Sunday, June 4, 2023
HomeEntertainmentಮಗುವಿಗೆ ಎದೆ ಹಾಲು ಉಣಿಸುತ್ತಲೇ ಮೇಕಪ್ ಮಾಡಿಸಿಕೊಂಡ ನಟಿ, ವಿಡಿಯೋ ನೋಡಿ ಕೆಡುಗಾಲ ಬಂತು ಅಂದ...

ಮಗುವಿಗೆ ಎದೆ ಹಾಲು ಉಣಿಸುತ್ತಲೇ ಮೇಕಪ್ ಮಾಡಿಸಿಕೊಂಡ ನಟಿ, ವಿಡಿಯೋ ನೋಡಿ ಕೆಡುಗಾಲ ಬಂತು ಅಂದ ನೆಟ್ಟಿಗರು.

 

ಬಾಲಿವುಡ್ ನ ಸ್ಟಾರ್ ಹೀರೋಯಿನ್ ಆಗಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ಸೋನಂ ಕಪೂರ್ ಅವರು ಇದೀಗ ತಮ್ಮ ಮುದ್ದು ಮಗನ ಆರೈಕೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ವೃತ್ತಿ ಬದುಕಿನಲ್ಲಿ ಒಳ್ಳೆಯ ಸಕ್ಸಸ್ ಅಲ್ಲಿ ಇದ್ದ ಸಮಯದಲ್ಲಿಯೇ ಆನಂದ್ ಅಹುಜಾ ಎನ್ನುವವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ಮದುವೆಗೂ ಮುನ್ನ ನಾಲ್ಕು ವರ್ಷಗಳ ಕಾಲ ಆನಂದ್ ಅಹುಜಾ ಅವರೊಂದಿಗೆ ಡೇಟಿಂಗ್ ಅಲ್ಲಿ ಸೋನಾ ಕಪೂರ್ ಸಮಯ ಕಳೆದಿದ್ದರೂ ಬಳಿಕ ಕುಟುಂಬಸ್ಥರ ಸಮ್ಮುಖದಲ್ಲಿ ಮುಂಬೈ ಅಲ್ಲಿ ಅದ್ದೂರಿಯಾಗಿ ಅವರ ವಿವಾಹವು 2018 ಜರುಗಿತ್ತು.

ದಿ ಝೋಯಾ ಫ್ಯಾಕ್ಟರಿ ಎನ್ನುವ ಸಿನಿಮಾವು 2019ರಲ್ಲಿ ತೆರೆಕಂಡಿತ್ತು. ಇದಾದ ಬಳಿಕ ಬೇರೆ ಯಾವ ಸಿನಿಮಾಗಳಲ್ಲೂ ಸೋನಂ ಕಪೂರ್ ಕಾಣಿಸಿಕೊಳ್ಳಲಿಲ್ಲ. ಸಿನಿಮಾರಂಗದಿಂದ ಬಿಡುವು ಪಡೆದುಕೊಂಡ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚು ಗಮನ ಕೊಟ್ಟಿದ್ದ ಇವರು ಆಗಸ್ಟ್ 20 ರಂದು ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ ನೀಡಿದ್ದರು. ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ಸೋನಂ ಕಪೂರ್ ಅವರು ಅದ್ದೂರಿಯಾಗಿ ಮಗನ ನಾಮಕರಣ ಕಾರ್ಯಕ್ರಮ ಕೂಡ ಮಾಡಿ ಅದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

ವಾಯು ಎಂದು ಮಗನಿಗೆ ನಾಮಕರಣ ಮಾಡಿದ್ದು ಈವರಿಗೆ ಎಲ್ಲಿಯೂ ಕೂಡ ಮಗನ ಮುಖವನ್ನು ಯಾವುದೇ ಫೋಟೋಗಳಲ್ಲಿ ಅವರು ರಿವೀಲ್ ಮಾಡಿಲ್ಲ. ನಾಮಕರಣ ಕಾರ್ಯಕ್ರಮದ ವಿಶೇಷ ಫೋಟೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಈ ನಟಿಗೆ ಹಲವು ಗಣ್ಯರು ಹಾಗೂ ಅಭಿಮಾನಿಗಳು ಶುಭಾಷಯ ತಿಳಿಸಿ ಹಾರೈಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಸೋನಂ ಕಪೂರ್ ಅವರು ಆಗಾಗ ತಮ್ಮ ಜೀವದ ವಿಶೇಷ ಸಂಗತಿಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಈಗ ಅವರ ಸೋಶಿಯಲ್ ಮೀಡಿಯಾ ಖಾತೆಯಿಂದ ಮತ್ತೊಂದು ಫೋಟೋ ವೈರಲ್ ಆಗಿದೆ ಈ ಫೋಟೋದಲ್ಲಿ ಸೋನಂ ಕಪೂರ್ ಅವರು ಮಗುವಿಗೆ ಹಾಲುಣಿಸುತ್ತಾ ಇದ್ದಾರೆ. ಹೇರ್ ಸ್ಪೆಷಲಿಸ್ಟ್ ಹಾಗೂ ಮೇಕ್ಅಪ್ ಆರ್ಟಿಸ್ಟ್ ಮೇಕಪ್ ಮಾಡುತ್ತಿದ್ದಾರೆ ಹಾಗಾದರೆ ಇದು ಯಾವ ಸಿನಿಮಾಕ್ಕಾಗಿ ಮಾಡಿಸಿರುವ ಫೋಟೋ ಶೂಟ್ ಇಷ್ಟು ಚಿಕ್ಕ ಮಗುವನ್ನು ಇಟ್ಟುಕೊಂಡು ಇಷ್ಟು ಬೇಗ ಅವರು ಚಿತ್ರಿಕರಣಕ್ಕೆ ಬಂದರೆ ಎಂದು ಅನುಮಾನ ಮೂಡಿದರೆ ಖಂಡಿತ ಇದು ಸಿನಿಮಾಗಾಗಿ ಮಾಡಿದ ಫೋಟೋಶೂಟ್ ಅಲ್ಲ.

ಸೋನಂ ಈ ವರ್ಷದ ಕರ್ವ ಚೌತ್ ಹಬ್ಬವನ್ನು ಆಚರಿಸಿದ ಪರಿ ಈ ರೀತಿ ಇತ್ತು ಬಾಲಿವುಡ್ ನ ಎಲ್ಲಾ ನಟಿಮಣಿಯರು ಕೂಡ ಈ ವರ್ಷ ಅದ್ದೂರಿಯಾಗಿ ಕರ್ವ ಚೌತ್ ಆಚರಿಸಿದ್ದಾರೆ ಸೋನಂ ಕಪೂರ್ ಅವರು ಕೂಡ ಸದ್ಯಕ್ಕೆ ಮಗುವಿನ ಆರೈಕೆಗಾಗಿ ಮುಂಬೈಗೆ ತನ್ನ ತವರು ಮನೆಗೆ ಬಂದಿರುವ ಕಾರಣ ತಾಯಿಯ ಆಸೆಯಂತೆ ಹಬ್ಬವನ್ನು ಆಚರಿಸಿದ್ದಾರೆ. ಅದಕ್ಕಾಗಿ ಕೆಂಪು ಹಾಗೂ ಹಸಿರು ಜರಿ ಇರುವ ಲಂಗ ದವಣಿ ತೊಟ್ಟು ಬಹಳ ಟ್ರೀಡಿಷನ್ ಲುಕ್ಕಿನಲ್ಲಿ ಕಾಣಿಸಿಕೊಂಡು ಫೋಟೋಶೂಟ್ ಮಾಡಿಸಿದ್ದಾರೆ ಮತ್ತು ಹಬ್ಬವನ್ನು ಕೂಡ ಅದ್ದೂರಿಯಾಗಿ ಆಚರಿಸಿದ್ದಾರೆ.

ಇದರ ಜೊತೆಗೆ ಕೆಲವು ಮಾತುಗಳನ್ನು ಕೂಡ ಬರೆದು ಹಂಚಿಕೊಂಡಿದ್ದಾರೆ. ತನ್ನ ತಂಡದೊಂದಿಗೆ ರಿಯಲ್ ಜಗತ್ತಿಗೆ ಹಿಂತಿರುಗಿರುವುದಕ್ಕೆ ನನಗೆ ಬಹಳ ಖುಷಿಯಾಗಿದೆ ಈ ರೀತಿ ರೆಡಿಯಾಗಿ ಮತ್ತೆ ನಿಮ್ಮನ್ನು ಭೇಟಿಯಾಗಲು ಸಂತೋಷವಾಯಿತು ನನ್ನ ತವರು ನೆಲ ಮುಂಬೈ ಅನ್ನು ನಾನು ಬಹಳ ಇಷ್ಟ ಪಡುತ್ತೇನೆ ಲವ್ ಯು ಮುಂಬೈ ಎಂದು ಬರೆದುಕೊಂಡಿದ್ದಾರೆ. ಆದರೂ ಮಗುವಿಗೆ ಹಾಲುಣಿಸುತ್ತ ಮೇಕಪ್ ಮಾಡಿಕೊಂಡ ವಿಡಿಯೋ ನೋಡಿ ನೆಟ್ಟಿಗರು ಕೆಂಡಮಂಡಲವಾಗಿದ್ದರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ? ತಪ್ಪದೆ ಕಾಮೆಂಟ್ ಮಾಡಿ.