Home Blog Page 176

ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಸರ್ಕಾರದ ಹೊಸ ಆದೇಶ, ಮೊಬೈಲ್ ನಲ್ಲೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಸುಲಭ ವಿಧಾನ…

 

ಕಳೆದ ಹತ್ತು ವರ್ಷಗಳಿಂದ ಒಮ್ಮೆಯೂ ಕೂಡ ಯಾರು ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿಲ್ಲ ಅವರು ತಪ್ಪದೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಜುಲೈ 14 ರ ವರೆಗೂ ಕೂಡ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಈಗ ನೀವು ಮನೆಯಲ್ಲಿ ಕುಳಿತು ನಿಮ್ಮ ಪರ್ಸನಲ್ ಕಂಪ್ಯೂಟರ್ ಅಥವಾ ಮೊಬೈಲ್ ಮೂಲಕವೇ ಸುಲಭವಾಗಿ ಆಧಾರ್ ಅಪ್ಡೇಟ್ ಮಾಡಿಸಬಹುದು. ಇದರ ಸುಲಭ ಹಂತಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

● ಮೊದಲಿಗೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಅಲ್ಲಿ ಗೂಗಲ್ ಗೆ ಹೋಗಿ Aadhar ಎಂದು ಟೈಪ್ ಮಾಡಿ ಸರ್ಚ್ ಕೊಡಿ. My Aadhar ಎನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಆಧಾರ್ ನ ಅಧಿಕೃತ ವೆಬ್ಸೈಟ್ ತಲುಪುತ್ತೀರಿ.
● ಆ ಪೇಜ್ ಅನ್ನು ಸ್ಕ್ರೋಲ್ ಮಾಡಿದರೆ Aadhar update ಎನ್ನುವ ಆಪ್ಷನ್ ಕಾಣುತ್ತದೆ ಅದರಲ್ಲಿ ಕೊನೆಯ ಆಯ್ಕೆ ಆದ Update Demographics Data & check status ಎನ್ನುವುದನ್ನು ಕ್ಲಿಕ್ ಮಾಡಿ‌

● ಲಾಗಿನ್ ಆಪ್ಷನ್ ಕ್ಲಿಕ್ ಮಾಡಿ ನೀವು ಯಾರ ಆಧಾರ್ ಅಪ್ಡೇಟ್ ಮಾಡುತ್ತಿದ್ದೀರಾ ಅವರ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು ಕೆಳಗೆ ಕ್ಯಾಪ್ಚರ್ ಕೋಡ್ ಇರುತ್ತದೆ ಅದನ್ನು ಕೂಡ ಹಾಕಬೇಕು. Send OTP ಮೇಲೆ ಕ್ಲಿಕ್ ಮಾಡಬೇಕು. ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಹೋಗುತ್ತದೆ ಅದನ್ನು Enter OTP ಮಾಡಿ Log in ಆಗಬೇಕು.

● ಆಧಾರ್ ವೆಬ್ಸೈಟ್ ನ ಮತ್ತೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ಆಧಾರ್ ನ ಎಲ್ಲಾ ಸರ್ವಿಸ್ ಗಳು ಕೂಡ ಸಿಗುತ್ತವೆ.
● Document update ಎನ್ನುವ ಸರ್ವೀಸ್ ಆಪ್ಷನ್ ಅನ್ನು ಸೆಲೆಕ್ಟ್ ಮಾಡಿ.
● ಮುಂದಿನ ಪೇಜ್ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಅಲ್ಲಿರುವ ಎಲ್ಲಾ ಮಾಹಿತಿಯು ಸ್ಕ್ರೀನ್ ಮೇಲೆ ಕಾಣುತ್ತದೆ ಅವೆಲ್ಲ ಸರಿಯಾಗಿದ್ದರೆ ವೇರಿಫೈ ಮಾಡಿ next ಆಪ್ಷನ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ದಾಖಲೆಗಳನ್ನು ಸಲ್ಲಿಸುವುದಕ್ಕೆ ಗೈಡ್ಲೈನ್ಸ್ ಗಳು ಇರುತ್ತವೆ ಆ ಪ್ರಕಾರವಾಗಿ ನೀವು ನಿಮ್ಮ ಪೂರಕ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿರಬೇಕು.ಆ ದಾಖಲೆಗಳ ಕಾಪಿ 2MB ಒಳಗೆ ಇರಬೇಕು ಎನ್ನುವ ನಿಯಮವಿದೆ.

● please upload proof of identity (POI) documents ಆಪ್ಷನ್ ಇರುತ್ತದೆ ಅದರಲ್ಲಿ ಹಲವಾರು ಐಡೆಂಟಿಟಿ ಫ್ರೂಫ್ ಗಳ ಲಿಸ್ಟ್ ಇರುತ್ತದೆ ನಿಮ್ಮ ಬಳಿ ಯಾವುದು ಇದೆ ಅದನ್ನು ಸೆಲೆಕ್ಟ್ ಮಾಡಿ.
● ಮುಂದಿನ ಹಂತದಲ್ಲಿ view details & upload document ಎನ್ನುವುದನ್ನು ಕ್ಲಿಕ್ ಮಾಡಿ continue to upload ಎನ್ನುವುದನ್ನು ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಫೋನ್ ನಲ್ಲಿ ಸ್ಕ್ಯಾನ್ ಆಗಿರುವ ಅಥವಾ ಫೋಟೋಗ್ರಾಫಿ ಆಗಿ ಇರುವ ಆ ದಾಖಲೆಗಳನ್ನು ಸೆಲೆಕ್ಟ್ ಮಾಡಿ ಅಪ್ಲೋಡ್ ಮಾಡಬೇಕು.

● ನೀವು ಕೊಟ್ಟಿರುವ ಮಾಹಿತಿಗಳು ಸರಿ ಇದೆಯೇ ಎನ್ನುವ ಘೋಷಣೆ ಬರುತ್ತದೆ ಅದಕ್ಕೆ ಒಪ್ಪಿದ್ದೇನೆ ಎಂದು ಚೆಕ್ ಬಾಕ್ಸ್ ಮೇಲೆ ರೈಟ್ ಕ್ಲಿಕ್ ಮಾಡಿ ಮುಂದಿನ ಹಂತಕ್ಕೆ ಹೋಗಿ.
● ಮುಂದಿನ ಹಂತದಲ್ಲಿ ನೀವು ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು, ಜುಲೈ 14ರ ಒಳಗೆ ಈ ಪ್ರಕ್ರಿಯೆ ಪೂರ್ತಿ ಉಚಿತವಾಗಿತ್ತು ಆದರೆ ಈಗ ನೀವು ನೆಟ್ ಬ್ಯಾಂಕಿಂಗ್ ಮೂಲಕ ನಿಗದಿತ ಶುಲ್ಕ ಪಾವತಿ ಮಾಡಬೇಕು.

● ಶುಲ್ಕ ಪಾವತಿ ಆದ ನಂತರ download aknowledgment ಎಂದು ಬರುತ್ತದೆ. ಇದನ್ನು ಸೇವ್ ಮಾಡಿ ಇಟ್ಟುಕೊಳ್ಳಿ. ನಿಮ್ಮ ಆಧಾರ್ ಸ್ಟೇಟಸ್ ಚೆಕ್ ಮಾಡಲು ಇದರಲ್ಲಿ ರೆಫೆರೆನ್ಸ್ ನಂಬರ್ ಬೇಕಾಗುತ್ತದೆ. ಈ ರೀತಿಯಾಗಿ ಮೊಬೈಲ್ ಫೋನ್ ನಲ್ಲಿ ಆಧಾರ್ ಗೆ ಡಾಕ್ಯೂಮೆಂಟ್ ಗಳನ್ನು ಅಪ್ಲೋಡ್ ಮಾಡಿ ಅಪ್ಡೇಟ್ ಮಾಡಿಸಬಹುದು.

ಹಾಸ್ಟೆಲ್ ವಾರ್ಡನ್ ಹುದ್ದೆಗಳ ನೇಮಕಾತಿ, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ. ವೇತನ 92,300/-

 

ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಈ ಬಾರಿ ಸುಮಾರು 4,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಭಾರತದಾತ್ಯಂತ ಇರುವ ಈ ವಸತಿ ಶಾಲೆಗಳಲ್ಲಿ ಕೆಲಸ ನಿರ್ವಹಿಸಲು ಬೋಧಕವೃಂದ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಸಂಬಂಧಿಸಿದಂತೆ ಅತಿ ದೊಡ್ಡ ನೇಮಕಾತಿ ನಡೆಯುತ್ತಿದೆ. ಈ ಹುದ್ದೆಗಳಿಗೆ ಕರ್ನಾಟಕದಾದ್ಯಂತ ಇರುವ ಎಲ್ಲಾ ಪುರುಷ ಮತ್ತು ಮಹಿಳಾ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ.

ಈಗಾಗಲೇ ನೋಟಿಫಿಕೇಶನಲ್ಲಿ ತಿಳಿಸಿರುವಂತೆ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, ಪರೀಕ್ಷೆಯನ್ನು ಎದುರಿಸುವ ಮೂಲಕ ಹುದ್ದೆಯನ್ನು ಪಡೆದುಕೊಳ್ಳಬಹುದು. ಸುಮಾರು 600ಕ್ಕೂ ಹೆಚ್ಚು ವಾರ್ಡನ್ ಹುದ್ದೆಗಳು ಖಾಲಿ ಇವೆ. ಇದನ್ನು ಪಡೆಯಲು ಪದವಿ ಪಡೆದ ಎಲ್ಲಾ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ.

ಉದ್ಯೋಗ ಸಂಸ್ಥೆ:- ಏಕಲವ್ಯ ಮಾದರಿ ವಸತಿ ಶಾಲೆ
ಹುದ್ದೆಗಳ ಹೆಸರು:-
● ಹಾಸ್ಟೆಲ್ ವಾರ್ಡನ್ (ಮಹಿಳೆ)
● ಹಾಸ್ಟೆಲ್ ವಾರ್ಡನ್ (ಪುರುಷ)

ಒಟ್ಟು ಹುದ್ದೆಗಳ ಸಂಖ್ಯೆ:- 669
● ಹಾಸ್ಟೆಲ್ ವಾರ್ಡನ್ (ಮಹಿಳೆ) – 335
● ಹಾಸ್ಟೆಲ್ ವಾರ್ಡನ್ (ಪುರುಷ) – 334

ಉದ್ಯೋಗ ಸ್ಥಳ:- ಭಾರತದಾತ್ಯಂತ…
ವೇತನ ಶ್ರೇಣಿ:- ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ 29,200 ರಿಂದ 92,300 ವೇತನ ಸಿಗುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ:-
ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಷಯದಲ್ಲಿ ಪದವಿ ಉತ್ತೀರ್ಣರಾಗಿರಬೇಕು.

ವಯೋಮಿತಿ:-
● ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
● ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 32 ವರ್ಷಗಳು
● SC/ST ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 37 ವರ್ಷಗಳು
● OBC ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 35 ವರ್ಷಗಳು
● PWDಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 42 ವರ್ಷಗಳು.

ಅರ್ಜಿ ಶುಲ್ಕ:-
● ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿ ಮಾಡಬೇಕು.
SC/ ST/ PWD ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.
● ಉಳಿದ ವಿದ್ಯಾರ್ಥಿಗಳಿಗೆ ಅರ್ಜಿ ಶುಲ್ಕ 1000ರೂ.

ಅರ್ಜಿ ಸಲ್ಲಿಸುವ ವಿಧಾನ:-
● ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಏಕಲವ್ಯ ಮಾದರಿ ವಸತಿ ಶಾಲೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಆನ್ಲೈನಲ್ಲಿ ಅರ್ಜಿ ಸಲ್ಲಿಸಬೇಕು.
● ವೆಬ್ಸೈಟ್ ಓಪನ್ ಆದಮೇಲೆ ಅರ್ಜಿ ಸಲ್ಲಿಸಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು ಹಾಗೆಯೇ ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ಶುಲ್ಕವನ್ನು ಕೂಡ ಪಾವತಿ ಮಾಡಬೇಕು
● ಅರ್ಜಿ ಸಲ್ಲಿಕೆ ಪೂರ್ತಿ ಆದ ಬಳಿಕ ಭವಿಷ್ಯದ ಬಳಕೆಗಾಗಿ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಬೇಕು.

ಆಯ್ಕೆ ವಿಧಾನ:-
● ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳಿಗೂ OMR ಆಧಾರಿತ ಲಿಖಿತ ಪರೀಕ್ಷೆ ನಡೆಸಲಾಗುವುದು.
● ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ದಾಖಲೆಗಳನ್ನು ಪರಿಶೀಲನೆ ಮಾಡುವ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು.
● ಕರ್ನಾಟಕದ ಬೆಂಗಳೂರಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗಳು ನಡೆಯಲಿದೆ.

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 18.07.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 18.08.2023
● ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ – 18.08.2023.

ಈ ರೀತಿ ರೇಷನ್ ಕಾರ್ಡ್ ಇದ್ದವರಿಗೆ ಈ ತಿಂಗಳಿನಿಂದ 14 ಕೆಜಿ ಗೋಧಿ ಹಾಗೂ 21 ಕೆಜಿ ಅಕ್ಕಿ ಸಿಗಲಿದೆ ಅದು ಕೂಡ ಫುಲ್ ಫ್ರೀ.!

 

ನಮ್ಮ ಭಾರತ ದೇಶದಲ್ಲಿರುವಂತಹ ಪ್ರತಿಯೊಬ್ಬರೂ ಕೂಡ ಹಸಿವಿ ನಿಂದ ಮುಕ್ತರಾಗಿರಬೇಕು ಅಂದರೆ ಅವರು ಆ ಆಹಾರಕ್ಕಾಗಿ ಯಾವು ದೇ ರೀತಿಯ ತೊಂದರೆಯನ್ನು ಅನುಭವಿಸಬಾರದು ಎನ್ನುವ ಉದ್ದೇಶ ದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತರುವುದರಲ್ಲಿ ಈ ಒಂದು ಉಚಿತ ಪಡಿತರ ಯೋಜನೆಯ ಕೂಡ ಒಂದಾಗಿದೆ.

ಹೌದು ಈ ಒಂದು ಯೋಜನೆ ಹಲವಾರು ಜನರಿಗೆ ಪ್ರಯೋಜನವನ್ನು ಉಂಟು ಮಾಡಿದ್ದು ಇದರಿಂದ ಹೆಚ್ಚಿನ ಜನ ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗೂ ಈ ಯೋಜನೆಯು ಬಡ ಜನರಿಗೆ ತುಂಬಾ ಅನುಕೂಲವಾಗಿದ್ದು ಅವರು ಕೂಡ ಹೊಟ್ಟೆ ತುಂಬಾ ಆಹಾರವನ್ನು ಸೇವಿಸಬಹುದಾಗಿದೆ.

ಅದೇ ರೀತಿಯಾಗಿ ಎಲ್ಲರಿಗೂ ತಿಳಿದಿರುವಂತೆ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು ಈ ಬಾರಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಪಕ್ಷದವರು 5 ಕೆಜಿ ಅಕ್ಕಿಯನ್ನು ಕೊಡುತ್ತಿದ್ದರು ಆದರೆ ಅವರು ಬೇರೆ ಯಾವುದೇ ರೀತಿಯ ಸಹಾಯವನ್ನು ಮಾಡುತ್ತಿರಲಿಲ್ಲ ಹಾಗೂ ಕೇವಲ 5 ಕೆಜಿ ಅಕ್ಕಿ ಎಲ್ಲರಿಗೂ ಸಾಕಾಗುವುದಿಲ್ಲ ಎನ್ನುವ ಉದ್ದೇಶದಿಂದ.

ಅದರ ಜೊತೆ ಮತ್ತೆ 5 ಕೆಜಿ ಅಕ್ಕಿಯನ್ನು ಕೊಡಬೇಕು ಎಂದು ಕೇಂದ್ರಕ್ಕೆ ಮನವಿಯನ್ನು ಸಲ್ಲಿಸಿದ್ದರು. ಆದರೆ ಸಿದ್ದರಾಮಯ್ಯ ಅವರ ಈ ಒಂದು ಉದ್ದೇಶವನ್ನು ಕೇಂದ್ರ ಸರ್ಕಾರವು ಒಪ್ಪಲಿಲ್ಲ ಅಂದರೆ 5 ಕೆಜಿ ಅಕ್ಕಿಯನ್ನು ಮತ್ತೆ ಕೊಡುವಂತಹ ಉದ್ದೇಶ ನೆರವೇರುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದಕ್ಕೆ ಕಾರಣ ಏನು ಎಂದರೆ ಅಕ್ಕಿಯ ಕೊರತೆ ಇರುವುದರಿಂದ ಅಕ್ಕಿ ಯನ್ನು ಕೊಡಲು ಸಾಧ್ಯವಾಗುವುದಿಲ್ಲ ಬದಲಿಗೆ ಬೇರೆ ಯಾವುದಾದರೂ ಯೋಜನೆಯನ್ನು ನೀವು ಜಾರಿಗೆ ಮಾಡಿ ಎನ್ನುವಂತಹ ಮಾತನ್ನು ಕೇಂದ್ರ ಸರ್ಕಾರವು ಸಿಎಂ ಸಿದ್ದರಾಮಯ್ಯ ಅವರ ಪಕ್ಷಕ್ಕೆ ಅಂದರೆ ಕಾಂಗ್ರೆಸ್ ಪಕ್ಷಕ್ಕೆ ಹೇಳಿತು.

ಆದರೆ ಇದನ್ನು ಗಮನದಲ್ಲಿಟ್ಟುಕೊಂಡಿ ದ್ದಂತಹ ಸಿದ್ದರಾಮಯ್ಯ ಹಾಗೂ ಅವರ ಪಕ್ಷದವರು ಜನರಿಗೆ ನಾವು ಈ ಒಂದು ಗ್ಯಾರಂಟಿಯನ್ನು ಕಡ್ಡಾಯವಾಗಿ ಕೊಡುತ್ತೇವೆ ಎಂದು ಹೇಳಿದ್ದೆವು. ಆದರೆ ಈಗ ಕೊಡಲಿಲ್ಲ ಎಂದರೆ ಅವರು ಆಕ್ರೋಶಕ್ಕೆ ಒಳಗಾಗು ತ್ತಾರೆ ಆದ್ದರಿಂದ 5 ಕೆಜಿಯ ಅಕ್ಕಿಯ ಬೆಲೆಯನ್ನು ನಾವು ನಿಗದಿಪಡಿಸಿ ಆ ಒಂದು ಹಣವನ್ನು ಬಿಪಿಎಲ್ ಕಾರ್ಡ್ ಹೊಂದಿರುವಂತಹ ಮುಖ್ಯ ಸದಸ್ಯನಿಗೆ ಹಾಕುವುದಾಗಿ ಹೇಳಿದ್ದರು.

ಅದೇ ರೀತಿಯಾಗಿ ಈ ಒಂದು ಯೋಜನೆಯ ಅಡಿಯಲ್ಲಿ ಕೆಲವೊಂದ ಷ್ಟು ಕಾರ್ಡ್ ಹೊಂದಿರುವಂತಹ ಜನರಿಗೆ ಉಚಿತವಾಗಿ ಇನ್ನು ಹಲ ವಾರು ವಸ್ತುಗಳು ಅಂದರೆ ಪದಾರ್ಥಗಳು ಸಿಗುತ್ತದೆ ಎನ್ನುವಂತಹ ಮಾಹಿತಿಯನ್ನು ಸಹ ಹೇಳಿದ್ದರು ಹಾಗಾದರೆ ಯಾವ ಕಾರ್ಡ್ ಹೊಂದಿ ರುವಂತಹ ಜನರಿಗೆ ಯಾವ ಯಾವ ಪದಾರ್ಥಗಳು ಸಿಗುತ್ತದೆ ಅದರಲ್ಲೂ ಗೋಧಿ ಸಿಗುತ್ತದೆ ಎನ್ನುವಂತಹ ಮಾಹಿತಿಯನ್ನು ಇಂದು ತಿಳಿಯೋಣ.

ಅಷ್ಟಕ್ಕೂ ಈ ದಿನ ಮೇಲೆ ಹೇಳಿದಂತಹ ವಿಷಯ ನಮ್ಮ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ ಬದಲಿಗೆ ಉತ್ತರ ಪ್ರದೇಶದ ಫಿರೋಜಾ ಬಾದ್ ನಲ್ಲಿ ನೀಡುತ್ತಿರುವಂತಹ ರೇಷನ್ ಬಗ್ಗೆ ಮಾತನಾಡಲು ಹೊರಟಿದ್ದೇವೆ. ಹೌದು ಉತ್ತರ ಪ್ರದೇಶದ ಗೃಹಸ್ತಿ ಕಾರ್ಡ್ ನವರಿಗೆ ಪ್ರತಿ ಯೂನಿಟ್ ನವರಿಗೆ 2 ಕೆಜಿ ಗೋಧಿ ಹಾಗೂ 3 ಕೆಜಿ ಅಕ್ಕಿಯನ್ನು ನೀಡುವಂತಹ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂಬುದಾಗಿ ಆಹಾರ ಸರಬರಾಜು ಇಲಾಖೆ ಹೇಳಿಕೊಂಡಿದೆ.

ಅದೇ ರೀತಿಯಲ್ಲಿ ಅಂತ್ಯೋದಯ ರೇಷನ್ ಕಾರ್ಡ್ ನವರಿಗೆ 14 ಕೆಜಿ ಗೋಧಿ ಹಾಗೂ 21 ಕೆಜಿ ಅಕ್ಕಿಯನ್ನು ಪ್ರತಿ ಯೂನಿಟ್ ನವರಿಗೆ ನೀಡಲಾಗುತ್ತದೆ ಎನ್ನುವುದನ್ನು ಅಧಿಕೃತವಾಗಿ ಹೇಳಿಕೊಳ್ಳಲಾಗಿದೆ.
ಬಡವರು ಹೊಟ್ಟೆ ಹಸಿವಿನಿಂದ ಇರಬಾರದು ಎನ್ನುವ ಕಾರಣಕ್ಕಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ರವರ ಸರಕಾರ ಈ ರೀತಿ ಪಡಿತರ ವಿತರಣೆಯಲ್ಲಿ ಯೋಜನೆಯನ್ನು ಕೈಗೊಂಡಿದೆ.

ಕುರುಕ್ಷೇತ್ರದಲ್ಲಿ ಭಾಗವಹಿಸಿದ ಅಷ್ಟು ಜನಕ್ಕೆ ಊಟ ಹೇಗೆ ತಯಾರಾಗುತ್ತಿತ್ತು ಗೊತ್ತಾ.?

ಭಾರತ ತನ್ನ ಚರಿತ್ರೆಯಲ್ಲಿ ಅನೇಕ ಯುದ್ಧಗಳನ್ನು ಕಂಡಿವೆ ಹಾಗೂ ಎಷ್ಟೋ ರಕ್ತ ಚರಿತ್ರೆಗಳಿಗೆ ತಾನು ಮೂಕ ಸಾಕ್ಷಿಯಾಗಿದೆ ಆದರೆ ಇವುಗಳಿ ಗಿಂತ ಅತ್ಯಂತ ಘೋರ ಹಾಗೂ ಭೀಕರವಾದಂತಹ ಯುದ್ಧ ಯಾವುದು ಎಂದರೆ ಅದು ಮಹಾಭಾರತದ ಕುರುಕ್ಷೇತ್ರ ಯುದ್ಧ ಅಂತ ಪರಿಗಣಿಸ ಲಾಗುತ್ತದೆ. ಈ ಯುದ್ಧದಲ್ಲಿ ದೇಶದ ಅಸಂಖ್ಯಾತ ವೀರರು ಸೇನಾನಿ ಗಳು ಭಾಗಿಯಾಗಿದ್ದರು.

ಹಾಗಾಗಿಯೇ ಇದನ್ನು ಮಹಾಭಾರತದ ಯುದ್ಧ ಅಂತ ಇತಿಹಾಸಕಾರರು ಕರೆದಿದ್ದು. ಉಲ್ಲೇಖಿತ ಅಂಕಿ ಅಂಶಗಳ ಪ್ರಕಾರ ಈ ಯುದ್ಧದಲ್ಲಿ 50 ಲಕ್ಷಕ್ಕೂ ಅಧಿಕ ಸೈನಿಕರು ಭಾಗಿಯಾಗಿ ದ್ದರೂ ಅಂತ ಹೇಳಲಾಗುತ್ತದೆ. ಪ್ರತಿದಿನವೂ ಇಲ್ಲಿ ಉಭಯ ತಂಡಗಳ ಲಕ್ಷಾಂತರ ಸೈನಿಕರು ವೀರ ಮರಣವನ್ನಪ್ಪುತ್ತಿದ್ದರು.ಈ ಯುದ್ಧ ಒಟ್ಟು 18 ದಿನಗಳ ಕಾಲ ನಡೆಯಿತು.

ಈ ಯುದ್ಧ ಶುರುವಾಗುವ ಮೊದಲು ರಣಾಂಗಣದಲ್ಲಿ ಯುದ್ಧದಲ್ಲಿ ಹೆದರಿ ಕೈ ಚೆಲ್ಲುವಂತಹ ಅರ್ಜುನನಿಗೆ ಶ್ರೀಕೃಷ್ಣ ಭಗವದ್ಗೀತೆಯನ್ನು ಬೋಧನೆ ಮಾಡುತ್ತಾನೆ. ಹಾಗೂ ಅರ್ಜುನನಿಗೆ ಸಾಂಸಾರಿಕತೆ ಹಾಗೂ ಅಲೌಕಿ ಕಥೆ ಇವೆರಡರ ಪರಿಚಯವನ್ನು ಮಾಡಿಸಿದ್ದ. ಹಿಂದೂ ಮತಗಳ ಭಾಗವತದಲ್ಲಿಯೇ ಈ ಭಗವದ್ಗೀತೆಯನ್ನು ಅತ್ಯಂತ ಪುರಾತನದ ಪುಣ್ಯ ವಿಶೇಷವಾದ ಹಾಗೂ ವಿಶಾಲವಾದ ಧರ್ಮೋಪನಿಷತ್ತು ಎಂದು ಭಾವಿ ಸಲಾಗುತ್ತದೆ.

ಇದನ್ನು ಪಂಚಮವೇದ ಎಂದು ಕೂಡ ಕರೆಯುತ್ತಾರೆ. ಮಹಾಭಾರತ ಕಾವ್ಯ ಭಾರತೀಯರ ಪವಿತ್ರ ಗ್ರಂಥ ಎಂದು ಮಾನ್ಯವಾ ಗಿದೆ. ಇದು ಈ ನೆಲದ ಅತ್ಯಂತ ಪೌರಾಣಿಕ, ಚಾರಿತ್ರಿಕ, ಧಾರ್ಮಿಕ ಹಾಗೂ ದಾರ್ಶನಿಕ ಗ್ರಂಥ ಎಂದು ಹೆಸರಾಗಿದೆ. ಈ ಕೃತಿಯಲ್ಲಿ ಶ್ರೀಕೃಷ್ಣ ವೈಶಂಪನಾಯ ಮಹರ್ಷಿ ಶ್ರೀ ವೇದವ್ಯಾಸರ ಬಗ್ಗೆ ವಿವರಗಳು ಇವೆ.

ಈ ಮಹಾ ಗ್ರಂಥವನ್ನು ಗಣೇಶ ಶ್ರೀ ವೇದವ್ಯಾಸರು ಹೇಳಿದಂತೆ ಬರೆದ ಎಂದು ನಂಬಲಾಗಿದೆ. ಈ ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧ ಪ್ರಮುಖ ಅಧ್ಯಾಯ ಈ ಒಂದು ಯುದ್ಧದಲ್ಲಿ 50 ಲಕ್ಷ ಸೇನಾನಿಗಳು ಭಾಗಿಯಾಗಿದ್ದರು ಎಂದು ಹೇಳಲಾಗುತ್ತದೆ. ಆದರೆ ಇಲ್ಲಿ ಇನ್ನೊಂದು ಆಶ್ಚರ್ಯಕರ ಸಂಗತಿ ಏನು ಎಂದರೆ.

ಇಷ್ಟು ಜನರಿಗೆ ಭೋಜನದ ವ್ಯವಸ್ಥೆಯನ್ನು ಹೇಗೆ ಮಾಡಲಾಗುತ್ತಿತ್ತು ಅಷ್ಟು ಜನರಿಗೆ ಕಾಲಕಾಲಕ್ಕೆ ಹೇಗೆ ಆಹಾರವನ್ನು ಪೂರೈಕೆ ಮಾಡಲಾಗುತ್ತಿತ್ತು? ಇಷ್ಟು ಆಹಾರವನ್ನು ತಯಾರು ಮಾಡುತ್ತಿದ್ದವರು ಯಾರು? ಹಾಗೂ ಎಲ್ಲಿ ಪ್ರತಿದಿನ ಸಂಜೆ ಯುದ್ಧ ಮುಗಿದ ಸಂದರ್ಭದಲ್ಲಿ ಎರಡು ತಂಡಗಳಲ್ಲಿ ಅನೇಕರು ಸಾವನ್ನಪ್ಪಿ ತಂಡಗಳಲ್ಲಿ ಸೇನೆಯ ಪ್ರಮಾಣ ಕುಸಿದಾಗ ಸರಿಯಾಗಿ ಅಷ್ಟು ಜನಕ್ಕೆ ರಾತ್ರಿ ಅಡುಗೆಯನ್ನು ಹೇಗೆ ನಿರ್ಧರಿಸಲಾಗುತ್ತಿತ್ತು.

ಇದರ ಬಗ್ಗೆ ಗ್ರಂಥದಲ್ಲಿ ಏನೆಲ್ಲ ಉಲ್ಲೇಖ ಮತ್ತು ಮಾಹಿತಿ ಇದೆ ಎನ್ನುವುದನ್ನು ಈ ಕೆಳಗೆ ತಿಳಿಯುತ್ತಾ ಹೋಗೋಣ. ಮಹಾಭಾರತದ ಯುದ್ಧದಲ್ಲಿ ಎಲ್ಲವೂ ಕೂಡ ಅತ್ಯಂತ ಕ್ರಮಬದ್ಧವಾಗಿ ವ್ಯವಸ್ಥಿತವಾಗಿ ಯೋಜಿತವಾಗುತ್ತಿತ್ತು. ಅದರಲ್ಲಿ ಸೈನಿಕರಿಗೆ ಭೋಜನದ ವ್ಯವಸ್ಥೆ ಕೂಡ ಒಂದು. ಸೈನಿಕರಿಗೆ ಅಂತ ತಯಾರಾಗುವ ಆಹಾರವು ಯಾವ ಕಾರಣ ಕ್ಕೂ ವ್ಯರ್ಥವಾಗುವುದಾಗಲಿ ಅಥವಾ ಕೆಡುವುದಾಗಲಿ ಆಗದ ಹಾಗೆ ಎಚ್ಚರಿಕೆಯನ್ನು ವಹಿಸಲಾಗುತ್ತಿತ್ತು.

ಮಹಾಭಾರತದ ಸೇನೆಗೆ ಅಡುಗೆ ಮಾಡುವಂತಹ ಹೊಣೆ ಉಡುಪಿಯ ಅರಸನದಾಗಿತ್ತು. ಈತ ಪಾಕ ಕಾರ್ಯದಲ್ಲಿ ಅತ್ಯಂತ ನಿಪುಣನಾಗಿದ್ದು ಯುದ್ಧದಲ್ಲಿ ಭಾಗಿಯಾಗಿ ದ್ದಂತಹ ಅಸಂಖ್ಯಾತ ಜನರಿಗೆ ಆಹಾರವನ್ನು ಪುರೈಕೆ ಮಾಡುವಂತಹ ಬಾಧ್ಯತೆಯನ್ನು ವಹಿಸಿಕೊಂಡಿದ್ದ. ಈತನ ಉಸ್ತುವಾರಿಯಲ್ಲಿ ಆಹಾರ ವೂ ಸ್ವಲ್ಪವೂ ಕೂಡ ವ್ಯರ್ಥವಾಗುತ್ತಿರಲಿಲ್ಲ. ಪ್ರತಿದಿನ ಆತ ಯುದ್ಧ ಮುಗಿದಾಗ ಎಷ್ಟು ಜನ ಇರುತ್ತಿದ್ದರೋ ಅಷ್ಟು ಜನರಿಗೆ ಅಡುಗೆ ಮಾಡುವಲ್ಲಿ ನಿಸ್ಸೀಮನಾಗಿದ್ದ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ತಾವೇ ಎತ್ತ ಸ್ವಂತ ಮಕ್ಕಳಿಂದ ತಂದೆ ತಾಯಿ ಯಾಕೆ ಕಷ್ಟ ಅನುಭವಿಸುತ್ತಾರೆ ಗೊತ್ತ.? ನಿಮ್ಮ ಹೊಟ್ಟೆಯಲ್ಲಿ ಹುಟ್ಟಿ ಬಂದು ಆ ಮಗು ಯಾರು ಗೊತ್ತ.? ಜೀವನದ ಕಟು ಸತ್ಯ ಇದು

 

ಪ್ರತಿಯೊಬ್ಬ ತಂದೆ ತಾಯಿ ಹಾಗೂ ಮಕ್ಕಳು ತಿಳಿದುಕೊಳ್ಳಲೇಬೇಕಾದ ಮಾಹಿತಿಗಳು.! ಹಿಂದೊಮ್ಮೆ ಒಬ್ಬ ವ್ಯಕ್ತಿ ತನ್ನ ಹೆಂಡತಿ ಹಾಗೂ ಸಂಸಾರದ ಜೊತೆ ಸಂತೋಷದಿಂದ ಜೀವಿಸುತ್ತಿದ್ದ. ಉತ್ತಮ ಸಂಸ್ಕಾರವಂತ ಹಾಗೂ ಸದ್ಭಾವನೆ ತುಂಬಿದಂತಹ ಮನೆತನದಿಂದ ಬಂದಿದ್ದಂತಹ ಆ ವ್ಯಕ್ತಿ ತನ್ನ ಮನೆಯಲ್ಲಿ ಯಾವುದೇ ಬಗೆಯ ಹೋಮ ಹವನ ಯಾಗ ಯಜ್ಞ ಇತ್ಯಾದಿಗಳನ್ನು ಆಚರಿಸುತ್ತಿರಲಿಲ್ಲ. ಬದಲಿಗೆ ಆತ ತನಗೆ ಇಷ್ಟ ಬಂದ ಕೆಲಸವನ್ನು ಮಾಡುತ್ತಾ ಅದರಲ್ಲಿ ನಿರತನಾಗುತ್ತಿದ್ದ ಹೀಗಿರುವಾಗ ಆತನ ಪತ್ನಿ ಗರ್ಭವತಿಯಾಗುತ್ತಾಳೆ.

ತಾನೀಗ ಮಗುವಿನ ತಂದೆಯಾಗುತ್ತಿದ್ದೇನೆ ಅದರ ಭವಿಷ್ಯಕ್ಕಾಗಿ ಹಾಗೂ ಸಂಸಾರದ ಹೆಚ್ಚಿನ ಮುತುವರ್ಜಿ ಗಾಗಿ ಇನ್ನು ಹೆಚ್ಚಿನ ಹಣವನ್ನು ಸಂಪಾದನೆ ಮಾಡಬೇಕು ಎಂದು ಆತ ನಿರ್ಧರಿಸಿ ಪಕ್ಕದ ಊರಿಗೆ ಕೆಲಸ ಮಾಡುವ ಸಲುವಾಗಿ ಹೋಗುತ್ತಾನೆ. ದಾರಿ ಮಧ್ಯ ಆತನಿಗೆ ಒಂದು ಸುಂದರವಾದ ಆಕರ್ಷಕ ವಾದಂತಹ ಋಷಿಗಳ ಆಶ್ರಮ ಕಾಣಸಿಗುತ್ತದೆ. ಅದರಲ್ಲಿ ಒಬ್ಬ ಮುನಿ ತನ್ನ ಶಿಷ್ಯರ ಜೊತೆ ವಾಸವಿದ್ದರು.

ಆ ಆಶ್ರಮ ನೋಡಿ ದಂತಹ ಈತನಿಗೆ ತಾನು ಕೂಡ ಅಲ್ಲಿಗೆ ಹೋಗುವ ಮನಸ್ಸಾಗುತ್ತದೆ. ತಕ್ಷಣ ಆತ ಆಶ್ರಮದ ಬಳಿ ಬಂದು ಆ ಗುರುವಿಗೆ ನಮಸ್ಕರಿಸಿ ಗುರುವರ್ಯ ತಾನು ಕೂಡ ನಿಮ್ಮೊಡನೆ ಈ ಶಿಷ್ಯರ ಜೊತೆ ಇದ್ದು ನೀವು ಬೋಧಿಸುವ ವಿಷಯಗಳನ್ನು ಕಲಿಯುವುದಕ್ಕೆ ಆಸಕ್ತನಾಗಿದ್ದೇನೆ ನನಗೂ ಕೂಡ ಕಲಿಸಿಕೊಡಿ ಎಂದು ಕೇಳಿಕೊಳ್ಳುತ್ತಾನೆ. ಇನ್ನು ಆ ಗುರುವು ಸಾಮಾನ್ಯವಾಗಿರಲಿಲ್ಲ ಅವರು ಮಹಾ ತಪೋವಂತನಾಗಿದ್ದರು.

ತ್ರಿಕಾಲ ಜ್ಞಾನಿಯಾಗಿದ್ದಂತಹ ಅವರಿಗೆ ತಿಳಿಯದ ವಿಷಯವೇ ಇರಲಿಲ್ಲ. ಹೀಗಿರುವಾಗ ತನಗೆ ಕಲಿಸಿ ಕೊಡಿ ಎಂದು ಬೇಡಿಕೊಂಡಂತಹ ವ್ಯಕ್ತಿಯ ಕಡೆಗೆ ಈ ಗುರು ಈ ರೀತಿ ಹೇಳುತ್ತಾರೆ. ನೋಡಪ್ಪ ನಾನು ನಿನಗೆ ಕಲಿಸುವುದಕ್ಕೆ ಸಿದ್ಧ ಆದರೆ ನಾನು ನಿನಗೆ ಮಂತ್ರೋಪದೇಶವನ್ನು ಮಾಡಬೇಕು ಎಂದರೆ ನನ್ನದೊಂದು ಶರತ್ತು ಇದೆ. ನಾನು ಹೇಳಿದ್ದನ್ನು ನೀನು ಮಾಡಬೇಕು ಆಗ ಮಾತ್ರ ನಿನಗೆ ಇಲ್ಲಿ ಕಲಿಯುವುದಕ್ಕೆ ಮುಕ್ತ ಅವಕಾಶ ಎಂದು ಹೇಳುತ್ತಾರೆ.

ತಕ್ಷಣ ಈತ ಗುರುವಿನ ಮಾತಿಗೆ ತಲೆಯಾಡಿಸಿ ನೀವು ಹೇಳಿದಂತೆ ನಾನು ಕೇಳುತ್ತೇನೆ ಅದೇನು ಮಾಡಬೇಕು ಹೇಳಿ ಎಂದು ಹೇಳಿದ. ಆಗ ಗುರು ನಿನಗೆ ಇಷ್ಟರಲ್ಲಿಯೇ ಸುಂದರವಾದ ತೇಜೋವಂತ ಗಂಡು ಮಗು ಜನಿಸುತ್ತದೆ. ಅದು ಜನಿಸಿದ ಕೂಡಲೇ ಅದನ್ನು ತಂದು ನೀನು ನಮ್ಮ ಆಶ್ರಮದಲ್ಲಿ ಬಿಟ್ಟು ಅದರ ಬಾಧ್ಯತೆಯನ್ನು ನನಗೆ ಒಪ್ಪಿಸಬೇಕು ಎಂದು ಹೇಳುತ್ತಾರೆ. ಗುರುಗಳ ಮಾತಿನಿಂದ ಆರಂಭದಲ್ಲಿ ಆ ವ್ಯಕ್ತಿ ಗೊಂದಲಕ್ಕೆ ಒಳಪಟ್ಟರು ಕೂಡ.

ಗುರುವಿನ ಆಜ್ಞೆಯನ್ನು ಮೀರಬಾರದು ಎಂದು ಭಾವಿಸಿ ಸರಿ ಗುರುಗಳೇ ಹಾಗೆ ಆಗಲಿ ಎಂದು ಕೈ ಮುಗಿದು ಅಲ್ಲಿಂದ ಹಾಗೆ ತನ್ನ ಮನೆಗೆ ಹೊರಟಿದ್ದ. ಮನೆಗೆ ಹೋಗಿ ಈ ವಿಷಯವನ್ನು ತನ್ನ ಪತ್ನಿಗೆ ತಿಳಿಸಿದಾಗ ತನ್ನ ಮಗುವಿನಿಂದ ದೂರವಾಗಲು ಬಯಸದ ಆಕೆ ಇದಕ್ಕೆ ಒಪ್ಪಲಿಲ್ಲ. ಆಗ ಈತ ನೋಡು ಅವರು ಮಹಾಜ್ಞಾನಿಗಳು ಅಂಥವರ ಆಶ್ರಮದಲ್ಲಿ ನಮ್ಮ ಮಗ ಬೆಳೆದರೆ ಆತ ಮುಂದೆ ದೊಡ್ಡ ವ್ಯಕ್ತಿಯಾಗುತ್ತಾನೆ ಎಂದು ಮಡದಿಯನ್ನು ಹೇಗೋ ಒಪ್ಪಿಸಿದ್ದ.

ಕ್ರಮೇಣ ಕೆಲವು ದಿನಗಳ ಬಳಿಕ ಅವರಿಗೆ ಒಂದು ಸುಂದರವಾದ ಗಂಡು ಮಗು ಜನಿಸುತ್ತದೆ. ಗುರುಗಳ ಆದೇಶದಂತೆ ಆತನನ್ನು ತಂದು ಆಶ್ರಮಕ್ಕೆ ಬಿಡುವುದಕ್ಕೆ ಅವರ ಮಗುವಿನ ಜೊತೆ ಈ ಋಷಿಯ ಆಶ್ರಮಕ್ಕೆ ಬರುತ್ತಾರೆ. ಗುರುವಿನ ಮುಂದೆ ಬಂದು ನಿಂತಂತಹ ಅವರು ತಮ್ಮ ಮಗುವನ್ನು ಆ ಗುರುವಿಗೆ ಒಪ್ಪಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಎಷ್ಟೇ ತೊಳೆದರೂ ಸ್ವಚ್ಛ ಆಗದ ನಿಮ್ಮ ಬಾತ್ರೂಮ್ ಕನ್ನಡಿ ತರಹ ಹೊಳೆಯೋ ಹಾಗೆ ಮಾಡೋ ಸೂಪರ್ ಟ್ರಿಕ್.!

 

ಪ್ರತಿಯೊಬ್ಬರಿಗೂ ಕೂಡ ಬಾತ್ರೂಮ್ ಅನ್ನು ಸ್ವಚ್ಛ ಮಾಡುವುದೇ ಒಂದು ದೊಡ್ಡ ಕೆಲಸವಾಗಿರುತ್ತದೆ. ಹೌದು ಪ್ರತಿನಿತ್ಯ ನಾವು ಸ್ನಾನ ಮಾಡುವುದರಿಂದ ಅಲ್ಲಿ ಪದೇ ಪದೇ ನೀರು ಬೀಳುವುದರಿಂದ ಬಾತ್ರೂಮ್ ಹಾಳಾಗುತ್ತದೆ ಎಂದರೆ ಹೆಚ್ಚು ಕೊಳೆ ಆಗುವುದು. ಹಾಗೂ ನೀರಿನ ಕಲೆ ಹಾಗೆ ಒಣಗಿರುವುದರಿಂದ ನೀರಿನ ಕಲೆಯು ಸಹ ಟೈಲ್ಸ್ ಮೇಲೆ ಹಾಗೆ ಇರುತ್ತದೆ.

ಹಾಗಾಗಿ ಅದನ್ನು ವಾರಕ್ಕೆ ಒಮ್ಮೆ ತಕ್ಷಣವೇ ಕ್ಲೀನ್ ಮಾಡಿದರೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ. ಆದರೆ ಕೆಲವೊಂದಷ್ಟು ಜನ ಅದನ್ನು ವರ್ಷಾನುಗಟ್ಟಲೆ ಹಾಗೆ ಬಿಟ್ಟು ಅದನ್ನು ಸ್ವಚ್ಛ ಮಾಡಲು ಹೋಗುತ್ತಾರೆ. ಆದರೆ ವರ್ಷದಿಂದ ಇರುವಂತಹ ಕೊಳೆ.

ಒಮ್ಮೆ ನೀವು ಉಜ್ಜಿ ತಿಕ್ಕಿ ತೊಳೆದರೆ ಹೋಗುವುದಿಲ್ಲ. ಬದಲಿಗೆ ಅದು ಗಟ್ಟಿಯಾಗಿ ಕೊಳೆ ಅಲ್ಲಿಯೇ ಕೂತಿರುತ್ತದೆ. ಆದ್ದರಿಂದ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ತಿಳಿದುಕೊಂಡು ಅದನ್ನು ಯಾವ ವಸ್ತುವಿನಿಂದ ಸ್ವಚ್ಛ ಮಾಡಬಹುದು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಆನಂತರ ಮತ್ತೆ ನೀರಿನ ಕಲೆ ಕೆಲವೊಂದು ಕೊಳೆಗಳು ಹಾಗೆಯೇ ಇರುತ್ತದೆ.

ಹಾಗಾದರೆ ಈ ದಿನ ಬಾತ್ರೂಮ್ ನಲ್ಲಿ ಇರು ವಂತಹ ಕೊಳೆಯನ್ನು ಅಂದರೆ ಟೈಲ್ಸ್ ಮೇಲೆ ಇರುವ ಕೊಳೆಯನ್ನು ಸಂಪೂರ್ಣವಾಗಿ ಹೇಗೆ ಸ್ವಚ್ಛ ಮಾಡುವುದು, ಹಾಗೂ ಅದನ್ನು ಮಾಡು ವುದಕ್ಕೆ ಯಾವ ಒಂದು ಮ್ಯಾಜಿಕ್ ವಸ್ತು ಬಳಸಬಹುದು ಹಾಗೂ ಅದಕ್ಕೆ ಯಾವ ಪದಾರ್ಥಗಳು ಬೇಕಾಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳು ತ್ತಾ ಹೋಗೋಣ.

ಈ ಒಂದು ಮ್ಯಾಜಿಕಲ್ ನೀರನ್ನು ತಯಾರು ಮಾಡುವುದಕ್ಕೆ ಬೇಕಾಗಿರುವ ಪದಾರ್ಥಗಳು ಯಾವುದು ಎಂದು ನೋಡುವುದಾದರೆ.
• ಎರಡರಿಂದ ಮೂರು ಚಮಚ ಅಡುಗೆ ಸೋಡಾ
• ಹೈಡ್ರೋಜನ್ ಪೆರೋಕ್ಸೈಡ್. ಇದು ನಿಮಗೆ ಎಲ್ಲ ಮೆಡಿಕಲ್ ಶಾಪ್ ಗಳಲ್ಲಿ ಸಿಗುತ್ತದೆ ಇದನ್ನು ಯಾವುದಕ್ಕೆ ಉಪಯೋಗಿಸುತ್ತಾರೆ ಎಂದು ನೋಡುವುದಾದರೆ.

ನಿಮಗೆ ಏನಾದರೂ ಗಾಯವಾದಂತಹ ಸಮಯ ದಲ್ಲಿ ನಿಮ್ಮ ಚರ್ಮದ ಮೇಲ್ಭಾಗದಲ್ಲಿ ಯಾವುದಾದರೂ ಧೂಳು ಕೊಳೆ ಇದ್ದರೆ ಅದು ಹೋಗಲಿ ಎನ್ನುವ ಉದ್ದೇಶದಿಂದ ಇದನ್ನು ಉಪಯೋಗಿ ಸುತ್ತಾರೆ. ಆದ್ದರಿಂದ ಇದನ್ನು ಉಪಯೋಗಿಸಿದರೆ ನಿಮಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಬದಲಿಗೆ ನಿಮ್ಮ ಒಂದು ಬಾತ್ರೂಮ್ ಕ್ಲೀನ್ ಮಾಡಲು ಸಹಾಯ ತುಂಬಾ ಉಪಯೋಗಕ್ಕೆ ಬರುತ್ತದೆ ಎಂದು ಹೇಳಬಹುದು.

ಇದನ್ನು ಕೈಯಿಂದ ಮುಟ್ಟಿದರು ಸಹ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ. ಮೊದಲು ಒಂದು ಜಗ್ ತೆಗೆದುಕೊಂಡು ಅದರ ಒಳಗಡೆ 2 ರಿಂದ 3 ಚಮಚ ಅಡುಗೆ ಸೋಡವನ್ನು ಹಾಕಿ ಅದಕ್ಕೆ ಎರಡರಿಂದ ಮೂರು ಚಮಚ ಹೈಡ್ರೋಜನ್ ಪೆರೋಕ್ಸೈಡ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಆ ನೀರನ್ನು ನಿಮ್ಮ ಬಾತ್ರೂಮ್ ಟೈಲ್ಸ್ ಮೇಲೆ ಹಾಕಿ ಒಮ್ಮೆ ಉಜ್ಜಿದರೆ ಸಾಕು ಟೈಲ್ಸ್ ಮೇಲೆ ಇರುವಂತಹ ಸಂಪೂರ್ಣವಾದಂತಹ ಕೊಳೆ ಹೋಗುತ್ತದೆ.

ಇದು ಯಾವುದೇ ರೀತಿಯ ಕಷ್ಟವಾಗುವುದಿಲ್ಲ ಸುಲಭ ವಾಗಿ ಬೇಗನೆ ಎಲ್ಲವನ್ನು ಸಹ ಸ್ವಚ್ಛ ಮಾಡಬಹುದು. ಈ ಒಂದು ಟ್ರಿಕ್ ಪ್ರತಿಯೊಬ್ಬರಿಗೂ ಕೂಡ ಅನುಕೂಲವಾಗುತ್ತದೆ ಎಂದು ಹೇಳಬಹುದು. ಹೆಚ್ಚಿನ ಸಮಯ ತೆಗೆದುಕೊಳ್ಳದೆ ಇರುವುದರಿಂದ ಪ್ರತಿಯೊಬ್ಬರೂ ಕೂಡ ಬಾತ್ರೂಮ್ ಅನ್ನು ಬೇಗನೆ ಕಡಿಮೆ ಸಮಯದಲ್ಲಿ ಸ್ವಚ್ಛ ಮಾಡಬಹುದು.

ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಮಿಕಲ್ ಪದಾರ್ಥಗಳನ್ನು ಉಪಯೋಗಿಸಿ ಹಣವನ್ನು ಹಾಳು ಮಾಡಿಕೊಳ್ಳುವುದರ ಬದಲು ಕಡಿಮೆ ಬೆಲೆಯಲ್ಲಿ ಸಿಗುವಂತಹ ಈ ಪದಾರ್ಥಗಳನ್ನು ತೆಗೆದುಕೊಂಡು ಈ ರೀತಿ ಉಪಯೋಗಿಸುವುದು ನಿಮಗೆ ತುಂಬಾ ಅನುಕೂಲವಾಗುತ್ತದೆ ಹಾಗೂ ಯಾವುದೇ ರೀತಿಯ ತೊಂದರೆಗಳು ಸಹ ಉಂಟಾಗುವುದಿಲ್ಲ.

ಮತ್ತೆ ಶುರುವಾಯ್ತು ಗ್ಯಾಸ್ ಸಿಲಿಂಡರ್ ಸಬ್ಸಿಡಿ, ಪ್ರತಿ ಸಿಲಿಂಡರ್ ಗೆ ಸಿಗಲಿದೆ 267 ರೂಪಾಯಿಗಳ ಸಬ್ಸಿಡಿ. ಈ ಹಣ ಪಡೆಯೋದು ಹೇಗೆ ನೋಡಿ.!

 

ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ದಿನಸಿ ಧಾನ್ಯಗಳು, ತರಕಾರಿ ಪಲ್ಲೆಗಳ ಜೊತೆಗೆ ಗ್ಯಾಸ್ ಸಿಲಿಂಡರ್ ಬೆಲೆ ಕೂಡ 1000 ದ ಗಡಿ ದಾಟಿದೆ. ಇಂದು ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಕೂಡ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 1000 ಕ್ಕಿಂತ ಅಧಿಕವಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಗ್ಯಾಸ್ ಸಿಲೆಂಡರ್ ಬಳಸಿ ಅಡುಗೆ ಮಾಡುವ ಪದ್ದತಿಗೆ ಬದಲಾಗಿದ್ದಾರೆ.

ಕೇಂದ್ರ ಸರ್ಕಾರವು ಉಜ್ವಲ್ ಯೋಜನೆ ಆರಂಭಿಸಿದ ಕಾರಣ ಈಗ ಎಲ್ಲರೂ ಕೂಡ ಹೊಗೆ ಮುಕ್ತ ವಾತಾವರಣದಲ್ಲಿ ಅಡುಗೆ ಮಾಡುವ ಅನುಕೂಲತೆ ಪಡೆದಿದ್ದಾರೆ. ಆದರೆ ಸಿಲಿಂಡರ್ ಬೆಲೆ ಪ್ರತಿ ತಿಂಗಳಿಗೂ ವ್ಯತ್ಯಾಸವಾಗುತ್ತಿರುವುದು ಮತ್ತು ಕಳೆದ ತಿಂಗಳಿನಲ್ಲಿ ಏರಿಕೆ ಆಗಿರುವುದು ಜನಸಾಮಾನ್ಯರಿಗೆ ಹೊರೆಯಾಗಿ ಭಾಸವಾಗುತ್ತಿದೆ.

ಈ ರೀತಿ ಬೆಲೆ ಏರಿಕೆಯಿಂದ ನೊಂ’ದು ಹೋಗಿದ್ದ ಬಡ ಮತ್ತು ಮಧ್ಯಮ ವರ್ಗದವರಿಗೆ ಈಗ ಸರ್ಕಾರದಿಂದ ಸಿಹಿಸುದ್ದಿ ಸಿಕ್ಕಿದೆ. ಅದೇನೆಂದರೆ, ಉಜ್ವಲ್ ಯೋಜನೆಯಡಿ ಗ್ಯಾಸ್ ಖರೀದಿ ಮಾಡುತ್ತಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ ಗೆ 200 ರೂ. ಸಬ್ಸಿಡಿ ಸಿಗುತ್ತಿದೆ.

ಇಂತಹದೊಂದು ಮಹತ್ವವಾದ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ಇದೇ ತಿಂಗಳಿನಿಂದ ಯೋಜನೆಯ ಸಬ್ಸಿಡಿ ಹಣವು ಫಲಾನುಭವಿಗಳ ಖಾತೆಗೆ DBT ಮೂಲಕ ವರ್ಗಾವಣೆ ಆಗಲಿದೆ. ಈ ಹಿಂದೆ ಕೂಡ ಕೇಂದ್ರ ಸರ್ಕಾರವು ಎಲ್ಲ LPG ಬಳಕೆದಾರರಿಗೆ ಇಂತಹ ಅನುಕೂಲ ನೀಡುತ್ತಿತ್ತು.

ಈಗ ಉಜ್ವಲ್ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಬಳಸುತ್ತಿರುವ ಫಲಾನುಭವಿಗಳಿಗೆ ಕೆಲ ಕಂಡೀಷನ್ ಗಳ ಜೊತೆ ಸಬ್ಸಿಡಿ ಹಣವನ್ನು ನೀಡಲು ಸಚಿವ ಸಂಪುಟ ಸಭೆ ಜೊತೆ ಚರ್ಚಿಸಿ ಸರ್ಕಾರ ನಿರ್ಧಾರ ಮಾಡಿದೆ. ಸರ್ಕಾರದ ಈ ನಿರ್ಧಾರಕ್ಕೆ ಎಲ್ಲಾ ಪ್ರಮುಖ ಭಾರತೀಯ ತೈಲ ಕಂಪನಿಗಳು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್.

(BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸಬ್ಸಿಡಿಯನ್ನು ನೀಡಲು ಒಪ್ಪಿಕೊಂಡಿವೆ ಎನ್ನುವುದು ತಿಳಿದು ಬಂದಿದೆ. ಅಂಕಿಅಂಶಗಳಿಂದ ದೇಶದ 1.6 ಕೋಟಿ ಫಲಾನುಭವಿಗಳಿಗೆ ಸರ್ಕಾರದ ಈ ನಿರ್ಧಾರದಿಂದ ಅನುಕೂಲತೆ ಆಗಲಿದೆ ಎನ್ನುವುದು ತಿಳಿದು ಬಂದಿದೆ.

ಈ ಯೋಜನೆಯ ಕುರಿತಾದ ಕೆಲ ಪ್ರಮುಖ ವಿಷಯಗಳು:-
● ಉಜ್ವಲ್ ಯೋಜನೆಯಡಿ ನೀವು ಭಾರತ್, ಇಂಡಿಯನ್, HP ಯಾವುದೇ ಕಂಪನಿಯ ಸಿಲಿಂಡರ್ ಬಳಸುತ್ತಿದ್ದರೂ ಫಲಾನುಭವಿಗಳಾಗಬಹುದು.
● ಒಂದು ವರ್ಷಕ್ಕೆ 12 ಸಿಲಿಂಡರ್ ಬಳಸುವವರಿಗೆ ಮಾತ್ರ ಈ ಸಬ್ಸಿಡಿ ಹಣ ಸಿಗುತ್ತದೆ.
● ಸದ್ಯಕ್ಕೆ ಸರ್ಕಾರವು ಒಂದು ವರ್ಷದ ಅವಧಿಗೆ ಈ ಸಬ್ಸಿಡಿ ಹಣದ ಯೋಜನೆಯನ್ನು ಘೋಷಿಸಿದೆ.

● ಈ ಸಬ್ಸಿಡಿ ಹಣವನ್ನು ಪಡೆದುಕೊಳ್ಳಲು ಮೊದಲಿಗೆ ಪೂರ್ತಿ ಹಣವನ್ನು ಕೊಟ್ಟು ಗ್ಯಾಸ್ ಸಿಲೆಂಡರ್ ಖರೀದಿಸಬೇಕು, ಬಳಿಕ ಭಾರತ ಸರ್ಕಾರ ನಿಮ್ಮ ಖಾತೆಗೆ ಒಂದು ಸಿಲಿಂಡರ್ ಗೆ 200 ರೂ. ಲೆಕ್ಕದಲ್ಲಿ ಸಬ್ಸಿಡಿ ಹಣ ವರ್ಗಾವಣೆ ಮಾಡಲಿದೆ.
● ಇದಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇದ್ದರೆ ನಿಮ್ಮ ಬ್ಯಾಂಕ್ ಖಾತೆ ವಿವರ ಹಾಗೂ ಉಜ್ವಲ್ ಯೋಜನೆ ಕುರಿತ ವಿವರ ಸಲ್ಲಿಸಿ ನೋಂದಣಿಯಾಗಬೇಕು.
● ಈ ಸಬ್ಸಿಡಿ ಹಣದ ಪ್ರಯೋಜನ ಪಡೆಯಲು ಹೆಚ್ಚಿನ ವಿಷಯ ಬೇಕಾದಲ್ಲಿ ನಿಮ್ಮ ಗ್ಯಾಸ್ ಸಂಪರ್ಕ ಕಚೇರಿಗೆ ಭೇಟಿಕೊಟ್ಟು ಮಾಹಿತಿ ಪಡೆಯಬಹುದು.

ವರ್ಷಾನುಗಟ್ಟಲೆಯಿಂದ ಡಯಾಬಿಟಿಸ್ ನಿಂದ ನರಳುತ್ತಿದ್ದಿರಾ.? ಚಿಂತೆ ಬಿಡಿ ಈ ಮನೆಮದ್ದು ಸೇವಸಿ ಸಾಕು 15 ದಿನದಲ್ಲಿ ಶುಗರ್ ಕಂಟ್ರೋಲ್ ಆಗುತ್ತೆ.!

 

ನಮ್ಮಲ್ಲಿ ಹೆಚ್ಚಿನ ಜನಕ್ಕೆ ಡಯಾಬಿಟೀಸ್ ಸಮಸ್ಯೆ ಇದ್ದು ಅದನ್ನು ಅವರು ಸರಿಪಡಿಸಿಕೊಳ್ಳಲು ಆಸ್ಪತ್ರೆಗಳಿಗೆ ಹೋಗಿ ಔಷಧಿಗಳನ್ನು ಉಪಯೋಗಿಸುತ್ತಿರುತ್ತಾರೆ. ಆದರೆ ಅವುಗಳನ್ನು ಸದಾಕಾಲ ಉಪಯೋ ಗಿಸಲು ಸಾಧ್ಯವಿಲ್ಲ ಏಕೆಂದರೆ ಪ್ರತಿ ದಿನ ಪ್ರತಿ ಬಾರಿ ಯಾವಾಗಲೂ ಔಷಧಿಗಳನ್ನು ಉಪಯೋಗಿಸಲು ಸಾಧ್ಯವಿಲ್ಲ. ಆದ್ದರಿಂದ ಕೆಲವೊಂದ ಷ್ಟು ಮನೆಯಲ್ಲಿಯೇ ಮಾಡಿಕೊಳ್ಳುವಂತಹ ಔಷಧಿಗಳನ್ನು ತಯಾರಿಸಿ ಉಪಯೋಗಿಸುವುದು ಒಳ್ಳೆಯದು.

ಆದರೆ ಹೆಚ್ಚಿನ ಜನ ಈ ರೀತಿಯ ಯಾವುದೇ ವಿಧಾನಗಳನ್ನು ಅನುಸರಿಸುವುದಿಲ್ಲ. ಬದಲಿಗೆ ಎಲ್ಲರೂ ಕೂಡ ಆಸ್ಪತ್ರೆಗಳಿಗೆ ಹೋಗಿ ಔಷಧಿಗಳನ್ನು ತೆಗೆದುಕೊಂಡು ಉಪಯೋಗಿಸುತ್ತಿರುತ್ತಾರೆ. ಆದರೆ ಅವು ಕೆಲವೊಮ್ಮೆ ನಮಗೆ ಸೈಡ್ ಎಫೆಕ್ಟ್ ಅನ್ನು ಉಂಟುಮಾಡುತ್ತದೆ. ಹೌದು ಎಲ್ಲ ಮಾತ್ರೆಗಳಲ್ಲಿಯೂ ಕೂಡ ಕೆಲವೊಂದಷ್ಟು ಕೆಮಿಕಲ್ ಹಾಕಿರುವುದರಿಂದ.

ಅವು ಕೆಲವೊಮ್ಮೆ ನಮ್ಮ ಆರೋಗ್ಯವನ್ನು ಹಾಳು ಮಾಡಬಹುದು ಆದ್ದರಿಂದ ಅವುಗಳನ್ನು ಅಧಿಕವಾಗಿ ಉಪಯೋಗಿಸುವುದರ ಬದಲು ಈ ರೀತಿಯ ಕೆಲವೊಂದು ಮನೆಮದ್ದುಗಳನ್ನು ಮಾಡಿ ಉಪಯೋಗಿಸು ವುದು ಒಳ್ಳೆಯದು. ಹಾಗಾದರೆ ಈ ಡಯಾಬಿಟಿಸ್ ಸಮಸ್ಯೆಯನ್ನು ನಿಯಂತ್ರಣ ಮಾಡಿ ನಮ್ಮ ದೇಹದಲ್ಲಿ ರಕ್ತವನ್ನು ಹೆಚ್ಚು ಮಾಡುವಂತಹ ಮನೆಮದ್ದು ಯಾವುದು.

ಅದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಹಾಗೂ ಅದನ್ನು ಹೇಗೆ ಉಪಯೋಗಿಸ ಬೇಕು, ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲೇ ಹೇಳಿದಂತೆ ನೂರರಲ್ಲಿ ಶೇಕಡ 80ರಷ್ಟು ಜನರಿಗೆ ಈ ಒಂದು ಡಯಾಬಿ ಟೀಸ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಹೌದು ಅವರ ಆಹಾರ ಪದ್ಧತಿ ಅವರ ಜೀವನ ಶೈಲಿಯಿಂದ ಈ ಒಂದು ಸಮಸ್ಯೆ ಉಂಟಾಗುತ್ತಿದೆ ಎಂದೇ ಹೇಳಬಹುದು. ಅದರಲ್ಲೂ ನಾವು ಈಗ ಸೇವನೆ ಮಾಡುತ್ತಿರುವಂತಹ ಆಹಾರ ಎಲ್ಲವೂ ಕೂಡ ಕಲುಷಿತವಾಗಿದ್ದು ಅವುಗಳನ್ನು ನಾವು ಹೇಗೆ ಉಪಯೋಗಿಸ ಬೇಕು ಯಾವ ಆಹಾರವನ್ನು ನಾವು ತೆಗೆದುಕೊಂಡರೆ ಅದರಿಂದ ನಮಗೆ ಆರೋಗ್ಯ ಹೆಚ್ಚುತ್ತದೆ ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಬದಲಿಗೆ ಯಾರು ಕೂಡ ಈ ಒಂದು ವಿಧಾನವನ್ನು ಅನುಸರಿಸುವುದಿಲ್ಲ. ಈ ರೀತಿಯಿಂದಲೇ ಒಂದು ಸಮಸ್ಯೆ ಉಂಟಾಗು ವುದಕ್ಕೆ ಕಾರಣವಾಗಿರುತ್ತದೆ ಎಂದು ಹೇಳಬಹುದು. ಹಾಗಾದರೆ ಈದಿನ ಡಯಾಬಿಟಿಸ್ ಅನ್ನು ಕೇವಲ 15 ದಿನದಲ್ಲಿ ಹೇಗೆ ನಿಯಂತ್ರಣಕ್ಕೆ ತರುವುದು ಇದನ್ನು ತಡೆಗಟ್ಟಲು ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಹಾಗೂ ಅದನ್ನು ಹೇಗೆ ತಯಾರಿಸಿ ಉಪಯೋಗಿಸುವುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ಈ ಒಂದು ಮನೆ ಮದ್ದನ್ನು ಮಾಡುವುದಕ್ಕೆ ಬೇಕಾಗುವುದು ಕೇವಲ ಮೂರೇ ಮೂರು ಪದಾರ್ಥ.
• ಜೀರಿಗೆ
• ಅಜ್ವಾನ ಅಂದರೆ ಓಂಕಾಳು
• ಮೆಂತ್ಯ

ಇಷ್ಟನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಇದನ್ನು ಸಣ್ಣ ಉರಿಯಲ್ಲಿ ಉರಿದು ನುಣ್ಣನೆ ಪುಡಿ ಮಾಡಿಟ್ಟುಕೊಳ್ಳಬೇಕು. ನಂತರ ಬೆಳಗಿನ ಸಮಯ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಈ ಪುಡಿಯನ್ನು ಸೇರಿಸಿ ಖಾಲಿ ಹೊಟ್ಟೆಗೆ ಸೇವನೆ ಮಾಡುತ್ತಾ ಬರುವುದರಿಂದ ನಿಮ್ಮಲ್ಲಿ ರುವಂತಹ ಡಯಾಬಿಟೀಸ್ ಸಮಸ್ಯೆ ಕೇವಲ 15 ದಿನದಲ್ಲಿಯೇ ನಿಯಂತ್ರಣಕ್ಕೆ ಬರುತ್ತದೆ.

ಹಾಗೂ ನಿಮ್ಮ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚು ಮಾಡುವುದಕ್ಕೂ ಕೂಡ ಇದು ಸಹಾಯ ಮಾಡುತ್ತದೆ. ಪ್ರತಿ ಯೊಬ್ಬರೂ ಕೂಡ ಇದನ್ನು ಸೇವನೆ ಮಾಡಬಹುದಾಗಿತ್ತು ಯಾವುದೇ ಸಮಸ್ಯೆ ಬಂದ ಮೇಲೆ ಔಷಧಿಯನ್ನು ಪಡೆಯುವುದರ ಮೊದಲು ಬಾರದೆ ಇರುವ ಹಾಗೆ ಈ ರೀತಿಯ ಕೆಲವೊಂದು ಒಳ್ಳೆಯ ಮನೆಮದ್ದು ಗಳನ್ನು ಮಾಡಿ ಸೇವನೆ ಮಾಡುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಎಣ್ಣೆ ಜಿಡ್ಡಿನಿಂದ ಕೊಳಕಾಗಿರೋ ಅಡುಗೆಮನೆ ಕಿಟಕಿ ಮತ್ತೆ ಪಳಪಳನೇ ಹೊಳೆಯಲು ಈ ರೀತಿ ಮಾಡಿ.!

 

ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಅಡುಗೆಮನೆಯನ್ನು ಸ್ವಚ್ಛ ಮಾಡುವುದು ಒಂದು ದೊಡ್ಡ ಕೆಲಸವೇ ಆಗಿರುತ್ತದೆ. ಆದ್ದರಿಂದ ಹೆಚ್ಚಿನವರು ಅಡುಗೆಮನೆಯನ್ನು ತಕ್ಷಣ ಅಂದರೆ ಪದೇ ಪದೇ ಸ್ವಚ್ಛ ಮಾಡಲು ಹೋಗುವುದಿಲ್ಲ. ಏಕೆಂದರೆ ಹೆಚ್ಚಿನ ಸಮಯ ತೆಗೆದುಕೊಳ್ಳು ತ್ತದೆ ಎನ್ನುವ ಉದ್ದೇಶದಿಂದ ಯಾರು ಕೂಡ ವಾರಕ್ಕೆ 15 ದಿನಕ್ಕೆ ಸ್ವಚ್ಛ ಮಾಡಲು ಹೋಗುವುದಿಲ್ಲ.

ಏನಾದರೂ ಹಬ್ಬ ಹರಿದಿನಗಳಲ್ಲಿ ಅಥವಾ ಏನಾದರೂ ಬೇರೆ ಕೆಲಸ ಕಾರ್ಯಗಳು ಇಲ್ಲದೆ ಇರುವಂತಹ ಸಮಯ ದಲ್ಲಿ ಅಡುಗೆಮನೆಯನ್ನು ಸ್ವಚ್ಛ ಮಾಡಲು ಮುಂದಾಗುತ್ತಾರೆ. ಅದರ ಲ್ಲಂತೂ ಕೆಲಸಕ್ಕೆ ಹೋಗುವಂತಹ ಮಹಿಳೆಯರು ಅಡುಗೆಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಕ್ಕೆ ಸಮಯವೇ ಇರುವುದಿಲ್ಲ. ಹಾಗಾದರೆ ಈ ದಿನ ಅಡುಗೆ ಮನೆಯಲ್ಲಿ ಇರುವಂತಹ ಕಿಟಕಿಯ ಕೊಳೆಗಳನ್ನು.

ಅಂದರೆ ಕಿಟಕಿಯ ಮೇಲೆ ಇರುವಂತಹ ಕೊಳೆ ಧೂಳು ಹಾಗೂ ಎಣ್ಣೆಯ ಕಲೆಗಳನ್ನು ಸಂಪೂರ್ಣವಾಗಿ ಸ್ವಚ್ಛ ಮಾಡುವುದು ಹೇಗೆ ಹಾಗೂ ಯಾವ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ಕಡಿಮೆ ಸಮಯದಲ್ಲಿ ಹೆಚ್ಚು ಶ್ರಮಪಡದೆ ಸ್ವಚ್ಛ ಮಾಡುವುದು ಹೇಗೆ ಎನ್ನುವುದನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಸಾಮಾನ್ಯ ವಾಗಿ ಮಹಿಳೆಯರು ಪ್ರತಿಯೊಂದನ್ನು ಸ್ವಚ್ಛ ಮಾಡುವುದಕ್ಕೆ ಸುಲಭ ವಾದ ಮಾರ್ಗಗಳು ಯಾವುದಾದರು ಸಿಗುತ್ತದೆಯಾ ಎನ್ನುವುದನ್ನು ಆಲೋಚನೆ ಮಾಡುತ್ತಿರುತ್ತಾರೆ. ಆದರೆ ಈ ಮಾಹಿತಿ ಕೆಲವೊಂದಷ್ಟು ಮಹಿಳೆಯರಿಗೆ ತಿಳಿಯುತ್ತದೆ. ಕೆಲವೊಂದಷ್ಟು ಮಹಿಳೆಯರಿಗೆ ತಿಳಿಯುವುದಿಲ್ಲ. ಆದರೆ ಈ ರೀತಿ ಕೆಲಸ ಮಾಡುವುದರಿಂದ ಅವರಿಗೆ ಹೆಚ್ಚು ಶ್ರಮ ಬೇಕಾಗುತ್ತದೆ ಹಾಗೂ ಹೆಚ್ಚು ಸಮಯವೂ ಕೂಡ ತೆಗೆದುಕೊಳ್ಳುತ್ತದೆ.

ಆದ್ದರಿಂದ ಕೆಲವೊಂದು ಮಹಿಳೆಯರು ಈ ಕೆಲಸ ಕಷ್ಟದ ಕೆಲಸ ಎನ್ನುವ ಅರ್ಥದಲ್ಲಿ ಹೇಳುತ್ತಿರುತ್ತಾರೆ. ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಟಿಪ್ಸ್ ನಿಮಗೆ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಬಹುದು. ಹೌದು ನಿಮ್ಮ ಅಡುಗೆ ಮನೆಯಲ್ಲಿಯೇ ಸುಲಭವಾಗಿ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿಕೊಂಡು ನಿಮ್ಮ ಅಡುಗೆ ಮನೆಯ ಕಿಟಕಿಯ ಮೇಲೆ ಇರುವಂತಹ ಎಣ್ಣೆ ಜಿಡ್ಡು ಕೊಳೆ ಎಲ್ಲವನ್ನು ಸಹ ಸಂಪೂರ್ಣವಾಗಿ ತೆಗೆದು ಹಾಕಬಹುದು.

ಹೌದು ಇದನ್ನು ಮಾಡುವುದಕ್ಕೆ ಅಂದರೆ ಈ ಒಂದು ಅದ್ಭುತವಾದಂತಹ ಚಮತ್ಕಾರಿ ಪೇಸ್ಟ್ ಅನ್ನು ತಯಾರಿಸುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
• ನಿಮಗೆ ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟು ಪೇಸ್ಟ್
• ಹಾಗೆಯೇ ಉಪ್ಪು ಎರಡರಿಂದ ಮೂರು ಚಮಚ
• ಹಾಗೂ ಎರಡು ರಿಂದ ಮೂರು ಚಮಚ ವಿನೀಗರ್.
ವಿನೀಗರ್ ಇಲ್ಲದೆ ಇರುವವರು ನಿಂಬೆಹಣ್ಣಿನ ರಸವನ್ನು ಸಹ ಉಪಯೋಗಿಸಿಕೊಳ್ಳ ಬಹುದು.

ಹಾಗಾದರೆ ಇದನ್ನು ಹೇಗೆ ತಯಾರಿಸುವುದು ಎಂದು ನೋಡುವುದಾದರೆ ಇಷ್ಟನ್ನು ಒಂದು ಚಿಕ್ಕ ಬೌಲ್ ನಲ್ಲಿ ಹಾಕಿ ಅಷ್ಟನ್ನು ಚೆನ್ನಾಗಿ ಕಲಸಿಕೊಳ್ಳ ಬೇಕು. ಅದು ಒಂದು ಪೇಸ್ಟ್ ಹದದಲ್ಲಿ ತಯಾರಾಗುತ್ತದೆ ಹೆಚ್ಚು ತೆಳ್ಳನೆ ಮಾಡಿಕೊಳ್ಳಬಾರದು. ಒಂದು ಹದದಲ್ಲಿ ತಯಾರಿಸಿದಂತಹ ಈ ಒಂದು ಮಿಶ್ರಣವನ್ನು ನಿಮ್ಮ ಕಿಟಕಿಯ ಕೊಳೆ ಇರುವಂತಹ ಜಾಗಗಳಿಗೆ ಹಾಕಿ 5 ರಿಂದ 10 ನಿಮಿಷ ಬಿಟ್ಟು ಆನಂತರ ಯಾವುದಾದರೂ ಬ್ರಷ್ ಸಹಾಯದಿಂದ ಅದನ್ನು ಒಂದು ಕಡೆಯಿಂದ ಉಜ್ಜಿದರೆ ಸಾಕು.

ಹೆಚ್ಚು ಶ್ರಮ ಇಲ್ಲದೆ ಒಮ್ಮೆಯೇ ಕಿಟಕಿಯ ಮೇಲೆ ಇರುವಂತಹ ಸಂಪೂರ್ಣ ವಾದ ಎಣ್ಣೆ ಜಿಡ್ಡು ಕೊಳೆ ಧೂಳು ಎಲ್ಲವೂ ಸಹ ತೆಗೆದುಹಾಕುತ್ತದೆ. ಈ ಒಂದು ವಿಧಾನ ಸುಲಭವಾಗಿದ್ದು 15 ದಿನಕ್ಕೆ ತಿಂಗಳಿಗೆ ಈ ರೀತಿ ಮಾಡಿಕೊಂಡರೆ ನಿಮಗೆ ಹೆಚ್ಚು ಶ್ರಮಪಡುವ ಅವಶ್ಯಕತೆ ಬರುವುದಿಲ್ಲ. ಆದ್ದರಿಂದ ಮಹಿಳೆಯರಿಗೆ ಈ ಒಂದು ವಿಧಾನ ತುಂಬಾ ಅನುಕೂಲವಾಗಲಿದ್ದು ಇದನ್ನು ಅನುಸರಿಸುವುದು ಕೂಡ ಬಹಳ ಮುಖ್ಯವಾಗಿರುತ್ತದೆ.

ಇನ್ಮುಂದೆ ದೇವರ ಸಮಾನು ಕ್ಲೀನ್ ಮಾಡಲು ಕಷ್ಟ ಪಡಬೇಕಿಲ್ಲ ಈ ಪೇಸ್ಟ್ ಬಳಸಿದ್ರೆ ಸಾಕು ನಿಮಿಷದೊಳಗೆ ದೇವರ ಸಾಮಾಗ್ರಿಗಳು ಪಳಪಳನೆ ಹೊಳೆಯುತ್ತದೆ.!

 

ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ದೇವರ ಮನೆಯ ಪೂಜಾ ಸಾಮಗ್ರಿಗಳನ್ನು ಕ್ಲೀನ್ ಮಾಡುವುದಕ್ಕೆ ಹೆಚ್ಚಿನ ಶ್ರಮ ಪಡುತ್ತಿರುತ್ತಾರೆ. ಹೌದು ಅದನ್ನು ವಾರಕ್ಕೆ ಒಮ್ಮೆ ಕ್ಲೀನ್ ಮಾಡುವುದರಿಂದ ಅದರ ಮೇಲೆ ಕಪ್ಪು ಕಲೆ ಅಥವಾ ಹೊಗೆ, ಎಣ್ಣೆ ಕಲೆ, ಈ ರೀತಿಯಾಗಿ ಹಲವಾರು ಕೊಳೆಗಳು ಇರುತ್ತದೆ. ಅವುಗಳನ್ನು ಸ್ವಚ್ಛ ಮಾಡಲು ಪ್ರತಿಯೊಬ್ಬರೂ ಕೂಡ ಹೆಚ್ಚಿನ ಶ್ರಮ ಪಡುತ್ತಿರುತ್ತಾರೆ.

ಆದರೆ ಈ ದಿನ ನಾವು ಹೇಳುವಂತಹ ಈ ಟಿಪ್ಸ್ ನಿಮಗೆ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಬಹುದು. ಹೌದು ಕಡಿಮೆ ಖರ್ಚಿನಲ್ಲಿ ಅದರಲ್ಲೂ ಹತ್ತು ರೂಪಾಯಿ ಖರ್ಚಿನ ಒಳಗೆ ಈಗ ನಾವು ಹೇಳುವಂತಹ ಈ ಒಂದು ಪೌಡರ್ ಅಂದರೆ ಪೇಸ್ಟ್ ಅನ್ನು ತಯಾರಿಸಬಹುದು. ಇದನ್ನು ನೀವು ನಿಮ್ಮ ದೇವರ ಮನೆಯ ಪಾತ್ರೆಯನ್ನು ತೊಳೆಯುವಂತಹ ಸಮಯದಲ್ಲಿ ಉಪಯೋಗಿಸಬಹುದು.

ಹೌದು ಇದನ್ನು ನೀವು ನಿಮ್ಮ ದೇವರಮನೆಯ ಪಾತ್ರೆಗೆ ಹಚ್ಚಿ ಉಜ್ಜಿ ತಿಕ್ಕಿ ತೊಳೆಯುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಅದನ್ನು ಹಚ್ಚಿ ಎರಡು ನಿಮಿಷ ಬಿಟ್ಟರೆ ಸಾಕು ದೇವರ ಮನೆಯ ಸಾಮಗ್ರಿ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಹೊರಗಡೆ ಮಾರುಕಟ್ಟೆಯಲ್ಲಿ ಸಿಗುವಂತಹ ಪೌಡರ್ ಗಳನ್ನು ತಂದು ನೀವು ದೇವರ ಸಾಮಾನುಗಳನ್ನು ಹಚ್ಚಿ ಚೆನ್ನಾಗಿ ಉಜ್ಜಿದರೆ ಮಾತ್ರ ಸ್ವಚ್ಛವಾಗುತ್ತದೆ.

ಅದರಲ್ಲಂತೂ ಹಬ್ಬದ ದಿನಗಳಲ್ಲಿ ಹೆಚ್ಚಿನ ಕೆಲಸ ಇದ್ದಂತಹ ಸಮಯದಲ್ಲಿ ಈಗ ನಾವು ಹೇಳುವಂತಹ ಈ ಒಂದು ಟ್ರಿಕ್ಸ್ ಬಳಸಿದರೆ ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಕಡಿಮೆ ಸಮಯದಲ್ಲಿ ದೇವರಮನೆಯ ಸಾಮಗ್ರಿಗಳನ್ನು ಸ್ವಚ್ಛ ಮಾಡಬಹುದಾಗಿದೆ. ಹಾಗಾದರೆ ಅದನ್ನು ಮಾಡುವುದು ಹೇಗೆ? ಅದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ಮೊದಲೇ ಹೇಳಿದಂತೆ ದೇವರ ಮನೆಯ ಸಾಮಗ್ರಿಗಳಲ್ಲಿ ಅತಿ ಹೆಚ್ಚಿನ ಕೊಳೆ ಅಂಶ ಇರುತ್ತದೆ ಎಂದು ಹೇಳಬಹುದು. ಏಕೆ ಎಂದರೆ ನಾವು ದೇವರ ಮನೆಯಲ್ಲಿ ತಾಮ್ರ ಹಿತ್ತಾಳೆ ಪಾತ್ರೆಗಳನ್ನು ಉಪಯೋಗಿಸುತ್ತಿರು ತ್ತೇವೆ ಆದರೆ ಅವುಗಳನ್ನು ಪ್ರತಿದಿನ ತೊಳೆಯಲು ಸಾಧ್ಯವಾಗುವುದಿಲ್ಲ ವಾರದ ದಿನಗಳಲ್ಲಿ ಅಂದರೆ ಆ ಮನೆಯ ದೇವರ ವಾರದ ದಿನಗಳಲ್ಲಿ ಅವುಗಳನ್ನು ಸ್ವಚ್ಛ ಮಾಡಿ ಆನಂತರ ಪೂಜೆ ಮಾಡುತ್ತಾರೆ.

ಅಂತಹ ಸಮಯದಲ್ಲಿ ಕೆಲವೊಂದಷ್ಟು ಹೆಣ್ಣು ಮಕ್ಕಳು ಕೆಲಸಕ್ಕೆ ಹೋಗುವ ಸಂದರ್ಭ ಇದ್ದಂತಹ ಸಮಯದಲ್ಲಿ ಅವುಗಳನ್ನು ಉಜ್ಜಿ ತಿಕ್ಕಿ ತೊಳೆಯಲು ಸಮಯ ಇರುವುದಿಲ್ಲ ಅಂತಹವರು ಉಪಯೋಗಿಸಿದರೆ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಬಹುದು. ಹಾಗಾದರೆ ಅದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥ ಬೇಕಾಗು ತ್ತದೆ ಎಂದು ನೋಡುವುದಾದರೆ.

* ಸ್ವಲ್ಪ ಪ್ರಮಾಣದ ಇಟ್ಟಿಗೆ ಪುಡಿ ಹೌದು ಇಟ್ಟಿಗೆಯನ್ನು ತಂದು ಚೆನ್ನಾಗಿ ಕುಟ್ಟಿ ಅದನ್ನು ಪುಡಿ ಮಾಡಿ ಕೊಳ್ಳಬೇಕು. ಆನಂತರ ಅದಕ್ಕೆ ಸ್ವಲ್ಪ ಪ್ರಮಾಣದ ನಿಂಬೆ ಉಪ್ಪನ್ನು ಮಿಶ್ರಣ ಮಾಡಿ ಸ್ವಲ್ಪ ನೀರನ್ನು ಹಾಕಿ ಕಲಸಿಟ್ಟು ಕೊಳ್ಳಬೇಕು.

ನಿಂಬೆ ಉಪ್ಪು ಇಲ್ಲದೆ ಇರುವವರು ಇಟ್ಟಿಗೆ ಪುಡಿಗೆ ನಿಂಬೆಹಣ್ಣಿನ ರಸ ವನ್ನು ಹಾಕಿದರೆ ಸಾಕು ನೀರನ್ನು ಹಾಕುವ ಅವಶ್ಯಕತೆ ಇರುವುದಿಲ್ಲ. ಈ ರೀತಿ ತಯಾರಾದ ಪೇಸ್ಟ್ ಅನ್ನು ನಿಮ್ಮ ದೇವರ ಮನೆಯ ಸಾಮಗ್ರಿಗಳ ಮೇಲೆ ಹಚ್ಚಿ ಒಮ್ಮೆ ಉಜ್ಜಿದರೆ ಸಾಕು ದೇವರಮನೆಯ ಎಲ್ಲಾ ಪಾತ್ರೆಗಳನ್ನು ಸುಲಭವಾಗಿ ಕಡಿಮೆ ಸಮಯದಲ್ಲಿ, ಕಡಿಮೆ ಖರ್ಚಿನಲ್ಲಿ, ಸ್ವಚ್ಛ ಮಾಡಬಹುದು. ಈ ಒಂದು ಟ್ರಿಕ್ಸ್ ಪ್ರತಿಯೊಬ್ಬರಿಗೂ ಕೂಡ ಅನುಕೂಲವಾಗುತ್ತದೆ ಎಂದೇ ಹೇಳಬಹುದು.