ಸಾಮಾನ್ಯವಾಗಿ ಮಹಿಳೆಯರು ಮನೆಯಲ್ಲಿ ಯಾವುದೇ ರೀತಿಯ ಪದಾರ್ಥ ಇರಲಿ ವಸ್ತುವಾಗಿರಲಿ ಅದನ್ನು ಅಷ್ಟು ಸುಲಭವಾಗಿ ಆಚೆ ಬಿಸಾಡುವುದಕ್ಕೆ ಇಷ್ಟಪಡುವುದಿಲ್ಲ. ಆದಷ್ಟು ಅದನ್ನು ಮತ್ತೆ ಬೇರೆ ಯಾವ ಕೆಲಸಕ್ಕೆ ಬಳಸಬಹುದು ಮತ್ತೆ ಅದನ್ನು ಹೇಗೆ ಪುನರ್ ಬಳಕೆ ಮಾಡಬಹುದು ಎನ್ನುವಂತಹ ಮಾಹಿತಿಯನ್ನು ಅವರು ಹುಡುಕುತ್ತಿರುತ್ತಾರೆ.
ಆದರೆ ಕೆಲವೊಂದಷ್ಟು ಜನರಿಗೆ ಅದರ ಬಗ್ಗೆ ಮಾಹಿತಿ ತಿಳಿದಿರು ತ್ತದೆ. ಆದರೆ ಇನ್ನೂ ಕೆಲವೊಂದಷ್ಟು ಜನರಿಗೆ ಅದರ ಬಗ್ಗೆ ಯಾವುದೇ ಮಾಹಿತಿಯು ಕೂಡ ಇರುವುದಿಲ್ಲ ಆದ್ದರಿಂದ ಅಂತವರಿಗೆ ಈ ದಿನ ನಾವು ಹೇಳುತ್ತಿರುವಂತಹ ಮಾಹಿತಿ ತುಂಬಾ ಅನುಕೂಲವಾಗಿರುತ್ತದೆ ಎಂದೇ ಹೇಳಬಹುದು ಹಾಗೂ ಈ ಕೆಲಸ ಪ್ರತಿಯೊಬ್ಬರು ತಪ್ಪದೆ ಮಾಡುತ್ತಾರೆ ಎಂದೇ ಹೇಳಬಹುದಾಗಿದೆ.
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಪದಾರ್ಥ ಅಥವಾ ವಸ್ತು ಇದ್ದರೆ ಅದನ್ನು ಹೇಗೆ ಮತ್ತೆ ಪುನರ್ ಬಳಕೆ ಮಾಡಬಹುದು ಅದನ್ನು ಹೇಗೆ ತಯಾರಿಸುವುದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ಮುರಿದು ಹೋಗಿರುವ ಮೂಳೆಗಳನ್ನು ವೇಗವಾಗಿ ಜೋಡಿಸುತ್ತೆ ಇದರ ಎಲೆ. ಕೈಕಾಲು ಸೊಂಟ ಮಂಡಿ ಜಾಯಿಂಟ್ ಪೈನ್ ಗೂ ಇದು ರಾಮಬಾಣ.!
ಮನೆಯಲ್ಲಿ ಪುರುಷರು ಉಪಯೋಗಿಸುವಂತಹ ಪ್ಯಾಂಟ್ ಗಳು ಹಳೆಯದಾದರೆ ಅದನ್ನು ಕೆಲವೊಂದಷ್ಟು ಜನ ಆಚೆ ಬಿಸಾಡುತ್ತಿರುತ್ತಾರೆ ಇನ್ನು ಕೆಲವೊಂದಷ್ಟು ಜನ ಅದನ್ನು ಮನೆ ಸ್ವಚ್ಛ ಮಾಡುವುದಕ್ಕೆ ಬಟ್ಟೆಯಾಗಿ ಉಪಯೋಗಿಸುತ್ತಾರೆ.
ಆದರೆ ಈ ದಿನ ನಾವು ಹೇಳುವಂತಹ ಈ ವಿಧಾನವನ್ನು ನೀವು ಅನುಸರಿಸಿದರೆ ಅದು ಬಹಳ ಉತ್ತಮವಾದಂತಹ ಕೆಲಸಕ್ಕೆ ಬರುತ್ತದೆ ಎಂದೇ ಹೇಳಬಹುದು. ಹಾಗಾದರೆ ಮನೆಯಲ್ಲಿರುವಂತಹ ಹಳೆಯ ಪ್ಯಾಂಟ್ ಗಳನ್ನು ಹೇಗೆ ಮರುಬಳಕೆ ಮಾಡುವುದು ಅದನ್ನು ಹೇಗೆ ತಯಾರಿಸುವುದು ಎಂದು ಈ ಕೆಳಗೆ ತಿಳಿಯೋಣ.
ಮೊದಲು ಪ್ಯಾಂಟ್ ಕೆಳಭಾಗದಲ್ಲಿ ಅಂದರೆ ಕೆಳಗಿನ ಭಾಗದಿಂದ ಸರಿ ಸುಮಾರು ನಿಮಗೆ ಕುಶನ್ ಮೇಲೆ ಹಾಕುವುದಕ್ಕೆ ದಿಂಬು ಎಷ್ಟು ಉದ್ದ ಸರಿಹೋಗುತ್ತದೆಯೋ ಅಷ್ಟು ಉದ್ದಕ್ಕೆ ಅದನ್ನು ಕತ್ತರಿಸಿಕೊಳ್ಳಬೇಕು ಅದನ್ನು ಹಿಂದಕ್ಕೆ ಮಾಡಿ ಒಂದು ಭಾಗದಲ್ಲಿ ಹೊಲಿಗೆ ಹಾಕಿಕೊಳ್ಳಬೇಕು ಆನಂತರ ನಿಮ್ಮ ಮನೆಯಲ್ಲಿ ಯಾವುದಾದರೂ ಮತ್ತಷ್ಟು ಹಳೆ ಬಟ್ಟೆಗಳು ಇದ್ದರೆ ಅದನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಬೇಕು ಆನಂತರ ಅದನ್ನು ಅದರ ಒಳಗಡೆಗೆ ತೂರಿಸುತ್ತಾ ಹೋಗಬೇಕು.
ಈ ಸುದ್ದಿ ಓದಿ:- ಕಿಟಕಿ ಗಾಜು ಹೀಗೆ ಕ್ಲೀನ್ ಮಾಡಿ ಮತ್ತೆ ಹೊಸತಾಗಿ ಶೈನ್ ಆಗುತ್ತೆ….||
ಈ ರೀತಿ ಹೆಚ್ಚಿನ ಹಳೆ ಬಟ್ಟೆಗಳನ್ನು ಅದರ ಒಳಗಡೆ ತೂರಿಸಿ ಅದರ ಕೊನೆಯ ಭಾಗದಲ್ಲಿ ಸೂಜಿ ದಾರದಿಂದ ಹೊಲೆದರೆ ಸಾಕು ನಿಮಗೆ ಕುಶನ್ ಮೇಲೆ ಹಾಕುವಂತಹ ಸಣ್ಣದಾಗಿರುವಂತಹ ಉದ್ದನೆಯ ದಿಂಬು ತಯಾರಾಗುತ್ತದೆ.ಹೆಚ್ಚಿನ ಜನ ಕುಶನ್ ಮೇಲೆ ದಿಂಬು ಹಾಗೂ ಉದ್ದನೆಯ ದಿಂಬನ್ನು ಮಾರುಕಟ್ಟೆಗಳಲ್ಲಿ ಖರೀದಿ ಮಾಡಿ ಅದನ್ನು ಇಡುತ್ತಾರೆ.
ಆದರೆ ಈ ಮಾಹಿತಿ ತಿಳಿದರೆ ನೀವು ಅದನ್ನು ಖರೀದಿ ಮಾಡುವುದಿಲ್ಲ ಬದಲಿಗೆ ಮೇಲೆ ಹೇಳಿದ ಈ ವಿಧಾನವನ್ನು ನೀವು ಖಂಡಿತವಾಗಿಯೂ ಮನೆಯಲ್ಲಿ ಪ್ರಯತ್ನಿಸುತ್ತೀರಿ ಹಾಗೂ ಹಳೆಯ ಬಟ್ಟೆ ಎಂದು ಬಿಸಾಡುವ ಬದಲು ಮತ್ತೆ ಪುನರ್ ಬಳಕೆ ಮಾಡಿಕೊಳ್ಳಬಹುದು.
ಇದನ್ನು ನೀವೇ ನಿಮ್ಮ ಕೈಯಾರೆ ತಯಾರಿಸಿರುವುದರಿಂದ ನಿಮಗೆ ಮತ್ತಷ್ಟು ಸಂತೋಷ ಇರುತ್ತದೆ ಆದ್ದರಿಂದ ಯಾವುದೇ ವಸ್ತುವನ್ನು ಸಹ ಆಚೆ ಹಾಕುವ ಮೊದಲು ಅದನ್ನು ಹೇಗೆ ಮತ್ತೆ ಮರುಬಳಕೆ ಮಾಡಿಕೊಳ್ಳಬಹುದು ಎನ್ನುವಂತಹ ಮಾಹಿತಿಗಳನ್ನು ಪ್ರತಿಯೊಬ್ಬರು ತಿಳಿದುಕೊಂಡಿರುವುದು ಬಹಳ ಒಳ್ಳೆಯದು.
ಈ ಸುದ್ದಿ ಓದಿ:- ಹೀಗೆ ಮಾಡಿ ಸಾಕು ಎಷ್ಟೇ ಕರಟಿದ ಪಾತ್ರೆ ಮತ್ತೆ ಹೊಸತಾಗುತ್ತೆ.!
ಹೀಗೆ ಮನೆಯಲ್ಲಿ ಮತ್ತೆ ಯಾವುದೇ ಹಳೆ ವಸ್ತು ಅಥವಾ ಪದಾರ್ಥವಾಗಿರಬಹುದು ಅದನ್ನು ಮತ್ತೆ ಹೇಗೆ ಮರುಬಳಕೆ ಮಾಡಬೇಕು ಎಂದು ತಿಳಿದುಕೊಂಡಿದ್ದರೆ ಯಾವುದೇ ವಸ್ತು ಉಪಯೋಗಕ್ಕೆ ಬಾರದೆ ಆಚೆ ಬಿಸಾಡುವ ಅಗತ್ಯ ಇರುವುದಿಲ್ಲ.