Home Blog Page 241

ಪತಿಯ ವಿರುದ್ಧ ಟ್ರೋಲ್ ಮಾಡುವವರಿಗೆ ಸರಿಯಾದ ಪಾಠ ಕಳಿಸಿದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ‌.

0

 

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟ. ದರ್ಶನ್ ಅವರಿಗೆ ಅವರ ಅಭಿಮಾನಿಗಳ ಮೇಲೆ ಎಷ್ಟು ಪ್ರೀತಿ ಇದೆ ಎಂದು ವಿವರಿಸಲು ಸಾಧ್ಯವಿಲ್ಲ, ಅವರು ತಮ್ಮ ಅಭಿಮಾನಿಗಳನ್ನು ಅಭಿಮಾನಿಗಳು ಎಂದು ಕರೆಯುವ ಬದಲು ಅವರೇ ನನ್ನ ಸೆಲೆಬ್ರಿಟಿಗಳು ಎಂದು ಕರೆಯುತ್ತಾರೆ.

ಇನ್ನು ಅಭಿಮಾನಿಗಳ ಪಾಲಿಗಂತೂ ಡಿ ಬಾಸ್ ಎಂದರೆ ಹುಚ್ಚು ಪ್ರೀತಿ. ಅವರೆಲ್ಲಾ ದರ್ಶನ್ ಅವರನ್ನು ಯಾಕೆ ಇಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೆ ಕಾರಣವೇ ಬೇಕಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ಪಡ್ಡೆ ಹೈಕಳು ಹೆಣ್ಣು ಮಕ್ಕಳು ವೃದ್ಧರು ಹೀಗೆ ಎಲ್ಲರೂ ದರ್ಶನ್ ಫ್ಯಾನ್ಗಳೇ. ದರ್ಶನ್ ಒಂದು ಮಾತು ಹೇಳಿದರೆ ಅದೇ ಅವರ ಅಭಿಮಾನಿಗಳ ಪಾಲಿಗೆ ವೇದ ವಾಕ್ಯ ಇಷ್ಟು ದರ್ಶನ್ ಮೇಲೆ ಪ್ರೀತಿ ತೋರಿ ದಚ್ಚು, ಡಿ ಬಾಸ್ ಎಂದು ಕರೆದು ದರ್ಶನ್ ಅವರನ್ನು ಮೆರೆಸುತ್ತಿದ್ದಾರೆ ಅವರ ಅಭಿಮಾನಿಗಳು.

ಆದರ ಕೆಲ ಕಿಡಿಗೇಡಿಗಳು ಮಾತ್ರ ದರ್ಶನ್ ಅವರ ಬಗ್ಗೆ ಯಾವಾಗಲೂ ನೆಗೆಟಿವ್ ಆಗಿಯೇ ಮಾತನಾಡುತ್ತಿರುತ್ತಾರೆ. ಅದರಲ್ಲೂ ಇತ್ತೀಚಿಗೆ ಕ್ರಾಂತಿ (Kranthi) ಸಿನಿಮಾದ ಸಮಯದಲ್ಲಿ ಅದು ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಂತೂ ದರ್ಶನ್ ಅವರ ಪರವಾಗಿ ಎಷ್ಟು ಜನ ಕಮೆಂಟ್ ಮಾಡಿರುತ್ತಾರೋ ಅಷ್ಟೇ ನೆಗೆಟಿವ್ ಆಗಿ ಕೂಡ ಬಂದಿರುತ್ತದೆ. ಮುಂದುವರೆದು ದರ್ಶನ ಅವರನ್ನು ಹಲವು ರೀತಿಯಲ್ಲಿ ಟ್ರೋಲ್ (troll) ಕೂಡ ಮಾಡಲಾಗುತ್ತಿದೆ.

ಕ್ರಾಂತಿ ಸಿನಿಮಾದ ಪ್ರಚಾರವಾಗಿ ದರ್ಶನ್ ಅವರು ಹಲವು ತಿಂಗಳ ಹಿಂದಿನಿಂದಲೂ ಇಡೀ ಕರ್ನಾಟಕ ಯಾತ್ರೆಗೆ ಹೊರಟಿದ್ದಾರೆ. ಒಂದು ಕಡೆ ಯೂಟ್ಯೂಬ್ ಚಾನೆಲ್ಗಳಿಗೆ ನಿರೂಪಣೆ ಕೊಡುವುದಾದರೆ ಮತ್ತೊಂದು ಕಡೆ ಕರ್ನಾಟಕದ ಪ್ರಮುಖ ಸಿಟಿಗಳಲ್ಲಿ ಹಾಡುಗಳನ್ನು ರಿಲೀಸ್ ಮಾಡುವುದು ಮತ್ತು ಸಿನಿಮಾದ ವಿಷಯವನ್ನು ಎಲ್ಲಡೆ ಪ್ರಚಾರ ಮಾಡುವುದು. ಈ ಕೆಲಸಕ್ಕಾಗಿ ಇಡಿ ತಂಡವನ್ನೇ ಬೆನ್ನಿಗೆ ಕಟ್ಟಿಕೊಂಡು ತಿರುಗುತ್ತಿದ್ದಾರೆ ಹಾಗಾಗಿ ದರ್ಶನವರು ತಮ್ಮ ಫಿಟ್ನೆಸ್ ಹಾಗೂ ಮೇಕಪ್ ಬಗ್ಗೆ ಗಮನ ಕೊಡಲು ಆಗಿರದೆ ಇರಬಹುದು.

ಇದನ್ನೇ ದೊಡ್ಡದಾಗಿ ಮಾಡಿರುವ ಕೆಲ ಟ್ರೋಲ್ ಪೇಜ್ ಗಳು ದರ್ಶನ್ ಅವರು ತೆರೆ ಮೇಲೆ ಒಂದು ರೀತಿ ಕಾಣುತ್ತಾರೆ, ನೇರವಾಗಿ ಒಂದು ರೀತಿ ಕಾಣುತ್ತಾರೆ ಮೇಕಪ್ ಇಲ್ಲದೆ ದರ್ಶನ್ ಅವರನ್ನು ನೋಡಲು ಆಗುವುದೇ ಇಲ್ಲ, ಮೇಕಪ್ ತೆಗೆದು ಇವರನ್ನು ನೋಡಿದರೆ ಇವರಿಗಿಂತ ನಮ್ಮ ಪಕ್ಕದ ಮನೆಯ ಅಂಕಲ್ ಎಷ್ಟೋ ಚೆನ್ನಾಗಿ ಕಾಣುತ್ತಾರೆ ಎನ್ನುವ ರೀತಿ ಪೋಸ್ಟರ್ಗಳನ್ನು ಹಾಕಿಕೊಂಡು ಟ್ರೋಲ್ ಮಾಡಿದ್ದಾರೆ.

ಇದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ ಜೊತೆಗೆ ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi) ತನಕ ತಲುಪಿ ಈಗ ಅವರು ಅದರ ವಿರುದ್ಧ ಕಿಡಿ ಕಾರಿದ್ದಾರೆ. ಒಬ್ಬ ವ್ಯಕ್ತಿಯ ಚಂದವನ್ನು ಅಂದ ಚಂದದಿಂದ ಲೆಕ್ಕ ಹಾಕುವ ಬದಲು ಆತನ ಸ್ವಭಾವ ಆತನ ವ್ಯಕ್ತಿತ್ವ ಹಾಗೂ ಆತ ಮಾಡಿರುವ ಸಾಧನೆಯಿಂದ ಅಳಿಯಬೇಕು ಎಂದು ತಮ್ಮ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ.

ಇದು ಟ್ರೋಲ್ ಮಾಡುವವರಿಗೆ ಇಂಡೈರೆಕ್ಟಾಗಿ ಕೊಟ್ಟಿರುವ ತಿರುಗೇಟಾಗಿದೆ. ಇನ್ನು ಇದು ಯಾವ ರೀತಿ ಮುಂದುವರೆಯುತ್ತದೆ ಹಾಗೂ ಈ ವಿಚಾರ ಎಲ್ಲಿಯ ತನಕ ತಲುಪುತ್ತದೆ ಕಾದು ನೋಡಬೇಕಾಗಿದೆ. ಆದರೆ ದರ್ಶನ್ ಅವರ ವಿಚಾರ ಬಂದಾಗ ವಿಜಯಲಕ್ಷ್ಮಿ ಅವರ ಪದೇ ಪದೇ ಇದೇ ರೀತಿ ಅವರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಅಥವಾ ಕಮೆಂಟ್ ಹಾಕುವ ಮೂಲಕ ಅವರ ಸಪೋರ್ಟ್ ಗೆ ನಿಲ್ಲುತ್ತಾರೆ.

ನಟ ಸಿದ್ದಾರ್ಥ್ ಮದುವೆ ಫೋಟೋ ನೋಡಿ ನನ್ನ ಹೃದಯ ಹೊಡೆದು ಹೊಯ್ತು ಎಂದು ಪೊಸ್ಟ್ ಹಾಕಿದ ಸಾನ್ವಿ.! ಲವ್ ನಲ್ಲಿ ಬಿದ್ದಿದ್ರಾ ಸುದೀಪ್ ಮಗಳು.? ಎಲ್ಲರಲ್ಲೂ ಮೂಡಿಸಿದೆ ಅನುಮಾನ.

0

 

ಅಲ್ಲಿ ಅದ್ದೂರಿಯಾಗಿ ಮದುವೆಯಾದ ಸಿದ್ದಾರ್ಥ್ ಮಲ್ಹೋತ್ರ, ಇಲ್ಲಿ ಹೃದಯ ಮುರಿದುಕೊಂಡ ಸುದೀಪ್ ಮಗಳು ಸಾನ್ವಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kicha Sudeep) ಅವರು ಅಂದರೆ ಈಗಿನ ಕಾಲದ ಯುವತಿಯರಿಗೂ ಕೂಡ ಡ್ರೀಮ್ ಬಾಯ್, 40 ದಾಟಿದ್ದರು ಇವರ ಚಾರ್ಮಿಂಗ್ ಯಾವ ಯುವ ಹೀರೋಗಳಿಗೂ ಕಡಿಮೆ ಇಲ್ಲ. ಈಗಲೂ ಸಹಾ ಅದೆಷ್ಟೋ ಹುಡುಗಿಯರು ಕನಸಿನಲ್ಲಿ ಸುದೀಪ್ ಅವರ ಪ್ರೀತಿಯಲ್ಲಿ ಬೀಳುತ್ತಾರೆ.

ಆದರೆ ಸುದೀಪ್ ಅವರ ಮಗಳು ಯಾವ ಹೀರೋ ರೀತಿಯಲ್ಲಿ ಬಿದ್ದಿದ್ದರೂ ಗೊತ್ತಾ? ಬಹುಶಃ ಸುದೀಪ್ ಮಗಳು ಸಾನ್ವಿ ಸುದೀಪ್ ( Sanvi Sudeep) ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಲೋಡ್ ಆಗುವ ಫೋಟೋಗಳನ್ನು ಗಮನಿಸಿರುವವರಿಗೆ ಈ ವಿಷಯ ತಿಳಿದೇ ಇರುತ್ತದೆ. ಯಾಕೆಂದರೆ ಸುದೀಪ್ ಮಗಳ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅಪ್ಪನ ಜೊತೆಗಿನ ಫೋಟೋಗಳು ಹಾಗೂ ಅಪ್ಪನ ಸಿನಿಮಾ ಕುರಿತ ಅಪ್ಡೇಟ್ಸ್ ಬಿಟ್ಟರೆ ಬೇರೊಬ್ಬ ಹೀರೋಗೆ ಮಾತ್ರ ಹೆಚ್ಚಿನ ಸ್ಪೇಸ್ ಇದ್ದದ್ದು.

ಅವರು ಬೇರೆ ಯಾರು ಅಲ್ಲ ಬಾಲಿವುಡ್ ನ ಹ್ಯಾಂಡ್ಸಮ್ ಹೀರೋ ಸಿದ್ದಾರ್ಥ ಮಲ್ಹೋತ್ರ (Siddarth Malhothra) ಅವರದ್ದು ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಸಿದ್ದಾರ್ಥ್ ಮಲ್ಹೋತ್ರ ಅವರನ್ನು ಎಷ್ಟು ಇಷ್ಟ ಪಡುತ್ತಿದ್ದರು ಎಂದರೆ ಆ ಪ್ರೀತಿಯ ಅಳವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅವರ ಅತಿ ದೊಡ್ಡ ಅಭಿಮಾನಿ ಆಗಿದ್ದ ಸಾನ್ವಿ ಸುದೀಪ್ ಅವರು ಸಿದ್ದಾರ್ಥ್ ಮಲ್ಹೋತ್ರ ಅವರ ಪ್ರತಿಯೊಂದು ಸಿನಿಮಾ ವಿಷಯ ಹಾಗೂ ಹಾಡುಗಳು ಜೊತೆಗೆ ಅವರ ಫೋಟೋಸ್ ಗಳನ್ನು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದರು.

ಯಾವುದೇ ವಿಶೇಷ ಇಲ್ಲದಿದ್ದರೂ ಸಹ ನೆನಪಾದಾಗಲೆಲ್ಲಾ ಸಿದ್ದಾರ್ಥ್ ಮಲ್ಹೋತ್ರ ಅವರ ಫೋಟೋಗಳನ್ನು ಹಾಕುತ್ತಿದ್ದರು, ಅಷ್ಟೊಂದು ಸಿದ್ದಾರ್ಥ ಮಲ್ಹೋತ್ರ ಅವರನ್ನು ಸಾನ್ವಿ ಸುದೀಪ್ ಅವರು ಹಚ್ಚಿಕೊಂಡು ಬಿಟ್ಟಿದ್ದರು. ಈಗ ಎಲ್ಲರಿಗೂ ತಿಳಿದಿರುವಂತೆ ನೆನ್ನೆ ಅದ್ದೂರಿಯಾಗಿ ಸಿದ್ದಾರ್ಥ್ ಮಲ್ಹೋತ್ರ ಅವರು ಅವರ ಪ್ರೇಯಸಿ ಆದ ಬಾಲಿವುಡ್ ಬೆಳಗಿ ಕಿಯಾರ ಅಡ್ವಾನಿ (Kiara advani) ಅವರನ್ನು ಕೈ ಹಿಡಿದಿದ್ದಾರೆ.

ನೆನ್ನೆ ರಾಜಸ್ಥಾನದ ಸೂರ್ಯಗ್ರಹ ಪ್ಯಾಲೇಸ್ (Rajasthan Surya grah palace) ಅಲ್ಲಿ ಶಾಸ್ತ್ರೊಕ್ತವಾಗಿ ಹಾಗೂ ಬಹಳ ಅದ್ದೂರಿಯಾಗಿ ಇವರಿಬ್ಬರ ಮದುವೆ ನಡೆದಿದೆ. ಸ್ವತಃ ಈ ಜೋಡಿಗಳೇ ತಮ್ಮ ಮದುವೆಯ ಮೂರು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಜೊತೆಗೆ ನಾವಿಬ್ಬರು ಪರ್ಮನೆಂಟ್ ಆಗಿ ಬುಕಿಂಗ್ ಆಗಿದ್ದೇವೆ ನಿಮ್ಮ ಪ್ರೀತಿ ಹಾಗೂ ಆಶೀರ್ವಾದ ನಮ್ಮ ಮೇಲೆ ಇರಲಿ ನಮ್ಮನ್ನು ಹರಸಿ ಎಂದು ಇಬ್ಬರೂ ಸಹ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಫೋಟೋ ಹಂಚಿಕೊಂಡು ಬರೆದುಕೊಳ್ಳುವ ಮೂಲಕ ತಾವಿಬ್ಬರು ಅಧಿಕೃತವಾಗಿ ಸತಿಪತಿಗಳು ಆಗಿದ್ದೇವೆ ಎನ್ನುವುದನ್ನು ಅನೌನ್ಸ್ ಮಾಡಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಇಡೀ ಬಾಲಿವುಡ್ ಬಳಗದೊಂದಿಗೆ ಅನೇಕ ಅಭಿಮಾನಿಗಳು ಹಾಗೂ ಇವರ ಫಾಲೋವರ್ಸ್ ಗಳು ರಾಶಿಗಟ್ಟಲೆ ಇವರಿಗೆ ಕಮೆಂಟ್ಸ್ ಮಾಡಿ ಆ ಮೂಲಕ ವಿಷಸ್ ತಿಳಿಸಿದ್ದಾರೆ. ಸಾನ್ವಿ ಸುದೀಪ ಅವರು ಸಹ ತಮ್ಮ ಹೀರೋ ದಾಂಪತ್ಯ ಜೀವನ ಸಂತೋಷಕರದಿಂದ ಕೂಡಲೇ ಇರಲಿ ಎಂದು ಖಂಡಿತ ಹರಸಿರುತ್ತಾರೆ.

ಆದರೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾತ್ರ ಸಿದ್ಧಾರ್ಥ ಮಲ್ಹೋತ್ರ ಅವರ ಫೋಟೋ ಹಾಕಿಕೊಂಡು ನನ್ನ ಕ್ರಶ್ ಮದುವೆ ಆಗಿ ಬಿಟ್ಟಿದ್ದಾರೆ, ಅಲೆಕ್ಸಾ ನೀನು ಚೆನ್ನ ಮರೆಯಾ ಪ್ಯಾಥೋ ಸಾಂಗ್ ಪ್ಲೇ ಮಾಡು ಎಂದು ತಮ್ಮ ಮೊಬೈಲ್ ಫೋನ್ ಗೆ ಆಜ್ಞೆ ಮಾಡಿದ್ದಾರೆ. ಸಾನ್ವಿ ಪ್ರೊಫೈಲ್ ಇಂದ ಈ ಪೋಸ್ಟ್ ಹೊರ ಬೀಡುತ್ತಿದ್ದಂತೆ ಸಾನ್ವಿ ಅವರು ಹಾಗಾದರೆ ಸಿದ್ಧಾರ್ಥ್ ಅವರ ಪ್ರೀತಿಯಲ್ಲಿ ಬಿದ್ದಿದ್ದರಾ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ, ಆದರೆ ಇದೊಂದು ಶುದ್ಧ ಅಭಿಮಾನದ ಪ್ರೀತಿ ಆಗಿದೆ.

ನನ್ನ ವಯಸ್ಸಿಗೂ ಮರ್ಯಾದೆ ಕೊಡದೆ ಸೃಜನ್ ಎಲ್ಲರ ಮುಂದೆ “ಅವನಿಗೆ ಮುಚ್ಕೊಂಡು ಇರೋಕೆ ಹೇಳು” ಅಂದಿದ್ದು ಬೇಸರ ಆಯ್ತು ಎಂದು ನೋವು ವ್ಯಕ್ತಪಡಿಸಿದ ಮಂಡ್ಯ ರಮೇಶ್.

 

ಮಜಾ ಟಾಕೀಸ್ ಅಲ್ಲಿ ಮಂಡ್ಯ ರಮೇಶ್ ಅವರು ಏನಾದರೂ ಸಜೆಶನ್ ಕೊಟ್ಟರೆ ಸೃಜನ್ ಅವರು ಬೈತಾ ಇದ್ದಿದ್ದು ಯಾಕೆ ಗೊತ್ತಾ.? ಮಂಡ್ಯ ರಮೇಶ್ ಅವರು ಕಳೆದ ಹಲವು ದಶಕಗಳಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಹಾಸ್ಯಕ್ಕೆ ಫೇಮಸ್ ಆಗಿದ್ದಾರೆ. ಜನುಮದ ಜೋಡಿ ಸಿನಿಮಾದಿಂದ ಶುರು ಆದ ಅವರ ಜರ್ನಿ ಇಂದು ಅವರನ್ನು ಜನ ಮುದ್ದೇಶ ಎನ್ನುವ ಪಾತ್ರದಿಂದ ಗುರುತಿಸುವಂತೆ ಮಾಡಿದೆ.

ಮಂಡ್ಯ ರಮೇಶ್ ಅವರಿಗೆ ಮಂಡ್ಯ ರಮೇಶ್ ಎನ್ನುವ ಹೆಸರು ಬರುವಂತೆ ಮಾಡಿದ್ದು ಬಿವಿ ಕಾರಂತ್ ಅವರು, ಆದರೆ ಮುದ್ದೇಶ ಎನ್ನುವ ಹೆಸರು ಕೊಟ್ಟಿದ್ದು ಮಜಾ ಟಾಕೀಸ್ ಕರ್ನಾಟಕದ ಮೂಲೆ ಮೂಲೆಯಲ್ಲೂ ಸಹ ಜನ ಈ ಹೆಸರು ಕೇಳಿದರೆ ಎದ್ದು ಬಿದ್ದು ನಗುತ್ತಾರೆ. ಜೊತೆಗೆ ಮುದ್ದೆಶಾ ಎಂದು ತಕ್ಷಣ ಅವರ ಭಾವೋ ಎನ್ನುವ ಕೂಗು ಹಾಗೂ ಕಬ್ಬಿನ ಗದ್ದೆ ಶಾಂತಿ ಎನ್ನುವ ಡೈಲಾಗ್ ಕೂಡ ಫುಲ್ ಫೇಮಸ್ ಆಗಿಬಿಟ್ಟಿದೆ.

ಇತ್ತೀಚಿನ ಒಂದು ಸಂದರ್ಶನದಲ್ಲಿ ಮಂಡ್ಯ ರಮೇಶ್ ಅವರು ಮಜಾ ಟಾಕೀಸ್ ತಮ್ಮ ಪಾತ್ರದ ಬಗ್ಗೆ ಹಾಗೂ ಅದು ಹೇಗೆ ಶುರುವಾಯಿತು ಎನ್ನುವುದರ ಬಗ್ಗೆ ಹೇಳಿಕೊಂಡಿದ್ದಾರೆ. ಮೊದಲಿಗೆ ಮಜಾ ಟಾಕೀಸ್ ಅನ್ನು ಶುರು ಮಾಡುತ್ತೇನೆ ನಿಮಗಾಗಿ ಒಂದು ಪಾತ್ರ ಇದೆ ಬನ್ನಿ ಎಂದು ಸೃಜನ್ ಕರೆದಾಗ ನಾನು ಒಪ್ಪಿಕೊಂಡಿರಲಿಲ್ಲ, ಕಾರಣ ನನಗೆ ಸ್ಟ್ಯಾಂಡಪ್ ಕಾಮಿಡಿ ಮಾಡಲು ಬರುವುದಿಲ್ಲ.

ನಾನು ಹಾಸ್ಯ ಪಾತ್ರಗಳನ್ನು ಮಾಡುತ್ತೇನೆ, ಆದರೆ ಸ್ಟೇಜ್ ಮೇಲೆ ನಿಂತು ಮಾತನಾಡುತ್ತಾ ಇರುವಾಗ ಭಾವನಾತ್ಮಕವಾಗಿ ಹೋಗಿ ಬಿಡುತ್ತೇನೆ ಅಥವಾ ಮಾತನಾಡುತ್ತಾ ಹಾಸ್ಯ ಹೋಗಿ ವಿಚಿತ್ರ ಮಾಡಿ ಬಿಡುತ್ತೇನೆ. ಹಾಗಾಗಿ ಅಂತಹ ಯೋಗ್ಯತೆ ನನಗಿಲ್ಲ ಬರುವುದಿಲ್ಲ ಎಂದೇ ಹೇಳಿದ್ದೆ ಆತ ಬಲವಂತವಾಗಿ ಒಂದು ಎಪಿಸೋಡ್ ಗೆ ಕರೆಸಿಕೊಂಡ ಆ ಎಪಿಸೋಡ್ ನೋಡಿದ ಜನರಲ್ಲಿ 500 ಜನ ನಿಮಗೆ ಇದು ತಕ್ಕ ಪಾತ್ರ ಅಲ್ಲ ಪೆದ್ದು ಪೆದ್ದಾಗಿ ಕಾಣಿಸುತ್ತಿದ್ದೀರ ಮಂಗನ ರೀತಿ ಆಗಿದ್ದೀರಾ ಎಂದು ಕಾಮೆಂಟ್ ಮಾಡಿದ್ದರು.

ಆದರೆ 5000 ಮಂದಿ ಬಹಳ ಅದ್ಭುತವಾಗಿದೆ ಹೊಟ್ಟೆ ತುಂಬಾ ನಕ್ಕೆವು ಎಂದು ಕಾಮೆಂಟ್ ಮಾಡಿದ್ದರು ಅದನ್ನು ನೋಡಿ ಬಹುಮತಕ್ಕೆ ಬೆಂಬಲ ಎಂದುಕೊಂಡು ಮುಂದಿನ ಎಪಿಸೋಡ್ ಮಾಡಿದೆ. ಆ ಎಪಿಸೋಡ್ ನಲ್ಲಿ ಎಂಟ್ರಿ ಸೀನ್ ನನ್ನದೇ ಇತ್ತು ಅದರ ಟಿ ಆರ್ ಪಿ ನೋಡಿ ಸೃಜನ್ ಗೆ ಬಹಳ ಆಶ್ಚರ್ಯವಾಯಿತು. ಜೊತೆಗೆ ತೇಜಸ್ವಿ ಎನ್ನುವ ಹುಡುಗ ಸೃಜನ್ ಜೊತೆ ಇರುತ್ತಾನೆ, ಅವನು ಸಲಹೆ ಕೊಟ್ಟ ನಿಮ್ಮಲ್ಲಿ ಒಂದು ಪೆದ್ದುತನ ಇದೆ. ಅದನ್ನು ಹಾಗೆ ಉಳಿಸಿಕೊಳ್ಳಿ ಈ ಪಾತ್ರಕ್ಕೆ ಅದೇ ಬೇಕು ಎಂದು.

ಹೆಸರು ಏನು ಇಡುವುದು ಎಂದು ಎಲ್ಲಾ ಡಿಸೈಡ್ ಮಾಡಿ ಅದು ಇದು ಸೇರಿಸಿ ಮುದ್ದೇಶಾ ಎಂದು ಇಟ್ಟುಬಿಟ್ಟರು ಅದು ಹಾಗೆ ಉಳಿದುಕೊಂಡಿತು. ಎಲ್ಲೇ ಹೋದ್ರು ಜನ ಜೋರಾಗಿ ಕಬ್ಬಿನ ಗದ್ದೆ ಶಾಂತಿ ಎಂದು ಕೂಗಿ ತಮಾಷೆ ಮಾಡುತ್ತಾರೆ ಅಷ್ಟೇ ಸಾಕು ತೃಪ್ತಿ ಆಗುತ್ತದೆ. ಜೊತೆಗೆ ಆ ಸಮಯದಲ್ಲಿ ನಾನು ಯಾರನ್ನು ಕೇಳಿದರೂ ಅವಕಾಶಗಳು ಸಿಗುತ್ತಿರಲಿಲ್ಲ, ಸೃಜನ್ ಕರೆದು ಒಂದು ಒಳ್ಳೆ ಮೊತ್ತದ ಸಂಭಾವನೆ ಕೊಟ್ಟು ಪಾತ್ರ ಮಾಡಿಸಿದ ಹಾಗಾಗಿ ಒಪ್ಪಿಕೊಂಡೆ ಎಂದು ಹೇಳಿದ್ದಾರೆ.

ಜೊತೆಗೆ ನೀವು ಸಹ ನಾಟಕಗಳನ್ನು ತಯಾರಿಸುತ್ತೀರಲ್ಲ ಸೃಜನ್ ಗೆ ಸಜೆಶನ್ ಕೊಡುತ್ತಿದ್ರಾ ಎಂದು ನಿರೂಪಕರು ಕೇಳಿದ ಪ್ರಶ್ನೆಗೆ ಸೃಜನ್ ಐಡಿಯಾಸ್ ಬೇರೆ ಇರುತ್ತದೆ ನಾವು ಅರ್ಧ ಪ್ರಾಕ್ಟೀಸ್ ಅರ್ಧ ಸ್ಟೇಜ್ ಮೇಲೆ ಪರ್ಫಾರ್ಮ್ ಮಾಡುತ್ತಾ ಅಲ್ಲಿ ಇಂಪ್ರೂವ್ ಮಾಡಿಕೊಳ್ಳುತ್ತಿದ್ದೆವು. ಅವನಿಗೇನಾದರೂ ಈ ರೀತಿ ಮಾಡಿದರೆ ಹೇಗೆ ಎಂದು ಕೇಳಿದಾಗ ನೇರವಾಗಿ ಬೈಯದೆ ಆ ಕಡೆ ನೋಡಿಕೊಂಡು ಬೇರೆಯವರನ್ನು ನಿನ್ನನ್ನು ಯಾರು ಕೇಳಿದ್ದು ಸುಮ್ಮನೆ ಇರಕ್ಕಾಗಲ್ವ ಅನ್ನುತ್ತಿದ್ದಾ ಅಷ್ಟರಲ್ಲೇ ನಾವು ಅರ್ಥಮಾಡಿಕೊಳ್ಳಬೇಕು. ಯಾರು ಏನೇ ಐಡಿಯಾಸ್ ಕೊಟ್ಟರು ಅಂತಿಮವಾದ ತೀರ್ಮಾನ ಅದರಲ್ಲಿ ನಿರ್ದೇಶಕನಾಗಿ ಸೃಜನ್ ದೇ ಆಗಿರುತ್ತಿತ್ತು ಎಂದು ಮಜಾ ಟಾಕೀಸ್ ಅನುಭವಗಳನ್ನು ಹೇಳಿಕೊಂಡಿದ್ದಾರೆ.

M.L.A ಪರಮೇಶ್ವರ್ ಮಗ ಹೆಣ್ಣಾಗಿ ಬದಲಾಗಿದ್ದು ಹೇಗೆ ಗೊತ್ತ.? ಓದೋಕೆ ಅಂತ ವಿದೇಶಕ್ಕೆ ಹೋದ ಮಗ ಒಂದು ವರ್ಷ ಬಿಟ್ಟು ಮರಳಿ ಮನೆಗೆ ಬರುವಾಗ ಹೆಣ್ಣಾಗಿದ್ದು ನಿಜಕ್ಕೂ ರೋಚಕ.

0

 

ವಿದೇಶದಲ್ಲಿ ಓದಲು ಎಂದು ಹೋಗಿದ್ದ ಪರಮೇಶ್ವರ್ ಅವರ ಮಗ ಯಾವ ಸ್ಥಿತಿಯಲ್ಲಿ ಬಂದರು ಗೊತ್ತಾ.? ಕರ್ನಾಟಕದ ಮಾಜಿ ಉಪ ಮುಖ್ಯಮಂತ್ರಿ ಆಗಿದ್ದ ಜಿ.ಪರಮೇಶ್ವರ್ ಅವರು ಆಸ್ಥಾನದಲ್ಲಿದ್ದಾಗ ರಾಜ್ಯದ ಜನತೆಗೆ ಅನುಕೂಲವಾಗಲು ಸಾಕಷ್ಟು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರು. ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಬೆಳಕಾಗಿ ನಾನಾ ಯೋಚನೆಗಳನ್ನು ಅವರಿಗಾಗಿ ಕೊಡುವ ಮೂಲಕ ಅವರ ಬದುಕಿಗೆ ದಾರಿ ದೀಪವಾಗಿದ್ದಾರೆ.

ಆದರೆ ಇವರ ಬದುಕಿನಲ್ಲಿ ಬೆಳಕು ತುಂಬ ಬೇಕಾಗಿದ್ದ ಇವರ ಒಬ್ಬನೇ ಒಬ್ಬ ಮಗ ವಿದೇಶಕ್ಕೆ ಓದಲು ಎಂದು ಹೋಗಿ ಈಗ ಪರಮೇಶ್ವರ್ ಅವರು ಪ್ರತಿದಿನ ಅವರ ನೆನಪಿನಲ್ಲಿ ದುಃಖಿಸುವಂತೆ ಮಾಡಿದ್ದಾರೆ. ಅಷ್ಟಕ್ಕೂ ಜಿ ಪರಮೇಶ್ವರ್ ಅವರ ಮಗ ಮಾಡಿರುವ ಕೆಲಸ ಆದರೂ ಏನು ಎಂದು ನೋಡುವುದಾದರೆ ಯಾವುದೇ ಅಪರಾಧ ಮಾಡಿಲ್ಲದೆ ಇದ್ದರೂ ಅವರ ಇಚ್ಛೆಯಿಂದ ಮಾಡಿಕೊಂಡ ಒಂದೇ ಒಂದು ಕೆಲಸದಿಂದ ಈಗ ಪರಮೇಶ್ವರ್ ಅವರು ನೋವು ಅನುಭವಿಸುವಂತೆ ಆಗಿದೆ.

ಜಿ ಪರಮೇಶ್ವರ್ ಅವರ ಮಗ ಹುಟ್ಟಿದ್ದು ಬೆಂಗಳೂರಿನಲ್ಲೇ, ಬಾಲ್ಯದಿಂದಲೂ ಇವರಿಗೆ ಪೈಲೆಟ್ ಆಗಬೇಕು ಎನ್ನುವ ಆಸೆ ಇತ್ತು. ಹೀಗಾಗಿ ಪರಮೇಶ್ವರ್ ಅವರು ಇವರನ್ನು ವಿದೇಶಕ್ಕೆ ಕಳುಹಿಸಿ ಓದಿಸುತ್ತಿದ್ದರು. ವಿದ್ಯಾಭ್ಯಾಸ ಮುಗಿಯುವವರೆಗೂ ಹುಡುಗನಾಗಿಯೇ ಇದ್ದ ಇವರ ಮಗ ಮಲೇಶಿಯಾದಲ್ಲಿ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾರೆ.

ಹುಡುಗನಾಗಿದ್ದ ಇವರು ಈಗ ಶಾನು ಎಂದು ಹೆಸರು ಬದಲಾಗಿಸಿಕೊಂಡು ಹುಡುಗಿ ಆಗಿದ್ದಾರೆ. ಆದರೆ ತಾವು ಚಿಕ್ಕ ವಯಸ್ಸಿನಿಂದ ಕಂಡಿದ್ದ ಆ ಕನಸನ್ನು ವ್ಯರ್ಥ ಮಾಡಿಲ್ಲ, ವಿದೇಶಕ್ಕೆ ಯಾವ ಉದ್ದೇಶಕ್ಕಾಗಿ ಹೋಗಿದ್ದರೂ ಅದನ್ನು ಸಹಾ ಸಾಕಾರ ಮಾಡಿಕೊಂಡಿದ್ದಾರೆ. ತಾವು ಕಂಡ ಪೈಲೆಟ್ ಕನಸನ್ನು ನನಸು ಮಾಡಿಕೊಳ್ಳಲು ನ್ಯೂಜಿಲೆಂಡ್ ಅಲ್ಲಿ ಇದ್ದುಕೊಂಡು ಪೈಲೆಟ್ ಟ್ರೈನಿಂಗ್ ಅನ್ನು ಕೂಡ ಪಡೆದು ಇಂದು ನ್ಯೂಜಿಲೆಂಡ್ ನ ಟೂರಿಸ್ಟ್ ವಿಮಾನಗಳಲ್ಲಿ ಅಲ್ಲಿ ಪೈಲೆಟ್ ಆಗಿ ಕೂಡ ಕೆಲಸ ನಿರ್ವಹಿಸುತ್ತಿದ್ದಾರೆ.

ಜೊತೆಗೆ ಕಾರ್ ರೇಸಿಂಗ್ ಬಗ್ಗೆ ಇವರಿಗೆ ವಿಪರೀತ ಕ್ರೇಜ್ ಇದೆ ಇವರೊಬ್ಬ ಪ್ರೊಫೆಷನಲ್ ಕಾರ್ ರೇಸರ್ ಕೂಡ ಆಗಿದ್ದಾರೆ. ಒಂದು ಸಂದರ್ಶನದಲ್ಲಿ ಇವರನ್ನು ಹುಡುಗಿ ಆಗಿ ಕಾರ್ ರೇಸಿಂಗ್ ನಿಮಗೆ ಕಷ್ಟ ಆಗುವುದಿಲ್ಲವೇ ಎಂದು ಪ್ರಶ್ನಿಸಿದಾಗ ಅಶ್ಚರ್ಯಕರವಾದ ಉತ್ತರವನ್ನು ಕೊಟ್ಟಿದ್ದಾರೆ. ಕಾರಿನಲ್ಲಿ ಹುಡುಗ ಹುಡುಗಿ ಎನ್ನುವ ವ್ಯತ್ಯಾಸ ಇರುತ್ತದೆಯೇ.? ಅದಕ್ಕೆ ಇಲ್ಲ ಅಂದಮೇಲೆ ನಮಗೆ ಯಾಕೇ ಬೇಕು.

ಇದರಲ್ಲಿ ಹುಡುಗ ಅಥವಾ ಹುಡುಗಿ ಎನ್ನುವ ಭೇದಭಾವ ಬರುವುದಿಲ್ಲ, ಬೇಧ ಭಾವ ಮಾಡಲೂಬಾರದು. ಪ್ರಯತ್ನ ಪಟ್ಟರೆ ಯಾರು ಏನು ಬೇಕಾದರೂ ಮಾಡಬಹುದು ಇಲ್ಲಿ ಎಲ್ಲರೂ ಒಂದೇ ಎಂದು ಉತ್ತರಿಸಿದ್ದಾರೆ. ಆದರೆ ಕೆಲವೊಂದು ಮೂಲಗಳ ಪ್ರಕಾರ ಪರಮೇಶ್ವರ್ ಅವರಿಗೆ ಅವರ ಮಗ ಶಾನು ಆಗಿ ಬದಲಾಗಿರುವುದು ಇಷ್ಟ ಇಲ್ಲವಂತೆ ಇದರಿಂದ ಅವರು ಬಹಳ ಮುಜುಗರ ಅನುಭವಿಸಿದ್ದಾರಂತೆ.

ನಾವೆಲ್ಲರೂ ”ನಾನು ಅವನಲ್ಲ ಅವಳು” ಎನ್ನುವ ಸಿನಿಮಾವನ್ನು ನೋಡಿ ಅದೊಂದು ಸಿನಿಮಾ ಕಥೆ ಅಥವಾ ಪಕ್ಕದ ರಾಜ್ಯದವರ ಜೀವನಾಧಾರಿತ ಚಿತ್ರಕಥೆ ಎಂದು ಮಾತನಾಡಿಕೊಳ್ಳುತ್ತಿದ್ದೆವು. ಆದರೆ ಇಂದು ನಮ್ಮ ರಾಜ್ಯದ ಗಣ್ಯ ರಾಜಕೀಯ ಪುತ್ರನು ಕೂಡ ಈ ರೀತಿ ಉದಾಹರಣೆ ಆಗುತ್ತಾರೆ ಎಂದು ಯಾರು ಊಹಿಸಿರಲಿಲ್ಲ. ಅದೇನೆ ಇದ್ದರೂ ಅವರವರ ಬದುಕು ಅವರಿಚ್ಛೆ. ಶಾನು ಅವರು ಈಗ ಹುಡುಗಿಯಾಗಿ ಬಹಳ ಸಂತೋಷದಲ್ಲಿ ಇದ್ದಾರೆ ಎನ್ನುವ ವಿಷಯದಿಂದ ಸಮಾಧಾನ ಪಟ್ಟುಕೊಳ್ಳಬೇಕು ಅಷ್ಟೇ. ಪರಮೇಶ್ ಮಗ ಮಗಳಾಗಿ ಬದಲಾದ ನಂತರ ಹೇಗೆ ಕಾಣಿಸುತ್ತಿದ್ದಾರೆ ಎಂಬ ವಿಡಿಯೋ ಒಂದು ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮೂಲಕ ತಿಳಿಸಿ.

 

ಅಪ್ಪು ಸಾ-ಯು-ವ ಒಂದು ತಿಂಗಳ ಮುಂಚೆ ದರ್ಶನ್ ಬಗ್ಗೆ ಅಪ್ಪು ಮಾತನಾಡಿದ ವಿಡಿಯೋ ವೈರಲ್. ಈ ವಿಡಿಯೋ ನೋಡಿದ್ರೆ ಗೊತ್ತಗುತ್ತೆ ಅಪ್ಪು ಮನಸ್ಸಿನಲ್ಲಿ ದರ್ಶನ್ ಬಗ್ಗೆ ಮನೋಭಾವ

0

 

ಅಪ್ಪು (Appu) ಈ ನಾಡು ಕಂಡ ದೇವಮಾನವ, ಅಭಿಮಾನಿಗಳಿಂದ ದೇವರು ಎಂದು ಪೂಜೆ ಮಾಡಿಸಿಕೊಳ್ಳುತ್ತಿರುವ ಶ್ರೇಷ್ಠ ಕಲಾವಿದ. ಕಣ್ ಮುಚ್ಚಿ ಬಿಡುವಷ್ಟರಲ್ಲಿ ಮಿಂಚಿ ಮರೆಯಾದ ಮಾಣಿಕ್ಯ. ಅಪ್ಪು ಅವರ ವ್ಯಕ್ತಿತ್ವ ಏನು ಎನ್ನುವುದು ಎಲ್ಲರಿಗೂ ತಿಳಿದಿದೆ. ಅವರ ಕುಟುಂಬದವರು ಮತ್ತು ಅವರ ಜೊತೆ ಒಡನಾಟ ಇಟ್ಟುಕೊಂಡಿದ್ದ ಕೆಲವರಿಗೆ ಅಷ್ಟೇ ತಿಳಿದಿದ್ದ ಅಪ್ಪು ಗುಣ ಇಂದು ಅವರ ಮ.ರ.ಣ.ದ ಬಳಿಕ ಜಗತ್ ಜಾಹಿರಾಗಿ ಹೋಗಿದೆ.

ಈ ಒಂದು ಕಾರಣಕ್ಕಾಗಿ ಅಪ್ಪು ಅವರನ್ನು ದೇಶ ಭಾಷೆ ಗಡಿ ಭೇದವಿಲ್ಲದೆ ಇಡೀ ಭಾರತವೇ ಕೊಂಡಾಡುತ್ತಿದೆ. ಅಪ್ಪು ಎಂದು ಕೂಡ ಯಾರಿಗೂ ಕೆಟ್ಟದ್ದು ಬಯಸಲಿಲ್ಲ, ಯಾವ ಸ್ಟಾರ್ ಬಗ್ಗೆ ಕೂಡ ತಪ್ಪಾಗಿ ಮಾತನಾಡಲಿಲ್ಲ, ಯಾರನ್ನೇ ಕಂಡರೂ ಹೆಸರಿಗೆ ತಕ್ಕಂತೆ ಪ್ರೀತಿಯಿಂದ ಅಪ್ಪಿಕೊಂಡು ಸಹೋದರನಂತೆ ಮಾತನಾಡಿಸುತ್ತಿದ್ದ ಈ ಪುಣ್ಯಾತ್ಮನ ಹೆಸರಿಗೆ ಮಸಿ ಬೆಳೆಯುವ ಕೆಲಸ ಇತ್ತೀಚಿಗೆ ನಡೆಯುತ್ತಿದೆ.

ಎಲ್ಲರಿಗೂ ತಿಳಿದಿರುವಂತೆ ಹೊಸಪೇಟೆಯಲ್ಲಿ (Hospet incident) ಆದ ದರ್ಶನ್ (Darshan) ಮೇಲಿನ ಹಲ್ಲೆ ಬಳಿಕ ಅಪ್ಪು ಫ್ಯಾನ್ಸ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಾರ್ ನಡೆಯುತ್ತಿದೆ. ಇಬ್ಬರು ಸಹ ತಮ್ಮ ಹೀರೋ ಹೆಚ್ಚು ತಮ್ಮ ಹೀರೋ ಹೆಚ್ಚು ಎಂದು ಮತ್ತೊಬ್ಬ ಹೀರೋ ಬಗ್ಗೆ ಬಾಯಿಗೆ ಬಂದ ಹಾಗೆ ಬರೆಯುತ್ತಿದ್ದಾರೆ.

ಆದರೆ ಇದನ್ನೆಲ್ಲ ಮೇಲೆ ಕುಳಿತು ನೋಡುತ್ತಿರುವ ಮನಸ್ಸಿಗೆ ಎಷ್ಟು ನೋವಾಗುತ್ತಿದೆಯೋ ಬಲ್ಲವರ್ಯಾರು. ಯಾಕೆಂದರೆ ಅಪ್ಪು ಇರುವ ತನಕ ಎಂದು ದರ್ಶನ್ ಬಗ್ಗೆ ಕೆಟ್ಟದಾಗಿ ಮಾತನಾಡಲಿಲ್ಲ, ದರ್ಶನ್ ಅವರನ್ನು ಆತ್ಮೀಯ ಸ್ನೇಹಿತನಂತೆ ಕಂಡು ಅದೇ ರೀತಿ ನಡೆಸಿಕೊಂಡವರು ಅಪ್ಪು. ಡಾಕ್ಟರ್ ರಾಜಕುಮಾರ್ ಅವರ ಕಾಲದಿಂದಲೂ ಸಹ ಅಪ್ಪು ಹಾಗು ದರ್ಶನ್ ಕುಟುಂಬದ ನಡುವೆ ಬಾಂಧವ್ಯ ಇದೆ.

ದರ್ಶನ್ ಅವರ ತಾಯಿಯೂ ಸಹ ಅಣ್ಣಾವ್ರ ಮನೆ ಅನ್ನದ ಋಣವನ್ನು ಕೊನೆ ತನಕ ಮರೆಯುವುದಿಲ್ಲ ಎಂದೇ ಹೇಳಿಕೊಳ್ಳುತ್ತಾರೆ ಆದರೆ ಇತ್ತೀಚೆಗೆ ಆದ ಬೆಳವಣಿಗೆಗಳಿಂದ ಅಪ್ಪು ಮತ್ತು ದರ್ಶನ್ ಹೆಸರಿನ ನಡುವೆ ಕಂದಕ ಏರ್ಪಡುತ್ತಿದೆ. ಅಂದು ಹೊಸಪೇಟೆಯಲ್ಲಿ ದರ್ಶನ್ ಗೆ ಆದ ಅವಮಾನಕ್ಕೆ ಅಪ್ಪು ಅವರ ಅಭಿಮಾನಿಗಳೇ ಕಾರಣ ಎಂದು ದರ್ಶನ್ ಅಭಿಮಾನಿಗಳು ಫಿಕ್ಸ್ ಆಗಿ ಬಿಟ್ಟಿದ್ದಾರೆ.

ಆದರೆ ಅಪ್ಪು ಅವರು ಇಂದು ಬದುಕಿದ್ದರೆ ಇಷ್ಟೆಲ್ಲಾ ಬೆಳೆಯಲು ಬಿಡುತ್ತಾ ಇರಲಿಲ್ಲ ಎನಿಸುತ್ತದೆ. ಅದಕ್ಕೆ ಆಗಲೇ ಮುಕ್ತಿ ಹೇಳಿಬಿಡುತ್ತಿದ್ದರು. ಅಪ್ಪು ಅವರು ದರ್ಶನ್ ಕುಟುಂಬದ ಮೇಲೆ ಬಹಳ ಪ್ರೀತಿ ಹೊಂದಿದ್ದರು. ಆ ಪ್ರೀತಿಗೆ ಸಾಕ್ಷಿ ಎನ್ನುವಂತೆ ಸಾಯುವ ಮೂರು ತಿಂಗಳ ಹಿಂದೆಯೂ ಕೂಡ ತೂಗುದೀಪ ದರ್ಶನ (Thoogudeepa Darshan) ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡಿದ್ದರು.

ಈ ಪುಸ್ತಕ ದರ್ಶನ್ ಅವರ ತಂದೆಯ ಕುರಿತಾದ ಪುಸ್ತಕ ಆಗಿತ್ತು ಜೊತೆಗೆ ಆ ಪುಸ್ತಕ ಬಿಡುಗಡೆ ಸಮಯದಲ್ಲಿ ದರ್ಶನ್ ಅವರಿಗಾಗಿ ಒಂದು ಮಾತನ್ನು ಸಹ ಹೇಳಿದ್ದರು. ಕಲಾವಿದ ಆಗಿ ಬಣ್ಣ ಹಚ್ಚಿದರೆ ಸಾಕು ಅದು ನಾನೇ ಆಗಬೇಕು ಎಂದಿಲ್ಲ ಯಾರಾದರೂ ಅಷ್ಟೇ ಕಲಾವಿದ ಆಗಿಬಿಟ್ಟರೆ ಅವನು ಅಂದೇ ಶ್ರೀಮಂತ ಆಗಿಬಿಡುತ್ತಾನೆ. ಯಾಕೆಂದರೆ ಎಲ್ಲೇ ಹೋದರು ಆತನಿಗೆ ಒಂದು ಹೊತ್ತಿನ ಊಟ ಒಂದು ಲೋಟ ಕಾಫಿಗೆ ಕೊರತೆ ಹುಟ್ಟುವುದಿಲ್ಲ, ಅಷ್ಟರಮಟ್ಟಿಗೆ ಅಭಿಮಾನಿಗಳು ಪ್ರೀತಿ ತೋರಿಸುತ್ತಾರೆ.

ಕೊನೆವರೆಗೂ ಅಭಿಮಾನಿಗಳಿಗೆ ಅವರ ಹೀರೋನೇ ಸ್ಟಾರ್ ಆಗಿರುತ್ತಾರೆ ಎಂದು ಹೇಳಿದ್ದರು. ಒಂದರ್ಥದಲ್ಲಿ ಅವರು ದರ್ಶನ್ ಅವರನ್ನೇ ಕುರಿತು ದರ್ಶನ್ ಅಭಿಮಾನಿಗಳ ವಿಷಯದಲ್ಲಿ ಎಲ್ಲರಿಗಿಂತ ಶ್ರೀಮಂತ ಎಂದು ಹೇಳಿದ್ದರು ಎಂದೇ ಅರ್ಥೈಸಿಕೊಳ್ಳಬಹುದು. ಆದರೆ ಇಂದು ಅಪ್ಪು ಇಲ್ಲದೆ ಅನೇಕ ವಿಷಯಗಳು ಅಪಾರ್ಥ ಆಗಿ ಅವರ ಅಭಿಮಾನಿಗಳು ನೋವು ತಿನ್ನುವ ಹಾಗಾಗಿದೆ ಎನ್ನುವುದೇ ಬೇಸರ. ಶೀಘ್ರದಲ್ಲೇ ಇವೆಲ್ಲವೂ ಇತ್ಯರ್ಥವಾಗಲಿ ಎನ್ನುವುದು ಇಡೀ ಕರುನಾಡಿನ ಆಸೆ.

ಅಣ್ಣಾವ್ರ ಮನೆಯಲ್ಲಿ ನಾನು ಮಾಡಿದ ದೊಡ್ಡ ತಪ್ಪು ಅಂದ್ರೆ ಇದೆ ಎಂದು ಭಾವುಕರಾದ ನಟ ಬಾಲರಾಜ್.

 

ನಟ ಬಾಲರಾಜ್ ಕನ್ನಡಿಗರಿಗೆಲ್ಲರಿಗೂ ಪರಿಚಿತರು. ಕಳೆದ ಒಂದು ದಶಕದ ಹಿಂದಿನ ಸಿನಿಮಾಗಳಲ್ಲಿ ನಾಯಕನಾಗಿ, ನಾಯಕನ ಸ್ನೇಹಿತನಾಗಿ ಮತ್ತು ಸಿಪಾಯಿ ಅಂತಹ ಸಿನಿಮಾಗಳಲ್ಲಿ ರವಿಚಂದ್ರನ್ ಅವರ ಎದುರಿಗೆ ಖಳನಾಯಕನಾಗಿ ಕಾಣಿಸಿಕೊಂಡಿದ್ದ ಇವರು ಸದ್ಯಕ್ಕೆ ಕಿರುತೆರೆ ಧಾರಾವಾಹಿಗಳಲ್ಲಿ ಪಾತ್ರ ಮಾಡುತ್ತಿದ್ದಾರೆ. ಬಾಲರಾಜ್ ಅವರು ಡಾಕ್ಟರ್ ರಾಜಕುಮಾರ್ ಅವರ ತಂಗಿಯ ಮಗ ಎನ್ನುವುದು ಹೆಚ್ಚಿನ ಜನರಿಗೆ ತಿಳಿದಿಲ್ಲ.

ಡಾಕ್ಟರ್ ರಾಜಕುಮಾರ್ ಅವರು ಬಾಲರಾಜ್ ಅವರಿಗೆ ಮಾವನೆ ಆಗಬೇಕಿತ್ತು. ಹೀಗಾಗಿ ಶಿವರಾಜ್ ಕುಮಾರ್, ರಾಘಣ್ಣ ಬಾಲರಾಜ್ ಇವರೆಲ್ಲ ಒಂದೇ ಕುಟುಂಬದಲ್ಲಿ ಒಂದೇ ತಾಯಿಯ ಮಕ್ಕಳಂತೆ ಒಟ್ಟಿಗೆ ಆಡಿ ಬೆಳೆದವರು. ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಅವರು ಮದ್ರಾಸಿನಲ್ಲಿ ಕಳೆದಿದ್ದ ಅಣ್ಣಾವ್ರ ಕುಟುಂಬದ ಜೊತೆಗಿನ ಕೆಲವು ಸವಿನೆನಪುಗಳನ್ನು ಹಂಚಿಕೊಂಡಿದ್ದಾರೆ. ಹೀಗೆ ಅದರಲ್ಲಿ ಅವರ ಮನೆಯಿಂದ ಕಾರು ಕದ್ದು ಕಾರು ಕಲಿತ ಪ್ರಸಂಗವನ್ನು ಸಹ ನೆನೆಸಿಕೊಂಡು ಹೇಳಿಕೊಂಡಿದ್ದಾರೆ.

ಅಣ್ಣಾವ್ರು ಆಗಸ್ಟ್ 1983 ರಲ್ಲಿ ಅಂಬಾಸಿಡರ್ ಕಾರನ್ನು ತೆಗೆದುಕೊಂಡಿದ್ದರಂತೆ. ಬಾಲರಾಜ್ ಅವರ ಸ್ನೇಹಿತನೊಬ್ಬನಿಗೆ ಚೆನ್ನಾಗಿ ಕಾರು ಓಡಿಸಲು ಬರುತ್ತಿತ್ತಂತೆ ಅವನನ್ನು ನೋಡಿ ಬಾಲರಾಜ್ ನಾನು ಕಾರು ಕಲಿಯಬೇಕು ಕಲಿಸಿಕೊಡು ಎಂದು ಕೇಳುತ್ತಿದ್ದರಂತೆ. ಅದಕ್ಕೆ ಅವನು ಕಾರು ತೆಗೆದುಕೊಂಡು ಬಾ ಎಂದು ಸಲಹೆ ನೀಡಿದ್ದನಂತೆ ಹೊಸ ಕಾರು ಕೇಳಲು ಭಯ ಹೀಗಾಗಿ ವಾಚ್ ಮೆನ್ ಮಲಗಿದ ಮೇಲೆ ಪ್ರತಿದಿನ ಕೂಡ ಕಾರ್ ಶೆಡ್ ಇಂದ ಕಾರು ತಳ್ಳಿಕೊಂಡು ಬಂದು ನಂತರ ಹೊರಗಡೆ ಸ್ಟಾರ್ಟ್ ಮಾಡಿಕೊಂಡು ಹೋಗಿ ಮದ್ರಾಸಿನ ಅನೇಕ ರಸ್ತೆಗಳಲ್ಲಿ ಸುತ್ತಾಡಿಕೊಂಡು ಮತ್ತೆ ತಂದು ಮನೆತನಕ್ಕೆ ಡ್ರೈವ್ ಮಾಡಿ ನಂತರ ಅದೇ ರೀತಿ ತಳ್ಳಿ ಶೆಡ್ ಒಳಗೆ ನಿಲ್ಲಿಸಿ ಬಿಡುತ್ತಿದ್ದರಂತೆ.

ಪಾರ್ವತಮ್ಮರ ಬಳಿ ದಿನ ಡ್ರೈವರ್ ಕಂಪ್ಲೇಂಟ್ ಮಾಡುತ್ತಿದ್ದರಂತೆ. ಯಾರೋ ಕಾರು ತೆಗೆದುಕೊಂಡು ಹೋಗುತ್ತಿದ್ದಾರೆ, ದಿನ ಪೆಟ್ರೋಲ್ ಕಮ್ಮಿಯಾಗಿ ಇರುತ್ತದೆ ಎಂದು. ಆದರೆ ಪಾರ್ವತಮ್ಮನವರು ಕಳ್ಳ ಕಾರು ತೆಗೆದುಕೊಂಡು ಹೋಗಿರುತ್ತಾನಾ, ಹೋಗಿದ್ದರೆ ಮತ್ತೆ ನಿಲ್ಲಿಸುತ್ತಿದ್ದನಾ ಬಿಡು ಎಂದು ಹೇಳಿ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲವಂತೆ.

ಒಂದು ದಿನ ಇವರ ಮನೆಯ ಡ್ರೈವರ್ ಆಗಿದ್ದ ಎಲ್ಲಪ್ಪ ಎನ್ನುವವರು ರಜಾ ಹಾಕಿದ್ದ ಕಾರಣ ಚಿ.ಉದಯಶಂಕರ್ ಅವರ ಮನೆಗೆ ಪಾರ್ವತಮ್ಮನವರನ್ನು ಬಿಡಲು ಯಾರಾದರೂ ಡ್ರೈವರ್ ಬೇಕಿತ್ತಂತೆ. ಡ್ರೈವರ್ ಬರುವಷ್ಟರಲ್ಲಿ ಅಲ್ಲೇ ಇದ್ದ ಒಬ್ಬರು ಬಾಲರಾಜ್ ಕಾರು ಓಡಿಸುವುದನ್ನು ಕಲಿತು ಬಿಟ್ಟಿದ್ದಾನೆ ಎಂದು ಹೇಳಿದರಂತೆ. ತಕ್ಷಣ ಪಾರ್ವತಮ್ಮನವರು ಹಾಗಾದ್ರೆ ನೀನೇ ಕರೆದುಕೊಂಡು ಹೋಗಬೇಕು ಎಂದು ಹೇಳಿದರಂತೆ.

ಅವರು ಕೊಟ್ಟ ಧೈರ್ಯದಿಂದ ಕಾರು ಓಡಿಸಿದ್ದ ಬಾಲರಾಜ್ ಅವರು ಪಾರ್ವತಮ್ಮರಿಂದ ಪ್ರಶಂಸೆಯನ್ನು ಕೂಡ ಪಡೆದರಂತೆ. ಪಾರ್ವತಮ್ಮನವರು ಹಾಗಾದರೆ ಪ್ರತಿದಿನ ಶೆಡ್ ಯಿಂದ ಕಾರು ಕಳ್ಳತನ ಮಾಡಿ ಕಲಿಯುತ್ತಿದ್ದ ಕಳ್ಳ ನೀನೇನಾ ಎಂದು ಕೇಳಿ ತಮಾಷೆಯನ್ನು ಸಹ ಮಾಡಿದ್ದರಂತೆ.

ಮದ್ರಾಸಿನಲ್ಲಿ ಎಲ್ಲಾ ಮಕ್ಕಳನ್ನು ಅಣ್ಣಾವ್ರು ಮರೀನಾ ಬೀಚ್ ಗೆ ವಾಯು ವಿಹಾರಕ್ಕೆ ಕರೆದುಕೊಂಡು ಹೋಗುತ್ತಿದ್ದನ್ನು ಮತ್ತು ಅಣ್ಣಾವ್ರ ಚಿತ್ರದಲ್ಲಿ ನಟಿಸಬೇಕು ಎಂದು ಪಾರ್ವತಮ್ಮನವರನ್ನು ಕೇಳಿದಾಗ ಜೀವನ ಚೈತ್ರ ಸಿನಿಮಾದ ಆ ಪಾತ್ರಕ್ಕೆ ಭಗವಾನ್ ಅವರಿಗೆ ಹೇಳಿದ್ದನ್ನು ಮತ್ತು ಮೊದಲ ದಿನದ ಶೂಟಿಂಗ್ ವೇಳೆಗೆ ಅಣ್ಣಾವ್ರ ಎದುರು ನಿಂತು ಗಡಗಡ ನಡುಗುತ್ತಿದ್ದನ್ನು, ಆ ಎಲ್ಲಾ ನೆನಪುಗಳನ್ನು ಈ ಸಂದರ್ಶನದಲ್ಲಿ ಮನ ಬಿಚ್ಚಿ ಹಂಚಿಕೊಂಡಿದ್ದಾರೆ. ಬಾಲರಾಜ್ ಅವರ ಆ ಮಾತುಗಳನ್ನೆಲ್ಲಾ ಕೇಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ. ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

ಕೆಜಿಎಫ್, ಕಬ್ಜಾ ರೇಂಜಿಗೆ ದರ್ಶನ್ ಗೆ ಸಿನಿಮಾ ಮಾಡ್ತಿನಿ.

 

ತಾಜ್ ಮಹಲ್ ಚಾರ್ಮಿನಾರ್ ಇಂತಹ ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ಕೊಟ್ಟ ಖ್ಯಾತ ನಿರ್ದೇಶಕ ಆರ್ ಚಂದ್ರು (R.Chandru) ಅವರ ಮತ್ತೊಂದು ಬಹು ನಿರೀಕ್ಷಿತ ಚಿತ್ರ ರಿಲೀಸ್ ಗೆ ರೆಡಿಯಾಗಿ ನಿಂತಿದೆ. ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kicha Sudeep) ಅವರ ಕಾಂಬಿನೇಷನ್ ನ ಎರಡನೇ ಚಿತ್ರವಾದ ಕಬ್ಜಾ (Kabzaa) ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲವನ್ನು ಹೆಚ್ಚಿಸಿದೆ.

ಮೊನ್ನೆ ಅಷ್ಟೇ ಸಿನಿಮಾದ ಹಾಡೊಂದು ಬಿಡುಗಡೆ ಆಗಿದ್ದು ಸಿನಿಮಾ ಬಿಡುಗಡೆಗಾಗಿ ಇಡೀ ನಾಡಿನಾದ್ಯಂತ ಕಲಾಪೇಕ್ಷಕರು ಅದು ಕುಳಿತಿದ್ದಾರೆ. ನಿರ್ದೇಶಕ ಆರ್ ಚಂದ್ರು ಅವರು ಈ ಸಿನಿಮಾವನ್ನು ಅಪ್ಪು ಅವರ ಹುಟ್ಟುಹಬ್ಬದ (Appu birthday) ಪ್ರಯುಕ್ತ ಮಾರ್ಚ್ 17 ರಂದು ಬಿಡುಗಡೆ ಮಾಡುತ್ತೇವೆ, ಈ ಸಿನಿಮಾವನ್ನು ಅಪ್ಪು ಅವರಿಗೆ ಅರ್ಪಿಸುತ್ತಿದ್ದೇವೆ ಎಂದು ಕೂಡ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಮಾಧ್ಯಮದವರಿಗೆ ಸಿಕ್ಕ ಆರ್.ಚಂದ್ರು ಅವರನ್ನು ಮಾಧ್ಯಮದವರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರಮುಖವಾಗಿ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬಕ್ಕೂ ಮುಂಚೆ ಫೆಬ್ರವರಿ ತಿಂಗಳಿನಲ್ಲಿಯೇ ದರ್ಶನ್ (Darshan) ಅವರ ಹುಟ್ಟು ಹಬ್ಬ ಬರುತ್ತಿದೆ ಅಂದು ಸಿನಿಮಾ ಬಿಡುಗಡೆ ಮಾಡಬಹುದಿತ್ತಲ್ಲ ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ.

ಅದಕ್ಕೆ ಆರ್ ಚಂದ್ರು ಅವರು ಪುನೀತ್ ರಾಜಕುಮಾರ್ ಅವರಿಗೆ ಕಬ್ಜಾ ಸಿನಿಮಾದ ಹಲವು ವಿಷಯಗಳನ್ನು ಹೇಳಿದ್ದೆ, ನನಗೆ ಸಿನಿಮಾ ಬಗ್ಗೆ ಕೆಲವು ಸಲಹೆಗಳನ್ನು ಅವರು ಕೊಟ್ಟಿದ್ದರು. ಟೀಸರ್ ರಿಲೀಸ್, ಅಥವಾ ಟೈಟಲ್ ಲಾಂಚ್ ಹೀಗೆ ಯಾವುದಾದರು ಒಂದು ಕಾರ್ಯಕ್ರಮವನ್ನು ಅವರ ಕೈಯಿಂದ ಮಾಡಿಸಬೇಕು ಎಂದು ಆಸೆ ಪಟ್ಟಿದ್ದೆ ಅವರು ಸಹ ಒಪ್ಪಿಕೊಂಡು ಬರುತ್ತೇನೆ ಎಂದು ಹೇಳಿದ್ದರು ಆದರೆ ಇಂದು ಅವರು ನಮ್ಮೊಂದಿಗೆ ಇಲ್ಲ ಎನ್ನುವ ದುಃಖ ಎಲ್ಲರಂತೆ ನನಗೂ ಕಾಡುತ್ತಿದೆ.

ಹಾಗಾಗಿ ಅವರ ನೆನಪಿಗಾಗಿ ಪ್ರೀತಿಯಿಂದ ಅವರಿಗೆ ಅರ್ಪಿಸುತ್ತಿದ್ದೇನೆ ಅಷ್ಟೇ ಆದರೆ ದರ್ಶನ್ ಅವರಿಗಾಗಿ ಕಬ್ಜಾ ಮತ್ತು ಕೆಜಿಎಫ್ ರೇಂಜಿಗೆ ಸಿನಿಮಾ ಒಂದನ್ನು ಮಾಡೋಣ. ಕನ್ನಡ ಸಿನಿಮಾ ಇಂಡಸ್ಟ್ರಿಯ ಎಲ್ಲಾ ನಿರ್ದೇಶಕರಿಗೆ ಕೂಡ ಈ ಆಸೆ ಇರುತ್ತದೆ ದರ್ಶನ್ ಅವರೊಂದಿಗೆ ಸಿನಿಮಾ ಮಾಡಬೇಕು ಎಂದು ನಾನು ಸಹ ಅಂಥವರಲ್ಲಿ ಒಬ್ಬ ಜೊತೆಗೆ ನಾನು ಕೂಡ ದರ್ಶನ್ ಅವರ ಅಭಿಮಾನಿ.

ದರ್ಶನ್ ಅವರಿಗಾಗಿ ಸಿನಿಮಾ ಮಾಡ್ತೇನೆ ಆದರೆ ಅನೌನ್ಸ್ ಮಾಡುವುದು ದೊಡ್ಡದಲ್ಲ ಅದಕ್ಕೆ ಸಮಯ ಕೂಡಿ ಬರಬೇಕು, ಕಥೆ ಅವರ ಡೇಟ್ಸ್ ಎಲ್ಲವು ಹೊಂದಬೇಕು, ಒಂದು ದಿನ ಆಗುತ್ತದೆ ಎಂದಿದ್ದಾರೆ. ಜೊತೆಗೆ ಸಿನಿಮಾ ಬಜೆಟ್ ಇತ್ತೀಚೆಗೆ ಹೆಚ್ಚಾಗುತ್ತಿದೆ ಮುಂದಿನ ಸಿನಿಮಾಗಳಲ್ಲಿ ನೀವು ಅದೇ ರೀತಿ ಪ್ಲಾನ್ ಮಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಕಾಂತರಾ ಸಿನಿಮಾ ಇದಕ್ಕೆ ಪಾಠ ಆಗಿದೆ, ಕಂಟೆಂಟ್ ಮುಖ್ಯ ಬಜೆಟ್ ಅಲ್ಲ ಎಂದು.

ನಾವು ಸಹ ಅದೇ ರೀತಿ ಹೋಗುತ್ತೇವೆ ಎಂದಿದ್ದಾರೆ ಜೊತೆಗೆ ಸಿನಿಮಾ ಹಿಟ್ ಹಾಗೂ ಫ್ಲಾಫ್ ಗಳ ಬಗ್ಗೆ ಕೂಡ ಮಾತನಾಡಿದ ಇವರು ಸಿನಿಮಾ ಇಂಡಸ್ಟ್ರಿಯಲ್ಲಿ ಇನ್ವೆಸ್ಟ್ ಮಾಡುವುದು ಕೂಡ ಒಂದು ಉದ್ಯಮ. ನಿರ್ಮಾಪಕರಿಗೆ ಅವರ ಬಜೆಟ್ ಮೇಲೆ ಎಷ್ಟು ಬಂದರೂ ಸಂಬಳ ಇದ್ದಂತೆ. ಅವರ ಬಜೆಟ್ ಮೇಲೆ ಹಣ ಬಂದರೆ ಸಾಕು ಸಿನಿಮಾ ಗೆದ್ದಂತೆ. ಇಲ್ಲಿ ಎಲ್ಲರೂ ಮಾಡುತ್ತಿರುವುದು ಕನ್ನಡ ಸಿನಿಮಾ ಇಂಡಸ್ಟ್ರಿಗಾಗಿ ಎನ್ನುವುದು ಮುಖ್ಯ ಎಂದಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ

ಮೋದಿ ಸಿನಿಮಾನೇ ಗೆಲ್ಸೋಕೆ ಆಗ್ಲಿಲ್ಲ ಪಠಾಣ್ ಗೆ ಬಾಯ್ಕಾಟ್ ಮಾಡಲು ಹೊರಟಿದ್ರು ಆದ್ರೆ ಆ ಸಿನಿಮಾ ಸೋಲ್ತಾ.? ಎಂದು ವ್ಯಂಗ್ಯ ಮಾಡಿದ ಪ್ರಕಾಶ್ ರೈ.

0

 

ಕೇರಳದ ಸಂವಾದ ಒಂದರಲ್ಲಿ ಪಾಲ್ಗೊಂಡಿದ್ದ ಪ್ರಕಾಶ್ ರೈ (Prakash Rai) ಅವರು ಮಾತಿನ ನಡುವೆ ಸಿನಿಮಾ ವಿಚಾರವನ್ನು ತೆಗೆದುಕೊಂಡಿದ್ದಾರೆ. ಪಠಾಣ್ (Pataan) ಸಿನಿಮಾದ ಗೆಲುವು ಹಾಗೂ ಮೋದಿ ಸಿನಿಮಾದ ಸೋಲಿನ ನಡುವೆ ತಾಳೆ ಹಾಕಿ ವ್ಯಂಗ್ಯದ ನುಡಿಗಳನ್ನಾಡಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಬಾಲಿವುಡ್ ನ ಶಾರುಖಾನ್ (Shar ruk khan) ಹಾಗೂ ದೀಪಿಕಾ ಪಡುಕೋಣೆ (Deepika padukone) ಅವರು ಮುಖ್ಯ ಭೂಮಿಕೆಯಲ್ಲಿರುವ ಪಠಾಣ್ ಸಿನಿಮಾವನ್ನು ನಾನಾ ಕಾರಣಗಳಿಂದ ಬಾಯ್ ಕಟ್ ಮಾಡುವಂತೆ ಮಾತುಕತೆ ನಡೆಯುತ್ತಿತ್ತು.

ಆ ಸಮಯದಲ್ಲಿ ಇನ್ನೇನು ಚಿತ್ರ ಬ್ಯಾನ್ ಆಗೇ ಬಿಡುತ್ತದೆ ಎನ್ನುವಷ್ಟರ ಮಟ್ಟಕ್ಕೆ ಎಲ್ಲ ಕಡೆ ಕೂಗು ಜೋರಾಗಿತ್ತು. ಆದರೆ ಇದೆಲ್ಲವನ್ನು ದಾಟಿ ಇಂದು ಸಿನಿಮಾ ಗೆದ್ದು ಬಿಟ್ಟಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಸದ್ದು ಮಾಡುತ್ತಿರುವ ಇದು ಒಟ್ಟು ಎಲ್ಲಾ ಕಲೆಕ್ಷನ್ ಸೇರಿಸಿ 12 ದಿನಕ್ಕೆ 900 ಕೋಟಿಯನ್ನು ಬಾಚಿದೆ. ಈ ಉದಾಹರಣೆಯನ್ನು ಇಟ್ಟುಕೊಂಡು ಪ್ರಕಾಶ್ ರೈ ಈಗ ಕೊಂಕಾಡುತ್ತಿದ್ದಾರೆ. ಪಠಾಣ್ ಸಿನಿಮಾ 700 ಕೋಟಿ ದಾಟಿದೆ, ಆ ಸಿನಿಮಾ ಬಾಯ್ ಕಟ್ ಗ್ಯಾಂಗಿನವರು ಬಾಯ್ ಕಟ್ ಮಾಡಲು ಹೋಗಿದ್ದರು

ಆದರೆ ಅವರಿಗೆ ಅವರ ಮೋದಿ (Modi) ಸಿನಿಮಾವನ್ನು ಮೂವತ್ತು ಕೋಟಿಯ ಸಿನಿಮಾ ಆಗಿ ಕೂಡ ಗೆಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ ಪ್ರಕಾಶ್ ರೈ ಅವರು ಅವರೆಲ್ಲ ಬೊಗಳುತ್ತಾರೆ ಅಷ್ಟೇ ಕಚ್ಚುವುದಿಲ್ಲ ಎಂದಿದ್ದಾರೆ. ಜೊತೆಗೆ ದಿ ಕಾಶ್ಮೀರಿ ಫೈಲ್ (The Kashmiri Files) ಸಿನಿಮಾ ಬಗ್ಗೆ ಕೂಡ ಮಾತನಾಡಿ. ದಿ ಕಾಶ್ಮೀರಿ ಫೈಲ್ಸ್ ಸಿನಿಮಾವನ್ನು ಇಂಟರ್ನ್ಯಾಷನಲ್ ವಿಮರ್ಶಕರು ಮತ್ತು ಜೂರಿ ಮೆಂಬರ್ಸ್ ತೆಗಳಿದ್ದಾರೆ.

ಅದೊಂದು ನಾನ್ಸೆನ್ಸ್ ಸಿನಿಮಾ ಆದರೆ ಆ ಸಿನಿಮಾದ ನಿರ್ದೇಶಕ ಕೇಳುತ್ತಿದ್ದಾನೆ ನನಗೆ ಯಾಕೆ ಆಸ್ಕರ್ ಬಂದಿಲ್ಲ ಎಂದು ಎನ್ನುತ್ತಾ ಆಡಿಕೊಂಡಿದ್ದಾರೆ. ಪ್ರೋಪಗಾಂಡ (Propaganda) ಸಿನಿಮಾ ಮಾಡಲೆಂದೇ ಅವರು ಸುಮಾರು 2000 ಕೋಟಿ ಅಷ್ಟು ಖರ್ಚು ಮಾಡುತ್ತಾರೆ, ಆದರೆ ಪ್ರತಿ ಬಾರಿ ಕೂಡ ಪ್ರೇಕ್ಷಕನನ್ನು ಮೂರ್ಖ ಮಾಡಲು ಆಗುವುದಿಲ್ಲ ಎನ್ನುವುದು ಅವರಿಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಕೆಜಿಎಫ್ ಟೂ (KGF2) ಸಿನಿಮಾ ರಿಲೀಸ್ ಆದ ವೇಳೆಯಲ್ಲಿ ಸಹ ಆ ಸಿನಿಮಾದಲ್ಲಿ ಪ್ರಕಾಶ್ ರಾಜ್ ಅವರು ಇದ್ದಾರೆ ಎನ್ನುವ ಕಾರಣಕ್ಕೆ ಹಲವು ಕಡೆ ಸಿನಿಮಾವನ್ನು ಬ್ಯಾನ್ ಮಾಡಬೇಕು ಎನ್ನುವ ಕೂಗು ಕೇಳಿ ಬಂದಿತ್ತು. ಆದರೂ ಸಹ ಅದೆಲ್ಲದರ ನಡುವೆ ಕೆಜಿಎಫ್ ಟೂ ಸಿನಿಮಾ ಇಂಡಿಯನ್ ಸಿನಿಮಾ ಹಿಸ್ಟರಿಯಲ್ಲಿ ಹೊಸ ದಾಖಲೆಯನ್ನು ಬರೆದು ಬಿಟ್ಟಿತ್ತು. ಪಠಾಣ್ ಸಿನಿಮಾದಲ್ಲಿ ನಾಯಕ ನಟಿಯಾದ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣದ ಬಿಕಿನಿ ಧರಿಸಿ ಭೇಷ್ರಾಮ್ ರಂಗ್ ಹಾಡೊಂದರಲ್ಲಿ ಬೀಚ್ ಮುಂದೆ ಹೆಜ್ಜೆ ಹಾಕಿದ್ದರು.

ಇದು ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ ಎನ್ನುವ ಕಾರಣಕ್ಕೆ ಸಿನಿಮಾದ ಬ್ಯಾನ್ ಮಾಡುವ ತನಕ ವಿಚಾರ ಹೋಗಿತ್ತು. ಸಿನಿಮಾ ಬಿಡುಗಡೆ ಆದ ಮೇಲೂ ಕೂಡ ಹಿಂದೂ ಕಾರ್ಯಕರ್ತರು ಹಾಗೂ ಭಜರಂಗಿ ದಳದವರು ಅನೇಕ ಕಡೆ ಥಿಯೇಟರ್ ಗೆ ನುಗ್ಗಿ ದಾಂಧಲೇ ನಡೆಸಿದ್ದಾರೆ. ಇದೆಲ್ಲದರ ನಡುವೆ ಹಲವು ವರ್ಷಗಳಿಂದ ಬಾಯಿ ಬಿಟ್ಟುಕೊಂಡು ಬಾಲಿವುಡ್ ಕಾಯುತ್ತಿದ್ದ ಒಂದು ಹಿಟ್ ಪಠಾಣ್ ಸಿನಿಮಾದಿಂದ ಸಿಕ್ಕಿದೆ ಎಂದು ಹೇಳಬಹುದು. ಸದ್ಯಕ್ಕೆ ಇಡೀ ಬಾಲಿವುಡ್ ಈಗ ಆ ಸಂಭ್ರಮಾಚರಣೆಯಲ್ಲಿದೆ.

ರವಿಚಂದ್ರನ್ ಸುದೀಪ್ ನಾ ದೊಡ್ಡ ಮಗ ಅಂತ ಕರೆಯೋದು ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

 

ಇಂಡಸ್ಟ್ರಿಯಲ್ಲಿ ಇಷ್ಟೊಂದು ಸ್ಟಾರ್ ಗಳು ಇದ್ದರೂ ಸುದೀಪ್ ಅವರನ್ನೇ ತಮ್ಮ ದೊಡ್ಡ ಮಗ ಎಂದು ರವಿಚಂದ್ರನ್ ಅವರು ಹೇಳುವುದು ಯಾಕೆ ಗೊತ್ತಾ.? ರವಿಚಂದ್ರನ್ (Ravichandran) ಎನ್ನುವ ಹೆಸರೇ ಒಂದು ವಿಶೇಷ ಶಕ್ತಿ ಹೊಂದಿದೆ. ರವಿಚಂದ್ರನ್ ಎಂದರೆ ಸಿನಿಮಾ, ಸಿನಿಮಾ ಎಂದರೆ ರವಿಚಂದ್ರನ್ ಎಂದು ಹೇಳಬಹುದು. ಕರ್ನಾಟಕದ ಮಂದಿಗೆ ರವಿಚಂದ್ರನ್ ಅವರು ಸಿನಿಮಾ ವಿಷಯದಲ್ಲಿ ಬಹಳ ಹತ್ತಿರವಾಗಿದ್ದಾರೆ. ರವಿಚಂದ್ರನ್ ಅವರು ಸೋಲೊ ಹೀರೋ ಆಗಿ ಸಾಕಷ್ಟು ಸಿನಿಮಾಗಳಲ್ಲಿ ರಂಜಿಸಿರುವುದು ಮಾತ್ರ ಅಲ್ಲದೆ ಮಲ್ಟಿಸ್ಟಾರ್ ಸಿನಿಮಾ ಮಾಡಿ ಕೂಡ ಗೆದ್ದಿದ್ದಾರೆ.

ಡಾ.ವಿಷ್ಣುವರ್ಧನ್, ಶಿವರಾಜ್ ಕುಮಾರ್, ವಿಜಯ ರಾಘವೇಂದ್ರ, ರಮೇಶ್ ಅರವಿಂದ್, ನವರಸ ನಾಯಕ ಜಗ್ಗೇಶ್, ಶಶಿಕುಮಾರ್ ಇಂದ ಹಿಡಿದು ಈಗಿನ ಸ್ಟಾರ್ಗಳಾದ ದರ್ಶನ್ ಸುದೀಪ್ ತನಕ ಅನೇಕ ಹೀರೋಗಳ ಜೊತೆ ರವಿಚಂದ್ರನ್ ಅವರ ತೆರೆ ಹಂಚಿಕೊಂಡಿದ್ದಾರೆ. ಇಷ್ಟೆಲ್ಲಾ ಇಂಡಸ್ಟ್ರಿಯಲ್ಲಿದೆ ರವಿಚಂದ್ರನ್ ಅವರಿಗೆ ಗೌರವ ಪ್ರೀತಿ ಹಲವರ ಕಡೆಯಿಂದ ಸಿಗುತ್ತಿದ್ದರು ಸುದೀಪ್ (Sudeep) ಅವರ ಮೇಲೆ ವಿಶೇಷ ಒಲವು ಹೊಂದಿ ಅವರನ್ನು ತಮ್ಮ ಹಿರಿಯ ಮಗ ಎಂದು ಹೇಳುತ್ತಾರೆ.

ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಕನ್ನಡದ ಖಾಸಗಿ ಸುದ್ದಿ ಮಾಧ್ಯಮದ ನಿರೂಪಕರು ಒಬ್ಬರು ಇದೇ ಪ್ರಶ್ನೆಯನ್ನು ರವಿಚಂದ್ರನ್ ಅವರಿಗೆ ಕೇಳಿದಾಗ ಅವರು ಹೇಳಿದ ಉತ್ತರ ಈ ರೀತಿ ಇತ್ತು. ಸುದೀಪ್ ಮತ್ತು ನನ್ನ ಬಾಂಧವ್ಯ ನಾವು ಒಟ್ಟಿಗೆ ಸಿನಿಮಾ ಮಾಡುವುದಕ್ಕಿಂತ ಮುಂಚೆಯಿಂದಲೂ ಬಹಳ ಚೆನ್ನಾಗಿದೆ. ಸುದೀಪ್ ಅವರೇ ಹೇಳುತ್ತಾರೆ ಎಷ್ಟೋ ವಿಚಾರವನ್ನು ನನ್ನಿಂದ ಫಾಲೋ ಮಾಡಿದ್ದೇನೆ ಅಂತ. ಅವರು ಕಪ್ಪು ಬಟ್ಟೆ ಹಾಕಿರುವುದು ಇರಬಹುದು ಅಥವಾ ಸಿನಿಮಾ ಅನ್ನು ಇಷ್ಟ ಪಡುವುದು ಇರಬಹುದು ನಮ್ಮಿಬ್ಬರ ಥಂಕಿಂಗ್ ಒಂದೇ ರೀತಿ ಇದೆ.

ಅಲ್ಲದೆ ಪ್ರತಿಯೊಬ್ಬರೂ ಕೂಡ ನನ್ನನ್ನು ಸಿನಿಮಾ ಕಾರ್ಯಕ್ರಮಗಳಿಗೆ ಮುಹೂರ್ತಕ್ಕೆ ಕರೆಯುತ್ತಾರೆ. ಆದರೆ ಸುದೀಪ್ ಕರೆಯುವಾಗ ಅವನ ಮಾತಿನಲ್ಲಿ ಒಂದು ಕಾನ್ಫಿಡೆಂಟ್ ಇರುತ್ತದೆ. ಮನೆಯ ಫ್ಯಾಮಿಲಿ ಮೆಂಬರ್ ಅನ್ನು ಕರೆದ ರೀತಿ ಕರೆಯುತ್ತಾನೆ. ಅವನು ಕರೆಯುವಾಗಲೇ ಇವರು ಕನ್ಫರ್ಮ್ ಆಗಿ ಬರುತ್ತಾರೆ ಎಂದುಕೊಂಡು ಕರೆಯುತ್ತಾನೆ ಎನ್ನುವ ಭಾವನೆ ಬಂದು ಬಿಡುತ್ತದೆ ಅಷ್ಟರ ಮಟ್ಟಿಗೆ ಇಬ್ಬರ ನಡುವೆ ಒಂದು ಹೇಳಲಾಗದ ನಂಬಿಕೆ ಹುಟ್ಟಿಕೊಂಡಿದೆ.

ಒಟ್ಟಿಗೆ ಸಿನಿಮಾ ಮಾಡುವ ಸಮಯದಲ್ಲೂ ಸಹ ಮಾಣಿಕ್ಯ (Manikya) ಸಿನಿಮಾದಲ್ಲಿ ಮೊದಲ ಬಾರಿಗೆ ನಾನು ಪೋಷಕ ಪಾತ್ರದಲ್ಲಿ ನಟಿಸಿದ್ದು. ಆಗ ಮಾತ್ರ ಅವನಿಗೆ ಸ್ವಲ್ಪ ಗೊಂದಲ ಇತ್ತು. ಆದರೆ ಆತ ಒಂದೇ ಮಾತು ಹೇಳಿದ್ದು, ನೀವು ಈ ಪಾತ್ರ ಮಾಡಿದರೆ ಮಾತ್ರ ಮಾಣಿಕ್ಯ ಒಪ್ಪಿಕೊಳ್ಳುತ್ತೇನೆ ಇಲ್ಲ ಕೈ ಬಿಡುತ್ತೇನೆ ಎಂದು. ನನ್ನಿಂದ ಅವನ ಡ್ರೀಮ್ ಯಾಕೆ ಹಾಳಾಗಬೇಕು ಅಂತ ಮಾಡಿದೆ. ಆದರೆ ಅಲ್ಲಿ ಅವನ ಜೊತೆ ಅಪ್ಪನಾಗಿ ನಟಿಸಿದ ಮೇಲೆ ಆ ಫೀಲ್ ನಿಜವಾಗಿಯೂ ಬಂದು ಬಿಟ್ಟಿತ್ತು.

ಅದಕ್ಕಾಗಿ ಅಂದಿನಿಂದ ನಾನು ಸುದೀಪ್ ನನ್ನ ಹಿರಿ ಮಗ ಎಂದು ಹೇಳುತ್ತೇನೆ. ಅದಾದ ಮೇಲೆ ಸಹ ಅನೇಕ ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದೇವೆ ಹೆಬ್ಬುಲಿ (Hebbuli) ಅಲ್ಲೂ ಅಣ್ಣ ತಮ್ಮ ಆಗಿ ನಟಿಸಿದೆವು, ಈಗ ನನ್ನ ಸಿನಿಮಾ ರವಿ ಬೋಪಣ್ಣದಲ್ಲೂ (Ravi Bopanna) ಸಹ ಒಂದು ಅತಿಥಿ ಪಾತ್ರದಲ್ಲಿ ಸುದೀಪ್ ಅವರ ನಟಿಸಿದ್ದಾರೆ. ಸುದೀಪ್ ಈ ಪಾತ್ರ ಮಾಡಬೇಕು ಎಂದು ನನಗೆ ಆಸೆ ಇತ್ತು ನಮ್ಮ ನಿರ್ಮಾಪಕರಿಗೆ ಹೇಳಿದಾಗ ಅವರಿಗೆ ನಂಬಿಕೆ ಇರಲಿಲ್ಲ.

ಇದನ್ನು ಅವರು ಒಪ್ಪುವುದಿಲ್ಲ ಎಂದು ಹಠ ಮಾಡುತ್ತಿದ್ದರು. ನಾನು ಒಂದೇ ಒಂದು ಕರೆ ಮಾಡಿದೆ ಅವನು ಕಥೆ ಏನು ಪಾತ್ರ ಏನು ಯಾವುದು ಕೇಳಲಿಲ್ಲ ಆಯ್ತು ಯಾವಾಗ ಬರಬೇಕು ಹೇಳಿ ಎಂದು ಇಷ್ಟೆ ಕೇಳಿ ಬಂದು ಮಾಡಿಕೊಟ್ಟ. ಈ ರೀತಿ ನನ್ನ ಅವನ ಸಂಬಂಧ ಇದೆ ಜೊತೆಗೆ ಇಂಡಸ್ಟ್ರಿಯ ಬಹುತೇಕ ಎಲ್ಲಾ ಹಿರಿಯ ಮತ್ತು ಕಿರಿಯ ಕಲಾವಿದರು ಸಹ ನನಗೆ ಇಷ್ಟೇ ಪ್ರೀತಿ ವಿಶ್ವಾಸ ತೋರಿದ್ದಾರೆ ಎಂದು ಅದನ್ನು ಸಹ ಹೇಳಿದ್ದಾರೆ.

ನಾನು ಸಿನಿಮಾಗಳಲ್ಲಿ “ಗೇ” ಪಾತ್ರವನ್ನೇ ಹೆಚ್ಚಾಗಿ ಮಾಡುತ್ತಿದ್ದಕ್ಕೆ ನನ್ನ ಮಗಳು ಹೇಳಿದ್ದೇನು ಗೊತ್ತಾ.?

 

ಮಂಡ್ಯ ರಮೇಶ್ ಅವರು ಮೂಲತಃ ರಂಗಭೂಮಿ ಕಲಾವಿದರು. ಮೈಸೂರಿನಲ್ಲಿ ನಟನಾ ಎನ್ನುವ ಶಾಲೆಯನ್ನು ಕೂಡ ಆರಂಭಿಸಿ ಇಂದು ಕನ್ನಡ ಚಲನಚಿತ್ರರಂಗಕ್ಕೆ ಅನೇಕ ಕಲಾವಿದರು ಗಳನ್ನು ಕೊಡುಗೆಯಾಗಿ ಕೊಟ್ಟಿರುವ ಮಂಡ್ಯ ರಮೇಶ್ ಅವರು ಸ್ವತಃ ತಾವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಮಂಡ್ಯ ರಮೇಶ್ ಅವರು ನಾಗಾಭರಣ ಅವರ ನಿರ್ದೇಶನದ ಹಾರ್ಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜನುಮದ ಜೋಡಿ ಸಿನಿಮಾದಿಂದ ತಮ್ಮ ಆಕ್ಟಿಂಗ್ ಕೆರಿಯರ್ ಶುರು ಮಾಡಿದರು.

ಅಂದಿನಿಂದ ಇಂದಿನವರೆಗೆ ಬಹುತೇಕ ಎಲ್ಲಾ ಕಲಾವಿದರೊಂದಿಗೆ ಸ್ನೇಹಿತನ ಪಾತ್ರ ಮಾಡಿದ್ದಾರೆ, ಹೆಚ್ಚಾಗಿ ಹಾಸ್ಯ ಪ್ರಧಾನ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ಕಿರುತೆರೆಗಳಲ್ಲಿ ಬಹಳ ಗಂಭೀರವಾದ ಪಾತ್ರದಲ್ಲೂ ಅಭಿನಯಿಸುವುದರ ಜೊತೆಗೆ ಮಜಾ ಟಾಕೀಸ್ ಅಂತಹ ಕಾರ್ಯಕ್ರಮದಲ್ಲಿ ಮುದ್ದಣನ ಪಾತ್ರ ಮಾಡಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.

ಇತ್ತೀಚೆಗೆ ಅವರು ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದಾಗ ನಿರೂಪಕರು ಅವರಿಗೆ ಪ್ರಶ್ನೆ ಒಂದನ್ನು ಕೇಳಿದ್ದಾರೆ. ಎಂದಾದರೂ ಯಾವುದಾದರೂ ಸಿನಿಮಾ ಸೆಟ್ಟಿಗೆ ಹೋಗಿ ಯಾಕಾದರೂ ಬಂದೆನೋ ಎಂದು ಬೇಸರ ಅನುಭವಿಸಿದ್ದೀರಾ? ಆ ರೀತಿ ಎಲ್ಲಾದರೂ ಅವಮಾನ ಆಗಿದೆಯಾ ಎಂದು ಕೇಳಿದರು. ಅದಕ್ಕೆ ಮಂಡ್ಯ ರಮೇಶ್ ಅವರು ಎಂದು ಸಹ ಅಂತಹ ಘಟನೆ ನಡೆದೇ ಇಲ್ಲ, ನಾನು ಒಂದು ಸಿನಿಮಾ ಅಥವಾ ಪಾತ್ರ ಒಪ್ಪಿಕೊಂಡ ಮೇಲೆ ಆ ರೀತಿ ಅಂದುಕೊಳ್ಳುವುದು ಇಲ್ಲ.

ಆ ರೀತಿ ನನ್ನ ಜೊತೆ ಯಾರು ವರ್ತಿಸಿಯೂ ಇಲ್ಲ. ಆದರೆ ನಾನು ಹೆಚ್ಚಾಗಿ ಸಿನಿಮಾಗಳಲ್ಲಿ ತೃತೀಯಲಿಂಗಿ ಪಾತ್ರಗಳನ್ನು ಮಾಡುತ್ತಿದ್ದೆ, ನನ್ನ ಮಗಳು ಅದರಿಂದ ಬೇಜಾರು ಮಾಡಿಕೊಳ್ಳುತ್ತಿದ್ದಳು. ಒಂದು ಬಾರಿ ಎರಡು ಬಾರಿ ಸಾಕು ಅಪ್ಪ ಪದೇ ಪದೇ ಯಾಕೆ ಅದೇ ಪಾತ್ರ ಮಾಡುತ್ತೀರಿ ಎಂದು ಕೇಳುತ್ತಿದ್ದಳು. ನಾನು ಅದು ಕೂಡ ಒಂದು ಪಾತ್ರ ಅಲ್ವಾ ಕಂದ ಎಂದು ಹೇಳುತ್ತಿದ್ದೆ ಆದರೂ ಆ ಪಾತ್ರ ಆಯ್ತಲ್ಲ ಬೇರೆ ಪಾತ್ರ ಮಾಡಿ ಇಷ್ಟು ಸಾಕು ಮತ್ತೆ ಅದೇ ಪಾತ್ರದಲ್ಲಿ ಮಾಡಬೇಡಿ ಎಂದು ಹೇಳುತ್ತಿದ್ದಳು.

ಒಂದರ್ಥದಲ್ಲಿ ನಾನು ಆ ಸಮಯದಲ್ಲಿ ಅದೇ ರೀತಿ ಫೇಮಸ್ ಆಗಿಬಿಟ್ಟಿದ್ದೆ, ತ್ರೀ ಜೆಂಡರ್ ಪಾತ್ರಕ್ಕೆ ಕರ್ನಾಟಕದಲ್ಲಿ ವರ್ಲ್ಡ್ ಫೇಮಸ್ ನಾನೇ. ಸ್ವತಃ ಅಂಬರೀಶ್ ಅವರೇ ನನ್ನನ್ನು ನೋಡಿದಾಗಲೆಲ್ಲ ಅದನ್ನೇ ಹೇಳಿ ನೆನೆಸಿಕೊಳ್ಳುತ್ತಿದ್ದರು ನೀನು ಹಾಗೂ ಸಾಧುಕೋಕಿಲ ಎಷ್ಟು ಚೆನ್ನಾಗಿ ಆಕ್ಟಿಂಗ್ ಮಾಡಿದ್ದೀರ ಎಂದು ಹೇಳಿಕೊಂಡು ನೆನೆಸಿಕೊಂಡು ನಗುತ್ತಿದ್ದರು. ಆದರೆ ನನ್ನ ಮಗಳಿಗೆ ಆ ಪಾತ್ರದ ಬಗ್ಗೆ ಬೇಸರ ಇತ್ತು, ಜನ ಎಲ್ಲ ನೋಡುತ್ತಾರೆ ಪದೇ ಪದೇ ಅದೇ ಪಾತ್ರ ಹೆಚ್ಚಾಗಿ ನಿಮಗೆ ಬರುತ್ತವೆ.

ಹಾಗಾಗಿ ಆ ಪಾತ್ರ ಇನ್ನೂ ಬೇಡ ಮಾಡಬೇಡಿ ಎಂದಳು, ಹಾಗಾಗಿ ಅವಳ ಮಾತಿಗಾಗಿ ನಾನು ಅಂತಹ ಪಾತ್ರಗಳನ್ನು ಮಾಡುವುದಿಲ್ಲ ಎಂದು ಹೇಳುತ್ತಿದ್ದೆ. ಅಷ್ಟು ಬಿಟ್ಟರೆ ಬೇರೆ ಯಾವ ಪಾತ್ರವನ್ನು ಯಾವ ಸಿನಿಮಾವನ್ನು ಆಗುವುದಿಲ್ಲ ಎಂದು ಹೇಳಿಲ್ಲ ಎಂದು ನಿರೂಪಕರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಜೊತೆಗೆ ಇದೆ ಇಂಟರ್ವ್ಯೂ ಅಲ್ಲಿ ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವುದರ ಬಗ್ಗೆ ಜೊತೆಗೆ ಅವರಿಗೆ ಸಿಕ್ಕ ಅನೇಕ ಅವಾರ್ಡ್ ಗಳ ಬಗ್ಗೆ ಮತ್ತು ನಟನಾ ಬಗ್ಗೆ ಅವರಿಗಿರುವ ಮುಂದಿನ ಕನಸುಗಳ ಬಗ್ಗೆ ಇನ್ನೂ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಹಳ ಅರ್ಥಪೂರ್ಣವಾದ ಸಂದರ್ಶನ ಇದಾಗಿದ್ದು ಅವರ ಮಾತುಗಳನ್ನು ಕೇಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.