ರಾಜ್ಯದ ಕಂದಾಯ ಸಚಿವರಾಗಿರುವಂತಹ ಕೃಷ್ಣಭೈರೇಗೌಡ ಅವರು ರಾಜ್ಯದಾದ್ಯಂತ ಇರುವ ಪ್ರತಿಯೊಬ್ಬ ರಾಜ್ಯದ ರೈತರಿಗೆ ಬಾರಿ ದೊಡ್ಡ ಗುಡ್ ನ್ಯೂಸ್ ನೀಡಿದ್ದಾರೆ. ಸ್ವಂತ ಜಮೀನು ಇಲ್ಲದೆ ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವಂತಹ ರೈತರಿಗೆ ಹಾಗೂ ಈಗಾಗಲೇ ಭಗರ್ ಹುಕುಂ ಸಾಗುವಳಿ ಮಾಡುತ್ತಿರುವವರಿಗೆ.
ಮತ್ತು ಅಕ್ರಮ ಸಕ್ರಮ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದಕ್ಕೆ ಬಯಸುತ್ತಿರುವವರಿಗೆ ಅಥವಾ ಅಕ್ರಮ ಸಕ್ರಮ ಮತ್ತು ಭಗರ್ ಹುಕುಂ ಸಾಗುವಳಿಗಾಗಿ ಅರ್ಜಿ ಸಲ್ಲಿಸಿದವರಿಗೆ ರಾಜ್ಯದ ಕಂದಾಯ ಸಚಿವರಾಗಿರುವಂತಹ ಕೃಷ್ಣಭೈರೇಗೌಡ ಅವರು ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.
ಹಾಗೂ ಅಕ್ರಮ ಸಕ್ರಮ ಯೋಜನೆಯ ಅಡಿಯಲ್ಲಿ ನಿಮ್ಮ ಜಮೀನು ನಿಮ್ಮ ಪಹಣಿ ನಿಮ್ಮ ಹೆಸರಿಗೆ ಮಾಡಿಸಿಕೊಳ್ಳುವುದಕ್ಕೆ ಬಯಸುತ್ತಿದ್ದರೆ ಹಾಗೂ ಭಗರ್ ಹುಕುಂ ಸಾಗುವಳಿಗಾಗಿ ಸಂಬಂಧಿಸಿದ ಯಾವುದೇ ಮಾಹಿತಿಗಳನ್ನು ತಿಳಿದುಕೊಳ್ಳಬೇಕು ಎಂದರೆ ಈಗ ನಾವು ಹೇಳುವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಈ ಸುದ್ದಿ ಓದಿ:- ಬರಪೀಡಿತ ರೈತರಿಗೆ ಎರಡನೇ ಕಂತಿನ ಹಣ ಬಿಡುಗಡೆ || NDRF ಮತ್ತು SDRF ವರದಿ 22,500 ಹಣ.!
ಹಾಗಾದರೆ ಈಗ ನಾವು ಹೇಳುವಂತಹ ಮಾಹಿತಿ ರಾಜ್ಯದಲ್ಲಿರುವ ರೈತರಿಗೆ ಹೇಗೆ ಅನುಕೂಲವಾಗುತ್ತದೆ ಹಾಗೂ ಈಗ ಬೈರೇಗೌಡ ಅವರು ಹೇಳಿರುವಂತಹ ಮಾಹಿತಿ ಏನು ಹಾಗು ಅದು ರೈತರಿಗೆ ಹೇಗೆ ಅನುಕೂಲವನ್ನು ಉಂಟುಮಾಡುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.
* ಸರ್ಕಾರಿ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿರುವಂತಹ ಭಗರ್ ಹುಕುಂ ರೈತರಿಗೆ ರಾಜ್ಯ ಸರ್ಕಾರದಿಂದ ಶೀಘ್ರವೇ ಅರ್ಹರಿಗೆ ಜಮೀನು ಮಂಜೂರು ಮಾಡುವುದಾಗಿ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತಹ ಅವರು ನಮೂನೆ 50,53,57 ಕ್ಕೆ ಸಂಬಂಧಿಸಿದಂತೆ ಅಕ್ರಮ ಸಕ್ರಮ ಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಲಕ್ಷಾಂತರ ಜನ ಅರ್ಜಿ ಯನ್ನು ಸಲ್ಲಿಸಿದ್ದಾರೆ.
ಆದರೆ ಅರ್ಹ ರೈತರಿಗೆ ಮಾತ್ರ ಜಮೀನು ಮಂಜೂರು ಮಾಡಬೇಕು ಎಂದು ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದಂತಹ ಅವರು ಈ ಹಿಂದೆ ಭಗರ್ ಹುಕುಂ ಸಾಗುವಳಿ ಚೀಟಿ ನೀಡುವ ವೇಳೆ ಅನರ್ಹರಿಗೂ ಜಮೀನು ಮಂಜೂರು ಮಾಡಲಾಗಿದೆ.
ಈ ಸುದ್ದಿ ಓದಿ:- ಕೇಂದ್ರ ಸರ್ಕಾರದ ಅತಿ ಕಡಿಮೆ ಬೆಲೆಯ ಅಕ್ಕಿ ಬೇಳೆ ಹಿಟ್ಟು ತರಕಾರಿ ಎಲ್ಲಿ ಸಿಗುತ್ತೆ, ಹೇಗೆ ಖರೀದಿ ಮಾಡಬೇಕು.!
ಈ ನಿಯಮ ಮೀರಿ ಸಾಕಷ್ಟು ಅಕ್ರಮ ನಡೆಸಲಾಗಿದೆ. ಆದರೆ ಈ ಬಾರಿ ಅಂತಹ ಪ್ರಹಸನಗಳಿಗೆ ಆಸ್ಪದ ಇರುವುದಿಲ್ಲ. ಭಗರ್ ಹುಕುಂ ಸಭೆಯ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿ ಪಡೆಯಬೇಕು ಎಂದು ತಿಳಿಸಿದ್ದರು. ಬಗರ್ ಹುಕುಂ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಅಥವಾ ಯಾವುದೇ ರಾಜಕೀಯ ಪಕ್ಷದ ನಾಯಕರಿಗೆ ಅನುಕೂಲವಾಗುವಂತೆ ವರ್ತಿಸಬಾರದು.
ಬದಲಿಗೆ ಬಡ ಜನರಿಗೆ ಮತ್ತು ಅರ್ಹರಿಗೆ ನ್ಯಾಯ ಒದಗಿಸಲು ಬದ್ಧರಾಗಿರಬೇಕು ಮುಂದಿನ ಆರು ತಿಂಗಳಲ್ಲಿ ಅರ್ಹರಿಗೆ ಸಾಗುವಳಿ ಚೀಟಿ ನೀಡಬೇಕು. ಸಾಗುವಳಿ ಚೀಟಿ ನೀಡುತ್ತಿದ್ದಂತೆ ಹೊಸ ಸರ್ವೇ ನಂಬರ್ ಪೋಡಿಯನ್ನು ಸಹ ಒದಗಿಸಬೇಕು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕಂದಾಯ ಸಚಿವರಾಗಿರುವಂತಹ ಕೃಷ್ಣಭೈರೇಗೌಡ ಅವರು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡವರು ಅಥವಾ ಸ್ವಂತ ಜಮೀನು ಇಲ್ಲದೆ ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡುತ್ತಿರುವವರಿಗೆ ಅವರ ಹೆಸರಿಗೆ ಪಹಣಿಯನ್ನು ವರ್ಗಾವಣೆ ಮಾಡಿಕೊಡಲು ಅಕ್ರಮ ಸಕ್ರಮ ಭಗರ್ ಹುಕುಂ ಸಾಗುವಳಿ ಯೋಜನೆಯ ಅಡಿ ಆಸ್ತಿಯ ವರ್ಗಾವಣೆ ಮಾಡಿಕೊಳ್ಳಲು ಮಹತ್ವದ ಕ್ರಮವನ್ನು ತೆಗೆದುಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ವಿವರಗಳಿಗೆ ನಿಮ್ಮ ಗ್ರಾಮದ ಲೆಕ್ಕಾಧಿಕಾರಿಗಳನ್ನು ಸಂಪರ್ಕಿಸಿ.