Home Blog Page 29

ಒಂದು ನಿಂಬೆಹಣ್ಣು ಮತ್ತೆ ಕೇವಲ 3 ಸಾಮಗ್ರಿಯಲ್ಲಿ ಸುಲಭವಾಗಿ ಐಸ್ ಕ್ಯಾಂಡಿ ಮಾಡಿ.! ಈ ಬೇಸಿಗೆಗೆ ಮನೆಯಲ್ಲೇ ಮಾಡಿ ಆರೋಗ್ಯಕರ ಐಸ್ ಕ್ರೀಮ್

ಬೇಸಿಗೆ ಕಾಲದಲ್ಲಿ ಐಸ್ ಕ್ಯಾಂಡಿಗಳಿಗೆ ಬೇಡಿಕೆ ಹೆಚ್ಚು. ಏಕೆಂದರೆ ಬಿಸಿಲಿನ ತಾಪಮಾನ ಹೆಚ್ಚಾಗಿ ಇರುವುದರಿಂದ ಆ ಸಂದರ್ಭದಲ್ಲಿ ತಣ್ಣಗಿರುವಂತಹ ಆಹಾರ ಪದಾರ್ಥಗಳನ್ನು ತಿನ್ನಬೇಕು ಎಂದು ಅನ್ನಿಸುತ್ತಿರುತ್ತದೆ. ಹಾಗಾಗಿ ಹೆಚ್ಚಿನ ಜನ ಹೊರಗಡೆ ಸಿಗುವಂತಹ ಐಸ್ ಕ್ಯಾಂಡಿ ಗಳನ್ನು ಅಥವಾ ತಂಪಾದ ಜ್ಯೂಸ್ ಗಳನ್ನು ತಂದು ಕುಡಿಯುತ್ತಿರುತ್ತಾರೆ.

ಆದರೆ ಅವುಗಳನ್ನು ಸೇವನೆ ಮಾಡುವುದರ ಬದಲು ಮನೆಯಲ್ಲಿಯೇ ಸುಲಭವಾಗಿ ಐಸ್ ಕ್ಯಾಂಡಿ ಮಾಡಿಕೊಂಡು ಸೇವನೆ ಮಾಡುವುದು ತುಂಬಾ ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದಲೂ ಕೂಡ ನಾವು ನಮ್ಮ ಮನೆಯಲ್ಲಿಯೇ ಐಸ್ ಕ್ಯಾಂಡಿ ಗಳನ್ನು ಮಾಡಿ ಸೇವನೆ ಮಾಡುವುದು ಬಹಳ ಒಳ್ಳೆಯದು ಹೊರಗಡೆ ಮಾರುವಂತಹ ಐಸ್ ಕ್ಯಾಂಡಿಗಳಲ್ಲಿ ಕೆಲವೊಂದಷ್ಟು ಕೆಮಿಕಲ್ ಪದಾರ್ಥಗಳನ್ನು ಉಪಯೋಗಿಸಿರುತ್ತಾರೆ.

ಆದ್ದರಿಂದ ಅವುಗಳನ್ನು ಸೇವನೆ ಮಾಡುವುದರ ಬದಲು ಆರೋಗ್ಯಕರ ವಾಗಿ ಶುಚಿಯಾಗಿ, ರುಚಿಯಾಗಿ ನಾವೇ ನಮ್ಮ ಮನೆಯಲ್ಲಿ ತಯಾರಿಸಿ ಕೊಂಡು ಕುಟುಂಬದವರೆಲ್ಲರೂ ಕೂಡ ಸೇವನೆ ಮಾಡಬಹುದಾಗಿದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೇವಲ ಮೂರೇ ಮೂರು ಪದಾರ್ಥ ಇದ್ದರೆ ಸಾಕು ಸುಲಭವಾಗಿ ಐಸ್ ಕ್ಯಾಂಡಿ ಹೇಗೆ ಮಾಡುವುದು ಹಾಗೂ ಆ ಮೂರು ವಸ್ತುಗಳು ಯಾವುದು ಅದನ್ನು ಹೇಗೆ ತಯಾರಿಸುವುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ತಕ್ಷಣ ಹಣದ ಅವಶ್ಯಕತೆ ಇದ್ರೆ 21 ಅಕ್ಕಿಕಾಳಿನಿಂದ ಈ ರೀತಿ ಮಾಡಿ.!

ಮೊದಲನೆಯದಾಗಿ ಐಸ್ ಕ್ಯಾಂಡಿ ಮಾಡುವುದಕ್ಕೆ ಬೇಕಾಗಿರುವಂತಹ ಮೂರು ಪದಾರ್ಥಗಳು ಯಾವುದು ಎಂದು ನೋಡುವುದಾದರೆ.
* ಒಂದು ನಿಂಬೆಹಣ್ಣು
* ಸಕ್ಕರೆ
* ಕಾರ್ನ್ ಫ್ಲೋರ್

ಮೊದಲು ನಿಂಬೆ ಹಣ್ಣಿನ ಮೇಲ್ಭಾಗದ ಸಿಪ್ಪೆಯನ್ನು ತೆಗೆದುಕೊಳ್ಳಬೇಕು ಆನಂತರ ನಿಂಬೆ ಹಣ್ಣಿನ ರಸವನ್ನು ಬೇರ್ಪಡಿಸಿ ಇಟ್ಟುಕೊಳ್ಳಬೇಕು. ಆನಂತರ ಸ್ಟೌ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದರಲ್ಲಿ ಅರ್ಧ ಲೀಟರ್ ನಷ್ಟು ನೀರನ್ನು ಹಾಕಬೇಕು ಆ ನೀರಿಗೆ ನಿಂಬೆಹಣ್ಣಿನ ಎರಡರಿಂದ ಮೂರು ಸಣ್ಣ ಸಿಪ್ಪೆಯನ್ನು ಹಾಕಿ ಅದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

ಈ ರೀತಿ ಮಾಡುವುದರಿಂದ ಅದರಲ್ಲಿ ಇರುವಂತಹ ಅಂಶ ನೀರಿನಲ್ಲಿ ಇಳಿಯುತ್ತದೆ ಆನಂತರ ಅದಕ್ಕೆ ಬೇಕಾಗುವಷ್ಟು ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಸಕ್ಕರೆ ಕರಗಿದ ಮೇಲೆ ಸ್ವಲ್ಪ ನೀರಿಗೆ ಒಂದು ಚಮಚದಷ್ಟು ಕಾನ್ಫ್ಲೋರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಆ ನೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು ಕೊನೆಯಲ್ಲಿ ನಿಂಬೆಹಣ್ಣಿನ ರಸವನ್ನು ಹಾಕಿ ಐದರಿಂದ 10 ನಿಮಿಷ ಚೆನ್ನಾಗಿ ಮಿಶ್ರಣ ಮಾಡಬೇಕು.

ಈ ಸುದ್ದಿ ಓದಿ:- ಮುರಿದು ಹೋಗಿರುವ ಮೂಳೆಗಳನ್ನು ವೇಗವಾಗಿ ಜೋಡಿಸುತ್ತೆ ಇದರ ಎಲೆ. ಕೈಕಾಲು ಸೊಂಟ ಮಂಡಿ ಜಾಯಿಂಟ್ ಪೈನ್ ಗೂ ಇದು ರಾಮಬಾಣ.!

ಈ ರೀತಿ ಮಿಶ್ರಣ ಮಾಡಿದಂತಹ ನೀರನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು ಆನಂತರ ನಿಮ್ಮ ಮನೆಯಲ್ಲಿ ಐಸ್ ಕ್ರೀಮ್ ತಯಾರಿಸಲು ಇರುವಂತಹ ಐಸ್ ಕ್ಯಾಂಡಿ ಮೋಲ್ಡ್ ಒಳಗಡೆ ಆ ನೀರನ್ನು ಹಾಕಿ ಅದರ ಮೇಲೆ ಅಲ್ಯೂಮಿನಿಯಂ ಪೇಪರ್ ಅನ್ನು ಹಾಕಿ ಚೆನ್ನಾಗಿ ಕವರ್ ಮಾಡಿಕೊಳ್ಳಬೇಕು.

ಆನಂತರ ಅದರ ಮಧ್ಯಭಾಗದಲ್ಲಿ ಚಾಕುವಿನಿಂದ ಹೋಲ್ ಮಾಡಿ ಅದಕ್ಕೆ ಐಸ್ ಕ್ಯಾಂಡಿ ಸ್ಟಿಕ್ ಅನ್ನು ಹಾಕಿ ಫ್ರಿಡ್ಜ್ ನಲ್ಲಿ ಏಳರಿಂದ ಎಂಟು ಗಂಟೆಗಳ ತನಕ ಇಡಬೇಕು. ನಿಮ್ಮ ಮನೆಯಲ್ಲಿ ಐಸ್ ಕ್ಯಾಂಡಿಕ್ ಮೋಲ್ಡ್ ಇಲ್ಲದೆ ಇದ್ದರೆ ಒಂದು ಸ್ಟೀಲ್ ಲೋಟಕ್ಕೆ ಹಾಕಿ ಅದರ ಮೇಲೆ ಒಂದು ಪ್ಲಾಸ್ಟಿಕ್ ಕವರ್ ಹಾಕಿ ಅದರ ಸುತ್ತ ಬಿಗಿಯಾಗಿ ರಬ್ಬರ್ ಹಾಕಬೇಕು ಅದರ ಮಧ್ಯಕ್ಕೆ ಹೋಲ್ ಮಾಡಿ ಅಲ್ಲಿಗೆ ಸ್ಪೂನ್ ಹಾಕಿ.

ಅದನ್ನು ಸಹ ಏಳರಿಂದ ಎಂಟು ಗಂಟೆಗಳ ತನಕ ಫ್ರಿಡ್ಜ್ ನಲ್ಲಿ ಇಡಬೇಕು ಆನಂತರ ಅದನ್ನು ತೆಗೆಯುವ ಸಂದರ್ಭದಲ್ಲಿ ಒಂದು ಪಾತ್ರೆಯಲ್ಲಿ ತಣ್ಣೀರನ್ನು ಹಾಕಿ ಅದರೊಳಗೆ ಅದನ್ನು ಇಟ್ಟು ಆನಂತರ ಸುಲಭವಾಗಿ ನೀವು ಐಸ್ ಕ್ಯಾಂಡಿಯನ್ನು ತೆಗೆಯಬಹುದು ಈ ರೀತಿ ಸುಲಭವಾಗಿ ಅನುಸರಿಸುವುದರಿಂದ ನೀವೇ ನಿಮ್ಮ ಮನೆಯಲ್ಲಿ ಐಸ್ ಕ್ಯಾಂಡಿಗಳನ್ನು ತಯಾರಿಸಬಹುದಾಗಿದೆ.

ತಕ್ಷಣ ಹಣದ ಅವಶ್ಯಕತೆ ಇದ್ರೆ 21 ಅಕ್ಕಿಕಾಳಿನಿಂದ ಈ ರೀತಿ ಮಾಡಿ.!

 

ಜೀವನ ಎಂದರೆ ಒಂದೇ ಸಮನಾಗಿ ಇರುವುದಿಲ್ಲ ಏರಿಳಿತ ಇದ್ದೇ ಇರುತ್ತದೆ. ಒಂದು ದಿನ ಇದ್ದಂತೆ ಮತ್ತೊಂದು ದಿನ ಇರುವುದಿಲ್ಲ. ಒಂದು ದಿನ ಹಣ ಇದ್ದಂತೆ ಮತ್ತೊಂದು ದಿನ ಒಂದು ರೂಪಾಯಿ ಹಣಕಾಸು ಕೈಯಲ್ಲಿ ಇಲ್ಲದೆ ಇರುವ ಪರಿಸ್ಥಿತಿ ಬರುತ್ತದೆ. ಹಣಕಾಸು ಹೊಂದಾಣಿಕೆ ಮಾಡುವುದಕ್ಕೆ ಏನು ಮಾಡಬೇಕು ಎಂದು ದಾರಿ ಕಾಣದೆ ತಲೆಯ ಮೇಲೆ ಕೈ ಹಾಕಿ ಕೂರುವ ಪರಿಸ್ಥಿತಿ ಬಂದಾಗ ಚಿಂತೆ ಮಾಡುವುದು ಬೇಡ.

ಅದಕ್ಕಾಗಿಯೇ ಅದಕ್ಕೆ ಪರಿಹಾರ ಮಾರ್ಗ ಏನು ಮಾಡಿಕೊಳ್ಳಬೇಕು ಎನ್ನುವಂತಹ ಮಾಹಿತಿಯನ್ನು ನಾವು ಈ ದಿನ ತಿಳಿಯೋಣ. ಹಾಗಾದರೆ ಪ್ರತಿಯೊಬ್ಬರಿಗೂ ಕೂಡ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಇದ್ದರೂ ಅದನ್ನು ಕೇವಲ ಅಕ್ಕಿ ಕಾಳಿನಿಂದ ಹೇಗೆ ಸರಿಪಡಿಸಿಕೊಳ್ಳ ಬಹುದು ಎಂದು ನೋಡೋಣ.

ಅಕ್ಕಿ ಇದು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಅಕ್ಕಿ ಇಲ್ಲದ ಜೀವನವನ್ನು ನಾವು ಕಲ್ಪನೆ ಮಾಡಿಕೊಳ್ಳುವುದಕ್ಕೂ ಕೂಡ ಅಸಾಧ್ಯ. ಅನ್ನ ಪರಬ್ರಹ್ಮ ಸ್ವರೂಪo ಅಂತ ಹೇಳುತ್ತಾರೆ. ಅಕ್ಕಿ ನಮ್ಮ ಜೀವಕ್ಕೆ ಜೀವನಕ್ಕೆ ಚೈತನ್ಯವನ್ನು ನೀಡುವಂತಹ ವಸ್ತುವು ಕೂಡ ಹೌದು. ಇನ್ನು ಪೂಜೆ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಅಕ್ಕಿಗಂತೂ ತುಂಬಾ ಮಹತ್ವದ ಸ್ಥಾನ ಇದೆ.

ಈ ಸುದ್ದಿ ಓದಿ:- ಹಳೆ ಪ್ಯಾಂಟ್ ನಿಂದ ಕುಶನ್ ರೋಲ್ ಮಾಡುವ ಸುಲಭ ವಿಧಾನ.!

ಅಕ್ಕಿಯನ್ನು ಅಕ್ಷತೆ ಎಂದು ಸಹ ಕರೆಯಲಾಗು ತ್ತದೆ. ಅಕ್ಷತೆ ಎಂದರೆ ಎಂದಿಗೂ ಮುಗಿಯದ ವಸ್ತು ಪೂಜೆಗೆ ಅಕ್ಷತೆಯನ್ನು ಬಳಸುವುದರಿಂದ ಮನೆಯಲ್ಲಿ ಆಹಾರ ಪದಾರ್ಥಗಳಿಗೆ ಹಣಕಾಸಿಗೆ ಎಂದಿಗೂ ಕೊರತೆಯಾಗುವುದಿಲ್ಲ. ಅಕ್ಷತೆಯಿಲ್ಲದೆ ಯಾವುದೇ ಪೂಜೆಯೂ ಸಹ ಪೂರ್ಣಗೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಪೂಜೆಯ ಸಮಯದಲ್ಲಿ ಅಕ್ಷತೆಯನ್ನು ತಪ್ಪಾಗಿ ಬಳಸುವುದರಿಂದ ಜೀವನದಲ್ಲಿ ನೆಗಿಟಿವ್ ಎನರ್ಜಿ ನಿಮ್ಮತ್ತ ಹರಿದು ಬರುತ್ತದೆ. ಮತ್ತು ಹಣಕಾಸಿನ ಸಮಸ್ಯೆ ಹೆಚ್ಚಾಗುತ್ತದೆ ಎಂದರೆ ನಿಮಗೆ ಅಚ್ಚರಿಯಾಗ ಬಹುದು ಹೌದು ಪೂಜೆಯ ಸಮಯದಲ್ಲಿ ಪರಿಪೂರ್ಣವಾದ ಅಕ್ಕಿ ಕಾಳನ್ನು ಅಕ್ಷತೆ ಮಾಡಿ ಬಳಸಬೇಕು.

ತುಂಡಾಗಿರುವಂತಹ ಅಕ್ಕಿ ಕಾಳನ್ನು ಅಕ್ಷತೆಯಾಗಿ ಬಳಸಬಾರದು ಇದರಿಂದ ದೇವರ ಅವ ಕೃಪೆಗೆ ಪಾತ್ರರಾಗಬೇಕಾಗುತ್ತದೆ. ಇದು ಹಣಕಾಸಿನ ತೊಂದರೆಗೂ ಕೂಡ ದಾರಿ ಮಾಡಿಕೊಡುತ್ತದೆ. ಹಾಗಾಗಿ ಪೂಜೆಯ ಸಂದರ್ಭದಲ್ಲಿ ಮುರಿದ ಅಥವಾ ತುಂಡಾದ ಅಕ್ಷತೆಯನ್ನು ಬಳಕೆ ಮಾಡಬೇಡಿ.

ಈ ಸುದ್ದಿ ಓದಿ:- ಮುರಿದು ಹೋಗಿರುವ ಮೂಳೆಗಳನ್ನು ವೇಗವಾಗಿ ಜೋಡಿಸುತ್ತೆ ಇದರ ಎಲೆ. ಕೈಕಾಲು ಸೊಂಟ ಮಂಡಿ ಜಾಯಿಂಟ್ ಪೈನ್ ಗೂ ಇದು ರಾಮಬಾಣ.!

ಪೂಜೆಯಲ್ಲಿ ಬಳಸುವ ಎಲ್ಲಾ ಅಕ್ಷತೆಗಳು ಅಖಂಡವಾಗಿರಬೇಕು ಅನ್ನುವುದನ್ನು ನೆನಪಿನಲ್ಲಿಡಿ. 6 ಅಕ್ಕಿಯ ಕಾಳನ್ನು ಶುಕ್ರವಾರ ಕುಂಕುಮದೊಂದಿಗೆ ಹಣೆಗೆ ಹಚ್ಚುವುದರಿಂದ ಆ ವ್ಯಕ್ತಿಯಲ್ಲಿನ ನಕಾರಾತ್ಮಕ ಶಕ್ತಿ ತೊಲಗಿ ಧನಾತ್ಮಕ ಶಕ್ತಿ ಎನ್ನುವುದು ಹೆಚ್ಚಾಗುತ್ತದೆ ಧನ ಆಕರ್ಷಣೆಯಾಗುತ್ತದೆ ಸಂಕಷ್ಟಗಳು ದೂರವಾಗಿ ಅವನ ಅದೃಷ್ಟವೇ ಬದಲಾಗುತ್ತದೆ.

ಅಕ್ಕಿ ಕಾಳುಗಳನ್ನು ನಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ ನಮಗೆ ಇರುವಂತಹ ಆರ್ಥಿಕ ಸಂಕಷ್ಟಗಳು ದೂರವಾಗುತ್ತದೆ ಪದೇಪದೇ ಹಣದ ನಷ್ಟ ಉಂಟಾಗುತ್ತಿದ್ದರೆ ಅಕ್ಷತೆಗಳು ಇದನ್ನು ತಡೆದು ನಿಲ್ಲಿಸುತ್ತದೆ. ಹಣ ಕೈಯಲ್ಲಿ ಉಳಿಯುವಂತೆ ಮಾಡುತ್ತದೆ. ಜೊತೆಗೆ ಅಕ್ಕಿಯನ್ನು ವಿಶೇಷವಾಗಿ ಪವಾಡದ ಧಾನ್ಯ ಎಂದೇ ಹೇಳುತ್ತೇವೆ ಶುಕ್ರವಾರ ಅಕ್ಕಿಯನ್ನು ಕೆಲವೊಂದು ವಿಶೇಷ ಉಪಾಯಗಳಿಗೆ ಬಳಸುವುದರಿಂದ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತೇವೆ.

ಹಾಗೂ ನೀವು ಯಾವುದಾದರು ನಿಮ್ಮ ಜೀವನದಲ್ಲಿ ಬಹು ಮುಖ್ಯವಾದ ನಿರ್ಣಯಗಳನ್ನು ತೆಗೆದುಕೊಳ್ಳುವಂತಹ ಸಂದರ್ಭದಲ್ಲಿ ತುಂಬಾ ಗೊಂದಲಕ್ಕೆ ಈಡಾಗಿದ್ದರೆ ಈ ಉಪಾಯ ಮಾಡಿ. ಕೇವಲ ಚಿಟಿಕೆಯಷ್ಟು ಅಕ್ಷತೆಯನ್ನು ಮಾತೆ ಮಹಾಲಕ್ಷ್ಮಿ ಪಾದಕ್ಕೆ ಸಮರ್ಪಣೆ ಮಾಡಿ ಗೊಂದಲ ನಿವಾರಣೆ ಮಾಡುವಂತೆ ಭಕ್ತಿಯಿಂದ ಪ್ರಾರ್ಥನೆ ಮಾಡಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಹಳೆ ಪ್ಯಾಂಟ್ ನಿಂದ ಕುಶನ್ ರೋಲ್ ಮಾಡುವ ಸುಲಭ ವಿಧಾನ.!

 

ಸಾಮಾನ್ಯವಾಗಿ ಮಹಿಳೆಯರು ಮನೆಯಲ್ಲಿ ಯಾವುದೇ ರೀತಿಯ ಪದಾರ್ಥ ಇರಲಿ ವಸ್ತುವಾಗಿರಲಿ ಅದನ್ನು ಅಷ್ಟು ಸುಲಭವಾಗಿ ಆಚೆ ಬಿಸಾಡುವುದಕ್ಕೆ ಇಷ್ಟಪಡುವುದಿಲ್ಲ. ಆದಷ್ಟು ಅದನ್ನು ಮತ್ತೆ ಬೇರೆ ಯಾವ ಕೆಲಸಕ್ಕೆ ಬಳಸಬಹುದು ಮತ್ತೆ ಅದನ್ನು ಹೇಗೆ ಪುನರ್ ಬಳಕೆ ಮಾಡಬಹುದು ಎನ್ನುವಂತಹ ಮಾಹಿತಿಯನ್ನು ಅವರು ಹುಡುಕುತ್ತಿರುತ್ತಾರೆ.

ಆದರೆ ಕೆಲವೊಂದಷ್ಟು ಜನರಿಗೆ ಅದರ ಬಗ್ಗೆ ಮಾಹಿತಿ ತಿಳಿದಿರು ತ್ತದೆ. ಆದರೆ ಇನ್ನೂ ಕೆಲವೊಂದಷ್ಟು ಜನರಿಗೆ ಅದರ ಬಗ್ಗೆ ಯಾವುದೇ ಮಾಹಿತಿಯು ಕೂಡ ಇರುವುದಿಲ್ಲ ಆದ್ದರಿಂದ ಅಂತವರಿಗೆ ಈ ದಿನ ನಾವು ಹೇಳುತ್ತಿರುವಂತಹ ಮಾಹಿತಿ ತುಂಬಾ ಅನುಕೂಲವಾಗಿರುತ್ತದೆ ಎಂದೇ ಹೇಳಬಹುದು ಹಾಗೂ ಈ ಕೆಲಸ ಪ್ರತಿಯೊಬ್ಬರು ತಪ್ಪದೆ ಮಾಡುತ್ತಾರೆ ಎಂದೇ ಹೇಳಬಹುದಾಗಿದೆ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಪದಾರ್ಥ ಅಥವಾ ವಸ್ತು ಇದ್ದರೆ ಅದನ್ನು ಹೇಗೆ ಮತ್ತೆ ಪುನರ್ ಬಳಕೆ ಮಾಡಬಹುದು ಅದನ್ನು ಹೇಗೆ ತಯಾರಿಸುವುದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ಮುರಿದು ಹೋಗಿರುವ ಮೂಳೆಗಳನ್ನು ವೇಗವಾಗಿ ಜೋಡಿಸುತ್ತೆ ಇದರ ಎಲೆ. ಕೈಕಾಲು ಸೊಂಟ ಮಂಡಿ ಜಾಯಿಂಟ್ ಪೈನ್ ಗೂ ಇದು ರಾಮಬಾಣ.!

ಮನೆಯಲ್ಲಿ ಪುರುಷರು ಉಪಯೋಗಿಸುವಂತಹ ಪ್ಯಾಂಟ್ ಗಳು ಹಳೆಯದಾದರೆ ಅದನ್ನು ಕೆಲವೊಂದಷ್ಟು ಜನ ಆಚೆ ಬಿಸಾಡುತ್ತಿರುತ್ತಾರೆ ಇನ್ನು ಕೆಲವೊಂದಷ್ಟು ಜನ ಅದನ್ನು ಮನೆ ಸ್ವಚ್ಛ ಮಾಡುವುದಕ್ಕೆ ಬಟ್ಟೆಯಾಗಿ ಉಪಯೋಗಿಸುತ್ತಾರೆ.

ಆದರೆ ಈ ದಿನ ನಾವು ಹೇಳುವಂತಹ ಈ ವಿಧಾನವನ್ನು ನೀವು ಅನುಸರಿಸಿದರೆ ಅದು ಬಹಳ ಉತ್ತಮವಾದಂತಹ ಕೆಲಸಕ್ಕೆ ಬರುತ್ತದೆ ಎಂದೇ ಹೇಳಬಹುದು. ಹಾಗಾದರೆ ಮನೆಯಲ್ಲಿರುವಂತಹ ಹಳೆಯ ಪ್ಯಾಂಟ್ ಗಳನ್ನು ಹೇಗೆ ಮರುಬಳಕೆ ಮಾಡುವುದು ಅದನ್ನು ಹೇಗೆ ತಯಾರಿಸುವುದು ಎಂದು ಈ ಕೆಳಗೆ ತಿಳಿಯೋಣ.

ಮೊದಲು ಪ್ಯಾಂಟ್ ಕೆಳಭಾಗದಲ್ಲಿ ಅಂದರೆ ಕೆಳಗಿನ ಭಾಗದಿಂದ ಸರಿ ಸುಮಾರು ನಿಮಗೆ ಕುಶನ್ ಮೇಲೆ ಹಾಕುವುದಕ್ಕೆ ದಿಂಬು ಎಷ್ಟು ಉದ್ದ ಸರಿಹೋಗುತ್ತದೆಯೋ ಅಷ್ಟು ಉದ್ದಕ್ಕೆ ಅದನ್ನು ಕತ್ತರಿಸಿಕೊಳ್ಳಬೇಕು ಅದನ್ನು ಹಿಂದಕ್ಕೆ ಮಾಡಿ ಒಂದು ಭಾಗದಲ್ಲಿ ಹೊಲಿಗೆ ಹಾಕಿಕೊಳ್ಳಬೇಕು ಆನಂತರ ನಿಮ್ಮ ಮನೆಯಲ್ಲಿ ಯಾವುದಾದರೂ ಮತ್ತಷ್ಟು ಹಳೆ ಬಟ್ಟೆಗಳು ಇದ್ದರೆ ಅದನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಬೇಕು ಆನಂತರ ಅದನ್ನು ಅದರ ಒಳಗಡೆಗೆ ತೂರಿಸುತ್ತಾ ಹೋಗಬೇಕು.

ಈ ಸುದ್ದಿ ಓದಿ:- ಕಿಟಕಿ ಗಾಜು ಹೀಗೆ ಕ್ಲೀನ್ ಮಾಡಿ ಮತ್ತೆ ಹೊಸತಾಗಿ ಶೈನ್ ಆಗುತ್ತೆ….||

ಈ ರೀತಿ ಹೆಚ್ಚಿನ ಹಳೆ ಬಟ್ಟೆಗಳನ್ನು ಅದರ ಒಳಗಡೆ ತೂರಿಸಿ ಅದರ ಕೊನೆಯ ಭಾಗದಲ್ಲಿ ಸೂಜಿ ದಾರದಿಂದ ಹೊಲೆದರೆ ಸಾಕು ನಿಮಗೆ ಕುಶನ್ ಮೇಲೆ ಹಾಕುವಂತಹ ಸಣ್ಣದಾಗಿರುವಂತಹ ಉದ್ದನೆಯ ದಿಂಬು ತಯಾರಾಗುತ್ತದೆ.ಹೆಚ್ಚಿನ ಜನ ಕುಶನ್ ಮೇಲೆ ದಿಂಬು ಹಾಗೂ ಉದ್ದನೆಯ ದಿಂಬನ್ನು ಮಾರುಕಟ್ಟೆಗಳಲ್ಲಿ ಖರೀದಿ ಮಾಡಿ ಅದನ್ನು ಇಡುತ್ತಾರೆ.

ಆದರೆ ಈ ಮಾಹಿತಿ ತಿಳಿದರೆ ನೀವು ಅದನ್ನು ಖರೀದಿ ಮಾಡುವುದಿಲ್ಲ ಬದಲಿಗೆ ಮೇಲೆ ಹೇಳಿದ ಈ ವಿಧಾನವನ್ನು ನೀವು ಖಂಡಿತವಾಗಿಯೂ ಮನೆಯಲ್ಲಿ ಪ್ರಯತ್ನಿಸುತ್ತೀರಿ ಹಾಗೂ ಹಳೆಯ ಬಟ್ಟೆ ಎಂದು ಬಿಸಾಡುವ ಬದಲು ಮತ್ತೆ ಪುನರ್ ಬಳಕೆ ಮಾಡಿಕೊಳ್ಳಬಹುದು.

ಇದನ್ನು ನೀವೇ ನಿಮ್ಮ ಕೈಯಾರೆ ತಯಾರಿಸಿರುವುದರಿಂದ ನಿಮಗೆ ಮತ್ತಷ್ಟು ಸಂತೋಷ ಇರುತ್ತದೆ ಆದ್ದರಿಂದ ಯಾವುದೇ ವಸ್ತುವನ್ನು ಸಹ ಆಚೆ ಹಾಕುವ ಮೊದಲು ಅದನ್ನು ಹೇಗೆ ಮತ್ತೆ ಮರುಬಳಕೆ ಮಾಡಿಕೊಳ್ಳಬಹುದು ಎನ್ನುವಂತಹ ಮಾಹಿತಿಗಳನ್ನು ಪ್ರತಿಯೊಬ್ಬರು ತಿಳಿದುಕೊಂಡಿರುವುದು ಬಹಳ ಒಳ್ಳೆಯದು.

ಈ ಸುದ್ದಿ ಓದಿ:- ಹೀಗೆ ಮಾಡಿ ಸಾಕು ಎಷ್ಟೇ ಕರಟಿದ ಪಾತ್ರೆ ಮತ್ತೆ ಹೊಸತಾಗುತ್ತೆ.!

ಹೀಗೆ ಮನೆಯಲ್ಲಿ ಮತ್ತೆ ಯಾವುದೇ ಹಳೆ ವಸ್ತು ಅಥವಾ ಪದಾರ್ಥವಾಗಿರಬಹುದು ಅದನ್ನು ಮತ್ತೆ ಹೇಗೆ ಮರುಬಳಕೆ ಮಾಡಬೇಕು ಎಂದು ತಿಳಿದುಕೊಂಡಿದ್ದರೆ ಯಾವುದೇ ವಸ್ತು ಉಪಯೋಗಕ್ಕೆ ಬಾರದೆ ಆಚೆ ಬಿಸಾಡುವ ಅಗತ್ಯ ಇರುವುದಿಲ್ಲ.

ಮುರಿದು ಹೋಗಿರುವ ಮೂಳೆಗಳನ್ನು ವೇಗವಾಗಿ ಜೋಡಿಸುತ್ತೆ ಇದರ ಎಲೆ. ಕೈಕಾಲು ಸೊಂಟ ಮಂಡಿ ಜಾಯಿಂಟ್ ಪೈನ್ ಗೂ ಇದು ರಾಮಬಾಣ.!

 

ಜನರು ಯಾವುದೇ ರೀತಿಯ ಸಮಸ್ಯೆ ಇದ್ದರೂ ಅದನ್ನು ಗುಣಪಡಿಸಿ ಕೊಳ್ಳುವುದಕ್ಕೆ ಮೊದಲು ಆಸ್ಪತ್ರೆಗಳಿಗೆ ಹೋಗಿ ಅಲ್ಲಿ ಔಷಧಿಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಪ್ರತಿಯೊಂದಕ್ಕೂ ಕೂಡ ಆಸ್ಪತ್ರೆಗಳಿಗೆ ಹೋಗಿ ಔಷಧಿಗಳನ್ನು ತೆಗೆದುಕೊಳ್ಳುವುದು ತಪ್ಪು ಬದಲಿಗೆ ಅದನ್ನು ನಾವೇ ನಮ್ಮ ಮನೆಯಲ್ಲಿ ಹೇಗೆ ಸರಿಪಡಿಸಿಕೊಳ್ಳಬಹುದು ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ತುಂಬಾ ಒಳ್ಳೆಯದು.

ಅದರಲ್ಲೂ ಕೈಕಾಲು ಸೊಂಟ ಮಂಡಿ ನೋವು ಹೇಗೆ ಇನ್ನೂ ಹಲವಾರು ರೀತಿಯ ಸಮಸ್ಯೆಗಳು ನಮಗೆ ಕಾಣಿಸಿಕೊಂಡರೆ ಅದನ್ನು ನಾವು ಮನೆಯಲ್ಲಿ ಹೇಗೆ ಕೆಲವೊಂದಷ್ಟು ಆಯುರ್ವೇದ ಔಷಧಿಗಳನ್ನು ಮಾಡಿ ಉಪಯೋಗಿಸಬೇಕು ಎನ್ನುವುದನ್ನು ಸಹ ತಿಳಿದಿರಬೇಕಾಗುತ್ತದೆ

50 60 ವರ್ಷ ದಾಟಿದ ತಕ್ಷಣವೇ ಪ್ರತಿಯೊಬ್ಬರಿಗೂ ಕೂಡ ಕೈಕಾಲು ಮಂಡಿ ನೋವು ಹೇಗೆ ಇನ್ನೂ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಇತ್ತೀಚಿನ ದಿನದಲ್ಲಿ 30 ವರ್ಷ ದಾಟಿದ ತಕ್ಷಣವೇ ಇಂಥ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ ಇದೆಲ್ಲದಕ್ಕೂ ಕೂಡ ಬಹಳ ಪ್ರಮುಖವಾದಂತಹ ಕಾರಣ ಏನು ಎಂದು ನೋಡುವುದಾದರೆ.

ಈ ಸುದ್ದಿ ಓದಿ:- ಕಿಟಕಿ ಗಾಜು ಹೀಗೆ ಕ್ಲೀನ್ ಮಾಡಿ ಮತ್ತೆ ಹೊಸತಾಗಿ ಶೈನ್ ಆಗುತ್ತೆ….||

ಅವರ ದೇಹದಲ್ಲಿ ನಿಶಕ್ತತೆ ಹೌದು ಅವರು ಸೇವನೆ ಮಾಡುತ್ತಿರುವಂತಹ ಆಹಾರದಲ್ಲಿ ಯಾವುದೇ ರೀತಿಯಾದಂತಹ ಪೌಷ್ಟಿಕಾಂಶ ಅವರಿಗೆ ಸಿಗುತ್ತಿಲ್ಲ. ಆದ್ದರಿಂದ ಅವರು ತಿಂದಂತಹ ಆಹಾರದಿಂದ ಯಾವುದೇ ರೀತಿಯ ಅಂಶ ಸೇರದೆ ಇದ್ದಂತಹ ಸಂದರ್ಭದಲ್ಲಿ ಅವರ ದೇಹದಲ್ಲಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.

ಅದೇ ರೀತಿಯಾಗಿ ಈ ಮಂಡಿ ನೋವು ಸೊಂಟ ನೋವು ಜಾಯಿಂಟ್ ಪೈನ್ ಇಂತಹ ಸಮಸ್ಯೆಗಳು ಕೂಡ ಒಂದು ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮಂಡಿ ನೋವು ಸೊಂಟ ನೋವು ಜಾಯಿಂಟ್ ಫೈನ್ ಮುರಿದಿರುವ ಮೂಳೆಯನ್ನು ಸಹ ಜೋಡಿಸಬಲ್ಲದು ಈ ಒಂದು ಎಲೆ.

ಹಾಗಾದರೆ ಇಷ್ಟೆಲ್ಲ ಶಕ್ತಿಯನ್ನು ಹೊಂದಿರುವಂತಹ ಆ ಒಂದು ಎಲೆ ಯಾವುದು ಹಾಗೂ ಅದನ್ನು ಹೇಗೆ ನಾವು ಉಪಯೋಗಿಸುವುದರಿಂದ ಮುರಿದಿರುವ ಮೂಳೆಯನ್ನು ಸೇರಿಸಬಹುದು ಮತ್ತು ಸಂಧಿವಾದ ಸೊಂಟ ನೋವು ಬೆನ್ನು ನೋವು ಇಂತಹ ನೋವುಗಳನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ಹೀಗೆ ಮಾಡಿ ಸಾಕು ಎಷ್ಟೇ ಕರಟಿದ ಪಾತ್ರೆ ಮತ್ತೆ ಹೊಸತಾಗುತ್ತೆ.!

ಈಗ ನಾವು ಹೇಳುತ್ತಿರುವಂತಹ ಈ ಒಂದು ಎಲೆಯನ್ನು ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧಿಯಲ್ಲಿ ಅತಿ ಹೆಚ್ಚಾಗಿ ಬಳಸುತ್ತಿದ್ದಂತಹ ಎಲೆಯಾಗಿದೆ. ಹಾಗಾದರೆ ಆ ಒಂದು ಎಲೆ ಯಾವುದು ಎಂದು ನೋಡುವುದಾದರೆ ಮುಳ್ಳು ಅರವೇ ಸೊಪ್ಪು.

ಯಾವುದೇ ಮೂಳೆ ಮುರಿತ ಆಗಿದ್ದರೂ ಮೊದಲು ಅವರು ಆಸ್ಪತ್ರೆಗಳಲ್ಲಿ ತೋರಿಸಿ ಬಂದ ನಂತರ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಈ ಒಂದು ಎಲೆಯ ರಸವನ್ನು ಕುಡಿಯಬೇಕು ಈ ರೀತಿ ಕುಡಿಯುತ್ತಾ ಬಂದರೆ ಕಡಿಮೆ ಸಮಯದಲ್ಲಿಯೇ ನಿಮ್ಮ ಮುರಿದ ಮೂಳೆಗಳು ಬೇಗನೆ ಸರಿಯಾಗುತ್ತದೆ.

ಈ ಸೊಪ್ಪಿನಲ್ಲಿ ಹೇರಳವಾದ ಕಬ್ಬಿಣಾಂಶ ವಿಟಮಿನ್ಸ್ ಮಿನರಲ್ಸ್, ನ್ಯೂಟ್ರಿಯೆಂಟ್ಸ್ ಪಾಸ್ಪರಸ್ ಹೀಗೆ ಇನ್ನೂ ಹಲವಾರು ರೀತಿಯ ಪೌಷ್ಟಿಕಾಂಶಗಳು ಇದರಲ್ಲಿ ಇದೆ. ಕೇವಲ ಮೂಳೆಮುರಿತ ಆಗಿರುವವರು ಇದನ್ನು ಸೇವನೆ ಮಾಡುವುದಷ್ಟೇ ಅಲ್ಲದೆ ಸಾಮಾನ್ಯ ಜನರು ಕೂಡ ಈ ಸೊಪ್ಪನ್ನು ಉಪಯೋಗಿಸಿ ಸಾಂಬಾರ್ ಪಲ್ಯ ಹೀಗೆ ಹಲವಾರು ರೀತಿಯ ಅಡಿಗೆಯಲ್ಲಿ ಇದನ್ನು ಉಪಯೋಗಿಸಿ ಸೇವನೆ ಮಾಡುವುದು ತುಂಬಾ ಒಳ್ಳೆಯದು. ಇದನ್ನು ಸೇವನೆ ಮಾಡುವುದರಿಂದ ನಿಮ್ಮ ಮೂಳೆಗಳಿಗೆ ಶಕ್ತಿ ಹೆಚ್ಚಾಗುತ್ತದೆ.

ಕಿಟಕಿ ಗಾಜು ಹೀಗೆ ಕ್ಲೀನ್ ಮಾಡಿ ಮತ್ತೆ ಹೊಸತಾಗಿ ಶೈನ್ ಆಗುತ್ತೆ….||

 

ಯಾವುದೇ ಹಬ್ಬ ಹರಿದಿನ ಮನೆಯಲ್ಲಿ ಯಾವುದೇ ರೀತಿಯ ಶುಭ ಕಾರ್ಯ ಮಾಡುವಂತಹ ಸಂದರ್ಭದಲ್ಲಿ ನಾವು ನಮ್ಮ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡುತ್ತೇವೆ. ಆದರೆ ಸಣ್ಣಪುಟ್ಟ ವಿಷಯಗಳಲ್ಲಿ ಚಿಕ್ಕಪುಟ್ಟ ಕೆಲಸಗಳನ್ನು ನಾವು ಕೆಲವೊಮ್ಮೆ ಮಾಡುವುದಿಲ್ಲ ಅದೇ ನೆಂದರೆ ಕಿಟಕಿ ಗಾಜು ಹೀಗೆ ಇಂತಹ ಸೂಕ್ಷ್ಮವಾದಂತಹ ಸ್ಥಳಗಳಲ್ಲಿ ನಾವು ಸ್ವಚ್ಛ ಮಾಡಲು ಹೋಗುವುದಿಲ್ಲ ಅದನ್ನೆಲ್ಲ ಯಾರು ಗಮನಿಸುತ್ತಾರೆ ಎನ್ನುವಂತಹ ಮಾತನ್ನು ಪ್ರತಿಯೊಬ್ಬರು ಹೇಳುತ್ತಿರುತ್ತಾರೆ.

ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸು ವುದರಿಂದ ನೀವು ಎಷ್ಟೇ ಕೆಲಸ ಮಾಡುತ್ತಿದ್ದರು ಈ ಒಂದು ಕೆಲಸವನ್ನು ಕೂಡ ಅಷ್ಟೇ ಸುಲಭವಾಗಿ ಕಡಿಮೆ ಸಮಯದಲ್ಲಿ ಯಾವುದೇ ರೀತಿಯ ಹೆಚ್ಚಿನ ಪದಾರ್ಥಗಳನ್ನು ಉಪಯೋಗಿಸದೆ ಕಿಟಕಿ ಗಾಜುಗಳನ್ನು ಸ್ವಚ್ಛಗೊಳಿಸಬಹುದಾಗಿದೆ.

ಹಾಗಾದರೆ ಈ ದಿನ ನಮ್ಮ ಮನೆಗಳಲ್ಲಿ ಇರುವಂತಹ ಕಿಟಕಿ ಗಾಜು ಗಳನ್ನು ಹೇಗೆ ಸ್ವಚ್ಛಗೊಳಿಸುವುದು ಹಾಗೂ ಅದನ್ನು ಸ್ವಚ್ಛಗೊಳಿಸುವು ದಕ್ಕೆ ಯಾವ ಪದಾರ್ಥ ಬೇಕಾಗುತ್ತದೆ ಹಾಗೂ ಅದನ್ನು ಹೇಗೆ ಅನುಸರಿಸುವುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ಕೆಲವೊಂದಷ್ಟು ಜನ ತಮ್ಮ ಮನೆಯ ಕಿಟಕಿ ಗಾಜುಗಳನ್ನು ಒಂದು ತಿಂಗಳಿಗೆ ಅಥವಾ ಎರಡು ತಿಂಗಳಿಗೊಮ್ಮೆ ಸ್ವಚ್ಛ ಮಾಡುತ್ತಿರುತ್ತಾರೆ.

ಈ ಸುದ್ದಿ ಓದಿ:- ಈ ರೀತಿ ಮಾಡಿ ಹಾಸಿಗೆಯಲ್ಲಿ ತಿಗಣೆ, ಕೆಟ್ಟವಾಸನೆ, ಮುಗ್ಗುಲು ವಾಸನೆ ಬರೋದಿಲ್ಲ.!

ಅವರು ಕೇವಲ ಒಂದು ಪೇಪರ್ ಸಹಾಯದಿಂದ ನೀರು ಹೀಗೆ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ಅದನ್ನು ಸ್ವಚ್ಛ ಮಾಡುತ್ತಿರುತ್ತಾರೆ. ಆದರೆ ಹಾಗೆ ಮಾಡು ವುದರಿಂದ ಸಂಪೂರ್ಣವಾದಂತಹ ಕೊಳೆಯನ್ನು ನೀವು ತೆಗೆಯಲು ಸಾಧ್ಯವಿಲ್ಲ. ಆದರೆ ಈಗ ನಾವು ಹೇಳುವ ಈ ವಿಧಾನವನ್ನು ಅನುಸರಿಸಿ ದರೆ ಸಂಪೂರ್ಣವಾಗಿ ಕಿಟಕಿ ಗಾಜುಗಳನ್ನು ಸ್ವಚ್ಛಗೊಳಿಸಬಹುದು.

ಹಾಗಾದಈ ಅದನ್ನು ಹೇಗೆ ಸ್ವಚ್ಛಗೊಳಿಸುವುದು ಅದಕ್ಕೆ ಯಾವ ಪದಾರ್ಥ ಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ. ಈ ಒಂದು ವಿಧಾನವನ್ನು ಅನುಸರಿಸುವುದಕ್ಕೆ ನಿಮಗೆ ಒಂದೇ ಒಂದು ಪದಾರ್ಥ ಇದ್ದರೆ ಸಾಕು ನಿಮ್ಮ ಮನೆಯ ಕಿಟಕಿ ಗಾಜನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಬಹುದು.

ಅದೇನೆಂದರೆ ನೀವು ಉಪಯೋಗಿಸುವಂತಹ ಟೂತ್ ಪೇಸ್ಟ್. ಒಂದು ಬೌಲ್ ಗೆ ಒಂದು ಚಮಚದಷ್ಟು ಟೂತ್ ಪೇಸ್ಟ್ ಹಾಕಿ ಸ್ವಲ್ಪ ನೀರನ್ನು ಹಾಕಿ ಅದನ್ನು ಚೆನ್ನಾಗಿ ಕಲಸಿಕೊಳ್ಳಬೇಕು ಆನಂತರ ಒಂದು ಸ್ಕ್ರಬ್ಬರ್ ಸಹಾಯದಿಂದ ಅದನ್ನು ಅಜ್ಜಿ ಅದನ್ನು ನಿಮ್ಮ ಕಿಟಕಿ ಗಾಜಿನಲ್ಲಿ ಉಜ್ಜಿ ಐದರಿಂದ ಹತ್ತು ನಿಮಿಷ ಹಾಗೆ ಬಿಡಬೇಕು ಆನಂತರ ಒಂದು ಬಟ್ಟೆ ಅಥವಾ ಸ್ಕ್ರಬ್ಬರ್ ಅನ್ನು ತೇವ ಮಾಡಿ ಅದನ್ನು ಒಂದು ಕಡೆಯಿಂದ ಉಜ್ಜುತ್ತಾ ಬರಬೇಕು.

ಈ ಸುದ್ದಿ ಓದಿ:- ಕೇವಲ 10 ನಿಮಿಷದಲ್ಲಿ ಫ್ರಿಡ್ಜ್ ಕ್ಲೀನ್ ಮಾಡುವ ಸುಲಭ ವಿಧಾನ.!

ಈ ರೀತಿ ಮಾಡಿ ಕೊನೆಯಲ್ಲಿ ಒಂದು ತೇವವಾಗಿರುವ ಬಟ್ಟೆಯನ್ನು ತೆಗೆದು ಸ್ವಚ್ಛ ಮಾಡಿದರೆ ಸಾಕು ನಿಮ್ಮ ಕಿಟಕಿ ಗಾಜಿನ ಮೇಲೆ ಎಷ್ಟೇ ಹೊಳೆ ಧೂಳು ಕಲೆ ಇದ್ದರೂ ಅದು ಸಂಪೂರ್ಣವಾಗಿ ಆಚೆ ಬರುತ್ತದೆ ಆ ನಂತರ ಒಂದು ಟಿಶ್ಯೂ ಪೇಪರ್ ತೆಗೆದುಕೊಂಡು ಒಂದು ಕಡೆಯಿಂದ ಸ್ವಚ್ಛ ಮಾಡಿದರೆ ಸಾಕು ನಿಮ್ಮ ಕಿಟಕಿಯ ಗಾಜು ಪಳಪಳನೆ ಹೊಳೆಯುತ್ತದೆ.

ಈ ಒಂದು ವಿಧಾನವನ್ನು ಅನುಸರಿಸುವುದರಿಂದ ನಿಮ್ಮ ಕಿಟಕಿ ಗಾಜುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬಹುದು ಹಾಗೂ ಯಾವುದೇ ರೀತಿಯ ಹೆಚ್ಚಿನ ಶ್ರಮ ಪಡದೆ ಇದನ್ನು ಸ್ವಚ್ಛ ಮಾಡಬಹುದು ವಾರಕ್ಕೆ 15 ದಿನಕ್ಕೆ ಒಮ್ಮೆ ಈ ರೀತಿ ಮಾಡಿಕೊಳ್ಳುವುದರಿಂದ ಇನ್ನೂ ಹೆಚ್ಚಿನ ಕೊಳೆ ಆಗುವುದನ್ನು ತಪ್ಪಿಸಬಹುದು. ಆದ್ದರಿಂದ ಪ್ರತಿಯೊಬ್ಬರೂ ಈ ಮಾಹಿತಿಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಕಪ್ಪಗಾದ ಬಾಣಲೆಯನ್ನು ಕ್ಲೀನ್ ಮಾಡಲು ಇದನ್ನು ಹಾಕಿ ಆಶ್ಚರ್ಯ ಪಡ್ತೀರ………….!! ಕಿಚನ್ ಟಿಪ್ಸ್….||

ಸಾಮಾನ್ಯವಾಗಿ ಮನೆಯಲ್ಲಿರುವಂತಹ ಪ್ರತಿಯೊಬ್ಬ ಮಹಿಳೆಯರು ಕೂಡ ಮನೆಯಲ್ಲಿ ಮಾಡುವಂತಹ ಕೆಲಸಗಳಾಗಿರಬಹುದು ಅಥವಾ ಇನ್ಯಾವುದೇ ವಸ್ತುವನ್ನು ಹೇಗೆ ಮತ್ತೆ ಮರುಬಳಕೆ ಮಾಡಿಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ಹಲವಾರು ಕಡೆ ಹುಡುಕುತ್ತಿರುತ್ತಾರೆ. ಏಕೆ ಎಂದರೆ ಯಾವುದೇ ಕೆಲಸವನ್ನು ಹೇಗೆ ಸುಲಭವಾಗಿ ಮಾಡಬಹುದು ಹಾಗೂ ಅದು ನಮಗೆ ಹೇಗೆ ಅನುಕೂಲವಾಗುತ್ತದೆ.

ಹಾಗೂ ನಾವು ಬಿಸಾಡುವಂತಹ ವಸ್ತುವನ್ನು ಯಾವ ಕೆಲಸಕ್ಕೆ ತುಂಬಾ ಅನುಕೂಲವಾಗುವಂತೆ ಬಳಸಬಹುದು ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ಈ ದಿನ ನಾವು ಹೇಳುವಂತಹ ಮಾಹಿತಿ ಮನೆಯಲ್ಲಿರುವಂತಹ ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು. ಇವುಗಳಿಂದ ಅವರು ಬಿಸಾಡುವಂತಹ ವಸ್ತುವನ್ನು ಮತ್ತೆ ಮರುಬಳಕೆ ಮಾಡಿಕೊಳ್ಳಬಹುದು.

ಹಾಗೂ ಅವುಗಳನ್ನು ಮರುಬಳಕೆ ಮಾಡಿಕೊಳ್ಳುವುದರಿಂದ ನಮ್ಮ ಕೆಲಸ ಇನ್ನೂ ಸುಲಭವಾಗುತ್ತದೆ ಎಂದೇ ಹೇಳಬಹುದು. ಹಾಗಾದರೆ ಯಾವ ಕೆಲವು ವಸ್ತುಗಳನ್ನು ಬಿಸಾಡುವ ಬದಲು ಮತ್ತೆ ಮರುಬಳಕೆ ಮಾಡಿಕೊಳ್ಳಬಹುದು ಹಾಗೂ ಅವುಗಳನ್ನು ಹೇಗೆ ಯಾವ ಕೆಲಸಗಳಿಗೆ ಉಪಯೋಗಿಸಿಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ಹೀಗೆ ಮಾಡಿ ಸಾಕು ಎಷ್ಟೇ ಕರಟಿದ ಪಾತ್ರೆ ಮತ್ತೆ ಹೊಸತಾಗುತ್ತೆ.!

* ಮೊದಲನೆಯದಾಗಿ ಕಾಫಿ ಟೀ ಸೋಸುವಂತಹ ಜಾಲರಿ ಹೌದು ಹೆಚ್ಚು ದಿನದವರೆಗೆ ಇದನ್ನು ಉಪಯೋಗಿಸುತ್ತಾ ಬಂದರೆ ಅದು ಹಾಳಾಗುತ್ತದೆ ಆದ್ದರಿಂದ ಕೆಲವೊಬ್ಬರು ಅದನ್ನು ಬಿಸಾಡುತ್ತಾರೆ ಆದರೆ ಈ ಮಾಹಿತಿ ತಿಳಿದರೆ ನೀವು ಮತ್ತೆ ಅದನ್ನು ಮರುಬಳಕೆ ಮಾಡಿಕೊಳ್ಳುತ್ತೀರಿ. ಟೀ ಸೋಸುವಂತಹ ಜಾಲರಿ ಹಾಳಾಗಿದ್ದರೆ ಅದರ ಮಧ್ಯಭಾಗದಲ್ಲಿರುವ ಜಾಲರಿಯನ್ನು ಚಾಕುವಿನ ಸಹಾಯದಿಂದ ಕತ್ತರಿಸಿ ತೆಗೆಯಬೇಕು.

ಆನಂತರ ಅದರ ಮಧ್ಯ ಭಾಗಕ್ಕೆ ಸ್ವಲ್ಪ ಬೆಂಕಿಯನ್ನು ತಾಕಿಸಿ ಅದನ್ನು ಸ್ಟ್ಯಾಂಡ್ ರೀತಿ ಅಂದರೆ ಮೊಳಕೆ ಸಿಕ್ಕಿಸುವ ರೀತಿ ಮಾಡಿಕೊಳ್ಳಬೇಕು. ಇದನ್ನು ಒಂದು ಕಡೆ ನೇತು ಹಾಕಿ ಅದರ ಮಧ್ಯಭಾಗದಲ್ಲಿ ಇರುವಂತಹ ಜಾಗಕ್ಕೆ ಚಿಕ್ಕದಾಗಿರುವಂತಹ ಲೋಟಗಳು ಸಾಂಬಾರ್ ಸೌಟ್ ಹೀಗೆ ಇಂತಹ ವಸ್ತುಗಳನ್ನು ಅದರಲ್ಲಿ ನೇತು ಹಾಕಬಹುದು ಇದರಿಂದ ಆ ವಸ್ತುಗಳು ನಿಮಗೆ ಸುಲಭವಾಗಿ ಸಿಗುತ್ತದೆ ಹಾಗೂ ಚಿಕ್ಕ ಅಡುಗೆ ಮನೆ ಇರುವವರಿಗೆ ಸುಲಭವಾಗಿ ಕೈಗೆ ಸಿಗುವಂತೆ ವಸ್ತುಗಳನ್ನು ಇಟ್ಟುಕೊಳ್ಳ ಬಹುದು.

* ಎರಡನೆಯದಾಗಿ ಟೂತ್ ಪೇಸ್ಟ್ ಖಾಲಿಯಾದ ತಕ್ಷಣ ನಾವು ಅದನ್ನು ಆಚೆ ಹಾಕುತ್ತೇವೆ ಆದರೆ ಅದನ್ನು ಆಚೆ ಹಾಕುವುದರ ಬದಲು ನಿಮ್ಮ ಸಿಂಕ್ ನಲ್ಲಿ ಬರುವಂತಹ ನೀರನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸುವಂತೆ ಬಳಸಬಹುದು. ಪೇಸ್ಟ್ ಕವರ್ ಹಿಂಭಾಗವನ್ನು ಸ್ವಲ್ಪ ಕತ್ತರಿಸಿ ಅದನ್ನು ಸ್ವಚ್ಛ ಮಾಡಿ ಅದನ್ನು ನೆಲ್ಲಿಗೆ ಹಾಕಿ ನೀರನ್ನು ಆನ್ ಮಾಡಿದರೆ ಸ್ವಲ್ಪ ಪ್ರಮಾಣದಲ್ಲಿ ನೀರು ಬರುತ್ತದೆ ಇದರಿಂದ ಅತಿ ಹೆಚ್ಚು ನೀರು ಖರ್ಚಾಗುವುದಿಲ್ಲ.

ಈ ಸುದ್ದಿ ಓದಿ:- ಈ ರೀತಿ ಮಾಡಿ ಹಾಸಿಗೆಯಲ್ಲಿ ತಿಗಣೆ, ಕೆಟ್ಟವಾಸನೆ, ಮುಗ್ಗುಲು ವಾಸನೆ ಬರೋದಿಲ್ಲ.!

* ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿ ಡಿಶ್ ವಾಷರ್ ಹಾಗೂ ಲಿಕ್ವಿಡ್ ಇಂತಹ ಪದಾರ್ಥಗಳನ್ನು ನಾವು ಪ್ಲಾಸ್ಟಿಕ್ ಬಾಟಲ್ ನಲ್ಲಿ ಖರೀದಿ ಮಾಡುತ್ತೇವೆ ಆದರೆ ಅವು ಖಾಲಿಯಾದ ತಕ್ಷಣ ನಾವು ಅದನ್ನು ಆಚೆ ಹಾಕುತ್ತೇವೆ ಆದರೆ ಅದರ ಮೇಲ್ಭಾಗವನ್ನು ಕತ್ತರಿಸಿ ಅದನ್ನು ಸ್ವಚ್ಛವಾಗಿ ತೊಳೆದರೆ ಒಂದು ಪ್ಲಾಸ್ಟಿಕ್ ಬೌಲ್ ರೆಡಿಯಾಗುತ್ತದೆ.

ಇದಕ್ಕೆ ನೀವು ಅಡುಗೆ ಮನೆಯಲ್ಲಿ ಉಪಯೋಗಿಸುವಂತಹ ಸೌಟ್ ಸ್ಪೂನ್ ಇವುಗಳನ್ನು ಇಡಬಹುದು ಅಥವಾ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಹೀಗೆ ಇಂತಹ ವಸ್ತುಗಳನ್ನು ಇಡಬಹುದು ಅಥವಾ ಸ್ಟಡಿ ಟೇಬಲ್ ಮೇಲೆ ಇಟ್ಟುಕೊಂಡು ಅದರಲ್ಲಿ ಪೆನ್ನು ಪೆನ್ಸಿಲ್ ರಬ್ಬರ್ ಹೀಗೆ ಅಲ್ಲಿ ಇರುವಂತಹ ಹಲವಾರು ರೀತಿಯ ವಸ್ತುಗಳನ್ನು ಅದರೊಳಗೆ ಇಟ್ಟು ಸುಲಭವಾಗಿ ಉಪಯೋಗಿಸಬಹುದು. ಹಾಗೂ ಎಲ್ಲವೂ ಕೂಡ ಒಂದೇ ಸ್ಥಳದಲ್ಲಿ ಸಿಗುತ್ತದೆ ಇದು ನಿಮಗೆ ತುಂಬಾ ಅನುಕೂಲವಾಗುತ್ತದೆ.

* ಅಡುಗೆ ಮನೆಯಲ್ಲಿರುವಂತಹ ಬಾಣಲಿ ಎಣ್ಣೆಯಲ್ಲಿ ಕಾದು ಕೆಳಭಾಗದಲ್ಲಿ ಕಪ್ಪಾಗಿರುತ್ತದೆ ಅದನ್ನು ಸ್ವಚ್ಛ ಮಾಡುವುದಕ್ಕೆ ಒಂದು ಗಾಜಿನ ಬಟ್ಟಲಿನಲ್ಲಿ ಒಂದು ಚಮಚ ಹಾರ್ಪಿಕ್ ಒಂದು ಚಮಚ ಉಪ್ಪು ಹಾಗೂ ಒಂದು ಚಮಚ ವಿನಿಗರ್ ಹಾಗೂ ಒಂದು ಚಮಚ ಅಡುಗೆ ಸೋಡಾ ಇಷ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

ಆನಂತರ ಈ ಒಂದು ಮಿಶ್ರಣವನ್ನು ಬಾಣಲೆಗೆ ಹಚ್ಚಿ ಅದರ ಮೇಲೆ ಒಂದು ಪೇಪರ್ ಅನ್ನು ಹಾಕಿ 5 ರಿಂದ 10 ನಿಮಿಷ ಹಾಗೆ ಬಿಡಬೇಕು ಆನಂತರ ಒಂದು ಸ್ಯಾಂಡ್ ಪೇಪರ್ ತೆಗೆದುಕೊಂಡು ಅದಕ್ಕೆ ಲಿಕ್ವಿಡ್ ಹಾಕಿ ಅದರಿಂದ ಬಾಣಲೆಯನ್ನು ಉಜ್ಜಬೇಕು ಈ ರೀತಿ ಉಜ್ಜುವುದರಿಂದ ಬಾಣಲೆಯಲ್ಲಿ ಇರುವಂತಹ ಎಲ್ಲಾ ಕಪ್ಪು ಬಣ್ಣ ಹಾಗೂ ಜಿಡ್ಡಿನ ಅಂಶ ಎಲ್ಲವೂ ಕೂಡ ಸಂಪೂರ್ಣವಾಗಿ ಹೋಗುತ್ತದೆ.

ಹೀಗೆ ಮಾಡಿ ಸಾಕು ಎಷ್ಟೇ ಕರಟಿದ ಪಾತ್ರೆ ಮತ್ತೆ ಹೊಸತಾಗುತ್ತೆ.!

ಅಡುಗೆ ಮನೆಯಲ್ಲಿ ಎಷ್ಟೇ ಎಚ್ಚರಿಕೆ ಇಟ್ಟರೂ ಕೂಡ ನಾವು ಪಾತ್ರೆಗಳಲ್ಲಿ ಇಟ್ಟಂತಹ ಹಾಲು ಸಾಂಬಾರ್ ಹೇಗೆ ಮಸಾಲೆ ಭರಿತ ಪದಾರ್ಥಗಳು ಸೀದು ಹೋಗುತ್ತದೆ ಅಂದರೆ ಆ ಎಲ್ಲ ಪದಾರ್ಥಗಳು ಕೆಳಭಾಗದಲ್ಲಿ ಗಟ್ಟಿಯಾಗಿರುತ್ತದೆ ಆದರೆ ಹೆಚ್ಚಿನ ಜನ ಇಂತಹ ಪಾತ್ರೆಗಳನ್ನು ಮತ್ತೆ ಉಪಯೋಗಿಸಲು ಸಾಧ್ಯವಿಲ್ಲ ಎಂದು ಅದನ್ನು ಉಪಯೋಗಿಸದೆ ಹಾಗೆ ಇಟ್ಟಿರುತ್ತಾರೆ.

ಆದರೆ ಈ ರೀತಿ ಕರಟಿದ ಪಾತ್ರೆಯನ್ನು ಮತ್ತೆ ಮರುಬಳಕೆ ಮಾಡಬಹುದು ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕರಟಿದ ಪಾತ್ರೆಯನ್ನು ಹೇಗೆ ಸ್ವಚ್ಛಗೊಳಿಸುವುದು ಹಾಗೂ ಅದನ್ನು ಸ್ವಚ್ಛಗೊಳಿಸುವುದಕ್ಕೆ ಯಾವ ವಿಧಾನ ಅನುಸರಿಸ ಬೇಕಾಗುತ್ತದೆ ಹಾಗೂ ಯಾವ ಪ್ರಮುಖವಾದ ಪದಾರ್ಥ ಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ಈ ದಿನ ತಿಳಿಯೋಣ.

ಸಾಮಾನ್ಯವಾಗಿ ಯಾವುದೇ ರೀತಿಯ ಕರ್ರಿ ಅಥವಾ ಮಸಾಲೆ ಭರಿತ ಪದಾರ್ಥಗಳನ್ನು ನಾವು ಸ್ಟೀಲ್ ಪಾತ್ರೆಗಳಲ್ಲಿ ಮಾಡುತ್ತಿರುತ್ತೇವೆ ಹಾಗೂ ಕೆಲವೊಂದಷ್ಟು ಜನ ಕಾಫಿ, ಟೀ ಮುಂತಾದ ಪದಾರ್ಥಗಳನ್ನು ಸ್ಟೀಲ್ ಪಾತ್ರೆಗಳಲ್ಲಿ ಮಾಡುತ್ತಿರುತ್ತಾರೆ ಕೆಲವೊಮ್ಮೆ ಅವರು ಅದನ್ನು ಇಟ್ಟಿರುವುದನ್ನು ಮರೆತು ಬೇರೆ ಕಡೆ ಕೆಲಸ ಮಾಡುತ್ತಿರುತ್ತಾರೆ.

ಈ ಸುದ್ದಿ ಓದಿ:- ತೆಂಗಿನಕಾಯಿ ಚಿಪ್ಪಿನಿಂದ ಎಷ್ಟೆಲ್ಲಾ ಉಪಯೋಗಗಳಿವೆ ನೋಡಿ.!

ಆದರೆ ಅದು ಸಂಪೂರ್ಣವಾಗಿ ಆವಿಯಾಗಿ ಪಾತ್ರೆಯಲ್ಲಿ ಒಂದು ರೀತಿಯ ಮಸಿಯ ರೀತಿ ಕೆಳಭಾಗದಲ್ಲಿ ಇರುತ್ತದೆ. ಆದರೆ ಅದನ್ನು ಹೋಗಲಾಡಿಸಲು ಸಾಧ್ಯವಿಲ್ಲ ಅದು ಸಂಪೂರ್ಣವಾಗಿ ಹೋಗುವುದಿಲ್ಲ ಎಂದು ಕೆಲವೊಂದು ಅಷ್ಟು ಜನ ತಿಳಿದುಕೊಂಡಿದ್ದಾರೆ. ಆದರೆ ಅದು ತಪ್ಪು ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ನೀವು ಅನುಸರಿಸುವುದರಿಂದ ಎಷ್ಟೇ ರೀತಿಯ ಕರಟಿದ ಪಾತ್ರೆ ಇದ್ದರೂ ಅದನ್ನು ಸಂಪೂರ್ಣವಾಗಿ ದೂರ ಮಾಡಬಹುದು.

ಹಾಗಾದರೆ ಅದನ್ನು ಹೇಗೆ ದೂರ ಮಾಡುವುದು ಯಾವ ಪದಾರ್ಥವನ್ನು ಉಪಯೋಗಿಸಬೇಕು ಎಂದು ಈ ಕೆಳಗೆ ತಿಳಿಯೋಣ. ಮೊದಲು ಕರಟಿದ ಪಾತ್ರೆಗೆ ಸಂಪೂರ್ಣವಾಗಿ ನೀರನ್ನು ತುಂಬಿಸಿ ಅದನ್ನು ಸ್ಟವ್ ಮೇಲೆ ಬಿಸಿಯಾಗಲು ಇಡಬೇಕು ಆನಂತರ ಅದಕ್ಕೆ ಎರಡರಿಂದ ಮೂರು ಚಮಚ ಸರ್ಫ್ ಎಕ್ಸೆಲ್ ಪೌಡರ್ ಅನ್ನು ಹಾಕಿ ಚೆನ್ನಾಗಿ ಬಿಸಿ ಮಾಡಬೇಕು.

ಆ ನೀರು ಕೊತಕೊತ ಕುದಿಯಬೇಕು ಆನಂತರ ಕಡಿಮೆ ಮಾಡಬೇಕು ಹೀಗೆ ಎರಡರಿಂದ ಮೂರು ನಿಮಿಷ ಮಾಡಿ ಅದು ತಣ್ಣಗಾಗಲು ಬಿಡಬೇಕು. ಆನಂತರ ಅದನ್ನು ಒಂದು ಪಾತ್ರೆಗೆ ಚೆಲ್ಲಿ ಮತ್ತೆ ಒಂದು ಸ್ಕ್ರಬ್ಬರ್ ಗೆ ವಿಮ್ ಲಿಕ್ವಿಡ್ ಹಾಕಿ ಚೆನ್ನಾಗಿ ಉಜ್ಜಬೇಕು ಈ ರೀತಿ ಮಾಡುವುದರಿಂದ ಎಷ್ಟೇ ಕರಟಿದ ಪಾತ್ರೆ ಇದ್ದರೂ ಅದು ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ.

ಈ ಸುದ್ದಿ ಓದಿ:-ಕೇವಲ 10 ನಿಮಿಷದಲ್ಲಿ ಫ್ರಿಡ್ಜ್ ಕ್ಲೀನ್ ಮಾಡುವ ಸುಲಭ ವಿಧಾನ.!

ಕೊನೆಯಲ್ಲಿ ಅಲ್ಪ ಸ್ವಲ್ಪ ಇದ್ದರೆ ಅದನ್ನು ಸ್ಟೀಲ್ ಸ್ಕ್ರಬ್ಬರ್ ಇಂದ ವಿಮ್ ಲಿಕ್ವಿಡ್ ಹಾಕಿ ಚೆನ್ನಾಗಿ ಉಜ್ಜಿ ತೊಳೆದರೆ ಸಾಕು ಆ ಪಾತ್ರೆಯಲ್ಲಿ ಇರುವಂತಹ ಎಲ್ಲಾ ಅಂಶವೂ ದೂರವಾಗುತ್ತದೆ. ಆನಂತರ ನೀವು ಆ ಪಾತ್ರೆಯನ್ನು ಮರುಬಳಕೆ ಮಾಡಬಹುದು ಹಾಗೂ ಅದು ಸಂಪೂರ್ಣವಾಗಿ ಹೊಸ ಪಾತ್ರೆಯಾಗಿ ಬದಲಾಗಿರುತ್ತದೆ ಎಂದೇ ಹೇಳಬಹುದು.

ಈ ಮಾಹಿತಿಯನ್ನು ಪ್ರತಿಯೊಬ್ಬ ಮಹಿಳೆಯರು ತಿಳಿದುಕೊಳ್ಳುವುದರಿಂದ ನಿಮ್ಮ ಅಡುಗೆ ಮನೆಯಲ್ಲಿ ಇರುವಂತಹ ಇಂತಹ ಯಾವುದೇ ರೀತಿಯ ಪಾತ್ರೆಗಳನ್ನು ನೀವು ಸುಲಭವಾಗಿ ಸ್ವಚ್ಚ ಮಾಡಬಹುದು ಹಾಗೂ ಯಾವುದೇ ರೀತಿಯ ಹೆಚ್ಚಿನ ಹಣಕಾಸಿನ ಖರ್ಚಾಗುವುದಿಲ್ಲ ಜೊತೆಗೆ ಕಡಿಮೆ ಸಮಯದಲ್ಲಿ ಸುಲಭವಾಗಿ ಇದನ್ನು ಸ್ವಚ್ಛ ಮಾಡಬಹುದು ಇದರಿಂದ ನೀವು ಆ ಪಾತ್ರೆಯನ್ನು ಎಸೆಯುವ ಅವಶ್ಯಕತೆ ಇಲ್ಲ ಎಂದೇ ಹೇಳಬಹುದು.

ಈ ರೀತಿ ಮಾಡಿ ಹಾಸಿಗೆಯಲ್ಲಿ ತಿಗಣೆ, ಕೆಟ್ಟವಾಸನೆ, ಮುಗ್ಗುಲು ವಾಸನೆ ಬರೋದಿಲ್ಲ.!

 

ನಾವು ಮಲಗುವಂತಹ ಹಾಸಿಗೆಯು ನಮಗೆ ಸುಖವಾದಂತಹ ನಿದ್ರೆಯನ್ನು ಕೊಡುವಂತಹ ಸ್ಥಳ. ಆದ್ದರಿಂದ ಅದು ಸ್ವಚ್ಛವಾಗಿ ಇರುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಹಾಸಿಗೆಯಲ್ಲಿ ಕೆಟ್ಟ ವಾಸನೆ ತಿಗಣೆ ಕ್ರಿಮಿ ಕೀಟಗಳು ಸಹ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ನಾವು ಮಲಗುವಂತಹ ಹಾಸಿಗೆ ಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಇಲ್ಲವಾದರೆ ನಾವು ಆ ಸ್ಥಳದಲ್ಲಿ ಮಲಗಿದರೆ ನಮ್ಮ ಚರ್ಮದ ಮೇಲೆ ಹಲವಾರು ರೀತಿಯ ಸಮಸ್ಯೆಗಳು ಉಂಟಾಗಬಹುದು ಆದ್ದರಿಂದ ನಾವು ಮಲಗುವಂತಹ ಹಾಸಿಗೆಯನ್ನು ಸ್ವಚ್ಛವಾಗಿ ಇಡುವುದು ಒಳ್ಳೆಯದು. ಪ್ರತಿನಿತ್ಯ ಹಾಸಿಗೆಯನ್ನು ಸ್ವಚ್ಛ ಮಾಡಲು ಸಾಧ್ಯವಾಗುವು ದಿಲ್ಲ ಆದ್ದರಿಂದ 15 ದಿನಕ್ಕೊಮ್ಮೆ ಅಥವಾ ತಿಂಗಳಿಗೆ ಒಮ್ಮೆಯಾದರೂ ಹಾಸಿಗೆಯನ್ನು ಸ್ವಚ್ಛ ಮಾಡುವುದು ಒಳ್ಳೆಯದು.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಹಾಸಿಗೆಯನ್ನು ಹೇಗೆ ಸ್ವಚ್ಛ ಮಾಡುವುದು ಹಾಗೂ ನಾವು ಯಾವ ವಿಧಾನವನ್ನು ಅನುಸರಿಸುವುದರಿಂದ ನಮ್ಮ ಹಾಸಿಗೆಯನ್ನು ಹೆಚ್ಚು ದಿನಗಳವರೆಗೆ ಬಾಳಿಕೆಗೆ ಬರುವ ಹಾಗೆ ನೋಡಿಕೊಳ್ಳಬಹುದು ಹಾಗೂ ಹಾಸಿಗೆಯಲ್ಲಿ ಯಾವುದೇ ರೀತಿಯ ಜಿರಳೆ ತಿಗಣೆ ಯಾವುದೇ ರೀತಿಯ ವಾಸನೆ ಬರಬಾರದು ಎಂದರೆ ಯಾವ ರೀತಿಯ ವಿಧಾನಗಳನ್ನು ಅನುಸರಿಸಬೇಕು ಹೀಗೆ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

ಅದಕ್ಕೂ ಮೊದಲು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದಂತಹ ಕೆಲವೊಂದಷ್ಟು ಮಾಹಿತಿಗಳು ಏನು ಎಂದರೆ.
* ಪ್ರತಿನಿತ್ಯ ನಾವು ನಮ್ಮ ಹಾಸಿಗೆಯ ಮೇಲೆ ನಿದ್ರಿಸುತ್ತೇವೆ ಹಾಗಾಗಿ ನಾವು ಆ ಸ್ಥಳವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಅದೇ ರೀತಿಯಾಗಿ ನಾವು ಮಲಗುವಂತಹ ಸ್ಥಳಗಳಲ್ಲಿ ಗಾಳಿ ಬೆಳಕು ಬರುವ ಹಾಗೆ ನೋಡಿಕೊಳ್ಳಬೇಕು.

* ಜೊತೆಗೆ ಹಾಸಿಗೆಯ ಮೇಲೆ ಬಿಸಿಲು ಹಾಗೂ ಗಾಳಿ ಬರುವುದರಿಂದ ಹಾಸಿಗೆಯು ಯಾವುದೇ ರೀತಿಯ ಕೀಟಾಣುಗಳನ್ನು ಒಳಗೊಂಡಿರುವು ದಕ್ಕೆ ಸಾಧ್ಯವಾಗುವುದಿಲ್ಲ ಗಾಳಿಗೆ ಹಾಸಿಗೆಯು ಸ್ವಚ್ಛವಾಗುತ್ತದೆ ಹಾಗೂ ಯಾವುದೇ ರೀತಿಯ ದುರ್ವಾಸನೆ ಇದ್ದರೂ ಅದು ದೂರವಾಗಲು ಸಹಾಯವಾಗುತ್ತದೆ.

ಆದ್ದರಿಂದ ಪ್ರತಿಯೊಬ್ಬರ ರೂಮ್ ನಲ್ಲಿ ಗಾಳಿ ಬೆಳಕು ಬರುವ ಹಾಗೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಸಾಧ್ಯವಾದರೆ ಆದಷ್ಟು ನಿಮ್ಮ ಹಾಸಿಗೆಗಳನ್ನು ಬಿಸಿಲಿಗೆ ಇಟ್ಟು ಆನಂತರ ಉಪಯೋಗಿಸುವುದು ಒಳ್ಳೆಯದು ಹೀಗೆ ಮಾಡುವುದರಿಂದ ಯಾವುದೇ ರೀತಿಯ ಧೂಳು ಕ್ರಿಮಿ ಕೀಟಗಳಿದ್ದರೂ ಅವು ಬಿಸಿಲಿನ ತಾಪಕ್ಕೆ ನಾಶವಾಗುತ್ತದೆ.

ಹಾಗಾದರೆ ಈದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಹಾಸಿಗೆಯನ್ನು ಹೇಗೆ ಸ್ವಚ್ಛಗೊಳಿಸುವುದು ಹಾಗೂ ಅದರಲ್ಲಿ ಇರುವಂತಹ ದುರ್ವಾಸನೆಯನ್ನು ಹೇಗೆ ದೂರ ಮಾಡುವುದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.

ಮೊದಲು ಹಾಸಿಗೆಯ ಮೇಲೆ ಅಡುಗೆ ಸೋಡವನ್ನು ಹಾಕಿ ಎರಡರಿಂದ ಮೂರು ಗಂಟೆಗಳ ತನಕ ಹಾಗೆ ಬಿಡಬೇಕು ಆನಂತರ ಒಂದು ಗ್ಲೌಸ್ ಅಥವಾ ಒಣ ಬಟ್ಟೆಯಿಂದ ಅವೆಲ್ಲವನ್ನು ಆಚೆ ತೆಗೆಯಬೇಕು ಆನಂತರ ಒಂದು ಪಾತ್ರೆಯಲ್ಲಿ ನೀರು ಅದಕ್ಕೆ ಸ್ವಲ್ಪ ಶಾಂಪೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

ಆನಂತರ ಒಂದು ಕಾಟನ್ ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಅಜ್ಜಿ ಒಂದು ಕಡೆಯಿಂದ ಹಾಸಿಗೆಯನ್ನು ಉಜ್ಜಿ ಸ್ವಚ್ಛ ಮಾಡಬೇಕು ಈ ರೀತಿ ಮಾಡುವುದರಿಂದ ಹಾಸಿಗೆಯ ಮೇಲೆ ಇರುವಂತಹ ಕೊಳೆ ಹಾಗೂ ಧೂಳು ಎಲ್ಲವೂ ಸಹ ಆಚೆ ಬರುತ್ತದೆ.

ಆ ನಂತರ ಒಂದು ಒಣ ಬಟ್ಟೆಯಿಂದ ಹಾಸಿಗೆಯನ್ನು ಒರೆಸಿಕೊಳ್ಳಬೇಕು ಕೊನೆಯಲ್ಲಿ ಹಾಸಿಗೆಯ ಮೇಲೆ ಸ್ವಲ್ಪ ಪೌಡರ್ ಹಾಕಿ ಸ್ವಲ್ಪ ಸಮಯ ಬಿಟ್ಟು ಆನಂತರ ಅದನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಹಾಸಿಗೆಯ ಮೇಲೆ ಯಾವುದೇ ರೀತಿಯ ಧೂಳು ಕೊಳೆ ಇದ್ದರೂ ಅವೆಲ್ಲಾ ಆಚೆ ಬರುತ್ತದೆ.

ತೆಂಗಿನಕಾಯಿ ಚಿಪ್ಪಿನಿಂದ ಎಷ್ಟೆಲ್ಲಾ ಉಪಯೋಗಗಳಿವೆ ನೋಡಿ.!

 

ತೆಂಗಿನಕಾಯಿ ಚಿಪ್ಪನ್ನು ಪ್ರತಿಯೊಬ್ಬರೂ ಕೂಡ ಅದನ್ನು ಹೇಗೆ ಮತ್ತೆ ಮರುಬಳಕೆ ಮಾಡಿಕೊಳ್ಳಬೇಕು ಎನ್ನುವಂತಹ ಮಾಹಿತಿ ತಿಳಿದಿಲ್ಲ. ಕೆಲವೊಂದಷ್ಟು ಜನ ಅದನ್ನು ಬಿಸಿ ನೀರನ್ನು ಕಾಯಿಸುವುದಕ್ಕೆ ಒಲೆಗೆ ಹಾಕುತ್ತಾರೆ. ಇನ್ನೂ ಕೆಲವು ಜನರು ಅದನ್ನು ಆಚೆ ಬಿಸಾಡುತ್ತಿರುತ್ತಾರೆ ಆದರೆ ಇನ್ನು ಮುಂದೆ ತೆಂಗಿನಕಾಯಿ ಚಿಪ್ಪನ್ನು ಆಚೆ ಬಿಸಾಡುವ ಅಗತ್ಯವಿಲ್ಲ.

ಬದಲಿಗೆ ಅದನ್ನು ಬಹಳ ಪ್ರಮುಖವಾದಂತಹ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಬಹುದು ಹಾಗೂ ಅದು ನಿಮಗೆ ತುಂಬಾ ಅನುಕೂಲವನ್ನು ಸಹ ಉಂಟುಮಾಡುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ತೆಂಗಿನ ಕಾಯಿ ಚಿಪ್ಪನ್ನು ಹೇಗೆ ಬಳಸಬಹುದು ಹಾಗೂ ಅದರಿಂದ ನಾವು ಯಾವ ರೀತಿಯ ಲಾಭಗಳನ್ನು ಪಡೆದುಕೊಳ್ಳ ಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲು ತೆಂಗಿನಕಾಯಿ ಚಿಪ್ಪಿನಲ್ಲಿ ಸಂಪೂರ್ಣವಾಗಿ ಕಾಯಿಯನ್ನು ಆಚೆ ತೆಗೆಯಬೇಕು. ಆನಂತರ ಅದನ್ನು ಒಂದು ಪೇಪರ್ ಸಹಾಯದಿಂದ ಅಥವಾ ಇನ್ಯಾವುದೇ ಸಹಾಯದಿಂದ ಸುಟ್ಟು ಅದನ್ನು ಒಣಗಿಸಿಕೊಳ್ಳ ಬೇಕು. ಈ ರೀತಿ ಸುಟ್ಟಂತಹ ತೆಂಗಿನಕಾಯಿ ಚಿಪ್ಪನ್ನು ಹೇಗೆ ಯಾವುದೆಲ್ಲ ಕೆಲಸಗಳಿಗೆ ಉಪಯೋಗ ಮಾಡಿಕೊಳ್ಳಬಹುದು ಎಂದು ಈ ಕೆಳಗೆ ತಿಳಿಯೋಣ.

ಈ ಸುದ್ದಿ ಓದಿ:- ಬೆಳ್ಳಿ ಹಿತ್ತಾಳೆ ಕಂಚು ಮತ್ತು ತಾಮ್ರ ಪಾತ್ರೆಗಳನ್ನು ಸುಲಭವಾಗಿ ಕ್ಲೀನ್ ಮಾಡಿ.!

* ಸುಟ್ಟಂತಹ ತೆಂಗಿನಕಾಯಿ ಚಿಪ್ಪಿನ ಸ್ವಲ್ಪ ಭಾಗವನ್ನು ಒಂದು ಟಿಶ್ಯೂ ಪೇಪರ್ ಒಳಗಡೆ ಇಟ್ಟು ಫ್ರಿಡ್ಜ್ ನಲ್ಲಿ ಇಡುವುದರಿಂದ ಫ್ರಿಡ್ಜ್ ನಲ್ಲಿ ಬರುವಂತಹ ದುರ್ವಾಸನೆಯನ್ನು ತೆಗೆದು ಹಾಕಬಹುದು.
* ಅದೇ ರೀತಿಯಾಗಿ ಸುಟ್ಟಂತಹ ತೆಂಗಿನಕಾಯಿ ಚಿಪ್ಪನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ಆನಂತರ ಒಂದು ಚಿಕ್ಕ ಬೌಲಿಗೆ ಕಾಲು ಚಮಚ ತೆಂಗಿನ ಚಿಪ್ಪಿನ ಪುಡಿ ಹಾಗೂ ಒಂದು ಚಮಚ ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿರು ವಂತಹ ಡಾರ್ಕ್ ಸರ್ಕಲ್, ಪಿಗ್ಮೆಂಟೇಷನ್ ಇವೆಲ್ಲವೂ ಸಹ ಸಂಪೂರ್ಣವಾಗಿ ಆಚೆ ಹೋಗುತ್ತದೆ. ಅದೇ ರೀತಿಯಾಗಿ ನೀವು ತಲೆಗೆ ಹಚ್ಚುವಂತ ಯಾವುದೇ ರೀತಿಯ ಎಣ್ಣೆ ಇದ್ದರೂ ಅದಕ್ಕೆ ಅರ್ಧ ಚಮಚ ಈ ಒಂದು ಪುಡಿಯನ್ನು ಮಿಶ್ರಣ ಮಾಡಿ ನಿಮ್ಮ ತಲೆಗೆ ಹಚ್ಚುತ್ತಾ ಬಂದರೆ ಕೂದಲು ಬೆಳ್ಳಗಾಗಿದ್ದರೆ ದಿನೇ ದಿನೇ ಅದು ಕಪ್ಪಗಾಗುತ್ತಾ ಬರುತ್ತದೆ.

ಹಾಗೂ ಕೂದಲು ದಿನೇ ದಿನೇ ದಪ್ಪ ಹಾಗೂ ಉದ್ದವಾಗಿ ಬೆಳೆಯಲು ಪ್ರಾರಂಭಿಸುತ್ತದೆ ಆದ್ದರಿಂದ ಈ ವಿಧಾನವನ್ನು ಅನುಸರಿಸುವುದರಿಂದ ತುಂಬಾ ಒಳ್ಳೆಯದು. ಅದೇ ರೀತಿಯಾಗಿ ಈ ಒಂದು ಪುಡಿಯನ್ನು ಉಪಯೋಗಿಸಿ ನೀವು ಹಲ್ಲನ್ನು ಉಜ್ಜುವುದರಿಂದ ವಸಡಿನಲ್ಲಿ ಉಂಟಾಗುವಂತಹ ಯಾವುದೇ ಸಮಸ್ಯೆ ಇದ್ದರೂ ಅವೆಲ್ಲವೂ ಗುಣವಾಗುತ್ತದೆ.

ಈ ಸುದ್ದಿ ಓದಿ:- ಹಿಮ್ಮಡಿ ಎಷ್ಟೇ ಒಡೆದು ಚುರಾಗಿದ್ದರು ಕೇವಲ ಒಂದೇ ದಿನ ಹಚ್ಚಿ ಸಾಕು……..!! ಹಿಮ್ಮಡಿಯ ಬಿರುಕು ಮಾಯ….!!

ಹಾಗೂ ಕೆಲವೊಂದಷ್ಟು ಜನರಿಗೆ ಹಲ್ಲಿನಲ್ಲಿ ಹಳದಿ ಬಣ್ಣ ಇರುತ್ತದೆ ಅದನ್ನು ದೂರ ಮಾಡಬೇಕು ಎಂದರೆ ಅವರು ಈ ಒಂದು ಪುಡಿಯನ್ನು ಉಪಯೋಗಿಸಿ ಹಲ್ಲನ್ನು ಉಜ್ಜುವುದು ಬಹಳ ಮುಖ್ಯವಾಗಿರುತ್ತದೆ. ಇದು ಯಾವುದೇ ರೀತಿಯ ಹಾನಿಯನ್ನು ಉಂಟುಮಾಡುವುದಿಲ್ಲ ಬದಲಿಗೆ ನಿಮ್ಮ ಹಲ್ಲಿಗೆ ಹೆಚ್ಚು ಬಿಳಿ ಹೊಳಪನ್ನು ತಂದುಕೊಡುತ್ತದೆ. ಹಾಗೂ ನಿಮ್ಮ ವಸಡಿನ ಆರೋಗ್ಯ ಹಲ್ಲಿನ ಆರೋಗ್ಯವನ್ನು ಕಾಪಾಡುತ್ತದೆ.

* ತೆಂಗಿನಕಾಯಿ ಚಿಪ್ಪಿನ ಪುಡಿಯನ್ನು ನಿಮ್ಮ ಗಿಡಗಳ ಬೇರಿಗೆ ಹಾಕುತ್ತಾ ಬಂದರೆ ಆ ಗಿಡ ಸಂಪೂರ್ಣವಾಗಿ ಯಾವುದೇ ರೀತಿಯ ರೋಗರುಜನೆ ಇಲ್ಲದೆ ಚೆನ್ನಾಗಿ ಬೆಳೆಯುತ್ತದೆ ಹಾಗೂ ಅತಿ ಹೆಚ್ಚಿನ ಹೂವು ಬಿಡಲು ಪ್ರಾರಂಭಿಸುತ್ತದೆ. ಇದು ಒಂದು ರೀತಿಯ ಔಷಧಿಯಾಗಿ ಕೆಲಸ ಮಾಡುತ್ತದೆ.

* ಜೊತೆಗೆ ಈ ಪುಡಿಯನ್ನು ಉಪಯೋಗಿಸಿ ಪಾತ್ರೆಯನ್ನು ತೊಳೆಯುವು ದರಿಂದ ಪಾತ್ರೆಯಲ್ಲಿರುವಂತಹ ಮಸಿ ಬಣ್ಣ ಆಗಿರಬಹುದು ಇನ್ಯಾವುದೇ ಕೊಳೆ ಇದ್ದರೆ ಅದು ಸಂಪೂರ್ಣವಾಗಿ ಶುಚಿಯಾಗುತ್ತದೆ.
* ಈ ಒಂದು ಪುಡಿಯನ್ನು ಉಪಯೋಗಿಸಿ ಬೆಳ್ಳಿ ಪಾತ್ರೆ ತಾಮ್ರ ಹಿತ್ತಾಳೆ ಪಾತ್ರೆಗಳನ್ನು ತೊಳೆಯುವುದರಿಂದ ಅದರಲ್ಲಿರುವಂತಹ ಜಿಡ್ಡಿನ ಅಂಶ ಎಲ್ಲವೂ ಸಹ ದೂರವಾಗುತ್ತದೆ.

ಕೇವಲ 10 ನಿಮಿಷದಲ್ಲಿ ಫ್ರಿಡ್ಜ್ ಕ್ಲೀನ್ ಮಾಡುವ ಸುಲಭ ವಿಧಾನ.!

 

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಫ್ರಿಡ್ಜ್ ಇದ್ದೇ ಇರುತ್ತದೆ. ಆದರೆ ಅವರಿಗೆ ಅದನ್ನು ಹೇಗೆ ಕ್ಲೀನ್ ಮಾಡುವುದು ಎನ್ನುವಂತಹ ಮಾಹಿತಿ ತಿಳಿದಿರುವುದಿಲ್ಲ. ಆದರೆ ಕೆಲವೊಂದಷ್ಟು ಜನ ಅದನ್ನು ಸುಲಭವಾಗಿ ಕ್ಲೀನ್ ಮಾಡುತ್ತಾರೆ ಇನ್ನು ಕೆಲವೊಂದಷ್ಟು ಜನರಿಗೆ ಅದರ ಬಳಕೆ ತಿಳಿದಿರುವುದಿಲ್ಲ. ಅಂತವರು ಈ ದಿನ ನಾವು ಹೇಳುವಂತಹ ಮಾಹಿತಿ ಯನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಏಕೆಂದರೆ ಹೆಚ್ಚಿನ ದಿನಗಳವರೆಗೆ ಬಾಳಿಕೆಗೆ ಬರಬೇಕು ಯಾವುದೇ ರೀತಿಯ ಸಮಸ್ಯೆ ಉಂಟಾಗಬಾರದು ಎಂದರೆ ಈಗ ನಾವು ಹೇಳುವ ಕೆಲವೊಂದಷ್ಟು ಟಿಪ್ಸ್ ಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಈ ದಿನ ಫ್ರಿಡ್ಜ್ ಅನ್ನು ಹೇಗೆ 10 ನಿಮಿಷದಲ್ಲಿಯೇ ಕ್ಲೀನ್ ಮಾಡಬಹುದು.

ಈ ಸುದ್ದಿ ಓದಿ:- ನಮ್ಮ ಜಾತಕವನ್ನು ನಾವೇ ಹೇಗೆ ನೋಡುವ ಸುಲಭ ವಿಧಾನ ಇಲ್ಲಿದೆ ನೋಡಿ.!

ಹಾಗೂ ಯಾವ ಕೆಲವು ಪದಾರ್ಥವನ್ನು ಉಪಯೋಗಿಸುವುದರಿಂದ ಫ್ರಿಡ್ಜ್ ಅನ್ನು ಸುಲಭವಾಗಿ ಕ್ಲೀನ್ ಮಾಡಬಹುದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ. ಅದಕ್ಕೂ ಮೊದಲು ಸಂಪೂರ್ಣವಾಗಿ ಫ್ರಿಡ್ಜ್ಅನ್ನು ಹಾಗೂ ಅದರಲ್ಲಿರುವಂತಹ ಎಲ್ಲಾ ಡಿವೈಡರ್ ಗಳನ್ನು ಆಚೆ ತೆಗೆಯಬೇಕು.

ಆನಂತರ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಬೇಕು ಅದಕ್ಕೆ ಎರಡು ಚಮಚ ವಿನೆಗರ್ ಹಾಗೂ ಒಂದು ಚಮಚ ಅಡುಗೆ ಸೋಡವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕೊಳ್ಳಬೇಕು. ಆ ನಂತರ ಈ ನೀರಿನ ಮಿಶ್ರಣವನ್ನು ಒಂದು ಸ್ಪ್ರೇ ಬಾಟಲ್ ನಲ್ಲಿ ಹಾಕಿ ಅದನ್ನು ಫ್ರಿಜ್ ಎಲ್ಲಾ ಭಾಗಗಳಿಗೂ ಸ್ಪ್ರೇ ಮಾಡಬೇಕು ಆನಂತರ 5 ರಿಂದ 10 ನಿಮಿಷ ಹಾಗೆ ಬಿಡಬೇಕು.

ನಂತರ ಒಂದು ಕಾಟನ್ ಬಟ್ಟೆಯ ಸಹಾಯದಿಂದ ಸಂಪೂರ್ಣವಾಗಿ ಎಲ್ಲವನ್ನು ಸ್ವಚ್ಛ ಮಾಡಿಕೊಳ್ಳಬೇಕು ಹಾಗೂ ಆ ಡಿವೈಡರ್ ಗಳಲ್ಲಿ ಇರುವಂತಹ ಕೊಳೆಯನ್ನು ತೆಗೆಯು ವುದಕ್ಕೆ ಹಳೆದಾಗಿರುವಂತಹ ಒಂದು ಬ್ರಷ್ ತೆಗೆದುಕೊಂಡು ಉಜ್ಜಿದರೆ ಸಾಕು ಅದರಲ್ಲಿ ಇರುವಂತಹ ಕೊಳೆ ಸಂಪೂರ್ಣವಾಗಿ ಆಚೆ ಬರುತ್ತದೆ.

ಈ ಸುದ್ದಿ ಓದಿ:- 10 ವರ್ಷದ ಹಳೆಯ ಕುಕ್ಕರ್ ಆಗಿದ್ದರೂ ಮತ್ತೆ ಹೊಸದರಂತೆ ಕಾಣುವ ಹಾಗೆ ಮಾಡಬಹುದು, ಈ ಸಿಂಪಲ್ ಟ್ರಿಕ್ ಉಪಯೋಗಿಸಿ…

ಅದೇ ರೀತಿಯಾಗಿ ಇನ್ನೂ ಕೆಲವೊಂದಷ್ಟು ಜನ ಫ್ರಿಡ್ಜ್ ನಲ್ಲಿ ಯಾವುದೇ ರೀತಿಯ ಪದಾರ್ಥವನ್ನು ಹೇಗೆ ಇಟ್ಟರೂ ಫ್ರಿಜ್ ವಾಸನೆ ಬರುತ್ತಿರುತ್ತದೆ ಎಂದು ಹೇಳುತ್ತಿರುತ್ತಾರೆ. ಆದರೆ ಅದಕ್ಕೆ ಕಾರಣ ಏನು ಎಂದರೆ ಫ್ರಿಡ್ಜ್ ಡೋರ್ ನಲ್ಲಿ ಒಂದು ರೀತಿಯ ಇನ್ಸುಲೇಟರ್ ಇರುತ್ತದೆ ಅದನ್ನು ಕೈ ಹಾಕಿ ಸುಲಭವಾಗಿ ತೆಗೆಯಬಹುದು ಆನಂತರ ಅದರ ಒಳಭಾಗದಲ್ಲಿ ಲೇಯರ್ ರೀತಿಯ ಎರಡರಿಂದ ಮೂರು ಭಾಗ ಇರುತ್ತದೆ ಅದರ ಒಳಗಡೆ ಹೆಚ್ಚಿನ ಕೊಳೆ ಇರುತ್ತದೆ.

ಅದನ್ನು ಕೈ ಹಾಕಿ ಸ್ವಚ್ಛ ಮಾಡಲು ಸಾಧ್ಯವಾಗುವುದಿಲ್ಲ ಅದನ್ನು ಸ್ವಚ್ಛ ಮಾಡುವುದಕ್ಕೆ ಒಂದು ಫೋರ್ಕ್ ಸ್ಪೂನ್ ತೆಗೆದುಕೊಂಡು ಅದರ ಮುಂಭಾಗಕ್ಕೆ ಚಿಕ್ಕದಾಗಿರುವಂತಹ ಕಾಟನ್ ಬಟ್ಟೆಯನ್ನು ಹಾಕಿ ಅದರ ಒಳಗಡೆ ಹಾಕಿ ಸ್ವಚ್ಛವಾಗಿ ಕ್ಲೀನ್ ಮಾಡಬಹುದು. ಈ ರೀತಿ ಮಾಡುವು ದರಿಂದ ಅದರ ಒಳಗಡೆ ಇರುವಂತಹ ಸಣ್ಣಪುಟ್ಟ ಕೊಳೆ ಧೂಳು ಇದ್ದರೆ ಅದು ಸಂಪೂರ್ಣವಾಗಿ ಆಚೆ ಬರುತ್ತದೆ.

ಈ ಸುದ್ದಿ ಓದಿ:- ಬಂತು ನೋಡಿ ಮಿನಿ ಮ್ಯಾಜಿಕ್ ಏರ್ ಕೂಲರ್ ಕೇವಲ 1300 ಕ್ಕೆ ಸಿಗುತ್ತೆ.! ಕರೆಂಟ್, ಪವರ್ ಬಂಕ್ 2 ರಲ್ಲೂ ರನ್ ಮಾಡಬಹುದು ಬೇಸಿಗೆ ಕಾಲಕ್ಕೆ ರಿಲೀಫ್ ನೀಡುತ್ತೆ

ಈ ರೀತಿ ಮಾಡುವುದರಿಂದ ನಿಮಗೆ ಕಷ್ಟವಾಗಿರುವಂತಹ ಕೆಲಸ ಬಹಳ ಸುಲಭವಾಗಿ ಆಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಫ್ರಿಜ್ ಅನ್ನು ಹೇಗೆ ಕ್ಲೀನ್ ಮಾಡಬೇಕು ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಜೊತೆಗೆ ಸಣ್ಣಪುಟ್ಟ ವಿಚಾರಗಳನ್ನು ಸಹ ತಿಳಿದುಕೊಳ್ಳುವುದು ಬಹಳ ಮುಖ್ಯ ಇಲ್ಲವಾದರೆ ನಿಮ್ಮ ಫ್ರಿಡ್ಜ್ ಕಡಿಮೆ ದಿನಗಳಲ್ಲಿಯೇ ಕೆಟ್ಟು ಹೋಗುವ ಸಾಧ್ಯತೆ ಇರುತ್ತದೆ ಆದ್ದರಿಂದ ಇಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ.