Home Blog Page 59

ನೀರಿನ ಮೇಲೆ ತೇಲುವ ವಿಶ್ವದ ಏಕೈಕ ವಿಷ್ಣುವಿನ ವಿಗ್ರಹ, ಇದರ ಹಿಂದಿನ ರೋಚಕ ಕಥೆ ಕೇಳಿದ್ರೆ ನಿಜಕ್ಕೂ ಬೆರಗಾಗ್ತೀರಾ.!

0

 

ನಾವು ವಿಶ್ವದಲ್ಲಿ ಅನೇಕ ಬಗೆಯ ದೇವಸ್ಥಾನಗಳನ್ನು ಕಂಡಿರುತ್ತೇವೆ ಅಥವಾ ಅವುಗಳ ಬಗ್ಗೆ ಕೇಳಿರುತ್ತೇವೆ. ಕೆಲವು ವಿಶೇಷ ದೇವಸ್ಥಾನಗಳು ನಮಗೆ ಅಚ್ಚರಿಯನ್ನು ತರವ ರೀತಿ ಹಾಗೂ ಇನ್ನೂ ಅನೇಕ ರೀತಿ ದೇವಸ್ಥಾನಗಳು ನಮ್ಮ ಊಹೆಗೆ ನಿಲುಕದ ರೀತಿ ಕುತೂಹಲಗಳನ್ನು ಇನ್ನು ತನ್ನೊಳಗೆ ಉಳಿಸಿಕೊಂಡಿರುವ ಹಾಗೆ ಕಾಣುತ್ತವೆ.

ಇಂತಹ ದೇವಾಲಯಗಳ ಪಟ್ಟಿಗೆ ಮತ್ತೊಂದು ವಿಶೇಷವಾದ ದೇವಾಲಯ ಸೇರುತ್ತದೆ. ಇಲ್ಲಿ ದೇವರು ನೆಲೆಗೊಂಡಿರುವ ಭಂಗಿಯ ಕಾರಣದಿಂದಾಗಿ ಕೂಡ ಪ್ರಖ್ಯಾತಿಯಲ್ಲಿದೆ. ಸಾಮಾನ್ಯವಾಗಿ ನಾವು ದೇವರು ನಿಂತಿರುವ ಹಾಗೂ ಕುಳಿತಿರುವ ಭಂಗಿಯಲ್ಲಿರುವ ವಿಗ್ರಹಗಳನ್ನು ನೋಡಿದ್ದೇವೆ.

ಭಾರತದಲ್ಲಿ ಕೆಲವು ವಿಷ್ಣು ದೇವಸ್ಥಾನಗಳಲ್ಲಿ ಶಯನ ಸ್ವರೂಪದಲ್ಲಿರುವ ದೇವರ ವಿಗ್ರಹಗಳನ್ನು ಕಂಡಿದ್ದೇವೆ ಪೂಜಿಸಿದ್ದೇವೆ. ಆದರೆ ಇಡೀ ವಿಶ್ವದಲ್ಲಿ ಒಂದೇ ಒಂದು ಕಡೆ ಭಗವಂತನು ತೇಲುವ ರೂಪಯಲ್ಲಿ ದರ್ಶನ ಕೊಡುತ್ತಿದ್ದಾರೆ. ಈ ದೇವಸ್ಥಾನದ ಈ ವಿಶೇಷತೆಗೆ ಇಂದು ಇಡೀ ಜಗತ್ತೇ ದೇವಾಲಯದತ್ತ ತಿರುಗಿ ನೋಡುವಂತಾಗಿದೆ. ಇಲ್ಲಿನ ಮತ್ತೊಂದು ವಿಶೇಷತೆ ಏನೆಂದರೆ ಶಿವ ಹಾಗೂ ವಿಷ್ಣು ಬೇರೆ ಬೇರೆ ಅಲ್ಲ ಹರಿಹರ ಒಂದೇ ಎನ್ನುವ ರೀತಿ ಸಂದೇಶವನ್ನು ನೀಡುವ ವಿಶೇಷ ದೇವಸ್ಥಾನವಾಗಿದೆ.

ಈ ಸುದ್ದಿ ಓದಿ:- ಆಂಜನೇಯ ಸ್ವಾಮಿಗೆ ಇಷ್ಟ ಈ 8 ವಸ್ತು ಅರ್ಪಿಸಿ ಸಾಕು.! ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ ಖಂಡಿತ ಒಲಿಯುತ್ತಾನೆ ಮಾರುತಿ.!

ಬುಧ ನೀಲಕಂಠ ಎಂದು ಕರೆಸಿಕೊಂಡಿರುವ ಈ ದೇವಸ್ಥಾನವು ನಮ್ಮ ನೆರೆಯ ರಾಜ್ಯವಾದ ನೇಪಾಳದಲ್ಲಿದೆ. ನೇಪಾಳ ಕೂಡ ಹಿಂದೂ ರಾಜ್ಯ, ಈ ಹಿಂದೆ ಇದು ಅಖಂಡ ಭಾರತದ ಭಾಗವಾಗಿತ್ತು. ಈಗ ಭಾರತದ ಬೇರ್ಪಟ್ಟು ಪ್ರತ್ಯೇಕ ದೇಶವಾಗಿದ್ದರು ಕೂಡ ಇನ್ನೂ ನಮ್ಮ ಸನಾತನ ಧರ್ಮದ ಮೂಲಗಳನ್ನು ನಾವು ಕಾಣಬಹುದು, ಇಂತಹ ಕುರುಹುಗಳಲ್ಲಿ ಈ ಬುಧ ನೀಲಕಂಠ ದೇವಸ್ಥಾನವೂ ಕೂಡ ಸೇರಿದೆ.

ತೆರೆದ ಪ್ರದೇಶದಲ್ಲಿ ವಿಷ್ಣುವಿನ ವಿಗ್ರಹ ಇರುವ ಈ ದೇವಾಲಯವು ತುಂಬಾ ವಿಶೇಷವಾಗಿದೆ. ಈ ದೇವಾಲಯವು ರಾಜಧಾನಿ ಕಾಟ್ಮಂಡು ಕಣಿವೆಯ ಶಿವಪುರಿಯ ಉತ್ತರಭಾಗದಲ್ಲಿದೆ. ವಿಷ್ಣು ಕ್ಷೀರಸಾಗರದಲ್ಲಿ ಶೇಷನಾಗನ ಮೇಲೆ ಮಲಗಿರುವ ಹಾಗೆ ಈ ವಿಷ್ಣುವಿನ ವಿಗ್ರಹ ಕಾಣುತ್ತದೆ. ಈ ಮೂರ್ತಿಯೂ ಇರುವ ಪ್ರದೇಶವು ಸುತ್ತಲೂ 13 ಮೀ ಸರೋವರ ಇವರಿಸಿದೆ. ಮತ್ತು ಇದರ ಆಳ 6 ಮೀ ಉದ್ದವಿದೆ.

ಇಷ್ಟೇ ಅಲ್ಲದೇ ಈ ವಿಗ್ರಹದಲ್ಲಿ ಮತ್ತೊಂದು ರಹಸ್ಯವಿದೆ. ಅದೇನೆಂದರೆ, ನೀಲಕಂಠ ಎಂದು ಕರೆಯುವುದು ಶಿವನನ್ನು ,ಆದರೆ ಇಲ್ಲಿರುವುದು ವಿಷ್ಣುವಿನ ವಿಗ್ರಹ. ಅದಕ್ಕಾಗಿ ಇದನ್ನು ಬುದನೀಲಕಂಠ ದೇವಾಲಯ ಎಂದು ಕರೆಯಲಾಗುತ್ತದೆ. ಶಿವರಾತ್ರಿಯ ದಿನದಂದು ಈ ವಿಗ್ರಹಕ್ಕೆ ವಿಶೇಷ ಪೂಜೆ ಇರುತ್ತದೆ. ಈ ಪೂಜೆ ನಡೆಯುವ ಸಂದರ್ಭದಲ್ಲಿ ಆ ಸರೋವರದಲ್ಲಿ ಉಂಟಾಗುವ ನೆರಳಿಗು ಕೂಡ ಪೂಜೆ ಸಲ್ಲಿಸಲಾಗುತ್ತದೆ ಹಾಗೂ ಆ ನೆರಳಿನ ರಹಸ್ಯವನ್ನು ಇನ್ನು ಸಹ ಯಾರಿಗೂ ಭೇದಿಸಲು ಸಾಧ್ಯವಾಗಿಲ್ಲ.

ಈ ಸುದ್ದಿ ಓದಿ:- ನೊಂದು ಬಂದವರಿಗೆ ಪರಿಹಾರ ಕೊಡುವ ಹಾಸನದ ಈ ಪುರದಮ್ಮ.!

ಯಾಕೆಂದರೆ ಆ ನೆರಳಿನಲ್ಲಿ ಗೋಚರಿಸುವುದು ಶಿವನ ರೂಪ. ವಿಗ್ರಹ ವಿಷ್ಣುವಿನದಾದರು ಅದರ ನೆರಳು ಹಾಗೂ ರೂಪ ಶಿವನದ್ದು, ಇದೇ ಈ ದೇವಾಲಯದ ವಿಸ್ಮಯಕಾರಿ ಹಾಗೂ ಆಶ್ಚರ್ಯಕರ ಸಂಗತಿಯಾಗಿದೆ.ಈ ನೆರಳು ಹೇಗೆ ಗೋಚರಿಸುತ್ತದೆ, ಯಾವ ಕಾರಣದಿಂದ ಹೀಗೆ ಕಾಣಿಸುತ್ತದೆ ಎಂಬುದನ್ನು ಕಂಡು ಹಿಡಿಯಲು ಶತ ಪ್ರಯತ್ನಗಳಾಗಿವೆ, ಆದರೆ ಯಾರಿಗೂ ಸಾಧ್ಯವೇ ಆಗಿಲ್ಲ.

ವಿಚಿತ್ರವೆಂದರೆ ಈ ವಿಗ್ರಹ ಸಮುದ್ರದಲ್ಲಿ ಸಂಪೂರ್ಣವಾಗಿ ತೇಲುತ್ತದೆ ಪುರಾಣದ ಪ್ರಕಾರ ಹಾಗೂ ಅಲ್ಲಿನ ಪೂಜಾರಿಗಳ ಪ್ರಕಾರ ಆ ವಿಗ್ರಹದ ಕೆಳಗಡೆ ಶಿವನ ಮೂರ್ತಿಯೂ ಇದೆ ಎಂದು ನಂಬಲಾಗಿದೆ ಅಷ್ಟೇ. ಆದರೆ ಅದನ್ನು ಇಲ್ಲಿವರೆಗೂ ಸಾಭೀತು ಪಡಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಹಲವು ವರ್ಷಗಳ ಹಿಂದೆ ಈ ಭಾಗದಲ್ಲಿ ರೈತನೊಬ್ಬ ಉಳುಮೆ ಮಾಡುವಾಗ ನೆಲದಿಂದ ರಕ್ತ ಹರಿಯುತ್ತಿರುವ ರೀತಿ ಆಗುತ್ತದೆ.

ಈ ಬಗ್ಗೆ ಕುತೂಹಲಗೊಂಡ ರೈತ ಒಳಗೇನಿದೆ ಎಂದು ನೋಡಿದಾಗ ವಿಷ್ಣುವಿನ ವಿಗ್ರಹ ಇರುವುದು ಮತ್ತು ಅದರ ಕೆಳಗೆ ಜಲ ಹರಿದು ಬರುತ್ತಿರುವುದು ನೋಡಿ ಆಶ್ಚರ್ಯ ಚಕಿತರಾಗಿ ಋಷಿ ಮುನಿಗಳ ಸಲಹೆ ಮೇರೆಗೆ ಸಮುದ್ರ ಮೇಲೆಯೇ ವಿಷ್ಣುವಿನ ರೂಪದಲ್ಲಿಯೇ ಪೂಜಿಸಿಕೊಂಡು ಬಂದಿದ್ದಾರೆ ಎನ್ನುವ ಪ್ರತೀತಿಗಳು ಇವೆ.

ಬೆಳ್ಳಿಯ ಉಂಗುರವನ್ನು ಧರಿಸುವವರಿಗೆ ಈ 9 ಅದ್ಭುತ ಲಾಭಗಳು ಸಿಗುತ್ತವೆ.!

 

ಬೆಳ್ಳಿಯ ಆಭರಣಗಳು ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅನೇಕ ದೋಷಗಳನ್ನು ಕೂಡ ಪರಿಹರಿಸುತ್ತವೆ. ಬೆಳ್ಳಿಯು ಶುಕ್ರ ಹಾಗೂ ಚಂದ್ರಗ್ರಹಕ್ಕೆ ಸಂಬಂಧಪಟ್ಟ ಧಾತುಗಳಾಗಿವೆ. ಶುಕ್ರ ಗ್ರಹವು ಸಿರಿ ಸಂಪತ್ತು ಸುಖ ಸಮೃದ್ಧಿ ಕೊಡುವ ಗ್ರಹವಾಗಿದ್ದರೆ ಚಂದ್ರ ಗ್ರಹವು ಮನಸ್ಸಿನ ಕಾರಕವಾಗಿದ್ದು ಶಾಂತಿ ಮತ್ತು ನೆಮ್ಮದಿಯನ್ನು ಕೊಡುತ್ತದೆ.

ಪುರಾಣಗಳ ಮಾಹಿತಿ ಪ್ರಕಾರ ಬೆಳ್ಳಿಯು ಶಿವನ ಕಣ್ಣುಗಳಿಂದ ಉತ್ಪತ್ತಿ ಆದದ್ದಾಗಿದೆ ಹಾಗಾಗಿ ಯಾವ ವ್ಯಕ್ತಿಗಳು ಬೆಳ್ಳಿಯನ್ನು ಬಳಸುತ್ತಾರೆ ಅಥವಾ ಧರಿಸುತ್ತಾರೆ ಅವರಿಗೆ ಮಹಾದೇವನ ಅನುಗ್ರಹ ಮತ್ತು ತಾಯಿ ಪಾರ್ವತಿಯ ಆಶೀರ್ವಾದ ಖಂಡಿತವಾಗಿಯೂ ಸಿಗುತ್ತದೆ ಎಂದು ನಂಬಲಾಗುತ್ತದೆ.

ಹಾಗಾಗಿ ಬೆಳ್ಳಿಯನ್ನು ಅಲಂಕಾರ ಉದ್ದೇಶದಿಂದ ಧರಿಸುವುದು ಮಾತ್ರವಲ್ಲದೆ ಗ್ರಹದೋಷಗಳ ಪರಿಹಾರಕ್ಕಾಗಿ ಮತ್ತು ಬಲಕ್ಕಾಗಿ ಕೂಡ ಧರಿಸಲಾಗುತ್ತದೆ. ಸಾಮಾನ್ಯವಾಗಿ ಆಭರಣಗಳಲ್ಲಿ ಬೆಳ್ಳಿಯ ಉಂಗುರಗಳನ್ನು ಧರಿಸುತ್ತಾರೆ. ಈ ರೀತಿ ಬೆಳ್ಳಿಯ ಉಂಗುರಗಳನ್ನು ಹಾಕಿಕೊಳ್ಳುವುದರಿಂದ ಸಿಗುವ 9 ಲಾಭಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.

ಈ ಸುದ್ದಿ ಓದಿ:- ಆಂಜನೇಯ ಸ್ವಾಮಿಗೆ ಇಷ್ಟ ಈ 8 ವಸ್ತು ಅರ್ಪಿಸಿ ಸಾಕು.! ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ ಖಂಡಿತ ಒಲಿಯುತ್ತಾನೆ ಮಾರುತಿ.!

ಬೆಳ್ಳಿಯ ಉಂಗುರ ಧರಿಸಬೇಕು ಎನ್ನುವ ಕಾರಣಕ್ಕೆ ಅಂಗಡಿಯಿಂದ ತಂದು ನೇರವಾಗಿ ಹಾಕಿ ಕೊಂಡರೆ ಯಾವ ಫಲವೂ ಸಿಗುವುದಿಲ್ಲ. ಅದಕ್ಕೆ ಸಂಸ್ಕಾರ ಕೊಡುವುದು ಕೂಡ ಅಷ್ಟೇ ಮುಖ್ಯ, ಸರಿಯಾದ ವಿಧಾನದಲ್ಲಿ ಇದನ್ನು ಬಳಸಿದರೆ ಮಾತ್ರ ಇದಕ್ಕಿರುವ ಪೂರ್ಣ ಶಕ್ತಿಯ ಫಲ ನಮಗೆ ದೊರೆಯುವುದು.

ಹಾಗಾಗಿ ನೀವು ಬೆಳ್ಳಿಯ ಉಂಗುರವನ್ನು ಖರೀದಿಸಿ ತಂದ ತಕ್ಷಣ ಧರಿಸುವ ಮೊದಲು 24 ಗಂಟೆಗಳ ಕಾಲ ಗೋಮೂತ್ರದಲ್ಲಿ ನೆನೆಸಿಡಬೇಕು ಹೀಗೆ ಮಾಡುವುದರಿಂದ ಇದರಲ್ಲಿರುವ ನಕರಾತ್ಮಕತೆ ಹಾಗೂ ಅಶುದ್ಧತೆಯು ಹೊರಟು ಹೋಗುತ್ತದೆ. ಗೋಮೂತ್ರ ಇಲ್ಲದೆ ಇದ್ದರೆ ಗಂಗಾ ಜಲದಲ್ಲಿ ಕೂಡ ನೆನೆಸಿಡಬಹುದು ಈ ರೀತಿ ಮಾಡಿ ಧರಿಸುವುದರಿಂದ ಇದರ ಶಕ್ತಿಯು ಜಾಗೃತವಾಗುತ್ತದೆ ಮತ್ತು ಧರಿಸುವವರಿಗೆ ಅದರ ಶುಭಫಲಗಳು ಸಂಪೂರ್ಣವಾಗಿ ಸಿಗುತ್ತದೆ.

ಬೆಳ್ಳಿ ಬಳಕೆಯ ಪ್ರಯೋಜನಗಳು:-

* ಬೆಳ್ಳಿಯನ್ನು ಉಂಗುರ ವಾಗಿ ಸದಾ ಕೈ ಗೆ ಹಾಕಿಕೊಳ್ಳುವುದರಿಂದ ಮನಸ್ಸಿನ ಚಂಚಲತೆ ಕಡಿಮೆಯಾಗಿ ಮನಸ್ಸು ಶಾಂತವಾಗಿರುತ್ತದೆ
* ಬೆಳ್ಳಿ ಉಂಗುರ ಧರಿಸುವುದರಿಂದ ಮಾನಸಿಕ ಶಕ್ತಿ ಹೆಚ್ಚಾಗುತ್ತದೆ, ಧೈರ್ಯ ಹಾಗೂ ಸುಜ್ಞಾನ ಬರುತ್ತದೆ
* ಕಫ, ಆರ್ಥರೈಟಿಸ್, ಕೀಲು ನೋವು ಮೂಳೆ ನೋವು ಇಂತಹ ಸಮಸ್ಯೆಗಳು ಇದ್ದರೂ ಕೂಡ ಬೆಳ್ಳಿ ಆಭರಣ ಧಾರಣೆಯಿಂದ ಇವುಗಳಿಗೆ ಪರಿಹಾರ ಸಿಗುತ್ತದೆ.

* ಶರೀರದ ವಾತ ಪಿತ್ತ ಕಫ ಈ ಮೂರು ಗುಣಗಳನ್ನು ಕಂಟ್ರೋಲ್ ಮಾಡುವ ಶಕ್ತಿ ಬೆಳ್ಳಿಗಿದೆ
* ಸಾಧ್ಯವಾದರೆ ಬೆಳ್ಳಿ ಉಂಗುರ ಖರೀದಿಸಿದ ಮೇಲೆ 24 ಗಂಟೆ ಶಿವಲಿಂಗಕ್ಕೆ ಸ್ಪರ್ಶಿಸಿ ಇಡಿ, ಆಗ ಇನ್ನಷ್ಟು ಸಿದ್ಧಿಯಾಗುತ್ತದೆ. ಈ ರೀತಿ ಮಾಡಿ ಧರಿಸುವುದರಿಂದ ಇನ್ನು ಹೆಚ್ಚಿನ ಬಲ ಬರುತ್ತದೆ. ಅಕಾಲಿಕ ಮೃ’ತ್ಯು ಭಯ ಇದ್ದರೆ, ಅ’ಪ’ಘಾ’ತದ ಭ’ಯ ಕಾಡುತ್ತಿದ್ದರೆ ನಿವಾರಣೆಯಾಗುತ್ತದೆ.
* ಯಾವಾಗಲು ಬೆಳ್ಳಿಯ ಉಂಗುರವನ್ನು ಕಿರು ಬೆರಳಿಗೆ ಧರಿಸಬೇಕು.

ಈ ಸುದ್ದಿ ಓದಿ:- ನೊಂದು ಬಂದವರಿಗೆ ಪರಿಹಾರ ಕೊಡುವ ಹಾಸನದ ಈ ಪುರದಮ್ಮ.!

* ಬೆಳ್ಳಿ ಉಂಗುರ ಧರಿಸುವುದು ಮಾತ್ರವಲ್ಲದೆ ಬೆಳ್ಳಿ ತಟ್ಟೆ, ಲೋಟ ಚಮಚ ಇವುಗಳನ್ನು ಕೂಡ ಪ್ರತಿನಿತ್ಯ ಬಳಸುವುದು ಕೂಡ ಆರೋಗ್ಯದ ದೃಷ್ಟಿಯಲ್ಲಿ ಬಹಳ ಒಳಿತು ಮಾಡುತ್ತದೆ. ಬೆಳ್ಳಿಯು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಧಾತು ಆಗಿದೆ ಹೀಗಾಗಿ ಆಗಿನ ಕಾಲದಲ್ಲಿ ಬೆಳ್ಳಿಯ ತಟ್ಟಿಯಲ್ಲಿ ಊಟ ಬಡಿಸುತ್ತಿದ್ದರು. ಎಲ್ಲರಿಗೂ ಕೊಳ್ಳುವ ಶಕ್ತಿ ಇಲ್ಲದೆ ಇರುವುದರಿಂದ ಬೆಳ್ಳಿ ಉಂಗುರ ಧರಿಸಿ ಊಟ ಮಾಡುವುದರಿಂದ ಅದರ ಕೆಲ ಅಂಶವಾದರೂ ದೇಹಕ್ಕೆ ಸೇರಿ ಆರೋಗ್ಯಕ್ಕೆ ಒಳಿತಾಗುತ್ತದೆ.

ವಾಹನ ಮಾಲೀಕರುಗಳಿಗೆ ಪ್ರಮುಖ ಸುದ್ದಿ, HSRP ನೋಂದಣಿಗೆ ಪಾವತಿಸಬೇಕಾದ ಶುಲ್ಕದ ವಿವರ ಇಲ್ಲಿದೆ.! ಕಾರ್, ಬೈಕ್, ಆಟೋ, ಇನ್ನಿತರ ವಾಹನಗಳಿಗೆ ಎಷ್ಟು ಚಾರ್ಜಸ್ ಬೀಳಲಿದೆ ನೋಡಿ.!

 

ಸದ್ಯಕ್ಕೆ ರಾಜ್ಯದಲ್ಲಿ ಹೆಚ್ಚು ಚರ್ಚೆಯಲ್ಲಿರುವ ವಿಷಯ ಎಂದರೆ ಅದು HSRP (High Security Number Plate) ನಂಬರ್ ಪ್ಲೇಟ್ ವಿಚಾರ. ಕೇಂದ್ರ ಸರ್ಕಾರವು ದೇಶದ ಭದ್ರತೆ ಉದ್ದೇಶದಿಂದ ಮತ್ತು ಅಪರಾಧಿ ಚಟುವಟಿಕೆಗಳಲ್ಲಿ ಅನಧಿಕೃತ ವಾಹನಗಳು ಭಾಗಿಯಾಗುವುದನ್ನು ತಪ್ಪಿಸಲು HSRP ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದೆ.

2019 ಏಪ್ರಿಲ್ ಒಂದರ ನಂತರ ಬಂದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆಯಾಗಿದೆ, ಆದರೆ ಅದಕ್ಕೂ ಮುನ್ನ ಖರೀದಿಸಿರುವ ವಾಹನಗಳಿಗೆ ಮಾಲೀಕರು ಬುಕಿಂಗ್ ಮಾಡಿ ತಮ್ಮ ಹತ್ತಿರದ ಡೀಲರ್ ಗಳನ್ನು ಸಂಪರ್ಕಿಸಿ ಈ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು. ನೂತನ HSRP ವಿಶೇಷತೆ ಏನೆಂದರೆ ಮೇಲೆ ಬರುವ ಅಶೋಕ ಚಕ್ರದ ಸಂಕೇತವು ನೀಲಿ ಬಣ್ಣದ ಹೊಲೋಗ್ರಾಮ್‌ನಲ್ಲಿ ಅಳವಡಿಸಲಾಗಿದೆ. ಇದು ರಾಷ್ಟ್ರೀಯ ಗೌರವವನ್ನು ಸೂಚಿಸುತ್ತದೆ.

ಫಲಕವು ಸ್ಪಷ್ಟ ಮತ್ತು ಓದಲು ಸುಲಭವಾಗಿದ್ದು ಅಂತಾರಾಷ್ಟ್ರೀಯ ನೋಂದಣಿ ಗುರುತನ್ನು ಒಳಗೊಂಡಿರುತ್ತದೆ. HSRP ಪ್ಲೇಟ್‌ಗೆ ರಾಜ್ಯ ಕೋಡ್‌, ಜಿಲ್ಲಾಕೋಡ್‌ ಮತ್ತು ಏಕಮಾತ್ರ ಆಲ್ಫಾ ನ್ಯೂಮರಿಕ್‌ ಗುರುತಿನ ಸಂಖ್ಯೆ ವಾಹನ ಗುರುತಿಸುವಿಕೆ ಸಂಖ್ಯೆ (VIN) ನೀಡಲಾಗಿದ್ದು, ಟ್ಯಾಂಪರ್‌-ಪ್ರೂಫ್‌ ಫಲಕಗಳಾಗಿವೆ.

ಈ ಸುದ್ದಿ ಓದಿ:- ಆಂಜನೇಯ ಸ್ವಾಮಿಗೆ ಇಷ್ಟ ಈ 8 ವಸ್ತು ಅರ್ಪಿಸಿ ಸಾಕು.! ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ ಖಂಡಿತ ಒಲಿಯುತ್ತಾನೆ ಮಾರುತಿ.!

ಇವುಗಳನ್ನು ಬದಲಾಯಿಸಲು ಅಥವಾ ತಿದ್ದಲು ಸಾಧ್ಯವಾಗುವುದಿಲ್ಲ. ಹೀಗಾಗಿ ವಾಹನ ನಿಯಮ ಉಲ್ಲಂಘನೆಗಳನ್ನು ಪತ್ತೆ ಹಚ್ಚಲು ಮತ್ತು ದಂಡ ವಿಧಿಸಲು ಈ ಫಲಕಗಳು ಕಾನೂನು ಜಾರಿ ಸಂಸ್ಥೆಗಳಿಗೆ ಸಹಾಯ ಮಾಡುತ್ತವೆ. ವಾಹನ ಅಪಘಾತಗಳ ಸಂದರ್ಭದಲ್ಲಿ ತನಿಖೆಗೆ ಫಲಕಗಳಲ್ಲಿನ ಮಾಹಿತಿಯನ್ನು ಬಳಸಬಹುದು, ಇದರ ಮುಖ್ಯ ಲಾಭವೇನೆಂದರೆ ಕಾನನ ಬಾಹಿರ ಚಟುವಟಿಕೆಗಳಿಗೆ ವಾಹನ ಬಳಕೆಯಾಗದಂತೆ ತಡೆಯಬಹುದು.

ಕರ್ನಾಟಕ ರಾಜ್ಯದಲ್ಲೂ ಕೂಡ ಆಗಸ್ಟ್ 17, 2023ರಿಂದ ವಾಹನ ಮಾಲೀಕರುಗಳಿಗೆ HSRP ಅಳವಡಿಕೆಗೆ ಮೂರು ತಿಂಗಳ ಕಾಲಾವಕಾಶವನ್ನು ನೀಡಿ ಮತ್ತೊಮ್ಮೆ ಈ ಗಡುವನ್ನು ಫೆಬ್ರವರಿ 17ರ ವರೆಗೆ ವಿಸ್ತರಿಸಲಾಗಿತ್ತು. ಆದರೆ ನಿನ್ನೆ ಮತ್ತೊಮ್ಮೆ ವಿಧಾನಸಭೆ ಕಲಾಪದಲ್ಲಿ ಇದೇ ವಿಷಯವು ಚರ್ಚೆಯಾಗಿ ಸಚಿವರೊಬ್ಬರು ಹಳ್ಳಿಗಳಲ್ಲಿ ಅನೇಕರಿಗೆ ಮಾಹಿತಿ ಕೊರತೆ ಇದೆ.

ಮತ್ತು ರಾಜ್ಯದಲ್ಲಿ ಎರಡು ಕೋಟಿಗೂ ಹೆಚ್ಚು ವಾಹನಗಳಿವೆ ಇವುಗಳಿಗೆ ಇಷ್ಟು ಕಡಿಮೆ ಅವಧಿಯಲ್ಲಿ ನಂಬರ್ ಪ್ಲೇಟ್ ಅಳವಡಿಕೆಗೆ ಸರ್ವರ್ ಸಮಸ್ಯೆ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆಗಳು ಕೂಡ ಎದುರಾಗಿವೆ ಹಾಗಾಗಿ ಮತ್ತಷ್ಟು ಕಾಲಾವಕಾಶ ನೀಡಬೇಕು ಎನ್ನುವ ಮನವಿಯನ್ನು ಸಚಿವರು ಸಲ್ಲಿಸಿದ್ದಕ್ಕೆ ಒಪ್ಪಿಕೊಂಡ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರು ಮತ್ತೆ ಮೂರು ತಿಂಗಳವರೆಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ಕಾಲಾವಕಾಶ ನೀಡಿದ್ದಾರೆ.

ಈ ಸುದ್ದಿ ಓದಿ:- ನೊಂದು ಬಂದವರಿಗೆ ಪರಿಹಾರ ಕೊಡುವ ಹಾಸನದ ಈ ಪುರದಮ್ಮ.!

ಒಂದು ವೇಳೆ ಈ ಅವಧಿ ಒಳಗೆ ನಂಬರ್ ಅಳವಡಿಸಿಕೊಳ್ಳದೆ ಇದ್ದಲ್ಲಿ ಈ ಹಿಂದೆ ತಿಳಿಸಿದಂತೆ ಮೊದಲ ಬಾರಿ ಪೊಲೀಸರಿಗೆ ಸಿಕ್ಕಿಬಿದ್ದಲ್ಲಿ ರೂ.1000, ಎರಡನೇ ಬಾರಿ ಸಿಕ್ಕಿಬಿದ್ದಲ್ಲಿ ರೂ.2000 ಹೀಗೆ ದಂಡ ಬೀಳಲಿದೆ ಮತ್ತು ವಾಹನ ಮಾರಾಟ ಮಾಡುವಾಗ ಸಮಸ್ಯೆಯಾಗಲಿದೆ. ಇದನ್ನು ತಪ್ಪಿಸಲು ಸರ್ಕಾರದ ನಿಯಮವನ್ನು ಪಾಲಿಸಿ. HSRP ನಂಬರ್ ಪೆಟ್ ಅಳವಡಿಕೆಗೆ ಆನ್ಲೈನ್ ನಲ್ಲಿ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ.

ಸಾರಿಗೆ ಇಲಾಖೆ ಅಧಿಕೃತ ವೆಬ್ಸೈಟ್ https://transport.karnataka.gov.in ಅಥವಾ www.siam.in ಮೂಲಕ ಮಾತ್ರ ನೋಂದಣಿಯ ಮಾಡಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ ಮತ್ತು ಇದಕ್ಕೆ ನಿಗದಿಪಡಿಸಿರುವ ಶುಲ್ಕವನ್ನು ಕೂಡ ಆನ್ಲೈನ್ ಮೂಲಕವೇ ಪಾವತಿ ಮಾಡಬೇಕು ಈ ಪ್ರಕಾರವಾಗಿ ಯಾವ ವಾಹನಗಳಿಗೆ ಎಷ್ಟು ಶುಲ್ಕ ತಗಲುತ್ತದೆ, ಎನ್ನುವ ಮಾಹಿತಿ ಹೇಗಿದೆ ನೋಡಿ.

ದ್ವಿಚಕ್ರ ವಾಹನಗಳಿಗೆ – ರೂ.450 ರಿಂದ ರೂ.550
ತ್ರಿ ಚಕ್ರ ವಾಹನಗಳಿಗೆ – ರೂ.450 ರಿಂದ ರೂ.550
4 ವೀಲರ್ – ರೂ.650 ರಿಂದ ರೂ.780
ಲಾರಿ, ಬಸ್, 10 ವೀಲರ್ – 650 ರಿಂದ ರೂ.800

ಈ ಸುದ್ದಿ ಓದಿ:- ಹೆಣ್ಣು ಮಕ್ಕಳ ಪೋಷಕರಿಗೆ ಮಹತ್ವದ ಸುದ್ದಿ, ಮಾರ್ಚ್ 31ರ ಒಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಮಗಳ ಸುಕನ್ಯಾ ಸಮೃದ್ಧಿ ಯೋಜನೆ ಅಕೌಂಟ್ ರದ್ದಾಗುತ್ತದೆ.!

ಆಂಜನೇಯ ಸ್ವಾಮಿಗೆ ಇಷ್ಟ ಈ 8 ವಸ್ತು ಅರ್ಪಿಸಿ ಸಾಕು.! ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ ಖಂಡಿತ ಒಲಿಯುತ್ತಾನೆ ಮಾರುತಿ.!

0

 

ಕಲಿಯುಗದಲ್ಲಿ ನರ ಮನುಷ್ಯರನ್ನು ಕಾಡುವಂತಹ ನೂರಾರು ರೀತಿ ಸಮಸ್ಯೆಗಳನ್ನು ಎದುರಿಸುವ ಶಕ್ತಿಯು ಆಂಜನೇಯ ಸ್ವಾಮಿಯನ್ನು ಆರಾಧಿಸುವ ಮೂಲಕ ಸಿಗುತ್ತದೆ. ಆಂಜನೇಯನನ್ನು ಪ್ರಾರ್ಥಿಸುವವರಿಗೆ, ಪ್ರತಿನಿತ್ಯ ಪೂಜಿಸುವವರಿಗೆ, ಆಂಜನೇಯ ಸ್ವಾಮಿಯಂತೆ ತೀಕ್ಷ್ಣ ಬುದ್ಧಿ ಧೈರ್ಯ ಆರೋಗ್ಯ ಚುರುಕುತನ ಎಲ್ಲವೂ ಕೂಡ ಇರುತ್ತದೆ.

ಆಂಜನೇಯ ಸ್ವಾಮಿಯ ಅನುಗ್ರಹ ಇರುವವರನ್ನು ಕಲಿಪುರುಷ ಹಿಡಿಯಲಾರ ಮತ್ತು ಶನಿಭಾದೆಯಿಂದ ಕೂಡ ಮುಕ್ತಿ ಸಿಗುತ್ತದೆ. ಹಾಗಾಗಿ ಆಂಜನೇಯ ಸ್ವಾಮಿಯ ಕೃಪೆಗಾಗಿ ಪ್ರತಿನಿತ್ಯವು ಆಂಜನೇಯನನ್ನು ಪ್ರಾರ್ಥಿಸಿ, ಹನುಮಾನ್ ಚಾಲೀಸಾ ಪಠಿಸಿ ಜೊತೆಗೆ ಮಾರುತಿಗೆ ಇಷ್ಟವಾದ ಈ ಒಂಬತ್ತು ಬಗೆಯ ವಸ್ತುಗಳಿಂದ ಆಂಜನೇಯನನ್ನು ಪೂಜಿಸಿದರೆ ಇನ್ನು ಹೆಚ್ಚಿನ ಫಲ ಸಿಗುತ್ತದೆ. ಆಂಜನೇಯನಿಗೆ ಇಷ್ಟವಾದ ಆ ವಸ್ತುಗಳು ಯಾವುವು ಗೊತ್ತಾ?

* ರಾಮನಾಮ – ಶ್ರೀ ರಾಮ ಜೈ ರಾಮ ಜಯ ಜಯ ರಾಮ ಎಂದು ಯಾರು ರಾಮ ನಾಮ ಜಪ ಮಾಡುತ್ತಾರೆಯೋ ಖಂಡಿತವಾಗಿಯೂ ಅಂತಹ ಭಕ್ತರ ಮನೆಗೆ ಆಂಜನೇಯ ಬಂದೇ ಬರುತ್ತಾರೆ. ರಾಮಾಯಣದ ಕೊನೆಯಲ್ಲಿ ಇದರ ಬಗ್ಗೆ ಉಲ್ಲೇಖಿಸಿರುವ ಶ್ಲೋಕಗಳು ಸಿಗುತ್ತವೆ ರಾಮ ನಾಮ ಹಾಡುವ ಕಡೆ ರಾಮನ ಜಪ ನಡೆಯುವ ಕಡೆ, ಕೀರ್ತನೆಯೇ ಆಗಲಿ ಹರಿಕಥೆಯೇ ಆಗಲಿ ಅಲ್ಲಿಗೆ ಮಾರುತಿ ಬಂದೇ ಬರುತ್ತಾರೆ.

ಈ ಸುದ್ದಿ ಓದಿ:- ನೊಂದು ಬಂದವರಿಗೆ ಪರಿಹಾರ ಕೊಡುವ ಹಾಸನದ ಈ ಪುರದಮ್ಮ.!

* ಸಿಂಧೂರ – ಸಿಂಧೂರವನ್ನು ತಂದು ಅದನ್ನು ತುಪ್ಪದ ಜೊತೆ ಮಿಕ್ಸ್ ಮಾಡಿ ಪ್ರತಿನಿತ್ಯ ಹಣೆಗೆ ಇಟ್ಟುಕೊಂಡರೆ ಆಂಜನೇಯನ ಕೃಪಾಕಟಾಕ್ಷ ದೊರೆಯುತ್ತದೆ. ಮನೆಯಲ್ಲಿ ಆಂಜನೇಯ ವಿಗ್ರಹ ಅಥವಾ ಫೋಟೋ ಇದ್ದರೂ ಮೊದಲಿಗೆ ಸಿಂಧೂರ ಹಚ್ಚಿ ಆಮೇಲೆ ಸ್ವಲ್ಪ ಕುಂಕುಮ ಇಡಬೇಕು ಆಂಜನೇಯ ಸ್ವಾಮಿಯ ವಿಗ್ರಹಕ್ಕೆ ಅಕ್ಷತೆ ಹಾಕಿದರು ಅದನ್ನು ಅರಿಶಿನದ ಬದಲು ಸಿಂಧಕರದಲ್ಲಿ ಸಿದ್ಧಪಡಿಸಿಕೊಳ್ಳಬೇಕು.

ಆಗ ಆಂಜನೇಯ ಸ್ವಾಮಿಯ ಪ್ರಸನ್ನರಾಗುತ್ತಾರೆ ಇದಕ್ಕೆ ಕೇಸರಿ ಬಣ್ಣದಲ್ಲಿ ಇರುತ್ತದೆ. ಆಂಜನೇಯನಿಗೆ ಇಷ್ಟವಾದ ಬಣ್ಣ ಕೂಡ ಕೇಸರಿ ಆಂಜನೇಯ ಸ್ವಾಮಿ ದರ್ಶನಕ್ಕೆ ಹೋಗುವುದಾದರೆ ಕೇಸರಿ ಬಣ್ಣದ ವಸ್ತುದಲ್ಲಿ ಹೋದರೆ ಬಹಳ ಬೇಗ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ.

* ಉದ್ದಿನ ವಡೆ – ಉದ್ದಿನ ವಡೆಯು ಆಂಜನೇಯ ಸ್ವಾಮಿಗೆ ಇಷ್ಟವಾದ ಆಹಾರ. ನೀವು ಹತ್ತಿರದ ಯಾವುದೇ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋದರು ಉದ್ದಿನ ವಡೆಯಿಂದ ಹಾರ ಹಾಕಿರುವುದನ್ನು ಕಾಣಬಹುದು. ಈ ರೀತಿ ಆಂಜನೇಯ ಸ್ವಾಮಿಗೆ ಉಪ್ಪಿನ ವಡೆ ಹಾರ ಅರ್ಪಿಸುವುದರಿಂದ ಗೃಹ ದೋಷ, ಅಂಗಾರಕ ದೋಷ, ರಾಹು ಕೇತು ದೋಷ ಈ ರೀತಿ ದೋಷಗಳು ನಿವಾರಣೆ ಆಗುತ್ತದೆ.

ಈ ಸುದ್ದಿ ಓದಿ:- ಇದುವರೆಗೂ ನಿಮಗೆ ಗೊತ್ತಿರದ, ಆಹಾರದ ಬಗ್ಗೆ ಅತಿ ಮುಖ್ಯವಾದ ಕೆಲವು ಉಪಯುಕ್ತ ಮಾಹಿತಿಗಳು.!

* ವೀಳ್ಯದೆಲೆ – ಆಂಜನೇಯ ಸ್ವಾಮಿಗೆ ಬಹಳ ಇಷ್ಟವಾದ ಮತ್ತೊಂದು ವಸ್ತು ಎಂದರೆ ವೀಳ್ಯದೆಲೆ ಹಾರ. ಸಾಧ್ಯವಾದರೆ ಈ ವೀಳ್ಯದೆಲೆಯಲ್ಲಿ ಕೇಸರಿ ಯಿಂದ ಶ್ರೀರಾಮ್ ಎಂದು ಬರೆದು ಹಾರ ಮಾಡಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಅರ್ಪಿಸಿದರೆ ಅಥವಾ ಆಂಜನೇಯ ಸ್ವಾಮಿಗೆ ಫೋಟೋಗೆ ಹಾಕಿದರೆ ಖಂಡಿತವಾಗಿಯೂ ಆಂಜನೇಯ ಸ್ವಾಮಿಯ ಸಂಪೂರ್ಣ ಕೃಪಾಕಟಾಕ್ಷ ನಿಮಗೆ ದೊರೆಯುತ್ತದೆ

* ಪಾರಿಜಾತ ಹಾಗೂ ತುಳಸಿ ಆಂಜನೇಯ ಸ್ವಾಮಿಗೆ ಬಹಳ ಇಷ್ಟವಾದ ವಸ್ತುಗಳು ಪ್ರತಿ ಮಂಗಳವಾರ ಅಥವಾ ಶನಿವಾರ ಪಾರಿಜಾತ ಹೂಗಳನ್ನು ಮತ್ತು ತುಳಸಿ ಹೂಗಳನ್ನು ಅರ್ಪಿಸಿ ಅರ್ಚನೆ ಮಾಡಿಸಿದರೆ ಸ್ವಾಮಿಯ ಅನುಗ್ರಹ ದೊರೆಯುತ್ತದೆ.

* ನೈವೇದ್ಯ – ಆಂಜನೇಯ ಸ್ವಾಮಿಗೆ ಬಾಳೆಹಣ್ಣು ಎಂದರೆ ಬಹಳ ಇಷ್ಟ ಮತ್ತು ಆಂಜನೇಯನಿಗೆ ಇಷ್ಟವಾದ ಸಂಖ್ಯೆ ಐದು ಹಾಗಾಗಿ ಐದು ಬಾಳೆಹಣ್ಣನ್ನು ನೈವೇದ್ಯವಾಗಿ ಅರ್ಪಿಸುವುದರಿಂದ, ತೆಂಗಿನಕಾಯಿ ಒಡೆದು ಚಿಪ್ಪನ್ನು ನೈವೇದ್ಯ ಮಾಡುವುದರಿಂದ ಆಂಜನೇಯ ಸ್ವಾಮಿ ತೃಪ್ತರಾಗುತ್ತಾರೆ ಮತ್ತು ಆಶೀರ್ವದಿಸುತ್ತಾರೆ. ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗಲು ಕೂಡ ಐದು ಪ್ರದಕ್ಷಿಣೆ ಹಾಕಬೇಕು.

ಈ ಸುದ್ದಿ ಓದಿ:- ಎಷ್ಟೇ ವರ್ಷಗಳಿಂದ ಥೈರಾಯ್ಡ್ ಇರಲಿ, ಈ ಶಂಖ ಮುದ್ರೆ ಮಾಡಿದ್ರೆ ಥೈರಾಯ್ಡ್ ಸಂಪೂರ್ಣ ಗುಣಮುಖವಾಗುತ್ತೆ.!

* ಹನುಮಾನ್ ಚಾಲೀಸಾ – ಜೀವನದಲ್ಲಿ ಯಾವುದೇ ರೀತಿಯ ಕ’ಷ್ಟ, ಸಮಸ್ಯೆ, ದುಃ’ಖ ಇದ್ದರು ತುಳಸಿದಾಸರು ರಚಿಸಿರುವ ಹನುಮಾನ್ ಚಾಲೀಸವನ್ನು 21 ಬಾರಿ ಪ್ರತಿದಿನ ಸಂಜೆ ಶ್ರದ್ಧಾ ಭಕ್ತಿಯಿಂದ ಪಠಿಸಿದರೆ ಖಂಡಿತವಾಗಿಯೂ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

ನೊಂದು ಬಂದವರಿಗೆ ಪರಿಹಾರ ಕೊಡುವ ಹಾಸನದ ಈ ಪುರದಮ್ಮ.!

0

 

ನಮ್ಮ ಕರ್ನಾಟಕದಲ್ಲಿ ಸಾವಿರಾರು ದೇವಾಲಯಗಳಿವೆ. ಕೆಲವು ದೇವಾಲಯಗಳು ತಮ್ಮ ಸಾಂಸ್ಕೃತಿಕ ಹಿನ್ನೆಲೆ, ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ ಕಾರಣದಿಂದಾಗಿ ಪ್ರಖ್ಯಾತಿಯಾಗಿದ್ದರೆ ಇನ್ನು ಕೆಲವು ಸ್ಥಳ ಮಹಾತ್ಮೆ ಕಾರಣದಿಂದಾಗಿ ಜಗತ್ ವಿಖ್ಯಾತಗೊಂಡಿವೆ. ನಮ್ಮ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಕೂಡ ಇಂತಹ ಶಕ್ತಿಶಾಲಿ ದೈವ ಬಲವುಳ್ಳ ಸಾಕಷ್ಟು ದೇವಸ್ಥಾನಗಳು ನೆಲೆಗೊಂಡಿರುವುದು ಮತ್ತು ಅಲ್ಲಿ ಪ್ರತಿನಿತ್ಯವೂ ಭಕ್ತರ ಸಮೂಹ ತುಂಬಿರುವುದನ್ನು ನಾವು ಕಾಣಬಹುದು.

ಅಂತಹದ್ದೇ ಒಂದು ವಿಶೇಷ ಧಾರ್ಮಿಕ ಸ್ಥಳದ ಬಗ್ಗೆ ನಾವು ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ. ಈ ಸ್ಥಳದ ಮಹಾತ್ಮೆಯನ್ನು ತಿಳಿದ ಮೇಲೆ ನೀವು ಕೂಡ ಈ ದೇವಸ್ಥಾನಕ್ಕೆ ಹೋಗಲು ಬಯಸುವುದರಲ್ಲಿ ಎರಡು ಮಾತಿಲ್ಲ. ಈಗ ನಾವು ಹೇಳುತ್ತಿರುವುದು ಹಾಸನ ಜಿಲ್ಲೆಯಲ್ಲಿರುವ ಪ್ರತಿಮನೆಯ ಆರಾಧ್ಯ ದೈವವಾಗಿ ಕಾಯುತ್ತಾ ಮನೆಮನೆ ಮಾತಾಗಿರುವ ತಾಯಿ ಪುರದಮ್ಮ ವಾಸವಿರುವ ದೇವಸ್ಥಾನದ ಬಗ್ಗೆ.

ಈ ಸುದ್ದಿ ಓದಿ:- ಎಲ್ಲಾ ರೈತರ ಖಾತೆಗೂ ಬೆಳೆ ಹಾನಿ ಹಾಗೂ ಬರ ಪರಿಹಾರದ ಹಣ ಜಮೆ, ನಿಮ್ಮ ಖಾತೆಗೆ ಹಣ ಬರಲಿದೆಯೇ ಈ ರೀತಿ ಚೆಕ್ ಮಾಡಿ.!

ಹಾಸನದ ಬಳಿ ಇರುವ ಸೊಪ್ಪಿನ ಹಳ್ಳಿ ಎನ್ನುವ ಗ್ರಾಮದಲ್ಲಿ ಈ ಪುರದಮ್ಮ ತಾಯಿಯ ದೇವಸ್ಥಾನ ಇದೆ. ಆರಂಭದಲ್ಲಿ ಒಂದು ಮರದ ಕೆಳಗೆ ವಿಗ್ರಹ ರೂಪದಲ್ಲಿ ಪೂಜೆ ಮಾಡಿಸಿಕೊಳ್ಳುತ್ತಿದ್ದ ತಾಯಿಯ ಮಹಾತ್ಮೆ ಎಂದು ಲೋಕ ವಿಖ್ಯಾತಿಯಾಗಿ ಪುರದಮ್ಮನ ದೇವಸ್ಥಾನವು ಇಂದು ಕರ್ನಾಟಕದ ಹಾಸನ ನಗರದಲ್ಲಿರುವ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ.

ಈ ದೇವಸ್ಥಾನವು ಪ್ರಮುಖವಾಗಿ ಶಕ್ತಿ ಮತ್ತು ಮಹಾಲಕ್ಷ್ಮಿ ದೇವಿಯರನ್ನು ಒಟ್ಟಿಗೆ ಪೂಜಿಸುವುದಕ್ಕಾಗಿ ಪ್ರಸಿದ್ಧವಾಗಿದೆ. ಸಾಕ್ಷಾತ್ ಶಕ್ತಿ ದೇವತೆಗಳ ಸ್ವರೂಪವಾಗಿರುವ ಈ ದೇವಿಯು ಶಕ್ತಿ ಮತ್ತು ಮಹಾಲಕ್ಷ್ಮಿ ರೂಪದಲ್ಲಿ ಪ್ರತಿಷ್ಠಾಪನೆಯಾಗಿದ್ದಾರೆ. ಪುರದಮ್ಮ ದೇವಸ್ಥಾನದ ಮತ್ತೊಂದು ವಿಶೇಷತೆ ಏನೆಂದರೆ ಈ ತಾಯಿಯ ಅಲಂಕಾರ ಹಾಗೂ ಬಲಿ ಕೊಡುವ ವಿಧಾನ ಇಲ್ಲಿ ದೇವಿಗೆ ತಾಳಿ ಬಿಟ್ಟು ಬೇರೆ ಯಾವ ಒಡವೆ ವಸ್ತ್ರಗಳನ್ನು ಹಾಕುವುದಿಲ್ಲ.

ಈ ಸುದ್ದಿ ಓದಿ:- ಹಣಕಾಸು ಉಳಿತಾಯಕ್ಕೆ ನಿಮ್ಮ ಮನೆ ವಾಸ್ತು ಕಾರಣವಾಗುತ್ತಾ ನೀವೇ ತಿಳಿದುಕೊಳ್ಳಿ.

ಹಿಂದೆ ಮರದ ಕೆಳಗಿದ್ದ ದೇವಾಲಯವನ್ನು ಈಗ ಚಿಕ್ಕ ದೇವಸ್ಥಾನವಾಗಿ ಮಾಡಲಾಗಿದೆ ಅಷ್ಟೇ, ಆದರೆ ತಾಯಿಗೆ ಅಲಂಕಾರ ಇಲ್ಲ. ಅರಿಶಿನ ಕುಂಕುಮವೇ ತಾಯಿಗೆ ಇಷ್ಟ ಹಾಗಾಗಿ ಅದನ್ನೇ ಧರಿಸಲಾಗುತ್ತದೆ. ಹಾಗೆಯೇ ಎಲ್ಲಾ ದೇವಸ್ಥಾನದಲ್ಲಿ ಕುರಿ ಕೋಳಿ ಬಲಿ ಕೊಡುವುದು ವಾಡಿಕೆ ಇರುವಂತೆ ಇಲ್ಲಿಯೂ ಸಹ ಭಕ್ತಾದಿಗಳು ಇಂತಹ ಹರಕೆಗಳನ್ನು ಹೊರುತ್ತಾರೆ ಆದರೆ ಇಲ್ಲಿ ಆಚರಣೆಯು ಸ್ವಲ್ಪ ಭಿನ್ನವಾಗಿದೆ.

ತಾಯಿ ಪುರದಮ್ಮ ದೇವಿಗೆ ಹಂದಿ ಬಲಿ ಎಂದರೆ ಬಹಳ ಅಚ್ಚು ಮೆಚ್ಚು. ಹಾಗಾಗಿ ತಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಡಲು ಈ ತಾಯಿಗೆ ಭಕ್ತರು ಇಲ್ಲಿಗೆ ಬಂದು ಹಂದಿಯನ್ನೇ ಬಲಿ ಕೊಡುತ್ತಾರೆ. ಸಸ್ಯಹಾರಿಗಳು ಕೂಡ ಇಂತಹದನ್ನೇ ಹರಕ್ಕೆ ಹೊತ್ತು ಬೇರೆಯವರಿಂದ ಪ್ರಸಾದ ಮಾಡಿಸುತ್ತಾರೆ.

ಈ ಸುದ್ದಿ ಓದಿ:- ಈ ಐದು ಲಕ್ಷಣಗಳು ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎನ್ನುವುದನ್ನು ತಿಳಿಸುತ್ತವೆ.!

ಈ ರೀತಿ ತಾಯಿಗೆ ಬಲಿ ಕೊಟ್ಟು ತಮ್ಮ ಕಷ್ಟಗಳನ್ನು ಪರಿಹಾರ ಮಾಡುವಂತೆ ಬೇಡಿಕೊಂಡರೆ ಅಥವಾ ಬಲಿಕೊಡುವುದಾಗಿ ಹರಕೆ ಹೊತ್ತುಕೊಂಡರೆ ಸಾಕು ಆದಷ್ಟು ಬೇಗ ಅವರ ಕಷ್ಟ ಬಗೆಹರಿಯಲಿದೆ. ಆದರೆ ಈ ಸ್ಥಳದಲ್ಲಿ ಯಾರು ಕೂಡ ಹೋಗಿ ಹಂದಿ ಎಂದು ಹೇಳಬಾರದು.

ಅಂಗಡಿಗಳಲ್ಲಿ ಆಗಲಿ ಬಲಿಕೊಡುವ ಸ್ಥಳದಲ್ಲೇ ಆಗಲಿ ಹಂದಿ ಎನ್ನುವಂತಿಲ್ಲ. ಅದರ ಬದಲಿಗೆ ಭೇಟೆ ಎಂಬ ಪದ ಬಳಸಬೇಕು. ಈ ತಾಯಿಯನ್ನು ನಂಬಿ ಕಷ್ಟಗಳನ್ನು ಹೊತ್ತು ಬಂದವರಿಗೆ ಯಾರಿಗೂ ಕೊಡ ಇಲ್ಲಿ ಮೋ’ಸ, ನಿರಾಸೆ ಆಗುವುದಿಲ್ಲ ಎಂದು ಬಲವಾಗಿ ನಂಬಬಹುದು ಪ್ರತಿನಿತ್ಯವೂ ಕೂಡ ದೇವಿಯ ದರ್ಶನ ಸಿಗುತ್ತದೆ.

ಈ ಸುದ್ದಿ ಓದಿ:- ತುಲಾ ರಾಶಿಯ ಮಾಸ ಭವಿಷ್ಯ ಮಾರ್ಚ್ 2024, ಮುಖ್ಯವಾದ ಮೂರು ಸಲಹೆಗಳು.!

ಆದರೆ ಮಂಗಳವಾರ, ಶುಕ್ರವಾರ, ಭಾನುವಾರ ಮತ್ತು ಅಮಾವಾಸ್ಯೆ ದಿನಗಳಂದು ವಿಪರೀತ ಜನಜಂಗುಳಿ ಇರುತ್ತದೆ ಮತ್ತು ದೇವಸ್ಥಾನದ ಸುತ್ತ ಜಾತ್ರೆಯ ವಾತಾವರಣವೇ ನಿರ್ಮಾಣವಾಗಿರುತ್ತದೆ. ನೀವು ಕೂಡ ಬಿಡುವಾದಾಗ ಕುಟುಂಬದ ಜೊತೆ ಒಮ್ಮೆ ಭೇಟಿ ಕೊಡಿ, ತಾಯಿಯ ಕೃಪೆಗೆ ಪಾತ್ರರಾಗಿ.

ಇದುವರೆಗೂ ನಿಮಗೆ ಗೊತ್ತಿರದ, ಆಹಾರದ ಬಗ್ಗೆ ಅತಿ ಮುಖ್ಯವಾದ ಕೆಲವು ಉಪಯುಕ್ತ ಮಾಹಿತಿಗಳು.!

ಆಹಾರ ಸೇವಿಸುವುದು ಮಾತ್ರವಲ್ಲದೇ ನಾವು ತಿನ್ನುವ ಆಹಾರದಲ್ಲಿ ಪೌಷ್ಟಿಕಾಂಶ ಎಷ್ಟಿದೆ ಎಂದು ತಿಳಿದುಕೊಂಡು ಆಹಾರ ಸೇವಿಸುವುದು ಕೂಡ ಮುಖ್ಯ. ಹಾಗಾಗಿ ಎಲ್ಲಾ ಮಹಿಳೆಯರಿಗೂ ಅನುಕೂಲವಾಗಲಿ ಎಂದು ಕೆಲವು ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
* ಅಕ್ಕಿಯನ್ನು ಹೆಚ್ಚು ಫಾಲಿಶ್ ಮಾಡಬೇಡಿ, ಅದರಲ್ಲಿರುವ ಪೌಷ್ಟಿಕಾಂಶಗಳು ನಾಶವಾಗುತ್ತವೆ.

* ಸಸ್ಯಹಾರಿಗಳು ಎರಡು ಮೂರು ಬಗೆಯ ಧಾನ್ಯ ಉಪಯೋಗಿಸಿದರೆ ದೇಹಕ್ಕೆ ಬೇಕಾದ ಅಮೈನೋ ಆಮ್ಲಗಳು ಸಿಗುತ್ತವೆ
* ಬೆಲ್ಲ, ಕೊಟ್ಟಣದಕ್ಕಿ, ಕಾಳು, ಗೋಧಿಯಂತಹ ಸಂಸ್ಕರಿಸಿದ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದು
* ಧಾನ್ಯಗಳನ್ನು ಮೊಳಕೆ ಕಟ್ಟಿ ಸೇವಿಸುವುದರಿಂದ ಕಬ್ಬಿನಾಂಶ ಪ್ರೋಟೀನ್ ಹೆಚ್ಚಿಗೆ ಸಿಗುತ್ತದೆ ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಕೂಡ ಕಬ್ಬಿನಾಂಶ ಹೆಚ್ಚಿಗೆ ಸಿಗುತ್ತದೆ.

ಈ ಸುದ್ದಿ ಓದಿ:- ಎಷ್ಟೇ ವರ್ಷಗಳಿಂದ ಥೈರಾಯ್ಡ್ ಇರಲಿ, ಈ ಶಂಖ ಮುದ್ರೆ ಮಾಡಿದ್ರೆ ಥೈರಾಯ್ಡ್ ಸಂಪೂರ್ಣ ಗುಣಮುಖವಾಗುತ್ತೆ.!

* ದ್ವಿದಳ ಧಾನ್ಯಗಳನ್ನು ಬೇಯಿಸುವ ಮುನ್ನ ಸ್ವಲ್ಪ ನೀರಿನಲ್ಲಿ ನೆನೆಗಿಟ್ಟು ನಂತರ ಬೇಯಿಸಿ ಇದರಿಂದ ಪ್ರೋಟಿನ್ ನಾಶವಾಗುವುದಿಲ್ಲ, ದ್ವಿದಳ ಧಾನ್ಯಗಳನ್ನು ಉರಿದು ಬಳಸುವುದು ಇನ್ನೂ ಉತ್ತಮ.
* ಕುದಿಯುವ ನೀರಿಗೆ ಕಾಳುಗಳು ಅಥವಾ ತರಕಾರಿಯನ್ನು ಹಾಕಿದಾಗ ಬೇಗ ಬೇಯಿಸಲು ಆತರ ಮಾಡಬೇಡಿ ಮತ್ತು ಅಗತ್ಯಕ್ಕಿಂತ ಹೆಚ್ಚು ಬೇಯಿಸಬೇಡಿ ಈ ಎರಡು ರೀತಿ ಮಾಡುವುದರಿಂದ ಕೂಡ ಪೋಷಕಾಂಶ ನಷ್ಟವಾಗುತ್ತದೆ

* ಯಾವುದೇ ಪ್ರಾಣಿಯ ಮಾಂಸಗಳನ್ನು ಅಡುಗೆ ಮಾಡುವಾಗ ಚೆನ್ನಾಗಿ ಬೇಯಿಸಿಯೇ ಬಳಸಬೇಕು ಇಲ್ಲವಾದಲ್ಲಿ ಅನೇಕ ಸೋಂಕು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ, ಈ ಬಗ್ಗೆ ಎಚ್ಚರ ಇರಲಿ.
* ಸೊಪ್ಪು ಅಥವಾ ತರಕಾರಿ ಹೆಚ್ಚುವಾಗ ತೊಳೆದು ನಂತರ ಹಚ್ಚಿ ಬಹಳ ಸಣ್ಣದಾಗಿ ಸೊಪ್ಪು ಅಥವಾ ತರಕಾರಿ ಹಚ್ಚಿದರೆ ಜೀವ ಸತ್ವಗಳು ನಾಶವಾಗುತ್ತವೆ.

ಈ ಸುದ್ದಿ ಓದಿ:- ಎಲ್ಲಾ ರೈತರ ಖಾತೆಗೂ ಬೆಳೆ ಹಾನಿ ಹಾಗೂ ಬರ ಪರಿಹಾರದ ಹಣ ಜಮೆ, ನಿಮ್ಮ ಖಾತೆಗೆ ಹಣ ಬರಲಿದೆಯೇ ಈ ರೀತಿ ಚೆಕ್ ಮಾಡಿ.!

* ಟೊಮೋಟೋವನ್ನು ಹಸಿ ತಿಂದರೆ ಒಳ್ಳೆಯದು. ಬೇಯಿಸಿ ಟೊಮೇಟೊ ತಿನ್ನುವುದರಿಂದ ಯಾವುದೇ ರೀತಿಯ ಪೋಷಕಾಂಶ ಸಿಗುವುದಿಲ್ಲ
* ತರಕಾರಿ ಬೇಯಲು ಎಷ್ಟು ಬೇಕೋ ಅಷ್ಟು ನೀರು ಮಾತ್ರ ಹಾಕಿ ಮುಚ್ಚಿಟ್ಟು ಬೇಯಿಸುವುದರಿಂದ ಬೇಗ ಬೇಯುತ್ತದೆ ಅಥವಾ ಪ್ರೆಶರ್ ಕುಕ್ಕರ್ ಗೆ ಹಾಕಿ ಬೇಯಿಸಿ
* ಪದೇ ಪದೇ ಸಾಂಬಾರ್ ಕುದಿಸಬೇಡಿ

* ಬೇಯಿಸಿದ ಸೊಪ್ಪು ತರಕಾರಿಗಳನ್ನು ಬೇಗ ಸೇವಿಸಿ
* ಕಾಳು, ತರಕಾರಿ, ಸೊಪ್ಪು ಬೇಯಿಸುವಾಗ ಚೆನ್ನಾಗಿ ಬೇಯಲಿ ಬೇಗ ಬೇಯಲಿ ಎಂದು ಸೋಡಾಪುಡಿ ಹಾಕಬೇಡಿ
* ತರಕಾರಿ, ಕಾಳು, ಸೊಪ್ಪು ಬೇಯಿಸಿದ ನೀರನ್ನು ವೇಸ್ಟ್ ಮಾಡಬೇಡಿ ಇದನ್ನು ಚಪಾತಿ ಹಿಟ್ಟು ಮಿಕ್ಸ್ ಮಾಡಲು ಅಥವಾ ಕುಡಿಯಲು ಬಳಸಿ ಇದರಲ್ಲಿ ಪೋಷಕಾಂಶ ಇರುತ್ತದೆ.

ಈ ಸುದ್ದಿ ಓದಿ:- ಹಣಕಾಸು ಉಳಿತಾಯಕ್ಕೆ ನಿಮ್ಮ ಮನೆ ವಾಸ್ತು ಕಾರಣವಾಗುತ್ತಾ ನೀವೇ ತಿಳಿದುಕೊಳ್ಳಿ.

* ಫ್ರಿಜ್ ನಲ್ಲಿ ಇಟ್ಟು ಬಳಸುವುದರಿಂದ ತರಕಾರಿಗಳ ಸತ್ವ ಹಾಳಾಗುವುದಿಲ್ಲ ಬದಲಾಗಿ ರುಚಿ ಹೋಗುತ್ತದೆ
* ಯಾವಾಗಲೂ ಫ್ರೆಶ್ ತರಕಾರಿಗಳನ್ನು ಖರೀದಿಸಿ ಬಳಸಿ, ಬಾಡಿದ ತರಕಾರಿಗಳಲ್ಲಿ ಪೌಷ್ಟಿಕಾಂಶ ಕಡಿಮೆ ಇರುತ್ತದೆ.
* ಅಡುಗೆ ಮಾಡುವಾಗ ಈರುಳ್ಳಿ ಹೆಚ್ಚಿಕೊಳ್ಳಿ ಅಥವಾ ಹೆಚ್ಚಿದ ಈರುಳ್ಳಿಯನ್ನು ಬೇಗ ಬಳಸಿ. ಈರುಳ್ಳಿ ಹೆಚ್ಚಿ ಹೆಚ್ಚು ಹೊತ್ತು ಗಾಳಿಗೆ ಇಡಬಾರದು

* ಬೆಣ್ಣೆ ಕೆಡದಂತೆ ಬಹಳ ದಿನಗಳವರೆಗೆ ಇಡಲು ಪ್ರತಿದಿನ ಫ್ರೆಶ್ ನೀರಿನಲ್ಲಿ ತೊಳೆದಿಡಬೇಕು
* ಜಾನುವಾರುಗಳನ್ನು ಬಿಸಿನಲ್ಲಿ ನಿಲ್ಲಿಸಿ ಹಾಲು ಕರೆಯುವುದರಿಂದ ಜೀವ ಸತ್ವ ನಾಶವಾಗುತ್ತದೆ ಮತ್ತು ಕಡಿಮೆ ಹಾಲು ಸಿಗುತ್ತದೆ
* ಪಲ್ಯ ಮಾಡುವಾಗ ಹಸಿಮೆಣಸಿನಕಾಯಿ ಹಾಕಿ ಖಾರ ಹೆಚ್ಚಾಗಿದ್ದರೆ ಇದನ್ನು ಬ್ಯಾಲೆನ್ಸ್ ಮಾಡಲು ಟೊಮೆಟೊ ರಸ ಹಾಕಬಹುದು.

ಈ ಸುದ್ದಿ ಓದಿ:- ಈ ಐದು ಲಕ್ಷಣಗಳು ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎನ್ನುವುದನ್ನು ತಿಳಿಸುತ್ತವೆ.!

* ಹಾಲಿಗೆ ನೇರವಾಗಿ ಹಾಲಿನ ಪುಡಿ ಹಾಕಿದರೆ ಗಂಟುಗಂಟಾಗುತ್ತದೆ. ಆದ್ದರಿಂದ ಲೋಟಕ್ಕೆ ಸಕ್ಕರೆ ಹಾಗೂ ಹಾಲಿನ ಪುಡಿ ಹಾಕಿ ಬೆಚ್ಚಗಿರುವ ನೀರಿನಲ್ಲಿ ಕರಗಿಸಿಕೊಂಡು ಅಥವಾ ದಪ್ಪವಾಗಿ ಮಿಕ್ಸ್ ಮಾಡಿ ನಂತರ ಬಿಸಿ ಹಾಲನ್ನು ಹಾಕಿ.
* ಗೋಧಿಯನ್ನು ಹಿಟ್ಟು ಮಾಡಿಸಲು ಕೊಡುವಾಗ ಒಂದು ಹಿಡಿ ಉಪ್ಪನ್ನು ಹಾಕಿ ಹಿಟ್ಟು ಮಾಡಿಸಿ ಈ ರೀತಿ ಮಾಡುವುದರಿಂದ ಹುಳ ಆಗುವುದಿಲ್ಲ, ಮತ್ತು ಈ ಹಿಟ್ಟನ್ನು ಚಪಾತಿ ಮಾಡಲು ಮಿಕ್ಸ್ ಮಾಡುವಾಗ ಉಪ್ಪು ಹಾಕದೆ ಮಿಕ್ಸ್ ಮಾಡಿ.
* ಊಟ ಆದ ತಕ್ಷಣ ಏಲಕ್ಕಿ ಜಗಿದು ತಿನ್ನಿ, ಊಟದಲ್ಲಿ ನಂಜು ಇದ್ದರೆ ನಾಶವಾಗುತ್ತದೆ.

ಎಷ್ಟೇ ವರ್ಷಗಳಿಂದ ಥೈರಾಯ್ಡ್ ಇರಲಿ, ಈ ಶಂಖ ಮುದ್ರೆ ಮಾಡಿದ್ರೆ ಥೈರಾಯ್ಡ್ ಸಂಪೂರ್ಣ ಗುಣಮುಖವಾಗುತ್ತೆ.!

 

ಇತ್ತೀಚಿನ ದಿನಗಳಲ್ಲಿ ಥೈರಾಯಿಡ್ ಸಮಸ್ಯೆ ಎನ್ನುವುದನ್ನು ಹೆಚ್ಚಾಗಿ ಕೇಳುತ್ತಿದ್ದೇವೆ. ಥೈರಾಯ್ಡ್ ಗ್ರಂಥಿ ಸ್ರವಿಸುವ ಹಾರ್ಮೋನ್ ನಲ್ಲಿ ವ್ಯತ್ಯಾಸಗಳಾದರೆ ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಬಹಳ ಗಂಭೀರ ಪರಿಣಾಮ ಉಂಟಾಗುತ್ತದೆ. ಆ ಗ್ರಂಥಿಗೆ ಬೇಕಾಗಿರುವ ಪ್ರಾಣಶಕ್ತಿ ಹಾಗೂ ಜೀವಸತ್ವಗಳ ಕೊರತೆಯಿಂದಾಗಿ ಹಾರ್ಮೋನ್ಸ್ ಇಂಬ್ಯಾಲೆನ್ಸ್ ಉಂಟಾಗುತ್ತದೆ.

ಈ ರೀತಿ ಸಮಸ್ಯೆಯಿಂದ ಹೆಣ್ಣು ಮಕ್ಕಳಲ್ಲಿ ಋತುಚಕ್ರಕ್ಕೆ ಅಡಚಣೆಗಳಾಗುತ್ತವೆ ಮತ್ತು ಇದೇ ಸಮಸ್ಯೆ ಸಂತಾನೋತ್ಪತ್ತಿ ಪ್ರಕ್ರಿಯೆಗೂ ತೊಂದರೆ ನೀಡುತ್ತದೆ. ರಿಪ್ರೊಡಕ್ಟಿವ್ ಗ್ರಂಥಿಗಳು ಸ್ರವಿಸುವ ಹಾರ್ಮೋನ್ ವ್ಯತ್ಯಾಸ ಉಂಟಾಗುತ್ತದೆ. ಆಯುರ್ವೇದ ಹೇಳುವ ಪ್ರಕಾರ ವಾತ ಪಿತ್ತ ವಿಕಾರದಿಂದ ಕೂಡ ಈ ರೀತಿ ಸಮಸ್ಯೆ ಬರುತ್ತದೆ, ಈ ವಿಕಾರಕ್ಕೆ ಮೂಲ ಕಾರಣ ಅವೈಜ್ಞಾನಿಕ ಆಹಾರ ಪದ್ಧತಿ ಮತ್ತು ಜೀವನ ಶೈಲಿ.

ಈ ರೀತಿ ತಪ್ಪಾದ ಬದುಕುವ ರೀತಿಯಿಂದಾಗಿ ಅಜೀರ್ಣ, ಮಲಬದ್ಧತೆ ಇಂತಹ ಸಮಸ್ಯೆಗಳು ಉಂಟಾಗಿ ಅದು ವಾತ, ಪಿತ್ತ ವಿಕಾರವಾಗಿ ಇಡೀ ದೇಹಕ್ಕೆ ತೊಂದರೆಯಾಗುತ್ತದೆ ಮತ್ತು ಹಾಗೆಯೇ ಆಯುರ್ವೇದದಲ್ಲಿ ಇದಕ್ಕೆ ಪರಿಹಾರ ಕೂಡ ಇದೆ ಶಂಕ ಮುದ್ರೆ ಮಾಡುವುದರಿಂದ ಈ ಅಸಮತೋಲನೆಯನ್ನು ಕಂಟ್ರೋಲ್ ಗೆ ತರಬಹುದು.

ಈ ಸುದ್ದಿ ಓದಿ:- ಎಲ್ಲಾ ರೈತರ ಖಾತೆಗೂ ಬೆಳೆ ಹಾನಿ ಹಾಗೂ ಬರ ಪರಿಹಾರದ ಹಣ ಜಮೆ, ನಿಮ್ಮ ಖಾತೆಗೆ ಹಣ ಬರಲಿದೆಯೇ ಈ ರೀತಿ ಚೆಕ್ ಮಾಡಿ.!

ಈ ಶಂಕ ಮುದ್ರೆ ಮಾಡುವುದು ಹೇಗೆಂದರೆ ಬಲಗೈ ಹೆಬ್ಬೆರಳನ್ನು ಎಡ ಕೈ ನ ಹೆಬ್ಬೆರಳು ಹೊರತುಪಡಿಸಿ ಇನ್ನ ನಾಲ್ಕು ಬೆರಳುಗಳಿಂದ ಸುತ್ತುವರಿದು ಬಲಗೈನ ಉಳಿದ ಬೆರಳುಗಳು ತುದಿಯನ್ನು ಮತ್ತು ಎಡಗೈ ಹೆಬ್ಬೆರಳಿನ ತುದಿಯು ಟಚ್ ಮಾಡುವ ಹಾಗೆ ಗೋಪುರದ ರೀತಿ ಮಾಡಬೇಕು ಮತ್ತು ಈ ಶಂಕ ಮುದ್ರೆಯಲ್ಲಿ ಮೊದಲಿಗೆ ಉಜ್ಜಾಯಿ ಪ್ರಾಣಾಯಾಮ ಮಾಡಬೇಕು.

5 ನಿಮಿಷಗಳ ಕಾಲ ಉಜ್ಜಾಯಿ ಪ್ರಾಣಯಾಮ ಆದಮೇಲೆ ಇದೇ ಶಂಕ ಚಕ್ರ ಮುದ್ರೆಯಲ್ಲಿ ಕಪಾಳಬಾತಿಯನ್ನು 5 ನಿಮಿಷ ಮಾಡಬೇಕು. ಆದರೆ ಯಾವುದೇ ಕಾರಣಕ್ಕೂ ಇವುಗಳನ್ನು ಗರ್ಭಿಣಿ ಸ್ತ್ರೀಯರು, ಹೃದಯದ ಸಮಸ್ಯೆ ಮತ್ತು ಹೈಬಿಪಿ ಸಮಸ್ಯೆ ಇರುವವರು ಮಾಡಬಾರದು. ಈ ಶಂಕ ಚಕ್ರ ಪ್ರಾಣಯಾಮ ಮಾಡುವುದರಿಂದ ಹೈಪೋ ಥೈರಾಯಿಡಿಸಂ ಮತ್ತು ಹೈಪರ್ ಥೈರಾಯಿಡಿಸಂ ಈ ಎರಡರಲ್ಲಿ ಯಾವುದೇ ರೀತಿ ತೊಂದರೆ ಇದ್ದರೂ ಕೂಡ ಅದು ನ್ಯಾಚುರಲ್ ಆಗಿ ಕಂಟ್ರೋಲಿಗೆ ಬರುತ್ತದೆ.

ಆದರೆ ನೀವು ಯೋಗ ಗುರುಗಳ ಮಾರ್ಗದರ್ಶನ ಪಡೆದು ಅಥವಾ ವೈದ್ಯರ ಸಲಹೆ ಮೇರೆಗೆ ಮಾತ್ರ ಮುಂದುವರೆಯಬೇಕು. ಆಯುರ್ವೇದದಲ್ಲಿ ತಿಳಿಸಿರುವ ಕೆಲ ಮನೆಮದ್ದುಗಳನ್ನು ಬಳಸುವುದರಿಂದ ಕೂಡ ಕಂಟ್ರೋಲ್ ಗೆ ತರಬಹುದು.

ಈ ಸುದ್ದಿ ಓದಿ:- ಹಣಕಾಸು ಉಳಿತಾಯಕ್ಕೆ ನಿಮ್ಮ ಮನೆ ವಾಸ್ತು ಕಾರಣವಾಗುತ್ತಾ ನೀವೇ ತಿಳಿದುಕೊಳ್ಳಿ.

* ಮೆಂತ್ಯೆ ಪುಡಿ 1 ಚಮಚ, ಬೆಲ್ಲ 1 ಚಮಚ, ನಾಟಿ ಹಸುವಿನ ತುಪ್ಪ 1 ಚಮಚ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು
* ಬೆಳಗ್ಗೆ ಮತ್ತು ಸಂಜೆ ಧನಿಯಾ ಕಷಾಯ ಕುಡಿಯಬೇಕು. ಎರಡು ಲೋಟ ನೀರಿಗೆ ಒಂದು ಚಮಚ ಧನಿಯಾ ಪುಡಿ ಹಾಕಿ ಅರ್ಧ ಲೋಟ ಆಗುವಷ್ಟು ಕುದಿಸಿ ಬೆಚ್ಚಗಾದ ಮೇಲೆ ಕುಡಿಯಬೇಕು. ಬೆಳಗ್ಗೆ ಮತ್ತು ಸಂಜೆ ಪ್ರತ್ಯೇಕವಾಗಿ ಫ್ರೆಶ್ ಆಗಿಯೇ ಮಾಡಿಕೊಂಡು ಸೇವಿಸಬೇಕು.

* ಹುರಳಿ ಹಿಟ್ಟಿನ ಗಂಜಿಯನ್ನು ಪ್ರತಿ ರಾತ್ರಿ ಸೇವಿಸಬೇಕು
* ಇವುಗಳಿಂದ ರಿಸಲ್ಟ್ ಸಿಗದೇ ಇದ್ದರೆ ಆಯುರ್ವೇದದಲ್ಲಿ ಪಂಚ ಕರ್ಮ ಚಿಕಿತ್ಸೆ, ಕಂಚಿನ ಅರಗು, ಆರೋಗ್ಯ ವರ್ಧಿನಿ ಮಡ್ಡಿ ಇತ್ಯಾದಿಗಳನ್ನು ನೀಡುತ್ತಾರೆ. ಆರ್ಯುವೇದ ವೈದ್ಯರ ಸಲಹೆ ಪಡೆದು ಇಂತಹ ಚಿಕಿತ್ಸೆಗಳನ್ನು ಪಡೆದುಕೊಳ್ಳಿ.

https://youtu.be/KMGPm-WLCmU?si=t6wYugOoR0h8eth0

ಎಲ್ಲಾ ರೈತರ ಖಾತೆಗೂ ಬೆಳೆ ಹಾನಿ ಹಾಗೂ ಬರ ಪರಿಹಾರದ ಹಣ ಜಮೆ, ನಿಮ್ಮ ಖಾತೆಗೆ ಹಣ ಬರಲಿದೆಯೇ ಈ ರೀತಿ ಚೆಕ್ ಮಾಡಿ.!

 

2023-24 ನೇ ಸಾಲಿನಲ್ಲಿ ರಾಜ್ಯದ ರೈತರಿಗೆ (Farmers) ಕೃಷಿ ಸಂಪೂರ್ಣ ನೆಲಕಚ್ಚಿದೆ. ಮುಂಗಾರಿನ ವೈಫಲ್ಯದಿಂದಾಗಿ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಕೂಡ ಬರಗಾಲದ ಪರಿಸ್ಥಿತಿ (drought) ಏರ್ಪಟ್ಟಿದ್ದು ಕೆಲವು ಕಡೆ ಕೃಷಿ ಮಾಡಲಾಗದ ಪರಿಸ್ಥಿತಿ ಇದ್ದರೆ ಕೆಲವು ಕಡೆ ಬಿದ್ದ ಮಳೆ ನಂಬಿ ಬಿತ್ತನೆ ಮಾಡಿದ್ದರೂ ಫಸಲು ಬರದೇ ಹಾನಿಯಾಗಿದೆ.

ಈ ರೀತಿ ಕೈ ಸುಟ್ಟುಕೊಂಡಿರುವ ರೈತನಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಹಾರ ನೀಡುವ ‌ಭರವಸೆ ನೀಡಿವೆ. ಕೇಂದ್ರ ಸರ್ಕಾರದ ಕಡೆಯಿಂದ ರಾಜ್ಯದಲ್ಲಿ ಬರಗಾಲದ ಅಧ್ಯಯನ ಕೂಡ ನಡೆದಿದ್ದು 225 ತಾಲ್ಲೂಕುಗಳು ಬರಪೀಡಿತ ತಾಲೂಕುಗಳು ಎಂದು ಘೋಷಣೆಯಾಗಿವೆ. ಈ ಜಿಲ್ಲೆಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಬಾರದಂತೆ ಕುಡಿಯುವ ನೀರಿನ ಸಮಸ್ಯೆ ಬರದಂತೆ ಕ್ರಮ ಕೈಗೊಳ್ಳುವ ಹೊಣೆಯು ರಾಜ್ಯ ಸರ್ಕಾರಕ್ಕೆ ಸೇರಿದೆ.

ಹಲವು ಜಿಲ್ಲೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡಗಳು ರಚನೆಯಾಗಿ ಇದಕ್ಕಾಗಿ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಮಾನ್ಯ ಮುಖ್ಯಮಂತ್ರಿಗಳು ರೈತರ ಕಷ್ಟವನ್ನು ಕೂಡ ನೋಡಿ ಯಾವುದೇ ಬೆಳೆ ಸಾಲ ನೀಡಿರುವಂತಹ ಹಣಕಾಸು ಸಂಸ್ಥೆಗಳಾಗಲಿ, ಬ್ಯಾಂಕ್ ಗಳಾಗಲಿ, ಲೇವಾದೇವಿ ವ್ಯವಹಾರದಾರರೇ ಆಗಲಿ ಈ ವರ್ಷ ರೈತರಿಗೆ ಹಣ ಹಿಂತಿರುಗಿಸುವಂತೆ ತೊಂದರೆ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿ ಓದಿ:- ಹಣಕಾಸು ಉಳಿತಾಯಕ್ಕೆ ನಿಮ್ಮ ಮನೆ ವಾಸ್ತು ಕಾರಣವಾಗುತ್ತಾ ನೀವೇ ತಿಳಿದುಕೊಳ್ಳಿ.

ಮತ್ತು ಸಹಕಾರಿ ಬ್ಯಾಂಕ್ ಗಳಲ್ಲಿ ರೈತರು ಪಡೆದುಕೊಂಡಿದ್ದ ಮಧ್ಯಮಾವಧಿ ಸಾಲಗಳಿಗೆ ಕಂಡಿಷನ್ ಮೇರೆಗೆ ಬಡ್ಡಿ ಮನ್ನ ಕೂಡ ಘೋಷಿಸಿದ್ದಾರೆ. ಇದರ ಜೊತೆಗೆ SDRF ಹಾಗೂ NDRF ಮಾರ್ಗಸೂಚಿಯಂತೆ ರಾಜ್ಯದ ರೈತರ ಖಾತೆಗೆ ಬರ ಪರಿಹಾರದ ಹಣ ಕೂಡ ಜಮೆಯಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಬರ ಪರಿಹಾರದ ಹಣ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿ ಮತ್ತು ಶೀಘ್ರವೇ ಪರಿಹಾರದ ಹಣ ಬಿಡುಗಡೆ ಮಾಡಿ ನೆರವಾಗಬೇಕೆಂದು ಆಗ್ರಹಿಸಿದೆ.

ಕಾರಣಾಂತರಗಳಿಂದ ಕೇಂದ್ರದಿಂದ ಬರ ಪರಿಹಾರದ ಹಣ ತಲುಪುವುದು ವಿಳಂಬವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು ರೈತರ ಕಷ್ಟವನ್ನು ಅರಿತು ಕೇಂದ್ರದಿಂದ ಹಣ ಬರುವ ಮೊದಲೇ ಮೊದಲ ಕಂತಿನ ಹಣವನ್ನು ಎಲ್ಲ ರೈತರ ಬ್ಯಾಂಕ್ ಖಾತೆಗಳಿಗೆ DBT ಮೂಲಕ ವರ್ಗಾವಣೆ ಮಾಡಿದೆ.

ಈ ಹಣ ಜಮೆ ಮಾಡುವ ಮುನ್ನವೂ ಕೂಡ ಈ ಬೆಳೆ ಪರಿಹಾರದ ಹಣ ಪಡೆಯಲು ರೈತರ ಕಡ್ಡಾಯವಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ (FRUITS) ತಮ್ಮ ಎಲ್ಲಾ ಸರ್ವೇ ನಂಬರ್ ಜೋಡಿಸಿ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಬ್ಯಾಂಕ್ ಖಾತೆ ಇತ್ಯಾದಿ ದಾಖಲೆಗಳನ್ನು ನೀಡಿ ಪಡೆಯಬೇಕು ಎಂದು ಪ್ರಕಟಣೆ ಹೊರಡಿಸಿತ್ತು.

ಈ ಸುದ್ದಿ ಓದಿ:- ಈ ಐದು ಲಕ್ಷಣಗಳು ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎನ್ನುವುದನ್ನು ತಿಳಿಸುತ್ತವೆ.!

ಈ ಪ್ರಕಾರವಾಗಿ ನಡೆದುಕೊಂಡಿರುವ ರೈತರ ಖಾತೆಗಳಿಗೆ ಮೊದಲೇ ಕಂತಿನ ಬರ ಪರಿಹಾರದ ಹಣ ಬಿಡುಗಡೆ ಆಗಿದೆ ಮತ್ತು ಇಂದು ರಾಜ್ಯ ಸರ್ಕಾರ ಕಡೆಯಿಂದ ಎರಡನೇ ಕಂತಿನಲ್ಲಿ ಬೆಳೆ ಪರಿಹಾರದ ಹಣ ಜಮೆ ಆಗುತ್ತಿದೆ. ಯಾವ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಾಯಿಸಿಕೊಂಡು FID ಪಡೆದಿದ್ದಾರೆ ಆ ರೈತರ ಖಾತೆಗೆ ಮಾತ್ರ ಎರಡನೇ ಕಂತಿನ ಹಣ ಬಿಡುಗಡೆ ಆಗುತ್ತದೆ.

ನೀವು ರೈತರಾಗಿದ್ದು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡಿದ್ದೀರಿಯೇ ಎನ್ನುವುದನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ.
* https://fruitspmk.karnataka.gov.in ವೆಬ್ಸೈಟ್ ಗೆ ಭೇಟಿ ನೀಡಿ
* ರೈತನ ಆಧಾರ್ ನಂಬರ್ ಕೇಳಲಾಗುತ್ತದೆ ಆಧಾರ್ ನಂಬರ್ ಹಾಕಿ ಸರ್ಚ್ ಕ್ಲಿಕ್ ಮಾಡಿದರೆ details ಬರುತ್ತದೆ
* ಒಂದು ವೇಳೆ ರೈತರ ಆಧಾರ್ ಸಂಖ್ಯೆ ಮತ್ತು ಪಹಣಿ ಸಂಖ್ಯೆ ಫ್ರೂಟ್ ತಂತ್ರಾಂಶದಲ್ಲಿ ನೋಂದಣಿಯಾಗಿಲ್ಲ ಎಂದರೆ ಕೂಡಲೇ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ ಕೇಳುವ ದಾಖಲೆಗಳನ್ನು ಸಲ್ಲಿಸಿ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಿ.

ಹಣಕಾಸು ಉಳಿತಾಯಕ್ಕೆ ನಿಮ್ಮ ಮನೆ ವಾಸ್ತು ಕಾರಣವಾಗುತ್ತಾ ನೀವೇ ತಿಳಿದುಕೊಳ್ಳಿ.

ನಮ್ಮ ಜಾತಕದಲ್ಲಿ ಇಲ್ಲದ ಯೋಗ ಫಲಗಳು ಬರುವುದಕ್ಕೂ ಹಾಗೂ ಜಾತಕದಲ್ಲಿ ಇಲ್ಲದಿದ್ದರೂ ಕೂಡ ದೋಷಗಳು ಸಮಸ್ಯೆಗಳು ಕಾಡುವುದಕ್ಕೂ ನಾವು ವಾಸಿಸುವ ಮನೆಯ ವಾಸ್ತು ಕಾರಣವಾಗಿ ಬಿಡಬಹುದು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು. ವಾಸ್ತುವಿನಿಂದ ಹಣಕಾಸು ಪರಿಸ್ಥಿತಿಯನ್ನು ಉತ್ತಮ ಗೊಳಿಸಿಕೊಳ್ಳಬಹುದು ಹಾಗಯೇ ಕೆಡಿಸಿಕೊಳ್ಳಬಹುದು.

ಹಾಗಾದರೆ ಹಣಕಾಸು ಉಳಿತಾಯ ವಿಚಾರದಲ್ಲಿ ವಾಸ್ತು ಹೇಗಿದ್ದರೆ ಸೂಕ್ತ ಎನ್ನುವ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದ ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಎಲ್ಲರಿಗೂ ಅನುಕೂಲವಾಗುವಂತೆ ಮಾಡಿ.

ಸಾಮಾನ್ಯವಾಗಿ ಜನರು ಈಶಾನ್ಯ ದಿಕ್ಕಿನಲ್ಲಿ ನೀರಿನ ಸಂಗ್ರಹ ಇರುವುದರಿಂದ ಮನೆಯಲ್ಲಿ ಹಣಕಾಸಿನ ಕೊರತೆ ಬರುವುದಿಲ್ಲ ಎಂದುಕೊಂಡಿರುತ್ತಾರೆ. ಇದು ಕೂಡ ಸತ್ಯ ಆದರೆ ಇದರಲ್ಲಿ ಸ್ವಲ್ಪ ಬದಲಾವಣೆ ಇದೆ ಇದನ್ನು ಸರಿಯಾಗಿ ಹೇಗೆ ತಿಳಿಸುವುದೆಂದರೆ ನೀವು ವಾಯುವ್ಯದಿಂದ ಈಶಾನ್ಯಕ್ಕೆ 9 ಸಮ ಭಾಗ ಮಾಡಿಕೊಳ್ಳಿ ಇದರಲ್ಲಿ ಈಶಾನ್ಯದಿಂದ ವಾಯುವ್ಯದ ಕಡೆಗಿನ ಪಾಯಿಂಟ್ ಗಳಲ್ಲಿ ಮೊದಲನೇ ಹಾಗೂ ಎರಡನೇ ಸ್ಥಾನ ಬಿಟ್ಟು ಮೂರರಿಂದ ಐದು ಪಾಯಿಂಟ್ ವರೆಗೆ ಐದನೇ ಪಾಯಿಂಟ್ ನಲ್ಲಿ ಕರೆಕ್ಟಾಗಿ ಉತ್ತರ ಬರುತ್ತದೆ.

ಈ ಸುದ್ದಿ ಓದಿ:- ಈ ಐದು ಲಕ್ಷಣಗಳು ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎನ್ನುವುದನ್ನು ತಿಳಿಸುತ್ತವೆ.!

ಉತ್ತರವೂ ಕೂಡ ಹಣಕಾಸಿಗೆ ಸಂಬಂಧಪಟ್ಟ ದಿಕ್ಕಾಗಿದೆ. ಈ ಭಾಗದಲ್ಲಿ ನೀರಿನ ಸಂಪ್ ಮಾಡಿಸಿ ನಿಮ್ಮ ಹಣಕಾಸಿನ ಪರಿಸ್ಥಿತಿಯು ಬಹಳ ಉತ್ತಮಗೊಳ್ಳುತ್ತದೆ. ಈ ದಿಕ್ಕಿನಲ್ಲಿ ಸಂಪು ಮಾಡುವುದರಿಂದ ನೀವು ಸಾಮಾನ್ಯವಾಗಿ 1000 ದುಡಿದು 500 ರೂಪಾಯಿ ಖರ್ಚು ಮಾಡುತ್ತಿದ್ದರೆ ಈ ರೀತಿ ವಾಸ್ತು ಬದಲಾದ ಮೇಲೆ ಖರ್ಚು ಕಡಿಮೆಯಾಗದೆ ಇದ್ದರೆ ದುಡಿಮೆ 2,000 ಆಗಿರುತ್ತದೆ.

ಆದರೆ ಕೆಲವರಿಗೆ ಉತ್ತರಕ್ಕೆ ಜಾಗ ಇರುವುದಿಲ್ಲ ಅಲ್ಲಿ ಸಂಪ್ ಮಾಡಲು ಆಗುವುದಿಲ್ಲ ಆಗ ಇದೇ ರೀತಿಯ ಸಂಪ್ ಮಾಡುವುದಕ್ಕೆ ಉತ್ತಮವಾದ ಮತ್ತೊಂದು ಸೂಕ್ತವಾದ ಸ್ಥಳ ಮತ್ತೊಂದು ಇದೆ. ಈಶಾನ್ಯದಿಂದ ಆಗ್ನೇಯದವರಿಗೆ ಇದೇ ರೀತಿ 9 ಸಮಭಾಗಗಳನ್ನಾಗಿ ಮಾಡ ಈಶಾನದಿಂದ ಪೂರ್ವದ ಕಡೆಗೆ ಮೊದಲ ಎರಡು ಸ್ಥಾನ ಬಿಟ್ಟು ಮೂರು ನಾಲ್ಕು ಐದನೇ ಆರನೇ ಸ್ಥಾನದ ವರೆಗೂ ಕೂಡ ಸಂಪ್ ಮಾಡಬಹುದು, ಪೂರ್ವದ ದಿಕ್ಕು ಹೆಸರು ಖ್ಯಾತಿ ಕೀರ್ತಿ ಇವುಗಳನ್ನು ಸೂಚಿಸುತ್ತದೆ.

ಈ ದಿಕ್ಕಿನ ಕಡೆಗೆ ಸಂಪ್ ಮಾಡುವುದರಿಂದ ಹಣಕಾಸಿನ ಪರಿಸ್ಥಿತಿ ಜೊತೆಗೆ ಇಂತಹ ವಿಚಾರದಲ್ಲಿ ಕೂಡ ಒಳಿತಾಗುತ್ತದೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಹೆಚ್ಚು ಹಣ ಗಳಿಸಬೇಕು ಮತ್ತು ಹಾಗೆ ದುಡಿದಿದ್ದನ್ನು ಉಳಿಸಬೇಕು ಎಂಬ ಇಚ್ಛೆ ಇರುತ್ತದೆ ಈ ರೀತಿ ಮಾಡಿದರೆ ನೀವು ಖಂಡಿತವಾಗಿಯೂ ಸಕರಾತ್ಮಕವಾದ ಫಲ ಕಾಣುತ್ತಿರಿ ಎಂದು ಹೇಳುತ್ತದೆ ವಾಸ್ತು ಶಾಸ್ತ್ರ.

ಈ ಸುದ್ದಿ ಓದಿ:- ಮಹಿಳೆಯರು ಮಾಡುವ ಯಾವ ತಪ್ಪಿನಿಂದ ಅವರು ಬೇಗ ವಿಧವೆಯರಾಗುತ್ತಾರೆ ಗೊತ್ತಾ.?, ಈ ವಿಚಾರ ಎಲ್ಲ ಮಹಿಳೆಯರಿಗೂ ತಿಳಿದಿರಬೇಕು ಎಚ್ಚರ…

ಆದರೆ ಮತ್ತೊಂದು ವಿಚಾರ ಇದೆ. ಅದೇನೆಂದರೆ, ಮನೆಯ ಮಧ್ಯಭಾಗವನ್ನು ಬ್ರಹ್ಮ ಸ್ಥಾನ ಎಂದು ಹೇಳಲಾಗುತ್ತದೆ. ಈ ಬ್ರಹ್ಮ ಸ್ಥಾನವನ್ನು ಬಹಳ ತಗ್ಗು ಮಾಡುವುದರಿಂದ ತುಂಬಾ ಸಮಸ್ಯೆಗಳು ಬರುತ್ತದೆ. ವಾಸ್ತುಶಾಸ್ತ್ರದಲ್ಲಿ ಇದನ್ನು ವಾಸ್ತು ಪುರುಷನ ನಾಭಿ ಎಂದು ಹೇಳಲಾಗುತ್ತದೆ, ಈ ಸ್ಥಾನವು ಯಾವಾಗಲೂ ಉಬ್ಬಾಗಿರಬೇಕು ಅಥವಾ ಸಮನಾಗಿರಬೇಕು.

ಇದು ತಗ್ಗಿರುವುದರಿಂದ ಆ ಮನೆಯಲ್ಲಿ ಧನ ಧಾನ್ಯಕ್ಕೆ ಕೊರತೆ ಕಷ್ಟ ಬರುತ್ತದೆ ಮತ್ತು ಎಲ್ಲಾ ಮೂಲಗಳು ಹರಿದು ಬಂದು ತಗ್ಗಾಗಿರುವ ಸ್ಥಳಕ್ಕೆ ಸೇರಿದಂತೆ ಯಾವುದೇ ಕಡೆಯಿಂದ ಹಣ ಬಂದರೂ ಎಲ್ಲವೂ ಖರ್ಚಾಗಿ ಹೋಗುತ್ತದೆ ಮತ್ತು ದುಡಿಮೆ ಹೊಟ್ಟೆಗೆ ಸಾಲುವುದಿಲ್ಲ ಎನ್ನುವ ರೀತಿ ಆಗಿ ಬಿಡುತ್ತದೆ ಹಾಗಾಗಿ ತಪ್ಪದೆ ಈ ವಿಚಾರಗಳ ಬಗ್ಗೆ ಮನೆ ಕಟ್ಟುವಾಗ ಎಚ್ಚರದಲ್ಲಿ ಇರಿ.

ಈ ಐದು ಲಕ್ಷಣಗಳು ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎನ್ನುವುದನ್ನು ತಿಳಿಸುತ್ತವೆ.!

ಈಗಿನ ಕಾಲದಲ್ಲಿ ಕುಟುಂಬದವರೇ ಆಗಲಿ ಸ್ನೇಹಿತರೆ ಆಗಲಿ ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನ ಏಳಿಗೆ ಹಾಗೂ ಸಂತೋಷವನ್ನು ಸಹಿಸುವುದಿಲ. ಲ ಬಹಳ ಆತ್ಮೀಯರನ್ನು ಹೊರತುಪಡಿಸಿ ಉಳಿದ ಎಲ್ಲರೂ ಕೂಡ ಹೊಟ್ಟೆಕಿಚ್ಚು ಪಡುತ್ತಾರೆ. ಕೆಲವರು ಒಂದು ಹೆಜ್ಜೆ ಮುಂದೆ ನಿಮ್ಮ ಸುಖ-ಶಾಂತಿ ನೆಮ್ಮದಿ ಇದೆಲ್ಲ ಹಾಳಾಗಬೇಕು ಎಂದು ಕಾರಣಕ್ಕಾಗಿ ಮಾಟ ಮಂತ್ರ ಪ್ರಯೋಗ ಕೂಡ ಮಾಡಿಸುತ್ತಾರೆ.

ಅಥವಾ ಇನ್ನು ಕೆಲವರು ನಿಮ್ಮ ಮೇಲೆ ಇರುವ ಯಾವುದೋ ದ್ವೇಷದ ಕಾರಣ ಈ ರೀತಿ ಸಮಸ್ಯೆ ಮಾಡುತ್ತಾರೆ. ನಿಮಗೂ ಕೂಡ ಈ ರೀತಿ ಮಾಟ ಮಂತ್ರ ಪ್ರಯೋಗ ಆಗಿದೆ ಎನ್ನುವ ಅನುಮಾನ ಇದ್ದರೆ ನಿಮಗೆ ಕಂಡುಬರುವ 5 ಲಕ್ಷಣಗಳ ಮೂಲಕ ಇದನ್ನು ತಿಳಿದುಕೊಂಡು ಪರಿಹಾರ ಮಾಡಿಕೊಳ್ಳಬಹುದು. ಆ ಲಕ್ಷಣಗಳು ಹೀಗೆವೆ ನೋಡಿ.

ಈ ಸುದ್ದಿ ಓದಿ:- ಗೃಹಲಕ್ಷ್ಮೀ ಈ ತಿಂಗಳ ಕ್ಯಾನ್ಸಲ್ ಆದವರ ಲಿಸ್ಟ್ ಬಿಡುಗಡೆ | ಗೃಹಲಕ್ಷ್ಮೀಯಲ್ಲಿ ಮತ್ತೊಂದು ಶಾ-ಕ್..

* ಪದೇಪದೇ ನೀವು ತಿನ್ನುತ್ತಿರುವ ಆಹಾರದಲ್ಲಿ ಕೂದಲು ಸಿಗುತ್ತಿದೆ ಎಂದರೆ ಎಚ್ಚರವಹಿಸಿ. ಯಾಕೆಂದರೆ, ಇದು ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎನ್ನುವ ಲಕ್ಷಣವನ್ನು ತೋರುತ್ತದೆ. ಯಾವಾಗ ಅಪರೂಪಕ್ಕೆ ಒಮ್ಮೆ ಅಥವಾ ಒಂದೆರಡು ಬಾರಿ ಕೂದಲು ಸಿಗುತ್ತದೆ ಇದನ್ನು ಒಪ್ಪಬಹುದು ಅದನ್ನು ಹೊರತುಪಡಿಸಿ ಪದೇಪದೇ ಹೀಗಾಗುತ್ತಿದೆ ಎಂದರೆ ಅದು ಮಾಟ ಮಂತ್ರ ಆಗಿರುವ ಲಕ್ಷಣ ತೋರುತ್ತದೆ

* ನಿಮ್ಮ ಸುತ್ತಮುತ್ತ ಯಾವುದೋ ನೆಗೆಟಿವ್ ಎನರ್ಜಿ ಓಡಾಡುತ್ತಿದೆ ನಿಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎನ್ನುವ ರೀತಿ ಅನುಭವ ಆಗುತ್ತಿದ್ದರೆ ಆಗಲು ಕೂಡ ಇದಕ್ಕೆ ನಿಮ್ಮ ಮೇಲೆ ಮಾಟ ಮಂತ್ರ ಆಗಿರುವುದೇ ಕಾರಣ ಎಂದು ಅಂದುಕೊಳ್ಳಬಹುದು. ಇದರ ಬಗ್ಗೆ ಇತರರಿಗೆ ಹೇಳಿದಾಗ ಯಾರು ನಂಬುವುದಿಲ್ಲ, ಇದರ ಅನುಭವ ಅವರಿಗೆ ತಿಳಿಯುವುದಿಲ್ಲ.

ಈ ಸುದ್ದಿ ಓದಿ:- ಡಾಕ್ಟರ್ ಬದುಕಲ್ಲ ಅಂತ ಹೇಳಿದವರು ಈ ದೇವರ ತೀರ್ಥದಿಂದ ಬದುಕಿ ಉಳಿದಿದ್ದಾರೆ.!

ಅವರು ನಿಮಗೆ ಸಮಾಧಾನ ಪಡಿಸಲು ನೋಡುತ್ತಾರೆ. ಆದರೆ ಇದನ್ನು ಅನುಭವಿಸುತ್ತಿರುವವರಿಗೆ ಮಾತ್ರ ಇದರ ಕಷ್ಟ ಏನು ಎಂದು ಗೊತ್ತಿರುತ್ತದೆ ಈ ರೀತಿ ಆದಾಗ ತಪ್ಪದೆ ನಿಮ್ಮ ಮಾಟ ಮಂತ್ರ ಪ್ರಯೋಗ ನಿವಾರಣೆ ಮಾಡಿಸಿಕೊಳ್ಳಿ

* ಇದ್ದಕ್ಕಿದ್ದಂತೆ ಹತ್ತಿರದವರೆಲ್ಲ ದೂರಾಗುತ್ತಾರೆ ಅದುವರೆಗೂ ಕೂಡ ನಿಮ್ಮ ಜೊತೆ ಆತ್ಮೀಯವಾಗಿದ್ದವರು, ಚೆನ್ನಾಗಿ ವ್ಯಾಪಾರ ವ್ಯವಹಾರ ನಡೆಸಿಕೊಂಡು ಹೋಗುತ್ತಿದ್ದವರು, ಸ್ನೇಹಿತರು ಕುಟುಂಬಸ್ಥರು ಹೀಗೆ ಎಲ್ಲರೂ ಕೂಡ ಮನಸ್ತಾಪ ಮಾಡಿಕೊಂಡು ನಿಮ್ಮಿಂದ ದೂರಾಗುತ್ತಿರುತ್ತಾರೆ. ನಿಮ್ಮನ್ನು ನೋಡಲು ಮಾತನಾಡಿಸಲು ಅವರಿಗೆ ಆಸಕ್ತಿ ಹೊರಟು ಹೋಗಿರುತ್ತದೆ. ಇದಕ್ಕೆ ಕಾರಣ ನಿಮ್ಮ ಮೇಲಾಗಿರುವ ಮಾಟ ಮಂತ್ರದ ಪ್ರಭಾವ ಇರಬಹುದು.

ಈ ಸುದ್ದಿ ಓದಿ:- ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ 2 ಲಕ್ಷ ಸಿಗುತ್ತೆ…|

* ದಿನೇ ದಿನೇ ನಿಮ್ಮ ಮುಖದಲ್ಲಿ ಕಾಂತಿ ಕಳೆದು ಹೋಗಿರುತ್ತದೆ, ನಿಮ್ಮನ್ನು ನೋಡಿದರೆ ನೀವು ಯಾವುದೋ ಚಿಂತೆಯಲ್ಲಿ ಮುಳುಗಿದ್ದೀರ ಯಾವುದೋ ಕಷ್ಟದಲ್ಲಿ ಇದ್ದೀರಾ ಎನ್ನುವುದು ಕಾಣಿಸುವ ರೀತಿ ಮುಖ ಆಗಿರುತ್ತದೆ ಈ ರೀತಿ ಲಕ್ಷಣಗಳು ಕೂಡ ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿರುವುದನ್ನು ಸೂಚಿಸುತ್ತದೆ

* ಬಹಳ ಗಟ್ಟಿ ಮುಟ್ಟಾಗಿ ಆರೋಗ್ಯವಾಗಿ ಶಕ್ತಿಯುತವಾಗಿದ್ದ ನೀವು ನಿಧಾನವಾಗಿ ಒಂದೊಂದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತೀರ ಇದಕ್ಕೆ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಹೋದರೆ ಕಾಯಿಲೆ ಏನು ಎನ್ನುವುದನ್ನು ಸರಿಯಾಗಿ ಗುರುತಿಸಲು ಆಗುವುದಿಲ್ಲ. ಊಟ ಸೇರದೆ ಇರುವುದು, ವಾಂತಿ ಬಂದ ರೀತಿ ಆಗುವುದು, ತಲೆನೋವು, ವಿಪರೀತವಾದ ಮೈ ಕೈ ನೋವು ಇನ್ನು ಮುಂತಾದ ವಿಚಿತ್ರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಈ ಸುದ್ದಿ ಓದಿ:- ಸಿಂಹ ರಾಶಿಯವರಿಗೆ ಮಾರ್ಚ್ ತಿಂಗಳಿನಲ್ಲಿ ಶುಕ್ರ ಬಲ, ಹೇಗಿರಲಿದೆ ಗೊತ್ತಾ ಮಾರ್ಚ್ – 2024ರ ಮಾಸ ಭವಿಷ್ಯ, ಮುತ್ತಿನಂಥ 3 ಶುಭ ವಿಚಾರಗಳು.!

ಆದರೆ ಯಾವುದೇ ಮೆಡಿಸನ್ ವರ್ಕ್ ಆಗುವುದಿಲ್ಲ ನೀವು ದೈಹಿಕವಾಗಿ ಹಾಗೂ ಮಾನಸಿಕವಾಗಿ ಶಕ್ತಿ ಕಳೆದುಕೊಳ್ಳುತ್ತೀರಾ ಇದು ಕೂಡ ನಿಮ್ಮ ಮೇಲೆ ಆಗಿರುವ ನಕರಾತ್ಮಕ ಶಕ್ತಿಗಳ ಪ್ರಭಾವದ ಕಾರಣದಿಂದಲೇ ಆಗಿರುತ್ತದೆ. ಈ ರೀತಿ ನಿಮಗೆ ಲಕ್ಷಣಗಳು ಕಾಣಿಸಿಕೊಂಡು ಇದರ ಬಗ್ಗೆ ಅನುಮಾನ ಇದ್ದರೆ ಕವಡೆ ಶಾಸ್ತ್ರದ ಮೂಲಕ ಪ್ರಶ್ನೆ ಹಾಕಿ ಪರಿಹರಿಸಿಕೊಳ್ಳಬಹುದು.

ಮತ್ತು ಇದಕ್ಕಿರುವ ಸುಲಭ ಪರಿಹಾರ ಎಂದರೆ ನೀವು ಸ್ನಾನ ಮಾಡುವ ನೀರಿಗೆ ಚಿಟಿಕೆ ಅರಿಶಿಣ ಹಾಗೂ ಹರಳುಪ್ಪು ಹಾಕಿ ಸ್ನಾನ ಮಾಡಬೇಕು ಮತ್ತು ನೀವು ಪ್ರತಿದಿನ ಮನೆ ಸ್ವಚ್ಛ ಮಾಡುವಾಗ ನೀರಿಗೆ ಗೋಮೂತ್ರ ಅರಿಶಿನ ಹಾಗೂ ಕಲ್ಲುಪ್ಪನ್ನು ಹಾಕಿ ಮನೆಯನ್ನು ಕ್ಲೀನ್ ಮಾಡಿ ಆಗ ನಿಮ್ಮ ಮೇಲೆ ಯಾವುದೇ ಮಾಟ ಮಂತ್ರ ಪ್ರಯೋಗ ಆಗಿದ್ದರು ಅದು ವರ್ಕ್ ಆಗುವುದಿಲ್ಲ. ಎಲ್ಲ ನೆಗೆಟಿವ್ ಎನರ್ಜಿ ನಿಮ್ಮ ದೇಹದಿಂದ ಹಾಗೂ ಮನೆಯಿಂದ ಹೊರ ಹೋಗುತ್ತದೆ.