Home Entertainment ಇಂದು ನನ್ನ ಬಳಿ ಎಲ್ಲಾ ಇದೆ ಆದ್ರೆ ಅಂದು ಮನೆ ಬಾಡಿಗೆ ಕಟ್ಟೋಕೂ ಕೂಡ ಹಣ ಇರಲಿಲ್ಲ ಕಷ್ಟದ ದಿನ ನೆನೆದು ಕಣ್ಣೀರು ಹಾಕಿದ ನಟಿ ರಶ್ಮಿಕಾ ಮಂದಣ್ಣ.

ಇಂದು ನನ್ನ ಬಳಿ ಎಲ್ಲಾ ಇದೆ ಆದ್ರೆ ಅಂದು ಮನೆ ಬಾಡಿಗೆ ಕಟ್ಟೋಕೂ ಕೂಡ ಹಣ ಇರಲಿಲ್ಲ ಕಷ್ಟದ ದಿನ ನೆನೆದು ಕಣ್ಣೀರು ಹಾಕಿದ ನಟಿ ರಶ್ಮಿಕಾ ಮಂದಣ್ಣ.

0
ಇಂದು ನನ್ನ ಬಳಿ ಎಲ್ಲಾ ಇದೆ ಆದ್ರೆ ಅಂದು ಮನೆ ಬಾಡಿಗೆ ಕಟ್ಟೋಕೂ ಕೂಡ ಹಣ ಇರಲಿಲ್ಲ ಕಷ್ಟದ ದಿನ ನೆನೆದು ಕಣ್ಣೀರು ಹಾಕಿದ ನಟಿ ರಶ್ಮಿಕಾ ಮಂದಣ್ಣ.

 

ಯಾರೇ ಆದರೂ ಗೆದ್ದ ಬಳಿಕ ಅವರು ಹೇಳುವ ಅವರ ಹಿಂದಿನ ಕಷ್ಟದ ಕಥೆಗಳನ್ನು ಕೇಳಲು ಬಹಳ ಸ್ಪೂರ್ತಿದಾಯಕವಾಗಿರುತ್ತದೆ. ಪ್ರತಿಯೊಬ್ಬರೂ ಕೂಡ ತಮ್ಮ ಜೀವನದ ಕಠಿಣ ಹಾದಿಯನ್ನು ತುಳಿದು ಕಲ್ಲು ಮುಳ್ಳು ರಸ್ತೆಯಲ್ಲಿ ನಡೆದ ಮೇಲೆಯೇ ಹೂವಿನ ಹಾಸಿಗೆ ಅಂತಹ ಬದುಕು ನಮ್ಮದಾಗುವುದು ಎನ್ನುವುದು ಇಲ್ಲಿವರೆಗೆ ನಾವು ತಿಳಿದುಕೊಂಡಿರುವ ಸೂತ್ರ.

ಆದರೆ ಕೆಲವರು ಮಾತ್ರ ಹುಟ್ಟಿದಾಗ ನಿಂದ ಚಿನ್ನದ ಚಮಚದಲ್ಲಿಯೇ ಊಟ ಮಾಡಿ ಬೆಳೆದವರಂತೆ ಬಿಲ್ಡಪ್ ಕೊಟ್ಟಿಕೊಳ್ಳುತ್ತಾರೆ. ಇದುವರೆಗೆ ರಶ್ಮಿಕ ಮಂದಣ್ಣ ಅವರನ್ನು ನೋಡಿದವರು ಕೂಡ ಇದೇ ರೀತಿ ಭಾವಿಸಿದ್ದರು. ಆದರೆ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದ ರಶ್ಮಿಕ ಬಂದಣ್ಣ ಅವರು ತಾವು ಈ ಹಿಂದೆ ಅನುಭವಿಸಿರುವ ಆರ್ಥಿಕ ಸಂಕಷ್ಟಗಳು ಮತ್ತು ತನ್ನ ಕುಟುಂಬದ ಹಿಂದಿನ ಪರಿಸ್ಥಿತಿ ಏನಿತ್ತು ಎನ್ನುವುದನ್ನು ಬಿಚ್ಚಿಟ್ಟು ತಾವು ಕೂಡ ಕಷ್ಟದಿಂದಲೇ ಬಂದವರು ಎನ್ನುವುದನ್ನು ನೆನೆಸಿಕೊಂಡಿದ್ದಾರೆ.

ನಟಿ ಸಂದರ್ಶನದಲ್ಲಿ ಹೇಳಿದ ಮಾತುಗಳು ಈ ರೀತಿ ಇದ್ದವು. ಸೆಲೆಬ್ರಿಟಿಗಳು ಎಂದ ಮಾತ್ರಕ್ಕೆ ಈಗ ಚೆನ್ನಾಗಿದ್ದೇವೆ ಅಂದ ಮಾತ್ರಕ್ಕೆ ನಾವು ಮೊದಲಿನಿಂದಲೂ ಹೀಗೆಯೇ ಇದ್ದೆವು ಎನ್ನುವ ಅರ್ಥ ಅಲ್ಲ. ನಾನು ಬಾಲ್ಯದಲ್ಲಿ ಬಹಳ ಕಷ್ಟಗಳನ್ನು ಪಟ್ಟಿದ್ದೇನೆ ನನ್ನ ತಂದೆಗೆ ಮನೆ ಬಾಡಿಗೆ ಕಟ್ಟಲು ಸಹ ಹಣ ಇರುತ್ತಿರಲಿಲ್ಲ. ಒಮ್ಮೆ ನಾವು ಇದೇ ಕಾರಣಕ್ಕಾಗಿ ಸಮಸ್ಯೆ ಅನುಭವಿಸಿ ಎರಡು ತಿಂಗಳಿಗೆ ಮನೆ ಬದಲಾಗಿಸುವ ಪರಿಸ್ಥಿತಿಯನ್ನು ಕೂಡ ಎದುರಿಸಿದ್ದೇವೆ.

ಬಾಲ್ಯದಲ್ಲಿ ನನ್ನ ತಂದೆ ನನಗೆ ಆಟ ಆಡಲು ಒಂದು ಬೊಂಬೆ ಕೂಡ ತಂದು ಕೊಟ್ಟಿರಲಿಲ್ಲ ಎಂದು ಈಕೆ ಹೇಳಿರುವುದು ನಿಜಕ್ಕೂ ಎಲ್ಲರಿಗೂ ಶಾ-ಕ್ ಆಗಿದೆ. ರಶ್ಮಿಕ ಮಂದಣ್ಣ ಅವರು ಈಗ ನ್ಯಾಷನಲ್ ಕ್ರಶ್ ಅವರ ತೋರುವ ಆಟಿಟ್ಯೂಡ್ ಗೆ ಯಾರು ಕೂಡ ಇವರು ಈ ರೀತಿ ಕಷ್ಟದಿಂದ ಬಂದಿದ್ದಾರೆ ಎಂದು ಅನಿಸುವುದಿಲ್ಲ. ಆದರೆ ಅವರೇ ಸಂದರ್ಶನದಲ್ಲಿ ನೇರವಾಗಿ ಕ್ಯಾಮೆರಾಗಳ ಮುಂದೆ ಈ ಮಾತು ಹೇಳಿರುವ ಕಾರಣ ಇದು ನಿಜ ಇರಬಹುದು ಏನೋ ಎಂದು ಕೂಡ ಅನಿಸುತ್ತದೆ.

ಆಕೆ ಹಿಂದಿನ ಕಥೆ ಏನೇ ಇರಬಹುದು ಸದ್ಯದ ಪಾಲಿಗಂತು ರಶ್ಮಿಕಾ ಮಂದಣ್ಣ ಚಿನ್ನದ ಮೊಟ್ಟೆ ಇಡುತ್ತಿರುವ ಕೋಳಿ ಎಂದರೆ ತಪ್ಪಾಗಲಾರದು. ಕನ್ನಡದಲ್ಲಿ ಪುನೀತ್ ರಾಜಕುಮಾರ್ ಗೋಲ್ಡನ್ ಸ್ಟಾರ್ ಗಣೇಶ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ತೆರೆ ಹಂಚಿಕೊಂಡು ಸದಾ ಬೇಡಿಕೆಯಲ್ಲಿರುವ ನಟಿಯಾಗಿರುವ ಇವರು ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂ ಮತ್ತು ಹಿಂದಿ ಚಿತ್ರಗಳನ್ನು ಕೂಡ ನಟಿಸಿರುವ ಅದೃಷ್ಟದ ನಟಿ.

ಬಾಲಿವುಡ್ ಅಲ್ಲಿ ಅಮಿತಾಬ್ ಬಚ್ಚನ್ ಜೊತೆ ಗುಡ್ ಬಾಯ್ ಸಿನಿಮಾದಲ್ಲಿ ನಟಿಸಿರುವ ರಶ್ಮಿಕ ಮಂದಣ್ಣ ಅವರು ಮಿಷನ್ ಮಜ್ನು ಮತ್ತು ಅನಿಮಲ್ ಚಿತ್ರಗಳನ್ನು ಕೂಡ ನಟಿಸಿದ್ದಾರೆ. ಈಗಾಗಲೇ ಮಿಷನ್ ಮಜ್ನು ಓಟಿಟಿಯಲ್ಲಿ ರಿಲೀಸ್ ಆಗಲು ರೆಡಿಯಾಗಿದೆ ಇದರೊಂದಿಗೆ ಅಲ್ಲು ಅರ್ಜುನ್ ಮಹೇಶ್ ಬಾಬು ಅವರೊಂದಿಗೆ ತೆರೆ ಹಂಚಿಕೊಂಡಿರುವ ಈಕೆ ಪುಷ್ಪ ಸೀಕ್ವೆಲ್ಸ್ ಅಲ್ಲು ಇರುವುದು ಕೂಡ ಖಚಿತವಾಗಿದೆ.

ಮತ್ತು ತಮಿಳಿನಲ್ಲಿ ವಿಜಯ್ ಅವರ ಜೊತೆಗಿನ ಚಿತ್ರ ಚಿತ್ರೀಕರಣ ಹಂತ ಮುಕ್ತಾಯವಾಗುತ್ತಿದ್ದು ಹೀಗೆ ವರ್ಷ ಪೂರ್ತಿ ಎಲ್ಲಾ ಚಿತ್ರರಂಗದ ಸಿನಿಮಾಗಳಲ್ಲೂ ಇರುವ ನಟಿ. ವಿವಾದಗಳು ಏನೇ ಇದ್ದರೂ ಇವರು ಕನ್ನಡದಿಂದ ಮೂಲದಿಂದ ಬಂದವರು ಎನ್ನುವುದನ್ನು ಮಾತ್ರ ಬಿಟ್ಟುಕೊಡಲಾಗುವುದಿಲ್ಲ. ಆದಷ್ಟು ಬೇಗ ಕನ್ನಡದ ಜನತೆಗೆ ಇವರ ಮೇಲಿನ ಕೋಪ ಕಡಿಮೆಯಾಗಲಿ ಎಂದು ಬಯಸುತ್ತಾ ನಟಿ ಹೀಗೆ ಸದಾ ಕಾಲ ಬ್ಯುಸಿಯಾಗಿರಲಿ ಎಂದು ಬಯಸೋಣ.

LEAVE A REPLY

Please enter your comment!
Please enter your name here