Home Blog Page 235

ಈಗ್ಲೂ ಹೇಳ್ತಾ ಇದ್ದಿನಿ ನನ್ನ ಗಂಡ ರೈತನೇ.! ಹರ್ದೊಗಿರೋ ಬಟ್ಟೆ ಹಾಕೊಂಡ್ರೆ ಮಾತ್ರ ರೈತನಾ.? ಎಲ್ಲಾ ನನ್ನ ಹಣೆಬರಹ ಎಂದು ಗರಂ ಆದ ನಟಿ ಅಧಿತಿ ಪ್ರಭುದೇವ್.

0

 

ರೈತನ್ನ ಮದ್ವೆ ಆಗ್ತಿನಿ ಅಂತೇಳಿ ಕೋಟ್ಯಾಧಿಪತಿ ಮದ್ವೆ ಆಗಿದ್ದಿರ ಅಂದೋರಿಗೆ ಅದಿತಿ ಕೊಟ್ಟ ಉತ್ತರ. ಅಧಿತಿ ಪ್ರಭುದೇವ್ (Actress Adithi Prabhudev) ಅವರು ಕಳೆದ ವರ್ಷಾಂತ್ಯದಲ್ಲಿ ವೈವಾಹಿಕ ಜೀವನಕ್ಕೆ (marriage life) ಕಾಲಿಟ್ಟರು. ಸದ್ಯಕ್ಕೆ ಕನ್ನಡದಲ್ಲಿ ಅತಿ ಹೆಚ್ಚು ಬೇಡಿಕೆ ನಟಿಯಾಗಿರುವ ಅಧಿತಿ ಪ್ರಭುದೇವ್ ಅವರು ತಮ್ಮ ಕೆರಿಯರ್ ಅವರನ್ನು ಬಿಟ್ಟು ಉದ್ಯಮಿ ಯಶಸ್ (Yashas) ಅನ್ನುವವರನ್ನು ಕೈ ಹಿಡಿದರು. ಮೂಲತಃ ಚಿಕ್ಕಮಂಗಳೂರಿನವರಾದ ಯಶಸ್ ಅವರು ರೈತ ಕೂಡ ಆಗಿದ್ದಾರೆ ಎಂದು ಅಧಿತಿ ಪ್ರಭುದೇವ್ ಅವರು ಹೇಳಿಕೊಳ್ಳುತ್ತಾರೆ.

ಯಾಕೆಂದರೆ ಈ ಹಿಂದೆ ಅಧಿತಿ ಪ್ರಭುದೇವ್ ಅವರು ಮದುವೆ ವಿಚಾರ ಬಂದಾಗ ತಾನು ಮದುವೆ ಆಗುವುದಾದರೆ ರೈತರನ್ನೇ (farmer) ಮದುವೆಯಾಗುವುದು ಯಾಕೆಂದರೆ ತಾನು ಕೂಡ ರೈತ ಕುಟುಂಬದಿಂದ ಬಂದಿರುವವಳು ಅವರ ಬೆಲೆ ನನಗೆ ಗೊತ್ತು ಹೆಮ್ಮೆಯಿಂದ ರೈತನ ಕೈ ಹಿಡಿಯುತ್ತೇನೆ ಎಂದು ಹೇಳಿಕೊಂಡಿದ್ದರು. ಈಗ ಅವರ ಪತಿ ಜೊತೆ ತೆಗೆಸಿಕೊಂಡಿರುವ ಫೋಟೋಗಳನ್ನು ನೋಡಿದರೆ ಅವರು ಯಾವೊಬ್ಬ ಸೆಲೆಬ್ರಿಟಿಗು ಕಡಿಮೆ ಇಲ್ಲದಂತೆ ಕಾಣುತ್ತಾರೆ.

ಸದಾ ಫ್ಯಾಷನ್ ಲುಕ್ ಅಲ್ಲಿ ಕಂಗೊಳಿಸುತ್ತಿರುವ ಇವರನ್ನು ರೈತರು ಎಂದು ಹೇಳುವುದು ಕಷ್ಟ ಮೊದ ಮೊದಲಿಗೆ ಎಲ್ಲರಿಗೂ ಸಮಜಾಯಿಸಿಕೊಡುವ ಪ್ರಯತ್ನ ಮಾಡಿದರು ಇತ್ತೀಚೆಗೆ ಅವರ ತಾಳ್ಮೆ ಕಟ್ಟೆ ಹೊಡೆದಂತೆ ಕಾಣುತ್ತಿದೆ. ಹಾಗಾಗಿ ಈ ಬಾರಿ ಸ್ವಲ್ಪ ಖಾರವಾಗಿಯೇ ಉತ್ತರಿಸಿದ್ದಾರೆ. ಒಂದು ಕಡೆ ಅವರ ಮದುವೆ ವಿಚಾರವನ್ನು ತೆಗೆದುಕೊಂಡು ಪ್ರಶ್ನೆ ಮಾಡಲಾಗಿದೆ, ಅದಕ್ಕೆ ನಾನು ಎಷ್ಟು ಹೇಳಿದರು ಯಾರು ನಂಬುವುದಿಲ್ಲ, ರೈತ ಎಂದರೇನು ನಿಮ್ಮ ಪ್ರಕಾರ ಹರಿದು ಹೋಗಿರುವ ಬಟ್ಟೆ ಹಾಕಿಕೊಂಡು ಇರಬೇಕಾ.?

ಸ್ಟೈಲ್ ಆಗಿ ಕಾಣಿಸಿಕೊಳ್ಳುವವರು, ಕೂಲಿಂಗ್ ಗ್ಲಾಸ್ ಹಾಕಿಕೊಳ್ಳುವವರು, ಫ್ಯಾಶನ್ ಮಾಡುವವರು ರೈತರಾಗಿರಬಾರದಾ.? ನನ್ನ ತಂದೆ ಮನೆಯಲ್ಲಿ ತಂದೆ ದೊಡ್ಡಪ್ಪ ಚಿಕ್ಕಪ್ಪ ಮಾವ ಎಲ್ಲರೂ ರೈತರೇ ಆಗಿದ್ದಾರೆ. ಅವರು ಹೈ-ಸಫಸ್ಟಿಕೇಟ್ ಬದುಕು ಬದುಕುತ್ತಿದ್ದಾರೆ. ರೈತರು ಎಂದರೆ ದೇಶಕ್ಕೆ ಊಟ ಕೊಡುವವರು, ಅನ್ನ ಹಾಕೋ ಶ್ರೀಮಂತರು. ಅವರು ಘನತೆಯಿಂದ ಬದುಕಬೇಕು. ಯಾವ ವಿಚಾರದ ಲೆಕ್ಕ ಹಾಕಿ ನನ್ನ ಪತಿ ರೈತ ಅಲ್ಲ ಎನ್ನುತ್ತಿದ್ದೀರಾ ಈಗಷ್ಟೇ ಹೋಗಿ ಕಾಫಿ ತೋಟ, ಕಬ್ಬು ಬೆಳೆ ಎಲ್ಲವನ್ನು ನೋಡಿಕೊಂಡು ಬಂದಿದ್ದಾರೆ ಇದೆಲ್ಲ ನನ್ನ ಕರ್ಮ ಎಂದು ಬೇಸರಿಸಿಕೊಂಡು ಉತ್ತರ ಕೊಟ್ಟಿದ್ದಾರೆ.

ಕೊರೋನ ಲಾಕ್ ಡೌನ್ ಸಮಯದಲ್ಲಿ ಚಿತ್ರರಂಗದ ಕೆಲಸ ಕಾರ್ಯಗಳು ಸ್ಥಗಿತ ಆಗಿದ್ದ ಕಾರಣ ಎಲ್ಲರಂತೆ ಅಧಿತಿ ಪ್ರಭುದೇವ್ ಕೂಡ ತಮ್ಮ ಊರು ಸೇರಿದ್ದರು. ರೈತ ಕುಟುಂಬವಾದ ಕಾರಣ ತಮ್ಮನು ತಾವು ಕೃಷಿ ಸಂಬಂಧಿತ ಕೆಲಸಗಳಲ್ಲಿ ತೊಡಿಸಿಕೊಂಡು ಆ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋಗಳನ್ನು ನೋಡಿದ ಕನ್ನಡಿಗರು ಇವರನ್ನು ಹಾಡಿ ಹೊಗಳಿದ್ದರು. ಆ ಸಮಯದಲ್ಲಿ ನಾನು ಇದೇ ರೀತಿ ಬಂದವಳು, ಇದನ್ನೆಲ್ಲಾ ಮಾಡುವುದರಲ್ಲಿ ಮುಜುಗರ ಏನು ಇಲ್ಲ, ಸಂತೋಷ ಸಿಗುತ್ತದೆ.

ನಾನು ನಟಿಯಾಗಿದ್ದರೆ ಅದು ಸಿನಿಮಾದಲ್ಲಿ ಮಾತ್ರ ಅದನ್ನು ಹೊರತು ಪಡಿಸಿ ವೈಯಕ್ತಿಕ ಬದುಕಿನಲ್ಲಿ ಹೀಗೆ ಇರಲು ಇಷ್ಟ ಮದುವೆ ಆಗುವುದಾದರೆ ರೈತನನ್ನೇ ಆಗುವುದು ಎಂದು ಹೇಳಿದ್ದರು. ಆದರೆ ಈಗ ವರಸೆ ಬದಲಾಯಿಸಿ ನನ್ನ ಹಣೆ ಬರಹದಲ್ಲಿ ಯಾರ ಹೆಸರು ಇದೆಯೋ ಅವರನ್ನು ಮದುವೆಯಾಗಿದ್ದೇನೆ. ಅರೆಂಜ್ ಮ್ಯಾರೇಜ್ ಆಗಿದ್ದರು ನನ್ನ ಮದುವೆ ಜೀವನ ಚೆನ್ನಾಗಿದೆ ಅಷ್ಟೇ ಸಾಕು ಎಂದು ಹೇಳುತ್ತಿದ್ದಾರೆ ಈ ಹಿಂದೆ ಇವರಿಗೂ ಮೊದಲು ಶುಭ ಪೂಂಜಾ ಎನ್ನುವ ನಟಿ ಕೂಡ ಇದೇ ರೀತಿ ಮಾಡಿದ್ದರು.

ನಾನು ರೈತನೇ ಮದುವೆಯಾಗುತ್ತೇನೆ ಎಂದು ಹೇಳಿದ ಕಾರಣ ಅವರಿಗೂ ಸಹ ಅನೇಕ ಪ್ರಪೋಸಲ್ಗಳು ರೈತರ ಕುಟುಂಬದಿಂದ ಬಂದಿತ್ತು. ಆದರೆ ನಂತರ ಮಾತು ತಪ್ಪಿ ಇನ್ನೊಬ್ಬರ ಜೊತೆ ಮದುವೆಯಾಗಿ ಈಗ ಸಂತೋಷವಾಗಿದ್ದಾರೆ. ನಟಿ ಮಣಿಯರು ಪ್ರಚಾರಕ್ಕಾಗಿ ಮಾತ್ರ ರೈತರ ಹೆಸರು ಬಳಸಿಕೊಳ್ಳುತ್ತಾರೆ, ಶಾತ್ಸವವಾಗಿ ಅನುಸರಿಸುವುದಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎನ್ನುವುದು ಜನಸಾಮಾನ್ಯರ ಅಸಮಾಧಾನ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ರಿಷಿಕಾ ಮದುವೆ ಕ್ಯಾನ್ಸಲ್, ಮಾಧ್ಯಮಗಳಿಂದ ಸೇಫ್ ಆಗಲು ಸುದೀಪ್ ಸಹಾಯ ಕೋರಿದ ನಟಿ. ರಿಷಿಕಾ ನಾ ಬಚಾವ್ ಮಾಡಲು ಕಿಚ್ಚ ಮಾಡಿದ ಮಾಸ್ಟರ್ ಪ್ಲಾನ್ ಏನು ಗೊತ್ತ.?

0

 

ನಿಶ್ಚಿತಾರ್ಥ ಆಗಿ ಮದುವೆ ಮುರಿದುಕೊಂಡಿದ್ದ ನಟಿ ರಿಷಿಕಾ ಸಿಂಗ್, ಮದುವೆ ಇಂದ ತಪ್ಪಿಸಿಕೊಳ್ಳಲು ಸುದೀಪ್ ಸಹಾಯ ಮಾಡಿದ್ರಾ? ನಟಿ ರಿಷಿಕಾ ಸಿಂಗ್ (Actress Rishika singh) ಕೊರೋನ ಲಾಕ್ ಡೌನ್ ಸಮಯದಲ್ಲಿ ಭೀಕರ ಅ.ಪ.ಘಾ.ತ.ಕ್ಕೆ (Accident) ತುತ್ತಾಗಿದ್ದರು. ಅಂದಿನ ಅವರ ಪರಿಸ್ಥಿತಿ ನೋಡಿ ಇವರು ಬದುಕುತ್ತಾರೆ ಎಂದು ಯಾರಿಗೂ ನಂಬಿಕೆ ಇರ್ಲಿಲ್ಲ. ಸದ್ಯ ಎರಡು ವರ್ಷಗಳ ನಿರಂತರ ಚಿಕಿತ್ಸೆ ಮತ್ತು ಕುಟುಂಬದ ಹಾರೈಕೆಯ ಪರಿಣಾಮವಾಗಿ ಇಂದು ನಟಿ ಚೇತರಿಸಿಕೊಂಡಿದ್ದಾರೆ.

ಇತ್ತೀಚೆಗೆ ರಿಷಿಕಾ ಸಿಂಗ್ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಾಕಿದ್ದರು. ಅವರ ಚಿಕಿತ್ಸೆ ಹಂತಗಳು ಮತ್ತು ಚೇತರಿಕೆ ಲಕ್ಷಣಗಳು ಎಲ್ಲವೂ ಸೇರಿದ ಆ ವಿಡಿಯೋ ಸೋಶಿಯಲ್ ವಿಡಿಯೋ ಹೊಸ ಸಂಚಲನ ಸೃಷ್ಟಿಸಿತ್ತು. ಆನಂತರ ಮಾಧ್ಯಮಗಳನ್ನು ಮತ್ತು ಕೆಲವು ಖಾಸಗಿ ಯು ಟ್ಯೂಬ್ ಚಾನೆಲ್ ಗಳು ನಿರಂತರವಾಗಿ ರಿಷಿಕಾ ಅವರನ್ನು ಸಂದರ್ಶನ ಮಾಡುತ್ತಾ ಅವರ ಬದುಕಿನ ಕುರಿತ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಹೀಗೆ ಅವರ ಮದುವೆ (marriage) ಕುರಿತ ಒಂದು ಪ್ರಶ್ನೆ ಎದುರಾಗಿದ್ದಕ್ಕೆ ರಿಷಿಕಾ ಅವರ ಹಿಂದಿನ ನಿಶ್ಚಿತಾರ್ಥದ ವಿಷಯ ಹೇಳಿಕೊಂಡು ಆ ವಿಷಯದಿಂದ ಆಚೆ ಬರಲು ಸುದೀಪ್ (Sudeep) ಅವರ ಸಹಾಯ ಕೇಳಿದ್ದನ್ನು ಕೂಡ ಹೇಳಿಕೊಂಡು ಸುದೀಪ್ ಅವರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ಹೇಳಿದ್ದಾರೆ. ಯಾಕೆಂದರೆ 2013ರಲ್ಲಿ ಕೇರಳ ಮೂಲದ ಸಂದೀಪ್ ಎನ್ನುವವರ ಜೊತೆ ರಿಷಿಕಾ ಸಿಂಗ್ ಮದುವೆ ನಿಶ್ಚಯವಾಗಿತ್ತು ಏಪ್ರಿಲ್ 14ರಂದು ನಿಗದಿ ಆಗಿದ್ದ ಮದುವೆಗೆ ಡಿಸೆಂಬರ್ ತಿಂಗಳಿನಲ್ಲಿಯೇ ನಿಶ್ಚಿತಾರ್ಥ ಕೂಡ ಆಗಿ ಸರ್ವಸಿದ್ಧತೆಯೂ ನಡೆದಿತ್ತು.

ಆದರೆ ಮದುವೆಗೆ ಕೆಲವೇ ದಿನಗಳು ಇರುವಾಗ ಸಂದೀಪ್ ಹಾಗೂ ರಿಷಿಕಾ ಮಾತನಾಡಿಕೊಂಡು ಮದುವೆ ಮುರಿದುಕೊಂಡರು, ಆದರೆ ಅದಕ್ಕೆ ಕಾರಣವನ್ನು ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿ ಇಬ್ಬರು ಇರಲಿಲ್ಲ. ಆ ಸಮಯದಲ್ಲಿ ರಿಷಿಕಾ ಮನೆಯಿಂದ ಬಹಳ ಒತ್ತಡ ಇತ್ತಂತೆ, ರಿಷಿಕ ಅಣ್ಣ ಆದಿ ಇಬ್ಬರಿಗೂ ಸಹ ಆತ್ಮೀಯರಾಗಿದ್ದ ಕಾರಣ ಅವರು ಮಾತು ಬಿಟ್ಟಿದ್ದರಂತೆ. ಇದನ್ನೆಲ್ಲ ನಿಭಾಯಿಸಲಾಗದೆ ಸೋತು ಹೋಗಿದ್ದರಂತೆ ರಿಷಿಕಾ.

ಆಗ ಒಂದು ದಿನ ಬಹಳ ದುಃಖವಾಗಿ ಅಳುತ್ತಾ ಸುದೀಪ್ ಅವರಿಗೆ ಫೋನ್ ಮಾಡಿದ್ದರಂತೆ. ಆ ಕಡೆಯಿಂದ ಎರಡೇ ರಿಂಗಿಗೆ ಕರೆ ಸ್ವೀಕರಿಸಿದ ಸುದೀಪ್ ಅವರ ಜೊತೆ ತಾನು ರಿಷಿಕಾ ಎಂದು ಮಾತು ಶುರು ಮಾಡಿ ಈ ರೀತಿ ಆಗಿದೆ ಎಂದು ನಡೆದ ಘಟನೆಯನ್ನೆಲ್ಲಾ ವಿವರಿಸಿದರಂತೆ. ಜೊತೆಗೆ ನಮ್ಮ ಮನೆಯಲ್ಲಿ ಇರಲು ಆಗುತ್ತಿಲ್ಲ, ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇರಲು ಆಗುತ್ತಿಲ್ಲ, ಜೊತೆಗೆ ಮಾಧ್ಯಮದವರನ್ನು ಎದುರಿಸಬೇಕಾಗಿದೆ. ಇದೆಲ್ಲದರಿಂದ ಹೊರ ಬರಲು ಸಹಾಯ ಮಾಡಿ.

ನನ್ನನ್ನು ದೂರದ ಹಾಸ್ಟೆಲ್ ಗೆ ಸೇರಿಸಿಬಿಡಿ ಇಲ್ಲ, ಬಿಗ್ ಬಾಸ್ ಮನೆಗೆ ಹಾಕಿಬಿಡಿ ಎಂದು ಕೇಳಿಕೊಂಡಿದ್ದರಂತೆ. ಈ ಹಿಂದೆ ಬಿಗ್ ಬಾಸ್ ಆಫರ್ ಅವರಿಗೆ ಹೋಗಿದ್ದರೂ ರಿಷಿಕಾ ರಿಜೆಕ್ಟ್ ಮಾಡಿದ್ದರಂತೆ. ಆದರೆ ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ರಾಘು ಕರೆ ಮಾಡುತ್ತಾರೆ ಸಂಭಾವನೆ ನಿಗದಿಪಡಿಸಿಕೊಳ್ಳಿ ಎಂದು ಹೇಳಿ ಸಮಾಧಾನ ಮಾಡಿದರಂತೆ.

ನನ್ನ ಡಿ’ಪ್ರೆ’ಷ’ನ್ ಮತ್ತು ಆ ಸಮಯದಲ್ಲಿ ಕೆಲಸ ಇರಲಿಲ್ಲ ಆ ಸಮಸ್ಯೆ ,ಹಣದ ಸಮಸ್ಯೆ ಎಲ್ಲವೂ ಒಂದೇ ಒಂದು ಕರೆಯಲ್ಲಿ ಸರಿಯಾಗಿ ಹೋಯಿತು ಎಂದು ಕಿಚ್ಚನ ಸಹಾಯ ನೆನೆದಿದ್ದಾರೆ ರಿಷಿಕಾ. ಜೊತೆಗೆ ನನ್ನ ಕೋಪ ದುಃಖ ಎಲ್ಲವನ್ನು ಬಿಗ್ ಬಾಸ್ (Bigboss) ಮನೆಯಲ್ಲಿ ಎಲ್ಲರಿಗೂ ತೋರಿಸಿಕೊಳ್ಳುತ್ತಿದ್ದೆ ಎಂದು ಅದನ್ನು ಸಹ ಓಪನ್ ಆಗಿ ಹೇಳಿಕೊಂಡಿದ್ದಾರೆ.

ಕೊನೆಗೂ ತಮ್ಮ ಲವ್ ಸ್ಟೋರಿ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡ ಕಾಂತಾರ ಚೆಲುವೆ ಲೀಲಾ ಅಲಿಯಾಸ್ ಸಪ್ತಮಿ ಗೌಡ

 

ವ್ಯಾಲೆಂಟೈನ್ಸ್ ಡೇ ದಿನ ಖಾಸಗಿ ಚಾನೆಲ್ ಅಲ್ಲಿ ಮೊದಲ ಪ್ರೀತಿ ಬಗ್ಗೆ ಹೇಳಿಕೊಂಡ ಕಾಂತಾರ ಖ್ಯಾತಿ ಲೀಲಾ ಸದ್ಯಕ್ಕೆ ನಟಿ ಸಪ್ತಮಿ ಗೌಡ (actress Sapthami Gowda) ಅವರು ಅವರ ಮೂಲ ಹೆಸರಿಗಿಂತ ಲೀಲಾ (Kanthara Leela) ಹೆಸರಿನಿಂದ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಕಾಂತಾರ ಸಿನಿಮಾದ ಸಕ್ಸಸ್ ಈಗ ದೇಶದಾದ್ಯಂತ ಇವರನ್ನು ಇದೇ ಹೆಸರಿನಿಂದ ಗುರುತಿವಂತೆ ಮಾಡಿದೆ ಸಿನಿಮಾದಲ್ಲಿ ಇವರ ಮುಗ್ಧ ಮತ್ತು ಸಹಜ ಅಭಿನಯ ಎಲ್ಲರ ಮನ ಗೆದ್ದಿದೆ.

ಜೊತೆಗೆ ಸಿನಿಮಾದಿಂದ ಆಚೆಗೂ ಇವರ ನಿಜ ವ್ಯಕ್ತಿತ್ವ ಇವರನ್ನು ಇನ್ನಷ್ಟು ಜನರ ಮನಸ್ಸಿಗೆ ಹತ್ತಿರವಾಗಿಸಿದೆ. ಬಹಳ ಸರಳ ಜೀವಿ ಆಗಿರುವ ಸಪ್ತಮಿ ಗೌಡ ಅವರು ಮಾಡಿರುವ ಸಾಧನೆ ಇಡೀ ದೇಶವೇ ಕೊಂಡಾಡುವಂಥದ್ದು. ನ್ಯಾಷನಲ್ ಮಟ್ಟದ ಸ್ವಿಮ್ಮರ್ (National level Swimming Athlit) ಆಗಿರುವ ಇವರು ವಿದೇಶಕ್ಕೆ ಹೋಗಿ ವೈದ್ಯಕೀಯ ವೃತ್ತಿ ಮಾಡಬೇಕಿತ್ತು, ಆದರೆ ಸಿನಿಮಾ ಬಗೆಗಿನ ಆಸಕ್ತಿ ಇವರನ್ನು ಕನ್ನಡಕ್ಕೆ ಒಬ್ಬ ಭರವಸೆಯ ನಟಿ ದೊರಕುವಂತೆ ಮಾಡಿದೆ.

ಕಾಂತಾರ ಸಿನಿಮಾದ ನಂತರ ಸಾಕಷ್ಟು ಕನ್ನಡ ಮತ್ತು ಪರಭಾಷೆಯ ಸಿನಿಮಾ ಆಫರ್ ಗಳು ಇವರ ಪಾಲಿಗೆ ಒದಗಿ ಬರುತ್ತಿದೆ. ಇದರ ನಡುವೆ ಈಗಾಗಲೇ ಕಾಂತಾರ ಸಿನಿಮಾದ ಸಕ್ಸಸ್ ಮೀಟ್ ಸೇರಿದಂತೆ ಅನೇಕ ಸಂದರ್ಶನಗಳಲ್ಲಿ ಮತ್ತು ಕಾರ್ಯಕ್ರಮದ ವೇದಿಕೆಗಳಲ್ಲಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕಿರುತೆರೆಯ ಕಾರ್ಯಕ್ರಮಗಳಿಗೂ ಕೂಡ ಬಂದು ಬರಪೂರ ಮನರಂಜನೆಯನ್ನು ನೀಡುವ ಸಪ್ತಮಿ ಗೌಡ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ (Star Suvarna) ಪ್ರಸಾರವಾಗುತ್ತಿರುವ ಬೊಂಬಾಟ್ ಭೋಜನ (Bombat Bojana) ಎನ್ನುವ ಕಾರ್ಯಕ್ರಮಕ್ಕೂ ಆಗಮಿಸಿದ್ದಾರೆ.

ಸಿಹಿ ಕಹಿ ಚಂದ್ರು (Sihi kahi Chandru) ಅವರ ನಡೆಸಿಕೊಡುವ ಈ ಕಾರ್ಯಕ್ರಮಕ್ಕೆ ವ್ಯಾಲೆಂಟೈನ್ಸ್ ಡೇ ಸ್ಪೆಷಲ್ (Valentine’s day special) ಆಗಿ ಅನೇಕ ಅತಿಥಿಗಳನ್ನು ಕರೆತರಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಪ್ತಮಿ ಗೌಡ ಅವರು ಸಹ ಆಗಮಿಸಿ, ವಿಶೇಷ ಅಡುಗೆಯನ್ನು ಮಾಡಿ ವೈಯುಕ್ತಿಕ ಜೀವನದ ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಾ ಜೊತೆಗೆ ಪ್ರೇಕ್ಷಕರಿಗೆ ಮೊದಲ ಪ್ರೇಮದ ಬಗ್ಗೆ ಕೂಡ ವಿವರಿಸಿದ್ದಾರೆ.

ಪ್ರೇಮಿಗಳ ದಿನ ಎನ್ನುವ ವಿಶೇಷತೆಗೆ ಪ್ರತಿಯೊಬ್ಬರನ್ನು ತಮ್ಮ ಪ್ರೀತಿಯ ಕುರಿತು ಮಾತನಾಡುವ ರೀತಿ ಮಾಡಿಬಿಡುತ್ತದೆ. ಹಾಗೆ ಸಪ್ತಮಿ ಗೌಡ ಅವರು ಕೂಡ ಮಾತನಾಡಿ ಪ್ರೀತಿ ಎಂದರೆ ನನಗೆ ವಿಶ್ವಾಸ, ಪ್ರಾಮಾಣಿಕತೆ ಮತ್ತು ನಂಬಿಕೆಯ ಸಮಿಶ್ರಣ ಆಗಿದೆ. ನಾನು ಕೂಡ ಪ್ರೀತಿಯಲ್ಲಿ ಬಿದ್ದಿದ್ದೇನೆ ಆದರೆ ಇದುವರೆಗೆ ಅವರಿಗೆ ಅದರ ಬಗ್ಗೆ ತಿಳಿಸೇ ಇಲ್ಲ ಎಂದು ಹೇಳಿ ಈಗಲೇ ಕರೆ ಮಾಡುತ್ತೇನೆ ಎನ್ನುತ್ತಾ ತನ್ನ ತಂದೆಗೆ ಕರೆ ಮಾಡಿ ಪ್ರೇಕ್ಷಕರಿಗೆಲ್ಲರಿಗೂ ಶಾ’ಕ್ ಕೊಟ್ಟಿದ್ದಾರೆ.

ಎಲ್ಲಾ ಹೆಣ್ಣು ಮಕ್ಕಳಿಗೂ ಕೂಡ ತನ್ನ ತಂದೆಯೇ ತನ್ನ ವ್ಯಾಲಂಟೈನ್ ಆಗಿರುತ್ತಾರೆ. ಅಪ್ಪ ತೋರಿದ ಪ್ರೀತಿ, ವಿಶ್ವಾಸ ಮತ್ತು ಅಪ್ಪನ ಮೇಲೆ ಇರುವ ಅಪಾರ ನಂಬಿಕೆ ಮತ್ತೊಬ್ಬರಿಂದ ಆ ಸ್ಥಾನ ತುಂಬಿಸಲು ಸಾಧ್ಯವೇ ಇಲ್ಲ. ಹಾಗಾಗಿ ಅಪ್ಪನ ವಿಶೇಷವಾಗಿ ಮಾತನಾಡಿ ಎಲ್ಲರ ಮನ ಗೆದ್ದಿದ್ದಾರೆ ಸಪ್ತಮಿ ಗೌಡ. ಸಪ್ತಮಿ ಗೌಡ ಅವರ ತಂದೆ ಉಮೇಶ್ ಗೌಡ ಅವರು ಬೆಂಗಳೂರಿನ ಹೆಸರಾಂತ ಪೊಲೀಸ್ ಅಧಿಕಾರಿ ಆಗಿದ್ದಾರೆ. ಇಂದು ಈಕೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಅವರಿಗೆ ಬೆಂಬಲ ನೀಡಿದ ಅವರ ತಂದೆಯೇ ಕಾರಣ ಆಗಿದ್ದಾರೆ.

ಅದನ್ನು ಅನೇಕ ಬಾರಿ ಸಂದರ್ಶನಗಳಲ್ಲಿ ಸಪ್ತಮಿ ಅವರು ಹೇಳಿಕೊಂಡಿದ್ದಾರೆ. ತಮ್ಮ ವ್ಯಾಲೆಂಟೈನ್ಸ್ ದಿನವನ್ನು ಮಧ್ಯಾಹ್ನ ನಿದ್ದೆ ಮಾಡುವುದು, ಹೊಟ್ಟೆ ತುಂಬಾ ಇಷ್ಟವಾದ ತಿಂಡಿ ತಿನ್ನುವುದು ಮತ್ತು ಸಂಜೆ ಸಿನಿಮಾ ನೋಡುವ ಮೂಲಕ ಕಳೆಯುತ್ತೇನೆ ಎಂದು ಸಪ್ತಮಿ ಗೌಡ ಹೇಳಿಕೊಂಡಿದ್ದಾರೆ. ನಟಿ ಸಪ್ತಮಿ ಗೌಡ ಅವರು ಇದೇ ರೀತಿ ಸಾಕಷ್ಟು ಹೆಸರು ಮಾಡಲಿ ಮುಂದಿನ ವರ್ಷ ಪ್ರಿಯತಮನೊಂದಿಗೆ ಪ್ರೇಮಿಗಳ ದಿನವನ್ನು ಆಚರಿಸಿಕೊಳ್ಳುವಂತಾಗಲಿ ಎಂದು ಹಾರೈಸೋಣ.

ಸತ್ಯ ಸಿಂಹ ಇದ್ದಂತೆ, ಅದನ್ನು ಯಾರು ರಕ್ಷಿಸಬೇಕಾಗಿಲ್ಲ ಎಂದು ಕಣ್ಣಿರಿಟ್ಟ ವಿಜಯಲಕ್ಷ್ಮಿ.

0

 

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರ ಪತ್ನಿ ವಿಜಯಲಕ್ಷ್ಮಿ (wife Vijayalakshmi) ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟಿವ್ ಆಗಿ ಇರುತ್ತಾರೆ. ಆದರೆ ಹೆಚ್ಚಾಗಿ ಅವರು ಯಾವ ವಿಷಯದ ಬಗ್ಗೆಯೂ ಪ್ರತಿಕ್ರಿಯೆ ಕೊಡುತ್ತಿರಲಿಲ್ಲ ಇತ್ತೀಚಿಗೆ ಕ್ರಾಂತಿ ಸಿನಿಮಾದ ಪ್ರಚಾರದ ವೇಳೆ ದರ್ಶನ್ ಅವರ ಬಗ್ಗೆ ಕುತಂತ್ರದಿಂದ ನೆಗೆಟಿವ್ ಆಗಿ ಸುದ್ದಿ ಆಗುತ್ತಿದ್ದ ವೇಳೆ ಮಾತ್ರ ಪತಿ ಬಗ್ಗೆ ತಮ್ಮ ಧ್ವನಿ ಎತ್ತಿದ್ದರು.

ಆಗಿನಿಂದ ಎಲ್ಲರೂ ಸಹ ವಿಜಯಲಕ್ಷ್ಮಿ ಅವರ ಸೋಶಿಯಲ್ ಮೀಡಿಯಾ ಖಾತೆ ಮೇಲೆ ಒಂದು ಕಣ್ಣು ಇಟ್ಟಿದ್ದರು ಎಂದು ಹೇಳಬಹುದು. ಆದರೆ ಇದೀಗ ಕುಟುಂಬದ ಪರವಾಗಿ ಮತ್ತೊಬ್ಬ ನಟಿಯ ಮೇಲೆ ಸರಿಯಾಗಿ ಚಾಟಿ ಬಿಸಿದ್ದಾರೆ. ಆದರೆ ಈ ಬಾರಿಯೂ ದರ್ಶನ್ ಅವರ ಕುರಿತ ವಿಚಾರವಾಗಿ ಆಕೆಯನ್ನು ತರಾಟೆಗೆ ತೆಗೆದುಕೊಂಡು ಬುದ್ಧಿ ಹೇಳಿದ್ದಾರೆ, ಅದು ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ.

ಮೊನ್ನೆ ಅದ್ದೂರಿಯಾಗಿ ದರ್ಶನ್ ಅವರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಣೆ ಆಗಿತ್ತು. ತಡರಾತ್ರಿಯಿಂದಲೇ ಮನೆ ಅತ್ತ ಧಾವಿಸಿದ ಅಭಿಮಾನಿಗಳು ಕೈಕುಲಕಿ ನೆಚ್ಚಿನ ನಟನನ್ನು ನೋಡಿ ಕಣ್ತುಂಬಿಕೊಂಡು ಸಮಾಧಾನದಿಂದ ಹೋದರು. ದರ್ಶನ್ ಅವರು ಸಹ ತಮ್ಮನ್ನು ನೋಡಲು ಬಂದಿದ್ದ ಅಭಿಮಾನಿಗಳಿಗೆ ಗೌರವ ಮತ್ತು ಕೃತಜ್ಞತೆ ಸಲ್ಲಿಸುವ ಕಾರಣಕ್ಕೆ ಊಟದ ವ್ಯವಸ್ಥೆಯನ್ನು ಏರ್ಪಡಿಸಿದ್ದರು. ಮೊದಲ ಬಾರಿಗೆ ಅಚ್ಚುಕಟ್ಟಾಗಿ ಈ ರೀತಿ ಒಬ್ಬ ನಟನ ಹುಟ್ಟುಹಬ್ಬ ಆಚರಣೆ ಆಗಿತ್ತು.

ಇಷ್ಟಾದ ಮೇಲೆ ಸಂಜೆ ವೇಳೆಗೆ ದರ್ಶನ್ ಕುರಿತ ವಿವಾದ ಒಂದು ಎಲ್ಲೆಡೆ ಭುಗಿಲೇಳಲು ಶುರು ಆಯ್ತು. ಅದೇನೆಂದರೆ ದರ್ಶನ್ ಅವರು ಮೇಘ ಶೆಟ್ಟಿ (Megha Shetty) ಅವರು ಅರೆಂಜ್ ಮಾಡಿದ ಬರ್ತಡೇ ಪಾರ್ಟಿಗೆ (private birth day larty) ಹೋಗಿದ್ದರು. ಆದರೆ ಈ ಬರ್ತಡೇ ಪಾರ್ಟಿಯಲ್ಲಿ ಸದಾ ದರ್ಶನ್ ಜೊತೆಗೆ ತಳಕು ಹಾಕಿಕೊಳ್ಳುವ ಹೆಸರಾದ ಪವಿತ್ರ ಗೌಡ ಮತ್ತು ಇನ್ನಿತರ ಸೆಲೆಬ್ರಿಟಿಗಳು ಇದ್ದರು.

ದರ್ಶನ್ ಅವರನ್ನು ವಿಶೇಷವಾಗಿ ಬರಮಾಡಿಕೊಂಡು ಕೇಕ್ ಕಟ್ ಮಾಡಿಸಿ ಬಹಳ ಹತ್ತಿರದವರಂತೆ ಫೋಟೋಗೆ ಫೋಸ್ ಕೊಟ್ಟು ಅದಕ್ಕೆ ದರ್ಶನ್ ಅವರ ಬೃಂದಾವನ ಸಿನಿಮಾದ ಹಾರ್ಟ್ ಅಲ್ಲಿರೋ ಹಾರ್ಮೋನಿಯಂ ಈ ಹಾಡನ್ನು ಸೇರಿಸಿ ವಿಡಿಯೋ ಮಾಡಿ ಮೇಘ ಶೆಟ್ಟಿ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದರು. ಇದು ವಿಜಯಲಕ್ಷ್ಮಿ ಅವರ ಕಣ್ಣಿಗೆ ಬಿದ್ದಿದ್ದೆ ತಡ ದರ್ಶನ್ ಪತ್ನಿ ಅವರು ಸಹ ಅವರು instagram ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ಮೇಘ ಶೆಟ್ಟಿ ಅವರಿಗೆ ಬಿಸಿ ಮುಟ್ಟುವ ಹಾಗೆ ಮಾಡಿದರು.

ಎಚ್ಚೆತ್ತುಕೊಂಡ ಮೇಘ ಶೆಟ್ಟಿ ಅವರು ಕೂಡಲೇ ಅದನ್ನು ಡಿಲೀಟ್ ಕೂಡ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ಈ ಎಲ್ಲಾ ನಡವಳಿಗಳ ಬಗ್ಗೆ ವ್ಯಾಪಕ ಪ್ರತಿಕ್ರಿಯೆ ಆರಂಭವಾಯಿತು. ಕೆಲವರು ವಿಜಯಲಕ್ಷ್ಮಿ ಪರ, ಕೆಲವರು ದರ್ಶನ್ ಪರ ಮತ್ತು ಕೆಲವರು ಮೇಘ ಶೆಟ್ಟಿ ಪರ ಕಮೆಂಟ್ಗಳ ಮೂಲಕ ತಮ್ಮ ಅಭಿಪ್ರಾಯವನ್ನು ಸಹ ಹೇಳಿಕೊಂಡರು. ಇದೀಗ ವಿಜಯಲಕ್ಷ್ಮಿ ಅವರು ಮತ್ತೊಂದು ಪೋಸ್ಟ್ ಹಾಕಿದ್ದಾರೆ.

ಅದೇನೆಂದರೆ ಸತ್ಯ ಸಿಂಹ ಇದ್ದ ಹಾಗೆ ಅದನ್ನು ರಕ್ಷಿಸಬೇಕಾದ ಅವಶ್ಯಕತೆ ಇಲ್ಲ. ಅದನ್ನು ಸಡಿಲ ಬಿಟ್ಟರೆ ತನ್ನನ್ನು ತಾನೇ ರಕ್ಷಿಸಿಕೊಳ್ಳುತ್ತದೆ ಎನ್ನುವ ಕೋಟ್ ಅನ್ನು ಹಾಕಿದ್ದಾರೆ. ಈಗ ದರ್ಶನ್ ಅಭಿಮಾನಿಗಳ ಬಳಗದಲ್ಲಿ ಅತ್ತಿಗೆಯ ಈ ಪೋಸ್ಟ್ ಯಾವ ವಿಷಯ ಕುರಿತಾಗಿದ್ದು ಎಂದು ಯೋಚನೆ ಶುರು ಆಗಿದೆ. ಅಥವಾ ಮತ್ಯಾರಿಂದಲಾದರೂ ಪ್ರತಿಕ್ರಿಯೆ ಆಗುವ ಮೂಲಕ ಇದಕ್ಕೆ ಸ್ಪಷ್ಟನೆ ಸಿಗಲಿದೆಯಾ ಎಂದು ಕಾದು ನೋಡೋಣ.

ನಟಿ ಶ್ವೇತಾ ಚಂಗಪ್ಪ ಅವರ ಈ ನೃತ್ಯಕ್ಕೆ ಮಾರು ಹೋಗದವರೆ ಇಲ್ಲ. ಸೌಂದರ್ಯ ದೇವತೆಯೇ ಧರೆಗಿಳಿದ ಹಾಗೇ ಹೆಜ್ಜೆ ಹಾಕುತ್ತಿರುವ ಈ ಕ್ಯೂಟ್ ವಿಡಿಯೋ ಒಮ್ಮೆ ನೋಡಿ.

 

ಶ್ವೇತ ಚಂಗಪ್ಪ (Shwetha chengappa) ಎನ್ನುವ ಕನ್ನಡದ ಹೆಸರಾಂತ ನಟಿಯ (Actress) ಹೆಸರನ್ನು ಆಕೆ ನಿಜ ಹೆಸರಿಗಿಂತ ಅವರ ಅಭಿನಯಿಸಿರುವ ಪಾತ್ರಗಳ ಹೆಸರಿನಿಂದಲೇ ಜನ ಗುರುತಿಸುವುದು ಹೆಚ್ಚು. ಶ್ವೇತ ಚಂಗಪ್ಪ ಅವರು ಎಸ್. ನಾರಾಯಣ (S. Narayan direction) ಅವರ ನಿರ್ದೇಶನದ ಸುಮತಿ (Sumathi serial) ಎನ್ನುವ ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು (Debut). ಕಳೆದ ಎರಡು ದಶಕಗಳಿಂದಲೂ ಕಿರುತೆರೆಯಲ್ಲಿ ಒಂದಲ್ಲ ಒಂದು ಸೂಪರ್ ಹಿಟ್ ಸೀರಿಯಲ್ ಗಳನ್ನು ನೀಡುವ ಮೂಲಕ ಕಿರುತೆರೆ ಲೋಕವನ್ನು ಆಳಿದರು.

ಸುಮತಿ, ಸುಕನ್ಯಾ, ಅರುಂಧತಿ, ಕಾದಂಬರಿ ಇನ್ನು ಮುಂತಾದ ಅನೇಕ ಧಾರಾವಾಹಿಗಳಿಗೆ ಬಣ್ಣ ಹಚ್ಚಿದ ಶ್ವೇತ ಚಂಗಪ್ಪ ಅವರು ಕಾದಂಬರಿ (Kadambari megha serial) ಎನ್ನುವ ಮೆಗಾ ಧಾರವಾಹಿಯ ಪಾತ್ರ ಮತ್ತು ಅಭಿನಯವನ್ನು ಕನ್ನಡಿಗರು ಎಂದೂ ಮರೆಯುವುದಿಲ್ಲ. ಉದಯ ಟಿವಿಯಲ್ಲಿ ಬಾಲಾಜಿ ಟೆಲಿ ಫಿಲಂಸ್ ಅವರ ನಿರ್ಮಾಣದಲ್ಲಿ ತೆರೆಕಂಡಿದ್ದ ಈ ಕಾದಂಬರಿ ಧಾರಾವಾಹಿ 90’s ಕಿಡ್ಸ್ ಗಳ ಸವಿ ಸವಿ ನೆನಪುಗಳಲ್ಲಿ ಒಂದು.

ಕಾದಂಬರಿ ಧಾರಾವಾಹಿಯ ಫೇಮ್ ಇಂದ ಈಕೆಗೆ ಹಿರಿತರೆಯಲ್ಲೂ ಕೂಡ ಕಾಣಿಸಿಕೊಳ್ಳುವ ಅದೃಷ್ಟ ಒಲಿದು ಬಂತು. ನಾಯಕ ನಟಿ ಆಗದಿದ್ದರೂ ಸೂಪರ್ ಸ್ಟಾರ್ಗಳ ತಂಗಿಯಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ವಿಷ್ಣುವರ್ಧನ್ ಅವರಿಗೆ ವರ್ಷ ಸಿನಿಮಾದಲ್ಲಿ ತಂಗಿಯಾಗಿ ಮತ್ತು ದರ್ಶನ್ ಅವರಿಗೆ ತಂಗಿಗಾಗಿ ಮತ್ತು ತಂಗಿಯಾಗಿ (Sister role in Darshan and Vishnuvardhan movies) ಕಾಣಿಸಿಕೊಂಡು ಅಮೋಘ ಅಭಿನಯದ ಮೂಲಕ ಗಮನ ಸೆಳೆದಿದ್ದರು.

ನಂತರ ಕಿರಣ್ ಅಪ್ಪಚ್ಚು ಅವರನ್ನು ವಿವಾಹವಾಗಿ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದ ಇವರು ಜಿಯನ್ ಅಯ್ಯಪ್ಪ ಎನ್ನುವ ಗಂಡು ಮಗುವಿನ ತಾಯಿ ಆಗಿದ್ದಾರೆ. ನಂತರ ರಿಯಾಲಿಟಿ ಶೋಗಳ (Reality show) ಮೂಲಕ ತನ್ನ ಕೆರಿಯರ್ ಸೆಕೆಂಡ್ ಇನ್ನಿಂಗ್ (second innings) ಆರಂಭಿಸಿದ್ದಾರೆ. ಮೊದಲಿಗೆ ಝೀ ಕನ್ನಡ ವಾಹಿನಿಯಲ್ಲಿ ಯಾರಿಗುಂಟು ಯಾರಿಗಿಲ್ಲ ಎನ್ನುವ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ ಇವರು ಬಿಗ್ ಬಾಸ್ ಗೆ ಹೋಗಿ ಬಂದ ಮೇಲೆ ರಿಯಾಲಿಟಿ ಶೋಗಳಲ್ಲಿ ಮತ್ತಷ್ಟು ಕಾಣಿಸಿಕೊಳ್ಳಲು ಶುರು ಮಾಡಿದರು.

ಬಿಗ್ ಬಾಸ್ ಇಂದ ಬಂದ ಮೇಲೆ ಸೃಜನ್ ಲೋಕೇಶ್ ಅವರು ಶುರು ಮಾಡಿದ ಮಜಾ ಟಾಕೀಸ್ ಎನ್ನುವ ಕಾರ್ಯಕ್ರಮದಲ್ಲಿ ಸೃಜನ್ ಅವರ ಸಪ್ನೋಂ ಕಿ ರಾಣಿಯಾಗಿ ಕಾಣಿಸಿಕೊಂಡ ಇವರು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ಅದುವರೆಗೆ ಕೂಡ ಕಣ್ಣೀರಿನ ನಾಯಕಿ ಆಗಿ ಕಂಡಿದ್ದ ಶ್ವೇತಾ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದರು. ಈಗ ಝೀ ಕನ್ನಡ ವಾಹಿನಿಯ ಸೂಪರ್ ಕ್ವೀನ್ಸ್ (Super Queens) ಕಾರ್ಯಕ್ರಮದಲ್ಲೂ ನಿರೂಪಕಿ (Anchor) ಆಗಿದ್ದಾರೆ.

ಇದಕ್ಕೂ ಮುನ್ನ ಪ್ರಸಾರವಾದ ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲೂ ನಿರೂಪಕಿ ಆಗಿದ್ದರು. ಈ ಮೂಲಕ ತಾವಿನ್ನು ಝೀ ಕನ್ನಡ ವಾಹಿನಿಯ ಮತ್ತೊಬ್ಬ ಪರಮನೆಂಟ್ ಆಂಕರ್ ಎನ್ನುವುದನ್ನು ರಿಜಿಸ್ಟರ್ ಮಾಡುತ್ತಿದ್ದಾರೆ. ಇದರ ಜೊತೆಗೆ ತನ್ನದೇ ಆದ ಉದ್ಯಮಗಳನ್ನು ಸಹ ಹೊಂದಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿದ್ದಾರೆ. ಸದಾ ಒಂದಲ್ಲ ಒಂದು ವಿಷಯಗಳನ್ನು ಪೋಸ್ಟ್ ಹಾಕುವ ಇವರು ರೀಲ್ಸ್ ಗಳನ್ನು ಮಾಡುತ್ತಾ ಫೇಮಸ್ ಆಗಿದ್ದಾರೆ.

ಮೊದಲಿನಿಂದಲೂ ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಇವರು ಅಪ್ರತಿಮ ಸುಂದರಿಗೆ ಸರಿ. ಇದೇ ಕಾರಣಕ್ಕೆ ಶೂಟಿಂಗ್ ಸೆಟ್ ಅಲ್ಲಿ ತಮ್ಮ ಕಾಸ್ಟ್ಯೂಮ್ ಜೊತೆ ತಪ್ಪದೆ ಫೋಟೋ ಅಥವಾ ರೀಲ್ಸ್ ತೆಗೆದು ಹಾಕಿಬಿಡುತ್ತಾರೆ. 43ರ ವಸಂತಕ್ಕೆ ಈಗಷ್ಟೇ ಕಾಲಿಟ್ಟಿರುವ ಈ ಕೊಡಗಿನ ಬೆಡಗಿ ಎಳೆ ಹೀರೋಯಿನ್ ಗಳಿಗೂ ಪೈಪೋಟಿ ಕೊಡುವಂತೆ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ. ಇವರ ಹೊಸ ರೀಲ್ಸ್ ಇನ್ಸ್ಟಾಗ್ರಾಮ್ ಅಲ್ಲಿ ಅಪ್ಲೋಡ್ ಆಗಿದ್ದು ದೇವಲೋಕದ ಅಪ್ಸರೆಯಂತೆ ಆ ಹಳದಿ ಅನಾರ್ಕಲಿ ಬಟ್ಟೆಯಲ್ಲಿ ಮಿಂಚುತ್ತಿದ್ದಾರೆ.

ಮೇಘ ಶೆಟ್ಟಿ ಪರವಾಗಿ ನಿಂತ ಡಿ-ಬಾಸ್.

0

ಮೇಘ ಶೆಟ್ಟಿ ಎದುರು ವಿಜಯಲಕ್ಷ್ಮಿ ಅವರು ಮಾಡಿರುವ ಸೋಶಿಯಲ್ ಮೀಡಿಯಾ ವಾರ್ ಬಗ್ಗೆ ದರ್ಶನ್ ಪ್ರತಿಕ್ರಿಯೆ ಏನು ಗೊತ್ತಾ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಜನರು ಇಷ್ಟಪಡುವಂತಹ ಒಬ್ಬ ಸ್ಟಾರ್ ನಟ. ಇವರಿಗೆ ಇರುವ ಫ್ಯಾನ್ ಬೇಸ್ ನೋಡಿ ಅಕ್ಕಪಕ್ಕದ ಇಂಡಸ್ಟ್ರೀಯವರು ಸಹ ಹೊಟ್ಟೆ ಉರಿದುಕೊಳ್ಳುತ್ತಾರೆ. ಅಷ್ಟೊಂದು ಖ್ಯಾತಿಗಳಿಸಿರುವ ದರ್ಶನ್ ಅವರ ವೈಯುಕ್ತಿಕ ವಿಷಯಗಳ ಮಾತ್ರ ಸದಾ ಚರ್ಚೆಯಲ್ಲಿ ಇರುತ್ತದೆ.

ಮೊನ್ನೆ ತಾನೆ ದರ್ಶನ್ ಅವರ ಹುಟ್ಟುಹಬ್ಬ (Darshan birthday) ಇತ್ತು ತಡರಾತ್ರಿಯಿಂದಲೇ ಮನೆ ಮುಂದೆ ಅಭಿಮಾನಿಗಳೆಲ್ಲಾ ಸೇರಿ ನೆಚ್ಚಿನ ನಟನಿಗೆ ಕೈಕುಲುಕಿ ವಿಶ್ ಮಾಡಿ ಸಂತೋಷಪಟ್ಟರು. ದರ್ಶನ್ ಅವರು ಸಹ ತನ್ನ ಸೆಲೆಬ್ರಿಟಿಗಳು ಹಸಿದು ಇರಬಾರದು ಎನ್ನುವ ಕಾರಣಕ್ಕೆ ಬಂದವರಿಗೆಲ್ಲಾ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಹೀಗೆ ನಡೆದ ಹುಟ್ಟುಹಬ್ಬ ಬಹಳ ಅರ್ಥಪೂರ್ಣವಾಗಿತ್ತು ಕಾರಣ ನನ್ನ ಹುಟ್ಟುಹಬ್ಬಕ್ಕೆ ಕೇಕು ಹಾರ ಕಟೌಟ್ ಇವುಗಳಿಗೆ ಹಣ ವ್ಯರ್ಥ ಮಾಡದೆ ಕೈಲಾದರೆ ದವಸಧಾನ್ಯ ತಂದು ಕೊಡಿ ಅಸಹಾಯಕರಿಗೆ ಹಂಚೋಣ ಎಂದಿದ್ದರು ದರ್ಶನ್.

ಈ ರೀತಿ ಮೊದಲ ಬಾರಿಗೆ ಒಬ್ಬ ಹೀರೋ ಹಾಗೂ ಅಭಿಮಾನಿಗಳೆಲ್ಲ ಸೇರಿ ಇಂತಹ ಅರ್ಥಪೂರ್ಣ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಸಂಜೆವರೆಗೂ ಚೆನ್ನಾಗಿ ಆಯ್ತು ಆದರೆ ದರ್ಶನ್ ಅವರು ಅಭಿಮಾನಿಗಳ ಭೇಟಿಯಾದ ಬಳಿಕ ಖಾಸಗಿ ಪಾರ್ಟಿಯಲ್ಲಿ (private birthday party) ಬರ್ತಡೇ ಆಚರಿಸಿಕೊಂಡಿದ್ದಾರೆ. ಈ ಪಾರ್ಟಿಯನ್ನು ಅರೆಂಜ್ ಮಾಡಿದ್ದು ಜೊತೆ ಜೊತೆಯಲಿ ಖ್ಯಾತಿಯ ಮೇಘ ಶೆಟ್ಟಿ (Jothe jotheyali serial actress Megha Shetty ) ಅನ್ನುವ ಮಾತುಗಳೂ ಇವೆ.

ಮೇಘ ಶೆಟ್ಟಿ ಅವರು ಮಾತ್ರ ಅಲ್ಲದೆ ಪವಿತ್ರ ಗೌಡ, ಪಾಯಲ್ ಇನ್ನು ಮುಂತಾದ ಅನೇಕರೆಲ್ಲ ಸೇರಿ ದರ್ಶನ್ ಅವರನ್ನು ಮಹಾರಾಜರಂತೆ ವೆಲ್ಕಮ್ ಮಾಡಿ ಕೇಕ್ ಕಟ್ ಮಾಡಿಸಿ ಬಹಳ ಕ್ಲೋಸ್ ಆಗಿ ಫೋಟೋ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ (Darshan wife Vijayalakshmi) ಈ ರೀತಿ ನನ್ನ ಕುಟುಂಬದ ಸಂತೋಷವನ್ನು ಹಾಳು ಮಾಡುವ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುವುದನ್ನು ನಿಲ್ಲಿಸಿ.

ಮಹಿಳೆಯಾಗಿ ಅದನ್ನು ಹಾಕಿದವರು ಹಾಕುವ ಮೊದಲೇ ಎರಡೆರಡು ಬಾರಿ ಯೋಚನೆ ಮಾಡಬೇಕಿತ್ತು, ಯಾಕೆಂದರೆ ಇದರಿಂದ ನನಗೂ ಹಾಗೂ ನನ್ನ ಮಗನಿಗೂ ಬಹಳ ನೋವಾಗುತ್ತಿದೆ. ನಾನು ಸುಮ್ಮನೆ ಇದ್ದೇನೆ ಎಂದ ಮಾತ್ರಕ್ಕೆ ಎಲ್ಲವನ್ನು ಸಹಿಸುತ್ತೇನೆ ಅಂದುಕೊಂಡರೆ ಅದು ನಿಮ್ಮ ದಡ್ಡತನ, ಎಂದು ಇದೆಲ್ಲ ನಿಮ್ಮ ನೈತಿಕತೆ ಇಂತದ್ದು ಅನ್ನೋದನ್ನ ತೋರಿಸುತ್ತದೆ ಎಂದು ಕ್ಲಾಸ್ (warn) ತೆಗೆದುಕೊಂಡಿದ್ದರು.

ಆ ಕೂಡಲೇ ಮೇಘ ಶೆಟ್ಟಿ ಕೂಡ ತಾವು ಹಾಕಿದ್ದ ಪೋಟೋಗಳನ್ನು ಡಿಲೀಟ್ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಪತ್ನಿ ಹಾಕಿದ್ದ ಈ ಪೋಸ್ಟ್ ಹಾಗು ಮೇಘ ಶೆಟ್ಟಿ ಅವರು ಹಾಕಿದ್ದ ಆ ಫೋಟೋಸ್ ನೋಡಿ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ವಿಜಯಲಕ್ಷ್ಮಿ ಅವರ ಮಾತು ಕರೆಕ್ಟಾಗಿ ಇದೆ. ಎಷ್ಟಾದರೂ ಅವರು ಬೇರೆಯವರ ಪತ್ನಿ ಎಂದ ಮೇಲೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು, ಪತ್ನಿಯಾಗಿ ಇದನ್ನೆಲ್ಲಾ ಕೇಳುವ ಹಕ್ಕು ಅವರಿಗೆ ಎಂದಿದ್ದರೆ.

ಕೆಲವರು ಮೇಘ ಶೆಟ್ಟಿ ಅವರು ಮೊದಲಿನಿಂದಲೂ ದರ್ಶನ್ ಅವರನ್ನು ನನ್ನ ನೆಚ್ಚಿನ ನಟ, ಅವರು ನನ್ನ ಅಣ್ಣನ ತರಹ ಎಂದು ಎಷ್ಟೋ ಬಾರಿ ಹೇಳಿಕೊಂಡಿದ್ದಾರೆ. ಸ್ಟಾರ್ ಗಳಿಂದ ಮೇಲೆ ಅನೇಕರು ಈ ರೀತಿ ಪಾರ್ಟಿ ಕೊಡುತ್ತಾರೆ ಅದರಲ್ಲಿ ತಪ್ಪಾಗಿ ತಿಳಿದುಕೊಳ್ಳುವುದು ಏನು ಇಲ್ಲ ಎಂದು ಹೇಳಿದರೆ, ಇನ್ನು ಕೆಲವರು ಈ ಪಾರ್ಟಿಯಲ್ಲಿ ಪವಿತ್ರ ಗೌಡ ಇರುವುದೇ ವಿಜಯಲಕ್ಷ್ಮಿ ಅವರ ಅಸಮಾಧಾನಕ್ಕೆ ಮುಖ್ಯ ಕಾರಣ ಎಂದು ಊಹಿಸಿದ್ದಾರೆ. ಆದರೆ ದರ್ಶನ್ ಮಾತ್ರ ಈವರೆಗೆ ಇದರ ಬಗ್ಗೆ ಇನ್ನೂ ಏನು ಪ್ರತಿಕ್ರಿಯೆ ಅವರ ಪರವಾಗಿ ಅಭಿಮಾನಿಗಳೇ ಬ್ಯಾಟ್ ಬೀಸುತ್ತಿದ್ದಾರೆ. ದರ್ಶನ್ ಅವರು ಈ ಬಗ್ಗೆ ಏನು ಹೇಳುತ್ತಾರೆ ಎಂದು ಕೆಲ ಅಭಿಮಾನಿಗಳು ಕಾಯುತ್ತಿದ್ದಾರೆ.

ಕನ್ನಡದ ಹಿರಿಯ ನಿರ್ದೇಶಕ ಭಗವಾನ್ ವಿ.ಧಿ.ವ.ಶ.

0

 

ಕನ್ನಡ ಚಲನಚಿತ್ರ ರಂಗ ಇಷ್ಟು ವಿಶ್ವವಿಖ್ಯಾತಿ ಆಗಲು ಆರಂಭದಲ್ಲಿ ಅದಕ್ಕೆ ಅಡಿಪಾಯ ಹಾಕಿದ ಕೆಲ ಗಣ್ಯರಲ್ಲಿ ನಿರ್ದೇಶನ ಭಗವಾನ್ (Director Bhaghavan) ಹೆಸರು ಕೂಡ ಸೇರುತ್ತದೆ. ಭಗವಾನ್ ಎನ್ನುವ ಈ ನಿರ್ದೇಶಕರು 60ರಿಂದ 90ರ ದಶಕದಲ್ಲಿ ತಮ್ಮನ್ನು ತಾವು ಚಿತ್ರರಂಗಕ್ಕಾಗಿ ಮುಡಿಪಿಟ್ಟು ಕನ್ನಡ ತಾಯಿಯ ಸೇವೆ ಮಾಡಿದ್ದಾರೆ. ಕನ್ನಡದಲ್ಲಿ ಒಬ್ಬ ಯಶಸ್ವಿ ಪ್ರಯೋಗಾತ್ಮಕ ನಿರ್ದೇಶಕ ಮತ್ತು ಲೆಜಂಡ್ ಸಿನಿಮಾಗಳನ್ನು ಕನ್ನಡಕ್ಕೆ ಕೊಟ್ಟ ನಿರ್ದೇಶಕರಲ್ಲಿ ಒಬ್ಬ ಎನ್ನುವ ಖ್ಯಾತಿಗೆ ಒಳಗಾಗಿರುವ ಇವರು ಜುಲೈ 5 1933 ರಂದು ಜನಿಸಿದರು.

ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಇವರು ನಂತರ ಹಿರಣ್ಣಯ್ಯ ಮಿತ್ರ ಮಂಡಳಿ ಎನ್ನುವ ನಾಟಕ ಕಂಪನಿಯಲ್ಲಿ ಸೇರಿಕೊಂಡು ನಾಟಕಗಳತ್ತ ತಮ್ಮ ಆಸಕ್ತಿ ಬೆಳೆಸಿಕೊಂಡರು. 1955 ರಲ್ಲಿ ಭಾಗ್ಯೋದಯ (Bhagyodhaya movie) ಎನ್ನುವ ಕನ್ನಡ ಚಲನಚಿತ್ರ ತಯಾರಾಗುತ್ತಿದ್ದ ಸಮಯದಲ್ಲಿ ಆ ಸಿನಿಮಾದ ನಿರ್ದೇಶಕರಾದ ಕಣಗಲ್ ಪ್ರಭಾಕರ್ ಶಾಸ್ತ್ರಿ (assistant for Kanagal Prabhakar Shasthri) ಅವರಿಗೆ ಸಹಾಯಕ ನಿರ್ದೇಶಕನಾಗಿ ಸೇರಿಕೊಂಡರು.

ಇವರು 1966ರಲ್ಲಿ ಸಂಧ್ಯಾರಾಗ (Sandhyaraga movie) ಎನ್ನುವ ಡಾಕ್ಟರ್ ರಾಜ್ ಕುಮಾರ್ ಮತ್ತು ಕಲ್ಯಾಣ್ ಕುಮಾರ್ ಅವರ ಅಭಿನಯದ ಸಿನಿಮಾಗೆ ಸಹ ನಿರ್ದೇಶಕನಾಗಿ (co-director) ಬಡ್ತಿ ಪಡೆದು, ಆ ಸಿನಿಮಾದ ಯಶಸ್ಸಿನ ಭಾಗವಾದರು. ಈ ಮೂಲಕ ತಮ್ಮದೇ ಆದ ಛಾಪನ್ನು ನಿರ್ದೇಶನದಲ್ಲಿ ಮೂಡಿಸಿದ ಇವರಿಗೆ 1966ರಲ್ಲಿ ದೊರೈ (with director Dore) ಅವರೊಂದಿಗೆ ಜೇಡರ ಬಲೆಯನ್ನು (Jedarabhale) ಸಿನಿಮಾಕ್ಕೆ ನಿರ್ದೇಶಕನಾಗುವ ಅವಕಾಶ ಸಿಗುತ್ತದೆ.

ಕನ್ನಡದಲ್ಲಿ ಮೊದಲ ಬಾರಿಗೆ ಜೇಮ್ಸ್ ಬಾಂಡ್ ಮಾದರಿಯ ಸಿನಿಮಾ ಪ್ರಯೋಗ ಮಾಡಿದ ದೊರೆ ಮತ್ತು ಭಗವಾನ್ ಜೋಡಿ ಈ ಸಿನಿಮಾದ ಸಕ್ಸಸ್ ಗೋವಾದಲ್ಲಿ ಸಿಐಡಿ, ಆಪರೇಷನ್ ಡೈಮಂಡ್ ರಾಕೆಟ್, ಇನ್ನು ಮುಂತಾದ ಇದೇ ಮಾದರಿಯ ಸಿನಿಮಾಗಳನ್ನು ನಿರ್ದೇಶಿಸಲು ಸ್ಪೂರ್ತಿ ನೀಡಿತು. ದೊರೈ ಮತ್ತು ಭಗವಾನ್ ಇಬ್ಬರು ಒಬ್ಬರೇ ಎನ್ನುವಷ್ಟರ ಮಟ್ಟಿಗೆ ಆತ್ಮೀಯರಾಗಿದ್ದರು. 27 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಜಂಟಿಯಾಗಿ ನಿರ್ದೇಶನ ಮಾಡಿ ಗೆದ್ದರು.

ಯಾರಿವನು, ಎರಡು ಕನಸು, ಚಂದನದ ಗೊಂಬೆ, ಗಿರಿಕನ್ಯೆ, ಸಮಯದ ಗೊಂಬೆ, ಜೀವನ ಚೈತ್ರ, ಕಸ್ತೂರಿ ನಿವಾಸ ಇನ್ನು ಮುಂತಾದ ಕೌಟುಂಬಿಕ ಕಥಾಹಂದರವುಳ್ಳ ಸಿನಿಮಾಗಳು ಆ ಸಾಲಿನಲ್ಲಿ ಸೇರುತ್ತವೆ. ದೊರೈ ಅವರು 2000ರಲ್ಲಿ ತಮ್ಮ ಆಪ್ತ ಸ್ನೇಹಿತನನ್ನು ಅ-ಗ-ಲಿ ಹೋಗಿದ್ದರು. ಇದೀಗ ಫೆಬ್ರವರಿ 20, 2023ರ ಬೆಳ್ಳಂಬೆಳಗ್ಗೆ ಭಗವಾನ್ ಅವರು ಸಹ ಸ್ನೇಹಿತನನ್ನು ಸೇರಲು ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಹಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು 90ನೇ ವಯಸ್ಸಿನಲ್ಲಿ ತಮ್ಮ ದೇಹ ತ್ಯಾಗ ಮಾಡಿದ್ದಾರೆ.

ಡೈರೆಕ್ಷನ್ ಜೊತೆಗೆ ಕನ್ನಡದ ಹಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿ ತಮ್ಮ ಅಭಿನಯದ ಆಸೆಯನ್ನು ತಿಳಿಸಿಕೊಂಡಿದ್ದಾರೆ. ಆ ಸಿನಿಮಾ ಸಾಲುಗಳು ಹೀಗಿವೆ ಹಾಲು ಜೇನು, ವಸಂತ ಗೀತಾ, ಜೀವನ ಚೈತ್ರ ಬೆಂಗಳೂರು ಮೇಲ್ ಮಂಗಳಸೂತ್ರ ಭಾಗ್ಯೋದಯ, ಹೊಸ ಬೆಳಕು, ಬೆಂಗಳೂರು ಮೈಲ್ ಮುಂತಾದವು. ಆದರೆ ಇವರಿಗೆ ಆಕ್ಟಿಂಗ್ ಗಿಂತಲೂ ಡೈರೆಕ್ಷನ್ ಕೈ ಹಿಡಿದಿತ್ತು.

ಡಾ. ರಾಜಕುಮಾರ್ ಅವರ ಆಪ್ತಪಲಯದಲ್ಲಿ ಒಬ್ಬರಾಗಿ ಗುರುತಿಸಿಕೊಂಡು ಅವರ ಕುಟುಂಬದಂತೆ ಇದ್ದ ಇವರು ಇಂದು ಕನ್ನಡ ಚಿತ್ರರಂಗದ ಅಪಾರ ಸ್ನೇಹಿತರು ಮತ್ತು ಕನ್ನಡ ಕುಲಕೋಟಿ ಸಿನಿಪ್ರೇಕ್ಷಕರ ಬಳಗವನ್ನು ಬಿಟ್ಟು ಹೋಗಿದ್ದಾರೆ. ಗಣ್ಯರ ಸಾವಿಗೆ ಚಿತ್ರರಂಗದ ಅನೇಕರು ಕಂಬನಿ ಮಿಡದಿದ್ದು ಸೋಶಿಯಲ್ ಮೀಡಿಯಾದಲ್ಲಿ ಕೂಡ ಅನೇಕ ಕನ್ನಡಿಗರು ಇವರ ಸಾಧನೆ ನೆನೆದು ಪೋಸ್ಟ್ ಹಾಕುವ ಮೂಲಕ ತಮ್ಮದೇ ಆದ ರೀತಿಯಲ್ಲಿ ಶ್ರದ್ಧಾಂಜಲಿ ಕೋರಿದ್ದಾರೆ.

ಮಾಧ್ಯಮದವರ ಮೇಲೆ ಹ-ಲ್ಲೆ ಮಾಡಿದ ದರ್ಶನ್ & ಬಾಡಿಗಾರ್ಡ್ ಮತ್ತೊಂದು ವಿವಾದಕ್ಕೆ ಸಿಲುಕಿದ ಡಿ-ಬಾಸ್. ಗಾಯಗೊಂಡ ಕ್ಯಾಮರ ಮ್ಯಾನ್ ಲೈವ್ ನಲ್ಲಿ ಹೇಳಿದ್ದೇನು ನೋಡಿ.

0

ಅದ್ಯಾಕೋ ದರ್ಶನ್ (Darshan) ಅವರನ್ನು ವಿವಾದಗಳು ಬಿಡುವಂತೆ ಕಾಣುತ್ತಲೇ ಇಲ್ಲ. ಸದಾ ಒಂದಲ್ಲ ಒಂದು ವಿಷಯದಿಂದ ಗಲಾಟೆ ಮಾಡಿಕೊಂಡು ಸುದ್ದಿ ಆಗುತ್ತಲೇ ಇರುತ್ತಾರೆ ಇವರು. ದರ್ಶನ್ ಸಿನಿಮಾಗಳು ಎಷ್ಟು ಸುದ್ದಿಯಾಗುತ್ತದೆಯೋ ಅವರ ಕುರಿತಾದ ವಿವಾದಗಳು (controversies) ಕೂಡ ಅಷ್ಟೇ ಬೇಗ ಸುದ್ದಿಯಾಗುತ್ತವೆ. ಈ ಹತ್ತು ವರ್ಷಗಳ ಇತಿಹಾಸವನ್ನೇ ನೋಡುವುದಾದರೆ ಇದುವರೆಗೂ ದರ್ಶನ್ ಅವರು ಪತ್ನಿ ಮೇಲೆ ಹ.ಲ್ಲೆ ಮಾಡಿದ್ದರು.

ಮಗನ ಮೇಲೆ ಹ.ಲ್ಲೆ ಮಾಡಿದ್ದರು ಹಾಗೂ ಹೋಟೆಲ್ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದರು ಇತ್ಯಾದಿಗಳನ್ನು ಸಾಕಷ್ಟು ನೋಡಿದ್ದೇವೆ. ಇನ್ನು ಅನೇಕ ವಿಚಾರಗಳು ವರದಿ ಆಗದೆಯೇ ಮುಚ್ಚಿ ಹೋಗಿರಲೂಬಹುದು. ಇದುವರೆಗೆ ಮಾಧ್ಯಮಗಳಿಗೆ ಸಾಕಷ್ಟು ಸುದ್ದಿ ದರ್ಶನ್ ಅವರ ಕುರಿತ ಗಲಾಟೆಗಳ ಬಗ್ಗೆ ಸಿಕ್ಕಿದೆ ಮತ್ತು ದರ್ಶನ್ ಅವರು ಮಾಧ್ಯಮಗಳನ್ನು ಸಹ ಏಕವಚನದಲ್ಲಿ ನಿಂದಿಸಿರುವುದು ವರದಿಯಾಗಿ ಈಗ ಕನ್ನಡ ಸುದ್ದಿ ಮಾಧ್ಯಮಗಳೆಲ್ಲ ಅವರನ್ನು ಬ್ಯಾನ್ ಕೂಡ ಮಾಡಿವೆ.

ಇಷ್ಟಾದರೂ ದರ್ಶನ್ ಬುದ್ಧಿ ಕಲಿತಂತೆ ಕಾಣುತ್ತಲೇ ಇಲ್ಲ. ಮತ್ತೊಮ್ಮೆ ತನ್ನ ವರಸೆಯನ್ನು ಪ್ರದರ್ಶಿಸಿದ್ದಾರೆ. ಅದೇನೆಂದರೆ ವಿ2 ಎನ್ನುವ ಡಿಜಿಟಲ್ ಮಾಧ್ಯಮದ (V2 digital media) ಕ್ಯಾಮರಮನ್ ಮತ್ತು ವರದಿಗಾರರ ಮೇಲೆ ದರ್ಶನ್ ಬಾಡಿ ಗಾರ್ಡ್ ಗಳು ಹ.ಲ್ಲೆ ಮಾಡಿದ್ದಾರೆ. ಆದರೆ ಇದನ್ನು ದರ್ಶನ್ ಅವರ ಹೇಳಿ ಮಾಡಿಸಿದ್ದಾರಾ ಅಥವಾ ಮತ್ಯಾವ ವಿಚಾರಕ್ಕೆ ಇವರ ನಡುವೆ ಗಲಾಟೆ ಆಗಿ ಹಲ್ಲೆ ಮಾಡಿದ್ದಾರೋ ಗೊತ್ತಿಲ್ಲ.

ವಿ2 ವಾಹಿನಿಯ ಕ್ಯಾಮೆರಾಮೆನ್ ದಯಾನಂದ್ ಮತ್ತು ವರದಿಗಾರರಾದ ಮಧುಸೂಧನ್ ಎನ್ನುವ ಸಿಬ್ಬಂದಿ ಮೇಲೆ ದರ್ಶನ್ ಬಾಡಿಗಾರ್ಡ್ ಕಡೆಯಿಂದ ಮಾ.ರ.ಣಾಂ.ತಿ.ಕ ಹ.ಲ್ಲೆ ಆಗಿದೆ ಎನ್ನುವ ಸುದ್ದಿ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಗಲಾಟೆಯ ರಭಸದಲ್ಲಿ ಅವರಿಗೆ ಹಿಗ್ಗಾ ಮುಗ್ಗಾ ತಳಿಸಿ ಹಲ್ಲು ಕೂಡ ಮುರಿದಿದ್ದಾರೆ ಎನ್ನುವುದು ಅವರ ಕಡೆಯಿಂದ ಆರೋಪ.

ಈ ಬಗ್ಗೆ ಆರ್ ಆರ್ ನಗರದ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೊಡಲು ಹೋದರು ಎಫ್ಐಆರ್ ಹಾಕದೆ ಏನ್ ಸಿ ಮಾಡಿ ಕಳಿಸಿದ್ದಾರೆ ಎಂದು ಚಾನೆಲ್ ಸಂಬಂಧಿತರು ಸಾಮಾಜಿಕ ಜಾಣತನದಲ್ಲಿ ವಿಡಿಯೋ ಮಾಡಿ ಆ.ಕ್ರೋ.ಶ ಹಾಕಿದ್ದಾರೆ. ಕೋರ್ಟ್ ಅನುಮತಿ ತೆಗೆದುಕೊಂಡು ಹಾಕಬೇಕು ಎಂದು ಸಮಜಾಯಿಷಿ ಹೇಳಿದ್ದಾರೆ, ಜೊತೆಗೆ ಹ.ಲ್ಲೆ ಅದ ಸ್ಥಳದಿಂದ ಸೆಂಟ್ ಜಾನ್ಸ್ ಆಸ್ಪತ್ರೆ ಹತ್ತಿರವಿತ್ತು ಅಲ್ಲಿಗೆ ಚಿಕಿತ್ಸೆಗೆ ಹೋದರೆ ಮೆಡಿಕಲ್ ರಿಪೋರ್ಟ್ ಮಾಡಲು ಕೇಳಿದರೆ ಅದಕ್ಕೂ ಕೂಡ ಅವರು ಸರಿಯಾಗಿ ಸ್ಪಂದಿಸಿಲ್ಲ ಅವರು ಸಹ ಇನ್ಫ್ಲುಯೆನ್ಸ್ ಇಂದ ಈ ರೀತಿ ಮಾಡಿದ್ದಾರೆ.

ಆದರೆ ಯಾವುದೇ ಕಾರಣಕ್ಕೂ ಇದೆಲ್ಲ ಮುಂದುವರಿಯಬಾರದು ಈಗಾಗಲೇ ಸಾಕಷ್ಟು ಬಾರಿ ಇವರ ಕಡೆಯಿಂದ ಈ ರೀತಿ ನಡವಳಿಕೆಗಳು ಆಗಿವೆ. ಆದರೂ ಇವರು ಬುದ್ಧಿ ಕಲಿತಿಲ್ಲ ಈ ಬಾರಿ ಡಿಜಿಟಲ್ ಮಾಧ್ಯಮಗಳೆಲ್ಲ ಒಟ್ಟಿಗೆ ಸೇರಿ ನಮಗೆ ನ್ಯಾಯ ಕೊಡಿಸಬೇಕು ಎಂದು ಈ ವಿಡಿಯೋದಲ್ಲಿ ಚಾನೆಲ್‌ ಸಿಬ್ಬಂದಿ ಮಾತನಾಡಿದ್ದಾರೆ.

ಆದರೆ ಇದರಲ್ಲಿ ಸತ್ಯಾಂಶ ಎಷ್ಟಿದೆಯೋ ಅಥವಾ ಮಾಧ್ಯಮದ ತಪ್ಪು ಏನಿದೆಯೋ ಅಥವಾ ಈ ಎಲ್ಲಾ ಘಟನೆಗಳ ಮಧ್ಯೆ ದರ್ಶನ್ ಅವರು ಬಾಗಿ ಆಗಿದ್ದಾರಾ ಇಲ್ಲವೋ ಅದು ಗೊತ್ತಿಲ್ಲ. ಆದರೆ ದರ್ಶನ್ ಅವರ ಬಾಡಿಗಾರ್ಡ್ ಎನ್ನುವ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಬಾರಿ ಚರ್ಚೆಗೆ ಒಳಗಾಗಿದೆ ಮುಂದೆ ಪ್ರಕರಣದ ಬಗ್ಗೆ ಏನು ತಿರುವುಗಳಾಗುತ್ತದೆಯೋ ಕಾದು ನೋಡಬೇಕು, ನೊಂದವರಿಗೆ ಸರಿಯಾದ ತೀರ್ಪು ಸಿಗಲೇಬೇಕು ಎಂಬುದು ಕೆಲವರ ಅಭಿಪ್ರಾಯ.

ಕುರುಕ್ಷೇತ್ರ ಸಿನಿಮಾದಲ್ಲಿ ಕರ್ಣನ ಪಾತ್ರ ಮಾಡಬೇಕಿದ್ದ ಶಿವಣ್ಣ ಆ ಪಾತ್ರದಿಂದ ಹೊರ ಬಂದಿದ್ದು ಯಾಕೆ ಗೊತ್ತಾ.? ಕೊನೆಗೂ ಸತ್ಯ ಬಯಲು

 

ಕನ್ನಡದಲ್ಲಿ ಸ್ಟಾರ್ ಹೀರೋಗಳ ಸಿನಿಮಾ ಎಂದರೆ ಅದೆಂತಹದ್ದೋ ಕ್ರೇಜ್, ಆ ಸಿನಿಮಾ ರಿಲೀಸ್ ನಾಡ ಹಬ್ಬದಂತಹ ಸಂಭ್ರಮವನ್ನು ಕರ್ನಾಟಕದಲ್ಲಿ ತಂದಿರುತ್ತದೆ. ಇನ್ನು ಮಲ್ಟಿ ಸ್ಟಾರ್ (Multi star’s movie) ಗಳ ಸಿನಿಮಾ ಎಂದು ಬಿಟ್ಟರಂತೂ ಆ ಸಂತೋಷಕ್ಕೆ ಪಾರವೇ ಇಲ್ಲ. ನೆಚ್ಚಿನ ನಟರನ್ನೆಲ್ಲಾ ಒಂದೇ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಸದಾ ಕಾತುರರಾಗಿರುತ್ತಾರೆ. ಅಲ್ಲದೆ ಇಂತಹ ಮಲ್ಟಿ ಸ್ಟಾರ್ ಗಳ ಸಿನಿಮಾ ಹ್ಯಾಂಡಲ್ ಮಾಡುವ ಕಥೆಯೂ ವಿಶೇಷವಾಗಿರುತ್ತದೆ ಎನ್ನುವ ಕಾರಣಕ್ಕೆ ಇನ್ನು ಹೆಚ್ಚಿಗೆ ಎಕ್ಸೈಟ್ ಆಗಿರುತ್ತಾರೆ.

ಕನ್ನಡದಲ್ಲಿ ಪ್ರತಿಯೊಂದು ಮಲ್ಟಿ ಸ್ಟಾರ್ ಸಿನಿಮಾ ಕೂಡ ಗೆದ್ದಿದೆ, ಹಾಗಾಗಿ ಇಂತಹ ಪ್ರಯೋಗಗಳು ಆಗಾಗ ಕನ್ನಡದಲ್ಲಿ ನಡೆಯುತ್ತಲೇ ಇರುತ್ತದೆ. ಹೀಗೆ 2019ರಲ್ಲಿ ಕುರುಕ್ಷೇತ್ರ (Kurukshethra) ಎನ್ನುವ ಪೌರಾಣಿಕ ಕಥೆ (Mythological movie) ಎಳೆಯುಳ್ಳ ಸಿನಿಮಾವನ್ನು ಈ ರೀತಿ ಚಿತ್ರರಂಗದ ದಿಗ್ಗಜರುಗಳನ್ನೆಲ್ಲ ಸೇರಿಸಿ ಮಾಡಲಾಗಿತ್ತು.

ಮಹಾಮಹಿಮ ಭೀಷ್ಮರ ಪಾತ್ರದಲ್ಲಿ ಅಂಬರೀಶ್ , ಧೃತರಾಷ್ಟ್ರರಾಗಿ ಶ್ರೀನಾಥ್, ಶ್ರೀ ಕೃಷ್ಣನ ಪಾತ್ರದಲ್ಲಿ ರವಿಚಂದ್ರನ್, ಕುಂತಿಯಾಗಿ ಭಾರತಿ ವಿಷ್ಣುವರ್ಧನ್, ಧರ್ಮರಾಯನಾಗಿ ಶಿವರಾಜಕುಮಾರ್, ಅರ್ಜುನರಾಗಿ ಸೋನು ಸೂದ್, ಅಭಿಮನ್ಯು ಆಗಿ ನಿಖಿಲ್ ಕುಮಾರಸ್ವಾಮಿ, ದ್ರೌಪದಿ ಆಗಿ ಸ್ನೇಹ, ಕರ್ಣನಾಗಿ ಅರ್ಜುನ್ ಸರ್ಜಾ, ಭಾನುಮತಿಯಾಗಿ ಮೇಘನಾ ರಾಜ್ ಮತ್ತು ಸಿನಿಮಾದ ಮುಖ್ಯಪಾತ್ರಧಾರಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರು ದುರ್ಯೋಧನ ಪಾತ್ರದಲ್ಲಿ ಅಬ್ಬರಿಸಿದ್ದರು.

ಈ ಸಿನಿಮಾ ಒಂದು ರೀತಿಯಲ್ಲಿ ದುರ್ಯೋಧನನ (Duryodhana role) ಪಾತ್ರವನ್ನು ಹೆಚ್ಚಾಗಿ ಕೇಂದ್ರೀಕರಿಸಿತ್ತು ಎಂದರು ಸುಳ್ಳಲ್ಲ. ದುರ್ಯೋಧನ ಒಳ್ಳೆತನ ಮತ್ತು ಕೆಟ್ಟತನ ಎರಡನ್ನು ಸೇರಿಸಿ ಸಿನಿಮಾ ಮಾಡಲಾಗಿದ್ದರಿಂದ ಸಿನಿಮಾದಲ್ಲಿ ಎಲ್ಲಾ ಪಾತ್ರಗಳು ಕೂಡ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಧಕ್ಕಿಸಿ ಅಭಿನಯಿಸಿದ್ದಾರೆ.

ಬಹು ವರ್ಷಗಳ ನಂತರ ಕನ್ನಡದಲ್ಲಿ ಈ ರೀತಿ ಒಂದು ಪೌರಾಣಿಕ ಚಿತ್ರ ತಯಾರಾಗಿತ್ತು ಎಲ್ಲಾ ಪಾತ್ರಗಳಿಗೂ ಕೂಡ ನಿರ್ದೇಶಕರಾದ ನಾಗಣ್ಣ ಮತ್ತು ನಿರ್ಮಾಪಕರಾದ ಮುನಿರತ್ನ ಅವರು ಅಳೆದು ತೂಗಿ ಕಲಾವಿದರನ್ನು ಆಯ್ದುಕೊಂಡಿದ್ದರು. ಆದರೆ ಕರ್ಣನ ಪಾತ್ರಕ್ಕೆ ಅರ್ಜುನ್ ಸರ್ಜಾ ಅವರಿಗೂ ಮೊದಲು ಶಿವರಾಜ್ ಕುಮಾರ್ ಅವರನ್ನು ಒಪ್ಪಿಸಲಾಗಿತ್ತಂತೆ. ಮೊದಲಿಗೆ ಕಥೆ ಕೇಳಿದ ಶಿವಣ್ಣ ಇದಕ್ಕೆ ಒಪ್ಪಿಕೊಂಡಿದ್ದರೂ.

ಇದೇ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಅವರ ಟಗರು ಮತ್ತು ದಿ ವಿಲನ್ ಸಿನಿಮಾಗಳು ತಯಾರಾಗುತ್ತಿದ್ದವು ಎಲ್ಲಾ ಸಿನಿಮಾಗಳ ಶೂಟಿಂಗ್ ಬ್ಯುಝಿಯಲ್ಲಿ ಡೇಟ್ ಸಿಗದ ಕಾರಣ ಅವರು ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಲು ಆಗಲಿಲ್ಲ. ದರ್ಶನ್ ಜೊತೆ ಸಿನಿಮಾ ಮಾಡಲು ಅವಕಾಶ ಕಳೆದುಕೊಂಡಿದ್ದ ಕ್ಕಾಗಿ ಇಂದಿಗೂ ಸಹ ಶಿವಣ್ಣ ಅದರ ಬಗ್ಗೆ ಬೇಸರಿಸಿಕೊಳ್ಳುತ್ತಾರೆ. ಅದೇ ರೀತಿ ಮುಂದೆ ಒಂದು ದಿನ ನಮ್ಮಿಬ್ಬರನ್ನು ಹ್ಯಾಂಡಲ್ ಮಾಡುವ ನಿರ್ಮಾಪಕ ಮತ್ತು ನಿರ್ದೇಶಕ ಸಿಕ್ಕರೆ ಖಂಡಿತವಾಗಿಯೂ ಮುಂದೆ ಒಟ್ಟಿಗೆ ಕಾಣಿಸಿಕೊಳ್ಳುತ್ತೇವೆ ಎನ್ನುವ ಸಮಾಧಾನದ ನುಡಿಗಳನ್ನು ಕೂಡ ನುಡಿಯುತ್ತಾರೆ.

ಈ ಹಿಂದೆ ದೇವರ ಮಗ (Devara maga) ಎನ್ನುವ ಸಿನಿಮಾದಲ್ಲಿ ಕೂಡ ಶಿವಣ್ಣ ಹಾಗೂ ದರ್ಶನ್ ಕಾಣಿಸಿಕೊಂಡಿದ್ದರು. ದರ್ಶನವರು ಆಗತಾನೇ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು. ಆಗಿನ್ನು ಹೀರೋ ಆಗಿ ಅವರು ಹೆಸರು ಮಾಡಿರಲಿಲ್ಲ. ಸಿಕ್ಕ ಸಣ್ಣಪುಟ್ಟ ಪಾತ್ರ ಮತ್ತು ವಿಲನ್ ರೋಲ್ (villain role) ಗಳಲ್ಲಿ ಅಭಿನಯಿಸಿದ್ದರು. ಅಂಬರೀಶ್ ಕೂಡ ಅಭಿನಯಿಸಿದ್ದ ಈ ಸಿನಿಮಾದಲ್ಲಿ ದರ್ಶನ್ ವಿಲನ್ ರೋಲ್ ಮಾಡಿದ್ದರು. ಆ ದಿನಗಳಲ್ಲಿ ದೇವರ ಮಗ ಸಿನಿಮಾ ಬಹಳ ದೊಡ್ಡ ಸೌಂಡ್ ಮಾಡಿತ್ತು. ಮತ್ತೊಮ್ಮೆ ಇವರಿಬ್ಬರನ್ನು ತೆರೆ ಮೇಲೆ ಕಾಣಲು ಕನ್ನಡಿಗರು ಕಾಯುತ್ತಿದ್ದಾರೆ.

ಪ್ರತಿನಿತ್ಯವು ನಟಿ ಮಾಳ್ವಿಕಾ ತಪ್ಪದೆ ವಿಷ್ಣು ದಾದ ಫೋಟೋಗೆ ಪೂಜಿಸೋದು ಯಾಕೆ ಗೊತ್ತ.? ದೇವರ ಮನೆಯಲ್ಲಿ ವಿಷ್ಣು ಫೋಟೋ ಇಟ್ಟು ಪೂಜಿಸುವ ಈ ವಿಡಿಯೋ ನೋಡಿದ್ರೆ ಆಶ್ಚರ್ಯ ಆಗುತ್ತೆ.

 

ನಟ ವಿಷ್ಣುವರ್ಧನ್ (Actor Vishnuvardhan) ಅವರು ಅಭಿನವ ಸಂತನಂತೆ ಬದುಕಿ ದುರಂತ ನಾಯಕನಾಗಿ ಅಂತ್ಯ ಕಂಡವರು. ವಿಷ್ಣುವರ್ಧನ್ ಅವರನ್ನು ನಮ್ಮ ಚಿತ್ರರಂಗ ಆಗಲಿ ಸರ್ಕಾರ ಆಗಲಿ ಸರಿಯಾಗಿ ಗುರುತಿಸಲಿಲ್ಲ ಎನ್ನುವ ನೋವು ಪ್ರತಿ ಕನ್ನಡಿಗರ ಮನದಲ್ಲೂ ಇದೆ. ಆದರೆ ವಿಷ್ಣುವರ್ಧನ್ ಅವರ ಸರಳ ವ್ಯಕ್ತಿತ್ವ ಎಂದೂ ಇದನ್ನೆಲ್ಲಾ ಬಯಸಿಯೇ ಇರಲಿಲ್ಲ. ಬದುಕಿನ ಉದ್ದಕ್ಕೂ ನೂರಾರು ನೋವುಗಳನ್ನು ತಿಂದುಕೊಂಡು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕು ಮುಗಿಸಿಬಿಟ್ಟರು ಇವರು.

ವಿಷ್ಣುವರ್ಧನ್ ಅವರನ್ನು ಯಾರು ಗುರುತಿಸದೆ ಇದ್ದರೂ ಅವರ ಹತ್ತಿರದ ಬಳಗದವರು ಮತ್ತು ಅವರ ಅಪ್ಪಟ ಅಭಿಮಾನಿಗಳು ದೇವರ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದಾರೆ, ಅವರ ಆದರ್ಶಗಳನ್ನು ಅದೇ ರೀತಿ ಪಾಲಿಸುತ್ತಿದ್ದಾರೆ. ಈ ಮೂಲಕ ವಿಷ್ಣು ಅವರೆಲ್ಲರ ಮನದಲ್ಲಿ ಸದಾ ಅಮರ ವಿಷ್ಣುವರ್ಧನ್ ಅವರು ಬಹುತೇಕ ಕನ್ನಡ ಚಿತ್ರರಂಗದೊಂದಿಗೂ ಉತ್ತಮವಾದ ಸ್ನೇಹ ಬಾಂಧವ್ಯವನ್ನು ಹೊಂದಿದ್ದರು. ಪ್ರತಿಯೊಬ್ಬರ ಜೊತೆಗೂ ಕೂಡ ವಿಶ್ವಾಸದಿಂದ ಬೆರೆಯುತ್ತಿದ್ದರು.

ಆದರೆ ಅವರ ಆಪ್ತ ವಲಯ ಒಂದಿತ್ತು. ಅದರಲ್ಲಿ ಅಂಬರೀಶ್, ಅಭಿಜಿತ್, ರಮೇಶ್ ಭಟ್, ಅವಿನಾಶ್, ರಮೇಶ್ ಅರವಿಂದ್, ತಾರಾ ಅನುರಾಧ ಇನ್ನು ಕೆಲವು ಕಲಾವಿದರು ಇದ್ದರು. ಅವರ ಜೊತೆಗೆ ಕುಟುಂಬದವಂಥ ಒಡನಾಟ ವಿಷ್ಣುವರ್ಧನ್ ಅವರಿಗೆ ಇತ್ತು. ಎಷ್ಟೋ ಬಾರಿ ಅವರ ಕುಟುಂಬದ ಸಮಸ್ಯೆಗಳನ್ನು ತನ್ನ ಸಮಸ್ಯೆಯಂತೆ ಬಗೆಹರಿಸಿದ್ದಾರೆ ಸಾಹಸ ಸಿಂಹ. ಇಂಥವರಲ್ಲಿ ಅವಿನಾಶ್ (Avinash) ಅವರ ಬದುಕಿನಲ್ಲಾದ ಘಟನೆಯನ್ನು ಸ್ವತಃ ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಅದೇನೆಂದರೆ ಅವಿನಾಶ್ ಅವರು ಮಾಳ್ವಿಕಾ (Malvika) ಅವರನ್ನು ಬಹಳ ಪ್ರೀತಿಸುತ್ತಿದ್ದರು, ಆದರೆ ಅವಿನಾಶ್ ಅವರಿಗೆ ತಂದೆ ತಾಯಿ ಇಲ್ಲದ ಕಾರಣ ಮಾಳ್ವಿಕ ಮನೆಯಲ್ಲಿ ಮದುವೆ ಮಾಡಿಕೊಡಲು ಹಿಂದೆ ಮುಂದೆ ನೋಡುತ್ತಿದ್ದರು. ಅಂತಹ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರೇ ಅವಿನಾಶ್ ಅವರ ಪರವಾಗಿ ಮಾಳವಿಕಾ ಅವರ ಮನೆಗೆ ಹೋಗಿ ಮಾತನಾಡಿ ಅವನಿಗೆ ಯಾರಿಲ್ಲದಿದ್ದರೂ ನಾನಿದ್ದೇನೆ ನನ್ನನ್ನು ನಂಬಿ ನಿಮ್ಮ ಮಗಳನ್ನು ಧಾರೆ ಎರೆದು ಕೊಡಿ ಎಂದು ಹೇಳಿದ್ದರು.

ಮತ್ತು ಹೀಗೆ ಎಲ್ಲರ ಮನೆಯಂತೆ ಅವರ ಸಂಸಾರದಲ್ಲೂ ಕಲಹ ಬಂದು ಅವಿನಾಶ್ ಅವರು ಬೇಸರದಲ್ಲಿದ್ದಾಗ ಅದನ್ನು ಗಮನಿಸಿ ವಿಷ್ಣುವರ್ಧನ್ ಅವರೇ ಮಾಳ್ವಿಕಾ ಅವರನ್ನು ಕರೆಸಿ, ಇಬ್ಬರಿಗೂ ಸಂಧಾನ ಮಾಡಿ ಬುದ್ಧಿ ಹೇಳಿದ್ದರು. ಅದೇ ಕೊನೆ ವಿಷ್ಣುವರ್ಧನ್ ಅವರ ಮಾತಿಗೆ ಬೆಲೆ ಕೊಟ್ಟು ಮತ್ತೆಂದೂ ಭಿನ್ನಾಭಿಪ್ರಾಯಕ್ಕೆ ಎಡೆ ಮಾಡಿಕೊಡದೆ ಆದರ್ಶ ದಂಪತಿಗಳಂತೆ ಒಟ್ಟಿಗೆ ಬದುಕುತ್ತಿದ್ದಾರೆ ಅವಿನಾಶ್ ಹಾಗೂ ಮಾಳ್ವಿಕಾ.

ಈ ದಂಪತಿಗಳು ಮನೆ ಕಟ್ಟಿಸಬೇಕು ಎಂದು ಭೂಮಿ ಪೂಜೆ ಮಾಡಿಸುವಾಗ ವಿಶೇಷ ಅತಿಥಿಯಾಗಿ ವಿಷ್ಣುವರ್ಧನ್ ಅವರನ್ನೇ ಕರೆದು ಅವರ ಕೈಯಿಂದಲೇ ಗುದ್ದಲಿ ಪೂಜೆ ಮಾಡಿಸಿದ್ದಾರೆ. ಮೊದಲಿಗೆ ನಾನು ಬೇಡ ಎಂದು ಒಪ್ಪದ ಅವರು ನಂತರ ಅವರ ಒತ್ತಾಯಕ್ಕೆ ಮಾಡಿದ್ದು ಪೂಜೆ ನೆರವೇರಿಸಿದರು. ಅದೇ ಜಾಗದಲ್ಲಿ ಇಂದು ಬೃಹತ್ ಆದ ಬಂಗಲೆಯನ್ನು ಕಟ್ಟಿಕೊಂಡು ಅವಿನಾಶ್ ಹಾಗು ಮಾಳ್ವಿಕಾ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ.

ಜೊತೆಗೆ ತಮ್ಮ ಬದುಕಿನ ಅತಿ ಮುಖ್ಯ ಭಾಗ ಆದ ಕಾರಣ ವಿಷ್ಣುದಾದಾ ಅವರ ಫೋಟೋ ಒಂದನ್ನು ದೇವರ ಕೋಣೆಯಲ್ಲಿಟ್ಟು ಪ್ರತಿನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಮಾಳ್ವಿಕಾ ಅವರು ಸಹ ಒಮ್ಮೆ ದಾದನ ಬಗ್ಗೆ ಈ ರೀತಿ ಹೇಳಿಕೊಂಡಿದ್ದಾರೆ. ನನ್ನ ತಂದೆಯ ಸ್ಥಾನದಲ್ಲಿದ್ದು ವಿಷ್ಣು ಸರ್ ನನ್ನನ್ನು ನೋಡಿಕೊಳ್ಳುತ್ತಿದ್ದರು, ಬಹುಬೇಗ ಅವರನ್ನು ಕಳೆದುಕೊಂಡು ಬಿಟ್ಟೆವು. ನನ್ನ ಜೀವನದಲ್ಲಿ ನಾನು ಕಂಡ ಶ್ರೇಷ್ಠ ವ್ಯಕ್ತಿ ಅವರು ಎಂದು ಹೇಳಿಕೊಂಡಿದ್ದಾರೆ.