Home Blog Page 227

ಸ-ತ್ತ ಮಗನ ವೀರ್ಯಾ ಬಳಸಿ ಈ ತಾಯಿ ಮಾಡಿದ ಕೆಲಸವೇನು ಗೊತ್ತ.? ವರ್ಷದ ಬಳಿಕ ಬಯಲಿಗೆ ಬಂದ ಸತ್ಯ.!

 

ಒಬ್ಬ ತಾಯಿಯು ತನ್ನ ಮಕ್ಕಳ ಮೇಲೆ ಎಷ್ಟು ಪ್ರೀತಿ ಇಟ್ಟಿರುತ್ತಾಳೆ ಎಂಬುದನ್ನು ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ ತನ್ನ ಮಗುವನ್ನು ಕಾಪಾಡಿಕೊಳ್ಳಲು ಎಂಥ ಸಂದರ್ಭದಲ್ಲಿಯೂ ಆ ತಾಯಿ ಯಾವ ಮಟ್ಟಕ್ಕಾದರೂ ಹೋಗುತ್ತಾಳೆ. ಸಾಮಾನ್ಯವಾಗಿ ಮಗು ತಾಯಿ ಹೊಟ್ಟೆಯಲ್ಲಿ ಬೆಳೆಯುತ್ತಿರುವಾಗಲೇ ತಾಯಿಯು ತನ್ನ ಮಗುವಿನ ಬಗ್ಗೆ ಕನಸು ಕಾಣಲು ಪ್ರಾರಂಭಿಸುತ್ತಾಳೆ. ಮಗುವಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ ದೇಶಕ್ಕೆ ಒಳ್ಳೆಯ ಪ್ರಜೆಯಾಗಿ ಮಾಡಬೇಕು ಎಂಬುದು ಪ್ರತಿಯೊಬ್ಬ ತಾಯಿಯ ಕನಸಾಗಿರುತ್ತದೆ.

ಹಾಗೆಯೆ ಪೂಣೆಯಲ್ಲಿ ವಾಸವಾಗಿದ್ದ ರಾಜಶ್ರೀ ಎಂಬ ತಾಯಿ ಈಕೆಗೆ ಪ್ರಥಮೇಶ್ ಎಂಬ ಒಬ್ಬ ಮಗನಿದ್ದ. ಮಗ ಬೆಳೆಯುತ್ತಿದ್ದಂತೆ ತಾಯಿಯ ಕನಸು ಕೂಡ ದೊಡ್ಡದಾಗಿ ಬೆಳೆಯುತ್ತಿತ್ತು. ಮಗನನ್ನು ಚೆನ್ನಾಗಿ ಓದಿಸಿ ಉತ್ತಮ ಪ್ರಜೆಯಾಗಿ ಮಾಡಬೇಕೆಂಬುದು ಅವಳ ಕನಸಾಗಿತ್ತು ಅವಳ ಕನಸಿನಂತೆ ಪ್ರಥಮೇಶ್ ಪ್ರೌಢ ಶಿಕ್ಷಣ, ಕಾಲೇಜು ಶಿಕ್ಷಣವನ್ನು ಮುಗಿಸಿ ನಂತರ ಉನ್ನತ ಶಿಕ್ಷಣಕ್ಕಾಗಿ ಜರ್ಮನಿ ದೇಶಕ್ಕೆ ಹೋಗುತ್ತಾನೆ. ಪ್ರೀತಿಯ ಕುಟುಂಬ ಒಳ್ಳೆಯ ವಿದ್ಯಾಭ್ಯಾಸ ಪಡೆದ ಮಗ ಹೀಗೆ ರಾಜಶ್ರೀ ಅವರ ಕುಟುಂಬ ತುಂಬಾ ಸಂತೋಷವಾಗಿ ಇತ್ತು.

ಆದರೆ 2013 ಫೆಬ್ರವರಿ ತಿಂಗಳಲ್ಲಿ ಇವರ ಕುಟುಂಬಕ್ಕೆ ಆಗಾಧವಾದ ಒಂದು ಸುದ್ದಿ ಕೇಳಿ ಬರುತ್ತದೆ. ಜರ್ಮನಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರಥಮೇಶ್ ಆರೋಗ್ಯವು 2013ರಲ್ಲಿ ಹಾಳಾಗಿದ್ದು, ಅಲ್ಲಿನ ಒಂದು ದೊಡ್ಡ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಂಡಾಗ ಅಲ್ಲಿನ ವೈದ್ಯರು ಪ್ರಥಮೇಶ್ ಗೆ ಮೂಳೆಯಲ್ಲಿ ಕ್ಯಾನ್ಸರ್ ಗಂಟುಗಳಿದೆ ಎಂದು ತಿಳಿಸುತ್ತಾರೆ. ಇದನ್ನು ತಿಳಿದ ರಾಜಶ್ರೀ ತಕ್ಷಣ ಜರ್ಮನಿಗೆ ಬಂದು ಮಗನನ್ನು ಕ್ಯಾನ್ಸರ್ ಆಸ್ಪತ್ರೆಗೆ ದಾಖಲಿಸಿ ಕೀಮಿಯೋತೆರಪಿ ಮಾಡಿಸುತ್ತಾಳೆ.

ಆ ಆಸ್ಪತ್ರೆಯ ನಿಯಮದಂತೆ ಯಾವುದೇ ಒಬ್ಬ ಕ್ಯಾನ್ಸರ್ ಪೀಡಿತ ಪುರುಷರು ಆಸ್ಪತ್ರೆಗೆ ದಾಖಲಾದರೆ ಅವರ ವೀರ್ಯಾಣುವನ್ನು ಹಾಗೂ ಮಹಿಳೆಯಾದರೆ ಅಂಡಾಣುವನ್ನು ಶೇಖರಿಸಿಡುತ್ತಿದ್ದರು. ಏಕೆಂದರೆ ರೋಗಿಯು ಸ.ತ್ತು ಹೋದರೆ ಅವರ ಕುಟುಂಬ ವೃದ್ಧಿಗೆ ಅದು ಸಹಾಯವಾಗಬಹುದು ಎಂದು ಹಾಗೆಯೆ ಪ್ರಥಮೇಶ್ ನ ವೀರ್ಯಾಣುವನ್ನು ಶೇಖರಿಸಿ, ಅವನ ತಾಯಿಯನ್ನು ಕರೆದು ನಿಮ್ಮ ಮಗನಿಗೆ ಕ್ಯಾನ್ಸರ್ ಕೊನೆಯ ಹಂತದಲ್ಲಿದೆ ಆದ್ದರಿಂದ ಆಸ್ಪತ್ರೆಯ ನಿಯಮದನ್ವಯ ಅವನ ವೀರ್ಯಾಣುವನ್ನು ಶೇಖರಿಸಿ ಇಟ್ಟಿದ್ದೇವೆ ಮುಂದೆ ನಿಮಗೆ ಬೇಕಾದರೆ ಪಡೆದುಕೊಳ್ಳಿ ಎಂದರು.

ಮಗನ ಮೇಲೆ ಬಹಳ ಕನಸುಗಳನ್ನು ಹೊಂದಿದ್ದ ರಾಜಶ್ರೀ ವೈದ್ಯರ ಮತ್ತನ್ನು ಕೇಳಿ ತಡೆಯಲಾಗದಷ್ಟು ದುಃಖ ಪಡುತ್ತಾಳೆ. ನಂತರ 2013 ಮೇ ತಿಂಗಳಿನಲ್ಲಿ ಭಾರತಕ್ಕೆ ಮಗನನ್ನು ಕರೆತಂದು ಮುಂಬೈನ ಒಂದು ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮೂಳೆ ಸರ್ಜರಿ ಮಾಡಿಸಿ ಗೆಡ್ಡೆಗಳನ್ನು ತೆಗೆಸಿದ್ದಾರೆ ಇದರಿಂದ ಪ್ರಥಮೇಶ್ ಸ್ವಲ್ಪ ಚೇತರಿಸಿಕೊಳ್ಳುತ್ತಾನೆ ಇದನ್ನು ನೋಡಿದ ಕುಟುಂಬ ಹಾಗೂ ರಾಜಶ್ರೀಯು ತನ್ನ ಮಗ ಮತ್ತೆ ಬದುಕುಳಿದ ಎಂದು ಸಂತೋಷ ಪಡುತ್ತಾರೆ.

ಆದರೆ ವಿಧಿ ಆಟವೇ ಬೇರೆಯಾಗಿತ್ತು. ಮುಂದಿನ ಎರಡು ವರ್ಷಗಳಲ್ಲಿ ಪ್ರಥಮೇಶ್ ಗೆ ಮತ್ತೆ ಕ್ಯಾನ್ಸರ್ ಬಂದು ಕಣ್ಣು ಕಾಣದಂತಾಗಿ ದೇಹ ಸ್ಥಿತಿ ದಿನೇ ದಿನೇ ಕ್ಷೀಣಿಸುತಿತ್ತು. ಇವನನ್ನು ಕಾಪಾಡಲು ಎಷ್ಟೇ ಪ್ರಯತ್ನ ಪಟ್ಟರು ಚಿಕಿತ್ಸೆ ಫಲಕಾರಿಯಾಗಿದೆ ಮೂರು ವರ್ಷಗಳ ಬಳಿಕ ಕೊನೆಗೆ ಸಾ.ವ.ನಪ್ಪುತ್ತಾನೆ. ಮಗನ ಮ.ರ.ಣದಿಂದ ತಾಯಿಯು ಹತಾಶಳಾಗಿ ತುಂಬಾ ಕಣ್ಣೀರು ಹಾಕುತ್ತಾಳೆ ತಕ್ಷಣ ಜರ್ಮನಿ ಆಸ್ಪತ್ರೆಯಲ್ಲಿ ತನ್ನ ಮಗನ ವೀರ್ಯಾಣವನ್ನು ಶೇಖರಿಸಿಟ್ಟಿರುವುದನ್ನು ನೆನಪಿಸಿಕೊಂಡು ಅದು ಆಕ್ಟಿವ್ ಇದೆಯಾ ಎಂದು ತಿಳಿದುಕೊಂಡು ಅಲ್ಲಿನ ಸರ್ಕಾರದಿಂದ ಬಹಳ ಹಣವನ್ನು ಖರ್ಚು ಮಾಡಿ ವೀರ್ಯಾಣುವನ್ನು ತರಿಸಿಕೊಳ್ಳುತ್ತಾಳೆ.

ಬಾಡಿಗೆ ತಾಯಿಯ ಆ ವೀರ್ಯಾಣುವನ್ನು ಬಳಸಿ ಮೊಮ್ಮಕ್ಕಳನ್ನು ಮಾಡಿಕೊಳ್ಳಲು ರಾಜಶ್ರೀ ತೀರ್ಮಾನ ಮಾಡಿ ಬಾಡಿಗೆ ತಾಯಿಗೋಸ್ಕರ ಬಹಳಷ್ಟು ಜನರನ್ನು ಕೇಳಿಕೊಂಡರೂ ಯಾರೊಬ್ಬರೂ ಕ್ಯಾನ್ಸರ್ ನಿಂದ ಸತ್ತ ಒಬ್ಬ ವ್ಯಕ್ತಿ ವೀರ್ಯಾಣುವನ್ನು ಹಾಕಿಸಿಕೊಳ್ಳಲು ಒಪ್ಪಲಿಲ್ಲ. ಕೊನೆಗೆ ರಾಜಶ್ರೀಯ ಕುಟುಂಬದ ಒಬ್ಬ ಹೆಣ್ಣು ಮಗಳು ಪ್ರಥಮೇಶ್ ವಿರ್ಯಾಣುವನ್ನು ಹಾಕಿಸಿಕೊಳ್ಳಲು ಒಪ್ಪಿಕೊಳ್ಳುತ್ತಾರೆ 9 ತಿಂಗಳ ಬಳಿಕ ಅವಳು ಒಂದು ಗಂಡು ಒಂದು ಹೆಣ್ಣು ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ರಾಜಶ್ರೀ ಬಹಳ ಸಂತೋಷ ಪಟ್ಟು ಗಂಡು ಮಗುವಿಗೆ ಪ್ರಥಮೇಶ್, ಹೆಣ್ಣು ಮಗುವಿಗೆ ತ್ರಿಷಾ ಎಂದು ಹೆಸರಿಡುತ್ತಾಳೆ. ತನ್ನ ಮಗನನ್ನು ನಾನು ಮತ್ತೆ ಭೂಮಿಗೆ ಕರೆತಂದೆ ಎಂದು ರಾಜಶ್ರೀ ಕಣ್ಣೀರಿಡುತ್ತಾ ಸಂತೋಷದಿಂದ ದೇವರಿಗೆ ಧನ್ಯವಾದ ತಿಳಿಸಿದಳು. ಹೀಗೆ ಒಬ್ಬಳು ತಾಯಿ ತನ್ನ ಮಗ ಸತ್ತ ನಂತರ ಅವನ ವೀರ್ಯಾಣುವಿನಿಂದ ಮೊಮ್ಮಕ್ಕಳನ್ನು ಪಡೆದಿದ್ದಾಳೆ. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

ವೃದ್ಯಾಪ್ಯ ವೇತನ ಕೊಡಲು ಸತಾಯಿಸುತ್ತಿದ್ದ ಅಧಿಕಾರಿಗಳು. ತನ್ನ ಕಷ್ಟವನ್ನು ಡಿ.ಸಿ ಬಳಿ ಹೇಳಲು ಹೋದ ಅಜ್ಜಿ ನಂತರ ಆಗಿದ್ದೇನು ಗೊತ್ತ.?

 

ಭೂಪಲ್ ಪಲ್ಲಿ ಜಿಲ್ಲೆಯ ಕಲೆಕ್ಟರ್ ಮೊಹಮದ್ ಅಬ್ದುಲ್ ಅಜೀಂ‌ ಸರ್ಕಾರದ ಒಂದು ಕಾರ್ಯಕ್ರಮವನ್ನು ಮುಗಿಸಿಕೊಂಡು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ತಮ್ಮ ಆಫೀಸಿಗೆ ಬಂದಿದ್ದಾರೆ. ಕಾರಿನಿಂದ ಇಳಿದು ಆಫೀಸಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆಫೀಸಿನ ಮೆಟ್ಟಿಲುಗಳ ಮೇಲೆ ಒಬ್ಬರು ವಯಸ್ಸಾದ ಅಜ್ಜಿ ಕುಳಿತುಕೊಂಡಿರುವುದನ್ನು ನೋಡುತ್ತಾರೆ ಆ ಅಜ್ಜಿಯು ತನ್ನ ಸಮಸ್ಯೆಯನ್ನು ಕಲೆಕ್ಟರ್ ಗೆ ಹೇಳಿಕೊಳ್ಳಲು ಬಂದಿದ್ದರು ಕಲೆಕ್ಟರ್ ಅಜ್ಜಿಯನ್ನು ಗಮನಿಸಿದರು ಆದರೆ ಅಜ್ಜಿಗೆ ಇವರೇ ಕಲೆಕ್ಟರ್ ಎಂದು ಗೊತ್ತಿರಲಿಲ್ಲ.

ಆಫೀಸಿನ ಎಲ್ಲ ನೌಕರರು ಕಾರ್ಯಕ್ರಮಕ್ಕೆ ಹೋಗಿದ್ದರಿಂದ ಇಡೀ ಕಲೆಕ್ಟರ್ ಆಫೀಸ್ ಖಾಲಿ ಖಾಲಿ ಆಗಿರುತ್ತದೆ. ಕಲೆಕ್ಟರ್ ಅಜ್ಜಿಯ ಬಳಿ ಹೋಗಿ ನಿಮ್ಮ‌ ಸಮಸ್ಯೆ ಏನು ಎಂದು ಕೇಳಿದಾಗ ನೀನು ಯಾರು ನಿನ್ನ ಹತ್ತಿರ ನನ್ನ ಸಮಸ್ಯೆ ಹೇಳಿಕೊಂಡರೆ ಬಗೆಹರಿಸುತ್ತೀಯಾ ಎಂದು ಕಲೆಕ್ಟರ್ ನ ಕೇಳುತ್ತಾರೆ. ಅಜ್ಜಿಯ ಆ ಮಾತಿನಲ್ಲಿ ಅವರಿಗೆ ಏನೋ ಸಮಸ್ಯೆ ಇದೆ ಎಂದು ಅರಿತ ಕಲೆಕ್ಟರ್ ಅಜ್ಜಿ ಒಳಗೆ ಬನ್ನಿ ಕುಳಿತು ಮಾತನಾಡೋಣ ಎಂದು ಕರೆಯುತ್ತಾರೆ.

ಆದರೆ ಮಗನೇ ನನಗೆ ಮಂಡಿ ನೋವು ಈ ಮೆಟ್ಟಿಲುಗಳನ್ನು ಹತ್ತಿ ಆಫೀಸಿನ ಒಳಗೆ ಬರಲು ಸಾಧ್ಯವಿಲ್ಲ ನನಗೆ ಆರು ತಿಂಗಳಿನಿಂದ ವೃದ್ದಾಪ್ಯ ವೇತನ ಪಾವತಿಸಿಲ್ಲ ಇಲ್ಲಿ ಇರುವ ಪ್ರತಿಯೊಬ್ಬರನ್ನು ಸಹ ಪ್ರತಿದಿನ ಕೇಳುತ್ತಿದ್ದೇನೆ ಆದರೆ ಇಂದು ನಾಳೆ ಎಂದು ಸತಾಯಿಸಿ ಆರು ತಿಂಗಳಾದರೂ ನನ್ನ ವೃದ್ದಾಪ್ಯ ವೇತನ ನೀಡುತ್ತಿಲ್ಲ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಕಲೆಕ್ಟರ್ ಅಜ್ಜಿಯ ಕೈ ಹಿಡಿದು ನಿಮ್ಮ‌ ಸಮಸ್ಯೆಯನ್ನು ನಾನು ಈಗಲೆ ಪರಿಹಾರ ಮಾಡುತ್ತೇನೆ, ನೀವು ಯಾವ ಊರಿನಿಂದ ಬಂದಿದ್ದೀರಿ? ನಿಮ್ಮ ಹೆಸರೇನು? ಎಂದು ಕೇಳಿದರು.

ನನ್ನ ಹೆಸರು ಅಜ್ಮೀರಾ ಮಂಗಮ್ಮ, ಈಗ ನನಗೆ 70 ವರ್ಷ ವಯಸ್ಸು ಕಳೆದ 2 ವರ್ಷಗಳಿಂದ ನನಗೆ ವೃದ್ದಾಪ್ಯ ವೇತನ ಬರುತ್ತಿಲ್ಲ. ಯಾಕೇ ಬರುತ್ತಿಲ್ಲ ಎಂದು ಕೇಳಿದರೆ ಮಂಡಲ ಪಂಚಾಯತಿಗೆ ಹೋಗಿ ವಿಚಾರಿಸಿ ಎಂದು ಪೋಸ್ಟ್ ಮ್ಯಾನ್ ಹೇಳಿದ ಅಲ್ಲಿ ಹೋಗಿ ಕೇಳಿದರೆ ನನ್ನ ಬಳಿ ಲಂಚ ಪಡೆದು ನಾಳೆ ನಾಳಿದ್ದು ಎಂದು ಹೇಳುತ್ತಾರೆ. ಅಲ್ಲಿಂದ ರಾಜಕರಣಿಗಳ ಬಳಿ ಹೋದರೆ ಬರಿ ಆಶ್ವಾಸನೆ ಕೊಡುತ್ತಾರೆ ಹೊರತು ನನಗೆ ಯಾರು ಹಣ ಕೊಡಿಸಲಿಲ್ಲ ಎಂದು ಅಜ್ಜಿ ಕಲೆಕ್ಟರ್ ಗೆ ವಿವರಿಸುತ್ತಾರೆ.

ಅದನ್ನು ಕೇಳಿದ ಕಲೆಕ್ಟರ್ ಅಜ್ಜಿ ನಿಮ್ಮ ಸಮಸ್ಯೆಯನ್ನು ನಾನು ಬಗೆಹರಿಸುತ್ತೇನೆ ಎಂದು ಅಜ್ಜಿಯ ಆಧಾರ್ ಕಾರ್ಡ್ ಪರಿಶೀಲಿಸಿ ನಂತರ DRDO ಸುಮತಿ ಅವರಿಗೆ ಕರೆ ಮಾಡಿ ಅಜ್ಜಿಯ ಸಮಸ್ಯೆಯ ಬಗ್ಗೆ ಚರ್ಚಿಸಿ ಕೂಡಲೇ ಅಜ್ಜಿಗೆ ವೃದ್ದಾಪ್ಯ ವೇತನ ಪಾವತಿಸಲು ಕಲೆಕ್ಟರ್ DRDO ಗೆ ಆದೇಶಿಸಿದ್ದಾರೆ. ಅದಕ್ಕೆ ಸುಮತಿ ಅವರು ಒಪ್ಪಿದ್ದಾರೆ. ನಂತರ ಕಲೆಕ್ಟರ್ ಅಜ್ಜಿಗೆ ನಾನು ಈ ಜಿಲ್ಲೆಯ ಕಲೆಕ್ಟರ್ ನಿಮ್ಮ ಹಣ ನಿಮಗೆ ಬಂದೇ ಬರುತ್ತದೆ ನೀವೇನು ಚಿಂತಿಸಬೇಡಿ ಎಂದು ಅಜ್ಜಿಯ ಪಕ್ಕ ಮೆಟ್ಟಿಲಿನ ಮೇಲೆ ಕುಳಿತು ಭರವಸೆ ನೀಡುತ್ತಾರೆ.

ಕಲೆಕ್ಟರ್ ನ ಮಾತುಗಳನ್ನು ಕೇಳಿ ಭಾವುಕರಾಗಿ ಅಜ್ಜಿಯು ಒಬ್ಬ ಕಲೆಕ್ಟರ್ ನನ್ನ ಪಕ್ಕ ಕುಳಿತು ಆತ್ಮೀಯವಾಗಿ ಮಾತನಾಡುತ್ತಿದ್ದರೆ ಎಂದು ಕಣ್ಣೀರು ಹಾಕುತ್ತಾ, ನೀನು ನೂರು ವರ್ಷ ಸುಖವಾಗಿ ಬಾಳು ಮಗು ನಿನಗೆ ಒಳ್ಳೆಯದಾಗಲಿ ಎಂದು ಆಶೀರ್ವಾದಿಸುತ್ತಾರೆ. ನಂತರ ಅಜ್ಜಿಯನ್ನು ನೀವು ಮನೆಗೆ ಹೋಗಿ ಅಧಿಕಾರಿಗಳು ನಿಮ್ಮ ಬಳಿಯೇ ಬರುತ್ತಾರೆ ಎಂದು ಹೇಳಿ ಕಲೆಕ್ಟರ್ ಆಫೀಸ್ ಒಳಗೆ ಹೋಗುತ್ತಾರೆ. ಇಂತಹ ಒಳ್ಳೆಯ ಕಲೆಕ್ಟರ್ ಪ್ರತಿ ಜಿಲ್ಲೆಯಲ್ಲಿಯೂ ಇದ್ದರೆ ಬಡವರಿಗೆ ಕಷ್ಟ ಇರುವುದಿಲ್ಲ ಎಂದು ಅಜ್ಜಿ ಹೇಳಿದ್ದಾರೆ.

ಉದ್ಯೋಗ ಮಾಹಿತಿ:- 10th ಮತ್ತು PUC ಪಾಸ್ ಆದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಮಾಡುವ ಅವಕಾಶ..! ಅರ್ಜಿ ಸಲ್ಲಿಸಿ ಯಾವುದೇ ಪರೀಕ್ಷೆ ಇಲ್ಲ ನೇರ ನೇಮಕಾತಿ.

0

 

10ನೇ ತರಗತಿ ಹಾಗೂ ಪಿಯುಸಿ ಪಾಸ್ ಆದ ಅಭ್ಯರ್ಥಿಗಳಿಂದ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಶೀಘ್ರ ಲಿಪಿಗಾರರು, ಬೆರಳಚ್ಚುಗಾರರು, ಬೆರಳಚ್ಚು ನಕಲುಗಾರರು, ಆದೇಶ ಜಾರಿಕಾರರು ಮತ್ತು ಜವಾನ್ ಹುದ್ದೆಗಳು ಖಾಲಿ ಇವೆ. ಹುದ್ದೆಗಳ ಬಗ್ಗೆ ಮಾಹಿತಿಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ
ವಯೋಮಿತಿ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷವನ್ನು ಪೂರೈಸಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷವನ್ನು ನಿಗದಿಪಡಿಸಲಾಗಿದೆ. 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷವನ್ನು ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಇದಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷವನ್ನು ನಿಗದಿಪಡಿಸಲಾಗಿದೆ.

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 25.03.2023ರವರೆಗೆ ಅವಕಾಶವಿರುತ್ತದೆ. ವೇತನ : ಶೀಘ್ರ ಲಿಪಿಗಾರರು ರೂಪಾಯಿ 27,650 ರಿಂದ 52,650 ಗಳನ್ನು ಪಡೆಯಬಹುದು. ಬೆರಳಚ್ಚುಗಾರು ಮತ್ತು ಬೆರಳಚ್ಚು ನಕಲುಗಾರರು 21,400 ಗಳಿಂದ 42,000 ರೂಪಾಯಿಗಳವರೆಗೆ ಪಡೆಯಬಹುದು. ಆದೇಶ ಜಾರಿಕಾರರು ರೂಪಾಯಿ 19,950 ರಿಂದ 37,900ರ ವರೆಗೆ ಮತ್ತು ಜವಾನರು 17,000 ದಿಂದ 28,950 ರೂಪಾಯಿಗಳವರೆಗೆ ಪಡೆಯಬಹುದಾಗಿದೆ.

ಆಯ್ಕೆ ವಿಧಾನ :
• ಶೀಘ್ರ ಲಿಪಿಕಾರ, ಬೆರಳಚ್ಚುಗಾರ, ಬೆರಳಚ್ಚು ನಕಲುಗಾರ ಹುದ್ದೆಗೆ ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಶೇಕಡವಾರು ಅಂಕಗಳು ಮತ್ತು ಸಾಮರ್ಥ್ಯ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳು ಹಾಗೂ ಸಂದರ್ಶನದಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆಯನ್ನು ಮಾಡಲಾಗುವುದು.
• ಆದೇಶ ಜಾರಿಕಾರ ಮತ್ತು ಜವಾನ ಹುದ್ದೆಗಳಿಗೆ ಗಳಿಸಿರುವ ಶೇಕಡವಾರು ಅಂಕಗಳ ಆಧಾರದ ಮೇಲೆ ಸಂದರ್ಶನವನ್ನು ಮಾಡಿ ಆಯ್ಕೆ ಮಾಡಲಾಗುವುದು.

ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ವರ್ಗಗಳ ಅಭ್ಯರ್ಥಿಗಳಿಗೆ ರೂಪಾಯಿ 200 ಅನ್ನು ಅರ್ಜಿ ಶುಲ್ಕವಾಗಿ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಕೆ ಸೇರಿದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕಗಳಿರುವುದಿಲ್ಲ. ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಮಾರ್ಕೆಟಿಂಗ್ ಗಳ ಮೂಲಕ ಶುಲ್ಕವನ್ನು ಪಾವತಿಸಬಹುದು. ಜಿಲ್ಲಾ ನ್ಯಾಯಾಲಯದ ವೆಬ್ಸೈಟ್ನಿಂದ ಚಲನ್ ಪ್ರಿಂಟ್ ತೆಗೆದು, ಎಸ್ ಬಿ ಐ ಬ್ಯಾಂಕಿನ ಯಾವುದೇ ಶಾಖೆಗಳಲ್ಲಿ ಶುಲ್ಕ ಪಾವತಿಸಬಹುದು.

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್ಸೈಟ್ನ ವಿಳಾಸಕ್ಕೆ ಭೇಟಿ ನೀಡಿ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಖಾಲಿ ಇರುವ ಬಟ್ಟು ಹುದ್ದೆಗಳ ಸಂಖ್ಯೆ 60. ಎಂಟು ಶೀಘ್ರ ಲಿಪಿಕಾರರು, 9 ಬೆರಳಚ್ಚುಗಾರರು, ಒಂದು ಬೆರಳಚ್ಚು ನಕಲುಗಾರು, 13 ಆದೇಶ ಜಾರಿಕಾರರು ಮತ್ತು 29 ಜವಾನರ ಹುದ್ದೆಗಳು ಖಾಲಿ ಇವೆ.

ವಿದ್ಯಾರ್ಹತೆ : ಶೀಘ್ರ ಲಿಪಿಕಾರ ಹುದ್ದೆಗೆ ಅರ್ಜಿ ಸಲ್ಲಿಸಲು ಪಿಯುಸಿ ಪಾಸ್ ಆಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಜೊತೆಯಲ್ಲಿ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಡೆಸುವ ಕನ್ನಡ ಮತ್ತು ಆಂಗ್ಲ ಶೀಘ್ರ ಲಿಪಿ ಪರೀಕ್ಷೆಯಲ್ಲಿ ಮತ್ತು ಬೆರಳಚ್ಚು (ಸೀನಿಯರ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಬೆರಳಚ್ಚುಗಾರ ಹುದ್ದೆಗೆ ಅರ್ಜಿ ಸಲ್ಲಿಸಲು ಪಿಯುಸಿ ಪಾಸ್ ಆಗಿರಬೇಕು ಜೊತೆಗೆ ಕನ್ನಡ ಮತ್ತು ಆಂಗ್ಲ ಭಾಷೆಯ ಬೆರಳಚ್ಚು(ಸೀನಿಯರ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಬೆರಳಚ್ಚು ನಕಲುಗಾರ ಹುದ್ದೆಗೆ ಅರ್ಜಿ ಸಲ್ಲಿಸಲು, ಪಿಯುಸಿ ಪಾಸ್ ಆಗಿರಬೇಕು ಜೊತೆಗೆ ಕನ್ನಡ ಮತ್ತು ಆಂಗ್ಲ ಭಾಷೆಯ ಬೆರಳಚ್ಚು (ಜೂನಿಯರ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಆದೇಶ ಜಾರಿಕಾರರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಸ್ಎಸ್ಎಲ್ಸಿ ಪಾಸ್ ಆಗಿರಬೇಕು. ಡ್ರೈವಿಂಗ್ ಲೈಸನ್ಸ್ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ಜವನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಸ್ಎಸ್ಎಲ್ಸಿ ಪಾಸ್ ಆಗಿರಬೇಕು ಜೊತೆಯಲ್ಲಿ ಕನ್ನಡವನ್ನು ಓದಲು ಮತ್ತು ಬರೆಯಲು ಕಲಿತಿರಬೇಕು.

ಬಾಯ್ ಫ್ರೆಂಡ್ ಇಂದ ಹ-ಲ್ಲೆ ಸೋಶಿಯಲ್ ಮೀಡಿಯಾದಲ್ಲಿ ಕಿರುಕುಳ ಕೊಟ್ಟು ದೈಹಿಕವಾಗಿ ಹಿಂ-ಸೆ ಕೊಟ್ಟ ಪೋಟೋಸ್ ಹಂಚಿಕೊಂಡ ನಟಿ ಅನಿಕಾ.

 

ಸಾಮಾನ್ಯ ಮಹಿಳೆಯರೇ ಆಗಲಿ ಸೆಲೆಬ್ರೆಟಿಗಳೇ ಆಗಲಿ ಕೆಲವರಿಗೆ ಈ ಪುರುಷ ಪ್ರಧಾನ ವ್ಯವಸ್ಥೆಯಿಂದ ಪದೇಪದೇ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ಆಗುತ್ತವೇ ಇರುತ್ತದೆ. ಕೆಲವರು ನಾಲ್ಕು ಗೋಡೆಗಳ ಮಧ್ಯೆ ಇದನ್ನೆಲ್ಲ ಇದೀನ್ನೆ ಸಹಿಸಿಕೊಂಡು, ಮುಚ್ಚಿಟ್ಟುಕೊಂಡು ನಗುವಿನ ಮುಖವಾಡ ಹಾಕಿ ಮುಂದೆ ಹೋಗುವ ಪ್ರಯತ್ನ ಮಾಡಿದರೆ, ಕೆಲವೊಮ್ಮೆ ತಾಳ್ಮೆ ಕಟ್ಟೆಯೊಡೆದು ಸರಿಯಾಗಿ ಶಿಕ್ಷೆ ಕೊಡಬೇಕು ಎನ್ನುವಷ್ಟು ಆ.ಕ್ರೋ.ಶ ಹುಟ್ಟಿಕೊಳ್ಳುತ್ತದೆ.

ಈಗ ಅಂತಹದೊಂದು ನಿರ್ಧಾರಕ್ಕೆ ಬಂದಿದ್ದಾರೆ ತಮಿಳಿನ ನಟಿ ಅನಿಕ ವಿಕ್ರಮನ್ ಅವರು. ಕೆ ಸಿನಿಮಾ ಮೂಲಕ ಚಿತ್ರರಂಗ ಪಾದಾಪಣೆ ಮಾಡಿದ ಇವರು ಅಲ್ಲಿಯ ಪ್ರಾಮಿಸ್ ಹೀರೋಯಿನ್ ಆಗಿದ್ದಾರೆ. ಆದರೆ ಈಕೆ ಬಾಯ್ ಫ್ರೆಂಡ್ ಕೊಡುತ್ತಿರುವ ಕಿರುಕುಳ ತಾಳಲಾರದೆ ಬಹಳ ಬೇಸತ್ತು ಹೋಗಿ ಈಗ ಬೇಸರದಿಂದ ಅದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಷಯ ಹಂಚಿಕೊಂಡಿದ್ದಾರೆ.

ಸದ್ಯಕ್ಕೀಗ ಅನ್ಯಾಯಕ್ಕೆ ಒಳಗಾದವರಿಗೆ ಎಲ್ಲೂ ನ್ಯಾಯ ಸಿಗಲಿಲ್ಲ ಎಂದರೆ ಕಡೆಗೆ ಸೋಶಿಯಲ್ ಮೀಡಿಯಾ ಅಸ್ತ್ರ ಎನ್ನಬಹುದು. ಯಾಕೆಂದರೆ ಇಡೀ ಪ್ರಪಂಚಕ್ಕೆ ಒಬ್ಬ ಮನುಷ್ಯನ ಕೆಟ್ಟ ಮುಖವನ್ನು ಸಾಕ್ಷಿ ಸಮೇತ ಪ್ರದರ್ಶನ ಮಾಡುವುದಕ್ಕೆ ಇದಕ್ಕಿಂತ ಉತ್ತಮ ವೇದಿಕೆ ಮತ್ತೊಂದಿಲ್ಲ. ಇದೇ ಕಾರಣಕ್ಕೆ ಅನಿಕಾ ತನಗಾದ ಶೋಷಣೆ ಸಹಿಸಲಾಗದೆ, ಒಮ್ಮೆಲೇ ತಿರುಗಿಬಿದ್ದು ತನಗಾದ ನೋವನ್ನೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅನಿಕ ವಿಕ್ರಮನ್ ಅವರು ಕಳೆದ ಕೆಲವು ವರ್ಷಗಳಿಂದ ಅಂಕಿತ್ ಪಿಳ್ಳೈ ಎನ್ನುವವರನ್ನು ಬಹಳ ಪ್ರೀತಿಸುತ್ತಿದ್ದಾರಂತೆ. ಮೊದಮೊದಲಿಗೆ ಎಲ್ಲವೂ ಚೆನ್ನಾಗಿದ್ದ ಇವರ ಸಂಬಂಧದಲ್ಲಿ ಇತ್ತೀಚೆಗೆ ಯಾವುದು ಸರಿ ಇಲ್ಲ ಎನ್ನಬಹುದು. ಅದೀಗ ಪ್ರತಿದಿನ ನಟಿ ಮೇಲೆ ದೈಹಿಕವಾಗಿ ಹ.ಲ್ಲೆ ಆಗುವಷ್ಟು ಮಿತಿಮೀರಿದ ಮಟ್ಟಕ್ಕೆ ಬೆಳೆದು ನಿಂತಿದೆ.

ಈ ಹಿಂದೆ ಕೂಡ ಇದೇ ರೀತಿ ಹಲ್ಲೆ ಆಗುತ್ತಿದ್ದಾಗ ನಟಿ ಆ ಬಗ್ಗೆ ಪೊಲೀಸ್ ಗೆ ದೂರು ಕೊಡುವ ಪ್ರಯತ್ನ ಪಟ್ಟರೂ ಈತ ತನ್ನ ಚಾಲಾಕಿತನದಿಂದ ಎಸ್ಕೇಪ್ ಆಗುತ್ತಿದ್ದ. ಮೊದಲಿಗೆ ಚೆನ್ನೈ ಅಲ್ಲಿ ಈಕೆ ಮೇಲೆ ಹ.ಲ್ಲೆ ಆಗಿ ಪೊಲೀಸ್ ದೂರ ಕೊಡುವ ಪ್ರಯತ್ನ ಮಾಡಿದಾಗ ಆತ ಆಕೆಯ ಕಾಲಿಗೆ ಬಿದ್ದು ಕಣ್ಣೀರ ನಾಟಕ ಆಡಿ ಎಸ್ಕೇಪ್ ಆಗಿದ್ದ. ಮತ್ತೊಮ್ಮೆ ಬೆಂಗಳೂರಿನಲ್ಲಿದ್ದಾಗ ಕೂಡ ಇದೇ ರೀತಿ ವಿಪರೀತವಾಗಿ ಆಕೆ ಮೇಲೆ ಹಲ್ಲೆ ಮಾಡಿದ್ದ, ಆಗ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಟ್ಟರು ಪೊಲೀಸರಿಗೆ ಹಣ ಕೊಟ್ಟು ತಪ್ಪಿಸಿಕೊಂಡಿದ್ದ ಎಂದು ಈಗ ಸೋಶಿಯಲ್ ಮೀಡಿಯಾದಲ್ಲಿ ದೂರಿದ್ದಾರೆ ನಟಿ.

ಈ ಬಾರಿ ಅವನಿಗೆ ಬುದ್ಧಿ ಕಲಿಸಲು ಅವನು ಹ.ಲ್ಲೆ ಮಾಡಿರುವುದರಿಂದ ಈಕೆಗಾಗಿರುವ ಗಾಯವನ್ನೆಲ್ಲ ಫೋಟೋ ತೆಗೆದು ಅದರ ಸಮೇತವಾಗಿ ಹಂಚಿಕೊಂಡಿದ್ದಾರೆ. ಈಕೆಯ ಕೆನ್ನೆ ತೋಳು ಎದೆ ಭಾಗ ಇಲ್ಲೆಲ್ಲ ಹೊಡೆತ ಬಿದ್ದಿರುವುದು ಕಾಣುತ್ತಿದೆ ಆತ ಬಹಳ ಆತ್ಮವಿಶ್ವದಿಂದ ಹೊಡೆಯುತ್ತಾನೆ, ಆತನನ್ನು ಪೊಲೀಸರು ಏನು ಮಾಡುವುದಿಲ್ಲ ಎನ್ನುವ ಧೈರ್ಯ ಅವನಿಗೆ, ಇಷ್ಟು ವಿಷಕಾರಿ ಮನಸ್ಥಿತಿಯನ್ನು ಎಂದು ನನಗೆ ತಿಳಿದಿರಲಿಲ್ಲ.

ನಾನು ಶೂಟಿಂಗ್ ಹೋಗೋದು ಅವನಿಗೆ ಇಷ್ಟವಿಲ್ಲದೆ ನನ್ನ ಮೊಬೈಲ್ ಕೂಡ ಹೊಡೆದು ಹಾಕಿದ್ದಾನೆ. ನನಗೆ ಗೊತ್ತಿಲ್ಲದೆ ನನ್ನ ವಾಟ್ಸಪ್ ಅನ್ನು ಅವನ ಲ್ಯಾಪ್ಟಾಪ್ ಗೆ ಕನೆಕ್ಟ್ ಮಾಡಿಕೊಂಡು ನೋಡುತ್ತಿರುತ್ತಾನೆ. ಅವನಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಹಳ ಹಿಂಸೆ ಆಗುತ್ತಿದೆ ನಾನೇ ಅವನನ್ನು ಬಿಟ್ಟು ಬಿಡುವ ನಿರ್ಧಾರಕ್ಕೆ ಬಂದಿದ್ದರೂ ಅವನು ಬಿಡುತ್ತಿಲ್ಲ ಜೊತೆಗೆ ಇತ್ತೀಚೆಗೆ ನನ್ನ ಕುಟುಂಬಕ್ಕೆ ಹಾಗೂ ನನಗೆ ಕೊಲೆ ಬೆದರಿಕೆ ಕೂಡ ಹಾಕುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ಹೆಂಡ್ತಿ ಮಾತು ಕೇಳಿ ತಾಯಿನ ಹುಚ್ಚಾಸ್ಪತ್ರೆಗೆ ಸೇರಿಸಿದ ಮಗ ವರ್ಷದ ನಂತರ ತಾಯಿಯ ಸ್ಥಿತಿ ನೋಡಿ ಮಗನೇ ಬೆಚ್ಚಿ ಬಿದ್ದಿದ್ದಾನೆ.!

 

ಉತ್ತರ ಪ್ರದೇಶದ ಝಾನ್ಸಿಯಲ್ಲಿ ಸುರೇಶ್ ಅಗರ್ವಾಲ್ ಎಂಬ ವ್ಯಕ್ತಿ ತನ್ನ 60 ವರ್ಷ ವಯಸ್ಸಾಗಿದ್ದ ತಾಯಿಯ ಜೊತೆ ವಾಸಿಸುತ್ತಿದ್ದ. ಸುರೇಶ್ ತಂದೆ ಕೆಲವು ವರ್ಷಗಳ ಹಿಂದೆ ಸ.ತ್ತು ಹೋಗಿದ್ದರಿಂದ ತಾಯಿ ತುಂಬಾ ಕಷ್ಟಪಟ್ಟು ಅವನನ್ನು ಸಾಕಿದ್ದರು. ಸುರೇಶ್ ಮದುವೆ ಆಗಲು ಪ್ರಯತ್ನಿಸುತ್ತಿದ್ದರೂ ಸಾಕಷ್ಟು ಅಡಚಣೆಗಳು ಎದುರಾದವು. ನಂತರ ಬಹಳ ವರ್ಷಗಳ ಮೇಲೆ ಸುರೇಶ್ಗೆ ಒಂದು ಹುಡುಗಿ ಜೊತೆ ಅದ್ದೂರಿಯಾಗಿ ಮದುವೆ ಆಗುತ್ತದೆ.

ಮದುವೆಗೂ ಮುನ್ನ ಸುರೇಶ್ ಪತ್ನಿ ದಿವ್ಯ ತುಂಬಾ ಡೀಸೆಂಟ್, ಒಳ್ಳೆಯ ಕುಟುಂಬದ ಹುಡುಗಿ ಎಂದು ಕಾಣುತ್ತಿದ್ದಳು ಆದರೆ ಮದುವೆಯಾದ ಕೆಲ ದಿನಗಳ ನಂತರವೇ ಅವಳು ತನ್ನ ಮುಖವಾಡವನ್ನು ಪ್ರದರ್ಶನ ಮಾಡಿದಳು. ದಿವ್ಯ ತನ್ನ ಅತ್ತೆಗೆ ಗೌರವ ಕೊಡದೆ ಪ್ರತಿ ದಿನ ಜಗಳ ಆಡುತ್ತಿದ್ದಳು ಸುರೇಶ್ ಜೊತೆ ಬೇರೆ ಮನೆ ಮಾಡಿ ಪತಿ ಪತ್ನಿ ಇಬ್ಬರೆ ಸಂಸಾರ ಮಾಡಬೇಕು ಎಂಬುದು ದಿವ್ಯಳ ಆಸೆಯಾಗಿತ್ತು. ಅದಕ್ಕಾಗಿ ಮನೆ ಬಿಟ್ಟು ಹೋಗಲು ಅನೇಕ ಷಡ್ಯಾಂತರಗಳನ್ನು ಅತ್ತೆಯ ವಿರುದ್ದ ಮಾಡುತ್ತಾಳೆ.

ಉದಾಹರಣೆಗೆ ನನ್ನ ಗಂಡನ ಬೇಬಿನಿಂದ ದುಡ್ಡನ್ನು ಕದಿಯುತ್ತಿದ್ದೀಯ ನೀನು ಕಳ್ಳಿ ಎಂದು ಸುಮ್ಮನೆ ಅತ್ತೆಯ ಮೇಲೆ ಆರೋಪ ಮಾಡುತ್ತಿದ್ದಳು. ಅಲ್ಲದೆ ಮೆಟ್ಟಿಲುಗಳ ಮೇಲೆ ಎಣ್ಣೆ ಚೆಲ್ಲಿ ಅತ್ತೆಯನ್ನು ಬೀಳಿಸಲು ಪ್ರಯತ್ನಿಸುತ್ತಿದ್ದಳು. ಸುರೇಶ್ ತನ್ನ ಹೆಂಡತಿಯ ಬಣ್ಣ ಬಣ್ಣದ ಮಾತುಗಳನ್ನು ನಂಬಿ ತಾಯಿ ಮೇಲೆ ಕೋಪ ಮಾಡಿಕೊಂಡು ಪ್ರತಿನಿತ್ಯ ತಾಯಿಗೆ ಬಾಯಿಗೆ ಬಂದಂತೆ ಬೈಯುತ್ತಿದ್ದ. ಹೀಗೆ ಮಗ ಮತ್ತು ಸೊಸೆ ನೀಡುತ್ತಿದ್ದ ಹಿಂಸೆಯಿಂದ ತಾಯಿಯ ಮಾನಸಿಕ ಸ್ಥಿತಿ ಹದಗೆಡುತ್ತಿತ್ತು. ಹುಚ್ಚಿಯಂತೆ ಆಡುವುದಕ್ಕೂ ಕೂಡ ಶುರು ಮಾಡಿಕೊಂಡರು

ಇದನ್ನೇ ಬಂಡವಾಳವಾಗಿ ತೆಗೆದುಕೊಂಡ ದಿವ್ಯ ರೀ ನಿಮ್ಮ ತಾಯಿ ಹುಚ್ಚಿಯ ರೀತಿ ಆಡುತ್ತಿದ್ದಾರೆ ನಿಮ್ಮ ತಾಯಿಗೆ ತಲೆ ಕೆಟ್ಟಿದೆ ಅನ್ನಿಸುತ್ತಿದೆ. ಹಾಗಾಗಿ ಕೆಲವು ದಿನಗಳ ಕಾಲ ಹುಚ್ಚಾಸ್ಪತ್ರೆಯಲ್ಲಿ ಸೇರಿಸಿ ಚಿಕಿತ್ಸೆಯನ್ನು ಕೊಡಿಸಿ ಎಂದು ಗಂಡನಿಗೆ ಹೇಳಿದಳು. ಹೆಂಡತಿಯ ಮಾತುಗಳನ್ನು ಕೇಳಿ ತನ್ನ ತಾಯಿಯ ಮೇಲಿನ ಪ್ರೀತಿ ಕಳೆದುಕೊಂಡಿದ್ದ ಸುರೇಶ್ ತಾಯಿ ಬಗ್ಗೆ ಸ್ವಲ್ಪ ಕೂಡ ಯೋಚನೆ ಮಾಡಿದೆ ಹುಚ್ಚಾಸ್ಪತ್ರೆಗೆ ಸೇರಿಸಿದನು. ಇದರಿಂದ ದಿವ್ಯಳ ಆಸೆಯಂತೆ ಬೇರೆ ಇರಬೇಕು ಎಂಬುದು ನೆರವೇರಿತು.

ತಾಯಿಯನ್ನು ಹಿಂಸಿಸಿ ನೋಯಿಸಿದ ಪರಿಣಾಮ ಸುರೇಶ್ ಜೀವನದಲ್ಲಿ ಸಮಸ್ಯೆಗಳು ಎದುರಾದವು. ವ್ಯಾಪಾರದಲ್ಲಿ ವಿಪರೀತ ನಷ್ಟ ಉಂಟಾಗಿ ಸುರೇಶ್ ಬಹಳ ಸಾಲದಲ್ಲಿ ಸಿಲುಕಿ ಹಾಕಿಕೊಂಡ. ಅವನ ಬಳಿ ಇದ್ದ ಕಾರು ಬೈಕ್ ಮನೆ ಎಲ್ಲವನ್ನು ಮಾರಬೇಕಾಯಿತು. ಬಾಡಿಗೆ ಮನೆಯಲ್ಲಿ ಇರಬೇಕಾದ ಸ್ಥಿತಿಗೆ ಬಂದ ಸುರೇಶ್ ಎರಡು ಹೊತ್ತು ಊಟ ತಿನ್ನುವುದಕ್ಕೂ ಕೂಡ ಕಷ್ಟ ಪಡಬೇಕಾಯಿತು. ಇದರಿಂದ ದಿವ್ಯ ಕೂಡ ಸುರೇಶನ್ನು ಬಿಟ್ಟು ಹೋದಳು.

ಈ ಸಮಯದಲ್ಲಿ ಏಕಾಂಗಿಯಾಗಿದ್ದ ಸುರೇಶ್ ಗೆ ತಾಯಿ ನೆನಪಾಗುತ್ತ‍ಾರೆ. ಹೆಂಡತಿ ಮಾತು ಕೇಳಿ ತಾಯಿಗೆ ಎಂತ ಮೋಸ ಮಾಡಿಬಿಟ್ಟೆ ಎಂದು ಪಶ್ಚಾತ್ತಾಪ ಪಟ್ಟು ತಕ್ಷಣ ತಾಯಿಯನ್ನು ನೋಡಲು ಹುಚ್ಚಾಸ್ಪತ್ರೆಗೆ ಹೋದನು. ಅಲ್ಲಿ ಹೋಗಿ ನೋಡಿದರೆ ತಾಯಿ ಇರಲಿಲ್ಲ ಬಳಿಕ ಆಸ್ಪತ್ರೆಯವರು ತನ್ನ ತಾಯಿಯನ್ನು ಯಾರೋ ಒಬ್ಬರು ದತ್ತುಗೆ ಪಡೆದುಕೊಂಡು ಅವರ ಮನೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನುವ ವಿಷಯವನ್ನು ತಿಳಿಸಿದರು.

ನಂತರ ಸುರೇಶ್ ಅವರ ವಿಳಾಸ ತಿಳಿದುಕೊಂಡು ಅವರ ಮನೆಗೆ ಹೋಗಿ ನೋಡಿದಾಗ ಆ ವ್ಯಕ್ತಿ ಸುರೇಶ್ ತಾಯಿಗೆ ವಿಜೃಂಭಣೆಯ ಜೀವನ ಕೊಟ್ಟಿದ್ದನ್ನು ನೋಡಿದ ಸುರೇಶ್ ಕಣ್ಣಲ್ಲಿ ನೀರು ಬಂತು ಮತ್ತು ಆತ ಮಾಡಿದ ತಪ್ಪು ಕೂಡ ಅರಿವಾಯಿತು. ಸುರೇಶ್ ತನ್ನ ತಾಯಿಯ ಬಳಿ ಹೋಗಿ ಕ್ಷಮೆ ಕೇಳಿ ತಾಯಿಯನ್ನು ಮನೆಗೆ ಬಾ ಎಂದು ಹೇಳಿದಾಗ ಆಕೆ ಒಪ್ಪಲಿಲ್ಲ ಆದರೆ ಮಗ ಮಾಡಿರುವ ತಪ್ಪನ್ನು ಕ್ಷಮಿಸಿದಳು. ಇದಾದ ಮೇಲೆ ಸುರೇಶ್ ಮತ್ತೆ ತನ್ನ ಬಾಡಿಗೆ ಮನೆಗೆ ಹೋಗಿ ಒಬ್ಬಂಟಿ ಜೀವನವನ್ನು ಮಾಡಿದನು.

ಕಾರ್ಮಿಕ ಕಾರ್ಡ್ ಇದ್ದವರು 20,000 ರೂಪಾಯಿಗಳನ್ನು ಉಚಿತವಾಗಿ ಪಡೆಯಲು ತಪ್ಪದೇ ಈ ಕೆಲಸವನ್ನು ಮಾಡಬೇಕು.

ಕಾರ್ಮಿಕ ಕಾರ್ಡ್ ಹೊಂದಿದವರಿಗೆ ಕಾರ್ಮಿಕರ ಕಲ್ಯಾಣ ಇಲಾಖೆಯ ಒಂದರ ಮೇಲೊಂದು ಸಿಹಿ ಸುದ್ದಿಯನ್ನು ನೀಡುತ್ತಿದೆ. ಕಾರ್ಮಿಕರ ಅಭಿವೃದ್ಧಿಯ ಹೊಣೆ ಹೊತ್ತಿದೆ. ಹೊಸ ಹೊಸ ಯೋಜನೆಗಳನ್ನು ಕಾರ್ಮಿಕರ ಎದುರಲ್ಲಿ ಬಿತ್ತರಿಸುವ ಮೂಲಕ ಅವರಿಗೆ ಹಣಕಾಸಿನ ಸಹಾಯ ಮಾಡುತ್ತಿದೆ. ಕೆಲವೊಂದು ಸ್ಕೀಮ್ಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಈ ಕೂಡಲೇ ಅವು ಯಾವವು ಎಂಬುದನ್ನು ಈ ಬರಹವನ್ನು ಓದುವುದರ ಮುಖಾಂತರ ನೀವು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ.

ಆರೋಗ್ಯದ ಸಮಸ್ಯೆಯು ಯಾರನ್ನು ಬಿಡುತ್ತಿಲ್ಲ. ದಿನಗೂಲಿ ಮಾಡಿ ಜೀವನ ನಡೆಸುವವರು, ಗ್ರಾಮೀಣ ಭಾಗದ ಜನರು, ರೈತರು ಈ ದುಬಾರಿ ದುನಿಯಾದಲ್ಲಿ ಏರುಪೇರಾದ ಆರೋಗ್ಯವನ್ನು ಹದ ಸ್ಥಿತಿಗೆ ತರಲು ಸೆಣಸಾಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ಕಾರ್ಮಿಕರ ಕಲ್ಯಾಣ ಇಲಾಖೆಯು ಕಾರ್ಮಿಕರ ಆರೋಗ್ಯದ ಹಿತ ದೃಷ್ಟಿಯಿಂದ ವೈದ್ಯಕೀಯ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಸಹಾಯಧನವನ್ನು ನೀಡುತ್ತಿದೆ. ದೊಡ್ಡ ದೊಡ್ಡ ಕಾಯಿಲೆಗಳ ವೆಚ್ಚವನ್ನು ಭರಿಸಲು ಬಡ ಕಾರ್ಮಿಕರಿಗೆ ಹೆಗಲಾಗಿ ನಿಂತಿದೆ.

ನೊಂದಾಯಿತ ಕಾರ್ಮಿಕರಿಗಾಗಿ ಎರಡು ಸ್ಕೀಮ್ ಗಳಲ್ಲಿ ಅರ್ಜಿಯನ್ನು ಆಹ್ವಾನಿಸಿದೆ:-

• ಕಾರ್ಮಿಕರ ಚಿಕಿತ್ಸಾ ಭಾಗ್ಯ ಸ್ಕೀಮ್ ನ ಅಡಿಯಲ್ಲಿ ಹೃದಯ, ಕಿಡ್ನಿ, ಕಣ್ಣುಗಳು ಸೇರಿದಂತೆ ದೇಹದ ಹಲವು ಭಾಗಗಳ ಶಸ್ತ್ರಚಿಕಿತ್ಸೆಗಾಗಿ ಮತ್ತು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಎರಡು ಲಕ್ಷ ರೂಪಾಯಿಗಳವರೆಗೆ ಸಹಾಯಧನವನ್ನು ನೀಡುತ್ತಿದೆ.
• ಕಾರ್ಮಿಕರ ಆರೋಗ್ಯ ಭಾಗ್ಯ ಸ್ಕೀಮ್ ನ ಅಡಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಹಾಗೂ ಅವರನ್ನು ಅವಲಂಬಿಸಿ ಜೀವನ ಸಾಗಿಸುತ್ತಿರುವವರಿಗೆ ಅಂದರೆ ಕುಟುಂಬಸ್ಥರಿಗೆ 300 ರೂಪಾಯಿಗಳಿಂದ ಗರಿಷ್ಠ 20 ಸಾವಿರ ರೂಪಾಯಿಗಳವರೆಗೆ ಸಹಾಯಧನವನ್ನು ನೀಡುತ್ತಿದೆ.

ಸಮಸ್ಯೆಯಲ್ಲಿರುವ ಕಾರ್ಮಿಕರು ಮೇಲಿನ ಎರಡು ಸ್ಕೀಮ್ಗಳಿಂದ ಪ್ರಯೋಜನಗಳನ್ನು ಪಡೆಯಬೇಕೆಂದರೆ ಕೆಲವು ಅಗತ್ಯ ದಾಖಲೆಗಳನ್ನು ಲಗತ್ತಿಸುವ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕಾರ್ಮಿಕರು ಹೊಂದಿರಬೇಕಾದ ದಾಖಲೆಗಳು/ ಅರ್ಹತೆ :

• ಕಾರ್ಮಿಕರ ಕಲ್ಯಾಣ ಇಲಾಖೆಯಲ್ಲಿ ಕಾರ್ಮಿಕರು ನೋಂದಾಯಿತರಾಗಿರಬೇಕು ಮತ್ತು ಅವರ ನೋಂದಣಿ ಚಾಲ್ತಿಯಲ್ಲಿರಬೇಕು.
• ಮಂಡಳಿಯಲ್ಲಿ ನೀಡಿದ ನೋಂದಣಿ ಅಥವಾ ಕಾರ್ಮಿಕರ ಕಾರ್ಡ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು.
• ಸರ್ಕಾರಿ ಆಸ್ಪತ್ರೆ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಯಲ್ಲಿ ಕನಿಷ್ಠ ಎರಡು ದಿನಗಳ ವರೆಗೆ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿಯೇ ಉಳಿದ ದಾಖಲೆಗಳನ್ನು ಹೊಂದಿರಬೇಕು.
• ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ನ ಮುಖಪುಟವನ್ನು ಹೊಂದಿದ್ದು ಲಗತ್ತಿಸಬೇಕು.
• ಉದ್ಯೋಗ ಅಥವಾ ಸ್ವಯಂ ದೃಢೀಕರಣ ಪತ್ರವನ್ನು ಹೊಂದಿರಬೇಕು.
• ಆಸ್ಪತ್ರೆಗೆ ದಾಖಲಾದ ದಿನಾಂಕ ಮತ್ತು ಬಿಡುಗಡೆಯಾದ ದಿನಾಂಕಗಳ ದಾಖಲೆಗಳು ಇರಬೇಕು.
• ಖರ್ಚು ವೆಚ್ಚಗಳೊಂದಿಗೆ ಚಿಕಿತ್ಸಾ ವಿವರಗಳನ್ನು ದಾಖಲೆ ಪತ್ರಗಳೊಂದಿಗೆ ಅವಶ್ಯವಾಗಿ ನೀಡಬೇಕು.
• ಕಾರ್ಮಿಕರ ಚಿಕಿತ್ಸ ಭಾಗ್ಯ ಅಡಿಯಲ್ಲಿ ಹಣವನ್ನು ಪಡೆಯಲು ನಮೂನೆ 22ಎ ನಲ್ಲಿ ವೈದ್ಯರ ಸಹಾಯದಿಂದ ಆಸ್ಪತ್ರೆಯಿಂದ ಭರ್ತಿ ಮಾಡಿದ ಅರ್ಜಿಯನ್ನು ಹೊಂದಿರಬೇಕು.

ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ಹೊಂದಿರುವವರು ಕಾರ್ಮಿಕರ ಚಿಕಿತ್ಸಾ ಭಾಗ್ಯ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಬೇಕೆಂದರೆ ಆಸ್ಪತ್ರೆಯಿಂದ ಬಿಡುಗಡೆಯಾದ ದಿನಾಂಕದಿಂದ ಆರು ತಿಂಗಳ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಕಾರ್ಮಿಕರ ಆರೋಗ್ಯ ಭಾಗ್ಯ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಬೇಕೆಂದರೆ ಆಸ್ಪತ್ರೆಗೆ ದಾಖಲಾದ ದಿನಾಂಕದಿಂದ ಆರು ತಿಂಗಳ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.

ಮೇಲೆ ತಿಳಿಸಿದ ಎಲ್ಲಾ ದಾಖಲಾತಿಗಳನ್ನು ಹೊಂದಿರುವ ಅರ್ಹ ಕಾರ್ಮಿಕರು, ನಿಗದಿಪಡಿಸಿದ ಸಮಯದ ಒಳಗೆ ಅರ್ಜಿಯನ್ನು ಭರ್ತಿ ಮಾಡಿ ಕೇಳಿದ ದಾಖಲಾತಿಗಳನ್ನು ಲಗತ್ತಿಸಿದರೆ ಕಾರ್ಮಿಕರ ಕಲ್ಯಾಣ ಇಲಾಖೆಯಿಂದ ಆರೋಗ್ಯದ ಚೇತರಿಕೆಗಾಗಿ ಹಣ ಸಹಾಯವನ್ನು ಪಡೆಯಬಹುದು.

ಗರ್ಭಪಾತ ಮಾಡಿಸಿಕೊಳ್ಳಲು 75 ಲಕ್ಷ ರೂ ಬೇಡಿಕೆ ಇಟ್ಟ ನಟಿ ರಮ್ಯಕೃಷ್ಣ. ಖ್ಯಾತ ನಟಿಯ ಮುಖವಾಡ ಬಯಲು.

 

ಬಣ್ಣದ ಪ್ರಪಂಚದ ಜೊತೆ ನಂಟು ಹೊಂದಿರುವವರ ಪ್ರೀತಿ ಅಫೇರ್ ಮದುವೆ ಈ ವಿಚಾರಗಳು ಸದಾ ಗಾಸಿಪ್ ಆಗುತ್ತಲೇ ಇರುತ್ತವೆ. ಇಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವ ಜೋಡಿಗಳ ಮೇಲೆ ಇಂಥದೊಂದು ಆರೋಪ ಬರುವುದು ಸಹಜ. ಅದರಲ್ಲೂ ನಟಿಮಣಿಯರ ಹೆಸರಿನಂತು ಸದಾ ನಿರ್ದೇಶಕರು ಹಾಗೂ ನಾಯಕ ನಟರ ಜೊತೆ ತಳಕು ಹಾಕಿಕೊಂಡು ಸುದ್ದಿ ಆಗುತ್ತಲೇ ಇರುತ್ತದೆ. ಆದರೆ ಇಲ್ಲಿ ಎಲ್ಲವನ್ನು ಕೂಡ ಸುಳ್ಳು ಎಂದು ಅಲ್ಲಗಳೆಯುವಂತಿಲ್ಲ, ಹೇಗೆ ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲವೋ ಹಾಗೆ ವಿಷಯ ಇಲ್ಲದೆ ಇಂತಹ ಮಾತುಗಳು ಕೇಳಿ ಬರುವುದಿಲ್ಲ.

ಈಗ ಸ್ಟಾರ್ ನಟಿ ಒಬ್ಬರ ಬಗ್ಗೆ ಕೂಡ ಇಂತಹದೊಂದು ಗಂಭೀರ ಆರೋಪ ಬಂದಿದೆ. ಪಂಚಭಾಷೆಗಳಲ್ಲಿ ನಟಿಸಿ ಮೆರೆದಾಡಿದ ಈ ನಟಿ ಒಂದು ಕಾಲದಲ್ಲಿ ನಿರ್ದೇಶಕರ ಜೊತೆ ಅಫೇರ್ ಹೊಂದಿದ್ದರು, ಆ ಸಂಬಂಧದಿಂದ ಆದ ಗರ್ಭಧಾರಣೆಯನ್ನು ತಡೆಯಲು 75 ಲಕ್ಷಗಳನ್ನು ಡಿಮ್ಯಾಂಡ್ ಮಾಡಿದ್ದರು ಎಂದು ಸುದ್ದಿ ಆಗುತ್ತಿದೆ. ಕನ್ನಡ ತಮಿಳು ತೆಲುಗು ಮಲಯಾಳಂ 5 ಭಾಷೆಗಳಲ್ಲಿ ನಟಿಸಿ ಸೈ ಅನಿಸಿಕೊಂಡಿರುವ, ನಾಯಕನಟಿಯಾಗಿ ಸಿನಿಮಾ ಇಂಡಸ್ಟ್ರಿ ಗೆ ಎಂಟ್ರಿ ಕೊಟ್ಟು ಈಗಲೂ ಸಹ ಪೋಷಕ ಪಾತ್ರಗಳಲ್ಲಿ ಬಹಳ ಬೇಡಿಕೆ ಇರುವ ಕನ್ನಡದ ರಕ್ತ ಕಣ್ಣೀರು ಸಿನಿಮಾದ ಕಾಂತ ಬಾಹುಬಲಿಯ ಶಿವಗಾಮಿ ರಮ್ಯಾಕೃಷ್ಣ ಅವರ ಬಗ್ಗೆ ಈಗ ಈ ರೀತಿ ಮಾತು ಕೇಳಿ ಬರುತ್ತಿದೆ.

ನಟಿ ರಮ್ಯಕೃಷ್ಣ ಅವರು 80, 90 ರ ದಶಕದಲ್ಲಿ ಬಹಳ ಪೀಕ್ ಅಲ್ಲಿ ಇದ್ದ ನಟಿ. ವಿಷ್ಣುವರ್ಧನ್ ರವಿಚಂದ್ರನ್ ನಾಗಾರ್ಜುನ ರಜನಿಕಾಂತ್ ಇಂತಹ ಮೇರು ನಟರೊಂದಿಗೆ ತೆರೆ ಹಂಚಿಕೊಂಡ ಪ್ರತಿಭಾವಂತೆ. ಆದರೆ ವೈಯಕ್ತಿಕ ಜೀವನದಲ್ಲಿ ಮಾತ್ರ ಇವರ ಬಗ್ಗೆ ಸಾಕಷ್ಟು ವಿವಾದಗಳಾಗಿವೆ ಆ ಕುರಿತಂತೆ ನಿರ್ದೇಶಕ ರವಿಕುಮಾರ್ ಅವರೊಂದಿಗೆ ಹೊಂದಿದ್ದ ಅಫೇರ್ ಮತ್ತು ಆನಂತರ ಆದ ಬೆಳವಣಿಗೆ ಬಗ್ಗೆ ಈಗ ಒಂದಿಷ್ಟು ಚರ್ಚೆ ಶುರು ಆಗಿದೆ. ನಟಿ ರಮ್ಯಾ ಕೃಷ್ಣ ಅವರು ಪಡೆಯಪ್ಪ ಮತ್ತು ಆನಂತರ ಬಂದ ಮತ್ತೊಂದಿಷ್ಟು ಸಿನಿಮಾಗಳಲ್ಲಿ ನಿರ್ದೇಶಕ ರವಿಕುಮಾರ್ ಅವರ ಜೊತೆ ಕೆಲಸ ಮಾಡಿದ್ದರು.

ಆ ಸಮಯದಲ್ಲಿ ಅವರಿಗೆ ಉಂಟಾಗಿದ್ದ ಸ್ನೇಹ ನಂತರ ಪ್ರೀತಿಯಾಗಿ ಬದಲಾಗಿದೆ. ನಟಿ ಆಗ ಇನ್ನು ವಿವಾಹವಾಗಿರದೇ ಇದ್ದರೂ ರವಿಕುಮಾರ್ ಅವರಿಗೆ ಮದುವೆ ಆಗಿತ್ತು. ನಂತರ ಆ ಸಂಬಂಧ ಬಹಳ ಆಪ್ತಮಟ್ಟಕ್ಕೆ ಬೆಳೆದಿತ್ತು. ಅದು ರವಿಕುಮಾರ್ ಅವರ ಹೆಂಡತಿ ತನಕ ತಲುಪಿದ ಮೇಲೆ ಅವರ ಮನೆಯಲ್ಲಿ ಗಲಭೆಯನ್ನು ಸೃಷ್ಟಿಸಿತ್ತು, ರವಿಕುಮಾರ್ ಪತ್ನಿ ನಟಿ ರಮ್ಯಾಕೃಷ್ಣ ಅವರಿಗೆ ಬೆದರಿಕೆ ಕೂಡ ಹಾಕಿದ್ದರು ಎಂದು ಸುದ್ದಿ ಇತ್ತು. ಆ ಸಮಯದಲ್ಲಿ ರಮ್ಯಾಕೃಷ್ಣ ಅವರು ಗರ್ಭಿಣಿ ಕೂಡ ಆಗಿದ್ದರಂತೆ. ಆದರೆ ಅದನ್ನು ಮುಂದುವರಿಸಲು ಪರಸ್ಪರ ಇಬ್ಬರಿಗೂ ಇಷ್ಟ ಇರದ ಕಾರಣ ರವಿಕುಮಾರ್ ಅವರು ಆ ಸಂಬಂಧವನ್ನು ಅಲ್ಲಿಗೆ ತಿಲಾಂಜಲಿ ನೀಡಲು ಬಯಸಿದ್ದರಂತೆ.

ನಟಿ ರಮ್ಯಾ ಕೃಷ್ಣ ಅವರಿಗೆ ಗರ್ಭಪಾತ ಮಾಡಿಸಲು ಹೇಳಿದ್ದಕ್ಕೆ 75 ಲಕ್ಷ ರೂಗಳನ್ನು ಅದಕ್ಕಾಗಿ ರಮ್ಯಕೃಷ್ಣ ಡಿಮ್ಯಾಂಡ್ ಮಾಡಿದ್ದರು ಎನ್ನುವ ಸುದ್ದಿ ಈಗ ಹೊರ ಬಿದ್ದಿದೆ. ನಂತರ 2003 ರಲ್ಲಿ ನಟಿ ರಮ್ಯಕೃಷ್ಣ ಅವರು ಕೃಷ್ಣ ವಂಶಿ ಎನ್ನುವ ತೆಲುಗು ನಿರ್ದೇಶಕರ ಜೊತೆ ಮದುವೆಯಾಗಿದ್ದರು. ಈಗ ಮುದ್ದಾದ ಗಂಡು ಮಗುವಿನ ತಾಯಿ ಆಗಿ ಸಂತೋಷವಾಗಿದ್ದಾರೆ ಎಂದು ನಂಬಲಾಗಿತ್ತು. ಆದರೆ ಇತ್ತೀಚೆಗೆ ಕೃಷ್ಣವಂಶಿ ಹಾಗೂ ರಮ್ಯಕೃಷ್ಣ ಅವರ ಸಂಬಂಧದಲ್ಲಿ ಬಿ’ರು’ಕು ಬಿತ್ತಿದೆ ವಿ’ಚ್ಛೇ’ದ’ನ ಪಡೆಯಲಿದ್ದಾರೆ ಎನ್ನುವ ಗಾಳಿ ಸುದ್ದಿ ಕೂಡ ಇದೆ.

ತಾಳಿ ಕಟ್ಟಿದ ಐದೇ ನಿಮಿಷಕ್ಕೆ ವಾಪಸ್ ತಾಳಿಯನ್ನು ಕಿತ್ತು ಮಧು ಮಗನ ಕೈಗೆ ಕೊಟ್ಟು ಹೋದ ಯುವತಿ ಕಾರಣವೇನು ಗೊತ್ತಾ.? ನಿಜಕ್ಕೂ ನಿಮ್ಮೆಲ್ಲರನ್ನು ಬೆರಗು ಮೂಡಿಸುತ್ತದೆ ಈ ಪ್ರಕರಣ

 

ತಮಿಳುನಾಡಿನ ಪ್ರಿಯ ಎಂಬ ಹುಡುಗಿಯು ತನ್ನ ಮದುವೆಯ ದಿನದಂದು ತಾಳಿ ಕಟ್ಟಿಸಿಕೊಂಡ 5 ನಿಮಿಷದ ಒಳಗಾಗಿ ಕಿತ್ತು ಬಿಸಾಡಿದ್ದಾಳೆ. ಆಕೆಯ ವಯಸ್ಸು 20 ವರ್ಷ. ಆಕೆಗೆ ತಾಳಿ ಕಟ್ಟಿದ್ದ ಹುಡುಗನ ಹೆಸರು ಚೆಲ್ಲಪಾಂಡಿ. ವೃತ್ತಿಯಲ್ಲಿ ಮೆಕಾನಿಕಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಹುಡುಗ ಹುಡುಗಿಯ ಒಪ್ಪಿಗೆಯನ್ನು ಪಡೆದೆ ಮದುವೆಯ ದಿನವನ್ನು ಫಿಕ್ಸ್ ಮಾಡಲಾಗಿತ್ತು. ಅದೊಂದು ಕಾರಣಕ್ಕಾಗಿ ಪ್ರಿಯಾಳಿಗೆ ಚೆಲ್ಲಪಾಂಡಿ ಜೊತೆಗಿನ ವಿವಾಹ ಜೀವನವು ಬೇಡವೆಂದು ಅನಿಸಿ ಹೋಯ್ತು.

ಹಿರಿಯರು ನೋಡಿ ನಿಶ್ಚಯಿಸಿದ ಹುಡುಗನೊಂದಿಗೆ ಅಥವಾ ಹುಡುಗಿಯೊಂದಿಗೆ ವಿವಾಹವಾಗುವ ಕಾಲವೊಂದಿತ್ತು. ಆದರೆ ಈಗಿನ ಕಾಲದಲ್ಲಿ ತಾವು ಇಚ್ಛಿಸಿದ ರೀತಿಯ ಬಾಳ ಸಂಗಾತಿಯನ್ನು ತಾವೇ ಹುಡುಕಿಕೊಳ್ಳುತ್ತಾರೆ. ಇಲ್ಲವೇ ತಂದೆ ತಾಯಿ ಅಥವಾ ಹಿರಿಯರು ನೋಡಿದ ಹುಡುಗನನ್ನು ತಮಗೆ ಸರಿ ಹೊಂದುತ್ತಾನೇ? ಇಲ್ಲವೇ? ಎಂದು ಪರೀಕ್ಷಿಸಿಕೊಂಡು ನಿರ್ಧರಿಸುತ್ತಾರೆ. ಅವರಿವರ ಮಾತಿಗೆ ಒಪ್ಪಿ ವಿವಾಹವಾಗುವುದಿಲ್ಲ. ಆಗಿನ ಕಾಲದಲ್ಲಿ ಮದುವೆಯಾಗುವ ಹುಡುಗಿಯನ್ನು ವರ ಹಾಗೂ ಆತನ ಕುಟುಂಬವು ನಾನಾ ವಿಧದ ಪ್ರಶ್ನೆಗಳನ್ನು ಕೇಳಿ ಪರೀಕ್ಷಿಸುತ್ತಿದ್ದರು.

ಈಗಿನ ಕಾಲದಲ್ಲಿ ವರನನ್ನು ಕೂಡ ಪರೀಕ್ಷಿಸಿಯೇ ಕೈಹಿಡಿಯುತ್ತಾರೆ. ಆದರೂ ಮೇಲೆ ಹೇಳಿದಂತಹ ಘಟನೆಗಳು ಅಲ್ಲೊಂದು ಇಲ್ಲೊಂದು ನಡೆದು ಬೆಳಕಿಗೆ ಬರುತ್ತಲೇ ಇರುತ್ತವೆ. ಮದುವೆ ಎಂಬುದು ಪವಿತ್ರ ಬಂಧ. ಜೀವನಪರ್ಯಂತ ಯಾವುದೇ ಕಷ್ಟ ನಷ್ಟಗಳು ಎದುರಾದರೂ ಒಟ್ಟಾಗಿ ಸಾಗುತ್ತೇವೆ ಎಂದು ಸಪ್ತಪದಿ ತುಳಿದು ಅಗ್ನಿಸಾಕ್ಷಿಯಾಗಿ ಮಾಂಗಲ್ಯ ಧಾರಣೆಯನ್ನು ಮಾಡುತ್ತಾರೆ. ಆದರೆ ಕೆಲವು ವ್ಯಕ್ತಿಗಳು ಅಥವಾ ಸಂದರ್ಭಗಳು ಮದುವೆಯನ್ನೇ ಎಡವಟ್ಟು ಮಾಡುತ್ತಾರೆ.

ಪ್ರಿಯಾಳಿಗೆ ಹರೆಯದ ವಯಸ್ಸು ತುಂಬುತ್ತಿದ್ದಂತಲೇ ಮನೆಯಲ್ಲಿ ಹುಡುಗನನ್ನು ಹುಡುಕಿ ಮದುವೆ ಮಾಡಲು ನಿರ್ಧರಿಸುತ್ತಾರೆ. ಯಾವ ರೀತಿಯ ವರ ಬೇಕೆಂದು ಪ್ರಶ್ನಿಸಿದಾಗ ಆಕೆ ‘ಯಾವುದೇ ಕಾರಣಕ್ಕೂ ನಾನು ಕೈಹಿಡಿಯುವ ವರ ಕುಡುಕನಾಗಿರಬಾರದು’ ಎಂಬ ಕಂಡೀಶನ್ ಅನ್ನು ತಿಳಿಸುತ್ತಾಳೆ. ಅದೇ ರೀತಿ ಹತ್ತಾರು ಹುಡುಗರನ್ನು ನೋಡಿದ ಬಳಿಕ ಒಬ್ಬನು ಆಯ್ಕೆಯಾಗಿ ವಿವಾಹ ಮಾಡಲು ಮನೆಯವರು ನಿರ್ಧರಿಸುತ್ತಾರೆ. ಹುಡುಗ ಹುಡುಗಿಯ ಹಾಗೂ ಕುಟುಂಬದ ಒಪ್ಪಿಗೆಯ ಮೇರೆಗೆ ಮದುವೆಯ ದಿನಾಂಕವನ್ನು ಫಿಕ್ಸ್ ಮಾಡಿದರು.

ಚೆಲ್ಲಪಾಂಡಿ ನೋಡಲು ಚೆನ್ನಾಗಿದ್ದ ಜೊತೆಯಲ್ಲಿ ಉತ್ತಮ ಉದ್ಯೋಗವನ್ನು ಮಾಡುತ್ತಿದ್ದ. ಮದುವೆಯ ಮುಹೂರ್ತಕ್ಕೆ ಮುಂಚಿತವಾಗಿಯೇ ಮಂಟಪದಲ್ಲಿ ಚೆಲ್ಲಪಾಂಡಿ ಹಾಜರಿದ್ದ. ಪ್ರಿಯಾ ಹಾಗೂ ಚೆಲ್ಲಪಾಂಡಿಯ ವಿವಾಹ ಕಾರ್ಯವು ಅಂದುಕೊಂಡಂತೆ ನೆರವೇರುತ್ತಾ ಇರುತ್ತದೆ. ಬೆಳಗಿನ ಹೇಳು ಗಂಟೆಗೆ ಮುಹೂರ್ತವಿತ್ತು. ಪ್ರಿಯ ವರನ ಸಮೀಪಕ್ಕೆ ಬರುತ್ತಿದ್ದಂತಲೇ ಆಕೆಗೇನೊ ವಾಸನೆ ಬಂದಂತಾಯಿತು. ತಾಳಿಯನ್ನು ಕಟ್ಟುವ ಸಂದರ್ಭದಲ್ಲಿ ಇನ್ನೂ ಸಮೇತ ಬಂದಾಗ ಚೆಲ್ಲಪಾಂಡೆಯಿಂದ ದುರ್ವಾಸನೆ ಬಂತು. ಆತ ಕುಡಿದುಕೊಂಡು ಬಂದಿದ್ದ.

ಕುಡಿದ ಮತ್ತಿನಲ್ಲಿ ಚೆಲ್ಲಪಾಂಡಿ ಏನೇನೋ ಮಾತನಾಡುತ್ತಿದ್ದ. ಮದುವೆಯ ಮನೆಯಲ್ಲಿ ಸೇರಿದ ಅತಿಥಿಗಳಿಗೆ ಕೈ ತೋರಿಸಿ ಏನನ್ನೊ ಹೇಳುತ್ತಿದ್ದ. ಈ ರೀತಿಯಾದ ಅಸಭ್ಯ ವರ್ತನೆಯನ್ನು ಉಳಿದು ಬಂದು ತೋರಿಸಿದ ಚೆಲ್ಲಪಾಂಡಿಯ ಮೇಲಿನ ಗೌರವವೇ ಪ್ರಿಯಾಳಲ್ಲಿ ಕಡಿಮೆಯಾಯಿತು. ಈತನೊಂದಿಗೆ ಬದುಕಲು ಅಸಾಧ್ಯ ಎಂದು ಅನಿಸಿತು. ತಕ್ಷಣವೇ ಕಟ್ಟಿಸಿಕೊಂಡ ತಾಳಿಯನ್ನು ಕಿತ್ತು ತೆಗೆದು ಚೆಲ್ಲಪಾಂಡಿಯ ಮುಖದ ಮೇಲೆ ಪ್ರಿಯಾ ಬಿಸಾಡಿದಳು.

ತಂದೆ ತಾಯಿಗಳು ಮಗಳ ಈ ನಿರ್ಧಾರಕ್ಕೆ ಯಾವುದೇ ಅಡ್ಡಿ ತರದೆ ಚೆಲ್ಲಪಾಂಡಿಯಲ್ಲಿ ಇನ್ನೊಮ್ಮೆ ತಮ್ಮ ಮಗಳ ಜೀವನಕ್ಕೆ ಬರಬೇಡ ಎಂದು ಎಚ್ಚರಿಕೆ ನೀಡಿ ಮದುವೆ ಮಂಟಪದಿಂದ ಹೊರಟರು. ಕುಡುಕನ ಜೊತೆ ನೋವು ಅನುಭವಿಸುತ್ತಾ ಜೀವನ ಕಳೆಯುವುದಕ್ಕಿಂತ ಪ್ರಿಯಾ ತೆಗೆದುಕೊಂಡ ನಿರ್ಧಾರವೇ ಸರಿ ಎಂದು ಹಲವಾರು ಹೆಣ್ಣು ಮಕ್ಕಳು ಹೇಳಿದರಂತೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮೂಲಕ ತಿಳಿಸ

Meesho ಆನ್ಲೈನ್ ಶಾಪಿಂಗ್ ನಲ್ಲಿ ಚೂಡಿದಾರ ಖರೀದಿಸಿದ ಮಹಿಳೆಗೆ 6 ಲಕ್ಷ ಕಾರು ಬಹುಮಾನ ಬಂತು. ಆದ್ರೆ ಆಮೇಲೆ ಏನಾಯ್ತು ಅಂತ ನೋಡಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.

 

ಇತ್ತೀಚಿನ ದಿನಗಳಲ್ಲಿ ಆನ್ಲೈಲ್ ಶಾಪಿಂಗ್ ಗೆ ಜನ ಮೋರೆ ಹೋಗಿದ್ದಾರೆ. ತಮ್ಮ ಬ್ಯುಸಿ ಜೀವನದಲ್ಲಿ ಹೊರಗಡೆ ಹೋಗಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಕಾಲದ ಅಭಾವದಿಂದ ಕೂತಲ್ಲಿಗೆ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವ ಸುಲಭ ಮಾರ್ಗ ಆನ್ಲೈನ್ ಶಾಪಿಂಗ್. ಅಮೇಜಾನ್, ಪ್ಲಿಪ್ಕಾರ್ಟ್, ಮೀಶೋ ಇವು ಆನ್ಲೈನ್ ಶಾಪಿಂಗ್ ಆ್ಯಪ್ ಗಳು. ಒಬ್ಬ ಮಹಿಳೆ Meesho ನಲ್ಲಿ ರೂಪಾಯಿ 366 ಗಳಿಗೆ ಒಂದು ಚೂಡೀದಾರವನ್ನು ಇಷ್ಟ ಪಟ್ಟು ಆರ್ಡರ್ ಮಾಡಿ ತರಿಸಿಕೊಳ್ಳುತ್ತಾಳೆ.

ನಂತರ ನಿಮಗೆ Meesho ಯಿಂದ 6 ಲಕ್ಷದ ಕಾರು ಬಹುಮಾಮವಾಗಿ ಬಂದಿದೆ ಎಂದು ಹೇಳಿ ಅವಳಿಗೆ ಒಂದು ಕರೆ ಬರುತ್ತದೆ. ಆ ಕರೆಯಿಂದ ಸುಮಾರು 50 ಸಾವಿರಗಳನ್ನು ಕೊಟ್ಟು ಮೋಸ ಹೋದಂತಹ ಒಂದು ಘಟನೆ. ತಮಿಳುನಾಡಿನ ತಿರುವಳೂರು ಜಿಲ್ಲೆಯ ಕೊತ್ತನೂರು ಗ್ರಾಮದ ನಿವಾಸಿ ಆಗಿರುವ ಧನಲಕ್ಷ್ಮಿ ಎಂಬ ಮಹಿಳೆ Meesho‌ ಆ್ಯಪ್ ನಲ್ಲಿ ರೂ. 366 ಕ್ಕೆ ಒಂದು ಚೂಢೀದಾರವನ್ನು ಖರೀದಿಸಿದ್ದಾಳೆ ಚೂಡೀದಾರ ಬಂದ ಕೆಲವೇ ನಿಮಿಷಕ್ಕೆ ಧನಲಕ್ಷ್ಮಿಗೆ ಒಂದು ಕರೆ ಬರುತ್ತದೆ.

ಅದರಲ್ಲಿ ಮೇಡಂ ನಮಸ್ತೆ ನಾವು Meesho ಕಂಪನಿಯಿಂದ ಮಾತನಾಡುತ್ತಿದ್ದೇವೆ. ನೀವು ಇಂದು Meesho app ನಲ್ಲಿ ಒಂದು ಚೂಡೀದಾರವನ್ನು ಖರೀದಿಸಿದ್ದೀರಿ ಅದಕ್ಕಾಗಿ ನಿಮಗೆ ಆರು ಲಕ್ಷದ ಕಾರು ಬಹುಮಾನ ಬಂದಿದೆ ಎಂದು ಹೇಳಿದ. ನಿಮಗೆ ಕಾರು ಬೇಕಾ? ಅಥವಾ ದುಡ್ಡು ಬೇಕಾ? ಎಂದು ಧನಲಕ್ಷ್ಮಿಯನ್ನು ಕೇಳಿದ್ದಾನೆ. ನಿಮಗೆ ಕಾರು ಬೇಕಾದರೆ ನಿಮ್ಮ ಮನೆಯ ಬಳಿ ಕಾರು ಬರಲು ಮೂರು ದಿನ ಸಮಯ ಬೇಕಾಗುತ್ತದೆ. ನಿಮಗೆ ದುಡ್ಡು ಬೇಕಾದರೆ ಈ ಕೂಡಲೆ ನಿಮ್ಮ ಅಕೌಂಟ್ ಗೆ ಹಣ ಬರುತ್ತದೆ ಎಂದು ಹೇಳುತ್ತಾನೆ.

ತನಗೆ ಬಹುಮಾನ ಬಂದಿದೆ ಎಂದು ಕೇಳಿದಾಗ ಧನಲಕ್ಷ್ಮಿ ತುಂಬಾ ಖುಷಿ ಪಟ್ಟಳು. ಕಾರಿನ ಬದಲು ಹಣ ಬೇಕಾದರೆ ನೀವು ಮೊದಲಿಗೆ 3250 ರೂಗಳನ್ನು ಮೊದಲು ಕಟ್ಟಬೇಕು ನಂತರ ಅರ್ಧ ಗಂಟೆಯೊಳಗೆ ನಿಮಗೆ ಹಣ ಬರುತ್ತದೆ ಎಂದು ಫೋನ್ ಮಾಡಿದವನು ಹೇಳಿದ್ದಾನೆ. ಇದನ್ನು ನಂಬಿ ಅವಳು 3250 ಗಳನ್ನು ಗೂಗಲ್ ಪೇ ಮೂಲಕ ಕಳುಹಿಸಿ ಅರ್ಧ ಗಂಟೆ ಕಾಯುತ್ತಾಳೆ. ಅದಾದ ಬಳಿಕ ಅವಳ ಅಕೌಂಟ್ಗೆ ಹಣ ಬರಲಿಲ್ಲ. ಆಗ ತಕ್ಷಣ ಫೋನ್ ಬಂದಿದ್ದ ನಂಬರ್ ಗೆ ಇವಳು ಫೋನ್ ಮಾಡುತ್ತಾಳೆ.

ಆಗ ಆತ ಮತ್ತಷ್ಟು ಹಣವನ್ನು ಜಿಎಸ್ ಟಿ ಆಗಿ ಸರ್ಕಾರಕ್ಕೆ ಕಟ್ಟಬೇಕು ನಂತರ ನಿಮಗೆ ಹಣ ಸಿಗುತ್ತದೆ ಎಂದು ಹೇಳುತ್ತಾನೆ ಅದನ್ನು ನಂಬಿ ಹಣವನ್ನು ಕಳುಹಿಸಿ ನಂತರ 6 ಲಕ್ಷ ಹಣ ಬರುತ್ತದೆ ಎಂದು ಒಂದು ಕಾಯುತ್ತಾಳೆ ಮತ್ತೆ ಅವನಿಗೆ ಕರೆ ಮಾಡಿ ಹಣ ಬರಲಿಲ್ಲ ಎಂದು ಕೇಳಿದಾಗ ಮತ್ತಷ್ಟು ಹಣ ಕಟ್ಟಬೇಕು ಎಂದು ಹೇಳಿ ಸುಮಾರು 50 ಸಾವಿರಗಳವರೆಗೆ ಹಣವನ್ನು ಗೂಗಲ್ ಪೇ ಮೂಲಕ ಕಳುಹಿಸುತ್ತಾಳೆ.

ಆದರೂ ಹಣ ಬಾರದೆ ಇದ್ದಾಗ ಗಾಬರಿಯಿಂದ ಅವನಿಗೆ ಫೋನ್ ಮಾಡುತ್ತಾಳೆ ಆದರೆ ಅಷ್ಟರಲ್ಲಿ ಫೋನ್ ಸ್ವಿಚ್ ಆಫ್ ಆಗಿ ಬಿಟ್ಟಿರುತ್ತದೆ. ನಂತರ ಅವಳು ಸೈಬರ್ ಕ್ರೈಮ್ ಪೋಲೀಸರಿಗೆ ದೂರು ನೀಡುತ್ತಾಳೆ. ತಾನು ಹಣ ಕಳುಹಿಸಿದ್ದಕ್ಕೆ ಇದ್ದ ದಾಖಲೆಗಳು, ಕಾಲ್ ರೆಕಾರ್ಡ್ ಗಳು ಎಲ್ಲವನ್ನು ಪೋಲೀಸರಿಗೆ ನೀಡುತ್ತಾಳೆ. ದೂರು ದಾಖಲಿಸಿಕೊಂಡ ಪೋಲೀಸರು ಧನಲಕ್ಷ್ಮಿಗೆ ಮೋಸ ಮಾಡಿದ ಆರೋಪಿಗೆ ಹುಡುಕಾಡುತ್ತಿದ್ದಾರೆ. ಹೀಗೆ 365 ರೂ ಚೂಡೀದಾರ ಖರೀದಿಸಿ 50 ಸಾವಿರಗಳನ್ನು ಕಳೆದುಕೊಂಡಳು. ಆನ್ಲೈನ್ ಶಾಪಿಂಗ್ ಮಾಡುವಾಗ ಎಚ್ಚರಿಕೆ ವಹಿಸಬೇಕು.

ಹೆಂಡ್ತಿ ಮನೆಲಿ ಇಲ್ಲ ಅಂತ ಗೆಳತಿನ ಮನೆಗೆ ಕರೆಸಿಕೊಂಡು ಭೂಪ ನಂತರ ಆಗಿದ್ದೇನು ಗೊತ್ತ.?

 

ಮಡದಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಗೆಳತಿಯನ್ನು ಮನೆಗೆ ಕರೆದಿದ್ದ ಟೆಕ್ಕಿ. ಸ್ನೇಹಿತೆಯೊಂದಿಗೆ ಸಿಕ್ಕಿಬಿದ್ದ ಪತಿರಾಯನಿಗೆ ತಕ್ಕ ಶಾಸ್ತಿಯಾಗಿದೆ. ಪತಿಯ ನಿಜರೂಪ ಬಯಲಾದ ಬಳಿಕ ಪತ್ನಿಯು ತಪ್ಪಿಗೆ ನೀಡಿದ ಶಿಕ್ಷೆಯನ್ನು ಕಂಡು ಸುತ್ತ ಮುತ್ತಲಿನ ಜನ ಬೆಚ್ಚಾಗಿದ್ದಾರೆ. ಹೆಂಡತಿಗೆ ತಿಳಿಯದಂತೆ ಆಟವಾಡಿದ್ದ ಟೆಕ್ಕಿಯ ಹೆಸರು ಧನಂಜಯ. ಈ ಘಟನೆ ನಡೆದಿರುವುದು ಕರ್ನಾಟಕದ ಬೆಂಗಳೂರಿನಲ್ಲಿ.

ಇತ್ತೀಚಿನ ದಿನಗಳಲ್ಲಿ ಜನರ ಮನಸ್ಥಿತಿಗಳೇ ಅರ್ಥವಾಗುವುದಿಲ್ಲ. ಮದುವೆ ಎಂಬ ಶುಭಕಾರ್ಯವು ನಡೆದಿರುವುದು ಸಂಬಂಧದಲ್ಲಿ ಯಾವುದೇ ಮೋಸ ಮಾಡದೆ, ಜೊತೆಯಾಗಿ ಬಾಳ ಸಂಗಾತಿಯೊಂದಿಗೆ ಬಾಳುವೆ…ಎಂಬ ಪ್ರತಿಜ್ಞೆಯಲ್ಲಿ ಎಂಬುದನ್ನು ಹಲವಾರು ಮಂದಿ ಮರೆತಿದ್ದಾರೆ. ಪ್ರೀತಿ ವಿಶ್ವಾಸ ನಂಬಿಕೆಗಳಿಂದ ತುಂಬಿರಬೇಕಾಗಿದ್ದ ಸಂಬಂಧಗಳಲ್ಲಿ, ಅನುಮಾನ ಅನೈತಿಕ ಬಂಧಗಳು ತುಂಬಿಕೊಂಡು ಹಾಳಾಗುತ್ತಿವೆ.

ಪತಿ-ಪತ್ನಿಯರ ನಿಜವಾದ ವೈವಾಹಿಕ ಜೀವನದ ಅರ್ಥವೇ ಬದಲಾಗಿ ಹೋಗುತ್ತಿದೆ. ಧನಂಜಯ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಮಡದಿ ಹಾಗೂ ಮಕ್ಕಳೊಂದಿಗೆ ಬೆಂಗಳೂರಿನ ಉತ್ತರಹಳ್ಳಿಯ ಸಾಲುಹುಣಸೆ ಎಂಬ ಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದ. ಇವರ ಸಂಸಾರವು ಸುಖಮಯವಾಗಿದೆ ಸಾಗುತ್ತಿತ್ತು ಆದರೆ ಧನಂಜಯ್ ಮಾಡಿದ ಕೆಲಸದಿಂದ ಕುಟುಂಬದ ಮರ್ಯಾದಿಯೇ ಕಳೆದು ಹೋಯಿತು.

ಧನಂಜಯ್ ಅವರ ಪತ್ನಿ ತನ್ನ ಸಹೋದರನ ವಿವಾಹ ಕಾರ್ಯವು ನೆರವೇರಲಿದೆ ಎಂಬ ಕಾರಣಕ್ಕಾಗಿ ತನ್ನ ಮಗನೊಂದಿಗೆ ಉತ್ತರಪ್ರದೇಶಕ್ಕೆ ತೆರಳಿದ್ದಳಂತೆ. ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಹೋಗಿದ್ದ ಪತ್ನಿ ಬರಲು 15 ದಿನ ಬೇಕಾಗುವುದು ಎಂಬುದನ್ನು ಧನಂಜಯ್ ಅರಿತಿದ್ದ. ಹೇಗಂದರೂ ಪತ್ನಿ ಮನೆಯಲ್ಲಿಲ್ಲ..ಇದೇ ಸರಿಯಾದ ಸಮಯ. ಜೀವನ ಬೇಸತ್ತು ಹೋಗಿದೆ..ಎನ್ನುತ್ತಾ ಮೋಸದ ಬುದ್ದಿಯನ್ನು ಉಪಯೋಗಿಸಿದ್ದಾನೆ. ನಿಯಂತ್ರಣ ತಪ್ಪಿದ ಮನಸ್ಸು ಹಳಿ ತಪ್ಪಿದ ರೈಲಿನಂತೆ.

ಪತ್ನಿ ಇಲ್ಲದ ಸಮಯವನ್ನು ಕಳೆಯಲು ಗೆಳೆಯನಿಗೆ ಕರೆ ಮಾಡಿ ಮನೆಗೆ ಯಾರಾದರೂ ಬರುತ್ತರಾ ಎಂದು ಕೇಳಿದ್ದಾನಂತೆ. ಧನಂಜಯನ ಗೆಳೆಯ ಅರ್ಪಿತಾ ಎಂಬ ಹುಡುಗಿಯ ಮೊಬೈಲ್ ನಂಬರ್ ಅನ್ನು ಕಳುಹಿಸಿದನಂತೆ. ನಂತರ ಅರ್ಪಿತಾಳಿಗೆ ಕರೆ ಮಾಡಿ ಮನೆಗೆ ಬರಲು ವಿಳಾಸವನ್ನು ನೀಡಿದನಂತೆ. ಅರ್ಪಿತ ಮನೆಗೆ ಬಂದ ನಂತರ ಇಬ್ಬರು ಸೇರಿಕೊಂಡು ಕುಡಿದು ತಿಂದು ಮಜಾ ಮಾಡಿ ನಂತರ ಸಿಗರೇಟ್ ಸೇದುವ ಆಸೆಯಾಗಿ ಧನಂಜಯ್ ಸಾಲು ಹುಣಸೆಯ ಅಂಗಡಿಯೊಂದಕ್ಕೆ ಸಿಗರೇಟ್ ತರಲು ಹೋದನಂತೆ.

ತದನಂತರ ನಡೆದದ್ದು ವಿಚಿತ್ರ ಘಟನೆ. ಅರ್ಪಿತಾಳನ್ನು ಮನೆಯಲ್ಲಿಯೇ ಬಿಟ್ಟು ತಾನೊಬ್ಬನೇ ಕಾರಿನಲ್ಲಿ ಹತ್ತಿಕೊಂಡು ಹೋಗಿ ಸಿಗರೇಟ್ ತಂದು ಮನೆಯನ್ನು ತಲುಪಿದಾಗ ಧನಂಜಯ್ ಕಂಗಾಲಾದನಂತೆ. ಅರ್ಪಿತ ಮನೆಯಲ್ಲಿರುವ ಹಣ ಹಾಗೂ ಬಂಗಾರವನ್ನು ದೋಚಿಕೊಂಡು ವಸ್ತುಗಳನ್ನೆಲ್ಲಾ ಮನೆಯ ತುಂಬಾ ಹರಡಿ ಹೋಗಿದ್ದಳಂತೆ ಮದುವೆಯನ್ನು ಮುಗಿಸಿ ಮನೆಗೆ ವಾಪಸಾದ ಹೆಂಡತಿಯು ಗಂಡನಲ್ಲಿ ಚಿನ್ನದ ಬಗ್ಗೆ ಪ್ರಶ್ನಿಸಿದಳು.

ಆಗ ಪತ್ನಿಯಿಂದ ಮರೆಮಾಚಿ ಚೆಲ್ಲಾಟವಾಡಲು ಪ್ರಯತ್ನಿಸಿದ್ದ ಟೆಕ್ಕಿ ನಡೆದ ಎಲ್ಲಾ ಘಟನೆಗಳನ್ನು ಮಡದಿಯಲ್ಲಿ ವಿವರಿಸಿವಂತಾಯ್ತು. ವಿಷಯವನ್ನು ತಿಳಿದ ಬಳಿಕ ಈ ದಂಪತಿಗಳು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ವಿಚಾರಣೆಯನ್ನು ನಡೆಸಿದ ಪೊಲೀಸರು ಅರ್ಪಿತಾ ಇಂಜಿನಿಯರಿಂಗ್ ಓದಿದ್ದು ಒಳ್ಳೆಯ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ ಎಂದು ತಿಳಿಸಿದರು. ಪೊಲೀಸರ ತನಿಖೆಯ ವೇಳೆ ಅರ್ಪಿತಾ ಸತ್ಯವನ್ನು ಬಾಯ್ಬಿಟ್ಟಿದ್ದಾಳೆ.

ಒಟ್ಟಾರೆಯಾಗಿ ಮಡದಿ ಮಕ್ಕಳಿಲ್ಲದ ಸಮಯದಲ್ಲಿ ಮಾಡಬಾರದನ್ನು ಮಾಡಲು ಹೋಗಿ ಧನಂಜಯ್ ಸುಖದಿಂದ ಸಾಗುತ್ತಿದ್ದ ಸಂಸಾರವನ್ನು ಹಾಳು ಮಾಡಿಕೊಂಡಿದ್ದಾನೆ. ಪತ್ನಿಯು ಮೊದಲಿನಂತೆ ತೋರಿಸುವ ಪ್ರೀತಿ ಹಾಗೂ ಕಾಳಜಿಯನ್ನು ಕಳೆದುಕೊಂಡಿದ್ದಾನೆ. ಧನಂಜಯನ ಮರ್ಯಾದೆಯು ಬೀದಿ ಪಾಲಾಗಿದ್ದು ತಲೆಯೆತ್ತಿ ನಡೆಯಲು ಹಿಂಜರಿಯುತ್ತಿದ್ದಾನೆ.