Home Blog Page 98

ಹೊಸ ವರ್ಷಕ್ಕೆ ಸರ್ಕಾರದಿಂದ ಗುಡ್ ನ್ಯೂಸ್ ಆಟೋ/ಟ್ಯಾಕ್ಸಿ/ಸರಕು ವಾಹನ ಖರೀದಿಗೆ 3 ಲಕ್ಷ ಉಚಿತ.!

 

ರಾಜ್ಯದಲ್ಲಿ ನಿರುದ್ಯೋಗ ದರದಲ್ಲಿ ಕಡಿಮೆ ಮಾಡಿ, ನಿರುದ್ಯೋಗಿ ಯುವಜನತೆಗೆ ಸ್ವಯಂ ಉದ್ಯೋಗ ಕಟ್ಟಿಕೊಳ್ಳಲು ನೆರವಾಗುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆಯನ್ನು ಘೋಷಿಸಿದೆ. ಕೆಲವು ದಿನಗಳ ಹಿಂದೆ ಸರ್ಕಾರವು ವಿವಿಧ ನಿಗಮಗಳಡಿ ಈ ಯೋಜನೆಯ ನೆರವು ನೀಡುವುದರ ಬಗ್ಗೆ ಘೋಷಿಸಿತ್ತು.

ಅಂತಿಮವಾಗಿ ಹೊಸ ವರ್ಷದಲ್ಲಿ ಫಲಾನುಭವಿಗಳಿಗೆ ಯೋಜನೆಯ ಅನುದಾನ ಬಿಡುಗಡೆ ಮಾಡುತ್ತಿದೆ. ಯೋಜನೆ ಕುರಿತಾದ ಮಾಹಿತಿಗಳಾದ ಅರ್ಜಿ ಸಲ್ಲಿಸಲು ಇರುವ ಮಾನದಂಡಗಳು, ಬೇಕಾಗುವ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನ ಇನ್ನಿತರ ಪ್ರಮುಖ ಮಾಹಿತಿಗಳು ಹೀಗಿದೆ ನೋಡಿ…

ಯೋಜನೆ ಹೆಸರು:- ಸ್ವಾವಲಂಬಿ ಸಾರಥಿ ಯೋಜನೆ

ಯೋಜನೆಯ ಉದ್ದೇಶ:-

ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 2ಬಿ, 3ಬಿ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ನಿರುದ್ಯೋಗಿ ಯುವಜನತೆಗೆ ವಾಣಿಜ್ಯದ ಉದ್ದೇಶಕ್ಕಾಗಿ ನಾಲ್ಕು ಚಕ್ರದ ವಾಹನಗಳಾದ ಟ್ಯಾಕ್ಸಿ ಆಟೋ ಸರಕು ವಾಹನ ಖರೀದಿಸಲು ಸಂಬಂಧಪಟ್ಟ ನಿಗಮದ ವತಿಯಿಂದ ಆರ್ಥಿಕ ನೆರವು ನೀಡುವುದು.

ಸಿಗುವ ಸಹಾಯಧನ:-

* ಸ್ವಾವಲಂಬಿ ಸಾರಥಿ ಯೋಜನೆಯಡಿ 4 ಚಕ್ರಗಳ ವಾಹನವನ್ನು ಖರೀದಿಸಲು ರಾಷ್ಟ್ರೀಕೃತ ಬ್ಯಾಂಕ್‌ ಅಥವಾ ಗ್ರಾಮೀಣ ಬ್ಯಾಂಕ್‌ಗಳು ಮಂಜೂರು ಮಾಡಿದ ಸಾಲಕ್ಕೆ 50%ರಷ್ಟು ಅಥವಾ ಗರಿಷ್ಠ ರೂ.3.00 ಲಕ್ಷಗಳವರೆಗೆ ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು.
* ಬ್ಯಾಂಕ್‌ ಪಾಲಿನ ಸಾಲಕ್ಕೆ ಬ್ಯಾಂಕ್‌ ನಿಗಧಿಪಡಿಸುವ ಚಾಲ್ತಿ ದರದ ಬಡ್ಡಿಯೊಂದಿಗೆ ಸಾಲದ ಮೊತ್ತವನ್ನು ನಿಗದಿತ ಕಂತುಗಳಲ್ಲಿ ಫಲಾನುಭವಿಯು ಸಾಲ ಮರು ಪಾವತಿಸಬೇಕು.

ಅರ್ಹತಾ ಮಾನದಂಡಗಳು:-

* ಈ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಅಭ್ಯರ್ಥಿಯು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ವರ್ಗದ ಸಮುದಾಯಗಳಿಗೆ ಸೇರಿದವರಾಗಿರಬೇಕು.
* ಅರ್ಜಿದಾರರು ಲಘು ವಾಹನ ಚಾಲನಾ ಪರವಾನಗಿಯನ್ನು ಹೊಂದಿರಬೇಕು
* ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ ರೂ.98000 ಮತ್ತು ನಗರ ಪ್ರದೇಶದವರಿಗೆ ರೂ. 120000 ಗಳನ್ನು ಮೀರಿರಬಾರದು.

* ಮುಖ್ಯವಾಗಿ ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
* ಅರ್ಜಿದಾರರ ವಯಸ್ಸು ಕನಿಷ್ಠ 21 ವರ್ಷಗಳು ಹಾಗೂ ಗರಿಷ್ಠ 45 ವರ್ಷಗಳ ಮಿತಿಯೊಳಗಿರಬೇಕು.
* ಅರ್ಜಿದಾರರ ಕುಟುಂಬವು ಈ ಹಿಂದೆ ನಿಗಮದ ಯೋಜನೆಗಳಲ್ಲಿ ಅಥವಾ ಸರ್ಕಾರಿ ಇಲಾಖೆಗಳಲ್ಲಿ ಈ ಉದ್ದೇಶಕ್ಕೆ ಯಾವುದೇ ಯೋಜನೆಗಳಿಂದ ಸೌಲಭ್ಯ ಪಡೆದಿರಬಾರದು.

* ಈ ಯೋಜನೆಯಲ್ಲಿ ಸವಲತ್ತು ಪಡೆಯಬಯಸುವ ಅರ್ಜಿದಾರರು ವಾಸಿಸುತ್ತಿರುವ ವ್ಯಾಪ್ತಿಗೆ ಬರುವ ರಾಷ್ಟ್ರೀಕೃತ ಬ್ಯಾಂಕ್‌ ಶಾಖೆಯಲ್ಲಿ ಸರ್ಕಾರದ ಸೌಲಭ್ಯ ಪಡೆಯುವ ಆಧಾರ್‌ ಸಂಯೋಜಿತ ಬ್ಯಾಂಕ್‌ ಖಾತೆ ಹೊಂದಿರಬೇಕು.
* ಒಂದು ಕುಟುಂಬದಲ್ಲಿ ಒಬ್ಬರಿಗಷ್ಟೇ ಈ ಯೋಜನೆಯ ಪ್ರಯೋಜನ ಪಡೆಯಲು ಅವಕಾಶ
* ಮಹಿಳೆಯರಿಗೆ ಹಾಗೂ ಮಂಗಳಮುಖಿಯರಿಗೂ ಆದ್ಯತೆ ನೀಡಲಾಗುವುದು.
* ಈ ಯೋಜನೆಯ ಸೌಲಭ್ಯ ಪಡೆಯಲು ಬಯಸುವ ಫಲಾನುಭವಿಯು ಸ್ವಯಂ ಟ್ಯಾಕ್ಸಿ ಚಾಲನೆ (Yellow Board) ಉದ್ದೇಶಕ್ಕೆ ವಾಹನವನ್ನು ನೋಂದಾಯಿಸಬೇಕು.

ಬೇಕಾಗುವ ದಾಖಲೆಗಳು:-

* ಸಂಬಂಧಿಸಿದ ತಾಲ್ಲೂಕು ತಹಶೀಲ್ದಾರರು/ಕಂದಾಯ ಅಧಿಕಾರಿಗಳಿಂದ ನಿಗಧಿತ ನಮೂನೆಯಲ್ಲಿ ಪಡೆದ ಜಾತಿ/ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ.
* ಅರ್ಜಿದಾರರ ವಾಸದ ಪುರಾವೆಗಾಗಿ ಸಕ್ಷಮ ಪ್ರಾಧಿಕಾರಗಳು ನೀಡಿದ ಆಧಾರ ಕಾರ್ಡ್/ಚುನಾವಣಾ ಗುರುತಿನ ಚೀಟಿ/ಪಡಿತರ ಚೀಟಿ.
* ಲಘು ವಾಹನ ಚಾಲನಾ ಪರವಾನಗಿಯ ದೃಢೀಕೃತ ಪ್ರತಿ.
* ಅರ್ಜಿದಾರರ ಪಾಸ್‌ ಪೋರ್ಟ್‌ ಅಳತೆಯ ಇತ್ತೀಚಿನ ಭಾವಚಿತ್ರ.
* ಅರ್ಜಿದಾರರು ನಿರುದ್ಯೋಗಿ ಆಗಿರಬೇಕು (ಸ್ವಯಂ ಘೋಷಣಾ ಪತ್ರ ಸಲ್ಲಿಸುವುದು).
* ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ವಿವರ
* ಮೊಬೈಲ್ ಸಂಖ್ಯೆ

ಅರ್ಜಿ ಸಲ್ಲಿಸುವ ವಿಧಾನ:-

* ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
* ಈ ಮೇಲೆ ತಿಳಿಸಿದ ದಾಖಲೆಗಳೊಂದಿಗೆ ಹತ್ತಿರದ ಯಾವುದೇ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ ಅಥವಾ ಬೆಂಗಳೂರು ಒನ್ ಅಥವಾ CSC ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.

ಸರ್ಕಾರದ ಗ್ಯಾರೆಂಟಿ ಯೋಜನೆ ಹಣವನ್ನು ಇನ್ಮುಂದೆ ಪುರುಷರು ಕೂಡ ಪಡೆಯಬಹುದು, ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!

ಕರ್ನಾಟಕದ ಕಾಂಗ್ರೆಸ್ ಪಕ್ಷವು (Congress party) ಚುನಾವಣೆ ಪೂರ್ವವಾಗಿ ರಾಜ್ಯದ ಜನತೆಗೆ ನೀಡಿದ್ದ ಭರವಸೆಗಳಂತೆ ತಮ್ಮದೇ ರಾಜ್ಯ ಸರ್ಕಾರ ಸ್ಥಾಪನೆಯಾದ ಮೇಲೆ ಐದು ಗ್ಯಾರಂಟಿ ಯೋಜನೆಗಳನ್ನು (Guarantee Schemes) ಜಾರಿಗೆ ತರಲು ಅಕ್ಷರಶಃ ಶ್ರಮಿಸುತ್ತಿದೆ.

ಆ ಪ್ರಯುಕ್ತವಾಗಿ ರಾಜ್ಯದಲ್ಲಿ ಹಂತ ಹಂತವಾಗಿ ಗ್ಯಾರಂಟಿ ಯೋಜನೆಗಳು ಜಾರಿಯಾಗಿದ್ದು ಮೊದಲಿಗೆ ಶಕ್ತಿ ಯೋಜನೆ (Shakthi yojane) ಮೂಲಕ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ರಾಜ್ಯದ ಗಡಿಯೊಳಗೆ ಉಚಿತ ಪ್ರಯಾಣ, ಗೃಹ ಜ್ಯೋತಿ ಯೋಜನೆ (Gruhajyoti Scheme) ಮೂಲಕ ಕರ್ನಾಟಕದ ಪ್ರತಿ ಕುಟುಂಬಕ್ಕೂ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ.

ಅನ್ನಭಾಗ್ಯ ಯೋಜನೆ ಕೂಡ ಜಾರಿಗೆ ಬಂದು ಹಲವು ತಿಂಗಳುಗಳು ಕಳೆದಿದ್ದು ಅನ್ನಭಾಗ್ಯ ಯೋಜನೆ (Annabhagya) ಮೂಲಕ BPL ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಪ್ರತಿ ಸದಸ್ಯನಿಗೆ 10Kg ಪಡಿತರ ನೀಡಬೇಕಿತ್ತು ದಾಸ್ತಾನು ಲಭ್ಯವಾಗದ ಕಾರಣ 5Kg ಅಕ್ಕಿ ಜೊತೆ ಉಳಿದ 5Kg ಅಕ್ಕಿ ಬದಲು ಪ್ರತಿ ಸದಸ್ಯನಿಗೆ 170 ರುಪಾಯಿಯನ್ನು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆಯ ಸ್ಥಾನದಲ್ಲಿರುವ ಮಹಿಳೆಯರ ಖಾತೆಗೆ DBT ಮೂಲಕ ವರ್ಗಾವಣೆ ಮಾಡುತ್ತಿದೆ.

ರೇಷನ್ ಕಾರ್ಡ್ ಹೊಂದಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯು ಗೃಹಲಕ್ಷ್ಮಿ ಯೋಜನೆ (Gruhalakshmi) ರೂ.2,000 ಸಹಾಯಧನವನ್ನು ಕೂಡ ಪಡೆಯುತ್ತಿದ್ದಾರೆ. ಈಗ ಇದರ ಕುರಿತು ಒಂದು ಬಿಗ್ ಅಪ್ಡೇಟ್ ಇದೆ. ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿ ಬ್ಯಾಂಕ್ ಖಾತೆಗೆ DBT ಮೂಲಕ ಜಮೆ ಮಾಡಲು ಕೆಲವು ತಾಂತ್ರಿಕ ಸಮಸ್ಯೆ (Technical Issues) ಎದುರಾಗಿದೆ.

ಇದೇ ಕಾರಣದಿಂದ ಇದುವರೆಗೂ ಯಶಸ್ವಿಯಾಗಿ ಎಲ್ಲ ಮಹಿಳೆಯರು ಕೂಡ ಹಣ ಪಡೆಯಲು ಸಾಧ್ಯವಾಗಿಲ್ಲ ಮಹಿಳೆಯರ ಬ್ಯಾಂಕ್ ಖಾತೆಗಳು ಆಕ್ಟಿವ್ ಆಗದೆ ಇರುವುದು, ಮಹಿಳೆಯರ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗದೆ ಇರುವುದು ಮತ್ತು ಮಹಿಳೆಯರ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇತ್ಯಾದಿಗಳಲ್ಲಿರುವ ಮಾಹಿತಿಗಳಲ್ಲಿ ಹೆಸರಿನ ವ್ಯತ್ಯಾಸವಾಗಿರುವುದು, ಮುಖ್ಯಸ್ಥರ ಸ್ಥಾನದಲ್ಲಿ ಮಹಿಳೆಯ ಹೆಸರು ಇಲ್ಲದೆ ಇರುವುದು ಇನ್ನೂ ಇತ್ಯಾದಿ ಅನೇಕ ಕಾರಣಗಳಿಂದ ಕೆಲವು ಮಹಿಳೆಯರಿಗೆ ಹಣ ಜಮೆ ಆಗುತ್ತಿಲ್ಲ.

ಈಗ ಸಮಸ್ಯೆ ಏನೆಂದರೆ, ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲಾಗದ ಮಹಿಳೆಯರು ಅನ್ನ ಭಾಗ್ಯ ಯೋಜನೆ ಹಣವನ್ನು ಕೂಡ ಪಡೆಯಲಾಗುತ್ತಿಲ್ಲ ಇದರಿಂದ ಅನ್ನಭಾಗ್ಯ ಯೋಜನೆಗೆ ಅರ್ಹರಾಗಿರುವ ಆ ರೇಷನ್ ಕಾರ್ಡ್ ನಲ್ಲಿರುವ ಇತರ ಸದಸ್ಯರಿಗೂ ಕೂಡ ವಂಚನೆ ಆಗುತ್ತಿದೆ. ಇದಕ್ಕೆ ಪರಿಹಾರ ಮಾರ್ಗವೊಂದನ್ನು ಸರ್ಕಾರ ಸೂಚಿಸಿದೆ.

ಇತ್ತೀಚಿಷ್ಟೇ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು (CM Siddaramaih) ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಹಾಗೂ ಅಧಿಕಾರಿಗಳನ್ನೊಗೊಂಡು ಗೃಹಲಕ್ಷ್ಮಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಹಿಳೆಯರಿಗಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯಮಂತ್ರಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಆದಾಲತ್ (Gruhalakshmi Adalath) ಕಾರ್ಯಕ್ರಮ ಆಯೋಜನೆ ಮಾಡಿ ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲಾಗದ ಮಹಿಳೆಯರಿಗಾಗಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.

ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸ್ವತಃ ಮಹಿಳೆಯರನ್ನು ಬ್ಯಾಂಕ್ ಶಾಖೆಗಳಿಗೆ ಕರೆದುಕೊಂಡು ಹೋಗಿ ಅವರ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಆಜ್ಞಾಪಿಸಿದ್ದಾರೆ. ಇದರೊಂದಿಗೆ ಅನ್ನ ಭಾಗ್ಯ ಯೋಜನೆ ಹಣ ಪಡೆಯಲು ಆಗಿರುವ ತೊಡಕನ್ನು ಪರಿಹರಿಸಲು ಕುಟುಂಬದ ಮುಖ್ಯಸ್ಥೆ ಮಹಿಳೆ ಖಾತೆಗೆ ಹಣ ವರ್ಗಾವಣೆಯಾಗುವಂತೆ ವ್ಯವಸ್ಥೆ ಆಗುವವರೆಗೂ ಕುಟುಂಬದ ಎರಡನೇ ಮುಖ್ಯಸ್ಥರ ಸ್ಥಾನದಲ್ಲಿರುವ ಎರಡನೇ ಮುಖ್ಯಸ್ಥ ಪುರುಷ ಖಾತೆಗೆ ಅನ್ನಭಾಗ್ಯ ಯೋಜನೆ ಹಣವನ್ನು ವರ್ಗಾವಣೆ ಮಾಡಬಹುದು ಎಂದು ಹೇಳಿದ್ದಾರೆ.

HDFC ಬ್ಯಾಂಕ್ ನಲ್ಲಿ ಉದ್ಯೋಗವಕಾಶ, 14,510 ಹುದ್ದೆಗಳಿಗಾಗಿ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ.!

0

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು ಎಂದು ಬಯಸುವ ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೂ ಕೂಡ HDFC ಬ್ಯಾಂಕ್ ವತಿಯಿಂದ ಸಿಹಿ ಸುದ್ದಿ ಇದೆ. HDFC (HDFC Recruitments ) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ SSLC, PUC ಹಾಗೂ ಪದವಿ ವಿದ್ಯಾಭ್ಯಾಸ ಮುಗಿದಿರುವ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ.

ಭಾರತದಾದ್ಯಂತ ಇರುವ ಯಾವುದೇ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲಿ HDFC ನೇಮಕಾತಿ ಕುರಿತು ಅಧಿಸೂಚನೆಯಲ್ಲಿರುವ ಕೆಲವು ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇವೆ. ಈ ಉಪಯುಕ್ತ ಮಾಹಿತಿಯನ್ನು ತಪ್ಪದೇ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ನೇಮಕಾತಿ ಸಂಸ್ಥೆ:- HDFC
ಒಟ್ಟು ಹುದ್ದೆಗಳ ಸಂಖ್ಯೆ:- 14,510
ಹುದ್ದೆಗಳ ವಿವರ:-
* ಸಹಾಯಕ ವ್ಯವಸ್ಥಾಪಕ
* ಶಾಖಾ ವ್ಯವಸ್ಥಾಪಕ
* ವ್ಯಾಪಾರ ಅಭಿವೃದ್ಧಿ ವ್ಯವಸ್ಥಾಪಕ
* ಗುಮಾಸ್ತ
* ಸಂಗ್ರಹ ಅಧಿಕಾರಿ
* ಗ್ರಾಹಕ ಸಂಬಂಧ ವ್ಯವಸ್ಥಾಪಕ
* ಗ್ರಾಹಕ ಸೇವಾ ಕಾರ್ಯನಿರ್ವಾಹಕ
* ಹಣಕಾಸು ವ್ಯವಸ್ಥಾಪಕರು
* ಪ್ರಧಾನ ವ್ಯವಸ್ಥಾಪಕರು
* ಮ್ಯಾನೇಜರ್
* ಸಹಾಯಕ
* ಚಾಲಕ
* ಪ್ಯೂನ್
* ಕಾರ್ಯಾಚರಣೆ ಮುಖ್ಯಸ್ಥ
* ನಿಷೇಧಿತ ಅಧಿಕಾರಿ
* ರಿಕವರಿ ಅಧಿಕಾರಿ
* ಸಂಬಂಧ ವ್ಯವಸ್ಥಾಪಕ
* ಪರಿಣಿತ ಅಧಿಕಾರಿ
* ನೆಟ್ ವರ್ಕ್ ಇಂಜಿನಿಯರ್

ಉದ್ಯೋಗ ಸ್ಥಳ:- ಭಾರತದಾದ್ಯಂತ…

ವೇತನ ಶ್ರೇಣಿ:-
ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ HDFC ನಿಯಮಗಳ ಪ್ರಕಾರ ಆಕರ್ಷಣೀಯ ವೇತನ ಇರುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ:-
* ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ, 12ನೇ ತರಗತಿ, ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
* ಫ್ರೆಶರ್ ಹಾಗೂ ಈಗಾಗಲೇ ಈ ಕ್ಷೇತ್ರದಲ್ಲಿ ಉದ್ಯೋಗ ಮಾಡಿ ಅನುಭವ ಉಳ್ಳವರು ಕೂಡ ಅರ್ಜಿ ಸಲ್ಲಿಸಬಹುದು.

ವಯೋಮಿತಿ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 40 ವರ್ಷಗಳು.
* HDFC ನಿಯಮಾನುಸಾರ ಕೆಲವು ವರ್ಗಗಳಿಗೆ ಮೀಸಲಾತಿ ಇರುತ್ತದೆ.

ಅರ್ಜಿ ಶುಲ್ಕ:- ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ

ಅರ್ಜಿ ಸಲ್ಲಿಸುವ ವಿಧಾನ:-
* hdfcbank.com/personal/about-us/careers
ವೆಬ್ ಸೈಟ್ ಗೆ ಭೇಟಿ ಕೊಟ್ಟು ರಿಜಿಸ್ಟರ್ ಆಗಿ ನಂತರ ಅರ್ಜಿ ಸಲ್ಲಿಸಬೇಕು.
* ಅರ್ಜಿ ಫಾರಂನಲ್ಲಿ ಕೇಳಲಾಗುವ ಎಲ್ಲಾ ವೈಯಕ್ತಿಕ ಮಾಹಿತಿಗಳನ್ನು ಸರಿಯಾಗಿ ತುಂಬಿಸಬೇಕು ಮತ್ತು ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
* ಅರ್ಜಿ ಸಲ್ಲಿಕೆ ಯಶಸ್ವಿಯಾದ ಬಳಿಕ ತಪ್ಪದೇ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಬೇಕು.

ಆಯ್ಕೆ ವಿಧಾನ:-
* ಸಂದರ್ಶನ
* ದಾಖಲೆಗಳ ಪರಿಶೀಲನೆ

ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 5 ಡಿಸೆಂಬರ್, 2022
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 20 ಜನವರಿ, 2023.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ಇತ್ತೀಚಿನ ಭಾವಚಿತ್ರ ಮತ್ತು ಸಹಿ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
* ಆಧಾರ್ ಕಾರ್ಡ್
* ಶೈಕ್ಷಣಿಕ ಅಂಕ ಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಈಗಾಗಲೇ ಕೆಲಸದ ಅನುಭವ ಹೊಂದಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳು.
* ಇನ್ನಿತರ ಯಾವುದೇ ಮೀಸಲಾತಿಗೆ ಸಂಬಂಧಿಸಿದ ದಾಖಲೆಗಳು.

ಅದೃಷ್ಟದ ಹಾದಿ ತೆರೆಯುತ್ತದೆ ಎಂಬುದನ್ನು ಸೂಚಿಸುವ ಶುಭ ಸಂಕೇತಗಳು ಇವು…

 

 

 

ದಿನನಿತ್ಯ ಆಗುವ ಎಷ್ಟೋ ಘಟನೆಗಳಲ್ಲಿ ಶಕುನಗಳು ಕೂಡ ಇರುತ್ತವೆ. ಅವು ಮುಂದೆ ಆಗುವ ಹಿತ ಅಥವಾ ಅ’ಹಿ’ತ’ಕ’ರ ಘಟನೆಗಳ ಬಗ್ಗೆ ಸೂಚನೆ ನೀಡುತ್ತವೆ ಅಂತಹ ಶುಭ ಸೂಚನೆಗಳಲ್ಲಿ ಕೆಲವುಗಳನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.

* ದಾರಿಯಲ್ಲಿ ಹೋಗುವಾಗ ನೀವು ಕಬ್ಬು ತುಂಬಿದ ಟ್ರ್ಯಾಕ್ಟರ್ ಎತ್ತಿನಗಾಡಿ ಅಥವಾ ಲಾರಿಯನ್ನು ನೋಡಿದರೆ ಅದು ಶುಭಸಂಕೇತ, ನೀವು ಸಿಹಿ ಸುದ್ದಿಯನ್ನು ಕೊಡುತ್ತೀರಾ ಎಂದು ಸೂಚಿಸುತ್ತದೆ.
* ಕನಸಿನಲ್ಲಿ ಪೂರ್ವಜರನ್ನು ಕಂಡರೆ ಅದು ಬಹಳ ಒಳ್ಳೆಯ ಸೂಚನೆ ಎಂದು ಹೇಳಲಾಗುತ್ತದೆ. ಅವರ ಆಶೀರ್ವಾದ ನಿಮ್ಮ ಮೇಲೆ ಇದೆ ಎನ್ನುವುದನ್ನು ಸೂಚಿಸುತ್ತದೆ. ಅದರಲ್ಲೂ ಕನಸಿನಲ್ಲಿ ಅವರು ನಗುತ್ತಿರುವಂತೆ ಕಂಡರೆ ಇದರ ಪರಿಣಾಮ ದುಪ್ಪಟ್ಟಾಗಿರುತ್ತದೆ.

* ಬೆಳಿಗ್ಗೆ ಎದ್ದ ಕೂಡಲೇ ಹಾಗೂ ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ಗೋವುಗಳ ದರ್ಶನವಾದರೆ ಅದು ಬಹಳ ಅದೃಷ್ಟ ಕೊಡುತ್ತದೆ ಮತ್ತು ಇದರೊಂದಿಗೆ ಹಾಲು, ಮೊಸರು ಇವುಗಳ ದರ್ಶನವಾದರೂ ಇದೇ ಫಲ ಸಿಗುತ್ತದೆ.
* ದಾರಿಯಲ್ಲಿ ನಡೆದುಕೊಂಡು ಹೋಗುವಾಗ ನಾಣ್ಯ ಅಥವಾ ಕುದುರೆಯ ಲಾಳವನ್ನು ಕಂಡರೆ ಅದನ್ನು ತಪ್ಪದೆ ತೆಗೆದುಕೊಳ್ಳಿ, ಇದು ಕೂಡ ನಿಮಗೆ ಶೀಘ್ರದಲ್ಲೇ ಲಾಭವಾಗುತ್ತದೆ ಎನ್ನುವುದರ ಸೂಚನೆಯನ್ನು ಕೊಡುತ್ತದೆ.

* ಒಳ್ಳೆಯ ಕೆಲಸಕ್ಕೆ ಹೋಗುವಾಗ ನಾಯಿಗಳು ಕಂಡರೆ ಅಥವಾ ಅಡ್ಡ ಬಂದರೆ ಅದು ಕೂಡ ಒಳ್ಳೆಯದೆ. ಸಾಧ್ಯವಾದರೆ, ನೀವು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗಬೇಕು ಎಂದುಕೊಂಡಾಗ ಬೀದಿ ನಾಯಿಗಳಿಗೆ ರೊಟ್ಟಿ ಅಥವಾ ಬಿಸ್ಕೆಟ್ ಹಾಕಿ ಹೋಗಿ ಖಂಡಿತವಾಗಿ ಆ ಕಾರ್ಯ ಜಯಿಸುತ್ತದೆ.
* ಮಳೆ ಬರುವಾಗ ಆಕಾಶದ ನಡುವೆ ಇದ್ದಕ್ಕಿದ್ದಂತೆ ನೀವು ದಟ್ಟವಾಗಿ ಹೊಳೆಯುವ ಸೂರ್ಯನನ್ನು ಕಂಡರೆ ನೀವು ಬಹಳ ಬೇಗ ಶ್ರೀಮಂತರಾಗುತ್ತೀರಿ ಎನ್ನುವುದರ ಸೂಚನೆ.

* ಬೆಳಂಬೆಳಿಗ್ಗೆ ನಿಮಗೆ ಕಬ್ಬಿಣದ ದರ್ಶನವಾದರೆ ಧನಲಾಭವಾಗುತ್ತದೆ ಎನ್ನುವುದರ ಸೂಚನೆ.
* ಹಸು ನಿಮ್ಮ ಮನೆ ಹತ್ತಿರ ಬಂದು ಕೂಗಿದರೆ ನಿಮ್ಮ ಮನೆಗೆ ಸುಖ ಸಮೃದ್ಧಿ ಪ್ರಾಪ್ತಿ ಆಗುತ್ತದೆ. ಹಾಗೆಯೇ ಹಸು ಏನಾದರೂ ನಿಮ್ಮ ಮನೆಯ ಪಕ್ಕ ಸೆಗಣಿ ಹಾಕಿದರೆ ಅದು ಕೂಡ ಮಹಾಲಕ್ಷ್ಮಿ ಆಗಮನ ಆಗುತ್ತದೆ ಎನ್ನುವುದನ್ನು ಸೂಚಿಸುವ ಸಂಕೇತವಾಗಿದೆ.

* ಬೆಳಗ್ಗೆ ಎದ್ದ ಕೂಡಲೇ ನಿಮಗೆ ದೇವಸ್ಥಾನಗಳ ಘಂಟೆ ಶಬ್ಧ ಅಥವಾ ಶಂಖನಾದ ಕೇಳಿದರೆ ಬಹಳ ಶುಭ.
* ನಿಮ್ಮ ಮನೆಯ ಅಂಗಳದಲ್ಲಿ ನವಿಲು ಕಾಣಿಸಿಕೊಳ್ಳುವುದು ಅಥವಾ ನವಿಲು ತನ್ನ ಗರಿ ಬಿಟ್ಟು ಹೋಗುವುದು ಕೂಡ ನಿಮಗೆ ಒಳಿತಾಗುತ್ತದೆ ಎನ್ನುವುದನ್ನು ಸೂಚಿಸುವ ಸಂಕೇತವಾಗಿದೆ. ಅದರಲ್ಲೂ ಹಣಕಾಸು ವಿಷಯದಲ್ಲಿ ನೀವು ಬಹಳ ಉತ್ತಮ ಸ್ಥಾನಕ್ಕೆ ಹೋಗುತ್ತೀರಿ.

* ಪುರುಷರಿಗೆ ಬಲಗೈ, ಮಹಿಳೆಯರಿಗೆ ಎಡ ಅಂಗೈ ತುರಿಕೆ ಆಗುತ್ತಿದ್ದರೆ ನಿಮಗೆ ಯಾವುದಾದರು ಅನಿರೀಕ್ಷಿತ ಮೂಲದಿಂದ ಧನ ಲಾಭವಾಗುತ್ತದೆ ಎನ್ನುವುದರ ಸೂಚನೆ.
* ಬೆಳಗ್ಗೆ ನೀವು ಏಳುವ ಸಮಯದಲ್ಲಿ ಎಚ್ಚರವಾದಾಗ ಮೊದಲು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳಿದರೆ ಅದು ಕೂಡ ಶುಭ ಸಂಕೇತವಾಗಿದೆ.
* ನಿಮ್ಮ ಮನೆಯ ಮೇಲೆ ಕೋಗಿಲೆ ಕೂತು ಹಾಡುತ್ತಿದ್ದರೆ ಅದು ಆರ್ಥಿಕ ವೃದ್ಧಿಯ ಸಂಕೇತವಾಗಿದೆ.
* ದಾರಿಯಲ್ಲಿ ಹೋಗುವಾಗ ಮುಗಿಸಿ ಅಥವಾ ಹಾವು ಕಾಣಿಸಿದರೆ ಅದು ಕೂಡ ಒಳ್ಳೆಯದು

* ಪ್ರಯಾಣದ ಸಮಯದಲ್ಲಿ ನಿಮ್ಮ ಬಲಭಾಗದಲ್ಲಿ ಕೋತಿ ಅಥವಾ ನಾಯಿ ಕಾಣಿಸಿದರೆ ನಿಮಗೆ ಧನಲಾಭವಾಗುತ್ತದೆ ಎಂದು ಅರ್ಥ
* ಮನೆಯಲ್ಲಿ ಒಂದೇ ಕಡೆ ಮೂರು ಹಲ್ಲಿಗಳು ಒಟ್ಟಿಗೆ ಇರುವುದು ಕಾಣಿಸಿದರೆ ಅದು ಕೂಡ ಶುಭ ಸೂಚನೆ.
* ಮನೆಯ ಒಳಗಡೆ ಇದ್ದಕ್ಕಿದ್ದಂತೆ ಕಪ್ಪು ಇರುವೆಗಳು ಬಂದರೆ ಅಥವಾ ಅವು ಗೂಡು ಕಟ್ಟಿದರೆ ತಾಯಿ ಮಹಾಲಕ್ಷ್ಮಿಯ ಅನುಗ್ರಹವಾಗುತ್ತಿದೆ ಎಂದು ಅರ್ಥ

https://youtu.be/txOrnfvnpyo?si=jssFvdkAZStz9TMm

ಹೃದಯಘಾತ ಆಗಬಾರದು ಎಂದರೆ ಇಂತಹ ಆಹಾರಗಳಿಂದ ದೂರವಿರಿ.!

 

ಪ್ರತಿಯೊಬ್ಬರಿಗೂ ಆಹಾರ ಎನ್ನುವುದು ಅವರ ದೇಹವು ಚಟುವಟಿಕೆಯಿಂದ ಇರುವುದಕ್ಕೆ ದೇಹಕ್ಕೆ ಶಕ್ತಿ ಬರುವುದಕ್ಕೆ ಪ್ರಮುಖ ಆಧಾರ. ಆದರೆ ಇಂದು ನಾವು ಆಹಾರದ ರೂಪದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಟಾಕ್ಸಿನ್ ಅಂಶಗಳನ್ನು ದೇಹಕ್ಕೆ ಸೇರಿಸಿ ನಾನಾ ರೋಗಗಳಿಗೆ ತುತ್ತಾಗುತ್ತಿದ್ದೇವೆ.

ನಮ್ಮ ದೇಹಕ್ಕೆ ಶಕ್ತಿಯ ರೂಪವಾಗಿ ಸಿಗುತ್ತಿರುವ ಆಹಾರವು ಶೇಕಡ 80% ಗಿಂತ ಹೆಚ್ಚು ಕಾರ್ಬೋಹೈಡ್ರೇಟ್ ಗಳಿಂದ ಕೂಡಿದೆ. ಆದರೆ ದೇಹವು ಆರೋಗ್ಯಕರವಾಗಿ ಯಾವುದೇ ರೀತಿ ರೋಗವಿಲ್ಲದೆ ಆಕ್ಟಿವ್ ಆಗಿ ಇರಬೇಕು ಎಂದರೆ ಈ ಪ್ರಮಾಣ ಸರಿಯಲ್ಲ ದೇಹಕ್ಕೆ ಕಾರ್ಬೋಹೈಡ್ರೇಟ್ಸ್ ಗಳಿಗಿಂತ ಫ್ಯಾಟ್ಸ್ ಅಂಶ ಹೆಚ್ಚು ಬೇಕಾಗಿದೆ ಆದರೆ ಫ್ಯಾಟ್ಸ್ ಎಂದು ಹೇಳಿದ ತಕ್ಷಣವೇ ಅನೇಕರು ಗಾಬರಿಗೊಳ್ಳುತ್ತಾರೆ.

ಫ್ಯಾಟ್ ನಿಂದ ದೇಹದ ತೂಕ ‌ ಹೆಚ್ಚಾಗುತ್ತದೆ ಅಲ್ಲವೇ ಎಂದು ಗೊಂದಲಕ್ಕೊಳಕಾಗುತ್ತಾರೆ ಅದರ ಬಗ್ಗೆ ಸಂಶೋಧನೆಗಳಿಂದ ತಿಳಿದು ಬಂದಿರುವ ಕೆಲ ಸತ್ಯಾಂಶಗಳ ಬಗ್ಗೆ ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಸ್ಟ್ಯಾಚುರೇಟೆಡ್ ಫ್ಯಾಟ್ಸ್ ಮತ್ತು ಅನ್ಸಾಚುರೆಟೆಡ್ ಫ್ಯಾಟ್ಸ್ ಎನ್ನುವ ಎರಡು ಬಗೆ ಇದೆ.

ಇದರಲ್ಲಿ ಸ್ಯಾಚುರೇಟ್ ಫ್ಯಾಟ್ಸ್ ಗಳಾದ ಬೆಣ್ಣೆ, ತುಪ್ಪ, ಕೊಬ್ಬರಿ, ಶುದ್ಧ ಕೊಬ್ಬರಿ ಎಣ್ಣೆ, ತೆಂಗಿನ ಹಾಲು ಇದೆಲ್ಲವೂ ಕೂಡ ಅತ್ಯುತ್ತಮವಾದದ್ದು ಹಾಗಾಗಿ ಆಯುರ್ವೇದದಲ್ಲಿ ಇದಕ್ಕೆ ಬಹಳ ಪ್ರಾಶಸ್ಯ್ತ ನೀಡಲಾಗಿತ್ತು. ಇಂದು ನಾವು ತುಪ್ಪ ತಿಂದರೆ ದಪ್ಪ ಆಗುತ್ತೇವೆ ಎಂದು ದೂರ ಇಟ್ಟಿದ್ದೇವೆ. ತುಪ್ಪ, ಬೆಣ್ಣೆ ತಿನ್ನುವುದು ಒಳ್ಳೆಯದೇ ಆದರೆ ಬ್ರೆಡ್ ಜೊತೆ ಬಟರ್ ಹಾಕಿಕೊಂಡು ತಿನ್ನುತ್ತಾರೆ.

ಈ ರೀತಿ ಬಟರ್ ಜೊತೆ ತಿನ್ನುತ್ತಿರುವ ಬ್ರೆಡ್ ತಯಾರಾಗಿರುವ ರೀತಿ ನೋಡಿದರೆ ಅದನ್ನು ಮುಟ್ಟುವುದು ಬೇಡ ಅನಿಸುತ್ತದೆ. ಯಾಕೆಂದರೆ ಅದಕ್ಕೆ ಅನೇಕ ಕೆಮಿಕಲ್ , ರೀಫೈಂಡ್ ಮೈದಾ ಹಾಕಿ ತಯಾರಿಸುತ್ತಾರೆ. ಇದು ದೇಹಕ್ಕೆ ಮಾರಕವಾಗಿವೆ ಮತ್ತು ತುಪ್ಪ ತಿನ್ನುವ ರೀತಿ ಕೂಡ ಗೊತ್ತಿರಬೇಕು.

ನಾವು ಚಪಾತಿ ಜೊತೆ ತುಪ್ಪ ತಿಂದರೆ ಬಾಯಿಗೆ ರುಚಿ ಆಗಿ ಚಪಾತಿಯನ್ನು ಹೆಚ್ಚು ತಿಂದು ಬಿಡುತ್ತೇವೆ ಆಗ ಆ ಚಪಾತಿ ಕೂಡ ಕಾರ್ಬೋಹೈಡ್ರೇಟ್ ಆಗಿರುವುದರಿಂದ ಚಪಾತಿ ಪ್ರಮಾಣ ದೇಹದಲ್ಲಿ ಹೆಚ್ಚಾಗುತ್ತದೆ ಇದರ ಬದಲು ತುಪ್ಪದ ಸಂಪೂರ್ಣ ಪೋಷಕಾಂಶಗಳು ದೇಹಕ್ಕೆ ಸೇರುವ ರೀತಿ ತಿನ್ನಬೇಕು.

ಉತ್ತಮ ಎಂದರೆ ರಾತ್ರಿ ಮಲಗುವ ಮುನ್ನ ಬೆಚ್ಚಗಿನ ನೀರಿಗೆ 3 ಸ್ಪೂನ್ ತುಪ್ಪ ಹಾಕಿ ಕಲಸಿ ಕುಡಿದರೆ ಬೆಳಗ್ಗೆ ದೇಹದಿಂದ ತ್ಯಾಜ್ಯ ಅಂಶಗಳು ಹೊರಹೋಗುವ ಕ್ರಿಯೆಗೆ ಬಹಳ ಅನುಕೂಲವಾಗುತ್ತದೆ ಮತ್ತು ತುಪ್ಪದಲ್ಲಿರುವ ಪೂರ್ತಿ ಪೋಷಕಾಂಶವು ಸರಿಯಾಗಿ ದೇಹಕ್ಕೆ ಸೇರುತ್ತದೆ.

ಅನ್ಸಾಚುರೆಟೆಡ್ ಫ್ಯಾಟ್ಸ್ ಬಗ್ಗೆ ಹೇಳುವುದಾದರೆ ನಾವು ಡ್ರೈ ಫ್ರೂಟ್ಸ್ ಗಳಾದ ಗೋಡಂಬಿ ಬಾದಾಮಿ ಪಿಸ್ತಾ ಕುಂಬಳಕಾಯಿ ಬೀಜ ಇತ್ಯಾದಿಗಳನ್ನು ನೀರಿನಲ್ಲಿ ನೆನೆಸಿ ತಿನ್ನುವುದು ದೇಹಕ್ಕೆ ಅತ್ಯುತ್ತಮ. ದಿನದಲ್ಲಿ 50 ಗ್ರಾಂಗಳನಾದರೂ ಇವುಗಳನ್ನು ಸೇವಿಸಬೇಕು. ಆಗ ದೇಹಕ್ಕೆ ಹೊಸ ಚೈತನ್ಯ ಬರುತ್ತದೆ ಮತ್ತು ಅನೇಕ ರೋಗಗಳು ದೇಹದಿಂದ ದೂರ ಇರುತ್ತವೆ.

ಅದರಲ್ಲೂ ಹೃದಯಘಾತ ಉಂಟು ಮಾಡುವ LDL ನ್ನು ಕಡಿಮೆ ಮಾಡುತ್ತದೆ ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಆದರೆ ಇದನ್ನು ನಾವು ನೇರವಾಗಿ ಈ ರೀತಿ ಸೇವಿಸುವುದರ ಬದಲು ಬಾದಾಮಿ ಎಣ್ಣೆ ಅಥವಾ ಕಡಲೇಕಾಯಿ ಎಣ್ಣೆ ಎಂದು ಅಂಗಡಿಗಳಲ್ಲಿ ಸಿಗುವ ರೀಫೈನ್ಡ್ ಆಯಿಲ್ ಗಳನ್ನು ಸೇವಿಸುತ್ತಿದ್ದೇವೆ.

ಅದು ತುಂಬಾ ತಪ್ಪು ಅವುಗಳನ್ನು ತಯಾರಿಸುವಾಗ ಅನೇಕ ಕೆಮಿಕಲ್ ಗಳನ್ನು ಬಳಸಿರುತ್ತದೆ ಅದರ ಬದಲು ಆದಷ್ಟು ನೇರವಾಗಿ ನಾವೇ ಗಾಣಗಳಿಗೆ ಹೋಗಿ ಎಣ್ಣೆ ಮಾಡಿಸಿಕೊಂಡು ಬಂದರೆ ಉತ್ತಮ. ಮ್ಯಾನ್ ಮೇಡ್ ಫ್ಯಾಟ್ ಗಳಾದ ವನಸ್ಪತಿ ಇಂಥವುಗಳಿಂದ ದೂರ ಇರಬೇಕು. ಪ್ರೋಟೀನ್ ಅವಶ್ಯಕತೆ ದೇಹಕ್ಕೆ 20% ಇದೆ ಈ ಪ್ರೊಟೀನ್ ಗಳು ಮೊಳಕೆ ಕಾಳುಗಳು, ತರಕಾರಿಗಳು, ಹಣ್ಣುಗಳಿಂದ ಸಿಗುತ್ತದೆ.

ಕಾರ್ಬೋಹೈಡ್ರೇಟ್ಸ್ ದೇಹಕ್ಕೆ ಶಕ್ತಿಗಾಗಿ ಅವಶ್ಯಕತೆ ಇದೆ ಆದರೆ ನಾವು ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ, ಗೋಧಿ, ಜೋಳ, ರಾಗಿ ಇವುಗಳ ಪದಾರ್ಥಗಳನ್ನು ಸೇವಿಸಿದಾಗ ಲಿವರ್ ಅದನ್ನು ಮತ್ತೆ ಫ್ಯಾಟ್ ಆಗಿ ಕನ್ವರ್ಟ್ ಮಾಡಿ ನಾಳೆಗೆಂದು ಇಟ್ಟುಕೊಳ್ಳುತ್ತದೆ.

ಇದು ಬಳಕೆ ಆಗದೆ ಸ್ಟೋರ್ ಆಗುವುದಿಲ್ಲ ನಮಗೆ ಫ್ಯಾಟಿ ಲಿವರ್, ಹೊಟ್ಟೆ ಭಾಗದಲ್ಲಿ ಬೊಜ್ಜಾಗುವುದು ಇಂತಹ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಹಾಗಾಗಿ 40% ಫ್ಯಾಟ್ 20 % ಪ್ರೋಟೀನ್ ಹಾಗೂ 40% ಮಾತ್ರ ಕಾರ್ಬೋಹೈಡ್ರೇಟ್ ಸೇವಿಸಿದರೆ ಬಹಳ ಒಳ್ಳೆಯದು. ಮೂರು ತಿಂಗಳು ಇದನ್ನು ಪಾಲಿಸಿ ನೋಡಿ ನಿಮ್ಮ ದೇಹದ ತೂಕ ಸಮತೋಲನಗೊಳ್ಳುತ್ತದೆ.

ನೀವು ಹೆಚ್ಚು ಚೈತನ್ಯದಿಂದ ಕಾಣುತ್ತೀರಿ, ಚರ್ಮದ ಕಾಂತಿ ಹೆಚ್ಚಾಗುತ್ತದೆ, ನಿಮಗೆ PCOD, ಥೈರಾಯ್ಡ್, BP, ಶುಗರ್ ಸಮಸ್ಯೆ ಇದ್ದರೆ ಅವುಗಳು ಕಂಟ್ರೋಲ್ ಆಗುತ್ತವೆ, ಆ ಬದಲಾವಣೆಯನ್ನು ನೀವೇ ಕಾಣುತ್ತೀರಿ. ಈ ವಿಚಾರದ ಬಗ್ಗೆ ಇನ್ನಷ್ಟು ವಿಸ್ತೃತವಾದ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಮನೆಗೆ ದರಿದ್ರ ಬರಲು ನಾವು ತಿಳಿಯದೆ ಮಾಡುವ ಈ ತಪ್ಪುಗಳೇ ಕಾರಣ.!

 

ಜೀವನದಲ್ಲಿ ನಾವು ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಹಾಗಾಗಿ ನಮ್ಮ ಹಿರಿಯರು ಇದನ್ನು ಸಂಸ್ಕಾರ. ಪದ್ಧತಿ ಎನ್ನುವ ಹೆಸರಿನಲ್ಲಿ ಕಲಿಸುತ್ತಿದ್ದರು. ಆದರೆ ಆಧುನಿಕ ಯುಗದ ಓಟದಲ್ಲಿ ನಾವು ಇವುಗಳನ್ನು ಮರೆಯುತ್ತಿರುವುದರಿಂದಲೇ ನಾವು ಎಷ್ಟೇ ದುಡಿದರೂ ಸಮಸ್ಯೆಗಳು ತೀರುತ್ತಿಲ್ಲ. ಹಾಗಾಗಿ ಸುಖ, ಶಾಂತಿ, ನೆಮ್ಮದಿಯ ಜೊತೆ ಹಣ, ಐಶ್ವರ್ಯಗಳನ್ನು ಹೊಂದಲು ನೀವು ಮಾಡುತ್ತಿರುವ ಕೆಲಸ ತಪ್ಪುಗಳನ್ನು ಸರಿಪಡಿಸಿಕೊಳ್ಳಿ.

* ಊಟ ಮಾಡುವ ಸಮಯದಲ್ಲಿ ನಾವು ಅನ್ನವನ್ನು ತಟ್ಟೆಯ ಮುಂದೆ ಇಟ್ಟುಕೊಂಡು ಕಾಯಿಸುತ್ತಾ ಆ ಸಮಯದಲ್ಲಿ ಅವಶ್ಯಕತೆ ಇಲ್ಲದ ಕೆಲಸಗಳನ್ನು ಮಾಡುವುದು ತಾಯಿ ಅನ್ನಪೂರ್ಣೇಶ್ವರಿ ಗೆ ಅವಮಾನ ಮಾಡಿದಂತೆ, ಜೊತೆಗೆ ಕೆಲವರು ಅನ್ನವನ್ನು ಮುಂದೆ ಇಟ್ಟುಕೊಂಡು ಮನಸ್ಸಿನಲ್ಲಿ ಏನೇನೋ ನಡೆಸಿಕೊಂಡು ಕ’ಣ್ಣೀ’ರು ಇಡುತ್ತಾರೆ. ಇದನ್ನು ಕೂಡ ಮಾಡಬಾರದು ಇದರಿಂದ ಕ’ಷ್ಟ ಕಾರ್ಪಣ್ಯಗಳು ಇನ್ನು ಹೆಚ್ಚಾಗುತ್ತವೆ.

* ಊಟ ಮಾಡಲು ಕುಳಿತುಕೊಳ್ಳುವಾಗ ನೆಲದ ಮೇಲೆ ಚಾಪೆ ಹಾಕಿಕೊಂಡು ಕುಳಿತು ತಟ್ಟೆಯನ್ನು ನಮ್ಮ ಮುಂದಿಟ್ಟು ಊಟ ಮಾಡಬೇಕು. ಕೆಲವು ಹೆಣ್ಣು ಮಕ್ಕಳು ತಟ್ಟೆಯನ್ನು ತೊಡೆಯ ಮೇಲೆ ಇಟ್ಟುಕೊಂಡು ಊಟ ಮಾಡುತ್ತಾರೆ ಇದು ಕೂಡ ತಪ್ಪು. ಇದರಿಂದಲೂ ಕೂಡ ದರಿದ್ರ ಬರುತ್ತದೆ.

* ಮನೆಗೆ ಯಾರೇ ಅತಿಥಿಗಳು ಬಂದರು ಅವರಿಗೆ ಗೌರವ ಕೊಡಿ, ನಿಮ್ಮ ಶಕ್ತಿಯನುಸಾರ ಅವರ ಹಸಿವನ್ನು ತಣಿಸುವ ಪ್ರಯತ್ನ ಮಾಡಿ, ಹಸಿದು ಬಂದವರಿಗೆ ಎಂದು ಅ’ವ’ಮಾ’ನ ಮಾಡಿ ಕಳುಹಿಸಬೇಡಿ ಇದು ಮನೆಗೆ ಶ್ರೇಯಸ್ಕರವಲ್ಲ.
* ಮನೆಯ ಆವರಣದಲ್ಲಿ ಒಣಗಿದ ಗಿಡಗಳು ಇರಲು ಬಿಡಬೇಡಿ, ಇದರಿಂದ ಖಿ’ನ್ನ’ತೆ ಶುರುವಾಗಿ ಮಾನಸಿಕ ಆರೋಗ್ಯ ಕುಸಿಯುತ್ತದೆ

* ಸಾಧ್ಯವಾದಷ್ಟು ದೇವರಿಗೆ ನೀವೇ ನಿಮ್ಮ ಕೈತೋಟದಲ್ಲಿ ಬೆಳೆಸಿದ ಹೂಗಳನ್ನು ಅರ್ಪಿಸಿ ಇದರಿಂದ ಹೆಚ್ಚು ಫಲ ಸಿಗುತ್ತದೆ ಒಂದು ವೇಳೆ ಅನುಕೂಲತೆ ಇಲ್ಲದಿದ್ದರೆ ಹೊರಗಿನಿಂದ ಹೂವು ತಂದು ಅದಕ್ಕೆ ಮಡಿ ನೀರು ಚಿಮ್ಮಿಸಿ ಶುದ್ಧ ಮಾಡಿ ನಂತರ ಬಳಸಬೇಕು

* ನಿಮ್ಮ ಮನೆಯ ಗಡಿಯಾರ ನಿಂತಿದ್ದರೆ ಅಥವಾ ಕೆ’ಟ್ಟು ಹೋಗಿದ್ದರೆ ಅಥವಾ ಅದು ಒಡೆದಿದ್ದರೆ ಅದು ಮನೆಗೆ ಮಂಗಳಕರವಲ್ಲ. ಇದರಿಂದ ಮನೆಯವರ ಸಮಯ ಕೆಡುತ್ತದೆ, ಇಲ್ಲಸಲ್ಲದ ಸಮಸ್ಯೆಗಳು ಹೆಚ್ಚಾಗುತ್ತವೆ.
* ಮುಖ್ಯದ್ವಾರದ ಮುಂದೆ ಮೆಟ್ಟಲು ಗಳಿದ್ದರೆ ಅವು ಬೆಸ ಸಂಖ್ಯೆಯಲ್ಲಿರಬೇಕು ಮತ್ತು ರಸ್ತೆ ಗಿಂತ ಸ್ವಲ್ಪ ಎತ್ತರದ ಸ್ಥಾನದಲ್ಲಿರಬೇಕು.

* ಮನೆಯಲ್ಲಿರುವ ಹಿರಿಯರನ್ನು ಗೌರವಿಸಿ ನಿಮ್ಮ ತಂದೆ ತಾಯಿಯನ್ನು ಅತ್ತೆ ಮಾವರನ್ನು ನೀವು ಪೂಜ್ಯ ಭಾವನೆಯಿಂದ ನೋಡಿದರೆ ನಿಮ್ಮ ಮಕ್ಕಳು ಅದನ್ನೇ ಅನುಸರಿಸುತ್ತಾರೆ ಹಾಗಾಗಿ ಮುಖ್ಯ ಕೆಲಸ ಕಾರ್ಯಗಳಿಗೆ ಹೊರಟಾಗ, ಹುಟ್ಟು ಹಬ್ಬ, ಹಬ್ಬ ಹರಿದಿನಗಳ ಸಮಯದಲ್ಲಿ ಹಿರಿಯರ ಕಾಲುಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳಿ. ಅವರನ್ನು ಪ್ರೀತಿಯಿಂದ ಮಾತನಾಡಿಸಿ ಒಂದು ವೇಳೆ ಅವರ ನಡವಳಿಕೆ ಅಥವಾ ನಿರ್ಧಾರಗಳು ಅನುಕೂಲಕರವಾಗಿಲ್ಲದಿದ್ದರೆ ಮನವರಿಕೆ ಮಾಡಿ ಯಾವುದೇ ಕಾರಣಕ್ಕೂ ಅವರ ಮನಸ್ಸು ನೋಯಿಸಲು ಹೋಗಬೇಡಿ ಇದು ಮನೆಗೆ ಶುಭವಲ್ಲ

* ದೇವರ ಪೂಜೆ ಮಾಡುವಾಗ ಶುದ್ಧತೆ ಬಗ್ಗೆ ಗಮನ ಇರಲಿ. ಜೊತೆಗೆ ನೀವು ಕೂಡ ಮನಸು ಮತ್ತು ಬುದ್ಧಿಯನ್ನು ಸ್ವಚ್ಛ ಮಾಡಿಕೊಂಡು ದೇವರ ಮುಂದೆ ನಿಲ್ಲಿ ಮತ್ತು ದೇವರ ಕೋಣೆಯಲ್ಲಿ ಯಾವಾಗಲೂ ಒಂಟಿ ದೀಪ ಹಚ್ಚಬೇಡಿ ಚಿಕ್ಕ ದೀಪವಾದರೂ ಎರಡು ದೀಪಗಳಿರಲಿ.
* ಸಂಜೆ ಹೊತ್ತು ಮುಳುಗಿದ ಮೇಲೆ ಮನೆಯ ಕಸ ಗುಡಿಸಿ ಹೊರ ಹಾಕುವುದು ಮಾಡಿದರೆ ಹಣಕಾಸಿನ ಸಮಸ್ಯೆಗಳು ಉಂಟಾಗುತ್ತವೆ, ನಿಮ್ಮ ಐಶ್ವರ್ಯ ಕುಸಿಯುತ್ತದೆ.

* ಚಾಪೆ ಮೇಲೆ ಮಲಗುವವರು ಬೆಳಿಗ್ಗೆ ಎದ್ದ ಕೂಡಲೇ ಎಲ್ಲವನ್ನು ನೀಟಾಗಿ ಎತ್ತಿ ಇಡಬೇಕು. ಅದರ ಮೇಲೆ ಅಡ್ಡಾದಿಡ್ಡಿ ಓಡಾಡುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳುಂಟಾಗುತ್ತದೆ ಮತ್ತು ಮನೆಗೆ ದರಿದ್ರ ಬರುತ್ತದೆ.
* ಮನೆಯಲ್ಲಿ ಎಷ್ಟು ಶುದ್ಧವಾಗಿ ಇಟ್ಟುಕೊಳ್ಳುತ್ತೇವೆ ಅಷ್ಟು ದೈವಿಕ ಕಳೆ ಬರುತ್ತದೆ ಮತ್ತು ಆ ಮನೆಯಲ್ಲಿ ಸಕಾರಾತ್ಮಕ ವಾತಾವರಣವಿದ್ದರೆ ತಾಯಿ ಮಹಾಲಕ್ಷ್ಮಿ ಅನುಗ್ರಹವಾಗುತ್ತದೆ. ಮನೆಯ ಸುಖ ಶಾಂತಿ ಸಮೃದ್ಧಿ ಹೆಚ್ಚಾಗುತ್ತದೆ.

* ಮನೆಯಲ್ಲಿ ಯಾವುದಾದರೂ ಜೀವಿಗಳು ಬಂದು ವಾಸಿಸಲು ಅಥವಾ ಗೂಡು ಕಟ್ಟಿಕೊಳ್ಳಲು ಪ್ರಯತ್ನಿಸಿದರೆ ಸಾಕು ಪ್ರಾಣಿಗಳಾಗಿದ್ದರೆ ಅವಕಾಶ ಮಾಡಿಕೊಡಿ, ವಿಷಕಾರಿಯಾಗಿದ್ದರೆ ಅವುಗಳಿಗೆ ನೋವಾಗದಂತೆ ಅವುಗಳ ಪ್ರಾಣಕ್ಕೆ ತೊಂದರೆ ಆಗದಂತೆ ಮನೆಯಿಂದ ಓಡಿಸಿ.

ಆಹಾರ ಸರಬರಾಜು ನಿಗಮದಲ್ಲಿ ನೇಮಕಾತಿ, ಆಹಾರ ಇನ್ಸ್ಪೆಕ್ಟರ್ ಮತ್ತು ಕ್ಲಕ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ.! ವೇತನ 92,300/-

 

ಭಾರತೀಯ ಆಹಾರ ನಿಗಮದಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ನಿಗಮದಿಂದ ಅಧಿಕೃತ ಅಧಿಸೂಚನೆ ಕೂಡ ಬಿಡುಗಡೆ ಆಗಿದೆ. ಇವು ಕೇಂದ್ರ ಸರ್ಕಾರದ ಹುದ್ದೆಗಳಾಗಿದ್ದು ಸರ್ಕಾರಿ ಹುದ್ದೆ ಪಡೆಯಬೇಕು ಎಂದು ಹಂಬಲಿಸುವ ಆಕಾಂಕ್ಷಿಗಳಿಗೆ ಸದಾವಕಾಶವಾಗಿದೆ.

ಈ ಹುದ್ದೆಗಳಿಗೆ ಸೂಚಿಸಿರುವ ಅರ್ಹತೆ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಪ್ರಕಟಣೆಯಲ್ಲಿರುವ ಕೆಲವು ಪ್ರಮುಖ ಅಂಶಗಳಾದ ಹುದ್ದೆಗಳ ವಿವರ, ಒಟ್ಟು ಹುದ್ದೆಗಳ ಸಂಖ್ಯೆ, ವೇತನ ಶ್ರೇಣಿ, ಶೈಕ್ಷಣಿಕ ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಆಯ್ಕೆ ವಿಧಾನ, ಪ್ರಮುಖ ದಿನಾಂಕಗಳು ಇನ್ನಿತರ ವಿಷಯಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ…

ನೇಮಕಾತಿ ಸಂಸ್ಥೆ:- ಭಾರತೀಯ ಆಹಾರ ನಿಗಮ (FCI)
ಹುದ್ದೆಗಳು:- ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 345
ಹುದ್ದೆಗಳ ವಿವರ:-
* ಆಹಾರ ಸರಬರಾಜು ನಿರೀಕ್ಷಕರು
* ಉನ್ನತ ಮಟ್ಟದ ಗುಮಾಸ್ತ
ಉದ್ಯೋಗ ಸ್ಥಳ:- ಭಾರತದಾದ್ಯಂತ…

ವೇತನ ಶ್ರೇಣಿ:-
* ಆಹಾರ ಸರಬರಾಜು ನಿರೀಕ್ಷಕರು – ರೂ.29,200 ರಿಂದ ರೂ.92,300
* ಉನ್ನತ ಮಟ್ಟದ ಗುಮಾಸ್ತ – ರೂ.25,500 ರಿಂದ 81,100

ಶೈಕ್ಷಣಿಕ ವಿದ್ಯಾರ್ಹತೆ:-
* ಆಹಾರ ಸರಬರಾಜು ನಿರೀಕ್ಷಕರು ಮತ್ತು ಉನ್ನತ ಮಟ್ಟದ ಗುಮಾಸ್ತ ಈ ಎರಡು ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು
* ಒಂದು ವೇಳೆ ಆಯ್ಕೆ ಆಗುವ ಅಭ್ಯರ್ಥಿಗಳು ಪರೀಕ್ಷೆಗಳಲ್ಲಿ ಒಂದೇ ರೀತಿಯ ಅಂಕಗಳನ್ನು ಹೊಂದಿದ್ದರೆ ಆಹಾರ ತಂತ್ರಜ್ಞಾನ ಮತ್ತು ಆಹಾರ ವಿಜ್ಞಾನ ವಿಷಯದಲ್ಲಿ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು.
* ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮರಾಠಿ ಭಾಷೆ ಚೆನ್ನಾಗಿ ಗೊತ್ತಿರಬೇಕು.

ವಯೋಮಿತಿ:-
* ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 43 ವರ್ಷಗಳು

ವಯೋಮಿತಿ ಸಡಿಲಿಕೆ:-
* Sc / ST ಪ್ರವರ್ಗ – 1ರ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ
* OBC ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು
* ಮೊಬೈಲ್ ಅಥವಾ ಲ್ಯಾಪ್ಟಾಪ್ ಅಥವಾ ಸೈಬರ್ ಸೆಂಟರ್ ನಲ್ಲಿ ಅರ್ಜಿ ಸಲ್ಲಿಸಬಹುದು
* ಮೊದಲಿಗೆ fci ಅಧಿಕೃತ ವೆಬ್ಸೈಟ್ಗೆ ಭೇಟಿಕೊಟ್ಟು ನೇಮಕಾತಿ ಕುರಿತು ಹೊರಡಿಸಿರುವ ಅಧಿಸೂಚನೆಯಲ್ಲಿರುವ ಎಲ್ಲಾ ಅಂಶಗಳನ್ನು ಮತ್ತೊಮ್ಮೆ ತಪ್ಪದೆ ಓದಿ ಅರ್ಥ ಮಾಡಿಕೊಳ್ಳಿ
* ಆ ಪ್ರಕಾರವಾದ ಎಲ್ಲಾ ಮಾನದಂಡಗಳನ್ನು ಪೂರೈಸುವವರು ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ

* ಅರ್ಜಿ ಫಾರಂನಲ್ಲಿ ಕೇಳಲಾಗಿರುವ ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
* ಅರ್ಜಿ ಶುಲ್ಕ ಪಾವತಿ ಮಾಡಬೇಕಾಗಿದ್ದಲ್ಲಿ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿಸಿ
* ಅರ್ಜಿ ಸಲ್ಲಿಕೆ ಪೂರ್ತಿಯಾದ ಮೇಲೆ ಅರ್ಜಿ ಸಲ್ಲಿಕೆ ಸ್ವೀಕೃತಿ ಪತ್ರ ಹಾಗೂ ಇ-ರಶೀದಿಯನ್ನು ಪ್ರಿಂಟ್ ಔಟ್ ತಪ್ಪದೇ ಪಡೆದುಕೊಳ್ಳಿ.

ಆಯ್ಕೆ ವಿಧಾನ:-
* ಅರ್ಜಿ ಸಲ್ಲಿಸಿದ ಎಲ್ಲರಿಗೂ ಕಂಪ್ಯೂಟರ್ ಬೇಸ್ಡ್ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ
* ಸ್ಪರ್ಧಾತ್ಮಕ ಪರೀಕ್ಷೆಯ ಸುತ್ತಿನಲ್ಲಿ ಆಯ್ಕೆ ಆದವರಿಗೆ ಸಂದರ್ಶನ ಮತ್ತು ದಾಖಲೆಗಳ ಪರಿಶೀಲ ನಡೆಸಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 13 ಡಿಸೆಂಬರ್, 2023
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31 ಡಿಸೆಂಬರ್ , 2023.

 

ಕೌಶಲ್ಯ ಅಭಿವೃದ್ಧಿ ನಿಗಮದಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

0

 

ನೇಮಕಾತಿ ಸಂಸ್ಥೆ:- ಬೌದ್ಧಿಕ ಅಸಾಮರ್ಥ್ಯ ಹೊಂದಿರುವ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಸಂಸ್ಥೆ (NIEPID)
ಹುದ್ದೆ:- ವಿವಿಧ ಹುದ್ದೆಗಳು

ಹುದ್ದೆಗಳ ವಿವರ:-
* ವಿಶೇಷ ಶಿಕ್ಷಣದ ಉಪನ್ಯಾಸಕರು – 1
* ಪುನರ್ವಸತಿ ಮನೋವಿಜ್ಞಾನದ ಉಪನ್ಯಾಸಕರು – 1
* ಪುನರ್ವಸತಿ ಅಧಿಕಾರಿ – 1
* ಅಂಕಿಅಂಶ ಸಹಾಯಕ – 1
* ರಿಸೆಪ್ಷನಿಸ್ಟ್ ಮತ್ತು ಟೆಲಿಫೋನ್ ಆಪರೇಟರ್ – 1
* ಚಾಲಕ – 3
* MTS (ಅಟೆಂಡರ್) – 2
* MTS (Ayah) – 1
* ಪೀಡಿಯಾಟ್ರಿಕ್ಸ್‌ನಲ್ಲಿ ಸಹಾಯಕ ಪ್ರಾಧ್ಯಾಪಕ – 1
* ಸಹಾಯಕ ಆಡಳಿತಾಧಿಕಾರಿ – 1
* ಸಹಾಯಕ ಪ್ರಾಧ್ಯಾಪಕ (PMR) – 2
* ಕಾರ್ಯಾಗಾರದ ಮೇಲ್ವಿಚಾರಕ ಮತ್ತು ಅಂಗಡಿ ಕೀಪರ್ – 1
* ಸಹಾಯಕ ಪ್ರಾಧ್ಯಾಪಕರು (ಭಾಷಣ) – 1
* ಪ್ರಾಸ್ಥೆಟಿಸ್ಟ್ ಮತ್ತು ಆರ್ಥೋಟಿಸ್ಟ್ – 1
* ವಿಶೇಷ ಶಿಕ್ಷಕ / ಓ&ಎಂ ಬೋಧಕ – 2
* ಕಾರ್ಯಾಗಾರದ ಮೇಲ್ವಿಚಾರಕ – 3
* ಗುಮಾಸ್ತ/ಬೆರಳಚ್ಚುಗಾರ – 1
* ಸಹಾಯಕ ಪ್ರಾಧ್ಯಾಪಕರು (ವಿಶೇಷ ಶಿಕ್ಷಣ) – 1
* ಉಪನ್ಯಾಸಕ (ಆಕ್ಯುಪೇಷನಲ್ ಥೆರಪಿ) – 1
* ಕ್ಲಿನಿಕಲ್ ಸೈಕಾಲಜಿಸ್ಟ್/ಪುನರ್ವಸತಿ ಮನಶ್ಶಾಸ್ತ್ರಜ್ಞ – 4
* ಆಕ್ಯುಪೇಷನಲ್ ಥೆರಪಿಸ್ಟ್ – 3
* ಆಡಿಯಾಲಜಿಸ್ಟ್ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್ – 2
* ವಿಶೇಷ ಶಿಕ್ಷಕ (ID) – 1
* ವಿಶೇಷ ಶಿಕ್ಷಕ (HI/VI) – 1
* ಆರಂಭಿಕ ಮಧ್ಯಸ್ಥಿಕೆವಾದಿ – 1
* ನರ್ಸ್ – 1
* ತರಬೇತಿ ಪಡೆದ ಆರೈಕೆದಾರ – 4
* ಚಟುವಟಿಕೆ ಶಿಕ್ಷಕ – 3

ಒಟ್ಟು ಹುದ್ದೆಗಳು:- 46 ಹುದ್ದೆಗಳು
ವೇತನ ಶ್ರೇಣಿ:- ರೂ.15,000 ದಿಂದ 75,000 ಮಾಸಿಕವಾಗಿ…
ಉದ್ಯೋಗ ಸ್ಥಳ:-
* ನೆಲ್ಲೂರು (ಆಂದ್ರಪ್ರದೇಶ)
* ದಾವಣಗೆರೆ (ಕರ್ನಾಟಕ)
* ಮುಂಬೈ (ಮಹಾರಾಷ್ಟ್ರ)
* ನೋಯ್ಡಾ (ಉತ್ತರ ಪ್ರದೇಶ)

ಶೈಕ್ಷಣಿಕ ವಿದ್ಯಾರ್ಹತೆ:-
* ವಿಶೇಷ ಶಿಕ್ಷಣದ ಉಪನ್ಯಾಸಕರು ಹುದ್ದೆಗೆ ಅರ್ಜಿ ಸಲ್ಲಿಸಲು
ಡಿಪ್ಲೊಮಾ, B.ed, ಸ್ನಾತಕೋತ್ತರ ಪದವಿ
* ಪುನರ್ವಸತಿ ಮನೋವಿಜ್ಞಾನದ ಉಪನ್ಯಾಸಕರು ಹುದ್ದೆಗೆ ಅರ್ಜಿ ಸಲ್ಲಿಸಲು M.phil
* ಪುನರ್ವಸತಿ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು
ಸ್ನಾತಕೋತ್ತರ ಪದವಿ
* ಅಂಕಿಅಂಶ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು
ಅಂಕಿಅಂಶಗಳಲ್ಲಿ ಸ್ನಾತಕೋತ್ತರ ಪದವಿ
* ರಿಸೆಪ್ಷನಿಸ್ಟ್ ಮತ್ತು ಟೆಲಿಫೋನ್ ಆಪರೇಟರ್ ಹುದ್ದೆಗೆ ಅರ್ಜಿ ಸಲ್ಲಿಸಲು 12 ನೇ ತರಗತಿ

* ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಲು 10 ನೇ ತರಗತಿ
* MTS (ಅಟೆಂಡರ್) ಹುದ್ದೆಗೆ ಅರ್ಜಿ ಸಲ್ಲಿಸಲು 10ನೇ ತರಗತಿ
* MTS (Ayah) ಹುದ್ದೆಗೆ ಅರ್ಜಿ ಸಲ್ಲಿಸಲು 10ನೇ ತರಗತಿ
* ಪೀಡಿಯಾಟ್ರಿಕ್ಸ್‌ನಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಸ್ನಾತಕೋತ್ತರ ಪದವಿ ಪೀಡಿಯಾಟ್ರಿಕ್ಸ್‌ನಲ್ಲಿ ‌ MD * * ಸಹಾಯಕ ಆಡಳಿತಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು
ಪದವಿ
* ಸಹಾಯಕ ಪ್ರಾಧ್ಯಾಪಕ (PMR) ಹುದ್ದೆಗೆ ಅರ್ಜಿ ಸಲ್ಲಿಸಲು
MBBS, ಸ್ನಾತಕೋತ್ತರ ಪದವಿ
* ಕಾರ್ಯಾಗಾರದ ಮೇಲ್ವಿಚಾರಕ ಮತ್ತು ಅಂಗಡಿ ಕೀಪರ್ ಹುದ್ದೆಗೆ ಅರ್ಜಿ ಸಲ್ಲಿಸಲು 12ನೇ ತರಗತಿ ಮತ್ತು ಪ್ರಾಸ್ತೆಟಿಕ್ಸ್ ಮತ್ತು ಆರ್ಥೋಟಿಕ್ಸ್‌ನಲ್ಲಿ ಡಿಪ್ಲೊಮಾ

* ಸಹಾಯಕ ಪ್ರಾಧ್ಯಾಪಕರು (ಭಾಷಣ) ಹುದ್ದೆಗೆ ಅರ್ಜಿ ಸಲ್ಲಿಸಲು
ಮಾತು ಮತ್ತು ಶ್ರವಣದಲ್ಲಿ ಸ್ನಾತಕೋತ್ತರ ಪದವಿ
* ಪ್ರಾಸ್ಥೆಟಿಸ್ಟ್ ಮತ್ತು ಆರ್ಥೋಟಿಸ್ಟ್ಪ್ರಾಸ್ಥೆಟಿಕ್ ಹುದ್ದೆಗೆ ಅರ್ಜಿ ಸಲ್ಲಿಸಲು ಪ್ರಾಸ್ಥೆಟಿಸ್ಟ್ ಆರ್ಥೋಟಿಕ್‌ನಲ್ಲಿ ಪದವಿ
* ವಿಶೇಷ ಶಿಕ್ಷಕ / ಓ&ಎಂ ಬೋಧಕ ಹುದ್ದೆಗೆ ಅರ್ಜಿ ಸಲ್ಲಿಸಲು
ಡಿಪ್ಲೊಮಾ, ಪದವಿ, B.ed, ಸ್ನಾತಕೋತ್ತರ ಪದವಿ
* ಕಾರ್ಯಾಗಾರದ ಮೇಲ್ವಿಚಾರಕ ಹುದ್ದೆಗೆ ಅರ್ಜಿ ಸಲ್ಲಿಸಲು
12ನೇ, ಪ್ರಾಸ್ತೆಟಿಕ್ಸ್ ಮತ್ತು ಆರ್ಥೋಟಿಕ್ಸ್‌ನಲ್ಲಿ ಡಿಪ್ಲೊಮಾ
* ಗುಮಾಸ್ತ/ಬೆರಳಚ್ಚುಗಾರ ಹುದ್ದೆಗೆ ಅರ್ಜಿ ಸಲ್ಲಿಸಲು
12 ನೇ ತರಗತಿ

* ಸಹಾಯಕ ಪ್ರಾಧ್ಯಾಪಕರು (ವಿಶೇಷ ಶಿಕ್ಷಣ) ಹುದ್ದೆಗೆ ಅರ್ಜಿ ಸಲ್ಲಿಸಲು ಸ್ನಾತಕೋತ್ತರ ಪದವಿ, M.Ed
* ಉಪನ್ಯಾಸಕ (ಆಕ್ಯುಪೇಷನಲ್ ಥೆರಪಿ) ಹುದ್ದೆಗೆ ಅರ್ಜಿ ಸಲ್ಲಿಸಲು ಆಕ್ಯುಪೇಷನಲ್ ಥೆರಪಿಯಲ್ಲಿ ಸ್ನಾತಕೋತ್ತರ ಪದವಿ
* ಕ್ಲಿನಿಕಲ್ ಸೈಕಾಲಜಿಸ್ಟ್ / ಪುನರ್ವಸತಿ ಮನಶ್ಶಾಸ್ತ್ರಜ್ಞ ಹುದ್ದೆಗೆ ಅರ್ಜಿ ಸಲ್ಲಿಸಲು M.phil
* ಆಕ್ಯುಪೇಷನಲ್ ಥೆರಪಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಲು
BOT

* ಆಡಿಯಾಲಜಿಸ್ಟ್ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಎಎಸ್ ಎಲ್ ಪಿಯಲ್ಲಿ B.Sc
* ವಿಶೇಷ ಶಿಕ್ಷಕ (ID) ಹುದ್ದೆಗೆ ಅರ್ಜಿ ಸಲ್ಲಿಸಲು
B.Ed.SE (ID)
* ವಿಶೇಷ ಶಿಕ್ಷಕ (HI/VI) ಹುದ್ದೆಗೆ ಅರ್ಜಿ ಸಲ್ಲಿಸಲು
B.Ed.SE (HI/VI)
* ಆರಂಭಿಕ ಮಧ್ಯಸ್ಥಿಕೆವಾದಿ ಹುದ್ದೆಗೆ ಅರ್ಜಿ ಸಲ್ಲಿಸಲು
M.Sc, PGDEI
* ನರ್ಸ್ ಹುದ್ದೆಗೆ ಅರ್ಜಿ ಸಲ್ಲಿಸಲು ನರ್ಸಿಂಗ್ ನಲ್ಲಿ ಪದವಿ * ತರಬೇತಿ ಪಡೆದ ಆರೈಕೆದಾರ ಹುದ್ದೆಗೆ ಅರ್ಜಿ ಸಲ್ಲಿಸಲು
NIEPID ನಿಯಮಗಳ ಪ್ರಕಾರ
* ಚಟುವಟಿಕೆ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು
DECSE, D.Ed.SE

ವಯೋಮಿತಿ:-
* ಕನಿಷ್ಠ18 ವರ್ಷಗಳು
* ಗರಿಷ್ಠ 56 ವರ್ಷಗಳು
* BLW ಅಧಿಸೂಚನೆಯ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:-
* SC/ST/ಮಹಿಳೆ/PH ಅಭ್ಯರ್ಥಿಗಳಿಗೆ ವಿನಾಯಿತಿ ಇದೆ
* ಉಳಿದ ಅಭ್ಯರ್ಥಿಗಳಿಗೆ ರೂ.500
* ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬೇಕು.

ಅರ್ಜಿ ಸಲ್ಲಿಸುವ ವಿಧಾನ:-
* niepid.nic.in ವೆಬ್ ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬೇಕು.

ಆಯ್ಕೆ ವಿಧಾನ:-
* ಲಿಖಿತ ಪರೀಕ್ಷೆ
* ಸಂದರ್ಶನ
* ದಾಖಲೆಗಳ ಪರಿಶೀಲನೆ

ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 06 ನವೆಂಬರ್, 2023
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 18 ಡಿಸೆಂಬರ್, 2023.

ಕಣ್ಣಿನ ದೃಷ್ಟಿ ಕಡಿಮೆ ಆಗ್ತಿದೆ ಅನಿಸಿದ್ರೆ ಹೀಗೆ ಮಾಡಿ, ನಾವು ಅನಾವಶ್ಯಕ ಸ್ಪೆಕ್ಸ್ ಹಾಕೋದು ಒಳ್ಳೆಯದಾ.?.

ಕಣ್ಣು ನಮ್ಮ ಜೀವನದ ಪ್ರಮುಖ ಅಂಗ, ಮನುಷ್ಯ ಹುಟ್ಟಿದಾಗಲಿಂದ ಸಾವಿನವರೆಗೂ ಬೆಳೆಯದಿರುವ ಒಂದೇ ಅಂಗ ಕಣ್ಣು. ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಯಾಕೆ ಮುಖ್ಯ ಎಂದರೆ ಕಣ್ಣು ಇಲ್ಲದಿದ್ದರೆ ಬದುಕು ಕತ್ತಲಾದಂತೆ ಆತ ಜೀವನದಲ್ಲಿ ಏನನ್ನು ಕೂಡ ಮಾಡಲಾಗದೆ ಇನ್ನೊಬ್ಬರಿಗೆ ಹೊರೆಯಾಗುತ್ತಾನೆ.

ಹುಟ್ಟಿನಿಂದ ಕಣ್ಣು ಕಾಣದವರ ಸಮಸ್ಯೆ ಒಂದಾದರೆ ದೇವರು ಕಣ್ಣು ಕೊಟ್ಟಿದ್ದನ್ನು ಕಾಪಾಡಿಕೊಳ್ಳದೆ ನಾವು ಹಾಳು ಮಾಡಿಕೊಂಡರೆ ಅದು ಇನ್ನೂ ಒಂದು ರೀತಿಯ ದುರಂತ. ಹಾಗಾಗಿ ನಾವು ನಮ್ಮ ಯಾವ ತಪ್ಪುಗಳಿಂದ ಕಣ್ಣನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ ಮತ್ತು ಕಣ್ಣಿನ ಆರೋಗ್ಯಕ್ಕೆ ಏನು ಮಾಡಬೇಕು ಎನ್ನುವ ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ವಿದೇಶಗಳಲ್ಲಿ ಮಗು ಹುಟ್ಟಿದ ತಕ್ಷಣದಿಂದ ಹಿಡಿದು ಯಾವಾಗಲೂ ಕಣ್ಣುಗಳ ಆರೋಗ್ಯದ ಬಗ್ಗೆ ಕಾಳಜಿ ಮಾಡುತ್ತಾರೆ. ಅಲ್ಲಿ ಚಿಕ್ಕ ಮಕ್ಕಳಿಗೂ ಸನ್ ಗ್ಲಾಸ್ ಹಾಕುವುದು ಬೇರೆ ಬೇರೆ ರೀತಿಯ ಗ್ಲಾಸ್ ಗಳನ್ನು ಹಾಕುವುದು ಮಾಮೂಲಿ.

ಇದು ತಪ್ಪಲ್ಲ ನಾವು ಕೂಡ ಬಿಸಿಲಿಗೆ ಹೋದಾಗ ಸೂರ್ಯನ ನೇರ ಕಿರಣಗಳು ಕಣ್ಣಿನ ಜೀವಕೋಶಗಳಿಗೆ ಹಾನಿ ಆಗದಂತೆ ಸನ್ ಗ್ಲಾಸ್ ಬಳಸುವುದು ಬಳಸಿದರೇ ಅದು ಒಳ್ಳೆಯದೇ ಮತ್ತು ಇದೇ ರೀತಿ ಲೈಟ್ ಎಮಿಷನ್ ಗಳನ್ನು ತಡೆಯಲು ಗ್ಲಾಸ್ ಗಳನ್ನು ಬಳಸುವುದು ಒಳ್ಳೆಯದೇ ಹಾಗೆ ಧೂಳು ಹೊಗೆ ಇಂತಹ ವಾತಾವರಣದಲ್ಲಿರುವಾಗಲು ಕೂಡ ಕಣ್ಣಿನ ಪ್ರೊಟೆಕ್ಷನ್ ಗಾಗಿ ಕನ್ನಡಕ ಬಳಸಿದರೆ ಅದು ತಪ್ಪಲ್ಲ.

ಆದರೆ ನಮ್ಮಲ್ಲಿ ಮೊದಲಿನಿಂದಲೂ ಕನ್ನಡಕ ಬಳಸುವುದು ಶೋಕಿ ಅಥವಾ ದೃಷ್ಟಿ ದೋಷಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಮಾತ್ರ ಕನ್ನಡಕ ಬಳಸಬೇಕು ಎನ್ನುವ ಭಾವನೆ ಆಳವಾಗಿ ಬೇರೂರಿದೆ. ಸಾಮಾನ್ಯವಾಗಿ 40 ವರ್ಷ ವಯಸ್ಸಿಗೆ ಪ್ರತಿಯೊಬ್ಬರಿಗೂ ಕನ್ನಡದ ಅವಶ್ಯಕತೆ ಇರುತ್ತದೆ ಆಗ ದೂರ ದೃಷ್ಟಿ ಹಾಗೂ ಸಮೀಪ ದೃಷ್ಟಿ ಪವರ್ ವ್ಯತ್ಯಾಸವಾಗುತ್ತದೆ.

ಅದಕ್ಕೆ ತಕ್ಕ ಪವರ್ ಗ್ಲಾಸ್ ಗಳನ್ನು ಬಳಸುತ್ತಾರೆ. ನಾವು ನ್ಯಾಚುರಲ್ ಆಗಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರೆ ತಪ್ಪದೇ ಕಣ್ಣಿಗೆ ಇರುವ ಸಾಮಾನ್ಯ ವ್ಯಾಯಾಮಗಳಾದ ಕಣ್ಣನ್ನು ಎಡದಿಂದ ಬಲಕ್ಕೆ ತಿರುಗಿಸುವುದು, ಬಲದಿಂದ ಎಡಕ್ಕೆ ತಿರುಗಿಸುವುದು, ಮೇಲಿಂದ ಕೆಳಕ್ಕೆ ಮತ್ತು ಕೆಳಗೆನಿಂದ ಮೇಲಕ್ಕೆ ನೋಡುವುದು.

ಕಣ್ಣನ್ನು ಪ್ರದಕ್ಷಣೀಯ ಹಾಗೂ ಆ ಪ್ರದಕ್ಷಣೀಯವಾಗಿ ತಿರುಗಿಸುವುದು ಇವುಗಳನ್ನು ಕನಿಷ್ಠ 10ರಿಂದ 20 ಬಾರಿಯಾದರೂ ಮಾಡಬೇಕು ಮತ್ತು ಹತ್ತಿರದಿಂದ ಮೊಬೈಲ್, ಲ್ಯಾಪ್ಟಾಪ್ ಅಥವಾ ಟಿವಿಗಳನ್ನು ನೋಡಬಾರದು. ಈ ರೀತಿ ನೋಡುವಾಗಲೂ ಕಣ್ಣುಗಳನ್ನು ಆಗಾಗ ಬ್ಲಿಂಕ್ ಮಾಡಬೇಕು ಮತ್ತು ಹತ್ತಿರದಿಂದ ಪುಸ್ತಕ ಅಥವಾ ಫೋನ್ ನೋಡಿದರೂ ಆಗಾಗ ದೃಷ್ಟಿ ಬದಲಾಯಿಸಿ ದೂರದಲ್ಲಿರುವುದನ್ನು ನೋಡಬೇಕು, ಧೂಳು ಇರುವ ಕಡೆ ಓಡಾಡುವಾಗ ಕಣ್ಣಿನ ರಕ್ಷಣೆಗೆ ಕನ್ನಡಕ ಬಳಸಬೇಕು, ಕಣ್ಣನ್ನು ಉಜ್ಜಬಾರದು.

ಆಯುರ್ವೇದದಲ್ಲಿ ದರ್ಪಣ ಚಿಕಿತ್ಸೆ ಎಂದು ಮಾಡುತ್ತಾರೆ. ಶುದ್ಧ ಹಸುವಿನ ತುಪ್ಪವನ್ನು ಕಣ್ಣಿಗೆ ಹಾಕಿ ಕಣ್ಣಿನ ಕಲ್ಮಶಗಳನ್ನು ಹೊರ ತರುತ್ತಾರೆ. ಇದನ್ನು ಮಾಡಿಸಲಾಗದವರು ಮನೆಯಲ್ಲಿ ಸಿಗುವ ಶುದ್ಧ ಹರಳೆಣ್ಣೆಯನ್ನು ಶುದ್ಧ ಹರಳೆಣ್ಣೆ ಅಥವಾ ಶುದ್ಧ ಕೊಬ್ಬರಿ ಎಣ್ಣೆಯನ್ನು ಮಲಗುವಾಗ ಕಣ್ಣಿನ ರೆಪ್ಪೆಗಳಿಗೆ ಹಚ್ಚಿ ಮಲಗಿದರೆ ಬಹಳ ಉತ್ತಮ ರಿಸಲ್ಟ್ ಕೊಡುತ್ತದೆ ಮತ್ತು ಮಲಗುವ ಎರಡು ತಾಸು ಮುಂಚೆ ಮೊಬೈಲ್ ಟಿವಿ ನೋಡುವುದನ್ನು ನಿಲ್ಲಿಸಬೇಕು.

ಕಣ್ಣಿನ ಮೇಲೆ ಸೌತೆಕಾಯಿ ಇಟ್ಟುಕೊಳ್ಳುವುದು, ಕಣ್ಣಿನ ಮೇಲೆ ಆಲೂಗಡ್ಡೆ ಕಟ್ ಮಾಡಿ ಇಟ್ಟುಕೊಂಡು ಮಲಗುವುದು ಕೂಡ ಕಂಫರ್ಟ್ ನೀಡುತ್ತದೆ, ಉರಿಯನ್ನು ಕಡಿಮೆ ಮಾಡುತ್ತದೆ, ಕಣ್ಣಿನ ಕಲ್ಮಶಗಳನ್ನು ಆಚೆ ತರುತ್ತದೆ.

ಪಿತ್ತಕೋಶದ ಕಲ್ಲಿನ ಸಮಸ್ಯೆಗೆ ಅದ್ಭುತ ಪರಿಹಾರ, ಈ ಒಂದು ಉಂಡೆ ಏಳೇ ದಿನಗಳಲ್ಲಿ ಕಲ್ಲು ಕರಗಿಸಿಬಿಡುತ್ತದೆ.!

 

ನಾವೆಲ್ಲಾ ಕಿಡ್ನಿಯಲ್ಲಿ ಕಲ್ಲು ಉಂಟಾಗಿರುವ ಸಮಸ್ಯೆಗಳ ಬಗ್ಗೆ ಕೇಳಿದ್ದೇವೆ. ಕಿಡ್ನಿ ಸ್ಟೋನ್ ಎನ್ನುವುದು ಇತ್ತೀಚಿಗೆ ಸರ್ವೇ ಸಾಮಾನ್ಯವಾಗಿದ್ದು ಕೆಲವರು ಇದನ್ನು ಆಯುರ್ವೇದದ ಚಿಕಿತ್ಸೆಗಳ ಮೂಲಕ ಮತ್ತು ಕೆಲವರು ಶಸ್ತ್ರಚಿಕಿತ್ಸೆಗಳ ಮೂಲಕ ಇನ್ನು ಕೆಲವರು ಮನೆಮದ್ದುಗಳಲ್ಲಿ ಪರಿಹಾರ ಮಾಡಿಕೊಂಡಿರುವ ಉದಾಹರಣೆಗಳನ್ನು ನೋಡಿದ್ದೇವೆ.

ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಪಿತತ ಕೋಶದ ಕಲ್ಲುಗಳು (Gallblader stone) ಎನ್ನುವ ಸಮಸ್ಯೆ ಕೂಡ ಎಲ್ಲಾ ಕಡೆ ಕೇಳಿ ಬರುತ್ತಿದೆ. ಈ ರೀತಿ ಪಿತ್ತಕೋಶದಲ್ಲಿ ಕಲ್ಲುಗಳು ಉಂಟಾಗಲು ಕರುಳಿನ PH ವ್ಯಾಲ್ಯೂ ಹೆಚ್ಚಾಗಿ ಅಸಿಡಿಕ್ ಅಂಶವು ಹೆಚ್ಚಾಗಿರುವುದೇ ಸ್ಟೋನ್ ಆಗಲು ಕಾರಣವಾಗಿದೆ.

ಇದನ್ನು ಹೇಗೆ ನ್ಯಾಚುರಲ್ ಆಗಿ ಕಡಿಮೆ ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಪಿತ್ತಕೋಶದಲ್ಲಿ ಕಲ್ಲು ಉಂಟಾಗಿರುವ ಸಮಸ್ಯೆಗೆ ಹೆಚ್ಚಿನ ಜನರು ಶಸ್ತ್ರ ಚಿಕಿತ್ಸೆಯನ್ನು ಸೂಚಿಸುತ್ತಾರೆ. ಅದರಲ್ಲೂ ಬಹುತೇಕ ಸಮಯಗಳಲ್ಲಿ ಪಿತ್ತಕೋಶವನ್ನು ತೆಗೆಯಬೇಕು ಎಂದು ಕೂಡ ಹೇಳುತ್ತಾರೆ.

ಆದರೆ ದೇಹದ ಯಾವ ಅಂಗಗಳು ಕೂಡ ಪ್ರಯೋಜನ ಇಲ್ಲದೆ ಬೆಳವಣಿಗೆಯಾಗಿಲ್ಲ, ಹಾಗಾಗಿ ಇಂತಹ ನಿರ್ಧಾರ ತೆಗೆದುಕೊಳ್ಳುವುದರ ಬದಲು ಮೊದಲು ನ್ಯಾಚುರಲ್ ಆಗಿಯೇ ಇದನ್ನು ಪರಿಹರಿಸುವ ಮಾರ್ಗವನ್ನು ಕಂಡುಕೊಳ್ಳಬೇಕು. ಈ ಹಿಂದಿನ ಕಾಲದಲ್ಲಿ ಕೂಡ ಈ ರೀತಿಯ ಸಮಸ್ಯೆಗಳು ಇರುತ್ತಿದ್ದವು ಆದರೆ ಅವರು ಮನೆ ಮದ್ದುಗಳಲ್ಲಿ ಒಳ್ಳೆಯ ಔಷಧಿಗಳನ್ನು ಸೇರಿಸಿ ಗುಣಪಡಿಸಿಕೊಳ್ಳುತ್ತಿದ್ದರು.

ಅಂತಹ ಒಂದು ಅದ್ಭುತವಾದ ರಿಸಲ್ಟ್ ಕೊಡುವ ಒಂದು ಔಷಧಿ ಮಾಡಿಕೊಳ್ಳುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಶೇರ್ ಮಾಡಿಕೊಳ್ಳಿ.

ಇಂಗಳಾರದ ಕಾಯಿ ಎನ್ನುವುದು ಹಳ್ಳಿಗಳ ಕಡೆ ಹೆಚ್ಚಾಗಿ ಸಿಗುತ್ತದೆ ಸಿಗದಿದ್ದವರು ಆಯುರ್ವೇದಿಕ್ ಅಂಗಡಿಗಳಲ್ಲಿ ಇದನ್ನು ಖರೀದಿಸಬಹುದು ಅಥವಾ ಗ್ರಂಥಿಗೆ ಅಂಗಡಿಗಳನ್ನು ಕೂಡ ಸಿಗುತ್ತದೆ. ಈ ಇಂಗಳಾರದ ಕಾಯಿಯ ಸಿಪ್ಪೆ ತೆಗೆದು ಒಳಗಡೆ ಇರುವ ಅಂಶವನ್ನು ಉಂಡೆಗಳಾಗಿ ಮಾಡಿಕೊಳ್ಳಬೇಕು ಕಡಲೆಕಾಳು ಗಾತ್ರಕ್ಕೆ ಉಂಡೆಗಳನ್ನು ಮಾಡಿ.

ಒಂದು ದಿನಕ್ಕೆ ಆಗುವಷ್ಟು ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು ಮರುದಿನಕ್ಕೆ ಫ್ರೆಶ್ ಆಗಿ ತಯಾರಿಸಿಕೊಂಡರೆ ಹೆಚ್ಚು ಫಲಿತಾಂಶ ಸಿಗುತ್ತದೆ. ಕಾಡು ಬಸಳೆ ಸೊಪ್ಪು ತೆಗೆದುಕೊಂಡು ಅದನ್ನು ರಸ ಮಾಡಿಕೊಳ್ಳಬೇಕು ಇದನ್ನು ಕೂಡ ಪ್ರತಿ ಹೊತ್ತಿಗೂ ತಯಾರಿಸಿಕೊಳ್ಳಬೇಕು ಇದರ ಜೊತೆಗೆ ಒಂದು ಎಳನೀರನ್ನು ತೆಗೆದುಕೊಂಡು ಈ ಮೂರರಿಂದ ಒಂದು ಮನೆ ಮದ್ದು ತಯಾರಿಸಬೇಕು.

ಪ್ರಮಾಣ ಹೇಗಿರಬೇಕು ಎಂದರೆ ಇಂಗಳಾರದ ಕಾಯಿಯ ಕಡಲೆಕಾಳು ಗಾತ್ರದ ಉಂಡೆ 3, ಸೊಪ್ಪಿನ ರಸ ಮತ್ತು ಒಂದು ಎಳನೀರು ಈ ಮೂರನ್ನು ಮಿಕ್ಸ್ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಗೆ 6 ಗಂಟೆಗೆ ಒಮ್ಮೆ ತೆಗೆದುಕೊಳ್ಳಬೇಕು, ಮಧ್ಯಾಹ್ನ ಊಟಕ್ಕೂ ಮುನ್ನ 1 ಗಂಟೆಗೆ ಮುಂಚಿತವಾಗಿ ಒಂದು ಬಾರಿ ಮತ್ತು ಸಂಜೆ ಊಟಕ್ಕೂ ಮುನ್ನ 4 ಗಂಟೆ ಸಮಯಕ್ಕೆ ಒಂದು ಬಾರಿ ಈ ರೀತಿ ತೆಗೆದುಕೊಂಡರೆ ಪಿತ್ತಕೋಶದಲ್ಲಿ ಉಂಟಾಗಿರುವ ಕಲ್ಲು ತಂತಾನೆ ಕರಗುತ್ತದೆ.

ಒಂದು ವೇಳೆ ಏಳು ದಿನಗಳಲ್ಲಿ ರಿಸಲ್ಟ್ ಸಿಗಲಿಲ್ಲ ಎಂದರೆ ಇದರ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕು. 2 ಉಂಡೆ, 30 ml ಕಾಡು ಬಸಳೆ ಸೊಪ್ಪಿನ ರಸ ಹಾಗೂ ಒಂದು ಎಳನೀರನ್ನು ಸೇವಿಸಬೇಕು. ಇನ್ನು ನೋವು ಶ್ರಮನವಾಗಿಲ್ಲ ಸಮಸ್ಯೆ ಕಂಡು ಬರುತ್ತಿದೆ ಎಂದರೆ ಮತ್ತೆ ಕೆಲವು ದಿನಗಳವರೆಗೆ ಮುಂದುವರೆಸಿ ಪ್ರಮಾಣ ಕಡಿಮೆ ಮಾಡಬೇಕು 1 ಇಂಗಳಾರದ ಕಾಯಿ ಉಂಡೆ 20ml ಕಾಡು ಬಸಳೆ ರಸ ಹಾಗೂ ಒಂದು ಎಳನೀರನ್ನು ನಿಯಮಿತವಾಗಿ ದಿನದಲ್ಲಿ 3 ಸಮಯವೂ ತೆಗೆದುಕೊಂಡು ಬಂದರೆ ವೈದ್ಯರೇ ಆಶ್ಚರ್ಯ ಪಡುವಂತೆ ಗಾಲ್ ಬ್ಲೆಡರ್ ಸ್ಟೋನ್ ಮಾಯವಾಗಿರುತ್ತದೆ.

https://youtu.be/N9VcatHZrdM?si=y9OQcKMcWyKlG5UK