Skip to content

Kannada Trend News

Just another WordPress site

  • News
  • Cinema Updates
  • Serial Loka
  • Devotional
  • Health Tips
  • Interesting Facts
  • Useful Information
  • Astrology
  • Terms and Conditions
  • Privacy Policy
  • Contact Us
  • About Us
  • Toggle search form

ಸಂಗೀತ ನಿರ್ದೇಶಕ ರಘು ದೀಕ್ಷಿತ್ ಹಾಗೂ ಡ್ಯಾನ್ಸರ್ ಮಯೂರಿ ದೂರಗಾಲು ನಿಜವಾದ ಕಾರಣ ಏನೂ ಗೊತ್ತಾ.?

Posted on June 15, 2022 By Kannada Trend News No Comments on ಸಂಗೀತ ನಿರ್ದೇಶಕ ರಘು ದೀಕ್ಷಿತ್ ಹಾಗೂ ಡ್ಯಾನ್ಸರ್ ಮಯೂರಿ ದೂರಗಾಲು ನಿಜವಾದ ಕಾರಣ ಏನೂ ಗೊತ್ತಾ.?

ರಘು ದೀಕ್ಷಿತ್ ಅವರು ತಮ್ಮದೇ ಆದ ವಿಭಿನ್ನ ಶೈಲಿ ಹಾಗೂ ಅದ್ಭುತವಾದ ಧ್ವನಿಯಿಂದ ಫೇಮಸ್ ಆಗಿದ್ದಾರೆ ನವೆಂಬರ್ 11, 1974 ರಲ್ಲಿ ಜನಿಸಿರುವ ರಘು ದೀಕ್ಷಿತ್ ಅವರು ಕಲಾ ಕುಟುಂಬದಲ್ಲೇ ಬೆಳೆದವರು. ಬಾಲ್ಯದಿಂದಲೂ ಕಲೆಯ ಬಗ್ಗೆ ಅಪಾರ ಒಲವನ್ನು ಹೊಂದಿದ್ದ ರಘುದಿಕ್ಷಿತ್ ಅವರು ನಂತರ ಶಿಕ್ಷಣ ಪಡೆಯುವುದರ ಜೊತೆಗೆ ಸಂಗೀತ ಕೂಡ ಕಲಿಯುವುದಕ್ಕೆ ಶುರು ಮಾಡಿದರು. ರಘು ದೀಕ್ಷಿತ್ ಅವರಿಗೆ ಇದೇ ನಂತರ ಸಂಗೀತದಲ್ಲಿ ಅವರ ಬದುಕನ್ನು ಕಟ್ಟಿಕೊಳ್ಳಲು ಸಹಾಯವಾಯಿತು. ಅವರ ಆಸಕ್ತಿಯಂತೆ ರಘು ದೀಕ್ಷಿತ್ ಅವರು ಮ್ಯೂಸಿಕ್ ಅಲ್ಲಿ ಸಾಧನೆ ಗಳಿಸಿ ಅದರ ಮೂಲಕವೇ ಹಣ ಮತ್ತು ಖ್ಯಾತಿಯನ್ನು ಗಳಿಸಿ ಕೊಂಡಿದ್ದಾರೆ. ಸಂಗೀತವನ್ನೇ ತಮ್ಮ ಜೀವನ ಮಾಡಿಕೊಂಡಿರುವ ರಘು ದೀಕ್ಷಿತ್ ಅವರನ್ನು ಜನರು ಗುರುತಿಸುವುದು ಅವರ ಕಂಚಿನ ಕಂಠ ಮತ್ತು ಸಂಗೀತ ನಿರ್ದೇಶನದಿಂದ. “ಗುಡುಗುಡಿಯ” ಸೇದಿ ನೋಡು ಎನ್ನುವ ಹಾಡಿನ ಮೂಲಕ ಮೊದಲು ಗುರುತಿಸಿಕೊಂಡ ರಘು ದೀಕ್ಷಿತ್ ಅವರು ಮೊದಲಿಗೆ ಕನ್ನಡದಲ್ಲಿ ಸೈಕೋ ಎನ್ನುವ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದು ಹಾಡನ್ನು ಕೂಡ ಹಾಡಿದ್ದರು. ಇದು ಅವರಿಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿತು ಈಗಲೂ ಕೂಡ ಸೈಕೋ ಸಿನಿಮಾದ ನಿನ್ನ ಪೂಜೆಗೆ ಬಂದೆ ಮಾದೇಶ್ವರ ಹಾಡನ್ನು ಈಗಿನ ಯುವ ಜನತೆ ಕೂಡ ಗುನುಗುತ್ತಲೇ ಇರುತ್ತಾರೆ.

WhatsApp Group Join Now
Telegram Group Join Now

ಸೈಕೋ ಸಿನಿಮಾದ ಸಕ್ಸಸ್ ನಂತರ ಜಸ್ಟ್ ಮಾತ್ ಮಾತಲ್ಲಿ ಸೂಪರ್ ಮ್ಯಾನ್ ಕೋಟೆ ಲವ್ ಮಾಕ್ಟೈಲ್ ಹ್ಯಾಪಿ ನ್ಯೂ ಇಯರ್ ಟೋನಿ ಇನ್ನು ಮುಂತಾದ ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುವುದರ ಜೊತೆಗೆ ಈ ಸಿನಿಮಾದ ಹಲವಾರು ಹಾಡುಗಳಿಗೆ ಧ್ವನಿಯಾಗಿದ್ದಾರೆ ರಘು ದೀಕ್ಷಿತ್ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ಮಾತ್ರವಲ್ಲದೆ ಬೇರೆ ಭಾಷೆಯ ಸಿನಿಮಾಗಳಿಗೂ ಕೂಡ ಸಂಗೀತ ನಿರ್ದೇಶನ ಮಾಡಿರುವ ಖ್ಯಾತಿ ಇವರದು. ಅದಲ್ಲದೆ ತೆಲುಗು ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಆಲ್ಬಮ್ ಸಾಂಗ್ ಗಳನ್ನು ರಚಿಸಿರುವ ಖ್ಯಾತಿ ಇವರದು. ಇದರ ಜೊತೆಗೆ ತಮ್ಮದೇ ಆದ ಮೇಲೋಡಿಸ್ ಟೀಮ್ ಹೊಂದಿರುವ ಇವರು ಹಲವು ಶೋಗಳನ್ನು ಕೂಡ ನೀಡಿದ್ದಾರೆ. ಇವರು ನಡೆಸಿಕೊಡುವ ಸಂಗೀತದ ಶೋಗೆ ಪ್ರಪಂಚದಾದ್ಯಂತ ಅಭಿಮಾನಿಗಳು ಇದ್ದಾರೆ. ಗಿಟಾರ್ ಹಾಗೂ ಬ್ಯಾಂಡಲ್ಲಿ ಪ್ರವೀಣತೆ ಪಡೆದಿರುವ ರಘು ದೀಕ್ಷಿತ್ ಅವರು ಒಬ್ಬ ಸಂಗೀತಗಾರನಾಗಿ ಗಾಯಕನಾಗಿ ಸಂಗೀತ ನಿರ್ದೇಶಕನಾಗಿ ಮತ್ತು ಕೆಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯ ಕೂಡ ಮಾಡಿ ಕರ್ನಾಟಕದಾದ್ಯಂತ ಮನೆಮಾತಾಗಿದ್ದಾರೆ. ಸಿನಿಮಾ ರಂಗದಲ್ಲೂ ಕೂಡ ಬಹುಜನರಿಗೆ ಪರಿಚಿತವಾಗಿರುವ ಇವರ ಸಂಗೀತ ನಿರ್ದೇಶನಕ್ಕೆ ಯಾವಾಗಲೂ ಬೇಡಿಕೆ ಇದ್ದೇ ಇದೆ. ತಮ್ಮ ಸಂಗೀತದ ಮೂಲಕವೇ ಗಳಿಕೆ ಹಾಗೂ ಖ್ಯಾತಿ ಎರಡನ್ನು ಹೊಂದಿರುವ ರಘು ದೀಕ್ಷಿತ್ ಅವರ ವೈಯುಕ್ತಿಕ ಬದುಕು ಮಾತ್ರ ಹೇಳಿಕೊಳ್ಳುವಷ್ಟು ಹಸನಾಗಿಲ್ಲ.

ರಘು ದೀಕ್ಷಿತ್ ಅವರು ಡ್ಯಾನ್ಸರ್ ಮಯೂರಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಡ್ಯಾನ್ಸರ್ ಮಯೂರಿ ಅವರು ಕೂಡ ನೃತ್ಯದಲ್ಲಿ ಬಹಳ ಸಾಧನೆ ಮಾಡಿದ್ದಾರೆ. ಕನ್ನಡದ ಜನತೆಗೆ ಇವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಡ್ಯಾನ್ಸಿಂಗ್ ಸ್ಟಾರ್ ಮತ್ತು ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಮೂಲಕ ಪರಿಚಯವಾದರು. ಈ ಎರಡು ಕಾರ್ಯಕ್ರಮಗಳಲ್ಲೂ ಕೂಡ ಮಯೂರಿ ಅವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ನಟಿ ಮಯೂರಿ ಅವರಿಗೂ ಕೂಡ ತಮ್ಮದೇ ಆದ ಅಪಾರ ಅಭಿಮಾನಿ ಬಳಗವಿದೆ ಇದರ ಜೊತೆ ನೃತ್ಯದಿಂದ ಕೂಡ ಇವರು ಕರ್ನಾಟಕದಾದ್ಯಂತ ಫೇಮಸ್ ಆಗಿದ್ದಾರೆ. ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದರು ಎನ್ನುವ ಮಾತುಗಳು ಕೂಡ ಹಲವರ ಬಾಯಿಂದ ಕೇಳಿ ಬರುತ್ತಿವೆ. ಇಬ್ಬರೂ ಕೂಡ ಅದ್ಭುತ ಕಲಾವಿದರು ಆದರೆ ಇಬ್ಬರ ನಡುವೆ ಹೊಂದಾಣಿಕೆ ಬಾರದೆ ಇವರಿಬ್ಬರು ಬೇರೆ ಬೇರೆಯಾಗಿ ಜೀವನ ನಡೆಸುತ್ತಿರುವುದು ಇವರಿಬ್ಬರ ಅಭಿಮಾನಿಗಳಿಗೂ ಕೂಡ ತುಂಬಾ ಬೇಸರವನ್ನುಂಟು ಮಾಡಿದೆ. ರಘು ದೀಕ್ಷಿತ್ ಹಾಗೂ ಮಯೂರಿ ಅವರ ನಡುವೆ ಸಂಬಂಧ ಸರಿ ಇಲ್ಲ ಎನ್ನುವ ವಿಚಾರ ಹಾಗೂ ವಿ-ಚ್ಛೇ-ದ-ನ ಅನೌನ್ಸ್ ಮಾಡುವ ಮುಂಚೆಯೇ ಇವರಿಬ್ಬರೂ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದರು ಎನ್ನುವ ಬಗ್ಗೆ ಮಾತುಗಳು ಆಗಾಗ ಕೇಳಿಬರುತ್ತಿದ್ದವು.

ಆದರೆ ಈಗ ಇಬ್ಬರ ನಡುವೆ ವಿ-ಚ್ಛೇ-ದ-ನ ಆಗಿ ಇಬ್ಬರೂ ಕೂಡ ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದಾರೆ ಈಗ ಇವರಿಬ್ಬರ ಸಂಬಂಧ ಸರಿ ಇರಲಿಲ್ಲ ಎನ್ನುವ ವಿಷಯ ಜಗಜ್ಜಾಹೀರಾಗಿದೆ. ಆದರೂ ಕೂಡ ಇವರಿಬ್ಬರ ಸಂಬಂಧದ ನಡುವೆ ಬಿರುಕು ಉಂಟಾಗಲು ಕಾರಣ ಏನಿರಬಹುದು ಎನ್ನುವ ವಿಷಯದ ಕುರಿತು ಜನಸಾಮಾನ್ಯರಿಗೆ ಕುತೂಹಲ ಇದ್ದೇ ಇರುತ್ತದೆ. ಮೀಟು ಅಭಿಯಾನ ಶುರುವಾದ ಬಳಿಕ ಇವರಿಬ್ಬರ ನಡುವಿನ ಕ-ಲ-ಹ ಹೆಚ್ಚಾಗಿದ್ದು ಮೀಟು ಆರೋಪವೇ ಅವರಿಬ್ಬರ ವಿ-ಚ್ಛೇ-ದ-ನ-ಕ್ಕೆ ಬಲವಾದ ಕಾರಣ ಅನ್ನುವ ಮಾತುಗಳು ಕೂಡ ಕೇಳಿಬಂದಿವೆ. ಗಾಯಕಿ ಚಿನ್ಮಯಿ ಶ್ರೀಪಾದ ಅವರು ಟ್ವಿಟರ್ ನಲ್ಲಿ ತಮಗೆ ಮತ್ತು ತಮ್ಮ ಸ್ನೇಹಿತರಿಗೆ ಆದ ಅನುಭವದ ಬಗ್ಗೆ ಎರಡು ಪತ್ರ ಬರೆದು ಪೋಸ್ಟ್ ಮಾಡಿದ್ದರು. ಇದಾದ ಬಳಿಕ ರಘು ದೀಕ್ಷಿತ್ ಅವರು ತಮ್ಮ ನಡವಳಿಕೆ ಬಗ್ಗೆ ಕ್ಷಮೆ ಕೂಡ ಕೋರಿದ್ದರು ಆ ಸಮಯದಲ್ಲಿ ಮಯೂರಿ ಅವರು ತಾವು ಯಾವಾಗಲೂ ಲೈಂಗಿಕ ದೌ-ರ್ಜ-ನ್ಯ-ಕ್ಕೊ-ಳಗಾದ ವರ ಪರ ಇರುತ್ತೇನೆ ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ ರಘು ದೀಕ್ಷಿತ್ ಅವರ ನಡವಳಿಕೆ ಬಗ್ಗೆ ಬೇಸರ ಹೊಂದಿದ್ದ ಮಯೂರಿ ಅವರು ಅವರಿಂದ ವಿ-ಚ್ಛೇ-ದ-ನ ಪಡೆದು ಸ್ವತಂತ್ರ ಜೀವನ ನಡೆಸಲು ಶುರುಮಾಡಿದರು. ಮಯೂರಿ ಅವರ ಈ ನಿರ್ಧಾರ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ

WhatsApp Group Join Now
Telegram Group Join Now
Cinema Updates Tags:Mayuri, Raghu deekshith

Post navigation

Previous Post: ಮಗಳ ವಯಸ್ಸಿನ ಹುಡುಗಿ ಜೊತೆಗೆ ಮೂರನೇ ಮದುವೆಯಾದ ಪ್ರಕಾಶ್ ರೈ, ಇವರಿಬ್ಬರ ವಯಸ್ಸಿನ ಅಂತರ ಎಷ್ಟು ಗೊತ್ತಾ.? ನಿಜಕ್ಕೂ ಶಾ’ಕ್ ಆಗುತ್ತೆ.
Next Post: ಅಪ್ಪು ಜೊತೆ ನಟನೆ ಮಾಡಲು ಆಫರ್ ಬಂದಿದ್ದರೂ ಕೂಡ ಅದನ್ನು ಮೇಘನಾ ರಾಜ್ ರಿಜೆಕ್ಟ್ ಮಾಡಿದ್ದು ಯಾಕೆ ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2023 Kannada Trend News.

Powered by PressBook WordPress theme