Home Blog Page 242

ಅದೊಂದು ಮಾತು ನನ್ನ ಗಂಡನನ್ನೆ ಬಳಿ ತೆಗೆದುಕೊಂಡು ಬಿಟ್ಟಿತು ಎಂದು ಭಾವುಕರಾದ ನಟಿ ವಿನಯ ಪ್ರಸಾದ್…

0

 

ವಿನಯ ಪ್ರಸಾದ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕ ನಟಿಯಾಗಿ ಈಗ ಪೋಷಕ ಪಾತ್ರಧಾರಿಯಾಗಿ ಮತ್ತು ಕಿರುತೆರೆಯ ಧಾರಾವಾಹಿಗಳಲ್ಲಿ ಒಂದಲ್ಲ ಒಂದು ಧಾರಾವಾಹಿಗಳಲ್ಲಿ ಸದಾ ಸಕ್ರಿಯವಾಗಿರುವ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ. ಇಂದು ವಿನಯ ಪ್ರಸಾದ್ ಅವರು ವೃತ್ತಿ ಜೀವನದಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲೂ ಸಹ ಗೆದ್ದಿದ್ದಾರೆ ಸಂತೋಷವಾಗಿದ್ದಾರೆ. ಆದರೆ ಒಂದು ಸಮಯದಲ್ಲಿ ಅವರು ಪಟ್ಟಿದ್ದ ಕಷ್ಟ ಅಷ್ಟಿಷ್ಟಲ್ಲ ಯಾಕೆಂದರೆ ವಿನಯ ಪ್ರಸಾದ್ ತಮ್ಮ 28ನೇ ವಯಸ್ಸಿಗೆ ಮೊದಲ ಪತಿಯನ್ನು ಕಳೆದುಕೊಂಡಿದ್ದರು.

ಆಗ ಅವರ ಮಗಳು ಪ್ರಥಮ ಗೆ ಕೇವಲ ಐದು ವರ್ಷಗಳು. ಆಗ ತಾನೇ ನಾಯಕ ನಟಿಯಾಗಿ ವಿನಯ ಪ್ರಸಾದ್ ಅವರು ಫೇಮಸ್ ಆಗುತ್ತಿದ್ದರು. ಅಂತಹ ಸಮಯದಲ್ಲಿ ಆದ ಪತಿ ಅಕಾಲಿಕ ಸಾವಿಗೆ ಕಾರಣ ಏನಿತ್ತು ಅನ್ನುವುದನ್ನು ಅವರು ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇತ್ತೀಚಿಗೆ ಕಲಾ ಮಾಧ್ಯಮ ಎನ್ನುವ ಯೂಟ್ಯೂಬ್ ಚಾನೆಲ್ ಅಲ್ಲಿ ಕೊಟ್ಟ ಸಂದರ್ಶನದಲ್ಲಿ ಮಾತನಾಡಿದ ವಿನಯ ಪ್ರಸಾದ್ ಅವರು ಜೀವನದ ಅನೇಕ ವಿಚಾರಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿ ಇಂದಿನ ಯುವ ಪೀಳಿಗೆಗೂ ಸಹ ಸಾಕಷ್ಟು ಸಂದೇಶವನ್ನು ನೀಡಿದ್ದಾರೆ.

ಜೊತೆಗೆ ತನ್ನ ಜೀವನದ ಹಲವು ಘಟನೆಗಳನ್ನು ನೆನೆದು ಅದರಿಂದ ಈ ಕಾಲದವರು ಏನು ತಿದ್ದುಕೊಳ್ಳಬಹುದು ಎನ್ನುವುದನ್ನು ಸಹ ಮುಚ್ಚು ಮರೆ ಇಲ್ಲದೆ ಹೇಳಿದ್ದಾರೆ. ಹೀಗೆ ಮಾತಿನ ಬರದಲ್ಲಿ ಅವರು ತಮ್ಮ ಮೊದಲ ಪತಿ ಸಾವಿಗೆ ಕಾರಣ ಏನು ಎನ್ನುವುದನ್ನು ಸಹ ಹೇಳಿಕೊಂಡಿದ್ದಾರೆ. ನಾನು ನಟಿಯಾಗಿ ಜನಪ್ರಿಯತೆ ಆಗುವ ಮೊದಲೇ ನನ್ನ ಪತಿ ವಿ ಆರ್ ಕೆ ಪ್ರಸಾದ್ ರಾಷ್ಟ್ರ ಪ್ರಶಸ್ತಿ ಪಡೆದ ಯುವ ನಿರ್ದೇಶಕ ಎಂದು ಹೆಸರು ಪಡೆದಿದ್ದರು. ಆದರೆ ನಂತರದ ನನ್ನ ಜನಪ್ರಿಯತೆ ನಮ್ಮನ್ನು ಸಾಕಷ್ಟು ಸಂಕಷ್ಟಕ್ಕೆ ಸಿಕ್ಕಿಸಿತು ಎಂದಿದ್ದಾರೆ.

ಈಗಿನ ಕಾಲದಲ್ಲೂ ಸಹ ಚಿತ್ರರಂಗದಲ್ಲೂ ಹಾಗೂ ಬೇರೆ ಕ್ಷೇತ್ರದಲ್ಲೂ ಗಂಡ ಹೆಂಡತಿ ಇಬ್ಬರೂ ಒಟ್ಟಿಗೆ ಕೆಲಸ ಮಾಡುವವರು ಇದ್ದಾರೆ. ಇದರಲ್ಲಿ ಗಂಡ ಹೆಚ್ಚು ಜನಪ್ರಿಯನಾದರೆ ಹೆಣ್ಣು ಮಕ್ಕಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ, ಆದರೆ ಗಂಡಿಗಿಂತ ಹೆಣ್ಣು ಸ್ವಲ್ಪ ಫೇಮಸ್ ಆಗಿ ಬಿಟ್ಟರೆ ಅದನ್ನು ಗಂಡಸರು ಅರಗಿಸಿಕೊಳ್ಳುವುದು ಕಷ್ಟ. ಅವರಿಬ್ಬರ ಮಧ್ಯ ಅದು ಸಮಸ್ಯೆ ಆಗಿರದೇ ಇರಬಹುದು ಆದರೆ ಆ ತೆರನಾದ ಒಂದು ಆಲೋಚನೆ ಖಂಡಿತ ಇರುತ್ತದೆ.

ನನ್ನ ಸಂಸಾರದಲ್ಲೂ ಅದೇ ಆಗಿದ್ದು ಅಲ್ಲಿಯತನಕ ನಾನು ವಿನಯ ಆಗಿ ಅಥವಾ ವಿ ಆರ್ ಕೆ ಪ್ರಸಾದ್ ಅವರ ಪತ್ನಿ ವಿನಯ ಪ್ರಸಾದ್ ಆಗಿ ಗುರುತಿಸಿಕೊಳ್ಳುತ್ತಿದ್ದೆ. ಒಂದು ಸಮಯದಲ್ಲಿ ನನ್ನ ಪತಿಯ ಎಲ್ಲಾ ಪ್ರಾಜೆಕ್ಟ್ ಗಳು ಫೇಲ್ ಆಗ ತೊಡಗಿದವು, ಅವರು ಅದೇ ನೋವಿನಲ್ಲಿ ಬೇಸರದಲ್ಲಿ ಇದ್ದರು. ನನ್ನ ಅದೃಷ್ಟವೋ ದುರಾದೃಷ್ಟವೋ ಅದೇ ಸಮಯಕ್ಕೆ ನನ್ನ ಎಲ್ಲಾ ಪ್ರಾಜೆಕ್ಟ್ ಗಳು ಗೆಲ್ಲ ತೊಡಗಿದ್ದವು. ಹಾಗಾಗಿ ನನಗೆ ಹೆಚ್ಚಿನ ಜನಪ್ರಿಯತೆ ಬಂದು ಬಿಟ್ಟಿತ್ತು. ಎಲ್ಲಿ ಹೋದರು ಸಹ ವಿನಯ ಪ್ರಸಾದ್ ಪತಿ ವಿ ಆರ್ ಕೆ ಪ್ರಸಾದ್ ಎಂದು ಕರೆಯುತ್ತಿದ್ದರು.

ಸಿನಿಮಾದವರು ಈ ರೀತಿ ಮಾಡಿದಾಗ ಅದನ್ನು ನಾನು ಪತಿ ಸಹಿಸಿಕೊಳ್ಳುತ್ತಿದ್ದರು, ಆದರೆ ಕುಟುಂಬದಲ್ಲೂ ಸಹ ಇದೇ ರೀತಿ ಆಗಿ ಹೋಯಿತು ಅದನ್ನು ಸ್ವಲ್ಪ ಜೀರ್ಣಿಸಿಕೊಳ್ಳುವುದು ಅವರಿಗೆ ಕಷ್ಟ ಆಗಿ ಹೋಯಿತು. ಆದರೆ ಎಂದೂ ಸಹ ಇದಕ್ಕೆಲ್ಲ ನನ್ನನ್ನು ಅವರು ಜವಾಬ್ದಾರಿ ಮಾಡಿದವರು ಅಲ್ಲ ಒಂದು ದಿನ ಕೂಡ ಅದರ ಬಗ್ಗೆ ನನ್ನ ಮೇಲೆ ಕೋಪವೂ ಸಹ ತೋರಲಿಲ್ಲ. ಆದರೆ ಆ ನೋವಿನಿಂದ ಅವರು ಖಿನ್ನತೆಗೆ ಹೋದರು. ಕೆಲ ಕೆಟ್ಟ ಅಭ್ಯಾಸಗಳನ್ನು ರೂಡಿಸಿಕೊಂಡರು. ಅವರ ಸಾ.ವು ಅನಿರೀಕ್ಷಿತವಾಗಿರದಿದ್ದರೂ ಖಂಡಿತ ಶಾ-ಕ್ ನೀಡಿತು ಎಂದು ಹೇಳಿಕೊಂಡಿದ್ದಾರೆ.

ಹುಟ್ಟು ಹಬ್ಬದ ಪ್ರಯುಕ್ತ ಮಿಡ್ ನೈಟ್ ನಲ್ಲಿ ವಂಶಿಕಾಗೆ ಸರ್ಪ್ರೈಸ್ ನೀಡಿದ ಮಾಸ್ಟರ್ ಆನಂದ್. ಅಪ್ಪನ ಗಿಫ್ಟ್ ನೋಡಿ ವಂಶಿಕಾ ಕೊಟ್ಟ ಕ್ಯೂಟ್ ರಿಯಾಕ್ಷನ್ ನೋಡಿ ಹೇಗಿದೆ.

 

 

ಕನ್ನಡ ಕಿರುತೆರೆಯ ಸ್ಟಾರ್ ಕಿಡ್ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸ್ಟಾರ್ ಆಗಿರುವ ಕನ್ನಡದ ಹೆಮ್ಮೆಯ ಕಲಾವಿದ ಮಾಸ್ಟರ್ ಆನಂದ್ ಅವರ ಮಗಳು ವಂಶಿಕಾಗೆ (Vamshika) ಇಂದು ಹುಟ್ಟು ಹಬ್ಬದ ಸಂಭ್ರಮ. ವಂಶಿಕ ಇಂದು ತಮ್ಮ ಏಳನೇ ವಸಂತಕ್ಕೆ ಕಾಲಿಟ್ಟಿದ್ದಾರೆ, ಈ ದಿನ ಏಳನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಎಲ್ಲರಿಗಿಂತ ಮುಂಚೆ ಕುಟುಂಬದ ಪರವಾಗಿ ವಂಶಿಕ ತಂದೆ ಆಗಿರುವ ಮಾಸ್ಟರ್ ಆನಂದ್ ಅವರು ಮಗಳಿಗೆ ಹುಟ್ಟುಹಬ್ಬಕ್ಕಾಗಿ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ.

ಮಧ್ಯ ರಾತ್ರಿ ಮಗಳಿಗಾಗಿ ಮನೆಯಲ್ಲಿಯೇ ಕೇಕ್ ಡೆಕೋರೇಟ್ ಮಾಡಿ ತಂದೆ ತಾಯಿ ಇಬ್ಬರು ಕೇಕ್ ಕಟ್ ಮಾಡಿ ವಂಶಿಕಾಗಿ ತಿನ್ನಿಸಿ ಅವಳನ್ನು ಖುಷಿ ಪಡಿಸಿದ್ದಾರೆ. ವಂಶಿಕಾಳಿಗೆ ಅಪ್ಪ ಸರ್ಪ್ರೈಸ್ ಆಗಿ ರೆಡಿ ಮಾಡಿ ಆಚರಿಸಿದ ಈ ಹುಟ್ಟುಹಬ್ಬ ಸಂತಸ ತಂದಿದೆ, ಅವಳು ಖುಷಿಯಿಂದ ಕುಣಿದು ಸಂಭ್ರಮಪಟ್ಟಿದ್ದಾಳೆ. ಸದ್ಯಕ್ಕೆ ಅದರ ವಿಡಿಯೋ ಕ್ಲಿಪ್ಪಿಂಗ್ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಪುಟ್ಟ ವಂಶಿಕಾ ಕಿರುತೆರೆ ಲೋಕದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದ್ದಾಳೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ನಮ್ಮಮ್ಮ ಸೂಪರ್ ಸ್ಟಾರ್ ಮತ್ತು ಗಿಚ್ಚ ಗಿಲಿ ಗಿಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಟಫ್ ಕಾಂಪಿಟೇಶನ್ ನೀಡಿ, ಈ ಎರಡು ಕಾರ್ಯಕ್ರಮಗಳ ವಿನ್ನರ್ ಸಹ ಆಗಿದ್ದಾಳೆ. ಎರಡು ಕಾರ್ಯಕ್ರಮದಿಂದ ಸಾಕಷ್ಟು ಸ್ಕಿಟ್ ಗಳನ್ನು ಮಾಡಿ ಸ್ಟೇಜ್ ಮೇಲೆ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾಳೆ.

ಚಿಕ್ಕ ವಯಸ್ಸಿಗೆ ಇವಳ ತರ್ಲೆ ತುಂಟಾಟಗಳು ಚಟುವಟಿಕೆಗಳು ಹಾಗೂ ನೆನಪಿನ ಶಕ್ತಿ ಮತ್ತು ಪ್ರಬುದ್ಧ ಪರ್ಫಾರ್ಮೆನ್ಸ್ ಅನ್ನು ಸಹ ನೋಡಿ ಮೆಚ್ಛಿದ ಪ್ರೇಕ್ಷಕ ವರ್ಗ ಬೆಕ್ಕಸ ಬೆರಗಾಗಿದೆ. ಕಿರುತೆರೆಗೆ ಬಂದ ಮೇಲೆ ವಂಶಿಕಾಳಿಗೆ ಕರ್ನಾಟಕದಲ್ಲಿ ದೊಡ್ಡ ಅಭಿಮಾನಿ ಬಳಗವೇ ಸಿಕ್ಕಿದೆ. ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ ಎರಡರಲ್ಲಿ ಕೂಡ ನಿರಂಜನ್ ದೇಶಪಾಂಡೆ ಜೊತೆ ವಂಶಿಕ ನಿರೂಪಣೆಯನ್ನು ಮಾಡುತ್ತಾ ಎಲ್ಲರನ್ನು ನಕ್ಕು ನಗಿಸಲು ಬಂದಿದ್ದಾರೆ.

ಈ ರಿಯಾಲಿಟಿ ಶೋಗಳಿಗೆ ಬರುವ ಮುನ್ನವೇ ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ಆದ ಸೆನ್ಸೇಷನ್ ಕ್ರಿಯೇಟ್ ಮಾಡಿದ ವಂಶಿಕಾ ಸಾಕಷ್ಟು ರೀಲ್ಸ್ ಗಳನ್ನು ಮಾಡಿ ಫೇಮಸ್ ಆಗಿದ್ದರು. ತಂದೆ ತಾಯಿಯ ಜೊತೆ ರೀಲ್ಸ್ ಮಾಡುತ್ತಿದ್ದ ವಂಶಿಕಾ ಈಗ ಸೆಟ್ ಅಲ್ಲಿರುವ ಇತರೆ ಕಂಟೆಸ್ಟೆಂಟ್ ಗಳು ಮತ್ತು ತನ್ನ ಪುಟ್ಟ ಸ್ನೇಹಿತೆಯರ ಜೊತೆಗೂ ಕೂಡ ರೀಲ್ಸ್ ಮಾಡಿ ಅದನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಾಳೆ.

ಇನ್ಸ್ಟಾಗ್ರಾಮ್ ಅಲ್ಲಿ ಈಗಲೇ ಈಕೆಯ ಫಾಲೋವರ್ಸ್ ಸಂಖ್ಯೆ ಲಕ್ಷ ಮುಟ್ಟುತ್ತಿದೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ತನ್ನ ಕ್ರೇಝ್ ಉಳಿಸಿಕೊಂಡಿದ್ದಾರೆ. ಅನೇಕ ಕಾಮಿಡಿ ವೆಬ್ ಸೀರೀಸ್ ಮತ್ತು ಶಾರ್ಟ್ ವಿಡಿಯೋಗಳಲ್ಲಿ ಪಾತ್ರ ಮಾಡಿದ್ದಾರೆ. ಒಟ್ಟಿನಲ್ಲಿ ಒಂದಲ್ಲ ಒಂದು ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಚರ್ಚೆಯಲ್ಲಿರುವ ವಂಶಿಕಾ ಗೆ ಅವರ ಎಲ್ಲಾ ಅಭಿಮಾನಿಗಳು ಹುಟ್ಟು ಹಬ್ಬದ ಶುಭಾಶಯ ಕೋರುತ್ತಿದ್ದಾರೆ.

ಈ ವರ್ಷವೂ ಕೂಡ ಪ್ರತಿ ವರ್ಷದಂತೆ ನಮ್ಮನ್ನು ಇನ್ನಷ್ಟು ಮನೋರಂಜಿಸಲಿ, ಈಕೆಯ ಟ್ಯಾಲೆಂಟ್ ಗೆ ತಕ್ಕ ವೇದಿಕೆಗಳು ದೊರೆತು ಕರ್ನಾಟಕದ ಖ್ಯಾತಿ ಬೆಳಗಿಸುವಂತಹ ಪ್ರತಿಭೆ ಇವಳಾಗಲಿ ಎಂದು ಮನಪೂರ್ವಕವಾಗಿ ಈಕೆಗೆ ಹರಸಿ ಹುಟ್ಟು ಹಬ್ಬದ ಶುಭಾಶಯಗಳು ಕೋರುತ್ತಿದ್ದಾರೆ. ಮತ್ತೊಮ್ಮೆ ಎಲ್ಲರ ಕಡೆಯಿಂದ ವಂಶಿಕಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ನೀವು ಕೂಡ ವಂಶಿಕಾಗೆ ವಿಶ್ ಮಾಡಿ

ರೈತನ್ನ ಮದ್ವೆ ಆಗ್ತಿನಿ ಅಂತ ಸುಳ್ಳು ಹೇಳಿ ಕೋಟ್ಯಾಧೀಶ್ವರನ್ನ ಮದ್ವೆ ಆಗಿದ್ದೀರಲ್ಲ ಎಂದು ಪ್ರಶ್ನೆ ಕೇಳಿದವರಿಗೆ ನಟಿ ಅದಿತಿ ಪ್ರಭುದೇವ ಕೊಟ್ಟ ಖಡಕ್ ಉತ್ತರ ಏನು ಗೊತ್ತ .?

 

ಅಧಿತಿ ಪ್ರಭುದೇವ್ (Adhithi Prabhudev) ವರ್ಷಪೂರ್ತಿ ಒಂದಲ್ಲ ಒಂದು ಚಲನಚಿತ್ರಗಳ ವಿಷಯವಾಗಿ ಸದಾ ಪ್ರಚಲಿತದಲ್ಲಿ ಇರುವ ನಟಿ. ಈಕೆಯ ಅದೃಷ್ಟವೋ ಅಥವಾ ಟ್ಯಾಲೆಂಟೋ ಒಂದಲ್ಲ ಒಂದು ಸಿನಿಮಾಗಳು ರಿಲೀಸ್ ಆಗುತ್ತಲೇ ಇರುತ್ತವೆ. ಕಳೆದ ವರ್ಷ ರಿಲೀಸ್ ಆದ ಹಲವು ಸಿನಿಮಾಗಳಲ್ಲಿ ಇವರು ಪಾತ್ರ ಮಾಡಿದ್ದಾರೆ. ತೋತಾಪುರಿ, ತ್ರಿಬ್ಬಲ್ ರೈಡಿಂಗ್, ಜಮಾಲಿಗುಡ್ಡ ಇನ್ನು ಅನೇಕ ಸಿನಿಮಾಗಳು ಕಳೆದ ವರ್ಷ ತೆರೆಕಂಡಿದ್ದವು.

ಈ ವರ್ಷ ಕೂಡ ಫೆಬ್ರವರಿ ತಿಂಗಳಲ್ಲೇ ಇವರ ಚೋಸ್ (Chaos) ಚಿತ್ರ ರಿಲೀಸ್ ಗೆ ರೆಡಿ ಆಗಿದ. ಶಶಿಕುಮಾರ್ ಅವರ ಪುತ್ರ ಅಕ್ಷಿತ್ ಶಶಿಕುಮಾರ್ (Akshith Shashikumar) ಅವರು ನಾಯಕನಟನಾಗಿರುವ ಈ ಸಿನಿಮಾಗೆ ನಾಯಕಿಯಾಗಿ ಇವರಿರಲ್ಲಿದ್ದಾರೆ. ಹೊಸ ಕಂಟೆಂಟ್ ಆಧರಿತ ಚಿತ್ರ ಇದಾಗಿದೆ. ಈ ಚಿತ್ರದ ಪ್ರಚಾರದ ಸಂದರ್ಶನದಲ್ಲಿ ಭಾಗಿಯಾಗಿದ್ದ ಅಧಿತಿ ಪ್ರಭುದೇವ್ ಅವರು ಈಗಾಗಲೇ ಬಿಡುಗಡೆ ಆಗಿರುವ ತಮ್ಮ ಸಿನಿಮಾ ಆಯ್ಕೆಗಳ ಕುರಿತು ಹೇಳಿಕೊಳ್ಳುತ್ತಾ ತಮ್ಮನ್ನು ಜನ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಯತ್ನವನ್ನು ಮಾಡಿದ್ದಾರೆ.

ಕೆಲವರು ಕೇಳುತ್ತಿರುತ್ತಾರೆ ವರ್ಷಪೂರ್ತಿ ಬ್ಯುಸಿ ಆಗಿರುತ್ತೀರಾ ಇಷ್ಟೊಂದು ಸಿನಿಮಾ ಒಪ್ಪಿಕೊಳ್ಳುತ್ತಿರಲ್ಲಾ ಹೇಗೆ ಎಂದು, ಆದರೆ ನನ್ನ ಪರಿಸ್ಥಿತಿ ಹಾಗೆ ಇದೆ ನನಗೆ ಒಂದೆರಡು ವರ್ಷ ಚಿತ್ರ ಇಲ್ಲದಿದ್ದರೂ ಪರವಾಗಿಲ್ಲ ಕಾಯುತ್ತೇನೆ ಎಂದು ಹೇಳುವ ಮಟ್ಟದಲ್ಲಿ ಇರಲಿಲ್ಲ. ನನಗೆ ಬರುವ ಆಫರ್ ಗಳಲ್ಲಿ ಯಾವುದು ಬೆಸ್ಟ್ ಅದನ್ನು ಆಯ್ದುಕೊಂಡು ಮಾಡಲೇಬೇಕಾದ ಸಿಚುವೇಶನ್ ಅಲ್ಲಿ ಇದ್ದೆ. ಒಂದೊಂದು ಸಿನಿಮಾ ಒಂದೊಂದು ಕಾರಣಗಳಿಗಾಗಿ ಇಷ್ಟಾವಾಗುತ್ತಿತ್ತು ಒಂದು ಒಳ್ಳೆ ಬ್ಯಾನರ್ ಚಿತ್ರ, ಆದರೆ ಒಂದರಲ್ಲಿ ಇತರ ಕಲಾವಿದರ ತಂಡ ಅತ್ಯುತ್ತಮವಾಗಿರುತ್ತಿತ್ತು,

ಮತ್ತೊಂದು ಹಾಡುಗಳ ಕಾರಣಕ್ಕೆ, ಹೀಗೆ ಒಂದೊಂದು ಸಿನಿಮಾಗಳನ್ನು ಒಂದೊಂದು ಕಾರಣಗಳಿಗಾಗಿ ಒಪ್ಪಿಕೊಂಡೆ ಹಾಗಾಗಿ ಕಳೆದ ವರ್ಷ ಅಷ್ಟು ಸಿನಿಮಾ ಮಾಡಿದೆ. ಈ ವರ್ಷ ಕೂಡ ನನ್ನ ಇನ್ನೊಂದು ಸಿನಿಮಾ ಬರುವ ಸಾಧ್ಯತೆ ಇದೆ ಇಷ್ಟೊಂದು ಅವಕಾಶಗಳು ನನ್ನನ್ನು ಅರಸಿ ಬರುತ್ತಿರುವುದಕ್ಕೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ನಾನಿರುವ ತನಕ ಚಿರರುಣಿ ಆಗಿರುತ್ತೇನೆ ಆದರೆ ಜನ ಆಡುವ ಮಾತಿಗೆ ಬೇಸರವಾಗುತ್ತದೆ.

ನೀವು ರೈತನನ್ನು ಮದುವೆಯಾಗುತ್ತೇನೆ ಎಂದು ಹೇಳಿ ಕೋಟ್ಯಾಧೀಶ್ವರನನ್ನು ಮದುವೆ ಆಗಿದ್ದೀರಾ ಎಂದು ಕೇಳುತ್ತಾರೆ ಅದು ಅವರ ದುಡ್ಡು ನನಗೆ ಮೊದಲಿನಿಂದಲೂ ನಾನು ದುಡಿದು ತಿಂದೆ ಅಭ್ಯಾಸ ಅದೇ ಒಳ್ಳೆಯದು ನನ್ನ ತಂದೆ ದುಡ್ಡಿದೆ ಮಜಾ ಮಾಡಿಬಿಡೋಣ, ನನ್ನ ಗಂಡನ ದುಡ್ಡು ಇದೆ ಉಡಾಯಿಸೊಣ ಎಂದು ಯೋಚನೆ ಮಾಡುವವಳು ನಾನಲ್ಲ.

ನಾನು ದುಡಿಯಬೇಕು ನನ್ನಿಂದ ಎಷ್ಟು ಆಗುತ್ತದೆ ಅಷ್ಟು ಮಾಡಬೇಕು. ಇದೆಲ್ಲ ನನ್ನ ತಲೆಯಲ್ಲಿ ಓಡುತ್ತಿರುತ್ತದೆ ಅದಕ್ಕಾಗಿ ನಾನು ಇನ್ನು ಸಿನಿಮಾಗಳನ್ನು ಮಾಡುತ್ತಿದ್ದೇನೆ ಎಂದು ಉತ್ತರ ಕೊಟ್ಟಿದ್ದಾರೆ. ಜನ ಹಿಟ್ ಮತ್ತು ಫ್ಲಾಫ್ ಗಳ ಬಗ್ಗೆ ತಪ್ಪು ತಿಳಿದುಕೊಂಡಿರುತ್ತಾರೆ. ಸಿನಿಮಾ 25 ದಿನ ಓಡಿದರೆ ಮಾತ್ರ ಅಥವಾ 50 ದಿನ ಒಡಿದ್ರೆ ಮಾತ್ರ ಹಿಟ್ ಎಂದುಕೊಳ್ಳುತ್ತಾರೆ ಆದರೆ ನಮ್ಮ ಪ್ರಕಾರ ಒಂದು ವಾರ ಥಿಯೇಟರಲ್ಲಿ ಓಡಿದರೆ ಸಾಕು.

ಅದರ ಆಡಿಯೋ ರೈಟ್ ಸಿಗುತ್ತದೆ, ಚಾನಲ್ ರೇಟ್ ಸಿಗುತ್ತದೆ ಡಬ್ಬಿಂಗ್ ರೇಟ್ ಸಿಗುತ್ತದೆ ಹೇಗೋ ನಮ್ಮನ್ನು ಹಾಕಿಕೊಂಡ ನಿರ್ಮಾಪಕರಿಗೆ ಅವರ ಬಜೆಟ್ ಕಿಂತ ಹೆಚ್ಚಿನ ಹಣ ದೊರೆತರೆ ಅದು ನಮಗೆ ಸಮಾಧಾನ. ಆ ದೃಷ್ಟಿಯಲ್ಲಿ ನೋಡುವುದಾದರೆ. ನನ್ನ ಎಲ್ಲಾ ಚಿತ್ರಗಳು ಕೂಡ ಒಳ್ಳೆ ಗುಣಮಟ್ಟದಲ್ಲಿವೆ ಹಾಗಾಗಿ ಯಾವ ಸಿನಿಮಾ ಒಪ್ಪಿಕೊಂಡಿರುವುದರ ಬಗ್ಗೆಯೂ ನನಗೆ ಬೇಸರವಾಗಿಲ್ಲ ಎಂದು ಸಹ ಹೇಳಿಕೊಂಡಿದ್ದಾರೆ.

ಅಂದು ಅಪ್ಪು ರಸ್ತೆ ಉದ್ಘಾಟನೆಗೆ ದರ್ಶನ್ ಅವರನ್ನು ಚೀಫ್ ಗೆಸ್ಟ್ ಆಗಿ ಕರೆಯೋಣ ಎಂದು ಹೇಳಿ ಇಂದು ಅವರನ್ನು ಕೈ ಬಿಟ್ಟಿದ್ದಾರೆ.! ಇದು ಎಷ್ಟರ ಮಟ್ಟಿಗೆ ಸರಿ.? ಅನ್ನುತ್ತಿದ್ದಾರೆ ಫ್ಯಾನ್ಸ್.!

0

 

ಅಂದು ಅಪ್ಪು ಕಾರ್ಯಕ್ರಮಕ್ಕೆ ದರ್ಶನ್ ಅವರನ್ನು ಚೀಫ್ ಗೆಸ್ಟ್ ಆಗಿ ಕರಿಯೊಣ ಎಂದು ಹೇಳಿ ಇಂದು ಮಾತು ತಪ್ಪಿದ್ರಾ ಆರ್.ಅಶೋಕ್ ಈ ಬಾರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಕಂಡ ಶ್ರೇಷ್ಠ ಮಾನವ ದೈವ ಮಾನವ ನಮ್ಮೆಲ್ಲರ ಪ್ರೀತಿಯ ಅಪ್ಪು (Appu) ಅವರಿಗೆ ಕರ್ನಾಟಕ ಸರ್ಕಾರವು ಕರ್ನಾಟಕ ರತ್ನ (Karnataka Rathna) ಪ್ರಶಸ್ತಿಯನ್ನು ಕೊಟ್ಟು ಗೌರವಿಸಿತ್ತು. ಆ ಪ್ರಶಸ್ತಿ ಪ್ರಧಾನ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನೆರೆಯ ರಾಜ್ಯಗಳ ಸ್ಟಾರ್ ಕಲಾವಿದರಾದ ಜೂನಿಯರ್ ಎನ್ಟಿಆರ್ (Jn.NTR) ಮತ್ತು ರಜನಿಕಾಂತ್ (Rajanikanth) ಅವರನ್ನು ಆಹ್ವಾನಿಸಿತ್ತು.

ಇದಾದ ಮೇಲೆ ಬೆಂಗಳೂರಿನಲ್ಲಿ ಸಾಯಿ ಸಂಗಮ ಹೆಲ್ತ್ ಕೇರ್ ಮತ್ತು ಡಯೋಗ್ನೋಸ್ಟಿಕ್ ಸೆಂಟರ್ ಉದ್ಘಾಟನೆ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ (Ashwini Punith Rajkumar) ಹಾಗೂ ಆರ್ ಅಶೋಕ್ (R.Ashok) ಇಬ್ಬರು ಸಹ ಹೋಗಿದ್ದರು. ಆಗ ಅವರಿಬ್ಬರೂ ಮಾತನಾಡಿಕೊಂಡಿದ್ದು ಮಾಧ್ಯಮದವರ ಕಣ್ಣಿಗೂ ಬಿದ್ದಿತ್ತು. ಆರ್ ಅಶೋಕ್ ಅವರು ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಕುರಿತು ಈ ಬಾರಿ ಅಪ್ಪು ರಸ್ತೆ ಉದ್ಘಾಟನೆ ಕಾರ್ಯಕ್ರಮಕ್ಕೆ ಕನ್ನಡಿಗರನ್ನು ಮಾತ್ರ ಕರೆಯೋಣ, ಕರ್ನಾಟಕ ರತ್ನ ಪ್ರಶಸ್ತಿಗೆ ಬೇರೆಯವರನ್ನು ಕರೆದವರು ಎಂದು ಇವರಿಗೆ ಬೇಜಾರು ಆಗಬಾರದು ಎಂದು ಹೇಳುತ್ತಾ ದರ್ಶನ್ ಕರೆಸೋಣ ಎಂದು ಹೇಳಿದ್ದರು.

ದರ್ಶನ್ ಅವರ ಹೆಸರು ಹೇಳುತ್ತಿದ್ದಂತೆ ಅಶ್ವಿನಿ ಪುನೀತ್ ಅವರ ಸಹ ಅದಕ್ಕೆ ಅಭ್ಯಂತರ ಇಲ್ಲ ನೀವು ಕರೆಯಿರಿ ಯಾರನ್ನು ಬೇಕಾದರೂ ಕರೆಸಿ ನಿಮ್ಮಿಷ್ಟ ಎಂದು ಸಹ ಹೇಳಿದ್ದರು. ಆದರೆ ಈಗ ಆ ಮಾತನ್ನು ಬದಲಾಯಿಸಿದ್ದಾರೆ ನಾಳೆ ನಡೆಯುವ ಅಪ್ಪು ರಸ್ತೆ ಉದ್ಘಾಟನೆ ಕಾರ್ಯಕ್ರಮದ ಕುರಿತು ಕನ್ನಡ ಚಲನಚಿತ್ರ ಮಂಡಳಿ ಜೊತೆ ಸುದ್ದಿಗೋಷ್ಠಿ ನಡೆಸಿ ನಾಳೆ ನಡೆಯಲಿರುವ ಕಾರ್ಯಕ್ರಮಗಳ ಕುರಿತು ವಿವರಗಳನ್ನು ಹೇಳಿದ ಆರ್ ಅಶೋಕ್ ಅವರು ಅಪ್ಪುವರಿಗಾಗಿ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

ಶಮಿತಾ ಮಲ್ನಾಡ್ ಅವರ ಮುಖ್ಯಸ್ಥಿಕೆಯಲ್ಲಿ ಕನ್ನಡ ಚಿತ್ರರಂಗದ ಹೇಮಂತ್, ಅನುರಾಧ ಭಟ್, ವಿಜಯ ಪ್ರಕಾಶ್, ಸಾಧುಕೋಕಿಲ ಇವರನ್ನು ಒಳಗೊಂಡಂತೆ ಸುಮಾರು 17 ಹೆಚ್ಚು ಗಾಯಕರುಗಳು ಅಪ್ಪು ಅವರ ಹಾಡುಗಳನ್ನು ಹಾಗೂ ಅಪ್ಪು ಅವರಿಗಾಗಿ ಹಾಡುಗಳನ್ನು ಹಾಡಲಿದ್ದಾರೆ ಎನ್ನುವುದನ್ನು ತಿಳಿಸಿದರು. ಈ ರೀತಿ ಅದರ ವಿವರಗಳನ್ನು ಹೇಳುತ್ತಿದ್ದ ಅವರಿಗೆ ಮಾಧ್ಯಮದವರು ಪ್ರಶ್ನೆಯೊಂದನ್ನು ಕೇಳಿದ್ದಾರೆ. ಹಿಂದೆ ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ನೀವು ಹಾಗೂ ಅಶ್ವಿನಿ ಅವರು ಮಾತನಾಡಿಕೊಂಡಿದ್ದಿರಿ.

ಈ ಕಾರ್ಯಕ್ರಮಕ್ಕೆ ದರ್ಶನ್ (Darshan) ಅವರನ್ನು ಮುಖ್ಯ ಅತಿಥಿಯಾಗಿ ಕರಿಯಬೇಕು ಎಂದು ಪ್ಲಾನ್ ಮಾಡಿದ್ದಿರಿ ಅದರ ವಿಷಯ ಏನಾಯ್ತು ಎಂದು ಕೇಳಿದಾಗ ಕಾರ್ಯಕ್ರಮವನ್ನು ಆಯೋಜನೆ ಮಾಡುವುದಷ್ಟೇ ಸರ್ಕಾರದ ಯೋಜನೆ ಆನಂತರದ ಅತಿಥಿಗಳ ವಿಷಯವನ್ನೆಲ್ಲ ಸಂಪೂರ್ಣವಾಗಿ ಚಿತ್ರರಂಗಕ್ಕೆ ಬಿಟ್ಟು ಕೊಟ್ಟಿದ್ದೇವೆ. ಕನ್ನಡ ಚಲನ ಚಿತ್ರಮಂಡಳಿ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಈಗಾಗಲೇ ಎಲ್ಲಾ ಕಲಾವಿದರಗಳಿಗೂ ಸಹ ಮನವಿಯನ್ನು ಮಾಡಿಕೊಳ್ಳಲಾಗಿದೆ.

ನನಗೆ ತಿಳಿದಿರುವ ಪ್ರಕಾರ ಶಿವರಾಜ್ ಕುಮಾರ್ ಅವರ ಪತ್ನಿಯಾದ ಗೀತ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಅವರು ವಿಜಯ ರಾಘವೇಂದ್ರ ಇವರೆಲ್ಲಾ ಬರಲಿದ್ದಾರೆ ಎಂದಿದ್ದಾರೆ. ಕೆಲವರ ಊಹೆ ಪ್ರಕಾರ ಹೊಸಪೇಟೆಯಲ್ಲಿ (Hosapet) ಆದ ಘಟನೆ ಬಳಿಕ ನಿರ್ಧಾರ ಬದಲಾಗಿದೆಯಂತೆ. ಹೊಸಪೇಟೆಯಲ್ಲಿ ದರ್ಶನ ಅವರ ಮೇಲಾದ ಚಪ್ಪಲಿ ಹ-ಲ್ಲೆ ಬಳಿಕ ಅದಕ್ಕೆಲ್ಲ ಅಪ್ಪು ಅವರ ಅಭಿಮಾನಿಗಳನ್ನು ದರ್ಶನ ಅಭಿಮಾನಿಗಳು ದೂಷಿಸಿದ್ದು.

ಅಂದಿನಿಂದ ಇಂದಿನವರೆಗೂ ಸೋಶಿಯಲ್ ಮೀಡಿಯಾದಲ್ಲಿ ಒಬ್ಬರಿಗೊಬ್ಬರು ಕಿತ್ತಾಡಿಕೊಂಡು ಸ್ಟಾರ್ ವಾರ್ ದೊಡ್ಡದು ಮಾಡಿಕೊಂಡಿರುವುದು ಬದಲಾಗಿರುವ ಈ ನಿರ್ಧಾರಕ್ಕೆ ಕಾರಣ ಎಂದು ಊಹೆ ಮಾಡಲಾಗುತ್ತಿದೆ. ಇನ್ನು ಎಲ್ಲಾ ಹೀರೋಗಳಿಗೂ ಮನವಿ ಕಳುಹಿಸಲಾಗಿದೆ ಎನ್ನುವ ವಿಷಯವನ್ನು ಹೇಳಿರುವುದರಿಂದ ನಾಳೆ ದರ್ಶನ್ ಅವರು ಬರುತ್ತಾರೆ ಎನ್ನುವ ನಿರೀಕ್ಷೆಯು ಸಹ ಇದೆ, ನಾಳೆ ತನಕ ಕಾದು ನೋಡೋಣ. ಒಂದು ವೇಳೆ ದರ್ಶನ್ ಬಂದರೆ ಫ್ಯಾನ್ ವಾರ್ ಅಂತ್ಯ ಆಗುತ್ತೆ ಇಲ್ಲವಾದರೆ ಉರಿಯುವ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತೆ ಆಗುತ್ತದೆ ಎನ್ನುವುದು ಕೆಲವರ ಅಭಿಪ್ರಾಯ.

ಆಂಕರ್ ಅನುಶ್ರೀ ಗ್ರಹಚಾರ ಬಿಡಿಸಿದ್ದಿನಿ, ನಟಿ ರಿಷಿಕಾ ಸಿಂಗ್ ಹೀಗೆ ಮೀಡಿಯಾ ಮುಂದೆ ಹೇಳಿದ್ದೇಕೆ ಗೊತ್ತ.? ಅಂತ ತಪ್ಪು ಅನುಶ್ರೀ ಏನ್ ಮಾಡಿದ್ರು.?

0

ಕಳೆದ ನಾಲ್ಕೈದು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ರಿಷಿಕ ಸಿಂಗ್ ಅವರ ಕುರಿತಾದ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿವೆ ಇದಕ್ಕೆಲ್ಲ ಕಾರಣ ರಿಷಿಕ ಸಿಂಗ್ ಅವರು ವರ್ಷದ ಹಿಂದೆ ತಮಗಾದ ಅಪಘಾತದಿಂದ ಚೇತರಿಸಿಕೊಂಡಿರುವುದು. ಅ.ಪ.ಘಾ.ತ ತೀವ್ರತೆಗೆ ಆಕೆಯ ಬದುಕೇ ಮುಗಿದು ಹೋಯಿತು ಎಂದು ಎಷ್ಟೋ ಜನ ಭಾವಿಸಿದ್ದರು. ಆದರೆ ರಿಷಿಕ ಸಿಂಗ್ ಅವರು ಈಗ ತಮ್ಮ ಕುಟುಂಬದವರ ಬೆಂಬಲದಿಂದ ಸುಧಾರಿಸಿಕೊಂಡಿದ್ದು ಕಳೆದ ವಾರ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮತ್ತು ಇಷ್ಟು ದಿನಗಳ ಚಿಕಿತ್ಸೆ ಬಗ್ಗೆ ಕುಟುಂಬದವರು ತೋರಿದ ಅಕ್ಕರೆಯ ಬಗ್ಗೆ ಫೋಟೋಗಳನ್ನೆಲ್ಲ ಸೇರಿಸಿ ವಿಡಿಯೋ ಮಾಡಿ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದರು.

ಇದಾಗಿದ್ದೆ ತಡ ಅವರ ಚೈತನ್ಯ ಕಂಡು ಅನೇಕ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾ ಚಾನಲ್ ಗಳು ಈಗ ಅವರ ಸಂದರ್ಶನ ನಡೆಸಿದ್ದಾರೆ. ಹೀಗೆ ಒಂದು ಸಂದರ್ಶನದಲ್ಲಿ ರಿಷಿಕಾ ಸಿಂಗ್ ಅವರನ್ನು ಇಂಡಸ್ಟ್ರಿಯಲ್ಲಿ ಯಾರ ಜೊತೆ ಆದರೂ ಗಲಾಟೆ ಮಾಡಿಕೊಂಡಿದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ರಿಷಿಕಾ ಅವರು ಕೊಟ್ಟಿರುವ ಉತ್ತರ ಈ ರೀತಿ ಇದೆ. ನಾನು ಸುಖ ಸುಮ್ಮನೆ ಯಾರ ಜೊತೆಗೂ ಕೂಡ ಜಗಳಕ್ಕೆ ಹೋಗುವುದಿಲ್ಲ, ವಿವಾದವನ್ನು ಮಾಡಿಕೊಳ್ಳುವುದಿಲ್ಲ.

ನನಗೆ ನೆನಪಿರುವ ಹಾಗೆ ನಾನು ಅನುಶ್ರೀ ಗೆ ಚೆನ್ನಾಗಿ ಬೈದಿದ್ದೆ. ಅದು ಕೂಡ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಾನು ಮತ್ತು ಅನುಶ್ರೀ ಬಿಗ್ ಬಾಸ್ ಸೀಸನ್ 1 ರ ಕಂಟೆಸ್ಟೆಂಟ್ಗಳು ಆಗಿದ್ದೆವು ಆಗ. ಅದರಲ್ಲಿ ಒಂದು ದಿನ ಅವಳು ಅಲ್ಲಿ ನಡೆದ ಒಂದು ಘಟನೆಗೆ ನಾನು ಸಂಬಂಧ ಇರದೇ ಇದ್ದರೂ ಕೂಡ ಅವಳು ಒಳ್ಳೆಯ ರೀತಿ ಪ್ರೇಮ್ ಆಗುವ ಉದ್ದೇಶ ಇಟ್ಟುಕೊಂಡು ನನ್ನನ್ನು ಅದರಲ್ಲಿ ಇನ್ವೊಲ್ ಮಾಡಿ ಮಾತನಾಡಿದ್ದಳು. ಅದು ನನಗೆ ಇಷ್ಟ ಆಗದೆ ಜೋರಾಗಿ ಬೈದಿದ್ದೆ ನನಗೂ ಅವಳಿಗೂ ದೊಡ್ಡ ಜಗಳವೇ ನಡೆದು ಹೋಯಿತು.

ಅದಾದ ಮೇಲೆ ಸುದೀಪ್ ಸರ್ ಅವಳಿಗೆ ಒಂದು ಹ್ಯಾಂಡ್ ಕರ್ಚೀಫ್ ಕೂಡ ಕೊಟ್ಟಿದ್ದರು ಕಣ್ಣೀರು ಒರೆಸಿಕೊಳ್ಳಲು, ಯಾಕೆಂದರೆ ನಾನು ಅವಳನ್ನು ಅಷ್ಟು ಅಳಿಸಿ ಬಿಟ್ಟಿದ್ದೆ. ಆದರೆ ಅವಳ ಮುಖದಲ್ಲಿ ಅವಳು ಮಾಡಿದ್ದು ತಪ್ಪು ಎನ್ನುವ ಅರಿವು ಬಂದಿದೆ ಎನ್ನುವುದು ನನಗೆ ಗೊತ್ತಾಯ್ತು. ಅವಳು ಸಹ ತುಂಬಾ ಸ್ವಾಭಿಮಾನಿ ಮತ್ತೆ ಬಂದು ಕ್ಷಮೆ ಕೇಳುವ ರೀತಿ ಏನು ಆಗಲಿಲ್ಲ ಆದರೆ ಅವಳಿಗೆ ಅರ್ಥವಾಗಿದೆ ಎಂದು ನನಗೆ ಗೊತ್ತಾದ ತಕ್ಷಣ ಮತ್ತೆ ಪ್ಯಾಚಪ್ ಆದೆ.

ನಾನು ಅವಳಿಗೆ ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದೆ ನಿನಗೆ ತಂದೆ ಇಲ್ಲ ಆದರೆ ಈ ಮನೆಯಲ್ಲಿ ನಾನು ನಿನಗೆ ತಂದೆ ರೀತಿ ಸಪೋರ್ಟಿವ್ ಆಗಿ ಇರುತ್ತೇನೆ ಎಂದು. ನನಗೆ ಹುಡುಗಿಯರ ಜೊತೆ ಜಗಳವಾಡಲು ಇಷ್ಟವೇ ಇಲ್ಲ ಯಾಕೆಂದರೆ ಹುಡುಗ ಹುಡುಗರ ಮಧ್ಯೆ ಫ್ರೆಂಡ್ಶಿಪ್ ಅಲ್ಲಿ ಎಷ್ಟು ಗಟ್ಟಿತನ ಇರುತ್ತದೆ ಆದರೆ ನಾವ್ಯಾಕೆ ಹೆಣ್ಣು ಮಕ್ಕಳು ಹೆಣ್ಣು ಮಕ್ಕಳೇ ಜಗಳಾಡಿಕೊಳ್ಳುತ್ತೇವೆ, ಅದು ಆಗುವುದು ನನಗೆ ಇಷ್ಟ ಇಲ್ಲ. ಒಂದು ವೇಳೆ ಮನಸ್ತಾಪ ಆದರೂ ಅವರಿಂದ ಒಳ್ಳೆ ರೆಸ್ಪಾನ್ಸ್ ಬಂದ ಕೂಡಲೇ ಅದು ನನಗೆ ಕಂಡರೆ ಪ್ಯಾಚ್ ಅಪ್ ಆಗಿಬಿಡುತ್ತೇನೆ. ಒಂದು ವೇಳೆ ಆ ರೀತಿ ಬದಲಾವಣೆ ಕಂಡು ಬರಲಿಲ್ಲ ಎಂದರೆ ಮತ್ತೆ ಅವರ ಕಡೆ ತಿರುಗಿ ಸಹ ನೋಡುವುದಿಲ್ಲ ಎಂದು ಹೇಳಿದ್ದಾರೆ.

ನನ್ನ ಕೋರಿಕೆಯನ್ನು ನೆಡೆಸಿಕೊಡ್ತಿರಾ.? ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ದರ್ಶನ್ ಏನದು ಗೊತ್ತ.?

0

ನನ್ನ ಈ ಕೋರಿಕೆಯನ್ನು ನಡೆಸಿಕೊಡುತ್ತೀರ ಎಂದು ನಂಬಿದ್ದೇನೆ ಎಂದು ತಮ್ಮ ಸೆಲೆಬ್ರಿಟಿಗಳ ಬಳಿ ಕೇಳಿಕೊಂಡ ಚಾಲೆಂಜಿಂಗ್ ಸ್ಟಾರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರು ತಾವು ಸೆಲೆಬ್ರಿಟಿಗಳು ಎಂದು ಕರೆಯುವ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿಕೊಂಡಿದ್ದಾರೆ. ಅದೇನೆಂದರೆ ಇದೆ ಫೆಬ್ರವರಿ ತಿಂಗಳಲ್ಲಿ ದರ್ಶನ್ ಅವರ ಹುಟ್ಟುಹಬ್ಬ ಬರಲಿದೆ. ಫೆಬ್ರವರಿ 16ನೇ ತಾರೀಖಿನಂದು ದರ್ಶನ್ ಅಭಿಮಾನಿಗಳಿಗೆ ಯುಗಾದಿ ಮತ್ತು ದೀಪಾವಳಿ ಹಬ್ಬದ ಸಂಭ್ರಮ.

ನೆಚ್ಚಿನ ನಟನ ಮನೆ ಮುಂದೆ ಬಂದು ಅವರನ್ನು ಭೇಟಿಯಾಗಿ, ಕೇಕ್ ಕಟ್ ಮಾಡಿಸಿ ತಿನ್ನಿಸಿ, ಕೈ ಕುಲಕಿ ವಿಶ್ ಮಾಡಿ, ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಹೋಗುವುದಕ್ಕೆ ಬೆಳಗಿನ ಜಾವದಿಂದಲೇ ಸಾವಿರಾರು ಸಂಖ್ಯೆಯಲ್ಲಿ ಕ್ಯೂ ನಿಂತಿರುತ್ತಾರೆ. ಹಲವು ವರ್ಷಗಳಿಂದ ಇದೇ ರೀತಿ ದರ್ಶನ್ ಅವರ ಹುಟ್ಟು ಹಬ್ಬವನ್ನು ಮಾಡಿಕೊಂಡು ಬಂದಿದ್ದರೂ ಕಳೆದ ಮೂರು ವರ್ಷಗಳಿಂದ ಇದಕ್ಕೆ ಬ್ರೇಕ್ ಹಾಕಲಾಗಿತ್ತು. ಕೊರೋನ ಕಾರಣದಿಂದ ಎರಡು ವರ್ಷ ಹಾಗೂ ಅಪ್ಪು ಅವರ ಅ.ಗ.ಲಿಕೆಯ ಕಾರಣದಿಂದ ಒಂದು ವರ್ಷ ದರ್ಶನ್ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರಲಿಲ್ಲ.

ಈ ಬಾರಿ ಕ್ರಾಂತಿ (Kranti) ಸಿನಿಮಾದ ಸಕ್ಸಸ್ ನ ಜೊತೆ ಅಭಿಮಾನಿಗಳ ಜೊತೆ ಹುಟ್ಟುಹಬ್ಬದ ಆಚರಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ. ಆದರೆ ಅದಕ್ಕೂ ಮುನ್ನ ಮನವಿ ಒಂದನ್ನು ಮಾಡಿದ್ದಾರೆ. ಅದೇನೆಂದರೆ ನನ್ನ ಹುಟ್ಟುಹಬ್ಬಕ್ಕಾಗಿ ದಯಮಾಡಿ ಯಾರು ಹಣವನ್ನು ವೆಚ್ಚ ಮಾಡಬೇಡಿ. ಹಾರ, ಬ್ಯಾನರ್, ತುರಾಯಿ, ಕೇಕು ತರಬೇಡಿ. ಅದರ ಬದಲು ನಿಮ್ಮ ಕೈಲಾದಷ್ಟು ದವಸ ಧಾನ್ಯ ಸಕ್ಕರೆ ಇಂತವುಗಳನ್ನು ತಂದುಕೊಡಿ. ಅದನ್ನು ಅವಶ್ಯಕತೆ ಇರುವ ವೃದ್ಧಾಶ್ರಮ ಅನಾಥಾಶ್ರಮ ಇವುಗಳಿಗೆ ತಲುಪಿಸುವ ಕೆಲಸವನ್ನು ಜವಾಬ್ದಾರಿಯಿಂದ ನಾನು ಮಾಡುತ್ತೇನೆ ಎಂದು ದರ್ಶನ್ ಅವರು ಹೇಳಿದ್ದಾರೆ.

ಜೊತೆಗೆ ನನ್ನ ಹುಟ್ಟು ಹಬ್ಬದ ಪ್ರಯುಕ್ತ ನನ್ನ ಮನೆಗೆ ಬರುತ್ತೀರಾ ಅದೇ ಸಂಭ್ರಮದಲ್ಲಿ ಪಟಾಕಿ ಹೊಡೆಯುವುದು, ಅಕ್ಕಪಕ್ಕದ ಮನೆ ಕಾಂಪೌಂಡ್ ಹತ್ತುವುದು, ಹೂ ಗಿಡ ಬೀಳಿಸುವುದು, ಅವರ ಸ್ವತ್ತುಗಳಿಗೆ ಹಾನಿ ಮಾಡುವುದು ಈ ರೀತಿ ಮಾಡಿ ಅವರಿಗೆ ಬೇಸರ ಮಾಡಬೇಡಿ. ಸಂಘದ ಕಾರ್ಯಕರ್ತರು ಹಾಗೂ ಪೊಲೀಸರ ಜೊತೆ ಶಾಂತಿಯುತವಾಗಿ ನಡೆದುಕೊಳ್ಳಿ ದಯವಿಟ್ಟು ನನಗಾಗಿ ಇಷ್ಟನ್ನು ನಡೆಸಿ ಕೊಡಿ ಎಂದು ಕೇಳಿಕೊಂಡಿದ್ದಾರೆ.

ದರ್ಶನ್ ಅವರ ಪ್ರತಿ ಮಾತನ್ನು ಕೂಡ ಅಭಿಮಾನಿಗಳು ಅಕ್ಷರಶಃ ಪಾಲಿಸುತ್ತಾರೆ ಹಾಗಾಗಿ ಈ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ದರ್ಶನವರು ಹೇಳಿರುವ ಇಷ್ಟು ಮಾತುಗಳಿಗೂ ಕೂಡ ತಕ್ಕನಾಗಿ ನಡೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ. ಜೊತೆಗೆ ದರ್ಶನ್ ಅವರ ಕಡೆಯಿಂದಲೂ ಅಭಿಮಾನಿಗಳಾಗಿ ಗಿಫ್ಟ್ ಸಿಗುವ ಸಾಧ್ಯತೆ ಇದೆ. ಅವರ ಮುಂದಿನ ಸಿನಿಮಾದ ಟೈಟಲ್ ಹಾಗೂ ಟೀಸರ್ ಝಲಕ್ ರಿಲೀಸ್ ಆಗಲಿದೆ ಎನ್ನುವ ಸುದ್ದಿ ಇದೆ.

ಮಾಲಾಶ್ರೀ ಪುತ್ರಿ ರಾಧನರಾಮ್ ನಾಯಕಿ ಆಗಿ ಲಾಂಚ್ ಆಗುತ್ತಿರುವ ವಿಶೇಷ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರುವ ತರುಣ್ ಸುಧೀರ್ ಅವರ ನಿರ್ದೇಶನದ ರಾಕ್ ಲೈನ್ ವೆಂಕಟೇಶ್ ಅವರ ನಿರ್ಮಾಣದ ಇನ್ನು ಹೆಸರಿಡದ ಡಿ ಫಿಫ್ಟಿ (D56) ಸಿಕ್ಸ್ ಸಿನಿಮಾದ ಮುಹೂರ್ತ ಕಳೆದ ವರ್ಷವೇ ನಡೆದಿತ್ತು. ಈಗ ದರ್ಶನ್ ಹುಟ್ಟು ಹಬ್ಬದ ಪ್ರಯುಕ್ತ ಆ ಸಿನಿಮಾದ ಟೈಟಲ್ ಮತ್ತು ಅದರ ಟೀಸರ್ ರಿಲೀಸ್ ಮಾಡುವ ನಿರೀಕ್ಷೆ ಇದೆ. ಜೊತೆಗೆ ಸ್ಪೆಷಲ್ ಕಾಮನ್ ಡಿಪಿ (Common DP) ದರ್ಶನ್ ಹುಟ್ಟು ಹಬ್ಬದ ಪ್ರಯುಕ್ತ ತಯಾರಾಗುತ್ತಿದ್ದು, ಅದನ್ನು ಟ್ವಿಟರ್ (Twitter) ಅಲ್ಲಿ ಟ್ರೆಂಡಿಂಗ್ ಮಾಡಲಾಗುವುದು ಎನ್ನುವ ಮಾತುಗಳು ಇವೆ.

ಗಂಡನ ಸಾ-ವಿ-ನಿಂದ ಖಿನ್ನತೆಗೆ ಜಾರಿ ನೆನಪಿನ ಶಕ್ತಿ ಕಳೆದಕೊಂಡ ನಟಿ ಭಾನುಪ್ರಿಯಾ. ಈಗ ಭಾನುಪ್ರಿಯಾ ಸ್ಥಿತಿ ಹೇಗಿದೆ ಗೊತ್ತ.? ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ.!

0

ನೆನಪಿನ ಶಕ್ತಿ ಕಳೆದುಕೊಂಡ ನಟಿ ಭಾನುಪ್ರಿಯ, ಡೈಲಾಗ್ ಮರೆಯುವ ಭಯದಿಂದ ಸಿನಿಮಾಗಳಿಂದ ದೂರ ಇರುವ ನಟಿ. ನಟಿ ಭಾನುಪ್ರಿಯ ಒಂದು ಕಾಲಘಟ್ಟದಲ್ಲಿ ಕನ್ನಡ ತಮಿಳು ತೆಲುಗು ಮಲಯಾಳಂ ಎಲ್ಲಾ ಚಿತ್ರರಂಗದಲ್ಲೂ ಪೀಕ್ ಅಲ್ಲಿ ಇದ್ದ ನಟಿ. ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್ ಇಂತಹ ಸ್ಟಾರ್ ನಟರುಗಳಿಗೆ ನಾಯಕಿಯಾಗಿ ಅಭಿನಯಿಸಿದ ಅದ್ಭುತ ಕಲಾವಿದೆ.

ನೃತ್ಯ ಮತ್ತು ಅಭಿನಯವನ್ನು ಕರಗತ ಮಾಡಿಕೊಂಡಿದ್ದ ಈಕೆ ಕನ್ನಡದವರೇ ಎನಿಸುವಷ್ಟು ಕನ್ನಡಿಗರಿಗೂ ಹತ್ತಿರವಾಗಿದ್ದರು. ನಾಯಕ ನಟಿಯಾಗಿ ಬಳಿಕ ಪೋಷಕ ನಟಿಯಾಗಿ ಸಹ ಬೇಡಿಕೆ ಅಲ್ಲಿದ್ದ ನಟಿ ಇದ್ದಕ್ಕಿದ್ದಂತೆ ಹಲವು ವರ್ಷಗಳಿಂದ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಹಲವು ಜನರು ಭಾನುಪ್ರಿಯ ಯಾಕೆ ಈ ರೀತಿ ಮರೆಯಾಗಿ ಹೋದರು ಎಂದು ಅವರ ಬಗ್ಗೆ ನೆನಪಿಸಿಕೊಂಡಿದ್ದು ಇದೆ.

ಇದೀಗ ಅವರೇ ತಾವು ಸಿನಿಮಾಗಳಿಂದ ದೂರ ಉಳಿಯಲು ಕಾರಣ ಏನು ಎನ್ನುವ ವಿಷಯವನ್ನು ತೆಲುಗಿನ ಚಾನೆಲ್ ಒಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನಟಿ ಭಾನುಪ್ರಿಯ ಅವರಿಗೀಗ ಮೆಮೊರಿ ಲಾಸ್ ಆಗಿದೆಯಂತೆ ಅದು ಎಷ್ಟರಮಟ್ಟಿಗೆ ಎಂದರೆ ಕೊನೆಯ ಹಂತದಲ್ಲಿ ಇರುವಷ್ಟು. ಇತ್ತೀಚೆಗೆ ಹಲವು ಜನರಲ್ಲಿ ಈ ಕಾಯಿಲೆ ಬಗ್ಗೆ ಕೇಳುತ್ತಿದ್ದೇವೆ. ಕೆಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲೂ ಮರೆವಿನ ಕಾಯಿಲೆ ಬಗ್ಗೆ ತೋರಿಸುತ್ತಿದ್ದಾರೆ.

ಮರೆವಿನ ಸಮಸ್ಯೆ ಎಲ್ಲರಿಗೂ ಇರುತ್ತದೆ, ಆದರೆ ಇದು ಕಾಯಿಲೆ ಹಂತಕ್ಕೆ ಹೋಗಬಾರದು ಎಷ್ಟರ ಮಟ್ಟಿಗೆ ಎಂದರೆ ತಾವು ಏನು ಮಾಡುತ್ತಿದ್ದೇವೆ ಏನಕ್ಕಾಗಿ ಬಂದೆವು ಎನ್ನುವುದನ್ನೇ ಮರೆತು ಬಿಡುವಷ್ಟು ಮರೆವಿನ ಸಮಸ್ಯೆ ಆಗಿದೆಯಂತೆ. ಹಾಗಾಗಿ ಸಿನಿಮಾ ಸೆಟ್ಟಿಗೆ ಹೋದರೆ ಕೊಟ್ಟಿದ ಡೈಲಾಗ್, ಪ್ರಾಕ್ಟೀಸ್ ಮಾಡಿದ್ದ ಡೈಲಾಗ್ ಅನ್ನೇ ಮರೆತು ಬಿಡುವಷ್ಟು ಮರೆವಿನ ಕಾಯಿಲೆ ಕಾಯುತ್ತಿದ್ದೆಯಂತೆ.

ಹೀಗಾಗಿ ಅಲ್ಲಿ ಹೋಗಿ ಅವಮಾನ, ಮುಜುಗರ ಅನುಭವಿಸಬಾರದು ಜೊತೆಗೆ ನನ್ನಿಂದ ಇತರರಿಗೆ ಸಮಸ್ಯೆಯನ್ನು ಆಗಬಾರದು ಎನ್ನುವ ಕಾರಣಕ್ಕೆ ನಟಿ ಸಿನಿಮಾಗಳಿಂದ ದೂರ ಉಳಿದಿದ್ದಾರಂತೆ. ಜೊತೆಗೆ ಆಕೆಗೆ ಒಂದು ನೃತ್ಯ ಶಾಲೆ ಆರಂಭಿಸಬೇಕು ಎನ್ನುವ ಆಸೆ ಇತ್ತು ಆದರೆ ಈಗ ಮರೆವಿನ ಕಾಯಿಲೆಯಿಂದಾಗಿ ಅದು ಕನಸಾಗೇ ಉಳಿಯುವಂತಾಗಿದೆ.

ಅಷ್ಟೊಂದು ಲವಲವಿಕೆಯಿಂದ ಚಟುವಟಿಕೆಯಿಂದ ಚಾರ್ಮಿಂಗ್ ಆಗಿದ್ದ ನಟಿಗೆ ಈ ಸಮಸ್ಯೆ ಬರಲು ಕಾರಣ ಏನು ಎಂದು ನೋಡುವುದಾದರೆ ಅವರ ಗಂಡನ ಸಾವಿನ ಖಿನ್ನತೆ. ಅದೇ ಅವರನ್ನು ಈ ಪರಿಯಾಗಿ ಕಾಡುತ್ತಿರುವುದು. ಬಹಳ ಪ್ರೀತಿಸಿ ಭಾನುಪ್ರಿಯ ಅವರು 1998ರಲ್ಲಿ ಸಿನಿಮಾಟೋಗ್ರಾಫರ್ ಆದರ್ಶ್ ಕೌಶಲ್ ಎನ್ನುವವರನ್ನು ಕೈ ಹಿಡಿದಿದ್ದರು. ಆದರೆ ಇಬ್ಬರ ಮಧ್ಯೆ ಸಣ್ಣಪುಟ್ಟ ಸಮಸ್ಯೆಗಳಿಂದ ಭಿನ್ನಭಿಪ್ರಾಯ ಮೂಡಿ 2005ರಿಂದ ಇಬ್ಬರು ಬೇರೆ ಬೇರೆಯಾಗಿ ಬದುಕಲು ಶುರು ಮಾಡಿದರು.

ಎಷ್ಟೋ ಬಾರಿ ಇವರಿಬ್ಬರಿಗೂ ಡಿ.ವೋ.ರ್ಸ್ ಆಗಿದೆ ಎಂದು ಗಾಳಿ ಸುದ್ದಿ ಹರಡಿದ್ದರೂ ನಟಿ ಇಲ್ಲ ಬೇರೆಯಾಗಿ ಜೀವಿಸುತ್ತಿದ್ದೆ ಹೊರತು ವಿ.ಚ್ಛೇ.ದ.ನ ಪಡೆದಿಲ್ಲ ಎಂದು ಸ್ಪಷ್ಟತೆಯನ್ನು ಕೊಟ್ಟಿದ್ದರು. ಆದರೆ 2018ರಲ್ಲಿ ಹೃ.ದ.ಯಾ.ಘಾ.ತದಿಂದ ಆದರ್ಶ್ ಕೌಶಲ್ ಅವರು ಸಾ.ವ.ನ್ನ.ಪ್ಪು.ತ್ತಾ.ರೆ. ಆ ಸಾ.ವು ಭಾನುಪ್ರಿಯ ಅವರನ್ನು ಇನ್ನಿಲ್ಲದಂತೆ ಕಾಡಿದೆ. ನಾವಿಬ್ಬರೂ ಒಳ್ಳೆ ಸ್ಥಾನದಲ್ಲಿದ್ದೆವು, ಕೈತುಂಬಾ ದುಡಿಯುತ್ತಿದ್ದೆವು, ಸಮಯ ಇತ್ತು ಆದರೆ ನಾವು ಚೆನ್ನಾಗಿರಬೇಕಾಗಿದ್ದ ಸಮಯದಲ್ಲಿ ಚಿಕ್ಕಪುಟ್ಟ ಸಮಸ್ಯೆಗಳಿಗೆ ಬೇರೆ ಆಗಿಬಿಟ್ಟೆವು.

ಈಗ ಅವರನ್ನು ಕಳೆದುಕೊಂಡೆ ಎನ್ನುವ ದುಃಖ ನನ್ನನ್ನು ಕಾಡುತ್ತಿದೆ. ಸಹಿಸಲಾರದಷ್ಟು ಹಿಂಸೆ ಕೊಡುತ್ತಿದ್ದೆ ಹಾಗಾಗಿ ಬದುಕಿನ ಬಗ್ಗೆ ನನಗೆ ಆಸಕ್ತಿಯೇ ಹೊರಟು ಹೋಗಿದೆ ಎನ್ನುವಷ್ಟರ ಮಟ್ಟಕ್ಕೆ ನಟಿ ಖಿನ್ನತೆಗೆ ಒಳಗಾಗಿದ್ದಾರೆ. ಅದರಿಂದಲೇ ಈಗ ಮೆಮೊರಿ ಲಾಸ್ ಖಾಯಿಲೆಯೂ ಆಕೆಯನ್ನು ಬಾಧಿಸುತ್ತಿದೆ. ಆದರೆ ಪ್ರತಿಭಾನ್ವಿತ ನಟಿ ಈ ರೀತಿಯಾಗಿ ವೈವಾಹಿಕ ಜೀವನವನ್ನು ಕೊನೆಗಾಣಿಸಿಕೊಂಡಿದ್ದು ದು.ರಂ.ತ.ವೇ ಸರಿ.

ವೀಕೆಂಡ್ ವಿತ್ ರಮೇಶ್ ಸೀಸನ್ 5 ರಲ್ಲಿ ಮೊದಲ ಅತಿಥಿಯಾಗಿ ಭಾಗವಹಿಸಲು ರಿಷಬ್ ಶೆಟ್ಟಿ ಡಿಮ್ಯಾಂಡ್ ಮಾಡಿರುವ ಸಂಭಾವನೆ ಎಷ್ಟು ಗೊತ್ತಾ.? ಪಕ್ಕಾ ತಲೆ ತಿರುಗುತ್ತೆ‌.!

 

ಜೀ ಕನ್ನಡ ವಾಹಿನಿಯಲ್ಲಿ (Zee kannada) ಪ್ರಸಾರವಾಗುತ್ತಿರುವ ಎಲ್ಲಾ ರಿಯಾಲಿಟಿ ಶೋಗಳು ಕೂಡ ಪ್ರೇಕ್ಷಕರ ಮನ ಗೆದ್ದಿವೆ. ಸರಿಗಮಪ (saregamapa) ಮತ್ತು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕ ವರ್ಗವಿದ್ದು ಅದೇ ಕಾರಣಕ್ಕಾಗಿ ಪದೇಪದೇ ಚಾನೆಲ್ ಕೂಡ ಇದರ ಸೀಸನ್ ಗಳನ್ನು ಏರ್ಪಡಿಸುತ್ತಿರುತ್ತದೆ. ಈಗಾಗಲೇ ಸರಿಗಮಪ ಕಾರ್ಯಕ್ರಮವು 19ನೇ ಸೀಸನ್ ಅಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಮತ್ತು ವೀಕೆಂಡ್ ವಿತ್ ಕಾರ್ಯಕ್ರಮವನ್ನು ಶುರು ಮಾಡುವಂತೆ ಪ್ರೇಕ್ಷಕ ವರ್ಗದಿಂದ ಭಾರಿ ಬೇಡಿಕೆ ಕೇಳಿ ಬರುತ್ತಿದೆ.

ಸದ್ಯಕ್ಕೆ ಚಾನೆಲ್ ಕೂಡ ಶೀಘ್ರದಲ್ಲೇ ವೀಕೆಂಡ್ ವಿತ್ ರಮೇಶ್ ಸೀಸನ್ 5 ಬರಲಿದೆ ಎನ್ನುವ ಸುಳಿವು ಕೊಟ್ಟಿದೆ ಇದಾದ ಬೆನ್ನಲ್ಲೇ ಈ ಸೀಸನ್ 5 ಸಾಧಕ ಯಾರು ಎನ್ನುವ ಕುರಿತು ಬಾರಿ ಕುತೂಹಲ ಏರ್ಪಟ್ಟಿದ್ದು ಆ ರಹಸ್ಯ ಕೂಡ ರೆಟ್ಟಾಗಿದೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮೊದಲ ಸಾಧಕನಾಗಿ ಮೊದಲ ಸೀಸನ್ ಅಲ್ಲಿ ಪುನೀತ್ ರಾಜಕುಮಾರ್ (Punith raj kumar) ಅವರು ಪಾಲ್ಗೊಂಡಿದ್ದರು. ಇದಾದ ಬಳಿಕ ನಾನಾ ವಿಭಾಗಗಳಿಂದ ಹಲವು ಸಾಧಕರನ್ನು ಕರೆಸಿ, ಈ ಪೀಳಿಗೆ ಜನರಿಗೆ ಅವರ ಕಥೆಗಳನ್ನು ತಿಳಿಸಿ ಸ್ಪೂರ್ತಿ ತುಂಬಿಸುವ ಕೆಲಸವನ್ನು ಮಾಡಲಾಗಿತ್ತು.

ನಿರೂಪಕರಾದ ರಮೇಶ್ ಅರವಿಂದ್ (Ramesh Aravind) ಅವರು ಕಾರ್ಯಕ್ರಮಕ್ಕೆ ಶಕ್ತಿಯಾಗಿದ್ದು ಇಡೀ ತಂಡ ಸಮಾಜಮುಖಿಯಾದ ಇಂತಹ ಕಾರ್ಯಕ್ರಮ ಭಾಗವಾಗಿದೆ. ಈಗಾಗಲೇ ಈ ಕಾರ್ಯಕ್ರಮದಲ್ಲಿ ವೀರೇಂದ್ರ ಹೆಗಡೆ, ಸುಧಾ ಮೂರ್ತಿ, ಸಿದ್ದರಾಮಯ್ಯ, ದೇವೇಗೌಡ, ಯಶ್, ದರ್ಶನ್, ಸುದೀಪ್, ರಾಧಿಕಾ ಪಂಡಿತ್, ಇನ್ಫೋಸಿಸ್ ನಾರಾಯಣ ಮೂರ್ತಿ, ರವಿಚಂದ್ರನ್ ಇವರು ಸೇರಿದಂತೆ ಸಾಕಷ್ಟು ಸಾಧಕರು ಬಂದು ತಮ್ಮ ಜೀವನದ ಚಿತ್ರಣದ ಬಗ್ಗೆ ಅನುಭವಗಳನ್ನು ಹಂಚಿಕೊಂಡು ಹೋಗಿದ್ದಾರೆ.

ಈಗ ರಿಷಬ್ ಶೆಟ್ಟಿ (Rishabh shetty) ಅವರು ಐದನೇ ಸೀಸನ್ ನ ಮೊದಲ ಅತಿಥಿ ಆಗುತ್ತಿದ್ದು ಅವರ ಸಾಧನೆ ಕುರಿತು ಕಾರ್ಯಕ್ರಮದಲ್ಲಿ ಹೇಳಲಾಗುತ್ತದೆ. ರಿಷಬ್ ಶೆಟ್ಟಿ ಅವರ ಬಗ್ಗೆ ಈಗಾಗಲೇ ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ಭಾರತದ ಎಲ್ಲಾ ಚಿತ್ರರಂಗದವರಿಗೂ ತಿಳಿದಿದೆ. ಆದರೆ ಕಾಂತಾರ (Kanthara) ಸಕ್ಸಸ್ ಬರುವವರೆಗೂ ಇವರು ತುಳಿದಿದ್ದು ಬಹಳ ಕಷ್ಟದ ಹಾದಿ ಹಾಗೂ ಪಟ್ಟಿದ್ದು ಬಾರಿ ಪರಿಶ್ರಮ. ಕಾಂತಾರ ಎನ್ನುವ ಒಂದು ಚಿತ್ರದ ಮೂಲಕ ಕನ್ನಡ ನಾಡಿನ ಹಿರಿಮೆಯನ್ನು ಹೆಚ್ಚಿಸಿದ ಈ ನಟ ಮತ್ತು ನಿರ್ದೇಶಕನ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಇಡೀ ನಾಡು ಕಾದು ಕೂತಿದೆ.

ಸದ್ಯದಲ್ಲೇ ಎಲ್ಲರ ಆಸೆಯಂತೆ ಈ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಅವರು ಆ ಸೀಟ್ ಮೇಲೆ ಆಸೀನರಾಗುವುದು ನೋಡಿ ಕಣ್ತುಂಬಿಕೊಳ್ಳಬಹುದು. ಆದರೆ ಅದಕ್ಕಾಗಿ ರಿಷಬ್ ಶೆಟ್ಟಿ ಅವರು ಪಡೆಯುತ್ತಿರುವ ಸಂಭಾವನೆ ಬಗ್ಗೆ ಬಾರಿ ಚರ್ಚೆ ಆಗುತ್ತಿದೆ. ಬರೋಬ್ಬರಿ 8 ತಾಸುಗಳ ಕಾಲ ಶೂಟಿಂಗ್ ಆಗುವ ಈ ಪ್ರೋಗ್ರಾಮ್ ಅಲ್ಲಿ ಅತಿಥಿ ಆಗಿ ಭಾಗವಹಿಸಲು ರಿಷಭ್ ಶೆಟ್ಟಿ ಅವರಿಗೆ 4 ಕೋಟಿ ರೂಗಳನ್ನು ಸಂಭಾವನೆ ಆಗಿ ಕೊಡಲಾಗುತ್ತಿದೆಯಂತೆ. ಈ ಬಗ್ಗೆ ಚಾನೆಲ್ ಕಡೆಯಿಂದ ಆಗಲಿ ಅಥವಾ ರಿಷಬ್ ಶೆಟ್ಟಿ ಅವರ ಕಡೆಯಿಂದಾಗಲಿ ಸ್ಪಷ್ಟನೆ ಸಿಗದೇ ಇದ್ದರೂ ಇಂತಹದೊಂದು ಚರ್ಚೆ ನಡೆಯುತ್ತಿದೆ ಮತ್ತು ಇದೇ ಮೊದಲ ಬಾರಿಗೆ ಕಾರ್ಯಕ್ರಮದಲ್ಲಿ ಅತಿಥಿ ಆಗಿರುವವರ ಸಂಭಾವನೆ ಕುರಿತು ಚರ್ಚೆ ನಡೆಯುತ್ತಿದೆ.

ಕುಂಕುಮ ಕೊಡೋಕು ಜನ ಹಿಂದೆ ಮುಂದೆ ನೋಡ್ತಾರೆ. ನಟಿ ಆಗಿರಬಹುದು ಆದ್ರೂ ನಿಜ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದೇನೆ ಎಂದು ಕಣ್ಣೀರು ಹಾಕಿದ ನಟಿ ಉಮಾಶ್ರೀ

0

ಕನ್ನಡದ ಹಾಸ್ಯ ನಟಿಯರನ್ನು ನೆನೆದಾಗ ಮೊದಲಿಗೆ ಕಣ್ಮುಂದೆ ತುಂಬಿಕೊಳ್ಳೋದು ಉಮಾಶ್ರೀ (Umashree) ಅವರ ಚಿತ್ರ. ಹಲವು ದಶಕಗಳಿಂದ ಕನ್ನಡ ಚಲನಚಿತ್ರ ರಂಗದಲ್ಲಿ ನಾನಾ ಪಾತ್ರಗಳಲ್ಲಿ ರಂಜಿಸುತ್ತ ವಿಶೇಷವಾಗಿ ಹಾಸ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಾಗೆ ರಾಜಕೀಯದತ್ತ ಕೂಡ ಮುಖ ಮಾಡಿ, ಇಂದು ಕಿರುತೆರೆಯ ಪ್ರೇಕ್ಷಕರನ್ನು ತನ್ನ ಅಮೋಘ ನಟನೆಯ ಮೂಲಕ ಹಿಡಿದಿಟ್ಟುಕೊಂಡಿರುವ ಪ್ರತಿಭಾವಂತೆ.

ಉಮಾಶ್ರೀ ಎಂದ ತಕ್ಷಣ ನಮಗೆಲ್ಲ ಕ್ರೇಜಿಸ್ಟಾರ್ ರವಿಚಂದ್ರನ್ (Crazy star Ravichandran) ಅವರ ಪುಟ್ನಂಜ (Putnanja) ಚಿತ್ರದ ಪುಟ್ಪಲ್ಲಿ (Putmalli) ಪಾತ್ರ ತಕ್ಷಣ ನೆನಪಾಗಿಬಿಡುತ್ತದೆ. ಸಂಪ್ರದಾಯ ಕುಟುಂಬದ ಹಳ್ಳಿ ಅಜ್ಜಿ ಒಬ್ಬಳು ಫ್ಯಾಷನ್ ಮಾಡುವ ಮೊಮ್ಮಗನ ಹೆಂಡತಿಗೆ ಸಂಸ್ಕಾರ ಕಲಿಸುವ ಘಾಟಿ ಅಜ್ಜಿ ಪಾತ್ರ ಎಲ್ಲರ ಮನಸನ್ನ ಮೇಲೆ ಒಂದು ದೊಡ್ಡ ಪ್ರಭಾವ ಬೀರಿತ್ತು. ಆನಂತರ ಉಮಾಶ್ರೀ ಅವರ ಇಮೇಜ್ ಪುಟ್ಮಲ್ಲಿ ಎಂದೇ ಬದಲಾಯಿತು ಎಂದು ಹೇಳಬಹುದು.

ಆದರೆ ಆರಂಭದ ದಿನಗಳಲ್ಲಿ ಪುಟ್ಮಲ್ಲಿ ಅಲಿಯಾಸ್ ಉಮಾಶ್ರೀ ಅವರು ಸಹ ಸಿನಿಮಾಗಳಲ್ಲಿ ಫ್ಯಾಶನ್ ಉಡುಗೆಗಳನ್ನು ಧರಿಸಿದ್ದಾರೆ. ಆದರೆ ಒಂದು ಹಂತದಲ್ಲಿ ಅಂದರೆ ಬಹುತೇಕ ಅವರು ಪುಟ್ಮಲ್ಲಿ ಸಿನಿಮಾದಲ್ಲಿ ನಟಿಸಿದ ಬಳಿಕ ಸಂಪೂರ್ಣವಾಗಿ ಇದೇ ರೀತಿ ತುಂಬಾ ಸಂಪ್ರದಾಯವಾಗಿ ಕಾಣಿಸಿಕೊಳ್ಳಲು ಶುರು ಮಾಡಿದರು ಎನ್ನಬಹುದು. ಅದು ಸಿನಿಮಾಗೆ ಮಾತ್ರ ಸೀಮಿತವಾಗದೆ ತೆರೆ ಹಿಂದೆ ಕೂಡ ಅವರ ವ್ಯಕ್ತಿತ್ವವೇ ಈ ರೀತಿ ರೂಪಗೊಂಡಿತು.

ಹಲವು ವರ್ಷಗಳಿಂದ ಉಮಾಶ್ರೀ ಅವರು ಸಾರ್ವಜನಿಕವಾಗಿ ಕೂಡ ಇದೇ ರೀತಿ ಕಾಣಿಸಿಕೊಳ್ಳುತ್ತಾರೆ. ಲಕ್ಷಣವಾಗಿ ಸೀರೆಯುಟ್ಟು ಹಣೆ ತುಂಬಾ ಕುಂಕುಮ ಇಟ್ಟುಕೊಂಡು, ಕೈಯಲ್ಲಿ ಬಾಳೆ ಹಾಕಿಕೊಂಡು, ಸಂಪ್ರದಾಯಸ್ಥ ಭಾರತ ನಾರಿಯ ಹಾಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗಲೂ ಉಮಾಶ್ರೀ ಅವರಿಗೆ ಯಾವ ಉಡುಗೆ ಇಷ್ಟ ಎಂದು ಕೇಳಿದರೆ ಅವರು ಹೆಮ್ಮೆಯಿಂದ ಹೇಳಿ ಬಿಡುತ್ತಾರೆ.

ನನಗೆ ಬಾಲ್ಯದಿಂದಲೂ ಭಾರತೀಯ ಸಂಸ್ಕೃತಿಯ ಲಂಗ ಧವಣಿ, ಸೀರೆ ಇಂತಹ ಉಡುಗೆಗಳು ಇಷ್ಟ, ಆದರೆ ಪಾತ್ರಗಳಿಗೆ ಅನುಗುಣವಾಗಿ ಫ್ಯಾಶನ್ ಬಟ್ಟೆ ಧರಿಸುತ್ತದೆ ಹೊರತು ಅದನ್ನು ಹೊರತುಪಡಿಸಿ ಉಳಿದ ಸಮಯದಲ್ಲೆಲ್ಲ ನಾನು ಈ ರೀತಿಯೇ ಇರಲು ಇಷ್ಟಪಡುತ್ತಿದ್ದೆ, ಇದೇ ರೀತಿ ಇರುತ್ತಿದ್ದೆ ಎಂದು. ಆದರೆ ಇಷ್ಟು ಸಂಪ್ರದಾಯವನ್ನು ಪಾಲಿಸುವ ಉಮಾಶ್ರೀ ಅವರನ್ನು ಜನ ಅಂದು ನೋಡುತ್ತಿದ್ದದ್ದೇ ಬೇರೆ ರೀತಿ.

ಒಂದು ಕಾಲದಲ್ಲಿ ಅವರನ್ನು ಕುಂಕುಮಕ್ಕೆ ಕರೆಯುವುದಕ್ಕೂ ಕೂಡ ಜನರು ಹಿಂದೆ ಮುಂದೆ ನೋಡುತ್ತಿದ್ದರಂತೆ ಕಾರಣ ಇಷ್ಟೇ ಅವರು ನಾಟಕದವರು ಜೊತೆಗೆ ಗಂಡನಿಂದ ಬೇರೆ ಆಗಿದ್ದಾರೆ ಎಂದು. ಆ ಕಹಿ ನೆನಪುಗಳನ್ನು ನೆನೆದು ಹೇಳಿಕೊಳ್ಳುವ ಇವರು ಅದರ ಜೊತೆಗೆ ಧೈರ್ಯವಾಗಿ ಮತ್ತೊಂದು ಮಾತನ್ನು ಸಹ ಹೇಳುತ್ತಾರೆ.

ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲೇ ನಮ್ಮ ದೇಶದಲ್ಲಿ ಅರಿಶಿನ ಕುಂಕುಮ ಹಾಕಿಕೊಳ್ಳುವ ಶಾಸ್ತ್ರ ಮಾಡುತ್ತಾರೆ. ಅಂದಿನಿಂದಲೇ ಅವರಿಗೆ ಅದರ ಮೇಲೆ ಅಧಿಕಾರ ಇರುತ್ತದೆ ಯಾರು ಸಹ ಅದನ್ನು ಕೊಡುವುದು ಅಲ್ಲ ಕಿತ್ತುಕೊಳ್ಳುವುದು ಅಲ್ಲ ಯಾರು ಕೊಡದೆ ಇದ್ದರೂ ನಾವೇ ಅದನ್ನು ಧರಿಸಬಹುದು. ನಾನು ಅಷ್ಟೇ ಸಾಕಷ್ಟು ಬಾರಿ ಈ ರೀತಿ ಬೇಸರ ಅನುಭವಿಸಿದೆ ಆಮೇಲೆ ಬುದ್ಧಿ ಬಂತು.

ಯಾರು ಯಾಕೆ ಕೊಡಬೇಕು ನನಗೆ ಇಷ್ಟ ನಾನು ಲಕ್ಷಣವಾಗಿ ಕಾಣುತ್ತೇನೆ ನನಗೆ ಖುಷಿಯಾಗುತ್ತದೆ ಹಾಗಾಗಿ ಅದೇ ಕಾರಣಕ್ಕೆ ಯಾರು ಕೊಡದಿದ್ದರೂ ನಾನೇ ಅರಿಶಿನ ಮತ್ತು ಕುಂಕುಮವನ್ನು ಹಚ್ಚಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಕಿರುತೆರೆ ಲೋಕದಲ್ಲಿ ಮತ್ತೊಂದು ಕಥೆಯ ಮೂಲಕ ಈ ಬಾರಿ ಇವರು ಬಂದಿದ್ದಾರೆ. ಈ ತನ್ನ ಜೊತೆ ತನ್ನ ಮೂರು ಹೆಣ್ಣು ಮಕ್ಕಳ ಕಾಲ್ಪನಿಕ ಕಥೆಯನ್ನು ಸಹ ಹೇಳಲಿದ್ದಾರೆ. ಝೀ ಕನ್ನಡ ವಾಹಿನಿಯಲ್ಲಿ (Zee kannada) ಪ್ರಸಾರವಾಗುತ್ತಿರುವ ಈ ಸೂಪರ್ ಹಿಟ್ ಧಾರಾವಾಹಿಗೆ ಪುಟ್ಟಕ್ಕನ ಮಕ್ಕಳು (Puttakkana Makkalu) ಎಂದು ಹೆಸರಿಡಲಾಗಿದೆ.

35 ಪೀಸ್ ಆಗಿ ಫ್ರಿಡ್ಜ್ ಒಳಗೆ ಸಾ.ಯೋ.ಕೆ ನನ್ಗೆ ಇಷ್ಟ ಇಲ್ಲ, ಮೈಸೂರಿನ ಆದಿಲ್ ನನ್ಗೆ ಮೋಸ ಮಾಡ್ತ ಇದಾನೆ ದಯವಿಟ್ಟು ನನ್ಗೆ ನ್ಯಾಯ ಕೊಡಿಸಿ ಅಂತ ಕಣ್ಣಿರೋ ಹಾಕ್ತಿರೋ ನಟಿ ರಾಖಿ ಸಾವಂತ್

0

 

ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ ರಾಖಿ ಸಾವಂತ್ (Rakhi Savanth) ಆಗಾಗ ಮಾಧ್ಯಮಗಳಲ್ಲಿ ಸುದ್ದಿ ಆಗುವುದು ಇದ್ದೇ ಇದೆ. ಆದರೆ ಈ ಬಾರಿ ಆಕೆ ಸಿನಿಮಾ ಮತ್ತು ರಿಯಾಲಿಟಿ ಶೋಗಳ ಹೊರತಾಗಿ ಸಂಸಾರದ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಒಂದರ್ಥದಲ್ಲಿ ಪತಿ ಆದಿಲ್ (Adil) ವಿರುದ್ಧ ಮಾರುದ್ದದ ದೂರು ಹೇಳುತ್ತಾ ಸುದ್ದಿಯಾಗುತ್ತಿದ್ದಾರೆ ಎಂದೇ ಹೇಳಬಹುದು. ರಾಖಿ ಸಾವಂತ್ ಈಗಷ್ಟೇ ಮಾತೃ ವಿಯೋಗದ ದುಃಖದಲ್ಲಿದ್ದಾರೆ. ಆ ದುಃಖದಿಂದ ಹೊರಬರುವ ಮೊದಲೇ ಆಕೆ ಪತಿಯಿಂದ ಕೂಡ ನೋವನ್ನು ಅನುಭವಿಸುತ್ತಿದ್ದಾರೆ.

ರಾಖಿ ಸಾವಂತ್ ಮೈಸೂರಿನ ಆದಿಲ್ ಎನ್ನುವ ಯುವಕನನ್ನು ಮದುವೆ ಆಗಿದ್ದರು. ಅವರಿಬ್ಬರು ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರ ಅವರಿಬ್ಬರೂ ಒಟ್ಟೊಟ್ಟಿಗೆ ಓಡಾಡುವ ಸಮಯದಲ್ಲಿಯೇ ಮೀಡಿಯಾಗಳಲ್ಲಿ ಹರಿದಾಡಿತ್ತು, ಆದರೆ ಮದುವೆ ಆಗಿರುವ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಈಗಷ್ಟೇ ಕೆಲ ದಿನಗಳ ಹಿಂದೆ ರಾಖಿ ಸಾವಂತ್ ತಾವು ಮತ್ತು ಆದಿಲ್ ಮದುವೆ ಆಗಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಕೊಟ್ಟಿದ್ದಾರೆ. ಇದರಿಂದ ಇವರಿಬ್ಬರ ಮದುವೆ ಆಗಿರೋದು ಸ್ಪಷ್ಟ ಆಗಿದೆ.

ಆದರೆ ಇವರಿಬ್ಬರ ಮದುವೆ ಮಧ್ಯೆ ಹುಡುಗಿ ಒಬ್ಬಳು ಬಂದಿದ್ದಾಳಂತೆ, ಮರಾಠಿಯ ಬಿಗ್ ಬಾಸ್ ಸೀಸನ್ 4 ಅಲ್ಲಿ ರಾಕಿ ಸಾವಂತ್ ಇದ್ದ ಸಮಯವನ್ನು ಬಳಸಿಕೊಂಡ ಆ ಹುಡುಗಿ ಆದಿಲ್ ಅನ್ನು ಬುಟ್ಟಿಗೆ ಹಾಕಿಕೊಂಡಿದ್ದಾಳಂತೆ. ಇದರಿಂದ ಆಗಿ ತನ್ನ ಮದುವೆ ವಿಷಯವನ್ನು ಗುಟ್ಟಾಗಿ ಇಡುವಂತೆ ಆದಿಲ್ ತಾಕೀತು ಮಾಡಿದ್ದನಂತೆ ಆದಿಲ್ ನ ಎಲ್ಲಾ ಮಾತುಗಳನ್ನು ನಂಬುತ್ತಿದ್ದ ರಾಖಿ ಸಾವಂತ್ ಅವನಿಗಾಗಿ ಮದುವೆಯಾಗಿ 10 ತಿಂಗಳು ಆಗಿದ್ದರು ಮದುವೆ ವಿಷಯವನ್ನು ಹೊರ ಹೇಳಿರಲಿಲ್ಲವಂತೆ.

ಆದರೆ ಮಾಧ್ಯಮ ಹಾಗೂ ತನ್ನ ಅಭಿಮಾನಿಗಳಿಗೆ ಹೆದರಿ ಈಗ ಬಹಿರಂಗ ಪಡಿಸುವುದಾಗಿ ಒಪ್ಪಿಕೊಂಡಿದ್ದಾರೆ. ಜೊತೆಗೆ ಈ ಬಾರಿ ಆದಿಲ್ ಹಾಗೂ ಆ ಹುಡುಗಿಗೆ ಎಚ್ಚರಿಕೆಯನ್ನು ಕೊಟ್ಟಿದ್ದಾಳೆ. ಆದಿಲ್ ನೀನು ನನಗೆ ಕುರಾನ್ ಮೇಲೆ ಪ್ರಮಾಣ ಮಾಡಿ ಹೇಳಿದ್ದೆ, ಅಲ್ಲಾ ಬಿಟ್ಟರೆ ನೀನು ದೇವರು ನನಗೆ ಎಂದು ಹೇಳಿದ್ದೆ. ಆದರೆ ನನಗೆ ದೇವರು ಆಗಲು ಇಷ್ಟವಿಲ್ಲ ನಿನ್ನ ಮಡಿದಿಯಾಗಬೇಕು, ನಿನ್ನ ಮಕ್ಕಳಿಗೆ ತಾಯಿ ಆಗಬೇಕು ಎನ್ನುವುದು ನನ್ನ ಆಸೆ.

ನೀನು ಹೇಳಿರುವ ಮಾತುಗಳನ್ನು ಉಳಿಸಿಕೊಳ್ಳುತ್ತಿಲ್ಲ. ನೀನು ಹೇಳುತ್ತಿದ್ದೀಯ ಮುಸ್ಲಿಂ ಧರ್ಮದಲ್ಲಿ ಎಲ್ಲವೂ ಬಾಗಿಲ ಒಳಗೆ ಆಗಬೇಕು ಎಂದು. ಆದರೆ ನಾನು ಎಲ್ಲವನ್ನು ಮುಚ್ಚಿಟ್ಟುಕೊಂಡು ಫ್ರಿಡ್ಜ್ ಒಳಗೆ ತುಂಡಾಗಿರಲು ಇಷ್ಟ ಪಡುವುದಿಲ್ಲ. ಹಾಗಾಗಿ ಎಲ್ಲರಂತೆ ನನ್ನನ್ನು ಭಾವಿಸಬೇಡ ಮದುವೆ ಆಗಿರುವ ಮಹಿಳೆಯಾಗಿ ನಾನು ನನ್ನ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾನೆ. ಅಲ್ಲದೇ ನನ್ನ ನಿನ್ನ ಮಧ್ಯೆ ಬರುತ್ತಿರುವ ನಿನ್ನ ಅಕ್ರಮ ಸಂಬಂಧದ ಹುಡುಗಿಯನ್ನು ಸುಮ್ಮನೆ ಬಿಡುವುದಿಲ್ಲ.

ಅವಳು ನನಗೆ ಕರೆ ಮಾಡಿ ಧಮ್ಕಿ ಹಾಕುತ್ತಿದ್ದಾಳೆ, ನಿನ್ನನ್ನು ಬಿಡುವಂತೆ ಹೇಳುತ್ತಿದ್ದಾಳೆ ಇದು ಹೇಗೆ ಸಾಧ್ಯ? ಅವಳಿಗೆ ಹೇಳು ನಾನು ಇನ್ನೂ ಅವಳ ಹೆಸರನ್ನು ಬಹಿರಂಗಪಡಿಸಿಲ್ಲ, ಅವಳ ವಿಡಿಯೋಗಳನ್ನು ಮೀಡಿಯಾಗೆ ಕೊಟ್ಟಿಲ್ಲ ಅದಕ್ಕಾಗಿ ಅವಳೇ ನನಗೆ ಚಿರಋಣಿಯಾಗಿ ಇರಬೇಕು ಎಂದು. ಸಮಯ ಬಂದಾಗ ನಾನು ಎಲ್ಲವನ್ನು ಬಹಿರಂಗ ಪಡಿಸುತ್ತೇನೆ.

ಮದುವೆ ಆಗಿರುವ ಪತ್ನಿಗೆ ಪ್ರಾಮಾಣಿಕನಾಗಿರದ ಪತಿಗೆ ಯಾವ ಹುಡುಗಿಯೂ ಕೂಡ ಪ್ರಾಮಾಣಿಕವಾಗಿ ಇರಲಾರಳು ಅದು ನಿನಗೆ ಅರ್ಥ ಆಗಬೇಕು. ಜನ ನನ್ನನ್ನು ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾಳೆ ಅಂದುಕೊಳ್ಳುತ್ತಾರೆ ಖಂಡಿತವಾಗಿಯೂ ಇಲ್ಲ ನಾನು ನನ್ನ ದುಃಖವನ್ನು ಹೇಳಿಕೊಳ್ಳುತ್ತಿದ್ದೇನೆ ಅಷ್ಟೇ ಎಂದು ರಾಖಿ ಸಾವಂತ್ ಹೇಳಿದ್ದಾರೆ. ಆದಿಲ್ ಗಾಗಿ ಹಿಂದೂ ಧರ್ಮವನ್ನು ಬಿಟ್ಟು ಮುಸ್ಲಿಂ ಧರ್ಮಕ್ಕೆ ಹೋಗಿ ಆತನನ್ನು ಮದುವೆಯಾಗಿದ್ದಕ್ಕೆ ಈಗ ತಕ್ಕ ಶಾಸ್ತಿ ಆಗುತ್ತಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.