Home Blog Page 233

ಕಬ್ಜಾ ಸಿನಿಮಾಗೆ ಖರ್ಚು ಮಾಡಿರುವ ಬಜೆಟ್ ಎಷ್ಟು ಕೋಟಿ ಗೊತ್ತಾ.? ಇದರ ನಿಖರ ಅಂಕಿ ಅಂಶ ತಿಳಿದರೆ ಶಾ-ಕ್ ಆಗೋದು ಗ್ಯಾರಂಟಿ. ಭಾರತೀಯ ಇತಿಹಾಸದಲ್ಲೇ ಇದು ಮೊದಲು ಇಂಥ ಸಾಧನೆ.

 

ಬಾಕ್ಸ್ ಆಫೀಸ್ ಕಬ್ಜಾ ಮಾಡಲು ಮತ್ತೊಂದು ಸ್ಯಾಂಡಲ್ ವುಡ್ ನ ಪ್ಯಾನ್ ಇಂಡಿಯಾ ಸಿನಿಮಾ ತಯಾರಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಕನ್ನಡದ ಬಹು ನಿರೀಕ್ಷಿತ ಚಿತ್ರ ಇದ ಕಬ್ಜಾ ಮಾರ್ಚ್ 17 ರಂದು ಬಿಡುಗಡೆ ಅಗಲಿದೆ. ಚಿತ್ರದ ನಿರ್ದೇಶಕರಾಗಿರುವ ಆರ್. ಚಂದ್ರು ಅವರು ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರಿಗಾಗಿ ಈ ಸಿನಿಮಾ ಅರ್ಪಣೆ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ.

ಉಪೇಂದ್ರ ಮತ್ತು ಕಿಚ್ಚ ಸುದೀಪ್ ಇಬ್ಬರು ಕನ್ನಡದ ಸೂಪರ್ ಸ್ಟಾರ್ ಗಳ ಕಾಂಬಿನೇಷನಲ್ಲಿ ತಯಾರಾಗುತ್ತಿರುವ ಸಿನಿಮಾ ಆದಕಾರಣ ಚಿತ್ರದ ಬಗ್ಗೆ ನಿರೀಕ್ಷೆ ಮತ್ತು ಕುತೂಹಲ ಇನ್ನು ಹೆಚ್ಚಾಗಿದೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್ ನಲ್ಲಿ ಬಂದಿದ್ದ ಮುಕುಂದ ಮುರಾರಿ ಸಿನಿಮಾ ಗೆದ್ದು ಸೂಪರ್ ಹಿಟ್ ಆಗಿತ್ತು. ಆದರೆ ಅದೊಂದು ಕೌಟುಂಬಿಕ ಚಿತ್ರ ಅನಿಸಿಕೊಂಡಿತು ಕಾಮಿಡಿ ಜೊತೆಗೆ ಸಮಾಜಮುಖಿಯಾದ ಸಂದೇಶವನ್ನು ದೇವರ ಮತ್ತು ಭಕ್ತಿ ಹಾಗೂ ಭಕ್ತರ ನಡುವಿನ ಸಂಬಂಧವನ್ನು ಮುಕುಂದ ಮುರಾರಿ ಸಿನಿಮಾ ಮೂಲಕ ಸಾರಲಾಗಿತ್ತು.

ರಿಮೇಕ್ ಸಿನಿಮಾ ಆಗಿದ್ದರೂ ಕನ್ನಡದಲ್ಲಿ ಇದು ಬಹಳ ಒಳ್ಳೆ ಸದ್ದು ಮಾಡಿತ್ತು, ಎಲ್ಲಾ ಹಾಡುಗಳು ಕೂಡ ಸೂಪರ್ ಹಿಟ್ ಆಗಿದ್ದವು. ಈಗ ರಿಲೀಸ್ ಗೆ ರೆಡಿಯಾಗಿರುವ ಕಬ್ಜಾ ಸಿನಿಮಾ ಬಹಳ ಹೈ ಬಜೆಟ್ ಸಿನಿಮಾ ಆಗಿದೆ. ಈಗಾಗಲೇ ಬಿಡುಗಡೆ ಆದ ಟೀಸರ್ ಪೋಸ್ಟರ್ ಮತ್ತು ಸಾಂಗ್ ಗಳಿಂದ ಸಿನಿಮಾ ಎಲ್ಲರ ಗಮನ ಸೆಳೆದಿದೆ. 70ರ ದಶಕದ ಗ್ಯಾಂಗ್ ಸ್ಟರ್ ಕಥೆ ಇದು ಎನ್ನಲಾಗುತ್ತಿದೆ. ವರ್ಡ್ ಕ್ಲಾಸ್ ಆಕ್ಷನ್ ಮತ್ತು ಸಿನಿಮಾಟೋಗ್ರಾಫಿ ಕೂಡ ಸಿನಿವಾಗಿದೆ ಎಂದು ಚಿತ್ರತಂಡ ಹೇಳುತ್ತಿದೆ.

ಜೊತೆಗೆ ಈಗಾಗಲೇ ಸಿನಿಮಾ ಶೂಟಿಂಗ್ ವೇಳೆ ಲೈವ್ ಅಲ್ಲಿ ಬಂದು ಉಪೇಂದ್ರ ಅವರು ಕಾಣಿಸಿಕೊಳ್ಳುತ್ತಿದ್ದರಿಂದ ಸಿನಿಮಾ ರೋಚಕವಾಗಿರುತ್ತದೆ ಎನ್ನುವ ಸುಳಿವು ಸಿಕ್ಕಿದೆ. ಯಾವುದೇ ಹಾಲಿವುಡ್ ಸಿನಿಮಾಗಳು ಕಡಿಮೆ ಇಲ್ಲದಂತೆ ಕಬ್ಜ ಸಿನಿಮಾ ರೆಡಿ ಆಗಿದೆ ಎಂದು ಹೇಳಬಹುದು. ಇಷ್ಟು ಅದ್ದೂರಿಯಾದ ಈ ಚಿತ್ರಕ್ಕೆ ಖರ್ಚು ಮಾಡಿರುವ ಬಜೆಟ್ ಬಗ್ಗೆ ಕೇಳಿದರೆ ಖಂಡಿತ ಕನ್ನಡಿಗರು ಶಾ-ಕ್ ಆಗಬಹುದು, ಯಾಕೆಂದರೆ ಬರೋಬಕರೆ 120 ಕೋಟಿ ಹಣವನ್ನು ಈ ಸಿನಿಮಾಗಾಗಿ ಖರ್ಚು ಮಾಡಲಾಗಿದೆ.

ಈ ಸಿನಿಮಾಗೆ ಬಂಡವಾಳನವನ್ನು ಬಾಲಿವುಡ್ ನ ಖ್ಯಾತ ನಿರ್ಮಾಪಕರಾದ ಆನಂದ್ ಪಂಡಿತ್ ಅವರು ಹೂಡಿದ್ದಾರೆ. ಇದರ ಜೊತೆಗೆ ಹಿಂದಿ, ಮರಾಠಿ ಮತ್ತು ತೆಲುಗು ವಿತರಣೆ ಹಕ್ಕನ್ನು ಕೂಡ ಪಡೆದುಕೊಂಡಿದ್ದಾರೆ. ಬಜೆಟ್ ಬಗ್ಗೆ ಅವರಾಡಿದ ಮಾತು ಬಹಳ ವಿಶೇಷ ಎನಿಸುತ್ತದೆ. ನಿರ್ಮಾಪಕರಾದ ಆನಂದ್ ಪಂಡಿತ್ ಅವರ ಬಳಿ ಮಾಧ್ಯಮದವರು ಸಿನಿಮಾಗೆ ಖರ್ಚು ಮಾಡಿರುವ ಬಜೆಟ್ ಬಗ್ಗೆ ಕೇಳಿದಾಗ ಇದು ಸಿನಿಮಾಗಾಗಿ ಖರ್ಚು ಮಾಡಿರುವ ಬಜೆಟ್ ಅಲ್ಲ, ಫ್ಯಾಶನ್ ಗಾಗಿ ಖರ್ಚು ಮಾಡಿರುವುದು ಎಂದು ಹೇಳಿದ್ದಾರೆ. ಈ ಮಾತು ಸಿನಿಪ್ರಕ್ಷಕರ ಆಸಕ್ತಿಯನ್ನು ಇನ್ನಷ್ಟು ಕೆರಳಿಸಿದೆ.

ಸಿನಿಮಾದಲ್ಲಿ ಅತಿ ದೊಡ್ಡ ಕಲಾವಿದ ದಂಡೇ ಇದ್ದು, ನಾಯಕಿಯಾಗಿ ಶ್ರೇಯ ಅವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ವರ್ಷದ ಹಿಟ್ ಪ್ಯಾನ್ ಇಂಡಿಯಾ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಈಗಾಗಲೇ ಕಂಡು ಬಂದಿದ್ದು, ಕಳೆದ ವರ್ಷ ತೆರೆಕಂಡ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳಾದ ಚಾರ್ಲಿ777, ಕೆಜಿಎಫ್-2, ಕಾಂತಾರ, ವಿಕ್ರಾಂತ್ ರೋಣ ಈ ಸಿನಿಮಾ ರೀತಿಯೇ ಇದು ಹೆಸರಾಗಲಿದೆ ಎನ್ನುವ ಭರವಸೆ ಎಲ್ಲರಲ್ಲಿದೆ. ಚಿತ್ರ ತಂಡಕ್ಕೆ ಶುಭವಾಗಲಿ ಎಂದು ನಾವು ಸಹ ಹರಸೋಣ.

ಯಾರು ಈ ಪವಿತ್ರ ಗೌಡ.? ದರ್ಶನ್ ಕುಟುಂಬದ ಜೊತೆ ಸದಾ ಕಾಣಿಸಿಕೊಳ್ಳುವ ಈಕೆ ಇನ್ನಲೆ ಏನು.! ಪವಿತ್ರ ಗೌಡ ಅಂದ್ರೆ ದರ್ಶನ್ ಗೆ ಯಾಕೆ ಅಷ್ಟು ಇಷ್ಟ.!

0

 

ಪವಿತ್ರ ಗೌಡ ಅವರು ಕನ್ನಡದಲ್ಲಿ ಕೆಲ ಸಿನಿಮಾಗಳನ್ನು ಮಾಡಿದ್ದಾರೆ ಆದರೆ ಇವರು ಸಿನಿಮಾ ನಾಯಕಿ ಆಗಿ ಹೆಸರು ಮಾಡಿದ್ದಕ್ಕಿಂತ ದರ್ಶನ್ ಅವರ ವಿವಾದಗಳಲ್ಲಿ ಹೆಸರಾಗಿದ್ದೇ ಹೆಚ್ಚು. ದರ್ಶನ್ ಜೊತೆ ಪವಿತ್ರ ಗೌಡ ಹೆಸರು ಸದಾ ತಳುಕು ಹಾಕಿಕೊಂಡಿರುತ್ತದೆ. ದರ್ಶನ್ ಅವರ ಸುದ್ದಿಯಿಂದಲೇ ಪವಿತ್ರ ಗೌಡ ಅವರ ಹೆಸರು ಜನರಿಗೆ ಗೊತ್ತಾಗಿರುವುದು ಎಂದೇ ಹೇಳಬಹುದು. ಹಾಗಾಗಿ ಇವರಿಬ್ಬರ ಸಂಬಂಧ ಮತ್ತು ಪರಿಚಯದ ಬಗ್ಗೆ ತಿಳಿದುಕೊಳ್ಳಲು ಎಲ್ಲರಿಗೂ ಸಹ ಕುತೂಹಲ ಇದ್ದೇ ಇದೆ.

ದರ್ಶನ್ ಅವರಿಗೆ ಜನಸಾಮಾನ್ಯರಂತೆ ಸೆಲೆಬ್ರೆಟಿಗಳು ಕೂಡ ಅಭಿಮಾನಿಗಳಾಗಿದ್ದಾರೆ. ಈ ರೀತಿ ಅಭಿಮಾನಿ ಎಂದು 2016ರಲ್ಲಿ ಪವಿತ್ರ ಗೌಡ ಅವರಿಗೆ ದರ್ಶನ್ ಅವರ ಪರಿಚಯ ಆಗುತ್ತದೆ. ಆ ಪರಿಚಯ ಸ್ನೇಹವಾಗಿ ತಿರುಗಿ ಪದೇ ಪದೇ ಆಕೆ ದರ್ಶನ್ ಅವರ ಫಾರಂ ಹೌಸ್ ಗೆ ಭೇಟಿ ಕೊಡಲು ಶುರು ಮಾಡುತ್ತಾರೆ. ಅವರು ಫಾರಂ ಹೌಸ್ ಅಲ್ಲಿ ದರ್ಶನ್ ಅವರ ಕುದುರೆಗಳ ಜೊತೆ ತೆಗೆಸಿಕೊಂಡ ಫೋಟೋ ಮತ್ತು ದರ್ಶನ್ ಅವರ ಹಿಂದೆ ಬೈಕಿನಲ್ಲಿ ಕುಳಿತುಕೊಂಡಿದ್ದ ಫೋಟೋ ಅಪ್ಲೋಡ್ ಮಾಡುವವರೆಗೂ ಇವರಿಬ್ಬರ ವೈಯಕ್ತಿಕ ವಿಚಾರದ ಬಗ್ಗೆ ಯಾರಿಗೂ ಸುಳಿವೇ ಇರಲಿಲ್ಲ.

ಒಮ್ಮೆ ಈಕೆ ಫೇಸ್ಬುಕ್ ಅಕೌಂಟ್ ನಲ್ಲಿ ಈ ಫೋಟೋಗಳನ್ನು ಶೇರ್ ಮಾಡಿದ ಬಳಿಕ ಎಲ್ಲೆಡೆ ಇವರಿಬ್ಬರ ಸಂಬಂಧದ ಬಗ್ಗೆ ಗುಸು-ಗುಸು ಶುರುವಾಗುತ್ತದೆ. ನಂತರ ಕೆಲ ದಿನಗಳ ಬಳಿಕ ಆ ಫೋಟೋಗಳು ಡಿಲೀಟ್ ಆಗುತ್ತದೆ ಆಗ ಎಲ್ಲರೂ ಇಬ್ಬರ ನಡುವೆ ಸಂಬಂಧ ಮುರಿದಿರಬೇಕು ಎಂದೇ ಭಾವಿಸಿಕೊಂಡಿರುತ್ತಾರೆ. ಮತ್ತೆ ಈಕೆ ಕಾಣಿಸಿಕೊಂಡಿದ್ದು ಕುರುಕ್ಷೇತ್ರ ಶೂಟಿಂಗ್ ವೇಳೆ ಆ ಸೆಟ್ ಗೆ ಈಕೆ ಹೋಗಿದ್ದ ಫೋಟೋಗಳು ಕೂಡ ವೈರಲ್ ಆಗುತ್ತವೆ.

ದರ್ಶನ್ ಅವರ ತಾಯಿ ಮತ್ತು ದರ್ಶನ್ ಅವರ ಅಕ್ಕನ ಜೊತೆ ಕೂಡ ಪವಿತ್ರ ಗೌಡ ಅವರು ಬಹಳ ಆತ್ಮೀಯವಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಕುಟುಂಬದ ಯಾವುದೋ ಶುಭ ಕಾರ್ಯದಲ್ಲಿ ತೆಗೆದುಕೊಂಡಿರುವ ಫೋಟೋ ರೀತಿ ಇವುಗಳು ಇವೆ ಆದರೆ ಆ ದಿನ ದರ್ಶನ್ ಅವರ ಜೊತೆ ತೆಗೆಸಿಕೊಂಡಿರುವ ಫೋಟೋಗಳನ್ನು ಮಾತ್ರ ಆಕೆ ಅಪ್ಲೋಡ್ ಮಾಡಿಲ್ಲ. ಹಾಗಾಗಿ ಇವರಿಬ್ಬರ ಸಂಬಂಧ ನಿಂತು ಹೋಗಿರಬೇಕು ಎಂದೇ ಎಲ್ಲರೂ ಅಂದುಕೊಂಡಿದ್ದರು, ಅದು ಕೂಡ ಸುಳ್ಳಾಯಿತು.

ಯಾಕೆಂದರೆ ದರ್ಶನ್ ಅವರು ಮೈಸೂರಿನ ಹೋಟೆಲ್ ಒಂದರಲ್ಲಿ ವಿವಾದ ಮಾಡಿಕೊಂಡು ಅದು ಹಲವು ದಿನಗಳವರೆಗೆ ಮಾಧ್ಯಮದಲ್ಲಿ ಸುದ್ದಿಯಾಗಿ ನಂತರ ಒಂದಕ್ಕೊಂದು ವಿಷಯ ತಾರಕಕ್ಕೇರಿ ಮಾಧ್ಯಮಗಳು ದರ್ಶನ್ ಅವರನ್ನು ಬ್ಯಾನ್ ಮಾಡುವ ಹಂತಕ್ಕೂ ಬೆಳೆಯುತ್ತದೆ. ಇಷ್ಟೆಲ್ಲಕ್ಕೂ ಕಾರಣವಾದ ಆ ಘಟನೆ ನಡೆದ ದಿನ ಕೂಡ ಪವಿತ್ರ ಗೌಡ ಅವರು ಅಲ್ಲಿದ್ದರೂ ಎನ್ನುವುದು ಸ್ಪಷ್ಟ ಆಗಿದೆ. ಈ ವರ್ಷದ ದರ್ಶನ್ ಅವರ ಹುಟ್ಟು ಹಬ್ಬದ ದಿನದಂದು ಖಾಸಗಿ ಪಾರ್ಟಿ ಅರೆಂಜ್ ಮಾಡಿ ಮೇಘ ಶೆಟ್ಟಿ ಅವರು ದರ್ಶನ್ ಅವರ ಹುಟ್ಟು ಹಬ್ಬ ಸೆಲೆಬ್ರೇಟ್ ಮಾಡಿದ್ದರು.

ಮೇಘ ಶೆಟ್ಟಿ ಅವರು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದ ಫೋಟೋ ಅಲ್ಲಿ ಪವಿತ್ರ ಗೌಡ, ದರ್ಶನ್ ಮತ್ತು ಮೇಘ ಶೆಟ್ಟಿ ಕಾಣಿಸಿಕೊಂಡಿದ್ದರು. ಪವಿತ್ರ ಗೌಡ ಕೂಡ ಅಂದು ಕೇಕ್ ತಂದಿದ್ದರೂ ಅದರ ಮೇಲೆ ಸುಬ್ಬ ಎಂದು ಬರೆದಿತ್ತು ಎನ್ನಲಾದ ಫೋಟೋಗಳು ಕೂಡ ವೈರಲ್ ಆಗಿವೆ. ಇದು ಅವರಿಬ್ಬರ ಆತ್ಮೀಯತೆ ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ ಆದರೆ ಇದರ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪೋಸ್ಟ್ ಹಾಕಿ ಕಿಡಿ ಕಾರಿದ್ದರು. ತಕ್ಷಣವೇ ಮೇಘ ಶೆಟ್ಟಿ ಅವರು ಕೂಡ ಫೋಟೋ ಡಿಲೀಟ್ ಕೂಡ ಮಾಡಿದ್ದರು. ಇಷ್ಟೆಲ್ಲ ಆದರೂ ಕೂಡ ದರ್ಶನ್ ಅವರು ಪವಿತ್ರ ಗೌಡ ಅವರನ್ನು ಪದೇಪದೇ ಭೇಟಿ ಆಗುತ್ತಲೇ ಇರುವುದರಿಂದ ಇದಕ್ಕೆಲ್ಲಾ ಯಾವ ಅರ್ಥವನ್ನು ಕೊಡಬೇಕು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

ಚಾನ್ಸ್ ಕೇಳಿದ್ರೆ ಒಬ್ಬಳನ್ನೇ ರೆಸಾರ್ಟ್ ಗೆ ಕರೀತಿದ್ರು ಎಂದು ಇಂಡಸ್ಟ್ರಿಯ ಕರಾಳ ಮುಖ ಬಿಚ್ಚಿಟ್ಟು ನಟಿ.

0

 

ಅಪ್ಪಾಜಿ ಸಿನಿಮಾದ ವಿಷ್ಣುವರ್ಧನ್ ಅವರ ಏನೇ ಕನ್ನಡತಿ ನೀ ಯಾಕೆ ಹಿಂಗಾಡುತಿ.? ಈ ಹಾಡು ಕನ್ನಡದ ಎವರ್ಗೀನ್ ಹಾಡು. ಈ ಹಾಡಿನಲ್ಲಿ ವಿಷ್ಣುವರ್ಧನ್ ಅವರಿಗೆ ಜೋಡಿ ಆಗಿ ಕಾಣಿಸಿಕೊಂಡಿರುವ ಈ ಕನ್ನಡತಿ ಹೆಸರು ಆಮನಿ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ಇವರು ಕನ್ನಡ ಸಿನಿಮಗಳಿಗಿಂತ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋಯಿನ್ ಆಗಿ ಮಿಂಚಬೇಕು ಎನ್ನುವುದೇ ಇವರ ಬದುಕಿನ ಕನಸಾಗಿತ್ತು. ಆದರೆ ಆ ಹಾದಿ ಇವರಿಗೆ ಅಷ್ಟು ಸುಲಭದ್ದಾಗಿರಲಿಲ್ಲ.

ಸಾಮಾನ್ಯವಾಗಿ ಯಾರಿಗೆ ಆದರೂ ಕೂಡ ಅವರ ಕನಸು ಸುಲಭಕ್ಕೆ ಧಕ್ಕುವುದಿಲ್ಲ, ಅದಕ್ಕಾಗಿ ಬಹಳ ಶ್ರಮ ಪಡಬೇಕಾಗುತ್ತದೆ. ಆದರೆ ಈಕೆಗೆ ಎದುರಾಗಿದ್ದು ಬರೀ ಕಷ್ಟವಲ್ಲ ಅದೊಂದು ತರಹದ ಹಿಂಸೆ ಅಂತಾನೆ ಹೇಳಬಹುದು. ಇದನ್ನು ಅವರೇ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಆಸೆಯಿಂದ ಅವಕಾಶ ಕೇಳಲು ಹೋಗುವವರಿಗೆ ಎದುರಾಗುವ ಮೊದಲ ಸಮಸ್ಯೆಯೇ ಕಾಸ್ಟಿಂಗ್ ಕೌಚ್.

ಇದು ಇಂದು ನೆನ್ನೆಯ ಸಮಸ್ಯೆ ಅಲ್ಲ, ಕಳೆದ ಹಲವು ವರ್ಷಗಳಿಂದ ನಟಿಮಣಿಯರ ಪಾಲಿಗೆ ಇದೊಂದು ಕಂಠಕ ಆಗಿದೆ ಮತ್ತು ಕನ್ನಡ ಸಿನಿಮಾ ಇಂಡಸ್ಟ್ರಿ ಮಾತ್ರ ಅಲ್ಲದೆ ಎಲ್ಲಾ ಇಂಡಸ್ಟ್ರಿಯಲ್ಲೂ ಕೂಡ ಇದೇ ಹಣ ಬರಹ. ಇದನ್ನು ಎದುರಿಸಿದ ನಟಿಮಣಿಯರು ನಿಧಾನವಾಗಿ ಇದರ ಬಗ್ಗೆ ಈಗ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಅದಕ್ಕೆ ಮೀಟು ಒಂದು ವೇದಿಕೆ ಆಗಿದೆ ಎಂದೂ ಹೇಳಬಹುದು. ಇದೇ ವಿಷಯದ ಬಗ್ಗೆ ಮಾತನಾಡಲು ಧೈರ್ಯ ಮಾಡಿರುವ ಆಮನಿ ಅವರು ತಾವು ಸಹ ಈ ಸಮಸ್ಯೆ ಎದುರಿಸಿದ ಬಗ್ಗೆ ಹೇಳಿಕೊಂಡಿದ್ದಾರೆ.

ನನಗೆ ನಟಿ ಆಗಬೇಕು ಎನ್ನುವ ಆಸೆ ಬಹಳ ಇತ್ತು, ಹಾಗಾಗಿ ನನ್ನ ತಂದೆ ಬೇಡ ಎಂದರು ನಾನು ನಟಿ ಆಗುತ್ತೇನೆ ಎಂದು ಹಠ ಮಾಡಿದೆ ಆರಂಭದಲ್ಲಿ ಹಲವು ಕಂಪನಿಗಳಿಗೆ ಹೋಗಿ ಆಡಿಶನ್ ಕೊಡುತ್ತಿದ್ದೆ ಕೆಲವರು ಓಕೆ ಅನ್ನುತ್ತಿದ್ದರು ಕೆಲವರು ರಿಜೆಕ್ಟ್ ಮಾಡುತ್ತಿದ್ದರು ಈ ಎಲ್ಲಾ ಆಡಿಶನ್ ಗು ನಾನು ನನ್ನ ತಾಯಿಯ ಜೊತೆ ಹೋಗುತ್ತಿದ್ದೆ. ಕೆಲವರು ಅಮ್ಮನ ಜೊತೆ ಬಂದರೆ ಕೆಲಸ ಆಗುವುದಿಲ್ಲ ಎಂದು ನೇರವಾಗಿ ಹೇಳಿ ಬಿಡುತ್ತಿದ್ದರು.

ಮತ್ತೆ ಕೆಲವರು ಹೇಳುತ್ತೇವೆ ಎಂದು ಹೇಳಿ ಕಳುಹಿಸುತ್ತಿದ್ದರು, ನಂತರ ಮನೆಗೆ ಕರೆ ಮಾಡಿ ಮೇಕಪ್ ಟೆಸ್ಟ್ ಇದೆ ನಿರ್ದೇಶಕರು ಬರಲು ಹೇಳುತ್ತಿದ್ದಾರೆ ಇಂತಹ ರೆಸಾರ್ಟ್ ಗೆ ಬಂದುಬಿಡಿ ಎಂದು ಅಡ್ರೆಸ್ ಕೊಡುತ್ತಿದ್ದರು. ಅಮ್ಮನ ಜೊತೆ ಬರಬೇಡಿ ನೀವು ಒಬ್ಬರೇ ಬನ್ನಿ ಎಂದು ಹೇಳುತ್ತಿದ್ದರು ಅವರಿಗೆ ಹೇಳಿದ ತಕ್ಷಣವೇ ನನ್ನ ಅಮ್ಮ ಆ ರೀತಿ ಸಾಧ್ಯವಿಲ್ಲ ಇಬ್ಬರು ಒಟ್ಟಿಗೆ ಬರುತ್ತೇವೆ ಎಂದರೆ ಬೇಡ ಎಂದು ರಿಜೆಕ್ಟ್ ಮಾಡುತ್ತಿದ್ದರು. ಆಗ ಅದೆಲ್ಲ ಯಾಕೆ ಎಂದು ಅರ್ಥ ಆಗಲಿಲ್ಲ, ನಿಧಾನವಾಗಿ ಎಲ್ಲವೂ ಅರ್ಥವಾಗಲು ಶುರು ಆಯ್ತು ಆಮೇಲೆ ತಂದೆ ಯಾಕೆ ಇಂಡಸ್ಟ್ರಿ ಬೇಡ ಎನ್ನುತ್ತಿದ್ದರು ಅದು ಅರ್ಥ ಆಯಿತು.

ಅಡ್ಡ ದಾರಿಯಲ್ಲಿ ಹೀರೋಯಿನ್ ಆಗುವುದು ನನಗೆ ಇಷ್ಟ ಇರಲಿಲ್ಲ, ನಾನು ಚೆನ್ನಾಗಿ ವಿದ್ಯಾಭ್ಯಾಸ ಮಾಡಿದ್ದೆ ಯಾವುದಾದರೂ ಒಂದು ಕೆಲಸ ಮಾಡಿದರೂ ಆಗುತ್ತಿತ್ತು. ಇದರಿಂದ ನಾನು ಇಂಡಸ್ಟ್ರಿಗೆ ಬರಲು ಎರಡು ವರ್ಷಗಳ ಕಾಲ ಸೈಕಲ್ ಹೊಡೆಯಬೇಕಾಯಿತು ಎಂದು ಆ ದಿನಗಳ ಬಗ್ಗೆ ವಿವರಿಸಿದ್ದಾರೆ. ಕನ್ನಡದಲ್ಲಿ ಇವರು ಅಪ್ಪಾಜಿ ಮತ್ತು ಬಾಳಿನ ಜ್ಯೋತಿ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ನಟಿ ಸೌಂದರ್ಯ ಅವರಿಗೆ ಬಹಳ ಆತ್ಮೀಯ ಗೆಳತಿಯಾಗಿದ್ದ ಇವರು ತೆಲುಗು ಮತ್ತು ತಮಿಳಿನ ಸ್ಟಾರ್ ಹೀರೋಗಳ ಸಿನಿಮಾಗಳಿಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ಯಾಕಾದ್ರೂ ಈ ಸಿನಿಮಾ ಮಾಡಿದ್ನೋ ಅಂತ ಸುಹಾಸಿನಿ ಶೂಟಿಂಗ್ ಸ್ಪಾಟ್ ನಲ್ಲೆ ಚಪ್ಪಲಿ ತಗೊಂಡು ಹೊಡ್ಕೊಂಡ್ರು. ರೋಚಕ ಸತ್ಯಾಂಶ ಬಿಚ್ಚಿಟ್ಟ ನಿರ್ದೇಶಕ ರಾಜೇಂದ್ರ ಪ್ರಸಾದ್ ಸಿಂಗ್

0

ಪರ ಭಾಷಿಕ ನಟಿಯರಾಗಿ ಬಂದು ಕನ್ನಡಿಗರೇ ಎನ್ನುವ ಮಟ್ಟಕ್ಕೆ ಕನ್ನಡಿಗರಿಂದ ಪ್ರೀತಿ ಪಡೆದ ಕೆಲವೇ ಕೆಲವು ನಟಿಯರಲ್ಲಿ ಸುಹಾಸಿನಿ ಅವರ ಹೆಸರು ಸೇರುತ್ತದೆ. ಸುಹಾಸಿನಿ ಮತ್ತು ವಿಷ್ಣುವರ್ಧನ್ ಕನ್ನಡ ಚಿತ್ರರಂಗ ಕಂಡ ಯಶಸ್ವಿ ಜೋಡಿ. ಜೊತೆಗೆ ವಿಷ್ಣುವರ್ಧನ್ ಮತ್ತು ರಾಜೇಂದ್ರ ಸಿಂಗ್ ಬಾಬು ಅವರು ಕನ್ನಡ ಚಿತ್ರ ಪ್ರಪಂಚದ ಲಕ್ಕಿ ಕಾಂಬಿನೇಷನ್.

ಈ ಲೆಜೆಂಡರಿ ಡೈರೆಕ್ಟರ್ ನಿರ್ದೇಶನ ಮತ್ತು ಆ ತಾರೆಗಳ ಮುಖ್ಯ ಭೂಮಿಕೆಯಲ್ಲಿ ಬಂದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ. ಇಂತಹ ಸಿನಿಮಾಗಳಲ್ಲಿ ಒಂದು ಮುತ್ತಿನ ಹಾರ ಸಿನಿಮಾ. ಇಂದಿಗೂ ಕೂಡ ನಮ್ಮ ಕನ್ನಡದ ಜನತೆ ದೇಶಪ್ರೇಮ ಕಥೆ ಹೊಂದಿರುವ ಸಿನಿಮಾಗಳು ಎಂದ ಕೂಡಲೇ ಮುತ್ತಿನ ಹಾರ ಸಿನಿಮಾವನ್ನು ಮೊದಲಿಗೆ ನೆನೆಸಿಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಇಷ್ಟು ದಶಕಗಳು ಕಳೆದಿದ್ದರೂ ಕೂಡ ಆ ಸಿನಿಮಾ ಜನರ ಮನಸ್ಸಲ್ಲಿ ಸ್ಥಾನ ಗಿಟ್ಟಿಸಿ ಕೊಂಡಿದೆ.

ಆದರೆ ಈ ಸಿನಿಮಾದಲ್ಲಿ ಅಭಿನಯಿಸಿದ ತಪ್ಪಿಗಾಗಿ ಸುಹಾಸಿನಿ ಅವರು ಚಪ್ಪಲಿ ತೆಗೆದುಕೊಂಡು ಹೊಡೆದುಕೊಂಡಿದ್ದರಂತೆ. ಇದನ್ನು ಸ್ವತಃ ಈ ಸಿನಿಮಾದ ನಿರ್ದೇಶಕರಾದ ಆದ ರಾಜೇಂದ್ರ ಸಿಂಗ್ ಬಾಬು ಅವರು ವಿಷ್ಣು ಸೇವಾ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮ ಒಂದರಲ್ಲಿ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣ ಇಷ್ಟೇ ವಿಷ್ಣುವರ್ಧನ್ ಒಬ್ಬ ಡೈರೆಕ್ಟರ್ ಆಕ್ಟರ್ ಎನ್ನುವುದರಲ್ಲಿ ಯಾವುದೇ ಎರಡು ಮಾತಿಲ್ಲ ಯಾಕೆಂದರೆ ವಿಷ್ಣುವರ್ಧನ್ ಅವರು ಅಭಿನಯಿಸುವಾಗ ಆ ಶಾಟ್ 50 ಪರ್ಸೆಂಟ್ ಓಕೆ ಆಗಿದ್ದರೆ ತೆರೆ ಮೇಲೆ ಅದನ್ನು ನೋಡುವಾಗ ಅವರ ಪರ್ಫಾರ್ಮೆನ್ಸ್ ನೂರಕ್ಕೆ ನೂರಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿರುತ್ತದೆ ಎನ್ನುವುದನ್ನು ಹಲವಾರು ನಿರ್ದೇಶಕರು ಒಪ್ಪಿಕೊಂಡಿದ್ದಾರೆ.

ಹೀಗೆ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವ ಇವರು ಆ ಸೀನ್ ಗಳಿಗಾಗಿ ಎಂತಹ ಸನ್ನಿವೇಶಗಳನ್ನು ಬೇಕಾದರೂ ಎದುರಿಸುವ ಧೈರ್ಯ ಮಾಡಿದ್ದಾರೆ. ಇದೇ ಕಾರಣಕ್ಕೆ ರಾಜೇಂದ್ರ ಸಿಂಗ್ ಬಾಬು ಅವರು ಅಷ್ಟು ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮತ್ತೊಬ್ಬ ಸ್ಟಾರ್ ಕನ್ನಡದಲ್ಲಿ ಇಲ್ವೇ ಇಲ್ಲ, ಆ ತಾಕತ್ತು ಯಾರಿಗೂ ಇಲ್ಲ ಎಂದು ಕೂಡ ಆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಜೊತೆಗೆ ಮುತ್ತಿನ ಹಾರ ಸಿನಿಮಾ ದೊಡ್ಡ ಚಾಲೆಂಜ್ ಆಗಿತ್ತು ಅದು ಅಷ್ಟು ನೈಜವಾಗಿ ಬರಲು ಚಿತ್ರೀಕರಣ ಅಷ್ಟು ನೈಜವಾಗಿ ನಡೆದಿದ್ದೇ ಕಾರಣ. 52 ಡಿಗ್ರಿ ಸೆಲ್ಸಿಯಸ್ ಅಲ್ಲಿ ಮಿಲ್ಟಿ ಸೂಟ್ ತೊಟ್ಟು ಮರಳು ಗಾಡಿನಲ್ಲಿ ವಿಷ್ಣು ನಿಂತಿರುತ್ತಿದ್ದ, ಆದರೆ ಸುಹಾಸಿನಿ ಪಾಪ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಒದ್ದಾಡುತ್ತಿದ್ದರು. ಒಂದೊಂದು ಬಾರಿ ನಾನು ಇಲ್ಲೇ ಇದ್ದರೆ ಸತ್ತೇ ಹೋಗುತ್ತೇನೆ ಎಂದು ಜೋರಾಗಿ ಅಳುತ್ತಿದ್ದರು.

ಒಮ್ಮೆ ನನ್ನ ಮೇಲೆ ಕೋಪ ಮಾಡಿಕೊಂಡು ಅಲ್ಲೇ ಇದ್ದ ಅವರ ಚಪ್ಪಲಿ ತೆಗೆದುಕೊಂಡು ಹೊಡೆದುಕೊಂಡಿದ್ದರು. ಯಾಕಾದರೂ ಈ ಸಿನಿಮಾ ಒಪ್ಪಿಕೊಂಡೆನೋ ಗೊತ್ತಿಲ್ಲ ನನ್ನ ಕರ್ಮ ಎಂದು ಗಲಾಟೆ ಮಾಡುತ್ತಿದ್ದರು. ಆಗ ನಾನು ಮತ್ತು ವಿಷ್ಣುವರ್ಧನ್ ಅವರು ಹೋಗಿ ಅವರನ್ನು ಸಮಾಧಾನ ಪಡಿಸಿ ಸಂತೈಸುವ ಪ್ರಯತ್ನ ಮಾಡಿದೆವು ಸಿನಿಮಾ ತೆರೆ ಮೇಲೆ ಬಂದಾಗ ಹೆಮ್ಮೆ ಪಡುತ್ತೀರಾ ಎಂದು ಹೇಳಿದ್ದೆವು. ಅದು ಹಾಗೆ ಆಯ್ತು. ಇಂದಿಗೂ ಸಹ ಸುಹಾಸಿನಿ ಮುತ್ತಿನ ಹಾರ ಸಿನಿಮಾ ತನ್ನ ಕೆರಿಯರ್ ನ ಅತ್ಯುತ್ತಮ ಸಿನಿಮಾ ಎಂದು ಹೇಳಿಕೊಳ್ಳುತ್ತಾರೆ. ನಾವು ಅಂದುಕೊಂಡ ರೀತಿಯೇ ಜನಕ್ಕೆ ಆ ಸಿನಿಮಾ ಕೂಡ ರೀಚ್ ಆಗಿತ್ತು ಇದಕ್ಕೆಲ್ಲ ಕಾರಣ ವಿಷ್ಣುವರ್ಧನ್ ಎಂದು ಹೇಳಿದ್ದಾರೆ.

ವಿಷ್ಣುವರ್ಧನ್ ಸಿನಿಮಾ ನೋಡೋಕೆ ಅಣ್ಣಾವ್ರ ಇಡೀ ಕುಟುಂಬನೇ ಥಿಯೇಟರ್ ಗೆ ಬಂದಿತ್ತು ಅದು ಯಾವ ಸಿನಿಮಾ ಗೊತ್ತಾ.?

 

ಸ್ಟಾರ್ ವಾರ್ ಕಿತ್ತಾಟ ಎನ್ನುವುದು ಇಂದು ನೆನ್ನೆಯದಲ್ಲ, ಡಾಕ್ಟರ್ ರಾಜಕುಮಾರ್ ಅವರ ಕಾಲದಿಂದಲೂ ಕೂಡ ಇಂತಹದೊಂದು ಸಮಸ್ಯೆ ಕನ್ನಡ ಇಂಡಸ್ಟ್ರಿಯಲ್ಲಿ ಇತ್ತು. ಅದಕ್ಕೆ ಸಾಕ್ಷಿ ಅಣ್ಣಾವ್ರು ಮತ್ತು ವಿಷ್ಣುವರ್ಧನ್ ಅವರ ನಡುವೆ ಮೂಡಿದ್ದ ಬಿರುಕು. ಆದರೆ ನಿಜವಾಗಿ ಹೇಳಬೇಕು ಎಂದರೆ ಅಣ್ಣಾವ್ರು ಮತ್ತು ವಿಷ್ಣುವರ್ಧನ್ ಅವರ ನಡುವೆ ಅಷ್ಟೊಂದು ಸಮಸ್ಯೆಯೇ ಇರಲಿಲ್ಲ, ಬದಲಾಗಿ ಅಭಿಮಾನಿಗಳು ಮಾತ್ರ ಇದನ್ನು ದೊಡ್ಡದಾಗಿ ಬೆಳೆಸಿ ಬಿಟ್ಟರು.

ಅದರಲ್ಲೂ ಅಭಿಮಾನಿಗಳು ಎಂದು ಹೇಳುವುದಕ್ಕಿಂತ ಕಿಡಿಗೇಡಿಗಳು ಎಂದೇ ಹೇಳಬಹುದು ಈ ಮಾತನ್ನು ಕನ್ನಡದ ಸಿನಿಮಾ ಇಂಡಸ್ಟ್ರಿ ಏಳಿಗೆಗಾಗಿ ದುಡಿದ ಕನ್ನಡದ ಹೆಸರಾಂತ ವಿತರಕರಲ್ಲಿ ಒಬ್ಬರಾದ ಆರ್ ಪಿ ಮುನಿರಾಜು ಅವರು ಸಹ ಹೇಳಿದ್ದಾರೆ. ಕನ್ನಡ ಮಾಣಿಕ್ಯ ಎಂಬ ಯುಟ್ಯೂಬ್ ಚಾನೆಲ್ ಗೇ ನೀಡಿದ ಸಂದರ್ಶನದಲ್ಲಿ ಇದೆಲ್ಲವನ್ನು ಹಂಚಿಕೊಂಡಿದ್ದಾರೆ.

ವಿಷ್ಣುವರ್ಧನ್ ಅವರನ್ನು ಡಾಕ್ಟರ್ ರಾಜಕುಮಾರ್ ಅವರು ಬಹಳ ಇಷ್ಟ ಪಡುತ್ತಿದ್ದರು. ಅವರಿಬ್ಬರ ನಡುವೆ ಉತ್ತಮವಾದ ಬಾಂಧವ್ಯ ಇತ್ತು ಎಷ್ಟು. ಎಷ್ಟು ಎಂದರೆ ಮಗುವಿನ ರೀತಿ ವಿಷ್ಣುವನ್ನು ಅಪ್ಪಿಕೊಂಡು ಅಣ್ಣಾವ್ರು ಮತ್ತು ನೀಡುತ್ತಿದ್ದರು. ಅಷ್ಟರಮಟ್ಟಿಗೆ ಇಬ್ಬರ ನಡುವೆ ವಿಶ್ವಾಸ ಇತ್ತು ಆದರೆ ಗಂಧದ ಗುಡಿ ಸಿನಿಮಾದಲ್ಲಿ ಆದ ಒಂದು ಕಹಿ ಘಟನೆ ನಂತರ ಇವರಿಬ್ಬರು ದೂರವಾಗುವ ರೀತಿ ಮಾಡಿಬಿಟ್ಟಿತು.

ಆದರೆ ಅವರಿಬ್ಬರ ನಡುವೆ ದ್ವೇಷ ಏನು ಇರಲಿಲ್ಲ ಇಬ್ಬರು ಸಹ ಸಹಜವಾಗಿಯೇ ಇರುತ್ತಿದ್ದರು. ಆದರೆ ಒಟ್ಟಿಗೆ ಸೇರಲು ಜಾಸ್ತಿ ಅವಕಾಶಗಳು ಆಗುತ್ತಿರಲಿಲ್ಲ. ಯಾಕೆಂದರೆ ಇಬ್ಬರ ಅಭಿಮಾನಿಗಳು ಎಂದು ಹೆಸರು ಹೇಳಿಕೊಂಡು ಕೆಲ ಕಡಿಗೇಡಿಗಳು ಇಬ್ಬರ ನಡುವೆ ಕಂದಕವನ್ನು ಸೃಷ್ಟಿಸಿ ಬಿಟ್ಟರು. ಅದು ಕನ್ನಡ ಸಿನಿಮಾ ಇಂಡಸ್ಟ್ರಿ ಹಾಳು ಮಾಡುವ ದುರುದ್ದೇಶದಿಂದ ಮಾಡಿದ ಹೊಂಚು ಎಂತಲೇ ಹೇಳಬಹುದು.

ಯಾಕೆಂದರೆ ಇವರಿಬ್ಬರೂ ಸಹ ಮೇರು ನಟರು, ಇಬ್ಬರ ಚಿತ್ರಗಳು ಕೂಡ ಸೂಪರ್ ಹಿಟ್ ಆಗುತ್ತಿತ್ತು. ಇವರಿಬ್ಬರು ಒಟ್ಟಿಗೆ ಇನ್ನಷ್ಟು ಸಿನಿಮಾಗಳನ್ನು ಮಾಡಿದ್ದರೆ ಆ ಕಾಲದಲ್ಲೇ ನಮ್ಮ ಇಂಡಸ್ಟ್ರಿ ಎಲ್ಲೋ ಬೆಳೆಯುತ್ತಿತ್ತು. ಅದನ್ನು ತಡೆಯಲು ಕೆಲ ಕಿಡಿಗೇಡಿಗಳು ಈ ರೀತಿ ಚಿಕ್ಕದನ್ನೆಲ್ಲ ದೊಡ್ಡದು ಮಾಡಿ ಬೆಳೆಸಿ ಬಿಟ್ಟರು. ಎಷ್ಟರ ಮಟ್ಟಿಗೆ ಎಂದರೆ ವಿಷ್ಣುವರ್ಧನ್ ಅವರ ಹೊಂಬಿಸಲು ಸಿನಿಮಾ ರಿಲೀಸ್ ಆದ ವೇಳೆಗೆ ಅಣ್ಣಾವ್ರ ಒಲವು ಗೆಲುವು ಸಿನಿಮಾವೂ ರಿಲೀಸ್ ಆಗಿತ್ತು.

ಒಮ್ಮೆ ಕಾರಿನಲ್ಲಿ ಬಂದ ವಿಷ್ಣುವರ್ಧನ್ ಅವರು ಒಲವು ಗೆಲುವು ಸಿನಿಮಾಗೆ ಥಿಯೇಟರ್ ಮುಂದೆ ಹಾಕಿದ್ದ ಅಣ್ಣಾವ್ರ ಕಟೌಟನ್ನು ಬಹಳ ಆನಂದಿನಿಂದ ನೋಡುತ್ತಿದ್ದರು. ಅದನ್ನೇ ಸಹಿಸದ ಕೆಲವರು ಅಣ್ಣಾವ್ರ ಕಟೌಟ್ ನೋಡುತ್ತಿದ್ದೀಯ ಎಂದು ಗಲಾಟೆ ಆರಂಭಿಸಿದರು. ಏನು ಮಾತನಾಡಿದರೆ ವಿಷ್ಣುವರ್ಧನ್ ಅವರು ಹೊರಟು ಹೋದರು. ಇಂತಹ ಅನೇಕ ಸಂದರ್ಭಗಳು ವಿಷ್ಣುವರ್ಧನ್ ಅವರಿಗೆ ಎದುರಾಗಿತ್ತು ಅದಕ್ಕಾಗಿ ಅವರು ಹೆಚ್ಚಾಗಿ ಯಾವ ಮೀಟಿಂಗ್ ಗೂ ಭಾಗಿ ಆಗುತ್ತಿರಲಿಲ್ಲ, ಹೊರಗಡೆ ಕಾಣಿಸಿಕೊಳ್ಳುತ್ತಲೂ ಇರಲಿಲ್ಲ.

ಅಣ್ಣಾವ್ರು ಸಹ ವಿಷ್ಣುವರ್ಧನ್ ಅವರ ಸಿನಿಮಾಗಳನ್ನು ಬಹಳ ಇಷ್ಟ ಪಡುತ್ತಿದ್ದರು. ಅವರ “ಮಲೆಯ ಮಾರುತ” ಎನ್ನುವ ಸಿನಿಮಾ ರಿಲೀಸ್ ಆದಾಗ ಚಿತ್ರತಂಡವು ಅಣ್ಣಾವ್ರ ಕುಟುಂಬಕ್ಕಾಗಿ ಆಹ್ವಾನ ಕೊಟ್ಟಿತ್ತು. ಆ ಚಿತ್ರ ನೋಡಲು ಅಣ್ಣಾವ್ರು ಪಾರ್ವತಮ್ಮ ಮತ್ತು ಅವರ ಕುಟುಂಬದ ಎಲ್ಲರೂ, ಭಾರತಿ ವಿಷ್ಣುವರ್ಧನ್ ಅವರು ವಿಷ್ಣು ವರ್ಧನ್ ಕುಟುಂಬದ ಮತ್ತಿತರರು ಎಲ್ಲರೂ ಒಟ್ಟಿಗೆ ಕುಳಿತು ಸಿನಿಮಾವನ್ನು ನೋಡಿದ್ದನ್ನು ಕಣ್ಣಾರೆ ನಾನು ಕಂಡಿದ್ದೇನೆ ಎಂದು ಆರ್ ಪಿ ಮುನಿರಾಜು ಅವರು ಹಳೆಯ ಆ ದಿನಗಳನ್ನು ನೆನೆದು ಮಾತನಾಡಿದ್ದಾರೆ. ಅವರ ಮಾತುಗಳಲ್ಲಿ ಇವುಗಳನ್ನೆಲ್ಲ ಕೇಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಹೆಜ್ಜೆ ಇಡಲಾಗದೆ ಒದ್ದಾಡುತ್ತಿದ್ದರು ಕೂಡ 600 ಮೆಟ್ಟಿಲುಗಳನ್ನು ಹತ್ತಿ ಹರಕೆ ತೀರಿಸಿದ ನಟಿ ಸಮಂತಾ, ಕ್ರಿಶ್ಚಿಯನ್ ಕುಟುಂಬದದಲ್ಲಿ ಹುಟ್ಟಿದ್ರು ಕೂಡ ಹಿಂದು ದೇವರ ಮೇಲೆ ಎಷ್ಟು ಭಕ್ತಿ ನೋಡಿ.

0

ನಟಿ ಸಮಂತ ಋತು ಪ್ರಭು (Samantha Ruthu Prabhu) ಎನ್ನುವ ಮುದ್ದು ಮುಖದ ಚಲುವೆ ಇಡೀ ಭಾರತ ಸಿನಿಮಾ ಇಂಡಸ್ಟ್ರಿಯ ನಂಬರ್ ಒನ್ ನಟಿ ಎನಿಸಿಕೊಳ್ಳುವಷ್ಟು ಹತ್ತಿರಕ್ಕೆ ಹೆಸರು ಮಾಡಿದವರು. ತಮಿಳು ತೆಲುಗು ಮತ್ತು ಹಿಂದಿ ಸಿನಿಮಾಗಳು, ವೆಬ್ ಸೀರೀಸ್ ಅಲ್ಲಿ ಬ್ಯಾಕ್ ಟು ಬ್ಯಾಕ್ ಇಟ್ ಕೊಟ್ಟ ಸ್ಟಾರ್ ನಟಿ. ಸಮಂತ ವರ್ಷಗಳ ಹಿಂದೆಯಿಂದ ಮಯೋಸಿಟಿಸ್ (Myositos) ಎನ್ನುವ ಕಾಯಿಲೆಗೆ ತುತ್ತಾಗಿ ವಿಪರೀತವಾಗಿ ಬಳಲಿ ಹೋಗಿದ್ದಾರೆ ಎನ್ನುವ ವಿಚಾರ ಈಗ ಎಲ್ಲರಿಗೂ ತಿಳಿದಿದೆ.

ಮಯೋಸಿಟಿಸ್ ಎನ್ನುವ ಕಾಯಿಲೆ ಎಷ್ಟು ಮಾರಕವಾದದ್ದು ಎಂದರೆ ನಟಿ ಸಮಂತ ಸ್ಥಾನದಲ್ಲಿ ಜನಸಾಮಾನ್ಯರು ಯಾರಾದರೂ ಇದ್ದಿದ್ದರೆ ಖಂಡಿತ ಅವರು ಬದುಕುಳಿಯುವ ಸಾಧ್ಯತೆ ಇರಲಿಲ್ಲ, ಹೀರೋಯಿನ್ ಆಗಿರುವ ಕಾರಣ ದುಬಾರಿ ಚಿಕಿತ್ಸೆ (costly treatment) ಪಡೆದು ಭಾರತ ಅಮೆರಿಕ ದಕ್ಷಿಣ ಕೊರಿಯಾ ಇಲ್ಲೆಲ್ಲ ಚಿಕಿತ್ಸೆಗಾಗಿ ಅಲೆದಾಡಿ ಮತ್ತೆ ಭಾರತಕ್ಕೆ ಹಿಂದಿರುಗಿ ಈಗ ಸುಧಾರಿಸಿಕೊಳ್ಳುತ್ತಿದ್ದಾರೆ.

ಕಳೆದ ತಿಂಗಳಷ್ಟೇ ಶಾಕುಂತಲ ಸಿನಿಮಾದ ಪ್ರಚಾರದಲ್ಲಿ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದಾಗ ಸಮಂತ ಎಷ್ಟು ಒದ್ದಾಡುತ್ತಿದ್ದಾರೆ ಎನ್ನುವುದು ಕ್ಯಾಮರ ಎದುರು ಬಯಲಾಗಿತ್ತು. ಆದರೆ ಆಶ್ಚರ್ಯಕರ ರೀತಿಯಲ್ಲಿ ಈಗಷ್ಟೇ 600 ಇಮೆಟ್ಟಿಲುಗಳನ್ನು ಹತ್ತಿ ಹರಕೆ ಸಲ್ಲಿಸಿದ್ದಾರೆ. ಹಾಗಾದರೆ ನಟಿಮಣಿ ಸಂಪೂರ್ಣವಾಗಿ ಗುಣವಾಗಿದ್ದಾರಾ ಎಂದರೆ ಇಲ್ಲ, ಬದಲಿಗೆ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಇನ್ನೂ ಕೂಡ ಆಕೆಗೆ ದಿನಕ್ಕೆ ನಾಲ್ಕು ಗಂಟೆಗಳ ಚಿಕಿತ್ಸೆ ನಡೆಯುತ್ತದೆ.

ಸಮಂತ ಅವರ ಆರೋಗ್ಯ ಸುಧಾರಿಸಲು ಕಾರಣವಾಗಿರುವುದು ಚಿಕಿತ್ಸೆ ಜೊತೆಗೆ ಅವರ ಆತ್ಮವಿಶ್ವಾಸ ಮತ್ತು ಅವರು ನಂಬಿರುವ ದೇವರು ಎಂದರೆ ಆ ಮಾತು ಸುಳ್ಳಲ್ಲ. ಇದೇ ಕಾರಣಕ್ಕಾಗಿ ಸಮಂತ ಹರಕೆ ತೀರಿಸಲು ಹೋಗಿದ್ದಾರೆ ತಮಿಳುನಾಡಿನ ಪಳನಿ ಮುರುಗನ್ (Palani Murugan temple) ದೇವಸ್ಥಾನದ ಪವಾಡ ಶಕ್ತಿಯ ಬಗ್ಗೆ ದಕ್ಷಿಣ ಭಾರತದ ಎಲ್ಲರಿಗೂ ಗೊತ್ತು. ಸಮಂತ ಅವರು ಸಹ ಹತ್ತಿರದವರ ಸಲಹೆ ಮೇರೆಗೆ ಆ ದೇವಾಲಯದಲ್ಲಿ ಹರಕೆ ಕಟ್ಟಿಕೊಂಡಿದ್ದಾರಂತೆ.

ಬೇಗ ಗುಣವಾದರೆ ಮೆಟ್ಟಿಲುಗಳನ್ನು ಹತ್ತಿ ದರ್ಶನ ಪಡೆಯುತ್ತೇನೆ ಎಂದು ಹರಕೆ ಮಾಡಿಕೊಂಡಿದ್ದರಂತೆ ಈಗ ಚೇತರಿಕೆ ಕಾಣುತ್ತಿರುವ ಕಾರಣ ಸಮಂತ ಮಾತಿನಂತೆ 600 ಮೆಟ್ಟಿಲುಗಳನ್ನು ಜನಸಾಮಾನ್ಯರ ನಡುವೆ ಹತ್ತಿ ಪ್ರತಿ ಮೆಟ್ಟಿಲಿಗೂ ಕೂಡ ಕರ್ಪೂರವನ್ನು ಹಚ್ಚಿ ಕೈಮುಗಿದು ಪಳನಿ ಮುರುಗನ್ ದರ್ಶನ ಪಡೆದು ಧನ್ಯರಾಗಿದ್ದಾರೆ. ಸಮಂತ ಈಗ ಆಧ್ಯಾತ್ಮದ ಕಡೆ ಹೆಚ್ಚು ವಾಲಿದ್ದಾರೆ ಎನ್ನುವುದಕ್ಕೆ ಅವರು ಎಲ್ಲೇ ಕಾಣಿಸಿಕೊಂಡರು ಅವರ ಕೈಯಲ್ಲಿ ಒಂದು ಜಪಮಾಲೆ ಇರುವುದೇ ಸಾಕ್ಷಿ.

ಮೂಲತಃ ಕ್ರಿಶ್ಚಿಯನ್ ಧರ್ಮದವರಾದ ಸಮಂತ ನಂತರ ಹಿಂದೂ ಧರ್ಮಕ್ಕೆ ಕನ್ವರ್ಟ್ ಆಗಿದ್ದರು. ಹಿಂದೂ ಧರ್ಮದ ಎಲ್ಲಾ ಆಚರಣೆಗಳನ್ನು ಅನುಸರಿಸುತ್ತ ದೇವಸ್ಥಾನಕ್ಕೆ ಭೇಟಿ ನೀಡಿ ಜಪ ಶ್ಲೋಕ ಪಠಣೆ ಮಾಡುವುದು ಮುಂತಾದವುಗಳನ್ನು ಮಾಡುತ್ತಿದ್ದರು. ಈಗ ಅವರ ಕೈಯಲ್ಲಿರುವ ಜಪಮಾಲೆ ಬಗ್ಗೆ ಪ್ರಶ್ನೆ ಕೇಳಿದರೆ ವಿಷ್ಣು ಸಹಸ್ರನಾಮ ಹೇಳುತ್ತೇನೆ ಎಂದು ಅವರೇ ಉತ್ತರ ಕೊಡುತ್ತಾರೆ. ಮಯೋಸಿಟಿಸ್ ಖಾಯಿಲೆಗೆ ಮುಖ್ಯ ಕಾರಣ ಖಿನ್ನತೆ. ಯೋಗ, ವ್ಯಾಯಾಮ, ಆಧ್ಯಾತ್ಮ, ಧ್ಯಾನ ಇತ್ಯಾದಿಗಳಲ್ಲಿ ತೊಡಗಿಕೊಳ್ಳುವುದರಿಂದ ಇದು ಬೇಗ ಗುಣವಾಗಲು ಸಹಾಯಕವಾಗುತ್ತದೆ.

ಮತ್ತೆ ಸಮಂತ ತನ್ನ ಅರ್ಧ ಆಗಿದ್ದ ಸಿನಿಮಾಗಳಾದ ಖುಷಿ ಶಾಕುಂತಲಾ ಮತ್ತು ಹಿಂದಿ ವೆಬ್ ಸೀರೀಸ್ ಗಳ ಶೂಟಿಂಗ್ ಕಡೆ ಗಮನ ಕೊಡುತ್ತಿದ್ದಾರೆ. ಜೊತೆಗೆ ವೈವಾವಿಕ ಜೀವನದಲ್ಲಾದ ಕಹಿ ಘಟನೆಗಳ ನೋವಿನಿಂದ ಆಚೆ ಬರುವ ಪ್ರಯತ್ನ ಮಾಡುತ್ತಿದ್ದು, ಹೈದರಾಬಾದ್ ತೊರೆದು ಮುಂಬೈ ಅಲ್ಲಿ ಸೆಟಲ್ ಆಗಲು ನಿರ್ಧಾರ ಕೂಡ ಮಾಡಿ ಮುಂಬೈಯಲ್ಲಿ 15 ಕೋಟಿಯ ಮನೆ ಖರೀದಿಸಿದ್ದಾರಂತೆ. ಸಾವಿನ ಕದ ತಟ್ಟಿ ಬದುಕನ್ನು ಗೆದ್ದಿರುವ ಸಮಂತ ಬದುಕು ಭರವಸೆ ಕಳೆದುಕೊಂಡ ಎಷ್ಟೋ ಜನರಿಗೆ ಸ್ಪೂರ್ತಿ ಆಗಿದೆ.

ಅಪ್ಪು ಮತ್ತು ಚಿರು ಫೋಟೋ ಹಾಕಿ ಟ್ರಿಬ್ಯೂಟ್ ಕೊಟ್ಟ ಮಾರ್ಟಿನ್ ಚಿತ್ರತಂಡ, ಪರೋಕ್ಷವಾಗಿ “ಆ ನಟನ” ಚಿತ್ರವನ್ನು ಖಂಡಿಸಿದ ನೆಟ್ಟಿಗರು

.

ಸ್ಯಾಂಡಲ್ ವುಡ್ ಅಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರ ಇಂದು ದೇಶದಾದ್ಯಂತ ಬಿಡುಗಡೆ ಆಗಿದೆ. ಧ್ರುವ ಸರ್ಜಾ ಅವರ ಸಿನಿಮಾಗಳ ಮೇಲೆ ಬಹಳ ನಿರೀಕ್ಷೆ ಇರುತ್ತದೆ, ಯಾಕೆಂದರೆ ಅವರು ವರ್ಷಕ್ಕಿಂತಲೂ ಹೆಚ್ಚು ಕಾಲ ಸಮಯ ತೆಗೆದುಕೊಂಡು ಒಂದು ಸಿನಿಮಾಗೆ ತಯಾರಾಗಿ ಅಭಿನಯಿಸುತ್ತಾರೆ. ಹಾಗಾಗಿ ಇವರ ಅಭಿಮಾನಿಗಳು ಇವರ ಚಿತ್ರವನ್ನು ಬಹಳ ಅದ್ದೂರಿಯಾಗಿ ಸ್ವಾಗತಿಸುತ್ತಾರೆ.

ಇದೇ ರೀತಿ ನಾಡಿನಾದ್ಯಂತ ಥಿಯೇಟರ್ ಗಳಲ್ಲಿ ಧ್ರುವ ಸರ್ಜಾ ಅವರ ಅಭಿಮಾನಿಗಳ ವತಿಯಿಂದ ಸಿನಿಮಾ ಗೆ ಭರ್ಜರಿ ಓಪನಿಂಗ್ ಸಿಕ್ಕಿದೆ ಸಿನಿಮಾ ಆರಂಭ ಆಗುವ ಮುನ್ನ ಎಂದಿನಂತೆ ಎಲ್ಲಾ ಸಿನಿಮಾಗಳ ರೀತಿ ಈ ಚಿತ್ರದಲ್ಲೂ ಕೂಡ ಪುನೀತ್ ರಾಜಕುಮಾರ್ ಅವರ ಫೋಟೋ ಮತ್ತು ಜೊತೆಗೆ ಧ್ರುವ ಸರ್ಜಾ ಅವರ ಅಣ್ಣ ಚಿರಂಜೀವಿ ಸರ್ಜಾ ಫೋಟೋ ಎರಡನ್ನು ಸಹ ಫ್ರೇಮ್ ಪೂರ್ತಿ ಹಾಕಿ ಶ್ರದ್ಧಾಂಜಲಿ ಕೋರಲಾಗಿದೆ.

ಅಪ್ಪು ಮತ್ತು ಚಿರು ಫೋಟೋ ತೆರೆ ಮೇಲೆ ಬರುತ್ತಿದ್ದಂತೆ ಥಿಯೇಟರ್ ಅಲ್ಲಿದ್ದ ಎಲ್ಲಾ ಧ್ರುವ ಮತ್ತು ಅಪ್ಪು ಅಭಿಮಾನಿಗಳು ಶಿಳ್ಳೆ ಚಪ್ಪಾಳೆ ಹಾಕಿ ಎದ್ದು ನಿಂತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಯಾವುದೋ ಒಂದು ಥಿಯೇಟರ್ ನ ಪರಿಸ್ಥಿತಿ ಅಲ್ಲ ಬಹುತೇಕ ಎಲ್ಲಾ ಥಿಯೇಟರ್ ಗಳು ಕೂಡ ಅವರಿಗೆ ಅರಿವಿಲ್ಲದಂತೆ ಅಪ್ಪು ಫೋಟೋ ನೋಡುತ್ತಿದ್ದರೆ ಈ ರೀತಿ ಮಾಡಬೇಕು ಎಂದು ಅಭಿಮಾನಿಗಳಿಗೆ ಅನಿಸಿದೆ.

ಅಪ್ಪು ಆಶೀರ್ವಾದದಿಂದ ಈ ಸಿನಿಮಾ ಒಳ್ಳೆ ಸಕ್ಸಸ್ ಪಡೆಯಲಿ ಶುಭವಾಗಲಿ ಎಂದು ಅಪ್ಪುವಿನ ಅಭಿಮಾನಿಗಳು ಹಾರೈಸುತಿದ್ದರೆ ಮತ್ತೆ ಎಂದಿನಂತೆ ಕೆಲ ಕಿಡಿಗೇಡಿಗಳು ಈ ವಿಷಯದಲ್ಲೂ ಕೂಡ ಮತ್ತೊಂದು ಚಿತ್ರದ ನೆನೆದು ಕುಟುಕುತ್ತಿದ್ದಾರೆ. ಡಿ ಬಾಸ್ ಅವರ ಕ್ರಾಂತಿ ಸಿನಿಮಾದಲ್ಲಿ ಅಪ್ಪು ಅವರ ಫೋಟೋ ಹಾಕಿ ಶ್ರದ್ದಾಂಜಲಿ ಸಲ್ಲಿಸಲಿಲ್ಲ, ಅಪ್ಪು ಅವರು ಅ’ಗ’ಲಿ’ದ ಅಂದಿನಿಂದಲೂ ಕೂಡ ಯಾವುದೇ ಕಿರುಚಿತ್ರ ರಿಲೀಸ್ ಆದರು ಕೂಡ ಅದಕ್ಕೂ ಅಪ್ಪು ಅವರ ಫೋಟೋ ಹಾಕಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿತ್ತು.

ಯಾವುದೇ ಸಿನಿಮಾ ಕಾರ್ಯಕ್ರಮ ನಡೆದರೂ ಕೂಡ ಅಪ್ಪು ಫೋಟೋ ಮುಂದೆ ದೀಪ ಹಚ್ಚಿ ನಂತರ ಅದನ್ನು ಆರಂಭಿಸಲಾಗುತ್ತಿತ್ತು. ಮೊದಲ ಬಾರಿಗೆ ಕ್ರಾಂತಿ ಸಿನಿಮಾ ಆ ನಿಯಮವನ್ನು ಮುರಿದಿತ್ತು ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾರ್ಟಿನ್ ಚಿತ್ರದಲ್ಲಿ ಟ್ರಬ್ಯೂಟ್ ಸಲ್ಲಿಸಿರುವ ರೀತಿ ನೋಡಿ, ಹಿಂದಿನದನ್ನು ನೆನೆದು ಜನರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಮಾರ್ಟಿನ್ ಚಿತ್ರದ ಬಗ್ಗೆ ಹೇಳುವುದಾದರೆ ಎಪಿ ಅರ್ಜುನ್ ಮತ್ತು ಧ್ರುವ ಸರ್ಜಾ ಅವರ ಕಾಂಬಿನೇಷನಲ್ಲಿ ಮೂಡಿ ಬಂದಿರುವ ಮತ್ತೊಂದು ಚಿತ್ರ ಇದಾಗಿದೆ.

ಈಗಾಗಲೇ ಇವರಿಬ್ಬರ ಕಾಂಬಿನೇಷನ್ನ ಅದ್ದೂರಿ ಮತ್ತು ಬಹುದ್ದೂರ್ ಗೆದ್ದು ಒಳ್ಳೆ ಕಲೆಕ್ಷನ್ ಕೂಡ ಗಿಟ್ಟಿಸಿದೆ. ಪ್ಯಾನ್ ಇಂಡಿಯಾ ಸಿನಿಮಾ ಕೂಡ ಆಗಿರುವುದರಿಂದ ಮಾರ್ಟಿನ್ ಮೇಲೂ ನಿರೀಕ್ಷೆ ಹೆಚ್ಚಾಗಿದೆ. ಉದಯ್ ಮೆಹ್ತಾ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ವೈಭವಿ ಶಾಂಡೀಲ್ಯ ಅವರು ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಟೀಸರ್ ಹಾಗೂ ಟೈಟಲ್ ಲಾಂಚ್ ಆದ ಸಮಯದಿಂದಲೂ ಕೂಡ ಬಹಳ ಕುತೂಹಲವನ್ನು ಉಂಟು ಮಾಡಿತ್ತು, ಇಂದು ಎಲ್ಲರಿಗೂ ನೆಚ್ಚಿನ ನಟವನ್ನು ಸಿನಿಮಾವನ್ನು ನೋಡಿಕೊಂಡಿ ಸಂಭ್ರಮಿಸುವ ಘಳಿಗೆ ಕೂಡಿ ಬಂದಿದೆ. ಮತ್ತೊಮ್ಮೆ ಕನ್ನಡದ ಮತ್ತೊಂದು ಪಾನ್ ಇಂಡಿಯಾ ಚಿತ್ರಕ್ಕೆ ಶುಭವಾಗಲಿ ಎಂದು ಹರಸೋಣ.

 

ನನ್ ಮುಖ ನೋಡಿದ್ ತಕ್ಷಣ ಸಿಗರೇಟ್ ಸೇದ್ತಿಯಾ ಅಂತ ಪಟ್ ಅಂತ ವಿಷ್ಣು ಸರ್ ಕೇಳ್ಬಿಟ್ರು. ಅವರಲ್ಲಿ ಒಂದು ವಿಶೇಷ ಶಕ್ತಿ ಇತ್ತು ಎಂದು ದಾದ ಬಗ್ಗೆ ಮಾತನಾಡಿದ ನಟ ನವೀನ್ ಕೃಷ್ಣ

ಕದಂಬ ಸಿನಿಮಾದಿಂದ ಕಲಿತ ಅಭಿನಯ ಹಾಗೂ ವಿಷ್ಣುವರ್ಧನ್ ಅವರಿಂದ ಕಲಿತ ಪಾಠವನ್ನು ಹೇಳಿಕೊಂಡ ನವೀನ್ ಕೃಷ್ಣ. ಸಾಹಸ ಸಿಂಹ ವಿಷ್ಣುವರ್ಧನ್ ಇಡೀ ಕರುನಾಡೇ ಕೊಂಡಾಡುವಂತೆ ಮಾಣಿಕ್ಯ. ಪ್ರೀತಿಯಿಂದ ಎಲ್ಲರೂ ಇವರನ್ನು ದಾದಾ ಎಂದು ಕರೆಯುತ್ತಾರೆ. ಹೆಸರಿಗೆ ತಕ್ಕಂತೆ ಇವರು ಒಬ್ಬ ಅಣ್ಣನ ಸ್ಥಾನದಲ್ಲಿ ಇದ್ದುಕೊಂಡು ಎಲ್ಲರಿಗೂ ಮಾರ್ಗದರ್ಶನ ನೀಡುತ್ತಾರೆ.

ಹಿರಿಯರು ಕಿರಿಯರು ಎನ್ನುವ ಯಾವ ಭೇದ ಇಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಇವರ ವ್ಯಕ್ತಿತ್ವಕ್ಕೇ ಅವರೇ ಸಾಟಿ. ಅವರ ಜೊತೆ ಅಭಿನಯ ಮಾಡಿರುವ ಅವರ ಚಿತ್ರಗಳಲ್ಲಿ ಕೆಲಸ ಮಾಡಿರುವ ಪ್ರತಿಯೊಬ್ಬರು ಕೂಡ ವಿಷ್ಣುವರ್ಧನ್ ಅವರ ಗುಣಗಾನ ಮಾಡುತ್ತಾರೆ ಇದೇ ರೀತಿ ಕನ್ನಡದ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರ ಮಗ ಆಗಿರುವ ನವೀನ್ ಕೃಷ್ಣ ಅವರು ಸಹ ಕದಂಬ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ಮಗನಾಗಿ ಪಾತ್ರ ಮಾಡಿದ್ದಾರೆ.

ಸಿನಿಮಾ ಅನುಭವದ ಬಗ್ಗೆ ವೇದಿಕೆ ಒಂದರಲ್ಲಿ ಈ ರೀತಿ ಹೇಳಿಕೊಂಡಿದ್ದಾರೆ ನಾನು ವಿಷ್ಣುವರ್ಧನ್ ಸರ್ ಮಗನಾಗಿ ಕದಂಬ ಸಿನಿಮಾದಲ್ಲಿ ಅಭಿನಯ ಮಾಡಲು ಪಡೆದುಕೊಂಡ ಆ ಅವಕಾಶ ಅದು ಅವಕಾಶವಲ್ಲ ನನ್ನ ಅದೃಷ್ಟ. ನಾನು ಎಷ್ಟೇ ಸಿನಿಮಾದಲ್ಲಿ ಬಣ್ಣ ಹಾಕಿದರೂ, ನಿರ್ದೇಶನ ಮಾಡಿದರೂ ಆ ಸಿನಿಮಾ ನನ್ನ ಜೀವ ಮಾನದ ಶ್ರೇಷ್ಠ ಅನುಭವ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಈ ಸಿನಿಮಾದ ಒಂದು ಸೀನ್ ನ ಬಗ್ಗೆ ಹೇಳಿಕೊಂಡು ವಿಷ್ಣುವರ್ಧನ್ ಅವರ ಹೃದಯದ ವೈಶಾಲ್ಯತೆಯನ್ನು ವಿವರಿಸಿದ್ದಾರೆ.

ನವೀನ್ ಕೃಷ್ಣ ಅವರು ಈ ಚಿತ್ರದಲ್ಲಿ ಚಿಕ್ಕ ವಯಸ್ಸಿನಿಂದಲೂ ತಂದೆಯನ್ನು ದ್ವೇಷಿಸುತ್ತಿರುತ್ತಾರೆ. ಅವರ ಹುಟ್ಟು ಹಬ್ಬದ ದಿನದಂದೆ ತಂದೆಗೆ ಚಾಲೆಂಜ್ ಮಾಡಿ ಇಂದಿನಿಂದ ನನಗೂ ನಿನಗೂ ಸಂಬಂಧ ಇಲ್ಲ ನಾನು ನಿನ್ನ ಮಗನೇ ಅಲ್ಲ ಎಂದು ಗಲಾಟೆ ಮಾಡಿ ಹೊರ ಹೋಗುವ ಸೀನ್ ಇರುತ್ತದೆ. ಒಂದೆರಡು ಮಾನಿಟರ್ ಮಾಡಿದ ಮೇಲೆ ವಿಷ್ಣು ಸರ್ ಅವರಿಗೆ ನವೀನ್ ಕೃಷ್ಣ ಅವರು ಯಾಕೋ ಒದ್ದಾಡುತ್ತಿರುವುದು ಕಾಣಿಸುತ್ತದೆ. ಅದಕ್ಕಾಗಿ ಹೊರಗೆ ಕರೆದುಕೊಂಡು ಬಂದು ಸ್ಮೋಕ್ ಮಾಡುತ್ತೀಯ ಎಂದು ಕೇಳಿದರಂತೆ ಆದರೆ ಇಲ್ಲ ಎಂದು ಸುಳ್ಳು ಹೇಳಿದ್ದು ಗೊತ್ತಾದ ತಕ್ಷಣ ಬೇರೆ ಒಬ್ಬರನ್ನು ಕರೆಸಿ ಇವನನ್ನು ಹೊರಗೆ ಕರೆದುಕೊಂಡು ಹೋಗಿ ಎಂದು ಹೇಳಿದರಂತೆ.

ಆರಾಮಾಗಿ ರಿಲಾಕ್ಸ್ ಆಗಿ ಬಾ ಎಂದು ಕಾಯುತ್ತಾ ಕುಳಿತಿದ್ದರಂತೆ. ಅಲ್ಲಿಂದ ಬಂದು ವಿಷ್ಣುವರ್ಧನ್ ಅವರ ಮಾತುಗಳನ್ನು ಕೇಳಿ ಮತ್ತೆ ಆ ಸೀನಲ್ಲಿ ತೊಡಗಿಸಿಕೊಂಡಿರಂತೆ. ಬಹಳ ಚೆನ್ನಾಗಿ ಆ ಸೀನ್ ಬಂದ ಕಾರಣ ಸೆಟ್ ಅಲ್ಲಿದ್ದ ಎಲ್ಲರೂ ಚಪ್ಪಾಳೆ ಹೊಡೆದರಂತೆ ಆದರೆ ಆ ಸೀನ್ ನಲ್ಲಿ ವಿಷ್ಣುವರ್ಧನ್ ಅವರ ಮೇಲೆ ಅವರು ಕ್ಯಾಪ್ ಹಾಕಿದ್ದ ಕಾರಣ ಶೇಡ್ ಬರುತ್ತದೆ ಅದನ್ನು ಗಮನಿಸಿದ ತಂತ್ರಜ್ಞರು ವಿಷ್ಣು ಸರ್ ಗೆ ಬಂದು ಹೇಳಿದಂತೆ.

ಇಡೀ ಸಿನಿಮಾ ಪೂರ್ತಿ ನಾನು ಕಾಣಿಸಿಕೊಳ್ಳುತ್ತೇನೆ ಈ ಸೀನ್ ಒಂದರಲ್ಲಿ ಶೇಡ್ ಇದ್ರೆ ಪರವಾಗಿಲ್ಲ. ಇವನು ತುಂಬಾ ಚೆನ್ನಾಗಿ ಮಾಡಿದ್ದಾನೆ ಮತ್ತೆ ಶಾಟ್ ತೆಗೆದರೆ ಅದು ಬರುವುದಿಲ್ಲ ಇರಲಿ ಬಿಡಿ ಎಂದು ಹೇಳಿದರಂತೆ. ಅಂತಹ ಮನಸ್ಸು ಎಷ್ಟು ಜನರಿಗೆ ತಾನೇ ಇರುತ್ತದೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಸುಮ್ಮನೆ ಇರಲಾರದೆ ಆ ಸೆಟ್‌ಗೆ ನಾನು ಪ್ರೀತಿಸುವ ಹುಡುಗಿಯನ್ನು ಕರೆದುಕೊಂಡು ಹೋಗಿದ್ದೆ ತಕ್ಷಣವೇ ನನ್ನ ತಂದೆಗೆ ಫೋನ್ ಮಾಡಿ ಹೇಳಿ ಬಿಟ್ಟರು ಅದರ ಪರಿಣಾಮ ಇಂದು ಅವಳು ನನ್ನ ಹೆಂಡತಿ ಆಗಿದ್ದಾಳೆ ಎಂದು ಅದನ್ನು ಸಹ ತಮಾಷೆಯಾಗಿ ಹೇಳಿಕೊಂಡಿದ್ದಾರೆ.

ನೆನ್ನೆ ಅಪ್ಪು ಹೆಸರಲ್ಲಿ ಮಾಲೆ ಧರಿಸಿದರು ಇಂದು ಕಿಚ್ಚ ಸುದೀಪ್ ಹೆಸರಲ್ಲಿ ಮಾಲೆ ಧರಿಸುತ್ತಿರುವ ಅಭಿಮಾನಿಗಳು.! ಅಯ್ಯಪ್ಪ ಸ್ವಾಮಿ ಬದಲಾಗಿ ನಟರಿಗಾಗಿ ಮಾಲೆ ಧರಿಸುತ್ತಿರುವುದು ಸರಿನಾ.?

0

 

ಅಪ್ಪು ಮಾಲೆ ಬೆನ್ನಲ್ಲೇ ದೀಪಣ್ಣನ ಮಾಲೆ ಹಾಕಲು ರೆಡಿಯಾದ ಕಿಚ್ಚನ ಅಭಿಮಾನಿಗಳು. ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ಇದ್ದಕ್ಕಿದ್ದಂತೆ ಪುನೀತ್ ರಾಜಕುಮಾರ್ ಅವರನ್ನು ಮಾಲೆ ಹಾಕುವ ವಿಧಿ ವಿಧಾನದ ನಿಯಮಗಳನ್ನು ಒಳಗೊಂಡಿರುವ ಒಂದು ಪಾಂಪ್ಲೆಟ್ ಫೋಟೋ ವೈರಲ್ ಆಗಿತ್ತು. ಬಳಿಕ ಇದು ವಿಜಯನಗರ ಜಿಲ್ಲೆಯಲ್ಲಿ ಅಪ್ಪುಗೆ ಇರುವ ಡೈ ಹಾರ್ಟ್ ಫ್ಯಾನ್ಗಳು ನಿಜವಾಗಿಯೂ ಇಂತದ್ದೊಂದು ನಿರ್ಧಾರ ಮಾಡಿದ್ದಾರೆ ಎನ್ನುವುದು ಬಯಲಿಗೆ ಬಂದಿತ್ತು.

ಬಳಿಕ ಈ ವಿಷಯದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪರ ಮತ್ತು ವಿರೋಧ ಎರಡು ಚರ್ಚೆಗಳು ಕೂಡ ನಡೆದು ಹೆಚ್ಚಿನ ಜನ ಅಪ್ಪು ಮತ್ತು ದೊಡ್ಮನೆ ಅಭಿಮಾನಿಗಳೇ ಇದನ್ನು ವಿರೋಧಿಸಿದ್ದರು. ಆ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸದ್ದಾಗುತ್ತಿದ್ದಂತೆ ಮತ್ತೊಬ್ಬ ಸ್ಟಾರ್ ನ ಅಭಿಮಾನಿಗಳು ಈಗ ತಮ್ಮ ಹೀರೋನ ಮಾಲೆ ಹಾಕಲು ನಿರ್ಧರಿಸಿದ್ದಾರೆ, ಅದರ ಕುರಿತ ಪೋಸ್ಟ್ ಒಂದು ಟ್ರೋಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ದೀಪಣ್ಣ ದೇವರ ಮಾಲೆ ಹಾಕುವ ವಿಧಾನ ಎಂದು ಬರೆದಿರುವ ಇದರಲ್ಲಿ ಸುದೀಪ್ ಫೋಟೋ ,ವಾಲ್ಮೀಕಿ ಅವರ ಫೋಟೋ, ಶ್ರೀರಾಮುಲು ಫೋಟೋ ಮತ್ತು ವಾಲ್ಮೀಕಿ ಮಠದ ಗುರುಗಳ ಫೋಟೋ ಹಾಗೂ ಹೀರೋ ಅಜಯ್ ಕೃಷ್ಣ ಫೋಟೋ ಕೂಡ ಹಾಕಲಾಗಿದೆ. ಹೇಳಬೇಕು ಎಂದರೆ ನೆನ್ನೆ ವೈರಲ್ ಆಗಿದ್ದ ಅಪ್ಪು ಮಾಲೆ ನಿಯಮಾವಳಿಗಳಲ್ಲಿ ಒಂದು ರೀತಿಯ ಅರ್ಥಪೂರ್ಣವಾದ ವಿಧಿ ವಿಧಾನವಾದರೂ ಇತ್ತು.

ಆದರೆ ಈಗ ಹೇಳಲಾಗುತ್ತಿರುವ ದೀಪಣ್ಣ ದೇವರ ಮಾಲೆ ವಿಧಿ ವಿಧಾನಗಳಲ್ಲಿ ಎಲ್ಲವೂ ಅಸಂಬದ್ಧವಾಗಿದೆ. ಒಂದು ರೀತಿಯಲ್ಲಿ ಇದನ್ನು ಯಾರೋ ಕಿಡಿಗೇರಿಗಳು ಮತ್ತೊಮ್ಮೆ ಸ್ಟಾರ್ಗಳ ನಡುವೆ ಕಿಚ್ಚು ಹಚ್ಚುವ ಸಲುವಾಗಿ ಈ ರೀತಿ ಹುಚ್ಚುಚ್ಚಾಗಿ ಬರೆದಿದ್ದಾರೆ ಎನ್ನುವ ರೀತಿಯೇ ಇದರಲ್ಲಿ ನಿಯಮಗಳನ್ನು ಬರೆದು ಸುದೀಪ್ ಅಭಿಮಾನಿಗಳನ್ನು ಲೇವಡಿ ಮಾಡಿದ್ದಾರೆ.

ತುಂಗಭದ್ರ ಜಲಾಶಯದಲ್ಲಿ ಸೂರ್ಯೋದಯ ಮುಂಚೆ ಹಾಗೂ ಸೂರ್ಯಾಸ್ತದ ನಂತರ ಓಂ ದೀಪಣ್ಣಾಯ ನಮಃ ಎಂದು ಹೇಳುತ್ತಾ ಮುಳುಗಿ ಏಳಬೇಕು, ದೀಪಣ್ಣ ದೇವರ ಮಾಲೆ ಹಾಕುವ ಎಲ್ಲರೂ, ಕೇಸರಿ ಬಣ್ಣದ ಪಂಚೆ, ಶಾಲು ಮತ್ತು ಶರ್ಟ್ ಜೊತೆ ವಾಲ್ಮೀಕಿ ಗುರೂಜಿ ಮತ್ತು ದೀಪಣ್ಣ ಇರುವ ಡಾಲರ್ ಜಪ ಮಣಿ ಧರಿಸಬೇಕು. ದೀಪಣ್ಣ ದೇವರ ಮತ್ತು ವಾಲ್ಮೀಕಿ ಅವರ ಫೋಟೋ ಇಟ್ಟುಕೊಂಡು ಪೂಜೆ ಮಾಡಬೇಕು.

ವ್ರತ ಇರುವ ಎಲ್ಲರಿಗೂ ಪ್ರಸಾದವಾಗಿ ದೀಪಣ್ಣ ಅವರ ತಂದೆ ಹೋಟೆಲ್ ಆದ ಸರೋವರ್ ಇಂದ ಬೆಳಗ್ಗೆ ಇಡ್ಲಿ ಗಟ್ಟಿ ಚಟ್ನಿ, ಮಧ್ಯಾಹ್ನ ಮೊಸರನ್ನ ಮತ್ತು ರಾತ್ರಿ ತಿಳಿಸಾರು ಬರುತ್ತದೆ. ರಾತ್ರಿ ವೇಳೆ ದೀಪಣ್ಣ ಮಾಲದಾರಿಗಳು ಯಾರು ಸರೋವರ ಬಾರಿಗೆ ಹೋಗಿ ಎಣ್ಣೆ ಹೊಡೆಯಬಾರದು. ಅದಕ್ಕಿಂತ ವಿಶೇಷವಾದ ಸೂಚನೆ ಏನೆಂದರೆ ದೀಪಣ್ಣ ದೇವರ ಮುಂದಿನ ಚಿತ್ರ ರಿಲೀಸ್ ಆದಾಗ ಎಲ್ಲರೂ ಮೂರು ಬಾರಿ ಟಿಕೆಟ್ ತೆಗೆದುಕೊಂಡು ಚಿತ್ರದ ನಿರ್ಮಾಪಕರು ಹಿಮಾಲಯಕ್ಕೆ ಹೋಗದಂತೆ ತಡೆಯಬೇಕು ಎಂದು ಬರೆದಿದ್ದಾರೆ.

ಸದ್ಯಕ್ಕೆ ಈಗ ಇದರ ಬಗ್ಗೆ ಸುದೀಪ್ ಅಭಿಮಾನಿಗಳು ರೊಚ್ಚಿಗೆದ್ದಿದ್ದು ಇದಕ್ಕೆಲ್ಲ ಕಾರಣ ಡಿ ಬಾಸ್ ಅಭಿಮಾನಿಗಳು ಎಂದು ಡಿ ಬಾಸ್ ಮಾಲೆ ಹಾಕಿದ್ದರೆ ಯಾವ ರೀತಿ ಇರಬಹುದು ಎನ್ನುವುದನ್ನು ಊಹಿಸಿ ಕಮೆಂಟ್ ಗಳ ಮೂಲಕ ಚುಚ್ಚುತಿದ್ದಾರೆ . ಮುಂದೆ ಇದು ಯಾವ ರೀತಿ ತಿರುವು ಪಡೆದುಕೊಳ್ಳಲಿದೆಯೋ ಕಾದು ನೋಡೋಣ. ಒಂದು ರೀತಿಯಲ್ಲಿ ಧಾರ್ಮಿಕ ಭಾವನೆ ಆಗಿದ್ದ ಮಾಲೆ ವಿಷಯ ಈ ಸ್ಯಾಂಡಲ್ ವುಡ್ ಸ್ಟಾರ್ ಗಳ ಅಂಧಭಿಮಾನಿಗಳ ಕಚ್ಚಾಟದಿಂದ ತನ್ನ ಮೌಲ್ಯ ಕಳೆದುಕೊಳ್ಳದಿದ್ದರೆ ಸಾಕು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

ನಟಿ ಸ್ವರ ಭಾಸ್ಕರ್ & ಫಾಹದ್ ಮದುವೆಯನ್ನು ಅಸಿಂಧು ಎಂದ ಇಸ್ಲಾಂ ಧರ್ಮಗುರು, ಮದುವೆ ಆದ 4 ದಿನಕ್ಕೆ ಇದೆಂಥ ಶಾ-ಕ್ ಕೊಟ್ರು ವಿಚಾರ ಕೇಳಿ ಕಣ್ಣಿರಿಟ್ಟ ನಟಿ ಸ್ವರ ಭಾಸ್ಕರ್

0

 

ಸೆಲೆಬ್ರಿಟಿಗಳು ಅಂತರ್ಜಾತಿ ವಿವಾಹ ಆಗುವುದು ಹೊಸದೇನಲ್ಲ ಈಗಾಗಲೇ ಭಾರತದಲ್ಲಿ ಹಲವು ಚಿತ್ರರಂಗದ ನಟಿಯರು ಈ ರೀತಿ ಬೇರೆ ಧರ್ಮದವರನ್ನು ವರಿಸಿದ್ದಾರೆ. ಅದೇ ರೀತಿ ಬಾಲಿವುಡ್ ನ ಹೆಸರಾಂತ ನಟಿ ಸ್ವರ ಭಾಸ್ಕರ್ ಅವರು ಕೂಡ ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಮುಖಂಡ ಫಹದ್ ಅಹ್ಮದ್ ಅವರನ್ನು ಕೈಹಿಡಿದಿದ್ದಾರೆ. ಇವರಿಬ್ಬರದು ಪ್ರೇಮ ವಿವಾಹ ಆಗಿದ್ದು, ಜೋಡಿ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟಲ್ಲಿ ಮದುವೆ ಆಗಿರುವ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಇದರ ಬೆನ್ನಲ್ಲೇ ಇವರ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಜೋರು ಚರ್ಚೆ ಆಗುತ್ತಿದೆ. ಕೆಲವರು ಇದು ಮತ್ತೊಂದು ಲವ್ ಜಿಹಾದ್ ಪ್ರಕರಣ ಎನ್ನುತ್ತಿದ್ದರೆ, ಇಸ್ಲಾಂ ಧರ್ಮಗುರುಗಳೇ ಈ ಮದುವೆ ಅಸಿಂಧು ಎಂದು ಹೇಳುತ್ತಿದ್ದಾರೆ. ಸ್ವರ ಭಾಸ್ಕರ್ ಅವರು ಶರಿಯ ಕಾನೂನಿನ ಅಡಿಯಲ್ಲಿ ಫಹಾದ್ ಅಹ್ಮದ್ ಅವರನ್ನು ಮದುವೆ ಆಗಿದ್ದಾರೆ. ಇಸ್ಲಾಂ ಧರ್ಮ ಗುರುಗಳಾದ ಚಿಕಾಗೋ ಮೂಲದ ನಿಯತಕಾಲಿಕ ಸಂಪಾದಕ ಮತ್ತು ವಿದ್ವಾಂಸರಾಗಿರುವ ಡಾಕ್ಟರ್ ಯಾಸಿರ್ ನಹೀಮ್ ಅಲ್ ವಾಜಿದಿ ಅವರು ಸೋಶಿಯಲ್ ಮೀಡಿಯಾ ಟ್ವಿಟರ್ ಅಲ್ಲಿ ಪೋಸ್ಟ್ ಒಂದನ್ನು ಹಾಕುವ ಮೂಲಕ ಈ ಮದುವೆಯನ್ನು ಇಸ್ಲಾಂ ಧರ್ಮ ಒಪ್ಪುವುದಿಲ್ಲ ಎಂದಿದ್ದಾರೆ.

ಇಬ್ಬರು ಅನ್ಯ ಧರ್ಮಿಯರು ಮದುವೆ ಆಗುವುದನ್ನು ಇಸ್ಲಾಂ ಧರ್ಮ ಒಪ್ಪುವುದಿಲ್ಲ, ಈಗ ಮದುವೆ ಆಗುವ ಕಾರಣಕ್ಕಾಗಿ ಸ್ವರ ಭಾಸ್ಕರ್ ಇಸ್ಲಾಂ ಧರ್ಮಕ್ಕೆ ಮತಾಂತರವಾದರೆ ಅದನ್ನು ಸಹ ಅಲ್ಲಾ ಒಪ್ಪುವುದಿಲ್ಲ ಎಂದು ಹೇಳಿ ಅವರ ದೃಷ್ಟಿಕೋನದ ಪ್ರಕಾರ ಮದುವೆ ಆ ಸಿಂಧು ಎಂದಿದ್ದಾರೆ. ಇದರ ಬೆನ್ನಲ್ಲೇ ಇದು ದೇಶದಾದ್ಯಂತ ವ್ಯಾಪಕ ಚರ್ಚೆ ಆಗುತ್ತಿದೆ ದೇಶದ ಪ್ರತಿಷ್ಠಿತ ರೇಡಿಯೋ ಆರ್ ಜೆ ಸಯೇಮಾ ಅವರು ಧಾರ್ಮಿಕ ವಿದ್ವಾಂಸರು ಜನರ ವೈಯಕ್ತಿಕ ವಿಷಯದ ಬಗ್ಗೆ ಮಾತನಾಡಬಾರದು, ಈಗಲೇ ಭಾರತದಂತಹ ದೇಶದಲ್ಲಿ ಅಂತರ್ಜಾತಿಗಳ ವಿವಾಹಗಳು ಹಗೆತನ ಮತ್ತು ಅನುಮಾನವನ್ನು ಎದುರಿಸುತ್ತಿವೆ.

ಇಂತಹ ಬೆಳವಣಿಗೆ ಇರುವ ಸಂದರ್ಭದಲ್ಲಿ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಅದಕ್ಕೆ ರೀ ಟ್ವೀಟ್ ಮಿಡುವ ಮೂಲಕ ತಿರುಗೇಟು ಕೊಟ್ಟಿದ್ದಾರೆ. ಇಷ್ಟಾಗುತ್ತಿದ್ದಂತೆ ಅನೇಕ ಟ್ವಿಟರ್ ಬಳಕೆದಾರರು ಆರ್.ಜೆ ಸಯೇಮಾ ಪರ ಮಾತನಾಡುತ್ತಿದ್ದಾರೆ. ಸಯೀನಾ ಎನ್ನುವ ಒಬ್ಬ ಟ್ವಿಟರ್ ಬಳಕೆಗಾರ್ತಿ ಧರ್ಮ ಗುರುಗಳು ಯಾರಾದರೂ ಬಂದು ಅಲ್ಲಾ ಏನು ಹೇಳಿದ್ದರು ಎಂದು ಕೇಳಿದರೆ ಆಗ ಮಾತ್ರ ಮಾತನಾಡಬೇಕು ಅಲ್ಲಿಯವರೆಗೂ ಸುಮ್ಮನಿರಿ, ವಿನಾಕಾರಣ ಬೇರೆಯವರ ಮದುವೆ ವಿಷಯಕ್ಕೆ ತಲೆ ಹಾಕಬೇಡಿ ಎಂದು ಕಮೆಂಟ್ ಮಾಡಿದ್ದಾರೆ.

ಸಮರ್ ಖಾನ್ ಎನ್ನುವ ಮತ್ತೊಬ್ಬ ಬರಹಗಾರರು ಧರ್ಮ ಗುರುಗಳು, ಧರ್ಮ ಪ್ರಚಾರಕರು ಮತ್ತು ವಿದ್ವಾಂಸರು ಎಂದುಕೊಂಡು ಕೆಲವರು ಎಲ್ಲ ವಿಷಯಕ್ಕೂ ಮೂಗು ತೂರಿಸುತ್ತಾರೆ. ಆದರೆ ಯಾರು ಯಾರ ವೈಯಕ್ತಿಕ ವಿಷಯಕ್ಕೂ ಹೋಗದೆ ಇದ್ದರೆ ಅದೇ ಒಳ್ಳೆಯದು ಅವರ ಪಾಡಿಗೆ ಅವರನ್ನು ಬಿಟ್ಟುಬಿಡಬೇಕು ಎಂದಿದ್ದಾರೆ. ಒಟ್ಟಿನಲ್ಲಿ ಸದಾ ಸ್ವರ ಭಾಸ್ಕರ್ ಅವರು ಹಿಂದು ಧರ್ಮವನ್ನು ಲೇವಾಡಿ ಮಾಡುತ್ತಾ ಅಥವಾ ಹಿಂದು ಭಾವನೆಗಳಿಗೆ ಧಕ್ಕೆ ಆಗುವಂತ ಪೋಸ್ಟ್ ಹಾಕುತ್ತಾ ಕಾಂಟ್ರವರ್ಸಿ ಕ್ವೀನ್ ಎನಿಸಿಕೊಂಡಿದ್ದರು.

ಈಗ ಮದುವೆ ವಿಷಯದಲ್ಲೂ ಕೂಡ ಅಣ್ಣ ಎಂದು ಕರೆದವರನ್ನೇ ಮದುವೆಯಾಗಿ ಮತ್ತೊಂದು ವಿವಾದ ಸೃಷ್ಟಿಸಿಕೊಂಡು ಟ್ರೋಲ್ ಆಗುತ್ತಿದ್ದಾರೆ. ಇವರ ಮದುವೆ ಬೆಳವಣಿಗೆ ಇನ್ನೂ ಯಾವ ಹಂತಕ್ಕೆ ಹೋಗಲಿದೆ ಎಂದು ಕಾದು ನೋಡೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.