Home Blog Page 213

ವಾಟ್ಸಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಅನ್ನು ಮತ್ತೆ ಓದಬೇಕೇ ಈ ಸುಲಭ ವಿಧಾನ ಅನುಸರಿಸಿ. ಡಿಲೀಟ್ ಆದ ಮೆಸೇಜ್ ಮತ್ತೆ ಓದಬಹುದು.

 

ನಮಗೆ ಬರುವಂತಹ ವಾಟ್ಸಪ್ ಮೆಸೇಜ್ ಗಳ ಮೇಲೆ ನಾವು ತೋರಿಸುವ ಉತ್ಸಾಹಕಿಂತ ನಮಗೆ ಯಾರಾದರೂ ವಾಟ್ಸಪ್ ಮೆಸೇಜ್ ಕಳುಹಿಸಿ, ನಂತರ ಅದನ್ನು ಡಿಲೀಟ್ ಮಾಡಿದರೆ ಅದರ ಮೇಲೆ ತೋರುವ ಆಸಕ್ತಿಯೇ ಹೆಚ್ಚು. ಆ ವಿಷಯ ಏನಿರಬಹುದು, ಯಾಕಾಗಿ ಅವರು ಮೆಸೇಜ್ ಡಿಲೆಟ್ ಮಾಡಿರಬಹುದು, ಓದುವ ಮುನ್ನವೇ ಯಾಕೆ ಡಿಲೀಟ್ ಮಾಡಿದರು, ಬ್ಲೂ ಟಿಕ್ ಬಂದಿಲ್ಲದಿದ್ದರೂ ಸಹ ವಿಷ್ಯ ಗೊತ್ತಾಗುವ ಮುನ್ನ ಯಾಕೆ ಡಿಲೀಟ್ ಮಾಡಿದರು ಅವರು ಏನನ್ನು ಮುಚ್ಚಿಡುತ್ತಿದ್ದಾರೆ.

ಅದರ ಹಿಂದಿನ ಉದ್ದೇಶವೇನು? ಮತ್ತೆ ಈ ಬಗ್ಗೆ ಪ್ರಶ್ನೆ ಮಾಡಬಹುದಾ? ಬೇಡವಾ? ಹೀಗೆ ಒಂದು ಸೆಕೆಂಡ್ ಗೆ ನಮ್ಮ ಮನಸ್ಸಿನಲ್ಲಿ ಸಾಕಷ್ಟು ಪ್ರಶ್ನೆಗಳು ಡಿಲೀಟ್ ಆದ ಒಂದು ಮೆಸೇಜ್ ಉದ್ದೇಶದಿಂದ ಉದ್ಬವವಾಗಿ ಬಿಡುತ್ತದೆ. ಆದರೆ ಡಿಲೀಟ್ ಮಾಡುವ ಮೆಸೇಜನ್ನು ಕೂಡ ಓದುವ ಅವಕಾಶ ಇದ್ದಿದ್ದರೆ.

ಹೌದು, ಈಗ ತಂತ್ರಜ್ಞಾನವು ಬೆಳೆಯುತ್ತಲೇ ಇದೆ. ಇಷ್ಟೆಲ್ಲಾ ಮುಂದುವರೆದಿರುವಾಗ ಡಿಲೀಟ್ ಮಾಡಿದ ಮೆಸೇಜ್ ಅನ್ನು ಓದುವ ಅವಕಾಶ ಇರುವುದಿಲ್ಲವಾ ಖಂಡಿತ ಇರುತ್ತದೆ. ಕೆಲವರು ಆಪ್ ಗಳ ಮೊರೆ ಹೋಗುತ್ತಾರೆ. ಅವುಗಳಿಂದ ಅದು ಸಾಧ್ಯವಾದರೂ ಕೂಡ ಗೌಪ್ಯತೆ ಮೌಲ್ಯಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ನಿಮ್ಮ ಮೆಸೇಜ್ಗಳು ಲೀಕ್ ಆಗಬಹುದು ಅಥವಾ ನಿಮ್ಮ ಮೊಬೈಲ್ ಹ್ಯಾಕ್ ಕೂಡ ಆಗಬಹುದು.

ಡಿಲೀಟ್ ಆಗಿರುವ ವಾಟ್ಸಪ್ ಮೆಸೇಜ್ ಓದುವ ಅವಕಾಶ ಇದೆ ಎನ್ನುವುದನ್ನು ಹೇಳಿದ ತಕ್ಷಣವೇ ಜನರು ಥ್ರಿಲ್ ಆಗುತ್ತಾರೆ. ಅವರ ಆಸೆಗೆ ನಿರಾಸೆ ಮಾಡದೆ ಅದಕ್ಕಿರುವ ವಿಧಾನಗಳನ್ನು ನಾವು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ನಿಮ್ಮ ವಾಟ್ಸಪ್ ಸೆಟ್ಟಿಂಗನ್ನು ಒಮ್ಮೆ ಚೆಕ್ ಮಾಡಿದರೆ, ಅದರಲ್ಲಿ ಬ್ಯಾಕಪ್ ಎನ್ನುವ ಒಂದು ಆಪ್ಷನ್ ಇರುತ್ತದೆ. ಅದರಲ್ಲಿ ನಾಲ್ಕು ರೀತಿಯ ಆಪ್ಷನ್ಗಳು ಇರುತ್ತವೆ.

ನೆವರ್, ಡೈಲಿ ಬ್ಯಾಕಪ್, ವೀಕ್ಲಿ ಬ್ಯಾಕಪ್ ಮತ್ತು ಮಂತ್ಲಿ ಬ್ಯಾಕಪ್ ಇವುಗಳಲ್ಲಿ ನಿಮಗೆ ಪ್ರತಿದಿನ ಮೆಸೇಜ್ ಮಾಡುವವರು ಮಾಡಿರುವ ಮೆಸೇಜ್ ಗಳನ್ನು ಏನಿದೆ ಎಂದು ತಿಳಿದುಕೊಳ್ಳಲು ಡೈಲಿ ಬ್ಯಾಕಪ್ ಎನ್ನುವ ಆಪ್ಷನ್ ಕ್ಲಿಕ್ ಮಾಡಿದರೆ ಸಾಕು. ನಿಮಗೆ ಪ್ರತಿದಿನ ಮೆಸೇಜ್ ಮಾಡುವವರು ಈ ಮೆಸೇಜ್ ಗಳನ್ನು ಡಿಲೀಟ್ ಮಾಡಿ ಹೆಚ್ಚು ಹೊತ್ತು ಆಗಿರುವುದಿಲ್ಲ, ಆದ ಕಾರಣ ಹಾಗೂ ನೀವು ಅವರ ಮೆಸೇಜ್ ಗಾಗಿ ಕಾಯುತ್ತಿದ್ದರೆ ಅವರ ಮೆಸೇಜ್ ಬಂದು ಹೆಚ್ಚು ಹೊತ್ತು ಆಗಿರುವುದಿಲ್ಲ.

ಅದಕ್ಕಾಗಿ ಡೈಲಿ ಆಪ್ಷನ್ ಸೆಲೆಕ್ಟ್ ಮಾಡಿ ನೀವು ಈಸಿಯಾಗಿ ಅವರ ಮೆಸೇಜ್ ಓದಬಹುದು. ಈ ಆಪ್ಷನ್ ಸೆಲೆಕ್ಟ್ ಮಾಡಿದ ತಕ್ಷಣ ಡಿಲೀಟ್ ಆಗಿರುವ ಚಾಟ್ ಗಳೆಲ್ಲ ಮರಳಿ ಬರುವುದರಿಂದ ಓದಲು ಸಾಧ್ಯವಾಗುತ್ತದೆ ಮತ್ತೊಂದು ವಿಧಾನ ಇದೆ ಅದನ್ನು ಆಂಡ್ರಾಯ್ಡ್ 11 ಮತ್ತು ನಂತರದ ಅಪ್ಡೇಟ್ ವರ್ಷನ್ ಸೆಟ್ಗಳನ್ನು ಬಳಸುವವರು ಮಾತ್ರ ಬಳಸಬಹುದು.

ನಿಮ್ಮ ಮೊಬೈಲ್ ಫೋನ್ ಸೆಟ್ಟಿಂಗ್ ಅಲ್ಲಿ ಹೋಗಿ ನೋಟಿಫಿಕೇಶನ್ಗಳನ್ನು ಲಿಂಕ್ ಮೂಲಕ ಮೋರ್ ಸೆಟ್ಟಿಂಗ್ ಗೆ ಹೋಗಿ ನೋಟಿಫಿಕೇಶನ್ ಹಿಸ್ಟರಿ ಆನ್ ಮಾಡಿ. ಆಗ ದಿನದ 24 ಗಂಟೆಯಲ್ಲಿ ನಿಮಗೆ ಯಾವ ಯಾವ ನೋಟಿಫಿಕೇಶನ್ ಬಂದಿರುತ್ತದೆ. ಅದೆಲ್ಲಾ ಅದರಲ್ಲಿ ಇರುತ್ತದೆ, ಆಗ ಅಲ್ಲಿ ನೀವು ನಿಮಗೆ ಬಂದಿದ್ದ ಸಂದೇಶ ನೋಡಬಹುದು. ಆದರೆ ಅದು ಟೆಕ್ಸ್ಟ್ ಮೆಸೇಜ್ ಆಗಿದ್ದರೆ ಮಾತ್ರ ನೀವು ನೋಡಲು ಸಾಧ್ಯ.

ಕೃಷಿ ಇಲಾಖೆಯಲ್ಲಿ ಭರ್ಜರಿ ನೇಮಕಾತಿ, ಖಾಲಿ ಇರುವ 1000 ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.

 

ದೇಶದಾದ್ಯಂತ ಇರುವ ಎಲ್ಲಾ ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಇದು ಸಿಹಿ ಸುದ್ದಿ. ಕೃಷಿ ಇಲಾಖೆಯಲ್ಲಿ ಖಾಲಿ ಇರುವ 1000ಕ್ಕೂ ಹೆಚ್ಚು ಹುದ್ದೆಗಳಿಗ ಭರ್ತಿ ಮಾಡಿಕೊಳ್ಳಲು ಇಲಾಖೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕೂಡ ಆಹ್ವಾನಿಸಲಾಗಿದೆ. ಇದಕ್ಕಾಗಿ ಇಲಾಖೆಯು ಅರ್ಜಿ ಸಲ್ಲಿಸುವವರಿಗೆ ಇರಬೇಕಾದ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಾನ ಮಾನದಂಡ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವುದಕ್ಕೆ ಬೇಕಾಗುವ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ ಆಯ್ಕೆ ಪ್ರಕ್ರಿಯೆ ಮುಂತಾದ ಸಂಪೂರ್ಣ ಮಾಹಿತಿಗಳನ್ನು ಒಳಗೊಂಡ ವಿವರಗಳನ್ನು ಸಹ ಅಧಿಸೂಚನೆಯಲ್ಲಿ ತಿಳಿಸಿದೆ.

ಕೇಂದ್ರ ಸರ್ಕಾರದ ಹುದ್ದೆ ಪಡೆಯುವ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಸೂಚಿಸಿರುವ ಮಾರ್ಗಸೂಚಿ ಪ್ರಕಾರ ಅರ್ಜಿ ಸಲ್ಲಿಸಿ, ಉದ್ಯೋಗ ಪಡೆಯುವ ಪ್ರಯತ್ನ ಮಾಡಬಹುದು. ಈ ಅಂಕಣದಲ್ಲಿ
ಸಹ ಆಕಾಂಕ್ಷಿಗಳಿಗೆ ಅನುಕೂಲಕ್ಕಾಗಿ ಕೆಲ ಪ್ರಮುಖ ಅಂಶಗಳ ವಿವರ ತಿಳಿಸಲಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ.

ಸಂಸ್ಥೆ:- ಕೃಷಿ ನಿರ್ವಹಣೆ ಮತ್ತು ವಿಸ್ತರಣಾ ತರಬೇತಿ ಸಂಸ್ಥೆ.
ಹುದ್ದೆಗಳ ಸಂಖ್ಯೆ:- 1041
ಉದ್ಯೋಗ ಸ್ಥಳ:- ಭಾರತದಾದ್ಯಂತ

● ಹುದ್ದೆಗಳ ವಿವರ:-
1. ತಾಂತ್ರಿಕ ವ್ಯವಸ್ಥಾಪಕ
2. ಸಹಾಯಕ ತಾಂತ್ರಿಕ ವ್ಯವಸ್ಥಾಪಕ
3. ಸ್ಟೆನೋಗ್ರಾಫರ್
4. ಅಕೌಂಟೆಂಟ್

ವೇತನ ಶ್ರೇಣಿ:- 25,000 ಮಾಸಿಕವಾಗಿ…

● ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ:-
1. ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕೃಷಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಉತ್ತೀರ್ಣರಾದವರು.
2. ಬಿಕಾಂ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.

● ವಯಸ್ಸಿನ ಮಿತಿ:-
1. ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಸರಿಯಾಗಿ ಕಡ್ಡಾಯವಾಗಿ ಕನಿಷ್ಠ 18 ವರ್ಷಗಳು ಪೂರ್ತಿಗೊಂಡಿರಬೇಕು
2. ಗರಿಷ್ಠ 40 ವರ್ಷಗಳು ಮೀರಿರಬಾರದು
● ವಯೋಮಾನ ಸಡಿಲಿಕೆ:-
1. OBC ಅಭ್ಯರ್ಥಿಗಳಿಗೆ ಮೂರು ವರ್ಷಗಳು
2. SC & ST ಅಭ್ಯರ್ಥಿಗಳಿಗೆ ಐದು ವರ್ಷಗಳು

● ಅರ್ಜಿ ಶುಲ್ಕ:- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ವಿಧಿಸಿಲ್ಲ.
● ಆಯ್ಕೆ ವಿಧಾನ :-
1. ನೇರ ಸಂದರ್ಶನ
2. ದಾಖಲೆಗಳ ಪರಿಶೀಲನೆ

● ಅರ್ಜಿ ಸಲ್ಲಿಸುವ ವಿಧಾನ:-
1. ಅಧಿಸೂಚಿಯಲ್ಲಿ ಸೂಚಿಸಲಾದ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ ಒಳಗೆ ಇರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.
2. ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ವೆಬ್ಸೈಟ್ ಮೂಲಕ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಮತ್ತೊಮ್ಮೆ ಪರಿಶೀಲಿಸಬೇಕು.
3. ಆಸಕ್ತಿ ಮತ್ತು ಅರ್ಹತೆ ಇದ್ದಲ್ಲಿ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಭರ್ತಿ ಮಾಡಿ ಸಂಬಂಧಪಟ್ಟ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಸಬ್ಮಿಟ್ ಬಟನ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬೇಕು.
4. ನಿಮ್ಮ ಭವಿಷ್ಯದ ಅನುಕೂಲತೆಗಾಗಿ ಅರ್ಜಿ ಸಲ್ಲಿಸಿರುವ ಪ್ರಿಂಟೌಟ್ ತೆಗೆದಿಟ್ಟುಕೊಳ್ಳುವುದು ಸೂಕ್ತ ಅಥವಾ ಅರ್ಜಿ ಸಂಖ್ಯೆ, ವಿನಂತಿ ಸಂಖ್ಯೆ ಇತ್ಯಾದಿಗಳನ್ನು ಬರೆದಿಟ್ಟುಕೊಳ್ಳಬೇಕು.

● ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
1. ಇತ್ತೀಚಿನ ಭಾವಚಿತ್ರ ಮತ್ತು ಸಹಿ
2. ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
3. ಆಧಾರ್ ಕಾರ್ಡ್
4.ಜಾತಿ ಮತ್ತು ಆದಾಯ ಪ್ರಮಾಣ ಪತ್ರ
5.ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
6.ನಿವಾಸ ದೃಢೀಕರಣ ಪತ್ರ

● ಪ್ರಮುಖ ದಿನಾಂಕಗಳು:-
1. ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 05 ಏಪ್ರಿಲ್, 2023.
2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 30 ಏಪ್ರಿಲ್, 2023.

ಈ ಶ್ರಮ ಕಾರ್ಡ್ ಮಾಡಿಸಿ ಪ್ರತಿ ತಿಂಗಳು ಸರ್ಕಾರದ ಕಡೆಯಿಂದ 3000 ಸಾವಿರ ಹಣ ಪಡೆಯಿರಿ

 

ಇ ಶ್ರಮ ಕಾರ್ಡ್‌ನಿಂದ ನೀವು ಪ್ರತಿ ತಿಂಗಳು 3000 ರೂ. ಪಡೆಯಬಹುದು. ಈ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರಲಿದೆ. ಈ ಕಾರ್ಡ್‌ ಮಾಡಿಸಬೇಕು ಅಂದ್ರೆ ನೀವು ಏನು ಮಾಡಬೇಕು? ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನೀಡಲಾಗಿದೆ. ಕೊನೆವರೆಗೂ ಸಂಪೂರ್ಣವಾಗಿ ಓದಿ ಮಾಹಿತಿ ತಿಳಿದುಕೊಳ್ಳಿ.

ಪ್ರತಿ ತಿಂಗಳು 3000 ಹಣ ನಿಮಗೆ ಬರಬೇಕು ಅಂದರೆ ನೀವು ಕೂಡ ಸ್ವಲ್ಪ ಹಣವನ್ನು ಮೊದಲೇ ಹೂಡಿಕೆ ಮಾಡಬೇಕಾಗುತ್ತದೆ. ನಿಮ್ಮ ಜೀವಿತಾವಧಿಯ ಕೊನೆಯಲ್ಲಿ ಕೊನೆಯ ದಿನದವರೆಗೂ ಕೂಡ 3000 ನಿಮ್ಮ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಕೂಡ ಬರುತ್ತದೆ. ಮೊದಲು ನೀವು ಇ ಶ್ರಮ ಆಫೀಷಿಯಲ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ. ಈ ಒಂದು ವೆಬ್‌ಸೈಟ್‌ ಅನ್ನು ಕೇಂದ್ರ ಸರ್ಕಾರದಿಂದ ಜಾರಿ ಮಾಡಲಾಗಿದೆ.

ಈ ವೆಬ್‌ಸೈಟ್‌ನಲ್ಲಿ ನಿಮಗೆ ಒಂದು ಆಪ್ಷನ್ ಕಾಣುತ್ತದೆ. ಅದೇನೆಂದರೆ, ಪೆನ್ಷನ್ ಫಾರ್ 3,000 ರೂ. ರಿಜಿಸ್ಟರ್ ಪೆನ್ಷನ್ ಡಾಟ್ ಇನ್ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತದೆ. ಈ ಯೋಜನೆಯ ಮುಖ್ಯ ಉದ್ದೇಶವೆಂದರೆ, ಅಸಂಘಟಿತ ಕಾರ್ಮಿಕರ ಮಾಹಿತಿಯನ್ನು ಪಡೆಯುವುದು ಹಾಗೂ ಅವರಿಗೆ ಜೀವನ ಪೂರ್ತಿ ಸುರಕ್ಷಿತವಾಗಿ ಇರುವುದಕ್ಕೆ ಕೆಲವೊಂದಷ್ಟು ಸವಲತ್ತುಗಳನ್ನು ಸೌಲಭ್ಯ ಗಳನ್ನು ಒದಗಿಸಿ ಕೊಡುವುದು.

ಇದರ ಜೊತೆಗೆ ಯಾರು ಪ್ರಧಾನಮಂತ್ರಿ ಜನ-ಧನ ಯೋಜನೆಯಲ್ಲಿ ಒಳಗೊಂಡಿರುತ್ತದೆ. ಅಂತವರಿಗೂ ಕೂಡ ಈ ಒಂದು ಯೋಜನೆ ಅಡಿ ಮಾಸಿಕ ವೇತನ ದೊರೆಯುತ್ತದೆ. ಈ ಒಂದು ಪೆನ್ಷನ್ ಅನ್ನು ನೀವು ಪಡೆದುಕೊಳ್ಳಬೇಕು. ಅಂದರೆ, ಕನಿಷ್ಠ 18ರಿಂದ ಗರಿಷ್ಠ 40 ವರ್ಷದ ವಯೋಮಿತಿಯನ್ನು ಒಳಗೊಂಡಿರಬೇಕಾಗುತ್ತದೆ. ಭಾರತ ಸರ್ಕಾರವು ಅಸಂಘಟಿತ ಕಾರ್ಮಿಕರಿಗೆ ವೃದ್ಧಾಪ್ಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ (PM-SYM) ಎಂಬ ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆಯನ್ನು ಪರಿಚಯಿಸಿದೆ .

ಅಸಂಘಟಿತ ಕಾರ್ಮಿಕರು ಹೆಚ್ಚಾಗಿ ಗೃಹಾಧಾರಿತ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಮಧ್ಯಾಹ್ನದ ಊಟದ ಕೆಲಸಗಾರರು, ತಲೆ ಹೊರೆ ಮಾಡುವವರು, ಇಟ್ಟಿಗೆ ಗೂಡು ಕೆಲಸಗಾರರು, ಚಮ್ಮಾರರು, ಚಿಂದಿ ಆಯುವವರು, ಮನೆಗೆಲಸದವರು, ತೊಳೆಯುವವರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಸ್ವಂತ ಖಾತೆ ಕೆಲಸಗಾರರು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮದ ಕೆಲಸಗಾರರು, ಶ್ರವ್ಯ-ದೃಶ್ಯ ಕೆಲಸಗಾರರು ಮತ್ತು ಮಾಸಿಕ ಆದಾಯ ರೂ 15,000/ ಅಥವಾ ಅದಕ್ಕಿಂತ ಕಡಿಮೆ ಇರುವ ಮತ್ತು 18-40 ವರ್ಷ ವಯಸ್ಸಿನ ಪ್ರವೇಶ ವಯೋಮಿತಿಗೆ ಸೇರಿದ ಇತರ ಉದ್ಯೋಗಗಳು.

ಅವರು ಹೊಸ ಪಿಂಚಣಿ ಯೋಜನೆ (NPS), ನೌಕರರ ರಾಜ್ಯ ವಿಮಾ ನಿಗಮ (ESIC) ಯೋಜನೆ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಅಡಿಯಲ್ಲಿ ಒಳಗೊಳ್ಳಬಾರದು. ಇದಲ್ಲದೆ, ಅವನು / ಅವಳು ಆದಾಯ ತೆರಿಗೆ ಪಾವತಿದಾರರಾಗಿರಬಾರದು.
PM-SYM ನ ವೈಶಿಷ್ಟ್ಯಗಳು
ಇದು ಸ್ವಯಂಪ್ರೇರಿತ ಮತ್ತು ಕೊಡುಗೆಯ ಪಿಂಚಣಿ ಯೋಜನೆಯಾಗಿದೆ. ಇದರ ಅಡಿಯಲ್ಲಿ ಚಂದಾದಾರರು ಈ ಕೆಳಗಿನ ಪ್ರಯೋಜನಗಳನ್ನು ಪಡೆಯುತ್ತಾರೆ.

* ಕನಿಷ್ಠ ಖಚಿತವಾದ ಪಿಂಚಣಿ: PM-SYM ಅಡಿಯಲ್ಲಿ ಚಂದಾದಾರರು 60 ವರ್ಷ ವಯಸ್ಸನ್ನು ತಲುಪಿದ ನಂತರ ಪ್ರತಿ ತಿಂಗಳಿಗೆ ಕನಿಷ್ಠ 3000 ರೂ. ಪಡೆಯುತ್ತಾರೆ.
* ಕುಟುಂಬ ಪಿಂಚಣಿ: ಪಿಂಚಣಿ ಪಡೆಯುವ ಸಮಯದಲ್ಲಿ, ಚಂದಾದಾರರು ಮರಣಹೊಂದಿದರೆ, ಫಲಾನುಭವಿಯ ಸಂಗಾತಿಯು ಕುಟುಂಬ ಪಿಂಚಣಿಯಾಗಿ ಫಲಾನುಭವಿಯು ಪಡೆದ ಪಿಂಚಣಿಯ 50% ಅನ್ನು ಪಡೆಯಲು ಅರ್ಹರಾಗಿರುತ್ತಾರೆ. ಕುಟುಂಬ ಪಿಂಚಣಿಯು ಸಂಗಾತಿಗೆ ಮಾತ್ರ ಅನ್ವಯಿಸುತ್ತದೆ.

* ಫಲಾನುಭವಿಯು ನಿಯಮಿತ ಕೊಡುಗೆಯನ್ನು ನೀಡಿದ್ದರೆ ಮತ್ತು ಯಾವುದೇ ಕಾರಣದಿಂದ (60 ವರ್ಷಕ್ಕಿಂತ ಮೊದಲು) ಮ.ರ.ಣಹೊಂದಿದ್ದರೆ, ಅವನ/ಅವಳ ಸಂಗಾತಿಯು ನಿಯಮಿತ ಕೊಡುಗೆಯನ್ನು ಪಾವತಿಸುವ ಮೂಲಕ ಯೋಜನೆಗೆ ಸೇರಲು ಮತ್ತು ಮುಂದುವರಿಸಲು ಅರ್ಹರಾಗಿರುತ್ತಾರೆ ಅಥವಾ ನಿರ್ಗಮನದ ನಿಬಂಧನೆಗಳ ಪ್ರಕಾರ ಯೋಜನೆಯಿಂದ ನಿರ್ಗಮಿಸುತ್ತಾರೆ. ವಾಪಸಾತಿ.
* ಚಂದಾದಾರರ ಕೊಡುಗೆ: PM-SYM ಗೆ ಚಂದಾದಾರರ ಕೊಡುಗೆಗಳನ್ನು ಅವನ/ಅವಳ ಉಳಿತಾಯ ಬ್ಯಾಂಕ್ ಖಾತೆ/ಜನ್-ಧನ್ ಖಾತೆಯಿಂದ ‘ಆಟೋ-ಡೆಬಿಟ್’ ಸೌಲಭ್ಯದ ಮೂಲಕ ಮಾಡಲಾಗುತ್ತದೆ. ಚಂದಾದಾರರು PM-SYM ಗೆ ಸೇರುವ ವಯಸ್ಸಿನಿಂದ 60 ವರ್ಷ ವಯಸ್ಸಿನವರೆಗೆ ನಿಗದಿತ ಕೊಡುಗೆ ಮೊತ್ತವನ್ನು ನೀಡಬೇಕಾಗುತ್ತದೆ.

* PM-SYM ಅಡಿಯಲ್ಲಿ ನೋಂದಣಿ ಪ್ರಕ್ರಿಯೆ: ಚಂದಾದಾರರು ಮೊಬೈಲ್ ಫೋನ್, ಉಳಿತಾಯ ಬ್ಯಾಂಕ್ ಖಾತೆ ಮತ್ತು ಆಧಾರ್ ಸಂಖ್ಯೆಯನ್ನು ಹೊಂದಿರಬೇಕು. ಅರ್ಹ ಚಂದಾದಾರರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ (CSC eGovernance Services India Limited (CSC SPV)) ಭೇಟಿ ನೀಡಬಹುದು ಮತ್ತು ಸ್ವಯಂ ಪ್ರಮಾಣೀಕರಣದ ಆಧಾರದ ಮೇಲೆ ಆಧಾರ್ ಸಂಖ್ಯೆ ಮತ್ತು ಉಳಿತಾಯ ಬ್ಯಾಂಕ್ ಖಾತೆ/ ಜನ್-ಧನ್ ಖಾತೆ ಸಂಖ್ಯೆಯನ್ನು ಬಳಸಿಕೊಂಡು PM-SYM ಗೆ ದಾಖಲಾಗಬಹುದು.

ನಂತರ, ಚಂದಾದಾರರು PM-SYM ವೆಬ್ ಪೋರ್ಟಲ್‌ಗೆ ಭೇಟಿ ನೀಡಬಹುದು ಅಥವಾ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ಸ್ವಯಂ-ಪ್ರಮಾಣೀಕರಣದ ಆಧಾರದ ಮೇಲೆ ಆಧಾರ್ ಸಂಖ್ಯೆ / ಉಳಿತಾಯ ಬ್ಯಾಂಕ್ ಖಾತೆ / ಜನ್-ಧನ್ ಖಾತೆ ಸಂಖ್ಯೆಯನ್ನು ಬಳಸಿಕೊಂಡು ಸ್ವಯಂ-ನೋಂದಣಿ ಮಾಡಿಕೊಳ್ಳುವ ಸೌಲಭ್ಯವನ್ನು ಒದಗಿಸಲಾಗುತ್ತದೆ.
* ದಾಖಲಾತಿ ಏಜೆನ್ಸಿಗಳು: ಎಲ್ಲಾ ಸಾಮಾನ್ಯ ಸೇವಾ ಕೇಂದ್ರಗಳಿಂದ ದಾಖಲಾತಿಯನ್ನು ಕೈಗೊಳ್ಳಲಾಗುತ್ತದೆ. ಅಸಂಘಟಿತ ಕಾರ್ಮಿಕರು ತಮ್ಮ ಆಧಾರ್ ಕಾರ್ಡ್ ಮತ್ತು ಉಳಿತಾಯ ಬ್ಯಾಂಕ್ ಖಾತೆಯ ಪಾಸ್‌ಬುಕ್/ಜನಧನ್ ಖಾತೆಯೊಂದಿಗೆ ತಮ್ಮ ಹತ್ತಿರದ ಸಿಎಸ್‌ಸಿಗೆ ಭೇಟಿ ನೀಡಬಹುದು ಮತ್ತು ಯೋಜನೆಗೆ ತಮ್ಮನ್ನು ನೋಂದಾಯಿಸಿಕೊಳ್ಳಬಹುದು.
ಮೊದಲ ತಿಂಗಳ ಕೊಡುಗೆ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಲಾಗುತ್ತದೆ, ಇದಕ್ಕಾಗಿ ಅವರಿಗೆ ರಶೀದಿಯನ್ನು ನೀಡಲಾಗುತ್ತದೆ.

ಇ ಶ್ರಮ್ ಕಾರ್ಡ್ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
* ಮೊದಲಿಗೆ ಇ-ಶ್ರಮ್ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್ eshram.gov.in ಗೆ ಹೋಗಿ.
* ಮುಖಪುಟದಲ್ಲಿ ರಿಜಿಸ್ಟರ್ ಆನ್ ಇ-ಶ್ರಾಮ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಇದರ ನಂತರ ಹೊಸ ಪುಟ ತೆರೆದಾಗ ವಿನಂತಿಸಿದ ಮಾಹಿತಿಯನ್ನು ಭರ್ತಿ ಮಾಡಿ.
* ವಿವರಗಳನ್ನು ಭರ್ತಿ ಮಾಡಿದ ನಂತರ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ನಮೂದಿಸಿ.

* ಈಗ ನೋಂದಣಿ ಫಾರ್ಮ್ ಕಾಣಿಸಿಕೊಂಡಿದೆ. ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿ.
* ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಿ.
* ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿದ ನಂತರ ನೀವು ಭರ್ತಿ ಮಾಡಿದ ಮಾಹಿತಿಯು ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಒಮ್ಮೆ ಫಾರ್ಮ್ ಅನ್ನು ಪರಿಶೀಲಿಸಿ.
* ಈಗ ಫಾರ್ಮ್ ಅನ್ನು ಸಲ್ಲಿಸಿ.
* ನೋಂದಣಿ ಪ್ರಕ್ರಿಯೆಯು ಪೂರ್ಣಗೊಂಡ ನಂತರ, 10-ಅಂಕಿಯ ಇ-ಶ್ರಮ್ ಕಾರ್ಡ್ ಅನ್ನು ನೀಡಲಾಗುತ್ತದೆ.

ಇ ಶ್ರಮ್ ಕಾರ್ಡ್ ನೋಂದಣಿಗೆ ಅಗತ್ಯ ದಾಖಲೆಗಳು(ಪೋರ್ಟಲ್‌ನಲ್ಲಿ ಆನ್‌ಲೈನ್ ನೋಂದಣಿಗಾಗಿ)
* ಆಧಾರ್ ಕಾರ್ಡ್
* ಪ್ಯಾನ್ ಕಾರ್ಡ್ ಮತ್ತು
* ಬ್ಯಾಂಕ್ ಖಾತೆ
* ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
* ಮೊಬೈಲ್ ಸಂಖ್ಯೆಯೂ ಅಗತ್ಯ.
* ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಅವಶ್ಯಕವಾಗಿದೆ

ಇದ್ದಕ್ಕಿದ್ದ ಹಾಗೇ ಶುರುವಾಯ್ತು ರೇಷನ್ ಕಾರ್ಡ್ ರದ್ದು ಕಾರ್ಯಕ್ರಮ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ.

 

ರೇಷನ್ ಕಾರ್ಡ್ ಎನ್ನುವುದು ಭಾರತದಲ್ಲಿ ಒಂದು ಪ್ರಮುಖ ಗುರುತಿನ ಚೀಟಿ. ಅದರಲ್ಲಿ ಮುಖ್ಯವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿತರಣೆ ಮಾಡುವ ಉಚಿತ ಪಡಿತರವನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ಬೇಕೇ ಬೇಕು. ಅವರ ಕುಟುಂಬದ ಪರಿಸ್ಥಿತಿಯನ್ನು ಆಧರಿಸಿ ಆ ಬಗೆಯಾದ ರೇಷನ್ ಕಾರ್ಡ್ ಅನ್ನು ನೀಡಲಾಗುತ್ತದೆ. ಇಂದು ಭಾರತದಲ್ಲಿರುವ ಪ್ರತಿಯೊಂದು ಕುಟುಂಬವು ಕೂಡ ತನ್ನ ಸ್ಥಿತಿಗೆ ಅನುಗುಣವಾದ ಒಂದೊಂದು ರೇಷನ್ ಕಾರ್ಡ್ ಹೊಂದಿದೆ.

APL, BPL ಅಂತ್ಯೋದಯ ಈ ರೀತಿ ಭಿನ್ನ ಬಗೆಯ ರೇಷನ್ ಕಾರ್ಡ್ ಗಳು ಇರಬಹುದು ಆದರೆ ಪ್ರತಿಯೊಂದು ಕುಟುಂಬವು ಕೂಡ ಮುಖ್ಯವಾಗಿ ಪಡಿತರ ಕಾರಣಕ್ಕೆ ಹಾಗೂ ಇನ್ನಿತರ ಕಾರಣಕ್ಕೆ ರೇಷನ್ ಕಾರ್ಡನ್ನು ಹೊಂದಿದೆ. ರೇಷನ್ ಕಾರ್ಡ್ ಮೂಲಕ ಪಡಿತರ ಕೊಡುವ ವ್ಯವಸ್ಥೆ ಜಾರಿಗೆ ಬಂದು ಸಾಕಷ್ಟು ವರ್ಷಗಳೇ ಕಳೆದಿವೆ ಆಗಿಲಿಂದಲೂ ಸಹಾ ಇದರಲ್ಲಿ ಅಕ್ರಮಗಳು ವ್ಯವಹಾರಗಳು ನಡೆಯುತ್ತಲೇ ಇವೆ.

ಸಧ್ಯಕ್ಕೆ ಈಗ ಇದಕ್ಕೆ ಪರಿಹಾರ ಎಂದರೆ ಆಧಾರ್ ಕಾರ್ಡ್. ಒಬ್ಬ ವ್ಯಕ್ತಿಗೆ ಒಂದೇ ಸಂಖ್ಯೆ ಎನ್ನುವ ಈ ಕ್ರಮದಿಂದ ಮತ್ತು ಬಯೋಮೆಟ್ರಿಕ್ ಮಾಹಿತಿಗಳನ್ನು ಆದರಿಸಿ ಪಡಿತರ ಕೊಡುವುದರಿಂದ ತಕ್ಕಮಟ್ಟಿಗೆ ಇದನ್ನು ಕಂಟ್ರೋಲಿಗೆ ತರಬಹುದು. ಅದರ ಬಗ್ಗೆ ಈಗ ಸರ್ಕಾರ ಚಿಂತನೆ ನಡೆಸುತ್ತಿದೆ. ಯಾಕೆಂದರೆ ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರಿಗೆ, ಕಡು ಬಡವರಿಗೆ ಉಚಿತ ಪಡಿತರ ಕೊಡಬೇಕು.

ಅಂತಹ ಕುಟುಂಬಕ್ಕೆ ಅಗತ್ಯವಾದ ಆಹಾರ ಧಾನ್ಯ ಪದಾರ್ಥಗಳನ್ನು ಕಡಿಮೆ ಬೆಲೆಗೆ ಅಥವಾ ಸಂಪೂರ್ಣ ಉಚಿತವಾಗಿ ನೀಡಬೇಕು ಎನ್ನುವ ಧ್ಯೇಯವನ್ನು ಇಟ್ಟುಕೊಂಡಿದೆ. ರಾಜ್ಯದಲ್ಲೂ ಅನ್ನಭಾಗ್ಯ ಯೋಜನೆ ಜಾರಿಗೆ ಬಂದು ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ಒಂದಕ್ಕಿಂತ ಹೆಚ್ಚಿನ ಕಾರ್ಡುಗಳಲ್ಲಿ ಹೆಸರು ಹೊಂದಿರುವುದು ಅಥವಾ ನಕಲಿ ರೇಷನ್ ಕಾರ್ಡ್ ಗಳನ್ನು ಹೊಂದಿರುವುದು ಅಥವಾ ಅವರು ಉತ್ತಮ ವ್ಯವಸ್ಥೆಯಲ್ಲಿ ಇದ್ದರೂ ಕೂಡ ಬಡತನ ಹೊಂದಿರುವ ಕುಟುಂಬಗಳಿಗೆ ಕೊಡಲಾಗುವಂತಹ ಕಾರ್ಡುಗಳನ್ನು ಹೊಂದಿರುವುದರಿಂದ ನಿಜವಾಗಿಯೂ ಸಮಸ್ಯೆಯಲ್ಲಿ ಕಷ್ಟದಲ್ಲಿ ಇರುವವರಿಗೆ ವಂಚನೆ ಆಗುತ್ತಿದೆ.

ಈ ರೀತಿ ಮೋಸದಿಂದ ಪಡೆದ ಪಡಿತರಗಳು ಕಾಳಸಂತೆಯಲ್ಲಿ ಹೆಚ್ಚು ಬೆಲೆಗೆ ಮಾರಾಟವಾಗಿ ಸರ್ಕಾರ ಮತ್ತು ಬಡವರಿಗೆ ಅನ್ಯಾಯವಾಗುತ್ತಿದೆ. ಇದನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಸರ್ಕಾರಗಳು ರೇಷನ್ ಕಾರ್ಡ್ ವಿಷಯದಲ್ಲಿ ಇನ್ನು ಕಟ್ಟುನಿಟ್ಟಿನ ನಿಯಮಗಳ ಜಾರಿಗೆ ತರಲು ಚಿಂತಿಸಿದೆ. ಈಗಾಗಲೇ ಕರ್ನಾಟಕದಲ್ಲಿ ಆದಷ್ಟು ಶೀಘ್ರವಾಗಿ ರೇಷನ್ ಕಾರ್ಡ್ ಜೊತೆ ರೇಷನ್ ಕಾರ್ಡ್ ಅಲ್ಲಿ ಇರುವ ಎಲ್ಲಾ ಸದಸ್ಯರು ಕೂಡ ತಮ್ಮ ಆಧಾರ್ ಕಾರ್ಡ್ ಕೊಟ್ಟು ಮತ್ತು ಬಯೋಮೆಟ್ರಿಕ್ ಮಾಹಿತಿ ಕೊಟ್ಟು ಲಿಂಕ್ ಮಾಡಬೇಕು ಎನ್ನುವ ಆದೇಶವನ್ನು ಹೊರಡಿಸಲಾಗಿದೆ.

ಇದೇ ರೀತಿ ಮಹಾರಾಷ್ಟ್ರ ಸರ್ಕಾರವು ಕೂಡ ಪಡಿತರ ಚೀಟಿ ವ್ಯವಸ್ಥೆಯಲ್ಲಿ ಮಹತ್ವಪೂರ್ಣವಾದ ನಿರ್ಧಾರವೊಂದಕ್ಕೆ ಬಂದಿದೆ ಮಹಾರಾಷ್ಟ್ರ ಸರ್ಕಾರವು ಮಹಾರಾಷ್ಟ್ರ ರಾಜ್ಯದಲ್ಲಿರುವ ರೇಷನ್ ಕಾರ್ಡ್ ಗಳ ಪರಿಶೀಲನೆ ನಡೆಸಿ, ಅಕ್ರಮವಾಗಿ ರೇಷನ್ ಕಾರ್ಡ್ ಹೊಂದಿರುವವರು ಹಾಗೂ ಅನರ್ಹರಾಗಿದ್ದರೂ ಕೂಡ ಸವಲತ್ತುಗಳ ಆಸೆಯಿಂದ ನಕಲಿ ದಾಖಲೆ ಸೃಷ್ಟಿ ಕಾರ್ಡು ಪಡೆದಿರುವವರನ್ನು ಕಂಡುಹಿಡಿದು ಅದನ್ನು ರದ್ದುಗೊಳಿಸಿ ರೇಷನ್ ಕಾರ್ಡ್ ಕಸಿಕೊಳ್ಳುವ ಮೂಲಕ ಶಿಕ್ಷೆ ನೀಡಲು ನಿರ್ಧರಿಸಿದೆ. ರೇಷನ್ ಕಾರ್ಡ್ ಗಳ ಮೇಲೆ ಈ ರೀತಿ ಕಟ್ಟುನಿಟ್ಟಿನ ನಿಯಮ, ಅಕ್ರಮ ಕಾಡುಗಳ ರದ್ದುಗೊಳಿಸುವಿಕೆ ಕ್ರಮಗಳು ರಾಜ್ಯದಲ್ಲೂ ಜಾರಿಗೆ ಬರುವ ದಿನಗಳು ಹತ್ತಿರದಲ್ಲಿದೆ.

ಆಧಾರ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್ 2 ಲಕ್ಷ ಸಾಲ ಕೇವಲ 5 ನಿಮಿಷದಲ್ಲಿ ದೊರೆಯಲಿದೆ ಹೇಗೆ ಅಂತ ನೋಡಿ.!

 

ಹೆಚ್ಚುತ್ತಿರುವ ಬೆಲೆಗಳ ಮಧ್ಯೆ ಹೊಸ ಹೊಸ ಕನಸುಗಳನ್ನು ನನಸು ಮಾಡಿಕೊಳ್ಳಲು, ಕೃಷಿ ಕಾರ್ಖಾನೆಗಳ ಕೆಲಸ ಕಾರ್ಯಗಳಲ್ಲಿ ಅಥವಾ ದಿನನಿತ್ಯದ ಚಟುವಟಿಕೆಗಳಲ್ಲಿ ನವ ತಂತ್ರಜ್ಞಾನಗಳನ್ನು ಅಳವಡಿಸಿರುವ ಯಂತ್ರೋಪಕರಣಗಳನ್ನು ಬಳಸಲು ಸಾಲವನ್ನು ಪಡೆಯುವ ಅಥವಾ ಲೋನ್ ಮಾಡುವ ಸಂದರ್ಭವು ಬಂದೊದಗುತ್ತದೆ. ಇದೀಗ ನಾವು ನೀಡಲಿರುವ ಮಾಹಿತಿಯನ್ನು ಸಂಪೂರ್ಣವಾಗಿ ಅರಿತರೆ ನಿಮಗೆ ಸಂತಸ ತರಬಹುದು.

ಸಾಲವನ್ನು ಪಡೆಯಲು ಈ ಹಿಂದೆ ಅನೇಕ ದಾಖಲಾತಿಗಳನ್ನು ನೀಡಿ ಬಹಳ ಸಮಯ ಕಾಯಬೇಕಿತ್ತು. ಹಣ ಕೈ ಸೇರುವವರೆಗೂ ತಾಳ್ಮೆ ಇರಬೇಕಿತ್ತು. ಇದೀಗ ಸಾಲ ಅಥವಾ ಲೋನ್ ಪಡೆಯುವುದು ಸುಲಭವಾಗಿದೆ. ಈ ಹಿಂದೆ ಪರ್ಸನಲ್ ಲೋನ್ ಪಡೆಯಲು ವಿಳಾಸ ಹಾಗೂ ಗುರುತಿನ ಪುರಾವೆಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದರು. ಆದರೂ ಈಗ ಕೇವಲ ಆಧಾರ್ ಕಾರ್ಡ್ ನಿಂದಲೇ ವಯಕ್ತಿಕ ಸಾಲವನ್ನು ಪಡೆಯಬಹುದು.

ಆಧಾರ್ ಕಾರ್ಡನ್ನು ಬಳಸಿ ವೈಯಕ್ತಿಕ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಧಾರ್ ಕಾರ್ಡ್‌ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನವು ಅತಿಯಾಗಿ ಹಂತಗಳಿಲ್ಲದೆ ಸರಳವಾಗಿದ್ದು, ಅದರ ಕುರಿತಾದ ಕೆಲವು ಪ್ರಮುಖ ವಿಷಯಗಳು ಇಲ್ಲಿದೆ. ಈ ಸಾಲ ಪಡೆಯಲು ನಿಮ್ಮ ಕ್ರೆಡಿಟ್ ಸ್ಕೋರ್ (CIBIL Score) ಅನ್ನು ಪರಿಶೀಲಿಸಿಕೊಳ್ಳಬೇಕು ಎಂಬ ವಿಚಾರವು ಗಮನದಲ್ಲಿರಲಿ. ಅವರ ಷರತ್ತಿಗೆ ಅನುಗುಣವಾಗಿ ಅರ್ಹರಾಗಿದ್ದವರು ಮಾತ್ರ ಸಾಲವನ್ನು ಪಡೆಯಬಹುದು.

ಆಧಾರ್ ಕಾರ್ಡ್ ಮೂಲಕವಾಗಿ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸುವ ವಿಧಾನವು ಈ ಕೆಳಗಿನಂತಿದೆ;
• ಅರ್ಜಿ ಸಲ್ಲಿಸಲು ಮೊದಲು ಬ್ಯಾಂಕಿನ ಅಧಿಕೃತ ವೆಬ್ಸೈಟ್ ಗೆಭೇಟಿ ನೀಡಬೇಕು.
• ಇಲ್ಲವೇ ಮೊಬೈಲ್ ನಲ್ಲಿ ಇರುವ ಬ್ಯಾಂಕಿನ ಅಪ್ಲಿಕೇಶನ್ ಮುಖಾಂತರವಾಗಿಯೇ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸಬಹುದು.
• ಬಳಿಕ ನೀವು ಪಡೆದ ಓಟಿಪಿಯನ್ನು ನಮೂದಿಸಿದ ನಂತರ ವೈಯಕ್ತಿಕ ಸಾಲವನ್ನು ಆಯ್ಕೆ ಮಾಡಬೇಕು.
• ನೀವು ಪಡೆಯಲು ಇಚ್ಚಿಸುವ ಸಾಲದ ಒಟ್ಟಾರೆ ಮೊತ್ತ ಹಾಗೂ ಅಲ್ಲಿ ಕೇಳಿರುವ ಅಗತ್ಯ ಮಾಹಿತಿಗಳನ್ನು ನೀಡಬೇಕು.

• ನಿಮ್ಮ ಪಾನ್ ಕಾರ್ಡ್ ಮಾಹಿತಿಯನ್ನು ಕೂಡ ನಮೂದಿಸಬೇಕಾಗಬಹುದು.
• ಅಗತ್ಯ ಮಾಹಿತಿಗಳನ್ನು ಹಾಗೂ ದಾಖಲಾತಿ ಪತ್ರಗಳನ್ನು ಸಲ್ಲಿಸಿದ ಬಳಿಕ ಬ್ಯಾಂಕ್ ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತದೆ. ಸಲ್ಲಿಸಿದ ಎಲ್ಲ ಮಾಹಿತಿಗಳು ಸತ್ಯವೇ ನ್ಯಾಯಯುತವಾಗಿವೆಯೇ ಎಂದು ಪರೀಕ್ಷಿಸುತ್ತದೆ.
• ನೀವು ಸಲ್ಲಿಸಿದ ಅರ್ಜಿಯು ಸರಿಯಾಗಿದ್ದು, ದಾಖಲಾತಿಗಳು ಅವರು ಕೇಳಿದ ಎಲ್ಲಾ ಮಾಹಿತಿಗಳನ್ನು ಖಚಿತಪಡಿಸುವಂತಿದ್ದು ನಿಮಗೆ ನೀಡಬೇಕಾದ ಸಾಲವನ್ನು ಅವರು ಅನುಮೋದಿಸಿದರೆ ಸಾಲವನ್ನು ಪಡೆಯಲು ನೀವು ಅರ್ಹರಾಗುತ್ತೀರಿ. ಬಳಿಕ ಸಾಲದ ಮೊತ್ತವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಯಾವ ಯಾವ ಬ್ಯಾಂಕ್ ಗಳು ಈ ರೀತಿಯ ಸಾಲವನ್ನು ನೀಡುತ್ತಿದೆ ಎಂಬ ಪ್ರಶ್ನೆಯು ನಿಮ್ಮನ್ನು ಕಾಡುತ್ತಿದ್ದರೆ ಇಲ್ಲಿದೆ ಉತ್ತರ. ನಿಮ್ಮ ಆಧಾರ್ ಕಾರ್ಡನ್ನು ಬಳಸಿಕೊಂಡು ವೈಯಕ್ತಿಕ ಸಾಲವನ್ನು ಪಡೆಯಲು ಇಚ್ಚಿಸಿದರೆ, ಅದಕ್ಕೆ ಸುಲಭದ ಮಾರ್ಗ ತೋರುವ ಬ್ಯಾಂಕ್ ಗಳೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚಡಿಎಫ್ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಗಳು ಸೇರಿದಂತೆ ಅನೇಕ ಭಾರತೀಯ ಬ್ಯಾಂಕ್ ಗಳು ಸಹಾಯ ಹಸ್ತವನ್ನು ಚಾಚಿವೆ.

ಗ್ರಾಹಕರು ಆಧಾರ್ ಕಾರ್ಡ್ ಮೂಲಕವಾಗಿ ಸಾಲವನ್ನು ಪಡೆಯಲು ಇಚ್ಚಿಸಿದರೆ ಗಮನದಲ್ಲಿಡಬೇಕಾದ ಮುಖ್ಯ ಅಂಶವೆಂದರೆ ನಿಮ್ಮ ಕ್ರೆಡಿಟ್ ಸ್ಕೋರ್ ಅವರು ನಿಗದಿಪಡಿಸಿದಕ್ಕಿಂತ ಕಡಿಮೆ ಇರಬಾರದು. ನಿಮ್ಮ ಕ್ರೆಡಿಟ್ ಸ್ಕೋರ್ ಕನಿಷ್ಠ 750 ಇರಬೇಕು ಅಥವಾ ಅದಕ್ಕೂ ಹೆಚ್ಚಿನದಾಗಿರಬೇಕು. ಈ ರೀತಿಯಾಗಿ ಅರ್ಜಿಯನ್ನು ಸಲ್ಲಿಸಿ ಎರಡು ಲಕ್ಷ ರೂಪಾಯಿಗಳವರೆಗಿನ ಸಾಲವನ್ನು ಪಡೆಯಬಹುದು. ಅನೇಕ ಬಾರಿ ಸಲ್ಲಿಸಿದ ಅರ್ಜಿಯು ಕೇವಲ 5 ನಿಮಿಷಗಳಲ್ಲಿಯೇ ಅಪ್ರೂವಲ್ ಆಗುತ್ತದೆ. ತಕ್ಷಣವೇ ಸಾಲವನ್ನು ಕೂಡ ವಿತರಿಸಲಾಗುತ್ತದೆ.

ಎರಡನೇ ಹೆಂಡತಿಯ ಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ಇದೆಯಾ ಅಥವಾ ಇಲ್ಲವಾ.? ಕಾನೂನು ಈ ಬಗ್ಗೆ ಏನು ಹೇಳುತ್ತೆ ನೋಡಿ.

 

ಭಾರತ ದೇಶದಲ್ಲಿ ಜನಸಾಮಾನ್ಯರಿಗೆ ಕಾನೂನು ಕುರಿತು ಮಾಹಿತಿ ಕೊರತೆ ಇದೆ. ಅದರಲ್ಲೂ ಆಸ್ತಿಭಾಗದ ಕುರಿತು ಜನ ಹೆಚ್ಚು ಗೊಂದಲಕ್ಕೆ ಒಳಗಾಗಿದ್ದಾರೆ. ಭಾರತದಲ್ಲಿ ಸಂಬಂಧಗಳನ್ನೇ ಆಸ್ತಿ ಎಂದು ತಿಳಿದುಕೊಳ್ಳಲಾಗಿದೆ. ಆದರೂ ಒಟ್ಟು ಕುಟುಂಬದ ಆಸ್ತಿ ವಿಭಾಗದ ವಿಚಾರ ಬಂದಾಗ ನಾನಾ ರೀತಿಯ ಗೋಜಲಾಗುವುದು ಇದ್ದೇ ಇದೆ. ಹೆಚ್ಚಿನ ಪ್ರಕರಣಗಳಲ್ಲಿ ಕುಟುಂಬದ ನಡುವೆ ಆಸ್ತಿ ವಿಭಾಗದ ಕುರಿತು ತೀರ್ಮಾನಗಳು ಒಪ್ಪಿಗೆ ಆಗದೆ ಕಾನೂನಿನ ಮೊರೆ ಹೋಗಿರುವ ಉದಾಹರಣೆಗಳು ಇವೆ.

ಆದರೆ ಒಂದು ವಿಚಾರದಲ್ಲಿ ಇನ್ನೂ ಜನತೆಗೆ ತಪ್ಪು ತಿಳುವಳಿಕೆ ಇದೆ. ಅದೇನೆಂದರೆ ಒಬ್ಬ ವ್ಯಕ್ತಿಗೆ ಇಬ್ಬರು ಹೆಂಡತಿಯರಿದ್ದು, ಇಬ್ಬರಿಗೂ ಮಕ್ಕಳಿದ್ದರೆ ಆತನ ಆಸ್ತಿಯಲ್ಲಿ ಇಬ್ಬರು ಹೆಂಡತಿಯರಿಗೆ ಸಮಪಾಲು ಸಿಗುತ್ತದೆಯಾ ಅಥವಾ ಮಕ್ಕಳ ನಡುವೆ ಸಮಾನವಾಗಿ ಹಂಚಿಕೆಯಾಗುತ್ತದೆಯಾ ಎಂದು. ಇದೇ ವಿಚಾರದ ಕುರಿತು ಇಂದು ಸ್ಪಷ್ಟವಾಗಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.

ಹಿಂದು ವಿವಾಹ ಕಾಯ್ದೆ ಪ್ರಕಾರ ಮೊದಲನೇ ಹೆಂಡತಿ ಜೀವಂತ ಇದ್ದಾಗ ಎರಡನೇ ಮದುವೆ ಆದರೆ ಅದು ಅಸಿಂಧು ಆಗುತ್ತದೆ. ಆದರೆ ಒಬ್ಬ ವ್ಯಕ್ತಿಗೆ ಮೊದಲನೇ ಮದುವೆಯಾಗಿ ಒಬ್ಬಳು ಮಗಳಿದ್ದಾಳೆ, ನಂತರ ಮೊದಲ ಪತ್ನಿ ಮರಣ ಹೊಂದಿದ ಕಾರಣಕ್ಕೆ ಎರಡನೇ ಮದುವೆ ಆಗಿದ್ದಾನೆ ಎಂದು ಇಟ್ಟುಕೊಳ್ಳೋಣ. ಈಗ ಎರಡನೇ ಹೆಂಡತಿಗೆ 2 ಗಂಡು ಮಕ್ಕಳು ಹಾಗೂ 3 ಹೆಣ್ಣು ಮಕ್ಕಳು ಮಕ್ಕಳಿದ್ದಾರೆ ಎಂದುಕೊಳ್ಳೋಣ.

ಒಟ್ಟು ಆ ವ್ಯಕ್ತಿಗೆ 6 ಮಕ್ಕಳು ಇದ್ದಂತೆ ಆಯಿತು. ಈಗ ಆ ವ್ಯಕ್ತಿ 6 ಎಕರೆ ಜಮೀನು ಹೊಂದಿದ್ದಾಗ, ಆ 6 ಎಕರೆ ಜಮೀನು ಆತನ ಮರಣ ನಂತರ ವಿಭಜನೆ ಆದರೆ ಮೊದಲ ಹೆಂಡತಿ ಮಕ್ಕಳಿಗೆ 3 ಎಕರೆ, ಎರಡನೇ ಹೆಂಡತಿ ಮಕ್ಕಳಿಗೆ 3 ಎಕರೆ ಸಿಗುತ್ತದೆ ಎಂದು ತಪ್ಪು ತಿಳಿದುಕೊಂಡಿರುತ್ತಾರೆ. ಆದರೆ ಕಾನೂನು ಇದರ ಕುರಿತು ಬೇರೆ ಹೇಳುತ್ತದೆ.

ಯಾವುದೇ ವ್ಯಕ್ತಿಯ ಆಸ್ತಿ ವ್ಯಕ್ತಿಯ ಮ.ರಣದ ನಂತರ ಆತನ ವಾರಸ್ದಾರರಿಗೆ ಆಸ್ತಿ ಮೇಲಿನ ಹಕ್ಕು ವಿಭಜನೆ ಆಗುವ ಸಮಯದಲ್ಲಿ ಆಸ್ತಿ ಮೂಲವನ್ನು ಮುಖ್ಯವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಯಾಕೆಂದರೆ ಆಸ್ತಿ ಪಿತ್ರಾರ್ಜಿತ ಆಸ್ತಿಯಾಗಿದ್ದರೆ ಅಥವಾ ಉಡುಗೊರೆ ರೂಪದಲ್ಲಿ ಬಂದಿದ್ದರೆ ಮುಂದಿನ ಹಂತದಲ್ಲಿ ಆಸ್ತಿ ವಿಭಜನೆ ಮಾಡುವಾಗ ಸುಲಭ ಆಗುತ್ತಿದೆ. ಒಂದು ವೇಳೆ ಸ್ವಯಾರ್ಜಿತವಾಗಿ ಆಸ್ತಿ ಸಂಪಾದನೆ ಮಾಡಿದ್ದರೆ, ಆತನ ಯಾವ ಮಕ್ಕಳಿಗೆ ಬೇಕಾದರೂ ಅವರು ಅವರ ಆಸ್ತಿಯ ಹಕ್ಕು ವರ್ಗಾವಣೆ ಮಾಡಿಕೊಡಬಹುದು.

ಒಂದು ವೇಳೆ ಆ ವ್ಯಕ್ತಿ ಪಿತ್ರಾರ್ಜಿತವಾಗಿ ಬಂದ ಆಸ್ತಿ ಹೊಂದಿದ್ದರೆ ಆತ ಮದುವೆ ಆದ ನಂತರವೇ ಮಡದಿಗೆ ಮತ್ತು ಆತನ ಮಕ್ಕಳು ಕೂಡ ಹುಟ್ಟಿನಿಂದಲೇ ಆಸ್ತಿ ಮೇಲೆ ಹಕ್ಕು ಹೊಂದಿರುತ್ತಾರೆ. ಪಿತ್ರಾಜಿತವಾಗಿ ಬಂದ ಜಮೀನು ಹೊಂದಿದ್ದರೆ ಆ ವ್ಯಕ್ತಿಯ ಮರಣದ ನಂತರ ಆತನ ಎಲ್ಲಾ ಮಕ್ಕಳಿಗೂ ಕೂಡ ಸಮಭಾಗವಾಗಿ ಅದು ವಿಭಜನೆ ಆಗುತ್ತದೆ. ಎಲ್ಲ ಮಕ್ಕಳಿಗೂ ತಲ ಒಂದು ಎಕರೆ ಆಸ್ತಿ ಸಿಗುತ್ತದೆ.

ಒಂದು ವೇಳೆ ಆರು ಎಕರೆ ಆಸ್ತಿಯಲ್ಲಿ ಸ್ವಲ್ಪ ಭಾಗ ಅವರ ಸ್ವಯಚಿತ ಆಸ್ತಿ ಆಗಿದ್ದರೆ ಅವರು ಇದ್ದಾಗ ದಾನ ಪತ್ರದ ಮೂಲಕ ಅಥವಾ ಕ್ರಯ ಪತ್ರದ, ಗಿಫ್ಟ್ ಡೀಡ್ ಮೂಲಕ ಅವರಿಚ್ಛೆಯ ಯಾರಿಗಾದರೂ ಅದನ್ನು ಮಾಡಿಕೊಡಬಹುದು. ಉಳಿದ ಆಸ್ತಿ ಎಲ್ಲಾ ಮಕ್ಕಳಿಗೂ ಸಮಾನವಾದ ಅಧಿಕಾರ ಬರುತ್ತಿದೆ. ಈ ವಿಷಯದ ಕುರಿತು ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಅಥವಾ ನಿಮ್ಮ ಪರಿಚಯದ ವಕೀಲರ ಬಳಿ ಈ ಕುರಿತು ಇರುವ ಕಾನೂನಿನ ಬಗ್ಗೆ ಕೇಳಿ ತಿಳಿಯಿರಿ.

ಎಲ್ಲಾ ಮಹಿಳೆಯರಿಗೂ ಬಂಪರ್ ಸುದ್ದಿ. ಇನ್ಮುಂದೆ ಪ್ರತಿ ತಿಂಗಳು ಸಿಗಲಿದೆ 3000 ಕೂಡಲೇ “ಸಖಿ ಭಾಗ್ಯ” ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಪಡೆಯಿರಿ

ಜೀವನೋಪಾಯ ವೃದ್ಧಿ ಮಾಡುವ ಜತೆಜತೆಗೆ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಗೌರಿ&ಗಣೇಶ ಹಬ್ಬದ ಬಾಗಿನ ನೀಡಲು ಸರ್ಕಾರ ಮುಂದಾಗಿದೆ. ಸಖಿ ಪರಿಕಲ್ಪನೆಯಲ್ಲಿ ವಿವಿಧ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸುವ ಹೊಸ ಯೋಜನೆ ಇದಾಗಿದೆ. ಕೃಷಿ ಸಖಿ, ವನ ಸಖಿ, ಹೈನುಗಾರಿಕೆ ಸಖಿ, ಬ್ಯಾಂಕ್​ ವಹಿವಾಟು ಸಖಿ, ಡಿಜಿಟಲ್​ ಪಾವತಿ ಸಖಿ ರೂಪದಲ್ಲಿ ಮಹಿಳೆಯರಿಗೆ ಉದ್ಯೋಗ ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ.

ಆರೋಗ್ಯ ಇಲಾಖೆಯ ಮಾಹಿತಿಗಳನ್ನು ನೀಡಲು ಆಶಾ ಕಾರ್ಯಕರ್ತೆಯರಿದ್ದಾರೆ. ಆದರೆ ಕೃಷಿ, ಹೈನುಗಾರಿಕೆ, ವನ, ಹೀಗೆ ವಿವಿಧ ವಿಷಯಗಳಲ್ಲಿ ಮಾಹಿತಿ ನೀಡಲು ತಳಮಟ್ಟದಲ್ಲಿ ಸಿಬ್ಬಂದಿಯಿಲ್ಲ. ಬಹುತೇಕ ಇಲಾಖೆಗಳು, ಬ್ಯಾಂಕ್​ಗಳು ಹೋಬಳಿ ಮಟ್ಟಕ್ಕೆ ಸ್ಥಗಿತವಾಗುವ ಮೂಲಕ ಗ್ರಾಮೀಣ ಜನರಿಂದ ದೂರ ಸರಿದಿವೆ. ಆದ್ದರಿಂದಲೇ, ಆ ಕೆಲಸವನ್ನು ಸಖಿಯರ ಮೂಲಕ ಮಾಡಲಾಗುತ್ತಿದೆ.

ಮಹಿಳಾ ಸ್ವಸಹಾಯ ಗುಂಪುಗಳಲ್ಲಿರುವ ಅಂದಾಜು 28 ಲಕ್ಷ ಜನರ ಜೀವನಮಟ್ಟ ಸುಧಾರಣೆ ಮಾಡುವ ಮಹತ್ವದ ಉದ್ದೇಶವನ್ನು ಸರ್ಕಾರ ಹೊಂದಿದೆ. ಅದರ ಭಾಗವಾಗಿಯೇ ಗ್ರಾಮೀಣ ಜೀವನೋಪಾಯ ಅಭಿಯಾನಕ್ಕೆ ಹತ್ತು ವರ್ಷಗಳಾದ ಹಿನ್ನೆಲೆಯಲ್ಲಿ ಸರ್ಕಾರ ಈ ವರ್ಷವನ್ನು ಜೀವನೋಪಾಯ ವರ್ಷವೆಂದು ಘೋಷಣೆ ಮಾಡಿ ಹಲವು ಯೋಜನೆಗಳನ್ನು ಜಾರಿ ಮಾಡುತ್ತಿದೆ.

ಸರ್ಕಾರದ ವಿವಿಧ ಇಲಾಖೆಗಳು, ಕೃಷಿ, ತೋಟಗಾರಿಕೆ, ಪಶು ಸಂಗೋಪನಾ ವಿಶ್ವವಿದ್ಯಾಲಯಗಳನ್ನು ಒಗ್ಗೂಡಿಸುವ ಮೂಲಕ ವಿವಿಧ ಯೋಜನೆಗಳನ್ನು ಗ್ರಾಮೀಣ ಮಹಿಳೆಯರ ಜೀವನೋಪಾಯ ವೃದ್ಧಿಗಾಗಿ ರೂಪಿಸಲಾಗುತ್ತಿದೆ. ಇದಕ್ಕಾಗಿ ವರ್ಷಕ್ಕೆ 1,000 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಅದರಲ್ಲಿ ಮಹಿಳಾ ಸಾಮರ್ಥ್ಯ ವೃದ್ದಿಗೆ 500 ಕೋಟಿ ರೂ.ಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಗೌರವ ಧನ ಎಷ್ಟು?
ಪ್ರತಿ ಸಖಿಯರಿಗೆ ಆರಂಭದ ಮೂರು ವರ್ಷ ಪ್ರತಿ ತಿಂಗಳು 3,000 ರೂ. ಗಳ ಗೌರವ ಧನ ನೀಡಲಾಗುತ್ತದೆ. ಮೂರು ವರ್ಷದ ನಂತರ ಅವರು ನೀಡುವ ಸೇವೆಗೆ ಶುಲ್ಕ ಪಡೆಯಬೇಕು. ತಿಂಗಳಿಗೆ ಕನಿಷ್ಠ 5 ಸಾವಿರ ರೂ.ಗಳನ್ನು ಗಳಿಸುವಂತಾಗಬೇಕು ಎಂಬುದು ಗ್ರಾಮೀಣ ಜೀವನೋಪಾಯ ಅಭಿಯಾನದ ಉದ್ದೇಶ. ಅದೇ ರೀತಿಯಲ್ಲಿಯೇ ಯೋಜನೆ ರೂಪುಗೊಂಡಿದೆ. ತರಬೇತಿಗಾಗಿ ಒಬ್ಬರಿಗೆ ಒಂದು ದಿನಕ್ಕೆ 1020 ರೂ.ಗಳನ್ನು ವೆಚ್ಚ ಮಾಡಲಾಗುತ್ತದೆ.

ತರಬೇತಿಯ ಸ್ವರೂಪ
ಕೃಷಿ ಸಖಿಯರಿಗೆ ಕೃಷಿ ವಿವಿಗಳ ಮೂಲಕ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತದೆ. ಪಶು ಸಖಿಗಳಿಗೆ ಇಲಾಖೆ 9 ತರಬೇತಿ ಕೇಂದ್ರಗಳು ಸೇರಿದಂತೆ ವಿವಿ ಮೂಲಕವೂ ತರಬೇತಿ ನೀಡಲಾಗುತ್ತದೆ. ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ (ಆರ್​ಸೆಟಿ) ಮೂಲಕ ಬಿ.ಸಿ. ಸಖಿ ಮತ್ತು ಡಿಜಿ ಪೇ ಸಖಿಯರಿಗೆ ಹಾಗೂ ಅರಣ್ಯ ಇಲಾಖೆಯ ಮೂಲಕ ವನ ಸಖಿಯರಿಗೆ ತರಬೇತಿ ನೀಡಲಾಗುತ್ತದೆ.

ಯಾರು, ಯಾವ ಕೆಲಸ? ಕೃಷಿ ಸಖಿ
ಕೃಷಿ, ರೇಷ್ಮೆ, ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಗ್ರಾಮೀಣ ಜನರಿಗೆ ಮಾಹಿತಿ ನೀಡುವುದು. ಪಂಚಾಯಿತಿ ಮಟ್ಟದಲ್ಲಿ ಈ ಇಲಾಖೆಗಳಿಲ್ಲ. ಹಳ್ಳಿಗಳಿಗೆ ಅಧಿಕಾರಿಗಳು ಹೋಗುವುದಿಲ್ಲ. ಇವರಿಗೆ 60 ದಿನಗಳ ತರಬೇತಿ ನೀಡಲಾಗುತ್ತದೆ. ತಂತ್ರಜ್ಞಾನದ ಬಗ್ಗೆ, ಕೃಷಿ ವಿಮೆ ಮಾಡಿಸುವ ಬಗ್ಗೆ, ಬೆಳೆ ಹಾನಿ ಪರಿಹಾರ ಕೊಡಿಸುವ ಬಗ್ಗೆ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಬಗ್ಗೆ, ಮಾರುಕಟ್ಟೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತಾರೆ.

ಪಶು ಸಖಿ
ಇವರಿಗೆ 42 ದಿನಗಳ ತರಬೇತಿ ನೀಡಲಾಗುತ್ತದೆ. ಜಾನುವಾರುಗಳ ಬಗ್ಗೆ ಸಮಗ್ರ ಮಾಹಿತಿ, ಹೈನುಗಾರಿಕೆ, ಕೋಳಿ ಸಾಕಣೆ, ಹೀಗೆ ವಿವಿಧ ಮಾಹಿತಿ ನೀಡುವ ಕೆಲಸ ಇವರದ್ದು.

ಏನಿದು ಯೋಜನೆ?
ಮಹಿಳಾ ಸ್ವಸಹಾಯ ಗುಂಪುಗಳಲ್ಲಿ ತಯಾರಿಸುವ ಉತ್ಪನ್ನಗಳ ಮೌಲ್ಯವರ್ಧನೆ, ಮಾರುಕಟ್ಟೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವುದಕ್ಕೆ ತರಬೇತಿ ಪಡೆದ ಸಿಬ್ಬಂದಿ “ಸಖಿ’ಯಾಗಿರುತ್ತಾರೆ. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಇವರನ್ನು ನೇಮಕ ಮಾಡಲಾಗುತ್ತದೆ. ಸಮುದಾಯ ಸಂಪನ್ಮೂಲ ವ್ಯಕ್ತಿಗಳ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ವನ ಸಖಿ
ಮರ & ಮುಟ್ಟು ಹೊರತಾದ ಅರಣ್ಯ ಉತ್ಪನ್ನಗಳನ್ನು ಸಂಗ್ರಹ ಮಾಡು ವುದು, ಮೌಲ್ಯವರ್ಧನೆ ಮಾಡುವುದು, ಮಾರಾಟ ಮಾಡುವುದು, ವನಗಳನ್ನು ಅಭಿವೃದ್ಧಿ ಪಡಿಸುವ ವಿಚಾರದಲ್ಲಿ ಮೇಲ್ವಿ ಚಾರಣೆ ಮಾಡುವುದು ಇವರ ಜವಾಬ್ದಾರಿ.

ಬಿ.ಸಿ. ಸಖಿ
ಬ್ಯಾಂಕಿಂಗ್​ ಕರೆಸ್ಪಾಂಡೆನ್ಸ್​ (ಬಿ.ಸಿ) ಬಗ್ಗೆ ಮಾಹಿತಿ ನೀಡುವುದು ಇವರ ಉದ್ದೇಶ. ಸಾಲ, ವಿಮೆ ಮಾಡಿಸುವುದು ಮೊದಲಾದ ಮಾಹಿತಿಗಳನ್ನು ನೀಡಲಿದ್ದಾರೆ.
ಡಿಜಿ ಪೇ ಸಖಿ: ಬ್ಯಾಂಕ್​ಗಳು ನೀಡುವ ಎಲ್ಲ ರೀತಿಯ ಸೇವೆಗಳು, ಪಿಂಚಣಿ ವಿತರಣೆ ಸೇರಿದಂತೆ ವಿವಿಧ ರೀತಿಯ ಪೇಮೆಂಟ್​ ಆಧಾರಿತ ಸೇವೆಯನ್ನು ನೀಡಲಿದ್ದಾರೆ.

ಅನುಕೂಲಗಳೇನು?
* ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ
* ಆರ್ಥಿಕ ಚಟುವಟಿಕೆಗಳು ಹೆಚ್ಚು
* ಗ್ರಾಮೀಣರ ಜೀವನಮಟ್ಟ ಸುಧಾರಣೆ
* ಗ್ರಾಮೀಣ ಜನರಿಗೆ ಸಕಾಲಕ್ಕೆ ಮಾಹಿತಿ
* ಮಹಿಳೆಯರ ಸಾಮರ್ಥ್ಯವೂ ವೃದ್ಧಿ

ಲೇಬರ್ ಕಾರ್ಡ್ ಸಿಗಲಿದೆ ಉಚಿತ ಮನೆ..! ಅರ್ಜಿ ಸಲ್ಲಿಸುವ ವಿಧಾನ ಹೇಗೆ ನೋಡಿ

 

ಕೇಂದ್ರ ಸರ್ಕಾರವು ಕಾರ್ಮಿಕರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಹೊಸದೊಂದು ಯೋಜನೆಯ ಅಡಿಯಲ್ಲಿ ಕಾರ್ಮಿಕರಿಗೆ ಅಂದರೆ ಲೇಬರ್ ಕಾರ್ಡ್ ಹೊಂದಿದ ಕಾರ್ಮಿಕರಿಗಾಗಿ ಉಚಿತ ಮನೆಯನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರದ ಶ್ರಮಿಕ್ ನಿವಾಸ್ ಎಂಬ ಯೋಜನೆಯ ಅಡಿಯಲ್ಲಿ ಉಚಿತ ಮನೆ ದೊರಕಲಿದೆ.

ನರೇಂದ್ರ ಮೋದಿ ಸರ್ಕಾರದ ಈ ಹೊಸ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಕುರಿತಾದ ಮಾಹಿತಿಯನ್ನು ಸಂಪೂರ್ಣವಾಗಿ ಈ ಬರಹವನ್ನು ಓದುವುದರ ಮುಖಾಂತರ ಪಡೆದುಕೊಳ್ಳಿ. ಕಾರ್ಮಿಕರ ಜೀವನ ಹೇಗಿರುತ್ತದೆ ಎಂಬುದನ್ನು ಹೊಸದಾಗಿ ವಿವರಿಸುವ ಅಗತ್ಯತೆ ಇಲ್ಲ. ಎಲ್ಲರಿಗೂ ತಿಳಿದ ವಿಷಯ ಇದಾಗಿದೆ. ಕೆಲಸವನ್ನು ಅರಸಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಆಗಾಗ ಹೋಗುತ್ತಲೇ ಇರಬೇಕಾಗುತ್ತದೆ.

ಒಂದೆಡೆ ಗಟ್ಟಿ ಮೇಲೆ ನಿಂತುಕೊಳ್ಳಲು ಕಷ್ಟ ಸಾಧ್ಯ. ಚಿಕ್ಕ ಪುಟ್ಟ ಮಕ್ಕಳು ಮಡದಿಯನ್ನುತ ಸಂಸಾರ ಸಮೇತವಾಗಿ ವಲಸೆ ಹೋದಾಗ ಸರಿಯಾದ ಸ್ಥಳದಲ್ಲಿ ಆಶ್ರಯ ಹುಡುಕುವುದು ಕಾರ್ಮಿಕರಿಗೆ ದೊಡ್ಡ ಸವಾಲಾಗಿ ಉಳಿದಿತ್ತು. ಆದರೆ ಇವರ ಆಶ್ರಯದ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಶ್ರಮಿಕ್ ನಿವಾಸ್ ಎಂಬ ಯೋಜನೆಯ ಅಡಿಯಲ್ಲಿ ವಲಸೆ ಕಾರ್ಮಿಕರ ವಸತಿಗಾಗಿ ಅನುಕೂಲ ಮಾಡಿಕೊಟ್ಟಿದೆ.

ವಾಸಿಸಲು ಸ್ಥಳವನ್ನು ಹುಡುಕುತ್ತಾ ಪರದಾಡಬೇಕಾದ ಪರಿಸ್ಥಿತಿಯು ಬಂದೊದಗದಂತೆ ತಡೆಯಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಶ್ರಮಿಕ್ ನಿವಾಸ್ ಯೋಜನೆಯ ಉದಾಹರಣೆ ಎಂಬಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ವಸತಿಗಾಗಿ ಹೊಸ ಕಟ್ಟಡವನ್ನು ನಿರ್ಮಿಸಿದ್ದಾರೆ. ಉದ್ಘಾಟನೆಯು ನಡೆದು, ಉಳಿಯಲು ಅವಶ್ಯಕವಾದ ವ್ಯವಸ್ಥೆಯನ್ನು ಹೊಂದಿದ್ದು, ಕಾರ್ಮಿಕರಿಗಾಗಿ ಈ ಕಟ್ಟಡವು ಸಿದ್ಧವಾಗಿ ನಿಂತಿದೆ.

ಈಗಾಗಲೇ ಹಲವಾರು ಕಾರ್ಮಿಕರು ಕೇಂದ್ರ ಸರ್ಕಾರದ ಯೋಜನೆಗಳಿಂದ ಉಪಯೋಗವನ್ನು ಪಡೆಯುತ್ತಿದ್ದಾರೆ. ಶ್ರಮಿಕ್ ನಿವಾಸ್ ಯೋಜನೆಯ ಅಡಿಯಲ್ಲಿ ಉಚಿತ ಮನೆಯ ಸೌಲಭ್ಯವನ್ನು ಪಡೆಯಲು ನಿಗದಿಪಡಿಸಿದ ಅತಿ ಮುಖ್ಯ ಅಂಶವೆಂದರೆ ಕಾರ್ಮಿಕರು “ಲೇಬರ್ ಕಾರ್ಡ”ನ್ನು ಹೊಂದಿರಬೇಕು ಎಂಬುದು. ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಗುರುತಿನ ಚೀಟಿಯನ್ನು ಇವರಿಗೆ ಹೊಂದಿರದೆ ಇರುವ ಕಾರ್ಮಿಕರು, ಈ ಕೂಡಲೇ ಸಮೀಪದ ಸೇವಾ ಸಿಂಧು ಕಚೇರಿಗೆ ಭೇಟಿ ನೀಡಿ ಕಾರ್ಡನ್ನು ಮಾಡಿಸಿಕೊಳ್ಳುವುದು ಸೂಕ್ತ.

ಲೇಬರ್ ಕಾರ್ಡ್ ಹೊಂದಿದ್ದರೆ ಸರ್ಕಾರದಿಂದ ಅಥವಾ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ದೊರಕುವ ಅನೇಕ ಸೌಲಭ್ಯಗಳನ್ನು ಕಾರ್ಮಿಕರು ಪಡೆಯಬಹುದು. ಈ ರೀತಿಯಾದ ಯೋಜನೆಯಿಂದ ಕಾರ್ಮಿಕರು ಮುಂದಿನ ದಿನಗಳಲ್ಲಿ ತಮ್ಮ ಊರನ್ನು ಅಥವಾ ನೆಲೆ ನಿಂತ ಪ್ರದೇಶವನ್ನು ಬಿಟ್ಟು ಬೇರೆಡೆ ಕೆಲಸಕ್ಕಾಗಿ ಹೋದಾಗ ವಾಸಿಸಲು ಪರದಾಡುವ ಪರಿಸ್ಥಿತಿಯು ಬರುವುದಿಲ್ಲ.

ಚಿಕ್ಕಬಳ್ಳಾಪುರದಲ್ಲಿ ವಲಸೆ ಕಾರ್ಮಿಕರಿಗಂದೆ ಸ್ಥಾಪಿಸಲ್ಪಟ್ಟ ಕಟ್ಟಡದಂತೆಯೇ ದೇಶದ ಎಲ್ಲಾ ಭಾಗಗಳಲ್ಲಿಯೂ ಈ ರೀತಿಯ ಕಟ್ಟಡಗಳನ್ನು ನಿರ್ಮಿಸುವ ಯೋಜನೆಯನ್ನು ಸರ್ಕಾರವು ಹೊಂದಿದೆ. ಕಾರ್ಮಿಕರು ವಲಸೆ ಹೋಗುವಾಗ ಮರೆಯದೆ ಲೇಬರ್ ಕಾರ್ಡನ್ನು ಜೊತೆಯಲ್ಲಿಯೇ ಒಯ್ದಿದಿರಬೇಕು. ಈ ರೀತಿಯಾಗಿ ಸರ್ಕಾರವು ಕಾರ್ಮಿಕರ ಆಶ್ರಯಕ್ಕಾಗಿ ಆಹಾರ ನೀರು ಸೇರಿದಂತೆ ದಿನನಿತ್ಯದ ಕಾರ್ಯಕ್ಕೆ ಬೇಕಾದ ಅಗತ್ಯ ವಸ್ತುಗಳ ಪೂರೈಕೆಗಾಗಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಾರ್ಮಿಕರಿಗೆ ನೀಡುವ ಸಲುವಾಗಿ ಹೊಸ ಹೊಸ ಯೋಜನೆಯನ್ನು ಜಾರಿಗೆ ತರುತ್ತಲೇ ಇರುತ್ತದೆ.

ಶ್ರಮಿಕ್ ನಿವಾಸ್ ಯೋಜನೆಯ ಅಡಿಯಲ್ಲಿ ಉಚಿತ ಮನೆಯನ್ನು ಪಡೆಯುವ ಕುರಿತಾದ ಅಧಿಕೃತ ಮಾಹಿತಿಯು ಬೇಕಾಗಿದ್ದಲ್ಲಿ ಅಥವಾ ನೀವು ಕಾರ್ಮಿಕರಾಗಿದ್ದಲ್ಲಿ, ‘155214’ ಈ ನಂಬರಿಗೆ ಕರೆ ಮಾಡಿ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಬಹುದು. ಈ ಮೇಲಿನ ಉಪಯುಕ್ತ ಮಾಹಿತಿಯನ್ನು ನಿಮ್ಮ ಆಪ್ತರೊಂದಿಗೆ ಅಥವಾ ನಿಮ್ಮ ಪರಿಚಿತ ಕಾರ್ಮಿಕರೊಂದಿಗೆ ಹಂಚಿಕೊಳ್ಳಿ.

ಸಾರ್ವಜನಿಕರಿಗೆ ಗುಡ್ ನ್ಯೂಸ್ ಉಚಿತ ದ್ವಿಚಕ್ರ ವಾಹನಗಳ ವಿತರಣೆಗಾಗಿ ಅರ್ಜಿ ಆಹ್ವಾನ..! ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

 

ಸರ್ಕಾರದಿಂದ ಬಡ ಕುಟುಂಬಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳು ಜಾರಿಗೆ ಬರುತ್ತಲೇ ಇರುತ್ತವೆ. ತಮ್ಮದೇ ಸ್ವಂತ ದ್ವಿಚಕ್ರ ವಾಹನವನ್ನು ಹೊಂದುವುದು ಹಲವಾರು ಜನರ ಕನಸು. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದವರಿಗೆ ಬೈಕ್ ಅನ್ನು ಖರೀದಿಸುವುದು ಕನಸಾಗಿ ಉಳಿದು ಬಿಡುತ್ತದೆ. ಇಂತಹ ಕನಸನ್ನು ನನಸು ಮಾಡಲು, ಸಮಾಜ ಕಲ್ಯಾಣ ಇಲಾಖೆಯು ಕರ್ನಾಟಕದ ಜನರ ಹಿತಾಸಕ್ತಿಯನ್ನು ಆಧರಿಸಿ ಉಚಿತವಾಗಿ ದ್ವಿಚಕ್ರ ವಾಹನವನ್ನು ವಿತರಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಸರ್ಕಾರದ ಈ ಹೊಸ ಯೋಜನೆಯಿಂದ ಪ್ರಯೋಜನವನ್ನು ಪಡೆದುಕೊಳ್ಳಲು ನಿಗದಿಪಡಿಸಿದ ಅರ್ಹತೆ ಹಾಗೂ ಅರ್ಜಿ ಸಲ್ಲಿಸಲು ಬೇಕಾಗಿರುವ ಎಲ್ಲಾ ದಾಖಲಾತಿಗಳು ಕುರಿತಾದ ಮಾಹಿತಿಯನ್ನು ಈ ಬರಹದಲ್ಲಿ ನೀಡುತ್ತಿದ್ದೇವೆ. ಆರ್ಥಿಕವಾಗಿ ಹಿಂದುಳಿದ, ಇಂದಿನವರೆಗೂ ಒಮ್ಮೆಯೂ ಸ್ವಂತ ವಾಹನವನ್ನು ಹೊಂದಿರುವ ಕುಟುಂಬದ ಜನರಲ್ಲಿ ತಮ್ಮ ಮನೆಯಲ್ಲಿಯೂ ತಮ್ಮದೇ ಸ್ವಂತ ದ್ವಿಚಕ್ರ ವಾಹನ ಇರಬೇಕು ಎಂದು ಆಸೆ ಇರುತ್ತದೆ.

ಸ್ವಂತ ವಾಹನದಲ್ಲಿ ಓಡಾಡುವುದು ಕೇವಲ ಶೋಕಿಯ ವಿಚಾರವಲ್ಲ. ಉದ್ಯೋಗ ಅಥವಾ ಕೆಲಸ ಕಾರ್ಯಗಳಲ್ಲಿ ಸಮಯವನ್ನು ಉಳಿಸುವ, ಒಂದೆಡೆಯಿಂದ ಇನ್ನೊಂದಡೆ ಬಾಡಿಗೆ ನೀಡದೆ ಸಣ್ಣ ಪುಟ್ಟ ವಸ್ತುಗಳನ್ನು ಸಾಗಿಸುವ ಅನಿವಾರ್ಯತೆಯ ಸಾರಥಿಯೂ ಹೌದು. ಆದರೆ ಏರಿದ ಬೆಲೆಯಿಂದಾಗಿ ಬೈಕ್ ತಮಗೆ ಕೈಗೆಟುಕುವುದಿಲ್ಲ ಎಂದು ಆಸೆಯನ್ನು ಮನಸ್ಸಿನಲ್ಲಿ ಹುದುಗಿಸಿಕೊಂಡು ಸುಮ್ಮನಿರುತ್ತಾರೆ. ತಮ್ಮ ಬಳಿಯೂ ಬೈಕ್ ಇದ್ದರೆ ಚೆನ್ನಾಗಿರುತ್ತಿತ್ತು ಎಂದು ಅಂದುಕೊಳ್ಳುತ್ತಾ ಜೀವನದ ಕಾಲವನ್ನು ತಳ್ಳುತ್ತಿರುತ್ತಾರೆ.

ಹೀಗೆ ವಾಹನವನ್ನು ಪಡೆಯಲು ಆಸಕ್ತ ಹಾಗೂ ಅರ್ಹ ಜನರಿಗಾಗಿ ಇಲ್ಲಿದೆ ಓದಲೇ ಬೇಕಾದ ಮಾಹಿತಿ. ಸರ್ಕಾರವು ದ್ವಿಚಕ್ರ ವಾಹನವನ್ನು ಮುಂಬರುವ ದಿನಗಳಲ್ಲಿ ಎಲ್ಲಾ ವರ್ಗದ ಜನರಿಗೂ ವಿತರಣೆ ಮಾಡಲಿದೆ. ದ್ವಿಚಕ್ರ ವಾಹನವನ್ನು ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಒಂದು ಸುದ್ದಿ. ಇತ್ತೀಚಿಗಷ್ಟೇ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಹಮ್ಮಿಕೊಂಡ ಕಾರ್ಯಕ್ರಮ ಒಂದರಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದ ಅನೇಕ ಅಭ್ಯರ್ಥಿಗಳಿಗೆ ದ್ವಿಚಕ್ರ ವಾಹನವನ್ನು ವಿತರಣೆ ಮಾಡಲಾಗಿದೆ.

ಮಾರ್ಚ್ 9ನೇ ತಾರೀಕು ಹಮ್ಮಿಕೊಳ್ಳಲಾಗಿದ್ದ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮದಲ್ಲಿ ಗಂಗಾ ಕಲ್ಯಾಣ ಯೋಜನೆಯ ಕಾರ್ಯಕ್ರಮವನ್ನು e-RUPI ಮುಖಾಂತರ ಅನುಷ್ಠಾನಕ್ಕೆ ತಂದು ಇದರ ಜೊತೆಯಲ್ಲಿಯೇ ಅನೇಕ ನಿಯಮಗಳ ಅನ್ವಯವಾಗಿ ಸವಲತ್ತುಗಳನ್ನು ವಿತರಿಸಲಾಗಿದೆ.

ಸರ್ಕಾರದಿಂದ ದ್ವಿಚಕ್ರ ವಾಹನವನ್ನು ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆ :
ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ತಾಂಡ ಅಭಿವೃದ್ಧಿ ನಿಗಮಗಳು ಸೇರಿ ಫಲಾನುಭವಿಗಳಿಗೆ ಡಾ. ಬಾಬು ಗಜಜೀವನ್ ರಾಮ್ ಸ್ವ ಉದ್ಯೋಗ ಯೋಜನೆಯ ಅಡಿಯಲ್ಲಿ 28,000 ದ್ವಿಚಕ್ರ ವಾಹನಗಳನ್ನು ವಿತರಿಸುವ ಗುರಿಯನ್ನು ಹೊಂದಿದೆ. ಆದ್ದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮಾತ್ರ ಈ ಯೋಜನೆಯಿಂದ ಲಾಭವನ್ನು ಪಡೆಯಲು ಅರ್ಹರಾಗಿರುತ್ತಾರೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ದ್ವಿಚಕ್ರವಾಹನವನ್ನು ತಮ್ಮದಾಗಿಸಿಕೊಳ್ಳುವ ಕನಸನ್ನು ನನಸು ಮಾಡಿಕೊಳ್ಳಬಹುದು.

ಅರ್ಜಿ ಸಲ್ಲಿಸಲು ಹೊಂದಿರಬೇಕಾದ ದಾಖಲಾತಿಗಳು :
* ಪಾಸ್ಪೋರ್ಟ್ ಅಳತೆಯ ಭಾವಚಿತ್ರ
* ಜಾತಿ ಪ್ರಮಾಣ ಪತ್ರದ ದೃಢೀಕರಣ ಪ್ರತಿ
* ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ನ ದೃಢೀಕರಣ ಪ್ರತಿ
* ಆಧಾರ್ ಕಾರ್ಡ್ ನ ದೃಢೀಕರಣ ಪ್ರತಿ
* ಚಾಲನ ಪರವಾನಗಿ ಮತ್ತು ಬ್ಯಾಡ್ಜ್ ಪ್ರತಿ

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಕೂಡಲೇ ಸಂಭಂದಪಟ್ಟ ಕಚೇರಿಗೆ ಭೇಟಿ ನೀಡಿ, ಸಂಕ್ಷಿಪ್ತ ಮಾಹಿತಿಯನ್ನು ಪಡೆದುಕೊಂಡು ಈ ಮೇಲೆ ತಿಳಿಸಿದಂತೆ ಎಲ್ಲಾ ದಾಖಲಾತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.

ಬಿಜಿಲಿ ಬಿಲ್ ಮಾಫಿ ಯೋಜನೆ: ವಿದ್ಯುತ್ ಬಿಲ್ ಮನ್ನ ಮಾಡುವುದರ ಕುರಿತು ಸರ್ಕಾರದಿಂದ ಮಹತ್ವದ ಘೋಷಣೆ.

 

ಏಪ್ರಿಲ್ ಒಂದರಿಂದ ಜಾರಿಯಾಗಲಿರುವ ಹೊಸ ನಿಯಮದ ಪ್ರಕಾರ, ವಿದ್ಯುತ್ ಬಿಲ್ಲನ್ನು ಕಟ್ಟುವ ಅಗತ್ಯತೆ ಇರುವುದಿಲ್ಲ. ಬಿಜಿಲಿ ಬಿಲ್ ಮಾಫಿ ಯೋಜನೆಯ ಅಡಿಯಲ್ಲಿ, ಬಾಕಿ ಇರುವ ವಿದ್ಯುತ್ ಬಿಲ್ ಅನ್ನು ಠೇವಣಿ ಮಾಡಿದರೆ ಹೊಸ ನಿಯಮದ ಪ್ರಯೋಜನವನ್ನು ಪಡೆಯಬಹುದು. ಏನಿದು ಈ ಹೊಸ ಯೋಜನೆ? ಇದರಿಂದ ಯಾರ್ಯಾರಿಗೆಲ್ಲ ಲಾಭ ದೊರಕಲಿದೆ? ಎಂದಿನಿಂದ ಯಾವ ರಾಜ್ಯದಲ್ಲಿ ಜಾರಿಯಾಗಲಿದೆ? 2023ರಲ್ಲಿಯೇ ಈ ಯೋಜನೆಯಿಂದ ಪ್ರಯೋಜನವನ್ನು ಪಡೆದುಕೊಳ್ಳಲು ಮಾಡಬೇಕಾದ ಅಗತ್ಯ ಕ್ರಮಗಳೇನು? ಎಂಬುದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ದುಬಾರಿ ದುನಿಯಾದಲ್ಲಿ ಬಡವರಿಂದ ಹಿಡಿದು ಮಧ್ಯಮವರ್ಗದ ಜನರವರೆಗೂ ಅಗತ್ಯತೆಗಿಂತ ಕೊಂಚವೇ ವಿದ್ಯುತ್ ಬಳಕೆ ಜಾಸ್ತಿ ಆದರೂ ಮನೆಯಲ್ಲಿ ಗಲಾಟೆ ಪ್ರಾರಂಭವಾಗುತ್ತದೆ. ಯಾಕೆಂದರೆ ದಿನನಿತ್ಯದ ಚಟುವಟಿಕೆಯಲ್ಲಿ ಫ್ರಿಡ್ಜ್, ವಾಷಿಂಗ್ ಮಷೀನ್, ಇಂಡಕ್ಷನ್, ಮಿಕ್ಸರ್, ಟಿವಿ, ಮೊಬೈಲ್ ಎನ್ನುತ್ತಾ ಎಲ್ಲಾ ಹೊಸ ಯಂತ್ರೋಪಕರಣಗಳ ಬಳಕೆಯು ವಿದ್ಯುತ್ ಶಕ್ತಿಯ ಮೇಲೆ ಅವಲಂಬಿತವಾಗಿದೆ.

ಬಿಸಿಲಿನ ಬೇಗೆಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದರಿಂದ ಬೇಸಿಗೆಕಾಲದಲ್ಲಿ ದಿನದ 24 ಗಂಟೆಯೂ ಫ್ಯಾನ್ ಬಳಕೆಯಾಗುತ್ತಿದೆ ಎಂದರೆ ತಪ್ಪಾಗಲಾರದು. ಗ್ರಾಮೀಣ ಭಾಗದಲ್ಲಿ ವ್ಯವಸಾಯ ಭೂಮಿಗಾಗಿ ನೀರನ್ನು ಒದಗಿಸಲು, ಕೀಟನಾಶಕಗಳನ್ನು ಸಿಂಪಡಿಸಲು, ಧಾನ್ಯಗಳನ್ನು ತೂರಲು ಹೀಗೆ ಕೃಷಿ ಉಪಕರಣಗಳ ಬಳಕೆಯಲ್ಲಿಯೂ ವಿದ್ಯುತ್ ಬೇಕಾಗುತ್ತದೆ. ಇನ್ನು ಸಣ್ಣ ಪುಟ್ಟ ವಸ್ತುಗಳನ್ನು ಮನೆಯಲ್ಲಿ ತಯಾರಿಸುವವರಿಗಂತೂ ವಿದ್ಯುತ್ ಬೇಕೇ ಬೇಕು.

ಇದರಿಂದಾಗಿ ತಿಂಗಳ ಕೊನೆಯಲ್ಲಿ ಅಧಿಕ ವಿದ್ಯುತ್ ಬಿಲ್ ಬರುತ್ತದೆ ಎಂಬ ಆತಂಕದಿಂದ ಹಿತಮಿತವಾಗಿ ವಿದ್ಯುತ್ತನ್ನು ಬಳಸಲಾಗುತ್ತಿದೆ. ಜಾರಿಯಾಗಲಿರುವ ಹೊಸ ನಿಯಮದ ಹೇಳಿಕೆಗಳನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡ ನಂತರ ಅತಿ ಕಟ್ಟುನಿಟ್ಟಾದ ವಿದ್ಯುತ್ ಬಳಕೆಯಿಂದ ಸ್ವಲ್ಪ ಸಡಿಲಗೊಳ್ಳಬಹುದು. ಇನ್ನು ಮುಂದೆ ಕರೆಂಟ್ ಬಿಲ್ ಜಾಸ್ತಿ ಬರುತ್ತಿದೆ ಎಂದು ತಲೆ ಮೇಲೆ ಕೈ ಇಟ್ಟು ಕುಳಿತುಕೊಳ್ಳುವ ಸನ್ನಿವೇಶವು ತಪ್ಪಲಿದೆ.

ಯಾಕೆಂದರೆ ಸರ್ಕಾರವು ಮಹತ್ವದ ಘೋಷಣೆಯನ್ನು ಮಾಡಿದ್ದು, ಈ ನಿಯಮದ ಅನ್ವಯ ಅನೇಕ ಜನರು ವಿದ್ಯುತ್ ಬಿಲ್ಲನ್ನು ಕಟ್ಟಬೇಕಾದ ಚಿಂತೆ ಬಿಡಬಹುದು. ಬಿಜಿಲಿ ಬಿಲ್ ಮಾಪಿ ಯೋಜನೆ 2023 ರ ಲಾಭವನ್ನು ಪಡೆದುಕೊಳ್ಳುವವರು ವಿದ್ಯುತ್ ಬಿಲ್ಲನ್ನು ಕಟ್ಟ ಬೇಕಾಗಿಲ್ಲ. ಆದರೆ ಗಮನದಲ್ಲಿಡಬೇಕಾದ ಅಂಶವೆಂದರೆ, ‘ಮಾರ್ಚ್ 31ರ ಒಳಗಾಗಿ ಹಿಂದಿನ ಎಲ್ಲಾ ವಿದ್ಯುತ್ ಬಿಲ್ ಬಾಕಿಯನ್ನು ಜಮಾ ಮಾಡಿರಬೇಕು’.

ನಿಗದಿತ ದಿನಾಂಕದ ಒಳಗಾಗಿ ಬಾಕಿ ಉಳಿದಿರುವ ವಿದ್ಯುತ್ ಬಿಲ್ಲನ್ನು ಕಟ್ಟದಿದ್ದಲ್ಲಿ ಬಿಜಿಲಿ ಬಿಲ್ಮಾಫಿ ಯೋಜನೆಯ ಹೊಸ ನಿಯಮದ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ವಿದ್ಯುತ್ ಪಿಲ್ಲನ್ನು ಕಟ್ಟುವುದು ಬಾಕಿ ಉಳಿದಿದ್ದರೆ ಕೂಡಲೇ ನಿಮ್ಮ ಹತ್ತಿರದ ವಿದ್ಯುತ್ ವಿಭಾಗ ಕಚೇರಿಗೆ ಭೇಟಿ ನೀಡಿ ಹಾಗೂ ಬಾಕಿ ಹಣವನ್ನು ಭರ್ತಿ ಮಾಡಿ.

ಈ ಯೋಜನೆಯಿಂದ ಮುಖ್ಯವಾಗಿ ಗ್ರಾಮೀಣ ಭಾಗದ ರೈತರಿಗೆ ಸಹಾಯವಾಗಲಿದೆ. ಬಿಜ್ಲಿ ಬಿಲ್ ಮಾಫಿ ಯೋಜನೆಯ ಲಾಭವನ್ನು ಪಡೆಯಲು ಅರ್ಹರಾದ ರೈತರು ಎಂದರೆ ವಿದ್ಯುತ್ ಕೊಳವೆಬಾವಿಯನ್ನು ಹೊಂದಿದವರು, ವಿದ್ಯುತ್ ಹಣವನ್ನು ಪಾವತಿಸಲು ಸಾಧ್ಯವಾಗದವರು, ಸಂಕಷ್ಟದಲ್ಲಿ ಸಿಲುಕಿರುವವರು ಇಂತಹ ಸಮಸ್ಯೆಯನ್ನು ಹೊಂದಿದ್ದು, ಕೂಡ ಮಾರ್ಚ್ 31ರ ಒಳಗಾಗಿ ಹಳೆಯ ಬಾಕಿಯನ್ನು ತುಂಬಿದವರು ಏಪ್ರಿಲ್ ಒಂದರ ನಂತರದ ವಿದ್ಯುತ್ ಬಿಲ್ಲನ್ನು ಕಟ್ಟ ಬೇಕಾಗಿಲ್ಲ.

ಈಗಾಗಲೇ ಈ ಯೋಜನೆಯನ್ನು ಉತ್ತರ ಪ್ರದೇಶ ರಾಜ್ಯದಲ್ಲಿ ಜಾರಿಗೆ ತರಲಾಗಿದ್ದು, ಪ್ರಾಯೋಗಿಕ ಹಂತದ ಪ್ರಯೋಜನವನ್ನು ಪರಿಶೀಲಿಸಿದ ಬಳಿಕ ಎಲ್ಲ ರಾಜ್ಯಗಳಲ್ಲಿಯೂ ವಿದ್ಯುತ್ ಬಿಲ್ ಅನ್ನು ಕಡಿತಗೊಳಿಸುವ ಈ ಹೊಸ ಯೋಜನೆಯನ್ನು ಜಾರಿಗೆ ತರಬಹುದು. ಇದರಿಂದ ರಾಜ್ಯದ ಅನೇಕ ಬಡ ರೈತರಿಗೆ ಸಹಾಯವಾಗಲಿದೆ.