Home Blog Page 234

ನಾನು ಹಿಂದು ಅನ್ನೋ ಕಾರಣಕ್ಕೆ ಆದಿಲ್ ಖಾನ್ ಮನೆಯವರು ನನ್ನ ಸೊಸೆ ಅಂತ ಒಪ್ಕೋತಿಲ್ಲ, ಮನೆಗೆ ಸೇರಿಸುತ್ತಿಲ್ಲ ದಯವಿಟ್ಟು ನನ್ಗೆ ನ್ಯಾಯ ಕೊಡ್ಸಿ ಅಂತ ಮೈಸೂರಲ್ಲಿ ಕಣ್ಣಿರಿಟ್ಟ ನಟಿ ರಾಖಿ ಸಾವಂತ್

0

 

ಸೆಲೆಬ್ರಿಟಿಗಳ ಅಂತರ್ಜಾತಿ ವಿವಾಹ ಬಹಳ ಮಾಮೂಲಿ, ಆದರೆ ಬಹುಶಃ ಭಾರತದಲ್ಲಿ ಯಾವ ತಾರೆಯ ವಿವಾಹದ ವಿಷಯ ಕೂಡ ಇಷ್ಟೊಂದು ವಿವಾದ ಆಗಿರಲಿಲ್ಲ ಎನಿಸುತ್ತದೆ. ಬಾಲಿವುಡ್ ಬೆಡಗಿ ರಾಖಿ ಸಾವಂತ್ ಮೈಸೂರು ಮೂಲದ ಮುಸ್ಲಿಂ ಯುವಕ ಆದಿಲ್ ಖಾನ್ ಅವರ ಪ್ರೇಮ ವಿವಾಹ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಗಂಡನ ಮೇಲೆ ಹಣದ ವಂ.ಚ.ನೆ ಸೇರಿದಂತೆ ಬೆ.ತ್ತ.ಲೆ ಫೋಟೋ ಮಾರಾಟ ಮಾಡಿರುವ ಆರೋಪ ಹಾಗೂ ಆತ ಹ.ಲ್ಲೆ ಮಾಡಿರುವ ಬಗ್ಗೆ ಕೂಡ ದೂರು ಕೊಟ್ಟು ಪತಿ ಆದಿಲ್ ಖಾನ್ ಮೇಲೆ ಎಫ್ ಐ ಆರ್ ದಾಖಲಿಸಿ ಜೈಲಿಗೆ ಕಳಿಸಿರುವ ರಾಕಿ ಸಾವಂತ್ ಅವರು ಇಂದು ಮೈಸೂರಿಗೆ ಆಗಮಿಸಿದ್ದರು.

ಫರ್ಲಿನ್ ಚೋಪ್ರಾ ಅವರ ಜೊತೆ ಮೈಸೂರಿಗೆ ಆಗಮಿಸಿರುವ ರಾಖಿ ಸಾವಂತ್ ಪತಿಯಿಂದ ಆದ ಅನ್ಯಾಯದ ಬಗ್ಗೆ ನ್ಯಾಯ ಕೇಳಲು ಉದ್ದೇಶದಿಂದ ಬಂದಿದ್ದರು. ಕೋರ್ಟ್ ಅವರಣದಲ್ಲಿ ಮಾಧ್ಯಮದ ಎದುರೇ ಮತ್ತೊಮ್ಮೆ ಗಂಡನ ಮೇಲೆ ಕಿಡಿಕಾರಿದ್ದಾರೆ. ಆದಿಲ್ ಖಾನ್ ನನಗೆ ಮೋಸ ಮಾಡಿದ್ದಾನೆ, ಹಣವಂಚನೆ ಮಾಡುವುದರ ಜೊತೆ ನನ್ನ ನಂಬಿಕೆ ದ್ರೋ.ಹ ಕೂಡ ಮಾಡಿಕೊಂಡಿದ್ದಾನೆ. ಅವನಿಗೆ ತನು ಎನ್ನುವ ಹುಡುಗಿ ಜೊತೆ ಅ.ನೈ.ತಿ.ಕ ಸಂಬಂಧ ಇದೆ. ನನ್ನನ್ನು ಪ್ರೀತಿಸಿ ಮದುವೆ ಮಾಡಿ ಕೊನೆಗೆ ಫ್ರಿಡ್ಜ್ ಅಲ್ಲಿ ತುಂ.ಡು ಮಾಡಿ ಇಡುವುದೇ ಅವನ ಉದ್ದೇಶ ಆಗಿತ್ತು.

ದೇವರ ಕೃಪೆಯಿಂದ ನಾನು ತಪ್ಪಿಸಿಕೊಂಡೆ ಯಾವುದೇ ಕಾರಣಕ್ಕೂ ಅವನು ಶಿ.ಕ್ಷೆಯಿಂದ ತಪ್ಪಿಸಿಕೊಳ್ಳಬಾರದು ಎಂದು ಗೋಳಾಡಿದ್ದಾರೆ. ಜೊತೆಗೆ ಆದಿಲ್ ಖಾನ್ ಇಂದ ಬಹಳ ಮೋಸ ಆಗಿದೆ ಈಗ ಅವರ ಕುಟುಂಬದವರನ್ನಾದರೂ ಮಾತನಾಡಿಸೋಣ ಎಂದು ಅವರ ಮಗನ ಬಗ್ಗೆ ಕೆಲ ವಿಷಯ ತಿಳಿಸುವ ಸಲುವಾಗಿ ಅವರ ತಂದೆ ತಾಯಿಯನ್ನು ಭೇಟಿಯಾಗಲು ಮನೆ ಬಳಿ ಹೋದರೆ ನಾನು ಹಿಂದು ಎನ್ನುವ ಕಾರಣಕ್ಕೆ ಅವರ ತಂದೆ ನನ್ನನ್ನು ಮನೆಗೆ ಸೇರಿಸುತ್ತಿಲ್ಲ.

ನೀನು ಹಿಂದೂ ಹಾಗಾಗಿ ಮನೆ ಒಳಗೆ ಬರಬೇಡ ಎಂದು ನೇರವಾಗಿ ಹೇಳುತ್ತಿದ್ದಾರೆ ಎಂದು ಮಾಧ್ಯಮಗಳ ಎದುರು ಗಳಗಳನೆ ಕಣ್ಣೀರುಟ್ಟು ಮಾತನಾಡಿದ್ದಾರೆ ರಾಖಿ ಸಾವಂತ್. ಕೋರ್ಟ್ ಆವರಣದಲ್ಲಿ ರಾಖಿ ಸಾವಂತ್ ಮತ್ತು ಆದಿಲ್ ಖಾನ್ ಅವರ ಭೇಟಿ ಕೂಡ ಆಗಿದೆ, ಅದರ ಬಗ್ಗೆ ಕೂಡ ಮಾತನಾಡಿದರು. ಕೋರ್ಟ್ ಆವರಣದಲ್ಲಿಯೇ ನನನ್ನು ಸಾ.ಯಿ.ಸು.ವು.ದಾ.ಗಿ ಬೆ.ದ.ರಿ.ಕೆ ಹಾಕಿದ್ದಾನೆ, ಅದ್ಹೇಗೆ ಬದುಕುತ್ತೀಯಾ ನಾನು ನೋಡುತ್ತೇನೆ ಎಂದು ನನಗೆ ಪ್ರಾಣ ಬೆ.ದ.ರಿಕೆ ಹಾಕಿದ್ದಾನೆ, ಅವನಿಗೆ ರೌಡಿಗಳ ಪರಿಚಯ ಇದೆ, ಜೈಲಲ್ಲಿ ಇದ್ದುಕೊಂಡೇ ಅವರ ಮೂಲಕ ನನ್ನನ್ನು ಮುಗಿಸಲು ಪ್ಲಾನ್ ಮಾಡುತ್ತಿದ್ದಾನೆ.

ಎಂದು ಪತಿ ಮೇಲೆ ಮತ್ತೊಂದು ಆರೋಪ ಹೊರಿಸಿದ್ದಾರೆ ರಾಖಿ ಸಾವಂತ್ ಅವರು. ಸದ್ಯಕ್ಕೆ ಪತಿ ಮತ್ತು ಆತನ ಕುಟುಂಬದ ಮೇಲೆ ದಿನಾ ಒಂದೊಂದು ಹೊಸ ಆರೋಪ ಇಟ್ಟುಕೊಂಡು ಮಾಧ್ಯಮದವರ ಎದುರು ಕಾಣಿಸಿಕೊಳ್ಳುತ್ತಿರುವ ರಾಖಿ ಸಾವಂತ್ ಅವರು ವಿವಾಹದ ವಿಷಯ ಸೋಶಿಯಲ್ ಮೀಡಿಯಾದಲ್ಲೂ ಬಾರಿ ಚರ್ಚೆ ಆಗುತ್ತಿದೆ. ಅನೇಕರು ರಾಖಿ ಸಾವಂತ್ ಪರ ನಿಂತು ಆಕೆಗೆ ನೈತಿಕ ಬೆಂಬಲ ಸಹ ತೋರುತ್ತಿದ್ದರೆ, ಇತ್ತ ಕೆಲ ಮಂದಿ ಆದಿಲ್ ಖಾನ್ ಕರ್ನಾಟಕದ ಹುಡುಗ ಆಗಿ ಈ ರೀತಿ ದೇಶಾದ್ಯಂತ ಚರ್ಚೆ ಆಗುವ ರೀತಿ ವೈಯಕ್ತಿಕ ವಿಷಯದಲ್ಲಿ ವಿವಾದ ಮಾಡಿಕೊಂಡಿರುವುದಕ್ಕೆ ಅವರಿಗೂ ಸಹ ಛೀಮಾರಿ ಹಾಕುತ್ತಿದ್ದಾರೆ.

ದೀಪಿಕಾ ದಾಸ್ ಮನೆ ಸದಸ್ಯೆ ಕಾಣೆ. ದಯವಿಟ್ಟು ಹುಡುಕಿ ಕೊಡಿ ಎಂದು ಕಣ್ಣಿರಿಟ್ಟ ನಟಿ. ಹುಡುಕಿ ಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.

0

 

ಕಿರುತೆರೆ ನಟಿ ದೀಪಿಕಾ ದಾಸ್ ಅವರು ಯಾವುದೇ ಸ್ಟಾರ್ ಹೀರೋಯಿನ್ ಗೂ ಕಡಿಮೆ ಇರದಷ್ಟು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಒಂದು ರೀತಿಯಲ್ಲಿ ಈಕೆ ಸ್ಟಾರ್ ಹೀರೋಯಿನ್ ರೀತಿಯ ಆಟಿಟ್ಯೂಡ್ ಹೊಂದಿದ್ದಾರೆ ಎಂದೇ ಹೇಳಬಹುದು. ಅದೇನೋ ಗೊತ್ತಿಲ್ಲ ಜನರಿಗೆ ದೀಪಿಕಾ ದಾಸ್ ಎಂದರೆ ಒಂದು ರೀತಿಯ ವಿಶೇಷ ಆಕರ್ಷಣೆ. ಇದಕ್ಕೆ ಆಕೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಅಷ್ಟು ದಿನಗಳು ಕಾರಣ ಆಗಿರಬಹುದು.

ಬಿಗ್ ಬಾಸ್ ಮನೆಯಲ್ಲಿ ನೇರನುಡಿ, ಖಡಕ್ ಆದ ವ್ಯಕ್ತಿತ್ವ ಮತ್ತು ಪ್ರಬುದ್ಧತೆಯ ಮಾತುಗಳಿಂದ ಆಕೆ ಒಬ್ಬ ಲೇಡೀಸ್ ಸೂಪರ್ ಸ್ಟಾರ್ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾರೆ ಎನಿಸುವ ರೀತಿ ಜನರ ಮನಸಲ್ಲಿ ಬಿಂಬಿತವಾಗಿದ್ದಾರೆ. ಜೊತೆಗೆ ಅದಕ್ಕೂ ಮುಂಚೆ ಆಕೆ ಅಭಿನಯಿಸಿದ್ದ ನಾಗಿಣಿ ಧಾರಾವಾಹಿಯು ಕೂಡ ಇವರಿಗೆ ಈ ರೀತಿಯ ಒಂದು ಚಾರ್ಮ್ ಬರಲು ಕಾರಣವಾಗಿದೆ ಎನ್ನುವುದನ್ನು ಮರೆಯುವಂತಿಲ್ಲ.

ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿರುವ ದೀಪಿಕಾ ದಾಸ್ ಅವರು ತಮ್ಮ ದಿನನಿತ್ಯದ ಚಟುವಟಿಕೆಗಳು ಮತ್ತು ವಿಶೇಷ ವಿಷಯಗಳು ಹಾಗೂ ಹೊಸ ಹೊಸ ಫೋಟೋ ಶೂಟ್ಗಳನ್ನು ಇನ್ನು ಮುಂತಾದ ವಿಚಾರಗಳನ್ನು ಇದರಲ್ಲಿ ಹಂಚಿಕೊಡುತ್ತಾರೆ. ಸದ್ಯಕ್ಕೆ ಇನ್ಸ್ಟಾಗ್ರಾಮ್ ಅಲ್ಲಿ ಒಂದು ದುಃಖದ ವಿಷಯವನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ ಅವರ ಮನೆಯ ಬೆಕ್ಕು ಶಾಡೋ ಕಾಣೆ ಆಗಿದೆಯಂತೆ. ದೀಪಿಕಾ ದಾಸ್ ಅವರು ಪೆಟ್ ಪ್ರಿಯೆ.

ಈಗಾಗಲೇ ಹಲವು ಸಂದರ್ಶನಗಳಲ್ಲಿ ಮತ್ತು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅವಕಾಶ ಸಿಕ್ಕಾಗಲ್ಲ ಅವರು ಈ ರೀತಿ ತಮ್ಮ ಮುದ್ದು ಪೆಟ್ಗಳ ಬಗ್ಗೆ ಮಾತನಾಡಿದ್ದಾರೆ. ಅವರ ಮನೆಯಲ್ಲಿ ಚಿಕ್ಕ ವಯಸ್ಸಿನಿಂದಲೂ ಕೂಡ ನಾಯಿಗಳನ್ನು ಮತ್ತು ಬೆಕ್ಕುಗಳನ್ನು ಸಾಕುತ್ತಿದ್ದ ಕಾರಣ ಈಗಲೂ ಅವರಿಗೆ ಅದು ಅಭ್ಯಾಸ ಆಗಿಬಿಟ್ಟಿದೆ. ಅವರು ಎಂದು ಅದನ್ನು ಪ್ರಾಣಿಗಳು ಎನ್ನುವ ರೀತಿ ಟ್ರೀಟ್ ಮಾಡೇ ಇಲ್ಲ ಎನ್ನುವುದನ್ನು ಸಹ ಅವರು ಹೇಳಿಕೊಂಡಿದ್ದಾರೆ.

ಈ ರೀತಿ ಪೆಟ್ ಗಳ ಬಗ್ಗೆ ಇಷ್ಟು ವಿಶೇಷ ಪ್ರೀತಿ ಮತ್ತು ಆಸಕ್ತಿ ಇಟ್ಟುಕೊಂಡಿರುವ ದೀಪಿಕಾ ದಾಸ್ ಅವರಿಗೆ ಈಗ ಅವರ ಮನೆಯ ಬೆಕ್ಕು ಕಾಣೆ ಆಗಿರುವುದು ತುಂಬಾ ನೋವುಂಟು ಮಾಡಿದೆ. ಕಪ್ಪು ಬಣ್ಣದ ಶಾಡೋ ಎನ್ನುವ ಈ ಬೆಕ್ಕಿನ ಫೋಟೋವನ್ನು ಹಾಕಿ ಫೆಬ್ರವರಿ 18 ರಿಂದ ನಮ್ಮ ಬೆಕ್ಕು ಕಾಣೆ ಆಗಿದೆ, ವಿಶ್ವೇಶ್ವರಯ್ಯ ಲೇಔಟ್ ಮೂರನೇ ಬ್ಲಾಕ್ ಉಲ್ಲಾಳ ಇಲ್ಲಿಂದ ಕಾಣೆ ಆಗಿದೆ. ಯಾರಿಗೆ ಆದರೂ ನಮ್ಮ ಬೆಕ್ಕು ಸಿಕ್ಕಲ್ಲಿ ದಯವಿಟ್ಟು ನಮಗೆ ತಲುಪಿಸಿ ನಿಮಗೆ 10000 ರಿಂದ 15000 ವರೆಗೆ ಬಹುಮಾನ ಕೂಡ ಕೊಡುತ್ತೇನೆ ಎಂದು ಬೆಕ್ಕು ಕಾಣೆಯಾದ ಬಗ್ಗೆ ಪ್ರಕಟಣೆ ಹಾಕಿದ್ದಾರೆ.

ಇದೇ ರೀತಿ ಕಳೆದ ತಿಂಗಳು ನಟಿ ಸುಧಾರಾಣಿ ಅವರು ಸಹ ತಮ್ಮ ಪ್ರೀತಿಯ ಶ್ವಾನ ಗಂಗಮ್ಮ ಕಳೆದು ಹೋಗಿರುವ ಬಗ್ಗೆ ಇನ್ಸ್ಟಾಗ್ರಾಮ್ ಅಲ್ಲಿ ಪೋಸ್ಟ್ ಹಾಕಿದ್ದರು. ಇದರಿಂದ ಮತ್ತೆ ಅದನ್ನು ಮನೆಗೆ ಹುಡುಕಿ ತರುವುದಕ್ಕೆ ಅನುಕೂಲ ಆಗಿತ್ತು. ಈಗಲೂ ಸಹ ಅದೇ ರೀತಿ ಅನುಕೂಲವಾಗಿ ದೀಪಿಕ ದಾಸ್ ಅವರಿಗೆ ಬಹಳ ಬೇಗ ಬೆಕ್ಕು ಸಿಗುವಂತಾಗಲಿ ಎಂದು ನಾವು ಹರಸೋಣ.

ಅಯ್ಯಪ್ಪನ ಹಾಗೇ ಇನ್ಮುಂದೆ ಅಪ್ಪುಗೂ ಮಾಲೆ ಹಾಕಿ ದರ್ಶನ ಮಾಡುವುದಾಗಿ ಅಭಿಯಾನ ಆರಂಭಿಸಿದ ಅಪ್ಪು ಫ್ಯಾನ್ಸ್. ಪೋಸ್ಟರ್ ನೋಡಿ ನೆಟ್ಟಿಗರು ಹೇಳುತ್ತಿರೋದೇನು ಗೊತ್ತ.?

0

 

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕರ್ನಾಟಕದ ಹೆಮ್ಮೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಒಬ್ಬ ನಟನಾಗಿ ಮತ್ತು ಒಬ್ಬ ಜವಾಬ್ದಾರಿಯುತ ಸೆಲೆಬ್ರಿಟಿ ಆಗಿ ವಿಶ್ವದಾದ್ಯಂತ ಎಲ್ಲರೂ ಅನುಸರಿಸುವ ರೀತಿ ಆದರ್ಶ ಬದುಕನ್ನು ಬದುಕಿ ಹೋಗಿದ್ದಾರೆ. ಅವರ ಸಮಾಜ ಸೇವೆ, ಊಹೆಗೂ ನಿಲುಕದ್ದು ಮತ್ತು ಅವರ ವೈಯುಕ್ತಿಕ ಜೀವನ ಕೂಡ ಅಷ್ಟೇ ಶ್ರೇಷ್ಠವಾಗಿತ್ತು. ಸಿನಿಮಾಗಳ ಆಯ್ಕೆ ವಿಚಾರದಲ್ಲೂ ಕೂಡ ಚ್ಯೂಸಿ ಆಗಿದ್ದ ಇವರು ಸಮಾಜ ಮುಖಿಯಾಗಿದ್ದರು.

ಆದರೆ ಇವರ ಹೃದಯವಂತಿಕೆ ಅವರ ಅಂತ್ಯದ ನಂತರ ಜನರಿಗೆ ಅರಿವಾಯಿತು ಎನ್ನುವುದೇ ಬೇಸರದ ವಿಷಯ. ಆದರೆ ಆ ಬಳಿಕವೂ ಕೂಡ ಅಭಿಮಾನಿಗಳು ಅವರಿಗೆ ಸಾಕಷ್ಟು ಗೌರವ ಪ್ರೀತಿ ಕೊಟ್ಟಿದ್ದಾರೆ. ಇಂದಿಗೂ ಕೂಡ ಪುನೀತ್ ರಾಜಕುಮಾರ್ ಎಂದರೆ ಕಣ್ಣಂಚಿನಲ್ಲಿ ನೀರು ಹಾಗೂ ಕಂಠದಲ್ಲಿ ಮೌನ ತುಂಬಿಕೊಳ್ಳುತ್ತದೆ.

ಪುನೀತ್ ಅವರ ಮೇಲಿರುವ ಪ್ರೀತಿಯನ್ನು ತೋರಿಸಲು ಹೋಗಿ ನೆಟ್ಟಿಗರ ಆ.ಕ್ರೋ.ಶ.ಕ್ಕೆ ಕೆಲವರು ಗುರಿಯಾಗಿದ್ದಾರೆ. ಅದೇನೆಂದರೆ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಾರ್ಚ್ 1ನೇ ತಾರಿಕಿನಿಂದ 17ರವರೆಗೆ ಪುನೀತ್ ರಾಜಕುಮಾರ್ ಮಾಲೆ ಹಾಕಲು ಅವರ ಕೆಲ ಅಭಿಮಾನಿಗಳು ನಿರ್ಧಾರ ಮಾಡಿದ್ದಾರೆ.

ಆ ಕುರಿತ ವಿಧಿ ವಿಧಾನಗಳನ್ನು ಹೊಂದಿರುವ ಒಂದು ಪಾಂಪ್ಲೆಟ್ ಪ್ರತಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಸುದ್ದಿ ಆಗುತ್ತಿದ್ದಂತೆ ಹೆಚ್ಚಿನ ಮಂದಿ ಇದರ ಬಗ್ಗೆ ತಮ್ಮ ಬೇಸರವನ್ನು ಹೊರ ಹಾಕುತ್ತಿದ್ದಾರೆ. ದಕ್ಷಿಣ ಭಾರತ ಭಾಗದ ಜನರ ಒಂದು ಧಾರ್ಮಿಕ ಭಾವನೆಯ ಭಾಗ ಅಯ್ಯಪ್ಪ ಸ್ವಾಮಿ ಮಾಲೆ. ಅದನ್ನು ಆ ಉದ್ದೇಶ ಬಿಟ್ಟು ಬೇರೆ ಎಲ್ಲೂ ಹೆಸರು ಹೇಳುವುದಿಲ್ಲ ಆದರೆ ಅದೇ ರೀತಿ ನಿಯಮಾವಳಿಗಳನ್ನು ಹಾಕಿಕೊಂಡು ಈಗ ಪುನೀತ್ ರಾಜಕುಮಾರ್ ಮಾಲೆ ಹಾಕುತ್ತಿರುವುದು ಒಂದು ರೀತಿಯಲ್ಲಿ ವಿಪರೀತ ಎನಿಸುತ್ತದೆ.

ಇದು ಅಂಧ ಅಭಿಮಾನ ಎಂದು ಕರೆಸಿಕೊಳ್ಳುತ್ತದೆ, ಇದಕ್ಕೆ ಯಾವುದೇ ಅರ್ಥ ಇಲ್ಲ ಪುನೀತ್ ರಾಜಕುಮಾರ್ ಅವರು ದೇವರಂತೆ ಕಂಡಿದ್ದಾರೆ ಹೊರತು ಅವರೇ ದೇವರಲ್ಲ. ಅವರ ಮೇಲೆ ಅಷ್ಟು ಪ್ರೀತಿ ಅಭಿಮಾನ ಇದ್ದರೆ ಅವರ ಆದರ್ಶನಗಳನ್ನು ಇಟ್ಟುಕೊಂಡು ಅವರ ರೀತಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಜನರಿಗೆ ಒಳ್ಳೇದಾಗುವ ಕೆಲಸ ಮಾಡಿ ಅಷ್ಟೇ ಸಾಕು. ಅಭಿಮಾನ ಎನ್ನುವ ಅತಿರೇಕದಿಂದ ಇಷ್ಟು ವರ್ಷಗಳಿಂದ ಇದ್ದ ಒಂದು ಆಚರಣೆಯನ್ನು ಅನುಸರಿಸಿ ಮಾಲೆ ಮತ್ತು ಇಡುಮುರಿಗೆ ಇರುವ ಗೌರವ ಕಡಿಮೆ ಆಗುವ ರೀತಿ ನಡೆದುಕೊಳ್ಳಬೇಡಿ ಎಂದು ಮನವಿ ಮಾಡುತ್ತಿದ್ದಾರೆ.

ಡಾಕ್ಟರ್ ರಾಜಕುಮಾರ್ ಅವರ ಕಾಲದಿಂದಲೂ ಅವರ ಕುಟುಂಬದವರು ಮಾಲೆ ಹಾಕುತ್ತಿದ್ದರು. ಪುನೀತ್ ರಾಜಕುಮಾರ್, ಶಿವಣ್ಣ ಇವರೆಲ್ಲರೂ ಸಹ ಭಕ್ತಿಯಿಂದ ಪ್ರತಿ ವರ್ಷ ಮಾಲೆ ಧರಿಸುತ್ತಿದ್ದರು. ಎಲ್ಲರಂತೆ ಇವರಿಗೂ ಅದರ ಮಹತ್ವ ಗೊತ್ತಿದೆ. ಈಗ ಅಪ್ಪು ಅಭಿಮಾನಿಗಳ ಈ ನಿರ್ಧಾರದ ಬಗ್ಗೆ ಯಾವ ರೀತಿ ಪತ್ರಿಕೆಯೇ ಕೊಡುತ್ತಾರೆ ಇವರನ್ನು ತಡೆಯುವ ಪ್ರಯತ್ನ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಅಯ್ಯಪ್ಪ ಸ್ವಾಮಿ ಮಾಲೆ ರೀತಿ ಇನ್ಮುಂದೆ ಅಪ್ಪು ಮಾಲೆ ಹಾಕಲು ಅಭಿಮಾನಿಗಳು ರೆಡಿ, ಈ ವ್ರತದ ವಿಧಿ ವಿಧಾನ ನೋಡಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.

0

 

ನಗುವಿನ ಒಡೆಯ, ನಾಡು ಕಂಡ ಶ್ರೇಷ್ಠ ಮಾನವ, ಚಿತ್ರರಂಗದ ಪವರ್ ಸ್ಟಾರ್ ಆಗಿದ್ದ ಪುನೀತ್ ರಾಜಕುಮಾರ್ ಅವರು ದೈವಾಧೀನರಾಗಿ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ದೇವರಾಗಿದ್ದಾರೆ. ಅವರೊಬ್ಬ ಸ್ಟಾರ್ ನಟ ಎನ್ನುವ ಕಾರಣಕ್ಕಿಂತ ಹೆಚ್ಚಾಗಿ ಅಪ್ಪು ಅವರ ಸಮಾಜ ಸೇವೆಯನ್ನು ಮನಗಂಡ ಅನೇಕ ಜನರು ಅಪ್ಪು ಅವರು ಹೋದ ಬಳಿಕ ಅವರ ವ್ಯಕ್ತಿತ್ವಕ್ಕೆ ಮನಸೋತು ಅವರಿಗೆ ಅಭಿಮಾನಿಗಳಾಗಿದ್ದಾರೆ.

ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಅಪ್ಪುವಿಗೆ ಸಂಬಂಧಪಟ್ಟ ಕಾರ್ಯಕ್ರಮಗಳು, ಸಮಾರಂಭಗಳು ಮತ್ತು ಇನ್ನಿತರ ವಿಷಯಗಳಲ್ಲಿ ಕೈ ಜೋಡಿಸುತ್ತಾರೆ. ಮುಂದಿನ ಮಾರ್ಚ್ ತಿಂಗಳ 17ನೇ ತಾರೀಖಿನಂದು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಇರುವ ಕಾರಣ ಅದನ್ನು ವಿಶೇಷವಾಗಿ ಆಚರಿಸಲು ಅವರ ಅಭಿಮಾನಿಗಳು ನಿರ್ಧಾರ ಮಾಡಿದ್ದಾರೆ.

ಕಳೆದ ವರ್ಷ ಇದೇ ದಿನ ಅಪ್ಪು ಅವರ ನಟನೆಯ ಕೊನೆಯ ಸಿನಿಮಾ ಆಗಿದ್ದ ಜೇಮ್ಸ್ ಚಿತ್ರ ರಿಲೀಸ್ ಆಗಿತ್ತು. ನಾಡಿನಾದ್ಯಂತ ಪುನೀತ್ ಅವರ ಹುಟ್ಟು ಹಬ್ಬವನ್ನು ಒಂದು ಜಾತ್ರೆ ರೀತಿ ಮಾಡಿ ಜೇಮ್ಸ್ ಸಿನಿಮಾವನ್ನು ಅಭಿಮಾನಿಗಳು ಗೆಲ್ಲಿಸಿದ್ದರು. ಇವರ ಹುಟ್ಟು ಹಬ್ಬದ ಅಂಗವಾಗಿ ಅವರು ಮಾಡುತ್ತಿದ್ದ ರೀತಿ ತಾವು ಸಹ ಅವರ ಆದರ್ಶಗಳನ್ನು ರೂಢಿಸಿಕೊಂಡು ಸಮಾಜ ಸೇವೆ ಮಾಡಬೇಕು ಎಂದುಕೊಂಡು ರಕ್ತದಾನ ಶಿಬಿರ, ನೇತ್ರದಾನ ಶಿಬಿರ, ಉಚಿತ ಆರೋಗ್ಯ ಶಿಬಿರ ಇತ್ಯಾದಿಗಳನ್ನು ಏರ್ಪಡಿಸಿದ್ದರು.

ಪ್ರತಿ ಊರಿನಲ್ಲೂ ಅನ್ನಸಂತರ್ಪಣೆ ಅಭಿಮಾನಿಗಳಿಂದ ನೆರವೇರಿತ್ತು. ಈ ಬಾರಿ ಅದಕ್ಕಿಂತ ಒಂದು ಹೆಚ್ಚು ಮುಂದು ಹೋಗಿ ದೈವ ಸ್ವರೂಪವಾದ ಅಪ್ಪು ಅವರನ್ನು ದೇವರನ್ನಾಗಿ ಮಾಡಿ ಅವರ ಮಾಲೆ ಹಾಕುವ ನಿರ್ಧಾರ ಮಾಡಿದ್ದಾರೆ ಅವರ ಅಭಿಮಾನಿಗಳು. ದಕ್ಷಿಣ ಭಾರತದಲ್ಲಿ ಹೆಸರುವಾಸಿ ಆಗಿರುವ ಅಯ್ಯಪ್ಪ ಸ್ವಾಮಿ ಮಾಲೆಯನ್ನು ಹಾಕುವ ರೀತಿ ಪುನೀತ್ ರಾಜಕುಮಾರ್ ಮಾಲೆಯನ್ನು ಹಾಕಲು ಅವರ ಅಭಿಮಾನಿಗಳು ನಿರ್ಧರಿಸಿದ್ದಾರೆ.

ಅದಕ್ಕೆ ಈಗಾಗಲೇ ವಿಧಿ ವಿಧಾನ ಹೇಗಿರಬೇಕು ಎನ್ನುವ ನಿಯಮಾವಳಿಯನ್ನು ಸಹ ತಯಾರು ಮಾಡಿ ಹಂಚಿದ್ದಾರೆ. ಆ ಪಾಂಪ್ಲೆಟ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಬರೆದಿರುವ ಅಂಶಗಳು ಈ ರೀತಿ ಇದೆ. ಪುನೀತ್ ರಾಜ್ ಕುಮಾರ್ ಮಾಲೆಯನ್ನು ಹಾಕಬೇಕು, ಇದಕ್ಕೆ ಅಪ್ಪು ಡಾಲರ್ ಇರುವ ಮಾಲೆಯನ್ನು ಧರಿಸಬೇಕು. ಕೇಸರಿ ಪಡೆದ ಪಂಚೆ, ಶರ್ಟ್ ಮತ್ತು ಟವಲ್ ಅನ್ನು ಹಾಕಿಕೊಂಡು ಪುನೀತ್ ಅವರ ಭಾವಚಿತ್ರ ಇಟ್ಟುಕೊಂಡು ಪೂಜೆ ಮಾಡಲಾಗುತ್ತದೆ.

ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚೆ ಹಾಗೂ ಸೂರ್ಯಾಸ್ತದ ನಂತರ ಸ್ನಾನ ಮಾಡಬೇಕು. ದಿನದ ಮೂರು ಹೊತ್ತು ಕೂಡ ಕೇವಲ ಉಪಹಾರವನ್ನು ಸೇವಿಸಬೇಕು. 18ನೇ ತಾರೀಖಿನ ಬೆಳಗ್ಗೆ ಅಪ್ಪು ಪುಣ್ಯ ಭೂಮಿಗೆ ಬೇಟಿ ಕೊಟ್ಟು ದರ್ಶನ ಪಡೆದುಕೊಳ್ಳುವ ಮೂಲಕ ಇದು ಪೂರ್ತಿಗೊಳ್ಳುತ್ತದೆ. ಮಾಲೆ ಹಾಕಿದ್ದ ಸಮಯದಲ್ಲಿ ಯಾರು ಕೂಡ ಯಾವುದೇ ದುಶ್ಚಟ ಅಭ್ಯಾಸ ಇದ್ದರೂ ಅದನ್ನು ಮಾಡಬಾರದು, ಎಲ್ಲರಿಗೂ ಸಹ ಮಾಲೆ ಹಾಕಲು ಅನುಕೂಲತೆ ಇರುವುದಿಲ್ಲ ಎನ್ನುವ ಕಾರಣಕ್ಕೆ.

ಅವರವರ ಅವಸರಕ್ಕೆ ಅನುಸಾರವಾಗಿ ಐದು ದಿನಗಳು ಅಥವಾ 11 ದಿನಗಳು ಇರುವಾಗ ಬೇಕಾದರೂ ಮಾಲೆ ಹಾಕಬಹುದು ಎಂದು ಇದರಲ್ಲಿ ಬರೆಯಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಒಂದು ಫೋಟೋ ಬಾರಿ ಸಂಚಲನವನ್ನೇ ಸೃಷ್ಟಿಸುತ್ತಿದೆ. ಸದ್ಯಕ್ಕೆ ವಿಜಯನಗರ ಜಿಲ್ಲೆಯಲ್ಲಿ ಈ ರೀತಿ ಯೋಜನೆ ಹಾಕಿದ್ದಾರೆ ಎನ್ನುವ ಮಾಹಿತಿಗಳ ಲಭ್ಯ ಆಗಿದ್ದು, ನಂತರ ಇದನ್ನು ಎಲ್ಲೆಡೆ ಹಬ್ಬುವುದರಲ್ಲಿ ಯಾವುದೇ ಅನುಮಾನ ಇಲ್ಲ.

JDS ಪಕ್ಷ ತೊರೆದು BJP ಪಕ್ಷಕ್ಕೆ ಸೇರ್ಪಡೆಯಾದ ಹಿರಿಯ ನಟ ಅನಂತ್ ನಾಗ್

0

 

ರಾಜ್ಯದಲ್ಲಿ ವಿಧಾನಸಭಾ ಎಲೆಕ್ಷನ್ ರಣರಂಗ ರಂಗೇರುತ್ತಿದೆ, ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಮೋದಿ ಮುಂತಾದ ಪಕ್ಷದ ಪ್ರಮುಖ ಮುಖಂಡರುಗಳೆಲ್ಲ ತಿಂಗಳಿಗೆ ಹಲವು ಬಾರಿ ರಾಜ್ಯಕ್ಕೆ ಪ್ರವಾಸ ಬರುತ್ತಿದ್ದಾರೆ. ಇದೇ ಬೆನ್ನಲ್ಲಿ ಎಲ್ಲಾ ಪಕ್ಷಗಳು ಕೂಡ ದೊಡ್ಡ ದೊಡ್ಡವರನ್ನು ಗಾಳಕ್ಕೆ ಹಾಕಿಕೊಂಡು ಪಕ್ಷಕ್ಕೆ ಎಳೆದುಕೊಳ್ಳುವ ಬಲೆ ಎಸೆಯುತ್ತಿವೆ. ಈಗ ಚಿತ್ರರಂಗದ ಕಡೆ ಕೂಡ ಕಣ್ಣು ಬಿದ್ದಿದ್ದು ಹಿರಿಯ ನಟರೊಬ್ಬರನ್ನು ಕಮಲ ಪಾಳಯ ತನ್ನ ತೆಕ್ಕೆಗೆ ಬಳಸಿಕೊಂಡಿದೆ.

ಮೊದಲಿನಿಂದಲೂ ಕೂಡ ಹಲವು ನಿಲುವುಗಳನ್ನು ಹೊಂದಿದ್ದಾರೆ ಎನ್ನುವ ರೀತಿ ತಮ್ಮ ಮಾತುಗಳಲ್ಲಿ ಸುಳಿವು ಕೊಡುತ್ತಿದ್ದ, ಸದಾ ಮೋದಿ ಆಡಳಿತವನ್ನು ಬೆಂಬಲಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದ ಹಿರಿಯ ನಟ ರಾಜಕೀಯ ಮುತ್ಸದ್ದಿ ಅನಂತ್ ನಾಗ್ ಅವರು ಕೊನೆಗೂ ಬಿಜೆಪಿ ಪಕ್ಷಕ್ಕೆ ಒಲಿದಿದ್ದಾರೆ.

ಇಂದು ಸಂಜೆ ಸಂಜೆ 4:30ಕ್ಕೆ ಬಿಜೆಪಿ ಪಕ್ಷದ ಮಲ್ಲೇಶ್ವರಂ ಕಛೇರಿಯಲ್ಲಿ ಘಟಕದ ಅಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಪಕ್ಷ ಸೇರಲಿದ್ದಾರೆ. ಈ ಸಮಯದಲ್ಲಿ ರಾಜ್ಯದ ಬಿಜೆಪಿ ಪಕ್ಷದ ಅನೇಕ ಪ್ರಮುಖರು ಮತ್ತು ಸಿನಿಮಾ ಕ್ಷೇತ್ರದಿಂದ ಬಿಜೆಪಿ ಅಲ್ಲಿ ಗುರುತಿಸಿಕೊಂಡಿರುವ ನಿರ್ಮಾಪಕ ಮುನಿರಾಜು ಮತ್ತಿತರ ಉಪಸ್ಥಿತರಿರುವ ಮಾಹಿತಿ ಇದೆ. ಅನಂತ್ ರಾಜ್ ಅವರು ಇದೇ ಮೊದಲಿಗೆ ಪಕ್ಷವೊಂದರಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಈಗಾಗಲೇ ಅವರು ಸಚಿವನಾಗಿ ಮತ್ತು ವಿಧಾನ ಪರಿಷತ್ ಸದಸ್ಯನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 80ರ ದಶಕದಲ್ಲಿಯೇ ರಾಜಕೀಯ ಪ್ರವೇಶ ಮಾಡಿದ ಇವರು ಆರಂಭದಲ್ಲಿ ಜೆಡಿಎಸ್ ಪಕ್ಷದ ಸ್ಟಾರ್ ಪ್ರಚಾರಕನಾಗಿ ಗುರುತಿಸಿಕೊಂಡಿದ್ದರು. 1994ರ ವಿಧಾನಸಭೆ ಎಲೆಕ್ಷನ್ ಸಮಯದಲ್ಲಿ ಜೆಡಿಎಸ್ ಪಕ್ಷದಿಂದ ಮಲ್ಲೇಶ್ವರಂ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಿ ಎಚ್ ಪಾಟೀಲ್ ಅವರ ನೇತೃತ್ವದ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು.

ಬೆಂಗಳೂರಿನಲ್ಲಿ ಮೆಟ್ರೋ ಮತ್ತು ಇಲ್ಲಿನ ಪರಿಸರದ ಬಗ್ಗೆ ಬದಲಾವಣೆ ತರಲು ಬಹಳ ತುಡಿತ ಹೊಂದಿದ್ದ ಇವರು ಸಾಧ್ಯವಾದಷ್ಟು ಅದರ ಪರವಾಗಿ ಕೆಲಸ ಮಾಡಿ ಜನಮನ್ನಣೆ ಗಳಿಸಿದ್ದರು. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಜೊತೆ ಬಹಳ ಒಡನಾಟ ಇಟ್ಟುಕೊಂಡಿದ್ದ ಇವರು ಅವರ ಕಡೆ ದಿನದವರೆಗೂ ಕೂಡ ಉತ್ತಮ ಸ್ನೇಹಿತರಾಗಿದ್ದರು. ಒಂದು ಅರ್ಥದಲ್ಲಿ ಜೆಡಿಎಸ್ ಪಕ್ಷ ಒಡೆದು ಚೂರಾಗುವವರೆಗೂ ಜೆಡಿಎಸ್ ಪಕ್ಷದ ಪ್ರಮುಖರಾಗಿ ಇವರು ಕಾಣಿಸಿಕೊಳ್ಳುತ್ತಿದ್ದರು.

ನಂತರ ನಡೆದ 2004ರ ಚುನಾವಣೆಯಲ್ಲಿ ಚಾಮರಾಜಪೇಟೆ ಇಂದ ಸ್ಪರ್ಧಿಸಿದ್ದ ಇವರು ಸೋಲಬೇಕಾಯಿತು. ಅದ್ಯಾಕೋ ಆ ನಂತರ ಇವರು ಹಂತ ಹಂತವಾಗಿ ರಾಜಕೀಯದಿಂದ ದೂರ ಉಳಿದರು. ನಂತರ ಕನ್ನಡ ಚಲನಚಿತ್ರ ರಂಗದ ಉತ್ತಮ ಸಿನಿಮಾಗಳಲ್ಲಿ ಒಳ್ಳೊಳ್ಳೆ ಪಾತ್ರಗಳನ್ನು ನಿಭಾಯಿಸುವ ಮೂಲಕ ರಾಜಕೀಯ ಮರೆತು ಸಿನಿಮಾ ರಂಗದಲ್ಲಿಯೇ ಸಕ್ರಿಯರಾಗಿ ಬಿಟ್ಟರು.

ಇತ್ತೀಚೆಗೆ ಬಿಜೆಪಿ ಸರ್ಕಾರದ ಕಡೆ, ಉತ್ತಮ ಅಭಿಪ್ರಾಯಗಳನ್ನು ಹೊಂದಿರುವ ಇವರು ಮತ್ತೊಮ್ಮೆ ಸಮಾಜ ಸೇವೆ ಮಾಡಲು ಕಾತುರದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅನಂತನಾಗ್ ಅವರ ತಮ್ಮ ನಮ್ಮೆಲ್ಲರ ಹೆಮ್ಮೆಯ ಶಂಕರ್ ನಾಗ್ ಅವರು ನೆನಪಾಗದೆ ಇರದು. ಶಂಕರ್ ನಾಗ್ ಅವರಿಗೂ ಸಹ ಈ ರೀತಿ ರಾಜಕೀಯ ಪ್ರವೇಶ ಮಾಡಿ ಕರ್ನಾಟಕದಲ್ಲಿ ಮಹತ್ವಪೂರ್ಣ ಬದಲಾವಣೆಗಳನ್ನು ತರಬೇಕು ಎನ್ನುವ ಮಹತ್ವಾಕಾಂಕ್ಷೆ ಇತ್ತು.

ಅವರ ಕನಸುಗಳನ್ನು ತಮ್ಮ ಕೈಲಾದಷ್ಟು ಸಾಕಾರ ಮಾಡುವ ಪ್ರಯತ್ನವನ್ನು ಅನಂತ್ ನಾಗ್ ಅವರು ಮಾಡಿದ್ದಾರೆ. ಮುಂದೆ ಅವಕಾಶ ಹಾಗೂ ಅಧಿಕಾರ ಸಿಕ್ಕರೆ ಮಾಡಲೂಬಹುದು. ಜನ ಅಭಿಪ್ರಾಯ ಏನಿದೆ ಎಂದು ಕಾದು ನೋಡೋಣ ಸದ್ಯಕ್ಕೆ ಇವರು ಯಾವ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ ಎನ್ನುವುದು ಕರ್ನಾಟಕದ ನಾಗರಿಕರ ಕುತೂಹಲ.

ಹೀರೋಗಳ ಮಾತೆಲ್ಲ ಬರಿ ಬೂಟಾಟಿಕೆ ಎಂದು ನೇರವಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಹೀರೋಗಳ ಮೇಲೆ ಕೋಪಗೊಂಡ ಹಿರಿಯ ನಟ ಶ್ರೀನಿವಾಸ್ ಮೂರ್ತಿ.

0

 

ಶ್ರೀನಿವಾಸ್ ಮೂರ್ತಿ (Shreenivas Murthy) ಅವರು ಈಗಷ್ಟೇ ರಿಲೀಸ್ ಆದ ಸೌತ್ ಇಂಡಿಯನ್ ಹೀರೋ (Sounth Indian hero kannada movie) ಎನ್ನುವ ಸಿನಿಮಾವನ್ನು ಚಿತ್ರತಂಡದ ಜೊತೆ ಅವರ ಅಪೇಕ್ಷೆ ಮೇರೆಗೆ ನೋಡಿ ಸಿನಿಮಾ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಹೇಳುವುದರ ಜೊತೆಗೆ ಆ ಸಿನಿಮಾದ ನೀಡಿರುವ ಸಂದೇಶದ ಸಾರ ಮತ್ತು ಅದನ್ನು ಪ್ರಸ್ತುತಪಡಿಸಿರುವ ಕಲಾವಿದರ ಟ್ಯಾಲೆಂಟ್ ಮತ್ತು ಇದರಿಂದ ಜನರಿಗೆ ಏನು ಅರ್ಥ ಆಗಬೇಕು.

ಅವರಿಗಿಂತ ಮುಖ್ಯವಾಗಿ ಕನ್ನಡದ ಸ್ಟಾರ್ ಹೀರೋಗಳಿಗೆ (taunt for star heroes) ಇದು ಹೇಗೆ ಪಾಠ ಆಗಬೇಕು ಎನ್ನುವುದನ್ನೆಲ್ಲಾ ತಮ್ಮ ನೇರವಾಗಿ ಮತ್ತು ಕಠೋರವಾಗಿ ನುಡಿದಿದ್ದಾರೆ. ಇಷ್ಟು ದಿನ ಇದ್ದ ತಮ್ಮ ಮನದಾಳದ ಬೇಸರವನ್ನೆಲ್ಲ ಈ ಮಾತುಗಳ ಮೂಲಕ ಹೊರ ಹಾಕಿದ್ದಾರೆ ಎಂದೂ ಹೇಳಬಹುದು. ಪ್ರಸಕ್ತ ವಿದ್ಯಮಾನವನ್ನು ಎಲ್ಲರಂತೆ ಅವರು ಗಮನಿಸುತ್ತಾರೆ, ಸ್ಟಾರ್ ವಾರ್, ಕಲೆಕ್ಷನ್ ವಿಚಾರದಲ್ಲಿ ಮನಸ್ತಾಪ ಮತ್ತು ಅಭಿಮಾನಿಗಳಿಂದ ಮಿತಿಮೀರಿದ ವರ್ತನೆ.

ಈ ರೀತಿ ಅಪಾಯಕಾರಿ ಬೆಳವಣಿಗೆಗಳನ್ನೆಲ್ಲ ಗಮನಿಸಿರುವ ಅವರು ಸಿನಿಮಾ ಬಗ್ಗೆ ಮಾತನಾಡುವ ಸಮಯದಲ್ಲಿ ಇದೆಲ್ಲವನ್ನು ಸೇರಿಸಿ ಹೇಳಿದ್ದಾರೆ. ಅವರು ಈ ಸಿನಿಮಾ ಬಗ್ಗೆ ಹೇಳಿದ್ದು ಇಷ್ಟೆ, ಸೌತ್ ಇಂಡಿಯನ್ ಹೀರೋ ಸಿನಿಮಾ ನಿಜಕ್ಕೂ ಅದ್ಭುತವಾಗಿದೆ ಯಾವುದೇ ಸ್ಟಾರ್ ಗೂ ಕಡಿಮೆ ಇಲ್ಲದಂತೆ ಈ ಹೊಸ ಹೀರೋ ಸಾರ್ಥಕ್ ಅಭಿನಯಸಿದ್ದಾನೆ ಅದಕ್ಕೆ ನಟಿಯರು ಕೂಡ ಅಷ್ಟೇ ಚೆನ್ನಾಗಿ ಸಾತ್ ಕೊಟ್ಟಿದ್ದಾರೆ.

ಕಾಮಿಡಿ ಆಕ್ಟರ್ಗಳ ಅಭಿನಯವನ್ನು ಅಲ್ಲ ಕಳೆಯುವಂತಿಲ್ಲ. ಎಲ್ಲರೂ ಸೇರಿ ಒಂದೊಳ್ಳೆ ಚಿತ್ರವನ್ನು ಕನ್ನಡಕ್ಕೆ ತಂದಿದ್ದಾರೆ. ಈ ಹೀರೋ ಬಹಳ ಚೆನ್ನಾಗಿ ಲಾಂಚ್ ಮಾಡಿದ್ದಾರೆ ಮುಂದೆ ಇಂಡಸ್ಟ್ರಿಯ ಭರವಸೆ ನಾಯಕನೂ ಆಗುತ್ತಾನೆ. ಇದು ಕಾಂತರಾ ಸಿನಿಮಾದಷ್ಟೇ ಪ್ರಾಮುಖ್ಯತೆ ಇರುವ ಸಿನಿಮಾ ಎಂದು ಹೇಳಬಹುದು. ಈ ಸಿನಿಮಾವನ್ನು ಜನರು ನೋಡುವ ಜೊತೆಗೆ ಮೊದಲಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿರುವ ಹೀರೋಗಳು ಬಂದು ನೋಡಬೇಕು, ಯಾಕೆಂದರೆ ಇದು ಅವರಿಗೆ ಹೆಚ್ಚು ಅನ್ವಯವಾಗುತ್ತದೆ.

ಅವರೆಲ್ಲರೂ ಹೇಳುತ್ತಾರೆ ಅಭಿಮಾನಿಗಳು ನಾವು ಬೇಡ ಎಂದರು ಹಾರ ತರುತ್ತಾರೆ, ಅಭಿಷೇಕ ಮಾಡುತ್ತಾರೆ, ಕಟೌಟ್ ಹಾಕುತ್ತಾರೆ, ಬೇಡ ಎಂದರು ಇದನ್ನೆಲ್ಲ ಮಾಡುತ್ತಾರೆ ಎಂದು ಅದೆಲ್ಲ ಬರೀ ಬೂಟಾಟಿಕೆ ಮಾತು. ಅವರೆಲ್ಲರಿಗೂ ಕೂಡ ಅಭಿಮಾನಿಗಳು ಬೇಕೇ ಬೇಕು, ಈಗಿನ ಕಾಲದಲ್ಲಿ ಹೇಗಾಗಿದೆ ಎಂದರೆ ಅವರ ಸಿನಿಮಾ ಗೆದ್ದರೆ ಇವರಿಗೆ ಹೊಟ್ಟೆ ಕಿಚ್ಚು, ಇವರ ಚಿತ್ರ ಹೆಸರು ಮಾಡುತ್ತಿದ್ದರೆ ಮತ್ತೊಬ್ಬರನ್ನು ಚೂ ಬಿಟ್ಟು ತಮಾಷೆ ನೋಡುವುದು.

ಇದರಿಂದ ಇಂಡಸ್ಟ್ರಿ ಎಲ್ಲಿ ಬೆಳೆಯುತ್ತದೆ? ಅದರ ಬದಲು ಒಬ್ಬರಿಗೊಬ್ಬರು ಈ ರೀತಿ ಕಾಂಪಿಟೇಶನ್ ಹಾಕಿಕೊಳ್ಳಿ ನೀನು ಯಾವ ರೀತಿ ಸಬ್ಜೆಕ್ಟ್ ತೆಗೆದುಕೊಂಡು ಪಾತ್ರ ಮಾಡಿ ಗೆಲ್ಲುತ್ತೀಯೋ ಅದರ ದುಪ್ಪಟ್ಟು ಎಫರ್ಟ್ ಹಾಕಿ ನಾನು ಅದಕ್ಕಿಂತ ಒಳ್ಳೆ ಸಂದೇಶ ಇರುವ ಹಾಗೂ ಅದಕ್ಕಿಂತ ಮಹತ್ವವುಳ್ಳ ಪಾತ್ರದಲ್ಲಿ ಅಭಿನಯಿಸುತ್ತೇನೆ ಎಂದು ಚಾಲೆಂಜ್ ಮಾಡಿ ಅಂತಹ ಸಿನಿಮಾಗಳನ್ನು ತನ್ನಿ. ಇದರಿಂದ ಕನ್ನಡ ಹೆಸರು ಬರುತ್ತದೆ ಆ ರೀತಿ ಸಾಮರ್ಥ್ಯ ಸದ್ಯಕ್ಕೆ ಈಗಿನ ಯಾವ ನಟರಲ್ಲೂ ಇಲ್ಲ.

ಆ ರೀತಿ ಇದ್ದವರು ಒಬ್ಬರೇ ಅವರು ಡಾಕ್ಟರ್ ರಾಜಕುಮಾರ್ ಅವರು ಮಾತ್ರ ಎಂದು ರಾಜಕುಮಾರ ಅಣ್ಣಾವ್ರನ್ನು ನೆನೆದಿದ್ದಾರೆ. ಈ ಕಾಲದಲ್ಲಿ ಮಾರ್ನಿಂಗ್ ಶೋ ನೋಡಿಕೊಂಡು ಬಂದರೆ ಮಧ್ಯಾನದ ಅಷ್ಟೊತ್ತಿಗೆ ಆ ಸಿನಿಮಾ ಥೀಯೇಟರ್ ಅಲ್ಲಿ ಇರುವುದೇ ಇಲ್ಲ, ಈ ಸಿನಿಮಾ ಹಾಗಾಗುವುದು ಬೇಡ. ಇದು ಒಂದು ಒಳ್ಳೆ ವಿಷಯ ಇಟ್ಟು ಕೊಂಡಿರುವ ಬಂದಿರುವ ಸಿನಿಮಾಗೆ ಎಲ್ಲರೂ ಸಹಕರಿಸಿ ಸಿನಿಮಾ ಗೆಲ್ಲಿಸಿ ಎಂದಿದ್ದಾರೆ.

ಡಿ ಬಾಸ್ ಬಗ್ಗೆ ಹಾಲಿವುಡ್ ನ್ಯೂಸ್ ಚಾನೆಲ್ ನಲ್ಲಿ ಸುದ್ದಿ ಪ್ರಸಾರ. ಕರ್ನಾಟಕದ ನ್ಯೂಸ್ ಚಾನೆಲ್ ಬ್ಯಾನ್ ಮಾಡಿದ್ರೆ ಏನೂ.! ಹಾಲಿವುಡ್ ಗೂ ಗೊತ್ತು ದರ್ಶನ್ ಗತ್ತು.

0

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ನಟ. ಜೊತೆಗೆ ಸ್ಟಾರ್ ಹೀರೋಗಳಲ್ಲಿ ಸದಾ ವಿವಾದದಲ್ಲಿ (contraversy) ಮೊದಲಿಗೆ ಇರುವ ನಟ ಎಂತಲೂ ಇವರನ್ನು ಕರೆಯಬಹುದು. ಇದುವರೆಗೆ ಕೌಟುಂಬಿಕ ವಿಚಾರವಾಗಿ ಮತ್ತು ಸಿನಿಮಾಗಳ ವಿಚಾರವಾಗಿ ಸಾಕಷ್ಟು ವಿವಾದಗಳನ್ನು ಮಾಡಿಕೊಂಡಿದ್ದಾರೆ.

ಕಳೆದ ಬಾರಿ ಒಮ್ಮೆ ತಮ್ಮ ವೈಯುಕ್ತಿಕ ಜಗಳದ ಆವೇಶದಲ್ಲಿ ಕನ್ನಡ ನ್ಯೂಸ್ ಚಾನೆಲ್ (Kannada news channels ) ಗಳ ವಿರುದ್ಧ ಅಶ್ಲೀಲ ಪದಗಳನ್ನು ಉಪಯೋಗಿಸಿ ನಿಂದಿಸಿದ ಪರಿಣಾಮ ಎಲ್ಲಾ ಚಾನೆಲ್ ಗಳು ಒಟ್ಟಾಗಿ ಡಿ ಬಾಸ್ ಅನ್ನು ಬ್ಯಾನ್ (Ban) ಕೂಡ ಮಾಡಿದ್ದವು. ದರ್ಶನ್ ಬಗ್ಗೆ ಆಗಲಿ, ಅವರ ಸಿನಿಮಾ ಕುರಿತ ವಿಚಾರವೇ ಆಗಲಿ ನಾವು ಪ್ರಸಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದವು. ಇದರಿಂದ ದರ್ಶನ್ ಕೆರಿಯರ್ ಗೆ ದೊಡ್ಡ ಹೊಡೆತ ಬೀಳುತ್ತದೆ ಎಂದೇ ಎಲ್ಲರೂ ಊಹಿಸಿದ್ದರು.

ಆದರೆ ಅಭಿಮಾನಿಗಳ ಸಹಕಾರದಿಂದ ಪ್ರೀತಿಯಿಂದ ಮತ್ತು ಅವರ ಕರುಣೆಯಿಂದ ದರ್ಶನ ಅವರ ಕ್ರಾಂತಿ (Kranthi) ಸಿನಿಮಾ ಯಾವುದೇ ಮೀಡಿಯಾಗಳ ಪ್ರಚಾರ ಇಲ್ಲದೆ ಗೆದ್ದು ಬೀಗುತ್ತಿದೆ. 100 ಕೋಟಿ ಕ್ಲಬ್ ದಾಟಿದ ಸಂಭ್ರಮದಲ್ಲಿ ಅಭಿಮಾನಿಗಳಿಗೆಲ್ಲ ದರ್ಶನ್ ಹೊಸ ರೀತಿಯಲ್ಲಿ ಕೃತಜ್ಞತೆ ಕೂಡ ಸಲ್ಲಿಸಿದ್ದಾರೆ. ತನ್ನನ್ನು ಪದೇಪದೇ ಎತ್ತಿ ಮೆರೆಸುತ್ತಿರುವ ಅಭಿಮಾನಿಗಳಿಗೆ ತನ್ನ ಕಡೆಯಿಂದ ಏನಾದರೂ ಕೊಡಲೇಬೇಕು ಎಂದು ನಿರ್ಧರಿಸಿ ಇವರು ಹಚ್ಚೆ ಹಾಕಿಸಿಕೊಂಡಿದ್ದಾರೆ.

ಯಾವಾಗಲೂ ತನ್ನ ಅಭಿಮಾನಿಗಳನ್ನು ಸೆಲೆಬ್ರಿಟಿಸ್ ಎಂದು ಕರೆಯುವ ದಚ್ಚು, ನನಗೆ ಎಲ್ಲಾ ಅಭಿಮಾನಿಗಳ ಹೆಸರನ್ನು ಹಾಕಿಸಿಕೊಳ್ಳಬೇಕು ಎನ್ನುವ ಇಚ್ಛೆ ಇದೆ, ಆದರೆ ಅದು ಸಾಧ್ಯವಾಗದ ಕಾರಣ ನನ್ನ ಸೆಲೆಬ್ರಿಟಿಸ್ (Nanna celebrates tattoo) ಎಂದು ಹಚ್ಚೆ ಹಾಕಿಸಿಕೊಳ್ಳುತ್ತೇನೆ. ಈ ಮೂಲಕ ಶಾಶ್ವತವಾಗಿ ಅವರು ನನ್ನ ಎದೆ ಮೇಲೆ ಇರುತ್ತಾರೆ ಎಂದು ಎದೆ ಮೇಲೆಯೇ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದು ಕನ್ನಡ ಚಿತ್ರರಂಗ ಮಾತವಲ್ಲದೆ ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ಸ್ಟಾರ್ ನಟನೊಬ್ಬ ತನ್ನ ಅಭಿಮಾನಿಗಳಿಗೆ ಈ ರೀತಿ ಅಭಿಮಾನ (tribute) ತೋರಿದ ಉದಾಹರಣೆ ಆಗಿದೆ.

ಈಗ ದರ್ಶನ್ ಅವರು ಅವರ ಅಭಿಮಾನಿಗಳ ವಿಚಾರದಿಂದ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಕನ್ನಡದ ಸುದ್ದಿ ಮಾಧ್ಯಮಗಳು ದರ್ಶನ್ ಬಗ್ಗೆ ಮಾತನಾಡದಿದ್ದರೂ ನೆರೆಹೊರೆಯ ರಾಜ್ಯದ ನ್ಯೂಸ್ ಚಾನೆಲ್ ಗಳು ಮತ್ತು ಅಂತರಾಷ್ಟ್ರೀಯ ಚಾನಲ್ ಗಳು ದರ್ಶನ್ ಅವರ ಬಗ್ಗೆ ಸುದ್ದಿ ಪ್ರಸಾರ ಮಾಡುತ್ತಿದೆ. ಇತ್ತೀಚೆಗೆ ಹಾಲಿವುಡ್ ನ್ಯೂಸ್ (Hollywood news) ಎನ್ನುವ ಇಂಗ್ಲಿಷ್ ಭಾಷೆಯ (English channel) ಸುದ್ದಿ ಮಾಧ್ಯಮದಲ್ಲಿ ದರ್ಶನ್ ಅವರ ಕುರಿತಾದ ಸುದ್ದಿ ಪ್ರಸಾರ ಆಗಿದೆ.

ನಾವು ಇಂಡಿಯನ್ ಒಬ್ಬ ಸ್ಟಾರ್ ಹೀರೋ ಬಗ್ಗೆ ವಿಷಯ ಹೇಳಲು ಇಚ್ಚಿಸುತ್ತೇವೆ, ಅದರಲ್ಲೂ ಇವರೊಬ್ಬ ಸೌತ್ ಇಂಡಿಯಾ ಸ್ಟಾರ್ ಫ್ಯಾನ್ಸ್ ಇಂದ ಡಿ ಬಾಸ್ ಎಂದು ಕರೆಸಿಕೊಳ್ಳುವ ಇವರು ಎಂದು ಹೇಳಿ ಅಭಿಮಾನಿಗಳಿಗಾಗಿ ಎದೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ ಎಂದು ಅವರ ಗುಣಗಾನ ಮಾಡಿದ್ದಾರೆ. ಇದರಿಂದ ದರ್ಶನ್ ಅಭಿಮಾನಿಗಳಿಗೆ ಬಹಳ ಸಂತೋಷ ಆಗಿದ್ದು, ಇದೇ ರೀತಿ ನಮ್ಮ ಡಿ ಬಾಸ್ ಖ್ಯಾತಿ ವಿಶ್ವ ಮಟ್ಟಕ್ಕೆ ಬೆಳೆಯಬೇಕು ಕಾಟೇರಾ (Katera) ಸಿನಿಮಾವನ್ನು ನಾವು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗುವ ರೀತಿ ಗೆಲ್ಲಿಸುತ್ತೇವೆ ಎಂದು ಪಣತೊಟ್ಟಿದ್ದಾರೆ.

ದರ್ಶನ್ ಅವರು ಇಷ್ಟೆಲ್ಲಾ ಹೊಡೆತದ ಮತ್ತು ನೆಗೆಟಿವ್ ವಿಮರ್ಶೆಗಳ ಕುತಂತ್ರದ ನಡುವೆಯೂ ಗೆಲ್ಲುತ್ತಿದ್ದಾರೆ ಎಂದರೆ ಖಂಡಿತವಾಗಿಯೂ ಅವರ ಅಭಿಮಾನಿಗಳ ಸಿಕ್ಕಿರುವ ಬೆಂಬಲವೇ ಕಾರಣ. ಈ ವಿಷಯದಲ್ಲಿ ದರ್ಶನ್ ಅವರು ಬಹಳ ಲಕ್ಕಿ ಎನ್ನಬಹುದು.

ಮದ್ವೆ ಆದ ಎರಡೇ ದಿನಕ್ಕೆ ಸಂಕಷ್ಟಕ್ಕೆ ಸಿಲುಕಿದ ನಟಿ ಸ್ವರ ಭಾಸ್ಕರ್, ಮುಸ್ಲಿಂ ಯುವಕ ಫಹಾದ್ ಅನ್ನು ಮದ್ವೆ ಆಗಿ ತಪ್ಪು ಮಾಡಿದ್ರ.? ಕಳೆದ ತಿಂಗಳು ಅಣ್ಣ ಅಂತ ಕರೆದವನ ಜೊತೆ ಮದುವೆ ಆಗಿದ್ದೆಗೇ.?

0

 

ಬಾಲಿವುಡ್ ನಟಿ ಪರ ಭಾಸ್ಕರ್ ಅವರು ಒಂದು ರೀತಿಯಲ್ಲಿ ಕಾಂಟ್ಲವರ್ಸಿ ಕ್ವೀನ್ ಎಂದು ಹೇಳಬಹುದು. ಸದಾ ಹಿಂದೂ ಧರ್ಮದ ವಿರುದ್ಧ ಮತ್ತು ಹಿಂದುಗಳನ್ನು ಪ್ರಚೋದನೆ ಮಾಡುವ ರೀತಿ ಪೋಸ್ಟ್ಗಳನ್ನು ಹಾಕುತ್ತಿದ್ದ ಈಕೆ ಅಣ್ಣ ಅಣ್ಣ ಎಂದು ಕರೆಯುತ್ತಿದ್ದತನನ್ನೇ ಕೈ ಹಿಡಿದಿದ್ದಾಳೆ. ಕಳೆದ ಎರಡು ತಿಂಗಳ ಹಿಂದೆ ಹಿಂದೂಗಳಿಗಿಂತ ಮುಸ್ಲಿಂರು ಹೆಚ್ಚು ಸುಖ ಕೊಡುತ್ತಾರೆ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸದ್ಯಕ್ಕೆ ಇದೆ ಸ್ವರ ಭಾಸ್ಕರ್ ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಮುಖಂಡ ಮತ್ತು ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಆಗಿರುವ ಫಹಾದ್ ಅಹ್ಮದ್ ಅವರನ್ನು ಕಳೆದ ತಿಂಗಳು ಈಕೆ ಮದುವೆ ಆಗಿದ್ದಾರೆ.

ಸ್ವತಃ ಇವರಿಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮದುವೆ ಆಗಿರುವ ಸಾಕ್ಷಿ ಕುರಿತು ಫೋಟೋ ಹಾಕಿಕೊಳ್ಳುವ ಮೂಲಕ ಇದನ್ನು ದೃಢ ಕೂಡ ಪಡಿಸಿದ್ದಾರೆ. ಈಗ ಎಲ್ಲೆಡೆ ಇವರಿಬ್ಬರ ಮದುವೆ ವಿಚಾರ ಭಾರಿ ಚರ್ಚೆ ಆಗುತ್ತಿದೆ ಜೊತೆಗೆ ಮದುವೆ ಆದ ಮೇಲೆ ನಡೆಸಲು ಪ್ಲಾನ್ ಮಾಡಿದ್ದ ದಾವತ್ ಬಗ್ಗೆ ಕೂಡ ಬಾರಿ ವಿರೋಧ ವ್ಯಕ್ತವಾಗುತ್ತಿದೆ ಸ್ವರ ಭಾಸ್ಕರ್ ಅವರು ಫಹಾದ್ ಅಹ್ಮದ್ ಅವರನ್ನು ಶರಿಯಾ ಕಾಯ್ದೆಯ ಅಡಿಯಲ್ಲಿ ಮದುವೆ ಆಗಿದ್ದಾರೆ.

ಆದರೆ ಈವರೆಗೆ ಎಲ್ಲೂ ಕೂಡ ಸ್ವರ ಭಾಸ್ಕರ್ ಅವರು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿರುವ ಬಗ್ಗೆ ವರದಿ ಇಲ್ಲ. ಹಾಗಾಗಿ ಹಿಂದೂ ಮಹಿಳೆಯಾಗಿ ಅವರು ಶರಿಯಾ ಕಾನೂನಿನ ಅಡಿಯಲ್ಲಿ ಫಹಾದ್ ಅಹ್ಮದ್ ಅವರನ್ನು ಮದುವೆ ಆಗಿರುವುದು ಬಾರಿ ಚರ್ಚೆ ಆಗುತ್ತಿದೆ. ಮತ್ತು ಈ ರೀತಿ ಮದುವೆ ಆಗಲು ಸಾಧ್ಯವಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನ ಶಹಬುದ್ದೀನ್ ರಜ್ವಿ ಬರೇಲ್ವಿ ಅವರು ಕೂಡ ಹೇಳಿದ್ದಾರೆ.

ಇದೆಲ್ಲದರ ನಡುವೆ ಆಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದ ಕ್ಯಾಂಪಸ್ ಅಲ್ಲಿ ಇವರಿಬ್ಬರ ದಾವತ್ ಮಾಡಲು ಅದ್ದೂರಿಯಾಗಿ ಸಿದ್ಧತೆ ನಡೆಯುತ್ತಿದೆ. ಇದರ ಬಗ್ಗೆ ವಿಷಯ ಹಂಚಿಕೊಂಡ ಎ ಎಂ ಯು ವಿದ್ಯಾರ್ಥಿಗಳ ಸಂಘದ ಮಾಜಿ ಅಧ್ಯಕ್ಷ ಪಜಲ್ ಹಸನ್ ಅವರು ಫಹಾದ್ ಅಹ್ಮದ್ ಅವರು ಈ ಕಾಲೇಜಿನ ಹಳೆಯ ವಿದ್ಯಾರ್ಥಿ ಅವರು ಈಗ ಅಮೆರಿಕದಲ್ಲಿ ಇದ್ದಾರೆ ಹಾಗಾಗಿ ದಾವತ್ ಮಾಡುವುದು ಯಾವಾಗ ಎನ್ನುವ ಬಗ್ಗೆ ನಿಗದಿ ಆಗಿಲ್ಲ.

ಆದರೆ ಅವರು ಬಂದ ನಂತರ ದಿನಾಂಕ ನಿಗದಿ ಮಾಡಿ 50 ರಿಂದ 100 ಜನರಿಗೆ ಮಾತ್ರ ಆಹ್ವಾನ ಕೊಟ್ಟು, ಮಾಧ್ಯಮಗಳನ್ನು ಕರೆಸಿ ಜವಾಬ್ದಾರಿಯುತವಾಗಿ ಇದೇ ಕ್ಯಾಂಪಸ್ ಅಲ್ಲಿ ಅಥವಾ ಅನುಮತಿ ಸಿಗದೇ ಹೋದರೆ ಓಲ್ಡ್ ಬಾಯ್ಸ್ ಲಾಡ್ಜ್ ಅಥವಾ ಗೆಸ್ಟ್ ಹೌಸ್ ಅಲ್ಲಿ ದಾವತ್ ಮಾಡುತ್ತೇವೆ ಎಂದಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳ ಸಂಘದ ಮಾಜಿ ಉಪಾಧ್ಯಕ್ಷ ನದೀಮ್ ಅನ್ಸಾರಿ ಅವರು ಯಾರು ಯಾರನ್ನು ಬೇಕಾದರೂ ಪ್ರೀತಿಸಲಿ, ಯಾರು ಯಾರನ್ನು ಬೇಕಾದರೂ ಮದುವೆ ಮಾಡಿಕೊಳ್ಳಲಿ ಆದರೆ ಇದನ್ನೆಲ್ಲಾ ಆಚರಿಸುವ ಜಾಗ ವಿವಿ ಕ್ಯಾಂಪಸ್ ಅಲ್ಲ.

ಶಾಹಿನ್ ಭಾಗ್ ಮತ್ತು ತುಕ್ಡೆ ತುಕ್ಡೆ ಗ್ಯಾಂಗ್ ಅವರು ಬಂದರೆ ದೇಶದ್ರೋಹಿ ಹೇಳಿಕೆಗಳನ್ನು ಕೂಗುತ್ತಾರೆ ಅದಕ್ಕಾಗಿ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಒಂದು ವೇಳೆ ಅವರು ಇಲ್ಲೇ ಮಾಡಲು ಪ್ರಯತ್ನಪಟ್ಟರೆ ನಾವು ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇವರ ಜೊತೆಗೆ ಅಲ್ಲಿರುವ ಹಲವು ವಿದ್ಯಾರ್ಥಿಗಳು ಕೂಡ ಇದೇ ರೀತಿಯ ನಿಲುವನ್ನು ಹೊಂದಿದ್ದಾರೆ. ಈ ರೀತಿ ಮದುವೆ ಆದ ಎರಡನೇ ದಿನಕ್ಕೆ ನಟಿಯ ದಾವತ್ ವಿಷಯ ಸಮುದಾಯದ ಸಮಸ್ಯೆಯಾಗಿ ಬದಲಾಗಿ ಬಿಟ್ಟಿದೆ.

ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ಖಿನ್ನತೆಗೆ ಹೋಗಿದ್ದಾಗ ನನ್ನ ಮೊದಲಿನ ರೀತಿ ಮಾಡಿದ್ದು ಇವರೇ ಎಂದು ಕನ್ನಡದಲ್ಲಿ ಮಾತನಾಡುತ್ತಲೇ ಕಣ್ಣಿರಿಟ್ಟ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ.

 

ಖಿನ್ನತೆಗೆ ಒಳಗಾಗಿದ್ದ ದೀಪಿಕಾ ಪಡುಕೋಣೆಗೆ ಕನ್ನಡದ ಚಿಕಿತ್ಸೆ ಬಾಲಿವುಡ್ (Bollywood) ಅಂಗಳದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನ್ನುವ ಖ್ಯಾತಿಗೆ ಗುರಿ ಆಗಿರುವ ದೀಪಿಕಾ ಪಡುಕೋಣೆ (Deepika padukon ) ಅವರ ಮೂಲ ನೆಲೆ ಕರ್ನಾಟಕವೇ ಎನ್ನುವುದು ಕನ್ನಡಿಗರಿಗೆಲ್ಲಾ ಹೆಮ್ಮೆಯ ವಿಷಯ. ದೀಪಿಕಾ ಪಡುಕೋಣೆ ಅವರು ಹುಟ್ಟಿದ್ದು ತುಳುನಾಡಿನಲ್ಲಿ ಹಾಗೂ ವಿದ್ಯಾಭ್ಯಾಸ ಪಡೆದದ್ದು ಮತ್ತು ವೃತ್ತಿ ಆರಂಭಿಸಿದ್ದು ಬೆಂಗಳೂರಿನಲ್ಲಿಯೇ.

ಬೆಂಗಳೂರಲ್ಲಿ ಓದುತ್ತಾ ಇದ್ದಂತೆ ಫ್ಯಾಷನ್ ಹಾಗೂ ಮಾಡಲಿಂಗ್ ಕಡೆ, ಅಟ್ರಾಕ್ಟ್ ಆದ ದೀಪಿಕಾ ಪಡುಕೋಣೆ ಅವರು ಮಾಡಲಿಂಗ್ ಅನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡರು. ನಂತರ ಉಪೇಂದ್ರ (Upendra) ಅವರ ಅಭಿನಯದ ಐಶ್ವರ್ಯ (Aishwarya) ಸಿನಿಮಾದಲ್ಲಿ ಮೊಟ್ಟಮೊದಲಿಗೆ ನಾಯಕ ನಟಿ ಆಗುವ ಅವಕಾಶ ಪಡೆದುಕೊಂಡು ತನ್ನ ಅದೃಷ್ಟವನ್ನು ಬದಲಾಯಿಸಿಕೊಂಡರು. ಆಮೇಲೆ ಬಿ ಟೌನ್ ಕಡೆಗೆ ವಾಲಿದ ದೀಪಿಕಾ ಪಡುಕೋಣೆ ಅವರು ಶಾರುಖ್ ಖಾನ್, ಸಲ್ಮಾನ್ ಖಾನ್ ಅಂತಹ ಖ್ಯಾತ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡುವುದಲ್ಲದೆ ಇಡೀ ಇಂಡಿಯಾದ ಎಲ್ಲಾ ಇಂಡಸ್ಟ್ರಿಗಳಲ್ಲೂ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ನಟಿ ಎನ್ನುವ ಖ್ಯಾತಿಗೆ ಒಳಗಾಗಿದ್ದಾರೆ.

ಇತ್ತೀಚಿಗೆ ರಣವೀರ್ ಸಿಂಗ್ (Ranaveer Singh) ಅವರನ್ನು ವಿವಾಹವಾಗುವ (Marriage) ಮೂಲಕ ದಾಂಪತ್ಯ ಜೀವನಕ್ಕೂ ಕಾಲಿಟ್ಟಿದ್ದಾರೆ. ಆದರೆ ದೀಪಿಕಾ ಪಡುಕೋಣೆ ಅವರಿಗೆ ಕೈ ತುಂಬಾ ಹಣವಿದ್ದರೂ, ಬಂಗಲೆ, ಕಾರು, ಹೆಸರು ಎಲ್ಲಾ ಇದ್ದರೂ ಕೂಡ ಆರೋಗ್ಯದ ಭಾಗ್ಯವೇ ಇಲ್ಲ. ದೈಹಿಕವಾಗಿ ಈಕೆ ಸದೃಢವಿದ್ದರೂ ಕೂಡ ಮಾನಸಿಕ ಖಿನ್ನತೆ (Depression) ಇವರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮದುವೆಗೂ ಮುನ್ನವೇ ಈಕೆ ಬೆಂಗಳೂರಿಗೆ ಬಂದು ಗುಟ್ಟಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಈಗ ಜಗ ಜಾಹಿರಾಗಿ ಹೋಗಿದೆ.

ಆದರೆ ಅದರಿಂದ ಪ್ರಯೋಜನವಿಲ್ಲದೆ ಇತ್ತೀಚೆಗಷ್ಟೇ ಮತ್ತೊಮ್ಮೆ ವಿದೇಶಕ್ಕೆ ಹೋಗಿ ದುಬಾರಿ ಚಿಕಿತ್ಸೆಗಳನ್ನು ಕೂಡ ಹಣ ವ್ಯಯಿಸಿ ಪಡೆದುಕೊಳ್ಳುತ್ತಿದ್ದರು. ಆದರೆ ಯಾವುದರಿಂದಲೂ ಈಕೆಯ ಮನಸ್ಸಿಗೆ ಶಾಂತಿ ದೊರಕತೆ ಇರುವುದರಿಂದ ಮತ್ತೊಮ್ಮೆ ಕರುನಾಡಿನ ಕಡೆ ಮುಖ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಅವರು ತಮ್ಮ ಈ ಸಮಸ್ಯೆಗೆ ಪರಿಹಾರ ಏನು ಎನ್ನುವುದನ್ನು ತುಳುನಾಡಿನ ಜನರ ನಂಬಿಕೆ ಆಗಿರುವ ದೈವಗಳ ಬಳಿ ಬಂದು ಪ್ರಶ್ನೆ ಇಟ್ಟು ಕೇಳಿದ್ದಾರೆ.

ದೈವ ಕೊಟ್ಟ ಮಾತಿನಂತೆ ಆಯುರ್ವೇದ ಚಿಕಿತ್ಸೆಯ ಕಡೆ ದೀಪಿಕಾ ಪಡುಕೋಣೆ ಮನಸು ಮಾಡಿದ್ದು ಚೇತರಿಕೆಯನ್ನು ಕೂಡ ಕಂಡಿದ್ದಾರೆ. ಇದೀಗ ಸಂತಸದಿಂದ ದೀಪಿಕಾ ಪಡುಕೋಣೆ, ಚಿಕಿತ್ಸೆಯ ಬಗ್ಗೆ ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಾಯಿ ನೆಲ, ತಾಯಿ ಭಾಷೆ, ತಾಯಿ ಮಡಿಲಿಗೆ ಸಮಾನವಾದದ್ದು. ಆ ಕಾರಣದಿಂದಲೇ ಮತ್ತೆ ತನ್ನೂರಿನ ಕಡೆ ಮರಳಿ ಬಂದಿದ್ದರಿಂದಲೇ ಆಕೆಗೆ ಮನಶಾಂತಿಯ ಸಿಕ್ಕಿರಬಹುದು ಅಥವಾ ಇಷ್ಟು ದಿನ ಮರೆತಿದ್ದ ದೈವವನ್ನು ಆಕೆ ನೆನೆಸಿಕೊಂಡ ಕಾರಣ ಆಕೆಗೆ ಆ ಸಮಸ್ಯೆ ಗುಣಪಡಿಸಿಕೊಳ್ಳುವ ಶಕ್ತಿ ಬಂದಿದೆಯೋ ಏನೋ, ಒಟ್ಟಿನಲ್ಲಿ ದೀಪಿಕಾ ಪಡುಕೋಣೆ ಅವರು ಸುಧಾರಿಸಿಕೊಳ್ಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅವರು ತಾವು ಪಡೆದುಕೊಳ್ಳುತ್ತಿರುವ ಚಿಕಿತ್ಸೆ ಬಗ್ಗೆ ಕನ್ನಡದಲ್ಲಿಯೇ ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ಅವರು ನನಗೆ ಒಂದು ರೀತಿಯ ಮಾನಸಿಕ ಖಿನ್ನತೆ ಕಾಡಿತ್ತು ಈಗ ಈ ಚಿಕಿತ್ಸೆ ಕಡೆ ಬಂದ ಮೇಲೆ ತುಂಬಾ ಹಗುರವಾಗಿದ್ದೇನೆ ಎಂದಿದ್ದಾರೆ. ಹಿಂದೆ ನನ್ನ ವರ್ಕ್ ಪ್ರೆಷರ್ ನನ್ನನ್ನ ಈ ರೀತಿ ಮಾಡಿತ್ತು ಆದರೆ ಲೈಫ್ ಸ್ಟೈಲ್ ಬದಲಿಸಿಕೊಂಡ ಮೇಲೆ ಮೆಡಿಕೇಶನ್ ಗೆ ಬಂದ ಮೇಲೆ, ಸಮಯ ನಿಗದಿಸಿ ಪಡಿಸಿಕೊಂಡು ಎಲ್ಲವನ್ನು ನಿಭಾಯಿಸುವುದನ್ನು ಕಲಿತ ಮೇಲೆ ಬಹಳ ಆರಾಮವಾಗಿದ್ದೇನೆ ಎಂದು ಮುದ್ದು ಮುದ್ದಾಗಿ ಕನ್ನಡದಲ್ಲಿ ಮಾತನಾಡಿದ್ದಾರೆ.

ಸಿನಿಮಾರಂಗದ ನಂಟು ತೊರೆದು ಕೃಷಿ ಮಾಡುತ್ತಿರುವ ಲೀಲಾವತಿ ಹಾಗೂ ವಿನೋದ್ ರಾಜ್ ಕೃಷಿಯಿಂದ ಎಷ್ಟು ಆದಾಯ ಪಡೆಯುತ್ತಿದ್ದಾರೆ ಗೊತ್ತಾ.?

 

ಡಾಕ್ಟರ್ ರಾಜಕುಮಾರ್ ವಿಷ್ಣುವರ್ಧನ್ ಇಂತಹ ಮೇರು ನಟರ ಸಿನಿಮಾಗಳಲ್ಲಿ ಮುಖ್ಯಪಾತ್ರಗಳಲ್ಲಿ ನಟಿಸಿದ್ದ ಹಿರಿಯ ನಟಿ ಲೀಲಾವತಿಯವರು (actress Leelavathi) ಕನ್ನಡ ಚಿತ್ರರಂಗ ಕಟ್ಟುವ ಹಾದಿಯಲ್ಲೂ ಕೂಡ ಕೈ ಜೋಡಿಸಿದ್ದಾರೆ ಎಂದರೆ ಅದು ತಪ್ಪಾಗಲಾರದು. ಕನ್ನಡ ಸಿನಿಮಾ ರಂಗದ ಆರಂಭಿಕ ದಿನಗಳಲ್ಲಿ ಕಪ್ಪು ಬಿಳುಪು ಸಿನಿಮಾದ (black and white movies) ಕಾಲದಿಂದಲೂ ಕನ್ನಡಿಗರನ್ನು ನಾನಾ ಪಾತ್ರಗಳ ಮೂಲಕ ರಂಜಿಸಿದ್ದ ಲೀಲಾವತಿಯವರು ಈಗ ಅವಕಾಶಗಳಿಲ್ಲದೆ ಚಿತ್ರರಂಗದಿಂದ ದೂರ ಉಳಿದಿದ್ದಾರೆ.

ಅಲ್ಲದೆ ಚಿತ್ರರಂಗಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರ ಬದಲು ಕೃಷಿಯತ್ತ ತಮ್ಮ ಒಲವನ್ನು ಬದಲಾಯಿಸಿಕೊಂಡಿದ್ದಾರೆ. ಈ ಕೆಲಸಗಳಿಗೆ ಇವರಿಗೆ ಜೊತೆ ಆಗಿರುವುದು ಇವರ ಪುತ್ರ ವಿನೋದ್ ರಾಜಕುಮಾರ್ (son Vinod Rajkumar) ಅವರು. ವಿನೋದ್ ರಾಜ್ ಕುಮಾರ್ ಅವರು ಸಹ ಕನ್ನಡದ ಹೆಸರಾಂತ ನಾಯಕ. ಮಹಭಾರತ, ಸ್ನೇಹಲೋಕ, ಡ್ಯಾನ್ಸ್ ರಾಜ ಡ್ಯಾನ್ಸ್ ಮುಂತಾದ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದ ಇವರು ಡ್ಯಾನ್ಸ್ ಅಲ್ಲಿ ಅಪಪ್ರತೀಮರು.

ಆದರೂ ಕೂಡ ಅದ್ಯಾಕೋ ಇವರ ಟ್ಯಾಲೆಂಟ್ ಗೆ ತಕ್ಕ ಅವಕಾಶ ಸಿಗಲೇ ಇಲ್ಲ. ಅವಕಾಶ ವಂಚಿತರಾಗಿ ಚಿತ್ರರಂಗದ ನಂಟನ್ನು ಕಳೆದುಕೊಂಡಿರುವ ಈ ಅಮ್ಮ ಮತ್ತು ಮಗ ದೂರದ ಊರಿನಲ್ಲಿ ಕೃಷಿ ಮಾಡುತ್ತಾ ಸಾಮಾನ್ಯರಂತೆ ತಮ್ಮ ಜೀವನ ಕಳೆಯುತ್ತಿದ್ದಾರೆ. ಬೆಂಗಳೂರಿನ ನೆಲಮಂಗಲ ಸಮೀಪ 10 ಎಕರೆ ಪ್ಲಾಟ್ ಅಲ್ಲಿ ತೋಟ ಮಾಡಿ ಕೃಷಿ (Agriculture) ಸಂಬಂಧಿತ ಕೆಲಸಗಳನ್ನು ಮಾಡುತ್ತಾ ನೆಮ್ಮದಿಯ ಜೀವನ ಸಾಧಿಸುತ್ತಿದ್ದಾರೆ. ಕೃಷಿ ಮೂಲಕವೇ ಬರುವ ಆದಾಯದಲ್ಲಿ ಇವರ ಕೈಲಾದಷ್ಟು ಸಮಾಜ ಸೇವೆಯನ್ನು ಮಾಡುತ್ತಿರುವ ಲೀಲಾವತಿ ಹಾಗೂ ವಿನೋದ್ ಅವರ ಹೃದಯ ಶ್ರೀಮಂತಿಕೆ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ.

ಇತ್ತೀಚೆಗೆ ಲಿಲಾವತಿಯವರು ಸರ್ಕಾರಿ ಆಸ್ಪತ್ರೆ ಒಂದನ್ನು ಕಟ್ಟಿಸಿ ಜನಸಾಮಾನ್ಯರಿಗೆ ಸಹಾಯ ಮಾಡಿದರು, ವಿನೋದ್ ರಾಜ್ ಅವರು ಇನ್ನೂ ಸಹ ವಿವಾಹವಾಗದೆ ಹಾಗೆ ಉಳಿದಿದ್ದು ತಮ್ಮ ಜೀವನಪೂರ್ತಿ ಇತರ ಜೀವನವನ್ನು ಸಂತೋಷವಾಗಿಡುವ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎನ್ನುವ ನಿರ್ಧಾರ ಮಾಡಿದ್ದಾರೆ. ಕೃಷಿಯಲ್ಲಿ ಬಂದ ಆದಾಯದಲ್ಲೂ ಸಹ ಆದಷ್ಟು ಸಮಾಜ ಸೇವೆಗೆ ಮೀಸಲು ಇಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಅದೆಷ್ಟೋ ಪ್ರಮಾಣದ ದಿನಸಿ ಧಾನ್ಯಗಳನ್ನು ಬಡವರಿಗೆ ಹಂಚಿದ್ದರು.

ಈ ರೀತಿ ಯಾವುದೇ ಪ್ರತಿಫಲ ಬಯಸದೆ ಬದುಕನ್ನು ಒಂದು ಉತ್ತಮ ಉದ್ದೇಶಕ್ಕಾಗಿ ಈ ಅಮ್ಮ ಮಗ ಮೀಸಲಿಟ್ಟಿದ್ದಾನೆ. ಇವರ ಈ ಕೆಲಸ ಈಗಿನ ಯುವಜನತೆಗೆ ಸ್ಪೂರ್ತಿ ಸೆಲೆ ಆಗಬಹುದು. ಇಂದು ಮನುಷ್ಯ ಎಷ್ಟೋ ಸ್ವಾರ್ಥಿಯಾಗಿದ್ದಾನೆ ಎಂದರೆ ತನ್ನ ಕುಟುಂಬ ಹಾಗೂ ಪರಿವಾರದ ಬಗ್ಗೆ ಕೂಡ ಕಿಂಚಿತ್ತು ಕಾಳಜಿ ಇಲ್ಲದವನಂತೆ ತೋರುತ್ತಿದ್ದಾನೆ, ಅಂಥವರ ನಡುವೆ ಈ ಅಮ್ಮ ಮಗ ಬಹಳ ವಿಶೇಷ ಎನಿಸುತ್ತಿದ್ದಾರೆ. ಒಂದು ಕಾಲದಲ್ಲಿ ತಾವಿಬ್ಬರು ಕೂಡ ಕನ್ನಡ ಚಿತ್ರರಂಗದ ಸ್ಟಾರ್ಗಳಾಗಿ ಮೆರೆದಿದ್ದರೂ ಈಗ ಅದ್ಯಾವುದರ ಹಮ್ಮು ಬಿಮ್ಮು ಇಲ್ಲದೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುತ್ತಾ ಅಸಾಮಾನ್ಯ ಸಾಧನೆ ಮಾಡಿರುವ ಇವರಿಬ್ಬರನ್ನು ಪಡೆದ ಕರುನಾಡು ಧನ್ಯ.

ಚಿತ್ರರಂಗಕ್ಕೆ ಸಂಬಂಧಪಟ್ಟ ಯಾವುದೇ ಆದಾಯ ಇರದ ಕಾರಣ ಇವರಿಗೆ ಇರುವ ಒಂದೇ ಆದಾಯದ ನೆಲೆ ಕೃಷಿಯಾಗಿದೆ. ಇವರು ತಮ್ಮ ಬಳಿ ಇರುವ ಹತ್ತು ಎಕರೆ ಜಮೀನಿನಲ್ಲಿ ಕೃಷಿ ಮಾಡಿ ವರ್ಷಕ್ಕೆ 8 ಕೋಟಿ ಎಷ್ಟು ಆದಾಯ ಗಳಿಸುತ್ತಿದ್ದಾರೆ ಎಂದು ಕೆಲಮೂಲಗಳಿಂದ ಮಾಹಿತಿ ಇದೆ. ಲೀಲಾವತಿ ಅವರು ತಮ್ಮ ವಯಸ್ಸನ್ನು ಕೂಡ ಲೆಕ್ಕಿಸದೆ ಇನ್ನು ಸಹ ತಾವೇ ಜಮೀನಿನಲ್ಲಿ ಕೆಲಸ ಮಾಡುತ್ತಾ ಕೆಲಸಗಾರರು ನಿರ್ವಹಿಸುತ್ತಾ ಲವಲವಿಕೆಯಿಂದ ಓಡಾಡಿಕೊಂಡಿದ್ದಾರೆ. ಮತ್ತು ಇಂತಹ ಇಳಿ ವಯಸ್ಸಿನಲ್ಲೂ ಸಮಾಜದ ಬಗ್ಗೆ ಕಾಳಜಿ ಮಾಡುತ್ತಾ ತಮ್ಮ ಮಗನಿಗೆ ಮಾರ್ಗದರ್ಶಕರಾಗಿದ್ದಾರೆ ಎನ್ನುವುದು ಶ್ಲಾಘನಾರ್ಹ.