Home Blog Page 16

ಮನೆಯ ಒಟ್ಟು ಬಾಗಿಲುಗಳ ಸಂಖ್ಯೆ ಎಷ್ಟಿರಬೇಕು.? ಎಷ್ಟಿದ್ದರೆ ಉತ್ತಮ ನೋಡಿ.!

 

ಈ ದಿನ ನಾವು ಮನೆಗೆ ಒಟ್ಟು ಎಷ್ಟು ಬಾಗಿಲುಗಳು ಇರಬೇಕು, ವಾಸ್ತು ಶಾಸ್ತ್ರದ ಪ್ರಕಾರ ಯಾವುದು ನಿಜವಾಗಿ ಬಾಗಿಲು ಎನ್ನಿಸಿಕೊಳ್ಳುತ್ತದೆ. ಯಾವುದು ಬಾಗಿಲು ಅಲ್ಲ. ಇತ್ಯಾದಿ ವಿಷಯಗಳನ್ನು ತಿಳಿದು ಕೊಳ್ಳೋಣ. ಮನೆಯ ಒಟ್ಟು ಬಾಗಿಲುಗಳ ಸಂಖ್ಯೆ ಸಮ ಸಂಖ್ಯೆಯಲ್ಲಿ ಇರಬೇಕು. ಅಂದರೆ 2, 4, 6, 8, 12, 14, 16, 18 ಹೀಗೆ ಇರಬೇಕು 10, 20, 30 ಹೀಗೆ ಸೊನ್ನೆಯಿಂದ ಕೂಡಿದ ಸಮ ಸಂಖ್ಯೆಗಳು ಇರಬಾರದು.

ಮನೆಯ ಮುಖ್ಯ ಬಾಗಿಲು ಎಲ್ಲಕ್ಕಿಂತ ದೊಡ್ಡದಾಗಿದ್ದರೆ ಒಳ್ಳೆಯದು. ಬಾಗಿಲ ಪದಕದ ಮೇಲೆ ದೇವರು ಚಿತ್ರಗಳನ್ನು ಕೆತ್ತಿಸುವುದು ಒಳ್ಳೆಯ ದಲ್ಲ. ಮತ್ತು ಕೇವಲ ಚೌಕಟ್ಟು ಕಮಾನು ಇದ್ದರೆ ಅವುಗಳನ್ನು ಬಾಗಿಲು ಎಂದು ಪರಿಗಣಿಸಲಾಗುವುದಿಲ್ಲ. ಕದವನ್ನು ಮುಚ್ಚುವುದು ತೆಗೆಯು ವುದು ಮಾಡಿದಾಗ ಅದು ನಿಜವಾದ ಬಾಗಿಲು ಎನಿಸಿ ಕೊಳ್ಳುವುದು.

ಈ ಸುದ್ದಿ ಓದಿ:- 21 ದಿನ 7 ನಿಮಿಷ ಹೀಗೆ ಮಾಡಿ ಪ್ರೀತಿ, ಜ್ಞಾನ, ಉದ್ಯೋಗ, ಹಣ, ಗೌರವ ನೀವು ಅಂದುಕೊಂಡಂತೆ ನಿಮ್ಮ ಇಷ್ಟದಂತೆ ಸ್ವಂತ ಆಗುತ್ತೆ.!

ಮತ್ತು ಈಗಿನ ಆಧುನಿಕ ಯುಗದಲ್ಲಿನ ಪ್ಲಾಸ್ಟಿಕ್ ಚೌಕಟ್ಟು ಮತ್ತು ಕದದಿಂದ ಕೂಡಿದ ಬಾಗಿಲುಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ಬಾಗಿಲು ಎಂದು ಪರಿಗಣಿಸಲಾಗುವುದಿಲ್ಲ. ಮನೆಯಲ್ಲಿ ಮುಖ್ಯ ಬಾಗಿಲಿನಿಂದ ನೇರವಾಗಿ ಮೂರು ಬಾಗಿಲು ಇಡಬಾರದು. ಒಂದು ಮನೆಗೆ ಮೂರು ದಿಕ್ಕುಗಳಲ್ಲಿ ಮೂರು ಹೊರಬಾಗಿಲುಗಳನ್ನು ಇಡಬಾರದು.

ಯಾವ ಸಂದರ್ಭದಲ್ಲಿಯೂ ನೈರುತ್ಯ ದಿಕ್ಕಿನ ಕಡೆಗೆ ಮುಂಬಾಗಿಲು ಅಥವಾ ಕಾಂಪೌಂಡ್‌ ಬಾಗಿಲು ಬರಬಾರದು. ಇನ್ನು ವಾಸ್ತುಶಾಸ್ತ್ರದ ಪ್ರಕಾರ ಬೆಸ ಸಂಖ್ಯೆಯಲ್ಲಿ ಬಾಗಿಲುಗಳಿದ್ದರೆ ಈ ಕೆಳಗಿನಂತೆ ಅಶುಭ ಫಲಗಳು ಉಂಟಾಗುತ್ತವೆ ಎಂದು ಹೇಳಲಾಗಿದೆ. ಮನೆಗೆ ಒಂದೇ ಬಾಗಿಲಿದ್ದರೆ ಸದಾ ದುಡಿಮೆ ಬೇಸರ.

ಈ ಸುದ್ದಿ ಓದಿ:- ನಿಮ್ಮ ಮನೆಯಲ್ಲಿ ಹಣ ಯಾವಾಗಲೂ ಇರಬೇಕು ಅಂದರೆ ಈ ನಿಯಮಗಳನ್ನು ಪಾಲಿಸಿ.!

ಮೂರು ಬಾಗಿಲುಗಳಿದ್ದರೆ ಶತ್ರುಭಯ ಅನಿಷ್ಟ ಹಾಗೂ ತೊಂದರೆಗಳು ಉಂಟಾಗುವವು. ಮನೆಗೆ 5 ಬಾಗಿಲುಗಳಿದ್ದರೆ ಚಿಂತೆ ಗಡಿಬಿಡಿಯ ಜೀವನ. ಮನೆಗೆ ಏಳು ಬಾಗಿಲುಗಳಿದ್ದರೆ ಸದಾ ಜಗಳ ಮಾನಸಿಕ ನೆಮ್ಮದಿ ಇಲ್ಲದಿರುವುದು. ಮನೆಗೆ 9 ಬಾಗಿಲುಗಳಿದ್ದರೆ ವ್ಯವಹಾರದಲ್ಲಿ ಹಾನಿ ಅನಾರೋಗ್ಯ.

ಮನೆಗೆ 11 ಬಾಗಿಲುಗಳಿದ್ದರೆ ಆಗಾಗ ವ್ಯಾಜ್ಯ ವ್ಯಾಪಾರದಲ್ಲಿ ನಷ್ಟ ಹಾಗೂ ಕಂಟಕಗಳು. ಮನೆಗೆ 13 ಬಾಗಿಲುಗಳಿದ್ದರ ಸದಾ ಕಿರಿಕಿರಿ ಜಗಳ ಅನಾರೋಗ್ಯ ಅಪಘಾತಗಳಾಗುವ ಸಂಭವ. ಮನೆಗೆ 15 ಬಾಗಿಲು ಗಳಿದ್ದರೆ ವ್ಯವಹಾರದಲ್ಲಿ ಹಾನಿ ಸೋಲು ಬದುಕಿನಲ್ಲಿ ನೆಮ್ಮದಿ ಇಲ್ಲದಿರು ವುದು. ಹೀಗೆ ಒಂದೊಂದು ಸಂಖ್ಯೆಯಲ್ಲಿರುವಂತಹ ಬಾಗಿಲುಗಳು ಕೂಡ ಒಂದೊಂದು ರೀತಿಯ ಶುಭಫಲಗಳನ್ನು ಹಾಗೂ ಕೆಲವೊಮ್ಮೆ ಅಶುಭ ಫಲಗಳನ್ನು ಕೊಡುತ್ತದೆ.

ಈ ಸುದ್ದಿ ಓದಿ:- ಈ ದಿನಾಂಕದಲ್ಲಿ ಮದುವೆಯಾದರೆ ಕಷ್ಟ ತಪ್ಪಿದ್ದಲ್ಲ.

ಆದ್ದರಿಂದ ಮನೆ ಕಟ್ಟುವಂತಹ ಸಂದರ್ಭದಲ್ಲಿ ವಾಸ್ತು ನಿಯಮಕ್ಕೆ ಅನುಗುಣವಾಗಿ ಮನೆಯನ್ನು ನಿರ್ಮಾಣ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ನಾವು ಜೀವನಪರ್ಯಂತ ಮನೆಯಲ್ಲಿ ಇರುವುದರಿಂದ ನಾವು ಆ ಮನೆಯಲ್ಲಿ ನೆಮ್ಮದಿಯ ಜೀವನವನ್ನು ನಡೆಸುವುದು ಬಹಳ ಮುಖ್ಯವಾಗಿರುತ್ತದೆ.

ಆದ್ದರಿಂದ ಮನೆಯನ್ನು ಕಟ್ಟಿಸುವಂತಹ ಸಂದರ್ಭ ದಲ್ಲಿ ಬಹಳಷ್ಟು ವಾಸ್ತು ಶಾಸ್ತ್ರದ ನಿಯಮಗಳನ್ನು ತಿಳಿದುಕೊಂಡು ಹಾಗೂ ಇದರ ಬಗ್ಗೆ ತಿಳಿದಿರುವವರ ಬಳಿ ಮಾಹಿತಿಗಳನ್ನು ತಿಳಿದು ಅದರಂತೆ ಮನೆಯನ್ನು ನಿರ್ಮಾಣ ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಪ್ರತಿಯೊಬ್ಬರ ಮನೆಯು ಅವರ ಅಭಿವೃದ್ಧಿ ಏಳಿಗೆ ಅವರ ಹಣಕಾಸಿನ ವಿಷಯಗಳು ಅವರ ವ್ಯಾಪಾರ ವ್ಯವಹಾರಗಳು ಮನೆ ಯಲ್ಲಿನ ಒಳ್ಳೆಯ ಸಂತೋಷದ ಸಮಯಗಳು ದುಃಖದ ಸಮಯಗಳು ಎಲ್ಲವೂ ಕೂಡ ಅದಕ್ಕೆ ಸಂಬಂಧಿಸಿರುತ್ತದೆ. ಆದ್ದರಿಂದ ಮನೆಯ ಮುಖ್ಯ ಬಾಗಿಲುಗಳು ಹಾಗೂ ಮನೆಯಲ್ಲಿ ಎಷ್ಟು ಬಾಗಿಲುಗಳಿರಬೇಕು ಯಾವ ದಿಕ್ಕಿನಲ್ಲಿ ಇರಬೇಕು ಹೀಗೆ ಇವೆಲ್ಲವನ್ನೂ ಸಹ ತಿಳಿದು ಕೊಂಡು ಸರಿಯಾದ ರೀತಿಯಲ್ಲಿ ಮಾಡಿಸುವುದು ತುಂಬಾ ಒಳ್ಳೆಯದು.

21 ದಿನ 7 ನಿಮಿಷ ಹೀಗೆ ಮಾಡಿ ಪ್ರೀತಿ, ಜ್ಞಾನ, ಉದ್ಯೋಗ, ಹಣ, ಗೌರವ ನೀವು ಅಂದುಕೊಂಡಂತೆ ನಿಮ್ಮ ಇಷ್ಟದಂತೆ ಸ್ವಂತ ಆಗುತ್ತೆ.!

ಮನುಷ್ಯ ಎಂದ ಮೇಲೆ ಅವನಿಗೆ ಕಷ್ಟಗಳು ಸುಖಗಳು ಪ್ರತಿಯೊಂದು ಕೂಡ ಸಮನಾಗಿ ಬರುತ್ತಿರುತ್ತದೆ. ಒಬ್ಬರಿಗೆ ಬರಿ ಕಷ್ಟ ಇರುವಂತದ್ದು ಒಬ್ಬರಿಗೆ ಬರಿ ಸುಖ ಇರುವಂತದ್ದು ಇಲ್ಲ ಪ್ರತಿಯೊಬ್ಬ ಮನುಷ್ಯನಿಗೂ ಪ್ರಾಣಿ ಪಕ್ಷಿಗಳಿರಬಹುದು ಪ್ರತಿಯೊಂದಕ್ಕೂ ಕೂಡ ಎಲ್ಲಾ ರೀತಿಯ ಪರಿಸ್ಥಿತಿಗಳು ಕೂಡ ಇರುತ್ತದೆ.

ಅದರಲ್ಲೂ ಬಹಳ ಮುಖ್ಯವಾಗಿ ಮನುಷ್ಯ ಪ್ರಾಣಿಗೆ ಕಷ್ಟ ಸುಖದ ಜೊತೆ ಪ್ರೀತಿ ವಿಶ್ವಾಸ ಆರೋಗ್ಯ ಇವು ಗಳ ಬಗ್ಗೆ ಬಹಳ ಪ್ರಮುಖವಾದಂತಹ ಕಾಳಜಿ ಇದೆ. ಹೌದು ಪ್ರತಿಯೊಬ್ಬ ಮನುಷ್ಯನು ಕೂಡ ತನ್ನ ಸುತ್ತಮುತ್ತ ಇರುವಂತಹ ಜನರೊಂದಿಗೆ ಬಹಳ ಪ್ರೀತಿ ವಿಶ್ವಾಸದಿಂದ ಇದ್ದಿದ್ದೆ ಆದರೆ ಪ್ರತಿಯೊಂದರಲ್ಲಿಯೂ ಕೂಡ ಅವನು ಯಶಸ್ಸು ಸಾಧಿಸಿದ ಹಾಗೆಯೇ.

ಈ ಸುದ್ದಿ ಓದಿ:- ಈ 5 ರಾಶಿಯವರು ಮುಂದಿನ ವರ್ಷದೊಳಗೆ ಸ್ವಂತ ಮನೆ ಮಾಡಿಯೇ ತೀರುತ್ತಾರೆ.!

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಮನುಷ್ಯನಾದವನು ತನ್ನ ಜೀವನದಲ್ಲಿ ಹೆಚ್ಚಿನ ಹಣಕಾಸಿನ ಸಂಪಾದನೆ ಮಾಡಬೇಕು ಎಂದರೆ ತನ್ನ ವಿದ್ಯಾಭ್ಯಾಸದಲ್ಲಿ ಅಭಿವೃದ್ಧಿಯನ್ನು ಹೊಂದಬೇಕು ಎಂದರೆ ಹಾಗೂ ಎಲ್ಲಾ ರೀತಿಯ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದರೆ.

ಈಗ ನಾವು ಹೇಳುವಂತಹ ಈ ಒಂದು ಕೆಲಸವನ್ನು ಮಾಡಿದರೆ ಸಾಕು ಇವೆಲ್ಲವೂ ಕೂಡ ನಿಮ್ಮ ಸ್ವಂತ ಆಗುತ್ತದೆ ನೀವು ಅಂದುಕೊಂಡಂತಹ ಎಲ್ಲಾ ಕನಸುಗಳು ಕೂಡ ಈಡೇರಿಸಿ ಕೊಳ್ಳುವ ಸನ್ನಿವೇಶಗಳು ನಿಮಗೆ ಉಂಟಾಗುತ್ತದೆ. ಹಾಗಾದರೆ ಈ ದಿನ ಮನುಷ್ಯನಾದವನು ಯಾವ ರೀತಿಯ ಕೆಲವು ಕೆಲಸಗಳನ್ನು ಮಾಡಬೇಕು ಹಾಗೂ ಯಾವ ಕೆಲವು ವಿಧಾನಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ.

ಈ ಸುದ್ದಿ ಓದಿ:- ಈ ದಿನಾಂಕದಲ್ಲಿ ಮದುವೆಯಾದರೆ ಕಷ್ಟ ತಪ್ಪಿದ್ದಲ್ಲ.

ಇವೆಲ್ಲದರಲ್ಲಿಯೂ ಕೂಡ ಪ್ರತಿಯೊಬ್ಬ ಮನುಷ್ಯನು ಯಶಸ್ಸನ್ನು ಪಡೆದುಕೊಳ್ಳಬೇಕು ಎಂದರೆ ಮನುಷ್ಯ ತನ್ನ ದೇಹದಲ್ಲಿ ಇರುವಂತಹ ಚಕ್ರಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ಇತ್ತೀಚಿಗೆ ಇದರ ಬಗ್ಗೆ ಹೆಚ್ಚಿನ ಜನ ಇದರ ಬಗ್ಗೆ ಮಾಹಿತಿಯನ್ನು ತಿಳಿಸುತ್ತಿದ್ದಾರೆ. ಆದರೆ ಹೆಚ್ಚಿನ ಜನಕ್ಕೆ ಇದರ ಬಗ್ಗೆ ಸ್ವಲ್ಪವೂ ಕೂಡ ಮಾಹಿತಿ ತಿಳಿದಿಲ್ಲ.

ಹಾಗಾದರೆ ಈಗ ನಮ್ಮ ದೇಹದಲ್ಲಿರುವಂತಹ ಚಕ್ರಗಳ ಬಗ್ಗೆ ಹೇಗೆ ತಿಳಿದುಕೊಳ್ಳುವುದು ಎಂದು ನೋಡುವುದಾದರೆ ಪ್ರತಿಯೊಂದು ಸಂದರ್ಭದಲ್ಲೂ ಕೂಡ ಕೆಲವೊಂದು ಸನ್ನಿವೇಶಗಳು ಬರುತ್ತದೆ. ಅದನ್ನು ನಾವು ಹೇಗೆ ಸರಿಯಾದ ರೀತಿಯಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು.

ಈ ಸುದ್ದಿ ಓದಿ:- ಯಾವ ರಾಶಿಯವರು ಯಾವ ವಯಸ್ಸಿನಲ್ಲಿ ಶ್ರೀಮಂತರು ಆಗುತ್ತಾರೆ ನೋಡಿ.!

ನಾವು ಯಾವ ರೀತಿಯ ತೀರ್ಮಾನವನ್ನು ತೆಗೆದುಕೊಂಡರೆ ಅದು ನಮಗೆ ಒಳ್ಳೆಯದಾಗುತ್ತದೆ ಎನ್ನುವುದನ್ನು ನಾವೇ ನಮ್ಮ ಸ್ವಂತ ನಿರ್ಧಾರದ ಮೂಲಕ ಪರಿಹಾರ ವನ್ನು ಕಂಡುಕೊಳ್ಳುತ್ತಿರುತ್ತೇವೆ. ಇದೆ ನಮ್ಮ ದೇಹದಲ್ಲಿ ಇರುವಂತಹ ಚಕ್ರದ ಒಂದು ಪ್ರಮುಖವಾ ದಂತಹ ಪಾತ್ರ ಎಂದೇ ಹೇಳಬಹುದು.

ಅಂದರೆ ನಾವು ಯಾವುದೇ ರೀತಿಯ ಸಂದರ್ಭದಲ್ಲಿಯೂ ಕೂಡ ಏನನ್ನೇ ತೀರ್ಮಾನ ತೆಗೆದುಕೊಳ್ಳು ತ್ತಿದ್ದರೆ ಅದರ ಬಗ್ಗೆ ನಮ್ಮ ಮನಸ್ಸಿನಲ್ಲಿ ಆಲೋಚನೆಯನ್ನು ಮಾಡುವು ದರ ಮೂಲಕ ನಾನು ಯಾವ ನಿರ್ಧಾರವನ್ನು ತೆಗೆದುಕೊಂಡರೆ ಅದು ನನಗೆ ಉತ್ತಮವಾಗುತ್ತದೆ ಯಾವ ನಿರ್ಧಾರ ತೆಗೆದುಕೊಂಡರೆ ಅದು ನನಗೆ ಕೆಟ್ಟದಾಗಿ ಪರಿಣಾಮ ಬೀರುತ್ತದೆ ಎನ್ನುವುದನ್ನು ನಮ್ಮ ಮನಸ್ಸಿ ನಲ್ಲಿ ಯೋಚನೆ ಮಾಡುವುದರ ಮೂಲಕ ಆಲೋಚನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳುವುದೇ ಚಕ್ರ ಜಾಗೃತಿ ಕಾರ್ಯಕ್ರಮ ಎಂದು ಹೇಳುತ್ತಾರೆ.

ಈ ಸುದ್ದಿ ಓದಿ:- ದಾಂಪತ್ಯದ ಗುಟ್ಟು ಬಿಚ್ಚಿಡುತ್ತೆ ನಿಮ್ಮ ಮದುವೆ ದಿನಾಂಕ.!

ಆದ್ದರಿಂದ ಇದರ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಇದರಿಂದ ನಮ್ಮ ಜೀವನದಲ್ಲಿ ಉತ್ತಮವಾದಂತಹ ಒಳ್ಳೆಯ ಸ್ಥಾನವನ್ನು ಒಳ್ಳೆಯ ಹೆಸರನ್ನು ಒಳ್ಳೆಯ ಹಣಕಾಸನ್ನು ಪ್ರತಿಯೊಂದನ್ನು ಕೂಡ ಪಡೆದುಕೊಳ್ಳು ವುದಕ್ಕೆ ಸಾಧ್ಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕೈಯಲ್ಲಿ ದೇವರ ಉಂಗುರವನ್ನು ಧರಿಸಿ ಮಾಂಸಹಾರ ತಿನ್ನಬಹುದಾ ? ಮಹಿಳೆಯರು ಎಷ್ಟು ಬಳೆಗಳನ್ನು ಧರಿಸಿದರೆ ತುಂಬಾ ಒಳ್ಳೆಯದು. ಸಂಪೂರ್ಣ ಮಾಹಿತಿ.!

 

ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನ ತಮ್ಮ ಕೈ ಬೆರಳಿಗೆ ಗಣಪತಿಯ ಉಂಗುರ ವೆಂಕಟೇಶ್ವರನ ಉಂಗುರ ಗಣಪತಿಯ ಚಿತ್ರ ಇರುವಂತಹ ಉಂಗುರಗಳನ್ನು ಧರಿಸಿಕೊಳ್ಳುತ್ತಿರುತ್ತಾರೆ. ಇಂತಹ ಒಂದು ಸಂದರ್ಭ ದಲ್ಲಿ ಅವರು ಮಾಂಸಹಾರ ಸೇವನೆ ಮಾಡಬಹುದಾ ಎನ್ನುವಂತಹ ಪ್ರಶ್ನೆ ಹಲವಾರು ಜನರಲ್ಲಿ ಇದೆ. ಹಾಗಾದರೆ ಈ ದಿನ ಈ ಒಂದು ಪ್ರಶ್ನೆಗೆ ಸಂಬಂಧಿಸಿದಂತೆ ಉತ್ತರವನ್ನು ತಿಳಿದು ಕೊಳ್ಳೋಣ ಅದೇ ರೀತಿಯಾಗಿ

* ಮಹಿಳೆಯರು ತಮ್ಮ ತಾಳಿಸರದಲ್ಲಿ ಲಕ್ಷ್ಮಿ ಕಾಸನ್ನು ಹಾಕಿಕೊಂಡು ಮಾಂಸಹಾರಿ ಸೇವನೆ ಮಾಡಬಹುದಾ ಹಾಗೂ ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ಯಾವ ಉಂಗುರಗಳನ್ನು ಅಂದರೆ ದೇವರ ಫೋಟೋ ಇರುವಂತಹ ವಿಗ್ರಹಗಳನ್ನು ಧರಿಸಿಕೊಳ್ಳಬಾರದು ಹಾಗೂ ಧರಿಸಿಕೊಂಡರೆ ಏನೆಲ್ಲ ತೊಂದರೆಗಳು ಕಾಣಿಸಿಕೊಳ್ಳುತ್ತದೆ.

ಈ ಸುದ್ದಿ ಓದಿ:-ಆಸ್ತಿ ವಿಭಾಗದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡದಿದ್ದರೆ ಏನಾಗುತ್ತೆ ಗೊತ್ತ.?

ಜೊತೆಗೆ ಮಹಿಳೆಯರು ತಮ್ಮ ಕೈಯಲ್ಲಿ ಎಷ್ಟು ಬಳೆಗಳನ್ನು ಹಾಕಿಕೊಳ್ಳು ವುದರಿಂದ ತಾಯಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು ಹೀಗೆ ಇನ್ನೂ ಹಲವಾರು ವಿಷಯವಾಗಿ ಸಂಬಂಧಿಸಿದ ಬಹಳಷ್ಟು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿಯೋಣ.

* ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಎನ್ನುವ ಹೆಸರಿನಿಂದ ಹಲವಾರು ರೀತಿಯ ಉಂಗುರಗಳನ್ನು ಉದ್ದರಿಸಿಕೊಳ್ಳುತ್ತಿರುತ್ತಾರೆ. ಅವುಗಳನ್ನು ಧರಿಸಿಕೊಳ್ಳುವುದರ ಬದಲು ಮೇಲೆ ಹೇಳಿದಂತೆ ದೇವರ ವಿಗ್ರಹವಿರು ವಂತಹ ಉಂಗುರಗಳನ್ನು ಧರಿಸಿಕೊಳ್ಳುವುದು ಉತ್ತಮ ಇದರಿಂದ ಭಗವಂತನ ಅನುಗ್ರಹ ಎನ್ನುವುದು ಸಿಗುತ್ತದೆ.

ಈ ಸುದ್ದಿ ಓದಿ:-ನಮ್ಮ ವಯಸ್ಸು 25 ಆದ ಬಳಿಕ ಈ ನಿಯಮ ಪಾಲಿಸಬೇಕು.!

ಅದೇ ರೀತಿಯಾಗಿ ಕೆಲವೊಂದಷ್ಟು ಜನ ಇಂತಹ ಉಂಗುರಗಳನ್ನು ಮಾಡಿಸಿಕೊಂಡು ತಂದ ತಕ್ಷಣವೇ ಅದನ್ನು ಕೈಗೆ ಧರಿಸಿಕೊಳ್ಳುತ್ತಿರುತ್ತಾರೆ. ಆದರೆ ಯಾವುದೇ ಕಾರಣಕ್ಕೂ ತಂದ ತಕ್ಷಣ ಉಂಗುರವನ್ನು ಧರಿಸಿಕೊಳ್ಳಬಾರದು. ಅದನ್ನು ಶುದ್ಧೀಕರಣ ಮಾಡಿ ಧರಿಸಬೇಕು. ಶುದ್ಧೀಕರಣ ಹೇಗೆ ಮಾಡುವುದು ಎಂದರೆ.

ಅರಿಶಿಣದ ನೀರಿನಲ್ಲಿ ಸ್ವಲ್ಪ ತುಳಸಿ ದಳವನ್ನು ಹಾಕಿ ಅದರಿಂದ ಚಿನ್ನದ ಉಂಗುರಗಳನ್ನು ತೊಳೆಯಬೇಕು ತದನಂತರ ಹಾಲಿನಲ್ಲಿಯೂ ಸಹ ಉಂಗುರ ತೊಳೆಯಬೇಕು ಏಕೆಂದರೆ ಹಾಲಿನಲ್ಲಿ ತಾಯಿ ಲಕ್ಷ್ಮಿ ದೇವಿ ವಾಸ ಇರುತ್ತಾಳೆ ಆದ್ದರಿಂದ ಇದರಿಂದ ತೊಳೆಯುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:-ಮೂರ್ಖ ಪುರುಷರ ಲಕ್ಷಣಗಳು.!

ತದನಂತರ ಶುದ್ಧವಾದ ನೀರಿನಿಂದ ತೊಳೆದು ನಿಮ್ಮ ಹತ್ತಿರ ಇರುವಂತಹ ಯಾವುದಾದರೂ ದೇವಸ್ಥಾನಕ್ಕೆ ಹೋಗಿ ಆ ಒಂದು ದೇವರ ಪಾದದ ಬಳಿ ಆ ಒಂದು ಉಂಗುರವನ್ನು ಇಡಿಸಿ ಆನಂತರ ಅದನ್ನು ಧರಿಸುವುದು ಉತ್ತಮ ಅದರಿಂದ ಒಳ್ಳೆಯ ಶುಭಫಲಗಳನ್ನು ಸಹ ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಹೀಗೆ ಮಾಡಲು ಸಾಧ್ಯವಿಲ್ಲ ಎನ್ನುವವರು ನಿಮ್ಮ ದೇವರ ಮನೆಯಲ್ಲಿ ಇರಿಸಿ ಅದಕ್ಕೆ ಪೂಜೆ ಮಾಡಿ ತದನಂತರ ಧರಿಸುವುದು ಉತ್ತಮ. ಇದರ ಜೊತೆ ದೇವರ ಉಂಗುರವನ್ನು ಹಾಕಿಕೊಂಡು ಮಾಂಸಹಾರ ಸೇವನೆ ಮಾಡಬಾರದು. ಮಾಂಸಹಾರ ಸೇವನೆ ಮಾಡುವಂತಹ ಸಂದರ್ಭದಲ್ಲಿ ಆ ಉಂಗುರ ವನ್ನು ತೆಗೆದು ಆನಂತರ ಶುದ್ಧವಾಗಿ ಸ್ನಾನ ಮಾಡಿ ಆನಂತರ ಉಂಗುರ ವನ್ನು ಧರಿಸಬಹುದು.

ಈ ಸುದ್ದಿ ಓದಿ:-ಫ್ರಿಡ್ಜ್ ಯಾವತ್ತು ಹೊಸದರಂತೆ ಇರುತ್ತೆ ಫ್ರಿಡ್ಜ್ ಯಾವತ್ತು ರಿಪೇರಿಗೆ ಬರಲ್ಲ..!

ಅದೇ ರೀತಿಯಾಗಿ ಮಹಿಳೆಯರು ಕೂಡ ತಮ್ಮ ತಿಂಗಳ ಮುಟ್ಟಿನ ಸಂದರ್ಭದಲ್ಲಿ ಆ ಒಂದು ಉಂಗುರವನ್ನು ತೆಗೆದು ಇಡಬೇಕು ಆ ನಂತರ 5 ದಿನ ಮುಗಿದ ಮೇಲೆ ಉಂಗುರವನ್ನು ಮೇಲೆ ಹೇಳಿದಂತೆ ಶುದ್ಧೀಕರಣ ಮಾಡಿ ಆನಂತರ ಧರಿಸುವುದು ಒಳ್ಳೆಯದು.

* ಅದೇ ರೀತಿಯಾಗಿ ಮಹಿಳೆಯರು ತಮ್ಮ ಕೈಗಳಲ್ಲಿ ಕನಿಷ್ಠಪಕ್ಷ ಎರಡೆರಡು ಬಳೆಗಳನ್ನಾದರೂ ಸಹ ಹಾಕಿಕೊಳ್ಳಬೇಕು ಇನ್ನು ಅತಿ ಹೆಚ್ಚಿನ ಫಲಗಳನ್ನು ಪಡೆದುಕೊಳ್ಳಬೇಕು ಎಂದರೆ ಮಹಿಳೆಯರು ತಮ್ಮ ಕೈಗಳಿಗೆ ಒಂದು ಡಜನ್ ಬಳೆಗಳನ್ನಾದರೂ ಸಹ ಹಾಕಿಕೊಳ್ಳುವುದು ಉತ್ತಮ ಇದರಿಂದ ಇನ್ನೂ ಹೆಚ್ಚಿನ ಫಲಗಳನ್ನು ಪಡೆಯುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಹಣಕಾಸಿನ ಸಮಸ್ಯೆಯಿಂದ ಕಂಗಾಲಾಗಿದ್ದೀರಾ. ಈ ವಾಸ್ತು ನಿಯಮಗಳನ್ನು ಪಾಲಿಸದಿದ್ದರೆ ನೀವು ಸಂಪಾದಿಸುವ ಹಣ ಉಳಿಯುವುದಿಲ್ಲ ಇನ್ನಾದರೂ ಜಾಗ್ರತೆಯಿಂದಿರಿ.!

 

ಜೀವನದಲ್ಲಿ ಪ್ರತಿಯೊಬ್ಬರಿಗೂ ಹಣದ ಅವಶ್ಯಕತೆ ಬಹಳ ಇದೆ. ಆದರೆ ಸಂಪಾದನೆ ಮಾಡಿದ ಹಣವೆಲ್ಲಾ ಒಂದೇ ಸಮ ಪೋಲಾಗುತ್ತಿದ್ದರೆ ಬಹಳ ಬೇಸರವಾಗುತ್ತದೆ. ನಿಮ್ಮ ಮನೆಯಲ್ಲಿರುವ ವಾಸ್ತು ದೋಷ ಕೂಡಾ ಇದಕ್ಕೆ ಕಾರಣವಿರಬಹುದು. ಆದ್ದರಿಂದ ಇನ್ನಾದರೂ ಈ ವಾಸ್ತು ದೋಷಗಳನ್ನು ಸರಿಪಡಿಸಿಕೊಳ್ಳಿ.

* ಕುಬೇರನ ಪ್ರತಿಮೆ ಕುಬೇರನು ಸಂಪತ್ತಿನ ಅಧಿಪತಿ. ಅವರ ಮೂರ್ತಿಯನ್ನು ಖರೀದಿಸಿ ಮನೆಯ ಉತ್ತರ ಭಾಗದಲ್ಲಿ ಇಟ್ಟರೆ ಹಣದ ಸಮಸ್ಯೆಗಳೆಲ್ಲವೂ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.
* ಮನೆಯ ಬಾಗಿಲಿಗೆ ಅಭಿಮುಖವಾಗಿ ಗಣಪತಿ ಕುಳಿತಿರುವಂತೆ ಕಾಣುವ, ಗಣೇಶನ ಮೂರ್ತಿಯನ್ನು ಇಟ್ಟರೆ ಆದಾಯ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.

* ಶಂಖವು ಲಕ್ಷ್ಮಿಯ ಅತ್ಯಂತ ಪೂಜ್ಯನೀಯ ವಸ್ತುಗಳಲ್ಲಿ ಒಂದಾಗಿದೆ. ಇದನ್ನು ಪೂಜಾ ಕೋಣೆಯಲ್ಲಿ ಇಟ್ಟು ಪೂಜಿಸಿದರೆ ಮನೆಯಲ್ಲಿ ಸಕಲ ಸಂಪತ್ತು ದೊರೆಯುತ್ತದೆ ಎಂದು ಹೇಳಲಾಗುತ್ತದೆ.
* ತೆಂಗಿನಕಾಯಿಗೆ ಧನಾತ್ಮಕ ಶಕ್ತಿಯನ್ನು ಬಿಡುಗಡೆ ಮಾಡುವ ಸಾಮರ್ಥ್ಯವಿದೆ. ತೆಂಗಿನಕಾಯಿಯನ್ನು ಮನೆ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಸದಾ ಇಟ್ಟುಕೊಂಡರೆ ಹಣದ ಸಮಸ್ಯೆ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.

* ಕೊಳಲು ಲಕ್ಷ್ಮಿಯ ಮಂಗಳಕರ ವಸ್ತುವಾಗಿದೆ. ಮನೆಯಲ್ಲಿ ಇಟ್ಟರೆ ಎಲ್ಲಾ ರೀತಿಯ ದೋಷಗಳು ನಿವಾರಣೆಯಾಗಿ ಧನ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.
* ಅರಿಶಿನವನ್ನು ಲಾಕರ್‌ನಲ್ಲಿ ಇರಿಸಿ ಹಣದ ಸಮಸ್ಯೆಗಳನ್ನು ಪರಿಹರಿಸಲು ಒಂದು ಮುಖ್ಯವಾದ ತಂತ್ರವೆಂದರೆ ಹಳದಿ ಅಥವಾ ಕೆಂಪು ಬಟ್ಟೆಯ ತುಂಡಿನಲ್ಲಿ ಅರಿಶಿನವನ್ನು ಉಂಡೆಯಂತೆ ಕಟ್ಟಿ ಅದನ್ನು ನಿಮ್ಮ ಮನೆಯ ಲಾಕರ್‌ನಲ್ಲಿರಿಸುವುದು.

ಅರಿಶಿನದ ಉಂಡೆ ಇರಿಸುವ ಮೊದಲು ನಿಮ್ಮ ಲಾಕರ್ ಅನ್ನು ಮೊದಲು ಸ್ವಚ್ಛವಾಗಿರಿಸಬೇಕು ಮತ್ತು ಈಶಾನ್ಯ ದಿಕ್ಕಿನಲ್ಲಿ ಉಂಡೆ ಇರಿಸಬೇಕು. ಇದರಿಂದ ನಿಮ್ಮ ಹಣಕಾಸು ಸಮಸ್ಯೆಗಳು ದೂರವಾಗಿ ಅನಗತ್ಯ ಕಾರಣಗಳಿಗೆ ಹಣ ಖರ್ಚು ಮಾಡುವ ಜನರಿಗೂ ಈ ವಾಸ್ತು ಸಲಹೆಯು ಉಪಯುಕ್ತವಾಗಬಹುದು.

* ಅರಿಶಿನದಿಂದ ಸ್ವಸ್ತಿಕವನ್ನು ಬಿಡಿಸಿ ಅರಿಶಿನವನ್ನು ಬಳಸಿ ಮನೆಯ ಪ್ರವೇಶದ್ವಾರದಲ್ಲಿ ಸ್ವಸ್ತಿಕ ಚಿಹ್ನೆಯನ್ನು ಬಿಡಿಸುವುದರಿಂದ ನಿಮಗೆ ಸಮೃದ್ಧಿ ಒಲಿದು ಬರುತ್ತದೆ ಮತ್ತು ವಾಸ್ತು ದೋಷಗಳು ಪರಿಹಾರವಾಗು ತ್ತದೆ. ಅರಿಶಿನ ಮತ್ತು ಸ್ವಸ್ತಿಕ ಎರಡನ್ನೂ ಮಂಗಳಕರವೆಂದು ಪರಿಗಣಿಸ ಲಾಗುತ್ತದೆ ಮತ್ತು ಇವು ಲಕ್ಷ್ಮಿ ದೇವಿಯನ್ನು ಮೆಚ್ಚಿಸುತ್ತದೆ ಎಂದು ನಂಬಲಾಗಿದೆ. ಅರಿಶಿನವು ಮನೆಯೊಳಗೆ ಪಾಸಿಟಿವ್‌ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ದುಷ್ಟ ಶಕ್ತಿಗಳನ್ನು ಓಡಿಸುತ್ತದೆ.

* ನಿಮ್ಮ ಮನೆಯಲ್ಲಿ ಯಾವುದೇ ವಾಸ್ತು ದೋಷವನ್ನು ತೊಡೆದು ಹಾಕಲು ಇದು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಮನೆಯ ಪ್ರವೇಶದ್ವಾರದ ಬಲಭಾಗದಲ್ಲಿ ಸ್ವಸ್ತಿಕದ ಚಿಹ್ನೆಯನ್ನು ಬಿಡಿಸಬೇಕು. ಅಡುಗೆಗೆ ಬಳಸಿದ ಅರಿಶಿನವನ್ನು ಬಳಸಬಾರದು. ಸ್ವಸ್ತಿಕವನ್ನು ಬಿಡಿಸುವ ಮುನ್ನ ನಿಮ್ಮ ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು ಮತ್ತು ಸ್ವಸ್ತಿಕದ ವಿನ್ಯಾಸವು ನಿಖರವಾಗಿರಬೇಕು.

* ಪ್ರವೇಶದ್ವಾರದಲ್ಲಿ ಅರಿಶಿನ ನೀರನ್ನು ಸಿಂಪಡಿಸಿ ನಿಮ್ಮ ಮನೆಯ ಪ್ರವೇಶದ್ವಾರದಲ್ಲಿ ಅರಿಶಿನ ನೀರನ್ನು ಸಿಂಪಡಿಸುವುದರಿಂದ ಅದು ಮನೆಯೊಳಗೆ ಪಾಸಿಟಿವ್ ಶಕ್ತಿಯನ್ನು ಆಕರ್ಷಿಸುತ್ತದೆ. ನಿಮ್ಮ ಹಣ ಕಾಸಿನ ಪರಿಸ್ಥಿತಿಯನ್ನು ಸುಧಾರಿಸುತ್ತದೆ.

ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಚಿಮುಕಿಸುವಾಗ ನೀರು-ಅರಿಶಿನದ ಪಾತ್ರೆಗೆ ನೀವು ನಾಣ್ಯವನ್ನು ಹಾಕಬೇಕು. ಅರಿಶಿನ ನೀರನ್ನು ಸಿಂಪಡಿಸಿದ ನಂತರ ಆ ನಾಣ್ಯವನ್ನು ತೆಗೆದು ಮರೆಯದೇ ಮನೆಯ ದೇವರಕೋಣೆಯಲ್ಲಿ ಇಡಬೇಕು.

* ನೀವು ಯಾರಿಗಾದರೂ ತುಳಸಿ ಗಿಡವನ್ನು ಉಡುಗೊರೆಯಾಗಿ ನೀಡಿದರೆ ಅದನ್ನು ಮಣ್ಣಿನ ತೊಟ್ಟಿಯಲ್ಲಿ ಇಟ್ಟು ನಂತರ ಉಡುಗೊರೆ ಯಾಗಿ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

 

ಮೂರ್ಖ ಪುರುಷರ ಲಕ್ಷಣಗಳು.!

 

ಪ್ರತಿಯೊಬ್ಬ ಪುರುಷನೂ ಕೂಡ ತನ್ನ ಜೀವನದಲ್ಲಿ ತನ್ನ ಪತ್ನಿಯಾದವ ಳನ್ನು ಒಳ್ಳೆಯ ರೀತಿಯಿಂದ ಸ್ನೇಹಿತೆಯಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಅವಳಲ್ಲಿ ನಿಮ್ಮ ಮೇಲೆ ಒಂದು ಒಳ್ಳೆಯ ಭಾವನೆ ಇರುತ್ತದೆ. ಹಾಗೇನಾದರೂ ನೀವು ಅವಳನ್ನು ಮನೆಯ ಕೆಲಸದವಳ ಹಾಗೆ ನೋಡಿ ಕೊಂಡರೆ ಅವಳ ಮನಸ್ಸಿನಲ್ಲಿ ನಿಮ್ಮ ಮೇಲೆ ಯಾವುದೇ ರೀತಿಯ ಒಳ್ಳೆಯ ಭಾವನೆ ಇರುವುದಿಲ್ಲ.

ಕೆಲವೊಂದಷ್ಟು ಜನ ಪುರುಷರು ಮದುವೆಯಾಗುವುದು ನನ್ನ ಕೆಲಸ ಕಾರ್ಯ ಮಾಡುವುದಕ್ಕೆ ಅವಳು ಮನೆಯನ್ನು ನೋಡಿಕೊಳ್ಳುವುದಕ್ಕೆ ಕುಟುಂಬವನ್ನು ನೋಡಿಕೊಳ್ಳುವು ದಕ್ಕೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಅಂತಹ ಒಂದು ಆಲೋಚನೆಯನ್ನು ಸಹ ಪುರುಷರು ಮಾಡಬಾರದು.

ಮನೆಗೆ ಬಂದಂತಹ ಹೆಣ್ಣು ಮಗಳನ್ನು ತಮ್ಮ ಮನೆಯ ಮಗಳಂತೆ ನೋಡಿಕೊಂಡು ಅವಳಿಗೆ ಅತಿ ಹೆಚ್ಚಿನ ಪ್ರೀತಿ ವಿಶ್ವಾಸ ಬಾಂಧವ್ಯವನ್ನು ತೋರಿಸುವುದರಿಂದ ಅವಳು ತನ್ನ ಕುಟುಂಬವನ್ನೇ ಮರೆತು ಗಂಡನ ಮನೆಯನ್ನೇ ತನ್ನ ಕುಟುಂಬ ಎನ್ನುವಂತೆ ಬಹಳ ಪ್ರೀತಿ ವಿಶ್ವಾಸದಿಂದ ಎಲ್ಲರನ್ನು ಕೂಡ ನೋಡಿಕೊಳ್ಳುತ್ತಿರುತ್ತಾಳೆ.

ಆದರೆ ಕೆಲವೊಂದಷ್ಟು ಜನ ಕೆಲವೊಂದು ವಿಚಾರಗಳಲ್ಲಿ ಹೆಂಡತಿಯ ಮೇಲೆ ತಪ್ಪು ಭಾವನೆಗಳನ್ನು ಹೊಂದಿರುತ್ತಾರೆ. ಅದು ಅವರ ಮೂರ್ಖತನ ಎಂದು ಹೇಳಿದರೆ ತಪ್ಪಾ ಗುವುದಿಲ್ಲ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಮೂರ್ಖ ಪುರುಷರ ಲಕ್ಷಣಗಳು ಯಾವುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

* ಮೂರ್ಖ ಪುರುಷ ತನ್ನ ಪತ್ನಿಯನ್ನು ಮನೆ ಕೆಲಸದವಳು ಎಂದು ಭಾವಿಸಿ ತಾನು ಕೆಲಸದವಳ ಪತಿಯಾಗಿ ಇರುತ್ತಾನೆ ಆದರೆ ಬುದ್ಧಿವಂತ ಪುರುಷ ಹೆಂಡತಿಯನ್ನು ರಾಣಿಯಾಗಿ ನೋಡಿಕೊಂಡು ತಾನು ರಾಜನಾಗಿ ಬಾಳುತ್ತಾನೆ.

* ಮೂರ್ಖ ಪುರುಷ ತನ್ನ ಹೆಂಡತಿಯನ್ನು ಬುಗುರಿಯಂತೆ ಆಡಿಸುತ್ತಾನೆ ಬೇರೆ ಕಡೆ ಮನೆ ಮಾಡಿ ಇರೋಣ ಅಂತ ಹಠ ಹಿಡಿಯುತ್ತಾನೆ ಅವನಿಗೆ ತಂದೆ ತಾಯಿಯೊಂದಿಗೆ ಕೂಡಿ ಬಾಳಲು ಅಷ್ಟು ಇಷ್ಟ ಇರುವುದಿಲ್ಲ.
* ಆದರೆ ಬುದ್ದಿವಂತ ಪುರುಷ ಸಂಸಾರದಲ್ಲಿ ಎಷ್ಟೇ ಕಷ್ಟವಿರಲಿ ಎಲ್ಲ ರನ್ನು ಎಲ್ಲವನ್ನು ಎಲ್ಲರನ್ನು ಹೊಂದಿಕೊಂಡು ಪರಿಸ್ಥಿತಿ ಅರ್ಥಮಾಡಿ ಕೊಂಡು ಎಲ್ಲರೊಂದಿಗೆ ಒಟ್ಟಿಗೆ ಬಾಳುವ ಆಸಕ್ತಿ ಹೊಂದಿರುತ್ತಾನೆ.

* ಮೂರ್ಖ ಪುರುಷರು ತನ್ನ ಮಕ್ಕಳು ಏನಾದರೂ ತಪ್ಪು ಮಾಡಿದರೆ ಎಲ್ಲರ ಮುಂದೆ ಬಾಯಿಗೆ ಬಂದಂತೆ ಬೈದು ಹೊಡೆದು ಮಕ್ಕಳಿಗೆ ಪಾಠ ಕಲಿಸುತ್ತಾರೆ.
* ಆದರೆ ಬುದ್ಧಿವಂತ ಪುರುಷ ಮಕ್ಕಳು ಏನೇ ತಪ್ಪು ಮಾಡಿದರು ಅದನ್ನು ಸಮಾಧಾನವಾಗಿ ತಾಳ್ಮೆಯಿಂದ ತಿಳಿಸಿ ಬುದ್ಧಿಮಾತು ಹೇಳುತ್ತಾನೆ.
* ಭಾವನೆಗಳಿಲ್ಲದ ಗಂಡಿನ ಮನಸ್ಸು ಬರಿದಾಗಿ ಹೋದ ಬಹುದೊಡ್ಡ ತೋಟದಂತೆ ಬರಿ ಹೆಸರಿಗೆ ಮಾತ್ರ ದೊಡ್ಡದಾದ ತೋಟ ಆದರೆ ಯಾವುದಕ್ಕೂ ಉಪಯೋಗವಿಲ್ಲ.

* ಮೂರ್ಖ ಪುರುಷ ಕುಟುಂಬ ಮತ್ತು ಪತ್ನಿಯ ಮನೆಯವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾನೆ.
* ಪತ್ನಿ ಏನೇ ಮಾಡಿದರೂ ನಗುಮುಖದ ಬದಲು ಹುಳಿ ಮುಖದಿಂದ ಅವಳನ್ನು ನೋಡುತ್ತಾನೆ.
* ಸಭ್ಯತೆ ಹೊಂದಿರುವ ಪುರುಷ ಯಾವಾಗಲೂ ಪ್ರೀತಿಯಿಂದ ಮಾತ ನಾಡುತ್ತಾನೆ ಕಠೋರವಾಗಿ ಮಾತನಾಡುವುದಿಲ್ಲ ಮತ್ತು ಇತರರ ಮುಂದೆ ಅಥವಾ ಮನೆಯಲ್ಲಿ ಪತ್ನಿಗೆ ಗೌರವ ನೀಡುತ್ತಾನೆ.
* ಬುದ್ಧಿವಂತ ಪುರುಷನಿಗೆ ತಾಳ್ಮೆ ಇರುತ್ತದೆ ಎಲ್ಲರೊಂದಿಗೆ ಹೊಂದಿ ಕೊಂಡು ಹೋಗುವ ಗುಣವಿರುತ್ತದೆ.

* ಆದರೆ ಸ್ವಾರ್ಥ ಮನೋಭಾವನೆ ಊಟ ತಿಂಡಿ ಹಾಕುವ ಬಟ್ಟೆ ಉಪಯೋಗಿಸುವ ವಸ್ತುಗಳು ಪ್ರತಿಯೊಂದರಲ್ಲಿ ನನ್ನದು ಎಂಬ ಸ್ವಾರ್ಥ ಇರುವಂತಹ ಪುರುಷ ಯಾವತ್ತಿಗೂ ಖುಷಿಯಾಗಿರಲು ಸಾಧ್ಯವಿಲ್ಲ.
* ಹೆಂಡತಿ ತನ್ನ ಪತಿಯನ್ನು ರಾಜನಂತೆ ನಡೆಸಿ ಕೊಳ್ಳಬೇಕೆಂದು ಬಯಸಿದರೆ ಗಂಡ ಕೂಡ ಅವಳನ್ನು ರಾಣಿಯಂತೆ ನೋಡಿಕೊಳ್ಳಬೇಕು.
* ತಾಳಿಯನ್ನು ತೂಕವೆಂದು ಭಾವಿಸುವ ಯಾವುದೇ ಹೆಣ್ಣು ಸಂಸಾರ ನಡೆಸಲು ಯೋಗ್ಯಳಲ್ಲ ಹೆಣ್ಣು ತನ್ನ ಮನೆಯ ಆಳು ಎಂದು ಭಾವಿಸುವ ಯಾವುದೇ ಗಂಡನಿಗೆ ಸಂಸಾರಿಯಾಗಿ ಬಾಳಲು ಯೋಗ್ಯನಲ್ಲ.

ಆಸ್ತಿ ವಿಭಾಗದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡದಿದ್ದರೆ ಏನಾಗುತ್ತೆ ಗೊತ್ತ.?

 

ಮನೆಯ ಒಟ್ಟು ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಪಾಲು ಇದೆ ಎನ್ನುವಂತಹ ಮಾಹಿತಿಯನ್ನು ಸುಪ್ರೀಂ ಕೋರ್ಟ್ ಆದೇಶಿಸಿದೆ ಆದರೆ ಕೆಲವೊಂದು ಸಂದರ್ಭದಲ್ಲಿ ಕೆಲವೊಂದಷ್ಟು ಜನ ಮನೆಯ ಗಂಡು ಮಕ್ಕಳು ಮಾತ್ರ ಆಸ್ತಿಯಲ್ಲಿ ಹಂಚಿಕೆಯನ್ನು ಮಾಡಿಕೊಂಡಿರುತ್ತಾರೆ. ಕೆಲವೊಂದಷ್ಟು ಜನ ತಮ್ಮ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯ ಆಸ್ತಿ ಹಂಚಿಕೆಯನ್ನು ಮಾಡಿರುವುದಿಲ್ಲ.

ಅಂತಹ ಸಂದರ್ಭದಲ್ಲಿ ಏನಾಗುತ್ತದೆ ಯಾವುದೆಲ್ಲ ರೀತಿಯ ಕ್ರಮಗಳನ್ನು ಮಹಿಳೆಯರು ಅಂದರೆ ಆ ಮನೆಯ ಹೆಣ್ಣು ಮಗಳು ತೆಗೆದುಕೊಳ್ಳಬಹುದು. ಆ ಆಸ್ತಿಯನ್ನು ತೆಗೆದುಕೊಳ್ಳುವುದಕ್ಕೆ ಏನೆಲ್ಲ ನಿಯಮಗಳನ್ನು ಅನುಸರಿಸುವುದರ ಮೂಲಕ ತನ್ನ ತಂದೆಯ ಆಸ್ತಿಯಲ್ಲಿ ಪಾಲನ್ನು ಪಡೆದುಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ನಮ್ಮ ವಯಸ್ಸು 25 ಆದ ಬಳಿಕ ಈ ನಿಯಮ ಪಾಲಿಸಬೇಕು.!

ಮೇಲೆ ಹೇಳಿದಂತೆ ಕೆಲವೊಮ್ಮೆ ಮನೆಯಲ್ಲಿರುವಂತಹ ಗಂಡು ಮಕ್ಕಳು ಮಾತ್ರ ತಂದೆಯ ಒಟ್ಟು ಆಸ್ತಿಯಲ್ಲಿ ಪಾಲನ್ನು ಮಾಡಿಕೊಂಡಿರುತ್ತಾರೆ ಆದರೆ ಕೆಲವೊಮ್ಮೆ ಹೆಣ್ಣು ಮಕ್ಕಳಿಗೆ ಆ ಒಂದು ಆಸ್ತಿಯಲ್ಲಿ ಯಾವುದೇ ರೀತಿಯ ಪಾಲನ್ನು ಕೊಟ್ಟಿರುವುದಿಲ್ಲ. ಎಲ್ಲಾ ಆಸ್ತಿಯನ್ನು ಅವರೇ ಅನುಭವಿಸುತ್ತಿರುತ್ತಾರೆ. ಹೀಗೆ ನಡೆದು ಸುಮಾರು ವರ್ಷಗಳೇ ಆದ ನಂತರ ಮನೆಯಲ್ಲಿರುವಂತಹ ಅಂದರೆ ಆ ಮನೆಯ ಹೆಣ್ಣು ಮಕ್ಕಳು ಆಸ್ತಿಯಲ್ಲಿ ನನಗೂ ಪಾಲು ಬೇಕು ಎಂದು ಕೇಳುವಂತಹ ಸಂದರ್ಭ ಬಂದೇ ಬರುತ್ತದೆ.

ಆಗ ಅವರು ಮೊದಲು ಏನು ಮಾಡಬೇಕು ಎಂದು ನೋಡುವುದಾದರೆ ಮೊದಲು ಒಟ್ಟು ಆಸ್ತಿಗೆ ಸಂಬಂಧಿಸಿದಂತಹ ಎಲ್ಲ ದಾಖಲೆಗಳನ್ನು ನೋಡಬೇಕಾಗುತ್ತದೆ. ಅಂದರೆ ಆಸ್ತಿ ಯಾವ ರೀತಿಯಾಗಿ ಬಂದಿದ್ದು ತಂದೆಯ ಸ್ವಯಾರ್ಜಿತ ಆಸ್ತಿಯ ಅಥವಾ ತಂದೆಗೆ ಪಿತ್ರಾರ್ಜಿತವಾಗಿ ಬಂದಿರುವಂತಹ ಆಸ್ತಿಯ ಎನ್ನುವುದನ್ನು ತಿಳಿದುಕೊಳ್ಳಬೇಕು.

ಈ ಸುದ್ದಿ ಓದಿ:- ಫ್ರಿಡ್ಜ್ ಯಾವತ್ತು ಹೊಸದರಂತೆ ಇರುತ್ತೆ ಫ್ರಿಡ್ಜ್ ಯಾವತ್ತು ರಿಪೇರಿಗೆ ಬರಲ್ಲ..!

ತಂದೆಯ ಸ್ವಯಾರ್ಜಿತ ಆಸ್ತಿಯಾಗಿದ್ದು ಅವರು ವಿಲ್ ಅನ್ನು ಅಂದರೆ ಮರಣ ಶಾಸನವನ್ನು ಮಾಡಿಸದೆ ಆಸ್ತಿಯನ್ನು ಹಾಗೆ ಬಿಟ್ಟು ಮರಣ ಹೊಂದಿದ್ದರೆ ಹಿಂದೂ ಸಕ್ಷೆಷನ್ ಆಕ್ಟ್ 8 ರ ಪ್ರಕಾರ ಎಲ್ಲಾ ವಾರಸು ದಾರರು ಕೂಡ ಹಕ್ಕುದಾರರಾಗಿರುತ್ತಾರೆ ಅವರು ಗಂಡು ಮಕ್ಕಳೇ ಆದರೂ ಸರಿ ಹೆಣ್ಣು ಮಕ್ಕಳೇ ಆದರೂ ಸರಿ.

ಹೆಚ್ಚಿನ ಜನಕ್ಕೆ ಗೊತ್ತಿಲ್ಲ 2005ರ ನಂತರ ಮಾತ್ರ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕು ಬಂದಿರು ತ್ತದೆ ಎಂದು ಆದರೆ ಅದು ತಪ್ಪು. ಬದಲಿಗೆ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ತಂದೆಯ ಮರಣದ ನಂತರ ಎಲ್ಲಾ ಮಕ್ಕಳು ಕೂಡ ಹಕ್ಕುದಾರರಾಗಿರುತ್ತಾರೆ. ಈಗ ಪೌತಿ ಖಾತೆ ಮನೆಯಲ್ಲಿ ಯಾರಾದರೂ ಒಬ್ಬರ ಹೆಸರಿಗೆ ಖಾತೆ ಬದಲಾವಣೆಯಾಗಿದ್ದರೆ ಅವರೇ ಆ ಒಂದು ಆಸ್ತಿಯ ಹಕ್ಕುದಾರರು ಎಂದು ಹೇಳುವುದಕ್ಕೆ ಬರುವುದಿಲ್ಲ.

ಈ ಸುದ್ದಿ ಓದಿ:- ಈ 5 ರಾಶಿಯವರು ಮುಂದಿನ ವರ್ಷದೊಳಗೆ ಸ್ವಂತ ಮನೆ ಮಾಡಿಯೇ ತೀರುತ್ತಾರೆ.!

ಯಾಕೆ ಎಂದರೆ ಆ ಒಂದು ಆಸ್ತಿಗೆ ಪ್ರತಿ ಬಾರಿ ಕಂದಾಯವನ್ನು ಕಟ್ಟು ವಂತಹ ಉದ್ದೇಶದಿಂದ ಇವರ ಹೆಸರನ್ನು ಇಟ್ಟಿರುತ್ತಾರೆ ಹೊರತು ಅವರೇ ಆ ಒಂದು ಆಸ್ತಿಯ ಸ್ವಂತ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.

ಮೊದಲೇ ಹೇಳಿದಂತೆ 2005ರ ನಂತರ ಯಾವುದೇ ಆಸ್ತಿ ವಿಭಾಗ ಆಗಿದ್ದರೂ ಕೂಡ ಅದರಲ್ಲಿ ಮನೆಯಲ್ಲಿರು ವಂತಹ ಹೆಣ್ಣು ಮಕ್ಕಳು ಆಸ್ತಿ ವಿಭಜನೆಯ ಪಾಲನ್ನು ಕೇಳಬಹುದು. ಅದು ತಂದೆಯ ಸ್ವಯಾರ್ಜಿತ ಆಸ್ತಿಯಾಗಿದ್ದರೆ ಮಾತ್ರ. ಬದಲಿಗೆ ತಂದೆಗೆ ಅವರ ಅಜ್ಜ ಮುತ್ತಜ್ಜ ಇವರುಗಳಿಂದ ಆಸ್ತಿ ಬಂದಿದ್ದರೆ ಅವರು ಇನ್ನೂ ಆಸ್ತಿಯನ್ನು ಹಂಚಿಕೊಂಡಿಲ್ಲ ಎಂದರು ಕೂಡ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾವುದೇ ಪಾಲನ್ನು ಕೇಳಲು ಬರುವುದಿಲ್ಲ.

ಈ ಸುದ್ದಿ ಓದಿ:- ಅಕ್ಷಯ ತೃತೀಯದಂದು ನಿಮ್ಮ ರಾಶಿಗೆ ಅನುಗುಣವಾಗಿ ಈ ವಸ್ತು ಖರೀದಿಸಿದರೆ ಬದುಕು ಬಂಗಾರ.!

ಆದ್ದರಿಂದ ತಂದೆಯ ಸ್ವಯಾರ್ಜಿತ ಆಸ್ತಿ ಗಂಡು ಮಕ್ಕಳು ವಿಭಜನೆ ಮಾಡಿಕೊಂಡಿ ದ್ದರು ಕೂಡ ಆ ಒಂದು ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲನ್ನು ಕೇಳ ಬಹುದು. ಅವರೇನಾದರೂ ಕೊಡುವುದಕ್ಕೆ ಹಿಂದೆ ಮುಂದೆ ಮಾಡಿದರೆ ನೀವು ಕೋರ್ಟ್ ಮುಖಾಂತರ ನೀವು ಅರ್ಜಿ ಸಲ್ಲಿಸಿ ಆಸ್ತಿಯಲ್ಲಿ ಪಾಲನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ನಮ್ಮ ವಯಸ್ಸು 25 ಆದ ಬಳಿಕ ಈ ನಿಯಮ ಪಾಲಿಸಬೇಕು.!

 

* ವಯಸ್ಸು ಹೆಚ್ಚುತ್ತಿದ್ದಂತೆ ನಿರ್ಮಲವಾದ, ಕಾಂತಿಯುತ ಮುಖ ಚರ್ಮ ಹೊಂದುವುದು ಸಾಮಾನ್ಯ ಸಂಗತಿಯಲ್ಲ. ವಯಸ್ಸಾಗುತ್ತಿರುವಂತೆ ಮುಖ ಚರ್ಮ ಬಾಡುತ್ತಾ, ಕಾಂತಿ ಹೀನವಾಗಲು ಪ್ರಾರಂಭವಾಗುತ್ತದೆ.
* 25 ವಯಸ್ಸಿನವರೆಗೂ ಚರ್ಮದಲ್ಲಿನ ಕಣಗಳು ಸೂಕ್ತ ತೇವಾಂಶ ವನ್ನು ಒದಗಿಸುತ್ತ ಚರ್ಮವನ್ನು ಮೃದುವಾಗಿ ಕಾಂತಿಯುಕ್ತವಾಗಿಡುತ್ತದೆ.

ವಯಸ್ಸು ಮೀರಿದಂತೆ ಚರ್ಮದ ಕಣಗಳು ತಮ್ಮ ಕೆಲಸವನ್ನು ತಗ್ಗಿಸುತ್ತಾ ಚರ್ಮಕ್ಕೆ ತೇವಾಂಶ ಒದಗಿಸಲು ಅಶಕ್ತವಾಗುತ್ತದೆ. ಆಗ ಮುಖ ಚರ್ಮ ಒಣಗಿದಂತೆ ಕಾಂತಿ ಹೀನವಾಗಿ ಕಾಣುತ್ತದೆ. ಇದನ್ನು ನಿವಾರಿಸಲು ಚರ್ಮಕ್ಕೆ ಜಿಡ್ಡಿನಾಂಶ ತೇವಾಂಶ ಒದಗಲು ಮುಖಕ್ಕೆ ಕ್ರೀಮ್ ಹಚ್ಚುವುದು ಅತ್ಯಗತ್ಯ.

* ಮೊದಲನೆಯದಾಗಿ ಸಮತೋಲನ ಆಹಾರ ಸೇವಿಸಲೇಬೇಕು.
ನೀವು ಹದಿಹರೆಯದಲ್ಲಿ ತಿನ್ನುತ್ತಿದ್ದ ಐಸ್ ಕ್ರೀಮ್, ಚಾಕೊಲೆಟ್, ಕರಿದ ತಿಂಡಿಗಳು, ಸಿಹಿ ಖಾದ್ಯಗಳನ್ನು ತ್ಯಜಿಸಿ ಬಿಡಿ.
* ಹಸಿ ತರಕಾರಿಗಳು, ರಾಗಿ, ಗೋಧಿ, ಹಣ್ಣುಗಳು ನಿಮ್ಮ ಆಹಾರದಲ್ಲಿ ಯಥೇಚ್ಛವಾಗಿರಲಿ.
* ವೈದ್ಯರ ಸಲಹೆ ಪಡೆದು ಪೌಷ್ಟಿಕಾಂಶ ಹೊಂದಿರುವಂತಹ ಮಾತ್ರೆಗಳನ್ನು ಸೇವಿಸಬಹುದು.

* ಬಿಡದೇ ಪ್ರತಿದಿನ 7-8 ಲೋಟಗಳಷ್ಟು ನೀರು ಕುಡಿಯಿರಿ, ಇದು ಮೂತ್ರಪಿಂಡ ಸೂಕ್ತವಾಗಿ ಕಲ್ಮಶವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರಿಂದ ಚರ್ಮದ ಕಾಯಿಲೆಗಳನ್ನು ತಡೆಗಟ್ಟಬಹುದು.
* ಮುಖಕ್ಕೆ ಹಚ್ಚುವ ತೇವಾಂಶ ಕ್ರೀಮ್ ಅನ್ನು ಮನೆಯಲ್ಲಿಯೇ ಕಡಿಮೆ. ಖರ್ಚಿನಲ್ಲಿ ಸುಲಭವಾಗಿ ತಯಾರಿಸಿಕೊಳ್ಳಬಹುದು.

ತಲಾ ನೂರು ಗ್ರಾಂ ನಷ್ಟು ಬಾದಾಮಿ, ವಾಲ್‌ನಟ್ ಮತ್ತು ಕಡಲೆ ಕಾಯಿ ಬೀಜವನ್ನು ಹಿಂದಿನ ರಾತ್ರಿ ನೀರಿನಲ್ಲಿ ನೆನೆಸಿ. ಬೆಳಿಗ್ಗೆ ಅದರ ಸಿಪ್ಪೆ ಸುಲಿದು ನುಣ್ಣಗೆ ರುಬ್ಬಿಕೊಳ್ಳಿ. ಆ ರುಬ್ಬಿದ ಮಿಶ್ರಣಕ್ಕೆ ನಾಲ್ಕು ದೊಡ್ಡ ಚಮಚ ಹಾಲಿನ ಕೆನೆ, ಎರಡು ಚಮಚವನ್ನು ಸೌತೆಕಾಯಿ ರಸ ಮತ್ತು ತಲಾ ಒಂದೊಂದು ಚಮಚ ಜೇನುತುಪ್ಪ, ಪನ್ನೀರನ್ನು ಬೆರೆಸಿ ಎಲ್ಲವನ್ನೂ ಮಿಶ್ರಣ ಮಾಡಿ ತೇವ ವಿಲ್ಲದ ಬಾಟಲ್‌ನಲ್ಲಿ ಶೇಖರಿಸಿ ಇಟ್ಟುಕೊಳ್ಳಿ. ಅನುಕೂಲವಿದ್ದರೆ ಫ್ರಿಡ್ಜ್ ನಲ್ಲಿ ಇಡಬಹುದು.

* ಒಂದು ಚಮಚ ಅಕ್ಕಿ ಹಿಟ್ಟಿಗೆ ಎರಡು ತೊಟ್ಟು ಹುಳಿ ಮೊಸರು, ಅರಿಶಿನ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ಚರ್ಮಕ್ಕೆ ಅಂಟಿಕೊಂಡ ಹಿಟ್ಟನ್ನು ಉಜ್ಜುತ್ತಾ ಮುಖ ತೊಳೆದುಕೊಳ್ಳಿ ಇದರಿಂದ ಚರ್ಮದ ರಂಧ್ರ ಸ್ವಚ್ಛವಾಗುತ್ತದೆ.

* ನಂತರ ಮನೆಯಲ್ಲಿಯೇ ತಯಾರಿಸಿದ ತೇವಾಂಶದ ಕ್ರೀಮ್ ಅನ್ನು ಅಂಗೈಗೆ ತೆಗೆದುಕೊಂಡು ವರ್ತುಲಾಕಾರದಲ್ಲಿ ಮುಖಕ್ಕೆ ಹಚ್ಚುತ್ತಾ ಬನ್ನಿ. ನಿಮ್ಮ ಕೈಗಳ ಚಲನೆ ಕಣ್ಣುಗಳ ಬಳಿ ಜಾಗೃತವಾಗಿರಬೇಕು. ಈ ಕ್ರೀಮ್ ಅನ್ನು ಸುಮಾರು 15 ನಿಮಿಷವಾದರೂ ಚರ್ಮಕ್ಕೆ ತೀಡಬೇಕು. ಆ ಮೇಲೆ ಟ್ಯೂಶ್ಯೂ ಪೇಪರ್ ಆಗಲಿ ಹತ್ತಿಯನ್ನಾಗಲಿ ತೆಗೆದುಕೊಂಡು ಉಳಿದ ಮುಖದ ಕ್ರೀಮ್ ಅನ್ನು ಒರೆಸಿಕೊಳ್ಳಿ.

ಈ ರೀತಿ ಪ್ರತಿದಿನ ಅನುಸರಿಸಿದರೆ ಒಂದು ತಿಂಗಳಲ್ಲಿ ನಿಮ್ಮ ಮುಖದ ಚರ್ಮದ ಬದಲಾವಣೆ ಕಂಡು ನೀವೇ ಆಶ್ಚರ್ಯ ಪಡುವಿರಿ. ಈ ವಯಸ್ಸಿನಲ್ಲಿ ನೀವು ಹಚ್ಚುವ ಮೇಕಪ್ ನಲ್ಲಿ ತೇವಾಂಶ ಹೆಚ್ಚಿರುವಂತೆ ನೋಡಿ ಸಾಮಗ್ರಿಗಳನ್ನು ಖರೀದಿಸಿ.

* ನೀವು ನೀಳವಾಗಿ ತೆಳ್ಳಗಿದ್ದರೆ ಸೀರೆಯಲ್ಲದೇ ಬೇರೆ ಉಡುಪುಗಳನ್ನೂ
ಧರಿಸಬಹುದು. ಆದರೆ ನಿಮ್ಮ ಅಲಂಕಾರ ಹದಿಹರೆಯದವರನ್ನು ಅನುಕರಣೆ ಮಾಡದಂತೆ ಆದಷ್ಟು ಸಂಯಮವಾಗಿರಲಿ. ಹೀಗೆ ಮೇಲೆ ಹೇಳಿದ ಈ ವಿಧಾನಗಳನ್ನು ನೀವು ಅನುಸರಿಸುವುದರಿಂದ ನಿಮ್ಮ ಚರ್ಮ ಸುಂದರವಾಗಿರುತ್ತದೆ ಹಾಗೂ ಎಷ್ಟೇ ವಯಸ್ಸಾದರೂ ಕೂಡ ನಿಮ್ಮ ಚರ್ಮ ಸುಕ್ಕುಗಟ್ಟಿರುವ ಹಾಗೆ ವಯಸ್ಸಾದ ಹಾಗೆ ಕಾಣಿಸುವುದಿಲ್ಲ.

ಇದೆಲ್ಲವೂ ಕೂಡ ನಿಮ್ಮ ಮುಖದ ಮೇಲಿರುವಂತಹ ಚರ್ಮದ ಆರೋಗ್ಯವನ್ನು ಕಾಪಾಡುವಂತಹ ವಿಧಾನಗಳಾಗಿದ್ದು ಪ್ರತಿಯೊಬ್ಬರೂ ಕೂಡ ಈ ವಿಧಾನವನ್ನು ಅನುಸರಿಸಬಹುದು ಇದರಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ.

ಈ 5 ರಾಶಿಯವರು ಮುಂದಿನ ವರ್ಷದೊಳಗೆ ಸ್ವಂತ ಮನೆ ಮಾಡಿಯೇ ತೀರುತ್ತಾರೆ.!

 

ಸ್ವಂತ ಮನೆ ಹೊಂದುವ ಕನಸು ಯಾರಿಗೆ ತಾನೇ ಇರುವುದಿಲ್ಲ ಹೇಳಿ. ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಜೊತೆಗೆ ಅವರ ಹಣೆ ಬರಹದಲ್ಲೂ ಬರೆದಿರಬೇಕು. ಇದನ್ನೇ ಜಾತಕ ಫಲ ಎನ್ನುತ್ತಾರೆ. ಒಬ್ಬ ವ್ಯಕ್ತಿ ತನ್ನ ಕರ್ಮಾನುಸಾರ ಆತನ ಜೀವಿತಾವಧಿಯಲ್ಲಿ ಎಲ್ಲವನ್ನು ಪಡೆಯುತ್ತಾ ಪ್ರತಿಯೊಂದನ್ನು ಅನುಭವಿಸಿಯೇ ಹೋಗುತ್ತಾನೆ.

ಅಂತೆಯೇ ಸ್ವಂತ ಮನೆ ಕಟ್ಟಿಕೊಳ್ಳುವ ಅಥವಾ ಹೊಂದುವ ಅದೃಷ್ಟ ಕೂಡ ಕೇವಲ ಕೆಲವರಿಗೆ ಮಾತ್ರ ಮೀಸಲಾಗಿರುತ್ತದೆ. ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯವರು 2024 ಮುಗಿಯುವುದರೊಳಗಾಗಿ ತಮ್ಮ ಬಹುದಿನದ ಸ್ವಂತ ಮನೆಯ ಕನಸನ್ನು ನನಸಾಗಿಸಿ ಕೊಳ್ಳುತ್ತಾರೆ ನೋಡೋಣ ಬನ್ನಿ.

* ವೃಷಭ ರಾಶಿ :- ವೃಷಭ ರಾಶಿಯವರು ಹಣಕಾಸಿನ ವಿಚಾರದಲ್ಲಿ ಬಹಳ ಬುದ್ಧಿವಂತರು. ಇವರು ಎಂದಿಗೂ ತಾವು ಇನ್ನೊಬ್ಬರ ಮುಂದೆ ಕೈ ಚಾಚುವ ಪರಿಸ್ಥಿತಿ ಬರದಿರಲಿ ಎಂದು ಮುಂದಿನ ಭವಿಷ್ಯಕ್ಕಾಗಿ ಮೊದಲೇ ಹಣವನ್ನು ಜೋಪಾನ ಮಾಡುತ್ತಾರೆ.

ಹೀಗಾಗಿ ಸ್ಥಿರ ಆರ್ಥಿಕತೆಯಲ್ಲಿ ವೃಷಭ ರಾಶಿಯವರು ಮುಂದಿದ್ದಾರೆ ಚಂದ್ರನ ಲೋಕ ಎನ್ನಬಹುದು. ಉತ್ತಮ ಆರ್ಥಿಕ ಜವಾಬ್ದಾರಿ ಹೊಂದಿರುವ ವೃಷಭ ರಾಶಿಯವರು ಒಂದು ವೇಳೆ ಈ ಬಾರಿ ಸ್ವಂತ ಮನೆಯನ್ನು ಖರೀದಿಸಬೇಕು ಎಂದು ಕೊಂಡರೆ ಅದಕ್ಕೆ 2024 ತುಂಬಾ ಪ್ರಶಸ್ತವಾಗಿದೆ.

* ಕರ್ಕಾಟಕ ರಾಶಿ :- ಕರ್ಕಾಟಕ ರಾಶಿಯವರು ತಮ್ಮ ಕುಟುಂಬವನ್ನು ಯಾವುದಕ್ಕೂ ಕಡಿಮೆ ಇಲ್ಲದಂತೆ ನೋಡಿಕೊಳ್ಳುವ ಮನಸ್ಥಿತಿಯಲ್ಲಿ ಕರ್ಕಾಟಕ ರಾಶಿಯವರು ತುಂಬಾ ಫೇಮಸ್. ತಮ್ಮ ಕುಟುಂಬಕ್ಕೋಸ್ಕರ ಯಾವುದೇ ಗಟ್ಟಿ ನಿರ್ಧಾರವನ್ನು ಬೇಕಾದರೂ ತೆಗೆದುಕೊಳ್ಳುವ ಸಾಮರ್ಥ್ಯ ಇವರಲ್ಲಿದೆ. ತಮ್ಮ ಹಾಗೂ ತಮ್ಮ ಕುಟುಂಬದ ಭವಿಷ್ಯದ ನಿರ್ಧಾರವನ್ನು ತೆಗೆದು ಕೊಂಡು ಸಮತೋಲನವಾದ ಬದುಕು ನಡೆಸಿ ಸ್ವಂತ ಮನೆಯನ್ನು ಹೊಂದುವ ಕನಸನ್ನು ಇವರು 2024 ರಲ್ಲಿ ನನಸು ಮಾಡಿಕೊಳ್ಳಲಿದ್ದಾರೆ.

* ವೃಶ್ಚಿಕ ರಾಶಿ :- ವೃಶ್ಚಿಕ ರಾಶಿಯವರಿಗೆ ಹಣದ ಕೊರತೆ ಸಮಸ್ಯೆಯನ್ನು ಎದುರಿಸುವ ಸಂಭವ ಮೊದಲಿನಿಂದಲೂ ಕಡಿಮೆ ಎಂದು ಹೇಳಬಹುದು. ಏಕೆಂದರೆ ಇವರು ಸಂಪನ್ಮೂಲಭರಿತರು ಮತ್ತು ತಮ್ಮ ಜೀವನಕ್ಕಾಗಿ ದೃಢ ನಿರ್ಧಾರವನ್ನು ಕೈಗೊಳ್ಳುವವರು.

ಯಾವುದೇ ಗುರಿಯನ್ನು ತಲುಪಲು ಎದುರಾಗುವ ಯಾವುದೇ ಬಗೆಯ ಅಡೆತಡೆಗಳನ್ನು ಮೀರಿ ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳುವಲ್ಲಿ ಇವರು ಕಠಿಣ ಪರಿಶ್ರಮದಿಂದ ದುಡಿಯುತ್ತಾರೆ. 2024 ರಲ್ಲಿ ಸ್ವಂತ ಮನೆ ಹೊಂದುವ ಯೋಗ ವೃಶ್ಚಿಕ ರಾಶಿಯವರಿಗೆ ಇದೆ ಎಂದು ಗ್ರಹಗತಿಗಳು ಹೇಳುತ್ತಿವೆ.

* ಮಕರ ರಾಶಿ :- ಮಕರ ರಾಶಿಯವರು ತಮ್ಮದೇ ಆದ ಕನಸು ಮತ್ತು ಗುರಿಯನ್ನು ಹೊಂದಿರುವ ಜನರು ಹಾಗೂ ಅದಕ್ಕಾಗಿ ಕಷ್ಟಪಟ್ಟು ದುಡಿಯುತ್ತಾರೆ. ದೂರದೃಷ್ಟಿ ಜಾಸ್ತಿ ಇವರಿಗೆ. ಸಾಧ್ಯವಾದಷ್ಟು ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳಬೇಕೆಂಬ ಹಂಬಲ. ಗ್ರಹಗತಿಗಳ ಆಧಾರದ ಮೇಲೆ ಹೇಳುವುದಾದರೆ ಸ್ವಂತ ಮನೆಯನ್ನು ಹೊಂದಬೇಕು ಎನ್ನುವ ಇವರ ಕನಸಿಗೆ 2024 ಮುನ್ನುಡಿ ಬರೆಯಲಿದೆ.

* ಕುಂಭ ರಾಶಿ :- ಹೊರಗಡೆ ಜನರ ಬಳಿ ಹೆಚ್ಚು ಮಾತನಾಡದಿದ್ದರೂ ಭವಿಷ್ಯಕ್ಕೆ ಸಂಬಂಧಪಟ್ಟಂತೆ ಆಲೋಚನೆಗಳನ್ನು ಮತ್ತು ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಇವರನ್ನು ಮೀರಿಸುವವರು ಮತ್ತೊಬ್ಬರಿಲ್ಲ. ಇನ್ನೊಬ್ಬರ ಹಂಗಿನಲ್ಲಿ ಎಂದಿಗೂ ಇರಬಾರದು ಎನ್ನುವ ಭಾವನೆ ಇವರಿಗೆ ಸ್ವಲ್ಪ ಜಾಸ್ತಿ. ಹಾಗಾಗಿ ನಾವು ಕೂಡ ನಮ್ಮದೇ ಆದ ಒಂದು ಸುಂದರ ಮನೆಯನ್ನು ಹೊಂದಬೇಕು ಎನ್ನುವ ಆಸೆ ಆಕಾಂಕ್ಷೆ ಇವರಿಗೆ ಮೊದಲಿನಿಂದಲೂ ಇರುತ್ತದೆ. ಇಷ್ಟು ವರ್ಷಗಳ ಇವರ ಬಯಕೆ 2024 ರಲ್ಲಿ ಪೂರ್ಣಗೊಳ್ಳಲಿದೆ.

ಫ್ರಿಡ್ಜ್ ಯಾವತ್ತು ಹೊಸದರಂತೆ ಇರುತ್ತೆ ಫ್ರಿಡ್ಜ್ ಯಾವತ್ತು ರಿಪೇರಿಗೆ ಬರಲ್ಲ..!

 

ಹೆಚ್ಚಿನ ಜನರು ಬಹಳ ವರ್ಷಗಳಿಂದಲೂ ಕೂಡ ಫ್ರಿಡ್ಜ್ ಅನ್ನು ಉಪ ಯೋಗಿಸುತ್ತಿರುತ್ತಾರೆ ಅಂತಹ ಒಂದು ಸಂದರ್ಭದಲ್ಲಿ ಫ್ರಿಡ್ಜ್ ತನ್ನ ಕೂಲಿಂಗ್ ಅನ್ನು ಕಡಿಮೆ ಮಾಡಿಕೊಂಡಿರುತ್ತದೆ ಕೆಲವೊಮ್ಮೆ ಕೆಲವೊಂದು ತೊಂದರೆಗಳು ಸಮಸ್ಯೆಗಳು ಉಂಟಾಗುತ್ತದೆ.

ಇದರಿಂದಾಗಿ ಹೆಚ್ಚಿನ ಜನ ಹೊಸ ಫ್ರಿಡ್ಜ್ ತರುವ ನಿರ್ಧಾರವನ್ನು ಮಾಡಿರುತ್ತಾರೆ. ಅದರ ಬದಲು ಈಗ ನಾವು ಹೇಳುವಂತಹ ಈ ಕೆಲವು ವಿಧಾನಗಳನ್ನು ನೀವು ಅನುಸರಿಸುವುದರಿಂದ ಫ್ರಿಡ್ಜ್ ಹಾಳಾಗದಂತೆ ಕಾಪಾಡುತ್ತದೆ. ಹಾಗೂ ಫ್ರಿಡ್ಜ್ ಹೆಚ್ಚಿನ ದಿನಗಳ ವರೆಗೆ ಬಾಳಿಕೆಗೆ ಬರುವ ಹಾಗೆಯೂ ಕೂಡ ನೋಡಿಕೊಳ್ಳುತ್ತದೆ.

ಹಾಗಾದರೆ ಈ ದಿನ ಫ್ರಿಡ್ಜ್ ಯಾರ ಮನೆಯಲ್ಲಿ ಇರುತ್ತದೆಯೋ ಅವರು ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸುವುದು ತುಂಬಾ ಒಳ್ಳೆಯದು. ಹಾಗಾದರೆ ಈ ದಿನ ಫ್ರಿಡ್ಜ್ ಅನ್ನು ನಾವು ಹೆಚ್ಚಿನ ದಿನಗಳವರೆಗೆ ಬಾಳಿಕೆ ಬರಬೇಕು ಎಂದರೆ ಮೊದಲು ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎಂದು ತಿಳಿಯೋಣ.

* ಫ್ರಿಡ್ಜ್ ನಲ್ಲಿ ಒಂದು ರಬ್ಬರ್ ಇರುತ್ತದೆ ಅಂದರೆ ಡೋರ್ ಹಾಕುವಂತಹ ಒಂದು ಸ್ಥಳದಲ್ಲಿ ರಬ್ಬರ್ ಇರುತ್ತದೆ ಅದನ್ನು ಸದಾ ಕಾಲ ನಾವು ಜೋಪಾನವಾಗಿ ನೋಡಿ ಕೊಳ್ಳಬೇಕು ಅದನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಹಾಗೇನಾದರೂ ನೀವು ಆ ಒಂದು ರಬ್ಬರ್ ಅನ್ನು ಸರಿಯಾದ ರೀತಿ ನೋಡಿಕೊಳ್ಳದೆ ಇದ್ದರೆ ಅದು ಹಾಳಾಗುತ್ತದೆ. ಇದರಿಂದ ಫ್ರಿಡ್ಜ್ ಹೆಚ್ಚಿನ ದಿನಗಳವರೆಗೆ ಬಳಕೆಗೆ ಬರುವುದಿಲ್ಲ ಹಾಗೂ ಫ್ರಿಡ್ಜ್ ನಲ್ಲಿ ಕೂಲಿಂಗ್ ಸಹ ಕಡಿಮೆ ಯಾಗುತ್ತದೆ. ಆದ್ದರಿಂದ ಇದನ್ನು ಬಹಳ ಮುಖ್ಯವಾಗಿ ಗಮನಿಸುವುದು ತುಂಬಾ ಒಳ್ಳೆಯದು.

ಹಾಗಾಗಿ 15 ದಿನಗಳಿಗೆ ಒಮ್ಮೆಯಾದರೂ ಇದನ್ನು ಸ್ವಚ್ಛ ಮಾಡಿಕೊಳ್ಳು ವುದು ಒಳ್ಳೆಯದು. ಇಲ್ಲವಾದರೆ ಫ್ರಿಡ್ಜ್ ನಲ್ಲಿ ಇಡುವಂತಹ ಆಹಾರಗಳೆ ಲ್ಲವೂ ಕೂಡ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾದರೆ ಈ ರಬ್ಬರ್ ಹೇಗೆ ಚೆನ್ನಾಗಿದೆ ಚೆನ್ನಾಗಿಲ್ಲ ಎನ್ನುವುದನ್ನು ಕಂಡು ಹಿಡಿಯುವುದು ಎಂದು ನೋಡುವುದಾದರೆ.

ಫ್ರಿಡ್ಜ್ ಡೋರ್ ಹಾಕುವಂತಹ ಸಂದರ್ಭದಲ್ಲಿ ಒಂದು ಪೇಪರ್ ಅನ್ನು ಹಾಕಿ ಹೊರ ಗಡೆಯೂ ಸಹ ಬಿಡಬೇಕು ಆನಂತರ ಅದನ್ನು ಮೆತ್ತಗೆ ಎಳೆಯಬೇಕು ಎಳೆದ ತಕ್ಷಣವೇ ಆ ಒಂದು ಪೇಪರ್ ಬಂದರೆ ಫ್ರಿಡ್ಜ್ ನಲ್ಲಿ ಇರುವಂತಹ ರಬ್ಬರ್ ಹಾಳಾಗಿದೆ ಎಂದರ್ಥ ಆನಂತರ ನೀವು ಅದನ್ನು ಬದಲಾಯಿಸಿ ಕೊಳ್ಳುವುದು ಉತ್ತಮ.

* ಫ್ರಿಡ್ಜ್ ನಲ್ಲಿ ಕೂಲಿಂಗ್ ಎನ್ನುವಂತಹ ಒಂದು ಬಟನ್ ಇರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಕೂಲಿಂಗ್ ನಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇತ್ತೀಚೆಗೆ ಎಲ್ಲಾ ಫ್ರಿಡ್ಜ್ ಗಳಲ್ಲಿಯೂ ಕೂಡ ಆಟೋಮೆಟಿಕ್ ಕೂಲಿಂಗ್ ಇರುತ್ತದೆ. ನಾವೇ ಅದನ್ನು ಸೆಟ್ ಮಾಡಿಕೊಳ್ಳಬೇಕಾಗುತ್ತದೆ ಆದ್ದರಿಂದ ಅದನ್ನು ಗಮನಿಸುವುದು ಒಳ್ಳೆಯದು.

* ಇನ್ನು ಮೂರನೆಯದಾಗಿ ಫ್ರಿಡ್ಜ್ ನಲ್ಲಿರುವಂತಹ ಏರ್ವೆಂಟ್ ಅನ್ನು ನಾವು ಮುಚ್ಚಬಾರದು ಅಂದರೆ ಕೆಲವೊಂದಷ್ಟು ಜನ ಹೆಚ್ಚಿನ ಆಹಾರ ಪದಾರ್ಥಗಳನ್ನು ಬಾಕ್ಸ್ ಗಳನ್ನು ಅದರ ಹತ್ತಿರಕ್ಕೆ ಇಟ್ಟು ಮುಚ್ಚಿರುತ್ತಾರೆ ಆದರೆ ಈ ರೀತಿ ಇಡಬಾರದು. ಈ ರೀತಿ ಇಡುವುದರಿಂದ ಅದರಲ್ಲಿ ಇರುವಂತಹ ಅಂಶ ಆಚೆ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ ಅಂತಹ ಸಂದರ್ಭದಲ್ಲಿ ಫ್ರಿಡ್ಜ್ ಹಾಳಾಗುವ ಸಾಧ್ಯತೆ ಇರುತ್ತದೆ.

* ಫ್ರಿಜ್ ನಲ್ಲಿರುವಂತಹ ಕಂಡೆನ್ಸರ್ ಕಾಯಿಲ್ ಗಳನ್ನು ಆರು ತಿಂಗಳಿ ಗೊಮ್ಮೆ ಸ್ವಚ್ಛ ಮಾಡುವುದು ಉತ್ತಮ. ಕೆಲವೊಂದಷ್ಟು ಜನ ಇದನ್ನು ಗಮನಿಸುವುದೇ ಇಲ್ಲ ಇದರ ಸುತ್ತ ಧೂಳು ಎಲ್ಲ ಕೂತಿರುತ್ತದೆ ಇದರಿಂದ ಫ್ರಿಡ್ಜ್ ನಲ್ಲಿ ಕೂಲಿಂಗ್ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇದನ್ನು ಗಮನಿಸುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಅಕ್ಷಯ ತೃತೀಯದಂದು ನಿಮ್ಮ ರಾಶಿಗೆ ಅನುಗುಣವಾಗಿ ಈ ವಸ್ತು ಖರೀದಿಸಿದರೆ ಬದುಕು ಬಂಗಾರ.!

 

ಅಕ್ಷಯ ತೃತೀಯವನ್ನು ಮೇ 10 ರಂದು ಆಚರಿಸಲಾಗುವುದು. ಈ ದಿನ ಚಿನ್ನ, ವಾಹನಗಳು, ಗ್ಯಾಜೆಟ್ ಗಳಲ್ಲದೆ ಕೆಲವು ವಿಶೇಷ ವಸ್ತುಗಳನ್ನು ಸಹ ಖರೀದಿಸಬಹುದು ಇದು ಲಕ್ಷ್ಮಿ ದೇವಿಯನ್ನು ಸಂತೋಷ ಪಡಿಸುತ್ತದೆ. ರಾಶಿ ಚಿಹ್ನೆಯ ಪ್ರಕಾರ ಅಕ್ಷಯ ತೃತೀಯದಂದು ಏನನ್ನು ಖರೀದಿಸಬೇಕು ಎಂದು ಇಲ್ಲಿ ತಿಳಿಯಿರಿ ಅಕ್ಷಯ ತೃತೀಯ ತುಂಬಾ ಮಂಗಳಕರವಾದ ದಿನವಾಗಿದೆ.

ಈ ದಿನ ಖರೀದಿಸಿದ ವಸ್ತುವು ಶಾಶ್ವತ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ಚಿನ್ನ ಅಥವಾ ಬೆಳ್ಳಿಯಿಂದ ತಯಾರಿಸಿದ ಆಭರಣಗಳನ್ನು ತೆಗೆದು ಕೊಂಡು ಮನೆಗೆ ಲಕ್ಷ್ಮಿ ಬರುತ್ತಾಳೆ ಎಂಬ ನಂಬಿಕೆ ಇದೆ. ಅಕ್ಷಯ ತೃತೀಯದಂದು ಖರೀದಿಸುವ ಮೂಲಕ ಹೆಚ್ಚಿನ ಶುಭ ಫಲಿತಾಂಶಗಳನ್ನು ಪಡೆಯಬಹುದಾದ ಕೆಲವು ವಿಷಯಗಳಿವೆ. ಅಕ್ಷಯ ತೃತೀಯದಂದು ರಾಶಿ ಚಿಹ್ನೆಯ ಪ್ರಕಾರ ನೀವು ಏನನ್ನು ಖರೀದಿಸಬಹುದು ಎಂದು ತಿಳಿಯಿರಿ.

* ಮೇಷ ರಾಶಿ :- ಅಕ್ಷಯ ತೃತೀಯ ದಿನದಂದು ಮೇಷ ರಾಶಿಗೆ ಸೇರಿದ ಜನರು ಬಾರ್ಲಿ, ಚಿನ್ನ, ತಾಮ್ರದ ಪಾತ್ರೆ ಅಥವಾ ತಾಮ್ರದಿಂದ ಮಾಡಿದ ಪಾತ್ರೆಗಳನ್ನು ಖರೀದಿಸಬೇಕು. ಇವುಗಳನ್ನು ಈ ದಿನ ಖರೀದಿಸುವುದ ರಿಂದ ನಿಮಗೆ ಒಳಿತಾಗುವುದು.

* ವೃಷಭ ರಾಶಿ :- ವೃಷಭ ರಾಶಿಯವರು ಅಕ್ಷಯ ತೃತೀಯದಂದು ಅಕ್ಕಿ, ಬೆಳ್ಳಿ, ರಾಗಿ, ಕವಡೆಯನ್ನು ಖರೀದಿಸಬೇಕು. ಅಕ್ಷಯ ತೃತೀಯದಂದು ಈ ವಸ್ತುಗಳನ್ನು ಮನೆಗೆ ತರುವುದರಿಂದ ನಿಮಗೆ ಶುಭವಾಗಲಿದೆ.
* ಮಿಥುನ ರಾಶಿ :- ಅಕ್ಷಯ ತೃತೀಯದಂದು ಮಿಥುನ ರಾಶಿಯವರು ಹಸಿರು ಬಟ್ಟೆಗಳನ್ನು ಖರೀದಿಸಬಹುದು. ಇದು ಮಿಥುನ ರಾಶಿಗೆ ಸೇರಿದ ಜನರ ಅದೃಷ್ಟವನ್ನು ಹೆಚ್ಚಿಸುತ್ತದೆ.

* ಕಟಕ ರಾಶಿ :- ಅಕ್ಷಯ ತೃತೀಯದ ದಿನದಂದು ಕರ್ಕಾಟಕ ರಾಶಿ ಯವರು ಗೋಮತಿ ಚಕ್ರ, ಬೆಳ್ಳಿ ಖರೀದಿಸಿದರೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಶುಭ ದಿನದಂದು ತಪ್ಪದೇ ಇವುಗಳನ್ನು ಖರೀದಿಸಿ.

* ಸಿಂಹ ರಾಶಿ : – ಅಕ್ಷಯ ತೃತೀಯದ ದಿನದಂದು ಸಿಂಹ ರಾಶಿಯ ಜನರು ಯಾವುದೇ ತಾಮ್ರದ ವಸ್ತುವನ್ನು ಖರೀದಿಸಬಹುದು ಶ್ರೀ ಯಂತ್ರವನ್ನು ಖರೀದಿಸುವುದು ಸಹ ಶುಭವಾಗಿರುತ್ತದೆ. ಇದರಿಂದಾಗಿ ಲಕ್ಷ್ಮಿ ಮನೆಯಲ್ಲಿ ಶಾಶ್ವತವಾಗಿ ವಾಸಿಸುತ್ತಾಳೆ ಎಂದು ಹೇಳಲಾಗುತ್ತದೆ.

* ಕನ್ಯಾ ರಾಶಿ :- ಕನ್ಯಾ ರಾಶಿಗೆ ಸೇರಿದ ಜನರು ಅಕ್ಷಯ ತೃತೀಯದಂದು ತುಳಸಿ ಗಿಡವನ್ನು ಮನೆಗೆ ತರಬೇಕು. ಈ ಅಕ್ಷಯ ತೃತೀಯದಂದು ನೀವು ತುಳಸಿ ಗಿಡವನ್ನು ಮನೆಗೆ ತಂದರೆ ನಿಮ್ಮ ಹಣಕಾಸಿನ ತೊಂದರೆಗಳು ದೂರ ಉಳಿಯುತ್ತದೆ.

* ತುಲಾ ರಾಶಿ :- ಅಕ್ಷಯ ತೃತೀಯದ ಶುಭ ದಿನದಂದು ತುಲಾ ರಾಶಿ ಯವರು ಶಂಖ, ಗ್ಯಾಜೆಟ್ ಗಳು, ಚಿನ್ನವನ್ನು ಖರೀದಿಸುವುದು ನಿಮಗೆ ಶುಭವನ್ನುಂಟು ಮಾಡಲಿದೆ. ಹಾಗಾಗಿ ನೀವು ತುಲಾ ರಾಶಿಯವರಾಗಿದ್ದರೆ ತಪ್ಪದೇ ಇವುಗಳನ್ನು ಖರೀದಿಸಿ.

* ವೃಶ್ಚಿಕ ರಾಶಿ : – ನೀವು ವೃಶ್ಚಿಕ ರಾಶಿಗೆ ಸೇರಿದವರಾಗಿದ್ದರೆ ಅಕ್ಷಯ ತೃತೀಯದ ದಿನ ನೀವು ಬೆಲ್ಲ, ಚಿನ್ನ, ಬಾರ್ಲಿಯನ್ನು ಖರೀದಿಸಿದರೆ ನಿಮ್ಮ ಸಂಪತ್ತು ಬಹಳಷ್ಟು ಹೆಚ್ಚಾಗಲಿದೆ. ಜೊತೆಗೆ ನಿಮ್ಮ ಮನೆ ಯಾವಾಗಲೂ ಹಣದಿಂದ ತುಂಬಿರುತ್ತದೆ.

* ಧನು ರಾಶಿ :- ಅಕ್ಷಯ ತೃತೀಯದಂದು ಧನು ರಾಶಿಗೆ ಸೇರಿದ ಆ ಜನರು ಹಿತ್ತಾಳೆ ಅಥವಾ ಹಿತ್ತಾಳೆಯಿಂದ ತಯಾರಿಸಿದ ಪಾತ್ರೆಗಳು ಶ್ರೀ ಕೃಷ್ಣನ ಮೂರ್ತಿಯನ್ನು ಮನೆಗೆ ತರಬೇಕು. ಹೀಗೆ ಮಾಡುವುದರಿಂದ ನಿಮ್ಮ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

* ಮಕರ ಮತ್ತು ಕುಂಭ ರಾಶಿ :- ಅಕ್ಷಯ ತೃತೀಯ ದಿನದಂದು ಮಕರ ರಾಶಿ ಮತ್ತು ಕುಂಭ ರಾಶಿಗೆ ಸೇರಿದ ಜನರು ಬೆಳ್ಳಿ, ಬೆಳ್ಳಿ ಆಭರಣಗಳು, ಕಪ್ಪು ಎಳ್ಳನ್ನು ಖರೀದಿಸುವುದು ಶುಭಕರವಾಗಿರುತ್ತದೆ. ನೀವು ಈ ರಾಶಿಯವರಾಗಿದ್ದರೆ ಈ ಶುಭ ದಿನದಂದು ಈ ವಸ್ತುಗಳನ್ನು ಖರೀದಿಸಿ.

* ಮೀನ ರಾಶಿ :- ಅಕ್ಷಯ ತೃತೀಯದಂದು ನೀವು ಬಾರ್ಲಿ, ಚಿನ್ನ, ಅರಿಶಿನ ಮತ್ತು ಬೇಳೆ ಕಾಳುಗಳನ್ನು ಮನೆಗೆ ತರಬಹುದು. ಇದು ಗುರುವಿನ ಆಶೀರ್ವಾದವನ್ನು ಪಡೆಯುವಂತೆ ಮಾಡುತ್ತದೆ ಎಂದು ನಂಬಲಾಗಿದೆ. ಇದರಿಂದಾಗಿ ಲಕ್ಷ್ಮೀದೇವಿಯು ಪ್ರಸನ್ನಳಾಗುತ್ತಾಳೆ ಎಂದು ಹೇಳಲಾಗುತ್ತದೆ.