ಭಾರತದಲ್ಲಿ ಈಗಲೂ ಜಾತಕ ನೋಡಿ ಮದುವೆ ಮಾಡುವ ಸಾಕಷ್ಟು ಕುಟುಂಬವಿದೆ ಮದುವೆ ನಂತರ ದಂಪತಿ ಸುಖವಾಗಿ ಇರಲಿ ಎನ್ನುವ ಕಾರಣಕ್ಕೆ ಜಾತಕ ನೋಡಲಾಗುತ್ತದೆ. ಜಾತಕ ಮಾತ್ರವಲ್ಲ ಮದುವೆ ದಿನಾಂಕ ಕೂಡ ನಮ್ಮ ಮೇಲೆ ಪರಿಣಾಮ ಬೀರುತ್ತದೆ.
ಹಾಗಾಗಿ ಮದುವೆ ಯಾಗುವ ಮುನ್ನ ದಿನಾಂಕದ ಬಗ್ಗೆಯೂ ಗಮನ ನೀಡಿ ಎನ್ನುತ್ತದೆ ಸಂಖ್ಯಾಶಾಸ್ತ್ರ ಜಾತಕದ ಹೊರತಾಗಿ ಸಂಖ್ಯಾಶಾಸ್ತ್ರದ ಮೂಲಕವೂ ನಮ್ಮ ಭವಿಷ್ಯ ವನ್ನು ತಿಳಿದುಕೊಳ್ಳಬಹುದು. ಸಂಖ್ಯಾ ಶಾಸ್ತ್ರದ ಮೂಲಕ ನೀವು ವೃತ್ತಿ ಆರೋಗ್ಯ ಮದುವೆ ಸೇರಿದಂತೆ ಅನೇಕ ವಿಷಯಗಳನ್ನು ತಿಳಿದುಕೊಳ್ಳ ಬಹುದಾಗಿದೆ.
ಮದುವೆಯಾದ ದಿನಾಂಕ ಕೂಡ ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಯಾವ ದಿನಾಂಕದಂದು ಮದುವೆಯಾಗಿ ದ್ದೀರಿ ಎಂಬುದನ್ನು ನೋಡಿ ನಿಮ್ಮ ದಾಂಪತ್ಯ ಜೀವನ ಹೇಗಿರುತ್ತದೆ ಎಂಬುದನ್ನು ಹೇಳಬಹುದು.
ಈ ಸುದ್ದಿ ಓದಿ:- ಹಿಂದಿನ ಕಾಲದ ಶಾಸ್ತ್ರ ಶಕುನ ಸಂಪ್ರದಾಯಗಳು ತಪ್ಪದೆ ತಿಳಿದುಕೊಳ್ಳಿ……..||
* ಮದುವೆ ದಿನಾಂಕ ಹಾಗೂ ದಾಂಪತ್ಯ ಜೀವನ :- ದಿನಾಂಕ 1 ಯಾವುದೇ ತಿಂಗಳ 1, 10, 19 ಮತ್ತು 28ನೇ ತಾರೀಖಿನಂದು ಯಾಗಿದ್ದರೆ ಸಂಖ್ಯಾಶಾಸ್ತ್ರದ ಪ್ರಕಾರ 2,3,4,5,7,8,9 ಸಂಖ್ಯೆಗಳು ನಿಮಗೆ ತುಂಬಾ ಒಳ್ಳೆಯದು.
ಈ ದಿನಾಂಕದಂದು ಮದುವೆಯಾದ ಜನರು ತಮ್ಮ ಮದುವೆಯ ಬಗ್ಗೆ ಗಂಭೀರವಾಗಿರುತ್ತಾರೆ. ಕ್ರಿಯಾಶೀಲವಾಗಿರುವ ಇವರು ತಮ್ಮ ಜೀವನದ ಬಗ್ಗೆ ಹೆಚ್ಚು ಫೋಕಸ್ ಮಾಡಲು ಇಷ್ಟಪಡುತ್ತಾರೆ. ಆದರೆ ಸ್ವಲ್ಪ ಅಹಂಕಾರ ಇವರಿಗೆ ಇರುತ್ತದೆ ಇದರಿಂದ ದಾಂಪತ್ಯದಲ್ಲಿ ಸಣ್ಣ ಪುಟ್ಟ ಗಲಾಟೆ ನಡೆಯುತ್ತದೆ.
* ದಿನಾಂಕ 2 :- ಯಾರು 2, 11 ಅಥವಾ 20 ನೆ ತಾರೀಖಿನಂದು ಮಾದುವೆಯಾಗಿರುತ್ತಾರೋ ಅವರು ತಮ್ಮ ಸಂಬಂಧಕ್ಕೆ ಬಹಳ ನಿಷ್ಟರಾಗಿರುತ್ತಾರೆ. ದಂಪತಿ ಮಧ್ಯೆ ಬಾಂಧವ್ಯ ಇರುತ್ತದೆ. ಪರಸ್ಪರ ಕಾಳಜಿ ವಹಿಸುವ ಸ್ವಭಾವ ಹೊಂದಿರುತ್ತಾರೆ. ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ನೆರವಾಗುತ್ತಾರೆ. ಆದರೆ ಇವರ ಜೀವನದಲ್ಲಿ ಮೂರನೇ ವ್ಯಕ್ತಿಯಿಂದಾಗಿ ದಾಂಪತ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಈ ಸುದ್ದಿ ಓದಿ:- ಸದಾ ಯೌವ್ವನವಾಗಿರಲು ಕೆಲವೊಂದು ಸಲಹೆಗಳು.!
* ದಿನಾಂಕ 3 :- 3, 30 ಅಥವಾ 12ನೇ ತಾರೀಖಿನಂದು ಮದುವೆ ಯಾದ ಜೋಡಿ ಯಶಸ್ವಿಯಾಗಿರುತ್ತಾರೆ. ಅವರ ಜೀವನದಲ್ಲಿ ಸದಾ ಸುಖ ಸಮೃದ್ಧಿ ಇರುತ್ತದೆ. ಈ ದಂಪತಿಗಳು ಜೀವನದಲ್ಲಿ ಶಿಸ್ತು ಮತ್ತು ಉತ್ತಮ ಜೀವನ ನಡೆಸಲು ಇಷ್ಟಪಡುತ್ತಾರೆ.
* ದಿನಾಂಕ 4 :- ಯಾವುದೇ ತಿಂಗಳ 4, 13 ಅಥವಾ 22ನೇ ತಾರೀಖಿ ನಂದು ಮದುವೆಯಾದ ಜೋಡಿಯ ವೈವಾಹಿಕ ಜೀವನ ಐಷಾರಾಮಿ ಯಿಂದ ಕೂಡಿರುತ್ತದೆ. ಅವರು ತಮ್ಮ ಸಂಬಂಧದಲ್ಲಿ ತೃಪ್ತರಾಗಿರುತ್ತಾರೆ. ತಮ್ಮ ಸಂಗಾತಿಯಿಂದ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುತ್ತಾರೆ.
* ದಿನಾಂಕ 5 :- 5, 14 ಅಥವಾ 23 ರಂದು ಮದುವೆಯಾದ ಜೋಡಿ ಹಠಮಾರಿ ಸ್ವಭಾವದವರಾಗಿರುತ್ತಾರೆ. ಇವರು ತ್ವರಿತ ನಿರ್ಧಾರ ತೆಗೆದು ಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಇಬ್ಬರ ಹಠ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ.
ಈ ಸುದ್ದಿ ಓದಿ:- ಸದಾ ಯೌವ್ವನವಾಗಿರಲು ಕೆಲವೊಂದು ಸಲಹೆಗಳು.!
* ದಿನಾಂಕ 6 :- 6, 15 ಅಥವಾ 24ರಂದು ಮದುವೆಯಾದ ಜನರು ಸ್ನೇಹಿತರಂತೆ ಇರುತ್ತಾರೆ. ಸಂಬಂಧಿಕರ ಮಧ್ಯೆ ಜನಪ್ರಿಯ ರಾಗಲು ಇಷ್ಟಪಡುತ್ತಾರೆ.
* ದಿನಾಂಕ 7 :- ಯಾವುದೇ ತಿಂಗಳ 7, 16, 25ನೇ ತಾರೀಕಿನಂದು ಮದುವೆಯಾಗುವ ಜನರು ವೈವಾಹಿಕ ಜೀವನದಲ್ಲಿ ಯಶಸ್ವಿಯಾಗು ತ್ತಾರೆ. ಇವರು ಪ್ರವಾಸವನ್ನು ಹೆಚ್ಚು ಇಷ್ಟಪಡುತ್ತಾರೆ. ಆಕರ್ಷಕವಾದ ಜೀವನ ಅವರದಾಗಿರುತ್ತದೆ.
* ದಿನಾಂಕ 8 :- 8, 17 ಅಥವಾ 26 ನೇ ತಾರೀಖಿನಂದು ಮದುವೆ ಯಾದ ಜನರ ವೈವಾಹಿಕ ಜೀವನ ಯಶಸ್ವಿಯಾಗಿರುತ್ತದೆ. ಯಾವುದೇ ಸಮಯದಲ್ಲೂ ಇವರು ಸಂಗಾತಿಯನ್ನು ಬಿಟ್ಟು ಕೊಡುವುದಿಲ್ಲ ಕಷ್ಟದ ಸಂದರ್ಭದಲ್ಲಿ ಸಂಗಾತಿಯನ್ನು ಬೆಂಬಲಿಸುವ ಮೂಲಕ ಗೆಲುವಿಗೆ ನೆರವಾಗುತ್ತಾರೆ.
* ದಿನಾಂಕ 9 :- 9, 18, 27ನೆ ತಾರೀಕಿನಂದು ಮದುವೆಯಾಗುವ ದಂಪತಿ ಮಧ್ಯ ಕೆಲವು ಭಿನ್ನಾಭಿಪ್ರಾಯಗಳು ಕಂಡುಬರುತ್ತವೆ. ಆದರೆ ಇದು ದೀರ್ಘಕಾಲ ಇರುವುದಿಲ್ಲ. ಗಲಾಟೆ ಇದ್ದರೂ ಪ್ರೀತಿಗೆ ಕೊರತೆ ಇರುವುದಿಲ್ಲ. ದಂಪತಿ ಮಧ್ಯೆ ನಂಬಿಕೆ ಹೆಚ್ಚಿರುತ್ತದೆ. ಹಾಗಾಗಿ ಭಿನ್ನಾಭಿಪ್ರಾಯ ಕೆಲ ಸಮಯದಲ್ಲಿ ದೂರವಾಗುತ್ತದೆ.