Home Blog Page 237

ಕರ್ನಾಟಕದಲ್ಲಿರೋ ಮಾಧ್ಯಮ ಬ್ಯಾನ್ ಗೆ ಕೇರ್ ಮಾಡದ ಇಂಟರ್ನ್ಯಾಷನಲ್ ಚಾನಲ್ ಒಂದು ಇಂದು ದರ್ಶನ್ ಅವರನ್ನು ಇಂಟರ್ವ್ಯೂ ಮಾಡಲು ಮನೆ ಬಾಗಿಲಿಗೆ ಬಂದಿದ್ದಾರೆ.

0

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈಗಾಗಲೇ ಕ್ರಾಂತಿ (Kranthi Movie hit) ಸಿನಿಮಾ ನೂರು ಕೋಟಿ ಕ್ಲಬ್ ಸೇರಿದ ಸಂಭ್ರಮದಲ್ಲಿರುವ ಬಾಕ್ಸ್ ಆಫೀಸ್ ಸುಲ್ತಾನನಿಗೆ ಇದು 46ರ ವಸಂತ. ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ನಟ ಎನ್ನುವ ಖ್ಯಾತಿಗೆ ಒಳಗಾಗಿರುವ ದರ್ಶನ್ ಅವರು ಮೂರು ವರ್ಷಗಳ ಬಳಿಕ ತಮ್ಮ ಸೆಲೆಬ್ರಿಟಿಸ್ ಜೊತೆ ಅರ್ಥಪೂರ್ಣವಾಗಿ ಹುಟ್ಟು ಹಬ್ಬ (Birthday) ಆಚರಿಸಿಕೊಂಡಿದ್ದಾರೆ.

ಇದುವರೆಗೆ ದರ್ಶನ್ ಅವರು ಎಷ್ಟೇ ಬಾರಿ ವಿವಾದಕ್ಕೆ ಒಳಗಾಗಿದ್ದರು ಅಥವಾ ಸೋತಿದ್ದರೂ ಪ್ರತಿಬಾರಿಯೂ ದರ್ಶನ್ ಅವರಿಗೆ ಬೆಂಬಲವಾಗಿ ನಿಂತಿದ್ದು ಅವರ ಸೆಲೆಬ್ರಿಟಿಗಳು ಮಾತ್ರ. ಈಗಷ್ಟೇ ಅವರು ಅಭಿಮಾನಿಗಳಿಗೆ ಟ್ರಿಬ್ಯೂಟ್ (tribute for fans) ಕೊಡುವ ಸಲುವಾಗಿ ಎದೆ ಮೇಲೆ ನನ್ನ ಸೆಲೆಬ್ರೇಟೀಸ್ ಎಂದು ಹಚ್ಚೆ (tattoo) ಕೂಡ ಹಾಕಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಕನ್ನಡಿಗರಿಂದ ಪ್ರೀತಿ ಪಡೆದಿರುವ ದರ್ಶನ್ ಅವರಿಗೆ ಅದ್ಯಾಕೋ ವಿವಾದಗಳು (Controversy) ಸದಾ ಬೆನ್ನು ಬಿಡದೆ ಕಾಡುತ್ತಿವೆ.

ದರ್ಶನ್ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ವಿವಾದದಲ್ಲೇ ಇರುತ್ತಾರೆ. ಅದು ವೈಯಕ್ತಿಕ, ಕೌಟುಂಬಿಕ ವಿಚಾರ ಅಥವಾ ಸಿನಿಮಾಗಳ ವಿಚಾರವಾಗಿ ಕೂಡ. ಇತ್ತೀಚೆಗಂತೂ ದರ್ಶನ್ ಅವರ ಪ್ರತಿ ನಡೆಯು ಕೂಡ ವಿವಾದ ಎನ್ನುವ ರೀತಿ ಸೋಶಿಯಲ್ ಮೀಡಿಯಾದಲ್ಲಿ ಕೆಲ ಕಿಡಿ ಕೇಡಿಗಳು ಕಿಚ್ಚು ಹಚ್ಚುತ್ತಿದ್ದಾರೆ. ಇದರಲ್ಲಿ ಎಲ್ಲಕ್ಕಿಂತ ಈ ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಆಗಿದ್ದು ಮಾಧ್ಯಮಗಳ ಬ್ಯಾನ್ ವಿಚಾರ.

ವರ್ಷದ ಹಿಂದೆ ಮೈಸೂರಿನ ಹೋಟೆಲ್ ವಿವಾದದಲ್ಲಿ ಮಾಧ್ಯಮಗಳನ್ನು ಏಕವಚನದಲ್ಲಿ ಅಶ್ಲೀಲ ಪದಗಳಿಂದ ನಿಂದನೆ ಮಾಡಿದ ಆರೋಪದಿಂದ ದರ್ಶನ್ ಅವರ ಕುರಿತ ಯಾವುದೇ ಮಾಹಿತಿಗಳನ್ನು ನ್ಯೂಸ್ ಚಾನೆಲ್ ಗಳು ಪ್ರಸಾರ ಮಾಡುವುದಿಲ್ಲ ಎಂದು ದರ್ಶನ್ ಅವರನ್ನು ಕನ್ನಡದ ಎಲ್ಲ ಮಾಧ್ಯಮಗಳು (Kannada news channels) ಸೇರಿ ಬ್ಯಾನ್ (ban) ಮಾಡಿದ್ದವು. ಇದರ ನಡುವೆ ಅಭಿಮಾನಿಗಳಿಗೆ ಕ್ರಾಂತಿ ಸಿನಿಮಾದ ಪ್ರಚಾರ ಹೇಗೆ ಮಾಡುವುದು ಎನ್ನುವ ಪ್ರಶ್ನೆ ಎದುರಾಗಿತ್ತು.

ಮಾಧ್ಯಮಗಳಿಗೆ ಸೆಡ್ಡು ಹೊಡೆದು ನೆಚ್ಚಿನ ನಟನ ಬೆಂಬಲಕ್ಕೆ ನಿಂತ ಅಭಿಮಾನಿಗಳು ಕ್ರಾಂತಿ ಸಿನಿಮಾ ಬಗ್ಗೆ ಹಳ್ಳಿಹಳ್ಳಿಗೂ ಕೂಡ ವಿಚಾರ ತಲುಪುವ ರೀತಿ ಮಾಡಿ ಸಿನಿಮಾವನ್ನು ದಾಖಲೆ ಮಾಡಿದರು. ಸಿನಿಮಾದ ಒಂದು ವಿಚಾರವನ್ನು ಕೂಡ ಸುದ್ದಿ ಮಾಧ್ಯಮಗಳು ಬಿತ್ತರಿಸಲೇ ಇಲ್ಲ ಬದಲಾಗಿ ಸೋಶಿಯಲ್ ಮೀಡಿಯವನ್ನೇ ಪ್ಲಾಟ್ಫಾರ್ಮ್ ಮಾಡಿಕೊಂಡ ಸಿನಿಮಾ ತಂಡ ನಿರಂತರವಾಗಿ ಸಂದರ್ಶನಗಳನ್ನು ಕೊಟ್ಟು ಸಿನಿಮಾದ ಪ್ರಚಾರಕಾರ್ಯದಲ್ಲಿ ತೊಡಗಿಕೊಂಡು, ಆಡಿಯೋ ಲಾಂಚ್ ಅನ್ನು ಕೂಡ ವಿಭಿನ್ನವಾಗಿ ಮಾಡಿ ಜನರಿಗೆ ವಿಷಯ ಮುಟ್ಟಿಸಿದರು.

ನಂತರ ಆದ ಕ್ರಾಂತಿ ಸಿನಿಮಾದ ಮೊದಲ ದಿನದ ಕಲೆಕ್ಷನ್ ವಿಚಾರವೇ ಆಗಲಿ ಮತ್ತು ಇಲ್ಲಿನ ತನಕ ಗಳಿಕೆ ವಿಚಾರವೇ ಆಗಲಿ ಅದು ಚಿತ್ರರಂಗದ ಇತಿಹಾಸ ಪುಟದಲ್ಲಿ ಬರೆದಿಡುವ ಒಂದು ಸಾಧನೆಯೇ ಸರಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಮೊದಲ ದಿನದಿಂದಲೂ ಇಂತಹ ಚಾಲೆಂಜ್ ಗಳನ್ನೇ ಎದುರಿಸಿಕೊಂಡು ಗೆದ್ದು ನಿಂತಿರುವ ಈ ಚಾಲೆಂಜಿಂಗ್ ಸ್ಟಾರ್ ನ ಇಂಟರ್ವ್ಯೂ ಮಾಡಲು ಹಿಂದಿ ಸುದ್ದಿ ಮಾಧ್ಯಮ (Hindi News Channel) ಒಂದು ಬಂದಿದೆ.

ಇಂದು ದರ್ಶನ್ ಹುಟ್ಟು ಹಬ್ಬದ ಪ್ರಯುಕ್ತ ಆಜ್ ತಕ್ (Aj Thak) ಎನ್ನುವ ನ್ಯೂಸ್ ಚಾನೆಲ್ ದರ್ಶನ್ ಅವರ ಇಂಟರ್ವ್ಯೂ ಮಾಡಿದೆ. ಇದರಿಂದ ಕರ್ನಾಟಕದಾದ್ಯಂತ ಅಭಿಮಾನಿಗಳ ಮನದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದ್ದು ಕನ್ನಡ ಸುದ್ದಿ ಮಾಧ್ಯಮಗಳು ನಡೆದುಕೊಂಡ ನಡೆಗೆ ಇದು ತಕ್ಕ ಶಾಸ್ತಿ ಎನ್ನುವ ರೀತಿ ಅಭಿಮಾನಿಗಳಿಂದ ಪ್ರತಿಕ್ರಿಯೆ ಕೇಳಿ ಬರುತ್ತಿವೆ. ಮತ್ತೊಮ್ಮೆ ದರ್ಶನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಹಾಗೂ ಈ ಮನಸ್ತಾಪಗಳೆಲ್ಲವೂ ಸರಿ ಹೋಗುವಂತೆ ಆಗಲಿ ಎಂದು ಹಾರೈಸೋಣ.

ಹಿಂದುಗಳಿಗಿಂತ ಮುಸ್ಲಿಂರು ಹೆಚ್ಚು ಸುಖ ಕೊಡ್ತಾರೆ ಅಂತ ಹೇಳಿಕೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ನಟಿ ಸ್ವರ ಭಾಸ್ಕರ್ ಇಂದು ಮುಸ್ಲಿಂ ಯುವಕ ಅಹ್ಮದ್ ಅವರನ್ನೆ ಮದ್ವೆ ಆಗಿದ್ದಾರೆ.

0

ಪ್ರಭಾವಿ ರಾಜಕಾರಣಿ ಅಹ್ಮದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸ್ವರ ಭಾಸ್ಕರ್ ಸ್ವರ ಭಾಸ್ಕರ್ (Actress Swara Bhaskar) ಎನ್ನುವ ಬಾಲಿವುಡ್ ಬಳಗದ ಬಿ ಟೌನ್ ನ ಈ ಬೆಡಗಿ ತನ್ನ ಸಿನಿಮಾಗಳ ವಿಚಾರಕ್ಕಿಂತ ಹೆಚ್ಚಾಗಿ ತಾವು ಹೇಳಿಕೆ ಕೊಡುವ ಕಾಂಟ್ರವರ್ಸಿ ಸ್ಟೇಟ್ಮೆಂಟ್ ಗಳು (Controversy) ಮತ್ತು ಹಾಕುವ ಪೋಸ್ಟ್ ಗಳಿಂದಲೇ ಸದಾ ಸುದ್ದಿಯಾಗುತ್ತಿದ್ದವರು. ಇವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಗಾಗ ಹಿಂದೂ ಧರ್ಮಿಯರನ್ನು ಕೆಣಕುವಂತೆ ಪೋಸ್ಟ್ ಹಾಕುವ ಹಿಂದೂ ಧರ್ಮೀಯರ ಭಾವನೆಗಳನ್ನು ಕೆಣಕುತ್ತಿದ್ದರು.

ವಿದೇಶಿಗರು ಕೂಡ ಸನಾತನ ಧರ್ಮವನ್ನು ಗೌರವಿಸಿ ಪಾಲಿಸುತ್ತಿರುವ ಈ ಕಾಲದಲ್ಲಿ ಹಿಂದೂ ಕುಟುಂಬದ ಯುವತಿಯಾಗಿ ಈ ಧರ್ಮಕ್ಕೆ ಬದ್ಧವಾಗಿ ಬದುಕುವುದರ ಬದಲು, ಸೋ ಕಾಲ್ಡ್ ಬಾಲಿವುಡ್ ತಾರೆಗಳಂತೆ ಈಕೆಯೂ ಹಿಂದುಗಳ ಭಾವನೆಗಳ ಜೊತೆ ಚೆಲ್ಲಾಟವಾಡಿದ್ದರು. ಸ್ವರ ಭಾಸ್ಕರ್ ಅವರು ಕಳೆದ ತಿಂಗಳಷ್ಟೇ “ಹಿಂದುಗಳಿಗಿಂತ ಮುಸ್ಲಿಮರು ಹೆಚ್ಚು ಸುಖ ಕೊಡುತ್ತಾರೆ ಹಿಂದೂ ಸಂಘಿಗಳಿಂದ ಇದು ಸಾಧ್ಯವಿಲ್ಲ, ಹಿಂದೂ ಕುಟುಂಬದಲ್ಲಿ ಹುಟ್ಟಿದ್ದಕ್ಕಾಗಿ ನಾಚಿಕೆ ಪಡುತ್ತೇನೆ ಎಂದು ಹೇಳಿಕೆ ಕೊಟ್ಟು ವಿವಾದ ಮೈಮೇಲೆ ಎಳೆದುಕೊಂಡಿದ್ದರು”.

ಇದಾದ ಬಳಿಕ ಇವರನ್ನು ಸಿನಿಮಾ ರಂಗದಿಂದ ಬ್ಯಾನ್ ಮಾಡಲೇಬೇಕು ಎಂದು ಹಿಂದೂ ಸಂಘಟನೆಗಳು ಹೋರಾಟಕ್ಕೂ ಇಳಿದಿದ್ದರು. ಇದಾಗಿ ತಿಂಗಳು ಮುಗಿಯುವಷ್ಟರಲ್ಲೇ ನಟಿಮಣಿ ರಾಜಕಾರಣಿ ಅಹ್ಮದ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುವ ಸುದ್ದಿ ಹಂಚಿಕೊಂಡಿದ್ದಾರೆ. ತನ್ನ ಸೋಶಿಯಲ್ ಮೀಡಿಯಾ ಖಾತೆಗಳಾದ ಫೇಸಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಮೂಲಕ ತನ್ನ ಲವ್ ಸ್ಟೋರಿಯನ್ನು ವಿವರಿಸಿ ಅದರ ಕುರಿತ ಸಿಹಿ ನೆನಪುಗಳ ತುಣುಕುಗಳನ್ನೆಲ್ಲ ಸೇರಿಸಿ ವಿಡಿಯೋ ಮಾಡಿ ಹಂಚಿಕೊಂಡಿರುವ ಸ್ವರ ಭಾಸ್ಕರ್ ಅವರು ತಾವು ಅಹ್ಮದ್ ಅವರನ್ನು ಕೈ ಹಿಡಿಯುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸದ್ಯದಲ್ಲೇ ಅದ್ದೂರಿಯಾಗಿ ಮದುವೆ ಆಗಲಿರುವ ಜೋಡಿ ಈಗಾಗಲೇ ಜನವರಿ 6ರಂದೇ ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ತಮ್ಮ ಮದುವೆಯನ್ನು ನೋಂದಣಿ ಕೂಡ ಮಾಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಕಾರ್ಯಕರ್ತ ಮತ್ತು ಪ್ರಭಾವಿ ರಾಜಕಾರಣಿ ಆಗಿರುವ ಅಹ್ಮದ್ (Politician Ahmad) ಅವರ ಜೊತೆ ಬಹಳ ದಿನಗಳಿಂದ ಪ್ರೀತಿಯಲ್ಲಿ ಬಿದ್ದಿದ್ದ ಸ್ವರ ಭಾಸ್ಕರ್ ಅವರು ಅಧಿಕೃತವಾಗಿ ವಿವಾಹವಾಗುವ ಮೂಲಕ ಇಬ್ಬರು ಇನ್ನು ಮುಂದೆ ದಂಪತಿಗಳಾಗಿ ಜೊತೆಯಾಗಿ ಇರಲಿದ್ದೇವೆ ಎನ್ನುವುದನ್ನು ವಿಶೇಷವಾಗಿ ತಮ್ಮ ಪ್ರೇಮಕಥೆಯ ವಿವರಿಸುವಾಗ ಹೇಳಿಕೊಂಡಿದ್ದಾರೆ.

ಯಾವಾಗಲೂ ಮುಕ್ತವಾಗಿ ಮಾತನಾಡುವುದಕ್ಕೆ ಮತ್ತು ತಮ್ಮ ಅಭಿಪ್ರಾಯಗಳನ್ನು ನೇರವಾಗಿ ವ್ಯಕ್ತಪಡಿಸುವುದಕ್ಕೆ ಹೆಸರುವಾಸಿ ಆಗಿದ್ದ ಸ್ವರ ಭಾಸ್ಕರ್ ಅವರು ಹಿಂದಿ ಚಿತ್ರರಂಗ ಮಾತ್ರವಲ್ಲದೆ ದೇಶದ ನಾನಾ ಭಾಷೆಯ ಚಿತ್ರಗಳಿಂದಲೂ ಕೂಡ ಅವಕಾಶಗಳನ್ನು ಪಡೆಯುತ್ತಿದ್ದರು. ಈಗಷ್ಟೇ ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡುತ್ತಿದ್ದ ಸಮಯದಲ್ಲಿ ಬೇಕಿಲ್ಲದ ವಿಚಾರಗಳ ಬಗ್ಗೆ ಮಾತನಾಡಿ ದೇಶದ ಹಿಂದೂ ಧರ್ಮಿಯರ ಕೆಂಗಣ್ಣಿಗೆ ಗುರಿಯಾದರು.

ಇನ್ನು ಅದು ತಣ್ಣಗಾಗುವ ಮೊದಲೇ ಮುಸ್ಲಿಂ ಧರ್ಮದವರನ್ನು ವಿವಾಹವಾಗುವ ಮೂಲಕ ತಮ್ಮ ಉದ್ದೇಶವನ್ನು ಈ ಮೂಲಕ ಸ್ಪಷ್ಟ ಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಈಕೆ ಮದುವೆ ಬಗ್ಗೆ ಪರ ಮತ್ತು ವಿರೋಧ ಎರಡು ರೀತಿಯ ಅಭಿಪ್ರಾಯಗಳು ಕೇಳಿ ಬರುತ್ತಿದ್ದು, ಅನೇಕ ಜನರು ಕಮೆಂಟ್ಗಳ ಮೂಲಕ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದಾರೆ. ಈಗಾಗಲೇ ಚಿತ್ರರಂಗದಲ್ಲಿ ಅನೇಕ ನಟ ಮತ್ತು ನಟಿಮಣಿಯರು ಅಂತರ್ಜಾತ, ಅಂತರ್ಧರ್ಮ ವಿವಾಹವಾಗಿ ಸಂತೋಷವಾಗಿದ್ದಾರೆ ಸ್ವರ ಭಾಸ್ಕರ್ ಅವರು ಕೂಡ ಅದೇ ಹಾದಿಯಲ್ಲಿ ಹೋಗುತ್ತಿದ್ದಾರೆ.

ಆದರೆ ಹಿಂದೂ ಧರ್ಮದವರಾದ ಸ್ವರ ಭಾಸ್ಕರ ಅವರು ಮುಸ್ಲಿಂ ಯುವಕನನ್ನು ಮದುವೆಯಾಗುತ್ತಿರುವ ವಿಚಾರ ಕೇಳುತ್ತಿದ್ದ ಹಾಗೆ ಕೆಲವು ಅಭಿಮಾನಿಗಳು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ನೀವು ನಟಿ ರಾಖಿ ಸಾವಂತ್ ರೀತಿ ಆಗುತ್ತೀರಾ ಆದಿಲ್ ಖಾನ್ ಅನ್ನು ಮದುವೆಯಾಗಿ ಕೋರ್ಟ್ ಕೇಸ್ ಅಂತ ರಾಖಿ ಅಲೆದಾಡುತ್ತಿದ್ದಾರೆ. ಇನ್ನು ಕೆಲವರು ಫ್ರಿಜ್ಜಿನಲ್ಲಿ 36 ತುಂಡುಗಳಾಗಿ ಹೋಗುತ್ತಿದ್ದಾರೆ ನೀವು ಆ ರೀತಿ ಆಗುತ್ತೀರಾ ಎಚ್ಚರಿಕೆ ಎಂದು ಸ್ವರ ಭಾಸ್ಕರ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

 

ಮೋದಿ ಭೇಟಿಗೆ ನಿಮ್ಗೆ ಆಹ್ವಾನ ಇರ್ಲಿಲ್ವಾ ಅಂತ ಕೇಳಿದ್ಕೆ ಸುದೀಪ್ ಕೊಟ್ಟ ಉತ್ತರ ಏನು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ.

 

 

ಕಿಚ್ಚ ಸುದೀಪ್ (kicha Sudeep) ಅವರು ಬಹುಭಾಷಾ ಕಲಾವಿದ. ಕನ್ನಡ ತಮಿಳು ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಕೂಡ ನಟಿಸಿ ತನ್ನದೇ ಆದ ಛಾಪನ್ನು ದೇಶದಾದ್ಯಂತ ಮೂಡಿಸಿರುವ ಇವರು ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಕೂಡ ಹೆಸರು ಮಾಡುತ್ತಿದ್ದಾರೆ. ಸುದೀಪ್ ಅವರು ನಟನೆಯ ಜೊತೆಗೆ ಇನ್ನು ಅನೇಕ ಕಲೆಗಳನ್ನು ಮೈಗೂಡಿಸಿಕೊಂಡಿದ್ದಾರೆ.

ಸದ್ಯಕ್ಕೆ ಸಕಲಕಲಾವಲ್ಲಭ ಎಂದು ಕರೆಯಬಹುದಾದ ಕಿಚ್ಚ ಕೆಸಿಎಲ್ (KCL) ನಾಯಕತ್ವ ವಹಿಸಿಕೊಂಡು ಪ್ರಾಕ್ಟೀಸ್ ಅಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆಯೇ ಕರ್ನಾಟಕಕ್ಕೆ ಮೋದಿ (Modi) ಅವರ ಆಗಮನ ಆಗಿದ್ದು, ಕರ್ನಾಟಕದ ಕೆಲವು ಗಣ್ಯರನ್ನು ಔತಣಕೂಟಕ್ಕೆ ಕರೆದಿದ್ದಾರೆ. ಸಿನಿಮಾ ಇಂಡಸ್ಟ್ರಿಯ ಕೆಲವರನ್ನು ಸಹ ಮರೆಯದ ಮೋದಿ ಅವರು ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಹಾಗೂ ಕಾಂತಾರಸಿನಿಮಾ ಸಕ್ಸಸ್ ಅಲ್ಲಿ ತೇಲುತ್ತಿರುವ ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಅವರನ್ನು ಸಹ ಆಹ್ವಾನಿಸಿದ್ದಾರೆ.

ಚಿತ್ರರಂಗದ ಕಡೆ ಗಮನ ಇರುವುದನ್ನು ಕೂಡ ತೋರ್ಪಡಿಸಿಕೊಂಡು ಅದರ ಕುರಿತು ಮಾತನಾಡಿದ್ದಾರೆ ಎನ್ನುವ ಮಾಹಿತಿಗಳು ಕೂಡ ಹೊರ ಬಿದ್ದಿದೆ. ಇದೆಲ್ಲದರ ನಡುವೆ ಕಿಚ್ಚ ಸುದೀಪ್ ಅವರನ್ನು ಮೀಡಿಯಾದವರು ನಿಮಗೆ ಆಹ್ವಾನ ಇರಲಿಲ್ಲವ ನೀವ್ಯಾಕೆ ಮೋದಿ ಭೇಟಿಗೆ ಹೋಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಸುದೀಪ್ ಅವರು ಕೊಟ್ಟ ಉತ್ತರ ಈ ರೀತಿ ಇತ್ತು.

“ಖಂಡಿತವಾಗಿಯೂ ನನಗೂ ಸಹ ಆಹ್ವಾನ ಇತ್ತು ಡೈರೆಕ್ಟರ್ ಆಫೀಸ್ ಇಂದಾನೆ ಕರೆ ಬಂದಿತ್ತು. ನಾನು ಬರುತ್ತೇನೆ ಎಂತಲೇ ಹೇಳಿದ್ದೆ ಯಾಕೆಂದರೆ ನಮ್ಮ ದೇಶದ ಲೀಡರ್ ಗಳನ್ನು ನಾವು ಗೌರವಿಸುತ್ತೇವೆ. ನಮಗಿಂತ ದೊಡ್ಡವರು ಕರೆದಾಗ ಇಲ್ಲ ಎಂದು ಹೇಳುವಷ್ಟು ದೊಡ್ಡ ಮಟ್ಟದಲ್ಲಿ ನಾವಿಲ್ಲ, ನನಗೆ ಹೋಗಲು ತುಂಬಾ ಖುಷಿ ಸಹಾ ಇತ್ತು ಆದರೆ ಅಲ್ಲಿನ ಪ್ರೊಟೋಕಾಲ್ ತುಂಬಾ ಸ್ಟ್ರಾಂಗ್ ಆಗಿತ್ತು, ಆರ್ ಟಿ ಪಿ ಸಿ ಆರ್ ಕಡ್ಡಾಯವಾಗಿತ್ತು ನೆನ್ನೆಯಿಂದ ನನ್ನ ಹೆಲ್ತ್ ಅಪ್ಸೆಟ್ ಆಗಿದೆ ಹಾಗೂ ಬಾಡಿ ಟೆಂಪರೇಚರ್ ಕೂಡ ಇದೆ ಕೆಸಿಎಲ್ ಅಲ್ಲಿ ಪ್ರಾಕ್ಟೀಸ್ ಜಾಸ್ತಿ ಇರುವುದರಿಂದ ಈ ರೀತಿ ವ್ಯತ್ಯಾಸ ಆಗುತ್ತಿದೆ.

ಅಲ್ಲಿಗೆ ಹೋಗಿ ಆದ ಮೇಲೆ ಈ ಕಾರಣಕ್ಕೆ ಒಳ ಹೋಗಲು ಆಗಲಿಲ್ಲ ಎಂದರೆ ಅದು ಕೂಡ ಅವಮಾನ ಆಗುತ್ತದೆ ಮತ್ತೆ ಮಾಧ್ಯಮದವರು ಆಗಿ ನೀವು ಸಹ ಅದನ್ನೇ ಪ್ರಶ್ನಿಸುತ್ತೀರಾ ಹಾಗಾಗಿ ನನಗೂ ಸಹಜವಾಗಿ ಆ ಒಂದು ಭಯ ಇತ್ತು. ಅದೇ ಕಾರಣಕ್ಕಾಗಿ ನಾನು ಹೋಗದೆ ಉಳಿದುಕೊಂಡಿದ್ದೆ ಅಂತಹ ಒಂದು ಕ್ಷಣವನ್ನು ತಪ್ಪಿಸಿಕೊಂಡಿಲ್ಲ ಅಂತ ಖಂಡಿತವಾಗಿಯೂ ನನಗೆ ಬೇಸರ ಆಗುತ್ತಿದೆ. ಅದೇ ಸಮಯಕ್ಕೆ ಇಂಡಸ್ಟ್ರಿಯ ಕೆಲ ಮಂದಿಗೆ ಆಹ್ವಾನ ಎಂದಾಗ ನನ್ನ ಹೆಸರು ಸಹ ಅದರಲ್ಲಿ ಇತ್ತಲ್ಲ ಎಂದು ಖುಷಿ ಕೂಡ ಆಗುತ್ತಿದೆ.

ಅಲ್ಲಿಗೇ ಹೋಗಲು ಆಗದಿದ್ದಕ್ಕೆ ನಾನು ಸಂಬಂಧ ಪಟ್ಟವರಿಗೆ ಕರೆ ಮಾಡಿ ಕ್ಷಮೆ ಕೂಡ ಯಾಚಿಸಿದ್ದೆನೆ ಮುಂದೆ ಒಂದು ದಿನ ಖಂಡಿತ ಭೇಟಿಯಾಗುತ್ತೇನೆ ಎಂದು ಹೇಳಿದರು. ಇತ್ತೀಚೆಗೆ ಸುದೀಪ್ ಅವರು ರಾಜಕೀಯಕ್ಕೆ ಸೇರುತ್ತಾರೆ ಎನ್ನುವ ಊಹಾ ಪೋಹ ಜೋರಾಗಿದ್ದು ಡಿಕೆ ಶಿವಕುಮಾರ್ ಅವರ ಭೇಟಿ ಅಚ್ಚರಿ ಮೂಡಿಸಿದೆ. ನಡುವೆ ಮೋದಿ ಭೇಟಿ ಅವಕಾಶವನ್ನು ತಪ್ಪಿಸಿಕೊಂಡಿರುವುದರಿಂದ ಸುದೀಪ್ ಅವರ ಮನಸ್ಸಿನಲ್ಲಿ ಏನು ಓಡುತ್ತಿದೆ ಎನ್ನುವ ಅನುಮಾನ ಇನ್ನಷ್ಟು ಜೋರಾಗುತ್ತಿದೆ.

ಪಬ್ಲಿಕ್ ನಲ್ಲೆ ಕಂಠಪೂರ್ತಿ ಕುಡಿದು ಮತ್ತಿನ ಅಮಲಿನಲ್ಲಿ ತೆಳಾಡುತ್ತಿರುವ ನಟಿ ಕಾಜೊಲ್ ಮಗಳು, ಈ ವೈರಲ್ ವಿಡಿಯೋ ನೋಡಿ ಕಣ್ಣಿರಿಟ್ಟ ಕಾಜೋಲ್ & ಅಜಯ್

0

ನಾವು ತೆರೆ ಮೇಲೆ ನೋಡುವ ಸ್ಟಾರ್ಗಳ (Stars) ಬಗ್ಗೆ ವಿಪರೀತವಾದ ಅಭಿಮಾನ ಬೆಳೆಸಿಕೊಂಡಿರುತ್ತೇವೆ. ನಿಜ ಜೀವನದಲ್ಲಿ ಕೂಡ ಇವರ ಪಾತ್ರರಂತೆ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಭಾವಿಸಿಕೊಂಡಿರುತ್ತೇವೆ. ಅದಕ್ಕೆ ಪೂರಕವಾಗಿ ಎಷ್ಟೋ ಸ್ಟಾರ್ ಗಳು ನಿಜ ಜೀವನದಲ್ಲೂ ಕೂಡ ನಾಯಕರು ಎನಿಸಿಕೊಳ್ಳುವ ಕೆಲಸಗಳನ್ನು ಮಾಡಿ ಸಾರ್ವಜನಿಕರಿಗೆ ಸ್ಪೂರ್ತಿಯೂ ಆಗಿದ್ದಾರೆ. ಆ ಸ್ಟಾರ್ ಗಳಂತೇ ಅವರ ಮಕ್ಕಳು (Star kids) ಕೂಡ ಸೆಲೆಬ್ರಿಟಿಗಳೆ ಆಗಿರುವದರಿಂದ ಜನ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಫಾಲೋ ಮಾಡುತ್ತಾ ಗಮನಿಸುತ್ತಲೇ ಇರುತ್ತಾರೆ.

ಆದರೆ ಇತ್ತೀಚಿಗೆ ಸ್ಟಾರ್ ಮಕ್ಕಳುಗಳು ಪಬ್ಲಿಕಲ್ಲಿ ನಡೆದುಕೊಳ್ಳುತ್ತಿರುವ ರೀತಿ ನೋಡಿ ಮಂದಿ ಬಹಳ ಬೇಸರ ಆಗಿದ್ದಾರೆ ಅದರಲ್ಲೂ ಬಾಲಿವುಡ್ (Bollywood) ನಲ್ಲಿರುವ ದೊಡ್ಡ ದೊಡ್ಡ ತಾರೆಗಳ ಮಕ್ಕಳು ಬೇಜಾಬ್ದಾರಿಯಿಂದ ವರ್ತಿಸುವುದನ್ನು ನೋಡಿ ಈ ಬಾರಿ ಅವರಿಗೆ ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಅಜಯ್ ದೇವಗನ್ (Ajay Devgan) ಹಾಗೂ ಕಾಜಲ್ (Khajal) ಪುತ್ರಿ ನೈಸಾ ದೇವಗನ್ (Nysa Devagan) ಕುಡಿದ ಅಮಲಿನಲ್ಲಿ ರಸ್ತೆಯಲ್ಲಿ ಕಾಣಿಸಿಕೊಂಡಿದ್ದರು.

ಸಿದ್ದಾರ್ಥ್ ಮಾಲ್ಹೋತ್ರ ಮತ್ತು ಕಿಯಾರ ಅದ್ವಾನಿ ಅವರ ರಿಸೆಪ್ಶನ್ ಪಾರ್ಟಿ (Party) ಗೆ ಹೋಗಿದ್ದ ನೈಸಾ ಫುಲ್ ಟೈಟಾಗಿ ರೋಡಿಗಿಳಿದಿದ್ದರು. ಕುಡಿದ ಅಮಲಿನಲ್ಲಿ ರಸ್ತೆಯಲ್ಲಿ ಓಲಾಡುತ್ತಿದ್ದ ನೈಸಾ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮತ್ತೊಂದು ವಿಚಾರ ಏನೆಂದರೆ ಇವರು ಇದೇ ಮೊದಲಲ್ಲ. ಈ ಹಿಂದೆ ಕೂಡ ಅನೇಕ ಬಾರಿ ಹೀಗೆ ಕಾಣಿಸಿಕೊಂಡಿದ್ದಾರೆ. ನಿಸಾ ಅವರ ಹಿಂದಿನ ಫೋಟೋಗಳನ್ನು ನೋಡಿದರೆ ಯಾವಾಗಲೂ ಪಾರ್ಟಿಯಲ್ಲಿ ಇರುವುದು, ಮೋಜು-ಮಸ್ತಿ, ಕುಡಿತ ಬಾಯ್ ಫ್ರೆಂಡ್, ಪಾರ್ಟಿ ಇಂತಹ ಫೋಟೋಗಳೇ ಸಿಗುತ್ತವೆ.

ಹಾಗಾಗಿ ಈ ಬಾರಿ ನೈಸಾ ವರ್ತನೆಗೆ ಬಾರಿ ಖಂಡನೆ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವಾಗಿ ತಂದೆಯನ್ನು ಸಹ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ನೈಸಾ ಫೋಟೋ ವೈರಲ್ ಆಗಿ ಟ್ರೋಲ್ (Troll) ಕೂಡ ಆಗುತ್ತಿದೆ. ಕಮೆಂಟ್ ಮಾಡುವವರು ಅಜಯ್ ದೇವಗನ್ ಅವರನ್ನು ವಿಮಲ್ ತಿನ್ನುವುದು ಬಿಟ್ಟು ನಿಮ್ಮ ಮಗಳ ಕಡೆ ಗಮನ ಕೊಡಿ ಎಂದು ದೇವಗನ್ ಗೆ ಬುದ್ಧಿ ಹೇಳುತ್ತಿದ್ದಾರೆ, ಇನ್ನು ಕೆಲವರು ಸೌತ್ ಇಂಡಿಯನ್ ಸ್ಟಾರ್ ಗಳ ಮಕ್ಕಳನ್ನು ನೋಡಿ ಕಲಿಯಿರಿ ಹೇಗೆ ತಂದೆ ತಾಯಿ ಹೆಸರನ್ನು ಉಳಿಸಬೇಕು ಬೆಳೆಸಬೇಕು ಎನ್ನುವುದನ್ನು ಎಂದು ಬುದ್ಧಿ ಸಹ ಹೇಳಿದ್ದಾರೆ.

ಯಾಕೆಂದರೆ ಬಾಲಿವುಡ್ ಅಂಗಳದ ಬಿಗ್ ಸ್ಟಾರ್ ಗಳ ಮಕ್ಕಳು ಈ ರೀತಿ ಬೇಡದ ವಿಷಯಗಳಲ್ಲಿ ಪಬ್ಲಿಸಿಟಿ ಪಡೆಯುವುದು ಹೆಚ್ಚು. ವರ್ಷಗಳ ಹಿಂದೆ ಅಷ್ಟೇ ಶಾರುಖ್ ಪುತ್ರ ಡ್ರ-ಗ್ ಕೇಸ್ ಅಲ್ಲಿ ತಗಲಿ ಹಾಕಿಕೊಂಡಿದ್ದನ್ನು ಜನ ಮರೆತಿಲ್ಲ ಮತ್ತು ಅಮೀರ್ ಖಾನ್ ಅವರ ಪುತ್ರಿಯ ಬೋಲ್ಡ್ ಫೋಟೋಗಳಂತೂ ನೋಡುಗರಿಗೆ ಬಾರಿ ಬೇಸರ ತರಿಸಿದೆ, ಈಗ ಇದೇ ಹಾದಿಯಲ್ಲಿ ನೈಸಾ ದೇವಗನ್ ಕೂಡ ಮುಂದುವರೆದಿದ್ದಾರೆ.

ನೀವು ನಿಮ್ಮ ಇಷ್ಟ ಬಂದ ಹಾಗೆ ಹೇಗೆ ಆದರೂ ಇರಿ ಆದರೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಸ್ವಲ್ಪವಾದರೂ ಸಭ್ಯತೆ ಇರಲಿ. ಸ್ಟಾರ್ಗಳನ್ನು ಫಾಲೋ ಮಾಡುವಂತೆ ಅವರ ಮಕ್ಕಳುಗಳನ್ನು ಕೂಡ ಹಲವಾರು ಫಾಲೋ ಮಾಡುತ್ತಿರುತ್ತಾರೆ. ನಿಮ್ಮ ನಡತೆ ಹಲವರನ್ನು ದಾರಿ ತಪ್ಪಿಸಬಹುದು ಎಂದಿದ್ದಾರೆ. ಈ ವಿಚಾರದಲ್ಲಿ ದಕ್ಷಿಣ ಭಾರತದ ತಾರೆಗಳ ಮಕ್ಕಳನ್ನು ಕೊಂಡಾಡಲೇಬೇಕು. ಈಗಷ್ಟೇ ಮಾಧವನ್ ಮಗ ಸ್ವಿಮ್ಮಿಂಗ್ ಅಲ್ಲಿ ದೇಶಕ್ಕೆ ಪದಕ ತಂದಿದ್ದಾರೆ.

ಮಹೇಶ್ ಬಾಬು, ಪುನೀತ್ ರಾಜಕುಮಾರ್, ಸೂರ್ಯ, ವಿಜಯ್ ಈ ರೀತಿ ಯಾವ ತಾರೆ ಮಕ್ಕಳ ಬಗ್ಗೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ವರೆಗೆ ಈ ರೀತಿಯಾಗಿ ಟ್ರೋಲ್ ಆಗಿಲ್ಲ ಜೊತೆಗೆ ಆ ಮಕ್ಕಳು ಕೂಡ ಈ ರೀತಿ ನಡತೆಯನ್ನು ಹೊಂದಿಲ್ಲ. ತಂದೆ ತಾಯಿ ಸಮಕ್ಕೆ ಹೆಸರು ಮಾಡಲು ಆಗದಿದ್ದರೂ ಆ ಹೆಸರನ್ನು ಉಳಿಸಿಕೊಂಡು ಹೋಗುವ ಹಾದಿಯಲ್ಲಿದ್ದಾರೆ. ಇದೇ ಬುದ್ಧಿ ಬಿ ಟೌನ್ ಮಕ್ಕಳಿಗೂ ಬರಲಿ ಎಂದು ಹರಸೋಣ.

ಹುಟ್ಟುಹಬ್ಬಕ್ಕೆ ವಿಶ್ ಮಾಡಿ, ದರ್ಶನ್ ಗೆ ಬುದ್ದಿವಾದ ಹೇಳಿದ ಪ್ರಥಮ್, ಈತನ ಮಾತು ಕೇಳಿ ಕೆಂಡಮಂಡಲವಾದ ಫ್ಯಾನ್ಸ್ ಅಷ್ಟಕ್ಕೂ ಪ್ರಥಮ್ ದರ್ಶನ್ ಗೆ ಹೇಳಿದ್ದೇನು ಗೊತ್ತ.?

 

ಕನ್ನಡದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರಿಗೆ ಇಂದು ಹುಟ್ಟು ಹಬ್ಬದ (Birthday) ಸಂಭ್ರಮ. 46ನೇ ವಸಂತಕ್ಕೆ ಕಾಲಿಟ್ಟಿರುವ ದರ್ಶನ್ ಅವರ ಮನೆ ಮುಂದೆ ತಡರಾತ್ರಿಯಿಂದಲೇ ಅಭಿಮಾನಿಗಳು ಸೇರಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಮತ್ತು ಈ ಬಾರಿ ದರ್ಶನ್ ಅವರು ಹುಟ್ಟುಹಬ್ಬಕ್ಕೆ ಹಾರ ತುರಾಯಿ ಕೇಕ ತರುವುದು ಬೇಡ ಬದಲಿಗೆ ನಿಮ್ಮ ಕೈಲಾದಷ್ಟು ಧವಸದಾನ್ಯ ತನ್ನಿ ಅವಶ್ಯಕತೆ ಇರುವವರಿಗೆ ತಲುಪಿಸೋಣ ಎನ್ನುವ ಕರೆ ಕೊಟ್ಟಿದ್ದರೆ.

ಅದಕ್ಕೆ ಓಗೊಟ್ಟ ದಚ್ಚು ಸೆಲೆಬ್ರಿಟಿಗಳು ದರ್ಶನ್ ಮನೆಗೆ ಮೂಟೆ ಮೂಟೆ ಗ್ರೋಸರಿ ತಲುಪಿಸಿದ್ದಾರೆ. ಈ ಸಂಭ್ರಮ ನಡುವೆ ಕಣ್ಮರೆಯಾಗಿ ಹೋಗಿತ್ತು. ಎರಡು ವರ್ಷ ಲಾಕ್ಡೌನ್ ಕಾರಣ ಮತ್ತು ಕಳೆದ ವರ್ಷ ಪುನೀತ್ ಅವರ ಅಗಲಿಕೆ ಕಾರಣ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ ಈಗ ಮತ್ತೆ ಅಭಿಮಾನಿಗಳ ಮನಸಲ್ಲಿ ದೀಪಾವಳಿ ಹಾಗೂ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ.

ಇಷ್ಟಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ದರ್ಶನ್ ಅವರಿಗೆ ಅಭಿಮಾನಿಗಳು, ಕಲಾ ರಸಿಕರು ಮತ್ತು ಸಿನಿಮಾ ರಂಗದ ಗಣ್ಯರಿಂದ ಶುಭಾಶಯದ ಮಹಾಪೂರವೇ ಹರಿದು ಬಂದಿದೆ. ದರ್ಶನ್ ಅವರ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿರುವ ಹಲವು ಮಂದಿ ದರ್ಶನ್ ಅವರ ಹುಟ್ಟು ಹಬ್ಬಕ್ಕೆ ಶುರು ಕೋರಿದ್ದಾರೆ. ಈ ಸಾಲಿದಲ್ಲಿ ಒಳ್ಳೆ ಹುಡುಗ ಪ್ರಥಮ್ (Olle huduga Pratham) ಕೂಡ ಸೇರಿದ್ದು, ಹುಟ್ಟು ಹಬ್ಬದ ಶುಭಾಶಯಗಳು ಜೊತೆಗೆ ಒಂದಿಷ್ಟು ಬರಹಗಳನ್ನು ಬರೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ‌

ಪ್ರಥಮ್ ಅವರು ಮಾತಿನ ಮಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ ಸಿನಿಮಾ ರಂಗಕ್ಕೆ ಸಂಬಂಧ ಪಟ್ಟ ಅನೇಕ ವಿಷಯಗಳ ಬಗ್ಗೆ ಸಿನಿಮಾ ವಿಚಾರವಾಗಿ ಸಿನಿಮಾ ತಾರೆಗಳ ವಿಚಾರವಾಗಿ ತಡವಿರದೆ ಮಾತನಾಡುತ್ತಾರೆ ಇವರು. ಇದರೊಡನೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಾಲು ಸಾಲು ಪೋಸ್ಟ್ಗಳನ್ನು ಈ ಕುರಿತು ಹಾಕುತ್ತಲೇ ಇರುತ್ತಾರೆ.

ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಹೇಳುತ್ತಾ, ಎರಡು ಸಲಹೆಗಳನ್ನು ಕೊಟ್ಟಿದ್ದಾರೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ದರ್ಶನ್ ಸರ್ ಈ ಸಮಯದಲ್ಲಿ ನಾನು ಹೇಳುವ ಈ ಎರಡು ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂದು ಹೇಳಿ ಕನ್ನಡ ಚಿತ್ರರಂಗಕ್ಕೆ ಅಂಬರೀಶ್ ಅವರ ಬಳಿಕ ಸಿಕ್ಕಿರುವ ದೊಡ್ಡ ಮಾಸ್ ಹೀರೋ, ನೀವು ನೋಡಿ ನಿಮಗೆ ಎಷ್ಟೊಂದು ದೊಡ್ಡ ಫ್ಯಾನ್ಸ್ ಬಳಗ ಇದೆ. ಇಷ್ಟಿದ್ದ ಮೇಲೆ ಕೂಲಾಗಿರಿ, ಆರಾಮಾಗಿರಿ.

ಮತ್ತೆ ಎರಡನೆಯದಾಗಿ ನಿಮ್ಮ ಹಾಗೂ ಮಾಧ್ಯಮದವರ ನಡುವಿನರುವ ವೈ ಮನಸು ಆದಷ್ಟ ಬೇಗ ದೂರ ಆಗಲಿ ಇದಕ್ಕೆ ಸಂಬಂಧಪಟ್ಟ ಹಾಗೆ ನಿಮ್ಮ ಹಿತ ಬಯಸುವವರು ಮಧ್ಯಸ್ತಿಕೆ ವಹಿಸಿ ಆದಷ್ಟು ಬೇಗ ಇದನ್ನೆಲ್ಲ ಸರಿ ಮಾಡಲಿ. ಅಂಬರೀಶ್ ಅಣ್ಣ ಇಂದು ಬದುಕಿದ್ದರೆ ಈ ವಿವಾದ ಇಷ್ಟು ಬೆಳೆಯಲು ಬಿಡುತ್ತಿರಲಿಲ್ಲ. ಆದಷ್ಟು ಬೇಗ ಸರಿಪಡಿಸಿಕೊಳ್ಳಿ. ಇದೇ ನಿಮ್ಮ ಕಡೆಯಿಂದ ಅಭಿಮಾನಿಗಳಿಗೆ ಸಿಗುವ ಬರ್ತಡೇ ಗಿಫ್ಟ್ ಆಗಲಿ ಎಂದು ಬರೆದುಕೊಂಡಿದ್ದಾರೆ.

ಆದರೆ ಪ್ರಥಮ್ ಅವರ ಈ ಮಾತಿನ ಬಗ್ಗೆ ಅಭಿಮಾನಿಗಳು ಆ.ಕ್ರೋ.ಶ ಹೊರಹಾಕುತ್ತಿದ್ದಾರೆ. ಪ್ರಥಮ್ ಅವರ ಟ್ವೀಟ್ ಗೆ ರೀ ಟ್ವೀಟ್ ಮಾಡುವ ಮೂಲಕ ಹುಟ್ಟು ಹಬ್ಬದ ವಿಶ್ ಮಾಡಿ ಸುಮ್ಮನಾಗಿ ಹೆಚ್ಚಿನ ವಿಷಯ ನಿಮಗೆ ಬೇಡ ಅವರ ಬಗ್ಗೆ ಸಲಹೆ ಕೊಡುವಷ್ಟು ದೊಡ್ಡವನು ನೀನಲ್ಲ ಎಂಬಿತ್ಯಾದಿ ಮಾತುಗಳಿಂದ ಪ್ರಥಮ್ ಅವರನ್ನು ಖಂಡಿಸುತ್ತಿದ್ದಾರೆ.

 

ಡಾ.ರಾಜಕುಮಾರ್ ಜೊತೆ ನಟಿಸುವ ಆಫರ್ ಅನ್ನು ರಜನಿಕಾಂತ್ ರಿಜೆಕ್ಟ್ ಮಾಡಿದ್ಯಾಕೆ ಗೊತ್ತ.? ಅಣ್ಣಾವ್ರ ಜೊತೆ ನಟಿಸಲು ಒಪ್ಪದ ಏಕೈಕ ನಟ ಅಂದ್ರೆ ಅದು ತಲೈವಾ ಮಾತ್ರ.

 

ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಸೂಪರ ಸ್ಟಾರ್ (Super star of Indian cinema industry) ಎಂದು ಕರೆಸಿಕೊಂಡಿರುವ ರಜನಿಕಾಂತ್ (Rajanikanth) ಅವರು ಸದ್ಯಕ್ಕೆ ತಮಿಳು ಚಿತ್ರರಂಗದ ಮೇರು ನಟ. ತಲೈವ ಎಂದೇ ತಮಿಳುನಾಡಿನಲ್ಲಿ ಖ್ಯಾತರಾಗಿರುವ ರಜನಿಕಾಂತ್ ಅವರು ತಮಿಳು ತೆಲುಗು ಹಿಂದಿ ಕನ್ನಡ ಬಂಗಾಳಿ ಹೀಗೆ ದೇಶದ ನಾನಾ ಭಾಷೆಗಳಲ್ಲಿ ನಟಿಸಿ ಬಹುಭಾಷಾ ನಟ ಎಂದು ಕೂಡ ಹೆಸರು ಮಾಡಿದ್ದಾರೆ. ರಜನಿಕಾಂತ್ ಅವರು ಇಂದು ತಮಿಳುನಾಡು ಚಿತ್ರರಂಗವನ್ನು ಆಳುತ್ತಿದ್ದಾರೆ ಎಂದರೆ ಅದು ಸುಳ್ಳಲ್ಲ.

ಯಾಕೆಂದರೆ ಇಂದು ತಮಿಳುನಾಡು ಮಾತ್ರ ಅಲ್ಲದೆ ಇಡೀ ದೇಶವೇ ಇವರ ಸಿನಿಮಾ ರಿಲೀಸ್ ಆಗೋದನ್ನು ಕಾಯುತ್ತಿರುತ್ತದೆ. ಈ ಇಳಿ ವಯಸ್ಸಿನಲ್ಲಿ ಸಹ ಇವರ ಸಿನಿಮಾಗೆ ಇಷ್ಟು ಹವಾ ಇದೆ ಎಂದರೆ ಅದು ಈ ಭಾಷ ನಿಗೆ ಇರುವ ಅಭಿಮಾನಿ ಬಳಗ ಎಂತದ್ದು ಎನ್ನುವುದನ್ನು ತಿಳಿಸುತ್ತದೆ. ರಜನಿಕಾಂತ್ ಅವರು ಇಂದು ತಮಿಳುನಾಡಿನಲ್ಲಿ ಸೆಟಲ್ ಆಗಿದ್ದಾರೆ. ಆದರೆ ಅವರು ಮೂಲತಃ ಕರ್ನಾಟಕದವರು. ಹುಟ್ಟಿ ಬೆಳೆದಿದ್ದು ವಿದ್ಯಾಭ್ಯಾಸ ಮಾಡಿದ್ದೆಲ್ಲಾ ಬೆಂಗಳೂರಿನಲ್ಲಿಯೇ.

ಬೆಂಗಳೂರಿನಲ್ಲಿ ಬಿಟಿಎಸ್ ಬಸ್ ಕಂಡಕ್ಟರ್ (BTS bus conductor) ಆಗಿದ್ದ ಶಿವಾಜಿ ರಾವ್ (Shivaji rao) ರಜನಿಕಾಂತ್ ಆಗಿ ಬದಲಾದ ಕಥೆಯೇ ರೋಚಕ. ಅವರ ಬದುಕಿನ ಕಥೆಯನ್ನು ತೆಗೆದುಕೊಂಡರೆ ಅದೇ ಒಂದು ಸೂಪರ್ ಹಿಟ್ ಸಿನಿಮಾ ಆಗುತ್ತದೆ. ಈ ರೀತಿ ಬದುಕಿನಲ್ಲಿ ಬಂದ ಎಲ್ಲಾ ಅಡೆ-ತಡೆಗಳನ್ನು ಮೆಟ್ಟಿ ನಿಂತು ಹೀರೋ ಆಗಿ ಬೆಳೆದ ಈ ಪಡಿಯಪ್ಪ ನಿಜ ಜೀವನದಲ್ಲಿ ಕೂಡ ನಾಯಕ ನಟನೇ. ರಜನಿಕಾಂತ್ ಅವರು ಇನ್ನು ಸಹ ಕನ್ನಡ ನೆಲದ ನಂಟನ್ನು ಉಳಿಸಿಕೊಂಡಿದ್ದಾರೆ.

ಕನ್ನಡದ ಮೇಲೆ ಅಷ್ಟೇ ಅಪಾರವಾದ ಪ್ರೀತಿಯನ್ನು ಹೊಂದಿದ್ದಾರೆ ಎನ್ನುವುದಕ್ಕೆ ಇತ್ತೀಚೆಗೆ ಕನ್ನಡದ ಕಾಂತರಾ (Kanthara) ಸಿನಿಮಾ ಸೂಪರ್ ಹಿಟ್ ಆಗಿ ಹೆಸರು ಮಾಡಿದ್ದಕ್ಕಾಗಿ ಕಾಂತಾರ ಸಿನಿಮಾದ ನಟ ಹಾಗೂ ನಿರ್ದೇಶಕನಾಗಿದ್ದ ರಿಷಭ್ ಶೆಟ್ಟಿ (Directorand actor Rishabh Shetty) ಅವರನ್ನು ಮನೆಗೆ ಆಹ್ವಾನಿಸಿ ಸನ್ಮಾನಿಸಿದ್ದೆ ಸಾಕ್ಷಿ. ಆರಂಭದ ದಿನಗಳಲ್ಲಿ ಅವಕಾಶಗಳಿಗಾಗಿ ಅಲೆದಾಡುತ್ತಿದ್ದಾಗ ರಜನಿಕಾಂತ್ ಅವರಿಗೆ ಕನ್ನಡ ಚಿತ್ರರಂಗ ಅವಕಾಶ ಕೊಟ್ಟಿತ್ತು.

ಕನ್ನಡದ ಹಲವು ಸಿನಿಮಾಗಳಲ್ಲಿ ಅತಿಥಿ ಪಾತ್ರ ಹಾಗೂ ಖಳನಾಯಕನಾಗಿ ಮತ್ತು ಎರಡನೇ ನಾಯಕನಾಗಿ ಕೂಡ ರಜನಿಕಾಂತ್ ಅವರು ಕಾಣಿಸಿಕೊಂಡಿದ್ದಾರೆ. ಹಾಗೆಯೇ ಕನ್ನಡದ ಹಲವು ಸಿನಿಮಾಗಳ ಆಫರ್ ಗಳನ್ನು ಕೂಡ ಕಾರಣಾಂತರಗಳಿಂದ ರಿಜೆಕ್ಟ್ ಮಾಡಿದ್ದಾರೆ. ಮೊದಲಿಗೆ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ನಾಗರಹಾವು ಸಿನಿಮಾದ ಜಲೀಲ ಪಾತ್ರವನ್ನು ರಜನಿಕಾಂತ್ ಅವರು ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅದನ್ನು ಅವರು ಮಾಡಲಾಗಲಿಲ್ಲ.

ಆನಂತರ ಆ ಅವಕಾಶ ಅಂಬರೀಶ್ ಅವರ ಪಾಲಿಗೆ ಹೋಗಿ ಕರ್ನಾಟಕಕ್ಕೆ ಮತ್ತೊಬ್ಬ ರೆಬೆಲ್ ಸ್ಟಾರ್ ಸಿಕ್ಕುವ ರೀತಿ ಆಯಿತು. ಇದೇ ರೀತಿ ದೊರೆ ಭಗವಾನ್ (Dore Bhaghavan) ಅವರ ನಿರ್ದೇಶನದ ಡಾಕ್ಟರ್ ರಾಜ್ ಕುಮಾರ್ (Dr.Rajkumar) ಅವರ ನಟನೆಯ ಗಿರಿಕನ್ಯೆ (Girikanye) ಸಿನಿಮಾ ಆವರನ್ನು ಕೂಡ ತಲೈವಾ ರಿಜೆಕ್ಟ್ ಮಾಡಿದ್ದರು. ಆ ಸಮಯದಲ್ಲಿ ಬಹಳ ಸಿನಿಮಾಗಳಲ್ಲಿ ರಜನಿಕಾಂತ್ ಅವರು ಬ್ಯುಸಿ ಇದ್ದ ಕಾರಣ ಅವರಿಗೆ ಡಾಕ್ಟರ್ ರಾಜ್ ಅವರೊಂದಿಗೆ ತೆರೆ ಹಂಚಿಕೊಳ್ಳುವ ಆಸೆ ಇದ್ದರೂ ಅಂದು ಆ ಪಾತ್ರದಲ್ಲಿ ಅಭಿನಯಿಸಲು ಆಗಲಿಲ್ಲ.

ನಂತರ ಅದು ವಜ್ರಮುನಿ (Vajramuni) ಅವರ ಪಾಲಿಗೆ ಹೋಯಿತು. ನಂತರ ಗಿರಿಕನ್ಯೆ ಸಿನಿಮಾ ಸೂಪರ್ ಹಿಟ್ ಆಗಿ ಹೊಸ ದಾಖಲೆಯನ್ನು ಮಾಡಿತು. ಅಂದು ಆ ಪಾತ್ರ ಮಾಡಲು ಆಗದಿದ್ದಕ್ಕೆ ಇಂದಿಗೂ ರಜನಿಕಾಂತ್ ಅವರಿಗೆ ಅಣ್ಣಾವ್ರ ಸಿನಿಮಾದಲ್ಲಿ ನಟಿಸಲು ಆಗಲಿಲ್ಲವಲ್ಲಾ ಎನ್ನುವ ನೋವು ಇನ್ನು ಸಹಾ ಕಾಡುತ್ತಿದೆಯಂತೆ.

ಶಿವಣ್ಣ ಮಾಡಿರೋ ಈ ದಾಖಲೆ ನಾ ಮುರಿಯೋಕೆ ಯಾವ ನಟನಿಂದಲೂ ಸಾಧ್ಯವಿಲ್ಲ. ಶಿವಣ್ಣನನ್ನು ಹೊಗಳುವ ಭರದಲ್ಲಿ ಇತರೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಪ್ರಥಮ್

 

ಕರ್ನಾಟಕದಲ್ಲಿ ಒಳ್ಳೆ ಹುಡುಗ ಪ್ರಥಮ್ (Olle huduga Pratham) ಎಂದು ಅವರೇ ಟೈಟಲ್ ಇಟ್ಟುಕೊಂಡಿರುವ ನಟ ಪ್ರಥಮ್ ಅವರು ಬಿಗ್ ಬಾಸ್ (Bigboss) ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ಪರಿಚಿತವಾದರು. ಬಿಗ್ ಬಾಸ್ ಸೀಸನ್ 4ರ ಕಾಮನ್ ಮ್ಯಾನ್ ಕಂಟೆಸ್ಟೆಂಟ್ ಆಗಿ ಮನೆ ಒಳಗೆ ಹೋಗಿದ್ದ ಬಿಗ್ ಬಾಸ್ ಅದುವರೆಗಿನ ಸೀಸನ್ ಗಳ ಮೊದಮೊದಲ ಕಾಮನ್ ಮ್ಯಾನ್ ಆಗಿದ್ದರು ಮತ್ತು ಆ ಬಾರಿಯ ವಿನ್ನರ್ ಕೂಡ ಆದರು. ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟಿದ್ದ ಪ್ರಥಮ್ ಈಗ ಫೇಮಸ್ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ.

ಬಿಗ್ ಬಾಸ್ ಇಂದ ಹೊರಬಂದ ಮೇಲೆ 2018 ರಲ್ಲಿ ಎಂಎಲ್ಎ (MLA) ಅನ್ನುವ ಸಿನಿಮಾ ಮೂಲಕ ನಾಯಕನಾಗಿ (Hero) ಕಾಣಿಸಿಕೊಂಡ ಇವರು ಅದೇ ವರ್ಷ ಬಂದ ದೇವರಂತ ಮನುಷ್ಯ ಎನ್ನುವ ಸಿನಿಮಾದಲ್ಲೂ ಕೂಡ ಹೀರೋ ಆಗಿ ಅಭಿನಯಿಸಿದರು. ನಂತರ ಬಂದ ರಾಜು ಕನ್ನಡ ಮೀಡಿಯಂ ಎನ್ನುವ ಸಿನಿಮಾದಲ್ಲಿ ಮುಖ್ಯಪಾತ್ರ ಒಂದನ್ನು ನಿರ್ವಹಿಸಿದ ಇವರು ಬಹಳ ಬ್ರೇಕ್ ತೆಗೆದುಕೊಂಡು ಈಗ ನಟಭಯಂಕರ (Nata Bhayankara) ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

ಸದ್ಯಕ್ಕೀಗ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾ ಮೂಲಕ ತನ್ನ ನಟಭಯಂಕರ ಸಿನಿಮಾದ ಪ್ರಚಾರ ಮಾಡುತ್ತಿರುವ ಪ್ರಥಮ್ ಅವರು ಸಿನಿಮಾ ರಿಲೀಸ್ ಆಗುವ ಮುನ್ನ ಕೃಷಿ ಮೇಳ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕನ್ನಡ ಸಿನಿಮಾ ಇಂಡಸ್ಟ್ರಿ ಕುರಿತು ಅಪಾರ ಮಾಹಿತಿ ಸಂಗ್ರಹ ಮಾಡಿ ಇಟ್ಟುಕೊಂಡಿರುವ ಪ್ರಥಮ್ ಅವರು ಪ್ರತಿಯೊಬ್ಬ ನಟನ ಪ್ರತಿಯೊಂದು ಸಿನಿಮಾ ವಿಚಾರವನ್ನು ಕೂಡ ಅದು ರಿಲೀಸ್ ಆದ ದಿನದಿಂದ ಹಿಡಿದು ಅದಕ್ಕೆ ಆ ದಿನ ಇದ್ದ ಟಿಕೆಟ್ ದರದ ಸಮೇತವಾಗಿ ಹೇಳುವಷ್ಟು ಆ ವಿಚಾರಗಳಲ್ಲಿ ಆಸಕ್ತಿ ಹೊಂದಿದ್ದಾರೆ.

ಇತ್ತೀಚೆಗೆ ಅವರು ಶಿವಣ್ಣನ (Actor Shivanna) ಕುರಿತು ವೇದಿಕೆ ಮೇಲೆ ಮಾತನಾಡಿರುವ ಆ ವಿಡಿಯೋ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅವರ ಮಾತಿನಲ್ಲಿ ಶಿವಣ್ಣನವರ ಎರಡು ದಾಖಲೆಗಳ (two records) ಕುರಿತು ಮಾತನಾಡಿದ್ದಾರೆ. ವೇದಿಕೆ ಮೇಲೆ ಶಿವರಾಜ್ ಕುಮಾರ್ ಅವರನ್ನು ನೆನೆದ ಮಾತಿನ ಮಲ್ಲ ಪ್ರಥಮ್ ಅವರು ಇನ್ನು ಮುಂದೆ ಆದರೂ ಸರಿ ಇನ್ನೆಷ್ಟು ವರ್ಷಗಳಾದರೂ ಸರಿ ಶಿವಣ್ಣನ ಈ ಎರಡು ದಾಖಲೆಗಳನ್ನು ಯಾರಿಂದಲೂ ಸಹ ಮುರಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರಥಮ್ ಅವರು ಹೇಳಿರುವ ಆ ಎರಡು ದಾಖಲೆಗಳು ಯಾವುದು ಎಂದರೆ ಶಿವಣ್ಣ ಅವರು ಒಬ್ಬ ಸ್ಟಾರ್ ನಟನ ಪುತ್ರನಾಗಿ ಬರೋಬ್ಬರಿ 151 ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಇದಕ್ಕೆ ಬಾಲಿವುಡ್ ನ ಅಮಿತಾ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್ ಮತ್ತು ಮಲಯಾಳಂ ಮುಮ್ಮುಟ್ಟಿ ಪುತ್ರ ದುಲ್ಕರ್ ಸಲ್ಮಾನ್ ಅವರನ್ನು ಉದಾಹರಣೆಯಾಗಿ ಕೊಟ್ಟ ಪ್ರಥಮ್ ಅವರು ಶಿವಣ್ಣ ಒಬ್ಬರೇ ಮೆರುನಟನ ಮಗನಾಗಿ ಈ ರೀತಿ ಇಷ್ಟು ಸಿನಿಮಾಗಳ ಅವಕಾಶ ಪಡೆದಿರುವುದು ಎಂದಿದ್ದಾರೆ.

ಜೊತೆಗೆ ಶಿವಣ್ಣನ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಏನೆಂದರೆ ಅವರ ತಂದೆ ಡಾಕ್ಟರ್ ರಾಜಕುಮಾರ್ ಕಾಲದಲ್ಲಿ ವಿಷ್ಣುವರ್ಧನ್, ಅಂಬರೀಶ್ ಅವರ ಕಾಲದಲ್ಲಿ ರವಿಚಂದ್ರನ್ ಅವರ ಕಾಲದಲ್ಲಿ ಉಪೇಂದ್ರ, ಸುದೀಪ್, ದರ್ಶನ್ ಮತ್ತು ವಿಜಯ ರಾಘವೇಂದ್ರ ರಂತಹ ಯುವ ನಟರ ಕಾಲದಲ್ಲಿ ಮತ್ತು ಯಶ್ ಹೀರೋ ಆಗಿ ಮಿಂಚುತ್ತಿರುವ ಈ ಕಾಲದಲ್ಲಿ ಕೂಡ ಹೀರೋ ಆಗಿಯೇ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈ ಒಂದು ದಾಖಲೆಯನ್ನು ಯಾರಿಂದಲೂ ಸಹ ಮುರಿಯಲು ಸಾಧ್ಯವಿಲ್ಲ ಎಂದು ಹೇಳಿ ಶಿವಣ್ಣನ ಬಗ್ಗೆ ಹಾಡಿ ಹೊಗಳಿದ್ದಾರೆ.

ಎರಡು ಪಕ್ಷದವರು ಮನೆಗೆ ಬಂದಿದ್ದು & ರಾಜಕೀಯ ಮಾತುಕತೆ ಆಗಿದ್ದು ನಿಜ ಸತ್ಯ ಒಪ್ಪಿಕೊಂಡ ಕಿಚ್ಚ. ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಗೊತ್ತ.?

0

 

ಕೆಲ ದಿನಗಳಿಂದ ಕರ್ನಾಟಕದಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರ ರಾಜಕೀಯ ಎಂಟ್ರಿ (Politics entry) ಕುರಿತ ಚರ್ಚೆ ಜೋರಾಗಿ ನಡೆಯುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ಕುರಿತು ಹಲವು ಸುದ್ದಿಗಳು ಹಬ್ಬಿದ್ದು, ಎಲ್ಲಾ ಕಡೆ ರಮ್ಯಾ (Ramya) ಅವರ ಕಡೆಯಿಂದ ಕಾಂಗ್ರೆಸ್ ಪಾಳಯಕ್ಕೆ (Congress Party offer) ಸುದೀಪ್ ಅವರನ್ನು ಎಳೆದುಕೊಳ್ಳಲು ಗಾಳ ಹಾಕಿಸಲಾಗುತ್ತಿದೆ ಎನ್ನುವ ಸುದ್ದಿ ಹಬ್ಬಿದೆ.

ಇದರ ಸತ್ಯಾಂಶದ ಬಗ್ಗೆ ಹಲವರಲ್ಲಿ ಅನುಮಾನ ಇತ್ತು ನಂತರದಲ್ಲಿ ಡಿಕೆ ಶಿವಕುಮಾರ್ (D.K Shivakumar) ಅವರು ಕಿಚ್ಚ ಸುದೀಪ್ ಅವರನ್ನು ಭೇಟಿ (meet) ಮಾಡಿದ್ದು ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿತು. ಇದರ ಬಗ್ಗೆ ಇಷ್ಟು ದಿನ ಎಷ್ಟು ಮಾತುಗಳು ಬರುತ್ತಿದ್ದರು, ಈವರೆಗೆ ಇದರ ಕುರಿತು ಪಕ್ಷವಾಗಲಿ ಅಥವಾ ಸುದೀಪ್ ಅವರಾಗಲಿ ಮಾತನಾಡಿರಲಿಲ್ಲ. ಈಗ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರು ರಾಜಕೀಯ ನಾಯಕರುಗಳು ತಮ್ಮನ್ನು ಭೇಟಿ ಆಗಿರುವುದರ ಕುರಿತು ಮೌನ ಮುರಿದಿದ್ದಾರೆ.

ಇದರ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ಅವರು ನಾನು ಒಬ್ಬ ಸೆಲೆಬ್ರಿಟಿ ರಾಜಕೀಯ ನಾಯಕರುಗಳು ನನ್ನನ್ನು ಭೇಟಿ ಆಗಲು ಬಂದಿದ್ದು ನಿಜ. ಆ ಮಾತನ್ನು ಸುಳ್ಳು ಎಂದು ಹೇಳಿ ನಾನು ತೇಲಿಸಲು ಆಗುವುದಿಲ್ಲ ರಾಜಕೀಯದ ವಿಷಯವಾಗಿ ಕೂಡ ಮಾತುಕತೆ ಆಯಿತು. ಈಗ ಅವರಿಗೆ ನನ್ನ ಮೇಲೆ ನಂಬಿಕೆ ಬಂದಿದೆ ಎರಡು ಪಕ್ಷಗಳ ಕಡೆಯಿಂದಲೂ ಆಫರ್ ಕೂಡ ಇದೆ. ಆದರೆ ನನಗೆ ಬಸವರಾಜ್ ಬೊಮ್ಮಾಯಿ, ಸುಧಾಕರ್, ರಮ್ಯಾ, ಡಿಕೆ ಶಿವಕುಮಾರ್ ಹೀಗೆ ಎಲ್ಲರೊಡನೆ ಒಳ್ಳೆಯ ಬಾಂಧವ್ಯವಿದೆ.

ಹಾಗಾಗಿ ಎರಡು ಪಕ್ಷದಲ್ಲಿ ಒಳ್ಳೆಯ ಸ್ನೇಹಿತರು ಇರುವುದರಿಂದ ಗೊಂದಲದಲ್ಲಿದ್ದೇನೆ. ಸದ್ಯಕ್ಕೆ ನಾನು ಇನ್ನು ಈ ಕುರಿತು ಏನು ನಿರ್ಧಾರ ತೆಗೆದುಕೊಂಡಿಲ್ಲ, ಈ ರೀತಿ ಇದ್ದಾಗ ನಿರ್ಧಾರ ತೆಗೆದುಕೊಳ್ಳುವುದು ಕೂಡ ಬಹಳ ಕಷ್ಟ ಆಗುತ್ತದೆ ಎಂದಿದ್ದಾರೆ. ರಾಜಕೀಯದ ಕುರಿತ ಖಂಡಿತವಾಗಿ ಎಮೋಷನ್ಸ್ ಇದೆ, ಆದರೆ ಅದರ ಜೊತೆ ನಿರ್ಧಾರವನ್ನು ಸೇರಿಸೋಕೆ ಆಗುವುದಿಲ್ಲ. ನಾನು ರಾಜಕೀಯಕ್ಕೆ ಬರುವುದು ಬೇಡ ಎನ್ನುವುದು ಜನರ ಅಭಿಪ್ರಾಯ ಆಗಿರಬಹುದು.

ಒಳ್ಳೆಯದನ್ನು ಮಾಡಬೇಕು ಎನ್ನುವ ಮನಸಿದ್ದರೆ ಅದಕ್ಕೆ ಪವರ್ ಬೇಕು ಎನ್ನುವ ಯಾವ ನಿಯಮಗಳು ಇಲ್ಲ. ಶೀಘ್ರವೇ ಇದರ ಕುರಿತು ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ ಅದಕ್ಕಾಗಿ ಸಮಯ ಬೇಕು ಎಂದು ಸಹ ನುಡಿದಿದ್ದಾರೆ. ಸುದೀಪ್ ಅವರು ರಾಜಕೀಯಕ್ಕೆ ಬರುತ್ತಿದ್ದಾರೆ ಎನ್ನುವ ಮಾತು ಬರುತ್ತಿದ್ದಂತೆ ಹೆಚ್ಚಿನ ಜನ ಅವರು ರಾಜಕೀಯಕ್ಕೆ ಬರುವುದು ಬೇಡ ಎಂದೇ ಅಭಿಪ್ರಾಯ ಪಟ್ಟಿದ್ದರು. ಈ ವಿಷಯದ ಕುರಿತು ಕಾಮೆಂಟ್ ನೀಡಿದವರಲ್ಲಿ ಹೆಚ್ಚಿನ ಮತ ಸುದೀಪ್ ಅವರು ರಾಜಕೀಯಕ್ಕೆ ಬರುವುದು ಬೇಡ ಎನ್ನುವುದಾಗಿತ್ತು.

ಹಾಗಾಗಿ ಇದನ್ನೆಲ್ಲ ಗಮನಿಸಿರುವ ಸುದೀಪ್ ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ಬಗ್ಗೆ ಎಲ್ಲರಿಗೂ ಕುತೂಹಲ ಉಂಟಾಗಿದೆ. ಸದ್ಯದಲ್ಲೇ ಮುಂದಿನ ತಿಂಗಳಿನಲ್ಲಿ ಕರ್ನಾಟಕದಲ್ಲಿ ಎಲೆಕ್ಷನ್ ಬರಲಿದೆ, ಹಾಗಾಗಿ ಸುದೀಪ್ ಅವರು ಏನಾದರೂ ರಾಜಕೀಯದಲ್ಲಿ ಸಂಚಲನ ಸೃಷ್ಟಿ ಮಾಡಲು ನಿರ್ಧರಿಸಿದರೆ ಶೀಘ್ರವೇ ಅದರ ಕುರಿತು ಎಲ್ಲರಿಗೂ ಮಾಹಿತಿ ಸಿಗಲಿದೆ. ಆದರೆ ಕಿಚ್ಚ ಸುದೀಪ್ ಅವರು ಚುನಾವಣೆ ಕುರಿತ ಯಾವ ಚಟುವಟಿಕೆಗಳಲ್ಲಿಯೂ ಈವರೆಗೆ ಕಾಣಿಸಿಕೊಂಡಿಲ್ಲ.

ಬದಲಾಗಿ ಕರ್ನಾಟಕ ಚಲನಚಿತ್ರ ಕಪ್ (KCC) ಎನ್ನುವ ಕ್ರಿಕೆಟ್ ಲೀಗ್ (Cricket league) ಅಲ್ಲಿ ತಂಡದ ನಾಯಕನಾಗಿ ಗೆಲ್ಲುವ ಕಸರತ್ತು ನಡೆಸುತ್ತಿದ್ದಾರೆ. ಅವರ ಮುಂದಿನ ನಡೆ ಏನು ಎನ್ನುವುದನ್ನು ಕಾದು ನೋಡೋಣ ನಿಮ್ಮ ಪ್ರಕಾರ ಸುದೀಪ್ ಯಾವ ಪಕ್ಷವನ್ನು ಆಯ್ಕೆ ಮಾಡಿಕೊಂಡರೆ ಉತ್ತಮ.? ತಪ್ಪದೆ ಕಾಮೆಂಟ್ ಮೂಲಕ ಉತ್ತರಿಸಿ

ಕಾಂತಾರ ಸಿನಿಮಾದ ಅಭಿನಯಕ್ಕಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ನಟ ರಿಷಬ್ ಶೆಟ್ಟಿ ಕಾಂತರಾ ಸಿನಿಮಾ ಸಕ್ಸಸ್ ಗೆ ಮತ್ತೊಂದು ಗರಿ.

 

ಕಾಂತರಾ (Kanthara) ಸಿನಿಮಾ ಕನ್ನಡದ ಒಂದು ಹೆಮ್ಮೆ ಸಿನಿಮಾ. ತುಳುನಾಡಿನ ಭಾಗದ ದೈವದ ಅಂಶವನ್ನು ಪ್ರಧಾನವಾಗಿ ಹೊಂದಿದ್ದ ಈ ಚಿತ್ರವು ದೇಶ ಭಾಷೆಗಳ ಅಂತರವಿಲ್ಲದೆ ಎಲ್ಲರ ಗಮನ ಸೆಳೆದು ಸೂಪರ್ ಹಿಟ್ ಆಗಿದೆ. ಕನ್ನಡ ಸಿನಿಮಾ ವಾಗಿ ಕಡಿಮೆ ಬಜೆಟ್ ಅಲ್ಲಿ ತಯಾರಾಗಿದ್ದರು ಪ್ಯಾನ್ ಇಂಡಿಯಾ ಸಿನಿಮಾ (pan india movie) ಆಗಿ ಹೊರಹೊಮ್ಮುವ ಮೂಲಕ ಹೊಸದೊಂದು ಇತಿಹಾಸವನ್ನೇ ಸೃಷ್ಟಿಸಿದೆ. ರಿಷಭ್ ಶೆಟ್ಟಿ ಅವರಿಗೆ ನಿರ್ದೇಶಕನಾಗಿ ಮತ್ತು ನಟನಾಗಿ ಈ ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿದೆ.

ಈಗಾಗಲೇ ಸಿನಿಮಾ ಹಲವು ವಿಭಾಗಗಳ ದಾಖಲೆಗಳನ್ನು ಮುರಿದಿದ್ದು ಈಗ ಒಂದು ಹೆಜ್ಜೆ ಮುಂದೆ ಹೋಗಿ ಪ್ರಶಸ್ತಿಯ ಭೇಟೆಗಳನ್ನು ಆಡುತ್ತಿದೆ. ಇನ್ನು ಹಲವು ವರ್ಷಗಳ ಕಾಲ ನಡೆಯುವ ಎಲ್ಲಾ ಅವಾರ್ಡ್ ಫಂಕ್ಷನ್ಗಳಿಗೂ ಖಂಡಿತವಾಗಿಯೂ ಕಾಂತಾರ ಸಿನಿಮಾ ಗೆ ಅವಾರ್ಡ್ಗಳು ಬರುತ್ತಲೇ ಇರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾಂತಾರ ಎನ್ನುವ ಕನ್ನಡ ಸಿನಿಮಾ ಆಸ್ಕರ್ ಗೆ ನಾಮಿನೇಟ್ (nominate for Oscar) ಆಗಿರುವುದು ಕನ್ನಡಿಗರ ಸಂತಸವನ್ನು ಇಮ್ಮಡಿಗೊಳಿಸಿತ್ತು.

ಮತ್ತೊಮ್ಮೆ ಈಗ ರಿಷಬ್ ಶೆಟ್ಟಿ ಅಭಿಮಾನಿಗಳು ಮತ್ತು ಕರುನಾಡ ಜನತೆಗೆ ಸಂತಸ ವಾಗುವ ಮತ್ತೊಂದು ವಿಷಯ ಕಾಂತಾರ ಸಿನಿಮಾ ಕುರಿತು ನಡೆದಿದೆ. ಅದೇನೆಂದರೆ ದೇಶದ ಚಿತ್ರೋದ್ಯಮದ ಅತ್ಯಂತ ಶ್ರೇಷ್ಠ ಪ್ರಶಸ್ತಿ ಎಂದು ಕರೆಸಿಕೊಳ್ಳಲಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೆ ರಿಷಭ್ ಶೆಟ್ಟಿ (Rishabh Shetty) ಬಾಜನರಾಗಿದ್ದಾರೆ. ಈ ಕುರಿತ ಅಪ್ಡೇಟ್ ಹೊರಬಿದ್ದಿದ್ದು ಫೆಬ್ರವರಿ 20ರಂದು ಮುಂಬೈ ತಾಜ್ ಲ್ಯಾಂಡ್ ಹೋಟೆಲ್ ಅಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಕಾರಣ ಎಂದು ಹೇಳುವ ಅಗತ್ಯವೇ ಇಲ್ಲ, ಇದೆಲ್ಲಾ ಸಾಧ್ಯ ಆಗಿರುವುದು ಕಾಂತರಾ ಸಿನಿಮಾದ ನಟನೆ ಹಾಗೂ ನಿರ್ದೇಶನದಿಂದ ಎಂದು ಮತ್ತೊಮ್ಮೆ ಹೇಳಬೇಕಾಗಿಲ್ಲ. ಕಾಂತರಾ ಸಿನಿಮಾದಿಂದ ಡಿವೈನ್ ಸ್ಟಾರ್ (Divine star title) ಎಂದು ಬಡ್ತಿ ಪಡೆದಿರುವ ರಿಷಭ್ ಶೆಟ್ಟಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಚಿತ್ರೋದ್ಯಮ ಪ್ರಶಸ್ತಿಯು (Dada Saheb phalke International award) ಭರವಸೆಯ ನಾಯಕ ನಟ ಎನ್ನುವ ವಿಭಾಗದಿಂದ ದೊರೆಯುತ್ತಿದೆ. ಈ ಮೂಲಕ ಕನ್ನಡದ ಕೀರ್ತಿ ಪತಾಕೆ ಹಾರಿಸುತ್ತಿರುವ ರಿಷಬ್ ಶೆಟ್ಟಿ ಅವರಿಗೆ ಅಭಿಮಾನಿಗಳು ಸಂತಸದಿಂದ ಶುಭವನ್ನು ಕೂಡ ಹಾರೈಸಿದ್ದಾರೆ.

ಈಗಷ್ಟೇ ಕಾಂತರಾ ಸಿನಿಮಾವು 100 ದಿನಗಳನ್ನು ಪೂರೈಸಿದ ಸಂಭ್ರಮವನ್ನು ಬೆಂಗಳೂರಿನ ವಿಜಯನಗರದ ಭಂಟರ ಭವನದಲ್ಲಿ ತಂಡ ಆಚರಿಸಿಕೊಂಡಿತ್ತು. ಇಡೀ ಸಭಾಂಗಣವನ್ನು ಕಾಂತಾರ ಸಿನಿಮಾ ಶೂಟಿಂಗ್ ಸೆಟ್ ರೀತಿಯೇ ಸೆಟ್ ಹಾಕಿ ಈ ಚಿತ್ರದ ಸಕ್ಸಸ್ ಆಗಿ ದುಡಿದ ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರಿಗೆ ಸ್ಮರಣಿಕೆ ಕೊಟ್ಟು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾಂತಾರ ಸಿನಿಮಾದ ಮುಂದುವರಿದ ಭಾಗ ಅಲ್ಲ ಹಿಂದಿನ ಕಥೆಯನ್ನು ಸೀಕ್ವೆನ್ಸ್ ಬದಲು ಫ್ರೀಕ್ವೆನ್ಸ್ ಆಗಿ ತರಲಿದ್ದೇವೆ ಎಂದು ಹೇಳಿಕೊಂಡ ರಿಷಭ್ ಶೆಟ್ಟಿ ಅವರು ಆ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ.

ಇದರ ನಡುವೆಯೇ ಮೊನ್ನೆ ಅಷ್ಟೇ ಪ್ರಧಾನಿ ಮೋದಿಯವರು (Prime minister Narendra Modi) ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದ ಸಮಯದಲ್ಲಿ ಇಲ್ಲಿನ ಪ್ರಮುಖರಿಗೆ ಔತಣ ಕೂಟಕ್ಕೆ ಆಹ್ವಾನ ಕೊಟ್ಟಿದ್ದರು ಎನ್ನುವುದು ವಿಶೇಷವಾಗಿತ್ತು. ಕನ್ನಡ ಚಿತ್ರರಂಗದ ಪರವಾಗಿ ರಾಕಿಂಗ್ ಸ್ಟಾರ್ ಯಶ್, ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಮತ್ತು ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಆಹ್ವಾನಿಸಲಾಗಿತ್ತು. ದೇಶದ ಪ್ರಧಾನ ಬಾಯಿಯಲ್ಲೂ ಸಹ ಕಾಂತಾರ ಸಿನಿಮಾದ ಬಗ್ಗೆ ಮಾತುಗಳು ಬಂದಿದ್ದವು ಎನ್ನುವುದು ಸಿನಿಮಾ ಬೀರಿರುವ ಪ್ರಭಾವದ ಆಳವನ್ನು ತಿಳಿಸುತ್ತದೆ.

ಚಿತ್ರರಂಗದಲ್ಲಿ ಅವಕಾಶಗಳಿಲ್ಲದೆ ಕಣ್ಮರೆ ಆಗಿರುವ ನಟ ಗುರುದತ್ ಅವರ ನೋವಿನ ಕಥೆ ಇದು. ಒಮ್ಮೆ ಇವರ ಮಾತು ಕೇಳಿ.

 

ಸಿನಿಮಾ ಬಿಟ್ಟು ಸೀರಿಯಲ್ ಗೆ ಬಂದ ಕಾರಣವನ್ನು ಬೇಸರಿಂದ ಹೇಳಿಕೊಂಡ ಗುರುದತ್ ಹಳ್ಳಿ ರಂಬೆ ಬೆಳ್ಳಿ ಬೊಂಬೆ ಸಿನಿಮಾದ ಹ್ಯಾಂಡ್ಸಮ್ ಹೀರೋ ಬೆಳ್ಳಿ ಕಾಲುಂಗುರ ಸಿನಿಮಾದ ವಿಲನ್ ಜೀವನ ಚೈತ್ರ ಸಿನಿಮಾದಲ್ಲಿ ಡಾಕ್ಟರ್ ರಾಜಕುಮಾರ್ ಅವರಿಗೆ ಮಗನಾಗಿ ಅಭಿನಯಿಸುವ ಅವಕಾಶ ಪಡೆದುಕೊಂಡು, ಸಂಯುಕ್ತ ಚಿತ್ರದಲ್ಲಿ ಶಿವಣ್ಣನಿಗೆ ಸ್ನೇಹಿತರಾಗಿದ್ದ ಗುರುದತ್ (Gueudath) ಅವರು ನಿಜ ಜೀವನದಲ್ಲಿ ಸಹ ಶಿವಣ್ಣನಿಗೆ ಆಪ್ತ ಸ್ನೇಹಿತ.

ಗುರುದತ್ ಅವರು ಆ ಸಮಕಾಲೀನ ಹೀರೋಗಳಷ್ಟೇ ಚಾರ್ಮ್ ಹೊಂದಿದ್ದರೂ, ಟ್ಯಾಲೆಂಟ್ ಇದ್ದರೂ ಸಹ ಹೀರೊ ಆಗಿ ಅಭಿನಯಿಸುವ ಅವಕಾಶಗಳಿಂದ ವಂಚಿತರಾದರು ಎಂದು ಹೇಳಬಹುದು. ಕೇವಲ ಕೆಲವ ಸಿನಿಮಾಗಳಷ್ಟೇ ಅಭಿನಯಿಸಿ ಮಿಂಚಿ ಕಣ್ಮರೆ ಆದಂತಹ ಈ ನಟ ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಬೆರಳಣಿಕೆಯಷ್ಟು ಸಿನಿಮಾಗಳಲ್ಲಿ ಅಷ್ಟೇ ಕಾಣಿಸಿಕೊಂಡಿದ್ದಾರೆ. ಕಿರುತೆರೆ ಕಡೆ ಮುಖ ಮಾಡಿರುವ ಇವರು ಈಗ ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ (Ramachari) ಎನ್ನುವ ಸೀರಿಯಲ್ ಅಲ್ಲಿ ಮುಖ್ಯವಾದ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ.

ಗುರುದತ್ ಅವರು ಕನ್ನಡ ಚಿತ್ರರಂಗದ ಹೆಮ್ಮೆಯ ಹಾಡು ಮತ್ತು ಸಂಭಾಷಣೆ ಬರಹಗಾರ ಚಿ.ಉದಯಶಂಕರ್ (Chi. Udayashankar)ಅವರ ಪುತ್ರ. ಚಿ.ಉದಯಶಂಕರ್ ಅವರು ಕಿರುತೆರೆಯ ಗೋಧೂಳಿ ಅಂತಹ ಸೂಪರ್ ಹಿಟ್ ಸೀರಿಯಲ್ ಗಳ ನಿರ್ಮಾಣಕಾರರು ಹೌದು. ತಮ್ಮದೇ ಪ್ರೊಡಕ್ಷನ್ ಹೌಸ್ ಅಲ್ಲಿ ಅನೇಕ ಧಾರಾವಾಹಿಗಳನ್ನು ನಿರ್ಮಿಸಿರುವ ಗುರುದತ್ ಅವರು ಈಗ ಅವಕಾಶಗಳು ಇಲ್ಲದೆ ಧಾರಾವಾಹಿಯಲ್ಲಿ ಅಭಿನಯಿಸುವ ಪರಿಸ್ಥಿತಿಗೆ ಬಂದಿದ್ದಾರೆ.

ಇದರ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ಗುರುದತ್ ಅವರು ನಿರೂಪಕರು ಕೇಳಿದ ಈ ಪ್ರಶ್ನೆಗೆ ಉತ್ತರಿಸಿದ್ದಾರೆ. ಯಾಕೆ ನೀವು ಸತತವಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆಗೆ ನೇರವಾಗಿ ಸತ್ಯವನ್ನೇ ನುಡಿದಿದ್ದಾರೆ. ಗುರುದತ್ ಅವರು ನಿಜವಾಗಿಯೂ ನನಗೆ ಅವಕಾಶಗಳಿಲ್ಲ ಆದರೆ ಈ ಬಗ್ಗೆ ನಾನು ಬೇಸರ ಪಟ್ಟುಕೊಳ್ಳುವುದಿಲ್ಲ ಖುಷಿಯಿಂದ ಇದ್ದೇನೆ,
ಯಾಕೆಂದರೆ ನಾನು ಇಲ್ಲ ಅಂದರು ನನ್ನ ಶ್ರಮಕ್ಕೆ ಹತ್ತು ಆಪ್ಷನ್ ಗಳು ಈಗ ನಮ್ಮ ಚಿತ್ರರಂಗದಲ್ಲಿ ಇದೆ.

ಈಗ ಸಿನಿಮಾ ರಂಗಕ್ಕೆ ಬರುವವರು ಎಲ್ಲಾ ರೀತಿಯಲ್ಲೂ ಕೂಡ ಪ್ರಿಪೇರ್ ಆಗಿ ಟ್ರೈನ್ ಆಗಿ ಬರುತ್ತಿದ್ದಾರೆ. ಕ್ಯಾರೆಕ್ಟರ್ ಆರ್ಟಿಸ್ಟ್ ಸಹ ಪರ್ಫೆಕ್ಟ್ ಆಗಿ ತಯಾರಾಗಿರುತ್ತಾರೆ. ಹಿಂದೆಲ್ಲಾ ಅಕ್ಕಪಕ್ಕದ ಇಂಡಸ್ಟ್ರಿ ನೋಡಿ ಇದಕ್ಕೆ ಉದಾಹರಣೆ ಕೊಡುತ್ತಿದ್ದ ನಾವು ಈಗ ನಮ್ಮ ಇಂಡಸ್ಟ್ರಿ ಸಮೃದ್ಧವಾಗಿದೆ ಎಂದು ಖುಷಿ ಪಡಬೇಕು. ನನಗೆ ಅವಕಾಶ ಇಲ್ಲ ಎಂದರೆ ಖಂಡಿತ ನನ್ನಲ್ಲೇ ಏನು ಕೊರತೆ ಇರಬೇಕು ಅದನ್ನು ಒಪ್ಪಿಕೊಂಡು ಸಮಾಧಾನ ಪಟ್ಟುಕೊಳ್ಳಬೇಕು ಅಷ್ಟೇ ಎಂದು ಹೇಳಿದ್ದಾರೆ.

ನನಗೆ ಇರುವುದರಲ್ಲಿ ತುಂಬಾ ಖುಷಿ ಹಾಗೂ ಸಮಾಧಾನ ಇದೆ ಎಲ್ಲೇ ಹೋದರು ನನ್ನ ಹೆಸರು ಗೊತ್ತಿಲ್ಲದೇ ಇದ್ದರೂ ಚಿ.ಉದಯಶಂಕರ್ ಮಗ ಎಂದು ಗುರುತಿಸುತ್ತಾರೆ. ನನ್ನ ತಂದೆ ನನಗೆ ಸಾಕಷ್ಟು ಕೊಟ್ಟು ಹೋಗಿದ್ದಾರೆ, ನನಗೆ ಅವರ ಮಗನಾಗಿ ಇರುವುದಕ್ಕೆ ಅರ್ಹತೆ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಅವರನ್ನು ತಂದೆಯಾಗಿ ಪಡೆದಿರುವುದಕ್ಕೆ ನಾನು ಧನ್ಯ. ಈಗಲಾದರೂ ಯಾವುದೋ ರೀತಿಯಲ್ಲಿ ತೆರೆ ಮೇಲೆ ನಾನು ಕಾಣಿಸಿಕೊಳ್ಳುತ್ತಿದ್ದೇನೆ ಅಷ್ಟೇ ಸಮಾಧಾನ.

ಅದರಲ್ಲೂ ಸೀರಿಯಲ್ ಗೆ ಬಂದ ಮೇಲೆ ತುಂಬಾ ಕಲಿತಿದ್ದೇನೆ, ಇತ್ತೀಚಿಗೆ ವೇದ ಸಿನಿಮಾದಲ್ಲಿ ಒಂದೆರಡು ಸೀನ್ ಗಳಲ್ಲಿ ಕಾಣಿಸಿಕೊಂಡಿದ್ದೆ. ಶಿವಣ್ಣನ ನನ್ನನ್ನು ಗುರುತಿಸಿ, ಎಷ್ಟು ಚೆನ್ನಾಗಿ ಆಕ್ಟಿಂಗ್ ಮಾಡೋದು ಕಲಿತುಬಿಟ್ಟಿದ್ದೀಯ ಎಂದು ಪ್ರಶಂಸೆ ಮಾಡಿದರು, ಇದೆಲ್ಲಾ ಒಪ್ಪಿಕೊಳ್ಳಬೇಕು ಎಂದು ಮುಕ್ತವಾಗಿ ಮಾತನಾಡಿದ್ದಾರೆ. ಅವರ ಈ ಮಾತುಗಳನ್ನು ಕೇಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.