Home Blog Page 329

ದರ್ಶನ್ ಜೊತೆ ನಟಿಸಲು ಮಲಾಶ್ರೀ ಮಗಳು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ.? ಹೊಸ ನಟಿಗೆ ಇಷ್ಟು ಸಂಭಾವನೆ ನಾ.!

ದರ್ಶನ್ ಅವರ ಕ್ರಾಂತಿ ಸಿನಿಮಾ ಈಗಾಗಲೇ ಮುಕ್ತಾಯವಾಗಿದ್ದು ಇನ್ನೇನು ಬಿಡುಗಡೆಗೆ ಸಜ್ಜಾಗಿದೆ ಇದರ ಬೆನ್ನಲ್ಲೇ ದರ್ಶನ್ ಅವರು ಯಾವ ಸಿನಿಮಾವನ್ನು ಪ್ರಾರಂಭ ಮಾಡಲಿದ್ದಾರೆ ಅವರ ಮುಂದಿನ ಪ್ರಾಜೆಕ್ಟ್ ಯಾವುದು ಎಂಬ ಸಾಕಷ್ಟು ವಿಚಾರಗಳನ್ನು ಅಭಿಮಾನಿಗಳು ಚರ್ಚೆ ಮಾಡುತ್ತಲೇ ಇದ್ದರೂ. ಆದರೆ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಬೇಗನೆ ಶುಭ ಸುದ್ದಿಯನ್ನು ನೀಡಿದ್ದಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಸಾಮಾನ್ಯವಾಗಿ ಒಬ್ಬ ನಟ ನಟನೆ ಮಾಡಿದ ನಂತರ ಮತ್ತೊಂದು ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತೇನೆ.

ಇದಕ್ಕೆ ಉದಾಹರಣೆ ಅಂದರೆ ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಸಿನಿಮಾದಲ್ಲಿ ಘಟನೆ ಮಾಡಿದ ನಂತರ ಈ ಸಿನಿಮಾ ತೆರೆಕಂಡ ನಂತರ ಇಲ್ಲಿಯವರೆಗೂ ಕೂಡ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಈಗಾಗಲೇ ಕೆಜಿಎಫ್ ಬಿಡುಗಡೆಯಾಗಿ ನಾಲ್ಕು ತಿಂಗಳು ಕಳೆದೆ ಹೋಗಿದೆ ಆದರೂ ಕೂಡ ಅವರು ಇನ್ನು ಕಥೆಯನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ರಾಕಿಂಗ್ ಸ್ಟಾರ್ ಅಭಿಮಾನಿಗಳು ಯಶ್ ಅವರ ಮುಂದಿನ ಪ್ರಾಜೆಕ್ಟ್ ಯಾವುದು ಇರಬಹುದು ಎಂದು ಹೆಚ್ಚು ಗಮನವಹಿಸುತ್ತಿದ್ದಾರೆ. ಆದರೆ ದರ್ಶನ ಅಭಿಮಾನಿಗಳಿಗೆ ಇಂತಹ ಗೊಂದಲವಿಲ್ಲ ಏಕೆಂದರೆ ಸ್ವತಃ ದರ್ಶನ್ ಅವರೆ ಕ್ರಾಂತಿ ಸಿನಿಮಾ ಬಿಡುಗಡೆಯಾಗುವುದಕ್ಕಿಂತ ಮುಂಚೆ ತಮ್ಮ ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ.

ಹೌದು ವರಮಹಾಲಕ್ಷ್ಮಿ ಹಬ್ಬದ ದಿನವೇ ಕನಕಪುರ ರಸ್ತೆಯಲ್ಲಿ ಇರುವಂತಹ ರವಿಶಂಕರ್ ಗುರೂಜಿ ಅವರ ಆಶ್ರಮದಲ್ಲಿ ತಮ್ಮ 56ನೇ ಸಿನಿಮಾದ ಮುಹೂರ್ತ ಪೂಜೆ ನೆರವೇರಿಸಿದ್ದಾರೆ. ಈ ಸಿನಿಮಾದಲ್ಲಿ ರಾಬರ್ಟ್ ಸಿನಿಮಾದಲ್ಲಿ ಕೆಲಸ ಮಾಡಿದಂತಹ ಚಿತ್ರತಂಡವೇ ಇರಲಿದೆ ಎಂದು ಸ್ವತಃ ದರ್ಶನ್ ಅವರೇ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಈ ಸಿನಿಮಾವನ್ನು ತರುಣ್ ಸುಧೀರ್ ರವರು ನಿರ್ದೇಶನ ಮಾಡಲಿದ್ದಾರೆ ಹಾಗೂ ರಾಕ್ಲೈನ್ ವೆಂಕಟೇಶ್ ಅವರು ಈ ಸಿನಿಮಾಗೆ ಬಂಡವಾಳವನ್ನು ಹೂಡಿಕೆ ಮಾಡಲಿದ್ದಾರೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ದರ್ಶನ್ ಅವರಿಗೆ ನಾಯಕನಟಿಯಾಗಿ ಮಾಲಾಶ್ರೀ ಮತ್ತು ನಿರ್ಮಾಪಕ ರಾಮು ಅವರ ಪುತ್ರಿ ಆದಂತಹ ಆರಾಧನಾ ರಾಮ ಅವರು ನಟಿಸಲಿದ್ದಾರೆ. ಇದೆ ಮೊದಲ ಬಾರಿಗೆ ಮಾಲಾಶ್ರೀ ಪುತ್ರಿ ದರ್ಶನ್ ಅವರ ಒಟ್ಟಿಗೆ ನಟನೆ ಮಾಡುವುದರ ಮೂಲಕ ಸ್ಯಾಂಡಲ್ ವುಡ್ ಗೆ ಪಾದರ್ಪಣೆ ಮಾಡುತ್ತಿರುವುದು.

ಸಾಮಾನ್ಯವಾಗಿ ದರ್ಶನ್ ಅವರ ಸಿನಿಮಾದಲ್ಲಿ ನಾಯಕ ನಟಿಯಾಗಿ ನಟನೆ ಮಾಡಬೇಕು ಅಂದರೆ ಕೆಲವೊಂದಷ್ಟು ನಿಯಮಗಳನ್ನು ಪಾಲನೆ ಮಾಡುತ್ತಾರೆ. ಇನ್ನು ದರ್ಶನ್ ಅವರು ಯಾವಾಗಲೂ ಕೂಡ ಕನ್ನಡಿಗರಿಗೆ ಮತ್ತು ಕನ್ನಡ ಕಲಾವಿದರಿಗೆ ಹೆಚ್ಚಿನ ಒತ್ತನ್ನು ನೀಡುತ್ತಾರೆ. ಈ ಕಾರಣಕ್ಕಾಗಿ ತಮ್ಮ ಸಿನಿಮಾದಲ್ಲಿ ನಾಯಕ ನಟಿಯರ ಆಯ್ಕೆ ಮಾಡಿಕೊಳ್ಳುವಾಗ ಮೊದಲ ಪ್ರಾಮುಖ್ಯತೆಯನ್ನು ಕನ್ನಡದವರಿಗೆ ನೀಡುತ್ತಾರೆ. ಅಷ್ಟೇ ಅಲ್ಲದೆ ಹೊರರಾಜ್ಯದಿಂದ ಯಾವ ಹೀರೋಯಿನ್ ಅನ್ನು ಕರೆದುಕೊಂಡು ಬರುವುದು ಬೇಡ ನಮ್ಮಲ್ಲಿ ಇರುವವರಿಗೆ ಅವಕಾಶವನ್ನು ನೀಡೋಣ ಅಂತ ಹೇಳುತ್ತಾರೆ. ಈ ಕಾರಣಕ್ಕಾಗಿ ದರ್ಶನ್ ಅವರ 56ನೇ ಸಿನಿಮಾ ಹಾಗೆ ಮಾಲಾಶ್ರೀ ಮಗಳನ್ನು ಆಯ್ಕೆ ಮಾಡಿಕೊಂಡಿರುವುದು.

ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಮಾಲಾಶ್ರೀ ಅವರ ಮಗಳು ಈ ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಎಷ್ಟು ಸಂಭಾವನೆಯನ್ನು ತೆಗೆದುಕೊಂಡಿದ್ದಾರೆ ಎಂಬ ವಿಚಾರ ಹರಿದಾಡುತ್ತಿದೆ. ಕೆಲವು ಮೂಲಗಳ ಪ್ರಕಾರ ಮಾಲಾಶ್ರೀ ಅವರ ಮಗಳು ಈ ಸಿನಿಮಾಗೆ ಬರೋಬ್ಬರಿ 40 ಲಕ್ಷ ಸಂಭಾವನೆಯನ್ನು ಪಡೆಯುತ್ತಿದ್ದಾರಂತೆ. ನಿಜಕ್ಕೂ ಇದು ಆಶ್ಚರ್ಯವೇ ಏಕೆಂದರೆ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡುವಂತಹ ನಟಿಯರಿಗೆ ಮೊದಲ ಸಿನಿಮಾದಲ್ಲಿ ಇಷ್ಟು ದುಬಾರಿ ಸಂಭಾವನೆಯನ್ನು ಯಾರಿಗೂ ಕೂಡ ನೀಡುವುದಿಲ್ಲ. ಆದರೆ ಮೊದಲ ಬಾರಿಗೆ ಇಷ್ಟು ದುಬಾರಿ ಹಣವನ್ನು ಪಡೆಯುವುದರ ಮೂಲಕ ಮಾಲಾಶ್ರೀ ಮಗಳು ಆರಾಧನಾ ಅವರು ಸುದ್ದಿಯಲ್ಲಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

ಎಲ್ಲ ನಟರ ಜೊತೆ ನಟಿಸಿರುವ ರಾಧಿಕಾ ಪಂಡಿತ್ ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಗೊತ್ತಾ.?

ಸ್ಯಾಂಡಲ್ವುಡ್ ಸಿಂಡ್ರೆಲಾ ಅಂತ ಬಿರುದು ಪಡೆದಿರುವ ರಾಧಿಕಾ ಪಂಡಿತ್ ಅವರು ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಮೊಗ್ಗಿನ ಮನಸ್ಸು ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ತದನಂತರ ಒಂದರ ಹಿಂದೆ ಮತ್ತೊಂದರಂತೆ ಸಾಲು ಸಾಲು ಹಿಟ್ ಸಿನಿಮಾ ನೀಡುವುದರ ಮೂಲಕ ಕನ್ನಡ ಸಿನಿ ರಸಿಕರ ಮನಸ್ಸಿಗೆ ಮನರಂಜನೆಯನ್ನು ನೀಡುತ್ತಾ ಬಂದಿದ್ದಾರೆ. ಇಲ್ಲಿಯವರೆಗೂ ಕೂಡ ರಾಧಿಕಾ ಪಂಡಿತ್ ಅವರು ಯಶ್, ಪುನೀತ್, ಗೋಲ್ಡನ್ ಸ್ಟಾರ್ ಗಣೇಶ್, ಅನುಪ್ ಭಂಡಾರಿ, ಅಜಯ್ ರಾವ್, ಶಿವರಾಜ್ ಕುಮಾರ್, ಧ್ರುವ ಸರ್ಜಾ, ಲೂಸ್ ಮಾದ ಯೋಗಿ, ಹೀಗೆ ಕನ್ನಡದ ದಿಗ್ಗಜರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ಆದರೆ ಈವರೆಗೂ ಕೂಡ ದರ್ಶನ್ ಜೊತೆಯಾಗಲಿ ಅಥವಾ ಸುದೀಪ್ ಜೊತೆಯಾಗಲಿ ರಾಧಿಕಾ ಪಂಡಿತ್ ಯಾವ ಒಂದು ಸಿನಿಮಾದಲ್ಲೂ ಕೂಡ ಕಾಣಿಸಿಕೊಂಡಿಲ್ಲ.

ಈ ವಿಚಾರವನ್ನು ಮನಗೊಂಡಂತಹ ಅಭಿಮಾನಿಗಳು ರಾಧಿಕಾ ಪಂಡಿತ್ ಅವರಿಗೆ ಪ್ರಶ್ನೆಯನ್ನು ಕೇಳಿದ್ದಾರೆ ಎಲ್ಲ ನಟರ ಜೊತೆ ನಟಿಸಿರುವ ನೀವು ಸ್ಯಾಂಡಲ್ ವುಡ್ ದಿಗ್ಗಜ ನಾಯಕರು ಅಂತ ಅನಿಸಿಕೊಂಡಿರುವ ದರ್ಶನ್ ಆಗಿರಲಿ ಅಥವಾ ಸುದೀಪ್ ಇರಲಿ ಅವರ ಜೊತೆ ಯಾಕೆ ನಟಿಸಿಲ್ಲ ಅಂತ ಪ್ರಶ್ನೆಯನ್ನು ಕೇಳಿದರೆ. ಅಭಿಮಾನಿಗಳು ಕೇಳಿದ ಪ್ರಶ್ನೆಗೆ ನಗುತ್ತಲೆ ಉತ್ತರಿಸಿದಂತಹ ರಾಧಿಕಾ ಪಂಡಿತ್ ಅವರು ಕಥೆ ಚೆನ್ನಾಗಿದ್ರೆ ನಾನು ಯಾವ ನಟನ ಜೊತೆಗೂ, ಯಾವ ಪಾತ್ರ ಬೇಕಾದ್ರೂ ಮಾಡುತ್ತೇನೆ. ನನಗೆ, ದೊಡ್ಡ ನಟರು, ಸಣ್ಣ ನಟರು, ಹೊಸಬರು ಎನ್ನುವ ಭೇದ ಭಾವವಿಲ್ಲ ನನಗೆ ಚಿತ್ರದ ಕಥೆ ಬಹಳ ಮುಖ್ಯ. ಖಂಡಿತವಾಗಿಯೂ ಒಳ್ಳೆಯ ಕಥೆ ಸಿಕ್ಕಿದ್ರೆ ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರ ಜೊತೆಗೆ ಸಿನಿಮಾ ಮಾಡುತ್ತೇನೆ” ಎಂದು ಸ್ಪಷ್ಟನೆ ನೀಡಿದ್ದರು.

ಆದರೆ ಗಾಂಧಿನಗರದಲ್ಲಿ ಮಾತ್ರ ಒಂದು ಗಾಸಿಪ್ ಹಾರಿದಾಡುತ್ತಿತ್ತು ಅದೇನೆಂದರೆ ಮೊದಲು ಯಶ್ ಹಾಗೂ ದರ್ಶನ್ ಅವರ ಸಂಬಂಧ ಅಷ್ಟೇನೂ ಅಸನಾಗಿ ಇರಲಿಲ್ಲ. ಈ ಕಾರಣದಿಂದಲೇ ರಾಧಿಕಾ ಪಂಡಿತ್ ಅವರಿಗೆ ದರ್ಶನ್ ಜೊತೆ ನಟನೆ ಮಾಡದಿರಲು ಕಡಿವಾಣವನ್ನು ಹಾಕಲಾಗಿದೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಆದರೆ ಇದು ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದು ಮಾತ್ರ ತಿಳಿದಿಲ್ಲ. ರಾಧಿಕಾ ಪಂಡಿತ್ ಅವರು ಈ ಕಾರಣಕ್ಕಾಗಿಯೇ ದರ್ಶನ್ ಜೊತೆ ನಟನೆ ಮಾಡುತ್ತಿಲ್ಲ ಎಂಬುದು ಕೆಲವರ ಅಭಿಪ್ರಾಯವಾಗಿತ್ತು. ಆದರೆ ಇದಕ್ಕಿದ್ದ ಹಾಗೆ ರಾಧಿಕಾ ಪಂಡಿತ್ ಅವರು ಇದೀಗ ಮಾಧ್ಯಮದ ಮುಂದೆ ಬಂದು ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಖಂಡಿತವಾಗಿಯೂ ಕೂಡ ಉತ್ತಮ ಕಥೆ ಸಿಕ್ಕರೆ ನಾನು ಅವರೊಟ್ಟಿಗೆ ನಟನೆ ಮಾಡುತ್ತೇನೆ ಅಂತ ಹೇಳಿಕೆ ನೀಡುವುದರ ಮೂಲಕ ಎಲ್ಲ ವದಂತಿಗಳಿಗೂ ಕೂಡ ತೆರೆ ಎಳೆದಿದ್ದಾರೆ.

ಸದ್ಯಕ್ಕೆ ರಾಧಿಕಾ ಪಂಡಿತ್ ಅವರು ಮಕ್ಕಳ ಲಾಲನೆ ಪಾಲನೆ ಪೋಷಣೆಯಲ್ಲಿ ತೊಡಗಿದ್ದಾರೆ ಮಕ್ಕಳ ನಂತರ ಯಾವ ಸಿನಿಮಾದಲ್ಲೂ ಕೂಡ ನಟಿಸಿಲ್ಲ. ಇದನ್ನು ನೋಡಿದಂತಹ ರಾಧಿಕಾ ಪಂಡಿತ್ ಅಭಿಮಾನಿಗಳು ಯಶ್ ಮತ್ತು ಸುದೀಪ್ ಅಭಿಮಾನಿಗಳು ಇನ್ನು ಮುಂದೆ ನೀವು ನಾಯಕ ನಟಿಯಾಗಿ ಅಭಿನಯಿಸಿದೆ ಇದ್ದರೂ ಕೂಡ ನಮ್ಮ ನೆಚ್ಚಿನ ನಟನ ಜೊತೆ ಸಹೋದರಿಯ ಪಾತ್ರದಲ್ಲಿ ಅಥವಾ ಪೋಷಕ ಪಾತ್ರದಲ್ಲಾದರೂ ನಟಿಸಿ ಎಂದು ಬೇಡಿಕೆಯನ್ನು ಇಟ್ಟಿದ್ದಾರೆ. ರಾಧಿಕಾ ಪಂಡಿತ್ ಅವರು ಈ ವಿಚಾರದ ಬಗ್ಗೆ ಯಾವ ನಿಲುವನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ನಿಮ್ಮ ಪ್ರಕಾರ ರಾಧಿಕಾ ಪಂಡಿತ್ ದರ್ಶನ್ ಮತ್ತು ಸುದೀಪ್ ಅವರೊಟ್ಟಿಗೆ ನಟನೆ ಮಾಡದೆ ಇರಲು ಯಶ್ ಅವರ ಕಡಿವಾಣವೇ ಕಾರಣವ ಅಥವಾ ಬೇರೆ ಏನಾದರೂ ಕಾರಣ ಇದೆ ಎಂಬುದನ್ನು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ.

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ರಚಿತಾ ರಾಮ್ ಅವಾಜ್ ಹಾಕಿದ ಈ ವೈರಲ್ ವಿಡಿಯೋ ನೋಡಿ, ನಟಿಯಾದ ಕೂಡಲೇ ಈ ರೀತಿ ಮಾಡುವುದು ಸರಿನಾ .?

ರಚಿತಾ ರಾಮ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬುಲ್ ಬುಲ್ ಸಿನಿಮಾದಲ್ಲಿ ನಾಯಕ ನಟಿಯಾಗಿ ನಟನೆ ಮಾಡುವುದರ ಮೂಲಕ 2013ರಲ್ಲಿ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಅವರು ನಟನೆ ಮಾಡುವುದಕ್ಕಿಂತ ಮುಂಚೆ ಸುವರ್ಣ ವಾಹಿನಿಯಲ್ಲಿ ಬರುತ್ತಿದ್ದಂತಹ ಅರಸು ಎಂಬ ಧಾರವಾಹಿಯಲ್ಲಿ ನಟನೆ ಮಾಡುತ್ತಿದ್ದರು. ಈ ಧಾರಾವಾಹಿ ರಚಿತಾ ರಾಮ್ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು ಇದರ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಕೂಡ ತಮ್ಮನ್ನು ತಾವು ಗುರುತಿಸಿಕೊಂಡಿದ್ದಂತಹ ರಚಿತಾರಾಮ್ ಅವರಿಗೆ ದರ್ಶನ್ ಅವರು ಮೊದಲ ಬಾರಿಗೆ ತಮ್ಮ ಸಿನಿಮಾದಲ್ಲಿ ನಾಯಕನಟಿಯಾಗಿ ಅಭಿನಯ ಮಾಡುವುದಕ್ಕೆ ಅವಕಾಶ ನೀಡುತ್ತಾರೆ.

ಸಾಮಾನ್ಯವಾಗಿ ದರ್ಶನವರು ತಮ್ಮ ಸಿನಿಮಾಗೆ ಯಾವುದೇ ನಟಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದರು ಕೂಡ ಕನ್ನಡದವರಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಈ ಕಾರಣಕ್ಕಾಗಿ ದರ್ಶನವರು ನಟನೆ ಮಾಡಿರುವ ಈವರಿಗಿನ ಎಲ್ಲಾ ಸಿನಿಮಾದಲ್ಲಿಯೂ ಕೂಡ ಕನ್ನಡತಿಯರಿಗೆ ಹೆಚ್ಚಿನ ಮಹತ್ವವನ್ನು ನೀಡಿದ್ದಾರೆ. ಇದು ಒಂದು ಕಡೆಯಾದರೆ ರಚಿತಾ ರಾಮ್ ನಟನೆ ಮಾಡಿದ ಮೊದಲ ಸಿನಿಮಾದಲ್ಲಿ ಹೆಚ್ಚು ಹೆಸರು ಮತ್ತು ಖ್ಯಾತಿಯನ್ನು ಗಳಿಸುತ್ತಾರೆ. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿ ಬಹುದೊಡ್ಡ ಮಟ್ಟದಲ್ಲಿ ಹೆಸರನ್ನು ಪಡೆಯುತ್ತದೆ. ರಚಿತಾ ರಾಮ್ ನಟನೆ ಮಾಡಿದ ಮೊದಲ ಸಿನಿಮಾವೇ ಸಕ್ಸಸ್ ತಂದು ಕೊಟ್ಟ ನಂತರ ಇವರಿಗೆ ಸಾಲು ಸಾಲು ಸಿನಿಮಾಗಳ ಆಫರ್ ಬರುವುದಕ್ಕೆ ಪ್ರಾರಂಭವಾಗುತ್ತದೆ.

ಹೌದು ನಟಿ ರಚಿತಾ ರಾಮ್ ಅವರು ಬುಲ್ ಬುಲ್ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಪುನೀತ್ ರಾಜಕುಮಾರ್, ಸುದೀಪ್, ಉಪೇಂದ್ರ, ಶ್ರೀಮುರಳಿ, ನಿಖಿಲ್ ಕುಮಾರ್, ಹೀಗೆ ಸಾಕಷ್ಟು ನಟರ ಜೊತೆ ನಟನೆಯನ್ನು ಮಾಡಿದ್ದಾರೆ. ಸದ್ಯಕ್ಕೆ ರಚಿತಾ ರಾಮ್ ಅವರು ಡಾಲಿ ಧನಂಜಯ್ ಅವರ “ಮಾನ್ಸೂನ್ ರಾಗ” ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಲೈಂ.ಗಿ.ಕ ಕಾರ್ಯಕರ್ತೆಯ ಪಾತ್ರದಲ್ಲಿ ರಚಿತರಾಮ್ ಅವರು ಕಾಣಿಸಿಕೊಂಡಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ. ಏಕೆಂದರೆ ರಚಿತಾ ರಾಮ್ ಅವರು ಯಾವಾಗಲೂ ಕಥೆಯನ್ನು ಆಯ್ಕೆ ಮಾಡಿಕೊಳ್ಳುವಾಗ ತುಂಬಾನೇ ಯೋಚಿಸಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಈ ಬಾರಿ ಇಂತಹದೊಂದು ವಿಭಿನ್ನ ಪಾತ್ರದಲ್ಲಿ ನಟನೆ ಮಾಡುವುದರ ಮೂಲಕ ಹೊಸದೊಂದು ಸಾಧನೆಗೆ ಕೈ ಹಾಕಿದ್ದಾರೆ ಅಂತ ಹೇಳಬಹುದು.

ಈಗಾಗಲೇ ರಚಿತಾ ರಾಮ್ ಅವರ ಮಾನ್ಸೂನ್ ರಾಗ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು ಇನ್ನೇನು ಬಿಡುಗಡೆಗೆ ಸಜ್ಜಾಗಿದೆ ಈ ಸಮಯದಲ್ಲಿ ಚಿತ್ರತಂಡ ಮತ್ತು ರಚಿತಾ ರಾಮ್ ಡಾಲಿ ಧನಂಜಯ್ ಸೇರಿದಂತೆ ಇನ್ನಿತರ ಕಲಾವಿದರು ಪ್ರೆಸ್ ಮೀಟ್ ಒಂದನ್ನು ನಡೆಸುತ್ತಾರೆ. ಈ ಸಮಯದಲ್ಲಿ ಅಭಿಮಾನಿಗಳಿಗೂ ಕೂಡ ಭಾಗವಹಿಸುವಂತಹ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ. ಕಾರ್ಯಕ್ರಮವೆಲ್ಲವೂ ಕೂಡ ಮುಕ್ತಾಯವಾದ ನಂತರ ಅಭಿಮಾನಿಗಳು ಡಾಲಿ ಧನಂಜಯ್ ಅವರ ಬಳಿ ಹೋಗಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ. ಧನಂಜಯ್ ಎಲ್ಲಾ ಅಭಿಮಾನಿಗಳಿಗೂ ಕೂಡ ಪೋಸ್ ನೀಡುತ್ತಾರೆ ತದನಂತರ ಪಕ್ಕದಲ್ಲಿಯೇ ಇದ್ದಂತಹ ರಚಿತಾರಾಮ್ ಬಳಿಗೆ ಬಂದಂತಹ ಅಭಿಮಾನಿಯೊಬ್ಬರು ಅವರಿಗೆ ತಿಳಿಯದಂತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಪ್ರಯತ್ನ ಪಡುತ್ತಾನೆ.

ಇದನ್ನು ನೋಡಿದಂತಹ ರಚಿತರಾಮ ಅವರು ಗರಂ ಆಗಿ “ನೋ ಡೋಂಟ್ ಟೇಕ್” ಅಂತ ಹೇಳುತ್ತಾರೆ ಆದರೂ ಕೂಡ ಆತ ಮತ್ತೊಮ್ಮೆ ಫೋಟೋ ತೆಗೆಯುವುದಕ್ಕೆ ಪ್ರಯತ್ನಪಡುತ್ತಾನೆ. ಇದರಿಂದ ಕೋಪಗೊಂಡ ರಚಿತಾ ರಾಮ್ ಇದಲ್ಲ ಬೇಡ ಅಂತ ಕಣ್ಣಲ್ಲೇ ಗುರಾಯಿಸುತ್ತಾರೆ. ಸದ್ಯಕ್ಕೆ ರಚಿತಾ ರಾಮ್ ಅವರು ಅಭಿಮಾನಿ ಒಟ್ಟಿಗೆ ನಡೆದುಕೊಂಡಂತಹ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಹಲವಾರು ಚರ್ಚೆಗೆ ಗುರಿಯಾಗಿದೆ. ಕೆಲವು ನೆಟ್ಟಿಗರು ಈ ವಿಡಿಯೋ ನೋಡಿ ಹೀರೋಯಿನ್ ಆದ ಮಾತ್ರಕ್ಕೆ ರಚಿತಾ ರಾಮ್ ಈ ರೀತಿ ದವಲತ್ತಿನಿಂದ ನಡೆದುಕೊಳ್ಳುವುದು ತಪ್ಪು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ನೋಡಿದರೆ ನಿಮಗೆ ಏನ್ ಅನಿಸುತ್ತದೆ ನಿಮ್ಮ ಪ್ರಕಾರ ರಚಿತಾ ರಾಮ್ ಮಾಡಿದ್ದು ಸರಿನಾ ತಪ್ಪಾ ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ದರ್ಶನ್ ಕ್ಷಮೆ ಕೇಳುವವರೆಗೂ ಕ್ರಾಂತಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಹೋರಾಟ ಮಾಡುತ್ತಿರುವ ಅಪ್ಪು ಅಭಿಮಾನಿಗಳು.

ಕರುನಾಡ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳ ಪ್ರೀತಿಯ ದಚ್ಚು ಅದ್ಯಾಕೋ ಇತ್ತೀಚಿಗೆ ತೀರ ವಿವಾದಕ್ಕೆ ಎಡೆಯಾಗುತ್ತಿದ್ದಾರೆ. ಕಳೆದ ಬಾರಿ ಅವರ ವಾಯ್ಸ್ ನಲ್ಲಿ ರಿಲೀಸ್ ಆದ ರೆಕಾರ್ಡಿಂಗ್ ಒಂದರಲ್ಲಿ ಮಾಧ್ಯಮಗಳನ್ನು ತೀವ್ರವಾಗಿ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದ ಕಾರಣ ಮಾಧ್ಯಮಗಳು ದರ್ಶನ್ ಅವರ ಯಾವುದೇ ಸಿನಿಮಾಗಳಿಗೂ ನಾವು ಪ್ರಚಾರ ನೀಡುವುದಿಲ್ಲ ಎಂದು ಸ್ಟ್ರೈಕ್ ಮಾಡುತ್ತಿವೆ. ಜೊತೆಗೆ ದರ್ಶನ್ ಅವರ ಹೆಸರು ಇನ್ ಯಾವುದೇ ಸಂದರ್ಭದಲ್ಲಿ ಬಂದರೂ ಕೂಡ ಅಲ್ಲಿಗೆ ಬೀಪ್ ಸೌಂಡ್ ಹಾಕುವಷ್ಟು ದರ್ಶನ್ ಅವರನ್ನು ದ್ವೇಷಿಸುತ್ತಿದೆ. ಆದರೂ ದರ್ಶನ ಅಭಿಮಾನಿಗಳೇ ಸೇರಿಕೊಂಡು ದರ್ಶನ್ ಅವರ ಕ್ರಾಂತಿ ಸಿನಿಮಾದ ಪ್ರಮೋಷನ್ ಕೆಲಸ ಮತ್ತು ದರ್ಶನ್ ಅವರ ಇನ್ನುಳಿದ ಎಲ್ಲಾ ಸಿನಿಮಾ ಸಂಭದಿತ ಕೆಲಸಗಳಿಗೆ ಸೋಶಿಯಲ್ ಮೀಡಿಯಾ ಮೂಲಕ ಪ್ರಚಾರ ಮಾಡುತ್ತಿದ್ದಾರೆ.

ಈ ಸಮಯದಲ್ಲಿ ಮತ್ತೊಮ್ಮೆ ಪುನೀತ್ ಅವರ ಸಾವಿನ ಬಗ್ಗೆ ಹೇಳಿರುವ ಹೇಳಿಕೆ ಒಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಪುನೀತ್ ಅಭಿಮಾನಿಗಳ ಕೋಪಕ್ಕೆ ಇದು ಕಾರಣವಾಗಿದೆ. ಹಾಗಾಗಿ ದರ್ಶನ್ ಅವರು ಕ್ಷಮೆ ಕೇಳುವವರೆಗೂ ಕ್ರಾಂತಿ ಸಿನಿಮಾ ರಿಲೀಸ್ ಆಗಲು ಬಿಡುವುದಿಲ್ಲ ಎಂದು ಹೊಸದುರ್ಗ, ಬಳ್ಳಾರಿ, ವಿಜಯನಗರ ಮತ್ತು ಬೆಂಗಳೂರು ಸಿರಿದಂತೆ ಹಲವು ಕಡೆ ಪುನೀತ್ ಅಭಿಮಾನಿಗಳು ದರ್ಶನ್ ಅವರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅಷ್ಟಕ್ಕೂ ಈ ವಿವಾದ ಏನೆಂದರೆ ದರ್ಶನ್ ಅವರು ಮಾತಿನ ಬರದಲ್ಲಿ ಅಭಿಮಾನಿಗಳ ಅಭಿಮಾನ ಎಷ್ಟಿದೆ ಎಂದು ಪುನೀತ್ ಅವರ ಸಾವಿನಲ್ಲಿ ನಾವು ನೋಡಿದ್ದೇವೆ ಆದರೆ ನನ್ನ ಅಭಿಮಾನಿಗಳು ನನಗೆ ಅದನ್ನು ಬದುಕಿರುವಾಗ ತೋರಿಸಿದ್ದಾರೆ ಇದಕ್ಕಿಂತ ಹೆಚ್ಚಿಗೆ ಏನು ಬೇಕು ಎಂದು ಮಾತಿನ ಬರದಲ್ಲಿ ಹೇಳಿದ್ದರು.

ಅವರು ಯಾವುದೇ ವಿವಾದ ಮಾಡಬೇಕು ಅಥವಾ ಯಾರಿಗಾದರೂ ಅವಮಾನ ಮಾಡಬೇಕು ಎಂದು ಉದ್ದೇಶಪೂರ್ವಕವಾಗಿ ಈ ರೀತಿ ಮಾಡದಿದ್ದರೂ ಸಹ ಕೆಲ ಕಿಡಿಗೇಡಿಗಳು ಅವರು ಹೇಳಿರುವ ಮಾತುಗಳನ್ನು ತಿರುಚಿ ಈ ರೀತಿ ಪುನೀತ್ ಅವರ ಸಾ.ವಿ.ಗೆ ಅವಮಾನ ಮಾಡಿದರೆ ಎಂದು ಬಿಂಬಿಸುತ್ತಿದ್ದಾರೆ ಮತ್ತು ಅದಕ್ಕೆ ಸಂಬಂಧಿಸಿದ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅವರ ಹೆಸರು ಹೇಳಿಕೊಂಡು ಇನ್ನಿತರ ವಾಕ್ಯಗಳನ್ನು ಸೇರಿಸಿ ಬರೆಯುತ್ತಿದ್ದಾರೆ, ಇದರಿಂದ ಮನನೊಂದು ಕೊಂಡಿರುವ ಪುನೀತ್ ಅಭಿಮಾನಿಗಳು ಇದಕ್ಕೆ ಕಾರಣ ದರ್ಶನ್ ಎಂದು ತಿಳಿದು ಅವರ ಕ್ರಾಂತಿ ಸಿನಿಮಾ ಅಡ್ಡ ಪಡಿಸುವುದಾಗಿ ಹೇಳುತ್ತಿದ್ದಾರೆ. ಹಾಗೂ ಹೊಸ ದುರ್ಗದ ಅಭಿಮಾನಿಗಳು ಪುನೀತ್ ಅವರ ಪ್ರತಿಮೆ ಮುಂದೆ ನಿಂತು ಹೋರಾಟ ಮಾಡುತ್ತಾ ಅಕಸ್ಮಾತ್ ಅವರೇನಾದರೂ ಕ್ಷಮೆ ಕೇಳದೆ ಹೋದರೆ ಇನ್ನು ದರ್ಶನ್ ಅವರ ಯಾವ ಸಿನಿಮಾಗಳನ್ನು ಕೂಡ ಹೊಸ ದುರ್ಗದಲ್ಲಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಕೂಡ ಎಚ್ಚರಿಕೆ ನೀಡಿದ್ದಾರೆ.

ದರ್ಶನ್ ಅವರು ಪುನೀತ್ ಅವರ ಮೇಲೆ ತುಂಬಾ ಪ್ರೀತಿ ತೋರಿಸುತಿದ್ದರು ಅಲ್ಲದೆ ನಾವು ರಾಜ್ ಕುಟುಂಬದ ಕಾಲಿನ ಧೂಳಿಗೂ ಸಮಯ ಇಲ್ಲ ನಾವು ಅವರ ಮನೆ ಅನ್ನ ತಿಂದುಕೊಂಡು ಬೆಳೆದಿರುವವರು ಎಂದು ಹೇಳುತ್ತಿದ್ದರು ಅಂತಹದರಲ್ಲಿ ಪುನೀತ್ ಅವರ ಬಗ್ಗೆ ಅವರು ಇಲ್ಲದ ಈ ನೋವಿನ ಸಮಯದಲ್ಲಿ ಯಾಕೆ ಈ ರೀತಿ ಮತ್ತೆ ಹೇಳಿಕೆ ನೀಡಿ ನಮ್ಮನ್ನು ನೋಯಿಸುತ್ತಿದ್ದಾರೆ ಎಂದು ಕೂಡ ಅಭಿಮಾನಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದುವರೆಗೆ ವಿವಾದದ ಬಗ್ಗೆ ಬಗ್ಗೆ ದರ್ಶನ್ ಅವರು ಏನು ಹೇಳಿಲ್ಲ ಮುಂದೆ ಇದು ಏನು ತಿರುವು ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ ಅಷ್ಟೇ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.

ವೇದಿಕೆ ಮೇಲೆ ಎಲ್ಲರ ಎದುರು ವಿಜಯ್ ದೇವರಕೊಂಡಗೆ ಮುತ್ತಿಟ್ಟು ತಬ್ಬಿಕೊಂಡು ರಶ್ಮಿಕಾ ಮಂದಣ್ಣ, ಈ ವೈರಲ್ ವಿಡಿಯೋ ನೋಡಿ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕ ಮಂದಣ್ಣ ಅವರು ರಿಲೇಷನ್ಶಿಪ್ ನಲ್ಲಿ ಇದ್ದಾರೆ ಎನ್ನುವುದು ತೆಲುಗು ಇಂಡಸ್ಟ್ರಿಯ ಹಲವು ಜನರ ಬಾಯಿಂದ ಬಂದಿರುವ ಮಾತು. ಅದಕ್ಕೆ ಸಾಕ್ಷಿ ಎನ್ನುವಂತೆ ಹೈದರಾಬಾದಿನ ಹಲವು ಕಡೆಗಳಲ್ಲಿ ಇವರಿಬ್ಬರು ಓಡಾಡಿರುವ ಹಾಗೂ ಡೇಟಿಂಗ್ ನಡೆಸಿರುವ ಬಗ್ಗೆ ಮಾಹಿತಿಗಳು ಇದೆ. ಅಲ್ಲದೆ ರಶ್ಮಿಕ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಅವರೊಂದಿಗಿನ ಎಂಗೇಜ್ಮೆಂಟ್ ಮುರಿದು ಬೀಳಲು ಇವರಿಬ್ಬರ ರಿಲೇಷನ್ಶಿಪ್ ಕಾರಣ ಎನ್ನುವ ಗಾಳಿ ಸುದ್ದಿಗಳು ಕೂಡ ಕನ್ನಡ ಮತ್ತು ತೆಲಗು ಇಂಡಸ್ಟ್ರಿಯ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದವು. ಗೀತ ಗೋವಿಂದಂ ಎನ್ನುವ ಸಿನಿಮಾದಲ್ಲಿ ಜೋಡಿ ಆದ ಇವರು ಡಿಯರ್ ಕಾಮ್ರೆಡ್ ಸಿನಿಮಾದಲ್ಲೂ ಕೂಡ ಒಟ್ಟಿಗೆ ಕಾಣಿಸಿಕೊಂಡು ಮತ್ತೊಮ್ಮೆ ಮೋಡಿ ಮಾಡಿದ್ದರು.

ಗೀತ ಗೋವಿಂದಂ ಸಿನಿಮಾದಲ್ಲಿನ ಹಲವಾರು ದೃಶ್ಯಗಳು ರಶ್ಮಿಕ ಹಾಗೂ ರಕ್ಷಿತ್ ನಡುವೆ ಬಿರುಕು ಉಂಟು ಮಾಡಿತ್ತು ನಂತರ ಅದು ಅವರ ನಿಶ್ಚಿತಾರ್ಥವನ್ನೇ ಮುರಿಯುವಷ್ಟು ಬೆಳೆಯುತ್ತಾ ಹೋಯಿತು. ಆ ಸಮಯದಲ್ಲಿ ವಿಜಯ ದೇವರಕೊಂಡ ಅವರು ರಶ್ಮಿಕ ಮಂದಣ್ಣ ಅವರ ಪರವಾಗಿ ಮಾತನಾಡಿ ನಾವಿಬ್ಬರೂ ಜಸ್ಟ್ ಒಳ್ಳೆ ಫ್ರೆಂಡ್ಸ್ ಅಷ್ಟೇ ವಿವಾದಕ್ಕೂ ನನಗೂ ಸಂಬಂಧವಿಲ್ಲ ಎಂದು ಕೈ ತೊಳೆದುಕೊಂಡರು. ವಿಜಯ ದೇವರಕೊಂಡ ಹಾಗೂ ರಶ್ಮಿಕ ಮಂದಣ್ಣ ಇಬ್ಬರು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾ ಒಳ್ಳೆಯ ಹೆಸರು ಮಾಡಿ ಬೆಳೆಯುತ್ತಾ ಇದ್ದಾರೆ. ಸದ್ಯಕ್ಕೆ ರಶ್ಮಿಕ ಮಂದಣ್ಣ ಅವರ ಜೊತೆ ಬಾಂಧವ್ಯ ಮುರಿದುಕೊಂಡಿರುವ ರಕ್ಷಿತ್ ಶೆಟ್ಟಿ ಕೂಡ ಚಾರ್ಲಿ777 ರೀತಿಯ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಮೂಲಕ ಮತ್ತೊಂದು ರೀತಿ ಬೆಳೆಯುತ್ತಿದ್ದಾರೆ.

ಫ್ರೆಂಡ್ಶಿಪ್ ಎಂದು ಹೆಸರು ಹೇಳಿಕೊಂಡು ರಶ್ಮಿಕ ಮಂದಣ್ಣ ಹಾಗೂ ವಿಜಯ ದೇವರಕೊಂಡ ಅವರು ಒಬ್ಬರಿಗೊಬ್ಬರು ಇಂಡಸ್ಟ್ರಿಯಲ್ಲಿ ಬಲವಾಗಿ ಸಪೋರ್ಟ್ ಮಾಡುತ್ತಿದ್ದಾರೆ. ಲೈಗರ್ ಎನ್ನುವ ಬಾಲಿವುಡ್ ಸಿನಿಮಾ ಮಾಡುತ್ತಿರುವ ವಿಜಯ ದೇವರಕೊಂಡ ಅವರು ಬಿಡುವು ಮಾಡಿಕೊಂಡು ಸದ್ಯಕ್ಕೆ ದುಲ್ಕರ್ ಸಲ್ಮಾನ್ ಅವರೊಂದಿಗೆ ರಶ್ಮಿಕ ಮಂದಣ್ಣ ಅವರು ನಟಿಸಿರುವ ಸೀತಾರಾಮಂ ಎನ್ನುವ ಮಲಯಾಳಂ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಕನ್ನಡ ತಮಿಳು ತೆಲುಗು ಹಾಗು ಹಿಂದಿಯಲ್ಲಿ ತಮ್ಮ ಛಾಪು ಮೂಡಿಸಿರುವ ರಶ್ಮಿಕ ಮಂದಣ್ಣ ಅವರು ಈ ಸಿನಿಮಾದ ಮೂಲಕ ಮಲಯಾಳಂ ಚಿತ್ರರಂಗಕ್ಕೂ ಪಾದರ್ಪಣೆ ಮಾಡುತ್ತಿದ್ದಾರೆ. ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕ ಮಂದಣ್ಣ ಅವರು ಇಲ್ಲೂ ಕೂಡ ಗೆಲ್ಲುವ ಎಲ್ಲ ಲಕ್ಷಣಗಳು ಇದೆ. ಈ ಸಿನಿಮಾದ ಚಿತ್ರೀಕರಣ ಪೂರ್ತಿಗೊಂಡಿದ್ದು ಸಿನಿಮಾ ರಿಲೀಸ್ ಮಾಡುವ ಪ್ರತಿ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ವಿಜಯ ದೇವರಕೊಂಡ ಅವರನ್ನೇ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಹ್ವಾನಿಸಿದ ವಿಜಯ ದೇವರಕೊಂಡ ಅವರು ಸಿನಿಮಾ ಗೆ ಸಂಬಂಧಪಟ್ಟ ಎಲ್ಲರಿಗೂ ಕೂಡ ಶುಭ ಹಾರೈಸಿದರು ಆ ಸಮಯದಲ್ಲಿ ರಶ್ಮಿಕ ಮಂದಣ್ಣ ಕಡೆ ಬಂದಾಗ ಅವರು ಕೂಡ ತಮ್ಮ ಎರಡು ಕೈಗಳಲ್ಲಿ ಬರ ಮಾಡಿಕೊಂಡು ಜೋರಾಗಿ ಹಗ್ ಮಾಡಿದ್ದಾರೆ. ಇದನ್ನು ನೋಡಿದ ಯಾರಿಗೆ ಆದರೂ ಇವರಿಬ್ಬರ ನಡುವೆ ಇರುವುದು ಜಸ್ಟ್ ಫ್ರೆಂಡ್ಶಿಪ್ ಅಷ್ಟೇನಾ ಎನ್ನುವ ಅನುಮಾನ ಕಾಡದೆ ಇರದು ಅಥವಾ ಫ್ರೆಂಡ್ಶಿಪ್ ಹೆಸರಿನಲ್ಲಿ ಹೇಳಿಕೊಂಡು ಇವರಿಬ್ಬರು ಏನಾದರೂ ಪ್ರೇಮದ ಪಾಶದಲ್ಲಿ ಸಿಲುಕಿದ್ದಾರ ಎನ್ನುವ ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ ಇವರಿಬ್ಬರ ವರ್ತನೆ. ಈ ವಿಡಿಯೋ ನೋಡಿದರೆ ನಿಮಗೆ ಏನ್ ಅನಿಸುತ್ತದೆ ತಪ್ಪದೆ ಕಾಮೆಂಟ್ ಮಾಡಿ ಈ ಮಾಹಿತಿಯನ್ನು ಲೈಕ್ & ಶೇರ್ ಮಾಡಿ

ಕೋಟಿ, ಕೋಟಿ ಹಣ ಕೊಟ್ರು ಬಿಗ್ ಬಾಸ್ ಮನೆಗೆ ನಾನು ಹೋಗಲ್ಲ ಅನ್ನುತ್ತಿರವ ಟೆನಿಸ್ ಕೃಷ್ಣ, ಯಾಕೆ ಗೊತ್ತಾ.?

ಟೆನಿಸ್ ಕೃಷ್ಣ ಅವರು 90ರ ದಶಕದಿಂದ ಇಂದಿನವರೆಗೂ ಸುಮಾರು 600ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡು ಕನ್ನಡಿಗರನ್ನು ನಗಿಸುತ್ತಾ ಬಂದಿದ್ದಾರೆ. ಇಂದಿಗೂ ಟೆನ್ನಿಸ್ ಕೃಷ್ಣ ಎಂದರೆ ನೆನಪಾಗುವುದು ಅವರ ನಂಜಪ್ಪನ ಮಗ ಗುಂಜಪ್ಪ ಮತ್ತು ಗಡಿಬಿಡಿ ಅಳಿಯ ಸಿನಿಮಾದ ಇನ್ನೂ ಬೆಲ್ಲು ಹೊಡಿಲಿಲ್ವೇ ಎನ್ನುವ ಡೈಲಾಗ್ ಹಾಗೆಯೇ ಅವರ ಮಾರಮ್ಮನ ಡಿಸ್ಕ್ ಎನ್ನುವ ಡೈಲಾಗ್ ಕೂಡ ವರ್ಲ್ಡ್ ಫೇಮಸ್ ಆಗಿದೆ. ಇಂದಿಗೂ ಎಷ್ಟೋ ಜನರಿಗೆ ಆ ಡೈಲಾಗ್ ಫೇವರೇಟ್ ಕೂಡ. ಅದೇ ಡೈಲಾಗ್ ಇಟ್ಟುಕೊಂಡು ಕನ್ನಡದ ರಾಪರ್ ಅಲೋಕ್ ರಾಪ್ ಸಾಂಗ್ ಒಂದನ್ನು ಮಾಡಿ ಫೇಮಸ್ ಆಗಿದ್ದಾರೆ. ಟೆನ್ನಿಸ್ ಕೃಷ್ಣ ಅವರು ಎಷ್ಟು ಒಳ್ಳೆಯ ಅದ್ಭುತ ಕಲಾವಿದ ಎನ್ನುವುದನ್ನು ಈಗಾಗಲೇ ಅವರ ಸಿನಿಮಾಗಳಲ್ಲಿ ಪ್ರೂವ್ ಮಾಡಿದ್ದಾರೆ.

ಕನ್ನಡದಲ್ಲಿ ಡಾಕ್ಟರ್ ರಾಜಕುಮಾರ್, ಅನಂತ ನಾಗ್, ರವಿಚಂದ್ರನ್, ಶಿವರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅಂತಹ ದೊಡ್ಡ ಕಲಾವಿದ ರಿಂದ ಹಿಡಿದು ಇಂದಿಗೂ ಸಹ ಸುದೀಪ್ ದರ್ಶನ್ ಎಲ್ಲರ ಸಿನಿಮಾಗಳಲ್ಲೂ ನಟಿಸಿರುವ ಖ್ಯಾತಿ ಟೆನಿಸ್ ಕೃಷ್ಣ ಅವರಿಗೆ ಸಲ್ಲುತ್ತದೆ. ಇನ್ನು ಇವರು ಸಿನಿಮಾ ಸೇರಿದ್ದಕ್ಕಿಂತ ಮುಂಚೆ ಟೆನ್ನಿಸ್ ಕೋಚ್ ಆಗಿದ್ದರಿಂದ ಇವರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಬಂದಾಗ ಕೃಷ್ಣ ಹೆಸರಿನ ಜೊತೆ ಈ ಹೆಸರನ್ನು ಸೇರಿಸಲಾಯಿತು. ಅದ್ಭುತ ಸ್ಪೋರ್ಟ್ಸ್ ಮ್ಯಾನ್ ಆಗಿದ್ದ ಇವರು ಹಾಸ್ಯ ಮಾಡಿ ಜನರನ್ನು ನಕ್ಕಿ ನಗ್ಗಿಸಿದ್ದೇ ಒಂದು ಸಾಧನೆ ಎನ್ನಬಹುದು. ಅದರಲ್ಲೂ ದೊಡ್ಡಣ್ಣ ಮತ್ತು ಟೆನಿಸ್ ಕೃಷ್ಣ ಅವರ ಅದ್ಭುತವಾದ ಕಾಂಬಿನೇಷನ್ ಕನ್ನಡಿಗರನ್ನು ನಗೆ ಗಡಲಲ್ಲಿ ತೇಲಿಸಿತ್ತು. ಟೆನ್ನಿಸ್ ಕೃಷ್ಣ ಅವರ ಹೈಟ್, ಬಾಡಿ ಲ್ಯಾಂಗ್ವೇಜ್ ಎಲ್ಲವೂ ಕೂಡ ಹಾಸ್ಯಕ್ಕೆ ಹೇಳಿ ಮಾಡಿಸಿದ ರೀತಿ ಇತ್ತು. ಕನ್ನಡದ ಸೊಗಡು ಇವರ ಮಾತುಗಳಲ್ಲಿ ತುಂಬಿ ತುಳುಕುತ್ತದೆ.

ಇವರು ಇಷ್ಟೊಂದು ಫೇಮಸ್ ಆಗಿದ್ದರೂ ಕೂಡ ತಮ್ಮ ಕುಟುಂಬದ ಮತ್ಯಾವ ಸದಸ್ಯರನ್ನು ಫಿಲಂ ಇಂಡಸ್ಟ್ರಿಗೆ ತರಲು ಇಷ್ಟಪಡಲಿಲ್ಲ. ಅದರಲ್ಲೂ ಇವರ ಒಬ್ಬಳೇ ಒಬ್ಬಳು ಮಗಳು ರಂಜಿತ ಬಹಳ ಸುಂದರವಾಗಿದ್ದು ಇವರು ಯಾವ ನಟಿ ಮಣಿಗಿಂತಲೂ ಕಡಿಮೆ ಇಲ್ಲ ಆದರೆ ಕೂಡ ಟೆನಿಸ್ ಕೃಷ್ಣ ಅವರು ಅವರ ಮಕ್ಕಳನ್ನು ಸಿನಿಮಾ ಇಂಡಸ್ಟ್ರಿಗೆ ತರಲು ಇಷ್ಟಪಡಲಿಲ್ಲ. ಅಲ್ಲದೆ ಸಿನಿಮಾ ಇಂಡಸ್ಟ್ರಿಗೆ ಸಂಬಂಧಪಟ್ಟ ಯಾವ ಕೆಲಸವನ್ನು ಅವರು ಮಾಡುತ್ತಿಲ್ಲ ಬದಲಾಗಿ ಅವರು ಈಗ ಕಾರ್ಪೊರೇಟರ್ ಕಂಪನಿ ಕೆಲಸ ಮಾಡುತ್ತಿದ್ದು ಮದುವೆಯಾಗಿ ಮಗುವೊಂದಿಗೆ ಸಂತೋಷದ ಜೀವನ ಕಳೆಯುತ್ತಿದ್ದಾರೆ. ಇನ್ನು ಟೆನಿಸ್ ಕೃಷ್ಣ ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಂಟೆಸ್ಟೆಂಟ್ ಆಗಿ ಬರುವ ಬಗ್ಗೆ ಹಲವು ದಿನಗಳಿಂದ ಗಾಳಿ ಸುದ್ದಿ ಹಬ್ಬಿದೆ. ಈ ಬಗ್ಗೆ ಅವರನ್ನು ಮಾಧ್ಯಮದವರು ಪ್ರಶ್ನಿಸಿದಾಗ ಅವರು ಈ ರೀತಿ ಉತ್ತರ ಕೊಟ್ಟಿದ್ದಾರೆ.

ನನ್ನ ಹೆಸರು ಬಿಗ್ ಬಾಸ್ ಸೀಸನ್ ಎರಡನೇ ಆವೃತ್ತಿಯಿಂದ ಹಲವು ಬಾರಿ ಕೇಳಿ ಬರುತ್ತಿದೆ. ಈ ವರ್ಷವೂ ಕೂಡ ಅದೇ ರೀತಿ ಮಾತುಗಳು ಇದೆ ಆದರೆ ನಾನು ಈ ಹಿಂದೆಯೇ ಹೇಳಿಕೆ ಕೊಟ್ಟಿದ್ದೇನೆ. ಕೋಟಿ ಹಣ ಕೊಟ್ಟರೂ ಕೂಡ ನಾನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು. ಆ ಮಾತಿನ ಪ್ರಕಾರವೇ ನಾನು ನಡೆದುಕೊಳ್ಳುತ್ತಿದ್ದೇನೆ. ಈಗ ನನ್ನ ಬಗ್ಗೆ ಅಪಪ್ರಚಾರ ಇದೆ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಲಿ ಎಂದೇ ನಾನು ಈ ರೀತಿ ಹೇಳಿಕೆ ಕೊಟ್ಟಿದ್ದೇನೆ ಎನ್ನುತ್ತಿದ್ದಾರೆ ಏನೇ ಇದ್ದರೂ ಕೂಡ ನಾನು ಆ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಈ ಬಾರಿ ಬಿಗ್ ಬಾಸ್ 9ನೇ ಆವೃತ್ತಿಯಲ್ಲಿ ಮನೆಯೊಳಗಿರುವ ಸದಸ್ಯರ ಫೈನಲ್ ಲೀಸ್ಟ್ ಇದೆ ನೋಡಿ.

ಬಿಗ್ ಬಾಸ್ ಪ್ರಪಂಚದ ಹಲವು ಭಾಷೆಗಳಲ್ಲಿ ತೆರೆ ಕಾಣುತ್ತಿರುವ ಅತಿ ದೊಡ್ಡ ರಿಯಾಲಿಟಿ ಶೋ, ಕನ್ನಡದಲ್ಲಿ ಇದಕ್ಕೆ ಈ ಬಾರಿ 9ನೇ ಆವೃತ್ತಿಯ ಸಂಭ್ರಮ ಈ ಬಗ್ಗೆ ಅಧಿಕೃತವಾಗಿ ಇಷ್ಟೊತ್ತಿಗೆ ಪ್ರಮುಖ ಯಾವುದೇ ಸದ್ದಿಲ್ಲ ಆದರೆ ಬಿಗ್ ಬಾಸ್ ಮಿನಿ ಶೋ ಬರುವ ಬಗ್ಗೆ ಮಾಹಿತಿ ದೊರೆತಿದ್ದು ಅದಕ್ಕೆ ಸಂಬಂಧಪಟ್ಟ ಪ್ರೋಮಗಳನ್ನು ರಿಲೀಸ್ ಮಾಡಲಾಗಿದೆ ಈ ಬಾರಿ ಒಟಿಟಿಯಲ್ಲಿ ಕಾಣಿಸಿಕೊಳ್ಳುವ ಹಲವಾರು ಸ್ಪರ್ದಿಗಳು ಕಿರುತೆರೆಯ ಬಿಗ್ ಬಾಸ್ ಶೋ ಅಲ್ಲೂ ಕೂಡ ಇರಲಿದ್ದಾರೆ ಮತ್ತು ಪ್ರತಿವರ್ಷ ಕೂಡ ಬಿಗ್ ಬಾಸ್ ಮನೆ ಒಳಗೆ ಬರುವ ಕಂಟೆಸ್ಟೆಂಟ್ಗಳ ಮೇಲೆ ಬಹಳ ನಿರೀಕ್ಷೆ ಇರುತ್ತದೆ. ಈ ಬಾರಿ ಅದೇ ರೀತಿ ಬಿಗ್ ಬಾಸ್ ಮನೆ ಒಳಗೆ ಹೋಗಲಿರುವ ಅಭ್ಯರ್ಥಿಗಳ ಲಿಸ್ಟ್ ಹೊರಬಂದಿದ್ದು ಅವರ ಮಾಹಿತಿ ಹೀಗಿದೆ ನೋಡಿ.

ವಿಜಯ್ ಸೂರ್ಯ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸಿದ್ದಾರ್ಥ್ ಆಗಿ ಮನೆ ಮಾತಾಗಿದ್ದ ಇವರಿಗೆ ಇವರದೇ ಆದ ದೊಡ್ಡ ಅಭಿಮಾನಿ ಬಳಗ ಇದೆ ವಿಜಯ್ ಸೂರ್ಯ ಅವರು ಈ ಬಾರಿ ಬಿಗ್ ಬಾಸ್ ಗೆ ಬರುವುದು ಬಹುತೇಕ ಫೈನಲ್ ಆಗಿದೆ. ಮಜಾಭಾರತದ ರಾಘು, ಹೆಣ್ಣು ವೇಷ ಹಾಕಿ ಕಿರುತೆಯ ಪ್ರೇಕ್ಷಕರನ್ನು ನಕ್ಕು ನಗಿಸುವ ರಾಘವೇಂದ್ರ ಅವರು ಕೂಡ ಈ ಬಾರಿ ಬಿಗ್ ಬಾಸ್ ಮನೆ ಒಳಗೆ ಇರಲಿದ್ದಾರೆ. ಐಶ್ವರ್ಯ ಪ್ರಭಾಕರ್ ಜಯಮಾಲಾ ಮತ್ತು ಟೈಗರ್ ಪ್ರಭಾಕರ್ ಅವರ ಪುತ್ರಿಯಾಗಿರುವ ಇವರು ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು ಇವರು ಕೂಡ ಈ ಬಾರಿ ಆಟದಲ್ಲಿ ಇರುವುದು ಖಚಿತವಾಗಿದೆ. ತರಂಗ ವಿಶ್ವ ಇವರು ಇತ್ತೀಚೆಗೆ ಮಜಾ ಟಾಕೀಸ್ ಅಲ್ಲಿ ಪೂಜಾ ಬಾರ್ ಮಾಲೀಕರಾಗಿ ಫೇಮಸ್ ಆಗಿದ್ದರು. ಇವರು ಕೂಡ ಕಂಟೆಸ್ಟೆಂಟ್ ಆಗಿ ಬಿಗ್ ಬಾಸ್ ಮನೆ ಒಳಗಡೆ ಕಾಲಿಡಲಿದ್ದಾರೆ.

ಇವರೊಂದಿಗೆ ಮಜಾ ಟಾಕೀಸ್ ಮುದ್ದಣ್ಣ ಎಂದೇ ಖ್ಯಾತ ಆಗಿರುವ ಮಂಡ್ಯ ರಮೇಶ್ ಅವರು ಕಿರುತೆರೆ ಪ್ರೇಕ್ಷಕರಿಗೆ ಬಹಳ ಪ್ರಿಯರು ಈ ಬಾರಿ ಅವರು ಕೂಡ ಬಿಗ್ ಮನೆ ಒಳಗೆ ಇರಲಿದ್ದಾರಂತೆ. ಚಂದನ್ ಶರ್ಮಾ ಇವರು ಪತ್ರಿಕೋದ್ಯಮದಲ್ಲಿ ಸೆಲೆಬ್ರಿಟಿ ಸ್ಟಾರ್ ಪಡೆದುಕೊಂಡವರು. ಬಿಟಿವಿ ಪವರ್ ಟಿವಿ ಟಿವಿ5 ಮುಂತಾದ ಎಲ್ಲಾ ಚಾನಲ್ಗಳಲ್ಲೂ ಕೂಡ ಕೆಲಸ ಮಾಡಿರುವ ಇವರು ಸಾಮಾನ್ಯ ಜನರಿಗೆ ಪರಿಚಿತ ಮುಖ. ಇವರು ಕೂಡ ಈ ಬಾರಿ ಬಿಗ್ ಬಾಸ್ ಮನೆ ಒಳಗೆ ಇರುವುದು ಫೈನಲ್ ಆಗಿದೆ. ಕಲರ್ ಕಾಗೆ ಹಾರಿಸುವ ಮೂಲಕ ಎಲ್ಲರಿಗೂ ನಕ್ಕು ನಗಿಸುವ ಆರ್ ಜೆ ಸುನಿ ಕೂಡ ಈ ಬಾರಿ ಬಿಗ್ ಬಾಸ್ ಮನೆ ಒಳಗಡೆ ಕಣಕ್ಕಿಳಿದಿದ್ದಾರೆ. ಕ್ರೀಡಾ ವಿಭಾಗದಿಂದ ಈ ಬಾರಿ ಕೆ ಸಿ ಕಾರಿಯಪ್ಪ ಅವರು ಹಾಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವೇದ ಕೃಷ್ಣಮೂರ್ತಿ ಅವರಿಬ್ಬರು ಬಿಗ್ ಬಾಸ್ ಅಖಾಡ ಪ್ರವೇಶ ಮಾಡಲಿದ್ದಾರೆ.

ಇದರೊಂದಿಗೆ ಕನ್ನಡದ ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಮತ್ತು ಹಾಸ್ಯ ಕಲಾವಿದೆ ರೇಖಾದಾಸ್ ಅವರು ಕೂಡ ಇರಲಿದ್ದಾರೆ. ಕಲರ್ಸ್ ಕನ್ನಡದ ವಾಯ್ಸ್ ಆಗಿರುವ ಪ್ರದೀಪ್ ಬಳಕೆಲೆ ಅವರು ಮತ್ತು ಕನ್ನಡದ ರ್ಯಾಪರ್ ಅಲೋಕ್ ಅವರು ಕೂಡ ಈ ಬಾರಿ ಬಿಗ್ ಬಾಸ್ ಅಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಿರುತೆರೆ ನಟಿಯರಾದ ಮೇಘನ, ಸುಪ್ರೀತಾ ಹಾಗೂ ನಮ್ರತಾ ಅವರು ಕೂಡ ಈ ಪಟ್ಟಿಯಲ್ಲಿದ್ದಾರೆ. ವೈಲ್ಡ್ ಕಾರ್ಡ್ ಅಲ್ಲಿ ಇನ್ನಿಬ್ಬರ ಪ್ರವೇಶವಾಗಲಿದೆ ಹಾಗೆಯೇ ಮೇಲೆ ತಿಳಿಸಿರುವ ಯಾವುದೇ ಸ್ಪರ್ಧಿಯ ಹೆಸರು ಯಾವುದೇ ಸಮಯದಲ್ಲಿ ಬೇಕಾದರೂ ಬದಲಾವಣೆಯಾಗುವ ಸಾಧ್ಯತೆಯೂ ಇದೆ.

ಎಷ್ಟ್ ಬೇಕಾದ್ರು ಕುಡಿರಪ್ಪ ಅಂತ ಹೇಳಿ ನೈಟ್ ಡ್ರೆಸ್ ನಲ್ಲಿ ಹಾಟ್ ಡ್ಯಾನ್ಸ್ ಮಾಡಿದ ನಿವೇದಿತಾ ಗೌಡ ಅವರ ಈ ವಿಡಿಯೋ ನೋಡಿ.

ನಿವೇದಿತಾ ಗೌಡ ಕನ್ನಡದ ಪ್ರತಿಯೊಬ್ಬರಿಗೂ ಗೊತ್ತಿರುವ ಹೆಸರು ಅದರಲ್ಲೂ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುವ ಪ್ರತಿಯೊಬ್ಬರಿಗೂ ಕೂಡ ಇವರ ಪರಿಚಯ ಇದ್ದೇ ಇರುತ್ತದೆ ಮತ್ತು ಕಿರುತರೆಯ ಪ್ರತಿಯೊಬ್ಬ ಪ್ರೇಕ್ಷಕರಿಗೂ ಕೂಡ ಇವರ ಮುಗ್ಧತೆ ಹಾಗೂ ಬೇಬಿ ಡಾಲ್ ಲುಕ್ ಇಷ್ಟವಾಗುತ್ತದೆ. ಹೀಗಾಗಿ ಕರ್ನಾಟಕದ ಬಹುತೇಕ ಎಲ್ಲರಿಗೂ ಚಿರಪರಿಚಿತ ಹೆಸರು ಇವರದು ಎಂದು ಹೇಳಬಹುದು. ಅದರಲ್ಲೂ ಇವರು ಮಿಸ್ಸೆಸ್ ಇಂಡಿಯಾ ಕಾಂಪಿಟೇಶನ್ ಗೆ ಹೋಗಿ ಬಂದಮೇಲೆ ಇಡೀ ದೇಶಕ್ಕೆ ಇವರು ಪರಿಚಯವಾಗಿದ್ದಾರೆ ಮಿಸಸ್ ಇಂಡಿಯಾ ಕಾಂಪಿಟೇಶನ್ ನಲ್ಲಿ ಭಾಗವಹಿಸಬೇಕು ಎನ್ನುವುದು ನಿವೇದಿತ ಗೌಡ ಅವರ ಬಹುದೊಡ್ಡ ಕನಸಾಗಿತ್ತು ಇದನ್ನು ಅವರೇ ಹೇಳಿಕೊಂಡಿದ್ದರು ಮತ್ತು ಈ ಕಾಂಪಿಟೇಶನ್ ಅಲ್ಲಿ ಭಾಗವಹಿಸಲು ಮುಂಬೈಗೆ ತೆರಳಿ ಹಲವಾರು ರೀತಿಯ ಕ್ಲಾಸ್ ಕೂಡ ತೆಗೆದುಕೊಂಡಿದ್ದರು.

ಅದಕ್ಕೆ ಸಂಬಂಧಪಟ್ಟ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ತಮ್ಮ ಎಕ್ಸ್ಪೀರಿಯನ್ಸ್ ಶೇರ್ ಮಾಡುತ್ತಿದ್ದರು. ಇದೆಲ್ಲದರ ಫಲವಾಗಿ ನಿವೇದಿತ ಗೌಡ ಅವರು ಈ ಬಾರಿಯ ಪೀಪಲ್ ಚಾಯ್ಸ್ ಅಲ್ಲಿ ಮಿಸೆಸ್ ಇಂಡಿಯಾ ಆಗಿ ವಿನ್ ವಿನ್ನರ್ ಆಗಿದ್ದಾರೆ. ಇದರೊಂದಿಗೆ ಅವರಿಗೆ ಅವರ ಬದುಕಿನಲ್ಲಿ ಇನ್ನೂ ಹಲವು ಹೊಸ ಅವಕಾಶಗಳು ತೆರೆದುಕೊಂಡಿದ್ದು ತೆಲುಗು ಸಿನಿಮಾ ಇಂಡಸ್ಟ್ರಿಯಿಂದ ಸಿನಿಮಾ ಆಫರ್ ಗಳು ಬರುತ್ತಿದೆಯಂತೆ. ಅದರಲ್ಲಿ ಒಂದು ಕಥೆ ಸೆಲೆಕ್ಟ್ ಮಾಡಿಕೊಂಡಿರುವ ಇವರು ಈ ಬಾರಿ ಬೆಳ್ಳಿ ತೆರೆಯ ಮೇಲೆ ನಾಯಕಿ ಆಗುವ ಪ್ರಯತ್ನ ಮಾಡುತ್ತಿದ್ದಾರೆ. ಈ ರೀತಿ ಪ್ರತಿಯೊಂದು ಬಾರಿಯೂ ಕೂಡ ಒಂದಲ್ಲ ಒಂದು ಹೊಸ ಸಾಹಸಕ್ಕೆ ಕೈ ಹಾಕಿ ಗೆಲ್ಲುವ ನಿವೇದಿತ ಗೌಡ ಅವರ ಸ್ಪಿರಿಟ್ ಎಲ್ಲರಿಗೂ ಇಷ್ಟವಾಗುವಂತದ್ದು.

ಒಂದೆಡೆ ಸಿನಿಮಾ ತಯಾರಿ ಮತ್ತೊಂದೆಡೆ ಕಿರುತೆರೆ ರಿಯಾಲಿಟಿ ಶೋ ಅಲ್ಲಿ ಭಾಗವಹಿಸುತ್ತಿರುವ ಇವರು ತಮ್ಮದೇ ಆದ ಸೋಶಿಯಲ್ ಮೀಡಿಯಾ ಅಕೌಂಟ್ ಹೊಂದಿದ್ದು ಅದರಲ್ಲಿ ಯಾವಾಗಲೂ ಸಕ್ರಿಯವಾಗಿರುತ್ತಾರೆ.ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ಪತಿಯೊಂದಿಗೆ ರೀಲ್ಸ್ ಮಾಡುತ್ತಾ ಅದನ್ನು ಹಂಚಿಕೊಂಡು ಖುಷಿಪಡುವ ಇವರು ಈ ಬಾರಿ ಹೊಸ ರೀತಿಯ ರಿಲೀಸ್ ಮಾಡಿದ್ದಾರೆ ಇವರಿಗೆ ಇವರ ಪತಿ ಕೂಡ ಸಹಕಾರ ನೀಡಿದ್ದಾರೆ ವಿಡಿಯೋ ನೋಡಿದವರು ಲೈಕ್ ಮಾಡಿ ಕಮೆಂಟ್ ಕೂಡ ಮಾಡುತ್ತಿದ್ದಾರೆ. ತಮ್ಮ ಕ್ಯೂಟ್ನೆಸ್ ಇಂದಲೇ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಜನರ ಮನ ಗೆದ್ದಿರುವ ನಿವೇದಿತ ಗೌಡ ಅವರ ಟ್ಯಾಲೆಂಟ್ ನಿಜಕ್ಕೂ ಎಲ್ಲರೂ ಮೆಚ್ಚಲೇಬೇಕು.

ಯೂಟ್ಯೂಬ್ ಅಲ್ಲೂ ಕೂಡ ತಮ್ಮದೇ ಆದ ಖಾಸಗಿ ಚಾನೆಲ್ ಹೊಂದಿರುವ ಅವರು ಅಲ್ಲೂ ಅನೇಕ ಹೊಸ ರೀತಿಯ ಕಂಟೆಂಟ್ ಗಳನ್ನು ಅಭಿಮಾನಿಗಳ ಟೆಸ್ಟಿಗೆ ತಕ್ಕ ಹಾಗೆ ವಿಡಿಯೋಗಳನ್ನು ಕೊಡುತ್ತಿರುತ್ತಾರೆ. ಇಲ್ಲಿಯವರೆಗೂ ನಿವೇದಿತ ಗೌಡ ಆಗಿದ್ದ ಇವರು ಇನ್ನು ಮುಂದೆ ನಟಿಯಾಗಿ ಕರಿಸಿಕೊಳ್ಳಲಿದ್ದಾರೆ. ನಿವೇದಿತಾ ಗೌಡ ಅವರು ಡ್ರೀಮ್ ಗರ್ಲ್ ಬದುಕಿನ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಿವೇದಿತ ಗೌಡ ಅವರು ಎಲ್ಲಿ ಹೋದರು ಅವರೇಕೆ ಸಿನಿಮಾದಲ್ಲಿ ನಟಿಸುತ್ತಿಲ್ಲ ಎನ್ನುವ ಪ್ರಶ್ನೆ ಎದುರಾಗುತ್ತಿತ್ತು. ಈ ಬಾರಿ ನಟಿ ಕೂಡ ಆಗಿ ಅದೃಷ್ಟ ಪರಿಶಿಸಿಕೊಳ್ಳಲು ಇಳಿದಿರುವ ನಿವೇದಿತ ಗೌಡ ಅವರಿಗೆ ನಿರೀಕ್ಷೆ ಮಟ್ಟದ ಗೆಲುವು ಸಿಗಲಿ ಮುಂದೆ ಅವರನ್ನು ಕನ್ನಡ ಸಿನಿಮಾಗಳಲ್ಲೂ ಕೂಡ ನಾಯಕಿ ಆಗಿ ನೋಡುವ ಅದೃಷ್ಟ ನಮಗೂ ಸಿಗಲಿ ಎಂದು ಹಾರೈಸೋಣ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ

ಜನರ ಕಾಟಕ್ಕೆ ಸುಸ್ತಾದ ಚಂದು ದಿನಕ್ಕೊಂದು ನಂಬರ್ ಚೇಂಜ್ ಮಾಡುತ್ತಿದ್ದರಂತೆ.

ತನ್ನ ಮುಗ್ಧ ಪ್ರತಿಭೆಯ ಹಾಡು ಹಾಗೂ ನೃತ್ಯಗಳಿಂದ ನೆಟ್ಟಿಗರನ್ನು ರಂಜಿಸುತ್ತಾ ನಾನು ಪುನೀತಣ್ಣ ಶಿವಣ್ಣ ಅವರ ಅಭಿಮಾನಿ ಎಂದು ವಿಡಿಯೋ ಶುರು ಮಾಡುವ ಈ ಹಳ್ಳಿಯ ಮುಗ್ಧತೆಯ ಹುಡುಗ ಕಾಫಿನಾಡು ಚಂದು ಒಬ್ಬ ಆಟೋ ಚಾಲಕ ಆಗಿದ್ದು ಕೆಲವು ಸಮಾಜ ಸೇವೆಗಳನ್ನು ಮಾಡುತ್ತ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿದ್ದಾನೆ. ಇತ್ತೀಚೆಗೆ ಕೇವಲ 2 ವಾರಗಳಿಂದ ಈಚೆಗೆ ಹೆಚ್ಚು ಪ್ರಸಿದ್ದಿಯಲ್ಲಿರುವ ಈ ಹುಡುಗ ಚಿಕ್ಕಮಗಳೂರಿನ ಮೂಡಿಗೆರೆಯ ಮಲ್ಲಂದೂರು ಗ್ರಾಮದ ನಿವಾಸಿಯಾಗಿದ್ದು ಹೆಚ್ಚಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ತನ್ನದೇ ಶೈಲಿಯಲ್ಲಿ ಹಾಡುಗಳ ಮೂಲಕ ಹಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ದಿಯನ್ನು ಗಳಿಸಿದ್ದಾನೆ. 10 ಸಾವಿರಕ್ಕೂ ಹೆಚ್ಚು ಹುಟ್ಟುಹಬ್ಬದ ಹಾಡುಗಳನ್ನು ತನ್ನದೇ ಶೈಲಿಯಲ್ಲಿ ಹಾಡಿರುವುದಾಗಿ ಹೇಳಿಕೊಳ್ಳುವ ಕಾಫಿನಾಡು ಚಂದು ಅವರು ಅರ್ಜುನ್ ಜನ್ಯ ಅವರಿಗಿಂತ 2 ಪಟ್ಟು ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾರೆ.

ಈ ಸೋಶಿಯಲ್ ಮೀಡಿಯಾ ಎನ್ನುವುದು ಎಂಥವರನ್ನು ಬೇಕಾದರೂ ಪ್ರಸಿದ್ದಿಗೊಳಿಸಿ ಕೊನೆಗೆ ಹಾಳು ಮಾಡುತ್ತದೆ ಎಂದರೂ ತಪ್ಪಿಲ್ಲ. ಏಕೆಂದರೆ ನಮ್ಮನ್ನು ಹೆಚ್ಚು ಜನರು ಬೆಂಬಲಿಸುತ್ತಿರುವಾಗ ನಮಗೆ ಹೆಮ್ಮೆಯಾಗಿ ನಮ್ಮ ಕಾರ್ಯ ಕ್ಷಮತೆಯನ್ನು ಬೆಂಬಲಿಸುತ್ತಾರೆ ಎಂದು ಬಲವಾಗಿ ನಂಬಿ ಅದರಲ್ಲಿಯೇ ನಾವು ಮಗ್ನರಾಗುವುದಲ್ಲದೆ ನಾವು ಮಾಡುತ್ತಿರುವುದೇ ಸರಿ ಎಂದುಕೊಂಡು ಬಿಡುತ್ತೇವೆ. ಆದರೆ ಒಮ್ಮೆ ಯೋಚಿಸಿ ನಮಗೆ ಅರಿವಿಲ್ಲದಯೇ ಸಣ್ಣದೊಂದು ತಪ್ಪು ನಮ್ಮಿಂದ ಆಗಿದೆ ಎಂದು ತಿಳಿದರೆ ಸಾಕು ನಮ್ಮನ್ನು ಬೆಂಬಲಿಸುವ ಅದೇ ಜನ ನಮ್ಮನ್ನು ದೂಷಿಸಿ ಅಟ್ಟದಿಂದ ಕೆಳಗಿಳಿಸುತ್ತಾರೆ. ಇಂತಹ ನೋವುಗಳನ್ನು ತಡೆದುಕೊಳ್ಳುವ ಶಕ್ತಿ ಇದ್ದರೆ ಪರವಾಗಿಲ್ಲ ಒಂದು ನಾವು ಹೆಚ್ಚಾಗಿ ಮುಗ್ಧರಾಗಿ ಖಿನ್ನತೆಗೆ ಒಳಗಾಗುವ ಹಾಗೂ ಡಿಪ್ರೆಶನ್ ಗೆ ಒಳಗಾಗುವ ವ್ಯಕ್ತಿಗಳಾಗಿದ್ದರೆ ಖಂಡಿತ ಈ ಸೋಶಿಯಲ್ ಮೀಡಿಯಾದಿಂದ ಎಚ್ಚರಿಕೆಯಿಂದ ಇರುವುದು ನಮಗೆ ಒಳಿತು. ಈ ಸೋಶಿಯಲ್ ಮೀಡಿಯಾ ಒಂದು ರೀತಿ ಅಟ್ಟಕ್ಕೇರಿಸುವ ಏಣಿಯೂ ಹೌದು ಚಟ್ಟಕ್ಕೆ ಏರಿಸುವ ಮಾಯೆಯೂ ಹೌದು.

ಯಾಕೆ ಈ ವಿಷಯವನ್ನು ಪ್ರಸ್ತಾಪಿಸುತ್ತಿರುವುದು ಎಂದರೆ ಕಾಫಿನಾಡು ಚಂದು ಒಬ್ಬ ಮುಗ್ಧತೆಯ ಹುಡುಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಆತನ ಮಾತಿನ ಶೈಲಿಯಿಂದಲೇ ಆತನ ಮುಗ್ಧತೆಯನ್ನು ಗುರುತಿಸಬಹುದಾಗಿದ್ದು ಈ ಸೋಶಿಯಲ್ ಮೀಡಿಯದಿಂದ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳಿತು. ಈ ಸಂದರ್ಭದಲ್ಲೇನೋ ಜನರ ಸಹಕಾರ ಬೆಂಬಲಗಳು ದೊರೆಯುತ್ತಿದೆ ಆದರೆ ಮುಂದೊಂದು ಈ ಬೆಂಬಲ ಕಡಿಮೆಯಾದಾಗ ಮನ ಕುಗ್ಗುವ ಸಂದರ್ಭ ಬಂದಾಗ ದೈರ್ಯದಿಂದ ಎದುರಿಸಿ ನಿಲ್ಲಬೇಕಾಗುತ್ತದೆ. ಅಂತಹ ಸಮಯದಲ್ಲಿ ಯಾರೂ ಕೂಡ ಸಹಾಯಕ್ಕೆ ಬರುವುದಿಲ್ಲ ಹಾಗಾಗಿ ಎಚ್ಚರಿಕೆಯಿಂದ ಇರುವುದು ಒಳಿತು. ಇದೇ ರೀತಿ ಸೋಶಿಯಲ್ ಮೀಡಿಯಾಗಳಲ್ಲಿ ತಮಗೆ ಬೆಂಬಲ ಕಡಿಮೆಯಾಗಿ ಜನಪ್ರಿಯತೆ ಕಡಿಮೆಯಾದಾಗ ಎಷ್ಟೋ ಮಂದಿ ಆತ್ಮಹತ್ಯೆ ಎಂಬ ಕೆಟ್ಟ ನಿರ್ಧಾರಕ್ಕೆ ಶರಣಾದರೆ ಇನ್ನು ಕೆಲವರು ಕೆಟ್ಟ ಚಟಗಳಿಗೆ ಶರಣಾಗಿ ನಾಚಿಕೆಗೇಡಿನ ಕೆಲಸಗಳನ್ನು ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಅಪಪ್ರಚಾರಕ್ಕೆ ಗುರಿಯಾದವರನ್ನು ನೋಡಿದ್ದೇವೆ.

ಸದ್ಯ ಕಾಫಿನಾಡು ಚಂದು 2 ವಾರಗಳಿಂದ ಈಚೆಗೆ ದಿನದಿಂದ ದಿನಕ್ಕೆ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು ಇಂದು 3 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಸಂಖ್ಯೆಯನ್ನು ಹೊಂದಿದ್ದು ಕರ್ನಾಟಕದ ಮೂಲೆ ಮೂಲೆಯಲ್ಲೂ ಕಾಫಿನಾಡು ಚಂದು ಶೈಲಿಯ ಹುಟ್ಟುಹಬ್ಬದ ಹಾಡನ್ನು ಹಾಡುತ್ತಿರುವುದನ್ನು ನಾವು ದಿನನಿತ್ಯ ನೋಡುತ್ತಿದ್ದೇವೆ. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಚಂದು ಅವರು ತಮ್ಮ ಕಣ್ಣಿಗೆ ಯಾರಾದರೂ ಕಷ್ಟದಲ್ಲಿರುವವರು ಕಂಡರೆ ಸಹಾಯ ಮಾಡುವ ಮೂಲಕ ಅವರಿಗೆ ನೆರವಾಗಿ ಸಮಾಜಕ್ಕೆ ತಮ್ಮ ಕಾಣಿಕೆಯನ್ನು ಸಲ್ಲಿಸುತ್ತಾರೆ.

ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಸಿ.ಎಂ ಬೊಮ್ಮಾಯಿ ನವೆಂಬರ್ 1 ಕ್ಕೆ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ.

75ನೇ ಸ್ವಾತಂತ್ರ್ಯೋತ್ಸವದ ಆಚರಣೆಗೆ ದಿನಗಣನೆ ಆರಂಭವಾಗಿದ್ದು ಸಸ್ಯಾಕಾಶಿ ಎಂದೇ ಹೆಸರಾಗಿರುವ ಲಾಲ್ ಬಾಗ್ ನಲ್ಲಿ ಪುಷ್ಪ ಪ್ರದರ್ಶನ ಇಂದಿನಿಂದ ಆರಂಭವಾಗಿದ್ದು ಈ ಫ್ಲವರ್ ಶೋ ಗೆ ಕರ್ನಾಟಕ ಸಿ ಎಂ ಬಸವರಾಜ್ ಬೊಮ್ಮಾಯಿ ಅವರು ಇಂದು ಚಾಲನೆ ನೀಡಿದರು. ಚಾಲನೆ ನೀಡಿ ಪುಷ್ಪ ಪ್ರದರ್ಶನದ ಬಗ್ಗೆ ಮಾತನಾಡಿದ ಬೊಮ್ಮಾಯಿ ಅವರು ಲಾಲ್ ಬಾಗ್ ನಲ್ಲಿ ಉದ್ಘಾಟನೆಗೊಂಡಿರುವ ಡಾಕ್ಟರ್ ರಾಜ್ ಕುಮಾರ್ ಪ್ರತಿಮೆ ಹಾಗೂ ಅಪ್ಪು ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಮಾತನಾಡಿದರು. ಇಂದಿನ ಲಾಲ್ ಬಾಗ್ ನ ಪುಷ್ಪ ಪ್ರದರ್ಶನಕ್ಕೆ ಅಪ್ಪು ಅವರ ಪ್ರತಿಮೆಯಿಂದ ಕಳೆ ಬರಲಿದ್ದು ಅಪ್ಪು ಅವರು ಇಂದಿಗೂ ಎಂದೆಂದಿಗೂ ಅಜರಾಮರ ಎನ್ನುವ ಮಾತು ನೂರಕ್ಕೆ ನೂರರಷ್ಟು ದಿಟ ಆಗುತ್ತಿದೆ.

ಮೊನ್ನೆಯಷ್ಟೇ ಬೆಂಗಳೂರಿನ ಜಿ ಎಂ ಪಾಳ್ಯದಲ್ಲಿ ಅಪ್ಪು ಪ್ರತಿಮೆಯನ್ನು ಉದ್ಘಾಟಿಸಿದ್ದನ್ನು ನಾವು ನೋಡಿದ್ದೇವೆ ಅದೇ ರೀತಿ ರಾಜ್ಯದ ವಿವಿದೆಡೆ ಅಪ್ಪು ಪ್ರತಿಮೆಗಳನ್ನ ನಿರ್ಮಿಸಿ ಪೂಜಿಸುತ್ತಿರುವ ಘಟನೆಗಳನ್ನು ನಾವು ನೀವು ದಿನನಿತ್ಯ ನೋಡುತ್ತಿದ್ದೇವೆ. ಇದೇ ರೀತಿ ಲಾಲ್ ಬಾಗ್ ನಲ್ಲಿಯೂ ಅಪ್ಪುವಿನ ಸುಂದರ ಪ್ರತಿಮೆಯೊಂದನ್ನು ನಿರ್ಮಿಸಿ ಉದ್ಘಾಟನೆ ಮಾಡಿದ್ದಾರೆ. ಈ ಪ್ರತಿಮೆಯನ್ನು ಅಣ್ಣಾವ್ರ ಪ್ರತಿಮೆಯ ಪಕ್ಕದಲ್ಲೇ ಇರಿಸಲಾಗಿದ್ದು ಈ ಬಾರಿಯ ಲಾಲ್ ಬಾಗ್ ನ ಪುಷ್ಪ ಪ್ರದರ್ಶನಕ್ಕೆ ಕಳೆ ಬರಲಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಕಳೆದ 2 ವರ್ಷಗಳಿಂದ ಕೊರೊನ ಮಹಾಮಾರಿ ಕಾರಣದಿಂದ ಈ ಪುಷ್ಪ ಪ್ರದರ್ಶನ ಸ್ಥಗಿತಗೊಂಡಿತ್ತು, ಕೊರೊನದಿಂದ ಕರ್ನಾಟಕ ಚೇತರಿಕೆ ಕಂಡ ನಂತರ ಮತ್ತೆ ಲಾಲ್ ಬಾಗ್ ನಲ್ಲಿ ಈ ಪುಷ್ಪ ಪ್ರದರ್ಶನ ಆರಂಭಿಸಿರುವುದು ಬೆಂಗಳೂರಿಗರಿಗೆ ಸಂತಸ ತಂದಿದೆ.

ಸಿ ಎಂ ಬೊಮ್ಮಾಯಿ ಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ್ದಲ್ಲದೆ ಈ ಬಾರಿಯ ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನದಂದು ಅಪ್ಪು ಅಭಿಮಾನಿಗಳಿಗೆ ಸಂತಸದ ದಿನವಾಗಲಿದೆ ಎಂಬುದನ್ನು ಖಚಿತ ಪಡಿಸಿದ್ದಾರೆ. ಅಪ್ಪು ನಮ್ಮಿಂದ ದೂರವಾಗಿ 9 ಮಾಸಗಳು ಕಳೆದರೂ ಸಹ ಅಪ್ಪು ಅವರ ಮೇಲಿನ ಕನ್ನಡಿಗರ ಪ್ರೀತಿ ವಿಶ್ವಾಸ ಇಂದಿಗೂ ಸ್ವಲ್ಪವೂ ಮಾಸಿಲ್ಲ. ಅಪ್ಪು ಸಹ ಬದುಕಿದ್ದ ಅಷ್ಟು ದಿನ ಅಭಿಮಾನಿಗಳಿಗಾಗಲಿ, ಕನ್ನಡಿಗರಿಗಾಗಲಿ ಕಿಂಚಿತ್ತೂ ತೊಂದರೆ, ಅಪಮಾನಗಳಾಗದಂತೆ ನಡೆದುಕೊಂಡಿದ್ದಲ್ಲದೆ ಅಭಿನಯ ದುಡಿಮೆಗಾದರೆ ನನ್ನ ದುಡಿಮೆ ಸಮಾಜ ಸೇವೆಗೆ ಮೀಸಲು ಎನ್ನುವಂತೆ ಬಲಗೈ ಮಾಡಿದ್ದು ಎಡಗೈ ಗೆ ತಿಳಿಯದಂತೆ ಸಮಾಜ ಸೇವೆ ಮಾಡಿ ಕೊನೆಯುಸಿರೆಳೆದು ಸತ್ತ ನಂತರವೂ ಪರರಿಗೆ ಕಣ್ಣಾದ ಕನ್ನಡದ ಕುವರ ನಮ್ಮ ರಾಜಕುಮಾರ. ಇಂತಹ ಅಪರೂಪದ ಕನ್ನಡದ ರತ್ನಕ್ಕೆ ಕರ್ನಾಟಕ ರತ್ನ ಇಲ್ಲವೆಂದರೆ ಹೇಗೆ..!

ಹೌದು ಇದೇ ನವೆಂಬರ್ ಒಂದಕ್ಕೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅಜರಾಮರ ರಾಜಕುಮಾರ ನಮ್ಮ ಅಪ್ಪು ಅವರಿಗೆ ಕರ್ನಾಟಕ ರತ್ನ ನೀಡುವುದಾಗಿ ಕರ್ನಾಟಕದ ಮುಖ್ಯ ಮಂತ್ರಿ ಸಿ ಎಂ ಬಸವರಾಜ್ ಬೊಮ್ಮಾಯಿ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ, ರಾಘಣ್ಣ ಕೂಡ ಉಪಸ್ಥಿತರಿದ್ದು ಅಪ್ಪುವನ್ನು ನೆನೆದು ರಾಘಣ್ಣ ಅವರು ಅಪ್ಪನ ಜೀವದಲ್ಲಿ ಬೆರೆತು ಹೋಗಿರುವ ನಮ್ಮ ಅಪ್ಪು ಪ್ರತಿಮೆಯನ್ನು ನೋಡಿ ಅವನೇ ಎದ್ದು ಬಂದಂತೆ ಭಾಸವಾಯಿತು ಎಂದು ನೆನೆದರೆ ಶಿವಣ್ಣ ಅವರು ಅಪ್ಪುವನ್ನು ನೆನೆದು ಗದ್ಗದಿತರಾದರು. ಹೀಗೆ ಪುಷ್ಪಗಳ ನಡುವೆ ಅಪ್ಪುವಿನ ಕಂಚಿನ ಪ್ರತಿಮೆ ವಿಶೇಷ ಗಮನ ಸೆಳೆಯುತ್ತಿದ್ದು ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ಕಳೆ ಬರಲಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡಿ.