Home Blog Page 225

300ಕ್ಕೂ ಹೆಚ್ಚಿನ ಬಾರಿ ಅ.ತ್ಯಾ.ಚಾ.ರ.ಕ್ಕೆ ಒಳಗಾದ ಪೂಲನ್ ದೇವಿಯ ಕಥೆಯು ಕಲ್ಲು ಹೃದಯಗಳಿಗೂ ಕಣ್ಣೀರು ತರಿಸುವುದು ಖಂಡಿತ..!

ಈ ದಶಕದ ಹಿರಿಯ ಜನರಿಗೆ ಪೂಲನ್ ದೇವಿಯ ಹೆಸರು ಹೇಳಿದರೆ ‘ಕೇಳಿಲ್ಲ’ ಎನ್ನಲಾರರು. ಚಂಬಲ್ ಕಣಿವೆಯನ್ನು ಭಯಭೀತಗೊಳಿಸಿದ ದರೋಡೆ ಕೋರರ ಗ್ಯಾಂಗ್ ನಲ್ಲಿ ಪೂಲನ್ ದೇವಿ ಕೂಡ ಇದ್ದರು. 1981 ಫೆಬ್ರುವರಿ 14ರಂದು ಉತ್ತರ ಪ್ರದೇಶದ ಬೇಹಮಾಯಿ ಗ್ರಾಮದಲ್ಲಿ ಹತ್ಯಾಕಾಂಡ ಒಂದು ನಡೆದಿದ್ದು, ದೇಶಮಟ್ಟದಲ್ಲಿ ಜನರನ್ನು ಕಂಗಾಲುಗೊಳಿಸಿತ್ತು. ಪೂಲನ್ ದೇವಿ ಹಾಗೂ ಆಕೆಯ ಗ್ಯಾಂಗ್ ಸೇರಿ ಮೇಲ್ವರ್ಗಕ್ಕೆ ಸೇರಿದ 20 ಜನರನ್ನು ಗುಂಡಿಕ್ಕಿ ಕೊಂ.ದಿದ್ದರು.

ಪ್ರಕರಣವು ಈ ರೀತಿಯಾಗಿತ್ತು. 1963 ರಲ್ಲಿ ಜನಿಸಿದ ಪೂಲನ್ ದೇವಿ ಮೇಲ್ವರ್ಗದ ಜನರಿಂದ ತುಳಿತಕ್ಕೆ ಒಳಗಾದರಂತೆ. ಆ ವೇಳೆಯಲ್ಲಿ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದ ಕಣಿವೆ ಭಾಗದಲ್ಲಿ ದರೋಡೆಕೋರರ ಕಾರ್ಯವು ಭರದಿಂದಲೇ ಸಾಗುತ್ತಿತ್ತು. ಮೇಲ್ಜಾತಿಯ ಕೆಲವರಿಂದ ದೌರ್ಜನ್ಯಕ್ಕೆ ಒಳಗಾದ ಪೂಲನ್ ದೇವಿಯು ಜೀವನದಲ್ಲಿ ಅನುಭವಿಸಿದ ನೋವಿನ ಕಾರಣದಿಂದಾಗಿ ದರೋಡೆಕೋರರ ಗುಂಪನ್ನು ಸೇರಲು ನಿರ್ಧರಿಸಿದರಂತೆ. ಬಡತನದಲ್ಲಿ ನೊಂದವರು ಆ ಗುಂಪಿನಲ್ಲಿ ಇದ್ದರು.

ಬಾಬು ಗುಜ್ಜರ್ ನೇತೃತ್ವದ ಡಕಾಯಿತರ ತಂಡವು ಪೂಲನ್ ದೇವಿ ಅವರ ಕುಟುಂಬವನ್ನು ವಶಪಡಿಸಿಕೊಳ್ಳಲು ಬಂದಿತ್ತಂತೆ. ಆ ಸಮಯದಲ್ಲಿ ಎದುರು ಕಂಡ ಪೂಲನ್ ದೇವಿ ಅವರನ್ನು ಗುಜ್ಜರ್ ಅವರು ಆಸ್ತಿಯಂತೆ ಪೂಲನ್ ಅವರನ್ನು ವಶಕ್ಕೆ ಪಡೆದು, ಬಳಸಿಕೊಂಡು ಪ್ರತಿ ರಾತ್ರಿಯೂ ಅ.ತ್ಯಾ.ಚಾ.ರ.ವನ್ನು ಮಾಡುತ್ತಿದ್ದಾರಂತೆ. ದರೋಡೆಕೋರರ ಗುಂಪನ್ನು ಸೇರಿದ ಬಳಿಕ ಪೂಲನ್ ಅವರು ಮೇಲ್ಜಾತಿಯ ವಿಕ್ರಂ ಮಲ್ಲ ಎಂಬುವವರ ಪ್ರೀತಿಯಲ್ಲಿ ಬೀಳುತ್ತಾರೆ.

ಇವರೇ ದೇವಿಗೆ ರೈಫಲ್ ಬಳಸಲು ಹೇಳಿಕೊಟ್ಟದ್ದು ಇದರಿಂದಾಗಿ ರೈಲನ್ನು ಹಾಗೂ ಉನ್ನತ ಜಾತಿಯ ಹಳ್ಳಿಗಳನ್ನು ಲೂಟಿ ಮಾಡಲು ಸಹಾಯವಾಯಿತು. ಕದ್ದ ಪೊಲೀಸ ಸಮವಸ್ತ್ರವನ್ನು ಮಾರುವೇಷಕ್ಕಾಗಿ ಬಳಸುತ್ತಿದ್ದರಂತೆ. ಆದರೆ ಮೇಲ್ವರ್ಗದ ಜನರನ್ನು ಸಹಿಸದ ಉಳಿದ ಗ್ಯಾಂಗ್ ನವರು ಕೆರಳುವಂತೆ ಮಾಡುತ್ತದೆ. ಅದೇ ರೀತಿ ವಿಕ್ರಂ ಮಲ್ಲ ಅವರನ್ನು ಕೊ.ಲೆ.ಗಯ್ಯುತ್ತಾರೆ.

ಅಲ್ಲಿಗೆ ದರೋಡೆಕೋರರ ಗುಂಪಿನ ಸಿಟ್ಟು ಮುಗಿಯದೆ, ಲಾಲಾ ರಾಮ್ ಮತ್ತು ಶ್ರೀರಾಮ್ ಎಂಬ ಅದೇ ಗುಂಪಿನ ಇಬ್ಬರು ಸದಸ್ಯರು ಪೂಲನ್ ದೇವಿ ಅವರನ್ನು ಅಪಹರಿಸಿ ನಿರಂತರವಾದ ಅ.ತ್ಯಾ.ಚಾ.ರವನ್ನು ಎಸಗುತ್ತಾರೆ. ಬಳಿಕ ಪೂಲನ್ ದೇವಿಯು ತನ್ನ ಪ್ರೇಮಿಯ ಕೊ.ಲೆ.ಯಿಂದಾಗಿ ಮತ್ತು ದೌರ್ಜನ್ಯಕ್ಕೆ ಒಳಪಟ್ಟಿದ್ದರಿಂದ ಸೇಡನ್ನು ತೀರಿಸಿಕೊಳ್ಳಲು ತೀರ್ಮಾನಿಸುತ್ತಾಳೆ.

ಡಕಾಯಿತ ರಾಣಿ ಎಂದೇ ಜನಪ್ರಿಯತೆಯನ್ನು ಪಡೆದ ಪೂಲನ್ ದೇವಿಯು ಪ್ರೇಮಿಗಳ ದಿನದಂದು ತನ್ನ ಗ್ಯಾಂಗ್ನೊಂದಿಗೆ ಸಿದ್ಧಗೊಂಡು ಹೋಗಿ ಬೇಹ ಮಾಯಿ ಗ್ರಾಮದ ಮೇಲೆ ಲೂಟಿ ಮಾಡಿ ಠಾಕೂರ್ ಸಮಾಜದ ಮೇಲೆ ದಾಳಿ ಮಾಡಿದರು. 20 ಮಂದಿಯನ್ನು ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಕೊಂ.ದಿದ್ದರು. ಹ.ತ್ಯಾ.ಕಾಂಡವು ನಡೆದ ಕೆಲವು ವರ್ಷಗಳ ಒಳಗೆ ದೇವಿಯು ಶರಣಾಗತಳಾಗಿ ಸೆರೆವಾಸವನ್ನು ಅನುಭವಿಸುತ್ತಾಳೆ.

ಕಿತ್ತು ತಿನ್ನುವ ಬಡತನ ಹಾಗೂ ಲೈಂ.ಗಿಕ ಕಿರುಕುಳ ಆಕೆಯನ್ನು ಗುಂಡೆದೆಯ ಗಂಡಂತೆ ಸೇಡು ತುಂಬಿದ ಮಹಿಳೆಯನ್ನಾಗಿ ಮಾಡಿತ್ತು ಎಂದರೆ ತಪ್ಪಾಗಲಾರದು. ಸೆರೆಮನೆ ವಾಸವನ್ನು ಅನುಭವಿಸಿದ ಬಳಿಕ ಅಂದರೆ 15 ವರ್ಷಗಳ ಬಳಿಕ ಫೂಲನ್ ದೇವಿಯು ರಾಜಕೀಯ ರಂಗಕ್ಕೆ ಇಳಿದು, ಎರಡು ಬಾರಿ ಸಂಸದೆ ಕೂಡ ಆಗಿದ್ದಾರೆ. 1996ರಲ್ಲಿ ಮತ್ತು 1999 ರಲ್ಲಿ.

ಬೆಹಮಾಯಿ ಹ.ತ್ಯಾ.ಕಾಂಡದ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ಆಗುತ್ತಲೇ ಇದೆ. ಪ್ರಕರಣದಲ್ಲಿ ದಾಖಲಾಗಿರುವ 23 ಆರೋಪಿಗಳ ಪೈಕಿ 16 ಮಂದಿ ಸಾ.ವ.ನ್ನ.ಪ್ಪಿ.ದ್ದಾ.ರೆ.ಅದರಲ್ಲಿ ಫೂಲನ್ ದೇವಿ ಕೂಡ ಒಬ್ಬರು. ಹೌದು. ಕೊ.ಲೆಯಿಂದ ಶಿ.ಕ್ಷೆಗೊಳಗಾದ ಶೇರ್ ಸಿಂಗ್ ರಾಣಾ ಅವರು ಪೂಲನ್ ಅಧಿಕಾರದಲ್ಲಿ ಇರುವಾಗಲೇ ಮನೆಯ ಹೊರಗೆ ಹ.ತ್ಯೆ ಮಾಡುತ್ತಾರೆ.

ಹೈಟೆಕ್ ವೇ-ಶ್ಯಾ-ವಾಟಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ನಟಿ ಯಮುನಾ, ನ್ಯಾಯ ಸ್ಥಾನದಲ್ಲಿ ಗೆದ್ದಿದ್ರು ಸೋಶಿಯಲ್ ಮೀಡಿಯಾ ಮಾತ್ರ ನಾನು ಸ-ತ್ತ-ರು ನನ್ನನ್ನು ಬಿಡಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

ಈ ಪ್ರಪಂಚವೇ ಹಾಗೆ ಆರೋಪಿ ಹಾಗೂ ಅಪರಾಧಿಗಳ ವ್ಯತ್ಯಾಸ ಇಲ್ಲದಂತೆ ಜನರನ್ನು ನೋಡುತ್ತದೆ. ಯಾವುದಾದರೂ ಪ್ರಕರಣದಲ್ಲಿ ಆರೋಪಿ ಎನ್ನುವ ಅನುಮಾನ ಹುಟ್ಟಿದ್ದರೂ ಸಾಕು. ಸುತ್ತಮುತ್ತ ಇರುವ ಜನರು ಮಾತ್ರವಲ್ಲದೆ ಇಡೀ ಜಗತ್ತು ನಮ್ಮನ್ನು ಅಪರಾಧಿಯಾಗಿ ಮಾಡಿ ಬಿಟ್ಟಿರುತ್ತದೆ. ಕಾನೂನು ಹೋರಾಟ ಮಾಡಿ ನಾವು ಗೆಲ್ಲಬಹುದು ಆದರೆ ಜನ ಕೊಡುವ ಆ ಶಿ.ಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಇಂತಹದೇ ಒಂದು ನೋವನ್ನು ಈಗ ಹೈಟೆಕ್ ವೇ.ಶ್ಯಾ.ವಾಟಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ಬಹುಭಾಷ ನಟಿ ಯಮುನಾ ಅವರು ಅನುಭವಿಸುತ್ತಿದ್ದಾರೆ.

ನಟಿ ಯಮುನಾ ಕನ್ನಡದ ನಟಿ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಈಕೆ ಕನ್ನಡ, ತಮಿಳು ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಭಾಷೆಗಳಲ್ಲಿ ನಾಯಕ ನಟಿಯಾಗಿ ಮತ್ತು ಕಿರುತರೆ ನಟಿಯಾಗಿ ಹಾಗೂ ಪೋಷಕ ಪಾತ್ರಧಾರಿ ಆಗಿ ಹೆಸರು ಮಾಡಿದ್ದಾರೆ. ಆದರೆ 2011ರ ಜನವರಿ 20ನೇ ತಾರೀಕಿನ ಮಧ್ಯರಾತ್ರಿ ಆದ ಒಂದು ಘಟನೆಯಿಂದ ಆಕೆ ಬದುಕು ಸಂಪೂರ್ಣವಾಗಿ ಹಾಳಾಗಿ ಹೋಯಿತು ಎಂದೇ ಹೇಳಬಹುದು. ಬೆಂಗಳೂರಿನಲ್ಲಿರುವ ವಿಠ್ಠಲ್ ಮಲ್ಯ ರಸ್ತೆಯ ಹೈಟೆಕ್ ಹೋಟೆಲ್ ಒಂದರಲ್ಲಿ ರೂಮ್ ಪಡೆದು ವೇಶ್ಯಾವಾಟಿಕೆ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು.

ಅದರಲ್ಲಿ ಪ್ರಮುಖ ಆರೋಪಿಯಾಗಿ ನಟಿ ಯಮುನಾ ಮತ್ತು ಇನ್ನಿತರ ಮೂರು ಜನ ಸಿಕ್ಕಿಬಿದ್ದಿದ್ದರು. ಆ ಸಮಯದಲ್ಲಿ ಕೂಡ ಈ ವಿಷಯ ಬಾರಿ ಸುದ್ದಿಯಾಗಿತ್ತು. ನಂತರ ನ್ಯಾಯಾಲಯದಲ್ಲಿ ಈಕೆ ತಾನು ಹೇಗೆ ಆ ಘಟನೆಯಲ್ಲಿ ಸಿಕ್ಕಿಕೊಂಡರು ಎನ್ನುವುದರ ವಿವರ ಕೊಟ್ಟಿದ್ದರು, ನಂತರ ಹೈಕೋರ್ಟ್ ಇವರನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿತ್ತು. ಜೊತೆಗೆ ಅದಾದ ಬಳಿಕ ಹಲವು ಸಂದರ್ಶನಗಳಲ್ಲಿ ನಟಿ ಈ ಕುರಿತು ಸ್ಪಷ್ಟನೆ ಕೊಟ್ಟಿದ್ದರು.

ಆದರೂ ಸಹ ಈಗಲೂ ಅವರನ್ನು ಅದೇ ದೃಷ್ಟಿಕೋನದಿಂದ ನೋಡುತ್ತಿರುವುದು ಮಾತ್ರ ಅಲ್ಲದೆ ಆಕೆಯನ್ನು ಹಿಂಸಿಸುವ ಕೆಲಸಗಳು ಆಗುತ್ತಿದೆಯಂತೆ ಎನ್ನುವುದು. ಈ ಬಗ್ಗೆ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಮಾಡಿ ನೋವು ತೋಡಿಕೊಂಡಿರುವ ನಟಿ ಯಮುನ ನ್ಯಾಯಸ್ಥಾನವೇ ನನ್ನನ್ನು ನಿರ್ದೋಷಿ ಎಂದು ಪೋಷಿಸಿದೆ, ನಾನು ನ್ಯಾಯಾಲಯದಲ್ಲಿ ಗೆದ್ದರೂ ಕೂಡ ಜನ ಮಾತ್ರ ಸಾ.ಯು.ವರೆಗೂ ನನ್ನನ್ನು ಬಿಡಲ್ಲ ಎನಿಸುತ್ತದೆ.

ಯಾಕೆಂದರೆ ಸೋಶಿಯಲ್ ಮೀಡಿಯಾದಲ್ಲಿ ನನ್ನ ಫೋಟೋ ಹಾಕಿಕೊಂಡು ವಿಚಿತ್ರ ಥಂಬ್ ನೇಲ್ ಹಾಕಿ ಪದೇಪದೇ ಆ ವಿಷಯಕ್ಕೆ ನನ್ನನ್ನು ಎಳೆದು ತರುತ್ತಿದ್ದಾರೆ. ಎಷ್ಟೋ ಬಾರಿ ನನ್ನ ಕಣ್ಣಿಗೆ ಇದು ಬಿದ್ದರೂ ಅದನ್ನು ಓಪನ್ ಮಾಡಿ ನೋಡುವ ಮನಸ್ಸು ಇಲ್ಲದೆ ಸುಮ್ಮನಾಗಿದ್ದೇನೆ. ಆದರೆ ಇದನ್ನು ನೋಡಿದ ತಕ್ಷಣ ಮನಸ್ಸಿಗೆ ಒಂದು ವಿಚಿತ್ರ ನೋವಾಗುತ್ತದೆ ಇದುವರೆಗೆ ನಾನು ಸಾಕಷ್ಟು ಮಾನಸಿಕವಾಗಿ ಈ ವಿಷಯಕ್ಕಾಗಿ ಸಿದ್ಧವಾಗಿದ್ದೇನೆ.

ನನ್ನನ್ನು ನಾನು ಎಷ್ಟೇ ಮೋಟಿವೇಟ್ ಮಾಡಿಕೊಂಡಿರೂ ಕೂಡ ಇಂತಹ ವಿಡಿಯೋಗಳು ಕಣ್ಣಿಗೆ ಬಿದ್ದಾಗ ಬಹಳ ಬೇಸರವಾಗುತ್ತದೆ. ನಾನು ಕೂಡ ಎಲ್ಲರಂತೆ ಮನುಷ್ಯೆ ಅಲ್ಲವೇ, ದಯವಿಟ್ಟು ನನ್ನ ಹೆಸರನ್ನು ಬಳಸಿಕೊಂಡು ಈ ರೀತಿ ಹಿಂಸೆ ಕೊಡವ ಕೆಲಸವನ್ನು ನನಗೆ ಮಾಡಬೇಡಿ. ಇದನ್ನೆಲ್ಲ ನೋಡುತ್ತಿದ್ದರೆ ಇನ್ನಷ್ಟು ಮಾನಸಿಕ ಹಿಂಸೆ ಆಗುತ್ತಿದೆ ಎಂದು ಮಾತನಾಡಿರುವ ಆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ನೀವು ನಂದಿನಿ ಹಾಲನ್ನು ಬಳಸುತ್ತಿದ್ದೀರಾ.? ಹಾಗಾದ್ರೆ ತಪ್ಪದೇ ಈ ವಿಚಾರ ನೋಡಿ.!

 

ಪ್ರತಿನಿತ್ಯ ಹಾಲನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಹಾಲು ಬಹಳ ಪೌಷ್ಟಿಕಾಂಶಯುಕ್ತ ಆಹಾರ ಆಗಿದೆ. ಪ್ರತಿ ದಿನ ರಾತ್ರಿ ಹಾಲು ಕೊಡುವುದರಿಂದ ನಿದ್ರಾಹೀನತೆ ಸಮಸ್ಯೆ ನಿವಾರಣೆ ಆಗುತ್ತದೆ, ಅಲ್ಲದೆ ರಾತ್ರಿ ಪೂರ್ತಿ ನೆಮ್ಮದಿಯಿಂದ ನಿದ್ದೆ ಮಾಡುವುದಕ್ಕೆ ಹಾಲಿನಲ್ಲಿರುವ ಒಂದು ಅಂಶ ಕಾರಣ ಆಗಿರುತ್ತದೆ. ಹಾಲನ್ನು ಕುಡಿಯುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ ಈ ಪ್ರಕೃತಿ ದತ್ತವಾಗಿ ಸಿಗುವ ಹಲವು ಆಹಾರಗಳಲ್ಲಿ ಹಾಲು ಕೂಡ ಒಂದು.

ಹಾಲನ್ನು ಹಲವು ಹೆಲ್ಪ್ ಪ್ರಾಡಕ್ಟ್ಗಳ ಜೊತೆ ಸೇರಿಸಿ ಕುಡಿಯುತ್ತಾರೆ ಅಥವಾ ಕಲ್ಲು ಸಕ್ಕರೆ ಜೊತೆ ಸೇರಿಸಿ ಕುಡಿಯುತ್ತಾರೆ ಇನ್ನಿತರ ಸಂದರ್ಭದಲ್ಲಿ ಕೆಲವು ಖಾದ್ಯಗಳನ್ನು ತಯಾರು ಮಾಡಲು ಸಹ ಹಾಲನ್ನು ಬಳಸುತ್ತಾರೆ. ಯಾವುದಾದರೂ ಒಂದು ರೂಪದಲ್ಲಿ ಹಾಲು ಮನುಷ್ಯನ ದೇಹ ಸೇರುತ್ತಿರಬೇಕು ಎನ್ನುವುದಷ್ಟೇ ಇದರ ಉದ್ದೇಶ.

ಆದರೆ ಹಳ್ಳಿಯಲ್ಲಿ ಇರುವವನು ನೇರವಾಗಿ ಹಸುವಿನ ಕರೆದ ಹಾಲನ್ನು ಕುಡಿಯಬಹುದು ಆದರೆ ಇದು ಪಟ್ಟಣ ಅಥವಾ ನಗರ ಪ್ರದೇಶದಲ್ಲಿ ಇರುವವರಿಗೆ ಸಾಧ್ಯವಿಲ್ಲವಲ್ಲ ಎಂದು ಅವರು ಸಹ ಕೊರಗುವ ಅಗತ್ಯ ಇಲ್ಲ. ಯಾಕೆಂದರೆ ಹಲವಾರು ಕಂಪನಿಯ ಹಾಲಿನ ಪ್ಯಾಕೆಟ್ಗಳು ದೊರೆಯುವುದರಿಂದ ಅವುಗಳನ್ನು ಖರೀದಿಸಿ ಅಷ್ಟೇ ಪೋಷಕಾಂಶಯುಕ್ತ ಆಹಾರವನ್ನು ಪಟ್ಟಣ ಪ್ರದೇಶ ಹಾಗೂ ನಗರ ಪ್ರದೇಶದ ಜನತೆಯು ಕೂಡ ಪಡೆಯಬಹುದಾಗಿದೆ.

ಇದರಲ್ಲಿ ಕರ್ನಾಟಕದ ಬ್ರಾಂಡ್ ಎಂದು ಹೆಸರುವಾಸಿ ಆಗಿರುವ ನಂದಿನಿ ಹಾಲಿನ ಬಗ್ಗೆ ಒಂದು ವಿಶೇಷವಾದ ಹೆಮ್ಮೆ ಇದೆ. ಯಾಕೆಂದರೆ ಇಂದು ಹೈನುಗಾರಿಕೆಯಲ್ಲಿ ನಂದಿನಿ ಮಾಡಿರುವ ಕ್ರಾಂತಿ ಅಂತಿಂಹದಲ್ಲ. ಇದರಿಂದ ಒಂದೆಡೆ ಒಂದು ಪ್ರದೇಶದ ಜನರಿಗೆ ಆರೋಗ್ಯವಾಗಿರುವ ಆಹಾರ ದೊರೆಯುತ್ತಿದ್ದರೆ ಮತ್ತೊಂದು ವರ್ಗಕ್ಕೆ ಇದು ಉದ್ಯಮವು ಆಗಿದೆ. ಜೊತೆಗೆ ರೈತರ ಪಾಲಿಗೆ ಜೀವನೋಪಾಯವು ಆಗಿದೆ. ಕೃಷಿಯ ಜೊತೆಗೆ ಹೈನುಗಾರಿಕೆಯಲ್ಲಿ ಕೂಡ ರೈತರ ತೊಡಗಿಸಿಕೊಳ್ಳುವುದಕ್ಕೆ ನಂದಿನಿ ಬ್ರಾಂಡ್ ವರದಾನವಾಗಿದೆ.

ನಂದಿನಿ ಹಾಲನ್ನು ಖರೀದಿಸಿ ಕುಡಿಯುವವರು ಸಾಕಷ್ಟು ಬಾರಿ ಒಂದು ಗೊಂದಲಕ್ಕೆ ಒಳಗಾಗಿರುತ್ತಾರೆ. ಅದೇನೆಂದರೆ ಹಾಲಿನ ಪ್ಯಾಕೆಟ್ ಅಲ್ಲಿ ಹಲವು ಬಣ್ಣಗಳಿರುವುದು, ಈ ಪ್ಯಾಕೆಟ್ ಬಣ್ಣದ ಕಾರಣದಿಂದ ಅದರ ಬೆಲೆಗಳನ್ನು ಕೂಡ ವ್ಯತ್ಯಾಸ ಆಗಿರುವುದನ್ನು ನಾವು ಗಮನಿಸಬಹುದಾಗಿದೆ. ಹಾಗಾದರೆ ನಂದಿನಿ ಹಾಲಿನ ಪ್ಯಾಕೆಟ್ ನಲ್ಲಿ ಇಷ್ಟು ವ್ಯತ್ಯಾಸ ಆಗಿರುವುದಕ್ಕೆ ಕಾರಣ ಏನಾದರೂ ಇದೆಯಾ ಎನ್ನುವ ಕೌತುಕ ಹುಟ್ಟದೇ ಇರಲಾರದು. ಅದಕ್ಕೆಲ್ಲ ಉತ್ತರ ಹೀಗಿದೆ.

ಯಾಕೆಂದರೆ ಕೆಲವೊಂದು ಗುಣಗಳಿಗೆ ಆಧಾರವಾಗಿ ಈ ರೀತಿ ಹಾಲುಗಳನ್ನು ಬಣ್ಣಬಣ್ಣದ ಪ್ಯಾಕೆಟ್ ಅಲ್ಲಿ ಪ್ಯಾಕ್ ಮಾಡಲಾಗಿರುತ್ತದೆ. ಕೇಸರಿ ಬಣ್ಣದ ಹಾಲಿನ ಪ್ಯಾಕೆಟ್ ಶುದ್ಧ ಗಟ್ಟಿ ಹಾಲಾಗಿದ್ದು ಗಟ್ಟಿ ಕಾಫಿ ಟೀ ಕುಡಿಯುವುದು ಹಾಗೂ ಪಾಯಸ ಮುಂತಾದ ಆಹಾರ ತಯಾರಿಸುವವರು ಇದನ್ನು ಬಳಸಬಹುದಾಗಿದೆ. ನೀಲಿ ಬಣ್ಣದ ಪ್ಯಾಕೆಟ್ ಅಲ್ಲಿ ಸಂಪೂರ್ಣವಾಗಿ ಕೆನೆ ತೆರೆಯಲಾಗಿರುತ್ತದೆ ಇದರಿಂದ ಡಯಟ್ ಮಾಡುವವರು ಹಾಗೂ ಫ್ಯಾಟ್ ಬಗ್ಗೆ ಭಯ ಇರುವವರು ಇದನ್ನು ಉಪಯೋಗಿಸಬಹುದಾಗಿದೆ.

ಜೊತೆಗೆ ಹಸಿರು ಬಣ್ಣದ ಪ್ಯಾಕೆಟ್ ಅಲ್ಲಿ ಎಮ್ಮೆ ಹಾಲು ಮಿಶ್ರಿತ ಮಾಡಿರುವುದಿಲ್ಲ ಇದು ಸಂಪೂರ್ಣವಾಗಿ ಹಸುವಿನ ಹಾಲಿನಿಂದ ಕೂಡಿರುತ್ತದೆ. ಜೊತೆಗೆ ಗುಡ್ ಲೈಫ್ ಹಾಲನ್ನು ಬಿಸಿ ಮಾಡಿ ಕುಡಿಯುವ ಅನುಕೂಲತೆ ಇಲ್ಲದವರು ಬಳಸಬಹುದಾಗಿದೆ. ಇದನ್ನು 137 ಡಿಗ್ರಿ ಸೆಲ್ಸಿಯಸ್ ಅಲ್ಲಿ ನಾಲ್ಕು ನಿಮಿಷಗಳ ಕಾಲ ಕಾಯಿಸಿ ತಣ್ಣಗೆ ಮಾಡಿರುತ್ತಾರೆ. ಈ ರೀತಿ ಕಾರಣಗಳಿಗೆ ಅನುಗುಣವಾಗಿ ಪ್ಯಾಕ್ ಗಳ ಬಣ್ಣ ಬೇರೆ ಬೇರೆ ಆಗಿರುತ್ತದೆ.

ಬೆಂಗಳೂರಲ್ಲಿ ಕೇವಲ 14 ಲಕ್ಷಕ್ಕೆ ಸಿಗುತ್ತದೆ ಸ್ವಂತ ಮನೆ ಹೇಗೆ ಗೊತ್ತಾ.?

 

ಬೆಂಗಳೂರಿನಂತಹ ಮಹಾನಗರದ ಅಕ್ಕಪಕ್ಕ 14 ಲಕ್ಷಕ್ಕೆ ಮನೆ ಸಿಗುತ್ತದೆ ಎಂದರೆ ಅದು ಸಾಮಾನ್ಯವಾಗಿ ನಂಬಲು ಆಗದ ವಿಷಯ. ಅದರಲ್ಲೂ 2BHK ಮನೆ 14 ಲಕ್ಷಕ್ಕೆ ಸಿಗುತ್ತದೆ ಎಂದರೆ ಅದು ಇನ್ನೂ ಹೆಚ್ಚಿನ ಶಾ’ಕ್ ನೀಡುತ್ತದೆ. ಮನೆ ಎನ್ನುವುದು ಒಂದು ಮೂಲಭೂತ ಅವಶ್ಯಕತೆ. ಎಲ್ಲರ ಕನಸು ಕೂಡ ಪುಟ್ಟದಾದರೂ ಪರವಾಗಿಲ್ಲ ಒಂದು ಚೊಕ್ಕವಾದ ಗೂಡು ಕಟ್ಟಿಕೊಳ್ಳಬೇಕು ಎನ್ನುವುದು. ಇದಕ್ಕಾಗಿ ತಾನೆ ದುಡಿದ ಅಂಶದಲ್ಲಿ ಅತಿ ಹೆಚ್ಚು ಭಾಗವನ್ನು ಉಳಿತಾಯ ಮಾಡಿ ಇಡುವುದು. ಮನೆ ಅಕ್ಕಪಕ್ಕ ಸ್ವಲ್ಪ ಜಾಗ ಇದ್ದರೆ, ಸಣ್ಣದಾಗಿ ಗಾರ್ಡನ್ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎನ್ನುವುದು ಬಡವ, ಸಾಮಾನ್ಯ ಹಾಗೂ ಶ್ರೀಮಂತ ಎಲ್ಲರ ಮನದಲ್ಲಿ ಇರುವ ಆಸೆ ಕೂಡ.

ಸರ್ಕಾರ ಹಾಗೂ ಕೆಲವು ಸಂಸ್ಥೆಗಳು ಆಗಾಗ ಕೆಲವೊಂದು ಸ್ಕೀಮ್ ಗಳನ್ನು ಬಡವರಿಗೆ ಹಾಗೂ ಜನಸಾಮಾನ್ಯರಗಾಗಿ ನೀಡುತ್ತಿರುತ್ತದೆ. ಆದರೆ ಜನಸಾಮಾನ್ಯರು ಮತ್ತು ಬಡವರು ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳದೆ ಹೋದಲ್ಲಿ ಅಥವಾ ಇದರ ಬಗ್ಗೆ ಆಸಕ್ತಿ ತೋರದೆ ಹೋದಲ್ಲಿ ಅದು ಉಳ್ಳವರ ಪಾಲಾಗುವುದರಲ್ಲಿ ಅನುಮಾನವೇ ಇಲ್ಲ. ಈ ರೀತಿ ಹೆಚ್ಚು ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಹಾಗಾಗಿ ಮೊದಲಿಗೆ ಯಾವುದೇ ಯೋಜನೆ ಆದರೂ ಅದರ ಮಾಹಿತಿ ಎಲ್ಲರ ತನಕ ಹೋಗಿ ತಲುಪಬೇಕು ಆಗ ಮಾತ್ರ ಅದು ಅರ್ಹತೆ ಇದ್ದವರಿಗೆ ಅದು ಸಿಗುತ್ತದೆ.

ಇದರ ಉದಾಹರಣೆಯೊಂದಿಗೆ ಹೇಳುವುದಾದರೆ ಬೆಂಗಳೂರಿನಲ್ಲಿ 14 ಲಕ್ಷಕ್ಕೆ ಮನೆ ಸಿಗುವುದು ಖಂಡಿತ. ನಿಜ ಆದರೆ ಇದು ಎಲ್ಲರಿಗೂ ಅಲ್ಲ ಅದಕ್ಕಾಗಿ ಕೆಲವು ನಿಯಮಗಳಿವೆ ಜೊತೆಗೆ ಕೆಲವು ಅರ್ಹತೆಗಳು ಕೂಡ ಇರಬೇಕಾಗುತ್ತದೆ. ಕೆಲವೊಂದು ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ಮಾತ್ರ ನೀವು ಇದರ ಫಲಾನುಭವಿಗಳಾಗಬಹುದು. ಹಾಗಾಗಿ ಮೊದಲಿಗೆ ಇವುಗಳ ಬಗ್ಗೆ ತಿಳಿದುಕೊಳ್ಳಬೇಕು.

ಬೆಂಗಳೂರಿನಲ್ಲಿ ಹಾಗೂ ಬೆಂಗಳೂರು ಅಕ್ಕ ಪಕ್ಕ ಮನೆ ಕೊಂಡುಕೊಳ್ಳಬೇಕು ಎಂದರೆ ಅದು ಬಡವನಿಗೆ ಸಾಮಾನ್ಯವಾಗಿ ಕೈಗೆಟ್ಟುಕುವ ವಿಷಯ ಅಲ್ಲ ಅದಕ್ಕಾಗಿ ಲಕ್ಷಗಟ್ಟಲೆ ಬೇಕು ಕೋಟಿಗಟ್ಟಲೆ ಬೇಕು ಇಂತಹ ಮಾತುಗಳನ್ನು ನಾವು ಸಾಕಷ್ಟು ಕೇಳಿ ಬಿಟ್ಟಿದ್ದೇವೆ. ಆದರೆ ಇಲ್ಲೊಮ್ಮೆ ನೋಡಿ ಬೆಂಗಳೂರಿನ ಸುತ್ತಮುತ್ತ ಇರುವ ಐದು ತಾಲೂಕುಗಳಲ್ಲಿ ವಾಸ ಆಗಿರುವವರಿಗೆ ಮನೆ ವಿಚಾರವಾಗಿ ಸಿಹಿ ಸುದ್ದಿ ಸಿಗಲಿದೆ.

ಅದೇನೆಂದರೆ ಕಡ್ಡಾಯವಾಗಿ ನೀವು ಬೆಂಗಳೂರಿನ ಸುತ್ತಮುತ್ತ ಇರುವ ತಾಲೂಕಿನಲ್ಲಿಯೇ ವಾಸವಿರಬೇಕು ನಿಮ್ಮ ಬಳಿ ವಾಸಕ್ಕೆ ಸ್ವಂತ ಮನೆ ಇರಬಾರದು ಈ ರೀತಿ ಇದ್ದರೆ ನಿಮಗೆ ಖಂಡಿತವಾಗಿಯೂ ಸರ್ಕಾರದ ಈ ಯೋಜನೆ ಮೂಲಕ 14 ಲಕ್ಷಕ್ಕೆ 2BHK ಮನೆ ಸಿಗಲಿದೆ. ಇದಕ್ಕಾಗಿ ನೀವು ಸಹ ಸ್ವಲ್ಪ ಹಣ ಖರ್ಚು ಮಾಡಬೇಕು. ಆದರೆ ಈ ಹಣವನ್ನು ಒಂದೇ ಬಾರಿಗೆ ಅಲ್ಲದೆ ಮೂರು ಕಂತುಗಳಲ್ಲಿ ಕಟ್ಟಬಹುದು ಎನ್ನುವುದು ಇನ್ನೂ ಸಮಾಧಾನಕರ ವಿಷಯ.

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇವರು ತಮ್ಮ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಯಾರ್ಯಾರು ಸ್ವಂತ ಮನೆ ಹೊಂದಿಲ್ಲ ಅವರಿಗೆ ಅರ್ಜಿ ಹಾಕಲು ತಿಳಿಸಿದ್ದಾರೆ. ಈ ರೀತಿ ಅರ್ಜಿ ಹಾಕಿದವರಿಗೆ ಈ ಮೇಲ್ಕಂಡ ರೀತಿ 14 ಲಕ್ಷಕ್ಕೆ ಮೂರು ಕಂತುಗಳಲ್ಲಿ 2BHK ಮನೆ ಸಿಗಲಿದೆ. ಇನ್ನು ವಿವರವಾಗಿ ಈ ಯೋಜನೆ ಬಗ್ಗೆ ತಿಳಿದುಕೊಳ್ಳಲು ಮತ್ತು ಯೋಜನೆ ಕಂತುಗಳ ಹಣವನ್ನು ಯಾವಾಗ ಕಟ್ಟಬೇಕು ಜೊತೆಗೆ ಅಪ್ಲಿಕೇಶನ್ ಅನ್ನು ಯಾವ ರೀತಿ ಸಲ್ಲಿಸಬೇಕು ಇತ್ಯಾದಿ ಎಲ್ಲಾ ಮಾಹಿತಿಗಳಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಅನ್ನಭಾಗ್ಯ ಯೋಜನೆಯಲ್ಲಿ ಇನ್ಮುಂದೆ ಮೋಸ ಮಾಡೋಕೆ ಸಾಧ್ಯ ಇಲ್ಲ ಹೊಸ ಟೆಕ್ನಾಲಜಿ ಪಡಿತರ ತೂಕದಲ್ಲಿ ಮೋಸ ಆದ್ರೆ ಐರಿಸ್ ಸ್ಕ್ಯಾನರ್ ಸೈರನ್ ಕೂಗುತ್ತೆ..!

 

ಕರ್ನಾಟಕದ ಜನತೆಯ ಹಸಿವು ನೀಗಿಸುವ ಆಹಾರ ಪೂರೈಕೆಯ ಪೂರಕವಾಗಿರುವುದು ಅನ್ನಭಾಗ್ಯ ಯೋಜನೆ. ಆದರೆ ಈ ಯೋಜನೆಯಲ್ಲಿ ಹಲವಾರು ಅಕ್ರಮಗಳು ನಡೆಯುತ್ತಿವೆ. ಕೆಲವರು ಈ ಯೋಜನೆಯ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ ಇದನ್ನು ಕಡಿವಾಣ ಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ನಿರ್ಧರಿಸಿದ್ದು, ಪ್ರತಿಯೊಂದು ನ್ಯಾಯಬೆಲೆ ಅಂಗಡಿಗೆ STQC ಮಾನ್ಯತೆ ಪಡೆದ ಐರಿಸ್ ಸ್ಕ್ಯಾನರನ್ನು ಅಳವಡಿಸಲಿದೆ ಧ್ವನಿ ಮುದ್ರಿತ ತೂಕದ ಯಂತ್ರವನ್ನು ಸಹ ಅಳವಡಿಸುವಂತೆ ಆದೇಶ ಹೊರಡಿಸಿದೆ.

ನಮ್ಮ ಕರ್ನಾಟಕ ರಾಜ್ಯದಲ್ಲಿ 1,17,13,413 ಬಿಪಿಎಲ್ ಕಾರ್ಡ್ ಗಳು, 24,04,127 ಎಪಿಎಲ್ ಕಾರ್ಡ್ ಗಳು, 10,90,594 ಅಂತ್ಯೋದಯಗಳು ಸೇರಿದಂತೆ ಒಟ್ಟಾರೆಯಾಗಿ 1,52,08,134 ಕಾರ್ಡುಗಳಿವೆ ಪ್ರತಿ ತಿಂಗಳು 20,168 ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ವಸ್ತುಗಳನ್ನು ವಿತರಿಸಲಾಗುತ್ತದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಅಥವಾ ಅಂತಿಯೋದಯ ಕಾರ್ಡ್ ಅನ್ನು ಹೊಂದಿದ ಕುಟುಂಬದ ಮುಖ್ಯ ಸದಸ್ಯನೊಬ್ಬನ ಬೆರಳಚ್ಚು ಬಯೋಮೆಟ್ರಿಕ್ ನಲ್ಲಿ ಪಡೆಯುವುದರ ಮುಖಾಂತರವಾಗಿ ಪಡಿತರವನ್ನು ನೀಡುತ್ತಾರೆ.

ಆದರೆ ಆಗಾಗ ಸರ್ವರ್ ಬ್ಯುಸಿ ಬರುವ ಕಾರಣವಾಗಿ ಜನರು ಬೇಸತ್ತು ಹೋಗಿದ್ದಾರೆ. ದಿನಗೂಲಿ ಮಾಡಿ ಬದುಕುವವರಿಗೆ ಒಂದು ಇಡೀ ದಿನ ನ್ಯಾಯಬೆಲೆ ಅಂಗಡಿಯ ಎದುರಲ್ಲಿ ಕಾಯುವುದು ಅಥವಾ ಸರ್ವರ್ ಬ್ಯುಸಿ ಎಂಬ ಕಾರಣಕ್ಕಾಗಿ ಪ್ರತಿದಿನವೂ ಕೆಲಸವನ್ನು ಬಿಟ್ಟು ಬಂದು ಕಾಯುವುದು ಕಷ್ಟಕರ. ಈ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಓಟಿಪಿ ಮೂಲಕ ಪಡಿತರವನ್ನು ವಿತರಿಸುವ ಕಾರ್ಯವನ್ನು ನಿರ್ಮಿಸಲಾಗಿದೆ. ಇನ್ನು ಮುಂದೆ ಐರಿಸ್ ಸ್ಕ್ಯಾನರ್ ಮತ್ತು ಧ್ವನಿ ಮುದ್ರಿತ ತೂಕ ಯಂತ್ರಗಳ ಮೂಲಕವೇ ಪಡಿತರವನ್ನು ನೀಡಲಾಗುತ್ತದೆ.

‘ಈ ಹಿಂದೆ ಜಾರಿಯಲ್ಲಿದ್ದಂತೆ ಪಡಿತರವನ್ನು ಓಟಿಪಿ ಪಡೆಯುವುದರ ಮುಖಾಂತರವೇ ವಿತರಿಸುವುದು ಒಳಿತು. ಆದರೆ ಸರ್ವರ್ ಬ್ಯುಸಿ ಸಮಸ್ಯೆಯನ್ನು ಖಂಡಿತವಾಗಿ ಬಗೆಹರಿಸಬೇಕು. ಹೊರತಾಗಿ ರೂ.10,000 ಹಣವನ್ನು ಖರ್ಚು ಮಾಡಿ ಸ್ಕ್ಯಾನರ್ ಮತ್ತು ಮುದ್ರಿತ ತೂಕ ಯಂತ್ರಗಳ ಅಳವಡಿಕೆಯು ಅಷ್ಟು ಸರಿಯಲ್ಲ’. ಎಂದು ರಾಜ್ಯ ಪಡಿತರ ವಿತರಕರ ಸಂಘವು ಬಲವಾಗಿ ವಿರೋಧವನ್ನು ವ್ಯಕ್ತಪಡಿಸಿದೆ. ‘ಅಕ್ಕಿಯ ವಿತರಣೆಗಾಗಿ ಸರ್ಕಾರವು 120 ರೂಪಾಯಿಗಳ ಕಮಿಷನ್ ಅನ್ನು ನೀಡುತ್ತಿದೆ. ಆದರೆ ಉಳಿದ ರಾಜ್ಯಗಳಲ್ಲಿ ರೂಪಾಯಿ 250ರಷ್ಟು ಕಮಿಷನ್ ಅನ್ನು ನೀಡಲಾಗುತ್ತದೆ.

ಅಕ್ರಮ ದಂಧೆಯಲ್ಲಿ ಭಾಗಿಯಾದ ಆಹಾರ ಇಲಾಖೆಯ ಅಧಿಕಾರಿಗಳನ್ನು ಗುರುತಿಸಿ ನಿರ್ದಾಕ್ಷಿಣ್ಯವಾಗಿ ಅಗತ್ಯ ಕ್ರಮಗಳನ್ನು ಕೈಗೊಂಡರೆ ಯಾವುದೇ ಮೋಸವಾಗದೆ ಅಕ್ಕಿಯನ್ನು ವಿತರಿಸಲು ಸಾಧ್ಯವಾಗುತ್ತದೆ’. ಎಂದು ಸಂಘದ ಅಧ್ಯಕ್ಷ ಟಿ ಕೃಷ್ಣಪ್ಪ ಅವರು ಹೇಳಿಕೆಯನ್ನು ನೀಡಿದ್ದಾರೆ.

ಐರಿಸ್ ಸ್ಕ್ಯಾನರ್ ಎಂದರೇನು? ಇದು ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ? ಎಂದು ಯೋಚಿಸುತ್ತಿರುವವರಿಗೆ ಇಲ್ಲಿದೆ ಉತ್ತರ. ರಾಜ್ಯದ ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳಲ್ಲಿ ಈ ಐರಿಸ್ ಸ್ಕ್ಯಾನರ್ ಅನ್ನು ಅಳವಡಿಸಿಕೊಳ್ಳಬೇಕು. ಕಾರ್ಡುದಾರರ ಕಣ್ಣುಗಳನ್ನು ಸೆರೆಹಿಡಿದು ನಮೂದಿಸಿಕೊಳ್ಳುವಲ್ಲಿ ಇದು ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ತೂಕದ ಪೆಟ್ಟಿಗೆಯಲ್ಲಿ ಧ್ವನಿಮುದ್ರಿತ ಸಾಧನವನ್ನು ಅಳವಡಿಸಿಕೊಳ್ಳಬೇಕು.

ಕಾರ್ಡನ್ನು ಹೊಂದಿದವರಿಗೆ 6 ಕೆ.ಜಿ ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಆದರೆ ಅಕ್ಕಿಯನ್ನು ನೀಡುವಾಗ ಕೆಲವು ಮಾಲೀಕರು 6 ಕೆಜಿಗಿಂತ ಕಡಿಮೆ ಪ್ರಮಾಣದ ಅಕ್ಕಿಯನ್ನು ತೂಕ ಮಾಡಿ ನೀಡಿ ಮೋಸ ಮಾಡುತ್ತಿದ್ದರು. ಆದರೆ ಐರಿಸ್ ಸ್ಕ್ಯಾನರ್ ಮತ್ತು ಧ್ವನಿಮುದ್ರಿತ ಯಂತ್ರವನ್ನು ಅಳವಡಿಸುವುದರ ಮೂಲಕ ನಮೂದಿಸಿದ ಕಾರ್ಡ್ ದಾರನಿಗೆ ಕಡಿಮೆ ಅಕ್ಕಿಯ ವಿತರಣೆಯಾದರೆ ಸೈರನ್ ಕೂಗಲಿದೆ. ಇದರಿಂದಾಗಿ ಅಕ್ಕಿಯ ತೂಕದಲ್ಲಿ ಮೋಸವಾಗಲು ಸಾಧ್ಯವಿಲ್ಲ. ಒಂದು ವೇಳೆ ಮೋಸವಾದರೆ ಅಪರಾಧಿಗಳನ್ನು ಹಿಡಿಯುವುದು ಸುಲಭದ ಕೆಲಸವಾಗಲಿದೆ.

ವಿತರಕರ ಸಂಘದ ಕೂಗನ್ನು ಕೇಳಿ ಸರ್ಕಾರವು ಸರ್ವರ್ ಸಮಸ್ಯೆಯನ್ನು ಕಡಿಮೆಗೊಳಿಸಿ ಓಟಿಪಿ ನೀಡುವುದರ ಮುಖೇನವೇ ಅಕ್ಕಿಯನ್ನು ವಿತರಣೆ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಈಗಾಗಲೇ ಐರಿಸ್ ಸ್ಕ್ಯಾನರ್ ಮತ್ತು ಧ್ವನಿ ಮುದ್ರಿತ ಯಂತ್ರಗಳನ್ನು ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಅಳವಡಿಸುವಂತೆ ಸರ್ಕಾರವು ಆದೇಶವನ್ನು ಹೊರಡಿಸಿದೆ.

ಇನ್ನೆರಡು ತಿಂಗಳಲ್ಲಿ ಎಲೆಕ್ಷನ್ ಬರಲಿದೆ ನಿಮ್ಮ ವೋಟರ್ ಐಡಿಯಲ್ಲಿ ವಿಳಾಸ, ಹೆಸರು, ಲಿಂಗ ಏನಾದರೂ ಬದಲಾವಣೆ ಮಾಡಬೇಕಾದರೆ ಈ ರೀತಿ ಮಾಡಿ. 1 ದಿನದಲ್ಲಿ ಹೊಸ ವೋಟರ್ ಐಡಿ ಬರುತ್ತೆ.

 

ಸ್ನೇಹಿತರೆ ಮುಂದಿನ ದಿನಗಳಲ್ಲಿ ಚುನಾವಣೆ ಎದುರಾಗುತ್ತಿದ್ದು ವೋಟರ್ ಐಡಿಗಳನ್ನು ಮಾಡಿಸುವವರ ಪಟ್ಟಿಯು ಹೆಚ್ಚಾಗಿರುವುದಿಲ್ಲ ಇನ್ನೂ ಕೆಲವರಿಗೆ ನಮ್ಮ ವೋಟರ್ ಐಡಿ ಕಾರ್ಡ್ ಗಳನ್ನು ಎಲ್ಲಿ ಪಡೆಯಬೇಕು ಅದಕ್ಕೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂದು ಹುಡುಕುತ್ತಾ ಇರುತ್ತಾರೆ ಅಂತವರಿಗೆ ನಾವು ಇಂದು ಒಂದು ಉತ್ತಮವಾದ ಪುಟವನ್ನು ಇಲ್ಲಿ ತಂದಿದ್ದೇವೆ ಅದರಲ್ಲೂ ಈಗಷ್ಟೇ 18 ತುಂಬಿರುವವರ ನಮ್ಮ ಭಾರತೀಯ ಯುವ ಜನತೆಗೆ ಇದು ಬಹಳ ಉಪಯುಕ್ತವಾಗಿದೆ ಹಾಗಾದರೆ ಬನ್ನಿ ಸ್ನೇಹಿತರೆ ನಮ್ಮ ಹಕ್ಕನ್ನು ಚಲಾಯಿಸಲು ವೋಟರ್ ಐಡಿ ಕಾರ್ಡ್ ಬಹಳ ಮುಖ್ಯವಾದ ಆಧಾರ.

ಇನ್ನೂ ಇದೆ ವೋಟರ್ ಐ ಡಿ ಕಾರ್ಡಲ್ಲಿ ನಮ್ಮ ಊರು, ಜನನ ದಿನಾಂಕ, ಫೋಟೋ, ಲಿಂಗ, ಪತಿ ಅಥವಾ ತಂದೆಯ ಹೆಸರು ವಿಳಾಸ ದ ಬದಾಲಾವಣೆ ಆಗಬೇಕು ಎಂದರೆ ರಾಷ್ಟ್ರೀಯ ಚುನಾವಣಾ ಆಯೋಗದ ಅಡಿಯಲ್ಲಿ ಬದಲಾಯಿಸಬಹುದು. ಇಲ್ಲವಾದಲ್ಲಿ ನಿಮ್ಮ ಮೊಬೈಲ್ನಲ್ಲಿಯೇ ವೋಟರ್ ಐಡಿಯ ಬದಲಾವಣೆ ಬಹಳ ಸರಳವಾದ ಪ್ರಕ್ರಿಯೆ ಆಗಿದೆ. ಮೊದಲನೆಯದಾಗಿ ಭಾರತ ಸರ್ಕಾರವು ಬಿಟ್ಟಿರುವ ಈ ಅಪ್ಲಿಕೇಶನ್ ಅನ್ನು ಆಂಡ್ರಾಯ್ಡ್ ಮೊಬೈಲ್ ಗಳು ಅಥವಾ ಐ ಫೋನ್ಗಳಿಗೆ ಡೌನ್ಲೋಡ್ ಮಾಡಿಕೊಳ್ಳಬಹುದು.

ಈ ಅಪ್ಲಿಕೇಶನ್ ಹೆಸರು ವೋಟರ್ ಹೆಲ್ಪ್ ಲೈನ್ ಎಂದು ಇದೆ ಇದನ್ನು ಮೊಬೈಲ್ಗೆ ಮೊದಲು ಡೌನ್ಲೋಡ್ ಮಾಡಬೇಕು. ನಂತರ ನಾವು ನಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆಯ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬೇಕು. ಒಮ್ಮೆ ಅಕೌಂಟ್ ಕ್ರಿಯೇಟ್ ಆದಮೇಲೆ ಪಾಸ್ವರ್ಡ್ ಅನ್ನು ಹಾಕಿ ಲಾಗ್ ಇನ್ ಆಗಬೇಕು ನಂತರ ಅಲ್ಲಿ ಫಾರ್ಮ್ಸ್ ಎಂಬ ಆಯ್ಕೆಯನ್ನು ಒತ್ತಬೇಕು. ಅಲ್ಲಿ ನೀವು ಹೊಸದಾಗಿ ಆದರೂ ಅಥವಾ ಹಳೆಯ ವೋಟರ್ ಐಡಿಯಲ್ಲಿ ತಿದ್ದುಪಡಿ ಮಾಡಬಹುದು.

ಇನ್ನೂ ಹೊಸದಾಗಿ ಅರ್ಜಿಯನ್ನು ಸಲ್ಲಿಸಲು ಮೊದಲನೆಯ ಆಯ್ಕೆಯನ್ನು ಒತ್ತಬೇಕು. ಇನ್ನೂ ನಿಮ್ಮ ವೋಟರ್ ಐಡಿ ಕಾರ್ಡ್ ನಲ್ಲಿ ಯಾವುದಾದರೂ ಬದಲಾವಣೆ ಆಗಬೇಕಾದರೆ ಅಲ್ಲಿ ನಾಲ್ಕನೇ ಆಯ್ಕೆಯಾದ ಕರೆಕ್ಷನ್ ಆಫ್ ಎಂಟರೀಸ್ ಫಾರ್ಮ್ 8 ಎಂಬ ಆಯ್ಕೆಯನ್ನು ಒತ್ತಿ ಅಲ್ಲಿ ನಿಮ್ಮ ವೋಟರ್ ಐಡಿ ನ ತಿದ್ದುಪಡಿ ಮಾಡಬಹುದು. ಇವುಗಳ ನಂತರ ಕಂಟಿನ್ಯೂ ಮೇಲೆ ಒತ್ತಿದರೆ ನಿಮ್ಮ ಪ್ರದೇಶವನ್ನು ಆಯ್ದುಕೊಂಡು, ನಂತರ ಇನ್ನು ನಿಮ್ಮ ಹೆಸರು, ನಿಮ್ಮ ವೋಟರ್ ಐಡಿ ಸಂಖ್ಯೆ ಎಲ್ಲವನ್ನು ತುಂಬಿಸಬೇಕು

ಇವೆಲ್ಲವೂ ಆದ ನಂತರ ನೆಕ್ಸ್ಟ್ ಬಟನ್ ಅನ್ನು ಒತ್ತಬೇಕು. ಮುಂದಿನ ಫಾರ್ಮ್ ನಲ್ಲಿ ನಿಮ್ಮ ವೋಟರ್ ಐಡಿ ಯಲ್ಲಿ ಯಾವ ವಿವರವನ್ನು ಬದಲಾಯಿಸಬೇಕಾದ ಆಯ್ಕೆಯನ್ನು ಟಿಕ್ ಮಾಡಿ. ಒಂದು ಬಾರಿಗೆ ನೀವು ಮೂರು ಆಯ್ಕೆಯನ್ನು ಮಾಡಬಹುದು.ತಿದ್ದುಪಡಿಯು ಆದಮೇಲೆ ನೆಕ್ಸ್ಟ್ ಬಟನ್ ಮೇಲೆ ಒತ್ತಿ ಆಗ ನಮಗೆ ನಾವು ಬದಲಾಯಿಸಿರುವ ಹಾಗೂ ನಮಗೆ ಬೇಕಾದ ವಿವರವೂ ಇದೆಯಾ ಎಂದು ನೋಡಿ ನಂತರ ನೆಕ್ಸ್ಟ್ ಬಟನ್ ಅನ್ನು ಒತ್ತಿ.

ನಂತರ ವಯಸ್ಸಿನ ಸಾಕ್ಷಿಗೆ ಎಸೆಸೆಲ್ಸಿ ಮಾರ್ಕ್ಸ್ ಕಾರ್ಡ್ ಅಥವಾ ಬರ್ತ್ ಸರ್ಟಿಫಿಕೇಟ್ ಹಾಗೂ ವಿಳಾಸದ ಸಾಕ್ಷಿಗೆ ಪಡಿತರ ಚೀಟಿ ಅಥವಾ ಆಧಾರ್ ಕಾರ್ಡ್ ಅನ್ನು ಫೋಟೋ ತೆಗೆದು ಅಪ್ಲೋಡ್ ಮಾಡಬೇಕು. ಇದಕ್ಕೆ ಮುಖ್ಯವಾದ ವಿಷಯ ಎಂದರೆ ಫೋಟೋಗಳು jpg ಅಥವಾ img ಫಾರ್ಮೇಟ್ ನಲ್ಲಿ ಇರಬೇಕು. ಇದೆಲ್ಲ ಆದ ನಂತರ ದಿಕ್ಲಾರೇಷನ್ ಗೆ ಟಿಕ್ ಮಾರ್ಕ್ ಹಾಕಿ ದಿನಾಂಕ ಹಾಗೂ ಸ್ಥಳವನ್ನು ಧೃಡಿಕಾರಿಸಬೇಕು. ಇನ್ನು ನಾವು ಹಾಕಿರುವ ಅರ್ಜಿಯು ಸರಿಯಾಗಿ ಇದೆ ಎಂದು ಒಮ್ಮೆ ಪರಿಶೀಲಿಸಿ ನಂತರ ಕಂಫರ್ಮ್ ಕೊಟ್ಟರೆ ನಮಗೆ ಒಂದು ಅಪ್ಲಿಕೇಶನ್ ನಂಬರ್ ಬರುತ್ತದೆ. ಈ ಸಂಖ್ಯೆಯನ್ನು ಇಟ್ಟುಕೊಂಡು ಟ್ರ್ಯಾಕ್ ಎಂಬ ಆಯ್ಕೆಯನ್ನು ಆಯ್ದುಕೊಂಡು,ಅಪ್ಲಿಕೇಶನ್ ಟ್ರಾಕ್ ಮಾಡಬಹುದು.

ಅಪ್ಪು ಮಾಲೆ ಹಾಕಿದವರಿಗೆಲ್ಲಾ ಸ್ವಂತ ಖರ್ಚಿನಲ್ಲಿ ಊಟ ಹಾಕಿಸಿದ ಆಂಕರ್ ಅನುಶ್ರೀ. ವೈರಲ್ ವಿಡಿಯೋ ನೋಡಿ.

 

ರಾಜ್ಯದಲ್ಲಿ ಈಗ ಎಲ್ಲರ ಚಿತ್ತ ಪುನೀತ್ ಅವರ ಹುಟ್ಟು ಹಬ್ಬದತ್ತ. ಅಭಿಮಾನಿಗಳಿಗಂತೂ ಇದು ಯುಗಾದಿ ಗಿಂತ ಹೆಚ್ಚಿನ ಸಂಭ್ರಮ ತಂದಿದ್ದು, ಈ ಬಾರಿ ಕಳೆದ ವರ್ಷಕ್ಕಿಂತಲೂ ಇನ್ನು ವಿಶೇಷವಾಗಿ ಅಭಿಮಾನಿಗಳು ಅಪ್ಪು ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ಅಪ್ಪು ನಮ್ಮನ್ನೆಲ್ಲ ಆಗಲಿ ನೋಡುತ್ತಿದ್ದಂತೆ ಒಂದುವರೆ ವರ್ಷ ಕಳೆದೇ ಹೋಯಿತು. ಆದರೂ ಕೂಡ ಅವರ ಅಗಲಿಕೆ ನೋವು ಇನ್ನು ಕ್ಷೀಣಿಸಿಲ್ಲ.

ಅವರ ಹುಟ್ಟುಹಬ್ಬ ಹಾಗೂ ಪುಣ್ಯ ಸ್ಮರಣೆ ದಿನ ಕರ್ನಾಟಕದಲ್ಲಿ ಅರ್ಥಪೂರ್ಣವಾಗಿ ಅಪ್ಪು ಹಬ್ಬದಂತೆ ಆಚರಣೆ ಆಗುತ್ತಿದೆ. ಕಳೆದ ವರ್ಷ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಕೊನೆಯ ಚಿತ್ರವಾದ ಜೇಮ್ಸ್ ಸಿನಿಮಾ ವನ್ನು ರಿಲೀಸ ಮಾಡಲಾಗಿತ್ತು, ಜೇಮ್ಸ್ ಚಿತ್ರವನ್ನು ಕರ್ನಾಟಕದಾದ್ಯಂತ ಮೆಚ್ಚಿಕೊಂಡಾಡಿ ಸೂಪರ್ ಹಿಟ್ ಕೂಡ ಮಾಡಿ ಅಭಿಮಾನಿಗಳು ತಮ್ಮ ಕೈಲಾದ ಮಟ್ಟಿಗೆ ಈ ಪುಣ್ಯಾತ್ಮನಿಗೆ ನಮನ ಸಲ್ಲಿಸಿದ್ದರು.

ಈ ಬಾರಿ ಇನ್ನೂ ಒಂದು ಹೆಚ್ಚು ಮುಂದೆ ಹೋಗಿ ಅಪ್ಪು ಅವರ ಮಾಲೆ ಹಾಕಿಕೊಂಡು ಅಪ್ಪು ಹುಟ್ಟು ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಈಗಾಗಲೇ ವಿಜಯನಗರ, ಹೊಸಪೇಟೆ ಭಾಗದ ಅವರ ಅಭಿಮಾನಿಗಳು ಪುನೀತ್ ಪುತ್ಥಳಿ ಮುಂದೆ ನಿಂತು ಮಾಲೆ ಧರಿಸಿಕೊಂಡು ಕೇಸರಿ ಬಣ್ಣದ ವಸ್ತ್ರ, ಕೊರಳಿಗೆ ಅಪ್ಪು ಇರುವ ಡಾಲರ್ ಧರಿಸಿ ಅಪ್ಪು ಭಾವಚಿತ್ರ ಹಿಡಿದು ಪೂಜೆ ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿವೆ.

ಇದರ ಪರ ಹಾಗೂ ವಿರೋಧ ಚರ್ಚೆಗಳ ನಡುವೆ ನಡುವೆಯೂ ಇದಕ್ಕೆ ಕೇರ್ ಮಾಡದ ಅಪ್ಪು ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ದಿನ ಕಾಲ್ನಡಿಗೆಯಲ್ಲಿ ಬಂದು ಸ್ಮಾರಕವನ್ನು ದರ್ಶನ ಮಾಡುವ ತನಕ ಮಾಲೆಯನ್ನು ಧರಿಸೇ ಇರುವ ದೃಢ ನಿರ್ಧಾರದಲ್ಲಿದ್ದಾರೆ. ಅಲ್ಲಿಯವರೆಗೂ ಅಪ್ಪು ಅವರ ಆದರ್ಶ ಗುಣಗಳನ್ನು ಪಾಲಿಸಿಕೊಂಡು, ಅಪ್ಪು ಸ್ವಾಮಿ ಮಾಲೆ ಹಾಕಲು ಇರುವ ನಿಯಮಗಳಂತೆ ಪಾಲಿಸಿಕೊಂಡು ಹೋಗಲಿದ್ದಾರೆ.

ಇದೆಲ್ಲದರ ಜೊತೆ ಮತ್ತೊಂದು ವಿಷಯ ಈಗ ಬಾರಿ ಸುದ್ದಿ ಆಗುತ್ತಿದೆ. ಅದೇನೆಂದರೆ ಅಪ್ಪು ಅವರ ಅಪ್ಪಟ ಅಭಿಮಾನಿ ಆಗಿರುವ ನಿರೂಪಕಿ ಅನುಶ್ರೀ ಅವರು ಅಪ್ಪು ಮಾಲಾಧಾರಿಗಳನ್ನು ಕರೆಸಿ ಸ್ವಂತ ಖರ್ಚಿನಲ್ಲಿ ಊಟ ಹಾಕಿಸಿದ್ದಾರೆ. ಇದರ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಪ್ರತಿಷ್ಠಿತ ಹೋಟೆಲ್ ಅಲ್ಲಿ ಅಪ್ಪು ಮಲೆ ಧರಿಸುವ ಕೆಲವೊಂದು ಮಾಲಾದಾರಿಗಳಿಗೆ ಜೊತೆ ಅನುಶ್ರೀ ಅವರು ಮಾತಾಡಿಸುತ್ತಿರುವುದು ಮತ್ತು ಅವರನ್ನು ಊಟಕ್ಕೆ ಕರೆದಿರುವುದು ಇದರಲ್ಲಿ ಸ್ಪಷ್ಟ ಆಗುತ್ತಿದೆ.

ಈ ವಿಡಿಯೋದಲ್ಲಿ ಅಪ್ಪು ಅಭಿಮಾನಿಗಳು ಡಾ. ರಾಜಕುಮಾರ್ ಹಾಗೂ ಅಪ್ಪು ಅವರ ಗುಣಗಾನವನ್ನು ಭಕ್ತಿ ಗೀತೆಗಳ ರೀತಿ ಹಾಡಿದ್ದಾರೆ. ಮೊದಲಿಗೆ ಕರುನಾಡಿನ ರಸಿಕರ ರಾಜ ಗಂಧದಗುಡಿಯ ರಾಜಕುಮಾರ ಎಂದು ರಾಜಕುಮಾರ ಅವರನ್ನು ಹೊಗಳಿರುವ ಇವರು ನಂತರ ಪುನೀತ್ ರಾಜಕುಮಾರ್ ಅವರ ಗೀತೆಯನ್ನು ಸಹ ಹಾಡಿದ್ದಾರೆ. ನಿಮ್ಮ ನಡೆ-ನುಡಿಗೆ ನಮಗೆ ದಾರಿದೀಪ, ಆ ಮಾರ್ಗದಿ ನಡೆದರೆ ಬದುಕು ಸಾರ್ಥಕ ನಗುವಿನ ರಾಜಕುಮಾರ ಇತ್ಯಾದಿ ಪದಗಳನ್ನು ಅದರಲ್ಲಿ ಪೋಣಿಸಲಾಗಿದೆ.

ಕೊನೆಯಲ್ಲಿ ಇಬ್ಬರನ್ನು ಸೇರಿಸಿ ನೀವು ಮತ್ತೆ ಈ ಕರ್ನಾಟಕದಲ್ಲಿ ಹುಟ್ಟಿ ಬರಬೇಕು ಅದಕ್ಕಾಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ ಎನ್ನುವ ಸಾಲುಗಳನ್ನು ಸೇರಿಸುವ ಮೂಲಕ ದೇವರಿಗೆ ಕೂಡ ತಮ್ಮ ಮೊರೆಯನ್ನು ಇಟ್ಟಿದ್ದಾರೆ. ಈ ವಿಡಿಯೋವನ್ನು ನೋಡಿ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

ಮೊನ್ನೆಯಷ್ಟೇ 4ನೇ ಮದ್ವೆ ಆದ ನಟ ನರೇಶ್ & ಪವಿತ್ರ ಇಂದು ದುಬೈಗೆ ಹನಿಮೂನ್ ಗಾಗಿ ತೆರಳಿ, ಆನಂದದಲ್ಲಿ ತೇಲಾಡುತ್ತಿದ್ದಾರೆ ಈ ವೈರಲ್ ವಿಡಿಯೋ ನೋಡಿ.

 

ಕೆಲವು ತಿಂಗಳುಗಳಿಂದಲೂ ಭರ್ಜರಿ ಸುದ್ದಿಯಲ್ಲಿರುವ ಟಾಲಿವುಡ್ ನ ಸೂಪರ್ ಜೋಡಿ ನರೇಶ್ ಹಾಗೂ ಪವಿತ್ರ ಲೋಕೇಶ್ ಅವರು ಇತ್ತೀಚಿಗಷ್ಟೇ ತಾವು ವಿವಾಹವಾಗುವ ಕುರಿತು ಸೂಚನೆಯನ್ನು ನೀಡುವಂತೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಮನೆಯಲ್ಲಿ ಎಲ್ಲರ ಎದುರೆ ಕೈ ಸನ್ನೆ, ಕಣ್ಣುಸನ್ನೆ ಮಾಡುತ್ತಾ ಪೋಲಿ ಆಟ ಆಡುತ್ತಿದ್ದ ಈ ಜೋಡಿಯ ಚುಂಬನದ ವಿಡಿಯೋ ನೆಟ್ಟಿಗರು ಹುಬ್ಬೇರಿಸಿ ನೋಡುವಂತೆ ಮಾಡಿತ್ತು. ಹೈದರಾಬಾದ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಲು ಎಲ್ಲರೂ ಕಣ್ಣರಳಿಸಿ ನೋಡಿದ್ದರು.

ಅಷ್ಟೇ ಅಲ್ಲದೆ ಆಶೀರ್ವಾದ ಕೋರಿ ವಿಡಿಯೋ ಒಂದನ್ನು ಕೂಡ ಹರಿಬಿಟ್ಟಿದ್ದರು. ಇದೀಗ ಹೊಸದಾದ ಸುದ್ದಿ ಏನೆಂದರೆ ಪವಿತ್ರ ಲೋಕೇಶ್ ಹಾಗೂ ನರೇಶ್ ಜೋಡಿ ಹನಿಮೂನ್ಗಾಗಿ ದುಬೈಗೆ ತೆರಳಿದೆ. ನರೇಶ್ ಅವರು ಪವಿತ್ರಾ ಲೋಕೇಶ್ ಅವರನ್ನು ಮದುವೆ ಆಗಿರುವುದು ಅಭಿಮಾನಿಗಳಿಗೆ ಹೆಚ್ಚಿನ ಆಶ್ಚರ್ಯವನ್ನು ಉಂಟು ಮಾಡಿಲ್ಲ. ಯಾಕೆಂದರೆ ಈಗಾಗಲೇ ನರೇಶ್ ಅವರಿಗೆ ಮೂರು ವಿವಾಹಗಳಾಗಿವೆ. ಅಲ್ಲದೆ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ನರೇಶ್ ಅವರ ಕುರಿತಾದ ಅನೇಕ ವಿಷಯಗಳನ್ನು ಬಯಲು ಮಾಡಿದ್ದಾರೆ.

ಪವಿತ್ರಾ ಹಾಗೂ ನರೇಶ್ ಹೋಟೆಲ್ನಲ್ಲಿ ಒಟ್ಟಾಗಿ ಕಾಣಿಸಿಕೊಂಡಾಗಲೂ ಗಲಾಟೆ ಮಾಡಿ ಸುದ್ದಿಯಾಗಿದ್ದರು. ಪತ್ನಿಗೆ ವಿಚ್ಛೇದನ ನೀಡದೆ, ಈ ರೀತಿಯಾಗಿ ಪವಿತ್ರಳೊಂದಿಗೆ ಕದ್ದು ಮುಚ್ಚಿ ಹೋಟೆಲ್ ಗೆ ಹೋಗಿ ತಂಗುವುದು ಸರಿಯಲ್ಲ..ಎಂದು ಕೂಗಾಡಿದ್ದರು. ಇಷ್ಟೆಲ್ಲಾ ಆಗಿದ್ದರೂ ಕೂಡ ನರೇಶ್ ಅವರು ವಿ.ಚ್ಛೇ.ದನವನ್ನು ನೀಡುತ್ತಾರೆಯೇ ಹೊರತು ಪವಿತ್ರಾಳನ್ನು ಬಿಟ್ಟು ಕೊಡುವುದಿಲ್ಲ. ಆ ಬಳಿಕ ನರೇಶ್ ಅವರು ಪವಿತ್ರ ಲೋಕೇಶ್ ಅವರೊಂದಿಗೆ ಹಲವಾರು ವರ್ಷಗಳಿಂದ ಸಂಬಂಧವನ್ನು ಹೊಂದಿದ್ದಾರೆ ಎಂಬ ವದಂತಿಗಳು ಹರಡಲು ಪ್ರಾರಂಭವಾಯ್ತು.

ನರೇಶ್ ಹಾಗೂ ಪವಿತ್ರ ಅವರ ಮದುವೆಯ ವಿಚಾರವಾಗಿ ಅನೇಕ ಚರ್ಚೆಗಳು ನಡೆಯುತ್ತಲೇ ಇವೆ. ‘ಇದು ನಿಜವಾದ ವಿವಾಹವಲ್ಲ..ಈ ಎಲ್ಲಾ ಸುದ್ದಿಗಳು ಹಬ್ಬುತ್ತಿರುವುದು ಕೇವಲ ಒಂದು ಚಿತ್ರದ ಪ್ರಚಾರಕ್ಕಾಗಿ.. ಈ ರೀತಿಯ ಗಿಮಿಕ್ ಗಳನ್ನು ಚಿತ್ರರಂಗವು ಸಾಕಷ್ಟು ಬಾರಿ ಮಾಡಿದೆ…ನರೇಶ್ ಹಾಗೂ ಪವಿತ್ರ ಅವರ ಸ್ಟಂಟ್ ಈ ವಿಚಾರವಾಗಿ ಸ್ವಲ್ಪ ಅತಿಯಾಗಿದೆ’ ಎಂಬುದು ಹಲವರ ಅಭಿಪ್ರಾಯ.

‘ಮುಂದೆ ಇಬ್ಬರು ಜೊತೆಯಾಗಿ ನಡೆಯಲಿದ್ದೇವೆ’ ಎಂದು ಸಾಕ್ಷಿ ಹೇಳುವಂತಹ, ಪವಿತ್ರಾ ಹಾಗೂ ನರೇಶ್ ಅವರ ವಿವಾಹವು ಅನೇಕರ ಕುತೂಹಲ ಕೆರಳಿಸಿದೆ. ನವ ವಿವಾಹಿತರಿಂದಲೇ ಅಭಿಮಾನಿಗಳಿಗೆ ಸ್ಪಷ್ಟನೆ ಒಂದು ಬೇಕಿದೆ. ಚಿತ್ರದ ಪ್ರಚಾರಕ್ಕಾಗಿ ಇಷ್ಟೆಲ್ಲಾ ಮಾಡುತ್ತಿದ್ದಾರೆಯೇ? ಹಾಗಾದರೆ ಅದು ಯಾವ ಚಿತ್ರ? ಫ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ದೊಡ್ಡ ಬಜೆಟಿನ ಚಿತ್ರವೇ? ಚಿತ್ರವು ಫೇಲ್ ಆಗದೆ ಹೆಚ್ಚೆಚ್ಚು ಪ್ರದರ್ಶನ ನೀಡಿ ಲಾಭ ಗಳಿಸಿಕೊಡಲಿ ಎಂಬುದೇ ಈ ಎಲ್ಲಾ ಆಟಗಳ ಅಸಲಿ ಕಾರಣವೇ? ಈ ರೀತಿಯಾಗಿ ಅನೇಕ ಪ್ರಶ್ನೆಗಳು ದಕ್ಷಿಣ ಭಾರತದ ಅಭಿಮಾನಿಗಳಲ್ಲಿ ಕಾಡುತ್ತಿದೆಯಂತೆ.

ಇಷ್ಟಕ್ಕೂ ನಿಲ್ಲದೆ ಈ ದಂಪತಿಗಳ ಆಟವು ವಿದೇಶಕ್ಕೂ ವಿಸ್ತರಿಸಿದೆ. ಅಂದರೆ ಪವಿತ್ರ ಲೋಕೇಶ್ ಹಾಗೂ ನರೇಶ್ ಜೋಡಿಯು ಹನಿಮೂನ್ ಟ್ರಿಪ್ ಗಾಗಿ ದುಬೈಗೆ ಹೋಗಿದ್ದಾರೆ. ಹೊಸತಾಗಿ ಕೈ ಹಿಡಿದ ನವ ಮದುಮಕ್ಕಳಂತೆ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಈ ವರದಿಗಳನ್ನು ನಿರಾಕರಿಸಲಾಗಿದೆ. ಪ್ರೇಮ ಕಥೆಯೇ ಮೂಲಾಧಾರವಾಗಿರುವ ಚಿತ್ರವೊಂದರ ಚಿತ್ರೀಕರಣಕ್ಕಾಗಿ ನರೇಶ್ ಅವರು ದುಬೈಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಯಾವ ವರದಿ ಸುಳ್ಳು ಯಾವ ವರದಿ ನಿಜ ಎಂಬುದು ಅಸ್ಪಷ್ಟವಾಗಿದೆ ಆದರೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರ ಜೋಡಿಯನ್ನು ನೋಡಿದಾಗ ತಿಳಿಯುವ ಪ್ರಮುಖ ವಿಚಾರವೆಂದರೆ, ‘ವಯಸ್ಸು ಕೇವಲ ಸಂಖ್ಯೆಯಷ್ಟೇ.. ಜೀವನದಲ್ಲಿ ಹುರುಪು ವಯಸ್ಸಿಗೂ ಮೀರಿದ್ದು’.

ಈ ಹುಡುಗನ ಸಾಧನೆ ಮುಂದೆ ಅಂದು ಒಂದು ಡಜನ್ ವೈದ್ಯರು ತಲೆಬಾಗಿ ನಿಂತಿದ್ದರು ಯಾಕೆ ಗೊತ್ತಾ.? ನಿಜಕ್ಕೂ ಕಂಣಚ್ಚಲ್ಲಿ ನೀರು ಬರುತ್ತೆ.

 

ಲಿಯಾನ್ ಯೋಯಿ ಎನ್ನುವ ಚೀನಾ ದೇಶದ ಈ ಹುಡುಗನ ಬಗ್ಗೆ ನೀವು ಕೇಳಿರಬಹುದು, ಒಂದು ವೇಳೆ ಈ ಹುಡುಗ ಮಾಡಿರುವ ಸಾಧನೆ ಬಗ್ಗೆ ವಿಷಯ ಗೊತ್ತಿಲ್ಲ ಎಂದರೆ ಇವನ ಸಾಧನೆ ತಿಳಿದ ಬಳಿಕ ನೀವು ಇದ್ದಲ್ಲಿಯೇ ಕೂಡ ಇವನಿಗೆ ನಮಸ್ಕರಿಸುತ್ತೀರಿ. ಅಂತಹ ಒಂದು ಸಾಧನೆಯನ್ನು ತನ್ನ 11ನೇ ವಯಸ್ಸಿಗೆ ಮಾಡಿ ಮುಗಿಸಿ ಹೋಗಿದ್ದಾನೆ ಈತ. ಇಂದು ಲಿಯಾನ್ ಯೋಯಿ ನಮ್ಮೆಲ್ಲರೊಂದಿಗೆ ಇಲ್ಲ ಆದರೆ ಅವನು ಮಾಡಿರುವ ಆ ಒಂದು ಕೆಲಸದಿಂದ ಇಂದಿಗೂ ಸಹ ಅವನನ್ನು ನೆನೆಯುವಂತಾಗಿದೆ.

2014 ರಲ್ಲಿ ಲಿಯಾನ್ ಕೊನೆ ಉಸಿರೆಳೆದಿದ್ದ ಆದರೆ ಅಂದು ಒಂದು ಆಸ್ಪತ್ರೆಯ 12 ಡಾಕ್ಟರ್ ಗಳು ಅವನ ಮೃತ ದೇಹದ ಮುಂದೆ ತಲೆಬಾಗಿ ನಿಂತಿದ್ದರು. ಅದಕ್ಕೆ ಕಾರಣ ಏನು ಎಂದರೆ ಅಷ್ಟು ಚಿಕ್ಕ ವಯಸ್ಸಿಗೆ ಆತ ಯಾರು ಮಾಡಿರದಂತಹ ಸಾಧನೆ ಮಾಡಿ ಈ ಲೋಕದ ಯಾತ್ರೆ ಮುಗಿಸಿಕೊಂಡಿದ್ದ. ಲಿಯಾನ್ ಯೋಯಿ ಕೂಡ ಎಲ್ಲಾ ಮಕ್ಕಳಂತೆ, ಚೆನ್ನಾಗಿ ಆಡಿಕೊಂಡು ಓದಿಕೊಂಡು ಬೆಳೆಯುತ್ತಿದ್ದ ಆದರೆ ಆತನ 9ನೇ ವಯಸ್ಸಿನಲ್ಲಿ ವಿಪರೀತವಾದ ಜ್ವರ ಕಾಡುತ್ತದೆ.

ಮೊದಲಿಗೆ ಸಾಮಾನ್ಯ ಜ್ವರ ಎಂದು ನಿರ್ಲಕ್ಷಿಸಿ ಸಾಮಾನ್ಯ ಚಿಕಿತ್ಸೆ ಕೊಡಿಸಿದರು ನಂತರದಲ್ಲಿ ಅದು ಗುಣವಾಗದೆ ಹೋದಾಗ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ದಾಗ ಆತನಿಗೆ ಕ್ಯಾನ್ಸರ್ ಅಟ್ಯಾಕ್ ಆಗಿದೆ ಎನ್ನುವುದು ತಿಳಿಯುತ್ತದೆ. ಮಗನನ್ನು ಈ ಗಂಭೀರ ಕಾಯಿಲೆಯಿಂದ ಗುಣಪಡಿಸಬೇಕು ಎಂದುಕೊಂಡು ಹೆತ್ತ ತಂದೆ ತಾಯಿ ತಮ್ಮಲ್ಲಿದ್ದ ಹಣವನ್ನೆಲ್ಲ ಚಿಕಿತ್ಸೆಗಾಗಿ ಸುರಿಯುತ್ತಾರೆ. ಆದರೆ ದೈವ ನಿರ್ಣಯ ಬೇರೆಯೇ ಇತ್ತು ಇದ್ದೊಂದ ಮನೆಯನ್ನು ಮಾರಿ ಚಿಕಿತ್ಸೆಗೆ ಹಣ ಖರ್ಚು ಮಾಡಿದರೂ ಮಗನ ಆರೋಗ್ಯದಲ್ಲಿ ಚೇತರಿಕೆ ಕಾಣಲೇ ಇಲ್ಲ.

ಲಿಯಾನ್ ಯೋಯಿ ಗೆ ಬಾಲ್ಯದಿಂದಲೂ ಕೂಡ ವಿಜ್ಞಾನಿ ಆಗಬೇಕೆಂದು ಆಸೆ. ಲಿಯಾನ್ ಯೋಯಿ ಆಸ್ಪತ್ರೆ ಸೇರಿದ ಬಳಿಕ ಅಲ್ಲಿರುವ ವೈದ್ಯರ ಸೇವೆಗಳನ್ನೆಲ್ಲ ಕಂಡು ತಾನು ಸಹ ವೈದ್ಯ ಆಗಬೇಕು ಎಂದು ಆ ಕುರಿತ ಕೆಲವು ಪುಸ್ತಕಗಳನ್ನು ಓದಲು ಶುರು ಮಾಡುತ್ತಾನೆ. ನಂತರ ಅಲ್ಲಿರುವ ಒಂದು ವಿಷಯವನ್ನು ಬಹಳ ಮನಸ್ಸಿಗೆ ತೆಗೆದುಕೊಂಡು ಆ ಕುರಿತು ಸಾಧನೆ ಮಾಡಿ ದೇಶದ ಎಲ್ಲರೂ ಇವನ ಸಾವಿನ ದಿನ ಈತನಿಗೆ ನಮಸ್ಕರಿಸುವಂತೆ ಮಾಡಿದ್ದಾನೆ.

ಈ ರೀತಿ ಪುಸ್ತಕ ಓದುತ್ತಿದ್ದಂತೆ ಅವನಿಗೆ ಒಂದು ವಿಷಯ ಆಗುತ್ತದೆ ಅದೇನೆಂದರೆ ಅಂಗಾಂಗ ದಾನ ಎನ್ನುವ ವಿಷಯ ಅರಿವಿಗೆ ಬಂದಿರುತ್ತದೆ. ವೈದ್ಯರು ತಂದೆ ತಾಯಿಯನ್ನು ಕರೆದು ಮಗ ಗುಣವಾಗುವುದು ಅನುಮಾನ ಎಂದು ಹೇಳಿದಾಗ ತಂದೆ ತಾಯಿಯನ್ನು ಹತ್ತಿರಕ್ಕೆ ಕರೆದ ಈತ ನನಗೆ ಅರಿವಿದೆ ನಾನು ಇದರ ಜೊತೆ ಹೋರಾಡಲು ಸಾಧ್ಯವಿಲ್ಲ. ಆದರೆ ನಾನು ವೈದ್ಯ ಆಗಬೇಕು ಎಂದು ಕಂಡ ಕನಸು ಮಣ್ಣಾಗೋದು ಬೇಡ, ಹಾಗಾಗಿ ನನ್ನ ಅಂಗಾಂಗ ದಾನವನ್ನು ಮಾಡಿಬಿಡಿ.

ಈ ಮೂಲಕ ನಾನು ಇತರರಲ್ಲಿ ಜೀವಿಸುತ್ತೇನೆ ಎಂದು ಹೇಳಿ ಕೆಲ ಕ್ಷಣದಲ್ಲಿಯೇ ಮರಣ ಹೊಂದುತ್ತಾನೆ. ಆಗ ವೈದ್ಯರೆಲ್ಲರೂ ಆ ಹುಡುಗನ ಕಣ್ಣು ಹೃದಯ ಕಿಡ್ನಿ ಲಿವರ್ ಸೇರಿದಂತೆ ಜೀವಂತವಾಗಿ ಆರೋಗ್ಯವಾಗಿ ಉಳಿದಿದ್ದ ಈತನ ಅಂಗಗಳನ್ನು ತೆಗೆದುಕೊಳ್ಳುತ್ತಾರೆ. ಚೀನಾ ದೇಶದಲ್ಲಿ ದೇಶಕ್ಕಾಗಿ ಮಣಿದವರಿಗೆ ಮಾತ್ರ ಈ ಪರಿಯಾಗಿ ಎಲ್ಲರೂ ತಲೆಬಾಗಿ ನಮಿಸುತ್ತಾರೆ. ಆದರೆ ಆ ಹುಡುಗ ಅಷ್ಟು ಚಿಕ್ಕ ವಯಸ್ಸಿಗೆ ಮಾಡಿದ ನಿರ್ಧಾರ ಯಾವುದೇ ವೀರನಿಗಿಂತ ಕಡಿಮೆ ಇರಲಿಲ್ಲ, ಹಾಗಾಗಿ ಆಸ್ಪತ್ರೆಯ ಸಿಬ್ಬಂದಿ, ಆತನಿಗೆ ತಲೆಬಾಗಿ ನಮಿಸಿದ್ದ ಆ ಫೋಟೋಗಳು ವಿಡಿಯೋಗಳು ಎಲ್ಲೆಡೆ ಜನಪ್ರಿಯವಾಯಿತು. ಇಂದು ಕೂಡ ಲಿಯಾನ್ ಯೋಯಿ ವಿಷಯ ಕಿವಿಗೆ ಬಿದ್ದರೆ ಎಲ್ಲರೂ ಕೂಡ ಆತನಿಗೆ ನಮಸ್ಕರಿಸುತ್ತಾರೆ.

P.M ಹೊಸ ಯೋಜನೆ, ವರ್ಷಕ್ಕೆ 20 ರೂಪಾಯಿ ಪಾವತಿಸಿ 2 ಲಕ್ಷ ಪಡೆಯಿರಿ.

 

ಕೇಂದ್ರ ಸರ್ಕಾರವು ದೇಶದ ನಾಗರಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜನರ ಆರೋಗ್ಯ ಹಾನಿ ಆಗಿ ತೊಂದರೆಯಾದ ಸಂದರ್ಭದಲ್ಲಿ ಆರ್ಥಿಕ ಭದ್ರತೆ ಒದಗಿಸಲು ಕೆಲ ಯೋಜನೆಗಳನ್ನು ಜಾರಿಗೆ ತಂದಿದೆ. ಅಂತಹ ಯೋಚನೆಗಳಲ್ಲಿ ಪ್ರಧಾನಮಂತ್ರಿ ಸುರಕ್ಷಾ ಭೀಮ ಯೋಜನೆ ಬಹಳ ಜನಪ್ರಿಯವಾಗಿರುವಂತಹ ಯೋಜನೆ. ಆದರೆ ಇನ್ನು ಅನೇಕ ಮಂದಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ, ಆ ಕುರಿತ ಮಾಹಿತಿ ಮತ್ತು ಇದರ ಕುರಿತಾದ ಎಲ್ಲಾ ಅನುಕೂಲಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.

PMSBY ಅಂದರೆ ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ ಆಗಿದೆ. ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಹಲವು ಯೋಜನೆಗಳನ್ನು ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ ಕೂಡ ಒಂದು. ಈ ಯೋಜನೆಯು ದೇಶದಾದ್ಯಂತ ಹಲವಾರು ಜನರಿಗೆ ಅನುಕೂಲ ಮಾಡಿಕೊಡುವಂತಹ ಯೋಜನೆ ಆಗಿದೆ. ಒಂದು ಅರ್ಥದಲ್ಲಿ ಈ ಯೋಜನೆಯನ್ನು ತಪ್ಪದೆ ದೇಶದ ಎಲ್ಲಾ ನಾಗರಿಕರು ಕೂಡ ಹೊಂದಿರಬೇಕು ಎಂದರು ಸಹ ಆ ಮಾತು ತಪ್ಪಾಗಲಾರದು. ಆ ರೀತಿ ಕಡಿಮೆ ಹಣದಲ್ಲಿ ಖರೀದಿ ಮತ್ತು ಪಾವತಿ ಮಾಡಿ ಅನಾಹುತ ಆದ ಆಪತ್ಕಾಲದಲ್ಲಿ ಕೈಹಿಡಿಯುವಂತಹ ಉತ್ತಮ ಯೋಜನೆಗಳಲ್ಲಿ ಒಂದು ಈ ಯೋಜನೆ.

ಜೊತೆಗೆ ಇದನ್ನು ಯಾವುದೇ ವಿಮೆ ಕಂಪನಿ ಮಾತ್ರ ಅಲ್ಲದೆ ನಿಮ್ಮ ಉಳಿತಾಯ ಖಾತೆಗಳ ಮೂಲಕ ಪಡೆಯಬಹುದಾದರಿಂದ ಇದು ಇನ್ನೂ ಹೆಚ್ಚಿಗೆ ಸಾರ್ವಜನಿಕರಿಗೆ ಹತ್ತಿರವಾಗಿರುವ ಮತ್ತು ಅನುಕೂಲಕರವಾಗಿರುವ ಯೋಜನೆ ಎಂದು ಸಹ ಹೇಳಬಹುದು. ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ಅಡಿಯಲ್ಲಿ ನೋಂದಾಯಿತರಾಗಬೇಕು ಎಂದರೆ ಅವರ ಕೆವೈಸಿ ಅಪ್ಡೇಟ್ ಆಗಿರಬೇಕು ಅವರ ಉಳಿತಾಯ ಖಾತೆ ಅಥವಾ ಪೋಸ್ಟ್ ಆಫೀಸ್ ಖಾತೆ ಮೂಲಕ ನೋಂದಣಿ ಆಗಬಹುದು.

ಕೆಲವು ಬ್ಯಾಂಕ್ಗಳು ಹಾಗೂ ವಿಮೆ ಕಂಪನಿಗಳು ಕೂಡ ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆಯ ನೋಂದಣಿ ಮಾಡಿಕೊಳ್ಳುತ್ತವೆ. ಇದಕ್ಕೆ ನೀವು ಪ್ರೀಮಿಯಂ ಗಳನ್ನು ಕೂಡ ಕಟ್ಟಬೇಕು. ಆದರೆ ಅದು ಅತಿ ಕಡಿಮೆ ಮೊತ್ತದ್ದಾಗಿದೆ. ವರ್ಷಕ್ಕೆ 20 ರೂಗಳನ್ನು ನೀವು ಪಾವತಿ ಮಾಡಿದರೆ 2 ಲಕ್ಷದವರೆಗೆ ಅದರ ವಿಮೆ ಇರುತ್ತದೆ. ಜೊತೆಗೆ ವರ್ಷದಿಂದ ವರ್ಷಕ್ಕೆ ಇದನ್ನು ರಿನಿವಲ್ ಕೂಡ ಮಾಡಿಕೊಳ್ಳಬಹುದಾದ ಅನುಕೂಲತೆ ಇದೆ.

ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ ಅಡಿ ನೊಂದಾಯಿತರಾದರು ಒಂದು ವೇಳೆ ಯಾವುದಾದರೂ ಅ.ಪ.ಘಾ.ತಕ್ಕೆ ಒಳಗಾಗಿ ಸಾ.ವ.ನ್ನ.ಪ್ಪಿದರೆ ಅಥವಾ ಅಂಗವೈಫಲ್ಯ ಆದರೆ ಅವರಿಗೆ ಎರಡು ವರ್ಷದವರೆಗೆ ವಿಮೆ ಪಾವತಿ ಆಗುತ್ತದೆ. ಒಂದು ವೇಳೆ ಭಾಗಶಃ ಅಂಗವೈಫಲ್ಯ ಆದರೆ ಒಂದು ಲಕ್ಷದವರೆಗೆ ಅವರಿಗೆ ಹಣ ಕ್ಲೈಮ್ ಆಗುತ್ತದೆ. ಜೊತೆಗೆ ಇದಕ್ಕೆ ಪ್ರೇಮಿಯಂ ಅನ್ನು ನೀವೇ ಹೋಗಿ ಪಾವತಿ ಮಾಡುವ ಅವಶ್ಯಕತೆ ಏನು ಇಲ್ಲ. ನಿಮ್ಮ ಖಾತೆಯಿಂದ ಆಟೋ ಡೆಬಿಟ್ ಮೂಲಕ ಇದು ಪಾವತಿ ಆಗುತ್ತದೆ. ಕೆಲವೊಂದು ಬ್ಯಾಂಕ್ಗಳು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಇದರ ಪ್ರೇಮಿಯಂಗಳನ್ನು ಖರೀದಿಸುವ ಅನುಕೂಲ ಮಾಡಿಕೊಟ್ಟಿವೆ.

ಆ ಮೂಲಕ ಕೂಡ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಹೊಂದಿರುವವರು ಈ ಪ್ರೀಮಿಯಂ ಅನ್ನು ಖರೀದಿಸಬಹುದಾಗಿದೆ. ಈ ರೀತಿಯಲ್ಲಿ ಕೈಗೆಟುಕುವ ದರದಲ್ಲಿ ಕಟ್ಟಬಹುದಾದ ಪ್ರೀಮಿಯಂನೊಂದಿಗೆ ಜನ ಸಾಮಾನ್ಯರಿಗೆ ಸುರಕ್ಷತೆ ಹಾಗೂ ಭದ್ರತೆ ಒದಗಿಸುವ ಪ್ರೀಮಿಯಂ ಇದಾಗಿದೆ. ತಪ್ಪದೆ ನೀವು ಹಾಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರು ಚಂದಾದಾರರಾಗಿರಿ ಹಾಗೂ ಈ ಮಾಹಿತಿ ಹೆಚ್ಚಿನ ಜನರಿಗೆ ತಲುಪುವಂತೆ ಶೇರ್ ಮಾಡಿ.