Home Blog Page 239

ದರ್ಶನ್ ಹಚ್ಚೆ ಹಾಕಿಸೋಕು ಮುಂಚೆನೇ ಕನ್ನಡದ ಈ ಸ್ಟಾರ್ ನಟ ತನ್ನ ಫ್ಯಾನ್ಸ್ ಗಾಗಿ “ಅಭಿಮಾನಿ” ಅಂತ ಟ್ಯಾಟೋ ಹಾಕಿಸಿದ್ರು ಅದು ಯಾರು ಗೊತ್ತ.?

 

ದರ್ಶನ್ ಗೂ ಮೊದಲೇ ಅಭಿಮಾನಿ ಎಂದು ಹಚ್ಚೆ ಹಾಕಿಸಿಕೊಂಡಿದ್ದ ಕನ್ನಡದ ಆ ಸ್ಟಾರ್ ನಟ ಯಾರು ಗೊತ್ತಾ? ಒಬ್ಬ ಸ್ಟಾರ್ ಗೆ (Star) ಅಭಿಮಾನಿಗಳು (Fan’s) ಎಷ್ಟು ಮುಖ್ಯ ಎನ್ನುವುದು ಬಹಳ ಗಂಭೀರವಾದ ವಿಷಯ. ಯಾಕೆಂದರೆ ಸಿನಿಮಾದ ಅರ್ಧ ಗೆಲುವು ನಿರ್ಧಾರ ಆಗುವುದು ಅಭಿಮಾನಿಗಳಿಂದಲೇ. ಇಂದು ಇದು ಕಮರ್ಷಿಯಲ್ ವಿಷಯ ಆಗಿರಬಹುದು, ಆದರೆ ಕಾಲದಿಂದಲೂ ಅಭಿಮಾನಿಗಳಿಂದಲೇ ಕಲಾವಿದರ ಬದುಕು ನಡೆಯುತ್ತಿರುವುದು. ಇದನ್ನು ಅರಿತಿದ್ದ, ಕನ್ನಡದ ಸರಳ ಸಜ್ಜನಿಕೆಯ ಮೇರು ಪರ್ವತ ಕಲಾ ಕಂಠೀರವ ಡಾಕ್ಟರ್ ರಾಜಕುಮಾರ್ (Dr.Rajkumar) ಅವರು ಅಭಿಮಾನಿಗಳನ್ನೇ ದೇವರು ಎಂದು ಕರೆದಿದ್ದು.

ಅಭಿಮಾನಿಗಳನ್ನು ದೇವರ ಸಮಕ್ಕೆ ಕಾಣುತ್ತಿದ್ದ ಅಣ್ಣಾವ್ರಿಂದ ಇಂತಹದೊಂದು ಸಂಸ್ಕೃತಿಗೆ ನಾಂದಿ ಸಿಕ್ಕಿದ್ದು ಎಂದರೆ ಅದು ಸುಳ್ಳಲ್ಲ. ಇಂದಿಗೂ ಸಹ ರಾಜವಂಶದ ಎಲ್ಲರೂ ಅಭಿಮಾನಿಗಳೇ ನಮ್ಮ ಮನೆ ದೇವರು ಎಂದು ಹೇಳಿಕೊಳ್ಳುತ್ತಾರೆ. ಮುಂದುವರೆದು ಈಗ ಎಲ್ಲಾ ಸ್ಟಾರ್ ನಟರು ಕೂಡ ತಮ್ಮ ತಮ್ಮ ಅಭಿಮಾನಿಗಳ ಮೇಲೆ ಅಪಾರ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಇದಕ್ಕೆ ಸಾವಿರಾರು ರೀತಿಯ ಉದಾಹರಣೆಗಳು ಸಿಗುತ್ತವೆ.

ಒಬ್ಬ ಕಲಾವಿದನನ್ನು ಸ್ನೇಹಿತನಿಗಿಂತ ಸಹೋದರರಿಗಿಂತ ಹೆಚ್ಚಾಗಿ ಕಂಡು ಅವರನ್ನೇ ರೋಲ್ ಮಾಡಲ್ ಆಗಿ ಮಾಡಿಕೊಂಡು ಆತನ ಮೇಲೆ ಹುಚ್ಚು ಪ್ರೀತಿ ಇಟ್ಟುಕೊಳ್ಳುವ ಆ ಭಾವನೆಯನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಈಗ ಸ್ಟಾರ್ ನಟರಿಂದಲೂ ಕೂಡ ಅಭಿಮಾನಿಗಳಿಗೆ ಅಷ್ಟೇ ಮಟ್ಟದ ಪ್ರೀತಿ ಸಿಗುತ್ತಿದೆ ಅದಕ್ಕೆ ಸಿಕ್ಕಿರುವ ಸಾಕ್ಷಿ ಎಂದರೆ ಕನ್ನಡದ ಸ್ಟಾರ್ ಹೀರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರು ತಮ್ಮ ಅಭಿಮಾನಿಗಳಿಗೋಸ್ಕರ ಅವರ ಹೆಸರನ್ನೆಲ್ಲ ಒಟ್ಟಿಗೆ ಸೇರಿಸಿ ಹಚ್ಚೆ (Tatto) ಹಾಕಿಸಿಕೊಂಡಿರುವುದು.

ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಹೀರೋ ಎನ್ನುವ ಖ್ಯಾತಿಗೆ ದರ್ಶನ್ ಅವರು ಒಳಗಾಗಿದ್ದಾರೆ. ದರ್ಶನ್ ಅವರಿಗೆ ಅಭಿಮಾನಿಗಳ ಮೇಲೆ ಅಷ್ಟೇ ಪ್ರೀತಿ ಇದೆ. ಹಾಗಾಗಿ ಅವರನ್ನು ನನ್ನ ಸಲೆಬ್ರೆಟಿಸ್ ಎಂದು ಪ್ರೀತಿಯಿಂದ ಕರೆಯುತ್ತಾರೆ ಇನ್ನು ದರ್ಶನ್ ಮೇಲೆ ಅಭಿಮಾನಿಗಳಿಗೆ ಇಟ್ಟಿರುವ ಪ್ರೀತಿಗೆ ಈಗ ಮಾಧ್ಯಮಗಳಿಗೆ ಸೆಡ್ಡು ಹೊಡೆದು ಕ್ರಾಂತಿ (Kranthi) ಸಿನಿಮಾವನ್ನು ಪ್ರಚಾರ ಮಾಡಿ ಗೆಲ್ಲಿಸಿರುವುದೇ ಸಾಕ್ಷಿ. ಹೀಗೆ ಸದಾ ಕಾಲ ದರ್ಶನ್ ಅವರಿಗೆ ಬೆನ್ನಿಗೆ ನಿಂತಿರುವ ಅವರ ಅಭಿಮಾನಿಗಳು ದರ್ಶನ್ ಮೇಲೆ ಇಟ್ಟಿರುವ ಪ್ರೀತಿಗೆ ಟ್ರ್ಯುಬ್ಯೂಟ್ ಕೊಡುವ ಸಲುವಾಗಿ ದರ್ಶನ್ ಅವರು ಈ ರೀತಿ ಎದೆ ಮೇಲೆ ನನ್ನ ಸೆಲೆಬ್ರಿಟಿಸ್ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ.

ಇದನ್ನು ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ಸ್ಟಾರ್ ನಟನೊಬ್ಬ ಅಭಿಮಾನಿಗಳಾಗಿ ತೋರಿಸಿರುವ ಪ್ರೀತಿ ಎಂದು ಕರೆಯಲಾಗುತ್ತಿದೆ. ಆದರೆ ಇದಕ್ಕೂ ಮೊದಲೇ ಕನ್ನಡದ ಮತ್ತೊಬ್ಬ ನಟ ಇದೇ ರೀತಿ ಮಾಡಿದ್ದರು. ಸಾಹಸ ನಿರ್ದೇಶಕರಾಗಿ, ನಾಯಕ ನಟನಾಗಿ ಈಗ ನಿರ್ದೇಶನದಲ್ಲೂ ಸಹ ಪಳಗುತ್ತಿರುವ ದುನಿಯಾ ವಿಜಯ್ (Duniya Vijay) ಅವರು ಸಹ ಇದೇ ರೀತಿ ಹಚ್ಚೆ ಹಾಕಿಸಿಕೊಂಡಿದ್ದಾರೆ. ದುನಿಯಾ ವಿಜಯ ಅವರು ಅವರ ತಾಯಿಯ ಮೇಲೆ ಇರುವ ಪ್ರೀತಿಯಷ್ಟೇ ಅಭಿಮಾನಿಗಳ ಮೇಲು ಪ್ರೀತಿ ಹೊಂದಿದ್ದಾರೆ.

ಹಾಗಾಗಿ ಅವ್ವ ಅಭಿಮಾನಿ ಎರಡನ್ನು ಸೇರಿಸಿ ಅವರು ಸಹ ಹಚ್ಚೆ ಹಾಕಿಸಿಕೊಂಡಿದ್ದಾರೆ. ಈಗ ಅವರ ದೇಹದ ಮೇಲಿರುವ ಆ ಹಚ್ಚೆ ವೈರಲ್ ಆಗುತ್ತಿದೆ ಮತ್ತು ಇತ್ತೀಚೆಗೆ ನಿ’ಧ’ನರಾದ ನಮ್ಮೆಲ್ಲರ ಪ್ರೀತಿಯ ದೈವ ಮಾನವ ಪುನೀತ್ ರಾಜಕುಮಾರ್ (Punith rajkumar) ಅವರಿಗೆ ಸಹ ಇಂಥದೊಂದು ಆಸೆ ಇತ್ತು ಎಂದು ತಿಳಿದು ಬಂದಿದೆ. ಅಭಿಮಾನಿಗಳೇ ನಮ್ಮ ಮನೆ ದೇವರು ಎಂದು ಅವರು ಸಹ ಎದೆ ಮೇಲೆ ಹಚ್ಚೆ ಹಾಕಿಸಿಕೊಳ್ಳಬೇಕು ಎಂದು ಆಸೆ ಪಟ್ಟಿದ್ದರಂತೆ ಆದರೆ. ಆ ಆಸೆ ಪೂರ್ತಿಗೊಳ್ಳುವ ಮುನ್ನವೇ ಅವರು ನಮ್ಮನ್ನೆಲ್ಲ ಅ’ಗ’ಲಿದ್ದಾರೆ .ಇದನ್ನು ಜೇಮ್ಸ್ ಚಿತ್ರದ ನಿರ್ಮಾಪಕರಾದ ಕಿಶೋರ್ ಪತ್ತಿಕೊಂಡ ಅವರು ಸಿನಿಮಾ ರಿಲೀಸ್ ವೇಳೆ ಹೇಳಿದ್ದರು.

ಸಿನಿಮಾದಲ್ಲಿ ನಟಿಸಲು ಚಾನ್ಸ್ ಸಿಗ್ತಾ ಇಲ್ಲ ಅನ್ನೋ ಒಂದೇ ಕಾರಣಕ್ಕೆ ನಟಿ ಡೈಸಿ ಬೋಪಣ್ಣ ಈಗ ಯಾವ ಕೆಲಸ ಮಾಡ್ತಿದ್ದಾರೆ ಗೊತ್ತ.?

 

ನಟಿ ಡೈಸಿ ಬೋಪಣ್ಣ (Daisy Bopanna) ಸ್ಯಾಂಡಲ್ ವುಡ್ ಇಂದ ಬಾಲಿವುಡ್ ತನಕ ಹೋಗಿ ಗೆದ್ದು ಬಂದವರು ಮೂಲತಃ ಕೊಡಗಿನ ಬೆಡಗಿ ಆಗಿರುವ ಡೈಸಿ ಬೋಪಣ್ಣ ಅವರು ಬೆಂಗಳೂರಿನಲ್ಲಿ ಫೈನ್ ಆರ್ಟ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಶಿಕ್ಷಣ ಮುಗಿದಿದ್ದಂತೆ ಆಕ್ಟಿಂಗ್ ಅನ್ನು ಕೆರಿಯರ್ ಆಗಿ ಮಾಡಿಕೊಂಡ ಇವರು ಮೊದಲು ಬಣ್ಣ ಹಚ್ಚಿದ್ದು ಕನ್ನಡ ಸಿನಿಮಾಗಳಿಗೆ. ಉಪೇಂದ್ರ, ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ದರ್ಶನ್, ಗಣೇಶ್ ಜೊತೆಗೆ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿ.

ನಂತರ ಬಾಲಿವುಡ್ ಅಲ್ಲಿ ಅಕ್ಷಯ್ ಕುಮಾರ್ ಹಾಗೂ ತಮಿಳುನಾಡು ಕಮಲ್ ಹಾಸನ್ ಮುಂತಾದವರ ಜೊತೆಗೂ ತೆರೆ ಹಂಚಿಕೊಂಡಿದ್ದ ಇವರ ರಾಮ ಭಾಮ ಶಾಮ ಸಿನಿಮಾದ ಪಾತ್ರ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಅಭಿನಯಿಸಿದ ಗಾಳಿಪಟ ಚಿತ್ರದ ಮನೋಜ್ಞ ಅಭಿನಯಶನ್ನು ಕನ್ನಡಿಗರು ಎಂದು ಸಹ ಮರೆಯಲು ಸಾಧ್ಯವಿಲ್ಲ.

ತವರಿನ ಸಿರಿ, ಐಶ್ವರ್ಯ, ಭಗವಾನ್, ಗಾಳಿಪಟ, ಸತ್ಯವಾನ್ ಸಾವಿತ್ರಿ, ರಾಮ ಶಾಮ ಭಾಮ ಈ ರೀತಿ ಪಟ್ಟಿ ಮಾಡಲು ಹೊರಟರೆ ಇವರು ಕನ್ನಡದಲ್ಲಿ ಮಾಡಿರುವ ಸಿನಿಮಾಗಳ ಹೆಸರು 20 ಕೂಡ ದಾಟುವುದಿಲ್ಲ. ಆದರೆ ಆಕೆ ಅಭಿನಯಿಸಿದ ಪಾತ್ರಗಳಿಂದ ಪಡೆದಿರುವ ಫೇಮ್ ಕೊನೆಯವರೆಗೂ ಹೋಗುವುದಿಲ್ಲ. ಅಷ್ಟರಮಟ್ಟಿಗೆ ಡೈಸಿ ಬೋಪಣ್ಣ ಅವರನ್ನು ಕನ್ನಡಿಗರು ಮೆಚ್ಚಿಕೊಂಡು ಹಚ್ಚಿಕೊಂಡಿದ್ದಾರೆ ಈಗಲೂ ಅವರು ಮತ್ತೆ ಸಿನಿಮಾ ಮಾಡುತ್ತಾರಾ ಎಂದು ಕಾಯುವವರು ಇದ್ದಾರೆ.

ಕನ್ನಡ ಚಲನಚಿತ್ರ ರಂಗ ಈಗಾಗಲೇ ಸಾವಿರಾರು ನಟಿಮಣಿಯರನ್ನು ಕಂಡಿದೆ ಅದರಲ್ಲಿ ಕೆಲವರು ಕೆಲವೇ ವರ್ಷಗಳಲ್ಲಿ ಮಿಂಚಿ ಮರೆಯಾಗಿ ಬಿಡುತ್ತಾರೆ. ಈ ರೀತಿ ಯಶಸ್ಸಿನ ಉತ್ತುಂಗದಲ್ಲಿ ಮೆರೆದಾಡುತ್ತಿದ್ದ ಡೈಸಿ ಬೋಪಣ್ಣ ಅವರು ಈಗ ಅವಕಾಶಗಳಿಲ್ಲದೆ ಚಿತ್ರರಂಗದಿಂದ ದೂರ ಉಳಿದಿದ್ದಾರೆ. 2011ರಲ್ಲಿ ಉದ್ಯಮಿ ಅಮಿತ್ ಜಾಜು (Amith jaju) ಅವರನ್ನು ವಿವಾಹ (Marriage) ಆದ ಬಳಿಕ ಸಿನಿಮ ರಂಗದಿಂದ ಕೊಂಚ ಬ್ರೇಕ್ ಪಡೆದುಕೊಂಡರು.

ಆನಂತರ ಇವರಿಗೆ ಅವಕಾಶಗಳೇ ತಪ್ಪಿ ಹೋಯಿತು ಮೊದಮೊದಲು ಇದರ ಬಗ್ಗೆ ತೀರ ತಲೆಕೆಡಿಸಿಕೊಂಡಿದ್ದ ಇವರು ನಂತರ ಈಗ ಒತ್ತಡದಿಂದ ಹೊರಬಂದು ಹೊಸ ಉದ್ಯಮವನ್ನೇ ಆರಂಭಿಸಿ ಅನೇಕರಿಗೆ ರೋಲ್ ಮಾಡೆಲ್ ಆಗಿದ್ದಾರೆ. ಮನಸು ಮಾಡಿದ್ದರೆ ಹೆಣ್ಣುಮಕ್ಕಳು ಏನು ಬೇಕಾದರೂ ಸಾಧಿಸಬಹುದು ಆಸಕ್ತಿ ಇದ್ದರೆ ಯಾವ ಕ್ಷೇತ್ರದಲ್ಲಾದರೂ ಸಾಧನೆ ಮಾಡಿ ತೋರಿಸಬಹುದು ಎಂದು ಸಾಧಿಸಿ ತೋರಿಸಿದ್ದಾರೆ ಡೈಸಿ ಬೋಪಣ್ಣ.

ಮೊದಲಿಗೆ ಸುಮ್ಮನೆ ಫೋಟೋಗ್ರಫಿ (Photography) ಶುರು ಮಾಡಿದ ಇವರು ತಮ್ಮ ಕುಟುಂಬದವರ ಫೋಟೋಗ್ರಾಫ್ ಗಳನ್ನು ತೆಗೆಯುತ್ತಿದ್ದರು. ನಂತರ ಇದರ ಬಗ್ಗೆ ಇಂಟರೆಸ್ಟ್ ಬಂದು ಮುಂಬೈ (Mumbai) ಅಲ್ಲಿ ಕೆಲ ಮಾಡೆಲ್ ಗಳಿಗೆ ಫೋಟೋಶೂಟ್ ಮಾಡಲು ಶುರು ಮಾಡಿದರು. ನಂತರ ಅವರಿಗೆ ಅದರಲ್ಲಿ ಹೆಸರು ಬರುತ್ತಿದ್ದಂತೆ ಅವರಿಗೆ ಡ್ರೆಸ್ ಡಿಸೈನ್ (Dress disegn) ಮಾಡುವುದು ಮತ್ತು ಮೇಕಪ್ (Make up) ಮಾಡುವುದನ್ನು ಕೂಡ ಕಲಿತುಕೊಂಡು ಈಗ ಅದರಲ್ಲೇ ಎಕ್ಸ್ಪರ್ಟ್ ಆಗಿ ಅದನ್ನೇ ತಮ್ಮ ಉದ್ಯಮವಾಗಿಸಿಕೊಂಡಿದ್ದಾರೆ.

ಜೊತೆಗೆ ಅದರಿಂದ ಹಣ ಮತ್ತು ಹೆಸರು ಎರಡನ್ನು ಗಳಿಸುತ್ತಿದ್ದಾರೆ ನಿಜಕ್ಕೂ ಇದು ಕನ್ನಡದ ಹೆಣ್ಣು ಮಕ್ಕಳೆಲ್ಲಾ ಹೆಮ್ಮೆ ಪಡುವ ವಿಷಯ. ಯಾವುದಾದರೂ ಒಂದು ಯಶಸ್ಸು ಕೈತಪ್ಪಿ ಹೋದ ತಕ್ಷಣ ಬದುಕುವ ಉತ್ಸಾಹವನ್ನೇ ಕಳೆದುಕೊಳ್ಳುವ ಎಷ್ಟೋ ಯುವ ಪೀಳಿಗೆಯ ಜನರಿಗೆ ಡೈಸಿ ಬೋಪಣ್ಣ ಅವರ ಈ ಸ್ಟೋರಿ ಸ್ಪೂರ್ತಿ ನೀಡಲಿದೆ. ಈ ವಿಚಾರ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ

ನನ್ನ ಮದುವೆ ಸಿನಿಮಾ ಸ್ಟೈಲ್ ನಲ್ಲಿ ನೆಡೆದು ಹೋಯ್ತು ಹೀಗೆಲ್ಲಾ ಆಗುತ್ತೆ ಅಂತ ನಾನು ಕನಸಲ್ಲೂ ಕೂಡ ಅನ್ಕೊಂಡಿರಲಿಲ್ಲ ಎಂದ ನೋವು ಹಂಚಿಕೊಂಡ ನಟಿ ಭವ್ಯಶ್ರೀ ರೈ.

 

ಸಿನಿಮಾ ರೀತಿ ನಡೆದು ಹೋದ ಭವ್ಯಶ್ರೀ ರೈ ಅವರ ಮದುವೆ ಕಥೆ ಭವ್ಯಶ್ರೀ ರೈ (Bhavyashree Rai ) ಅವರು 90ರ ದಶಕದಿಂದಲೂ ಕನ್ನಡ ಕಿರುತೆರೆಯ ಧಾರಾವಾಹಿ ಹಾಗೂ ಬೆಳ್ಳಿತೆರೆಯ ಸಿನಿಮಾಗಳ ಮೂಲಕ ಕನ್ನಡಿಗರಿಗೆ ಬಹಳ ಹತ್ತಿರವಾಗಿರುವ ನಟಿ. ಕಿರುತೆರೆಯ ಕುಂಕುಮ ಭಾಗ್ಯ, ನಿತ್ಯಶ್ರೀ, ಮನೆಯೊಂದು ಮೂರು ಬಾಗಿಲು ಮತ್ತು ಇತ್ತೀಚೆಗಿನ ಕಮಲಿ ಧಾರವಾಹಿ ವರೆಗೂ ಜನರಿಗೆ ಪ್ರತಿದಿನ ಟಿವಿ ಮೂಲಕ ಭೇಟಿಯಾಗುವ ಈ ನಟಿ ಶಿವಣ್ಣನ ತಂಗಿಯಾಗಿ ಕೂಡ ಮುತ್ತಣ್ಣ (Muththanna) ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಶಿವರಾಜ್ ಕುಮಾರ್, ವಿಷ್ಣುವರ್ಧನ್, ರಮೇಶ್ ಅರವಿಂದ್, ಶಶಿಕುಮಾರ್, ಅಂಬರೀಶ್ ಹೀಗೆ ಕನ್ನಡದ ಬಹುತೇಕ ಎಲ್ಲಾ ಮೇರು ನಟರ ಜೊತೆ ತೆರೆ ಹಂಚಿಕೊಂಡಿರುವ ಇವರು ನೋಡಲು ಬಹಳ ಸಿಂಪಲ್ ಆದರೆ ಅಭಿನಯದಲ್ಲಿ ಮಾತ್ರ ಬಹಳ ಗ್ರೇಟ್. ಈಗ ಮದುವೆಯಾಗಿ ಮಗು ಕೂಡ ಪಡೆದಿರುವ ಇವರ ದಾಂಪತ್ಯ ಜೀವನ ಸುಖಮಯವಾಗಿದೆ, ಆದರೆ ಇವರ ಮದುವೆ ನಡೆದಿದ್ದೇ ಸಿನಿಮಾ ರೀತಿಯಲ್ಲಿ ಎನ್ನುವುದು ಹೆಚ್ಚಿನ ಜನರಿಗೆ ತಿಳಿದಿಲ್ಲ.

ಹಲವು ಸಂದರ್ಶನಗಳಲ್ಲಿ ಈ ವಿಷಯವನ್ನು ಭವ್ಯಶ್ರೀ ರೈ ಅವರು ಹಾಗೂ ಅವರ ಪತಿ ಸುರೇಶ್ ರೈ (Suresh Rai) ಅವರು ಹೇಳಿಕೊಂಡಿದ್ದಾರೆ. ಅದೇನೆಂದರೆ ಭವ್ಯಶ್ರೀ ಅವರಿಗೆ ಅವರ ತಂದೆ ತಾಯಿ ಬಿಟ್ಟು ಇರಲು ಇಷ್ಟ ಇರಲಿಲ್ಲವಂತೆ. ಹಾಗಾಗಿ ಅವರು ಮದುವೆ ಆಗುವುದೇ ಇಲ್ಲ ಎಂದು ಡಿಸೈಡ್ ಮಾಡಿದ್ದರಂತೆ. ಯಾವುದೇ ಪ್ರಪೋಸಲ್ ಬಂದರೂ ಉಪವಾಸ ಮಾಡಿ ಅದನ್ನು ಮುರಿದು ಬಿಡುತ್ತಿದ್ದರಂತೆ.

ಹೀಗಾಗಿ ಮನೆಯವರೆಲ್ಲಾ ನಿರ್ಧಾರ ಮಾಡಿ ಇವರಿಗೆ ಹೇಳದೆ ಮದುವೆ ಫಿಕ್ಸ್ ಮಾಡಿಬಿಡಬೇಕು ಎಂದು ನಿರ್ಧಾರ ಮಾಡಿಕೊಂಡು ಸುರೇಶ್ ರೈ ಅವರ ಜೊತೆ ಮದುವೆ ಫಿಕ್ಸ್ ಮಾಡಿದರಂತೆ. ಸುರೇಶ್ ರೈ ಅವದಿಗೆ ಭವ್ಯಶ್ರೀ ಅವರ ತಾಯಿ ಮಗಳನ್ನು ಮದುವೆಗೆ ಒಪ್ಪಿಸುವುದಾಗಿ ಮಾತು ಕೊಟ್ಟಿದ್ದಾರಂತೆ. ಒಮ್ಮೆ ಸುರೇಶ್ ರೈ ಅವರು ಮದುವೆ ವಿಚಾರವಾಗಿ ಮನೆಗೆ ಬಂದಿದ್ದಾಗ ಶೂಟಿಂಗ್ ಸೆಟ್ ಇಂದ ತಾಯಿಗೆ ಫೋನ್ ಮಾಡಿದ್ದ ಭವ್ಯಶ್ರೀ ರೈ ಅವರು ಸುರೇಶ್ ರೈ ಅವರು ಬಂದಿರುವ ವಿಚಾರ ತಿಳಿದು ಅವರ ಜೊತೆ ಮಾತನಾಡಿದರಂತೆ.

ಅವರ ತಾಯಿ ಮದುವೆ ವಿಚಾರವಾಗಿ ಬಂದಿದ್ದಾರೆ ಎಂದು ಹೇಳಿದ್ದಕ್ಕೆ ಮದುವೆಗೆ ಇನ್ವಿಟೇಶನ್ ಕೊಡಲು ಬಂದಿರಬಹುದು ಎಂದು ತಿಳಿದು ಮದುವೆ ಫಿಕ್ಸ್ ಆಗಿರುವುದಕ್ಕೆ ಕಂಗ್ರಾಜುಲೇಷನ್ಸ್ ಮನೆಯವರೆಲ್ಲ ಬರುತ್ತೇವೆ ಎಂದು ಹೇಳಿ ಬಿಟ್ಟಿದ್ದರಂತೆ. ಆದರೆ ಪಾಪ ಅವರಿಗೆ ಗೊತ್ತಿರಲಿಲ್ಲ ಅವರ ಜೊತೆಗೆ ಮದುವೆ ಫಿಕ್ಸ್ ಆಗುತ್ತಿರುವುದು ಎಂದು. ಕೊನೆಗೆ ಒಂದು ದಿನ ಅಮ್ಮನ ಜೊತೆ ಹೊರಗೆ ಹೋಗಿದ್ದಾಗ ಇವರ ತಾಯಿ ಸ್ನೇಹಿತೆಯೊಬ್ಬರಿಗೆ ನನ್ನ ಮಗಳ ಮದುವೆ ಇದೆ ಬರಬೇಕು ಎಂದು ಕರೆಯುತ್ತಿದ್ದರಂತೆ.

ಮನೆಯಲ್ಲಿ ಅಕ್ಕನಿಗೆ ಮದುವೆ ಆಗಿದೆ ಯಾರ ಮದುವೆಗೆ ಕರೆಯುತ್ತಿದ್ದಾರೆ ಎಂದು ಮನೆಗೆ ಬಂದು ಕೇಳಿದಾಗ ನಿನಗೆ ಮದುವೆ ಫಿಕ್ಸ್ ಮಾಡಿದ್ದೇವೆ ಎಂದು ಆಗ ನಿಜ ಹೇಳಿದರಂತೆ. ಆಗಲೂ ಹಠ ಬಿಡದೆ ಮದುವೆಗೆ ಒಪ್ಪುವುದಿಲ್ಲ ಎಂದು ಹೇಳುತ್ತಿದ್ದಾಗ ಅವರ ತಾಯಿ ನಿನ್ನನ್ನು ನಂಬಿ ಮಾತು ಕೊಟ್ಟಿದ್ದೇನೆ ಇನ್ವಿಟೇಶನ್ ಎಲ್ಲಾ ಪ್ರಿಂಟ್ ಆಗಿದೆ ಎಲ್ಲರಿಗೆ ಹೇಳಿಯೂ ಆಗಿದೆ ನಮ್ಮ ಮಾತು ಉಳಿಸುತ್ತಿಯಾ ಇಲ್ಲ ನಮ್ಮ ಮರ್ಯಾದೆ ತೆಗಿಯುತೀಯ ನಿನಗೆ ಬಿಟ್ಟಿದ್ದು ಎಂದು ಹೇಳಿದರಂತೆ. ಆದರೆ ಇಂದು ಸುರೇಶ ರೈ ಅಂತಹ ಬಾಳ ಸಂಗಾತಿ ಪಡೆದು ಬಹಳ ಸಂತೋಷದಿಂದ ಇದ್ದೇನೆ ಖುಷಿ ಖುಷಿಯಾಗಿ ಮದುವೆ ಕಥೆಯನ್ನು ಹೇಳಿಕೊಳ್ಳುತ್ತಾರೆ ಭವ್ಯಶ್ರೀ ರೈ ಅವರು.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆಯ ಜನಪ್ರಿಯ ನಟಿ ಪ್ರಿಯಾ & ನಟ ಸಿದ್ದು.

 

ಪ್ರಿಯ ಜೆ ಆಚಾರ್ (Priya J Achar) ಹಾಗೂ ಸಿದ್ದು ಮೂಲಿಮನಿ (Siddu Moolimane) ಅವರು ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಈ ಹೆಸರು ಹೇಳಿದರೆ ಇವರು ಯಾರು ಎಂದು ಎಲ್ಲರಿಗೂ ಕನ್ಫ್ಯೂಸ್ ಆಗಬಹುದು. ಗಟ್ಟಿಮೇಳ (Gattimela) ಧಾರಾವಾಹಿ ಅಧಿತಿ (Adhiti) ಮತ್ತು ಪಾರು (Paru) ಧಾರವಾಹಿಯ ಪ್ರೀತಮ್ (Preetham) ಎಂದ ತಕ್ಷಣ ಎಲ್ಲರಿಗೂ ಇವರ ಮುದ್ದು ಮುಖ ನೆನಪಿಗೆ ಬರುತ್ತದೆ.

ಇದೇ ಪಾತ್ರದ ಹೆಸರುಗಳಿಂದ ಕಿರುತೆರೆ ಜನರ ಗಮನ ಸೆಳೆದಿರುವ ಇವರಿಬ್ಬರೂ ಪ್ರೀತಿಯಲ್ಲಿ ಬಿದ್ದಿರುವ ವಿಷಯ ಹಾಗೂ ಕುಟುಂಬದವರ ಒಪ್ಪಿಗೆ ಪಡೆದುಕೊಂಡು ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಕಳೆದ ನವೆಂಬರ್ ತಿಂಗಳಲ್ಲಿ ಇಬ್ಬರು ಕೂಡ ಅದ್ದೂರಿಯಾಗಿ ನಿಶ್ಚಿತಾರ್ಥ ಕಾರ್ಯಕ್ರಮ ಮಾಡಿಕೊಂಡಿದ್ದರು, ಆ ಕಾರ್ಯಕ್ರಮಕ್ಕೆ ಕಿರುತೆರೆ ಧಾರಾವಾಹಿಗಳ ದಂಡೆ ಬಂದು ಆಶೀರ್ವಾದ ಮಾಡಿತ್ತು.

ನಂತರ ಸೋಶಿಯಲ್ ಮೀಡಿಯಾದಲ್ಲಿ ಆ ಫೋಟೋಗಳು ವೈರಲ್ ಆಗುವ ಮೂಲಕ ಅಧಿಕೃತವಾಗಿ ಇವರಿಬ್ಬರು ಮುಂದಿನ ವರ್ಷ ಮದುವೆ ಆಗಲಿದ್ದಾರೆ ಎನ್ನುವುದು ಕನ್ಫರ್ಮ್ ಆಯ್ತು. ಇಂದು ಲವ್ ಬರ್ಡ್ಸ್ ಆಗಿದ್ದ ಇವರು ಸತಿಪತಿಗಳಾಗಿ ಜೀವನದ ಮುಂದಿನ ಅಧ್ಯಾಯ ಶುರು ಮಾಡುತ್ತಿದ್ದಾರೆ. ಸಿದ್ದು ಮೂಲಿಮನಿ ಹಾಗೂ ಪ್ರಿಯ ಜೆ ಆಚಾರ್ ಅವರು ಒಂದೇ ವಾಹಿನಿಯ ಬೇರೆ ಬೇರೆ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು.

ಮೊದಲಿಗೆ ಮುಖ ಪರಿಚಯ ಇದ್ದರೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (DKD) ಕಾರ್ಯಕ್ರಮದಲ್ಲಿ ಇಬ್ಬರು ಕಂಟೆಸ್ಟೆಂಟ್ಗಳಾಗಿ ಕಾಣಿಸಿಕೊಂಡಿದ್ದರಿಂದ ಇಬ್ಬರ ನಡುವೆ ಸ್ನೇಹ ಮೊಳೆತು ನಂತರ ಅದು ಪ್ರೀತಿಯಾಗಿ ಬದಲಾಗಿತ್ತು. ಈ ನಡುವೆ ಇಬ್ಬರು ಕೂಡ ಧಮಾಕ (Dhamaka) ಎನ್ನುವ ಚಿತ್ರದಲ್ಲಿ ಜೋಡಿಗಳಾಗಿ ಕೂಡ ಅಭಿನಯಿಸಿದ್ದರು. ಧಮಾಕ ಚಿತ್ರದ ಹಾಡುಗಳು ಹಿಟ್ ಆಗಿ ಟ್ರೆಂಡಿಂಗ್ ಕೂಡ ಆಗಿತ್ತು, ಆಗ ಇವರಿಬ್ಬರು ಜೀವನದಲ್ಲೂ ಜೊತೆ ಆಗುತ್ತಾರೆ ಎಂದು ಯಾರು ಊಹಿಸಿಕೊಂಡು ಇರಲಿಲ್ಲ.

ಇವರ ನಿಶ್ಚಿತಾರ್ಥದ ಆದ ಬಳಿಕ ಎಲ್ಲರಿಗೂ ಈ ವಿಷಯ ಬಹಳ ಅಚ್ಚರಿ ಮೂಡಿಸಿದೆ ತಮ್ಮ ಪ್ರೀತಿಯನ್ನು ಕುಟುಂಬದವರಿಗೆ ತಿಳಿಸಿ ಗುರು ಹಿರಿಯರು ಬಂದು ಬಾಂಧವರು ಮತ್ತು ಸ್ನೇಹಿತರು ಹಾಗೂ ಪರಿಚಯಸ್ತರ ಸಮ್ಮುಖದಲ್ಲಿ ಇಂದು ಇಬ್ಬರು ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಂಡಿದ್ದಾರೆ. ಮದುವೆಗೆ ತಿಂಗಳ ಹಿಂದೆ ತಯಾರಿ ಜೋರಾಗಿ ನಡೆದಿತ್ತು. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಗೆ ಮಾಡಿಕೊಂಡಿದ್ದ ತಯಾರಿಯ ಬಗ್ಗೆ ಹಾಗೂ ಪ್ರೀ ವೆಡ್ ಶೂಟ್ ವಿಡಿಯೋ ಮತ್ತು ಸ್ನೇಹಿತರ ಜೊತೆ ಬ್ಯಾಚುಲರ್ ಪಾರ್ಟಿ ಮಾಡಿರುವ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಯಾವ ಸಿನಿಮಾ ಶೂಟಿಂಗ್ ಗಿಂತಲೂ ಕಡಿಮೆ ಇಲ್ಲದಂತೆ ಇವರ ಪ್ರೀ ವೆಡ್ ಶೂಟಿಂಗ್ ನಡೆದಿತ್ತು. ಈಗ ಮದುವೆ ಸಹ ಅಷ್ಟೇ ಗ್ರಾಂಡ್ ಆಗಿ ನಡೆದಿದ್ದು ಮಧು ಮಕ್ಕಳಿಬ್ಬರು ಯುವರಾಜ, ಯುವರಾಣಿಯಂತೆ ಕಾಣುತ್ತಿದ್ದಾರೆ. ರೇಷ್ಮೆಬಣ್ಣದ ರೇಷ್ಮೆ ಸೀರೆ ಹಾಗೂ ಶಲ್ಯ ತೊಟ್ಟು ಜೋಡಿಗಳು ಸಾಂಪ್ರದಾಯ ಉಡುಗೆಯಲ್ಲಿ ರಾಯಲ್ ಆಗಿ ಕಾಣುತ್ತಿದ್ದಾರೆ. ಇವರಿಬ್ಬರ ವಿವಾಹ ಕಾರ್ಯಕ್ರಮಕ್ಕೆ ಗಟ್ಟಿಮೇಳ ಹಾಗೂ ಪಾರು ಧಾರವಾಹಿಯ ಇಡೀ ತಂಡವೇ ಬಂದಿದೆ.

ಜೊತೆಗೆ ಜೀ ಕನ್ನಡ ವಾಹಿನಿಯ ಇತರೆ ಧಾರಾವಾಹಿ ಕಲಾವಿದರು ತಂತ್ರಜ್ಞರು ಎಲ್ಲರೂ ಸಹ ಭಾಗಿಯಾಗಿ ದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಸದ್ಯಕ್ಕೆ ವೈರಲಾಗುತ್ತಿರುವ ಫೋಟೋಗಳಲ್ಲಿ ಸುಧಾ ನರಸಿಂಹಮೂರ್ತಿ, ಅಶ್ವಿನಿ, ವಿನಯ ಪ್ರಸಾದ್, ಶರತ್ ಪದ್ಮನಾಭ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಇಬ್ಬರು ತಮ್ಮ ದಾಂಪತ್ಯ ಜೀವನವನ್ನು ನೆಮ್ಮದಿಯಿಂದ ಕಳೆಯಲಿ ಎಂದು ನಾವು ಸಹ ಹಾರೈಸೋಣ.

ಆ.ತ್ಮ.ಹ.ತ್ಯೆ ಮಾಡಿಕೊಳ್ಳಲು ಹೋಗಿ ಅಣ್ಣಾವ್ರ ಹಾಡು ಕೇಳಿ ವಾಪಸ್ ಬಂದ ಕಥೆ ಹೇಳಿದ ಹಂಸಲೇಖ.

0

 

ವರನಟ ಡಾ. ರಾಜಕುಮಾರ್ (Dr.Rajkumar) ಅಕ್ಷರಶಃ ಈ ನಾಡು ಕಂಡ ಶ್ರೇಷ್ಠ ವ್ಯಕ್ತಿತ್ವದ ಮನಮೋಹಕ ಅಭಿನಯದ ನಟಸಾರ್ವಭೌಮ. ಇವರ ಅಭಿನಯದ ಮೋಡಿಯದೆಮೇ ಒಂದು ಸೆಳೆತವಾದರೆ ಇವರು ಒಪ್ಪಿಕೊಳ್ಳುತ್ತಿದ್ದ ಪಾತ್ರಗಳು ಮಾಡುತ್ತಿದ್ದ ಸಿನಿಮಾಗಳು ಅದರ ಸಂದೇಶ ಮತ್ತು ಆ ಸಿನಿಮಾದ ಹಾಡುಗಳು ಈ ಬದುಕಿಗೆ ಬೇಕಾದ ಜೀವನ ಪಾಠವೇ ಆಗಿರುತ್ತಿತ್ತು. ಪ್ರತಿಯೊಂದು ಸಿನಿಮಾದಲ್ಲೂ ಕೂಡ ಅರ್ಥಪೂರ್ಣ ಸಂಭಾಷಣೆ ಹಾಗೂ ಸಿನಿಮಾದಲ್ಲಿ ಒಂದು ನೀತಿಯನ್ನು ನೀಡುತ್ತಿದ್ದ ಅಣ್ಣಾವ್ರ ಸಿನಿಮಾ ನೋಡಿ ಹಾಗೂ ಅವರ ವ್ಯಕ್ತಿತ್ವ ನೋಡಿ ಅನೇಕರು ಬದಲಾಗಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಕನ್ನಡ ಚಲನಚಿತ್ರ ರಂಗದ ಬಂಗಾರದ ಸಿನಿಮಾ ಎಂದೇ ಕರೆಯಬಹುದಾದ ಬಂಗಾರದ ಮನುಷ್ಯ (Bangarada Manushya) ಸಿನಿಮಾ ನೋಡಿ ಎಷ್ಟೋ ಮಂದಿ ಪಟ್ಟಣ ಬಿಟ್ಟು ಹಳ್ಳಿಗೆ ಹೋಗಿ ವ್ಯವಸಾಯ ಮಾಡಲು ಶುರು ಮಾಡಿದರು. ಅಷ್ಟರ ಮಟ್ಟಿಗೆ ಆ ಸಿನಿಮಾದ ಅಣ್ಣಾವ್ರ ಪಾತ್ರ ಜನರ ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು. ಜನ ಸಾಮಾನ್ಯರು ಮಾತವಲ್ಲದೆ ಜನಪ್ರಿಯ ಸೆಲೆಬ್ರಿಗಳು ಕೂಡ ಈ ಬಗ್ಗೆ ಅನೇಕ ಬಾರಿ ಹೇಳಿಕೊಂಡಿದ್ದಾರೆ.

ಅದೇ ರೀತಿ ಈ ವಾರ ಜೀ ಕನ್ನಡ (Zee kannada) ವಾಹಿನಿಯ ಸರಿಗಮಪ (Saregamapa) ರಿಯಾಲಿಟಿ ಶೋ ವೇದಿಕೆಯಲ್ಲಿ ಹಂಸಲೇಖ ಅವರು ಇಂತಹದೊಂದು ನೆನಪನ್ನು ತೆರೆದುಕೊಂಡಿದ್ದಾರೆ. ಈ ಬಾರಿ ಸರಿಗಮಪ ಶೋ ಅಲ್ಲಿ ರಾಜ್ ಕುಮಾರ್ ಅವರ ವಿಶೇಷದ ಸುತ್ತು ಇದೆ. ಈ ಸುತ್ತಿನಲ್ಲಿ ಅಣ್ಣಾವ್ರ ಹಾಡುಗಳನ್ನು ಹಾಡಲಾಗುತ್ತಿದ್ದು ರಾಘಣ್ಣ ಅವರು ಇದಕ್ಕೆ ಅತಿಥಿಯಾಗಿ ಆಗಮಿಸಿದ್ದಾರೆ. ಚೆನ್ನಪ್ಪ ಅವರು ಆಕಸ್ಮಿಕ (Akasmika) ಚಿತ್ರದ ಬಾಳುವಂತ ಹೂವೆ ಬಾಡುವ ಆಸೆ ಏಕೆ? ಈ ಹಾಡನ್ನು ಹಾಡಿದ್ದಾರೆ.

ಆಕಸ್ಮಿಕ ಚಿತ್ರದಲ್ಲಿ ಅಣ್ಣಾವ್ರು ಅಭಿನಯ ಮಾಡಿರುವುದು ಮಾತ್ರವಲ್ಲದೆ ಈ ಹಾಡಿಗೂ ಕೂಡ ಧ್ವನಿ ಆಗಿದ್ದಾರೆ. ಅಣ್ಣಾವ್ರು ಹಾಡಿರುವ 300ಕ್ಕೂ ಹೆಚ್ಚಿನ ಸಿನಿಮಾ ಹಾಡುಗಳಲ್ಲಿ ಈ ಹಾಡು ಕೂಡ ಒಂದು. ಈ ಹಾಡಿನ ಅರ್ಥ ಬಲು ಸೊಗಸಾಗಿದೆ ಬದುಕಿನಲ್ಲಿ ಸೋಲು ಕಂಡ ಜೀವ ಬದುಕೆ ಮುಗಿದು ಹೋಯಿತು ಎಂದು ನಂಬಿಕೆ ಕಳೆದುಕೊಂಡ ಒಡೆದ ಮನಸ್ಸು ಒಮ್ಮೆ ಈ ಹಾಡನ್ನು ಕೇಳಿದರೆ ಸಾಕು ಯಾವುದೇ ತೆರಪಿ ಇಲ್ಲದೆ ಅವರ ನೋವು ನಿವಾರಣೆ ಆಗಿ ಬಿಡುತ್ತದೆ.

ಅಷ್ಟು ಅರ್ಥಬದ್ಧವಾದ ಈ ಹಾಡನ್ನು ಸೃಶ್ಯಾವ್ಯವಾಗಿ ಅಣ್ಣಾವ್ರು ಹಾಡಿದ್ದಾರೆ. ಈ ಹಾಡನ್ನು ಚೆನ್ನಪ್ಪ (Chennappa) ಅವರು ಹಾಡಿದ ಬಳಿಕ ಹಂಸಲೇಖ (Hamsalekha) ಅವರು ಹಾಡಿನ ಬಗ್ಗೆ ಮಾತನಾಡಿ ನನಗೆ ತಿಳಿದಿರುವ ಒಬ್ಬ ಹುಡುಗ ಆ.ತ್ಮ.ಹ.ತ್ಯೆ (Succide) ಮಾಡಿಕೊಳ್ಳಲು ಹೋಗಿದ್ದ ಆದರೆ ಅಣ್ಣಾವ್ರ ಹಾಡು ಅದೇ ಸಮಯದಲ್ಲಿ ಪ್ಲೇ ಆಗುತ್ತಿತ್ತು ಹಾಡನ್ನು ಕೇಳಿ ಮನ ಪರಿವರ್ತನೆ ಮಾಡಿಕೊಂಡು ಮತ್ತೆ ಜೀವನದ ಯುದ್ಧ ಎದುರಿಸಲು ಸಿದ್ಧನಾದ ಎಂದು ಹಳೆಯ ಕಥೆಯನ್ನು ಹೇಳಿಕೊಂಡಿದ್ದಾರೆ.

ಅದೇ ಸಮಯದಲ್ಲಿ ರಾಘಣ್ಣ (Raghavendra Rajkumar) ಅವರು ಸಹ ನಾನು ಪ್ಯಾರಾಲಿಸಿಸ್ ಅಟ್ಯಾಕ್ (Paralysis attack) ಆಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಬಹಳ ಖಿನ್ನತೆ (depression) ಅನುಭವಿಸುತ್ತಿದ್ದೆ. ಆ ಸಮಯದಲ್ಲಿ ಅಪ್ಪಾಜಿ ಅವರ ಈ ಹಾಡನ್ನು ಪದೇ ಪದೇ ಕೇಳುತ್ತಿದ್ದೆ ಅದರಿಂದ ನನಗೆ ಸಮಾಧಾನ ಸಿಗುತ್ತಿತ್ತು ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ರೀತಿ ಆಕಸ್ಮಿಕ ಸಿನಿಮಾದ ಈ ಒಂದು ಹಾಡು ಮಾತ್ರ ಅಲ್ಲದೆ ಅಣ್ಣಾವ್ರು ಹಾಡಿರುವ ಅನೇಕ ಹಾಡು ಗಳು ಇದೇ ರೀತಿ ಮನಸ್ಸಿಗೆ ಸಮಾಧಾನ ನೀಡುವ ಮೌಲ್ಯ ಭರಿತ ಪದಪುಂಜ ದಿಂದ ಕುಡಿದ ಹಾಡಾಗಿದೆ, ಜೊತೆಗೆ ಅವುಗಳಿಗೆ ಅಣ್ಣಾವ್ರ ಸ್ವರ ಬೆರೆತಿರುವುದರಿಂದ ಅದಕ್ಕೆ ಇನ್ನಷ್ಟು ಸಕಾರಾತ್ಮಕ ಶಕ್ತಿ ಬಂದಿದೆ ಎಂದು ಹೇಳಬಹುದು.

ಸ್ವಂತ ಮನೆಯನ್ನು ಬಾಡಿಗೆ ಕೊಡುವ ಪರಿಸ್ಥಿತಿಗೆ ಬಂದ ನಟಿ ಅಧಿತಿ ಪ್ರಭುದೇವ. ಇಷ್ಟ ಪಟ್ಟ ಖರೀದಿ ಮಾಡಿದ ಮನೆಯನ್ನು ಬಿಟ್ಟು ಹೋಗಲು ಕಾರಣವೇನು ಗೊತ್ತ.?

0

 

ನಟಿ ಅಧಿತಿ ಪ್ರಭುದೇವ (Adhithi Prabhudev) ಈಗ ಕನ್ನಡಿಗರಿಗೆಲ್ಲರಿಗೂ ಪರಿಚಿತರು. ನೋಡಿದ ತಕ್ಷಣ ಪಕ್ಕದ ಮನೆ ಹುಡುಗಿ ಎನ್ನುವ ಫೀಲ್ ಕೊಡುವ ಈಕೆ ಹಳ್ಳಿ ಹುಡುಗಿ ಪಾತ್ರಕ್ಕೂ ಸೈ, ಸಿಟಿ ಹುಡುಗಿ ಇಮೇಜಿಗೂ ಜೈ. ಕಲರ್ಸ್ ಕನ್ನಡ (Colors kannada) ವಾಹಿನಿಯಲ್ಲಿ ಪ್ರಸಾರವಾದ ನಾಗಕನ್ನಿಕೆ (Nagakannike serial) ಎನ್ನುವ ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಇವರು ಅಜಯ್ ರಾವ್ (Ajay Rao) ಅವರ ಧೈರ್ಯಂ (Dairyam) ಸಿನಿಮಾದ ಮೂಲಕ ಬೆಳ್ಳಿ ತೆರೆಗೂ ಬಂದರು.

ಆನಂತರ ಇವರು ತಿರುಗಿ ನೋಡಿದ್ದೆ ಇಲ್ಲ ವರ್ಷಪೂರ್ತಿ ಹತ್ತಾರು ಸಿನಿಮಾಗಳಲ್ಲಿ ಬ್ಯುಸಿ ಇರುವ ಈಕೆ ಕಳೆದ ವರ್ಷ ಕೂಡ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಈಗಲೂ ಹೊಸ ವರ್ಷದಿಂದ ಅವರ ಎರಡು ಸಿನಿಮಾ ರಿಲೀಸ್ ಆಗಿದೆ. ಒಂದು ರೀತಿಯಲ್ಲಿ ಈಗ ಅಧಿತಿ ಪ್ರಭುದೇವ್ ಅವರು ಮುಟ್ಟಿದ್ದೆಲ್ಲ ಚಿನ್ನ ಎನ್ನುವ ರೀತಿ ಅದೃಷ್ಟ ಪಡೆದುಕೊಂಡಿದ್ದಾರೆ. ಯಾವುದೇ ಹೊಸ ಫೇಸ್ ಗೆ ಹೊಸ ಸಿನಿಮಾದಲ್ಲಿ ಅವಕಾಶ ಸಿಗುವುದು ಸುಲಭ, ಆದರೆ ಅದನ್ನು ಉಳಿಸಿಕೊಂಡು ಮೊದಲಿಗಿಂತಲೂ ಹೆಚ್ಚಿನ ಬೇಡಿಕೆ ಸೃಷ್ಟಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.

ಆದರೆ ಇದರಲ್ಲಿ ಅಧಿತಿ ಸೋತಿಲ್ಲ. ಯಾವುದೇ ಝೋನರ್ ಸಿನಿಮಾದ ಯಾವುದೇ ಪಾತ್ರ ಕೊಟ್ಟರು ಜನರಿಗೆ ಇಷ್ಟವಾಗುವ ರೀತಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗುವ ಇವರು ಸದ್ಯಕ್ಕೆ ಕೆರಿಯರ್ ಅಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇದ್ದಾರೆ. ಜೊತೆಗೆ ಕಳೆದ ವರ್ಷ ವೈವಾಹಿಕ ಜೀವನವನ್ನು ಕೂಡ ಆರಂಭಿಸಿದ್ದಾರೆ 2022 ರ ನವೆಂಬರ್ ತಿಂಗಳಿನಲ್ಲಿ ಉದ್ಯಮಿ ಮತ್ತು ಕೃಷಿಕರಾಗಿರುವ ಯಶಸ್ ಪಾಟ್ಲ (Yashas patla) ಎನ್ನುವ ಕೋಟ್ಯಾಧೀಶ್ವರರನ್ನು ಮದುವೆ ಆಗಿರುವ ಇವರು ಮದುವೆ ಆಗಿ ವರ್ಷ ತುಂಬುವ ಮೊದಲೇ ತಾವಿದ್ದ ಮನೆಯನ್ನು ಬಾಡಿಗೆ ಕೊಡಲು ರೆಡಿಯಾಗಿದ್ದಾರೆ.

ಇವರ ಈ ನಿರ್ಧಾರಕ್ಕೂ ಕೂಡ ಕಾರಣ ಇದೆ. ಮನೆಯನ್ನು ಬೇರೆಯವರಿಗೆ ಬಾಡಿಗೆಗೆ ಕೊಡುತ್ತಾ ಇರುವ ಕಾರಣ ಕೊನೆಯದಾಗಿ ಅವರು ಇದ್ದ ಮನೆಯ ಹೋಂ ಟೂರ್ ಮಾಡಿರುವ ಅಧಿತಿ ಪ್ರಭುದೇವ್ ಅವರು ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಆ ಮನೆ ಖರೀದಿಸಲು ಪಟ್ಟ ಶ್ರಮ ಮತ್ತು ಈಗ ಬಾಡಿಗೆಗೆ (for Rent) ಕೊಡುತ್ತಿರುವ ಕಾರಣ ಕೂಡ ತಿಳಿಸಿದ್ದಾರೆ. ಬ್ಯಾಂಕ್ ಅಲ್ಲಿ ಹೋಂ ಲೋನ್ ಗಳನ್ನು ಕಡಿಮೆ ಬಡ್ಡಿಗೆ ಕೊಡುವ ಕಾರಣ ಲೋನ್ (home loan) ಪಡೆದುಕೊಂಡೆ ಮನೆ ಖರೀದಿಸಿದ್ದರಂತೆ.

ಈಗ ಮನೆ ಖರೀದಿಸಿ ಎರಡು ವರ್ಷಗಳು ಮಾತ್ರ ಆಗಿದೆ ಎನ್ನುವುದನ್ನು ಹೇಳಿದ್ದಾರೆ ಅದನ್ನು ಮಾರುವ ನಿರ್ಧಾರವನ್ನು ಕೂಡ ಮಾಡಿದ್ದ ಇವರು ಈಗ ಮನಸ್ಸು ಬದಲಾಯಿಸಿ ಬಾಡಿಗೆಗೆ ಕೊಟ್ಟಿದ್ದಾರೆ. ಈಗ ಮದುವೆಯಾಗಿ ಗಂಡನ ಮನೆ ಸೇರಿರುವ ಕಾರಣ ಈ ಮನೆಯಲ್ಲಿ ಅವರು ಇರುವುದಿಲ್ಲ ಹಾಗಾಗಿ ಅದು ಹಾಗೆ ಹಾಳಾಗುವುದು ಬೇಡ ಎನ್ನುವ ಕಾರಣಕ್ಕೆ ಬಾಡಿಗೆಗೆ ಕೊಡುವ ನಿರ್ಧಾರಕ್ಕೆ ಬಂದಿದ್ದಾರೆ.

ನಟಿ ಅಧಿತಿ ಪ್ರಭುದೇವ್ ಅವರು ಕನ್ನಡದ ಟಾಪ್ ಹೀರೋಯಿನ್ ಆಗಿ ಮಿಂಚುತ್ತಿದ್ದರು ಬದುಕುತ್ತಿರುವುದು ಬಹಳ ಸರಳವಾಗಿ. ತಮ್ಮ ಜೀವನದ ಕುರಿತ ಯಾವುದೇ ವಿಷಯ ಇದ್ದರೂ ಅದನ್ನು ಸೀದಾಸಾದ ಅಭಿಮಾನಿಗಳ ಜೊತೆ ಹೇಳಿಕೊಂಡು ಬಿಡುತ್ತಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾ ಈಗ ಅವರಿಗೂ ಹಾಗೂ ಅಭಿಮಾನಿಗಳಿಗೂ ಕನೆಕ್ಟ್ ಮಾಡಿರುವ ಒಂದು ಬ್ರಿಡ್ಜ್ ಆಗಿದ್ದು, ನಟಿ ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟಿವ್ ಆಗಿ ಇರುತ್ತಾರೆ ಮತ್ತು ಅಭಿಮಾನಿಗಳ ಪ್ರಶ್ನೆಗಳಿಗೆ ಸ್ಪಂದಿಸಿ ಉತ್ತರಿಸುತ್ತಾರೆ.

ದರ್ಶನ್ ಹಚ್ಚೆ ಹಾಕಿಸಿಕೊಂಡಿರುವುದರ ಬಗ್ಗೆ ಅಭಿಷೇಕ್ ಅಂಬರೀಶ್ ಅವರನ್ನು ಕೇಳಿದಾಗ ಅಭಿ ಕೊಟ್ಟ ಉತ್ತರವೇನು ಗೊತ್ತ.? ನಿಜಕ್ಕೂ ಒಂದು ಕ್ಷಣ ಎಲ್ಲರೂ ಶಾ-ಕ್ ಆದ್ರೂ

 

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರು ನೆನ್ನೆ ತಮ್ಮ ಅಭಿಮಾನಿಗಳಿಗಾಗಿ (for fan’s) ಎದೆ ಮೇಲೆ ನನ್ನ ಸೆಲೆಬ್ರಿಟಿಸ್ ಎಂದು ಹಚ್ಚೆ (Tattoo) ಹಾಕಿಸಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳನ್ನು ತುಂಬಾ ಭಾವುಕರನ್ನಾಗಿ ಮಾಡಿದ್ದು ಒಂದು ರೀತಿಯಲ್ಲಿ ಕೂಡ ಸಂತಸದಲ್ಲಿ ಕಂಬನಿ ಮಿಡಿಯುವಂತೆ ಮಾಡಿದೆ. ದರ್ಶನ್ ಅವರಿಗೆ ಅವರ ಅಭಿಮಾನಿಗಳ ಮೇಲೆ ಎಷ್ಟು ಪ್ರೀತಿ ಇದೆ ಎಂದು ಎಲ್ಲರಿಗೂ ಗೊತ್ತು. ಹಾಗಾಗಿ ಅವರು ಅಭಿಮಾನದಿಂದ ಅಭಿಮಾನಿಗಳನ್ನು ನನ್ನ ಸೆಲೆಬ್ರಿಟಿಸ್ ಎಂದೇ ಕರೆಯುತ್ತಾರೆ.

ಈಗ ಅದೇ ಹೆಸರನ್ನು ಎದೆ ಮೇಲೆ ಹಚ್ಚೆಯಾಗಿ ಕೂಡ ಹಾಕಿಸಿಕೊಂಡಿದ್ದಾರೆ ಅಭಿಮಾನಿಗಳು ಸಹ ದರ್ಶನ್ ಅವರನ್ನು ಅಷ್ಟೇ ಇಷ್ಟಪಡುತ್ತಾರೆ. ವೈಯಕ್ತಿಕವಾಗಿ ಅವರ ವಿವಾದಗಳು ಏನೇ ಇದ್ದರೆ ಕೂಡ ಒಬ್ಬ ಸ್ಟಾರ್ ನಟನಾಗಿ ಅಭಿಮಾನಿಗಳು ಇಟ್ಟಿರುವ ಅಭಿಮಾನ ಎಂದೂ ಕಡಿಮೆ ಆಗಿಲ್ಲ. ಇಡೀ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ ಅವರು ಈ ರೀತಿ ಅಭಿಮಾನಿಗಳ ಬಗ್ಗೆ ಟ್ಯಾಟು ಹಾಕಿಸಿಕೊಂಡಿರುವುದು ಅಭಿಮಾನಿಗಳ ಜೊತೆ ಸ್ಯಾಂಡಲ್ ವುಡ್‌ ಇತರ ತಾರೆಗಳಿಗೂ ಮೆಚ್ಚುಗೆ ಆಗಿದೆ.

ಎಲ್ಲರೂ ಸಹ ದರ್ಶನ್ ಅವರ ಈ ನಡೆ ಬಗ್ಗೆ ಬಹಳ ಹೆಮ್ಮೆ ಹಾಗು ಸಂತಸ ವ್ಯಕ್ತಪಡಿಸುತ್ತಿದ್ದಾರೆ ದರ್ಶನ್ ಅವರೇ ಟ್ಯಾಟು ಹಾಕಿಸಿಕೊಳ್ಳುವ ಮುಂಚೆ ಹೇಳಿಕೊಂಡಿದ್ದರು ನನ್ನ ಸೆಲೆಬ್ರಿಟಿಸ್ ನನಗಾಗಿ ಅಷ್ಟೊಂದು ಮಾಡುತ್ತಾರೆ. ಅದರ ಮುಂದೆ ಇದೆಲ್ಲ ಯಾವ ಲೆಕ್ಕ ನನ್ನ ಕಡೆಯಿಂದ ಅವರಿಗಾಗಿ ಒಂದು ಸಣ್ಣ ಅರ್ಪಣೆ ಅಷ್ಟೇ ಎಂದು ಹೇಳಿ ಟ್ಯಾಟು ಹಾಕಿಸಿಕೊಂಡಿದ್ದರು. ಈಗ ದರ್ಶನ್ ತಮ್ಮ ಎಂದೇ ಹೆಸರಾಗಿರುವ ಅಭಿಷೇಕ್ ಅಂಬರೀಶ್ (Abhishek Ambarish) ಅಣ್ಣನ ಈ ನಡೆ ಬಗ್ಗೆ ತಮ್ಮ ಮಾತುಗಳನ್ನು ಈ ರೀತಿ ಹಂಚಿಕೊಂಡಿದ್ದಾರೆ.

ದರ್ಶನ್ ಅಣ್ಣ ಅಭಿಮಾನಿಗಳನ್ನು ಎಷ್ಟು ಇಷ್ಟ ಪಡುತ್ತಾರೆಂದು ಅವರ ಸುತ್ತಮುತ್ತ ಇರುವ ಎಲ್ಲರಿಗೂ ಗೊತ್ತು ಒಮ್ಮೆ ಯಾವುದೋ ಸಂದರ್ಭದಲ್ಲಿ ಕಣ್ಣಾರೆ ನಾನು ಕಂಡಿದ್ದೇನೆ. ತುಂಬಾ ಸ್ಟ್ರೈನ್ ಆಗಿದ್ದರು ಒಂದು ಸಿನಿಮಾ ತಯಾರಿಗಾಗಿ ಬಹಳ ಜಿಮ್ ಮಾಡುತ್ತಿದ್ದರು ಅವರು ಎರಡು ತಾಸು ರೆಸ್ಟ್ ಮಾಡುತ್ತಾರೆ ಅಷ್ಟೇ ಎಂದು ಅವರ ಅಸಿಸ್ಟೆಂಟ್ಗಳು ಹೇಳಿದ್ದರು. ಹಾಗಾಗಿ ನಾನು ಹೇಳಿದೆ ಯಾಕಾಗಿ ಇಷ್ಟೊಂದು ಸ್ಟ್ರೆಸ್ ತೆಗೆದುಕೊಳ್ಳುತ್ತೀರಾ ಆರಾಮಾಗಿರಿ ಸ್ವಲ್ಪ ದಿನ, ಇಷ್ಟು ಕಷ್ಟ ಬೇಕಾ ನಿಮಗೆ ಎಂದು ಕೂಡ ಕೇಳಿದೆ.

ಅದಕ್ಕೆ ದರ್ಶನ್ ಅಣ್ಣ ಹೇಳಿದ್ದು ಒಂದೇ ಮಾತು ನನ್ನ ಅಭಿಮಾನಿಗಳು ನನ್ನ ಮೇಲೆ ಏನೋ ಒಂದು ಎಕ್ಸ್ಪೆಕ್ಟೇಶನ್ ಇಟ್ಟುಕೊಂಡಿದ್ದಾರೆ ಅವರಿಗೆ ನಿರಾಸೆ ಮಾಡಲು ಇಷ್ಟ ಇಲ್ಲ. ನನ್ನ ಫ್ಯಾನ್ಸ್ ಗೆ ನಾನು ಹೇಗೆ ಬೇಕೋ ಹಾಗೆ ತಯಾರಾಗುತ್ತೇನೆ ಕಷ್ಟ ಆಗಿದ್ದರು ಪರವಾಗಿಲ್ಲ ಎಂದು ಹೇಳಿದ್ದರು. ಈಗ ಎಲ್ಲರಂತೆ ನನಗೂ ಸಹ ಅವರು ಟ್ಯಾಟು ಹಾಕಿಸಿಕೊಂಡಿರುವ ವಿಷಯ ಬಹಳ ಎಮೋಷನಲ್ ಮಾಡಿದ್ದು ಕರೆ ಮಾಡಿ ನಾನು ವಿಚಾರಿಸಿದೆ.

ಆಗ ಅಣ್ಣ ಹೇಳಿದ್ದು ಹೀಗೆಂದರು “ಎದೆ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದಲ್ಲ ನನ್ನ ಎದೆ ಬಗೆದರೂ ಕೂಡ ಅವರೇ ಇರುವುದು, ಎಲ್ಲರ ಹೆಸರನ್ನು ಹಾಕಿಸಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಎಲ್ಲರ ಹೆಸರನ್ನು ಸೇರಿಸಿ ಒಂದೇ ಹೆಸರಿನಲ್ಲಿ ಹಾಕಿಸಿಕೊಂಡಿದ್ದೇನೆ ಎಂದು ಹೇಳಿದರು” ಎಂದಿದ್ದಾರೆ. ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ಸ್ಟಾರ್ ಅಭಿಮಾನಿಗಳಿಗಾಗಿ ಈ ರೀತಿ ಅಭಿಮಾನದಿಂದ ಟ್ಯಾಟು ಹಾಕಿಸಿಕೊಂಡಿರುವುದು ಅದರಲ್ಲಿ ಅಣ್ಣನೇ ಫಸ್ಟ್ ಎಂದು ಹೇಳಿದ್ದಾನೆ. ಈ ವಿಚಾರ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಶೂಟಿಂಗ್ ಬಸ್ ನಲ್ಲೇ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಶ್ವೇತ ಚಂಗಪ್ಪ ಈ ಕ್ಯೂಟ್ ವಿಡಿಯೋ ನೋಡಿ.

 

ಶ್ವೇತ ಚಂಗಪ್ಪ (Shwetha changappa) ಎನ್ನುವ ಈ ಕೊಡಗಿನ ಬೆಡಗಿ ಕಿರುತೆರೆಗೆ ತೀರಾ ಪರಿಚಿತರು. ಕನ್ನಡಿಗರೆಲ್ಲರೂ ಶ್ವೇತಾ ಚಂಗಪ್ಪ ಅವರನ್ನು ಮನೆ ಮಗಳ ರೀತಿ ಕಾಣುತ್ತಾರೆ. ಇದಕ್ಕೆಲ್ಲ ಕಾರಣ ಅವರ ಧಾರಾವಾಹಿಗಳು ಅಷ್ಟು ಚೆನ್ನಾಗಿ ಜನರ ಮನಸ್ಸಿಗೆ ಹತ್ತಿರವಾಗಿವೆ ಇವರು ನಿಭಾಯಿಸಿದ್ದ ಪಾತ್ರಗಳು. ಸುಮತಿ, ಸುಕನ್ಯಾ, ಕಾದಂಬರಿ, ಅರುಂಧತಿ ಇನ್ನೂ ಮುಂತಾದ ಅನೇಕ ಧಾರಾವಾಹಿಗಳಲ್ಲಿ ಕಿರುತೆರೆ ಕಣ್ಣೀರಿನ ನಾಯಕಿ ಎಂದು ಹೆಸರು ಪಡೆದಿದ್ದ ಇವರು ಇವರು ಮಜಾ ಟಾಕೀಸ್ ಅಲ್ಲಿ ಸೃಜನ್ ಅವರಿಗೆ ರಾಣಿಯಾಗಿ ಕಾಮಿಡಿ ಪಾತ್ರದಲ್ಲೂ ಸೈ ಅನಿಸಿ ಕೊಂಡುಬಿಟ್ಟರು.

ಶ್ವೇತ ಚಂಗಪ್ಪ ಅವರು ವಿಷ್ಣುವರ್ಧನ್, ದರ್ಶನ್ ಅಂತಹ ಸ್ಟಾರ್ ನಟರಿಗೆ ತಂಗಿಯಾಗಿ ಕೂಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ತೆರೆಕಂಡ ಶಿವರಾಜ್ ಕುಮಾರ್ ಅವರ ಬ್ಲಾಕ್ಬ ಬ್ಲಾಸ್ಟರ್ ಚಿತ್ರ ವೇದ (Veda) ಸಿನಿಮಾದಲ್ಲೂ ಕೂಡ ಪ್ರಮುಖ ಪಾತ್ರ ಅಭಿನಯಿಸುವುದರ ಮೂಲಕ ಚಿತ್ರರಂಗದಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಇದರ ಜೊತೆಗೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಮತ್ತು ಸ್ವಂತ ಉದ್ದಿಮೆ ಕೂಡ ನಿಭಾಯಿಸುತ್ತಿರುವ ಶ್ವೇತ ಚಂಗಪ್ಪ ಅವರು ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದನ್ನು ಮಾತ್ರ ಎಷ್ಟೇ ಬ್ಯುಸಿ ಇದ್ದರೂ ತಪ್ಪಿಸಿಕೊಳ್ಳುವುದಿಲ್ಲ. ಸದಾ ಒಂದಲ್ಲ ಒಂದು ರಿಯಾಲಿಟಿ ಶೋಗಳು ಅಥವಾ ಧಾರಾವಾಹಿಗಳ ಮೂಲಕ ಒಂದಲ್ಲ ಒಂದು ಚಾನೆಲ್ ಅಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ ನಿರೂಪಣೆಯಲ್ಲೂ ಕೂಡ ಶ್ವೇತ ಚಂಗಪ್ಪ ಅವರು ಜಾದು ಮಾಡಿದ್ದಾರೆ.

ಈ ಹಿಂದೆಯೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಡ್ಯಾನ್ಸ್ ಡ್ಯಾನ್ಸ್ ಜೂನಿಯರ್, ಯಾರಿಗೂಂಟು ಯಾರಿಗಿಲ್ಲ ಈ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದ ಇವರು ಮತ್ತೊಮ್ಮೆ ನಿರೂಪಣೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಈಗಷ್ಟೇ ಜೋಡಿ ನಂಬರ್ ಒನ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿ ಯಶಸ್ವಿಗೊಳಿಸಿದ ಇವರು ಜೀ ಕನ್ನಡದ ಮತ್ತೊಂದು ಹೆಣ್ಣು ಮಕ್ಕಳ ವಿಶೇಷ ರಿಯಾಲಿಟಿ ಶೋ ಆದ ಕ್ವೀನ್ಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ.

ಅಭಿನಯ ಡ್ಯಾನ್ಸ್ ನಿರೂಪಣೆ ಉದ್ಯಮ ಈ ರೀತಿ ಬಹುಮುಖ ಪ್ರತಿಭೆ ಆಗಿರುವ ಶ್ವೇತಾ ಚಂಗಪ್ಪ ಅವರು ಇದೀಗ 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 18ರ ನಟಿ ಮಣಿಯರಿಗೂ ಸೆಡ್ಡು ಹೊಡೆಯಬಲ್ಲ ಸ್ಪುರಧ್ರೂಪಿ ಚೆಲುವೆ ಆದ ಈಕೆ 43ನೇ ಹರೆಯದವರು ಎಂದರೆ ಯಾರಿಗಾದರೂ ನಂಬಲು ಅಸಾಧ್ಯವೇ. ಫೆಬ್ರವರಿ 11ನೇ ತಾರೀಖಿನಂದು ಶ್ವೇತಾ ಚಂಗಪ್ಪ ಅವರ ಹುಟ್ಟಿದ ದಿನ, ಈ ದಿನವನ್ನು ಈ ಬಾರಿ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.

ಕ್ವೀನ್ಸ್ (Queens) ರಿಯಾಲಿಟಿ ಶೋ ತಂಡದ ಎಲ್ಲರೂ ಸೇರಿ ಶೂಟಿಂಗ್ ಬಸ್ (Shooting bus) ಅಲ್ಲಿಯೇ ಶ್ವೇತ ಚಂಗಪ್ಪ ಅವರಿಗಾಗಿ ವಿಶೇಷವಾಗಿ ಡೆಕೋರೇಟ್ ಮಾಡಿ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ. ಶೂಟಿಂಗ್ ಬಸ್ ತುಂಬಾ ಶ್ವೇತ ಚಂಗಪ್ಪ ಅವರ ಫೋಟೋಗಳ ಅಲಂಕಾರ ಮಾಡಿ ಶ್ವೇತ ಅವರನ್ನು ಕರೆತಂದು ಅವರನ್ನು ಖುಷಿ ಪಡಿಸಿ ಕೇಕ್ ಕತ್ತರಿಸಿ ತಿನ್ನಿಸುವ ಮೂಲಕ ಸಂಭ್ರಮಿಸಿದ್ದಾರೆ. ಸದ್ಯಕ್ಕೆ ಆ ವಿಡಿಯೋಗಳು ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಕ್ವೀನ್ಸ್ ತಂಡದ ತಂತ್ರಜ್ಞರು ಹಾಗೂ ಕಲಾವಿದರೆಲ್ಲಾ ಸೇರಿ ಮಾಡಿರುವ ಈ ಬರ್ತಡೇ ಆಚರಣೆಯಲ್ಲಿ ರಚಿತರಾಮ್ (Rachitha Ram) ಅವರು ಕೂಡ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್ ಅವರು ಶ್ವೇತ ಚೆಂಗಪ್ಪ ಅವರ ಬರ್ತಡೆಗೆ ವಿಶ್ ಮಾಡಿರುವುದು, ಕೇಕ್ ತಿನ್ನುತ್ತಿರುವುದು ಇತ್ಯಾದಿಗಳು ಕೂಡ ಸೆರೆ ಆಗಿವೆ. ರಚಿತರಾಮ್ ಅವರು ಕೂಡ ಕ್ವಿನ್ಸ್ ರಿಯಾಲಿಟಿ ಶೋ ಕಾರ್ಯಕ್ರಮದ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶ್ವೇತ ಚಂಗಪ್ಪ ಅವರಿಗೆ ಮತ್ತೊಮ್ಮೆ ಹುಟ್ಟು ಹಬ್ಬದ (birthday) ಶುಭಾಶಯಗಳು, ಇನ್ನಷ್ಟು ವರ್ಷ ನಮ್ಮನ್ನು ರಂಜಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಕೇಳಿಕೊಳ್ಳೋಣ.

ವರದಕ್ಷಿಣೆ ಕಿರುಕುಳ ಆರೋಪದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ನಟಿ ಅಭಿನಯ ಶಿಕ್ಷೆಗೆ ಎದುರಿ ತಲೆ ಮರೆಸಿಕೊಂಡಿದ್ದರು, ಇಂದು ತಾತ್ಕಾಲಿಕ ಜಾಮೀನು ಪಡೆದು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ.

0

 

ಕನ್ನಡದ ಹಿರಿತೆರೆ ಮತ್ತು ಕಿರುತೆರೆ ಕಲಾವಿದೆ serial actress) ಆದ ಅಭಿನಯ (Abhinaya) ಅವರ ಮೇಲೆ ಕೇಸ್ ಒಂದು ದಾಖಲಾಗಿತ್ತು. ಅದು ಕೂಡ ಅತ್ತಿಗೆಗೆ ವರದಕ್ಷಿಣೆ ಕಿ.ರು.ಕು.ಳ ಕೊಟ್ಟು ಹ.ಲ್ಲೆ ಮಾಡಿರುವ ಕೇಸ್ (Dowry case) ಆಗಿತ್ತು. ಇವರ ಅಣ್ಣ ಚೆಲುವರಾಜ್ (Brother Cheluvaraj) ಅವರ ಪತ್ನಿಯಾದ ಲಕ್ಷ್ಮಿ ದೇವಿ ಅವರು ಅಭಿನಯ ಅವರ ಮೇಲೆ ಮತ್ತು ಅವರ ತಾಯಿ ಹಾಗೂ ಸಹೋದರನ ಮೇಲೆ 2002ರಲ್ಲಿ ದಾಖಲಿಸಿದ್ದ ಕೇಸ್ ಇದಾಗಿದೆ.

ಬರೋಬ್ಬರಿ 20 ವರ್ಷಗಳ ನಂತರ 2022 ಡಿಸೆಂಬರ್ ಅಲ್ಲಿ ಇವರ ತಪ್ಪಿಗೆ ಶಿ.ಕ್ಷೆ.ಯಾಗಿ ಎರಡು ವರ್ಷಗಳ ಜೈಲು ಶಿ.ಕ್ಷೆ ನೀಡಿತ್ತು. ಆದರೆ ಸೆಶನ್ ಕೋರ್ಟ್ (session court) ನೀಡಿದ್ದ ತೀರ್ಪಿನ ವಿರುದ್ಧ ಉಚ್ಚ ನ್ಯಾಯಾಲಯಕ್ಕೆ (High court) ಅಭಿನಯ ಹಾಗೂ ತಾಯಿ ಜಯಮ್ಮ (Mother Jayamma) ಮತ್ತು ಸಹೋದರ ಚೆಲುವರಾಜ್ ಅವರು ಮನವಿ ಸಲ್ಲಿಸಿದರು. ಆದರೆ ಹೈಕೋರ್ಟ್ ಸೇಷನ್ ಕೋರ್ಟ್ ನೀಡಿದ ತೀರ್ಪನ್ನು ಎತ್ತಿ ಹಿಡಿದಿದ್ದು ಶಿ.ಕ್ಷೆ ಜಾರಿ ಮಾಡೇ ಬಿಟ್ಟಿತು.

ಇದಾದ ಮೇಲೆ ದೊಡ್ಡ ಹೈಡ್ರಾಮವೇ ನಡೆದಿದೆ. ನಟಿ ಅಭಿನಯ ತಾಯಿ ಜಯಮ್ಮ ಮತ್ತು ಸಹೋದರ ಚೆಲುವರಾಜ್ ಅವರನ್ನು ಸೆರೆಹಿಡಿದು ಕೋರ್ಟ್ ಗೆ ಹಾಜರು ಪಡಿಸಬೇಕಾಗಿತ್ತು ಆದರೆ ಅಷ್ಟರಲ್ಲಿ ಮೂರು ಜನ ಬಂಧನ ಭೀತಿಯಿಂದ ತಲೆ ಮರಿಸಿಕೊಂಡಿದ್ದಾರೆ. ಇದರ ಕಾರಣದಿಂದಾಗಿ ಚಂದ್ರಲೇಔಟ್ (Chandra layout) ಪೊಲೀಸರು ಲುಕ್ ಔಟ್ ನೋಟಿಸ್ (look out notice) ಜಾರಿ ಮಾಡಿ ಅಭಿನಯ ಜಯಮ್ಮ ಮತ್ತು ಚೆಲುವರಾಜ್ ಬಗ್ಗೆ ಏನೇ ಮಾಹಿತಿ ಸಿಕ್ಕಿದರು ಪೊಲೀಸರಿಗೆ ತಿಳಿಸಿ ಎಂದು ನಾಗರಿಕರಲ್ಲಿ ಮನವಿ ಮಾಡಿತ್ತು.

ಪೊಲೀಸರು ಇವರನ್ನು ಹುಡುಕುವ ಮೊದಲೇ ಸುಪ್ರೀಂಕೋರ್ಟ್ (Supreme court) ಮೊರೆ ಹೋಗಿರುವ ಅಭಿನಯ ಅವರು ತಾತ್ಕಾಲಿಕವಾಗಿ ಇದರಿಂದ ರಿಲೀಫ್ ಪಡೆದುಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ಈ ಮೂರು ಜನರ ಅಹವಾಲನ್ನು ಕೇಳಿ ಮೂವರಿಗೂ ತಾತ್ಕಾಲಿಕ ಜಾಮಿನನ್ನು (Bail) ಮಂಜೂರು ಮಾಡಿದೆ. ಮತ್ತು ಪ್ರಕರಣವನ್ನು ಮುಂದಿನ ವಿಚಾರಣೆ ತನಕ ಮುಂದೂಡಿದೆ.

ಅಭಿನಯ ಅವರ ಅಣ್ಣ ಚಲುವರಾಜ್ ಲಕ್ಷ್ಮಿ ದೇವಿಯನ್ನು ಅವರನ್ನು ಮದುವೆ ಆಗಿ ನಂತರ ತಾಯಿ ಜೊತೆ ಸೇರಿ ವರದಕ್ಷಿಣೆ ತರುವಂತೆ ನಾನಾ ರೀತಿ ಹಿಂ.ಸೆ ಕೊಟ್ಟು ಶೋಷಣೆ ಮಾಡಿದ್ದರು, ಈ ಕೃತ್ಯದಲ್ಲಿ ನಟಿ ಅಭಿನಯ ಅವರು ಅವರ ಕುಮ್ಮಕು ಸಹ ಇದೆ ಎಂದು ಅವರ ಹೆಸರನ್ನು ಸೇರಿಸಿ ದೂರು ನೀಡಿದ್ದರು. ಇದರ ತೀರ್ಪು ಬಂದ ಬಳಿಕ ಅನೇಕ ನ್ಯೂಸ್ ಚಾನೆಲ್ ಗಳಲ್ಲಿ ಲಕ್ಷ್ಮಿ ದೇವಿಯವರು ಮಾತನಾಡಿ ನಟಿ ಅಭಿನಯ ಅವರ ಬಣ್ಣ ಹಚ್ಚಿದ ಮುಖವಾಡದ ಹಿಂದೆ ಇರುವ ನಿಜವಾದ ಮುಖ ಏನು ಎನ್ನುವುದನ್ನು ಬಯಲು ಮಾಡಿದ್ದರು.

ಪೊಲೀಸರ ಅತಿಥಿ ಆಗಬೇಕಾಗಿದ್ದ ಅಭಿನಯ ಕುಟುಂಬದವರು ಎಸ್ಕೇಪ್ ಆಗಿ ಈಗ ಸುಪ್ರೀಂ ಕೋರ್ಟ್ ಇಂದ ಬೇಲ್ ತಂದು ಪಾರಾಗಿದ್ದಾರೆ. ನಟಿ ಅಭಿನಯ ಅವರು ಇತ್ತೀಚೆಗೆ ಝೀ ಕನ್ನಡ (Zee kannada) ವಾಹಿನಿಯ ಹಿಟ್ಲರ್ ಕಲ್ಯಾಣ (Hitler Kalyana) ಧಾರವಾಹಿಯಲ್ಲಿ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಷ್ಟೆಲ್ಲಾ ಅವಾಂತರ ಆದ ಮೇಲೆ ಆ ಧಾರವಾಹಿಯಿಂದ ಹೊರ ಬಂದಿದ್ದಾರೆ. ಆದರೂ ನಟಿ ಅಭಿನಯ ಅವರು ಮಾಡುತ್ತಿದ್ದ ಕಾಮಿಡಿ ಪಾತ್ರಗಳು ಜನರಿಗೆ ಬಹಳ ಹತ್ತಿರವಾಗಿರುತ್ತಿತ್ತು. ಇಷ್ಟು ನಗಿಸುತ್ತಿದ್ದ ಈಕೆಯ ಒಳ ಮನಸ್ಸಿಗೆ ಎಷ್ಟು ಕೆಟ್ಟದಾಗಿದ್ದಾಗಿದೆ ಎನ್ನುವುದು ಬಯಲಾಗಿ ಈಗ ಎಲ್ಲರೂ ಈಗ ಅಭಿನಯ ಅವರ ಕೆಟ್ಟತನದ ಬಗ್ಗೆ ಮಾತನಾಡುತ್ತಿದ್ದಾರೆ.

 

ಅನುಶ್ರೀ & ದರ್ಶನ್ ಫ್ಯಾನ್ಸ್ ನಡುವೆ ವಾರ್, ವೇದಿಕೆ ಮೇಲೆ ಫ್ಯಾನ್ಸ್ ಗೆ ಅವಾಜ್ ಹಾಕಿದ ಅನುಶ್ರೀ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.

0

 

ಕನ್ನಡ ಕಿರುತೆರೆಯ ನಂಬರ್ ಒನ್ ಮಹಿಳಾ ನಿರೂಪಕಿ ಎನ್ನುವ ಖ್ಯಾತಿಗೆ ಒಳಗಾಗಿರುವ ಅನುಶ್ರೀ (Anushree) ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar)ಅವರ ಅಪ್ಪಟ ಅಭಿಮಾನಿ ಎನ್ನುವುದು ಎಲ್ಲರಿಗೂ ತಿಳಿದಿದೆ. ಸಾಕಷ್ಟು ಬಾರಿ ಅನೇಕ ವೇದಿಕೆಗಳಲ್ಲಿ ಇದನ್ನು ಅನುಶ್ರೀ ಅವರು ಹೇಳಿಕೊಂಡಿದ್ದಾರೆ ಮುಂದುವರೆದು ತಮ್ಮ ಯೂಟ್ಯೂಬ್ ಚಾನೆಲ್ (you tube) ಅನ್ನು ಕೂಡ ಪುನೀತ್ ಅವರ ಎಪಿಸೋಡ್ ಇಂದಲೇ ಆರಂಭಿಸಿ ಈಗ ಲೋಗೋ (Logo) ಅನ್ನು ಕೂಡ ಅದೇ ರೀತಿ ಡಿಸೈನ್ ಮಾಡಿಸಿಕೊಂಡಿದ್ದಾರೆ.

ಈ ರೀತಿ ಅಪ್ಪು ಅವರ ಗುಣ ಮತ್ತು ವ್ಯಕ್ತಿತ್ವ ನೋಡಿ ಕೋಟ್ಯಂತರ ಮಂದಿ ಪುನೀತ್ ಅವರಿಗೆ ಅಭಿಮಾನಿಗಳಾಗಿದ್ದಾರೆ. ಹಾಗೆಯೇ ಅಂತವರಲ್ಲಿ ಅನುಶ್ರೀ ಅವರು ಕೂಡ ಒಬ್ಬರು. ಆದರೆ ಒಬ್ಬ ಜವಾಬ್ದಾರಿಯುತ ನಿರೂಪಕಿ ಆಗಿ ಅವರು ಅಪ್ಪು ಅವರ ಅಭಿಮಾನಿ ಎನ್ನುವ ಕಾರಣ ಮಾತ್ರಕ್ಕೆ ಮತ್ತೊಬ್ಬ ಸ್ಟಾರ್ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸುವಂತಿಲ್ಲ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಅಪ್ಪು (Appu) ಹಾಗೂ ದಚ್ಚು (Dachchu) ಅವರ ಅಭಿಮಾನಿಗಳ (fans) ನಡುವೆ ಪ್ರತಿಯೊಂದು ವಿಷಯಕ್ಕೂ ಸಂಘರ್ಷ ನಡೆಯುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಬರಹಗಳ ಕೆಸರೆರಚಾಟ ಮಾಡಿಕೊಳ್ಳುತ್ತಿದ್ದ ಇವರು ಮುಂದುವರೆದು ಹೊಸಪೇಟೆಯಲ್ಲಿ (Hosapet) ಮಾಡಿದ ಗಲಾಟೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದುಕೊಂಡಿದೆ. ಅದು ಮಾಸುವ ಮುನ್ನವೇ ಈಗ ಅದಕ್ಕೆ ಮತ್ತಷ್ಟು ಕಿಚ್ಚು ಹಚ್ಚುವ ರೀತಿಯ ಲಕ್ಷಣಗಳು ಕಂಡುಬರುತ್ತವೆ, ಅದರಲ್ಲೂ ಪಬ್ಲಿಕ್ ಫೇಸ್ ಎಂದು ಕರೆಸಿಕೊಂಡ ಸೆಲೆಬ್ರಿಗಳೇ ಈ ರೀತಿ ನಡೆದುಕೊಳ್ಳುತ್ತಿರುವುದು ಅಸಹನೀಯ ವಿಷಯವಾಗಿದೆ.

ಇಷ್ಟಕ್ಕೂ ಅನುಶ್ರೀ ಅವರು ದರ್ಶನ್ ಅವರ ವಿಷಯದಲ್ಲಿ ಯಾವ ರೀತಿ ನಡೆದುಕೊಂಡರು ಅವರಿಂದ ಆದ ಮಿಸ್ಟೇಕ್ ಏನು ಎಂದು ವಿವರಿಸಲು ಕನಕೋತ್ಸವ ಕಾರ್ಯಕ್ರಮದಲ್ಲಿ ಆದ ಆ ಒಂದು ಘಟನೆಯ ಸಾಕು. ಕನಕೋತ್ಸವ 2023 (Kanakothsava 2023) ಎನ್ನುವ ಕಾರ್ಯಕ್ರಮ ಡಿಕೆ ಸಹೋದರರ (DK brothers) ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದಿತ್ತು ಆ ಕಾರ್ಯಕ್ರಮಕ್ಕೆ ನಿರೂಪಕಿ ಆಗಿ ಅನುಶ್ರೀ ಅವರು ಹೋಗಿದ್ದರು.

ವೇದಿಕೆ ಮೇಲೆ ಹಾಡುಗಳ ಕುರಿತು ಮಾತನಾಡುವಾಗ ಕೆಳಗಿದ್ದ ಕೆಲವು ದರ್ಶನ್ ಅವರ ಅಭಿಮಾನಿಗಳಿಂದ ಪುಷ್ಪವತಿ (Pushpavathi) ಹಾಡನ್ನು ಹಾಕುವಂತೆ ಕೋರಿಕೆ ಬರುತ್ತಿತ್ತು. ಆಗಷ್ಟೇ ಕ್ರಾಂತಿ (Kranthi) ಸಿನಿಮಾದ ಒಂದೊಂದೇ ಹಾಡು ರಿಲೀಸ್ ಆಗುತ್ತಿತ್ತು, ಸರಿಯಾಗಿ ಅದೇ ಸಮಯಕ್ಕೆ ಕನಕೋತ್ಸವ ಕಾರ್ಯಕ್ರಮ ಏರ್ಪಟ್ಟಿತ್ತು. ಆ ಸಮಯದಲ್ಲಿ ಟ್ರೆಂಡಿಂಗ್ ಹಾಡಾಗಿದ್ದ ಕಾರಣ ದಚ್ಚು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪುಷ್ಪವತಿ ಹಾಡನ್ನು ಹಾಕಬೇಕು ಎಂದು ಕೂಗಿ ಕೇಳುತ್ತಿದ್ದರು.

ವೇದಿಕೆ ಮೇಲಿದ್ದ ಅನುಶ್ರೀ ಅವರು ಈ ಕೂಗು ಬಂದ ತಕ್ಷಣ ಕೆಳಗೆ ನೋಡಿ ಪುಷ್ಪವತಿ ಎಂದು ಕೂಗುತ್ತಿದ್ದ ಅಪ್ಪಟ ಡಿ ಬಾಸ್ ಅಭಿಮಾನಿಯನ್ನು ಪುಷ್ಪವತಿ ಬರುತ್ತದೆ ನೀನು ಈ ರೀತಿ ಆಡುತ್ತಿದ್ದರೆ ನಿನ್ನ ಬೆನ್ನ ಗತಿ ಏನಾಗಬೇಕು ನೋಡಿಕೋ ಎಂದು ಕಾಲೆಳೆದಿದ್ದಾರೆ. ಇಷ್ಟಕ್ಕೆ ನಿಲ್ಲದೆ ಅವರ ಅಹಂಕಾರದ ಪರಮಾವಧಿಯು ಇನ್ನು ಮುಂದುವರೆದಿದೆ. ಹಾಡು ಹಾಕಲು ತಡವಾಗುತ್ತಿದ್ದಂತೆ ಅಭಿಮಾನಿಗಳೆಲ್ಲ ಒಟ್ಟಾಗಿ ಸೇರಿ ಪುಷ್ಪವತಿ ಪುಷ್ಪವತಿ ಎಂದು ಕೂಗುತ್ತಿದ್ದರು.

ಆಗ ಅವರ ಕಡೆ ನೋಡಿದ ಅನುಶ್ರೀ ಅವರು ಒಬ್ಬರನ್ನು ಉದ್ದೇಶಿಸಿ ನೀನು ಒಬ್ಬ ಇಲ್ಲಿ ಕಿರಿಚಿಕೊಳ್ಳುವುದರಿಂದ ಏನು ಮಾಡಲು ಆಗುವುದಿಲ್ಲ, ನಿನ್ನಂತೆ ಸಾಕಷ್ಟು ಅಭಿಮಾನಿಗಳು ಇದ್ದಾರೆ ಬರುತ್ತದೆ ಅಲ್ಲಿವರೆಗೂ ಸಮಾಧಾನ ಇಟ್ಟುಕೋ ಎಂದು ಉದಾಸೀನವಾಗಿ ಮಾತನಾಡಿದ್ದಾರೆ. ಇದು ದರ್ಶನ್ ಅಭಿಮಾನಿಗಳ ಬೇಸರ ಹಾಗೂ ಕೋಪಕ್ಕೆ ಕಾರಣ ಆಗಿದೆ ಅವರು ಅಪ್ಪು ಅಭಿಮಾನಿ ಆಗಿರುವ ಕಾರಣದಿಂದಲೇ ಕ್ರಾಂತಿ ಚಿತ್ರದ ಹಾಡನ್ನು ಕೇಳಿದ್ದಕ್ಕೆ ಉರಿದುಕೊಂಡು ಈ ರೀತಿ ವೇದಿಕೆ ಮೇಲೆ ಮಾತನಾಡಿರುವುದು ಎಂದು ತಮ್ಮ ಆ.ಕ್ರೋ.ಶ.ವನ್ನು ಹೊರ ಹಾಕುತ್ತಿದ್ದಾರೆ. ಸದ್ಯಕ್ಕೆ ಅನುಶ್ರೀ ಅವರು ಆ ಕಾರ್ಯಕ್ರಮದಲ್ಲಿ ಹೇಗೆ ನಡೆದುಕೊಂಡರು ಎನ್ನುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನು ನೀವು ಸಹ ನೋಡಿ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.