Home Blog Page 91

ಈ ನಂಬರ್ ಒಮ್ಮೆ ಬರೆದು ನಿಮ್ಮ ಪಾಕೆಟ್ ನಲ್ಲಿ ಇಟ್ಟುಕೊಳ್ಳಿ, 4 ದಿಕ್ಕಿನಿಂದಲೂ ದುಡ್ಡು ಬಂದು ಸೇರುತ್ತದೆ.! ಪರೀಕ್ಷೆ ಮಾಡಿ ನೋಡಿ.!

 

ದುಡ್ಡು ಎನ್ನುವುದು ಜೀವನದ ಅತ್ಯಾವಶ್ಯಕತೆಯ ವಸ್ತು. ಪ್ರತಿಯೊಬ್ಬರೂ ಕೂಡ ತಾವು ಹೆಚ್ಚು ದುಡ್ಡು ಸಂಪಾದನೆ ಮಾಡಬೇಕು, ತಾವು ಅಂದುಕೊಂಡ ರೀತಿ ಚೆನ್ನಾಗಿ ಬದುಕಬೇಕು, ಶ್ರೀಮಂತಿಕೆ ಅನುಭವಿಸಬೇಕು ಎನ್ನುವ ಆಸೆ ಇರುತ್ತದೆ. ಆದರೆ ಎಲ್ಲರಿಗೂ ಕೂಡ ದುಡ್ಡು ಒಂದೇ ರೀತಿಯಾಗಿ ಹಂಚಿಕೆಯಾಗಿಲ್ಲ ಕೆಲವರು ಹುಟ್ಟಿನಿಂದಲೇ ಪುಣ್ಯವಂತರಾಗಿರುತ್ತಾರೆ.

ಆ ಕಾರಣ ಶ್ರೀಮಂತರ ಮನೆಯಲ್ಲಿ ಹುಟ್ಟಿ ಐಶ್ವರ್ಯವನ್ನು ಅನುಭವಿಸುತ್ತಾರೆ, ಹಾಗೆಯೇ ಕೆಲವರಿಗೆ ಮದುವೆ ನಂತರ ಅಂತಹ ಯೋಗ ಬರುತ್ತದೆ, ಶ್ರೀಮಂತರ ಮನೆಗೆ ಮದುವೆ ಆಗುತ್ತಾರೆ. ಇನ್ನು ಕೆಲವರು ತಾವೇ ದುಡಿದು ಶ್ರೀಮಂತಿಕೆ ಪಡೆಯುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಹಗಲು ರಾತ್ರಿ ಎನ್ನದೇ ಸಮಯ ಮತ್ತು ಬಂಡವಾಳ ಹಾಕಿ ಹಣ ಸಂಪಾದಿಸುತ್ತಾರೆ.

ಈ ರೀತಿ ನಾವು ಮನಸ್ಸು ಮಾಡಿ ಕ’ಷ್ಟಪಟ್ಟರೆ ಅಸಾಧ್ಯವಾದದ್ದು ಯಾವುದು ಇಲ್ಲ. ನಮ್ಮ ಹುಟ್ಟು ನಮ್ಮ ಕೈಲಿ ಇರಲಿಲ್ಲ ಹಾಗಾಗಿ ಬಡತನದಲ್ಲಿ ನಾವು ಹುಟ್ಟಿರಬಹುದು ಆದರೆ ಅದನ್ನು ಬದಲಾಯಿಸಿಕೊಂಡು ಶ್ರೀಮಂತರಾಗಿ ಬದುಕುವ ಸಂಪೂರ್ಣ ಅವಕಾಶ ನಮ್ಮ ಕೈಯಲ್ಲಿ ಇರುತ್ತದೆ.

ಅದಕ್ಕೆ ತಕ್ಕ ಹಾಗೆ ನಾವು ಬದುಕಿನಲ್ಲಿ ಕೆಲ ಮಾರ್ಪಾಡುಗಳನ್ನು ಮಾಡುತ್ತಾ ಬೆಳೆಯುತ್ತಾ ಹೋಗಬೇಕು ಜೀವನದಲ್ಲಿ ಈ ರೀತಿ ಶ್ರೀಮಂತರಾಗಬೇಕು ಎಂದರೆ ನಮ್ಮ ಗುರಿ ಸ್ಪಷ್ಟವಾಗಿರಬೇಕು ಒಮ್ಮೆ ನಮ್ಮ ಕಡೆಗೆ ಹಣದ ಆಕರ್ಷಣೆ ಆದರೆ ಅದು ನಂತರ ನದಿಯ ರೀತಿ ಹರಿದು ಬರುತ್ತದೆ ಹಾಗಾಗಿ ದುಡ್ಡು ಇರುವ ಕಡೆಗೆ ದುಡ್ಡು ಸೇರುವುದು.

ಈ ರೀತಿ ಬಂದ ದುಡ್ಡನ್ನು ಜೋಪಾನವಾಗಿ ಇಟ್ಟುಕೊಂಡು ಹೆಚ್ಚು ಹಣಾಕರ್ಷಣೆ ಬರುವಂತೆ ಮಾಡಿಕೊಳ್ಳಲು ನಮ್ಮ ಬುದ್ಧಿವಂತಿಕೆ ಅದೃಷ್ಟದ ಜೊತೆಗೆ ಕೆಲವೊಂದು ತಂತ್ರಗಳನ್ನು ಕೂಡ ಮಾಡಬೇಕಾಗುತ್ತದೆ. ಅಂತಹದೊಂದು ತಂತ್ರದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ನಂಬಿಕೆಯಿಂದ ನೀವು ಈ ಒಂದು ಚಟುವಟಿಕೆ ಮಾಡಿದರೆ ಸಾಕು ನಿಮ್ಮ ಕಡೆಗೆ ಹಣದ ಆಕರ್ಷಣೆ ಆಗುತ್ತದೆ. ನಿಮ್ಮ ಬಳಿ ಇರುವ ಹಣ ದುಪ್ಪಟ್ಟಾಗುತ್ತದೆ ಅಥವಾ ನಿಮಗೆ ಯಾರಿಂದಲೋ ಹಣ ಬರಬೇಕಾಗಿ ಸಮಸ್ಯೆಯಾಗಿದ್ದರೆ ಪರಿಹಾರವಾಗಿ ಅವರೇ ದುಡ್ಡು ತಂದುಕೊಡುತ್ತಾರೆ ಅಥವಾ ನಿಮ್ಮ ವ್ಯಾಪಾರ ವ್ಯವಹಾರ ಅಭಿವೃದ್ಧಿ ಆಗುತ್ತದೆ ನಿಮ್ಮ ಸಂಬಳಕ್ಕಿಂತ ಹೆಚ್ಚಿನ ಸಂಬಳ ಸಿಗುವ ಹುದ್ದೆಗೆ ನೀವು ಬಡ್ತಿ ಹೊಂದಿರುತ್ತೀರಿ ಈ ರೀತಿ ಬದಲಾವಣೆಗಳು ಉಂಟಾಗುತ್ತವೆ.

ಇದನ್ನು ಮಾಡುವುದು ಹೇಗೆ ಎಂದರೆ ನೀವು ಒಂದು ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಮಾಡಿ ಏಕಾಗ್ರತೆಯಿಂದ ದೇವರ ಕೋಣೆಯಲ್ಲಿ ಕುಳಿತುಕೊಂಡು ಒಂದು ಚೀಟಿ ತೆಗೆದುಕೊಳ್ಳಿ, ಆ ಚೀಟಿಯಲ್ಲಿ ಕೇಸರಿ ಬಣ್ಣದ ಮಾರ್ಕರ್ ಪೆನ್ನಿಂದ ಅಥವಾ ಕೇಸರಿ ಇಂಕಿನಲ್ಲಿ 8 8 8 ಎಂದು ಬರೆದು ಅದರ ಕೆಳಗೆ ನಿಮಗೆ ಯಾವ ಮೂಲದಿಂದ ಹಣ ಬರಬೇಕು ಎನ್ನುವ ನಿಮ್ಮ ಇಚ್ಛೆ ಬರೆದುಕೊಳ್ಳಿ.

ಉದಾಹರಣೆಗೆ ನಿಮ್ಮ ಕೆಲಸದಲ್ಲಿ ಪ್ರಮೋಷನ್ ಆಗಿ ಹೆಚ್ಚು ಸಂಬಳ ಬರಬೇಕು ಎಂದಿದ್ದರೆ ಅದನ್ನೇ ಒಂದು ಸಾಲಿನಲ್ಲಿ ಬರೆಯಿರಿ. ಈಗ ಅದನ್ನು ಮಡಚಿ ನಿಮ್ಮ ದೇವರು ಕೋಣೆಯಲ್ಲಿ ಬಿಟ್ಟು ದೇವರಿಗೆ ಪೂಜೆ ಮಾಡುವಾಗ ಇದಕ್ಕೂ ಕೂಡ ಪೂಜೆ ಮಾಡಿ ಮನಸಾರೆ ತಾಯಿ ಮಹಾಲಕ್ಷ್ಮಿ ಹಾಗೂ ನಿಮ್ಮ ಕುಲದೇವರು ಮತ್ತು ಇಷ್ಟ ದೇವರನ್ನು ಪ್ರಾರ್ಥಿಸಿ.

ನಿಮ್ಮ ಕೋರಿಕೆಯನ್ನು ಒಮ್ಮೆ ಯುನಿವರ್ಸಿಗೆ ಹೇಳಿ ಈಗ ಆ ಚೀಟಿಯನ್ನು ನಿಮ್ಮ ಪರ್ಸನಲ್ಲಿ ಇಟ್ಟುಕೊಳ್ಳಿ. ಪ್ರತಿ ವಾರ ಇದನ್ನು ಚೇಂಜ್ ಮಾಡಬೇಕು ಬದಲಿಸುವಾಗ ನಿಮ್ಮ ಬಳಿ ಇರುವ ಹಳೆ ಚೀಟಿಯನ್ನು ಹರಿಯುವ ನೀರಿಗೆ ಬಿಡಬೇಕು ಮತ್ತು ದಿನ ಬೆಳಗ್ಗೆ ಎದ್ದ ಕೂಡಲೇ ಈ ರೀತಿ ಬರೆದ ವಿಚಾರವನ್ನು ನೆನಪು ಮಾಡಿಕೊಂಡು ಮನಸಿನಲ್ಲಿ ಒಮ್ಮೆ 8 8 8 ಎಂದು ಹೇಳಿ ನೀವು ಬರೆದಿರುವ ಲೈನ್ ಅನ್ನು ಕೂಡ ಹೇಳಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಬಹಳ ಉತ್ತಮ ಬದಲಾವಣೆಗಳು ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಉಂಟಾಗುತ್ತವೆ. ಬೇಕಾದರೆ ಪರೀಕ್ಷೆ ಮಾಡಿ ನೋಡಿ.

ಈ ವ್ಯಾಯಮ ಮಾಡಿದ್ರೆ ಭುಜದ ನೋವು ಎಂದಿಗೂ ಬರಲ್ಲ.!

 

ಸಾಮಾನ್ಯವಾಗಿ 40 ರಿಂದ 60 ವರ್ಷದ ವಯೋಮಾನದಲ್ಲಿ ಭುಜದ ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿ ಭುಜದ ನೋವು ಬರಲು ಸಾಕಷ್ಟು ಕಾರಣಗಳಿವೆ. ಮುಖ್ಯವಾಗಿ ಎರಡು ರೀತಿಯಾಗಿ ಬರುತ್ತದೆ. ಒಂದು ತನ್ನಿಂದ ತಾನೇ ವಯೋಸಹಜ ಸಮಸ್ಯೆಯಂತೆ ಬಂದು ಹೋಗುತ್ತದೆ, ಅಥವಾ ಮತ್ತೊಂದು ರೀತಿಯಲ್ಲಿ ಯಾವಾಗಲಾದರೂ ಬಿದ್ದು ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದಾಗ, ಡಯಾಬಿಟಿಕ್ ಆದಾಗ, ಸ್ಟ್ರೋಕ್ ಆದಾಗ ಅಥವಾ ತುಂಬಾ ದಪ್ಪ ಆದ ಕಾರಣದಿಂದಲೂ ಕೂಡ ಬರಬಹುದು.

ತನ್ನಿಂದ ತಾನೇ ಉಂಟಾದ ನೋವು ಸ್ವಲ್ಪ ದಿನ ಆದಮೇಲೆ ಗುಣವಾಗಿ ಹೋಗುತ್ತದೆ ಇಲ್ಲವಾದರೆ ನಾವೇ ಅದಕ್ಕೆ ಫಿಝಿಯೋಥೆರಪಿ ಅಥವಾ ವ್ಯಾಯಾಮ ಮಾಡುವ ಮೂಲಕ ವಾಸಿ ಮಾಡಿಕೊಳ್ಳಬೇಕು. ಸುಲಭವಾಗಿ ಭುಜದ ನೋವನ್ನು ಗುಣಪಡಿಸುವ ಕೆಲವು ಟಿಪ್ ಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

ಭುಜದ ನೋವು ಹೇಗೆ ಬರುತ್ತದೆ ಎಂದರೆ ಎರಡು ಜಾಯಿಂಟಾ ಗಳ ಮಧ್ಯೆ ಗಟ್ಟಿಯಾಗಿ ಬಿಡುತ್ತದೆ. ಉರಿಯೂತ ಬರಬಹುದು, ತಲೆಯಿಂದ ಮೇಲೆ ಕೈ ಎತ್ತಲಾಗದಷ್ಟು ನೋವಾಗುವುದು, ಸ್ವಲ್ಪ ಕೆಲಸ ಮಾಡಿದರೂ ಬಹಳ ಕೈ ನೋವಾಗಬಹುದು, ಕೈ ಸೋತು ಹೋಗುವುದು ಇತ್ಯಾದಿಗಳು ಇದನ್ನು ನಿರ್ಲಕ್ಷ ಮಾಡಿದರೆ ಮುಂದೆ ಕೈ ಸ್ವಾಧೀನ ಕಳೆದುಕೊಂಡು ಬಿಡಬಹುದು.

ಇದನ್ನು ಗುಣಪಡಿಸಲು ವ್ಯಾಯಾಮ ಮಾಡುವುದು ಬಹಳ ಮುಖ್ಯ. ಆದರೆ ಕೆಲವರಿಗೆ ಕೈ ಮೂವ್ಮೆಂಟ್ ಮಾಡಲಾಗದಷ್ಟು ನೋವಾಗುತ್ತದೆ ಅಂತವರಿಗೆ ಕೆಲವರು ಥೆರಪಿಗಳನ್ನು ಮಾಡಿ ನೋವು ಕಡಿಮೆ ಪಡಿಸಿ ನಂತರ ವ್ಯಾಯಾಮ ಮಾಡಲು ಸೂಚಿಸಲಾಗುತ್ತದೆ. ಭುಜದ ನೋವು ಕಡಿಮೆ ಮಾಡಲು ಕೆಲ ವ್ಯಾಯಾಮಗಳು ಹೀಗಿವೆ ನೋಡಿ

* ನೀವು ನಿಮ್ಮ ಕೈಯನ್ನು ಫ್ರೀ ಬಿಟ್ಟು ಮತ್ತೊಂದು ಕೈಯನ್ನು ಬೆನ್ನ ಹಿಂದೆ ಕಟ್ಟಿಕೊಂಡು ಸ್ವಲ್ಪ ನೆಲದ ಕಡೆ ಬೆಂಡಾಗಿ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಫ್ರೀಯಾಗಿ ಆಡಿಸಬೇಕು ಮತ್ತು ಮೇಲಿನಿಂದ ಕೆಳಗೆ ಕೆಳಗಿನ ಮೇಲಕ್ಕೆ ಈ ರೀತಿಯಾಗಿ ಕೂಡ ಫ್ರೀಯಾಗಿ ಆಡಿಸಬೇಕು ಇದನ್ನು 10 ಬಾರಿಯಂತೆ ಐದು ಸುತ್ತು ಮಾಡಬೇಕು. * ಪ್ರದಕ್ಷಿಣೀಯ ದಿಕ್ಕಿನಲ್ಲಿ 10 ಬಾರಿ ಅಪ್ರದಕ್ಷಣೀಯ ದಿಕ್ಕಿನಲ್ಲಿ 10 ಬಾರಿ ಫ್ರೀ ಆಗಿ ರೊಟೇಟ್ ಮಾಡಬೇಕು ಮತ್ತು ಇದನ್ನು ಐದು ಸುತ್ತು ಮಾಡಬೇಕು.

* ಯಾವುದಾದರೂ ಕಂಬದ ಬಳಿ ನಿಂತುಕೊಂಡು ನಿಮ್ಮ ಮೊಣಕೈಯನ್ನು ಎಲ್ ಶೇಪ್ ನಲ್ಲಿ 90 ಡಿಗ್ರಿ ಗೆ ಸ್ಟ್ರೈಟ್ ಆಗಿ ಮಾಡಿಕೊಂಡು ಬೆರಳುಗಳನ್ನು ಉದ್ದ ಮಾಡಿ ಹಸ್ತದಿಂದ ಕಂಬವನ್ನು ಪ್ರೆಸ್ ಮಾಡಬೇಕು. ಈಗ ಅದನ್ನೇ ವಿರುದ್ಧ ದಿಕ್ಕಿನಲ್ಲಿ ಅಂದರೆ ಹಸ್ತದ ಹಿಂಭಾಗದಿಂದ ಕಂಬದ ಮೇಲೆ ಪ್ರೆಶರ್ ಹಾಕುವಂತೆ ಒತ್ತಬೇಕು. ಇದನ್ನು ಸಹ 10 ಬಾರಿ ಲೆಕ್ಕ ಹಾಕುತ್ತಾ ಐದು ಸುತ್ತು ಮಾಡಬೇಕು

* ಒಂದು ಕೋಲನ್ನು ತೆಗೆದುಕೊಂಡು ನೆಲದ ಮೇಲೆ ಮಲಗಿ. ಮಂಡಿಗಳನ್ನು ಮಡಚಿ ಮಂಡಿ ನೇರಕ್ಕೆ ಎರಡು ಕೈಗಳಲ್ಲಿ ಕೋಲಿನ ತುದಿಯನ್ನು ಹಿಡಿದುಕೊಳ್ಳಿ. ಕೋಲನ್ನು ಎರಡು ಕೈಗಳಿಂದ ನಿಮ್ಮ ತಲೆಗೆ ತನಕ ನಿಧಾನವಾಗಿ ತೆಗೆದುಕೊಂಡು ಹೋಗಿ ಹಾಗೆ ನಿಧಾನವಾಗಿ ಇಳಿಸಿ. ಇದನ್ನು ಸಹ 10 ಬಾರಿಯಂತೆ 2 ಸ್ವತ್ತು ಮಾಡಿ. ಒಂದು ವೇಳೆ ನಿಮ್ಮ ಕೈ ನೋವು ಬಂದರೆ ಎಲ್ಲಿಯವರೆಗೆ ಸಾಧ್ಯ ಅಲ್ಲಿಯವರೆಗೆ ಮಾತ್ರ ಕೈ ಮೇಲೆ ತೆಗೆದುಕೊಂಡು ಹೋಗಿ. ಅದೇ ರೀತಿ ಕೋಲನ್ನು ರೊಟೇಟ್ ಮಾಡುತ್ತಾ ಕೂಡ 10 ಎಂದು ಕೌಂಟ್ ಮಾಡಿ ಎರಡು ಸುತ್ತು ಮಾಡಿ.

* ಪ್ರತಿದಿನವೂ ಕೂಡ ಕನಿಷ್ಠ 30 ನಿಮಿಷಗಳ ಕಾಲ ವಾಕಿಂಗ್ ಮಾಡಿ ಕೈಗಳನ್ನು ಫ್ರೀ ಬಿಟ್ಟು ಈ ಟೈಮಲ್ಲಿ ವಾಕಿಂಗ್ ಮಾಡುವುದರಿಂದ ನೋವು ಕಡಿಮೆ ಆಗುತ್ತದೆ ಮತ್ತು ನಿಮ್ಮ ದೇಹ ಆಕ್ಟಿವೇಟ್ ಆಗಿರುವುದರಿಂದ ನೀವು ಫ್ರೀ ಆಗಿ ಇರುತ್ತೀರಿ ಡಯಾಬಿಟಿಕ್ ಆಗಿದ್ದರೆ ಕಂಟ್ರೋಲ್ ಗೆ ಬರುತ್ತದೆ ಈ ಎಲ್ಲಾ ವ್ಯಾಯಾಮಗಳು ಸರಳವಾಗಿ ನಿಮಗೆ ಭುಜದ ನೋವು ಕಡಿಮೆ ಆಗುತ್ತದೆ.

ಎಲ್ಲಾ ಕಷ್ಟಗಳಿಂದ ಮುಕ್ತಿ ಪಡೆಯಲು ಅಕ್ಕಿಯಿಂದ ಹೀಗೆ ಮಾಡಿ.!

 

ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಕೂಡ ಅವನ ಪರಿಸ್ಥಿತಿಗೆ ಅನುಗುಣವಾಗಿ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತವೆ. ಕೆಲವೊಮ್ಮೆ ನಮ್ಮ ಕೆಟ್ಟ ಗ್ರಹಗತಿಗಳ ಪ್ರಭಾವದಿಂದಾಗಿ, ಕೆಲವೊಮ್ಮೆ ಹಿಂದಿನ ಜನ್ಮದ ಕರ್ಮದ ಫಲವಾಗಿ ನಾವು ಗೊತ್ತಿಲ್ಲದೆ ಮಾಡಿದ ತಪ್ಪಿನಿಂದ ಅಥವಾ ನಮ್ಮ ಮೇಲೆ ಉಂಟಾಗಿರುವ ದೃಷ್ಟಿ ದೋಷದಿಂದ ಈ ರೀತಿ ನೂರಾರು ಕಾರಣಗಳಿಂದ ನಮಗೆ ಒಂದಲ್ಲ ಒಂದು ರೀತಿಯ ಕ’ಷ್ಟಗಳು ಬರುತ್ತಿವೆ.

ಮನುಷ್ಯನಾದವನಿಗೆ ವ್ಯಾಪಾರ ವ್ಯವಹಾರ ಆರೋಗ್ಯ ಕುಟುಂಬ ಹಣಕಾಸು ಎಲ್ಲವೂ ಕೂಡ ಬಹಳ ಮುಖ್ಯ. ಇವುಗಳಲ್ಲಿ ಯಾವುದರಲ್ಲೂ ತೊಡಕಾದರೂ ಕೂಡ ನೆಮ್ಮದಿ ಇರುವುದಿಲ್ಲ. ಆದರೆ ಸಮಸ್ಯೆಯಲ್ಲಿ ಸಿಲುಕಿ ಕೊಂಡಾಗ ಅದರೊಳಗೆ ಮುಳುಗುವುದು ಬಿಟ್ಟು ಪರಿಹಾರ ಮಾರ್ಗಕ್ಕಾಗಿ ಹೊರಗೆ ಬಂದು ಯೋಚಿಸಬೇಕು.

ಅನೇಕ ಬಾರಿ ನಮ್ಮ ಮನೆಯಲ್ಲಿರುವ ಸಣ್ಣ ವಸ್ತುಗಳು ಕೂಡ ನಮಗೆ ನಮ್ಮ ಸಮಸ್ಯೆಗಳನ್ನು ಪರಿಹಾರ ಕೊಡಲು ಉತ್ತಮ ಶಕ್ತಿಯಾಗಿ ಕೆಲಸಕ್ಕೆ ಬರುತ್ತವೆ. ಮನೆಯಲ್ಲಿರುವ ಅಕ್ಕಿಯಿಂದ ನಮ್ಮ ಜಾತಕದ ಅನೇಕ ಸಮಸ್ಯೆಗಳಿಗೆ ಪರಿಹಾರ ಇದೆ ಅವುಗಳಲ್ಲಿ ಪ್ರಮುಖವಾದ ಕೆಲ ವಿಷಯಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಅಕ್ಕಿ ಎಂದರೆ ಚಂದ್ರ ಎಂದು ಸಹ ಹೇಳಲಾಗುತ್ತದೆ. ಚಂದ್ರ ಮನಸ್ಸು ಕಾರಕನಾಗಿದ್ದಾನೆ ಮಾನಸಿಕ ಒತ್ತಡಗಳು ಉಂಟಾದಾಗ ಅದಕ್ಕೆ ಸಂಬಂಧ ಪಟ್ಟ ಈ ಒಂದು ಸಣ್ಣ ಪ್ರಯೋಗ ಮಾಡಿ ನಿಮಗೆ ಪರಿಹಾರ ಸಿಗುತ್ತದೆ. ಮಾನಸಿಕ ಒತ್ತಡಗಳು ನಮ್ಮನ್ನು ವೃತ್ತಿ ಜೀವನದಲ್ಲಿ ಮುಂದೆ ಹೋಗದಂತೆ ವ್ಯವಹಾರದಲ್ಲಿ ನಾವು ಅಭಿವೃದ್ಧಿ ಹೊಂದದಂತೆ ತಡೆದು ಬಿಡುತ್ತವೆ.

ಹಾಗಾಗಿ ಯಾವುದೇ ವಿಷಯಕ್ಕಾದರೂ ಮನಸ್ಸು ಶುದ್ದವಾಗಿರಬೇಕು ಮತ್ತು ಮನಸ್ಸಿನಲ್ಲಿ ಸಂತೋಷ, ನೆಮ್ಮದಿ, ಉತ್ಸಾಹ ಇರಬೇಕು. ಮಾನಸಿಕ ಸಮಸ್ಯೆಗಳು ಇವುಗಳನ್ನು ಕುಂದಿಸುತ್ತವೆ. ಹಾಗಾಗಿ ನಿಮ್ಮ ಹಣಕಾಸಿನ ಪರಿಸ್ಥಿತಿ ಸರಿ ಹೋಗಲು ಮಾನಸಿಕ ನೆಮ್ಮದಿಗಾಗಿ ಹಳದಿ ಅಕ್ಕಿಯಿಂದ ಈ ಪರಿಹಾರ ಮಾಡಿ.

ಒಂದು ಶುಭ ಶುಕ್ರವಾರದ ದಿನದಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಹಳದಿ ಅಕ್ಕಿ ಎಂದರೆ ಅಕ್ಷತೆ ಮೊದಲಿಗೆ ಅಕ್ಷತೆ ಮಾಡಿಕೊಂಡು 21 ಅಕ್ಷತೆಯನ್ನು ಒಂದು ಕೆಂಪು ವಸ್ತ್ರದಲ್ಲಿ ಕಟ್ಟಿ ಈಗ ಅದನ್ನು ತಾಯಿ ಮಹಾಲಕ್ಷ್ಮಿಯ ಫೋಟೋ ಮುಂದೆ ಇಡಿ, ವಿಗ್ರಹ ಇದ್ದರೆ ವಿಗ್ರಹದ ಮುಂದೆ ಇಡಿ.

ಅದಕ್ಕೂ ಕೂಡ ಪೂಜೆ ಮಾಡಿ ನಂತರ ತಾಯಿ ಮಹಾಲಕ್ಷ್ಮಿಯನ್ನು ನಿಮ್ಮ ಹಣಕಾಸು ಸಮಸ್ಯೆ ಪರಿಹರಿಸುವಂತೆ ಬೇಡಿಕೊಳ್ಳಿ ಮತ್ತು ಮಾನಸಿಕವಾಗಿ ನೆಮ್ಮದಿ ಕೊಡುವಂತೆ ಕೇಳಿಕೊಳ್ಳಿ. ಈಗ ಅದನ್ನು ತೆಗೆದುಕೊಂಡು ನಿಮ್ಮ ಪರ್ಸನಲ್ಲಿಯಾದರೂ ಇಟ್ಟುಕೊಳ್ಳಿ ಅಥವಾ ಹಣ ಇಡುವ ಕಪಾಟೀನಲ್ಲಿ ಇಡಿ ನಿಮ್ಮ ಸಮಸ್ಯೆ ಆಶ್ಚರ್ಯ ಪಡುವಂತೆ ನಿವಾರಣೆ ಆಗುತ್ತದೆ.

ಹುಣ್ಣಿಮೆಯ ದಿನ ನೀರಿಗೆ ಅಕ್ಕಿಯನ್ನು ಹಾಕಿ ಚಂದ್ರನಿಗೆ ಅರ್ಘ್ಯ ಅರ್ಪಿಸುವುದರಿಂದ ಕೂಡ ಮಾನಸಿಕ ಒತ್ತಡಗಳು ಕಡಿಮೆ ಆಗುತ್ತದೆ. ಇದರ ಜೊತೆಗೆ ಒಂದು ಹಿಡಿ ಮುಕ್ಕಾಗದ ಅಕ್ಕಿಯನ್ನು ತೆಗೆದುಕೊಂಡು ಶಿವನ ದೇವಾಲಯದಲ್ಲಿ ಅರ್ಪಿಸುವುದರಿಂದ ಕೂಡ ಮಾನಸಿಕ ಚಂಚಲತೆಗಳು ದೂರಾಗುತ್ತವೆ, ಮಾನಸಿಕ ಒತ್ತಡ ಕಡಿಮೆ ಆಗುತ್ತದೆ.

ನಿಮ್ಮ ಕೈಲಾದಷ್ಟು ಅಸಹಾಯಕರಿಗೆ ಅನ್ನದಾನ ಮಾಡಿ ಇದು ಎಲ್ಲಕ್ಕಿಂತ ಶ್ರೇಷ್ಠವಾಗಿದೆ ನಿಮ್ಮ ಬದುಕಿನ ಎಷ್ಟೋ ಕ’ಷ್ಟಗಳಿಗೆ ಅನ್ನದಾನವು ಪರಿಹಾರ ಆಗಿದೆ. ಆದರೆ ಅನ್ನವನ್ನು ವ್ಯರ್ಥ ಮಾಡಬೇಡಿ ನಿಜವಾಗಿಯೂ ಆಹಾರದ ಅವಶ್ಯಕತೆ ಇರುವಂತವರಿಗೆ ಊಟ ಕೊಡಿಸಿ. ಹಸಿವು ನೀಗಿದವರು ಮನಸಾರೆಯಾಗಿ ಹರಸುವುದರಿಂದ ಅದು ಭಗವಂತನಿಗೆ ತಲುಪುತ್ತದೆ ಮತ್ತು ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ.

ಈ ದಿಕ್ಕಿನಲ್ಲಿ 7 ಕುದುರೆ ಓಡುವ ಚಿತ್ರ ಹಾಕಿದ್ರೆ ಮನೆ ಸರ್ವನಾಶ ಆಗೋದು ಖಚಿತ.!

0

 

ಏಳು ಅಶ್ವ ಇರುವ ರಥ ಏರಿ ಸೂರ್ಯದೇವನು ಬರುತ್ತಾನೆ. ಹಾಗಾಗಿ ಏಳು ಅಶ್ವ ಎನ್ನುವುದು ಸೂರ್ಯನಂತೆ ಸಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ. ವ್ಯಾಪಾರ ವ್ಯವಹಾರ ಅಭಿವೃದ್ಧಿಯಾಗಲು, ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆ ಮಾಡಲು, ವಿದ್ಯಾರ್ಥಿಗಳಿಗೆ ಆಸಕ್ತಿ ಹೆಚ್ಚಾಗಲು.

ಹೀಗೆ ಜೀವನದಲ್ಲಿ ಮುಂದೆ ಬರಲು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಅಥವಾ ವ್ಯಾಪಾರಸ್ಥಳಗಳಲ್ಲಿ ಈ ರೀತಿ ಏಳು ಕುದುರೆ ಇರುವ ಫೋಟೋ ಹಾಕುತ್ತಾರೆ. ಇದನ್ನು ವಾಸ್ತು ಶಾಸ್ತ್ರದ ಪ್ರಕಾರ ಹೇಗೆ ಹಾಕಬೇಕು ಎಂದು ನಿಯಮ ಇದೆ. ಒಂದು ವೇಳೆ ತಪ್ಪಾಗಿ ಹಾಕಿದರೆ ಕಷ್ಟಗಳು ತಪ್ಪಿದ್ದಲ್ಲ ಹಾಗಾಗಿ ಏಳು ಅಶ್ವಗಳನ್ನು ಇರುವ ಫೋಟೋ ಹಾಕುವ ವಿಧಾನದ ಬಗ್ಗೆ ಈ ಅಂಕಣದಲ್ಲಿ ಕೆಲ ಮಾಹಿತಿ ತಿಳಿಸುತ್ತಿದ್ದೇವೆ

* ನೀವು ಹಾಕುವ ಚಿತ್ರದಲ್ಲಿ ಇರುವ ಕುದುರೆಗೆ ಲಗಾಮನ್ನು ಹಾಕಿರಬಾರದು ಮತ್ತು ಆ ಅಶ್ವಗಳ ಮುಖದಲ್ಲಿ ಆಕ್ರೋಶವಿಲ್ಲದೇ ಮಂದಹಾಸವಿರುವ ಫೋಟೋ ಆಗಿರಬೇಕು. ಹಾಗಾಗಿ ಖರೀದಿ ಮಾಡುವಾಗಲೇ ಇದರ ಬಗ್ಗೆ ಗಮನ ಕೊಡಬೇಕು.

* ಈ ಏಳು ಕುದುರೆ ಫೋಟೋವನ್ನು ಮನೆಯ ಗೋಡೆಯ ದಕ್ಷಿಣ ದಿಕ್ಕಿನಲ್ಲಿ ಹಾಕಬೇಕು. ಕುದುರೆಗಳ ಮುಖ ಉತ್ತರ ದಿಕ್ಕನ್ನು ನೋಡುತ್ತಿರಬೇಕು.

* ವ್ಯಾಪಾರ ಸ್ಥಳದಲ್ಲಿ ಹಾಕುವುದಾದರೇ ಮುಖ್ಯಗೋಡೆಯ ಮೇಲೆ ಹೊರಗಿನಿಂದ ಒಳಗೆ ಬರುವ ರೀತಿ ಕುದುರೆಯ ಫೋಟೋವನ್ನು ಹಾಕಬೇಕು, ಅಲ್ಲಿಯೂ ಕೂಡ ಈ ಕುದುರೆಗಳು ಉತ್ತರ ದಿಕ್ಕನ್ನೇ ನೋಡುತ್ತಿರುವ ರೀತಿ ಇರಬೇಕು.

* ಮನೆಯಲ್ಲಿ ಈ ಚಿತ್ರ ಹಾಕುವುದಿದ್ದರೆ ವಾಸ್ತುತಜ್ಞರ ಸಲಹೆಯನ್ನು ಕೇಳಿ ಸಲಹೆ ಪಡೆದು ಹಾಕುವುದು ಒಳ್ಳೆಯದು. ಸಾಮಾನ್ಯವಾಗಿ ಮನೆಯಲ್ಲಿ ಈ ಪೋಟೋವನ್ನು ಪೂರ್ವದ ಗೋಡೆಯ ಮೇಲೆ ಇಡುವುದರಿಂದ ವೃತ್ತಿ ಬೆಳವಣಿಗೆಯನ್ನು ಬಯಸುತ್ತಿರುವವರಿಗೆ ಒಳ್ಳೆಯದಾಗುತ್ತದೆ.

* ಓಡುವ ಭಂಗಿಯಲ್ಲಿರುವ ಕುದುರೆಯ ಫೋಟೋವನ್ನು ಇಡುವುದಕ್ಕೆ ಮನೆಯ ಹಾಲ್ ಸೂಕ್ತ ಸ್ಥಳವಾಗಿದೆ. ಓಡುವಂತಹ ಕುದುರೆಗಳ ಫೋಟೋ ಖರೀದಿಸುವುದಾದರೆ ಅವು ಯಾವುದೇ ಅಡೆತಡೆ ಇಲ್ಲದೆ ತೆರೆದ ನೆಲದ ಮೇಲೆ ಓಡುವಂತೆ ಚಿತ್ರಿಸಿರಬೇಕು.

* ಕಿಟಕಿ ಮತ್ತು ಮನೆಯ ಮುಖ್ಯದ್ವಾರದ ಬಳಿ ಈ ಫೋಟೋ ಇಡಬಾರದು. ವಾಸ್ತುಶಾಸ್ತ್ರದ ಪ್ರಕಾರ ಮಲಗುವ ಕೋಣೆ, ದೇವಸ್ಥಾನ, ಪೂಜಾ ಕೊಠಡಿ, ವಾಶ್ ರೂಂ ಗೆ ಎದುರಾಗಿರುವ ಯಾವುದೇ ಗೋಡೆಗಳ ಮೇಲೆ ಅಥವಾ ಅವುಗಳ ಬಾಗಿಲುಗಳ ಮೇಲೆ ಏಳು ಕುದುರೆಗಳ ಫೋಟೋವನ್ನು ಹಾಕುವುದು ಅಷ್ಟೊಂದು ಸರಿ ಬರುವುದಿಲ್ಲ.

* ಕುದುರೆಗಳು ನೀರಿನ ಮೇಲೆ ಓಡುತ್ತಿರುವ ಚಿತ್ರ ಅಷ್ಟೊಂದು ಶುಭಕರವಲ್ಲ ಅವುಗಳನ್ನು ಖರೀದಿಸಬಾರದು ಒಂದು ವೇಳೆ ಏಳು ಅಶ್ವಗಳು ಇರುವ ಭಾವಚಿತ್ರ ಸಿಗದೇ ಇದ್ದರೆ ಬೆಸಸಂಖ್ಯೆಯಲ್ಲಿ ಇರುವ ಕುದುರೆಯನ್ನ ಚಿತ್ರವನ್ನು ಆಯ್ಕೆ ಮಾಡುವುದು ಸೂಕ್ತ.
* ಕೆಂದು ಬಣ್ಣದಲ್ಲಿರುವ ಏಳು ಕುದುರೆಗಳ ಚಿತ್ರವು ಮಂಗಳಗ್ರಹದ ಪ್ರಭಾವವನ್ನು ಹೊಂದಿರುತ್ತದೆ. ಇದು ವ್ಯಕ್ತಿಯ ಸ್ವಾಭಿಮಾನವನ್ನು ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ.

* ನೀಲಿ ಹಿನ್ನೆಲೆ ಬಣ್ಣದಲ್ಲಿ ಚಿತ್ರಿಸಿದ ಏಳು ಕುದುರೆಗಳು ಶನಿಗ್ರಹವನ್ನು ಪ್ರತಿನಿಧಿಸುತ್ತದೆ. ಇದು ಸಾಮರಸ್ಯ ಮತ್ತು ಶಾಂತಿಯನ್ನು ಆಹ್ವಾನಿಸುತ್ತದೆ.
* ವಾಸ್ತುಶಾಸ್ತ್ರದ ಪ್ರಕಾರ ಏಳು ಬಿಳಿಕುದುರೆಯ ವರ್ಣಚಿತ್ರವನ್ನೇ ಆಯ್ಕೆ ಮಾಡುವುದು ಶ್ರೇಷ್ಠ. ಯಾಕೆಂದರೆ ಬಿಳಿ ಬಣ್ಣವು ಶಾಂತಿ ಮತ್ತು ಪರಿಶುದ್ಧತೆಯನ್ನು ಸೂಚಿಸುತ್ತದೆ. ಹಾಗೆಯೇ ಧನಾತ್ಮಕ ಭಾವನೆಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ.

* ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕಿನಲ್ಲಿ ಕುದುರೆಯ ಫೋಟೋಗಳನ್ನು ಇಟ್ಟರೇ ವೃತ್ತಿ ಜೀವನದ ಸಮಸ್ಯೆಗಳು ಬಗೆಹರಿಯುತ್ತವೆ. ಇದರಿಂದ ಅದೃಷ್ಠವು ಒಲಿದು ಬರುತ್ತದೆ.
* ಎರಡು ಜೋಡಿ ಕುದುರೆಯ ಫೋಟೋಗಳನ್ನು ಬೆಡ್ ರೂಂ ನಲ್ಲಿ ಇಟ್ಟುಕೊಂಡರೆ ದಂಪತಿಗಳ ನಡುವೆ ಅನ್ಯೋನ್ಯತೆ ಹೆಚ್ಚಾಗುತ್ತದೆ.
* ಒಂದೇ ಕುದುರೆ ಓಡುವ ಫೋಟೋವನ್ನು ಹಾಕುವುದು ಕೂಡ ಒಳ್ಳೆಯದಲ್ಲ, ಇದು ದುರಾದೃಷ್ಠವನ್ನು ತರುತ್ತದೆ.

* ಫೋಟೋದಲ್ಲಿ ಕುದುರೆಗಳ ಮೇಲೆ ಹಗ್ಗವಿರಬೇಕು ಆದರೇ ಆ ಏಳು ಕುದುರೆಗಳನ್ನು ಹಗ್ಗದಿಂದ ಬಂಧಿಸಿರುವ ಚಿತ್ರ ಇರಬಾರದು. ಇದು ಅಭಿವೃದ್ಧಿಯನ್ನು ತಡೆಯುತ್ತದೆ. ಪೇಟಿಂಗ್ ನಲ್ಲಿ ಕುದುರೆಯ ಪೂರ್ತಿ ಚಿತ್ರ ಕಾಣುವಂತಿರಬೇಕು. ಕುದುರೆಗಳ ಮುಖದಲ್ಲಿ ಸಂತೋಷ, ಧೈರ್ಯ ಎದ್ದು ಕಾಣುವಂತೆ ಇರಬೇಕು. ಇಂತಹ ಫೋಟೋ ಹಾಕುವುದರಿಂದ ಪಾಸಿಟಿವ್ ವೈಬ್ರೇಶನ್ ಕ್ರಿಯೇಟ್ ಆಗುತ್ತದೆ.

ಪೀರಿಯಡ್ ಸಮಯದಲ್ಲಿ ಬರುವ ಹೊಟ್ಟೆನೋವು, ಎದೆನೋವು ಕಡಿಮೆ ಮಾಡುವ ಸುಲಭ ಮನೆ ಮದ್ದು.!

0

 

ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ಬರುವ ಮುಟ್ಟಿನ ಚಕ್ರವು ಅದು ಆರಂಭವಾಗುವ ದಿನದ 3-4 ಹಿಂದಿನ ದಿನದಿಂದಲೇ ಅನೇಕ ರೀತಿಯ ದೇಹದಲ್ಲಿ ಆರೋಗ್ಯ ವ್ಯತ್ಯಾಸವನ್ನು ಉಂಟು ಮಾಡುತ್ತದೆ ಇದು ಹಾರ್ಮೋನ್ ವೇರಿಯೇಷನ್ ನಿಂದ ಉಂಟಾಗುವ ಸಮಸ್ಯೆ ಆಗಿರುತ್ತದೆ.

ಆ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಎದೆ ನೋವು, ಹೊಟ್ಟೆ ನೋವು, ಕೈ ಕಾಲು ಸೆಳೆತ, ಕೈ ಕಾಲು ಊದಿಕೊಳ್ಳುವುದು, ಬೇಸರ , ಡಿಪ್ರೆಶನ್ ಇನ್ನು ಮುಂತಾದ ಸಮಸ್ಯೆಗಳು ಉಂಟಾಗುತ್ತದೆ. ಇದನ್ನು PMS (Pre Mensteual Syndrome) ಎನ್ನುತ್ತಾರೆ. ಹದಿಹರೆಯದವರಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಇದರಿಂದ ಆ ಮಕ್ಕಳಿಗೆ ಸರಿಯಾಗಿ ಶಾಲಾ ಕಾಲೇಜುಗಳಿಗೆ ಕೆಲಸಕ್ಕೆ ಹೋಗಲು ಆಗುವುದಿಲ್ಲ ಇದಕ್ಕೆ ಸುಲಭ ಪರಿಹಾರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಮನೆಯಲ್ಲಿ ಸಿಕ್ಕುವ ಕೆಲವು ಪದಾರ್ಥಗಳನ್ನು ಬಳಸಿಕೊಂಡು ಮನೆ ಮದ್ದು ಮಾಡಿಕೊಂಡು ಮುಂದಿನ ತಿಂಗಳಿಂದ ಈ PMS ಸಮಸ್ಯೆ ಕಂಟ್ರೋಲ್ ಆಗುವ ರೀತಿ ಮಾಡಬಹುದು. ನಿಯಮಿತವಾಗಿ ಅವುಗಳನ್ನು ರೂಢಿ ಮಾಡಿಕೊಂಡು ಬರುವುದರಿಂದ ಒಂದು ದಿನ ಸಂಪೂರ್ಣವಾಗಿ ಸಮಸ್ಯೆಯಿಂದ ಹೊರ ಬರುತ್ತೀರಿ. ಈ ಮನೆಮದ್ದುಗಳನ್ನು ನೀವು ಸಹ ನೋಡಿ ಮಾಡಿಕೊಳ್ಳಿ ಮತ್ತು ನಿಮ್ಮ ಗೆಳತಿಯರಿಗೂ ಹಾಗೂ ಕುಟುಂಬದವರೊಂದಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ.

ಮನೆಮದ್ದುಗಳು:-
* ದೇಹದಲ್ಲಿ ಈ ಸಮಯದಲ್ಲಿ ನೀರಿನಾಂಶ ಹೆಚ್ಚಾಗುತ್ತದೆ. ಆದ್ದರಿಂದ ಉಪ್ಪು, ಉಪ್ಪಿನಕಾಯಿ, ಕರಿದ ಆಹಾರ ಪದಾರ್ಥಗಳು, ಮಸಾಲೆ ಪದಾರ್ಥಗಳು ಇವುಗಳ ಸೇವನೆ ಕಡಿಮೆ ಮಾಡಬೇಕು.

* ಒಂದು ಲೋಟ ಮಜ್ಜಿಗೆಗೆ ಒಂದು ಚಿಟಿಕೆ ಇಂಗು ಹಾಗೂ ಒಂದು ಚಮಚ ಮೆಂತೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಆ ಮಜ್ಜಿಗೆಯನ್ನು ನಿಯಮಿತವಾಗಿ ಸೇವನೆ ಮಾಡಿದರೆ ಮುಂದಿನ ತಿಂಗಳು PMS ಕಂಟ್ರೋಲ್ ಗೆ ಬರುತ್ತದೆ.

* ನಾಲ್ಕು ಕೆಂಪು ದಾಸವಾಳ ಹೂವು, ಒಂದು ಗುಲಾಬಿ ಹೂವು, ಒಂದು ಚಮಚ ಜೇನುತುಪ್ಪ ಹಾಗೂ ಒಂದು ಚಮಚ ಸಕ್ಕರೆ ಸೇರಿಸಿ, ಒಂದು ಚಮಚ ಶತಾವರಿ ಪುಡಿ ಹಾಗೂ ಚಿಟಿಕೆ ಏಲಕ್ಕಿ ಪುಡಿ ಹಾಕಿ ಜ್ಯೂಸ್ ಮಾಡಿಕೊಂಡು ಕುಡಿಯಬೇಕು ಈ ರೀತಿ ಆಗಾಗ ಕುಡಿಯುವುದರಿಂದ PMS ಮುಂದಿನ ತಿಂಗಳಲ್ಲಿ ಉಂಟಾಗುವುದಿಲ್ಲ

* ಒಂದು ಚಮಚ ಅಮೃತಬಳ್ಳಿ ಪುಡಿ, ಚಿಟಿಕೆ ಅರಿಶಿಣ ಹಾಗೂ ಒಂದು ಏಲಕ್ಕಿಯನ್ನು ಹಾಕಿ ಒಂದುವರೆ ಲೋಟದಷ್ಟು ನೀರನ್ನು ಹಾಕಿ ಅದು ಮುಕ್ಕಾಲು ಲೋಟ ಆಗುವಷ್ಟು 6-7 ನಿಮಿಷ ಚೆನ್ನಾಗಿ ಕುದಿಸಿ ಅದನ್ನು ಶೋಧಿಸಿ ಬೆಲ್ಲ ಸೇರಿಸಿ ಕುಡಿಯುವುದರಿಂದ PMS ಕಂಟ್ರೋಲ್ ಗೆ ಬರುತ್ತದೆ

* ಒಂದು ಚಮಚ ಸೋಂಪು ಕಾಳು, ಕಾಲು ಚಮಚ ಕಪ್ಪು ಜೀರಿಗೆ, ಕಾಲು ಚಮಚ ಒಣ ಶುಂಠಿ ಇವುಗಳನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅರ್ಧ ಲೋಟ ಆದ ಬಳಿಕ ಶೋಧಿಸಿ ಆರಿಸಿ ಕುಡಿಯುವುದರಿಂದ ಕೂಡ ಈ ಸಮಸ್ಯೆ ಕಂಟ್ರೋಲ್ ಗೆ ಬರುತ್ತದೆ

* ಬಾರ್ಲಿ ನೀರನ್ನು ಕುಡಿಯುವುದರಿಂದ ಇದು ಮೂತ್ರ ವರ್ಧತಕವಾಗಿ ಕೆಲಸ ಮಾಡಿ ದೇಹದಲ್ಲಿರುವ ಈ ಸಮಯದಲ್ಲಿ ತುಂಬುವ ನೀರನ್ನು ಹೊರ ಹಾಕುತ್ತದೆ. 2-3 ಲೀಟರ್ ನೀರನ್ನು ಕುದಿಯಲು ಇಟ್ಟು ಅದಕ್ಕೆ ಎರಡು ಚಮಚ ಬಾರ್ಲಿ ಪೌಡರ್ ಹಾಕಬೇಕು ನಂತರ ಕುಡಿಯುತ್ತಾ ಬರಬೇಕು ಇದರೊಂದಿಗೆ ಮೂತ್ರ ವರ್ಧಕ ಹಣ್ಣುಗಳಾದ ಕಲ್ಲಂಗಡಿ ಹಣ್ಣು, ದಾಳಿಂಬೆ ಹಣ್ಣು ಇವುಗಳ ಸೇವನೆ ಮಾಡಬೇಕು.

https://youtu.be/aclS89zIx08?si=53n3s0YKC5E7PBl1

ಯಾವ ರಾಶಿಯವರು ಲವ್ ಮ್ಯಾರೇಜ್ ಆಗುವ ಯೋಗವಿದೆ ನೋಡಿ.! 12 ರಾಶಿಗಳ ವಿವಾಹ ರಹಸ್ಯ ಇಲ್ಲಿದೆ.!

0

ರಾಶಿ ಚಕ್ರದಲ್ಲಿ 12 ರಾಶಿಗಳಿವೆ. ಈ 12 ರಾಶಿಯ ಜನರು ಕೂಡ ಬೇರೆ ಬೇರೆ ರೀತಿಯ ಸ್ವಭಾವಗಳನ್ನು ಹೊಂದಿರುತ್ತಾರೆ. ವಿದ್ಯಾಭ್ಯಾಸದ ವಿಷಯದಲ್ಲಿ, ವೃತ್ತಿ ವ್ಯಾಪಾರ ವಿಚಾರದಲ್ಲಿ, ಸಾಂಸಾರಿಕ ಜೀವನವೇ ಆಗಲಿ ಅಥವಾ ಸಾಮಾಜಿಕ ಜೀವನದಲ್ಲೇ  ಆಗಲಿ ಒಬ್ಬರಿಗಿಂತ ಒಬ್ಬರು ಬಹಳ ವಿಭಿನ್ನ. ಇದರಲ್ಲಿ ಮದುವೆಯ ವಿಚಾರದಲ್ಲಿ ಯಾರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಅಂದಾಜಿಸಿ ಯಾವ ರಾಶಿಯವರು ಹೆಚ್ಚು ಲವ್ ಮ್ಯಾರೇಜ್ ಆಗುತ್ತಾರೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

1. ಮೇಷ ರಾಶಿ:- ಮೊದಲ ರಾಶಿಯವರದ ಮೇಷ ರಾಶಿಯವರು  ತುಂಬಾ ಫ್ರೆಂಡ್ಲಿ ಆಗಿರುತ್ತಾರೆ, ಎಲ್ಲರ ಜೊತೆಗೂ ತುಂಬಾ ಓಪನ್ ಆಗಿ ಮಾತನಾಡುತ್ತಾರೆ, ಫ್ಯಾಮಿಲಿ ಮೇಲೆ ತುಂಬಾನೇ ಪ್ರೀತಿ ಇರುತ್ತದೆ. ಕುಟುಂಬದವರು ಇವರ ನಿರ್ಧಾರಗಳನ್ನು ಗೌರವಿಸುತ್ತಾರ ಹಾಗೂ ಒಪ್ಪಿಕೊಳ್ಳುತ್ತಾರೆ. ಹಾಗಾಗಿ ಆದಷ್ಟು ಮೇಷ ರಾಶಿಯವರು 90% ಲವ್ ಮ್ಯಾರೇಜ್ ಆಗುತ್ತಾರೆ.

2. ವೃಷಭ ರಾಶಿ:- ಇವರು ಬಹಳ ಬೇಗ ಒಬ್ಬರನ್ನು ಹಚ್ಚಿಕೊಳ್ಳುವ, ಇಷ್ಟವಾಗುವ ವ್ಯಕ್ತಿಗಳಾಗಿರುತ್ತಾರೆ. ತುಂಬಾನೇ ಕೇರಿಂಗ್ ಮಾಡುವ ವ್ಯಕ್ತಿಗಳು ಎನಿಸಿಕೊಳ್ಳುವ ಇವರಿಗೆ ಪ್ರಪೋಸಲ್ ಗಳು ಹೆಚ್ಚಾಗುತ್ತದೆ, ಇವರು ಕೂಡ ಲವ್ ಮ್ಯಾರೇಜ್ ಆಗುತ್ತಾರೆ.

3, ಮಿಥುನ ರಾಶಿ:- ಇವರು ಕೂಡ ಬೇಗ ಇಷ್ಟ ಆಗುವ ವ್ಯಕ್ತಿಗಳಾಗಿರುತ್ತಾರೆ. ಇವರು ಸಹ ಪ್ರೀತಿಯಲ್ಲಿ ಬೀಳುತ್ತಾರೆ. ಇವರು ಪ್ರೀತಿ ಮಾಡಿದರು ಮನೆಯವರ ಒಪ್ಪಿಗೆ ಪಡೆದೆ ಮದುವೆ ನಿರ್ಧಾರ ಮಾಡುತ್ತಾರೆ. ಕುಟುಂಬದವರ ಒಪ್ಪಿಗೆಯಿಲ್ಲದೆ ಇವರು ಯಾವ ಕೆಲಸವನ್ನು ಮಾಡದ ಕಾರಣ ಕುಟುಂಬದವರಿಗಾಗಿ ಕೆಲವೊಮ್ಮೆ ಪ್ರೀತಿಯನ್ನು ಬಿಟ್ಟು ಕೊಡಬಹುದು

4. ಕಟಕ ರಾಶಿ:- ಈ ವ್ಯಕ್ತಿಗಳು ಪ್ರೀತಿ ಮತ್ತು ಮದುವೆ ವಿಷಯದಲ್ಲಿ ಅದೃಷ್ಟವಂತರು.ಯಾಕೆಂದರೆ ಇವರು ಪ್ರೀತಿ ಮಾಡಿದವರನ್ನೇ ಮದುವೆ ಆಗುವಂತಹ ಸನ್ನಿವೇಶಗಳು ಹೆಚ್ಚಾಗಿರುತ್ತದೆ. ಇವರಿಗೆ ಸಿಗುವ ಪಾರ್ಟ್ನರ್ ಇವರ ಕಾರಣದಿಂದಲೇ ಹೆಚ್ಚು ಖುಷಿಯಾಗಿರುತ್ತಾರೆ, ಇವರ ಪ್ರತಿಯೊಂದು ಕೆಲಸದಲ್ಲೂ ಅವರು ಸದಾ ಜೊತೆಯಲ್ಲಿ ಇರುತ್ತಾರೆ. ಕಟಕ ರಾಶಿಯವರು ಪ್ರೀತಿಯ ವಿಚಾರದಲ್ಲಿ ಯಶಸ್ವಿ ಆಗುತ್ತಾರೆ.

5. ಸಿಂಹ ರಾಶಿ:- ಈ ರಾಶಿಯ ವ್ಯಕ್ತಿಗಳು ಪ್ರೀತಿಯ ವಿಷಯದಲ್ಲಿ ತುಂಬಾನೇ ಸೀರಿಯಸ್ ಆಗಿ ಇರುತ್ತಾರೆ. ಇವರ ಮನೆಯಲ್ಲಿ ಒಪ್ಪದಿದ್ದರೂ ಸಹ ಮನೆಯವರ ವಿರೋಧ ಕಟ್ಟಿಕೊಂಡು ಬೇಕಾದರೂ ಲವ್ ಮ್ಯಾರೇಜ್ ಆಗುತ್ತಾರೆ.

6. ಕನ್ಯಾ ರಾಶಿ:- ಈ ರಾಶಿಯ ವ್ಯಕ್ತಿಗಳು ತುಂಬಾನೇ ಎಮೋಷನಲ್ ವ್ಯಕ್ತಿಗಳಾಗಿರುತ್ತಾರೆ. ಪ್ರೀತಿ ಎಂದರೆ ನಂಬಿಕೆ ಎನ್ನುವ ಇವರು ಅದನ್ನು ಮದುವೆ ಹಂತಕ್ಕೆ ತೆಗೆದುಕೊಂಡು ಹೋಗಿ ಉಳಿಸಿಕೊಳ್ಳುತ್ತಾರೆ.

7, ತುಲಾ ರಾಶಿ:- ತುಲಾ ರಾಶಿಯವರು ಯಾವುದೇ ವಿಚಾರದಲ್ಲಿ ಗೊಂದಲ ಮಾಡಿಕೊಳ್ಳುವುದಕ್ಕೆ, ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹೋಗುವುದಿಲ್ಲ ಹಾಗಾಗಿ ಇವರು ಕುಟುಂಬದವರು ಮೆಚ್ಚಿದವರನ್ನೇ ಕೈ ಹಿಡಿಯುತ್ತಾರೆ.

8. ವೃಶ್ಚಿಕ ರಾಶಿ:- ತುಂಬಾನೇ ಪ್ರಾಕ್ಟಿಕಲ್ ಆಗಿ ಥಿಂಕ್ ಮಾಡುವ ಇವರು ಪ್ರೀತಿ ವಿಚಾರದಲ್ಲೂ ಕೂಡ ಇದೇ ರೀತಿ ಯೋಚಿಸುತ್ತಾರೆ. ಪ್ರೀತಿಸಿದವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ, ಜೀವನ ಒಂದು ಲೆವೆಲ್ ಗೆ ಬಂದ ಮೇಲೆ ಅವರನ್ನೇ ಮದುವೆಯಾಗುತ್ತಾರೆ

9. ಧನಸ್ಸು ರಾಶಿ:- ಕನಸು ರಾಶಿಯವರು ಪ್ರೀತಿಯಲ್ಲಿ ಮೋಸ ಹೋಗುವ ಅಥವಾ ಪ್ರೀತಿಯಲ್ಲಿ ನಂಬಿಕೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಸಾಮಾನ್ಯವಾಗಿ ಇವರು ಕುಟುಂಬದ ಮೇಲೆ ಮದುವೆ ಜವಾಬ್ದಾರಿ ಹಾಕಿ ಅರೇಂಜ್ ಮ್ಯಾರೇಜ್ ಆಗುತ್ತಾರೆ.

10. ಮಕರ ರಾಶಿ:- ತಮ್ಮ ಪ್ರೀತಿಗೆ ಕುಟುಂಬ ಒಪ್ಪುವುದಿಲ್ಲ ಎನ್ನುವುದು ಮಕರ ರಾಶಿಯ ಬಹುತೇಕರಿಗೆ ತಿಳಿದಿರುತ್ತದೆ. ಕುಟುಂಬದವರಿಗೆ ನೋವನ್ನು ಕೊಟ್ಟು ಪ್ರೀತಿ ಮಾಡಬಾರದು ಎನ್ನುವ ಯೋಚನೆ ಇರುತ್ತದೆ. ಆದ್ದರಿಂದ 90% ಇವರು ಕೂಡ ಅರೆಂಜ್ ಮ್ಯಾರೇಜ್ ಆಗುತ್ತಾರೆ.

11, ಕುಂಭ ರಾಶಿ:- ಇವರದ್ದು ಸಾಮಾನ್ಯವಾಗಿ ಒನ್ ಸೈಡ್ ಲವ್, ಎಷ್ಟೋ ಸಮಯದಲ್ಲಿ ತಮ್ಮ ಪ್ರೀತಿ ಬಗ್ಗೆ ಹೇಳಿಕೊಳ್ಳುವುದಿಲ್ಲ ಹೀಗಾಗಿ ಪ್ರೀತಿ ಕೈ ತಪ್ಪಿ ಅರೆಂಜ್ ಮ್ಯಾರೇಜ್ ಆಗುತ್ತಾರೆ.

12. ಮೀನ ರಾಶಿ:- ಯಾವುದೇ ಒಂದು ಡಿಸಿಷನ್ ತೆಗೆದುಕೊಳ್ಳುವಾಗ ಯೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಪ್ರೀತಿ ಆದರೂ ಕೂಡ ಎಲ್ಲರನ್ನು ಒಪ್ಪಿಸಿ ಮದುವೆ ಆಗಲು ಬಯಸುತ್ತಾರೆ.

https://youtu.be/bCXKf_AS-NU

ಈ 6 ವಿಧವಾದ ಕನಸುಗಳು ಬಿದ್ದರೆ ಧನ ಲಾಭವಾಗುವುದು ಗ್ಯಾರಂಟಿ.!

 

ಸ್ವಪ್ನಶಕುನ ಎನ್ನುವುದು ಅನಾದಿಕಾಲದಿಂದಲೂ ಕೂಡ ಇದೆ. ರಾಮಾಯಣ ಮಹಾಭಾರತದ ಕಾಲದಲ್ಲಿ ಕೂಡ ಇದಕ್ಕೆ ಸಂಬಂಧಿಸಿದ ಕಥೆಗಳ ಬಗ್ಗೆ ನಾವು ಕೇಳಿದ್ದೇವೆ. ಅಶೋಕವನದಲ್ಲಿ ಸೀತೆಯು ಕಣ್ಣೀರಿಡುತ್ತಿರುವಾಗ ತ್ರಿಜಂಡೆ ರಾಕ್ಷಸಿ ಒಬ್ಬಳು ತನ್ನ ಕನಸಿನಲ್ಲಿ ಬಿಳಿಕುದುರೆಯಲ್ಲಿ ಶ್ರೀರಾಮಚಂದ್ರ ಬಂದು ಸೀತಾಮಾತೆಯನ್ನು ಕರೆದುಕೊಂಡು ಹೋದ ಹಾಗೆ ಹಾಗೂ ರಾವಣನನ್ನು ಕಪ್ಪು ವಸ್ತ್ರ ಉಟ್ಟಿದ್ದವರು ದಕ್ಷಿಣದ ಕಡೆಗೆ ಕೋಣನ ಮೇಲೆ ಹೇರಿ ಹೋದಂತೆ ಕನಸು ಬಿದ್ದಿದೆ ಎಂದು ಹೇಳಿ ಸಮಾಧಾನ ಪಡಿಸಿದ್ದಳು.

ನಂತರದ ದಿನಗಳಲ್ಲಿ ರಾಮ ರಾವಣರ ಯುದ್ಧ ನಡೆದು ಅದು ನಿಜವಾಯಿತು ಅಂತೆಯೇಶಮಹಾಭಾರತ ಕಾಲದಲ್ಲಿ ಕೂಡ ಅಭಿಮನ್ಯು ಕುರುಕ್ಷೇತ್ರ ಯುದ್ಧಕ್ಕೆ ಹೊರಟಾಗ ಉತ್ತರೆಗೂ ಕೂಡ ಸ್ವಪ್ನದಲ್ಲಿ ಅಭಿಮನ್ಯುಗೆ ಅಪಾಯವಿದೆ ಎನ್ನುವ ಮುನ್ಸೂಚನೆ ಸಿಕ್ಕಿತ್ತು. ಆದರೆ ಅಭಿಮನ್ಯು ತನ್ನ ಕರ್ತವ್ಯ ಮಾಡಲೇಬೇಕಿತ್ತು ಹಾಗಾಗಿ ಚಕ್ರವ್ಯೂಹವನ್ನು ಭೇದಿಸಲು ಹೋಗಿ ಸಿಲುಕಿದ ಕಥೆಯನ್ನು ಕೇಳಿದ್ದೇವೆ.

ಹಾಗೆ ಕಲಿಯುಗದಲ್ಲೂ ಕೂಡ ಬೀಳುವ ಕೆಲವು ಕನಸುಗಳು ನಮಗೆ ಮುಂದೆ ಆಗುವ ಘಟನೆಗಳ ಬಗ್ಗೆ ಮುನ್ಸೂಚನೆ ಕೊಡುತ್ತವೆ ಆದರೆ ರೋಗಿಗಳಿಗೆ, ಮಧ್ಯಾಹ್ನ ನಿದ್ರೆ ಮಾಡುವವರಿಗೆ, ವಾಯು ರೋಗ ಇರುವವರಿಗೆ, ಕೈ ಕಾಲು ಮಂಡಿ ನೋವು ಇರುವವರಿಗೆ ಸದಾ ಒಂದೇ ವಿಷಯದ ಬಗ್ಗೆ ಯೋಚನೆ ಮಾಡುತ್ತಾ ಇದ್ದು ಅದೇ ವಿಷಯದ ಬಗ್ಗೆ ಕನಸು ಕಂಡವರಿಗೆ ಇದು ಫಲಿಸುವುದಿಲ್ಲ.

ಅದನ್ನು ಹೊರತುಪಡಿಸಿ ಆರೋಗ್ಯಕರವಾಗಿರುವ ವ್ಯಕ್ತಿ ಒಂದನೇ ಜಾಮು ಅಂದರೆ ರಾತ್ರಿ 8:00 ರಿಂದ 10:00 ಗಂಟೆ ಒಳಗಡೆ ಕಾಣುವ ಕನಸು ಒಂದು ವರ್ಷದ ಒಳಗೆ ಫಲಿಸುತ್ತದೆ, ಎರಡನೇ ಜಾಮು ಅಂದರೆ ರಾತ್ರಿ 10:00 ರಿಂದ 12:00 ಗಂಟೆ ಒಳಗೆ ಕಾಣುವ ಕನಸು 8 ತಿಂಗಳಿನಲ್ಲಿ ನಿಜವಾಗುತ್ತದೆ, ಮೂರನೇ ಜಾಮು ಎಂದರೆ 12:00 ಯಿಂದ 3:00 ಗಂಟೆ ಒಳಗಡೆ ಕಾಣುವ ಕನಸು 6 ತಿಂಗಳಲ್ಲಿ ಈಡೇರುತ್ತದೆ ಹಾಗೂ ನಾಲ್ಕನೇ ಜಾಮು ಅಂದರೆ ಮುಂಜಾವು 3:00 ರಿಂದ 6:00 ರ ಒಳಗೆ ಬೀಳುವ ಕನಸು ಶೀಘ್ರವಾಗಿ ನಿಜವಾಗುತ್ತದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ.

ದೇವತೆಗಳಿಗೂ ಗುರುವಾದ ಬೃಹಸ್ಪದಚಾರ್ಯರು ಸ್ವಪ್ನ ಧ್ಯಾಯ ಎನ್ನುವ ಗ್ರಂಥದಲ್ಲಿ ಇದರ ಬಗ್ಗೆ ತಿಳಿಸಿದ್ದಾರೆ. ಕನಸಿನಲ್ಲಿ ಸ್ಪಷ್ಟವಾಗಿ ನಡೆಯುವ ಘಟನೆ ಕಾಣುವುದಿಲ್ಲ, ಆದರೆ ಅದಕ್ಕೆ ಮುನ್ಸೂಚನೆ ಸಿಗುತ್ತದೆ ಇದನ್ನು ಹೇಗೆ ತರ್ಕ ಮಾಡಬಹುದು ಎನ್ನುವುದನ್ನು ಕೂಡ ಸ್ವಪ್ನ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಬೆಳಗಿನ ಜಾವದ ಕನಸಿನಲ್ಲಿ ಕುದುರೆ ಮೇಲೆ ಹಾಗೂ ಆನೆ ಮೇಲೆ ಕುಳಿತಂತೆ ಕನಸು ಬಿದ್ದರೆ ಅವರು ತಮ್ಮ ವೃತ್ತಿ ಜೀವನದಲ್ಲಿ ಬಡ್ತಿ ಹೊಂದುತ್ತಾರೆ ಎಂದು ಅರ್ಥ.

ಅದೇ ರೀತಿಯಾಗಿ ಕನಸಿನಲ್ಲಿ ಹಂಸ ಪಕ್ಷಿ, ಕೋಳಿ ಇಂತಹ ಪಕ್ಷಿಗಳನ್ನು ಕಂಡರೆ ವಿವಾಹ ಯೋಗ ಕೂಡಿ ಬರಲಿದೆ ಎಂದರ್ಥ. ನೀವೇನಾದರೂ ಕನಸಿನಲ್ಲಿ ನದಿ ಅಥವಾ ಕೆರೆಯಲ್ಲಿ ತಾವರೆ ಹೂವಿನ ಮೇಲೆ ಕುಳಿತು ಪಾಯಸ ಕುಡಿಯುತ್ತಿರುವ ಕನಸು ಬಿದ್ದರೆ ಶೀಘ್ರವಾಗಿ ಅಪಾರ ಧನ ಲಾಭವಾಗಲಿದೆ ಎಂದರ್ಥ. ನಿಮಗೆ ರಾಜಯೋಗ ಬರುತ್ತಿದೆ ಎಂದು ಸೂಚನೆ.

ಪತಿ-ಪತ್ನಿ ಮಧ್ಯ ವಿರಸ ಉಂಟಾಗಿ ಬೇರೆ ಬೇರೆಯಾಗಿದ್ದರೆ ಇಬ್ಬರಲ್ಲಿ ಒಬ್ಬರ ಕನಸಿನಲ್ಲಿ ಇಬ್ಬರು ಒಟ್ಟಿಗೆ ಒಂದೇ ತಟ್ಟೆಯಲ್ಲಿ ಊಟ ತಿನ್ನುತ್ತಿರುವ ಹಾಗೆ ಅಥವಾ ಒಟ್ಟಿಗೆ ತಾಂಬೂಲ ತಿನ್ನುತ್ತಿರುವ ಹಾಗೆ ಕನಸು ಬಿದ್ದರೆ ಒಂದು ತಿಂಗಳಲ್ಲಿ ಇಬ್ಬರು ಒಂದೇ ಕಡೆ ಕೂಡಿ ಬಾಳುತ್ತಾರೆ ಮತ್ತೆ ಎಂದು ಅವರು ಬೇರೆ ಆಗುವುದಿಲ್ಲ ಎಂದರ್ಥ.

ನಿಮ್ಮ ಕನಸಿನಲ್ಲಿ ಯಾರಾದರೂ ನಿಮಗೆ ಬಿಳಿ ಛತ್ರಿ ಹಿಡಿದರೆ ಅಥವಾ ಬೀಸಣಿಗೆ ಬೀಸಿದರೆ ಅಥವಾ ಬಿಳಿ ಹಾರ ಹಾಕಿ ಸನ್ಮಾನ ಮಾಡುವ ರೀತಿ ಕನಸು ಬಂದರೆ ಶೀಘ್ರದಲ್ಲಿ ರಾಜಯೋಗ ಬರುತ್ತದೆ ಎಂದು ಅರ್ಥ. ಕನಸಿನಲ್ಲಿ ಅರಿಶಿಣ ಕುಂಕುಮ ಬಳೆ ಚಿನ್ನ ದುಡ್ಡು ಮುಂತಾದ ಮಂಗಳದ್ರವ್ಯಗಳು ಕಂಡರೆ ತಾಯಿ ಮಹಾಲಕ್ಷ್ಮಿ ಶೀಘ್ರದಲ್ಲೇ ಮನೆಗೆ ಬರುತ್ತಾರೆ ಎಂದರ್ಥ.

ಒಂದು ವೇಳೆ ಕನಸಿನಲ್ಲಿ ದೇವರು ಕಂಡರೆ ಬೆಳಿಗ್ಗೆ ಎದ್ದ ಕೂಡಲೇ ಸ್ನಾನ ಮಾಡಿ ನಿಮ್ಮ ಕನಸಿನಲ್ಲಿ ಶಿವ ಕಾಣಿಸಿದರೆ ಶಿವನ ದೇವಾಲಯ, ವೆಂಕಟೇಶ್ವರನನ್ನು ಕಂಡಿದ್ದರೆ ಹತ್ತಿರದಲ್ಲಿರುವ ವೆಂಕಟೇಶ್ವರನ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿದರೆ ಆ ದೇವರ ಅನುಗ್ರಹವಾಗುತ್ತದೆ.

ರಾತ್ರಿಯ ವೇಳೆ ಮಾತ್ರ ತೆರೆದಿರುವ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ರೆ ಎಲ್ಲಾ ರೀತಿಯ ಕಷ್ಟಗಳು ನಿವಾರಣೆ ಆಗುತ್ತೆ.! ಒಮ್ಮೆ ಪರೀಕ್ಷೆ ಮಾಡಿ ನೋಡಿ.!

 

ನಮಗೆಲ್ಲಾ ಉಜ್ಜೈನಿಯಲ್ಲಿರುವ ಮಹಾಕಾಳೇಶ್ವರನ ಬಗ್ಗೆ ತಿಳಿದೇ ಇದೆ. ಕಾಲದ ಅಧಿಪತಿಯಾದ ಶಿವನ ಅವತಾರವಾದ ಮಹಾಕಾಳೇಶ್ವರನ ಸನ್ನಿಧಾನದಲ್ಲಿ ನಡೆದ ಅನೇಕ ಪವಾಡಗಳ ಕಥೆಯನ್ನು ಕೇಳಿರುತ್ತೇವೆ ಮತ್ತು ಮಹಾಕಾಳೇಶ್ವರನ ಆರಾಧನೆಯಿಂದ ದರ್ಶನದಿಂದ ನಮ್ಮ ಕೆ’ಟ್ಟ ಸಮಯವು ಸರಿ ಹೋಗುತ್ತದೆ ಎನ್ನುವ ನಂಬಿಕೆ ಕೂಡ ನಮ್ಮದು ಅಂತೆಯೇ ಭಾರತದಲ್ಲಿ ಮತ್ತೊಂದು ಪುರಾಣ ಪ್ರಸಿದ್ಧವಾದ ದೇವಸ್ಥಾನ ಇದೆ.

ಈ ದೇವಸ್ಥಾನದಲ್ಲಿ ಕೂಡ ಇದೇ ರೀತಿಯಾದ ನಂಬಿಕೆ ಇದ್ದು, ನಮ್ಮ ನೆರೆಯ ರಾಜ್ಯವಾದ ತಮಿಳುನಾಡಿನಲ್ಲಿ ಇರುವ ಈ ದೇವಸ್ಥಾನಕ್ಕೆ ಹೆಚ್ಚಾಗಿ ಜೀವನದಲ್ಲಿ ಬಹಳ ಕೆ’ಟ್ಟ ಸಮಯ ಅನುಭವಿಸುತ್ತಾ ಇರುವಂತಹ ಜನರು ಭೇಟಿ ಕೊಟ್ಟು ಅದರ ಪರಿಹಾರಕ್ಕಾಗಿ ಪ್ರಾರ್ಥಿಸಿ ಫಲ ಪಡೆಯುತ್ತಾರೆ. ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ತಾಯಿ ಕಾಳದೇವಿಯು ಈ ರೀತಿ ತನ್ನನ್ನು ನಂಬಿ ಬಂದ ಭಕ್ತಾಧಿಗಳ ಕ’ಷ್ಟಗಳನ್ನು ಕೇಳಿ ಅವರಿಗೆ ಹರಸಿ ಕಳುಹಿಸುತ್ತಾಳೆ ಎನ್ನುವ ನಂಬಿಕೆ ಇದೆ.

ಈ ದೇವಸ್ಥಾನಕ್ಕೆ ಹೋಗಿ ಒಂದು ವಿಶೇಷವಾದ ಆಚರಣೆ ಮಾಡುವುದರಿಂದ ಜೀವನದಲ್ಲಿ ಕೆ’ಟ್ಟ ಸಮಯಯಿಂದ ಅನುಭವಿಸುತ್ತಿರುವ ಸಾಕಷ್ಟು ತೊಂದರೆಗಳಿಗೆ ಪರಿಹಾರ ಪಡೆಯಬಹುದು. ಈ ದೇವಸ್ಥಾನದ ವಿಶೇಷತೆ ಏನೆಂದರೆ ಹಗಲಿನಲ್ಲಿ ಈ ದೇವಸ್ಥಾನವು ತೆರೆದಿರುವುದಿಲ್ಲ ಪ್ರತಿ ದಿನ ರಾತ್ರಿ ದೇವಸ್ಥಾನವನ್ನು ತೆರೆದು ಸೂರ್ಯೋದಯ ಆಗುವ ಮುನ್ನ ದೇವಸ್ಥಾನವನ್ನು ಮುಚ್ಚಲಾಗುತ್ತದೆ.

ಈ ದೇವಸ್ಥಾನದ ಮುಖ್ಯ ವಿಷಯ ವಿಚಾರ ಇದಾಗಿತ್ತು ಇದು ಅನೇಕರಿಗೆ ಅಚ್ಚರಿಯನ್ನುಂಟು ಮಾಡಿದರು ಕೂಡ ಇದೇ ಸತ್ಯ. ಅನಾದಿ ಕಾಲದಿಂದಲೂ ಇದೇ ರೂಢಿಯಲ್ಲಿದ್ದು ಇನ್ನೂ ಸಹ ಪಾರಂಪರ್ಯವಾಗಿ ಅದನ್ನೇ ನಡೆಸಿಕೊಂಡು ಬರುತ್ತಿದ್ದಾರೆ. ತಮಿಳುನಾಡಿನ ಮಧುರೈನಲ್ಲಿರುವ ಈ ದೇವಸ್ಥಾನಕ್ಕೆ ತೆರಳಬೇಕಾದರೆ, ರಾಜಪಾಳ್ಯ (Rajyapalya)ಕ್ಕೆ ಹೋಗುವ ಬಸ್ಸಿನಲ್ಲಿ ಹೋಗಬೇಕು.

ಅಲ್ಲಿ ಇಳಿದು ಸುಪ್ಪಲಪುರಂ (Suppalapuram) ಮುಖ್ಯ ರಸ್ತೆ ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಚಿಲ್ಲರ್ ಪಟ್ಟಿ (Chillar Patti) ಎಂಬ ಹಳ್ಳಿಗೆ ಹೋದರೆ ಈ ಕಾಳದೇವಿಯ ದರ್ಶನವನ್ನು ಪಡೆಯಬಹುದು. ಬಸ್ಸಿನಿಂದ ಇಳಿದು ಆಟೋ ಮಾಡಿಕೊಂಡು ಈ ದೇವಾಲಯವನ್ನು ತಲುಪಬಹುದಾಗಿದೆ. ಈ ದೇವಸ್ಥಾನಕ್ಕೆ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ಕೊಡುತ್ತಾರೆ.

ಈ ದೇವಸ್ಥಾನಕ್ಕೆ ಹೋಗಿ ತಾಯಿ ಕಾಳದೇವಿಯ ದರ್ಶನ ಮಾಡಿ ನಿಮ್ಮ ಮನಸ್ಸನ್ನಲ್ಲಿರುವ ಸಮಸ್ಯೆಯನ್ನು ಹೇಳಿಕೊಳ್ಳಬೇಕು. ನಂತರ ದೇವಸ್ಥಾನದ ಅಂಬಾಲದಲ್ಲಿ ಎಡದಿಂದ ಬಲಕ್ಕೆ ಹಾಗೂ ಬಲದಿಂದ ಎಡಕ್ಕೆ ಒಂಬತ್ತು ಬಾರಿ ಪ್ರದರ್ಶನ ಹಾಕಬೇಕು ಮತ್ತು ನಿಮ್ಮ ಶಕ್ತಿಯನುಸಾರ ಇಲ್ಲಿ ದೀಪಗಳನ್ನು ಹಚ್ಚಬೇಕು ಈ ರೀತಿ ಮಾಡುವುದರಿಂದ ನಿಮ್ಮ ಕೆ’ಟ್ಟ ಸಮಯ ಕಳೆದು ನಿಮ್ಮ ಬಾಳಿನಲ್ಲೂ ಕೂಡ ಬೆಳಕು ಬರುತ್ತದೆ ಎನ್ನುವುದು ಇಲ್ಲಿಗೆ ನಡೆದುಕೊಳ್ಳುವ ಭಕ್ತಾಧಿಗಳು ಹೇಳುವ ಮಾತು.

ಈ ಕಾಲ ದೇವಿಯ ದರ್ಶನವನ್ನು ಪಡೆದ ಮೇಲೆ ಗ್ರಹಗತಿಗಳ ದೋಷದಿಂದಾಗಿ ಅಥವಾ ಪಾಪ ಕರ್ಮಗಳ ಕಾಟದಿಂದಾಗಿ ಬದುಕಿನಲ್ಲಿ ಬಹಳ ವರ್ಷಗಳಿಂದ ಕ’ಷ್ಟವನ್ನೇ ಪಡುತ್ತಿದ್ದ ಅನೇಕರು ಜೀವನವನ್ನು ಸುಧಾರಿಸಿಕೊಂಡು ಚೇತರಿಸಿಕೊಂಡಿರುವ ಸಾಕಷ್ಟು ಉದಾಹರಣೆಗಳು ಇವೆ. ಮತ್ತು ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟವರು ನಂತರ ಸ್ನೇಹಿತರು ಹಾಗೂ ಕುಟುಂಬದವರು ಕೂಡ ಮತ್ತೊಮ್ಮೆ ಈ ದೇವಸ್ಥಾನಕ್ಕೆ ಹೋಗಲು ಬಯಸುವಂತಹ ವಾತಾವರಣ ಈ ದೇವಸ್ಥಾನದಲ್ಲಿ ಇದೆ. ಸಾಧ್ಯವಾದರೆ ಪ್ರತಿಯೊಬ್ಬರೂ ಕೂಡ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ಕೊಡಿ ಎಲ್ಲರಿಗೂ ಶುಭವಾಗಲಿ.

 

ದೇವಸ್ಥಾನಕ್ಕೆ ಹೋಗುವವರು ಈ ವಿಷಯಗಳನ್ನು ತಪ್ಪದೆ ತಿಳಿದುಕೊಳ್ಳಿ.! ದೇವಸ್ಥಾನಕ್ಕೆ ಹೋಗುವಾಗ ಹಾಗೂ ಬರುವಾಗ ಇವುಗಳನ್ನು ಪಾಲಿಸಿ.!

 

ಪ್ರತಿಯೊಬ್ಬರೂ ಕೂಡ ದೇವಸ್ಥಾನಗಳಿಗೆ ಹೋಗುತ್ತೇವೆ. ನಮ್ಮ ಕುಲದೇವರ ನಮ್ಮ ಇಷ್ಟ ದೇವರ ಹಾಗೂ ಮನೆ ಹತ್ತಿರ ಸಾಧ್ಯವಾಗುವ ಯಾವುದಾದರೂ ದೇವರ ಸನ್ನಿಧಾನಕ್ಕೆ ಹೋಗುವ ಅಭ್ಯಾಸ ಇದ್ದೇ ಇರುತ್ತದೆ. ಈ ರೀತಿ ದೇವಸ್ಥಾನಗಳಿಗೆ ಹೋದಾಗ ಮನಸ್ಸಿಗೆ ಒಂದು ರೀತಿಯ ಸಮಾಧಾನ ಸಿಗುತ್ತದೆ. ಬಹಳ ಸಕರಾತ್ಮಕವಾದ ಭಾವನೆಗಳು ಉಂಟಾಗುತ್ತದೆ.

ಈ ನೆಮ್ಮದಿಯನ್ನು ಅನುಭವಿಸುವುದಕ್ಕಾಗಿ ಲೋಕದ ಜಂಜಾಟಗಳನ್ನು ಮರೆತು ಭಗವಂತನನ್ನು ಕ್ಷಣ ಹೊತ್ತು ಸ್ಮರಿಸುವುದಕ್ಕಾಗಿ ದೇವಸ್ಥಾನಕ್ಕೆ ಹೋಗುತ್ತೇವೆ. ಈ ರೀತಿ ದೇವಸ್ಥಾನಕ್ಕೆ ಹೋಗುವಾಗ ಹಾಗೂ ಬರುವಾಗ ಕೆಲವು ನಿಯಮಗಳಿವೆ. ಇವುಗಳನ್ನು ಪಾಲಿಸಿದರೆ ಇವುಗಳ ಫಲ ಇನ್ನಷ್ಟು ಸಿಗುತ್ತದೆ. ಅದರಲ್ಲಿ ಪ್ರಮುಖವಾದ ಕೆಲವು ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

* ಮನೆ ಹತ್ತಿರ ಇರುವ ದೇವಸ್ಥಾನಕ್ಕೆ ಹೋಗುವಾಗ ಅದರಲ್ಲೂ ಶನೇಶ್ವರನ ದೇವಸ್ಥಾನವಾಗಿದ್ದರೆ ನೀವು ಬರಿಗಾಲಿನಲ್ಲಿ ದೇವಸ್ಥಾನಕ್ಕೆ ಹೋಗುವುದು ಒಳ್ಳೆಯದು ಹಾಗೂ ದೇವಸ್ಥಾನ ಪ್ರವೇಶ ಮಾಡುವ ಮುನ್ನ ದೇವಸ್ಥಾನದ ಹೊರಗಡೆ ಇರುವ ನಲ್ಲಿಯಲ್ಲಿ ಕಾಲು ಕೈಗಳನ್ನು ತೊಳೆದುಕೊಂಡು ನಂತರ ದೇವಸ್ಥಾನದ ಒಳಗಡೆ ಹೋಗಿ

* ಗಣೇಶನ ದೇವಸ್ಥಾನಕ್ಕೆ ಹೋದಾಗ ಬೆನ್ನ ಹಿಂದೆ ಕೈ ಮುಗಿಯಬಾರದು
* ಶನಿ ದೇವರಿಗೆ ತಲೆ ಬಗ್ಗಿಸಿ ಸಾಷ್ಟಾಂಗ ನಮಸ್ಕಾರ ಮಾಡಬಾರದು
* ದೇವಸ್ಥಾನದ ಆವರಣದಲ್ಲಿ ಸಾಧ್ಯವಾದಷ್ಟು ಹೊತ್ತು ಮೌನವಾಗಿರಬೇಕು ಅಥವಾ ಭಗವಂತನ ಧ್ಯಾನದಲ್ಲಿದ್ದು ಸ್ತೋತ್ರಗಳನ್ನು ಅಥವಾ ಮಂತ್ರಗಳನ್ನು ಪಠಿಸಬೇಕು. ವಿನಾಕಾರಣ ಇಲ್ಲಸಲ್ಲದ ಮಾತನಾಡುವುದು ಗಲಾಟೆ ಮಾಡುವುದು ನಿಮ್ಮ ಪುಣ್ಯವನ್ನು ಕಡಿಮೆ ಮಾಡುತ್ತದೆ

* ದೇವಸ್ಥಾನದಿಂದ ಮನೆಗೆ ಬಂದ ತಕ್ಷಣ ಕಾಲುಗಳನ್ನು ತೊಳೆಯಬೇಡಿ ಮುಖ ತೊಳೆಯಬೇಡಿ ಮತ್ತು ದೇವಸ್ಥಾನದಿಂದ ಮನೆಗೆ ಮರಳುವಾಗ ಕುಂಕುಮ ಹೂವು ಏನನ್ನಾದರೂ ಮನೆಯಲ್ಲಿರುವವರಿಗಾಗಿ ಪ್ರಸಾದ ರೂಪದಲ್ಲಿ ಪಡೆದುಕೊಂಡು ಬನ್ನಿ

* ದೇವಸ್ಥಾನಕ್ಕೆ ಹೋಗುವಾಗ ಸ್ನಾನ ಮಾಡಿ ಶುದ್ಧವಾದ ಮಡಿ ಬಟ್ಟೆ ಹಾಕಿ ಹೋಗಬೇಕು. ದೇವಸ್ಥಾನ ಬಹಳ ಪವಿತ್ರವಾಗಿರುತ್ತದೆ. ಅದರ ಶುದ್ಧತೆಯನ್ನು ಹಾಳು ಮಾಡುವ ಕೃತ್ಯಗಳನ್ನು ಮಾಡಬೇಡಿ. ಹೊರಗೆ ಮಾಡಿದ ಪಾಪಗಳನ್ನು ದೇವಸ್ಥಾನದಲ್ಲಿ ಕಳೆದುಕೊಳ್ಳಬಹುದು ಆದರೆ ದೇವಸ್ಥಾನದಲ್ಲಿ ಮಾಡುವ ಪಾಪ ಅದರಲ್ಲೂ ಗೊತ್ತಿದ್ದು ಬೇಕಂತಲೇ ಮಾಡುವ ತಪ್ಪುಗಳು ವಜ್ರಲೇಪನದಂತೆ ನಿಮ್ಮನ್ನು ಅಂಟಿಕೊಳ್ಳುತ್ತದೆ.

* ಯಾರಾದರೂ ತೀರ್ಥಯಾತ್ರೆಗೆ ಹೋಗುತ್ತಿದ್ದರೆ ಅಥವಾ ದೇವಸ್ಥಾನಕ್ಕೆ ಹೋಗುತ್ತೇನೆ ಎಂದು ನಿಮ್ಮ ಬಳಿ ಹೇಳಿದರೆ ನಿಮ್ಮ ಕೈಯಲ್ಲಿ ಆದಷ್ಟು ಹಣವನ್ನು ಅವರಿಗೆ ಕೊಡಿ ಮತ್ತು ಅವರ ಪ್ರಯಾಣ ಸುಖಕರವಾಗಿರಲಿ ಎಂದು ಪ್ರಾರ್ಥಿಸಿ
* ದೇವಸ್ಥಾನದಲ್ಲಿ ಯಾವುದೇ ದೇವರ ವಿಗ್ರಹಗಳಿಗೆ ಪ್ರದಕ್ಷಿಣೆ ಹಾಕುವಾಗ ಕೈಯಿಂದ ಮುಟ್ಟಬೇಡಿ

* ದೇವಸ್ಥಾನಕ್ಕೆ ಹೋಗುವಾಗ ಸಂಪ್ರದಾಯದ ಪ್ರಕಾರವಾಗಿ ಬಟ್ಟೆ ಧರಿಸಿ. ತೀರ ಮಾಡರ್ನ್ ಅವತಾರದಲ್ಲಿ ದೇವಸ್ಥಾನಗಳಿಗೆ ಹೋಗಬೇಡಿ ಮತ್ತು ದೇವಸ್ಥಾನದಲ್ಲಿ ಕುಳಿತುಕೊಂಡು ಬೇರೆ ವಿಚಾರಗಳನ್ನು ಯೋಚನೆ ಮಾಡಬೇಡಿ. ದೇವಸ್ಥಾನದಲ್ಲಿ ಕುಳಿತು ಸ್ನೇಹಿತರ ಜೊತೆ ಹರಟೆ ಹೊಡೆಯುವುದು, ಮೊಬೈಲ್ ಗಳನ್ನು ಬಳಸುವುದು ಇವುಗಳನ್ನು ಮಾಡುವುದರಿಂದ ಪ್ರಯೋಜನವಿಲ್ಲ ಬದಲಾಗಿ ಮೌನದಿಂದ ಭಗವಂತನನ್ನು ಸ್ಮರಿಸಿ.

* ದೇವಸ್ಥಾನಕ್ಕೆ ಹೋಗುವಾಗ ನೀವು ನಿಮ್ಮ ಮನೆಯ ಕೈತೋಟದಲ್ಲಿ ಬೆಳೆದ ಹೂವುಗಳನ್ನೇ ಆರಿಸಿ ದೇವರಿಗಾಗಿ ತೆಗೆದುಕೊಂಡು ಹೋದರೆ ಇನ್ನು ಹೆಚ್ಚಿನ ಸಮಾಧಾನ ಸಿಗುತ್ತದೆ. ಒಂದು ವೇಳೆ ಅನುಕೂಲತೆ ಇಲ್ಲದೆ ಇದ್ದವರು ಕೈಲಾದಷ್ಟು ದೇವರಿಗೆ ಕಾಣಿಕೆ ಹೂವಿನ ರೂಪದಲ್ಲಿ ತೆಗೆದುಕೊಂಡು ಹೋಗಿ.

ಬಹಳ ದೇವಸ್ಥಾನಗಳಲ್ಲಿ ಈ ರೀತಿ ಹೆಚ್ಚಾಗಿ ಹೂವನ್ನು ಅರ್ಪಿಸುತ್ತಾರೆ ಆಗ ಭಗವಂತನ ವಿಗ್ರಹಗಳಿಗಾಗಿ ಅಥವಾ ಫೋಟೋಗಾಗಲಿ ಈ ಹೂವನ್ನು ಹಾಕಲು ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ ಹೂವನ್ನು ಖರೀದಿಸುವ ಮನಸ್ಸು ಇಲ್ಲ ಎಂದರೆ ಅದೇ ಹಣದಲ್ಲಿ ತಿನ್ನುವ ಯಾವುದಾದರೂ ಪದಾರ್ಥವನ್ನು ಖರೀದಿಸಿ ದೇವಸ್ಥಾನದ ಹೊರಗೆ ಕುಳಿತಿರುವ ಅಸಹಾಯಕರಿಗೆ ಅರ್ಪಿಸಿ.

ಸಿಂಹ ರಾಶಿಯವರ ಸಿಕ್ರೇಟ್.!

0

 

ಸಿಂಹ ರಾಶಿಯ ಚಿಹ್ನೆಯು ಕೂಡ ಸಿಂಹವೇ ಆಗಿದೆ. ಸಿಂಹ ಎಂದರೆ ಎಲ್ಲರಿಗೂ ಗೊತ್ತಿದೆ ಕಾಡಿನ ರಾಜ ಎಂದು. ಕಾಡಿನಲ್ಲಿ ಅಷ್ಟು ಪ್ರಾಣಿಗಳಿದ್ದರೂ ಕೂಡ ನಾವು ಕಾಡಿನ ರಾಜ ಎಂದು ಸಿಂಹವನ್ನೇ ಕರೆಯುತ್ತೇವೆ. ಯಾಕೆಂದರೆ ಸಿಂಹಕ್ಕೆ ಅಂತ ರಾಜ ಗಾಂಭೀರ್ಯವಿದೆ. ಅದರ ನಡಿಗೆ, ಅದು ಒಂದು ಸಲ ಘರ್ಜಿಸಿದರೆ ಇಡೀ ಅರಣ್ಯವೇ ನಡುಗುವಂತಹ ಹವಾ ಸೃಷ್ಟಿಸಿದೆ ಹೀಗಾಗಿ ಅದಕ್ಕೆ ಆ ರಾಜ ಪದವಿ ಸಿಕ್ಕಿದೆ.

ಅಂತಹ ಗುಣಗಳಲ್ಲಿ ಕೆಲವು ಸಿಂಹ ರಾಶಿಯವರಿಗೆ ಸಹಜವಾಗಿ ಬಂದೇ ಇರುತ್ತದೆ. ಸಿಂಹ ರಾಶಿಯ ಗಂಡು ಮಕ್ಕಳು ಸಿಂಹಗಳಂತಿದ್ದರೆ ಹೆಣ್ಣು ಮಕ್ಕಳು ಸಿಂಹಿಣಿಯರಂತೆ ವರ್ಚಸ್ಸು ಹೊಂದಿರುತ್ತಾರೆ, ಹಾಗೆಯೇ ಜೀವನಪೂರ್ತಿ ಎಷ್ಟೇ ಕಷ್ಟ ಅನುಭವಿಸಿದರೂ ಗತ್ತಿನಿಂದಲೇ ಬದುಕುತ್ತಾರೆ.

ಇವರಲ್ಲಿ ನಾಯಕತ್ವದ ಗುಣ ಹುಟ್ಟಿನಿಂದಲೇ ಇರುತ್ತದೆ ಮತ್ತು ಯಾವುದನ್ನೇ ಆದರೂ ಜವಾಬ್ದಾರಿ ತೆಗೆದು ಕೊಂಡು ಅದನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸುವಂತಹ ಬುದ್ಧಿವಂತಿಕೆ ಇರುತ್ತದೆ. ಇವರು ಯಾವುದೇ ಸಭೆ ಸಮಾರಂಭ ಆಫೀಸು ಕಛೇರಿ ಎಲ್ಲಾ ಕಡೆ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುತ್ತಾರೆ.

ತಮ್ಮ ಕೆಲಸ ಕಾರ್ಯದ ಮೂಲಕ ಮತ್ತು ತಮ್ಮ ಮಾತಿನ ಶೈಲಿಯ ಮೂಲಕ ಹಾಗೂ ಸಮಯಕ್ಕೆ ತಕ್ಕ ಹಾಗೆ ಸಮಸ್ಯೆಗಳನ್ನು ಬಗೆಹರಿಸುವ ನಿಪುಣತೆ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಸಿಂಹ ರಾಶಿಯವರು ಸ್ವಭಾವತಃ ನೇರವಂತಿಕೆ ಗುಣ ಉಳ್ಳವರು. ಇವರಿಗೆ ಯಾರಿಗಾದರೂ ಬಕೆಟ್ ಹಿಡಿವ ಬುದ್ಧಿಯಾಗಲಿ ಅಥವಾ ಯಾರನ್ನಾದರೂ ನೈಸ್ ಮಾಡಿ ಕೆಲಸ ಮಾಡಿಸುವುದಾಗಲಿ ಬರುವುದಿಲ್ಲ.

ಇವರು ಕಮ್ಯಾಂಡ್ ಮಾಡಿ ಕೆಲಸ ತೆಗೆಯುತ್ತಾರೆ ಹಾಗಾಗಿ ಎಲ್ಲರಿಗೂ ಇವರು ಡಾಮಿನೇಟ್ ಎನಿಸಿದರೆ ಕೂಡ ಇದು ಅವರ ಕಾರ್ಯ ಚತುರತೆ ಇದೆ ಅವರ ಜೀವನದ ಯಶಸ್ಸಿನ ಗುಟ್ಟು ಕೂಡ ಹೌದು ಸಿಂಹ ರಾಶಿಯವರು ಬಹಳ ಪ್ರಾಮಾಣಿಕರಾಗಿರುತ್ತಾರೆ ಮತ್ತು ಇತರರು ಕೂಡ ತಮಗೆ ಹೀಗೆ ಇರಬೇಕು ಎಂದು ಬಯಸುತ್ತಾರೆ.

ಹೆಚ್ಚು ತಮಾಷೆಯಾಗಿರಲು ಬಯಸುವುದಿಲ್ಲ ಆದರೆ ಸುಖ ಸುಮ್ಮನೆ ಯಾರಿಗೂ ತೊಂದರೆಯೂ ಕೊಡುವುದಿಲ್ಲ. ಇವರು ಹೊಗಳಿದರು ತೆಗೆಳೀದರೂ ಅದರಲ್ಲಿ ಸತ್ಯವೇ ಇರುತ್ತದೆ. ಇವರು ಯಾರನ್ನು ಬೇಗ ನಂಬುವುದಿಲ್ಲ, ಹೊಂದಿಕೊಳ್ಳುವುದಿಲ್ಲ ಒಂದು ಬಾರಿ ಅವರಿಗೆ ಸ್ನೇಹಿತರಾದರೆ ಅಥವಾ ಸಂಗಾತಿ ಎಂದು ಒಪ್ಪಿಕೊಂಡರೆ ಕೊನೆ ಉಸಿರು ಇರುವವರೆಗೂ ಕೂಡ ಅವರ ನಂಬಿಕೆ ಉಳಿಸಿಕೊಳ್ಳುತ್ತಾರೆ.

ಅವರಿಂದ ಮೋ’ಸ ಹೋದರೆ ತಿರುಗಿ ಜೀವನದಲ್ಲಿ ಎಂದು ಕೂಡ ಅವರ ಕಡೆ ನೋಡುವುದಿಲ್ಲ. ಸಿಂಹ ರಾಶಿಯವರೂ ಎಲ್ಲರೆದುರೂ ಭಾವನೆಗಳನ್ನು ತೋಡಿಕೊಳ್ಳುವುದಿಲ್ಲ, ಎಂತಹದೆ ಕ’ಷ್ಟ ಬಂದರೂ ಕೂಡ ಅದನ್ನು ಎದುರಿಸಿ ನಿಲ್ಲುವ ಗಟ್ಟಿ ತನ್ನದವರು.

ಸಿಂಹ ರಾಶಿಯವರು ಎಲ್ಲ ರೀತಿಯಲ್ಲೂ ಕೂಡ ಪರ್ಫೆಕ್ಟ್ ಆಗಿರುತ್ತಾರೆ. ತಾವು ಅಂದುಕೊಂಡ ರೀತಯೇ ಬದುಕುತ್ತಾರೆ. ಆದರೆ ಸಂಗಾತಿ ವಿಷಯ ಬಂದಾಗ ಮಾತ್ರ ತಮಗೆ ಹೊಂದಾಣಿಕೆ ಆಗುವ ತಮ್ಮ ಮಾತನ್ನು ಕೇಳುವ ತಮ್ಮನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿಗಳನ್ನು ಆರಿಸಿಕೊಳ್ಳುವುದು ಸೂಕ್ತ. ಇಲ್ಲವಾದಲ್ಲಿ ಇವರಿಗೂ ಡಾಮಿನೇಟ್ ಗುಣಗಳು ಇರುವುದರಿಂದ ವೈ ಮನಸು ಉಂಟಾಗಬಹುದು.

ಇದೊಂದು ವಿಚಾರದಲ್ಲಿ ಮಾತ್ರ ಎಚ್ಚರಿಕೆಯಿಂದ ಇರಿ. ಹಾಗೆ ಮುಂಗೋಪವನ್ನು ಸಾಧ್ಯವಾದಷ್ಟು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಿ. ಕೋ’ಪ ನ್ಯಾಯವಾಗಿಯೇ ಇದ್ದರು ಎಲ್ಲಾ ಸ್ಥಳದಲ್ಲೂ ಕೋ’ಪ ತರುವುದು ಸೂಕ್ತವಲ್ಲ. ಉಳಿತಂತೆ ಸೂರ್ಯದೇವನ ಅನುಗ್ರಹ ನಿಮಗೆ ಯಾವಾಗಲೂ ಇರುತ್ತದೆ ಆದ್ದರಿಂದ ಸೂರ್ಯನಂತೆ ಪ್ರಜ್ವಲಿಸುತ್ತೀರಿ. ಪ್ರತಿದಿನ ತಪ್ಪದೆ ಸೂರ್ಯ ನಮಸ್ಕಾರ ಮಾಡಿ.

https://youtu.be/GpQZLlqcv14?si=qlVqQCY_PxCDu1Mb