Home Blog Page 90

ಬೊಹ್ರಾ ಮುಸಲ್ಮಾನರು ಎಂದರೆ ಯಾರು ಗೊತ್ತಾ.? ಹಿಂದುಗಳನ್ನು ಕಂಡರೆ ಇವರಿಗೇಕೆ ಅಷ್ಟೊಂದು ಇಷ್ಟ ಗೊತ್ತಾ.?

 

ಭಾರತ ದೇಶವು ಸರ್ವ ಜನಾಂಗದ ಶಾಂತಿಯ ತೋಟ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದ ಭೂಮಿಯಲ್ಲಿ ಹಿಂದೂ, ಮುಸ್ಲಿಂ, ಜೈನ, ಕ್ರೈಸ್ತ, ಬೌದ್ಧ ಮುಂತಾದ ಹಲವು ಧರ್ಮಗಳ ಜನರು ಹೊಂದಾಣಿಕೆಯಿಂದ ಬದುಕುತ್ತಿದ್ದಾರೆ. ಧಾರ್ಮಿಕವಾಗಿ ಒಬ್ಬರಿಗೊಬ್ಬರ ಸಿದ್ದಾಂತಗಳು ಹೋಲಿಕೆಯಾಗದೆ ಇದ್ದರೂ ವ್ಯಾವಹಾರಿಕವಾಗಿ ಎಲ್ಲರೂ ಎಲ್ಲರ ಜೊತೆ ವ್ಯವಹರಿಸಲೇಬೇಕು ಹಾಗೆ ಸ್ನೇಹದ ವಿಚಾರದಲ್ಲಿ ಯಾರು ಕೂಡ ಲೆಕ್ಕಾಚಾರ ಹಾಕಿ ಫ್ರೆಂಡ್ಶಿಪ್ ಬೆಳೆಸುವುದಿಲ್ಲ.

ಆದರೂ ಕೂಡ ಈ ಧರ್ಮದ ವಿಚಾರ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಹಾಗಾಗಿ ಈ ಅಂಕಣದಲ್ಲಿ ಇಂದು ನಾವು ಒಂದು ವಿಶೇಷವಾದ ಗುಂಪಿನ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ. ಭಾರತವನ್ನು ಭಾರತೀಯರನ್ನು ಭಾರತಧ ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸುವ ಬೊಹ್ರಾ ಮುಸ್ಲಿಮರ ಬೆಳವಣಿಗೆ ಭಾರತದಲ್ಲಿ ಹೇಗಾಯಿತು ಈಗ ಏನು ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿಸುತ್ತೇವೆ. ಇದರ ಬಗ್ಗೆ ಕುತೂಹಲ ಇದ್ದರೆ ಕೊನೆ ತನಕ ಓದಿ.

ಬೊಹ್ರಾ ಮುಸ್ಲಿಮರು ಭಾರತದಲ್ಲಿ ಮಧ್ಯಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಅಪಾರ ಸಂಖ್ಯೆಯಲ್ಲಿ ಇದ್ದಾರೆ. ಇವರು ಭಾರತದ ಧಾರ್ಮಿಕ ಸಮಾರಂಭಗಳಲ್ಲಿ ಸಂತೋಷದಿಂದ ಕುಟುಂಬ ಸಮೇತ ಪಾಲ್ಗೊಳ್ಳುತ್ತಾರೆ ಹಾಗೂ ಅವರ ಮನೆಯ ಹಬ್ಬಗಳಿಗೆ ಹಿಂದುಗಳನ್ನು ಆಹ್ವಾನಿಸುತ್ತಾರೆ.

ಶ್ರೀರಾಮ ಮಂದಿರಕ್ಕೆ ಸಪೋರ್ಟ್ ಮಾಡುವುದರಿಂದ ಹಿಡಿದು ಭಾರತೀಯರ ಭಾವನೆಗೆ ತಕ್ಕ ಹಾಗೆ ಪ್ರತಿಯೊಂದು ವಿಚಾರದಲ್ಲೂ ಕೂಡ ಸ್ಪಂದಿಸುವ ಇವರು ಪ್ರಧಾನಮಂತ್ರಿಯವರಿಗೆ ಅಚ್ಚುಮೆಚ್ಚು. ಇವರ ಜನಾಂಗ ಇರುವ ಎಲ್ಲೇ ಪ್ರಧಾನಿ ಹೋದರು ಅವರನ್ನು ಸತ್ಕರಿಸಿಯೇ ಕಳುಹಿಸುತ್ತಾರೆ.

ಬೊಹ್ರಾ ಮುಸ್ಲಿಮರು ಹಾಕುವ ವೇಷಭೂಷಣ ಅವರು ಮಾಡುವ ವೃತ್ತಿಯಿಂದ ಹಿಡಿದು ಸಂಪೂರ್ಣವಾಗಿ ಅವರು ಇತರೆ ಮುಸ್ಲಿಂಗಳಿಗಿಂತ ಭಿನ್ನ ಎನಿಸುತ್ತಾರೆ. ಮುಸ್ಲಿಮರಲ್ಲಿ ಸುನ್ನಿ ಹಾಗೂ ಶಿಯ ಎನ್ನುವ ಎರಡು ಪಂಗಡಗಳಿವೆ ಸನ್ನಿ ಮುಸಲ್ಮಾನರ ಧಾರ್ಮಿಕ ಕ್ಷೇತ್ರ ಸೌದಿ ಅರೇಬಿಯಾವಾದರೆ ಶಿಯಾ ಮುಸಲ್ಮಾನರ ಪವಿತ್ರವಾದ ಸ್ಥಳ ಇರಾನ್. ಶಿಯಾ ವರ್ಗಕ್ಕೆ ಇವರು ಸೇರಿದವರಾದಗಿದ್ದರೂ ಇವರ ಪರಂಪರೆ ಶುರುವಾಗುವುದು ಫಾತಿಮತ್ ಕ್ಯಾಲಿಫೆಟ್ ಮನೆತನದಿಂದ.

ಇದು ಪ್ರವಾದಿಗಳಾದ ಫ್ರಿಫಿತ್ ಮಹಮ್ಮದ್ ಅವರ ಮಗಳಾದ ಫಾತಿಮಾ ಅವರ ಮಗನಾದ ಹುಸೇನ್ ನಿಂದ ಬೆಳೆಯಿತು ಎನ್ನುವ ಇತಿಹಾಸವಿದೆ. 10ನೇ ಶತಮಾನದ ಸಮಯದಲ್ಲಿ ಒಮೆನ್ ನಿಂದ ಈ ಮನೆತನದ ಮುಸ್ತಿಫಿರ್ ಬಿಲ್ಲಾ ಭಾರತಕ್ಕೆ ಬಂದು ಧರ್ಮ ಪ್ರಚಾರ ಮಾಡಿ ಹಲವು ಬ್ರಾಹ್ಮಣರು ಹಾಗೂ ಬನಿಯಟ್ ಟ್ರೇಡರ್ ಗಳನ್ನು ಮತಾಂತರ ಮಾಡಿದರು, ಮುಂದೆ ಅವರೇ ಬೊಹ್ರಾ ಗಳಾಗಿ ಮುಂದುವರೆದರು ಎನ್ನುವ ಉಲ್ಲೇಖಗಳಿವೆ.

ಬಳಿಕ ಭಾರತ ಮೂಲದಿಂದ ಯೂಸೆಫ್ ಸುಲೇಮಾನ್ ಉದ್ದಿನ್ ಎನ್ನುವ ಯುವಕನು ಒಮೆನ್ ಗೆ ಹೋಗಿ 23ನೇ ದಾಹಿ ಅಲ್ ಮುತ್ಲಕ್ ಬಳಿ ಶಿಷ್ಯರಾಗಿದ್ದು 24ನೇ ಬೊಹ್ರಾ ಸಮುದಾಯದ ಲೀಡರ್ ಎಂದು ಪರಿಗಣಿಸುತ್ತಾರೆ, ಇಂದಿನವರೆಗೂ ಕೂಡ ಭಾರತದ ಮೂಲದವರೇ ಬೋಹ್ರ ಸಮುದಾಯದ ಲೀಡರ್ ಆಗುತ್ತಿದ್ದಾರೆ ಈ ಕಾರಣದಿಂದ ಕೂಡ ಅವರಿಗೆ ಭಾರತ ಎಂದರೆ ಬಹಳ ಇಷ್ಟ.

ಇವರ ಉಡುಗೆತೊಡಿಗೆಗಳನ್ನು ನೋಡಿ ಇವರನ್ನು ಗುರುತಿಸಬಹುದು. ಇವರಲ್ಲಿ ಪುರುಷರ, ಹೆಣ್ಣು ಮತ್ತು ಗಂಡು ಮಕ್ಕಳು ಒಂದೇ ರೀತಿಯ ಟೋಪಿಗಳನ್ನು ಧರಿಸುತ್ತಾರೆ. ಇವರ ಟೋಪಿ ಇತರ ಮುಸ್ಲಿಮರಿಗಿಂತ ಭಿನ್ನವಾಗಿರುತ್ತದೆ. ಇವರ ಹೆಸರಿನ ಜೊತೆ ಇವರು ಮಾಡುವ ಕೆಲಸ ಅಥವಾ ಇರುವ ಸ್ಥಳದ ಗುರುತನ್ನು ಕೂಡ ಸೇರಿಸಿಕೊಂಡಿರುತ್ತಾರೆ. ಬಂದೂಕ್ ವಾಲ, ಕಾರ್ಪೆಟ್ ವಾಲ, ರಂಗೇನ್ ವಾಲ ಎಂದು ಹೆಸರಿಟ್ಟು ಕೊಂಡಿರುತ್ತಾರೆ.

ಇವರ ಹೆಸರನ್ನು ಕೇಳಿಯೂ ಇವರು ಬೊಹ್ರಾ ಸಮುದಾಯದವರು ಎಂದು ಸುಲಭವಾಗಿ ಕಂಡುಹಿಡಿಯಬಹುದು. ಮುಸ್ಲಿಮರ ಭಾಷೆಯ ಅರೇಬಿಕ್ ಮೂಲದಿಂದ ಬಂದಿದ್ದರು ಬೊಹ್ರ ಮುಸ್ಲಿಂ ಭಾಷೆಯು ಧಾವತ್ ಎನ್ನುವುದಾಗಿದೆ, ಇದು ಹೆಚ್ಚು ಗುಜರಾತಿ ಪದಗಳನ್ನು ಒಳಗೊಂಡಿದೆ.ಬೊಹಾರಾ ಎನ್ನುವುದು ಕೂಡ ವೊಹರು ಎನ್ನುವ ಗುಜರಾತಿ ಪದದಿಂದ ಬೆಳವಣಿಗೆ ಹೊಂದಿದೆ, ಇದು ವ್ಯವಹರಿಸು ಎನ್ನುವ ಅರ್ಥ ಕೊಡುತ್ತದೆ.

ಇವರು ಹೆಚ್ಚು ಬಿಸಿನೆಸ್ ನಲ್ಲಿ ಮತ್ತು ಟ್ರೇಡಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಇವರಲ್ಲಿ ಅತಿ ಹೆಚ್ಚು ಜನ ಶ್ರೀಮಂತರಾಗಿರುತ್ತಾರೆ ತಮ್ಮ ಸಮುದಾಯದವರ ಅಭಿವೃದ್ಧಿಗಾಗಿ ಸಹಾಯ ಮಾಡುತ್ತಾರೆ. ಹೆಣ್ಣು ಮಕ್ಕಳು ಕೂಡ ಬಿಸಿನೆಸ್ ನಲ್ಲಿ ಮುಂದೆ ಬರುತ್ತಾರೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಉದ್ಯೋಗವಕಾಶ ಎಲ್ಲದರಲ್ಲೂ ಸಮಾನ ಅವಕಾಶವಿದೆ. ಹೆಣ್ಣು ಮಕ್ಕಳು ಸ್ಕಾಫ್ ಧರಿಸುತ್ತಾರೆ. ಗಂಡು ಮಕ್ಕಳು ಲಿಬಾಸ್ ಉಲ್ ಅನ್ವರ್ ಎನ್ನುವ ಬಟ್ಟೆ ಧರಿಸುತ್ತಾರೆ. ಹೆಚ್ಚು ಕಡಿಮೆ ಇವರ ಆಚರಣೆಗಳು ಭಾರತದ ಪರಂಪರೆಯನ್ನೇ ಹೋಲುತ್ತವೆ.

ಬೆಳಗ್ಗೆ ಇವುಗಳನ್ನು ತಿನ್ನುವುದರಿಂದ ಮತ್ತು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ.!

0

 

ಕೆಲವರಿಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಹಾಗೆ ತೊಂದರೆಗಳಿರುತ್ತವೆ. ಊಟ ಮಾಡಿದ ತಕ್ಷಣ ಹೊಟ್ಟೆ ನೋವು ಬರುವುದು, ಹೊಟ್ಟೆ ಊದಿಕೊಂಡ ಹಾಗಾಗಿ ಊಟ ಮಾಡಿದ ತಕ್ಷಣವೇ ಹೊಟ್ಟೆಯಲ್ಲಿ ಗುಳುಗುಳು ಆಗುತ್ತಾ ಶೌಚಕ್ಕೆ ಹೋಗಬೇಕು ಎನಿಸುವುದು, ಕೆಲವರಿಗೆ ಮಲಬದ್ಧತೆ ಸಮಸ್ಯೆ ಕಾಡಿದರೆ ಇನ್ನು ಕೆಲವರಿಗೆ ತಿಂದ ಊಟವೆಲ್ಲ ಆಚೆ ಹೋಗುವುದು ಈ ರೀತಿ ಸಮಸ್ಯೆಗಳಾಗುತ್ತಿರುತ್ತದೆ.

ಜೀರ್ಣಕ್ರಿಯೆಗೆ ಸಂಬಂಧಿಸಿದ ಈ ಸಮಸ್ಯೆಗಳನ್ನು ಮೆಡಿಕಲ್ ಭಾಷೆಯಲ್ಲಿ IBS ಎಂದರೆ ಇರಿಟೇಬಲ್ ಬೋವೆಲ್ ಸಿಂಟ್ರೋಲ್ Irritable Bowel Syndrome) ಎಂದು ಕರೆಯುತ್ತಾರೆ. ದೊಡ್ಡ ಕರುಳಿನಲ್ಲಿರುವ ಬ್ಯಾಕ್ಟೀರಿಯಗಳು ಸಣ್ಣ ಕರುಳಿಗೆ ಬಂದಾಗ ‌SIBO ಸ್ಸ್ಮಾಲ್ ಇಂಟರೆಸ್ಟೇನಾ ಬ್ಯಾಕ್ಟೀರಿಯಲ್ ಓವರ್ ಗ್ರೋಥ್ (Small Interstane Bacterial Over Growth) ಆಗುತ್ತದೆ.

ಇದು ಬ್ಯಾಕ್ಟೀರಿಯಾದಿಂದ ಬರುವ ಸಮಸ್ಯೆಯಾಗಿದೆ. ನಮ್ಮ ದೇಹದಲ್ಲಿ ನಮ್ಮ ಆರೋಗ್ಯಕ್ಕೆ ಪೂರಕವಾಗಿರುವ ಅನೇಕ ಬ್ಯಾಕ್ಟೀರಿಯಗಳು ಇವೆ ಆದರೆ SIBO ನಿಂದ ಇಂತಹ ಜೀವನ ಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ. SIBO ಸರಿ ಮಾಡಿದರೆ IBS ಕಂಟ್ರೋಲ್ ಗೆ ಬರುತ್ತದೆ.

ಆದರೆ ಇದು ನೋಡುವವರಿಗೆ ಬಹಳ ಸಣ್ಣ ಸಮಸ್ಯೆ ಎನಿಸಿದರೂ ಕೂಡ ಅನುಭವಿಸುವವರಿಗೆ ಮಾತ್ರ ಇದರ ಹಿಂಸೆ ಗೊತ್ತಿರುತ್ತದೆ. ಇದಕ್ಕೆ ಸುಮಾರು 25ಕ್ಕೂ ಹೆಚ್ಚು ಚಿಕಿತ್ಸೆಗಳು ಆಯುರ್ವೇದದಲ್ಲಿ ಇದೆ ಇದರೊಂದಿಗೆ ಮನೆಯಲ್ಲಿ ಕೂಡ ಈ ಸಮಸ್ಯೆಗೆ ಔಷಧಿ ಮಾಡಬಹುದು ಎನ್ನುವುದು ಬಹಳ ಸಮಾಧಾನಕರ ಸಂಗತಿ.

ಹಾಗಾಗಿ ಯಾವೆಲ್ಲ ಮನೆಮದ್ದುಗಳ ಮೂಲಕ ಈ ಸಮಸ್ಯೆಯನ್ನು ಪರಿಹಾರ ಮಾಡಬಹುದು ಈ ರೀತಿ ಸಮಸ್ಯೆ ಅನುಭವಿಸುತ್ತಿರುವವರಿಗೆ ಯಾವ ಔಷಧಿಯಿಂದ ಶೀಘ್ರ ಪರಿಹಾರ ಸಿಗುತ್ತದೆ ಎನ್ನುವ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಇವುಗಳನ್ನು ಪಾಲಿಸಿ ಸಮಸ್ಯೆಯಿಂದ ಹೊರಬನ್ನಿ.

1. SBO ಪ್ರೋ ಬಯೋಟೆಕ್ ಎನ್ನುವ ಮಾತ್ರೆಗಳನ್ನು ರಾತ್ರಿ ಹೊತ್ತು ಅನ್ನದಿಂದ ಗಂಜಿ ಅಥವಾ ರಾಗಿಯಿಂದ ಗಂಜಿ ಮಾಡಿ ಅದು ಆರಿದ ಮೇಲೆ ತಣ್ಣಗಿದ್ದಾಗ ಈ ಒಂದು ಪ್ರೊ ಬಯೋಟೆಕ್ ಮಾತ್ರೆಯನ್ನು ಹಾಕಿ ನೆನೆಸಿಟ್ಟು ಬೆಳಗ್ಗೆ ಅದನ್ನು ಮಜ್ಜಿಗೆಯ ಜೊತೆ ಸೇವಿಸುವುದರಿಂದ ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯ ಉತ್ಪಾದನೆ ಹೆಚ್ಚಾಗುತ್ತದೆ SIBO ಕಂಟ್ರೋಲ್ ಆಗುತ್ತದೆ

2. ಮೆಡಿಕಲ್ ಶಾಪ್ ಗಳಲ್ಲಿ ಎನಿಮಾ ಕ್ಯಾನ್ ಸಿಗುತ್ತದೆ. ಅದರಲ್ಲಿ ಮಜ್ಜಿಗೆಯನ್ನು ಹಾಕಿ ವಾರದಲ್ಲಿ ಎರಡರಿಂದ ಮೂರು ಬಾರಿ ಮಜ್ಜಿಗೆ ಎನಿಮ ಸೇವಿಸುವುದರಿಂದ ಈ ಸಮಸ್ಯೆ ಕಂಟ್ರೋಲ್ ಗೆ ಬರುತ್ತದೆ

3. ಕ್ಯಾಬೇಜ್ ಚೆನ್ನಾಗಿ ತುರಿದು ಒಂದು ಜಾರ್ ನಲ್ಲಿ ಮೊದಲು ಒಂದು ಲೇಯರ್ ಕ್ಯಾಬೇಜ್ ಅದರ ಮೇಲೆ ಉಪ್ಪು ನಂತರ ಅದರ ಮೇಲೆ ಮತ್ತೊಂದು ಲೇಯರ್ ಕ್ಯಾಬೇಜ್ ಅದರ ಮೇಲೆ ಉಪ್ಪು 2-3 ಚಮಚ ವಿನೆಗರ್ ಹಾಕಿ ಗಟ್ಟಿಯಾಗಿ ಮುಚ್ಚಿಟ್ಟು ಮೂರು ದಿನ ಹೊರಗೆ ಇಡಬೇಕು, ಅದು ಹುಳಿಯಾಗಿರುತ್ತದೆ. ಇದರಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಗಳು ತಯಾರಾಗಿರುತ್ತದೆ ಇದನ್ನು ಫ್ರಿಜ್ಜಿನಲ್ಲಿ ಇಟ್ಟು ಬೆಳಗ್ಗೆ ಎರಡು ಚಮಚ ಹಾಗೂ ಸಂಜೆ ಎರಡು ಚಮಚ ಸೇವಿಸುತ್ತಾ ಬರುವುದರಿಂದ ಇದು IBS ನಿಯಂತ್ರಣ ಮಾಡುವುದಕ್ಕೆ ತುಂಬಾ ಸಹಾಯಕವಾಗುತ್ತದೆ.

* ಆಯುರ್ವೇದಿಕ್ ಅಂಗಡಿಯಲ್ಲಿ ಸಿಗುವ IBS ಕಷಾಯ ಪುಡಿಯನ್ನು ತೆಗೆದುಕೊಂಡು ಎರಡು ಗ್ಲಾಸ್ ನೀರಿಗೆ ಎರಡು ಚಮಚ IBS ಕಷಾಯ ಪುಡಿಯನ್ನು ಸೇರಿಸಿ ಅದು ಒಂದು ಲೋಟ ಆಗುವವರೆಗೂ ಚೆನ್ನಾಗಿ ಕುದಿಸಿ ಬೆಳಗ್ಗೆ ಅರ್ಧ ಲೋಟ ಹಾಗೂ ಸಂಜೆ ಅರ್ಧ ಲೋಟ ತೆಗೆದುಕೊಳ್ಳುವುದರಿಂದ ಕಂಟ್ರೋಲ್ ಗೆ ಬರುತ್ತದೆ

* ಆಯುರ್ವೇದದ ಪ್ರಕೃತಿ ಚಿಕಿತ್ಸೆಯಲ್ಲಿ ನೀಡುವ ತಂಪು ಕಟ್ಟಿ ಸ್ನಾನ ಎನ್ನುವ ಚಿಕಿತ್ಸಾ ವಿಧಾನದಿಂದ ಕೂಡ ಈ ಸಮಸ್ಯೆ ಕಂಟ್ರೋಲ್ ಗೆ ಬರುತ್ತದೆ.
*ನೀರಿನಲ್ಲಿ ಕರಗುವಂತಹ ನಾರಿನಂಶ ಹೊಂದಿರುವ ಮೆಂತೆಯನ್ನು ರಾತ್ರಿಯಲ್ಲಿ ನೆನೆಸಿಟ್ಟು ಅದನ್ನು ಮೊಳಕೆ ಕಟ್ಟಿ ಸೇವಿಸುವುದರಿಂದ ಇದು ಒಳ್ಳೆಯ ಬ್ಯಾಕ್ಟೀರಿಯಕ್ಕೆ ಆಹಾರವಾಗುತ್ತದೆ.

 

ತುಳಸಿ ಗಿಡ ಮನೆಯಲ್ಲಿದ್ದರೆ ಇಂತಹ ತಪ್ಪುಗಳನ್ನು ಮಾಡಬೇಡಿ, ಮನೆಯಲ್ಲಿ ಹಣ ಉಳಿಯುವುದಿಲ್ಲ.!

ತುಳಸಿ ಗಿಡಕ್ಕೆ ಪುರಾಣ ಕಾಲದಿಂದಲೂ ಕೂಡ ಬಹಳ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಹಿಂದೂಗಳ ಪಾಲಿಗೆ ಇದೊಂದು ಗಿಡ ಮಾತ್ರವಲ್ಲ ಪವಿತ್ರವಾದ ವಸ್ತು. ಸಾಕ್ಷಾತ್ ಮಹಾಲಕ್ಷ್ಮಿ ದೇವಿ ರೂಪವಾಗಿ ಕಾಣುವ ಈ ತುಳಸಿ ಗಿಡವನ್ನು ಪ್ರತಿ ಮನೆ ಮುಂದೆ ಕೂಡ ನೆಡುತ್ತಾರೆ ಆಯುರ್ವೇದದಲ್ಲೂ ತುಳಸಿ ಗಿಡಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ.

ಧಾರ್ಮಿಕವಾಗಿ ಆರೋಗ್ಯ ದೃಷ್ಟಿಯಿಂದ ಕೂಡ ತುಳಸಿ ಗಿಡ ಪ್ರತಿಯೊಬ್ಬರಿಗೂ ಹತ್ತಿರವಾಗಿದೆ ಈ ರೀತಿ ತುಳಸಿ ಗಿಡವನ್ನು ಭಯ ಭಕ್ತಿಯಿಂದ ಪೂಜೆ ಮಾಡಿ ಅದಕ್ಕೆ ಲೋಪಗಳಾಗದ ರೀತಿ ನೋಡಿಕೊಂಡರೆ ನಮ್ಮ ಅದೆಷ್ಟೋ ಸಮಸ್ಯೆಗಳಿಗೆ ಇದು ಪರಿಹಾರವಾಗುತ್ತದೆ.

ತುಳಸಿ ಗಿಡಗಳಿಂದ ಏನೆಲ್ಲಾ ಪ್ರಯೋಜನಗಳಿವೆ ಮತ್ತು ಅದನ್ನು ಏಕೆ ಪೂಜಿಸಬೇಕು ಹಾಗೆ ಯಾವ ರೀತಿಯ ತಪ್ಪುಗಳಿಂದ ತುಳಸಿ ಗಿಡಕ್ಕೆ ಅಪಚಾರವಾಗಿ ನಮಗೆ ದೋಷಗಳು ಉಂಟಾಗುತ್ತದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಪ್ರತಿ ಮನೆ ಮುಂದೆ ಕೂಡ ತುಳಸಿ ಗಿಡ ನೆಡಬೇಕು, ಯಾಕೆಂದರೆ ತುಳಸಿ ಗಿಡ ಇರುವ ಕಡೆ ವಾತಾವರಣ ಶುದ್ಧವಾಗುತ್ತದೆ.

ಗಾಳಿಯಲ್ಲಿ ಓಡಾಡುವ ಎಷ್ಟೋ ಸೂಕ್ಷ್ಮ ಜೀವಿಗಳನ್ನು ತುಳಸಿ ಪರಿಮಳವು ಕೊಲ್ಲುತ್ತದೆ ಮತ್ತು ತುಳಸಿ ಗಿಡದ ಸಕಾರಾತ್ಮಕ ವಾತಾವರಣವು ಮನುಷ್ಯರ ಮನಸ್ಸಿನಲ್ಲಿ ಶಕ್ತಿ ತುಂಬುತ್ತದೆ, ಹಾಗೂ ಮನೆಯ ವಾತಾವರಣವನ್ನು ಸಕಾರಾತ್ಮಕವಾಗಿ ಇಡಲು ಸಹಕಾರಿಯಾಗುತ್ತದೆ.

ಎಷ್ಟೋ ಬಾರಿ ಮನೆಗೆ ಉಂಟಾಗುವ ದೃಷ್ಟಿ ದೋಷ ಮತ್ತು ಕೆಟ್ಟ ಶಕ್ತಿ ಪ್ರಭಾವವನ್ನು ತುಳಸಿ ಗಿಡವು ತಡೆದು ತಾನು ಕುಟುಂಬದವರಿಗೆ ಒಳ್ಳೆಯದನ್ನೇ ಮಾಡುತ್ತದೆ. ಆದ್ದರಿಂದ ಮನೆಯಲ್ಲಿರುವ ಗೃಹಿಣಿ ಬೆಳಗ್ಗೆ ಎದ್ದ ಕೂಡಲೇ ಮನೆ ಅಂಗಳ ಸ್ವಚ್ಛಗೊಳಿಸಿ ತುಳಸಿ ಅಂಗಳವನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿ ಮಡಿಯುಟ್ಟು ತುಳಸಿಗೆ ಪೂಜೆ ಮಾಡಬೇಕು. ತುಳಸಿ ಕಟ್ಟೆಗೆ ಪ್ರದಕ್ಷಿಣೆ ಹಾಕಬೇಕು ಮತ್ತು ಸಂಜೆ ಸಮಯ ಕೂಡ ತುಳಸಿ ಬಳಿ ದೀಪ ಹಚ್ಚಿ ಇಡಬೇಕು.

ಈ ರೀತಿ ಪೂಜೆ ಮಾಡುವ ತುಳಸಿಯನ್ನು ನೀರು ಹಾಕುತ್ತ ಚೆನ್ನಾಗಿ ಬೆಳೆಸಬೇಕು. ಯಾವುದಾದರೂ ಕಾರಣದಿಂದ ತುಳಸಿ ಗಿಡ ಒಣಗುತ್ತಾ ಬಂದರೆ ಅದನ್ನು ತೆಗೆದು ಹರಿಯುವ ನೀರಿನಲ್ಲಿ ಬಿಡಬೇಕು ಮತ್ತು ತುಳಸಿ ಕಟ್ಟೆಯನ್ನು ಖಾಲಿ ಬಿಡದೆ ತಕ್ಷಣವೇ ಬೇರೆ ತುಳಸಿಯನ್ನು ಹಾಕಿ ಬೆಳೆಸಬೇಕು.

ತುಳಸಿ ದಳವನ್ನು ತಿನ್ನುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು, ಇದರಿಂದ ಅನೇಕ ಮನೆಮದ್ದುಗಳನ್ನು ಮಾಡಬಹುದು ಹಾಗೂ ದಿನಕ್ಕೆ ಒಂದು ಎಲೆ ತುಳಸಿ ತಿನ್ನುವುದು ಎಷ್ಟು ಕಾಯಿಲಿಗೆ ಔಷಧಿಯಾಗಿದೆ. ವೈರಲ್ ಫೀವರ್ ಗಳನ್ನು, ಹವಾಮಾನ ವೈಪರಿತದಿಂದ ಉಂಟಾಗುವ ಸಣ್ಣಪುಟ್ಟ ಆರೋಗ್ಯ ವ್ಯತ್ಯಾಸಗಳನ್ನು ಇದು ತಡೆದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಆದರೆ ತಿನ್ನಲು ಪೂಜೆ ಮಾಡಿದ ತುಳಸಿ ಗಿಡದಿಂದ ಎಲೆಗಳನ್ನು ಕೀಳುವುದರ ಬದಲು ಇದಕ್ಕಾಗಿ ಪಕ್ಕದಲ್ಲಿ ಬೇರೆ ತುಳಸಿ ಬೆಳೆಸಿದರೆ ಇನ್ನು ಒಳ್ಳೆಯದು. ಅಮಾವಾಸ್ಯೆ, ಹುಣ್ಣಿಮೆ, ಏಕಾದಶಿ, ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ದಿನದಂದು ಯಾವುದೇ ಕಾರಣಕ್ಕೂ ತುಳಸಿ ಗಿಡವನ್ನು ಕೀಳಬಾರದು. ಮೈಲಿಗೆ ಆಗಿದ್ದಾಗ ತುಳಸಿ ಗಿಡವನ್ನು ಮುಟ್ಟಬಾರದು, ತುಳಸಿ ಗಿಡದಿಂದ ತುಳಸಿ ದಳ ಕೀಳುವ ಮೊದಲು ಸ್ವಲ್ಪ ನೀರು ಹಾಕಿ ನಂತರ ತುಳಸಿ ಕೇಳಬೇಕು.

ಈ ರೀತಿ ತುಳಸಿ ಗಿಡವನ್ನು ಸ್ವಲ್ಪ ಜಾಗೃತಿಯಾಗಿ ಬಳಸಬೇಕು ಭಕ್ತಿಯಿಂದ ತುಳಸಿ ಗಿಡವನ್ನು ಪೂಜೆ ಮಾಡಿದರೆ ಎಷ್ಟೋ ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ತಾಯಿ ಮಹಾಲಕ್ಷ್ಮಿ ಹಾಗೂ ಮಹಾವಿಷ್ಣುವಿನ ಅನುಗ್ರಹ ಸದಾ ಹಾಕು ಕುಟುಂಬದ ಮೇಲೆ ಇರುತ್ತದೆ ಹಾಗಾಗಿ ಇಂತಹ ತುಳಸಿ ಗಿಡವನ್ನು ಪ್ರತಿಯೊಬ್ಬರ ಪೂಜಿಸಿ.

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಸುಲಭ ವಿಧಾನ.! ಈ ಸರಳ ಅಭ್ಯಾಸಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಿ.!

* ಬೆಳಿಗ್ಗೆ ಎದ್ದ ಮೇಲೆ ಸ್ವಲ್ಪ ಹೊತ್ತು ಹೊರಗಡೆ ಓಡಾಡಿಕೊಂಡು ಬಂದು ನಂತರ ಮಲವಿಸರ್ಜನೆ ಮಾಡಬೇಕು
* ಪ್ರತಿದಿನವೂ ಕೂಡ ನಿತ್ಯ ಕರ್ಮಗಳು ಸರಿಯಾಗಿ ಆಗಬೇಕು, ಶೌಚಕಾರ್ಯಗಳು ಆದ ಮೇಲೆ ಶುದ್ಧವಾಗಿ ಕೈಕಾಲು ಮುಖ ತೊಳೆದುಕೊಂಡು ಒಂದೆರಡು ಲೋಟ ನೀರನ್ನು ಕುಡಿಯಬೇಕು

* ಪ್ರತಿ ದಿನ ನಾವು ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಯುವುದರಿಂದ ತಮ್ಮ ಕರುಳು ಕ್ಲೀನ್ ಆಗುತ್ತದೆ ಹಾಗೂ ದೇಹದಲ್ಲಿರುವ ಟಾಕ್ಸಿನ್ ಅಂಶವು ಮೂತ್ರದ ಮೂಲಕ ಹೊರಗೆ ಹೋಗುತ್ತದೆ
* ಹಲ್ಲುಗಳು ಗಟ್ಟಿಮುಟ್ಟಾಗಲು ಅವುಗಳನ್ನು ಬಿಳಿ ಬಣ್ಣಕ್ಕೆ ತರಲು ಈ ರೀತಿ ಹಲ್ಲುಗಳ ಆರೋಗ್ಯಕ್ಕೆ ದಂತಧಾವನ ಚೂರ್ಣವನ್ನು ಪ್ರತಿದಿನವೂ ಬಳಸಿ ಚೆನ್ನಾಗಿ ಹಲ್ಲುಗಳನ್ನು ಕ್ಲೀನ್ ಮಾಡಬೇಕು

* ಪ್ರತಿ ಸಮಯವು ಊಟ ಆದ ತಕ್ಷಣ ನೀರಿನಿಂದ ಮುಕ್ಕಳಿಸಿ ಬಾಯನ್ನು ತೊಳೆಯಬೇಕು ಹಾಗೂ ಹಲ್ಲುಗಳನ್ನು ಬೆರಳಿನಿಂದ ಉಜ್ಜಿ ಬಾಯಿಯನ್ನು ಕ್ಲೀನ್ ಮಾಡಿಕೊಳ್ಳಬೇಕು.
* ದಿನದಲ್ಲಿ ಎರಡು ಬಾರಿ ಹಲ್ಲು ಉಜ್ಜಬೇಕು, ಬೆಳಗ್ಗೆ ಎದ್ದ ಕೂಡಲೇ ಹಲ್ಲುಜ್ಜುವುದರ ಜೊತೆಗೆ ರಾತ್ರಿ ಮಲಗುವಾಗ ಕೂಡ ನೀಟಾಗಿ ಹಲ್ಲನ್ನು ಕ್ಲೀನ್ ಮಾಡಿ ಮಲಗಬೇಕು

* ಯಾವಾಗಲೂ ಉಗುರು ಬೆಚ್ಚಗೆ ನೀರಿನಲ್ಲಿ ಸ್ನಾನ ಮಾಡಬೇಕು ಮತ್ತು ಪ್ರತಿದಿನವೂ ತಪ್ಪದೇ ಸ್ನಾನ ಮಾಡಬೇಕು, ಸ್ನಾನ ಮಾಡಲು ಒಳ್ಳೆಯ ಸೋಪನ್ನು ಬಳಸಬೇಕು
* ಸ್ನಾನ ಆದ ಮೇಲೆ ಒಣಗಿದ ಬಟ್ಟೆಗಳನ್ನು ಧರಿಸಬೇಕು ಸಾಧ್ಯವಾದರೆ ಇಸ್ತ್ರಿ ಮಾಡಿದ ಬಟ್ಟೆಗಳನ್ನು ಬಳಸುವುದು ಒಳ್ಳೆಯದು

* ಸ್ನಾನ ಮಾಡಲು ತುಂಬಾ ಬಿಸಿಯಾದ ನೀರನ್ನು ಬಳಸಬಾರದು ತುಂಬಾ ಬಿಸಿಯಾದ ನೀರನ್ನು ನೆತ್ತಿಗೆ ಹಾಕಬಾರದು ಬಿಸಿನೀರಿನಿಂದ ಸ್ನಾನ ಮಾಡುವಾಗ ಮೊದಲು ಕಾಲುಗಳನ್ನು ತೊಳೆದು ನಂತರ ತಲೆಯಿಂದ ನೀರು ಹಾಕಬೇಕು
* ದೇಹ ಬಹಳ ಆಯಾಸಕೊಂಡಿರುವಾಗ ಹಾಗೂ ವ್ಯಾಯಾಮ ಮಾಡಿದ ತಕ್ಷಣವೇ ಸ್ನಾನ ಮಾಡಬಾರದು

* ವಾರದಲ್ಲಿ ಒಮ್ಮೆಯಾದರೂ ತಲೆಗೆ ಹಾಗೂ ಅಂಗಾಂಗಗಳಿಗೆ ಚೆನ್ನಾಗಿ ಹರಳೆಣ್ಣೆಯನ್ನು ಹಿಕಿ, ತಿಕ್ಕಿ ತೊಳೆದು ಸ್ನಾನ ಮಾಡಬೇಕು
* ಊಟಕ್ಕೆ ಕೂರುವ ಮೊದಲು ಚೆನ್ನಾಗಿ ಕೈಕಾಲು ಹಾಗೂ ಬಾಯಿಯನ್ನು ತೊಳೆದುಕೊಂಡು ಆಹಾರ ಸೇವಿಸಬೇಕು
* ಹಸಿವನ್ನು ತಡೆಯಬಾರದು ಹಾಗೆ ಹಸಿವು ಇಲ್ಲದೆ ಯಾವುದೇ ಕಾರಣಕ್ಕೂ ಊಟ ಮಾಡಬಾರದು

* ಶುಚಿಯಾಗಿರುವ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ ಸೇವನೆ ಮಾಡಬೇಕು
* ಆತುರ ಆತುರವಾಗಿ ಆಹಾರವನ್ನು ಸೇವಿಸಬಾರದು, ಆಹಾರವನ್ನು ಚೆನ್ನಾಗಿ ಜಗಿದು ನುಂಗಬೇಕು
* ನಮ್ಮ ಊಟದಲ್ಲಿ ಹಸಿ ಸೊಪ್ಪು, ತರಕಾರಿ, ಮೊಳಕೆ ಕಟ್ಟಿದ ಕಾಳುಗಳು ಹಾಗೂ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿರಬೇಕು. ಅದೇ ರೀತಿ ದಿನ ಪೂರ್ತಿ ಸಾಧ್ಯವಾದಷ್ಟು ನೀರನ್ನು ಕುಡಿಯುತ್ತಿರಬೇಕು

* ಬಹಳ ತಣ್ಣಗಿರುವ ಆಹಾರ ಸೇವಿಸಬಾರದು ತಿನ್ನುವ ಊಟ ಯಾವಾಗಲೂ ಬಿಸಿ ಬಿಸಿಯಾಗಿರಬೇಕು
* ಆಹಾರವು ಹಳಸಿದ್ದರೆ ಹಾಗೂ ಅಪಕ್ವವಾಗಿದ್ದರೆ ಅವುಗಳನ್ನು ಸೇವಿಸಬಾರದು
* ಬಾಯಾರಿಕೆಯನ್ನು ಎಂದಿಗೂ ತಡೆಯಬಾರದು
* ಊಟ ಮಾಡಿದ ತಕ್ಷಣ ಶ್ರಮವಾದ ಕೆಲಸವನ್ನು ಮಾಡಬಾರದು ಊಟ ಮಾಡಿದ ಮೇಲೆ ಲಘು ವಿಶ್ರಾಂತಿ ತೆಗೆದುಕೊಂಡರೆ ಒಳ್ಳೆಯದು ಆದರೆ ಊಟ ಮಾಡಿದೆ ತಕ್ಷಣ ನಿದ್ರೆ ಹೋಗಬಾರದು

* ರಾತ್ರಿ ಹೊತ್ತು ಯಾವಾಗಲು ಸ್ವಲ್ಪ ಕಡಿಮೆ ಊಟ ಮಾಡಬೇಕು ಮತ್ತು ಲಘುವಾದ ಸುಲಭವಾಗಿ ಜೀರ್ಣವಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಕು
* ರಾತ್ರಿ ಹೊತ್ತು ಹಣ್ಣು ಹಾಲು ಸೇವಿಸುವ ಅಭ್ಯಾಸವಿದ್ದರೆ ಊಟ ಆದ ಎರಡು ಗಂಟೆ ನಂತರ ಸೇವಿಸಬೇಕು ಹಾಗೂ ಊಟವು ಮಲಗುವ ಮೂರು ತಾಸಿನ ಮೊದಲೇ ಮಾಡಿರಬೇಕು.
* ರಾತ್ರಿ ಮಲಗುವಾಗ ಎಡ ಮಗ್ಗಲಿನಲ್ಲಿ ಮಲಗಬೇಕು ಹಾಗೂ ಏಳುವಾಗ ಬಲದ ಮಗ್ಗಲಿನಲ್ಲಿ ಏಳಬೇಕು.

ಸಂಸ್ಕಾರ ಎಂದರೇನು? ಹೇಗಿರಬೇಕು ಗೊತ್ತಾ? ನಮ್ಮ ನಡೆ-ನುಡಿ, ಆಚಾರ-ವಿಚಾರ.!

 

ನಮಸ್ಕಾರ ಎನ್ನುವುದು ಮನುಷ್ಯನಿಗೆ ಬಹಳ ಮುಖ್ಯವಾದದ್ದು. ಒಬ್ಬ ವ್ಯಕ್ತಿಗೆ ಶಿಸ್ತು, ಪ್ರಾಮಾಣಿಕತೆ, ವಿನಯ ಎಲ್ಲವನ್ನು ಕೂಡ ಸಂಸ್ಕಾರ ಎನ್ನುವುದೇ ಕಲಿಸುತ್ತದೆ. ಸಂಸ್ಕಾರ ಎನ್ನುವುದು ನಮ್ಮ ಕುಟುಂಬದಲ್ಲಿ ನಾವು ಹೇಗೆ ಬೆಳೆದು ಬಂದಿದ್ದೇವೆ ಎನ್ನುವುದನ್ನು ತೋರಿಸುತ್ತದೆ ನಮ್ಮ ಸಂಸ್ಕಾರ ನೋಡಿ ವ್ಯಕ್ತಿತ್ವ ಅಳೆಯಬಹುದು,

ಸಂಸ್ಕಾರ ಎನ್ನುವುದು ಹೇಳಿ ಬರುವುದಂತದಲ್ಲ ಅದನ್ನು ನಡವಳಿಕೆಯಲ್ಲಿ ನೋಡಬೇಕು. ಸಂಸ್ಕಾರ ಎಂದರೆ ಹೆಣ್ಣು ಮಕ್ಕಳು, ಗಂಡು ಮಕ್ಕಳು ಎಲ್ಲರೂ ಕೂಡ ಅಚ್ಚುಕಟ್ಟಾದ ಜೀವನಕ್ಕಾಗಿ ಪಾಲಿಸಬೇಕಾದದ್ದು, ಇದರಲ್ಲಿ ಕೆಲವು ಸಂಸ್ಕಾರದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

* ನಾವು ಎಷ್ಟೇ ಶ್ರೀಮಂತಿಕೆ ಸಂಪಾದನೆ ಮಾಡಿದ್ದರೂ ಕೂಡ ನಮಗಿಂತ ಹಿರಿಯರನ್ನು ನೋಡಿದಾಗ ಅವರಿಗೆ ಗೌರವ ಕೊಟ್ಟು ನಡೆದುಕೊಳ್ಳುವುದು ಮತ್ತು ನಮ್ಮ ಮನೆ ಹಿರಿಯರಿಗೆ ನೋವಾಗದಂತೆ ನಡೆದುಕೊಂಡರೆ ಅದು ಸಂಸ್ಕಾರ ಎನಿಸುತ್ತದೆ.
* ಹೆಣ್ಣು ಮಕ್ಕಳು ಎಷ್ಟೇ ಉನ್ನತ ಹುದ್ದೆಗೆ ಏರಿದರೂ ಅಥವಾ ಯಾವುದೇ ಮಹಾನಗರದಲ್ಲಿ ವಾಸಿಸಿದರೂ ನಮ್ಮತನ ಬಿಟ್ಟುಕೊಡದೆ ಹಣೆಗೆ ಬೊಟ್ಟು ಇಡುವುದು ಸಂಸ್ಕಾರ ಎನಿಸುತ್ತದೆ

* ಮದುವೆ ಆಗಿರುವ ಹೆಣ್ಣು ಮಗಳು ಕೈಗೆ ಬಳೆಗಳನ್ನು ಹಾಕುವುದು, ತಲೆಗೆ ಹೂವು ಮುಡಿದುಕೊಳ್ಳುವುದು ಹಣೆಗೆ ಸಿಂಧೂರ ಹಚ್ಚಿಕೊಳ್ಳುವುದು. ಮಂಗಳಸೂತ್ರ ಹಾಗೂ ಕಾಲುಂಗುರ ಪವಿತ್ರ ಎಂದು ಭಾವಿಸಿ ಅದರ ಗೌರವಕ್ಕೆ ಧಕ್ಕೆ ಆಗದಂತೆ ನಡೆದುಕೊಳ್ಳುವುದು ಕೂಡ ಸಂಸ್ಕಾರ ಎನಿಸುತ್ತದೆ
* ಎಷ್ಟೇ ಡಿಗ್ರಿ ಪಡೆದು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ನಮಗೆ ಅಕ್ಷರ ಕಲಿಸಿದ ಗುರುಗಳನ್ನು ಕಂಡಾಗ ಮನಸ್ಸಿನಲ್ಲಿ ಭಯ ಭಕ್ತಿ ಮೂಡುವುದು ಸಂಸ್ಕಾರ ಎನಿಸುತ್ತದೆ

* ದುಡಿಯುತ್ತಿದ್ದೇನೆ ಮನೆ ನೋಡಿಕೊಳ್ಳುತ್ತಿದ್ದೇನೆ ಎನ್ನುವ ದರ್ಪ ತೋರದೆ ಮನೆಯ ಎಲ್ಲರೊಡನೆ ಪ್ರೀತಿಯಿಂದ ನಡೆದುಕೊಳ್ಳುವುದು, ಚಿಕ್ಕ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವುದು ಸಂಸ್ಕಾರ
* ನಮ್ಮ ನಡವಳಿಕೆಯಲ್ಲಿ ಇರುವ ನಯ ನಾಜೂಕೂ ಕೂಡ ಸಂಸ್ಕಾರ ಎನಿಸುತ್ತದೆ
* ಓದು, ಬರಹ, ಉದ್ಯೋಗ ಇತ್ಯಾದಿಗಳ ಹೊರತಾಗಿ ಕೂಡ ನಾವು ನಮ್ಮ ಸಮಾಜದ ಜವಾಬ್ದಾರಿಗಳನ್ನು ಹೊರುವುದು ಸಂಸ್ಕಾರ

* ಖಾಯಿಲೆ ಬಿದ್ದಿರೋ ತಂದೆ ತಾಯಿಯನ್ನು ಮಕ್ಕಳಂತೆ ಜೋಪಾನ ಮಾಡುವುದು ಕೂಡ ಸಂಸ್ಕಾರ
* ಮನೆಯಲ್ಲಿರುವ ಹೆಣ್ಣು ಮಕ್ಕಳ ಬೇಕು ಬೇಡಗಳನ್ನು ಕೇಳಿ ನೆರವೇರಿಸುವುದು ಕೂಡ ಸಂಸ್ಕಾರ
* ಪ್ರೀತಿಯಿಂದ ಸಾಕಿದ ಮಕ್ಕಳೆಲ್ಲ ತಪ್ಪು ದಾರಿ ಹಿಡಿದಾಗ ಅವರಿಗೆ ಒಳ್ಳೆಯ ಮಾತಿನಿಂದ ತಪ್ಪು ಅರ್ಥ ಮಾಡಿಸಿ ಸರಿ ದಾರಿಗೆ ತರುವುದು ಕೂಡ ಸಂಸ್ಕಾರ.

* ಗಂಡನ ಸಂಪಾದನೆ ಸಣ್ಣದಾಗಿದ್ದರೂ ಕೂಡ ಕುಟುಂಬವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಸಂಸಾರದ ಗುಟ್ಟನ್ನು ಬಿಟ್ಟು ಕೊಡದೆ ಹೆಂಡತಿಯ ಗುಣ ಸಂಸ್ಕಾರ ಎನಿಸಿಕೊಳ್ಳುತ್ತದೆ
* ಹೆಣ್ಣು ಮಕ್ಕಳು ಬೆಳಗ್ಗೆ ಎದ್ದ ಕೂಡಲೇ ನಿತ್ಯ ಕರ್ಮ ಮುಗಿಸಿ ಮನೆ ಮುಂದೆ ರಂಗೋಲಿ ಬಿಡಿಸುವುದು, ದೇವರಿಗೆ ದೀಪ ಹಚ್ಚಿ ಪೂಜೆ ಮಾಡುವುದು, ತುಳಸಿ ಕಟ್ಟೆಗೆ ಪೂಜೆ ಮಾಡುವುದು ಕೂಡ ಸಂಸ್ಕಾರ ಎನಿಸಿಕೊಡುತ್ತದೆ

* ಮನೆ ಹತ್ತಿರ ಬಂದ ಸಾಕು ಪ್ರಾಣಿಗೆ ಆಹಾರ ಒದಗಿಸಿಕೊಡುವುದು ಭಿಕ್ಷಕ್ಕೆ ಬಂದವರಿಗೆ ಇಲ್ಲ ಎಂದು ಹೇಳದೆ ಏನಾದರೂ ಕೊಟ್ ಕಳಿಸುವುದು ಇದು ಕೂಡ ಸಂಸ್ಕಾರ ಎನಿಸುತ್ತದೆ.
* ತನ್ನ ನೂರಾರು ಕ’ಷ್ಟಗಳ ನಡುವೆಯೂ ಸಂಬಂಧಿಕರು ಸ್ನೇಹಿತರು ಸಹಾಯ ಕೋರಿದಾಗ ಇಲ್ಲದೆ ಎಂದು ಮಾಡುವ ಗುಣವು ಕೂಡ ಸಂಸ್ಕಾರ

* ಹೆಣ್ಣುಮಕ್ಕಳು ಅಡುಗೆ ಮಾಡಿದಾಗ ಬರುವ ಘಮದಲ್ಲಿ, ಮಾಡಿದ ಅಡುಗೆಯನ್ನು ಬಡಿಸುವ ವಿಧಾನದಲ್ಲಿ, ತುಳಸಿಕಟ್ಟೆಯನ್ನು ಸ್ವಚ್ಛವಾಗಿ ಮಡಿಯಾಗಿ ಇಟ್ಟುಕೊಳ್ಳುವುದರಲ್ಲಿ , ಮನೆಯವರಿಗೆ ಹುಷಾರಿಲ್ಲದೇ ಇದ್ದಾಗ ಮಾಡುವ ಆರೈಕೆಯಲ್ಲಿ ಸಂಸ್ಕಾರ ಕಾಣುತ್ತದೆ.
* ನಮ್ಮ ಬಾಯಿಯಿಂದ ಬರುವ ಪದಗಳಲ್ಲೂ ಕೂಡ ನಮ್ಮ ಸಂಸ್ಕಾರ ಪ್ರತಿಬಿಂಬಿಸುತ್ತದೆ.

ಡಯಾಬಿಟಿಸ್ ಶಾಶ್ವತವಾಗಿ ಕಡಿಮೆ ಮಾಡಲು ಇದನ್ನು ಮಿಕ್ಸ್ ಮಾಡಿ ಜ್ಯೂಸ್ ಮಾಡಿ ಕುಡಿಯಿರಿ, ಒಂದು ವಾರದಲ್ಲಿ ಶುಗರ್ ಫುಲ್ ಕಂಟ್ರೋಲ್.!

0

 

ಇತ್ತೀಚಿಗೆ ಸರ್ವೆ ಸಾಮಾನ್ಯವಾಗಿ ಕೇಳಿ ಬರುತ್ತಿರುವ ಕಾಯಿಲೆ ಡಯಾಬಿಟಿಸ್. ಈ ಹಿಂದೆ ಇದನ್ನು ವಯೋ ಸಹಜ ಕಾಯಿಲೆ, ಶ್ರೀಮಂತರ ಕಾಯಿಲೆ ಎನ್ನಲಾಗುತ್ತಿತ್ತು. ಆದರೆ ಇಂದು ಅತಿ ಚಿಕ್ಕ ವಯಸ್ಸಿನವರಿಗೆ ಮತ್ತು ಹಳ್ಳಿಯಲ್ಲಿ ಇರುವವರಿಗೆ ಕೂಡ ಡಯಾಬಿಟಿಸ್ ಕಾಡುತ್ತಿದೆ. ಇದಕ್ಕೆಲ್ಲ ಕಾರಣ ಇಂದು ನಮ್ಮ ಆಹಾರ ಶೈಲಿ ಸಂಪೂರ್ಣವಾಗಿ ಹದ ತಪ್ಪಿರುವುದು.

ಹಾಗೆ ನಮ್ಮ ಜೀವನ ಶೈಲಿ ಕೂಡ ಬದಲಾಗಿದೆ, ಈ ರೀತಿ ವ್ಯತ್ಯಾಸಗಳಾದಾಗ ನಮ್ಮ ದೇಹದ ಆರೋಗ್ಯವೂ ಕೂಡ ಕಂಟ್ರೋಲ್ ತಪ್ಪಿ ಕೆಲವು ಆರೋಗ್ಯ ಸಮಸ್ಯೆಗಳಾಗುತ್ತವೆ. ಆದರೆ ಇದು ಗಂಭೀರ ಕಾಯಿಲೆಗಳಲ್ಲ ಹಾಗೆಂದು ನಿರ್ಲಕ್ಷಿಸುವಂತೆಯೂ ಇಲ್ಲ. ಡಯಾಬಿಟಿಸ್ ಪೇಷಂಟ್ ಗಳಿಗೆ ಆಸ್ಪತ್ರೆಗೆ ಹೋದರೆ ವರ್ಷ ಪೂರ್ತಿ ಸೇವಿಸಲು ಮಾತ್ರೆಗಳನ್ನು ಕೊಡುತ್ತಾರೆ.

ಹಾಗಾಗಿ ಈ ರೀತಿ ಧೀರ್ಘವಾಗಿ ಮಾತ್ರೆಗಳನ್ನು ಸೇವಿಸುವ ಯಾವುದೇ ಸಮಸ್ಯೆ ಇದ್ದರೂ ಅದನ್ನು ಆದಷ್ಟು ಬೇಗ ಕಂಟ್ರೋಲ್ ಮಾಡಿಕೊಳ್ಳುವುದು ಒಳ್ಳೆಯದು ಹಾಗಾಗಿ ಇಂದು ಈ ಅಂಕಣದಲ್ಲಿ ಡಯಾಬಿಟಿಸ್ ಕಂಟ್ರೋಲ್ ಗೆ ಸುಲಭ ಮನೆಮದ್ದುಗಳನ್ನು ತಿಳಿಸಿಕೊಡುತ್ತಿದ್ದೇವೆ.

ಆಯುರ್ವೇದ ಹೇಳಿರುವ ಪ್ರಕಾರ ಸುಮಾರು 20ಕ್ಕೂ ಹೆಚ್ಚು ಡಯಾಬಿಟಿಸ್ ಗಳು ಇವೆ. ಆದರೆ ವೈದ್ಯಕೀಯ ಭಾಷೆಯಲ್ಲಿ 2 ರೀತಿ ಡಯಾಬಿಟಿಸ್ ಗಳು ಹೆಚ್ಚಾಗಿ ಕಂಡು ಬರುತ್ತದೆ. ಇದರಲ್ಲಿ ಟೈಪ್ 1 ಇನ್ಸುಲಿನ್ ಕೊರತೆಯಾಗುತ್ತದೆ. ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಆಗದೇ ಇರುವುದು ಒಂದು ರೀತಿಯ ಸಮಸ್ಯೆ.

ಆದರೆ ಇನ್ಸುಲಿನ್ ಉತ್ಪಾದನೆ ಹೆಚ್ಚಾಗಿ ಅದು ಜೀವಕೋಶದ ಜೊತೆ ಸರಿಯಾಗಿ ರಿಜಿಸ್ಟೆನ್ಸ್ ಆಗದೆ ಇರುವುದು ಈ ಕಾರಣದಿಂದಾಗಿ ಇನ್ಸುಲಿನ್ ಹೆಚ್ಚಾಗುವುದು ಕೂಡ ಮತ್ತೊಂದು ರೀತಿಯ ಡಯಾಬಿಟಿಸ್ ಆಗಿದೆ. ಈ ರೀತಿ ಯಾವುದೇ ಡಯಾಬಿಟಿಸ್ ಇದ್ದರೂ ಕೂಡ ಈಗ ನಾವು ಹೇಳುವ ಈ ಮನೆಮದ್ದುಗಳನ್ನು ಪಾಲಿಸಿ ಒಂದೇ ವಾರದಲ್ಲಿ ನಿಮ್ಮ ಆರೋಗ್ಯ ಸುಧಾರಿಸುವುದನ್ನು ನೀವೇ ನೋಡುತ್ತೀರಿ.

* ಡಯಾಬಿಟಿಕ್ ಪೇಷಂಟ್ ಗಳು ಖಾಲಿ ಹೊಟ್ಟೆಯಲ್ಲಿ ಕೆಲವು ಜ್ಯೂಸ್ ಗಳನ್ನು ಸೇವಿಸಬೇಕು. ಒಂದು ವೇಳೆ ಖಾಲಿ ಹೊಟ್ಟೆಯಲ್ಲಿ ಸೇವಿಸಲು ಆಗದೆ ಇದ್ದವರು ಊಟಕ್ಕೂ ಮೊದಲು ಇವುಗಳನ್ನು ಸೇವಿಸಿದರೆ ಉತ್ತಮ. ಬೆಟ್ಟದ ನೆಲ್ಲಿಕಾಯಿ, ಗರಿಕೆ ಅಥವಾ ಸೋರೆಕಾಯಿ ಅಥವಾ ಬೂದುಕುಂಬಳಕಾಯಿ ಇವುಗಳನ್ನು ಜ್ಯೂಸ್ ಮಾಡಿ.

ಜ್ಯೂಸ್ ಮಾಡುವಾಗ ತಂಗಡಿ ಹೂವಿನ ದಳ 7-8, ಅಥವಾ ಬಿಲ್ಪತ್ರೆ ಎಲೆ ಗಳಿಂದ 3-5, ನಿತ್ಯ ಪುಷ್ಪ 3-4 ಇವುಗಳಲ್ಲಿ ಯಾವುದಾದರೂ ಒಂದನ್ನು ಹಾಕಿ ಜ್ಯೂಸ್ ಮಾಡಿ ಸೇವಿಸಬೇಕು. ಪ್ರತಿನಿತ್ಯವು 200ml ರಿಂದ 250ml ಸೇವಿಸಬೇಕು. ಚಿಕ್ಕ ಮಕ್ಕಳಾದರೆ 50ml ರಿಂದ 60ml ಮಾತ್ರ ಸೇವಿಸಬೇಕು ಆದರೆ ಯಾವುದೇ ಕಾರಣಕ್ಕೂ ಕಿಡ್ನಿ ಸಮಸ್ಯೆ ಇರುವವರು ಮತ್ತು ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರು ಇದನ್ನು ಸೇವಿಸುವಂತಿಲ್ಲ.

ಈ ರೀತಿ ಕನಿಷ್ಠ ಎರಡು ತಿಂಗಳು ಈ ಮೇಲೆ ತಿಳಿಸಿದ ಜ್ಯೂಸ್ ಗಳಲ್ಲಿ ಯಾವುದಾದರೂ ಒಂದನ್ನು ಪ್ರತಿದಿನ ಸೇವಿಸಿದರೆ ಆಶ್ಚರ್ಯಕರ ರೀತಿಯಲ್ಲಿ ನಿಮ್ಮ ಶುಗರ್ ಕಂಟ್ರೋಲ್ ಗೆ ಬರುತ್ತದೆ.
* ಅಪಾನ ಮುದ್ರೆಯಲ್ಲಿ ಕಪಾಲಬಾತಿ ಪ್ರಾಣಯಮ, ನಾಡಿ ಶೋಧನ ಪ್ರಾಣಾಯಾಮ ಭ್ರಮರಿ ಪ್ರಾಣಾಯಾಮ ಅಭ್ಯಾಸ ಮಾಡುವುದರಿಂದ ಕೂಡ ಶುಗರ್ ಕಂಟ್ರೋಲ್ ಗೆ ಬರುತ್ತದೆ

* ಸಕ್ಕರೆ ಕಾಯಿಲೆ ಇರುವವರು ಬರಿಕಾಲಿನಲ್ಲಿ ಮಣ್ಣಿನ ಮೇಲೆ ವಾಕಿಂಗ್ ಮಾಡುವುದು ಬಹಳ ಉತ್ತಮ ಪರಿಣಾಮವನ್ನು ನೀಡುತ್ತದೆ. ಬೆಳಿಗ್ಗೆ ಹಾಗೂ ಸಂಜೆ ತಲಾ ಒಂದು ಘಂಟೆ ಇವರು ತಪ್ಪದೆ ವಾಕಿಂಗ್ ಮಾಡಬೇಕು.
* ಜಂಕ್ ಫುಡ್, ಫಾಸ್ಟ್ ಬುಕ್ ಗಳು, ಬೇಕರಿ ಪದಾರ್ಥಗಳು ತಂಬಾಕು ಧೂಮಪಾನ, ಮಧ್ಯಪಾನ ಇವುಗಳಿಂದ ದೂರ ಇದ್ದು ಹೆಚ್ಚು ಸೊಪ್ಪು ತರಕಾರಿ ಹಣ್ಣುಗಳು ಸೇವಿಸುವುದು ರೂಢಿಸಿಕೊಂಡರೆ ಸಕ್ಕರೆ ಕಾಯಿಲೆ ಕಂಟ್ರೋಲ್ ಗೆ ಬರುತ್ತದೆ.

https://youtu.be/8Nz33oSY_UA?si=MX9SDrhWHJWVGvn7

ನಿಮ್ಮ ನಕ್ಷತ್ರದಿಂದ ತಿಳಿಯಬಹುದು ಮದುವೆಯ ಗುಟ್ಟು, ಯಾವ ನಕ್ಷತ್ರದವರ ಸಂಸಾರ ಹೇಗಿರುತ್ತದೆ ನೋಡಿ.!

ರೋಹಿಣಿ ನಕ್ಷತ್ರ:- ಈ ನಕ್ಷತ್ರದವರು ಸಂಗಾತಿಯಾಗಿ ಸಿಕ್ಕವರು ಸುಖ ಸಂಸಾರ ಹೊಂದಿರುತ್ತಾರೆ, ಇವರಲ್ಲಿ ಹೊಂದಾಣಿಕೆ ಗುಣ ಇರುತ್ತದೆ, ಅನ್ಯೋನ್ಯವಾಗಿ ಇರುತ್ತಾರೆ.
ಹಸ್ತ ನಕ್ಷತ್ರ:- ಅಖಂಡ ಅದೃಷ್ಟ ಹೊಂದಿರುತ್ತಾರೆ. ಇವರ ಸಂಸಾರ ಜೀವನ ಚೆನ್ನಾಗಿರುತ್ತದೆ, ಸಂತೋಷವಾಗಿ ಕುಟುಂಬದೊಂದಿಗೆ ಜೀವನ ಕಳೆಯುತ್ತಾರೆ.

* ಅಶ್ವಿನಿ ನಕ್ಷತ್ರ:- ನಾಯಕತ್ವದ ಗುಣಸ್ವಭಾವ ಇರುವುದರಿಂದ ಅವರು ಹೇಳಿದರೆ ಅದು ಹಾಗೆ ನಡೆಯಬೇಕು ಎಂದು ಡಾಮಿನೇಟ್ ಮಾಡುತ್ತಾರೆ, ಅವರು ಅಂದುಕೊಂಡ ರೀತಿಯ ಕುಟುಂಬದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
* ಭರಣಿ ನಕ್ಷತ್ರ:- ಭರಣಿ ನಕ್ಷತ್ರದವರು ಧರಣಿಯನ್ನು ಆಳುತ್ತಾರೆ ಎನ್ನುವ ಗಾದೆಯು ಇದೆ. ಈ ರೀತಿ ಅವರು ಹೊರಗಿನವರು ಮಾತ್ರವಲ್ಲದೆ ಮನೆಯವರ ಮನಸ್ಸನ್ನು ಕೂಡ ಗೆಲ್ಲುತ್ತಾರೆ. ಎಲ್ಲರನ್ನೂ ಅರ್ಥ ಮಾಡಿಕೊಂಡು ಎಲ್ಲರೂ ಸುಖ ಸಂತೋಷಕ್ಕೆ ಗಮನ ಕೊಡುತ್ತಾರೆ.

* ಕೃತ್ತಿಕಾ ನಕ್ಷತ್ರಾ:- ಕೃತಿಕಾ ನಕ್ಷತ್ರದವರು ತೇಜಸ್ಸು ಉಳ್ಳವರಾಗಿರುತ್ತಾರೆ, ಇವರು ಸಾಧನೆಗಾಗಿ ಹಾತೊರೆಯುತ್ತಾರೆ, ಹಾಗಾಗಿ ಕುಟುಂಬ ಜೀವನದಲ್ಲಿ ಅಪಸ್ವರಗಳು ಆಗಾಗ ಉಂಟಾಗುತ್ತವೆ. ಆದರೂ ನಿಭಾಯಿಸಿ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನ ಪಡುತ್ತಾರೆ.
* ಮೃಗಶಿರಾ ನಕ್ಷತ್ರಾ:- ಮೃಗಶಿರ ನಕ್ಷತ್ರದವರ ಸಂಸಾರ ಜೀವನ ಚೆನ್ನಾಗಿರುತ್ತದೆ.

* ಆರಿದ್ರಾ ನಕ್ಷತ್ರ:- ಆರಿದ ನಕ್ಷತ್ರ ಅವರಿಗೆ ಖಂಡಿತವಾಗಿಯೂ ಪುತ್ರ ಸಂತಾನ ಭಾಗ್ಯವಿರುತ್ತದೆ. ಇವರ ಸಹ ಪತಿ, ಪುತ್ರ ಕುಟುಂಬದ ಹಿರಿಯರೊಂದಿಗೆ ಕೊನೆಯವರೆಗೂ ಒಟ್ಟಾಗಿ ಬಾಳುತ್ತಾರೆ.
* ಪುಷ್ಯ ನಕ್ಷತ್ರ:- ಪುಷ್ಯ ನಕ್ಷತ್ರದವರ ಕುಟುಂಬ ಜೀವನ ಅಷ್ಟೊಂದು ಹಿತಕರವಾಗಿರುವುದಿಲ್ಲ, ಸದಾ ಒಂದಲ್ಲ ಒಂದು ಕ’ಷ್ಟಗಳು ವೇದನೆ ಇದ್ದೇ ಇರುತ್ತದೆ, ಅದರಿಂದ ಈ ಬಗ್ಗೆ ಮುನ್ನೆಚ್ಚರಿಕೆಯಿಂದ ಇರುವುದು ಒಳ್ಳೆಯದು

* ಆಶ್ಲೇಷ ನಕ್ಷತ್ರ:- ಆಶ್ಲೇಷ ನಕ್ಷತ್ರದವರಿಗೆ ಎಲ್ಲ ರೀತಿಯ ಸುಖಗಳು ಸಿಗುತ್ತವೆ. ಜೀವನದಲ್ಲಿ ಇವರು ಸಂತೋಷವಾಗಿರುತ್ತಾರೆ.
* ಪುನರ್ವಸು ನಕ್ಷತ್ರ:- ಪುನರ್ವಸು ನಕ್ಷತ್ರದವರ ಜೀವನದಲ್ಲೂ ಸಂಸಾರದಲ್ಲಿ ಸಾಕಷ್ಟು ಕ’ಷ್ಟಗಳನ್ನು ಎದುರಾಗುತ್ತವೆ. ಹಾಗಾಗಿ ಇವರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎರಡು ಬಾರಿ ಯೋಚನೆ ಮಾಡಿ ಮುಂದುವರಿಯುವುದು ಒಳ್ಳೆಯದು.

* ಮಖಾ ನಕ್ಷತ್ರ:- ಮಖಾ ನಕ್ಷತ್ರದವರು ಗಂಡ ಹೆಂಡತಿ ದೂರ ಆಗುವ ಸಂದರ್ಭಗಳು ಎದುರಾಗುತ್ತವೆ. ಆದರೆ ಇದಕ್ಕೆ ಅವಕಾಶ ಕೊಡದೆ ಒಬ್ಬರು ಸ್ವಲ್ಪ ತಗ್ಗಿ ನಡೆದರೆ ಇಂತಹ ಸಮಸ್ಯೆ ಉಂಟಾಗುವುದಿಲ್ಲ, ಹಾಗಾಗಿ ಮಖ ನಕ್ಷತ್ರದವರು ತಾಳ್ಮೆಯಿಂದ ನಡೆದುಕೊಳ್ಳಿ.
* ಪುಬ್ಬಾ ನಕ್ಷತ್ರ:- ಒಬ್ಬ ನಕ್ಷತ್ರದವರು ಗಂಡು ಸಂತಾನ ಪಡೆಯುತ್ತಾರೆ, ಇವರ ತಮ್ಮ ಮಕ್ಕಳನ್ನು ಬಹಳ ಇಷ್ಟಪಡುತ್ತಾರೆ, ಮಕ್ಕಳಿಂದ ಜೀವನದಲ್ಲಿ ನೆಮ್ಮದಿ ಪಡೆಯುತ್ತಾರೆ.

* ಫಾಲ್ಗುಣಿ ನಕ್ಷತ್ರ:- ಪಾಲ್ಗುಣಿ ನಕ್ಷತದವರು ತಮ್ಮ ಮಕ್ಕಳಿಂದ ಜೀವನದಲ್ಲಿ ಸಂತೋಷ ಕಾಣುತ್ತಾರೆ ಮಕ್ಕಳು ಇವರನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ.
* ಚಿತ್ತಾ ನಕ್ಷತ್ರ:- ಚಿತ್ತ ನಕ್ಷತ್ರದಲ್ಲಿ ಜನಿಸಿದವರು ಬಹಳ ಬುದ್ಧಿವಂತರಾಗಿರುತ್ತಾರೆ, ಇವರದು ಚಿಕ್ಕದಾದ ಚೊಕ್ಕದಾದ ಸಂಸಾರವಾಗಿರುತ್ತದೆ.

* ಸ್ವಾತಿ ನಕ್ಷತ್ರ:- ಸ್ವಾತಿ ನಕ್ಷತ್ರದವರು ಬಹಳ ಅದೃಷ್ಟ ಶಾಲಿಗಳಾಗಿರುತ್ತಾರೆ. ಇವರು ಸಹ ಗಂಡ ಹೆಂಡತಿ ಹೆಚ್ಚು ಅನ್ಯೋನ್ಯವಾಗಿರುತ್ತಾರೆ.
* ವಿಶಾಖ ನಕ್ಷತ್ರ:- ವಿಶಾಖ ನಕ್ಷತ್ರದವರ ಸಂಸಾರದ ಮೇಲೆ ಎಲ್ಲರ ದೃಷ್ಟಿ ಬೀಳುತ್ತದೆ ಯಾಕೆಂದರೆ ಇವರು ಅಷ್ಟು ಅನ್ಯೋನ್ಯವಾಗಿರುತ್ತಾರೆ ಎಲ್ಲರೂ ಇಷ್ಟಪಡುವ ರೀತಿ ಕುಟುಂಬವನ್ನು ಪಡೆಯುತ್ತಾರೆ.

* ಅನುರಾಧ ನಕ್ಷತ್ರ:- ಈ ನಕ್ಷತ್ರದವರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚು, ಇದರಿಂದ ಕುಟುಂಬ ಸ್ವಲ್ಪ ನೋವಿನಲ್ಲಿ ಇರುತ್ತದೆ.
* ಜೇಷ್ಠ ನಕ್ಷತ್ರ:- ಜೇಷ್ಠ ನಕ್ಷತ್ರದವರು ಹೆಚ್ಚು ಹಣಕಾಸು ನ’ಷ್ಟ ಅನುಭವಿಸುವುದರಿಂದ ಇದೇ ಕಾರಣಕ್ಕಾಗಿ ಸಂಸಾರದಲ್ಲಿ ಕಲಹಗಳು ಆಗುತ್ತಿರುತ್ತವೆ.
* ಮೂಲ ನಕ್ಷತ್ರ:- ಮೂಲ ನಕ್ಷತ್ರ ಐಶ್ವರ್ಯವಂತರಾಗಿರುತ್ತಾರೆ, ಇವರಿಗೆ ಒಳ್ಳೆಯ ಗುಣಗಳುಳ್ಳ ಸಂಗಾತಿ ಸಿಗುತ್ತಾರೆ.

* ಪೂರ್ವಾಷಾಡ ನಕ್ಷತ್ರ:- ಈ ನಕ್ಷತ್ರದವರಿಗೆ ಸಮಸ್ಯೆಗಳು ಹೆಚ್ಚು, ಆದರೂ ಕೂಡ ಕುಟುಂಬದ ಬೆಂಬಲ ಇರುತ್ತದೆ
* ಉತ್ತರಾಷಾಡ ನಕ್ಷತ್ರ:- ಉತ್ತರಾಷಾಢ ನಕ್ಷತ್ರದವರು ಸಂತೋಷದ ಜೀವನ ನಡೆಸುತ್ತಾರೆ, ಒಳ್ಳೆಯ ಕುಟುಂಬ ಪಡೆಯುತ್ತಾರೆ.
* ರೇವತಿ ನಕ್ಷತ್ರ:- ರೇವತಿ ನಕ್ಷತ್ರದವರ ಜೀವನ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯಿಂದ ಕೂಡಿರುತ್ತದೆ.

* ಶ್ರವಣ ನಕ್ಷತ್ರ:- ಶ್ರವಣ ನಕ್ಷತ್ರದವರಿಗೆ ಕಲೆಯಲ್ಲಿ ಆಸಕ್ತಿ ಇರುತ್ತದೆ, ಆದೇ ರೀತಿ ಕುಟುಂಬದಲ್ಲಿ ಬೆಂಬಲ ಸಿಗುತ್ತದೆ.
* ಶತಬಿಷಾ ನಕ್ಷತ್ರ:- ಶತಭಿಷ ನಕ್ಷತ್ರದವರಿಗೆ ಸಿಟ್ಟು ಹೆಚ್ಚಾಗಿರುವುದರಿಂದ ಇದು ಸಂಸಾರ ಜೀವನವನ್ನು ಹಾಳು ಮಾಡಬಹುದು.
* ಧನಿಷ್ಠ ನಕ್ಷತ್ರ:- ಧನಿಷ್ಠ ನಕ್ಷತ್ರ ಸುಂದರವಾಗಿರುತ್ತಾರೆ ಹಾಗೂ ಬುದ್ಧಿವಂತರಾಗಿರುತ್ತಾರೆ, ಸಂಸಾರವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.

* ಉತ್ತರಭಾದ್ರ ನಕ್ಷತ್ರ:- ಇವರು ತುಂಬಾ ನೇರವಂತಿಗೆ ಗುಣ ಹೊಂದಿರುತ್ತಾರೆ, ಅದೇ ರೀತಿ ಪ್ರಾಮಾಣಿಕವಾಗಿ ಇರುತ್ತಾರೆ. ಕುಟುಂಬವನ್ನು ಕೂಡ ಬಹಳ ಶಿಸ್ತಿನಿಂದ ನೋಡಿಕೊಳ್ಳುತ್ತಾರೆ.
* ಪೂರ್ವ ಭಾದ್ರಪದ ನಕ್ಷತ್ರ:- ಇವರ ಸಂಸಾರ ಜೀವನ ಆದರ್ಶಮಯವಾಗಿರುತ್ತದೆ. ಇವರಿಗೆ ಎಲ್ಲ ರೀತಿಯ ಸಂತೋಷಗಳೂ ಕೂಡ ಸಿಗುತ್ತದೆ.

https://youtu.be/Cc39XSz1TR0?si=aHpD1uFfQUYtO8ib

ಡಿಸೆಂಬರ್ 29 ವರ್ಷದ ಕೊನೆಯ ಪುಷ್ಯ ನಕ್ಷತ್ರದ ದಿನ, ಅಂದು ಈ ಒಂದು ವಸ್ತುವನ್ನು ಬೀರುವಿನ ಕೆಳಗೆ ಇಡಿ, ವರ್ಷವಿಡೀ ಹಣದ ಹೊಳೆಯೇ ಹರಿದು ಬರುತ್ತದೆ.!

ಎಲ್ಲರಿಗೂ ಕೂಡ ಹೆಚ್ಚು ಹಣ ಪಡೆಯಬೇಕು, ಅದರಿಂದ ಜೀವನದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಂಡು ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಬದುಕಬೇಕು, ಯಾವುದಕ್ಕೂ ಕೊರತೆ ಇರದ ಲಕ್ಸುರಿ ಜೀವನ ನಡೆಸಬೇಕು ಎನ್ನುವ ಆಸೆ ಇರುತ್ತದೆ. ಹೀಗಾಗಬೇಕು ಎಂದರೆ ಹಣ ಮುಖ್ಯ ಹಣದ ಗುಣವೇನೆಂದರೆ ಇದು ಒಮ್ಮೆ ಆಕರ್ಷಣೆಯಾದರೆ ರಾಶಿ ರಾಶಿ ಹಣವನ್ನು ತನ್ನತ್ತ ಸೆಳೆಯುತ್ತದೆ ಹಾಗಾಗಿ ಹಣ ಇರುವವರ ಕಡೆಗೆ ಹಣ ಹರಿಯುತ್ತದೆ.

ಯಾವ ರೀತಿ ನಾವು ನಮಗೆ ಹಣದ ಕೊರತೆ ಆಗದಂತೆ ನೋಡಿಕೊಳ್ಳಬೇಕು ಮ, ಹೇಗೆ ನಮ್ಮಲ್ಲಿರುವ ಹಣವನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವುದಕ್ಕೆ ಕೆಲವು ಉಪಾಯಗಳು ಇದೆ. ಶುಭದಿನಗಳಲ್ಲಿ ಈ ವಿಶೇಷ ಆಚರಣೆ ಮಾಡುವುದರಿಂದ ಇಂತಹ ಉತ್ತಮ ಫಲಗಳನ್ನು ಪಡೆಯಬಹುದು ಈಗ ಅದಕ್ಕೆ ಸಮಯ ಬಂದಿದೆ ಡಿಸೆಂಬರ್ 29 ಈ ವರ್ಷದ ಕೊನೆಯ ಪುಷ್ಯ ನಕ್ಷತ್ರದ ದಿನವಾಗಿದೆ.

ಈ ದಿನ ಹಣದ ಆಕರ್ಷಣೆ ಹೆಚ್ಚಿಸಿಕೊಳ್ಳಲು ಉಪಾಯ ಮಾಡುವುದಕ್ಕೆ ಬಹಳ ಶಕ್ತಿಶಾಲಿ ದಿನವಾಗಿದೆ. ಈ ದಿನದಂದು ನಾವು ಹೇಳುವ ಈ ಸರಳ ಉಪಾಯವನ್ನೇನಾದರೂ ನೀವು ಮಾಡಿದರೆ ನಿಮ್ಮ ಜೀವಮಾನದಲ್ಲಿ ನಿಮಗೆ ಎಂದೂ ಹಣದ ಸಮಸ್ಯೆ ಬರುವುದಿಲ್ಲ, ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ, ಎಲ್ಲಿಯಾದರೂ ಹಣ ಹಾಕಿ ಸಿಕ್ಕಿ ಹಾಕಿಕೊಂಡಿದ್ದರೆ ಅವರೇ ಬಂದು ಹಣ ಕೊಡುತ್ತಾರೆ.

ಮನೆ ಮಾಡುವುದು ಆಸ್ತಿ ಖರೀದಿ ಅರ್ಧಕ್ಕೆ ನಿಂತಿದ್ದರೆ ಅದು ಮುಂದಕ್ಕೆ ನಡೆಯುತ್ತದೆ, ನಿಮಗೆ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಆಗುತ್ತದೆ ಈ ರೀತಿ ನೂರಾರು ಆದಾಯದ ಮೂಲಗಳು ನಿಮಗೆ ಸೃಷ್ಟಿಯಾಗುತ್ತವೆ. ಇದನ್ನು ಬಹಳ ಸರಳವಾಗಿ ಮಾಡಬಹುದು ಮನೆಯಲ್ಲಿರುವ ಗೃಹಿಣೀರು ಸಾಧ್ಯವಾಗದೇ ಇದ್ದರೆ ಮನೆಯಲ್ಲಿರುವ ಯಾವುದೇ ಸದಸ್ಯ ಬೇಕಾದರೂ ಮಾಡಬಹುದು.

ಈ ತಂತ್ರವನ್ನು ಆರಂಭಿಸಲು ಪುಷ್ಯ ನಕ್ಷತ್ರ ಅತ್ಯಂತ ಶುಭ ದಿನವಾಗಿದೆ, ಈ ದಿನ ಆರಂಭಿಸಿ ಮುಂದುವರೆಸಿಕೊಂಡು ಹೋಗಿ. ಅಂತೆಯೇ ಈ ವರ್ಷದ ಕೊನೆಯ ಪುಷ್ಯ ನಕ್ಷತ್ರವು ಡಿಸೆಂಬರ್ 29 ಶುಕ್ರವಾರ ಇದೆ. ಬೆಳಿಗ್ಗೆ 5.30 ರಿಂದ 10.10ರ ಒಳಗೆ ಈ ಆಚರಣೆಯನ್ನು ಮಾಡಬೇಕು.

ಆ ದಿನ ಬೆಳಗ್ಗೆ ನಿಮ್ಮ ಮನೆ ದೇವರ ಹಾಗೂ ಇಷ್ಟ ದೇವರನ್ನು ಪೂಜಿಸಿದ ಮೇಲೆ ಒಂದು ಗಾಜಿನ ಬಟ್ಟಲ ತುಂಬಾ ಉಪ್ಪನ್ನು ತೆಗೆದುಕೊಂಡು ಅದರ ಮೇಲೆ ಆರರಿಂದ ಏಳು ಲವಂಗವನ್ನು ಹಾಕಿ ದೇವರ ಬಳಿ ಇಟ್ಟು ಭಕ್ತಿಯಿಂದ ಬೇಡಿಕೊಂಡು ಪಾಸಿಟಿವ್ ಆಗಿ ಅಫರ್ಮೇಷನ್ ಮಾಡಿಕೊಳ್ಳಬೇಕು.

ನಮಗೆ ಹಣದ ಹರಿವು ಹೆಚ್ಚಾಗಿದೆ ನಮ್ಮ ಬಳಿ ಹಣ ತೆಗೆದುಕೊಂಡು ಹೋದವರು ವಾಪಸ್ ಕೊಟ್ಟಿದ್ದಾರೆ, ನಮ್ಮ ಬಿಸಿನೆಸ್ ಇಂಪ್ರೂ ಆಗಿದೆ ಈ ರೀತಿ ಹೇಳಿಕೊಂಡು ನಂತರ ಅದನ್ನು ಹಣ ಇಡುವ ಬೀರುವಿನ ಕೆಳಗೆ ಯಾರಿಗೂ ಕಾಣದ ರೀತಿ ಇಡಬೇಕು. 15 ದಿನಕ್ಕೊಮ್ಮೆ ಇದನ್ನು ಚೇಂಜ್ ಮಾಡಬೇಕು.

ಇದನ್ನು ತೆಗೆದುಕೊಂಡು ಉಪ್ಪನ್ನು ನೀರಿನಲ್ಲಿ ಕರಗಿಸಿ ಗಿಡಗಳಿಗೆ ಹಾಕಬೇಕು, ಯಾರು ತುಳಿಯದ ಜಾಗದಲ್ಲಿ ಹಾಕಬೇಕು ಅಥವಾ ಗಿಡದ ಬುಡಕ್ಕೆ ಹಾಕಬಹುದು. ಮತ್ತೆ ಹೊಸದಾಗಿ ಬೇರೆ ಉಪ್ಪು ತೆಗೆದುಕೊಂಡು ಅದೇ ರೀತಿ ಪಾಸಿಟಿವ್ ಅಫರ್ಮೇಷನ್ ಮಾಡಿ ಇಡಬೇಕು ಈ ರೀತಿ ಮಾಡುವುದರಿಂದ ನೀವು ಆಶ್ಚರ್ಯ ಪಡುವ ರೀತಿಯಲ್ಲಿ ಬಹಳ ಉತ್ತಮವಾದ ಪರಿಣಾಮಗಳು ಉಂಟಾಗುತ್ತವೆ. ತಪ್ಪದೇ ಈ ದಿನ ಇದನ್ನು ಮಾಡಿ.

ಮಿಥುನ ರಾಶಿಯವರ ವರ್ಷ ಭವಿಷ್ಯ.! 2024 ಹೇಗಿರಲಿದೆ ಗೊತ್ತಾ.?

0

 

2023 ಮುಗಿದು 2024ನೇ ವರ್ಷವನ್ನು ಆರಂಭಿಸಲು ನಾವು ತಯಾರಾಗಿದ್ದೇವೆ. ಈಗಾಗಲೇ ಎಲ್ಲೆಡೆ ಹೊಸ ವರ್ಷವನ್ನು ಬರಮಾಡಿಕೊಳ್ಳುವುದಕ್ಕೆ ಸಿದ್ಧತೆಗಳು ಆರಂಭವಾಗಿ ಎಲ್ಲ ಮನೆಮನಗಳು ತಯಾರಾಗಿದೆ ಹೊಸ ವರ್ಷದಲ್ಲಿ ಸಹಜವಾಗಿ ಭವಿಷ್ಯ ಹೇಗಿರುತ್ತೆ ಎನ್ನುವ ಕುತೂಹಲವೂ ಕೂಡ ಉಂಟಾಗುತ್ತದೆ.

ಆ ಪ್ರಕಾರವಾಗಿ ದ್ವಾದಶ ರಾಶಿಯಲ್ಲಿ ಮಿಥುನ ರಾಶಿಯ ವರ್ಷ ಭವಿಷ್ಯ ಹೇಗಿದೆ? ಮಿಥುನ ರಾಶಿಯವರು ಈ ವರ್ಷದಲ್ಲಿ ಯಾವ ಕೆಲಸ ಕಾರ್ಯಗಳನ್ನು ಕೈಗೊಂಡರೆ ಲಾಭವಾಗುತ್ತದೆ ಮತ್ತು ಯಾವುದು ಅವರಿಗೆ ಸಮಸ್ಯೆಯುಂಟು ಮಾಡುವಂತಹ ಪರಿಸ್ಥಿತಿಗಳಾಗಿವೆ.

ಇದರ ಪರಿಹಾರಕ್ಕಾಗಿ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಕೆಲವು ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ತಪ್ಪದೆ ಈ ಮಾಹಿತಿಯನ್ನು ಮಿಥುನ ರಾಶಿಯ ಸ್ನೇಹಿತರೊಡನೆ ಹಾಗೂ ಬಂಧು ಬಾಂಧವರ ಜೊತೆ ಹಂಚಿಕೊಳ್ಳಿ.

ಮಿಥುನ ರಾಶಿಯವರಿಗೆ ಮೇ ತಿಂಗಳವರೆಗೆ ಗುರುಬಲ ಚೆನ್ನಾಗಿದೆ. ಈ ಕಾರಣಕ್ಕಾಗಿ ಅವರು ಮುಟ್ಟಿದೆಲ್ಲಾ ಚಿನ್ನವಾಗುತ್ತದೆ, ಹೊಸ ಮನೆ ಕಟ್ಟಲು ಶುರು ಮಾಡಬಹುದು ಅಥವಾ ಹೊಸ ವ್ಯಾಪಾರ ವ್ಯವಹಾರ ಆರಂಭ ಮಾಡಬಹುದು. ಹಣಕಾಸಿನ ಪರಿಸ್ಥಿತಿಯು ಕೂಡ ಉತ್ತಮವಾಗಿರುತ್ತದೆ ಅಂದುಕೊಂಡಂತೆ ಕೆಲಸ ಕಾರ್ಯಗಳಲ್ಲೂ ಕೂಡ ಜಯ ಪಡೆಯುತ್ತಾರೆ.

2024ರ ಪೂರ್ವ ಭಾಗ ಅವರಿಗೆ ಅತ್ಯಂತ ಉತ್ತಮ ಫಲಗಳನ್ನು ಕೊಡುತ್ತದೆ ಆದರೆ ಗುರುವು 12ನೇ ಸ್ಥಾನಕ್ಕೆ ಬರುವುದರಿಂದ ಇದು ಗುರುವಿನ ವ್ಯಯಸ್ಥಾನವಾಗಿ ಇದಕ್ಕೆ ವಿರುದ್ಧ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಅವರು ವರ್ಷದ ಆರಂಭದಲ್ಲಿ ಹಸು ತಂದಿದ್ದರೆ ಮೇ ತಿಂಗಳ ನಂತರ ಹಸುವಿನ ಆರೋಗ್ಯ ಹದಗೆಡುವುದು ಅಥವಾ ಅದು ನಿರೀಕ್ಷೆ ಮಟ್ಟದಲ್ಲಿ ಫಲ ಕೊಡದೆ ಇರುವುದು ಇಂತಹ ನ’ಷ್ಟಗಳು ಬರುತ್ತವೆ, ಆರಂಭದಲ್ಲಿ ಚೆನ್ನಾಗಿ ನಡೆಯುತ್ತಿದ್ದ ವ್ಯವಹಾರವು ಅರ್ಧ ವರ್ಷ ಆದನಂತರ ಕುಸಿಯುತ್ತದೆ.

ಹಾಗಾಗಿ ಮೇ ತಿಂಗಳ ನಂತರ ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಾರೆ ಇಂತಹ ಸಂದರ್ಭದಲ್ಲಿ ಯಾವುದೇ ಹೊಸ ಯೋಜನೆಗಳನ್ನು ಕೈಗೊಳ್ಳದೆ ಇರುವುದು ಹೊಸ ವ್ಯವಹಾರಕ್ಕೆ ಕೈ ಹಾಕದೆ ಇರುವುದು ಒಳ್ಳೆಯದು. ಮೇತಿಂಗಳ ನವರೆಗೆ ಅತ್ಯಂತ ಲಾಭದಾಯಕವಾಗಿದ್ದ ಇವರ ವ್ಯಾಪಾರ ವಹಿವಾಟು ಕೃಷಿ ನಂತರ ಕ್ರಮೇಣವಾಗಿ ಕ್ಷೀಣಿಸುತ್ತಾ ಹೋಗುತ್ತದೆ.

ಹಾಗಾಗಿ ನಂತರದ ದಿನಗಳಲ್ಲಿ ಹಣಕಾಸಿನ ವಹಿವಾಟಿನಲ್ಲಿ ಎಚ್ಚರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಈ ಎಲ್ಲ ವಿಚಾರಗಳು ಅವರನ್ನು ಮಾನಸಿಕವಾಗಿ ಕುಗ್ಗಿಸಿ ಇದರ ಪರಿಣಾಮ ಸಂಸಾರ ಜೀವನದಲ್ಲಿ ಕೂಡ ಬೀಳುತ್ತದೆ. ಮನೆಯಲ್ಲಿ ವಿನಾಕಾರಣ ಜಗಳ ಮನಸ್ತಾಪ ವೈ ಮನಸು ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇದನ್ನು ಅರ್ಥ ಮಾಡಿಕೊಂಡು ಸಮಯ ಸರಿ ಇಲ್ಲ ಎಂದು ನೀವೆ ಸುಮ್ಮನಾಗಿ ಪರಿಸ್ಥಿತಿಯನ್ನು ನಿಭಾಯಿಸಿ.

ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಮತ್ತು ಮಕ್ಕಳ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಳೆದುಕೊಂಡು ನೋವುಂಟು ಮಾಡಬಹುದು, ಹಾಗಾಗಿ ಮಕ್ಕಳ ಮೇಲೆ ನಿಗವಹಿಸಿ. ಈ ಎಲ್ಲಾ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಇದರಿಂದ ಪರಿಹಾರ ಕಂಡುಕೊಳ್ಳಲು ಶನಿ ದೇವರಿಗೆ ಎಳ್ಳೆಣ್ಣೆಯನ್ನು ಅರ್ಪಿಸಿ.

ಶನಿ ದೇವರಿಗೆ ನೀಲಿ ಬಣ್ಣದ ವಸ್ತುಗಳನ್ನು ಅರ್ಪಿಸುವುದರಿಂದ ನೀಲಿ ಪುಷ್ಪಗಳಿಂದ ಪೂಜೆ ಮಾಡುವುದರಿಂದ ಮನೆಯಲ್ಲಿ ಸ್ವಲ್ಪ ಸುಖ ಶಾಂತಿ ನೆಲೆಸುತ್ತದೆ. ಶನಿ ದೇವರ ಆಶೀರ್ವಾದ ನಿಮ್ಮ ಮೇಲೆ ಇರುವುದರಿಂದ ಹೆಚ್ಚಿನ ತೊಂದರೆಗಳಾಗುವುದಿಲ್ಲ. ಶನಿ ದೇವರ ಜೊತೆ ಸಂಕಷ್ಟಹರ ಗಣಪತಿ ಮತ್ತು ವೆಂಕಟರಮಣನನ್ನು ಕೂಡ ಆರಾಧಿಸಿ. ಈ ವರ್ಷ ಸಾಧ್ಯವಾದಷ್ಟು ಹಸಿರು ಬಣ್ಣವನ್ನು ಧರಿಸಿ ಮತ್ತು ಸಂಖ್ಯೆ 5 ಎನ್ನುವುದು ನಿಮಗೆ ಶುಭ ತಂದುಕೊಡುವ ಸಂಖ್ಯೆಯಾಗಿದೆ.

ಥೈರಾಯಿಡ್ ಶಾಶ್ವತವಾಗಿ ವಾಸಿಯಾಗಲು ಈ ಮನೆಮದ್ದನ್ನು ತಪ್ಪದೇ ಪಾಲಿಸಿ.!

 

ಇತ್ತೀಚಿನ ದಿನಗಳಲ್ಲಿ ಥೈರೊಯ್ಡ್ ಸಮಸ್ಯೆ ಎನ್ನುವುದು ಎಲ್ಲರನ್ನು ಕಾಡುತ್ತಿದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಸಮಸ್ಯೆ ಜಾಸ್ತಿ ಇದೆ. ಥೈರಾಯ್ಡ್ ಎನ್ನುವುದು ಕಾಯಿಲೆ ಎನ್ನುವುದಕ್ಕಿಂತ ಅದು ದೇಹದಲ್ಲಿ ಆರೋಗ್ಯ ಹದ ತಪ್ಪಿ ಆಗುವ ಡಿಸ್ಆರ್ಡರ್ ಎನ್ನಬಹುದು. ಥೈರಾಯ್ಡ್ ಆಗಿರುವಾಗ ಹಲವಾರು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ವೈದ್ಯರು ಇದಕ್ಕೆ ಸಂಬಂಧಿಸಿದ ಪರೀಕ್ಷೆ ಮಾಡಿ ದೃಡೀಕರಿಸುತ್ತಾರೆ.

ಕೆಲವೊಮ್ಮೆ ಇದು ಹೆಚ್ಚಿನ ಮಟ್ಟದಲ್ಲಿದ್ದಾಗ ಮಾತ್ರೆಗಳನ್ನು ಶುರು ಮಾಡುತ್ತಾರೆ ಆದರೆ ಇದು ಒಂದೆರಡು ದಿನಗಳಲ್ಲಿ ಮಾತ್ರೆ ತೆಗೆದುಕೊಂಡರೆ ಗುಣವಾಗುವ ಸಮಸ್ಯೆ ಅಲ್ಲ ತಿಂಗಳುಗಟ್ಟಲೇ ಕೆಲವೊಮ್ಮೆ ವರ್ಷಗಟ್ಟಲೇ ಮಾತ್ರೆಗಳನ್ನು ಸೇವಿಸಬೇಕು. ಆದರೆ ಇದ್ದಕ್ಕಿದ್ದಂತೆ ಕಡಿಮೆ ಕೂಡ ಆಗುತ್ತದೆ ಆಗ ಟೆಸ್ಟ್ ಮಾಡಿಸಿ ಡೋಸೆಜ್ ಕಡಿಮೆ ಮಾಡಿಕೊಳ್ಳಬೇಕು.

ಆಗಾಗ ಟೆಸ್ಟ್ ಮಾಡಿಸಿಕೊಳ್ಳದೆ ಒಂದೇ ಸಮನೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಅದು ಕೂಡ ತಪ್ಪು ಥೈರಾಯ್ಡ್ ಬರಬಾರದು ಎಂದರೆ ನಾವು ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು ಹಾಗೂ ಆರೋಗ್ಯಕರವಾದ ಆಹಾರ ಪದಾರ್ಥಗಳನ್ನು ತಿನ್ನಬೇಕು. ಅತಿಯಾದ ಕರಿದ ಪದಾರ್ಥಗಳ ಸೇವನೆ, ಜಂಕ್ ಫುಡ್ಗಳ ಸೇವನೆ, ಬೇಕರಿ ಪದಾರ್ಥಗಳ ಸೇವನೆ ಇವುಗಳನ್ನು ಸಂಪೂರ್ಣವಾಗಿ ಬಿಡಬೇಕು.

ಬೇಗ ಮಲಗುವುದು, ಬೇಗ ಏಳುವುದು ಸಮಯಕ್ಕೆ ಸರಿಯಾಗಿ ಊಟ ಮಾಡಿ ಊಟ ಆದ ಎರಡು ತಾಸಿನಲ್ಲಿ ಮಲಗುವುದು, ಊಟದಲ್ಲಿ ಸೊಪ್ಪು ತರಕಾರಿ ಹಣ್ಣುಗಳು ಹೆಚ್ಚಿಗೆ ಮಾಡುವುದು, ಕೆಟ್ಟ ಕೊಲೆಸ್ಟ್ರಾಲ್ ಬದಲು ತುಪ್ಪ ಬೆಣ್ಣೆಯಂತಹ ಒಳ್ಳೆಯ ಕೊಲೆಸ್ಟ್ರಾಲ್ ತಿನ್ನುವುದು ಫ್ಯಾಟ್ ಕಡಿಮೆ ಮಾಡಿಕೊಳ್ಳುವುದು ಇವುಗಳು ಥೈರಾಯ್ಡ್ ಬರದಂತೆ ತಡೆಯಲು ಹಾಗೂ ಥೈರಾಯಿಡ್ ಇರುವುದನ್ನು ಗುಣಪಡಿಸಲು ಇರುವ ಮಾರ್ಗ ಆಗಿದೆ.

ಇದರ ಜೊತೆಗೆ ಥೈರಾಯ್ಡ್ ಈಗಾಗಲೇ ಬಂದಿದ್ದರೆ ಅದನ್ನು ನ್ಯಾಚುರಲ್ ಆಗಿ ಕ್ಲಿಯರ್ ಮಾಡಿಕೊಳ್ಳಲು ಕನಿಷ್ಠ ಆರು ತಿಂಗಳೇ ಬೇಕು ಈ ಸಮಯದಲ್ಲಿ ನಾವು ಹೇಳುವ ಇಂತಹ ಮನೆ ಮದ್ದುಗಳನ್ನು ಮಾಡಿದರೆ ಇದಕ್ಕಿಂತಲೂ ಬೇಗನೆ ಕಂಟ್ರೋಲ್ ಗೆ ಬರುತ್ತದೆ.

* ಪ್ರತಿದಿನವೂ ಕೂಡ ಇವರು ನಿಂಬೆಹಣ್ಣಿನ ಪಾನಕವನ್ನು ಸೇವಿಸಬೇಕು
* ನೆಲ್ಲಿಕಾಯಿ, ನಿಂಬೆ ರಸ ಹಾಗೂ ಸೈಂಧವ ಲವಣ ಹಾಕಿ ಜ್ಯೂಸ್ ಮಾಡಿ ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಲು ಸಾಧ್ಯವಾಗದೇ ಇದ್ದರೆ ಬೆಳಗ್ಗೆ ಹಾಗೂ ರಾತ್ರಿ ಊಟ ಆದ ನಂತರ ಸೇವಿಸಬೇಕು
* ನೆಲ್ಲಿಕಾಯಿ ಅಗಸೆ ಬೀಜ ಹಾಗೂ ಒಣಶುಂಟಿ, ಟಮೋಟೊ ಹಾಕಿ ಜ್ಯೂಸ್ ಮಾಡಿ ಕೂಡ ಕುಡಿಯಬಹುದು

* ಒಂದು ಹಿಡಿ ಪಾಲಕ್, ಕ್ಯಾರೆಟ್ ಮತ್ತು ಅರ್ಥ ಹೋಳು ನಿಂಬೆ ರಸದಿಂದ ಜ್ಯೂಸ್ ಮಾಡಿ ಕೂಡ ಕುಡಿಯಬಹುದು. ಅಥವಾ ಸಲಾಡ್ ಮಾಡಿ ಕೂಡ ತೆಗೆದುಕೊಳ್ಳಬಹುದು
* ಲಾವಂಚದ ಪುಡಿ, ಶತಾವರಿ ಪುಡಿ, ಹರಿತಕಿ ಚೂರ್ಣ ಇವೆಲ್ಲವನ್ನೂ ತಲಾ ಒಂದೊಂದು ಚಮಚ ತೆಗೆದುಕೊಂಡು200ml ನೀರಿಗೆ ಹಾಕಿ 100ml ಬರುವವರೆಗೂ ಚೆನ್ನಾಗಿ ಕುದಿಸಿ ಶೋಧಿಸಿ ಕುಡಿಯಬೇಕು

* ಉದ್ದದ ಕಾಟನ್ ಬಟ್ಟೆ ತೆಗೆದುಕೊಂಡು ಅದನ್ನು ನೀರಿನಲ್ಲಿ ಆದ್ದಿ ಕತ್ತಿನ ಸುತ್ತ ಸುತ್ತಿಕೊಂಡು ಮತ್ತು ಅದರ ಮೇಲೆ ಉಲ್ಲನ್ ಒಣ ಬಟ್ಟೆ ಕೂಡ ಸುತ್ತಿಪ್ಯಾಕ್ ಹಾಕಬೇಕು. ಈ ರೀತಿ ಮಾಡುವುದರಿಂದ ಕೂಡ ಥೈರಾಯಿಡ್ ಕಂಟ್ರೋಲ್ ಗೆ ಬರುತ್ತದೆ
* ಕುತ್ತಿಗೆಯ ಥೈರೊಯ್ಡ್ ಭಾಗದಲ್ಲಿ ಥೈರಾಯಿಡ್ ಮ್ಯಾಗ್ನೆಟ್ ಇಟ್ಟುಕೊಳ್ಳುವುದರಿಂದ ರಕ್ತ ಸಂಚಾರ ನಾರ್ಮಲ್ ಆಗಿ ಕೂಡ ಥೈರಾಯ್ಡ್ ಕಂಟ್ರೋಲ್ ಗೆ ಬರುತ್ತದೆ.

* ದೇಹ ಶುದ್ದಿ ಮಾಡಿಕೊಳ್ಳುವುದರಿಂದ ಕೂಡ ಥೈರಾಯಿಡ್ ನಿಯಂತ್ರಣಕ್ಕೆ ಬರುತ್ತದೆ ಆಯುರ್ವೇದದ ಪಂಚ ಕರ್ಮ ಚಿಕಿತ್ಸೆ ಅಥವಾ ಪ್ರಕೃತಿ ಚಿಕಿತ್ಸೆ, ಮಸಾಜ್, ಸ್ಟ್ರೀಮಿಂಗ್ ತೆಗೆದುಕೊಳ್ಳುವುದು ಇದೆಲ್ಲವೂ ಬಾಡಿ ಟಾಕ್ಸಿನ್ ಅಂಶವನ್ನು ಹೊರಹಾಕಿ ಹಾರ್ಮೋನ್ ಇಂಬ್ಯಾಲೆನ್ಸ್ ನಾರ್ಮಲ್ ಮಾಡುತ್ತವೆ. ಥೈರಾಯಿಡ್ ನಿಂದ ಆಗುವ ಬೊಜ್ಜು ಕೂಡ ಇದರಿಂದ ಕಡಿಮೆ ಆಗುತ್ತದೆ.

* ಇದರೊಂದಿಗೆ ದಿನಾಚರ್ಯನ್ನು ಸರಿಯಾದ ಕ್ರಮದಲ್ಲಿ ರೂಢಿಸಿಕೊಳ್ಳುವುದು ಕೂಡ ಸಹಕಾರಿ ಆಗುತ್ತದೆ. ಪ್ರತಿ ದಿನ ವ್ಯಾಯಾಮ, ಯೋಗ, ಧ್ಯಾನ ಮಾಡುವುದು ಕೂಡ ಥೈರಾಯ್ಡ್ ಕಂಟ್ರೋಲ್ ಗೆ ಅನುಕೂಲ ಮಾಡಿಕೊಡುತ್ತದೆ.

https://youtu.be/CjVwoDnpsFw?si=EByToJTXTl-yp0eg