ಭಾರತ ದೇಶದಲ್ಲಿ ಲಕ್ಷಾಂತರ ಹಿಂದೂ ದೇವಾಲಯಗಳಿವೆ. ರಾಮ, ಕೃಷ್ಣ, ಆಂಜನೇಯ, ಆದಿಶಕ್ತಿ. ಗಣೇಶ ಇತ್ಯಾದಿಯಾಗಿ ಲಿಂಗ ರೂಪದ ಶಿವನಿಗೂ ಕೂಡ ಅನೇಕ ದೇವಾಲಯಗಳು ಇವೆ. ಇವುಗಳಲ್ಲಿ ಶೈವರಿಗೆ ಬಹಳ ಪುಣ್ಯಕ್ಷೇತ್ರವಾದ ಶಿವನ ದೇವಸ್ಥಾನದ ಮಹಿಮೆಯೊಂದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿಕೊಡುತ್ತಿದ್ದೇವೆ.
ಹಿಮಾಲಯದ ತಪ್ಪಲಿನಲ್ಲಿರುವ ಉತ್ತರಾಖಂಡ ರಾಜ್ಯದ ಅಲ್ಮೋರಾ ಜಿಲ್ಲೆಯ ಬಳಿಯ ಹಿಂದೂ ತೀರ್ಥಯಾತ್ರಾ ಪ್ರದೇಶವಾದ ಜಾಗೇಶ್ವರ ದೇವಸ್ಥಾನವು ವಿಶ್ವದಲ್ಲಿಯೇ ಅತಿ ಹೆಚ್ಚು ದೇವಸ್ಥಾನದ ಸಮೂಹ ಹೊಂದಿರುವ ಪ್ರದೇಶ ಎಂದು ಹೆಸರುವಾಸಿಯಾಗಿದೆ.
ಸುಮಾರು ಇಲ್ಲಿ 125ಕ್ಕೂ ಹೆಚ್ಚು ಇಂದು ದೇವಸ್ಥಾನದ ಗುಂಪು ಇದೆ ಪ್ರಸ್ತುತವಾಗಿ ಈ ದೇವಸ್ಥಾನಗಳ ಹೊಣೆಯನ್ನು ಭಾರತೀಯ ಕಾನೂನುಗಳ ಅಡಿಯಲ್ಲಿ ಸಂರಕ್ಷಿಸಿ, ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ನಿರ್ವಹಿಸುತ್ತದೆ.
ಮೋದಿ ಅವರ ಹೊಸ ಯೋಜನೆ ಪ್ರತಿಯೊಬ್ಬರಿಗೂ ಒಂದು ಲಕ್ಷ ರೂಪಾಯಿ ಸಿಗಲಿದೆ ಈ ಮೂರು ದಾಖಲೆ ಇದ್ದರೆ ಸಾಕು.!
ಈ ಪ್ರದೇಶದಲ್ಲಿ ದಂಡೇಶ್ವರ ದೇವಾಲಯ, ಚಂಡಿಕಾದೇವಾಲಯ, ಜಾಗೇಶ್ವರ ದೇವಾಲಯ, ಕುಬೇರ ದೇವಾಲಯ, ಮೃತುಂಜಯ ದೇವಾಲಯ, ನಂದಾ ದೇವಿ ಮತ್ತು ನವದುರ್ಗಾ, ನವಗ್ರಹ ದೇವಾಲಯ, ಪಿರಮಿಡ್ ದೇವಾಲಯ ಮತ್ತು ಸೂರ್ಯ ದೇವಾಲಯವನ್ನು ಮತ್ತು ಮಹಾಕಾಳೇಶ್ವರ ದೇವಾಲಯ ಸೇರಿದಂತೆ ಅನೇಕ ದೇವರುಗಳಿಗೆ ಗುಡಿ ಇದೆ.
ಈ ತಾಣದಲ್ಲಿ ಜಾಗೇಶ್ವರ ಮಾನ್ಸೂನ್ ಹಬ್ಬವನ್ನು ಹಿಂದೂ ಕ್ಯಾಲೆಂಡರ್ ತಿಂಗಳ ಶ್ರಾವಣದಲ್ಲಿ ಅಂದರೆ ಜುಲೈ-ಆಗಸ್ಟ್ನಲ್ಲಿ ಮತ್ತು ವಾರ್ಷಿಕ ಮಹಾ ಶಿವರಾತ್ರಿ ಮೇಳವನ್ನು ಶಿವರಾತ್ರಿ ಹಬ್ಬದಂದು ಆಚರಿಸುತ್ತದೆ, ಇದು ವಸಂತಕಾಲದ ಆರಂಭದಲ್ಲಿ ನಡೆಯುತ್ತದೆ.
7 ರಿಂದ 14ನೇ ಶತಮಾನದ ನಡುವಿನ ಸಮಯದಲ್ಲಿ ನಿರ್ಮಾಣವಾಗಿರುವ ದೇವಸ್ಥಾನಗಳು ಎಂದು ಗುರುತಿಸಲಾಗಿದ್ದು ನಾಗರ ಶೈಲಿಯಲ್ಲಿ ಈ ದೇವಸ್ಥಾನಗಳು ರಚನೆಯಾಗಿವೆ.
ಉತ್ತರಖಂಡ ರಾಜ್ಯದ ರಾಜಧಾನಿಯಿಂದ 35km ದೂರದಲ್ಲಿ ಇರುವಂತಹ ದಟ್ಟವಾದ ಮರಗಳ ಅರಣ್ಯದ ಮಧ್ಯ ಇದೆ ಜಾಗೇಶ್ವರ ಧಾಮ ಇದೆ.
ಈ ಕಾರ್ಡ್ ಮಾಡಿಸಿ ಸಾಕು ತಿಂಗಳಿಗೆ 3000 ಉಚಿತವಾಗಿ ಸಿಗುತ್ತೆ.!
ಕಾಡಿನ ನಡುವೆ ಇರುವಂತಹ ಈ ಸುಂದರ ಪ್ರದೇಶದ ಪಕ್ಕದಲ್ಲಿಯೇ ಜಠರಂಗ ಎಂಬ ನದಿ ಪ್ರವಹಿಸುತ್ತದೆ. ಭಾರತದ ಅತ್ಯಂತ ಪ್ರಾಚೀನ ಶಿವ ದೇವಾಲಯಗಳಲ್ಲಿ ಮುಂಚೂಣಿಯಲ್ಲಿ ಬರುವ ಈ ದೇವಸ್ಥಾನಗಳ ಸಮೂಹವು ಸಮುದ್ರಮಟ್ಟದಿಂದ 1280 ಮೀಟರ್ ಎತ್ತರದಲ್ಲಿ ಇದೆ. ಆದರೂ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿಕೊಡುತ್ತಾರೆ ಸ್ಥಳದ ಸೌಂದರ್ಯಕ್ಕೆ ಅನೇಕರು ಬೆರಗಾಗಿದ್ದರೆ ಸ್ಥಳ ಮಹಾತ್ಮೆ ತಿಳಿದು ಹೆಚ್ಚಿನ ಜನ ಬರುತ್ತಿದ್ದಾರೆ.
ಅಂತಹ ವಿಶೇಷತೆ ಏನೆಂದರೆ, ಜಾಗೇಶ್ವರ ಸ್ಥಳದಲ್ಲಿ ಕಂಡುಬರುವ ದೇವಾಲಯಗಳ ಗುಂಪಿನಲ್ಲಿ 70ನೇ ದೇವಸ್ಥಾನವಾಗಿ ಮೃತ್ಯುಂಜಯ ಮಹಾದೇವನ ದೇವಾಲಯವಿದೆ. ಇದು ಸಾವಿರ ವರ್ಷ ಹಳೆಯದು ಎಂದು ಮತ್ತೊಂದು ದಾಖಲೆ ತಿಳಿಸುತ್ತಿದ್ದು ಇದು ಶಿವನ ಮೃತ್ಯುಂಜಯ ರೂಪಕ್ಕೆ ಅಥವಾ ಮರಣವನ್ನು ಗೆದ್ದವನಿಗೆ ಸಮರ್ಪಿಸಲಾಗಿದೆ.
ದೇವಾಲಯವು ಲಿಂಗಗಳು ಮತ್ತು ಸಣ್ಣ ದೇವಾಲಯಗಳ ಮಧ್ಯದಲ್ಲಿದೆ, ಇದು ಕೂಡ ಲ್ಯಾಟಿನಾ ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿರುವಂತಹ ದೇವಾಲಯವಾಗಿದೆ. ನಾಲ್ಕು ಕಂಬಗಳ ಪ್ರವೇಶ ಮಂಟಪವನ್ನು ಹೊಂದಿರುವ ದೇವಸ್ಥಾನವನ್ನು ನೋಡುಗರಿಗೆ ದೇವಸ್ಥಾನದಲ್ಲಿಯೇ ಉಳಿಯಬೇಕು ಎನ್ನುವಂತಹ ಅನುಭವವನ್ನು ಕೊಡುತ್ತದೆ.
ಜನ್ ಧನ್ ಜೀರೋ ಅಕೌಂಟ್ ಗೆ ಕೇಂದ್ರದ ಮೋದಿ ಬಂಪರ್ ಗಿಫ್ಟ್ 10,000 ಹಣ ಇವತ್ತು ಖಾತೆಗೆ ಜಮಾ.!
ಮತ್ತು ಈ ಜಾಗದ ಅತ್ಯಂತ ಪ್ರಭಾವಶಾಲಿ ವಿಷಯವೇನೆಂದರೆ, ಈ ಮೃತ್ಯುಂಜಯನ ಸನ್ನಿಧಾನದಲ್ಲಿ ಸಮಯ ಕಳೆದು ಸ್ವಾಮಿಯ ದರ್ಶನ ಮಾಡಿದವರಿಗೆ ಮೃ’ತ್ಯು ಭ’ಯ ಕಳೆಯುತ್ತದೆ ಎಂದು ಅಪಾರವಾದ ನಂಬಿಕೆ ಇದೆ. ಜಾತಕದಲ್ಲಿ ಯಾವುದೇ ರೀತಿಯ ದೋಷ ಇದ್ದವರು ಅಥವಾ ಇಂತಹ ಕಂಠಕ ಎದುರಿಸಿದವರು ಇಲ್ಲಿಗೆ ಹೋದರೆ ಅವರ ದೋಷ ಕಳೆದು ಶುಭವಾಗುತ್ತದೆ ಮತ್ತು ಅವರಿಗೆ ಇರುವ ಮೃ’ತ್ಯು ಭ’ಯ ಕಳೆಯುತ್ತದೆ ಎಂದು ಪ್ರಖ್ಯಾತಿ ಇದೆ.