Home Blog Page 232

ಕೇವಲ 20 ರೂಪಾಯಿಗೆ ಹೊಟ್ಟೆ ತುಂಬಾ ಊಟ ನೀಡುತ್ತಿದ್ದ ಮುದುಕ.! ಅದರ ಹಿಂದಿನ ಕಾರಣ ತಿಳಿದು ಬೆಚ್ಚಿಬಿದ್ದ ಪೊಲೀಸರು.!

 

ಸಾಮಾನ್ಯವಾಗಿ ಹೊರಗಡೆ ಹೋದ ಸಂದರ್ಭದಲ್ಲಿ ಹೊಟ್ಟೆ ಹಸಿವಾದಾಗ ನಾವು ಹೋಟೆಲ್ ನಲ್ಲಿ, ರಸ್ತೆ ಬದಿಯಲ್ಲಿ ಇರುವ ಅಂಗಡಿಗಳಲ್ಲಿ, ಫಾಸ್ಟ್ ಫುಡ್ ನಲ್ಲಿ ಏನಾದರೂ ಆಹಾರವನ್ನು ತಿನ್ನಲು ಬಯಸುತ್ತೇವೆ. ಆದರೆ ಆ ಊಟ ತಿಂಡಿಗಳನ್ನು ಹೇಗೆ ತಯಾರು ಮಾಡುತ್ತಾರೋ? ಆ ಆಹಾರಗಳು ಉತ್ತಮವಾಗಿ ಇರುತ್ತದೆಯೇ, ಅದನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದೇ ಎಂಬುದನ್ನು ಯೋಚಿಸುವುದಿಲ್ಲ ಬದಲಾಗಿ ಕಡಿಮೆ ದರದಲ್ಲಿ ಸಿಗುತ್ತದೆ ಎಂದು ತಿಂದು ಬಿಡುತ್ತಾರೆ.

ಮನುಷ್ಯನಿಗೆ ಹೊಟ್ಟೆ ಹಸಿದಾಗ ಆಹಾರದ ರುಚಿ ಶುಚಿಯನ್ನು ಅರಿಯದೆ ಪಕ್ಕದಲ್ಲಿ ಕಡಿಮೆ ದರಗಳಲ್ಲಿ ಸಿಗುವ ಆಹಾರವನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಹಲವಾರು ಜನರು ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ದುಬಾರಿ ಬೆಲೆಯ ಕೊಟ್ಟು ವಿಧ ವಿಧವಾದ ಆಹಾರಗಳನ್ನು ಸೇವಿಸುತ್ತಾರೆ. ಆ ಆಹಾರವು ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಇಲ್ಲವೋ ಎಂಬ ಯೋಚನೆಯನ್ನು ಮಾಡುವುದಿಲ್ಲ. ಆದರೆ ಇಲ್ಲಿ ಒಬ್ಬ ವ್ಯಕ್ತಿ ಕೇವಲ 20 ರೂಪಾಯಿಗೆ ಹೊಟ್ಟೆ ತುಂಬ ಊಟ ನೀಡುತ್ತಾನೆ.

ಆತನ ಬಗ್ಗೆ ಹಾಗೂ ಅವನು ಕಡಿಮೆ ಬೆಲೆಗೆ ಏಕೆ ಊಟ ನೀಡುತ್ತಿದ್ದ.? ಇದರ ಹಿಂದಿನ ಕತೆಯ ಬಗ್ಗೆ ತಿಳಿಯೋಣ. ಒಬ್ಬ ಅಜ್ಜ ಕೇವಲ 20 ರೂಪಾಯಿ ಗಳಿಗೆ ಹೊಟ್ಟೆ ತುಂಬ ಊಟ ನೀಡುತ್ತಿದ್ದ, ಇದನ್ನು ತಿಳಿದ ಪೋಲೀಸರು ಅದರ ಹಿನ್ನೆಲೆಯನ್ನು ತಿಳಿಯಲು ಹೋದಾಗ ಅದರ ಸತ್ಯ ತಿಳಿದು ಬೆಚ್ಚಿ ಬಿದ್ದಿದ್ದಾರೆ. ಗುಜರಾತಿನ ಮುರಬ ನಗರದಲ್ಲಿ ಬಚ್ಚು ದಾದಾ ಎಂಬ ಹೆಸರಿನ ಒಬ್ಬ ವಯಸ್ಸಾದ ವ್ಯಕ್ಕಿ. ಈ ಬಚ್ಚು ದಾದಾ ಎಂಬ ಹೆಸರಿನಲ್ಲಿ ಒಂದು ಡಾಬಾ ಇದೆ ಆ ಡಾಬಾದ ಮಾಲೀಕನಾದ ಬಚ್ಚು ದಾದಾ ಅವರಿಗೆ 73 ವರ್ಷ ವಯಸ್ಸು ಆಗಿದೆ.

ಈತನ ಡಾಬಾ ತುಂಬಾ ಚಿಕ್ಕದು ಚಿಕ್ಕದಾದರು ಈ ಡಾಬಾದಲ್ಲಿ ಪ್ರತಿ ದಿನ 150 ರಿಂದ 200 ಜನ ಊಟ ಮಾಡುತ್ತಾ ಇದ್ದಾರೆ. ಈ ಡಾಬಾ ದಲ್ಲಿ ಬಡಿಸುವ ಒಂದು ತಾಲಿನ ಬೆಲೆ ಕೇವಲ 20 ರೂಪಾಯಿ. ಆ ತಾಲಿನಲ್ಲಿ ಮೂರು ವಿಧ ವಿಧವಾದ ಸಾರು, ಪಲ್ಯ, ತರಕಾರಿ ಜೊತೆಗೆ ಮೂರು ರೊಟ್ಟಿಗಳು ಇರುತ್ತವೆ. ಇದಲ್ಲದೆ ಇವುಗಳ ಜೊತೆ ಅನ್ನವನ್ನು ಸಹ ಈ ಬಚ್ಚುದಾದಾ ನೀಡುತ್ತಾರೆ ಇಷ್ಟೆಲ್ಲಾ ಇರುವ ಈ ಊಟಕ್ಕೆ ಬೇರೆ ಕಡೆಯಾದರೆ ರೂ. 70 ರಿಂದ 100 ರವರೆಗೆ ಬೆಲೆ ಹೇಳುತ್ತಾರೆ. ಆದರೆ ಈ ತಾತಾ ಇಷ್ಟೆಲ್ಲವನ್ನು ಕೇವಲ ರೂಪಾಯಿ 20 ಕ್ಕೆ ನೀಡುತ್ತಾರೆ ಇದನ್ನು ಕಂಡ ಜನರು ಅದನ್ನು ವಿಚಾರಿಸಲು ಅವರ ಬಳಿ ಹೋಗಿ ವಿಚಾರಿಸುತ್ತಾರೆ.

ಅದಕ್ಕೆ ಉತ್ತರಿಸಿದ ದಾದಾ ‘ಕೋರೋನಾ ಬಂದ ಸಮಯದಲ್ಲಿ ತನ್ನ ಪತ್ನಿ ಹಾಗೂ ಮಗ ಇಬ್ಬರನ್ನು ಕಳೆದುಕೊಂಡಿದ್ದೇನೆ. ಇನ್ನು ಯಾವೊಬ್ಬ ವ್ಯಕ್ತಿಯೂ ಸ.ತ್ತ ನಂತರ ಹೋಗುವಾಗ ಏನನ್ನು ಹೊತ್ತು ಹೊಯ್ಯುವುದಿಲ್ಲ. ಇರೋ ತನಕ ಕೈಲಾದಷ್ಟು ಒಳ್ಳೆಯದನ್ನು ಮಾಡಬೇಕು. ಅದಕ್ಕಾಗಿ ಹಸಿದವರಿಗೆ ಊಟ ನೀಡುತ್ತಿದ್ದೇನೆ. ಈ ಊಟವನ್ನು ಉಚಿತವಾಗಿ ನೀಡಬೇಕೆಂಬ ಆಸೆ ಇದೆ ಆದರೆ ಉಚಿತವಾಗಿ ನೀಡುವಂತಹ ಶಕ್ತಿಯನ್ನು ಆ ದೇವರು ನನಗೆ ನೀಡಿಲ್ಲ.

ಆದ್ದರಿಂದ ಆ ಊಟ ತಯಾರಿಸಲು ಅಗತ್ಯವಿರುವುದು ಕೇವಲ 20 ರೂಪಾಯಿ ಮಾತ್ರ ಅದಲ್ಲಾಗಿ ಮಾತ್ರ 20 ರೂಪಾಯಿಗಳನ್ನು ಪಡೆಯುತ್ತೇನೆ. ಯಾರಿಗಾದರೂ 20 ರೂಪಾಯಿಗಳನ್ನು ಕೊಡಲು ಸಾಧ್ಯವಿಲ್ಲವೋ ಅಂತಹವರಿಗೆ ಉಚಿತವಾಗಿ ಊಟ ನೀಡುತ್ತೇನೆ ಎಂದು ಹೇಳಿದ್ದಾರೆ. ಈಗಿನ ತಾಂತ್ರಿಕ ಯುಗದಲ್ಲಿ ಇಂತಹ ವ್ಯಕ್ತಿಗಳು ಇರುವುದು ಬಹಳ ಅಪರೂಪ. ದಾನಗಳಲ್ಲಿ ಎಲ್ಲ ದಾನಕ್ಕಿಂತ ಅನ್ನದಾನ ಬಹಳಷ್ಟು ಲೇಸು. ಸ್ನೇಹಿತರೆ ಇರುವವರೆಗೆ ಕಷ್ಟದಲ್ಲಿ ಇರುವವರಿಗೆ ತಮ್ಮಿಂದ ಆದಷ್ಟು ಸಹಾಯ ಮಾಡಿ, ಹಸಿದವರಿಗೆ ಅನ್ನ ನೀಡಿ. ನಾವು ಸತ್ತ ನಂತರ ನಾವು ಇಲ್ಲಿಂದ ಏನನ್ನು ಹೊತ್ತು ಹೋಗಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಳ್ಳಿ.

ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾ ಬೋನಿ ಅಗಲ್ಲ ಗಾಂಧಿ ನಗರ ಬಿಟ್ ಹೋಗ್ತಿಯಾ ಅಂದ್ರು ಆದ್ರೆ ಆ ಎಷ್ಟು ದುಡಿತು ಗೊತ್ತಾ.?

 

ಕನ್ನಡದಲ್ಲಿ ಜೇಮ್ಸ್ ಬಾಂಡ್ ಮಾದರಿಯ ಸಿನಿಮಾ ಬರುತ್ತದೆ ಎನ್ನುವುದು ಆ ಸಮಯದ ಕಲ್ಪನೆಯಲ್ಲೂ ಇರಲಿಲ್ಲ. ಯಾಕೆಂದರೆ ಆಗ ತಾನೆ ಕನ್ನಡ ಚಿತ್ರರಂಗ ಕಣ್ಣು ಬಿಡುತ್ತಿದ್ದ ಕಾಲ ಅದು. ಅಂತಹ ಸಮಯದಲ್ಲಿ ಈ ಮಾದರಿಯ ಸಿನಿಮಾಗಳು ಕನ್ನಡದಲ್ಲಿ ಆಗಿದ್ದು ನಮ್ಮ ಕನ್ನಡಿಗರ ಆಸಕ್ತಿಗಳ ಆಳ ಎಷ್ಟಿದೆ ಮತ್ತು ಇಲ್ಲಿನ ಪ್ರತಿಭೆಗಳು ಯಾವ ರೇಂಜಿಗೆ ಇದ್ದಾರೆ ಎನ್ನುವುದಕ್ಕೆ ಸಾಕ್ಷಿ ಆಗಿತ್ತು. ಮೊಟ್ಟಮೊದಲ ಬಾರಿಗೆ ದೊರೈ ಮತ್ತು ಭಗವಾನ್ ಇಬ್ಬರು ಜೋಡಿಯಾಗಿ ಜೇಡರ ಬಲೆ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

ಆ ಸಿನಿಮಾ ಕೂಡ ಮೊದಲ ಬಾರಿಗೆ ಕನ್ನಡದಲ್ಲಿ ಪ್ರಯೋಗ ಆಗಿತ್ತು, ಆ ಸಿನಿಮಾದ ಸಕ್ಸಸ್ ಅದೇ ರೀತಿಯ ಮತ್ತಷ್ಟು ಸಿನಿಮಾಗಳನ್ನು ಮಾಡಲು ಸ್ಪೂರ್ತಿಯಾಯಿತು. ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾ ನಂತರ 2013ರಲ್ಲಿ ಇದರ ಹೆಚ್ ಡಿ ವರ್ಷನ್ ಬಂದಾಗಲೂ ಕೂಡ ಅಷ್ಟೇ ದೊಡ್ಡ ಸಕ್ಸಸ್ ಪಡೆಯಿತು. ಇದರ ಬಗ್ಗೆ ಅದರ ವಿತರಕರಾಗಿದ್ದ ಆರ್ ಪಿ ಮುನಿರಾಜ್ ಅವರು ಹೇಳಿಕೊಂಡಿದ್ದಾರೆ. ಕನ್ನಡ ಮಾಣಿಕ್ಯ ಎಂಬ ಯುಟ್ಯೂಬ್ ಚಾನೆಲ್ ಗೆ ಕೊಟ್ಟ ಸಂದರ್ಶನದಲ್ಲಿ ಆರ್.ಪಿ ಮುನಿರಾಜು ಅವರು ಎಷ್ಟು ಕಷ್ಟಪಟ್ಟು ಅದನ್ನು ಮತ್ತೆ ತೆರೆ ಮೇಲೆ ತಂದರು ಎನ್ನುವ ಕಥೆಯನ್ನು ಹೇಳಿಕೊಂಡಿದ್ದಾರೆ.

ಬೆಂಗಳೂರಿನ ಕಲಾಸಿಪಾಳ್ಯ ಬಳಿ ಥಿಯೇಟರ್ ಒಂದರಲ್ಲಿ ತಮಿಳು ನಟ ಎಂಟಿಆರ್ ಅವರ ಹಳೆ ಸಿನಿಮಾವನ್ನು ಇದೇ ರೀತಿ ಎಚ್ ಡಿ ಮಾಡಿ ಹಾಕಿದರಂತೆ. ಎತ್ತರದ ಕಟೌಟ್ಗಳು ದೊಡ್ಡ ದೊಡ್ಡ ಹಾರಗಳು ಎಲ್ಲವನ್ನು ನೋಡಿ ಈ ಸಿನಿಮಾ ಇಷ್ಟು ಸದ್ದು ಮಾಡುತ್ತಿದ್ದೆ, ಕನ್ನಡ ಸಿನಿಮಾ ಯಾಕೆ ಈ ರೀತಿ ಆಗಬಾರದು ಎಂದು ನಿರ್ಧಾರ ಮಾಡಿ ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾ ಮತ್ತೆ ರಿಲೀಸ್ ಮಾಡಬೇಕು ಎಂದು ನಿರ್ಧರಿಸಿದರಂತೆ.

ತಕ್ಷಣವೇ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ಕೊಟ್ಟು ಆ ಸಿನಿಮಾದ ಯಾರ ಬಳಿ ಇದೆ ಮತ್ತು ಅದರ ಮೆಟೀರಿಯಲ್ಗಳು ಎಲ್ಲಿದೆ ಎನ್ನುವ ವಿಷಯವನ್ನೆಲ್ಲ ಕಲೆ ಹಾಕಿದರಂತೆ. ಕೊನೆಗೆ ಮೈಸೂರಿನ ಆನಂದ್ ಪಿಚ್ಚರ್ಸ್ ಅವರ ಬಳಿ ಮೆಟೀರಿಯಲ್ ಇದೆ ಎನ್ನುವುದನ್ನು ತಿಳಿದುಕೊಂಡ ಅವರು ಆನಂದ್ ಪಿಚ್ಚರ್ಸ್ ಅಲ್ಲಿ ಜಯರಾಮ್ ಎನ್ನುವವರನ್ನು ಭೇಟಿಯಾಗಿ ಕೇಳಿದಾಗ ಅವರು ಅದನ್ನೆಲ್ಲ ಕಸದ ರೀತಿ ಒಂದು ಗೋಡನ್ ಗೆ ಹಾಕಿಬಿಟ್ಟಿದ್ದಾರೆ ಅದು ಯೂಸ್ ಆಗಲ್ಲ ಅನಿಸುತ್ತದೆ ಬಿಟ್ಟು ಬಿಡಿ ಎಂದರಂತೆ.

ಆದರೂ ಕೂಡ ಇಲ್ಲ ಬೇಕೇ ಬೇಕು ಕೊಡಿ ಎಂದು ಕೇಳಿ ಎಂಟು ಕ್ಯಾನ್ ಮೆಟೀರಿಯರ್ ಇತ್ತಂತೆ ಅದನ್ನು ಚೆನ್ನೈ ಪ್ರಸಾದ್ ಲ್ಯಾಬ್ ಗೆ ಕಳುಹಿಸಿ ಪರೀಕ್ಷಿಸಿದಾಗ ತುಂಬಾ ಹಾಳಾಗಿದೆ ಬಹಳ ಕಷ್ಟ ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂದರಂತೆ. ಕೊನೆಗೆ ಅವರೆಲ್ಲರನ್ನು ಒಪ್ಪಿಸಿ ರೆಡಿ ಮಾಡಿಸುವಷ್ಟರಲ್ಲಿ ನಾಲ್ಕು ದಿನಗಳು ಕಳೆದವು ಎಂದು ಹೇಳಿಕೊಳ್ಳುತ್ತಾರೆ. ದನ್ನೆಲ್ಲ ತಂದು ಮಸ್ತಾನ್ ಅವರ ಕಡೆ ಕೊಟ್ಟು ಕೋಟ್ ಪೇಜ್ ಮಾಡಿಸಿ ಕೊನೆಗೆ ಸಿನಿಮಾ ಪೂರ್ತಿ ಗೊಳಿಸಿ ಅನೌನ್ಸ್ ಮಾಡಿದಾಗ ಬಹಳಷ್ಟು ಜನ ಫೋನ್ ಮಾಡಿ ನೆಗೆಟಿವ್ ಆಗಿ ಹೇಳಿದ್ದರಂತೆ.

ಅವರ ಆತ್ಮೀಯರಲ್ಲಿ ಒಬ್ಬರಾದ ಗೋಕುಲ್ ದಾಸ್ ಅವರು ಎಲ್ಲಾ ಹಣ ವ್ಯರ್ಥ ಮಾಡಿ ಸಾಲ ಹೊತ್ತುಕೊಂಡು ಗಾಂಧಿನಗರ ಬಿಟ್ಟು ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದರಂತೆ. ಆದರೆ ಮನಸಲ್ಲಿ ಇದ್ದ ಆಸೆಯನ್ನು ಇಷ್ಟು ಹಂತಕ್ಕೆ ತಂದು ಅರ್ಧಕ್ಕೆ ಬಿಡಲು ಒಪ್ಪದ ಇವರು ಏನಾಗುತ್ತದೆ ನೋಡೋಣ ಎಂದು ಧೈರ್ಯ ಮಾಡಿ ಥಿಯೇಟರ್ ಗೆ ತಂದರಂತೆ. ಅಂತಿಮವಾಗಿ ಸಿನಿಮಾ ಮತ್ತೆ ಎಲ್ಲಾ ಕಡೆ 100 ದಿನಗಳ ಪ್ರದರ್ಶನ ಆಗಿ 13 ಲಕ್ಷ ಬಜೆಟ್ಟಿಗೆ 77 ಲಕ್ಷ ಆದಾಯ ತಂದು ಕೊಡುವ ಮೂಲಕ ಮತ್ತೊಮ್ಮೆ ದಾಖಲೆಯನ್ನು ಸೃಷ್ಟಿಸಿತ್ತು ಎಂದು ಆ ಸಿನಿಮಾ ಬಗ್ಗೆ ಹೇಳಿಕೊಂಡಿದ್ದಾರೆ.

ಆಪ್ತರಕ್ಷಕ ಸಿನಿಮಾದಲ್ಲಿ ವಿಷ್ಣು ದಾದಾ ಧರಿಸಿದ್ದ ಆ ಕಾಸ್ಟ್ಯೂಮ್ ಬೆಲೆ ಎಷ್ಟು ಗೊತ್ತಾ.?

0

 

ಸಾಹಸಸಿಂಹ ವಿಷ್ಣುವರ್ಧನ್ ಅವರು ಅಭಿನವ ಸಂತ. ಆರಂಭದಲ್ಲಿ ರಾಮಾಚಾರಿ ಸಿನಿಮಾದಂತಹ ಚಿತ್ರಗಳಲ್ಲಿ ಚಿಗುರು ಮೀಸೆ ಬಿಸಿ ರಕ್ತದ ಯುವಕನಾಗಿ, ನಂತರ ಹೃದಯಗೀತೆ ಜಯಸಿಂಹ ಸಿನಿಮಾಗಳ ಕಾಲದಲ್ಲಿ ರೋಮ್ಯಾಂಟಿಕ್ ಹೀರೋ ಆಗಿ, ಯಜಮಾನ ಸೂರ್ಯವಂಶ ಸಿಂಹಾದ್ರಿಯ ಸಿಂಹ ಮುಂತಾದ ಕೌಟುಂಬಿಕ ಚಿತ್ರಗಳಲ್ಲಿ ಭಾವಜೀವಿ ಆಗಿ ಅಂತಿಮ ದಿನಗಳಲ್ಲಿ ಸಿರಿವಂತ ಸಾಹುಕಾರ ಸಿನಿಮಾದಂತಹ ಆಧ್ಯಾತ್ಮಿಕ ಪಾತ್ರಗಳಲ್ಲಿ ಕಾಣಿಸಿಕೊಂಡು ಕನ್ನಡಿಗರನ್ನು ಹಲವು ದಶಕಗಳವರೆಗೂ ರಂಜಿಸಿದ ಒಬ್ಬ ಮಹಾನ್ ಕಲಾವಿದ.

ಇಂತಹ ಮೇರು ನಟನ ಮುಖದಲ್ಲಿ ಅದೆಂತಹದೋ ರಾಜಕಳೆ ರಾರಾಜಿಸುತ್ತಿತ್ತು. ಹೆಸರೇ ವಿಷ್ಣುವರ್ಧನ ಎಂದು ಇದ್ದ ಅವರ ಮುಖದಲ್ಲೂ ಕೂಡ ಅಂತಹದ್ದೇ ತೇಜಸ್ಸು ಎದ್ದು ಕಾಣುತ್ತಿತ್ತು. ಇದಕ್ಕೆ ಅವರು ಆಪ್ತರಕ್ಷಕ ಸಿನಿಮಾದಲ್ಲಿ ಹಾಕಿದ ಆ ಪಾತ್ರವೇ ಸಾಕ್ಷಿ ಆಪ್ತರಕ್ಷಕ ಸಿನಿಮಾದ ವಿಜಯರಾಜೇಂದ್ರ ಬಹದ್ದೂರ್ ಪಾತ್ರ ವಿಷ್ಣುವರ್ಧನ್ ಅವರಿಗೆ ಹೇಳಿ ಮಾಡಿಸಿದ ರೀತಿ ಇತ್ತು.

ಇಂದಿಗೂ ಸಹ ವಿಷ್ಣುವರ್ಧನ್ ಹೆಸರು ಕೇಳಿದ ತಕ್ಷಣ ಅವರು ಇದುವರೆಗೆ ಮಾಡಿದ ಎಲ್ಲಾ ಪಾತ್ರಗಳ ಜೊತೆಯಲ್ಲಿ ಅಂತಿಮವಾಗಿ ಕಣ್ಣ ಮುಂದೆ ಉಳಿದುಕೊಳ್ಳುವ ಚಿತ್ರಪಟ ವಿಜಯ ರಾಜೇಂದ್ರ ಬಹುದ್ದೂರ್ ಅವರ ಅಪಾವತಾರ ಆಗಿದ್ದ ವಿಷ್ಣುವರ್ಧನ್ ಅವರು. ಜಮೀನ್ದಾರು, ಸಿಂಹಾದ್ರಿಯ ಸಿಂಹ, ರಾಜ ನರಸಿಂಹ ಮುಂತಾದ ಸಿನಿಮಾಗಳಲ್ಲಿ ಜಮೀನ್ದಾರನ ಪಾತ್ರ ನಿರ್ವಹಿಸಿದ್ದರೂ ಕೂಡ ಅದಕ್ಕಿಂತಲೂ ಒಂದು ಹೆಜ್ಜೆ ಮುಂದಾಗಿ ಈ ಮಹರಾಜನ ಪಾತ್ರ ಜನರ ಮನಸ್ಸನ್ನು ಗೆದ್ದಿತ್ತು.

ಆ ಪಾತ್ರಕ್ಕೆ ತಕ್ಕ ಹಾಗೆ ಮಾಡಿದ್ದ ಕಾಸ್ಯೂಮ್ ಅದಕ್ಕೆ ಪ್ಲಸ್ ಪಾಯಿಂಟ್ ಆಯ್ತು ಎಂದೇ ಹೇಳಬಹುದು. ಆದರೆ ಆ ಕಾಸ್ಚ್ಯೂನ ಬೆಲೆ ಎಷ್ಟಿತ್ತು ಎಂದು ಕೇಳಿದರೆ ಎಲ್ಲರೂ ಶಾಕ್ ಆಗಿ ಬಿಡಬಹುದು. ಇದನ್ನು ಕರ್ನಾಟಕದಲ್ಲಿ ಜೂನಿಯರ್ ವಿಷ್ಣುವರ್ಧನ್ ಎಂದೇ ಕರೆಸಿಕೊಂಡಿರುವ ಗಂಗಾಧರ್ ಅವರು ಕನ್ನಡ ಮಾಣಿಕ್ಯ ಎನ್ನುವ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡುವಾಗ ಹೇಳಿಕೊಂಡಿದ್ದಾರೆ.

ಆರಂಭದ ದಿನಗಳಲ್ಲಿ ನಾನು ವಿಷ್ಣುವರ್ಧನ್ ಅವರಂತೆ ಕಾಣಿಸಿಕೊಳ್ಳಬೇಕು ಎಂದು ಆಸೆ ಪಟ್ಟಾಗ ಅವರಂತೆ ಕಾಸ್ಟ್ಚೂಮ್ ಹೊಂದಿಸಿಕೊಳ್ಳುವುದು ನನ್ನ ಬಹುದೊಡ್ಡ ಚಾಲೆಂಜ್ ಆಗಿತ್ತು. ಯಾಕೆಂದರೆ ನಾನು ಆಗ ಇನ್ನು ಆರ್ಕೆಸ್ಟ್ರಾಗೆ ಬಂದಿರಲಿಲ್ಲ ರಂಗಭೂಮಿ ಕಲಾವಿದ ಆಗಿದ್ದೆ. ಕಡಿಮೆ ದುಡಿಮೆ, ಅದು ತಿಂಗಳು ಪೂರ್ತಿ ಕೆಲಸವೂ ಇರುತ್ತಿರಲಿಲ್ಲ ಹಾಗಾಗಿ ಫುಟ್ಪಾತ್ ಅಲ್ಲಿ ಸಿಗುವ ಹೆಚ್ಚು ಕಡಿಮೆ ಅವರ ಬಟ್ಟೆಗಳಂತೆ ಹೋಲುವ ಬಟ್ಟೆಗಳನ್ನು ತೆಗೆದುಕೊಂಡು ಟೈಲರ್ ಗಳಿಗೆ ರಿಕ್ವೆಸ್ಟ್ ಮಾಡಿಕೊಂಡು ಅವರಿಂದ ಅದನ್ನು ಆಲ್ಟ್ರೇಷನ್ ಮಾಡಿಸಿಕೊಳ್ಳುತ್ತಿದ್ದೆ.

ಈ ಎಲ್ಲಾ ಕೆಲಸಗಳಲ್ಲಿ ನನ್ನ ಪತ್ನಿ, ಜಯಶ್ರೀ ಅವರು ಬಹಳ ಸಪೋರ್ಟ್ ಮಾಡುತ್ತಿದ್ದರು. ಕೊನೆಗೆ ಆಪ್ತರಕ್ಷಕ ಚಿತ್ರದ ಕಾಸ್ಟಿಂಗ್ ಮಾತ್ರ ಬಹಳ ಚಾಲೆಂಜಿಂಗ್ ಆಗಿತ್ತು. ನಾವು ಅದನ್ನು ರೆಡಿ ಮಾಡಿಸಲು ಅದರ ಬೆಲೆ ಕೇಳಿದಾಗ ಒಂದೂವರೆ ಲಕ್ಷ ರೂಪಾಯಿ ಎಂದು ಹೇಳಿದ್ದರು ನಮ್ಮ ಕೈಲಿ ಅದು ಸಾಧ್ಯವಾಗದ್ದು ಆದರೆ ಬೇಕೇ ಬೇಕಿತ್ತು. ಆಗ ನನ್ನ ಪತ್ನಿ ಶಿವಾಜಿನಗರ ಮುಂತಾದ ಕಡೆಯಲ್ಲ ಓಡಾಡಿ ಅದಕ್ಕೆ ಬೇಕಾದ ಸಾಮಗ್ರಿಗಳನ್ನು ತೆಗೆದುಕೊಂಡು ಅವರ ಗೆಳತಿಯಾದ ಒಬ್ಬ ಟೈಲರ್ ಗೆ ಯಾವ ರೀತಿ ಬೇಕು ಎನ್ನುವುದನ್ನು ಎಲ್ಲ ವಿವರಿಸಿ.

ಮೇಲೆ ಹರಳುಗಳು ಮುತ್ತುಗಳನ್ನೆಲ್ಲ ಅವರೇ ಸೂಜಿ ದಾರ ತೆಗೆದುಕೊಂಡು ಪೋಣಿಸಿ ರೆಡಿ ಮಾಡಿ ಕೊಟ್ಟರು. ಮತ್ತು ಕಿರೀಟ ಪೂರ್ತಿ ಅವರೇ ಅವರ ಕೈಯಿಂದ ಮಾಡಿರುವುದು. ಹೇಗೋ ಕೊನೆಗೂ ಅದಕ್ಕೆ ಪೂರಕವಾದ ಕಾಸ್ಟ್ಯೂಮ್ ಬಂತು. ಇಂದಿಗೂ ಸಹಾ ಅದನ್ನು ಜೋಪಾನವಾಗಿ ಇಟ್ಟುಕೊಂಡಿದ್ದೇವೆ ಎಂದು ಅದರ ಬಗ್ಗೆ ಹೇಳಿಕೊಂಡಿದ್ದಾರೆ.

 

ನನ್ ಅತ್ರ ಸಿನಿಮಾ ಮಾಡಿಸ್ಕೊಂಡು ಎಷ್ಟು ಜನ ದುಡ್ಡು ಕೊಡ್ದೆ ನಾಮ ಹಾಕಿದ್ದಾರೆ ಗೊತ್ತ.? ಇಂಡಸ್ಟ್ರಿಯ ಬಂಡವಾಳ ಬಯಲು ಮಾಡಿದ ನಟ ಶ್ರೀನಗರ ಕಿಟ್ಟಿ.

 

ಶ್ರೀನಗರ ಕಿಟ್ಟಿ ಅವರು ಬಹಳ ಗ್ಯಾಪ್ ತೆಗೆದುಕೊಂಡು ಮತ್ತೊಮ್ಮೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಅವರ ಗೌಳಿ ಎನ್ನುವ ಚಿತ್ರ ರಿಲೀಸ್ ಗೆ ರೆಡಿ ಆಗಿದ್ದು ಇದು ಅವರ ಮತ್ತೊಂದು ಪ್ರಯೋಗಾತ್ಮಕ ಸಿನಿಮಾ ಆಗಿದೆ. ಶ್ರೀನಗರ ಕಿಟ್ಟಿ ಅವರು ಒಂದು ರೀತಿ ಆರಕ್ಕೇರದ ಮೂರಕ್ಕಿಳಿಯದ ನಟ ಎಂದೇ ಹೇಳಬಹುದು. ಯಾಕೆಂದರೆ ಇವರ ಒಂದು ಫಿಲಂ ಸೂಪರ್ ಹಿಟ್ ಆಗುತ್ತದೆ ನಂತರ ಬರುವ ನಾಲ್ಕೈದು ಸಿನಿಮಾಗಳು ಜನರಿಗೆ ಸೌಂಡ್ ಮಾಡುವುದೇ ಇಲ್ಲ.

ಆದರೂ ಕೂಡ ಇವರು ಇಂಡಸ್ಟ್ರಿಯಲ್ಲಿ ಬಹಳ ಬಿಝಿ ಇರುತ್ತಾರೆ. ಇಷ್ಟೆಲ್ಲ ಅವಕಾಶಗಳು ಇದ್ದಮೇಲೆ ಅವರು ಬಹಳ ದೊಡ್ಡ ಮಾಡಿರುತ್ತಾರೆ ಎನ್ನುವುದೇ ಇಲ್ಲರ ಅಭಿಪ್ರಾಯ ಆದರೆ ಅವನು ದುಡ್ಡು ಮಾಡುವುದಕ್ಕಿಂತ ಒಳ್ಳೊಳ್ಳೆ ಸಿನಿಮಾ ಕೊಟ್ಟಿದ್ದಾರೆ ಎಂದು ಹೇಳಬಹುದು. ಅವರ ಹಿಟ್ ಸಿನಿಮಾಗಳಾದ ಗಿರಿ, ಇಂತಿ ನಿನ್ನ ಪ್ರೀತಿಯ, ಸವಾರಿ, ಸಂಜು ಮತ್ತು ಗೀತಾ, ಬಹುಪರಾಕ್ ಹುಡುಗರು ಇದೆಲ್ಲಾ ಒಂದು ತೂಕ.

ಆದರೆ ಥಿಯೇಟರ್ ಅಲ್ಲಿ ಸದ್ದು ಮಾಡದೆ ಫ್ಲಾಫ್ ಎನಿಸಿಕೊಂಡ ಒಲವೇ ಜೀವನ ಲೆಕ್ಕಾಚಾರ, ಮತ್ತೆ ಮುಂಗಾರು, ಟೋನಿ, ಕಿಲಾಡಿ ಕಿಟ್ಟಿ ಈ ಸಿನಿಮಾಗಳ ತೂಕವೇ ಬೇರೆ. ಪ್ರಚಾರವಿಲ್ಲದೆಯೋ ಅಥವಾ ಮತ್ತಿತರ ಕಾರಣಗಳಿಂದ ಈ ಸಿನಿಮಾಗಳು ಅಂದುಕೊಂಡಷ್ಟು ಗಳಿಕೆ ಮಾಡದೇ ಸೋತಿರಬಹುದು. ಆದರೆ ಈ ಚಿತ್ರಗಳ ಕಥೆಗಳು ಕೂಡ ಅತ್ಯದ್ಭುತವಾಗಿವೆ ಸದಾ ಸಿನಿಮಾಗಳಲ್ಲಿ ಪ್ರಯೋಗಾತ್ಮಕವಾಗಿಯೇ ತಮ್ಮನ್ನು ಇವರ ತೊಡಗಿಸಿಕೊಂಡಿದ್ದಾರೆ ಎಂದರೇ ತಪ್ಪಲ್ಲ.

ಪ್ರತಿ ಬಾರಿ ಕೂಡ ಒಂದೇ ರೀತಿ ಪಾತ್ರ ಅಥವಾ ಒಂದೇ ರೀತಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಎಲ್ಲ ಶೇಡಲ್ಲಿಯೂ ಕಾಣಿಸಿಕೊಂಡಿದ್ದಾರೆ. ಧೋನಿ ಮತ್ತು ಬಾಲ್ ಪೆನ್ ಸಿನಿಮಾಗಳನ್ನು ಅನುಭವ ಇಲ್ಲದೆ ನಿರ್ಮಾಣ ಮಾಡಿ ಕೈ ಸಹ ಸುಟ್ಟುಕೊಂಡಿದ್ದಾರೆ. ಇಷ್ಟೆಲ್ಲ ಆಗಿದ್ದರೂ ಸಹ ಅವರ ಈ ಎರಡು ದಶಕದ ಸಿನಿ ಜರ್ನಿ ಬಗ್ಗೆ ಕೇಳಿದರೆ ನನಗೆ ತೃಪ್ತಿ ಇದೆ ಎನ್ನುತ್ತಾರೆ.

ಸಾಕಷ್ಟು ಅನುಭವಗಳನ್ನು ಪಡೆದಿದ್ದೇನೆ ಸಾಕಷ್ಟು ಕಲಿತಿದ್ದೇನೆ ಇನ್ನು ಕಲಿಯಬೇಕಾದದ್ದು ಬಹಳಷ್ಟು ಇದೆ ಎಂದು ಹೇಳುವ ಇವರು ಇಷ್ಟು ವರ್ಷದಲ್ಲಿ ಗಳಿಸಿದೆ ಹಣದ ಲೆಕ್ಕ ಕೇಳಿದರೆ ಇನ್ನು ಎಷ್ಟೋ ಸಿನಿಮಾಗಳಿಂದ ಹಣವೇ ಬಂದಿಲ್ಲ, ಯಾಕೆಂದರೆ ಅವರು ಸಹ ನಾನು ರೀತಿ ಸಂಕಷ್ಟಗಳ ಸಿಲುಕಿ ಹಾಕಿಕೊಂಡಿದ್ದಾರೆ. ಅವರು ನಿಷ್ಠೆಯಿಂದ ತಂದು ಕೊಟ್ಟರೆ ಖುಷಿಯಾಗಿ ತೆಗೆದುಕೊಳ್ಳುತ್ತೇನೆ, ಇಲ್ಲದಿದ್ದರೆ ಅವರ ಕಾಲರ್ ಹಿಡಿದು ವಸೂಲಿ ಮಾಡುವ ತನ ನನ್ನದಲ್ಲ ಎಂದು ಹೇಳುತ್ತಾರೆ.

ಮತ್ತು ಮುಂದಿನ ಸಿನಿಮಾಗಳ ಬಗ್ಗೆ ಕೇಳಿದರೆ ಈ ಕಾಲದಲ್ಲಿ ಏನು ಟ್ರೆಂಡ್ ಇದೆ ಆ ರೀತಿ ಸಿನಿಮಾ ಮಾಡಿದರೆ ಮಾತ್ರ ಅದು ವರ್ಕ್ ಆಗುತ್ತದೆ. ಗಳಿಕೆ ವಿಚಾರದಿಂದ ಹಿಡಿದು ಪ್ರದರ್ಶನ ಜನರ ಇಂಟರೆಸ್ಟ್ ಎಲ್ಲ ವಿಷಯಗಳಲ್ಲೂ ಸಹ ಇಂಡಸ್ಟ್ರಿಯಲ್ಲಿ ಸಾಕಷ್ಟು ಬದಲಾಗಿದೆ. ಈಗ ಒಂದು ಹಿಟ್ ಸಿನಿಮಾ ಕೊಡಬೇಕು ಎಂದರೆ ನಿರ್ಮಾಪಕರು ನಿರ್ದೇಶಕರು ಕಥೆ ಇಂಪ್ಯಾಕ್ಟ್ ಮತ್ತು ಹೀರೋ ಎಲ್ಲರೂ ಸಹ ಮುಖ್ಯ ಆಗುತ್ತಾರೆ. ಹೀಗೆ ಜನ ಏನು ಕೇಳುತ್ತಾರೋ ಅದನ್ನು ಕೊಟ್ಟಾಗ ಮಾತ್ರ ಅದು ವರ್ಕೌಟ್ ಆಗುತ್ತದೆ. ಅದನ್ನು ಬಿಟ್ಟು ನಾವಿನ್ನು ಅದೇ ಹಳೇ ಕಾಲದ ರೀತಿ ಇದ್ದರೆ ಅದು ರೀಚ್ ಆಗುವುದೇ ಇಲ್ಲ. ಔಟ್ ಆಫ್ ದ ಬಾಕ್ಸ್ ಎಂದಿಗೂ ಔಟ್ ಆಫ್ ದ ಬಾಕ್ಸ್ ಆಗಿಯೇ ಉಳಿದುಕೊಳ್ಳುತ್ತದೆ ಎನ್ನುತ್ತಾರೆ.

ಕೋಟಿ ಕೋಟಿ ಬೆಲೆ ಬಾಳುವ 175 ಎಕರೆ ಜಮೀನನ್ನು ದಾನ ಮಾಡಿದ್ಯಾಕೆ ಕನ್ನಡದ ನಟ ಸುಮನ್, ಇಂತಹ ನಟನನ್ನು ಜೈಲಿಗಟ್ಟುವ ಸಂಚು ಮಾಡಿದ್ರಾ ರಜನಿಕಾಂತ್ ಮತ್ತು ಚಿರಂಜೀವಿ.?

0

 

ಇಂಗ್ಲೀಷಿನಲ್ಲಿ ಪ್ರಸಿದ್ಧವಾದ ಒಂದು ಮಾತಿದೆ ಅದೇನೆಂದರೆ, ಇಫ್ ಯು ಕ್ಯಾರಿ ಯುವರ್ ಓವ್ನ್ ವಾಟರ್, ಯು ನೋ ದ ವ್ಯಾಲ್ಯೂ ಆಫ್ ಎವ್ರಿ ಡ್ರಾಪ್ಸ್ ಎಂದು ಕನ್ನಡದಲ್ಲಿ ಇದರ ಅರ್ಥವನ್ನು ಬೇರೆಯವರ ದುಡ್ಡಿನಲ್ಲಿ ಮಜಾ ಮಾಡುವುದು, ಅದನ್ನು ಸುಲಭವಾಗಿ ಬಿಟ್ಟುಕೊಡುವುದು ಬಹಳ ಈಝಿ ಆದರೆ ನಾವು ಕಷ್ಟಪಟ್ಟು ಸಂಪಾದನೆ ಮಾಡಿದ ಪ್ರತಿಯೊಂದು ವಸ್ತುವಿನ ಬೆಲೆ ನಮಗೆ ಚೆನ್ನಾಗಿ ಗೊತ್ತಿರುತ್ತದೆ, ಪರಿಶ್ರಮ ಹಾಕಿ ಪಡೆದ ವಸ್ತುವನ್ನು ಸಾಮಾನ್ಯವಾಗಿ ಯಾರು ಬಿಟ್ಟು ಕೊಡುವುದಿಲ್ಲ ಎಂದು.

ಇಂತಹ ಮನಸ್ಥಿತಿಯಿಂದ ಹೊರಬಂದು ತಾವು ಗಳಿಸಿದ್ದನ್ನು ತಮ್ಮ ಕೈಯಾರೆ ಸ್ವಚ್ಛ ಮನಸ್ಸಿಂದ ಮತ್ತೊಬ್ಬರಿಗೆ ಕೊಡುತ್ತಾರೆ ಎಂದರೆ ಅವರನ್ನು ಮಾನವ ಶ್ರೇಷ್ಠರು ಎನ್ನಬಹುದು. ಆ ಸಾಲಿಗೆ ತಮ್ಮ 175 ಎಕರೆ ಜಮೀನು ದಾನ ಮಾಡಿ ಕನ್ನಡದ ನಟ ಸುಮನ್ ಸೇರಿದ್ದಾರೆ. ಮಂಗಳೂರು ಮೂಲದವರಾದ ಸುಮನ್ ಅವರು ತಂದೆ ತಾಯಿ ಚೆನ್ನೈ ಅಲ್ಲಿದ್ದ ಕಾರಣ ಅವರು ಅಲ್ಲೇ ಬೆಳೆಯಬೇಕಾಗುತ್ತದೆ. ಆದರೆ ಆಗಾಗ ಮಂಗಳೂರಿನ ಅಜ್ಜಿ ಮನೆಗೆ ಬರುತ್ತಿದ್ದರಿಂದ ತುಂಬಾ ಸ್ಪಷ್ಟವಾಗಿ ತುಳು ಹಾಗೂ ಕನ್ನಡವನ್ನು ಮಾತನಾಡುತ್ತಾರೆ.

ಈಗ ಕನ್ನಡ,ತೆಲುಗು, ತಮಿಳು ಸಿನಿಮಾಗಳಲ್ಲಿ ಖಳನಾಯಕನಾಗಿ ಮಿಂಚುತ್ತಿರುವ ಇವರು 90ನೇ ದಶಕದಲ್ಲಿ ಹೆಸರಾಂತ ನಾಯಕನಟ ಆಗಿದ್ದರು. ಅವರ ಯಶಸ್ಸು ಯಾವ ಮಟ್ಟಕ್ಕೆ ಇತ್ತು ಎಂದರೆ ನಿರ್ಮಾಪಕರು, ನಿರ್ದೇಶಕರು ಅವರ ಮನೆ ಮುಂದೆ ಸಾಲು ನೀಡುತ್ತಿದ್ದರು. ಸಂಭಾವನೆ ಹಾಗೂ ಅವಕಾಶಗಳ ವಿಷಯದಲ್ಲೂ ರಜನಿಕಾಂತ್ ಮತ್ತು ಚಿರಂಜೀವಿ ಅವರನ್ನು ಮೀರಿಸುವಷ್ಟು ಎತ್ತರಕ್ಕೆ ಬೆಳೆದಿದ್ದರು. ಚಿರಂಜೀವಿ ಅವರಿಗೆ ಒಂದು ಲಕ್ಷ ಸಂಭವನೆ ಇದ್ದರೆ ಸುಮನ್ ಅವರಿಗೆ ಐದು ಲಕ್ಷ ಸಂಭಾವನೆ ಕೊಟ್ಟು ತಮ್ಮ ಸಿನಿಮಾಗಳಿಗೆ ಹಾಕಿಕೊಳ್ಳುತ್ತಿದ್ದರು.

ಹೀಗೆ ಹಲವು ವರ್ಷಗಳವರೆಗೆ ಹೀರೋ ಆಗಿ ರಾರಾಜಿಸಿದ ಇವರ ಬದುಕಿನಲ್ಲಿ ಇದ್ದಕ್ಕಿದ್ದಂತೆ ದುರ್ಘಟನೆ ಒಂದು ನಡೆದು ಹೋಗುತ್ತದೆ. ಆ ಘಟನೆಯಿಂದ ಅವರು ಜೈಲುವಾಸವನ್ನು ಕೂಡ ಅನುಭವಿಸಬೇಕಾಗುತ್ತದೆ. ಸುಮನ್ ಅವರ ಮೇಲೆ ಅವರ ಯಶಸ್ಸನ್ನು ಸಹಿಸದ ಕೆಲವರು ನೀ.ಲಿ ಚಿತ್ರ ತಯಾರಿಕೆ ಮಾಡುತ್ತಿದ್ದಾರೆ ಎನ್ನುವ ರೀತಿ ಕು.ತಂ.ತ್ರ ಮಾಡಿ ಜೈ.ಲಿ ಅಟ್ಟಿರುತ್ತಾರೆ. ನೀ.ಲಿ ಚಿತ್ರ ತಯಾರಿಕೆ ಅಡ್ಡದ ಮೇಲೆ ದಾಳಿ ಆದಾಗ ಸುಮನ್ ಅವರ ಕಾರು ಅಲ್ಲಿರುತ್ತದೆ. ಆದರೆ ಅಂದು ಅವರ ಸ್ನೇಹಿತ ಆ ಕಾರನ್ನು ತೆಗೆದುಕೊಂಡು ಹೋಗಿರುತ್ತಾರೆ.

ಬೇಕೆಂದಲೇ ತಮಿಳು ಮತ್ತು ತೆಲುಗು ಚಿತ್ರರಂಗದ ಖ್ಯಾತ ಹೀರೋಗಳು ಈ ರೀತಿ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು, ಅದರಲ್ಲಿ ರಜನಿಕಾಂತ್ ಮತ್ತು ಚಿರಂಜೀವಿ ಹೆಸರು ಕೇಳಿ ಬಂದಿತ್ತು. ಇದರಿಂದ ಡಾರ್ಕ್ ಸೆಲ್ ಶಿ.ಕ್ಷೆಯನ್ನು ಕೂಡ ಅನುಭವಿಸಿದವರು ಸುಮನ್. ನಂತರ ಒಂದೊಳ್ಳೆ ಲಾಯರ್ ಇಂದ ಆಚೆ ಬರುತ್ತಾರೆ. ಆದರೆ ಆಚೆ ಬಂದ ಇವರಿಗೆ ಮೊದಲ ರೀತಿ ಯಾವುದು ಇರುವುದಿಲ್ಲ. ಸಿನಿಮಾಗಳಲ್ಲಿ ನಾಯಕ ನಟ ಅಲ್ಲ ಸಹ ಪಾತ್ರಗಳಿಗೂ ಕೂಡ ಅವಕಾಶ ಸಿಗೋದಿಲ್ಲ. ಇನ್ನೊಂದೆಡೆ ಜನರು ಇವರನ್ನು ಅನುಮಾನದಿಂದ ನೋಡಲು ಶುರು ಮಾಡುತ್ತಾರೆ.

ಮಾಡದ ತಪ್ಪಿಗೆ ಈ ಎಲ್ಲಾ ಅವಮಾನಗಳಿಂದ ಸುಧಾರಿಸಿಕೊಳ್ಳಲು ಬಹಳ ವರ್ಷ ಬೇಕಾಗುತ್ತದೆ. ಇದೆಲ್ಲಕ್ಕಿಂತ ಸುಮನ್ ಅವರ ಬಗ್ಗೆ ಹೇಳಲೇಬೇಕಾದ ಒಂದು ವಿಷಯ ಏನೆಂದರೆ, ಅವರು ಚೆನ್ನಾಗಿದ್ದ ಸಮಯದಲ್ಲಿ ಹೈದರಾಬಾದ್ ಹೊರ ವಲಯದಲ್ಲಿ 175 ಎಕರೆ ಜಮೀನು ಖರೀದಿಸಿರುತ್ತಾರೆ. ಅಲ್ಲಿ ದೊಡ್ಡ ಸ್ಟುಡಿಯೋ ಕಟ್ಟಿ ಸಿನಿಮಾ ತಯಾರಿಕೆ ಮಾಡಬೇಕು ಎಂಬುದು ಅವರ ಕನಸಾಗಿರುತ್ತದೆ. ಆದರೆ ಯಾವಾಗ ಜೈಲಿಗೆ ಹೋಗಿ ಬರುವ ಪರಿಸ್ಥಿತಿ ಆಯ್ತು ಆಗ ಸಂಪೂರ್ಣವಾಗಿ ಎಲ್ಲದರ ಮೇಲೆ ಆಸಕ್ತಿಯನ್ನು ಅವರು ಕಳೆದುಕೊಳ್ಳುತ್ತಾರೆ.

ಕಾರ್ಗಿಲ್ ಯುದ್ಧದಿಂದ ಪ್ರಾ.ಣ ಕಳೆದುಕೊಂಡ ಸೈನಿಕರ ಕುಟುಂಬಗಳಿಗೆ ಸಂಪೂರ್ಣವಾಗಿ 175 ಎಕರೆ ಜಮೀನನ್ನು ಕೂಡ ಸೈಟುಗಳನ್ನು ಮಾಡಿ ದಾನ ಮಾಡಿಬಿಡುತ್ತಾರೆ. ಸರಕಾರ ಕೂಡ ಮಾಡದ ಸಹಾಯವನ್ನು ಸುಮನ್ ಅವರು ಸೈನಿಕರ ಕುಟುಂಬಕ್ಕೆ ಮಾಡಿದ್ದಾರೆ. ಇವರು ಕನ್ನಡದ ಮೂಲದವರು ಎಂದು ಹೇಳಿಕೊಳ್ಳುವುದೇ ಹೆಮ್ಮೆ.

ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಇಬ್ಬರು ಇದ್ದ ವೇದಿಕೆಗೆ ಚಪ್ಪಲಿ ಎಸೆದಿದ್ದ ಕೆಡಿಗೇಡಿಗಳು. ಬೇಸರದಿಂದ ಹೊರ ನಡೆದ ವಿಷ್ಣು ಆಗ ಅಣ್ಣಾವ್ರ ಹೇಳಿದ್ದೇನು ಗೊತ್ತ.?

0

 

ಕನ್ನಡದ ಹಳೆಯ ಚಲನಚಿತ್ರಗಳಿಗೆ ಹೊಸ ರೂಪ ಕೊಟ್ಟು ಹಳೆಯದಕ್ಕಿಂತಲೂ ತುಂಬಾ ಅದ್ಭುತವಾಗಿ ತೆರೆ ಮೇಲೆ ಬರುವಂತೆ ಮಾಡುತ್ತಿರುವ ಆರ್.ಪಿ ಮುನಿರಾಜು ಅವರು ಕನ್ನಡ ಸಿನಿಮಾಗಳ ವಿತರಕರಾಗಿ ಹೆಸರುವಾಸಿಯಾಗಿದ್ದಾರೆ. ಅಣ್ಣಾವ್ರ ದಿನದಿಂದಲೂ ಕೂಡ ಸಿನಿಮಾ ರಂಗದ ಜೊತೆ ಬಹಳ ನಂಟು ಹೊಂದಿರುವ ಇವರು ಹಲವು ಹೀರೋಗಳಿಗೆ ಆತ್ಮೀಯರು.

ಅದರಲ್ಲೂ ರಾಜಕುಮಾರ್ ವಿಷ್ಣುವರ್ಧನ್ ಇಂತಹ ಮೇರು ನಟರುಗಳನ್ನು ಹತ್ತಿರದಿಂದ ಕಂಡಿರುವ ಇವರು ಈಗ ರಾಜ್ ಕುಮಾರ್ ಹಾಗೂ ವಿಷ್ಣುವರ್ಧನ್ ಅವರ ಹಳೆಯ ಸಿನಿಮಾಗಳಿಗೆ ಎಚ್ ಡಿ ಕಲರ್ ರೂಪ ಕೊಟ್ಟು ಮತ್ತೊಮ್ಮೆ ರಿಲೀಸ್ ಮಾಡಿ ಹೊಸ ದಾಖಲೆ ಸೃಷ್ಟಿಸುತ್ತಿದ್ದಾರೆ. ಕನ್ನಡ ಮಾಣಿಕ್ಯ ಎನ್ನುವ ಯೂಟ್ಯೂಬ್ ಚಾನೆಲ್ ಗೆ ಸಂದರ್ಶನ ಕೊಟ್ಟಿರುವ ಇವರು ರಾಜಕುಮಾರ್ ಮತ್ತು ವಿಷ್ಣುವರ್ಧನ್ ಅವರ ನಂಟಿನ ಕುರಿತು ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಈ ಮಾತುಗಳ ನಡುವೆ ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಅವರು ಸೇರದೆ ಇರುವ ರೀತಿ ತಡೆಯುತ್ತಿದ್ದ ಆ ದುಷ್ಟ ಶಕ್ತಿಗಳ ಬಗ್ಗೆ ಕೂಡ ಮಾತನಾಡಿದ್ದಾರೆ. ಡಾಕ್ಟರ್ ರಾಜಕುಮಾರ್ ಹಾಗು ವಿಷ್ಣುವರ್ಧನ್ ಅವರ ನಡುವೆ ತುಂಬಾ ಒಳ್ಳೆ ಅನುಬಂಧ ಇತ್ತು, ವಿಷ್ಣುವರ್ಧನ್ ಅವರನ್ನು ರಾಜಕುಮಾರ್ ಅವರು ಸ್ವಂತ ತಮ್ಮನಂತೆ ಪ್ರೀತಿಸಿ ಮುದ್ದಾಡುತ್ತಿದ್ದರು ಆದರೆ ಗಂಧದಗುಡಿ ಸಿನಿಮಾದಿಂದ ಅವರಿಬ್ಬರ ನಡುವೆ ಕಂದಕ ಏರ್ಪಟ್ಟಿತ್ತು.

ಆದರೆ ಅದಾದ ಬಳಿಕವೂ ಕೂಡ ಇಬ್ಬರು ಅದನ್ನು ಮನಸ್ಸಲ್ಲಿ ಇಟ್ಟುಕೊಳ್ಳದೆ ಒಟ್ಟೊಟ್ಟಿಗೆ ಸೇರುತ್ತಿದ್ದರು. ಅದನ್ನು ಸಹಿಸದ ಕೆಲವರು ಇಬ್ಬರು ಸೇರುವಲ್ಲಿ ತೊಂದರೆ ಕೊಟ್ಟು ಇಬ್ಬರು ಸೇರಿದಂತೆ ಮಾಡಿ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಹಾಳು ಮಾಡುವ ಹುನ್ನಾರದಲ್ಲಿ ಇದ್ದರು. ಅಂತಹ ಕಿಡಿಗೇಡಿಗಳಿಂದ ಅನೇಕ ಬಾರಿ ವೇದಿಕೆಗಳಲ್ಲಿ ವಿಷ್ಣುವರ್ಧನ್ ಅವರಿಗೆ ಅವಮಾನ ಆಗಿದೆ ಎಂದು ಹಳೆಯ ಘಟನೆ ಯನ್ನು ನೆನೆದು ಹೇಳಿಕೊಂಡಿದ್ದಾರೆ.

ಒಮ್ಮೆ ಮಾಗಡಿ ರೋಡ್ ನ ರೈಲ್ವೆ ಕ್ವಾಟ್ರಸ್ ಹಿಂದೆ ಮೈದಾನದಲ್ಲಿ ಚಿತ್ರರಂಗದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಇಬ್ಬರು ಮೇರು ನಟರನ್ನು ಸಹ ವೇದಿಕೆಗೆ ಅತಿಥಿಗಳಾಗಿ ಕರೆಸಿದ್ದರು. ಇಬ್ಬರನ್ನು ನೋಡಲು ಇಬ್ಬರ ಲಕ್ಷಾಂತರ ಅಭಿಮಾನಿಗಳು ಸೇರಿ ದೊಡ್ಡ ಜನಸಂದಣಿಯೇ ಏರ್ಪಟ್ಟಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಎಲ್ಲಿಂದಲೋ ಒಂದು ಚಪ್ಪಲಿ ಬಂದು ವೇದಿಕೆ ಮೇಲೆ ಬಿತ್ತು. ಅದು ವಿಷ್ಣುವರ್ಧನ್ ಅವರಿಗೆ ತಾಗಲಿಲ್ಲ ಬದಲಾಗಿ ಅಣ್ಣಾವರನ್ನೇ ಮುಟ್ಟಿತ್ತು ಅದನ್ನು ಕಂಡು ಅಣ್ಣಾವ್ರು ತಕ್ಷಣವೇ ಎದ್ದು ಕೈ ಮುಗಿದು ಬಿಟ್ಟರು.

ನಾವೆಲ್ಲಾ ಕಲಾವಿದರು ನಾವೆಲ್ಲ ಒಂದೇ ದಯಮಾಡಿ ಎಲ್ಲಾ ಸುಮ್ಮನಿರಬೇಕು ಎಂದು ಕೇಳಿಕೊಂಡರು. ಆದರೆ ವಿಷ್ಣುವರ್ಧನ್ ಅವರಿಗೆ ಆ ಘಟನೆ ಯಿಂದ ಬಹಳ ಬೇಸರ ಆಯ್ತು ಅವರೇ ನೊಂದುಕೊಂಡು ತಕ್ಷಣವೇ ನಾನು ಇರುವುದಿಲ್ಲ ಹೋಗುತ್ತೇನೆ ಎಂದು ಹೊರಟು ಬಿಟ್ಟರು. ಅದಾದ ಮೇಲೆ ಅನೇಕ ವೇದಿಕೆಗಳಲ್ಲಿ ಅಣ್ಣಾವ್ರು ಹಾಗೂ ವಿಷ್ಣುವರ್ಧನ್ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಪದೇ ಪದೇ ಕಿಡಿಗೇಡಿಗಳು ಮಾಡುತ್ತಿದ್ದ ಈ ದು.ಷ್ಕ.ತ್ಯ.ದಿಂದ ಬಹಳ ಬೇಜಾರಾಗಿ ವಿಷ್ಣುವರ್ಧನ್ ಅವರು ಚೆನ್ನೈ ಹೊರಟು ಹೋದರು.

ವಿಷ್ಣುವರ್ಧನ್ ಅವರ ಜೊತೆ ದ್ವಾರಕೀಶ್ ಮತ್ತಿತರರು ಕನ್ನಡ ಸಿನಿಮಾ ಇಂಡಸ್ಟ್ರಿಯೇ ಬೇಡ ಎಂದು ಬೇಸರವಾಗಿ ಹೊರಟು ಹೋಗಿದ್ದರು. ಆಗ ಸ್ವತಃ ವಿಷ್ಣುವರ್ಧನ್ ಅವರನ್ನು ಅಣ್ಣಾವ್ರೇ ಸಮಾಧಾನಿಸಿ, ಸಂಭಾಳಿಸಿ ಮತ್ತೆ ಕನ್ನಡ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುವಂತೆ ಮಾಡಿದರು. ಇದನ್ನೆಲ್ಲಾ ನಾವು ಹತ್ತಿರದಿಂದ ಕಂಡಿದ್ದೇವೆ ಎಂದು ಆರ್.ಪಿ ಮುನಿರಾಜು ಅವರು ಹೇಳಿದ್ದಾರೆ.

ನಮ್ಮಪ್ಪನ ಹೆಸರನ್ನ ನಾನು ಹಾಳು ಮಾಡ್ಬಿಟ್ಟೆ ಅಂತ ಮಾಧ್ಯಮದ ಮುಂದೆ ಹೇಳಿಕೊಂಡ ನಟ ವಿನೋದ್ ಪ್ರಭಾಕರ್. ಕಾರಣವೇನು ಗೊತ್ತ.?

 

ಕನ್ನಡ ಚಲನಚಿತ್ರ ರಂಗದಲ್ಲಿ ಪ್ರಭಾಕರ್ ಅವರು ಟೈಗರ್ ಎಂದೇ ಹೆಸರುವಾಸಿ ಆಗಿದ್ದವರು, ಅವರ ಮಾತನಾಡುವ ಶೈಲಿ, ಬೇಸ್ ವಾಯ್ಸ್, ಅವರ ವ್ಯಕ್ತಿತ್ವ ಅವರ ಅಗ್ರೆಸಿವ್ ಲುಕ್ ಇದೆಲ್ಲವೂ ಆ ಹೆಸರಿಗೆ ತಕ್ಕಂತೆ ಇತ್ತು. ಅವರ ಅಚ್ಚಿನಂತೆ ಇರುವ ಅವರ ಮಗ ವಿನೋದ್ ಪ್ರಭಾಕರ್ ಕೂಡ ಇಂಡಸ್ಟ್ರಿಯಲ್ಲಿ ಮರಿ ಟೈಗರ್ ಎಂದು ಕರೆಸಿಕೊಳ್ಳುತ್ತಿದ್ದಾರೆ. ಕನ್ನಡದ ಹಲವಾರು ಸಿನಿಮಾಗಳಲ್ಲಿ ಮತ್ತು ಮಲ್ಟಿ ಸ್ಟಾರ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ವಿನೋದ್ ಪ್ರಭಾಕರ್ ಅವರು ಈಗ ನಿರ್ಮಾಪಕರಾಗಿ ಬಡ್ತಿ ಹೊಂದಿದ್ದಾರೆ.

ತಮ್ಮದೇ ಅಭಿನಯದ ಲಂಕಾಸುರ ಎನ್ನುವ ಸಿನಿಮಾ ನಿರ್ಮಾಣ ಮಾಡುವ ಮೂಲಕ ಮತ್ತೊಮ್ಮೆ ಇಂಡಸ್ಟ್ರಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸಿನಿಮಾದ ಕುರಿತು ಕನ್ನಡ ಸುದ್ದಿ ಮಾಧ್ಯಮದ ಸಂದರ್ಶನದೊಂದರಲ್ಲಿ ಪಾಲ್ಗೊಂಡ ಇವರು ತಂದೆ ಹೆಸರು ಹಾಳು ಮಾಡಿದ್ದಾಗಿ ಬೇಸರದಿಂದ ಹೇಳಿಕೊಂಡಿದ್ದಾರೆ.

ನಾನು ಮೂರು ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದೆ, ಇಂಡಸ್ಟ್ರಿಯ ಎಲ್ಲಾ ನಾಯಕನಟರಿಗೂ ಹೋಗಿ ಅವರು ಬೇಡ ಎಂದು ರಿಜೆಕ್ಟ್ ಮಾಡಿದ ಸಿನಿಮಾ ನನ್ನನ್ನು ಹುಡುಕಿಕೊಂಡು ಬರುತ್ತಿತ್ತು. ಆ ವಿಷಯ ನನಗೂ ಗೊತ್ತಿತ್ತು ಆದರೂ ನಾನು ಅದನ್ನು ಒಪ್ಪಿಕೊಳ್ಳುತ್ತಿದ್ದೆ. ಅದು ನನ್ನ ಜೀವನ ನಿರ್ವಹಣೆಗಾಗಿ ಮಾಡಲೇ ಬೇಕಿತ್ತು. ಯಾಕೆಂದರೆ ಎಷ್ಟೋ ಬಾರಿ ಆ ರೀತಿ ಮಾಡಿದ ಸಿನಿಮಾಗಳಿಂದ ನಾನು ನನ್ನ ತಾಯಿಗೆ ಮೆಡಿಸಿನ್ ಕೊಡಿಸಲು ಸಾಧ್ಯ ಆಗಿದ್ದು.

ನನ್ನ ತಂದೆ ನನಗಾಗಿ ಸ್ವಲ್ಪ ಆಸ್ತಿ ಮಾಡಿಟ್ಟಿದ್ದಾರೆ, ಮನೆ ಕೊಟ್ಟಿದ್ದಾರೆ ಅದನ್ನು ಮಾರಿ ನಾನು ಮೆರೆದಾಡುವುದು ದೊಡ್ಡದಲ್ಲ, ನನಗೆ ಅದು ಬೇಕಾಗಿರಲಿಲ್ಲ. ನಾನು ದುಡಿದು ಬದುಕಬೇಕು ಎನ್ನುವ ಆದರ್ಶ ಇಟ್ಟುಕೊಂಡಿದ್ದೆ ಕೆಲವೊಮ್ಮೆ ಇಂಡಸ್ಟ್ರಿಯಲ್ಲಿ ಇದ್ದೇನೆ ಇನ್ನು ಇಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎನಿಸಿಕೊಳ್ಳುವ ಉದ್ದೇಶಕ್ಕಾಗಿ ಸಿನಿಮಾ ಒಪ್ಪಿಕೊಂಡಿದ್ದು ಇದೆ.

ಕೆಲವೊಮ್ಮೆ ಕುಳಿತು ಯೋಚನೆ ಮಾಡುವಾಗ ನನಗೆ ನನ್ನ ತಂದೆ ಹೆಸರನ್ನು ಹಾಳು ಮಾಡಿಬಿಟ್ಟೆನಾ ಎನ್ನುವ ಪಶ್ಚಾತ್ತಾಪವೂ ಇದೆ. ಯಾಕೆಂದರೆ ನನ್ನ ತಂದೆ ಯಾವ ರೀತಿ ಅಬ್ಬರಿಸಿದವರು ಹೇಗೆ ತೆರೆ ಮೇಲೆ ಮೆರೆದವರು ಎಂದು ಎಲ್ಲರಿಗೂ ಗೊತ್ತು. ಅವರ ಮಗನಾಗಿ ನಾನು ಅಂತಿಂಥ ಪಾತ್ರ ಮಾಡುತ್ತಿದ್ದೇನೆ, ಯಾವ ಸಿನಿಮಾ ಸಿಕ್ಕರು ಒಪ್ಪಿಕೊಂಡು ಮಾಡುತ್ತಿದ್ದೆನಲ್ಲಾ ಇದು ಸರಿಯಾ ಎಂದು ಯೋಚನೆ ಬರುತ್ತಿತ್ತು. ಆದ್ರೆ ತಪ್ಪು ನನ್ನದೆ ಯಾಕೆಂದರೆ ನಾನು ಸಿನಿಮಾ ಗೆ ತಯಾರಾಗಿ ಬರಲಿಲ್ಲ.

ನನ್ನ ಫೀಲ್ಡ್ ಬೇರೆ ಇತ್ತು, ಎಲೆಕ್ಟ್ರಿಕಲ್ ಇಂಜಿನಿಯರ್ ಮಾಡಿದ ನಾನು ಎಂದು ಸಿನಿಮಾವನ್ನು ನಟನಾಗುವ ದೃಷ್ಟಿಕೋನದಿಂದ ನೋಡಲೇ ಇಲ್ಲ. ಫೈಟ್ ಸೀನ್ ಗಳ ಬಗ್ಗೆ ಆಸಕ್ತಿ ಇತ್ತು, ನೋಡುತ್ತಿದ್ದೆ ಸುಮ್ಮನಾಗುತ್ತಿದ್ದೆ. ಅದೇ ರೀತಿ ಇಲ್ಲಿ ಅಭಿನಯಕ್ಕೆ ಧುಮುಕಿಬಿಟ್ಟೆ, ಅದೇ ನನಗೆ ಹೊಡೆತ ಬಿದ್ದಿದ್ದು. ಯಾರದೋ ಗೈಡೆನ್ಸ್ ಇಂದ ಸಿನಿಮಾ ರಂಗಕ್ಕೆ ಬಂದೆ ಇಲ್ಲಿ ನಂತರ ಸಿನಿಮಾ ಅಂದರೆ ಏನು, ಆಕ್ಟಿಂಗ್ ಅಂದರೇನು, ಯಾವ ರೀತಿ ಪಾತ್ರಕ್ಕೆ ಭಾವ ತುಂಬಬೇಕು, ಏನೇನು ಬೇಕು ಎಲ್ಲವೂ ಗೊತ್ತಾಯ್ತು.

ಅದೆಲ್ಲಾ ತಯಾರಿ ಇಲ್ಲದೆ ಮೊದಲೆಲ್ಲಾ ಪೆಟ್ಟು ತಿನ್ನಬೇಕಾಗಿ ಬಂತು. ಈಗ ಒಂದು ಮಟ್ಟಕ್ಕೆ ಸುಧಾರಿಸಿಕೊಂಡಿದ್ದೇನೆ, ಸರಿ ಹೋಗುವ ಪ್ರಯತ್ನ ನಡೆಯುತ್ತಲೇ ಇದೆ ಎಂದು ಹೇಳುತ್ತಾ ಈ ಪ್ರಯತ್ನದಲ್ಲಿ ಲಂಕಾಸುರ ಮಾತ್ರ ಬಹಳ ಅದ್ಭುತವಾದ ಸಿನಿಮಾ ಆಗಿದೆ. ಸಿನಿಮಾದಲ್ಲಿ ನನ್ನನ್ನು ನೋಡಿ ನನ್ನ ಅಭಿಮಾನಿಗಳು ಹಾಗೂ ನನ್ನ ತಂದೆ ಅಭಿಮಾನಿಗಳು ಎಲ್ಲರೂ ಕೂಡ ಹೆಮ್ಮೆ ಪಡುತ್ತಾರೆ. ಅಂತದ್ದೊಂದು ಕಥೆ ಮತ್ತು ಅಭಿನಯ ಎರಡು ಸಿನಿಮಾದಲ್ಲಿ ಮಾಡಿದ್ದೇನೆ ಎಂದು ಲಂಕಾಸುರ ಸಿನಿಮಾ ಬಗ್ಗೆ ಹೇಳಿಕೊಂಡಿದ್ದಾರೆ.

ನಟನೆ ಬಿಟ್ಟು ಹೊಸ ಉದ್ಯಮ ಆರಂಭಿಸಿದ ನಟ ಶೈನ್ ಶೆಟ್ಟಿ, ಸ್ಯಾಂಡಲ್ ವುಡ್ ತಾರೆಯರಿಂದ ಹರಿದು ಬಂತು ಶುಭಾಶಯದ ಮಹಾಪುರ.

 

ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಅವರು ಬಿಗ್ ಬಾಸ್ ಗೆ ಹೋಗುವ ಮುನ್ನ ಗಲ್ಲಿ ಕಿಚ್ಚನ್ ಎನ್ನುವ ಮೊಬೈಲ್ ಕ್ಯಾಂಟೀನ್ ನಡೆಸುತ್ತಿದ್ದರು. ಯಾಕೆಂದರೆ ಸಿನಿಮಾ ಮಾಡಬೇಕು ಎಂದು ಸೀರಿಯಲ್ ಇಂದ ಹೊರಬಂದ ನಂತರ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಆ ಸಮಯದಲ್ಲಿ ಮತ್ತೆ ಕಿರುತೆರೆಗೆ ಹೋಗಲು ಅವಕಾಶಗಳಿದ್ದರೂ ಸಿನಿಮಾ ಮಾಡಬೇಕು ಎನ್ನುವ ಕನಸು ಇಟ್ಟುಕೊಂಡೆ ಬಂದೆ ಮತ್ತೆ ಹಿಂದಿರುಗಲು ಮನಸ್ಸಿಲ್ಲ ಎನ್ನುವ ಕಾರಣಕ್ಕೆ.

ತಾಯಿಯ ಸಹಾಯ ತೆಗೆದುಕೊಂಡು ಬನಶಂಕರಿ ಬಳಿ ಗಲ್ಲಿ ಕಿಚನ್ ಎನ್ನುವ ಕಾನ್ಸೆಪ್ಟ್ ಅಲ್ಲಿ, ತಮ್ಮ ಬಳಿ ಇದ್ದ ವ್ಯಾನ್ ಅನ್ನೇ ಕಿಚನ್ ಮಾಡಿಕೊಂಡು ಉದ್ಯಮ ಶುರು ಮಾಡಿದರು. ಅವರ ಅದೃಷ್ಟ ಕುಲಾಯಿಸಿ ಆ ಉದ್ಯಮ ಚೆನ್ನಾಗಿ ಕೈ ಹಿಡಿಯಿತು, ಅವರ ತಾಯಿ ಕೈ ರುಚಿ ಎಲ್ಲರಿಗೂ ಇಷ್ಟವಾಗಿ ಕೈ ತುಂಬಾ ಕಾಸು ಸೇರುತ್ತಿತ್ತು. ಅವರ ಗಲ್ಲಿ ಕಿಚನ್ ಅಲ್ಲಿ ವಿಶೇಷವಾಗಿ ಮಸಾಲ ದೋಸೆ, ಗುಲಾಬ್ ಜಾಮೂನು ಮತ್ತು ಕ್ಯಾರೆಟ್ ಹಲ್ವಾ ವಿಶೇಷವಾಗಿರುತ್ತದೆ.

ಇವರು ಬಿಗ್ ಬಾಸ್ ಹೋದಮೇಲೆ ಅವರ ತಾಯಿಯೇ ಅದನ್ನು ನಡೆಸಿಕೊಂಡು ಹೋಗುತ್ತಿದ್ದರು. ಬಿಗ್ ಬಾಸ್ ಅಲ್ಲಿ ಅವರು ಅವರ ಜೀವನದ ಕಥೆ ಹೇಳುವಾಗ ಗಲ್ಲಿ ಕಿಚನ್ ಬಗ್ಗೆ ಹೇಳಿಕೊಂಡಾಗಲಿಂದ ಅದರ ಖ್ಯಾತಿ ಇನ್ನಷ್ಟು ಹೆಚ್ಚಿತು. ಬಿಗ್ ಬಾಸ್ ಇಂದ ಬಂದ ಮೇಲೆ ಸಿನಿಮಾಗಳಲ್ಲೂ ಕೂಡ ಶೈನ್ ಶೆಟ್ಟಿ ಅವರಿಗೆ ಚಾನ್ಸ್ ಸಿಗುತ್ತಿದೆ. ಪುನೀತ್ ರಾಜ್ ಕುಮಾರ್ ಅವರ ಕೊನೆ ಚಿತ್ರವಾದ ಜೇಮ್ಸ್ ಸಿನಿಮಾದಲ್ಲಿ ಅವರ ಗೆಳೆಯನ ಪಾತ್ರ ಮಾಡಿದ್ದರು ಅದು ಕೂಡ ಬಹಳ ಮಹತ್ವ ಇದ್ದ ಪಾತ್ರ ಆಗಿತ್ತು.

ಈಗ ದೇಶದಾದ್ಯಂತ ರೆಕಾರ್ಡ್ ಮಾಡಿರುವ ಕಾಂತರಾ ಸಿನಿಮಾದಲ್ಲೂ ಕೂಡ ಶೈನ್ ಶೆಟ್ಟಿ ಪಾತ್ರ ಮಾಡಿದ್ದರು, ಈಗ ಅದರ ಪ್ರೀಕ್ವೆಲ್ ತಯಾರಾಗುತ್ತಿರುವುದರಿಂದ ಅಲ್ಲೂ ಸಹ ಒಳ್ಳೆ ಅವಕಾಶ ಸಿಗುವ ಮತ್ತು ಹೆಚ್ಚಿನ ಸಮಯ ಸ್ಕ್ರೀನ್ ಮೇಲೆ ಇರುವ ಅದೃಷ್ಟ ಸಿಗುವ ಸಾಧ್ಯತೆ ಇದೆ. ಇದರ ನಡುವೆಯೇ ಗಲ್ಲಿ ಕಿಚನ್ ಕೂಡ ಚೆನ್ನಾಗಿ ನಡೆಯುತ್ತಿರುವುದರಿಂದ ಅದರ ಹೊಸ ಬ್ರಾಂಚ್ ಅನ್ನು ಶುರು ಮಾಡಿದ್ದಾರೆ. ಮೊನ್ನೆ ಅಷ್ಟೇ ತಮ್ಮ ಗಲ್ಲಿ ಗಿಚನ್ ಅಲ್ಲಿ ಕೆಲಸ ಮಾಡಲು ಸಹಾಯಕರು ಬೇಕಾಗಿದ್ದಾರೆ ಎಂದು ಪೋಸ್ಟ್ ಹಾಕಿದ್ದ ಅವರು ದಿಢೀರ್ ಎಂದು ಆರ್ ಆರ್ ನಗರದಲ್ಲಿ ಹೊಸ ಬ್ರಾಂಚ್ ಒಂದನ್ನು ಓಪನ್ ಮಾಡಿದ್ದಾರೆ.

ವಿಶೇಷ ಏನೆಂದರೆ ಈ ಬ್ರಾಂಚ್ ಅನ್ನು ಅವರು ದಿವಂಗತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಕೈಯಿಂದ ಟೇಪ್ ಕಟ್ ಮಾಡಿಸುವ ಮೂಲಕ ಓಪನ್ ಮಾಡಿದ್ದಾರೆ. ಶೈನ್ ಶೆಟ್ಟಿಯ ಹಲವು ಸ್ನೇಹಿತರು ಈ ಸಮಾರಂಭಕ್ಕೆ ಭಾಗಿಯಾಗಿದ್ದರು, ಅನೇಕರು ಅಲ್ಲಿ ಹೋಗಿ ವಿಶ್ ಮಾಡಲು ಸಾಧ್ಯವಾಗದ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಶೈನ್ ಶೆಟ್ಟಿಗೆ ಆಲ್ ದ ಬೆಸ್ಟ್ ಹೇಳುತ್ತಿದ್ದಾರೆ.

ಶೈನ್ ಶೆಟ್ಟಿ ಅವರ ಆತ್ಮೀಯರಲ್ಲಿ ಒಬ್ಬರಾದ ನಿರಂಜನ್ ದೇಶಪಾಂಡೆ ಮತ್ತು ಅವರ ಪತ್ನಿ ಸಹ ಈ ಕಾರ್ಯಕ್ರಮಕ್ಕೆ ಹೋಗಿದ್ದರು. ಅಲ್ಲಿ ಶೈನ್ ಶೆಟ್ಟಿ ಜೊತೆ ದಂಪತಿಗಳು ತೆಗೆದುಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿರುವ ನಿರಂಜನ್ ದೇಶಪಾಂಡೆ ಈ ರೀತಿ ಗೆಳೆಯನ ಉದ್ಯಮಕ್ಕೆ ಶುಭ ಕೋರಿದ್ದಾರೆ. ಕಂಗ್ರಾಜುಲೇಷನ್ ಗೆಳೆಯ ನಿನ್ನ ಹೊಸ ಗಲ್ಲಿ ಕಿಚನ್ ಬ್ರಾಂಚ್ ಗೆ ಒಳ್ಳೇದಾಗಲಿ, ಸಿಕ್ಕಾಪಟ್ಟೆ ಪ್ರಾಫಿಟ್ ತಂದು ಕೊಡಲಿ ಆಲ್ ದ ಬೆಸ್ಟ್ ಗೆಳೆಯ ಎಂದಿದ್ದಾರೆ. ಜೊತೆಗೆ ಬೆಂಗಳೂರಿಗರಿಗೆ ಆರ್.ಆರ್ ನಗರ ಕಡೆ ಬಂದು ನನ್ನ ಗೆಳೆಯನ ಕಿಚನ್ ಗೆ ಭೇಟಿ ಕೊಡಿ ನಿಮ್ಮೆಲ್ಲರ ಸಹಕಾರ ಸದಾ ಶೈನ್ ಶೆಟ್ಟಿ ಇರಲಿ ಎಂದು ಕೋರಿಕೊಂಡಿದ್ದಾರೆ.

KCC ಕ್ರಿಕೇಟ್ ಲೀಗ್ ನಲ್ಲಿ ಕನ್ನಡ ನಟರೊಂದಿಗೆ ಕ್ರಿಕೇಟ್ ಆಡಲು ಬಂದಿರುವ ಕ್ರಿಸ್ ಗೇಲ್ & ಸುರೇಶ್ ರೈನಾ ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ

ಬೆಂಗಳೂರಿನ ಚಿನ್ನಸ್ವಾಮಿ ಸ್ಟುಡಿಯೋ ಬಳಿ ಇಂದು, ಕ್ರಿಕೆಟ್ ಹಬ್ಬ ನಡೆಯುತ್ತಿದೆ. ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿಯೇ ಇಂದು ಮೈದಾನದ ತುಂಬಾ ತುಂಬಿಕೊಳ್ಳಲಿದೆ. ಇದೇ ಉದ್ದೇಶಕ್ಕಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕರ್ನಾಟಕ ಚಲನಚಿತ್ರ ಕಪ್ ಪಂದ್ಯಾವಳಿಯ ರುವಾರಿಯಾಗಿ ಬಹಳ ಉತ್ಸಾಹ ತೆಗೆದುಕೊಂಡು ಈ ನೆಪದಲ್ಲಿ ಎಲ್ಲಾ ಕಲಾವಿದರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಕನ್ನಡದ ಅನೇಕ ಘನಕಲಿಗಳು ಇಂದು ಸಿನಿಮಾ ಸೆಟ್ ಬಿಟ್ಟು ಕ್ರೀಡಾಂಗಣದಲ್ಲಿ ಕೆಸಿಸಿ ಕಪ್ ಗಾಗಿ ಸೆಣಸಾಡಲಿದ್ದಾರೆ.

ಈ ಹಿಂದೆ ಕೂಡ ಈ ರೀತಿ ಮ್ಯಾಚ್ ಏರ್ಪಡಿಸಲಾಗಿತ್ತು, ಈಗ ಎರಡನೇ ಬಾರಿ ಕೆಸಿಸಿ ಕಪ್ ನಡೆಯುತ್ತಿದೆ , ಅದರಲ್ಲಿ ಕನ್ನಡ ಕಲಾವಿದರ ಜೊತೆ ವೀರೇಂದ್ರ ಸೆಹ್ವಾಗ್ ಹರ್ಶಲ್ ಗಿಬ್ಸ್ ಕ್ರಿಕೆಟಿಗರು ಕೂಡ ತಂಡವನ್ನು ಸೇರಿಕೊಂಡಿದ್ದು ಬಹಳ ವಿಶೇಷ. ಈ ಬಾರಿ ಫೆಬ್ರವರಿ 24 ಮತ್ತು 25 ರ ಶನಿವಾರ ಮತ್ತು ಭಾನುವಾರದಂದು ಕೆಸಿಸಿ ಯ ಮ್ಯಾಚ್ಗಳು ನಡೆಯುತ್ತಿದೆ. ಈಗಾಗಲೇ ಚಿನ್ನಸ್ವಾಮಿ ಸ್ಟುಡಿಯೋದಲ್ಲಿ ಸಕಲ ರೀತಿಯ ಸಿದ್ಧತೆಯು ನಡೆದಿದ್ದು ನೋಡಿ ಕಣ್ತುಂಬಿಕೊಳ್ಳಲು ಸಿನಿಮಾ ತಾರೆಗಳ ಅಭಿಮಾನಿಗಳು ಮತ್ತು ಕ್ರಿಕೆಟ್ ಅಭಿಮಾನಿಗಳ ವಲಯವು ಕಾಯುತ್ತಿದೆ.

ಈ ವರ್ಷ ಕೂಡ ಕೆಸಿಸಿ 2 ಅಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕ್ರಿಕೆಟಿಗರು ಕೂಡ ಕರ್ನಾಟಕದ ಕಲಾವಿದ ತಂಡವನ್ನು ಮುನ್ನಡೆಸುವ ಉದ್ದೇಶದಿಂದ ತಂಡಗಳ ಜೊತೆ ಸೇರಿಕೊಂಡಿದ್ದಾರೆ. ಕ್ರಿಕೆಟ್ ಅಲ್ಲಿ 360°, ಕ್ರಿಕೆಟ್ ಯುನಿವರ್ಸಲ್ ಬಾಸ್ ಎಂದೇ ಹೆಸರಾಗಿರುವ ಕ್ರಿಸ್ ಗೇಲ್ ಅವರು ಕೂಡ ಈ ಬಾರಿ ಆಡುತ್ತಿದ್ದು, ಇವರೊಂದಿಗೆ ಮಿಸ್ಟರ್ ಐಪಿಎಲ್ ಎಂದ ಹೆಸರಾಗಿರುವ ಸುರೇಶ್ ರೈನಾ ಅವರು ಸಹ ಈ ಬಾರಿ ಕೆಸಿಸಿ ಅಖಾಡಕ್ಕಿಳಿದಿದ್ದಾರೆ.

ಇವರೊಂದಿಗೆ ಕಳೆದ ವರ್ಷ ಕೂಡ ಆಡಿದ್ದ ವೀರೇಂದ್ರ ಸೆಹ್ವಾಗ್, ಹರ್ಶಲ್ ಗಿಬ್ಸ್, ಬದ್ರಿನಾಥ್, ಬ್ರೈನ್ ಲಾರ್, ತಿಲಕರತ್ನ ದಿಲ್ಶಾನ್ ಇವರುಗಳು ಸಹ ಈ ಬಾರಿಯ ಕೆಸಿಸಿ ಪಂದ್ಯಾವಳಿಯಲ್ಲಿ ಆಟ ಆಡಲಿದ್ದಾರೆ. ಈಗ ಇದೆಲ್ಲರ ಜೊತೆ ಮತ್ತೊಂದು ವಿಷಯದ ಬಗ್ಗೆ ಬಾರಿ ಕುತೂಹಲ ವ್ಯಕ್ತ ಆಗುತ್ತಿದೆ. ಅದೇನೆಂದರೆ, ದೇಶ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಈ ಕ್ರಿಕೆಟಿಗರು ಬಹುದೊಡ್ಡ ಮಟ್ಟದ ಸಂಭಾವನೆಯನ್ನು ಪಡೆಯುತ್ತಾರೆ.

ಹಾಗಾಗಿ ಕೆಸಿಸಿ ಅಲ್ಲಿ ಆಡಲು ಅವರಿಗೆ ಎಷ್ಟು ಹಣ ಕೊಟ್ಟಿರಬಹುದು ಎನ್ನುವುದು ಎಲ್ಲರ ಕುತೂಹಲ ಇದರ ಬಗ್ಗೆ ಕೂಡ ಮಾಹಿತಿ ಹೊರ ಬಿದ್ದಿದ್ದು, ಇದು ಎರಡೇ ದಿನದ ಮ್ಯಾಚ್ ಆಗಿರುವ ಕಾರಣ ಫೆಬ್ರವರಿ 24 ಮತ್ತು 25 ಎರಡು ದಿನದ ಪಂದ್ಯಾವಳಿಯಲ್ಲಿ ಭಾಗವಹಿಸಲು ಈ ಎಲ್ಲಾ ಕ್ರಿಕೆಟಿಗರಿಗೂ ಒಂದರಿಂದ ಒಂದೂವರೆ ಕೋಟಿ ರೂಗಳನ್ನು ತೆರಲಾಗಿದೆಯಂತೆ. ಈಗಾಗಲೇ ತಿಂಗಳ ಹಿಂದೆಯಿಂದಲೇ ಕನ್ನಡ ಕಲಾವಿದರ ದಂಡು ಮೈದಾನದಲ್ಲಿ ಜಾಂಡ ಹೂಡಿ ಸಾಕಷ್ಟು ತಯಾರಿ ಮಾಡಿಕೊಂಡಿದೆ.

ಜೊತೆಗೆ ತಂಡದ ಕ್ಯಾಪ್ಟನ್ ಗಳಾಗಿರುವ ಶಿವಣ್ಣ, ಸುದೀಪ್, ಉಪೇಂದ್ರ, ಗಣೇಶ್, ಧ್ರುವ ಮತ್ತು ಡಾಲಿ ಧನಂಜಯ್ ಕೂಡ ತಂಡದವರ ಜೊತೆ ಬೆವರು ಸುರಿಸಿ ಸಾಕಷ್ಟು ತಾಲೀಮು ಮಾಡಿ ತಯಾರಾಗಿದ್ದಾರೆ. ಒಂದು ಬಳಗ ಚಿನ್ನ ಸ್ಟುಡಿಯೋ ಬಳಿ ದಾಖಲಾಗಿ ನೆಚ್ಚಿನ ತಾರೆಯನ್ನು ಕಣ್ತುಂಬಿಸಿಕೊಳ್ಳುವುದರ ಜೊತೆಗೆ ಲೈವ್ ಆಗಿ ಮ್ಯಾಚ್ ನೋಡುತ್ತಿದ್ದರೆ, ಮತ್ತೊಂದು ವಲಯ ಜಿ ಪಿಚ್ಚರ್ ಪ್ಲಾಟ್ ಫಾರ್ಮ್ ಅಲ್ಲಿ ಇದರ ಮ್ಯಾಚ್ ಗಳನ್ನು ಮನೆಯಲ್ಲಿ ಕುಳಿತು ಎಂಜಾಯ್ ಮಾಡುತ್ತಾ ಈ ವೀಕೆಂಡ್ ಅನ್ನು ಹಿಟ್ ವೀಕೆಂಡ್ ಆಗಿ ಮಾಡಿಕೊಳ್ಳುತ್ತಿದ್ದಾರೆ.

ಕಮಲ್ ಹಾಸನ್ ಅವರನ್ನು ನೋಡಬೇಕು ಎಂದು ಸ್ಟುಡಿಯೋಗೆ ಬಂದು ಬಾಗಿಲ ಬಳಿಯೇ ನಿಂತಿದ್ದ ಡಾ.ರಾಜ್ ಕುಮಾರ್, ತನಗಾಗಿ ಕಾದ ಅಣ್ಣಾವ್ರಿಗೆ ಕಮಲ್ ಹಾಸನ್ ಹೇಳಿದ್ದೇನು ಗೊತ್ತಾ.?

 

ಒಮ್ಮೆ ಡಾಕ್ಟರ್ ರಾಜಕುಮಾರ್ ಅವರು ಕಮಲ್ ಹಾಸನ್ ಅವರನ್ನು ನೋಡಲು ಬಂದು ಸ್ಟುಡಿಯೋ ಬಾಗಿಲ ಬಳಿಯೇ ನೋಡುತ್ತಾ ನಿಂತು ಬಿಟ್ಟಿದ್ದರಂತೆ. ಕರ್ನಾಟಕ ಕಂಡ ಮೇರುನಟ, ನಟ ಶ್ರೇಷ್ಠ ಅಣ್ಣಾವ್ರು ಆ ರೀತಿ ಯಾಕೆ ಕಾಯಬೇಕಿತ್ತು ಎಂದು ಎಲ್ಲರಿಗೂ ಅನಿಸಬಹುದು. ಆದರೆ ಅವರು ತುಂಬಿದ ಕೊಡದಂತಿದ್ದ ವ್ಯಕ್ತಿತ್ವದವರು ಅಷ್ಟು ದೊಡ್ಡ ನಟನಾಗಿದ್ದರೂ ಕೂಡ ಅವರಿಗೆ ಕಿಂಚಿತ್ತು ಅಹಂ ಇರಲಿಲ್ಲ, ತೋರಿಕೆ ಅವರಿಗೆ ಗೊತ್ತೇ ಇರಲಿಲ್ಲ.

ಯಾರ ಬಗ್ಗೆ ಯಾವ ಗುಣ ಇಷ್ಟ ಆದರೂ ಎದುರಿಗೆ ತಕ್ಷಣ ಹೇಳು ಬಿಡುತ್ತಿದ್ದರು, ಹಾಗೆ ಇಷ್ಟವಾಗದ ಗುಣದ ಬಗ್ಗೆ ಕೂಡ ಮುಕ್ತವಾಗಿ ಮಾತನಾಡುತ್ತಿದ್ದರು. ಅಣ್ಣಾವ್ರು ಆಗಷ್ಟೇ ಮೊದಲ ಸಿನಿಮಾ ಮಾಡಿ ಗೆದ್ದ ಹೀರೋಗಳನ್ನು ಕೂಡ ಮನೆಗೆ ಕರೆದು ಪ್ರಶಂಸಿಸುತ್ತಿದ್ದರು. ಅಣ್ಣಾವ್ರು ಕನ್ನಡ ಬಿಟ್ಟು ಬೇರೆ ಭಾಷೆ ಸಿನಿಮಾ ಮಾಡುತ್ತಿರಲಿಲ್ಲ ಎಂದು ಎಲ್ಲರಿಗೂ ಗೊತ್ತು, ಆದರೆ ಅವರಿಗೆ ಬೇರೆ ಭಾಷೆ ಸಿನಿಮಾಗಳನ್ನು ನೋಡುವ ಅಭ್ಯಾಸ ಇತ್ತು.

ಹೀಗೆ ನೋಡಿದ ಸಿನಿಮಾಗಳಲ್ಲಿ ಹೀರೋ ಮತ್ತು ಹೀರೋಯಿನ್ ನಟನೆ ಇಷ್ಟ ಆದರೆ ಅವರನ್ನು ಕೂಡ ಮುಕ್ತ ಕಂಠದಿಂದ, ಸ್ವಚ್ಛ ಮನಸ್ಸಿನಿಂದ ಅಭಿನಂದಿಸುತ್ತಿದ್ದರು. ಅವರಿಗೆ ಎಲ್ಲಾ ಇಂಡಸ್ಟ್ರಿಯಲ್ಲೂ ಕೂಡ ಸ್ನೇಹಿತರಿದ್ದರು. ಹಿರಿಯ ನಟಿ ಲಕ್ಷ್ಮಿ, ಕಮಲ್ ಹಾಸನ್ ಮುಂತಾದವರು ಈ ರೀತಿ ಅಣ್ಣಾವ್ರಿಂದ ಪ್ರಶಸ್ತಿಗೆ ಒಳಗಾಗಿದ್ದಾರೆ. ಇವರಂತೆ ಹತ್ತಾರು ಕಲಾವಿದರು ಅಣ್ಣಾವ್ರಿಂದ ಹೊಗಳಿಸಿಕೊಂಡಿದ್ದಾರೆ. ರಾಜಕುಮಾರ್ ಅವರ ಹಿರಿಯ ಮಗ ಶಿವರಾಜ್ ಕುಮಾರ್ ಅವರು ಕಮಲ್ ಹಾಸನ್ ಅವರ ಅತಿ ದೊಡ್ಡ ಫ್ಯಾನ್, ಅವರು ಮಾತ್ರ ಅಲ್ಲದೆ ಅಣ್ಣಾವ್ರು ಸಹ ಕಮಲ್ ಹಾಸನ್ ಅವರ ಸಹಜ ಅಭಿನಯ ನೋಡಿ ಮನಸೋತಿದ್ದರು.

ಯಾವುದೇ ಪಾತ್ರ ಒಪ್ಪಿಕೊಂಡರು ಕೂಡ ಅದಕ್ಕೆ ತಲ್ಲೀನನಾಗಿ ಅಭಿನಯಿಸುತ್ತಿದ್ದ ಅವರ ಟ್ಯಾಲೆಂಟ್ ಗೆ ಮನಸೋತಿದ್ದರು. ಹೀಗಾಗಿ ಒಮ್ಮೆ ಅವರನ್ನು ನೋಡಲು ಸ್ಟುಡಿಯೋಗೆ ಹೋಗಿ ಕಾದು ನಿಂತಿದ್ದ ಪ್ರಸಂಗವೂ ಇದೆ.1982ರಲ್ಲಿ ಕಮಲ್ ಹಾಸನ್ ಅವರ ಅಭಿನಯದ ಮೂಂದ್ರಾಮ್ ಪಿರಾಯ್ ಎನ್ನುವ ಸಿನಿಮಾ ತೆರೆ ಕಾಣುತ್ತದೆ. ಆ ಸಿನಿಮಾ ತುಂಬಾ ದೊಡ್ಡ ಹಿಟ್ ಕೂಡ ಆಗಿ ಭಾರತದಾದ್ಯಂತ ಹೆಸರು ಪಡೆಯುತ್ತದೆ.

ಅಣ್ಣಾವ್ರು ಸಹ ಈ ಸಿನಿಮಾವನ್ನು ನೋಡಿರುತ್ತಾರೆ ಇದು ಮಾತ್ರ ಅಲ್ಲದೆ ಅದುವರೆಗಿನ ಪ್ರತಿಯೊಂದು ಕಮಲ್ ಹಾಸನ್ ಅವರ ಚಿತ್ರವನ್ನು ಕೂಡ ನೋಡಿರುತ್ತಾರೆ. ಈ ಚಿತ್ರದ ನಂತರ ಕಮಲ್ ಹಾಸನ್ ಮತ್ತೊಂದು ಸಿನಿಮಾದಲ್ಲಿ ತೊಡಗಿಕೊಂಡಿರುತ್ತಾರೆ. ಆ ಸಿನಿಮಾದ ಶೂಟಿಂಗ್ ಎಬಿಎಂ ಸ್ಟುಡಿಯೋದಲ್ಲಿ ನಡೆಯುತ್ತಿರುತ್ತದೆ. ಅದೇ ಸ್ಟುಡಿಯೋ ಅಲ್ಲಿ ಅಣ್ಣಾವ್ರ ಸಿನಿಮಾ ಕೂಡ ಚಿತ್ರೀಕರಣವಾಗುತ್ತಿರುತ್ತದೆ. ಕಮಲ್ ಹಾಸನ್ ಕೂಡ ಸಿನಿಮಾ ಕಾರಣವಾಗಿ ಬಂದಿದ್ದಾರೆ ಎನ್ನುವ ಕಾರಣ ತಿಳಿದ ತಕ್ಷಣವೇ ತಮ್ಮ ಸಿನಿಮಾದ ತಮ್ಮ ಭಾಗದ ಅಭಿನಯ ಮುಗಿದ ತಕ್ಷಣ ಕಮಲ್ ಹಾಸನ್ ಅವರನ್ನು ನೋಡಲು ಅವರಿದ್ದಲಿಗೆ ಹೋಗುತ್ತಾರೆ.

ಹೋದವರು ಬಾಗಿಲ ಬಳಿಗೆ ನಿಂತು ಬಿಡುತ್ತಾರೆ ಅದಕ್ಕೆ ಕಾರಣ ಇಷ್ಟೇ ನಾನು ಒಳಗೆ ಹೋದರೆ ಶೂಟಿಂಗ್ ನಿಲ್ಲಿಸ್ಲಿ ನನ್ನನ್ನು ಉಪಚರಿಸುತ್ತಾರೆ ಅಥವಾ ಶೂಟಿಂಗ್ ಮಾಡಿದರೂ ಅವರ ಸಹಜ ಅಭಿನಯ ಬರುವುದಿಲ್ಲ ಹಾಗಾಗಿ ನಾನಂದುಕೊಂಡಿದ್ದನ್ನು ನೋಡುವುದಕ್ಕೆ ಆಗುವುದಿಲ್ಲ ಎಂದು ನಿರ್ಧಾರ ಮಾಡಿ ಅಲ್ಲೇ ಕಮಲ್ ಹಾಸನ್ ಅಭಿನಯ ನೋಡಿ ಆನಂದಿಸುತ್ತಾ ನಿಂತಿರುತ್ತಾರೆ. ಅಷ್ಟರಲ್ಲಿ ಒಮ್ಮೆ ಕಮಲ್ ಹಾಸನ್ ಅವರು ಬಾಗಿಲ ಬಳಿ ನೋಡಿ ಒಮ್ಮೆಲೆ ಶಾ’ಕ್ ಆಗಿ ಬಿಡುತ್ತಾರೆ

ಅಭಿಜಾತ ಕಲಾವಿದರಾದ ಅಣ್ಣಾವ್ರು ಹೀಗೇಕೆ ನಿಂತಿದ್ದಾರೆ ಎಂದು ನಂತರ ಅವರು ತಮ್ಮ ಶೂಟಿಂಗ್ ನೋಡೋದಕ್ಕಾಗಿ ಆ ರೀತಿ ಕಾಯುತ್ತಿದ್ದರು ಎಂದು ತಿಳಿದ ಮೇಲಂತೂ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲವಂತೆ, ಜೊತೆಗೆ ಬಾಗಿಲ ಬಳಿಯೇ ನಿಂತುಬಿಟ್ಟರಲ್ಲ ಎಂದು ಬೇಸರ ಕೂಡ ಆಯಿತಂತೆ. ಇದೇ ವಿಷಯವನ್ನು ಜೂಲಿ ಲಕ್ಷ್ಮಿ ಅವರ ಬಳಿ ಕೇಳಿಕೊಂಡಾಗ ಲಕ್ಷ್ಮಿ ಅವರು ಸಹ ಅಣ್ಣಾವ್ರ ಗುಣದ ಬಗ್ಗೆ ತಮಗಾದ ಅನುಭವವನ್ನು ಹೇಳಿಕೊಂಡಿದ್ದರಂತೆ. ಈಗ ಆ ಮಾತುಗಳನ್ನು ಸ್ವತಃ ಕಮಲ್ ಹಾಸನ್ ಅವರೇ ಸಂದರ್ಶನವೊಂದರಲ್ಲಿ ಮತ್ತೊಮ್ಮೆ ಹೇಳಿದ್ದಾರೆ.