ನಿಮ್ಮ ರಾಶಿಯಲ್ಲಿ ಬುಧ ಅತ್ಯಂತ ಬಲಿಷ್ಠವಾಗಿದ್ದಾಗ ನೀವು ಮಾಡುವಂತಹ ಯಾವುದೇ ಒಂದು ಕೆಲಸದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತೀರಿ ಹಾಗೂ ಆ ಕೆಲಸದಲ್ಲಿ ಅಭಿವೃದ್ಧಿಯನ್ನು ಪಡೆಯುವು ದಕ್ಕೆ ಸಾಧ್ಯವಾಗುತ್ತದೆ. ಇದರ ಜೊತೆ ನೀವು ಮಾಡುತ್ತಿರುವಂತಹ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಮನ್ನಣೆ ಬರುವಂತದ್ದು ನಿಮ್ಮ ಕೆಲಸಕ್ಕೆ ಮೆಚ್ಚುಗೆ ಬಂದು ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಯನ್ನು ಕೊಡುವ ಸಾಧ್ಯತೆ ಗಳು ಕೂಡ ಇದೆ.
ಅಂದರೆ ನೀವು ಮಾಡುವ ಕೆಲಸದ ಮೇಲೆ ನಿಮಗೆ ಹೆಚ್ಚು ನಂಬಿಕೆ ಇರುತ್ತದೆ ನಾನು ಮಾಡುವ ಕೆಲಸ ನನಗೆ ಈಗಲ್ಲವಾ ದರೂ ಮುಂದಿನ ದಿನದಲ್ಲಾದರೂ ಹೆಚ್ಚು ಬೆಳವಣಿಗೆಯನ್ನು ತರುತ್ತದೆ ಎನ್ನುವ ಆತ್ಮವಿಶ್ವಾಸವನ್ನು ಹೊಂದಿರುತ್ತೀರಿ. ಅದರಂತೆ ಪ್ರತಿ ಬಾರಿ ನೀವು ಅದರಲ್ಲಿ ಯಶಸ್ಸನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಒಟ್ಟಾರೆಯಾಗಿ ನಿಮ್ಮ ಜೀವನದ ಮುಖ್ಯವಾದ ಗುರಿ ಏನೆಂದರೆ ನೀವು ಮಾಡುವ ಕೆಲಸ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಬೇಕು ಎನ್ನುವುದಾಗಿರುತ್ತದೆ. ಇನ್ನು ಗೃಹಿಣಿಯರಿಗೆ ತಮ್ಮ ಜೀವನದಲ್ಲಿಯೂ ಕೂಡ ಬಹಳಷ್ಟು ಯಶಸ್ಸು ಎನ್ನುವುದು ಇರುತ್ತದೆ. ಒಟ್ಟಾರೆಯಾಗಿ ನೀವು ಮಾಡುವ ಯಾವುದೇ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡುತ್ತೀರಿ.
ಯಾವುದೇ ಸಮಯವನ್ನು ಕೂಡ ನೀವು ವ್ಯರ್ಥ ಮಾಡುವುದಿಲ್ಲ ಯಾವುದೇ ಕೆಲಸ ಇಲ್ಲ ಎಂದರು ಆ ಸಮಯದಲ್ಲಿ ಬೇರೆ ಕೆಲಸ ಮಾಡುವುದರ ಮೂಲಕ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುತ್ತೀರಿ ಇದರಿಂದ ನೀವು ಬಹಳಷ್ಟು ಖುಷಿ ಸಂತೋಷವನ್ನು ಅನುಭವಿಸುತ್ತೀರಿ ಇದು ಕೂಡ ನಿಮ್ಮ ಜೀವನದಲ್ಲಿ ಒಂದು ಯಶಸ್ಸು ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಈಗಾಗಲೇ ಹೇಳಿದಂತೆ ಪ್ರತಿಯೊಬ್ಬರೂ ಕೂಡ ಅಂದರೆ ಕನ್ಯಾ ರಾಶಿಯವರು ತಮ್ಮ ಜೀವನದಲ್ಲಿ ಯಶಸ್ಸು ಸಿಗಬೇಕು ಎಂದು ಪ್ರಯತ್ನಿಸುತ್ತಿರುತ್ತಾರೆ. ಹಾಗೆಂದ ಮಾತ್ರಕ್ಕೆ ಸುಮ್ಮನೆ ಕುಳಿತುಕೊಂಡರೆ ಯಶಸ್ಸು ನಿಮ್ಮ ಕಡೆ ಬರುವುದಿಲ್ಲ. ಒಂದಲ್ಲ ಒಂದು ಕೆಲಸದಲ್ಲಿ ನೀವು ನಿರತರಾಗಿರಬೇಕು ಆಗ ಮಾತ್ರ ನೀವು ನಿಮ್ಮ ಜೀವನದಲ್ಲಿ ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ನೀವು ಮಾಡುವಂತಹ ಪ್ರಯತ್ನ ಚಿಕ್ಕದಾಗಿದ್ದರೂ ಸರಿಯೇ ಒಟ್ಟಾರೆಯಾಗಿ ನಿಮ್ಮ ಒಂದು ಪರಿಶ್ರಮ ಎನ್ನುವುದು ಅದರಲ್ಲಿ ಇರಬೇಕು.
ಸ್ವಲ್ಪ ಮಟ್ಟಿಗೆ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇಲ್ಲ ಎನ್ನುವ ಅನುಭವ ಉಂಟಾಗಬಹುದು. ನೀವು ಮಾಡಿರುವಂತಹ ಹಣದಲ್ಲಿ ಎಷ್ಟೇ ಪ್ರಯತ್ನ ಪಟ್ಟರು ನೀವು ಅಂದುಕೊಂಡಂಥ ರೀತಿಯಲ್ಲಿ ಹಣಕಾಸನ್ನು ಉಳಿಸಲು ಸಾಧ್ಯವಾಗದೆ ಇರುವಂತದ್ದು. ಇದಕ್ಕೆ ಕಾರಣ ಅಷ್ಟಮದಲ್ಲಿ ಗುರು ಗ್ರಹ ಇದ್ದಾನೆ. ಹಾಗಾದರೆ ಇದಕ್ಕೆ ಪರಿಹಾರವಾಗಿ ನೀವು ಓಂ, ಹರಿಹಿಓಂ ಹೇಗೆ ಒಂದಲ್ಲ ಒಂದು ಮಂತ್ರವನ್ನು 108 ಬಾರಿ ಪಠಣೆ ಮಾಡಬೇಕು.
ಹೀಗೆ ಮಾಡುತ್ತಾ ಬಂದರೆ ಎಲ್ಲದರಲ್ಲಿಯೂ ಕೂಡ ನೀವು ಯಶಸ್ಸನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಹಾಗೂ ಕೇತು ನಿಮ್ಮ ರಾಶಿಯಲ್ಲಿ ಇದ್ದು ಸಪ್ತಮದಲ್ಲಿ ರಾಹು ಗ್ರಹ ಇರುವಂತದ್ದು ಇದರ ಪ್ರಭಾವದಿಂದಾಗಿ ನಿಮ್ಮ ಜೀವನದಲ್ಲಿ ಎದುರಾಗುವ ಕೆಲವೊಂದು ಸಂದರ್ಭಗಳನ್ನು ನೀವು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ.
ಒಟ್ಟಾರೆಯಾಗಿ ಯಾವುದೇ ಒಳ್ಳೆಯ ಶುಭ ಸೂಚನೆಗಳನ್ನು ನಿಮಗೆ ಕೊಟ್ಟರು ಅದನ್ನು ನೀವು ನಂಬುವುದಕ್ಕೆ ಸಾಧ್ಯವಾಗುವುದಿಲ್ಲ ಅಂತಹ ಒಂದು ಪ್ರಭಾವವನ್ನು ನಿಮಗೆ ಕೇತು ಮತ್ತು ರಾಹು ಕೊಡುತ್ತಾನೆ. ಇದರಿಂದ ಕೆಲವೊಂದು ಸಂದರ್ಭದಲ್ಲಿ ಕನ್ಯಾ ರಾಶಿಯವರನ್ನು ಬುದ್ಧಿ ಜೀವಿಗಳನ್ನಾಗಿಯೂ ಸಹ ಮಾಡಬಹುದು.
ಕೆಲವೊಮ್ಮೆ ನಿಮಗೆ ಒಳ್ಳೆಯ ಬದಲಾವಣೆಯನ್ನು ಸಹ ಮಾಡಬಹುದು ಈ ಒಂದು ಗ್ರಹಗಳು ಹಾಗೆಯೇ ಮೊದಲೇ ಹೇಳಿದಂತೆ ಇವುಗಳನ್ನು ನೀವು ನಂಬಿಕೊಳ್ಳಲು ಸಾಧ್ಯವಾಗದೇ ಇರುವ ಅನುಭವವನ್ನು ಸಹ ಉಂಟುಮಾಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.