Home Blog Page 95

ಜನವರಿ 2024ರ ಕನ್ಯಾ ರಾಶಿ ಮಾಸ ಭವಿಷ್ಯ, ಕನ್ಯಾ ರಾಶಿಯವರಿಗೆ 5 ಎಚ್ಚರಿಕೆಗಳು.!

 

ನಾವೀಗ ಹೊಸ ವರ್ಷದ ಹೊಸ್ತಿಲಲ್ಲಿ ಬಂದು ನಿಂತಿದ್ದೇವೆ. 2024ರ ನೂತನ ವರ್ಷಕ್ಕೆ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇದೆ. ಅಪಾರ ನಿರೀಕ್ಷೆಯೊಂದಿಗೆ ಹಾಗೂ 2023ರ ಕುರಿತ ಕೆಲವು ನಿರಾಸೆಯೊಂದಿಗೆ ನಾವು ಮತ್ತೊಂದು ಹೊಸ ಆರಂಭವನ್ನು ಕಾಣುತ್ತಿದ್ದೇವೆ ಪ್ರತಿ ವರ್ಷದ ಆರಂಭದಲ್ಲೂ ಕೂಡ ಈ ವರ್ಷ ಆದರೂ ಚೆನ್ನಾಗಿರುತ್ತದೆಯಾ ಎನ್ನುವ ಕುತೂಹಲ ಇದ್ದೇ ಇರುತ್ತದೆ.

ಕೆಲವರು ಹಠ ಮಾಡಿ ಅದನ್ನು ಸರಿಪಡಿಸಿಕೊಳ್ಳುವುದಕ್ಕೆ ಪ್ಲಾನಿಂಗ್ ಕೂಡ ಮಾಡಿಕೊಂಡಿರುತ್ತಾರೆ. ಅದೇನೇ ಇದ್ದರೂ ನಮ್ಮ ರಾಶಿ ನಕ್ಷತ್ರ ಮೀರಿ ಕೆಲವು ಸಂಗತಿಗಳು ನಡೆಯುವುದು ಅಸಾಧ್ಯ. ಹಾಗಾಗಿ ರಾಶಿ ಪ್ರಕಾರವಾಗಿ ಕನ್ಯಾ ರಾಶಿಯವರಿಗೆ ಈ ವರ್ಷ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಮತ್ತು ಅವರು ಎಚ್ಚರಿಕೆಯಿಂದ ಇರಬೇಕಾದ ಐದು ವಿಷಯಗಳ ಬಗ್ಗೆ ತಿಳಿಸುತ್ತಿದ್ದೇವೆ.

1. ಕನ್ಯಾ ರಾಶಿಯವರು ಈ ಹೊಸ ವರ್ಷದ ಆರಂಭದಿಂದಲೇ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು, ಕುಜ ಗ್ರಹವು ಅಷ್ಟಮದಲ್ಲಿರುವುದರಿಂದ ಚತುರ್ಥಾಧಿಪತಿ ಅಷ್ಟಮದಲ್ಲಿ, ಅಷ್ಟಮಧಿಪತಿಯು ಚತುರ್ಥದಲ್ಲಿ ಇರುವುದರಿಂದ ತಾಯಿಯ ಆರೋಗ್ಯ ಅಷ್ಟಕಷ್ಟೇ.

ಯಾವುದೇ ಕಾರಣಕ್ಕೂ ತಾಯಿಯ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ ಮಾಡಬೇಡಿ. ಸಾಮಾನ್ಯವಾಗಿ ವಯಸ್ಸಾದವರಿಗೆ ಪ್ರತಿನಿತ್ಯ ಒಂದಲ್ಲ ಒಂದು ಆರೋಗ್ಯ ವ್ಯತ್ಯಾಸಗಳು ಆಗುತ್ತದೆ. ಆದರೆ ಜನವರಿ ತಿಂಗಳಲ್ಲಿ ಸ್ವಲ್ಪ ಹೆಚ್ಚಿಗೆ ಕಾಳಜಿ ಮಾಡಿ ಸ್ವಲ್ಪ ಆರೋಗ್ಯ ಕೆಟ್ಟರೂ ತಡ ಮಾಡದೆ ಆಸ್ಪತ್ರೆಗೆ ಕಳೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ.

2. ಇದ್ದಕ್ಕಿದ್ದಂತೆ ಕನ್ಯಾ ರಾಶಿಯವರಿಗೆ ಯಾವುದಾದರೂ ಬಿಸಿನೆಸ್ ಐಡಿಯಾ ಬರುತ್ತದೆ. ಆದರೆ ಜನರೇ ತಿಂಗಳಲ್ಲಿ ಮಾತ್ರ ಇಂತಹ ವ್ಯವಹಾರಗಳಿಗೆ ಕೈ ಹಾಕಬೇಡಿ. ಅದರಲ್ಲೂ ಮುಖ್ಯವಾಗಿ ಸಾಲ ಮಾಡಿಕೊಂಡು ಹೂಡಿಕೆ ಮಾಡುವಂತಹ ವಿಷಯಗಳ ಕಡೆಗೆ ನೀವು ಹೋಗಲೇಬೇಡಿ.

ಯಾಕೆಂದರೆ ಜನವರಿ ತಿಂಗಳಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿರುವುದಿಲ್ಲ, ಹೀಗಾಗಿ ನಿಮಗೆ ಅಂತಹ ಅನಿವಾರ್ಯ ಪರಿಸ್ಥಿತಿ ಇದ್ದರೆ ವೈಯಕ್ತಿಕ ಜಾತಕ ಪರಿಶೀಲನೆ ಮಾಡಿಸಿ ನಂತರ ಮುಂದುವರೆಯಿರಿ. ಭೂಮಿ ಬಿಟ್ಟು ಬೇರೆ ಯಾವ ವಿಷಯ ಕೂಡ ಸಾಲ ಮಾಡಿ ಹೂಡಿಕೆ ಮಾಡಬೇಡಿ.

3. ಕನ್ಯಾ ರಾಶಿಯವರು ಜನವರಿ 14ರಂದು ಮಕರ ಸಂಕ್ರಾಂತಿ ಮುಗಿಯುವವರೆಗೂ ಕೂಡ ಒಂದಲ್ಲ ಒಂದನ್ನು ಕಳೆದುಕೊಳ್ಳುತ್ತಲೇ ಇರುತ್ತಾರೆ. ಮನೆಯಲ್ಲಿ ಯಾವುದಾದರೂ ವಸ್ತುಗಳನ್ನು ಇಟ್ಟು ಮರೆಯುವುದು ಅಥವಾ ಮೊಬೈಲ್ ಬೀಳಿಸಿಕೊಳ್ಳುವುದು, ಬೈಕ್ ಕಳ್ಳತನವಾಗುವುದು ಭೂಮಿ ಕಳೆದುಕೊಳ್ಳುವುದು ಅಥವಾ ಹಣ ಕಳೆದುಕೊಳ್ಳುವುದು ಈ ರೀತಿ ಕಳೆದುಕೊಳ್ಳುವಿಕೆ ಹೆಚ್ಚಾಗಿರುತ್ತದೆ. ಆದರೆ ಜನವರಿ 14ರ ನಂತರ ಶುಭ ಫಲಗಳಿದ್ದು ನೀವು ಕಳೆದುಕೊಂಡಿದ್ದನ್ನೆಲ್ಲಾ ಮರಳಿ ಮಾಡಿ ಪಡೆದುಕೊಳ್ಳಲು ಅದೃಷ್ಟ ಇರುತ್ತದೆ.

4. ಕನ್ಯಾ ರಾಶಿಯವರಿಗೆ ಜನವರಿ ತಿಂಗಳಲ್ಲಿ ಕಾಲಿಗೆ ಸಂಬಂಧ ಪಟ್ಟ ಆರೋಗ್ಯ ಸಮಸ್ಯೆಗಳು ಹೆಚ್ಚಿಗೆ ಇರುತ್ತವೆ. ಕಾಲು ಊದಿಕೊಳ್ಳುವುದು ಅಥವಾ ಕಾಲು ವಿಪರೀತ ನೋವು ಬರುವುದು ಅಥವಾ ಕಾಲು ಉಳುಕುವುದು ಅಥವಾ ಸಣ್ಣ ಪಟ್ಟ ಅ’ಪ’ಘಾ’ತಗಳಾಗಿ ಕಾಲಿಗೆ ನೋವಾಗುವುದು ಈ ರೀತಿ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಆಹಾರ ಪದ್ಧತಿ ಅಥವಾ ಜೀವನಶೈಲಿ ಕಾರಣದಿಂದಾಗಿ ಈ ಆರೋಗ್ಯ ಸಮಸ್ಯೆ ಬಂದಿದ್ದರೆ ಸರಿಪಡಿಸಿಕೊಳ್ಳುವತ್ತ ಗಮನ ಕೊಡಿ ಮತ್ತು ಸಂಚಾರ ಮಾಡುವಾಗ ಎಚ್ಚರಿಕೆಯಿಂದ ಇರಿ.

5. ನಿಮ್ಮ ರಾಶಿಯಲ್ಲಿರುವ ಕೇತು ಮತ್ತು ಚತುರ್ಥದಲ್ಲಿರುವ ಕುಜನು ನಿಮಗೆ ಯಾವುದೇ ವಿಷಯದಲ್ಲಿ ಸಮಾಧಾನ ಇಲ್ಲದಂತೆ ಮಾಡುತ್ತಾನೆ. ಹಾಗಾಗಿ ನೀವು ಎಲ್ಲದರಲ್ಲೂ ಕಿರಿಕಿರಿ ಮಾಡುತ್ತೀರಿ. ನಿಮಗೆ ಯಾರ ಮೇಲು, ಯಾರ ಕೆಲಸದ ಮೇಲೆ ಸಮಾಧಾನ ಇರುವುದಿಲ್ಲ. ಎಲ್ಲವೂ ಸರಿ ಇಲ್ಲ ಎಂದುಕೊಂಡು ಮನಸ್ಸಿಗೆ ಒತ್ತಡ ತಂದುಕೊಳ್ಳುತ್ತೀರಿ. ಇದರಿಂದ ಮನಸ್ಸಿನ ಆರೋಗ್ಯ ಹದ ಗೆಡುತ್ತದೆ, ಹಾಗಾಗಿ ಮುನ್ನೆಚ್ಚರಿಕೆಯಾಗಿ ಹೇಳುತ್ತಿದ್ದೇವೆ. ಜನವರಿ ತಿಂಗಳಲ್ಲಿ ನೀವು ಆದಷ್ಟು ತಾಳ್ಮೆಯಿಂದ ಇರಬೇಕು.

ಚಪಾತಿ ಹಿಟ್ಟು ಕೆಡದಂತೆ ನೋಡಿಕೊಳ್ಳಲು ಇಲ್ಲಿದೆ ಸೂಪರ್ ಟಿಪ್ಸ್.!

 

ಚಪಾತಿ ಈಗ ಎಲ್ಲರ ಫೇವರೆಟ್ ಫುಡ್ ಆಗಿಬಿಟ್ಟಿದೆ. ಡಯಟ್ ಮಾಡುವವರಿಗೆ, ಶುಗರ್ ಇರುವವರಿಗೆ, ಮಕ್ಕಳ ಲಂಚ್ ಬಾಕ್ಸ್ ಗೆ ಹಾಕಲು, ಸಂಜೆ ಸಮಯ ಸಣ್ಣ ಹಸಿವಾದಾಗ ರಾತ್ರಿ ಡಿನ್ನರ್ ಗೂ ಕೂಡ ಹೀಗೆ ಯಾವ ಹೊತ್ತಿನಲ್ಲಿ ಚಪಾತಿ ಬೇಕಾಗುತ್ತದೆ ಎಂದು ಹೇಳಲು ಆಗುವುದಿಲ್ಲ. ಬೆಳಗ್ಗೆ ಮಧ್ಯಾಹ್ನ ರಾತ್ರಿ ಮೂರು ಹೊತ್ತು ಕೂಡ ತಿನ್ನಬೇಕೆನಿಸುವ ಈ ಚಪಾತಿ ಮಾಡುವುದು ಕೂಡ ಬಹಳ ಸುಲಭ.

ಅದರಲ್ಲೂ ಚಪಾತಿ ಹಿಟ್ಟನ್ನು ಮೊದಲೇ ರೆಡಿ ಮಾಡಿ ಇಟ್ಟಿದ್ದರಂತೂ ಹೊಟ್ಟೆ ಹಸಿದ ತಕ್ಷಣ ತಟ್ಟೆಗೆ ಹಾಕಿ ಕೊಡಬಹುದು. ಹಾಗಾಗಿ ಗೃಹಿಣಿಯರು ಸಾಮಾನ್ಯವಾಗಿ ಚಪಾತಿ ಹಿಟ್ಟನ್ನು ಯಾವಾಗಲು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ರೆಡಿ ಮಾಡಿ ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿ ಇಟ್ಟಿರುತ್ತಾರೆ. ಈ ರೀತಿ ಮಾಡುವವರೆಲ್ಲಾ ತಪ್ಪದೆ ಈ ಅಂಕಣವನ್ನು ಕೊನೆಯವರೆಗೂ ಓದಿ.

ಈ ರೀತಿ ನಾವು ಚಪಾತಿ ಹಿಟ್ಟನ್ನು ರೆಡಿ ಮಾಡಿ ಫ್ರಿಡ್ಜ್ ನಲ್ಲಿ ಇಟ್ಟಿದ್ದರು ಕೆಲವೊಮ್ಮೆ ಅದು ಮೇಲೆಲ್ಲಾ ಕಪ್ಪಾಗಿ ಬಿಟ್ಟಿರುತ್ತದೆ. ಅಥವಾ ಕೆಲವೊಮ್ಮೆ ಬಹಳ ಗಟ್ಟಿಯಾಗಿ ನಾವು ಫ್ರೆಶ್ ಚಪಾತಿಯನ್ನು ತಿಂದಾಗ ಕೊಡುವ ರುಚಿ ಬರುವುದಿಲ್ಲ, ಕೆಲವೊಮ್ಮೆ ಚಪಾತಿ ಹಿಟ್ಟು ಉಳಿದಿದ್ದನ್ನು ಫ್ರಿಡ್ಜ್ ನಲ್ಲಿ ಇಟ್ಟಾಗ ಎರಡು ಮೂರು ದಿನ ಆದರೂ ಬಳಸದೆ ಇದ್ದಾಗ ಅದು ಕೆಟ್ಟು ಹೋಗಿ ವೇಸ್ಟ್ ಆಗಿಬಿಡುತ್ತದೆ.

ಈ ರೀತಿಯೆಲ್ಲಾ ಆಗಬಾರದು ಎಂದರೆ ಚಪಾತಿ ಹಿಟ್ಟು ಕಲಸುವಾಗ ನೀವು ಸಮಯ ಉಳಿತಾಯ ಮಾಡುವ ಕಾರಣಕ್ಕಾಗಿ ಹೆಚ್ಚಿಗೆ ಹಿಟ್ಟು ಕಲಸಿದ್ದರೆ ನಾವು ಹೇಳುವ ಈ ಪದಾರ್ಥಗಳನ್ನು ಅದಕ್ಕೆ ಸೇರಿಸಿ ಈ ವಿಧಾನದಲ್ಲಿ ಕಲಸಿಡಿ ಚಪಾತಿ ಹಿಟ್ಟು ಕೆಡುವುದಿಲ್ಲ ಹಾಗೆ ರುಚಿ ಕಡಿಮೆ ಆಗುವುದಿಲ್ಲ.

ಚಪಾತಿ ಹಿಟ್ಟು ಮೃದುವಾಗಿರಬೇಕು ಎಂದರೆ ನೀವು ಹಿಟ್ಟನ್ನು ಹಾಕಿ ಮಿಕ್ಸ್ ಮಾಡುವಾಗಲೇ ಅದಕ್ಕೆ ಅಡುಗೆ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಚಪಾತಿ ಹಿಟ್ಟನ್ನು ರೆಡಿ ಮಾಡಬೇಕು. ಹೀಗೆ ಮಾಡಿದರೆ ಅದು ಮೇಲೆ ಕಪ್ಪು ಬಣ್ಣಕ್ಕೂ ತಿರುಗುವುದಿಲ್ಲ ಮತ್ತು ಸಾಫ್ಟ್ ಆಗಿ ಟೇಸ್ಟಿ ಆಗಿರುತ್ತದೆ. ಚಪಾತಿಗೆ ಮಾತ್ರವಲ್ಲದೆ ಯಾವುದೇ ಹಿಟ್ಟು ಮಿಕ್ಸ್ ಮಾಡುವಾಗಲೂ ಈ ರೀತಿ ಅಡುಗೆ ಎಣ್ಣೆ ಅಥವಾ ತುಪ್ಪ ಹಾಕಿ ಮಿಕ್ಸ್ ಮಾಡಿದರೆ ಅದು ಬೇಗ ಕೆಡುವುದಿಲ್ಲ, ಫ್ರಿಡ್ಜ್ ನಲ್ಲಿ ಇಟ್ಟು ನಿಧಾನಕ್ಕೆ ಬಳಸಬಹುದು.

ಚಪಾತಿಯು ಮೃದುವಾಗಿ ಬರಬೇಕು ಎಂದರೆ ಚಪಾತಿ ಹಿಟ್ಟು ಕಲಸುವಾಗ ಮೊಸರನ್ನು ಹಾಕಿ ಮಿಕ್ಸ್ ಮಾಡಿದರೆ ಚಪಾತಿ ಬಹಳ ಸಾಫ್ಟ್ ಆಗಿ ಬರುತ್ತದೆ. ಚಪಾತಿ ಹಿಟ್ಟನ್ನು ನೀವು ಫ್ರಿಜ್ಜಿನಲ್ಲಿ ಇಡುವುದಾದರೆ ಚಪಾತಿ ಹಿಟ್ಟು ಕಲಸಿದ ತಕ್ಷಣ ಗಾಳಿ ಆಡದ ಯಾವುದಾದರೂ ಡಬ್ಬದಲ್ಲಿ ಹಾಕಿ ಗಟ್ಟಿಯಾಗಿ ಮುಚ್ಚಳವನ್ನು ಹಾಕಿ ನಂತರ ಫ್ರಿಡ್ಜ್ ನಲ್ಲಿ ಇಡಿ, ಈ ರೀತಿ ಮಾಡುವುದರಿಂದ ಅದು ಒರಟಾಗುವುದಿಲ್ಲ, ಬಹಳ ಸಾಫ್ಟ್ ಆಗಿ ಬರುತ್ತದೆ ಮತ್ತು ಟೆಸ್ಟ್ ಕೂಡ ಹೋಗುವುದಿಲ್ಲ.

ಚಪಾತಿ ಹಿಟ್ಟು ಬೆರೆಸುವಾಗ ತಣ್ಣೀರಿನಿಂದ ಬೆರೆಸುವ ಬದಲು ಅದಕ್ಕೆ ಬೆಚ್ಚಗಿನ ನೀರು ಬಳಸಿದರೆ ಅದರಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾ ಗಳು ಕೊಲ್ಲಲ್ಪಡುತ್ತವೆ ಮತ್ತು ಹಿಟ್ಟು ದೀರ್ಘ ಕಾಲದವರೆಗೆ ಮೃದುವಾಗಿರುತ್ತದೆ. ಚಪಾತಿ ಹಿಟ್ಟು ಬೆರೆಸುವಾಗ ತಪ್ಪದೆ ಉಪ್ಪನ್ನು ಬಳಸಿ ಈ ರೀತಿ ಮಾಡುವುದರಿಂದ ಉಪ್ಪು ತನ್ನ ಸ್ವಾಭಾವಿಕ ಗುಣದಿಂದ ಹಲವು ದಿನಗಳವರೆಗೆ ಹಿಟ್ಟು ಹಾಳಾಗದಂತೆ ಕಾಪಾಡುತ್ತದೆ. ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಗೆಳತಿಯರೊಂದಿಗೂ ಶೇರ್ ಮಾಡಿಕೊಳ್ಳಿ.

ಮಂಗಳ ಮುಖಿಯರು ರಸ್ತೆಯಲ್ಲಿ ಕಾಣಿಸಿದಾಗ ಈ ಒಂದು ಕೆಲಸ ಮಾಡಿದರೆ ನೀವು ಕೋಟ್ಯಾಧೀಶ್ವರರಾಗುವುದು ಗ್ಯಾರಂಟಿ.!

 

ಮಂಗಳಮುಖಿಯರಿಗೆ ಇತ್ತೀಚೆಗೆ ಎಲ್ಲರೂ ಗೌರವ ಕೊಡುತ್ತಿದ್ದಾರೆ. ವಿದ್ಯಾವಂತನಾದ, ವಿದ್ಯಾವಂತನಲ್ಲದಿದ್ದರೂ ಕೂಡ ಮನಸ್ಸಿನಿಂದ ಒಳ್ಳೆಯ ಭಾವನೆಗಳಿರುವ ವ್ಯಕ್ತಿ ಪ್ರಪಂಚದಲ್ಲಿ ಎಲ್ಲರಿಗೂ ಕೂಡ ತನ್ನಂತೆ ಅವರ ಇಚ್ಛೆಯ ಪ್ರಕಾರವಾಗಿ ಬದುಕುವ ಸ್ವಾತಂತ್ರ್ಯ ಇದೆ ಎನ್ನುವ ಸೂಕ್ಷ್ಮತೆ ಅರ್ಥ ಮಾಡಿಕೊಂಡ ವ್ಯಕ್ತಿಯು ಎಂದಿಗೂ ಇನ್ನೊಬ್ಬರು ಬದುಕುವ ರೀತಿಯನ್ನು ಆಡಿಕೊಂಡು ನಗುವುದಿಲ್ಲ.

ಈ ವಿಚಾರದಲ್ಲಿ ಈ ಹಿಂದಿಗಿಂತ ಈಗ ಮಂಗಳಮುಖಿಯರನ್ನು ನೋಡಿ ಅ’ವ’ಮಾ’ನಿಸುತ್ತಿದ್ದವರ, ನೋ’ಯಿಸುತ್ತಿದ್ದವರ, ಕ’ಣ್ಣೀ’ರು ಹಾಕಿಸುತ್ತಿದ್ದವರ ಸಂಖ್ಯೆ ಕಡಿಮೆ ಆಗಿದೆ ಎಂದು ಹೇಳಬಹುದು. ಯಾಕೆಂದರೆ ಮಂಗಳಮುಖಿಯರು ಎಂದರೆ ಅವರು ಅಬಲೆಯರಲ್ಲ, ಅವರು ಅರ್ಧನಾರೀಶ್ವರನ ಪ್ರತಿರೂಪ ಎಂದೇ ಹೇಳಬಹುದು. ತಮ್ಮ ಪಾಲಿಗೆ ಈ ಪ್ರಕೃತಿ ಕೊಟ್ಟಿರುವ ಈ ಸೃಷ್ಟಿಯನ್ನು ಅವರು ಮನಸ್ಪೂರ್ವಕವಾಗಿ ಒಪ್ಪಿಕೊಂಡು ಹಾಗೆ ಬದುಕುತ್ತಿರುತ್ತಾರೆ.

ಇಂಥವರ ಭಾವನೆಗಳಿಗೆ ಗೌರವ ಕೊಡುವುದು ಕೋಟಿ ಪುಣ್ಯ ಈಗಿನ ಕಾಲದಲ್ಲಿ ಮಂಗಳಮುಖಿಯರು ಕೂಡ ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಬರಲು ಪ್ರಯತ್ನಿಸುತ್ತಿದ್ದಾರೆ ಮತ್ತು ಸರ್ಕಾರಗಳು ಕೂಡ ಮಂಗಳಮುಖಿಯರಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿ ಮೀಸಲಾತಿಗಳನ್ನು ಕೊಟ್ಟು ಅವರಿಗೂ ಇತರರ ಸಮಕ್ಕೆ ಬದುಕಲು ಅವಕಾಶ ಮಾಡಿಕೊಡುತ್ತಿದೆ.

ಮಂಗಳಮುಖಿರಲ್ಲೂ ವಿದ್ಯಾವಂತರಿದ್ದಾರೆ, ಸಾಧಕರಿದ್ದಾರೆ ಆದರೆ ಅವರಿಗೆ ಅವರದ್ದೇ ಆದ ಪದ್ಧತಿಗಳು ಇರುತ್ತವೆ. ಅದು ಎಲ್ಲರಿಗೂ ಅರ್ಥ ಆಗುವುದಿಲ್ಲ. ಮಂಗಳಮುಖಿಯರನ್ನು ನೋಡಿದ ತಕ್ಷಣ ಇವರು ದುಡ್ಡು ಕೀಳಲು ಬರುತ್ತಾರೆ ಎಂದು ತಪ್ಪಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಅವರು ಯಾವ ಕಾರಣಕ್ಕಾಗಿ ದುಡ್ಡು ಕೇಳುತ್ತಿದ್ದಾರೆ ಎನ್ನುವುದರ ಅರ್ಥವಾಗದೇ ಇರಬಹುದು.

ಇದು ಅವರ ಸಮುದಾಯದ ನಿಯಮವಾಗಿರಬಹುದು ಅಥವಾ ಕೆಲವು ಮಂಗಳಮುಖಿಯರಿಗೆ ಯಾರು ಕೆಲಸ ಕೊಡದ ಕಾರಣ ಹೊಟ್ಟೆಪಾಡಿಗಾಗಿ ಅವರು ದುಡ್ಡು ಕೇಳುತ್ತಿರಬಹುದು ಆ ಕಾರಣ ಏನೇ ಇರಲಿ ಅದೇ ಕಾರಣದಿಂದ ಅವರನ್ನು ತಾ’ತ್ಸ’ರದಿಂದ ನೋಡಬೇಡಿ. ಮಂಗಳಮುಖಿಯರು ರಸ್ತೆಯಲ್ಲಿ ಸಿಕ್ಕ ತಕ್ಷಣ ಹಣ ಕೇಳಲು ಬರುತ್ತಾರೆ ಎಂದು ತಪ್ಪಿಸಿಕೊಂಡು ಓಡಾಡುತ್ತಾರೆ ಅಥವಾ ಹಣ ಕೇಳಲು ಬರುವ ಮಂಗಳಮುಖಿಯರಿಗೆ ಒಡೆದು, ಬೈದು, ಕ’ಣ್ಣೀ’ರು ಹಾಕಿಸಿ ನಗುತ್ತಾರೆ. ಈ ರೀತಿ ಕ್ರೌ’ರ್ಯಮಾಡುವುದು ನಿಮಗೆ ಕೆ’ಟ್ಟ’ದ್ದು, ಮಂಗಳ ಮುಖಿಯರ ಶಾ’ಪ ತಟ್ಟುತ್ತದೆ.

ಅವರ ಮನಸ್ಸು ಬಹಳ ಸೂಕ್ಷ್ಮವಾಗಿರುತ್ತದೆ ಅವರು ಯಾವಾಗಲೂ ಮನಸ್ಸಿನಲ್ಲಿ ನೊಂದುಕೊಂಡು ಈ ಸಮಾಜದಲ್ಲಿ ತಮಗೆ ಗೌರವ ಇಲ್ಲ ಎಂದು ಕೊರಗುತ್ತಿರುತ್ತಾರೆ. ಇಷ್ಟು ನೋ’ವಿರುವವರ ಶಾ’ಪ ಒಳ್ಳೆಯದಲ್ಲ, ಅವರ ಶಾ’ಪಕ್ಕೆ ನಿಮ್ಮನ್ನು ಬ’ರ್ಬಾ’ದ್ ಮಾಡುವ ಶಕ್ತಿ ಇರುತ್ತದೆ. ಬದಲಾಗಿ ನಿಮ್ಮ ಕೈಯಲ್ಲಿ ಇರುವಷ್ಟು ಹಣವನ್ನು ಅವರಿಗೆ ಕೊಡಿ. ನೀವು ಅವರಿಗೆ ಪ್ರೀತಿಯಿಂದ ಮಾತನಾಡಿಸಿ 50 ರೂಪಾಯಿ ಕೊಟ್ಟರು ಕೂಡ ಅವರು ತೆಗೆದುಕೊಳ್ಳುತ್ತಾರೆ ಮತ್ತು ಒಳ್ಳೆಯ ಮನಸ್ಸಿನಿಂದ ನಿಮಗೆ ಆಶೀರ್ವಾದ ಮಾಡುತ್ತಾರೆ.

ಮಂಗಳಮುಖಿಯರು ಹಣ ತೆಗೆದುಕೊಂಡು ಹಾಗೆ ಹೋಗುವುದಿಲ್ಲ. ಅವರ ಬಳಿ ಇರುವ ಒಂದು ನಾಣ್ಯವನ್ನು ದೃಷ್ಟಿ ತೆಗೆದು ಅವರ ಬಳೆಗಳಿಗೆ ಮುಟ್ಟಿಸಿ ಹಲ್ಲಿನಿಂದ ಕಚ್ಚಿ ಕೊಡುತ್ತಾರೆ. ನೀವೇನಾದರೂ ಮಂಗಳಮುಖಿಯರಿಂದ ಈ ರೀತಿ ನಾಣ್ಯವನ್ನು ಪಡೆದರೆ ಅಂದಿನಿಂದ ನಿಮ್ಮ ಅದೃಷ್ಟ ಬದಲಾಗಿ ಹೋಗುತ್ತದೆ ನೀವು ಬಲವಂತವಾಗಿ ಅವರಿಂದ ಪಡೆಯಬಾರದು ನಿಮ್ಮನ್ನು ನೋಡಿ ಅವರೇ ಇಷ್ಟಪಟ್ಟು ಈ ರೀತಿಯಾಗಿ ಕೊಡಬೇಕು.

ಹೀಗೆ ಆದರೆ ನಿಮ್ಮ ಅದೃಷ್ಟದ ಬಾಗಿಲು ತೆರೆದಂತೆ ಹಾಗಾಗಿ ರಸ್ತೆಯಲ್ಲಿ ಮಂಗಳಮುಖಿ ಸಿಕ್ಕಾಗ ಅವರ ಕ್ಷೇಮ ವಿಚಾರಿಸಿ ಸಾಧ್ಯವಾದರೆ ಅವರಿಗೆ ತಿನ್ನಲು ಏನಾದರೂ ಕೊಡಿಸಿ, ಕೈಯಲ್ಲಿ ಇದ್ದಷ್ಟು ಹಣ ಕೊಡಿ, ಅವರು ಹೆಚ್ಚಿಗೆ ಕೇಳಿದರೆ ನಿಮ್ಮ ಬಳಿ ಇಲ್ಲ ಅಂದಾಗ ಪರಿಸ್ಥಿತಿಯನ್ನು ವಿವರಿಸಿ, ಖಂಡಿತವಾಗಿ ಅವರು ಹಿಂ’ಸೆ ಕೊಡುವುದಿಲ್ಲ ಜೊತೆಗೆ ಕೊನೆಯಲ್ಲಿ ಹೋಗಿ ಬರುತ್ತೇನೆ ಎಂದು ಹೇಳಿ ನಿಮ್ಮ ಕಾರ್ಯಗಳಿಗೆ ಹೋಗಿ ಎಲ್ಲವೂ ಒಳ್ಳೆಯದಾಗುತ್ತದೆ.

ಹೊಸ ವರ್ಷ 2024ರ ಸಿಂಹ ರಾಶಿಯವರ ವರ್ಷ ಭವಿಷ್ಯ.!

 

ಸಿಂಹ ರಾಶಿಯವರಿಗೆ ಎರಡನೇ ಮನೆಯಲ್ಲಿ ಅಂದರೆ ಆರ್ಥಿಕ ಸ್ಥಾನದಲ್ಲಿ ಕೇತು ಇರುವುದರಿಂದ ಜೀವನದಲ್ಲಿ ಯಶಸ್ಸು ಸಿಗುತ್ತದೆ ಆದರೆ ಆ ಯಶಸ್ವಿಗೆ ಅವರು ಸಾಕಷ್ಟು ಪರಿಶ್ರಮದ ಜೊತೆಗೆ ಹಣವನ್ನು ಕೂಡ ಖರ್ಚು ಮಾಡಬೇಕು. ಇದೇ ಕಾರಣದಿಂದ ಇವರಿಗೆ ಈ ವರ್ಷ ಪೂರ್ತಿ ಹೆಚ್ಚು ಮ’ನ’ಸ್ತಾ’ಪಗಳಾಗುವ ಸಾಧ್ಯತೆ ಇದೆ.

ಅದರಲ್ಲೂ ಇವರು ಬಾಯಿ ತಪ್ಪಿ ಆಡುವ ಮಾತುಗಳಿಂದ ಇವರಿಗೆ ಸಮಸ್ಯೆಗಳು ಬಂದೊದಗುತ್ತವೆ ಹಾಗಾಗಿ ಮಾತು ಕೊಡುವ ಮುನ್ನ ಅಥವಾ ಮಾತನಾಡುವಾಗ ಎ’ಚ್ಚ’ರಿ’ಕೆ ಇರಲಿ. ಮಾತು ಮುತ್ತಾಗಿ ಹಾಗೂ ಮಾತೇ ಮೃ’ತ್ಯುವಾಗಿ ಈ ವರ್ಷ ನಿಮ್ಮನ್ನು ಕಾಡಲಿದೆ. ಅದರಲ್ಲೂ ರಾಜಕೀಯ ಕ್ಷೇತ್ರದವರಿಗೆ ಈ 2024 ಬಹಳ ಆಶ್ಚರ್ಯಕರ ಪರಿವರ್ತನೆಯನ್ನು ಉಂಟುಮಾಡುವಂತಹ ವರ್ಷವಾಗಿದೆ.

ಸಿಂಹ ರಾಶಿಯವರಿಗೆ ಕಳಸ್ತಸ್ಥಾನದಲ್ಲಿ ಶನಿ ಇರುವುದರಿಂದ ಸಿಂಹ ರಾಶಿ ಸೂರ್ಯ ರಾಶಿಯಾಗಿರುವ ಕಾರಣದಿಂದಲೂ ಶನಿಯ ಪ್ರಭಾವ ಇವರಿಗೆ ಒಳ್ಳೆಯ ಫಲಗಳನ್ನು ನೀಡುವುದಿಲ್ಲ. ನೇರವಾಗಿ ಶನಿಯ ದೃಷ್ಟಿ ಬೀಳುತ್ತಿರುವುದರಿಂದ ವೈವಾಹಿಕ ಜೀವನದಲ್ಲಿ ಬಹಳ ಸಮಸ್ಯೆಗಳಾಗುತ್ತವೆ.

ಸಣ್ಣ ಪುಟ್ಟ ವಿಚಾರಕ್ಕೆ ಕೋರ್ಟ್ ಮೆಟ್ಟಿಲು ತನಕ ಹೋಗಬೇಕಾಗಹುದು ಅಥವಾ ವಿವಾಹ ನಿಶ್ಚಯವಾಗಿ ನಿಶ್ಚಿತಾರ್ಥ ಆದ ಮೇಲೆ ಕೊನೆ ಹಂತದಲ್ಲಿ ಸಂಬಂಧ ಮುರಿದು ಬೀಳುವುದು ಇಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಇವೆ. ಹಾಗಾಗಿ ಈ ವಿಚಾರದಲ್ಲಿ ಹೆಜ್ಜೆ ಇಡುವಾಗ ಸಾಕಷ್ಟು ಜಾಗೃತಿ ಇರಲಿ ಅದೇ ರೀತಿ ಉದ್ಯೋಗದ ವಿಚಾರದಲ್ಲಿ ಕೂಡ ಸ್ವಲ್ಪ ತಾಳ್ಮೆ ಇರಲಿ.

ಯಾಕೆಂದರೆ ನಿಮಗೆ ಈಗಿರುವ ಸ್ಥಾನಕ್ಕಿಂತ ಅಥವಾ ವೇತನಕ್ಕಿಂತ ಹೆಚ್ಚಿನ ಮೌಲ್ಯದ ಆಫರ್ ಬರಬಹುದು ನೀವು ತಕ್ಷಣ ಒಪ್ಪಿಕೊಂಡು ಅಗ್ರಿಮೆಂಟ್ ಮಾಡಿಕೊಂಡರೆ ಅಗ್ರಿಮೆಂಟ್ ಆದ ಕೆಲವೇ ದಿನಗಳಲ್ಲಿ ಅದಕ್ಕಿಂತಲೂ ಬೆಸ್ಟ್ ಆಪ್ಷನ್ ಸಿಗುವ ಸಾಧ್ಯತೆ ಇರುತ್ತದೆ. ಶನಿಯ ಪ್ರಭಾವ ಈ ರೀತಿ ಕಾಡುವುದರಿಂದ ಯಾವುದೇ ಒಪ್ಪಂದಗಳಲ್ಲಿ ಸಿಕ್ಕಿ ಹಾಕಿಕೊಳ್ಳದಿರುವುದು ಉತ್ತಮ.

ವಿದೇಶಿ ಪ್ರಯಾಣ ಹಾಗೂ ವಿದೇಶಕ್ಕೆ ಹೋಗಿ ನೆಲೆಸಬೇಕು, ಉದ್ಯೋಗ ಮಾಡಬೇಕು, ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂದು ಕನಸು ಕಾಣುತ್ತಿರುವವರೆಗೂ ಕೂಡ ಇದು ಒಳ್ಳೆಯ ಅವಕಾಶವಾಗಿದೆ. ಗುರುವಿನ ಅನುಗ್ರಹ ಚೆನ್ನಾಗಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಾಗಲಿ ಅಥವಾ ನಿಮ್ಮ ಉನ್ನತ ವಿದ್ಯಾಭ್ಯಾಸದ ಅಥವಾ ವೃತ್ತಿಗೆ ಸಂಬಂಧ ಪಟ್ಟ ಯಾವುದೇ ಪರೀಕ್ಷೆಗಳಿಗೆ ನೀವು ಒಳ್ಳೆಯ ಫಲಿತಾಂಶವನ್ನು ಪಡೆಯಲಿದ್ದೀರಿ.

ಈ ಬಗ್ಗೆ ನಿಮ್ಮ ಪ್ರಯತ್ನವನ್ನು ಹೆಚ್ಚಿಸುವುದು ನಿಮಗೆ ಉತ್ತಮ ಫಲಿತಾಂಶಗಳನ್ನು 2024ರಲ್ಲಿ ಕೊಡಲಿದೆ. ಈ ಮೇಲೆ ತಿಳಿಸಿದಂತೆ ರಾಜಕೀಯ, ರಾಜತಾಂತ್ರಿಕತೆ ಅಥವಾ ಸರ್ಕಾರಿ ಹುದ್ದೆಗಳನ್ನು ಹೊಂದಿರುವವರು ಅಥವಾ ಆಕಾಂಕ್ಷಿಗಳಿಗೆ ಈ ವರ್ಷ ಉತ್ತಮವಾಗಿರುತ್ತದೆ, ನಿರೀಕ್ಷಿತ ಫಲಗಳನ್ನು ಪಡೆಯುತ್ತಾರೆ.

ಸೂರ್ಯನು ಪ್ರತಿ ತಿಂಗಳು ರಾಶಿಯಿಂದ ರಾಶಿಗೆ ಸ್ಥಾನಪಲ್ಲಟ ಮಾಡುವುದರಿಂದ ಸೂರ್ಯನು ವೃಷಭ ರಾಶಿ ಮಿಥುನ ರಾಶಿ ತುಲಾ ರಾಶಿ ಮಕರ ಹಾಗೂ ಕುಂಭ ರಾಶಿಗಳಿಗೆ ಪ್ರವೇಶ ಮಾಡಿದಾಗ ಅದರ ಪ್ರತಿಕೂಲ ಪರಿಣಾಮಗಳು ಕೂಡ ಈ ರಾಶಿಯವರ ಮೇಲೆ ಬೀಳುತ್ತಿರುತ್ತದೆ.

ಇವುಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ದರಾಗಿ 2024ಕ್ಕೆ ಪ್ರವೇಶ ಮಾಡಿ. 2024 ನಿಮಗೆ ಒಂದು ಜವಾಬ್ದಾರಿಗಿಂತ ವರ್ಷವಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಯಾವುದೇ ಹೆಚ್ಚಿನ ಅ’ಪಾ’ಯ’ವಿದೆ ಉತ್ತಮವಾಗಿದ್ದು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಾಡಬಹುದು ಅಷ್ಟೇ ಮತ್ತು ಈಗಾಗಲೇ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಿಸುತ್ತಿರುವವರಿಗೆ ಸ್ವಲ್ಪ ಸುಧಾರಣೆ ಕಂಡು ಬರಬಹುದು.

ಹಣಕಾಸಿನ ವಿಚಾರದಲ್ಲಿ ಕೂಡ ಪರಿಸ್ಥಿತಿ ಸಮಾಧಾನವಾಗಿರುತ್ತದೆ. ಹಾಗಾಗಿ ಯಾವುದೇ ಹೆಚ್ಚಿನ ಒತ್ತಡ ಇಲ್ಲದೆ ನಮ್ಮನ್ನು ಇನ್ನಷ್ಟು ಚುರುಕುಗೊಳಿಸುವಂತಹ ವರ್ಷ ಸಿಂಹ ರಾಶಿಯವರಿಗಾಗಿರುತ್ತದೆ, ಶುಭವಾಗಲಿ.

ಯಾರು ಎಷ್ಟೇ ಪ್ರೀತಿಯಿಂದ ಕೊಟ್ಟರು ಈ ವಸ್ತುಗಳಿಗೆ ಕೈಚಾಚಬೇಡಿ, ಕೆಲವರು ಬಲವಂತ ಮಾಡಿ ಕೂಡ ಕೊಡುತ್ತಾರೆ ಎಚ್ಚರ.!

 

ನಮಗೆ ಬೇಕಾದ ವಸ್ತು ತಕ್ಷಣಕ್ಕೆ ಸಿಕ್ಕಲಿಲ್ಲ ಎಂದರೆ ಸಹಜವಾಗಿ ನಾವು ಅದನ್ನು ಬೇರೆಯಿಂದ ತೆಗೆದುಕೊಳ್ಳುತ್ತೇವೆ. ಆದರೆ ವಾಸ್ತು ಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಈ ರೀತಿ ಎಲ್ಲರಿಂದಲೂ ಕೂಡ ಎಲ್ಲ ವಸ್ತುಗಳನ್ನು ಪಡೆಯುವಂತಿಲ್ಲ. ಬೇರೆಯವರನ್ನು ಸಹಾಯ ಕೇಳುವುದು ಮ, ಬೇರೆಯವರಿಗೆ ಸಹಾಯ ಮಾಡುವುದು ತಪ್ಪಲ್ಲ. ಆದರೆ ಕೆಲವು ವಸ್ತುಗಳನ್ನು ಮಾತ್ರ ಒಬ್ಬರಿಂದ ಮತ್ತೊಬ್ಬರು ಕೇಳಿ ಪಡೆಯಬಾರದು ಅಥವಾ ಮತ್ತೊಬ್ಬರಿಗೆ ಕೊಡಬಾರದು ಎನ್ನುವ ನಿಯಮ ಇದೆ.

ಕೆಲವು ಸಮಯ ಇಬ್ಬರಿಗೂ ಅದು ಕೆ’ಡ’ಕು ಉಂಟು ಮಾಡಿದರೆ ಕೆಲವೊಮ್ಮೆ ಬಲವಂತವಾಗಿ ಯಾರೋ ಕೊಟ್ಟರು ಎಂದು ತೆಗೆದುಕೊಂಡರೆ ತೆಗೆದುಕೊಂಡವರಿಗೆ ಅದರಿಂದ ದೋ’ಷಗಳು ಉಂಟಾಗುತ್ತದೆ. ಹಾಗಾಗಿ ಯಾವ ಯಾವ ವಸ್ತುಗಳನ್ನು ಇನ್ನೊಬ್ಬರಿಂದ ಪಡೆಯಬಾರದು ಎನ್ನುವ ಮಾಹಿತಿಯನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರುವುದು ಒಳ್ಳೆಯದು.

* ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಯಾವುದೇ ಕಾರಣಕ್ಕೂ ಒಬ್ಬರು ಮತ್ತೊಬ್ಬರ ಪಾದರಕ್ಷೆಗಳನ್ನು ಅಥವಾ ಶೂ ಗಳನ್ನು ಬಳಸಲೇಬಾರದು. ಈಗಿನ ಕಾಲದಲ್ಲಿ ತಮ್ಮ ಡ್ರೆಸ್ ಗೆ ಮ್ಯಾಚ್ ಆಗುತ್ತದೆ ಎಂದು ತಮ್ಮ ಫ್ರೆಂಡ್ ಅಥವಾ ರೂಮ್ ಮೇಟ್ ಪಾದ ರಕ್ಷೆಗಳನ್ನು ಸಹಜವಾಗಿ ಹಾಕಿಕೊಂಡು ಹೋಗಿ ಬಿಡುತ್ತಾರೆ. ಆದರೆ ಈ ರೀತಿ ಮಾಡುವುದು ಬಹಳ ದೊಡ್ಡ ತಪ್ಪು ಇದರಿಂದ ಅವರ ಕಷ್ಟಗಳನ್ನು ನೀವು ಎರವಲು ಪಡೆದಂತೆ

* ಈ ರೀತಿ ಪಾದರಕ್ಷೆಗಳು ಮಾತ್ರವಲ್ಲದೆ ಬಟ್ಟೆಗಳಿಗೂ ಕೂಡ ಈ ನಿಯಮ ಇದೆ. ಯಾಕೆಂದರೆ ನಾವು ಹಾಗೆ ಕೊಡುವ ಬಟ್ಟೆಯಲ್ಲಿ ನಮ್ಮದೊಂದು ಭಾವನೆ ಇರುತ್ತದೆ. ಅದು ಹಲವು ದಿನಗಳಿಂದ ನಮ್ಮ ಮೈಮೇಲೆ ಇದ್ದ ಕಾರಣ ನಮ್ಮ ಹಾಗೂ ನಮ್ಮ ಬಟ್ಟೆಗಳ ನಡುವೆ ಸಂಬಂಧ ಬೆಳೆದಿರುತ್ತದೆ.

ನಾವು ಸಕಾರಾತ್ಮಕವಾಗಿದ್ದರೆ ಅಥವಾ ನಮ್ಮ ಕೆಲವು ಬಟ್ಟೆಗಳನ್ನು ಹಾಕಿಕೊಂಡಾಗ ನಮಗೆ ಅವು ಲಕ್ಕಿ ಎನಿಸಿದರೆ ಕನೆಕ್ಷನ್ ಶುರು ಆಗಿರುತ್ತದೆ ಇಂತಹ ಬಟ್ಟೆಗಳನ್ನು ಬೇರೆಯವರಿಗೆ ಕೊಟ್ಟರೆ ಅಥವಾ ಬೇರೆಯವರು ಕೇಳಿ ಹಾಕಿಕೊಂಡರೆ ಅಥವಾ ಬೇರೆಯವರ ಬಟ್ಟೆಗಳನ್ನು ನಾವು ಅಪ್ಪಿ ತಪ್ಪಿ ಧರಿಸಿದರೆ ಈ ಕನೆಕ್ಷನ್ ಗಳು ಬಿಟ್ಟು ಹೋಗುತ್ತವೆ. ಒಂದು ವೇಳೆ ನೀವು ನಕಾರಾತ್ಮಕ ವ್ಯಕ್ತಿಗಳ ಬಟ್ಟೆಯನ್ನು ಧರಿಸಿದರೆ ನಿಮ್ಮ ವ್ಯಕ್ತಿತ್ವವೇ ಹಳಸಿ ಹೋಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಇಂತಹ ತಪ್ಪುಗಳನ್ನು ಮಾಡಬೇಡಿ

* ಬೇರೆಯವರ ವಾಚ್ ಗಳನ್ನು ಕೂಡ ಧರಿಸಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಯಾಕೆಂದರೆ ಇದರಿಂದ ನಿಮ್ಮ ಸಮಯ ಹಾಳಾಗಬಹುದು ಅಥವಾ ಅವರ ಕೆ’ಟ್ಟ ಸಮಯ ನಿಮಗೆ ವರ್ಗಾವಣೆಯಾಗಬಹುದು

* ಬೇರೆಯವರ ಉಂಗುರಗಳನ್ನು ಕೂಡ ಧರಿಸಬಾರದು. ಯಾಕೆಂದರೆ ಕೆಲವರು ಅವರ ಶಾಸ್ತ್ರ ರಾಶಿ ನಕ್ಷತ್ರಗಳಿಗೆ ಹೋಲಿಕೆ ಆಗುವಂತೆ ಉಂಗುರಗಳನ್ನು ಮಾಡಿಸಿಕೊಂಡಿರುತ್ತಾರೆ. ನೀವು ಇಷ್ಟವಾಗಿದೆ ಎಂದಾಗ ಅವರು ಕೊಡದೆ ಇರಲು ಆಗದೆ ಇರಬಹುದು. ನೀವು ಗೊತ್ತಿಲ್ಲದೇ ತೆಗೆದುಕೊಂಡರು ನಿಮಗೆ ಅದು ಸೆಟ್ ಆಗದೆ ಇದ್ದರೆ ಸಮಸ್ಯೆ ಉಂಟಾಗುತ್ತದೆ.

* ಬೇರೆಯವರಿಗೆ ಪೊರಕೆಗಳನ್ನು ಕೊಡುವುದು ತಪ್ಪು, ಉಚಿತವಾಗಿ ಯಾರಿಂದಲೂ ಪೊರಕೆಗಳನ್ನು ತೆಗೆದುಕೊಳ್ಳಬಾರದು. ಹಾಗೆ ನಾವು ನಮ್ಮ ಮನೆಯ ಕಸಗುಡಿಸಿ ಬೇರೆಯವರ ಕೈಗೆ ಅದನ್ನು ಚೆಲ್ಲಲು ಕೊಟ್ಟರೆ ಅದು ಇಬ್ಬರಿಗೂ ಕ’ಷ್ಟವನ್ನುಂಟು ಮಾಡುತ್ತದೆ

* ಬೇರೆಯವರ ಕರವಸ್ರ್ತ ಬಳಸುವುದು ಮಹಾ ಪಾಪ. ಇದರಿಂದ ಆರೋಗ್ಯ ಸಮಸ್ಯೆಗಳು ವರ್ಗಾಯಿಸುವುದು ಮಾತ್ರವಲ್ಲದೆ ಸಂಬಂಧಗಳು ಹಾಳಾಗುತ್ತವೆ. ನಿಮಗೆ ಹೊಸ ಕರ್ಚಿಫ್ ಬೇರೆಯವರಿಂದ ಉಡುಗೊರೆಯಾಗಿ ಬಂದರೂ ಕೂಡ ನೀವು ಅದನ್ನು ನಯವಾಗಿ ನಿರಾಕರಿಸುವುದು ಉತ್ತಮ

* ಬೇರೆಯವರ ಚಾಪೆ, ಹಾಸಿಗೆ, ದಿಂಬು ಇವುಗಳನ್ನು ಕೂಡ ಪಡೆಯಬಾರದು. ಮತ್ತೊಬ್ಬರು ಬಳಸಿರುವ ಇವುಗಳ ಮೇಲೆ ನೀವು ಮಲಗಿಕೊಂಡರೆ ಅದು ನೆಗೆಟಿವ್ ವೈಬ್ರೇಶನ್ ಆಗುತ್ತದೆ.

* ಅಡುಗೆಮನೆ ವಿಚಾರದಲ್ಲಿ ಹೇಳುವುದಾದರೆ ಉಪ್ಪು, ಎಣ್ಣೆ ಮತ್ತು ಹುಳಿ ಪದಾರ್ಥಗಳು ಇವುಗಳನ್ನು ಯಾವುದೇ ಕಾರಣಕ್ಕೂ ಬೇರೆಯವರಿಂದ ಪಡೆಯಬಾರದು. ಯಾರಾದರೂ ಕೇಳಿದರು ನಾವು ಸಬೂಬು ಹೇಳಿ ಅವರಿಗೆ ಬೇಸರ ಪಡಿಸದೆ ತಿರಸ್ಕರಿಸಬೇಕು, ನಾವು ಸಹ ಕೊಡಬಾರದು.

ಅಸ್ತಮ / ಗೂರಲು ಉಸಿರಾಟದ ಸಮಸ್ಯೆ ಇದ್ದರೆ ಅಥಾವ ನಿಮ್ಮ ಮಕ್ಕಳಿಗೆ ಬರಬಾರದು ಎಂದರೆ ತಾಯಿಯರು ಹೀಗೆ ಮಾಡಿ.!

 

ಈಗಿನ ಕಾಲದಲ್ಲಿ ಮಕ್ಕಳು ಹುಟ್ಟಿದ ತಕ್ಷಣ ತಾಯಿಯ ಎದೆ ಹಾಲು ಕೊಡುವುದಕ್ಕೂ ಮೊದಲು ಜೇನುತುಪ್ಪ ಕೊಡುತ್ತಾರೆ ಅಥವಾ ಸಕ್ಕರೆ ನೀರು ಹಾಕುತ್ತಾರೆ ಅಥವಾ ತಮ್ಮ ಮನೆ ದೇವರ ಪ್ರಸಾದ ಎಂದು ತೀರ್ಥ ಹಾಕುತ್ತಾರೆ. ಈ ರೀತಿ ಮಾಡುವುದಕ್ಕಿಂತ ತಾಯಿ ಎದೆ ಹಾಲನ್ನು ಕೊಡಬೇಕು, ಯಾವುದೇ ಕಾರಣಕ್ಕೂ ತಾಯಿ ಎದೆ ಹಾಲಿಗಿಂತ ಮೊದಲು ಯಾವುದೇ ಆಹಾರವನ್ನು ಕೊಡದೆ ಇರುವುದು ಒಳ್ಳೆಯದು ಯಾಕೆಂದರೆ ಎದೆ ಹಾಲು ಪರಿಪೂರ್ಣ ಆಹಾರವಾಗಿರುತ್ತದೆ.

ಉಳಿದ ಎಲ್ಲಾ ಆಹಾರ ಪದಾರ್ಥಗಳಿಗಿಂತ ಹೆಚ್ಚು ಪೋಷಕಾಂಶವಿರುವ ಇದನ್ನು ಸೇವಿಸಿದಾಗ ಮಗು ಹೆಚ್ಚು ಆರೋಗ್ಯವಾಗಿರುತ್ತದೆ, ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈಗಿನ ಕಾಲದಲ್ಲಿ ಕೆಲವು ಹೆಣ್ಣು ಮಕ್ಕಳು ಬೇಕೆಂದಲೇ ಎದೆ ಹಾಲು ಕೊಡುವುದಿಲ್ಲ, ಅದಕ್ಕಿಂತ ಪಾಪ ಬೇರೊಂದಿಲ್ಲ.

ಕೆಲವರು ಎದೆ ಹಾಲು ಬರುವುದೇ ಇಲ್ಲ ಎಂದು ಹೇಳುತ್ತಾರೆ ಆದರೆ ಮಕ್ಕಳಿಗೆ ಅಭ್ಯಾಸ ಮಾಡಿಸಿ ಮಕ್ಕಳು ಎದೆ ಹಾಲು ಕುಡಿಯಲು ಆರಂಭಿಸಿದಾಗ ತಾಯಿಯ ಎದೆಹಾಲಿನ ಗ್ರಂಥಿಗಳು ಪ್ರಚೋದನೆಯಾಗಿ ಹಾಲು ಉತ್ಪತ್ತಿ ಆಗುತ್ತದೆ. ಈ ರೀತಿ ಎದೆ ಹಾಲು ಕುಡಿದ ಮಕ್ಕಳು ಬಹಳ ಗಟ್ಟಿಮುಟ್ಟಾಗಿ ಇರುತ್ತಾರೆ ಇವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಇರುತ್ತದೆ.

ಆದರೆ ಕೆಲವರು ಈ ರೀತಿ ಹಾಲು ಬರಲಿಲ್ಲ ಎಂದರೆ ಬಹಳ ಬೇಗ ಇದನ್ನು ಡಿಸೈಡ್ ಆಗಿ ಬೇರೆ ಹಾಲುಗಳನ್ನು ಕುಡಿಸಲು ಆರಂಭಿಸುತ್ತಾರೆ. ಇದರಿಂದ ತಾಯಿ ಹಾಗೂ ಮಗುವಿನ ಆರೋಗ್ಯ ಎರಡಕ್ಕೂ ಕೂಡ ಒಳ್ಳೆಯದಲ್ಲ. ಮಗು ತಾಯಿಯ ಹಾಲು ಕುಡಿಯುವುದು ಅಭ್ಯಾಸ ಮಾಡಿಕೊಳ್ಳದೆ ಹೋದರೆ ಅದು ತಾಯಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಹಾಕಿ ಇದೇ ಕಾರಣಕ್ಕಾಗಿ ವಿಪರೀತವಾದ ನೋವು ಜ್ವರ ಎಲ್ಲವನ್ನು ಅನುಭವಿಸಬೇಕಾಗುತ್ತದೆ ಮತ್ತು ಮಗು ಕೂಡ ತಾಯಿ ಎದೆ ಹಾಲನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳದೆ ಹೋದರೆ ನಂತರದ ದಿನಗಳಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತದೆ ತಾಯಿಯ ಗರ್ಭದಲ್ಲಿ ಇರುವಾಗ ಮಗುವಿನ ಶ್ವಾಸಕೋಶ ಸಂಕುಚಿತಗೊಂಡಿರುತ್ತದೆ.

ಅದು ಆಚೆಗೆ ಬಂದ ಮೇಲೆ ನಿಧಾನವಾಗಿ ಈ ವಾತಾವರಣಕ್ಕೆ ಹೊಂದಿಕೊಳ್ಳುತ್ತಾ ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ತಾಯಿ ಎದೆ ಹಾಲು ಕೊಡುವಾಗ ಅದು ಉಸಿರು ತೆಗೆದುಕೊಳ್ಳುವ ರೀತಿಯಿಂದ ಶ್ವಾಸಕೋಶ ನಿಧಾನವಾಗಿ ಹಿಗ್ಗಲು ಶುರುವಾಗುತ್ತದೆ ಒಂದು ವೇಳೆ ಈ ಅಭ್ಯಾಸ ಆಗದೆ ಇದ್ದರೆ ಮಗು ಬೆಳೆದ ಬೆಳೆ ಅದಕ್ಕೆ ಅಸ್ತಮಾ ಗುರಲು ಮುಂತಾದ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವುದು ಗ್ಯಾರಂಟಿ.

ಹಾಗಾಗಿ ಪ್ರತಿದಿನವೂ ಕೂಡ ಮಗುವಿಗೆ ಹಾಲು ಕುಡಿಯುವ ಅಭ್ಯಾಸ ಮಾಡಿಸಿ ಮಗು ಎಷ್ಟೇ ಅತ್ತರು ಅದು ಒಂದು ಹೊತ್ತು ತಿನ್ನದೇ ಇದ್ದರೂ ಈ ವಿಚಾರದಲ್ಲಿ ಸ್ವಲ್ಪ ಗಟ್ಟಿ ಮನಸ್ಸು ಮಾಡಬೇಕು, ಇದು ಮಗುವಿನ ಆರೋಗ್ಯ ದೃಷ್ಟಿಯಿಂದ ಬಹಳ ಒಳ್ಳೆಯದು.

ಆಗ ಮಗು ತಾನಾಗಿ ಹಾಲು ಕುಡಿಯಲು ಆರಂಭಿಸುತ್ತದೆ ಅದನ್ನು ಕಲಿಯುತ್ತದೆ. ಮಗು ಹೆಚ್ಚಾಗಿ ಅಳುತ್ತಿದೆ ಮಗುವಿಗೆ ಆಗುತ್ತಿಲ್ಲ ಎಂದು ನಾವೇ, ಬೇರೆ ಹಾಲು ಅಥವಾ ಜೇನುತುಪ್ಪವನ್ನು ತಿನಿಸಲು ಆರಂಭಿಸಿದರೆ ಮಗು ಅದನ್ನೇ ಕಲಿಯುತ್ತದೆ, ಮತ್ತೆ ಎಂದೂ ಅದು ಹಾಲು ಕುಡಿಯುವುದನ್ನು ಕಲಿಯುವುದಿಲ್ಲ.

ಈ ಕಾರಣಕ್ಕಾಗಿ ಪೌಷ್ಟಿಕಾಂಶದ ವಿಚಾರದಲ್ಲಿ ಮಾತ್ರವಲ್ಲದೆ ನಂತರದ ದಿನಗಳಲ್ಲಿ ದೇಹದ ಅಂಗಾಂಗ ಗಳಿಗೂ ಸಂಬಂಧ ಪಟ್ಟ ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಹಾಗಾಗಿ ಇನ್ನು ಮುಂದೆ ಇಂತಹ ತಪ್ಪನ್ನು ಮಾಡಬೇಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

https://youtu.be/U2Ao9cGlW4c?si=WFKQ3SL66HmLjZ1v

ಕನ್ಯಾ ರಾಶಿಯವರಿಗೆ ಹೊಸ ವರ್ಷ 2024 ಹೇಗಿರಲಿದೆ ನೋಡಿ.!

 

ಪ್ರತಿ ಹೊಸ ವರ್ಷವೂ ಕೂಡ ನಮ್ಮಲ್ಲಿ ಹೊಸ ಆಸೆಗಳನ್ನು ಹುಟ್ಟು ಹಾಕುತ್ತದೆ. ಇದುವರೆಗೆ ಬಹಳ ಕ’ಷ್ಟ ಪಟ್ಟವರು ಮುಂದಿನ ವರ್ಷವಾದರೂ ಒಳ್ಳೆಯದಾಗುತ್ತದೆ ಎಂದು ಕಾಯುತ್ತಿರುತ್ತಾರೆ. ಒಂದು ವೇಳೆ ಕಳೆದ ವರ್ಷದಲ್ಲಿ ಶುಭಫಲಗಳನ್ನು ಪಡೆದಿದ್ದವರು ಮುಂದಿನ ವರ್ಷದಲ್ಲಿ ಇದು ಮುಂದುವರೆಯಲಿ ಎಂದು ಬಯಸುತ್ತಾರೆ.

ಈ ರೀತಿ ನಿರೀಕ್ಷೆ ಏನೇ ಇದ್ದರೂ ಅವರ ರಾಶಿ ನಕ್ಷತ್ರಗಳ ಅನುಗುಣವಾಗಿ ಮತ್ತು ಹುಟ್ಟಿದ ದಿನಾಂಕದ ಅನುಗುಣವಾಗಿ ಯೂನಿವರ್ಸ್ ಅವರಿಗೆ ಫಲಾನುಫಲಗಳನ್ನು ನೀಡುತ್ತಿರುತ್ತದೆ. ಆದರೆ ಭವಿಷ್ಯ ಹೇಗಿದೆ ಎನ್ನುವುದನ್ನು ತಿಳಿದುಕೊಂಡರೆ ಸ್ವಲ್ಪ ಎಚ್ಚರಿಕೆಯಿಂದ ಇರಬಹುದು ಅಥವಾ ಬರುವ ಆ’ಗಂ’ತು’ಕಕ್ಕೆ ಮಾನಸಿಕವಾಗಿ ಸಿದ್ದರಿರಬಹುದು ಅಥವಾ ಬಂದದ್ದನ್ನು ತಡೆಯಲಾಗದಿದ್ದರೂ ಬದಲಿ ಮಾರ್ಗಗಳನ್ನು ಹುಡುಕಿಕೊಂಡು ನೋ’ವಿ’ನ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು.

ಹಾಗಾಗಿ ಹೊಸ ವರ್ಷವೂ ಹೇಗಿದೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ ಈ ಹಾದಿಯಲ್ಲಿ ಇಂದು ಈ ಅಂಕಣದಲ್ಲಿ ಹೊಸ ವರ್ಷ 2024 ಕನ್ಯಾ ರಾಶಿಯವರಿಗೆ ಯಾವ ರೀತಿಯ ಫಲಾನುಫಲಗಳನ್ನು ನೀಡುತ್ತಿದೆ ಎನ್ನುವುದರ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಕನ್ಯಾ ರಾಶಿಯವರಿಗೆ ಹೊಸ ವರ್ಷವು ಸಾಕಷ್ಟು ಲಾಭವನ್ನು ತರಲಿದೆ ಹಾಗಾಗಿ ಈ ವಿಚಾರದಲ್ಲಿ ಆತಂಕ ಬೇಡ.

ಕನ್ಯಾ ರಾಶಿಯ ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಬರುತ್ತದೆ, ಬಹಳ ಆಶ್ಚರ್ಯ ಪಡುವ ರೀತಿಯಲ್ಲಿ ಅವರು ಓದಿನಲ್ಲಿ ಮುಂದೆ ಬರುತ್ತಾರೆ. ಕೆಲಸ ಕಾರ್ಯಕ್ಕೆ ಹೋಗುವವರು ಕೂಡ ಉನ್ನತ ಸ್ಥಾನಕ್ಕೆ ಏರುತ್ತಾರೆ. ಎಲ್ಲರಿಂದ ಶಭಾಷ್ ಗಿರಿ ಪಡೆಯುತ್ತಾರೆ. ಅವರಿಗೆ ಜವಾಬ್ದಾರಿ ಹೆಚ್ಚಾಗಬಹುದು ಆದರೆ ಅದು ಮುಂದೆ ಒಂದು ದಿನ ಒಳ್ಳೆಯ ಸ್ಥಾನಕ್ಕೆ ಕರೆದುಕೊಂಡು ಹೋಗಿ ಕೂರಿಸುತ್ತದೆ.

ಹಾಗಾಗಿ ಹೊಸ ವರ್ಷದಲ್ಲಿ ಬರುವ ಸವಾಲುಗಳನ್ನು ಸ್ವೀಕರಿಸಿ. ಅದನ್ನು ಯಶಸ್ವಿಗೊಳಿಸಲು ಪ್ರಯತ್ನಿಸಿ ಈ ವರ್ಷ ನಿಮ್ಮ ಅದೃಷ್ಟವೂ ಕೂಡ ಅದಕ್ಕೆ ಸಾತ್ ಕೊಡುತ್ತದೆ. ಇನ್ನು ಮದುವೆ ವಿಚಾರದಲ್ಲಿ ಕೂಡ ದಂಪತಿಗಳ ನಡುವೆ ಇದ್ದ ವೈ ಮನಸು ತಳಿ ಆಗಲಿದೆ, ವಿವಾಹ ಯೋಗ ಇಲ್ಲದಿದ್ದವರಿಗೆ ಹೊಸ ವರ್ಷದಲ್ಲಿ ಸಂಬಂಧಗಳು ಕೂಡಿಬರುವ ಅಥವಾ ಒಳ್ಳೆಯ ಸಂಬಂಧಗಳನ್ನು ಹರಸಿ ಹೋಗುವ ಸಾಧ್ಯತೆಗಳು ಇವೆ ಮನೆಯ ಹಿರಿಯರ ಆರೋಗ್ಯವೂ ಕೂಡ ಸುಧಾರಿಸಲಿದೆ.

ಕನ್ಯಾ ರಾಶಿಯವರು ತಂದೆ ತಾಯಿ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದರೆ ಈ ವರ್ಷ ಅವರು ಸಮಾಧಾನದಿಂದ ಇರಬಹುದು. ಯಾಕೆಂದರೆ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಅನೇಕ ದಿನಗಳಿಂದ ರೋಗ ಭಾದೆ ಇದ್ದರೆ ಹೊಸ ವರ್ಷದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದೆ ಸಮಸ್ಯೆಗಳು ಪರಿಹಾರವಾಗಿ ಸಮಾಧಾನ ಕಾಣುತ್ತಿರಿ.

ಈ ರೀತಿಯಾಗಿ ಎಲ್ಲ ವಿಚಾರದಲ್ಲೂ ಕೂಡ ಕನ್ಯಾ ರಾಶಿಯವರಿಗೆ ಶುಭ ಫಲಗಳನ್ನು 2024 ನೀಡುತ್ತಿದೆ. ಆದರೆ ಸ್ವಲ್ಪ ಮಟ್ಟಿಗಾದರೂ ದೋ’ಷಗಳು ಇದ್ದೇ ಇರುತ್ತವೆ. ಈ ರೀತಿ ದೋಷಗಳ. ಪರಿಹಾರ ಆಗಬೇಕು ಎಂದರೆ ಈ ಪರಿಹಾರ ಕ್ರಮಗಳನ್ನು ಅನುಸರಿಸಿ.

1. ಸಾಧ್ಯವಾದಷ್ಟು ನಿಮ್ಮ ಮನೆಯ ಸುತ್ತಮುತ್ತ ಗಿಡಮರಗಳನ್ನು ನೆಡಿ, ಪಟ್ಟಣ ಪ್ರದೇಶದಲ್ಲಿ ಇದ್ದವರಿಗೆ ಅನುಕೂಲತೆ ಇಲ್ಲ ಎಂದರೆ ನಿಮ್ಮ ಮನೆಯ ಮೇಲೆ ಆದರೂ ನಿಮ್ಮ ಕೈಲಾದಷ್ಟು ಗಿಡಗಳನ್ನು ಸಾಕಿ ಬೆಳಸಿ. ಜೊತೆಗೆ ಅಲ್ಲಿ ಪ್ರಾಣಿ-ಪಕ್ಷಿಗಳು ಕೂಡಿಕೊಂಡು ಬದುಕಲು ಬಂದರೆ ಹಾನಿ ಮಾಡಬೇಡಿ, ಅವುಗಳಿಗೆ ಗೂಡು ಕಟ್ಟಿಕೊಳ್ಳಲು ಬಿಡಿ, ನಿಮ್ಮ ಶಕ್ತಿಯನುಸಾರ ಆಹಾರವನ್ನು ಕೂಡ ಇಡಿ. ಸಾಧ್ಯವಾದಷ್ಟು ಅನಾಥರಿಗೆ, ನೋವಿನಲ್ಲಿ ಇರುವವರಿಗೆ, ವೃದ್ಧಾಶ್ರಮದಲ್ಲಿರುವವರಿಗೆ ಭಿಕ್ಷುಕರಿಗೆ ನಿಮ್ಮ ಶಕ್ತಿಯಲ್ಲಿ ಆದಷ್ಟು ದಾನ ಮಾಡುತ್ತಾ ಬನ್ನಿ ಇನ್ನು ಹೆಚ್ಚಿನ ಫಲಗಳನ್ನು ಪಡೆಯುತ್ತೀರಿ

2. ಪ್ರತಿದಿನವೂ ಉತ್ತರಾಭಿಮುಖವಾಗಿ ಕುಳಿತು 108 ಬಾರಿ ಓಂ ಐಂ ಹ್ರೀಂ ಲಲಿತಾ ದೇವ್ಯೈ ನಮಃ ಎನ್ನುವ ಮಂತ್ರವನ್ನು ಪಠಿಸಿ ಶುಭವಾಗುತ್ತದೆ.

ಯಾರು ಶಿವನನ್ನು ಪೂಜೆ ಮಾಡುತ್ತಾರೋ ಅವರಿಗೆ ಈ 5 ಮಹಾ ಶಕ್ತಿಗಳು ಕಾಪಾಡುತ್ತವೆ.!

ಶಿವ ಎನ್ನುವ ಎರಡಕ್ಷರದ ಶಕ್ತಿಯನ್ನು ವಿವರಿಸಲು ಎರಡು ಗ್ರಂಥ ಬರೆದರೂ ಸಾಲದು, ಶಿವನನ್ನು 108 ಹೆಸರಿನಿಂದ ಕರೆಯುತ್ತಾರೆ. ಜಗದೀಶ, ಸರ್ವೇಶ, ಗೌರೀಶ, ಗಂಗಾಧರ, ದೇವ ದೇವ ಮಹಾದೇವ ಎಲ್ಲವೂ ಕೂಡ ಈಶ್ವರನೇ. ಈಶ್ವರನನ್ನು ಒಲಿಸಿಕೊಳ್ಳುವುದು ಎಷ್ಟು ಸರಳ ಎಂದರೆ ಆತ ಆಡಂಬರ ಕೇಳಲಾರ, ನಿಜ ಭಕ್ತಿಯೊಂದೇ ಶಿವನ ಸಾಕ್ಷಾತ್ಕಾರಕ್ಕೆ ಇರುವ ದಾರಿ, ಸರಳತೆಯೇ ಆತನ ಆಭರಣ.

ಶಿವ ಅಭಿಷೇಕ ಪ್ರಿಯ ಶುದ್ಧಜಲದಿಂದ ಶಿವನಿಗೆ ಅಭಿಷೇಕ ಮಾಡಿ ತಮ್ಮ ಕೈಲಾದ ಪ್ರಸಾದವನ್ನು ನೈವೇದ್ಯ ಮಾಡಿ ಏಕಾಗ್ರತೆಯಿಂದ ಪಂಚಾಕ್ಷರಿ ಮಂತ್ರವನ್ನು 108 ಬಾರಿ ನುಡಿಯುತ್ತಾ ಸಂಪೂರ್ಣವಾಗಿ ಶಿವನ ಮೇಲೆ ನಂಬಿಕೆ ಇಟ್ಟು ಕರೆದರೆ ಸಾಂಬಸದಾ ಶಿವ ಕರಗದೇ ಇರಲಾರ. ಜೀವನದಲ್ಲಿ ಎಲ್ಲದರ ಮೇಲೆ ಬೇಸರವಾದಾಗ ಶಿವ ನೆನಪಾಗುತ್ತಾನೆ ಹಾಗೂ ಇಂತಹ ಅನಾಥಸ್ಥಿತಿಯಲ್ಲಿರುವವನು ಕೈ ಹಿಡಿಯುವುದು ಈ ದೇವನೆ.

ಶಿವನ ಅನುಗ್ರಹ ದೊರೆತರೆ  ಜೊತೆ ಇನ್ನೂ ಐದು ದೇವತೆಗಳ ಆಶೀರ್ವಾದವೂ ಜೊತೆಗೆ ಸಿಗುತ್ತದೆ. ಶಿವನನ್ನು ಕಾಲ ಎಂದು ಕೂಡ ಕರೆಯುತ್ತಾರೆ. ಮಹಾಕಾಳೇಶ್ವರನ ಅಂಶವಾಗಿರುವ ಶ್ರೀ ಕಾಲಭೈರವೇಶ್ವರನನ್ನು ಆರಾಧಿಸುವವರಿಗೆ ಖಂಡಿತವಾಗಿಯೂ ಸಿಗುತ್ತದೆ, ಕಾಲಭೈರವೇಶ್ವರನ ಕೃಪೆಯಿಂದಾಗಿ ನಮ್ಮ ಸಮಯ ಸರಿಯಾಗಿ ನಡೆಯುತ್ತದೆ ಹಾಗೂ ಆತನು ನಮ್ಮ ಸಮಯ ಕಾಯುತ್ತಾನೆ ಎನ್ನುವ ನಂಬಿಕೆ. ಅದೇ ರೀತಿಯಾಗಿ ನಮ್ಮ ಮೇಲೆ ಆಗುವ ದುಷ್ಟಶಕ್ತಿಗಳ ಪ್ರಭಾವವನ್ನು ಕೂಡ ಶ್ರೀ ‌ ಕಾಲಭೈರವೇಶ್ವರನ ತಡೆಯುತ್ತಾನೆ.

ಶಿವನ ವಾಹನವಾದ ನಂದಿಯು ಯಾವಾಗಲೂ ಶಿವನ ಜೊತೆ ಇರುತ್ತಾರೆ. ಪ್ರತಿಯೊಂದು ಶಿವನ ದೇವಸ್ಥಾನದಲ್ಲಿ ಕೂಡ ಶಿವಲಿಂಗದ ಎದುರುಗಡೆ ನಂದಿ ಇರುತ್ತಾರೆ. ನಂದಿ ಎಂದರೆ ಸಾತ್ವಿಕತೆ, ನಂದಿ ಎಂದರೆ ಭಕ್ತಿಯ ಪ್ರತೀಕ, ನಂದಿ ಎಂದರೆ ಗುರುಭಕ್ತಿ, ನಂದಿ ಎಂದರೆ ಶಿವನ ಅತ್ಯಂತ ಪ್ರೀತಿ ಪಾತ್ರದಲ್ಲಿ ಒಬ್ಬ ನಂದಿಯು  ಶಿವನ ಮೇಲೆ ಅಪಾರವಾದ ಭಯ ಭಕ್ತಿ  ಹೊಂದಿದ್ದಾರೆ.

ನಾವು ಶಿವನನ್ನು ಆರಾಧಿಸಿದರೆ ಶಿವನ ಜೊತೆ ನಂದಿಯನ್ನು ಆರಾಧಸಿದಂತೆ, ಶಿವ ಭಕ್ತರೆಲ್ಲರೂ ಕೂಡ ಶಿವನ ಜೊತೆ ನಂದಿಯನ್ನು ಕೂಡ ಪೂಜಿಸುತ್ತಾರೆ ಹಾಗಾಗಿ ನೀವೇನಾದರೂ ಪರಶಿವನ ಕೃಪೆಗಾಗಿ ಪ್ರಾರ್ಥಿಸಿದರೆ ಖಂಡಿತವಾಗಿಯೂ ನಿಮಗೆ ನಂದೀಶ್ವರನ ಆಶೀರ್ವಾದ ಸಿಗುತ್ತದೆ.

ಶಿವನ ಜಟೆಯಿಂದ ಅವತರಿಸಿರುವ ವೀರಭದ್ರನು ಕೂಡ ಶಿವನ ಪ್ರತಿರೂಪ. ವೀರಭದ್ರನು ಶಿವನ ರೌದ್ರ ಅವತಾರವಾಗಿದ್ದಾರೆ ಮತ್ತು ಶಿವನ ಹಿಂಬಾಲಕರಾಗಿದ್ದಾರೆ. ನೀವು ವೀರಭದ್ರನನ್ನು ಪೂಜಿಸಿದರೆ ಸಾಕ್ಷಾತ್ ಶಿವನಿಗೆ ಕೈ ಮುಗಿದಂತೆ ಹಾಗೆ ನೀವು ಶಿವನ ಮೇಲೆ ಅಪಾರ ನಂಬಿಕೆ ಇಟ್ಟಿದ್ದರೆ ವೀರಭದ್ರನ ಅನುಗ್ರಹ ಕೂಡ ನಿಮ್ಮ ಮೇಲೆ ಆಗುತ್ತದೆ.

ಅದೇ ರೀತಿಯಾಗಿ ಕಲಿಯುಗದಲ್ಲಿ ಬಹಳ ಬೇಗ ಒಲಿಯುವ ದೇವನಾದ ಆಂಜನೇಯನು ಕೂಡ ಶಿವ ಭಕ್ತರನ್ನು ಕಾಯುತ್ತಾರೆ ಎನ್ನುವ ಪುರಾವೆಗಳಿವೆ, ಶಿವನಿಗೆ ಭಕ್ತಿಯಿಂದ ನಮಿಸುವುದರಿಂದ ಶ್ರೀ ಆಂಜನೇಯನ ಆಶೀರ್ವಾದವೂ ಕೂಡ ಸಿಗುತ್ತದೆ.

ವಿಷ್ಣುವಿನ ಅವತಾರವಾದ ಶ್ರೀ ರಾಮನು ಕೂಡ ಶಿವನನ್ನು ಪ್ರಾರ್ಥಿಸುವವರಿಗೆ ಆಶೀರ್ವಾದ ಮಾಡುತ್ತಾರೆ. ಶಿವನನ್ನು ಪ್ರೀತಿಸುವವರಿಗೆ ಶಿವನ ಮೇಲೆ ಅಪರಾಧ ಭಕ್ತಿ ಉಳ್ಳವರಿಗೆ ಶಿವ ಧ್ಯಾನ ಮಾಡುತ್ತಾ ಬದುಕು ನಡೆಸುವವರಿಗೆ ಸದಾ ಕಾಲ ಶ್ರೀ ರಾಮನ ಶ್ರೀರಕ್ಷೆಯು ದೊರಕುತ್ತದೆ.

ನೀವೇನಾದರೂ ಶಿವನ ಭಕ್ತರಾಗಿದ್ದರೆ ಶಿವನನ್ನು ಪೂಜಿಸುವಾಗ ಈ ಐದು ಜನರನ್ನು ನೆನೆದು ಒಮ್ಮೆ ಕೈ ಮುಗಿಯಿರಿ ಹೆಚ್ಚಿನ ಆಶೀರ್ವಾದ ನಿಮಗೆ ದೊರೆಯುತ್ತದೆ. ಒಂದು ವೇಳೆ ನಿಮಗೆ ಇದುವರೆಗೂ ಕೂಡ ಈ ವಿಷಯ ತಿಳಿಯದೆ ಇದ್ದರೂ ಕೂಡ ನೀವು ಶಿವಭಕ್ತರಾಗಿದ್ದರೆ ಈ ಐದು ದೇವರ ಆಶೀರ್ವಾದವು ನಿಮಗೆ ಮೇಲೆ ಇದ್ದೇ ಇರುತ್ತದೆ.

ಹುಟ್ಟಿದ ದಿನಾಂಕದ ಆಧಾರದ ಮೇಲೆ ಅದೃಷ್ಟದ ಸಂಖ್ಯೆ ಕಂಡು ಹಿಡಿಯುವುದು ಹೇಗೆ ಅಂತ ನೋಡಿ.!

 

ಈಗಿನ ಕಾಲದಲ್ಲಿ ಸಂಖ್ಯಾಶಾಸ್ತ್ರವನ್ನು ಹೆಚ್ಚಿನ ಜನರು ನಂಬುತ್ತಾರೆ. ಜ್ಯೋತಿಷ್ಯ ಶಾಸ್ತ್ರದಂತೆ ಸಂಖ್ಯಾಶಾಸ್ತ್ರವು ಕೂಡ ಬಹಳ ಚೆನ್ನಾಗಿ ವರ್ಕ್ ಆಗುತ್ತದೆ. ಸಂಖ್ಯಾಶಾಸ್ತ್ರವು ಕಣ್ಣೆದುರಿಗೆ ಕಾಣುತ್ತಿರುವ ಸತ್ಯ ಎಂದು ಹೇಳಬಹುದು. ಹಾಗಾಗಿ ಜ್ಯೋತಿಷ್ಯ ಶಾಸ್ತ್ರವನ್ನು ನಂಬದಿದ್ದರೂ ಕೂಡ ಸಂಖ್ಯಾಶಾಸ್ತ್ರವನ್ನು ನಂಬಲೇಬೇಕು.

ಸಂಖ್ಯಾಶಾಸ್ತ್ರದಲ್ಲಿ ಎಲ್ಲವೂ ನಂಬರ್ ಆಧಾರಿತವೇ ನಮ್ಮ ಬದುಕು ಕೂಡ ನಂಬರ್ ಆಧಾರಿತವಾಗಿ ನಡೆಯುತ್ತಿರುವುದರಿಂದ ಕಣ್ಣು ಮುಚ್ಚಿ ಇದನ್ನು ನಂಬಬಹುದು. ಸಂಖ್ಯಾಶಾಸ್ತ್ರವನ್ನು ನಂಬಿ ನಡೆದವರಿಗೆ ಮಾತ್ರ ಅದರ ರುಚಿ ತಿಳಿದಿರುತ್ತದೆ. ಸಂಖ್ಯಾಶಾಸ್ತ್ರದಲ್ಲಿ ಜನ್ಮ ಸಂಖ್ಯೆ ಹಾಗೂ ಭಾಗ್ಯ ಸಂಖ್ಯೆ ಎನ್ನುವುದು ಬಹಳ ಮುಖ್ಯವಾದ ವಿಷಯಗಳು ಮತ್ತು ಇದರ ನಡುವೆ ಲಕ್ಕಿ ನಂಬರ್ ಎನ್ನುವುದು ಅಥವಾ ಲಕ್ಕಿ ಕಾಂಬಿನೇಶನ್ ನಂಬರ್ ಎನ್ನುವುದು ಹೆಚ್ಚು ವರ್ಕ್ ಆಗುತ್ತದೆ.

ಇದರ ಜೊತೆಗೆ ಇಂದು ನಿಮಗೆ ಹಿಡನ್ ಲಕ್ಕಿ ನಂಬರ್ ಬಗ್ಗೆ ಕೂಡ ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ ಉದಾಹರಣೆಗೆ ನೀವು 14 ಏಪ್ರಿಲ್ 1994ರಲ್ಲಿ ಹುಟ್ಟಿದ್ದೀರಾ ಎಂದುಕೊಳ್ಳೋಣ. ಇಲ್ಲಿ ನಿಮ್ಮ ಜನ್ಮ ಸಂಖ್ಯೆ 1+4=5, 5 ಎಂದರೆ ಬುಧ ಗ್ರಹದ ಪ್ರಭಾವವಿರುವ ಸ್ವಭಾವವನ್ನು ನೀವು ಹೊಂದಿರುತ್ತೀರಿ ಮತ್ತು ನಿಮ್ಮ ಭಾಗ್ಯ ಸಂಖ್ಯೆಯು 1+4+0+4+1+9+9+4=32=5 ಭಾಗ್ಯ ಸಂಖ್ಯೆ ಕೂಡ 5 ಬಂದಿರುತ್ತದೆ.

ಹಾಗಾಗಿ ನೀವು ಹೆಚ್ಚು ಬುದ್ಧಿವಂತರು ವ್ಯಾಪಾರ ವ್ಯವಹಾರದಲ್ಲಿ ಆಸಕ್ತಿ ಹೊಂದಿರುತ್ತೀರಾ ಹಣಕಾಸಿನ ಸಮಸ್ಯೆ ಇರುವುದಿಲ್ಲ. ಬುಧ ಗ್ರಹದ ರೀತಿ ಮಗುವಿನ ಸ್ವಭಾವ ಇರುವ ಗುಣ ನಿಮ್ಮದು ಎಲ್ಲರ ಮಧ್ಯ ಹೆಚ್ಚು ಆಕರ್ಷಣೀಯವಾಗಿರುತ್ತೀರಿ ಇದೆಲ್ಲವೂ ಸತ್ಯ ಈಗ ನಿಮ್ಮ ಸ್ವಭಾವವು ಇದರ ಜೊತೆ ಇನ್ನು ಕೆಲವು ಲಕ್ಷಣಗಳನ್ನು ಹೋಲುತ್ತಿರುತ್ತದೆ.

ಉದಾಹರಣೆಗೆ ಇದೇ 14ನೇ ಸಂಖ್ಯೆಯಲ್ಲಿ ಹುಟ್ಟಿದ ಕೆಲವರು ಬಹಳ ಕೋ’ಪಿ’ಷ್ಟ ರಾಗಿರುತ್ತಾರೆ. ಕೆಲಸ ಕಾರ್ಯದ ವಿಚಾರದಲ್ಲಿ ಬಹಳಷ್ಟು ಆಗಿರುತ್ತಾರೆ, ನಿಷ್ಟೂರವಾದಿಗಳಾಗಿರುತ್ತಾರೆ. ಇವರಲ್ಲಿ ಮಂಗಳಗ್ರಹದ ಪ್ರಭಾವ ಹೆಚ್ಚಾಗಿ ಕಾಣಿಸುತ್ತಿರುತ್ತದೆ. ಹೀಗ್ಯಾಕೆ ಎನ್ನುವ ಗೊಂದಲ ಇದ್ದರೆ ಅದಕ್ಕೆ ಉತ್ತರ ಹೀಗಿದೆ ನೋಡಿ, ಅದು ನಿಮ್ಮ ಹಿಡನ್ ಲಕ್ಕಿ ನಂಬರ್ ಆಗಿರುತ್ತದೆ.

ಇದು ಹೇಗೆಂದರೆ ನಿಮ್ಮ ಹುಟ್ಟಿದ ದಿನಾಂಕ ಹಾಗೂ ತಿಂಗಳಿನ ಸಂಖ್ಯೆಯನ್ನು ಮಾತ್ರ ಕೂಡಿಸಬೇಕು. 1+4+0+4=9 ಆದಕಾರಣ ನಿಮಗೆ ಬುಧ ಗ್ರಹದ ಜೊತೆ ಮಂಗಳ ಗ್ರಹದ ಪ್ರಭಾವವು ಹೆಚ್ಚಾಗಿದ್ದು ಆ ವರ್ತನೆ ಕೂಡ ನಿಮ್ಮಲ್ಲಿ ಕಂಡು ಬರುತ್ತಿರುತ್ತದೆ ಇದು ನಿಮ್ಮ ಲಕ್ಕಿ ನಂಬರ್ ಕೂಡ ಆಗಿರುತ್ತದೆ.

ಸಾಮಾನ್ಯವಾಗಿ ಬುಧಗ್ರಹಕ್ಕೆ 2, 6, 8, 9 ಒಳ್ಳೆಯ ಕಾಂಬಿನೇಷನ್ ಆಗಿರುವುದರಿಂದ ಈ 9ನೇ ಲಕ್ಕಿ ನಂಬರ್ ಪ್ರಕಾರ ನೀವು ಒಳ್ಳೆಯ ಕೆಲಸಗಳನ್ನು ಮಾಡಿದರೆ ಕೆಲವು ವಿಷಯಗಳಲ್ಲಿ 9 ಎನ್ನುವ ಸಂಖ್ಯೆ ಆರಿಸಿದರೆ ಅಥವಾ 9 ಬರುವ ದಿನಗಳಲ್ಲಿ ಆ ಕಾರ್ಯಗಳನ್ನು ಮಾಡಿದರೆ ಹೀಗೆ 9ಕ್ಕೆ ಸಂಬಂಧಿಸಿದಂತೆ ನೀವು ಎಲ್ಲದರಲ್ಲೂ ನಡೆದುಕೊಂಡರೆ ಯೂನಿವರ್ಸ್ ಕೂಡ ನಿಮಗೆ ಸಪೋರ್ಟ್ ಮಾಡಿ ನಿಮ್ಮ ಎಲ್ಲಾ ಕಾರ್ಯಗಳು ಜಯಿಸುತ್ತವೆ.

ಇದೊಂದು ಹಿಡನ್ ಸೀಕ್ರೆಟ್ ಆಗಿದೆ ಆದರೆ ಹೆಚ್ಚಿನ ಜನರಿಗೆ ಈ ಮಾಹಿತಿ ಗೊತ್ತಿರುವುದಿಲ್ಲ. ಇದನ್ನು ಕೂಡ ನೀವು ನಿಮ್ಮ ಜೀವನದಲ್ಲೇ ಅಳವಡಿಸಿಕೊಂಡು ಇನ್ನಷ್ಟು ಸಕ್ಸಸ್ ಆಗಲಿ ಎನ್ನುವುದಷ್ಟೇ ಈ ಅಂಕಣದ ಆಶಯ.

ಎಲ್ಲಾ ಮಹಿಳೆಯರಿಗಾಗಿ ಕೆಲವು ಅಡಿಕೆ ಮನೆ ಟಿಪ್ಸ್, ಇವುಗಳನ್ನು ಫಾಲೋ ಮಾಡಿ ಕೆಲಸ ಕಡಿಮೆ ಆಗುತ್ತೆ.!

ಮನೆಯಲ್ಲಿರುವ ಗೃಹಿಣಿ ಮೇಲೆ ಸಾಕಷ್ಟು ಜವಾಬ್ದಾರಿ ಇರುತ್ತದೆ ಅಡುಗೆ ಮನೆಯನ್ನು ಸರಿಯಾಗಿ ನಿರ್ವಹಿಸುವ ಮನೆ ಮಂದಿಯ ಆರೋಗ್ಯ ಕಾಳಜಿ ಮಾಡುವ, ಮನೆಯನ್ನು ಕ್ಲೀನ್ ಆಗಿ ಆಕರ್ಷಕವಾಗಿ ಇಟ್ಟುಕೊಳ್ಳುವ ಹೀಗೆ ಈ ಪಟ್ಟಿ ಬೆಳೆಯುತ್ತದೆ. ಇದರ ಗಡಿಬಿಡಿಯಲ್ಲಿ ಅನೇಕ ಬಾರಿ ಸಣ್ಣ ಪುಟ್ಟ ಎಡಗಟ್ಟಿನಿಂದ ಅನೇಕ ನ’ಷ್ಟಗಳನ್ನು ಮಾಡಿಕೊಳ್ಳುತ್ತೇವೆ.

ಅದರಲ್ಲೂ ಅಡುಗೆ ಮನೆ ವಿಷಯದಲ್ಲಿ ಕೆಲಸ ಕಡಿಮೆ ಮಾಡಿ, ಪದಾರ್ಥಗಳು ಹಾಳಾಗುವುದನ್ನು ತಪ್ಪಿಸಲು ಎಷ್ಟು ಉಪಾಯ ಮಾಡಿದರೂ ಸಾಲದು. ಹಾಗಾಗಿ ಈ ಅಂಕಣದಲ್ಲಿಯೂ ಕೂಡ ಕೆಲ ಪ್ರಮುಖ ಟಿಪ್ಸ್ ಗಳನ್ನು ನೀಡುತ್ತಿದ್ದೇವೆ, ಇನ್ನು ಮುಂದೆ ಇವುಗಳನ್ನು ಕೂಡ ಪಾಲಿಸಿ.

* ಅಕ್ಕಿಯನ್ನು ತಂದು ಕ್ಲೀನ್ ಮಾಡಿ ಇಡುತ್ತೇವೆ, ಆದರೆ ಕೆಲ ದಿನಗಳಾದ ಮೇಲೆ ಬೂಸ್ಟ್ ಬಂದಿರುತ್ತದೆ ಹೀಗಾಗಬಾರದೆಂದರೆ ಅಕ್ಕಿ ಡಬ್ಬದಲ್ಲಿ ಕರಿಬೇವಿನ ಎಲೆಗಳನ್ನು ಹಾಕಿ ಇಡಿ
* ಸಕ್ಕರೆ ಡಬ್ಬಕ್ಕೆ ಇರುವೆಗಳು ಮುತ್ತಿಗೆ ಹಾಕದಿರುವಂತೆ ಮಾಡಲು ಏನೆಲ್ಲ ಟ್ರಿಕ್ಸ್ ಮಾಡಿ ಸೋತಿರುತ್ತೇವೆ, ಇನ್ನು ಮುಂದೆ ನಾಲ್ಕೈದು ಲವಂಗಗಳನ್ನು ಸಕ್ಕರೆ ಡಬ್ಬಕ್ಕೆ ಹಾಕಿ ಇಡಿ ಈ ಸಮಸ್ಯೆ ತಪ್ಪುತ್ತದೆ

* ಹಸಿಮೆಣಸಿನಕಾಯಿ ಹಚ್ಚಿದಾಗ ಕೈ ಉರಿ ಬರುತ್ತದೆ. ಆ ಕೈ ಉರಿ ವಾಸಿ ಮಾಡಿಕೊಳ್ಳುವುದಕ್ಕೆ ನಮಗೆ ಹೆಚ್ಚು ಸಮಯ ಬೇಕು ಮತ್ತು ಅದಕ್ಕಾಗಿ ಏನೇನೋ ಮುಲಾಮು ಕೂಡ ಹಚ್ಚಬೇಕು. ಈ ಕಷ್ಟ ತಪ್ಪಿಸಿಕೊಳ್ಳಲು ಇನ್ನು ಮುಂದೆ ಹಸಿಮೆಣಸಿಕಾಯಿಯನ್ನು ಕತ್ತರಿಸಲು ಚಾಕುವಿನ ಬದಲು ಕತ್ತರಿಯನ್ನು ಬಳಸಿ

* ಕರಿಬೇವಿನ ಎಲೆಗಳನ್ನು ಬಿಡಿಸಿ ಒಂದು ಗಾಜಿನ ಕಂಟೈನರ್ ನಲ್ಲಿ ಹಾಕಿ ಫ್ರಿಡ್ಜ್ ಗೆ ಇಡಿ ಈ ರೀತಿ ಮಾಡಿದರೆ ತಿಂಗಳಾದರೂ ಅವು ಫ್ರೆಶ್ ಆಗಿರುತ್ತವೆ.
* ಏಲಕ್ಕಿ ಬಿಡಿಸಿದ ಮೇಲೆ ಅದರ ಸಿಪ್ಪೆಗಳನ್ನು ಬಿಸಾಕಬೇಡಿ. ಇದನ್ನು ಒಣಗಿಸಿ ಪುಡಿ ಮಾಡಿ ಚಹಾ ಪುಡಿಗೆ ಹಾಕಿ ಇಡಿ ಇದರಿಂದ ಚಹಾ ಮಾಡಿದಾಗ ಅದರ ರುಚಿ ಹೆಚ್ಚಾಗುತ್ತದೆ, ಪರಿಮಳದಿಂದ ಕೂಡಿರುತ್ತದೆ.

* ಅನ್ನ ಉದುರುದುರಾಗಿ ಬೆಳ್ಳಗೆ ಬರಬೇಕು ಎಂದರೆ ಅನ್ನ ಬೇಯುವಾಗ ಒಂದೆರಡು ಹನಿ ನಿಂಬೆರಸ ಹಾಕಿದರೆ ಅನ್ನ ಬೆಳ್ಳಗಾಗುತ್ತದೆ ಮತ್ತು ಹೆಚ್ಚು ರುಚಿಯಿಂದ ಕೂಡಿರುತ್ತದೆ ಹಾಗೂ ಬೇಗ ಬೇಯುತ್ತದೆ
* ಉಪ್ಪಿನ ಡಬ್ಬದಲ್ಲಿ ಉಪ್ಪು ಕಂದು ಹೋಗಿ ನೀರು ಬಿಟ್ಟುಕೊಳ್ಳುವುದನ್ನು ನಾವೆಲ್ಲ ನೋಡಿ ಸುಮ್ಮನಾಗಿರುತ್ತೇವೆ, ಇದನ್ನು ತಪ್ಪಿಸಲು ಆ ಉಪ್ಪಿನ ಡಬ್ಬಕ್ಕೆ ಎರಡು ಒಣ ಮೆಣಸಿನಕಾಯಿ ಹಾಕಿ ಇಡಿ

* ತೆಂಗಿನಕಾಯಿ ಒಡೆದ ಮೇಲೆ ಅದು ಹೆಚ್ಚಿಗೆ ದಿನ ಬಾಳಿಕೆ ಬರಬೇಕು ಎಂದರೆ ಅವುಗಳಿಗೆ ಸ್ವಲ್ಪ ಉಪ್ಪು ಸವರಿ ಇಡಿ ಆಗ ಬೇಗ ಕೆಡುವುದಿಲ್ಲ
* ನೀರನ್ನು ಕುಡಿಸಬೇಕಾದಾಗ ಪ್ಲೇಟ್ ಮುಚ್ಚಿಟ್ಟರೆ ನೀರು ಬೇಗ ಬಿಸಿಯಾಗುತ್ತದೆ
* ಮಾವಿನಕಾಯಿ ಉಪ್ಪಿನಕಾಯಿ ಬೇಗ ಕೆಡುತ್ತದೆ ಮತ್ತು ಅದರ ರುಚಿ ಹೋಗುತ್ತದೆ ಹಾಗೆ ಆಗಬಾರದು ಎಂದರೆ ಅದಕ್ಕೆ ಚೂರು ಬೇಕಿಂಗ್ ಸೋಡಾ ಹಾಕಿ ಇಡಿ

* ಓಂ ಕಾಳು ಹಾಗೆ ತಿನ್ನುವ ಅಭ್ಯಾಸ ಇರುವವರು ಅದರ ಘಾಟಿನಿಂದ ಸಮಸ್ಯೆಪಡುತ್ತಿದ್ದರೆ ಮೊದಲಿಗೆ ಅದನ್ನು ನೀರಿನಲ್ಲಿ ಬೇಯಿಸಿ ಇಟ್ಟುಕೊಳ್ಳಿ, ಈ ರೀತಿ ಮಾಡಿ ಬಳಸಿದರೆ ಘಾಟಾಗುವುದಿಲ್ಲ. ಓಂ ಕಾಳು ಬೇಯಿಸಲು ಬಹಳ ಸಮಯ ಬೇಕು ಅವುಗಳನ್ನು ನೆನೆಸಿಟ್ಟು ಬೇಯಿಸಿದರೆ ಬೇಗ ಬೇಯುತ್ತದೆ.

* ಮೆಣಸಿಕಾಯಿಗೆ ಎಣ್ಣೆ ಮತ್ತು ಉಪ್ಪನ್ನು ಸವರಿ ಇಟ್ಟರೆ ಹೆಚ್ಚು ದಿನ ಬಾಳಿಕೆ ಬರುತ್ತದೆ
* ಬಿಸ್ಕೆಟ್, ಚಕ್ಕುಲಿ ನಿಪ್ಪಟ್ಟು ಇವುಗಳನ್ನು ಇಡುವ ಡಬ್ಬದಲ್ಲಿ ಹೀರುವ ಕಾಗದ ಹಾಕಿ ಇಟ್ಟರೆ, ಇವು ಬೇಗ ಮೆತ್ತಗೆ ಆಗುವುದಿಲ್ಲ
* ಅಡುಗೆಗೆ ಬಳಸುವ ಇಂಗು ಬಹಳ ಬೇಗ ಗಟ್ಟಿಯಾಗಿ ಬಿಡುತ್ತದೆ. ಹಾಗಾಗಿ ಒಂದು ಒಣಮೆಣಸಿನ ಕಾಯಿಯನ್ನು ಹಾಕಿ ಇಟ್ಟರೆ ಅದು ಮೆತ್ತಗಾಗುವುದಿಲ್ಲ ಮತ್ತು ಹೊಸದರಂತೆ ಇರುತ್ತದೆ.

* ಮಾಂಸವನ್ನು ಬೇಯಿಸುವಾಗ ಸ್ವಲ್ಪ ಅರಿಶಿನ ಹಾಕಿ ಬೇಯಿಸಿದರೆ, ಮಾಂಸದ ಹಸಿವಾಸನೆ ಹೋಗುತ್ತದೆ.
* ತೆಂಗಿನಕಾಯಿ ಸ್ವಲ್ಪ ಚೂರನ್ನು ಮೊಸರಿಗೆ ಹಾಕಿ ಇಟ್ಟರೆ ಮೊಸರು ಬೇಗ ಕೆಡುವುದಿಲ್ಲ.