Home Blog Page 243

ಶೇಕ್ ಇಟ್ ಪುಷ್ಪವತಿ ಹಾಡಿಗೆ ಹೆಜ್ಜೆ ಹಾಕಿದ ನಟಿ ಪ್ರಿಯಾಂಕಾ ಉಪೇಂದ್ರ, ವಯಸ್ಸು 45 ಆಗಿದ್ರು ಎಷ್ಟು ಮಸ್ತ್ ಆಗಿ ಡ್ಯಾನ್ಸ್ ಮಾಡ್ತರಪ್ಪ, ಈ ವಿಡಿಯೋ ನೋಡಿ.

 

ಬೆಂಗಾಲಿ ಹೀರೋ ಜೊತೆ ಪುಷ್ಪವತಿ ರೂಲ್ಸ್ ಮಾಡಿದ ಪ್ರಿಯಾಂಕ ಉಪೇಂದ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾದ ಪುಷ್ಪವತಿ ಹಾಡು ಸೋಶಿಯಲ್ ಮೀಡಿಯಾದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿ ಬಿಟ್ಟಿದೆ. ಸೆಲೆಬ್ರೆಟಿಗಳಿಂದ ಹಿಡಿದು ಸಾಮಾನ್ಯರವರೆಗೆ ರೀಲ್ಸ್ ಮಾಡುವ ಎಲ್ಲರ ಫೇವರೆಟ್ ಸಾಂಗ್ ಆಗಿರುವ ಪುಷ್ಪವತಿ ಹಾಡಿಗೆ ಚಿಕ್ಕ ಮಕ್ಕಳಿಂದ ಶಾಲಾ ಮಕ್ಕಳ ತನಕ ಹಾಗೂ ಕಾಲೇಜು ಯುವಕ ಯುವತಿಯರಿಂದ ಆಫೀಸಿನಲ್ಲಿ ಕೆಲಸ ಮಾಡುವವರ ತನಕ ಎಲ್ಲರೂ ಸಹ ಹಾಡು ಕೇಳಿದ ತಕ್ಷಣವೇ ತಾವಿದ್ದಲ್ಲಿಯೇ ಎರಡು ಸ್ಟೆಪ್ ಹಾಕಿ ಬಿಡುತ್ತಾರೆ.

ಅಷ್ಟೊಂದು ಕ್ಯಾಚಿ ಲಿರಿಕ್ಸ್ ಹಾಗೂ ಮ್ಯೂಸಿಕ್ ಹೊಂದಿರುವ ಪುಷ್ಪವತಿ ಹಾಡನ್ನು ಹರಿಕೃಷ್ಣ ಅವರು ಸಂಗೀತ ನಿರ್ದೇಶಿಸಿ ಐಶ್ವರ್ಯ ರಂಗ ರಾಜನ್ ಜೊತೆ ಸ್ವತಃ ಅವರೇ ಹಾಡಿದ್ದಾರೆ. ಹಾಡಿನ ಜೊತೆಗೆ ಎಲ್ಲರ ಮನಸಿಗೆ ಬಹಳ ಹತ್ತಿರ ಆಗಿರುವುದು ಈ ಹಾಡಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಕಿರುವ ಸ್ಟೆಪ್ಪುಗಳು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನೃತ್ಯದ ಗುಂಪಿನೊಂದಿಗೆ ನಾಯಕಿ ನಿಮಿಕಾ ರತ್ನಾಕರ್ ಅವರ ಜೊತೆಗೂಡಿ ಈ ಹಾಡಿಗೆ ಕುಣಿದಿದ್ದಾರೆ.

ಅದರಲ್ಲೂ ವಿಶೇಷವಾಗಿ ಶೇಕ್ ಇಟ್ ಪುಷ್ಪವತಿ ಎನ್ನುವ ಬೀಟ್ ಗೆ ಹಾಕಿರುವ ಸ್ಟೆಪ್ಗಳು ಎಲ್ಲರ ಹಾರ್ಟಿಗೂ ತಾಗಿ ಈಗ ಎಲ್ಲರೂ ಅದೇ ಸ್ಟೆಪ್ಗಳನ್ನು ಫಾಲೋ ಮಾಡುತ್ತಾ ಅವರು ಸಹ ದರ್ಶನ್ ಅವರಂತೆ ಶೇಕ್ ಇಟ್ ಪುಷ್ಪವತಿ ಎನ್ನುತ್ತಿದ್ದಾರೆ. ಈ ಹಾಡನ್ನು ದರ್ಶನ್ ಅವರ ಕ್ರಾಂತಿ ತಂಡವು ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಿತ್ತು, ಹಾಡು ಬಿಡುಗಡೆ ಆದ ಅಂದಿನಿಂದಲೇ ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

ಈ ಮಧ್ಯೆ ಹಾಡಿನ ಅರ್ಥದ ಬಗ್ಗೆ ಕೆಲವು ಜನ ನೆಗೆಟಿವ್ ಕಾಮೆಂಟ್ ಮಾಡಿ ಇದರ ಕ್ರೇಜಿಗೆ ಅಡ್ಡ ಒಡ್ಡುವ ಗಟ್ಟಿತನ ತೋರಿದರು ಇಂದು ಪಡ್ಡೆ ಹೈಕಳಗೆ ಫೇವರೆಟ್ ಹಾಡಾಗಿ ಎಲ್ಲರ ಬಾಯಿಗಳಲ್ಲೂ ಹಾಡು ಗುನುಗುತ್ತಿರುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಇಂದಿಗೂ ಸಹ ಹಾಡು ರಿಲೀಸ್ ಆಗಿ ಹತ್ತಿರ ತಿಂಗಳಾಗುತ್ತಿದ್ದರು ಎಲ್ಲರ ಬಾಯಿಯಲ್ಲಿಯೂ ಇದೆ ಹಾಡಿನ ಗುಣಗಾನ ಮುಂದುವರೆಯುತ್ತದೆ. ಎಲ್ಲಿ ಹೋದರು ಸಹ ಶೇಕ್ ಇಟ್ ಪುಷ್ಪವತಿ ಎನ್ನುವ ಕೂಗು ಕೇಳಿ ಬರುತ್ತಾ ಇದೆ.

ಇಷ್ಟು ಚೆನ್ನಾಗಿರುವ ಈ ಹಾಡಿಗೆ ಈಗಾಗಲೇ ಸಾಕಷ್ಟು ಮಂದಿ ರೀಲ್ಸ್ ಮಾಡಿ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯರೇ ಸೆಲಬ್ರೇಟ್ ಮಾಡುತ್ತಿರುವ ಈ ಹಾಡನ್ನು ಸೆಲೆಬ್ರಿಟಿಗಳು ಸಹ ಫಾಲೋ ಮಾಡುತ್ತಿದ್ದಾರೆ. ಈಗಾಗಲೇ ಕಿರುತರೆ ಹಾಗೂ ಬೆಳ್ಳಿತೆರೆಯ ಸಾಕಷ್ಟು ಕಲಾವಿದರುಗಳು ಈ ಹಾಡಿಗೆ ದರ್ಶನ್ ಹಾಕಿರುವ ಸ್ಟೆಪ್ಗಳನ್ನು ಅನುಕರಿಸಿ ಸ್ಟೆಪ್ ಹಾಕಿ ರೀಲ್ಸ್ ಮಾಡಿದ್ದಾರೆ ಮೊದಲಿಗೆ ಈ ಸಿನಿಮಾದ ನಾಯಕ ನಟಿಯಾದ ರಚಿತರಾಮ್ ಅವರು ಇದರ ರೀಲ್ಸ್ ಮಾಡಿ ಹಂಚಿಕೊಂಡಿದ್ದರು.

ನಂತರ ಪ್ರೇಮ್ ಪುತ್ರಿ ಅಮೃತ ಪ್ರೇಮ್ ಅವರು ಸಹ ಈ ಹಾಡಿನ ಪೂರ್ತಿ ನೃತ್ಯ ಮಾಡಿ ಆ ವಿಡಿಯೋವನ್ನು ಹಂಚಿಕೊಂಡಿದ್ದರು. ಕಿರುತೆರೆ ಕಲಾವಿದರಾದ ಜೊತೆ ಜೊತೆಯಲಿ ಧಾರಾವಾಹಿಯ ಅನು ಸಿರಿಮನೆ ಮತ್ತು ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸ್ನೇಹ ಮತ್ತು ಜೀ ಕನ್ನಡ ವಾಹಿನಿಯ ನಿರೂಪಕರಾದ ಆನಂದ್ ಅವರು ಪುತ್ರಿ ವಂಶಿಕ ಹಾಗೂ ಪತ್ನಿ ಜೊತೆ ಈ ಹಾಡಿನ ರೀಲ್ಸ್ ಮಾಡಿದ್ದರು.

ಇದೀಗ ಸ್ಟಾರ್ ನಟಿಯರು ಕೂಡ ಹಾಡಿನ ರೀಲ್ಸ್ ಮಾಡಿದ ಶುರು ಮಾಡುತ್ತಿದ್ದು ಈಗಷ್ಟೇ ಪ್ರಿಯಾಂಕ ಉಪೇಂದ್ರ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೆಂಗಾಲಿ ನಟನ ಜೊತೆ ಅವರು ಹೆಜ್ಜೆ ಹಾಕಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಪುಷ್ಪವತಿ ಹಾಡಿಗೆ ಪ್ರಿಯಾಂಕಾ ಉಪೇಂದ್ರ ಅವರು ಕಪ್ಪು ಉಡುಗೆ ತೊಟ್ಟು ಸಿಗ್ನೇಚರ್ ಸ್ಟೆಪ್ ಹಾಕಿ ಕುಣಿದಿದ್ದಾರೆ. ಇವರಿಗೆ ಬೆಂಗಾಲಿ ಹೀರೋ ವಿನಾಯಕ್ ತ್ರಿವೇದಿ ಅವರು ಸಾಥ್ ನೀಡಿದ್ದಾರೆ.

ಅಪ್ಪನಿಗೆ ಖದರ್ ತೋರಿಸಿದ ರಾಕಿ ಭಾಯ್ ಮಗ, ಯಶ್ ಗಿಂತ ಯಥರ್ವನೇ ಸ್ಟ್ರಾಂಗ್ ಅಂತೆ ಅಪ್ಪ ಮಗನ ಈ ಜುಗಲ್ ಬಂದಿಯ ಕ್ಯೂಟ್ ವಿಡಿಯೋ ನೋಡಿ

ರಾಕಿಂಗ್ ಸ್ಟಾರ್ ಯಶ್ ಅವರು ಈಗ ಇಂಟರ್ನ್ಯಾಷನಲ್ ಸ್ಟಾರ್. ಕರ್ನಾಟಕದ ಮೈಸೂರಿನ ಹುಡುಗನೊಬ್ಬ ಇಂದು ರಾಜ್ಯದ ಗಡಿ ದಾಟಿ ದೇಶದ ಪೂರ್ತಿ ಮತ್ತು ವಿದೇಶಗಳಲ್ಲೂ ಗುರುತಿಸಿಕೊಳ್ಳುವಷ್ಟು ಹೆಸರು ಮಾಡಿದ್ದಾರೆ ಎಂದರೆ ಅದು ಕನ್ನಡಿಗರಾದ ನಮ್ಮೆಲ್ಲರಿಗೂ ಅದು ಹೆಮ್ಮೆಯ ವಿಷಯ. ಯಶ್ ಎಂದರೆ ಸಿನಿಮಾ ಎಂದರೆ ಕನಸು ಹಾಗಾಗಿ ಯಶ್ ಅವರನ್ನು ಕಂಡ ಕನಸನ್ನು ನನಸು ಮಾಡಿಕೊಂಡ ಸಾಧಕ ಎಂದು ಕರೆಯಬಹುದು.

ಜೊತೆಗೆ ಕೆರಿಯರ್ ವಿಷಯದಲ್ಲಿ ಮಾತ್ರವಲ್ಲದೆ ವೈಯಕ್ತಿಕ ವಿಷಯದಲ್ಲಿ ಸಹ ತಾನು ಅಂದುಕೊಂಡಂತೆ ಬದುಕನ್ನು ಕಟ್ಟಿಕೊಂಡ ಪುಣ್ಯವಂತ. ತಾನು ಪ್ರೀತಿಸಿದ ಹುಡುಗಿಯನ್ನೇ ವರಿಸಿ ಇಬ್ಬರು ಮುದ್ದಾದ ಮಕ್ಕಳಿಗೆ ತಂದೆಯಾಗಿ ಒಂದು ಸುಂದರ ಸಾಂಸಾರಿಕ ಜೀವನವನ್ನು ನಡೆಸುತ್ತಿರುವ ಯಶ್ ಅವರು ಒಬ್ಬ ಪಕ್ಕ ಫ್ಯಾಮಿಲಿ ಮ್ಯಾನ್. ಈ ವಿಷಯದಲ್ಲಿ ಯಶ್ ಅವರಿಗೆ ಯಶ್ ಅವರೇ ಸಾಟಿ ಎಂದು ಹೇಳಬಹುದು.

ಯಶ್ ಅವರು ತಮ್ಮ ಸಿನಿಮಾ ವಿಚಾರವಾಗಿ ಎಷ್ಟೇ ಬ್ಯುಸಿ ಇದ್ದರೂ ಕೂಡ ಪತ್ನಿ ಹಾಗೂ ಮಕ್ಕಳಿಗಾಗಿ ಸಮಯ ಮೀಸಲು ಇಡುವುದನ್ನು ತಪ್ಪಿಸುವುದಿಲ್ಲ, ಕುಟುಂಬದ ಯಾವುದೇ ಆಚರಣೆ ಇದ್ದರೂ ತಪ್ಪದೆ ಪಾಲ್ಗೊಳ್ಳುತ್ತಾರೆ. ಜೊತೆಗೆ ವಿಶೇಷ ಸಂದರ್ಭಗಳಲ್ಲಿ, ಹಬ್ಬಗಳಲ್ಲಿ ಕುಟುಂಬದ ಜೊತೆಗೆ ಭಾಗಿಯಾಗುತ್ತಾರೆ. ಹಾಗೂ ಆಗಾಗ ಸಮಯ ಸಿಕ್ಕಾಗ ಮಕ್ಕಳ ಜೊತೆ ಆಟ ಆಡುತ್ತ ಸಮಯ ಕಳೆಯುತ್ತಾರೆ. ಜೊತೆಗೆ ಯಶ್ ಅವರು ತಮ್ಮ ಮಕ್ಕಳ ಜೊತೆಗೆ ಕಳೆಯುವ ಸಮಯದ ವಿಡಿಯೋ ಕ್ಲಿಪ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

ಈಗ ನ್ಯಾಷನಲ್ ಸ್ಟಾರ್ ಆಗಿರುವ ಯಶ್ ಅವರು ಆ ವಿಡಿಯೋಗಳು ಬಹುಬೇಗ ವೈರಲ್ ಆಗಿಬಿಡುತ್ತವೆ. ಈಗಲೂ ಅಷ್ಟೇ ಯಶ್ ಅವರು ತಮ್ಮ ಮುದ್ದು ಮಗ ಯಥರ್ವ್ ಜೊತೆ ಆಟ ಆಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ಯಶ್ ಅವರ ಮಗ ಅಪ್ಪನಿಗೆ ತನ್ನ ಸ್ಟ್ಯಾಮಿನ ತೋರಿಸಿ ನಿನಗಿಂತ ನಾನೇ ಸ್ಟ್ರಾಂಗ್ ಎಂದು ಹೇಳುತ್ತಾರೆ ಆಗ ಯಶ್ ಅವರು ಸಹ ಮಗನಿಗೆ ಇಲ್ಲ ನಾನೇ ಸ್ಟ್ರಾಂಗ್ ಎಂದು ತಮ್ಮ ಬೈಸಪ್ ತೋರಿಸಿ ವಾದ ಮಾಡುತ್ತಿರುತ್ತಾರೆ.

ಮಗ ಇಲ್ಲ ಅದು ಸಾಫ್ಟ್ ಇದೆ ನನ್ನ ಬೈಸೆಪ್ಟ್ ಹಾರ್ಡ್ ಇದೆ ಎಂದು ವಾದ ಮಾಡುತ್ತಿರುತ್ತಾರೆ. ವಿಡಿಯೋ ಬಹಳ ಮುದ್ದು ಮುದ್ದಾಗಿದೆ ಇದೆಲ್ಲವೂ ಸರಿ ,ಆದರೆ ಆ ವಿಡಿಯೋದಲ್ಲಿ ಯಶ್ ಮಾತ್ರ ಪೂರ್ತಿ ಮಾತನಾಡಿದ್ದಾರೆ ಆದರೆ ಮಗನನ್ನು ಅದೇ ರೀತಿ ಕನ್ನಡದಲ್ಲಿ ಮಾತನಾಡಿಸುವ ಪ್ರಯತ್ನ ಮಾಡಿದರು ಸಹ ಪ್ರತಿಯೊಂದು ಬಾರಿ ಯಥರ್ವ್ ಇಂಗ್ಲಿಷ್ ಅಲ್ಲಿ ಉತ್ತರ ಹೇಳುತ್ತಿರುತ್ತಾರೆ. ಈ ವಿಡಿಯೋ ಎಷ್ಟೇ ಮುದ್ದಾಗಿದ್ದರೂ ಸಹ ಕನ್ನಡಿಗರು ಮಗನು ಕನ್ನಡ ಮಾತನಾಡಿರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಒಮ್ಮೆ ಸಹ ಯಶ್ ಮಗನ ಜೊತೆ ಮಾತನಾಡುವಾಗ ಇಂಗ್ಲಿಷ್ನಲ್ಲಿಯೇ ಮಾತನಾಡಿದ್ದರು ಆ ಸಮಯದಲ್ಲಿಯೂ ಸಹ ಜನ ಇದೇ ರೀತಿ ಆಕ್ಷೇಪ ವ್ಯಕ್ತಪಡಿಸಿ ತಮ್ಮ ಅನಿಸಿಕೆ ತಿಳಿಸಿದ್ದರು. ಈಗ ಮತ್ತೊಮ್ಮೆ ಅದು ರಿಪೀಟ್ ಆಗಿದೆ ಬೆಳೆಯುತನಕ ಮಾತ್ರ ಕನ್ನಡ ಬೇಕು ನ್ಯಾಷನಲ್ ಸ್ಟಾರ್ ಆದ ಮೇಲೆ ಕನ್ನಡ ಮರೆತು ಹೋಯಿತಾ? ಮಕ್ಕಳಿಗೆ ಯಾಕೆ ಕನ್ನಡ ಕಲಿಸುತ್ತಿಲ್ಲ ಮಾತೃಭಾಷೆಯಲ್ಲಿ ಕಡೆಗಣಿಸಿ ಬಿಟ್ಟಿರಾ? ಎಂದು ಕಮೆಂಟ್ ಮಾಡಿ ಯಶ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಕೈಮುಗಿದು ಬೇಡ್ಕೋತಿನಿ ಪ್ಲೀಸ್ ನನ್ನ ಸಿನಿಮಾ ನೋಡಿ ಅಂತ ಕಣ್ಣೀರು ಹಾಕ್ತಿರೋ ಪ್ರಥಮ್. ಸೋಷಿಯಲ್ ಮಿಡಿಯಾದಲ್ಲಿ ಪ್ರಥಮ್ ವಿಡಿಯೋ ವೈರಲ್ ಇದನ್ನು ನೋಡಿದ ನೆಟ್ಟಿಗರು ಹೇಳಿದ್ದೇನು ಗೊತ್ತ.?

 

ನನ್ನ ಸಿನಿಮಾ ನೋಡಿ ಎಂದು ಕಣ್ಣೀರಿಟ್ಟು ಬೇಡಿಕೊಂಡ ಒಳ್ಳೆ ಹುಡುಗ ಪ್ರಥಮ್ ಕರ್ನಾಟಕದಲ್ಲಿ ಒಳ್ಳೆ ಹುಡುಗ (Olle huduga) ಎಂದು ಫೇಮಸ್ ಆಗಿರುವ ನಟ ಪ್ರಥಮ್ (Pratham) ಅವರು ದೇವರಂತಾ ಮನುಷ್ಯ (Devaranthara Manushya) ಆದ ಬಳಿಕ ಬಹಳ ಸಮಯ ತೆಗೆದುಕೊಂಡು ಮತ್ತೊಂದು ಸಿನಿಮಾ ಮಾಡಿದ್ದಾರೆ. ನಟಭಯಂಕರ (Nata bhayankara) ಎನ್ನುವ ಈ ಸಿನಿಮಾಗಾಗಿ ತೆರೆ ಹಿಂದೆ ಸಾಕಷ್ಟು ದಿನಗಳ ಪರಿಶ್ರಮ ಹಾಕಿದ್ದಾರೆ.

ನಟ ಭಯಂಕರ ಸಿನಿಮವು ಫೆಬ್ರವರಿ ಮೂರನೇ ತಾರೀಕಿನಂದು ರಿಲೀಸ್ ಕೂಡ ಆಗಿತ್ತು. ಈ ಸಿನಿಮಾ ಬಗ್ಗೆ ರಿಲೀಸ್ ಆಗುವ ತನಕವೂ ಪ್ರಥಮ್ ಅವರಿಗೆ ಒಳ್ಳೆ ಕಾನ್ಫಿಡೆಂಟ್ ಇತ್ತು, ಈ ಸಿನಿಮಾ ಈ ಸಬ್ಜೆಕ್ಟ್ ಗೆದ್ದೇ ಗೆಲ್ಲುತ್ತದೆ ಎನ್ನುವ ಆತ್ಮವಿಶ್ವಾಸ ಇತ್ತು. ಆದರೆ ಈಗ ಅವರ ಲೆಕ್ಕಾಚಾರ ಎಲ್ಲಾ ಬಿದ್ದು ಹೋಗಿದೆ. ಸಿನಿಮಾ ನೋಡಲು ಥಿಯೇಟರ್ ಗೆ ಬರುತ್ತಿರುವ ಸಂಖ್ಯೆ ಬಹಳ ಕಡಿಮೆ ಇದೆ ಈ ಬಗ್ಗೆ ನೊಂದುಕೊಂಡು ಕಣ್ಣೀರಿಟ್ಟು ಸ್ವತಃ ಪ್ರಥಮ್ ಅವರೇ ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದಾರೆ.

ತಮ್ಮ ಸಿನಿಮಾ ನೋಡುವಂತೆ ಕಳಕಳಿಯಿಂದ ಕನ್ನಡಿಗರ ಬಳಿ ಬೇಡಿಕೊಳ್ಳುತ್ತಿದ್ದಾರೆ ಈಗಷ್ಟೇ ವಿಡಿಯೋ ಒಂದನ್ನು ಮಾಡಿ ಹರಿ ಬಿಟ್ಟಿರುವ ಪ್ರಥಮ್ ಅವರು ಆ ವಿಡಿಯೋದಲ್ಲಿ ಈ ರೀತಿ ಮಾತನಾಡಿದ್ದಾರೆ. ನಾನು ಬಹಳ ಕಷ್ಟಪಟ್ಟು ಬೆಳೆದಿದ್ದೇನೆ ಎಲ್ಲೂ ಸಹ ಯಾರ ಬಳಿಯು ಕೈ ಚಾಚಿ, ಕೇಳಿ ನನಗೆ ಗೊತ್ತಿಲ್ಲ, ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೇಳುತ್ತಿದ್ದೆ ಆಗ ನನ್ನ ಕೈ ಹಿಡಿದಿದ್ದೀರಾ ಅದನ್ನು ಬಿಟ್ಟು ಇಂದೇ ನಾನು ಕೇಳುತ್ತಿರುವುದು.

ಈ ಒಂದು ಸಿನಿಮಾ ಗೆದ್ದರೆ ನನಗೆ ಸಾಕಷ್ಟು ಚೈತನ್ಯ ಬರುತ್ತದೆ. ನಾನು ಮುಂದೆ ಹಲವು ಸಿನಿಮಾಗಳ ಪ್ಲಾನ್ ಹಾಕಿಕೊಂಡಿದ್ದೇನೆ ಒಂದು ವೇಳೆ ನೀವೆಲ್ಲಾ ಈ ಸಿನಿಮಾ ನೋಡಿ ಗೆಲ್ಲಿಸದೇ ಹೋದರೆ ನನ್ನ ಎಲ್ಲಾ ಕನಸುಗಳು ಚೂರಾಗುತ್ತದೆ. ನನಗೆ ಮತ್ತೆ ಏಳಲು ಆಗದೆ ಇರುವ ರೀತಿ ಹೊಡೆತ ಬಿದ್ದು ಬಿಡುತ್ತದೆ ಹಾಗಾಗಿ ದಯಮಾಡಿ ಎಲ್ಲರೂ ಒಂದೇ ಒಂದು ಬಾರಿ ನಿಮ್ಮ ಹತ್ತಿರದಲ್ಲಿರುವ ಸಿನಿಮಾ ಮಂದಿರಗಳಿಗೆ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಹೋಗಿ ಸಿನಿಮಾ ನೋಡಿ.

ನನ್ನ ಸಿನಿಮಾ ಬಗ್ಗೆ ಯಾರೋ ಒಬ್ಬ ಎಲ್ಲೋ ಕೂತ್ಕೊಂಡು ಅವರಿಗಿಷ್ಟ ಬಂದ ಏಜೆನ್ಸಿ ಅವರು ವಿಮರ್ಶೆ ಬರೆದರೆ ಖಂಡಿತ ನನಗೆ ನೋವಾಗುತ್ತದೆ. ನೀವು ನನಗೆ ರೈಟಿಂಗ್ ಕೊಡಬೇಕು, ನೀವು ನನ್ನ ಸಿನಿಮಾ ಬಗ್ಗೆ ರಿವ್ಯೂ ಕೊಡಬೇಕು ಅದು ಮುಖ್ಯ ಅದನ್ನು ನೀವು ಮಾಡದೆ ಹೋದರೆ ಸಿನಿಮಾ ರಂಗ ಈಗ ಹಿಂದಿನಂತೆ ಇಲ್ಲ ಮತ್ಯಾರೋ ಕೂತ್ಕೊಂಡು ಅದರ ಬಗ್ಗೆ ಬರೆದು ಬಿಡುತ್ತಾರೆ. ಆ ರೀತಿ ಆಗುವುದು ನನಗೆ ಇಷ್ಟ ಇಲ್ಲ ನಾನು ಪ್ರಾಮಾಣಿಕವಾಗಿ ಇದುವರೆಗೆ ಈ ಸಮಾಜಕ್ಕೆ ಬದುಕಿದ್ದೇನೆ ಎನ್ನುವ ನಂಬಿಕೆ ನಿಮ್ಮೆಲ್ಲರಿಗೂ ಇದ್ದರೆ ದಯಮಾಡಿ ಒಂದೇ ಒಂದು ಬಾರಿ ನನ್ನ ಸಿನಿಮಾವನ್ನು ಥಿಯೇಟರ್ ಗೆ ಹೋಗಿ ನೋಡಿ.

ನಿಮಗೆ ನಂಬಿಕೆ ಇಲ್ಲ ಎಂದರೆ ಒಂದು ಬಾರಿ ಟ್ರೈಲರ್ ನೋಡಿ ಅಥವಾ ಸಿನಿಮಾ ವನ್ನು ನಿಜವಾಗಿ ನೋಡಿರುವವರ ಬಳಿ ರಿವ್ಯೂ ಕೇಳಿ ಆನಂತರ ಥಿಯೇಟರ್ ಗೆ ಹೋಗಿ. ಎಲ್ಲೂ ನಿಮ್ಮ ಹಣಕ್ಕೆ ಮೋಸ ಆಗುವುದಿಲ್ಲ ಸಿನಿಮಾ ಇಲ್ಲಿ ತನಕ ತರೋತನಕ ಎಷ್ಟು ಕಷ್ಟ ಪಟ್ಟಿದ್ದೇನೆ ಎಂದು ನನಗೆ ಗೊತ್ತು. ಇಲ್ಲಿ ತನಕ ಮಾತ್ರ ಅದು ಸಿನಿಮಾ, ಈಗ ಅದೆಲ್ಲವನ್ನು ನಿಮ್ಮ ಮುಂದೆ ಇಡು ತ್ತಿದ್ದೇನೆ ಇದು ಈಗ ನಿಮ್ಮ ಸಿನಿಮಾ. ದಯವಿಟ್ಟು ನನಗೆ ಒಂದೇ ಒಂದು ಅವಕಾಶ ಕೊಟ್ಟು ಈ ಸಿನಿಮಾ ನೋಡಿ ನನ್ನನ್ನು ಉಳಿಸಿ ಎಂದು ಕೇಳಿಕೊಂಡಿದ್ದಾರೆ. ನನಗೆ ಸೋಲುತ್ತೇನೆ ಎನ್ನುವ ಭಯ ಇಲ್ಲ ಆದರೆ ಬಲವಂತವಾಗಿ ನನ್ನನ್ನು ಸೋಲಿಸಿ ಬಿಡುತ್ತಾರಲ್ಲ ಎನ್ನುವ ಬೇಸರ ಇದೆ ಹಾಗಾಗಿ ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಪ್ರಥಮ್ ಕೇಳಿಕೊಂಡಿದ್ದಾರೆ.

ಆಕ್ಸಿ-ಡೆಂಟ್ ಆಗೋಕೆ ಕುಡಿದು ಗಾಡಿ ಓಡಿಸಿದ್ದೇ ಕಾರಣ ನಾ.? ನಮ್ಮ ಕಮ್ಯುನಿಟಿಯಲ್ಲಿ ಬಾಟಲ್ ಓಪನ್ ಮಾಡದಿದ್ದರೆ ದೊಡ್ಡವರು ಬೈತಾರೆ ಎಂದಿದ್ದಕ್ಕೆ ರಿಷಿಕಾ.!

0

 

 

ಆಕ್ಸಿ-ಡೆಂಟ್ ಆದಾಗ ನೀವು ಕುಡಿದಿದ್ರಾ.? ನಮ್ ಕಮ್ಯೂನಿಟಿಲಿ ಬಾಟಲ್ ಓಪನ್ ಮಾಡ್ಲಿಲ್ಲ ಅಂದ್ರೆ ದೊಡ್ಡೊರು ಬೈತಾರೆ. ನಟಿ ರಿಷಿಕಾ ಕೊಟ್ಟ ಸಂಚಲನಾತ್ಮಕ ಹೇಳಿಕೆ. ಕನ್ನಡದ ಉದಯೋನ್ಮುಕ ನಟಿ ರಿಷಿಕ ಸಿಂಗ್ (Rishika Singh) ಅವರು ವರ್ಷದ ಬಳಿಕ ತಮಗಾದ ಅಪಘಾತದಿಂದ (Accident) ಸುಧಾರಿಸಿಕೊಂಡಿದ್ದಾರೆ. ಇನ್ನೇನು ಆ ಅಪಘಾತದಿಂದ ನಟಿಯ ಬದುಕೇ ಮುಗಿದು ಹೋಯಿತು ಎಂದೇ ಎಲ್ಲರೂ ಭಾವಿಸಿದ್ದರು.

ಆದರೆ ಇದೀಗ ಫೀನಿಕ್ಸ್ ಪಕ್ಷಿಯಂತೆ ಎದ್ದಿರುವ ರಿಷಿಕ ಸಿಂಗ್ ರವರು ನೆನ್ನೆ ಅಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಇಷ್ಟು ದಿನಗಳ ತನ್ನ ಚಿಕಿತ್ಸೆ ಹಾಗೂ ತನಗೆ ಫ್ಯಾಮಿಲಿ ಯಾವ ರೀತಿ ಸಪೋರ್ಟ್ ಇದೆ ಎಷ್ಟರಮಟ್ಟಿಗೆ ಮರಳಿ ಎದ್ದಿ ಬರುತ್ತಿದ್ದೇವೆ ಎನ್ನುವುದೆಲ್ಲಾ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಇಂದು ನ್ಯೂಸ್ ಚಾನೆಲ್ ಒಂದು ಅವರ ಇಂಟರ್ವ್ಯೂ ಸಹ ಮಾಡಿದ್ದು ಆ ದಿನದ ಘಟನೆಗೆ ಕಾರಣ ಏನು ಎಂದು ಕೇಳಿದೆ. ಅದಕ್ಕೆ ರಿಷಿಕಾ ಸಿಂಗ್ ಅವರು ಕೊಟ್ಟ ಉತ್ತರ ಹೀಗಿತ್ತು.

ಆಗಷ್ಟೇ ಲಾಕ್ಡೌನ್ ಓಪನ್ ಆಗಿತ್ತು, ಆ ತನಕ ನಾವೆಲ್ಲರೂ ಯಾವುದೇ ಪಾರ್ಟಿ ಅಥವಾ ಬರ್ಥ್ ಡೇ ಮಾಡಬೇಕು ಎಂದರು ನಮ್ಮ ಮನೆ ಮೇಲೆ ಅಥವಾ ನಮ್ಮ ಅತ್ತೆ ಮನೆ ಮೇಲೆ ಮಾಡುತ್ತಿದ್ದೆವು. ಹಾಗಾಗಿ ಎಲ್ಲರಿಗೂ ಇದು ಬೋರ್ ಆಗಿ ಹೋಗಿತ್ತು ಚೇಂಜ್ ಬೇಕು ಎಂದು ಬೇರೆ ಕಡೆ ನಮ್ಮ ಫ್ಯಾಮಿಲಿಯವರ ಒಬ್ಬರ ಬರ್ಡೇ ಅರೇಂಜ್ ಮಾಡಿದೆವು ಇಡೀ ಕುಟುಂಬ ಹಾಗೂ ಹೆಚ್ಚಿನ ಫ್ರೆಂಡ್ಸ್ ಎಲ್ಲಾ ಸೇರಿದ್ದೆವು. ದೊಡ್ಡವರೆಲ್ಲಾ ಮೂರು ಗಂಟೆಗೆ ನೀವು ಇಲ್ಲೇ ಇರಿ ಎಂದು ಮನೆಗೆ ಬಂದು ಬಿಟ್ಟರು.

ಆದರೆ ನನಗೆ 5:30 ಅಷ್ಟರಲ್ಲಿ ಒಂದು ಕರೆ ಬಂದಿತ್ತು ಹಾಗಾಗಿ ನಾನು ನನ್ನ ಫ್ರೆಂಡ್ ಅನ್ನು ಕರೆದುಕೊಂಡು ಮನೆಗೆ ಬಿಡು ಎಂದು ಫೋರ್ಸ್ ಮಾಡಿ ಎಬ್ಬಿಸಿದೆ. ಅಂದು ಗಾಡಿ ಓಡಿಸುತ್ತಿದ್ದು ನಾನು ಅಲ್ಲ ನನ್ನ ಫ್ರೆಂಡ್ ಆದರೆ ಆತನಿಗೆ ಅದು ಆಟೋಮೆಟಿಕ್ ಕಾರು ಎಂದು ಗೊತ್ತಾಗಲಿಲ್ಲ ಮ್ಯಾನುವೆಲ್ ಕಾರು ರೈಡ್ ಮಾಡುವ ರೀತಿ ಮಾಡಿದ್ದಾನೆ. ಹಾಗಾಗಿ ಆತನ ಎಡವಟ್ಟಿನಿಂದ ಈ ರೀತಿ ಆಗಿದೆ ಸಂಪೂರ್ಣವಾಗಿ ನಾನು ಅದಕ್ಕೆ ಅವನನ್ನೇ ಹೊಣೆ ಮಾಡುವುದಿಲ್ಲ.

ಜೊತೆಗೆ ನಾನು ಮನೆಗೆ ಹೋಗುವಷ್ಟರಲ್ಲಿ ಸ್ವಲ್ಪ ನಿದ್ದೆ ಮಾಡೋಣ ಎಂದು ಸೀಟ್ ಮೇಲೆ ಮಲಗಿದ್ದ ಕಾರಣ ಸೀಟ್ ಬೆಲ್ಟ್ ಧರಿಸಲಿಲ್ಲ ಅಷ್ಟು ಘಟನೆ ಆಗುವವರೆಗೂ ನಿದ್ರೆಯಲ್ಲಿದ್ದೆ. ಹಾಗಾಗಿ ಹೆಚ್ಚಿನ ನೋವು ಗೊತ್ತಾಗಲಿಲ್ಲ ಮತ್ತೆ ನನಗೆ ಜ್ಞಾನ ಬರುವಷ್ಟರಲ್ಲಿ ಆಸ್ಪತ್ರೆಯಲ್ಲಿದ್ದೆ ಆದರೆ ಹೆಚ್ಚಿನ ಜನ ನಾನೇ ಡ್ರಿಂಕ್ ಮಾಡಿ ನಾನೇ ಡ್ರೈವ್ ಮಾಡಿಕೊಂಡು ಬಂದು ಆ.ಕ್ಸಿ.ಡೆಂ.ಟ್ ಮಾಡಿಕೊಂಡಿದ್ದೇನೆ ಎಂದುಕೊಂಡಿದ್ದಾರೆ.

ನಾನು ಎಷ್ಟೋ ಬಾರಿ ಡ್ರಿಂಕ್ ಮಾಡಿ ಗಾಡಿ ಓಡಿಸಲೇಬೇಕಾದ ಪರಿಸ್ಥಿತಿ ಎದುರಿಸಿದ್ದೇನೆ ಆದರೆ ಎಂದು ಕೂಡ ಒಂದು ಸಣ್ಣ ಸ್ಕ್ರಾಚ್ ಕೂಡ ಮಾಡಿಕೊಂಡಿಲ್ಲ. ಜೊತೆಗೆ ಕೊರೋನ ಸಮಯದಲ್ಲಿ ನಾನು ನಮ್ಮ ಅಪ್ಪ ಎಲ್ಲರೂ ಡ್ರಿಂಕ್ ಬಿಡುವ ನಿರ್ಧಾರ ಮಾಡಿದ್ದೆವು ಹಾಗಾಗಿ, ಆ ಸಮಯದಲ್ಲಿ ನಾನು ಡ್ರಿಂಕ್ ಮುಟ್ಟುತ್ತಲೇ ಇರಲಿಲ್ಲ ಜೊತೆಗೆ ನಮ್ಮ ಕಮ್ಯುನಿಟಿಯಲ್ಲಿ ಯಾವುದೇ ಕಾರ್ಯಕ್ರಮ ಆದರೂ ಬಾಟಲ್ ಓಪನ್ ಮಾಡದೇ ಇದ್ದರೆ ದೊಡ್ಡವರೆ ಬೈಯುತ್ತಾರೆ.

ನಮ್ಮ ಕಮ್ಯುನಿಟಿ, ಕೂರ್ಗಿಸ್, ಮಲಿಯಾಳಿ, ಪಂಜಾಬಿ ಇವರೆಲ್ಲ ಬಾಟಲಿ ಓಪನ್ ಮಾಡದೆ ಫಂಕ್ಷನ್ ಮುಗಿಸೋದೇ ಇಲ್ಲ ಕೆಲವು ಕಡೆ ದೇವರಿಗೆ ನೈವೇದ್ಯವಾಗಿಯೂ ಇಡುತ್ತಾರೆ. ಜನರ ಮೆಂಟಾಲಿಟಿ ಬದಲಾಗಬೇಕು ಅಷ್ಟೇ. ಕುಡಿಯುವುದೇ ದೊಡ್ಡ ತಪ್ಪು ಎಂದುಕೊಳ್ಳುತ್ತಾರೆ ಆದರೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎನ್ನುವ ಅರಿವು ಇರಬೇಕು. ಆದರೆ ನಾವು ಎಂದು ಕೂಡ ಕುಡಿದು ಗಾಡಿ ಓಡಿಸುವುದಿಲ್ಲ ಆ ದಿನದ ನನ್ನ ಕೆಟ್ಟ ಸಮಯ ಇದಕ್ಕೆಲ್ಲ ಕಾರಣವಾಯಿತು ಎಂದು ಹೇಳಿಕೊಂಡಿದ್ದಾರೆ.

ಕ್ರಾಂತಿಲಿ ಅಪ್ಪು ಪೋಟೋ ಹಾಕಿ ಟ್ರಿಬ್ಯೂಟ್ ಕೊಡ್ದೆ ಇದ್ರೆ ಏನಂತೆ. ಅಪ್ಪು ಹುಟ್ದಬ್ಬಕ್ಕೆ ಕಬ್ಜಾ ಸಿನಿಮಾನೇ ರಿಲೀಸ್ ಮಾಡ್ತರಂತೆ ಕಿಚ್ಚ&ಉಪ್ಪಿ.

 

ಕಳೆದ ಒಂದುವರೆ ವರ್ಷದಿಂದ ಕನ್ನಡ ಸಿನಿಮಾ ಇಂಡಸ್ಟ್ರಿ ಒಂದು ಪದ್ಧತಿಯನ್ನು ಪಾಲಿಸಿಕೊಂಡು ಬರುತ್ತಿದೆ. ಅದೇನೆಂದರೆ ಸಿನಿಮಾ ಕುರಿತಾದ ಯಾವುದೇ ಕಾರ್ಯಕ್ರಮ ಆದರೂ ಕೂಡ ಮೊದಲು ಅಲ್ಲಿ ಪುನೀತ್ ರಾಜಕುಮಾರ್ (Puneeth Raj kumar) ಅವರ ಫೋಟೋ ಇಟ್ಟು ಶ್ರದ್ಧಾಂಜಲಿ ಸಲ್ಲಿಸಿದ ನಂತರ ಕಾರ್ಯಕ್ರಮ ಶುರು ಮಾಡುವುದು ಮತ್ತು ಯಾವುದೇ ಸಿನಿಮಾ ರಿಲೀಸ್ ಆದರೂ ಕೂಡ ಮೊದಲಿಗೆ ಅಲ್ಲಿ ಅಪ್ಪು ಫೋಟೋ ಹಾಕಿ ಅವರಿಗೆ ಟ್ರಿಬ್ಯೂಟ್ (tribute) ಸಲ್ಲಿಸುವುದು.

ಸಣ್ಣ ಸಿನಿಮಾ ಅಥವಾ ಪ್ಯಾನ್ ಇಂಡಿಯಾ ಸಿನಿಮಾ ಸ್ಟಾರ್ ಸಿನಿಮಾ ಅಥವಾ ಹೊಸಬರ ಸಿನಿಮಾ ಇತ್ಯಾದಿ ಯಾವುದೇ ವ್ಯತ್ಯಾಸ ಇಲ್ಲದೆ ಎಲ್ಲಾ ಸಿನಿಮಾ ಆರಂಭದಲ್ಲಿ ಹಾಗೂ ಎಲ್ಲಾ ಸಿನಿಮಾ ಕಾರ್ಯಕ್ರಮಗಳಲ್ಲೂ ಇದೇ ರೀತಿ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ಕ್ರಾಂತಿ (Kranthi) ಸಿನಿಮಾದಲ್ಲಿ ಅಪ್ಪು ಫೋಟೋ ಹಾಕಿಲ್ಲ ಹಾಗಾಗಿ ಮೊದಲೇ ದಚ್ಚು-ಅಪ್ಪು ಫ್ಯಾನ್ ನಡೆಯುತ್ತಿದ್ದ ಫ್ಥಾನ್ಸ್ ವಾ’ರ್ ಗೆ ಇದು ಇನ್ನಷ್ಟು ತುಪ್ಪ ಸುರಿದ ರೀತಿ ಆಯಿತು.

ಸಿನಿಮಾ ರಿಲೀಸ್ ಆಗಿ ಮೊದಲ ಶೋ ಲೇ ಇದು ತಿಳಿದು, ಸೋಶಿಯಲ್ ಮೀಡಿಯಾದಲ್ಲಿ ಬಾರಿ ಚರ್ಚೆ ಆಗಿ ಈ ಕಾಂಟ್ರವರ್ಸಿ ಇಬ್ಬರ ಅಭಿಮಾನಿಗಳ ನಡುವಿನ ಕೆಸರೆರಚಾಟವನ್ನು ಜಾಸ್ತಿ ಮಾಡಿತು. ಅಪ್ಪು ಅಭಿಮಾನಿಗಳು ನಮ್ಮ ಬಾಸ್ ಗೆ ನಮನ ಸಲ್ಲಿಸಿಲ್ಲ ಹಾಗಾಗಿ ನಾವು ಸಿನಿಮಾ ನೋಡುವುದೇ ಇಲ್ಲ ಎನ್ನುವ ಮಟ್ಟಕ್ಕೂ ಕೂಡ ಹೋಗಿದ್ದರು, ಇದೊಂದು ದೊಡ್ಡ ಸುದ್ದಿ ಆಗಿತ್ತು. ಆದರೆ ಈಗ ಅಪ್ಪು ಅಭಿಮಾನಿಗಳಿಗೆ ಸಂಸದ ಸುದ್ದಿಗೆ ಹಾಗೂ ಸಮಾಧಾನದ ಸುದ್ದಿ ಸಿಗುತ್ತಿದೆ. ಅದೇನೆಂದರೆ ಒಂದು ಸಿನಿಮಾದಲ್ಲಿ ಅಪ್ಪು ಫೋಟೋ ಹಾಕಿ ಟ್ರಿಬ್ಯೂಟ್ ಸಲ್ಲಿಸದಿದ್ದರೆ ಏನಾಯಿತು ಒಂದು ಸಿನಿಮಾವನ್ನೇ ಅಪ್ಪುಗಾಗಿ ಅರ್ಪಣೆ ಮಾಡಲಾಗುತ್ತಿದೆ.

ಅದು ಯಾವುದೆಂದರೆ ರಿಯಲ್ ಸ್ಟಾರ್ ಉಪೇಂದ್ರ (Real star Upendra) ಹಾಗೂ ಕಿಚ್ಚ ಸುದೀಪ್ (Kichcha Sudeep) ಅವರ ಅಭಿನಯದ ಕಬ್ಜಾ (Kabza) ಸಿನಿಮಾ. ಕಬ್ಜಾ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು ಆದರೆ ನಿರ್ದೇಶಕರಾದ ಆರ್ ಚಂದ್ರು (director R.Chandru) ಅವರು ಇದನ್ನು ಅಪ್ಪು ಅವರಿಗೆ ಅರ್ಪಣೆ ಮಾಡುವ ಕಾರಣ ಅಪ್ಪು ಹುಟ್ಟು ಹಬ್ಬದ ದಿನಕ್ಕಾಗಿ ಕಾಯುತ್ತಿದ್ದಾರೆ. ಈ ಸಿನಿಮಾದ ಕೆಲ ಅಂಶಗಳನ್ನು ಅಪ್ಪು ಅವರಿಗೆ ಹೇಳಲಾಗಿತ್ತಂತೆ ಆಗ ಎಲ್ಲರಿಗಿಂತ ಅಪ್ಪು ಅವರೇ ಸಿನಿಮಾಗಾಗಿ ಬಹಳ ಸಪೋರ್ಟ್ ಮಾಡಿ ಮಾತನಾಡಿದರಂತೆ ಹಾಗೂ ಕೆಲವೊಂದು ಸಲಹೆಗಳನ್ನು ಕೊಟ್ಟಿದ್ದರಂತೆ.

ಹಾಗೇ ಅಂತಹ ಪುಣ್ಯಾತ್ಮನ ಹುಟ್ಟು ಹಬ್ಬ ದಿನ ಸಿನಿಮಾ ರಿಲೀಸ್ ಮಾಡಬೇಕು ಹಾಗಾಗಿ ಕಾಯುತಿದ್ದೇನೆ ಅಂದೇ ರಿಲೀಸ್ ಮಾಡುತ್ತೇನೆ ಎಂದು ಆರ್ ಚಂದ್ರು ಅವರು ಇತ್ತೀಚಿಗೆ ಸುದ್ದಿಗೋಷ್ಠಿ ನಡೆಸಿ ವಿಷಯ ತಿಳಿಸಿದ್ದಾರೆ. ಅಪ್ಪು ಅಭಿಮಾನಿಗಳು ಆ ದಿನದ ಅಪ್ಪು ಜಾತ್ರೆ ಜೊತೆ ಸಿನಿಮಾ ನೋಡುವ ನಿರ್ಧಾರ ಮಾಡಿದ್ದಾರೆ. ಕ್ರಾಂತಿ ಸಿನಿಮಾ ನಂತರ ಕನ್ನಡದ ಮತ್ತೊಂದು ಬಹು ನಿರೀಕ್ಷಿತ ಚಿತ್ರ ಕಬ್ಜಾ. ಸಿನಿಮಾಗಾಗಿ ಹಲವು ವರ್ಷಗಳಿಂದ ತೆರೆ ಹಿಂದೆ ತಯಾರಿ ನಡೆಯುತ್ತಿದೆ. ಅಂತಿಮವಾಗಿ ಈ ವರ್ಷ ಪ್ರೇಕ್ಷಕ ಪ್ರಭುಗಳಿಗೆ ತೆರೆ ಮೇಲೆ ಪ್ರದರ್ಶನ ಸಿಗಲಿದೆ.

ಈಗಾಗಲೇ ಮುಕುಂದ ಮುರಾರಿ ಸಿನಿಮಾದಲ್ಲಿ ಕಮಾಲ್ ಮಾಡಿರುವ ಉಪ್ಪಿ-ಕಿಚ್ಚ ಜೋಡಿ ಮತ್ತೊಮ್ಮೆ ಕಬ್ಜಾ ಸಿನಿಮಾದಿಂದ ಒಂದಾಗುತ್ತಿದ್ದಾರೆ. ಸಿನಿಮಾ ಕಥೆ ಡಿಫ್ರೆಂಟ್ ಆಗಿದೆ ಎನ್ನುವ ಕಾರಣ, ಈಗಾಗಲೇ ರಿಲೀಸ್ ಮಾಡಿರುವ ಪೋಸ್ಟರ್ಗಳಲ್ಲಿ ಹುಟ್ಟು ಹಾಕಿರುವ ಕುತೂಹಲದ ಕಾರಣದಿಂದಾಗಿ ಎಲ್ಲರೂ ಮಾರ್ಚ್ 17 ಯಾವಾಗ ಬರುತ್ತದೆ ಎಂದು ಕ್ಷಣಗಣನೆ ಮಾಡುತ್ತಿದ್ದಾರೆ. ಕಬ್ಜಾ ತಂಡಕ್ಕೆ ಶುಭವಾಗಲಿ ಎಂದು ಹರಸೋಣ. ಉಪ್ಪಿ ಅವರು ತೆಗೆದುಕೊಂಡು ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಸುವರ್ಣ ನ್ಯೂಸ್ ಚಾನೆಲ್ ಗೆ ಮುತ್ತಿಗೆ ಹಾಕಿದ ದರ್ಶನ್ ಫ್ಯಾನ್ಸ್, ಅಭಿಮಾನಿಗಳ ಅಬ್ಬರಕ್ಕೆ ನಡುಗಿ ಪೋಲಿಸರ ಸಾಹಯ ಪಡೆಯುತ್ತಿರುವ ಚಾನೆಲ್. ಇಷ್ಟಲ್ಲಾ ಗಲಾಬೆಗೆ ಕಾರಣವೇನು ಗೊತ್ತ.?

0

ಸುವರ್ಣ ನ್ಯೂಸ್ ಚಾನೆಲ್ ಸ್ಟುಡಿಯೋ ಮುತ್ತಿಗೆ ಹಾಕಿದ ದರ್ಶನ್ ಫ್ಯಾನ್ಸ್ ಕನ್ನಡ ಸುದ್ದಿ ಮಾಧ್ಯಮಗಳು (Media) ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ನಡುವಿನ ಗಲಾಟೆ ಬಗ್ಗೆ ಇಡೀ ಕರ್ನಾಟಕಕ್ಕೆ ಗೊತ್ತಿದೆ. ಆದರೆ ನೆನ್ನೆಯಿಂದ ಹೊಸದಾಗಿ ದರ್ಶನ್ ಹಾಗೂ ಮೀಡಿಯಾ ಕುರಿತ ವಿಡಿಯೋ ಒಂದು ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಈ ವಿಡಿಯೋದಲ್ಲಿ ಸುವರ್ಣ ನ್ಯೂಸ್ ಚಾನೆಲ್ ನ (Suvarna NEWS Channel) ಸಿಬ್ಬಂದಿ ಮಾತನಾಡಿರುವ ಮಾತುಗಳಿಗೆ ಇಂದು ದರ್ಶನ್ ಗಜಪಡೆ ಆ ಚಾನೆಲ್ ಸ್ಟುಡಿಯೋ ಮುತ್ತಿಗೆ ಹಾಕುವ ಹಾಗೆ, ಅವರ ಸ್ಟುಡಿಯೋ ಎದುರು ಕುಳಿತು ಪ್ರತಿಭಟನೆ ಮಾಡುವ ಮಟ್ಟಕ್ಕೆ ವಿಷಯ ವಿಪರೀತಕ್ಕೆ ತಿರುಗಿದೆ.

ಅಷ್ಟಕ್ಕೂ ಏನಿದು ಕಾಂಟ್ರವರ್ಸಿ ಎಂದು ನೋಡುವುದಾದರೆ ಮೊನ್ನೆ ಸುವರ್ಣ ನ್ಯೂಸ್ ಚಾನೆಲ್ ಗೆ ಒಂದು ಗಿಫ್ಟ್ ಬಾಕ್ಸ್ ಬಂದಿತ್ತು. ಸಿಬ್ಬಂದಿಗಳೆಲ್ಲ ಸೇರಿ ಹಾಗೆ ಓಪನ್ ಮಾಡುತ್ತಿರುವಾಗ ಒಳಗೆ ಏನಿರಬಹುದು ಎನ್ನುವ ಕುತೂಹಲ ಎಲ್ಲರನ್ನು ಕಾಡುತ್ತಿತ್ತು. ಹಾಗಾಗಿ ಒಬ್ಬೊಬ್ಬರು ಒಂದೊಂದು ಹೇಳುತ್ತಿದ್ದರು. ಒಬ್ಬರು ಅದರಲ್ಲಿ ಕ್ರಾಂತಿ ಸಿನಿಮಾ ಟಿಕೆಟ್ ಇರಬಹುದು ನಮಗಾಗಿ ಯಾರಾದರೂ ಕಳುಹಿಸಿದ್ದಾರಾ ಎಂದು ಕೇಳಿದರೆ ಮತ್ತೊಬ್ಬರು ಇಲ್ಲ ದರ್ಶನ್ ಅವರ ತಲೆ ಬಂದಿರಬಹುದಾ ಅನಿಸುತ್ತದೆ ಎಂದು ಮಾತನಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.

ಮತ್ತೊಬ್ಬಾತ ಇಲ್ಲ ಚಪ್ಪಲಿ ಬಂದಿದೆ ಅಂತ ಹೇಳಿ ದರ್ಶನ್ ಅವರ ಹೊಸಪೇಟೆ ವಿವಾದಕ್ಕೆ ವಿಷಯ ಅಂಟಿಸಿ ತಮಾಷೆ ಮಾಡಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ದರ್ಶನ್ ಅಭಿಮಾನಿಗಳೆಲ್ಲಾ ಸಿಡಿದೆದ್ದರೂ ಇದರ ಪರಿಣಾಮ ಅರಿತ ಚಾನೆಲ್ ನ ಹಿರಿಯ ನಿರೂಪಕ ಎನಿಸಿಕೊಂಡ ಜಯ ಪ್ರಕಾಶ್ (Jaya Prakash) ಅವರು ಮತ್ತೊಂದು ವಿಡಿಯೋ ಮಾಡಿ ಎಂದಿಗೂ ಸಹ ನಾವು ಯಾರ ತಂಟೆಗೂ ಹೋಗುವುದಿಲ್ಲ,

ಯಾರನ್ನು ನೋಯಿಸುವುದಿಲ್ಲ ಆದರೆ ಅದ್ಯಾವುದೋ ವಿಷಘಳಿಗೆ ಆ ರೀತಿ ಮಾತುಗಳು ಬಂದು ಬಿಟ್ಟವು, ದಯವಿಟ್ಟು ಇದನ್ನು ಇಲ್ಲಿಗೆ ಬಿಡಿ ನಮ್ಮನ್ನು ಈ ಬಾರಿ ಕ್ಷಮಿಸಿ ಎಂದು ವಿನಯ ಪೂರ್ವಕವಾಗಿ ಕ್ಷಮೆ ಕೇಳಿದರು. ಆದರೂ ಸಹ ದರ್ಶನ್ ಅಭಿಮಾನಿಗಳಿಗೆ ಇಷ್ಟಕ್ಕೆ ಸಮಾಧಾನ ಆಗಿಲ್ಲ ಯಾಕೆಂದರೆ ಒಬ್ಬ ಸ್ಟಾರ್ ನಟ ಹಾಗೂ ಒಬ್ಬ ಕನ್ನಡದ ಹೆಮ್ಮೆಯ ಕಲಾವಿದನ ಸಾವನ್ನು ಬಯಸುವ ಮಟ್ಟಕ್ಕೆ ನಾಗರಿಕ ಸಮಾಜದ ಜವಾಬ್ದಾರಿ ಹೊತ್ತ ಪತ್ರಿಕ ಮಾಧ್ಯಮದ ಸಿಬ್ಬಂದಿ ಮಾತನಾಡುತ್ತಾರೆ ಎಂದರೆ ಅದು ಅವರು ಆ ಸ್ಥಾನದಲ್ಲಿ ಇರಲು ಯೋಗ್ಯರಲ್ಲ ಎನ್ನುವುದನ್ನು ತೋರಿಸುತ್ತದೆ.

ಹಾಗಾಗಿ ದರ್ಶನ್ ಅಭಿಮಾನಿಗಳು ಇಂದು ಸುವರ್ಣ ನ್ಯೂಸ್ ಚಾನೆಲ್ ಸ್ಟುಡಿಯೋ ಬಳಿ ಹೋಗಿ ಪ್ರತಿಭಟನೆ ಮಾಡಿದ್ದಾರೆ. ಅವರ ಕೂಗು ಏನಿತ್ತು ಎಂದು ಕೇಳುವುದಾದರೆ ಸುವರ್ಣ ನ್ಯೂಸ್ ಚಾನೆಲ್ ಅನ್ನೇ ಬ್ಯಾನ್ ಮಾಡಬೇಕು ಎಂದು ಅಭಿಮಾನಿಗಳು ಕೂಗು ಹಾಕಿದ್ದಾರೆ. ಗಲಾಟೆ ಜೋರಾಗುತ್ತಿದ್ದಂತೆ ಇನ್ನಷ್ಟು ಜನ ಸೇರುವ ಮೊದಲು ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಿಸುವ ಪ್ರಯತ್ನವನ್ನು ಸಹ ಮಾಡಿದ್ದಾರೆ.

ಆದರೆ ಇದು ಇಷ್ಟಕ್ಕೆ ನಿಲ್ಲುವ ಮಟ್ಟಕ್ಕೆ ಕಾಡುತ್ತಿಲ್ಲ ಇಡೀ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಂಬರ್ ಒನ್ ನಟ ಆಗಿರುವ ದರ್ಶನ್ ಅವರ ವಿಷಯಕ್ಕೆ ಹೋದರೆ ಅಭಿಮಾನಿಗಳು ಸುಮ್ಮನೆ ಬಿಡುವುದಿಲ್ಲ. ಅದಕ್ಕೆ ತಕ್ಕ ಪಾಠ ಕಲಿಸಿಯೇ ತೀರುತ್ತಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ ಆಗುವ ಹಂತಕ್ಕೆ ತಲುಪುವ ಎಲ್ಲ ಸಾಧ್ಯತೆಗಳು ಇದೆ. ಆದರೆ ಇಂದು ಪೊಲೀಸರ ಅನುಮತಿ ಇಲ್ಲದೆ ಪ್ರತಿಭಟನೆಗೆ ಹೋಗಿದ್ದ ಕಾರಣ ಶಾಂತಿಯುತವಾಗಿ ನಡೆದುಕೊಂಡಿದ್ದಾರೆ. ಮುಂದೆ ಇದು ಇನ್ಯಾವ ವಿಕೋಪಕ್ಕೆ ತಿರುಗುತ್ತದೆ ಎಂದು ನೋಡಬೇಕಾಗಿದೆ. ಈ ದಿನದ ಪ್ರತಿಭಟನೆಯಲ್ಲಿ ಮಹಿಳಾ ಅಭಿಮಾನಿಗಳು ಸಹ ಹೋರಾಟಕ್ಕಿಳಿದು ಧರಣಿಗೆ ಕೂತಿದ್ದನ್ನು ನಾವು ಕಾಣಬಹುದು.

ಪೈರಸಿ ಆಯ್ತು ಅಂತಾ ಕುತ್ಕೊಂಡು ಬೇರೆಯವರ ಥರ ಕಣ್ಣೀರು ಹಾಕೋಳಲ್ಲ ನಾನು. ಕ್ರಾಂತಿ ಸಿನಿಮಾ ಸಕ್ಸಸ್ ಪಾರ್ಟಿಯಲ್ಲಿ ಪರೋಕ್ಷವಾಗಿ ಟಂಗ್ ಕೊಟ್ಟ ಶೈಲಜಾ ನಾಗ್.

 

ನಾನು ಬೇರೆಯವರ ರೀತಿ ಸಿನಿಮಾ ಪೈರಸಿ ಆಯ್ತು ಎಂದು ಅಳುತ್ತಾ ಕೂರುವವಳು ಅಲ್ಲ ಎಂದು ಪರೋಕ್ಷವಾಗಿ ಆ ನಿರ್ಮಾಪಕಿಗೆ ಟಾಂಗ್ ಕೊಟ್ಟರಾ ಕ್ರಾಂತಿ ಪ್ರೊಡ್ಯೂಸರ್. ದರ್ಶನ್ (Darshan) ಅವರ ಕ್ರಾಂತಿ (Kranthi) ಸಿನಿಮಾ ಇದೆ ಜನವರಿ 26ರಂದು ರಿಲೀಸ್ ಆಗಿತ್ತು. ಕಳೆದ ಎರಡು ತಿಂಗಳ ಹಿಂದೆಯೇ ಚಿತ್ರದ ಪ್ರಚಾರ ಕಾರ್ಯಕ್ಕೆ ಇಳಿದಿದ್ದ ಇಡೀ ತಂಡ ಇಂದು ಎಂಟು ದಿನಗಳ ಬಳಿಕ ಸಿನಿಮಾ ನೂರು ಕೋಟಿ ಕಲೆಕ್ಷನ್ ದಾಟಿದ ಸಂಭ್ರಮದಲ್ಲಿದೆ.

ಇದರ ವಿಶೇಷವಾಗಿ ಸ್ಪೆಷಲ್ ಸಕ್ಸಸ್ ಮೀಟ್ (Success meet) ಕೂಡ ಅರೆಂಜ್ ಮಾಡಿದ್ದ ತಂಡ ಹಲವು ವಿಷಯಗಳನ್ನು ಈ ಬಾರಿಯೂ ಹಂಚಿಕೊಂಡಿತ್ತು. ಮಾತಿಗಿಳಿದ ಚಿತ್ರದ ನಿರ್ಮಾಪಕರಾದ ಶೈಲಜಾ ನಾಗ್ (Producer Shylaja nag) ಅವರು ಕ್ರಾಂತಿ ಸಿನಿಮಾದ ಬಗ್ಗೆ ಹಾಗೂ ಸಿನಿಮಾ ಸಕ್ಸಸ್ ಗೆ ಕಾರಣ ಆದವರ ಬಗ್ಗೆ ಹಾಗೂ ಸಿನಿಮಾ ಗಳಿಸಿರುವ ಕಲೆಕ್ಷನ್ ಬಗ್ಗೆ ಮಾತನಾಡುತ್ತಾ ಪೈರಸಿ ಪರಿಣಾಮದ ಬಗ್ಗೆ ಕೂಡ ಮಾತನಾಡಿದರು.

ಕ್ರಾಂತಿ ಚಿತ್ರದ ಕಲಾವಿದರಾದ ನಾಯಕ ನಟ ದರ್ಶನ್, ನಾಯಕಿ ರಚಿತಾ ರಾಮ್, ನಿಮಿಕಾ, ಹಿರಿಯ ಕಲಾವಿದರಾದ ಮುಖ್ಯಮಂತ್ರಿ ಚಂದ್ರು, ಗಿರಿಜಾ ಲೋಕೇಶ್ ಸೇರಿದಂತೆ ಎಲ್ಲರೂ ಮಾತನಾಡಿದರು. ಹಾಗೆಯೇ ನಿರ್ದೇಶಕರಾದ ಸುರೇಶ್, ಹರಿಕೃಷ್ಣ ಮತ್ತು ನಿರ್ಮಾಪಕಿಯಾದ ಶೈಲಜಾ ನಾಗ್ ಅವರೂ ಸಹ ಮಾತನಾಡಿದರು. ಮಾತನಾಡುವಾಗ ನಿರ್ಮಾಪಕಿಯಾಗಿ ತಮ್ಮ ಜವಾಬ್ದಾರಿ ಮೆರೆದರು. ಈ ಸಿನಿಮಾದ ಜವಾಬ್ದಾರಿ ಸಿನಿಮಾ ಶುರುವಾದ ದಿನದಿಂದ ರಿಲೀಸ್ ಆಗುವ ತನಕ ಇತ್ತು.

ನನ್ನ ಜವಾಬ್ದಾರಿಯಲ್ಲಿ ಹೆಗಲಾದ ಪ್ರತಿಯೊಬ್ಬರಿಗೂ ಕೂಡ ಧನ್ಯವಾದಗಳು. ನಮ್ಮ ಸಿನಿಮಾದ ಎಲ್ಲಾ ಕಲಾವಿದರುಗಳು, ತಂತ್ರಜ್ಞರು, ಮ್ಯೂಸಿಕ್ ಡೈರೆಕ್ಟರ್, ಲಿರಿಕ್ಸ್ ಬರೆದವರು, ಲೈಟ್ ಬಾಯ್ ಇಂದ ಹಿಡಿದು ಊಟದ ವ್ಯವಸ್ಥೆ ಮಾಡಿದ ಪ್ರತಿಯೊಬ್ಬರ ತನಕ ಕೂಡ ಎಲ್ಲರಿಗೂ ಧನ್ಯವಾದಗಳು. ಹಾಡುಗಳ ರಿಲೀಸ್ ಮಾಡುವ ಸಮಯದಲ್ಲಿ ನಮ್ಮ ಸಹಕಾರಕ್ಕೆ ನಿಂತಿದ್ದ ದರ್ಶನ್ ಅವರ ಎಲ್ಲಾ ಅಪಾರ ಅಭಿಮಾನಿ ಬಳಗ ಹಾಗೂ ನಮಗೆ ಸಹಾಯ ಮಾಡಿ ಎಲ್ಲಾ ಕಡೆ ವ್ಯವಸ್ಥೆ ಮಾಡಿಕೊಟ್ಟ ದರ್ಶನ ಅವರ ಆತ್ಮೀಯರಿಗೂ ಕೂಡ ಧನ್ಯವಾದಗಳು.

ಮತ್ತೆ ಈ ಸಿನಿಮಾದ ವಿತರಣೆ ಕೆಲಸ ಮಾಡಿ ಕರ್ನಾಟಕದಾದ್ಯಂತ ಕ್ರಾಂತಿ ತಲುಪಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು. ಸಿನಿಮಾ ಸಕ್ಸಸ್ ಬಗ್ಗೆ ಮಾತನಾಡಿದ ಅವರು ನಮ್ಮ ಚಿತ್ರ ಅನೇಕರ ಮೇಲೆ ಪ್ರಭಾವ ಬೀರಿ ಹಲವರು ಟ್ವೀಟ್ ಮಾಡಿ ಅದರ ಬಗ್ಗೆ ಮಾತನಾಡುತ್ತಿದ್ದಾರೆ. ತಾವು ಸಹ ಸಿನಿಮಾ ನೋಡಿ ಇಂಥ ವಿಷಯಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂದು ಬಯಸಿದ್ದೇವೆ ಎನ್ನುವುದನ್ನು ಹಂಚಿಕೊಳ್ಳುತ್ತಿದ್ದಾರೆ.

ಇಷ್ಟಾದರೆ ಸಿನಿಮಾ ಗೆದ್ದಿದೆ ಎಂದು ನಾನು ಭಾವಿಸುತ್ತೇನೆ. ಅದರ ಜೊತೆ ಸಿನಿಮಾಗೆ ದುಡ್ಡು ಹಾಕಿದವರಿಗೂ ಒಂದಿಷ್ಟು ಹಣ ಕೈಸೇರಬೇಕು ಅದು ಕೂಡ ಆಗಿದೆ. ಹಾಗಾಗಿ ನಾವು ನನ್ನ ಪ್ರಕಾರ ಗೆದ್ದಿದ್ದೇವೆ ಎಂದು ಹೇಳಿ ಸಿನಿಮಾ ಫೈರಸಿ ಬಗ್ಗೆ ಕೂಡ ಮಾತನಾಡಿದ್ದಾರೆ. ಆಂಟಿ ಪೈರಸಿ (anti pyracy) ಕೆಲಸ ಮಾಡುತ್ತಿರುವವರು ಹಗಲು ರಾತ್ರಿ ನಮಗಾಗಿ ಶ್ರಮ ಪಟ್ಟಿದ್ದಾರೆ ಆದರೆ ಎಲ್ಲಾ ಸಿನಿಮಾಗಳು ಕೂಡ ಇದೊಂದು ದೊಡ್ಡ ಯುದ್ಧ.

ನಾನು ಬೇರೆಯವರ ರೀತಿ ಸಿನಿಮಾ ಪೈರಸಿ ಆಯ್ತು ಎಂದು ಅಳುವವಳು ಅಲ್ಲ ,ಧೈರ್ಯವಾಗಿ ಎಲ್ಲವನ್ನು ಎದುರಿಸುತ್ತೇನೆ. ಆದರೂ ಆ ಪರಿಸ್ಥಿತಿಯಿಂದ ನಮ್ಮನ್ನು ಕಾಪಾಡಿದ ಆಂಟಿ ಪೈರಸಿ ಟೀಮ್ ಗೆ ಧನ್ಯವಾದಗಳು ಎಂದು ಅವರನ್ನು ನೆನೆಸಿಕೊಂಡಿದ್ದಾರೆ. ಈ ಹಿಂದೆ ಸುದೀಪ್ (Sudeep) ಅವರ ಪೈಲ್ವಾನ್ (Pylwan) ಸಿನಿಮಾ ಪೈರಸಿ ಆಗಿ ನಿರ್ಮಾಪಕಿ ಸ್ವಪ್ನಕೃಷ್ಣ (Swapna krishna) ಅವರು ಅದಕ್ಕೆ ಕಾರಣ ಆಗಿದವರಿಗೆ ಕಣ್ಣೀರು ಹಾಕಿ ಶಾಪ ಹಾಕಿದ್ದರು. ಅವರಿಗೆ ಟಾಂಗ್ ನೀಡುವ ಸಲುವಾಗಿ ಶೈಲಜಾ ನಾಗ್ ಈ ಮಾತುಗಳಾಡಿದರಾ ಎನ್ನುವ ಅನುಮಾನಗಳು ಹಲವರನ್ನು ಕಾಡುತ್ತಿದೆ.

ಸಿನಿಮಾದಲ್ಲಿ ಚಾನ್ಸ್ ಕೊಡ್ತಿನಿ, ಕಮಿಟ್ಮೆಂಟ್ ಮಾಡ್ಕೋಳಿ ಅಂತ ಆ ನಿರ್ದೇಶಕ ನನ್ನ ಮಂಚಕ್ಕೆ ಕರೆದ ಎಂಬ ಚಿತ್ರರಂಗದ ಕರಳ ಸತ್ಯ ಬಾಯ್ಬಿಟ್ಟ ನಟಿ ನಯನತಾರ.

0

 

ದಕ್ಷಿಣ ಸಿನಿಮಾ ರಂಗದ ಲೇಡಿ ಸೂಪರ್ ಸ್ಟಾರ್ (Lady super star) ಎಂದು ಖ್ಯಾತಿ ಆಗಿರುವ ನಯನತಾರ (Nayanathara) ಅವರ ಪ್ರಭಾವ ಸಿನಿಮಾ ರಂಗದ ಮೇಲೆ ಎಷ್ಟಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಸದ್ಯಕ್ಕೆ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಇವರು ಮಲಯಾಳಂ, ತೆಲುಗು ಮತ್ತು ಕನ್ನಡ ಸಿನಿಮಾ ಇಂಡಸ್ಟ್ರಿ ಕಡೆಯಿಂದಲೂ ಬೇಡಿಕೆ ಉಳ್ಳ ನಟಿ. ಆದರೆ ಅವರು ಈ ಹಂತ ತಲುಪುವವರೆಗೆ ಪಟ್ಟ ಕಷ್ಟಗಳು ಎದುರಿಸಿದ ಸವಾಲುಗಳ ಬಗ್ಗೆ ಹೇಳಿಕೊಂಡಿದ್ದು ಕಡಿಮೆಯೇ.

ಈಗ ಬ್ಯುಸಿ ಸಿನಿಮಾ ಶೆಡ್ಯೂಲ್ ನಡುವೆ ಕನೆಕ್ಟ್ ಬಗ್ಗೆ ಪ್ರಚಾರ ಮಾಡುತ್ತಿರುವ ನಯನತಾರ ಅವರು ಹಿಂದೆ ತಾವು ಅನುಭವಿಸಿದ ಕಾಸ್ಟಿಂಗ್ ಕೌಚ್ (cousting couch) ಬಗ್ಗೆ ಬಾಯಿ ಈಗ ಬಿಟ್ಟಿದ್ದಾರೆ. ನಯನತಾರಾ ಅವರು ಮೂಲತಃ ಕೇರಳದವರು. 2003ರಲ್ಲಿ ಮಲಯಾಳಂ ಮನಸ್ಸಿನ ನಕ್ಕ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸುವ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು.

ನಂತರ ತಮಿಳು ಸಿನಿಮಾಗಳತ್ತ ವಾಲಿದ ಇವರು ಇಂದಿಗೂ ತಮಿಳಿನ ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ. ತಮಿಳಿನಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಯನತಾರಾ ಅವರು ಈಗ ತಮಿಳಿನ ಸ್ಟಾರ್ ನಿರ್ದೇಶಕ ಆದ ವಿಜ್ಞೇಶ್ ಶಿವನ್ (Vignesh Shivan) ಅವರನ್ನೇ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೊತೆಗೆ ಬಾಡಿಗೆ ತಾಯ್ತನದ ಮೂಲಕ ಎರಡು ಅವಳು ಜವಳಿ ಮಕ್ಕಳನ್ನು ಪಡೆದು ಸುಖ ಸಂಸಾರದಲ್ಲಿ ತೇಲುತ್ತಿದ್ದಾರೆ.

ಈಗ ಸ್ವರ್ಗದಂತಹ ಬದುಕನ್ನು ಅನುಭವಿಸುತ್ತಿರುವ ನಯನತಾರ ಅವರಿಗೆ ಇಷ್ಟೆಲ್ಲಾ ಸಾಧಿಸಲು ಸಾಧ್ಯ ಆಗಿದ್ದು ಅವರ ಕಠಿಣ ಪರಿಶ್ರಮ ಮತ್ತು ಆಸಕ್ತಿಯಿಂದ. ಆದರೆ ಈ ನಡುವೆ ಅವರು ಇದಕ್ಕಾಗಿ ಮಾಡಿದ ಸ್ಟ್ರಗಲ್ ಬಗ್ಗೆ ಹೇಳಿದ್ದು ಕೇಳಿ ಇಂಡಸ್ಟ್ರಿಯೇ ಬೆಚ್ಚಿಬಿದ್ದಿದೆ. ಈಚೆಗೆ ನಯನತಾರಾ ಅವರು ತಾವು ಇಂಡಸ್ಟ್ರಿಗೆ ಬಂದ ಹೊಸದರಲಿ ಅವಕಾಶಕ್ಕಾಗಿ ಅಲೆಯುತ್ತಿದ್ದಾಗ ಏನೆಲ್ಲಾ ಕಷ್ಟಗಳನ್ನು ಎದುರಿಸಿದ್ದರು ಎನ್ನುವುದರ ಬಗ್ಗೆ ಸವಿವರವಾಗಿ ಹೇಳಿಕೊಂಡಿದ್ದಾರೆ.

ಎಷ್ಟೋ ಜನ ನನ್ನನ್ನು ಅವಕಾಶಕ್ಕಾಗಿ ಮಂಚಕ್ಕೆ ಕರೆಯುತ್ತಿದ್ದರು. ಕಮಿಟ್ಮೆಂಟ್ ಮಾಡಿ ಕೊಳ್ಳಿ ಎಂದು ನೇರವಾಗಿ ಕೇಳುತ್ತಿದ್ದರು. ಆದರೆ ನಾನು ಅದ್ಯಾವುದಕ್ಕೂ ಒಪ್ಪಲಿಲ್ಲ. ನಾನು ಮಾತ್ರ ಅಲ್ಲ ಎಲ್ಲ ಹೆಣ್ಣು ಮಕ್ಕಳು ಇದೇ ರೀತಿ ಇರಬೇಕು ಜೊತೆಗೆ ಈ ರೀತಿ ಅವರು ನಮಗೆ ತೊಂದರೆ ಕೊಡಲು ನಮ್ಮ ನಡವಳಿಕೆ ಕೂಡ ಕಾರಣ ಆಗಿರುತ್ತದೆ ಎಂದು ಹೊಸದಾಗಿ ಇಂಡಸ್ಟ್ರಿಗೆ ಬರುವವರಿಗೆ ಇಂಡೈರೆಕ್ಟ್ ಆಗಿ ಬುದ್ಧಿಮಾತು ಕೂಡ ಹೇಳಿದ್ದಾರೆ.

ಈ ವಿಷಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಪ್ರಚಾರ ಕೂಡ ಆಗುತ್ತಿದೆ. ಈಗ ಇಷ್ಟೆಲ್ಲಾ ಆದಮೇಲೆ ಇದರ ಬಗ್ಗೆ ಮಾತನಾಡುತ್ತಿದ್ದಾರೆ ಈ ಹಿಂದೆಯೇ ಆ ಸನ್ನಿವೇಶ ಎದುರಿಸಿದಾಗ ಯಾಕೆ ಬಹಿರಂಗಪಡಿಸಲಿಲ್ಲ ಅಥವಾ ಮೀಟು (me too) ಅಭಿಯಾನ ನಡೆಯುವ ವೇಳೆ ಯಾಕೆ ಇದರ ಬಗ್ಗೆ ಬಾಯಿ ಬಿಡಲಿಲ್ಲ ಎಂದು ಮರಳಿ ನಯನತಾರ ಅವರಿಗೆ ಪ್ರಶ್ನೆ ಹೂಡುತ್ತಿದ್ದಾರೆ.

ಅದೇನಿದ್ದರೂ ಹೊಸದಾಗಿ ಸಿನಿಮಾ ರಂಗಕ್ಕೆ ಹೋಗುವ ಹೆಣ್ಣು ಮಕ್ಕಳಿಗೆ ಈ ಕುರಿತು ಒಂದು ಭಯ ಇದ್ದೇ ಇರುತ್ತದೆ. ಪ್ರತಿಭಾನ್ವಿತ ನಟಿ ಅಪ್ಸರೆಯಂತಹ ಸೌಂದರ್ಯ ಹೊಂದಿರುವ ನಯನತಾರ ಅವರೇ ಅವಕಾಶಕ್ಕಾಗಿ ಹೋದಾಗ ಈ ರೀತಿ ಸನ್ನಿವೇಶಗಳನ್ನು ಎದುರಿಸುವ ಸಂದರ್ಭದಲ್ಲಿ ಇತ್ತೆಂದಾದರೆ ಬೇರೆಯವರ ಬಗ್ಗೆ ಊಹಿಸಲು ಅಸಾಧ್ಯ. ಈ ಬಗ್ಗೆ ಧ್ವನಿ ಎತ್ತಿ ಎಲ್ಲರೂ ಮಾತನಾಡಿದ್ದಲ್ಲಿ ಸ್ವಲ್ಪ ಸುಧಾರಣೆ ತರಬಹುದು ಎನ್ನುವುದು ಹಲವರ ಅಭಿಪ್ರಾಯ.

ಬಾತ್ರೂಮ್ ನಲ್ಲಿ ಕುಳಿತು ಹಾಟ್ ಫೋಟೋ ಅಪ್ಲೋಡ್ ಮಾಡಿ ಹಲ್ ಚಲ್ ಸೃಷ್ಟಿಸಿದ ತುಪ್ಪದ ಹುಡುಗಿ. ಈ ವಿಡಿಯೋ ನೋಡಿದ್ರೆ ಯುವಕರ ಟೆಂಪ್ರೇಚರ್ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.

ಸ್ಯಾಂಡಲ್ ವುಡ್ ಅಲ್ಲಿ ತುಪ್ಪದ ಹುಡುಗಿ ĺ(Thuppada hudugi) ಎಂದೇ ಖ್ಯಾತಿಯಾಗಿರುವ ರಾಗಿಣಿ ದಿಗ್ವೇದಿ (Ragini Digvedi ) ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿ ಇರುತ್ತಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪಾರ ಸಂಖ್ಯಾ ಅಭಿಮಾನಿಗಳನ್ನು, ಫಾಲೋವರ್ಸ್ ಅನ್ನು ಹೊಂದಿರುವ ಇವರು ತಮ್ಮ ಅವರಿಗಾಗಿ ಆಗಾಗ ಹೊಸ ಹೊಸ ಫೋಟೋ ಶೂಟ್ ಮಾಡಿಸಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ.

ಜೊತೆಗೆ ತಮ್ಮ ಹೊಸ ಸಿನಿಮಾ ಶೂಟಿಂಗ್ ಬಗ್ಗೆ ಕೂಡ ವಿಚಾರ ಹಂಚಿಕೊಳ್ಳುತ್ತಲೇ ಇರುತ್ತಾರೆ. ಕಳೆದ ವರ್ಷ ಡ್ರ-ಗ್ಸ್ ಕೇಸ್ ನಿಂದ ಬೇಸತ್ತು ಹೋಗಿದ್ದ ನಟಿ ಜೈ-ಲಿ-ನಿಂದ ಹೊರ ಬಂದ ಮೇಲೆ ಬಹಳ ಬದಲಾಗಿದ್ದಾರೆ. ಇದನ್ನೆಲ್ಲ ಸರಿ ಮಾಡಿಕೊಳ್ಳುವ ಹಂಬಲದಲ್ಲಿರುವ ಇವರು ಕಹಿ ಘಟನೆಗಳನ್ನೆಲ್ಲ ಮರೆತು ಸಂತಸಮಯವಾಗಿ ಜೀವನ ಸಾಗಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿಯಂತೆ ಫೋಟೋ ಶೂಟ್ ಶೂಟ್ ಮಾಡಿಸಿ ಅದನ್ನು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಾರೆ.

ಸದಾ ಬೋಲ್ಡ್ ಬಟ್ಟೆಗಳಲ್ಲಿ ಸಾರ್ವಜನಿಕವಾಗಿ ಕೂಡ ಕಾಣಿಸಿಕೊಳ್ಳುವ ರಾಗಿಣಿ ಟ್ರೆಡಿಶನಲ್ ಗಿಂತ ತುಂಡು ಉಡುಗೆಯಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಅವರು ಅಪ್ಲೋಡ್ ಮಾಡುವ ಫೋಟೋಗಳಲ್ಲೂ ಕೂಡ ಅದೇ ಹೆಚ್ಚು ವಿಶೇಷತೆಯಿಂದ ಕೂಡಿದ್ದು ಸಖತ್ ಹಾಟ್ ಲುಕ್ (Hot look) ಅಲ್ಲಿ ಫೋಟೋ ಶೂಟ್ ಮಾಡಿಸುತ್ತಾರೆ. ಹಿಂದೆ ಈಕೆ ಹಂಚಿಕೊಂಡಿರುವ ಅನೇಕ ಫೋಟೋಗಳು ಕೂಡ ಇಂತಹದ್ದೇ ಆಗಿದ್ದು ಸ್ವಿಮ್ಮಿಂಗ್ ಡ್ರೆಸ್ ನಲ್ಲಿ ಈ ಬಾರಿ ನಟಿ ಫೋಟೋಶೂಟ್ ಮಾಡಿಸಿ ಅಪ್ಲೋಡ್ ಮಾಡಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

ಸ್ವಿಮ್ ಡ್ರೆಸ್ ಅಲ್ಲಿ ಟಬ್ ಒಳಗೆ ಕುಳಿತು ಕೊಟ್ಟಿರುವ ಫೋಸ್ ಗೆ ಇವರ ಮೇಲ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಫೋಟೋಗಳು ಅಪ್ಲೋಡ್ ಆಗುತ್ತಿದ್ದಂತೆ ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆ ಕಂಡು ಲೈಕ್ಸ್ ಕೂಡ ಪಡೆದಿದೆ. ಜೊತೆಗೆ ಅಭಿಮಾನಿಗಳಿಂದ ಭರಪೂರ ಕಮೆಂಟ್ ಗಳ ಸುರಿಮಳೆಯೇ ಹರಿದು ಬಂದಿದೆ. ರಾಗಿಣಿ ಅವರು ಮೊದಲು ಸುದೀಪ್ (Sudeep) ಅವರ ವೀರಮದಕರಿ (Veera Madakari) ಸಿನಿಮಾ ಮೂಲಕ ಲಾಂಚ್ (launch) ಆದರು.

ನಂತರ ಅಭಿನಯಿಸಿದ ಒಂದಷ್ಟು ಸಿನಿಮಾಗಳಲ್ಲೂ ಕೂಡ ಉತ್ತಮ ಪಾತ್ರವನ್ನು ನಿರ್ವಹಿಸಿದ್ದರು. ಅದರಲ್ಲೂ ಮತ್ತೊಮ್ಮೆ ಸುದೀಪ್ ಅವರಿಗೆ ಜೊತೆಯಾಗಿ ಮಾಡಿದ ಕೆಂಪೇಗೌಡ, ಚಿರಂಜೀವಿ ಸರ್ಜಾ ಅವರ ಜೊತೆ ಅಭಿನಯಿಸಿದ ಗಂಡೆದೆ ಮತ್ತು ದುನಿಯಾ ವಿಜಯ್ ಅವರ ಜೊತೆ ಅಭಿನಯಿಸಿದ ಬ್ಲಾಕ್ ಕೋಬ್ರಾ ಹಾಗೂ ಪೊಲೀಸ್ ಅಧಿಕಾರಿಯಾಗಿ ಆರ್ಭಟಿಸಿದ್ದ ರಾಗಿಣಿ ಐಪಿಎಸ್ ಮುಂತಾದ ಸಿನಿಮಾಗಳು ನಟಿ ಮಣಿಗೆ ಒಳ್ಳೆ ಇಮೇಜ್ ಅನ್ನು ತಂದು ಕೊಟ್ಟಿದ್ದವು.

ಆದರೆ ನಂತರ ಈಕೆ ಆರಿಸಿಕೊಂಡ ಪಾತ್ರಗಳು ಈಕೆಯನ್ನು ಅದೇ ಪಾತ್ರಗಳಲ್ಲಿ ಮುಂದುವರೆಯುವಂತೆ ಮಾಡಿಬಿಟ್ಟಿದೆ. ಯಾವಾಗ ಕಳ್ಳ ಮಳ್ಳ ಸುಳ್ಳ ಸಿನಿಮಾದ ತುಪ್ಪ ಬೇಕಾ ತುಪ್ಪ ಐಟಂ ಹಾಡಿನಲ್ಲಿ ಕುಣಿದರು ಅಂದಿನಿಂದ ಈಕೆಯನ್ನು ಅದೇ ಇಮೇಜ್ ಅಲ್ಲಿ ನೋಡಲಾಗುತ್ತಿದೆ. ನಂತರ ಅಕ್ಕ ನಿನ್ನ ಮಗಳು ಚಿಕ್ಕವಳು ಆಗಲ್ವಾ ಎನ್ನುವ ವಿಕ್ಟರಿ ಸಿನಿಮಾದ ಮತ್ತೊಂದು ಇದೇ ಮಾದರಿಯ ಹಾಡಿನಲ್ಲಿ ಕುಣಿದರು.

ಹಾಗಾಗಿ ಈಕೆಗೆ ಇಂಥದೇ ಆಫರ್ ಗಳು ಬರುತ್ತಿದ್ದು ಮಧ್ಯೆ ಮಾಡಿಕೊಂಡ ಡ್ರ-ಗ್ಸ್ ಕೇಸ್ (drugs case) ಎಡಬಟ್ಟಿನಿಂದ ಜೈ-ಲು (jail) ಸೇರುವಂತಾಗಿತ್ತು. ಸದ್ಯಕ್ಕೀಗ ಎಲ್ಲಾ ವಿವಾದಗಳಿಂದ ಹೊರಬಂದಿರುವ ಈಕೆ ಸಿನಿಮಾ ರಂಗದಂತ ಮತ್ತೆ ಮುಖ ಮಾಡುತ್ತಿದ್ದಾರೆ. ಇನ್ನಾದರೂ ಈಕೆ ಬುದ್ಧಿ ಕಲಿತು ಕನ್ನಡ ಚಿತ್ರರಂಗದ ಹೆಸರುಳಿಸುವ ಕೆಲಸಗಳಲ್ಲಿ ತೊಡಗಿಕೊಳ್ಳವಂತೆ ಆಗಲಿ ಎಂದು ಹರಸೋಣ.

ಕ್ರಾಂತಿ ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಅನ್ನೇ ಮೀರಿಸಿದ ಪ್ರಥಮ್ ಅಭಿಮಾನಿಯದ ನಟಭಯಂಕರ ಸಿನಿಮಾ ಕಲೆಕ್ಷನ್, ಈ ಬಗ್ಗೆ ಪ್ರಥಮ್ ಹೇಳಿದ್ದೇನು ಗೊತ್ತ.?

0

ಮೊದಲ ದಿನದ ಕಲೆಕ್ಷನ್ ನಲ್ಲೇ ಕ್ರಾಂತಿಯನ್ನೇ ಮೀರಿಸಿದ ನಟಭಯಂಕರ ವೈರಲ್ ಆಗುತ್ತಿರುವ ಪೋಸ್ಟರ್ ಬಗ್ಗೆ ಪ್ರಥಮ್ ಕೊಟ್ಟ ಸ್ಪಷ್ಟತೆ ಏನು ಗೊತ್ತಾ.? ನೆನ್ನೆ ಅಷ್ಟೇ ಒಳ್ಳೆ ಹುಡುಗ ಪ್ರಥಮ್ (Olle hudga Pratham) ಅವರ ನಟಭಯಂಕರ (Nata bayankara) ಸಿನಿಮಾ ತೆರೆಕಂಡಿತ್ತು. ಕ್ರಾಂತಿ (Kranthi) ಸಿನಿಮಾದ ಅಬ್ಬರದ ನಡುವೆ ಈ ಹಾವಳಿ ಸ್ಟಾರ್ ತಮ್ಮ ಸಿನಿಮಾ ರಿಲೀಸ್ ಮಾಡುವ ಧೈರ್ಯ ತೋರಿ ರಿಲೀಸ್ ಮಾಡಿಯೇ ಬಿಟ್ಟರು. ಈಗ ಮೊದಲ ದಿನದ ಕಲೆಕ್ಷನ್ ಅಲ್ಲಿ ಡಿ ಬಾಸ್ (DBoss) ಅನ್ನು ಸೋಲಿಸುವ ಮೂಲಕ ಪಿ ಬಾಸ್ (PBoss) ಎನ್ನುವ ಟೈಟಲ್ ಗಿಟ್ಟಿಸಿಕೊಂಡಿದ್ದಾರೆ.

ಅಷ್ಟಕ್ಕೂ ಇದರ ಸತ್ಯಾನುಸತ್ಯತೆ ಏನು ಎಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಎರಡು ವರ್ಷದ ಗ್ಯಾಪ್ ನಂತರ ಬಿಡುಗಡೆ ಆದ ಸಿನಿಮಾ ಕ್ರಾಂತಿ. ಮೊದಲ ದಿನ 12.85 ಕೋಟಿ ಗಳಿಕೆ ಮಾಡಿತ್ತು. ಆದರೆ ಅಭಿಮಾನಿಗಳು ನಮ್ಮ ಬಾಸ್ ಸಿನಿಮಾ ಮೊದಲ ದಿನ 35.3 ಕೋಟಿ ಗಳಿಕೆ ಮಾಡಿದೆ ಎಂದು ಪೋಸ್ಟರ್ಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲು ಶುರು ಮಾಡಿದ್ದರು.

ಕೆಲ ಟ್ರೋಲ್ ಪೇಜ್ ಗಳು ಈ ವಿಷಯವನ್ನು ಇಟ್ಟುಕೊಂಡು ನೆಗೆಟಿವ್ ವಿಮರ್ಶೆ ಮಾಡಿ ಹಾಗೂ ಆ ಪೋಸ್ಟರ್ ಅನ್ನು ಟ್ರೋಲ್ ಮಾಡಲು ಶುರು ಮಾಡಿದ್ದವು. ಯಾವುದೇ ಕಾರಣಕ್ಕೂ ಕ್ರಾಂತಿ ಇಷ್ಟು ಗಳಿಕೆ ಮಾಡಿಲ್ಲ ಎನ್ನುವುದು ಅವರ ವಾದ. ನಂತರ ಎಂಟು ದಿನಗಳ ಬಳಿಕ ಸಿನಿಮಾ 100 ಕೋಟಿ ಕ್ಲಬ್ ಸೇರಿದೆ ಸಿನಿಮಾ ಥಿಯೇಟರ್ ಕಲೆಕ್ಷನ್ ಜೊತೆಗೆ ವಿವಿಧ ರೈಟ್ಸ್ಗಳಿಂದ ಆದ ಎಲ್ಲಾ ಕಲೆಕ್ಷನ್ ಸೇರಿ 100 ಕೋಟಿ ದಾಟಿದೆ ಎನ್ನುವ ಸ್ಪಷ್ಟತೆಯನ್ನು ನಿರ್ಮಾಪಕರು ಕೊಟ್ಟು ಕೇಕ್ ಕಟ್ ಮಾಡುವ ಮೂಲಕ ಸಂಭ್ರಮ ಹಂಚಿಕೊಂಡರು.

ಇನ್ನು ಅದ್ಯಾಕೋ ಕೆಲ ಮಂದಿ ಅದನ್ನು ನಂಬುತ್ತಲೇ ಇಲ್ಲ. ಇದರ ನಡುವೆ ಇದಕ್ಕೆ ಟಾಂಗ್ ಕೊಡುವ ಸಲುವಾಗಿ ಪ್ರಥಮ್ ಅವರ ನಟಭಯಂಕರ ಸಿನಿಮಾ ಮೊದಲ ದಿನವೇ 35.5 ಕೋಟಿ ಕಲೆಕ್ಷನ್ ಕಳಿಸಿದೆ ಎನ್ನುವ ಪೋಸ್ಟರ್ ಅನ್ನು ದರ್ಶನ್ ಅವರ ಫೇಕ್ ಕಲೆಕ್ಷನ್ ಫೋಟೋ ಜೊತೆ ಹಾಕಿ ಇವರೇ ಮುಂದಿನ ಬಾಕ್ಸ್ ಆಫೀಸ್ ಸುಲ್ತಾನ ಎಂದು ಬರೆದು ವೈರಲ್ ಮಾಡುತ್ತಿದ್ದಾರೆ.

ಇದು ಪ್ರಥಮ್ ತನಕ ತಲುಪಿದ್ದು ನಾನು ಪೂಜೆ ಮಾಡುವ ಕಬ್ಬಾಳಮ್ಮನ ಸಾಕ್ಷಿಯಾಗಿಯೂ ನನ್ನ ಸಿನಿಮಾ ಇಷ್ಟು ಕಲೆಕ್ಷನ್ ಮಾಡಿಲ್ಲ. ದರ್ಶನ್ ಅವರು ಎಂಥಹ ಸ್ಟಾರ್ ಎಂದು ಎಲ್ಲರಿಗೂ ಗೊತ್ತು ಅವರ ಜೊತೆ ನನ್ನ ಹೋಲಿಕೆ ಬೇಡ. ಈಶ್ವರನ ಸಾಕ್ಷಿಯಾಗಿಯೂ ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಸಿನಿಮಾ ಚೆನ್ನಾಗಿ ಆಗುತ್ತಿದೆ ಆಗಲೇ ಬಿಡಿ ಎಂದು ಟ್ವೀಟ್ ಮಾಡಿ ಇವರೇ ತಮ್ಮ ಸಿನಿಮಾ ಕಲೆಕ್ಷನ್ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ.

ಸ್ಟಾರ್ ಹೀರೋಗಳ ಸಿನಿಮಾ ಎಂದ ಮೇಲೆ ಅಭಿಮಾನಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ಕಲೆಕ್ಷನ್ ವಿಚಾರದ ಕುರಿತು ಕುತೂಹಲ ಇದ್ದೇ ಇರುತ್ತದೆ. ಆದರೆ ಚಿತ್ರತಂಡ ಸ್ಪಷ್ಟತೆ ಕೊಡದ ಸಮಯದಲ್ಲಿ ಈ ರೀತಿ ಅಭಿಮಾನಿಗಳು ಹಾಗೂ ವಿರೋಧಿಗಳ ನಡುವೆ ಆಗುವ ಚರ್ಚೆಗಳು ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗಬೇಕಾಗುತ್ತದೆ.

ಕ್ರಾಂತಿ ಸಿನಿಮಾ ಸಾಕಷ್ಟು ಅಡೆತಡೆಗಳನ್ನು ಮೀರಿ ಗೆದ್ದಿರುವ ಸಿನಿಮಾ ಆದರೆ ಕೆಲ ನೆಗೆಟಿವ್ ವಿಮರ್ಶೆಗಳು ಮತ್ತು ಪೈಠಾಣ್ (Pytan) ಸಿನಿಮಾದ ಫೈಟ್ ಇಂದ ಮೊದಲ ದಿನಕ್ಕಿಂತ ನಂತರ ದಿನಗಳಲ್ಲಿ ಕಲೆಕ್ಷನ್ ಕಡಿಮೆ ಇದೆ ಎನ್ನುವ ಸುದ್ದಿಯು ಸಹ ಇದೆ.ಸಿನಿಮಾ ನಿರ್ಮಾಪಕರು ಅಂಕಿ ಅಂಶಗಳ ಸಮೇತ ಕಲೆಕ್ಷನ್ ವಿಚಾರವನ್ನು ಎಲ್ಲರ ಎದುರಿಟ್ಟರೆ ಇಂತಹ ಸಮಸ್ಯೆಗಳು ಎದುರಾಗುವುದೇ ಇಲ್ಲ ಎನ್ನುವುದು ಹಲವರ ಅಭಿಪ್ರಾಯ.