Home Blog Page 250

ಪವಿತ್ರಾ ನರೇಶ್ ಗೆ 4ನೇ ಹೆಂಡ್ತಿ ಆಗುತ್ತಿರುವುದರ ಬಗ್ಗೆ ಪವಿತ್ರ ಲೋಕೇಶ್ ತಮ್ಮ ಆದಿ ಲೋಕೇಶ್ ಅನ್ನು ಕೇಳಿದ್ದಕ್ಕೆ ಆದಿ ಕೊಟ್ಟ ಉತ್ತರವೇನು ಗೊತ್ತ.? ನಿಜಕ್ಕೂ ನಿಂತಲೇ ನಲುಗು ಹೋಗ್ತಿರಾ.

 

ಅಕ್ಕ ಪವಿತ್ರ ಲೋಕೇಶ್ 3ನೇ ಮದ್ವೆ ಆಗುತ್ತಿರುವ ವಿಚಾರ ಕೇಳಿದಕ್ಕೆ ತಮ್ಮ ಆದಿ ಲೋಕೇಶ್ ಕೊಟ್ಟ ಉತ್ತರವೇನು ಗೊತ್ತ.? ನಿಜಕ್ಕೂ ನಿಂತಲ್ಲೇ ನಲುಗು ಹೋಗ್ತಿರಾ. ಕನ್ನಡದ ಪ್ರತಿಭಾನ್ವಿತ ನಟ ಮೈಸೂರು ಲೋಕೇಶ್ ರವರ ಇಬ್ಬರು ಮಕ್ಕಳಾದ ಆದಿ ಲೋಕೇಶ್ ಹಾಗೂ ಪವಿತ್ರ ಲೋಕೇಶ್ ಇಬ್ಬರು ಸಹ ಆಕ್ಟಿಂಗನ್ನು ಕೆರಿಯರ್ ಆಗಿ ಆಯ್ಕೆ ಮಾಡಿಕೊಂಡರು. ಅದರಲ್ಲಿ ಪವಿತ್ರ ಲೋಕೇಶ್ ಅವರು ನಾಯಕಿ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದು ಅಷ್ಟೇ ಪ್ರತಿಭಾನ್ವಿತೆಯೂ ಆಗಿದ್ದರು.

ನಾಯಕಿ ಆಗಲೆಂದೇ ಬಂದ ಇವರಿಗೆ ಇಂಡಸ್ಟ್ರಿಯಲ್ ಸಿಕ್ಕಿದ್ದು ಮಾತ್ರ ಸಹಕಲಾವಿದೆಯ ಪಾತ್ರಗಳು. ಸಿಕ್ಕ ಅವಕಾಶಗಳನ್ನು ಹೊಟ್ಟೆಪಾಡಿಗಾಗಿ ಮಾಡುತ್ತಿದ್ದ ಅವರು ಬಹಳ ವರ್ಷಗಳ ನಂತರ ಪೋಷಕ ಪಾತ್ರಗಳಲ್ಲಿ ಒಳ್ಳೊಳ್ಳೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಜೊತೆಗೆ ತೆಲುಗು ಸಿನಿಮಾಗಳಲ್ಲೂ ಕೂಡ ಪೋಷಕ ಪಾತ್ರಕ್ಕೆ ಬಹಳ ಬೇಡಿಕೆಯ ನಟಿ ಆಗಿರುವ ಇವರು ಮಹೇಶ್ ಬಾಬು, ಅಲ್ಲು ಅರ್ಜುನ್, ಜೂನಿಯರ್ ಎನ್ಟಿಆರ್ ಮುಂತಾದ ನಾಯಕ ನಟರುಗಳಿಗೆ ತಾಯಿಯಾಗಿ ಅಭಿನಯಿಸುತ್ತಿದ್ದಾರೆ.

ಆದಿ ಲೋಕೇಶ್ ಅವರು ಸಹ ಆರಂಭದಿಂದಲೇ ಸಿನಿಮಾಗಾಗಿ ತಯಾರು ಮಾಡಿಕೊಂಡು ಬಂದವರಲ್ಲ. 12 ವರ್ಷಕ್ಕೆ ಅಪನನ್ನು ಕಳೆದುಕೊಂಡ ಇವರು ಅವರ ತಂದೆಯ ಹೆಸರನ್ನು ಉಳಿಸುವ ಕಾರಣ ತಾವು ಸಹ ಇಂಡಸ್ಟ್ರಿಗೆ ಹೋಗಬೇಕು ಎಂದು ನಿರ್ಧಾರ ಭಯ ಬದಲಿಸಿ, ಈ ಫೀಲ್ಡ್ ಗೆ ಇಳಿದವರು. ಮೊದಮೊದಲು ಇವರಿಗೆ ಸಿನಿಮಾ ನಾಯಕನಾಗಿಯೇ ಅವಕಾಶಗಳು ಸಿಗುತ್ತಿರುತ್ತದೆ.

ಪೂಜಾರಿ ಅಂತಹ ಉತ್ತಮ ಚಿತ್ರಕಥೆ ಉಳ್ಳ ಸಿನಿಮಾದಲ್ಲಿ ಇವರು ನಾಯಕನಾಗಿ ಹೆಸರು ಮಾಡುತ್ತಿರುತ್ತಾರೆ. ಆದರೆ ನಂತರ ಬಂದ ಪಾತ್ರಗಳೆಲ್ಲಾ ಇವರಿಗೆ ಖಳನಾಯಕನ ಪಾತ್ರ ಆಗಿದ್ದವು. ಆದರೂ ಕೂಡ ಜೋಗಿ, ರಾಜ್, ಆರ್ ಎಕ್ಸ್ ಸೂರಿ, ಸರ್ಕಸ್ ಮುಂತಾದ ಸಿನಿಮಾಗಳಲ್ಲಿ ಖಳನಾಯಕನಾಗಿ ಅಭಿನಯಿಸಿ ಪಾತ್ರಕ್ಕೆ ಜೀವ ತುಂಬಿದ ಇವರು ಅವರ ಇಂಡಸ್ಟ್ರಿ ಜರ್ನಿ ಹಾಗೂ ವೈಯಕ್ತಿಕ ಜೀವನದ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ.

ಈ ಸಂದರ್ಶನದಲ್ಲಿ ಅವರು ಕುಟುಂಬದ ಬಗ್ಗೆ ಕೂಡ ಮಾತನಾಡಿದ್ದು ಅಪ್ಪ ಎನ್ನುವ ಪದದ ಅರ್ಥ ತಿಳಿಯುವ ಮುನ್ನವೇ ಅವರನ್ನು ಕಳೆದುಕೊಂಡೆ. ನನ್ನ ಅಪ್ಪನಿಗಿಂತ ನನ್ನ ಅಮ್ಮ ಅದ್ಭುತ ಕಲಾವಿದೆ. ಅವರು ಬಹಳ ಚಿಕ್ಕ ವಯಸ್ಸಿಗೆ ಮದುವೆ ಆದ ಕಾರಣ ಅವರು ಬೆಳಕಿಗೆ ಬರಲಿಲ್ಲ ಇಲ್ಲದಿದ್ದರೆ ಅವರು ಸಹ ಸಾಧನೆ ಮಾಡುತ್ತಿದ್ದರು. ಅಪ್ಪನನ್ನು ಬಿಟ್ಟರೆ ನನಗೆ ನನ್ನ ಅಕ್ಕನೇ ಎಲ್ಲಾ.

ನಮ್ಮ ಅಕ್ಕ ಎಷ್ಟೇ ಎತ್ತರಕ್ಕೆ ಹೆಸರು ಮಾಡಿದರು ಆ ಎಲ್ಲಾ ಸಂಭ್ರಮವನ್ನು ಮೊದಲಿಗೆ ಪಡುವವನು ನಾನೇ. ನಾನು ಮತ್ತು ನಮ್ಮ ಅಕ್ಕ ಇಂಡಸ್ಟ್ರಿಗೆ ಬರಬೇಕು ಎಂದು ಅಂದುಕೊಂಡವರಲ್ಲ. ಯಾಕೆಂದರೆ ನನ್ನ ತಂದೆ ಇಂಡಸ್ಟ್ರಿಗೆ ಯಾವುದೇ ಕಾರಣಕ್ಕೂ ನೀವು ಬರಬಾರದು ನಿಮಗೆ ಎಂದಿಗೂ ಈ ಫೀಲ್ಡ್ ಬೇಡ ಅಂದಿದ್ದವರು. ಆದರೆ ಅವರ ಹೆಸರು ಹಾಳಾಗುತ್ತಿದೆ ಎನ್ನುವ ಸಮಯ ಬಂದಾಗ ನಾವು ಸಹ ಇಂಡಸ್ಟ್ರಿಯಲ್ಲಿ ಇದ್ದುಕೊಂಡೇ ಅವರಂತೆ ಕಲಾವಿದರಾಗಿ ಹೆಸರು ಮಾಡಬೇಕು ಎಂದು ಈ ಫೀಲ್ಡ್ ಗೆ ಬಂದೆವು.

ನಾನು ನನ್ನ ತಾಯಿಯ ಹೊಟ್ಟೆಯಲ್ಲಿ ಇದ್ದ ದಿನದಿಂದಲೂ ಕೂಡ ಇಂಡಸ್ಟ್ರಿಯ ಋಣದಿಂದಲೇ ಬದುಕಿದ್ದೇನೆ ಎಂದರೆ ಅದು ಸುಳ್ಳಲ್ಲ. ನಾವು ಇಲ್ಲಿಗೆ ಕಲಾವಿದರಾಗಲು ಬಂದಿದೆವು. ಯಾವ ಪಾತ್ರ ಸಿಗುತ್ತದೆಯೋ ಅದರಲ್ಲೇ ಸಂತೋಷ ಪಟ್ಟುಕೊಂಡು ಕಲಾವಿದರಾಗಿ ಬದುಕು ಸವಿಸುತ್ತೇವೆ ಅಷ್ಟೇ ಎಂದು ಹೇಳಿದ್ದಾರೆ. ಈ ಸಂದರ್ಶನವು ಬಹಳ ಅರ್ಥಪೂರ್ಣವಾಗಿದ್ದು ಈ ವಿಡಿಯೋ ಬೈಟ್ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಮದ್ವೆ ಆಗೋಕೆ ಇಷ್ಟ, ತುಂಬಾ ಆಸೆ ಕನಸುಗಳಿವೆ, ಆದ್ರೆ ಸರಿಯಾದ ಹುಡ್ಗ ಸಿಗ್ತಿಲ್ಲ ಎನ್ನುತ್ತಿರುವ 47 ವರ್ಷದ ನಟಿ ಭಾವನ.

ಬಹುಮುಖ ಪ್ರತಿಭೆ ಭಾವನ ಅವರು ಕನ್ನಡ ಸಿನಿಮಾ ರಸಿಕರಿಗೆ ಚಿರಪರಿಚಿತರು. ಚಂದ್ರಮುಖಿ ಪ್ರಾಣಸಖಿ ಎನ್ನುವ ಸಿನಿಮಾ ಮೂಲಕ ಹೆಚ್ಚು ಹೆಸರು ಪಡೆದ ಭಾವನ ಅವರು ಕಳೆದ ಎರಡು ದಶಕಗಳಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಸಕ್ರಿಯ ರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಧಾರಾವಾಹಿಗಳಲ್ಲೂ ಕೂಡ ನಟಿಸುತ್ತಿದ್ದಾರೆ ಮತ್ತು ಇವರೊಬ್ಬ ಅದ್ಭುತ ಭರತನಾಟ್ಯ ಕಲಾವಿದೆ ಕೂಡ.

ಜೊತೆಗೆ ರಾಜಕೀಯದಲ್ಲಿ ಕೂಡ ಪ್ರಭಾವ ಬೀರುತ್ತಿರುವ ವ್ಯಕ್ತಿ. ಹೀಗೆ ಇಷ್ಟೆಲ್ಲ ಬಿಜಿ ಇರುವ ಅವರಿಗೆ ಯಾವಾಗಲೂ ಮದುವೆ ಕುರಿತು ವಿಚಾರಗಳು ಎದುರಾಗುತ್ತದೆ. ಈ ಬಗ್ಗೆ ಮೊದಲ ಬಾರಿಗೆ ಮನ ಬಿಚ್ಚಿ ಅವರು ಮಾತನಾಡಿದ್ದು ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಪಬ್ಲಿಕ್ ಮ್ಯೂಸಿಕ್ ಎನ್ನುವ ಯೂಟ್ಯೂಬ್ ಚಾನೆಲ್ ಭಾವನ ಅವರ ಸಂದರ್ಶನ ನಡೆಸಿತ್ತು.

ಅದರಲ್ಲಿ ನೀವು ಒಬ್ಬ ಮಹಿಳೆಯಾಗಿ ಆದರ್ಶ ಮಹಿಳೆ ಬಹಳ ಗಟ್ಟಿಯಾಗಿದ್ದೀರಾ ಇಂಡಿಪೆಂಡೆಂಟ್ ವುಮೆನ್ ಇದೆಲ್ಲವೂ ಸರಿ ಆದರೆ ಇನ್ನು ಸಹ ನಿಮ್ಮ ಮದುವೆ ಬಗ್ಗೆ ಪ್ರಶ್ನೆ ಇದೆ ಅದರ ಬಗ್ಗೆ ನೀವೇನು ಹೇಳುತ್ತೀರಾ ಎಂದು ಹೇಳಿದಾಗ ಹೌದು ಖಂಡಿತ ಇದೆಲ್ಲಾ ನಿಜ. ನಾನು ತುಂಬಾ ಸ್ಟ್ರಾಂಗ್ ನಾನು ಒಬ್ಬಳೇ ಕೂಡ ಇರಬಲ್ಲೆ ಆದರೆ ಮದುವೆ ವಿಚಾರವಾಗಿ ನನಗೂ ಆಸೆ ಇದೆ ನಾನು ಎಂದಿಗೂ ಕೂಡ ಮದುವೆ ಸಂಸಾರ ಕುಟುಂಬ ಇವುಗಳಿಂದ ದೂರ ಹೋಗಬೇಕು ಎಂದು ಬಯಸಿ ದೂರ ಇಟ್ಟವಳಲ್ಲ‌.

ನನಗೂ ಸಹ ಇದನ್ನ ಫಾರ್ಮ್ ಮಾಡಿಕೊಳ್ಳಲು ಒಂದೊಳ್ಳೆ ಸಂಗಾತಿ ಸಿಗಬೇಕು ಆ ರೀತಿ ಗುಣ ಇರುವವರು ಇನ್ನೂ ಸಹ ನನಗೆ ಕಂಡಿಲ್ಲ ಅಷ್ಟೇ, ಮುಂದೆ ನೋಡೋಣ ಎಂದು ತುಂಬಾ ಸರಳವಾಗಿ ಇದಕ್ಕೆ ಉತ್ತರ ಕೊಟ್ಟಿದ್ದಾರೆ. ಭಾವನ ಅವರು ಮದುವೆ ಆಗುವ ವ್ಯಕ್ತಿಗೆ ಭಾವನ ಅವರ ಭಾವನೆಗಳ ಸಂಘರ್ಷಗಳನ್ನು ತಡೆದುಕೊಳ್ಳುವ ಶಕ್ತಿ ಇರಬೇಕಂತೆ. ಇವರನ್ನು ಹ್ಯಾಂಡಲ್ ಮಾಡುವಂತಹ ಗುಣವೊಂದು ಇದ್ದರೆ ಸಾಕು ಎಂದು ಹೇಳಿದ್ದಾರೆ.

ಮುಂದುವರೆದು ಅವರ ಕರಿಯರ್ ಬಗ್ಗೆ ಕೂಡ ಈ ಸಂದರ್ಶನದಲ್ಲಿ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಭಾವನಾ ಅವರ ಇಷ್ಟು ವರ್ಷದ ಜರ್ನಿಯನ್ನು ಹಿಂದೆ ತಿರುಗಿ ನೋಡಿದರೆ ಏನು ಅನಿಸುತ್ತದೆ ಎಂದು ಕೇಳಲಾದ ಪ್ರಶ್ನೆಗೆ ಸಾಕಷ್ಟು ಖುಷಿ ಇದೆ. ಅಂದಿನಿಂದ ಅನೇಕರ ಜೊತೆ ಕೆಲಸ ಮಾಡಿದ ಅನುಭವ ಇದೆ ಆದರೆ ಒಂದೊಂದು ಸಮಯ ಅವಕಾಶಕ್ಕಾಗಿ ವರ್ಷಗಟ್ಟಲೆ ಕಾದಿದ್ದೇನೆ.

ಅದು ಸಹ ನೆನಪಿಗೆ ಬರುತ್ತದೆ ಎಂದು ಅವರ ಆ ದಿನಗಳನ್ನು ನೆನಸಿಕೊಂಡಿದ್ದಾರೆ. ಮತ್ತು ರಾಜಕೀಯವಾಗಿ ಕೂಡ ಇತ್ತೀಚೆಗೆ ಗುರುತಿಸಿಕೊಳ್ಳುತ್ತಿರುವುದರಿಂದ ಅವರ ಮೊದಲ ಆದ್ಯತೆ ಯಾವುದು ಎಂದು ಸಹ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಭಾವನ ಅವರು ನಾನು ಏನೇ ಮಾಡಿದರೂ ಕಲಾವಿದೆಯಾಗಿ ನನ್ನನ್ನು ನಾನು ತೊಡಗಿಸಿಕೊಂಡಾಗಲೇ ನಾನು ಪರಿಪೂರ್ಣವಾಗುವುದು.

ನನಗೆ ಈಗಲೂ ಸಹ ನೃತ್ಯ ಮಾಡಲು ಸ್ಟೇಜ್ ಪರ್ಫಾರ್ಮೆನ್ಸ್ ಗೆ ಅವಕಾಶ ಸಿಕ್ಕರೆ ತಪ್ಪಿಸಿಕೊಳ್ಳುವುದಿಲ್ಲ. ಜೊತೆಗೆ ನಾನು ಏನು ಮಾಡಿದರು ಕೂಡ ಬಣ್ಣ ಹಚ್ಚುವುದನ್ನು ಮಾತ್ರ ನಿಲ್ಲಿಸಲಾರೆ ಎಂದು ನೇರವಾಗಿ ಹೇಳಿದ್ದಾರೆ. ಭಾವನಾ ಅವರು ಈ ಸಂದರ್ಶನದಲ್ಲಿ ಹಲವು ವಿಷಯಗಳ ಕುರಿತು ಮಾತನಾಡಿದ್ದು ಅವರ ವೈಯಕ್ತಿಕ ಜೀವನದ ಬಗ್ಗೆ ಕೂಡ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇವುಗಳನ್ನೆಲ್ಲ ಕೇಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ನಟ ಲಕ್ಷಣ್ ಅಂತಿಮ ದರ್ಶನಕ್ಕೆ ಯಾವೊಬ್ಬ ನಟನು ಕೂಡ ಹೋಗಿಲ್ಲ. ಇದೆಂತ ತಾರತಮ್ಯ.! ಚಿತ್ರರಂಗದಲ್ಲಿಯೂ ಭೇದಭಾವ.?

 

ಹೃ.ದ.ಯ.ಘಾ.ತದಿಂದ ನಿ.ಧ.ನ.ರಾದ ಹಿರಿಯ ನಟ ಲಕ್ಷ್ಮಣ್ ಅಂತಿಮ ದರ್ಶನಕ್ಕಾಗಿ ಬರುತ್ತಿಲ್ಲ ಯಾವುದೇ ಸ್ಟಾರ್ಸ್, ಚಿತ್ರರಂಗದಲ್ಲೂ ಇದೆಯಾ ತಾರತಮ್ಯ. ನಾವೆಲ್ಲರೂ ಅಂದುಕೊಂಡಿದ್ದೇವೆ ಕಲಾವಿದರೆಲ್ಲ ಒಂದೇ ಎಂದು ಬಣ್ಣ ಹಚ್ಚಿ ನಟಿಸುವಾಗ ಮಾತ್ರ ವೇಷಕ್ಕೆ ತಕ್ಕ ಹಾಗೆ ಪಾತ್ರವಾಗಿರುತ್ತಾರೆ ಹೊರತು ಅದನ್ನು ಹೊರತುಪಡಿಸಿ ಅವರೆಲ್ಲಾ ವೃತ್ತಿಯಲ್ಲಿ ಒಂದೇ ಎಂದು.

ಒಬ್ಬನಿಗೆ ರಾಜನ ಪಾತ್ರ ಸಿಗುತ್ತದೆ, ಮತ್ತೊಬ್ಬನಿಗೆ ಹೀರೋ, ಒಬ್ಬನದು ಖಳ ನಾಯಕನಾದರೆ ಇನ್ನೊಬ್ಬ ಪೊಲೀಸ್ ಇವೆಲ್ಲ ಸಿನಿಮಾಗೆ ಪಾತ್ರಗಳು ಅಷ್ಟೇ ಇವೆಲ್ಲಾ ಇದ್ದಾಗ ಮಾತ್ರ ಒಂದು ಸಿನಿಮಾ ಗೆಲ್ಲುತ್ತದೆ. ಎಂದು ಸಾಮಾನ್ಯರಿಗೆ ಇಷ್ಟು ಅರಿವಿರುವಾಗ ಇಂಡಸ್ಟ್ರಿಯ ಜನರ ಮನಸ್ಥಿತಿ ಕೂಡ ಇದಕ್ಕಿಂತಲೂ ಉತ್ತಮ ಮಟ್ಟದಲ್ಲಿ ಇರುತ್ತದೆ. ಅವರು ಸಹ ನಾವೆಲ್ಲ ಒಂದೇ ಕುಟುಂಬದ ಸದಸ್ಯರು ಎಂದು ಅಂದುಕೊಂಡಿರುತ್ತಾರೆ ಎಂದೇ ಇಲ್ಲಿಯವರೆಗೂ ನಾವು ಭಾವಿಸಿದ್ದೆವು.

ಆದರೆ ಈಗ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳನ್ನು ಗಮನಿಸಿದರೆ ಜನ ಸಾಮಾನ್ಯರು ತಿಳಿದುಕೊಂಡಿರುವುದು ತಪ್ಪು ಕಲ್ಪನೆ. ಇಂಡಸ್ಟ್ರಿಯಲ್ಲೂ ಕೂಡ ತಾರತಮ್ಯ ಇದೆ ಎನ್ನುವುದು ಅರಿವಿಗೆ ಬರುತ್ತದೆ. ಇಂಡಸ್ಟ್ರಿಯಲ್ಲಿ ಉಳ್ಳವರಿಗೆ ಒಂದು ನ್ಯಾಯ ಸಾಮಾನ್ಯರಿಗೆ ಒಂದು ನ್ಯಾಯ ಹೀರೋ ಆಗಿ ಮೆರೆದವರೆಲ್ಲ ಸ್ಟಾರ್ಗಳು ಆ ಪಾತ್ರದ ಪೋಷಣೆಗಾಗಿ ನಟಿಸಿದ ಖಳನಾಯಕ ಅಥವಾ ಇತರೆ ಸಹಪಾತ್ರಗಳೆಲ್ಲಾ ಉದುರಿದ ಉಲ್ಕೆಗಳಾ ಎನ್ನುವಂತಹ ಪ್ರಶ್ನೆ ಎದುರಾಗುತ್ತಿದೆ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹಿರಿಯ ಕಲಾವಿದರುಗಳ ನಿಧನ ನಂತರ ನಡೆದುಕೊಳ್ಳುತ್ತಿರುವ ರೀತಿ ಈ ಪ್ರಶ್ನೆಗಳಿಗೆ ಹಿಡಿದ ಕೈಗನ್ನಡಿ ಅಂತಿದೆ. ಇಂದಿನ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಇಂದು ಹಿರಿಯ ನಟ ಲಕ್ಷ್ಮಣ್ ಅವರು ಹೃ.ದ.ಯಾ.ಘಾ.ತ.ದಿಂದ ತಮ್ಮ ನಿವಾಸದಲ್ಲಿ ಕೊನೆ ಉಸಿರು ಎಳೆದಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಕೆಲವು ಹಿರಿಯ ನಟರುಗಳು ಬಂದು ಅಂತಿಮ ದರ್ಶನ ಪಡೆದು ಹೋಗಿದ್ದಾರೆ.

ಆದರೆ ನಮ್ಮಲ್ಲಿ ಸ್ಟಾರ್ ಹೀರೋಗಳು ಎಂದು ಕರೆಸಿಕೊಂಡ ಯಾವ ಹೀರೋಗಳು ಕೂಡ ಇಂದು ಅವರ ನಿವಾಸಕ್ಕೆ ಭೇಟಿ ಕೊಟ್ಟಿಲ್ಲ ಕುಟುಂಬಸ್ಥರಿಗೆ ಸಮಾಧಾನವನ್ನು ಹೇಳಿಲ್ಲ. ಅದೇ ಒಬ್ಬ ಸೂಪರ್ ಸ್ಟಾರ್ ಗೆ ಈ ರೀತಿ ಆದರೆ ಮಾಡುವ ಎಲ್ಲಾ ಕೆಲಸವನ್ನು ಕ್ಯಾನ್ಸಲ್ ಮಾಡಿಕೊಂಡು ಓಡೋಡಿ ಬರುತ್ತಾರೆ. ಬೇರೆ ಕಲಾವಿದರಿಗೆ ಮಾತ್ರ ಯಾಕೆ ಆ ಗೌರವ ಸಿಗುತ್ತಿಲ್ಲ ಎನ್ನುವ ಬೇಸರ ಈಗ ಸಾರ್ವಜನಿಕರಲ್ಲಿ ಸಹಜವಾಗಿ ಮೂಡುತ್ತಿದೆ.

ಎಲ್ಲಾ ಹೀರೋಗಳು ಬರಲು ಸಾಧ್ಯವಿಲ್ಲ, ಈಗಾಗಲೇ ಅವರ ಶೂಟಿಂಗ್ ಫಿಕ್ಸ್ ಆಗಿರುತ್ತದೆ ಎನ್ನುವುದಾದರೂ ಕೆಲವರಾದರೂ ಗೌರವ ಕೊಡಲು, ಸಂತಾಪ ಸೂಚಿಸುವುದಕ್ಕೆ ಬರಬಹುದಿತ್ತು. ಅವರೇ ಇಂಡಸ್ಟ್ರಿಯನ್ನು ರೆಪ್ರೆಸೆಂಟ್ ಮಾಡಬಹುದಿತ್ತು ಆದರೂ ಕೂಡ ಆ ಲಕ್ಷಣಗಳು ಕಾಣುತ್ತಿಲ್ಲ. ಅಷ್ಟಕ್ಕೂ ಇವರೇನು ಎರಡು-ಮೂರು ಸಿನಿಮಾ ಮಾಡಿ ಕಾಣೆ ಆದವರಲ್ಲ. ಕನ್ನಡ ಚಲನಚಿತ್ರರಂಗದಲ್ಲಿ ರಾಜಕುಮಾರ್, ರಜನಿಕಾಂತ್, ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್ ಅವರ ಕಾಲದಿಂದ ಹಿಡಿದು ಈಗಿನ ಯುವ ಪೀಳಿಗೆಯ ನಟರ ಸಿನಿಮಾಗಳಲ್ಲೂ ಕೂಡ ಅವರಿಗೆ ಸರಿಸಮವಾಗಿ ನಿಂತು ಖಳನಾಯಕನ ಪಾತ್ರ ಮಾಡಿದವರು.

ಅಂಬರೀಶ್ ಅವರು ಮೆಚ್ಚಿ ಕೊಂಡಿದ್ದ ನೆಚ್ಚಿನ ಖಳನಾಯಕ ಇವರು. ಅಂಬರೀಶ್ ಅವರೇ ತಮ್ಮ ಸಿನಿಮಾಗಳಲ್ಲಿ ಇವರನ್ನು ವಿಲನ್ ಆಗಿ ಹಾಕಿಸಿಕೊಳ್ಳುತ್ತಿದ್ದರು. ಅಲ್ಲದೆ ತನ್ನ ಸಿನಿ ಕೆರಿಯರಲ್ಲಿ ಯಾವುದೇ ಕಪ್ಪು ಚುಕ್ಕೆ ಇರದಂತೆ ಎಲ್ಲೂ ವಿವಾದ ಮಾಡಿಕೊಳ್ಳದೆ ಬದುಕಿದ ಸಂಭಾವಿತ ಕಲಾವಿದ. ತನ್ನ ಬದುಕನ್ನು ಸಹ ಆದರ್ಶವಾಗಿ ರೂಪಿಸಿಕೊಂಡು ಇತರ ಕಲಾವಿದರಿಗೆ ಮಾದರಿಯಾಗುವಂತೆ ಜೀವನ ಸಾಗಿಸಿದ ಸಾಧಕ. ಆದರೂ ಕೂಡ ಇಂತಹ ಒಬ್ಬ ಹಿರಿಯರ ಸಾವಿಗೆ ಸಂತಾಪ ಸೂಚಿಸಲು ಒಬ್ಬ ಸ್ಟಾರ್ ಕೂಡ ಸುಳಿಯಲಿಲ್ಲವಲ್ಲ ಎನ್ನುವುದು ಬೇಸರ ತರಿಸುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾರು ಸೀರಿಯಲ್ ನಟ ಶರತ್, ಮದುವೆಗೆ ಯಾವೆಲ್ಲಾ ಸೆಲೆಬ್ರಿಟಿಗಳು ಬಂದಿದ್ರು ನೋಡಿ

ಕಳೆದ ವರ್ಷ ನಮ್ಮ ಸ್ಯಾಂಡಲ್ ವುಡ್ ನ ಅನೇಕ ತಾರೆಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದರಲ್ಲಿ ಹೆಚ್ಚಿನ ಮಂದಿ ತಮ್ಮ ಕೆರಿಯರ್ ಅಲ್ಲಿ ಇರುವವರನ್ನೇ ಆರಿಸಿಕೊಂಡು ಬಾಳ ಸಂಗಾತಿ ಮಾಡಿಕೊಂಡರು. ಹಿರಿತೆರೆ ಮಾತ್ರವಲ್ಲದೆ ಕಿರುತೆರೆಯ ಅನೇಕ ತಾರೆಗಳು ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳಿ ಮದುವೆ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲಿ ಅನೇಕ ಜೋಡಿಗಳು ಈಗಾಗಲೇ ನಿಶ್ಚಿತಾರ್ಥ ಕೂಡ ಮಾಡಿಕೊಂಡಿವೆ.

ಈ ಸಾಲಿನಲ್ಲಿ ಒಬ್ಬರಾಗಿ ಪಾರು ಧಾರವಾಹಿ ಖ್ಯಾತಿಯ ನಾಯಕ ನಟ ಶರತ್ ಪದ್ಮನಾಭ್(Paaru Serial Actor Adhu Wedding) ಅವರು ಎಂಗೇಜ್ಮೆಂಟ್ ಆಗಿದ್ದರು. ಅವರ ನಿಶ್ಚಿತಾರ್ಥ ಅನೇಕರಿಗೆ ಶಾಕ್ ನೀಡಿತ್ತು ಏಕೆಂದರೆ ಅನೇಕ ಹುಡುಗಿಯರ ಪಾಲಿಗೆ ಡ್ರೀಮ್ ಬಾಯ್ ಆಗಿದ್ದ ಇವರು ಗುಟ್ಟಾಗಿ ನಿಶ್ಚಿತಾರ್ಥ ಮಾಡ್ಕೊಂಡಿದ್ದು ಎಲ್ಲರಿಗೂ ಒಂದು ರೀತಿ ಶಾಕ್ ನೀಡಿತ್ತು. ಇಂದು ಅದ್ದೂರಿಯಾಗಿ ಅವರ ಮದುವೆ ಕಾರ್ಯ ಕೂಡ ವಿಜೃಂಭಣೆಯಿಂದ ಜರುಗುತ್ತಿದೆ.

ಕೆಲವು ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಶರತ್(Sharath Wedding Photos) ಪದ್ಮನಾಭನ್ ಅವರು ತಮ್ಮ ಸ್ನೇಹಿತೆಯ ಕೈ ಹಿಡಿಯುತ್ತಿದ್ದಾರೆ. ಅವರು ಮದುವೆ ಆಗುತ್ತಿರುವ ಹುಡುಗಿಯ ಹೆಸರು ದಿವ್ಯಶ್ರೀ ಇವರು ಇಂಜಿನಿಯರಿಂಗ್ ಪದವೀಧರೆ ಆಗಿದ್ದು ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರದು ಲವ್ ಮ್ಯಾರೇಜ್ ಆಗಿದ್ದು ಕುಟುಂಬಸ್ಥರ ಸಮ್ಮತಿಯೊಂದಿಗೆ ಗುರುಹಿರಿಯರು ಹಾಗೂ ಬಂಧು ಬಾಂಧವರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆ ಆಗುತ್ತಿದ್ದಾರೆ.

ಸದ್ಯಕ್ಕೀಗ ಪಾರು ಧಾರವಾಹಿ ಆದಿ(Adhu Marriage Photos) ಎಂದೆ ಫೇಮಸ್ ಆಗಿರುವ ಇವರು ಈ ಮುಂಚೆ ಪುಟ್ಮಲ್ಲಿ ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದರು. ಕನ್ನಡದ ನಟ ಆಗಿರುವ ದಿಲೀಪ್ ರಾಜ್ ಅವರ ಪ್ರೊಡಕ್ಷನ್ ಹೌಸ್ ಅಲ್ಲಿ ಆ ಧಾರವಾಹಿ ಮೂಡಿ ಬಂದಿತ್ತು. ಮೊದಲ ಬಾರಿ ಆ ಧಾರವಾಹಿಗೆ ಶರತ್ ಅವರನ್ನು ಆಯ್ಕೆ ಮಾಡಿದಾಗ ಅವರಿಗೆ ಅಭಿನಯದ ಗಂಧ ಗಾಳಿಯು ಕೂಡ ಗೊತ್ತಿರಲಿಲ್ಲವಂತೆ. ಬಹಳ ದಿನಗಳ ವರ್ಕ್ ಶಾಪ್ ನೀಡಿ ನಂತರ ಧಾರಾವಾಹಿಗೆ ಹಾಕಿಕೊಂಡು ದಿಲೀಪ್ ರಾಜ್ ಅವರು ಪಳಗಿಸಿದರಂತೆ.

ಈ ಬಗ್ಗೆ ಶರತ್ ಅವರು ನನ್ನ ಹೆಮ್ಮೆಯ ಗುರು ನನ್ನ ಪಾಲಿಗೆ ಎಲ್ಲವೂ ಅವರೇ ಎಂದು ದಿಲೀಪ್ ರಾಜ್ ಅವರನ್ನು ಹೊಗಳುತ್ತಾ ಇರುತ್ತಾರೆ. ದಿಲೀಪ್ ಅವರು ಸಹ ನನ್ನ ಜೀವನದಲ್ಲಿ ಕಂಡ ನನ್ನ ಕುಟುಂಬಕ್ಕೆ ಅತ್ಯಂತ ಆತ್ಮೀಯವಾದ ನನ್ನ ಮಗನಿಗೆ ಸಮವಾದ ವ್ಯಕ್ತಿ ಶರತ್ ಎಂದು ಹೊಗಳಿದ್ದಾರೆ. ಸದ್ಯಕ್ಕೆ ಇವರ ಮದುವೆಯ ಬಗ್ಗೆ ಹೊರಬಿದ್ದಿರುವ ಫೋಟೋಗಳಲ್ಲಿ ದಿಲೀಪ್ ರಾಜ್ ಅವರ ಕುಟುಂಬ, ಗಟ್ಟಿಮೇಳ ಧಾರಾವಾಹಿಯ ನಾಯಕ ರಕ್ಷ್ ನಟ ಅನಿರುದ್ ಮುಂತಾದವರು ಇದ್ದಾರೆ.

ಪಾರು ಧಾರಾವಾಹಿಯ ಹೀರೋಗಳಿಗೆ ಈ ವರ್ಷ ಕಂಕಣ ಭಾಗ್ಯ ಕೂಡಿ ಬಂದ ರೀತಿ ಇದೆ. ಯಾಕೆಂದರೆ ಕಳೆದ ವರ್ಷ ಇತರ ಧಾರಾವಾಹಿಯಲ್ಲಿ ಆದಿ ತಮ್ಮನ ಪಾತ್ರ ಮಾಡುತ್ತಿರುವ ಪ್ರೀತು ಅಲಿಯಾಸ್ ಸಿದ್ಧಾರ್ಥ್ ಮೂಲಿಮನಿ ಅವರೂ ಸಹ ಗಟ್ಟಿಮೇಳ ಧಾರಾವಾಹಿಯ ನಟಿ ಅಲಿಯಾಸ್ ಪೂಜಾ ಜೆ ಆಚಾರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಜೋಡಿ ಸಹ ಮುಂದಿನ ತಿಂಗಳೇ ಹಸಮಣೆ ಇರಲು ನಿರ್ಧಾರ ಮಾಡಿದ್ದಾರೆ.

ಅದಕ್ಕಾಗಿ ಈಗಾಗಲೇ ಪ್ರಿ ವೆಡ್ಡಿಂಗ್ ಶೀಟ್ ಮುಂತಾದ ಕೆಲಸಗಳಲ್ಲಿ ತೊಡಗಿಸಿಕೊಂಡು ಅದಕ್ಕೆ ಸಂಬಂಧಪಟ್ಟ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಶರತ್ ಅವರು ಸಿನಿಮಾಗಳಲ್ಲಿ ಅಭಿನಯಿಸಲು ಸಹಾ ಆಸಕ್ತಿ ಹೊಂದಿದ್ದು ಈಗಾಗಲೇ ನೀವು ಕರೆ ಮಾಡುತ್ತಿರುವ ಚಂದಾದಾರರು ಸಿನಿಮಾದ ಮೂಲಕ ಬೆಳ್ಳಿತೆರೆಗೂ ಎಂಟ್ರಿ ಕೊಟ್ಟಿದ್ದಾರೆ. ಅವರ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ, ಮದುವೆ ಜೊತೆಗೆ ಕೆರಿಯರಲ್ಲೂ ಸಹ ಅವರು ಏಳಿಗೆ ಕಾಣಲಿ ಎಂದು ಹರಸೋಣ.

300ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟ ಲಕ್ಷ್ಮಣ್ ವಿ.ಧಿ.ವ.ಶ ಕಂಬನಿ ಮಿಡಿದ ಚಿತ್ರರಂಗ.

 

ಸ್ಯಾಂಡಲ್ ವುಡ್ ಗೆ ಬಡಿದ ಮತ್ತೊಂದು ಬರಸಿಡಿಲು, ಹೆಸರಾಂತ ಖಳನಾಯಕ ಇನ್ನಿಲ್ಲ ಕಳೆದೆರಡು ವರ್ಷಗಳಿಂದ ಕನ್ನಡ ಚಲನಚಿತ್ರ ರಂಗ ಹಲವಾರು ಯುವ ಪ್ರತಿಭೆಗಳನ್ನು ಹಾಗೂ ಸ್ಟಾರ್ ನಟರನ್ನು ಮತ್ತು ಹಿರಿಯ ಕಲಾವಿದರನ್ನು ಕಳೆದುಕೊಂಡಿದೆ. ಆ ನೋವು ಮಾಸುವ ಮುನ್ನವೇ ಮತ್ತೊಂದು ಕಹಿ ಸುದ್ದಿ ಬಂದಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ಹಿರಿಯ ಹೆಸರಾಂತ ಖಳನಾಯಕ ನಟ ನಮ್ಮನ್ನೆಲ್ಲಾ ಅಗಲಿ ಹೋಗಿದ್ದಾರೆ.

ಸಾಂಗ್ಲಿಯಾನ, ಸೂರ್ಯವಂಶ, ಮಲ್ಲ, ಯಜಮಾನ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿ ಮಿಂಚಿ ಮೆರೆದಿದ್ದ ಲಕ್ಷ್ಮಣ್ ಎನ್ನುವ ಹಿರಿಯ ಕಲಾವಿದರು ಇಂದು ಬೆಳಗಿನ ಜಾವ ನಾಲ್ಕು ಗಂಟೆಯಲ್ಲಿ ಅವರ ಮೂಡಲ ಪಾಳ್ಯದ ಮನೆಯಲ್ಲಿ ಹೃದಯಘಾತದ ಕಾರಣದಿಂದ ಕೊನೆ ಉಸಿರೆಳೆದಿದ್ದಾರೆ. ಇವರ ಸಾ.ವಿ.ಗೆ ಕನ್ನಡ ಚಲನಚಿತ್ರರಂಗದ ಅನೇಕ ಕಲಾವಿದರುಗಳು ಸಂತಾಪ ಸೂಚಿಸಿದ್ದಾರೆ.

ಮೃ.ತ.ರ ಪಾರ್ಥವ ಶರೀರವನ್ನು ಅವರ ನಿವಾಸದಲ್ಲಿಯೇ ಅಂತಿಮ ದರ್ಶನಕ್ಕಾಗಿ ಏರ್ಪಡಿಸಿದ್ದು ನಂತರ ಮುಂದಿನ ಕಾರ್ಯಗಳನ್ನು ಮಾಡಲಾಗುವುದು. ಲಕ್ಷ್ಮಣ್ ಅವರು ಹಲವು ದಶಕಗಳ ಕಾಲ ಕನ್ನಡ ಚಲನಚಿತ್ರ ರಂಗದಲ್ಲಿ ನಾನಾ ಪಾತ್ರದಲ್ಲಿ ನಟಿಸುವ ಮೂಲಕ ಸಕ್ರಿಯರಾಗಿದ್ದರು. ಕನ್ನಡದಲ್ಲಿ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು ಹೆಚ್ಚು ಬಣ್ಣ ಹಚ್ಚಿದ್ದು ಖಳನಾಯಕನ ಪಾತ್ರದಲ್ಲಿಯೇ ಎನ್ನುವುದು ಬಹಳ ವಿಶೇಷ.

ಪೊಲೀಸ್ ಗೆಟಪ್ ಗಳಿಗೂ ಹೆಚ್ಚು ಒಪ್ಪುತ್ತಿದ್ದ ಇವರು ಆ ಪಾತ್ರಕ್ಕೂ ನ್ಯಾಯ ಧಕ್ಕಿಸಿ ಅಭಿನಯಿಸುತ್ತಿದ್ದರು. ಇವರ ಖಳನಾಯಕ ಪಾತ್ರ ಜನ ಮನಸ್ಸಿನ ಮೇಲೆ ಹೆಚ್ಚು ಪ್ರಭಾವ ಬೀರಿತ್ತು ಹಾಗಾಗಿ ಸಾರ್ವಜನಿಕವಾಗಿ ಇವರನ್ನು ಕಂಡಾಗ ಜನರು ಇವರನ್ನು ಕಂಡು ಹೆದರುತ್ತಿದ್ದರಂತೆ, ಈ ರೀತಿ ಅನೇಕ ಉದಾಹರಣೆಗಳನ್ನು ಅವರು ಕೆಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಆರ್ಮಿ ಆಫೀಸರ್ ಮಗನಾಗಿ ಹುಟ್ಟಿದ ಇವರು ನಡೆಸಿದ್ದು ಮಾತ್ರ ಬಲು ಕಷ್ಟದ ಜೀವನ.

ಎಸ್ ಎಸ್ ಎಲ್ ಸಿ ವರೆಗೆ ಮಾತ್ರ ವಿದ್ಯಾಭ್ಯಾಸ ನಡೆಸಿ ನಂತರ ಕಾರ್ಖಾನೆ ಒಂದರಲ್ಲಿ ಕಡಿಮೆ ಸಂಬಳಕ್ಕೆ ಕೂಲಿಗೆ ಸೇರಿದ್ದ ಇವರನ್ನು ಬಣ್ಣದ ಪ್ರಪಂಚ ಆಕರ್ಷಿಸಿತ್ತು. ನಂತರ ಇವರೇ ಒಂದು ಇತಿಹಾಸವನ್ನು ಸೃಷ್ಟಿಸಿ ಬಿಟ್ಟರು. ಶಂಕರ್ ನಾಗ್, ಅಂಬರೀಶ್ ಕಾಲದಿಂದಲೂ ಕೂಡ ಬಣ್ಣ ಹಚ್ಚಿ ನಟಿಸಿ ವಿಷ್ಣುವರ್ಧನ್, ರವಿಚಂದ್ರನ್, ರಾಜಕುಮಾರ್, ರಜನಿಕಾಂತ್, ಉಪೇಂದ್ರ, ದರ್ಶನ್ ಮುಂತಾದ ಅನೇಕ ಸೂಪರ್ ಸ್ಟಾರ್ಗಳಿಗೆ ಅವರ ಸಮನಾಗಿ ಖಳನಾಯಕ ಪಾತ್ರದಲ್ಲಿ ತೆರೆ ಹಂಚಿಕೊಂಡಿದ್ದ ಲಕ್ಷ್ಮಣ್ ಅವರು ಕನ್ನಡ ಚಿತ್ರರಂಗದ ಆಸ್ತಿ ಆಗಿದ್ದರು.

ಕನ್ನಡ ಸಿನಿಮಾಗಳ ಹೆಸರು ಉಳಿಸುವ ಸಲುವಾಗಿ ತಮ್ಮ ಕೈಲಾದ ಸೇವೆ ಮಾಡಿದ್ದರು. ಈಗ ಒಂದೆರಡು ಸಿನಿಮಾಗಳಾ ಒಂದೆರಡು ಸೀನ್ ಗಳಲ್ಲಿ ಕಾಣಿಸಿಕೊಂಡರೂ ಕೂಡ ಹೆಚ್ಚು ಪ್ರಭಾವ ಬೀರುವ ಮಂದಿಯ ಮುಂದೆ ಎಲೆ ಮರೆಕಾಯಿಯಂತೆ ಸರಳವಾಗಿ ಇದ್ದು ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿದ್ದರು. 74 ವರ್ಷ ವಯಸ್ಸಾಗಿದ್ದ ಲಕ್ಷ್ಮಣ್ ಅವರು ಹಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ನೆನ್ನೆ ಅಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಇಸಿಜಿ ಎಲ್ಲಾ ಮಾಡಿಸಿ ಮತ್ತೆ ಮನೆಗೆ ಕರೆತರಲಾಗಿತ್ತು. ಆದರೆ ಇಂದು ಮುಂಜಾನೆ ಅವರ ಸಾ.ವಿ.ನ ಸುದ್ದಿ ಎಲ್ಲರಿಗೂ ಬರ ಸಿಡಿಲಿನಂತೆ ಅಪ್ಪಳಿಸಿದೆ. ಕನ್ನಡ ಚಲನಚಿತ್ರ ರಂಗಕ್ಕೂ ಸಹ ಇದು ತುಂಬಲಾಗದ ನಷ್ಟವಾಗಿದೆ. ಇವರ ಆತ್ಮ ಚಿರಶಾಂತಿ ಕಾಯ್ದುಕೊಳ್ಳಲಿ, ಇವರಿಗೆ ಸದ್ಗತಿ ದೊರೆಯಲಿ. ಕುಟುಂಬಸ್ಥರು ಹಾಗೂ ಆತ್ಮೀಯರಿಗೆ ಇವರ ಸಾವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಕೇಳಿಕೊಳ್ಳೋಣ.

 

ಪುಟ್ಟಕ್ಕನ ಮಕ್ಕಳು ಸೀರಿಯಲ್ ನಟಿಯರು ಮೇಕಪ್ ಇಲ್ಲದೆ ಹೇಗೆ ಕಾಣ್ತಾರೆ ಗೊತ್ತ.? ಈ ವಿಡಿಯೋ ನೋಡಿದ್ರೆ ಪಕ್ಕಾ ಶಾ-ಕ್ ಆಗ್ತೀರಾ.

 

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕಳೆದು ಒಂದು ವರ್ಷದಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯ ಪ್ರೋಮೋ ಓಡಾಡುತ್ತಿದ್ದ ದಿನದಿಂದಲೇ ಈ ಧಾರಾವಾಹಿಯು ಗೆಲ್ಲುವ ಭರವಸೆ ಇತ್ತು. ಯಾಕೆಂದರೆ ಮೂರು ಹೆಣ್ಣು ಮಕ್ಕಳನ್ನು ಪಡೆದು ಪತಿಯಿಂದ ದೂರವಾಗಿ ಒಬ್ಬಂಟಿಯಾಗಿ ಮಕ್ಕಳನ್ನು ಸಾಕಿ ಸಲಹಿ ಅವರನ್ನು ಹಠದಿಂದ ಎತ್ತರದ ಸ್ಥಾನಕ್ಕೆ ತರುವ ಗಟ್ಟಿಗಿತ್ತಿ ಪುಟ್ಟಕ್ಕನ ಕಥೆ ಇದಾಗಿತ್ತು.

ಮಂಡ್ಯ ಭಾಗದ ಹಳ್ಳಿಯೊಂದರಲ್ಲಿ ನಡೆದಿರುವ ಕಥೆಯಂತಿರುವ ಈ ಧಾರಾವಾಹಿಯ ಶೂಟಿಂಗ್ ಕೂಡ ಅದೇ ರೀತಿಯ ಸೆಟ್ಟಿನಲ್ಲಿ ನಡೆಯುತ್ತಿದೆ. ಈ ಧಾರಾವಾಹಿ ಕಥಾಹಂದರಕ್ಕೆ ಮನಸೋತಿರುವ ಜನ ಪ್ರತಿದಿನ ಕೂಡ ತಪ್ಪದೇ ಇದನ್ನು ನೋಡುತ್ತಾರೆ. ಟಿ.ಆರ್.ಪಿ ವಿಷಯದಲ್ಲಿ ಕೂಡ ಹಲವು ವಾರಗಳಿಂದಲೇ ನಂಬರ್ ಒನ್ ಪಟ್ಟಿಯಲ್ಲಿ ಇರುವ ಇದು ದಿನದಿಂದ ದಿನಕ್ಕೆ ತನ್ನ ಪ್ರೇಕ್ಷಕರ ಸಂಖ್ಯೆಯನ್ನು ಇಮ್ಮಡಿ ಗೊಳಿಸಿಕೊಳ್ಳುತ್ತಿದೆ.

ಜೊತೆಗೆ ಈ ಧಾರಾವಾಹಿಯ ಮುಖ್ಯ ಆಕರ್ಷಣೆ ಏನು ಎಂದರೆ ಇಲ್ಲಿ ಪುಟ್ಟಕ್ಕನ ಪಾತ್ರ ಮಾಡಿರುವುದು ಕನ್ನಡದ ಹೆಮ್ಮೆಯ ಹಿರಿಯ ಕಲಾವಿದ ಉಮಾಶ್ರೀ ಅವರು ಎನ್ನುವುದು. ಉಮಾಶ್ರೀ ಅವರು ಪುಟ್ಟಕ್ಕನ ಪಾತ್ರಕ್ಕೆ ಎಷ್ಟು ಜೀವ ತುಂಬಿದ್ದಾರೆ ಎಂದರೆ ಆ ಪಾತ್ರವೇ ಅವರಂತೆ ಅಭಿನಯಿಸಿದ್ದಾರೆ. ಉಮಾಶ್ರೀ ಅವರು ಎಂತಹ ಮೇರು ಕಲಾವಿದೆ ಎನ್ನುವುದರ ಬಗ್ಗೆ ಎರಡು ಮಾತಿಲ್ಲ ಆದರೆ ಈ ಪಾತ್ರದಲ್ಲಿ ಕೂಡ ಅವರು ಆ ಪಾತ್ರದೊಳಗೆ ತಾವೇ ಆವಾಹನೆ ಆಗಿದ್ದಾರೆ ಎನಿಸುತ್ತದೆ.

ಅವರ ನಿಜ ಜೀವನಕ್ಕೂ ಕೂಡ ಬಹಳ ಹತ್ತಿರವಾಗಿರುವ ಕಥೆಯಂತಿರುವ ಈ ಕಥೆಯಿಂದ ಅದಕ್ಕೆ ಇನ್ನಷ್ಟು ಜೀವಂತಿಕೆ ಹೆಚ್ಚಾಗಿದೆ. ಮತ್ತು ಉಮಾಶ್ರೀ ಅವರ ಜೀವನಾನುಭವದ ಮಾತುಗಳು ಈ ಕಥೆಗೆ ಇನ್ನಷ್ಟು ಶಕ್ತಿ ತುಂಬಿ ಸಂಭಾಷಣೆಯಿಂದಲೇ ಧಾರಾವಾಹಿಯ ಹಿರಿಮೆ ಇನ್ನಷ್ಟು ಹೆಚ್ಚಾಗಿದೆ ಎಂದು ಸಹಾ ಹೇಳಬಹುದು.

ಈ ಧಾರಾವಾಹಿಯ ಇತರ ಪಾತ್ರಗಳಾದ ಸಹನಾ, ಸ್ನೇಹ ಮತ್ತು ಸುಮಾ ಎನ್ನುವ ಮೂರು ಮಕ್ಕಳ ಪಾತ್ರಗಳು ಹಾಗೂ ಸಹನಾ ಅವರನ್ನು ಪ್ರೀತಿಸುವ ಆ ಊರಿನ ಶಾಲಾ ಶಿಕ್ಷಕರಾದ ಮುರಳಿ ಎನ್ನುವ ಪಾತ್ರ, ಊರಿನ ಗೌಡ್ತಿ ಆದ ಬಂಗಾರಮ್ಮ ಮತ್ತು ಆತನ ಮಗನಾದ ಕಂಠಿಯ ಪಾತ್ರ, ಕಂಠಿಯ ಸಹೋದರಿ ವಸುಧಾ ಮತ್ತು ಆತನ ಪತಿ ಚಂದ್ರು ಹಾಗೂ ಚಂದುವಿನ ತಾಯಿ ಮತ್ತು ಪುಟ್ಟಕ್ಕನ ಪತಿ ಹಾಗೂ ಪತಿಯ ಎರಡನೇ ಹೆಂಡತಿ ರಾಜೇಶ್ವರಿ.

ರಾಜೇಶ್ವರಿಯ ತಮ್ಮ ಕಾಳಿಯ ಪಾತ್ರಗಳು ಧಾರಾವಾಹಿ ಇನ್ನಿತರ ಪ್ರಮುಖ ಪಾತ್ರಗಳು ಆಗಿದ್ದು. ಈ ಪ್ರತಿಯೊಂದು ಪಾತ್ರ ಗಳಿಗೂ ಕೂಡ ಈಗ ಅನೇಕ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ತೆರೆ ಮೇಲೆ ಬಣ್ಣ ಹಚ್ಚಿ ಪಾತ್ರಕ್ಕೆ ಹೊಂದ ಹಾಗೆ ಒಬ್ಬೊಬ್ಬರು ಕೂಡ ವಿಭಿನ್ನ ರೀತಿಯ ಕಾಶ್ಚ್ಯೂಮ್ ತೊಟ್ಟು ಪಾತ್ರಕ್ಕೆ ನ್ಯಾಯ ದಕ್ಕಿಸುವಂತೆ ನಟಿಸುತ್ತಿರುವ ಇವರುಗಳು ಮೇಕಪ್ ಇಲ್ಲದೆಯೂ ಸಹ ಅಷ್ಟೇ ಸುಂದರವಾಗಿದ್ದಾರೆ.

ಧಾರಾವಾಹಿಯಲ್ಲಿ ನಟಿಸಿರುವ ಎಲ್ಲಾ ಪ್ರಮುಖ ಪಾತ್ರದಾರಿಗಳು ಮೇಕಪ್ ಇಲ್ಲದ ಸಾಮಾನ್ಯ ದಿನಗಳಲ್ಲಿ ಹೇಗಿರುತ್ತಾರೆ ಎನ್ನುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇವುಗಳನ್ನು ಅವರ ವೈಯಕ್ತಿಕ ಸೋಶಿಯಲ್ ಮೀಡಿಯಾ ಖಾತೆಗಳಿಂದ ಆರಿಸಲಾಗಿದ್ದು ಪ್ರತಿಯೊಬ್ಬರೂ ಕೂಡ ತೀರ ಸಾಮಾನ್ಯವಾಗಿ ಸಾಮಾನ್ಯ ಜೀವನದಲ್ಲಿ ಇದ್ದಾಗ ಸೆಲ್ಫಿ ತೆಗೆದುಕೊಂಡಿರುವ ಮತ್ತು ಸ್ನೇಹಿತರ ಜೊತೆ ತೆಗೆಸಿಕೊಂಡಿರುವ ಫೋಟೋಗಳು ಇವಾಗಿವೆ.

ಮೇಕಪ್ ಇಲ್ಲದೆಯೂ ಸಹ ಯಾವ ತಾರೆಗೂ ಕಡಿಮೆ ಇಲ್ಲದಂತೆ ಇವರೆಲ್ಲರೂ ಕಂಗಳಿಸುತ್ತಿದ್ದಾರೆ. ನೀವು ಸಹ ಈ ವಿಡಿಯೋ ನೋಡಿ ನಿಮಗೆ ಅವರು ಧಾರಾವಾಹಿಯಲ್ಲಿ ಮೇಕಪ್ ಅಲ್ಲಿ ಇರುವುದು ಇಷ್ಟವೋ ಅಥವಾ ತೀರ ಸರಳವಾಗಿ ಸಾಮಾನ್ಯವಾಗಿ ಇರುವ ಫೋಟೋಗಳು ಇಷ್ಟವೋ ಎನ್ನುವ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

KGF ಸಿನಿಮಾ ನೋಡಲ್ಲ, ಮೈಂಡ್ ಲೆಸ್ ಸ್ಟೋರಿ, ಅದ್ನ ನೋಡಿದ್ರೆ ಟೈಮ್ ವೇಸ್ಟ್ ಅಂದಿದ್ದು ನಿಜಾನಾ ಎಂದು ಕೇಳಿದ್ದಕ್ಕೆ ಕಿಶೋರ್ ಹೇಳಿದ್ದೇನು ಗೊತ್ತ.?

 

ಬಹುಭಾಷಾ ಕಲಾವಿದ ನಮ್ಮ ಹೆಮ್ಮೆಯ ಕನ್ನಡಿಗ ಸರಳ ಜೀವಿ ಕಿಶೋರ್ ಅವರನ್ನು ಈಗ ಎಲ್ಲರೂ ಬಲ್ಲರು. ಕಿಶೋರ್ ಅವರು ಎಂತಹ ಅಸಾಮಾನ್ಯ ಆರ್ಟಿಸ್ಟ್ ಎಂದು ನಾವೆಲ್ಲರೂ ಅವರ ಅಭಿನಯವನ್ನು ನೋಡಿ ತಿಳಿದುಕೊಂಡಿದ್ದೇವೆ. ಆದರೆ ಅವರ ಒಳಗಡೆ ಇನ್ನೂ ಅದೆಷ್ಟೋ ಹಿಡನ್ ಟ್ಯಾಲೆಂಟ್ ಇದೆ. ಸದ್ಯಕ್ಕೆ ಕಾಡು ಮೇಡು ಕೃಷಿಯೆಂದು ತನ್ನ ಜೀವನ ಶೈಲಿಯನ್ನು ಬದಲಿಸಿಕೊಂಡಿರುವ ಇವರು ಸಿಂಪಲ್ ಆಗಿ ಸಾವಯುವ ಕೃಷಿ ಮಾಡುತ್ತಾ ದೂರದ ಹಳ್ಳಿಯೊಂದರಲ್ಲಿ ಬದುಕುತ್ತಿದ್ದಾರೆ.

ಜೊತೆಗೆ ಕನ್ನಡ ತಮಿಳು ತೆಲುಗು ಇಂಡಸ್ಟ್ರಿಯಲ್ಲೂ ಕೂಡ ಬಹಳ ಬೇಡಿಕೆಯ ಖಳನಾಯಕನಾಗಿ ಕಾಣಿಸಿ ಕೊಳ್ಳುತ್ತಿದ್ದಾರೆ. ಇಂತಹ ಒಬ್ಬ ನಟ ಕೆಜಿಎಫ್ ಬಗ್ಗೆ ಹೇಳಿಕೆ ಕೊಟ್ಟಿದ್ದು ಬಹಳ ವಿವಾದವನ್ನು ಸೃಷ್ಟಿ ಮಾಡಿತ್ತು. ಈ ಬಗ್ಗೆ ಮತ್ತೊಮ್ಮೆ ಯುಟ್ಯೂಬ್ ಚಾನೆಲ್ ಆಂಕರ್ ಒಬ್ಬರು ಅವರನ್ನು ಪ್ರಶ್ನೆ ಮಾಡಿದ್ದು ಇದೀಗ ಅವರು ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.

ಹಿಂದೊಮ್ಮೆ ಇಂಗ್ಲೀಷ್ ಇಂಟರ್ವ್ಯೂ ಅಲ್ಲಿ ಕೆಜಿಎಫ್ ನನ್ನ ಟೆಸ್ಟ್ ಸಿನಿಮಾ ಅಲ್ಲ ಅದಕ್ಕಾಗಿ ನಾನು ನೋಡಿಲ್ಲ ಎಂದು ಕಿಶೋರ್ ಅವರು ಹೇಳಿದ್ದು ದೊಡ್ಡ ಸಂಚಲವನ್ನೇ ಸೃಷ್ಟಿ ಮಾಡಿತ್ತು. ಅಲ್ಲದೆ ಹಲವರು ಇವರನ್ನು ಆ ಕುರಿತು ಟೀಕೆ ಕೂಡ ಮಾಡಿದ್ದರು. ಆದರೆ ಅದಕ್ಕೆ ಈಗ ಕಿಶೋರ್ ಸ್ಪಷ್ಟನೆ ನೀಡಿದ್ದಾರೆ ಆ ಪ್ರಕಾರ ಅವರ ಮಾತು ಹೀಗಿತ್ತು. ನಾನು ಹೇಳಿದ್ದು ಇಷ್ಟೇ ಕೆಜಿಎಫ್ ನನ್ನ ಟೆಸ್ಟ್ ಸಿನಿಮಾ ಅಲ್ಲ ನಾನಿನ್ನೂ ಅದನ್ನು ನೋಡಿಲ್ಲ ಎಂದು ಅದರ ಅರ್ಥ.

ಸಿನಿಮಾ ಚೆನ್ನಾಗಿಲ್ಲ ಎಂದು ಅಲ್ಲ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಅವನ ಅಭಿವ್ಯಕ್ತಿ ಬೇರೆ ರೀತಿ ಇರುತ್ತದೆ, ಅವರವರ ಆಸೆಗೆ ತಕ್ಕ ಹಾಗೆ ಅವರವರು ಕೆಲಸ ಮಾಡುತ್ತಾರೆ. ನನಗೆ ಗೊತ್ತು ಕೆಜಿಎಫ್ ಯಾವ ಝೋನರ್ರ್ ಸಿನಿಮಾ ಎಂದು, ಇಷ್ಟ ಇಲ್ಲ ಎನ್ನುವ ಕಾರಣಕ್ಕೆ ನಾನು ನೋಡಿಲ್ಲ ಯಾರನ್ನು ಸಹ ಬಲವಂತವಾಗಿ ಸಿನಿಮಾ ನೋಡಲೇಬೇಕು ಎಂದು ಕೂರಿಸಲು ಸಾಧ್ಯವಿಲ್ಲ.

ಸಿನಿಮಾ ಚೆನ್ನಾಗಿದೆ ಅಂತ ಅಷ್ಟೇ ಪ್ರಚಾರ ಮಾಡಬಹುದು ಹೊರತು ನೋಡಲೇಬೇಕು ಎನ್ನುವ ನಿಯಮ ಇಲ್ಲ. ಅದನ್ನೇ ನಾನು ಸಹ ಹೇಳಿದ್ದು ನಾನು ಕೆಜಿಎಫ್ ಸಿನಿಮಾವನ್ನೇ ಉದ್ದೇಶವನ್ನಾಗಿಟ್ಟುಕೊಂಡು ಹೇಳಲಿಲ್ಲ. ಉದಾಹರಣೆ ಕೊಟ್ಟು ಮಾತನಾಡಿದ್ದಾರೆ. ಆದರೆ ಅದು ಇಂಗ್ಲೀಷ್ ಇಂಟರ್ವ್ಯೂ ಆಗಿದ್ದ ಕಾರಣ ಅಪಾರ್ಥವಾಗಿ ಹೀಗಾಯ್ತು. ನನಗೆ ಕನ್ನಡದಲ್ಲಿ ಬಹಳ ಕಂಟ್ರೋಲ್ ಇದೆ ಆದರೆ ಇಂಗ್ಲಿಷ್ ಅಲ್ಲಿ ಈಗಲೂ ಮಾತನಾಡಲು ಬೆವರುತ್ತೇನೆ.

ಅದನ್ನು ನಾನು ರಶ್ಮಿಕ ಮಂದಣ್ಣ ಅವರ ವಿಷಯ ಬಂದಾಗ ರಶ್ಮಿಕ ಗಾಗೆ ಉದಾಹರಣೆ ಕೊಡಲು ಹೇಳಿದ್ದೆ ಹೊರತು ಮತ್ತೇನು ಇಲ್ಲ, ರಶ್ಮಿಕಾ ಅವರನ್ನು ಬ್ಯಾನ್ ಮಾಡುವ ವಿಚಾರಕ್ಕೆ ಅದು ಬಂತು ಯಾರನ್ನು ಯಾರು ಸಹ ಬ್ಯಾನ್ ಮಾಡಲು ಸಾಧ್ಯವಿಲ್ಲ ಅದೊಂದು ವಿವಾದ ಅಷ್ಟೇ ಎಂದು ಹೇಳಿದ್ದಾರೆ. ಇದರಿಂದ ಮುಂದುವರೆದು ಅವರು ಬದುಕುತ್ತಿರುವ ಸರಳ ಜೀವನದ ಕುರಿತು ಮತ್ತು ಅದಕ್ಕೆ ಸ್ಪೂರ್ತಿ ಯಾವುದರಿಂದ ಉಂಟಾಯಿತು ಎನ್ನುವುದರ ಕುರಿತು ಮತ್ತು ಕಾಂತರಾ ಚಿತ್ರದ ಪಾತ್ರ ಹಾಗೂ ಅದರ ಮುಂದುವರಿದ ಭಾಗದ ಕುರಿತು ಸಹ ಮಾತನಾಡಿದ್ದಾರೆ. ಇವಗಳ ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ

ತಿಂಗಳಿಗೆ ಮೇಕಪ್ ಖರ್ಚಿಗೆ 1 ಲಕ್ಷ ಬೇಕು. ಹಾಗಾದ್ರೆ ಎಷ್ಟೊತ್ತು ಮೇಕಪ್ ಮಾಡ್ಕೋತಿರ, ತಿಂಗಳಿಗೆ ಎಷ್ಟು ದುಡಿತೀರ ಅಂತ ಕೇಳಿದ್ಕೆ ನಟಿ ಧನುಶ್ರೀ ಕೊಟ್ಟ ಉತ್ತರವೇನು ಗೊತ್ತ.?

 

ಧನುಶ್ರೀ ಅವರು ಟಿಕ್ ಟಾಕ್ ಇಂದ ಬೆಳೆದ ಪ್ರತಿಭೆ. ಯಾಕೆಂದರೆ ಇವರು ಐಟಿ ಕಂಪನಿಯ ಉದ್ಯೋಗಿ ಆಗಿದ್ದ ಇವರು ಆ ಕೆಲಸ ತೊರೆದು ಫುಲ್ ಟೈಮ್ ಸೋಶಿಯಲ್ ಇನ್ಫ್ಲುಯೆನ್ಸ್ ಆಗಿ ತೊಡಗಿಸಿಕೊಂಡಿದ್ದು ಟಿಕ್ ಟಾಕ್ ಮೂಲಕ. ಟಿಕ್ ಟಾಕ್ ವಿಡಿಯೋಗಳನ್ನು ಮಾಡುತ್ತಲೇ ಫೇಮಸ್ ಆಗಿ ಇಂದು ಸಿನಿಮಾ ಮಾಡುವವರೆಗೂ ತಲುಪಿರುವ ಧನುಶ್ರೀ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಫೇಮಸ್.

ಇದೇ ಕಾರಣದಿಂದ ಬಿಗ್ ಬಾಸ್ ಅವಕಾಶ ಗಿಟ್ಟಿಸಿಕೊಂಡಿದ್ದ ಇವರು ಬಿಗ್ ಬಾಸ್ ಸೀಸನ್ ಎಂಟರ ಕಂಟೆಸ್ಟೆಂಟ್ ಆಗಿದ್ದರು. ಆದರೆ ಮೊದಲನೇ ವಾರಕ್ಕೆ ಮನೆಯಿಂದ ಔಟ್ ಆಗಿ ಬಿಟ್ಟರು. ಬಿಗ್ ಬಾಸ್ ಇಂದ ಬಂದ ಮೇಲೆ ಅವರಿಗೆ ಸಿನಿಮಾಗಳಿಂದ ಆಫರ್ ಬರೆದಿದ್ದು ಅವರ ಮೊದಲ ಸಿನಿಮಾ ಆದ ಒಂದೊಳ್ಳೆ ಲವ್ ಸ್ಟೋರಿ ರಿಲೀಸ್ ಹಂತಕ್ಕೆ ಬಂದು ತಲುಪಿದೆ. ಇದರ ಕುರಿತ ಸಂದರ್ಶನದಲ್ಲಿ ಧನುಶ್ರೀ ಭಾಗಿಯಾಗಿದ್ದಾರೆ.

ಈ ಸಂದರ್ಶನದಲ್ಲಿ ಸಿನಿಮಾ ಕುರಿತಂತೆ ಹಾಗೂ ವೈಯಕ್ತಿಕ ಜೀವನದ ಕುರಿತಂತೆ ಹಾಗೂ ಅವರ ವೀಡಿಯೋಗಳ ಬಗ್ಗೆ ಕೂಡ ಪ್ರಶ್ನೆ ಕೇಳಲಾಗಿದೆ. ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ ಇವರು ಅವರ ಸ್ನೇಹಿತ ಸಮೀರ್ ಬಗ್ಗೆ ಕೇಳಿದ ಪ್ರಶ್ನೆಗೆ ಸಕ್ಕತ್ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ನಿರೂಪಕರು ಎಲ್ಲರೂ ನಿಮ್ಮ ಹಾಗೂ ಸಮೀರ್ ಅವರ ಸಂಬಂಧದ ಬಗ್ಗೆ ಪಾಸಿಟಿವ್ ಹಾಗೂ ನೆಗೆಟಿವ್ ಆಗೂ ಮಾತನಾಡುತ್ತಿದ್ದಾರೆ.

ಹೆಚ್ಚಿನ ಜನರು ನೀವಿಬ್ಬರೂ ಲವರ್ಸ್ ನೀವಿಬ್ಬರೂ ಮದುವೆ ಆಗುತ್ತೀರಾ ಎಂದು ಊಹೆ ಮಾಡಿಕೊಂಡಿದ್ದಾರೆ ಅದು ನಿಜ ನಾ ಎಂದು ಕೇಳಿದ್ದಾರೆ. ಅದಕ್ಕೆ ಧನುಶ್ರೀ ಅವರು ಆ ರೀತಿ ಏನು ಇಲ್ಲ ನಾವಿಬ್ಬರು ಪ್ರೊಫೆಷನಲ್ ಪಾರ್ಟ್ನರ್ ಅಷ್ಟೇ ನನಗೆ ನನ್ನ ವ್ಲೋಗ್ ಗಳಿಗೆ ಎಡಿಟಿಂಗ್ ಮಾಡಲು ಹೇಳಿಕೊಟ್ಟಿದ್ದು ಸಮೀರ್. ಅವನಿಂದ ನಾನು ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ ಹಾಗೂ ನಾನು ಸಹ ಅವನಿಗೆ ಸೇಮ್ ಫೀಲ್ಡ್ ಅಲ್ಲಿ ಇರುವುದರಿಂದ ಕೆಲವು ವಿಷಯಗಳನ್ನು ಹಂಚಿಕೊಳ್ಳುತ್ತೇನೆ.

ಹೀಗಾಗಿ ಇಬ್ಬರು ಜೊತೆ ಕಾಣಿಸಿಕೊಳ್ಳುತ್ತೇವೆ ಹೊರತು ಆ ರೀತಿ ಏನು ಇಲ್ಲ ಎಂದು ಬಹಳ ನೇರವಾಗಿ ಉತ್ತರಿಸಿದ್ದಾರೆ. ಮುಂದುವರೆದು ಎಲ್ಲರೂ ಸಹ ಧನುಶ್ರೀ ಅವರನ್ನು ಅವರ ಮೇಕಪ್ ಬಗ್ಗೆ ಟ್ರೋಲ್ ಮಾಡುತ್ತಾರೆ ಇದಕ್ಕೂ ಸಹ ಉತ್ತರ ಕೊಟ್ಟಿದ್ದು ನಿರೂಪಕರು ಮೇಕಪ್ ಮಾಡಿಕೊಳ್ಳಲು ಮಿನಿಮಮ್ ಎಷ್ಟು ಸಮಯ ತೆಗೆದುಕೊಳ್ಳುತ್ತೀರಾ ಎಂದು ಕೇಳಿದ್ದಕ್ಕೆ ಅದು ಡಿಪೆಂಡ್ಸ್ ಆಗುತ್ತದೆ ಎಂದು ಉತ್ತರ ಕೊಟ್ಟಿದ್ದಾರೆ.

ಮುಂದೆ ನಿಮ್ಮಿಂದ ಕೂಡ ಒಂದೊಳ್ಳೆ ಲವ್ ಸ್ಟೋರಿ ಎಕ್ಸ್ಪೆಕ್ಟ್ ಮಾಡಬಹುದಾ ಎಂದು ಕೇಳಿದ ಪ್ರಶ್ನೆಗೆ ನೋಡೋಣ ಎಂದು ಉತ್ತರ ಕೊಟ್ಟಿದ್ದಾರೆ. ನನಗೆ ನನ್ನದೇ ಆದ ಜವಾಬ್ದಾರಿಗಳಿದೆ. ನಾನು ಹಳ್ಳಿಯಿಂದ ಬಂದು ಸಾಧಿಸಲು ಕನಸು ಕಾಣುತ್ತಿರುವ ಹುಡುಗಿ. ನನಗೆ ಸಿಟಿಯಲ್ಲಿ ಸ್ವಂತ ಮನೆ ಇಲ್ಲ ನನ್ನ ಬಾಡಿಗೆ ಕಟ್ಟಿಕೊಂಡು ಹೆತ್ತವರ ಖರ್ಚು ನೋಡಿಕೊಂಡು ನನ್ನ ಲೋನ್ ಗಳನ್ನು ನೋಡಿಕೊಂಡು ಜೀವನ ನಿರ್ವಹಣೆ ಮಾಡುವುದರ ಜೊತೆಗೆ ಅದಕ್ಕಾಗಿಯೇ ಬದುಕಬೇಕು.

ಇಷ್ಟೆಲ್ಲ ಬಿಝಿ ಇರುವಾಗ ಯಾವುದೋ ಒಂದು ಹುಡುಗನ ಹಿಂದೆ ತಿರುಗುತ್ತಾ ಕುಳಿತರೆ ಇದೆಲ್ಲ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ನನಗೆ ನನ್ನ ಮೊಬೈಲ್ ದೇವರಿದ್ದಂತೆ ಬೆಳಗ್ಗೆ ಎದ್ದ ತಕ್ಷಣ ಎಲ್ಲರೂ ದೇವರ ಫೋಟೋ ನೋಡುತ್ತಾರೆ. ಆದರೆ ನಾನು ನನ್ನ ಮೊಬೈಲ್ ನೋಡುತ್ತೇನೆ. ಇಂದು ನಾನು ಹೆಸರು ಮಾಡಿದರೂ ದುಡ್ಡು ಮಾಡುತ್ತಿದ್ದರೂ ಅದು ನನ್ನ ಮೊಬೈಲ್ ಇಂದಲೇ ಸಾಧ್ಯವಾಯಿತು. ಹಾಗಾಗಿ ನಾನು ದೇವರಷ್ಟೇ ಮೊಬೈಲ್ ಅನ್ನು ಗೌರವಿಸುತ್ತೇನೆ ಪ್ರೀತಿಸುತ್ತೇನೆ ಎನ್ನುವ ವಿಷಯವನ್ನೂ ಹೇಳಿಕೊಂಡಿದ್ದಾರೆ.

ನಟಿ ಭಾಮ ದಾಂಪತ್ಯದಲ್ಲಿ ಬಿರುಕು, ಮುದ್ದಾದ ಮಗು ಬಿಟ್ಟು ಗಂಡನಿಗೆ ವಿ.ಚ್ಛೇ.ದ.ನ ನೀಡುತ್ತಿರುವುದೇಕೆ ಗೊತ್ತ.?

 

ಪತಿಯಿಂದ ದೂರವಾಗಿದ್ದಾರ ಗಣೇಶ್ ಜೊತೆ ನಟಿಸಿದ್ದ ಈ ಮಲಯಾಳಿ ನಟಿ.? ಶೈಲೂ ಸಿನಿಮಾದ ಮೂಲಕ ಕನ್ನಡಕ್ಕೆ ಎಂಟ್ರಿ ಆಗಿ 2008ರಿಂದ ಶೈಲೂ ಎಂದೇ ಅನ್ವರ್ಥ ಹೆಸರಿನಿಂದ ಕರೆಸಿಕೊಳ್ಳುತ್ತಿರುವ ಭಾಮ ಅವರು ಮೂಲತಃ ಮಲಯಾಳಂ ನಟಿ. ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಲ್ಲಿ ಬಹಳ ಬೇಡಿಕೆ ಅಲ್ಲಿದ್ದ ಈ ನಟಿ ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್, ಗೋಲ್ಡನ್ ಸ್ಟಾರ್ ಗಣೇಶ್, ಶ್ರೀನಗರ ಕಿಟ್ಟಿ, ಮಿತ್ರ ಇನ್ನು ಮುಂತಾದವರಿಗೆ ನಾಯಕನಟಿಯಾಗಿ ಅಭಿನಯಿಸಿದ್ದಾರೆ.

ಗೋಲ್ಡನ್ ಸ್ಟಾರ್ ಜೊತೆ ಇವರು ನಟಿಸಿದ್ದ ಶೈಲೂ ಸಿನಿಮಾ ಬಹಳ ಹಿಟ್ ಆಗಿತ್ತು ಆನಂತರ ಅವರು ಆಟೋ ರಾಜ ಸಿನಿಮಾದಲ್ಲೂ ಕೂಡ ಗಣೇಶ್ ಅವರಿಗೆ ಜೋಡಿ ಆಗಿದ್ದರು. ಮುದ್ದುಮುಖದ ಈ ಚೆಲುವೆ 2020ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಅರುಣ್ ಎನ್ನುವ ಉದ್ಯಮಿಯನ್ನು ಕೈಹಿಡಿದ ಭಾಮ ಅವರು ನಂತರ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿದ್ದರು.

ಆ ಬಗ್ಗೆ ಎಲ್ಲೂ ಕೂಡ ಅಧಿಕೃತವಾಗಿ ಘೋಷಣೆ ಕೊಟ್ಟು ದೂರ ಆಗದೆ ಇದ್ದರೂ ಆಕೆ ಮದುವೆ ಆದಾಗಿನಿಂದ ಯಾವ ಸಿನಿಮಾದಲ್ಲಿ ಕೂಡ ನಟನೆ ಮಾಡಿಲ್ಲ. ಇದರಿಂದ ಅವರು ಕೆರಿಯರ್ ಕೊನೆಗೊಳಿಸಿ ಪರ್ಸನಲ್ ಲೈಫ್ ಗೆ ಸ್ಪೇಸ್ ಕೊಡುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಎರಡು ವರ್ಷದ ಮುದ್ದಾದ ಹೆಣ್ಣು ಮಗಳನ್ನು ಕೂಡ ಪಡೆದಿರುವ ಭಾಮ ಅವರು ಪತಿಯ ಜೊತೆ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದರು.

ಆದರೆ ಇತ್ತೀಚೆಗೆ ಅವರು ನಡೆದುಕೊಂಡಿರುವ ರೀತಿಯಿಂದ ಅವರ ದಾಂಪತ್ಯದಲ್ಲಿ ಎಲ್ಲಾ ಸರಿ ಇದೆಯಾ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಅದೇನೆಂದರೆ ಭಾಮಾ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿ ಇದ್ದರು ಸದಾ ಪತಿಯ ಜೊತೆಗೆ ಔಟಿಂಗ್ ಹೋಗುತ್ತಿದ್ದ ಫೋಟೋಗಳು, ಪಿಕ್ನಿಕ್ ವೆಕೇಷನ್ ಗಳ ವಿಡಿಯೋಗಳು ಹಾಗೂ ಮಗಳ ಜೊತೆಗಿನ ಫೋಟೋಗಳು ಮುಂತಾದವುಗಳನ್ನೆಲ್ಲಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದರು.

ಆದರೆ ಇತ್ತೀಚೆಗೆ ಆಕೆ ಯಾವುದೇ ಫೋಟೋವನ್ನು ಕೂಡ ಅಪ್ಲೋಡ್ ಮಾಡಿಲ್ಲ. ಜೊತೆಗೆ ಮೊದಲ ವರ್ಷದಲ್ಲಿ ಮಗಳ ಹುಟ್ಟು ಹಬ್ಬವನ್ನು ಸಕ್ಕತ್ ಗ್ರಾಂಡ್ ಆಗಿ ಆಚರಿಸಿ ಆ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದ ಭಾಮ ಅವರು ಈ ವರ್ಷ ಮಗಳ ಹುಟ್ಟು ಹಬ್ಬವನ್ನು ಕೂಡ ಬಹಳ ಸರಳವಾಗಿ ಆಚರಿಸಿದ ರೀತಿ ಕಾಣುತ್ತದೆ. ಒಂದೇ ಒಂದು ಫೋಟೋ ಕೂಡ ಮಗಳ ಎರಡನೇ ವರ್ಷದ ಹುಟ್ಟು ಹಬ್ಬದ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಲ್ಲ.

ಅಲ್ಲದೆ ಹಿಂದೆ ತನ್ನ ಪತಿ ಜೊತೆಗಿದ್ದ ಫೋಟೋಗಳನ್ನು ಹಂಚಿಕೊಂಡಿದ್ದ ಭಾಮ ಅವರು ಒಂದೊಂದಾಗಿ ಎಲ್ಲವನ್ನು ಕೂಡ ಡಿಲೀಟ್ ಮಾಡಿದ್ದಾರೆ. ಇದರಿಂದ ವೈವಾಹಿಕ ಜೀವನದಲ್ಲಿ ಏರುಪೇರು ಆಗಿದೆ ಅನ್ನುವ ಅನುಮಾನ ನೆಟ್ಟಿಗರಲ್ಲಿ ಹುಟ್ಟುಕೊಂಡಿದೆ. ಆದರೆ ಸ್ವತಃ ಭಾಮ ಅವರೇ ಹೇಳಿಕೆ ಕೊಡುವ ತನಕ ಇದನ್ನು ಕೇವಲ ಊಹಾಪೋಹ ಎಂದು ಅಂದಾಜಿಸಬಹುದು.

ಅಷ್ಟೇ ಆಕೆ ಯಾವ ಕಾರಣಕ್ಕಾಗಿ ಆ ರೀತಿ ಮಾಡಿದ್ದಾರೆ ಏನೋ ಗೊತ್ತಿಲ್ಲ. ಆದರೆ ನಟಿಯ ದಾಂಪತ್ಯ ಬದುಕು ಇಷ್ಟು ಬೇಗ ಮುಗಿಯುವುದು ಬೇಡ ಎಂದೇ ಅಭಿಮಾನಿಗಳಾಗಿ ನಾವೆಲ್ಲ ಬಯಸುವುದು. ಆದಷ್ಟು ಬೇಗ ತಮ್ಮ ನಡುವೆ ಏನಾದರೂ ಮನಸ್ತಾಪ ಇದ್ದರೆ ಸರಿ ಮಾಡಿಕೊಂಡು ಖುಷಿ ಖುಷಿಯಿಂದ ಮುದ್ದು ಮಗಳ ಹಾಗೂ ಪತಿಯ ಜೊತೆ ಭಾಮ ಬದುಕುವಂತಾಗಲಿ ಎಂದು ಹರಸೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ದೊಡ್ಮನೆಯ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ, ಇನ್ಮುಂದೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಾಜವಂಶದ್ದೇ ಕಾರುಬಾರು, ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ.

ಕನ್ನಡ ಸಿನಿಮಾ ಇಂಡಸ್ಟ್ರಿಗೆ ಭದ್ರ ಬುನಾದಿ ಹಾಕಿಕೊಟ್ಟ ಡಾಕ್ಟರ್ ರಾಜಕುಮಾರ್ ಅವರ ಕುಟುಂಬದ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ, ಇಂದು ನಮ್ಮ ಇಂಡಸ್ಟ್ರಿ ಬಗ್ಗೆ ಇಂಟರ್ನ್ಯಾಷನಲ್ ಮಟ್ಟದಲ್ಲಿ ಮಾತುಕತೆ ಆಗುತ್ತಿದೆ ಎಂದರೆ ಅದಕ್ಕೆ ಆರಂಭಿಕ ದಿನಗಳಲ್ಲಿ ಹೆಗಲುಕೊಟ್ಟು ಸಾಥ್ ನೀಡಿದ್ದೆ ಡಾಕ್ಟರ್ ರಾಜಕುಮಾರ್ ಹಾಗೂ ಅವರ ಕುಟುಂಬ. ಇದೀಗ ಮೂರು ತಲೆಮಾರಿನ ಅವರ ಕುಟುಂಬದ ಕಲಾವಿದರು ಚಿತ್ರರಂಗಕ್ಕೆ ಬರುತ್ತಿದ್ದಾರೆ.

ಡಾಕ್ಟರ್ ರಾಜ್ ಕುಮಾರ್ ಅವರ ತಂದೆಯು ಸಹ ಕಲಾವಿದರಾಗಿದ್ದು ನಾಟಕಗಳಲ್ಲಿ ಅಭಿನಯಿಸಿದ್ದರು. ನಂತರ ರಾಜಕುಮಾರ್ ಅವರ ಸಹ ನಾಟಕಗಳಿಂದ ಸಿನಿಮಾ ರಂಗಕ್ಕೆ ಬಂದು ಅಪೂರ್ವ ಸಾಧನೆಯನ್ನು ಮಾಡಿದರು. ರಾಜಕುಮಾರ್ ಅವರ ಮಕ್ಕಳುಗಳಲ್ಲಿ ಶಿವಣ್ಣ, ರಾಘಣ್ಣ ಹಾಗೂ ಪುನೀತ್ ಅವರು ಸಹ ಸೂಪರ್ ಸ್ಟಾರ್ಗಳಾಗಿ ಕನ್ನಡ ಚಿತ್ರರಂಗವನ್ನು ಆಳಿದರು.

ಪುನೀತ್ ಅವರು ಪವರ್ ಸ್ಟಾರ್ ಆದರೆ ಶಿವಣ್ಣ ಅವರು 60ರ ಹರೆಯದಲ್ಲೂ ಕೂಡ ಬೇಡಿಕೆ ಉಳಿಸಿಕೊಂಡಿದ್ದಾರೆ. ಇನ್ನು ರಾಜ್ ಕುಮಾರ್ ಅವರ ಮೊಮ್ಮಕ್ಕಳ ವಿಷಯದಲ್ಲಿ ಹೇಳುವುದಾದರೆ ಶಿವಣ್ಣ ಅವರ ಪುತ್ರಿ ನಿವೇದಿತ ಈಗಾಗಲೇ ಅಪ್ಪನೊಂದಿಗೆ ಬಾಲನಟಿಯಾಗಿ ಅಭಿನಯಿಸಿ ಈಗ ವೆಬ್ ಸೀರೀಸ್ ಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಘಣ್ಣನ ಮಕ್ಕಳಾದ ಯುವರಾಜ್ ಕುಮಾರ್ ಹಾಗೂ ವಿನಯ್ ರಾಜಕುಮಾರ್ ಅವರಲ್ಲಿ ವಿನಯ್ ರಾಜಕುಮಾರ್ ಅವರು ರನ್ ಆಂಟೋನಿ, ಸಿದ್ದಾರ್ಥ ಮುಂತಾದ ಕಂಟೆಂಟ್ ಒರಿಯೆಂಟೆಡ್ ಸಿನಿಮಾಗಳನ್ನು ಕೊಟ್ಟು ಕನ್ನಡದಲ್ಲಿ ಭರವಸೆಯ ನಾಯಕ ಎನಿಸಿಕೊಂಡಿದ್ದಾರೆ.

ಯುವರಾಜ್ ಕುಮಾರ್ ಸಹ ಅದ್ದೂರಿಯಾಗಿ ಒಂದೊಳ್ಳೆ ಸಿನಿಮಾ ಮೂಲಕ ಲಾಂಚ್ ಆಗುತ್ತಿದ್ದರೆ ಅದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರ ಮಕ್ಕಳು ತೀರ ಚಿಕ್ಕವರಾಗಿರುವುದರಿಂದ ಇನ್ನೂ ಶಿಕ್ಷಣ ಪಡೆಯುತ್ತಿದ್ದಾರೆ ಇನ್ನು ಮಗಳು ಪೂರ್ಣಿಮ ಹಾಗೂ ರಾಮಕುಮಾರ್ ಮಕ್ಕಳಾದ ಪುತ್ರಿ ಧನ್ಯ ರಾಮ್ ಕುಮಾರ್ ಹಾಗೂ ಪುತ್ರ ಧೀರನ್ ರಾಮ್ ಕುಮಾರ್ ಅವರು ಸಹ ನಾಯಕಿ ಆಗಿ ನಾಯಕ ಆಗಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದಾರೆ.

ಇದೀಗ ಮತ್ತೊಬ್ಬ ಪುತ್ರಿ ಯಾದ ಲಕ್ಷ್ಮಿ ಹಾಗೂ ಅಳಿಯ ಗೋವಿಂದರಾಜು ಅವರ ಪುತ್ರನ ಆಗಮನದ ಬಗ್ಗೆ ಎಲ್ಲೆಡೆ ನಿರೀಕ್ಷೆ ಇತ್ತು. ಮೊದಲ ಬಾರಿಗೆ A2 ಎನ್ನುವ ಯೂಟ್ಯೂಬ್ ಚಾನೆಲ್ ಗೆ ಇಂಟರ್ವ್ಯೂ ಕೊಡುವ ಮೂಲಕ ಷಣ್ಮುಖ ಗೋವಿಂದ ರಾಜ್ ಅವರು ತಾವು ಸಹ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಈಗಾಗಲೇ ಸದ್ದಿಲ್ಲದೆ ಸಿನಿಮಾ ಶೂಟಿಂಗ್ ಕೂಡ ನಡೆಯುತ್ತಿದೆ. ತಮ್ಮ ಕುಟುಂಬದವರಿಗೆ ಇರುವ ಲೇಡಿಲಕ್ ನಂಬಿಕೆ ಬಗ್ಗೆ ಮಾತನಾಡಿದ ಷಣ್ಮುಖ ಗೋವಿಂದ ಅವರು ನಮ್ಮ ಮಾಮಂದಿರು ಹಾಗೂ ಕುಟುಂಬದಲ್ಲಿ ಅನೇಕರು ಮದುವೆಯಾದ ಬಳಿಕ ಸ್ಟಾರ್ ಗಳಾಗಿದ್ದಾರೆ. ನನಗೂ ಆ ನಂಬಿಕೆ ಇದೆ. ನನಗೆ ಆಸೆ ಇತ್ತು ಕನಸಿತ್ತು ಈಗ ನಿರ್ದೇಶಕರ ಭರವಸೆಯಿಂದ ಪ್ರಯತ್ನ ಪಟ್ಟಿದ್ದೇನೆ ಎಂದು ತಮ್ಮ ಮೊದಲ ಚಿತ್ರದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡ ಚಲನಚಿತ್ರದ ನಿರ್ದೇಶಕ ಆರ್ ಅಶೋಕ್ ಹಾಗೂ ನಿರ್ಮಾಪಕರಾದ ಮಾದೇಶ ಅವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಮುಂದಿನ ಚಿತ್ರದಲ್ಲಿ ಷಣ್ಮುಗ ಗೋವಿಂದ ರಾಜ್ ಅವರೇ ಹೀರೋ ಆಗಿದ್ದಾರೆ. ಡೈರೆಕ್ಟರ್ ಅವರು ಈ ಕಥೆಗೆ ಷಣ್ಮುಖ ಅವರೇ ಹೋಲುತ್ತಾರೆ ಎನ್ನುವ ಕಾರಣದಿಂದ ಅವರನ್ನು ಒಪ್ಪಿಸಿದ್ದಾರಂತೆ ಮತ್ತು ಎಲ್ಲರೂ ಷಣ್ಮುಖ ಅವರನ್ನು ರಾಘಣ್ಣನ ರೀತಿ ಕಾಣುತ್ತೀರ ಎಂದು ಹೇಳುತ್ತಾರಂತೆ.

ಚಿತ್ರರಂಗ ಎಲ್ಲರಿಗೂ ಕೈಬಿಸಿ ಕಾಯುತ್ತದೆ, ಆದರೆ ಟ್ಯಾಲೆಂಟ್ ಇದ್ದವರಷ್ಟೇ ಕೊನೆವರೆಗೂ ಇದನ್ನು ಆಳುತ್ತಾರೆ ಈಗ ಷಣ್ಮುಖ ಗೋವಿಂದ ಅವರ ಅದೃಷ್ಟ ಹೇಗಿದೆ ಎನ್ನುವ ಪರೀಕ್ಷೆ ನಡೆಯುತ್ತಿದೆ ಅವರಿಗೆ ಶುಭವಾಗಲಿ ಎಂದು ಹಾರೈಸೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.