Home Blog Page 244

ತಪ್ಪಿನ ಅರಿವಾಗ ದರ್ಶನ್ & ಫ್ಯಾನ್ಸ್ ಗೆ ಕ್ಷಮೆ ಕೇಳಿದ ಸುವರ್ಣ ನ್ಯೂಸ್ ಚಾನೆಲ್ ಆಂಕರ್ ಜಯಪ್ರಕಾಶ್. ಅಷ್ಟಕ್ಕೂ ಮೀಡಿಯಾದವರು ಮಾಡಿದ ತಪ್ಪೇನು ಗೊತ್ತ.? ತಕ್ಕ ಶಾಸ್ತಿ ಮಾಡಿದ್ದಾರೆ ಫ್ಯಾನ್ಸ್

0

ದರ್ಶನ್ (Darshan) ಹಾಗೂ ಮಾಧ್ಯಮದವರ (Media) ನಡುವೆ ಇರುವ ಜಟಾಪಟಿ ಎಲ್ಲರಿಗೂ ತಿಳಿದೇ ಇದೆ. ದರ್ಶನ್ ಅವರ ಸಣ್ಣ ಪುಟ್ಟ ವಿಚಾರಗಳನ್ನು ಮಾಧ್ಯಮದವರು ದೊಡ್ಡದು ಮಾಡಿ ಬೆಂಕಿ ಹಾಕಿದ್ದು, ಜೊತೆಗೆ ಇದರಿಂದ ಕೋಪಗೊಂಡ ದರ್ಶನ್ ಅವರು ಏಕವಚನದಲ್ಲಿ ಅಶ್ಲೀಲ ಪದಗಳನ್ನು ಉಪಯೋಗಿಸಿ ಮಾಧ್ಯಮದವರೆಲ್ಲರನ್ನು ನಿಂದಿಸಿದ್ದು. ಅದಕ್ಕೆ ಅವರೆಲ್ಲ ಒಗ್ಗೂಡಿ ದರ್ಶನ್ ಅವರ ಯಾವುದೇ ವಿಷಯವನ್ನು ನಾವು ಪ್ರಸಾರ ಮಾಡುವುದಿಲ್ಲ ಎಂದು ದರ್ಶನ್ ಅವರನ್ನು ಮಾಧ್ಯಮದಿಂದ ಬ್ಯಾನ್ ಮಾಡಿದ್ದು.

ಅದಕ್ಕೆ ತೊಡೆತಟ್ಟಿ ನಿಂತು ದರ್ಶನ್ ಅಭಿಮಾನಿಗಳು ಸ್ವತಃ ತಾವೇ ಕ್ರಾಂತಿ ಸಿನಿಮಾವನ್ನು ಅವರ ಪ್ರಚಾರ ಮಾಡಿ ಗೆಲ್ಲಿಸಿದ್ದು ಇದೊಂದು ಕರ್ನಾಟಕದಲ್ಲಿ ಇತಿಹಾಸ ಎಂದೇ ಹೇಳಬಹುದು. ಇದಾದಮೇಲೆ ಸೂಕ್ಷ್ಮ ಮಟ್ಟದಲ್ಲಿ ಮಾಧ್ಯಮದವರು ದರ್ಶನ್ ಅವರ ವಿರುದ್ಧ ಮಸಲತ್ತು ಮಾಡುತ್ತಲೇ ಇದ್ದರು ಅಂದರೆ ಅದು ಕೂಡ ಸುಳ್ಳಲ್ಲ, ಆದರೆ ಸುಳಿವು ಈಗಾಗಲೇ ಅನೇಕ ಬಾರಿ ಕನ್ನಡಿಗರಿಗೆ ಸಿಕ್ಕಿದೆ.

ನಿನ್ನೆಯಿಂದ ವೈರಲ್ ಆದ ಒಂದು ವಿಡಿಯೋ ಮಾಧ್ಯಮಯವರು ದರ್ಶನ್ ಅವರ ಮೇಲೆ ಎಷ್ಟರಮಟ್ಟಿಗೆ ಕೋಪ ಇಟ್ಟುಕೊಂಡಿದೆ ಎನ್ನುವುದನ್ನು ನಿರೂಪಿಸುವಂತಿದೆ. ಆ ವೀಡಿಯೋದಲ್ಲಿರುವ ಮಾತುಗಳು ದರ್ಶನ್ ಅವರ ಅಭಿಮಾನಿಗಳನ್ನು ಬಹಳ ಕೆರಳಿಸಿದ್ದು ಅದರ ಪರಿಣಾಮ ಇಂದು ಆ ವಾಹಿನಿಯ ನಿರೂಪಕ ದರ್ಶನ್ ಹಾಗೂ ಅವರ ಅಭಿಮಾನಿಗಳ ಬಳಿ ಕ್ಷಮೆ ಕೇಳುವಂತೆ ಮಾಡಿದೆ.

ಇಷ್ಟಕ್ಕೂ ನಡೆದಿರುವುದು ಏನು ಎಂದರೆ ನೆನ್ನೆ ಕನ್ನಡ ಸುದ್ದಿ ಮಾಧ್ಯಮ ಸುವರ್ಣ ನ್ಯೂಸ್ ಚಾನೆಲ್ (Suvarna news ) ಗೆ ಒಂದು ಗಿಫ್ಟ್ ಬಾಕ್ಸ್ ಬಂದಿತ್ತು. ಸ್ಟುಡಿಯೋ ಮುಂದೆ ನಿಂತು ಸಿಬ್ಬಂದಿಗಳೆಲ್ಲಾ ಸೇರಿ ಆ ಗಿಫ್ಟ್ ಬಾಕ್ಸ್ ಅನ್ನು ಓಪನ್ ಮಾಡುತ್ತಿದ್ದರು. ಜೊತೆಗೆ ಕೆಲವರು ಒಳಗೆ ಏನಿರಬಹುದು ಎನ್ನುವ ವಿಷಯದ ಕುರಿತು ಕುತೂಹಲ ತೋರುತ್ತಿದ್ದರು.

ಅದರಲ್ಲಿದ್ದ ಒಬ್ಬರು ನಮಗಾಗಿ ಕ್ರಾಂತಿ ಸಿನಿಮಾದ ಟಿಕೆಟ್ ಗಳು ಬಂದಿರಬಹುದು ಎಂದು ಕೇಳಿದ್ದರೆ ಮತ್ತೊಬ್ಬರು ಇಲ್ಲ ದರ್ಶನ್ ಅವರ ತಲೆ ಬಂದಿದೆ ಎಂದು ತೀರ ತುಚ್ಚ ಮಟ್ಟದಲ್ಲಿ ಮಾತನಾಡಿದ್ದಾರೆ. ಮತ್ತೊಬ್ಬ ಇಲ್ಲ ಚಪ್ಪಲಿ ಬಂದಿರಬಹುದು ಎಂದು ಸಹ ಹೇಳಿದ್ದಾರೆ ಇದೆಲ್ಲವೂ ದರ್ಶನ್ ಅವರಿಗೆ ಸಂಬಂಧಪಟ್ಟ ಮಾತಾಗಿದ್ದು. ಎಲ್ಲದಕ್ಕಿಂತ ದರ್ಶನ್ ಅವರ ತಲೆ ಬಂದಿರಬಹುದು ಎಂದು ಆಡಿದ ಮಾತುಗಳು ದರ್ಶನ್ ಅವರ ಅಭಿಮಾನಿಗಳನ್ನು ಕೆರಳಿಸಿದೆ.

ಇದಾದ ಬಳಿಕ ಅವರ ಸ್ಟುಡಿಯೋ ಬಳಿ ಹೋಗಿ ದರ್ಶನ್ ಫ್ಯಾನ್ಸ್ ಪ್ರತಿಭಟನೆ ಮಾಡಿದ್ದು ಇದೆ. ಒಂದು ಜವಾಬ್ದಾರಿ ಸ್ಥಾನದಲ್ಲಿರುವ ಸಮಾಜದ ಆಗು ಹೋಗುಗಳನ್ನು ಜನರ ಮುಂದೆ ತಂದು ಪ್ರತಿನಿಧಿಸುವ ಮಾಧ್ಯಮ ಪ್ರತಿನಿಧಿಗಳು ಒಬ್ಬ ವ್ಯಕ್ತಿಯ ಸಾ.ವಿ.ನ ಬಗ್ಗೆ ನಿರೀಕ್ಷಿಸುತ್ತಾರೆ ಎಂದರೆ ಅದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಮಾತು. ಅವರವರ ನಡುವಿನ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಕನ್ನಡದ ಒಬ್ಬ ಸ್ಟಾರ್ ನಟನ ಬಗ್ಗೆ ಈ ರೀತಿ ಮಾತಾಡಿದ್ದು ಎಲ್ಲರಿಗೂ ಬೇಸರ ತರಿಸಿದೆ.

ಇದು ವೈರಲ್ ಆಗುತ್ತಿದ್ದಂತೆ ತಮ್ಮ ತಪ್ಪನ್ನು ಅರಿತುಕೊಂಡ ಸುವರ್ಣ ನ್ಯೂಸ್ ಚಾನೆಲ್ ನಿರೂಪಕರೊಬ್ಬರು ಮತ್ತೊಂದು ವಿಡಿಯೋ ಮಾಡಿ ಕ್ಷಮೆ ಕೇಳಿದ್ದಾರೆ. ಸುವರ್ಣ ಸುದ್ದಿ ವಾಹಿನಿ ಹಿರಿಯ ನಿರೂಪಕರಾದ ಜಯಪ್ರಕಾಶ್ ಅವರು ಇಂದು ವಿಡಿಯೋ ಮಾಡಿ ದರ್ಶನ್ ಹಾಗೂ ಅವರ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ. ನಾವು ಎಂದು ಎಲ್ಲರನ್ನೂ ಒಗ್ಗೂಡಿಸುವ ಎಲ್ಲರ ಜೊತೆಗೆ ಇರುವ ಸಾಧ್ಯವಾದಷ್ಟು ಖುಷಿಯನ್ನು ಹಂಚುವ ಮನಸ್ಥಿತಿಯವರು ಆದರೆ ಯಾವುದೋ ವಿಷಯ ಘಳಿಗೆ ಅಂತಹ ಮಾತು, ಅಂತಹ ಘಟನೆ ನಡೆದು ಹೋಯಿತು ದಯವಿಟ್ಟು ಈ ಬಾರಿ ನಮ್ಮನ್ನು ಕ್ಷಮಿಸಿ ಎಂದು ಪೂರ್ವಕವಾಗಿ ಎಲ್ಲರ ಬಳಿ ಕ್ಷಮೆ ಕೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಕನ್ನಡತಿ ಧಾರಾವಾಹಿ ಮುಕ್ತಾಯ, ಇಂದು ಕೊನೆ ಎಪಿಸೋಡ್, ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು.

 

ಕನ್ನಡತಿ ಧಾರಾವಾಹಿ ಮುಕ್ತಾಯ, ಪ್ರೇಕ್ಷಕರ ಮನಗಿದ್ದ ಅಂಶಗಳು ಇವು. ಜನಪ್ರಿಯ ಕನ್ನಡತಿ (Kannadathi) ಧಾರಾವಾಹಿಯ ಮುಕ್ತಾಯಗೊಂಡಿದೆ. ಅಂತಿಮ ಎಪಿಸೋಡ್ಗಳು ಪ್ರಸಾರ ಆಗುತ್ತಿದ್ದು, ಈ ವಾರದಲ್ಲೇ ಕೊನೆಗೊಳ್ಳುವ ಸ್ಪಷ್ಟತೆ ಸಿಕ್ಕಿದೆ. ಸುಮಾರು 800 ಎಪಿಸೋಡ್‌ಗಳನ್ನು ಕಂಡಿದ್ದ ಕನ್ನಡದ ಹೆಸರಾಂತ ಧಾರಾವಾಹಿಯು ಒಳ್ಳೆ ಕ್ಲೈಮ್ಯಾಕ್ಸ್ ಒಂದಿಗೆ ಎಂಡ್ ಆಗುತ್ತಿದ್ದೆ. ಇಷ್ಟು ದಿನ ಪ್ರೇಕ್ಷಕ ಪ್ರಭುಗಳು ಏಳುವರೆಗೆ ಟಿವಿ ಮುಂದೆ ಬಂದು ಕೂರುವಂತೆ ಹಿಡಿದಿಟ್ಟುಕೊಂಡಿದ್ದ ಈ ಧಾರಾವಾಹಿಯಲ್ಲಿ ಜನರಿಗೆ ಇಷ್ಟವಾದ ಅಂಶಗಳು ಯಾವುದು ಎಂದರೆ ಕನ್ನಡಕ್ಕೆ ಕೊಟ್ಟಿರುವ ಆದ್ಯತೆ.

ಹೆಸರೇ ಕನ್ನಡತಿ ಎಂದು ಇರುವಂತೆ ಧಾರಾವಾಹಿಯಲ್ಲಿ ನಾಯಕ ನಟಿ ಕನ್ನಡದ ಟೀಚರ್ ಆಗಿದ್ದಾರೆ. ಜೊತೆಗೆ ಕನ್ನಡ ಎಂದರೆ ಈಕೆಗೆ ಅಷ್ಟು ಇಷ್ಟ. ಧಾರಾವಾಹಿ ಶುರುವಾದ ದಿನದಿಂದಲೂ ಈಕೆ ತುಂಬಾ ಸ್ಪಷ್ಟವಾಗಿ ಹೆಮ್ಮೆಯಿಂದ ಕನ್ನಡವನ್ನೇ ಮಾತನಾಡಿಕೊಂಡು ಬಂದಿದ್ದಾರೆ. ಹಾಗಾಗಿ ಈ ಧಾರಾವಾಹಿ ಕನ್ನಡ ಅಭಿಮಾನಿಗಳ ಮನವನ್ನು ಕೂಡ ಸೆಳೆದಿದೆ. ಧಾರವಾಹಿಯ ಕಥೆ ,ಹಸಿರುಪೇಟೆಯ ಹಳ್ಳಿ ಹುಡುಗಿಯಾದ ಭುವನೇಶ್ವರಿ (Bhuvaneshwari) ಅಲಿಯಾಸ್ ಸೌಪರ್ಣಿಕ (Souparnika) ಎನ್ನುವ ಈಕೆ ಕುಟುಂಬದ ಜವಾಬ್ದಾರಿ ಹೊತ್ತುಕೊಂಡು ಬೆಂಗಳೂರಿಗೆ ಬಂದು ಮಾಡರ್ನ್ ಹುಡುಗ ಹರ್ಷನ (Harsha) ಪರಿಚಯವಾಗುವುದು.

ಜೊತೆಗೆ ಭುವಿ ಸ್ನೇಹಿತೆ ವರುಧಿನಿ ಹರ್ಷನನ್ನು ಪ್ರೀತಿಸುವುದು. ಹೀರೋಗಿಂತ ಮುಂಚೆ ಅವರ ತಾಯಿ ಭುವನೇಶ್ವರಿ ಗೆ ಹತ್ತಿರವಾಗಿರುವುದು, ಕೊನೆಗೆ ಎಲ್ಲಾ ಅಡೆತಡೆಗಳ ನಡುವೆ ಭುವನೇಶ್ವರಿ ಬಂದು ಹರ್ಷನ ಮನೆ ಸೇರುವುದ. ಹರ್ಷನ ತಮ್ಮನ ಹೆಂಡತಿ ಸಾನಿಯಾ ಸಿ.ಇ.ಓ ಪಟ್ಟದ ಆಸೆಯಿಂದ ಹರ್ಷ ಹಾಗೂ ಭುವನೇಶ್ವರಿ ಮೇಲೆ ಕತ್ತಿ ಮಸೆಯುವುದು. ಪ್ರಾಣ ಸ್ನೇಹಿತ ಹಾಗೂ ಪ್ರೀತಿಸಿದ ಹುಡುಗನ ಮದುವೆ ಮುರಿಯಲು ವರುಧಿನಿ ಒದ್ದಾಡುವುದು. ಇದೆಲ್ಲವೂ ಬಹಳ ಕುತೂಹಲ ಮೂಡಿಸಿ ಇಷ್ಟು ದಿನ ಪ್ರೇಕ್ಷಕರನ್ನು ಮನೋರಂಜಿಸಿತ್ತು.

ಜೊತೆಗೆ ಈ ಎಲ್ಲಾ ಧಾರಾವಾಹಿಯಲ್ಲಿ ನಟಿಸಿರುವ ಕಲಾವಿದರುಗಳು ಆಯಾ ಪಾತ್ರಗಳಿಗೆ ಜೀವ ತುಂಬಿ ತುಂಬಾ ಸಹಜವಾಗಿ ನಟಿಸಿರುವುದು ಕೂಡ ಕನ್ನಡತಿಯ ಒಂದು ಪ್ಲಸ್ ಪಾಯಿಂಟ್ ಹರ್ಷ ಪಾತ್ರಧಾರಿಯಾಗಿ ಕಾಣಿಸಿಕೊಂಡಿರುವ ಕಿರಣ್ ರಾಜ್ (Kiran raj) ಮತ್ತು ಭುವನೇಶ್ವರಿ ರಂಜನಿ ರಾಘವನ್ (Ranjani Raghavan) ಇವರಿಬ್ಬರ ಕೆಮಿಸ್ಟ್ರಿ ಸಹ ಬಹಳ ಚೆನ್ನಾಗಿ ವರ್ಕ್ ಆಗಿದ್ದು. ಹವಿ (Havi) ಜೋಡಿ ಎಂದೇ ಫೇಮಸ್ ಆಗಿದ್ದಾರೆ. ಇವರಿಬ್ಬರ ಜೋಡಿಗೆ ದೊಡ್ಡ ಅಭಿಮಾನಿ ಬಳಗವೇ ಇದ್ದು ಇದುವರೆಗೆ ಪುಟ್ಟಗೌರಿ ಆಗಿ ಫೇಮಸ್ ಆಗಿದ್ದ ರಂಜನಿ ರಾಘವನ್ ಅವರನ್ನು ಕನ್ನಡತಿ ಇಮೇಜ್ ಗೆ ಧಾರಾವಾಹಿ ಬದಲಾಯಿಸಿದೆ.

ಧಾರಾವಾಹಿ ಮತ್ತೊಂದು ಪ್ರಮುಖ ಪಾತ್ರ ಅಮ್ಮಮ್ಮ (Ammamma) ಹರ್ಷನ ತಾಯಿ ಆದ ಇವರು ಸಹ ಮಲೆನಾಡಿನ ಬಂದ ಬಂದು ಬೆಂಗಳೂರಿನಲ್ಲಿ ದೊಡ್ಡ ಕಾಫಿ ಶಾಪ್ ಓನರ್ ಆಗಿರುತ್ತಾರೆ. ಜೊತೆಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿರುತ್ತಾರೆ. ಚಿತ್ಕಲ ಬಿರಾದರ್ (Chithkala Biradar) ಎನ್ನುವ ಕಲಾವಿದೆ ಅಭಿನಯಿಸಿದ ರತ್ನಮಾಲ (Rathnamala) ಎನ್ನುವ ಈ ಪಾತ್ರ ಕೂಡ ಎಲ್ಲರ ಮನಸ್ಸಿನ ಮೇಲೆ ಗಂಭೀರವಾದ ಪರಿಣಾಮ ಬೀರಿತು.

ಸಾನಿಯಾ ಹಾಗೂ ವರುಧಿನಿ ಎನ್ನುವ ವಿಲನ್ ಪಾತ್ರಗಳು ಜನರಿಗೆ ಬಹಳ ಇಷ್ಟ ಆಗಿವೆ ಇದುವರೆಗೆ ಖಡಕ್ ಅತ್ತೆಯನ್ನು ಅಥವಾ ಹೀರೋ ತಾಯಿ ಅಥವಾ ಚಿಕ್ಕಮ್ಮನೋ ವಿಲನ್ ಆಗಿ ಇರುತ್ತಿದ್ದ ಧಾರಾವಾಹಿಗಳಿಗೆ ಸ್ವಲ್ಪ ವಿಭಿನ್ನವಾಗಿ ಯಂಗ್ ವಿಲನ್ ಗಳಾಗಿ ಸಾನಿಯಾ (Saniya) ಪಾತ್ರದಲ್ಲಿ ಆರೋಹಿ (Arohi) ಮತ್ತು ವರು (Varudhini) ಪಾತ್ರದಲ್ಲಿ ಸಾರ ಅಣ್ಣಯ್ಯ (Sara Annayya) ಅವರು ಅಭಿನಯಿಸಿರುವುದು ಧಾರಾವಾಹಿಗೆ ಹೊಸ ಅಟ್ರಾಕ್ಷನ್ ಅನ್ನು ನೀಡಿತ್ತು.

ಮತ್ತೊಂದು ಹೆಮ್ಮೆಯ ವಿಚಾರ ಏನು ಎಂದರೆ ಈ ಧಾರಾವಾಹಿಯು ಹಿಂದಿಯಲ್ಲಿ (Hindi) ಮತ್ತು ಮರಾಠಿಯಲ್ಲಿ (Marati) ಕೂಡ ಡಬ್ (dub) ಆಗಿದೆ. ಮರಾಠಿಯಲ್ಲಿ ಭಾಗ್ಯ ದಿಲೆ ತು ಮಲ ಎನ್ನುವ ಹೆಸರಿನಲ್ಲಿ ಮತ್ತು ಹಿಂದಿಯಲ್ಲಿ ಅಬ್ಜನಿ ಬನ್ನಿ ಹಮ್ಸಫರ್ ಎನ್ನುವ ಹೆಸರಿನಲ್ಲಿ ಪ್ರಸಾರಗೊಳ್ಳುತ್ತಿವೆ. ಅಲ್ಲಿಯೂ ಸಹ ಅಲ್ಲಿನ ಪ್ರೇಕ್ಷಕರಿಗೆ ಬಹಳ ಇಷ್ಟವಾದ ದಾರಾವಾಹಿ ಆಗಿದೆ. ಇಷ್ಟು ದಿನ ಮನೋರಂಜಿಸಿದ್ದ ಈ ಧಾರಾವಾಹಿ ಈಗ ಮುಕ್ತಾಯ ಆಗುತ್ತಿರುವುದು ಹಲವರ ಬೇಸರಕ್ಕೂ ಕಾರಣವಾಗಿದೆ. ಕನ್ನಡತಿ ಧಾರಾವಾಹಿ ಮುಕ್ತಾಯವಾಗುತ್ತಿರುವುದು ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ ಈ ಧಾರಾವಾಹಿಯನ್ನು ಇನ್ನೂ ಮುಂದುವರಿಸಬೇಕಿತ್ತ ಅಥವಾ ಕೊನೆಗೊಂಡಿದೆ ಒಳಿತಾಯಿತಾ.?

ಉರ್ಫಿಯನ್ನು ನೀನು ದೈವಾಂಶ ಸಂಭೂತೆ ಎಂದು ಕರೆದು ಅಕ್ಕಮಹಾದೇವಿಗೆ ಹೋಲಿಕೆ ಮಾಡಿದ ನಟಿ ಕಂಗಾನ ರಣವತ್.

0

ನೀನು ದೈವಾಂಶ ಹೊಂದಿದವಳು ನಿನ್ನ ದೇಹದ ಬಗ್ಗೆ ನಿಂದಿಸಲು ಯಾರಿಗೂ ಅವಕಾಶ ಕೊಡಬೇಡ, ಉರ್ಫಿಗೆ ಪಾಠ ಮಾಡಲು ಅಕ್ಕ ಮಹಾದೇವಿಯ ಹೆಸರನ್ನು ತೆಗೆದುಕೊಂಡ ಕಂಗನಾ ರಣಾವತ್. ಬಾಲಿವುಡ್ ನಟಿ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಕಂಗನಾ ರಣಾವತ್ (Kangana Ranavath) ಅವರು ದೇಶದ ಆಗು ಹೋಗುಗಳ ಬಗ್ಗೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುವ ಟ್ರೆಂಡಿಂಗ್ ವಿಚಾರಗಳ ಬಗ್ಗೆ ಹೀಗೆ ಸದಾ ಒಂದಲ್ಲ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡುವ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಈ ಬಾರಿ ಹೊಸ ಬಗೆಯ ಟ್ವೀಟ್ ಒಂದನ್ನು ಮಾಡಿ ಸಂಚಲನ ಸೃಷ್ಟಿಸಿದ್ದಾರೆ ಇವರು ಈಗ ಧ್ವನಿ ಎತ್ತಿ ಮಾತನಾಡಿರುವುದು ಉರ್ಫಿ ಜಾವೇದ್ (Urfi javed) ಬಗ್ಗೆ.

ಸೋಶಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ಬಟ್ಟೆಗಳ ಫ್ಯಾಷನ್ ಕಾರಣದಿಂದಾಗಿ ಸದಾ ಟ್ರೋಲ್ ಆಗುತ್ತಲ್ಲೇ ಇರುವ, ಈ ರೀತಿ ಬಟ್ಟೆ ಹಾಕುವುದೇ ತನ್ನಿಷ್ಟ ಎನ್ನುವಂತೆ ಯಾರಿಗೂ ಕೇರ್ ಮಾಡದೆ ಇಂಚಿನಷ್ಟು ಬಟ್ಟೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಇದೇ ಕಾರಣಕ್ಕೆ ಹೀಗೆ ಸದಾ ವಿವಾದದಲ್ಲಿ ಇರುವ ಉರ್ಫಿ ಜಾವೇದ್ ಗೆ ಸೋಶಿಯಲ್ ಮೀಡಿಯಾದಲ್ಲಿ ಸದಾ ನೆಗೆಟಿವ್ ಕಾಮೆಂಟ್ ಗಳ ಸುರಿಮಳೆಯೇ ಬರುತ್ತಿರುತ್ತದ್ದೆ.

ಏಕೆಂದರೆ ಭಾರತೀಯ ಸಂಸ್ಕೃತಿಯನ್ನು ಈಕೆ ಹಾಳು ಮಾಡುತ್ತಿದ್ದಾಳೆ ಈ ರೀತಿ ತುಂಡುಗೆಗಳನ್ನು ತೊಟ್ಟು ರಸ್ತೆಯಲ್ಲಿ ಓಡಾಡುವುದು ಇಲ್ಲಿಯ ಸಂಸ್ಕೃತಿಯಲ್ಲ. ಇದೇನಿದ್ದರೂ ಸಿನಿಮಾಗಳಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಇರಬೇಕು ಹೊರತು ಬೇರೆ ಸಮಯದಲ್ಲಿ ನಾರ್ಮಲ್ ಇರಬೇಕು ಎಂದೇ ಹೆಚ್ಚಿನವರ ವಾದ. ಆದರೆ ಯಾರು ಎಷ್ಟೇ ಹೇಳಿದರು ಕೂಡ ಉರ್ಫಿ ಬದಲಾಗುತ್ತಿಲ್ಲ ಆಕೆ ಬಟ್ಟೆ ವಿಚಾರಕ್ಕಾಗಿ ಎನ್ನುವುದಕ್ಕಿಂತ ಬಟ್ಟೆ ಇಲ್ಲದಂತೆ ಇದ್ದಾರೆ ಎನ್ನುವಷ್ಟು ಚಿಕ್ಕದಾದ ಬಟ್ಟೆ ಹಾಕಿರುತ್ತಾರೆ.

ಬಿಗ್ ಬಾಸ್ ಕಂಟೆಸ್ಟೆಂಟ್ ಕೂಡ ಆಗಿದ್ದ ಉರ್ಫಿ ಜಾವೇದ್ ಫ್ಯಾಶನ್ ಗೆ ಬಾಲಿವುಡ್ ನ ಖ್ಯಾತ ನಟಿ ಕಂಗನ ರಣಾವತ್ ಬಾರಿ ಸಪೋರ್ಟ್ ಮಾಡಿದ್ದಾರೆ. ಮತ್ತೊಂದು ಆಶ್ಚರ್ಯಕರ ವಿಷಯ ಏನೆಂದರೆ ಕನ್ನಡದ ಕವಿಯತ್ರಿ ಹೆಸರು ಬಳಿಸಿಕೊಂಡು ಆಕೆಗೆ ಬುದ್ಧಿ ಹೇಳಿದ್ದಾರೆ. ಸಾಲುಗಟ್ಟಲೇ ಬರೆದು ಟ್ವೀಟ್ ಮಾಡಿರುವ ಇವರು ಕನ್ನಡದಲ್ಲಿ ಅಕ್ಕಮಹಾದೇವಿ (Akka Mahadevi) ಎನ್ನುವ ಕವಿಯತ್ರಿ ಇದ್ದಾರೆ.

ಕನ್ನಡದ ಶ್ರೇಷ್ಠ ಕವಿಯತ್ರಿ ಆಗಿ ಸಾಕಷ್ಟು ವಚನಗಳನ್ನು ಬರೆದಿರುವ ಅವರು ಬಟ್ಟೆಯನ್ನು ಧರಿಸುತ್ತಿರಲಿಲ್ಲ. ಕಾರಣ ಅವರ ಪತಿ ಗಿಂತ ಅವರು ಚೆನ್ನ ಮಲ್ಲಿಕಾರ್ಜುನನನ್ನು (Chenna Mallikarjuna) ಹೆಚ್ಚು ಇಷ್ಟ ಪಡುತ್ತಿದ್ದರು. ಆ ಕಾರಣಕ್ಕೆ ರಾಜನಾಗಿದ್ದ ಆತನ ಪತಿ ಈಶ್ವರನನ್ನೇ ಇಷ್ಟ ಪಡುವುದಾದರೆ ನನ್ನಿಂದ ಏನನ್ನು ತೆಗೆದುಕೊಂಡು ಹೋಗಬಾರದು ಎಂದು ವಾರ್ನ್ ಮಾಡಿದ್ದರಂತೆ. ಈ ಕಾರಣಕ್ಕಾಗಿ ಆಕೆ ಉಟ್ಟಿದ ಬಟ್ಟೆಯನ್ನು ಬಿಚ್ಚಿ ಅರಮನೆಯಿಂದ ಆಚೆ ಬಂದರು.

ಅಂದಿನಿಂದ ಎಂದೂ ಕೂಡ ಆಕೆ ಬಟ್ಟೆ ತೊಡಲೇ ಇಲ್ಲ. ಅದನ್ನು ಉದಾಹರಣೆ ತೆಗೆದುಕೊ ನಿನ್ನ ದೇಹದ ಬಗ್ಗೆ ಅಥವಾ ಬಟ್ಟೆಯ ಬಗ್ಗೆ ನಿಂದಿಸಲು ಯಾರಿಗೂ ಕೂಡ ಅವಕಾಶ ಮಾಡಿಕೊಡಬೇಡ ಅದು ನಿನ್ನ ಇಷ್ಟ ಎಂದು ಸಪೋರ್ಟ್ ಮಾಡಿದ್ದಾರೆ. ಇದಕ್ಕೆ ಉರ್ಫಿ ಜಾವೇದ್ ಅಕ್ಕ ನಾನು ಬಟ್ಟೆ ತೊಡುವುದರಿಂದಲೇ ಫೇಮಸ್ ಆಗಿರುವುದು. ನೀವು ಕೊಡುತ್ತಿರುವ ಸಲಹೆ ಉಲ್ಟಾ ಆಗಬಹುದು ಎನ್ನುವ ರೀತಿ ರೀ ಟ್ವೀಟ್ ಮಾಡಿದ್ದಾರೆ.

ಸದ್ಯಕ್ಕೆ ಉರ್ಫಿ ಜಾವೇದ್ ಅವರನ್ನೇ ಜನರು ಇಷ್ಟು ತರಾಟೆಗೆ ತೆಗಿದುಕೊಳ್ಳುತ್ತಿದ್ದಾರೆ, ಇನ್ನು ಸದಾ ವಿವಾದಾತ್ಮಕ ಹೇಳಿಕೆ ಕೊಡುವ ಕಂಗನ ರಣಾವತ್ ಅವತ್ತು ಉರ್ಫಿಯನ್ನು ದೈವಾಂಶ ಸಂಭೂತೆ ಎಂದು ಹೇಳಿ ಸಪೋರ್ಟ್ ಮಾಡಿರುವುದು ನೋಡಿ ಇದು ಇನ್ನಷ್ಟು ದೊಡ್ಡ ಮಟ್ಟಿಗೆ ತಿರುಗುತ್ತದೋ ಎಂದು ಕಾದು ನೋಡಬೇಕಾಗಿದೆ. ಎಲ್ಲರಿಗೂ ಅವರಿಷ್ಟದ ಬಟ್ಟೆ ತೊಡುವ ಸ್ವಾತಂತ್ರ್ಯ ಖಂಡಿತ, ಇದೆ ಆದರೆ ಅದು ಸ್ವೇಚ್ಛಾಚಾರ ಆಗಬಾರದು ಎನ್ನುವುದಷ್ಟೇ ಭಾರತೀಯರ ಇಚ್ಛೆ.

ನನ್ಗೇನ್ ನಾಯಿ ಕಚ್ಚಿದ್ಯಾ.? ಕ್ರಾಂತಿ ಸಿನಿಮಾ ಸಕ್ಸಸ್ ಕಾರ್ಯಕ್ರಮದಲ್ಲಿ ಸಿಡಿದೆದ್ದ ಡಿ-ಬಾಸ್. ಅಷ್ಟಕ್ಕೂ ದರ್ಶನ್ ಈ ಪರಿ ಕೋಪ ಮಾಡಿಕೊಳ್ಳಲು ಕಾರಣವೇನು ಗೊತ್ತ.?

ಬರೋಬ್ಬರಿ 22 ತಿಂಗಳ ನಂತರ ದರ್ಶನ್ (Darshan) ಅವರ ಸಿನಿಮಾ ತೆರೆ ಮೇಲೆ ಬಂದಿತ್ತು. ಸಿನಿಮಾ ಶುರುವಾದ ದಿನದಿಂದಲೂ ಕೂಡ ಸಾಕಷ್ಟು ವಿ’ವಾ’ದ, ಸಂ’ಘ’ರ್ಷ, ಅಡೆತಡೆಗಳನ್ನು ಎದುರಿಸಿತ್ತು. ಕೊನೆಗೂ ಅಂದುಕೊಂಡಂತೆ ಜನವರಿ 26ರಂದು ಸಿನಿಮಾ ರಿಲೀಸ್ ಆಯ್ತು. ದರ್ಶನ್ ಅಭಿಮಾನಿಗಳ ಪಾಲಿಗಂತೂ ತಡೆಯಲಾರದಷ್ಟು ಸಂಭ್ರಮ. ಜೊತೆಗೆ ಕನ್ನಡ ಶಾಲೆ ಮತ್ತು ಸರ್ಕಾರಿ ಶಾಲೆಗಳ ಬಗ್ಗೆ ಸಂದೇಶ ಹೊತ್ತು ತಂದ ಸಿನಿಮಾ ಆದಕಾರಣ ಸಾಮಾಜಿಕ ಕಳಕಳಿ ಇರುವ ಚಿತ್ರ ಎಂದೇ ಕ್ರಾಂತಿ (Kranti) ಬಿಂಬಿತವಾಗಿತ್ತು.

ಚಿತ್ರ ರಿಲೀಸ್ ಆಗುವ ಎರಡು ತಿಂಗಳ ಹಿಂದಿನಿಂದಲೇ ಚಿತ್ರತಂಡ ಕೊಟ್ಟ ಸಂದರ್ಶನಗಳು ಮತ್ತು ಮಾಡಿದ ಪ್ರಚಾರ ವರ್ಕ್ ಆದ ಕಾರಣ ಹೆಚ್ಚಿನ ಜನರಿಗೆ ಸಿನಿಮಾ ಕುರಿತು ಕುತೂಹಲವು ಹೆಚ್ಚಾಗಿತ್ತು, ವಿಷಯವು ತಲುಪಿತ್ತು. ಒಂದರ್ಥದಲ್ಲಿ ಸಿನಿಮಾ ಗೆದ್ದಿತ್ತು ಎಂದು ಹೇಳಬಹುದು. ಇನ್ನು ಗಳಿಕೆ (Collection) ವಿಚಾರದಲ್ಲಿ ಹೇಳುವುದಾದರೆ ಸಿನಿಮಾ ಈಗಾಗಲೇ 109 ಕೋಟಿ ಗಳಿಸಿದೆ ಎನ್ನುವ ಲೆಕ್ಕಾಚಾರವನ್ನು ಚಿತ್ರ ತಂಡ ಕೊಟ್ಟು ಅದರ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಮಾಡುತ್ತಿದೆ.

ದರ್ಶನ್ ಅವರು ಮೊದಲಿನಿಂದಲೂ ತಮ್ಮ ಸಿನಿಮಾ ಗೆದ್ದಾಗ ಈ ರೀತಿ ಒಂದು ಸೆಲೆಬ್ರೇಶನ್ ಮಾಡುತ್ತಾರೆ. ಅಂತಿಯೇ ಈ ಸಿನಿಮಾಗೂ ಕೂಡ ಎಲ್ಲಾ ಸೆಲೆಬ್ರಿಟಿಗಳನ್ನು ಕಳಿಸಿ ಸಂತೋಷ ಕೂಟ ನಡೆಸಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್ ಬರುತ್ತಿದೆ. ಸ್ವತಃ ಚಿತ್ರ ತಂಡ ಸ್ಪಷ್ಟನೆ ಕೊಟ್ಟರು ಒಪ್ಪದ ಮಂದಿ ನೆಗೆಟಿವ್ ಕಾಮೆಂಟ್ ಮಾಡಿ ಇದೆಲ್ಲ ಸುಳ್ಳು ಎನ್ನುತ್ತಿದ್ದಾರೆ. ಈಗ ಈ ಸಂಭ್ರಮದಲ್ಲಿ ದರ್ಶನ್ ಅವರೇ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದು ಈ ರೀತಿ ಕಲೆಕ್ಷನ್ವಿಚಾರದಲ್ಲಿ ಜನರು ಹೇಳುತ್ತಿರುವ ನೆಗೆಟಿವ್ ಕಾಮೆಂಟ್ಗಳಿಗೆ ಸರಿಯಾದ ರೀತಿಯಲ್ಲಿ ಉತ್ತರ ನೀಡಿದ್ದಾರೆ.

ಒಂದು ಸಿನಿಮಾ ಗೆಲ್ಲುತ್ತದಾ ಅಥವಾ ಸೋಲುತ್ತದಾ ಎನ್ನುವುದು ಮೊದಲ ದಿನದ ಶೋ ಅಲ್ಲೇ ಗೊತ್ತಾಗಿ ಬಿಡುತ್ತದೆ. ಕುದುರೆ ಗೆಲ್ಲುತ್ತದಾ ಇಲ್ಲ ಬಿದ್ದು ಹೋಗುತ್ತದಾ ಎನ್ನುವುದು ಆಗಲೇ ಡಿಸೈಡ್ ಆಗುತ್ತದೆ. ಏನೋ ಸ್ವಲ್ಪ ಕುಂಟುತ್ತಾ ಇದ್ದರೆ ಸರಿ ಮಾಡಬಹುದು ಎನ್ನುವ ವಿಶ್ವಾಸ ಇರುತ್ತದೆ. ಆದರೆ ಅದು ಸತ್ತು ಹೋದರೆ ಸಮಯ ವ್ಯರ್ಥ ಅಲ್ಲವಾ? ನನ್ನ ಸಿನಿಮಾದ ಉದಾಹರಣೆ ಹೇಳುವುದಾದರೆ ನನ್ನ 25ನೇ ಸಿನಿಮಾ ಆಗಿದ್ದ ಭೂಪತಿ ಸಿನಿಮಾ ಮ್ಯಾಟನಿ ಶೋ ಅಲ್ಲೇ ಬಿದ್ದು ಹೋಯಿತು. ಅಂದು ನಾನು ಯಾವ ಸೆಲೆಬ್ರೇಶನ್ ಕೂಡ ಮಾಡಲಿಲ್ವಲ್ಲ ಮತ್ತು ನಾನು ಅಂದು ಏನನ್ನು ಸಹ ಹೇಳಲಿಲ್ಲವಲ್ಲ ಆದರೆ ಸಿನಿಮಾ ಗೆದ್ದಾಗ ಅದನ್ನು ಸೆಲೆಬ್ರೇಟ್ ಮಾಡಲೇಬೇಕು.

ಈಗ ಇವರು ಇಷ್ಟೆಲ್ಲ ಅರೇಂಜ್ ಮಾಡಿದಾಗ ಒಂದು ಪಕ್ಷ ಸಿನಿಮಾ ಅಷ್ಟು ಕಲೆಕ್ಷನ್ ಮಾಡಿಲ್ಲ ಅಥವಾ ಸೋತಿದೆ ಎಂದಿದ್ದರೆ ನಾನೇ ಹೇಳುತ್ತಿದ್ದೇನೆ. ಈ ರೂಮ್ ರೆಂಟ್ ಇಷ್ಟೆಲ್ಲ ಆರ್ಟಿಸ್ಟ್ ಗಳನ್ನು ಕರೆಸುವ ಖರ್ಚು ಇದೆಲ್ಲಾ ಒಬ್ಬರಿಗೆ ಹೊರೆ ಮಾಡಲು ನನಗೆ ಇಷ್ಟ ಇಲ್ಲ. ಮೊದಲಿಗೆ ನಾನೇ ಇಲ್ಲಿ ಬರುತ್ತಿಲ್ಲ. ಇಲ್ಲಿ ಬಂದು ಈ ರೀತಿ ಮಾತನಾಡುವುದಕ್ಕೆ ನನಗೇನು ಹುಚ್ಚು ನಾಯಿ ಕಚ್ಚಿದೆಯಾ ಆದರೆ ಸಿನಿಮಾ ನೋಡಿ ಒಂದಷ್ಟು ಜನ ಒಳ್ಳೆ ಮಾತುಗಳನ್ನ ಆಡುತ್ತಿದ್ದಾರೆ.

ಎಷ್ಟೋ ವರ್ಷಗಳಿಂದ ಸಿನಿಮಾ ನೋಡದ ಫ್ಯಾಮಿಲಿಗಳು ಬಂದು ಒಳ್ಳೆ ವಿವ್ಯೂ ಕೊಡುತ್ತಿದ್ದಾರೆ. ಅವರಿಗೆಲ್ಲಾ ಗೌರವ ಕೊಡಲೇಬೇಕು ಅಂತವರಿಗೆಲ್ಲ ಧನ್ಯವಾದ ಹೇಳುತ್ತೇನೆ. ವಿವ್ಯೂ ನಾವೇನು ಮನೆಯಲ್ಲಿ ಕೂತ್ಕೊಂಡು ಬರೆದಿಲ್ಲಾ ಅಲ್ವಾ ಎಂದು ನೆಗೆಟಿವ್ ವಿಮರ್ಶೆ ಕೊಡುವವರಿಗೆ ದರ್ಶನ್ ಖಡಕ್ ಮಾತುಗಳಿಂದ ಟಾಂಗ್ ನೀಡಿದ್ದಾರೆ. ಕೆಲವು ನಿಟ್ಟಿಗರು ಕ್ರಾಂತಿ ಸಿನಿಮಾ 109 ಕೋಟಿ ಕಲೆಕ್ಷನ್ ಮಾಡಿಲ್ಲ ಎಂದು ಹೇಳುತ್ತಿದ್ದಾರೆ.

ಈ ಮಾತಿನಿಂದ ಮನನೊಂದಂತಹ ದರ್ಶನ್ ಅವರು ಖಡಕ್ಕಾಗಿ ನಮಗೇನು ನಾಯಿ ಕಚ್ಚಿದೆಯಾ ಈ ರೀತಿ ಬಂದು ಸಕ್ಸಸ್ ಪಾರ್ಟಿ ಮಾಡುವುದಕ್ಕೆ ಎಂದು ಹೇಳಿದ್ದಾರೆ. ಅದೇನೆ ಆಗಲಿ ಸದ್ಯಕ್ಕಂತೂ ಯಾವುದೇ ಮೀಡಿಯಾ ಸಪ್ಪೋರ್ಟ್ ಇಲ್ಲದೆ ಏಕಾಂಗಿಯಾಗಿ ಹೋರಾಟ ಮಾಡಿ ದರ್ಶನ್ ಕ್ರಾಂತಿ ಸಿನಿಮಾವನ್ನು ಗೆಲ್ಲಿಸಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮೂಲಕ ತಿಳಿಸಿ.

ನೆನ್ನೆಯಷ್ಟೇ ಡೆ-ತ್ ನೋಟ್ ಬರೆದಿಟ್ಟು ಆ-ತ್ಮ-ಹ-ತ್ಯೆ ಮಾಡಿಕೊಳ್ಳುತ್ತೆನೆ ಅಂತ ಪೋಸ್ಟ್ ಹಾಕಿದ್ದ ಕೀರ್ತಿ, ಇಂದು ಇದ್ದಕ್ಕಿದ್ದ ಹಾಗೇ ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ ಏನದು ಗೊತ್ತ.?

0

 

ಕಿರುತೆರೆ ನಿರೂಪಕ, ನ್ಯೂಸ್ ಚಾನೆಲ್ ಆಂಕರ್ ಕನ್ನಡ ಸಿನಿಮಾ ನಾಯಕನಾಗಿ ಕೂಡ ಅದೃಷ್ಟ ಪರೀಕ್ಷಿಸಿಕೊಂಡಿದ್ದ ಕಿರಿಕ್ ಕೀರ್ತಿಯವರು (Kirik keerthy) ಇದ್ದಕ್ಕಿದ್ದಂತೆ ನೆನ್ನೆ ಅಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಆ.ತ್ಮ.ಹ.ತ್ಯೆ ಮಾಡಿಕೊಳ್ಳುವುದರ ಬಗ್ಗೆ, ಡೆ.ತ್ ನೋಟ್ (Death note) ಬಗ್ಗೆ ಕೆಲವು ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದರು. ಇವರು ಮಾಡಿದ್ದ ಆ ಪೋಸ್ಟ್ ಅಲ್ಲಿ ಹೀಗಿತ್ತು ನಿರ್ಧಾರ ಮಾಡಿದ್ದೆ ಈ ಜಗತ್ತನ್ನೇ ಬಿಟ್ಟು ಹೋಗಿಬಿಡಬೇಕು ಎಂದು ಇದಕ್ಕೆ ಹಲವಾರು ಕಾರಣಗಳು ಇವೆ.

ವೈಯಕ್ತಿಕ ಜೀವನದಲ್ಲಿ ಆದ ಕೆಲವು ಕಹಿ ಘಟನೆಗಳು ನನ್ನನ್ನು ಇನ್ನಿಲ್ಲವಾದಂತೆ ಕುಗ್ಗಿಸಿದೆ ಅದರಿಂದ ಹೊರಬರಲಾಗದೆ ಒದ್ದಾಡುತ್ತಿದ್ದೇನೆ. ಜೊತೆಗೆ ನನ್ನ ಯಾವ ಪ್ರಯತ್ನಗಳು ಕೂಡ ಕೈಗೂಡದೆ ಇರುವುದರಿಂದ ಬದುಕಿನ ಬಗ್ಗೆ ಒಂದು ರೀತಿಯ ಬೇಸರ ಮೂಡಿದೆ. ಹಾಗಾಗಿ ಯಾವುದರಲ್ಲೂ ಆಸಕ್ತಿಗೆ ಇಲ್ಲದೆ ಹೋಗಿದ್ದೇನೆ. ಜಿಹಾದಿಗಳಿಂದ ಕೂಡ ಕುಟುಂಬಕ್ಕೆ ಬೆ’ದ’ರಿ’ಕೆ ಕರೆಗಳು ಬರುತ್ತಿದ್ದು ಇದು ಇನ್ನಷ್ಟು ಕುಟುಂಬದ ಪರಿಸ್ಥಿತಿಯನ್ನು ಹದಗೆಡಿಸಿದೆ.

ಈ ಎಲ್ಲ ಸಮಸ್ಯೆಯಿಂದ ಮಾನಸಿಕವಾಗಿ ಖಿ’ನ್ನ’ತೆ’ಗೆ ಜಾರಿ ಸೋಶಿಯಲ್ ಮೀಡಿಯದಿಂದಲೂ ಸಹ ದೂರ ಉಳಿದುಕೊಂಡಿದ್ದೆ. ಆದರೆ ಈಗ ಅನಿಸುತ್ತಿದೆ ನಾನು ಈ ರೀತಿ ಹೆದರಿ ಎಲ್ಲೋ ಅಡಗಿ ಕುಳಿತುಕೊಂಡು ಬಿಟ್ಟರೆ ನನ್ನನ್ನು ಈ ಪರಿಸ್ಥಿತಿಗೆ ತಂದವರಿಗೆ ಉತ್ತರ ಹೇಳುವವರು ಯಾರು ಎಂದು. ನನ್ನನ್ನು ನಂಬಿ ನನ್ನ ಮೇಲೆ ಇನ್ವೆಸ್ಟ್ ಮಾಡಿರುವವರಿಗೆಲ್ಲ ನ್ಯಾಯ ಕೊಡುವವರು ಯಾರು ಎಂದು, ಜೊತೆಗೆ ನನ್ನ ಮಗನ ಭವಿಷ್ಯವನ್ನು ನಿರ್ವಹಿಸುವವರು ಯಾರು ಎಂದು ನನಗೆ ಪ್ರಶ್ನೆ ಮೂಡುತ್ತಿದೆ.

ಹಾಗಾಗಿ ಇದೆಲ್ಲವನ್ನು ಯೋಚಿಸುತ್ತಾ 10 ನಿಮಿಷ ಧ್ಯಾನ ಮಾಡುತ್ತಾ ಕುಳಿತು ಬಿಟ್ಟೆ ತಡವಾದರೂ ಪರವಾಗಿಲ್ಲ ನನ್ನ ಮೇಲೆ ನಂಬಿಕೆ ಇಟ್ಟಿರುವವರ ನಂಬಿಕೆ ಉಳಿಸಿಕೊಳ್ಳಬೇಕು ಎನಿಸುತ್ತಿದೆ. ಅದಕ್ಕಾಗಿ ಆದರೂ ಏನಾದರೂ ಸಾಧನೆ ಮಾಡಲೇಬೇಕು ಎನಿಸುತ್ತಿದೆ ಟೈಪ್ ಮಾಡಿದ್ದ ಆ ಡೆ’ತ್ ನೋಟ್ ಅನ್ನು ಡಿಲೀಟ್ ಮಾಡಿದೆ. ಜೀವನದಲ್ಲಿ ಎಲ್ಲವನ್ನು ಸರಿ ಮಾಡಲು ಆಗದಿದ್ದರೂ ಕೆಲವನ್ನಾದರೂ ಮತ್ತೆ ಟ್ರ್ಯಾಕಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.

ನಿಮ್ಮ ಬೆಂಬಲ ನನಗಿರಲಿ ಡಿ’ಪ್ರೆ’ಷ’ನಿಂದ ಹೊರ ಬಂದು ಮತ್ತೆ ನನ್ನ ಮುಖದಲ್ಲಿ ಮೊದಲ ನಗು ಬರುವ ತನಕ ನನಗೆ ಸಹಕರಿಸಿ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ವೈರಲಾಗುತ್ತಿದ್ದಂತೆ ಸಾಕಷ್ಟು ಜನ ಕಮೆಂಟ್ ಮಾಡಿ ನಿಮ್ಮೊಂದಿಗೆ ನಾವಿದ್ದೇವೆ ಏನಾದರೂ ಧೈರ್ಯದಿಂದ ಇರಿ ಎಂದು ಸಪೋರ್ಟ್ ಮಾಡುತ್ತಿದ್ದರೆ. ಅದಕ್ಕಿಂತಲೂ ಹೆಚ್ಚಿನ ಮಂದಿ ಇವರನ್ನು ಟ್ರೋಲ್ ಮಾಡಿದ್ದರು, ನೆಗೆಟಿವ್ ಆಗಿ ಕಮೆಂಟ್ ಮಾಡಿದ್ದರು ಅದಕ್ಕೆ ಈಗ ತಿರುಗೇಟು ಕೊಡಲು ಕೀರ್ತಿಯವರು ಮತ್ತೊಂದು ಪೋಸ್ಟ್ ಮಾಡಿದ್ದಾರೆ.

ಅದೆಷ್ಟೋ ಸಾವಿರ ಮೆಸೇಜ್ ಗಳು ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ. ಕೆಲವರು ನನ್ನನ್ನು ಇನ್ನಷ್ಟು ಕುಗ್ಗಿಸುವ ಪ್ರಯತ್ನ ಮಾಡಿದರೂ ಸಹ ಅದು ಈಗ ಉಪಯೋಗಕ್ಕೆ ಬಾರದು. ಯಾವ ನೆಗೆಟಿವಿಟಿ ಮತ್ತು ಟ್ರೋಲುಗಳು ನನ್ನ ಆತ್ಮವಿಶ್ವಾಸ ಕುಗ್ಗಿಸಲಾರವು. ಯಾಕೆಂದರೆ ನಾನೀಗ ಬಿದ್ದು ನೊಂದು ಬೇಸತ್ತು ಎಲ್ಲವನ್ನು ಮರೆತು ಗೆದ್ದು ಬರಲು ತೀರ್ಮಾನ ಮಾಡಿದವನು. ಮತ್ತೆ ಸೋಲುವ ಭಯವಿಲ್ಲ, ಗೆಲ್ಲುವ ಛಲವಷ್ಟೇ ಇರುವುದು.

ಪ್ರೀತಿ ಹಾರೈಕೆ ಆಶೀರ್ವಾದ ಕೊಟ್ಟು ನನ್ನ ಹಠಕ್ಕೆ ಸಾತ್ ಕೊಟ್ಟ ಎಲ್ಲರಿಗೂ ಕೋಟಿ ಕೋಟಿ ಧನ್ಯವಾದಗಳು. ನೀವು ಇಟ್ಟ ನಂಬಿಕೆ ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಮತ್ತೆ ಪೋಸ್ಟ್ ಹಾಕುವ ಮೂಲಕ ತಾವೀಗ ನಿಜವಾಗಿಯೂ ಸರಿಯೋಗುತ್ತಿರುವುದರ ಸೂಚನೆ ನೀಡಿದ್ದಾರೆ. ಮೊನ್ನೆ ಸಾ.ಯು.ತ್ತೇ.ನೆ ಅಂದಿದ್ದ ವ್ಯಕ್ತಿ ಇಂದು ಬದುಕುತ್ತೇನೆ ಎನ್ನುತ್ತಿದ್ದಾರೆ ಕೀರ್ತಿ ಅವರ ಈ ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ನಟಿ ಮಾನ್ಯ ಬದುಕಿನಲ್ಲಿ ವಿಧಿ ಆಟ, ಬದುಕನ್ನೇ ನಾ-ಶ ಮಾಡಿದ ಸ್ಟ್ರೋಕ್ ಕಾಯಿಲೆ. ಸದ್ಯಕ್ಕೆ ಮಾನ್ಯ ಪರಿಸ್ಥಿತಿ ಈಗ ಹೇಗಿದೆ ಗೊತ್ತ.?

0

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenge star Darshan) ಮತ್ತು ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan) ಅಂತಹ ಖ್ಯಾತ ನಟರೊಂದಿಗೆ ನಾಯಕನಟಿ ಆಗಿ ಅಭಿನಯಿಸಿದ್ದ ಮಾನ್ಯ (Manya) ಎನ್ನುವ ಮುದ್ದು ಮುಖದ ಚೆಲುವೆ ಕನ್ನಡಿಗರಿಗೆಲ್ಲರಿಗೂ ನೆನಪಿದ್ದಾರೆ. ಮುದ್ದು ಮುದ್ದಾದ ಮಾತು, ಸ್ಪುರದ್ರೂಪಿ ಚೆಲುವು ಹಾಗೂ ಪಾತ್ರಕ್ಕೆ ತಕ್ಕ ಹಾಗೆ ಸಹಜವಾಗಿ ಅಭಿನಯಿಸುವ ಟ್ಯಾಲೆಂಟ್ ಇದೆ ಕಾರಣಕ್ಕಾಗಿ ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೇ ಪರಭಾಷೆ ಸಿನಿಮಾಗಳಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿದ್ದರು ಈಕೆ.

ಇಷ್ಟೆಲ್ಲ ಹೆಸರು ಮಾಡಿರುವ ಇವರು ಅಲ್ಲಿ ತನಕ ಸವೆಸಿ ಬಂದಿದ್ದು ಹೂವಿನ ಹಾಸಿಗೆ ಅಂತ ಹಾದಿಯಲ್ಲಲ್ಲ, ಬದಲಾಗಿ ಬದುಕಿನ ಪೂರ್ತಿ ತುಳಿದಿದ್ದು ಹಾಗೂ ಈಗ ಬದುಕುತ್ತಿರುವುದು ಕೂಡ ಮುಳ್ಳಿನಂತಹ ಬದುಕು ಎಂದೇ ಹೇಳಬಹುದು. ಅಷ್ಟರಮಟ್ಟಿಗೆ ವಿಧಿ ನಟಿ ಮಾನ್ಯ ಅವರ ಬದುಕಿನಲ್ಲಿ ಆಟ ಆಡಿದೆ. ಮಾನ್ಯ ಅವರು ಚಿಕ್ಕ ವಯಸ್ಸಿನಿಗೆ ತಂದೆಯನ್ನು ಕಳೆದುಕೊಳ್ಳುತ್ತಾರೆ ಹಾಗಾಗಿ ತಾವು ಸಹ ಚಿಕ್ಕ ವಯಸ್ಸಿನಲ್ಲಿಯೇ ಕುಟುಂಬದ ಭಾರವನ್ನು ಹೊರಬೇಕಾಗುತ್ತದೆ.

ಓದಿನಲ್ಲಿ ಬಹಳ ಆಸಕ್ತಿ ಇದ್ದ ಇವರು ವಿದ್ಯಾಭ್ಯಾಸ ನಿಲ್ಲಿಸಿ ದುಡಿಯಲೇಬೇಕಾದ ಅನಿವಾರ್ಯತೆ ಇರುತ್ತದೆ. ಹಾಗಾಗಿ ಕೆಲಸ ಮಾಡುತ್ತ ನಟನೆಯತ್ತ ವಾಲಿದ ಇವರು ಹಲವು ವರ್ಷಗಳ ಕಾಲ ಇಂಡಸ್ಟ್ರಿಯಲ್ ಒಳ್ಳೊಳ್ಳೆ ಸಿನಿಮಾ ಮಾಡಿ ಹೆಸರು ಮಾಡಿದರು. ನಂತರ 2008ರಲ್ಲಿ ಮಲಯಾಳಂ ಸಿನಿಮಾ ಒಂದರಲ್ಲಿ ಅಭಿನಯಿಸಿ ಕೆರಿಯರ್ಗೆ ಗುಡ್ ಬೈ ಹೇಳಿ ವೈವಾಹಿಕ ಜೀವನದತ್ತ ಮುಖ ಮಾಡಿದರು.

2008ರಲ್ಲಿ ಸತ್ಯಪಟೇಲ್ (Sathya patel) ಎನ್ನುವವರನ್ನು ವಿವಾಹ ಆಗುತ್ತದೆ, ಕೊನೆವರೆಗೂ ಕೈ ಹಿಡಿದುಕೊಂಡೆ ಇರಬೇಕು ಎಂದು ಜೋಡಿ ಆದ ಇವರ ವಿವಾಹ ಅಷ್ಟೇ ಬೇಗ ವಿ-ಚ್ಛೇ-ದ-ನ-ದಲ್ಲಿ ಕೊನೆಗೊಳ್ಳುತ್ತದೆ. ಹೊಂದಾಣಿಕೆ ಸಮಸ್ಯೆ ಕಾರಣದಿಂದಾಗಿ 2013ರಲ್ಲಿ ವಿಚ್ಛೇದನ ಕೂಡ ಆಗುತ್ತದೆ. ಅದೇ ವರ್ಷ ಎರಡನೇ ಮದುವೆಯನ್ನು ಸಹ ಆಗುತ್ತಾರೆ. ವಿಕಾಸ್ ಬಚ್ಚಪೈ (Vikas Bachpe) ಅವರ ಜೊತೆ ಹೊಸ ಜೀವನ ಶುರು ಮಾಡಿದ ಇವರು ದೂರದ ಅಮೆರಿಕ (America) ದೇಶಕ್ಕೆ ಹೋಗಿ ನೆಲೆಸುತ್ತಾರೆ.

ನಂತರ ಇವರಿಗೆ ಬಾಲ್ಯದ ಕನಸಾಗಿದ್ದ ವಿದ್ಯಾಭ್ಯಾಸದ ಕಡೆ ಮನವಾಲುತ್ತದೆ. ಈಕೆ ಬರೋಬ್ಬರಿ 41 ಸಿನಿಮಾಗಳಲ್ಲಿ ನಾಯಕಿ ಆದ ಬಳಿಕ ಓದಲು ಶುರು ಮಾಡುತ್ತಾರೆ. ಆಕೆಯಲ್ಲಿದ್ದ ಆಸಕ್ತಿಯಿಂದ ಸ್ಯಾಟ್ (SAT) ಪರೀಕ್ಷೆಯನ್ನು ಪಾಸ್ ಮಾಡುತ್ತಾರೆ ನಂತರ ಐವಿ ಲೀಗ್ ಅಲ್ಲಿ ವಿದ್ಯಾಭ್ಯಾಸ ನಡೆಸುತ್ತಾರೆ. ನ್ಯಾಯಾರ್ಕ್ ನ ಪ್ರತಿಷ್ಠಿತ ಯುನಿವರ್ಸಿಟಿ ಅಲ್ಲೂ ಸಹ ವಿದ್ಯಾಭ್ಯಾಸ ಮಾಡುತ್ತಾರೆ ಆ ವೇಳೆಗಾಗಲೇ ಮುದ್ದಾದ ಹೆಣ್ಣು ಮಗುವಿಗೂ ಜನ್ಮ ನೀಡಿರುತ್ತಾರೆ.

ಬದುಕಿನಲ್ಲಿ ಎಲ್ಲವೂ ಚೆನ್ನಾಗಿರುತ್ತೆ ಇನ್ನೇನು ಆಕಾಶವೇ ಕೈಗೆ ಸಿಕ್ಕಷ್ಟು ಸಂಭ್ರಮ ಆದರೆ ಅಂತಹದ್ದೇ ಸಮಯದಲ್ಲಿ ಮತ್ತೊಂದು ಶಾಕ್ ಇವರಿಗೆ ಎದುರಾಗಿರುತ್ತದೆ. ಇದ್ದಕ್ಕಿದ್ದಂತೆ ಸ್ಟ್ರೋಕ್ (Stroke) ಗೆ ತುತ್ತಾದ ನಟಿ ಬರೋಬ್ಬರಿ ಎರಡು ವರ್ಷಗಳ ಕಾಲ ಹಾಸಿಗೆ ಮೇಲೆ ಮಲಗುವಂತಾಗಿ ಬಿಡುತ್ತದೆ. ಪ್ರತಿದಿನ ಕೂಡ ಇವರಿಗೆ ಸ್ಟೆರಾಯ್ಡ್ ಇಂಜೆಕ್ಷನ್ ಕೊಡಲಾಗುತ್ತದೆ. ಇಷ್ಟು ದಿನ ಲವಲವಿಕೆಯಿಂದ ಕುಣಿಯುತ್ತಿದ್ದ ನಟಿ ಎದ್ದು ನಡೆದಾಡಲು ಸಹ ಆಗಲಾರದ ಪರಿಸ್ಥಿತಿ.

ಆಗ ಕರೋನ ಆವರಿಸಿದ್ದ ಸಮಯ, ಆಪ್ತರನ್ನು ಸಹ ನೋಡುವಂತಿಲ್ಲ. ಆಗ ಆಕೆ ಕಳೆದ ಒಂದೊಂದು ಕ್ಷಣ ಕೂಡ ನರಕಮಯವಾಗಿತ್ತು. ಇದನ್ನೆಲ್ಲ ಸ್ವತಃ ನಟಿಯ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಸುಧಾರಿಸಿಕೊಂಡಿದ್ದು ತನ್ನ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ. ಜೊತೆಗೆ ತಾನು ಇದನ್ನು ಏನೋ ಸಾಧಿಸಿದೆ ಎನ್ನುವ ಕಾರಣಕ್ಕೆ ಹೇಳುತ್ತಿಲ್ಲ ಅಥವಾ ಸಿಂಪತಿ ಗಿಟ್ಟಿಸಿಕೊಳ್ಳಲು ಹೇಳುತ್ತಿಲ್ಲ.

ನನ್ನಂತೆ ಸಮಸ್ಯೆ ಎದುರಿಸುತ್ತಿರುವವರಿಗೆ ನನ್ನ ಕಥೆ ಸ್ಪೂರ್ತಿ ಆಗಬೇಕು ಎನ್ನುವ ಕಾರಣಕ್ಕೆ ಹೇಳುತ್ತಿದ್ದೇನೆ. ಆತ್ಮವಿಶ್ವಾಸ ಇದ್ದರೆ ಎಂತಹ ಸಾವನ್ನು ಬೇಕಾದರೂ ಎದುರಿಸಬಹುದು ಎನ್ನುವುದಕ್ಕೆ ನಾನೇ ಸಾಕ್ಷಿ ಎಂದು ಹೇಳಿದ್ದಾರೆ ಸದ್ಯಕ್ಕೆ ಇವರು ಗುಣಮುಖವಾಗುತ್ತಿರುವುದು ಅಭಿಮಾನಿಗಳಿಗೆಲ್ಲರಿಗೂ ಸಂತಸದ ಸುದ್ದಿ ಆಗಿದೆ.

ಎಲ್ಲಾ ನಟ ನಟಿಯರಿಗೂ ಸಂದರ್ಶನ ಮಾಡುವ ಅನುಶ್ರೀ ದರ್ಶನ್ ಗೆ ಮಾತ್ರ ಇದು ವರೆಗೂ ಒಂದು ಬಾರಿಯೂ ಸಂದರ್ಶನ ಮಾಡಿಲ್ಲ ಯಾಕೆ ಗೊತ್ತಾ.? ಕೊನೆಗೂ ಹೊರ ಬಿತ್ತು ಸತ್ಯ

0

ಆಂಕರ್ ಅನುಶ್ರೀ ಅವರು ರಿಯಾಲಿಟಿ ಶೋಗಳ ಸರದಾರೆ ಎನ್ನಬಹುದು. ಯಾಕೆಂದರೆ ಜೀ ಕನ್ನಡ(Zee kannada) ವಾಹಿನಿಯಲ್ಲಿ ಇದುವರೆಗೆ ಹಲವಾರು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟು ಬಂದಿರುವ ಇವರು ಕನ್ನಡ ಕಿರುತೆರೆ ಲೋಕದ ನಂಬರ್ ಒನ್ ನಿರೂಪಕಿ ಎನ್ನುವ ಸ್ಥಾನ ಗಿಟ್ಟಿಸಿ ಕೊಟ್ಟಿದ್ದಾರೆ. ಕಿರುತೆರೆ ರಿಯಾಲಿಟಿ ಶೋಗಳ ಜೊತೆಗೆ ಹಲವಾರು ಇವೆಂಟ್ಗಳನ್ನು ಕೂಡ ಕಿರುತೆರೆಯಲ್ಲಿ ನಡೆಸಿರುವ ಇವರು ಜೀ ಕನ್ನಡ ಜಾತ್ರೆ, ಜೀ ಕುಟುಂಬ ಅವಾರ್ಡ್ಸ್ ಮುಂತಾದ ಇನ್ನಿತರ ಕಾರ್ಯಕ್ರಮಗಳಿಗೂ ಹೋಸ್ಟ್ ಮಾಡಿದ್ದಾರೆ.

ಮುಂದುವರೆದು ಕೆಲವು ರಾಜಕೀಯ ಕಾರ್ಯಕ್ರಮಗಳು, ಆಡಿಯೋ ಲಾಂಚ್ಗಳು, ಟ್ರೈಲರ್ ರಿಲೀಸ್ ಮತ್ತು ಸರ್ಕಾರಿ ಕಾರ್ಯಕ್ರಮಗಳನ್ನು ಕೂಡ ನಿರೂಪಣೆ ಮಾಡಿರುವ ಅನುಶ್ರೀ ಅವರು ಇದೆಲ್ಲದರ ಜೊತೆಗೆ ತಮ್ಮದೇ ಆದ ಖಾಸಗಿ ಯೌಟ್ಯೂಬ್ ಚಾನೆಲ್ ಸಹ ಹೊಂದಿದ್ದಾರೆ. ಅದರಲ್ಲಿ ರಿಲೀಸ್ ಆಗುವ ಹೊಸ ಸಿನಿಮಾಗಳ ಕಲಾವಿದರನ್ನು ಕರೆಸಿ ಇಂಟರ್ವ್ಯೂ ಮಾಡುತ್ತಾರೆ.

ಅಪ್ಪು(Appu) ಅವರ ಅಪ್ಪಟ ಅಭಿಮಾನಿ ಆದ ಅನುಶ್ರೀ ಅವರು ಅಪ್ಪು ಅವರ ಲೋಗೋವನ್ನು(logo) ಕೂಡ ತಮ್ಮ ಚಾನೆಲ್ ಗೆ ಇಟ್ಟುಕೊಂಡಿದ್ದಾರೆ. ಜೊತೆಗೆ ಅಪ್ಪು ಅವರ ಯುವರತ್ನ(Yuvarathna) ಸಿನಿಮಾ ಕಾರ್ಯಕ್ರಮವನ್ನು ಮೊದಲ ಎಪಿಸೋಡ್ ಆಗಿ ಕೂಡ ಮಾಡಿದ್ದರು. ಶಿವಣ್ಣ, ಉಪೇಂದ್ರ, ರವಿಚಂದ್ರನ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಮುಂತಾದ ಅನೇಕ ನಟರ ಸಿನಿಮಾಗಳ ಪ್ರಚಾರ ಕಾರ್ಯವನ್ನು ತಮ್ಮ ಚಾನಲ್ ಅಲ್ಲಿ ಕಾರ್ಯಕ್ರಮ ಮಾಡುವುದರ ಮೂಲಕ ನಡೆಸಿಕೊಟ್ಟಿದ್ದಾರೆ.

ಆದರೆ ಇದುವರೆಗೆ ದರ್ಶನ್(Darshan) ಅವರ ಒಂದು ಇಂಟರ್ವ್ಯೂ ಕೂಡ ಅವರು ಮಾಡಿಲ್ಲ. ಈ ಬಗ್ಗೆ ಎಲ್ಲರಿಗೂ ಸಹ ಅನುಮಾನ ಉಂಟಾಗಿದ್ದು ಈಗ ಎಲ್ಲರೂ ಅನುಶ್ರೀ ಅವರ ಕಡೆ ನೋಡುತ್ತಿದ್ದಾರೆ. ಯಾಕೆಂದರೆ ಕ್ರಾಂತಿ(Kranthi) ಸಿನಿಮಾವು ಜನವರಿ 26ರಂದು ರಿಲೀಸ್ ಆಗುತ್ತಿದೆ ಮೀಡಿಯಾಗಳು ಬ್ಯಾನ್ ಆಗ್ ಮಾಡಿರುವ ಕಾರಣ ಹಲವು youtube ಚಾನೆಲ್ ಗಳು ದರ್ಶನ್ ಅವರನ್ನು ಇಂಟರ್ವ್ಯೂ ಕೊಡಿ ಎಂದು ಬೇಡಿಕೊಳ್ಳುತ್ತಿವೆ. ದರ್ಶನ್ ಹಾಗೂ ಅವರ ಚಿತ್ರ ತಂಡ ಈಗಾಗಲೇ ಸಾಕಷ್ಟು ಇಂಟರ್ವ್ಯೂ ಕೊಡುತ್ತಾ ಬಂದಿದೆ ಮತ್ತು ಎಲ್ಲರಿಗೂ ಸಂದರ್ಶನ ಕೊಡುವ ಭರವಸೆಯನ್ನು ನೀಡಿದೆ.

ದರ್ಶನ್ ಅವರು ಇಂಟರ್ವ್ಯೂ ಕೊಡುತ್ತಾರೆ ಎಂದರೆ ಎಲ್ಲರೂ ಸಾಲುಗಟ್ಟಿ ನಿಲ್ಲುತ್ತಾರೆ ಅಂತಹದರಲ್ಲಿ ಅನುಶ್ರೀ ಅವರು ಕ್ರಾಂತಿ ಸಿನಿಮಾದ ಬಗ್ಗೆ ಒಂದೇ ಒಂದು ಮಾಹಿತಿ ಕೂಡ ತಮ್ಮ ಯುಟ್ಯೂಬ್ ಚಾನೆಲ್ ಅಲ್ಲಿ ಹಾಕಿಲ್ಲ ಹಾಗೂ ದರ್ಶನ್ ಅವರನ್ನು ಇಂಟರ್ವ್ಯೂ ಮಾಡುವ ಕೆಲಸವನ್ನು ಮಾಡಿಲ್ಲ. ಹೀಗಾಗಿ ಅಪ್ಪು ಹಾಗೂ ದರ್ಶನ್ ಫ್ಯಾನ್ ವಾರ್ ಅನ್ನು ಅನುಶ್ರೀ ಅವರು ಸಹ ಮನಸ್ಸಿಗೆ ತೆಗೆದುಕೊಂಡಿದ್ದಾರಾ ಎನ್ನುವ ಅನುಮಾನಗಳನ್ನು ಇದು ಹುಟ್ಟು ಹಾಕುತ್ತಿದೆ.

ಮತ್ತೆ ಈಗಷ್ಟೇ ಆದ ಕನಕಪುರ ಉತ್ಸವ (kanakapur utsav) ಕಾರ್ಯಕ್ರಮದಲ್ಲಿ ಅವರು ನಡೆದುಕೊಂಡ ರೀತಿಯು ಇದಕ್ಕೆ ಹಿಡಿದ ಕೈಗನ್ನಡ ರೀತಿ ತೋರುತ್ತಿದೆ. ಕನಕಪುರ ಉತ್ಸವದಲ್ಲಿ ವೇದಿಕೆ ಮೇಲೆ ಹಾಡುಗಳು ಹಾಕುತ್ತಿದ್ದಂತೆ ಎಲ್ಲರೂ ಡಿ ಬಾಸ್(D.boss) ಪುಷ್ಪವತಿ(Pushpavathi) ಎಂದು ಕಿರುಚುತ್ತಿದ್ದರು. ಇದನ್ನು ಕೇಳಿದ ಅನುಶ್ರೀ ಅವರೊಂದಿಗೆ ವಿನಯವಾಗಿ ಮಾತನಾಡದೆ ಬಹಳ ಉಡಾಫೆ ಆಗಿ ಪರೋಕ್ಷವಾಗಿ ಟಾಂಗ್ ಕೊಡುವ ರೀತಿ ವೇದಿಕೆ ಮೇಲೆ ಮಾತನಾಡಿದರು.

ಯಾರು ಯಾರ ಫ್ಯಾನ್ ಆದರೂ ಅಡ್ಡಿ ಇಲ್ಲ ಆದರೆ ಇತರ ಸ್ಟಾರ್ ಗಳಿಗೂ ಕೂಡ ಸೆಲೆಬ್ರಿಟಿ ಆದವರು ಗೌರವ ಕೊಡಬೇಕು ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಇರುವ ಇವರೇ ಹೀಗೆ ನಡೆದುಕೊಂಡರೆ ಜನ ಸಾಮಾನ್ಯರಿಗೆ ಏನು ಹೇಳುತ್ತಾರೆ ಎನ್ನುವ ಪ್ರಶ್ನೆ ಇದರಿಂದ ಮೂಡುತ್ತದೆ. ಈ ಬಗ್ಗೆ ಸೃಜನ್ ಲೋಕೇಶ್(Srujan Lokesh) ಅವರು ಕೂಡ ಮಾತನಾಡಿದ್ದು ನನ್ನ ಗೆಳೆಯನ ಇಂಟರ್ವ್ಯೂ ಅನ್ನು ಯಾವುದೇ ನಿರೂಪಕರು ಮಾಡುವುದು ಬೇಡ ನಾನೇ ಮಾಡುತ್ತೇನೆ ಎಂದು ಅನುಶ್ರೀ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮೂಲಕ ತಿಳಿಸಿ.

ಆಕ್ಸಿ-ಡೆಂಟ್ ನಲ್ಲಿ ಸ್ವಾಧೀನ ಕಳೆದುಕೊಂಡಿದ್ದ ನಟಿ ರಿಷಿಕಾ ಈಗ ಹೇಗಿದ್ದಾರೆ ಗೊತ್ತ.? ಗುರುತೇ ಸಿಗದಷ್ಟು ಬದಲಾವಣೆ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ ಹೇಗಿದ್ದ ನಟಿ ಹೇಗಾದ್ರು.!

0

ಹೀರೋಯಿನ್ ಆಗಿ ಮಿಂಚಿದ್ದ ಆದಿತ್ಯನ ತಂಗಿ ರಿಷಿಕಾ ಸಿಂಗ್ ಪರಿಸ್ಥಿತಿ ಈಗ ಹೇಗಾಗಿದೆ ಗೊತ್ತಾ. ರಾಜೇಂದ್ರ ಸಿಂಗ್ ಬಾಬು (Rajendra Singh Babu ) ಅವರ ಇಬ್ಬರ ಮಕ್ಕಳಲ್ಲಿ ಆದಿತ್ಯ (Adhitya) ಅವರು ಕನ್ನಡ ಚಿತ್ರರಂಗದಲ್ಲಿ ಡೆಡ್ಲಿ ಸೋಮ (Deadly Soma) ಆಗಿ ಎಲ್ಲರಿಗೂ ಪರಿಚಿತರು. ಆದರೆ ಮಗಳು ರಿಷಿಕ ಸಿಂಗ್ (Rishika Singh ) ಕೆಲವೇ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೂ ಸಹ ನೋಡುಗರ ಮನಸಿನಲ್ಲಿ ಕೊನೆಯವರೆಗೂ ನೆನಪಿನಲ್ಲಿ ಉಳಿಯುವ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದರಲ್ಲಿ ಇವರ ಕಳ್ಳ ಸುಳ್ಳ ಮಳ್ಳ (Kalla malla sulla) ಸಿನಿಮಾದ ಪಾತ್ರವನ್ನು ಹೇಳಬಹುದು. ಜೊತೆಗೆ ಕನ್ನಡದ ಬಿಗ್ ಬಾಸ್ ಸೀಸನ್ ಒಂದರ ಸ್ಪರ್ಧಿ ( Bigboss Season 1 ) ಕೂಡ ಆಗಿದ್ದ ರಿಷಿಕಾ ಸಿಂಗ್ ಅವರು ಬಳಿಕ ನಾನಾ ವಿವಾದಗಳಲ್ಲಿ ಸುದ್ದಿ ಆಗಿದ್ದವರು. ಕನ್ನಡ ಚಲನಚಿತ್ರ ರಂಗದ ಜೊತೆ ಬೇರೆ ಭಾಷೆಯಲ್ಲೂ ಸಹ ನಟಿಸಲು ಆಫರ್ ಪಡೆದಿದ್ದ ಇವರು ಬೆಂಗಳೂರಿನಲ್ಲಿ ಅ-ಪ-ಘಾ-ತ ( Accident) ಒಂದಕ್ಕೆ ಈಡಾಗುತ್ತಾರೆ.

ಆ ಅ-ಪ-ಘಾ-ತದ ರಭಸಕ್ಕೆ ಇವರ ದೇಹದ ಅನೇಕ ಅಂಗಗಳು ಡ್ಯಾಮೇಜ್ ಆಗಿ ಹಾಸಿಗೆ ಮೇಲೆ ವರ್ಷಗಟ್ಟಲೆ ಕಾಲ ಕಳೆಯುವ ಪರಿಸ್ಥಿತಿ ಬರುತ್ತದೆ. ರಿಷಿಕ ಸಿಂಗ್ ಅವರಿಗೆ ಈ ಆಕ್ಸಿಡೆಂಟ್ ಆಗಿ ಒಂದೂವರೆ ವರ್ಷಗಳು ಕಳೆದಿವೆ. ಒಂದರ್ಥದಲ್ಲಿ ಈಕೆಗೆ ಇದು ಪುನರ್ಜನ್ಮ ಎಂದೇ ಹೇಳಬಹುದು. ಕನ್ನಡದ ಉದಯೋನ್ಮುಖ ನಟಿ ಒಬ್ಬರಿಗೆ ಈ ರೀತಿ ಆಗಿದ್ದಕ್ಕೆ ಕನ್ನಡಿಗರೆಲ್ಲರೂ ಬೇಸರ ವ್ಯಕ್ತಪಡಿಸಿದ್ದರು. ಇಷ್ಟಕ್ಕೆ ಇವರ ಬದುಕು ಮುಗಿದು ಹೋಯಿತ ಎಂದು ಹಲವರು ನೊಂದುಕೊಂಡಿದ್ದರು.

ಆದರೆ ರಿಷಿಕಾ ಸಿಂಗ್ ಅವರು ಅವರ ಆತ್ಮವಿಶ್ವಾಸದಿಂದ ಮತ್ತೆ ಎದ್ದು ಬರುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಸಂತೋಷದಿಂದ ಅವರೇ ತಮ್ಮ instagram ಖಾತೆಯಲ್ಲಿ ಇಂದು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅವರ ಹಳೆಯ ಒಂದೆರಡು ಫೋಟೋ ಜೊತೆ ಒಂದುವರೆ ವರ್ಷದಿಂದ ಅವರು ಅನುಭವಿಸಿರುವ ಕಷ್ಟಗಳ ಮತ್ತು ಅವರಿಗೆ ಆದ ಅಪಘಾತ ತೀವ್ರತೆಯ ಅವರು ಪಡೆಯುತ್ತಿದ್ದ ಚಿಕಿತ್ಸೆಯ ಒಂದಷ್ಟು ಫೋಟೋಗಳನ್ನು ಸೇರಿಸಿ ವೀಡಿಯೋ ಮಾಡಿ ಹಂಚಿಕೊಂಡಿದ್ದಾರೆ.

ಕೊನೆ ಕೊನೆ ಫೋಟೋಗಳಲ್ಲಿ ಅವರು ಈಗ ಸ್ಟ್ಯಾಂಡ್ ಹಿಡಿದುಕೊಂಡು ನಡೆಯಲು ಪ್ರಯತ್ನಿಸುತ್ತಿರುವುದು ಜೊತೆಗೆ ಎರಡು ಕೋಲುಗಳನ್ನು ಹಿಡಿದುಕೊಂಡು ನಡೆಯಲು ಪ್ರಯತ್ನಿಸುತ್ತಿರುವುದು ಅವರ ಸಪೋರ್ಟ್ ಗೆ ಅವರ ಕುಟುಂಬಸ್ಥರು ಇರುವುದು ಕಂಡು ಬರುತ್ತದೆ. ಜೊತೆಗೆ ಭಾವನಾತ್ಮಕವಾಗಿ ಒಂದಷ್ಟು ಸಾಲುಗಳನ್ನು ಕೂಡ ನಟಿಮಣಿ ಬರೆದುಕೊಂಡಿದ್ದಾರೆ. ಮನಸ್ಸು ಮಾಡಿದರೆ ಯಾವುದು ಕೂಡ ಅಸಾಧ್ಯ ಅಲ್ಲ, ನಾನೀಗ ಸುಧಾರಿಸಿಕೊಳ್ಳುತ್ತಿದ್ದೇನೆ.

ನಾನು ಇಷ್ಟು ಆತ್ಮ ವಿಶ್ವಾಸದಿಂದ ಇರಲು ಹಾಗೂ ನನ್ನ ಆರೋಗ್ಯ ಸುಧಾರಿಸಲು ನನ್ನ ಕುಟುಂಬ ಸ್ನೇಹಿತರು ಹಿತೈಷಿಗಳು ಮತ್ತು ಹೆಚ್ಚಾಗಿ ನನ್ನ ಹೆತ್ತವರು ಕಾರಣ ಅವರೆಲ್ಲರಿಗೂ ಋಣಿ ಎಂಬರ್ಥದಲ್ಲಿ ರಿಷಿಕ ಸಿಂಗ್ ಅವರು ಶೀರ್ಷಿಕೆ ಬರೆದು ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ನೋಡುತ್ತಿದ್ದಂತೆ ಅಭಿಮಾನಿಗಳು ಸಹಾ ಖುಷಿಯಾಗಿದ್ದು ಸದ್ಯ ಇವರ ಆರೋಗ್ಯ ಚೇತರಿಕೆ ವಿಷಯ ಕೇಳಿ ಸಂತಸಪಟ್ಟಿದ್ದಾರೆ.

ರಿಷಿಕ ಸಿಂಗ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಅವರ ಕುಟುಂಬಸ್ಥರಾದ ಅಣ್ಣ ಆದಿತ್ಯ, ತಂದೆ ರಾಜೇಂದ್ರ ಸಿಂಗ್ ಬಾಬು ಹಾಗೂ ರಿಷಿಕ ಸಿಂಗ್ ಅವರ ತಾಯಿ ಮತ್ತು ಅತ್ತೆ ಆದ ವಿಜಯಲಕ್ಷ್ಮಿ ಸಿಂಗ್ ಹಾಗೂ ಅವರ ಮೂರು ಜನ ಮಕ್ಕಳು ಒಂದಿಷ್ಟು ಸ್ನೇಹಿತರು ಇವರನ್ನು ಚಿಯರಪ್ ಮಾಡುತ್ತಿರುವ ಫೋಟೋಗಳು ಇವೆ. ರಿಷಿಕ ಸಿಂಗ್ ಅವರು ಆದಷ್ಟು ಬೇಗ ಸಂಪೂರ್ಣವಾಗಿ ಗುಣಮುಖಗೊಂಡು ಮತ್ತೆ ಕನ್ನಡ ಚಲನಚಿತ್ರ ರಂಗದಲ್ಲಿ ಅಭಿನಯಿಸುವ ಮೂಲಕ ಮತ್ತಷ್ಟು ವರ್ಷಗಳ ಕಾಲ ಎಲ್ಲರನ್ನೂ ರಂಜಿಸುವಂತಾಗಲಿ ಎಂದು ನಾವು ಕೇಳಿಕೊಳ್ಳೋಣ.

ದರ್ಶನ್ ಗಿಂತ ದೊಡ್ಡ ಸ್ಟಾರ್ ನಾ ಕರ್ಕೊಂಡ್ ಬಂದು ನನ್ನ ಸಿನಿಮಾ ಪ್ರಮೋಷನ್ ಮಾಡಿಸ್ತೀನಿ ಅಂತ ಚಾಲೆಂಜ್ ಮಾಡಿದ್ದ ಪ್ರಥಮ್ ಕೊನೆಗೆ ಕರ್ಕೊ ಬಂದಿದ್ದು ಯಾರನ್ನ ಗೊತ್ತಾ.?

ಒಳ್ಳೆ ಹುಡುಗ ಪ್ರಥಮ್ (Olle hudga Pratham) ಅವರು ತಮಾಷೆ ಮಾತುಗಳಿಂದ ಹಾಗೂ ತಮಾಷೆಯಂತೆ ಮಾಡುವ ಟಾಂಗ್ ಗಳಿಂದ ಫುಲ್ ಫೇಮಸ್ ಆಗಿದ್ದಾರೆ. ಈ ಬಾರಿ ಮತ್ತೊಂದು ರೀತಿಯಲ್ಲಿ ಎಲ್ಲರಿಗೂ ಶಾಕ್ ನೀಡಿದ್ದಾರೆ ಎಂದೇ ಹೇಳಬಹುದು. ಅವರು ಇದ್ದಕ್ಕಿದ್ದಂತೆ ಪೋಸ್ಟ್ ಒಂದನ್ನು ಹಾಕಿದ್ದರು. ನನ್ನ ಸಿನಿಮಾ ನಟ ಭಯಂಕರ (Nata bhayankara) ರಿಲೀಸ್ ಆಗುತ್ತಿದೆ, ಇದರ ಪೋಸ್ಟರ್ ಲಾಂಚ್ ಗೆ ದರ್ಶನ್ ಅವರಿಗಿಂತ ಬಿಗ್ ಸ್ಟಾರ್ ಕರೆದುಕೊಂಡು ಬರುತ್ತೇನೆ ಎಂದು ಹೇಳಿದ್ದರು.

ಆ ಪೋಸ್ಟ್ ವೈರಲಾಗುತ್ತಿದ್ದಂತೆ ಡಿ ಬಾಸ್ (DBoss) ಅಭಿಮಾನಿಗಳು ಪ್ರಥಮ್ ಅವರನ್ನು ನಮ್ಮ ಬಾಸ್ ಹೆಸರು ಹೇಳಿ ಪ್ರಚಾರ ಪಡೆಯುತ್ತಿದ್ದೆಯಾ ಎಂದು ತರಾಟೆಗೆ ತೆಗೆದುಕೊಂಡಿದ್ದರು, ಇಬ್ಬರು ಆತ್ಮೀಯರು ಇಬ್ಬರ ಮಧ್ಯೆ ಈ ರೀತಿ ಬೇಡ ಎಂದು ಕೆಲವರು ಹೇಳಿದ್ದರೆ ಅದು ಹೇಗೆ ಮಾಡುತ್ತೀಯ ಎಂದು ಸಹ ಕೆಲವರು ಚಾಲೆಂಜ್ ಹಾಕಿದ್ದರಂತೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಪ್ರಥಮ್ ಅವರು ಅಷ್ಟೆಲ್ಲಾ ವಿರೋಧದ ನಡುವೆಯೂ ಆ ಕೆಲಸ ಮಾಡಿ ಬಿಟ್ಟರು.

ಅಷ್ಟಕ್ಕೂ ಪ್ರಥಮ್ ಅವರು ತಮ್ಮ ನಟಭಯಕರ ಪೋಸ್ಟರ್ ಲಾಂಚ್ ಗೆ ಕಳೆದುಕೊಂಡು ಬಂದಿದ್ದ ದರ್ಶನ್ ಗಿಂತ ದೊಡ್ಡ ಸ್ಟಾರ್ ಯಾರು ಗೊತ್ತ ? ಪ್ರಥಮ್ ಅವರು ಇಷ್ಟೆಲ್ಲ ಕ್ಯೂರಿಯಾಸಿಟಿ ಹುಟ್ಟು ಹಾಕಿ ದರ್ಶನ್ ಅವರಿಗಿಂತ ಬಿಗ್ ಸ್ಟಾರ್ ಎಂದು ಹೇಳಿ ದರ್ಶನ್ ಅವರ ತಾಯಿ ಮೀನ ತೂಗುದೀಪ್ ( Meena Thoogudeep) ಅವರಿಂದ ತಮ್ಮ ಸಿನಿಮಾ ಪೋಸ್ಟರ್ ಲಾಂಚ್ ಮಾಡಿಸಿದ್ದಾರೆ. ಇದಕ್ಕೆ ಅವರು ಕೊಡುವ ಸಮಾಜಾಯಿಷಿ ಏನು ಎಂದರೆ ದರ್ಶನ್ ಅವರ ಬದಲು ಬೇರೆ ಯಾರಾದರೂ ಸ್ಟಾರ್ ಕರೆದುಕೊಂಡು ಬಂದಿದ್ದರೆ ಆಗ ಅದು ವಿವಾದ ಆಗುತ್ತಿತ್ತು.

ಆದರೆ ನಾನು ದರ್ಶನ್ ಅವರಿಗೆ ರೆಸ್ಪೆಕ್ಟ್ ಕೊಟ್ಟಿದ್ದೇನೆ ಹಾಗೂ ನಾನು ಎಷ್ಟು ಅವರನ್ನು ಪ್ರೀತಿ ಮಾಡುತ್ತೇನೆ ಎಂದು ಎಲ್ಲರಿಗೂ ಗೊತ್ತು. ಸ್ವಲ್ಪ ವಿಭಿನ್ನವಾಗಿ ಮಾಡೋಣ ಎಂದು ಈ ರೀತಿ ಮಾಡಿದೆ. ದರ್ಶನ್ ಅವರ ತಾಯಿ ನನ್ನ ಮೂರನೇ ಮಗನಂತೆ ಪ್ರಥಮ್, ಅವನ ಸಿನಿಮಾಗೆ ಶುಭವಾಗಲಿ ಎಂದು ಹರಿಸಿದ್ದಾರೆ. ದರ್ಶನ್ ಅವರಿಗೆ ಅವರ ತಾಯಿ ದರ್ಶನ್ ಗಿಂತ ಬಿಗ್ ಸ್ಟಾರ್ ತಾನೇ ಅದ್ರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ. ಅದನ್ನು ನೇರವಾಗಿ ಹೇಳಬಹುದು ಈ ರೀತಿ ಯಾಕೆ ಮಾಡಿದ್ದೀರಾ ಎಂದು ಇವರನ್ನು ಯೂಟ್ಯೂಬ್ ಸಂದರ್ಶನದಲ್ಲಿ ಕೇಳಿದ್ದಾರೆ.

ಅದಕ್ಕೆ ಯಾವಾಗಲೂ ದರ್ಶನ್ ಅವರಿಂದಲೇ ಮಾಡಿಸಬೇಕು ಎಂದರೆ ಆಗುವುದಿಲ್ಲ. ದರ್ಶನ್ ಅವರನ್ನು ದೇವರಂತ ಮನುಷ್ಯ (Devarantha Manushya) ಸಿನಿಮಾ ಆಡಿಯೋ ಲಾಂಚ್ (Audio launch) ಮಾಡಬೇಕು ಎಂದು ಕೇಳಿಕೊಂಡಿದ್ದೆವು. ಅವರು ಯಜಮಾನ ಹಾಗೂ ಒಡೆಯ ಶೂಟಿಂಗ್ ಅಲ್ಲಿ ಇದ್ದರೂ ಕೂಡ ಬಂದು ಆ ಕಾರ್ಯಕ್ರಮ ನಡೆಸಿ ಕೊಟ್ಟಿದ್ದರು. ಎಂ ಎಲ್ ಎ (MLA) ಸಿನಿಮಾಗೆ ದೇವೇಗೌಡ (Devegowda) ಅವರಿಂದ ಕ್ಲಾಪ್ (Clap) ಮಾಡಿಸಿದ್ದು ಆಯ್ತು, ಮುಂದೆ ಬೇರೆ ಸಿನಿಮಾಗೆ ಸಿದ್ದರಾಮಯ್ಯ (Siddaramai) ಅವರನ್ನು ಕರೆ ತರಬೇಕು ಹೀಗೆ ಸಿದ್ದರಾಮಯ್ಯ ಸಿಗಲಿಲ್ಲ ಅಂದರೆ ಹೈಕಮಾಂಡ್ ಬಳಿ ಹೋಗ ಬೇಕಾಗುತ್ತದೆ.

ಹಾಗಾಗಿ ದರ್ಶನ್ ಅವರು ಕೈಗೆ ಸಿಗದ ಕಾರಣ ಅವರ ತಾಯಿಯಿಂದ ಲಾಂಚ್ ಮಾಡಿಸಿದ್ದೇವೆ ಅಷ್ಟೇ ಇದರಲ್ಲಿ ಯಾರಿಗೂ ಬೇಸರ ಮಾಡುವ ವಿಷಯ ಇಲ್ಲ ಎಂದಿದ್ದಾರೆ. ಆದರೆ ಅವರು ಪೋಸ್ಟ್ ಹಾಕಿದ್ದ ಸಮಯದಲ್ಲಿ ಅದರ ತೀವ್ರತೆ ಎಷ್ಟಿತ್ತು ಎಂದರೆ ದರ್ಶನ್ ಅಭಿಮಾನಿಗಳು ಪ್ರಥಮ್ ಅವರು ಸಿಕ್ಕರೆ, ಹೊಡೆದು ಬಿಡುತ್ತೇವೆ ಎಂದು ಹೇಳಿದರು ಅದರ ಬಗ್ಗೆ ಕೂಡ ಪ್ರಥಮ್ ಅವರು ಮಾತನಾಡಿದ್ದು ಅಂದುಕೊಂಡಷ್ಟು ಸುಲಭ ಅಲ್ಲ ಪೋಸ್ಟ್ ಹಾಕಿದಷ್ಟು ಸುಲಭವೂ ಅಲ್ಲ ಯಾರನ್ನಾದರೂ ಮುಟ್ಟುವುದು ಎಂದು ಹೇಳಿದ್ದಾರೆ.

ರೀಲ್ಸ್ ಮಾಡುವ ಹುಚ್ಚಿನಲ್ಲಿ ಒಳ ಉಡುಪು ಧರಿಸದೆ ಬಾಳೆಕಾಯಿ ಧರಿಸಿ ಡ್ಯಾನ್ಸ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಯುವತಿ. ಡ್ಯಾನ್ಸ್ ಮಾಡುತ್ತಿರುವಾಗಲೇ ಜಾರಿದ ಬಾಳೇಕಾಯಿ….


ಇಂದು ಆಂಡ್ರಾಯ್ಡ್ ಫೋನ್ (Android phone) ಸೋಶಿಯಲ್ ಮೀಡಿಯಾ (Social media) ಇದೆಲ್ಲಾ ಬಂದ ಮೇಲೆ ಇಡೀ ಪ್ರಪಂಚವನ್ನೇ ಸೋಶಿಯಲ್ ಮೀಡಿಯಾ ಎನ್ನುವ ಒಂದು ಅಂಶದಲ್ಲಿ ಬಂದಿ ಆಗಿ ಹೋಗಿದೆ ಎನ್ನಬಹುದು. ಯಾಕೆಂದರೆ ಈಗ ವೇಗವಾಗಿ ಓಡುತ್ತಿರುವ ಈ ಜಗತ್ತಿನಲ್ಲಿ ಅತಿ ಹೆಚ್ಚು ಜನ ಸಮಯ ಕಳೆಯುತ್ತಿರುವುದು ಇದೇ ಇಂಟರ್ನೆಟ್ ಅಲ್ಲಿ. ಸಾಮಾಜಿಕ ಜಾಲತಾಣಗಳೆ ಇಲ್ಲಿ ಮನೋರಂಜನ (entertainment) ಮಾಧ್ಯಮಗಳು ಮತ್ತು ಹಣ ಗಳಿಸುವ ಪ್ಲಾಟ್ಫಾರ್ಮ್ ಕೂಡ ಆಗಿದ್ದು ಅನೇಕರಿಗೆ ತಮ್ಮ ಟ್ಯಾಲೆಂಟ್ ತೋರಿಸುವುದಕ್ಕೆ ವೇದಿಕೆ ಕೂಡ ಆಗಿದೆ.

ಇಂತಹ ಸಾಮಾಜಿಕ ಜಾಲತಾಣಗಳಿಂದ ಅನೇಕರು ಬದುಕನ್ನೇ ಕಟ್ಟುಕೊಂಡಿದ್ದಾರೆ ಮತ್ತು ಅನೇಕರು ಫೇಮಸ್ (famous) ಆಗುವುದಕ್ಕೆ ಸಾಮಾಜಿಕ ಜಾಲತಾಣ ಅತಿ ದೊಡ್ಡ ಕಾರಣವಾಗಿದ್ದು ಇದೇ ಕಾರಣದಿಂದಾಗಿ ಚಿತ್ರ ವಿಚಿತ್ರವಾಗಿ ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರು ವರ್ತಿಸುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ ಆಗಿದೆ. ಇಂದು ಇನ್ಸ್ಟಾಗ್ರಾಮ್ ಎನ್ನುವ ಆಪ್ ಅಲ್ಲಿ ಸೆಲೆಬ್ರಿಟಿ ಗಳಿಂದ ಹಿಡಿದು ಸಾಮಾನ್ಯರ ತನಕ ಎಲ್ಲರೂ ಸಹ ರೀಲ್ಸ್ ಮಾಡಿ ಜನ ಮೆಚ್ಚಿಗೆ ಗಳಿಸಲು ಆಸೆ ಪಡುತ್ತಾರೆ.

ಅನೇಕ ಜನರಿಗೆ ಸಿನಿಮಾ ಹಾಗೂ ಸೀರಿಯಲ್ ಗಳಿಗೆ ಅವಕಾಶಗಳು ದೊರೆತಿರುವುದು ಇದೇ ವಿಡಿಯೋಗಳಿಂದ. ಈ ರೀತಿ ಜನರ ಗಮನ ಸೆಳೆಯಲು ಹಲವರು ತಮ್ಮ ಕಲೆಗಳನ್ನು ಹೊರ ಹಾಕುತ್ತಾರೆ ಇದು ಒಂದು ವರ್ಗ ಆದರೆ ಮತ್ತೊಂದು ವರ್ಗವಿದೆ ಇಲ್ಲಿ ಕಲೆ ಬದಲಾಗಿ ತಮ್ಮ ವಿಚಿತ್ರ ಸ್ವಭಾವದಿಂದ ಜನರ ಗಮನ ಸೆಳೆಯುತ್ತಿದ್ದಾರೆ. ಉದಾಹರಣೆಗೆ ಹೇಳುವುದಾದರೆ ನಟಿ ಮತ್ತು ಮಾಡೆಲ್ ಆಗಿರುವ ಉರ್ಫಿ ಜಾವೇದ್ (Urfi Javed) ಅವರನ್ನು ಹೇಳಬಹುದು. ಈಕೆ ಸಿಕ್ಕಸಿಕ್ಕ ವಸ್ತುಗಳನ್ನೆಲ್ಲ ಬಟ್ಟೆ ಮಾಡಿಕೊಂಡು ಚೋಟುದ್ದದ ಬಟ್ಟೆಗಳಲ್ಲಿ ಮೈ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಾ ಇದೆ ತಮ್ಮ ಫ್ಯಾಶನ್ (Fashion) ಎನ್ನುವುದನ್ನು ತೋರಿಸುತ್ತಾ ಕು.ಖ್ಯಾ.ತಿಯಾಗಿದ್ದಾರೆ.

ಈಗ ಸೋಶಿಯಲ್ ಮೀಡಿಯಾ ಬಳಸುವ ಪ್ರತಿಯೊಬ್ಬರಿಗೂ ಕೂಡ ಉರ್ಫಿ ಜಾವೇದ್ ಅವರ ಹೆಸರು ಗೊತ್ತಿದೆ. ಅವರಂತೆ ಅವರಿಗೆ ಟಫ್ ಕಾಂಪಿಟೇಶನ್ ಕೊಡಬಲ್ಲ ಮತ್ತೊಬ್ಬ ಶಿಷ್ಯೆ ಹುಟ್ಟಿ ಕೊಂಡಿದ್ದಾಳೆ. ಈಕೆ ಅವರನ್ನು ಮೀರಿಸುವಂತಹ ಫ್ಯಾಷನ್ ಮಾಡಿದ್ದಾಳೆ. ಈ ವರ್ಷ ಬಾಲಿವುಡ್ ಅಲ್ಲಿ ತೆರೆಕಂಡಿರುವ ಮೊದಲ ಹಿಟ್ ಸಿನಿಮಾದ ಪಠಾಣ್ (Patan) ಚಿತ್ರದ ಭೇಷ್ ರ ರಂಗ್ (Beshram rang) ಹಾಡು ಎಲ್ಲರಿಗೂ ಇಷ್ಟ. ಈ ಹಾಡಿನಲ್ಲಿ ಶಾರುಖಾನ್ ಹಾಗೂ ದೀಪಿಕಾ ಪಡುಕೋಣೆ ಅವರು ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ ಈ ಹಾಡಿನ ರೀಲ್ಸ್ ಅನ್ನು ಅನೇಕರು ಮಾಡಿ ಖುಷಿ ಪಟ್ಟಿದ್ದಾರೆ.

ಈ ಹಾಡನ್ನು ರೀಲ್ಸ್ ಮಾಡಲು ಹೋದ ಯುವತಿಯು ರೀಲ್ಸ್ ಬದಲಾಗಿ ಹಾಕಿರುವ ಬಟ್ಟೆಯಿಂದ ಫೇಮಸ್ ಆಗುತ್ತಿದ್ದಾಳೆ. ಈಕೆ ಬಟ್ಟೆ ಚಿಕ್ಕದಾದ ಒಂದು ಬಾಳೆಗೊನೆ ಹಾಕಿಕೊಂಡಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗಳು ಉರ್ಫಿ ಜಾವೇದ್ ಅವರಿಗೆ ನೀವೇ ಫ್ಯಾಶನ್ ಕಲಿಸಿದ್ದ ಅಥವಾ ನೀವು ಅವರಿಗೆ ಕಾಂಪಿಟೇಶನ್ ಎಂದು ಕೇಳುತ್ತಿದ್ದಾರೆ ಮತ್ತು ಪ್ರಚಾರಕ್ಕಾಗಿ ಎಷ್ಟು ಕೆಳಮಟ್ಟಕ್ಕೆ ಇಳಿಯಬಾರದು ಎನ್ನುವ ಸಲಹೆಯನ್ನು ಕೂಡ ಕೊಡುತ್ತಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಇಂಥಹ ಬೆಳವಣಿಗೆ ಹೆಚ್ಚಾಗುತ್ತಿದೆ.

ಎಷ್ಟೇ ಬಾರಿ ಟ್ರೋಲ್ (troll) ಆದರೂ ಕೂಡ ಕೆಲವರ ಮನಸ್ಥಿತಿ ಬದಲಾಗುತ್ತಿಲ್ಲ. ಅದರಲ್ಲೂ ಗಂಡು ಮಕ್ಕಳು ಅಚ್ಚುಕಟ್ಟಾಗಿ ಕಾಣಿಸಿಕೊಳ್ಳುವಾಗ ಹೆಣ್ಣು ಮಕ್ಕಳು ಈ ರೀತಿ ಅಶ್ಲೀಲವಾಗಿ ಕುಣಿಯಲು ಹೋಗುತ್ತಿರುವುದು ನಮ್ಮ ಭಾರತೀಯ ಹೆಣ್ಣು ಮಕ್ಕಳಿಗೆ ಬಳಗಕ್ಕೆ ಕಪ್ಪು ಚುಕ್ಕೆ ಎನ್ನಬಹುದು. ಇಂಥವರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ಈ ವಿಡಿಯೋ ನೋಡಿದ ಬಳಿಕ ಕಮೆಂಟ್ ಮೂಲಕ ತಿಳಿಸಿ.