Home Blog Page 296

Trail post to check now oct 19 2022

0

Hi this is just for testing

ಕಾಂತಾರ ಸಿನಿಮಾ ಬಜೆಟ್ ಬಗ್ಗೆ ಶಾ.ಕಿಂ.ಗ್ ಹೇಳಿಕೆ ಕೊಟ್ಟ ರಿಷಬ್ ಶೆಟ್ಟಿ, ಪ್ಲಾನ್ ಮಾಡಿದ್ದು 7 ಕೋಟಿ ಆದ್ರೆ ಖರ್ಚು ಆಗಿದ್ದು ಎಷ್ಟು ಕೋಟಿ ಗೊತ್ತಾ.?

ಇಂದು ಕನ್ನಡ ಸಿನಿಮಾಗಳಲ್ಲಿ ಬಹುಬೇಗ ನೂರು ಕೋಟಿ ತಲುಪಿದ ಸಿನಿಮಾಗಳ ಹೆಸರಿನ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಕಾಂತಾರ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಪ್ರತಿದಿನಕ್ಕೊಂದು ಹೊಸ ದಾಖಲೆ ಬರೆಯುತ್ತಿದೆ. ಬಹುದೊಡ್ಡ ಬಜೆಟ್ ನ ಸಿನಿಮಾಗಳು ಈ ರೀತಿ ದೊಡ್ಡ ಕಲೆಕ್ಷನ್ ಮಾಡಿ ಹೆಸರು ಮಾಡುತ್ತಿದ್ದವು ಆದರೆ ಕಾಂತರಾ ರೀತಿಯ ಸಿಂಪಲ್ ಸಿನಿಮಾ ಇಷ್ಟು ದೊಡ್ಡ ಹೆಸರು ಮಾಡಿ ಇಂದು ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ತೆರೆ ಮೇಲೆ ರಾಜಾಜಿಸುತ್ತಿದೆ. ಕನ್ನಡಿಗರ ಹೆಮ್ಮೆ ಆಗಿರುವ ಕಾಂತಾರ ಸಿನಿಮಾದ ಸಿನಿಟೋಗ್ರಫಿ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದು ಕಾಂತರಾ ಸಿನಿಮಾದ ದೃಶ್ಯ ವೈಭವ ಕಣ್ಣು ಕಟ್ಟುವಂತೆ ಟೀಮ್ ಕಟ್ಟಿಕೊಟ್ಟಿದೆ. ಈಗ ಎಲ್ಲರ ಬಾಯಿಯಲ್ಲೂ ಓಡುತ್ತಿರುವ ಮತ್ತೊಂದು ವಿಷಯ ಏನೆಂದರೆ ಕಾಂತಾರ ಸಿನಿಮಾಗೆ ಒಟ್ಟು ಎಷ್ಟು ಖರ್ಚಾಗಿರಬಹುದು ಎಂದು.

ಈ ಬಗ್ಗೆ ಇದುವರೆಗೆ ಎಲ್ಲೂ ಕೂಡ ಸಿನಿಮಾ ತಂಡ ಮಾತನಾಡಿಲ್ಲ ಆದರೆ ಮೊದಲ ಬಾರಿಗೆ ರಿಷಬ್ ಶೆಟ್ಟಿ ಅವರ ತಂದೆ ಈ ಬಗ್ಗೆ ಮಾತನಾಡಿದ್ದು ಕಾಂತರಾದ ಒಟ್ಟು ಬಜೆಟ್ ಎಷ್ಟು ಆಗಿತ್ತು ಎನ್ನುವುದರ ನಿಖರ ಮಾಹಿತಿ ಕೊಟ್ಟಿದ್ದಾರೆ. ಕಾಂತರಾ ಸಿನಿಮಾ ತೆಗೆಯಲು ರಿಷಬ್ ಶೆಟ್ಟಿ ಅವರ ಸ್ವಂತ ಊರಿನಲ್ಲಿಗೆ ಸೆಟ್ ಹಾಕಲಾಗಿತ್ತು ಆದರೆ ಆ ಭಾಗದಲ್ಲಿ ಮಳೆ ಜಾಸ್ತಿ ಆದ ಕಾರಣ ಪೂರ್ತಿ ಸೆಟ್ ಒಂದು ಬಾರಿ ಹಾಳಾಗಿ ಹೋಗಿತ್ತು. ಅಲ್ಲಿ ಹಾಕಿಸಿದ ಮಣ್ಣು ಕೂಡ ಕರಗಿ ಹೋಗಿ ಎಷ್ಟೋ ವೇಳೆ ಸಂಚಾರಕ್ಕೂ ದಕ್ಕೆ ಆಗಿ ರಸ್ತೆಗಳೇ ಮುಚ್ಚಿ ಹೋಗಿತ್ತು ಆಗ ರಸ್ತೆ ಕೂಡ ಸರಿ ಮಾಡಿಸಲು ಚಿತ್ರತಂಡ ಹೆಣಗಾಡಿತ್ತು. ಇದೆಲ್ಲವನ್ನು ಸೇರಿಸಿ ಸಿನಿಮಾಗೆ ಒಟ್ಟು 15 ರಿಂದ 16 ಕೋಟಿ ಖರ್ಚಾಗಿದೆಯಂತೆ ಆದರೆ ಮೊದಲ ಬಾರಿಗೆ ಸಿನಿಮಾವನ್ನು ಹೊಂಬಾಳೆ ಫಿಲಂಸ್ ಅವರ ಬಳಿ ತೆಗೆದುಕೊಂಡು ಹೋದಾಗ ಏಳು ಕೋಟಿ ಅಂದಾಜು ಲೆಕ್ಕ ನೀಡಿದ್ದರಂತೆ ಆದರೆ ಅದರ ಎರಡರಷ್ಟು ಸಿನಿಮಾ ತಂಡ ಈ ಸಿನಿಮಾಕ್ಕಾಗಿ ದುಡ್ಡು ಹಾಕಿದೆ.

ರಿಷಭ್ ಅವರು ಹೊಂಬಾಳೆ ಫಿಲಂಸ್ ಅವರನ್ನು ತಮ್ಮ ಪ್ರಚಾರದ ಪೂರ್ತಿ ಈ ವಿಷಯಕ್ಕಾಗಿ ನೆನೆಸಿಕೊಂಡಿದ್ದಾರೆ ಹೊಂಬಾಳೆ ಫಿಲಂ ಅಂತಹ ಬ್ಯಾನರ್ ಸಿಕ್ಕ ಕಾರಣ ಇಷ್ಟು ಅದ್ಭುತವಾಗಿ ನಾನು ನನ್ನ ಕನಸನ್ನು ಸಾಕಾರಗೊಳಿಸಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ. ಇಂದು ಸಿನಿಮಾ ಬಗ್ಗೆ ಎಲ್ಲರೂ ಕೂಡ ಮಾತನಾಡುತ್ತಿದ್ದು ಜನಸಾಮಾನ್ಯರು ಸೇರಿದಂತೆ ಸೆಲೆಬ್ರಿಟಿಗಳು ಹಾಗೂ ಬೇರೆ ಭಾಷೆಯ ನಿರ್ದೇಶಕರುಗಳ ನಟರು ಕೂಡ ಕನ್ನಡದ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ. ರಿಷಬ್ ಶೆಟ್ಟಿ ಅವರು ಒಬ್ಬ ಭರವಸೆಯ ನಿರ್ದೇಶಕ ಎನ್ನುವುದು ಮತ್ತೆ ಮತ್ತೆ ಪ್ರೂ ಆಗುತ್ತಿದ್ದು ಕಿರಿಕ್ ಪಾರ್ಟಿ ಬೆಲ್ ಬಾಟಮ್ ನಂತರ ಈಗ ಕಾಂತಾರಾ ಇವುಗಳ ನಿರ್ದೇಶನವನ್ನು ಮೆಚ್ಚಿಕೊಂಡು ಅವರ ಹೆಸರಿಗೊಂದು ಸ್ಟಾರ್ ಗಿರಿಯನ್ನು ಸೇರಿಸಲು ಎಲ್ಲರೂ ನಿರ್ಧರಿಸಿದ್ದಾರೆ.

ಪ್ರಶಾಂತ್ ನೀಲ್ ಅವರು ಕಾಂತಾರ ವಿಮರ್ಶೆ ಮಾಡುವಾಗ ಡಿವೈನ್ ಎನ್ನುವ ಪದವನ್ನು ಬಳಸಿ ಹೇಳಿದ್ದರು ಹಾಗಾಗಿ ರಿಷಬ್ ಶೆಟ್ಟಿ ಅವರಿಗೆ ಈ ಹೆಸರು ಸರಿ ಹೊಂದುತ್ತದೆ ಅವರನ್ನು ಇನ್ನು ಮುಂದೆ ಡಿವೈನ್ ಸ್ಟಾರ್ ಎಂದು ಕರೆಯಬೇಕು ಎನ್ನುವ ಮಾತುಕತೆಗಳು ನಡೆಯುತ್ತಿವೆ. ಡಿವೈನ್ ಎನ್ನುವ ಪದವು ದೈವಿಕ ಎನ್ನುವ ಅರ್ಥವನ್ನು ಕೊಡುತ್ತದೆ ಕಾಂತಾರ ಸಿನಿಮಾದ ಕ್ಲೈಮಾಕ್ಸ್ ಅಲ್ಲಿ ರಿಷಬ್ ಶೆಟ್ಟಿ ಅವರು ನಿಜವಾಗಿಯೂ ಗುಳಿಕಾ ದೈವದಂತೆಯೇ ಆರ್ಭಟಿಸಿದ್ದಾರೆ. ಅವರ ಅಭಿನಯ ಕಂಡು ಜನ ನಿಜವಾಗಿಯೂ ದೈವವೇ ಆವಾಹನೆ ಆಗಿತ್ತೇನೋ ಎಂದು ಅಚ್ಚರಿಗೊಂಡಿದ್ದಾರೆ. ಇನ್ನು ಕಾಂತರಾ ಸಿನಿಮಾ ಗೆ 7 ಕೋಟಿ ಬಜೆಟ್ ಹಾಕಲಾಗಿತ್ತು ಆದರೆ ಈ ಸಿನಿಮಾ ಮುಕ್ತಾಯವಾಗುವ ವೇಳೆಗೆ ಇದರ ಬಜೆಟ್ ಎರಡರಷ್ಟು ಹೆಚ್ಚಾಗಿದೆ ಕಾಂತರಾ ಸಿನಿಮಾ ಗೆ 15 ಕೋಟಿ ಖರ್ಚಾಗಿದೆ ಎಂದು ತಿಳಿದುಬಂದಿದೆ.

ಹೊಂಬಾಳೆ ಸಂಸ್ಥೆ 15 ಕೋಟಿ ಬಂಡವಾಳವನ್ನು ಹೂಡಿಕೆ ಮಾಡಿ ಇದೀಗ ಇನ್ನೂರಕ್ಕೂ ಹೆಚ್ಚು ಕೋಟಿ ಹಣವನ್ನು ಲಭಿಸುತ್ತಿದೆ ಕಾಂತಾರ ಸಿನಿಮಾ ಬಿಡುಗಡೆಯಾದ ಕೇವಲ ಎರಡೇ ವಾರಕ್ಕೆ 200 ಕೋಟಿ ಕಲೆಕ್ಷನ್ ಮಾಡಿದೆ ಇದು ಆರಂಭ ಮಾತ್ರ ಕೊನೆಯವರೆಗೂ ಈ ಒಂದು ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತದೆ ಎಂಬುದನ್ನು ಯಾರಿಂದಲೂ ಕೂಡ ಊಹೆ ಮಾಡುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಕಾಂತಾರ ಸಿನಿಮಾದ ಕ್ರೇಜ್ ಇಂಡಿಯಾದಲ್ಲಿ ಅಷ್ಟರ ಮಟ್ಟಿಗೆ ಫೇಮಸ್ ಆಗುತ್ತಿದೆ ಮೊದಲು ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ ಈ ಸಿನಿಮಾ ಇದೀಗ ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲೂ ಕೂಡ ಬಿಡುಗಡೆಯಾಗಿದೆ. ಹಾಗಾಗಿ ಕೆಲವು ಮೂಲಗಳ ಪ್ರಕಾರ 500 ಕೋಟಿ ದಾಟಬಹುದು ಎಂದು ಹೇಳಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಿಮಗೆ ಕಮೆಂಟ್ ಮುಖಾಂತರ ತಿಳಿಸಿ.

ಕಾಂತಾರ ಸಿನಿಮಾದ ಸಕ್ಸಸ್ ನೋಡಿ ಹೊಟ್ಟೆಕಿಚ್ಚು ಪಟ್ರ ಯಶ್.? ಮೀಡಿಯಾ ಮುಂದೆ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಶಾ-ಕ್

ಯಶ್ ಕರ್ನಾಟಕ ಚಿತ್ರರಂಗ ಕಂಡ ಒಬ್ಬ ಸಾಧಕ ಎಂದೇ ಹೇಳಬಹುದು ಆದರೆ ಸಾಧನೆ ಹಾದಿಯಲ್ಲಿ ಅವರಿಗಿದ್ದ ತಾಳ್ಮೆ ವಿನಯತೆ ಮತ್ತು ಸಹಬಾಳ್ವೆಗುಣ ಈಗಲೂ ಇದಿಯಾ ಅನ್ನೋದು ಮಾತ್ರ ಅವರ ಇತ್ತೀಚಿನ ವರ್ತನೆಗಳನ್ನು ನೋಡುತ್ತಿದ್ದರೆ ಪ್ರಶ್ನೆಯಾಗಿಯೇ ಉಳಿದಿದೆ. ಯಶ್ ಅವರು ಒಬ್ಬ ಸಾಮಾನ್ಯ ನಟನಾಗಿ ಅವಕಾಶಗಳಿಗಾಗಿ ಹುಡುಕಾಡುತ್ತಿದ್ದಾಗ ಸಿಗುತ್ತಿದ್ದ ಒಂದೊಂದು ಪಾತ್ರವನ್ನು ಬಹಳ ಗೌರವಿಸುತ್ತಿದ್ದರು ಹಾಗೂ ತನ್ನ ಸಿನಿಮಾಗಳಲ್ಲಿ ಇತರ ಪಾತ್ರಗಳಿಗೂ ಅಷ್ಟೇ ತೆರೆ ಹಂಚಿಕೊಳ್ಳುತ್ತಿದ್ದರು. ಅವರ ಈಗಿನ ಸಿನಿಮಾಗಳಲ್ಲಿ ಅವರ ಡೈಲಾಗ್ ಗಳು ಇತರ ನಟರಗಳಿಗೆ ಟಾಂಟ್ ಮಾಡುವ ರೀತಿ ಇರುತ್ತವೆ.

ಇವರಿಗಾಗಿ ಆ ಡೈಲಾಗ್ ಬರೆಯಲಾಗುತ್ತಿದೆ ಇಲ್ಲ ಅವರೇ ಬರೆಸಿಕೊಳ್ಳುತ್ತಿದ್ದಾರೆಯೇ ಎನ್ನುವಷ್ಟು ಅನುಮಾನ ತರಿಸುತ್ತವೆ ನಾನು ಬರೋವರೆಗೂ ಮಾತ್ರ ಬೇರೆಯವರ ಹವಾ ನಾನು ಬಂದ ಮೇಲೆ ನನ್ನದೇ ಹವಾ ಎಂದು ಮೆರೆದಾಡುವ ಯಶ್ ಅವರು ಸಿನಿಮಾಗಳಲ್ಲಿ ಸಾಲು ಸಾಲು ಸಕ್ಸಸ್ ಕಾಣುತ್ತಿರಬಹುದು ಆದರೆ ಟ್ರೋಲ್ ಮಾಡುವವರಿಂದ ಆಗಾಗ ಕಾಲೆಳಿಸಿಕೊಳ್ಳುತ್ತಿರುವುದು ಕಡಿಮೆ ಆಗಿಲ್ಲ. ಇನ್ನು ವೈಯುಕ್ತಿಕ ವಿಚಾರವಾಗಿ ಬರುವುದಾದರೆ ಯಶ್ ಅವರ ಕುಟುಂಬ ಯಾವಾಗಲೂ ವಿವಾದದಲ್ಲಿ ಸಿಲುಕಿಕೊಳ್ಳುತ್ತದೆ.

ಈ ಹಿಂದೆ ಯಶ್ ಅವರ ತಾಯಿಯ ಮೇಲೆ ಚೀಟಿ ಹಣದ ವಂಚನೆ ಆರೋಪ ಇದ್ದರೆ, ಯಶ್ ಅವರು ಕನ್ನಡದ ನಂಬರ್ ಒನ್ ಸ್ಟಾರ್ ಹೀರೋ ಆದ ಮೇಲೂ ಮಾಡುತ್ತಿರುವ ಎಡವಟ್ಟುಗಳು ಒಂದೆರಡು ಅಲ್ಲ. ಮನೆ ಖಾಲಿ ಮಾಡುವ ವಿಚಾರಕ್ಕೆ ಮನೆ ಮಾಲೀಕರೊಡನೆ ಆದ ಜಗಳ ಹಾಗೂ ಸರಿಯಾಗಿ ಮನೆಗೆ ಬಾಡಿಗೆ ನೀಡದೆ ಮಾಡುತ್ತಿದ್ದ ತೊಂದರೆಯಿಂದ ಹಿಡಿದು ಸ್ವಂತ ಊರಿನಲ್ಲಿ ಜಮೀನು ಖರೀದಿಸಿ ಅಕ್ಕಪಕ್ಕದ ಜಮೀನವರಿಗೆ ರಸ್ತೆ ವಿಚಾರವಾಗಿ ಕೊಟ್ಟ ಕ್ವಾಟಲೆ ಹೀಗೆ ಸಾಲು ಸಾಲು ವಿಚಾರಗಳನ್ನು ಕೆಣಕಬಹುದು. ಇನ್ನು ಸಿನಿಮಾ ಇಂಡಸ್ಟ್ರಿಯ ವಿಚಾರಕ್ಕೆ ಬರುವುದಾದರೆ ಯಶ್ ರಾಕಿ ಬಾಯ್ ಆಗಿ ಕೆಜಿಎಫ್ ಅಲ್ಲಿ ಕಾಣಿಸಿಕೊಂಡ ನಂತರ ಅವರೇ ಭಾರತದಲ್ಲಿ ನಂಬರ್ ಒನ್ ಅಂದುಕೊಂಡು ಬಿಟ್ಟಿದ್ದಾರೆ.

ಕೆಜಿಎಫ್ 2 ಸಕ್ಸಸ್ ಕಂಡ ಮೇಲೆ ಮುಂದಿನ ಸಿನಿಮಾಗಳ ಮೇಲೆ ಸಹಜವಾಗಿ ನಿರೀಕ್ಷೆ ಇರುವ ಕಾರಣ ಸ್ವತಃ ಅವರೇ ಯಾವ ನಿರ್ಧಾರವನ್ನು ತೆಗೆದುಕೊಳ್ಳಲಾಗದಷ್ಟು ಗೊಂದಲದಲ್ಲಿದ್ದಾರೆ ಎನ್ನುವ ಮಾತುಗಳು ಇದ್ದವು. ಈಗ ಹಾಲಿವುಡ್ ಅಲ್ಲಿ ಅದೃಷ್ಟ ಪಡಿಸಿರುವ ಯಶ್ ಅವರು ಕನ್ನಡ ಇಂಡಸ್ಟ್ರಿಯಲ್ಲಿ ಇತರರು ತಮ್ಮಂತೆ ಬೆಳೆಯುತ್ತಿದ್ದಾರೆ ಕನ್ನಡ ಸಿನಿಮಾ ಹೆಸರು ವಿಶ್ವಕ್ಕೆ ತಿಳಿಸುವಷ್ಟು ಸಾಧನೆ ಮಾಡುತ್ತಿದ್ದಾರೆ ಎಂದು ತಿಳಿದಾಗ ಹೇಗೆ ವರ್ತಿಸುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಈ ವಿಡಿಯೋ ಸಿನಿಮಾ ನೋಡಿದ ಬಳಿಕ ಯಶ್ ಅವರು ಮೀಡಿಯಾ ಮುಂದೆ ಕೊಟ್ಟ ಹೇಳಿಕೆ ಆಗಿದೆ ಇದರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಕಾಂತರಾ ಸಿನಿಮಾ ಹಾಗೂ ರಿಷಬ್ ಶೆಟ್ಟಿ ಬಗ್ಗೆ ಈ ರೀತಿ ಹೇಳಿದ್ದಾರೆ.

ಕಾಂತರಾ ಸಿನಿಮಾವನ್ನು ನಾನು ಶಿಳ್ಳೆ ಚಪ್ಪಾಳೆ ಹೊಡೆದುಕೊಂಡು ಬಹಳ ಎಂಜಾಯ್ ಮಾಡುತ್ತಾ ನೋಡಿದೆ. ಈ ಸಿನಿಮಾ ನೋಡಿದ ಬಳಿಕ ರಿಷಬ್ ಶೆಟ್ಟಿ ಅವರನ್ನು ನಾನು ಬಹಳ ಇಷ್ಟಪ ಡುತ್ತೇನೆ, ಗೌರವಿಸುತ್ತೇನೆ. ಇಂತಹ ಒಂದು ಸಿನಿಮಾ ಮಾಡುವುದಕ್ಕೆ ಅವರ ಮನಸ್ಸಿನಲ್ಲಿ ಇರುವ ಸಿನಿಮಾ ಬಗ್ಗೆ ಬದುಕಿನ ಬಗ್ಗೆ ಆಸಕ್ತಿ ಅಲ್ಲಿರುವ ಸೂಕ್ಷ್ಮತೆಗಳನ್ನು ಅರಿತಿರುವ ಜ್ಞಾನ, ಭಾಷೆಯ ಬಗ್ಗೆ ಒಲವು ಇವೆಲ್ಲವೂ ಕಾರಣ. ಇದೆಲ್ಲಾ ಇದ್ದರೆ ಇಂತಹ ಒಂದು ಅದ್ಭುತ ದೃಶ್ಯ ಕಾವ್ಯ ಇಷ್ಟೊಂದು ಸುಂದರವಾಗಿ ತೆರೆ ಮೇಲೆ ತರಲು ಸಾಧ್ಯ ಕಿರಿಕ್ ಪಾರ್ಟಿ ಅಂತ ಸಬ್ಜೆಕ್ಟ್ ತೆಗೆದುಕೊಂಡ ನಿರ್ದೇಶಕ ಈಗ ಈ ರೀತಿ ಸಬ್ಜೆಕ್ಟ್ ಅಲ್ಲೂ ಕೂಡ ಗೆದ್ದಿದ್ದಾರೆ ಎಂದರೆ ಅದಕ್ಕೆ ಅವರ ಕನಸು ಕಾರಣ ಎಂದಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ಕಾಂತಾರ ಸಿನಿಮಾದಲ್ಲಿ ನಟಿಸಲು ರಿಷಬ್ ಶೆಟ್ಟಿಗೆ ಹೊಂಬಾಳೆ ಸಂಸ್ಥೆ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ.? ಸಿನಿಮಾ ಕೋಟಿ ಕೋಟಿ ಲಾಭದಲ್ಲಿದೆ ಹಾಗಾದ್ರೆ ರಿಷಬ್ ಪಡೆದದ್ದು ಎಷ್ಟು ನೋಡಿ.?

ಕಾಂತರಾ ಸಿನಿಮಾ ಕನ್ನಡದಲ್ಲಿ ಒಂದು ಪ್ರಯೋಗಾತ್ಮಕ ಸಿನಿಮಾ ಅಂತಾನೆ ಹೇಳಬಹುದು ನಟ ರಿಷಬ್ ಶೆಟ್ಟಿಯವರು ಈ ಒಂದು ಕಾಂತರಾ ಸಿನಿಮಾದಲ್ಲಿ ಕರಾವಳಿ ಹಾಗೂ ಮಂಗಳೂರಿನ ಭಾಗದ ದೈವರಾದನೆಯ ಕುರಿತು ಬಹಳ ಅಮೋಘವಾಗಿ ಚಿತ್ರಿಕರಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಕೃತಿಯ ಮುಂದೆ ಮಾನವನ ಆಟ ಏನೇ ನಡೆದರೂ ಕೂಡ ಅದು ಕ್ಷಣಿಕ ಅಂತ ಹೇಳಿದ್ದಾರೆ. ಇದರ ಜೊತೆಗೆ ದೈವ ಬಲದ ಮುಂದೆ ಮನುಷ್ಯನ ಬುದ್ಧಿವಂತಿಕೆ ಎಷ್ಟೇ ಇದ್ದರೂ ಕೂಡ ಅದೆಲ್ಲವೂ ಶೂನ್ಯಕ್ಕೆ ಸಮಾನ ಎಂಬುವುದನ್ನು ಈ ಚಿತ್ರದಲ್ಲಿ ಬಹಳ ಅಚ್ಚುಕಟ್ಟಾಗಿ ತೋರಿಸಿಕೊಂಡಿದೆ. ಇನ್ನು ಈ ಸಿನಿಮ ಯಾವ ಮಟ್ಟದಲ್ಲಿ ದಾಖಲೆ ಮಾಡುತ್ತಿದೆ ಅಂದರೆ ನಟ ಯಶ್ ಅವರ ಕೆಜಿಎಫ್ ದಾಖಲೆಗಳನ್ನು ಕೂಡ ಒಂದೊಂದೇ ಬ್ರೇಕ್ ಮಾಡಿಕೊಂಡು ಹೋಗುತ್ತಿರುವುದನ್ನು ನೀವು ನೋಡಬಹುದಾಗಿದೆ.

ಹೌದು ಕಾಂತಾರ ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳ ಕಳೆದು ಹೋಗಿದೆ ಮೊದಲ ವಾರ ಕನ್ನಡದಲ್ಲಿ ಈ ಸಿನಿಮಾ ಪಡೆದುಕೊಂಡಂತಹ ಯಶಸ್ಸು ಕೀರ್ತಿ ಇಲ್ಲಿಯವರೆಗೂ ಬಿಡುಗಡೆಯಾದ ಯಾವ ಕನ್ನಡ ಸಿನಿಮಾ ಪಡೆದುಕೊಂಡಿಲ್ಲ ಅಂತ ಹೇಳಿದರು ಕೂಡ ತಪ್ಪಾಗಲಾರದು. ಇದೀಗ ಕಾಂತರಾ ಸಿನಿಮಾ ಇಡೀ ಭಾರತದಲ್ಲಿ ಎಂತಹ ಹವಾ ಸೃಷ್ಟಿ ಮಾಡಿದೆ ಅಂದರೆ ಬಿಡುಗಡೆಯಾದ ಒಂದೇ ವಾರಕ್ಕೆ ತಮಿಳು ತೆಲುಗು ಮಲಯಾಳಂ ಹಿಂದಿ ಸೇರಿದಂತೆ ಸುಮಾರು ಐದು ಭಾಷೆಯಲ್ಲಿ ಡಬ್ಬಿಂಗ್ ಆಗಿದ್ದು ಎಲ್ಲ ಭಾಷೆಯಲ್ಲಿ ಕೂಡ ತೆರೆದುಕೊಂಡಿದೆ. ಅದರಲ್ಲಿಯೂ ಕೂಡ ಬಾಲಿವುಡ್ ನಲ್ಲಿ ಸುಮಾರು 3500 ಥಿಯೇಟರ್ ನಲ್ಲಿ ಏಕೆ ಕಾಲಕ್ಕೆ ರಿಲೀಸ್ ಆಗಿದ್ದು ಕೋಟಿಗಟ್ಟಲೆ ಹಣವನ್ನು ಸಂಪಾದನೆ ಮಾಡುತ್ತಿದೆ.

ಇನ್ನು ಕಾಂತರಾ ಸಿನಿಮಾವನ್ನು ನೋಡಿ ಖ್ಯಾತ ನಿರ್ದೇಶಕ ಆದಂತಹ ರಾಜಮೌಳಿ, ತಮಿಳುನಾಡಿನ ಕಾರ್ತಿಕ್ ಪ್ರಭಾಸ್ ಅನುಷ್ಕಾ ಶೆಟ್ಟಿ ಹೀಗೆ ದಕ್ಷಿಣ ಭಾರತದ ಸ್ಟಾರ್ ನಟ ನಟಿಯರು ಕೂಡ ಈ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದರೆ. ಅಷ್ಟರ ಮಟ್ಟಿಗೆ ಈ ಸಿನಿಮಾ ಹೆಸರು ಮಾಡುತಿದೆ ಒಂದು ಕಾಲದಲ್ಲಿ ಕನ್ನಡ ಸಿನಿಮಾವನ್ನು ಮುಸಿಯು ನೋಡದಂತಹ ಬಾಲಿವುಡ್ ಟಾಲಿವುಡ್ ಇದೀಗ ಕನ್ನಡ ಸಿನಿಮಾ ಅಂದರೆ ಸಾಕು ಭಯಭೀತರಾಗುತ್ತಿದ್ದಾರೆ. ನಮ್ಮ ಕನ್ನಡಿಗರು ಮತ್ತು ನಮ್ಮ ಕನ್ನಡದಲ್ಲಿ ಇರುವಂತಹ ಟೆಕ್ನಿಷಿಯನ್ ಗಳು ಆ ರೀತಿ ಕೆಲಸ ಮಾಡುತ್ತಿದ್ದಾರೆ. ಇನ್ನು ರಿಷಬ್ ಶೆಟ್ಟಿ ಅಭಿನಯದ ಬಗ್ಗೆ ಯಾರೂ ಕೂಡ ಬೆರಳು ಮಾಡಿ ತೋರಿಸುವ ಹಾಗೆಯೇ ಇಲ್ಲ ಹೌದು ಈ ಸಿನಿಮಾದಲ್ಲಿ ಇವರ ಅಮೋಘ ಅಭಿನಯ ಅಷ್ಟರಮಟ್ಟಿಗೆ ಇದೆ.

ಇನ್ನು ಸಿನಿಮಾದ ಕೊನೆಯ 20 ನಿಮಿಷಗಳು ಮಾತ್ರ ರೋಚಕ ಅಂತಾನೆ ಹೇಳಬಹುದು ರಿಷಬ್ ಶೆಟ್ಟಿಯವರು ಪಾತ್ರದ ಒಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಈ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ನೀವು ಥಿಯೇಟರ್ ಗೆ ಹೋದರೆ ಮಾತ್ರ ಸಾಧ್ಯ ಅಲ್ಲಿ ಆಗುವಂತಹ ಅನುಭವವನ್ನು ಯಾರಿಂದಲೂ ಕೂಡ ವ್ಯಕ್ತಪಡಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಈ ಕಾರಣಕ್ಕಾಗಿಯೇ ಕಾಂತರಾ ಸಿನಿಮಾ ಒಂದು ರೀತಿಯಲ್ಲಿ ಸಕ್ಸಸ್ ಪಡೆದುಕೊಂಡಿದೆ ಅಂತ ಹೇಳಿದರು ಕೂಡ ತಪ್ಪಾಗಲಾರದು.

ಇನ್ನು ಇವೆಲ್ಲ ಒಂದು ಕಡೆಯಾದರೆ ನಟ ರಿಷಬ್ ಶೆಟ್ಟಿ ಅವರ ಸಂಭಾವನೆ ವಿಚಾರ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಈ ಕಥೆ ಸ್ವತಹ ರಿಷಬ್ ಶೆಟ್ಟಿ ಅವರ ಬರದದ್ದು ಆದರೂ ಕೂಡ ಈ ಸಿನಿಮಾಗೆ ಬಂಡವಾಳವನ್ನು ಹೂಡಿಕೆ ಮಾಡಿದ್ದು ಹೊಂಬಾಳ ಸಂಸ್ಥೆ. ಈಗಾಗಲೇ ಹೊಂಬಾಳೆ ಸಂಸ್ಥೆ ಕೆಜಿಎಫ್ ಅಂತಹ ದೊಡ್ಡ ದೊಡ್ಡ ಹಿಟ್ ಸಿನಿಮಾಗಳಿಗೆ ಬಂಡವಾಳವನ್ನು ಹೂಡಿಕೆ ಮಾಡಿ ಈ ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದತ್ತ ತಿರುಗಿ ನೋಡಬೇಕು ಆ ರೀತಿ ಮಾಡಿದ್ದಾರೆ ಹಾಗಾಗಿ ಕಾಂತರಾ ಸಿನಿಮಾಗೂ ಕೂಡ ಹೊಂಬಾಳೆ ಸಂಸ್ಥೆಯವರೇ ಬಂಡವಾಳವನ್ನು ಹೂಡಿಕೆ ಮಾಡಿದ್ದಾರೆ.

ಇನ್ನು ಕಾಂತರಾ ಸಿನಿಮಾಗೆ ಬಂಡವಾಳ ಹೂಡಿಕೆ ಮಾಡಿರುವ ಹೊಂಬಾಳೆ ಸಂಸ್ಥೆಯವರು ನಟ ರಿಷಬ್ ಶೆಟ್ಟಿ ಅವರಿಗೆ ಈ ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಬರೋಬ್ಬರಿ ಎರಡು ಕೋಟಿ ರೂಪಾಯಿ ಸಂಭಾವನೆಯನ್ನು ನೀಡಿದ್ದಾರೆ. ಆದರೆ ಈ ಸಂಭಾವನೆ ಕಾಂತಾರ ಸಿನಿಮಾ ಸೆಟ್ಟೆರುವುದಕ್ಕಿಂತ ಮುಂಚೆಯೇ ನಿರ್ಧಾರವಾಗಿದ್ದು ಆದರೆ ಇಂದು ಕಾಂತರಾ ಸಿನಿಮಾ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಮುನ್ನುಗುತ್ತಿದೆ. ಹೌದು, ಈ ಸಿನಿಮಾ ಇದೀಗ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ಕಲೆಕ್ಷನ್ ಅತ್ತಿರ ದಾಪುಗಾಲು ಇಟ್ಟಿದೆ ಹಾಗಾಗಿ ಹೊಂಬಾಳೆ ಸಂಸ್ಥೆಯವರು ತಮ್ಮ ಲಾಭದಲ್ಲಿ ಇನ್ನಷ್ಟು ಮೊತ್ತವನ್ನು ರಿಷಬ್ ಶೆಟ್ಟಿ ಗೆ ನೀಡುತ್ತಾರೆ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ. ಒಂದು ಕಾಲದಲ್ಲಿ ಕೇವಲ ರೂ.50 ಸಂಭಾವನೆಗೆ ಕೆಲಸ ಮಾಡುತ್ತಿದ್ದಾರೆ ರಿಷಬ್ ಶೆಟ್ಟಿಯವರ ಸಂಭಾವನೆ ಎರಡು ಕೋಟಿ ಆಗಿರುವುದು ನಿಜಕ್ಕೂ ಸಂತಸದ ವಿಚಾರವೇ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ಅಣ್ಣಾವ್ರ ಬಭ್ರುವಾಹನ ಹಾಡಿಗೆ ವೇದಿಕೆಯ ಮೇಲೆ ನೃತ್ಯ ಮಾಡಿದ ಅಪ್ಪು ಮತ್ತು ದಚ್ಚು ಈ ಜುಂಗಲ್ಬಂದಿ ನೋಡಲು ಎರಡು ಕಣ್ಣು ಸಾಲದು, ಕೊನೆಯಲ್ಲಿ ಗೆದ್ದವರು ಯಾರು ನೋಡಿ

ಕರ್ನಾಟಕದಲ್ಲಿ ಮಲ್ಟಿ ಸ್ಟಾರ್ ಸಿನಿಮಾಗಳು ಸೋಲುವುದೇ ಇಲ್ಲ ತಮ್ಮ ನೆಚ್ಚಿನ ಎಲ್ಲಾ ತಾರೆಗಳನ್ನು ಒಂದೇ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಬಹಳ ಆಸೆ ಪಡುತ್ತಾರೆ. ಈಗಾಗಲೇ ಕನ್ನಡದಲ್ಲಿ ಹಲವಾರು ಮಲ್ಟಿಸ್ಟಾರ್ ಮೂವಿಗಳು ಬಂದಿವೆ. ಕೆಲವು ಸೂಪರ್ ಸ್ಟಾರ್ಗಳ ಕಾಂಬಿನೇಷನ್ ಗಳು ತೆರೆ ಮೇಲೆ ಅದ್ಭುತವಾಗಿ ವರ್ಕ್ ಮಾಡಿದೆ. ಅದರಲ್ಲಿ ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಅವರ ಜೋಡಿ, ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರ ಜೋಡಿ, ರಾಜಕುಮಾರ್ ಹಾಗೂ ಅಂಬರೀಶ್ ಜೋಡಿ ಮತ್ತು ಇತ್ತೀಚಿನ ನಟರುಗಳಾದ ಸುದೀಪ್ ಮತ್ತು ಉಪೇಂದ್ರ ಜೋಡಿ ಸುದೀಪ್ ಹಾಗೂ ಶಿವಣ್ಣ ಜೋಡಿ ಉಪೇಂದ್ರ ಹಾಗೂ ರವಿಚಂದ್ರನ್ ಜೋಡಿ ಈ ರೀತಿ ಹಲವುಗಳನ್ನು ಹೆಸರಿಸಬಹುದು.

ಇಂತಹ ಸಿನಿಮಾಗಳು ಸೋತ ಇತಿಹಾಸವೇ ಇಲ್ಲ. ಇನ್ನೂ ಅನೇಕ ಇದೇ ರೀತಿಯ ಸ್ಟಾರ್ ಕಾಂಬಿನೇಷನ್ ಸಿನಿಮಾಗಳನ್ನು ನೋಡಲು ಕನ್ನಡಿಗರು ಕಾತುರರಾಗಿದ್ದಾರೆ. ಅದರಲ್ಲೂ ಕನ್ನಡಿಗರಿಗೆ ಎರಡು ಕಣ್ಣು ಎಂದು ಹೇಳಬಹುದಾದ ದರ್ಶನ್ ಮತ್ತು ಸುದೀಪ್ ಇಬ್ಬರು ಒಂದೇ ಸಿನಿಮಾದಲ್ಲಿ ಅಭಿನಯಿಸಬೇಕು. ಅದನ್ನು ನಾವು ನೋಡಿ ಆನಂದಿಸಬೇಕು ಎಂದು ಕನ್ನಡಿಗರು ಕಾದಿದ್ದಾರೆ, ಆದರೆ ಇವರಿಬ್ಬರ ನಡುವೆ ಇದ್ದ ಸ್ನೇಹ ಬಾಂಧವ್ಯಕ್ಕೆ ಈಗ ಬಿರುಕು ಮೂಡಿರುವುದರಿಂದ ಸದ್ಯಕ್ಕೆ ಕನ್ನಡಿಗರ ಆಸೆ ನೆರವೇರುವ ಲಕ್ಷಣಗಳು ಕಾಣುತ್ತಿಲ್ಲ ಮುಂದೆ ಇದು ಸಾಧ್ಯವಾದರೂ ಆಗಬಹುದು.

ಆದರೆ ಕನ್ನಡಿಗರು ಇದೇ ರೀತಿ ಆಸೆ ಪಟ್ಟ ಮುಂದೆಂದೂ ಸಾಧ್ಯವಾಗದ ಇನ್ನೊಂದು ಜೋಡಿ ಎಂದರೆ ಅಪ್ಪು ಹಾಗೂ ದರ್ಶನ್ ಅವರ ಜೋಡಿಯ ಸಿನಿಮಾ ಮತ್ತು ಅಪ್ಪು ಹಾಗೂ ಸುದೀಪ್ ಅವರ ಜೋಡಿಯ ಸಿನಿಮಾ. ಅಪ್ಪು ಅವರ ಸಿನಿಮಾದಲ್ಲಿ ಅಭಿನಯಿಸಬೇಕು ಎಂದರೆ ಕನ್ನಡ ಮಾತ್ರವಲ್ಲದೆ ಉಳಿದ ಭಾಷೆಯ ಸಿನಿಮಾ ನಾಯಕರು ಕೂಡ ತಯಾರಾಗಿರುತ್ತಿದ್ದರು. ಇವರ ಸಿನಿಮಾದಲ್ಲಿ ಪಾತ್ರ ಮಾಡಲು ಸಣ್ಣ ಅವಕಾಶ ಸಿಕ್ಕರು ಸಂತಸ ಪಡುತ್ತಿದ್ದರು.

ಈ ರೀತಿ ಅಪ್ಪು ಎಲ್ಲಾ ಸೆಲೆಬ್ರಿಟಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಅಜಾತಶತ್ರು ಆಗಿದ್ದರು. ಪುನೀತ್ ರಾಜಕುಮಾರ್ ಅವರು ಕನ್ನಡದಲ್ಲಿ ಅತಿ ಹೆಚ್ಚು ಸಂಭವನ ಪಡೆಯುತ್ತಿದ್ದ ನಾಯಕ ಹಾಗೂ ದರ್ಶನ್ ಅವರು ಕರ್ನಾಟಕದಲ್ಲಿ ಹೆಚ್ಚು ಸಂಖ್ಯೆ ಅಭಿಮಾನಿಗಳನ್ನು ಹೊಂದಿರುವ ನಾಯಕ ಇವರಿಬ್ಬರ ಕಾಂಬಿನೇಷನ್ ಅಲ್ಲಿ ಸಿನಿಮಾ ಮೂಡಿ ಬರಬೇಕು ಅದನ್ನು ನೋಡಬೇಕು ಎಂದು ಅಭಿಮಾನಿಗಳು ಆಸೆ ಪಟ್ಟಿದ್ದರು.

ಹಲವಾರು ಕಾರ್ಯಕ್ರಮಗಳಲ್ಲಿ ಇವರು ಒಟ್ಟಿಗೆ ಕಾಣಿಸಿಕೊಂಡಿದ್ದರೂ ಕೂಡ ಸಿನಿಮಾಗಳ ವಿಚಾರವಾಗಿ ಅಪ್ಪು ಅವರ ಅಭಿನಯದ ಅರಸು ಸಿನಿಮಾದಲ್ಲಿ ಮಾತ್ರ ದರ್ಶನ್ ಅವರು ಅತಿಥಿ ಪಾತ್ರದಲ್ಲಿ ಕೊನೆಯಲ್ಲಿ ಕಾಣಿಸಿಕೊಂಡಿದ್ದರು ಮತ್ತೆ ಯಾವ ಸಿನಿಮಾದಲ್ಲೂ ಅದು ಸಾಧ್ಯವಾಗಲಿಲ್ಲ. ಆದರೆ ಉದಯ ತಾರೋತ್ಸವ ಎನ್ನುವ ಕಾರ್ಯಕ್ರಮವು ಕಳೆದ ದಶಕದಲ್ಲಿ ನಡೆದಿತ್ತು. ಅದ್ದೂರಿಯಾಗಿ ನಡೆದಿದ್ದ ಈ ಕಾರ್ಯಕ್ರಮದಲ್ಲಿ ಕನ್ನಡದ ಎಲ್ಲಾ ಸ್ಟಾರ್ಗಳು ಕೂಡ ಭಾಗವಹಿಸಿ ಪರ್ಫಾರ್ಮೆನ್ಸ್ ಕೂಡ ನೀಡಿದ್ದರು.

ಅಂದಿನ ಕಾರ್ಯಕ್ರಮದಲ್ಲಿ ಅಪ್ಪು ಹಾಗೂ ದಚ್ಚು ಬಬ್ರುವಾಹನ ಮತ್ತು ಅರ್ಜುನನಾಗಿ ವೇದಿಕೆ ಮೇಲೆ ಕಾಣಿಸಿಕೊಂಡು ತಮ್ಮ ಜುಗಲ್ ಬಂದಿ ಡೈಲಾಗ್ ಯಿಂದ ಎಲ್ಲರ ಶಿಲ್ಲೆ ಚಪ್ಪಾಳೆ ಗಿಟ್ಟಿಸಿದ್ದರು. ಕನ್ನಡದ ಹೆಮ್ಮೆಯ ಸಿನಿಮಾ ಬಬ್ರುವಾಹನದ ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ಈ ಹಾಡಿಗೆ ಬಬ್ರುವಾಹನನಾಗಿ ಪುನೀತ್ ರಾಜಕುಮಾರ್ ಅವರು ಮತ್ತು ಅಜುನನಾಗಿ ದರ್ಶನ್ ಅವರು ಕಾಣಿಸಿಕೊಂಡು ತಮ್ಮ ಎಕ್ಷ್ಪ್ರೆಶನ್ ಹಾವಭಾವಗಳಿಂದ ಅಲ್ಲಿದ್ದವರೆಲ್ಲರ ಗಮನ ಸೆಳೆದಿದ್ದರು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಯಾರ ಅಭಿನಯ ಇಷ್ಟ ಆಯಿತು ಎಂಬುದನ್ನು ತಪ್ಪದೆ ಕಾಮೆಂಟ್ ಮಾಡಿ.

ಮೊನ್ನೆ ದರ್ಶನ್, ನೆನ್ನೆ ಸುದೀಪ್ ಇಂದು ಯಶ್ ರವಿಚಂದ್ರನ್ ಮನೆಗೆ ಬಂದು ಮಾಡಿದ ಸಹಾಯವೇನು ಗೊತ್ತಾ.? ಸೋತು ಕಂಗಾಲಾಗಿ ಕುಳಿತಿರುವ ರವಿಚಂದ್ರನ್ ಗೆ ಬೆನ್ನೆಲುಬಾಗಿ ನಿಂತಿದೆ ಇಡೀ ಚಿತ್ರರಂಗ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ರವಿಚಂದ್ರನ್ ಈಗ ಸಾಕಷ್ಟು ಸಂಕಷ್ಟದಲ್ಲಿ ಸಿಲುಕಿದ್ದಾರೆ ಅಂದ ಹಾಗೆ ಇದು ಗಾಸಿಪ್ ಅಲ್ಲ ಅಷ್ಟೇ ಅಲ್ಲದೆ ಸುಳ್ಳು ಸುದ್ದಿಯು ಕೂಡ ಅಲ್ಲ. ಇತ್ತೀಚಿಗಷ್ಟೇ ಜೀ ಕನ್ನಡ ವಾಹಿನಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ನಟ ರವಿಚಂದ್ರನ್ ಅವರು ತಾವು ಕಳೆದುಕೊಂಡಿದ ಆಸ್ತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಸಿನಿಮಾಗಾಗಿ ನಾನು ಕೋಟಿ ಕೋಟಿ ಹಣವನ್ನು ಕಳೆದುಕೊಂಡಿದ್ದೇನೆ ಇದಕ್ಕಾಗಿ ಮನೆ ಮಾರಾಟ ಮಾಡಿದ್ದೇನೆ ಎಂಬ ವಿಚಾರವನ್ನು ಜೀ ಕನ್ನಡ ವಾಹಿನಿಯ ವೇದಿಕೆಯ ಮೇಲೆ ಹೇಳಿ ಭಾವುಕರಾಗಿದ್ದರು.

ಅಷ್ಟೇ ಅಲ್ಲದೆ ನಾನು ದಿನಗೂಲಿಗೆ ಕೆಲಸಕ್ಕೆ ಇಟ್ಟುಕೊಂಡಿದ್ದಂತಹ ವ್ಯಕ್ತಿಯೊಬ್ಬ ಇದೀಗ ನನ್ನನ್ನು ಕರೆದು ಒಂದುವರೆ ಕೋಟಿ ರೂಪಾಯಿ ಕೊಟ್ಟು ನನ್ನ ಸಿನಿಮಾದಲ್ಲಿ ಆಕ್ಟ್ ಮಾಡಿ ಅನ್ನುತ್ತಿದ್ದಾನೆ ಅಷ್ಟರ ಮಟ್ಟಿಗೆ ನಾನು ನನ್ನ ಜೊತೆಯಲ್ಲಿ ಇದ್ದವರೆಲ್ಲರನ್ನು ಬೆಳೆಸಿದ್ದೇನೆ. ಆದರೆ ನಾನು ಮಾತ್ರ ಇದೀಗ ಸೋತು ಹೋಗಿದ್ದೇನೆ ಆದರೆ ಈ ಸೋಲನ್ನು ನಾನು ಒಪ್ಪಿಕೊಳ್ಳುವುದಿಲ್ಲ ಮುಂದೆ ಒಂದು ದಿನ ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ ಇದರ ಜೊತೆಗೆ.

ಜನರಿಗಾಗಿ ಸಿನಿಮಾ ಮಾಡುತ್ತಿದ್ದೀನಿ ಆದರೆ ಜನರು ನನ್ನ ಸಿನಿಮಾವನ್ನು ಇಷ್ಟ ಪಡುತ್ತಿಲ್ಲ ಜನರನ್ನ ಮೆಚ್ಚಿಸೋದಕ್ಕೆ ಆಗಲಿಲ್ಲ ಅಂತ ಬೇಸರ ನನಗಿದೆ. ನಾನು ಮತ್ತೆ ಒಳ್ಳೆಯ ಸಿನಿಮಾ ಕೊಡುವ ಮೂಲಕ ವಾಪಸ್ ಬರ್ತೀನಿ ಜನರು ನನ್ನ ಸಿನಿಮಾ ನೋಡುವ ಹಾಗೆ ಮಾಡ್ತೀನಿ ಎಂದು ಬಹಳ ನೋವಿನಿಂದ ಹೇಳಿಕೊಂಡಿದ್ದರು. ಇದೀಗ ತಿಳಿದು ಬಂದಿರುವ ಮಾಹಿತಿ ಪ್ರಕಾರ, ರವಿ ಬೋಪಣ್ಣ ಸಿನಿಮಾ ಸೋಲಿನಿಂದ ರವಿಚಂದ್ರನ್ ಅವರು ತಾವು ಮಾಡಿದ ಸಾಲ ತೀರಿಸಲಾಗದೆ ಆಡಿ ಕಾರ್ ಮಾರಾಟ ಮಾಡಿದ್ದಾರೆ ಎಂದು ಸಹ ತಿಳಿದು ಬಂದಿದೆ.

ಇನ್ನು ರವಿಚಂದ್ರನ್ ಅವರು ವೇದಿಕೆಯ ಮೇಲೆ ತಮ್ಮ ಕಷ್ಟವನ್ನು ಹೇಳಿಕೊಂಡ ನಂತರ ಈ ವಿಚಾರ ತಿಳಿಯುತ್ತಿದ್ದ ಹಾಗೆ ಇಡೀ ಚಿತ್ರರಂಗವೇ ಇದೀಗ ರವಿಚಂದ್ರನ್ ಅವರ ಬೆನ್ನೆಲುಬುಗೆ ನಿಂತಿದೆ. ಹೌದು ಮೊನ್ನೆಷ್ಟೇ ದರ್ಶನವರು ರವಿಚಂದ್ರನ್ ಅವರನ್ನು ಭೇಟಿ ಮಾಡಿ ನೀವು ಧೈರ್ಯ ಕಳೆದುಕೊಳ್ಳಬೇಡಿ ಆರ್ಥಿಕವಾಗಿ ನಾನು ನಿಮಗೆ ಸಹಾಯ ಮಾಡುತ್ತೇನೆ ಎಂದು ಭರವಸೆಯನ್ನು ಕೊಟ್ಟಿದ್ದಾರೆ. ಇದಾದ ನಂತರ ಸುದೀಪ್ ಅವರು ರವಿಚಂದ್ರನ್ ಅವರನ್ನು ಭೇಟಿ ಮಾಡಿ ಧೈರ್ಯ ಹೇಳಿದ್ದರು.

ಇದೀಗ ರಾಕಿಂಗ್ ಸ್ಟಾರ್ ಯಶ್ ಮತ್ತು ಅವರ ಪತ್ನಿ ರಾಧಿಕಾ ಪಂಡಿತ್ ಅವರು ರವಿಚಂದ್ರನ್ ಅವರ ಮನೆಗೆ ಭೇಟಿ ನೀಡಿ ಅವರೊಡನೆ ಸ್ವಲ್ಪ ಸಮಯ ಕಳೆದು ಧೈರ್ಯ ಹೇಳಿದ್ದಾರೆ. “ನನ್ನಂತಹ ಹಲವು ಜನರಿಗೆ ನೀವು ಸ್ಪೂರ್ತಿ, ನಾವು ನಿಮ್ಮ ಸಿನಿಮಾಗಳನ್ನ ನೋಡಿಕೊಂಡು ಬೆಳೆದ್ವಿ. ನಿಮ್ಮ ಕಷ್ಟದ ಸಮಯದಲ್ಲಿ ಇಡೀ ಕರ್ನಾಟಕದ ಜನತೆ ನಿಮ್ಮ ಜೊತೆಗಿದೆ ನಾನು ಹಾಗು ಇಡೀ ಕನ್ನಡ ಚಿತ್ರರಂಗ ನಿಮ್ಮ ಜೊತೆಗೆ ಸದಾ ಇರುತ್ತದೆ” ಎಂದು ಇಬ್ಬರು ಧೈರ್ಯ ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಸೋತು ಕಂಗಾಲಾಗಿದ್ದಂತಹ ನಟ ರವಿಚಂದ್ರನ್ ಅವರಿಗೆ ಇಡಿ ಸ್ಟಾರ್ ನಟರು ಮನೆಗೆ ಬಂದು ಸಾಂತ್ವನವನ್ನು ಹೇಳಿ ಧೈರ್ಯ ತುಂಬಿ ತಮ್ಮ ಕೈಲಾದಷ್ಟು ಧನ ಸಹಾಯವನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ಇನ್ನು ಮುಂದೆ ನೀವು ತೆಗಿಯುವ ಪ್ರತಿಯೊಂದು ಸಿನಿಮಾಗೂ ಕೂಡ ನಮ್ಮ ಸಪೋರ್ಟ್ ಇರುತ್ತದೆ ಎಂದು ಹೇಳಿದ್ದಾರೆ. ನಿಜಕ್ಕೂ ನಾವು ಚಿತ್ರರಂಗವನ್ನು ಮೆಚ್ಚಲೇಬೇಕು ಏಕೆಂದರೆ.

ಒಂದು ಕಾಲದಲ್ಲಿ ರಾಯಲ್ ಆಗಿ ಬದುಕಿದಂತಹ ಹಾಗೂ ಇಡೀ ಚಿತ್ರರಂಗವನ್ನು ರಾಯಲಾಗಿ ತೋರಿಸಿದಂತಹ ರವಿಚಂದ್ರನ್ ಅವರು ಸಿನಿಮಾಗಾಗಿಯೇ ತಮ್ಮೆಲ್ಲ ಆಸ್ತಿಯನ್ನು ಕಳೆದುಕೊಂಡರು. ಹಾಗಾಗಿ ಇದೀಗ ಚಿತ್ರರಂಗದವರೇ ರವಿಚಂದ್ರನ್ ಅವರು ಏನನ್ನು ಕಳೆದುಕೊಂಡಿದ್ದರು ಅದನ್ನೆಲ್ಲವನ್ನು ಮರಳಿ ಕೊಡಿಸುವಂತಹ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದಲ್ಲಾದರೂ ರವಿಚಂದ್ರನ್ ಅವರು ಮತ್ತೆ ಮೊದಲಿನ ಸ್ಥಿತಿಗೆ ಬರಲಿ ಎಂಬುದೇ ನಮ್ಮ ಆಶಯ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಅನಾಥ ಮಕ್ಕಳ ಜೊತೆ ಚಿರು ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಚಿರಂಜೀವಿ ಸರ್ಜಾ ತಾಯಿ ಈ ಮನ ಕಲಕುವ ವಿಡಿಯೋ ನೋಡಿ ನಿಜಕ್ಕೂ ಕಣ್ಣೀರು ಬರುತ್ತೆ.

ಇಂದಿಗೆ ಚಿರಂಜೀವಿ ಸರ್ಜಾ ಅವರಿಗೆ 38ನೇ ವರ್ಷ ಬಹುಶಃ ಇಂದು ಚಿರಂಜೀವಿ ಸರ್ಜಾ ಅವರ ಬದುಕಿದ್ದರೆ ಈ ಒಂದು ಹುಟ್ಟು ಹಬ್ಬವನ್ನು ಅಭಿಮಾನಿಗಳೊಂದಿಗೆ ಹಾಗೂ ಕುಟುಂಬದೊಟ್ಟಿಗೆ ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದರು. ಆದರೆ ವಿಧಿ ಆಟ ಎಂಬುದೇ ಬೇರೆ ಇತ್ತು ಬದುಕಿ ಬಾಳಬೇಕಾದಂತಹ ಯುವ ಸಾಮ್ರಾಟ ನಮ್ಮೆಲ್ಲರನ್ನು ಬಿಟ್ಟು ಅಗಲಿ ಹೋಗಿದ್ದಾರೆ. ಹೌದು ನಿಮಗೆ ತಿಳಿದಿರುವ ಹಾಗೆ ಚಿರಂಜೀವಿ ಸರ್ಜಾ ನಮ್ಮೆಲ್ಲರನ್ನು ಬಿಟ್ಟು ಅಗಲಿ ಎರಡು ವರ್ಷಗಳೇ ಕಳೆದು ಹೋಗಿದೆ. ಜೂನ್ 7ನೇ ತಾರೀಕು 2020ನೇ ಇಸ್ವಿಯಲ್ಲಿ ಚಿರಂಜೀವಿ ಸರ್ಜಾ ಅವರು ಹೃ.ದ.ಯ.ಘಾ.ತ.ದಿಂದ ಸಾ.ವ.ನ್ನ.ಪ್ಪಿ.ದರೂ

ಈ ಸಾ.ವು ನಿಜಕ್ಕೂ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬರ ಸಿಡಿಲು ಬಡಿದಂತಾಯಿತು ಚಿರು ಅವರು ಇಲ್ಲಿ ಇಲ್ಲ ಎಂಬ ಮಾತನ್ನು ಯಾರಿಂದಲೂ ಕೂಡ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಏಕೆಂದರೆ ಚಿರು ಅವರ ವಯಸ್ಸು ಹಾಗೂ ಅವರ ದೇಹದ ಫಿಟ್ನೆಸ್ ಅಷ್ಟರ ಮಟ್ಟಿಗೆ ಇತ್ತು. ಚಿರು ಬದುಕಿದ್ದಷ್ಟು ದಿನವೂ ಕೂಡ ಚಿಕ್ಕದೊಂದು ಕಾಂಟ್ರವರ್ಸಿಯು ಕೂಡ ಮಾಡಿಕೊಂಡಿರಲಿಲ್ಲ ಕುಟುಂಬಕ್ಕೆ ತಕ್ಕ ಮಗ ಇಂಡಸ್ಟ್ರಿಗೆ ತಕ್ಕ ನಟ ಎಂಬ ಹೆಸರನ್ನು ಗಿಟ್ಟಿಸಿಕೊಂಡಿದ್ದರು. ಇನ್ನು ತಾವು ಪ್ರೀತಿಸಿ ಮದುವೆಯಾದಂತಹ ಮೇಘನಾ ರಾಜ್ ಅವರು ಕೂಡ ಚಿರಂಜೀವಿ ಸರ್ಜಾ ಅಗಲಿದ ಸಮಯದಲ್ಲಿ 5 ತಿಂಗಳ ತುಂಬ ಗರ್ಭಿಣಿಯಾಗಿದ್ದಳು.

ಈ ಸಮಯದಲ್ಲಿ ಹೆಂಡತಿಯ ಜೊತೆಗೆ ಇರಬೇಕಾದಂತಹ ಪತಿ ಇದ್ದಕ್ಕಿದ್ದ ಹಾಗೆ ಆಕೆಯನ್ನು ಒಂಟಿ ಮಾಡಿ ಹೊರಟೆ ಬಿಟ್ಟ ನಿಜಕ್ಕೂ ಈ ನೋವನ್ನು ಬರಿಸುವ ಶಕ್ತಿ ಆ ಸಮಯದಲ್ಲಿ ಆ ದೇವರೇ ಮೇಘಾನ ಅವರಿಗೆ ನೀಡಿದ್ದರು ಅಂತ ಹೇಳಿದರು ಕೂಡ ತಪ್ಪಾಗಲಾರದು. ಇನ್ನು ವೃದ್ಯಾಪ್ಯದಲ್ಲಿ ಮಕ್ಕಳಿಂದ ಮೋಕ್ಷ ದೊರೆಯಬೇಕು ಅಂತ ತಂದೆ ತಾಯಿ ಅಂದುಕೊಳ್ಳುತ್ತಾರೆ. ಆದರೆ ಮಗನಿಗೆ ಕೊಳ್ಳಿ ಇಡುವಂತಹ ಪರಿಸ್ಥಿತಿ ಚಿರಂಜೀವಿ ಸರ್ಜಾ ಅವರ ತಂದೆ ಮತ್ತು ತಾಯಿಗೆ ಬರುತ್ತದೆ ಇಂತಹ ಘನ ಘೋ.ರ ಪರಿಸ್ಥಿತಿ ಯಾವ ತಂದೆ ತಾಯಿಗೂ ಕೂಡ ನಿರ್ಮಾಣವಾಗಬಾರದು.

ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಂತಹ ನೋವು ಅಮ್ಮಜಿಯವರಿಗೆ ತಮ್ಮ ಜೀವಿತಾವಧಿಯವರೆಗೂ ಇರುತ್ತದೆ ನಾವೆಲ್ಲರೂ ಒಂದು ಗಾದೆಯನ್ನು ಕೇಳೇ ಇರುತ್ತೇವೆ ಪುತ್ರಶೋಕ ನಿರಂತರ ಅಂತ. ಅದೇ ರೀತಿ ಚಿರು ಅವರನ್ನು ಕಳೆದುಕೊಂಡ ಅಮ್ಮಜಿಯವರು ಈಗಲೂ ಕೂಡ ಅವರ ನೆನಪಿನಲ್ಲಿಯೇ ದಿನಾಲೂ ಕಣ್ಣೀರು ಇಡುತ್ತಾರೆ. ಇನ್ನು 38ನೇ ವರ್ಷದ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬವನ್ನು ಧ್ರುವ ಸರ್ಜಾ ಹಾಗೂ ಅವರ ತಾಯಿ ಅಮ್ಮಜಿಯವರು ಬಹಳ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ಹೌದು ಬೆಂಗಳೂರಿನ ಹೊರ ವಲಯದಲ್ಲಿ ಕರಕಪುರ ರಸ್ತೆಯಲ್ಲಿ ಇರುವಂತಹ ಧ್ರುವ ಸರ್ಜಾ ಅವರ ಫಾರ್ಮರ್ಸ್ ಆದಂತಹ ಬೃಂದಾವನಕ್ಕೆ ಹೋಗಿ ಚಿರಂಜೀವಿ ಸರ್ಜಾ ಅವರ ಸ.ಮಾ.ಧಿ.ಗೆ ಪೂಜೆಯನ್ನು ಸಲ್ಲಿಸಿ ಅವರಿಗೆ ಇಷ್ಟ ಆದಂತಹ ಎಲ್ಲಾ ತಿಂಡಿಯನ್ನು ನೈವೇದ್ಯ ಇಟ್ಟು ಪೂಜೆ ಮಾಡಿ ಬಂದಿದ್ದಾರೆ. ತದನಂತರ ಅನಾಥಾಶ್ರಮ ಒಂದಕ್ಕೆ ಭೇಟಿ ನೀಡಿ ಅಲ್ಲಿ ಚಿರಂಜೀವಿ ಸರ್ಜಾ ಅವರ ಹೆಸರಿನಲ್ಲಿ ಕೇಕ್ ಕತ್ತರಿಸಿ ಅನಾಥ ಮಕ್ಕಳಿಗೆ ಸಿಹಿ ತಿಂಡಿ ಬಟ್ಟೆ ಉಡುಗೊರೆಯನ್ನು ನೀಡಿ ಆ ಮಕ್ಕಳ ಮುಖದಲ್ಲಿ ಮಂದಹಾಸವನ್ನು ಮೂಡಿಸಿದ್ದಾರೆ.

ಮಕ್ಕಳ ಮಂದಹಾಸದಲ್ಲಿ ತಮ್ಮ ಮಗನನ್ನು ಕಳೆದುಕೊಂಡ ನೋವನ್ನು ಮರೆತಿದ್ದಾರೆ ಅಷ್ಟೇ ಅಲ್ಲದೆ ಈ ಒಂದು ಸಂದರ್ಭದಲ್ಲಿ ಚಿರು ಇಲ್ಲವಲ್ಲ ಎಂದು ಅಮ್ಮಜಿಯವರು ಕಣ್ಣೀರಿಟ್ಟಿದರೆ. ಸದ್ಯಕ್ಕೆ ಈ ವಿಡಿಯೋ ದಲ್ಲಿ ವೈರಲ್ ಆಗಿದ್ದು ಹಲವಾರು ಅಭಿಮಾನಿಗಳು ಈ ವಿಡಿಯೋ ನೋಡಿ ಭಾವುಕರಾಗಿದ್ದಾರೆ ಚಿರು ಬದುಕಿರಬೇಕಿತ್ತು ಎಂದು ಹೇಳಿದ್ದಾರೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

ವೇದಿಕೆ ಮೇಲೆ ಅಂಬರೀಶ್ ಜೊತೆ ಅನುಶ್ರೀ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ನೋಡಿ ಎಷ್ಟು ಸೊಗಸಾಗಿದೆ. ಅಂಬಿ ಅವರ ಅಪರೂಪದ ವಿಡಿಯೋ ತಪ್ಪದೆ ನೋಡಿ.

ಕಲಿಯುಗದ ಕರ್ಣ ಅಂತಾರೆ ಹೆಸರುವಾಸಿಯಾಗಿರುವಂತಹ ಅಂಬರೀಶ್ ಅವರು ನಮ್ಮೆಲ್ಲರನ್ನು ಅಗಲಿ ಐದು ವರ್ಷವಾಗಿರುವ ವಿಚಾರ ನಿಮಗೆಲ್ಲರಿಗೂ ತಿಳಿದೇ ಇದೆ. ಹೌದು 2017 ಅಕ್ಟೋಬರ್ ನಲ್ಲಿ ಅಂಬರೀಶ್ ಅವರು ನಮ್ಮೆಲ್ಲರನ್ನು ಬಿಟ್ಟು ಇಹಲೋಕವನ್ನು ತ್ಯಜಿಸಿದರು ಆದರೂ ಕೂಡ ಇವರು ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅಂಬರೀಶ್ ಅವರು ನಾಗರಹಾವು ಸಿನಿಮಾದಿಂದ ಹಿಡಿದು ಕುರುಕ್ಷೇತ್ರದ ಸಿನಿಮವರೆಗೂ ಸುಮಾರು 224 ಅಧಿಕ ಚಲನಚಿತ್ರದಲ್ಲಿ ನಾಯಕ ನಟರಾಗಿ ಪೋಷಕ ನಟರಾಗಿ ಖಳನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಪುಟ್ಟಣ್ಣ ಕಣ್ಗಲ್ ಅವರ ನಾಗರಹಾವು ಎಂಬ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ನಟನೆ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು.

ವಿಷ್ಣುವರ್ಧನ್ ಹಾಗೂ ಅಂಬರೀಶ್ ಇಬ್ಬರು ಕೂಡ ಒಂದೇ ಕಾಲಘಟ್ಟದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟವರು ಹಾಗಾಗಿ ಇಬ್ಬರೂ ಕೂಡ ಆತ್ಮೀಯ ಸ್ನೇಹಿತರು. ಇನ್ನು ಅಂಬರೀಶ್ ಅವರು ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೆ ರಾಜಕೀಯದಲ್ಲಿಯೂ ಕೂಡ ಸಕ್ರಿಯರಾಗಿದ್ದರು. ಹೌದು ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ವಿಜೇತರಾಗಿದ್ದರು ಅಲ್ಲಿನ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಇನ್ನು ಅಂಬರೀಶ್ ಅವರ ಮನೆಗೆ ಯಾರೇ ಕಷ್ಟ ಅಂತ ಹೋದರು ಕೂಡ ಅವರನ್ನು ಬರಿಗೈನಲ್ಲಿ ಕಳಿಸುತ್ತಿರಲಿಲ್ಲ ಈ ಕಾರಣಕ್ಕಾಗಿಯೇ ಅಂಬರೀಶ್ ಅವರನ್ನು ಕಲಿಯುಗದ ಕರ್ಣ ಅಂತ ಕರಿಯುತ್ತಿದ್ದರು.

ಇಲ್ಲಿಯವರೆಗೂ ಕೂಡ ತಮಗಾಗಿ ತಮ್ಮ ಕುಟುಂಬಕ್ಕಾಗಿ ಅವರು ಆಸ್ತಿ ಮಾಡಿದವರಲ್ಲ ಅವರು ಸಂಪಾದನೆ ಮಾಡಿದ ಭಾಗಶಹ 70ರಷ್ಟು ಭಾಗವನ್ನು ದಾನ ಮಾಡುತ್ತಿದ್ದರು. ಇನ್ನು ಅಂಬರೀಶ್ ಅವರ ಮಾತು ಒರಟಾಗಿದ್ದರು ಕೂಡ ಮನಸ್ಸು ಮಾತ್ರ ಬಹಳ ಮೃದು ಹೌದು ಅವರ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಕಲ್ಮಶವಿರುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಅಂಬರೀಶ್ ಅವರು ಯಾರನ್ನೇ ಬೈದರು ಕೂಡ ಆ ವ್ಯಕ್ತಿಗಳು ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ಬದಲಾಗಿ ಅವರ ಹಿಂದೆಯೇ ಹೋಗುತ್ತಿದ್ದರು ಅಂತ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದರು. ಇನ್ನು ನಮ್ಮ ಕನ್ನಡ ಚಿತ್ರರಂಗದಲ್ಲಿ ಅಣ್ಣವರನ್ನು ಹೊರತು ಪಡಿಸಿದರೆ ಆ ಸ್ಥಾನವನ್ನು ತುಂಬುತ್ತಿದ್ದಂತಹ ಏಕೈಕ ವ್ಯಕ್ತಿ ಅಂದರೆ ಅದು ಅಂಬರೀಶ್ ಚಿತ್ರರಂಗಕ್ಕೆ ಸಂಬಂಧಪಟ್ಟಂತಹ ಯಾವುದೇ ರೀತಿಯಾದಂತಹ ಸಮಸ್ಯೆ ಇದ್ದರೂ ಕೂಡ ಅದನ್ನು ಕೂತು ಬಗೆಹರಿಸುತ್ತಿದ್ದರು.

ಇಂಥ ದಿಗ್ಗಜ ನಾಯಕನಟನನ್ನು ಕಳೆದುಕೊಂಡಿದ್ದು ಕೇವಲ ಅಂಬರೀಶ್ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಚಿತ್ರರಂಗಕ್ಕೆ ನಷ್ಟ ಅಂತ ಹೇಳಿದರು ಕೂಡ ತಪ್ಪಾಗಲಾರದು. ಇನ್ನು ಅಂಬರೀಶ ಅವರು ಯಾವುದೇ ಕಾರ್ಯಕ್ರಮವಾದರೂ ಪಾಲ್ಗೊಳ್ಳುತ್ತಿದ್ದರು ಹೌದು ಕಳೆದ ಐದಾರು ವರ್ಷಗಳ ಹಿಂದೆ ಎಷ್ಟೇ ಕಾರ್ಯಕ್ರಮ ಒಂದರಲ್ಲಿ ಅಂಬರೀಶ್ ಅವರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಅನುಶ್ರೀ ಅವರು ನಿರೂಪಣೆ ಮಾಡುತ್ತಿದ್ದರು ಕಾರ್ಯಕ್ರಮ ಮುಗಿದ ನಂತರ ವೇದಿಕೆಯ ಮೇಲೆ ಹಾಡೊಂದಕ್ಕೆ ಅಂಬರೀಶ ಅವರು ಅನುಶೀಯ ಜೊತೆ ಹೆಜ್ಜೆಯನ್ನು ಹಾಕಿದ್ದಾರೆ.

ಅನುಶ್ರೀ ಮತ್ತು ಅಂಬರೀಶ್ ಜೊತೆ ನಟಿ ಮಾಲಾಶ್ರೀ ಅವರು ಕೂಡ ಕಾಣಿಸಿಕೊಂಡಿದ್ದಾರೆ ಇನ್ನು ಅಂಬರೀಶ್ ಅವರು ಮಾಡುತ್ತಿರುವ ಡಾನ್ಸ್ ನೋಡಿದರೆ ಯಾವ ಯುವಕನಿಗೂ ಕಡಿಮೆ ಇಲ್ಲ ಅಂತಾನೆ ಹೇಳಬಹುದು. ಬಹಳ ಎನರ್ಜಿಟಿಕ್ ಡಾನ್ಸ್ ಮಾಡುತ್ತಿದ್ದಾರೆ ಸಾಮಾನ್ಯವಾಗಿ ಅಂಬರೀಶ್ ಅವರು ಎಲ್ಲಿಯೂ ಕೂಡ ಡ್ಯಾನ್ಸ್ ಮಾಡುವುದಿಲ್ಲ. ಆದರೆ ಇದೇ ಮೊದಲ ಬಾರಿಗೆ ವೇದಿಕೆಯ ಮೇಲೆ ಅನುಶ್ರೀಯ ಅವರ ಜೊತೆ ಡ್ಯಾನ್ಸ್ ಮಾಡಿದ್ದಾರೆ ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅಂಬಿ ಅಭಿಮಾನಿಗಳು ಈ ವಿಡಿಯೋ ನೋಡಿ ಮೆಚ್ಚಿಕೊಂಡಿದ್ದಾರೆ. ನೀವು ಕೂಡ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

ಚಿರು ಹುಟ್ಟುಹಬ್ಬಕ್ಕೆ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡ ಮೇಘನಾ ರಾಜ್ ಏನದು ಗೊತ್ತ.? ಯಾವ ಹೆಣ್ಣಿಗೂ ಇಂಥ ಸ್ಥಿತಿ ಬರದಿರಲಿ

ಚಿರಂಜೀವಿ ಸರ್ಜಾ ಅವರು ನಮ್ಮೆಲ್ಲರನ್ನು ಅಗಲಿ ಎರಡು ವರ್ಷಗಳ ಕಳೆದು ಹೋಗಿದೆ ಆದರೂ ಕೂಡ ಅವರ ನೆನಪಿನಿಂದ ಹೊರಬರಲು ಕರುನಾಡ ಜನತೆಗೆ ಸಾಧ್ಯವಾಗುತ್ತಿಲ್ಲ. ಚಿರಂಜೀವಿ ಸರ್ಜಾ ಅವರು 2009ರಲ್ಲಿ ತೆರೆಕಂಡ ವಾಯು ಪುತ್ರ ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ತದನಂತರ ಆಟಗಾರ, ಗಂಡೆದೆ, ಚಂದ್ರಲೇಖ, ಶಿವಾರ್ಜುನ, ರಾಜಮಾರ್ಥಂಡ, ವರದನಾಯಕ, ಅಮ್ಮ ಐ ಲವ್ ಯು ಹೀಗೆ ಕನ್ನಡದಲ್ಲಿ ಸುಮಾರು 22ಕ್ಕೂ ಅಧಿಕ ಚಲನಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ, ಇವರು ನಾಯಕ ನಟರಾಗಿ ಅಭಿನಯ ಮಾಡುವುದಕ್ಕಿಂತ ಮುಂಚೆ ಕಿಶೋರ್ ಸರ್ಜಾ ಹಾಗೂ ಅರ್ಜುನ್ ಸರ್ಜಾ ಅವರ ಬಳಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದರು.

ಇನ್ನು ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ನಾಯಕ ನಟನಾಗಿ ಅಭಿನಯ ಮಾಡುವ ಸಮಯದಲ್ಲಿ ಮೇಘನಾ ರಾಜ್ ಅವರ ಪರಿಚಯವಾಗುತ್ತದೆ ಒಂದೆರಡು ವರ್ಷ ಇವರಿಬ್ಬರೂ ಕೂಡ ಸ್ನೇಹಿತರಾಗಿರುತ್ತಾರೆ. ತದನಂತರ ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಪ್ರೀತಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ಸುಮಾರು ಹತ್ತು ವರ್ಷಗಳ ಕಾಲ ಇಬ್ಬರು ಕೂಡ ಪ್ರೀತಿಸುತ್ತಾರೆ ತದನಂತರ ಈ ವಿಚಾರವನ್ನು ಮನೆಯಲ್ಲಿ ತಿಳಿಸುತ್ತಾರೆ. ಮೊದಮೊದಲು ಇವರ ಪ್ರೀತಿಗೆ ವಿರೋಧವಿತ್ತು ಏಕೆಂದರೆ ಮೇಘನಾ ರಾಜ್ ಕೃಷಿಯನ್ ಕುಟುಂಬಕ್ಕೆ ಸೇರಿದವರು ಧ್ರುವ ಸರ್ಜಾ ಅವರು ಅಪ್ಪಟ ಹಿಂದೂ ಕುಟುಂಬಕ್ಕೆ ಸೇರಿದವರು.

ಆದರೂ ಕೂಡ ಮನೆಯವರನ್ನು ಒಪ್ಪಿಸಿ ಇಬ್ಬರೂ ಕೂಡ ಎರಡು ಧರ್ಮಕ್ಕೂ ಧಕ್ಕೆ ಬಾರದ ರೀತಿಯಲ್ಲಿ ಚರ್ಚಿನಲ್ಲಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಹಾಗೂ ಮಂಟಪದಲ್ಲಿ ತಾಳಿ ಕಟ್ಟುವ ಮೂಲಕ ಮದುವೆಯಾದರು ತದನಂತರ ಇವರ ಮದುವೆ ಎರಡೂ ಸಂಪ್ರದಾಯಕ್ಕೂ ಒಂದು ಮಾದರಿಯಾದಂತೆ ಕಾಣಿಸಿತು. ಮದುವೆಯಾದ ನಂತರ ಮೂರು ವರ್ಷಗಳ ಕಾಲ ಸುಖ ದಾಂಪತ್ಯ ಜೀವನ ನಡೆಸಿದರು. ಈ ಸಮಯದಲ್ಲಿ ಮೇಘನಾ ರಾಜ್ ಅವರು ಕೂಡ ಗರ್ಭಿಣಿಯಾಗಿದ್ದರು ಈ ಒಂದು ಸಂತಸ ವಿಚಾರವನ್ನು ಚಿರಂಜೀವಿ ಸರ್ಜಾ ಅವರು ಎಲ್ಲಿಗೆ ಹೇಳಿಕೊಂಡಿರಲಿಲ್ಲ. ಇದನ್ನು ಒಂದು ವಿಶೇಷ ಸಂಭ್ರಮದಂತೆ ಆಚರಿಸಬೇಕು ಅಂತ ಪ್ಲಾನ್ ಮಾಡಿಕೊಂಡಿದ್ದರು.

ಆದರೆ ವಿಧಿ ಆಟವೇ ಬೇರೆ ಇತ್ತು ಹೌದು ಚಿರಂಜೀವಿ ಸರ್ಜಾ ಅವರು ಜೂನ್ 7ನೇ ತಾರೀಕು 2020 ನೇ ಇಸ್ವಿಯಲ್ಲಿ ಮಧ್ಯಾಹ್ನ ಸುಮಾರು 12:30 ಗಂಟೆಗೆ ನಮ್ಮೆಲ್ಲರನ್ನು ಬಿಟ್ಟು ವಿ.ಧಿ.ವಶರಾದರು. ಹೌದು ತೀ.ವ್ರ ಹೃ.ದ.ಯ.ಘ.ತದಿಂದ ಉಸಿರಾಟದ ಸಮಸ್ಯೆಯಿಂದ ಚಿರು ಅವರು ನಮ್ಮೆಲ್ಲರನ್ನು ಬಿಟ್ಟು ಅಗಲಿದರು. ಈ ಸಮಯದಲ್ಲಿ ಮೇಘನಾ ರಾಜ್ ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು ಈ ಒಂದು ಪರಿಸ್ಥಿತಿಯನ್ನು ಮೇಘನಾ ರಾಜ್ ಎದುರಿಸುವುದಕ್ಕೆ ಬಹಳ ಕಷ್ಟ ಪಟ್ಟರು. ಚಿರು ಅಗಲಿದ ಕೇವಲ ನಾಲ್ಕೇ ತಿಂಗಳಿಗೆ ರಾಯನ್ ಎಂಬ ಗಂಡು ಮಗ ಹುಟ್ಟಿದ.

ಈ ಮಗುವಿನ ಮುಖವನ್ನು ನೋಡಿಕೊಂಡು ಚಿರಂಜೀವಿ ಸರ್ಜಾ ಅವರ ನೆನಪಿನಲ್ಲಿ ಇದೀಗ ಮೇಘನಾ ರಾಜ್ ಅವರು ಜೀವನ ಸಾಗಿಸುತ್ತಿದ್ದಾರೆ ಇನ್ನು ಅಕ್ಟೋಬರ್ 17, 1984 ಚಿರು ಅವರ ಜನ್ಮದಿನ ಅಂದರೆ ಈ ದಿನ ಚಿರಂಜೀವಿ ಸರ್ಜಾ ಅವರ 38ನೇ ವರ್ಷದ ಹುಟ್ಟುಹಬ್ಬ. ಹಾಗಾಗಿ ಮೇಘನಾ ರಾಜ್ ಅವರು ತಮ್ಮ ಪತಿಯ ಹುಟ್ಟು ಹಬ್ಬದ ಸಲುವಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಿರು ಜೊತೆಗೆ ಮದುವೆಯಾದಂತಹ ಸುಂದರ ಭಾವಚಿತ್ರವನ್ನು ಹಾಕಿಕೊಂಡು ಅದರ ಅಡಿ ಬರಹದಲ್ಲಿ “ಜನ್ಮದಿನದ ಶುಭಾಶಯಗಳು ನನ್ನ ಸಂತೋಷ.! ಏನೇ ಆಗಲಿ, ಯಾರೇ ಆಗಲಿ, ಒಂದಲ್ಲ, ಎರಡಲ್ಲ, ನಾನು ಮುಗುಳ್ನಗಲು ಕಾರಣ ನಿನಗಾಗಿ” ನನ್ನ ಪ್ರೀತಿಯ ಪತಿ ಚಿರು. ಐ ಲವ್ ಯೂ ಎಂದು ಹಾಕಿಕೊಂಡಿದ್ದಾರೆ.

ಇದಿಷ್ಟು ಮಾತ್ರವಲ್ಲದೆ ತಮ್ಮ ಪತಿ ಹಾಗೂ ಮಗ ಸದಾ ಕಾಲ ನನ್ನ ಜೀವದ ಒಳಗೆ ಬೆರೆತು ಹೋಗಿದ್ದಾರೆ ಅವರನ್ನು ಯಾರಿಂದಲೂ ಕೂಡ ಬೇರ್ಪಡಿಸುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಕಳೆದ ತಿಂಗಳಷ್ಟೇ ತಮ್ಮ ಬಲಗೈನ ಮೇಲೆ ಚಿರು ರಾಯನ್ ಎಂಬ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ. ಆದರೂ ಕೂಡ ಪತಿ ಮತ್ತು ಮಗನು ಒಟ್ಟಿಗೆ ಸಂತೋಷದಿಂದ ಕಾಲ ಕಳೆಯಬೇಕಾದಂತಹ ಮೇಘನಾ ರಾಜ್ ಅವರು ಚಿಕ್ಕ ವಯಸ್ಸಿಗೆ ಪತಿಯನ್ನು ಕಳೆದುಕೊಂಡು ಇದೀಗ ಏಕಾಂಗಿ ಜೀವನವನ್ನು ಸಾಗಿಸುತ್ತಿದ್ದಾರೆ. ಎಷ್ಟು ಹಣವಿದ್ದರೇನು ಎಷ್ಟು ದೊಡ್ಡ ಸೆಲೆಬ್ರೆಟಿಯಾಗಿದ್ದರೆ ಏನು ಪತಿ ಇಲ್ಲದ ಮೇಲೆ ಅವೆಲ್ಲವೂ ಶೂನ್ಯ ಎಂಬುದು ಕೆಲವರ ಅಭಿಪ್ರಾಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ಉತ್ತರಿಸಿ.

ಧ್ರುವ ಸರ್ಜಾ ಮಗುವನ್ನು ನೋಡಲು ಬಂದ ದರ್ಶನ್ ಮಗುವಿಗೆ ಕೊಟ್ಟ ಕ್ಲಾಸಿ ಗಿಫ್ಟ್ ಏನು ಗೊತ್ತಾ.?

ಸರ್ಜಾ ಕುಟುಂಬವು ಈಗಾಗಲೇ ಅವರ ಕುಟುಂಬದ ಇಬ್ಬರ ಅಗಲಿಕೆಯ ನೋವಿನಲ್ಲಿ ಕುಂದು ಹೋಗಿದೆ. ಆದರೆ ಇದೀಗ ಅವರ ಮನೆಯಲ್ಲಿ ಹೊಸ ಅತಿಥಿ ಆಗಮನ ಅವರ ಹಳೆಯ ನೋವನ್ನು ಮರೆಸುವ ಹೊಸ ಚೈತನ್ಯ ತಂದಿದೆ. ಅಕ್ಟೋಬರ್ 2ರಂದು ಧ್ರುವ ಸರ್ಜಾ ಮತ್ತು ಪ್ರೇರಣ ದಂಪತಿಗೆ ಹೆಣ್ಣು ಮಗು ಜನಿಸಿದೆ. ಹಲವು ದಿನಗಳಿಂದ ಮಗುವಿನ ನಿರೀಕ್ಷೆಯಲ್ಲಿದ್ದ ಹಾಗೂ ಈಗಾಗಲೇ ಮಗುವಿನ ವಿಷಯಕ್ಕೆ ಬಹಳ ನೋವಿದ್ದ ದಂಪತಿ ಮೊಗದಲ್ಲಿ ಈಗ ಸಂತಸ ತುಂಬಿದೆ.

ಮಗು ಜನಿಸಿದ ಮೊದಲ ಪ್ರಶ್ನೆ ಧ್ರುವ ಸರ್ಜಾ ಅವರು ಸೆಲೆಬ್ರಿಟಿ ದಂಪತಿಗಳಿಗೆ ಮಗುವಿಗೆ ವಿಷಯಕ್ಕೆ ಆಗುವ ಸಮಸ್ಯೆಗಳ ಬಗ್ಗೆ ಮಾತನಾಡಿ ಜೊತೆಗೆ ಈಗಾಗಲೇ ಯಾರ್ಯಾರು ಮಗು ವಿಷಯಕ್ಕೆ ನಂಬಿಕೆ ಕಳೆದುಕೊಂಡಿದ್ದಾರೆ ಎಲ್ಲರಿಗೂ ಬದುಕಿನಲ್ಲಿ ಭರವಸೆ ಇಡಿ ನಂಬಿಕೆ ಇದ್ದರೆ ಖಂಡಿತ ಒಳ್ಳೆದಾಗಿದೆ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದು ಹೇಳಿದ್ದರು ಇದರಲ್ಲೇ ಅವರಿಗೆ ಮಗುವಿನ ಬಗ್ಗೆ ಎಷ್ಟು ನಿರೀಕ್ಷೆ ಇತ್ತು ಎಂದು ತಿಳಿಯುತ್ತದೆ ಆ ದಿನವೇ ಮೇಘನಾ ರಾಜ್ ಅವರು ಆಸ್ಪತ್ರೆಗೆ ಆಗಮಿಸಿ ಮಗಳ ದರ್ಶನ ಪಡೆದರು.

ಆನಂತರ ಅನೇಕ ಸ್ನೇಹಿತರು ಸೆಲೆಬ್ರಿಟಿಗಳು ಕುಟುಂಬಸ್ಥರು ಮಗುವನ್ನು ನೋಡಲು ಆಗಮಿಸಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ನೇಹಜೀವಿ ಎಂದು ಕರೆಸಿ ಕೊಂಡಿರುವ ದರ್ಶನ್ ಅವರು ಕೂಡ ಸರ್ಜಾ ಕುಟುಂಬಕ್ಕೆ ಬಹಳ ಆತ್ಮೀಯರು ಧ್ರುವ ಸರ್ಜಾ ಹಾಗೂ ದರ್ಶನವರು ಮೊದಲಿನಿಂದಲೂ ಉತ್ತಮ ಸ್ನೇಹಿತರು ಹಲವಾರು ಕಾರ್ಯಕ್ರಮಗಳಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಮತ್ತು ಅರ್ಜುನ್ ಸರ್ಜಾ ಅವರ ಜೊತೆಗೂ ಕೂಡ ದರ್ಶನ್ ಅವರಿಗೆ ಒಳ್ಳೆಯ ಗೆಳೆತನ ಇದ್ದು ಕುರುಕ್ಷೇತ್ರ ಸಿನಿಮಾದಲ್ಲಿ ದುರ್ಯೋಧನರಾಗಿ ದರ್ಶನ್ ಕಾಣಿಸಿಕೊಂಡಿದ್ದರೆ.

ಕರ್ಣನಾಗಿ ಅರ್ಜುನ್ ಸರ್ಜಾ ಜೋಡಿ ಆಗಿದ್ದರು ಇದಾದ ಬಳಿಕ ಅರ್ಜುನ್ ಸರ್ಜಾ ಅವರ ನಿರ್ದೇಶನದ ಮತ್ತು ನಿರ್ಮಾಣದ ಅವರ ಮಗಳು ಐಶ್ವರ್ಯ ಸರ್ಜಾ ಅವರ ನಾಯಕಿ ಆಗಿದ್ದ ಪ್ರೇಮ ಬರಹ ಎನ್ನುವ ಕನ್ನಡ ಸಿನಿಮಾದ ಹಾಡೊಂದರದಲ್ಲಿ ಆಂಜನೇಯನ ಭಕ್ತರಾದ ಸರ್ಜಾ ಕುಟುಂಬದ ಧ್ರುವ ಸರ್ಜಾ ಚಿರಂಜೀವಿ ಸರ್ಜಾ ಅರ್ಜುನ್ ಸರ್ಜಾ ಮತ್ತು ಐಶ್ವರ್ಯ ಸರ್ಜಾ ಅವರು ಆಂಜನೇಯನ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು ಇವರಿಗೆ ಆ ಹಾಡಿನಲ್ಲಿ ದರ್ಶನ್ ಕೂಡ ಜೊತೆಯಾಗಿ ವಿಶೇಷತೆ ತಂದಿದ್ದರು.

ದರ್ಶನ್ ಅವರು ಅರ್ಜುನ್ ಸರ್ಜಾ ಅವರ ಕುಟುಂಬದ ಎಲ್ಲಾ ಭಾಗಿಯಾಗುತ್ತಾರೆ ಹಾಗೆಯೇ ಧ್ರುವ ಸರ್ಜಾ ಮತ್ತು ಪ್ರೇರಣ ದಂಪತಿಯ ಅವನು ನೋಡಲು ದರ್ಶನ್ ಅವರು ಹೋಗಿದ್ದಾರೆ ಮಗುವನ್ನು ನೋಡಿದ ಬಳಿಕ ಮಗಳು ತುಂಬಾ ಲಕ್ಷಣವಾಗಿ ಇದ್ದಾಳೆ ಮುದ್ದಾಗಿದ್ದಾಳೆ ಚುರುಕಾಗಿದ್ದಾಳೆ ಚೆನ್ನಾಗಿ ಆರೈಕೆ ಮಾಡಿ ಎಂದು ಸವಿನುಡಿಗಳನ್ನು ಆಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ದರ್ಶನ್ ಅವರು ಅಭಿಮಾನಿಗಳಿಗೆ ಆಗಲಿ ಸ್ನೇಹಿತರಿಗೆ ಆಗಲಿ ಉಡುಗೊರೆ ನೀಡುವುದಕ್ಕೆ ಎತ್ತಿದ ಕೈ.

ಈಗ ಧ್ರುವ ಸರ್ಜಾ ಹಾಗೂ ಪ್ರೇರಣ ದಂಪತಿಯ ಮಗಳಿಗೂ ಕೂಡ ಗಿಫ್ಟ್ ಒಂದನ್ನು ನೀಡಿದ್ದಾರೆ ಇವರು ಏನು ಗಿಫ್ಟ್ ಕೊಟ್ಟಿದ್ದಾರೆ ಎಂದು ತಿಳಿದುಕೊಳ್ಳಲು ದಚ್ಚು ಅಭಿಮಾನಿಗಳು ಬಹಳ ಕುತೂಹಲರಾಗಿದ್ದರು. ಮತ್ತು ಇವರು ಕೊಟ್ಟ ಗಿಫ್ಟ್ ನೋಡಿ ತಮ್ಮ ಬಾಸ್ ಸಹೃದಯ ಎಂತದ್ದು ಎಂದು ಕೊಂಡಾಡುತ್ತಿದ್ದಾರೆ. ಇತ್ತೀಚಿಗೆ ಬಂದ ನಿಖರ ಮಾಹಿತಿಗಳ ಪ್ರಕಾರ ದರ್ಶನ್ ಅವರು ಚಿನ್ನದ ಸರವನ್ನು ಮಗುವಿಗೆ ನೀಡಿದ್ದಾರೆ ಎನ್ನುವ ಮಾಹಿತಿಗಳು ಕೇಳಿ ಬರುತ್ತಿವೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ