ವರ್ಷವಿಡಿ ಲಕ್ಷ್ಮಿ ದೇವಿಯ ಅನುಗ್ರಹ ಆಗಲು ಸಂಕ್ರಾಂತಿ ಹಬ್ಬದಂದು ಯಾವೆಲ್ಲ ಪ್ರತ್ಯೇಕವಾದಂತಹ ವಿಧಿ ವಿಧಾನಗಳನ್ನು ಪಾಲಿಸಬೇಕು ಹಾಗೂ ನಿಮಗಿರುವಂತಹ ಆರ್ಥಿಕ ಸಮಸ್ಯೆ ಆರೋಗ್ಯ ಸಮಸ್ಯೆ ಉದ್ಯೋಗ ವ್ಯಾಪಾರದ ಸಂಕಷ್ಟ ಕಳೆಯಬೇಕು ಎಂದರೆ ಸಂಕ್ರಾಂತಿ ಹಬ್ಬದ ದಿನ ಐದು ರೂಪಾಯಿ ನಾಣ್ಯ ಅಕ್ಷತೆ ಹಾಗೂ ಒಂದು ಅರಿಶಿಣದ ಕೊಂಬಿನಿಂದ ಯಾವ ಶಕ್ತಿಶಾಲಿಯಾಗಿರುವಂತಹ ಪರಿಹಾರವನ್ನು ಪಾಲಿಸಬೇಕಾಗುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.
ಮೊದಲನೆಯದಾಗಿ ಸಂಕ್ರಾಂತಿ ಹಬ್ಬದ ದಿನ ಪ್ರತಿಯೊಬ್ಬರು ಪಾಲಿಸಬೇಕಾದoತಹ ಪರಿಹಾರವೇನೆಂದರೆ ಕಪ್ಪು ಅರಿಶಿಣದ ಕೊಂಬಿನ ಪರಿಹಾರ.ಯಾರಾದರೂ ಸರಿ ಈ ಒಂದು ಹಬ್ಬದ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿದ ನಂತರ ಒಂದು ಅರಿಶಿನದ ಬಟ್ಟೆಯನ್ನು ತೆಗೆದುಕೊಂಡು ಅದರ ಒಳಗಡೆ ಒಂದು ಕಪ್ಪು ಅರಿಶಿನದ ಕೊಂಬನ್ನು ಇಡಬೇಕು.
ಮನೆಯಲ್ಲಿ ಈ ದಿಕ್ಕಿಗೆ ಕ್ಯಾಲೆಂಡರ್ ಹಾಕಿದರೆ ಒಂದು ರೂಪಾಯಿ ಕೂಡ ಉಳಿಯೋದಿಲ್ಲ, ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.!
ನಂತರ ಇದನ್ನು ಒಂದು ಮೂಟೆಯ ರೀತಿ ಕಟ್ಟಬೇಕು ನಂತರ ಅದನ್ನು ಲಕ್ಷ್ಮಿ ದೇವಿಯ ವಿಗ್ರಹದ ಮುಂದೆ ಅಥವಾ ಫೋಟೋ ಮುಂದೆ ಇಡಬೇಕು ಆಮೇಲೆ ಓಂ ವಕ್ರತುಂಡಾಯ ನಮಃ ಎಂದು 21 ಬಾರಿ ಜಪಿಸಬೇಕು. ಹಾಗೆಯೇ ಓಂ ಮಹಾಲಕ್ಷ್ಮಿ ದೇವಿಯೇ ನಮಃ ಎಂಬ ಮಂತ್ರವನ್ನು 11 ಬಾರಿ ಅಥವಾ 21 ಬಾರಿ ಹೇಳಬೇಕು.
ನಂತರ ಆ ಒಂದು ಕಪ್ಪು ಅರಿಶಿನದ ಕೊಂಬಿನ ಮೂಟೆಯನ್ನು ನಿಮ್ಮ ಮನೆಯಲ್ಲಿ ಹಣಕಾಸು ಇಡುವಂತಹ ಸ್ಥಳಗಳಲ್ಲಿ ಅಥವಾ ನಿಮ್ಮ ವ್ಯಾಪಾರ ವ್ಯವಹಾರ ಮಾಡುವಂತಹ ಸ್ಥಳಗಳಲ್ಲಿ ಅಥವಾ ನಿಮ್ಮ ಮನೆಯ ಬೀರುವಿನಲ್ಲಿ ಇರಿಸಬೇಕು.
ಹೀಗೆ ಈ ವಿಧಾನ ಅನುಸರಿಸುವುದರ ಮೂಲಕ ಇದನ್ನು ನೀವು ನಿಮ್ಮ ಮನೆಯಲ್ಲಿ ಇಟ್ಟುಕೊಂಡರೆ ನಿಮ್ಮ ದುಃಖ ದುಮ್ಮಾನಗಳು ನಿಮ್ಮ ಎಲ್ಲಾ ಸಂಕಷ್ಟಗಳು ಕೂಡ ದೂರವಾಗುತ್ತದೆ. ನಿಮ್ಮ ಕಷ್ಟಗಳು ಕರ್ಪೂರ ಹೇಗೆ ಉರಿಯುತ್ತದೆಯೋ ಹಾಗೆ ದೂರವಾಗುತ್ತಾ ಹೋಗುತ್ತದೆ. ವರ್ಷಪೂರ್ತಿ ಅದೃಷ್ಟ ಹಾಗೂ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಹಾಗೂ ಗಣೇಶನ ಅನುಗ್ರಹ ಎನ್ನುವುದು ಸಿಗುತ್ತದೆ.
ಭೋಗಿ ಮತ್ತು ಸಂಕ್ರಾಂತಿ ಹಬ್ಬ ಯಾವ ರೀತಿಯಾಗಿ ಆಚರಿಸಬೇಕು, ಎಲ್ಲರೂ ತಿಳಿದುಕೊಳ್ಳಿ.!
ಪ್ರತಿ ಶುಕ್ರವಾರ ಅಮಾವಾಸ್ಯೆ ಪೌರ್ಣಮಿಯ ವಿಶೇಷವಾದ ದಿನದಂದು ಈ ಮೂಟೆಗೆ ನೀವು ಪೂಜೆಯನ್ನು ಆರತಿಯನ್ನು ದೂಪವನ್ನು ಬೆಳಗಬೇಕು. ಹೀಗೆ ಮುಂದಿನ ಸಂಕ್ರಾಂತಿಯವರೆಗೆ ಇದನ್ನು ಪೂಜೆ ಮಾಡುತ್ತಾ ಬಂದರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಕೂಡ ಬರುವುದಿಲ್ಲ ಹಣಕಾಸಿನ ವಿಷಯದಲ್ಲಿ ಆರ್ಥಿಕವಾಗಿ ಅಭಿವೃದ್ಧಿಯನ್ನು ಕಾಣುತ್ತೀರಿ.
ಇದು ಒಂದು ಬಹಳ ಸುಲಭವಾದಂತಹ ಶಕ್ತಿಯುತವಾಗಿರುವಂತಹ ವಿಧಾನ. ಕಪ್ಪು ಅರಿಶಿನದ ಕೊಂಬು ಸಾಕ್ಷಾತ್ ಲಕ್ಷ್ಮಿ ದೇವಿಯ ಸ್ವರೂಪ ಹಾಗೂ ಗಣೇಶನ ಸ್ವರೂಪ. ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ಕಪ್ಪು ಅರಿಶಿನದ ಕೊಂಬನ್ನು ನಿಮ್ಮ ಹತ್ತಿರದ ಗ್ರಂಥಿಗೆ ಅಂಗಡಿಗಳಲ್ಲಿ ತಂದು ಈ ಒಂದು ಹಬ್ಬದ ದಿನ ಈ ವಿಧಾನವನ್ನು ಮಾಡುವುದರ ಮೂಲಕ ನೀವು ಅತಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಬಹುದಾಗಿದೆ.
ಕೆಲವೊಂದಷ್ಟು ಜನರಿಗೆ ಈ ಕಪ್ಪು ಅರಿಶಿನದ ಕೊಂಬು ದೊರೆಯುವು ದಿಲ್ಲ ಅಂತವರು ಒಂದು ಬಿಳಿ ಬಟ್ಟೆಯನ್ನು ತೆಗೆದುಕೊಂಡು ಅದರ ಒಳಗಡೆ ಐದು ರೂಪಾಯಿ ನಾಣ್ಯ ಬಿಳಿ ಅಕ್ಷತೆ ಹಾಕಿ ಮೂಟೆಯ ರೀತಿ ಕಟ್ಟಿಕೊಳ್ಳಬೇಕು ಆನಂತರ ಅದನ್ನು ಮೇಲೆ ಹೇಳಿದ ವಿಧಾನದಲ್ಲಿ ಪೂಜೆ ಮಾಡಿ ಓಂ ಶ್ರೀ ಚಾಮುಂಡೇಶ್ವರಿ ದೇವಿಯೇ ನಮೋ ನಮಃ ಎಂದು 21 ಬಾರಿ ಹೇಳಿ ಪೂಜೆ ಮಾಡಿ ನಿಮ್ಮ ಮನೆಯಲ್ಲಿ ಹಣ ಇಡುವ ಸ್ಥಳದಲ್ಲಿ ಇಡುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ