Home Blog Page 39

ಗೃಹ ಜ್ಯೋತಿ ಫಲಾನುಭವಿಗಳ ಇಲ್ಲಿ ನೋಡಿ, ಇನ್ನು ಮುಂದೆ ಉಚಿತ ಕರೆಂಟ್ ಎಲ್ಲರಿಗೂ ಇಲ್ಲ, ಪೂರ್ತಿ ಬಿಲ್ ಕಟ್ಟಲೇಬೇಕು.!

0

 

ಗೃಹ ಜ್ಯೋತಿ (Gruhajyothi Scheme) ಯೋಜನೆಯಡಿ ಕಳೆದ ಆರೇಳು ತಿಂಗಳಿಂದ ಉಚಿತ ವಿದ್ಯುತ್ (free Current) ಸೌಲಭ್ಯ ಪಡೆಯುತ್ತಿದ್ದ ಎಲ್ಲಾ ಗ್ರಾಹಕರಿಗೂ ಇಂಧನ ಇಲಾಖೆ (Power Department) ಕಡೆಯಿಂದ ಬಿಗ್ ಅಪ್ಡೇಟ್ ಇದೆ. ಅದೇನೆಂದರೆ, ಇನ್ನು ಮುಂದೆ ಎಲ್ಲರಿಗೂ ಕೂಡ ಶೂನ್ಯ ದರ ವಿದ್ಯುತ್ ಬಿಲ್ ಬರುವುದಿಲ್ಲ ಅಲ್ಲದೇ ಸರ್ಕಾರದ ಈ ನಿಯಮವನ್ನು ಮೀರುವ ಕುಟುಂಬಗಳು ಉಚಿತ ವಿದ್ಯುತ್ ಸೌಲಭ್ಯ ಕಳೆದುಕೊಂಡು ಪೂರ್ತಿ ಬಿಲ್ ಪಾವತಿ ಮಾಡಬೇಕು.

ಹಾಗಾದರೆ ಇನ್ನು ಮುಂದೆ ಆ ಕುಟುಂಬಗಳು ಉಚಿತ ವಿದ್ಯುತ್ ಪಡೆಯುವುದಕ್ಕೆ ಸಾಧ್ಯವೇ ಇಲ್ಲವೇ? ಅಷ್ಟಕ್ಕೂ ಆ ನಿಯಮವೇನು? ಇಲಾಖೆಯು ಗೃಹಜ್ಯೋತಿ ಫಲಾನುಭವಿಗಳಿಗೆ ವಿಧಿಸಿರುವ ಕಂಡೀಶನ್ ಏನು? ಎನ್ನುವ ಎಲ್ಲಾ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು (Congress Party) ಅಧಿಕಾರಕ್ಕೆ ಬಂದ ಮೇಲೆ ನುಡಿದಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಗೃಹಜ್ಯೋತಿ ಯೋಜನೆಯು ಕೂಡ ಒಂದು. ಆ ಪ್ರಕಾರವಾಗಿ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿರುವ ಪ್ರತಿ ಕುಟುಂಬವು ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದೆ.

ಆದರೆ ಆ ಕುಟುಂಬವು 2022-23ನೇ ಸಾಲಿನಲ್ಲಿ ಬಳಸಿದ್ದ ವಿದ್ಯುತ್ ಬಳಕೆಯ ಸರಾಸರಿಗಿಂತ 10% ಹೆಚ್ಚುವರಿ ಯೂನಿಟ್ ಮಾತ್ರ ಉಚಿತವಾಗಿ ಬಳಸಬಹುದು ಎನ್ನುವ ಕಂಡೀಶನ್ ಹೇರಲಾಗಿದೆ. ಹೀಗಿದ್ದೂ ಕರ್ನಾಟಕ ಕೋಟ್ಯಾಂತರ ಕುಟುಂಬಗಳು ಜುಲೈ 2024 ರಿಂದಲೇ ಈ ಫ್ರೀ ವಿದ್ಯುತ್ ಸೌಲಭ್ಯವನ್ನು ಪಡೆದಿವೆ. ಆದರೆ ಫೆಬ್ರವರಿ ತಿಂಗಳಿನಲ್ಲಿ ಬಂದಿರುವ ವಿದ್ಯುತ್ ಬಿಲ್ ಎಲ್ಲರನ್ನು ಗಾಬರಿಗೊಳಿಸಿದೆ.

ಯಾಕೆಂದರೆ ಕಳೆದ ಆರು ತಿಂಗಳಿನಿಂದ ಜೀರೋ ಬಿಲ್ ಪಡೆಯುತ್ತಿದ್ದ ಕುಟುಂಬಗಳಿಗೆ ಈಗ ವಿದ್ಯುತ್ ಬಿಲ್ ಪಾವತಿಸುವಂತೆ ಬಿಲ್ ನೀಡಲಾಗಿದೆ. ಇದು ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿಸಿದ ಕಾರಣ ಇಲಾಖೆ ಅಧಿಕಾರಿಗಳೇ ಇದರ ಬಗ್ಗೆ ಸ್ಪಷ್ಟತೆ ಕೊಟ್ಟಿದ್ದಾರೆ. ಅವರು ನೀಡಿರುವ ಮಾಹಿತಿಯ ಪ್ರಕಾರ ಕುಟುಂಬವು ಗೃಹಜೋತಿ ಯೋಜನೆ ಆರಂಭವಾಗುವುದಕ್ಕೂ ಹಿಂದಿನ ಒಂದು ವರ್ಷದಲ್ಲಿ ಬಳಸಿದ್ದ ವಿದ್ಯುತ್ ಬಳಕೆಯ ಶೇಕಡ 10% ಹೆಚ್ಚಿಗೆ ಬಳಸಬಹುದು.

ಉದಾಹರಣೆಗೆ ಅಲ್ಲಿಯವರೆಗೂ ಕುಟುಂಬದ ಸರಾಸರಿ ಬಳಕೆ 100 ಯೂನಿಟ್ ಆಗಿದ್ದರೆ 10% ಹೆಚ್ಚುವರಿಯಾಗಿ 10 ಯೂನಿಟ್ ಪಡೆದು ಒಟ್ಟು 110 ಯೂನಿಟ್ ವರೆಗೂ ಉಚಿತ ವಿದ್ಯುತ್ ಅನುಕೂಲತೆ ಪಡೆಯಬಹುದು. 110 ಯೂನಿಟ್ ಮೀರಿ 200 ಯೂನಿಟ್ ಒಳಗೆ ವಿದ್ಯುತ್ ಬಳಕೆ ಮಾಡಿದ್ದಲ್ಲಿ ಉದಾಹರಣೆಗೆ ಆ ತಿಂಗಳಿನಲ್ಲಿ 190 ಯೂನಿಟ್ ಬಳಸಿದ್ದಾರೆ ಎಂದರೆ ಹೆಚ್ಚುವರಿ 80 ಯೂನಿಟ್ ಗೆ ವಿದ್ಯುತ್ ಬಿಲ್ ಪಾವತಿ ಮಾಡಬೇಕು.

ಒಂದು ವೇಳೆ ಕುಟುಂಬವೂ 200 ಯೂನಿಟ್ ಗಡಿ ದಾಟಿ ವಿದ್ಯುತ್ ಬಳಕೆ ಮಾಡಿದರೆ ಪೂರ್ತಿ ಬಿಲ್ ಪಾವತಿ ಮಾಡಬೇಕು ಎನ್ನುವ ಆದೇಶವನ್ನು ನೀಡಿದ್ದಾರೆ. ಕಳೆದ ತಿಂಗಳಿನಲ್ಲಿ ಈ ರೀತಿ ಅನೇಕ ಕುಟುಂಬಗಳು ಶೂನ್ಯ ವಿದ್ಯುತ್ ದರ ಬಿಲ್ ಪಡೆಯುವ ಜಾಗದಲ್ಲಿ ಬದಲಾಗಿ ಹೆಚ್ಚುವರಿ ವಿದ್ಯುತ್ ಬಿಲ್ ಮತ್ತು ಕೆಲವು ಕುಟುಂಬಗಳು 200 ಯೂನಿಟ್ ಕಡೆಯೂ ದಾಟಿ ಪೂರ್ತಿ ಕರೆಂಟ್ ಬಿಲ್ ಕಟ್ಟಿವೆ.

ಬೇಸಿಗೆ ಸಮೀಪಿಸಿರುವುದರಿಂದ ಎಲ್ಲರ ಮನೆಯಲ್ಲೂ ಫ್ಯಾನ್, AC & TV ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಹೆಚ್ಚಾಗಿರುವುದೇ ಈ ರೀತಿ ವಿದ್ಯುತ್ ಬಿಲ್ ಹೆಚ್ಚಾಗುವುದಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ. ಮತ್ತು ಒಂದು ವೇಳೆ ಕುಟುಂಬಗಳು ಮುಂದಿನ ತಿಂಗಳಿನಲ್ಲಿ ಅವರ ಸರಾಸರಿ ಎಷ್ಟು ಅಥವಾ ಅದಕ್ಕಿಂತ ಕಡಿಮೆ ಬಳಕೆ ಮಾಡಿದರೆ ಎಂದಿನಂತೆ ಜೀರೋ ಬಿಲ್ ನೀಡಲಾಗುತ್ತಿದೆ ಎನ್ನುವ ಸಮಾಧಾನಕರ ಸಂಗತಿಯನ್ನು ತಿಳಿಸಿದ್ದಾರೆ.

ನಿಮ್ಮ ಪಾಲಿನ ಆಸ್ತಿ ನಿಮಗೆ ಸಿಗಬೇಕು ಎಂದರೆ ಈ ರೀತಿ ಮಾಡಿ, ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸುಲಭ ಪರಿಹಾರ.!

0

 

ಜೀವನದಲ್ಲಿ ಕಷ್ಟಗಳು ಯಾವಾಗ ಯಾವ ರೂಪದಲ್ಲಿ ಬರುತ್ತದೆ ಎಂದು ಊಹಿಸುವುದೇ ಕಷ್ಟ. ಇಂದು ನಾವು ತೆಗೆದುಕೊಂಡ ನಿರ್ಧಾರಗಳು ಇವತ್ತಿನ ಮಟ್ಟಿಗೆ ಸರಿ ಎನ್ನುವ ರೀತಿ ಇದ್ದರೂ ಮುಂದೆ ಒಂದು ದಿನ ಸಮಸ್ಯೆಗಳಾಗಿ ಕಣ್ಣ ಎದುರಿಗೆ ಬರುತ್ತದೆ. ಇದನ್ನು ವಿಧಿಯ ಆಟ ಎಂದು ಒಪ್ಪದೆ ಬೇರೆ ದಾರಿ ಇಲ್ಲ.

ನಮ್ಮ ಹಣೆಯಲ್ಲಿ ಬರೆದಿದ್ದನ್ನು ಹಾಗೂ ನಮ್ಮ ರಾಶಿ ನಕ್ಷತ್ರ ಅನುಸಾರವಾಗಿ ನಡೆಯುವ ಪರಿವರ್ತನೆಗಳನ್ನು ನಾವು ಒಪ್ಪಿಕೊಳ್ಳಲೇಬೇಕು. ಆದರೂ ಶಾಸ್ತ್ರಗಳಲ್ಲಿ ಎಲ್ಲಾ ಸಮಸ್ಯೆಗಳಿಗೂ ಕೆಲವು ಪರಿಹಾರವನ್ನು ಕೂಡ ಸೂಚಿಸಲಾಗಿದೆ. ಆ ಪ್ರಕಾರವಾಗಿ ಪರಿಹಾರ ಶಾಸ್ತ್ರದಲ್ಲಿ ಆಸ್ತಿ ಸಂಬಂಧಿಸಿದ ಸಮಸ್ಯೆಗಳಿಗೆ ಏನು ತಿಳಿಸಿದ್ದಾರೆ ಎನ್ನುವುದನ್ನು ಈ ಲೇಖನದಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತಿದ್ದೇವೆ.

ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಹೇಗಾಗಿದೆ ಎಂದರೆ ನೋಡುವುದಕ್ಕೂ ಕೇಳುವುದಕ್ಕೂ ಆಶ್ಚರ್ಯ ಎನಿಸುವಂತೆ ತಂದೆ ಮಕ್ಕಳೇ ಆಸ್ತಿ ವಿಚಾರಕ್ಕಾಗಿ ಕೋರ್ಟು ಕಚೇರಿ ಮೆಟ್ಟಿಲೇರುವಂತೆ ಆಗಿದೆ. ಸಹೋದರ ಸಹೋದರಿಯರು, ಅಣ್ಣ-ತಮ್ಮಂದಿರ ಮಕ್ಕಳು, ಅತ್ತೆ-ಸೊಸೆ, ಗಂಡ-ಹೆಂಡತಿ ಹೇಗೆ ಪ್ರತಿಯೊಬ್ಬರೂ ಕೂಡ ಹಣ ಆಸ್ತಿ ಹಿಂದೆ ಹೊರಟಿದ್ದಾರೆ.

ಕೆಲವೊಮ್ಮೆ ಬೇರೆಯವರಿಂದ ಆಸ್ತಿ ಕಿತ್ತುಕೊಳ್ಳುವುದಕ್ಕಾಗಿ ಈ ಅಸ್ತ್ರ ಬಳಸಿದರೆ ಕೆಲವೊಮ್ಮೆ ಧರ್ಮ ಮಾರ್ಗದಲ್ಲಿ ನಡೆಯುತ್ತಿರುವುದನ್ನು ಸಾಬೀತುಪಡಿಸುವುದಕ್ಕಾಗಿ ಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ. ನಮ್ಮದಲ್ಲ ತಪ್ಪಿಗೆ ಇಷ್ಟು ಶಿಕ್ಷೆ ಪಡಬೇಕಲ್ಲ ಎನ್ನುವ ದುಃ’ಖವು ಕಾಡದೇ ಇರದು. ಆದರೆ ಇದನ್ನು ಅನುಭವಿಸದೆ ವಿಧಿ ಇಲ್ಲ.

ಯಾಕೆಂದರೆ ನಮ್ಮ ಜಾತಕದಲ್ಲಿ ಮಂಗಳನ ಪ್ರವೇಶ ಆದಾಗ ಇಂತಹ ಪರಿಣಾಮಗಳು ಉಂಟಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಭೂಮಿ ಆಸ್ತಿಕ್ಕೆ ಸಂಬಂಧಿಸಿದ ಯೋಗಗಳು ಬರಬೇಕು ಎಂದರು ಅದಕ್ಕೆ ಮಂಗಳನೇ ಕಾರಣ ಹಾಗೂ ಇದಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಾಜ್ಯ ಅಥವಾ ಕಷ್ಟಗಳಿಗೆ ಸಿಲುಕಬೇಕು ಎಂದರು ಮಂಗಳನು ಕೆಟ್ಟ ಸಮಯದಲ್ಲಿ ರಾಶಿ ಪ್ರವೇಶ ಮಾಡಿರುವುದೇ ಕಾರಣ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಅಲ್ಲದೇ ಒಂದು ತಿಂಗಳು ಮಾತ್ರ ಈ ರೀತಿ ರಾಶಿಯಲ್ಲಿ ಮಂಗಳನ ಸಂಚಾರ ಇರುತ್ತದೆ. ಒಂದೇ ತಿಂಗಳಿಗೆ ಅವರು ಬೇರೊಂದು ಸ್ಥಾನವನ್ನು ಬದಲಾಯಿಸುವುದರಿಂದ ಈ ಸಮಯ ಕಳೆಯುವವರೆಗೂ ತಾಳ್ಮೆಯಿಂದ ಇದ್ದು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಎಲ್ಲದಕ್ಕೂ ಒಳ್ಳೆಯದು.

ನೀವು ಕೂಡ ಜೀವನದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ರೀತಿ ನಿಮ್ಮ ಕುಟುಂಬದ ರಕ್ತ ಸಂಬಂಧದ ನಡುವೆ ಹಣ ಆಸ್ತಿ ವಿಷಯದಲ್ಲಿ ಸಮಸ್ಯೆಗೆ ಸಿಲುಕಿದ್ದರೆ ಅಥವಾ ಪರಿಚಯಸ್ಥರು ಬಂಧುಗಳಿಂದ ಹಣ ಆಸ್ತಿ ವಿಚಾರಕ್ಕೆ ನೊಂ’ದು ಹೋಗಿದ್ದರೆ ಮೋ’ಸ ಹೋಗಿದ್ದರೆ ನಿಮ್ಮ ಪಾಲಿನ ಆಸ್ತಿ ನಿಮಗೆ ವಾಪಸ್ ಬರಲು ನಾವು ಹೇಳುವ ಈ ಸರಳ ವಿಧಾನವನ್ನು ಅನುಸರಿಸಿ ಸಾಕು.

ನಿಮ್ಮ ಜಾತಕ ಪರಾಮರ್ಶೆ ಮಾಡಿಸಿ ಮಂಗಳನ ಸ್ಥಾನದ ಬಗ್ಗೆ ಪರಿಶೀಲನೆ ಮಾಡಿಸಿ ನಂತರ ಮಂಗಳನ ಪರಿಹಾರಕ್ಕಾಗಿ ಸೂಚಿಸಲಾಗಿರುವ ಪೂಜೆಗಳನ್ನು ಮಾಡಿ ನವಗ್ರಹಗಳ ಆರಾಧನೆ ಮಾಡುವುದಂತೂ ಎಲ್ಲಕ್ಕಿಂತ ಉತ್ತಮ.

ಯಾಕೆಂದರೆ ನಮ್ಮ ಜೀವನ ನಡೆಯಬೇಕು ಎಂದರೆ ಪಂಚಭೂತಗಳು ಎಷ್ಟು ಮುಖ್ಯವೋ ನವಗ್ರಹಗಳ ಸಂಚಾರ ಕೂಡ ಅಷ್ಟೇ ಪ್ರಮುಖ ಪಾತ್ರವಹಿಸುತ್ತದೆ ಹಾಗಾಗಿ ಶಾಂತಿಗಾಗಿ ಇಂತಹ ವ್ರತಗಳಲ್ಲಿ ಪಾಲ್ಗೊಂಡು ಸಮಸ್ಯೆಯನ್ನು ಪರಿಹರಿಸಿಕೊಂಡು ಬದುಕಿನಲ್ಲಿ ನೆಮ್ಮದಿ ಹೊಂದಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

ಮಾರ್ಚ್ 25ರಂದು ಶಕ್ತಿಶಾಲಿ ಹೋಳಿ ಹುಣ್ಣಿಮೆ, ನಿಮ್ಮೆಲ್ಲರ ಕಷ್ಟ, ದಾರಿದ್ರ್ಯ, ಬಡತನ ಕಳೆಯಲು ಈ ದಿನ ಶಿವ, ವಿಷ್ಣು, ಲಕ್ಷ್ಮೀ ಮುಂದೆ ಈ ವಸ್ತು ಇಟ್ಟು ಪ್ರಾರ್ಥಿಸಿ.!

 

ಮಾರ್ಚ್ 25 ಹೋಳಿ ಹುಣ್ಣಿಮೆ ದಿನ. ಪಾಲ್ಗುಣ ಮಾಸದ ಹುಣ್ಣಿಮೆ ದಿನವನ್ನು ಹೋಳಿ ದಿನವಾಗಿ ಆಚರಿಸಲಾಗುತ್ತದೆ. ಶಿವ, ರಾಧಾ ಕೃಷ್ಣ, ಮಹಾವಿಷ್ಣು, ಲಕ್ಷ್ಮಿ ದೇವಿ, ಅಯ್ಯಪ್ಪ ಇವರೆಲ್ಲರನ್ನು ಆರಾಧಿಸುವುದಕ್ಕೆ ಈ ದಿನ ಅತ್ಯಂತ ಶುಭ ಕಾರಕ ದಿನವಾಗಿದೆ.

ಈ ವರ್ಷ ಇದೇ ದಿನ ಚಂದ್ರ ಗ್ರಹಣವು ಕೂಡ ಬಂದಿರುವುದರಿಂದ ಪೂಜೆ ಮಾಡಬಹುದೇ? ಮಾಡಬಾರದೇ? ಗ್ರಹಣದ ಆಚರಣೆ ಮಾಡಬೇಕೇ? ಈ ದಿನದಂದು ಯಾವ ದೇವಸ್ಥಾನಕ್ಕೆ ಹೋಗಬೇಕು? ದೇವರಿಗೆ ಯಾವ ವಸ್ತುಗಳನ್ನು ಅರ್ಪಿಸಿ ಪೂಜೆ ಮಾಡಬೇಕು? ಮತ್ತು ಈ ದಿನದ ವಿಶೇಷತೆ ಏನೇನು? ಎನ್ನುವುದೆಲ್ಲದರ ಬಗ್ಗೆ ಈ ಅಂಕಣದಲ್ಲಿ ಕೆಲ ಪ್ರಮುಖ ಮಾಹಿತಿಯನ್ನು ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ.

ಶಿವನು ತನ್ನ ಮೂರನೇ ಕಣ್ಣನ್ನು ತೆರೆದು ಕಾಮದೇವನನ್ನು ದಂಡಿಸಿದ್ದು ಇದೇ ದಿನ, ಹಾಗಾಗಿ ಶಿವನಿಗೂ ಇದು ಪ್ರಿಯವಾದ ದಿನ. ಈ ದಿನದಂದು ತುಂಬೆ ಪತ್ರೆಗಳನ್ನು ಶಿವನಿಗೆ ಅರ್ಪಿಸಿ, ಎಳ್ಳು ಉಂಡೆಗಳನ್ನು ಶಿವನಿಗೆ ನೈವೇದ್ಯ ಮಾಡಿ ಪೂಜೆ ಮಾಡಿದರೆ ಮತ್ತು ಯಾವುದೇ ಶಿವಾಲಯದಲ್ಲಿ ಅಥವಾ ಪುಣ್ಯ ಸ್ಥಳಗಳಲ್ಲಿ ಹೋಗಿ.

ಈ ಸುದ್ದಿ ಓದಿ:- ಎಂತಹದೇ ಆರೋಗ್ಯ ಸಮಸ್ಯೆ ಇರಲಿ ಈ ಸ್ತೋತ್ರ ನಿತ್ಯ ಒಂದು ತಿಂಗಳು ಕೇಳಿ ನೋಡಿ, ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.!

ಶಿವ ಪುರಾಣ ಅಥವಾ ಶಿವನ ಸ್ತೋತ್ರವಿರುವ ಮತ್ತು ಶಿವನ ಮಹಾತ್ಮೆ ಸಾರುವ ಪುಸ್ತಕಗಳನ್ನು ದಾನ ಮಾಡುವುದರಿಂದ, ವಿಭೂತಿ ಉಂಡೆಗಳನ್ನು ದಾನ ಮಾಡುವುದರಿಂದ ಶಿವನು ಪ್ರಸನ್ನರಾಗುತ್ತಾರೆ ಎಂದು ಹೇಳಲಾಗಿದೆ. ಶಿವನ ಆಶೀರ್ವಾದದಿಂದ ನಿಮ್ಮ ಜೀವನದ ಕಷ್ಟಗಳು ಕೂಡ ಕಳೆಯುತ್ತವೆ ಹಾಗಾಗಿ ತಪ್ಪದೇ ಇಂದು ಈ ಪುಣ್ಯ ಕಾರ್ಯಗಳನ್ನು ಮಾಡಿ.

ರಾಧಾ ಮತ್ತು ಕೃಷ್ಣ ಒಬ್ಬರ ಮೇಲೆ ಒಬ್ಬರು ಬಣ್ಣದ ಓಕುಳಿಯನ್ನು ಚೆಲ್ಲಿದ ದಿನವಾಗಿದೆ. ಸುಖ ಸಂತೋಷಕ್ಕಾಗಿ ನಾವೆಲ್ಲರೂ ಸಹ ಈ ದಿನ ಬಣ್ಣ ಬೆರೆಸಿರುವ ನೀರನ್ನು ಮೈಮೇಲೆ ಚೆಲ್ಲಿಕೊಂಡು ಕೃಷ್ಣ ರಾಧೆ ಹೆಸರನ್ನು ಹೇಳಿ ಹೋಳಿ ಆಚರಿಸಬೇಕು. ಶ್ರೀ ಕೃಷ್ಣ ಪರಮಾತ್ಮನು ಮೊಟ್ಟ ಮೊದಲ ಬಾರಿಗೆ ಉಯ್ಯಾಲೆ ಮೇಲೆ ಕುಳಿತಿದ್ದು ಕೂಡ ಇದೇ ದಿನವಾಗಿದೆ.

ಆದಕಾರಣ ನಿಮ್ಮ ಮನೆಯಲ್ಲಿ ಏನಾದರೂ ಉಯ್ಯಾಲೆ ಇದ್ದರೆ ಈ ದಿನ ಅದರಲ್ಲಿ ಶ್ರೀ ಕೃಷ್ಣನ ವಿಗ್ರಹ ಅಥವಾ ಫೋಟೋವನ್ನು ಇಟ್ಟು ತೂಗಿರಿ. ದೇವಸ್ಥಾನಗಳಲ್ಲಿ ಏನಾದರೂ ಶ್ರೀಕೃಷ್ಣನ ಲೋಲೋತ್ಸವ ಮಾಡುತ್ತಿದ್ದರೆ ದರ್ಶನ ಮಾಡಿ ಪ್ರಾರ್ಥಿಸಿ ಮತ್ತು ಕೃಷ್ಣನ ಫೋಟೋ ಮುಂದೆ ತುಪ್ಪದ ದೀಪ ಹಚ್ಚಿ ಹಾಲು ಮೊಸರು ಬೆಣ್ಣೆ ತುಪ್ಪ ಇತ್ಯಾದಿಗಳನ್ನು ನೈವೇದ್ಯ ಇಡಬೇಕು.

ಈ ಸುದ್ದಿ ಓದಿ:- ಆಂಜನೇಯನ ಬಳಿ ಈ ವಸ್ತು ಇಡಿ, ಎಷ್ಟೇ ಸಾಲ ಇದ್ದರು ಖಂಡಿತ ತೀರುತ್ತೆ.!

ಈ ದಿನ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಕೂಡ ಮಾಡಬೇಕು. ಯಾಕೆಂದರೆ, ಇದೇ ಹೋಳಿ ದಿನದಂದು ಸಾಕ್ಷಾತ್ ಅಯ್ಯಪ್ಪಸ್ವಾಮಿಯು ಪಂಬಳ ರಾಜನಿಗೆ ದರ್ಶನ ಕೊಟ್ಟಿದ್ದು. ಹಾಗಾಗಿ ಮರೆಯದೇ ಈ ದಿನ ಅಯ್ಯಪ್ಪ ಸ್ವಾಮಿಯ ದೇಗುಲಕ್ಕೆ ಹೋಗಿ ದರ್ಶನ ಮಾಡುವುದು ಅತ್ಯಂತ ಶುಭ.

ಈ ದಿನ ಅಯ್ಯಪ್ಪನ ದೀಪದಲ್ಲಿ ದೀಪಗಳನ್ನು ಬೆಳಕಿದ್ದರೆ ಶನಿ ದೇವರ ಆಶೀರ್ವಾದ ಕೂಡ ಸಿಕ್ಕಿ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಮತ್ತು ತಾಯಿ ಮಹಾಲಕ್ಷ್ಮಿಯನ್ನು ಆರಾಧಿಸುವುದಕ್ಕೆ ಕೂಡ ಈ ದಿನ ಅತ್ಯಂತ ಶುಭಕರವಾಗಿದೆ ಮತ್ತೊಂದು ವಿಚಾರವೇನೆಂದರೆ, ಇದೇ ದಿನ ಚಂದ್ರಗ್ರಹಣ ಕೂಡ ಇದೆ ಆದರೆ ಭಾರತದಲ್ಲಿ ಗೋಚಾರ ಇಲ್ಲದ ಕಾರಣ ಯಾವುದೇ ದೋಷ ಇರುವುದಿಲ್ಲ.

ಎಂತಹದೇ ಆರೋಗ್ಯ ಸಮಸ್ಯೆ ಇರಲಿ ಈ ಸ್ತೋತ್ರ ನಿತ್ಯ ಒಂದು ತಿಂಗಳು ಕೇಳಿ ನೋಡಿ, ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.!

 

ಮಹಾದೇವನನ್ನು ಮೃತ್ಯುಂಜಯ ಎಂದು ಕೂಡ ಕರೆಯುತ್ತಾರೆ ಪ್ರಪಂಚವನ್ನೇ ಮುಳುಗಿಸುತ್ತಿದ್ದ ವಿಷಯವನ್ನು ಕುಡಿದು ನೀಲಕಂಠನಾದ ಈ ಸರ್ವೇಶ್ವರನನ್ನು ಲಯಕರ್ತ ಎಂದು ಕೂಡ ಕರೆಯುತ್ತಾರೆ. ಪರಮೇಶ್ವರನ ಕೃಪ ಕಟಾಕ್ಷದಿಂದಲೇ ಮುಕ್ತಿ ಸಿಗುವುದು. ಈಶ್ವರನನ್ನು ವೈದ್ಯನಾಥೇಶ್ವರ ಎಂದು ಕೂಡ ಕರೆಯುತ್ತಾರೆ.

ಇದೆಲ್ಲದರ ಅರ್ಥ ಆಯಸ್ಸು ಆರೋಗ್ಯ ಅಥವಾ ಅಂತ್ಯ ಎಲ್ಲವೂ ಶಿವನಿಚ್ಚೆ ಎನ್ನುವುದೇ ಆಗಿದೆ. ಮಹಾದೇವನ ಮಹಾ ಮೃತ್ಯುಂಜಯ ಮಂತ್ರದ ಬಗ್ಗೆ ಎಲ್ಲರೂ ಕೇಳಿರುತ್ತಾರೆ ಅಪಮೃ’ತ್ಯು ಭ’ಯಕ್ಕಾಗಿ ಇದನ್ನು ಪಠಣೆ ಮಾಡಲು ಹೇಳಲಾಗುತ್ತದೆ ಎಂದೇ ಹೆಚ್ಚಿನವರು ಭಾವಿಸಿದ್ದಾರೆ ಅದೇ ರೀತಿಯಾಗಿ ಮೃತ್ಯುವಿನ ಮಹತ್ವ ಅದರ ಸರಿಯಾದ ಜ್ಞಾನವನ್ನು ತಿಳಿಯಲು ಕೂಡ ಈ ಮೃತ್ಯುಂಜಯ ಮಂತ್ರವನ್ನು ಅರ್ಥೈಸಿಕೊಂಡು ಪಠಿಸಬೇಕು.

ಈ ಸುದ್ದಿ ಓದಿ:- ಆಂಜನೇಯನ ಬಳಿ ಈ ವಸ್ತು ಇಡಿ, ಎಷ್ಟೇ ಸಾಲ ಇದ್ದರು ಖಂಡಿತ ತೀರುತ್ತೆ.!

ಮೃತ್ಯುಂಜಯ ಮಂತ್ರ ಹೇಳುವುದು ಏನೆಂದರೆ ಮೃತ್ಯುವನ್ನು ಎದುರಿಸುವ ಧೈರ್ಯ ಕೊಡು ಹೇಗೆ ಸೌತೆಕಾಯಿ ಅದರ ತೊಟ್ಟಿನಿಂದ ಬೇರ್ಪಡುತ್ತದೆ ಅದೇ ರೀತಿ ಸೂಕ್ಷ್ಮವಾಗಿ ನನಗೂ ಈ ಭವಬಂಧನದಿಂದ ಪಾರು ಮಾಡು ಎಂದು ಪರಿಪರಿಯಾಗಿ ಕೇಳಿಕೊಳ್ಳುವುದಾಗಿದೆ. ಹಾಗಾಗಿ ಬದುಕುವ ಆಸೆಗಿಂತ ವೈರಾಗ್ಯದ ಮಹತ್ವ ಇದರಿಂದ ತಿಳಿಯುತ್ತದೆ ಅಂದರೆ ತಪ್ಪಾಗಲಾರದು.

ಈ ವಿಚಾರ ಮುಂದುವರೆದು ಒಂದು ವೇಳೆ ನಿಜವಾಗಿಯೂ ಅಪ ಮೃ’ತ್ಯುಭ’ಯ ಇದ್ದರೆ ಅಥವಾ ಅನಾರೋಗ್ಯ ಕಾಡುತ್ತಿದ್ದರೆ ಯಾವ ರೀತಿಯಾದ ಮಂತ್ರ ಹೇಳಿ ಭಗವಂತನಿಂದ ರಕ್ಷಣೆ ಕೇಳಬೇಕು ಎಂದರೆ ಅದಕ್ಕೂ ಕೂಡ ಈಶ್ವರನ ಒಂದು ಶಕ್ತಿಶಾಲಿ ಮಂತ್ರವಿದೆ.

ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಇದ್ದರೆ ಈ ಮಂತ್ರವನ್ನು ಪಠಿಸಿ, ವಿಭೂತಿ ಹಚ್ಚಿದರೆ ಸಾಕು ಖಂಡಿತವಾಗಿ ಅವರು ಚೇತರಿಕೆ ಆಗುತ್ತಾರೆ ಮತ್ತು ಮನೆಯಲ್ಲಿ ಸದಾ ಈ ಮಂತ್ರವನ್ನು ಜೋರಾಗಿ ಹಾಕಿ ಕೇಳಿದರು ಸಾಕು ಇದರ ಶಬ್ದ ಸೃಷ್ಠಿಸುವ ತರಂಗದಲ್ಲಿ ನಮ್ಮನ್ನು ಆರೋಗ್ಯಗೊಳಿಸುವ ಚೈತನ್ಯ ಇರುತ್ತದೆ. ಹಾಗಾಗಿ ಪ್ರತಿನಿತ್ಯ ಕುಟುಂಬದ ಎಲ್ಲ ಸದಸ್ಯರ ಆರೋಗ್ಯಕ್ಕಾಗಿ ಈ ಶ್ಲೋಕವನ್ನು ಪಠಿಸಿ ಅಥವಾ ಕೇಳಿ.

ಈ ಸುದ್ದಿ ಓದಿ:- ಈ ಕ್ಷೇತ್ರಕ್ಕೆ ಕಾಲಿಟ್ಟರೆ ಶ್ರೀಮಂತರಾಗುವುದರಲ್ಲಿ ಅನುಮಾನವೇ ಇಲ್ಲ, ಸೈಕಲ್ ನಲ್ಲಿ ಹೋದವರು ಇಂದು ಕಾರ್ ಕೊಂಡುಕೊಂಡಿದ್ದಾರೆ.!

ಅಪಮೃತ್ಯು ಪರಿಹಾರ ಮಹಾ ಮೃತ್ಯುಂಜಯ ಸ್ತ್ರೋತ್ರ…

ಧ್ಯಾಯೇ ಮೃತ್ಯುಂಜಯಂ ಸಾಂಬಂ ನೀಲಕಂಠಂ
ಚತುರ್ಭುಜಂ ಚಂದ್ರಕೋಟಿ ಪ್ರತಿಕಾಶಂ
ಪೂರ್ಣಚಂದ್ರ ನಿಭಾನನಂ ಬಿಂಬಾಧರಂ ವಿಶಾಲಾಕ್ಷಂ
ಚಂದ್ರ ಅಲಂಕೃತ ಮಸ್ತಕಂ
ಅಕ್ಷಮಾಲಂ ಭರದರಂ ವರದಂ ಚಃ
ಅಭಯಪ್ರದಂ ಮಹಾಕುಂಡಲ ಭೂಷಣಂ
ಹಾರ ಅಲಂಕೃತ ರಕ್ಷಸಂ
ಭಸ್ಮೋಧೂಳಿತ ಸರ್ವಾಂಗಂ
ಬಾಲನೇತ್ರ ವಿರಾಜಿತಂ
ವ್ಯಾಘ್ರಜನ್ಮಂ ಪರೀಧಾನಂ
ವ್ಯಾಲ ಯಜ್ಞಂ ಪವೀತನಂ
ಪಾರ್ವತ್ಯ ಸಹಿತಂ ದೇವಂ
ಸರ್ವ ಅಭಿಷ್ಠ ವರದಪ್ರದಂ
ಓಂ ನಮೋ ಭಗವತೇ ಮಹಾ ಮೃತ್ಯುಂಜೇಶ್ವರಾಯಃ
ಚಂದ್ರಶೇಖರಾಯಃ
ಜಟಾಮುಕುಠ ಧಾರಣಾಯಃ
ಅಮೃತ ಕಳಶ ಹಸ್ತಾಯಃ
ಅಮೃತೇಶ್ವರಾಯಃ
ಸರ್ವಾತ್ಮ ರಕ್ಷಕಾಯಃ
ಮಹಾ ಮೃತ್ಯುಂಜಯಾಯಃ
ಸರ್ವರೋಗ ಅರಿಷ್ಠ ನಿವಾರಾಯಃ
ಆಯುರ್ ಅಭಿವ್ಯಕ್ತಿ ಕುರುಃ ಕುರುಃ
ಆತ್ಮನಂ ರಕ್ಷಃ ರಕ್ಷಃ
ಮಹಾ ಮೃತ್ಯುಂಜೇಶ್ವರಾಯಃ ನಮೋ ನಮಃ
ನಮೋ ಭಗವತೇ ಮಹಾ ಮೃತ್ಯುಂಜೇಶ್ವರಾಯಃ
ಪಾರ್ವತಿ ಮನೋಹರಾಯಃ
ಅಮೃತ ಸ್ವರೂಪಾಯಃ
ಕಾಲಂತಕಾಯಃ
ಕರುಣಾಕರಾಯಃ
ಗಂಗಾಧರಾಯಃ‌
ಮಹಾ ಮೃತ್ಯುಂಜಯಾಯಃ
ಸರ್ವರೋಗ ಅರಿಷ್ಟ ನಿವಾರಾಯಯಾಯಃ
ಸರ್ವ ದುಷ್ಟ ಗ್ರಹ ಉಪದ್ರವ ನಿವಾರೇ ನಿವಾರಾಯಃ
ಆತ್ಮನಂ ರಕ್ಷಃ ರಕ್ಷಃ
ಆಯುರ್ ಅಭಿವೃದ್ಧಿಂ ಕುರು ಕುರು
ಮಹಾ ಮೃತ್ಯುಂಜೇಶ್ವರಾಯ ನಮೋ ನಮಃ
ನಮೋ ಭಗವತೇ ಮಹಾ ಮೃತ್ಯುಂಜೇಶ್ವರಾಯಃ
ಜಟಾ ಮುಕುಟಧಾರಣಾಯಃ
ಚಂದ್ರಶೇಖರಾಯಃ
ಶ್ರೀ ಮಹಾವಿಷ್ಣುವಲ್ಲಭಾಯಃ
ಪಾರ್ವತಿ ಮನೋಹರಾಯಃ
ಪಂಚಾಕ್ಷರ ಪರಿಪೂರ್ಣಾಯಃ
ಪರಮೇಶ್ವರಾಯಃ
ಭಕ್ತಾತ್ಮ ಪರಿಪಾಲನಾಯಃ
ಪರಮಾನಂದಾಯಃ
ಪರಬ್ರಹ್ಮ ಪರಾಪರಾಯಃ
ಸರ್ವಾಗ್ರಹಾಂಧಯಃ
ಸ್ಥಂಭಯಃ ಸ್ಥಂಭಯಃ
ಸರ್ವರೋಗ ಅರಿಷ್ಟ ನಿವಾರಯಃ ನಿವಾರಯಃ
ದೀರ್ಘಾಯುಶ್ವಾಂ ಕುರುಃ ಕುರುಃ
ಶ್ರೀ ಮಹಾಮೃತ್ಯುಂಜೇಶ್ವರಯಾಃ ನಮೋ ನಮಃ
ಮಹಾ ಮೃತ್ಯುಂಜಯ ಮೂರ್ತಯೇ
ಆರೋಗ್ಯ ದೃಢಗಾತ್ರ
ಧೀರ್ಘಾಯುಷ್ಯಂ ಕುರುಃ ಕುರುಃ
ಧಾರಪುತ್ರ ಪೌತ್ರ ಸ್ಪಾಂಧವಃ
ಜನನ ರಕ್ಷಾಃ ರಕ್ಷಾಃ
ಧನಧಾನ್ಯ ಕನಕ ಭೂಷಣ
ವಸ್ತು ವಾಹನ ಕೃಷಿಂ
ಗೃಹ ಗ್ರಾಮಾಧಿಂ ರಕ್ಷಃ ರಕ್ಷಃ
ಸರ್ವತ್ರ ಕ್ರಿಯಾನೂಕೂಲ ಜಯಕರಂ ಕುರುಃ ಕುರುಃ
ಆಯುರ್ ಅಭಿವೃದ್ಧಿ ಕುರುಃ ಕುರುಃ
ಶ್ರೀ ಮಹಾ ಮೃತ್ಯುಂಜೇಶ್ವರಾಯ ನಮೋ ನಮಃ
ಓಂ ಮೃತ್ಯುಂಜಯಾಯ ವಿದ್ಮಹೇ
ಭೀಮ ರುದ್ರಾಯಾ ಧೀಮಹಿ
ತನ್ನೋ ರುದ್ರ ಪ್ರಚೋದಯಾತ್.

ಅದೃಷ್ಟವಂತ ಮಹಿಳೆಯರು ಹೊಂದಿರುವ ಲಕ್ಷಣಗಳು ಇವು.!

 

ಸಾಮುದ್ರಿಕ ಶಾಸ್ತ್ರದಲ್ಲಿ ಮನುಷ್ಯನ ದೇಹದ ಲಕ್ಷಣಗಳನ್ನು ನೋಡಿ ಅವರ ಅದೃಷ್ಟ ಮತ್ತು ದುರಾದೃಷ್ಟಗಳನ್ನು ಅಳೆದು ಹೇಳಲಾಗುತ್ತದೆ. ಈ ರೀತಿ ಹೋರೆಗಳನ್ನು ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ನೋಡುತ್ತಾರೆ. ಯಾಕೆಂದರೆ ಹೆಣ್ಣು ಮಕ್ಕಳು ಮನೆಯ ಅದೃಷ್ಟ ಲಕ್ಷ್ಮಿಯರು ಹೀಗಾಗಿ ಆಗಿನ ಕಾಲದಲ್ಲಿ ಹೆಣ್ಣು ತರುವಾಗ ಇವುಗಳನ್ನೆಲ್ಲ ನೋಡಿ ಆರಿಸಿ ತರುತ್ತಿದ್ದರು.

ಕಾಲ ಕಳೆದಂತೆ ಈಗ ಆಧುನಿಕ ಜಗತ್ತಿನ ಅಬ್ಬರದಲ್ಲಿ ಪಾಶ್ಚಿಮಾತ್ಯ ಶೈಲಿಗೆ ಮಾರುಹೋಗಿರುವ ಜನರು ಅನೇಕ ವಿಷಯಗಳನ್ನು ಗಾಳಿಗೆ ತೂರುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಇದು ಯಾವುದು ಸುಳ್ಳು ಆಗುವುದಿಲ್ಲ. ಈ ಲೇಖನದಲ್ಲಿ ನಾವು ಸಾಮುದ್ರಿಕ ಶಾಸ್ತ್ರದಲ್ಲಿ ಮಹಿಳೆಯರ ಅದೃಷ್ಟದ ಲಕ್ಷಣಗಳ ಬಗ್ಗೆ ಸೂಚಿಸಿರುವ ವಿಷಯಗಳನ್ನು ತಿಳಿಸುತ್ತಿದ್ದೇವೆ, ಬೇಕಿದ್ದರೆ ನೀವು ಕೂಡ ತಾಳೆ ಹಾಕಿ ನೋಡಿ ಪರೀಕ್ಷಿಸಿಕೊಳ್ಳಿ.

* ಹೆಣ್ಣುಮಕ್ಕಳ ಹಣೆ ಅಗಲವಾಗಿದ್ದರೆ ಆಕೆ ಬಹಳ ಅದೃಷ್ಟ ಹೊಂದಿದ್ದಾಳೆ. ಮದುವೆ ಆದ ನಂತರ ಗಂಡನ ಮನೆಯಲ್ಲಿ ಸಂತೋಷವಾಗಿ ಜೀವನ ನಡೆಸುತ್ತಾಳೆ ಎಂದು ಹೇಳಲಾಗುತ್ತದೆ.
* ಕೈ ಬೆರಳುಗಳು ಉದ್ದವಾಗಿದ್ದರೆ ಇಂತಹ ಹೆಣ್ಣು ಮಕ್ಕಳನ್ನು ಮದುವೆ ಆಗುವ ಗಂಡಂದಿರಿಗೆ ಅದೃಷ್ಟ ಬರುತ್ತದೆ, ಇವರಿಗೆ ಎಂದು ಕೂಡ ಹಣಕಾಸಿನ ಸಮಸ್ಯೆ ಬರುವುದಿಲ್ಲ ಯಾವಾಗಲೂ ಕೈ ತುಂಬಾ ಹಣ ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ.

ಈ ಸುದ್ದಿ ಓದಿ:- ಆಂಜನೇಯನ ಬಳಿ ಈ ವಸ್ತು ಇಡಿ, ಎಷ್ಟೇ ಸಾಲ ಇದ್ದರು ಖಂಡಿತ ತೀರುತ್ತೆ.!

* ಕತ್ತು ಉದ್ದವಾಗಿರುವ ಹೆಣ್ಣು ಮಕ್ಕಳು ಹುಟ್ಟಿದ ಮನೆಗೆ ಹಾಗೂ ಗಂಡನ ಮನೆ ಎರಡಕ್ಕೂ ಕೂಡ ಅದೃಷ್ಟವನ್ನು ಹೊತ್ತು ತಂದಿರುತ್ತಾರೆ ಎಂದು ಹೇಳಲಾಗುತ್ತದೆ. ಇಂತಹ ಹೆಣ್ಣು ಮಕ್ಕಳು ಮನೆಯಲ್ಲಿ ರಾಣಿ ರೀತಿ ಬೆಳೆಯುತ್ತಾರೆ ಮತ್ತು ಅವರು ಹುಟ್ಟಿದ ನಂತರ ಅವರ ಮನೆ ಹೇಗಿದ್ದರೂ ನಂತರ ಅರಮನೆ ರೀತಿ ಆಗುತ್ತದೆ ಎಂದು ಹೇಳುತ್ತಾರೆ.

* ದಪ್ಪವಾಗಿರುವ ಹೆಣ್ಣು ಮಕ್ಕಳು ಜೀವನದಲ್ಲಿ ಏನೇ ಕಷ್ಟ ಬಂದರೂ ಕೂಡ ಅದನ್ನು ಧೈರ್ಯವಾಗಿ ಎದುರಿಸುವಂತಹ ಶಕ್ತಿಯನ್ನು ಹೊಂದಿರುತ್ತಾರೆ, ತಾವು ಖುಷಿಯಾಗಿ ಇದ್ದು, ಸುತ್ತಮುತ್ತಲಿರುವವರನ್ನು ಕಾಳಜಿ ಇಂದ ನೋಡಿಕೊಳ್ಳುವ ಗುಣ ಹೊಂದಿರುತ್ತಾರೆ ಎಂದು ಸಾಮುದ್ರಿಕ ಶಾಸ್ತ್ರ ಹೇಳುತ್ತದೆ.

* ದುಂಡನೆಯ ಮುಖ ಹಾಗೂ ದಪ್ಪ ಕಣ್ಣನ್ನು ಹೊಂದಿರುವ ಹೆಣ್ಣು ಮಕ್ಕಳು ಕೂಡ ಯಾವಾಗಲೂ ಮನೆಯಲ್ಲಿ ಸಂತೋಷವಾಗಿ ಇರುತ್ತಾರೆ. ಮನೆ ಬೆಲೆ ಹೆಚ್ಚು ಕಾಳಜಿ ತೋರಿ, ಮನೆಯನ್ನು ಮುನ್ನಡೆಸಿಕೊಂಡು ಹೋಗುತ್ತಾರೆ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ.

ಈ ಸುದ್ದಿ ಓದಿ:- ಮಾರ್ಚ್ 25 ಹೋಳಿ ಹುಣ್ಣಿಮೆ ದಿನದಂದು ಚಂದ್ರಗ್ರಹಣ, ಪರಿಣಾಮ ಈ 5 ರಾಶಿಯವರಿಗೆ ರಾಜಯೋಗ ಖಂಡಿತ.!

* ಹೆಣ್ಣು ಮಕ್ಕಳಿಗೆ ಹಲ್ಲಿನ ಮೇಲೆ ಹಲ್ಲು ಇದ್ದರೆ ಅಥವಾ ಹಲ್ಲುಗಳ ನಡುವೆ ಗ್ಯಾಪ್ ಇದ್ದರೆ ಅಂತಹ ಹೆಣ್ಣು ಮಕ್ಕಳು ಹೋದ ಮನೆಯಲ್ಲಿ ಅದೃಷ್ಟ ತರುತ್ತಾರೆ ಅವರಿಗೆ ಬಹಳ ಕೀರ್ತಿ ಬರುತ್ತದೆ. ಸಂತೋಷವಾಗಿ ಜೀವನ ಕಳೆಯುತ್ತಾರೆ ಎಂದು ಹೇಳಲಾಗುತ್ತದೆ.

* ಹೆಣ್ಣು ಮಕ್ಕಳ ಕಾಲಿನ ಬೆರಳುಗಳು ಉದ್ದವಾಗಿ ಇದ್ದರೆ ಅದರಲ್ಲೂ ಹೆಬ್ಬೆರಳಿಗಿಂತ ಎರಡನೇ ಬೆರಳು ಉದ್ದವಾಗಿ ಇದ್ದರೆ ತನ್ನ ಪತಿಗೆ ಅದೃಷ್ಟ ತರುತ್ತಾರೆ. ಇವರು ಕಾಲಿಟ್ಟ ಮೇಲೆ ಪತಿ ಮನೆ ಏಳಿಗೆ ಆಗುತ್ತದೆ. ಈ ಲಕ್ಷಣ ಇರುವ ಹೆಣ್ಣು ಮಕ್ಕಳು ಲಕ್ಷ್ಮಿ ಅನುಗ್ರಹ ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ.

* ಚಪ್ಪಟೆ ಪಾದವನ್ನು ಹೊಂದಿರುವ ಹೆಣ್ಣು ಮಕ್ಕಳು ಮನೆಯಲ್ಲಿ ಹೊಂದಾಣಿಕೆ ಇರುವಂತೆ ನೋಡಿಕೊಳ್ಳುತ್ತಾರೆ. ಇವರು ಇರುವಂತಹ ಮನೆಗಳಲ್ಲಿ ಕ’ಲ’ಹ ಆಗುವುದು ಕಡಿಮೆ ಮನೆಯಲ್ಲಿ ಶಾಂತಿ ಇರುತ್ತದೆ, ಬಹಳ ಗುಣವಂತ ಹೆಣ್ಣು ಮಕ್ಕಳು ಎಂದು ಹೇಳಲಾಗುತ್ತದೆ.

ಈ ಸುದ್ದಿ ಓದಿ:- 3 ಒಲೆ ಇರುವ ಗ್ಯಾಸ್ ಸ್ಟವ್ ಬಳಸುವವರು ತಪ್ಪದೆ ನೋಡಿ.!

* ಹೆಣ್ಣು ಮಕ್ಕಳಿಗೆ ಮುಖದಲ್ಲಿ ಎಡಭಾಗದಲ್ಲಿ ಮಚ್ಚೆಗಳು ಇದ್ದರೆ ಅಂತಹ ಹೆಣ್ಣು ಮಕ್ಕಳು ಕೂಡ ಅದೃಷ್ಟ ಶಾಲಿಗಳು ಎಂದು ಹೇಳಲಾಗುತ್ತದೆ.

ಆಂಜನೇಯನ ಬಳಿ ಈ ವಸ್ತು ಇಡಿ, ಎಷ್ಟೇ ಸಾಲ ಇದ್ದರು ಖಂಡಿತ ತೀರುತ್ತೆ.!

 

ಆಂಜನೇಯ ಸ್ವಾಮಿ ಕಲಿಯುಗದಲ್ಲಿ ಮನುಷ್ಯನಿಗೆ ಕಷ್ಟ ಎಂದ ಕೂಡಲೇ ಕೈಹಿಡಿಯುವ ದೇವರು ಎಂದು ಹೇಳಲಾಗುತ್ತದೆ. ಯಾಕೆಂದರೆ ಮನುಷ್ಯನಿಗೂ ಆಂಜನೇಯ ಸ್ವಾಮಿಗೂ ಅವಿನಾಭಾವ ಸಂಬಂಧವಿದೆ. ಆಂಜನೇಯ ಸ್ವಾಮಿಯು ತೀಕ್ಷ್ಣ ಬುದ್ಧಿ ಉಳ್ಳವರು, ಸಾಹಸವಂತರು, ಧೈರ್ಯವಂತರು ಹಾಗೆ ಹೃದಯವಂತರು ಕೂಡ.

ಈ ಸುದ್ದಿ ಓದಿ:- ಏಪ್ರಿಲ್ 09 ರ ನಂತರ ಈ ಮೂರು ರಾಶಿಯವರಿಗೆ ರಾಜಯೋಗ, ನಿಮ್ಮ ರಾಶಿಯು ಇದೆಯೇ ಚೆಕ್ ಮಾಡಿ ತಿಳಿದುಕೊಳ್ಳಿ…

ನಿಸ್ವಾರ್ಥದಿಂದ ರಾಮಧ್ಯಾನವನ್ನೇ ಉಸಿರಾಗಿಸಿಕೊಂಡು ಬದುಕಿದ ಆಂಜನೇಯ ಸ್ವಾಮಿಗೆ ರಾಮನ ಹೆಸರು ಹೇಳಿದರೆ ಸಾಕು ಅಲ್ಲಿ ಪ್ರತ್ಯಕ್ಷರಾಗಿರುತ್ತಾರೆ ಮತ್ತು ಅವರನ್ನು ಈ ಹೆಸರಿನಿಂದ ಪ್ರಸನ್ನಗೊಳಿಸುವುದು ಬಹಳ ಸುಲಭ. ಯಾವುದೇ ಕಠಿಣ ವ್ರತ ಆಚರಣೆಗಳು ಇಲ್ಲದೆ ನಮ್ಮ ಕಷ್ಟ ಪರಿಹಾರಕ್ಕಾಗಿ ಆಂಜನೇಯನನ್ನು ಸಿಂಧೂರ ಹಾಗೂ ಶ್ರೀರಾಮನ ಹೆಸರಿನಿಂದ ಪ್ರಸನ್ನರಾಗಿಸಿ ಆಶೀರ್ವಾದ ಪಡೆಯಬಹುದು.

ಈ ಭೂಮಿ ಮೇಲೆ ಜೀವ ತಾಳಿ ಭಗವಂತನಾದ ಆಂಜನೇಯ ಸ್ವಾಮಿಗೆ ಮನುಷ್ಯನ ಕಷ್ಟಗಳು ಚೆನ್ನಾಗಿ ತಿಳಿದಿರುತ್ತವೆ. ಹಾಗಾಗಿ ಮನುಷ್ಯನಿಗೆ ಮನುಷ್ಯ ಸಹಜವಾದ ಯಾವುದೇ ಕಷ್ಟ ಬಂದರೂ ಬಹಳ ಬೇಗ ಅರ್ಥ ಮಾಡಿಕೊಂಡು ಪರಿಹಾರ ಮಾಡಿಕೊಡುತ್ತಾರೆ ಎಂದು ಹಿರಿಯರು ಹೇಳುತ್ತಾರೆ.

ಈಗಿನ ಕಾಲದಲ್ಲಿ ಮನುಷ್ಯನಿಗೆ ಇರುವ ಒಂದು ಬಹಳ ದೊಡ್ಡ ಸಮಸ್ಯೆ ಎಂದರೆ ಹಣಕಾಸಿನ ಸಮಸ್ಯೆ. ಈ ಹಣಕಾಸಿನ ತೊಡಕಿನಿಂದಾಗಿ ಆತ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ ಆ ಬಳಿಕ ಒಂದೊಂದು ಸಮಸ್ಯೆ ಆರಂಭವಾಗಿ ಒಟ್ಟಾರೆಯಾಗಿ ತನ್ನ ಉದ್ಯೋಗ ವ್ಯಾಪಾರ ಮನೆ ಮಠ ಎಲ್ಲದರಲ್ಲೂ ಆನಂದ ಕಳೆದುಕೊಳ್ಳುತ್ತಾನೆ ಬದುಕಿದ್ದಾಗಲೇ ನರಕ ನೋಡುವಂತಹ ಪರಿಸ್ಥಿತಿ ಎದುರಾಗುತ್ತದೆ.

ಈ ಸುದ್ದಿ ಓದಿ:- ಈ ಕ್ಷೇತ್ರಕ್ಕೆ ಕಾಲಿಟ್ಟರೆ ಶ್ರೀಮಂತರಾಗುವುದರಲ್ಲಿ ಅನುಮಾನವೇ ಇಲ್ಲ, ಸೈಕಲ್ ನಲ್ಲಿ ಹೋದವರು ಇಂದು ಕಾರ್ ಕೊಂಡುಕೊಂಡಿದ್ದಾರೆ.!

ಹಾಗಾಗಿ ಈ ರೀತಿ ಕಷ್ಟ ಬಂದಾಗ ತಕ್ಷಣವೇ ಈ ಪಾವಮಾನವನ್ನು ನೆನೆದು ಸಮಸ್ಯೆ ಪರಿಹರಿಸಿಕೊಳ್ಳಲು ಮಾರ್ಗ ತೋರಿಸುವುದಕ್ಕಾಗಿ ಪ್ರಾರ್ಥನೆ ಮಾಡಿ. ಆಂಜನೇಯನನ್ನು ಪೂಜೆ ಮಾಡಿದವರಿಗೆ ಏನು ಕಷ್ಟ ನೀಡುವುದಿಲ್ಲ ಎಂದು ಶನೇಶ್ವರ ಸ್ವಾಮಿಯು ಕೂಡ ಹೇಳಿದ್ದಾರೆ ಹಾಗಾಗಿ ನಿಮ್ಮ ಅದೃಷ್ಟ ಸರಿ ಹೋಗಬೇಕು ಹಣೆಬರಹ ಗಟ್ಟಿ ಆಗಬೇಕು ಎಂದರೆ ಮೊದಲಾಗಿ ನಿಮ್ಮ ಸಾಲ ತೀರಬೇಕು ಎಂದರೆ ಒಂದು ಮಂಗಳವಾರದ ದಿನದಂದು ಈಗ ನಾವು ಹೇಳುತ್ತಿರುವ ಈ ಸರಳ ಆಚರಣೆ ಮಾಡಿ.

ನೀವು ಮನೆ ಶುದ್ಧ ಮಾಡಿಕೊಂಡು ನೀವು ಸ್ನಾನ ಮಾಡಿ ಮಡಿಯುಟ್ಟು ದೇವರ ಕೋಣೆಯಲ್ಲಿ ಕುಳಿತು ಶ್ರೀರಾಮ ಆಂಜನೇಯ ನಿಮ್ಮ ಮನೆದೇವರು ಇಷ್ಟ ದೇವರು ಎಲ್ಲರನ್ನು ನೆನೆದು ಪೂಜೆ ಮಾಡಿ. ದೀಪದ ಬೆಳಕಿನಲ್ಲಿ ಭಗವಂತನನ್ನು ನೆನೆಯುತ್ತಾ ನಿಮ್ಮ ಕಷ್ಟಗಳನೆಲ್ಲ ಹೇಳಿಕೊಳ್ಳಿ, ನಂತರ 11 ವೀಳ್ಯದೆಲೆ, 11 ಅಡಿಕೆ, ಕೇಸರಿ ಸಿಂಧೂರ ಮತ್ತು ಕೆಂಪು ದಾರ ಇವಿಷ್ಟು ಸಿದ್ಧಪಡಿಸಿಕೊಳ್ಳಿ.

ಈ ಸುದ್ದಿ ಓದಿ:- 3 ಒಲೆ ಇರುವ ಗ್ಯಾಸ್ ಸ್ಟವ್ ಬಳಸುವವರು ತಪ್ಪದೆ ನೋಡಿ.!

ಒಂದೊಂದು ವೀಳ್ಯದೆಲೆ ಮೇಲೂ ಕೂಡ ಕೇಸರಿ ಸಿಂಧೂರದಿಂದ ಶ್ರೀರಾಮ ಎಂದು ಬರೆಯಿರಿ. ಅಡಿಕೆಗೂ ಕೂಡ ಕೇಸರಿ ಹಚ್ಚಿ ಒಂದೊಂದು ಎಲೆ ಮೇಲೆ ಒಂದೊಂದು ಅಡಿಕೆ ಇಟ್ಟು ಪಾನ್ ರೀತಿ ಮಡಚಿಕೊಳ್ಳಿ ಇವುಗಳನ್ನು ಕೆಂಪು ದಾರದಿಂದ ಸುತ್ತಿ ಹಾರ ಮಾಡಿಕೊಳ್ಳಿ ಇದನ್ನು ನಿಮ್ಮ ಮನೆಯಲ್ಲಿರುವ ಆಂಜನೇಯನ ವಿಗ್ರಹ ಅಥವಾ ಆಂಜನೇಯನ ಫೋಟೋಗೆ ಹಾಕಿ ಭಕ್ತಿಯಿಂದ ಆರಾಧನೆ ಮಾಡಿ.

11 ಬಾರಿ ಹನುಮಾನ್ ಚಾಲೀಸವನ್ನು ಪಡಿಸಿ ಮತ್ತು 11 ದಿನಗಳವರೆಗೆ ಪ್ರತಿನಿತ್ಯವೂ ಈ ಪೂಜೆಯನ್ನು ಮುಂದುವರಿಸಿ ಅಥವಾ 11 ವಾರಗಳವರೆಗೂ ಕೂಡ ಮಾಡಬಹುದು. ಈ ರೀತಿ ಮಾಡಿದರೆ ನಿಮ್ಮ ವ್ರತ ಮುಗಿಯುವುದರ ಒಳಗೆ ನಿಮ್ಮ ಸಮಸ್ಯೆ ಪರಿಹಾರ ಆಗುವುದರಲ್ಲಿ ಯಾವುದೇ ಅನುಮಾನ ಬೇಡ. ಶ್ರದ್ಧಾ ಭಕ್ತಿಯಿಂದ ಈ ವ್ರತ ಅನುಸರಿಸಿ ಹಣಕಾಸಿನ ಪರಿಸ್ಥಿತಿ ಉತ್ತಮಗೊಳಿಸಿಕೊಳ್ಳಿ.

 

ಏಪ್ರಿಲ್ 09 ರ ನಂತರ ಈ ಮೂರು ರಾಶಿಯವರಿಗೆ ರಾಜಯೋಗ, ನಿಮ್ಮ ರಾಶಿಯು ಇದೆಯೇ ಚೆಕ್ ಮಾಡಿ ತಿಳಿದುಕೊಳ್ಳಿ…

 

ನೋಡು ನೋಡುತ್ತಿದ್ದಂತೆ ನಾವು ಒಂದು ವರ್ಷ ಕಳೆದೇ ಬಿಟ್ಟಿದ್ದೇವೆ. ಮರಳಿ ಯುಗಾದಿಯು ಬಂದಿದ್ದು ಶೋಭಕೃತ್ ಸಂವತ್ಸರವು ಕಳೆದು ಕ್ರೋಧಿ ಸಂವತ್ಸರ ಆರಂಭವಾಗುತ್ತಿದೆ. ನಮ್ಮ ಸನಾತನ ಸಂಪ್ರದಾಯದ ಪ್ರಕಾರವಾಗಿ ಯುಗಾದಿ ಹಬ್ಬವು ಹಿಂದುಗಳಿಗೆ ಹೊಸ ವರ್ಷವಾಗಿದ್ದು ಅಂದೇ ಹೊಸ ಪಂಚಾಂಗವನ್ನು ವರ್ಷ ಭವಿಷ್ಯವನ್ನು ನೋಡುವುದು.

ಈ ವರ್ಷ ಏಪ್ರಿಲ್ 09 ರಂದು ಯುಗಾದಿ ಹಬ್ಬ ಬಂದಿದ್ದು, ಬರೋಬ್ಬರಿ 30 ವರ್ಷಗಳ ನಂತರ ಇಂತಹದೊಂದು ಅಪರೂಪದ ಯೋಗ ರೂಪುಗೊಳ್ಳುತ್ತಿದೆ. ಇದರ ಪರಿಣಾಮವು ದ್ವಾದಶ ರಾಶಿಗಳೆಲ್ಲದರ ಮೇಲೆ ಇದ್ದು ಅದರಲ್ಲೂ ಈ ಮೂರು ರಾಶಿಯವರಿಗೆ ಅವರ ಜೀವನದಲ್ಲಿ ಸಂತೋಷದ ಹೊಳೆಯೇ ಹರಿಯುತ್ತಿದೆ.

ಈ ಮೂರು ರಾಶಿಯವರಿಗೆ ಅಮೃತಸಿದ್ದಿಯೋಗ, ಸರ್ವಾರ್ಥ ಸಿದ್ಧಿಯೋಗ ಮತ್ತು ರಾಜಯೋಗ ಎಂಬ ಮೂರು ಬಗೆಯ ಯೋಗಗಳು ದೊರಕುತ್ತಿವೆ. ಯಾವ ರಾಶಿಯವರು ಈ ರೀತಿಯ ಶುಭಫಲಗಳನ್ನು ಹೊಂದಿದ್ದರೆ, ಯಾವ ರೀತಿಯ ಫಲಗಳು ಸಿಗುತ್ತವೆ ಇಲ್ಲಿದೆ ನೋಡಿ ವಿವರ.

ಈ ಸುದ್ದಿ ಓದಿ:- ಬಡ ಹಾಗೂ ಮಧ್ಯಮ ವರ್ಗದವರಿಗೆ ಸರ್ಕಾರದಿಂದ ಬಂಪರ್ ಗಿಫ್ಟ್.! ರೇಷನ್ ಕಾರ್ಡ್ ಇದ್ದವರಿಗೆ 5 ಲಕ್ಷ, ಇಲ್ಲದವರಿಗೆ 1.5 ಲಕ್ಷ ಉಚಿತ.!

* ಧನಸ್ಸು ರಾಶಿ:- ಧನಸ್ಸು ರಾಶಿಯವರಿಗೆ ಈ ಯೋಗಗಳ ಫಲವಾಗಿ ಬಹಳ ಅದೃಷ್ಟ ಕೈ ಹಿಡಿಯುತ್ತಿದೆ. ಈ ಸಮಯವು ನಿಮಗೆ ದೊಡ್ಡ ದೊಡ್ಡ ಲಾಭಗಳನ್ನು ತಂದು ಕೊಡುತ್ತಿದೆ. ವೃತ್ತಿ ಬದುಕು ಹಾಗೂ ವ್ಯಾಪಾರಕ್ಕೆ ಸಂಬಂಧಪಟ್ಟ ಹಾಗೆ ಹೊಸ ಹೊಸ ಅವಕಾಶಗಳನ್ನು ಕೂಡ ಕಾಣುತ್ತೀರಿ.

ವ್ಯಾಪಾರದಲ್ಲಿ ಬಹಳ ಲಾಭ ಹೊಂದುವ ವೃತ್ತಿ ಕ್ಷೇತ್ರದಲ್ಲಿ ಉನ್ನತ ಸ್ಥಾನಗಳಿಗೆ ಏರುವ ಅವಕಾಶವನ್ನು ಹೊಂದಿದ್ದೀರಿ. ಅಧ್ಯಯನದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಲಿದ್ದಾರೆ ಮತ್ತು ಈ ಕಾರಣಗಳಿಂದ ಕೀರ್ತಿವಂತರಾಗಿ ಹೆಸರು ಮಾಡುತ್ತಾರೆ. ಅವಿವಾಹಿತರಿಗೆ ವಿವಾಹ ಯೋಗ, ಮತ್ತು ವಿವಾಹ ಜೀವನದಲ್ಲಿ ತೊಂದರೆಯಲ್ಲಿ ಇದ್ದವರಿಗೆ ಇವುಗಳು ಪರಿಹಾರವಾಗಿ ಕುಟುಂಬದಲ್ಲಿ ಸಂತೋಷ ಸೌಖ್ಯ ದುಪ್ಪಟ್ಟು ಆಗುವ ಯೋಗಗಳನ್ನು ಪಡೆಯುತ್ತಾರೆ.

* ಮಕರ ರಾಶಿ:- ಮಕರ ರಾಶಿಯವರಿಗೆ ಕೂಡ ಬಹಳ ಒಳ್ಳೆಯ ಫಲಗಳು ಸಿಗುತ್ತಿವೆ. ಹಠಾತ್ ಧನಾಗಮನದ ಯೋಗವು ಕೂಡ ಇದ್ದು, ಹಣದ ಆಗಮನವು ನಿಮ್ಮ ಜೀವನದಲ್ಲಿದ್ದ ಬಹಳಷ್ಟು ಸಮಸ್ಯೆಗಳನ್ನು ತೊಡೆದು ಹಾಕಲಿದೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಯುಕ್ತಪಡುತ್ತಿದ್ದವರಿಗೆ ಬಯಸಿದ ಉದ್ಯೋಗ ಸಿಗುವ ಬಹುತೇಕ ಸಾಧ್ಯತೆಗಳು ಈ ವರ್ಷದಲ್ಲಿ ಇದೆ. ಮಕ್ಕಳು ಪ್ರಗತಿ ಕಾಣಲಿದ್ದಾರೆ, ಇದರಿಂದ ಮನೆಯ ವಾತಾವರಣವು ಹಸಿಯಾಗುತ್ತದೆ.

ಈ ಸುದ್ದಿ ಓದಿ:- ಈ 5 ಹೆಸರಿನ ಹೆಣ್ಣು ಮಕ್ಕಳನ್ನು ಕಣ್ಣು ಮುಚ್ಚಿ ನಂಬಬಹುದು, ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ.!

* ಕಟಕ ರಾಶಿ:- ಯುಗಾದಿ ಬಳಿಕ ಕಟಕ ರಾಶಿಯವರಿಗೆ ಆರ್ಥಿಕ ಲಾಭ ಸಿಗುತ್ತದೆ. ಕಚೇರಿಯಲ್ಲಿ ಹಾಗೂ ಉದ್ಯಮದಲ್ಲಿ ಹೊಸ ಜವಾಬ್ದಾರಿಗಳನ್ನು ಹೊತ್ತಿಕೊಳ್ಳಲಿದ್ದೀರಿ. ಎಲ್ಲದಕ್ಕೂ ಕೂಡ ನಿಮ್ಮ ಅದೃಷ್ಟ ಸಹಕರಿಸಲಿದ್ದು, ಎಲ್ಲವನ್ನು ಯಶಸ್ವಿಯಾಗಿ ಗೆಲ್ಲುತ್ತೀರಿ. ಕುಟುಂಬದಲ್ಲಿ ಸುಖ, ಶಾಂತಿ ನೆಮ್ಮದಿ ವೃದ್ಧಿಯಾಗುತ್ತಿದ್ದು ಬಹಳ ಖುಷಿ ಕಾಣುತ್ತೀರಿ.

* ತುಲಾ ರಾಶಿ:- ಯುಗಾದಿಯಲ್ಲಿ ರೂಪುಗೊಳ್ಳುತ್ತಿರುವ ಮೂರು ಯೋಗದ ಫಲದಿಂದಾಗಿ ತುಲಾ ರಾಶಿಯ ಅದೃಷ್ಟ ಕುಲಾಯಿಸಲಿದೆ. ಈ ರಾಶಿಯವರು ಯಾವುದೇ ಕ್ಷೇತ್ರದಲ್ಲಿ ತೊಡಕಿಕೊಂಡಿದ್ದರು ಅದೃಷ್ಟ ಮತ್ತು ಯಶಸ್ಸು ಈ ನೂತನ ವರ್ಷದಲ್ಲಿ ಅವರನ್ನು ಹುಡುಕಿ ಬರುತ್ತದೆ. ಯಾವುದೇ ಹೊಸ ಕೆಲಸ ಆರಂಭಿಸಿದರೂ ಕೂಡ ಅದು ಯಶಸ್ವಿಯಾಗಿ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿ ಶ್ರೀಮಂತಿಕೆ ಹುಡುಕಿ ಬರುತ್ತದೆ.

* ಸಿಂಹ ರಾಶಿ:- ಸಿಂಹ ರಾಶಿಯವರಿಗೆ ಸ್ವಲ್ಪ ವಿಭಿನ್ನವಾದ ಫಲಗಳು ಸಿಗುತ್ತಿವೆ. ಸಿಂಹ ರಾಶಿಯವರಿಗೆ ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚುತ್ತವೆ. ಸಂಶೋಧನೆ ಕ್ಷೇತ್ರದಲ್ಲಿ ಸಂಪರ್ಕ ಹೊಂದಿದ್ದವರಿಗೆ ಈ ಸಮಯ ಬಹಳ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತಿದೆ. ಈ ರಾಶಿಯವರು ಮಾತ್ರವಲ್ಲದೆ ಉಳಿದ ಎಲ್ಲ ರಾಶಿಗಳಿಗೂ ಕೂಡ ಅನೇಕ ಶುಭಫಲಗಳು ಸಿಗುತ್ತಿವೆ.

ಈ ಕ್ಷೇತ್ರಕ್ಕೆ ಕಾಲಿಟ್ಟರೆ ಶ್ರೀಮಂತರಾಗುವುದರಲ್ಲಿ ಅನುಮಾನವೇ ಇಲ್ಲ, ಸೈಕಲ್ ನಲ್ಲಿ ಹೋದವರು ಇಂದು ಕಾರ್ ಕೊಂಡುಕೊಂಡಿದ್ದಾರೆ.!

 

ನಮ್ಮ ನಾಡಿನಲ್ಲಿ ಅನೇಕ ಪುಣ್ಯಕ್ಷೇತ್ರಗಳು ಇವೆ. ರಾಮಾಯಣ ಮಹಾಭಾರತ ನಡೆದಿರುವ ಈ ಭರತ ಭೂಮಿಯಲ್ಲಿ ಕರ್ನಾಟಕದಲ್ಲಿ ಕೂಡ ಇದಕ್ಕೆ ಉಲ್ಲೇಖಗಳು ಇವೆ, ಆಂಜನೇಯನ ಜನ್ಮಭೂಮಿ ಆಗಿರುವ ಕರ್ನಾಟಕದಲ್ಲಿ ರಾಮ ಸೀತೆ ಲಕ್ಷ್ಮಣ ಆಂಜನೇಯ ನಡೆದಾಡಿರುವ ಸ್ಥಳಗಳು ಮತ್ತು ಅವುಗಳ ಪ್ರಭಾವ ಇಂದಿಗೂ ಕಣ್ಣೆದುರಿಗೆ ಸಾಕ್ಷಿಯಾಗಿರುವುದನ್ನು ಕಾಣಬಹುದು.

ಅದೇ ರೀತಿ ಮಹಾಭಾರತದಲ್ಲಿ ನಡೆದಿರುವ ಅದೆಷ್ಟೋ ಘಟನೆಗಳಿಗೆ ಕರ್ನಾಟಕವು ಸಾಕ್ಷಿಯಾಗಿದೆ. ಹೀಗೆ ದೇವಾನು ದೇವತೆಗಳು ಮಹಾಮಹಿಮರು ಅವತಾರ ತಾಳಿ ನೆಲೆ ನಿಂತು ಆಶೀರ್ವದಿಸಿ ಹೋಗಿರುವ ಈ ಭೂಮಿಯಲ್ಲಿ ಇಂದಿಗೂ ಅನೇಕ ಕ್ಷೇತ್ರಗಳಲ್ಲಿ ಚಮತ್ಕಾರವೇ ನಡೆಯುತ್ತಿದೆ.

ಇಂತಹ ಕ್ಷೇತ್ರಗಳಲ್ಲಿ ತಾಯಿ ಚಾಮುಂಡೇಶ್ವರಿಯ ಸನ್ನಿಧಾನ ಹಾಗೂ ಬಸವಪ್ಪನವರ ಮತ್ತು ಆಂಜನೇಯ ಸ್ವಾಮಿಯ ಇರುವ ಒಂದು ಜಾಗ ಎಂದರೆ ಚನ್ನಪಟ್ಟಣ ತಾಲೂಕು ರಾಮನಗರ ಜಿಲ್ಲೆ ಬಳಿ ಇರುವ ಗೌಡಗೆರೆ ಗ್ರಾಮ. ಗೌಡಗೆರೆ ಚಾಮುಂಡೇಶ್ವರಿ ಶ್ರೀ ಬಸವಪ್ಪನವರ ಕ್ಷೇತ್ರ ಎಂದು ಕೇಳಿದರೆ ಯಾರು ಬೇಕಾದರೂ ಈ ಸ್ಥಳಕ್ಕೆ ದಾರಿ ತೋರಿಸುತ್ತಾರೆ. ಅಷ್ಟರಮಟ್ಟಿಗೆ ಈ ಸ್ಥಳವು ತನ್ನ ಪ್ರಭಾವದಿಂದ ಸುತ್ತ ಹತ್ತಾರು ಹಳ್ಳಿಗಳಲ್ಲಿ ಹೆಸರುವಾಸಿಯಾಗಿದೆ.

ಈ ಸುದ್ದಿ ಓದಿ:- ನಿಮ್ಮ ಕೆಲಸ ಆಗುತ್ತದಾ? ಇಲ್ಲವಾ? ಎನ್ನುವುದನ್ನು ನೀರಿನಿಂದಲೇ ತಿಳಿಯಬಹುದು, ನೀವೇ ಹೇಳುತ್ತದೆ ನಿಮ್ಮ ಭವಿಷ್ಯ.!

ಹತ್ತಿರದ ಜನರು ಮಾತ್ರವಲ್ಲದೆ ದೂರದ ಊರುಗಳಿಂದ ರಾಜ್ಯದ, ದೇಶದ ನಾನಾ ಭಾಗಗಳಿಂದ ಇಲ್ಲಿ ನೆಲೆಗೊಂಡಿರುವ ತಾಯಿ ಚಾಮುಂಡೇಶ್ವರಿ ಅಮ್ಮನವರ ದರ್ಶನ ಮಾಡಲು ಮತ್ತು ಏಳು ವಾರ ಬಂದು ತೆಂಗಿನಕಾಯಿ ಕಟ್ಟಿದವರಿಗೆ ಹರಕೆ ನೆರವೇರುವಂತೆ ಮಾಡುವ ಬಸವಪ್ಪನವರ ಪವಾಡವನ್ನು ಕಾಣಲು ಮತ್ತು ಆಂಜನೇಯನ ಉದ್ಭವ ಮೂರ್ತಿ ಬಳಿ ಇಂದಿಗೂ ರಾಮ ಸೇತುವೆ ನಿರ್ಮಿಸಿದ ತೇತ್ರಾಯುಗದ ತೇಲುವ ಕಲ್ಲು ಇರುವುದನ್ನು ನೋಡಲು ಭಕ್ತಾದಿಗಳು ಈ ಸ್ಥಳಕ್ಕೆ ಬರುತ್ತಾನೆ.

ಸ್ಥಳ ಮಹಾತ್ಮೆ ಬಗ್ಗೆ ವಿವರಿಸುವುದಾದರೆ ಇಲ್ಲಿಗೆ ಬರುವ ಭಕ್ತಾದಿಗಳು ಹೇಳುವ ಪ್ರಕಾರವಾಗಿ ಅನೇಕರಿಗೆ ಕಷ್ಟಕಾರ್ಪಣ್ಯಗಳು ಕಳೆದಿವೆ. ಆರೋಗ್ಯಕ್ಕಾಗಿ, ಹಣಕಾಸಿನ ಪರಿಸ್ಥಿತಿಯ ಸುಧಾರಣೆಗಾಗಿ, ಹೆಸರಿಗಾಗಿ, ಕೀರ್ತಿಗಾಗಿ, ನೆಮ್ಮದಿಗಾಗಿ, ಸಂತಾನಕ್ಕಾಗಿ ವಿವಾಹಕ್ಕಾಗಿ ಹೀಗೆ ಯಾವ ಸಮಸ್ಯೆ ಇದ್ದರೂ ಅದಕ್ಕೆ ಪರಿಹಾರ ಕಂಡುಕೊಳ್ಳಲು ಇಲ್ಲಿಗೆ ಬರುತ್ತಾರೆ.

ಬಸವಪ್ಪನವರ ಹರಕೆ ಸಲ್ಲಿಸುವವರಿಗೆ ಮಂಗಳವಾರ ಶುಕ್ರವಾರ ಹಾಗೂ ಭಾನುವಾರದಂದು ನೀರು ಹಾಕಲಾಗುತ್ತದೆ. ಏಳು ವಾರ ಕಾಯಿ ತಂದು ಕಟ್ಟಿ ಏಳು ಪ್ರದಕ್ಷಿಣೆ ಹಾಕಿ ನೀರು ಹಾಕಿಸಿಕೊಂಡು ಹೋದರೆ ಏಳು ವಾರ ಮುಗಿಯುವುದರೊಳಗೆ ಅವರ ಕೋರಿಕೆ ನೆರವೇರುತ್ತದೆ ಬಯಕೆ ಈಡೇರಿದ ಮೇಲೆ ಬಂದು ತಮ್ಮ ಸೇವೆ ಸಲ್ಲಿಸಿ ಹೋಗುತ್ತಾರೆ.

ಈ ಸುದ್ದಿ ಓದಿ:-ಬಡ ಹಾಗೂ ಮಧ್ಯಮ ವರ್ಗದವರಿಗೆ ಸರ್ಕಾರದಿಂದ ಬಂಪರ್ ಗಿಫ್ಟ್.! ರೇಷನ್ ಕಾರ್ಡ್ ಇದ್ದವರಿಗೆ 5 ಲಕ್ಷ, ಇಲ್ಲದವರಿಗೆ 1.5 ಲಕ್ಷ ಉಚಿತ.!

ಅದೇ ರೀತಿ ಪ್ರತಿನಿತ್ಯವೂ ತಾಯಿ ಚಾಮುಂಡೇಶ್ವರಿಯ ದರ್ಶನ ಭಾಗ್ಯ ಇರುತ್ತದೆ ಇಲ್ಲಿಗೆ ಬರುವವರು ಬಹಳ ಸಕರಾತ್ಮಕ ವಾತಾವರಣ ಇರುತ್ತದೆ ತುಂಬಾ ನೆಮ್ಮದಿ ಸಿಗುತ್ತದೆ ಎಂದು ಹೇಳುತ್ತಾರೆ. ಸುಮಾರು 10 ರಿಂದ 15 ಕೆಜಿ ಇರುವ ತೇಲುವ ಕಲ್ಲನ್ನು ಇಲ್ಲಿ ನೋಡಬಹುದು ಪರೀಕ್ಷೆ ಮಾಡಲು ನೀವು 1/2 ಕೆಜಿ ಇರುವ ಕಲ್ಲನ್ನು ಅದೇ ನೀರಿನಲ್ಲಿ ಹಾಕಿದರೆ ಅದು ಮುಳುಗುತ್ತದೆ.

ಹಾಗಾಗಿ ರಾಮ ಸೇತುವೆಗೆ ಸಾಕ್ಷಿಯಾದ ಆಂಜನೇಯನ ಸ್ಪರ್ಶಿಸಿದ್ದ ಈ ಕಲ್ಲನ್ನು ತಲೆ ಮೇಲೆ ಹೊತ್ತು ಆಶೀರ್ವಾದ ಪಡಿದರೆ ಯಾವುದೇ ನಕಾರಾತ್ಮಕ ಶಕ್ತಿಗಳ ಪ್ರಭಾವ ಇದ್ದರು ಹೊರಟು ಹೋಗುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳು ನಂಬಿರುವ ವಾಡಿಕೆ ಮತ್ತು ಹಣಕಾಸಿನ ವಿಚಾರದಲ್ಲಂತೂ ಬಹಳ ಉತ್ತಮ ಪರಿಣಾಮಗಳು ಸಂಭವಿಸುತ್ತವೆ‌

ತಾಯಿ ಚಾಮುಂಡೇಶ್ವರಿ ಧೈರ್ಯ ಕೊಡುತ್ತಾರೆ ವ್ಯಾಪಾರ ವ್ಯವಹಾರ ಅಭಿವೃದ್ಧಿಯಾಗುವಂತೆ ವೃತ್ತಿ ಕ್ಷೇತ್ರದಲ್ಲಿ ಉನ್ನತಿಗೆ ಏರುವಂತೆ ದಾರಿ ತೋರಿಸಿ ಕಾಪಾಡುತ್ತಾರೆ. ಹಿಂದೆ ಸೈಕಲ್ ನಲ್ಲಿ ಬರುತ್ತಿದ್ದ ನಾವು ಇಂದು ಕಾರ್ ಕೊಂಡುಕೊಂಡು ತಾಯಿ ನೋಡಲು ಬರುವಂತೆ ಅಮ್ಮ ಅನುಗ್ರಹಿಸಿದ್ದಾರೆ ಎಂದು ಹೇಳುತ್ತಾರೆ ಭಕ್ತಾದಿಗಳು.

ದೇವಸ್ಥಾನದ ಸಹಾಯವಾಣಿ:-
9964676625 / 8693968983

ಮಾರ್ಚ್ 25 ಹೋಳಿ ಹುಣ್ಣಿಮೆ ದಿನದಂದು ಚಂದ್ರಗ್ರಹಣ, ಪರಿಣಾಮ ಈ 5 ರಾಶಿಯವರಿಗೆ ರಾಜಯೋಗ ಖಂಡಿತ.!

 

ಇದೇ ಮಾರ್ಚ್ 25 ಸೋಮವಾರದಂದು ಚಂದ್ರ ಗ್ರಹಣ ಸಂಭವಿಸುತ್ತಿದೆ. ಈ ರೀತಿ ಗ್ರಹಣ ಉಂಟಾದ ಸಮಯದಲ್ಲಿ ಗ್ರಹಗಳ ಸ್ಥಿತಿಗಳಲ್ಲಿ ಬದಲಾವಣೆಯಾಗಿ, ದ್ವಾದಶ ರಾಶಿಗಳೆಲ್ಲದರ ಮೇಲೂ ಕೂಡ ಇದರ ಪ್ರಭಾವ ಬೀರುತ್ತದೆ. ಕೆಲವು ರಾಶಿಯವರು ಇದರ ಸಕಾರಾತ್ಮಕ ಪರಿಣಾಮಗಳನ್ನು ಪಡೆದರೆ ಇನ್ನು ಕೆಲವು ರಾಶಿಯವರಿಗೆ ಪರಿಸ್ಥಿತಿ ಸ್ವಲ್ಪ ಕಷ್ಟಕರವಾಗಿರುತ್ತದೆ ಮತ್ತು ಅದಕ್ಕೆ ಪರಿಹಾರ ಇರುತ್ತದೆ.

ಕೆಲವು ದಿನಗಳಲ್ಲಿ ಅವರ ಪರಿಸ್ಥಿತಿ ಸುಧಾರಿಸುತ್ತದೆ ಆದರೆ ಇಂದು ನಾವು ಮುಖ್ಯವಾಗಿ ಈ ಚಂದ್ರ ಗ್ರಹಣ ಯಾವ ರಾಶಿಯವರಿಗೆ ಅಷ್ಟೈಶ್ವರ್ಯ ತರುತ್ತಿದೆ ಯಾವ ರಾಶಿಯವರಿಗೆ ಉತ್ತಮ ಫಲಗಳು ಸಿಗುತ್ತಿದೆ ಎನ್ನುವುದರ ಬಗ್ಗೆ ತಿಳಿಸುತ್ತಿದ್ದೇವೆ.

ಈ ಸುದ್ದಿ ಓದಿ:- 3 ಒಲೆ ಇರುವ ಗ್ಯಾಸ್ ಸ್ಟವ್ ಬಳಸುವವರು ತಪ್ಪದೆ ನೋಡಿ.!

12 ರಾಶಿಗಳಲ್ಲಿ ಈ 5 ರಾಶಿಯವರಿಗೆ ಚಂದ್ರ ಗ್ರಹಣವು ಬಹಳ ಅನುಕೂಲಕರ ಯೋಗಗಳನ್ನು ತರುತ್ತಿದ್ದು ಅವರು ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಸಮಯ ಬಂದಿದೆ. ಈ ಚಂದ್ರಗ್ರಹಣ ಆದ ನಂತರದ ಸಮಯದಲ್ಲಿ ಅವರ ಜೀವನದಲ್ಲಿ ಬಹಳ ಬದಲಾವಣೆಗಳು ಆಗುತ್ತಿತ್ತು ಇಷ್ಟು ದಿನ ಅವರು ಕಾಯುತ್ತಿದ್ದ ಉತ್ತಮ ಸಮಯ ಈಗ ಬಂದಿದೆ ಎಂದುಕೊಳ್ಳಬಹುದು ಅಷ್ಟರಮಟ್ಟಿಗೆ ಅವರಿಗೆ ಅದೃಷ್ಟ ಕೈ ಹಿಡಿಯಲಿದೆ.

ಇದುವರೆಗೂ ಎಷ್ಟೇ ಪ್ರಯತ್ನ ಪಟ್ಟು ಶ್ರಮ ಹಾಕಿದರು ನಡೆಯದ ಕೆಲಸಗಳು ಈಗ ಹೂವು ಎತ್ತಿದ ರೀತಿ ಬಹಳ ಸಲೀಸಾಗಿ ನಡೆಯುತ್ತವೆ ಮತ್ತು ಇದುವರೆಗೂ ಅನುಭವಿಸಿದ್ದ ಕ’ಷ್ಟಕಾರ್ಪಣ್ಯ, ಸಮಸ್ಯೆ, ನೋ’ವು, ಅ’ವ’ಮಾ’ನ ಎಲ್ಲದಕ್ಕೂ ಪರಿಹಾರ ನೀಡುವಂತೆ ಒಳ್ಳೊಳ್ಳೆ ಕೆಲಸಗಳು ಈ ಗ್ರಹಣ ನಂತರದ ದಿನಗಳಲ್ಲಿ ನಡೆಯುತ್ತಿದೆ.

ಈ ಸುದ್ದಿ ಓದಿ:-ಸ್ವಂತ ಮನೆ ಕಟ್ಟಿಸಬೇಕಾ.? ಖರೀದಿಸಬೇಕಾ.? ಮನೆಯವರಿಗೂ ಹೇಳದೆ ಈ ರಹಸ್ಯ ತಂತ್ರ ಮಾಡಿ ಸಾಕು, ವರ್ಷದೊಳಗೆ ಮನೆ ವಿಚಾರವಾಗಿ ಪವಾಡವೇ ನಡೆಯುತ್ತದೆ.

ಒಟ್ಟಾರೆಯಾಗಿ ಈ ಐದು ಅದೃಷ್ಟ ರಾಶಿಗಳು ಹತ್ತಿರದಲ್ಲಿಯೇ ಇಂತಹದೊಂದು ಉತ್ತಮ ಯೋಗವನ್ನು ಹೊಂದುತ್ತಿದ್ದಾರೆ. ಯಾವ ರಾಶಿಗಳು ಇಂತಹ ಭಾಗ್ಯ ಹೊಂದಿದ್ದಾರೆ ಮತ್ತು ಯಾವ ರಾಶಿಗೆ ಯಾವ ವಿಚಾರವಾಗಿ ಏನು ಫಲವಿದೆ ಇದರ ವಿವರ ಹೀಗಿದೆ.

1. ಮೇಷ ರಾಶಿ:- ಮೇಷ ರಾಶಿಯ 6 ಹಾಗೂ 12ನೇ ಸ್ಥಾನದ ಮೇಲೆ ಗ್ರಹಣದ ಪ್ರಭಾವ ಬೀಳುತ್ತಿದೆ. ಅನಿರೀಕ್ಷಿತ ಧನಲಾಭವಾಗಿ ಆದಾಯ ಹೆಚ್ಚಾಗುತ್ತದೆ.

2. ವೃಷಭ ರಾಶಿ:- ವೃಷಭ ರಾಶಿಯವರಿಗೆ ಪಂಚಮ ಹಾಗೂ ಲಾಭ ಸ್ಥಾನದ ಮೇಲೆ ಗ್ರಹಣದ ಪ್ರಭಾವ ಉಂಟಾಗಿ ನೀವು ಕುಳಿತಿದ್ದಲ್ಲಿ ಹಣ ನಿಮ್ಮನ್ನು ಹುಡುಕಿಕೊಂಡು ಬಂದು ಸೇರುವಂತಹ ಶುಭಫಲವನ್ನು ಪಡೆದಿದ್ದೀರಿ. ವೃತ್ತಿ ಅಥವಾ ಉದ್ಯಮ ಯಾವುದೇ ಕ್ಷೇತ್ರದಲ್ಲಿದ್ದರೂ ನಿಮಗೆ ಗಣ್ಯ ವ್ಯಕ್ತಿಗಳ ಸಂಪರ್ಕ ಸಾಧ್ಯವಾಗುತ್ತದೆ.

3. ಮಿಥುನ ರಾಶಿ:- ಮಿಥುನ ರಾಶಿಗೆ 4 ಮತ್ತು 10ನೇ ಸ್ಥಾನಗಳ ಮೇಲೆ ಗ್ರಹಣದ ಪ್ರಭಾವವಾಗಿ ವೃತ್ತಿ ಮತ್ತು ಉದ್ಯೋಗದಲ್ಲಿ ಮಾತ್ರವಲ್ಲದೆ ಸಾಮಾಜಿಕ ಮತ್ತು ಕೌಟುಂಬಿಕ ವಿಚಾರಗಳನ್ನು ಕೂಡ ಬಹಳ ಒಳ್ಳೆಯ ಏಳಿಗೆ ಕಾಣಲಿದೆ ನೀವು ಬಹಳ ದಿನಗಳಾದ ನಂತರ ತುಂಬಾ ಸಮಾಧಾನಕರವಾದ ಸಮಯವನ್ನು ಕಳೆಯುತ್ತೀರಿ.

4. ತುಲಾ ರಾಶಿ:- ತುಲಾ ರಾಶಿ ಅವರಿಗೂ ಕೂಡ 6 ಹಾಗೂ 12ನೇ ಸ್ಥಾನಗಳ ಮೇಲೆ ಗ್ರಹಣ ಪ್ರಭಾವ ಉಂಟಾಗುತ್ತಿದ್ದು, ಇದು ವಿಪರೀತ ರಾಜಯೋಗವನ್ನು ತರುತ್ತದೆ. ಹೂಡಿಕೆಗಳಲ್ಲಿ ಲಾಭ, ಹೊಸ ಮನೆ ವಾಹನ ಖರೀದಿಸುವ ಯೋಗ, ಕುಟುಂಬ ಸೌಖ್ಯ ಇತ್ಯಾದಿ ಭಾಗ್ಯಗಳನ್ನು ತುಲಾ ರಾಶಿಯವರು ಪಡೆಯುತ್ತಿದ್ದಾರೆ.

5. ವೃಶ್ಚಿಕ ರಾಶಿ:- ವೃಶ್ಚಿಕ ರಾಶಿಯ 5 ಮತ್ತು 11ನೇ ಮನೆ ಮೇಲೆ ಗ್ರಹಣ ಪ್ರಭಾವ ಉಂಟಾಗುತ್ತಿದೆ. ಇದರ ಫಲವಾಗಿ ಅವರ ಮನಸ್ಸಿನ ಅದೆಷ್ಟೋ ಚಿಂತನೆಗಳು ಕಾರ್ಯರೂಪಕ್ಕೆ ಬರುತ್ತದೆ. ಅಂದುಕೊಂಡಿದ್ದ ಕಾರ್ಯಗಳು ಆಲೋಚನೆಯಂತೆ ನಡೆದು ಸಂತೋಷ ತರುತ್ತದೆ, ಮಕ್ಕಳ ವಿಚಾರವಾಗಿ ಕೂಡ ಬಹಳ ಶುಭಫಲಗಳನ್ನು ಪಡೆಯುತ್ತಾರೆ.

ಅಡುಗೆ ಮನೆ ಟಿಪ್ಸ್.!

ಅಡುಗೆ ಟಿಪ್ಸ್ ಅಡುಗೆ ಮನೆಯಲ್ಲಿ ಹಾಕಬೇಕಾದ ಶ್ರಮವನ್ನು ಕಡಿಮೆ ಮಾಡುತ್ತದೆ. ಹಾಗೂ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಸಾರಿಗೆ ಉಪ್ಪು ಜಾಸ್ತಿ, ಆದರೆ ಅದನ್ನು ಹೇಗೆ ಸರಿಪಡಿಸಬಹುದು. ಟೊಮೆಟೊ ಸಿಪ್ಪೆ ಬಿಡಿಸಬೇಕು ಎಂದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬಹುದು ಹೀಗೆ ಈ ವಿಷಯಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ಕೆಳಗೆ ತಿಳಿಯೋಣ.

* ಅಡುಗೆ ಮಾಡುವಾಗ ಕೆಲವು ವಿಷಯಗಳತ್ತ ಹೆಚ್ಚಿನ ಗಮನ ಹರಿಸಿ ದರೆ ಕೆಲವು ಖಾದ್ಯ ಇನ್ನಷ್ಟು ರುಚಿಯಾಗುತ್ತದೆ ಹಾಗೂ ಅಡುಗೆ ಕೆಲಸವೂ ಸುಲಭವಾಗುತ್ತದೆ.
* ಸಾರಿಗೆ ಉಪ್ಪು ಹೆಚ್ಚಾದರೆ ಕಬ್ಬಿಣದ ಸೌಟನ್ನು ಒಲೆಯ ಮೇಲಿಟ್ಟು ಅದು ಕೆಂಪಗೆ ಕಾದ ಮೇಲೆ ಸಾರಿನಲ್ಲಿ ಅದ್ದಿದರೆ ಉಪ್ಪು ಸರಿಯಾಗುತ್ತದೆ
* ದ್ರಾಕ್ಷಿ, ಟೊಮೆಟೊ, ಕಿತ್ತಳೆ ಹಣ್ಣುಗಳನ್ನು ಕುದಿಯುವ ನೀರಿನಲ್ಲಿ ಎರಡು ನಿಮಿಷಗಳ ಕಾಲ ಇಟ್ಟು ನಂತರ ತಣ್ಣೀರಿಗೆ ಹಾಕಿದರೆ ಸಿಪ್ಪೆ ಯನ್ನು ಸುಲಭವಾಗಿ ಸುಲಿಯಬಹುದು.

* ಗಾಜಿನ ಲೋಟಕ್ಕೆ ಬಿಸಿ ಬಿಸಿ ಕಾಫಿ ಅಥವಾ ಟೀ ಹಾಕುವ ಮುಂಚೆ ಆ ಲೋಟದಲ್ಲಿ ಒಂದು ಚಮಚ ಹಾಕಿಟ್ಟರೆ ಲೋಟಕ್ಕೆ ಬಗ್ಗಿಸಿದ ಪೇಯದ ಬಿಸಿಯನ್ನು ಆ ಚಮಚ ಸಾಕಷ್ಟು ತೆಗೆದುಕೊಳ್ಳುವ ಕಾರಣ ಆ ಲೋಟ ಬಿಸಿಗೆ ಒಡೆಯುವುದಿಲ್ಲ.
* ಕಾಫಿಗೆ ಒಂದು ಚಿಟಿಕೆ ಉಪ್ಪು ಹಾಕಿ ಕಲಸಿ ಕುಡಿದರೆ ಕಾಫಿಯ ರುಚಿ ಹೆಚ್ಚುತ್ತದೆ.
* ಆಲೂಗೆಡ್ಡೆ ಬೇಯಿಸಿದ ನೀರಿನಿಂದ ಬೆಳ್ಳಿ ಮತ್ತು ಇತರ ಪಾತ್ರೆಗಳನ್ನು ಅಚ್ಚುಕಟ್ಟಾಗಿ ತೊಳೆಯಬಹುದು.

* ಟೀ ಸೊಪ್ಪನ್ನು ಗಾಜಿನ ಜಾಡಿಗಳಲ್ಲಿ ಹಾಕಿಟ್ಟರೆ ಟೀ ರುಚಿ ಹೆಚ್ಚುತ್ತದೆ. ಟೀ ಕುದಿಯುವಾಗ ಕಿತ್ತಳೆ ಸಿಪ್ಪೆ ಅಥವಾ ಏಲಕ್ಕಿ ಸಿಪ್ಪೆ ಹಾಕಿದರೆ ವಿಶಿಷ್ಟ
ರುಚಿ ಸಿಗುತ್ತದೆ.
* ತೊಗರಿ ಬೇಳೆ ಬೇಯಲು ಇಡುವಾಗ ಅದರ ಜೊತೆ ಒಂದು ಚೂರು ತೆಂಗಿನಕಾಯಿ ಹಾಕಿದರೆ ಬೇಳೆ ಬೇಗ ಮತ್ತು ಚೆನ್ನಾಗಿ ಬೇಯುತ್ತದೆ.

* ಕಡಗೋಲನ್ನು ಬಿಸಿ ನೀರಿನಲ್ಲಿ ಹಾಕಿ ತೆಗೆದು ಮಜ್ಜಿಗೆ ಕಡೆದರೆ ಅದಕ್ಕೆ ಬೆಣ್ಣೆ ಅಂಟುವುದಿಲ್ಲ. ಮಳೆಗಾಲದಲ್ಲಿ ಮಿಕ್ಸಿಯಲ್ಲಿ ಬೆಣ್ಣೆ ತೆಗೆಯುವಾಗ ಬಿಸಿ ನೀರು ಮತ್ತು ಬೇಸಿಗೆಯಲ್ಲಿ ತಂಪು ನೀರು ಹಾಕಿದರೆ ಬೆಣ್ಣೆ ಸುಲಭವಾಗಿ ಬರುತ್ತದೆ.
* ಹಾಲು ಕಾಯಿಸುವಾಗ ಆ ಪಾತ್ರೆಯಲ್ಲಿ ಒಂದು ಸ್ಟೀಲ್ ಸೌಟು ಹಾಕಿಟ್ಟರೆ ಹಾಲು ಉಕ್ಕಿ ಚೆಲ್ಲುವುದಿಲ್ಲ. ಸೊಪ್ಪು ಬೇಯಿಸುವಾಗ ಪಾತ್ರೆ ಮೇಲೆ ಮುಚ್ಚಳ ಇಡಬೇಡಿ. ಇದರಿಂದ ಸೊಪ್ಪಿನ ಹಸಿರು ಬಣ್ಣ ಹಾಗೆಯೇ ಇರುತ್ತದೆ.

* ಕಾಲಿಫ್ಲವರ್‌ಗೆ ಸ್ವಲ್ಪ ವಿನಿಗರ್ ಬೆರೆಸಿ ಬೇಯಿಸಿದರೆ ಅದರ ಬಿಳಿ ಬಣ್ಣ ಹಾಗೆಯೇ ಇರುತ್ತದೆ. ಮಸಾಲೆ ಅಥವಾ ಕೊಬ್ಬರಿ ರುಬ್ಬುವಾಗ ಸ್ವಲ್ಪ ಉಪ್ಪು ಹಾಕಿದರೆ ಕೊಬ್ಬರಿ ಬೇಗ ನುಣ್ಣಗಾಗುತ್ತದೆ ಮತ್ತು ಮೈ ಮೇಲೆ ಸಿಡಿಯುವುದಿಲ್ಲ.
* ಪಲಾವ್ ಮಾಡುವ ಮೊದಲು ಬಾಸುಮತಿ ಅಕ್ಕಿಯನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಟ್ಟು ನೀರು ಬಸಿದು ಮೂರ್ನಾಲ್ಕು ನಿಮಿಷ ಹಾಗೆಯೇ ಬಿಟ್ಟು ನಂತರ ಪಲಾವ್ ಮಾಡಿದರೆ ಅನ್ನ ಮುದ್ದೆಯಾಗದೆ ಉದುರುದುರಾಗಿರುತ್ತದೆ.

* ದೋಸೆ ಅಕ್ಕಿಗೆ ಸ್ವಲ್ಪ ಹೆಸರುಬೇಳೆ ಹಾಕಿ ರುಬ್ಬಿದರೆ ದೋಸೆ ಮೃದು ವಾಗುತ್ತದೆ. ಬಾಳೆಕಾಯಿಯನ್ನು ಹೆಚ್ಚುವಾಗ ಕೈಗಳಿಗೆ ಮಜ್ಜಿಗೆ ಸವರಿದರೆ ಕೈ ಕಪ್ಪಾಗುವುದಿಲ್ಲ.
* ಗಾಳಿ ಬರುವ ಸ್ಥಳದಲ್ಲಿ ಈರುಳ್ಳಿ ಹೆಚ್ಚಿದರೆ ಕಣ್ಣೀರು ಬರುವುದನ್ನು ತಪ್ಪಿಸಬಹುದು. ಕೈಯೆಲ್ಲಾ ಸೀಮೆಎಣ್ಣೆ ವಾಸನೆಯಿದ್ದರೆ ತಿಳಿ ಮಜ್ಜಿಗೆ ಯಿಂದ ಕೈಗಳನ್ನು ತೊಳೆಯಿರಿ.

* ಬೆಳ್ಳಿ ಪಾತ್ರೆಗಳನ್ನು ವಿಭೂತಿಯಿಂದ ಮತ್ತು ಸ್ಟೀಲ್ ಪಾತ್ರೆಗಳನ್ನು ಗೋಧಿ ಹಿಟ್ಟಿನಿಂದ ತಿಕ್ಕಿ ತೊಳೆದರೆ ಅವುಗಳಲ್ಲಿ ಅಂಟಿದ ಜಿಡ್ಡು ಹೋಗಿ ಪಾತ್ರೆಗಳು ಹೊಳೆಯುತ್ತವೆ.
* ಕೈಗಳಿಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಹಸಿ ಮೆಣಸಿನಕಾಯಿಗಳನ್ನು ಹೆಚ್ಚಿದರೆ ಕೈಗಳು ಉರಿಯುವುದಿಲ್ಲ. ಸೀಮೆ ಬದನೆಕಾಯಿ ಹೆಚ್ಚುವಾಗ ಅಂಗೈಗೆ ಕೊಬ್ಬರಿ ಎಣ್ಣೆ ಹಚ್ಚಿದರೆ ಕೈಯಲ್ಲಿ ಅಂಟಿನ ಸಿಪ್ಪೆ ಏಳುವುದಿಲ್ಲ.