Home Blog Page 108

ನಾಳೆ ಅನ್ನೋದನ್ನ ನಂಬಬೇಡಿ, ಯಾಕಂದ್ರೆ…!

 

ಈ ಭೂಮಿಯ ಮೇಲೆ ಏಳು ನೂರು ಕೋಟಿಗಿಂತಲೂ ಹೆಚ್ಚು ಮನುಷ್ಯರು ಇದ್ದರೂ ಕೂಡ ಇಲ್ಲಿ ಎಲ್ಲರೂ ಅವರ ಜೀವನ ಮಾಡಿದ ಮೌಲ್ಯವನ್ನು ಅರಿತಿಲ್ಲ ಎನ್ನುವುದು ಅಷ್ಟೇ ಸತ್ಯ. ಈ ಜೀವ ಹಾಗೂ ಜೀವನ ಎನ್ನುವುದು ಎಷ್ಟು ಮುಖ್ಯವಾಗಿದೆ ಎಂದರೆ ಇದನ್ನು ಪುರಾಣದ ಪ್ರಕಾರ ಹೇಳುವುದಾದರೆ 84 ಲಕ್ಷ ಜೀವ ರಾಶಿಗಳಾಗಿ ನಾವು ಜನ್ಮ ತಾಳಿದ ಮೇಲೆ ಮಾತ್ರವೇ ನಮಗೆ ಮನುಷ್ಯನಾಗಿ ಹುಟ್ಟುವ ಭಾಗ್ಯ ದೊರೆತಿದೆ.

ಹಾಗಂದ ಮೇಲೆ ನಾವು ಎಷ್ಟು ಶ್ರೇಷ್ಠರು ಎನ್ನುವುದನ್ನು ಮೊದಲು ಮನವರಿಕೆ ಮಾಡಿಕೊಳ್ಳಬೇಕು. ಈಗಷ್ಟೇ ಹುಟ್ಟುವ ಮಗುವ ಮುಖವನ್ನು ನೋಡಿ ಎಷ್ಟು ನಿರಾಳತೆಯಿಂದ ಈ ಪ್ರಪಂಚವನ್ನು ಕಾಣುತ್ತದೆ, ಎಲ್ಲ ಮಕ್ಕಳು ಕೂಡ ಹೀಗೆ ಹುಟ್ಟುತ್ತಾರೆ. ಆದರೆ ಬೆಳೆಯುತ್ತಾ ಹೋದಂತೆ ಅವರ ಬದುಕಿನಲ್ಲಿ ಆಗುವ ಘಟನೆಗಳು ಅವರ ಮೇಲೆ ಬಿಡುವ ಒತ್ತಡಗಳು ಅವರು ಅನುಭವಿಸಿದ ಸಂಧಿಗ್ಬದ್ಧತೆಗಳು ಅವರ ವ್ಯಕ್ತಿತ್ವವನ್ನು ಸೃಷ್ಟಿಸುತ್ತದೆ.

ಹೀಗಾಗಿ ಬದುಕಿನ ಇಂತಹ ಪರಿಸ್ಥಿತಿಗಳ ನಡುವೆ ಸಿಕ್ಕಿ, ಕೆಲವೊಮ್ಮೆ ಈ ಜೀವನವೇ ಬೇಡ ಎನ್ನುವಷ್ಟು ಬದುಕು ಬೇಸರವಾಗಿ ಕೆ’ಟ್ಟ ಆಲೋಚನೆಗಳು ಬರುತ್ತವೆ ಅಥವಾ ನಮಗೆ ನಾವೇ ಶಿ’ಕ್ಷೆ ಕೊಡುತ ಯಾವಾಗಲೂ ದುಃಖದಲ್ಲಿ ಇರುತ್ತೇವೆ. ಆದರೆ ಈ ರೀತಿ ಬದುಕುವುದಕ್ಕಾಗಿ ನಾವು ಹುಟ್ಟಿಲ್ಲ ಅದರಲ್ಲೂ ಕೆಲವೊಮ್ಮೆ ಹತ್ತು ವರ್ಷಗಳ ಹಿಂದೆ ಐದು ವರ್ಷಗಳ ಹಿಂದೆ ಯಾರೋ ಒಬ್ಬ ವ್ಯಕ್ತಿ ಹೇಳಿದ ಒಂದು ಮಾತು ಅಥವಾ ಒಂದು ಘಟನೆ ಸುತ್ತ ಸುತ್ತುತ್ತಾ ಇಷ್ಟು ದಿನಗಳಾದರೂ ನಾವು ಗುಣಪಡಿಸಿಕೊಳ್ಳಲಾಗದ ನೋವನ್ನು ಮನಸ್ಸಿನೊಳಗೆ ಮಾಡಿಕೊಂಡಿರುತ್ತೇವೆ.

ಇದು ಅಕ್ಷರಶಃ ತಪ್ಪು, ದೇಹ ಆರೋಗ್ಯ ತಪ್ಪಿದಾಗ ಹೇಗೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುತ್ತೇವೋ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಪ್ರತಿನಿತ್ಯ ವ್ಯಾಯಾಮ ಸ್ನಾನ ಉತ್ತಮ ಆಹಾರ ಸೇವನೆಯಿಂದ ಹಿಡಿದು ಮನೆ ಸ್ವಚ್ಛ ಮಾಡುವವರೆಗೆ ಚೆನ್ನಾಗಿ ನೋಡಿಕೊಳ್ಳುತ್ತೇವೆಯೋ ಹಾಗೆಯೇ ಮನಸ್ಸು ಕೆಟ್ಟಾಗ ಕೂಡ ಮನಸ್ಸಿನ ಆರೋಗ್ಯಕ್ಕೆ ಗಮನ ಕೊಡಬೇಕು ಅದಕ್ಕಾಗಿ ಮೊದಲು ಮನಸ್ಸನ್ನು ಕ್ಲೀನ್ ಮಾಡಬೇಕು.

ಎಂದೋ ಆದ ಘಟನೆಗೆ ಇನ್ನು ಕೊರಗುವುದರಲ್ಲಿ ಅರ್ಥವಿಲ್ಲ. ಆಗಿದ್ದು ಆಗಿ ಹೋಗಿದೆ ಅದು ಅವರ ತಪ್ಪಾಗಿದ್ದರೆ ನೀವು ಕ್ಷಮಿಸಿ ಮುನ್ನಡೆಯುವುದೇ ಉತ್ತಮ, ಒಂದು ವೇಳೆ ನಿಮ್ಮ ತಪ್ಪಾಗಿದ್ದರೆ ಅದಕ್ಕೆ ಪಶ್ಚಾತಾಪಟ್ಟಿದ್ದು ಸಾಕು ಇನ್ನು ಮುಂದೆ ಆ ರೀತಿ ಮಾಡುವುದಿಲ್ಲ ಎಂದು ದೃಢ ಮನಸ್ಸು ಮಾಡಿಕೊಂಡು ಮುಂದೆ ಸಾಗಿ, ನಿಮ್ಮಿಂದಾದ ಅನಾಹುತವನ್ನು ಸರಿಪಡಿಸಿರಿ.

ಹೆಚ್ಚಿನ ಸಮಯದಲ್ಲಿ ನಾವು ಬೇರೆಯವರು ನಮಗೆ ಮಾಡಿದ ಮೋ’ಸ ಅ’ನ್ಯಾ’ಯ ಅಥವಾ ಕೊಟ್ಟ ನೋ’ವಿನಿಂದಲೇ ಈ ರೀತಿ ಮಾನಸಿಕವಾಗಿ ಕುಗ್ಗಿ ಹೋಗಿ ಕೊರಗುತ್ತಿರುತ್ತೇವೆ ಇದನ್ನು ಮಾಡಿದವರೇ ಆರಾಮಾಗಿರುತ್ತಾನೆ. ಅದರಿಂದ ಮೊದಲು ಆಚೆ ಬನ್ನಿ ಅವರೇ ಪ್ರಪಂಚವಲ್ಲ, ಅವರನ್ನು ಹೊರತುಪಡಿಸಿ ಇಡೀ ಪ್ರಪಂಚವನ್ನು ನೋಡಿ ಎಷ್ಟು ಸುಂದರವಾಗಿದೆ.

ಹೇಗೆ ಒಂದು ಜೋಕಿಗೆ ಪದೇಪದೇ ನಾವು ನಗುವುದಿಲ್ಲವೋ ಅದೇ ರೀತಿ ಒಂದೇ ಒಂದು ಕೆಟ್ಟ ಘಟನೆಗೆ ಪದೇಪದೇ ಕಣ್ಣೀರು ಹಾಕುವುದರಲ್ಲೂ ಅರ್ಥವಿಲ್ಲ ನಾಳೆ ನಾವು ಇರುತ್ತೇವೆ ಎನ್ನುವ ಯಾವ ಭರವಸೆಯೂ ಇಲ್ಲ ನಾಳೆ ಎನ್ನುವುದು ಇದೆಯೋ ಇಲ್ಲವೋ ಎನ್ನುವ ಖಚಿತತೆ ಇಲ್ಲದಿದ್ದಾಗ ಇವತ್ತಿನ ದಿನವನ್ನು ಉತ್ತಮವಾಗಿ ಕಳೆಯುವುದು ಮುಖ್ಯ.

ಈ ರೀತಿ ದುಃ’ಖ ಪಡುತ್ತಾ ಜೀವನ ಮುಗಿಸುವುದಕ್ಕಾಗಿ ನಾವು ಹುಟ್ಟಿಲ್ಲ. ಹಾಗಾಗಿ ಇಂದೇ ದೊಡ್ಡ ಮನಸ್ಸು ಮಾಡಿಕೊಂಡು ಬದಲಾಗಿ ಉಳಿದಿರುವ ಪ್ರತಿ ದಿನವನ್ನು ಪ್ರತಿಕ್ಷಣವನ್ನು ನಿಮಗೆ ಸಂತೋಷವಾಗುವ ರೀತಿ ಮತ್ತು ಆ ಹಾದಿಯಲ್ಲಿ ಯಾರಿಗೂ ತೊಂದರೆ ಆಗದ ರೀತಿ ಬದುಕಿ. ನಿಮ್ಮ ದುಃಖವನ್ನು ಆತ್ಮೀಯರ ಬಳಿ ಹೇಳಿಕೊಳ್ಳಿ ಅಥವಾ ನಿಮಗೆ ನಂಬಿಕೆ ಇರುವವರ ಬಳಿ ಹೇಳಿಕೊಳ್ಳಿ, ಯಾರೊಂದಿಗೂ ಹೇಳಿಕೊಳ್ಳಲಾಗದ ಕ’ಷ್ಟಗಳು ಯಾರಿಗೂ ಇರುವುದಿಲ್ಲ.

ಎಲ್ಲವೂ ಪ್ರಪಂಚದಲ್ಲಿ ನಡೆದಿರುವುದೇ ಆಗಲಿಲ್ಲ ಎಂದರೆ ಅದನ್ನೆಲ್ಲ ಬರೆದು ಸುಟ್ಟುಬಿಡಿ. ಆಮನಸ್ಸು ಹೀಗೆ ಕುಗ್ಗಿದಾಗಲೆಲ್ಲಾ ನಿಮ್ಮ ಆಸಕ್ತಿಕರ ವಿಷಯಗಳಲ್ಲಿ ತೊಡಗಿಕೊಳ್ಳಿ. ವಾಕಿಂಗ್ ಮಾಡಿ, ಶಾಪಿಂಗ್ ಮಾಡಿ, ಸಂಗೀತ ಕೇಳಿ, ಸಿನಿಮಾ ನೋಡಿ, ಆರಾಮಾಗಿ ನಿದ್ದೆ ಮಾಡಿ, ಫ್ರೆಂಡ್ಸ್ ಜೊತೆ ಔಟಿಂಗ್ ಹೋಗಿ ಹೀಗೆ ಯಾವುದನ್ನೇ ಮಾಡಿದರು ಪೂರ್ತಿ ಮನಸ್ಸಿಟ್ಟು ಮಾಡಿ.

ನೀವು ಎಲ್ಲೇ ಹೋದರು ಮತ್ತೆ ಆ ಜಾಗದಲ್ಲಿ ಇದ್ದು ಅದೇ ಕೆ’ಟ್ಟ ಘಟನೆ ಬಗ್ಗೆ ಯೋಚನೆ ಮಾಡಿದರೆ ಏನು ಪ್ರಯೋಜನವಿಲ್ಲ. ನೆಮ್ಮದಿ ಎನ್ನುವುದು ಜಗತ್ತಿನ ಅತಿ ದುಬಾರಿ ವಸ್ತು ಆದರೆ ಅದನ್ನು ಕೊಂಡುಕೊಳ್ಳದೆ ನಿಮ್ಮೊಳಗೆ ನೀವೇ ಕಂಡುಕೊಳ್ಳಬೇಕು.

ಮನೆಯ ಹೆಂಗಸರು ಹೀಗಿದ್ದರೆ ಆ ಮನೆಯ ಸ್ವರ್ಗವಾಗುತ್ತದೆ, ಎಲ್ಲಾ ಹೆಣ್ಣು ಮಕ್ಕಳು ತಿಳಿದುಕೊಳ್ಳಲೇಬೇಕಾದ ಗುಟ್ಟು ಇದು.!

 

ಒಂದು ಮನೆಗೆ ಆ ಮನೆಯಲ್ಲಿರುವ ಹೆಣ್ಣು ಮಕ್ಕಳೇ ಭೂಷಣ. ಹೆಣ್ಣಿಲ್ಲದ ಮನೆ ಮನೆಯಲ್ಲ ಎನ್ನಬಹುದು. ಒಂದು ಮನೆಯನ್ನು ದೇವಸ್ಥಾನವನ್ನಾಗಿಸುವುದು ಅಥವಾ ಆ ಮನೆಯನ್ನು ಸ್ಮಶಾನ ವಾಗಿಸುವುದು ಆ ಮನೆಯ ಹೆಣ್ಣು ಮಕ್ಕಳ ಮೇಲೆ ನಿರ್ಧಾರವಾಗಿರುತ್ತದೆ.

ಹೆಣ್ಣು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಮಾಡಬಹುದು. ಹಾಗೆ ಇಷ್ಟು ಶಕ್ತಿ ಇರುವ ಆಕೆ ಕೆಲವೊಮ್ಮೆ ತಗ್ಗಿ ಬಗ್ಗಿ ನಡೆಯುವುದರಿಂದ ಒಂದು ಸಮುದಾಯಕ್ಕೆ ಒಳ್ಳೆಯದಾಗುತ್ತದೆ. ಹೀಗಾಗಿ ಹೆಣ್ಣುಮಕ್ಕಳು ಒಂದು ಮನೆಯ ಸುಖ ಸಂತೋಷಕ್ಕಾಗಿ ಏನು ಮಾಡಬಾರದು ಏನು ಮಾಡಬಹುದು ಎನ್ನುವುದರ ಕುರಿತು ಕೆಲವು ವಿಚಾರಗಳನ್ನು ಈ ಅಂಕಣದಲ್ಲಿ ಹೇಳುತ್ತಿದ್ದೇವೆ.

* ಮನೆಯವರಿಗೆ ಊಟ ಬಡಿಸಿ ಗೊಣಗಾಡುತ್ತಿರಬಾರದು, ಜೋರಾಗಿ ಮಾತನಾಡಬಾರದು ಈ ರೀತಿ ಮಾಡುವುದು ಯಾವುದೇ ಪಾಪಕ್ಕಿಂತ ಕಡಿಮೆ ಇಲ್ಲ. ಇಂತಹ ಹೆಣ್ಣು ಮಕ್ಕಳ ಮೇಲೆ ಯಾರಿಗೂ ಪ್ರೀತಿ ಹಾಗೂ ಗೌರವ ಬರುವುದಿಲ್ಲ.
* ಊಟ ಬಡಿಸುವುದಕ್ಕೂ ಒಂದು ನಿಯಮವಿದೆ ಉದಾಹರಣೆಗೆ, ಮೊದಲಿಗೆ ಉಪ್ಪು ಬಡಿಸಬೇಕು, ಊಟ ಬಡಿಸುವ ಮೊದಲು ನೀರು ಹತ್ತಿರ ಇಟ್ಟಿರಬೇಕು ಇಂತಹ ಸೂಕ್ಷ್ಮತೆಗಳನ್ನು ಪ್ರತಿನಿತ್ಯ ಹೇಳಿಸಿಕೊಳ್ಳಬಾರದು.

* ಹೆಣ್ಣು ಮಕ್ಕಳಿಗೆ ಮನೆಯ ಸೂಕ್ಷ್ಮತೆಗಳ ಬಗ್ಗೆ ಗಮನ ಇರಬೇಕು ಕೆಲವೊಂದು ಸಂಗತಿಗಳನ್ನು ಮನೆಯಲ್ಲಿ ಮಾಡಬಾರದು ಎಂದು ಹಿರಿಯರು ನಿಯಮ ಮಾಡಿರುತ್ತಾರೆ. ಆ ಮನೆಯ ಹಿರಿಯರು ಮಾಡಿರುವ ಅಥವಾ ಹೇಳಿಕೊಡುವ ಪ್ರಕಾರವಾಗಿ ಪಾಲಿಸಿಕೊಂಡು ಹೋಗಬೇಕು ಆಗ ಹಿರಿಯರಿಗೆ ಕೋಪ ಬರುವುದಿಲ್ಲ ಕಿರಿಯರು ಕೂಡ ನಿಮ್ಮನ್ನು ಆದರ್ಶವಾಗಿ ಕಾಣುತ್ತಾರೆ.

* ಮನೆಯ ಬಳಿ ಹೂವು ಮಾರುವವರು ಬಂದಾಗ ಬೇಡ ಎಂದು ಹೇಳಿ ಕಳುಹಿಸಬಾರದು ಅದರ ಬದಲು ನಾಳೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿ ಕಳುಹಿಸಬೇಕು.
* ಮುಟ್ಟದ ಸಮಯದಲ್ಲಿ ದೇವರಕೋಣೆಯ ವಸ್ತುಗಳನ್ನು ಮುಟ್ಟಬಾರದು. ಪೂಜೆ ಮಾಡಬಾರದು ಹಾಗೆ ಯಾರಿಗೂ ಅರಿಶಿನ ಕುಂಕುಮ ಹೂವು ಕೊಡಬಾರದು.
* ಅಡುಗೆ ಮಾಡುವಾಗ ದೇವರ ಪೂಜೆ ಮಾಡುವಾಗ ಕೂದಲನ್ನು ಹರಡಿಕೊಳ್ಳಬಾರದು.

* ಹೆಣ್ಣು ಮಕ್ಕಳು ನಡೆಯುವಾಗ ಜೋರಾಗಿ ನಡೆಯುವುದು ಶಬ್ದ ಬರುವ ಚಪ್ಪಲಿಗಳನ್ನು ಹಾಕಿಕೊಂಡು ನಡೆಯುವುದು ಕಾಲನ್ನು ಎಳೆದುಕೊಂಡು ನಡೆಯುವುದು ಹೀಗೆಲ್ಲ ಮಾಡಿ ಎಲ್ಲರಿಗೂ ಕಿರಿಕಿರಿ ಮಾಡಬಾರದು. ಹೆಣ್ಣು ಮಕ್ಕಳು ನಾಜೂಕಾಗಿದ್ದಾಗ ಎಲ್ಲರೂ ಇಷ್ಟಪಡುತ್ತಾರೆ ಇಲ್ಲವಾದಲ್ಲಿ ಭೇಟಿ ಮಾಡುವ ಸಣ್ಣ ತಪ್ಪು ಮನೆಯಲ್ಲಿ ಅ’ಶಾಂ’ತಿಗೆ ಕಾರಣವಾಗುತ್ತದೆ.

* ಯಾರಾದರೂ ಇದ್ದಾಗಲೂ ಇಲ್ಲದೆ ಇದ್ದಾಗಲೂ ಕಾಲನ್ನು ಕೆಳಕ್ಕೆ ಬಿಟ್ಟು ಅಲುಗಾಡಿಸುತ್ತಾ ಕುಳಿತುಕೊಳ್ಳಬಾರದು. ಇದರಿಂದ ಮನೆಗೆ ದರಿದ್ರ ಬರುತ್ತದೆ.
* ಮನೆಯಲ್ಲಿ ಹಿರಿಯರು ಕೆಳಗೆ ಕುಳಿತಿದ್ದಾಗ ನೀವು ಮೇಲೆ ಕುಳಿತುಕೊಳ್ಳಬಾರದು ಅಥವಾ ನೆಂಟರು ಪರಿಚಯಸ್ತರು ಮನೆಗೆ ಬಂದಾಗ ಅವರೆದುರು ಹಿರಿಯರ ಸಮಕ್ಕೆ ಮನೆ ಹೆಣ್ಣು ಮಕ್ಕಳು ಕುಳಿತುಕೊಳ್ಳಬಾರದು. ಅವರ ಮಾತಿನ ಮಧ್ಯೆ ನಿಮ್ಮ ಅಭಿಪ್ರಾಯ ಕೇಳದೆ ಇದ್ದಾಗಲೂ ಮಾತನಾಡಬಾರದು.

* ಹೆಣ್ಣು ಮಕ್ಕಳಿಗೆ ಕುಂಕುಮ ಕೈ ಬಳೆ ಮುಡಿಗೆ ಹೂವು ಕಾಲ್ಗೆಜ್ಜೆ ಇವೆಲ್ಲವೂ ಲಕ್ಷಣ ಆದಷ್ಟು ಇವುಗಳನ್ನು ಹಾಕಿಕೊಳ್ಳಬೇಕು ಮತ್ತು ದೇವರ ಪೂಜೆ ಮಾಡುವಾಗ ಇವುಗಳು ಹಣೆ ಖಾಲಿ ಇಟ್ಟುಕೊಂಡು, ತಲೆ ಕೆದರಿಕೊಂಡು, ಕೈಗಳಲ್ಲಿ ಬಳೆ ಇಲ್ಲದೆ, ಕಾಲಲ್ಲಿ ಗೆಜ್ಜೆ ಇಲ್ಲದೆ, ಕಿವಿಯಲ್ಲಿ ಓಲೆ ಇಲ್ಲದೆ ಪೂಜೆ ಮಾಡಬಾರದು. ಈ ರೀತಿ ಪೂಜೆ ಮಾಡಿದರು ಅದು ದೇವರಿಗೆ ಸಲ್ಲುವುದಿಲ್ಲ ಎಂದು ಹೇಳಲಾಗುತ್ತದೆ ಅಲ್ಲದೆ ಮನೆಯಲ್ಲಿ ಹಿರಿಯರ ಕೋಪಕ್ಕೆ ಗುರಿಯಾಗುತ್ತೀರಿ.

* ಹೆಣ್ಣು ಮಕ್ಕಳು ಮನೆಯಲ್ಲಿ ಯಾವಾಗಲೂ ಖುಷಿ ಖುಷಿಯಾಗಿ ನಗು ನಗುತ್ತಾ ಮಾತನಾಡಿಕೊಂಡು ಇರಬೇಕು. ಸಣ್ಣ ಪುಟ್ಟ ವಿಚಾರಕ್ಕೂ ಮುನಿಸಿಕೊಳ್ಳುವುದು ಅಥವಾ ಗಲಾಟೆ ಮಾಡಿ ಎಲ್ಲರಿಗೂ ಬೇಜಾರು ಮಾಡುವುದು ಇವುಗಳನ್ನು ಮಾಡಬಾರದು. ಅದೇ ರೀತಿ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಕಣ್ಣೀರು ಹಾಕಿಸದೆ ಗೌರವ ಕೊಟ್ಟು ಪ್ರೀತಿಯಿಂದ ನೋಡಿಕೊಳ್ಳಬೇಕಾದ ಜವಾಬ್ದಾರಿ ಆ ಮನೆಯ ಎಲ್ಲರದ್ದು ಆಗಿರುತ್ತದೆ. ಹೆಣ್ಣು ಮಕ್ಕಳು ಕ’ಣ್ಣೀ’ರಿ’ಟ್ಟ’ರೆ ಶಾ’ಪಕೊಟ್ಟರೆ ಆ ಮನೆ ನರಕವಾಗುತ್ತದೆ.

ಕ್ಯಾಲ್ಸಿಯಂ ಹೆಚ್ಚಿಸಲು ಮೂಳೆಗಳು ಗಟ್ಟಿಯಾಗಲು ದೇಹದಲ್ಲಿ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ.!

 

ದೇಹವು ಮೂಳೆ ಮಾಂಸಗಳ ತಡಿಕೆ ಅದರಲ್ಲಿ ಈ ದೇಹವನ್ನು ದಷ್ಟಪುಷ್ಟವಾಗಿ ಗಟ್ಟಿಯಾಗಿರುವಂತೆ ಆಕಾರ ಕೊಟ್ಟು ನೋಡಿಕೊಳ್ಳುತ್ತಿರುವುದು ಮೂಳೆಗಳು. ಮೂಳೆಗಳು ಇಲ್ಲವಾದರೆ ದೇಹ ಮಾಂಸಗಳ ಮುದ್ದೆಯಾಗಿ ಬಿಡುತ್ತದೆ. ಮೂಳೆಗಳು ಗಟ್ಟಿಯಾಗಿರುವುದರಿಂದ ಮನುಷ್ಯನಿಗೆ ಶಕ್ತಿ ಆದರೆ ಕ್ಯಾಲ್ಸಿಯಂ ಕೊರತೆ ಆದರೆ ಮೂಳೆಗಳಿಗೆ ಸಮಸ್ಯೆ ಆಗುತ್ತದೆ.

ಮೂಳೆಗಳಲ್ಲಿ ಸವೆತ ಅಥವಾ ಮೂಳೆಗಳು ದುರ್ಬಲವಾಗುವುದು ಇನ್ನಿತರ ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ಹಾಗಾಗಿ ನಮ್ಮ ದಿನನಿತ್ಯದ ಆಹಾರದಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವ ಆಹಾರ ಪದಾರ್ಥಗಳನ್ನು ಸೇವಿಸಿ ಕ್ಯಾಲ್ಸಿಯಂ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಯಾವ ಆಹಾರ ಪದಾರ್ಥದಲ್ಲಿ ಕ್ಯಾಲ್ಸಿಯಂ ಹೇರಳವಾಗಿದೆ ಮತ್ತು ಕ್ಯಾಲ್ಸಿಯಂ ಕೊರತೆಗೆ ಮಾತ್ರೆಗಳನ್ನು ಸೇವಿಸುವುದರಿಂದ ಎಷ್ಟು ದುಷ್ಪರಿಣಾಮವಾಗುತ್ತದೆ ಎನ್ನುವುದರ ವಿವಿಧ ಹೀಗಿದೆ ನೋಡಿ.

ಕ್ಯಾಲ್ಸಿಯಂ ಕೊರತೆ ಉಂಟಾಗಿದೆ ಎನ್ನುವುದು ತೀರ ಇತ್ತೀಚಿಗೆ ಜನರು ಅನುಭವಿಸುತ್ತಿರುವ ಸಮಸ್ಯೆಯಾಗಿದೆ. ಯಾಕೆಂದರೆ ಈಗ ಜನರ ಜೀವನ ಶೈಲಿ ಸಂಪೂರ್ಣ ಬದಲಾಗಿದೆ. ತಪ್ಪಾದ ಆಹಾರ ಪದ್ಧತಿ, ಶಿಸ್ತಿಲ್ಲ ನಿದ್ದೆ, ಅನಾರೋಗ್ಯಕರ ಜೀವನ ಶೈಲಿ, ವ್ಯಾಯಾಮರಹಿತ ದಿನಗಳು ಇವುಗಳು ಇದರೊಂದಿಗೆ ಅತಿಯಾದ ಫಾಸ್ಟ್ ಫುಡ್ ಗಳ ಸೇವನೆ ಅವೈಜ್ಞಾನಿಕವಾಗಿ ತಯಾರಾದ ಆಹಾರ ಪದಾರ್ಥಗಳ ಸೇವನೆ ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳ ಕೊರತೆಯನ್ನು ಉಂಟು ಮಾಡುತ್ತಿದೆ.

ಇದರಲ್ಲಿ ಕ್ಯಾಲ್ಸಿಯಂ ಕೊರತೆಯೂ ಕೂಡ ಒಂದು. ಅನೇಕರು ಕ್ಯಾಲ್ಸಿಯಂಗಾಗಿ ಮಾತ್ರೆಗಳನ್ನು ಸೇವಿಸುತ್ತಾರೆ ಆದರೆ ಇದು ದೇಹದ ಮೇಲೆ ಎಷ್ಟು ಗಂಭೀರ ದುಷ್ಪರಿಣಾಮಗಳನ್ನು ಬೀರುತ್ತದೆ ಎನ್ನುವುದು ಅವರಿಗೆ ಆ ಸಮಯದಲ್ಲಿ ತಿಳಿದಿರುವುದಿಲ್ಲ. ನಿರಂತರವಾಗಿ ಮಾತ್ರೆಗಳ ಸೇವನೆಯಿಂದಾಗಿ ದೇಹ ದುರ್ಬಲವಾಗುತ್ತದೆ.

ಇದರಿಂದ ಹಾರ್ಟ್ ಅಟ್ಯಾಕ್, ಹಾರ್ಟ್ ಫೇಲ್ಯೂರ್ ಮುಂತಾದ ಹೃದಯ ಸಂಬಂಧಿತ ಕಾಯಿಲೆಗಳು ಸ್ಟ್ರೋಕ್ ಆಗುತ್ತದೆ. ಹಾಗಾಗಿ ನ್ಯಾಚುರಲ್ ಆಗಿಯೇ ಸಿಗುವ ಆಹಾರ ಪದಾರ್ಥಗಳಿಂದಾಗಿ ನಾವು ಕ್ಯಾಲ್ಸಿಯಂ ಪ್ರಮಾಣವನ್ನು ಸರಿದೂಗಿಸಿಕೊಳ್ಳಲು ನೋಡಬೇಕು. ಪ್ರತಿದಿನ ಹಾಲಿನ ಸೇವನೆ ಮಾಡುವುದರಿಂದ ದೇಹಕ್ಕೆ ಹೇರಳವಾಗಿ ಕ್ಯಾಲ್ಸಿಯಂ ಸಿಗುತ್ತದೆ.

ವಿಟಮಿನ್ ಸಿ ಹೇರಳವಾಗಿ ನಿಂಬೆಹಣ್ಣು ಕಿತ್ತಳೆ ಹಣ್ಣು ಮೂಸಂಬಿ ಇವುಗಳ ಸೇವನೆಯಿಂದಾಗಿ ದೇಹದಲ್ಲಿ ಕ್ಯಾಲ್ಸಿಯಂ ಉತ್ಪಾದನೆಗೆ ಅಥವಾ ಆಹಾರ ಪದಾರ್ಥಗಳಲ್ಲಿ ಕ್ಯಾಲ್ಸಿಯಂ ಪಡೆದುಕೊಳ್ಳುವುದಕ್ಕೆ ಇದು ಸಹಾಯಕವಾಗುತ್ತದೆ. ಮೆಂತ್ಯ ಸೊಪ್ಪು ನುಗ್ಗೆ ಸೊಪ್ಪಿನಲ್ಲಿ ಕೂಡ ಕ್ಯಾಲ್ಸಿಯಂ ಅಂಶ ಹೇರಳವಾಗಿದೆ. ರಾಮಫಲ, ಸೀತಾಫಲ, ಬ್ರೊಕೋಲಿ, ನುಗ್ಗೆಕಾಯಿ, ಬೀನ್ಸ್, ಸೋರೆಕಾಯಿ, ಬೂದುಗುಂಬಳಕಾಯಿ ಇವುಗಳಲ್ಲಿ ಕೂಡ ಕ್ಯಾಲ್ಸಿಯಂ ಪದಾರ್ಥ ಹೇರಳವಾಗಿ ಇರುತ್ತದೆ.

ಕಿಡ್ನಿ ಬೀನ್ಸ್ ಕಾಳು ಎಂದು ಹೇಳಲಾಗುವ ಧಾನ್ಯ, ಹುರುಳಿಕಾಳು, ಉದ್ದು ಇವುಗಳಲ್ಲಿ ಕೂಡ ಕ್ಯಾಲ್ಸಿಯಂ ಯಥೇಚ್ಛವಾಗಿರುತ್ತದೆ. ಹುರುಳಿಕಾಳನ್ನು ಮೊಳಕೆ ಕಟ್ಟಿಸಿ ತಿನ್ನುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ಎಲೆ ಅಡಿಕೆ ಜೊತೆ ಗೋಧಿ ಗಾತ್ರದಷ್ಟು ಸುಣ್ಣ ತಿನ್ನುವುದರಿಂದ ಕೂಡ ದೇಹಕ್ಕೆ ಕ್ಯಾಲ್ಸಿಯಂ ಸೇರುತ್ತದೆ. ಈ ಮೇಲೆ ತಿಳಿಸಿದ ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾಲ್ಸಿಯಂ ಕೊರತೆ ಬರುವುದೇ ಇಲ್ಲ.

ಈಗಾಗಲೇ ಗಂಭೀರವಾಗಿ ಕ್ಯಾಲ್ಸಿಯಂ ಸಮಸ್ಯೆಯಿಂದ ಬಳಲುತ್ತಿದ್ದರೂ ತಪ್ಪದೆ ಈ ಮೇಲೆ ತಿಳಿಸಲಾದ ಎಲ್ಲಾ ಆಹಾರ ಪದಾರ್ಥಗಳನ್ನು ಮೂರು ತಿಂಗಳವರೆಗೆ ಪ್ರತಿನಿತ್ಯ ಆಹಾರದಲ್ಲಿ ಇವುಗಳು ಹೇರಳವಾಗಿ ಇರುವಂತೆ ನೋಡಿಕೊಂಡು ಸೇವಿಸಿ. ಆದರೆ ಒಂದೇ ಬಾರಿಗೆ ಎಲ್ಲವನ್ನು ತಿನ್ನುವುದು ಕೂಡ ದೇಹಕ್ಕೆ ಅಷ್ಟೊಂದು ಒಳ್ಳೆಯದಲ್ಲ. ಏಕ ರೂಪದ ಆಹಾರ ಸೇವಿಸುತ್ತಿರುವವರು ಒಂದು ತಿಂಗಳವರೆಗೆ ಸೇವಿಸಿದರೆ ಸಾಕು ನಿಮ್ಮ ದೇಹ ಪ್ರಕೃತಿಯ ಜೀರ್ಣಶಕ್ತಿಯ ಆಧಾರದ ಮೇಲೆ ಇವುಗಳನ್ನು ಸೇವಿಸಿ ಆದಷ್ಟು ಇವೆಲ್ಲ ಆಹಾರ ಪದಾರ್ಥದಲ್ಲಿ ಇರುವಂತೆ ನೋಡಿಕೊಳ್ಳಿ .

https://youtu.be/rjGeFUZOx3o?si=WATFwZteRQ7vSgxS

ಹೆಣ್ಣು ಮಕ್ಕಳಿಗೆ ಬಹಳ ಉಪಯುಕ್ತವಾದ ವಿಷಯ, ಮಹಿಳೆಯರು ಮಾತ್ರ ನೋಡಿ.!

 

ತಾಯ್ತನ ಎನ್ನುವುದು ಹೆಣ್ತನಕ್ಕೆ ಸಂಭ್ರ. ಒಂದು ಹೆಣ್ಣು ಜೀವನದಲ್ಲಿ ಏನೇ ಸಾಧಿಸಿದರು ಸಮಾಜದಲ್ಲಿ ಆಕೆಗೆ ಸಮಾನವಾದ ಸ್ಥಾನಮಾನ ಸಿಗುವುದು ಆಕೆ ತಾಯಿಯಾದ ಬಳಿಕವೇ. ಮಗು ಎನ್ನುವುದು ಆಕೆಯ ಭವಿಷ್ಯ, ತಾನಿನ್ನು ತಾಯಿಯಾಗುತ್ತಿದ್ದೇನೆ ಎನ್ನುವುದನ್ನು ತಿಳಿದಾಗಲಿಂದಲೇ ಆಕೆಗೆ ಮಗುವಿನ ಆಗಮದ ನಿರೀಕ್ಷೆ, ತುಡಿತ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿರುತ್ತದೆ.

ಹೆಣ್ಣೊಬ್ಬಳು ಮಗುವಿಗೆ ಜನ್ಮ ಕೊಡುವುದು ಆಕೆಗೆ ಮರುಜನ್ಮ ಎಂದು ಹೇಳುತ್ತಾರೆ ಯಾಕೆಂದರೆ, ಅದು ಅಷ್ಟು ಸಹಜವಾದ ಪ್ರಕ್ರಿಯೆಯಲ್ಲ. 9 ತಿಂಗಳವರೆಗೆ ಒಂದು ಜೀವವನ್ನು ಒಡಲಲ್ಲಿ ಇಟ್ಟುಕೊಂಡು ಅದನ್ನು ಈ ಪ್ರಪಂಚಕ್ಕೆ ಪರಿಚಯಿಸುವ ಸಮಯದಲ್ಲಿ ಉಂಟಾಗುವ ನೋ’ವು ಮಕ್ಕಳನ್ನು ಹಡೆದವರಿಗಷ್ಟೇ ಗೊತ್ತು.

ಈ ಕಾರಣಕ್ಕಾಗಿ ತಾಯಿಯೇ ಈ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಮತ್ತು ತನ್ನ ಪ್ರಾಣ ಹೋಗುವಷ್ಟು ನೋ’ವಿದ್ದರೂ ತಾನೊಂದು ಜೀವಕ್ಕೆ ಜೀವ ಜೀವನ ಕೊಡಬೇಕು ಎಂದುಕೊಳ್ಳುತ್ತಾಳಲ್ಲ ಆ ತಾಯಿ ಧರ್ಮಕ್ಕೆ ಸಮಾನವಾದದ್ದು ಯಾವುದು ಇಲ್ಲ ಎನ್ನುವುದು. ಆದರೆ ಈಗಿನ ಕಾಲದಲ್ಲಿ ಸಹಜ ಹೇಳಿಕೆ ಕೇಸ್ ಗಳಿಗಿಂತ ಸಿಸೇರಿಯನ್ ಕೇಸ್ ಗಳು ಹೆಚ್ಚು.

ಹಿಂದೆ ಬಹಳ ಕಾಂಪ್ಲಿಕೇಟೆಡ್ ಆಗಿದ್ದಕ್ಕೆ ಮಾತ್ರ ಸಿಸೇರಿಯನ್ ಮಾಡಲಾಗುತ್ತಿತ್ತು ಆದರೆ ಈಗ ಅವರೇ ಕೇಳಿ ಸಿಜೇರಿಯನ್ ಮಾಡಿಸಿಕೊಳ್ಳುತ್ತಿದ್ದಾರೆ. ಯಾವುದೇ ಪ್ರಕ್ರಿಯೆಯಾದರೂ ನ್ಯಾಚುರಲ್ ಆಗಿ ಆಗಬೇಕು ಎನ್ನುವುದು ಪ್ರಕೃತಿ ಧರ್ಮ, ಒಂದು ವೇಳೆ ನಿಮಗೂ ಕೂಡ ಈ ರೀತಿ ಸಹಜ ಹೆರಿಗೆ ಆಗಬೇಕು ಎಂದರೆ ನೀವು ಗರ್ಭಿಣಿಯಾಗಿದ್ದಾಗ ತಪ್ಪದೇ ಇವುಗಳನ್ನು ಮಾಡಿ…

* ಗರ್ಭಿಣಿಯಾಗಿದ್ದಾಗ ದೇಹದಲ್ಲಿ ಸಾಕಷ್ಟು ಹಾರ್ಮೋನ್ ವೇರಿಯೇಷನ್ ಆಗುತ್ತಿರುತ್ತದೆ ಆ ಬೈಪರೀತ್ಯಗಳನ್ನು ಸಂಭಾಳಿಸಿಕೊಂಡು ಸರಿಯಾದ ಸಮಯಕ್ಕೆ ಊಟ ಹಾಗೂ ನಿದ್ರೆಯನ್ನು ಮಾಡಬೇಕು.

* ಕೆಲವರು ಪ್ರಗ್ನೆಂಟ್ ಆದ ತಕ್ಷಣ ಬೆಡ್ ರೆಸ್ಟ್ ಎಂದು ಕೊಳ್ಳುತ್ತಾರೆ ಇದು ತಪ್ಪು. ಸಹಜ ಹೆರಿಗೆ ಆಗಬೇಕು ಎಂದರೆ ನೀವು ಎಂದಿನಂತೆ ಮನೆ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು. ವೈದ್ಯರ ಇನ್ಸ್ಟ್ರಕ್ಷನ್ ತೆಗೆದುಕೊಂಡು ಲಘು ವ್ಯಾಯಾಮ ಮಾಡಬೇಕು, ವಾಕಿಂಗ್ ಮಾಡುವುದು ಕೂಡ ಉತ್ತಮ ಇದರ ನಡುವೆ ಆಗಾಗ ರೆಸ್ಟ್ ಕೂಡ ಅಗತ್ಯ.

* ಎತ್ತರ ಹಿಮ್ಮಡಿ ಇರುವ ಚಪ್ಪಲಿಗಳನ್ನು ಧರಿಸಬಾರದು
* ಆಹಾರದಲ್ಲಿ ಬಸಳೆ ಸೊಪ್ಪು, ಕಿತ್ತಳೆ ಹಣ್ಣು, ಬೆಲ್ಲ, ಇಂಗು ಇವುಗಳನ್ನು ಬಳಸುವುದು ಸಹಜ ಹೆರಿಗೆಗೆ ಉತ್ತಮ.
* ಗರ್ಭಿಣಿಯಾಗಿರುವಾಗ ಅತಿ ಹೆಚ್ಚು ಬಿಗಿಯಾದ ಉಡುಪುಗಳನ್ನು ಧರಿಸಬಾರದು ಹತ್ತಿಯ ಉಡುಪುಗಳನ್ನು ಮೃದುವಾದ ಸಡಿಲವಾದ ಉಡುಪುಗಳನ್ನು ಧರಿಸಬೇಕು.

* ಗರ್ಭಿಣಿಯರು ಬೆಳ್ಳಿ ತಟ್ಟೆಯಲಿ ಆಗಾಗ ಮೊಸರು ಸೇವಿಸಿದರೆ ಸಹಜ ಹೆರಿಗೆ ಆಗುತ್ತದೆ.
* ಮೈ ತೂಕ ಹೆಚ್ಚಾಗದಂತೆ ಜಾಗ್ರತೆ ವಹಿಸಬೇಕು
* ಗರ್ಭಿಣಿಯಾದಾಗಲಿಂದ ಡಿಲೆವರಿ ಹಾಕುವವರೆಗೂ ಅತಿ ಉಷ್ಣದ ಆಹಾರ ಹಾಗೂ ಹಣ್ಣುಗಳನ್ನು ಸೇವಿಸಬಾರದು ಅದರಲ್ಲೂ ಯಾವುದೇ ಕಾರಣಕ್ಕೂ ಪೈನಾಪಲ್, ಹಲಸು, ಚಕ್ಕು ಹಣ್ಣು ಹಾಗೂ ಪಪ್ಪಾಯಿ ಹಣ್ಣನ್ನು ತಿನ್ನಲೇಬಾರದು.

* ಪೂರ್ತಿಯಾಗಿ ಹಣ್ಣಾಗದೇ ಇರುವಂತಹ ಹಣ್ಣುಗಳನ್ನು ಕೂಡ ಗರ್ಭಿಣಿಯರು ಸೇವಿಸಬಾರದು.
* ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಒಂದು ಚಮಚ ನೆಲ್ಲಿಕಾಯಿ ಪುಡಿ, ಒಂದು ಚಮಚ ಶುದ್ಧ ಹಸುವಿನ ತುಪ್ಪ ಸೇವಿಸಿ ಒಂದು ಲೋಟ ಬಿಸಿ ನೀರನ್ನು ಕುಡಿಯಬೇಕು
* ಆದಷ್ಟು ಜಂಕ್ ಫುಡ್ ಗಳನ್ನು ಕಡಿಮೆ ಮಾಡಿ
* ಪೌಷ್ಟಿಕಾಂಶದಿಂದ ಕೂಡಿದ ಉತ್ತಮ ಆಹಾರ ಪದಾರ್ಥಗಳನ್ನು ಸೇವಿಸಬೇಕು ಮತ್ತು ದೇಹ ಕೇಳುವಷ್ಟು ಅಗತ್ಯವಾದ ನೀರನ್ನು ಕುಡಿಯಬೇಕು.

ಬೆಡ್ರೂಮ್ ನಲ್ಲಿ ಈ ವಸ್ತುಗಳು ಇದ್ದರೆ ಕಂ’ಟ’ಕ ತಪ್ಪಿದ್ದಲ್ಲ.!

 

ವಾಸ್ತು ಶಾಸ್ತ್ರದಲ್ಲಿ ಯಾವ ದಿಕ್ಕುಗಳನ್ನು ಕೂಡ ಕೆ’ಟ್ಟದು ಎಂದು ಹೇಳುವುದಿಲ್ಲ. ಆದರೆ ಪ್ರತಿ ದಿಕ್ಕಿಗೂ ಉಚ್ಚ ಸ್ಥಾನ ಮತ್ತು ನೀಚ ಸ್ಥಾನಗಳು ಇರುತ್ತವೆ. ಯಾವ ದಿಕ್ಕುಗಳಲ್ಲಿ ಏನಿರಬೇಕು ಏನಿರಬಾರದು ಎನ್ನುವುದನ್ನು ಹೇಳಲಾಗುತ್ತದೆ, ಅದಕ್ಕೆ ಅವರದೇ ಆದ ತರ್ಕ ಬದ್ಧ ಸಮಜಾಯಿಸಿ ಕೂಡ ಇರುವುದರಿಂದ ಅದರಲ್ಲಿರುವ ಕೆಲ ಅಂಶಗಳನ್ನು ಒಪ್ಪಲೇಬೇಕು.

ಈ ರೀತಿ ವಾಸ್ತುಶಾಸ್ತ್ರವನ್ನು ಅನುಸರಿಸುವುದು ಹಾಗೂ ವಾಸ್ತು ಶಾಸ್ತ್ರದ ಪ್ರಕಾರವಾಗಿ ವಾಸ್ತು ಬದಲಾಯಿಸಿಕೊಂಡವರು ಜೀವನದಲ್ಲಿ ಯಶಸ್ಸು ಹಾಗೂ ಮನೆಯಲ್ಲಿ ಶಾಂತಿ ಕಂಡ ಉದಾಹರಣೆ ಇರುವುದರಿಂದ ವಾಸ್ತು ಶಾಸ್ತ್ರದ ಕುರಿತಾಗಿ ತಿಳಿಸಿರುವ ಕೆಲ ಸೀಕ್ರೆಟ್ ಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತೇವೆ. ಈ ಅಂಕಣದಲ್ಲಿ ಬೆಡ್ರೂಮ್ ಹೇಗಿರಬೇಕು? ಬೆಡ್ ರೂಂನಲ್ಲಿ ಏನಿರಬೇಕು, ಏನಿರಬಾರದು ಎನ್ನುವುದರ ಬಗ್ಗೆ ಹೇಳುತ್ತಿದ್ದೇವೆ.

* ಮೊದಲಿಗೆ ಬೆಡ್ರೂಮ್ ನಲ್ಲಿ ಮಲಗುವ ಹಾಸಿಗೆಯ ಪಕ್ಕ ಚಪ್ಪಲಿಗಳನ್ನು ಬಿಡುವ ಅಭ್ಯಾಸ ಇದ್ದರೆ ಮೊದಲ ಅದನ್ನು ತಪ್ಪಿಸಿ, ಇದು ಬಹಳ ತಪ್ಪು. ಆರೋಗ್ಯದ ದೃಷ್ಟಿಯಿಂದಲೂ ಕೂಡ ಇದು ಒಳ್ಳೆಯದಲ್ಲ ವಾಸ್ತು ಶಾಸ್ತ್ರದ ಪ್ರಕಾರ ಈ ವಿಚಾರವು ನಿಮಗೆ ನೆಗೆಟಿವಿಟಿಯನ್ನು ಹೆಚ್ಚು ಮಾಡುತ್ತದೆ. ಮನೆಯಲ್ಲಿ ಕಲಹವಾಗಲು ಕಾರಣವುಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ.

* ಹಾಗೆ ಮಲಗುವ ಮಂಚದ ಕೆಳಗಡೆ ಯಾವುದೇ ರೀತಿಯ ಮನೆ ಕ್ಲೀನ್ ಮಾಡುವ ವಸ್ತುಗಳು ಇಡಬಾರದು. ಅಂದರೆ ಬಕೆಟ್ ಜಗ್ ಬೇಡದ ಬಟ್ಟೆಗಳು ಇನ್ನು ಇತ್ಯಾದಿ ವಸ್ತುಗಳು ಇರಬಾರದು ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ನಮ್ಮಲ್ಲಿ ಮಂಚದ ಕೆಳಗಿರುವ ಜಾಗವನ್ನು ಯಾವುದಾದರೂ ವಸ್ತುಗಳನ್ನು ಇಟ್ಟುಕೊಳ್ಳಲು ಉಪಯೋಗಿಸುತ್ತೇವೆ.

ಆದಷ್ಟು ಆ ಜಾಗವನ್ನು ಖಾಲಿ ಬಿಟ್ಟರೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ ಮತ್ತು ಯಾವಾಗಲೂ ಮಂಚ ಮೂರು ಕಡೆಯಿಂದ ಲಾಕ್ ಆಗಿರುವುದರ ಬದಲು ಸಾಧ್ಯವಾದಷ್ಟು ಮಂಚ ಮೂರು ಕಡೆ ಓಡಾಡುವುದಕ್ಕೆ ಜಾಗ ಇರುವ ರೀತಿ ಇಟ್ಟರೆ ಇನ್ನು ಉತ್ತಮ ಫಲಗಳು ಸಿಗುತ್ತವೆ ಎನ್ನುವುದನ್ನು ಸಹ ಹೇಳಲಾಗುತ್ತದೆ.

* ಬೆಡ್ರೂಮಲ್ಲಿ ರಾಶಿ ಬಟ್ಟೆಗಳನ್ನು ಅಸ್ತವ್ಯಸ್ತವಾಗಿ ಗುಡ್ಡೆ ಹಾಕಿದ್ದರೆ ಅದೇ ರೀತಿ ನಿಮ್ಮ ಮನಸ್ಸಿಗೆ ಒತ್ತಡಗಳು ಹೆಚ್ಚಾಗುತ್ತದೆ. ಮನೆಯಲ್ಲಿ ಅಶಾಂತಿ ಮೂಡುತ್ತದೆ ಎಂದು ಸಹ ಹೇಳಲಾಗುತ್ತದೆ. ಯಾವಾಗಲೂ ಬೆಡ್ರೂಮ್ ಹಾಗೂ ಬೆಡ್ರೂಮ್ ನಲ್ಲಿರುವ ವಾರ್ಡ್ರೋಬ್ ಅಚ್ಚುಕಟ್ಟಾಗಿ ಕ್ಲೀನಾಗಿ ಇರಬೇಕು. ಬೆಡ್ರೂಮ್ ನಲ್ಲಿ ಸಿಕ್ಕಾಪಟ್ಟೆ ಬಟ್ಟೆಗಳನ್ನು ಗುಡ್ಡೆ ಹಾಕಿರಬಾರದು.

* ಮಲಗುವ ಮಂಚದ ಮೇಲೆ ಅಥವಾ ಹಾಸಿಗೆಯ ಪಕ್ಕದಲ್ಲಿ ಎಲೆಕ್ಟ್ರಿಕಲ್ ಗ್ಯಾಜೆಟ್ ಅಥವಾ ಚಾರ್ಜಿಂಗ್ ವೈರ್ ಗಳು ಈ ರೀತಿ ಎಲ್ಲವನ್ನು ಅಸ್ತವ್ಯಸ್ತವಾಗಿ ಸುತ್ತಿ ಹಾಕುವುದರಿಂದ ಅದೇ ರೀತಿ ನಿಮ್ಮ ಆಲೋಚನೆಗಳು ಗೋಜಲಾತ್ತವೆ ಎಂದು ಹೇಳಲಾಗುತ್ತದೆ. ಸಾಧ್ಯವಷ್ಟು ಮಲಗುವ ಪಕ್ಕದಲ್ಲಿ ಚಾರ್ಜಿಂಗ್ ಪಾಯಿಂಟ್ ಇರುವುದನ್ನು ತಪ್ಪಿಸಿ. ಇದ್ದರೂ ಅಲ್ಲಿ ಚಾರ್ಜಿಂಗ್ ಹಾಕಿ ಮಲಗುವ, ಚಾರ್ಜಿಂಗ್ ವೈರ್ ಗಳನ್ನು ಎರಡು ಮೂರು ಹಾಕಿ ಸುತ್ತಿಸಿ ಬಿಡುವ ಅಭ್ಯಾಸವನ್ನು ತಪ್ಪಿಸಿ.

* ಮಲಗುವ ಹಾಸಿಗೆ ಕೆಳಗೆ ಅಥವಾ ಹಾಸಿಗೆ ಪಕ್ಕದಲ್ಲಿಯೇ ತಮ್ಮ ಮಾತ್ರೆಗಳನ್ನು ಇಟ್ಟುಕೊಳ್ಳುವ ಅಭ್ಯಾಸ ಅನೇಕರಿಗೆ ಇದೆ, ಅದನ್ನು ಮರೆಯುತ್ತಾರೆ ಎನ್ನುವ ಕಾರಣ ಕೂಡ ಇರಬಹುದು. ಆದರೆ ವಾಸ್ತುಶಾಸ್ತ್ರ ಹೇಳುವ ಪ್ರಕಾರ ಈ ರೀತಿ ಯಾವಾಗಲೂ ಹಾಸಿಗೆ ಪಕ್ಕ ಔಷಧಿಗಳನ್ನು ಇಡಬಾರದು. ಇದರಿಂದ ಕಾಯಿಲೆಗಳು ಉಲ್ಬಣವಾಗುತ್ತವೆ, ಹಾಸಿಗೆ ಹಿಡಿಯಬೇಕಾದ ಸ್ಥಿತಿಗೆ ನೀವು ಹೋಗುತ್ತೀರಿ. ಅದರ ಬದಲು ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಮೆಡಿಸನ್ ಇಟ್ಟು ಅಲ್ಲಿಂದ ತಂದು ಮಾತ್ರೆ ತಿಂದು ಮಲಗಬೇಕು.

ತುಪ್ಪ ತಿನ್ನುವುದರಿಂದ ಸಿಗುವ ಪ್ರಯೋಜನಗಳೆಷ್ಟು ಗೊತ್ತಾ.? ಆರೋಗ್ಯದ ಬಗ್ಗೆ ಕಾಳಜಿ ಮಾಡುವವರು ಇದನ್ನು ತಪ್ಪಿಸಲೇಬೇಡಿ.!

 

ಹಿರಿಯರು ಸಾಲ ಮಾಡಿ ಆದರೂ ತುಪ್ಪ ತಿನ್ನು ಎನ್ನುವ ಗಾದೆಯನ್ನು ಮಾಡಿದ್ದರು. ಇದರಿಂದಲೇ ತುಪ್ಪಕ್ಕೆ ಎಷ್ಟು ಆರೋಗ್ಯಕರ ಅಂಶಗಳು ಇವೆ ಎನ್ನುವುದು ಅರ್ಥ ಆಗುತ್ತದೆ. ಆಯುರ್ವೇದದಲ್ಲಿ ಕೂಡ ತಪ್ಪಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ. ತುಪ್ಪದಲ್ಲಿ ಮನದ ದೇಹಕ್ಕೆ ಅನುಕೂಲಕರವಾದ ಅನೇಕ ಜೀವಸತ್ವಗಳಿದ್ದು ಕ್ಯಾಲ್ಸಿಯಂ ಹಾಗೂ ಕೊಬ್ಬಿನಾಂಶ ಹೇರಳವಾಗಿದೆ.

ವಿಟಮಿನ್ ಎ, ಇ, ಡಿ ಮತ್ತು ಕೆ ಜೊತೆಗೆ ಒಮೆಗಾ 3 ಕೂಡ ಇದೆ. ಬಿಸಿ ಅನ್ನಕ್ಕೆ ತುಪ್ಪ, ಬಿಸಿ ಕಜ್ಜಾಯ ಹಾಗೂ ಹೋಳಿಗೆಗೆ ತುಪ್ಪ ಹಾಕಿಕೊಂಡು ತಿನ್ನುವ ರುಚಿಯೇ ಬೇರ,ೆ ರುಚಿ ಮಾತ್ರವಲ್ಲದೆ ಆರೋಗ್ಯದ ವಿಚಾರದಲ್ಲಿ ಎಷ್ಟೆಲ್ಲಾ ಪ್ರಯೋಜನಗಳಿವೆ ಎನ್ನುವುದರ ವಿವರ ಹೀಗಿದೆ ನೋಡಿ.

* ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಂತೆ ಈ ಮೇಲೆ ತಿಳಿಸಿದ ಎಲ್ಲಾ ಪೋಷಕಾಂಶಗಳು ದೇಹಕ್ಕೆ ಸೇರುತ್ತದೆ, ಇದರಿಂದ ಜೀವಕೋಶಗಳ ಆರೋಗ್ಯ ವೃದ್ಧಿಸುತ್ತದೆ.
* ತುಪ್ಪದ ಸೇವನೆ ದೇಹ ನಿರ್ಜಲಿಕರಣವಾಗದಂತೆ ನೋಡಿಕೊಳ್ಳುತ್ತದೆ, ಇದರಿಂದ ಚರ್ಮ ಶುಷ್ಕವಾಗಿರುತ್ತದೆ ಮತ್ತು ಚರ್ಮದ ಸುಕ್ಕು ಕಲೆ, ಗುಳ್ಳೆ ಮೊಡವೆಗಳು ಗುಣವಾಗುತ್ತವೆ.
* ಎದೆ, ಗಂಟಲು ಹಾಗೂ ಮೂಗಿಗೆ ಸಂಬಂಧಪಟ್ಟ ಸೋಂಕುಗಳು ನಿವಾರಣೆಯಾಗುತ್ತವೆ.

* ಶೀತದ ವಾತಾವರಣದಿಂದ ಬರುವ ಜ್ವರ, ಚಳಿ ಇದು ಕೂಡ ಗುಣವಾಗುತ್ತದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
* ಮೆದುಳಿನ ಆರೋಗ್ಯಕ್ಕೂ ಕೂಡ ಅತ್ಯುತ್ತಮ ಆಹಾರ ತುಪ್ಪ, ತುಪ್ಪದ ಸೇವನೆ ಮಾಡುವುದರಿಂದ ಮೆದುಳಿನಲ್ಲಿರುವ ನರಕೋಶಗಳ ಕಾರ್ಯ ಚಟುವಟಿಕೆ ಉತ್ತಮವಾಗುತ್ತದೆ. ಇದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ. ಜ್ಞಾಪಕ ಶಕ್ತಿ ಮತ್ತು ಬುದ್ಧಿವಂತಿಕೆ ಹೆಚ್ಚಾಗುತ್ತದೆ ಎಂದು ಸಹ ಹೇಳಲಾಗುತ್ತದೆ ಇದಕ್ಕೆ ಇದರಲ್ಲಿರುವ ಒಮೆಗಾ3 ಕಾರಣವಾಗಿದೆ.

* ತೂಕ ಇಳಿಸಿಕೊಳ್ಳಲು ಇಚ್ಚಿಸುವವರು ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಪ್ರತಿನಿತ್ಯ ಒಂದು ಚಮಚ ತುಪ್ಪ ಸೇವನೆ ಮಾಡಬೇಕು.
* ತುಪ್ಪದ ಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತದೆ.
* ತುಪ್ಪದ ನಿಯಮಿತ ಸೇವನೆಯಿಂದ ದೇಹದಲ್ಲಿರುವ ಟಾಕ್ಸಿನ್ ಅಂಶಗಳನ್ನು ಹೊರಹಾಕಲು ಸಹಾಯಕವಾಗುತ್ತದೆ.
* ತುಪ್ಪದ ನಿಯಮಿತ ಸೇವನೆ ದೇಹದಲ್ಲಿ ಉಷ್ಣಾಂಶವನ್ನು ನಿಯಂತ್ರಣದಲ್ಲಿ ಇಡುತ್ತದೆ.

* ಕಣ್ಣಿಗೆ ಸಂಬಂಧಪಟ್ಟ ದೋಷಗಳಿಗೂ ಕೂಡ ತುಪ್ಪದ ಸೇವನೆ ಅತ್ಯಂತ ಪರಿಣಾಮಕಾರಿ ಔಷಧಿಯಾಗಿದೆ.
* ಕೂದಲು ಉದುರುವುದು, ಕೂದಲು ಬೇಗ ಬೆಳ್ಳಗಾಗುವುದು, ತಲೆಹೊಟ್ಟಿನ ಸಮಸ್ಯೆ ಮುಂತಾದ ಕೂದಲಿನ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೂ ಕೂಡ ತುಪ್ಪದ ಸೇವನೆಯಿಂದ ಪರಿಹಾರ ಸಿಗುತ್ತದೆ.

* ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಿನ ನೀರಿಗೆ ಒಂದು ಚಮಚ ತುಪ್ಪ ಸೇರಿಸಿ ಮಿಕ್ಸ್ ಮಾಡಿ ಕುಡಿಯುವುದರಿಂದ ಮಲಬದ್ಧತೆ, ನಿವಾರಣೆಯಾಗುತ್ತದೆ. ಗ್ಯಾಸ್ಟ್ರಿಕ್ ಹಾಗೂ ಎದೆ ಉರಿಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ನಿಯಂತ್ರಣಕ್ಕೆ ಬರುತ್ತದೆ.
* ಆಹಾರದಲ್ಲಿ ಪ್ರತಿನಿತ್ಯವು ತುಪ್ಪವನ್ನು ಬಳಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಮತ್ತು ಕರುಳಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.
* ಅನಿಯಮಿತ ಋತುಚಕ್ರದ ಸಮಸ್ಯೆ ಎದುರಿಸುತ್ತಿರುವವರು ಪ್ರತಿನಿತ್ಯ ತುಪ್ಪದ ಸೇವನೆ ಆರಂಭಿಸಿ. ಇದು ದೇಹದಲ್ಲಾಗುವ ಹಾರ್ಮೋನ್ ವೇರಿಯೇಷನ್ ಅನ್ನು ಸಮತೋಲನದಲ್ಲಿ ಇರಿಸುತ್ತದೆ.

* ಆಯುರ್ವೇದದಲ್ಲಿ ನಶ್ಯ ಚಿಕಿತ್ಸೆ ಎಂದು ಮಾಡಲಾಗುತ್ತದೆ. ಈ ಸಮಯದಲ್ಲಿ ತುಪ್ಪವನ್ನು ಬಿಸಿ ಮಾಡಿ ಅದು ಬೆಚ್ಚಗಿರುವಾಗ ಮೂಗಿಗೆ ಎರಡು ಹನಿ ಹಾಕಲಾಗುತ್ತದೆ ಮತ್ತು ಒಕ್ಕಳಿಗೂ ಕೂಡ ಪ್ರದಕ್ಷಣೀಯ ದಿಕ್ಕಿನಲ್ಲಿ ಹಾಕಲಾಗುತ್ತದೆ. ಇದರಿಂದ ಗೊರಕೆ ಸಮಸ್ಯೆ ಇದ್ದರೆ ನಿವಾರಣೆ ಆಗುತ್ತದೆ ಹಾಗೂ ಉಸಿರಾಟದ ಮತ್ತು ಕೆಮ್ಮು,ನೆಗಡಿ, ಶೀತದಂತಹ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.
* ಸಾಧ್ಯವಾದಷ್ಟು ನಾಟಿ ಹಸುವಿನ ತುಪ್ಪವನ್ನು ಸೇವಿಸಿ ಇದರಿಂದ ದೇಹಕ್ಕೆ ಎಲ್ಲಾ ಪೋಷಕಾಂಶಗಳು ಸೇರುತ್ತದೆ.

ನಮ್ಮನ್ನ ಬೇಡ ಅಂದೋರು ಅವಮಾನ ಮಾಡಿದವರನ್ನು ಮತ್ತೆ ನಮ್ಮತ್ತ ಸೆಳೆಯುವುದು ಹೇಗೆ ನೋಡಿ.!

 

ಈ ಭೂಮಿ ಮೇಲಿರುವ ಹೂವು, ಗಿಡ, ಮರ ವಸ್ತುಗಳು ಸೇರಿದಂತೆ ಎಲ್ಲಾ ಜೀವಿಗಳಿಗೂ ಕೂಡ ಒಂದು ಎಕ್ಸ್ಪರಿ ಡೇಟ್ ಎನ್ನುವುದು ಇರುತ್ತದೆ. ಹಾಗೆ ಸಂಬಂಧಗಳಿಗೆ ಕೂಡ, ಯಾವುದೇ ವ್ಯಕ್ತಿಯು ನಮ್ಮ ಜೀವನದಲ್ಲಿ ಸುಮ್ಮನೆ ಬರುವುದಿಲ್ಲ ಹಾಗೆ ಬಂದ ಕಾರಣ ಮುಗಿದ ಮೇಲೆ ಅವರ ಋಣ ತೀರಿದ ಮೇಲೆ ಬೇಕು ಎಂದರು ಕೂಡ ಉಳಿಯುವುದಿಲ್ಲ.

ನಾವೆಷ್ಟೇ ಪ್ರೀತಿ ಮಾಡುವ ವ್ಯಕ್ತಿ ಆಗಿದ್ದರು ನಮ್ಮನ್ನು ಬಿಟ್ಟು ಹೋಗುತ್ತಾರೆ ಒಂದು ವೇಳೆ ಅವರು ಇಹಲೋಕ ತ್ಯಜಿಸಿ ಹೋಗಿದ್ದರೆ ಅದು ಮರೆಯಲಾಗದ ನೋ’ವು, ಜೊತೆಗಿರದ ಜೀವ ಸದಾ ನಮ್ಮೊಳಗೆ ಜೀವಂತವಾಗಿರುತ್ತದೆ ಆದರೆ ಕೆಲವರು ಬದುಕಿರುವಾಗಲೇ ನಮ್ಮ ಸಹವಾಸವೇ ಬೇಡ ಎಂದು ನಮ್ಮಿಂದ ದೂರ ಹೋಗಿರುತ್ತಾರೆ. ನಾವು ಅವರಿಗೆ ಎಷ್ಟೇ ಪ್ರೀತಿಸಿದರು ಕೂಡ ತಾತ್ಸಾರವಾಗಿ ಕಾಣುತ್ತಾರೆ.

ಈ ರೀತಿ ಆಗುವುದು ಹೆಚ್ಚಾಗಿ ಲವ್ ಬ್ರೇ’ಕ್ ಅ’ಪ್ ಗಳಲ್ಲಿ ಅಥವಾ ಅತಿಯಾದ ಸ್ನೇಹ ಒ’ಡೆ’ದಾಗ ಮಾತ್ರ. ಅತ್ಯಂತ ಆತ್ಮೀಯರಾಗಿದ್ದವರು ಇದ್ದಕ್ಕಿದ್ದಂತೆ ಚಿಕ್ಕ ವಿಚಾರಕ್ಕೆ ದೊಡ್ಡದು ಮಾಡಿ ಸಂಬಂಧ ಕಳೆದುಕೊಳ್ಳುತ್ತಾರೆ ನಾವು ಅವರಿಗೆ ಎಷ್ಟೇ ಪ್ರೀತಿ ತೋರಿಸುತ್ತಿದ್ದರು, ಅವರಿಗಾಗಿ ಎಷ್ಟೇ ಸಮಯ ಕೊಡುತ್ತಿದ್ದರು.

ವರೊಂದಿಗೆ ಎಷ್ಟೇ ವರ್ಷಗಳಿಂದ ಜೊತೆಗಿದ್ದು ಅರ್ಥ ಮಾಡಿಕೊಂಡಿದ್ದರು ಈಗ ನಮ್ಮನ್ನು ಸಂಪೂರ್ಣವಾಗಿ ಇಗ್ನೋರ್ ಮಾಡಲು ಇಚ್ಚಿಸಿದ್ದಾರೆ ಎಂದರೆ ನಾವು ಮತ್ತೆ ಮತ್ತೆ ಅವರ ಹಿಂದೆ ಬೀಳುವುದರಲ್ಲಿ ಅರ್ಥವೇ ಇಲ್ಲ. ಅವರಿಗೆ ನಮ್ಮ ಜೀವನಕ್ಕೆ ಬಂದಿದ್ದ ಉದ್ದೇಶ ಮುಗಿಯಿತು ಎಂದುಕೊಂಡು ಸುಮ್ಮನಾಗಬೇಕು.

ಆದರೆ ಈ ರೀತಿ ನಾವಂದುಕೊಂಡರೂ ಮನಸ್ಸು ಕೇಳಬೇಕಲ್ಲ, ಪದೇ ಪದೇ ಅವರ ಯೋಚನೆ ಮಾಡುತ್ತೇವೆ. ನಮ್ಮ ವಿದ್ಯಾಭ್ಯಾಸ, ಉದ್ಯೋಗ ಇವುಗಳ ಮೇಲೆ ಆಸಕ್ತಿ ಕಳೆದುಕೊಂಡು ಡಿಪ್ರೆಶನ್ ಗೆ ಹೋಗುತ್ತೇವೆ. ಆದರೆ ಅವರು ಮಾತ್ರ ಇದ್ಯಾವುದಕ್ಕೂ ಕೇರ್ ಕೂಡ ಮಾಡುವುದಿಲ್ಲ. ಬಿಂದಾಸ್ ಆಗಿ ಅವರ ಲೈಫ್ ಎಂಜಾಯ್ ಮಾಡುತ್ತಿರುತ್ತಾರೆ.

ನಿಮ್ಮ ತಪ್ಪು ಇದ್ದರೂ ಇಲ್ಲದಿದ್ದರೂ ನೀವು ಅದನ್ನು ಒಪ್ಪಿಕೊಂಡು ಮತ್ತೊಮ್ಮೆ ಅವರನ್ನು ಮಾತನಾಡಿಸಲು, ನೋಡಲು ಪ್ರಯತ್ನಪಟ್ಟರು ಕೂಡ ಆ ವಿಷಯ ಅವರಿಗೆ ಗೊತ್ತಿದ್ದು ನಿಮ್ಮನ್ನು ದೂರ ಮಾಡುತ್ತಿದ್ದಾರೆ ಎಂದರೆ ನೀವು ದೊಡ್ಡ ಮನಸ್ಸು ಮಾಡಲೇಬೇಕು ಯಾವುದೇ ವ್ಯಕ್ತಿ ಇಲ್ಲದೆಯೂ ಕೂಡ ನಾವು ಜೀವಿಸಬಹುದ.

ನಮ್ಮನ್ನು ಬಿಟ್ಟು ನಮಗೆ ಮತ್ಯಾರು ನಮ್ಮಷ್ಟು ಮುಖ್ಯರಲ್ಲ ಎನ್ನುವುದನ್ನು ಮೊದಲು ಮನದಟ್ಟು ಮಾಡಿಕೊಳ್ಳಬೇಕು. ಮೊದಲಿಗೆ ಅವರನ್ನು ಮರೆಯಲು ಇರುವ ಆಪ್ಷನ್ಗಳನ್ನು ಹುಡುಕಬೇಕು, ಸಂಪೂರ್ಣವಾಗಿ ಅವರ ನೆನಪಿನಿಂದ ಹೊರಬರಲು ಸಮಯ ಬೇಕಾಗುತ್ತದೆ ಆದರೆ ದಿನಪೂರ್ತಿ ಅವರದ್ದೇ ದ್ಯಾನದಲ್ಲಿದ್ದರೆ ನಮ್ಮ ಜೀವನ ಅಲ್ಲಿಗೆ ನಿಂತು ಹೋಗಿ ಭವಿಷ್ಯ ನಾ’ಶವಾಗುತ್ತದೆ.

ನಾವು ಚೆನ್ನಾಗಿದ್ದರೆ ಇಂತಹ ನೂರು ಜನ ಸಿಗುತ್ತಾರೆ ಎಂದು ಕೊಳ್ಳಬೇಕು ದಿನದಲ್ಲಿ ಇಂತಿಷ್ಟು ಸಮಯ ಮಾತ್ರ ಅವರ ಬಗ್ಗೆ ಯೋಚನೆ ಮಾಡುತ್ತೇನೆ ಎಂದುಕೊಳ್ಳಬೇಕು. ಆ ಸಮಯ ಬಿಟ್ಟು ಬೇರೆ ಸಮಯದಲ್ಲಿ ಯೋಚನೆ ಬಂದಾಗ ಇದು ಅವರ ಬಗ್ಗೆ ಯೋಚಿಸುವ ಸಮಯ ಅಲ್ಲ ಎಂದು ನಿಮ್ಮ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು.

ಅವರ ಜೊತೆ ಇದ್ದಾಗ ಅನೇಕರನ್ನು ಅವರಿಗಾಗಿ ದೂರ ಮಾಡಿಕೊಂಡಿರುತ್ತೀರ ಈಗ ಅವರ ಜೊತೆ ಬೆರೆಯಲು ಪ್ರಯತ್ನಿಸಿ. ನಿಮಗೆ ಇಷ್ಟವಾದ ಸಂಗತಿಗಳಲ್ಲಿ ಸಮಯ ಕಳೆಯಿರಿ ‌, ಆರೋಗ್ಯ ಹಾಗೂ ಸೌಂದರ್ಯದ ಕಡೆ ಗಮನ ಕೊಡಿ. ಯೋಗ, ವ್ಯಾಯಾಮ, ಸಂಗೀತ, ಓದುವುದು, ಟ್ರಕಿಂಗ್ ಇತ್ಯಾದಿಗಳಲ್ಲಿ ತೊಡಗಿಕೊಂಡು ಖುಷಿಖುಷಿಯಾಗಿರಿ.

ಜೀವನದಲ್ಲಿ ಸ್ಪಷ್ಟ ಗುರಿ ಇಟ್ಟುಕೊಳ್ಳಿ ಆ ವ್ಯಕ್ತಿಗಿಂತ ನೀವು ಇಟ್ಟುಕೊಂಡ ಗುರಿ ಸಾಧಿಸುವುದೇ ಮುಖ್ಯ ಎಂದು ಹಠ ತೊಟ್ಟು ಅದರ ಕಡೆ ನಡೆಯಿರಿ. ಈ ರೀತಿ ನೀವು ಮಾಡುತ್ತಿದ್ದಂತೆ ನಿಮ್ಮೊಳಗೆ ಒಂದು ವೈಬ್ರೇಶನ್ ಕ್ರಿಯೇಟ್ ಆಗಿರುತ್ತದೆ ಅದು ಅವರೇ ಪಶ್ಚಾತಾಪ ಪಟ್ಟು ನಿಮ್ಮ ಕಡೆಗೆ ಬರುವಂತೆ ಮಾಡುತ್ತದೆ.

ನೀವು 90 ದಿನಗಳ ಕಾಲ ಗಟ್ಟಿ ಮನಸ್ಸು ಮಾಡಿ ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ನೀವು ಸಂಪೂರ್ಣವಾಗಿ ಅವರ ನೆನಪಿನಿಂದ ಆಚೆ ಬಂದಿರುತ್ತೀರಿ ಮತ್ತು ನಿಮಗೆ ಈಗ ಅವರು ಮೊದಲಿನಷ್ಟು ಮುಖ್ಯ ಎನಿಸುವುದಿಲ್ಲ. ನಿಮ್ಮ ಜೀವನ ಎಷ್ಟು ಮುಖ್ಯ ಮತ್ತೆ ಈ ಪ್ರಪಂಚ ಎಷ್ಟು ಸುಂದರವಾಗಿದೆ ನಿಮಗೆ ಯಾರು ಬೆಲೆ ಕೊಡುತ್ತಾರೆ ಎನ್ನುವುದೆಲ್ಲ ಚೆನ್ನಾಗಿ ಅರ್ಥ ಆಗಿರುತ್ತದೆ ಹಾಗಾಗಿ ಯಾರ ಬಗ್ಗೆಯೂ ಯಾವುದರ ಬಗ್ಗೆಯೂ ಹೆಚ್ಚು ಅಟ್ಯಾಚ್ಮೆಂಟ್ ಬೇಡ.

ಮಹಿಳೆಯರೇ ಈ ತಪ್ಪುಗಳನ್ನು ಮಾಡಲೇಬೇಡಿ, ನಿಮ್ಮ ಈ ಅಭ್ಯಾಸಗಳಿಂದ ಮನೆಗೆ ಕಂಠಕ ಬರುತ್ತೆ ಎಚ್ಚರ.!

 

ಒಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವ ಲೋಕೋಕ್ತಿ ಇಡೀ ಜಗತ್ತಿಗೆ ತಿಳಿದಿದೆ. ಹಾಗೆಯೇ ಒಂದು ಕುಟುಂಬದ ಏಳಿಗೆಯು ಆ ಮನೆಯ ಮಹಿಳೆಯರ ಮೇಲೆ ಅವಲಂಬಿಸಿರುತ್ತದೆ. ಮನೆಯಲ್ಲಿ ಹೆಣ್ಣು ಮಕ್ಕಳು ಹೇಗೆ ನಡೆದುಕೊಳ್ಳುತ್ತಾರೆ ಮನೆಯ ಇತರ ಸದಸ್ಯರು ಕೂಡ ಅದೇ ರೀತಿ ವರ್ತಿಸುತ್ತಾರೆ.

ಹಾಗಾಗಿ ನಮ್ಮ ಪುರಾಣ ಕಾಲದಿಂದ ಹಿಡಿದು ಇತಿಹಾಸದವರೆಗೂ ಹೆಣ್ಣು ಮಕ್ಕಳಿಗೆ ಅತ್ಯಂತ ಮಹತ್ವದ ಸ್ಥಾನ ಕೊಡಲಾಗಿದೆ. ಮನೆಯೊಂದರ ಏಳಿಗೆ, ಅಭಿವೃದ್ಧಿ, ಕ’ಷ್ಟ, ದ’ರಿ’ದ್ರ ಎಲ್ಲದಕ್ಕೂ ಕೂಡ ಆ ಮನೆಯ ಹೆಣ್ಣು ಮಕ್ಕಳ ವರ್ತನೆ ಕಾರಣವಾಗಿರುತ್ತದೆ. ಹೆಣ್ಣು ಮಕ್ಕಳು ಮಾಡುವ ಕೆಲವು ಸಣ್ಣ ತಪ್ಪುಗಳಿಂದ ಆ ಮನೆಯ ಅದೃಷ್ಟವೇ ಹಾಳಾಗುತ್ತದೆ.

ತಾಯಿ ಮಹಾಲಕ್ಷ್ಮಿ ಕೃಪೆ ಹೆಣ್ಣು ಮಕ್ಕಳ ಮೇಲೆ ಮತ್ತು ಮನೆಯ ಮೇಲೆ ಇದ್ದರೆ ಸಕಲೈಶ್ವರ್ಯಗಳು ಆ ಕುಟುಂಬಕ್ಕೆ ದೊರಕುತ್ತದೆ. ಹಾಗಾಗಿ ಹೆಣ್ಣು ಮಕ್ಕಳು ಯಾವ ಅಭ್ಯಾಸ ರೂಢಿಸಿಕೊಳ್ಳಬೇಕು ಮತ್ತು ಯಾವ ತಪ್ಪುಗಳನ್ನು ಮಾಡಲೇಬಾರದು ಎನ್ನುವುದರಲ್ಲಿ ಕೆಲ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ.

1. ಪೊರಕೆಯನ್ನು ಲಕ್ಷ್ಮಿ ದೇವಿಯ ವಾಸಸ್ಥಳ ಎಂದು ಹೇಳಲಾಗುತ್ತದೆ. ಪೊರಕೆಯನ್ನು ಕಾಲಿನಿಂದ ಒದೆಯುವುದು, ತುಳಿಯುವುದು ಮಾಡಿದರೆ ಪೊರಕೆಗೆ ಅವಮಾನ ಮಾಡಿದಂತೆ ಇದರಿಂದ ತಾಯಿ ಲಕ್ಷ್ಮಿ ದೇವಿಗೆ ಕೋ’ಪ ಬರುತ್ತದೆ, ಅಂತಹ ಮನೆಯಲ್ಲಿ ಆಕೆಯು ವಾಸಿಸಲಾರರು ಹಾಗಾಗಿ ಈ ತಪ್ಪನ್ನು ಹೆಣ್ಣು ಮಕ್ಕಳು ಮಾಡಬೇಡಿ.

2. ರಾತ್ರಿ ಊಟ ಆದಮೇಲೆ ಒಲೆಯ ಮೇಲೆ ಯಾವುದೇ ಪಾತ್ರೆಯನ್ನು ಇಡಬಾರದು ಅದು ಆಹಾರ ಉಳಿದಿರುವ ಪಾತ್ರೆಯಾಗಿದ್ದರೂ ಕೂಡ ಅದನ್ನು ಇಡಬಾರದು. ರಾತ್ರಿ ಊಟ ಆದಮೇಲೆ ಅನೇಕ ಮಹಿಳೆಯರು ಬೆಳಗಿನಿಂದ ಸುಸ್ತಾಗಿರುವುದರಿಂದ ಅಡುಗೆ ಮನೆಯನ್ನು ಹಾಗೆ ಬಿಟ್ಟು ಬೆಳಿಗ್ಗೆ ಕೆಲಸ ಮಾಡಿಕೊಳ್ಳೋಣ ಎಂದು ಮಲಗುತ್ತಾರೆ.

ಈ ತಪ್ಪುಗಳನ್ನು ಮಾಡಬೇಡಿ ರಾತ್ರಿ ಊಟ ಮಾಡಿದ ಪಾತ್ರೆಗಳನ್ನು ತೊಳೆದು ಇಡಿ ಹಾಗೆ ಅಡುಗೆ ಮಾಡಿದ ಒಲೆಯನ್ನು ಶುದ್ಧಗೊಳಿಸಿ. ಅಡುಗೆ ಮನೆಯನ್ನು ಕ್ಲೀನ್ ಮಾಡಿ ಒಲೆಯಿಂದ ಪಾತ್ರೆಗಳನ್ನು ಕೆಳಗಿಳಿಸಿ ಮಲಗಿ, ಇಲ್ಲವಾದಲ್ಲಿ ಅಡುಗೆ ಮನೆ ಗಲೀಜಾಗಿದ್ದರೆ ತಾಯಿ ಲಕ್ಷ್ಮಿ ದೇವಿಗೆ ಕೋ’ಪ ಬರುತ್ತದೆ ಮತ್ತು ಬ್ರಾಹ್ಮಿ ಮುಹೂರ್ತದಲ್ಲಿ ಸಂಚಾರ ಮಾಡುವ ಲಕ್ಷ್ಮಿ ದೇವಿಯ ಅಡುಗೆ ಮನೆಯನ್ನು ನೋಡುತ್ತಾರೆ ಎನ್ನುವ ನಂಬಿಕೆಯೂ ಇದೆ ಹಾಗಾಗಿ ಈ ಬಗ್ಗೆ ಗಮನವಿರಲಿ.

ಸಾಧ್ಯವಾದರೆ ವಾರಕ್ಕೊಮ್ಮೆ ಸಮುದ್ರದ ಉಪ್ಪಿನಿಂದ ಅಥವಾ ಕಲ್ಲುಪ್ಪಿನಿಂದ ಮನೆಯ ಅಡುಗೆ ಪಾತ್ರೆಗಳನ್ನು ಸ್ವಚ್ಛಗೊಳಿಸಿ ಇದರಿಂದ ಮನೆಯಲ್ಲಿ ಧನಧಾನ್ಯದ ಕೊರತೆ ಉಂಟಾಗುವುದಿಲ್ಲ. ತಾಯಿ ಅನ್ನಪೂರ್ಣೇಶ್ವರಿ ಹಾಗೂ ಮಹಾಲಕ್ಷ್ಮಿ ಆಶೀರ್ವಾದ ಆ ಮನೆಗೆ ಇರುತ್ತದೆ ಎಂದು ಹೇಳಲಾಗುತ್ತದೆ.

3. ಮನೆಯ ಹೊಸ್ತಿಲಲ್ಲಿ ಮಾತೆ ಮಹಾಲಕ್ಷ್ಮಿಯು ನೆಲೆಸಿರುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾಗಿ ಹಿಂದುಗಳು ಹೊಸ್ತಿಲನ್ನು ಪ್ರತಿನಿತ್ಯವೂ ಶುಚಿಗೊಳಿಸಿ, ರಂಗೋಲಿ ಇಟ್ಟು ಅರಿಶಿನ ಕುಂಕುಮ ಹೂವು ಅಕ್ಷತೆ ಹಾಕಿ ಪೂಜೆ ಮಾಡುತ್ತಾರೆ. ಇಷ್ಟು ಪವಿತ್ರವಾದ ಈ ಸ್ಥಳವನ್ನು ತುಳಿಯುವುದು, ಹೊಸ್ತಿಲ ಮೇಲೆ ನಿಲ್ಲುವುದು ಮತ್ತು ಹೊಸ್ತಿಲು ಪೂಜೆ ಮಾಡದೇ ಇರುವುದು‌.

ಮುಸ್ಸಂಜೆ ಸಮಯದಲ್ಲಿ ಬಾಗಿಲನ್ನು ಹಾಕುವುದು ಈ ರೀತಿ ಮಾಡಿದರು ಕೂಡ ತಾಯಿ ಮಹಾಲಕ್ಷ್ಮಿಗೆ ಕೋ’ಪ ಬಂದು ಅಲ್ಲಿಂದ ಹೊರಟು ಬಿಡುತ್ತಾರೆ. ಹಾಗಾಗಿ ಯಾರ ಮನೆಯಲ್ಲಿಯೂ ಇಂತಹ ತಪ್ಪುಗಳನ್ನು ಮಾಡಬೇಡಿ. ಕೆಲವು ಮಹಿಳೆಯರಂತೂ ಹೊಸ್ತಿಲ ಮೇಲೆ ಕುಳಿತು ಅಕ್ಕಪಕ್ಕದ ಮನೆಯವರೊಂದಿಗೆ ಮಾತನಾಡುವುದು, ಹೊಸ್ತಿಲ ಮೇಲೆ ಕುಳಿತು ಹೊರಗೆ ನೋಡಿಕೊಂಡು ಊಟ ಮಾಡುವುದು ಇಂತಹ ಕೆ’ಟ್ಟ ಅಭ್ಯಾಸ ರೂಢಿಸಿಕೊಂಡಿರುತ್ತಾರೆ, ಮೊದಲು ಈ ಅಭ್ಯಾಸವನ್ನು ನಿಲ್ಲಿಸಿ, ಇದು ನಿಮ್ಮ ಮೇಲೆ ಮಾತ್ರವಲ್ಲದೆ ಕುಟುಂಬದ ಸದಸ್ಯರೆಲ್ಲರ ಮೇಲೆ ಕೆ’ಟ್ಟ ಪರಿಣಾಮ ಬೀರುತ್ತದೆ.

4. ಹೆಣ್ಣು ಮಕ್ಕಳು ಸೂರ್ಯೋದಯವಾದ ನಂತರವೂ ಮಲಗಿರುವುದು ಮತ್ತು ಸೂರ್ಯಾಸ್ತದ ಸಮಯದಲ್ಲಿ ಮಲಗುವುದು ಆ ಮನೆಗೆ ಶ್ರೇಯಸ್ಕರವಲ್ಲ. ಯಾವ ಮನೆ ಹೆಣ್ಣು ಮಕ್ಕಳು ಸೂರ್ಯೋದಯಕ್ಕೂ ಮುಂಚೆ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿ ಪೂಜೆ ಮಾಡುತ್ತಾರೆ ಅಂತ ಮನೆಗೆ ತಾಯಿ ಮಹಾಲಕ್ಷ್ಮಿ ಆಗಮನವಾಗಿ ಆಕೆ ಶಾಶ್ವತವಾಗಿ ನೆಲೆಸುತ್ತಾರೆ ಎಂದು ಹೇಳಲಾಗುತ್ತದೆ, ಇದು ಆರೋಗ್ಯದ ದೃಷ್ಟಿಯಿಂದಲೂ ಕೂಡ ಬಹಳ ಒಳ್ಳೆಯದು.

* ಈ ಎಲ್ಲಾ ನಿಯಮಗಳು ಹೆಣ್ಣು ಮಕ್ಕಳಿಗೆ ಮಾತ್ರವಲ್ಲದೆ ಗಂಡು ಮಕ್ಕಳಿಗೂ ಅನ್ವಯವಾಗುತ್ತದೆ ಗಂಡು ಮಕ್ಕಳು ಕೂಡ ಇವುಗಳನ್ನು ಪಾಲಿಸಿ

 

ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮವಾಗಿರಲು ಈ ಟಿಪ್ಸ್ ಫಾಲೋ ಮಾಡಿ.!

 

ಇಂದಿನ ಗಡಿಬಿಡಿಯ ಬದುಕಿನಲ್ಲಿ ಬದುಕಿಗೆ ಅತಿ ಮುಖ್ಯವಾದ ಅದೆಷ್ಟೋ ಮೌಲ್ಯಗಳನ್ನು ಕಡೆಗಣಿಸಿ ನಾವು ಮನಸ್ಸಿಗೆ ದೋಚಿದಂತೆ ಬದುಕುತ್ತಿದ್ದೇವೆ. ಇದರಿಂದ ದೇಹದ ಮೇಲೆ ದುಷ್ಪರಿಣಾಮವಾಗುತ್ತಿದೆ ಹಾಗೂ ಮಾನಸಿಕ ಆರೋಗ್ಯವು ಕೆಡುತ್ತಿದೆ, ಇದರಲ್ಲಿ ಸರಿಪಡಿಸಿಕೊಳ್ಳಬಹುದಾದ ಕೆಲವು ಅಂಶಗಳ ಬಗ್ಗೆ ತಿಳಿಸುತ್ತಿದ್ದೇವೆ ಇನ್ನಾದರೂ ಇದರ ಬಗ್ಗೆ ಜಾಗರೂಕರಾಗಲು ಪ್ರಯತ್ನಿಸೋಣ…

* ರಭಸವಾಗಿ ಹರಿಯುತ್ತಿರುವ ನದಿಗಳಲ್ಲಿ ಸ್ನಾನ ಮಾಡಬಾರದು.
* ಯಾವ ಕೆಲಸ ಮಾಡಬೇಕಾದರೂ ಕೂಡ ಎರಡೆರಡು ಬಾರಿ ಯೋಚಿಸಿ ಆ ಕಾರ್ಯವನ್ನು ಮಾಡಬೇಕು. ಅರ್ಧ ಮನಸ್ಸಿನಿಂದ ಯಾವ ಕೆಲಸವನ್ನು ಮಾಡಬೇಡಿ.
* ಹೊಸ ಜಾಗಗಳಲ್ಲಿ ರಾತ್ರಿ ಹೊತ್ತು ಸುತ್ತಾಡಬಾರದು.
* ಮೂಗಿನ ಒಳಗೆ ಬೆರಳು ಹಾಕಿ ಮೇಲಿಂದ ಮೇಲೆ ತಿರುವುತ್ತಿರಬಾರದು.

* ಬೇರೆಯವರು ಊಟ ಮಾಡಿ ಬಿಟ್ಟಿದ್ದನ್ನು ಯಾವುದೇ ಕಾರಣಕ್ಕೂ ತಿನ್ನಬಾರದು.
* ಇತರರ ಬಟ್ಟೆ ಬರೆಗಳನ್ನು ಪಾದರಕ್ಷೆಗಳನ್ನು ಒಡವೆಗಳನ್ನು ನಾವು ಧರಿಸಬಾರದು. ಹಾಗೆ ನಮ್ಮ ಬಟ್ಟೆ, ಒಡವೆ, ಪಾದರಕ್ಷೆ ಮುಂತಾದ ವೈಯಕ್ತಿಕ ಸಾಮಗ್ರಿಗಳನ್ನು ಇತರರಿಗೂ ಕೊಡಬಾರದು.
* ಕುಡಿಯುವ ನೀರಿನ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಯಾವಾಗಲೂ ನೀರನ್ನು ಶೋಧಿಸಿ ಕುಡಿಯಬೇಕು.
* ದೇಹಕ್ಕೆ ಹಾಗೂ ಮನಸ್ಸಿಗೆ ನೋ’ವು ಮಾಡುವ ಕೆಲಸ ಕಾರ್ಯಗಳನ್ನು ಮಾಡಲೇಬಾರದು.

* ಬರಿ ನೆಲದ ಮೇಲೆ ಕುಳಿತುಕೊಳ್ಳುವುದಕ್ಕಾಗಿ, ಮಲಗುವುದಾಗಲಿ ಆರೋಗ್ಯಕ್ಕೆ ಒಳ್ಳೆಯದಲ್ಲ.
* ಹೊಟ್ಟೆ ಹಸಿದಿರುವಾಗ ಹಾಗೂ ಹೊಟ್ಟೆ ತುಂಬಿರುವಾಗ ಶ್ರಮದ ಕೆಲಸವನ್ನು ಮಾಡಬಾರದು, ಹೊಟ್ಟೆ ತುಂಬಿದ ಮೇಲೆ ವ್ಯಾಯಾಮ ಕೂಡ ಮಾಡಬಾರದು
* ಯಾವುದೇ ಕಾರ್ಯ ಮಾಡಬೇಕಾದರೆ ಶಕ್ತಿ ಸಾಮರ್ಥ್ಯ ಅರಿತು ಮಾಡುವುದು ಒಳ್ಳೆಯದು, ತಮ್ಮ ಶಕ್ತಿ ಮೀರಿ ಮಾಡುವ ಯಾವುದೇ ಕೆಲಸಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ

* ದೇಹದಿಂದ ಹೊರ ಹೋಗುವ ವಸ್ತುಗಳಾದ ಮಲ,ಮೂತ್ರ, ವೀರ್ಯ, ಹೆಣ್ಣು ಮಕ್ಕಳ ಮುತ್ತು, ಸೀನು, ಕೆಮ್ಮು, ತೇಗು, ಕಣ್ಣೀರು, ವಾಂತಿ ಇತ್ಯಾದಿಗಳನ್ನು ತಡೆಯಲು ಪ್ರಯತ್ನಿಸಬಾರದು. ಇದರಿಂದ ಆಯಾ ದೇಹ ಭಾಗಗಳು ವಿಕಾರವಾಗಿ ರೋಗಗಳಿಗೆ ಕಾರಣವಾಗುತ್ತದೆ
* ಆದರೆ ಮನಸ್ಸಿನೊಳಗಡೆ ಉಂಟಾಗುವ ಕೆ’ಟ್ಟ ಆಲೋಚನೆಗಳು, ಕಾಮ, ಕ್ರೋಧ, ಮದ, ಮತ್ಸರ, ಲೋಬ, ಮೋಹ ಮುಂತಾದ ಅರಿಷಡ್ವರ್ಗಗಳನ್ನು ಮನಸ್ಸಿನಲ್ಲಿಯೇ ಕಂಟ್ರೋಲ್ ಮಾಡಿ ಉತ್ತಮರಾಗಲು ಪ್ರಯತ್ನಿಸಬೇಕು.

* ಇನ್ನೊಬ್ಬರ ವಸ್ತುವಿಗೆ ಎಂದು ಬಯಸಬಾರದು, ಅದರಲ್ಲೂ ಪರ ಸ್ತ್ರೀಯರ ಮೇಲೆ ವ್ಯಾಮೋಹ ಪಡಲೇಬಾರದು.
* ಕೆ’ಟ್ಟವರ ಸಹವಾಸ ಗೊತ್ತಾದ ಮೇಲು ಮುಂದುವರಿಸಬಾರದು.
* ಸಾಧ್ಯವಾದಷ್ಟು ಒಳ್ಳೆಯ ಯೋಚನೆಗಳಲ್ಲಿ ಒಳ್ಳೆಯ ಕಾರ್ಯಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು.
* ಸ್ವಾರ್ಥ ಬುದ್ಧಿಯನ್ನು ಬಿಟ್ಟುಬಿಡಬೇಕು ಎಲ್ಲರೂ ಚೆನ್ನಾಗಿರಲಿ ಎನ್ನುವ ಮನಸಿರಬೇಕು, ಉಪಕಾರ ಮಾಡಲಾಗದಿದ್ದರೂ ಅಪಕಾರ ಮಾಡಬಾರದು.

* ಧ್ಯಾನ, ಭಕ್ತಿ, ಪೂಜೆ, ಪ್ರಾರ್ಥನೆ, ಅಧ್ಯಯನ, ಮಂತ್ರ ಘೋಷ ಮುಂತಾದ ಕಾರ್ಯಗಳಲ್ಲಿ ಸಾಧ್ಯವಾದಷ್ಟು ಭಾಗಿಯಾಗಿ ಮನಸ್ಸನ್ನು ಸಕಾರಾತ್ಮಕವಾಗಿ ಇಟ್ಟುಕೊಳ್ಳಬೇಕು.
* ಅಡುಗೆ ಮಾಡುವಾಗ ಊಟ ಬಡಿಸುವಾಗ ಪ್ರೀತಿ ಹಾಗೂ ಒಳ್ಳೆಯ ಭಾವನೆಗಳು ಇರಬೇಕು. ಊಟ ತಿನ್ನುವಾಗಲು ಕೂಡ ಮನಸ್ಸು ಪ್ರಶಾಂತವಾಗಿರಬೇಕು. ಕೋ’ಪ, ಸಿ’ಟ್ಟು, ಆ’ಕ್ರೋ’ಶ, ಕೆಟ್ಟ ಯೋಚನೆಗಳನ್ನು ಇಟ್ಟುಕೊಂಡು ಊಟ ಮಾಡಬಾರದು. ಅಂತಹ ಸಮಯದಲ್ಲಿ ಊಟ ಮಾಡಿದರೆ ಮನಸ್ಸು ಕೂಡ ಅದೇ ರೀತಿ ಆಗುತ್ತದೆ

* ಊಟ ಮಾಡುವಾಗ ನೆಮ್ಮದಿಯಾಗಿ ನಿಧಾನವಾಗಿ ಚೆನ್ನಾಗಿ ಅಗಿದು ಆಹಾರವನ್ನು ಸೇವಿಸಬೇಕು. ನಿಂತುಕೊಂಡು ಅಥವಾ ಅವಸರವಾಗಿ ಊಟ ಮಾಡಬಾರದು.
* ತಾಯಿ ಮಗುವಿಗೆ ಹಾಲು ಕೊಡುವಾಗ ಆಕೆಗೆ ಯಾವುದೇ ದುಃ’ಖ ಇದ್ದರು ಅಥವಾ ರೋ’ಷ ಇದ್ದರೂ ಅಂತಹ ಸಮಯದಲ್ಲಿ ಹಾಲು ಕೊಡಬಾರದು. ಯಾಕೆಂದರೆ ಇದನ್ನು ಸೇವಿಸುವ ಮಗುವಿನ ಮನಸ್ಸಿನ ಮೇಲೆ ಮತ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

* ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಬೇಕು ನಮಗಿಂತ ಚಿಕ್ಕವರರಾಗಿದ್ದರು ಅಥವಾ ಹಿರಿಯರಾಗಿದ್ದರು ಎಲ್ಲಾ ಸ್ತ್ರೀಯರನ್ನು ಗೌರವ ಪ್ರಮುಖವಾಗಿ ಕಾಣಬೇಕು ಅವರ ಮನಸ್ಸಿಗೆ ನೋವುಂಟು ಮಾಡುವ ಅವರಿಂದ ಕಣ್ಣೀರಾಕಿಸುವ ಮಾತುಗಳನ್ನು ಆಡಲೇಬಾರದು.
* ಬಟ್ಟೆಬರೆ ಸ್ವಚ್ಛವಾಗಿಟ್ಟುಕೊಳ್ಳಲು ಮುಖ್ಯ, ಇದರ ಜೊತೆ ಮನಸ್ಸನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಹಾಗೂ ಮನೆಯ ವಾತಾವರಣವನ್ನು ಅಷ್ಟೇ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಕೂಡ ಮುಖ್ಯ.

* ಪ್ರತಿಯೊಬ್ಬರೂ ಕೂಡ ಸಾಧ್ಯವಾದಷ್ಟು ವ್ಯಾಯಾಮಕ್ಕೆ ಸಮಯ ಮೀಸಲಿಡಬೇಕು.
* ಶುದ್ಧವಾದ ಗಾಳಿ, ಸೂರ್ಯನ ಬೆಳಕು, ಬಿಸಿಲು ಇದೆಲ್ಲವೂ ಉಚಿತವಾಗಿಯೇ ಇದೆ ಆದಷ್ಟು ಪ್ರಕೃತಿಯಿಂದ ಸಿಗುವ ಈ ಉತ್ತಮ ಅಂಶಗಳನ್ನು ಪ್ರತಿಯೊಬ್ಬರು ಗ್ರಹಿಸಬೇಕು. ಇದು ದೇಹ ಹಾಗೂ ಮನಸ್ಸಿನ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.
ಪ್ರತಿನಿತ್ಯ ಸ್ನಾನ ಮಾಡಬೇಕು, ಸಂಪೂರ್ಣ ಬೆತ್ತಲೆಯಾಗಿ ಸ್ನಾನವನ್ನು ಮಾಡಬಾರದು, ತಣ್ಣೀರಿನಿಂದ ಸ್ನಾನ ಮಾಡುವುದು ಒಳ್ಳೆಯ ಅಭ್ಯಾಸ.

ಗರ್ಭಿಣಿ, ಬಾಣಂತಿ ಹಾಗೂ ಹೆಣ್ಣು ಮಕ್ಕಳ ಸಮಸ್ಯೆಗಳಿಗೆ ಸುಲಭ ಹೆಲ್ತ್ ಟಿಪ್ಸ್ ಗಳು.!

 

ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳ ಮುಟ್ಟು, ಗರ್ಭಿಣಿಯಾದ ಸಮಯ ಹಾಗೂ ಬಾಣಂತನ ಬಹಳ ಸೂಕ್ಷ್ಮವಾದ ದಿನಗಳು. ಆ ಸಮಯದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಅವರ ದೇಹದಲ್ಲಿ ಹಲವಾರು ವ್ಯತ್ಯಾಸಗಳು ಆಗುತ್ತಿರುತ್ತವೆ. ಈ ಸಮಯದಲ್ಲಿ ಕೆಲವು ಮನೆಮದ್ದುಗಳ ಮೂಲಕ ಅವರ ಆರೋಗ್ಯದ ವ್ಯತ್ಯಾಸಗಳನ್ನು ಸರಿಪಡಿಸಬಹುದು ಅದಕ್ಕೆ ಉಪಯುಕ್ತವಾಗುವ ಟಿಪ್ ಗಳು ಹೀಗಿವೆ…

* ಮುಟ್ಟಿನ ದಿನಗಳಲ್ಲಿ ದಿನಕ್ಕೆ ಮೂರು ಬಾರಿ ನಿಂಬೆಹಣ್ಣಿನ ರಸ ಸೇವಿಸಿದರೆ ಹೆಚ್ಚು ಋತುಸ್ತ್ರಾವವಾಗುವುದಿಲ್ಲ.
* ಗರ್ಭಿಣಿ ಹೆಂಗಸರು ಅತಿ ಹೆಚ್ಚು ಬಾಳೆಹಣ್ಣನ್ನು ಸೇವಿಸಿದರೆ ಒಳ್ಳೆಯದು ಇದರಿಂದ ರಕ್ತಪುಷ್ಟಿಯಾಗುತ್ತದೆ ಹಾಗೂ ಹೆರಿಗೆ ಸರಾಗವಾಗಿ ಆಗುತ್ತದೆ.

* ಗರ್ಭಿಣಿ ಸ್ತ್ರೀಯರಿಗೆ ಬರುವ ಅನೇಕ ಸಮಸ್ಯೆಗಳಲ್ಲಿ ಉರಿಮೂತ್ರ ಸಮಸ್ಯೆ ಕೂಡ ಒಂದು. ಬಾರ್ಲಿ ನೀರು ಹಾಗೂ ಎಳನೀರನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ಇದು ಪರಿಹಾರವಾಗುತ್ತದೆ.
* ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಬೆನ್ನಿಗೆ ಚೆನ್ನಾಗಿ ಮಸಾಜ್ ಮಾಡಿ ಬಿಸಿನೀರು ಸ್ನಾನ ಮಾಡಿದರೆ ಬೆನ್ನು ನೋವು ಗುಣವಾಗುತ್ತದೆ.

* ಕಿತ್ತಳೆ ಹಣ್ಣಿನ ರಸವನ್ನು ಗರ್ಭಿಣಿಯರು ಸೇವಿಸುವುದರಿಂದ ಹೆರಿಗೆ ಸರಾಗವಾಗಿ ಆಗುತ್ತದೆ.
* ಮುಟ್ಟಿನ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗುತ್ತಿದ್ದರೆ ದಂಟಿನ ಸೊಪ್ಪಿನ ಆಹಾರ ಪದಾರ್ಥಗಳನ್ನು ಸೇವಿಸಿ ಇದರಿಂದ ಸಮಸ್ಯೆ ಪರಿಹಾರವಾಗುತ್ತದೆ.
* ಹಾಲು ತುಂಬಿದ ರಾಗಿ ತೆನೆಗಳನ್ನು ಬಿಸಿ ಮಾಡಿ ಉಜ್ಜಿ ಕಾಳುಗಳನ್ನು ಉದುರಿಸಿ ಕೊಬ್ಬರಿ ಹಾಗೂ ಬೆಲ್ಲದ ಜೊತೆ ಮಿಕ್ಸ್ ಮಾಡಿ ಸೇವಿಸುತ್ತಾ ಬಂದರೆ ಬಾಣಂತಿಯರಿಗೆ ಎದೆ ಹಾಲು ಹೆಚ್ಚುತ್ತದೆ.

* ಅವಿವಾಹಿತ ಹೆಣ್ಣು ಮಕ್ಕಳಿಗೆ ಹೆಚ್ಚು ಹೊಟ್ಟೆ ನೋವು ಮುಟ್ಟಿನ ಸಮಯದಲ್ಲಿ ಬರುತ್ತಿದ್ದರೆ ಕರಿ ಎಳ್ಳಿನ ಪುಡಿಯನ್ನು ಬಿಸಿ ನೀರಿನ ಜೊತೆ ಮಿಕ್ಸ್ ಮಾಡಿ ಕುಡಿಯಬೇಕು.
* ಹೆರಿಗೆ ನಂತರ ಸಬ್ಬಸಿಗೆ ಸೊಪ್ಪನ್ನು ಹೆಚ್ಚು ಸೇವಿಸುತ್ತಿದ್ದರೆ ಎದೆ ಹಾಲು ಉತ್ಪತ್ತಿ ಆಗುತ್ತದೆ.
* ಹಾಲು, ಜೇನುತುಪ್ಪ ಮತ್ತು ಪರಂಗಿ ಹಣ್ಣನ್ನು ಸೇವಿಸಿದರೆ ನರಗಳ ದುರ್ಬಲತೆ ಹೋಗುತ್ತದೆ. ಗರ್ಭಿಣಿಯರಿಗೆ ಇದು ಅತ್ಯುತ್ತಮ ಆಹಾರ.

* ಹುರುಳಿಕಾಳು ಮೊಳಕೆ ಕಟ್ಟಿ ಸಾರು ಮಾಡಿ ಕೊಡುವುದರಿಂದ ಬಾಣಂತಿಯರಿಗೆ ಗರ್ಭಾಶಯದ ನೋವು ಶಮನವಾಗುತ್ತದೆ.
* ಮುಟ್ಟಿನ ನಂತರ ಗರ್ಭಾಶಯದಲ್ಲಿ ವಿಪರೀತ ನೋವು ಕಾಣಿಸಿಕೊಂಡರೆ, ಬೆಳ್ಳುಳ್ಳಿಯನ್ನು ಒಂದು ಬಟ್ಟಲು ನೀರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ಆ ನೀರನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕುಡಿದರೆ ನೋವು ಶಮನವಾಗುತ್ತದೆ.

* ಒಂದು ಟೀ ಚಮಚ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನುಣ್ಣಗೆ ಅರೆದು ಒಂದು ಬಟ್ಟಲು ಅಕ್ಕಿ ತೊಳೆದ ನೀರಿನಲ್ಲಿ ಕದಡಿ ಕಲ್ಲುಸಕ್ಕರೆ ಬೆರೆಸಿ ಸೇರಿಸುವುದರಿಂದ ಗರ್ಭಿಣಿಯರಿಗೆ ವಾಂತಿ ಕಡಿಮೆ ಆಗುತ್ತದೆ. ದಿನದಲ್ಲಿ ಎರಡರಿಂದ ಮೂರು ಬಾರಿ ಈ ನೀರನ್ನು ಸೇವಿಸಬೇಕು.
* ಮುಟ್ಟಿನ ನಂತರ ಹೊಟ್ಟೆ ನೋವಿದ್ದರೆ ಹಸಿ ಶುಂಠಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರು ಆರಿದ ಮೇಲೆ ಅದಕ್ಕೆ ಕಲ್ಲು ಸಕ್ಕರೆ ಅಥವಾ ಸಕ್ಕರೆ ಬೆರೆಸಿ ಪ್ರತಿ ಬಾರಿ ಊಟ ಆದನಂತರ ಮೂರು ಹೊತ್ತು ಕೂಡ ಕುಡಿಯಬೇಕು ಆಗ ಹೊಟ್ಟೆ ನೋವು ಕಡಿಮೆ ಆಗುತ್ತದೆ.

* ಹೊಟ್ಟೆ ನೋವಿಗೆ ಎಳ್ಳಿನ ಪುಡಿ ಸೇವಿಸುವುದು ಒಳ್ಳೆಯದು ಹಾಗೆ ಕೆಲವರಿಗೆ ಈ ಸಮಯದಲ್ಲಿ ಸೊಂಟ ನೋವು ಬೆನ್ನು ನೋವು ಕಾಣಿಸಿಕೊಳ್ಳುತ್ತದೆ ಅವರು ಕೂಡ ಎಳ್ಳನ್ನು ನೀರಿನಲ್ಲಿ ಬಿಸಿ ಮಾಡಿ ಆ ನಿರಿನಿಂದ ಮಸಾಜ್ ಮಾಡಿಸಿಕೊಳ್ಳಬೇಕು.

* ಆ’ತಂ’ಕ, ಭ’ಯ ಇತ್ಯಾದಿ ಕಾರಣಗಳಿಂದ ಮುಟ್ಟು ನಿಂತು ಹೋಗಿದ್ದರೆ ಅಥವಾ ಅಸಹಜವಾಗಿದ್ದರೆ ಪರಂಗಿ ಹಣ್ಣಿನ ಸೇವನೆ ಉತ್ತಮ, ಇದು ಗರ್ಭಕೋಶವನ್ನು ಸಂಕೋಚನಗೊಳ್ಳುವಂತೆ ಮಾಡಿ ಮುಟ್ಟಿನ ಹರಿವು ಸರಿಯಾಗಿ ಆಗಲು ಸಹಾಯ ಮಾಡುತ್ತದೆ.
* ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಬೆಚ್ಚಗಾದ ಮೇಲೆ ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ಮುಟ್ಟಿನ ಸಮಯದಲ್ಲಿ ಆಗುವ ಅಧಿಕ ರಕ್ತಸ್ರಾವ ನಿಯಂತ್ರಣಕ್ಕೆ ಬರುತ್ತದೆ.