ಸ್ವಾಮಿ ಶರಣಂ ಅಯ್ಯಪ್ಪ ಭಕ್ತರ ಕಷ್ಟಗಳನ್ನು ನಿವಾರಿಸಲು ಧರೆಗಿಳಿದು ಬಂದ ಭಗವಂತ. ಶರಣು ಎಂದು ಬಂದವರನ್ನು ಉದ್ದರಿಸುತ್ತಾ ಇರುವ ಕರುಣಾಮಯಿ. ಒಬ್ಬರಲ್ಲ ಇಬ್ಬರಲ್ಲ ಸಂಕ್ರಾಂತಿ ಬಂತು ಎಂದರೆ ಸಾಕು ಲಕ್ಷ ಮಂದಿ ಶಬರಿಮಲೆಗೆ ಧಾವಿಸಿ ಬರುತ್ತಾರೆ ಶರಣು ಅಯ್ಯಪ್ಪ ಎಂದು ಶಬರಿಮಲೆ ಯತ್ತ ಹೆಜ್ಜೆ ಹಾಕುತ್ತಾರೆ.
ಅಯ್ಯಪ್ಪ ಸ್ವಾಮಿ ಎಂದರೆ ಕಾಲಿಗೆ ಚುಚ್ಚುವ ಕಲ್ಲು ಮುಳ್ಳುಗಳು ಸಹ ಲೆಕ್ಕಕ್ಕೆ ಬರುವುದಿಲ್ಲ. ಬರಿಗಾಲಿನಲ್ಲಿ ಭಕ್ತರು ಹೆಜ್ಜೆ ಹಾಕಿದರು ನೋವಿನ ಅನುಭವವೇ ಆಗುವುದಿಲ್ಲ ಯಾಕೆಂದರೆ ಭಕ್ತರನ್ನು ಸಂಪೂರ್ಣವಾಗಿ ಆವರಿಸಿರುತ್ತಾನೆ ಭಗವಂತ. ಶಬರಿಮಲೆಯಲ್ಲಿ ಇಂದಿಗೂ ವಿಸ್ಮಯ ನಡೆಯುತ್ತಿದೆಯಾ? ಅಯ್ಯಪ್ಪ ಸ್ವಾಮಿ ಪ್ರತಿ ವರ್ಷ ಅಲ್ಲಿಗೆ ಬಂದು ಹೋಗುತ್ತಿದ್ದಾರಾ? ಮಕರ ಜ್ಯೋತಿಯ ಹಿಂದೆ ಇದೆಯಾ ನಂಬಲಾಗದ ಸತ್ಯ
ಗರುಡ ಆಭರಣಗಳನ್ನು ಕಾಯುತ್ತಿದ್ದಾನ? ಹಾಗಾದರೆ ಶಬರಿಮಲೆಯ ಹಿಂದಿನ ರೋಚಕ ರಹಸ್ಯವಾದರೂ ಏನು? ಅಷ್ಟೇ ಅಲ್ಲದೆ ಅಯ್ಯಪ್ಪನ ಆಭರಣಗಳನ್ನು ಕಾಯುತ್ತಿರುವ ಗರುಡ ಪುರಾಣದ ಹಲವಾರು ಮಾಹಿತಿಯನ್ನು ಈ ದಿನ ಸಂಪೂರ್ಣವಾಗಿ ತಿಳಿಯೋಣ. ಭಕ್ತರಿಗೆ ಅಯ್ಯಪ್ಪನ ಮೇಲೆ ಯಾಕೆ ಇಷ್ಟು ಪ್ರೀತಿ ಯಾಕಿಷ್ಟು ನಂಬಿಕೆ? ಯಾಕೆ ಇಷ್ಟು ವಿಶ್ವಾಸ ಲೆಕ್ಕವೇ ಇಲ್ಲದಷ್ಟು ಮಂದಿ ಅಯ್ಯಪ್ಪನ ದರ್ಶನಕ್ಕೆ ಸಾಗರೋಪಾದಿಯಲ್ಲಿ ಬರುತ್ತಿದ್ದಾರಲ್ಲ ಇದರ ಹಿಂದಿನ ಮರ್ಮ ಏನು, ಈ ಪ್ರಶ್ನೆ ಹಲವರನ್ನು ಕಾಡಿದ್ದು ಕೂಡ ಇದೆ.
ರಾಶಿಗಳ ಪ್ರಕಾರ ಈ ವಯಸ್ಸಲ್ಲಿ ಮದುವೆಯಾದರೆ ಅದೃಷ್ಟ ಮತ್ತು ತುಂಬಾ ಒಳ್ಳೆಯದಾಗುತ್ತದೆ.!
ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಎಲ್ಲರಿಗೂ ಕೂಡ ಅಚ್ಚರಿ ವಿಷಯ ಹೊರ ಬೀಳುತ್ತದೆ. ಶಬರಿಮಲೆಯಲ್ಲಿ ಅಯ್ಯಪ್ಪ ಓಡಾಡುತ್ತಿದ್ದಾರಂತೆ , ಮಕರ ಸಂಕ್ರಾಂತಿ ಸಮಯದಲ್ಲಿ ಅಯ್ಯಪ್ಪ ಕಾಣಿಸಿಕೊಳ್ಳುತ್ತಾರಂತೆ, ತನ್ನ ಸನ್ನಿಧಾನಕ್ಕೆ ಬರುವಂತಹ ಭಕ್ತರನ್ನು ಉದ್ದರಿಸುತ್ತಿದ್ದಾರಂತೆ ಈ ಕಲಿಯುಗದ ದೈವ.
ಇದೇ ಕಾರಣಕ್ಕಾಗಿ ಅಯ್ಯಪ್ಪನ ಕೃಪೆಗೆ ಪಾತ್ರರಾಗಬೇಕು ಅಂತ ಲಕ್ಷ ಲಕ್ಷ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಭಕ್ತರು. ಇದು ನಂಬುವುದಕ್ಕೆ ಕಷ್ಟ ಅನಿಸಿದರೂ ಅಲ್ಲಲ್ಲಿ ಇಂಥ ವಿಚಾರಗಳು ಓಡಾಡುತ್ತಿದೆ. ಪ್ರತಿ ವರ್ಷದ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಅಯ್ಯಪ್ಪ ಸ್ವಾಮಿ ಕಾಣಿಸಿಕೊಳ್ಳುತ್ತಿದ್ದ ರಂತೆ, ಭಕ್ತರಿಗೆ ಆಶೀರ್ವದಿಸಿ ಹೋಗುತ್ತಿದ್ದಾರಂತೆ ಅಯ್ಯಪ್ಪನ ದರ್ಶನ ಪಡೆದಂತಹ ಹಲವರು ಭಕ್ತರ ಕಷ್ಟಗಳು ದೂರವಾಗಿದೆಯಂತೆ.
ಹಾಗಾದರೆ ಮಕರ ಜ್ಯೋತಿಯ ಹಿಂದಿನ ರಹಸ್ಯವೇನು ನಿಜಕ್ಕೂ ಮಕರ ಜ್ಯೋತಿ ಪವಾಡಗಳನ್ನು ಸೃಷ್ಟಿಸುತ್ತಿದೆಯಾ? ಅಥವಾ ಅದು ಮಾನವ ನಿರ್ಮಿತನ? ಅದಕ್ಕೂ ಮೊದಲು ಅಯ್ಯಪ್ಪ ಸ್ವಾಮಿಯ ಆಭರಣದ ಮೇಲೆ ಓಡಾಡುತ್ತಿರುವಂತಹ ಒಂದು ಪಕ್ಷಿಯ ಬಗ್ಗೆ ಈ ದಿನ ತಿಳಿಯೋಣ ಇದು ಸಾಮಾನ್ಯ ಪಕ್ಷಿ ಅಲ್ಲ.
ಉಚಿತ ಹೊಲಿಗೆ ಯಂತ್ರ ಉಚಿತ ವಿತರಣೆ.! ಅರ್ಜಿ ಹಾಕಿ
ಇಲ್ಲಿ ಹಾರಾಡುತ್ತಿರುವುದು ಗರುಡ. ಈ ಗರುಡ ಪ್ರತೀ ವರ್ಷ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಬರುವುದರ ಮೂಲಕ ಪ್ರತಿಯೊಬ್ಬರಿಗೂ ಕೂಡ ಕಾಣಿಸಿಕೊಳ್ಳುತ್ತದೆ. ಹೀಗೆ ಪ್ರತಿ ವರ್ಷ ಬರುವಂತಹ ಈ ಪಕ್ಷಿಯನ್ನು ಅಯ್ಯಪ್ಪ ಸ್ವಾಮಿ ಎಂದು ನಂಬುತ್ತಾರೆ ಇಲ್ಲಿಯ ಭಕ್ತರು ಆದರೆ ಇನ್ನೂ ಹಲವಾರು ಜನ ಇದಕ್ಕೆ ಬೇರೆ ಕಥೆಯನ್ನು ಹೇಳುತ್ತಾರೆ.
ಅಯ್ಯಪ್ಪ ಸ್ವಾಮಿ ಹರಿಹರರ ಪುತ್ರ ಹೀಗಾಗಿ ಮಕರ ಸಂಕ್ರಾಂತಿಯ ಸಮಯದಲ್ಲಿ ಅಯ್ಯಪ್ಪ ಸ್ವಾಮಿಯ ಆಭರಣಗಳ ರಕ್ಷಣೆಗೆ ಹರಿಯೇ ತನ್ನ ವಾಹನ ಗರುಡವನ್ನು ಕಳುಹಿಸುತ್ತಾನೆ ಎನ್ನುವ ನಂಬಿಕೆ ಕೂಡ ಇದೆ. ಇದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದು ಒಂದು ಕಡೆ ಇರಲಿ ಆದರೆ ಈ ಒಂದು ಪ್ರದೇಶದಲ್ಲಿ ಗರುಡ ಪ್ರತಿವರ್ಷ ಪ್ರತ್ಯಕ್ಷವಾಗುತ್ತಿದೆ. ಇದು ವಿಸ್ಮಯ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.