Home Blog Page 295

ಟಾಸ್ಕ್ ವೇಳೆ ನಿಂತಲ್ಲೇ ಮೂತ್ರ ಮಾಡಿಕೊಂಡ ಆರ್ಯವರ್ಧನ್ ಗುರೂಜಿ, ಇವರ ಸ್ಥಿತಿ ನೋಡಿ ಮನೆ ಮಂದಿ ಎಲ್ಲಾ ಕಕ್ಕಾಬಿಕ್ಕಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಸೀಸನ್ 9ರಲ್ಲಿ ಹೈಲೈಟ್ ಆಗಿರುವ ವ್ಯಕ್ತಿ ಅಂದರೆ ಅದು ಆರ್ಯವರ್ಧನ್ ಗುರೂಜಿ ಅಂತನೇ ಹೇಳಬಹುದು. ಓಟಿಟಿಯಲ್ಲಿ ಪ್ರಾರಂಭವಾದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೊನೆಯವರೆಗೂ ಕೂಡ ಇದ್ದು ಟಾಪ್ ಎರಡನೇ ಸ್ಥಾನವನ್ನು ಪಡೆದು ಇದೀಗ ಬಿಗ್ ಬಾಸ್ ಸೀಸನ್ 9 ರ ಮನೆಗೆ ಕಾಲಿಟ್ಟಿದ್ದಾರೆ. ಮೊದಲ ವಾರದಿಂದಲೂ ಗುರೂಜಿಯವರು ಉತ್ತಮವಾಗಿಯೇ ಆಟ ಆಡಿಕೊಂಡು ಬಂದಿದ್ದಾರೆ ಅದರಲ್ಲಿಯೂ ಕೂಡ ಟಾಸ್ಕ್ ವಿಚಾರದಲ್ಲಿ 100% ನೀಡುತ್ತಾರೆ. ಕೇವಲ ಇದಿಷ್ಟು ಮಾತ್ರವಲ್ಲದೆ ಮನೆಯ ಸ್ವಚ್ಛತೆಯ ಬಗ್ಗೆ ಅಡುಗೆಯ ಬಗ್ಗೆ ಎಲ್ಲದರಲ್ಲೂ ಕೂಡ ಹೆಚ್ಚಿನ ಗಮನವನ್ನು ನೀಡುತ್ತಾರೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಆದರೆ ಕಳೆದ ವಾರ ಸುದೀಪ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ. ಸುದೀಪ್ ಎದುರಿಗೆ ಬಿಗ್ ಬಾಸ್ ಒಂದು ಮ್ಯಾಚ್ ಫಿಕ್ಸಿಂಗ್ ಅನುಪಮಾ ಗೌಡ ಅವರನ್ನು ಗೆಲ್ಲಿಸುವುದಕ್ಕಾಗಿ ನೀವೆಲ್ಲರೂ ಅವರಿಗೆ ಸಪೋರ್ಟ್ ಮಾಡುತ್ತಿದ್ದೀರಾ ಎಂದು ಹೇಳುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ವಿಚಾರ ಹೇಳುತ್ತಿದ್ದ ಹಾಗೆ ಕೆಲವು ಬಿಗ್ ಬಾಸ್ ಅಭಿಮಾನಿಗಳು ಗುರೂಜಿಯವರು ಹೇಳಿದ್ದು ಸತ್ಯ ಅಂತ ಅಂದರು. ಇನ್ನು ಕೆಲವರು ಸುದೀಪ್ ಅವರಿಗೆ ಸಪೋರ್ಟ್ ನೀಡಿ ಗುರೂಜಿ ಅವರು ಸುಳ್ಳು ಹೇಳುತ್ತಿದ್ದಾರೆ ಅಂದರು.

ಇದೆಲ್ಲ ಒಂದು ವಿಚಾರ ಆದರೆ ಇದೀಗ ಗುರೂಜಿಯವರು ಟಾಸ್ಕ್ ಮಾಡುವ ವೇಳೆಯಲ್ಲಿ ನಿಂತ ಜಾಗದಲ್ಲಿಯೇ ಸುಸ್ಸು ಮಾಡಿಕೊಂಡಿದ್ದಾರೆ. ಹೌದು ಕಳೆದ ರಾತ್ರಿ ಬಿಗ್ ಬಾಸ್ ಮನೆಯಲ್ಲಿ ಇರುವಂತಹ ವ್ಯಕ್ತಿಗಳಿಗೆ ವಿಶೇಷವಾದ ಟಾಸ್ಕ್ ಒಂದನ್ನು ನೀಡಲಾಯಿತು. ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳನ್ನು ಎರಡು ತಂಡವಾಗಿ ಮಾರ್ಪಾಡು ಮಾಡಲಾಯಿತು ಅದರಲ್ಲಿ ಪ್ರಶಾಂತ್ ಸಂಬರ್ಗಿ ಕಾಮನ ಬಿಲ್ಲು ತಂಡದ ನಾಯಕರಾಗಿದ್ದರು ಈ ತಂಡದಲ್ಲಿ ಅರುಣ್ ಸಾಗರ್, ಅನುಪಮಾ ಗೌಡ, ಮಯೂರಿ, ಸಾನ್ಯ ಅಯ್ಯರ್, ರಾಕೇಶ್ ಅಡಿಗ, ವಿನೋದ್ ಗೊಬ್ಬರಗಾಲ ಇದ್ದರು. ಇನ್ನೂ, ರೂಪೇಶ್ ರಾಜಣ್ಣ ಟೀಮ್‌ನಲ್ಲಿ ನೇಹಾ ಗೌಡ, ಅಮೂಲ್ಯ ಗೌಡ, ಕಾವ್ಯಶ್ರೀ ಗೌಡ, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ ಇದ್ದರು

ಎರಡೂ ತಂಡಗಳಿಗೆ “ಜೋಪಾನ ರಾತ್ರಿ ಆಯ್ತು ಜಾಗರಣೆ ಖಾತ್ರಿ ಆಯ್ತು” ಎಂಬ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದರು. ಇದರ ಅನುಸಾರ ಎರಡೂ ತಂಡದ ಎಲ್ಲಾ ಸದಸ್ಯರು ಕಂಬದಲ್ಲಿರುವ ಸ್ವಿಚ್ ಒತ್ತಿ ಹಿಡಿಯಬೇಕಿತ್ತು. ಅತಿ ಹೆಚ್ಚು ಕಾಲ ಸ್ವಿಚ್ ಒತ್ತಿ ಹಿಡಿಯುವ ತಂಡ ಟಾಸ್ಕ್ ಗೆಲ್ಲುತ್ತದೆ. ರಾತ್ರಿ ಶುರುವಾದ ಈ ಟಾಸ್ಕ್ ಬೆಳಗ್ಗೆ ಮುಕ್ತಾಯಗೊಂಡಿತು 10 ಗಂಟೆಗಳ ಕಾಲ ಈ ಟಾಸ್ಕ್ ನಡೆಯಿತು ಹೇಗಾದರೂ ಮಾಡಿ ತಮ್ಮ ‘ಕಾಮನಬಿಲ್ಲು’ ತಂಡವನ್ನ ಗೆಲ್ಲಿಸಬೇಕು ಅಂತ ಆರ್ಯವರ್ಧನ್ ಗುರೂಜಿ ನಿರ್ಧರಿಸಿದ್ದರು. ಹೀಗಾಗಿ, 10 ಗಂಟೆಗಳ ಸ್ವಿಚ್ ಒತ್ತಿ ಹಿಡಿಯುತ್ತಲೇ ಆರ್ಯವರ್ಧನ್ ಗುರೂಜಿ ನಿಂತಿದ್ದರು.

ಮಧ್ಯದಲ್ಲಿ ಪ್ರಕೃತಿಯ ಕರೆ ಬಂದರೂ ಅದನ್ನ ತಡೆದು ಆರ್ಯವರ್ಧನ್ ಗುರೂಜಿ ನಿಂತರು ಒಂದು ಸಮಯದಲ್ಲಿ ತಡೆಯಲು ಸಾಧ್ಯವಾಗಲೇ ಇದ್ದಾಗ ನಿಂತಲ್ಲೇ ಮೂತ್ರ ವಿಸರ್ಜನೆ ಮಾಡಿ ಕೊಂಡುಬಿಟ್ಟರು. ಇದನ್ನ ಕಂಡ ಇತರೆ ಕೆಲವು ಸ್ಪರ್ಧಿಗಳು ನಕ್ಕರೆ ಕೆಲವರು ‘ಅಯ್ಯಯ್ಯೋ.. ಛೀ’ ಎಂದರು. ಇನ್ನೂ ‘’ಡೆಡಿಕೇಷನ್ ಅಂದ್ರೆ ಇದು’’ ಎಂದು ಬಿಟ್ಟರು ಸಾನ್ಯ ಅಯ್ಯರ್ ಬಿಗ್ ಬಾಸ್ ನಿಮಗೆ ಸ್ವಲ್ಪನಾದರೂ ಕರುಣೆ ಇಲ್ವಾ ಬಾತ್‌ರೂಮ್‌ಗೆ ಹೋಗಬೇಕು, ಕರುಣೆ ಇಲ್ವಾ? ಒಂದು ನೋಡಿದ್ರಿ ಎರಡೂ ನೋಡಬೇಕಾ.? ಎಂದು ಬಿಗ್ ಬಾಸ್ ಗೆ ಆರ್ಯವರ್ಧನ್ ಗುರೂಜಿ ಪ್ರಶ್ನಿಸುತ್ತಿದ್ದರು.

10 ಗಂಟೆಗಳು ಕಳೆದ ಬಳಿಕ ಟಾಸ್ಕ್ ಸಂಪೂರ್ಣಗೊಂಡಿತು ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ, ನೇಹಾ ಗೌಡ, ದಿವ್ಯಾ ಉರುಡುಗ ನಿಂತಿದ್ದ ಕಾರಣ “ಕಾಮನಬಿಲ್ಲು” ತಂಡ ಟಾಸ್ಕ್ ಗೆದ್ದಿದೆ ಎಂದು ‘’ಬಿಗ್ ಬಾಸ್’’ ಘೋಷಿಸಿದರು. ಆರ್ಯವರ್ಧನ್ ಗುರೂಜಿ ಸಂತೋಷಗೊಂಡರು. ಇನ್ನು ಗುರೂಜಿ ಅವರ ಡೆಡಿಕೇಶನ್ ಅನ್ನು ನಾವೆಲ್ಲರೂ ಮೆಚ್ಚಲೇಬೇಕು ಟಾಸ್ಕ್ ಅನ್ನು ಕೈ ಬಿಡಬಾರದು ಎಂಬ ಒಂದೇ ಒಂದು ಕಾರಣಕ್ಕೆ ಪ್ರಕೃತಿ ಕರೆ ಕೊಟ್ಟರು ಕೂಡ ಅದನ್ನು ಲೆಕ್ಕಿಸದೆ ತಮ್ಮ ನಾಚಿಕೆಯನ್ನು ಬದಿಗಿಟ್ಟು ಟಾಸ್ ನಲ್ಲಿಯ ನಿರತರಾಗಿದ್ದರು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಆರ್ಯವರ್ಧನ್ ಅವರ ಈ ಒಂದು ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಬಿಗ್ ಬಾಸ್ ಗೆ ಬರಲಿದ್ದಾರೆ ಸೋನು ಶ್ರೀನಿವಾಸ್ ಗೌಡ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಸೋಶಿಯಲ್ ಮೀಡಿಯಾದ ಟಿಕ್ ಟಾಕ್ ಸ್ಟಾರ್ ಅಂತ ಹೆಸರುವಾಸಿಯಾದಂತಹ ಸೋನು ಶ್ರೀನಿವಾಸ್ ಗೌಡ ಅವರು ಓಟಿಟಿಯಲ್ಲಿ ಪ್ರಾರಂಭವಾದ ಮಿನಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡು ಸುಮಾರು 42 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ವಾಸವಾಗಿದ್ದರು. ಆದರೆ ಈ ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ಕೂಡ ಕಂಟ್ರವರ್ಸಿಗೆ ಗುರಿಯಾಗಿದ್ದರು. ಹೌದು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ಚರ್ಚೆಗೆ ಗುರಿಯಾಗುತ್ತಿದ್ದರು ಅದರಲ್ಲಿಯೂ ಕೂಡ ತಮ್ಮ ಮಾತುಗಳಿಂದಲೇ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು ಇನ್ನು ಸೋನು ಗೌಡ ಅವರ ಖಾಸಗಿ ವಿಡಿಯೋ ಲೀಕ್ ಆಗಿದ್ದರ ಬಗ್ಗೆ ಬಿಗ್ ಬಾಸ್ ಓಟಿಟಿಯಲ್ಲಿ ಅವರೇ ಹೇಳುತ್ತಾ ಕಣ್ಣೀರು ಹಾಕಿದ್ದ ವಿಚಾರ ನಿಮಗೆ ತಿಳಿದೇ ಇದೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100 ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಬಿಗ್ ಬಾಸ್ ನಲ್ಲಿ ಬಾರಿ ಪೈಪೋಟಿಯನ್ನು ನಡೆಸಿ ಕೊನೆಯ ಟಾಪ್ 5ನೇ ಸ್ಪರ್ಧಿಯಾಗಿ ಹೊರ ಹೊಮ್ಮಿದರು ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಸಾಕಷ್ಟು ಸಂದರ್ಶನಗಳನ್ನು ಮಾಡಿ ಬಿಗ್ ಬಾಸ್ ನಲ್ಲಿ ತಾವು ಪಡೆದುಕೊಂಡಂತಹ ಜೀವನದ ಪಾಠ ಹಾಗೂ ಬಿಗ್ ಬಾಸ್ ನಲ್ಲಿ ಕಳೆದ ನೆನಪುಗಳನ್ನು ಹಂಚಿಕೊಂಡಿದ್ದರು. ಆದರೆ ಇದೀಗ ಮತ್ತೆ ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಸೀಸನ್ 9ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಬರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಈ ವಿಚಾರದ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥರಾಗಿ ಅಥವಾ ಬಿಗ್ ಬಾಸ್ ಸೀಸನ್ 9ರ ನಿರೂಪಕರಾಗಿರುವ ಸುದೀಪ್ ಅವರಾಗಲಿ ಎಲ್ಲಿಯೂ ಕೂಡ ಹೇಳಿಕೆ ನೀಡಿಲ್ಲ.

ಆದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸೋನು ಗೌಡ ಅವರು ಈ ಬಾರಿಯ ಬಿಗ್ ಬಾಸ್ ಸೀಸನ್ 9ರ ಆವೃತ್ತಿಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಹೋಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ವಿಚಾರ ಪ್ರಸ್ತಾಪವಾದರೂ ಕೂಡ ಭಾಗಶಃ ಆ ವಿಚಾರಗಳು ನಡೆದೆ. ಹಾಗಾಗಿ ಈ ಬಾರಿ ವೈಲ್ಡ್ ಜಾರ್ಡ್ ಎಂಟ್ರಿ ಮೂಲಕ ಸರ್ಪ್ರೈಸ್ ಆಗಿ ಸೋನು ಅವರನ್ನು ಮನೆಗೆ ಕಳುಹಿಸಿಕೊಡಬಹುದು ಎಂದು ಬಿಗ್ ಬಾಸ್ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಓಟಿಟಿಯಲ್ಲಿ ಪ್ರಾರಂಭವಾಗಿದ್ದ ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಹಾಗೂ ಸೋನು ಗೌಡ ಇಬ್ಬರು ಕೂಡ ಬಹಳ ಆತ್ಮೀಯರಾಗಿದ್ದರು ಒಂದು ರೀತಿಯಲ್ಲಿ ಹೇಳುವುದಾದರೆ ಸೋನು ಗೌಡ ಅವರಿಗೆ ರಾಕೇಶ್ ಅವರ ಮೇಲೆ ಪ್ರೀತಿ ಬೆಳೆದದ್ದು ಸತ್ಯ.

ಈ ವಿಚಾರವನ್ನು ಅವರೇ ಹೇಳಿಕೊಂಡಿದ್ದರು ಬಿಗ್ ಬಾಸ್ ಮನೆಗೆ ರಾಕೇಶ್ ಬಂದ ಸೋನು ಗೌಡ ಅವರನ್ನು ಸಂಪೂರ್ಣವಾಗಿ ಮರೆತು ಇದೀಗ ಅಮೂಲ್ಯ ಅವರ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಆದರೆ ವೈಲ್ಡ್ ಕಾರ್ಡ್ ಎಂಡ್ರಿ ಮೂಲಕ ಸೋನು ಗೌಡ ಅವರು ಮತ್ತೆ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಾಗ ರಾಕೇಶ್ ಅಡಿಗ ಅವರು ತಮ್ಮ ಪ್ರವೃತಿಯನ್ನು ಯಾವ ರೀತಿ ಬದಲಾಯಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಸೋನು ಗೌಡ ಅವರ ಜೊತೆ ಕಾಲ ಕಳೆಯಲಿದ್ದಾರ ಅಥವಾ ಅಮೂಲ್ಯ ಅವರ ಜೊತೆಯೇ ಮುನ್ನಡೆಯಲ್ಲಿದ್ದಾರೆ ಎಂಬುದು ಎಲ್ಲರಲ್ಲೂ ಕೂಡ ಪ್ರಶ್ನೆಯಾಗಿ ಉಳಿದಿದೆ. ಪ್ರತಿ ವರ್ಷವೂ ಕೂಡ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಸಾಕಷ್ಟು ಸೆಲೆಬ್ರೆಟಿಗಳನ್ನು ಕರೆಸಲಾಗುತ್ತದೆ ಆದರೆ ಈ ಬಾರಿ ಸೋನು ಗೌಡ ಅವರಿಗೆ ಒಂದು ಚಾನ್ಸ್ ನೀಡುತ್ತಾರೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಾಮೆಂಟ್ ಮುಖಾಂತರ ತಿಳಿಸಿ.

 

ಕೇವಲ ಒಂದೇ ನಿಮಿಷದಲ್ಲಿ ದರ್ಶನ್, ಸುದೀಪ್, ಯಶ್, ದಾಖಲೆ ಮುರಿದ ಧ್ರುವ ಸರ್ಜಾ, ಕೆ ಡಿ ಸಿನಿಮಾದ ಟೀಸರ್ ಮಾಡಿದ ದಾಖಲೆ ಹೊಸ ನಿರೀಕ್ಷೆ ಹುಟ್ಟು ಹಾಕಿದೆ.

ಕನ್ನಡ ಸಿನಿಮಾವನ್ನು ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಕೆಜಿಎಫ್ ಸಿನಿಮಾ ಮಾಡಿದ್ದು ಈ ಕೆಜಿಎಫ್ ಸಿನಿಮಾದ ನಂತರ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಸಿನಿಮಾಅಗಿ ತೆರೆ ಕಂಡಿತು. ಈ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ಸು ಮತ್ತು ಕೀರ್ತಿ ಲಭಿಸಿತು ಇದಾದ ನಂತರ ಕಾಂತರಾ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾ ಬಿಡುಗಡೆಯಾದ 15 ದಿನಗಳಿಂದಲೂ ಕೂಡ ಸಾಕಷ್ಟು ಸುದ್ದಿಯಲ್ಲಿದೆ ಕನ್ನಡದಲ್ಲಿ ಬಿಡುಗಡೆಯಾದ ಈ ಸಿನಿಮಾ ಇದೀಗ ಸುಮಾರು ಐದು ಭಾಷೆಯಲ್ಲಿ ಡಬ್ ಆಗುವ ಮೂಲಕ ಪ್ಯಾನ್ ಇಂಡಿಯಾ ಸಿನಿಮಾ ಸೇರ್ಪಡೆಯಾಗಿದೆ. ಸಿನಿಮಾ ಅಂದರೆ ಹೀಗಿರಬೇಕು ಎಂದು ಎಲ್ಲಾ ಸೆಲೆಬ್ರಿಟಿಗಳು ಹಾಡಿ ಹೋಗಳುತ್ತಿದ್ದಾರೆ ಅದರಲ್ಲಿಯೂ ಕೂಡ ಬಾಲಿವುಡ್ ನ ಸಾಕಷ್ಟು ನಟ ನಟಿಯರು ಕಾಂತರಾ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.

ಇನ್ನು ನಟ ಉಪೇಂದ್ರ ಅವರ ಕಬ್ಜಾ ಸಿನಿಮಾವು ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೊರ ಹೊಮ್ಮಿದೆ ಈ ಸಿನಿಮಾದ ನಿರ್ದೇಶಕ ಆರ್ ಚಂದ್ರು ಅವರು ಸುಮಾರು ಏಳು ಭಾಷೆಯಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಬೇಕು ಅಂತ ಅಂದುಕೊಂಡಿದ್ದಾರೆ. ಒಟ್ಟಾರೆಯಾಗಿ ಕನ್ನಡದಲ್ಲಿ ಮೂಡಿ ಬರುತ್ತಿರುವ ಎಲ್ಲಾ ಸಿನಿಮಾಗಳು ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ. ಒಂದು ಕಾಲದಲ್ಲಿ ಕನ್ನಡ ಸಿನಿಮಾವನ್ನು ಕೀಳಾಗಿ ನೋಡುತ್ತಿದ್ದರು ಆದರೆ ಇದೀಗ ಅವರೇ ನಮ್ಮ ಭಾಷೆಯಲ್ಲೂ ಕೂಡ ನಿಮ್ಮ ಸಿನಿಮಾವನ್ನು ರಿಲೀಸ್ ಮಾಡಿ ಅಂತ ಹೇಳುತ್ತಿದ್ದಾರೆ ಅಷ್ಟರ ಮಟ್ಟಿಗೆ ಇದೀಗ ಕನ್ನಡ ಸಿನಿಮಾ ಬೆಳೆಯುತ್ತಿದೆ. ಇವೆಲ್ಲ ಒಂದು ಕಡೆಯಾದರೆ ಇದೀಗ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹೊಸ ಸಿನಿಮಾ ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿರುವುದನ್ನು ನಾವು ಕಾಣಬಹುದಾಗಿದೆ.

ನಿರ್ದೇಶಕ ಪ್ರೇಮ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಕಾಂಬಿನೇಷನ್ ನಲ್ಲಿ ಕೆಡಿ ಸಿನಿಮಾ ನಿರ್ಮಾಣವಾಗುತ್ತಿದೆ ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಈಗಾಗಲೇ ಈ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ ಬಿಡುಗಡೆಯಾದ ಕೇವಲ ಒಂದೇ ನಿಮಿಷದಲ್ಲಿ ಯಶ್, ಸುದೀಪ್, ದರ್ಶನ್ ಇಲ್ಲಿಯವರೆಗೂ ಮಾಡಿದ ಎಲ್ಲ ದಿಗ್ಗಜರ ದಾಖಲೆಯನ್ನು ಈ ಟೀಸರ್ ಮುರಿದಿದೆ. ಕೆ.ಡಿ ಸಿನಿಮಾದ ಟೀಸರ್ ಅನ್ನು ಕೆ.ವಿ.ಎನ್ ಪ್ರೊಡಕ್ಷನ್ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದ ಕೇವಲ ಒಂದು ನಿಮಿಷದಲ್ಲಿ ನಾಲ್ಕು ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ ಅಂದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು ಕೆವಿಎಂ ಪ್ರೊಡಕ್ಷನ್ಸ್ ನಲ್ಲಿ ಕೆಡಿ 4ನೆ ಸಿನಿಮಾವಾಗಿದ್ದು ಭಾರಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ ಇನ್ನು ಇದೇ ಮೊದಲ ಬಾರಿಗೆ ಪ್ರೇಮ್ ಹಾಗೂ ಧ್ರುವ ಸರ್ಜಾ ಇಬ್ಬರು ಒಂದಾಗಿ ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಸಿನಿಮಾ ಪ್ರೇಮ್ ಅವರ ಸಿನಿಮಾ ಕರಿಯರ್ ನಲ್ಲಿಯೇ ಬಹಳ ದೊಡ್ಡ ಸಿನಿಮಾವಾಗಿದ್ದು ಟೈಟಲ್ ಟೇಸರ್ ಬಹಳ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾದ ಮೂಲಕ ಬೆಂಗಳೂರಿನ ಮರು ಸೃಷ್ಟಿ ಮಾಡಲಿದ್ದಾರೆ ಪ್ರೇಮ್ ಹೌದು ಟೀಸರ್ ನೋಡಿದ್ರೆ ನಿಮಗೆ ಗೊತ್ತಾಗುತ್ತೆ.

ಕೆಡಿ ಸಿನಿಮಾ ರೆಟ್ರೋ ಸಮಯವನ್ನು ನೆನಪಿಸುವಂಥದ್ದು ಇದರಲ್ಲಿ ಡೈಲಾಗ್ ಮೂಲಕ ಅಬ್ಬರಿಸಿದ ಧ್ರುವ ಸರ್ಜಾ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು 1970ರ ದಶಕದ ಕೆಲವು ನೈಜ ಕಥೆಯನ್ನು ಹೇಳುವತ್ತ ಪ್ರೇಮ್ ಕೆಡಿ ಸಿನಿಮಾದ ಕಥೆಯನ್ನು ಹೆಣೆದಿದ್ದಾರೆ ಕನ್ನಡದಲ್ಲಿ ಅದ್ದೂರಿ, ಭರ್ಜರಿ, ಪೊಗರು, ಬಹದ್ದೂರ್, ಈ ರೀತಿಯ ಆಕ್ಷನ್ ಸಿನಿಮಾಗಳಲ್ಲಿಯೇ ಅಭಿನಯಿಸಿ ಅಭಿಮಾನಿಗಳ ಮನ ಗೆದ್ದ ಧ್ರುವ ಸರ್ಜಾ ಈಗ ಮತ್ತೊಂದು ರೌಡಿ ಸಿನಿಮಾದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳಲಿದ್ದಾರೆ ಇನ್ನು ಈ ಮಾಸ್ ಸಿನಿಮಾ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿಯೂ ಕೂಡ ತೆರೆ ಕಾಣಲಿದೆ. ಒಟ್ಟಾರೆಯಾಗಿ ಕೆಡಿ-ದ ಡೆವಿಲ್ ಸಿನಿಮಾ ಚಿತ್ರೀಕರಣಕ್ಕೂ ಮುಂಚೆಯೇ ಸಿನಿ ಪ್ರಿಯರಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಮನೆ ಆಸ್ತಿ ಕಳೆದುಕೊಂಡು ಕಂಗಾಲಗಿರುವ ರವಿಚಂದ್ರನ್ ಬಗ್ಗೆ ಸೊಸೆ ಸಂಗೀತ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಆಶ್ಚರ್ಯ

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರವನ್ನು ಅದ್ದೂರಿ ತನದಿಂದ ತೋರಿಸಿದ ಏಕೈಕ ಸರದಾರ ಅಂದರೆ ಅದು ರವಿಚಂದ್ರನ್ ಅಂತಾನೇ ಹೇಳಬಹುದು. ಇತ್ತೀಚಿನ ದಿನದಲ್ಲಿ ಕೋಟಿ ಕೋಟಿ ಬಜೆಟ್ ಹಾಕಿ ಸಿನಿಮಾ ತೆಗೆಯುತ್ತಿರಬಹುದು ಆದರೆ ಸುಮಾರು ನಾಲ್ಕು ದಶಕಗಳ ಹಿಂದೆ ಹಣವನ್ನು ನೀರಿನಲ್ಲಿ ಖರ್ಚು ಮಾಡಿ ಸಿನಿಮಾವನ್ನು ಅದ್ದೂರಿಯಾಗಿ ಮೇಕಿಂಗ್ ಮಾಡಿದ ಕೀರ್ತಿ ರವಿಚಂದ್ರನ್ ಅವರಿಗೆ ಸಲ್ಲುತ್ತದೆ. ರವಿಚಂದ್ರನ್ ಸಿನಿಮಾ ಅಂದರೆ ಸಾಕು ಅಲ್ಲಿ ಏನಾದರೂ ಒಂದು ವಿಶೇಷತೆ ಇದ್ದೇ ಇರುತ್ತದೆ ಎಂಬುದು ಸಾಕಷ್ಟು ಜನರಿಗೆ ತಿಳಿದಿದೆ ಇನ್ನು ರವಿಚಂದ್ರನ್ ಅವರು ಹುಟ್ಟುತ್ತಾ ಆಗರ್ಭ ಶ್ರೀಮಂತರು. ಹೌದು ಅವರ ತಂದೆ ಈಶ್ವರಿ ಪ್ರೊಡಕ್ಷನ್ ಮೂಲಕ ಹಲವಾರು ದಿಗ್ಗಜ ನಟರಿಗೆ ಬಂಡವಾಳವನ್ನು ಹೂಡಿಕೆ ಮಾಡಿದ್ದಾರೆ.

ಇನ್ನು ತಂದೆಯ ಹಾದಿಯಂತೆ ರವಿಚಂದ್ರನ್ ಅವರು ಕೂಡ ಹಲವಾರು ಸಿನಿಮಾಗಳಿಗೆ ಈಶ್ವರಿ ಪ್ರೊಡಕ್ಷನ್ ಮೂಲಕ ಬಂಡವಾಳವನ್ನು ಹೂಡಿಕೆ ಮಾಡಿದ್ದಾರೆ‌‌. ಆದರೆ ರವಿಚಂದ್ರನ್ ಅವರ ಕನಸು ಮಾತ್ರ ಪ್ರೇಕ್ಷಕರಿಗೆ ಉತ್ತಮವಾದ ಸಿನಿಮಾವನ್ನು ನೀಡಬೇಕು ಎಂಬುದು ಮಾತ್ರ ಆಗಿತ್ತು ಈ ಕಾರಣಕ್ಕಾಗಿಯೇ ಅವರು ಸಿನಿಮಾಗಳಿಗಾಗಿ ಹಣದ ಹೊಳೆಯನ್ನೆ ಅರಿಸಿದ್ದಾರೆ. ಈ ಸಿನಿಮಾಗಳನ್ನು ತೆಗೆಯುವುದಕ್ಕೆ ರವಿಚಂದ್ರನ್ ಅವರು ಎಷ್ಟು ಆಸ್ತಿ ಮಾಡಿಕೊಂಡಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲವಂತೆ. ಒಂದು ಕಾಲದಲ್ಲಿ ರವಿಚಂದ್ರನ್ ಸಿನಿಮಾ ಅಂದರೆ ಸಾಕು ಪ್ರೇಕ್ಷಕರು ಹುಚ್ಚೆದ್ದು ನೋಡುತ್ತಿದ್ದರು ಆದರೆ ಇತ್ತೀಚಿನ ದಿನದಲ್ಲಿ ರವಿಚಂದ್ರನ್ ಅವರು ಯಾವುದೇ ಸಿನಿಮಾ ತೆಗೆದರೂ ಕೂಡ ಆ ಸಿನಿಮಾ ಓಡುತ್ತಿಲ್ಲ.

ಫ್ಲಾಫ್ ಆಗುತ್ತಿದೆ ಇದರ ಬಗ್ಗೆ ರವಿಚಂದ್ರನ್ ಅವರ ಜೀ ಕನ್ನಡ ವೇದಿಕೆಯಲ್ಲಿ ಕಣ್ಣೀರು ಹಾಕಿತ್ತಾ ನಾನು ಪ್ರೇಕ್ಷಕರಿಗೆ ಇಷ್ಟ ಆಗುವಂತಹ ಕಥೆಯನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಭಾವುಕರಾಗಿದ್ದಾರೆ. ಅಷ್ಟೇ ಅಲ್ಲದೆ ತಾವು ಸಿನಿಮಾಗಾಗಿ ಎಷ್ಟು ಆಸ್ತಿಯನ್ನು ಕಳೆದುಕೊಂಡಿದ್ದೇನೆ ಎಂಬುದರ ಬಗ್ಗೆಯೂ ಕೂಡ ಮಾತನಾಡಿದ್ದಾರೆ ಆದರೆ ಇದೇ ವೇದಿಕೆಯಲ್ಲಿ ಮುಂದೊಂದು ದಿನ ಜನ ಮೆಚ್ಚುವಂತಹ ಸಿನಿಮಾವನ್ನು ನಾನು ನೀಡುತ್ತೇನೆ ಈಗ ಸೋತಿರಬಹುದು ಆದರೆ ಮುಂದಿನ ದಿನದಲ್ಲಿ ಗೆದ್ದು ತೋರಿಸುತ್ತೇನೆ ಎಂದು ಸವಾಲನ್ನು ಹಾಕಿದ್ದಾರೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಮಾತನಾಡುವುದಕ್ಕೆ ಪ್ರಾರಂಭಿಸಿದರು ಆದರೆ ಇದೀಗ ರವಿಚಂದ್ರನ್ ಅವರ ಸೊಸೆ ತಮ್ಮ ಮಾವನ ಬಗ್ಗೆ ಹಾಗೂ ಗಂಡನ ಬಗ್ಗೆ ಮಾತನಾಡಿರುವುದು ನಿಜಕ್ಕೂ ಅಚ್ಚರಿಯನಿಸಿದೆ.

ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಎರಡು ತಿಂಗಳ ಹಿಂದಷ್ಟೇ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಅವರ ಮದುವೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವಂತಹ ಸಂಗೀತ ಅವರನ್ನು ಮನೋರಂಜನ್ ಅವರು ಮದುವೆಯಾಗಿದ್ದಾರೆ. ಇದೊಂದು ಪಕ್ಕ ಅರೆಂಜ್ ಮ್ಯಾರೇಜ್ ಆಗಿದ್ದರೂ ಕೂಡ ಸಂಗೀತ ಅವರು ತಮ್ಮ ಮಾವ ಹಾಗೂ ಗಂಡನನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಇತ್ತೀಚಿಗಷ್ಟೇ ನಡೆದ ಸಂದರ್ಶನ ಒಂದರಲ್ಲಿ ಸಂಗೀತ ಅವರನ್ನು ನಿಮ್ಮ ಮಾವ ಸಿನಿಮಾಗಾಗಿ ಆಸ್ತಿ ಸಿರಿ ಸಂಪತ್ತು ಎಲ್ಲವನ್ನು ಕಳೆದುಕೊಂಡು ಇದೀಗ ಬರಿಗೈನಲ್ಲಿ ಇದ್ದಾರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನೆಯನ್ನು ಕೇಳಿದ್ದಾರೆ.

ಈ ಪ್ರಶ್ನೆಗೆ ಸಂಗೀತ ಕೊಟ್ಟ ಉತ್ತರ ನಿಜಕ್ಕೂ ಎಲ್ಲರನ್ನು ನಿಬ್ಬರಿಗಾಗಿಸುವಂತೆ ಮಾಡಿದೆ ಹೌದು, ಅಷ್ಟಕ್ಕೂ ಸಂಗೀತ ಹೇಳಿದ್ದಾದರೂ ಏನು ಅಂದರೆ ದುಡ್ಡು ಇವತ್ತು ಬರುತ್ತೆ ನಾಳೆ ಹೋಗುತ್ತೆ. ದುಡ್ಡಿಗೆ ಬೆಲೆಯನ್ನು ಪ್ರಾಮುಖ್ಯತೆಯನ್ನು ನೀಡಬಾರದು ನಮ್ಮ ಮಾವ ಹಾಗೂ ನನ್ನ ಗಂಡ ಇಬ್ಬರೂ ಕೂಡ ಒಳ್ಳೆಯ ವ್ಯಕ್ತಿಗಳು ಇದಿಷ್ಟೇ ಸಾಕು ಇದಕ್ಕಿಂತ ದೊಡ್ಡ ಸಿರಿ ಸಂಪತ್ತು ಬೇಕಿಲ್ಲ. ಇಂದು ಸತತ ಸಿನಿಮಾಗಳು ಸೋತಿರಬಹುದು ಆದರೆ ಮುಂದೊಂದು ದಿನ ಒಳ್ಳೆಯ ಸಿನಿಮಾಗಳು ಬರುತ್ತದೆ ಈ ಸಿನಿಮಾದಿಂದಲೇ ನಮ್ಮ ಮಾವನವರಿಗೆ ಮತ್ತೆ ಯಶಸ್ಸು ಕೀರ್ತಿ ಹಾಗೂ ಹಣ ಎಲ್ಲವು ದೊರೆಯುತ್ತದೆ. ಅಲ್ಲಿಯವರೆಗೂ ನಾವು ತಾಳ್ಮೆಯಿಂದ ಕಾಯುತ್ತೇವೆ ಕಳೆದುಕೊಂಡಿದ್ದರ ಬಗ್ಗೆ ನಾವು ಚಿಂತೆ ಮಾಡಬಾರದು.

ಬದಲಿಗೆ ಮುಂದೇನು ಮಾಡಬೇಕು ಎಂಬುದರ ಬಗ್ಗೆ ಮಾತ್ರ ಆಲೋಚನೆ ಮಾಡಬೇಕು ನನ್ನ ಮಾವನ ಬಗ್ಗೆ ನನಗೆ ಹೆಮ್ಮೆ ಇದೆ ಹಾಗಾಗಿ ನಾನು ಅವರು ಕಳೆದುಕೊಂಡಿದ್ದರ ಬಗ್ಗೆ ಎಂದಿಗೂ ಕೂಡ ಚಿಂತೆ ಮಾಡುವುದಿಲ್ಲ. ಮುಂದೊಂದು ದಿನ ಅವರು ಉತ್ತಮವಾದ ಜೀವನವನ್ನು ಕಲ್ಪಿಸಿ ಕೊಡುತ್ತಾರೆ ಎಂಬ ಭರವಸೆಯಲ್ಲಿ ಇದ್ದೇನೆ ಎಂದು ಹೇಳಿದ್ದಾರೆ. ನಿಜಕ್ಕೂ ಸಂಗೀತ ಅವರ ಈ ಮಾತನ್ನು ಕೇಳಿ ಮನೆಯವರೆಲ್ಲ ಭಾವುಕರಾಗಿದ್ದಾರೆ ಇನ್ನು ಪ್ರೇಕ್ಷಕರು ಅಭಿಮಾನಿಗಳು ಸಹ ಸಂಗೀತ ಅವರ ಒಳ್ಳೆಯ ಗುಣವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ನಿಜಕ್ಕೂ ಈಗಿನ ಕಾಲದಲ್ಲಿ ಹಣ ಆಸ್ತಿ ಸಿರಿ ಸಂಪತ್ತಿಗೆ ಬೆಲೆಯನ್ನು ನೀಡುತ್ತಾರೆ ಆದರೆ ಈಕೆ ಮಾತ್ರ ವ್ಯಕ್ತಿತ್ವಕ್ಕೆ ಬೆಲೆ ನೀಡಿದ್ದಾರೆ ಎಂದು ಹಾಡಿ ಹೊಗಳುತ್ತಿದ್ದರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ

ಕಾಂತಾರ ಸಿನಿಮಾದ ಭೂತಕೋಲ, ಗುಳಿಕ ದೈವ, ಪಂಜುರ್ಲಿ ಹಿಂದು ಧರ್ಮದಲ್ಲ, ರಿಷಬ್ ಶೆಟ್ಟಿ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದ ನಟ ಚೇತನ್, ಕಾಂತಾರ ಸಿನಿಮಾದ ಬಗ್ಗೆ ಈತ ಹೇಳಿದ್ದೇನು ನೋಡಿ

ಕಳೆದ 15 ದಿನಗಳಿಂದ ಎಲ್ಲೇ ನೋಡಿದರೂ ಕೂಡ ಕಾಂತಾರ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದಾರೆ ಮೊದಲ ಎರಡು ವಾರವು ಕೂಡ ಈ ಕನ್ನಡ ಸಿನಿಮಾವನ್ನು ಎಲ್ಲಾ ನಟ ನಟಿಯರು ಹಾಡಿ ಹೊಗಳಿದ್ದರೂ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ಭಾರತದಾದ್ಯಂತ ಕಾಂತರಾ ಸಿನಿಮಾವನ್ನು ಮೆಚ್ಚಿಕೊಂಡಿದ್ದರು. ಅಷ್ಟೇ ಅಲ್ಲದೆ ನಮ್ಮ ಭಾಷೆಗೂ ಕೂಡ ಈ ಸಿನಿಮಾವನ್ನು ಡಬ್ ಮಾಡಿ ಕೊಡಿ ಎಂದು ಬೇಡಿಕೆ ಇಟ್ಟಿದ್ದರು ಈ ಕಾರಣಕ್ಕಾಗಿ ಕೇವಲ ಕನ್ನಡದಲ್ಲಿ ಮಾತ್ರ ಮೊದಲ ಬಾರಿಗೆ ನಿರ್ಮಾಣವಾಗಿದ್ದಂತಹ ಸಿನಿಮಾ ದಿನ ಕಳೆದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಸಾಕಷ್ಟು ಭಾಷೆಯಲ್ಲಿ ಡಬ್ ಆಗಿ ಪರಭಾಷೆಯಲ್ಲಿ ಕೂಡ ಇದೀಗ ಕಾಂತರಾ ಸಿನಿಮಾ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ವೀಕ್ಷಣೆಯನ್ನು ಪಡೆಯುತ್ತಿದೆ.

ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಸ್ಟಾರ್ ನಟ ನಟಿಯರು ಕೂಡ ಕಾಂತರಾ ಸಿನಿಮಾವನ್ನು ಮೆಚ್ಚಿಕೊಂಡು ರಿಷಬ್ ಶೆಟ್ಟಿ ಅವರ ಅಭಿನಯವನ್ನು ನೋಡಿ ಹೊಗಳಿದ್ದಾರೆ. ಅಷ್ಟೇ ಅಲ್ಲದೆ ಇವತ್ತು ಕಾಂತಾರ ಸಿನಿಮಾದಲ್ಲಿ ಇರುವಂತಹ ದೈವ ಆರಾಧನೆಯ ಬಗ್ಗೆ ಮೆಚ್ಚಿಕೊಂಡಿದ್ದಾರೆ ಪ್ರಕೃತಿಯ ಮುಂದೆ ಮತ್ತು ದೇವರ ಮುಂದೆ ಮನುಷ್ಯನ ಆಟ ನಡೆಯುವುದಿಲ್ಲ ಎಂಬುದನ್ನು ಈ ಚಿತ್ರದಲ್ಲಿ ಬಹಳ ಅಚ್ಚುಕಟ್ಟಾಗಿ ತೋರಿಸಿಕೊಟ್ಟಿದ್ದಾರೆ. ಪರಭಾಷೆಯಲ್ಲಿ ಶ್ಲಾಘನೀಯ ದೊರೆಯುತ್ತಿರುವ ಈ ಚಿತ್ರಕ್ಕೆ ಇದೀಗ ನಮ್ಮವರೇ ಬತ್ತಿಯನ್ನು ಇಡುವಂತಹ ಕೆಲಸವನ್ನು ಮಾಡುತ್ತಿದ್ದರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಇದೀಗ ರಿಷಬ್ ಶೆಟ್ಟಿ ಅವರ ಕಾಂತರಾದ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ಅಷ್ಟೇ ಅಲ್ಲದೆ ಕಾಂತಾರಾ ಚಿತ್ರದಲ್ಲಿ ಬರುವಂತಹ ಭೂತ ಕೋಲು ಪಂಜುರ್ಲಿ, ಗುಳಿಕ ದೈವದ ಬಗ್ಗೆ ಯಾರಿಗೂ ತಿಳಿದ ಮಾಹಿತಿಯನ್ನು ಹೇಳಿದ್ದಾರೆ ಅಷ್ಟಕ್ಕೂ ಚೇತನ್ ಹೇಳಿದ್ದಾದರೂ ಏನು ಎಂಬುದನ್ನು ನೋಡುವುದಾದರೆ. “ಕಾಂತಾರ ಚಿತ್ರದ ಭೂತಕೋಲ ಹಿಂದೂ ಸಂಸ್ಕಂತಿಗೆ ಸೇರಿಲ್ಲ ಎಂದು ಟ್ವೀಟ್ ಮಾಡಿದ್ದಾರೆ ತಮ್ಮ ಟ್ವೀಟ್‍ನಲ್ಲಿ ಚೇತನ್ ಅವರು, ನಮ್ಮ ಕನ್ನಡದ ಚಲನಚಿತ್ರ ಕಾಂತಾರವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂದು ತಮ್ಮ ಫೇಸ್‍ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ನೋಡಿದಂತಹ ಕೆಲವು ನೆಟ್ಟಿಗರು ಮತ್ತು ಅಭಿಮಾನಿಗಳು ಚೇತನ್ ಅವರನ್ನು ಇದೀಗ ತರಾಟೆಗೆ ತೆಗೆದುಕೊಂಡಿದ್ದಾರೆ ಹೌದು ಕನ್ನಡ ಸಿನಿಮಾ ಮೊದಲು ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾಗಿತ್ತು ಆದರೆ ಇದೀಗ ಇಡೀ ದೇಶಾದ್ಯಂತ ಹಾಗೂ ಪ್ರಪಂಚದಾದ್ಯಂತ ವ್ಯಾಪ್ತಿಯಾಗುತ್ತಿದೆ ಇದು ಖುಷಿಯ ಸಂಗತಿ. ಈ ವಿಚಾರವನ್ನು ಕೇಳಿ ನೀವು ಖುಷಿ ಪಡಬೇಕು ಅಥವಾ ಪ್ರೋತ್ಸಾಹ ನೀಡಬೇಕು ಅದನ್ನು ಬಿಟ್ಟು ಸಿನಿಮಾದಲ್ಲಿಯೂ ಕೂಡ ಜಾತಿ ಧರ್ಮ ಹಾಗೂ ತೊಡಕುಗಳನ್ನು ಹುಡುಕುತ್ತಿದ್ದೀರಲ್ಲ ಎಂದು ನಟ ಚೇತನ್ ಅವರಿಗೆ ಹಿಗ್ಗ ಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ನಟ ಚೇತನ್ ಅವರಿಗೆ ಇದೀಗ ಹೊಟ್ಟೆಕಿಚ್ಚು ಬಂದಿದೆ ಅವರ ಸಿನಿಮಾಗಳು ಹೆಚ್ಚಾಗಿ ಓಡುತ್ತಿಲ್ಲ ಯಾವುದೂ ಕೂಡ ತೆರೆ ಕಾಣುತ್ತಿಲ್ಲ ಎಂಬ ಕಾರಣಕ್ಕಾಗಿ ಇದೀಗ ಕಾಂತರಾ ಸಿನಿಮಾದ ಯಶಸ್ಸನ್ನು ನೋಡಿ ಸಹಿಸದೆ ಈ ರೀತಿ ತಂಟೆ ತೆಗೆದಿದ್ದಾರೆ ಎಂದು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ.

ಅದೇನೆ ಆಗಲಿ ನಮ್ಮವರೇ ನಮಗೆ ಆಗುವುದಿಲ್ಲ ಎಂಬುದು ಇದೇ ಕಾರಣಕ್ಕೆ ನೋಡಿ ಇಡೀ ಪ್ರಪಂಚದಾದ್ಯಂತ ಕಾಂತರಾ ಸಿನಿಮಾವನ್ನು ಎಲ್ಲರೂ ಮೆಚ್ಚಿಕೊಂಡು ಇದರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಚೇತನ್ ಅವರು ಮಾತ್ರ ಈ ಒಂದು ದೈವದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಅಷ್ಟೇ ಅಲ್ಲದೆ ಇದು ನಮ್ಮ ಹಿಂದೂ ಧರ್ಮಕ್ಕೆ ಸೇರಿದೆ ಆಚರಣೆಗೆ ಅಲ್ಲ ಎಂಬ ರೋಚಕ ಮಾಹಿತಿಯನ್ನು ಹೊರ ಹಾಕಿದ್ದಾರೆ. ಮುಂದಿನ ದಿನದಲ್ಲಿ ಈ ಒಂದು ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕಾಗಿದೆ ನಿಮ್ಮ ಪ್ರಕಾರ ನಟ ಚೇತನ್ ಅವರ ಹೇಳಿಕೆ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ವಸಿಷ್ಟ ಸಿಂಹ ಜೊತೆ ನಟಿ ಹರಿಪ್ರಿಯ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ನೋಡಿ ಎಷ್ಟು ಮಸ್ತಾಗಿದೆ.

ವಶಿಷ್ಟ ಸಿಂಹ ತಮ್ಮ ಕಂಚಿನ ಕಂಠದ ಮೂಲಕ ಕರ್ನಾಟಕದ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದ್ದಾರೆ ಹೌದು ಕವಚ ಸಿನಿಮಾದಲ್ಲಿ ಇವರು ಮಾಡಿರುವ ಅಮೋಘ ಅಭಿನಯವನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ. ಇನ್ನು ವಸಿಷ್ಟ ಸಿಂಹ ಲವ್ಲಿ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ ಗೌರಿ ಗಣೇಶದ ಹಬ್ಬದ ದಿನದಂದೇ ಈ ಒಂದು ಸಿನಿಮಾದ ಪೋಸ್ಟರ್ ಅನ್ನು ಕೂಡ ರಿಲೀಸ್ ಮಾಡಿದರು. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ವಂಶಿಕಾ ಅಂಜನಿ ಕಶ್ಯಪ್ ಅವರು ಕೂಡ ಬಾಲನಟಿಯಾಗಿ ಅಭಿನಯ ಮಾಡುತ್ತಿದ್ದಾರೆ.

ಮತ್ತೊಂದು ಕಡೆ ನಟಿ ಹರಿಪ್ರಿಯ ಅವರು ಕೂಡ ಕನ್ನಡದ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಹೌದು. ರಕ್ಷಿತ್ ಶೆಟ್ಟಿ ಅವರ ಜೊತೆಗಿನ ರಿಕ್ಕಿ ಸಿನಿಮಾ ಇವರಿಗೆ ಹೆಚ್ಚು ಹೆಸರು ಮತ್ತು ಖ್ಯಾತಿಯನ್ನು ಗಳಿಸಿಕೊಟ್ಟಂತಹ ಸಿನಿಮಾ ಅಂತಾನೆ ಹೇಳಬಹುದು. ಇದಾದ ನಂತರ ನೀರ್ದೋಸೆ ಸಿನಿಮಾದಲ್ಲಿ ಅದ್ಭುತವಾಗಿ ಅಭಿನಯ ಮಾಡಿದ್ದಾರೆ ಈ ಒಂದು ಸಿನಿಮಾಗೂ ಕೂಡ ಇವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ನೀರ್ ದೋಸೆ ಸಿನಿಮಾದಲ್ಲಿ ಅಭಿನಯ ಮಾಡಿದ ನಂತರ ನಟಿ ಹರಿಪ್ರಿಯಾ ಅವರಿಗೆ ಒಂದರ ಮೇಲೆ ಮತ್ತೊಂದರಂತೆ ಸಿನಿಮಾ ಅವಕಾಶಗಳು ಬರತೊಡಗಿದವು ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ತೆಲಗಿನಲ್ಲಿಯೂ ಕೂಡ ನಟಿ ಹರಿಪ್ರಿಯಾ ಅವರು ಅಭಿನಯಿಸಿದ್ದಾರೆ.

2007ರಲ್ಲಿ ಬಡಿ ಎಂಬ ತುಳು ಸಿನಿಮಾದಲ್ಲಿ ನಟನೆ ಮಾಡುವ ಮೂಲಕ ಮೊಟ್ಟ ಮೊದಲ ಬಾರಿಗೆ ಚಿತ್ರರಂಗಕ್ಕೆ ಪಾದರಪಣೆ ಮಾಡಿದರು ತದನಂತರ 2008ರಲ್ಲಿ ಮನಸುಗಳ ಮಾತು ಮಧುರ ಎಂಬ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ಕಾಣಿಸಿಕೊಂಡರು. ಇದಾದ ನಂತರ ರಿಕ್ಕಿ, ಬುಲೆಟ್ ಬಸ್ಯ, ರನ್ನ, ಡಾಟರ್ ಆಫ್ ಪಾರ್ವತಮ್ಮ, ಕಳ್ಳರ ಸಂತೆ, ಚೆಲುವೆ ನಿನ್ನ ನೋಡಲು, ಉಗ್ರಂ, ಭಲೇ ಜೋಡಿ, ಸಾಗರ್, ಸೂಪರ್ ಶಾಸ್ತ್ರಿ, ಭರ್ಜ,ರಿ ಅಂಜನಿಪುತ್ರ, ಕನಕ, ಲೈಫ್ ಜೊತೆ ಒಂದು ಸೆಲ್ಫಿ, ಜೈ ಸಿಂಹ, ಬೆಲ್ ಬಾಟಂ, ಕುರುಕ್ಷೇತ್ರ ಕನ್ನಡ ಗೊತ್ತಿಲ್, ಎಲ್ಲಿದ್ದೆ ಇಲ್ಲಿ ತನಕ, ಪೆಟ್ರೋಮ್ಯಾಕ್ಸ್ ಹೀಗೆ ಕನ್ನಡದಲ್ಲಿ ಸುಮಾರು 30ಕ್ಕೂ ಅಧಿಕ ಚಲನಚಿತ್ರದಲ್ಲಿ ನಟಿಯಾಗಿ ನಟನೆ ಮಾಡಿದ್ದಾರೆ. ಪರಭಾಷೆಯಲ್ಲಿ ಸೇರಿದರೆ ಒಟ್ಟಾರೆಯಾಗಿ ಹರಿಪ್ರಿಯ ಅವರು ಐವತ್ತಕ್ಕೂ ಹೆಚ್ಚಿನ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

ಸದ್ಯಕ್ಕೆ ಹರಿಪ್ರಿಯಾ ಅವರ ಕೈನಲ್ಲಿ ಸಾಲು ಸಾಲು ಸಿನಿಮಾಗಳಿದೆ ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯ ನಟನೆ ಮಾಡಿದಂತಹ ಬೆಲ್ ಬಾಟಮ್ ಸಿನಿಮಾದ ಚಾಪ್ಟರ್ ಟು ಭಾಗ ಕೆಲವೇ ದಿನದಲ್ಲಿ ಚಿತ್ರೀಕರಣ ನಡೆಯಲಿದೆ, ಇದರ ಜೊತೆಗೆ ಹೆಸರಿಡಿದ ಇನ್ನು ನಾಲ್ಕು ಸಿನಿಮಾಗಳಿಗೆ ಸಹಿಯನ್ನು ಹಾಕಿದ್ದಾರೆ ಹೇಳುವುದಾದರೆ ಸಾಲು ಸಾಲು ಸಿನಿಮಾದ ಪ್ರಾಜೆಕ್ಟ್ ಅನ್ನು ತಮ್ಮ ಕೈನಲ್ಲಿ ಇಟ್ಟುಕೊಂಡಿದ್ದಾರೆ. ಇಷ್ಟೆಲ್ಲ ಬಿಜಿ ಇದ್ದರೂ ಕೂಡ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋಸ್ ಮತ್ತು ಫೋಟೋಸ್ ಗಳನ್ನು ತಮ್ಮ ಅಭಿಮಾನಿಗಳ ಜೊತೆ ನಟಿ ಹರಿಪ್ರಿಯಾ ಆಗಾಗ ಹಂಚಿಕೊಳ್ಳುತ್ತಾರೆ. ಇತ್ತೀಚಿಗಷ್ಟೇ ನಟ ವಸಿಷ್ಠ ಅವರನ್ನು ಭೇಟಿ ಮಾಡಿದ್ದಾರೆ ಜೊತೆಗೆ ಅವರ ಜೊತೆ ರೀಲ್ಸ್ ಒಂದನ್ನು ಮಾಡಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನಟಿ ಹರಿಪ್ರಿಯ ಅವರು ವಶಿಷ್ಠ ಅವರ ಜೊತೆ ಮಾಡಿದಂತಹ ಡ್ಯಾನ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ನೀವು ಕೂಡ ಒಮ್ಮೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

ಹಿಂದಿ ಡ್ಯಾನ್ಸಿಂಗ್ ಶೋನಲ್ಲಿ ಕನ್ನಡ ಮಾತನಾಡಿದ ಶಿಲ್ಪ ಶೆಟ್ಟಿ, ಈ ವಿಡಿಯೋ ನೋಡಿ ನಿಜಕ್ಕೂ ಅದ್ಭುತ, ಇವರ ಕನ್ನಡ ಪ್ರೇಮವನ್ನು ಮೆಚ್ಚಲೇಬೇಕು

https://youtu.be/fa1spDkB4i4

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟಿ ಶಿಲ್ಪಾ ಶೆಟ್ಟಿಯವರು ಇದೀಗ ಮುಂಬೈನಲ್ಲಿ ಸೆಟಲ್ ಆಗಿದ್ದಾರೆ ಆದರೂ ಕೂಡ ಇವರು ಕನ್ನಡದವರೇ ಕರ್ನಾಟಕದ ಮಂಗಳೂರಿನವರು ಎಂಬುದು ಸಾಕಷ್ಟು ಜನರಿಗೆ ತಿಳಿದೇ ಇದೆ. ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ ಪ್ರೀತ್ಸೋದ್ ತಪ್ಪ ಎಂಬ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಈ ಸಿನಿಮಾದ ನಂತರ ಇವರು ಕನ್ನಡದ ಯಾವ ಸಿನಿಮಾದಲ್ಲಿಯೂ ನಟನೆ ಮಾಡಿಲ್ಲ. ತದನಂತರ ಬಾಲಿವುಡ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಮಾಡೆಲಿಂಗ್ ಕ್ಷೇತ್ರದಲ್ಲಿ ಅತಿವ ಆಸಕ್ತಿ ಹೊಂದಿದ ಇವರು ಮುಂಬೈ ನಗರಕ್ಕೆ ಸೇರುತ್ತಾರೆ. ತದನಂತರ ಬಾಲಿವುಡ್ ಚಿತ್ರರಂಗದಲ್ಲಿ ಅಭಿನಯ ಮಾಡಲು ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ ತದನಂತರ ಇವರು ಸಿಕ್ಕಾಪಟ್ಟೆ ಫೇಮಸ್ ಆಗಿ ಸಾಕಷ್ಟು ಸ್ಟಾರ್ ನಟರ ಜೊತೆ ತೆರೆಯನ್ನು ಹಂಚಿಕೊಳ್ಳುತ್ತಾರೆ.

ಇದೇ ಸಮಯದಲ್ಲಿ ಉದ್ಯಮಿ ಆದಂತಹ ರಾಜ್ ಕುಂದ್ರ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ ಶಿಲ್ಪ ಶೆಟ್ಟಿ ಅವರಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ. ಇನ್ನು ರಾಜ್ ಕುಂದ್ರ ಬಿಸಿನೆಸ್ ಮ್ಯಾನ್ ಮಾತ್ರವಲ್ಲದೆ ಹಲವಾರು ಸಿನಿಮಾಗಳಿಗೂ ಕೂಡ ಬಂಡವಾಳವನ್ನು ಹೂಡಿಕೆ ಮಾಡಿದ್ದಾರೆ. ಶಿಲ್ಪಾ ಶೆಟ್ಟಿಯವರು ಸದ್ಯಕ್ಕೆ ಸಿನಿಮಾಗಳಿಂದ ದೂರ ಉಳಿದಿದ್ದರೂ ಕೂಡ ಹಲವಾರು ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮೂಲಕ ಸಾಕಷ್ಟು ಸಕ್ರಿಯರಾಗಿದ್ದಾರೆ. ಹೌದು ಸದ್ಯಕ್ಕೆ ಶಿಲ್ಪಾ ಶೆಟ್ಟಿಯವರು ಹಿಂದಿ ಕಾರ್ಯಕ್ರಮದ ಡ್ಯಾನ್ಸಿಂಗ್ ಶೋನಲ್ಲಿ ಜಡ್ಜ್ ಆಗಿ ಪಾಲ್ಗೊಂಡಿದ್ದಾರೆ. ಈ ವೇದಿಕೆಗೆ ಕರ್ನಾಟಕ ಮೂಲದ ಗುಲ್ಬರ್ಗದ ಹುಡುಗನೊಬ್ಬ ತನ್ನ ಪ್ರತಿಭೆಯನ್ನು ತೋರಿಸುವುದಕ್ಕೆ ಹೋಗಿದ್ದಾನೆ.

ಕುಂದಾ ನಗರಿ ಬೆಳಗಾವಿ ಹುಡುಗನೊಬ್ಬರ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಬಳಿ ಕನ್ನಡ ಮಾತನಾಡಿಸಿದ್ದು ಅಷ್ಟೇ ಅಲ್ಲದೆ ಡ್ಯಾನ್ಸ್ ಮೂಲಕ ಹೊಗಳಿಸಿ ಕೊಂಡಿದ್ದಾನೆ. ಮೂಲತಃ ಬೆಳಗಾವಿಯ ಪೃಥ್ವಿರಾಜ್ ಅಶೋಕ್ ಕೊಂಗಾರಿ ಎನ್ನುವ ಕೇವಲ 9 ವರ್ಷದ ಹುಡುಗ ಸೋನಿ ಟಿವಿಯ ಸೂಪರ್ ಡ್ಯಾನ್ಸರ್ ಕಾರ್ಯಕ್ರಮದ ಆಡಿಶನ್‌ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿದ್ದು ಇದನ್ನು ಕಂಡಂತಹ ನಟಿ ಶಿಲ್ಪಾ ಶೆಟ್ಟಿ ಮನಸಾರೆ ಹೊಗಳಿದ್ದಾರೆ. ಅಷ್ಟೇ ಅಲ್ಲದೆ ಹೆಮ್ಮೆಯ ಕನ್ನಡಿಗ ಎಂದಿದ್ದು ನಿಮ್ಮ ಪರ್ಫಾಮೆನ್ಸ್ ತುಂಬ ತುಂಬ ಚೆನ್ನಾಗಿತ್ತು ನಮಸ್ತೆ ಹೇಗಿದ್ದೀರಾ.? ಚೆನ್ನಾಗಿದ್ದೀರಾ.? ಎಂದು ಶಿಲ್ಪಾ ಶೆಟ್ಟಿ ಕನ್ನಡದಲ್ಲಿ ಹೇಳಿದ ಮಾತು ಕನ್ನಡಿಗರಿಗೆ ಬಹಳ ಖುಷಿ ನೀಡಿದೆ.

ಇನ್ನು  ಪೃಥ್ವಿರಾಜ್ ರವರು ಬಡಕುಟುಂಬದಿಂದ ಬಂದ ಹುಡುಗನಾಗಿದ್ದು ಆತನ ಅಪ್ಪ ಸೀರೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾರೆ. ಸೂಪರ್ ಡಾನ್ಸರ್ ಕಾರ್ಯಕ್ರಮದಲ್ಲಿ  ಯಾರಿಗೆ ಯಾವ ಗಿಫ್ಟ್ ನೀಡುತ್ತೀರಾ ಎಂದು ಪ್ರಶ್ನೆ ಮಾಡಿದಾಗ ಪೃಥ್ವಿರಾಜ್ ರವರು ನನ್ನ ಹತ್ತಿರ ಶೂ ಇದೆ ಅಪ್ಪನ ಚಪ್ಪಲಿ ಹಾಕಿಕೊಂಡು ಫ್ಯಾಕ್ಟರಿ ಹೋಗ್ತಾರೆ ನಾನು ಅವರಿಗೆ ಶೂ ಕೊಡ್ತೀನಿ ಎಂದಿರೋದು ಎಲ್ಲರ ಮೆಚ್ಚುಗೆ ಗಳಿಸಿದೆ. ಹೌದು ನಾನು ದೊಡ್ಡವನಾದ ಮೇಲೆ ತುಂಬ ಬಡತನ ಬಂತು. ದುಡ್ಡಿನ ತೊಂದರೆ ಆಯ್ತು ದುಡ್ಡಿಲ್ಲ ಅಂದರೆ ಮನೆ ಖಾಲಿಮಾಡು ಅಂತ ಮನೆಯ ಮಾಲೀಕರು ಹೇಳುತ್ತಾರೆ. ಅಮ್ಮನಿಗೆ ಬೆನ್ನು ನೋವಿನ ಸಮಸ್ಯೆ ಇದ್ದು ಅವರು ಹಾಸಿಗೆ ಮೇಲೆ ಇರುತ್ತಾರೆ. ಅಮ್ಮನಿಗೆ ನೋವು ಹೆಚ್ಚಾದರೆ ಅಪ್ಪ ಊಟ ಮಾಡೋದಿಲ್ಲ ಎನ್ನುತ್ತಾ ಕಣ್ಣೀರು ಹಾಕಿದ್ದಾನೆ ಪೃಥ್ವಿ.

ಇನ್ನು ಶಿಲ್ಪ ಶೆಟ್ಟಿ ಅವರು ನಾನು ಮೂರು ಕನ್ನಡ ಸಿನಿಮಾ ಮಾಡಿದ್ದು ಕನ್ನಡ ಅರ್ಥವಾಗುತ್ತದೆ ಅಷ್ಟೊಂದು ಕನ್ನಡ ಮಾತನಾಡೋಕೆ ಬರಲ್ಲ ಪೃಥ್ವಿರಾಜ್ ಮುಖದಲ್ಲಿ ಭರವಸೆ ಕಾಣುತ್ತಿದ್ದು ಆತನ ಹಾವಭಾವ ಅದ್ಭುತವಾಗಿತ್ತು. ಹೆಸರಿನಲ್ಲಿಯೇ ರಾಜ ಇರುವಂತೆ ಡ್ಯಾನ್ಸ್ ಸಹ ರಾಜನಂತೆ ಮಾಡಿದ್ದಾರೆ ಆತನ ಡ್ಯಾನ್ಸ್ ನೋಡಿ ರೋಮಾಂಚನವಾಗಿದ್ದು ತುಂಬ ಹೆಮ್ಮೆಯಾಯ್ತು. ನಿಮ್ಮ ಪರ್ಫಾಮೆನ್ಸ್ ತುಂಬ ತುಂಬ ಚೆನ್ನಾಗಿದ್ದು ನಿಮ್ಮ ಕಣ್ಣುಗಳು ಬಲ್ಬ್ ರೀತಿ ಹೊಳೆಯುತ್ತಿತ್ತು. ಪವರ್ ಫುಲ್ ಪರ್ಫಾಮೆನ್ಸ್ ಎಂದು ಶಿಲ್ಪಾ ಶೆಟ್ಟಿ ಅವರು ಪೃಥ್ವಿರಾಜ್ ಡ್ಯಾನ್ಸ್ ಬಗ್ಗೆ ಹೇಳಿದ್ದಾರೆ ಸದ್ಯ ಇದೀಗ ಶಿಲ್ಪಾಶೆಟ್ಟಿ ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕನ್ನಡಿಗರ ಮೆಚ್ಚುಗೆಗೆ ಕಾರಣವಾಗಿದೆ.

ನಮ್ಮಲ್ಲಿನ ಸಾಕಷ್ಟು ನಟಿಯರು ಕನ್ನಡದಿಂದ ಅವಕಾಶ ಪಡೆದುಕೊಂಡು ಹೋಗಿ ಬೇರೆ ರಾಜ್ಯದಲ್ಲಿ ಕನ್ನಡ ಮಾತನಾಡುವುದಕ್ಕೆ ಬರುವುದಿಲ್ಲ ಕನ್ನಡ ಅಂದರೆ ನನಗೆ ಇಷ್ಟ ಇಲ್ಲ ಅಂತ ಹೇಳುತ್ತಾರೆ. ಆ ವ್ಯಕ್ತಿ ಯಾರು ಎಂಬುದು ನಿಮಗೆ ತಿಳಿದೇ ಇದೆ ಹೌದು ರಶ್ಮಿಕ ಅವರು ಪರರಾಜ್ಯದಲ್ಲಿ ಕನ್ನಡದ ಬಗ್ಗೆ ಅಸಡ್ಡೆಯನ್ನು ತೋರಿಸುತ್ತಾರೆ. ಆದರೆ ಶಿಲ್ಪಾ ಶೆಟ್ಟಿ ಅವರು ಕರ್ನಾಟಕ ಬಿಟ್ಟು ಹೋಗಿ ಬಹಳಷ್ಟು ವರ್ಷಗಳೇ ಆಗಿದೆ ಆದರೂ ಕೂಡ ಹಿಂದಿ ವೇದಿಕೆಯಲ್ಲಿ ಕನ್ನಡಿಗನನ್ನು ಕಂಡು ಕನ್ನಡದಲ್ಲಿಯೇ ಮಾತನಾಡಿಸಿದ್ದಾರೆ. ನಿಜಕ್ಕೂ ಇವರ ಕನ್ನಡ ಪ್ರೀತಿಯನ್ನು ನಾವೆಲ್ಲರೂ ಮೆಚ್ಚಲೇಬೇಕು ಶಿಲ್ಪ ಶೆಟ್ಟಿ ಮಾತನಾಡಿರುವ ವಿಡಿಯೋ ಈ ಕೆಳಗಿನ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಕಾಂತಾರ ಸಿನಿಮಾದ ಸಕ್ಸಸ್ ನಂತರ ತೆಲುಗಿನಲ್ಲು ರಿಷಬ್ ಶೆಟ್ಟಿಗೆ ಆಫರ್ ಬಂದಿದೆ ಯಾವ ಸಿನಿಮಾದಲ್ಲಿ ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಾಂತಾರ ಸಿನಿಮಾ ಕನ್ನಡದಲ್ಲಿ ಒಂದು ಹೊಸ ಮೈಲಿಗಲ್ಲನ್ನು ಸೃಷ್ಟಿ ಮಾಡುತ್ತಿರುವ ಸಿನಿಮಾ ಅಂತಾನೆ ಹೇಳಬಹುದು. ಹೌದು ಕೆಜಿಎಫ್ ಸಿನಿಮಾದ ನಂತರ ಅತಿ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾವಾಗಿ ಇದೀಗ ಕಾಂತರಾ ಸಿನಿಮಾ ಹೊರ ಹೊಮ್ಮಿದೆ. ಈ ಒಂದು ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ ಮಾಡಿದ ಅಭಿನಯವನ್ನು ಮತ್ಯಾರು ಮಾಡುವುದಕ್ಕೆ ಸಾಧ್ಯವಿಲ್ಲ ಅಂತಾನೆ ಹೇಳಬಹುದು. ಕೊನೆಯ 20 ನಿಮಿಷಗಳು ಮಾತ್ರ ರೋಮಾಂಚನವಾಗುತ್ತದೆ ಪ್ರೇಕ್ಷಕರು ಕಣ್ಣು ಮಿಟಿಕಿಸಿದೆ ಈ ಒಂದು ದೈವದ ನಟನೆಯನ್ನು ನೋಡುತ್ತಾರೆ.

ಇವೆಲ್ಲ ಒಂದು ಕಡೆಯಾದರೆ ಇದೀಗ ಕಾಂತರಾ ಸಿನಿಮಾ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಯಶಸ್ಸನ್ನು ಸಾಧಿಸುತ್ತಿದೆ ಕೇವಲ ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಕೂಡ ಇದರ ಸದ್ದು ಜೋರಾಗಿಯೇ ಇದೆ. ಇದರಿಂದಾಗಿ ರಿಷಬ್ ಶೆಟ್ಟಿ ಅವರ ನಸೀಬೆ ಬದಲಾಗಿದೆ ಅಂತಾನೆ ಹೇಳಬಹುದು ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಾಂತರಾ ಸಿನಿಮಾ ನೋಡಿದ ಮೇಲೆ ಎಲ್ಲಾ ಸೆಲೆಬ್ರಿಟಿಗಳು ಕೂಡ ರಿಷಬ್ ಶೆಟ್ಟಿ ಅವರನ್ನು ಹಾಡಿ ಹೊಗಳುತ್ತಿದ್ದರೆ. ಈ ಸಿನಿಮಾದಿಂದ ರಿಷಬ್ ಶೆಟ್ಟಿ ಅವರ ಬದುಕೆ ಬದಲಾಗಿದೆ ಈ ಸಿನಿಮಾದಿಂದ ರಿಷಬ್ ಶೆಟ್ಟಿಗೆ ಟರ್ನಿಂಗ್ ಪಾಯಿಂಟ್ ಸಿಕ್ಕಿದೆ. ಹೌದು ಕೇವಲ ಕನ್ನಡಕ್ಕೆ ಸೀಮಿತವಾಗಿದಂತಹ ರಿಷಬ್ ಶೆಟ್ಟಿ ಅವರು ಇದೀಗ ತೆಲುಗಿನಲ್ಲಿಯೂ ಕೂಡ ನಟನೆ ಮಾಡಲು ಒಪ್ಪಿಕೊಂಡಿದ್ದಾರಂತೆ.

ಅಂದಾಗೆ ಈ ವಿಚಾರವನ್ನು ಸ್ವತಃ ರಿಷಬ್ ಶೆಟ್ಟಿ ಅವರೇ ಹೇಳಿಕೊಂಡಿದ್ದಾರೆ ತೆಲುಗಿನ ಕಾಂತರಾ ಸಿನಿಮಾದ ಸಕ್ಸಸ್ ಮೀಟ್ ನಲ್ಲಿ ಭಾಗಿಯಾಗಿದಂತಹ ರಿಷಬ್ ಶೆಟ್ಟಿ ಸಪ್ತಮಿ ಗೌಡ ಸೇರಿದಂತೆ ಕಾಂತರಾ ಸಿನಿಮಾದ ಇಡೀ ಚಿತ್ರತಂಡವೇ ಇಲ್ಲಿ ನೆರದಿತ್ತು. ಈ ಒಂದು ಕಾರ್ಯಕ್ರಮದಲ್ಲಿ ಸ್ಟೈಲಿಸ್ ಸ್ಟಾರ್ ಅಲ್ಲು ಅರ್ಜುನ್ ಅವರ ತಂದೆ ಅಲ್ಲೂ ಅರವಿಂದ್ ಅವರು ಕೂಡ ಪಾಲ್ಗೊಂಡಿದ್ದರು ಈ ಸಮಯದಲ್ಲಿ ನಮ್ಮ ಮುಂದಿನ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ನಟನೆ ಮಾಡಲಿದ್ದಾರೆ ಈ ಒಂದು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ರಿಶಬ್ ಶೆಟ್ಟಿ ಒಪ್ಪಿಕೊಂಡಿರುವುದು ನಿಜಕ್ಕೂ ಕೂಡ ಸಂತೋಷವಾದ ವಿಚಾರವೇ ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ.

ಅಂದ ಹಾಗೆ ಅಲ್ಲೂ ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅಂದಿನ ಕಾಲದಿಂದಲೂ ಕೂಡ ಸಾಕಷ್ಟು ಸಿನಿಮಾಗಳಿಗೆ ಬಂಡವಾಳವನ್ನು ಹೂಡಿಕೆ ಮಾಡಿದ್ದಾರೆ. ಗೀತಾ ಪ್ರೊಡಕ್ಷನ್ ಎಂಬ ಸಂಸ್ಥೆ ಅಡಿಯಲ್ಲಿ ಇಲಿಯವರೆಗು ಕೂಡ ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ಹಾಗಾಗಿ ಕಾಂತಾರ ಸಿನಿಮಾದಲ್ಲಿ ನಟ ರಿಶಬ್ ಶೆಟ್ಟಿ ಮಾಡಿದ ಅಭಿನಯವನ್ನು ನೋಡಿ ಇವರಿಗಾಗಿಯೇ ವಿಶೇಷವಾದ ಚಿತ್ರ ಒಂದನ್ನು ನಿರ್ಮಾಣ ಮಾಡಬೇಕು ಎಂದು ಅಂದುಕೊಂಡಿದ್ದಾರಂತೆ. ಅದರಂತೆ ರಿಶಬ್ ಶೆಟ್ಟಿ ಅವರ ಒಪ್ಪಿಗೆಯನ್ನು ಪಡೆದು ಹೊಸ ಸಿನಿಮಾ ಚಿತ್ರೀಕರಣ ಶೀಘ್ರದಲ್ಲಿಯೇ ಪ್ರಾರಂಭವಾಗುತ್ತದೆ ಅಂತ ಹೇಳಿದ್ದಾರೆ.

ಆದರೆ ಈ ಒಂದು ಸಿನಿಮಾ ಯಾವ ರೀತಿ ಇರಲಿದೆ ಹಾಗೂ ಈ ಸಿನಿಮಾದ ಟೈಟಲ್ ಏನು ಎಂಬುದರ ಬಗ್ಗೆ ಎಲ್ಲಿಯೂ ಕೂಡ ರಿವಿಲ್ ಮಾಡಿಲ್ಲ ಆದರೆ ರಿಷಬ್ ಶೆಟ್ಟಿ ಅವರು ನಟನೆ ಮಾಡುತ್ತಾರೆ ಎಂಬ ವಿಚಾರವನ್ನಷ್ಟೇ ಹೇಳಿದ್ದಾರೆ. ಇನ್ನು ರಿಷಬ್ ಶೆಟ್ಟಿಯವರು ನಾನು ತೆಲುಗಿನಲ್ಲಿ ನಟನೆ ಮಾಡುತ್ತೇನೆ ಅದಕ್ಕೂ ಮುಂಚೆ ನನಗೆ ಸ್ವಲ್ಪ ಬ್ರೇಕ್ ಬೇಕು ಎಂದು ಕೇಳಿದ್ದಾರೆ. ಏಕೆಂದರೆ ರಿಷಬ್ ಶೆಟ್ಟಿಯವರು ಈಗಾಗಲೇ ಒಂದು ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ ಇದರ ಜೊತೆಗೆ ಮತ್ತೆರಡು ಸಿನಿಮಾದಲ್ಲಿ ನಟನಾಗಿ ಅಭಿನಯಿಸುವುದಕ್ಕೆ ಒಪ್ಪಿಗೆಯನ್ನು ಕೂಡ ಸೂಚಿಸಿದ್ದಾರೆ ಹಾಗಾಗಿ ಈ ಎಲ್ಲಾ ಕೆಲಸ ಕಾರ್ಯಗಳು ಮುಗಿದ ನಂತರವಷ್ಟೇ ತೆಲುಗಿನಲ್ಲಿ ನಟನೆ ಮಾಡಲಿದ್ದಾರಂತೆ. ಒಟ್ಟಾರೆಯಾಗಿ ಹೇಳುವುದಾದರೆ ಕಾಂತರಾ ಸಿನಿಮಾದ ನಂತರ ರಿಶಬ್ ಶೆಟ್ಟಿ ಅವರು ಇದೀಗ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಕೂಡ ನಾಯಕ ನಟನಾಗಿ ಅಭಿನಯ ಮಾಡುವುದಕ್ಕೆ ಸಿದ್ಧರಾಗಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ರಿಯಾಲಿಟಿ ಶೋಗಳ ಕರಾಳ ರಹಸ್ಯ ಬಾಯ್ಬಿಟ್ಟ ನಟ ದರ್ಶನ್ ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ ಅಷ್ಟೇ ಅಲ್ಲದೆ ದರ್ಶನ್ ಹೇಳಿದ್ದು ಸತ್ಯ ಅನ್ಸುತ್ತೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಏಕೈಕ ನಟ ಅಂದರೆ ಅದು ದರ್ಶನ್ ಅಂತಾನೆ ಹೇಳಬಹುದು, ದರ್ಶನ್ ಅವರ ಮಾತು ಒರಟಾಗಿರುತ್ತದೆ ಆದರೆ ಮನಸ್ಸಿನಲ್ಲಿ ಯಾವುದನ್ನು ಇಟ್ಟುಕೊಳ್ಳುವುದಿಲ್ಲ ಮನಸ್ಸಿನಲ್ಲಿ ಒಂದು ಮಾತಿನಲ್ಲಿ ಒಂದು ಹೇಳುವುದಿಲ್ಲ ಇದ್ದ ವಿಚಾರವನ್ನು ಇದ್ದಹಾಗೆ ನೇರವಾಗಿ ಹೇಳುತ್ತಾರೆ. ಈ ವ್ಯಕ್ತಿತ್ವಕ್ಕಾಗಿಯೇ ಬಹಳಷ್ಟು ಜನ ಇವರನ್ನು ಇಷ್ಟಪಟ್ಟರು ಇನ್ನೂ ಕೆಲವು ಜನ ಇವರನ್ನು ದ್ವೇಷ ಮಾಡುತ್ತಾರೆ. ಆದರೆ ಇವರು ಯಾವುದಕ್ಕೂ ಕೂಡ ತಲೆಕೆಡಿಸಿಕೊಳ್ಳುವುದಿಲ್ಲ ಇರೋ ಸತ್ಯವನ್ನು ಇದ್ದ ಹಾಗೆಯೇ ಹೇಳುತ್ತಾರೆ.

ದರ್ಶನ್ ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳಾಗಿದೆ ಇವರು ಕೇವಲ ಸಿನಿಮಾದಲ್ಲಿ ಮಾತ್ರ ನಟನೆ ಮಾಡುತ್ತಿದ್ದರೆ ಇದನ್ನು ಹೊರತು ಪಡಿಸಿದರೆ ಯಾವುದೇ ರಿಯಾಲಿಟಿ ಶೋನಲ್ಲಿ ಭಾಗಿಯಾಗಿಲ್ಲ ಹಾಗಾಗಿ ಕೆಲವು ಅಭಿಮಾನಿಗಳು ದರ್ಶನ್ ಅವರನ್ನು ರಿಯಾಲಿಟಿ ಶೋ ಗೆ ಯಾಕೆ ಬರುವುದಿಲ್ಲ ಹಾಗು ರಿಯಾಲಿಟಿ ಶೋಗಳನ್ನು ಯಾಕೆ ನಡೆಸಿಕೊಡುತ್ತಿಲ್ಲ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ದರ್ಶನ್ ಅವರು ಸಂದರ್ಶನ ಒಂದರಲ್ಲಿ ನೇರವಾಗಿ ಉತ್ತರ ಹೇಳಿದ್ದಾರೆ ಈ ಉತ್ತರ ಕೇಳಿದರೆ ನಿಜಕ್ಕೂ ಆಶ್ಚರ್ಯ ಆಗುತ್ತದೆ ಅಷ್ಟೇ ಅಲ್ಲದೆ ದರ್ಶನ್ ಅವರು ಹೇಳಿದ್ದು ಸತ್ಯ ಅಂತ ಒಂದು ಕಡೆ ಎಲ್ಲೋ ಅನಿಸುತ್ತದೆ.

ಹೌದು ಇತ್ತೀಚಿನ ದಿನದಲ್ಲಿ ಸೀರಿಯಲ್ ಹಾಗೂ ಸಿನಿಮಾಗಳಿಗಿಂತಲೂ ಹೆಚ್ಚು ಮನ್ನಣೆ ಮತ್ತು ಖ್ಯಾತಿಯನ್ನು ಗಳಿಸಿಕೊಳ್ಳುತ್ತಿರುವುದು ಅಂದರೆ ರಿಯಾಲಿಟಿ ಶೋ ಅಂತಾನೇ ಹೇಳಬಹುದು. ಅದರಲ್ಲಿಯೂ ಕೂಡ ಬಿಗ್ ಬಾಸ್ ಅಂತ ದೊಡ್ಡ ದೊಡ್ಡ ರಿಯಾಲಿಟಿ ಶೋಗಳನ್ನು ಜನರು ಹುಚ್ಚೆದ್ದು ನೋಡುತ್ತಾರೆ. ಇತ್ತೀಚಿನ ಯುವ ಪೀಳಿಗೆಗೆ ಬಿಗ್ ಬಾಸ್ ಎಂಬುದು ಒಂದು ದೊಡ್ಡ ಜನಪ್ರಿಯ ಕಾರ್ಯಕ್ರಮವಾಗಿದೆ ಹಾಗಾಗಿ ಈ ಮನೆಯಲ್ಲಿ ನಡೆಯುವಂತಹ ಪ್ರತಿನಿತ್ಯದ ದಿನಚರಿಯನ್ನು ನೋಡುವುದಕ್ಕೆ ಕಾತುರದಿಂದ ಕಾದು ಕುಳಿತಿರುತ್ತಾರೆ. ಆದರೆ ಬಿಗ್ ಬಾಸ್ ನೋಡುವ ಕೆಲವು ಜನ ಇದನ್ನು ಸ್ಕ್ರಿಪ್ಟೆಡ್ ಅಂತ ಹೇಳುತ್ತಾರೆ ಆದರೆ ಬಿಗ್ ಬಾಸ್ ಮನೆಗೆ ಹೋಗಿ ಬಂದಂತಹ ವ್ಯಕ್ತಿಗಳು ಮಾತ್ರ ಇದು ಸ್ಕ್ರಿಪ್ಟೆಡ್ ಅಲ್ಲ ರಿಯಾಲಿಟಿ ಶೋ ಅಲ್ಲಿ ನಡೆಯುವುದೆಲ್ಲವೂ ನೈಜವಾಗಿಯೇ ಇರುತ್ತದೆ ಯಾವುದೇ ರೀತಿಯಾದಂತಹ ಸುಳ್ಳು ಮೋಸ ಇಲ್ಲ ಎಂಬುದನ್ನು ತಿಳಿಸುತ್ತಾರೆ.

ನಾವು ಇಲ್ಲಿ ಕೇವಲ ಬಿಗ್ ಬಾಸ್ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ ಬಿಗ್ ಬಾಸ್ ಅನ್ನು ಹೊರತುಪಡಿಸಿ ಸಾಕಷ್ಟು ರಿಯಾಲಿಟಿ ಶೋಗಳಿವೆ. ಹಳ್ಳಿ ಹುಡುಗಿ ಪ್ಯಾಟೆಗ್ ಬಂದ, ಪ್ಯಾಟೆ ಮಂದಿ ಹಳ್ಳಿ ಬಂದ್ರು, ಇನ್ನು ಸಾಕಷ್ಟು ರಿಯಾಲಿಟಿ ಶೋಗಳು ಕನ್ನಡದಲ್ಲಿ ಇವೆ ಸಾಕಷ್ಟು ರಿಯಾಲಿಟಿ ಶೋಗಳು ಕೂಡ ಬಂದು ಹೋಗಿದೆ. ಆದರೆ ಹೆಚ್ಚು ಜನಪ್ರಿಯಗೊಳಿಸಿದ ರಿಯಾಲಿಟಿ ಶೋ ಅಂದರೆ ಬಿಗ್ ಬಾಸ್ ಹಾಗೂ ಕರ್ನಾಟಕದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ. ಹಾಗಾಗಿಬಿದನ್ನು ಉದಾಹರಣೆಯಾಗಿ ಇಟ್ಟುಕೊಂಡು ಹೇಳುತ್ತಿದ್ದೇವೆ ಅಷ್ಟೇ ಅದನ್ನು ಹೊರತುಪಡಿಸಿ ಬಿಗ್ ಬಾಸ್ ಗೆ ಅವಮಾನ ಮಾಡಬೇಕು ಅಥವಾ ಬಿಗ್ ಬಾಸ್ ಕಾರ್ಯಕ್ರಮವನ್ನು ಕೀಳಾಗಿ ತೋರಿಸಬೇಕು ಎಂಬ ಮನೋಭಾವನೆ ನಮಗಿಲ್ಲ.

ಜನರಿಗೆ ಅರ್ಥ ಮಾಡಿಸುವ ಸಲುವಾಗಿ ಈ ಒಂದು ಬಿಗ್ ಬಾಸ್ ಎಂಬ ಕಾನ್ಸೆಪ್ಟನ್ನು ಗಣನೆಗೆ ತೆಗೆದುಕೊಂಡು ಅದರ ಒಳಗಿರುವ ಸತ್ಯವನ್ನು ಹೊರ ಹಾಕುವಂತಹ ಪ್ರಯತ್ನವನ್ನು ಮಾಡುತ್ತಿದ್ದೇವೆ. ಹೌದು ಇತ್ತೀಚಿಗಷ್ಟೇ ಸಂದರ್ಶನ ಒಂದರಲ್ಲಿ ಪಾಲ್ಗೊಂಡಂತಹ ದರ್ಶನ್ ಅವರನ್ನು ನೀವ್ಯಾಕೆ ರಿಯಾಲಿಟಿ ಶೋ ಗಳಲ್ಲಿ ಪಾಲ್ಗೊಳ್ಳುವುದಿಲ್ಲ ಹಾಗೂ ರಿಯಾಲಿಟಿ ಶೋಗಳನ್ನು ನಡೆಸುವುದಿಲ್ಲ ಅಂತ ಹೇಳುತ್ತಾರೆ ಇದಕ್ಕೆ ಖಡಕ್ಕಾಗಿ ಉತ್ತರ ನೀಡಿರುವ ದರ್ಶನ್ ಅವರು ರಿಯಾಲಿಟಿ ಶೋ ಗೆ ಹೋಗಿ ಯಾರೋ ಹೇಳಿದ್ದನ್ನು ಮಾಡಲು ನನಗೆ ಇಷ್ಟ ಇಲ್ಲ ಅಷ್ಟೇ ಅಲ್ಲದೆ ಸ್ಪರ್ಧಿಗಳು ಚೆನ್ನಾಗಿ ಆಟ ಆಡುತ್ತಾರೆ ಆದರೆ ಚೆನ್ನಾಗಿ ಆಟನಾಡಿದರು ಕೂಡ ಅವರಿಗೆ ಬೈಯ ಬೇಕಾದ ಅನಿವಾರ್ಯ ಎದುರಾಗುತ್ತದೆ ಇದರಿಂದ ನಾನು ಅವರಿಗೆ ಮೋಸ ಮಾಡಿದಂತಾಗುತ್ತದೆ ಹಾಗಾಗಿ ನಾನು ರಿಯಾಲಿಟಿ ಶೋ ಗೆ ಹೋಗುವುದಿಲ್ಲ.

ಅಷ್ಟೇ ಅಲ್ಲದೆ ರಿಯಾಲಿಟಿ ಶೋನಲ್ಲಿ ಬೇರೆಯವರು ಹೇಳಿದ ಹಾಗೆಯೇ ಕೇಳಬೇಕಾಗುತ್ತದೆ ಅವರನ್ನು ಬೈಯಿ ಅಂದಾಗ ನಾನು ಅವರನ್ನು ಬೈಯಬೇಕಾಗುತ್ತದೆ ಇವೆಲ್ಲ ಯಾಕೆ ಬೇಕು. ದೇವರು ನನಗೆ ಸಾಕಷ್ಟು ಸಿನಿಮಾ ಅವಕಾಶ ಕೊಟ್ಟಿದ್ದಾನೆ ಏನು ನೋಡಿದರು ಕೂಡ ತೆಗೆದುಕೊಳ್ಳುವಷ್ಟು ಶಕ್ತಿಯನ್ನು ಅಭಿಮಾನಿಗಳು ನನಗೆ ನೀಡಿದ್ದರೆ. ಇದಿಷ್ಟೇ ಸಾಕು ಜೀವನ ಸಾಗಿಸುವುದಕ್ಕೆ ಅತಿ ಆಸೆ ಪಡಬಾರದು ಅಲ್ಲೇ ನಾನು ನೆಮ್ಮದಿಯುತವಾದ ಜೀವನವನ್ನು ಸಾಗಿಸುತ್ತಿದ್ದೇನೆ ಹಾಗಾಗಿ ಇದಕ್ಕಿಂತ ಹೆಚ್ಚು ಸಂಪಾದನೆ ಮಾಡಬೇಕು ಎಂಬ ಮನೋಭಾವನೆ ನನಗೆ ಇಲ್ಲ ಅಂತ ಹೇಳಿದ್ದಾರೆ‌. ಇದೆಲ್ಲವನ್ನು ನೋಡಿದಂತಹ ಕೆಲವು ಅಭಿಮಾನಿಗಳು ದರ್ಶನವರು ಬಿಗ್ ಬಾಸ್ ಕಾರ್ಯಕ್ರಮ ನೋಡಿ ಈ ರೀತಿ ಹೇಳಿಕೆ ಕೊಟ್ಟಿರಬಹುದು ಅಂತ ಹೇಳಿದ್ದಾರೆ ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಷ್ಟರ ಮಟ್ಟಿಗೆ ಸುಳ್ಳು ಎಂಬುದು ಮಾತ್ರ ತಿಳಿದಿಲ್ಲ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ದರ್ಶನ್ ಅವರು ಮಾತನಾಡಿರುವ ವಿಡಿಯೋ ಈ ಕೆಳಗಿದೆ ನೋಡಿ.

ಕಾಂತಾರ ಸಿನಿಮಾ ಬಜೆಟ್ ಬಗ್ಗೆ ಶಾ.ಕಿಂ.ಗ್ ಹೇಳಿಕೆ ಕೊಟ್ಟ ರಿಷಬ್ ಶೆಟ್ಟಿ ಪ್ಲಾನ್ ಮಾಡಿದ್ದು 7 ಕೋಟಿ ಆದ್ರೆ ಖರ್ಚು ಆಗಿದ್ದೆಷ್ಟು ಕೋಟಿ ಗೊತ್ತಾ.?

ಇಂದು ಕನ್ನಡ ಸಿನಿಮಾಗಳಲ್ಲಿ ಬಹುಬೇಗ ನೂರು ಕೋಟಿ ತಲುಪಿದ ಸಿನಿಮಾಗಳ ಹೆಸರಿನ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಕಾಂತಾರ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಪ್ರತಿದಿನಕ್ಕೊಂದು ಹೊಸ ದಾಖಲೆ ಬರೆಯುತ್ತಿದೆ. ಬಹುದೊಡ್ಡ ಬಜೆಟ್ ನ ಸಿನಿಮಾಗಳು ಈ ರೀತಿ ದೊಡ್ಡ ಕಲೆಕ್ಷನ್ ಮಾಡಿ ಹೆಸರು ಮಾಡುತ್ತಿದ್ದವು ಆದರೆ ಕಾಂತರಾ ರೀತಿಯ ಸಿಂಪಲ್ ಸಿನಿಮಾ ಇಷ್ಟು ದೊಡ್ಡ ಹೆಸರು ಮಾಡಿ ಇಂದು ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ತೆರೆ ಮೇಲೆ ರಾಜಾಜಿಸುತ್ತಿದೆ. ಕನ್ನಡಿಗರ ಹೆಮ್ಮೆ ಆಗಿರುವ ಕಾಂತಾರ ಸಿನಿಮಾದ ಸಿನಿಟೋಗ್ರಫಿ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದು ಕಾಂತರಾ ಸಿನಿಮಾದ ದೃಶ್ಯ ವೈಭವ ಕಣ್ಣು ಕಟ್ಟುವಂತೆ ಟೀಮ್ ಕಟ್ಟಿಕೊಟ್ಟಿದೆ. ಈಗ ಎಲ್ಲರ ಬಾಯಿಯಲ್ಲೂ ಓಡುತ್ತಿರುವ ಮತ್ತೊಂದು ವಿಷಯ ಏನೆಂದರೆ ಕಾಂತಾರ ಸಿನಿಮಾಗೆ ಒಟ್ಟು ಎಷ್ಟು ಖರ್ಚಾಗಿರಬಹುದು ಎಂದು.

ಈ ಬಗ್ಗೆ ಇದುವರೆಗೆ ಎಲ್ಲೂ ಕೂಡ ಸಿನಿಮಾ ತಂಡ ಮಾತನಾಡಿಲ್ಲ ಆದರೆ ಮೊದಲ ಬಾರಿಗೆ ರಿಷಬ್ ಶೆಟ್ಟಿ ಅವರ ತಂದೆ ಈ ಬಗ್ಗೆ ಮಾತನಾಡಿದ್ದು ಕಾಂತರಾದ ಒಟ್ಟು ಬಜೆಟ್ ಎಷ್ಟು ಆಗಿತ್ತು ಎನ್ನುವುದರ ನಿಖರ ಮಾಹಿತಿ ಕೊಟ್ಟಿದ್ದಾರೆ. ಕಾಂತರಾ ಸಿನಿಮಾ ತೆಗೆಯಲು ರಿಷಬ್ ಶೆಟ್ಟಿ ಅವರ ಸ್ವಂತ ಊರಿನಲ್ಲಿಗೆ ಸೆಟ್ ಹಾಕಲಾಗಿತ್ತು ಆದರೆ ಆ ಭಾಗದಲ್ಲಿ ಮಳೆ ಜಾಸ್ತಿ ಆದ ಕಾರಣ ಪೂರ್ತಿ ಸೆಟ್ ಒಂದು ಬಾರಿ ಹಾಳಾಗಿ ಹೋಗಿತ್ತು. ಅಲ್ಲಿ ಹಾಕಿಸಿದ ಮಣ್ಣು ಕೂಡ ಕರಗಿ ಹೋಗಿ ಎಷ್ಟೋ ವೇಳೆ ಸಂಚಾರಕ್ಕೂ ದಕ್ಕೆ ಆಗಿ ರಸ್ತೆಗಳೇ ಮುಚ್ಚಿ ಹೋಗಿತ್ತು ಆಗ ರಸ್ತೆ ಕೂಡ ಸರಿ ಮಾಡಿಸಲು ಚಿತ್ರತಂಡ ಹೆಣಗಾಡಿತ್ತು. ಇದೆಲ್ಲವನ್ನು ಸೇರಿಸಿ ಸಿನಿಮಾಗೆ ಒಟ್ಟು 15 ರಿಂದ 16 ಕೋಟಿ ಖರ್ಚಾಗಿದೆಯಂತೆ ಆದರೆ ಮೊದಲ ಬಾರಿಗೆ ಸಿನಿಮಾವನ್ನು ಹೊಂಬಾಳೆ ಫಿಲಂಸ್ ಅವರ ಬಳಿ ತೆಗೆದುಕೊಂಡು ಹೋದಾಗ ಏಳು ಕೋಟಿ ಅಂದಾಜು ಲೆಕ್ಕ ನೀಡಿದ್ದರಂತೆ ಆದರೆ ಅದರ ಎರಡರಷ್ಟು ಸಿನಿಮಾ ತಂಡ ಈ ಸಿನಿಮಾಕ್ಕಾಗಿ ದುಡ್ಡು ಹಾಕಿದೆ.

ರಿಷಭ್ ಅವರು ಹೊಂಬಾಳೆ ಫಿಲಂಸ್ ಅವರನ್ನು ತಮ್ಮ ಪ್ರಚಾರದ ಪೂರ್ತಿ ಈ ವಿಷಯಕ್ಕಾಗಿ ನೆನೆಸಿಕೊಂಡಿದ್ದಾರೆ ಹೊಂಬಾಳೆ ಫಿಲಂ ಅಂತಹ ಬ್ಯಾನರ್ ಸಿಕ್ಕ ಕಾರಣ ಇಷ್ಟು ಅದ್ಭುತವಾಗಿ ನಾನು ನನ್ನ ಕನಸನ್ನು ಸಾಕಾರಗೊಳಿಸಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ. ಇಂದು ಸಿನಿಮಾ ಬಗ್ಗೆ ಎಲ್ಲರೂ ಕೂಡ ಮಾತನಾಡುತ್ತಿದ್ದು ಜನಸಾಮಾನ್ಯರು ಸೇರಿದಂತೆ ಸೆಲೆಬ್ರಿಟಿಗಳು ಹಾಗೂ ಬೇರೆ ಭಾಷೆಯ ನಿರ್ದೇಶಕರುಗಳ ನಟರು ಕೂಡ ಕನ್ನಡದ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ. ರಿಷಬ್ ಶೆಟ್ಟಿ ಅವರು ಒಬ್ಬ ಭರವಸೆಯ ನಿರ್ದೇಶಕ ಎನ್ನುವುದು ಮತ್ತೆ ಮತ್ತೆ ಪ್ರೂ ಆಗುತ್ತಿದ್ದು ಕಿರಿಕ್ ಪಾರ್ಟಿ ಬೆಲ್ ಬಾಟಮ್ ನಂತರ ಈಗ ಕಾಂತಾರಾ ಇವುಗಳ ನಿರ್ದೇಶನವನ್ನು ಮೆಚ್ಚಿಕೊಂಡು ಅವರ ಹೆಸರಿಗೊಂದು ಸ್ಟಾರ್ ಗಿರಿಯನ್ನು ಸೇರಿಸಲು ಎಲ್ಲರೂ ನಿರ್ಧರಿಸಿದ್ದಾರೆ.

ಪ್ರಶಾಂತ್ ನೀಲ್ ಅವರು ಕಾಂತಾರ ವಿಮರ್ಶೆ ಮಾಡುವಾಗ ಡಿವೈನ್ ಎನ್ನುವ ಪದವನ್ನು ಬಳಸಿ ಹೇಳಿದ್ದರು ಹಾಗಾಗಿ ರಿಷಬ್ ಶೆಟ್ಟಿ ಅವರಿಗೆ ಈ ಹೆಸರು ಸರಿ ಹೊಂದುತ್ತದೆ ಅವರನ್ನು ಇನ್ನು ಮುಂದೆ ಡಿವೈನ್ ಸ್ಟಾರ್ ಎಂದು ಕರೆಯಬೇಕು ಎನ್ನುವ ಮಾತುಕತೆಗಳು ನಡೆಯುತ್ತಿವೆ. ಡಿವೈನ್ ಎನ್ನುವ ಪದವು ದೈವಿಕ ಎನ್ನುವ ಅರ್ಥವನ್ನು ಕೊಡುತ್ತದೆ ಕಾಂತಾರ ಸಿನಿಮಾದ ಕ್ಲೈಮಾಕ್ಸ್ ಅಲ್ಲಿ ರಿಷಬ್ ಶೆಟ್ಟಿ ಅವರು ನಿಜವಾಗಿಯೂ ಗುಳಿಕಾ ದೈವದಂತೆಯೇ ಆರ್ಭಟಿಸಿದ್ದಾರೆ. ಅವರ ಅಭಿನಯ ಕಂಡು ಜನ ನಿಜವಾಗಿಯೂ ದೈವವೇ ಆವಾಹನೆ ಆಗಿತ್ತೇನೋ ಎಂದು ಅಚ್ಚರಿಗೊಂಡಿದ್ದಾರೆ. ಇನ್ನು ಕಾಂತರಾ ಸಿನಿಮಾ ಗೆ 7 ಕೋಟಿ ಬಜೆಟ್ ಹಾಕಲಾಗಿತ್ತು ಆದರೆ ಈ ಸಿನಿಮಾ ಮುಕ್ತಾಯವಾಗುವ ವೇಳೆಗೆ ಇದರ ಬಜೆಟ್ ಎರಡರಷ್ಟು ಹೆಚ್ಚಾಗಿದೆ ಕಾಂತರಾ ಸಿನಿಮಾ ಗೆ 15 ಕೋಟಿ ಖರ್ಚಾಗಿದೆ ಎಂದು ತಿಳಿದುಬಂದಿದೆ.

ಹೊಂಬಾಳೆ ಸಂಸ್ಥೆ 15 ಕೋಟಿ ಬಂಡವಾಳವನ್ನು ಹೂಡಿಕೆ ಮಾಡಿ ಇದೀಗ ಇನ್ನೂರಕ್ಕೂ ಹೆಚ್ಚು ಕೋಟಿ ಹಣವನ್ನು ಲಭಿಸುತ್ತಿದೆ ಕಾಂತಾರ ಸಿನಿಮಾ ಬಿಡುಗಡೆಯಾದ ಕೇವಲ ಎರಡೇ ವಾರಕ್ಕೆ 200 ಕೋಟಿ ಕಲೆಕ್ಷನ್ ಮಾಡಿದೆ ಇದು ಆರಂಭ ಮಾತ್ರ ಕೊನೆಯವರೆಗೂ ಈ ಒಂದು ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತದೆ ಎಂಬುದನ್ನು ಯಾರಿಂದಲೂ ಕೂಡ ಊಹೆ ಮಾಡುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಕಾಂತಾರ ಸಿನಿಮಾದ ಕ್ರೇಜ್ ಇಂಡಿಯಾದಲ್ಲಿ ಅಷ್ಟರ ಮಟ್ಟಿಗೆ ಫೇಮಸ್ ಆಗುತ್ತಿದೆ ಮೊದಲು ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ ಈ ಸಿನಿಮಾ ಇದೀಗ ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲೂ ಕೂಡ ಬಿಡುಗಡೆಯಾಗಿದೆ. ಹಾಗಾಗಿ ಕೆಲವು ಮೂಲಗಳ ಪ್ರಕಾರ 500 ಕೋಟಿ ದಾಟಬಹುದು ಎಂದು ಹೇಳಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಿಮಗೆ ಕಮೆಂಟ್ ಮುಖಾಂತರ ತಿಳಿಸಿ.