Home Blog Page 283

ಮಲ್ಲ ಸಿನಿಮಾದಲ್ಲಿ ಅನುಭವಿಸಿದ ಕಷ್ಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ಪ್ರಿಯಾಂಕ ಉಪೇಂದ್ರ. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಅಯ್ಯೋ ಅನ್ಸುತ್ತೆ.

 

ಪ್ರಿಯಾಂಕ ಉಪೇಂದ್ರ ಎಂದರೆ ತಕ್ಷಣ ನೆನಪಾಗುವುದು ಅವರ ಪ್ರತಿಮ ಸೌಂದರ್ಯ, ಕಠಿಣ ಪರಿಶ್ರಮ ಮತ್ತು ಅದ್ಭುತವಾದ ಅಭಿನಯ. ಕನ್ನಡ ಮಾತ್ರವಲ್ಲದೇ ತಮಿಳು ತೆಲುಗು ಹಿಂದಿ ಮಲಯಾಳಂ ಬೆಂಗಾಲಿ ಮರಾಠಿ ಹೀಗೆ ಭಾರತದ ಬಹುತೇಕ ಎಲ್ಲಾ ಭಾಷೆ ಸಿನಿಮಾಗಳಲ್ಲಿ ಇವರು ಅಭಿನಯಿಸಿದ್ದಾರೆ. ಪರಭಾಷಾ ನಟಿ ಆಗಿ ಕನ್ನಡಕ್ಕೆ ಕಾಲಿಟ್ಟ ಇವರು ಸದ್ದಿಲ್ವದೇ 50 ಸಿನಿಮಾಗಳನ್ನು ಮುಗಿಸಿದ್ದಾರೆ.

ಅದರಲ್ಲಿ ಬಹುತೇಕ ಸಿನಿಮಾಗಳು ಮಹಿಳಾ ಪ್ರಧಾನ ಸಿನಿಮಾಗಳೇ ಎನ್ನುವುದು ಇನ್ನೂ ವಿಶೇಷ. ಪ್ರಿಯಾಂಕ ಉಪೇಂದ್ರ ಅವರು ಕನ್ನಡತಿ ಅಲ್ಲದಿದ್ದರೂ ಸಿನಿಮಾಗಾಗಿ ಕನ್ನಡವನ್ನು ಕಲಿತು ನಂತರ ಕನ್ನಡಿಗನ ಕೈ ಹಿಡಿದು ಈಗ ಪರಮನೆಂಟ್ ಆಗಿ ಕನ್ನಡದ ಸೊಸೆ ಆಗಿಬಿಟ್ಟಿದ್ದಾರೆ. ಹಲವು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿರುವ ಅವರ ಇಂದಿನ ಕನ್ನಡ ಕೇಳಿದರೆ ಯಾರು ಕೂಡ ಅವರು ಬೆಂಗಾಲಿ ಅವರು ಎಂದು ಗುರುತಿಸುವುದಿಲ್ಲ ಆದರೆ ಆರಂಭದ ದಿನಗಳು ಈ ನಟಿಗೆ ಅಷ್ಟೊಂದು ಸುಲಭ ಆಗಿರಲಿಲ್ಲ ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದ ಪ್ರಿಯಾಂಕ ಉಪೇಂದ್ರ ಅವರು ತಮ್ಮ ಸಿನಿಮಾ ಕೆರಿಯರ್ ಅಲ್ಲಿನ ಮೊದಲ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ. ಕನ್ನಡದಲ್ಲಿ ಎಚ್2ಓ ಎನ್ನುವ ಸಿನಿಮಾ ಇವರಿಗೆ ಮೊದಲ ಸಿನಿಮಾ ಆಗಿತ್ತು. ಆ ಸಿನಿಮಾ ಕಾವೇರಿ ಎನ್ನುವ ಅದ್ಭುತ ಪಾತ್ರದಿಂದ ಕನ್ನಡಿಗರ ಜೊತೆಗೆ ಇವರು ಭಾವನಾತ್ಮಕವಾಗಿ ಬೆಸೆದುಕೊಂಡರು.

ಆ ಸಿನಿಮಾ ಸಮಯದಲ್ಲಿಯೇ ಪ್ರಿಯಾಂಕ ಉಪೇಂದ್ರ ಅವರಿಗೆ ಉಪೇಂದ್ರ ಅವರ ಜೊತೆ ಸ್ನೇಹವಾಗಿ ನಂತರ ಇಬ್ಬರ ಸ್ನೇಹ ಪ್ರೀತಿಯಾಗಿ ಚಿಗುರೊಡಿಯಲು ಕಾರಣ ಆಯಿತು. ಹೆಚ್2ಓ ಸಿನಿಮಾ ಪ್ರಿಯಾಂಕ ಉಪೇಂದ್ರ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು ಎಂದರೆ ತಪ್ಪಲ್ಲ. ಸಿನಿಮಾ ವಿಚಾರದಲ್ಲಿ ಸಹ ಹೆಚ್ ಟು ಓ ಸಿನಿಮಾದ ಮೂಲಕ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸುವ ಅದೃಷ್ಟ ಇವರ ಪಾಲಿಗೆ ಬಂತು.

ಈ ಸಿನಿಮಾದ ಸಕ್ಸಸ್ ನಂತರ ನಟಿ ಒಪ್ಪಿಕೊಂಡಿದ್ದು ಮಲ್ಲ ಸಿನಿಮಾ. ಆ ಸಿನಿಮಾದ ಸಂದರ್ಭದಲ್ಲಿ ನಟಿ ತಮಗಾದ ಅನುಭವಗಳ ಬಗ್ಗೆ ಹೇಳಿಕೊಂಡಿದ್ದಾರೆ. ರವಿಚಂದ್ರನ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಲು ಎಲ್ಲ ನಟಿಮಣಿಯರು ಕೂಡ ಇಷ್ಟಪಡುತ್ತಾರೆ ಕಾರಣ ಅವರ ಕ್ರಿಯೇಟಿವಿಟಿ. ಹೆಣ್ಣು ಮಕ್ಕಳನ್ನು ಬಹಳ ಸುಂದರವಾಗಿ ಕಾಣಿಸುವ ರೀತಿ ಮಾಡುವುದು ಈ ನಿರ್ದೇಶಕರು ಒಬ್ಬರೇ.

ಹಾಗಾಗಿ ನನಗೂ ಕೂಡ ಅವರ ಜೊತೆ ಸಿನಿಮಾ ಮಾಡಬೇಕು ಎನ್ನುವ ಆಸೆ ಇತ್ತು ಆದರೆ ಹೈಟ್ ಕಡಿಮೆ ಇದ್ದ ಕಾರಣ ಸೆಲೆಕ್ಟ್ ಆಗುತ್ತಿನೋ ಇಲ್ಲವೋ ಎಂದು ಭಯ ಇತ್ತು. ರವಿಚಂದ್ರನ್ ಸರ್ ನನ್ನನ್ನು ಮೊದಲ ಬಾರಿ ನೋಡಿದಾಗಲೇ ಸೆಲೆಕ್ಟ್ ಮಾಡಿ ಬಿಟ್ಟರು. ಆದರೆ ನಂತರ ಅಷ್ಟು ಈಝಿ ಇರಲಿಲ್ಲ. ಆ ಸಮಯದಲ್ಲಿ ನನಗೆ ಕನ್ನಡ ಅಷ್ಟೊಂದು ಬರುತ್ತಿರಲಿಲ್ಲ.

ರವಿಚಂದ್ರನ್ ಅವರು ನನಗೆ ಉದ್ದುದ್ದ ಡೈಲಾಗ್ ಕೊಡುತ್ತಿದ್ದರು, ಸ್ಕ್ರಿಪ್ಟ್ ನೋಡಿಕೊಂಡು ಅಭಿನಯಿಸುವುದು ಬಹಳ ಕಷ್ಟ ಆಗುತ್ತಿತ್ತು. ಅದರ ಜೊತೆಗೆ ಎರಡು ಶೇಡ್ ಗಳಲ್ಲಿ ನಾನು ಕಾಣಿಸಿಕೊಂಡಿದ್ದೆ ಇಂದಿಗೂ ಕೂಡ ಮಲ್ಲ ಸಿನಿಮಾದ ಹಾಡುಗಳನ್ನು ಅಭಿಮಾನಿಗಳು ನೆನೆಸಿಕೊಳ್ಳುತ್ತಾರೆ. ಅಂತಹ ಒಂದು ಅದ್ಭುತ ನಟಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ರವಿ ಸರ್ ಗೆ ಥ್ಯಾಂಕ್ಸ್ ಹೇಳುತ್ತೇನೆ ಎಂದು ಪ್ರಿಯಾಂಕ ಉಪೇಂದ್ರ ಅವರು ಹೇಳಿಕೊಂಡಿದ್ದಾರೆ.

ಇದರ ಜೊತೆಗೆ ಮಲ್ಲ ಸಿನಿಮಾದಲ್ಲಿ ತುಂಬಾನೇ ಗ್ಲಾಮರಾಗಿ ಕಾಣಿಸಿಕೊಳ್ಳಬೇಕಿತ್ತು ಇದು ಸ್ವಲ್ಪ ನನಗೆ ಮುಜುಗರ ಅನಿಸುತ್ತಿತ್ತು ಆದರೆ ಪಾತ್ರಕ್ಕಾಗಿ ಈ ಕೆಲಸವನ್ನು ನಾನು ಮಾಡಲೇಬೇಕಿತ್ತು, ಬೇರೆ ದಾರಿ ಇಲ್ಲದ ಕಾರಣ ಎಲ್ಲಾವನ್ನು ನಾನು ಒಪ್ಪಿಕೊಂಡು ಎಂದು ಇತ್ತೀಚಿಗಷ್ಟೇ ನಡೆದ ಸಂದರ್ಶನದಲ್ಲಿ ಪ್ರಿಯಾಂಕ ಅವರು ಹೇಳಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಲೋಹಿತಾಶ್ವ ಬಿಟ್ಟು ಹೋದ ಆಸ್ತಿ ಎಷ್ಟು ಗೊತ್ತ.?

ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಹಾಗೂ ಹಿರಿಯ ನಟರಾದ ಲೋಹಿತಾಶ್ವರವರು ನವೆಂಬರ್ 8 ರಂದು ನಿ.ಧ.ನ.ರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಲೋಹಿತಾಶ್ವ ಮಂಗಳವಾರ ವಿ.ಧಿ.ವ.ಶ.ರಾಗಿದ್ದಾರೆ. ಇವರಿಗೆ ಸುಮಾರು 80 ವರ್ಷಗಳು ಆಗಿತ್ತು, ಕನ್ನಡ ಚಿತ್ರರಂಗದ ಹಿರಿಯ ನಟರಾಗಿದ್ದ ಇವರು ಕುಮಾರಸ್ವಾಮಿ ಲೇಔಟ್‌ದಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಸಂಜೆ 7: 30ಗೆ ಕೊನೆಯುಸಿರೆಳೆದಿದ್ದಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಇವರ ಅಂತಿಮ ದರ್ಶನವನ್ನು ಕುಮಾರಸ್ವಾಮಿ ಲೇಔಟ್ ನಲ್ಲಿ ಇರುವಂತಹ ಇವರ ನಿವಾಸದಲ್ಲಿ ರಾತ್ರಿ 11:30 ವರೆಗೂ ಅಂತಿಮ ದರ್ಶನವನ್ನು ಮಾಡಲು ಅವಕಾಶ ನೀಡಿದ್ದರು. ಆಗಸ್ಟ್‌ 5, 1942ರಲ್ಲಿ ತುಮಕೂರಿನ ತೊಂಡಗೆರೆ ಗ್ರಾಮದಲ್ಲಿ ಜನಿಸಿದರು. ನಾಟಕಕಾರಾಗಿದ್ದ ನಟ ಲೋಹಿತಾಶ್ವ ಅವರು ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಲ್ಲಿ ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದರು.

ಬಳಿಕ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕರ್ತವ್ಯ ಆರಂಭಿಸಿದರು. ಸುಮಾರು 40 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ನಟನೆಯಲ್ಲೂ ಅಭಿರುಚಿ ಹೊಂದಿದ್ದ ಲೋಹಿತಾಶ್ವ ಅವರು ನಾಟಕಕಾರನಾಗಿ ಚಿರಪರಿಚಿತರಾಗಿದ್ದರು.
ಲೋಹಿತಾಶ್ವ ಅವರು 1971ರಲ್ಲಿ ವತ್ಸಲಾ ಎನ್ನುವವರನ್ನು ವಿವಾಹವಾದರು.

ಮೂವರು ಮಕ್ಕಳ ಮುದ್ದಿನ ತಂದೆಯಾಗಿರುವ ಲೋಹಿತಾಶ್ವ ಅವರ ಪುತ್ರ ಶರತ್ ಲೋಹಿತಾಶ್ವ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ತಮ್ಮ ಧ್ವನಿ ಮೂಲಕವೇ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದ ಲೋಹಿತಾಶ್ವ ಅವರು ಈವರೆಗೂ ಒಟ್ಟು ಐದು ನೂರಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡ ಧಾರಾವಾಹಿಗಳಲ್ಲಿ ಇತಿಹಾಸ ಸೃಷ್ಟಿಸಿದ್ದ ನಟ ಶಂಕರ್‌ ನಾಗ್‌ ಅಭಿನಯದ ಮಾಲ್ಗುಡಿ ಡೇಸ್‌ ಧಾರಾವಾಹಿಯಲ್ಲಿ ಲೋಹಿತಾಶ್ವ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಗಿರೀಶ್‌ ಕಾಸರವಳ್ಳಿಯವರ ಗೃಹಭಂಗ, ಜಿ.ವಿ ಅಯ್ಯರ್‌ ನಿರ್ದೇಶನದ ನಾಟ್ಯರಾಣಿ ಶಕುಂತಲಾ, ಕೆ.ಎಂ ಚೈತನ್ಯಾ ನಿರ್ದೇಶನದ ಓಂ ನಮೋ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಲೋಹಿತಾಶ್ವ ಅವರು ಕರ್ನಾಟಕದ ಮನೆ ಮಾತಾಗಿದ್ದರು. 1981ರ ಮುನಿಯನ ಮಾದರಿ, ಸಾಂಗ್ಲಿಯಾನ, ಅಭಿಮನ್ಯು, ದಾದಾ, ಎ.ಕೆ 47 ಇನ್ನು ಅನೇಕ ಚಿತ್ರಗಳಲ್ಲಿ ನಟಿಸಿ ಕನ್ನಡ ಮೇರು ನಟರ ಜೊತೆ ತೆರೆ ಹಂಚಿಕೊಂಡಿದ್ದರು.

ಇನ್ನು ಕಿಚ್ಚ ಸುದೀಪ್‌ ಅಭಿನಯದ ಚಂದು ಸಿನಿಮಾ ಹಾಗೂ ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಅಭಿನಯದ ಸಾರಥಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಲೋಹಿತಾಶ್ವ ಅವರು ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. ಸುಮಾರು ವರ್ಷಗಳ ಕಾಲ ಸಿನಿಮಾ ರಂಗದಲ್ಲಿದ್ದ ಇವರು ಒಟ್ಟು ಮಾಡಿರುವ ಆಸ್ತಿ ಎಷ್ಟು ಎಂಬುವುದು ನೆಟ್ಟಿಗರಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ.

ಲೋಹಿತಾಶ್ವ ಅವರು ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಅಭಿನಯಿಸಿದೆ ತಮ್ಮ ಸ್ವಂತ ಊರಿನಲ್ಲಿ ಕೃಷಿಯನ್ನು ಮಾಡುವ ಮೂಲಕ ಸಮಯವನ್ನು ಕಳೆಯುತ್ತಿದ್ದರು ಎಂಬುವುದು ಈ ವರೆಗೆ ತಿಳಿದು ಬಂದಿರುವ ವಿಷಯ. ಕೃಷಿಯ ಬಗ್ಗೆ ಲೋಹಿತಾಶ್ವರವರಿಗೆ ಬಹಳ ಒಲವು. ಇನ್ನು ಕೃಷಿ ಹಾಗೂ ಟೈಲರಿಂಗ್ ಇವರ ಎರಡು ನೆಚ್ಚಿನ ಹವ್ಯಾಸಗಳು. ಇವರ ಒಟ್ಟು ಆಸ್ತಿಯ ಮೊತ್ತವು ಸುಮಾರು ನಾಲ್ಕು ಕೋಟಿಯಷ್ಟು ಇದ್ದು, ಮೂರು ಐಷಾರಾಮಿ ಕಾರುಗಳು ಹಾಗೂ ಹುಟ್ಟೂರಿನಲ್ಲಿ ಒಂದು ಸ್ವಂತ ಮನೆಯಿದೆ, ಈ ಎಲ್ಲಾ ಆಸ್ತಿಯೂ ಇವರ ಮೂರು ಗಂಡು ಮಕ್ಕಳಿಗೆ ಸಮನಾಗಿ ಪಾಲಾಗಲಿದೆ ಎಂದು ತಿಳಿದು ಬಂದಿದೆ.

ಶಂಕರ್ ನಾಗ್ ಅವರ ಅಪರೂಪದ ವಿಡಿಯೋ ಕೊನೆಗೂ ಸಿಕ್ತು ನೋಡಿ.! ಅಪ್ಪನ ಹುಟ್ಟುಹಬ್ಬಕ್ಕೆ ಮಗಳು ಕಾವ್ಯನಾಗ್ ಹಂಚಿಕೊಂಡ ಈ ವಿಡಿಯೋ ಒಮ್ಮೆ ನೋಡಿ.

ಸ್ನೇಹಿತರೆ ನಮ್ಮ ಕನ್ನಡ ಚಿತ್ರರಂಗದ ಹಲವಾರು ಚಿತ್ರನಟರಲ್ಲಿ ಶಂಕರ್ ನಾಗ್ ಕೂಡ ಒಬ್ಬರು ಇವರು ಬರಿ ನಟರಾಗಿ ಅಲ್ಲದೆ ಚಿತ್ರರಂಗದಲ್ಲಿ ನಿರ್ದೇಶಕ ನಿರ್ಮಾಪಕ ಹಾಗೂ ಕಥೆಯನ್ನು ಕೂಡ ಬರೆಯುತ್ತಿದ್ದರು ಎಂಬುವುದು ವಿಶೇಷ. ಇವರನ್ನು ಅಭಿಮಾನಿಗಳು ಪ್ರೀತಿಯಿಂದ ಕರಾಟೆ ಕಿಂಗ್, ಆಟೋ ರಾಜ, ಶಂಕರಣ್ಣ ಎಂಬ ಹೆಸರುಗಳಿಂದ ಕರೆಯುತ್ತಾರೆ. ಈಗಾಗಲೇ ಶಂಕರ್ ನಾಗ್ ರವರು ನಿ.ಧ.ನ.ರಾ‌ಗಿ ಸುಮಾರು 30 ವರ್ಷಗಳು ಕಳೆದಿದೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಆದರೂ ಅವರ ಮೇಲಿರುವ ಅಭಿಮಾನವನ್ನು ಅಭಿಮಾನಿಗಳು ಒಂದು ಚೂರು ಕೂಡ ಬಿಟ್ಟುಕೊಡಲು ತಯಾರಿಲ್ಲ. ಹಾಗಾಗಿ ಶಂಕರ್ ನಾಗ್ ಅವರು ಇಂದಿಗೂ ಕೂಡ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರೆ ಸುಳ್ಳಾಗುವುದಿಲ್ಲ. ಶಂಕರ್ ನಾಗ್ ರವರು ಕನ್ನಡ ಚಿತ್ರರಂಗದ ಚಾಣಾಕ್ಷ ನಟ ಎಂದರೆ ತಪ್ಪಾಗುವುದಿಲ್ಲ ಹೌದು ಸ್ನೇಹಿತರೆ, ಶಂಕರ್ ನಾಗ್ ರವರು ಬಹಳ ಕಲಾ ರಸಿಕರಾಗಿ ತಮ್ಮ ವೈವಿಧ್ಯಮಯವಾದ ಶೈಲಿಯಿಂದ, ಜೊತೆಗೆ ಹೊಸ ಹೊಸ ಯೋಚನಾ ಶಕ್ತಿಯನ್ನು ಬಳಸಿ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿದ್ದರಂತೆ.

ಶಂಕರ್ ನಾಗ್ ರವರ ಅಗಲಿಕೆಯಿಂದ ಸಿನಿಮಾರಂಗದ ಇನ್ನು ಎಷ್ಟೋ ಹಲವು ಸಿನಿಮಾಗಳು ಮುಂದಿನ ಹಂತಕ್ಕೆ ಹೋಗುವುದು ಅಸಾಧ್ಯವಾಗಿದೆ. ಸದ್ಯ ಶಂಕರ್ ನಾಗ್ ಅವರು ಈಗ ಇದ್ದಿದ್ದರೆ ಕನ್ನಡ ಚಿತ್ರರಂಗವನ್ನು ಒಂದು ಹಂತದಲ್ಲಿ ಎತ್ತರಕ್ಕೆ ತರುತ್ತಿದ್ದರು ಎಂಬುವುದು ಅಭಿಮಾನಿಗಳ ಮಾತಾಗಿದೆ. ಶಂಕರ್ ನಾಗ್ ರವರು ನಮ್ಮ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಜನಿಸುತ್ತಾರೆ.

ಶಂಕರ್ ನಾಗ್ ರವರು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಮುಂಬೈಗೆ ತೆರಳುತ್ತಾರೆ ತದನಂತರ ಶಂಕರ್ ನಾಗ್ ರವರಿಗೆ ಮರಾಠಿಯ ನಾಟಕದ ಮೇಲೆ ಹೆಚ್ಚು ಆಸಕ್ತಿಗಳು ಬೆಳೆಯುತ್ತದೆ. ಇನ್ನು ನಾಟಕದ ರಿಹರ್ಸೆಲ್ ಸಮಯದಲ್ಲಿ ಪರಿಚಯವಾಗುತ್ತಾರೆ ಅರುಂದತಿ ನಾಗ. ಶಂಕರ್ ನಾಗ್ ಅವರು ಅತ್ಯುತ್ತಮ ಕಥೆ ಬರಹಗಾರ ಎಂದರೆ ತಪ್ಪಾಗುವುದಿಲ್ಲ ಇವರು ಬರೆದು ನಿರ್ದೇಶನ ಮಾಡಿರುವ ಸಿನಿಮಾಗಳು ಇಂದಿಗು ಜನಪ್ರಿಯ.

ಒಂದಾನೊಂದು ಕಾಲದಲ್ಲಿ, ಸೀತಾರಾಮು, ಪ್ರೀತಿ ಮಾಡು ತಮಾಷೆ ನೋಡು, ನೋಡಿ ಸ್ವಾಮಿ ನಾವಿರೋದು ಹೀಗೆ, ಮಿಂಚಿನ ಓಟ, ಮೂಗನ ಸೇಡು, ಆಟೋ ರಾಜ, ಸಾಂಗ್ಲಿಯಾನ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಇನ್ನು ಶಂಕರ್ ನಾಗ್ ರವರು ನಿರ್ದೇಶಿಸಿದ ಕೆ ನಾರಾಯಣ್ ರವರ ಕೃತಿಯಾದ ಮಾಲ್ಗುಡಿ ಡೇಸ್ ಧಾರವಾಹಿಯು ಇಂದಿಗೂ ಅಷ್ಟೇ ಜನಪ್ರಿಯತೆಯನ್ನು ಹೊಂದಿದೆ.

ಕನ್ನಡ ರಂಗಭೂಮಿಯಲ್ಲಿ ಅವರ ಮೊದಲ ನಿರ್ದೇಶನದ ಪ್ರಯತ್ನ ಗಿರೀಶ್ ಕಾರ್ನಾಡ್ ಅವರ ಅಂಜು ಮಲ್ಲಿಗೆ. ಇವೆಲ್ಲವೂ ವೃತ್ತಿ ಜೀವನದ ಬಗ್ಗೆ ಆದರೆ, ಶಂಕರ್ ನಾಗ್ ರವರ ವೈಯಕ್ತಿಕ ಜೀವನದಲ್ಲಿ ಅರುಂಧತಿ ನಾಗರವರು ಶಂಕರ್ ನಾಗ್ ರವರ ಪತ್ನಿಯಾಗಿದ್ದಾರೆ. ಇನ್ನು ಶಂಕರ್ ನಾಗ್ ಹಾಗೂ ಅರುಂದತಿಯವರೆಗೆ ಕಾವ್ಯ ನಾಗ್ ಎಂಬ ಮಗಳಿದ್ದಾಳೆ.

ಕಾವ್ಯರವರು ತಂದೆ ತಾಯಿಯಂತೆ ರಂಗಭೂಮಿಯಲ್ಲಿ ಯಾವುದೇ ಆಸಕ್ತಿ ಹೊಂದಿಲ್ಲ ಆದರೆ ವೈಲ್ಡ್ ಲೈಫ್ ವಿಷಯದಲ್ಲಿ ಸ್ನಾನಕೋತ್ತರ ಪದವಿಯನ್ನು ಪಡೆದಿದ್ದಾರೆ. ಕಾವ್ಯ ನಾಗ್ ಅವರು ಈ ಮುಂಚೆ ವಿವಾಹವಾಗಿ ವಿದೇಶಕ್ಕೆ ತೆರಳಿದ್ದರು. ಸದ್ಯ ತಾಯಿನಾಡಿಗೆ ತಮ್ಮ ಕೊಡುಗೆ ಏನಾದರೂ ಇರಬೇಕು ಎಂದು ಕೋಕೊನಸ್ ಎಂಬ ತೆಂಗಿನ ಎಣ್ಣೆಯ ಸಂಸ್ಥೆಯೊಂದನ್ನು ಶುರು ಮಾಡಿದ್ದಾರೆ.

ಬೆಂಗಳೂರಿನಲ್ಲಿ ಶಂಕರ್ ನಾಗ್ ಅವರ ಹೆಸರಿನಲ್ಲಿ ರಂಗಮಂದಿರ ಒಂದನ್ನು ನಿರ್ಮಿಸಿ ಅದಕ್ಕೆ ರಂಗಶಂಕರ ಎಂದು ಹೆಸರಿಡಲಾಗಿದೆ. ಸದ್ಯ ಶಂಕರ್ ನಾಗ್ ರವರು ತಮ್ಮ ಕುಟುಂಬದ ಜೊತೆ ಸ್ವಲ್ಪ ಸಮಯ ಕಳೆದಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

ಯಾಕಿಷ್ಟು ನೋವು ಕೊಡ್ತಾ ಇದ್ದೀರ.? ನನ್ನ ಮೇಲೆ ಯಾಕೆ ದ್ವೇಷ.? ಅಂತ ತಪ್ಪು ನಾನೇನು ಮಾಡಿದ್ದಿನಿ.? ಹೇಳಿ ಎಂದು ಕಣ್ಣೀರು ಹಾಕ್ತಿರೋ ನಟಿ ರಶ್ಮಿಕಾ.!

ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದ ಸಾನ್ವಿ ಪಾತ್ರದ ಮೂಲಕ ಸಿನಿಮಾರಂಗ ಪ್ರವೇಶ ಮಾಡಿ ಇಂದು ನ್ಯಾಷನಲ್ ಕ್ರಶ್ ಆಗಿ ಗುರುತಿಸಿಕೊಳ್ಳುತ್ತಿರುವ ಪ್ರತಿಭಾನ್ವಿತ ನಟಿ. ಸದ್ಯಕ್ಕೆ ಇವರನ್ನು ಸಿನಿಮಾ ಇಂಡಸ್ಟ್ರಿಯ ಲಕ್ಕಿ ಹೀರೋಯಿನ್ ಎಂದೇ ಕರೆಯುತ್ತಿದ್ದಾರೆ. ಯಾಕೆಂದರೆ ಈಕೆ ನಟಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಕನ್ನಡದ ಮೂಲಕ ತನ್ನ ಕೆರಿಯರ್ ಸ್ಟಾರ್ಟ್ ಮಾಡಿದರು ಈಕೆ ಇಂದು ಟಾಲಿವುಡ್ ಕಾಲಿವುಡ್ ಹಾಗೂ ಬಾಲಿವುಡ್ ಅಂಗಳದಲ್ಲಿ ಬಹು ಬೇಡಿಕೆ ಇರುವ ನಟಿ. ಕನ್ನಡದ ದರ್ಶನ್ ಪುನೀತ್ ಗಣೇಶ್ ಧ್ರುವ ಸರ್ಜಾ ಈ ಸ್ಟಾರ್ ಹೀರೋಗಳು ಸೇರಿದಂತೆ ತೆಲುಗು ಮತ್ತು ತಮಿಳಿನಲ್ಲೂ ಕೂಡ ವಿಜಯ್, ಕಾರ್ತಿಕ್, ವಿಜಯ್ ದೇವರಕೊಂಡ, ನಿತಿನ್, ಅಲ್ಲು ಅರ್ಜುನ್, ಮಹೇಶ್ ಬಾಬು ಹೀಗೆ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

ಈಗಷ್ಟೇ ಗುಡ್ ಬೈ ಸಿನಿಮಾದ ಮೂಲಕ ಅಮಿತಾಬ್ ಜೊತೆ ಸ್ಕ್ರೀನ್ ಶೇರ್ ಮಾಡುವ ಅದೃಷ್ಟ ಪಡೆದುಕೊಂಡರು ಅತಿ ಕಡಿಮೆ ಸಮಯದಲ್ಲಿ ಇಷ್ಟು ಸಕ್ಸಸ್ ಕಂಡಿರುವ ಈ ನಟಿ ಅವರ ಅದೃಷ್ಟದಿಂದಲೋ ಅಥವಾ ಕಠಿಣ ಪರಿಶ್ರಮದಿಂದಲೋ ಈ ಲೆವೆಲ್ ಗೆ ಬೆಳೆದಿದ್ದಾರೆ. ಇದೀಗ ವ್ಯತ್ತಿ ಜೀವನದ ಉತ್ತುಂಗದಲ್ಲಿ ಇರುವ ಇವರು ಇನ್ಸ್ಟಾಗ್ರಾಮ್ ಅಲ್ಲಿ ಭಾವುಕವಾಗಿ ಪತ್ರ ಬರೆದು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

ಇವರು ಬರೆದಿರುವ ಸಾಲುಗಳು ಈ ರೀತಿ ಇವೆ. ನಾನು ನಟಿಯಾಗಲು ಈ ವೃತ್ತಿ ಆಯ್ದುಕೊಂಡಿದ್ದಕ್ಕಾಗಿ ಈಗ ಬೆಲೆ ತೆರುತ್ತಿದ್ದೇನೆ. ನನಗೆ ಗೊತ್ತು ನಾನು ಎಲ್ಲರಿಗೂ ಸಿಗುವವಳಲ್ಲ ಹೀಗಾಗಿ ನನ್ನನ್ನು ಒಪ್ಪದೇ ಇರುವ ಕಾರಣಕ್ಕೆ ನೆಗೆಟಿವ್ ಆಗಿ ಏನನ್ನಾದರೂ ಹೇಳಬಹುದು ಎಂದಲ್ಲ. ನಾನು ನೋಡಿದ್ದೇನೆ ಸೋಶಿಯಲ್ ಮೀಡಿಯಾದಲ್ಲಿ ಈವರಿಗೆ ನನ್ನನ್ನು ಬಹಳಷ್ಟು ಟ್ರೋಲ್ ಮಾಡಿದ್ದಾರೆ.

ಒಂದು ಹಂತದವರೆಗೆ ನಾನು ಕೂಡ ನೆಗ್ಲೆಟ್ ಮಾಡಿದ್ದೆ ಇನ್ನು ಕೂಡ ಅದೇ ಮುಂದುವರೆದಿದೆ. ನಾನು ಒಬ್ಬ ನಟಿಯಾಗಿ ನಿಮ್ಮನ್ನು ರಂಜಿಸಲು ನನ್ನಿಂದ ಎಷ್ಟು ಆಗುತ್ತದೆ ಅಷ್ಟು ಪ್ರಯತ್ನ ಪಡುತ್ತೇನೆ. ಅದಕ್ಕಾಗಿ ನಾನು ಶ್ರಮ ಹಾಕುತ್ತಿದ್ದೇನೆ. ನಿಮ್ಮನ್ನು ರಂಜಿಸುವುದು ಅಷ್ಟೇ ನನ್ನ ಕೆಲಸ ಆ ಮೂಲಕ ನಾನು ಖುಷಿ ಕಾಣುತ್ತೇನೆ. ಇದರ ಆಚೆಗೆ ನೆಟ್ಟಿಗರು ನನ್ನನ್ನು ನಾನು ಉತ್ತರಿಸಿದ ಪ್ರಶ್ನೆಗಳ ಸಲುವಾಗಿ ಬಹಳ ವಿಪರೀತವಾಗಿ ಟೀಕಿಸುತ್ತಿದ್ದಾರೆ.

ಇದು ನನ್ನ ವೃತ್ತಿ ಜೀವನದ ಹಾಗೂ ಅದರ ಆಚೆಗಿನ ಸಂಬಂಧಗಳನ್ನು ಹಾಳು ಮಾಡುತ್ತಿದೆ. ನಾನು ಪಾಲ್ಗೊಳ್ಳುವ ಸಂದರ್ಶನಗಳಲ್ಲಿ ನಾನು ಮಾತನಾಡುವ ವಿಷಯಗಳು ಕೂಡ ನನ್ನ ವಿರುದ್ಧ ತಿರುಗಿತ್ತಿವೆ. ಇಷ್ಟೆಲ್ಲ ಯಾಕೆ ಬೆಳೆಯುತ್ತದೆ ಎಂದು ನನಗೆ ಅರ್ಥ ಆಗುತ್ತಿಲ್ಲ. ಇಲ್ಲಿಯವರೆಗೆ ನಾನು ಕೆಲಸ ಮಾಡಿದ ಎಲ್ಲರ ಜೊತೆ ಹಾಗೂ ನನ್ನ ಸುತ್ತಮುತ್ತ ಇರುವ ಎಲ್ಲರೊಡನೇ ಮೊದಲಿನಂತೆ ಇದ್ದೇನೆ.

ನಾನು ಪ್ರೀತಿಯನ್ನು ಅಷ್ಟೇ ಎಲ್ಲರಿಗೂ ಹಂಚಲು ಬಯಸುತ್ತೇನೆ. ಆದರೂ ಕೂಡ ಹಲವು ವಿಚಾರದಲ್ಲಿ ನನ್ನ ಮನಸ್ಸಿಗೆ ಬಹಳ ನೋವಾಗುತ್ತಿದೆ. ಇತ್ತೀಚೆಗಂತೂ ಕಳೆದ ಕೆಲವು ದಿನಗಳಿಂದ ವಾರಗಳಿಂದ ತಿಂಗಳಿಂದ ವರ್ಷಗಳಿಂದ ನಾನು ಮಾನಸಿಕವಾಗಿ ಇದರಿಂದ ಬಹಳ ನೋವು ತಿನ್ನುತ್ತಿದ್ದೇನೆ. ಇದರ ಬಗ್ಗೆ ನಾನು ಮೊದಲೇ ಮಾತನಾಡಬೇಕಿತ್ತು ಆದರೆ ಇನ್ನೂ ನನ್ನಿಂದ ಸಹಿಸಲು ಸಾಧ್ಯವಾಗದೆ ಈಗ ಮಾತನಾಡುತ್ತಿದ್ದೇನೆ ಎಂದು ಹೇಳಿಕೊಂಡು ಕೊನೆಯಲ್ಲಿ ಇಂತಿ ನಿಮ್ಮ ರಶ್ಮಿಕಾ ಎಂದು ಬರೆದುಕೊಂಡಿದ್ದಾರೆ.

ನಟಿ ರಶ್ಮಿಕಾ ಅವರಿಗೆ ಈಗ ತಮ್ಮ ತಪ್ಪಿನ ಅರಿವಾಗಿದೆ ಪಶ್ಚಾತಾಪವಾಗುತ್ತಿದೆ ಅಂತ ಕಾಣಿಸುತ್ತದೆ. ರಕ್ಷಿತ್ ಶೆಟ್ಟಿ ಗೆ ಮಾಡಿದ ಮೋಸ ಹಾಗೂ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿದ ರೀತಿ, ನಮ್ಮ ಕನ್ನಡ ಭಾಷೆಯ ಮೇಲೆ ಇರುವ ಅಸಡ್ಡೆ ಇವೆಲ್ಲದರಿಂದಾಗಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸದ್ಯಕ್ಕೆ ರಶ್ಮಿಕಾ ಏನೇ ಮಾಡಿದರು ಕೂಡ ಟ್ರೊಲ್ ಮಾಡುತ್ತಿದ್ದಾರೆ ಈ ಟ್ರೋಲ್ ಗಳಿಂದ ಬೇಸತ್ತು ಬಹಳಾನೇ ನೊಂದು ಹೋಗಿದ್ದಾರೆ. ಇದೇ ಕಾರಣಕ್ಕಾಗಿ ತಮ್ಮ instagram ಖಾತೆಯಲ್ಲಿ ಈ ರೀತಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ಅರ್ಜುನ್ ಸರ್ಜಾ ಮಗಳು ಐಶ್ವರ್ಯಗೆ ಮೋಸ ಮಾಡಿದ ಖ್ಯಾತ ನಟ. ಮಗಳಿದ ಅನ್ಯಾಯವನ್ನು ಮಾಧ್ಯಮ ಮುಂದೆ ಹೇಳಿ ದುಃಖ ಹೊರ ಹಾಕಿದ ನಟ ಅರ್ಜುನ್ ಸರ್ಜಾ

ಅರ್ಜುನ್ ಸರ್ಜಾ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಚಿತ್ರರಂಗದಲ್ಲೂ ಕೂಡ ಹೆಸರು ಮಾಡಿರುವ ಖ್ಯಾತ ನಟ ಮೂಲತಃ ಕನ್ನಡದವರೇ ಆದ ಇವರಿಗೆ ಹೆಚ್ಚಿನ ಅವಕಾಶಗಳು ತಮಿಳು ಸಿನಿಮಾ ರಂಗದಲ್ಲಿ ಕಂಡುಬಂದದ್ದರಿಂದ ಅಲ್ಲೇ ನೆಲೆಯೂರಿರುವ ಇವರು ಆಗಾಗ ಕನ್ನಡ ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಳ್ಳುತ್ತಾರೆ. ಇವರು ಒಬ್ಬ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿ ಸಹ ನಿರ್ದೇಶಕನಾಗಿ ಮತ್ತು ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಕೂಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಸಿಂಹದಮರಿ ಸೈನ್ಯ ಎನ್ನುವ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಇವರು ಕನ್ನಡದಲ್ಲಿ ಪ್ರತಾಪ್, ಅಳಿಮಯ್ಯ, ಅಭಿಮನ್ಯು, ಗೇಮ್, ಪ್ರಸಾದ್ ಇನ್ನು ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿರ್ದೇಶಕನಾಗಿ ಕೂಡ ಸೈ ಅನಿಸಿಕೊಂಡಿರುವ ಇವರು ತಮಿಳಿನಲ್ಲಿ ಅಬ್ಬಾಸ್, ಪ್ರಭುದೇವ್ ಇಂತಹ ಖ್ಯಾತ ನಟರಿಗೂ ಕೂಡ ನಿರ್ದೇಶನ ಮಾಡಿದ್ದಾರೆ ಅಲ್ಲದೆ ತಮ್ಮ ಸಿನಿಮಾಗಳನ್ನೂ ಕೂಡ ನಿರ್ದೇಶನ ಮಾಡಿಕೊಂಡಿದ್ದಾರೆ.

ಕನ್ನಡದಲ್ಲಿ ತಮ್ಮ ಮಗಳನ್ನು ಲಾಂಚ್ ಮಾಡಲು ಪ್ರೇಮ ಬರಹ ಎನ್ನುವ ಸಿನಿಮಾವನ್ನು ನಿರ್ದೇಶನ ಮತ್ತು ನಿರ್ಮಾಣ ಕೂಡ ಮಾಡಿದ್ದರು. ಭಾರತದ ಸೈನಿಕರ ಕಷ್ಟ ಸುಖ ತಿಳಿಸುವ ಸಿನಿಮಾ ಕೂಡ ಆಗಿದ್ದು ಇದೊಂದು ಒಳ್ಳೆಯ ಕಂಟೆಂಟ್ ಚಿತ್ರವಾಗಿ ಕನ್ನಡದಲ್ಲಿ ಸದ್ದು ಮಾಡಿತ್ತು. ಅಲ್ಲದೆ ಸಿನಿಮಾದ ಹಾಡುಗಳು ಕೂಡ ಸೂಪರ್ ಹಿಟ್ ಆಗಿದ್ದವು. ಈ ಸಿನಿಮಾದ ಆಂಜನೇಯನ ಹಾಡಿಗೆ ಇಡೀ ಸರ್ಜಾ ಕುಟುಂಬದ ಜೊತೆ ದರ್ಶನ್ ಸಹ ಹೆಜ್ಜೆ ಹಾಕಿದ್ದರು.

ಕನ್ನಡ ಆದ ಬಳಿಕ ತೆಲುಗು ಚಿತ್ರರಂಗದಲ್ಲೂ ಕೂಡ ತಮ್ಮ ಮಗಳನ್ನು ಲಾಂಚ್ ಮಾಡುವ ಉದ್ದೇಶದಿಂದ ಅರ್ಜುನ್ ಸರ್ಜಾ ಅವರು ತಾವೇ ಕಥೆಯೊಂದನ್ನು ತಯಾರಿಸಿದ್ದರು. ನಟ ವಿಶ್ವಕ್ ಸೇನ್ ಅವರಿಗೆ ನಾಯಕನಾಗಲು ಆಫರ್ ಮಾಡಿ ಕಥೆ ಹೇಳಿದ್ದರು. ಮೊದಲ ಬಾರಿಗೆ ಕಥೆ ಕೇಳಿದ ಇವರು ಸಿನಿಮಾ ಮಾಡೋದಾಗಿ ಒಪ್ಪಿಕೊಂಡಿದ್ದರು.

ಜೂನ್ ತಿಂಗಳಲ್ಲೇ ಇದಕ್ಕೆ ಮುಹೂರ್ತ ನಡೆದಿದ್ದು ಪವನ್ ಕಲ್ಯಾಣ್ ಅವರು ಬಂದು ಈ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಇದಾದ ಬಳಿಕ ಅಕ್ಟೋಬರ್ ತಿಂಗಳಿನಲ್ಲಿ ಸಿನಿಮಾ ಶುರು ಆಗಬೇಕಿತ್ತು ಆದರೆ ನಟ ವಿಶ್ವಕ್ ಸೇನ್ ಅವರು ತಾವು ಹೇಳಿಕೊಂಡ ಮಾತಿನಂತೆ ನಡೆಯದೇ ಶೂಟಿಂಗ್ ಇಂದ ತಪ್ಪಿಸಿಕೊಂಡು ಓಡಾಡುತ್ತಿದ್ದಾರಂತೆ. ಈ ಬಗ್ಗೆ ಮಾಧ್ಯಮಗಳನ್ನು ಕರೆದು ತಮ್ಮ ಅಳಲನ್ನು ತೋಡಿಕೊಂಡಿರುವ ಅರ್ಜುನ್ ಸರ್ಜಾ ಅವರು ನಟ ವಿಶ್ವಕ್ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ.

ಅವರ ಮಾತುಗಳು ಹೀಗಿದ್ದವು ನಟ ವಿಶ್ವಕ್ ಹಲವು ಬಾರಿ ನನ್ನಲ್ಲಿ ಕಥೆ ಹೇಳಿ ಎಂದು ಕೇಳಿದ್ದಾರೆ. ಪ್ರತಿ ಬಾರಿ ಕೂಡ ಬದಲಾಯಿಸಿದ ವಿಷಯವನ್ನು ಸೇರಿಸಿ ಹೊಸದಾಗಿ ನಾನು ಕಥೆ ಹೇಳಿದ್ದೇನೆ. ಸಂಭಾವನೆ ಬಗ್ಗೆ ನನ್ನೊಂದಿಗೆ ಅವರು ಜಗಳ ಆಡಿಕೊಂಡಿದ್ದರು, ಆತನ ಎಲ್ಲಾ ಡಿಮಾಂಡ್ ಗಳಿಗೂ ನಾನು ಒಪ್ಪಿಕೊಂಡಿದ್ದೆ, ಅಲ್ಲದೆ ಒಂದು ಏರಿಯಾದ ರೈಟ್ಸ್ ಕೂಡ ಬಿಟ್ಟುಕೊಡುವಂತೆ ಕೇಳಿದರು ಅದಕ್ಕೂ ಕೂಡ ಸಮ್ಮತಿಸಿದ್ದೆ.

ಎಷ್ಟೋ ಬಾರಿ ಶೂಟಿಂಗ್ ಶುರುವಾಗಬೇಕು ಎನ್ನುವ ಸಮಯದಲ್ಲಿ ಮೆಸೇಜ್ ಮಾಡಿ ಇದು ನನಗೆ ಶೂಟಿಂಗ್ ಬರಲು ಆಗುವುದಿಲ್ಲ ಎಂದು ತಿಳಿಸುತ್ತಾರೆ. ಈ ರೀತಿ ಒಬ್ಬ ನಿರ್ದೇಶನಕ್ಕೆ ಗೌರವ ಕೊಡದ ನಟನನ್ನು ನೋಡಿಲ್ಲ. ನಾನು ಈವರಿಗೆ ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದೇನೆ. ಆದರೆ ವಿಶ್ವಕ್ ಅತಿಯಾಗಿ ವರ್ತಿಸುತ್ತಿದ್ದಾರೆ.

ನಾನು ಇದುವರೆಗೆ ಯಾರಿಗೂ ಮಾಡಿದಷ್ಟು ಕರೆಗಳನ್ನು ಅವರಿಗೆ ಮಾಡಿದ್ದೇನೆ. ಮೊದಲ ಪೋಶನ್ ಗಾಗಿ ಜಗಪತಿ ಬಾಬು ಹಾಗೂ ಕೆರಳದ ನಟರಿಂದ ಡೇಟ್ಸ್ ತೆಗೆದುಕೊಂಡಿದ್ದೆ. ವಿಶ್ವಕ್ ಅವರ ಬೇಜವಾಬ್ದಾರಿಯಿಂದ ಎಲ್ಲರಿಗೂ ತೊಂದರೆ ಆಗುತ್ತಿದೆ. ಇಂತಹ ನಟನನ್ನು ನಾನೆಲ್ಲೂ ನೋಡಿಲ್ಲ ಎಂದು ತಮ್ಮ ಬೇಸರವೆಲ್ಲಾ ಹೊರ ಹಾಕಿದ್ದಾರೆ. ಅರ್ಜುನ್ ಸರ್ಜಾ ಮಾತನಾಡಿದ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

ಮೈ ಮೇಲೆ ಇದ್ದ ಬಟ್ಟೆ ಒಂದೊಂದೆ ಕಳಚಿ, ಕೊನೆಗೆ ಬಿಕನಿಯಲ್ಲಿ ಕಾಣಿಸಿಕೊಂಡ KGF ಸಿನಿಮಾ ಹೀರೋಯಿನ್ ಶ್ರೀನಿಧಿ ಶೆಟ್ಟಿ, ಈಕೆ ಬೋಲ್ಡ್ ಲುಕ್ ನೋಡಿ ಯಶ್ ದಿಗ್ಭ್ರಮೆ.

ಶ್ರೀನಿಧಿ ಶೆಟ್ಟಿ ಹೆಸರಿಗೆ ತಕ್ಕ ಹಾಗೆ ನಿಧಿ ಅಷ್ಟು ಸೌಂದರ್ಯವನ್ನು ಹೊಂದಿರುವ ಮಾಡೆಲ್ ಹಾಗೂ ಆಕ್ಟ್ರೆಸ್ಸ್. 2015 ರಲ್ಲಿ ಮಿಸ್ ಕರ್ನಾಟಕ ಆಗಿದ್ದ ಇವರು 2016 ರಲ್ಲಿ ಮಿಸ್ ಸೂಪರ್ ನ್ಯಾಷನಲ್ ಅವಾರ್ಡ್ ಅನ್ನು ಕೂಡ ಮಡಿಕೇರಿಸಿಕೊಂಡರು. ಈ ಮೂಲಕ ಭಾರತವನ್ನು ಅಲ್ಲಿ ರೆಪ್ರೆಸೆಂಟ್ ಮಾಡಿದ ಎರಡನೇ ವುಮೇನ್ ಆಗಿದ್ದಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಮಾಡೆಲ್ ಆಗಿ ತಮ್ಮ ಕೆರಿಯರ್ ಅಲ್ಲಿ ಗುರುತಿಸಿಕೊಂಡಿದ್ದ ಇವರು ನಟನೆಗಾಗಿ ಮೊದಲು ಬಣ್ಣ ಹಚ್ಚಿದ್ದು ಪ್ರಶಾಂತ್ ನೀಲ್ ಅವರ ನಿರ್ದೇಶನದ ಕೆಜಿಎಫ್ ಸಿನಿಮಾದಲ್ಲಿ. ಸಿನಿಮಾದಲ್ಲಿ ಖಡಕ್ ರಾಖಿ ಬಾಯ್ ಎದುರು ಜಂಬದ ಹುಡುಗಿ ಕಾಣಿಸಿಕೊಂಡ ಶ್ರೀನಿಧಿ ತಮ್ಮ ಆಟಿಟ್ಯೂಡ್ ಆಕ್ಟಿಂಗ್ ಇಂದ ಪ್ರೇಕ್ಷಕರ ಮನ ಗೆದ್ದುಬಿಟ್ಟರು. ಅಭಿನಯಿಸಿದ ಮೊದಲ ಸಿನಿಮಾದಲ್ಲಿಯೇ ತಾವಂತಹ ಅದ್ಭುತ ನಟಿ ಎಂದು ನಿರೂಪಿಸಿದ ಇವರು ಬಹಳ ಜನಗಳ ಪ್ರೀತಿಯನ್ನು ಪಡೆದರು.

ನಂತರ ಇವರು ಕೆಜಿಎಫ್ ಟು ಸಿನಿಮಾದಲ್ಲಿ ಕಾಣಿಸಿಕೊಂಡ ಪರಿ ಆ ಸಿನಿಮಾದ ಅವರ ಬದಲಾದ ಪಾತ್ರ ರೀನಾ ಮತ್ತು ರಾಕಿ ಭಾಯ್ ಜೋಡಿಯನ್ನು ಇಡೀ ದೇಶವೇ ಮೆಚ್ಚಿ ಕೊಂಡಾಡುವಂತೆ ಮಾಡಿತು. ಎಲ್ಲಕ್ಕಿಂತ ಹೆಚ್ಚಾಗಿ ಮೊದಲ ಭಾಗದಲ್ಲಿ ಜಂಭದ ಹುಡುಗಿ ಆಗಿದ್ದ ಇವರು ಕೆಜಿಎಫ್ ಟು ಸಿನಿಮಾದಲ್ಲಿ ರಾಖಿ ಬಾಯ್ ಅನ್ನು ಅರ್ಥ ಮಾಡಿಕೊಂಡು ಅವರ ಸಂಗಾತಿ ಆಗಲು ಒಪ್ಪಿಕೊಳ್ಳುತ್ತಾರೆ.

ಹಾಗೆ ಈ ಬಾರಿ ಸಾಂಪ್ರದಾಯಕವಾಗಿ ಮೈ ತುಂಬಾ ಬಟ್ಟೆ ತೊಟ್ಟು ಹಣೆಗೆ ಸಿಂಧೂರ ಹಿಟ್ಟು ಕೈತುಂಬ ಬಳೆ ಹಾಕಿಕೊಂಡು ಕಾಣಿಸಿಕೊಂಡಿದ್ದ ಇವರು ಬಹಳ ಲಕ್ಷಣವಾಗಿ ಕಾಣುತ್ತಿದ್ದರು. ಸಿನಿಮಾ ಮುಗಿದ ಬಳಿಕ ಕೂಡ ಇಂಟರ್ವ್ಯೂಗಳಲ್ಲಿ ಪ್ರಮೋಷನ್ಗಳಲ್ಲಿ ಹೀಗೆ ಎಲ್ಲಾ ಕಡೆ ಸೀರೆಯಲ್ಲಿ ಬಹಳವಾಗಿ ಕಾಣಿಸಿಕೊಳ್ಳುತ್ತಿದ್ದ ಇವರು ಸೀರೆ ತನ್ನ  ಫೇವರೆಟ್ ಡ್ರೆಸ್ ಎಂದು ಕೂಡ ಹೇಳಿಕೊಂಡಿದ್ದರು.

ಕೆಜಿಎಫ್ ಟು ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ಅವರನ್ನು ನೋಡಿದ ಮೇಲೆ ನಟಿ ಎಂದರೆ ಹೀಗಿರಬೇಕು ಎಷ್ಟು ಸುಂದರವಾಗಿ ಲಕ್ಷಣವಾಗಿ ಮೈತುಂಬ ಬಟ್ಟೆ ತೊಟ್ಟು ಸಾಂಪ್ರದಾಯಿಕವಾಗಿ ಇದ್ದಾರೆ ಎಂದು ಹಾಡಿ ಹೊಗಳುತ್ತಿದ್ದವರು ಇದೀಗ ಇವರ ಹೊಸ ವೈರಲಾಗುತ್ತಿರುವ ವಿಡಿಯೋ ನೋಡಿ ಶಾಕ್ ಗೆ ಒಳಗಾಗಿದ್ದಾರೆ.

ಮೆಹಬೂಬ ಮೆಹಬೂಬ ಎಂದು ಯಶ್ ಅವರ ಹಿಂದೆ ಸುತ್ತುತ್ತಾ, ತನ್ನ ಸೀರೆಯನ್ನು ಸುತ್ತಲೂ ಹರಡುತ್ತಾ ಕುಣಿಯುತ್ತಿದ್ದ ಶ್ರಿನಿಧಿ ಶೆಟ್ಟಿ ಅವರು ಇದೀಗ ಬಿಕಿನಿ ತೊಟ್ಟು ಬೀಚಲ್ಲಿ ಓಡಾಡಿರುವುದು ಇವರೇನ ಶ್ರೀನಿಧಿ ಶೆಟ್ಟಿ ಎನ್ನುವಷ್ಟು ಪ್ರೇಕ್ಷಕರನ್ನು ಶಾಖ್ ಗೆ ಒಳ ಮಾಡಿದೆ. ಇದು ಅವರದ್ದೇ ವಿಡಿಯೋ ಹಾಗು ಫೋಟೋಗಳು ಆಗಿದ್ದು ಇದನ್ನು ಸ್ವತಃ ನಟಿ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಆದರೆ ಈವರೆಗೆ ಯಾರೂ ಕೂಡ ಶ್ರೀನಿಧಿ ಶೆಟ್ಟಿ ಅವರನ್ನು ಈ ಅವತಾರದಲ್ಲಿ ಕಂಡಿರಲಿಲ್ಲ ಹಾಗೂ ಊಹಿಸಿಕೊಂಡಿರಲಿಲ್ಲ ಕೂಡ. ಆದರೆ ಸಿನಿಮಾ ಎನ್ನುವುದು ಪಾತ್ರ, ವೈಯಕ್ತಿಕ ಬದುಕು ಅವರವರ ಇಚ್ಛೆ ನಟ್ಟಿಗರು ಸುಮ್ಮನಾಗಿದ್ದರೆ ರಾಕಿ ಭಾಯ್ ಅಭಿಮಾನಿಗಳು ಕೆಜಿಎಫ್ ಅಭಿಮಾನಿಗಳು ಮಾತ್ರ ಶ್ರೀನಿಧಿ ಶೆಟ್ಟಿ ಅವರನ್ನು ಆ ಅವತಾರದಲ್ಲಿ ಕಂಡು ಅರಗಿಸಿಕೊಳ್ಳದೆ ಒದ್ದಾಡುತ್ತಿದ್ದಾರೆ.

ಏನೇ ಆದರೂ ಅಭಿಮಾನಿಗಳು ಒಮ್ಮೆ ಒಪ್ಪಿಕೊಂಡ ಪಾತ್ರ ಹಾಗೂ ಮನದಲ್ಲಿ ಮೂಡಿಸಿಕೊಂಡ ಭಾವನೆ ವಿರುದ್ಧ ಏನಾದರೂ ನಡೆದರೆ ತಕ್ಷಣಕ್ಕೆ ಅದನ್ನು ಒಪ್ಪಿಕೊಳ್ಳುವುದು ಕಷ್ಟ.  ಆದರೆ ನಟಿ ಮುಂದೆ ಸಿನಿಮಾಗಳಲ್ಲಿ ಒಪ್ಪಿಕೊಳ್ಳುವ ಪಾತ್ರಗಳನ್ನು ನೋಡಿದ ಮೇಲೆ ಅವರ ಮೇಲಿರುವ ಟ್ರೆಡಿಷನಲ್ ಭಾವನೆ ಬದಲಾಗಬಹುದೇನೋ ಕಾದು ನೋಡೋಣ. ಶ್ರಿನಿಧಿ ಶೆಟ್ಟಿ ಅವರ ಬೋಲ್ಡ್ ಲುಕ್ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಮಾನಿಗಳು ತಪ್ಪದೆ ಕಾಮೆಂಟ್ ಮಾಡಿ.

ಕಿರಿಕ್ ಪಾರ್ಟಿ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ್ದೆ, ನಟಿಸಲು ಆಶಕ್ತಿ ಇರಲಿಲ್ಲ, ಆದ್ರೆ ನನ್ನ ಗುರು ಒತ್ತಯ ಮಾಡಿದ್ರು ಅಂತ ಆಕ್ಟ್ ಮಾಡ್ದೆ ಅಷ್ಟೇ. ಸಂದರ್ಶನದಲ್ಲಿ ರಶ್ಮಿಕಾ ಹೇಳಿದ ಮಾತಿದು.

ಕೊಡಗಿನ ಕುವರಿ ನ್ಯಾಚುರಲ್ ಬೆಡಗಿ ರಶ್ಮಿಕ ಮಂದಣ್ಣ ಅವರು ಇಂದು ಇಡೀ ದೇಶಕ್ಕೆ ನ್ಯಾಷನಲ್ ಕ್ರಶ್ ಆಗಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕೆರಿಯರ್ ಶುರು ಮಾಡಿದ ಇವರು ನಂತರ ಟಾಲಿವುಡ್ ಅಂಗಳಕ್ಕೆ ಜಿಗಿದು ಅದೃಷ್ಟವನ್ನು ಬೆಳಗಿಸಿ ಕೊಂಡವರು. ಸದ್ಯಕ್ಕೆ ಇವರನ್ನು ಕನ್ನಡದವರ ಅಥವಾ ತೆಲುಗು ಅವರ ಎಂದು ಆಶ್ಚರ್ಯ ಪಡುವಷ್ಟು ಹೆಚ್ಚಿನ ಸಿನಿಮಾಗಳನ್ನು ಇವರು ತೆಲುಗಿನಲ್ಲಿಯೇ ಮಾಡಿದ್ದಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಕಾಲಿವುಡ್ ಹಾಗೂ ಮಾಲಿವುಡ್ ಅಲ್ಲೂ ಕೂಡ ಹೆಸರು ಮಾಡಿರುವ ರಶ್ಮಿಕ ಮಂದಣ್ಣ ಅವರು ಬಾಲಿವುಡ್ ಕಡೆಗೂ ಮುಖ ಮಾಡಿದ್ದು ಈಗಷ್ಟೇ ಅಮಿತಾಬ್ ಅವರ ಜೊತೆ ಗುಡ್ ಬೈ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಅತಿ ಕಡಿಮೆ ಸಮಯದಲ್ಲಿ ಇಷ್ಟು ದೊಡ್ಡ ಮಟ್ಟದ ಸಕ್ಸಸ್ ಪಡೆದ ನಟಿಯರಲ್ಲಿ ರಶ್ಮಿಕ ಮಂದಣ್ಣ ಮೊದಲ ಸಾಲಿಗೆ ಬರುತ್ತಾರೆ.

ಈಕೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸಿದ ಆ ಸಮಯದಲ್ಲಿ ಯಾರು ಕೂಡ ಇವರು ಇಷ್ಟೊಂದು ದೇಶವೇ ಗುರುತಿಸುವಷ್ಟು ಮಟ್ಟಕ್ಕೆ ಬೆಳೆಯುತ್ತಾರೆ ಎಂದು ಊಹಿಸಿಯೂ ಇರಲಿಲ್ಲ. ಇಷ್ಟಕ್ಕೆಲ್ಲ ಕಾರಣ ಆಗಿದ್ದು ಕಿರಿಕ್ ಪಾರ್ಟಿ ಎನ್ನುವ ಆ ಒಂದು ಸಿನಿಮಾ. ರಿಷಬ್ ಶೆಟ್ಟಿ ಅವರ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ ಅವರ ನಿರ್ಮಾಣ ಮತ್ತು ನಾಯಕತ್ವದಲ್ಲಿ ತಯಾರಾದ ಈ ಸಿನಿಮಾ ಅನೇಕರಿಗೆ ಜೀವನ ಕೊಟ್ಟಿತ್ತು.

ರಿಷಬ್ ಶೆಟ್ಟಿ ಎನ್ನುವ ಯಶಸ್ವಿ ನಿರ್ದೇಶಕ ಈ ಸಿನಿಮಾ ಮೂಲಕ ಕನ್ನಡಕ್ಕೆ ಒಬ್ಬ ಭರವಸೆಯ ನಿರ್ದೇಶಕರಾದರು. ರಕ್ಷಿತ್ ಶೆಟ್ಟಿ ಮತ್ತೊಮ್ಮೆ ಬ್ರೇಕ್ ಪಡೆದುಕೊಂಡ ಸಿನಿಮಾ ಇದು. ಇದಲ್ಲದೆ ಸಂಯುಕ್ತ ಹೆಗಡೆ, ರಶ್ಮಿಕ ಮಂದಣ್ಣ ಈ ಎರಡು ನಾಯಕಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಸಿನಿಮಾ ಕಿರಿಕ್ ಪಾರ್ಟಿ. ಯಾರೇ ಆದರೂ ಕೂಡ ತಮ್ಮ ಮೊದಲ ಅವಕಾಶದ ಬಗ್ಗೆ ಕೊನೆಯವರೆಗೂ ಚಿರಋಣಿ ಆಗಿರುತ್ತಾರೆ ಮತ್ತು ನಾವು ಎಲ್ಲಿಂದ ಬೆಳೆದವು ಆ ಬೇರಿನ ಬಗ್ಗೆ ಗೌರವ ಹೊಂದಿರುತ್ತಾರೆ.

ಆದರೆ ರಶ್ಮಿಕ ಮಂದಣ್ಣ ಅವರ ಪಾಲಿಗಂತೂ ಆ ಸಂಸ್ಕಾರ ಇಲ್ಲವೇ ಇಲ್ಲ. ಇಂದು ಇಡೀ ದೇಶವೇ ಆಕೆಯ ನಟನೆಯನ್ನು ಹೊಗಳುತ್ತಿರಬಹುದು ಅಥವಾ ಅದೃಷ್ಟದ ನಟಿ ಎಂದು ಹೊತ್ತು ಮರೆಸುತ್ತಿರಬಹುದು ಕನ್ನಡಿಗರು ಹಾಗೂ ಕರ್ನಾಟಕ ಪಾಲಿಗೆ ಆಕೆ ಎಂದು ಮೋಸಗಾತಿಯೇ.

ಯಾಕೆಂದರೆ ಇತ್ತೀಚಿಗೆ ಅವರು ಕನ್ನಡದ ಬಗ್ಗೆ ಕನ್ನಡಿಗರ ಸಿನಿಮಾಗಳ ಬಗ್ಗೆ ಕೊಡುತ್ತಿರುವ ಹೇಳಿಕೆಗಳು ಈ ಮಟ್ಟಿಗೆ ಅವರನ್ನು ದ್ವೇಷಿಸಲು ಕಾರಣವಾಗಿದೆ. ತನಗೆ ಲೈಫ್ ಕೊಟ್ಟ ನಿರ್ದೇಶಕ ರಿಶಬ್ ಶೆಟ್ಟಿ ಎನ್ನುವುದು ರಶ್ಮಿಕ ಮಂದಣ್ಣ ಮರೆತಿರುವಂತಿದೆ ಹಾಗಾಗಿ ಇತ್ತೀಚೆಗಷ್ಟೇ ಮುಂಬೈನಲ್ಲಿ ಕ್ಯಾಮೆರಾ ಒಂದಕ್ಕೆ ಬಿದ್ದ ಇವರನ್ನು ಕಾಂತಾರ ಸಿನಿಮಾ ಬಗ್ಗೆ ಕೇಳಿದಾಗ ಇನ್ನು ನೋಡಿಲ್ಲ ಎಂದು ಸನ್ನೆ ಮಾಡಿ ಹೋದರು.

ಇಡೀ ದೇಶವೇ ಮೆಚ್ಚಿ ಕಾಂತರಾ ಸಿನಿಮಾ ಬಗ್ಗೆ ಘಟಾನುಘಟಿಗಳೆ ಅಭಿಪ್ರಾಯ ತಿಳಿಸುತ್ತಿರುವಾಗ ಕನಿಷ್ಠ ಪಕ್ಷ ಕನ್ನಡದ ಸಿನಿಮಾ ತಾನೊಬ್ಬ ಕನ್ನಡದಿಂದ ಗುರುತಿಸಿಕೊಂಡವಳು ಎನ್ನುವ ಪರಿವೇ ಇಲ್ಲದಂತೆ ಇವರು ನಡೆದುಕೊಂಡಿದ್ದಾರೆ. ಇನ್ನು ಮುಂದೆ ಹೋಗಿ ಇವರು ಕಿರಿಕ್ ಪಾರ್ಟಿ ಬಗ್ಗೆ ಕೊಟ್ಟಿರುವ ಇಂಟರ್ವ್ಯೂ ನೋಡಿದರೆ ಈಕೆ ಎಷ್ಟೊಂದು ಸುಳ್ಳುಗಾರ್ತಿ ಎನ್ನುವುದು ಗೊತ್ತಾಗುತ್ತದೆ.

ರಶ್ಮಿಕ ಮಂದಣ್ಣ ಅವರ ಕಿರಿಕ್ ಪಾರ್ಟಿ ಸಿನಿಮಾ ಸಮಯದ ವಿಡಿಯೋಗಳನ್ನು ನೋಡಿದರೆ ರಶ್ಮಿಕ ಅವಕಾಶಗಳಿಗಾಗಿ ಎಷ್ಟು ಒದ್ದಾಡಿದ್ದಾರೆ ಎನ್ನುವುದನ್ನು ಅವರೇ ಹೇಳಿಕೊಂಡಿದ್ದಾರೆ. ಆಡಿಷನ್ ಅಲ್ಲಿ ಇವರನ್ನು ಆರಿಸಿಕೊಂಡಿದ್ದರು, ಆದರೆ ಈಗ ಹೇಳುತ್ತಿರುವ ಹಸಿ ಸುಳ್ಳು ಏನೆಂದರೆ ನನಗೆ ಫೇಸ್ಬುಕ್ ನೋಡಿ ಸಿನಿಮಾ ಆಫರ್ ನೀಡಿದರು.

“ನಾನು ಮೊದಲಿಗೆ ಅದನ್ನು ರಿಜೆಕ್ಟ್ ಮಾಡಿದ್ದೆ ಆದರೆ ನನ್ನ ಟೀಚರ್ ಫೋರ್ಸ್ ಮಾಡಿದ ಕಾರಣ ನಾನು ಆ ಸಿನಿಮಾದಲ್ಲಿ ಅಭಿನಯಿಸಬೇಕಾಯಿತು. ನನಗೆ ಸಿನಿಮಾದಲ್ಲಿ ನಟಿಸಲು ಆಸಕ್ತಿ ಇರಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕನ್ನಡಿಗರು ಈಕೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ರಶ್ಮಿಕ ಮಂದಣ್ಣ ಮಾತನಾಡಿರುವ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

ಸ್ಟಾರ್ ನಟಿ ಆಗಿದ್ರು ನಟಿ ಸುಧಾರಾಣಿ ಮನೆಯಲ್ಲಿ ಎಷ್ಟು ಸರಳವಾಗಿ ಸಮಾನ್ಯರಂತೆ ತುಳಸಿ ಪೂಜೆ ಮಾಡ್ತಾ ಇದ್ದಾರೆ ನೋಡಿ, ಈಗಿನ ನಟಿಯರಿಗೆ ಮಾದರಿ ಇವರು.

 

ದೀಪಾವಳಿ ಹಬ್ಬ ಮುಗಿಯುತಿದ್ದಂತೆ ಬರುವ ಮತ್ತೊಂದು ಹಬ್ಬ ತುಳಸಿ ಹಬ್ಬ. ಈ ಹಬ್ಬ ಹಿಂದುಗಳ ಪಾಲಿಗೆ ತುಂಬಾ ವಿಶೇಷ. ಯಾಕೆಂದರೆ ಪ್ರತಿ ಹಿಂದೂವಿನ ಮನೆಯಲ್ಲಿ ಕೂಡ ಒಂದು ತುಳಸಿ ಗಿಡ ಇರುತ್ತದೆ. ಮನೆ ಮುಂದೆ ತುಳಸಿ ಕಟ್ಟೆಯಲ್ಲಿ ತುಳಸಿ ಗಿಡವನ್ನು ಬೆಳೆಸಿ ಹಿಂದುಗಳು ಪೂಜಿಸುತ್ತಾರೆ. ನಮ್ಮ ಗೃಹಿಣಿಯರು ಬೆಳಗ್ಗೆ ಎದ್ದ ತಕ್ಷಣ ಮನೆಯನ್ನು ಸ್ವಚ್ಛಗೊಳಿಸು ಸ್ನಾನ ಮಾಡಿಕೊಂಡು ತುಳಸಿ ಗಿಡದ ಪ್ರದಕ್ಷಿಣೆ ಹಾಕಿ ಪೂಜೆ ಮಾಡಿ ನಂತರ ಗೃಹ ಕಾರ್ಯಗಳನ್ನು ಆರಂಭಿಸುತ್ತಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಹೀಗಾಗಿ ತುಳಸಿ ಎನ್ನುವುದು ನಮ್ಮ ನಂಬಿಕೆಗಳ ಪ್ರಕಾರ ಪೂಜ್ಯನೀಯ ಸ್ಥಾನ ಪಡೆದುಕೊಂಡಿದೆ. ಪುರಾಣಗಳಲ್ಲೂ ಕೂಡ ತುಳಸಿ ಗಿಡದ ಮಹತ್ವವನ್ನು ವಿವರವಾಗಿ ವಿವರಿಸಿದ್ದಾರೆ. ಹಿಂದೂಗಳ ಭಾವನಾತ್ಮಕ ಅನೇಕ ಸಂಗತಿಗಳಲ್ಲಿ ತುಳಸಿ ಗಿಡದ ಪೂಜೆಯ ವಿಷಯವೂ ಕೂಡ ಒಂದು. ಪ್ರತಿ ದಿನ ತುಳಸಿ ಗಿಡದ ಪೂಜೆ ಮಾಡುವುದರ ಜೊತೆಗೆ ತುಳಸಿ ಹಬ್ಬದಂದು ತುಳಸಿ ಗಿಡದ ಪೂಜೆ ಮಾಡುವುದು ಮತ್ತಷ್ಟು ವಿಶೇಷ. ಈ ದಿನ ತುಳಸಿ ಮಾತೆಯನ್ನು ಮಹಾ ವಿಷ್ಣು ಮದುವೆ ಆದ ದಿನ.

ಆ ಕಾರಣದಿಂದ ತುಳಸಿ ಗಿಡದ ಜೊತೆ ಬೆಟ್ಟದ ನೆಲ್ಲಿ ಕಾಯಿ ಗಿಡವನ್ನು ಅಲಂಕರಿಸಿ ಅದರ ಮುಂದೆ ದೀಪಗಳನ್ನು ಜೋಡಿಸಿಟ್ಟು ಪೂಜೆ ಮಾಡಿ ಭಕ್ತಿಯಿಂದ ಪ್ರಾರ್ಥಿಸುತ್ತಾರೆ. ತುಳಸಿ ಗಿಡವನ್ನು ಲಕ್ಷ್ಮಿ ದೇವಿಯ ಸ್ವರೂಪ ಎಂದು ನಂಬಿದರೆ ಬೆಟ್ಟದ ನೆಲ್ಲಿಕಾಯಿ ಗಿಡವನ್ನು ವಿಷ್ಣು ರೂಪ ಅಥವಾ ಸಾಲಿಗ್ರಾಮ ಎಂದು ನಂಬಲಾಗುತ್ತದೆ. ಎಲ್ಲರ ಸೋಶಿಯಲ್ ಮೀಡಿಯಾ ಪೇಜ್ ಗಳಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ಗಳಲ್ಲಿ ಹಾಗೂ ವಾಟ್ಸಪ್ ಸ್ಟೇಟಸ್ ಗಳಲ್ಲಿ ತುಳಸಿ ಗಿಡ ಪೂಜೆ ಮಾಡುವ ಅನೇಕ ಫೋಟೋಗಳು ಈಗಾಗಲೇ ಶೇರ್ ಆಗಿರುತ್ತವೆ.

ಇನ್ನು ಸೆಲೆಬ್ರಿಟಿಗಳ ಪಾಲಿಗಂತೂ ಎಲ್ಲರೂ ಕೂಡ ಈ ರೀತಿ ತಮ್ಮ ಶೂಟಿಂಗ್ ಕೆಲಸಗಳ ನಡುವೆ ಹಿಂದೂ ಸಂಪ್ರದಾಯಗಳಿಗೆ ಬೆಲೆ ಕೊಟ್ಟು ಎಲ್ಲಾ ಹಬ್ಬವನ್ನು ತಪ್ಪದೇ ಆಚರಿಸುತ್ತಾರೆ ಎಂದು ಹೇಳುವುದು ಕಷ್ಟ. ಸಮಯದ ಅಭಾವದಿಂದಲೂ ಅಥವಾ ಮತ್ತೆ ಯಾವುದೋ ಕಾರಣದಿಂದ ನೆಪ ಹೇಳಿ ಜಾರಿಕೊಳ್ಳುವವರೇ ಹೆಚ್ಚು ಅಥವಾ ಇದು ಗೃಹಿಣಿಯರಿಗೆ ಮಾತ್ರ ನಮ್ಮಗಲ್ಲ ಎಂದುಕೊಳ್ಳುವವರು ಇದ್ದಾರೆ. ಆದರೆ ನಮ್ಮ ಹಿರಿಯ ಕಲಾವಿದೆ ಸುಧಾರಾಣಿ ಮಾತ್ರ ಆಗಲ್ಲ.

ನಮ್ಮ ಭಾರತೀಯ ಸಂಸ್ಕೃತಿಯ ಪ್ರತಿ ಹಬ್ಬವನ್ನು ಕೂಡ ಅರ್ಥಪೂರ್ಣವಾಗಿ ಆಚರಿಸುವ ಇವರು ಈ ವರ್ಷ ಗೌರಿ ಹಬ್ಬದ ಸಮಯದಲ್ಲಿ ತಮ್ಮ ಸಹಕಲಾವಿದರನ್ನು ಮನೆಗೆ ಆಹ್ವಾನ ಮಾಡಿ ಗೌರಿ ಬಾಗಿನವನ್ನು ನೀಡಿದ್ದರು. ಇದೀಗ ತುಳಸಿ ಹಬ್ಬವನ್ನು ಕೂಡ ಅಷ್ಟೇ ಭಕ್ತಿ ಭಾವದಿಂದ ನಮ್ಮ ಬಿಝಿ ಶೆಡ್ಯೂಲ್ ನಡುವೆಯೂ ಆಚರಣೆ ಮಾಡಿರುವ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿವೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೊದಲಿಗೆ ಈ ಫೋಟೋವನ್ನು ಇವರು ಹಂಚಿಕೊಂಡಿದ್ದರು.

ಅದರಲ್ಲಿ ಅವರು ಮಾಡುವ ಪೂಜಾ ವಿಧಾನಗಳಿಂದಲೇ ಅವರಿಗೆ ಅದರಲ್ಲಿ ಎಷ್ಟು ನಂಬಿಕೆ ಇದೆ ಎಷ್ಟು ತಿಳಿದುಕೊಂಡಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಜೊತೆ ಜೊತೆಯಲಿ ಎನ್ನುವ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಇವರು ಈಗ ಜೀ ಕನ್ನಡದ ಮತ್ತೊಂದು ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಶ್ರೀರಸ್ತು ಶುಭಮಸ್ತು ಎನ್ನುವ ಧಾರವಾಹಿಯಲ್ಲಿ ತುಳಸಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇವರು ಉತ್ತಮ ಸೊಸೆಯಾಗಿ ಅತ್ಯುತ್ತಮವಾಗಿ ಅಮ್ಮನಾಗಿ ಹಾಗೂ ಪ್ರೀತಿಯ ಅತ್ತೆಯಾಗಿ ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಇವರ ಇನ್ಸ್ಟಾ ವಿಡಿಯೋ ನೋಡಿರುವ ಅಭಿಮಾನಿಗಳು ಸುಧಾರಾಣಿ ಅವರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ ಧಾರಾವಾಹಿಯ ಬಗ್ಗೆ ಕೂಡ ಮೆಚ್ಚಿ ಕಮೆಂಟ್ ಮಾಡುತ್ತಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

ಅಪ್ಪು ಕೊನೆ ಬಾರಿ ವೇದಿಕೆ ಮೇಲೆ ಮನ ಬಿಚ್ಚಿ ಹಾಡಿದ ಈ ಹಾಡನ್ನೊಮ್ಮೆ ಕೇಳಿ ನಿಜಕ್ಕೂ ಮನಸ್ಸು ಒಂದು ಕ್ಷಣ ಉಲ್ಲಾಸ ಬರಿತವಾಗುತ್ತೆ.!

 

ಸ್ನೇಹಿತರೆ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾವಂತ ಕಲಾವಿದರು, ಕನ್ನಡ ಚಿತ್ರರಂಗದಲ್ಲಿ ಹಾಗೂ ಬೇರೆ ಭಾಷೆಯ ಚಿತ್ರರಂಗದಲ್ಲೂ ಕೂಡ ಇವರ ಪ್ರಖ್ಯಾತಿ ದೊಡ್ಡದು, ಪುನೀತ್ ಅವರಿಗೆ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಇದ್ದಾರೆ,ಇವರು ನಗುಮುಖದ ಚೆಲುವ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಸ್ನೇಹಿತರೆ ಎಲ್ಲರ ಮನಸ್ಸಲ್ಲಿ ಇವರ ನಗು ಇದ್ದೇ ಇರುತ್ತದೆ. ಹಾಗೂ ಇವರು ಪರಿಸರ ಪ್ರೇಮಿ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಹಿರಿಯರ ಮೇಲೆ ಅಪಾರ ಗೌರವವನ್ನು ಸದಾ ಹೊಂದಿದ್ದರು. ಪುನೀತ್ ಅವರ ಈ ಗುಣವೂ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಅವರು ಚಿತ್ರರಂಗದಲ್ಲಿ ಅವರದೇ ಆದ ಶೈಲಿ ಹಾಗೂ ನಟನೆಯಿಂದ ಅಭಿಮಾನಿಗಳನ್ನು ಮನರಂಜಿಸುತ್ತಿದ್ದರು ಅದಲ್ಲದೆ ಅಭಿಮಾನಿಗಳ ಮೇಲೆ ಹೆಚ್ಚಿನ ಪ್ರೀತಿಯನ್ನು ಪುನೀತ್ ರವರು ಇಟ್ಟಿದ್ದರು ಹಾಗಾಗಿ ಅಭಿಮಾನಿಗಳು ಇವರನ್ನು ಹೆಚ್ಚು ಪ್ರೀತಿಸುತ್ತಾರೆ.

ಪುನೀತ್ ರಾಜಕುಮಾರ್ ಅವರು ಹೃ.ದ.ಯಾ.ಘಾ.ತದಿಂದ ಈಗಾಗಲೇ ನಮ್ಮನ್ನೆಲ್ಲ ಅಗಲಿ ಒಂದು ವರ್ಷವಾಗಿದೆ, ಅವರು ಅಕ್ಟೋಬರ್ 29 2021 ರಂದು ನಿ.ಧ.ನ.ವಾದರು. ಆದರೂ ಕೂಡ ಒಂದು ವರ್ಷದಿಂದ ಅಪ್ಪು ಅವರನ್ನು ನೆನೆಯದೇ ಇರುವ ದಿನವೇ ಇಲ್ಲ. ಇನ್ನು ಅಕ್ಟೋಬರ್ 29 ರಂದು ಇಡೀ ಕರ್ನಾಟಕವೇ ದುಃಖದಲ್ಲಿತ್ತು ಹಾಗೂ ಪುನೀತ್ ಅವರ ಫೋಟೋಗಳು ಎಲ್ಲೆಡೆ ಹರಿದಾಡುತ್ತಿತ್ತು.

ಇದೇ ಅಕ್ಟೋಬರ್ 28 ರಂದು ಪುನೀತ್ ರವರ ಗಂಧದ ಗುಡಿ ಚಿತ್ರವು ಕೂಡ ತೆರೆಯ ಮೇಲೆ ಪ್ರದರ್ಶನವಾಗಿದೆ ಈ ಮೂಲಕ ಅಭಿಮಾನಿಗಳು ಅವರನ್ನು ಮತ್ತೊಮ್ಮೆ ನೋಡಬಹುದಾಗಿದೆ ಇದು ಎಲ್ಲರಿಗೂ ಪುನೀತ್ ರವರನ್ನು ನೋಡಲು ಸಿಕ್ಕಿರುವಂತಹ ಇನ್ನೊಂದು ಅವಕಾಶವೆಂದು ಹೇಳಬಹುದು. ಪುನೀತ್ ರವರ ಸಾವು ಎಲ್ಲಾ ಅಭಿಮಾನಿಗಳಿಗೂ ದುಃಖವನ್ನು ಉಂಟುಮಾಡಿತ್ತು.

ಪುನೀತ್ ರವರ ವ್ಯಕ್ತಿತ್ವವು ಕನ್ನಡ ಚಿತ್ರರಂಗದಲಲ್ಲೇ ಆಗಲಿ ರಾಜಕೀಯದಲಲ್ಲೇ ಆಗಲಿ ಯಾರನ್ನು ಕಂಡುಬರುವುದಿಲ್ಲ ಅಂತಹ ಅಪರೂಪದ ಗುಣವು ಇವರದ್ದಾಗಿದೆ. ಪುನೀತ್ ರವರು ಕೇವಲ 46 ವರ್ಷಕ್ಕೆ ಎಲ್ಲರನ್ನು ಬಿಟ್ಟು ಬಾರಲೋಕಕ್ಕೆ ಹೋಗಿದ್ದಾರೆ ಇದನ್ನು ಈಗಲೂ ಕೂಡ ಯಾರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುನೀತ್‍ರವರ ಸಮಾಜಸೇವೆಗಾಗಿ ಕರ್ನಾಟಕ ಸರ್ಕಾರವು ಈಗಾಗಲೇ ಕರ್ನಾಟಕ ರತ್ನ ಎಂದು ಪ್ರಶಸ್ತಿ ನೀಡಿದೆ.

ಈ ಪ್ರಶಸ್ತಿಯು ಪುನೀತ್ ರವರ ಅಭಿಮಾನಿಗಳನ್ನೂ ಸಂತೋಷ ಪಡಿಸಿದೆ. ಪುನೀತ್ ರವರ ಫೈಟಿಂಗ್ ಹಾಗೂ ಅವರ ಆಕ್ಟಿಂಗ್ ಅನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ, ಈ ಹಿಂದೆ ಅಪ್ಪು ರವರು ಕೊನೆಯ ಬಾರಿ ವೇದಿಕೆ ಮೇಲೆ ಹಾಡಿರುವ ಹಾಡೊಂದು ವೈರಲ್ ಆಗಿದೆ. ಹೌದು ಸ್ನೇಹಿತರೆ, ತಮ್ಮ ತಂದೆ ಡಾಕ್ಟರ್ ರಾಜಕುಮಾರ್ ಅವರು ಅಭಿನಯಿಸಿ ಹಾಗೂ ಅವರ ಕಂಠದಲ್ಲೇ ಹಾಡಿರುವ ಹಾಡಾದ “ಎಂದೆಂದೂ ನಿನ್ನನು ಮರೆತು ನಾನು ಇರಲಾರೆ” ಎರಡು ಕನಸು ಚಿತ್ರದ ಹಾಡನ್ನು ವೇದಿಕೆಯ ಮೇಲೆ ತುಂಬಾ ಸೊಗಸಾಗಿ ಹಾಡಿ ಎಲ್ಲರನ್ನು ಅವರತ್ತ ಸೆಳೆದಿದ್ದರು.

ಈ ಹಾಡು ರಾಜಕುಮಾರ ಅವರ ಚಿತ್ರಗಳಲ್ಲಿ ಉತ್ತಮವಾದ ಹಾಗೂ ಯಶಸ್ಸನ್ನು ಕಂಡ ಚಿತ್ರದ ಹಾಡಗಿದೆ. ಈ ಹಾಡು ಡಾ. ರಾಜಕುಮಾರ್ ಅವರನ್ನು ನೆನಪಿಸುತ್ತದೆ. ಹಾಗಾಗಿ ಪುನೀತ್ ರವರು ತಮ್ಮ ತಂದೆಯ ನೆನಪಿಗಾಗಿ ಈ ಹಾಡನ್ನು ಕೊನೆಯ ಬಾರಿ ಹಾಡಿದ್ದಾರೆ. ಸದ್ಯ ಈಗ ಅಭಿಮಾನಿಗಳು ಈ ವಿಡಿಯೋವನ್ನು ಪುನೀತ್‍ರವರ ನೆನಪಿಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಪುನೀತ್ ರವರು ಹಾಡಿರೋ ವಿಡಿಯೋ ಹೆಚ್ಚಿನ ಲೈಕ್ಗಳನ್ನು ಗಳಿಸಿ ಎಲ್ಲರ ಮನಸೆಳದಿದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

ಕಾಯಿಲೆಯಿಂದ ಬಳಲುತ್ತಿರುವ ವಿಚಾರವನ್ನು ಮಾಧ್ಯಮದ ಮುಂದೆ ಹೇಳಿಕೊಂಡು “ನಾನಿನ್ನು ಸ-ತ್ತಿ-ಲ್ಲ” ಎಂದು ಬಿಕ್ಕಿ-ಬಿಕ್ಕಿ ಅತ್ತ ನಟಿ ಸಮಂತಾ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕರುಳು ಚೂರ್ ಅನ್ನುತ್ತೆ.

 

ಇತ್ತೀಚಿಗಷ್ಟೇ ನಡೆದ ಸಂದರ್ಶನ ಒಂದರಲ್ಲಿ ನಟಿ ಸಮಂತಾ ಅವರನ್ನು ಆರೋಗ್ಯದ ಬಗ್ಗೆ ಕೇಳಿದ್ದಕ್ಕೆ ನಾನಿನ್ನೂ ಸ.ತ್ತಿ.ಲ್ಲ ಎಂದು ಉತ್ತರ ಕೊಟ್ಟು ಕಣ್ಣೀರು ಹಾಕಿದ್ದಾರೆ ಅಷ್ಟಕ್ಕೂ ಸಮಂತವಾಗಿ ಏನಾಯಿತು? ಯಾವ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ನೋಡೋಣ ಬನ್ನಿ. ಸೌತ್ ಇಂಡಿಯಾದ ಫೇಮಸ್ ನಟಿ ಸಮಂತ ಅವರು ಮೈಯಾಸಿಟಿಸ್ ಎನ್ನುವ ವಿಚಿತ್ರ ಖಾಯಿಲೆಯಿಂದ ಬಳಸುತ್ತಿದ್ದಾರೆ. ಈ ಬಗ್ಗೆ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಅಭಿಮಾನಿಗಳೊಂದಿಗೆ ವಿಷಯ ಹಂಚಿಕೊಂಡಿದ್ದರು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಇದೊಂದು ಸ್ನಾಯು ಸೆಳೆತಕ್ಕೆ ಸಂಬಂಧಪಟ್ಟ ಕಾಯಿಲೆ ಆಗಿದ್ದು ಪ್ರಪಂಚದಾದ್ಯಂತ ಸಾವಿರಾರು ಮಂದಿ ಇದೇ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಮಂತ ಋತು ಪ್ರಭು ಅವರು ಕೂಡ ಇದಕ್ಕಾಗಿ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಮ್ಮ ಖಾಯಿಲೆ ಬಗ್ಗೆ ಅಭಿಮಾನಿಗಳೊಂದಿಗೆ ಹೇಳಿಕೊಂಡಿದ್ದರು. ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ನೋಡಿ ಜೂನಿಯರ್ ಎನ್ಟಿಆರ್, ಮೆಘಾ ಸ್ಟಾರ್ ಚಿರಂಜೀವಿ ಸೇರಿದಂತೆ ಅನೇಕರು ಅದಕ್ಕೆ ಉತ್ತರ ಕೊಟ್ಟು ಆಕೆಗೆ ಖಾಯಿಲೆ ವಿರುದ್ಧ ಹೋರಾಡುವ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದರು.

ಸದ್ಯಕ್ಕೆ ಯಶೋಧ ಸಿನಿಮಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಸಮಂತಾ ಖಾಯಿಲೆ ಬಗ್ಗೆ ಮತ್ತೊಮ್ಮೆ ಹೇಳಿಕೊಂಡಿದ್ದಾರೆ. ತನ್ನ ಟ್ಯಾಲೆಂಟ್ ಇಂದ ಕಷ್ಟಪಟ್ಟು ಈ ಮಟ್ಟಕ್ಕೆ ಬೆಳೆದಿರುವ ನಟಿ ಸಮಂತಾ ಇಂದು ಕಾಲಿವುಡ್, ಟಾಲಿವುಡ್ ಹಾಗೂ ಬಾಲಿವುಡ್ ಅಂಗಳದಲ್ಲೂ ಕೂಡ ಬಹಳ ಬೇಡಿಕೆ ಸೃಷ್ಟಿಕೊಂಡಿರುವ ನಟಿ. ಸಮಂತ ಅವರು ಬಹುತೇಕ ಎಲ್ಲಾ ಸ್ಟಾರ್ ನಟರುಗಳೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

ಈ ವರ್ಷ ವೈವಾಹಿಕ ಜೀವನದಲ್ಲಿ ಏರುಪೇರು ಕಂಡ ಇವರು ನಾಗಚೈತನ್ಯ ಜೊತೆಗಿದ್ದ ಸಂಬಂಧವನ್ನು ಕಡಿದುಕೊಂಡರು. ಡೈವೋರ್ಸ್ ಆದ ಬಳಿಕವೂ ಕೂಡ ತಮ್ಮ ಕೆರಿಯರ್ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದ ಇವರು ತಮ್ಮ ಬೋಲ್ಡ್ ಪಾತ್ರಗಳಿಂದ ಸಾಕಷ್ಟು ಬಾರಿ ಟ್ರೋಲ್ ಗೂ ಕೂಡ ಒಳಗಾಗಿದ್ದರು. ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನ್ನ ಕೆಲಸವನ್ನಷ್ಟೇ ಮಾಡುತ್ತಿದ್ದ ಸಮಂತ ಅವರು ದಿಢೀರ್ ಎಂದು ಅನಾರೋಗ್ಯಕ್ಕೆ ತುತ್ತಾಗಿದ್ದು ಇದು ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿದೆ.

ಈ ಬಗ್ಗೆ ಅವರು ಹೇಳಿಕೊಂಡ ಮಾತುಗಳು ಹೀಗಿದ್ದವು ಯಶೋಧ ಬಾಡಿಗೆ ತಾಯ್ತನದ ಕಥೆ ಹೇಳುವ ಪ್ಯಾನ್ ಇಂಡಿಯಾ ಸಿನಿಮಾವಾಗಿ ಕನ್ನಡ ಸೇರಿದಂತೆ ಭಾರತದ ಪ್ರಮುಖ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ತಮಿಳು ತೆಲುಗು ಭಾಷೆಯಲ್ಲಿ ಸಂದರ್ಶನ ನೀಡುತ್ತಿರುವ ಸಮಂತ ಅವರನ್ನು ನಿರೂಪಕಿ ಆರೋಗ್ಯ ವಿಚಾರವಾಗಿ ಪ್ರಶ್ನಿಸಿದರು ಆ ಸಮಯದಲ್ಲಿ ನಟಿ ಭಾವುಕರಾಗಿ ಉತ್ತರ ನೀಡಿದ್ದಾರೆ.

ನಾನು ನನ್ನ ಖಾಯಿಲೆ ಬಗ್ಗೆ ಪ್ರಚಾರ ಪಡಿಸುವ ಹಲವು ದಿನಗಳ ಮುಂದೆಯಿಂದಲೂ ಇದರ ವಿರುದ್ಧ ಹೋರಾಡುತ್ತಿದ್ದೇನೆ. ನಾನು ಮಾತ್ರ ಅಲ್ಲ ನನ್ನಂತೆ ಸಾವಿರಾರು ಮಂದಿ ಇದೇ ರೀತಿಯ ಅನೇಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಎಷ್ಟೋ ದಿನ ನಾನು ಒಂದು ಹೆಜ್ಜೆ ಕೂಡ ಮುಂದೆ ಇಡಲು ಸಾಧ್ಯ ಆಗುವುದಿಲ್ಲ ಆದರೆ ಒಂದು ಕ್ಷಣ ಹಿಂದೆ ನೋಡಿದರೆ ನಾ ಇಷ್ಟು ದಿನ ತಳ್ಳಿಕೊಂಡು ಬಂದೆನಾ ಎನಿಸುತ್ತದೆ. ನಾನು ಅಷ್ಟು ಸುಲಭಕ್ಕೆ ಯಾವುದರಲ್ಲೂ ಸೋಲು ಒಪ್ಪಿಕೊಳ್ಳುವವಳು ಅಲ್ಲ.

ಈ ಖಾಯಿಲೆ ವಿರುದ್ಧವು ಕೂಡ ಹೋರಾಡುತ್ತೇನೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ನನ್ನ ಖಾಯಿಲೆ ಬಗ್ಗೆ ಟ್ರೋಲ್ ಮಾಡಿ ಅನೇಕ ರೀತಿಯಲ್ಲಿ ವಿಷಯ ಮಾಡಿಕೊಂಡು ಮಾತನಾಡುತ್ತಿದ್ದಾರೆ. ನಾನು ಹಾಸಿಗೆ ಹಿಡಿದಿದ್ದೇನೆ, ನನಗೆ ಪ್ರಾ.ಣಾ.ಪಾ.ಯ.ವಿ.ದೆ ಹೀಗೆಲ್ಲ ಬರೆದುಕೊಂಡು ಪ್ರಚಾರ ಮಾಡುತ್ತಾರೆ. ಆದರೆ ನಾನು ಆರೋಗ್ಯವಾದ ವಿಷಯದಲ್ಲಿ ಸೋತಿರಬಹುದು ಆದರೆ ನಾನಿನ್ನು ಸ.ತ್ತಿ.ಲ್ಲ. ಇದನ್ನು ಗೆದ್ದು ಬರುತ್ತೇನೆ ಎಂದು ಹೇಳುತ್ತಾ, ಭಾವುಕರಾಗಿದ್ದಾರೆ.

ಇದೇ ಶುಕ್ರವಾರ ಅವರ ಯಶೋದಾ ಸಿನಿಮಾ ರಿಲೀಸ್ ಆಗುತ್ತಿದ್ದು ಮತ್ತೊಂದು ಮಹಿಳಾ ಪ್ರಧಾನ ಚಿತ್ರ ಶಾಕುಂತಲ ಕೂಡ ಚಿತ್ರೀಕರಣ ಪೂರ್ತಿಗೊಂಡು ರಿಲೀಸ್ ಹಂತದಲ್ಲಿದೆ. ಇವರ ಅನಾರೋಗ್ಯ ಕಾರಣದಿಂದ ವಿಜಯ ದೇವರಕೊಂಡ ಅವರೊಂದಿಗೆ ಅಭಿನಯಿಸಬೇಕಾದ ಖುಷಿ ಚಿತ್ರೀಕರಣವನ್ನು ಮುಂದೂಡಲಾಗಿದೆಯಂತೆ. ನಟಿ ಆದಷ್ಟೂ ಬೇಗ ಸಮಸ್ಯೆ ಇಂದ ಹೊರಬರಲಿ ಎಂದು ಹಾರೈಸೋಣ. ನಟಿ ಸಮಂತಾ ಅವರು ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಮಾತನಾಡಿದ ವಿಡಿಯೋ ಈ ಕೆಳಗಿದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.