Home Blog Page 2

ತಮಿಳಿನಿಂದ ಕನ್ನಡ ಹುಟ್ಟಿದ್ದರೆ ಅದು ಸರಿ, ಇದು ಅಪಮಾನ ಹೇಗಾಗುತ್ತದೆ.? ಕಮಲ್ ಹಾಸನ್ ಹೇಳಿಕೆ ಸಮರ್ಥಿಸಿಕೊಂಡ ನಟ ಕಿಶೋರ್.!

ನಟ ಕಮಲ್ ಹಾಸನ್ (ACTOR KAMAL HASAN) ಅವರು ಕಳೆದ ವಾರ ನಡೆದ ಅವರ ಥಗ್ಸ್ ಲೈಫ್ (THUGS LIFE) ಸಿನಿಮಾ ರಿಲೀಸ್ ಕಾರ್ಯಕ್ರಮದಲ್ಲಿ ಮಾತಿನ ಬರದಲ್ಲಿ ಕನ್ನಡ ಭಾಷೆಯು ತಮಿಳು ಮೂಲದಿಂದ ಬಂದಿದ್ದು, ತಮಿಳು ಭಾಷೆ ಎಲ್ಲರ ಅಮ್ಮ ಎಂದು ಹೇಳಿಬಿಟ್ಟಿದ್ದಾರೆ, ಈ ಹೇಳಿಕೆಗೆ ಕರ್ನಾಟಕದಾದ್ಯಂತ ವಿಪರೀತವಾಗಿ ಆಕ್ಷೇಪ ವ್ಯಕ್ತವಾಗುತ್ತದೆ.

ಇದು ಕನ್ನಡಿಗರ ಭಾಷಾಭಿಮಾನ ಹಾಗೂ ಗೌರವಕ್ಕೆ ತರುವಂತಹ ಹೇಳಿಕೆ ಹಾಕಿದೆ. ಹೀಗಾಗಿ ಇಂತಹ ತಪ್ಪಾದ ಹೇಳಿಕೆಯನ್ನು ನೀಡಿದ ಕಮಲ್ ಹಾಸನ್ ಅವರು ಕೂಡಲೇ ತಮ್ಮ ತಪ್ಪನ್ನು ಅರಿತುಕೊಂಡು ಕ್ಷಮೆ ಕೇಳಬೇಕು ಎಂದು ಕನ್ನಡಪರ ಹೋರಾಟಗಾರರು ಪಟ್ಟು ಹಿಡಿದಿದ್ದಾರೆ. ಇಲ್ಲವಾದಲ್ಲಿ ಇವರನ್ನು ಬ್ಯಾನ್ ಮಾಡಲಾಗುವುದು ಹಾಗೂ ಯಾವುದೇ ಕಾರಣಕ್ಕೂ ಅವರ ಸಿನಿಮಾಗಳನ್ನು ಕರ್ನಾಟಕದಲ್ಲಿ ರಿಲೀಸ್ ಆಗಲು ಬಿಡುವುದಿಲ್ಲ ಎಂದು ಕನ್ನಡ ಚಲನಚಿತ್ರ ಪರಿಷತ್ತು ಕೂಡ ಎಚ್ಚರಿಕೆ ನೀಡಿದೆ.

ಆದರೆ ಕಮಲ್ ಹಾಸನ್ ಅವರು ಮಾತ್ರ ನಾನು ಹೇಳಿದ್ದಲ್ಲಿ ತಪ್ಪು ಇಲ್ಲ, ತಪ್ಪು ಮಾಡಿದ್ದರೆ ಕ್ಷಮೆ ಕೇಳುವುದರಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಇಂದು ಇದು ರಾಜಕೀಯವಾಗುತ್ತಿದೆ. ಭಾಷೆಯ ವಿಚಾರದಲ್ಲಿ ಪುರಾತತ್ವ ತಜ್ಞರು, ಭಾಷಾ ತಜ್ಞರು ಸಂಶೋಧನೆ ಮಾಡಿ ಮಾತನಾಡಬೇಕು ರಾಜಕೀಯ ಮಾಡುವವರು ಅಲ್ಲ ಹೀಗಾಗಿ ತಪ್ಪೇ ಇಲ್ಲದ ವಿಚಾರದ ಬಗ್ಗೆ ನಾನು ಕ್ಷಮೆ ಕೇಳುವುದಿಲ್ಲ ಯಾವುದೇ ಬೆದರಿಕೆಗೂ ಬಗ್ಗುವುದಿಲ್ಲ ಎಂದು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ.

ಇತ್ತ ಇನ್ನೊಂದು ನಮ್ಮ ಕರುನಾಡಿನ ಹಲವು ಕಲಾವಿದರು ನಟನ ಹೇಳಿಕೆಯನ್ನೇ ಬೆಂಬಲಿಸಿ ಬ್ಯಾಟ್ ಬೀಸುತ್ತಿದ್ದಾರೆ. ಅಂದು ಆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಹೋಗಿದ್ದ ಶಿವರಾಜ್ ಕುಮಾರ್ ರವರು ಈ ಮಾತು ಹೇಳುವಾಗ ವೇದಿಕೆ ಮೇಲೆಯೇ ಇದ್ದರು. ನಂತರ ಇದನ್ನು ಮಾಧ್ಯಮಗಳು ಪ್ರಶ್ನಿಸಿದಾಗ ಅವರ ನಮ್ಮ ಬಾಂಧವ್ಯ ವೈಯುಕ್ತಿಕ ಹೀಗಾಗಿ ಅವರ ಪ್ರೀತಿಗಾಗಿ ಹೋಗಬೇಕಾಯಿತು. ಅವರಿಗೆ ಕನ್ನಡದ ಭಾಷೆಯ ಬಗ್ಗೆ ಅಪಾರ ಗೌರವ ಹಾಗೂ ಪ್ರೀತಿ ಇದೆ ಪ್ರೀತಿಯಿಂದ ಹಾಗೆ ಹೇಳಿದ್ದಾರೆ ಅದನ್ನು ದೊಡ್ಡದು ಮಾಡುವ ಅಗತ್ಯ ಇಲ್ಲ ತಪ್ಪಾಗಿದ್ದರೆ ಅವರು ತಿದ್ದು ಕೊಳ್ಳುತ್ತಾರೆ ನೀವು ಇದನ್ನು ದೊಡ್ಡದಾಗಿ ಮಾಡಲು ಹೋಗಬೇಡಿ ಎಂದಿದ್ದರು. ಇನ್ನು ನಟಿ ರಮ್ಯಾ ಹಾಗೂ ರಚಿತಾ ರಾಮ್ ಕೂಡ ಇದೇ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ನಟ ಕಿಶೋರ್ ಕೂಡ ಇದನ್ನೇ ಮುದ್ದುವರಿಸಿದ್ದಾರೆ.

ಆರಂಭದಿಂದ ವಿಭಿನ್ನ ರೀತಿಯ ನಿಲುವುಗಳನ್ನು ಧೈರ್ಯವಾಗಿ ವ್ಯಕ್ತಪಡಿಸುತ್ತಾ ಅನೇಕ ಬಾರಿ ನಮ್ಮವರ ಕೆಂಗಣ್ಣಿಗೆ ಗುರಿಯಾಗಿರುವ ಕಿಶೋರ್ ಈ ಬಾರಿಯೂ ಕೂಡ ಇಂತಹದೇ ವಿವಾದ ಮಾಡಿಕೊಳ್ಳುವಂತಹ ಹೇಳಿಕೆ ನೀಡಿದ್ದಾರೆ. ಕಮಲ್ ಹಾಸನ್ ಅವರು ತಮಿಳು ಕನ್ನಡ ಭಾಷೆಯಿಂದ ಹುಟ್ಟಿದ್ದು ಎಂದರೆ ಅದರಲ್ಲಿ ಅವಮಾನ ಆಗುವ ಭಾಷೆ ಏನಿದೆ ನಾನು ನನ್ನ ತಾಯಿಯ ಹೊಟ್ಟೆಯಿಂದ ಹುಟ್ಟಿದ್ದು ಎಂದರೆ ನನಗೂ ಹಾಗೂ ನನ್ನ ತಾಯಿಗೂ ಅದು ಅವಮಾನ ಹೇಗಾಗುತ್ತದೆ. ಎಲ್ಲ ಭಾಷೆಗಳು ಕೂಡ ಎಲ್ಲಿಂದಲೋ ಹುಟ್ಟಿ ಬಂದಿರುತ್ತವೆ ನಂತರ ಬೆಳೆಯುತ್ತವೆ.

ಹೀಗೆ ಭಾಷೆ ಧರ್ಮ ಹಾಗೂ ಜಾತಿ ವಿಚಾರ ಇಟ್ಟುಕೊಂಡು ನಮ್ಮಲ್ಲಿ ರಾಜಕೀಯಗಳು ಹೆಚ್ಚಾಗುತ್ತಿವೆ. ಈ ವಿಚಾರವನ್ನು ದೊಡ್ಡದು ಮಾಡುವುದರಲ್ಲಿ ಯಾವುದೇ ಅರ್ಥ ಇಲ್ಲ ಒಬ್ಬ ಎಲ್ಲವನ್ನು ತಿಳಿದುಕೊಂಡ ವ್ಯಕ್ತಿ ಏನಾದರೂ ಹೇಳಿಕೆ ನೀಡಿದ್ದಾರೆ ಎಂದರೆ ಅದರಲ್ಲಿ ಒಂದು ಸಿದ್ಧಾಂತ ಇರುತ್ತದೆ ಅದನ್ನು ಅವರನ್ನೇ ಕೇಳಿ ತಿಳಿದುಕೊಳ್ಳಬೇಕು ಅದನ್ನು ಬಿಟ್ಟು ಈ ರೀತಿಯಲ್ಲ ಮಾಡಲು ಹೋಗಬಾರದು ಎಂದಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಕಾಮೆಂಟ್ ಮಾಡಿ ತಿಳಿಸಿ.

ನನ್ನ ಸಿನಿಮಾ ಬ್ಯಾನ್ ಮಾಡಿದ್ರೂ ಕೂಡ ಕ್ಷಮೆ ಮಾತ್ರ ಕೇಳಲ್ಲ.! ಇದೇ ನನ್ನ ಸ್ಟೈಲ್ ಕನ್ನಡಿಗರೊಂದಿಗೆ ಕಮಲ್ ಮಾಂಡಾಟ.!

ನಟ ಕಮಲ್ ಹಾಸನ್ (ACTOR KAMAL HASAN) ತಮ್ಮ ಥಗ್ಸ್ ಲೈಫ್ ಸಿನಿಮಾ (THUGS LIFE MOVIE) ಬಿಡುಗಡೆ ಕಾರ್ಯಕ್ರಮದಲ್ಲಿ ತಮಿಳಿನಿಂದ ಕನ್ನಡ ಜನ್ಮ ತಾಳಿದ್ದು ಎನ್ನುವ ಹೇಳಿಕೆ ಕೊಟ್ಟು ವಿವಾದ ( Controversy) ಮೈಮೇಲೆ ಎಳೆದುಕೊಂಡಿದ್ದಾರೆ. ನಟನ ಹೇಳಿಕೆ ವೈರಲ್ ಆಗುತ್ತಿದ್ದಂತೆ ಇತ್ತ ಕರ್ನಾಟಕದಲ್ಲಿ ದೊಡ್ಡ ಅಭಿಯಾನವೇ ಶುರು ಆಗಿದೆ

ಮೊದಲಿಗೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ ಕಮಲ್ ಹಾಸನ್ ಅವರ ತಪ್ಪಾದ ಮಾತಿಗೆ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ವಿಷಯ ಎಲ್ಲೆಡೆ ಜೋರಾಗುತ್ತಿದ್ದಂತೆ ಕನ್ನಡಪರ ಸಂಘಟನೆಗಳು ಕೂಡ ಭಾಷೆಯ ಇತಿಹಾಸ ತಿಳಿಯದೆ ಮಾತನಾಡಿರುವ ಈ ಹೇಳಿಕೆ ಎಷ್ಟು ತೀವ್ರವಾದದ್ದು ಎನ್ನುವುದನ್ನು ಅರ್ಥ ಮಾಡಿಸುವ ಪ್ರಯತ್ನಕ್ಕೆ ಕೈ ಹಾಕಿ ನಟನ ಬೇಜವಾಬ್ದಾರಿ ಹೇಳಕ್ಕೆ ಕ್ಷಮೆ ಕೊಡಲೇಬೇಕು ಎಂದು ಪಟ್ಟು ಹಿಡಿದಿವೆ.

ಇತ್ತ ಜೂನ್ 05ರಂದು ದೇಶದಾದ್ಯಂತ ಕಮಲ್ ಹಾಸನ್ ಸಿಂಬು ಅಭಿರಾಮಿ, ತ್ರಿಶಾ ಇತ್ಯಾದಿ ಕಲಾವಿದರ ನಟನೆಯ ಬಹು ನಿರೀಕ್ಷಿತ ಚಿತ್ರ ಥಗ್ಸ್ ಲೈಫ್ ದೇಶದಾದ್ಯಂತ ಬಿಡುಗಡೆ ಆಗುತ್ತಿದೆ. ಆದರೆ ಕರ್ನಾಟಕದಲ್ಲಿ ಕನ್ನಡ ಚಲನಚಿತ್ರ ಮಂಡಳಿಯೂ ಕೂಡ ಕಮಲ್ ಹಾಸನ್ ಅವರು ಕ್ಷಮೆ ಕೇಳಬೇಕು ಇಲ್ಲವಾದರೆ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಡುವುದಿಲ್ಲ ಎನ್ನುವ ಎಚ್ಚರಿಕೆ ಕೊಟ್ಟಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆಗಳು ಆಗಿದ್ದರೂ ಕೂಡ ನಟ ಕಮಲ್ ಹಾಸನ್ ಅವರು ಮಾತ್ರ ಯಾವುದಕ್ಕೂ ಕ್ಯಾರೆ ಇಲ್ಲದೆ ಸುಮ್ಮನಿದ್ದಾರೆ. ಈ ನಡುವೆ ನ್ಯೂಸ್ ನಿರೂಪಕರೊಬ್ಬರು ಕಮಲ್ ಹಾಸನ್ ಅವರಿಗೆ ಈ ವಿಚಾರದ ಕುರಿತು ಪ್ರಶ್ನೆ ಕೇಳಿದಿದ್ದಾರೆ ಅದಕ್ಕೆ ಕಮಲ್ ಹಾಸನ್ ಅವರ ಕೊಟ್ಟಿರುವ ಉತ್ತರ ಕನ್ನಡಿಗರನ್ನು ಇನ್ನಷ್ಟು ಪ್ರಚೋದಿಸುವಂತಿದೆ.

ಚೈನ್ನೈನಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿರುವ ನಟ ಕಮಲ್ ಹಾಸನ್, ನಮ್ಮದು ಪ್ರಜಾಪ್ರಭುತ್ವ ದೇಶ. ನಾನು ಕಾನೂನು ಮತ್ತು ನ್ಯಾಯಾಂಗದಲ್ಲಿ ನಂಬಿಕೆ ಇಟ್ಟಿದ್ದೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿರುವ ನನ್ನ ಪ್ರೀತಿ ನಿಜವಾದದ್ದು. ಆದರೆ ಅವರದ್ದೇ ಆದ ಅಜೆಂಡಗಳನ್ನು ಹೊಂದಿರುವವರು ಬಿಟ್ಟು ಬೇರೆಯವರು ಆ ನನ್ನ ಪ್ರೀತಿಯನ್ನು ಅನುಮಾನಿಸುವುದಿಲ್ಲ ಎನ್ನುವ ನಂಬಿಕೆ ಇದೆ.

ನನ್ನಿಂದ ತಪ್ಪಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ, ಆದರೆ ತಪ್ಪನ್ನೇ ಮಾಡದ್ದಿದ್ದರೇ ನಾನು ಕ್ಷಮೆ ಕೇಳುವುದಿಲ್ಲ ಈ ಹಿಂದೆಯೂ ನನಗೆ ಬೆದರಿಕೆಗಳನ್ನ ಒಡ್ಡಲಾಗಿದೆ ಆದರೆ ಇವುಗಳಿಗೆ ನಾನು ಬೆದರುವುದಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ. ಭಾಷೆಯ ವಿಚಾರ ಇಟ್ಟುಕೊಂಡು ಯಾರು ರಾಜಕೀಯ ಮಾಡುವುದು ಬೇಡ ನಾನು ಹೇಳಿದ ವಿಷಯದ ಕುರಿತು ಸಂಶೋಧನಾ ತಜ್ಞರು ಸಂಶೋಧನೆ ನಡೆಸಲಿ ಅಂದಿದ್ದಾರೆ.

ಇನ್ನು ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶಿವಣ್ಣ (Hatric Hero Shiva raj kumar) ಕೂಡ ಈ ವಿಚಾರದಲ್ಲಿ ಕನ್ನಡಿಗರನ್ನು ಸಂತೈಸುವ ಕೆಲಸ ಬಿಟ್ಟು ಕಮಲ್ ಹಾಸನ್ ಅವರಿಗೆ ಎಲ್ಲವೂ ತಿಳಿದಿದೆ ಬೇಕೆಂದು ಅವರು ಈ ರೀತಿ ಹೇಳಿಲ್ಲ ಅವರು ತಪ್ಪು ಅವರಿಗೆ ಗೊತ್ತಾದರೆ ತಿದ್ದಿಕೊಳ್ಳುತ್ತಾರೆ. ಅವರು ಪ್ರೀತಿಯಿಂದ ಈ ಮಾತು ಹೇಳಿದ್ದು ಆ ಚಿಕ್ಕ ವಿಚಾರವನ್ನು ದೊಡ್ಡದು ಮಾಡುವುದು ಬೇಡ ಎಂದು ಹೇಳಿದ್ದಾರೆ. ಕನ್ನಡಿಗರಿಗೆ ಇದು ಇನ್ನಷ್ಟು ಬೇಸರ ತಂದಿದೆ. ನಟಿ ರಮ್ಯ, ರಚಿತರಾಮ್ ಪರ ಬ್ಯಾಟ್ ಬೀಸಿದ್ದಾರೆ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ತಿಳಿಸಿ

Shivanna ಕನ್ನಡದ ಬಗ್ಗೆ ಕಮಲ್ ಹಾಸನ್‌ಗೆ ಪ್ರೀತಿಯಿದೆ, ಯಾಕೆ ಅದನ್ನ ದೊಡ್ಡ ವಿಷಯ ಮಾಡ್ತೀರಾ.?

ನಟ ಕಮಲ್ ಹಾಸನ್ (Actor Kamal Hasan) ಪ್ಯಾನ್ ಇಂಡಿಯಾ ಸ್ಟಾರ್ ಅದಕ್ಕೂ ಮೊದಲು ಪಂಚಭಾಷಾ ಕಲಾವಿದನಾಗಿದ್ದ ಅವರು ಕನ್ನಡವು ಸೇರಿದಂತೆ ನೆರೆಯ ಎಲ್ಲಾ ರಾಜ್ಯಗಳ ಸಿನಿಮಾದಲ್ಲಿ ಮುಖ್ಯ ಪಾತ್ರದಾರಿಯಾಗೆ ಅಭಿನಯಿಸಿ ಆ ನೆಲದದವರೆ ಅನಿಸುವಷ್ಟು ಹತ್ತಿರವಾಗಿದ್ದಾರೆ.

ಕನ್ನಡದಲ್ಲಿ ಕೂಡ ಮುಂದೆ ಬನ್ನಿ ಇನ್ನು ಮುಂದೆ ಬನ್ನಿ ಹಾಡಿನಲ್ಲಿ ಬಂದು ಮೋಡಿ ಮಾಡಿ ಹೋಗಿದ್ದು ಕಮಲ್ ನಂತರ ರಾಮ ಶಾಮ ಭಾಮದಂತಹ ಹಾಸ್ಯ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರೇ ಎನಿಸುವಷ್ಟು ಹತ್ತಿರವಾಗಿದ್ದಾರೆ. ಅಲ್ಲದೆ ಅವರ ಸಾಕಷ್ಟು ಸಿನಿಮಾಗಳು ಕನ್ನಡದಲ್ಲಿ ಡಬ್ ಕೂಡ ಆಗಿವೆ ಮತ್ತು ಕನ್ನಡದ ಸ್ಟಾರ್ ಹೀರೋಗಳೊಂದಿಗೆ ಬಹಳ ಅವಿನಾಭಾವ ಸಂಬಂಧ ಹೊಂದಿರುವ ಕಮಲ್ ಹಾಸನ್ ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಕನ್ನಡದ ಬಗ್ಗೆ ತಪ್ಪಾಗಿ ಮಾತನಾಡಿ ತಪ್ಪಿಸ್ಥರಾಗಿದ್ದಾರೆ (Controversy).

ಮೊನ್ನೆ ನಡೆದ ಕಮಲ್ ಹಾಸನ್ ಅಭಿನಯದ ಥಗ್ಸ್ ಲೈಫ್ ಸಿನಿಮಾ (Thugs Life) ರಿಲೀಸ್ ಇವೆಂಟ್ ನಲ್ಲಿ ಸಿನಿಮಾ ಬಗ್ಗೆ ಮಾತನಾಡುತ್ತಾ ವಿಶೇಷ ಅತಿಥಿಯಾ ಹೋಗಿದ್ದ ಶಿವಣ್ಣ ಅವರ ಕುರಿತು ಮತ್ತು ಡಾಕ್ಟರ್ ರಾಜಕುಮಾರ್ ಅವರನ್ನು ನೆನೆಯುತ್ತಾ ರಾಜಕುಮಾರ್ ಫ್ಯಾಮಿಲಿ ಹಾಗೂ ಬೆಂಗಳೂರಿನೊಂದಿಗೆ ಹೊಂದಿರುವ ನಂಟಿನ ಬಗ್ಗೆ ವಿವರಿಸುತ್ತ ಕೊನೆಗೆ ಕನ್ನಡ ತಮಿಳು ಮೂಲದಿಂದ ಬಂದಿದ್ದು ಎನ್ನುವ ಹೇಳಿಕೆ ಕೊಟ್ಟು ಬಿಟ್ಟಿದ್ದಾರೆ.

ಈ ವಿಡಿಯೋ ವೈರಲ್ ಆಗುದ್ದಂತೆ ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ. ಪದೇ ಪದೇ ಕನ್ನಡ ಭಾಷೆ ಮೇಲೆ ಪರಭಾಷಿಗರು ತೋರುತ್ತಿರುವ ಧೋರಣೆಯಿಂದಾಗಿ ಬೇಸತ್ತಿ ಹೋಗಿದ್ದ ಕನ್ನಡದ ಮಂದಿ ಬಹಳ ತೀವ್ರವಾಗಿ ಘಟನೆಯನ್ನು ಖಂಡಿಸುತ್ತಿದ್ದಾರೆ. 3000 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ತಮಿಳು ಮೂಲದಿಂದ ಬಂದಿದ್ದು ಎನ್ನುವುದನ್ನು ಸಹಿಸಿಕೊಳ್ಳಲು ಕನ್ನಡಿಗರಿಗೆ ಆಗುತ್ತಿಲ್ಲ ಹಾಗಾಗಿ ತಪ್ಪಾಗಿ ಮಾತನಾಡಿರುವ ಕಮಲ್ ಹಾಸನ್ ಈ ಬಗ್ಗೆ ಸರಿಯಾದ ಇತಿಹಾಸ ತಿಳಿದುಕೊಂಡು ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಂತೂ ಕಮಲ್ ಹಾಸನ್ ಅವರನ್ನು ಕ್ಷಮೆ ಕೇಳದಿದ್ದರೆ ಕನ್ನಡ ಚಿತ್ರರಂಗದಿಂದ ಬ್ಯಾನ್ (Ban) ಮಾಡಬೇಕು ಮತ್ತು ಕಮಲ್ ಹಾಸನ್ ಅವರ ಸಿನಿಮಾಗಳಿಗೆ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅವಕಾಶ ಕೊಡಬಾರದು (Boycott) ಎಂದು ಅಭಿಯಾನ ನಡೆಯುತ್ತಿದೆ. ಇಂಥ ಘಟನೆಗೆ ವೇದಿಕೆ ಮೇಲೆ ಪ್ರತ್ಯಕ್ಷ ಸಾಕ್ಷಿಯಾಗಿ ಕೂತಿದ್ದ ಶಿವಣ್ಣ ಈಗ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ.

ಅವರು ಮಾತನಾಡಿದ್ದನ್ನೇ ದೊಡ್ಡ ವಿಚಾರ ಮಾಡುವುದು ಬೇಡ, ಕನ್ನಡ ಭಾಷೆ ಬಗ್ಗೆ ಅವರಿಗೆ ಅಪಾರ ಪ್ರೀತಿ ಇದೆ, ಅವರಿಗೆ ಗೊತ್ತಾದ ತಕ್ಷಣ ಅವರೇ ತಿದ್ದುಕೊಳ್ಳುತ್ತಾರೆ. ಇದನ್ನು ಇಷ್ಟು ದೊಡ್ಡದು ಮಾಡುವ ಅಗತ್ಯ ಇರಲಿಲ್ಲ, ನನ್ನನ್ನು ಅತಿಥಿಯಾಗಿ ಕರೆದಿದ್ದರು, ನಾನು ಅವರ ಅಭಿಮಾನಿ ಹಾಗಾಗಿ ನಾನು ಹೋಗಿ ಬಂದೆ ಅಷ್ಟೇ.

ಕನ್ನಡ ಕನ್ನಡ ಎಂದು ಬರಿ ಬಾಯಿ ಮಾತಿಗೆ ಬಡಿದು ಕೊಳ್ಳುವುದಲ್ಲ ಕನ್ನಡಕ್ಕಾಗಿ ನಾವು ಏನು ಮಾಡುತ್ತಿದ್ದೇವೆ ಎನ್ನುವುದನ್ನು ಅವಲೋಕಿಸಿಕೊಳ್ಳಬೇಕು. ಕೇವಲ ಸ್ಟಾರ್ ಗಳಿಗೆ ಅವಕಾಶ ನೀಡಿದರೆ ಸಾಲದು ಹೊಸಬರ ಪ್ರಯತ್ನ ಪ್ರೋತ್ಸಾಹಿಸುವ ಕೆಲಸ ಆಗಬೇಕು ಆದರೆ ಯಾರು ಮಾಡುತ್ತಿದ್ದಾರೆ ಈ ರೀತಿ ಮಾಡಿದ್ರೆ ಕನ್ನಡ ಬೆಳೆಯುವುದಾದರೆ ಹೇಗೆ ಎಂದು ಹೇಳಿದ್ದಾರೆ.

ಆದರೆ ಇತ್ತ ಕಮಲ್ ಹಾಸನ್ ಮಾತ್ರ ಕೇರಳದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ನಾನು ಕ್ಷಮೆ ಕೇಳುವ ಮಾತೇ ಇಲ್ಲ ಭಾಷೆ ವಿಚಾರದಲ್ಲಿ ಪುರಾತತ್ವ ತಜ್ಞರು, ಇತಿಹಾಸ ತಜ್ಞರು, ಭಾಷಾ ತಜ್ಞರು ಏನು ಹೇಳುತ್ತಾರೆ ಅದು ಅಂತಿಮ ಅದನ್ನು ತಜ್ಞರಿಗೆ ಬಿಡೋಣ ಎಂದಿದ್ದಾರೆ.

ಮಗನನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿದ ನಟಿ ಅಮಲ.!

ಪರಭಾಷಾ ನಟಿಯಾಗಿದ್ದರೂ ಕನ್ನಡಿಗರಿಗೆ ನಟಿ ಅಮಲಾ ಪೌಲ್ (ACTRESS AMALA PAUL) ಪರಿಚಯವಿದೆ. ಕಿಚ್ಚ ಸುದೀಪ್ (KICHA SUDEEP) ಅವರೊಂದಿಗೆ ಹೆಬ್ಬುಲಿ ಸಿನಿಮಾದಲ್ಲಿ (HEBBULI MOVIE) ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಸ್ಯಾಂಡಲ್ವುಡ್ ಗೆ ಪ್ರವೇಶ ಪಡೆದ ನಟಿ ಈ ನೆಲದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಹೀಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ಹೆಸರು ಮಾಡುತ್ತಿರುವ ನಟಿ ಸಿನಿಮಾ ವಿಚಾರದಷ್ಟೇ ವೈಯಕ್ತಿಕ ಜೀವನದ ವಿಚಾರವಾಗಿ ಕೂಡ ಸದಾಸುದ್ದಿಯಲ್ಲಿ ಇರುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿರುವ ನಟಿ ತಮ್ಮ ಅಧಿಕೃತ ಖಾತೆಗಳಲ್ಲಿ ಪೋಸ್ಟ್ ಹಾಕುವ ಮೂಲಕ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸುಖ ದುಃಖಗಳನ್ನು ಅಭಿಮಾನಿ ಬಳಗದೊಂದಿಗೆ ಹಂಚಿಕೊಳ್ಳುತ್ತಾರೆ. ಅದೇ ರೀತಿಯಾಗಿ ಇದೀಗ ನಟಿಯ ಅಧಿಕೃತ ಇನ್ಸ್ಟಾ ಅಕೌಂಟ್ ನಿಂದ ಮಗನನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುವ ಸಂಭ್ರಮದ ಫೋಟೋಗಳು ವೈರಲ್ ಆಗಿ ಚರ್ಚೆ ಆಗುತ್ತಿದೆ.

2023ರಲ್ಲಿ ನಟಿ ಅಮಲಾಪೌಲ್ ಉದ್ಯಮಿ ಜಗತ್ ದೇಸಾಯಿ ಅವರೊಂದಿಗೆ ಎರಡನೇ ವಿವಾಹವಾಗಿದ್ದರು ಮತ್ತು ಮದುವೆ ಆದ ಕೆಲವೇ ದಿನಗಳಲ್ಲಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೂಡ ಕೊಟ್ಟಿದ್ದರು. ಅಂದರೆ, ಜೂನ್ 11, 2024ರಂದು ನಟಿ ಅಮಲಾ ಪೌಲ್ ಹಾಗೂ ವಿಜಯ್ ದೇಸಾಯಿ ದಂಪತಿ ಪ್ರೀತಿಗೆ ಸಾಕ್ಷಿಯಾಗಿ ಗಂಡು ಮಗುವಿನ ಜನನವಾಯಿತು, ಈ ಮಗುವಿಗೆ ನಟಿ ಇಲೈ ಎಂದು ನಾಮಕರಣ ಮಾಡಿದ್ದಾರೆ.

ತಮ್ಮ ಮಗನ ಕುರಿತು ಕೂಡ ಪ್ರತಿಯೊಂದು ಅಪ್ ಡೇಟ್ ಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತೋಷಪಡುತ್ತಿದ್ದ ನಟಿ ಈಗ ಮಗು ದೀಕ್ಷ ಸ್ಥಾನ ಪಡೆದಿರುವ ಅಂದರೆ ಕ್ರಿಶ್ಚಿಯನ್ ಧರ್ಮಕ್ಕೆ (Christian) ಮತಾಂತರವಾಗುವ ಅವರ ಸಂಸ್ಕೃತಿಯ ಪ್ರಕಾರ ಬ್ಯಾಪ್ಟಿಸಂ (Bapstism) ಎಂದು ಕರೆಯಲಾಗುವ ಆಚರಣೆಯನ್ನು ನೆರವೇರಿಸಿದ್ದಾರೆ ಮತ್ತು ಈ ಶುಭ ಸಂದರ್ಭವು ಪ್ರೀತಿ ಮತ್ತು ಶಾಂತಿಯಿಂದ ತಂಬಿತ್ತು ಎನ್ನುವ ಅಡಿಬರಹ ಬರೆದು ಸೆಲೆಬ್ರೇಶನ್ ನ ಮುದ್ದಾದ ಫೋಟೋದೊಂದಿಗೆ ಶೇರ್ ಮಾಡಿದ್ದಾರೆ.

ಮೂಲತಃ ನಟಿ ಅಮಲಾ ಪೌಲ್ ಕೂಡ ಮಲೆಯಾಳಿ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರು ಅವರ ಅಸಲಿ ಹೆಸರು ಅನಖ್ ಎನ್ನುವುದಾಗಿತ್ತು . ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಂತರ ಅಮಲಾ ಪೌಲ್ ಎಂದು ಹೆಸರು ಬದಲಾಯಿಸಿಕೊಂಡು ತಮ್ಮ ಅದೃಷ್ಟವನ್ನು ಕೂಡ ಬದಲಾಯಿಸಿಕೊಂಡರು ನಟಿ.

ನಟಿ ಸಿನಿಮಾದಷ್ಟೇ ಆಕೆಯ ವೈಯಕ್ತಿಕ ಜೀವನದ ಬಗ್ಗೆ ಕೂಡ ಹೆಚ್ಚು ಸುದ್ದಿ ಇರುತ್ತದೆ. ಯಾಕೆಂದರೆ ನಟಿ ಈ ಮೊದಲು 2013ರಲ್ಲಿ ನಿರ್ದೇಶಕ ವಿಜಯ್ (Director Vijay) ಅವರೊಂದಿಗೆ ವಿವಾಹವಾಗಿದ್ದರು ಆದರೆ ಕೇವಲ ಮೂರೇ ವರ್ಷಗಳಲ್ಲಿ ದಾಂಪತ್ಯ ಮುರಿದು ಬಿದ್ದಿತ್ತು ಬಳಿಕ ಬಹಳ ಕಾಲ ಏಕಾಂಗಿಯಾಗಿ ಜೀವನ ನಡೆಸುತ್ತ ನಟಿ ಎರಡನೇ ಬಾರಿ ಪ್ರೀತಿಯಲ್ಲಿ ಬಿದ್ದು ಈ ಬಾರಿ ಇಚ್ಛೆಯ ಪ್ರೀತಿ ಪಡೆದುಕೊಂಡಿದ್ದಾರೆ.

ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುವ ಫೇಮ್ ಉಳ್ಳ ನಟಿ ಈಗಲೂ ಕೂಡ ಎಲ್ಲಾ ಭಾಷೆಗಳಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಹೀಗೆ, ವೃತ್ತಿ ಜೀವನದಲ್ಲಿ ಸಾಧನೆಗೈದಿರುವ ಮತ್ತು ತಾಯಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ನಟಿ ಅಮಲಾ ಪೌಲ್ ಬದುಕು ಸಂತಸಮಯವಾಗಿರಲಿ ಎಂದು ನಾವು ಹರಸೋಣ.

ತಮಿಳಿನಿಂದ ಹುಟ್ಟಿದ್ದು ಕನ್ನಡ.! ನಾಲಿಗೆ ಹರಿಬಿಟ್ಟ ನಟ ಕಮಲ್ ಹಾಸನ್.!

ಅದ್ಯಾಕೋ ಏನೋ ಪದೇ ಪದೇ ಕನ್ನಡ ಭಾಷೆಯ (Kannada Language) ವಿಚಾರಕ್ಕೆ ಬಂದು ಕನ್ನಡಿಗರನ್ನು ಮತ್ತೆ ಮತ್ತೆ ಕೆರಳಿಸುವಂತಹ ಘಟನೆಗಳು ನಡೆಯುತ್ತಲೇ ಇದೆ. ಕನ್ನಡದ ಹಾಡನ್ನು ಹಾಡುವಂತೆ ಕೇಳಿದಕ್ಕಾಗಿ ಅಭಿಮಾನಿಗೆ ಪೆಹಲ್ಗಾಮ್ ಉದಾಹರಣೆ ಕೊಟ್ಟು ಸೋನು ನಿಗಮ್ (Sonu Nigam Ban) ಕನ್ನಡದಿಂದ ಬ್ಯಾನ್ ಆಗಿದ್ದು, ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್ ಫಲಕದಲ್ಲಿ ಕನ್ನಡಿಗರನ್ನು ಕೆರಳಿಸುವಂತಹ ಡಿಸ್ಪ್ಲೇ ಹಾಕಿ ಹೋಟೆಲ್ ಮುಚ್ಚಿದ್ದು.

ಬೆಂಗಳೂರಿನ SBI ಬ್ಯಾಂಕ್ ಮ್ಯಾನೇಜರ್ ಕನ್ನಡ ಮಾತನಾಡುವುದಿಲ್ಲ ಎಂದು ಪಟ್ಟು ಹಿಡಿದು ಸೀನ್ ಕ್ರಿಯೇಟ್ ಮಾಡಿದ್ದು, ನಮ್ಮ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ಗೆ (Mysore Sandal Soap) ಕೋಟಿ ಕೋಟಿ ಸಂಭಾವನೆ ಸುರಿದು ಪರಭಾಷಾ ನಟಿಯನ್ನು ರಾಯಭಾರಿ ಮಾಡಲು ಹೊರಟದ್ದು ಇನ್ನು ಇತ್ಯಾದಿ ಬೆಳವಣಿಗೆಗಳ ಕಾವು ಆರುವ ಮುನ್ನವೇ ಮತ್ತೊಮ್ಮೆ ಕನ್ನಡಿಗರ ಆಸ್ಮಿತೆಯನ್ನು ಕೆಣಕುವ ಪ್ರಯತ್ನವನ್ನು ಪ್ಯಾನ್ ಇಂಡಿಯ ಸ್ಟಾರ್ ಒಬ್ಬರು ಮಾಡಿದ್ದಾರೆ.

ನಟ ಕಮಲ್ ಹಾಸನ್ (Kamal Hasan) ಇಂತಹದೊಂದು ವಿವಾದಾತ್ಮಕ ಹೇಳಿಕೆ ಕೊಟ್ಟು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಚೆನ್ನೈನಲ್ಲಿ ನಡೆದ ತಮ್ಮ ಥಗ್ಸ್ ಲೈಫ್ (Thugs life Movie) ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಕನ್ನಡಿಗರನ್ನು ಎದುರು ಹಾಕಿಕೊಂಡಿದ್ದಾರೆ. ನಟನ ಈ ಹೇಳಿಕೆಯಲ್ಲಿ ವಿರೋಧಿಸಿ ಎಕ್ಸ್ ಜಾಲತಾಣದಲ್ಲಿ ಕನ್ನಡಿಗರು ಪೋಸ್ಟ್ ಹಾಕಿ ತಮ್ಮ ಆಕ್ರೋಶವನ್ನು ನಾನು ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

ತಮ್ಮ ಥಗ್ಸ್ ಲೈಫ್ ಸಿನಿಮಾ ಪ್ರಮೋಷನ್ ಕಾರ್ಯಕ್ರಮದಲ್ಲಿ ಹಲವಾರು ವಿಷಯಗಳ ಬಗ್ಗೆ ವೇದಿಕೆ ಮೇಲೆ ಕಮಲ್ ಹಸನ್ ಮಾತನಾಡಿದರು ಹೀಗೆ ಭಾಷೆಯ ವಿಚಾರ ಬಂದಾಗ ತಮಿಳು ಭಾಷೆ ಎಲ್ಲಾ ಭಾಷೆಗಳಿಂದ ಹಳೆಯದು ಕನ್ನಡ ಸೇರಿ ಎಲ್ಲಾ ಭಾಷೆಗಳು ತಮಿಳು ಮೂಲದಿಂದ ಬಂದದ್ದು ಎಂಬ ಹೇಳಿಕೆಯನ್ನು ಕೊಟ್ಟಿದ್ದಾರೆ. ಈಗ ಇದಕ್ಕೆ ವ್ಯಾಪಕ ಪ್ರತಿಕ್ರಿಯೆ ಕೇಳಿ ಬರುತ್ತಿದೆ.

ಆದರೆ ಅಸಲಿಯಾಗಿ ಕನ್ನಡ ತಮಿಳು ಎಲ್ಲವೂ ಕೂಡ ದ್ರಾವಿಡ ಮೂಲದಿಂದ ಬಂದದ್ದು ಹಾಗಾಗಿ ಈ ಭಾಷೆಗಳು ಸಹೋದರಿಯರು ಇದ್ದಂತೆ ಆದರೆ ದ್ರಾವಿಡ ಭಾಷೆಗಳಲ್ಲಿ ತಮಿಳು ಬಹಳ ಹಳೆಯದು ಎನ್ನುವ ವಾದವಿದೆ ಹೀಗಾಗಿ ಶಾಲೆಗಳಲ್ಲೂ ಕೂಡ ಅವರು ಅದನ್ನೇ ಕಲಿಸುತ್ತಿದ್ದಾರೆ ಎಂಬುದು ತಜ್ಞರ ಅಭಿಪ್ರಾಯ.

ಹೀಗಾಗಿ ಕನ್ನಡಿಗರು ನಟನಿಗೆ ನಿಮ್ಮ ಶಾಲೆಯಲ್ಲಿ ಮೇಷ್ಟ್ರು ಹೇಳಿಕೊಟ್ಟಿರುವ ತಪ್ಪನ್ನು ಮುಂದುವರಿಸಬೇಡಿ ಒಂದು ಭಾಷೆ ಬಗ್ಗೆ ಸರಿಯಾಗಿ ತಿಳಿದುಕೊಂಡು ಮಾತನಾಡಿ, ಕನ್ನಡಕ್ಕೆ ಕ್ರಿಸ್ತಪೂರ್ವ 3 ರಿಂದಲೂ ಭಾಷೆ ಇತ್ತು ಎನ್ನುವ ಉಲ್ಲೇಖವಿದೆ ಇತಿಹಾಸ ತಿಳಿದುಕೊಂಡು ಮಾತನಾಡಿ ಎಂದು ಸಲಹೆ ಕೊಟ್ಟಿದ್ದಾರೆ.

ಇಂತಹ ಹೇಳಿಕೆಗಳು ಕೊಡುವುದರಿಂದ ಎರಡು ರಾಜ್ಯಗಳ ನಡುವಿನ ಸಂಬಂಧವನ್ನು ಹಾಳು ಮಾಡುವ ಪ್ರಯತ್ನವಾಗುತ್ತದೆ ಎಂದು ಕೆಲವರು ಆತಂಕ ಹೊರ ಹಾಕಿದ್ದಾರೆ. ಇನ್ನು ಕೆಲವರು ಒಂದು ರಾಜ್ಯದ ಭಾವನೆ ಆಗಿರುವ ಭಾಷೆಯ ವಿಚಾರಕ್ಕೆ ಬಂದು ನಮ್ಮ ಭಾವನೆಗಳಿಗೆ ಧಕ್ಕೆ ಉಂಟಾಗುವಂತಹ ಹೇಳಿಕೆ ಕೊಟ್ಟಿರುವ ನಟ ಕ್ಷಮೆ ಕೇಳುವವರೆಗೂ ಕೂಡ ಕರ್ನಾಟಕದಲ್ಲಿ ಕಮಲ್ ಹಾಸನ್ ಅವರ ಸಿನಿಮಾಗಳನ್ನು ಬ್ಯಾನ್ ಮಾಡಬೇಕು ಎಂದು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ.

ತಮಿಳಿಗರು ಮಾತ್ರ ನಟನೆ ಹೇಳಿಕೆಯನ್ನು ಸಮರ್ಥಿಸಿಕೊಂಡು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನು ಸಿನಿಮಾ ವಿಚಾರ ಹೇಳುತ್ತಿರುತ್ತಾರೆ ಮನಿರತ್ನ ಅವರು ಈ ಸಿನಿಮಾ ಗೆ ಆಕ್ಷನ್ ಕಟ್ ಹೇಳಿದ್ದಾರೆ. ತ್ರಿಶಾ, ಸಿಂಬು, ಅಭಿರಾಮಿ ಸೇರಿದಂತೆ ದೊಡ್ಡ ತಾರಾ ಬಳಗವೇ ಸಿನಿಮಾದಲ್ಲಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.

ಶ್ರೀಧರ್ ಗೆ ಏಡ್ಸ್ ಇತ್ತು.! ಗಂಡ ಸತ್ತರು ಬರದೆ ಇದ್ದಕ್ಕೆ ಕಾರಣ ಕೊಟ್ಟ ಶ್ರೀಧರ್ ಪತ್ನಿ

ಕನ್ನಡ ಕಿರುತೆರೆಯ ಹೆಸರಾಂತ ಪೋಷಕ ನಟ ಶ್ರೀಧರ್ ನಾಯಕ್ (SRIDHAR NAIK) ಅವರು ಕೆಲ ದಿನಗಳ ಹಿಂದೆ ಗಂಭೀರ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದರು, ಆ ಬಳಿಕ ಚಿಕಿತ್ಸೆಗೂ ಅನುಕೂಲವಲ್ಲದೆ ಇಲ್ಲದೆ ಹಣಕ್ಕಾಗಿ ಪರದಾಡುತ್ತಿದ್ದ ನಟನಿಗೆ ಸಹಾಯ ಮಾಡುವ ಸಲುವಾಗಿ ಇತರೆ ಸಹ ಕಲಾದರು ಎಲ್ಲ ಸೇರಿ ಸೋಶಿಯಲ್ ಮೀಡಿಯಾದಲ್ಲಿ ಅವರಿದ್ದ ಪರಿಸ್ಥಿತಿ ಬಗ್ಗೆ ಮಾಹಿತಿ ಕೊಟ್ಟಿದ್ದರು.

ಆದರೆ ಈ ಫೋಟೋ ಹಾಗೂ ವಿಡಿಯೋಗಳಲ್ಲಿ ಶ್ರೀಧರ್ ಅವರನ್ನು ಕಂಡವರು ಅಕ್ಷರಶಃ ಬೆಚ್ಚಿ ಬಿದ್ದಿದ್ದರೂ ಯಾಕೆಂದರೆ, ಚಂದುಳ್ಳಿ ಚೆಲುವನಂತೆ ಇದ್ದ ನಟನ ಛಾಯೆ ಸಂಪೂರ್ಣ ಬದಲಾಗಿತ್ತು. ಗುರುತೇ ಕುರಿತಾಗದಷ್ಟು ಕುಗ್ಗಿ ಹೋಗಿ ಆಸ್ಪತ್ರೆ ಸೇರಿದ್ದರು. ಈ ನಡುವೆ ಅವರು ಕೊನೆ ದಿನಗಳಲ್ಲಿ ಆಸ್ಪತ್ರೆಯಲ್ಲಿದ್ದಾಗ ಕೆಲವು ಸುದ್ದಿ ವಾಹಿನಿಗಳು ಶ್ರೀಧರ್ ಅವರ ಸಂದರ್ಶನ ನಡೆಸಿದ್ದವು.

ಎದ್ದು ಕೂರಲು ಕೂಡ ಸಾಧ್ಯವಾಗ ಸ್ಥಿತಿಯಲ್ಲಿಯೇ ಸ್ಪಷ್ಟವಾಗಿ ಮಾತನಾಡದ ಪರಿಸ್ಥಿತಿಯಲ್ಲಿರುವ ತಮ್ಮ ದಯಾನೀಯ ಪರಿಸ್ಥಿತಿಯ ಬಗ್ಗೆ ಶ್ರೀಧರ್ ಅವರು ಮಾತನಾಡಿದ್ದರು. ಆಗ ವೈಯಕ್ತಿಕ ಜೀವನದ ಕುರಿತ ಪ್ರಶ್ನೆಗಳಿಗೆ ಹಾಗೂ ಕುಟುಂಬದ ಬಗ್ಗೆ ಬಹಳ ಬೇಸರವಾಗಿ ಕ’ಣ್ಣೀ’ರು ಇಡುತ್ತಾ ಮಾತನಾಡಿದ್ದರೂ ಈ ಮೂಲಕ ತಾವು ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಜ್ಯೋತಿ (WIFE JYOTHI) ತಮ್ಮ ಅನಾರೋಗ್ಯ ಪರಿಸ್ಥಿತಿಯಲ್ಲಿ ಬಿಟ್ಟು ಓಡಿ ಹೋದರು ಎಂದು ಹೇಳಿ ಕೊಂಡಿದ್ದರು.

ನಿನ್ನೆ ನಟ ಶ್ರೀಧರ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪರಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹೆಚ್ಚು ಸುದ್ದಿಗಳು ಪ್ರಚಾರವಾಗಿ ಇದನ್ನ ನೋಡಿದ ಬಹುತೇಕ ಎಲ್ಲರೂ ಶ್ರೀಧರ್ ಪತ್ನಿ ಜ್ಯೋತಿ ಅವರ ವಿರುದ್ಧವಾಗಿ ಕಮೆಂಟ್ಗಳನ್ನು ಹಾಕಿ ಶಾಪಿಸುತ್ತಿದ್ದರು. ಅವರ ಕುರಿತು ಕೇಳಿ ಬರುತ್ತಿರುವ ಅಪ ಪ್ರಚಾರದ ಬಗ್ಗೆ ಸಿಡಿದೆದ್ದು ಅಸಲಿ ಸತ್ಯವನ್ನು ಈಗ ಅವರು ಹೊರ ಹಾಕಿದ್ದಾರೆ.

ತಾವು ಎಲ್ಲಿಯೂ ಓಡಿ ಹೋಗಿಲ್ಲ ತಮ್ಮ ಮಗನ ಜೊತೆ ಕಷ್ಟಪಟ್ಟು ಜೀವನ ಮಾಡುತ್ತಿರುವತ್ತಾಗಿ ಹೇಳಿಕೊಂಡು ಶ್ರೀಧರ್ ಅವರ ಈ ಪರಿಸ್ಥಿತಿಗೆ ಕಾರಣವಾಗಿರುವ ಹಾಗೂ ಅವರು ಬೇರೆಯಾಗಲು ಎದುರಾದ ಸಂದರ್ಭದಲ್ಲಿ ಮಾತನಾಡಿದ್ದಾರೆ.

ನಾನು ಸಂಗೀತ ಕ್ಷೇತ್ರದಲ್ಲಿದ್ದೆ. ಕಲೆ ನಮ್ಮಿಬ್ಬರನ್ನು ಪರಿಚಯಿಸಿದ್ದು ಆರಂಭದಲ್ಲಿ ಸ್ನೇಹವಾಗಿ ನಂತರ ಪ್ರೀತಿಯ ಮನೆಯಲ್ಲಿ ಈ ಬಗ್ಗೆ ಹೇಳಿದಾಗ ಅವರು ಒಪ್ಪಲಿಲ್ಲ ಹೀಗಾಗಿ ಮನೆ ಬಿಟ್ಟು ಬಂದು ಶ್ರೀಧರ್ ಅವರನ್ನು ಮದುವೆಯಾಗಿ ಜೀವನ ನಡೆಸುತ್ತಿದೆ. ಆದರೆ ಆರಂಭದಲ್ಲಿ ಒಂದು ವರ್ಷ ಮಾತ್ರ ಶ್ರೀಧರ್ ಅವರು ನನ್ನ ಜೊತೆ ಸಂತೋಷವಾಗಿದ್ದರು

ಆ ಬಳಿಕ ಬಹಳ ರಿಸ್ಟ್ರಿಕ್ಟ್ ಮಾಡಲು ಶುರು ಮಾಡಿದರು, ಅನೇಕ ವಿಷಯವಾಗಿ ವೈ’ಮನಸು ಇತ್ತು ಆದರೂ ಹೊಂದಿಕೊಳ್ಳುತ್ತಿದ್ದೆ ಅನೇಕ ಸಮಯದಲ್ಲಿ ಅವರು ನನಗೆ ಹೊಡೆದಿದ್ದಾರೆ ಕೂಡ ಆದರೆ ನಾನು ಎಲ್ಲಿಯೂ ಈ ಬಗ್ಗೆ ಹೇಳಿಕೊಂಡಿರಲಿಲ್ಲ ಮತ್ತು ಶ್ರೀಧರ್ ಅವರ ಇಂದಿನ ಪರಿಸ್ಥಿತಿಗೆ ಅವರೇ ಕಾರಣ.

ಅವರಿಗೆ ಹೆಣ್ಣು ಮಕ್ಕಳ ಸಹವಾಸ ಹೆಚ್ಚಾಗಿ ಇತ್ತು ಅವರು ಏಡ್ಸ್ ಗೆ ಬಲಿಯಾಗಿದ್ದಾರೆ ಎಂಬ ವಿಚಾರ ನನಗೆ ತಿಳಿದ ಮೇಲೆ ಗುಣಪಡಿಸುವುದಕ್ಕಾಗಿ ಹಲವಾರು ಆಸ್ಪತ್ರೆಗಳಲ್ಲಿ ಅಲೆದಾಡಿದ್ದೇನೆ ಆದರೆ ಕೊನೆಗೆ ಅವರೊಟ್ಟಿಗೆ ಬದುಕಲಾಗದೆ ಬೇರೆಯಾಗ ಬೇಕಾಗಿ ಬಂತು ಎಂದು ತಮ್ಮ ನೋ’ವಿ’ನ ಬಗ್ಗೆ ಮನಸಾರೆ ಮಾತನಾಡಿದ್ದಾರೆ, ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

Mysore Sandal Soap ಜನರ ತೆರಿಗೆ ಹಣ ವೇಸ್ಟ್ ಮಾಡ್ತಿದ್ದಾರೆದು ಬೇಸರ ವ್ಯಕ್ತ ಪಡಿಸಿದ ನಟಿ ರಮ್ಯ.!

ಕಳೆದೊಂದು ವಾರದಿಂದ ರಾಜ್ಯದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಚಾರಗಳಲ್ಲಿ ಒಂದು ಮೈಸೂರು ಸ್ಯಾಂಡಲ್ ಸೋಪ್ ಗೆ ನಟಿ ತಮನ್ನಾ ರಾಯಭಾರಿ ಆಗಿರುವ ವಿಚಾರ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸೋಪ್ ಬಳಕೆದಾರದಿಂದ ಹಿಡಿದು ಸ್ಯಾಂಡಲ್ ವುಡ್ ಸ್ಟಾರ್ ಗಳವರೆಗೆ ಬಹುತೇಕ ಎಲ್ಲರೂ ಕೂಡ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿಯೇ ಈ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಷ್ಟಕ್ಕೂ ಚರ್ಚೆಯಲ್ಲಿನ ಮುಖ್ಯ ಸಂಗತಿ ಏನೆಂದರೆ, ಕರ್ನಾಟಕದ ಮನೆ ಮನೆಗೆ ಪರಿಚಯವಿರುವ ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ಉತ್ಪನ್ನಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ಇಲ್ಲಿನ ಗಂಧ ಗಾಳಿ ತಿಳಿಯದ ಬಹುಭಾಷ ನಟಿಯಾದ ಮಿಲ್ಕ್ ಬ್ಯೂಟಿ ತಮನ್ನಾ ಅವರನ್ನು ರಾಯಭಾರಿಯನ್ನಾಗಿ ಮಾಡಿದೆ. ಈ ಮೂಲಕ ಕರ್ನಾಟಕದ ಉತ್ಪನ್ನವನ್ನು ವಿಶ್ವದ ಮಾರುಕಟ್ಟೆ ವ್ಯಾಪ್ತಿಗೆ ಹೆಚ್ಚಿಸುವ ಉದ್ದೇಶ ಎನ್ನುವ ಸಬೂಬು ನೀಡಿದೆ.

ಆದರೆ ಇಲ್ಲಿ ಇನ್ನೂ ಮುಖ್ಯವಾದ ಮತ್ತೊಂದು ಅಂಶವೇನೆಂದರೆ ಈ ಕಾರಣಕ್ಕಾಗಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ನಟಿಗೆ ಪರೋಬರಿ 6.2 ಕೋಟಿ ಹಣವನ್ನು ಸಂಭಾವನೆಯಾಗಿ ನೀಡಲಾಗುತ್ತಿದೆ. ಇದೇ ವಿಚಾರ ಇಂದು ರಾಜ್ಯದಾದ್ಯಂತ ಚರ್ಚಾಸ್ಪದ ವಿಷಯವಾಗಿ ಬದಲಾಗಿದೆ. ಮೊದಲಿಗೆ ಕರ್ನಾಟಕ ಉತ್ಪನ್ನಕ್ಕೆ ನಮ್ಮ ಸ್ಯಾಂಡಲ್ ವುಡ್ ನಟಿಯರನ್ನು ಬಿಟ್ಟು ಪರಭಾಷೆ ನಟಿಯರನ್ನು ಆರಿಸಿಕೊಂಡಿರುವುದು ಅಲ್ಲದೆ,

ಈಗಾಗಲೇ ಭಾರತದಲ್ಲಿಯೇ ಅತಿ ದೊಡ್ಡ ಸೋಪ್ ಫ್ಯಾಕ್ಟರಿಗಳಲ್ಲಿ ಒಂದು ಎಂದು ಹೆಸರು ಮಾಡಿರುವ ಮತ್ತು ಉತ್ಪನ್ನದಲ್ಲಿರುವ ಗುಣಮಟ್ಟದ ಕಾರಣದಿಂದಾಗಿ ಈಗಾಗಲೇ ಚಿರಪಚಿತವಾಗಿರುವ ಈ ಹೆಮ್ಮೆಯ ಪ್ರಾಡಕ್ಟ್ ಜನರ ತೆರಿಗೆಯ ಕೋಟಿ ಹಣವನ್ನು ಕೇವಲ ಜಾಹೀರಾತಿನ ಅಭಿನಯಕ್ಕಾಗಿ ನಟಿ ಒಬ್ಬರ ಮೇಲೆ ಸುರಿಯುತ್ತಿರುವುದು ಜನಸಾಮಾನ್ಯನಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಅನೇಕ ಸಮಾಧಾನಕ್ಕೆ ಕಾರಣವಾಗಿದೆ.

ಹೀಗಾಗಿ ಈ ಬಗ್ಗೆ ಕಳೆದೊಂದು ವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆ ಆಗುತ್ತಿದ್ದು ಈ ಬಗ್ಗೆ ಚಂದನವಾದ ಅನೇಕ ತಾರೆಗಳು ಕೂಡ ತಮ್ಮ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.

ಇಂತಹ ವಿಚಾರಗಳಲ್ಲಿ ಸ್ವಯಂ ಪ್ರೇರಿತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳೋದಕ್ಕೆ ಮೊದಲಿನಿಂದಲೂ ಆಸಕ್ತಿ ಹೊಂದಿರುವ ನಟಿ ರಮ್ಯಾ ಕೂಡ ಎಂದಿನಂತೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕುವ ಮೂಲಕ ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಹೊಂದಿರಲ್ಲೂ ಈ ಬಾರಿ ತಮ್ಮದೇ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಬಹಿರಂಗವಾಗಿ ವಿರೋಧವನ್ನು ವ್ಯಕ್ತಪಡಿಸಿ ಸರ್ಕಾರ ನಡೆಯನ್ನು ಖಂಡಿಸಿದ್ದಾರೆ ಅಷ್ಟಕ್ಕೂ ನಟಿ ಪೋಸ್ಟ್ ನಲ್ಲಿ ಇರುವುದೇನು ಗೊತ್ತಾ?

ನಟಿ ರಮ್ಯಾ ಅವರು ತಮ್ಮ ಅಧಿಕೃತ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಕೌಂಟ್ ನಲ್ಲಿ ಉತ್ಪನ್ನ ಯಾವುದೇ ಇರಲಿ ಆ ಉತ್ಪನ್ನಗಳನ್ನು ಪ್ರಚಾರ ಮಾಡಲು ಈಗ ಹಲವು ದಾರಿಗಳಿವೆ, ಇದಕ್ಕೆ ಹಳೆಯ ಕಾಲದಲ್ಲಿ ಇದ್ದಂತೆ ಈಗ ಪ್ರಚಾರ ರಾಯಭಾರಿ ಬೇಕಿಲ್ಲ, ಇದರಿಂದ ತೆರಿಗೆ ಪಾವತಿ ಮಾಡುವ ಜನರ ಹಣವನ್ನು ವೇಸ್ಟ್ ಮಾಡಿದಂತೆ ಆಗುತ್ತೆ ಎಂದು ಹೇಳಿದ್ಧಾರೆ. ಈ ಮೂಲಕ ತೆರಿಗೆದಾರರ ದುಡ್ಡನ್ನು ಪ್ರಚಾರಕ್ಕೆ ರಾಯಭಾರಿಗೆ ಕೊಡುವುದು ತಪ್ಪು ಎಂದು ಕೂಡ ಹೇಳಿದ್ದಾರೆ.

ಕಾಲ ತುಂಬಾ ಬದಲಾಗಿದೆ, ಮೊದಲಾದರೆ ಸೆಲೆಬ್ರೇಟಿಗಳನ್ನು ನೋಡಿ ಅನೇಕರು ಕಣ್ಮುಚ್ಚಿ ಆ ವಸ್ತುಗಳನ್ನು ಖರೀದಿ ಮಾಡುತ್ತಿದ್ದರು. ಆದರೀಗ ಉತ್ತಮ ಗುಣಮಟ್ಟದಾದರೆ ಮಾತ್ರ ಜನ ಖರೀದಿಸುತ್ತಾರೆ. ಮೈಸೂರು ಸ್ಯಾಂಡಲ್ ಸೋಪ್‌ನ ಗುಣಮಟ್ಟ ಅತ್ಯುತ್ತಮವಾಗಿದೆ, ಮತ್ತು ಈಗಾಗಲೇ ನಮ್ಮ ಉತ್ಪನ್ನ ಹಿಸ್ಟರಿ ಯನ್ನೇ ಸೃಷ್ಟಿಸಿದೆ. ಘನತೆ ಮತ್ತು ಜನಪ್ರಿಯತೆ ಎರಡು ಕೂಡ ಮೈಸೂರು ಸ್ಯಾಂಡಲ್‌ ಸೋಪ್‌ಗೆ ಇದೆ. ಅಸಲಿಯಾಗಿ ಪ್ರತಿಯೊಬ್ಬ ಕನ್ನಡಿಗರು ಕೂಡ ಈ ಮೈಸೂರು ಸ್ಯಾಂಡಲ್ ಸೋಪ್‌ನ ರಾಯಭಾರಿ ಎಂದು ಬರೆದುಕೊಂಡು ನಟಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Vijayalakshmi ನಟ ಜಗ್ಗೇಶ್ ನನ್ನ ಗಂಡ.! ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ನಟಿ ವಿಜಯಲಕ್ಷ್ಮಿ.!

ನಾಗಮಂಡಲ ಸಿನಿಮಾ (NAGAMANDALA CINEMA) ಕಥೆಯ ನಟಿ ವಿಜಯಲಕ್ಷ್ಮಿ (ACTRESS VIJAYALAKSHMI) ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಪ್ರತಿಭಾನ್ವಿತ ನಟಿ. ತಮ್ಮ ಸಹಜ ಸೌಂದರ್ಯ ಹಾಗೂ ನೈಜ ಅಭಿನಯದಿಂದ ಕೆಲವೇ ವರ್ಷಗಳಲ್ಲಿ ಕರ್ನಾಟಕದಿಂದ ಹೆಸರಾದ ನಟಿಯಾಗಿದ್ದವರು ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಚಿತ್ರರಂಗದಲ್ಲೂ ಕೂಡ ತಮ್ಮ ಚಾಪು ಮಾಡಿಸಿದ್ದ ನಟಿ ಇತ್ತೀಚೆಗೆ ಮಾತ್ರ ತಮ್ಮ ವಿವಾದಗಳಿಂದ ಸುದ್ದಿಯಾಗಿದ್ದಾರೆ.

ಕನ್ನಡದಲ್ಲಿ ವಿಷ್ಣುವರ್ಧನ್ , ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ಬಿ. ಸಿ ಪಾಟೀಲ್, ರಾಮ್ ಕುಮಾರ್, ರಮೇಶ್, ಜಗ್ಗೇಶ್ ಮುಂತಾದ ಸ್ಟಾರ್ ಹೀರೋಗಳೊಂದಿಗೆ ತೆರೆ ಹೆಂಚಿಕೊಂಡು ಕನ್ನಡಕ್ಕೆ ಹಲವಾರು ಸೂಪರ್ ಹಿಟ್ ಗಳನ್ನು ಕೊಟ್ಟು ಅಲ್ಲದೆ ಇತರೆ ಭಾಷೆಗಳನ್ನು ಕೂಡ ಆ ಸಮಾನ ಕಾಲಿನ ಸ್ಟಾರ್ ಹೀರೋಗಳೊಂದಿಗೆ ಜೋಡಿಯಾಗಿ ಕಾಣಿಸಿಕೊಳ್ಳುವ ಅವಕಾಶ ಕಟ್ಟಿಸಿಕೊಂಡಿದ್ದ ಈ ನಟಿ ಕ್ರಮೇಣವಾಗಿ ತಮ್ಮ ಕೆರಿಯರ್ನಲ್ಲಿ ದುರಂತ ಕುಸಿತ ಕಂಡರು.

ಯಾವುದೇ ವೃತ್ತಿರಂಗವಾದರೂ ಕೂಡ ಏರುಪೇರು ಸಹಜ, ಆದರೆ ವಿಜಯಲಕ್ಷ್ಮಿ ಬಾಳಲ್ಲಿ ಮಾತ್ರ ವಿಧಿಯಾಟ ಹೆಚ್ಚಿನ ಕ್ರೂರತನ ತೋರಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ತಮ್ಮ ಯಶಸ್ಸಿನ ಉತ್ತುಂಗದಲ್ಲಿ ಇದ್ದ ನಟಿ ತನ್ನನ್ನು ತಾನು ಸಲಹಿ ಕೊಳ್ಳಲಾಗದಷ್ಟು ಹೀನಾಯ ಸ್ಥಿತಿ ತಲುಪಿದರು. ಸಾಲದಕ್ಕೆ ಆಕೆಯ ವೈಯಕ್ತಿಕ ಜೀವನದಲ್ಲಾದ ಏರುಪೇರು ಮತ್ತು ಕೌಟುಂಬಿಕ ಕ’ಲ’ಹಗಳು ಆಕೆಗೆ ಆ’ತ್ಮ’ಹ’ತ್ಯೆ ಪ್ರಚೋದನೆಯನ್ನು ಕೂಡ ನೀಡಿತ್ತು.

ಹೀಗಾಗಿ ಬದುಕಿನ ಬಗ್ಗೆ ನಿರಾಸೆ ಹೊಂದಿದ ನಟಿ ನಿಧಾನವಾಗಿ ಅದರಿಂದ ಹೊರ ಬರೆಯುತ್ತಿದ್ದಾರೆ ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ನೇರವಾಗಿ ಮೀಡಿಯಾ ಮುಂದೆ ಕೂತು ತನಗಾದ ಅ’ನ್ಯಾ’ಯಗಳನ್ನೆಲ್ಲ ಮುಚ್ಚುಮರೆ ಇಲ್ಲದೆ ಮಾತನಾಡುತ್ತಿದ್ದಾರೆ. ಹೀಗೆ ನಟಿ ಕನ್ನಡದ ಖ್ಯಾತ ಯೌಟ್ಯೂಬ್ ಚಾನಲ್ ನಲ್ಲಿ ನಟ ಜಗ್ಗೇಶ್ ನನ್ನ ಪತಿ ಅದನ್ನು ಅವತ್ತೇ ಪ್ರೆಸ್ ಮೀಟ್ ನಲ್ಲಿ ಹೇಳಿ ಬಹಿರಂಗ ಪಡಿಸಲಾಗಿತ್ತು ಎನ್ನುವ ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ.

ಆದರೆ ವಿಷಯದ ಅಸಲಿಯತ್ತು ಏನೆಂದರೆ ತಮಿಳುನಾಡಿನ ಎನ್‌ಟಿಕೆ ಪಕ್ಷದ ನಾಯಕ ಚಿತ್ರ ನಿರ್ದೇಶಕ ಸೀಮನ್ ಅವರು ಇಂತಹದೊಂದು ಸ್ಟೇಟ್ಮೆಂಟ್ ಹೇಳಿ ತಮ್ಮ ಮೇಲೆ ಅಪಪ್ರಚಾರ ಮಾಡಿದ್ದರು ಎನ್ನುವ ವಿಚಾರವನ್ನು ನಟಿ ಈ ರೀತಿ ಹೇಳಿದ್ದಾರೆ. ಏನು ಇಲ್ಲದೆ ನನ್ನ ಮೇಲೆ ಸುಖಾ ಸುಮ್ಮನೆ ಪುಕಾರು ಹಬ್ಬಿಸಿದರು ಇದು ನನ್ನ ವೃತ್ತಿ ಜೀವನದ ಮೇಲೆ ಬಹಳ ಗಂಭೀರ ಪರಿಣಾಮ ಬೀರಿತ್ತು ಎನ್ನುವ ದುಃಖದ ಸಂಗತಿ ಬಗ್ಗೆ ನಟಿ ಮಾತನಾಡಿದ್ದಾರೆ.

ಹೀಗೆ ಸಾಲು ಸಾಲು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ ವಿಜಯಲಕ್ಷ್ಮಿ ಅವರು ಈಗ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದ್ದಾರೆ ಆದರೆ ಸಿನಿಮಾ ಒಂದರ ಕಾರಣಕ್ಕಾಗಿ ನಟ ಜಗ್ಗೇಶ್ ಹಾಗೂ ವಿಜಯಲಕ್ಷ್ಮಿ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದರು ಹಾಗೂ ಇದು ಕೇವಲ ಸಿನಿಮಾ ಸಂಬಂಧಿತ ಸ್ನೇಹವಾಗಿತ್ತು ಆದರೆ ಸೀಮನ್ ವಿಜಯಲಕ್ಷ್ಮಿ ಅವರ ಹೆಸರನ್ನು ಹಾಳು ಮಾಡುವ ಕಾರಣದಿಂದಲೇ ಈ ರೀತಿ ಪತ್ರಿಕೆಯಲ್ಲಿ ಓಪನ್ ಮೇಲ್ ಸ್ಟೇಟ್ಮೆಂಟ್ ಕೊಟ್ಟಿದ್ದರು.

ನಟಿ ವಿಜಯಲಕ್ಷ್ಮಿ ಅವರ ಬಗ್ಗೆ ಮತ್ತೊಂದು ವಿಚಾರವೇನೆಂದರೆ ಕನ್ನಡದ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರೊಟ್ಟಿಗೆ ವಿಜಯಲಕ್ಷ್ಮಿ ಅವರಿಗೆ ಎಂಗೇಜ್ಮೆಂಟ್ ಆಗಿತ್ತು ಎನ್ನುವ ಸುದ್ದಿ ಇತ್ತು ಆದರೆ ನಂತರ ಉಂಟಾದ ವೈಮನಸುಗಳಿಂದ ಇಬ್ಬರು ಬೇರೆಯಾಗ ಬೇಕಾಯಿತು.

https://youtu.be/zgOJ1Rs6kJc?si=Vx_IIZwiNUMkQZSz

Sridhar: ನಟ ಶ್ರೀಧರ್‌ ನಾಯಕ್‌ ವಿಧಿವಶ.! ಪ್ರತಿಭಾನ್ವಿತ ನಟನ ಬಾಳಿನಲ್ಲಿ ವಿಧಿಯಾಟ.!

ಕಿರುತೆರೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವ ನಟರು ಜನಸಾಮಾನ್ಯರಿಗೆ ಹೆಚ್ಚು ಹತ್ತಿರವಾಗಿರುತ್ತಾರೆ. ಯಾಕೆಂದರೆ, ಪ್ರತಿನಿತ್ಯವೂ ಕೂಡ ಪ್ರಸಾರವಾಗುವ ದಾರವಾಹಿಗಳಲ್ಲಿ ಕಾಣುವ ಮುಖಗಳೇ ಆಗಿರುವುದರಿಂದ ತಮ್ಮ ಮನೆಯ ಸದಸ್ಯರಂತೆ ಜನ ಅವರನ್ನು ಕಾಣುತ್ತಾರೆ. ಅಲ್ಲದೆ, ಹೀಗಾಗಿಯೇ ಕಿರುತೆರೆ ಧಾರಾವಾಹಿಗಳಿಗೆ ತಮ್ಮ ಜೀವನವನ್ನು ಮುಡಿಪಾಗಿ ಕಟ್ಟಿಕೊಂಡ ಅನೇಕ ಪ್ರತಿಭೆಗಳು ಇವೆ.

ಇದೇ ಪಟ್ಟಿಗೆ ಸೇರಲಿದ್ದಾರೆ ನಟ ಶ್ರೀಧರ್ ನಾಯಕ್ (ACTOR SRIDHAR NAIR). ಇತ್ತೀಚೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಜನಪ್ರಿಯ ಧಾರಾವಾಹಿ ಪಾರು ಹಾಗೂ ಈಗಷ್ಟೇ ಕಲರ್ಸ್ ಕನ್ನಡ ವಾಹಿನಿ ಶುರುವಾಗಿದ್ದ ವಧು ಧಾರವಾಹಿಯ ಮುಖ್ಯಪಾತ್ರದಲ್ಲಿ ಶ್ರೀಧರ್ ನಾಯರ್ ಗುರುತಿಸಿಕೊಂಡಿದ್ದರು. ಆದರೆ ಸಾಧಿಸಲು ಸಾಕಷ್ಟು ಸಮಯ ಹಾಗೂ ಕಣ್ತುಂಬ ಕನಸಿದ್ದ ನಟನ ಬಾಳಿನಲ್ಲಿ ವಿಧಿ ಬಿರುಗಾಳಿ ಎಬ್ಬಿಸಿ ಬಲಿ ಪಡೆದುಕೊಂಡಿದೆ.

ಈ ವಿಚಾರದ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಪ್ರಸಾರವಾಗಿತ್ತು ನಟ ಶ್ರೀಧರ್ ರವರಿಗೆ ಆಪ್ತರಾಗಿದ್ದ ಕೆಲವು ಕಲಾವಿದರುಗಳು ಶ್ರೀಧರ್ ನಾಯರ್ ಅವರು ಗಂಭೀರವಾದ ಆರೋಗ್ಯ ಸಮಸ್ಯೆಗೆ ಗುರಿಯಾಗಿರುವುದು ಹಾಗೂ ಅವರ ಚಿಕಿತ್ಸೆಗೆ ಹಣ ಇಲ್ಲದೆ ನಟ ನರಳಾಗುತ್ತಿರುವುದರ ಬಗ್ಗೆ ವಿಡಿಯೋ ಮಾಡಿ ಸಹಾಯ ಹಸ್ತ ಚಾಚಿದ್ದರು. ಆದರೆ ಸಾ’ವು ಬದುಕಿನ ಹೋರಾಟದಲ್ಲಿ ವಿಧಿಗೆ ಜಯ ಸಂದಿದೆ.

ಸುಮಾರು ದಿನಗಳಿಂದ ಬೆಂಗಳೂರಿನ ಬ್ಲಾಪಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಯರ್ ಅವರು ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ಸುರ ಸುಂದರಾಂಗನಂತೆ ಸ್ಪುರದ್ರೂಪಿಯಾಗಿಂತಹ ನಟ ಗುರುತೇ ಸಿಗದಷ್ಟು ಬದಲಾಗಿ ಚಿಕಿತ್ಸೆ ಫಲಕಾರಿಯಾಗಿದೆ ನಮ್ಮನ್ನು ಅಗಲಿದ್ದಾರೆ.

ಮೂಲತಃ ರಂಗಭೂಮಿ ಕಲಾವಿದನಾಗಿದ್ದ ಶ್ರೀಧರ್ ಅವರು ರಂಗಭೂಮಿಯಲ್ಲಿ ಕೂಡ ಸಾಕಷ್ಟು ಹೆಸರು ಮಾಡಿದ್ದರು ಎಲ್ಲದಕ್ಕಿಂತ ಹೆಚ್ಚಾಗಿ ತಮ್ಮ ಹತ್ತಿರದವರೊಡನೆ ಇರುತ್ತಿದ್ದ ಅವರ ಒಡನಾಟ ಮತ್ತು ಅವರ ವಿಧೇಯ ಗುಣ ಎಲ್ಲರಿಗೂ ಅಚ್ಚು ಹೆಚ್ಚಾಗಿತ್ತು. ಅಭಿನಯದಲ್ಲೂ ಕೂಡ ಸೈನಿಸಿಕೊಂಡಿದ್ದ ಇವರು ಪೋಷಕ ಪಾತ್ರಗಳಿಗೆ ಹೇಳ ಹೆಸರಾಗಿದ್ದರು.

ಈಗಷ್ಟೇ ಸಿನಿಮಾ ಜಗತ್ತಿನ ಕಡೆ ಮುಖ ಮಾಡಿದ ಇವರಿಗೆ ಕಿಚ್ಚ ಸುದೀಪ್ ಅವರ ಅಭಿನಯದ ಮ್ಯಾಕ್ಸ್ ಚಿತ್ರದಲ್ಲಿ(MAX MOVIE) ಅವಕಾಶವು ದೊರಕಿತ್ತು. ಈಗಷ್ಟೇ ಉದಯೋನ್ಮುಖ ತಾರೆಯಾಗಿ ಬೆಳಗುತ್ತಿದ್ದ ನಟ ಅನಾರೋಗ್ಯಕ್ಕೆ ಗುರಿಯಾಗಿ ಕಣ್ಮರೆಯಾಗಿದ್ದಾರೆ. ಆದರೆ ಈ ನೋವಿಗಿಂತಲೂ ವೈಯಕ್ತಿಕ ಜೀವನದಲ್ಲಾದ ಏರುಪೇರಿನಿಂದ ನಟ ಕುಸಿದಿದ್ದರು ಎಂದರೆ ಕೂಡ ತಪ್ಪಾಗಲಾರದು

ಯಾಕೆಂದರೆ ಈಗಾಗಲೇ ವಿವಾಹವಾಗಿ ಸಂತಾನ ಕೂಡ ಇದ್ದ ಶ್ರೀಧರ್ ಅವರು ಕಡೆ ದಿನದಲ್ಲಿ ಏಕಾಂಗಿಯಾಗಿದ್ದರು. ಪ್ರೀತಿಸಿ ವಿವಾಹವಾಗಿದ್ದ ಇವರ ಪತ್ನಿ ಇವರ ಕಷ್ಟದ ದಿನಗಳಲ್ಲಿ ಜೊತೆ ನಿಲ್ಲದೆ ಇವರನ್ನು ಬಿಟ್ಟು ಹೋಗಿದ್ದರು ಸ್ವತಃ ಬಹಳ ನೋವಿನಿಂದ ಕಡೆ ದಿನಗಳಲ್ಲಿ ಸಂದರ್ಶನಗಳಲ್ಲಿ ಈ ಬಗ್ಗೆ ಹೇಳಿಕೊಂಡು ತಮ್ಮ ದುಃ’ಖ ಹೊರಹಾಕಿದ್ದರು. ಈ ರೀತಿ ಜೀವನಪೂರ್ತಿ ಕಷ್ಟಗಳಲ್ಲಿ ಬೇಯುತ್ತಿದ್ದ ನಟ ಕೊನೆಗೂ ದುರಂತ ಅಂತ್ಯ ಕಂಡಿದ್ದಾರೆ.

ಇಂತಹ ದುರಂತ ಅಂತ್ಯ ಕಂಡ ಈ ನಟನ ಆತ್ಮಕ್ಕೆ ಶಾಂತಿ ಸಿಗಲಿ ಇವರ ಅಗಲಿಕೆ ಬಣ್ಣದ ಪ್ರಪಂಚಕ್ಕೆ ತುಂಬಲಾಗದು ಆದರೂ ಅವರ ಆತ್ಮೀಯರೆಲ್ಲರಿಗೂ ಭಗವಂತ ಈ ಹೊರಬರುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ. ನಟನ ಅಂತಿಮ ದರ್ಶನಕ್ಕೆ ಬೆಂಗಳೂರಿನ ಬ್ಯಾಪಿಸ್ಟ್ ಆಸ್ಪತ್ರೆ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಆ ಫ್ಲೈಓವರ್ ಮೇಲೆ ಸೌಂದರ್ಯ ಆತ್ಮ ಇನ್ನೂ ಇದೆ, ಸತ್ಯ ಸತ್ಯತೆ ತಿಳಿಸಿದ ನಟಿ ಸೌಂದರ್ಯ ಅತ್ತಿಗೆ ನಿರ್ಮಲಾ..!

ನಟಿ ಸೌಂದರ್ಯ (SOUNDARYA) ಹೆಸರಿಗೆ ತಕ್ಕಂತೆ ರೂಪವಂತೆ, ರೂಪಕ್ಕೆ ತಕ್ಕ ಹಾಗೆ ಬುದ್ಧಿವಂತೆ ಕೂಡ. ಹಾಗೆ ಅಭಿನಯದ ವಿಷಯದಲ್ಲಿ ಆಕೆಗೆ ಆಕೆಯೇ ಸಾಟಿ ಆದರೆ ಅದೃಷ್ಟದ ವಿಚಾರದಲ್ಲಿ ಮಾತ್ರ ಬಹಳ ನತದೃಷ್ಟೆ. ಯಾಕೆಂದರೆ ಸಿನಿಮಾ ರಂಗದಲ್ಲಿ ಚಿಕ್ಕ ವಯಸ್ಸಿಗೆ ದೊಡ್ಡ ಹೆಸರು ಮಾಡಿ ರಾಜಕೀಯ ಭವಿಷ್ಯದ ಬಗ್ಗೆ ಕನಸು ಕಂಡು ಸಾಧಿಸಲು ಸಾಕಷ್ಟು ಇರುವಾಗಲೇ ವಿಧಿಯಾಟಕ್ಕೆ ಬ’ಲಿಯಾಗಿ ಹೋದ ದು’ರಂ’ತ ನಾಯಕಿ.

ಗಂಧರ್ವ (GANDARVA) ಎನ್ನುವ ಸಿನಿಮಾ ಮೂಲಕ ಹಂಸಲೇಖ ಅವರಿಂದ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಸೌಮ್ಯ ನಂತರ ಸೌಂದರ್ಯ ಆಗಿ ಕನ್ನಡ, ತಮಿಳು, ತೆಲುಗು ಮಲಯಾಳಂ ಹಾಗೂ ಹಿಂದಿ ಭಾಷೆಗಳ ಬೇಡಿಕೆಯ ನಟಿ ಆದರು, ತಮ್ಮ ಕೇವಲ 12 ವರ್ಷದ ವೃತ್ತಿ ಜೀವನದಲ್ಲಿ ಬಹುತೇಕ ಈ ಮೇಲೆ ತಿಳಿಸಿದ ಎಲ್ಲಾ ಪಂಚಭಾಷೆಗಳ ಮೇರು ನಟರೊಂದಿಗೆ ತೆರೆ ಮೇಲೆ ಮಿಂಚಿದವರು.

ವೃತ್ತಿ ಜೀವನದ ಉತ್ತುಂಗದ ಯಶಸ್ಸಿನಲ್ಲಿದ್ದರೂ ಕುಟುಂಬ ಹಾಗೂ ಇಂಡಸ್ಟ್ರಿ ಜೊತೆಗೆ ತಮ್ಮ ವಿಧೇಯ ನಡವಳಿಕೆಯಿಂದ ಆತ್ಮೀಯರಾಗಿದ್ದವರು. ಹೀಗಾಗಿಯೇ ಆಕೆ ಅಗಲಿ 21 ವರ್ಷಗಳಾದರೂ ಕೂಡ ಅಭಿಮಾನಿಗಳು ಇಂಡಸ್ಟ್ರಿಯವರು ಮತ್ತು ಕುಟುಂಬಸ್ಥರು ಆಕೆಯ ಇರುವಿಕೆಯನ್ನು ಅನುಭವಿಸುತ್ತಿದ್ದಾರೆ. ಆದರೆ ಇದೆಲ್ಲದರ ನಡುವೆ ಕೆಲವು ಕಡೆ ಫ್ಲೈ ಓವರ್ ಒಂದರ ಮೇಲೆ ಸೌಂದರ್ಯ ಆತ್ಮ ಅಲೆದಾಡುತ್ತಿದೆ ಎನ್ನುವ ಸುಳ್ಳು ಸುದ್ದಿಯ ಪ್ರಚಾರವಾಗಿದೆ.

ಈ ಬಗ್ಗೆ ಸಂದರ್ಶನ ಒಂದರಲ್ಲಿ ಸೌಂದರ್ಯ ಅವರ ಬಗ್ಗೆ ಮಾತನಾಡುತ್ತಿದ್ದ ಆಕೆಯ ಅತ್ತಿಗೆ ನಿರ್ಮಲ ಅವರು ಭಾವುಕವಾಗಿ ಮಾತನಾಡಿದ್ದಾರೆ. ಸೌಂದರ್ಯ ಅವರು ಅಂದು ವಿಮಾನ ದುರಂತದಲ್ಲಿ (Flight Accident) ದಹನ ವಾದಾಗ ಆಕೆಯ ಸಹೋದರ ಅಮರ್ ಕೂಡ ಅವರ ಜೊತೆಗಿದ್ದರು. ಆ ಅಮರ್ ಅವರ ಪತ್ನಿಯೇ ನಿರ್ಮಲ (Nirmala). ಸೌಂದರ್ಯ ಅವರ ಸಂಬಂಧಿ ಕ್ಲಾಸ್ಮೇಟ್ ಆಗಿದ್ದ ನಿರ್ಮಲ ಅವರು ಸೌಂದರ್ಯ ಅವರ ಕುಟುಂಬಕ್ಕೆ ಪರಿಚಯಸ್ಥರಾಗಿದ್ದರು, ಹೀಗಾಗಿ ಸೌಂದರ್ಯ ಅವರು ಬಹಳ ವರ್ಷಗಳಿಂದ ನಿರ್ಮಲ ಅವರಿಗೆ ಆತ್ಮೀಯರು.

ಅತ್ತಿಗೆಯಾಗಿ ಕುಟುಂಬ ಸೇರಿದ ಬಳಿಕ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಸೌಂದರ್ಯ ಅವರನ್ನು ಪ್ರೀತಿಸಿದವರು ಆದರೆ ಒಮ್ಮೆಲೇ ಪತಿ ಅಮರ್ ಹಾಗೂ ಸೌಂದರ್ಯ ಅವರ ಅಕಾಲಿಕ ಮ’ರ’ಣ’ದ ಆ.ಘಾ.ತ ಅನುಭವಿಸಿದವರು. ಈಗ ಸೌಂದರ್ಯ ಅವರ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಸಂದರ್ಶನವೊಂದರಲ್ಲಿ ಭಾಗಿಯಾಗಿ ಸೌಂದರ್ಯ ರವರ ಬಗ್ಗೆಮಾತನಾಡುವಾಗ ಸೌಂದರ್ಯ ಸಾ’ವಿ’ನ ಬಗ್ಗೆ ಇರುವ ಅನೇಕ ಊಹಾಪೋಹಗಳ ಬಗ್ಗೆ ಕೂಡ ಸ್ಪಷ್ಟೀಕರಣ ಕೊಟ್ಟಿದ್ದಾರೆ.

ಎಲ್ಲರಿಗೂ ಸೌಂದರ್ಯ ಸಾವಿನ ಬಗ್ಗೆ ಇರುವ ಒಂದು ಸಂಶಯವೇನೆಂದರೆ ಆಕೆ ಆತ್ಮಮಿತ್ರ ಸಿನಿಮಾ (APTHAMITRA) ಒಪ್ಪಿಕೊಳ್ಳಬಾರದಿತ್ತು ಹಾಗೆ ನಟಿಸಿದ ನಾಗವಲ್ಲಿ ಪಾತ್ರ ಆಕೆಯನ್ನು ಬಲಿ ತೆಗೆದುಕೊಂಡಿತು ಎನ್ನುವುದು. ಆದರೆ ಇದು ಮೂಲತಃ ತಮಿಳು ಸಿನಿಮಾ ತಮಿಳು ಭಾಷೆಯಲ್ಲಿ ಅಭಿನಯಿಸಿದ ಶೋಭಾ ಅವರು ಇನ್ನೂ ಬದುಕಿದ್ದಾರೆ ಅದಕ್ಕಾಗಿ ನನಗೆ ವಾದಗಳ ಬಗ್ಗೆ ನಂಬಿಕೆ ಇಲ್ಲ. ಸಿನಿಮಾ ಪೂರ್ತಿ ಶೂಟಿಂಗ್ ನಲ್ಲಿ ಇದ್ದಾಗ ಒಂದೇ ಒಂದು ಕಹಿ ಘಟನೆ ಕೂಡ ನಡೆದಿರುವುದಿಲ್ಲ ಎನ್ನುವುದರ ಬಗ್ಗೆ ಕೂಡ ಹೇಳಿದ್ದಾರೆ.

ಅವಳು ಸತ್ತಿದ್ದಾಳೆ ಎಂದು ನಾನು ಭಾವಿಸಿಕೊಳ್ಳುವುದೇ ಇಲ್ಲ ತನ್ನ 12 ವರ್ಷಗಳ ಸಮಯದಲ್ಲಿ ಈಗಾಗಲೇ ಸಾಕಷ್ಟು ಸಾಧಿಸಿ ಆಕೆ ಅನೇಕರ ಪ್ರೀತಿ ಗಳಿಸಿದ್ದರು. ಹಾಗಾಗಿ 21 ವರ್ಷಗಳಾದರೂ ಅಭಿಮಾನಿಗಳು ಮನೆಗೆ ಬರುತ್ತಾರೆ, ಕರೆ ಮಾಡುತ್ತಾರೆ, ಆಕೆಯನ್ನು ನೆನಪಿಸಿಕೊಳ್ಳುತ್ತಾರೆ ಹಾಗಾಗಿ ಸೌಮ್ಯ ಮತ್ತು ಅಮರ್ ನಮ್ಮ ಜೊತೆಗಿದ್ದಾರೆ ಎನ್ನುವ ಭಾವನೆಗೆ ನನಗೆ ಬರುತ್ತದೆ.

ಆದರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಯಾರೋ ಒಬ್ಬರು ಅವರ ಲಾಭಕ್ಕಾಗಿ ಬಾಯಿಗೆ ಬಂದ ಹಾಗೆ ಫ್ಲೈಓವರ್ ಮೇಲೆ ಸೌಂದರ್ಯ ಆತ್ಮ ಅಲೆದಾಡುತ್ತಿದೆ ಎನ್ನುವ ಕಂಟೆಂಟ್ ಮಾಡಿದ್ದರು. ಅದು ನನಗೆ ಬಹಳ ನೋ’ವುಂ’ಟು ಮಾಡಿತ್ತು. ಬದುಕಿರವರೆಗೂ ಕೂಡ ಯಾರಿಗೂ ನೋಯಿಸದ ಜೀವ ಅದು ಎಂದು ತಮ್ಮ ನೋವಿನ ಬಗ್ಗೆ ಆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.