Home Blog Page 238

ತರುಣ್ ಅವರನ್ನು ಪ್ರೀತಿಸುತ್ತಿದ್ದ ನಟಿ ಪ್ರಿಯಾಮಣಿ ಇದ್ದಕ್ಕಿದ್ದ ಹಾಗೇ ಮುಸ್ತಫಾ ಅವರನ್ನು ಮದುವೆ ಆಗಿದ್ಯಾಕೆ ಗೊತ್ತ.?

0

 

ನಟಿ ಪ್ರಿಯಾಮಣಿ (Actress Priyamani) ಅವರು ಕನ್ನಡ ಮಾತ್ರವಲ್ಲದೇ ತೆಲುಗು ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲೂ ಕೂಡ ಬೇಡಿಕೆ ಇರುವ ನಟಿ. 2003 ರಲ್ಲಿ ತೆಲುಗಿನ (Thelugu) ಇವರೇ ಆಟಗಾರು (ivare atagaru) ಎನ್ನುವ ಸಿನಿಮಾ ಮೂಲಕ ನಾಯಕ ನಟಿಯಾಗಿ ಕೆರಿಯರ್ ಆರಂಭಿಸಿದ ಇವರು 2007ರಲ್ಲಿ ತಮಿಳಿನಲ್ಲಿ ಕಾರ್ತಿಕ್ (Karthik) ಅವರೊಂದಿಗೆ ಪರುಪತಿವೀರನ್ (Parthiveeran) ಎನ್ನುವ ರೋಮ್ಯಾಂಟಿಕ್ ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದರು.

ಆ ಚಿತ್ರದ ಅಭಿನಯ ಇವರನ್ನು ದೇಶದಾದ್ಯಂತ ಎಲ್ಲರೂ ಗುರುತಿಸುವಂತೆ ಆಯಿತು. ಆ ಸಿನಿಮಾಗಾಗಿ ಫಿಲಂ ಫೇರ್ ಅವಾರ್ಡ್ ಹಾಗೂ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು. ಆ ಚಿತ್ರ ಆಕೆಯ ವೃತ್ತಿ ಬದುಕಿಗೆ ದೊಡ್ಡ ಬ್ರೇಕ್ ನೀಡಿತ್ತು. ನಂತರ ಸಾಲು ಸಾಲು ಸಿನಿಮಾಗಳಲ್ಲಿ ಇವರು ಬ್ಯುಸಿ ಆದರು ಮತ್ತೆ ತೆಲುಗು ಸಿನಿಮಾ ಕಡೆ ಮುಖ ಮಾಡಿದ ಇವರು ನವವಸಂತಂ (Nava vasamtham) ಎನ್ನುವ ಸಿನಿಮಾದಲ್ಲಿ ನಾಯಕನಟ ತರುಣ್ (Hero Tharun) ಅವರಿಗೆ ಜೋಡಿಯಾಗಿ ಕಾಣಿಸಿಕೊಂಡರು.

ಅದುವರೆಗೂ ಬಾಲ ನಟನಾಗಿ ಅಭಿನಯಿಸುತ್ತಿದ್ದ ತರುಣ್ ಅವರು ಆಗಷ್ಟೇ ನುವ್ವೇ ಕಾವಲಿ (Nuvve kavali) ಎನ್ನುವ ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ಹೀರೋ ಆಗಿ ಕಾಣಿಸಿಕೊಂಡರು. ಮೊದಲ ಸಿನಿಮಾದಲ್ಲೇ ಯುವಜನತೆಯಲ್ಲಿ ಕ್ರೇಝ್ ಹುಟ್ಟು ಹಾಕಿದ್ದ ಇವರನ್ನು ಎಲ್ಲರೂ ಇಷ್ಟಪಡುತ್ತಿದ್ದರು. ಬೇರೆ ಎಲ್ಲಾ ಹೀರೋಗಳಿಗಿಂತ ತರುಣ್ ಕಡೆಗೆ ಆಕರ್ಷಣೆ ಹೆಚ್ಚಾಗಿ ಇತ್ತು. ಅದೇ ಸಮಯದಲ್ಲಿ ನವವಸಂತಂ ಸಿನಿಮಾದಲ್ಲಿ ಪ್ರಿಯಾಮಣಿ ಹಾಗೂ ತರುಣ್ ಅವರು ಒಟ್ಟಿಗೆ ಕಾಣಿಸಿಕೊಂಡರು.

ಆ ಸಿನಿಮಾದಿಂದಲೇ ಇವರಿಬ್ಬರ ನಡುವೆ ಪ್ರೀತಿ (love affair) ಇದೆ ಎನ್ನುವ ಗುಸುಗುಸು (gossip) ಆರಂಭವಾಗಿತ್ತು. ಆದರೆ ಯಾವಾಗಲೂ ಎರಡು ಮೂರು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರವಷ್ಟೇ ನಟ ನಟಿ ಬಗ್ಗೆ ಈ ರೀತಿ ಸುದ್ದಿ ಹರಿದಾಡುತ್ತಿತ್ತು. ಆದರೆ ಮೊದಲ ಸಿನಿಮಾದಲ್ಲೇ ತರುಣ್ ಹಾಗೂ ಪ್ರಿಯಾಮಣಿ ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ, ಇಬ್ಬರು ಬಹಳ ಇಷ್ಟ ಪಡುತ್ತಿದ್ದಾರೆ. ಸ್ವತಃ ತರುಣ್ ಅವರ ತಾಯಿಯೇ ಶೂಟಿಂಗ್ ಸೆಟ್ ಗೆ ಹೋಗಿ ಇವರಿಬ್ಬರ ಪ್ರೀತಿ ಬಗ್ಗೆ ಕೇಳಿ, ಇದಕ್ಕೆ ತಮ್ಮದೇನು ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ ಎನ್ನುವ ಗಾಳಿ ಸುದ್ದಿ ಹಬ್ಬಿತ್ತು‌.

ಅದು ಮಾಧ್ಯಮಗಳಲ್ಲೂ ಪ್ರಸಾರವಾಗಿತ್ತು ನಂತರ ಇವರಿಬ್ಬರು ಮದುವೆ ಆಗುತ್ತಾರೆ ಎನ್ನುವ ಭರವಸೆಯೂ ಎಲ್ಲರಲ್ಲಿ ಜೋರಾಗಿತ್ತು. ಆದರೆ ಪ್ರಿಯಮಣಿಯವರು 2017ರಲ್ಲಿ ಮುಸ್ತಫ (Muthsafa) ಅವರನ್ನು ಮದುವೆ (marriage) ಆಗಿದ್ದಾರೆ, ಇವರಿಬ್ಬರದು ಪ್ರೇಮ ವಿವಾಹ ಆಗಿದೆ. ಹಾಗಾದರೆ ತರುಣ್ ಜೊತೆಗಿನ ಸಂಬಂಧ ಮುರಿದು ಬಿತ್ತಾ ಎಂದು ಅನೇಕರಿಗೆ ಅನುಮಾನ ಶುರುವಾಗಿದೆ. ಅಕ್ಷರಶಃ ಆಗ ಪ್ರಸಾರ ಆಗಿದ್ದು ಬರಿ ಊಹಾಪೋಹದ ಸುಳ್ಳು ಸುದ್ದಿ. ಎಲ್ಲೂ ಸಹ ಪ್ರಿಯಮಣಿಯಾಗಲಿ ತರುಣ್ ಅವರೇ ಆಗಲಿ ಈ ಬಗ್ಗೆ ಹೇಳಿಕೊಂಡಿರಲಿಲ್ಲ.

ಜನ ಇವರಿಬ್ಬರ ಜೋಡಿ ನೋಡಿ ಹಾಗೆ ಮಾತು ಹಬ್ಬಿಸಿದ್ದರು ಅಷ್ಟೇ. ಪ್ರಿಯಮಣಿ ಅವರು ಆಗಸ್ಟೇ ಇಂಡಸ್ಟ್ರಿಗೆ ಹೊಸಬರು, ತಮ್ಮ ಮೇಲೆ ಈ ರೀತಿಯ ಒಂದು ಗಾಸಿಪ್ ಹರಿದಾಡುತ್ತಿದೆ ಎನ್ನುವುದೇ ಅವರಿಗೆ ಗೊತ್ತಿರಲಿಲ್ಲ. ಸದ್ಯಕ್ಕೆ ಈಗ ಅವರು ವಿವಾಹವಾಗಿರುವುದರಿಂದ ಎಲ್ಲಾ ಗೊಂದಲಗಳಿಗೂ ತೆರೆ ಬಿದ್ದಿದೆ. ಆದರೆ ಮುಸ್ತಫಾ ಅವರನ್ನು ಮದುವೆ ಆಗಿರುವ ಪ್ರಿಯಮಣಿ ಅವರು ಸಂತೋಷವಾಗಿದ್ದಾರೆ ಎನ್ನುವುದು ಸುಳ್ಳಾಗಿದೆ, ಇತ್ತೀಚೆಗೆ ಇವರಿಬ್ಬರಿಗೂ ಮಗು ಆಗದಿರುವ ವಿಷಯದ ಬಗ್ಗೆ ಮನಸ್ತಾಪವಾಗಿ ಡಿ.ವೋ.ರ್ಸ್ ಆಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಹಿಂದು ಧರ್ಮ ಬಿಟ್ಟು ಆದಿಲ್ ಖಾನ್ ನಾ ಮದ್ವೆ ದೊಡ್ಡ ತಪ್ಪು ಮಾಡ್ದೆ, ಮದ್ವೆ ಆದ್ಮೇಲೆ ಆದಿಲ್ ನನ್ನ ಬೆ-ತ್ತ-ಲೆ ಫೋಟೋ ತೆಗೆದು ಮಾರಟ ಮಾಡಿದ್ದಾನೆ ಎಂದು ಕಣ್ಣೀರು ಹಾಕ್ತಿರೋ ನಟಿ ರಾಖಿ ಸಾವಂತ್

0

 

ಪತಿ ಆದಿಲ್ ಖಾನ್ ಮೇಲೆ ಬೆ.ತ್ತ.ಲೆ ಫೋಟೋ ಮಾರಾಟ ಮಾಡಿರುವ ಆರೋಪ ಹೊರಿಸಿದ ರಾಕಿ ಸಾವಂತ್ ನಟಿ ರಾಖಿ ಸಾವಂತ್ (Rakhi Savanth) ಸಿನಿಮಾ ಇಂಡಸ್ಟ್ರಿಯ ಕಾಂಟ್ರವರ್ಸಿ ಕ್ವೀನ್ (contreversy queen) ಎಂದೇ ಹೆಸರು ಪಡೆದಿರುವ ಈಕೆ ಏನು ಮಾಡಿದರೂ ಕೂಡ ಅದು ವಿವಾದವಾಗುತ್ತದೆ, ಹಾಗೂ ವೈರಲ್ ಆಗಿ ಬಿಡುತ್ತದ. ರಾಖಿ ಸಾವಂತ್ ತಮ್ಮ ನಟನೆಯ ಮೂಲಕ ಹಾಗೂ ವ್ಯಕ್ತಿತ್ವದ ಮೂಲಕ ಕೋಟ್ಯಾಂತರ ಜನರಿಗೆ ಮನರಂಜನೆ ನೀಡುತ್ತಾರೆ.

ಈ ವಿಷಯದಲ್ಲಿ ಎರಡು ಮಾತಿಲ್ಲ ಆದರೆ ಸದಾ ಅದೇ ರೀತಿ ತಮ್ಮ ಎಡವಟ್ಟುಗಳಿಂದ ಅಥವಾ ಹೇಳಿಕೆಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ ಎನ್ನುವುದು ಅಷ್ಟೇ ಸತ್ಯ. ರಾಖಿ ಸಾವಂತ್ ಅವರಿಗೆ ಕಿರುತೆರೆಯಲ್ಲಿ ಹಾಗೂ ಚಿತ್ರರಂಗದಲ್ಲಿ ಬಹಳ ಡಿಮ್ಯಾಂಡ್ ಇದೆ. ಬಿಗ್ ಬಾಸ್ ಅಂತಹ ಬಿಗ್ ಕಾರ್ಯಕ್ರಮಗಳಲ್ಲಿ ಕಂಟೆಸ್ಟೆಂಟ್ ಆಗಿ ಹೋಗಿ ಈಗ ಗೆಸ್ಟ್ ಆಗಿ ಹೋಗಲು ಕೂಡ ಬೇಡಿಕೆಯಲ್ಲಿರುವ ಈ ನಟಿ ಇತ್ತೀಚಿಗೆ ಮದುವೆ ವಿಷಯದಿಂದ (Marriage) ಸುದ್ದಿಯಲ್ಲಿದ್ದಾರೆ.

ಮೊದಲ ಮೊದಲಿಗೆ ಅವರು ಮೈಸೂರು ಹುಡುಗ ಆದಿಲ್ ಖಾನ್ (Adil khan) ಜೊತೆ ಪ್ರೀತಿಯಲ್ಲಿ ಇದ್ದಾರೆ ಎಂದಾಗ ಕನ್ನಡಿಗರು ಸೇರಿದಂತೆ ಎಲ್ಲರೂ ಖುಷಿ ಪಟ್ಟಿದ್ದರು. ಇಬ್ಬರೂ ಕೂಡ ಮದುವೆಯಾಗಿ ಸಂತಸದಿಂದ ಇರಲಿ ಎಂದು ಮನಸಾರೆ ಹರಸಿದ್ದರು ವರ್ಷದ ಹಿಂದೆಯೇ ಮದುವೆ ಆಗಿದ್ದರೂ ರಾಖಿ ಮತ್ತು ಆದಿಲ್ ತಮ್ಮ ಮದುವೆ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದಾರೆ. ಈಗ ಪರಸ್ಪರ ಇಬ್ಬರ ನಡುವೆ ವೈ ಮನಸು (mis understanding) ಮೂಡಿದ್ದು ರಾಖಿ ಸಾವಂತ್ ಮೊದಲಿಗೆ ಮದುವೆ ಆಗಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಆರಂಭದಲ್ಲಿ ಈ ವಿಷಯವನ್ನು ಸುಳ್ಳು ಎಂದೇ ವಾದಿಸುತ್ತಿದ್ದ ಪತಿರಾಯ ಈಗ ಮದುವೆ ಆಗಿರುವ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಇವರಿಬ್ಬರ ಜಗಳ ಈಗ ಪೊಲೀಸ್ ಠಾಣೆ (police station) ಮೆಟ್ಟಿಲು ಹತ್ತುವ ಹೋಗಿದೆ. ರಾಖಿ ಸಾವಂತ್ ತನ್ನ ಪತಿ ತನ್ನ ಮೇಲೆ ದೌ.ರ್ಜ.ನ್ಯ ಮಾಡುತ್ತಾರೆ ಎಂದು ದೂರು ಕೊಟ್ಟಿರುವ ಕಾರಣ ಈಗ 10 ದಿನಗಳ ನ್ಯಾಯಾಂಗ ಬಂಧನದಲ್ಲಿ (arrest) ಆದಿಲ್ ಖಾನ್ ಇದ್ದಾರೆ.

ಸಾಲದ್ದಕ್ಕೆ ರಾಖಿ ಪತಿ ಮೇಲೆ ಸಾಕಷ್ಟು ಆರೋಪಗಳನ್ನು ಮಾಡುತ್ತಿದ್ದು ತನ್ನ ಬೆ.ತ್ತ.ಲೆ ಫೋಟೋಗಳನ್ನು ಕೂಡ ಮಾರಾಟ ಮಾಡುತ್ತಿದ್ದ ಎಂದು ಹೇಳುವ ಮೂಲಕ ಎಲ್ಲಾರಿಗೂ ಶಾ.ಕ್ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ನಟಿ ಸೋಷಿಯಲ್ ಮೀಡಿಯಾದಲ್ಲಿ ತನ್ನ ಪತಿಯಿಂದ ಆಗುತ್ತಿರುವ ಹಿಂಸೆ ಹಾಗೂ ಮೋಸಗಳ ಬಗ್ಗೆ ವರದಿ ಮಾಡುತ್ತಲೇ ಇದ್ದರು, ಆತನಿಗೆ ಬೇರೆ ಹುಡುಗಿ ಜೊತೆ ಅಫೇರ್ ಇದೆ ಅವಳಿಗಾಗಿ ನನ್ನನ್ನು ನಿರ್ಲಕ್ಷ ಮಾಡುತ್ತಿದ್ದಾನೆ.

ನನಗೆ ಮೋಸ ಮಾಡಿ ಅವಳ ಬಳಿ ಹೋದರೆ ಅವನಿಗೂ ಅದೇ ರೀತಿ ಮೋಸ ಆಗುತ್ತದೆ ಎಂದು ಅಬ್ಬರಿಸುತ್ತಿದ್ದ ರಾಖಿ ಸಾವಂತ್ ಈಗ ಅದಕ್ಕೂ ಮೀರಿದ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ನನಗೆ ಮೋಸ ಮಾಡಿ ಅವನು ಅವಳ ಜೊತೆ ಮೂರನೇ ಮದುವೆಯಾಗಲು ರೆಡಿ ಆಗಿದ್ದಾನೆ, ಇದಕ್ಕೆ ನಾನು ಆಸ್ಪದ ಕೊಡುವುದಿಲ್ಲ ಮತ್ತು ಆತ ನನಗೆ ಬಹಳಷ್ಟು ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾನೆ, ದೈಹಿಕವಾಗಿ ಹ.ಲ್ಲೆ ಮಾಡಿದ್ದಾನೆ ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಬೆ‌.ತ್ತ.ಲೆ ಫೋಟೋಗಳನ್ನು ಮಾರಾಟ ಮಾಡುವುದರ ಜೊತೆಗೆ ನನ್ನ ಪಾಸ್ವರ್ಡ್ ಪಡೆದು ಹಣವನ್ನು ಕೂಡ ದೋಚಿ ನಂಬಿಕೆ ದ್ರೋಹ ಮಾಡಿದ್ದಾನೆ.

ಈ ಎಲ್ಲಾ ದಾಖಲೆಗಳು ನನ್ನ ಬಳಿ ಇದೆ, ಪೊಲೀಸರಿಗೆ ಕೊಟ್ಟು ಕೋರ್ಟ್ ಅಲ್ಲಿ ನ್ಯಾಯಕ್ಕೆ ಇಡುತ್ತೇನೆ ಎಂದು ಹೊಸ ವರಸೆ ಆರಂಭಿಸಿದ್ದಾರೆ. ಇದರ ಜೊತೆಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪತಿ ಜೊತೆಗಿರುವ ರೋಮ್ಯಾಂಟಿಕ್ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ, ಇದರಿಂದ ನೆಟ್ಟಿಗರು ಬಹಳ ಕನ್ಫ್ಯೂಸ್ ಆಗಿ ಹೋಗಿದ್ದಾರೆ. ಪ್ರಕರಣ ಮುಂದೇನಾಗುತ್ತದೆ ಕಾದು ನೋಡೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ

ಕೊನೆಗೂ ಬಯಲಾಯ್ತು ರಮ್ಯಾ ಜೊತೆಗಿದ್ದ ಹುಡುಗ ಯಾರು ಎಂದು.! ಸ್ವತಃ ರಮ್ಯಾ ಅವರೇ ಈ ರಿಲೇಷನ್ಶಿಪ್ ಬಗ್ಗೆ ಹೇಳಿಕೊಂಡಿದ್ದಾರೆ. ರಮ್ಯ ಮಾತು ಕೇಳಿ ಎಲ್ರೂ ಶಾ-ಕ್

 

ಚಂದನವನದ (Sandalwood) ಮೋಹಕ ತಾರೆ ರಮ್ಯ (Ramya) ಅವರು ಅತಿ ದೊಡ್ಡ ಫ್ಯಾನ್ ಬೇಸ್ ಹೊಂದಿರುವ ನಟಿ. ಚಿತ್ರರಂಗದಿಂದ ದೂರವಾಗಿ 10 ವರ್ಷಗಳಾಗಿದ್ದರು ಇಂದಿಗೂ ಜನ ಇವರನ್ನೇ ತಮ್ಮ ಫೇವರೆಟ್ ನಟಿ ಎಂದು ಹೇಳುತ್ತಾರೆ ಎಂದರೆ ಅದು ಈಕೆಯ ಮೇಲೆ ಅಭಿಮಾನಿಗಳ ಒಲವು ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ. ಸ್ಯಾಂಡಲ್ವುಡ್ ನ ಪದ್ಮಾವತಿಯೆಂದು ಫೇಮಸ್ ಆಗಿರುವ ರಮ್ಯಾ ಅವರು ವಜ್ರೇಶ್ವರಿ ಸಂಸ್ಥೆ ಮೂಲಕ ಪುನೀತ್ ರಾಜಕುಮಾರ್ (Puneeth Rajkumar) ಅವರೊಂದಿಗೆ ಅಭಿ (Abhi) ಸಿನಿಮಾದಲ್ಲಿ ಅಭಿನಯಿಸಿ ಸಿನಿ ಜರ್ನಿ ಆರಂಭಿಸಿದರು.

ದಿವ್ಯ ಸ್ಪಂದನ (Divya Spandana) ಆಗಿದ್ದ ಈಕೆ ರಮ್ಯಾ ಅಂತ ಹೆಸರು ಬದಲಾಯಿಸಿಕೊಂಡು ಸಿನಿ ಜರ್ನಿ ಶುರು ಮಾಡುತ್ತಾ ಹೊಸದೊಂದು ಹಿಸ್ಟರಿಯನ್ನೇ ಕ್ರಿಯೇಟ್ ಮಾಡಿದರು. ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ಈಕೆ ಪರಭಾಷೆ ಸಿನಿಮಾಗಳು ಆಫರ್ ಪಡೆದು ಅಲ್ಲಿಯ ಹೆಸರು ಮಾಡಿದ್ದರು. ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್ , ರಾಕಿಂಗ್ ಸ್ಟಾರ್ ಯಶ್, ರಿಯಲ್ ಸ್ಟಾರ್ ಉಪೇಂದ್ರ , ತಮಿಳಿನ ಸೂರ್ಯ, ಬಾಲಿವುಡ್ ಬಿಗ್ ಬಿ ಅಮಿತಾಬ್ ಮುಂತಾದವರೊಂದಿಗೆ ತೆರೆ ಶೇರ್ ಮಾಡಿಕೊಂಡಿರುವ ರಮ್ಯಾ ಅವರು ಈಗಲೂ ಸಹ ಚಿತ್ರರಂಗದಲ್ಲಿ ಅಷ್ಟೇ ಬೇಡಿಕೆಯಲ್ಲಿ ಇದ್ದಾರೆ.

ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ರಾಜಕೀಯದತ್ತ (politics)ಮುಖ ಮಾಡಿದ ಈಕೆ ಕಾಂಗ್ರೆಸ್ (Congress) ಪಾಳಯದಲ್ಲಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷದ ರಾಯಭಾರಿಯಾಗಿ ಅನೇಕ ಸಾಮಾಜಿಕ ಕಾರ್ಯಗಳನ್ನು ತೊಡಗಿಕೊಂಡು ರಾಜಕೀಯದಲ್ಲಿ ಸಹ ಸಾಧನೆ ಮಾಡಿದ ಇವರು ಮತ್ತೆ ಅಭಿಮಾನಿಗಳ ಒತ್ತಡಕ್ಕೆ ಮಣಿದು ಸಿನಿಮಾ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ (second innings) ಶುರು ಮಾಡುತ್ತಿದ್ದಾರೆ. ಈ ಬಾರಿ ಅಭಿಮಾನಿಗಳಿಗೆ ಎರಡು ರೀತಿಯಲ್ಲಿ ಸರ್ಪ್ರೈಸ್ ಕೊಡುವ ಮೂಲಕ ಮತ್ತೆ ವಾಪಸ್ಸು ಆಗುತ್ತಿದ್ದಾರೆ.

ತಮ್ಮದೇ ಆದ ಆಪಲ್ ಬಾಕ್ಸ್ (Apple box productions) ಎನ್ನುವ ಪ್ರೊಡಕ್ಷನ್ ಸಂಸ್ಥೆ ಆರಂಭಿಸಿರುವ ಈಕೆ ಒಂದು ಕಡೆ ನಿರ್ಮಾಪಕಿ (as a producer) ಆಗಿ ಮತ್ತು ಡಾಲಿ ಧನಂಜಯ್ (Dolly Dananjay) ಅವರ ಮುಂದಿನ ಚಿತ್ರದಲ್ಲಿ ನಾಯಕ ನಟಿ as a heroine) ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದೇ ವರ್ಷ ಅಭಿಮಾನಿಗಳಿಗೆ ಅವರ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿ (Swathi muththina malehani) ಸಿನಿಮಾ ಮತ್ತು ನಟನೆಯ ಉತ್ತರಕಾಂಡ (Uttarakanda) ಸಿನಿಮಾ ಎರಡು ನೋಡಲು ಸಿಗುವ ಸಾಧ್ಯತೆಗಳಿವೆ.

ನಟಿ ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟಿವ್ ಆಗಿರುತ್ತಾರೆ. ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಸಂಪರ್ಕಿಸುವುದರ ಜೊತೆಗೆ ಸದ್ಯ ಸಮಾಜದಲ್ಲಿ ಆಗುತ್ತಿರುವ ಆಗುಹೋಗುಗಳ ಬಗ್ಗೆ ಮತ್ತು ರಾಜಕೀಯ ವಿಷಯಗಳ ಬಗ್ಗೆಯೂ ಕೂಡ ಕಮೆಂಟ್ ಮಾಡುತ್ತಾ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆ. ಈಗಷ್ಟೇ ನಟಿ ಮಣಿಯರನ್ನು ಟ್ರೋಲ್ ಮಾಡುವ ಬಗ್ಗೆ ಗಟ್ಟಿ ಧ್ವನಿ ಎತ್ತಿದ್ದ ರಮ್ಯಾ ಅವರು ಆಗಾಗ ತಮ್ಮ ಬ್ಯೂಟಿಫುಲ್ ಫೋಟೋಸ್ ಗಳನ್ನು ಕೂಡ ಶೇರ್ ಮಾಡುತ್ತಾರೆ.

ನಟಿ ರಮ್ಯಾ ಅವರೇ ಇನ್ನೂ ಕೂಡ ಸಿಂಗಲ್ ಆಗಿ ಇದ್ದರೇನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ ಮದುವೆ (Marriage) ಬಗ್ಗೆ ಆಸಕ್ತಿ ಇಲ್ಲ ಎಂದು ಹೇಳುವ ನಟಿಮಣಿ ಫೇಸ್ಬುಕ್ ಖಾತೆಯಿಂದ ಹುಡುಗರೊಬ್ಬರ ಜೊತೆ ಆತ್ಮೀಯವಾಗಿರುವ ಫೋಟೋ ಶೇರ್ ಆಗಿತ್ತು, ಆ ಬಳಿಕ ಎಲ್ಲೆಡೆ ಕೂಡ ಅದು ಯಾರು ಎನ್ನುವ ಪ್ರಶ್ನೆ ರಮ್ಯಾ ಅವರಿಗೆ ಎದುರಾಗುತ್ತಿತ್ತು. ಈಗ ಅದಕ್ಕೆ ಉತ್ತರ ಕೊಟ್ಟಿರುವ ರಮ್ಯಾ ಅವರು ಒಂದೇ ಮಾತಿನಲ್ಲಿ ನನಗೆ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡುವುದು ಎಂದರೆ ತುಂಬಾ ಇಷ್ಟ ಅವರು ವಿಹಾನ್ (Vihan) ನನ್ನ ಸ್ಟೈಲಿಸ್ಟ್ (Stylist) ಎಂದು ಹೇಳಿ ಮಾತು ಮುಗಿಸಿದ್ದಾರೆ.

ಕೆಲವು ಮೂಲಗಳ ಪ್ರಕಾರ ರಮ್ಯಾ ಇಷ್ಟ ಪಡುತ್ತಿರುವ ಹುಡುಗ ಇವರೇ ಎಂದು ಹೇಳುತ್ತಿದ್ದಾರೆ ಆದರೆ ಇದು ಎಷ್ಟು ಸುಳ್ಳು ಅಥವಾ ಎಷ್ಟು ಸತ್ಯ ಎಂಬುದನ್ನು ಕಾದು ನೋಡಬೇಕಿದೆ. 40 ವರ್ಷವಾಗಿರುವ ರಮ್ಯಾ ಈಗಲಾದರೂ ಮದುವೆ ಮಾಡಿಕೊಳ್ಳುವ ಮನಸ್ಸು ಮಾಡಲಿ ಎಂದು ರಮ್ಯ ಅಭಿಮಾನಿಗಳು ಆಶಯ ವ್ಯಕ್ತಪಡಿಸುತ್ತಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

ಅನು ಪ್ರಗ್ನೆಂಟ್ ಆಗಿ 6 ತಿಂಗಳಾದ್ರು ಹೊಟ್ಟೆ ಕಾಣ್ತಿಲ್ಲ ಎಂದು ಜೊತೆಯಲ್ಲಿ ಸೀರಿಯಲ್ ತಂಡವನ್ನು ಟ್ರೋಲ್ ಮಾಡುತ್ತಿರುವ ನೆಟ್ಟಿಗರು.

0

 

ಹಿಂದೆಲ್ಲಾ ಮನರಂಜನೆ ಬದುಕಿನ ಒಂದು ಸಣ್ಣ ಭಾಗವಾಗಿತ್ತು, ದಿನಪೂರ್ತಿ ದುಡಿಯುತ್ತಿದ್ದ ಮಂದಿ ಸಂಜೆ ಊಟ ಮಾಡಿ ಪಡಸಾಲೆ ಮೇಲೆ ಕೂತು ಕ್ಷಣ ಹೊತ್ತು ಮಾತನಾಡಿದರೆ ಅದು ಅಲ್ಲಿಗೆ ಮುಗಿಯುತಿತ್ತು, ಅಥವಾ ಶುಕ್ರವಾರ ವಿಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಚಿತ್ರಮಂಜರಿಯ 5 ಹಾಡುಗಳಲ್ಲಿ ಅದು ಮುಗಿದು ಹೋಗುತ್ತಿತ್ತು. ಆದರೆ ನೋಡ ನೋಡುತ್ತಿದ್ದಂತೆ ಈಗ ಕಾಲ ಎಷ್ಟು ಬದಲಾಗಿ ಹೋಗಿದೆ ಎಂದರೆ ಕಳೆದ ಎರಡು ದಶಕದಲ್ಲಿ ಈ ಪ್ರಪಂಚದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ.

ಅದರಲ್ಲಂತೂ ಮನೋರಂಜನೆ ವಿಷಯದಲ್ಲಿ ಇದೊಂದು ದೊಡ್ಡ ಪವಾಡದಂತೆ ಜಾದು ಆಗುತ್ತಿದೆ. ಬದುಕಿನ ಒಂದು ಸಣ್ಣ ಭಾಗವಾಗಿದ್ದ ಮನೋರಂಜನೆ ಇಂದು ದಿನಪೂರ್ತಿ ಆವರಿಸಿಕೊಂಡು ಎಲ್ಲರ ಕೈ ಬೆರಳು ತುದಿಯವರೆಗೂ ಬಂದುಬಿಟ್ಟಿದೆ. ಅದರಲ್ಲಿ ಟಿವಿ ಮಾಧ್ಯಮವೂ (television) ಮನರಂಜನೆಯ (entertainment) ಸಾಧನವಾಗಿ ಕೆಲಸ ಮಾಡುತ್ತಿದೆ ಟಿವಿ ಮಾಧ್ಯಮ ಅಥವಾ ಕಿರುತೆರೆ ಎಂದ ತಕ್ಷಣ ಅದರಲ್ಲಿ ಮೊದಲಿಗೆ ಮನಸ್ಸಿಗೆ ಬರುವುದು ಧಾರವಾಹಿಗಳು (Serials).

ಈ ಧಾರಾವಾಹಿಗಳನ್ನು ಮನೆಯಲ್ಲಿರುವ ಗೃಹಿಣಿಯರ ಆಸಕ್ತಿ ಎಂದು ದೂರುತ್ತಿದ್ದಾದರೂ ಇಂದು ಮಕ್ಕಳ ಸಮೇತ ಎಲ್ಲರೂ ಸಹ ಧಾರಾವಾಹಿಗಳನ್ನು ನೋಡುತ್ತಾರೆ ಅಥವಾ ಧಾರಾವಾಹಿಗಳ ಬಗ್ಗೆ ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ (Social media) ಯುಗ ಶುರುವಾದ ಮೇಲೆ ಯಾರು ಎಲ್ಲಿ ಬೇಕಾದರೂ ಅವರಿಗೆ ಇಷ್ಟ ಬಂದ ಕಾರ್ಯಕ್ರಮ ನೋಡಬಹುದಾದ ಕಾರಣ ಜೊತೆಗೆ ಎಲ್ಲಾ ವಿಷಯಗಳ ಬಗ್ಗೆ ಎಲ್ಲರೂ ಹಂಚಿಕೊಂಡು ಅದು ಎಲ್ಲರಿಗೂ ತಲುಪುತ್ತಿರುವ ಕಾರಣ ಒಂದಲ್ಲ ಒಂದು ಕಾರಣದಿಂದ ಧಾರಾವಾಹಿಯ ವಿಷಯಗಳು ಎಲ್ಲರಿಗೂ ಮುಟ್ಟುತ್ತಿದೆ.

ಈಗ ಇಂತಹದೇ ಒಂದು ಧಾರಾವಾಹಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆ ಆಗುತ್ತಿರುವುದು ಅಲ್ಲದೆ ಆ ಧಾರವಾಹಿಯ ಒಂದು ವಿಷಯವನ್ನು ಟ್ರೋಲ್ ಕೂಡ ಮಾಡಲಾಗುತ್ತಿದೆ. ಜೀ ಕನ್ನಡ ವಾಹಿನಿಯಲ್ಲಿ (Zee kannada) ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಎನ್ನುವ ಧಾರಾವಾಹಿ ಒಂದು ವಿಭಿನ್ನ ಪ್ರೇಮ ಕಥೆ ಎನ್ನುವುದು ಎಲ್ಲರಿಗೂ ತಿಳಿದಿದೆ.

20 ವರ್ಷದ ಹುಡುಗಿ 40ರ ವಯೋಮಾನದ ವಯಸ್ಕರನ್ನು ಪ್ರೀತಿಸಿ ಮದುವೆ ಆಗುವ ಈ ಕಥೆ ಶುರುವಾದ ದಿನದಿಂದ ನಂಬರ್ ಒನ್ ಸ್ಥಾನದಲ್ಲಿದ್ದು ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಅನಿರುದ್ಧ್ (Actor Anirudh) ಅವರು ಆರ್ಯವರ್ಧನ (Aryavardhan role) ಆಗಿ ಈ ಧಾರಾವಾಹಿ ನಲ್ಲಿ ಅಭಿನಯಿಸುತ್ತಿದ್ದರು, ಆದರೆ ಕೆಲ ಕಾರಣಗಳಿಂದ ಅವರು ಧಾರಾವಾಹಿಯಿಂದ ಹೊರಬಂದಿದ್ದಾರೆ. ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ ಗೆ ಅ.ಪ.ಘಾ.ತ.ವಾಗಿ ಅವರು ಸ.ತ್ತು ಹೋದರು ಎಂದು ಎಲ್ಲರೂ ಅಂದುಕೊಂಡಿದ್ದಾರೆ.

ಅದೇ ದಿನ ನಾಯಕಿ ಅನು ಸಿರಿಮನೆ (role Anusirimane) ಗರ್ಭಿಣಿ (pregnant) ಆಗಿದ್ದಾಳೆ ಎನ್ನುವುದು ಎಲ್ಲರಿಗೂ ಶಾಕ್ ನೀಡಿತ್ತು. ಅನು ಸಿರಿಮನೆಯಾಗಿ ಮೇಘ ಶೆಟ್ಟಿ (Megha Shetty)ಅವರು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಈಗ ಅನು ಸಿರಿಮನೆ ಪಾತ್ರದ ಬಗ್ಗೆ ಜೋರಾಗಿರುವುದು ಯಾಕೆಂದರೆ ಅವರು ಗರ್ಭಿಣಿ ಎನ್ನುವ ವಿಷಯ ಹೇಳಿ ಅನೇಕ ತಿಂಗಳುಗಳೇ ಕಳೆದಿವೆ. ಆದರೂ ಕೂಡ ಇನ್ನೂ ಸಹ ಅನು ಸಿರಿಮನೆಯನ್ನು ಮೊದಲಿನಂತೆ ತೋರಿಸಲಾಗುತ್ತಿದೆ, ಆಕೆ ಗರ್ಭಿಣಿ ಎನ್ನುವುದಕ್ಕೆ ಹೊಟ್ಟೆ ಕಾಣುತ್ತಿಲ್ಲ ಎಂದು ನೆಟ್ಟಿಗರು ಕೇಳುತ್ತಿದ್ದಾರೆ.

ಇದೇ ವಿಷಯವನ್ನು ಇಟ್ಟುಕೊಂಡು ಈಗ ಅವರನ್ನು ಟ್ರೋಲ್ (troll) ಸಹಾ ಮಾಡಲಾಗುತ್ತಿದೆ. ಒಂದರ್ಥದಲ್ಲಿ ಜನರು ಧಾರಾವಾಹಿಗಳನ್ನು ಎಷ್ಟು ಗಮನಿಸುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿ. ಯಾಕೆಂದರೆ ದಿನವೂ ತಪ್ಪದೆ ಟಿವಿಯಲ್ಲಿ ಬರುವ ಇವರುಗಳು ತಮ್ಮ ಜೀವನದ ಅವಿಭಾಜ್ಯ ಅಂಗವೆನ್ನುವಂತೆ ಜನ ಭಾವಿಸುತ್ತಾರೆ. ಅವುಗಳು ಪಾತ್ರವೇ ಆಗಿದ್ದರೂ ಪ್ರತಿದಿನ ನೋಡುವುದರಿಂದ ಆ ಪಾತ್ರಗಳ ಜೊತೆಗೆ ಒಂದು ಭಾವನಾತ್ಮಕ ಸಂಬಂಧವನ್ನು ಆ ಪಾತ್ರಗಳೊಂದಿಗೆ ಬೆಸೆದುಕೊಂಡಿರುತ್ತಾರೆ.

ಅದನ್ನು ಇಷ್ಟು ಚೆನ್ನಾಗಿ ಗಮನಿಸಿರುವ ಕಾರಣವಾಗಿಯೇ ಇಂದು ನಾಯಕಿ ಪ್ರೆಗ್ನೆಂಟ್ ವಿಷಯ ಟ್ರೋಲ್ ಆಗುತ್ತಿರುವುದು. ಕಥೆಯಲ್ಲಿ ಈಗಾಗಲೇ ನಾನಾ ಬಗೆಯ ತಿರುವುಗಳು ತೆರೆದುಕೊಂಡಿದೆ, ಈಗ ಅನುಸಿರಿಮನೆ ಹೊಟ್ಟೆಯಲ್ಲಿರುವ ಮಗುವಿನಿಂದ ಧಾರಾವಾಹಿಗೆ ಇನ್ನೊಂದು ಟ್ವಿಸ್ಟ್ ಸಿಗಲಿದೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

ಅವಳಿ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಅಮೂಲ್ಯ ಪತಿ ಜಗದೀಶ್ ಈ ಕ್ಯೂಟ್ ವಿಡಿಯೋ ನೋಡಿ ಮಕ್ಕಳು ಎಷ್ಟು ಮುದ್ದಾಗಿ ಅಪ್ಪನ ಹುಟ್ಟಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.

 

ಕನ್ನಡದ ಗೋಲ್ಡನ್ ಕ್ಲೀನ್ (Golden queen) ಮುದ್ದುಮುಖದ ಚೆಲುವೆ ಐಶು ಎಂದೆ ಕನ್ನಡಿಗರ ಕಡೆಯಿಂದ ಕರೆಸಿಕೊಡುವ ಅಮೂಲ್ಯ (Amulya) ಅಂದರೆ ಈಗಲೂ ಕೂಡ ಕನ್ನಡದ ಹುಡುಗರಿಗೆ ವಿಶೇಷ ಪ್ರೀತಿ. ಬಾಲ್ಯದಿಂದಲೂ ಅಮೂಲ್ಯ ಅವರು ಧಾರವಾಹಿ ಹಾಗೂ ಸಿನಿಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಳ್ಳುತ್ತಿದ್ದ ಕಾರಣ ಚಿಕ್ಕಂದಿನಿಂದಲೂ ಇವರನ್ನು ನೋಡಿಕೊಂಡು ಬೆಳೆದಿರುವುದರಿಂದ ಇವರು ನಮ್ಮ ಪಕ್ಕದ ಮನೆ ಹುಡುಗಿಯ ಎನಿಸುವಷ್ಟು ಹತ್ತಿರದವರಾಗಿದ್ದಾರೆ.

ಅಮೂಲ್ಯ ಅವರು ಚೆಲುವಿನ ಚಿತ್ತಾರ (Cheluvina chiththara) ಸಿನಿಮಾದ ಮೂಲಕ ಮೊಟ್ಟಮೊದಲ ಬಾರಿಗೆ ನಾಯಕ ನಟಿಯಾಗಿ ಕಾಣಿಸಿಕೊಂಡರು. ಶಾಲಾ ಹುಡುಗಿ ಪಾತ್ರ ಮಾಡಿದ್ದ ಇವರು ಎಷ್ಟೇ ವಯಸ್ಸಾಗಿದ್ದರು ಈಗಲೂ ಸಹ ಅದೇ ರೀತಿ ಕಾಣಿಸುತ್ತಾರೆ. ಅಮೂಲ್ಯ ಅವರಿಗೆ ಚೆಲುವಿನ ಚಿತ್ತಾರ ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ಆನಂತರ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ಅವರು ಮಾಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್, ರಾಕಿಂಗ್ ಸ್ಟಾರ್ ಯಶ್, ಅಜಯ್ ಕೃಷ್ಣ, ಚಿರಂಜೀವಿ ಸರ್ಜಾ, ಸೂರಜ್, ದುನಿಯಾ ವಿಜಯ್ ಇನ್ನು ಮುಂತಾದ ಅನೇಕ ನಾಯಕ ನಟರ ಜೊತೆ ಜೋಡಿಯಾಗಿರುವ ಅಮೂಲ್ಯ ಅವರಿಗೆ ಗಣೇಶ್ (Golden star Ganesh) ಅವರು ಜೋಡಿಯಾಗಿರುವ ಸಿನಿಮಾಗಳು ದೊಡ್ಡ ಸಕ್ಸಸ್ ನೀಡಿವೆ. ಗಣೇಶ್ ಹಾಗೂ ಅಮೂಲ್ಯ ಅವರ ಸಂಬಂಧ ಸಿನಿಮಾಗಷ್ಟೇ ಮೀಸಲಿರದೇ ವೈಯಕ್ತಿಕವಾಗಿ ಕೂಡ ಇಬ್ಬರು ಅತ್ಯುತ್ತಮ ಸ್ನೇಹಿತರಾಗಿದ್ದಾರೆ.

ಸ್ವತಃ ಗಣೇಶ್ ದಂಪತಿಗಳೇ ಮುಂದೆ ನಿಂತು ಸ್ವಂತ ಅಣ್ಣನ ಸ್ಥಾನದಲ್ಲಿ ಅಮೂಲ್ಯ ಅವರ ಮದುವೆ ಮಾಡಿಸುವಷ್ಟು ಎರಡು ಕುಟುಂಬದವರು ಆತ್ಮೀಯರಾಗಿದ್ದಾರೆ. ಅಮೂಲ್ಯ ಅವರು ಸಹ ಒಳ್ಳೆ ಒಳ್ಳೆ ಸಿನಿಮಾಗಳ ಅವಕಾಶ ಪಡೆದುಕೊಂಡು ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ಸಿನಿ ಕೆರಿಯರ್ ಇಂದ ಬ್ರೇಕ್ ತೆಗೆದುಕೊಂಡು ವೈವಾಹಿಕ ಜೀವನಕ್ಕೆ (Marriage) ಕಾಲಿಟ್ಟಿದ್ದಾರೆ.

ಯುವ ರಾಜಕಾರಣಿ ಹಾಗೂ ಉದ್ಯಮಿ ಸಹ ಆಗಿರುವ ಜಗದೀಶ್ ರಾಮಚಂದ್ರ (Jagadeesh Ramachandra) ಅವರ ಕೈ ಹಿಡಿದಿರುವ ಅಮೂಲ್ಯ ಅವರು ಕಳೆದ ವರ್ಷ ಶಿವರಾತ್ರಿ ಹಬ್ಬದ ದಿನದಂದು ಅವಳಿ ಗಂಡುಮಕ್ಕಳಿಗೆ ಜನ್ಮ ಕೊಟ್ಟಿದ್ದಾರೆ. ಕೆರಿಯರ್ ಗಾಗಿ ಜೀವನವನ್ನೇ ಬಲಿಕೊಟ್ಟಿಕೊಳ್ಳುವ ನಟಿಮಣಿಯರ ಮಧ್ಯದಲ್ಲಿ ಅಮೂಲ್ಯ ನಡತೆ ಎಲ್ಲರಿಗೂ ಮೆಚ್ಚುಗೆ ಆಗಿದ್ದು, ಬಹಳ ಚಿಕ್ಕವಯಸ್ಸಿಗೆ ತುಂಬಾ ಚೆನ್ನಾಗಿ ಸಂಸಾರವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ ಎಂದು ಕನ್ನಡಿಗರಿಂದ ಬೇಷ್ ಎನಿಸಿಕೊಂಡಿದ್ದಾರೆ.

ಕಳೆದ ವರ್ಷ ಅದ್ದೂರಿಯಾಗಿ ಮಕ್ಕಳ್ಳಿಬ್ಬರಿಗೂ ಅಥರ್ವ (Atharv) ಮತ್ತು ಆಧವ್ (Adhav) ಎಂದು ನಾಮಕರಣ ಸಹ ಮಾಡಿದ್ದರು. ತಾಯಿಯಾಗಿರುವ ಅಮೂಲ್ಯ ಅವರು ತಮ್ಮ ಕುಟುಂಬದ ಜೊತೆ ಬಹಳ ಸಮಯ ಕಳೆಯುತ್ತಿದ್ದಾರೆ. ಮತ್ತು ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿ ಇದ್ದಾರೆ ಆಗಾಗ ತಮ್ಮ ಸುಂದರ ಕುಟುಂಬದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇತ್ತೀಚಿಗಷ್ಟೇ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪತಿ ಹಾಗೂ ಇಬ್ಬರು ಮಕ್ಕಳ ಜೊತೆ ತಮ್ಮ ತೋಟಕ್ಕೆ ಹೋಗಿ ಗೋವುಗಳ ಜೊತೆ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಗೋಲ್ಡನ್ ಕ್ವೀನ್, ಕುಟುಂಬದ ಎಲ್ಲರೂ ಗೋಲ್ಡ್ ಬಣ್ಣದ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರು. ಮತ್ತು ಪ್ರತಿ ತಿಂಗಳೂ ಕೂಡ ಮಕ್ಕಳ ಹುಟ್ಟಿದ ತಿಂಗಳ ಸಂಭ್ರಮವನ್ನು ವರ್ಷದವರೆಗೂ ಆಚರಣೆ ಮಾಡಿರುವ ಅಮೂಲ್ಯ ಅವರು ಆ ಫೋಟೋಗಳನ್ನು ಕೂಡ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ಪತಿ ಹಾಗೂ ಮಕ್ಕಳ ಜೊತೆಗಿನ ಅಮೂಲ್ಯ ಅವರ ಬಹಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಎಲ್ಲರೂ ಇವರ ಕುಟುಂಬಕ್ಕೆ ಮೆಚ್ಚುಗೆಯನ್ನು ಲೈಕ್ ಮೂಲಕ ನೀಡುತ್ತಿದ್ದಾರೆ.

ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ನಟ ದರ್ಶನ್, ಜನ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ದಾಸೋಹದಲ್ಲಿ ಪ್ರಸಾದ ಸೇವಿಸಿದ ಡಿ-ಬಾಸ್

0

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರು ನೂರಾರು ಅಡೆತಡೆಗಳ ನಡುವೆ ತಮ್ಮ ಕ್ರಾಂತಿ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಕಳೆದ ವಾರವಷ್ಟೇ ಕ್ರಾಂತಿ (Kranthi) ಚಿತ್ರವು 100 ಕೋಟಿ ಕ್ಲಬ್ (100cr.club) ಸೇರಿದ ದಾಖಲೆ ಮಾಡಿದೆ. ಕ್ರಾಂತಿ ಚಿತ್ರದ ಇಡೀ ತಂಡ ಒಟ್ಟಿಗೆ ಸೇರಿ ಅದರ ಸಂಭ್ರಮಾಚರಣೆಯನ್ನು ಮಾಡಿ ಸಂತಸ ಪಟ್ಟಿದ್ದಾರೆ ಸಿನಿಮಾ ಗೆದ್ದ ಬೆನ್ನಲ್ಲೇ ದರ್ಶನ್ ಅವರು ಆ ಸಮಯದಲ್ಲಿ ಹಲವಾರು ಕೆಲಸಗಳನ್ನು ಕೈಗೊಂಡಿದ್ದಾರೆ.

ಮೊದಲಿಗೆ ತನ್ನನ್ನು ಪ್ರತಿಬಾರಿ ಬೀಳದಂತೆ ಕೈ ಹಿಡಿದು ಎತ್ತುವ ತನ್ನ ಅಭಿಮಾನಿಗಳನ್ನು ಶಾಶ್ವತವಾಗಿ ನೆನೆಸಿಕೊಳ್ಳುವ ಕಾರಣಕ್ಕಾಗಿ ಎದೆ ಮೇಲೆ ನನ್ನ ಸೆಲೆಬ್ರಿಟೀಸ್ ಎಂದು ಹಚ್ಚೆ (tattoo) ಹಾಕಿಸಿಕೊಂಡು ಅಭಿಮಾನಿ (for fans) ದೇವರುಗಳಿಗೆ ಟ್ರ್ಯುಬ್ಯೂಟ್ ಸಲ್ಲಿಸಿದ್ದಾರೆ. ಮತ್ತು ಇಷ್ಟದೇವತೆಗಳ ದೇವಸ್ಥಾನಕ್ಕೆ ಭೇಟಿಕೊಟ್ಟು ಪೂಜೆ ಸಲ್ಲಿಸುತ್ತಿದ್ದಾರೆ. ಎಲ್ಲಾ ಸ್ಠಾರ್ ಗಳೂ ಕೂಡ ಸಿನಿಮಾ ಗೆದ್ದ ಮೇಲೆ ತಮ್ಮ ನೆಚ್ಚಿನ ದೇವಸ್ಥಾನಕ್ಕೆ ಹೋಗಿ ದೇವರಿಗೆ ಧನ್ಯವಾದಗಳು ಅರ್ಪಿಸಿ ನಮನ ಸಲ್ಲಿಸಿ ಬರುವುದು ಮಾಮೂಲಿ.

ಅಂತೆಯೇ ದರ್ಶನ್ ಅವರು ಸಹ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೈ ಮಹದೇಶ್ವರರ (M.M hills) ಸನ್ನಿಧಾನಕ್ಕೆ ಹೋಗಿ ಮಾದಪ್ಪನ ದರ್ಶನ ಪಡೆದಿದ್ದಾರೆ ದರ್ಶನ್ ಅವರು ಮಹದೇಶ್ವರ ಬೆಟ್ಟಕ್ಕೆ ಹೋಗಿರುವುದು, ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಅಲ್ಲಿಯ ದಾಸೋಹ ಭವನಕ್ಕೆ ಹೋಗಿ ಎಲ್ಲರಂತೆ ಸಾಮಾನ್ಯ ಪಂತಿದಲ್ಲಿ ಕುಳಿತು ಊಟ ಮಾಡಿ ಬಂದಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ದರ್ಶನ್ ಅವರಿಗೆ ಅವರ ಸ್ನೇಹಿತ ಸಚ್ಚಿದಾನಂದ ಮತ್ತು ಮತ್ತಿಬ್ಬರು ಜೊತೆಯಾಗಿದ್ದಾರೆ ದರ್ಶನ್ ಅವರ ಈ ವಿಡಿಯೋ ಜೊತೆ ಮತ್ತಷ್ಟು ವಿಡಿಯೋಗಳು ಕೂಡ ವೈರಲಾಗುತ್ತಿವೆ. ಅದೇನೆಂದರೆ ದಿಢೀರೆಂದು ನೆಚ್ಚಿನ ನಟ ಎದುರು ಕಾಣಿಸಿಕೊಂಡ ಸಂಭ್ರಮದಲ್ಲಿ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿರುವುದು, ದೇವಸ್ಥಾನದಲ್ಲಿ ದರ್ಶನ ಪಡೆದು ಬರುತ್ತಿರುವಾಗ ಅಭಿಮಾನಿಗಳೆಲ್ಲ ನಮ್ಮ ಕಡೆ ನೋಡಿ ಬಾಸ್ ಎಂದು ಕೂಗುತ್ತಿರುವುದು ಕೂಡ ವೀಡಿಯೋದಲ್ಲಿ ಕೇಳುತ್ತಿದೆ.

ದಾಸೋಹ ಭವನದಲ್ಲಿ ಊಟ ಮಾಡುವಾಗ ಕಿಟಕಿಯಿಂದ ನಿಂತು ಅಚ್ಚರಿಯಂತೆ ಅನೇಕ ಅಭಿಮಾನಿಗಳು ಅವರನ್ನು ನೋಡಿ ಕಣ್ತುಂಬಿ ಕೊಳ್ಳುತ್ತಿದ್ದರು. ನಂತರ ದರ್ಶನ್ ಅವರ ಕಾರಿನ ಬಳಿ ಹೋಗಿ ಮುತ್ತಿಗೆ ಹಾಕಿ ದರ್ಶನ್ ಬಗ್ಗೆ ತಮಗಿರುವ ಪ್ರೀತಿಯನ್ನು ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ದರ್ಶನ್ ಅವರ ಸಹ ತಮ್ಮ ಅಭಿಮಾನಿಗಳಿಗೆ ಕೈಬೀಸಿ ಪ್ರತಿಕ್ರಿಯೆ ಕೊಟ್ಟಿದ್ದಾನೆ.

ಆದರೆ ಅಲ್ಲಿನ ಪೊಲೀಸ್ ಸಿಬ್ಬಂದಿಗಂತೂ ಜನರನ್ನು ನಿಯಂತ್ರಿಸಲು ಆಗದೆ ಪರದಾಡುವಂತಾಗಿದೆ. ಒಂದೆಡೆ ದರ್ಶನ್ ಸುರಕ್ಷತೆ ಮತ್ತೊಂದೆಡೆ ಅಭಿಮಾನಿಗಳ ಗಲಾಟೆ. ಇವೆರಡನ್ನು ಪೊಲೀಸರು ಸುಧಾರಿಸುವಷ್ಟರಲ್ಲಿ ಹೈರಾಣಾಗಿ ಹೋಗಿದ್ದಾರೆ. ದರ್ಶನ್ ಅವರನ್ನು ಕಂಡರೆ ಅಭಿಮಾನಿಗಳಿಗೆ ಎಷ್ಟು ಹುಚ್ಚು ಪ್ರೀತಿ ಇದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಇಡೀ ಕರ್ನಾಟಕದಲ್ಲಿ ದರ್ಶನ್ ಅವರಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಇರುವುದು.

ಉತ್ತರದ ಬೀದರ್ ನಿಂದ ಹಿಡಿದು ದಕ್ಷಿಣದ ಚಾಮರಾಜನಗರದ ಪ್ರತಿ ಹಳ್ಳಿಯಲ್ಲೂ ದರ್ಶನ್ ಗೆ ಡೈ ಹಾರ್ಟ್ ಫ್ಯಾನ್ಸ್ ಇದ್ದಾರೆ. ಈ ರೀತಿ ದರ್ಶನ್ ಅಭಿಮಾನಿಗಳನ್ನು ಉಳಿಸಿಕೊಂಡಿದ್ದಾರೆ. ಇನ್ನು ಎರಡು ದಿನಗಳಲ್ಲಿ ದರ್ಶನ್ ಅವರ ಹುಟ್ಟು ಹಬ್ಬ (birthday) ಕೂಡ ಬರಲಿದೆ. ದರ್ಶನ್ ಅವರು ಯಾವಾಗಲೂ ತಮ್ಮ ಹುಟ್ಟುಹಬ್ಬಕ್ಕೆ ತಪ್ಪದೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ (Mysore Chamundeshwari Temple) ಭೇಟಿ ಕೊಡುತ್ತಾರೆ. ತಾಯಿ ಚಾಮುಂಡೇಶ್ವರಿ ಹಾಗೂ ಮಲೈ ಮಹದೇಶ್ವರ ಆಶೀರ್ವಾದದಿಂದ ದರ್ಶನ್ ಆವರಿಗೆ ಇನ್ನಷ್ಟು ಗೆಲವು ಸಿಗಲಿ, ಮುಂದಿನ ಭವಿಷ್ಯ ಮತ್ತಷ್ಟು ಸುಂದರವಾಗಿರಲಿ ಎಂದು ಹರಸೋಣ.

ಎದೆಯ ಮೇಲೆ “ನನ್ನ ಸೆಲೆಬ್ರಿಟೀಸ್” ಅಂತ ಟ್ಯಾಟೋ ಹಾಕಿದ ವ್ಯಕ್ತಿಗೆ ದರ್ಶನ್ ಕೊಟ್ಟ ದುಬಾರಿ ಸಂಭಾವನೆ ಏನು ಗೊತ್ತಾ.?

 

ವಿಶ್ವದಲ್ಲೇ ಸ್ಟಾರ್ ನಟನೊಬ್ಬ ತನ್ನ ಅಭಿಮಾನಿಗಳಿಗಾಗಿ ಅವರ ಹೆಸರನ್ನು ಟ್ಯಾಟು (Tatoo) ಹಾಕಿಸಿಕೊಂಡಿದ್ದಾರೆ ಅಂದರೆ ಅದು ಸ್ಯಾಂಡಲ್ವುಡ್ನ ದಾಸ ಮಾತ್ರ. ಡಿ ಬಾಸ್ (D Boss) ಅಭಿಮಾನಿಗಳ (fans) ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಎನ್ನುವುದಕ್ಕೆ ಅವರು ಅವರನ್ನು ಅಭಿಮಾನಿಗಳು ಎಂದು ಕರೆಯದೆ ನನ್ನ ಸೆಲೆಬ್ರೆಟೀಸ್ (celebrates) ಎಂದು ಕರೆಯುವುದೇ ಸಾಕ್ಷಿ. ಇನ್ನು ಅಭಿಮಾನಿಗಳ ಪಾಲಿಗಂತೂ ಬಾಕ್ಸಾಫೀಸ್ ಸುಲ್ತಾನನ್ನು ಕಂಡರೆ ಅದೆಂತಹದೋ ವಿಶೇಷ ಪ್ರೀತಿ.

ಇದುವರೆಗೂ ದರ್ಶನ್ ಅವರ ವಿವಾದ ಏನೇ ಇದ್ದರೂ ಎಷ್ಟೇ ಬಾರಿ ಅವರು ಬಿದ್ದಿದ್ದರು ಅವರ ಬೆಂಗಾವಲಾಗಿ ನಿಂತಿರುವುದು ಅವರ ಅಭಿಮಾನಿಗಳೇ. ಈ ಬಾರಿ ಕೂಡ ಅಭಿಮಾನಿಗಳಿಗೆ ಕ್ರಾಂತಿ (Kranthi) ಕೂಡ ದೊಡ್ಡ ಸವಾಲಾಗಿತ್ತು, ಪ್ರಚಾರ ಇಲ್ಲದೆ ಇದ್ದರೂ ನೆಗೆಟಿವ್ ವಿಮರ್ಷೆಗಳ ಪಿತೂರಿ ನಡುವೆಯೂ ಅಭಿಮಾನಿಗಳು ಸಿನಿಮಾವನ್ನು ಗೆಲ್ಲಿಸಿ ನೂರು ಕೋಟಿ ಕ್ಲಬ್ (100 cr. club) ಸೇರಿಸಿದ್ದಾರೆ. ಅವರ ಈ ಪ್ರೀತಿಗೆ ದಚ್ಚು ಕೂಡ ಈಗ ಅಷ್ಟೇ ಪ್ರೀತಿಯಿಂದ ಅಭಿಮಾನದ ಉಡುಗೊರೆ ಕೊಟ್ಟಿದ್ದಾರೆ.

ನನ್ನ ಅಭಿಮಾನಿಗಳಿಗೆ ವಿಶೇಷ ರೀತಿಯಲ್ಲಿ ಟ್ರುಬ್ಯೂಟ್ ಸಲ್ಲಿಸಬೇಕು ಎನ್ನುವ ಕಾರಣಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಎದೆ ಮೇಲೆ ನನ್ನ ಸೆಲೆಬ್ರಿಟಿಸ್ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದೊಂದು ಪರ್ಮನೆಂಟ್ ಟ್ಯಾಟು ಆಗಿದ್ದು ದರ್ಶನ್ ಅವರೇ ಸ್ವತಃ ವಿಡಿಯೋ ಮೂಲಕ ಇದು ನನ್ನನ್ನು ಇಷ್ಟು ಪ್ರೀತಿಸುತ್ತಿರುವ ನನ್ನ ಮೇಲೆ ಇಷ್ಟು ವಿಶ್ವಾಸ ಇಟ್ಟಿರುವ ನನ್ನ ಪ್ರೀತಿಯ ಸೆಲೆಬ್ರಿಟಿಸ್ ಗಳಿಗೆ ಅರ್ಪಣೆ ಎಂದು ಹೇಳಿದ್ದಾರೆ.

ಇದುವರೆಗೆ ತನ್ನ ನೆಚ್ಚಿನ ಸ್ಟಾರ್ ನ ಸಿನಿಮಾ ಹೆಸರನ್ನು ಅಥವಾ ಅವರ ಹೆಸರನ್ನೇ ಅಭಿಮಾನಿಗಳು ಹಾಕಿಸಿಕೊಂಡಿರುವುದನ್ನು ನಾವು ನೋಡುತ್ತಿದ್ದೆವು, ಮೊದಲ ಬಾರಿಗೆ ನಟನೊಬ್ಬ ಈ ರೀತಿ ಅಭಿಮಾನಿಗಳಿಗೆ ಅಭಿಮಾನ ತೋರಿರುವುದು ಇತಿಹಾಸದಲ್ಲೇ ಮೊದಲು. ಇನ್ನು ದರ್ಶನ್ ಅವರು ಈ ಟ್ಯಾಟುವನ್ನು ಬೆಂಗಳೂರಿನ ಅಶೋಕ ನಗರ ಸಮೀಪ ಇರುವ ಬ್ರಹ್ಮ ಟ್ಯಾಟೂಸ್ ಸ್ಟುಡಿಯೋದಲ್ಲಿ (Brahma tattoos studio) ಹಾಕಿಸಿಕೊಂಡಿದ್ದಾರೆ.

ಈ ಸ್ಟುಡಿಯೋ ನ ಆರ್ಟಿಸ್ಟ್ ಮತ್ತು ಓನರ್ ಕೂಡ ಆಗಿರುವ ಗಿರೀಶ್ ಬಿ ವಿ (Girish B V) ಅವರೇ ದರ್ಶನ್ ಅವರಿಗೆ ಈ ಟ್ಯಾಟು ಹಾಕಿದ್ದಾರೆ. ಈಗ ಎಲ್ಲಾ ಕಡೆ ವಿಚಾರ ಪ್ರಚಾರ ಆಗಿದ್ದು ಅಭಿಮಾನಿಗಳಂತೂ ದಿಲ್ ಖುಷ್ ಆಗಿದ್ದಾರೆ. ಈ ಕಾರಣದಿಂದಲೇ ನಾವು ದರ್ಶನ್ ಅವರನ್ನು ಇಷ್ಟು ಇಷ್ಟಪಡುತ್ತಿರುವುದು, ಕೊನೆವರೆಗೂ ನಾನು ಡಿ ಬಾಸ್ ಅಭಿಮಾನಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಟ್ಯಾಟು ಹಾಕಿರುವವರಿಗೆ ಕೊಟ್ಟಿರುವ ಸಂಭಾವನೆ ವಿಷಯ ಕೂಡ ಚರ್ಚೆ ಆಗುತ್ತಿದೆ.

ದರ್ಶನ್ ಅವರು ಕಲೆಗೆ ಬೆಲೆ ಕಟ್ಟುವುದು ಅಸಾಧ್ಯ, ಆದರೆ ಇದಕ್ಕಾಗಿ ನಾನು ನಿಮಗೆ ಕೆಲಸದ ಹಣವನ್ನು ಕೊಡದೆ ವಂಚಿಸಲಾರೆ ಹಾಗಾಗಿ ಎಷ್ಟು ಹಣ ಕೊಡಬೇಕು ಎಂದು ಕೇಳಿದ್ದಾರೆ. ಮೊದಲಿಗೆ ಹಣ ತೆಗೆದುಕೊಳ್ಳಲು ಆರ್ಟಿಸ್ಟ್ ಒಪ್ಪದೆ ಹೋದರು ಕೊನೆಗೆ ಅವರ ಒತ್ತಾಯಕ್ಕೆ ಮಣ್ಣಿದು ಟ್ಯಾಟು ಹಾಕಲು ಆದ ಖರ್ಚನ್ನು ಹೇಳಲೇಬೇಕಾಯಿತು. ಆದರೆ ದರ್ಶನ್ ಅವರು ಆ ಖರ್ಚಿನ ಮೂರು ಪಟ್ಟು ಹಣ ಕೊಡುವ ಮೂಲಕ ಆರ್ಟಿಸ್ಟ್ ಗೆ ಸರ್ಪ್ರೈಸ್ ಮಾಡಿದ್ದಾರೆ. ಇದನ್ನು ಸ್ವತಃ ಟ್ಯಾಟು ಹಾಕಿದ ಆರ್ಟಿಸ್ಟ್ ಗಿರೀಶ್ ಬಿ.ವಿ ಅವರೇ ಹೇಳಿಕೊಂಡಿದ್ದಾರೆ. ಇದೆಲ್ಲಾ ಡಿ ಬಾಸ್ ನ ಹೃದಯವಂತಿಕೆ ಎನ್ನುವುದು ಹಾಗೂ ದರ್ಶನ್ ತೆರೆ ಮೇಲೆ ಮಾತ್ರ ಹೀರೊ ಅಲ್ಲ ತೆರೆ ಹಿಂದೆಯೂ ತಾನು ನಾಯಕ ಎನ್ನುವುದನ್ನು ಡಿ ಬಾಸ್ ಸಾಬೀತು ಪಡಿಸಿದ್ದಾರೆ.

ಅಂಬೇಡ್ಕರ್, ಬಸವಣ್ಣ, ಶ್ರೀ ರಾಮನ ಕುರಿತು ಹಾಸ್ಯ ಮಾಡುವುದು ತಪ್ಪಲ್ಲ ಎಂಬ ಮತ್ತೊಂದು ವಿವಾದಾತ್ಮಕ ಹೇಳಿಕ ನೀಡಿದ ನಟ ಅಹಿಂಸ ಚೇತನ್.

0

 

ಆ ದಿನಗಳು, ಬಿರುಗಾಳಿ, ಮೈನಾ ಸಿನಿಮಾ ಖ್ಯಾತಿಯ ನಟ ಚೇತನ್ (Actor Chethan) ಅವರು ಸದಾ ಒಂದಲ್ಲ ಒಂದು ವಿವಾದಗಳಲ್ಲಿ (contreversy) ಸಿಲುಕಿಕೊಂಡಿರುತ್ತಾರೆ. ಇವರೇ ಕಾಂಟ್ರವರ್ಸಿಯನ್ನು ಹುಡುಕಿ ಹೋಗುತ್ತಾರೋ ಅಥವಾ ಇವರು ಮಾತನಾಡುವುದಿಲ್ಲವೂ ವಿವಾದವಾಗುತ್ತದೋ ಗೊತ್ತಿಲ್ಲ ವಿವಾದಾತ್ಮಕ ನಟ ಚೇತನ್ ಎನಿಸಿಕೊಂಡಿದ್ದಾರೆ. ಸಿನಿಮಾಗಳ ಜೊತೆ ಸಾಕಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಆಗಾಗ ಸರ್ಕಾರದ ವಿರುದ್ಧ ಅಥವಾ ಕೆಲವು ಪ್ರಚಲಿತ ಘಟನೆ ಬಗ್ಗೆ ಮಾತನಾಡಿ ವಿವಾದಕ್ಕೂ ಸಿಲುಕುತ್ತಾರೆ.

ಅವರು ಏನೇ ಮಾತನಾಡಿದರು ಅದನ್ನು ಸಹಿಸಿಕೊಳ್ಳಲು ನಮ್ಮವರಿಗೆ ಆಗುತ್ತಿಲ್ಲ. ಹೆಚ್ಚಾಗಿ ಅವರು ದೇಶದ ಸಂವಿಧಾನದ ಬಗ್ಗೆ ಹಾಗೂ ಈ ದೇಶದ ಆಚಾರ ವಿಚಾರಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಈಗಷ್ಟೇ ಕಾಂತರಾ ಸಿನಿಮಾದ ಬಗ್ಗೆ ಮಾತನಾಡಲು ಹೋಗಿ ಎಲ್ಲರನ್ನು ಛೀಮಾರಿ ಹಾಕಿಸಿಕೊಂಡಿದ್ದ ಅಹಿಂಸಾ ಚೇತನ್ ಅವರು ಮತ್ತೆ ಅಂಬೇಡ್ಕರ್ (Ambekdkar) ಅವರ ಅವಹೇಳನ ಮಾಡಿ ನಾಟಕ ಮಾಡಿದ್ದ ವಿದ್ಯಾರ್ಥಿಗಳ (students) ಪರ ವಕಾಲತ್ತು ವಹಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆಯನ್ನು ಹಾಕುವ ಮೂಲಕ ಇನ್ನಷ್ಟು ಜನರ ಬೇಸರಕ್ಕೆ ಕಾರಣ ಆಗಿದ್ದಾರೆ.

ಬೆಂಗಳೂರಿನ ಜೈನ್ ಯುನಿವರ್ಸಿಟಿಯಲ್ಲಿ (Jain University) ಯುವಜನೋತ್ಸವ ಕಾರ್ಯಕ್ರಮದ ಪ್ರಯುಕ್ತ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ನೃತ್ಯ, ಹಾಸ್ಯ, ನಾಟಕ ಇಂತಹ ಭಾಗಗಳಲ್ಲಿ ಆರು ವಿದ್ಯಾರ್ಥಿಗಳ ತಂಡವೊಂದು ಕಿರು ನಾಟಕವನ್ನು ಪ್ರದರ್ಶಿಸಲು ನಿರ್ಧರಿಸಿತು. ಈ ನಾಟಕದ ಉದ್ದೇಶ ಸಮಾಜದಲ್ಲಿ ದಲಿತರ ಮೇಲೆ ಆಗುತ್ತಿರುವ ಅನ್ಯಾಯ ಅವಮಾನದ ದೌರ್ಜನ್ಯದ ಮೇಲೆ ಧ್ವನಿ ಎತ್ತುವುದಾಗಿತ್ತು.

ಆದರೆ ನಾಟಕದಲ್ಲಿ ಬಳಸಲಾದ ಕೆಲವು ಸಂಭಾಷಣೆಗಳಲ್ಲಿ ಅಂಬೇಡ್ಕರ್ ಅವರನ್ನು ಹಾಗೂ ದಲಿತ ವರ್ಗದವರನ್ನು ಅವಮಾನಿಸುವಂತಹ ಕೆಲವು ಪದಗಳು ಇತ್ತು. ಈ ಕಾರ್ಯಕ್ರಮ ಪ್ರಸಾರವಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ವಿದ್ಯಾರ್ಥಿಗಳು ಬಳಸಿದ ಪದಗಳ ಬಗ್ಗೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಯಿತು. ಇದರಿಂದ ಎಚ್ಚೆತ್ತುಕೊಂಡ ಕುಲಪತಿಗಳು ನಮ್ಮ ಯೂನಿವರ್ಸಿಟಿ ಅಲ್ಲಿ ನಡೆಸಿದ ಕಾರ್ಯಕ್ರಮದ ಉದ್ದೇಶ ಇದಾಗಿರಲಿಲ್ಲ.

ಆದರೆ ಅದರಲ್ಲಿ ಬಳಸಿರುವ ಪದಗಳಿಂದ ಸಾಕಷ್ಟು ಜನರ ಭಾವನೆಗಳಿಗೆ ಧಕ್ಕೆ ಆಗಿದೆ. ಅದಕ್ಕಾಗಿ ನಾವು ಎಲ್ಲರಲ್ಲೂ ಕ್ಷಮೆ ಕೇಳುತ್ತೇವೆ ಮತ್ತು ಆರು ವಿದ್ಯಾರ್ಥಿಗಳ ಮೇಲೂ ಶಿಸ್ತು ಕ್ರಮ ಕೈಗೊಂಡು ಅಮಾನತು ಮಾಡಿದ್ದೇವೆ ಎಂದು ಸಹ ತಿಳಿಸಿದ್ದರು. ಈಗ ಅಹಿಂಸಾ ಚೇತನ ಅವರು ಆ ಘಟನೆ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ಜೈನ್ ಯುನಿವರ್ಸಿಟಿಯ ಈ ನಡೆಯ ಬಗ್ಗೆ ತಮ್ಮ ಅನಿಸಿಕೆ ಹೇಳಿ ಈ ವಿದ್ಯಾರ್ಥಿಗಳ ಪರವಾಗಿ ಕೆಲ ಸಾಲುಗಳನ್ನು ಬರೆದಿದ್ದಾರೆ.

“ಬಲವಾದ ಪ್ರಜಾಪ್ರಭುತ್ವಕ್ಕಾಗಿ ಎಲ್ಲರನ್ನೂ ಹಾಗೂ ಎಲ್ಲವನ್ನು ಹಾಸ್ಯ ಮಾಡುವ ಹಕ್ಕು ನಮಗಿರಬೇಕು. ಈಗ ಈ ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವ ನಡೆ ಸರಿಯಲ್ಲ ಎಂದು ಯುನಿವರ್ಸಿಟಿ ನಡೆ ಬಗ್ಗೆ ಅಸಮಾಧಾನ ತೋರಿದ್ದಾರೆ. ಹೇಗೆ ಸ್ಟ್ಯಾಂಡರ್ಡ್ ಕಾಮಿಡಿಯನ್ ಮೋದಿ ಬಗ್ಗೆ ಮಾತನಾಡಿದಾಗ ಅದನ್ನು ಸೆನ್ಸಾರ್ ಮಾಡುವುದಲ್ಲವೋ ಹಾಗೆ ರಾಮ, ಮಹಮ್ಮದ್, ಬಸವ, ಅಂಬೇಡ್ಕರ್, ದಲಿತ ಇಂಥವರ ಕುರಿತು ಮಾಡುವ ಹಾಸ್ಯವನ್ನು ಕೂಡ ಗಂಭೀರವಾಗಿ ಪರಿಗಣಿಸಬಾರದು. ಅದನ್ನು ಅಪರಾಧ ಎಂದುಕೊಳ್ಳುವುದು ಪಜಾಪ್ರಭುತ್ವ ಅಲ್ಲ ಈ ಆರು ವಿದ್ಯಾರ್ಥಿಗಳನ್ನು ಜೈನ್ ಯುನಿವರ್ಸಿಟಿಯು ಅಮಾನತು ಮಾಡಿರುವುದು ವಾಕ್ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ

ಹೆಸರಿಗೆ ಮಾತ್ರ ಅವರು ನನ್ನ ತಾಯಿ ಅಷ್ಟೇ, ಬದುಕಬೇಕಾದ್ರೆ ನಾನೇ ಸಂಪಾದ್ನೆ ಮಾಡ್ಬೇಕು‌. ಯಾರು ಸಹಾಯ ಮಾಡಲ್ಲ ಎಂದು ಕಣ್ಣಿರಿಟ್ಟ ನಟಿ ಲಕ್ಷ್ಮಿ ಮಗಳು ಐಶ್ವರ್ಯ

 

ನಾನು ನನ್ನ ತಾಯಿ ಜವಾಬ್ದಾರಿ ಅಲ್ಲ ಅದಕ್ಕಾಗಿ ಮುಚ್ಕೊಂಡು ಕೆಲಸ ಮಾಡಲೇಬೇಕು ಎಂದ ಲಕ್ಷ್ಮಿ ಪುತ್ರಿ ಐಶ್ವರ್ಯ ಭಾಸ್ಕರನ್. ಕನ್ನಡದ ಜೂಲಿ ಲಕ್ಷ್ಮಿ (Lakshmi) ಅವರ ಮಗಳು ಐಶ್ವರ್ಯ ಭಾಸ್ಕರನ್ (Aishwarya Bhaskaran) ಅವರು ಸಹ ಒಬ್ಬ ನಟಿ ಕನ್ನಡ ತಮಿಳು ತೆಲುಗು ಮಲಯಾಳಂ ಭಾಷೆಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಇನ್ನೂ ಅನೇಕ ಕೆಲಸಗಳನ್ನು ಅವರು ಮಾಡಿದ್ದಾರೆ. ಅವರು ಮಾಡುವ ಕೆಲಸಗಳ ವಿಷಯವಾಗಿಯೇ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಇತ್ತೀಚಿಗೆ ಅವರು ಒಂದು ಯೂಟ್ಯೂಬ್ ಚಾನೆಲ್ ಸಹ ಆರಂಭಿಸಿದ್ದಾರೆ.

ಆಗಲೂ ಸಾಕಷ್ಟು ಜನ ಇವರನ್ನು ಒಬ್ಬ ಸ್ಟಾರ್ ಹೀರೋಯಿನ್ ಮಗಳಾಗಿ ಪ್ರೊಡಕ್ಷನ್ ಶುರು ಮಾಡುವ ಬದಲು ಯೂಟ್ಯೂಬ್ ಚಾನೆಲ್ ಓಪನ್ ಮಾಡಿದ್ದೀರಾ ಎಂದು ಕಾಲೆಳೆದಿದ್ದರು. ಈಗ ನಟಿ ಅದರ ಬಗ್ಗೆ ಮಾತನಾಡಿದ್ದಾರೆ. ನಟ ಮತ್ತು ನಿರ್ದೇಶಕ ರಘು ರಾಮ್ (Raghu Ram) ಅವರು ನಡೆಸುವ ಯೌಟ್ಯೂಬ್ ಚಾನೆಲ್ ನ ನೂರೊಂದು ನೆನಪು (Noorondu nenapu) ಎನ್ನುವ ಕಾರ್ಯಕ್ರಮದಲ್ಲಿ ಇದನ್ನೆಲ್ಲಾ ಹೇಳಿಕೊಂಡಿದ್ದಾರೆ.

ನಾನು ಸ್ಟಾರ್ ಪುತ್ರಿ ಇರಬಹುದು ಯಾವುದೇ ಸ್ಟಾರ್ ಮಕ್ಕಳಾದರೂ ರಾಜಕಾರಣಿ ಮಕ್ಕಳು ಆದರೂ ಅವರ ಕೆಲಸ ಅವರು ಮಾಡಬೇಕು. ನನಗೆ 18 ವರ್ಷ ಆಗುವವರೆಗೆ ನನ್ನ ತಾಯಿ ಜವಾಬ್ದಾರಿ ಆಗಿದ್ದೆ, ಅವರು ನನಗೆ ಒಳ್ಳೆ ವಿದ್ಯಾಭ್ಯಾಸ ಕೊಟ್ಟಿದ್ದಾರೆ. ಈಗ ಬದುಕ ಬೇಕಾಗಿರುವುದು ನನ್ನ ಜವಾಬ್ದಾರಿ. ನಾನು ಸ್ಟಾರ್ ಹೀರೋಯಿನ್ ಮಗಳು ಎನ್ನುವ ರೀತಿ ಬೆಳೆದಿಲ್ಲ ನಾನು ಎಲ್ಲರಂತೆ ಸಾಮಾನ್ಯವಾಗಿ ಬೆಳೆದಿದ್ದೇನೆ.

ನನಗೆ ಗೊತ್ತಿರುವುದು ಇಷ್ಟೇ ಬೇಕು ಇರುವ ತನಕ ದುಡಿಯಬೇಕು, ನಾನು ಸಹ ಸಾಯುವ ತನಕ ಕೆಲಸ ಮಾಡುತ್ತಲೇ ಇರುತ್ತೇನೆ. ಹಿಂದೆಯೂ ನಾನು ಒಂದು ಹಂತ ಆದ ಮೇಲೆ ತಂದೆ ತಾಯಿ ಬಳಿ ಕೈ ಚಾಚುತಿರಲಿಲ್ಲ. ಈಗಲೂ ಸಹ ಗಂಡ ಮಕ್ಕಳ ಮೇಲೆ ಡಿಪೆಂಡ್ ಆಗಲು ನನಗೆ ಇಷ್ಟ ಇಲ್ಲ ಇದೇ ರೀತಿ ಬದುಕಲು ನನಗೆ ಇಷ್ಟ ಹಾಗೆ ಬದುಕುತ್ತಿದ್ದೇನೆ. ಕೆಲವರು ಇರುತ್ತಾರೆ, ಮನೆಯಲ್ಲಿ ಬಿದ್ದುಕೊಂಡು ಹೆತ್ತ ತಂದೆ ತಾಯಿಗೆ ಭಾರ ಆಗಿರುತ್ತಾರೆ ಅಂತವರನ್ನು ಕಂಡರೆ ಅಸಹ್ಯ ಆಗುತ್ತದೆ.

ನಾವು ಬೆಳೆದ ಮೇಲೆ ತಂದೆ ತಾಯಿ ನಮ್ಮ ಜವಾಬ್ದಾರಿ ಈಗಲೂ ಅವರ ಬೆನ್ನು ಬಿದ್ದು ಹಿಂಸೆ ಕೊಡಬಾರದು ಈ ಭೂಮಿ ಮೇಲೆ ನಾವು ನೂರು ವರ್ಷ ಕೂಡ ಇರುವುದಿಲ್ಲ. ಈಗಲೇ ನನಗೆ 50 ವರ್ಷ ಆಗಿ ಹೋಗಿದೆ ಹಾಗಾಗಿ ನಾನು ಜನ ಏನು ಮಾತನಾಡುತ್ತಾರೋ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ಯಾವಾಗಲೂ ಏನಾದರೂ ಮಾತನಾಡುತ್ತಲೇ ಇರುತ್ತಾರೆ ನನ್ನ ಬಗ್ಗೆ ಏನಾದರೂ ಹೇಳಲಿ ನನಗೆ ಏನು ಸಾಮರ್ಥ್ಯ ಇದೆ ಎಂದು ನನಗೆ ಗೊತ್ತು ಆ ಸಾಮರ್ಥ್ಯದಲ್ಲಿ ನಾನು ಒಳ್ಳೆ ಕೆಲಸ ಮಾಡುತ್ತಿದ್ದೇನೆ.

ಯೋಗ ಕಲಿತ ಮೇಲೆ ಒಂದು ವಿಚಾರ ತಿಳಿದುಕೊಂಡೆ ಈಗ ನಾವು ಇರುವ ಕಾಲ ಕಲಿಗಾಲದಲ್ಲಿ ಮನುಷ್ಯ ಮನುಷ್ಯನನ್ನೇ ತಿನ್ನುತ್ತಾನೆ, ಮುಂದೆ ಭವಿಷ್ಯ ಅನ್ನುವುದೇ ಇರುವುದಿಲ್ಲ. ಮನುಷ್ಯನಾಗಿ ಹುಟ್ಟಿದ್ದೇವೆ ಎಂದಮೇಲೆ ಮುಕ್ತಿ ಪಡೆಯಬೇಕು. ಮುಕ್ತಿ ಪಡೆಯಬೇಕು ಎಂದರೆ 12 ಜ್ಯೋತಿರ್ಲಿಂಗಗಳನ್ನು ನೋಡಬೇಕು ಎಂದು ಹೇಳುತ್ತಾರೆ, ಅದನ್ನು ಮಾಡಿದ್ದೇನೆ. ಈಗ ನನ್ನ ಗಮನವೆಲ್ಲಾ ನನಗೆ ಗೊತ್ತಿರುವ ಕೆಲಸ ಮಾಡಿಕೊಂಡು ಅದರಲ್ಲಿ ಬರುವ ಹಣದಿಂದ ನನ್ನನ್ನು ಹಾಗೂ ನನ್ನ ಸಾಕು ಪ್ರಾಣಿಗಳನ್ನು ಸಾಕಬೇಕು. ಮತ್ತು ಮಣ್ಣಿನ ಕಡೆ ಹಾಗೂ ತಾಯಿಯ ಕಡೆ ಗಮನ ಇಡಬೇಕು ಅಷ್ಟು ಮಾಡುತ್ತಿದ್ದೇನೆ ಇದರಿಂದ ಖುಷಿಯಾಗಿದ್ದೇನೆ ಎಂದಿದ್ದಾರೆ.

ಅದೊಂದು ಘಟನೆ ನನ್ನ ಮಗನೇ ಬದುಕನ್ನೆ ಸರ್ವನಾಶ ಮಾಡಿತು ಎಂದು ಕಣ್ಣಿರಿಟ್ಟ ನಟ ಶ್ರೀನಾಥ್

0

 

ಇಂಡಸ್ಟ್ರಿಯಲ್ಲಿ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಇರುವವರು ಗುರುತಿಸಿಕೊಳ್ಳುವುದು ಬಹಳ ಕಷ್ಟ. ಆದರೆ ಕೆಲವೊಂದು ಹೀರೋಗಳು ಮಾತ್ರ ಪ್ರಯತ್ನ ಹಾಗೂ ಅದೃಷ್ಟದಿಂದ ಹೆಸರು ಮಾಡಿದ್ದಾರೆ. ಇನ್ನುಳಿದಂತೆ ಹೆಚ್ಚಿನ ಜನ ಈಗಾಗಲೇ ಅವರ ಕುಟುಂಬದವರು ಅಥವಾ ಅವರ ತಂದೆ ಇಂಡಸ್ಟ್ರಿಯಲ್ಲಿ ಒಳ್ಳೆ ಹೆಸರು ಪಡೆದಿರುವ ಕಾರಣಕ್ಕೆ ಸಲೀಸಾಗಿ ಅವರು ಚಿತ್ರರಂಗವನ್ನು ಪ್ರವೇಶಿಸಿರುತ್ತಾರೆ. ಈ ರೀತಿ ಬಣ್ಣದ ನಂಟು ಇಲ್ಲದೆ ಇರುವವರನ್ನು ಸೆಳೆದುಬಿಡುವ ಈ ಚಿತ್ರರಂಗ ಅಪ್ಪ ಹೀರೋ ಆಗಿದ್ದಾಗ ಆ ಕಡೆಗೆ ಆಸೆ ಹುಟ್ಟಿಸದೇ ಇರದು.

ಇದೇ ಕಾರಣದಿಂದ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ ಡಾಕ್ಟರ್ ರಾಜಕುಮಾರ್, ರವಿಚಂದ್ರನ್, ಅಂಬರೀಶ್, ಪ್ರಭಾಕರ್, ತೂಗುದೀಪ್ ಶ್ರೀನಿವಾಸ್ ಈ ರೀತಿ ಅನೇಕ ದೊಡ್ಡ ಕಲಾವಿದರ ಮಕ್ಕಳು ಕೂಡ ಇಂಡಸ್ಟ್ರಿಯಲ್ಗೆ ಬದುಕು ಕಂಡುಕೊಳ್ಳುವಂತೆ ಆಯ್ತು ಎಂದರೆ ತಪ್ಪಾಗಲಾರದು. ಆದರೆ ಇವುಗಳ ಸಾಲಿನಲ್ಲಿ ಶ್ರೀನಾಥ್ (Shreenath) ಅವರ ಪುತ್ರ ರೋಹಿತ್ ಶ್ರೀನಾಥ್ (Rohith Shreenath) ರ ಹೆಸರು ಇಲ್ಲದೆ ಇರುವುದನ್ನು ಕಂಡಾಗ ಅದು ಬಹಳ ಆಶ್ಚರ್ಯ ಅನಿಸಿಬಿಡುತ್ತದೆ.

ಆದರೆ ಅದಕ್ಕೆಲ್ಲ ಒಂದು ಕಾರಣ ಇದೆ. ಶ್ರೀನಾಥ್ ಮಗ ಹೀರೋ ಆಗದೆ ಉಳಿದದ್ದಕ್ಕೆ ಮತ್ತು ಶ್ರೀನಾಥ್ ಅವರು ಅತಿ ಬೇಗನೆ ಹೀರೋಯಿಸಂ ಇಂದ ಪೋಷಕ ನಟನಾಗಿ ಬದಲಾಗಿದ್ದಕ್ಕೆ ಅವರ ಜೀವನದಲ್ಲಿ ಆದ ಒಂದು ಕಹಿ ಘಟನೆಯೇ ಕಾರಣ. ಈ ವಿಷಯವನ್ನು ಅವರು ಜೀ ಕನ್ನಡ (Zee kannada) ವಾಹಿನಿಯ ವೀಕೆಂಡ್ ವಿತ್ ರಮೇಶ್ (Weekend with Ramesh) ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾಗ ಕೂಡ ಬಹಳ ಭಾವನಾತ್ಮಕವಾಗಿ ಹಂಚಿಕೊಂಡಿದ್ದರು. ಅದೇನೆಂದರೆ ಶ್ರೀನಾಥ್ ಅವರಿಗೆ ಇಬ್ಬರು ಮಕ್ಕಳು ಅಮೂಲ್ಯ ಮತ್ತು ರೋಹಿತ್.

ರೋಹಿತ್ ಶ್ರೀನಾಥ್ ಅವರು ಬಾಲ್ಯದಲ್ಲಿಯೇ ಪಲ್ಲವಿ ಅನುಪಲ್ಲವಿ (Pallavi Anupallavi) ಎನ್ನುವಂತಹ ಸೂಪರ್ ಹಿಟ್ ಸಿನಿಮಾ ಮತ್ತು ಮಾಲ್ಗುಡಿ ಡೇಸ್ (Malgudi days) ಅಂತಹ ಸೀರಿಯಲ್ ಗಳಲ್ಲಿ ಅಭಿನಯಿಸಿ ಹೆಸರು ಪಡೆದಿದ್ದವರು. ಹೀರೋ ಆಗುವ ಎಲ್ಲಾ ಲಕ್ಷಣಗಳು ಹಾಗೂ ಅರ್ಹತೆಯನ್ನು ಹೊಂದಿದ್ದವರು ಆದರೂ ಕೂಡ ಅವರು ಇಂಡಸ್ಟ್ರಿಗೆ ಬರಲಿಲ್ಲ ಜೊತೆಗೆ ಶ್ರೀನಾಥ್ ಅವರು ಸಹ ಹೀರೋ ಆಗಿ ಮಿಂಚುತ್ತಿದ್ದವರು ಇದ್ದಕ್ಕಿದ್ದಂತೆ ಸಿಕ್ಕಸಿಕ್ಕ ಪಾತ್ರಗಳನ್ನೆಲ್ಲ ಒಪ್ಪಿಕೊಳ್ಳಲು ಶುರು ಮಾಡುತ್ತಾರೆ.

ಸಮಾನ ವಯೋನದವರಾದ ಅಂಬರೀಶ್ ಅವರಿಗೂ ಕೂಡ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ಶುರು ಮಾಡುತ್ತಾರೆ. ಅದಕ್ಕೆಲ್ಲ ಕಾರಣ ಹಣದ ಅವಶ್ಯಕತೆ. ಯಾಕೆಂದರೆ ಅವರ ಜೀವನದಲ್ಲಿ ಆದ ಒಂದು ಕಹಿ ಘಟನೆ ಅವರನ್ನು ಈ ಹಂತಕ್ಕೆ ತಂದಿರುತ್ತದೆ ಮಗಳು ಅಮೂಲ್ಯ ಮದುವೆ ತಯಾರಿಯಲ್ಲಿದ್ದ ಶ್ರೀನಾಥ್ ಅವರಿಗೆ ಮಗಳ ಮದುವೆ ಹಿಂದಿನ ದಿವಸ ಆಘಾತ ಒಂದು ಕಾದಿರುತ್ತದೆ. ಅಷ್ಟು ವರ್ಷ ಸಂಪಾದನೆ ಮಾಡಿದ ಹಣವನ್ನೆಲ್ಲ ಕೂಡಿಟ್ಟು ಮಕ್ಕಳಿಗಾಗಿ ಒಡವೆ ಮಾಡಿಸಿರುತ್ತಾರೆ, ಒಡವೆ ಜೊತೆ ಸಾಕಷ್ಟು ಹಣವನ್ನು ಕೂಡ ಮದುವೆ ಕಾರಣ ಮನೆಯಲ್ಲಿ ಇಟ್ಟಿರುತ್ತಾರೆ.

ಆದರೆ ಮದುವೆ ಬ್ಯುಸಿಯಲ್ಲಿ ಮನೆ ಮಂದಿಯೆಲ್ಲಾ ಸಂಭ್ರಮದಲ್ಲಿದ್ದಾಗ ಯಾರೋ ಇವರ ಮನೆಯಲ್ಲಿ ಕಳ್ಳತನ ಮಾಡಿ ಬಿಡುತ್ತಾರೆ ಇದೆಲ್ಲವನ್ನು ನೋಡಿಕೊಂಡಿದ್ದ ಪರಿಚಯಿಸ್ತರೇ, ಆ ಕುಕೃತ್ಯ ಮಾಡಿರುತ್ತಾರೆ. ಆ ವೇಳೆ ಶ್ರೀನಾಥ್ ಅವರಿಗೆ ಬದುಕನ್ನೇ ಕಳೆದುಕೊಂಡ ರೀತಿ ಆಗಿ ಬಿಟ್ಟಿರುತ್ತದೆ ಅದುವರೆಗೂ ಕೂಡಿಟ್ಟಿದ್ದ ಎಲ್ಲಾ ಹಣವು ಸಂಪೂರ್ಣವಾಗಿ ಕಳವಾಗಿರುತ್ತದೆ. ಮರುದಿನವೇ ಮಗಳ ಮದುವೆ ಕೂಡ ಇರುವುದರಿಂದ ವಿಧಿ ಇಲ್ಲದೆ ಅವರು ಸಾಲ ಮಾಡಬೇಕಾಗುತ್ತದೆ. ಆ ಸಾಲವನ್ನು ತೀರಿಸುವ ಸಲುವಾಗಿ ನಂತರ ಶ್ರೀನಾಥ್ ಅವರು ಯಾವುದೇ ಪಾತ್ರ ಸಿಕ್ಕರೂ ಅಭಿನಯಿಸಲು ಶುರುಮಾಡುತ್ತಾರೆ.

ಜೊತೆಗೆ ಅಪ್ಪನ ಕಷ್ಟಕ್ಕೆ ನೆರವಾಗುವ ಸಲುವಾಗಿ ಹೀರೋ ಆಗಲು ಕಾಯುತ್ತ ಕುಳಿತರೆ ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ ವಿದ್ಯಾಭ್ಯಾಸದಿಂದ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ರೋಹಿತ್ ಶ್ರೀನಾಥ್ ಅವರು ಸಹ ಅದೇ ಕೆಲಸದಲ್ಲಿ ಮುಂದುವರಿದುಕೊಂಡು ತಂದೆಯ ಸಾಲ ತೀರಿಸಲು ಸಹಾಯ ಮಾಡುತ್ತಾರೆ. ಈ ರೀತಿ ಆ ಒಂದು ಆಚಾತುರ್ಯದಿಂದ ಕನ್ನಡ ಇಂಡಸ್ಟ್ರಿ ಯಲ್ಲಿ ಮಿಂಚಬೇಕಾಗಿದ್ದ ಮತ್ತೊಬ್ಬ ಹೀರೋನನ್ನು ಕಳೆದುಕೊಳ್ಳುವಂತೆ ಆಗಿಬಿಡುತ್ತದೆ. ಈ ವಿಚಾರವನ್ನು ಸ್ವತಹ ಶ್ರೀನಾಥ್ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ