Home Blog Page 92

ನಾವು ತಿನ್ನುವ ಆಹಾರ ಪದಾರ್ಥವವೂ ಕೂಡ ನಮ್ಮ ಬೆನ್ನು ನೋವಿಗೆ ಕಾರಣವಾಗುತ್ತೆ.! ಬೆನ್ನು ನೋವು ಇರುವವರು ಯಾವ ಆಹಾರ ತಿನ್ನಬೇಕು? ಯಾವುದನ್ನು ತಿನ್ನಬಾರದು? ಇಲ್ಲಿದೆ ನೋಡಿ ಮಾಹಿತಿ

0

ನಾವು ನಡೆದಾಡುವ ಭಂಗಿ ಸರಿ ಇಲ್ಲದೆ ಇದ್ದಾಗ, ನಾವು ತಪ್ಪಾದ ಕ್ರಮದಲ್ಲಿ ತೂಕವನ್ನು ಎತ್ತಿದಾಗ ಅಥವಾ ಮಾನಸಿಕ ಒತ್ತಡ ಮತ್ತು ವ್ಯಾಯಾಮ ಇಲ್ಲದೆ ಇರುವುದು ಇವುಗಳು ನಮ್ಮ ಬೆನ್ನು ನೋವಿಗೆ ಕಾರಣ ಆಗುತ್ತದೆ ಎಂದು ಅನೇಕರು ಬಲ್ಲರು ಆದರೆ ನಾವು ತಿನ್ನುವ ಆಹಾರ ಕ್ರಮ ತಪ್ಪಾಗಿರುವುದರಿಂದ ಕೂಡ ನಮಗೆ ಬೆನ್ನು ನೋವು ಬರುತ್ತಿದೆ ಎಂದರೆ ಅದು ಅನೇಕರಿಗೆ ಆಶ್ಚರ್ಯ ಎನಿಸುತ್ತದೆ, ಆದರೆ ಈ ಮಾತು ಸತ್ಯ.

ಬೆನ್ನು ನೋವು ಬರುವುದಕ್ಕೆ ನಾವು ತಿನ್ನುತ್ತಿರುವ ಆಹಾರಗಳು ಕಾರಣವಾಗುತ್ತಿವೆ. ಬೆನ್ನುನೋವು ಇರುವವರು ಯಾವ ರೀತಿ ಆಹಾರಗಳನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು ಎನ್ನುವುದರಲ್ಲಿ ಒಂದಿಷ್ಟು ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ…

1. ಪ್ಯಾಕೇಜ್ ಫುಡ್ ಗಳಾದ ಚಿಪ್ಸ್, ಬಿಸ್ಕೆಟ್ ಇಂತಹ ಪದಾರ್ಥಗಳನ್ನು ಸೇವಿಸಬಾರದು. ಯಾಕೆಂದರೆ ಇವುಗಳಿಗೆ ಪ್ರಿಸರ್ವೇಟೀವ್ಸ್ ಮತ್ತು ಅಡೀಟೀವ್ಸ್ ಬಳಸಿರುತ್ತಾರೆ. ಇವುಗಳು ಉರಿಯೂತ (inflamation) ಉಂಟು ಮಾಡುವುದರಿಂದ ಬೆನ್ನು ನೋವು ಹೆಚ್ಚಾಗುತ್ತದೆ ಹಾಗಾಗಿ ಇಂತಹ ಆಹಾರ ಪದಾರ್ಥಗಳಿಂದ ದೂರವಿರಬೇಕು. ಅದೇ ರೀತಿಯಾಗಿ ಎರಡು ನಿಮಿಷಗಳಲ್ಲಿ ತಯಾರಾಗುವಂತಹ ಪಾಸ್ತಾ ನೂಡಲ್ಸ್, ಬಿಸಿ ಮಾಡಿಕೊಂಡು ತಿನ್ನಬಹುದಾದಂತಹ ಆಹಾರ ಪದಾರ್ಥಗಳನ್ನು ಕೂಡ ಅವಾಯ್ಡ್ ಮಾಡಬೇಕು. (Avoid packaged and canned foods)

2. ಸಕ್ಕರೆ ಅಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳು ಅಂದ್ರೆ ಚಾಕಲೇಟ್, ಸಿಹಿ ತಿನಿಸುಗಳು, ಜ್ಯೂಸ್ ಗಳು, ಕೇಕ್ ಗಳು ಇವೆಲ್ಲವೂ ಕೂಡ ದೇಹದಲ್ಲಿ ಬೆನ್ನು ನೋವು ಹೆಚ್ಚಾಗುವುದಕ್ಕೆ ಕಾರಣವಾಗುತ್ತವೆ. ಇದರೊಂದಿಗೆ ನಾವು ದಕ್ಷಿಣ ಭಾರತದ ಆಹಾರ ಶೈಲಿಯಲ್ಲಿ ಅತಿ ಹೆಚ್ಚಾಗಿ ಉಪಯೋಗಿಸುವ ಅಕ್ಕಿ ಗೋಧಿ ಪದಾರ್ಥಗಳು ಕೂಡ ಕೊನೆಗೆ ಕಾರ್ಬೋಹೈಡ್ರೇಟ್ ನಿಂದ ಶುಗರ್ ಆಗಿ ಬದಲಾವಣೆ ಆಗುವುದರಿಂದ ಈ ಸಕ್ಕರೆ ಅಂಶವೂ ದೇಹದಲ್ಲಿ ಇನ್ಫಮೇಷನ್ ಕ್ರಿಯೇಟ್ ಮಾಡಿ ಸಮಸ್ಯೆ ಉಂಟುಮಾಡುತ್ತದೆ. (Avoid Sugar richched foods and Carbohydrates)

3. ಇದರ ಬದಲು ಆಹಾರದಲ್ಲಿ ಫೈಬರ್ ಮತ್ತು ಪ್ರೋಟೀನ್ ಅಂಶ ಹೆಚ್ಚಿರಬೇಕು (eat more Fiber and Protein)
4. ಕೆಟ್ಟ ಕೊಬ್ಬನ್ನು ದೇಹದಲ್ಲಿ ಹೆಚ್ಚು ಮಾಡುವ LDL ಕ್ರಿಯೇಟ್ ಮಾಡುವ ಆಹಾರ ಪದಾರ್ಥಗಳನ್ನು ಅವಾಯ್ಡ್ ಮಾಡಬೇಕು, ಕರಿದ ಆಹಾರ ಪದಾರ್ಥಗಳು, ಮೈದಾ ಬಳಸಿ ಮಾಡಿದ ಪದಾರ್ಥಗಳು, ಜಂಕ್ ಫುಡ್ ಗಳು ಈ ರೀತಿ LDL ಹೆಚ್ಚಿಸುತ್ತದೆ. ಇವುಗಳನ್ನು ಅವಾಯ್ಡ್ ಮಾಡುವುದರಿಂದ ಬೆನ್ನು ನೋವು ಕಡಿಮೆ ಮಾಡಿಕೊಳ್ಳಬಹುದು. (Avoid tran fat foods)

5. ಧೂಮಪಾನ ಅಭ್ಯಾಸ ಬಿಡುವುದು ತುಂಬಾ ಒಳ್ಳೆಯ ನಿರ್ಧಾರ. ಯಾಕೆಂದರೆ ಧೂಮಪಾನದ ಚಟ ಇರುವವರಿಗೆ ಮಾಂಸ ಖಂಡದಲ್ಲಿ ಉರಿಯೂತ ಹೆಚ್ಚಾಗುತ್ತದೆ, ಇದು ನೋವನ್ನು ಹೆಚ್ಚು ಮಾಡುತ್ತದೆ. ಇನ್ನು ಮಧ್ಯಪಾನ ಅಭ್ಯಾಸ ಇರುವವರಿಗೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ ಈ ಕಾರಣಕ್ಕಾಗಿ ಅವರಿಗೆ ಸರಿಯಾಗಿ ಚೇತರಿಕೆಯಾಗದೆ ಬೆನ್ನು ನೋವು ಹೆಚ್ಚಾಗುತ್ತದೆ.

ಮತ್ತು ಅತಿ ಹೆಚ್ಚು ಕಾಫಿ ಕುಡಿಯುವರಲ್ಲಿ ದೇಹದ ಕ್ಯಾಲ್ಸಿಯಂ ಪ್ರಮಾಣ ಹೀರಿಕೊಳ್ಳುವುದಕ್ಕೆ ಉಂಟಾಗುವುದರಿಂದ ಕ್ಯಾಲ್ಸಿಯಂ ಕೊರತೆಯಿಂದಲೂ ಕೂಡ ಬೆನ್ನು ನೋವು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. (Avoid Smoking, driking and caffeine)

6. ನಮ್ಮ ದೇಹವು ಆಕ್ಟಿವ್ ಆಗಿರಲು ನಾವು ತಿಂದ ಆಹಾರ ಜೀರ್ಣವಾಗಿ ಅದರಲ್ಲಿರುವ ಸತ್ವಗಳು ದೇಹಕ್ಕೆ ಸೇರಬೇಕು. ಈ ರೀತಿ ವಿಟಮಿನ್ ಗಳು ಮಿನರಲ್ಸ್ ಗಳನ್ನು ದೇಹ ಹೀರಿಕೊಳ್ಳಲು ಮುಖ್ಯವಾಗಿ ವಿಟಮಿನ್ ಡಿ ಕಾರಣವಾಗುತ್ತದೆ. ವಿಟಮಿನ್ ಡಿ ನ್ಯಾಚುರಲ್ ಆಗಿ ಸೂರ್ಯನ ಬೆಳಕಿನಿಂದ ನಮಗೆ ಸಿಗುತ್ತದೆ ಹಾಗಾಗಿ ಸೂರ್ಯನ ಬೆಳಗಿನ ಜಾವ ಬಿಸಿಲಿನಲ್ಲಿ ವಾಕಿಂಗ್ ಮಾಡುವುದು.

ವ್ಯಾಯಾಮ ಮಾಡುವುದು ಅಥವಾ ಕೆಲಸ ಕಾರ್ಯಗಳನ್ನು ಮಾಡುವುದರಿಂದ ದೇಹಕ್ಕೆ ವಿಟಮಿನ್ ಡಿ ಕೊರತೆ ಉಂಟಾಗುವುದಿಲ್ಲ. ಇದರ ಮೂಲಕವಾಗಿ ದೇಹಕ್ಕೆ ಇತರ ಪೋಷಕಾಂಶಗಳು ಸೇರುವುದಕ್ಕೆ ಅನುಕೂಲವಾಗುತ್ತದೆ ಇದರಿಂದಲೂ ಬೆನ್ನು ನೋವು ನಿವಾರಣೆ ಆಗುತ್ತದೆ ಈ ವಿಚಾರವಾಗಿ ಇನ್ನು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಶನಿವಾರ ರಾತ್ರಿ ಉಪ್ಪಿನಿಂದ ಈ ಕೆಲಸ ಮಾಡಿ, ನಿಮ್ಮ ಮನೆಯ ಸದಸ್ಯರ ಯಾವುದೇ ಸದಸ್ಯರ ದುಶ್ಚಟ ಬೇಕಾದ್ರೂ ಬಿಡಿಸಬಹುದು.!

 

ನಮ್ಮ ಮನೆಯಲ್ಲಿ ಬಳಸುವ ಕೆಲವು ವಸ್ತುಗಳಿಗೆ ಬಹಳ ವಿಶೇಷವಾದ ಶಕ್ತಿ ಇರುತ್ತದೆ. ಉದಾಹರಣೆಗೆ ಹೇಳುವುದಾದರೆ ನಮ್ಮ ಮನೆಯ ಅಡುಗೆ ಮನೆಯಲ್ಲಿ ಬಳಸುವ ಉಪ್ಪು ನಮ್ಮ ಅಡುಗೆ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಆಯುರ್ವೇದದಲ್ಲೂ ಕೂಡ ಬಹಳ ಮಹತ್ವದ ಸ್ಥಾನ ಪಡೆದುಕೊಂಡಿದೆ.

ಹಾಗೆ ವಾಸ್ತು ಶಾಸ್ತ್ರದಲ್ಲೂ ಕೂಡ ಮುಖ್ಯ ಸಾಧನವಾಗಿ ಬಳಕೆಯಾಗುತ್ತದೆ, ಉಪ್ಪಿನಿಂದ ನಕರಾತ್ಮಕ ಶಕ್ತಿಯನ್ನು ಕೂಡ ತೊಳೆದು ಹಾಕಬಹುದು ಹಾಗೂ ಉಪ್ಪು ತಾಯಿ ಮಹಾಲಕ್ಷ್ಮಿ ಸಂಕೇತ ಆದ್ದರಿಂದ ಶಾಸ್ತ್ರಗಳಲ್ಲಿಯೂ ಕೂಡ ಇದಕ್ಕೆ ಪ್ರಾಶಸ್ತ್ಯವಿದೆ. ಇಂತಹ ಉಪ್ಪಿನಿಂದ ನೀವು ಒಂದೇ ಒಂದು ತಂತ್ರವನ್ನು ಮಾಡುವ ಮೂಲಕ ನಿಮ್ಮ ಕುಟುಂಬದ ಯಾವುದೇ ಸದಸ್ಯರ ದು’ಶ್ಚ’ಟಳನ್ನು ಕೂಡ ದೂರ ಮಾಡಬಹುದು. ಇನ್ನು ಮುಂದೆ ನೀವು ಹೇಳಿದಂತೆ ಅವರು ಕೇಳುತ್ತಾರೆ. ಆ ರೀತಿ ಮಾಡಬಹುದಾದ ಶಕ್ತಿ ಉಪ್ಪಿಗೆ ಇದೆ.

ಈ ಉಪಾಯವನ್ನು ನೀವು ಪ್ರತಿ ಶನಿವಾರ ರಾತ್ರಿ ಸಮಯ ಮಾಡಬೇಕು. ರಾತ್ರಿ ಮಲಗುವ ಮುನ್ನ ಈ ಚಟುವಟಿಕೆ ಮಾಡಿ ಮಲಗಬೇಕು ಮತ್ತು ಮುಂದಿನ ಶನಿವಾರವೇ ಮತ್ತೆ ಇದನ್ನು ಮಾಡಬೇಕು. ವಾರದ ಮಧ್ಯೆ ಮತ್ತೆ ಯಾವುದೇ ದಿನ ಮಾಡಬಾರದು. ವಾರಪೂರ್ತಿ ನಾವು ಕೆಲಸ ಕಾರ್ಯ ಶಾಲೆ ಕಾಲೇಜು ಅಥವಾ ಇನ್ನಿತರ ಕಾರಣಗಳಿಂದಾಗಿ ಎಲ್ಲೆಲ್ಲೋ ಸುತ್ತಾಡಿರುತ್ತೇವೆ.

ವಾರಪೂರ್ತಿ ನಮ್ಮ ಮೇಲೆ ನ’ಕ’ರಾ’ತ್ಮ’ಕ ಶಕ್ತಿಗಳ ಪ್ರಭಾವ ಹಾಗೂ ಕೆಟ್ಟ ದೃಷ್ಟಿಗಳು ಕೂಡ ಬಿದ್ದಿರುತ್ತವೆ, ಇವುಗಳನ್ನು ತೊಡೆದು ಹಾಕುವ ಸಲುವಾಗಿ ನಾವು ಈ ಪ್ರಯೋಗ ಮಾಡಬಹುದು. ಇದರೊಂದಿಗೆ ನಮಗಾಗಿ ಮಾತ್ರವಲ್ಲದೆ ನಮ್ಮ ಕುಟುಂಬದವರ ಒಳಿತಿಗಾಗಿ ಕೂಡ ಈ ಚಟುವಟಿಕೆಯನ್ನು ಮಾಡಬಹುದು ಮನೆಯವರ ಕೆ’ಟ್ಟ ಅಭ್ಯಾಸ ಬಿಡಿಸುವ ಸಲುವಾಗಿ ಕೂಡ ಇದನ್ನು ಮಾಡಬಹುದು.

ಇದನ್ನು ಮಾಡುವುದು ಹೇಗೆ ಎಂದರೆ ನೀವು ನಿಮ್ಮ ಮುಷ್ಟಿಯಲ್ಲಿ ಒಂದು ಮುಷ್ಟಿಯಷ್ಟು ಹರಳುಪ್ಪು ತೆಗೆದುಕೊಳ್ಳಿ. ಅದನ್ನು ಎರಡು ಕೈಗಳಿಗೂ ಹಾಕಿಕೊಳ್ಳಿ ಉಪ್ಪನ್ನು ಕೈಯಲ್ಲಿ ಹಿಡಿದುಕೊಂಡು ನಿಮ್ಮ ಮೇಲೆ ಆಗಿರುವ ಎಲ್ಲಾ ನ’ಕ’ರಾ’ತ್ಮ’ಕ ಪ್ರಯೋಗಗಳು ಹೋಗಬೇಕು ಮತ್ತು ನಿಮ್ಮ ಮೇಲೆ ಆಗಿರುವ ದೃಷ್ಟಿಗಳು ಕೂಡ ಪರಿಹಾರವಾಗಬೇಕು ಎಂದು ಯುನಿವರ್ಸಿಗೆ ಪ್ರಾರ್ಥಿಸಿರಿ.

ನಂತರ ಮನೆಯ ನಲ್ಲಿಯನ್ನು ಆನ್ ಮಾಡಿ ಎರಡು ಕೈಗಳಿಗೂ ಉಜ್ಜಿ ಚೆನ್ನಾಗಿ ಉಪ್ಪಿನಿಂದ ಕೈ ತೊಳೆದುಕೊಳ್ಳಿ. ಇದು ಬಹಳ ಸರಳ ಉಪಾಯ, ಆದರೆ ಬಹಳ ನಂಬಿಕೆಯಿಂದ ಇದನ್ನು ಮಾಡಬೇಕು ಈ ರೀತಿ ಮಾಡುವುದರಿಂದ ನಿಮ್ಮ ಮೇಲೆ ಆಗಿರುವ ಎಲ್ಲಾ ರೀತಿಯ ದೃಷ್ಟಿ ದೋಷ ಕೂಡ ನಿವಾರಣೆಯಾಗಿ ನಿಮಗೆ ಒಳ್ಳೆಯದಾಗುತ್ತದೆ.

ನಿಮ್ಮ ಕುಟುಂಬದ ಸದಸ್ಯರಿಗೆ ಕುಡಿತದ ಚಟವಿದ್ದರೆ ಅಥವಾ ಧೂಮಪಾನ ಗುಟ್ಕ ಇತ್ಯಾದಿ ದುರಭ್ಯಾಸವಿದ್ದರೆ ಮಕ್ಕಳಿಗೆ ಮೊಬೈಲ್ ಚಟ ಹೆಚ್ಚಾಗಿದ್ದರೆ ಅದನ್ನು ಬಿಡಿಸಲು ಕೂಡ ಇದೇ ಪ್ರಯೋಗವನ್ನು ಮಾಡಬಹುದು. ಇದನ್ನು ಮಾಡುವುದಕ್ಕೂ ಮುನ್ನ ನೀವು ಒಂದು ಗಾಜಿನ ಬಟ್ಟಲು ಅಥವಾ ಪ್ಲಾಸ್ಟಿಕ್ ಬಿಟ್ಟು ಯಾವುದೇ ಬಟ್ಟಲಿಗೆ ಒಂದು ಮುಷ್ಟಿ ಅಷ್ಟು ಉಪ್ಪನ್ನು ತೆಗೆದುಕೊಂಡು ನೀವೇ ಪ್ರಾರ್ಥನೆ ಮಾಡಿ ಅವರ ಕೈಗೆ ಕೊಡಬೇಕು.

ಮೊದಲು ನಿಮ್ಮ ಇಷ್ಟದ ದೇವರಿಗೆ ಹಾಗೂ ಮನೆ ದೇವರಿಗೆ ಅವರ ದು’ಷ್ಚ’ಟವನ್ನು ಬಿಡುವಂತೆ ಮಾಡು ಎಂದು ಬೇಡಿಕೊಳ್ಳಿ ನಂತರ ಯೂನಿವರ್ಸಿಗೆ ಪಾಸಿಟಿವ್ ಅಫರ್ಮೇಷನ್ ಮಾಡಿ ಇವರು ದುರಭ್ಯಾಸಗಳನ್ನು ಬಿಡುತ್ತಾರೆ, ಇನ್ನು ಮುಂದೆ ಚೆನ್ನಾಗಿರುತ್ತಾರೆ ಎಂದು ಹೇಳಿಕೊಂಡು ಉಪ್ಪನ್ನು ಕೊಡಿ. ಅವರು ಉಪ್ಪನ್ನು ಎರಡು ಕೈಗಳಿಗೆ ಚೆನ್ನಾಗಿ ಉಜ್ಜಿ ಕೈ ತೊಳೆದುಕೊಂಡು ಮಲಗಿದರೆ ಸಾಕು ನಿಧಾನವಾಗಿ ಅವರು ತಮ್ಮ ದುರಭ್ಯಾಸಗಳಿಂದ ಹೊರಬರುತ್ತಾನೆ, ಒಂದೇ ತಿಂಗಳಲ್ಲಿ ಸಂಪೂರ್ಣವಾಗಿ ಬದಲಾಗಿ ಬಿಡುತ್ತಾರೆ.

ಬಡತನ ದೂರ ಆಗುವ ಮೊದಲು ಮನೆಗೆ ಅದೃಷ್ಟ ಬರುವುದನ್ನು ಸೂಚಿಸುವ 5 ಲಕ್ಷಣಗಳು ಇವು.!

 

ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಶ್ರೀಮಂತರಾಗುವ ಅವಕಾಶ ಇದ್ದೆ ಇದೆ. ಬಡವರಾಗಿ ಹುಟ್ಟುವುದು ನಮ್ಮ ತಪ್ಪಲ್ಲ ಆದರೆ ಬಡವರಾಗಿ ಸತ್ತರೆ ಖಂಡಿತವಾಗಿಯೂ ಆ ತಪ್ಪು ನಮ್ಮದೇ ಆಗಿರುತ್ತದೆ. ಹಾಗಾಗಿ ನಮ್ಮ ಬಾಲ್ಯ ಹೇಗೆ ಇದ್ದರು ಅಂತ್ಯ ಮಾತ್ರ ನಾವಂದು ಕೊಂಡಂತೆ ಇರಬೇಕು.

ಆ ರೀತಿ ನಮ್ಮ ಬದುಕನ್ನು ರೂಪಿಸಿಕೊಂಡು ನಮ್ಮ ಜೀವನವನ್ನು ನಮ್ಮಿಷ್ಟದಂತೆ ಕಳೆಯಬೇಕು ಅದಕ್ಕಾಗಿ ಎಷ್ಟೇ ಕಷ್ಟ ಬಂದರೂ ಕೂಡ ಎದುರಿಸುವ ಮನಸ್ಸಿರಬೇಕು. ಜೀವನದಲ್ಲಿ ಶ್ರೀಮಂತಿಕೆ ಎನ್ನುವುದು ಎಲ್ಲಾ ಸಮಯದಲ್ಲೂ ಅದೃಷ್ಟದಿಂದಲೇ ಬರುವುದಿಲ್ಲ, ನಮ್ಮ ಕಠಿಣ ಪ್ರಯತ್ನಕ್ಕೆ ಕೆಲವೊಮ್ಮೆ ಅದೃಷ್ಟ ಕೂಡ ಸಾಥ್ ಕೊಟ್ಟು ನಾವು ಶ್ರೀಮಂತರಾಗುತ್ತೇವೆ.

ಹಾಗಾಗಿ ನಾವು ಅದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಕಾರ್ಯ ಪ್ರವೃತ್ತರಾಗಿರಬೇಕು. ಇದರ ನಡುವೆ ನಮಗೆ ನಾವು ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೇವೆ ಮತ್ತು ನಮ್ಮ ನಿರೀಕ್ಷೆಯ ಮಟ್ಟದ ಶ್ರೀಮಂತಿಕೆಯನ್ನು ನಾವು ತಲುಪುತ್ತಿದ್ದೇವೆ ಎನ್ನುವುದು ನಮಗೆ ಕೆಲವು ಸೂಚನೆಗಳ ಮೂಲಕ ಸಿಗುತ್ತದೆ. ಅಂತಹ ಕೆಲವು ಸೂಚನೆಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.

* ನಿಮಗೆ ಪ್ರತಿದಿನ ಕೂಡ ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರವಾಗುತ್ತಿದ್ದರೆ ಭಗವಂತ ನಿಮಗೆ ಅನುಗ್ರಹಿಸುತ್ತಿದ್ದಾನೆ ನೀವು ಕಷ್ಟ ಪಡುತ್ತಿರುವ ಕೆಲಸಗಳಿಗೆ ಭಗವಂತನ ಆಶೀರ್ವಾದ ಇದ್ದೇ ಇರುತ್ತದೆ, ನೀವು ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೀರಾ ಮತ್ತು ಶೀಘ್ರದಲ್ಲಿಯ ಗುರಿ ತಲುಪಲಿದ್ದೀರ ಎಂದು ಅರ್ಥ.

ಆದರೆ ನೀವು ಈ ರೀತಿ ಎಚ್ಚರವಾದಾಗ ಅದನ್ನು ನಿರ್ಲಕ್ಷಿಸಿ ಮಲಗಿದ್ದರೆ ನಿಮ್ಮ ಅದೃಷ್ಟವನ್ನು ನಿಮ್ಮ ಕೈಯಾರೆ ಕಳೆದುಕೊಳ್ಳುತ್ತಿದ್ದೀರಿ. ಹಾಗಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರವಾದರೆ ತಕ್ಷಣ ಎದ್ದು ನೀವು ಯಾವ ಕನಸಿಗಾಗಿ ಕಷ್ಟಪಡುತ್ತಿದ್ದೀರಾ ಆ ಕೆಲಸಗಳ ಕಡೆ ಗಮನ ಕೊಡಿ, ಭಗವಂತನ ಕೃಪಾಕಟಾಕ್ಷದಿಂದ ನಿಮ್ಮ ದಾರಿ ಸುಗಮವಾಗುತ್ತದೆ

* ನೀವೇನಾದರೂ ದಾರಿಯಲ್ಲಿ ಹೋಗುವಾಗ ನಿಮಗೆ ಹಣ ಸಿಕ್ಕಿದರೆ ಅಥವಾ ನಾಣ್ಯ ಅಥವಾ ಬೆಳ್ಳಿಯ ಪದಾರ್ಥಗಳು ಸಿಕ್ಕಿದರೆ ನೀವು ಶೀಘ್ರದಲ್ಲಿಯೇ ಶ್ರೀಮಂತರಾಗಲಿದ್ದೀರಿ ನಿಮಗೆ ಅಪಾರ ಮಟ್ಟದ ಹಣ ಒಲಿದು ಬರಲಿದೆ ಎನ್ನುವುದನ್ನು ಸೂಚಿಸುವ ಸಂಕೇತ ಆಗಿರುತ್ತದೆ.

* ನಿಮ್ಮ ಮನೆಯ ಸುತ್ತಲೂ ಹಸು ಬಂದು ಸೆಗಣಿ ಮಾಡುತ್ತಿದ್ದರೆ ಅಥವಾ ಹಸು ಬಂದು ನಿಲ್ಲುತ್ತಾ ಇದ್ದರೆ ಅದು ಕೂಡ ತಾಯಿ ಮಹಾಲಕ್ಷ್ಮಿ ಶೀಘ್ರದಲ್ಲಿ ನಿಮ್ಮ ಮನೆಗೆ ಬರಲಿದ್ದಾನೆ ಎನ್ನುವುದನ್ನು ಸೂಚಿಸುವ ಲಕ್ಷಣ ಆಗಿರುತ್ತದೆ. ಈ ರೀತಿ ಹಸು ಬಂದಾಗ ಅದಕ್ಕೆ ಕೈಲಾದಷ್ಟು ಆಹಾರ ಕೊಟ್ಟು ಕಳುಹಿಸಿ ಅದಕ್ಕೆ ಹೊಡೆದು ಗಾಬರಿಗೊಳಿಸಿ ನೋವು ಮಾಡಬೇಡಿ. ಈ ರೀತಿ ಹಸು ಹಾಗೂ ಕರು ಕನಸಿನಲ್ಲಿ ಕಂಡರೂ ಕೂಡ ಅದು ಇದೇ ಫಲ ಸೂಚಿಸುತ್ತದೆ

* ನಿಮ್ಮ ಕನಸಿನಲ್ಲಿ ನೀವು ಬೆಟ್ಟ ಹತ್ತುತ್ತಿರುವ ರೀತಿ ಕಂಡರೆ ಅದು ಕೂಡ ನೀವು ಶೀಘ್ರದಲ್ಲಿಯೇ ಹಣಕಾಸಿನ ವಿಚಾರದಲ್ಲಿ ಅತ್ಯುತ್ತಮ ಸ್ಥಾನ ತಲುಪುತ್ತಿದ್ದಿರಿ ಎನ್ನುವುದನ್ನು ಸೂಚಿಸುವ ಲಕ್ಷಣ ಆಗಿರುತ್ತದೆ.

* ಇದೇ ರೀತಿಯಾಗಿ ನಿಮ್ಮ ಪಿತೃಗಳು ಕನಸಿನಲ್ಲಿ ಕಂಡರೆ ಅದು ಕೂಡ ನಿಮಗೆ ನಿಮ್ಮ ಕುಟುಂಬದ ಹಿರಿಯರ ಹಾಗೂ ದೇವರ ಆಶೀರ್ವಾದ ನಿಮ್ಮ ಮೇಲೆ ಇದೆ ಎನ್ನುವುದನ್ನು ಸೂಚಿಸುತ್ತದೆ, ಇದರ ಮೂಲಕ ನೀವು ಜೀವನದಲ್ಲಿ ಬಹಳ ಬೇಗ ಯಶಸ್ವಿಯಾಗುತ್ತಿರಿ ಎನ್ನುವುದನ್ನು ಸೂಚಿಸುತ್ತದೆ.
* ನಿಮ್ಮ ಮೇಲೆ ಏನಾದರೂ ಅನಿರೀಕ್ಷಿತವಾಗಿ ನೀರು ಬಿದ್ದರೆ ಅದು ಕೂಡ ನಿಮಗೆ ಶ್ರೀಮಂತಿಕೆಯನ್ನು ತರುತ್ತದೆ ಎನ್ನುವುದನ್ನು ಸೂಚಿಸಿರುವ ಸಂಕೇತ ಆಗಿರುತ್ತದೆ.

ಈ 15 ರಹಸ್ಯಗಳು ಗೊತ್ತಿದ್ದರೆ ನಿಮ್ಮ ದೇಹವು ನೀವು ಹೇಳಿದಂತೆ ಕೇಳುತ್ತದೆ.!

 

ನಮ್ಮ ದೇಹವೇ ಒಂದು ವಿಸ್ಮಯ, ಇಂತಹ ಒಂದು ದೇಹವನ್ನು ಸೃಷ್ಟಿ ಮಾಡಿದಂತಹ ಪ್ರಕೃತಿಗೆ ಧನ್ಯವಾದ ಹೇಳುತ್ತಾ ನಮ್ಮ ದೇಹದ ಕೆಲವು ರಹಸ್ಯಮಯ ವಿಷಯಗಳನ್ನು ನಿಮ್ಮ ಜೊತೆ ಹೇಳಿಕೊಳ್ಳುತ್ತಿದ್ದೇವೆ. ಇವುಗಳನ್ನು ಪ್ರತಿಯೊಬ್ಬರು ಕೂಡ ತಿಳಿದುಕೊಂಡಿರಬೇಕು. ಇದನ್ನು ಅರಿತವರು ನೂರಾರು ವರ್ಷ ಆರೋಗ್ಯವಾಗಿ ಬದುಕುತ್ತಾರೆ ಮತ್ತು ದೇಹದ ಆರೋಗ್ಯವು ಅವರ ಕಂಟ್ರೋಲ್ ನಲ್ಲಿ ಇರುತ್ತದೆ. ಅಂತಹ ಕೆಲವೊಂದು ಲೋಕ ರೂಢಿಯಾಗಿ ಬಂದ ರಹಸ್ಯಗಳನ್ನು ಹಿರಿಯರು ತಿಳಿಸಿಕೊಟ್ಟಿದ್ದಾರೆ, ಅವು ಹೀಗಿವೆ ನೋಡಿ…

* ಗಂಟಲಲ್ಲಿ ಕೆರೆತ ಬಂದಾಗ ಕಿವಿಗಳನ್ನು ಕೆರೆದುಕೊಂಡರೆ ಅದು ಸರಿ ಹೋಗುತ್ತದೆ, ಗಂಟಲಿನ ಕೆರೆತ ಉಂಟು ಮಾಡಿದ ನರಗಳು ಸಡಿಲಗೊಳ್ಳುವುದರಿಂದ ಈ ಸಮಸ್ಯೆ ಪರಿಹಾರವಾಗುತ್ತದೆ.

* ಯಾರಾದರೂ ಮಾತನಾಡುವಾಗ ಸರಿಯಾಗಿ ಕೇಳಿಸುತ್ತಿಲ್ಲ ಎಂದರೆ ನಿಮ್ಮ ಬಲ ಕಿವಿಯನ್ನು ಕೊಟ್ಟು ಕೇಳಿ, ನೀವೇನಾದರೂ ಸಂಗೀತವನ್ನು ಆಲಿಸುತ್ತಿದ್ದರೆ ಅದು ಸರಿಯಾಗಿ ಕೇಳುತ್ತಿಲ್ಲ ಎಂದರೆ ಎಡ ಕಿವಿ ಕೊಟ್ಟು ಕೇಳಿ. ಬಲ ಭಾಗದ ಕಿವಿಗೆ ಶಬ್ದ ಹಾಗು ವಾಕ್ಯಗಳನ್ನು ಗ್ರಹಿಸುವ ಶಕ್ತಿ ಹೆಚ್ಚಾಗಿದ್ದರೆ, ಎಡಭಾಗದಲ್ಲಿರುವ ಕಿವಿ ಸಂಗೀತ, ಲಯ, ತಾಳ ಇವುಗಳನ್ನು ಚೆನ್ನಾಗಿ ಗುರುತಿಸುತ್ತವೆ.

* ಇಂಜೆಕ್ಷನ್ ಭಯ ಇರುವವರು ಸೂಜಿ ಚುಚ್ಚಿಸಿಕೊಳ್ಳುವಾಗ ಕೆಮ್ಮಿ. ಈ ರೀತಿ ಕೆಮ್ಮುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ ಆಗ ಬೆನ್ನು ಹುರಿಯಲ್ಲಿರುವ ನರಗಳಿಗೆ ಇಂಜೆಕ್ಷನ್ ಚುಚ್ಚಿದ ನೋವು ಗೊತ್ತಾಗುವುದಿಲ್ಲ

* ಮೂಗು ಕಟ್ಟಿದಾಗ ನಾಲಿಗೆಯನ್ನು ನಾಲಿಗೆ ಮೇಲ್ಬಾಗದಲ್ಲಿ ಮುಟ್ಟಿಸಿ, ಮತ್ತು ಎರಡು ಹಬ್ಬಗಳ ಮಧ್ಯ ಪ್ರೆಸ್ ಮಾಡಿ. ಈ ರೀತಿ ಒಂದಾದರ ಮೇಲೆ ಒಂದರಂತೆ ಮಾಡುತ್ತಿದ್ದರೆ ಒಂದು ನಿಮಿಷದ ಒಳಗಡೆ ನಿಮಗೆ ರಿಲಾಕ್ಸ್ ಆದ ಅನುಭವ ಆಗುತ್ತದೆ

* ಮಲಗುವ ಸಮಯದಲ್ಲಿ ಊಟ ಮಾಡಿ ಅದು ಜೀರ್ಣ ಆಗಿಲ್ಲ ಎಂದರೆ ಎಡ ಭಾಗದಲ್ಲಿ ತಿರುಗಿ ಮಲಗಿ, ಆಗ ಹೊಟ್ಟೆಯಲ್ಲಿ ಹೆಚ್ಚು ಆಸಿಡ್ ಉತ್ಪತ್ತಿಯಾಗಿ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.

* ಹಲ್ಲು ನೋವನ್ನು ಕಡಿಮೆ ಮಾಡಲು ಹೆಬ್ಬೆರಳು ಹಾಗೂ ತೋರುಬೆರಳಿನ ಮಧ್ಯೆ ಐಸ್ ಕ್ಯೂಬ್ ನಿಂದ ಉಜ್ಜಿ. ನಿಮಗೆ ಹಲ್ಲು ನೋವು ಹೆಚ್ಚಾಗಿದ್ದಾಗ ತಕ್ಷಣಕ್ಕೆ ಹಲ್ಲಿನ ಡಾಕ್ಟರ್ ಸಿಗದೇ ಇದ್ದರೆ ಅಥವಾ ರಾತ್ರಿ ಹೊತ್ತು ಹಲ್ಲಿನ ನೋವು ಬಂದಾಗ ಈ ರೀತಿ ಮಾಡಿ ನೋವು ಅರ್ಧ ಕಡಿಮೆ ಆಗುತ್ತದೆ.

* ನಿಮ್ಮ ಮೂಗಿನಿಂದ ರಕ್ತ ಬರುತ್ತಿದ್ದರೆ, ಮೂಗು ಹಾಗು ತುಟಿ ಸೇರುವ ಸ್ಥಳದಲ್ಲಿ ಗಟ್ಟಿಯಾಗಿ ಒತ್ತಿ ಹಿಡಿದುಕೊಳ್ಳಿ. ಆಗ ರಕ್ತನಾಳಗಳನ್ನು ತಡೆಗಟ್ಟಿದ ರೀತಿ ಆಗುವುದರಿಂದ ರಕ್ತಸ್ರಾವ ನಿಲ್ಲುತ್ತದೆ
* ಸುಟ್ಟ ಗಾಯಕ್ಕೆ ತಕ್ಷಣವೇ ನೀರನ್ನು ಹಾಕುವುದು ಉತ್ತಮ ಔಷಧಿಯಾಗಿದೆ, ಕೈ ಸುಟ್ಟ ತಕ್ಷಣ ಉಪ್ಪನ್ನು ಸವರುವುದರಿಂದ ಅದು ಬೊಬ್ಬೆ ಬರುವುದಿಲ್ಲ

* ನಿಮಗೆ ತುಂಬಾ ಭಯವಾಗುತ್ತಿದ್ದಾಗ ಹೆಬ್ಬೆಟ್ಟನ್ನು ಒತ್ತಿ ಹಿಡಿದುಕೊಳ್ಳಿ. ಹೀಗೆ ಮಾಡುವುದರಿಂದ ರಕ್ತದ ಒತ್ತಡ ಕಡಿಮೆ ಹಾಕಿ ಭಯ ಹೋಗುತ್ತದೆ.
* ತಣ್ಣಗಿರುವ ಜ್ಯೂಸ್ ಅಥವಾ ಐಸ್ ಕ್ರೀಮ್ ತಿಂದಾಗ ತಲೆ ಹಿಡಿದುಕೊಳ್ಳುತ್ತದೆ. ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಹೀಗಾಗುತ್ತದೆ ಇದನ್ನು ವಾಸಿ ಮಾಡಲು ನಾಲಿಗೆಯಿಂದ ಬಾಯಿಯ ಮೇಲ್ಭಾಗವನ್ನು ಒತ್ತಿಟ್ಟುಕೊಳ್ಳಿ.

* ನಿಮ್ಮ ಕೈಗಳು ಸೋತಿದ್ದರೆ ಕುತ್ತಿಗೆಯನ್ನು ನಿಧಾನವಾಗಿ ಆಡಿಸಿ ಆಗ ಕೈಗಳಿಗೆ ಸಂಪರ್ಕ ಹೊಂದಿರುವ ನರಗಳು ಸಡಿಲವಾಗುವುದರಿಂದ ಸಮಸ್ಯೆ ಸರಿ ಹೋಗುತ್ತದೆ.
* ಬೆಳಗ್ಗೆ ಹಾಸಿಗೆಯಿಂದ ಎದ್ದ ನಂತರ ಮತ್ತೆ ಹಾಸಿಗೆಗೆ ತಲೆ ಕೊಡಬೇಡಿ ಈ ರೀತಿ ಮಾಡುವುದರಿಂದ ರಾತ್ರಿ ಮಲಗಿದ ತಕ್ಷಣ ನಿದ್ರೆ ಬರುತ್ತದೆ

* ಯಾವುದಾದರೂ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರೆ ರಾತ್ರಿ ಮಲಗುವಾಗ ಅದನ್ನು ಯೋಚಿಸಿ. ಬಹಳ ದಿನಗಳವರೆಗೆ ನೆನಪಿನಲ್ಲಿ ಇರುತ್ತದೆ.
* ಓಡುವಾಗ ಎಡಗಾಲು ಮುಂದೆ ಇಟ್ಟಾಗ ಉಸಿರು ಹೊರಗೆ ಬಿಡಬೇಕು ಇದರಿಂದ ಎಡಭಾಗಕ್ಕೆ ನೋವಾಗುವುದಿಲ್ಲ ಹಾಗೂ ಲಿವರ್ ಮೇಲೆ ಒತ್ತಡ ಬೀಳುವುದಿಲ್ಲ. ಈ ತಪ್ಪು ಮಾಡುವುದರಿಂದಲೇ ಅನೇಕರಿಗೆ ನೋವಾಗುತ್ತದೆ.

* ಈಜುವಾಗ ನೀರಿನ ಆಳಕ್ಕೆ ಇಳಿಯಬೇಕು ಎಂದರೆ ಮೊದಲೇ ಚೆನ್ನಾಗಿ ಸ್ವಲ್ಪ ಹೊತ್ತು ಉಸಿರಾಡಿ. ಈ ರೀತಿ ಮಾಡಿ ನೀರಿಗೆ ಇಳಿಯುವುದರಿಂದ ಆಳಕ್ಕೆ ತಲುಪಿದಾಗ ಹೆಚ್ಚು ಹೊತ್ತು ಉಸಿರು ಹಿಡಿದಿಟ್ಟುಕೊಳ್ಳಲು ಸಹಾಯ ಆಗುತ್ತದೆ.

ಈ ಲಕ್ಷಣಗಳು ನಿಮ್ಮಲ್ಲಿ ಇದ್ದರೆ ಲಿವರ್ ಹಾಳಾಗುತ್ತಿದೆ ಎಂದರ್ಥ, ನಿರ್ಲಕ್ಷ್ಯ ಮಾಡಬೇಡಿ.!

 

ಲಿವರ್ ಎನ್ನುವುದು ನಮ್ಮ ದೇಹದ ಒಂದು ಪ್ರಮುಖವಾದ ಅಂಗ. ಜೀರ್ಣಕ್ರಿಯೆ, ರಕ್ತ ಶುದ್ಧಿ ಸೇರಿದಂತೆ ಮಾನವನ ದೇಹದ ಐನೂರಕ್ಕೂ ಹೆಚ್ಚು ಕಾರ್ಯಗಳು ಲಿವರ್ ಜವಾಬ್ದಾರಿ ಆಗಿದೆ. ಇಷ್ಟು ಮುಖ್ಯವಾದ ಈ ಅಂಗದ ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಕೂಡ ಹೌದು.

ಆದರೆ ಈ ವಿಚಾರದಲ್ಲಿ ನಮಗಿರುವ ಒಂದು ವರ ಏನೆಂದರೆ ಲಿವರ್ ಆರೋಗ್ಯ ಹಾದಗೆಟ್ಟಿರುವುದು ಲಕ್ಷಣಗಳ ಮೂಲಕ ತಿಳಿದು ಬಂದರೆ ನಾವು ಅದಕ್ಕೆ ಬೇಕಾದ ಚಿಕಿತ್ಸಾ ಕ್ರಮಗಳನ್ನು ಕೈಗೊಂಡಾಗ ನಮ್ಮಲಿವರ್ ಮೊದಲಿನಂತೆ ಸಂಪೂರ್ಣವಾಗಿ ಗುಣವಾಗಿ ಕಾಯೋನ್ಮುಖವಾಗುತ್ತದೆ.

ಹಾಗಾಗಿ ಲಿವರ್ ಸಮಸ್ಯೆಗಳನ್ನು ಆರಂಭಿಕ ಹಂತಗಳಲ್ಲಿ ಗುರುತಿಸುವುದು ಮುಖ್ಯ ಇಲ್ಲವಾದಲ್ಲಿ ನಂತರ ಇದು ಹೆಪಟೈಟಿಸ್ ಬಿ, ಸೋರಿಯಾಸಿಸ್, ಲಿವರ್ ಫೇಲ್ಯೂರ್ ಹಂತವನ್ನು ಕೂಡ ನಂತರ ತಲುಪಬಹುದು. ಲಿವರ್ ಆರೋಗ್ಯದ ವಿಚಾರದಲ್ಲಿ ನಮ್ಮ ಯಾವ ತಪ್ಪುಗಳಿಂದ ಲಿವರ್ ಆರೋಗ್ಯ ಹಾಳಾಗುತ್ತದೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.

ಅತಿ ಹೆಚ್ಚಾಗಿ ಜಂಕ್ ಫುಡ್, ಫಾಸ್ಟ್ ಫುಡ್ ಗಳ ಸೇವನೆ ಮಾಡುವುದು ಮತ್ತು ಅತಿ ಹೆಚ್ಚು ಸಕ್ಕರೆಯ ಅಂಶಗಳನ್ನು ಸೇವನೆ ಮಾಡುವುದು, ಮಧ್ಯಪಾನದ ಧೂಮಪಾನದ ಅತಿಯಾದ ಚಟಗಳು ನಮ್ಮಲಿವರ್ ಆರೋಗ್ಯವನ್ನು ಹಾಳು ಮಾಡುತ್ತವೆ. ಈ ರೀತಿ ಲಿವರ್ ಹಾಳಾದ ತಕ್ಷಣವೇ ಕೆಲ ಲಕ್ಷಣಗಳನ್ನು ಕಾಣಿಸಿಕೊಳ್ಳುತ್ತವೆ.

ಇವುಗಳಲ್ಲಿ ಮುಖ್ಯವಾಗಿ ಕೆಲವರಿಗೆ ಜಾಂಡೀಸ್ ಬರುತ್ತದೆ, ಕಣ್ಣು ಹಳದಿಯಾಗುವುದು ಚರ್ಮ ಹಳದಿ ಆಗುವುದು ಇದು ಲಿವರ್ ಹಾಳಾಗಿರುವ ಲಕ್ಷಣ ಆಗಿದೆ. ಹೆಪಟೈಟಿಸ್ ಇನ್ಫೆಕ್ಷನ್ ಆಗಿದೆ ಎಂದರೆ ಲಿವರ್ಗೂ ಕೂಡ ಕೆಲ ವೈರಸ್ ಇನ್ಫೆಕ್ಷನ್ ಆಗಿರಬಹುದು. ಆಗ ವೈದ್ಯರು ಅದನ್ನು ಚೆಕ್ ಮಾಡಿ ನೋಡಿ ಧೃಡೀಕರಿಸುತ್ತಾರೆ. ಕೆಲವರಿಗೆ ಮೂತ್ರದ ಬಣ್ಣವೂ ಕೂಡ ಗಾಢವಾಗಿರುತ್ತದೆ, ಇದು ಕೂಡ ಲಿವರ್ ಹಾಳಾಗಿರುವ ಲಕ್ಷಣವಾಗಿದೆ.

ದಿನಪೂರ್ತಿ ಸುಸ್ತಾಗಿರುವುದು, ಎಷ್ಟು ನಿದ್ದೆ ಮಾಡಿದರು ಕೂಡ ಮೈಂಡ್ ಫ್ರೆಶ್ ಆಗದೆ ಇರುವುದು, ಕೆಲಸ ಮಾಡಲು ಮನಸ್ಸಿಲ್ಲದೆ ಇರುವುದು, ಯಾವಾಗಲೂ ಮಲಗಿರಬೇಕು ಎನಿಸುವುದು ಕೂಡ ಲಿವರ್ ಸರಿಯಾಗಿ ಕಾರ್ಯ ನಿರ್ವಹಿಸದೆ ಇರುವ ಕಾರಣದಿಂದ ಕಾಣಿಸಿಕೊಳ್ಳುವ ಲಕ್ಷಣಗಳಾಗಿವೆ ಸಾಮಾನ್ಯವಾಗಿ ಸುಸ್ತಾದಾಗ ಈ ರೀತಿ ಆದರೆ ರೆಸ್ಟ್ ತೆಗೆದುಕೊಂಡಾಗ ಹುಷಾರಾಗುತ್ತಾರೆ.

ಆದರೆ ಲಿವರ್ ಹಾಳಾಗಿದ್ದರೆ ಅವರು ಯಾವಾಗಲೂ ಮಂಕಾಗಿರುತ್ತಾರೆ. ಉಗುರುಗಳು ಓದಿಕೊಂಡಿರುತ್ತದೆ, ಅವುಗಳ ಶೇಪ್ ಬದಲಾಗಿರುತ್ತದೆ. ಕಣ್ಣ ರೆಪ್ಪೆಗಳ ಸುತ್ತ ಫ್ಯಾಟ್ ಶೇಖರಣೆಯಾಗಿ ಗಂಟು ಗಂಟುಗಳಾಗುತ್ತವೆ ಮತ್ತು ಚರ್ಮದ ಮೇಲೆ ಬಿಳಿ ಬಣ್ಣದ ಪ್ಯಾಚಸ್ ಗಳು ಕೂಡ ಉಂಟಾಗುತ್ತದೆ.

ಕೆಲವೊಮ್ಮೆ ರಕ್ತನಾಳಗಳು ಜೇಡರ ಬಳೆ ರೀತಿ ಚರ್ಮದ ಕೆಳಗೆ ಕಟ್ಟಿಕೊಂಡಿರುತ್ತದೆ ಇದು ಕೂಡ ಲಿವರ್ ಹಾಳಾಗಿದೆ ಎನ್ನುವುದನ್ನು ತೋರಿಸುವ ಲಕ್ಷಣವಾಗಿದೆ. ಇವುಗಳಲ್ಲಿ ಕೆಲವು ಲಕ್ಷಣಗಳು ಬೇರೆ ಕಾಯಿಲೆ ಕಾರಣದಿಂದ ಕೂಡ ಕಾಣಿಸಿಕೊಂಡಿರಬಹುದು ಆದರೆ ಲಿವರ್ ಹಾಳಾಗಿರುವ ಲಕ್ಷಣ ಕೂಡ ಆಗಿರುವುದರಿಂದ ಇವುಗಳ ಬಗ್ಗೆ ವೈದ್ಯರಿಗೆ ತಿಳಿಸಿ ಪರೀಕ್ಷೆಗೆ ಒಳಪಟ್ಟಾಗ ಪರಿಸ್ಥಿತಿ ತಿಳಿಯುತ್ತದೆ.

ಕೆಲವರಿಗೆ ಕಾಲಿನ ಕೆಳಗಡೆ ರಕ್ತ ಸಂಚಾರಗಳು ಕಡಿಮೆ ಆಗಿ ರಕ್ತನಾಳಗಳು ಊದುಕೊಂಡು ನೋವುಂಟು ಮಾಡುವ ಪರಿಣಾಮ ಉಂಟಾಗಿರಬಹುದು. ಲಿವರ್ ಹಾಳಾದಾಗ ನಮ್ಮ ಡೈಜೆಸ್ಟಿವ್ ಸಿಸ್ಟಮ್ ಕೂಡ ಕೆಡು ತ್ತದೆ ಆಗ ನಮಗೆ ಹಸಿವು ಆಗದೇ ಇರುವುದು ಅಥವಾ ಊಟ ನೋಡಿದರೆ ವಾಂತಿ ಬಂದ ರೀತಿ ಆಗುವುದು ಹೀಗಾಗುತ್ತದೆ.

ಇದಕ್ಕೆ ಕಾರಣ ನಮ್ಮ ದೇಹವನ್ನು ಡಿ ಟಾಕ್ಸಿನ್ ಮಾಡುವ ಲಿವರ್ ಹಾಳಾಗಿರುವುದು ನಮ್ಮ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಪದೇಪದೇ ಆರೋಗ್ಯ ಹದಗೆಡುತ್ತಿದ್ದರೆ ಅದು ಕೂಡ ಲಿವರ್ ಕೆಟ್ಟಿರುವ ಲಕ್ಷಣ ಆಗಿರುತ್ತದೆ. ಹಾಗಾಗಿ ಇದರಲ್ಲಿ ಒಂದಕ್ಕಿಂತ ಹೆಚ್ಚು ಲಕ್ಷಣಗಳು ದೀರ್ಘಕಾಲದಿಂದ ಕಾಡುತ್ತಿದ್ದರೆ ತಪ್ಪದೆ ಒಮ್ಮೆ ವೈದ್ಯರ ಬಳಿ ಹೋಗಿ ಅವುಗಳ ತಿಳಿಸಿ ಪರೀಕ್ಷೆಗೆ ಒಳಪಟ್ಟು ಆರಂಭಿಕ ಹಂತಗಳಲ್ಲಿ ಗುರ್ತಿಸಿಕೊಂಡು ಗುಣಪಡಿಸಿಕೊಳ್ಳಿ.

ಧನುರ್ಮಾಸದ 30 ದಿನಗಳಲ್ಲಿ ಸರಳವಾಗಿ ಒಂದೇ ಒಂದು ದಿನವಾದರೂ ಇದನ್ನು ಮಾಡಿ.! ನಿಮ್ಮ ಇಚ್ಚೆ ಈಡೇರುತ್ತದೆ.!

 

ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ಆರಂಭವಾಗಿ ಜನವರಿ ತಿಂಗಳಲ್ಲಿ ಬರುವ ಸಂಕ್ರಾಂತಿವರೆಗೂ ಕೂಡ ನಮ್ಮ ಹಿಂದೂ ಸಂಪ್ರದಾಯದಲ್ಲಿ ಧನುರ್ ಮಾಸ ಎಂದು ಆಚರಿಸುತ್ತೇವೆ. ಕೆಲವು ಕಡೆ ಶೂನ್ಯಮಾಸ ಎನ್ನುತ್ತಾರೆ ಈ ಮಾಸವು ದೇವರ ಪೂಜೆ ಮಾಡಿಸುವುದಕ್ಕೆ ಹೇಳಿ ಮಾಡಿಸಿದ ಮಾಸವಾಗಿದೆ ಧನುರ್ಮಾಸ ವ್ರತವನ್ನು ಆಚರಿಸುವವರು ಇದ್ದಾರೆ ಇವರು ಈ ತಿಂಗಳು ಪೂರ್ತಿ ಇದನ್ನು ಆಚರಿಸುತ್ತಾರೆ.

ಧನುರ್ಮಾಸ ವ್ರತವನ್ನು ಆಚರಿಸುವುದರಿಂದ ಜೀವನದ ಬಹುತೇಕ ಕ’ಷ್ಟಗಳು ನಿವಾರಣೆ ಆಗುತ್ತದೆ ಈ ವ್ರತವನ್ನು ಯಾವ ರೀತಿ ಆಚರಣೆ ಮಾಡಬೇಕು, ಒಂದು ತಿಂಗಳು ಪೂರ್ತಿ ಆಚರಿಸಲು ಅನುಕೂಲತೆ ಇಲ್ಲದವರು ಎಷ್ಟು ದಿನ ಆಚರಿಸಿದರೆ ಫಲ ಸಿಗುತ್ತದೆ ಮತ್ತು ಇದನ್ನು ಹೇಗೆ ಆಚರಿಸುವುದು ಮತ್ತು ಯಾವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.

ಸಾಮಾನ್ಯವಾಗಿ ಮನುಷ್ಯನು ವರ್ಷದ 365 ದಿನವೂ ಕೂಡ ಬಹಳ ಬಿಝೀ ಎನ್ನುತ್ತಾನೆ. ದಿನದ 24 ಗಂಟೆಯೂ ಕೂಡ ಅವನಿಗೆ ಬಿಡುವಿಲ್ಲ. ಆದರೆ ಅಸಲಿಗೆ ಪರೀಕ್ಷಿಸಿದರೆ ಯಾವುದೇ ವಿಷಯದಲ್ಲಿ ಮನಸಿದ್ದರೆ ಖಂಡಿತವಾಗಿಯೂ ಬಿಡುವು ಮಾಡಿಕೊಳ್ಳುತ್ತಾನೆ.

ಈ ರೀತಿ ಪ್ರತಿದಿನವೂ ಕೂಡ ನಮಗೆ ಬದುಕಲು ಹೊಸ ದಿನವನ್ನು ಕೊಟ್ಟ ಭಗವಂತನನ್ನು ಸ್ಮರಿಸಲು ದಿನದ ಅಲ್ಪಕಾಲ ತೆಗೆದಿಡಬೇಕು ಹಾಗೆ ವರ್ಷದ ಒಂದು ತಿಂಗಳಾದರೂ ಸಂಪೂರ್ಣವಾಗಿ ಭಗವಂತನ ಧ್ಯಾನದಲ್ಲಿ ಇದ್ದು ಭಗವಂತನ ಸೇವೆ ಧ್ಯಾನ ಮಾಡುತ್ತಾ ಧನ್ಯವಾದ ಅರ್ಪಿಸುವುದು ಬಹಳ ಒಳ್ಳೆಯ ಅಭ್ಯಾಸ.

ಇದಲ್ಲದೆ ಜೀವನದ ಯಾವುದೇ ಕ’ಷ್ಟ ಇದ್ದರೂ ಕೂಡ ಪರಿಹಾರಕ್ಕಾಗಿ ಕೂಡ ಭಗವಂತನನ್ನು ಸ್ಮರಿಸಿ ಈ ವ್ರತ ಮಾಡಬಹುದು. ಈ ರೀತಿ ಮಾಡುವುದಕ್ಕೆ ವರ್ಷದಲ್ಲಿ ಹಲವು ಮಾಸಗಳು ಇದ್ದು ಅವುಗಳಲ್ಲಿ ಧನುರ್ಮಾಸ ಎನ್ನುವುದು ದೇವತೆಗಳನ್ನು ಆರಾಧಿಸುವುದಕ್ಕಾಗಿಯೇ ಇರುವ ಪವಿತ್ರ ಮಾಸ ಎನಿಸಿದೆ. ಈ ಸಮಯದಲ್ಲಿ ಮಾಡುವ ಪೂಜೆಗೆ ಫಲ ಹೆಚ್ಚು.

ಹೆಚ್ಚಾಗಿ ಈ ಸಮಯದಲ್ಲಿ ಶಿವನನ್ನು ಕುರಿತು ವ್ರತ ಮಾಡುತ್ತಾರೆ. ಶಿವ ಮಾತ್ರವಲ್ಲದೆ ಆದಿಶಕ್ತಿ ಪಾರ್ವತಿ, ಲಕ್ಷ್ಮೀನಾರಾಯಣ ಇತ್ಯಾದಿ ನಿಮ್ಮ ಯಾವುದೇ ಇಷ್ಟದೈವವಿದ್ದರೂ ಅವರಿಗಾಗಿ ಕೂಡ ಮಾಡಬಹುದು. ಕೆಲವರು ಇದೇ ಮಾಸದಲ್ಲಿ ಮಾಲೆ ಹಾಕುವುದಕ್ಕಾಗಿ ಕೂಡ ಕಾಯುತ್ತಿರುತ್ತಾರೆ.

ಈ ಒಂದು ಮಾಸದಲ್ಲಿ ವಿಶೇಷವಾಗಿ ಧನುರ್ಮಾಸ ವ್ರತ ಆಚರಿಸುವುದರಿಂದ ನಿಮಗೆ ವ್ಯಾಪಾರ ವ್ಯವಹಾರದಲ್ಲಿ ತೊಡಕುಗಳು ಉಂಟಾಗಿದ್ದರೆ ನಿವಾರಣೆಯಾಗಿ ಅದರಲ್ಲಿ ಯಶಸ್ಸು ಕಾಣುತ್ತೀರಿ. ವಿವಾಹ ಯೋಗ ವಿಳಂಬವಾಗುತ್ತಿರುವವರು ಮತ್ತು ಮದುವೆ ಆಗಿ ಮಕ್ಕಳಿರದ ದಂಪತಿಗಳು ವ್ರತ ಆಚರಿಸುತ್ತಾರೆ.

ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಹೆಚ್ಚಿಸಿಕೊಳ್ಳಲು ಮಕ್ಕಳು ಕೂಡ ಈ ವ್ರತವನ್ನು ಮಾಡುತ್ತಾರೆ. ಆರೋಗ್ಯಕ್ಕಾಗಿ, ಹಣಕಾಸು ಅಭಿವೃದ್ಧಿಗಾಗಿ, ಮನಶಾಂತಿಗಾಗಿ ಮತ್ತು ಪುಣ್ಯ ಸಂಪಾದನೆ ಮಾಡುವ ಕಾರಣಕ್ಕಾಗಿ ಆಚರಣೆ ಮಾಡಬೇಕು.

ಆದರೆ ಒಂದು ತಿಂಗಳು ಪೂರ್ತಿ ಈ ರೀತಿ ಮಾಡಲು ಖಂಡಿತವಾಗಿಯೂ ಸಾಧ್ಯವಾಗುತ್ತಿಲ್ಲ ಎನ್ನುವವರು ಒಂದು ತಿಂಗಳ ಮಾಡಲು ಆಗದೆ ಇದ್ದರೆ 16 ದಿನ ಅಥವಾ 9 ದಿನ ಅಥವಾ 5 ದಿನ ಕಡೆ ಪಕ್ಷ ಒಂದು ದಿನ ಆದರೂ ಬಹಳ ನಂಬಿಕೆಯಿಂದ ಪ್ರಾಮಾಣಿಕತೆಯಿಂದ ಸಂಪೂರ್ಣವಾಗಿ ನಿಷ್ಠೆಯಿಂದ ಈ ವ್ರತ ಮಾಡಿ.

ಇದನ್ನು ಮಾಡುವುದು ಬಹಳ ಸುಲಭ, ಬೆಳಗ್ಗೆ ಕಡ್ಡಾಯವಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು ಎದ್ದು ತಣ್ಣೀರಿನಿಂದ ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಬೇಕು, ಅಲ್ಲಿ ಕುಳಿತು ನಿಮ್ಮ ಇಷ್ಟ ದೈವದ ಅಥವಾ ಕುಲದೇವರ ಸ್ತೋತ್ರಗಳನ್ನು ಮಂತ್ರಗಳನ್ನು ಅಷ್ಟೋತ್ತರಗಳನ್ನು ಪಠಿಸುತ್ತಾ ಭಗವಂತನನ್ನು ಧ್ಯಾನಿಸಬೇಕು ಮತ್ತು ಅಶ್ವತ್ಥರಳಿ ಮರದ ಕಟ್ಟೆಯಲ್ಲಿ 9 ಅಥವಾ 12 ಪ್ರದಕ್ಷಿಣೆ ಹಾಕಿ ನಿಮ್ಮ ಇಷ್ಟಾರ್ಥಗಳ ಬಗ್ಗೆ ಕೇಳಿಕೊಳ್ಳಬೇಕು.

ಸಾಧ್ಯವಾದರೆ ದಿನ ಪೂರ್ತಿ ಉಪವಾಸ ಮಾಡಬಹುದು, ಈ ಆಚರಣೆ ಮಾಡುವಾಗ ಮಡಿಯಾಗಿರಬೇಕಾದ್ದು ಮುಖ್ಯ. ಇದು ಬಹಳ ಸರಳವಾಗಿರುವುದರಿಂದ ಪ್ರತಿಯೊಬ್ಬರೂ ಕೂಡ ಆಚರಿಸಬಹುದು. ತಪ್ಪದೇ ಸಾಧ್ಯವಾದಷ್ಟು ದಿನ ಇದನ್ನು ಮಾಡಿ.

ಪುರುಷರಿಗಾಗಿ ಮುಖ್ಯ 10 ಸಲಹೆಗಳು, ಬದುಕನ್ನು ಬದಲಾಯಿಸುವ ಬದಲಾವಣೆಗಳಿವು.!

 

ಈಗಿನ ಕಾಲದಲ್ಲಿ ಅನೇಕರು ಹಲವು ಕಾಲಗಳು ಒಟ್ಟಿಗೆ ಇದ್ದು ಮದುವೆ ಹಂತಕ್ಕೆ ಬಂದಾಗ ಪ್ರೀತಿಸಿದ ಹುಡುಗಿ ಬಿಟ್ಟು ಹೋದಳು ಎಂದು ಅಥವಾ ಮದುವೆಯಾದ ಸ್ವಲ್ಪ ದಿನದಲ್ಲಿ ಹೊಂದಾಣಿಕೆ ಇಲ್ವದೇ ಹೆಂಡತಿ ಬಿಟ್ಟು ಹೋದಳು ಎನ್ನುವುದು ಅನೇಕ ಗಂಡಸರ ದೂರಾಗಿದೆ. ಕೆಲವರು ಇದನ್ನು ಸ್ವತಃ ತಾವೇ ಅನುಭವಿಸಿ ನೋವಿನಲ್ಲಿದ್ದರೆ. ಇನ್ನೂ ಕೆಲವರು ತಮ್ಮ ಸ್ನೇಹಿತರು ಹಾಗೂ ಸಹೋದರರಿಗೆ ಈ ರೀತಿ ಆಗಿದ್ದನ್ನು ನೋಡಿ ಪ್ರೀತಿ ಹಾಗೂ ಸಂಬಂಧಗಳ ಮೇಲೆ ನಂಬಿಕೆ ಕಳೆದುಕೊಂಡಿರುತ್ತಾರೆ.

ಆದರೆ ಎಲ್ಲಾ ಹೆಣ್ಣು ಮಕ್ಕಳು ಕೆಟ್ಟವರಲ್ಲ ಹಾಗೆ ಎಲ್ಲಾ ಪುರುಷರು ಕೂಡ ಒಳ್ಳೆಯವರಲ್ಲ ನಿಮ್ಮಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ನಿಮ್ಮ ಹುಡುಗಿ ಎಂದು ನಿಮ್ಮನ್ನು ಬಿಟ್ಟು ಹೋಗಲಾರಳು. ಸಾಧ್ಯವಾದರೆ ಈ ಒಂದು ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ರೂಪಿಸಿಕೊಳ್ಳಿ ಹೇಗೆ ಬೇಡ ಎಂದು ಹೋದವರು ಕೂಡ ವಾಪಸ್ ಬರುತ್ತಾರೆ ನೀವೇ ನೋಡಿ.

1. ಜೀವನವನ್ನು ಆಸ್ಪಾದಿಸುವುದಕ್ಕೆ ದುಡ್ಡು ಒಂದೇ ಮುಖ್ಯ ಅಲ್ಲ ನಮ್ಮ ವ್ಯಕ್ತಿತ್ವವನ್ನು ನಾವು ಸರಿಯಾಗಿ ರೂಪಿಸಿಕೊಂಡರೆ ಹಣ ಗೌರವ ಎಲ್ಲವೂ ಕೂಡ ನಮ್ಮನೆ ಹುಡುಕಿಕೊಂಡು ಬರುತ್ತದೆ. ಹಾಗಾಗಿ ಇಂತಹ ವ್ಯಕ್ತಿತ್ವವನ್ನು ನಾವು ರೂಢಿಸಿಕೊಳ್ಳಬೇಕು. ಇದು ಕೇವಲ ಹೊರಗಿನಿಂದ ತೋರಿಕೆಗಾಗಿ ಮಾತ್ರ ಇಲ್ಲದೆ ನಮ್ಮ ಆನಂದಕ್ಕಾಗಿ ಮನಸ್ಸಿನ ಒಳಗಿನಿಂದ ಕೆಲವು ಬದಲಾವಣೆಗಳನ್ನು ನಾವು ಮಾಡಿಕೊಳ್ಳಬೇಕು.

2. ಅದರಲ್ಲಿ ಮುಖ್ಯವಾಗಿ ನೀವು ದೇಹದ ಸೌಂದರ್ಯ ಹಾಗೂ ಆರೋಗ್ಯಕ್ಕೆ ಕಾಳಜಿ ಮಾಡಿ. ಅದಕ್ಕಾಗಿ ವ್ಯಾಯಾಮಕ್ಕೆ ಸಮಯ ಕೊಡಿ. ಗಂಡು ಮಕ್ಕಳು ಗಟ್ಟಿಮುಟ್ಟಾಗಿ ಮೈಕಟ್ಟು ಚೆನ್ನಾಗಿ ಇದ್ದರೆ ಸಹಜವಾಗಿ ಎಲ್ಲರೂ ಆಕರ್ಷಿತರಾಗುತ್ತಾರೆ.
3. ಹಣಕಾಸಿನ ತೊಂದರೆ ನಿಮ್ಮ ಜೀವನದಲ್ಲಿ ಕಾಡಬಾರದು ಎಂದರೆ ಯಾವ ಪರ್ಸನಲ್ ವಿಚಾರವು ನಿಮ್ಮ ವೃತ್ತಿ ಜೀವನವನ್ನು ಕೆಡಿಸಬಾರದು.

4. ನೀವು ಯಾವುದೇ ಉದ್ಯೋಗ ಮಾಡುತ್ತಿದ್ದರು ಅಥವಾ ವ್ಯವಹಾರ ಮಾಡುತ್ತಿದ್ದರು ಅದು ಒಂದಕ್ಕೆ ಮೀಸಲಾಗಬೇಡಿ ನಿಮಗೆ ಒಂದಕ್ಕಿಂತ ಹೆಚ್ಚಿನ ಹಣಕಾಸಿನ ಮೂಲಗಳು ಇರಬೇಕು. ಇದರಿಂದ ಜೀವನದಲ್ಲಿ ಕೆಲಸ ಕಡಿಮೆಯಾಗಿ ಆದಾಯ ಹೆಚ್ಚಾಗುತ್ತದೆ ಆ ಮೂಲಕ ನೀವು ನಿಮ್ಮ ಜೀವನವನ್ನು ಉತ್ತಮ ಮಟ್ಟದಲ್ಲಿ ಇಟ್ಟುಕೊಳ್ಳಬಹುದು ಹಾಗಾಗಿ ದುಡಿಯುವ ಸಮಯದಲ್ಲಿಯೇ ಕೆಲವು ಕಡೆ ಹೂಡಿಕೆ ಮಾಡಿ ಆದಷ್ಟು ಬೇಗ ರಿಟರ್ನ್ಸ್ ಬರುವಂತೆ ಪ್ಲಾನ್ ಮಾಡಿ.

5. ಜೀವನದಲ್ಲಿ ಯಾವಾಗಲೂ ನೋ’ವಿನಲ್ಲಿರುವ ಅಥವಾ ಹೆಣ್ಣು ಮಕ್ಕಳ ರೀತಿ ಸದಾ ನೊಂದುಕೊಂಡು ಕ’ಣ್ಣೀ’ರಿಡುವ ಪುರುಷರ ಕಡೆ ಹೆಣ್ಣು ಮಕ್ಕಳು ತಿರುಗಿ ಸಹ ನೋಡುವುದಿಲ್ಲ. ಹಾಗಾಗಿ ನಿಮಗೆ ಎಷ್ಟೇ ನೋವಿದ್ದರೂ ಅದನ್ನು ಮನಸ್ಸಿನ ಒಳಗೆ ಇಟ್ಟುಕೊಂಡು ಹೊರಗಿನ ಪ್ರಪಂಚಕ್ಕೆ ಏನು ಆಗಿಲ್ಲ ಎನ್ನುವಂತೆ ಸ್ಟ್ರಾಂಗ್ ಆಗಿ ಇರಿ. ನಿಮ್ಮ ಭಾವನೆಗಳನ್ನು ಎಲ್ಲರೆದುರು ತೋಡಿಕೊಳ್ಳಬೇಡಿ.

6. ಒಂದು ವೇಳೆ ನಿಮಗೆ ಆ ರೀತಿ ಸಹಿಸಲಾಗದ ನೋ’ವು ಇದೆ ಎಂದರೆ ಆ ನೋ’ವ’ನ್ನು ಮರೆಯಲು ಕುಡಿತದ ದಾಸರಾಗುವ ಬದಲು ನೀವು ಯಾವುದಾದರೂ ಹೊಸದನ್ನು ಕಲಿಯಲು ಆರಂಭಿಸಿ. ಓದುವ ಅಭ್ಯಾಸ ಅಥವಾ ನಿಮಗಿರುವ ಯಾವುದು ಕಲೆಯನ್ನು ಇನ್ನಷ್ಟು ಎತ್ತರ ಮಟ್ಟಕ್ಕೆ ತೆಗೆದುಕೊಂಡು ಹೋಗುವಂತಹ ತರಬೇತಿಗಳು ಇವುಗಳಿಗೆ ಸ್ವಲ್ಪ ಸಮಯ ಮೀಸಲಿಟ್ಟು ಬಿಸಿಯಾಗಿ.

7. ಜೀವನದಲ್ಲಿ ಯಾರೇ ಬಂದರೂ ಯಾರೇ ಹೋದರು ತಂದೆ ತಾಯಿ ಹಾಗೂ ಕುಟುಂಬ ಮೊದಲು ಎನ್ನುವುದನ್ನು ಎಂದಿಗೂ ಮರೆಯಬೇಡಿ. ಯಾರ ಕಾರಣಕ್ಕಾಗಿಯೂ ಕೂಡ ನಿಮ್ಮ ಪೋಷಕರನ್ನು ನೋಯಿಸಬೇಡಿ. ಈ ರೀತಿ ಕುಟುಂಬಕ್ಕೆ ಹೆಚ್ಚಿನ ಮಹತ್ವ ಕೊಡುವವರ ಕಡೆ ಒಳ್ಳೆ ಮನಸ್ಸಿರುವವರು ಖಂಡಿತ ಬರುತ್ತಾರೆ

8. ಧೂಮಪಾನ ಮಾಡುವುದು, ಮಧ್ಯಪಾನ ಮಾಡುವುದು ಅವನ್ಯವಶಕವಾಗಿ ಹಣವನ್ನು ದುಂದು ವೆಚ್ಚ ಮಾಡುವುದು, ಅಶ್ಲೀಲ ಚಿತ್ರಗಳನ್ನು ನೋಡುವುದು ಇತ್ಯಾದಿ ವಿಚಾರಗಳಿಂದ ನೀವು ಎಷ್ಟು ದೂರ ಇರುತ್ತೀರೋ ನಿಮ್ಮ ಆರೋಗ್ಯ ಅಷ್ಟು ವೃದ್ಧಿಸುತ್ತದೆ ಹಾಗೂ ನಿಮ್ಮ ಸುತ್ತಲಿರುವ ಪ್ರಭೆ ಅಷ್ಟು ಸಕಾರಾತ್ಮಕವಾಗಿರುತ್ತದೆ. ಈ ರೀತಿ ನಿಮ್ಮ ಔರ ಸುಂದರವಾಗಿ ಸೃಷ್ಟಿಕೊಂಡರೆ ಎಲ್ಲರೂ ನಿಮ್ಮತ್ತ ಆಕರ್ಷಿತರಾಗುತ್ತಾರೆ ಹಾಗೂ ಗೌರವಿಸುತ್ತಾರೆ.

9. ನಿಮ್ಮನ್ನು ಯಾವುದೇ ಹುಡುಗಿ ಬಿಟ್ಟು ಹೋದರು ಆಕೆಯ ಬಗ್ಗೆ ಎಲ್ಲೂ ಕೆಟ್ಟದಾಗಿ ಹೇಳಿಕೊಂಡು ತಿರುಗಬೇಡಿ, ಇದು ನಿಮಗೆ ಹೆಣ್ಣು ಮಕ್ಕಳ ಮೇಲೆ ಎಷ್ಟು ಗೌರವ ಇದೆ ಎನ್ನುವುದನ್ನು ತೋರಿಸಿ ಬಿಡುತ್ತದೆ. ಹಾಗಾಗಿ ಅವರ ತಪ್ಪು ಅವರಿಗೆ ಅರ್ಥವಾಗಲು ಬಿಟ್ಟುಬಿಡಿ ಅಥವಾ ತಪ್ಪೇ ಮಾಡಿದರೆ ಅವರೇ ಶಿ’ಕ್ಷೆ ಪಡುತ್ತಾರೆ ನೀವು ಆಗಿದ್ದನ್ನು ಕೆಟ್ಟ ಕನಸು ಎಂದು ಮರೆತು ಮುಂದಿನ ಜೀವನದ ಬಗ್ಗೆ ನೋಡಿ.

10. ಜೀವನದಲ್ಲಿ ನಿಜವಾಗಿಯೂ ಮೋ’ಸ ಹೋಗಿದ್ದರೆ ಬದುಕನ್ನು ಬದಲಾಯಿಸಿಕೊಂಡು ಮತ್ತೊಮ್ಮೆ ಮೈ ಕೊಡವಿ ಏಳುವುದಕ್ಕೆ ಅದಕ್ಕಿಂತ ಮತ್ತೊಂದು ಅವಕಾಶ ಸಿಗುವುದಿಲ್ಲ ಹಾಗಾಗಿ ಅದೇ ಛಲದಿಂದ ಜೀವನದಲ್ಲಿ ಸಾಧನೆ ಮಾಡಲು ‌ ಮುನ್ನುಗ್ಗಿ ನಿಮ್ಮ ಸಾಧನೆ ನೋಡಿ ಅವರೇ ಮರಳಿ ಬರುತ್ತಾರೆ ನಂತರ ಅವರನ್ನು ಸ್ವೀಕರಿಸುವುದು ಬಿಡುವುದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು.

ಈ 5 ರಾಶಿಯವರಿಗೆ ಶ್ರೀಮಂತರನ್ನು ಮದುವೆಯಾಗುವ ಯೋಗವಿದೆ.! ಆ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡಿ.!

 

ಶ್ರೀಮಂತಿಕೆ ಎನ್ನುವುದು ಇಡೀ ಪ್ರಪಂಚವನ್ನೇ ತನ್ನತ್ತ ಸೆಳೆದು ಬಿಡುವ ಒಂದು ಶಬ್ದ. ಜೀವನದಲ್ಲಿ ಬಹುತೇಕ ಘಟ್ಟಗಳಲ್ಲಿ ಬದುಕು ತಿರುವು ತೆಗೆದುಕೊಂಡು ನಮಗೆ ಶ್ರೀಮಂತರಾಗುವ ಅದೃಷ್ಟವನ್ನು ಸುರಿಯುತ್ತದೆ ಕೆಲವರು ಶ್ರೀಮಂತ ಮನೆಯಲ್ಲಿ ಹುಟ್ಟುವ ಯೋಗ ಕೇಳಿಕೊಂಡು ಬಂದಿದ್ದರೆ.

ಕೆಲವರಿಗೆ ತಾವು ಆರಿಸಿಕೊಳ್ಳುವ ವ್ಯಕ್ತಿಯ ಕಾರಣದಿಂದಾಗಿ ಅಪಾರವಾದ ಐಶ್ವರ್ಯ ಲಭಿಸುತ್ತದೆ ಮತ್ತು ಕೆಲವರು ಮಕ್ಕಳ ಕಾರಣದಿಂದಾಗಿ ಜೀವನದ ಕೊನೆಯ ಸಮಯದಲ್ಲಿ ಶ್ರೀಮಂತಿಕೆ ಪಡೆದರೆ ಕೆಲವರಿಗೆ ಮದುವೆ ಎನ್ನುವ ಅದೃಷ್ಟವೂ ಶ್ರೀಮಂತರನ್ನು ಕೈ ಹಿಡಿಯುವ ರೀತಿ ಮಾಡುತ್ತದೆ

ಈ ರೀತಿ ಅದೃಷ್ಟ ಐದು ರಾಶಿಯವರಿಗೆ ಯಾವಾಗಲೂ ಇರುತ್ತದೆ ಈ ಐದು ರಾಶಿಯವರಿಗೆ ಶ್ರೀಮಂತರನ್ನು ಮದುವೆಯಾಗುವ ಯೋಗ ಇದ್ದು ಯಾವ ರಾಶಿಯವರು ಈ ರೀತಿ ಅದೃಷ್ಟ ಹೊಂದಿದ್ದಾರೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

1. ಮೇಷ ರಾಶಿ:- ಮೇಷ ರಾಶಿ ಎಂದರೆ ಅದು ಸೆಲ್ಫ್ ಕಾನ್ಫಿಡೆನ್ಸ್ ಗೆ ಹೆಸರುವಾಸಿ ಇವರು ತುಂಬಾ ಬೋರ್ಡ್ ಅಂಡ್ ಸ್ಟ್ರೈಟ್ ಫಾರ್ವರ್ಡ್ ಆಗಿರುತ್ತಾರೆ. ಇವರ ಈ ಗುಣ ಇವರನ್ನು ಬಹಳ ಪ್ರಬುದ್ಧರನ್ನಾಗಿ ಬಿಂಬಿಸುತ್ತದೆ. ಹಾಗಾಗಿ ಇಂತಹ ವ್ಯಕ್ತಿತ್ವ ಇರುವ ಜನರ ಕಡೆಗೆ ಸಹಜವಾಗಿ ಶ್ರೀಮಂತರು ನೋಡುತ್ತಾರೆ.

ಮೇಷ ರಾಶಿಯಲ್ಲಿ ಹುಟ್ಟಿದವರಿಗೆ ಅವರು ಬಡ ಕುಟುಂಬದಲ್ಲಿ ಹುಟ್ಟಿದರೂ ಅಥವಾ ಮಧ್ಯಮ ವರ್ಗದಲ್ಲಿ ಹುಟ್ಟಿದ್ದರೂ ಶ್ರೀಮಂತರ ಸಂಪರ್ಕಗಳು ಇರುವುದರಿಂದ ಇವರು ಮದುವೆ ವಿಷಯ ಬಂದಾಗ ಶ್ರೀಮಂತರನ್ನು ಮದುವೆಯಾಗಲು ಆರಿಸಿಕೊಳ್ಳುವ ಆಪ್ಷನ್ ಸಿಗುತ್ತದೆ ಅಥವಾ ಶ್ರೀಮಂತರೇ ಇವರಿಗೆ ಮದುವೆಯ ಪ್ರೊಪೋಸರ್ ಇಡುತ್ತಾರೆ.

2. ಸಿಂಹ ರಾಶಿ:- ಸಿಂಹ ರಾಶಿಯವರು 10 ಜನರ ಮಧ್ಯೆ ಎದ್ದು ಕಾಣುವ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಈ ಗುಣ ಸಹಜವಾಗಿ ಶ್ರೀಮಂತರನ್ನು ಆಕರ್ಷಿಸುತ್ತದೆ ಮತ್ತು ಸದಾ ಜೀವನದಲ್ಲಿ ಉನ್ನತಿ ಹೊಂದುವ ಕಾರಣಕ್ಕಾಗಿ ಒಂದಲ್ಲ ಒಂದು ಯೋಜನೆಗಳನ್ನು ರೂಪಿಸುವ ಇವರ ಕಾರ್ಯ ಚಟುವಟಿಕೆಗಳಿಗೆ ಮತ್ತು ಇವರ ಸೃಜನಶೀಲತೆಗೆ ಎಲ್ಲರೂ ಕೂಡ ಇವರನ್ನು ಬಯಸುವಂತಾಗುತ್ತದೆ. ಇದೇ ಕಾರಣಕ್ಕಾಗಿ ಶ್ರೀಮಂತರು ಇವರನ್ನು ಮದುವೆಯಾಗಲು ಇಚ್ಛಿಸುತ್ತಾರೆ.

3. ತುಲಾ ರಾಶಿ:- ತುಲಾ ರಾಶಿ ಎಂದರೆ ಪ್ರೀತಿಯ ರಾಶಿಯಿಂದೇ ಹೆಸರುವಾಸಿ. ತುಲಾ ರಾಶಿಯಲ್ಲಿ ಹುಟ್ಟಿದವರು ಹೆಚ್ಚು ಪ್ರೇಮ ವಿವಾಹವಾಗುತ್ತಾರೆ. ಈ ರೀತಿ ಪ್ರೇಮ ವಿವಾಹವಾದಾಗ ಬಡವರು ಶ್ರೀಮಂತರನ್ನು ಶ್ರೀಮಂತರು ಬಡವರನ್ನು ಬಡವ ಶ್ರೀಮಂತ ಎನ್ನುವ ಭೇದ ಇಲ್ಲದೆ ವರಿಸುತ್ತಾರೆ. ಈ ಕಾರಣಕ್ಕಾಗಿ ಪ್ರೀತಿಯಿಂದ ತುಲಾ ರಾಶಿಯವರನ್ನು ಶ್ರೀಮಂತರು ಮದುವೆ ಆಗುತ್ತಾರೆ.

ವೃಶ್ಚಿಕ ರಾಶಿ:- ವೃಶ್ಚಿಕ ರಾಶಿಯ ಜನರಿಗೆ ಇನ್ನೊಬ್ಬರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸುವಂತಹ ಗುಣ ಇರುತ್ತದೆ. ಇದು ಶ್ರೀಮಂತರಿಗೆ ಅವರ ಜೀವನದಲ್ಲಿ ಇರುವ ಅನೇಕ ಸಮಸ್ಯೆಗಳಿಗೆ, ಅನೇಕ ಪರಿಸ್ಥಿತಿಗಳಲ್ಲಿ ತೊಂದರೆಗಳಿಗೆ ಪರಿಹಾರ ತಂದುಕೊಡುತ್ತದೆ. ಹಾಗಾಗಿ ಜೀವನಪೂರ್ತಿ ಅವರ ಜೊತೆಗಿರಲು ಬಯಸಿ ಮದುವೆಯಾಗಲು ಒಪ್ಪುತ್ತಾರೆ. ಹೀಗಾಗಿ ವೃಶ್ಚಿಕ ರಾಶಿಯವರು ಮದುವೆಯ ನಂತರ ಶ್ರೀಮಂತರಾಗುತ್ತಾರೆ

ಮೀನ ರಾಶಿ:- ಮೀನ ರಾಶಿ ಎಂದರೆ ಸೂಕ್ಷ್ಮತೆ. ಬೇರೆಯವರ ಭಾವನೆಗಳನ್ನು ಬಹಳ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳುವ ಇವರು ಬಹಳ ಕರುಣಾಳುಗಳಾಗಿರುತ್ತಾರೆ. ಇವರ ಈ ಹೃದಯ ವೈಶ್ಯಾಲತೆ ಶ್ರೀಮಂತರನ್ನು ಆಕರ್ಷಿಸುತ್ತದೆ ಮತ್ತು ಅವರ ಒತ್ತಡವನ್ನು ನಿವಾರಿಸುವಂತಹ ಮತ್ತು ಇವರ ತಾಳ್ಮೆ ಕಾರಣದಿಂದಾಗಿ ಶ್ರೀಮಂತರು ಇವರಿಗೆ ಮನಸ್ಸು ಕೊಡುತ್ತಾರೆ ಮತ್ತು ಇಂಥವರು ತಮ್ಮ ಸಂಗಾತಿ ಆಗಬೇಕು ಎಂದುಕೊಳ್ಳುತ್ತಾರೆ.

ಸುಖಮಯ ದಾಂಪತ್ಯದ 6 ರಹಸ್ಯಗಳು ಇವು, ಇದನ್ನು ತಿಳಿದವರ ಸಂಸಾರದಲ್ಲಿ ಅಪಶೃತಿ ಬರುವುದಿಲ್ಲ.!

 

ಗಂಡ ಹೆಂಡತಿ ಸಂಬಂಧ ಎನ್ನುವುದು ಅತಿ ಶ್ರೇಷ್ಠವಾದ ಸಂಬಂಧವಾಗಿದೆ. ಇದೊಂದು ಪವಿತ್ರ ಬಂಧನವಾಗಿತ್ತು ಇದರ ಪಾವಿತ್ರ್ಯತೆ ಕಾಪಾಡಿಕೊಂಡಲ್ಲಿ ಇದೊಂದು ಶಕ್ತಿಯಾಗಲಿದೆ. ಇದು ಇಬ್ಬರ ನಡುವೆ ಮಾತ್ರವಲ್ಲದೆ ಎರಡು ಕುಟುಂಬಗಳ ಸಂಬಂಧ ಮತ್ತು ಈ ಮೂಲಕ ನಮ್ಮ ಮಕ್ಕಳ ಭವಿಷ್ಯವನ್ನು ಕಟ್ಟುವ ಬುನಾಧಿ ಕೂಡ ಆಗಿದೆ.

ಹಾಗಾಗಿ ಸಂಸಾರದಲ್ಲಿ ಪತಿ ಪತ್ನಿ ದಂಪತಿಗಳಾಗಿ ಬರಿ ಮಾತಿಗೆ ಮಾತ್ರವಲ್ಲದೆ ಅಕ್ಷರಶಃ ಇಬ್ಬರು ಎರಡು ದೇಹ ಒಂದು ಆತ್ಮ ಎನ್ನುವಂತೆ ನಡೆದುಕೊಂಡಾಗಲೇ ಆ ಮನೆ ನಂದನವನವಾಗಿರುತ್ತದೆ ಮತ್ತು ಇಂಥಹ ಮನೆಯು ಎಲ್ಲರಿಗೂ ಆದರ್ಶವಾಗಿ ಕಾಣುತ್ತದೆ. ಈ ಮೂಲಕ ಉತ್ತಮ ಸಮಾಜದ ನಿರ್ಮಾಣವೂ ಆಗುತ್ತದೆ ಹಾಗಾಗಿ ಸುಖಮಯ ಸಂಸಾರದ 6 ರಹಸ್ಯಗಳ ಬಗ್ಗೆ ಈ ಅಂಕಣದಲ್ಲಿ ಕೆಲ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ.

1. ಯಾವುದೇ ಸಂಬಂಧ ಆಗಿದ್ದರೂ ಕೂಡ ಅನುಮಾನ ಎನ್ನುವುದು ಉಂಟಾಗುವುದೇ ಆ ರೀತಿ ನಡೆದುಕೊಂಡಾಗ, ಹಾಗಾಗಿ ನೀವು ಮೊದಲಿಗೆ ನಿಮ್ಮ ಸಂಗಾತಿಯ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಆ ನಂಬಿಕೆಯನ್ನು ಕಟ್ಟಿಸಿಕೊಳ್ಳಲು ನೀವು ನಿಮ್ಮ ಸಂಗಾತಿಗೆ ಸಂಪೂರ್ಣ ಪ್ರಾಮಾಣಿಕರಾಗಿ ಇರಬೇಕು. ಯಾವುದೇ ಕಾರಣಕ್ಕೂ ಮತ್ತೊಬ್ಬರ ಮೇಲೆ ಆಕರ್ಷಿತರಾಗದೆ ಅಥವಾ ಇನ್ನೊಬ್ಬರ ಜಾಲಗಳಿಗೆ ಬೀಳದೆ ನಿಮ್ಮ ಸಂಗಾತಿಗೆ ಪ್ರಾಮಾಣಿಕರಾಗಿರಿ ಇದು ನಿಮ್ಮ ಸಂಸಾರದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ಮತ್ತು ಔಷಧಿಯಾಗಿದೆ.

2. ಅತಿಯಾದ ನಿರೀಕ್ಷೆಗಳು ಇಬ್ಬರ ನಡುವೆ ವೈ’ರು’ಧ್’ಯಕ್ಕೆ ಕಾರಣವಾಗುತ್ತದೆ. ಇದು ಹೆಣ್ಣಿಗಾಗಲಿ, ಗಂಡಿಗಾಗಲಿ ಖಂಡಿತವಾಗಲು ಒಳ್ಳೆಯದಲ್ಲ. ತನ್ನ ಪತ್ನಿ ಎದುರು ಬೇರೆಯವರ ರೀತಿ ಇರಬೇಕು ಎಂದು ಇನ್ನೊಬ್ಬರ ಗುಣ ಮತ್ತು ಸೌಂದರ್ಯ ಹೋಲಿಸಿ ಮಾತನಾಡುವುದು ಅಥವಾ ತನ್ನ ಪತ್ಯು ತನ್ನ ಸ್ನೇಹಿತೆಯ ಪತಿ ತಂದು ಕೊಡುವ ರೀತಿ ಬೆಲೆ ಬಾಳುವ ಉಡುಗೊರೆಗಳನ್ನು ತಂದು ಕೊಡುವುದಿಲ್ಲ ಎಂದು ಹೆಂಡತಿ ದೂರವುದು ಎರಡು ಕೂಡ ತಪ್ಪು. ಹಾಗಾಗಿ ಇಂತಹ ತಪ್ಪುಗಳನ್ನು ಮಾಡಬೇಡಿ ನಿಮ್ಮ ಸಂಗಾತಿಯ ಒಳ್ಳೆ ಗುಣಗಳನ್ನು ಗೌರವಿಸಿ, ಹಾಗೂ ವಿರುದ್ಧ ಗುಣಗಳನ್ನು ಒಪ್ಪಿಕೊಂಡು ನಿಧಾನವಾಗಿ ಸುಧಾರಿಸಲು ಪ್ರಯತ್ನಿಸಿ.

3. ಪರಸ್ಪರ ಸಮಯ ಕೊಡಿ ಇದು ನಿಮ್ಮ ನಡುವೆ ಇರುವ ಎಷ್ಟೋ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತದೆ. ಕೆಲವೊಮ್ಮೆ ತಮ್ಮ ಸಮಸ್ಯೆಗಳನ್ನು ಅಥವಾ ತಮ್ಮ ಭಾವನೆಗಳನ್ನು ಕೂಡ ಹಂಚಿಕೊಳ್ಳಲಾಗದಷ್ಟು ತಮ್ಮ ಸಂಗಾತಿ ಬಿಜಿ ಆಗಿಬಿಟ್ಟರೆ ಅದಕ್ಕಿಂತ ನೋವಿನ ವಿಚಾರ ಮತ್ತೊಂದಿಲ್ಲ. ಹಾಗಾಗಿ ನೀವು ಎಷ್ಟೇ ಬ್ಯುಸಿ ಇದ್ದರೂ ಕೂಡ ಸಂಗಾತಿಗಾಗಿ ನೀವು ಸಮಯ ಕೊಟ್ಟು ಆಗಾಗ ಹೊರಗೆ ಕರೆದುಕೊಂಡು ಹೋಗಿ.

4. ನಿಮ್ಮ ನಡುವೆ ನೂರೆಂಟು ಮಾತುಗಳು ಬರಬಹುದು, ಕುಟುಂಬ ಎಂದ ಮೇಲೆ ಒಂದಲ್ಲ ಒಂದು ಬಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ ಅಥವಾ ನಿಮ್ಮ ನಡುವೆ ಯಾವುದಾದರೂ ವಿಷಯಕ್ಕೆ ಜ’ಗ’ಳ’ಗಳಾಗಬಹುದು, ಸಿ’ಟ್ಟು ಬರಬಹುದು ಆದರೆ ಮೂರನೆಯರ ಎದುರಲ್ಲಿ ಅದನ್ನು ಎಂದಿಗೂ ತೋರಿಸಿಕೊಳ್ಳಬೇಡಿ ಮತ್ತು ನೀವು ನಿಮ್ಮ ಗೆಳತಿಯರೊಂದಿಗೆ ಅಥವಾ ಸಂಬಂಧಿಕರೊಂದಿಗೆ ಈ ವಿಚಾರಗಳನ್ನು ಹಂಚಿಕೊಳ್ಳುವುದು.

ಅಕ್ಕಪಕ್ಕದವರು ಮನೆಯವರಿಂದ ಸಲಹೆ ಕೇಳುವುದು ಅಥವಾ ಅವರೆದುರು ಜ’ಗ’ಳ ಮಾಡುವುದು ಇದು ಕೂಡ ಸಂಸಾರ ಹಾಳಾಗಲು ಕಾರಣ. ನಿಮ್ಮ ಆತ್ಮೀಯರಲ್ಲಿ ಅತಿ ಹೆಚ್ಚು ನಂಬಿಕೆ ಇದ್ದವರಲ್ಲಿ ಮಾತ್ರ ಸಮಸ್ಯೆ ದೊಡ್ಡದಿದ್ದಲ್ಲಿ ಸಲಹೆ ಕೇಳಿ ಅದನ್ನು ಹೊರತುಪಡಿಸಿ ನಿಮ್ಮ ಪೋಷಕರು ಹಾಗೂ ನಿಮ್ಮ ಸಂಗಾತಿಯ ಪೋಷಕದಷ್ಟೇ ನಿಮ್ಮ ಸಂಬಂಧದ ಮೇಲೆ ನಿಜಕ್ಕೂ ಕಾಳಜಿ ಉಳ್ಳವರಾಗಿರುತ್ತಾರೆ.

5. ಈಗಿನ ಕಾಲದಲ್ಲಿ ಪತಿ-ಪತ್ನಿ ಇಬ್ಬರು ಕೂಡ ಹೊರಗೆ ದುಡಿಯುವ ಅನಿವಾರ್ಯತೆ ಇರುತ್ತದೆ. ನಿಮಗೆ ಎಷ್ಟೇ ಒತ್ತಡ ಇದ್ದರೂ ಕೂಡ ಅದನ್ನು ಮನೆವರೆಗೂ ತರಬೇಡಿ. ಮನೆಯಲ್ಲಿ ನಿಮ್ಮ ಕರ್ತವ್ಯ ಏನಿದೆ ಅದನ್ನು ನೀವು ಪೂರೈಸಿ. ಹೆಣ್ಣು ಮಕ್ಕಳು ಕೆಲಸಕ್ಕೆ ಹೋಗುವ ಅನಿವಾರ್ತೆ ಇರುವ ಕಾರಣ ನೀಡಿ ಮನೆಯ ಜವಾಬ್ದಾರಿಗಳಿಂದ ನುಣಿಚಿಕೊಳ್ಳಲು ಪ್ರಯತ್ನಿಸಬೇಡಿ ಹಾಗೆ ಗಂಡು ಮಕ್ಕಳು ಎಲ್ಲಾ ಕೆಲಸ ಕಾರ್ಯಗಳು ಹೆಣ್ಣು ಮಕ್ಕಳಿಗೆ ಸೇರಿದ್ದು ಎಂದು ಅವರಿಗೆ ಬಿಡಬೇಡಿ.

ಇದು ನಿಮ್ಮಿಬ್ಬರ ಕುಟುಂಬವಾಗಿರುವುದರಿಂದ ಇಬ್ಬರು ಇಬ್ಬರ ಹೊಣೆಗಾರಿಕೆಗಳನ್ನು ಕೂಡ ಹಂಚಿಕೊಂಡು ಒಬ್ಬರಿಗೊಬ್ಬರು ನೆರವಾಗಿ. ಇದು ಮನೆ ಕೆಲಸ ಮಾತ್ರವಲ್ಲದೆ ಮನೆಯಲ್ಲಿ ಮಾಡುವ ಪೂಜೆಗಳು, ಹಬ್ಬಗಳು ಅಥವಾ ಸಂಬಂಧಿಕರ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು, ಸಂಗಾತಿ ಕುಟುಂಬದವರ ತೊಂದರೆಗಳಲ್ಲಿ ಬಾಗಿಯಾಗುವುದು ಇತ್ಯಾದಿಗಳನ್ನು ಸೇರಿರುತ್ತದೆ

6. ಈಗಿನ ಕಾಲದಲ್ಲಿ ಸ್ನೇಹಿತರು ಎನ್ನುವ ವಿಚಾರವು ಎಷ್ಟು ಸ್ಟ್ರೆಂತ್ ಆಗಿರುತ್ತದೆ ಅಷ್ಟೇ ಅದು ವೀಕ್ನೆಸ್ ಸಹಾ ಆಗಿರುತ್ತದೆ. ಹಾಗಾಗಿ ಸ್ನೇಹಿತರಿರುವುದು ತಪ್ಪಲ್ಲ ಆದರೆ ನಿಮ್ಮ ಪತಿಯೇ ನಿಮ್ಮ ಬೆಸ್ಟ್ ಫ್ರೆಂಡ್ ಆಗಿರಬೇಕು ಹಾಗೆ ಪತಿಗೆ ಪತ್ನಿಯೇ ಮೊದಲ ಪ್ರಿಯಾರಿಟಿ ಆಗಿರಬೇಕು. ಉಳಿದ ಎಲ್ಲರೂ ಕೂಡ ನಂತರ ಎನ್ನುವ ರೀತಿ ಬದುಕಿದ್ದರೆ ವಿನಾಕಾರಣ ಮ’ನ’ಸ್ತಾ’ಪಗಳು ಮೂಡುವುದಿಲ್ಲ.

ಅರಳಿ ಮರಕ್ಕೆ ಎಷ್ಟೊಂದು ಶಕ್ತಿ ಇದೆ ಗೊತ್ತಾ.? ಅರಳಿ ಮರದ ಬಗ್ಗೆ ಒಂದಿಷ್ಟು ಮಾಹಿತಿ.!

 

ನಮ್ಮ ಹಿಂದೂ ಸಂಪ್ರದಾಯದಲ್ಲಿ ಕೆಲವು ಮರಗಳಿಗೆ ದೇವರ ಸ್ಥಾನವನ್ನು ಕೊಟ್ಟಿದ್ದೇವೆ. ಅಂತಹ ಮರಗಳ ಪೈಕಿ ಅರಳಿಮರ ಕೂಡ ಒಂದು ಇದನ್ನು ಅಶ್ವತ್ಥರಳಿ ಮರ ಎಂದು ಕೂಡ ಹೇಳುತ್ತಾರೆ. ಅಶ್ವತ್ಥರಳಿ ಮರದಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಎನ್ನುವುದು ಹಿಂದೂ ಧರ್ಮದ ನಂಬಿಕೆ ಆಗಿನ ಕಾಲದಲ್ಲಿ ಋಷಿಮುನಿಗಳು ಜಪತಪ ಮಾಡುವುದಕ್ಕೆ ಅರಳಿ ಮರವನ್ನೇ ಅರಸಿ ಬರುತ್ತಿದ್ದರು.

ಅಶ್ವತ್ಥರಳಿ ಮರದ ಬುಡದಲ್ಲಿ ಕುಳಿತುಕೊಂಡು ತಮ್ಮ ಸಂಕಲ್ಪವನ್ನು ನೆರವೇರಿಸಿಕೊಳ್ಳುತ್ತಿದ್ದರು. ಈ ಮರಕ್ಕೆ ಎಷ್ಟೊಂದು ಶಕ್ತಿ ಇದೆ ಎಂದರೆ ಅದು ನಮ್ಮ ಬದುಕಿನ ಎಲ್ಲ ರೀತಿಯ ಸಮಸ್ಯೆಗಳನ್ನು ಕೂಡ ಪರಿಹಾರ ಮಾಡಬಲ್ಲದು, ಆರೋಗ್ಯ ಸಮಸ್ಯೆ ಇರುವವರು ಅಥವಾ ಜೀವನದಲ್ಲಿ ಇನ್ಯಾವುದೇ ಮಾನವ ಸಹಜ ಸಮಸ್ಯೆ ಇದ್ದರೂ ಕೂಡ ಅರಳೀ ಮರದ ಆರಾಧನೆ ಅದಕ್ಕೆ ಪರಿಹಾರ ಕೊಡುತ್ತದೆ.

ಪ್ರತಿ ದೇವಸ್ಥಾನದಲ್ಲೂ ಕೂಡ ಅಶ್ವತ್ಥರಳಿ ಮರ ನೆಟ್ಟಿರುತ್ತಾರೆ. ಆಗಿನ ಕಾಲದಲ್ಲಿ ಊರಿನ ಮಧ್ಯಭಾಗದಲ್ಲಿ ಅಥವಾ ಊರಿನ ಹೊರಭಾಗದಲ್ಲಿ ಈ ರೀತಿ ಅಶ್ವತ್ಥರಳೀ ಮರ ನೆಟ್ಟು ಅದಕ್ಕೆ ಕಟ್ಟೆ ಕಟ್ಟುತ್ತಿದ್ದರು ಮತ್ತು ಅಲ್ಲಿ ನಾಗರಕಲ್ಲು ಅಥವಾ ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡುತ್ತಿದ್ದರು. ಅಶ್ವತಹಳ್ಳಿ ಮರವನ್ನು ಅತಿ ಹೆಚ್ಚು ಆಕ್ಸಿಜನ್ ಕೊಡುವ ಮರ ಎಂದು ಕೂಡ ಹೇಳಲಾಗುತ್ತದೆ.

ಹಾಗಾಗಿ ಮುಂಜಾನೆ ಎದ್ದು ಯಾರು ಅರಳಿ ಮರದ ಪ್ರದಕ್ಷಿಣೆ ಹಾಕುತ್ತಾರೆ ಅವರಿಗೆ ಆರೋಗ್ಯದ ಸಮಸ್ಯೆಗಳು ಕಾಡುವುದಿಲ್ಲ. ಅಲ್ಲದೆ ಸಂತಾನ ಭಾಗ್ಯಕ್ಕಾಗಿ ಬಯಸುವ ಹೆಣ್ಣುಮಕ್ಕಳು ಕೂಡ ನಿಷ್ಠೆಯಿಂದ ಅಶ್ವತ್ಥರಳಿ ಮರಕ್ಕೆ ಪ್ರತಿದಿನ ಎದ್ದು ನಿಯಮಿತವಾಗಿ ಪ್ರದಕ್ಷಿಣೆ ಹಾಕುವುದರಿಂದ ಅವರ ದೈಹಿಕ ಸಮಸ್ಯೆಗಳು ನಿವಾರಣೆ ಆಗುತ್ತವೆ ಮತ್ತು ದೇವರ ಆಶೀರ್ವಾದದಿಂದಾಗಿ ಅವರ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಕೆಲವರು ಈ ಮರಕ್ಕೆ 9, 16, 21 ಈ ರೀತಿ ತಮ್ಮ ಸಂಕಲ್ಪದ ಅನುಸಾರವಾಗಿ ದಾರವನ್ನು ಸುತ್ತಿ ತಮ್ಮದೇ ಆದ ರೀತಿಯಲಿ ಅಥವಾ ತಮಗೆ ತಿಳಿಸಿರುವ ಪದ್ಧತಿಯ ಪ್ರಕಾರವಾಗಿ ಪೂಜೆ ಮಾಡುತ್ತಾರೆ. ಯಾವ ರೀತಿ ಪೂಜೆ ಮಾಡಿದರೆ ಕೂಡ ಈ ರೀತಿ ಅಶ್ವತ್ಥರಳಿ ಮರಕ್ಕೆ ಮಾಡುವ ಪೂಜೆಯು ತಾಯಿ ಮಹಾಲಕ್ಷ್ಮಿ ಸಮೇತವಾಗಿ ಎಲ್ಲ ದೇವಾನುದೇವತೆಗಳಿಗೂ ಕೂಡ ಸಲ್ಲುತ್ತದೆ ಎಂದು ಹೇಳಲಾಗುತ್ತದೆ.

ಅರಳಿ ಮರದ ಕೆಳಗೆ ಶಿವಲಿಂಗ ಪ್ರತಿಷ್ಠಾಪನೆ ಮಾಡುವುದು ಪುಣ್ಯದ ಕಾರ್ಯ ಎಂದು ಹೇಳಲಾಗುತ್ತದೆ ಮತ್ತು ಈ ಮರದ ಆರಾಧನೆ ಮಾಡುವ ಸಮಯದಲ್ಲಿ ಶಿವಪೂಜೆಯನ್ನು ಮಾಡುವುದು ಕೂಡ ಇನ್ನೂ ಹೆಚ್ಚಿನ ಫಲ ಕೊಡುತ್ತದೆ ಎಂದು ಸಹ ಹೇಳಲಾಗುತ್ತದೆ.

ಅರಳಿ ಮರದ ಕೆಳಗೆ ಕುಳಿತು ಹನುಮಾನ್ ಚಾಲೀಸಾ ಓದುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚಾಗುತ್ತದೆ ಹಾಗೂ ಮೃ’ತ್ಯು ಭ’ಯ ಅಥವಾ ಜೀವನದಲ್ಲಿ ಜಿಗುಪ್ಸೆ ಮುಂತಾದ ಮಾನಸಿಕ ಸಮಸ್ಯೆಗಳಿದ್ದರೆ ಅವುಗಳಿಗೆ ಕೂಡ ಪರಿಹಾರ ಸಿಗುತ್ತದೆ. ಸಾಡೇಸಾತಿ ಶನಿ ದೋಷ ಇದ್ದರೆ ಅದನ್ನು ಕೂಡ ಅಶ್ವತ್ಥರಳಿ ಮರದ ಆರಾಧನೆಯು ನಿವಾರಣೆ ಮಾಡುತ್ತದೆ.

ಈ ರೀತಿ ಯಾವುದೇ ಗ್ರಹದ ದೋಷ ಅನುಭವಿಸುತ್ತಿರುವವರು ಕೂಡ ಭಕ್ತಿಯಿಂದ, ನಂಬಿಕೆಯಿಂದ, ನಿಷ್ಠೆಯಿಂದ ಈ ಮರದ ಆರಾಧನೆ ಮಾಡಬೇಕು. ಮೊದಲು ನೀರನ್ನು ಅರ್ಪಿಸಿ, ಅರಿಶಿನ ಕುಂಕುಮ ಹೂವು ಇಟ್ಟು ಅದರ ಬಳಿ ದೀಪ ಹಚ್ಚಿ ತಮ್ಮ ಶಕ್ತಿ ಅನುಸಾರ ನೆನಸಿದ ಅಕ್ಕಿ ಬೆಲ್ಲ ಇವುಗಳನ್ನು ಇಟ್ಟು ನೈವೇದ್ಯ ಮಾಡಿ ಪ್ರದಕ್ಷಿಣೆ ಹಾಕಬೇಕು. ಈ ರೀತಿ 9 ಅಥವಾ 21 ದಿನ ಅಥವಾ ನಿಯಮಿತವಾಗಿ ಪ್ರತಿನಿತ್ಯ ಮಾಡುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಹಾಗೂ ಆಯಸ್ಸು, ಆರೋಗ್ಯ, ಐಶ್ವರ್ಯ ಪ್ರಾಪ್ತಿಯಾಗಿ ಇಷ್ಟಾರ್ಥ ಸಿದ್ಧಿಯಾಗುತ್ತದೆ.