Home Blog Page 94

ಯಾವ ರಾಶಿಯವರು ಯಾವ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ ನೋಡಿ.!

0

 

ಎಲ್ಲರಿಗೂ ಕೂಡ ಜೀವನದಲ್ಲಿ ಶ್ರೀಮಂತರಾಗಬೇಕು ಎನ್ನುವ ಆಸೆ ಇರುತ್ತದೆ. ಕೆಲವರು ಬೇಗ ಶ್ರೀಮಂತರಾಗಿ ದೇಶ ವಿದೇಶ ಸುತ್ತಬೇಕು, ನಮ್ಮ ಸ್ನೇಹಿತರು ಹಾಗೂ ಕುಟುಂಬದವರಲ್ಲಿ ನಾವೇ ಹೆಚ್ಚು ಹಣ ಹೊಂದಿರಬೇಕು, ಲಕ್ಸುರಿ ಲೈಫ್ ಲೀಡ್ ಮಾಡಬೇಕು ಎನ್ನುವ ಆಸೆ ಇಟ್ಟುಕೊಟ್ಟಿರುತ್ತಾರೆ. ಇನ್ನು ಕೆಲವರಿಗೆ ಆದಷ್ಟು ಬೇಗ ಹೆಚ್ಚು ಹಣ ಗಳಸಿ ಸೆಟಲ್ ಆಗಬೇಕು. ನೆಮ್ಮದಿಯಾಗಿ ಜೀವನದ ಸಣ್ಣ ಪುಟ್ಟ ಖುಷಿಗಳನ್ನು ಕೂಡ ಆನಂದಿಸ ಬೇಕು ಎನ್ನುವ ಮನಸ್ಸಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯವರು ಯಾವ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ ಗೊತ್ತಾ?…

ಮೇಷ ರಾಶಿ:-
ಮೇಷ ರಾಶಿಯವರು 19, 28, 37, 46, 55, 64 ಈ ವಯಸ್ಸಿನಲ್ಲಿ ಹೆಚ್ಚು ಹಣ ಗಳಿಸುತ್ತಾರೆ ಅಥವಾ ಹೆಚ್ಚು ಹಣ ಬರುವಂತಹ ಯಾವುದಾದರೂ ವ್ಯವಹಾರವನ್ನು ಆರಂಭಿಸುತ್ತಾರೆ. ಅವರಿಗೆ ಹಣಕಾಸಿನ ವಿಚಾರದಲ್ಲಿ ಈ ವಯಸ್ಸು ಶುಭವಾಗಿರುತ್ತದೆ

ವೃಷಭ ರಾಶಿ:- ಈ ರಾಶಿಯವರು ತಮ್ಮ ಕಠಿಣ ಪರಿಶ್ರಮದಿಂದಾಗಿ ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಹೋಗಿ ಹಣ ಪಡೆಯುತ್ತಾರೆ. ಹಾಗಾಗಿ ನಿಧಾನವಾಗಿ 29, 36, 45 ಮತ್ತೆ 56 ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ. ಈ ವಯಸ್ಸು ಇವರಿಗೆ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಿದೆ.

ಮಿಥುನ ರಾಶಿ:- ಮಿಥುನ ರಾಶಿಯವರಿಗೆ ಆಕಸ್ಮಿಕವಾಗಿ ಧನಲಾಭವಾಗುವ ಅವಕಾಶಗಳು ಇರುತ್ತವೆ. ತಂದೆಯ ಕಡೆಯಿಂದ ಬರುವ ಆಸ್ತಿಯಿಂದ ಇವರು ಹಣ ಮಾಡುತ್ತಾರೆ. 27, 36, 45, 57 ಈ ವರ್ಷಗಳಲ್ಲಿ ಅವರಿಗೆ ಹೆಚ್ಚು ಹಣ ಸಿಗುತ್ತದೆ ಮಿಥುನ ರಾಶಿಯವರಿಗೆ ಯಾವಾಗಲೂ ಮಂಗಳವಾರ ಹಾಗೂ ಶನಿವಾರ ಆಂಜನೇಯನಿಗೆ ಸಿಂಧೂರ ಅರ್ಪಿಸಿದರೆ ಬಹಳ ಬೇಗ ಶ್ರೀಮಂತರಾಗುತ್ತಾರೆ.

ಕರ್ಕಾಟಕ ರಾಶಿ:- 27, 23, 32, 48 ಮತ್ತು 58ನೇ ವಯಸ್ಸಿನಲ್ಲಿ ಹೆಚ್ಚು ಹಣ ಸಂಪಾದನೆ ಮಾಡುತ್ತಾರೆ. ಇವರಿಗೆ ಹೆಂಡತಿ ಮನೆ ಕಡೆಯಿಂದ ಹಣದಿಂದಾಗಿ ಅದೃಷ್ಟ ಬರುತ್ತದೆ. ಈ ರಾಶಿಯವರಿಗೆ ಎಂದೂ ಹಣಕಾಸಿನ ಸಮಸ್ಯೆ ಕಾಡಬಾರದು ಎಂದರೆ ಕರ್ಕಾಟಕ ರಾಶಿಯವರು ಲಕ್ಷ್ಮಿ ದೇವಿಗೆ ನಿಯಮಿತವಾಗಿ ಸುಗಂಧವನ್ನು ಅರ್ಪಿಸಬೇಕು.

ಸಿಂಹ ರಾಶಿ:- ಸಿಂಹ ರಾಶಿಯವರಿಗೆ 28, 32, 50 ಹಾಗೂ 60ನೇ ವಯೋಮಾನವು ಹಣ ಸಂಪಾದನೆಗೆ ದಾರಿ ತೋರಿಸುವ ವರ್ಷಗಳಾಗಿವೆ. ಈ ವರ್ಷದಲ್ಲಿ ಅವರು ಜೀವಮಾನದಲ್ಲಿ ಅತಿ ಹೆಚ್ಚು ಹಣವನ್ನು ಆ ವರ್ಷಗಳಲ್ಲಿ ಸಂಪಾದನೆ ಮಾಡುತ್ತಾರೆ ಮತ್ತು ಇವರು ಸಂಪಾದನೆ ಮಾಡಿಟ್ಟ ಹಣದಿಂದಲೇ ಹೆಚ್ಚು ಹಣ ಸಂಪಾದನೆ ಮಾಡುತ್ತಾರೆ.

ಕನ್ಯಾ ರಾಶಿ:- ಕನ್ಯಾ ರಾಶಿಯವರ ಬಹಳ ಚಿಕ್ಕ ವಯಸ್ಸಿಗೆ ಹಣ ನೋಡುತ್ತಾರೆ ಮತ್ತು ಕೊನೆಯವರೆಗೂ ಇವರಿಗೆ ಹಣದ ಹೊಲಿಗೆ ಹರಿಯುತ್ತಿರುತ್ತದೆ ಮೊದಲಿಗೆ ಪೋಷಕರಿಂದ ನಂತರ ವೃತ್ತಿಯಿಂದ ವ್ಯಾಪಾರ ತಿಂದ ಹಾಗೂ ಸಂಗಾತಿಯಿಂದ ಕೂಡ ಕೊನೆಗಾಲದಲ್ಲಿ ಮಕ್ಕಳಿಂದಲೂ ಕೂಡ ಇವರಿಗೆ ಹಣ ಬರುತ್ತದೆ.
15, 24, 33, 42ನೇ ವಯಸ್ಸಿನಲ್ಲಿ ಹೆಚ್ಚು ಹಣ ಮಾಡುತ್ತಾರೆ.

ತುಲಾ ರಾಶಿ:- ತುಲಾ ರಾಶಿಯವರಿಗೆ ಸ್ತ್ರೀಯರಿಂದ ಹಣ ಹೆಚ್ಚಾಗುವ ಯೋಗ ಇದೆ. 16, 34, 42 ಮತ್ತು 51 ನೇ ವರ್ಷಗಳು ಅದೃಷ್ಟದ ವರ್ಷಗಳಾಗಿವೆ. ಆದಾಯ ಹಾಗೂ ಖರ್ಚು ಎರಡನ್ನು ಸಮತೋಲನದಿಂದ ನೋಡುತ್ತಾರೆ. ಪ್ರತಿದಿನ ಸೋತುಹೋದಯದಲ್ಲಿ ಸೂರ್ಯನನ್ನು ನೋಡಿ ಅರ್ಘ್ಯ ಅರ್ಪಿಸುವುದರಿಂದ ಹಣಕಾಸಿನ ತೊಡಕುಗಳು ನಿವಾರಣೆ ಆಗುತ್ತದೆ, ಇನ್ನು ಹೆಚ್ಚಿನ ಹಣ ನೋಡುತ್ತಾರೆ.

ವೃಶ್ಚಿಕ ರಾಶಿ:- 35, 44, 53 ಮತ್ತು 63 ಈ ವಯೋಮಾನವು ಇವರಿಗೆ ಹಣಕಾಸಿನ ವಿಚಾರದಲ್ಲಿ ಉತ್ತಮವಾಗಿರುತ್ತದೆ. ಇವರು ಸಹ ಆಸ್ತಿಯ ಕಾರಣದಿಂದ ಅತಿ ಹೆಚ್ಚು ಹಣ ನೋಡುತ್ತಾರೆ. ಇವರಿಗೆ ಉಳಿದ ವರ್ಷಗಳಲ್ಲಿ ಹಣಕಾಸಿನ ಸಮಸ್ಯೆಗಳು ಕೂಡ ಇರುತ್ತದೆ. ಇವರ ಗಿಡಗಳಿಗೆ ನೀರು ಹಾಕಿದರೆ, ಮೂಕ ಪ್ರಾಣಿಗಳಿಗೆ ನೀರು, ಆಹಾರ ನೀಡಿದರೆ ಹಣಕಾಸಿನ ಸಮಸ್ಯೆಯಿಂದ ಹೊರ ಬರಬಹುದು.

ಧನಸ್ಸು ರಾಶಿ:- 36, 45, 54 ಮತ್ತು 63 ಹೆಚ್ಚು ಹಣಕಾಸಿನ ಲಾಭವನ್ನು ಉಂಟು ಮಾಡುವ ವಯಸ್ಸಾಗಿದೆ. ಚಿಕ್ಕ ವಯಸ್ಸಿನಿಂದ ಹಣಕಾಸಿನ ವಿಚಾರವಾಗಿ ಬಹಳ ಕ’ಷ್ಟ ಪಡುತ್ತಾರೆ ಆದರೆ ಅರ್ಧ ವಯಸ್ಸಿನ ನಂತರ ಬಹಳ ಒಳ್ಳೆಯದಾಗುತ್ತದೆ. ನಿಮ್ಮ ತಾಳ್ಮೆಯೇ ನಿಮ್ಮ ಅಸ್ತ್ರ.

ಮಕರ ರಾಶಿ:- 28, 37, 46, 55 ಈ ವರ್ಷಗಳಲ್ಲಿ ಶ್ರೀಮಂತರಾಗುತ್ತಾರೆ. ಸ್ವಂತ ವ್ಯಾಪಾರ ಮಾಡುವುದರಿಂದ ಇವರಿಗೆ ಹೆಚ್ಚು ಹಣ ಸಿಗುತ್ತದೆ. ಮಂಗಳವಾರ ಒಂದು ಹೊತ್ತು ಉಪವಾಸ ಮಾಡುವುದರಿಂದ ಬಹಳ ಉತ್ತಮ ಫಲಗಳನ್ನು ಕಾಣುತ್ತೀರಿ.

ಕುಂಭ ರಾಶಿ:- 29, 37, 48, 58 ಈ ವರ್ಷಗಳಲ್ಲಿ ನಿಮ್ಮ ಅದೃಷ್ಟದಿಂದ ಹಾಗೂ ದೇವರ ಕೃಪೆ ಕಷ್ಟಾಕ್ಷದಿಂದ ಹೆಚ್ಚು ಹಣ ಹೊಂದುತ್ತೀರಿ. ನಿಯಮಿತವಾಗಿ ದೇವಾಲಯಗಳಿಗೆ ಭೇಟಿ ಕೊಡಿ ಮತ್ತು ಬಾಳೆಹಣ್ಣನ್ನು ಅರ್ಪಿಸಿ.

ಮೀನಾ ರಾಶಿ:- 39, 48, 57 ಈ ವಯಸಲ್ಲಿ ಶ್ರೀಮಂತರಾಗುತ್ತಾರೆ. ಇವರು ಮಕ್ಕಳ ಕಾರಣದಿಂದ ಜೀವನದಲ್ಲಿ ಆದೃಷ್ಟ ಪಡೆಯುತ್ತಾರೆ.

https://youtu.be/2EkskrBUfOY?si=1YnXIMIdoBxoTVze

ಮಹಿಳೆಯರು ಯಾವ ದಿನ ತಲೆ ಸ್ನಾನ ಮಾಡಬೇಕು? ಯಾವ ದಿನ ಸ್ನಾನ ಮಾಡಿದರೆ ಏನು ಫಲ ನೋಡಿ.!

 

ನಮ್ಮ ಸಂಸ್ಕೃತಿಯಲ್ಲಿ ಹಿರಿಯರು ಕೆಲವು ಪದ್ಧತಿಗಳನ್ನು ಮಾಡಿದ್ದಾರೆ. ಇದು ಆರೋಗ್ಯದ ದೃಷ್ಟಿಯಿಂದ ಹಾಗೂ ಮನೆಯ ಸಕಾರಾತ್ಮಕ ವಾತಾವರಣವನ್ನು ಉತ್ತಮವಾಗಿಸುವ ಉದ್ದೇಶದಿಂದ ಸಕಾರಣವನ್ನು ಹೊಂದಿರುತ್ತದೆ. ಆದರೆ ಈಗಿನ ಕಾಲದಲ್ಲಿ ಅದನ್ನು ನಿರ್ಲಕ್ಷಿಸಿ ನಾವು ಕೆಲ ತಪ್ಪುಗಳನ್ನು ಮಾಡುವುದರಿಂದ ಅನೇಕ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಿದ್ದೇವೆ.

ಅಂತಹ ಕೆಲವು ನಿಯಮಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಸಾಧ್ಯವಾದಷ್ಟು ಇವುಗಳನ್ನು ತಪ್ಪದೇ ಪಾಲಿಸಿ.
* ಸೋಮವಾರ ತಲೆ ಸ್ನಾನ ಮಾಡುವುದರಿಂದ ಮನೆಯಲ್ಲಿ ಇಲ್ಲಸಲ್ಲದ ಜ’ಗ’ಳ’ಗಳು, ಮ’ನ’ಸ್ತಾ’ಪಗಳು, ಕ’ಲ’ಹಗಳು ಉಂಟಾಗುತ್ತವೆ. ಮನೆ ಹಾಗೂ ಮನಸ್ಸಿನ ಶಾಂತಿ ಹಾಳಾಗುತ್ತದೆ

* ಮಂಗಳವಾರ ತಲೆ ಸ್ನಾನ ಮಾಡಿದರೆ ಪತಿ ಜೊತೆ ಮ’ನ’ಸ್ತಾ’ಪವಾಗುತ್ತದೆ. ಪತಿ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ, ವಿನಾಕಾರಣ ದುಃ’ಖಕ್ಕೆ ಎಡೆ ಮಾಡಿಕೊಡುತ್ತದೆ
* ಬುಧವಾರ ತಲೆ ಸ್ನಾನ ಮಾಡುವುದು ಬಹಳ ಒಳ್ಳೆಯದು. ಈ ದಿನ ತಲೆ ಸ್ನಾನ ಮಾಡುವುದರಿಂದ ಮನೆಯ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಐಶ್ವರ್ಯ ವೃದ್ಧಿಯಾಗುತ್ತದೆ, ಕೀರ್ತಿ ಲಭಿಸುತ್ತದೆ

* ಗುರುವಾರ ತಲೆ ಸ್ನಾನ ಮಾಡಿದರೆ ಧನಹಾನಿ, ಸಂಪತ್ತು ಕ್ಷೀಣ, ವಿದ್ಯಾ ಹಾನಿ ಮುಂತಾದ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ
* ಮಹಿಳೆಯರು ಶುಕ್ರವಾರ ತಲೆ ಸ್ನಾನ ಮಾಡುವುದು ತುಂಬಾ ಶುಭಕರ ಎಂದು ಹೇಳಲಾಗುತ್ತದೆ. ಯಾಕೆಂದರೆ ಶುಕ್ರವಾರ ತಾಯಿ ಮಹಾಲಕ್ಷ್ಮಿಯ ವಾರವಾಗಿದೆ. ಈ ದಿನ ತಲೆ ಕೂದಲು ತೊಳೆದುಕೊಂಡು ಶುಕ್ರವಾರದ ಪೂಜೆ ಮಾಡಬೇಕು.

* ಶನಿವಾರದ ದಿನ ತಲೆ ಸ್ನಾನ ಮಾಡುವುದು ಬಹಳ ಒಳ್ಳೆಯದು. ಈ ರೀತಿ ಶನಿವಾರದ ದಿನ ತಲೆ ಸ್ನಾನ ಮಾಡುವವರ ಆರೋಗ್ಯ ವೃದ್ಧಿಯಾಗುತ್ತದೆ, ಅವರಿಗೆ ಎಲ್ಲ ರೀತಿಯ ಸೌಖ್ಯ ಗಳು ದೊರೆಯುತ್ತದೆ ಮತ್ತು ಅವರ ಆಯುಷ್ಯ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ
* ಭಾನುವಾರ ತಲೆ ಸ್ನಾನ ಮಾಡುವುದರಿಂದ ಯಾವುದೇ ರೀತಿಯ ದೋಷ ಇರುವುದಿಲ್ಲ.

* ಹೆಣ್ಣು ಮಕ್ಕಳು ತಲೆ ಸ್ನಾನ ಮಾಡಿದ ದಿನವೇ ತಲೆಗೆ ಎಣ್ಣೆ ಹಚ್ಚುವುದರಿಂದ ಅವರ ಸೋದರ ಮಾವನಿಗೆ ತೊಂದರೆ ಎಂದು ಹೇಳಲಾಗುತ್ತದೆ

* ಯಾವುದೇ ಕಾರಣಕ್ಕೂ ರಾತ್ರಿ ಹೊತ್ತು ಮಹಿಳೆಯರು ತಲೆ ಕೂದಲು ತೊಳೆದುಕೊಳ್ಳಬಾರದು, ಬೆಳಗ್ಗೆ ಎದ್ದ ಕೂಡಲೇ ತಲೆ ಸ್ನಾನ ಮಾಡಬಹುದಾದ ದಿನಗಳಲ್ಲಿ ಮೊದಲು ಆ ಕಾರ್ಯ ಪೂರ್ತಿ ಮಾಡಿ ನಂತರ ಮನೆಯ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳಬೇಕು. ಆಲಸ್ಯದಿಂದ ನಿಧಾನವಾಗಿ ಸ್ನಾನ ಮಾಡುವುದು ಕೂಡ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಹಾಗೂ ಇದು ಪದ್ಧತಿ ಕೂಡ ಅಲ್ಲ. ಈ ರೀತಿ ಮಾಡುವುದರಿಂದ ಅ’ನಾ’ರೋ’ಗ್ಯ ಹಾಗೂ ಹಣಕಾಸಿನ ಹಾನಿ ಹೆಚ್ಚಾಗುತ್ತದೆ.

* ಯಾವುದೇ ಹಬ್ಬ ಹವನ ಹೋಮ ಅಥವಾ ಶುಭ ಕಾರ್ಯಗಳಲ್ಲಿ ಭಾಗಿಯಾಗಬೇಕಾದ ದಿನ ಮಹಿಳೆಯರು ಕಡ್ಡಾಯವಾಗಿ ತಲೆ ಸ್ನಾನ ಮಾಡಿಕೊಂಡೆ ಪಾಲ್ಗೊಳ್ಳಬೇಕು
* ಮುತ್ತೈದೆಯರು ಮನೆಗೆ ಬಂದಾಗ ತಲೆ ಸ್ನಾನ ಮಾಡಿದ ದಿನಗಳಂದು ಅವರಿಗೆ ಕುಂಕುಮ ಕೊಡಬೇಕು

* ತಲೆ ಸ್ನಾನ ಮಾಡಲು ನಿಷಿದ್ಧ ಇರುವ ದಿನಗಳಲ್ಲಿ ಕೂದಲು ಬಿಟ್ಟು ಮೈಗೆ ಸ್ನಾನ ಮಾಡಿ ಮನೆಯಲ್ಲಿ ಪೂಜೆ ಮಾಡಬಹುದು. ಆದರೆ ದಿನಪೂರ್ತಿ ಸ್ನಾನ ಮಾಡದೆ ಇರುವುದು ಹಾಗೂ ಸ್ನಾನ ಮಾಡದೆ ದೇವರ ಮನೆಯ ವಸ್ತುಗಳನ್ನು ದೇವರ ಫೋಟೋಗಳನ್ನು ಹಾಗೂ ದೇವರ ಪ್ರಸಾದಗಳನ್ನು ಸ್ವೀಕರಿಸುವುದು ಮಹಾ ಪಾಪ

* ಮನೆಯಲ್ಲಿ ಒಳ್ಳೆಯ ಕಾರ್ಯಕ್ಕೆ ಅಥವಾ ತೀರ್ಥಯಾತ್ರೆಗೆ ಅಥವಾ ಪ್ರಯಾಣ ಹೊರಟ ಸಮಯದಲ್ಲಿ ಮನೆಯಲ್ಲಿರುವ ಮಹಿಳೆಯರು ಅವರು ಹೋದ ನಂತರ ತಲೆಕೂದಲು ತೊಳೆದುಕೊಳ್ಳಬಾರದು
* ಮಹಿಳೆಯರು ತಲೆ ಸ್ನಾನ ಮಾಡುವ ಮುನ್ನ ತಲೆಗೆ ಒಂದೆರಡು ಹನಿ ಹರಳೆಣ್ಣೆ ಹಾಗೂ ಮುಖ ಕೈ ಕಾಲುಗಳಿಗೆ ಎರಡು ಚಿಟಿಕೆ ಅರಿಶಿಣ ಪುಡಿಯನ್ನು ಹಚ್ಚಿಕೊಂಡು ಸ್ನಾನ ಮಾಡಬೇಕು ಈ ರೀತಿ ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ.

ಸಾಲ ಲಕ್ಷ ಇರಲಿ ಕೋಟಿ ಇರಲಿ, ಶತ್ರು ಕಾಟ ಇರಲಿ, ಲವಂಗದ ಈ ಪರಿಹಾರಗಳು ಜೀವನದ ದಿಕ್ಕನ್ನೇ ಬದಲಾಯಿಸುತ್ತವೆ.!

 

ಆಯುರ್ವೇದದಲ್ಲಿ ಲವಂಗಕ್ಕೆ ಮಹತ್ವದ ಸ್ಥಾನ ಇದೆ ಲವಂಗ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು ಲವಂಗದಿಂದ ಆರೋಗ್ಯ ಮಾತ್ರ ಅಲ್ಲದೆ ಲವಂಗದಿಂದ ಮಾಡುವ ಕೆಲವು ತಂತ್ರಗಳ ಮೂಲಕ ಜೀವನದ ಅನೇಕ ಕಷ್ಟಗಳಿಗೆ ಪರಿಹಾರ ಪಡೆಯಬಹುದು. ಅದರಲ್ಲಿ ನಿಮಗೆ ಉಪಯುಕ್ತವಾಗುವ ಕೆಲವು ಉಪಾಯಗಳು ಹೀಗಿವೆ ನೋಡಿ.

* ನೀವು ಯಾವುದಾದರೂ ಕೆಲಸ ಕಾರ್ಯವನ್ನು ಆರಂಭಿಸಿ ಅದು ಅರ್ಧಕ್ಕೆ ಸ್ಥಗಿತವಾಗಿದ್ದರೆ ಅಥವಾ ನಿಮ್ಮ ಆಲೋಚನೆ ಪ್ರಕಾರ ಆ ಕಾರ್ಯ ಜರುಗಲು ಅಡೆತಡೆಗಳು ಇವೆ ಎಂದು ನಿಮಗೆ ಅನಿಸುತ್ತಿದ್ದರೆ ಈ ರೀತಿಯ ತೊಂದರೆಗಳು ಪರಿಹಾರ ಆಗಲು ಬುಧವಾರದಂದು ವೀಳ್ಯದೆಲೆಗೆ ಲವಂಗ ಹಾಗೂ ಏಲಕ್ಕಿ ಹಾಕಿ ಪಾನ್ ರೀತಿ ಮಾಡಿ ಅದನ್ನು ಗಣಪತಿ ದೇವಸ್ಥಾನಕ್ಕೆ ಅರ್ಪಿಸಿ. ಇದರಿಂದ ವಿಘ್ನ ವಿನಾಶಕ ಸಂಕಷ್ಟಹರ ಗಣಪತಿಯು ನಿಮ್ಮ ಎಲ್ಲಾ ರೀತಿಯ ಕಷ್ಟಗಳನ್ನು ಪರಿಹಾರ ಮಾಡಿ ದಾರಿ ತೋರಿಸುತ್ತಾರೆ.

* ಮನೆಯಲ್ಲಿ ಯಾವ ಕೆಲಸಗಳು ಕೈಗೂಡುತ್ತಿಲ್ಲ, ಮನೆ ವಾತಾವರಣ ಉತ್ತಮವಾಗಿಲ್ಲ. ಸದಾ ಕಿರಿಕಿರಿ ಬೇಸರ ಒಂದಲ್ಲ ಒಂದು ಕ’ಲ’ಹ ಮತ್ತು ಯಾವುದೇ ಕೆಲಸ ಮಾಡಲು ಹೊರಟರು ಕೂಡ ಪೂರ್ತಿಯಾಗುತ್ತಿಲ್ಲ ಬಹಳ ತಡವಾಗುತ್ತಿದೆ, ಈ ರೀತಿಯ ಸಮಸ್ಯೆಗಳು ಇದ್ದರೆ ಪ್ರತಿದಿನ ದೇವರಿಗೆ ಆರತಿ ಮಾಡುವಾಗ ಎರಡು ಲವಂಗವನ್ನು ಇಟ್ಟು ಆರತಿ ಮಾಡಿ ಪೂಜೆ ಆದ ಬಳಿಕ ಆ ಲವಂಗವನ್ನು ಯಾವುದಾದರೂ ಗಿಡದ ಬುಡದಲ್ಲಿ ಹಾಕಿ. ಆ ಲವಂಗವನ್ನು ಯಾರು ತುಳಿಯಬಾರದು. ಈ ರೀತಿ ಮಾಡುವುದರಿಂದ ಕೂಡ ಸಮಸ್ಯೆ ಬಗ್ಗೆ ಹರಿಯುತ್ತದೆ.

* ನಿಮ್ಮ ಮನೆಯಲ್ಲಿ ನ’ಕಾ’ರಾ’ತ್ಮ’ ಕ ಶಕ್ತಿಗಳ ಪ್ರಭಾವವಾಗಿದ್ದರೆ ಅದನ್ನು ತಡೆಯಲು 7-8 ಮೆಣಸು ತೆಗೆದುಕೊಂಡು ಅದನ್ನು ಯಾವುದಾದರೂ ಒಂದು ಮೂಲೆಯಲ್ಲಿ ಇಟ್ಟು ಪೂರ್ತಿ ಬೂದಿ ಆಗುವವರೆಗೂ ಕೂಡ ಕರ್ಪೂರ ಅಥವಾ ಸಾಂಬ್ರಾಣಿಯೊಂದಿಗೆ ದಹಿಸಿ. ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳ ಪ್ರಭಾವ ನಾಶವಾಗುತ್ತದೆ ಮತ್ತು ಮನೆಯ ವಾತಾವರಣ ಸಕಾರಾತ್ಮಕವಾಗುತ್ತದೆ.

ಈ ರೀತಿ ಮಾಡುವುದರಿಂದ ಯಾವುದೇ ನಕಾರಾತ್ಮಕ ಶಕ್ತಿಗಳಿಗೆ ಮನೆ ಒಳಗಡೆ ಪ್ರವೇಶ ಆಗುವುದಿಲ್ಲ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯ ವಾತಾವರಣ ಉಂಟಾಗುತ್ತದೆ ಮತ್ತು ಅಕ್ಕ ಪಕ್ಕದ ಮನೆಯವರು ಸಂಬಂಧಿಕರು ಹಾಗೂ ಸ್ನೇಹಿತರ ನಡುವೆ ವೈ’ಷ’ಮ್ಯಗಳು ಉಂಟಾಗಿದ್ದರೆ ಅವು ಕೂಡ ನಿವಾರಣೆ ಆಗುತ್ತವೆ.

* ಹಣಕಾಸಿನ ತೊಂದರೆ ವಿಪರೀತವಾಗಿದ್ದರೆ ಯಾರು ಕಾಣದ ಜಾಗಕ್ಕೆ ಹೋಗಿ ಅದರಲ್ಲೂ ಮೂರು ಅಥವಾ ನಾಲ್ಕು ದಾರಿಗಳು ಕೂಡುವ ಸ್ಥಳಕ್ಕೆ ಹೋದರೆ ಇನ್ನೂ ಒಳ್ಳೆಯದು. ಒಂದೆರಡು ಲವಂಗ ಹಾಗೂ ಒಂದೆರಡು ಕಾಳು ಮೆಣಸು ತೆಗೆದುಕೊಂಡು ಎರಡನ್ನು ತಲೆಯಿಂದ ಪಾದದವರೆಗೆ ದೃಷ್ಟಿ ತೆಗೆದು ದೂರ ಹೋಗಿ ಬೀಳುವಂತೆ ಎಸೆದು ತಿರುಗಿ ನೋಡದೆ ನೀವು ಮನೆಗೆ ಬನ್ನಿ . ಮನೆಗೆ ಬಂದು ಕೈ ಕಾಲು ಮುಖ ತೊಳೆದುಕೊಂಡು ನಿಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಿ ನಿಮ್ಮ ಹಣಕಾಸಿನ ತೊಂದರೆ ನಿವಾರಣೆಯಾಗುತ್ತದೆ.

* ನೀವು ಯಾವುದಾದರೂ ಒಳ್ಳೆಯ ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗುವಾಗ ಆ ಕಾರ್ಯ ಗೆಲ್ಲಬೇಕು ಎಂದರೆ ನಿಮ್ಮ ಇಷ್ಟ ದೇವರು ಹಾಗೂ ಕುಲ ದೇವರಿಗೆ ಮನಸಾರೆ ಪ್ರಾರ್ಥಿಸಿ 2 ಲವಂಗವನ್ನು ಬಾಯಿಗೆ ಹಾಕಿಕೊಂಡು ಹೋಗಿ ನೀವು ನಿರೀಕ್ಷೆ ಮಾಡುವ ಫಲಿತಾಂಶ ಸಿಗುತ್ತದೆ.

* ಒಂದು ವೇಳೆ ಇದು ಸಾಧ್ಯವಾಗಿಲ್ಲ ಎಂದರೆ ಮಂಗಳವಾರದಂದು ಆಂಜನೇಯನನ್ನು ಪ್ರಾರ್ಥಿಸಿ, ಆಂಜನೇಯನಿಗಾಗಿ ದೀಪ ಹಚ್ಚಿ ಆ ದೀಪದಲ್ಲಿ ಎರಡು ಲವಂಗ ಹಾಕಿ ಮತ್ತು ಹನುಮಾನ್ ಚಾಲೀಸ ವನ್ನು ಪಠಿಸಿ. 21 ಮಂಗಳವಾರಗಳ ಕಾಲ ಇದನ್ನು ಮಾಡಿದರೆ ಖಂಡಿತವಾಗಿಯೂ ನಿಮ್ಮ ಇಚ್ಛೆಯಂತೆ ಕಾರ್ಯ ಕೈಗೂಡುತ್ತದೆ. ಆದರೆ ನೀವು ಕೈಗೊಂಡಿರುವ ಕಾರ್ಯ ಒಳ್ಳೆಯ ಕಾರ್ಯ ವಾಗಿರಬೇಕು ಇದರಿಂದ ನಿಮಗೆ ಮತ್ತು ನಿಮ್ಮವರಿಗೆ ಹಾಗೂ ಇತರರಿಗೆ ಒಳ್ಳೆಯದಾಗುವ ರೀತಿ ಇರಬೇಕು.

* ನೀವು ಯಾರಿಗಾದರೂ ಕೊಟ್ಟ ಹಣ ವಾಪಸ್ ಬರದೇ ಇದ್ದರೆ ಅಥವಾ ನಿಮ್ಮ ಹಣ ನೀವೇ ಪಡೆದುಕೊಳ್ಳಲು ತೊಂದರೆ ಆಗುತ್ತಿದ್ದರೆ ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನದಂದು 11ರಿಂದ 21 ಲವಂಗಗಳನ್ನು ತೆಗೆದುಕೊಂಡು ತಾಯಿ ಮಹಾಲಕ್ಷ್ಮಿಯನ್ನು ಸಮಸ್ಯೆಯಿಂದ ಕಾಪಾಡುವಂತೆ, ಮನಸಾರೆ ಪ್ರಾರ್ಥಿಸಿ, ತಾಯಿ ಲಕ್ಷ್ಮಿ ಆಶೀರ್ವಾದದಿಂದ ನಿಮ್ಮ ಪಾಲಿನ ಹಣ ನಿಮಗೆ ಬಂದು ಸೇರುತ್ತದೆ.

ರಸ್ತೆಯಲ್ಲಿ ಬೆಳ್ಳಿ ಬಂಗಾರ ಸಿಕ್ಕಿದರೆ ಏನು ಫಲ? ನಂತರ ಅದನ್ನು ಏನು ಮಾಡಬೇಕು ಗೊತ್ತಾ.?

 

ನಾವು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕೆಲವು ವಸ್ತುಗಳು ನಮಗೆ ಸಿಗುತ್ತವೆ. ನಮ್ಮ ಜೊತೆ, ನಮಗಿಂತ ಮುಂಚೆ ನಾಲ್ಕು ಜನ ಮಾತನಾಡಿಕೊಂಡು ಬರುತ್ತಿದ್ದರೂ ಕೂಡ ಅವರು ನಮ್ಮ ಮುಂದೆ ಹಾದು ಹೋಗಿದ್ದರು ಅವರ ಕಣ್ಣಿಗೆ ಬೀಳದ ವಸ್ತುಗಳು ನಮ್ಮ ಕಣ್ಣಿಗೆ ಕಾಣಿಸುತ್ತವೆ.

ಆಗ ನಾವು ಅದನ್ನು ಗುರುತಿಸಿ ಇದು ನಮ್ಮ ಕಣ್ಣಿಗೆ ಯಾಕೆ ಕಾಣಿಸಿತು ಏನೋ ಸೂಚನೆ ಇರಬೇಕು ಎಂದು ಯೋಚಿಸುತ್ತಾ ‌ಆಶ್ಚರ್ಯದೊಂದಿಗೆ ಸಂತೋಷ ಪಡುತ್ತೇವೆ. ಆದರೆ ರಸ್ತೆಯಲ್ಲಿ ಈ ರೀತಿ ಯಾವ ವಸ್ತುಗಳು ಸಿಗಬಹುದು, ಸಿಗಬಾರದು, ಬೆಲೆ ಬಾಳುವ ವಸ್ತುಗಳಾದ ಬೆಳ್ಳಿ ಬಂಗಾರ ರಸ್ತೆಯಲ್ಲಿ ಸಿಕ್ಕರೆ ಏನು ಫಲ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.

ನೀವೇನಾದರೂ ರಸ್ತೆಯಲ್ಲಿ ಹೋಗುವಾಗ ನಿಮ್ಮ ಕಣ್ಣಿಗೆ ಬಂಗಾರ ಕಾಣಿಸಿದರೆ ಖಂಡಿತವಾಗಿಯೂ ಅದನ್ನು ಯಾರಾದರೂ ಬೀಳಿಸಿಕೊಂಡು ಹೋಗಿರುತ್ತಾರೆ. ಹೆಚ್ಚಿನ ಸಮಯದಲ್ಲಿ ಮಹಿಳೆಯರ ಒಡವೆಗಳು ಬಿದ್ದು ಹೋಗಿರುತ್ತವೆ ಅದರಲ್ಲೂ ಮಾಂಗಲ್ಯ ಸರ ಮುಂತಾದ ಪವಿತ್ರವಾದ ವಸ್ತುಗಳು ಬಿದ್ದು ಹೋಗಿದ್ದರೆ ಅದು ಸಿಕ್ಕಿದಾಗ ತೆಗೆದುಕೊಳ್ಳಿ ಆದರೆ ಮತ್ತೆ ಅವರು ಅದನ್ನು ಹುಡುಕಿಕೊಂಡು ಬರುತ್ತಿದ್ದರೆ ಅವರನ್ನು ಪರೀಕ್ಷಿಸಿ ನಿಜವಾಗಿಯೂ ಅದು ಅವರದ್ದೇ ಆಗಿದ್ದರೆ ಕೊಟ್ಟುಬಿಡಿ.

ಯಾವುದೇ ಕಾರಣಕ್ಕೂ ಬೇರೆಯವರ ಮಂಗಳಸೂತ್ರವಾಗಲಿ ಅಥವಾ ಇನ್ಯಾವುದೇ ಬಂಗಾರದ ಒಡವೆ ಆಗಿದ್ದರು ನಿಜವಾಗಿ ಅದು ಅವರದ್ದೇ ಆಗಿದ್ದರೆ ಅವರಿಗೆ ಮೋಸ ಮಾಡಿ ನಿಮ್ಮ ಬಳಿ ಇಟ್ಟುಕೊಳ್ಳಬೇಡಿ. ಒಂದು ವೇಳೆ ಯಾರು ಸಿಗಲೇ ಇಲ್ಲ ನಿಮ್ಮ ಕೈಗೆ ಈಗ ಒಡವೆ ಸಿಕ್ಕಿದೆ ಎಂದರೆ ನೀವು ಅದನ್ನು ತೆಗೆದುಕೊಂಡು ಯಾವುದಾದರೂ ದೇವಸ್ಥಾನಕ್ಕೆ ಅರ್ಪಿಸಿ ಯಾಕೆಂದರೆ ಸಿಕ್ಕ ಬಂಗಾರವನ್ನು ಮನೆಗೆ ತೆಗೆದುಕೊಂಡು ಹೋಗುವುದರಿಂದ ಕುಟುಂಬದ ಸದಸ್ಯರಿಗೆ ಕಷ್ಟಗಳು ಬರುತ್ತವೆ ಆ ಮನೆ ಏಳಿಗೆ ಆಗುವುದಿಲ್ಲ ಎಂದು ಹೇಳುತ್ತದೆ ಶಾಸ್ತ್ರ.

ಅದೇ ರೀತಿಯಾಗಿ ಬೆಳ್ಳಿಯ ಕಾಲ್ಗೆಜ್ಜೆ ಅಥವಾ ಬೆಳ್ಳಿಯ ಸರ ಉಂಗುರ ಬೆಳ್ಳಿಯ ಉಡುದಾರ ಮುಂತಾದ ವಸ್ತುಗಳು ಸಿಕ್ಕರೆ ಅದು ನಿಮಗೆ ಶುಭ ಹಾಗು ಅಶುಭ ಯಾವುದೇ ರೀತಿಯ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ನೀವು ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗುವುದರ ಬದಲು ಯಾರಾದರೂ ಕ’ಷ್ಟದಲ್ಲಿರುವವರಿಗೆ ಅದನ್ನು ಕೊಟ್ಟುಬಿಡಿ ಅಥವಾ ಅದನ್ನು ಕೊಡುವುದರ ಜೊತೆಗೆ ನಿಮ್ಮ ಕೈಲಾದಷ್ಟು ಸಹಾಯವನ್ನು ಮಾಡಿ.

ಆಗ ನಿಮಗೂ ಒಳ್ಳೆಯದಾಗುತ್ತದೆ, ತೆಗೆದುಕೊಂಡವರಿಗೂ ಸಹಾಯವಾಗುತ್ತದೆ ಮತ್ತು ಕಳೆದುಕೊಂಡವರಿಗೆ ಪರೋಕ್ಷವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ. ಹಾಗೆ ನಿಮಗೆ ಏನಾದರೂ ತಾಮ್ರದ ಪದಾರ್ಥಗಳು ಸಿಕ್ಕರೆ ಅದು ಬಹಳ ಶುಭ ಸೂಚನೆ ಆಗಿದೆ. ಅವು ನಿಮ್ಮ ಜೀವನದಲ್ಲಿ ಒಳ್ಳೆಯ ಸಂಗತಿಗಳು ಘಟಿಸುತ್ತವೆ ಎನ್ನುವುದನ್ನು ನೀಡುವ ಮುನ್ಸೂಚನೆಗಳಾಗಿವೆ.

ಮತ್ತು ಕಬ್ಬಿಣದ ವಸ್ತುಗಳು ಸಿಕ್ಕರೆ ಅದರಲ್ಲೂ ಹಸು ಹಾಗೂ ಕುದುರೆ ಕಾಲಿಗೆ ಕಟ್ಟಿರುವ ಕಬ್ಬಿಣದ ಲಾಳ ಸಿಕ್ಕರೆ ನೀವು ಬಹಳ ಬೇಗ ಆರ್ಥಿಕ ಅಭಿವೃದ್ಧಿ ಹೊಂದುತ್ತೀರಿ ನಿಮ್ಮ ಜೀವನದಲ್ಲಿ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಶೀಘ್ರದಲ್ಲಿ ಉಂಟಾಗಿ ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆಗಳು ಪರಿಹಾರ ಆಗಿ ಬಹಳ ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದುತ್ತಿರಿ ಎನ್ನುವುದನ್ನು ಸೂಚಿಸುವ ಶಕುನವಾಗಿದೆ.

ಈ ರೀತಿ ತಾಮ್ರ ಅಥವಾ ಕಬ್ಬಿಣದ ವಸ್ತುಗಳು ಸಿಕ್ಕಾಗ ಅದನ್ನು ಮನೆ ಮುಂಭಾಗದಲ್ಲಿರುವ ಯಾವುದಾದರೂ ಗಿಡದ ಬುಡದಲ್ಲಿ ಹಾಕಿ ಮಣ್ಣನ್ನು ಮುಚ್ಚಿ. ಒಂದು ವೇಳೆ ಹಣ ಸಿಕ್ಕಿದರೆ ಕ’ಷ್ಟದಲ್ಲಿರುವವರಿಗೆ ಸಹಾಯ ಮಾಡಲು ಬಳಸಿಕೊಳ್ಳಿ.

ಸಂಪತ್ತು & ಆರೋಗ್ಯವೃದ್ಧಿಗಾಗಿ ಈ ಟೆಕ್ನಿಕ್ ಮಾಡಿ ಸಾಕು ಕೇವಲ 3 ದಿನದಲ್ಲಿ ನೀವು ಅಂದುಕೊಂಡಂತೆ ಆಗುತ್ತೆ.!

 

ಆಯುರ್ವೇದ, ಯೋಗ ಹಾಗೂ ಪ್ರಾಣಾಯಾಮದಿಂದ ಗುಣವಾಗದ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ಹೇಳಬಹುದು. ಅದು ದೈಹಿಕ ಆರೋಗ್ಯವಾಗಲಿ ಅಥವಾ ಮಾನಸಿಕ ಕಾಯಿಲೆಯಾಗಲಿ ಕಟ್ಟುನಿಟ್ಟಾಗಿ ಚಿಕಿತ್ಸೆಯನ್ನು ಪಾಲಿಸಿದ್ದಲ್ಲಿ ಖಂಡಿತವಾಗಿಯೂ ಗುಣವಾಗುತ್ತದೆ.

ಇಂತಹದ್ದೇ ಒಂದು ಗಂಭೀರ ಸಮಸ್ಯೆಗೆ ನಾವು ಇಂದು ಈ ಅಂಕಣದಲ್ಲಿ ಸುಲಭ ಪರಿಹಾರವನ್ನು ತಿಳಿಸುತ್ತೇವೆ. ಪ್ರಾಣಾಯಾಮದ ಈ ಒಂದು ಮುದ್ರೆಯಿಂದಾಗಿ ನಿಮ್ಮ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಮಾತ್ರವಲ್ಲದೆ ಆರ್ಥಿಕ ಸಮಸ್ಯೆಯನ್ನು ಕೂಡ ಪರಿಹರಿಸಿಕೊಳ್ಳಬಹುದು ಎಂದರೆ ನಿಮಗೆ ಆಶ್ಚರ್ಯ ಆಗುತ್ತದೆ. ಇದರ ಬಗ್ಗೆ ತಿಳಿದುಕೊಳ್ಳಲು ಅಂಕಣವನ್ನು ಕೊನೆಯವರೆಗೂ ಓದಿ.

ನಿಮಗೆ ಯಾವಾಗಲು ಸುಸ್ತಾಗುತ್ತಿದ್ದರೆ, ವಿಪರೀತ ಆಯಾಸವಾಗಿ ಯಾವುದರಲ್ಲೂ ಆಸಕ್ತಿ ಇಲ್ಲ ಎಂದರೆ, ತಲೆ ಸುತ್ತು ಬರುತ್ತಿದ್ದರೆ, ನಿಮಗೆ ಇದೇ ಕಾರಣದಿಂದಾಗಿ ಬದುಕು ಬೇಸರವಾಗಿದ್ದರೆ ಈ ಆರೋಗ್ಯ ಸಮಸ್ಯೆ ನಿಮ್ಮ ಮಾನಸಿಕ ಸಮಸ್ಯೆಯಾಗಿಯೂ ಕೂಡ ಕಾಡುತ್ತಿದ್ದರೆ ಈಗ ನಾವು ಹೇಳುವ ಈ ಮುದ್ರೆಯನ್ನು ಮಾಡಿ ನೂರಕ್ಕೆ ನೂರರಷ್ಟು ಫಲಿತಾಂಶ ಕಾಣುತ್ತೀರಿ.

ಈ ಸಮಸ್ಯೆ ಮಾತ್ರ ಅಲ್ಲದೆ ಧೂಮಪಾನ, ಮಧ್ಯಪಾನ ಟೀ ಕಾಫಿ ಕುಡಿಯುವ ಚಟ, ತಂಬಾಕು ಇಂತಹವುಗಳ ದುರಾಭ್ಯಾಸ ಇರುವವರು ತಾವೇ ಮನಸ್ಸು ಮಾಡಿ ಅದರಿಂದ ಆಚೆ ಬರಬೇಕು ಎಂದು ಸಂಕಲ್ಪ ಮಾಡಿದ್ದರೆ ಅವರು ಕೂಡ ಈ ಒಂದು ಮುದ್ರೆಯನ್ನು ಅಭ್ಯಾಸ ಮಾಡಿದರೆ ಬಹಳ ಬೇಗ ಉತ್ತಮವಾದ ರಿಸಲ್ಟ್ ಸಿಗುತ್ತದೆ. ಈ ಒಂದು ಮುದ್ರೆಯನ್ನು ಯಾರು ಬೇಕಾದರೂ ಮಾಡಬಹುದು ಆದರೆ ಯಾವುದೇ ಕಾರಣಕ್ಕೂ ಅಧಿಕ ರಕ್ತದೊತ್ತಡ ಇರುವವರು ಈ ಮುದ್ರೆಯನ್ನು ಮಾಡಬಾರದು.

ಸೂಕ್ತ ಗುರುಗಳ ಅಥವಾ ಇದರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ಮಾರ್ಗದರ್ಶನದಲ್ಲಿ ನೀವು ಈ ಮುದ್ರೆ ಹಾಕಬಹುದು. ಸುಖಾಸನ, ಪದ್ಮಾಸನ ಸಿದ್ದಾಸನ, ವಜ್ರಾಸನ ಯಾವುದೇ ಆಸನದಲ್ಲಿ ಅಥವಾ ಹಾಸಿಗೆ, ಚೇರ್ ಮೇಲೆ ಕುಳಿತುಕೊಂಡು ಕೂಡ ನೀವು ಈ ಮುದ್ರೆಯನ್ನು ಹಾಕಬಹುದು.

ಈ ಮುದ್ರೆ ಹೆಸರು ವಜ್ರಮುದ್ರೆ ಎಂದು, ಇದನ್ನು ಹಾಕುವುದು ಹೇಗೆಂದರೆ ಯಾವುದಾದರೂ ಒಂದು ಆಸನದಲ್ಲಿ ಕುಳಿತುಕೊಳ್ಳಿ ಅಥವಾ ನೆಲದ ಮೇಲೆ ಚಾಪೆ ಹಾಕಿ ಚಾಪೆಯ ಮೇಲೆ ಕುಳಿತುಕೊಳ್ಳಿ. ನಿಮ್ಮ ಎರಡು ತೋರು ಬೆರಳುಗಳನ್ನು ನೇರ ಮಾಡಿಕೊಳ್ಳಿ ಹೆಬ್ಬರಳಿನ ತುದಿಗೆ ಮಧ್ಯದ ಬೆರಳು ಉಂಗುರದ ಬೆರಳಿನಿಂದ ಪ್ರೆಸ್ ಮಾಡಿ, ಕಿರುಬೆರಳಿನ್ನು ಸೇರಿಸಿ.

ಈಗ ಎರಡು ಕೈಗಳಲ್ಲಿ ಈ ಮುದ್ರೆ ಮಾಡಿ ಮಂಡಿ ಮೇಲೆ ಇಟ್ಟುಕೊಳ್ಳಿ ಮತ್ತು ನಿಮ್ಮ ತೋರು ಬೆರಳು ನೆಲವನ್ನು ತೋರಿಸುತ್ತಿರುವಂತೆ ಇಟ್ಟುಕೊಳ್ಳಿ. ಕಣ್ಣು ಮುಚ್ಚಿ ದೀರ್ಘವಾಗಿ ಉಸಿರು ತೆಗೆದು ಕೊಂಡು ನಿಧಾನವಾಗಿ ಉಸಿರು ಬಿಟ್ಟು ನಂತರ ಓಂಕಾರವನ್ನು ಮನಸ್ಸಿನಲ್ಲಿ ಹೇಳಿಕೊಳ್ಳಿ ಅಥವಾ ಬಾಯಿ ಬಿಡದಂತೆ ಓಂಕಾರ ಹೇಳಬೇಕು. ಈ ರೀತಿ ದಿನದಲ್ಲಿ 2-3 ನಿಮಿಷಗಳ ಕಾಲ ಮಾತ್ರ ಬೆಳಗ್ಗೆ ಅಥವಾ ಸಂಜೆ ಈ ಮುದ್ರೆಯನ್ನು ಹಾಕಬೇಕು.

ಈ ರೀತಿ ಮಾಡಿದರೆ ಸಾಕು ಈ ಮೇಲೆ ತಿಳಿಸಿದ ನಿಮ್ಮ ಸಮಸ್ಯೆಗಳು ಪರಿಹಾರ ಆಗುತ್ತದೆ ಮತ್ತು ಇದು ಹೇಗೆ ಆರ್ಥಿಕ ಸಮಸ್ಯೆಗೆ ಪರಿಹಾರ ನೀಡುತ್ತದೆ ಎಂದರೆ ಈ ರೀತಿ ಮಾಡುವುದರಿಂದ ನಿಮ್ಮ ದೇಹ ಮತ್ತು ಮನಸಿನಲ್ಲಿರುವ ನ’ಕ’ರಾ’ತ್ಮ’ಕ ಎನರ್ಜಿ ಹೊರ ಹೋಗುತ್ತದೆ ಮನಸ್ಸು ಫ್ರೆಶ್ ಆಗುತ್ತದೆ.

ಇದರಿಂದ ನಿಮ್ಮ ಆಲಸ್ಯ ಎಲ್ಲಾ ಹೋಗಿ ನಿಮಗೆ ಚೈತನ್ಯ ಬರುತ್ತದೆ ಮತ್ತು ದುಡಿಮೆಯಲ್ಲಿ ಓದಿನಲ್ಲಿ ಆಸಕ್ತಿ ಬರುತ್ತದೆ ಹಾಗೂ ನಿಮ್ಮ ಮಾನಸಿಕ ಆರೋಗ್ಯ ಉತ್ತಮವಾಗುವುದರಿಂದ ನಿಮ್ಮ ಎಲ್ಲಾ ಕಾರ್ಯಗಳೂ ಜಯವಾಗಿ ಲಾಭವಾಗುತ್ತದೆ. ಆದ್ದರಿಂದ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಕರ್ಕಾಟಕ ರಾಶಿಯವರ ವರ್ಷ ಭವಿಷ್ಯ, 2024ರಲ್ಲಿ ಈ ಘಟನೆಗಳು ಖಂಡಿತಾ ನಡೆಯುತ್ತವೆ.!

0

 

ಶನಿ ಹಾಗೂ ಗುರು ಹತ್ತನೇ ಮನೆಯಲ್ಲಿ ಇರುವುದರಿಂದ ಮತ್ತು ಸೂರ್ಯ ಹಾಗೂ ಮಂಗಳನು 6ನೇ ಮನೆಯಲ್ಲಿ ಇರುವುದರಿಂದ ಉದ್ಯೋಗದ ವಿಚಾರದಲ್ಲಿ ಸಾಕಷ್ಟು ಒಳ್ಳೆಯ ಫಲಿತಾಂಶಗಳನ್ನು ಕಾಣುತ್ತೀರಿ. ನಿಮ್ಮ ವೃತ್ತಿ ಜೀವನದಲ್ಲಿ ಬಡ್ತಿ ಸಿಗಬಹುದು ಅಥವಾ ನಿಮಗೆ ಹೊಸ ಉದ್ಯೋಗವಕಾಶ ಒದಗಿ ಬರಬಹುದು.

ಅದರಲ್ಲೂ ವಿಶೇಷವಾಗಿ ವರ್ಷದ ಆರಂಭದಲ್ಲಿ ಕಟಕ ರಾಶಿಯವರಿಗೆ ಉದ್ಯೋಗದ ವಿಚಾರವಾಗಿ ಸಾಕಷ್ಟು ಒಳ್ಳೆಯ ಸಮಯ. ನೀವು ಮಾಡುವ ಕೆಲಸದಿಂದ ನೀವು ಜನಪ್ರಿಯರಾಗುತ್ತೀರಿ, ಉದ್ಯೋಗದ ವಿಚಾರದಲ್ಲಿ ನಿಮ್ಮ ನಿರೀಕ್ಷೆಗಳನ್ನು ಮುಟ್ಟುವುದರಿಂದ ಎಲ್ಲೆಡೆ ಪ್ರಶಂಸೆಗಳು ಕೇಳಿಬರುತ್ತದೆ, ಎಲ್ಲರೂ ನಿಮ್ಮನ್ನು ಗುರುತಿಸುತ್ತಾರೆ, ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚು ಮಾಡುತ್ತದೆ.

ಇದೇ ಕಾರಣಕ್ಕಾಗಿ ಸಹೋದ್ಯೋಗಿಗಳಿಂದ ಕಿ’ರು’ಕು’ಳ ಆಗಬಹುದು ಎಚ್ಚರಿಕೆಯಿಂದ ಇರಿ ಏಪ್ರಿಲ್ 23 ರಿಂದ ಜೂನ್ 1ರ ಒಳಗೆ ಉದ್ಯೋಗದ ವಿಚಾರದಲ್ಲಿ ನೀವು ಕೆಲ ಬದಲಾವಣೆಗಳಾಗಲಿವೆ ಅಥವಾ ನೀವು ಉದ್ಯೋಗವನ್ನೇ ಬದಲಿಸುವ ಸಮಯ ಇರಬಹುದು ತಯಾರಾಗಿರಿ.

4ನೇ ಮನೆಯಲ್ಲಿ ಬುಧ ಹಾಗೂ 2ನೇ ಮನೆಯಲ್ಲಿ ಶುಕ್ರ ಇರುವುದರಿಂದ ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ತೋರುತ್ತಾರೆ, ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆಗಳನ್ನು ಮಾಡುತ್ತಾರೆ. ಮೇ ನಿಂದ ಆಗಸ್ಟ್ ವರೆಗೆ ಹಾಗೂ ನವೆಂಬರ್ ನಿಂದ ಡಿಸೆಂಬರ್ ವರೆಗೆ ಈ ರಾಶಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಮಯವಾಗಿದೆ. ಆದರೆ ಶನಿಗೆ 8ನೇ ಮನೆಯಲ್ಲಿ ಇರುವುದರಿಂದ ಉಳಿದ ಸಮಯಗಳೇ ಸ್ವಲ್ಪ ಅಡೆತಡೆಗಳನ್ನು ಎದುರಿಸಬೇಕಾಗಿ ಬರಬಹುದು.

ವರ್ಷದ ಉತ್ತರಾರ್ಧವು ಉನ್ನತ ವಿದ್ಯಾಭ್ಯಾಸದ ಅನುಕೂಲತೆಗಳನ್ನು ಮಾಡಿಕೊಡಲಿದೆ. ವಿದ್ಯಾರ್ಥಿಗಳು ಕೂಡ ಈ ಸದಾವಕಾಶವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು, ಓದಿನಲ್ಲಿ ಸಾಧನೆ ಮಾಡಲು ಪರಿಶ್ರಮವನ್ನು ಕೂಡ ಹಾಕಬೇಕು ಆಗಿದ್ದಲ್ಲಿ ಈ ಎಲ್ಲ ಶುಭಫಲಗಳು ಅವರಿಗೆ ಸಿಗಲಿದೆ.

ಹಣಕಾಸು ವಿಷಯದಲ್ಲಿ ಮಿಶ್ರಫಲಗಳನ್ನು ಹೊಂದಿರುವ ವರ್ಷವಾಗಿರುತ್ತದೆ. ಈ ವರ್ಷದ ಆರಂಭದಲ್ಲಿ ಎಷ್ಟೇ ಹಣ ಸಂಪಾದನೆ ಮಾಡಿದರು ಅಥವಾ ಯಾವುದೇ ಮೂಲದಿಂದ ಹಣ ಬಂದರೂ ನಿಮಗೆ ಅದಕ್ಕೆ ತಕ್ಕನಾದ ಖರ್ಚು ರೆಡಿ ಇರುತ್ತದೆ. ಆದರೆ ಖರ್ಚು ಕೂಡ ವಿಪರಿತವಾಗುವುದಿಲ್ಲ ಸಾಲ ಮಾಡಿಕೊಂಡು ಪರದಾಡುವ ಪರಿಸ್ಥಿತಿ ಬರುವುದಿಲ್ಲ, ಸಂಪಾದಿಸಿದ ಹಣವು ಖರ್ಚಾಗಿ ಹೋಗುತ್ತದೆ.

ಕೌಟುಂಬಿಕ ವಿಚಾರದಲ್ಲೂ ಕೂಡ ಕರ್ಕಾಟಕ ರಾಶಿಯವರು ಈ ವರ್ಷದ ಆರಂಭದಿಂದ ಸಂತೋಷದಿಂದ ಇರುತ್ತಾರೆ, ಅವರ ಎಲ್ಲ ಕೆಲಸ ಕಾರ್ಯಗಳಿಗೆ ಕುಟುಂಬದ ಸಂಪೂರ್ಣ ಬೆಂಬಲ ಇರುತ್ತದೆ. ಕುಟುಂಬದಲ್ಲಿ ಹಿರಿಯರು ಒಳ್ಳೆಯ ಮಾರ್ಗದರ್ಶನ ಮಾಡುತ್ತಾರೆ, ನೀವು ಅವುಗಳನ್ನು ಪಾಲಿಸಿ ಅನುಸರಿಸಿದರೆ ನಿಮಗೆ ಇನ್ನು ಹೆಚ್ಚು ಉತ್ತಮ ಫಲಗಳು ಸಿಗುತ್ತದೆ.

ಏಪ್ರಿಲ್ 23ರಿಂದ ಜೂನ್ 1ರವರೆಗೆ ಮಂಗಳನು 9ನೇ ಮನೆಯಲ್ಲಿ ರಾಹು ಜೊತೆ ಇರುವುದರಿಂದ ಅಂಗಾರಕ ದೋಷ ಸಮಸ್ಯೆಯಿಂದಾಗಿ ತಂದೆಯ ಆರೋಗ್ಯ ಸ್ವಲ್ಪ ಹದಗೆಡಬಹುದು ಈ ವಿಚಾರದಲ್ಲಿ ಸ್ವಲ್ಪ ಹೆಚ್ಚು ಜಾಗರೂಕರಾಗಿರಿ. ವರ್ಷಪೂರ್ತಿ ಶನಿ 8ನೇ ಮನೆಯಲ್ಲಿರುವುದರಿಂದ ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಂಡಿರುವವರಿಗೆ ಸಹಜವಾಗಿ ತೋಡಕು ಇದ್ದೇ ಇರುತ್ತವೆ.

ಯಾವುದೇ ಹೊಸ ವ್ಯವಹಾರ ಆರಂಭಿಸುವ ಮೊದಲು ಅಥವಾ ಎಲ್ಲಾದರೂ ಹೂಡಿಕೆ ಮಾಡುವ ಮೊದಲು ನೀವು ಎರಡು ಮೂರು ಬಾರಿ ಯೋಚಿಸಬೇಕು. ಇಲ್ಲವಾದಲ್ಲಿ ನಿಮ್ಮ ವ್ಯಾಪಾರವು ಸ್ಥಗಿತಗೊಳ್ಳುವ ಅಥವಾ ಹಣ ಎಲ್ಲಾದರೂ ನ’ಷ್ಟವಾಗುವ ಪರಿಣಾಮ ಉಂಟಾಗಬಹುದು.

ಆದ್ದರಿಂದ ಈ ವರ್ಷ ಈ ವಿಚಾರದಲ್ಲಿ ಸ್ವಲ್ಪ ತಾಳ್ಮೆ ವಹಿಸಿ. ಆದರೆ ಮೇ 1ರ ನಂತರ ಗುರು 11ನೆ ಮನೆಗೆ ಹೋಗಿ 2ನೇ ಮನೆ ನೋಡುವುದರಿಂದ ಈ ಸಮಯವು ವ್ಯಾಪಾರ ವಹಿವಾಟಿಗೆ ಅನುಕೂಲಕರವಾಗಿದೆ ಮತ್ತು ನಿಮಗೆ ಈ ವಿಚಾರವಾಗಿ ಗಣ್ಯ ವ್ಯಕ್ತಿಗಳ ಬೆಂಬಲ ಕೂಡ ಸಿಗುತ್ತದೆ.

ಮಧ್ಯರಾತ್ರಿ ಒಬ್ಬರೇ ಇದ್ದಾಗ ಈ ತಂತ್ರ ಮಾಡಿ, ಕೋಟ್ಯಾಧಿಪತಿಗಳಾಗುತ್ತೀರಿ.!

 

ಮಂತ್ರ, ಯಂತ್ರಗಳಂತೆ ತಂತ್ರಗಳು ಕೂಡ ತುಂಬಾ ಚೆನ್ನಾಗಿ ಕೆಲಸ ಮಾಡುತ್ತವೆ. ನಾವು ಹಿಂದಿನ ಯುಗಗಳನ್ನು ನೋಡಿದರೆ ಮಂತ್ರ ಪಠನೆ, ಮಂತ್ರ ಪ್ರಯೋಗದಿಂದಲೇ ಅವರು ಮಳೆ ತರಸುತ್ತಿದ್ದರು. ಯುದ್ಧ ಮಾಡುತ್ತಿದ್ದರು ಹಾಗೂ ವರಗಳನ್ನು ಪಡೆದು ಮಂತ್ರ ಹೇಳಿ ಮಕ್ಕಳನ್ನು ಪಡೆಯುತ್ತಿದ್ದರು ಪುರಾಣಗಳಲ್ಲಿ ಇಂತಹ ಸಾಕಷ್ಟು ಕಥೆಗಳನ್ನು ನಾವು ಕೇಳುತ್ತೇವೆ.

ಆದರೆ ಈಗ ಜನರಲ್ಲಿ ಪ್ರಾಮಾಣಿಕತೆ, ನಿಷ್ಠೆ, ಒಳ್ಳೆಯತನ ಕಡಿಮೆ ಆಗಿರುವ ಕಾರಣಕ್ಕಾಗಿ ಮಂತ್ರಗಳ ಶಕ್ತಿಯು ಕೂಡ ಕುಂದು ಹೋಗಿವೆ. ಆಗಿನ ಕಾಲದಲ್ಲಿ ಲೋಕ ಕಲ್ಯಾಣಕ್ಕಾಗಿ ಮಾಡುತ್ತಿದ್ದ ಈ ಮಂತ್ರಗಳ ಪ್ರಯೋಗವನ್ನು ಈಗ ಮತ್ತೊಬ್ಬರನ್ನು ಹಾ’ಳು ಮಾಡಲು ಬಳಸುತ್ತಾರೆ ಎನ್ನುವುದು ಇದಕ್ಕೆ ಕಾರಣ ಇರಬಹುದು. ಅದೇನೇ ಇರಲಿ ಕಲಿಯುಗದ ವಿಚಾರವನ್ನು ನೋಡುವುದಾದರೆ ಈಗಿನ ಕಾಲದಲ್ಲಿ ಮಂತ್ರಗಳಿಗೆ ಶಕ್ತಿ ಕುಂದಿದೆ ನಿಜ, ಆದರೆ ಕಠಿಣ ನಿಷ್ಠೆ ಪ್ರಯತ್ನ ಮಾಡಿ ಅದನ್ನು ಏಕಾಗ್ರತೆಯಿಂದ ಪಡೆದು ಕೊಳ್ಳಬಹುದು.

ಆದರೆ ಎಲ್ಲರಿಗೂ ಅದು ಸಿದ್ಧಿಸುವುದಿಲ್ಲ ಕಲಿಯುಗದಲ್ಲಿ ನಾವು ಪ್ರತಿಯೊಂದು ವಿಚಾರಕ್ಕೂ ಯಂತ್ರಗಳ ಮೊರೆ ಹೋಗುತ್ತಿದ್ದೇವೆ. ಮನೆಯಲ್ಲಿ ಮನೆ ಕೆಲಸ ಮಾಡುವುದರಿಂದ ಹಿಡಿದು ದೊಡ್ಡ ದೊಡ್ಡ ಕಂಪನಿಗಳು ನಡೆಯುತ್ತಿರುವುದು ಕೂಡ ಇಂತಹ ಯಂತ್ರಗಳ ಸಹಾಯದಿಂದಲೇ.

ಯಂತ್ರಗಳ ಪ್ರಭಾವ ಹೆಚ್ಚಿರುವ ಈ ಕಾಲದಲ್ಲಿ ಮಂತ್ರ ಶಕ್ತಿಗಳ ಪ್ರಭಾವ ಕಡಿಮೆಯಾಗಿ, ಬದಲಿಗೆ ವಿರುದ್ಧವಾದ ತಂತ್ರ ಶಕ್ತಿಗಳ ಬಳಕೆ ಹೆಚ್ಚಾಗಿದೆ. ಈಗಿನ ಕಾಲದಲ್ಲಿ ಬಹಳ ಬೇಗ ತಂತ್ರಗಳು ಅಂದರೆ ಉಪಾಯಗಳು ಕೆಲಸ ಮಾಡುತ್ತವೆ. ಈ ಮಾತು ಸುಳ್ಳಲ್ಲ ಬೇಕಾದಲ್ಲಿ ನೀವು ಈಗ ನಾವು ಹೇಳುವ ಈ ಒಂದು ತಂತ್ರವನ್ನು ಬಹಳ ನಿಷ್ಠೆಯಿಂದ ನಂಬಿಕೆ ಇಟ್ಟು ಪ್ರಯೋಗ ಮಾಡಿ ನೋಡಿ.

ಈ ತಂತ್ರಕ್ಕೆ ಎಷ್ಟು ಶಕ್ತಿ ಇದೆ ಎಂದರೆ ಇದು ನಿಮ್ಮ ಹಣಕಾಸಿನ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ ಮತ್ತು ನಿಮ್ಮನ್ನು ಕೋಟ್ಯಾಧಿಪತಿಗಳಾಗಿ ಮಾಡುವ ಶಕ್ತಿಯನ್ನು ಹೊಂದಿದೆ. ಈ ಕೆಲಸ ಮಾಡುವುದು ಹೇಗೆಂದರೆ ನೀವು ಮಧ್ಯರಾತ್ರಿಯಲ್ಲಿ ಮಾತ್ರ ಈ ತಂತ್ರವನ್ನು ಮಾಡಬೇಕು. ಯಾವುದೇ ದಿನ ಯಾವುದೇ ವಾರದ ಮಧ್ಯರಾತ್ರಿ ಬೇಕಾದರೂ ಇದನ್ನು ಪ್ರಯೋಗ ಮಾಡಬಹುದು.

ಆದರೆ ಇದನ್ನು ಮಾಡುವ ಮುನ್ನ ನೀವು ತಣ್ಣೀರಿನಿಂದ ಸ್ನಾನ ಮಾಡಿ ಶುದ್ಧ ಬಟ್ಟೆಯನ್ನು ಧರಿಸಿರಬೇಕು. ನೀವು ಹಾಕುವ ಬ‌ಟ್ಟೆ ಬಿಳಿ ಬಣ್ಣದಾಗಿದ್ದರೆ ಇನ್ನೂ ಉತ್ತಮ ಫಲಗಳನ್ನು ಪಡೆಯುತ್ತೇವೆ. ತಣ್ಣೀರಿನಲ್ಲಿ ಸ್ನಾನ ಮಾಡಿ, ಮಡಿಯುಟ್ಟು ಮನೆಯ ನಡು ಮನೆ ಅಂದರೆ ಹಾಲ್ ನಲ್ಲಿ ಒಂದು ಮಣೆಯ ಮೇಲೆ ಬಂದು ಕುಳಿತುಕೊಳ್ಳಿ.

ಈ ತಂತ್ರ ಮಾಡಲು ಬೇಕಾದ ಸಾಮಗ್ರಿಗಳನ್ನು ಮೊದಲೇ ಹೊಂದಿಸಿಕೊಳ್ಳಿ. ನಿಮ್ಮ ಮುಂದೆ ಒಂದು ಬಿಳಿ ವಸ್ತ್ರವನ್ನು ಹಾಕಿ ಆ ವಸ್ತ್ರಕ್ಕೆ ಮೂರು ಹಿಡಿ ಅಕ್ಕಿಯನ್ನು ಹಾಕಿ ಅಕ್ಕಿಯ ಮೇಲೆ ಒಂದು ಅರಿಶಿಣದ ಕೊಂಬನ್ನು ಇಡಿ. ಇದು ಚೆನ್ನಾಗಿರಬೇಕು, ಮುರಿದಿರಬಾರದು ಅಥವಾ ಹುಳುಕಾಗಿರಬಾರದು.

ಇದಾದ ಮೇಲೆ ಇದಕ್ಕೆ ಮಡಿ ನೀರಿನಿಂದ ಸಿಂಚನ ಮಾಡಿ ಅರಿಶಿಣ ಕುಂಕುಮ ಹೂ ಅಕ್ಷತೆ ಇಟ್ಟು ಧೂಪ ದೀಪಗಳಿಂದ ಪೂಜೆ ಮಾಡಿ ಅದರ ಎದುರುಗಡೆ ಕುಳಿತುಕೊಂಡು ಕಣ್ಣು ಮುಚ್ಚಿ ನಿಮ್ಮ ಆರ್ಥಿಕ ಅಭಿವೃದ್ಧಿಯಾಗಿ ಮನಸಾರೆ ಪ್ರಾರ್ಥಿಸಿ, ನಂತರ ಅದನ್ನು ಹಳ‌ದಿ ದಾರದಿಂದ ಗಂಟು ಕಟ್ಟಿ ಇಡಿ. ಮರುದಿನ ಈ ಗಂಟನ್ನು ಹರಿಯುವ ನೀರಿಗೆ ಬಿಡಬೇಕು ಮತ್ತು ತಿರುಗಿ ನೋಡದೆ ಬರಬೇಕು. ಈ ರೀತಿಯ ಒಂದು ಪ್ರಯೋಗ ಮಾಡಿ ನೋಡಿ ನಿಮ್ಮ ಜೀವನದ ಹಣಕಾಸಿನ ಸಮಸ್ಯೆಗಳು ಎಷ್ಟು ಬೇಗ ಪರಿಹಾರ ಆಗುತ್ತವೆ ನೀವೆ ನೋಡಿ.

ಕಲಿಯುಗದಲ್ಲಿ ಹೆಂಡತಿಗಿಂತ ಗಂಡ ಬಹಳ ಬೇಗ ಮ-ರಣ ಹೊಂದುತ್ತಾನೆ ಯಾಕೆ ಗೊತ್ತ.? ಶ್ರೀಕೃಷ್ಣ ತಿಳಿಸಿದ ರಹಸ್ಯ ಇದು.!

 

ಮದುವೆ ಆಗಿರುವ ಪ್ರತಿ ವಿವಾಹಿತ ಮಹಿಳೆಗೂ ಆಕೆಯ ಪಾಲಿನ ಸೌಭಾಗ್ಯ ಅವಳ ಗಂಡನೇ ಆಗಿರುತ್ತಾನೆ. ಜಗತ್ತಿನಲ್ಲಿ ಬೆಲೆ ಬಾಳುವ ವಸ್ತು ಸಾಕಷ್ಟಿದ್ದರು ಅವಳ ಪಾಲಿಗೆ ಇರುವ ಬೆಲೆ ಕಟ್ಟಲಾಗದ ವಸ್ತು ಹಾಗೂ ಅವಳ ಕಣ್ಣಿಗೆ ಅತ್ಯಂತ ಮೌಲ್ಯವಾದದ್ದು ಆಕೆ ಪಾಲಿಗೆ ಪ್ರೀತಿ ಪಾತ್ರನಾದ ಆಕೆಯ ಸರ್ವಸ್ವವೂ ಆದ ಅವಳ ಪತಿ ಮಾತ್ರ.

ಈ ಪ್ರಪಂಚದಲ್ಲಿ ಆಕೆ ಸಂಪೂರ್ಣವಾಗಿ ನಂಬುವುದು ಹಾಗೂ ಆಕೆಯ ಜೀವನದ ಬಹು ಪಾಲಿನ ಕ’ಷ್ಟ ಸುಖ ಸಂತೋಷ ಸಮಸ್ಯೆ ಎಲ್ಲವನ್ನು ಹಂಚಿಕೊಳ್ಳುವುದು ಅವನೊಂದಿಗೆ ಮಾತ್ರ. ಹಾಗಾಗಿ ಪತಿ-ಪತ್ನಿ ಬೇರೆ ಬೇರೆ ಅಲ್ಲ ಎಂದು ಒಟ್ಟಿಗೆ ದಂಪತಿ ಎಂದು ಕರೆಯುವುದು. ಈ ರೀತಿ ಅನ್ಯೋನ್ಯವಾಗಿದ್ದ ದಂಪತಿಗಳು ಒಬ್ಬರನ್ನು ಅಗಲಿ ಮತ್ತೊಬ್ಬರು ಹೆಚ್ಚು ದಿನ ಬದುಕುತ್ತಿರಲಿಲ್ಲ.

ಆದರೆ ಈಗಿನ ಕಾಲದಲ್ಲಿ ಗಂಡಂದಿರು ಹೆಂಡತಿಯರಿಗಿಂತ ಬೇಗ ಸಾ’ಯುತ್ತಿದ್ದಾರೆ ಅದಕ್ಕೆ ಕಾರಣ ಏನು ಗೊತ್ತಾ.? ಮದುವೆ ಆದ ಮೇಲೆ ಪ್ರತಿಯೊಂದು ಹೆಣ್ಣು ಕೂಡ ತನ್ನ ಸೌಭಾಗ್ಯ ಶಾಶ್ವತವಾಗಿರಬೇಕು ಎಂದು ಬಯಸುತ್ತಾಳೆ. ಆಕೆಗೆ ಪತಿ ಇದ್ದರೆ ಮಾತ್ರ ಅಲಂಕಾರ ಮಾಡಿಕೊಳ್ಳುವ, ಹಣೆಗೆ ಕುಂಕುಮ, ಕೈಗೆ ಬಯಳೆ, ಮುಡಿಗೆ ಹೂವು, ಕಾಲುಂಗುರ ಹಾಗೂ ಮಾಂಗಲ್ಯ ಹಾಕಿಕೊಳ್ಳುವ ಅದೃಷ್ಟ ಇರುತ್ತದೆ.

ಮತ್ತು ಆಕೆಗೆ ಎಲ್ಲಾ ಕಡೆಯೂ ಕೂಡ ಗೌರವ ಸಿಗುತ್ತದೆ ಮತ್ತು ಈ ಅದೃಷ್ಟ ಆಕೆಗೆ ಕಡೆವರೆಗೂ ಇರಬೇಕು ಎನ್ನುವ ಕಾರಣಕ್ಕಾಗಿ ಅವಳು ಮದುವೆಗೂ ಮುಂಚೆ ಹಾಗೂ ಮದುವೆ ಆದ ನಂತರವೂ ಕೂಡ ಅನೇಕ ವ್ರತ ಪೂಜೆ ಆಚರಣೆಗಳನ್ನು ಮಾಡುತ್ತಿರುತ್ತಾಳೆ. ಇದನ್ನೆಲ್ಲ ಬಹಳ ಕಟ್ಟು ನಿಟ್ಟಾಗಿ ನಂಬಿಕೆಗಿಂತ ಪಾಲಿಸುತ್ತಿದ್ದ ಕಾರಣ ಆಗಿನ ಕಾಲದಲ್ಲಿ ಮಹಿಳೆಯರು ಮುತ್ತೈದೆಯಾಗಿ ಸಾ’ಯುತ್ತಿದ್ದರು ಹಾಗೂ ಈ ರೀತಿ ಮುತ್ತೈದೆಯಾಗಿ ಸ’ತ್ತವರಿಗೆ ಸಾ’ವಿನಲ್ಲೂ ಗೌರವ ಇರುತ್ತಿತ್ತು.

ಆದರೆ ಈಗಿನ ಕಾಲದಲ್ಲಿ ಯಾರಿಗೂ ಇಷ್ಟೊಂದು ಪತಿ ಭಕ್ತಿ ಇಲ್ಲ. ಪತಿಯ ಬಗ್ಗೆ ಬಹಳ ತಾತ್ಸಾರ ಮತ್ತು ಪತಿಯ ಸಂಕೇತವಾಗಿರುವ ತಾಳಿ ಹಾಗೂ ಕಾಲುಂಗುರದ ಮಹತ್ವವನ್ನು ಅರಿಯದೆ ಇರುವುದು ಇತ್ಯಾದಿಗಳು ಈ ರೀತಿ ಗಂಡನಿಗೆ ಅಪಮೃತ್ಯು ಬರಲು ಕಾರಣವಾಗುತ್ತಿದೆ. ತಾಳಿ ಹಾಗೂ ಕಾಲುಂಗುರ ಎಂದರೆ ಮುತ್ತೈದೆತನ ಎನ್ನುವ ಸಂಸ್ಕೃತಿ ಭಾರತದ್ದು.

ಆದರೆ ಈಗಿನ ಕಾಲದಲ್ಲಿ ಬರೀ ನೆಪ ಮಾತ್ರಕ್ಕೆ ಇದನ್ನು ಧರಿಸುತ್ತಾರೆ ಅಥವಾ ಬೇಕೆಂದಾಗ ಧರಿಸುತ್ತಾರೆ ಬೇಡ ಎಂದಾಗ ತೆಗೆದಿಡುತ್ತಾರೆ. ಈ ರೀತಿ ಮಾಡುವುದರಿಂದ ಗಂಡನಿಗೆ ಅನಾರೋಗ್ಯ, ಆತನ ಆಯಸ್ಸಿಗೆ ಕಂ’ಟ’ಕ ಹಾಗೂ ಆತನಿಗೆ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಬರುವುದರ ಜೊತೆಗೆ ಪತಿ-ಪತ್ನಿ ಮಧ್ಯೆ ಕಲಹಗಳು ಹೆಚ್ಚಾಗುತ್ತಿದೆ.

ಕಲಿಯುಗದಲ್ಲಿ ಈ ರೀತಿ ಜನರ ವರ್ತನೆಗಳು, ಭಾವನೆಗಳು, ವಿಪರೀತವಾಗಿ ಬದಲಾಗಿ ಅದು ಪರಮಾವಧಿ ತಲುಪಿ ಇದುವರೆಗೆ ಇದ್ದ‌ ಎಲ್ಲಾ ಸುಗುಣಗಳು ಕೂಡ ದು’ರ್ಗು’ಣಗಳಾಗಿ ಬದಲಾಗಿ ಪ್ರಪಂಚದ ತುಂಬಾ ಕಷ್ಟ ಕಾರ್ಪಣ್ಯಗಳು ಹೆಚ್ಚಾಗುತ್ತವೆ ಎಂದು ಆಗಿನ ಕಾಲದಲ್ಲೇ ಭವಿಷ್ಯ ಬರೆಯಲಾಗಿದೆ.

ಅದಕ್ಕೆ ತಕ್ಕಂತೆ ಈಗಿನ ಕಾಲದಲ್ಲಿ ಜನರು ಬದಲಾಗಿ ನಡೆದುಕೊಳ್ಳುತ್ತಿದ್ದಾರೆ ಇದು ಜೀವನದಲ್ಲಿ ಅತ್ಯಂತ ಪವಿತ್ರವಾದ ಸಂಬಂಧ ಎಂದು ನಂಬಲಾಗಿದ್ದ ವಿವಾಹ ಬಂಧನದ ಪಾವಿತ್ರ್ಯತೆ ಹಾಳು ಮಾಡುವ ತನಕ ಇದು ಬಂದು ತಲುಪಿದೆ. ಇದೇ ಕಾರಣಕ್ಕಾಗಿ ಹೆಣ್ಣು ಮಕ್ಕಳು ನತದೃಷ್ಟರಾಗಿ ಬಹಳ ಬೇಗ ವೈಧವ್ಯ ಹೊಂದುತ್ತಿದ್ದಾರೆ. ಹೀಗಾಗಬಾರದು ಎಂದರೆ ಮನೆಯಲ್ಲಿ ಹಿರಿಯರು ಹೇಳಿದ ಪ್ರಕಾರವಾಗಿ ಗಂಡನಿಗೆ ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕು ಮತ್ತು ಪತಿಭಕ್ತಿಯನ್ನು ತೋರಿಸಿ ಆತನನ್ನು ಪ್ರೀತಿಯಿಂದ ಜೋಪಾನ ಮಾಡಬೇಕು.

ವೈಕುಂಠ ಏಕಾದಶಿ ದಿನ ಈ ಒಂದು ವಸ್ತುವನ್ನು ನೀರಿಗೆ ಹಾಕಿ ಸ್ನಾನ ಮಾಡಿ, 24 ಗಂಟೆಗಳಲ್ಲಿ ಗ್ಯಾರಂಟಿ ಶುಭ ಸಮಾಚಾರ ಕೇಳುತ್ತೀರಿ…

 

ಡಿಸೆಂಬರ್ 23, ಶನಿವಾರದಂದು ವೈಕುಂಠ ಏಕಾದಶಿ ಬಂದಿದೆ. ಇದು ವೆಂಕಟೇಶ್ವರನ ಭಕ್ತರೆಲ್ಲರಿಗೂ ಕೂಡ ಬಹಳ ಪವಿತ್ರವಾದ ದಿನವಾಗಿದೆ. ಭಗವಾನ್ ವಿಷ್ಣು ಮಾತ್ರವಲ್ಲದೇ ವೆಂಕಟೇಶ್ವರನನ್ನು ಪೂಜಿಸುವವರು ಮಾತ್ರವಲ್ಲದೆ ಜಾತಿ, ಮತ ವರ್ಣ ಭೇದವಿಲ್ಲದೆ ಎಲ್ಲರೂ ಕೂಡ ಈ ಒಂದು ದಿನ ಉಪವಾಸ ಇದ್ದು ಏಕಾದಶಿ ಆಚರಿಸುತ್ತಾರೆ.

ಈ ದಿನದಂದು ವೈಕುಂಠದ ಬಾಗಿಲು ತೆರೆದಿರುತ್ತದೆ ಎನ್ನುವುದು ನಂಬಿಕೆ ಮತ್ತು ಈ ದಿನದಂದು ವೆಂಕಟೇಶ್ವರನ ದರ್ಶನ ಅಥವಾ ವಿಷ್ಣುವಿನ ಯಾವುದೇ ಅವತಾರದ ದರ್ಶನ ಮಾಡಿದರು ಕೂಡ ಕೋಟಿ ಪುಣ್ಯ ಎನ್ನುವುದು ನಂಬಿಕೆ ಹಾಗಾಗಿ ಬೆಳಗ್ಗೆಯಿಂದ ಎಲ್ಲಾ ದೇವಸ್ಥಾನಗಳನ್ನು ಕೂಡ ಅಪಾರ ಜನಸ್ತೋಮ ನೆರೆದಿರುತ್ತದೆ.

ವೈಜ್ಞಾನಿಕ ದೃಷ್ಟಿಕೋನದಿಂದಲೂ ಆರೋಗ್ಯದ ಉದ್ದೇಶದಿಂದ ಏಕಾದಶಿ ಆಚರಿಸುವುದು ಬಹಳ ಒಳ್ಳೆಯದು ಎನ್ನುವುದು ಇತ್ತೀಚಿಗೆ ಸಂಶೋಧನೆಗಳಿಂದ ಸಾಬೀತಾಗಿದ್ದು ವಿಜ್ಞಾನಿಗಳು ಕೂಡ ಒಪ್ಪಿಕೊಂಡಿದ್ದಾರೆ. ಆಹಾರ ತಜ್ಞರು ಕೂಡ ಹಿರಿಯರು ಆಚರಿಸುತ್ತಿದ್ದ ಈ ಒಂದು ಏಕಾದಶಿ ದಿನದ ಉಪವಾಸವು ಅರ್ಥಪೂರ್ಣವಾಗಿತ್ತು ಎನ್ನುತ್ತಿದ್ದಾರೆ ಹಾಗಾಗಿ ನಮ್ಮ ಸಂಪ್ರದಾಯ ಬಹಳ ಶ್ರೇಷ್ಠ ಎಂದು ನಾವು ಹೆಮ್ಮೆ ಪಡಬಹುದು.

ಏಕಾದಶಿಯ ದಿನ ಸ್ನಾನ, ಪೂಜೆ ಹಾಗೂ ದೇವರ ದರ್ಶನಕ್ಕೆ ಇಡೀ ದಿನ ಮೀಸಲು ಈ ಒಂದು ದಿನ ದಿನದಲ್ಲಿ ಎರಡು ಬಾರಿ ಸ್ನಾನ ಮಾಡಿ ದೇವರ ದರ್ಶನವನ್ನು ಮಾಡುವವರು ಇದ್ದಾರೆ. ನಿಮ್ಮ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಅಥವಾ ನಿಮ್ಮ ಕುಟುಂಬದಲ್ಲಿ ಆಚರಿಸಿಕೊಂಡು ಬಂದಿರುವ ನಿಯಮದ ಪ್ರಕಾರ ನೀವು ಏಕಾದಶಿಯನ್ನು ಆಚರಿಸಿ ಆದರೆ ಈ ದಿನ ಸ್ನಾನ ಮಾಡುವಾಗ ತಪ್ಪದೇ ಒಂದು ಉಪಾಯವನ್ನು ಮಾಡಿ ನಿಮ್ಮ ಅದೃಷ್ಟ ಹೇಗೆ ಬದಲಾಯಿಸುತ್ತದೆ ಎನ್ನುವುದನ್ನು ನೀವೇ ಪರೀಕ್ಷೆ ಮಾಡಿ ತಿಳಿದುಕೊಳ್ಳಿ.

ಬಹಳ ವಿಶೇಷವಾದ ದಿನದಾದ ಈ ವೈಕುಂಠ ಏಕಾದಶಿ ದಿನದಂದು ಬೆಳಗ್ಗೆ ಮತ್ತು ಸಂಜೆ ಸಮಯ ಸಮಯ ಕೂಡ ಸ್ನಾನ ಮಾಡಿ ಭಗವಂತನ ಧ್ಯಾನ ಮಾಡಿ. ಈ ರೀತಿ ಸಂಜೆ ಹೊತ್ತು ಸ್ನಾನ ಮಾಡುವಾಗ ನೀರಿಗೆ ನೀವು ಸ್ವಲ್ಪ ಹರಳುಪ್ಪು ಬೆರೆಸಿ ಸ್ನಾನ ಮಾಡಬೇಕು. ಇದರಿಂದ ನಿಮ್ಮ ಮೇಲೆ ಆಗಿರುವ ಕೆಟ್ಟ ದೃಷ್ಟಿಗಳು ನರ ದೃಷ್ಟಿಗಳ ಪ್ರಭಾವ ಎಲ್ಲವೂ ಕೂಡ ನಾಶ ಆಗುತ್ತದೆ, ನಿಮ್ಮ ಔರ ಸ್ವಚ್ಛವಾಗುತ್ತದೆ.

ನೀವು ಬಹಳ ಪಾಸಿಟಿವ್ ಆಗಿ ಬದಲಾಗುತ್ತಿರಿ ಮತ್ತು ನಿಮ್ಮ ಮೇಲೆ ಆಗಿರುವ ನ’ಕಾ’ರಾ’ತ್ಮ’ಕ ಪ್ರಯೋಗಳು ಕಳೆಯುವುದೆಂದರೆ ಭಗವಂತನ ಸಂಪೂರ್ಣ ಅನುಗ್ರಹ ನಿಮಗೆ ಸಿಗುತ್ತದೆ. ಹಾಗಾಗಿ ತಪ್ಪದೆ ಈ ರೀತಿ ಸ್ನಾನ ಮಾಡಿ ಹತ್ತಿರದಲ್ಲಿರುವ ಯಾವುದೇ ವಿಷ್ಣು ಅವತಾರದ ಸನ್ನಿಧಾನಗಳಿಗೆ ಭೇಟಿ ಕೊಟ್ಟು ಶ್ರೀ ಮಹಾ ವಿಷ್ಣುವಿನ ಅಥವಾ ವೆಂಕಟೇಶ್ವರ ಸ್ವಾಮಿಯ ಅಥವಾ ನರಸಿಂಹ ಸ್ವಾಮಿಯ, ಕೃಷ್ಣನ ದರ್ಶನವನ್ನು ಪಡೆಯಿರಿ.

ದೇವಸ್ಥಾನಕ್ಕೆ ಹೋಗುವಾಗ ನೀವು ತಪ್ಪದೆ ಮತ್ತೊಂದು ಕೆಲಸವನ್ನು ಮಾಡಬೇಕು. ಅದೇನೆಂದರೆ ನೀವು ಈ ದಿನ ಸಂಜೆ ದೇವಸ್ಥಾನಕ್ಕೆ ಹೋಗುವಾಗ ಗೊನೆ ಬಾಳೆಹಣ್ಣನ್ನು ತೆಗೆದುಕೊಂಡು ಹೋಗಬೇಕು, ಭಿನ್ನ ಆಗಿರದ ಪೂರ್ತಿ ಗೊನೆ ತೆಗೆದುಕೊಂಡು ಹೋದರೆ ಒಳ್ಳೆಯದು. ಶಕ್ತಿ ಇಲ್ಲದಿದ್ದವರು ಒಂದು Kg ಚಿಪ್ಪು ಆದರೂ ತೆಗೆದುಕೊಂಡು ಹೋಗಿ ಆದರೆ ಆ ಚಿಪ್ಪಿನಲ್ಲಿ ಒಂದು ಹಣ್ಣು ಕೂಡ ಮುರಿದಿರಬಾರದು.

ಈ ರೀತಿ ಪೂರ್ತಿ ಚಿಪ್ಪು ಬಾಳೆಹಣ್ಣನ್ನು ದೇವಸ್ಥಾನಕ್ಕೆ ಅರ್ಪಿಸಿ ಇದರಿಂದ ನಿಮ್ಮ ಅನೇಕ ದೋಷಗಳು ಪರಿಹಾರವಾಗಿ ವೈಕುಂಠ ಏಕಾದಶಿ ಆಚರಿಸಿದ ಸಂಪೂರ್ಣ ಫಲಗಳು ನಿಮಗೆ ಅನುಗ್ರಹವಾಗುತ್ತದೆ. ನಿಮ್ಮ ಉದ್ಯೋಗ, ವಿವಾಹ, ಕುಟುಂಬ, ಆರೋಗ್ಯ, ಹಣಕಾಸಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಕೂಡ ಪರಿಹಾರವಾಗಿ ಅದೃಷ್ಟಶಾಲಿಗಳಾಗುತ್ತೀರಿ.

ಗೃಹಿಣಿಯರಿಗೆ ಮನೆಕೆಲಸ ಕಡಿಮೆ ಮಾಡಲು ಸಹಾಯ ಮಾಡುತ್ತವೆ ಈ ಟಿಪ್ಸ್ ಗಳು.

* ಹೆಣ್ಣು ಮಕ್ಕಳು ಗಡಿಬಿಡಿಯಲ್ಲಿ ಗ್ಯಾಸ್ ಮೇಲೆ ಪಾತ್ರೆ ಇಟ್ಟು ಮರೆತು ಬೇರೆ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಆಗ ಪಾತ್ರೆ ಪೂರ್ತಿ ಸೀದು ಕಪ್ಪಗಾಗಿರುತ್ತದೆ. ಈ ರೀತಿ ತಳ ಕಪ್ಪಗಾಗಿರುವ ಪಾತ್ರೆಯನ್ನು ಮತ್ತೆ ಹೊಸ ರೂಪಕ್ಕೆ ತರಬೇಕು ಎಂದರೆ ಬಹಳ ಶ್ರಮ ಹಾಕಬೇಕು. ಈಸಿಯಾಗಿ ಈ ಕೆಲಸ ಮಾಡಲು ಸ್ವಲ್ಪ ಅಡುಗೆ ಸೋಡವನ್ನು ಬಿಸಿನೀರಿನ ಜೊತೆ ಮಿಕ್ಸ್ ಮಾಡಿ ಮತ್ತೆ ಪಾತ್ರೆಯನ್ನು ಬಿಸಿ ಆಗಲು ಇಡಿ, ನೀರು ಸ್ವಲ್ಪ ಕುದಿಯುತ್ತಾ ಬಂದ ಮೇಲೆ ಆಫ್ ಮಾಡಿ ಇಡಿ. ಕೆಲ ಸಮಯ ಬಿಟ್ಟ ನಂತರ ಸೀದಿರುವ ಮಸಿಯು ಬಹಳ ಸುಲಭವಾಗಿ ಬಿಟ್ಟುಕೊಳ್ಳುತ್ತದೆ, ಬೇಗ ಕ್ಲೀನ್ ಮಾಡ‌ಬಹುದು.

* ಹೆಣ್ಣು ಮಕ್ಕಳಿಗೆ ಬಟ್ಟೆಗೊಂದು ಹೊಸ ಚಪ್ಪಲಿ ಬೇಕು, ಆದರೆ ಈ ರೀತಿ ಹೊಸ ಚಪ್ಪಲಿಗಳು ಹೊಸದರಲ್ಲಿ ಕಚ್ಚುತ್ತವೆ. ಯಾವುದಾದರೂ ಫಂಕ್ಷನ್ ಅಥವಾ ಮುಖ್ಯ ಕೆಲಸಕ್ಕೆ ಹೋದಾಗ ಈ ರೀತಿ ಆಗಿ ಹಿಂಸೆಯಾಗುತ್ತಿರುತ್ತದೆ. ಇದನ್ನು ತಪ್ಪಿಸಲು ಕಚ್ಚುವ ಜಾಗಕ್ಕೆ ಕೊಬ್ಬರಿ ಎಣ್ಣೆ ಅಥವಾ ವ್ಯಾಸಲಿನ್ ಹಚ್ಚಿ ಚಪ್ಪಲಿ ಹಾಕಿಕೊಳ್ಳಿ.
* ಒಡೆದ ತೆಂಗಿನಕಾಯಿ ಬೇಗ ಹಾಳಾಗುತ್ತದೆ, ಇದು ಬಹಳ ದಿನ ಬಾಳಿಕೆ ಬರಬೇಕು ಅಂದರೆ ಹೊಡೆದ ತಕ್ಷಣ ಅದಕ್ಕೆ ಉಪ್ಪು ಅಥವಾ ನಿಂಬೆ ರಸವನ್ನು ಹಚ್ಚಿ ಹೇಳಿ

* ಬೆಳ್ಳಿಯ ಪಾತ್ರೆಗಳು ಕಪ್ಪಗಾಗಿದ್ದರೆ ಅದನ್ನು ಮತ್ತೆ ಹೊಳೆಯುವಂತೆ ಮಾಡಲು ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಸ್ವಲ್ಪ ಅಡಿಗೆ ಸೋಡಾ ಹಾಗೂ ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಈ ಬೆಳ್ಳಿಯ ಪಾತ್ರೆಗಳನ್ನು ಅದರಲ್ಲಿ ಹಾಕಿ 10 ನಿಮಿಷ ಬಿಡಿ ನಂತರ ಬೆಳ್ಳಿ ಪಾತ್ರೆಗಳನ್ನು ತಿಕ್ಕಿ ತೊಳೆದರೆ ಅವು ಮತ್ತೆ ಹೊಸದರಂತೆ ಕಾಣುತ್ತವೆ

* ಕರ್ಪೂರವನ್ನು ಒಂದು ಪೇಪರ್ ನಲ್ಲಿ ಕಟ್ಟಿ ಹಾಸಿಗೆಯ ನಾಲ್ಕು ಮೂಲೆಗಳಲ್ಲಿ ಇಡಿ. ಈ ರೀತಿ ಮಾಡುವುದರಿಂದ ಕ್ರಿಮಿಕೀಟಗಳು ಸೂಕ್ಷ್ಮಾಣು ಜೀವಿಗಳು ಸಾಯುತ್ತವೆ ನಿಮಗೆ ಇನ್ಫೆಕ್ಷನ್ ಗಳಾಗುತ್ತಿದ್ದರೆ ಕಡಿಮೆಯಾಗುತ್ತದೆ

* ನಿಮ್ಮ ಯಾವುದೇ ಬಟ್ಟೆ ಮೇಲೆ ಎಣ್ಣೆ ಬಿದ್ದು ಎಣ್ಣೆಯ ಕಲೆ ಆಗಿದ್ದರೆ ನೀವು ಸ್ನಾನ ಮಾಡುವ ಸೋಪನ್ನು ಎಣ್ಣೆ ಆಗಿರುವ ಜಾಗಕ್ಕೆ ಹಾಕಿ ಚೆನ್ನಾಗಿ ತಿಕ್ಕಿ ಒಗೆಯಿರಿ, ಎಣ್ಣೆ ಬಿಡುತ್ತದೆ ಹಾಗೂ ಎಣ್ಣೆಯ ಕಲೆಯು ಕೂಡ ಹೋಗುತ್ತದೆ

* ಎಣ್ಣೆಯನ್ನು ಬಾಟಲಿಗೆ ತುಂಬಿದ ಮೇಲೆ ಆ ಪೇಪರ್ ಬಿಸಾಕುವ ಮುನ್ನ ಕಿಲಿವು ಹಿಡಿದ ಕತ್ತರಿ ಚಾಕು ಇಂತಹ ಕಬ್ಬಿಣದ ವಸ್ತುಗಳಿಗೆ ಆ ಪೇಪರ್ ನಿಂದ ಸವರಿ
* ಮನೆಯಲ್ಲಿ ಸೊಳ್ಳೆ, ಇರುವೆ, ನೊಣ ಈ ಕೀಟಗಳ ಕಾಟ ಇದ್ದರೆ ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ಇಟ್ಟು ಅದು ಕುದಿಯುವಾಗ ಕರ್ಪೂರ ಹಾಕಿ ಕುದಿಸಿ ಈ ಸಮಸ್ಯೆ ಪರಿಹಾರವಾಗುತ್ತದೆ ಹಾಗೂ ಮನೆಯಲ್ಲಿ ಒಳ್ಳೆಯ ಘಮ ಕೂಡ ಇರುತ್ತದೆ

* ಹಾಸಿಗೆಯ ಮೇಲೆ ಅಡುಗೆ ಸೋಡವನ್ನು ಸ್ವಲ್ಪ ಸಿಂಪಡಿಸಿ ಮತ್ತು ಬಟ್ಟೆಯಿಂದ ನೀಟಾಗಿ ಒರೆಸುತ್ತ ಬನ್ನಿ ನಿಮ್ಮ ಹಾಸಿಗೆಗೆ ಹೊಸ ರೂಪ ಬರುತ್ತದೆ
* ಹೊಸ ಬಟ್ಟೆ ಅಥವಾ ಕಾಟನ್ ಅಥವಾ ಗಾಢವಾದ ಬಣ್ಣವಿರುವ ಬಟ್ಟೆಯನ್ನು ಮೊದಲ ಬಾರಿಗೆ ವಾಷಿಂಗ್ ಮಿಷನ್ ಗೆ ಹಾಕಬೇಡಿ. ಒಂದು ಬಕೆಟ್ ನಲ್ಲಿ ನೀರು ತುಂಬಿ ಸ್ವಲ್ಪ ಉಪ್ಪು ಹಾಕಿ ಈ ಬಟ್ಟೆಯನ್ನು ಸ್ವಲ್ಪ ಹೊತ್ತು ನೆನೆಸಿ ಅದು ಬಣ್ಣ ಹೋಗುತ್ತದಾ ಇಲ್ಲವಾ ಎಂದು ಗೊತ್ತಾಗುತ್ತದೆ.