Home Blog Page 288

ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಬಂದ ರಜನಿಕಾಂತ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಅಭಿಮಾನಿಗಳ ದೇವರಿಗೆ ಪ್ರಶಸ್ತಿ ಕೊಡಲು ಕೂಡ ಸಂಭಾವನೆ ಪಡೆಯಬೇಕಿತ್ತ ಎಂದ ನೆಟ್ಟಿದರು.!

ರಜಿನಿಕಾಂತ್ ಭಾರತೀಯ ಚಿತ್ರರಂಗ ಕಂಡ ಖ್ಯಾತ ಸೂಪರ್ ಸ್ಟಾರ್ ನಟ ತಮ್ಮ ವಿಭಿನ್ನ ಸ್ಟೈಲ್ ಮತ್ತು ಮ್ಯಾನರಿಸಂಗಳಿಂದ ಖ್ಯಾತರಾಗಿರುವ ಇವುರು ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಜನಿಸಿದ್ದು ಮತ್ತು ಶಿಕ್ಷಣ ಪಡೆದಿದ್ದು ಎಲ್ಲಾ ಕರ್ನಾಟಕದ ಬೆಂಗಳೂರಿನಲ್ಲಿಯೇ. ಇವರ ಬಾಲ್ಯದ ಹೆಸರು ಶಿವಾಜಿರಾವ್ ಗಾಯಕವಾಡ್, ಸಿಬಿಎಸ್‌ಇ ಶಾಲೆ ಪಠ್ಯದಲ್ಲಿ ಸೇರ್ಪಡೆಗೊಂಡಿರುವ ಭಾರತದ ಏಕೈಕ ನಟ ರಜನಿಕಾಂತ್. ಅವರ ಕುರಿತು ಪುಸ್ತಕ ಒಂದರಲ್ಲಿ ಬಸ್ ಕಂಡಕ್ಟರ್‌ ಟು ಸೂಪರ್ ಸ್ಟಾರ್ ಎಂದು ಇದೆ.

ತಮಿಳಿನ ಖ್ಯಾತ ನಿರ್ದೇಶಕ ಕೆ.ಬಿ.ಬಾಲಚಂದರ್ ನಿರ್ದೇಶನದ ಚಿತ್ರದ ಮೂಲಕ ಖಳನಟನಾಗಿ 1975 ರಲ್ಲಿ ಸಿನಿರಂಗ ಪ್ರವೇಶಿಸಿದರು. ಕಮಲ್ ಹಾಸನ್ ಮತ್ತು ಶ್ರೀವಿದ್ಯಾ ಈ ಚಿತ್ರದಲ್ಲಿ ನಟಿಸಿದ್ದರು. ಅದೇ ವರ್ಷ ಅವರು ಕಥಾ ಸಂಗಮ ಎಂಬ ಕನ್ನಡ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದರು. ನಂತರ ಕೆಲ ಚಿತ್ರಗಳಲ್ಲಿ ಖಳನಾಗಿ ನಟಿಸಿ ಮುಂದೆ ನಾಯಕನಾಗಿ ಬಡ್ತಿ ಪಡೆದರು. ಕನ್ನಡದಲ್ಲಿಯೂ ಸುಮಾರು 11 ಚಿತ್ರಗಳಲ್ಲಿ ನಟಿಸಿದ್ದಾರೆ.

ರಜನಿಕಾಂತ್ ಸೂಪರ್ ಸ್ಟಾರ್ ಆಗಿ ಬೆಳೆದು ಬಂದ ಹಾದಿ ಸುಲಭವಾಗಿರಲಿಲ್ಲ. ಸಿನಿಮಾ ಜಗತ್ತಿಗೆ ಕಾಲಿಡುವ ಮುನ್ನ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ಆಗಲೇ ಅವರು ಹಲವಾರು ವೇದಿಕೆ ಕಾರ್ಯಕ್ರಮ, ಸ್ಟಂಟ್‌ಗಳ ಮೂಲಕ ನಟನೆಯಲ್ಲಿ ಇರುವ ಆಸಕ್ತಿ ತೋರಿಸಿದ್ದರು. ಇವರು ಮದ್ರಾಸಿಗೆ ಹೋದಾಗ ಮನೆ ಇಲ್ಲದೆ, ಬಾಡಿಗೆಯ ಗುಡಿಸಲು ಮನೆಯಲ್ಲಿದ್ದರು.

ಚಿತ್ರರಂಗದಲ್ಲಿನ ಸೇವೆಗಾಗಿ ಪದ್ಮ ವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ರಜಿನಿ 2019 ರಲ್ಲಿ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸುವರ್ಣ ಮಹೋತ್ಸವದಲ್ಲಿ ಐಕಾನ್ ಆಫ್ ಗೋಲ್ಡನ್ ಜುಬ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದರು. ಅತಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ರಜನಿಕಾಂತ್ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್. ರಜನಿಕಾಂತ್ ಬಾಬಾರ ಅತಿ ದೊಡ್ಡ ಅನುಯಾಯಿ. ದೇವರು, ಧರ್ಮಗಳ ಬಗ್ಗೆ ಅಪಾರವಾದ ನಂಬಿಕೆ ಹೊಂದಿದ್ದಾರೆ.

ಸೂಪರ್ ಸ್ಟಾರ್ ತಮಿಳುನಾಡು ರಾಜಕೀಯದ ಮೇಲೆ ಭಾರೀ ಪ್ರಭಾವ ಬೀರಿದ್ದಾರೆ. ಚುನಾವಣಾ ಫಲಿತಾಂಶವನ್ನು ಬದಲಾವಣೆ ಮಾಡುವಷ್ಟು ಪ್ರಭಾವ ಹೊಂದಿದ್ದಾರೆ. 2020ರ ಡಿಸೆಂಬರ್ 3ರಂದು ರಜನಿಕಾಂತ್ ಅಧಿಕೃತವಾಗಿ ರಾಜಕೀಯಕ್ಕೆ ಬರುವುದಾಗಿ ಘೋಷಣೆ 22ಮಾಡಿದ್ದರು. ಆದರೂ ಅದೇಕೋ ರಾಜಕೀಯಕ್ಕೆ ರಜನಿಕಾಂತ್ ರವರು ಇನ್ನು ಪ್ರವೇಶಿಸಲಿಲ್ಲ. 2000-2010ರ ತನಕ ರಜನಿಕಾಂತ್ 26 ಕೋಟಿ ಸಂಭಾವಣೆ ಪಡೆದಿದ್ದಾರೆ.

ಜಾಕಿ ಚಾನ್ ನಂತರ ಏಷ್ಯಾದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆದ 2ನೇ ನಟ ರಜನಕಾಂತ್ ಆಗಿದ್ದಾರೆ. ಇವರು ಮದ್ರಾಸಿಗೆ ಹೋದಾಗ ಮನೆ ಇಲ್ಲದೆ, ಬಾಡಿಗೆಯ ಗುಡಿಸಲು ಮನೆಯಲ್ಲಿದ್ದರು ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಪುನೀತ್ ರವರ ಕಾರ್ಯಕ್ರಮಕ್ಕೆ ರಜಿನಿಕಾಂತ್ ಅವರು ಬಂದಿದ್ದರು, ಇವರು ಪಡೆದಿರುವ ಸಂಭಾವನೆಯ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಹೇಳುವುದಾದರೆ ಯಾವುದೇ ಸೆಲಬ್ರಿಟಿಗಳು ಸಂಭಾವನೆ ಪಡೆಯದೆ ಯಾವ ಕಾರ್ಯಕ್ರಮಕ್ಕೂ ಬರುವುದಿಲ್ಲ.

ಆದರೆ ಸೂಪರ್ ಸ್ಟಾರ್ ಆದ ಇವರು ಪುನೀತ್ ರಾಜಕುಮಾರ್ ಅವರ ಕಾರ್ಯಕ್ರಮಕ್ಕೆ ಯಾವುದೇ ಹಣವನ್ನು ಪಡೆಯದೆ, ತಮ್ಮ ದೊಡ್ಡತನವನ್ನು ತೋರಿಸಿದ್ದಾರೆ. ಅದರಲ್ಲೂ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡಿರುವ ದುಃಖವು ಇನ್ನು ಎಲ್ಲಾ ಅಭಿಮಾನಿಗಳಲ್ಲಿ ಹಾಗೂ ಕಲಾವಿದರಲ್ಲಿ ಹಸಿಯಾಗಿದೆ. ಹಾಗಾಗಿ ಎಲ್ಲಾ ಕಾರ್ಯಕ್ರಮಕ್ಕೂ ಕೂಡ ಸಂಭಾವನೆಯನ್ನು ಕೋಟಿಗಟ್ಟಲೆ ಪಡೆಯುವ ರಜನಿಕಾಂತ್ ಅಪ್ಪು ಅವರ ಕಾರ್ಯಕ್ರಮಕ್ಕೆ ಮಾತ್ರ ಒಂದು ನಯಪೈಸೆಊ ಕೂಡ ಸಂಭಾವನೆ ಬೇಡ ಎಂದು ತಿರಸ್ಕಾರ ಮಾಡಿದ್ದಾರೆ. ನಿಜಕ್ಕೂ ಇದು ಮೆಚ್ಚುವ ಕಾರ್ಯವೇ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.

ದಿವ್ಯ ಅರವಿಂದ್ ಮದುವೆಯಾದ್ರೆ ಗ್ಯಾರೆಂಟಿ ಡಿ-ವೋ-ರ್ಸ್ ಆಗುತ್ತೆ ಎಂದು ಬಿಗ್ ಬಾಸ್ ಮನೇಲಿ ಮತ್ತೊಂದು ಭವಿಷ್ಯ ನುಡಿದ ಆರ್ಯವರ್ಧನ್ ಗೂರುಜಿ.!

ಸ್ನೇಹಿತರೆ ಕಲರ್ಸ್ ಕನ್ನಡ ವಾಹನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ದಿನ ದಿನಕ್ಕೆ ತಿರುವುಗಳನ್ನು ಪಡೆಯುತ್ತಾ ಜನರ ಕುತೂಹಲಕ್ಕೆ ಕಾರಣವಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಸದಾ ಜಗಳ, ಮುನಿಸು, ಚರ್ಚೆಗಳು ನಡೆಯುತ್ತಾ ಇರುತ್ತದೆ. ಬಿಗ್ ಬಾಸ್ನ ಕೆಲವು ಮನೆಯ ಸದಸ್ಯರು ಈಗಾಗಲೇ ಎಲಿಮಿನೇಟ್ ಆಗಿದ್ದು, ಮನೆಯ ಒಳಗೆ ಇರುವ ಸದಸ್ಯರ ಸ್ಪರ್ಧೆಯು ಹೆಚ್ಚು ಬಿಗಿಯಾಗಿದೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ನೇರ ಮಾತನಾಡಿ ಎಲ್ಲರ ಜೊತೆ ವಿವಾದಗಳನ್ನು ಸೃಷ್ಟಿ ಮಾಡುವ ಆರ್ಯವರ್ಧನ್ ಗುರೂಜಿಯವರು ದಿವ್ಯ ಉರುಡುಗ ರವರ ಮದುವೆಯ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ. ಆರ್ಯವರ್ಧನ್ ಗುರೂಜಿಯವರು ಆಗಾಗ ಮನೆಯ ಸದಸ್ಯರ ಭವಿಷ್ಯವನ್ನು ಹೇಳುತ್ತಾ ಒಮ್ಮೊಮ್ಮೆ ಹಾಸ್ಯವನ್ನು ಮಾಡುತ್ತಾ ಇರುತ್ತಾರೆ. ಈ ಬಗೆಯಲ್ಲಿ ಮುಖವನ್ನು ನೋಡಿ ಭವಿಷ್ಯವನ್ನು ಹೇಳುವ ಗುರೂಜಿ, ಕೆಲವು ದಿನಗಳ ಹಿಂದೆ ದಿವ್ಯ ಉರುಡುಗರವರ ಭವಿಷ್ಯವನ್ನು ಹೇಳಿ ಬೆಚ್ಚಿ ಬೀಳುವಂತೆ ಮಾಡಿದ್ದಾರೆ.

ಬಿಗ್ ಬಾಸ್ ನ ಓಟಿಟಿಯನ್ನು ಗೆದ್ದು ಬಿಗ್ ಬಾಸ್ ಸೀಸನ್ 9 ರಕ್ಕೆ ಕಾಲಿಟ್ಟಿರುವ ಗುರೂಜಿ ಅವರು ತಮ್ಮ ಆಟದ ಶೈಲಿಯಿಂದ ಜನರಲ್ಲಿ ಅವರದೇ ಆದ ಚಾಪನ್ನು ಮೂಡಿಸಿದ್ದಾರೆ. ಇದರಿಂದ ಮನೆಯ ಹೊರಗಡೆ ಹಾಗೂ ಒಳಗಡೆ ಗುರೂಜಿಯವರಿಗೆ ಅಭಿಮಾನಿಗಳು ಹೆಚ್ಚು ಇದ್ದಾರೆ. ದಿವ್ಯ ಉರುಡುಗರವರ ಜನುಮದ ದಿನಾಂಕದ ಪ್ರಕಾರ ಅವರ ವೈವಾಹಿಕ ಜೀವನದ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ.

ದಿವ್ಯ ಉರುಡುಗ ರವರು ಅರವಿಂದ್ ಕೆ ಪಿ ಅವರನ್ನು ವಿವಾಹವಾದರೆ ಮುಂದೆ ಡಿ.ವೋ.ರ್ಸ್ ಆಗುವ ಸಾಧ್ಯತೆ ಇದೆ ಎಂದು ಭವಿಷ್ಯವನ್ನು ಗುರುಜಿಯವರು ಹೇಳಿದ್ದಾರೆ. ಇದೇ ಕಾರಣಕ್ಕಾಗಿ ಈಗಾಗಲೇ ದಿವ್ಯ ರವರು ಗುರೂಜಿಯವರ ಜೊತೆ ಮನಸ್ಸ್ತಾಪವನ್ನು ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಅವರ ಜೊತೆ ಮಾತನಾಡುತ್ತಿದ್ದ ಗುರೂಜಿಯವರು ಆ ಸಂದರ್ಭದಲ್ಲಿ 7ನೇ ತಾರೀಕು ಹಾಗೂ ಎಂಟನೇ ತಾರೀಕು ಜನಿಸಿದವರು ವಿವಾಹವಾಗಲು ಸಾಧ್ಯವಿಲ್ಲ ಬದಲಾಗಿ ಸ್ನೇಹಿತರಾಗಿರಬಹುದು ಅಷ್ಟೇ, ವಿವಾಹವಾದರೆ ಡೈ.ವೋ.ರ್ಸ್ ಆಗುವುದು ಖಚಿತ ಎಂದು ಮಾತನಾಡುತ್ತಿದ್ದರು.

ಹೀಗಾಗಿ ದಿವ್ಯ ರವರ ಜನ್ಮ ದಿನಾಂಕ 7ನೇ ತಾರೀಕು ಆಗಿದ್ದು ಅರವಿಂದ್ ರವರ ಜನ್ಮ ದಿನಾಂಕವು 8ನೇ ತಾರೀಕು ಆಗಿರುವುದರಿಂದ ದಿವ್ಯ ರವರು ಹಾಗೂ ಅರವಿಂದ್ ರವರು ಡಿವೋರ್ಸ್ ಆಗುತ್ತದೆ ಎಂದು ಭವಿಷ್ಯವನ್ನು ನುಡಿದಿದ್ದಾರೆ. ಗುರೂಜಿಯವರ ಭವಿಷ್ಯವನ್ನು ಅರಗಿಸಿಕೊಳ್ಳಲಾಗದೆ ದಿವ್ಯ ರವರು ಕೋಪಗೊಂಡಿದ್ದಾರೆ. ಹೀಗಾಗಿ ದಿವ್ಯ ರವರು, ನಮಸ್ಕಾರ ನಿಮ್ಮ ಭವಿಷ್ಯಕ್ಕೆ ಈ ವಿಷಯದಲ್ಲಿ ನಾನು ಇಲ್ಲವೇ ಇಲ್ಲ ಎಂದು ಅಲ್ಲಿಂದ ಎದ್ದು ಹೊರಟೇ ಬಿಟ್ಟರು.

ಬಿಗ್ ಬಾಸ್ ಮನೆಯಲ್ಲಿ ಆಗಾಗ ಪ್ರೇಮ ಪ್ರಸಂಗಗಳು ನಡೆಯುತ್ತಾ ಇರುತ್ತದೆ. ದಿವ್ಯ ಹಾಗೂ ಅರವಿಂದ್ ರವರು ಈ ಮುಂಚೆ ಬಿಗ್ ಬಾಸ್ ಎಂಟರಲ್ಲಿ ಪರಿಚಯವಾದರು, ಪರಿಚಯವು ಪ್ರೀತಿಗೆ ತಿರುಗಿತ್ತು, ಕೆಲವು ದಿನಗಳವರೆಗೂ ಇವರಿಬ್ಬರು ಹೆಚ್ಚು ಟ್ರೋಲ್ ಆಗುತ್ತಿದರು ಜೊತೆಗೆ ಕೆಲವೊಂದು ಬಾರಿ ಜನರ ಮಾತಿಗೂ ಈ ಜೋಡಿ ಸಿಲುಕಿದೆ, ಇನ್ನು ಬಿಗ್ ಬಾಸ್ ಇಂದ ಹೊರಗಡೆ ಬಂದ ಮೇಲೆ ಕೂಡ ಇವರು ಜೊತೆಯಾಗಿದ್ದಾರೆ.

ಈಗಾಗಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿರುವ ಈ ಜೋಡಿಗೆ ಕುಟುಂಬದವರಿಂದಲೂ ಕೂಡ ಒಪ್ಪಿಗೆ ಸಿಕ್ಕಿದೆ. ಇಂತಹ ಸಂಧರ್ಭದಲ್ಲಿ ಗುರೂಜಿಯವರ ಭವಿಷ್ಯದಿಂದ ದಿವ್ಯ ರವರು ಬೇಸರಗೊಂಡು, ನೇರವಾಗಿ ದಿವ್ಯರವರ ಕೆಂಗಣ್ಣಿಗೆ ಆರ್ಯವರ್ಧನ್ ಅವರು ಗುರಿಯಾಗಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಎರಡು ವರ್ಷದ ಬಳಿಕ ಸಿಹಿ ಸುದ್ದಿ ಹಂಚಿಕೊಂಡ ನಟಿ ವೈಷ್ಣವಿ ಗೌಡ.

ನಟಿ ವೈಷ್ಣವಿ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಇವರನ್ನು ವೈಷ್ಣವಿ ಗೌಡ ಅನ್ನುವುದಕ್ಕಿಂತ ಸನ್ನಿಧಿ ಅಂದರೆ ಎಲ್ಲರೂ ಬಹುಬೇಗ ಗುರುತು ಹಿಡಿಯುತ್ತಾರೆ. ಏಕೆಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಅಗ್ನಿಸಾಕ್ಷಿ ಎಂಬ ಧಾರಾವಾಹಿಯಲ್ಲಿ ಸನ್ನಿಧಿ ಪಾತ್ರವನ್ನು ವೈಷ್ಣವಿ ಗೌಡ ಅವರು ಮಾಡಿದ್ದರು. ಆಗಿನಿಂದಲೂ ಕೂಡ ಇವರ ನಿಜ ಹೆಸರು ವೈಷ್ಣವಿ ಗೌಡ ಎಂಬುದನ್ನೇ ಪ್ರೇಕ್ಷಕರು ಮರೆತು ಬಿಟ್ಟಿದ್ದಾರೆ ಅಷ್ಟರ ಮಟ್ಟಿಗೆ ಇವರು ಸನ್ನಿಧಿ ಎಂಬ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರು.

ಸುಮಾರು 4 ವರ್ಷಗಳ ಕಾಲ ಅಗ್ನಿಸಾಕ್ಷಿ ಎಂಬ ಧಾರಾವಾಹಿಯಲ್ಲಿ ನಟನೆ ಮಾಡುವುದರ ಮೂಲಕ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿದ್ದರು. ಈ ಧಾರಾವಾಹಿಯಿಂದ ಇವರಿಗೆ ಸಿಕ್ಕ ಕೀರ್ತಿ ಹೆಸರು ಪ್ರತಿಷ್ಠೆ ಸರು ಅಷ್ಟಿಷ್ಟಲ್ಲ ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಎಂಬ ಧಾರಾವಾಹಿಯಲ್ಲಿ ನಟನೆ ಮಾಡುವುದಕ್ಕಿಂತ ಮುಂಚೆ ಉದಯ ಟಿವಿಯಲ್ಲಿ ದೇವಿ ಎಂಬ ಧಾರಾವಾಹಿಯಲ್ಲಿ ಅಭಿನಯ ಮಾಡಿದರು. ಆದರೆ ಈ ಪಾತ್ರದಿಂದ ಇವರು ಹೆಚ್ಚು ಗುರುತಿಸಿಕೊಳ್ಳಲಿಲ್ಲ ಮತ್ತು ಖ್ಯಾತಿಯನ್ನು ಕೂಡ ಗಳಿಸಲಿಲ್ಲ ಆದರೆ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟನೆ ಮಾಡಿದ ನಂತರವೇ ಎಲ್ಲರಿಗೂ ವೈಷ್ಣವಿ ಗೌಡ ಅವರು ಚಿರಪರಿಚಿತರಾಗುತ್ತಾರೆ.

ಇನ್ನು ಅಗ್ನಿಸಾಕ್ಷಿಯಲ್ಲಿ ನಟನೆ ಮಾಡಿದ ನಂತರ ಇವರಿಗೆ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧಿಯಾಗಿ ಹೋಗುವಂತಹ ಅವಕಾಶ ದೊರೆಯುತ್ತದೆ. ಈ ಅವಕಾಶವನ್ನು ಬಳಕೆ ಮಾಡಿಕೊಂಡು ಬಿಗ್ ಬಾಸ್ ಮನೆಯಲ್ಲಿ ಸುಮಾರು 100 ದಿನಗಳ ಕಾಲ ವಾಸ ಮಾಡುತ್ತಾರೆ ಚಿಕ್ಕದೊಂದು ಕಾಂಟ್ರವರ್ಸಿಯನ್ನು ಕೂಡ ಮಾಡಿಕೊಳ್ಳುವುದಿಲ್ಲ. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಯಾವುದೇ ರೀತಿಯಾದಂತಹ ಆಫರ್ಗಳು ದೊರೆಯಲಿಲ್ಲ.

ಆದರೂ ಕೂಡ ನೃತ್ಯದಲ್ಲಿ ಹೆಚ್ಚಿದ ಆಸಕ್ತಿಯನ್ನು ಹೊಂದಿದಂತಹ ಇವರು ತಮ್ಮ ಮನೆಯಲ್ಲೇ ಡಾನ್ಸಿಂಗ್ ಕ್ಲಾಸನ್ನು ತೆರೆಯುತ್ತಾರೆ ಮಕ್ಕಳಿಗೆ ಉಚಿತವಾಗಿಯೂ ಕೂಡ ಡ್ಯಾನ್ಸ್ ಹೇಳಿ ಕೊಡುತ್ತಾರೆ. ಮಾಡಲಿಂಗ್ ಕ್ಷೇತ್ರದಲ್ಲಿಯೂ ಕೂಡ ಅತೀವ ಆಸಕ್ತಿಯನ್ನು ಹೊಂದಿದ್ದಾರೆ ಹಾಗಾಗಿ ಹೊಸ ಹೊಸ ಫೋಟೋ ಶೂಟ್ ಮಾಡಿಸುವ ಮೂಲಕ ಪ್ರೇಕ್ಷಕರಿಗೂ ಮನರಂಜನೆಯನ್ನು ನೀಡುತ್ತಿದ್ದರು.

ಸದ್ಯಕ್ಕೆ ನಟಿ ವೈಷ್ಣವಿ ಗೌಡ ಅವರಿಗೆ ಹೊಸದೊಂದು ಸೀರಿಯಲ್ ನಲ್ಲಿ ನಟನೆ ಮಾಡುವಂತಹ ಅವಕಾಶ ದೊರೆತಿದೆ ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಎಂಬ ಧಾರಾವಾಹಿಯಲ್ಲಿ ಖಡಕ್ ವಿಲ್ಲನ್ ನಟಿ ವೈಷ್ಣವಿ ಗೌಡ ಅವರಿಗೆ ಅಭಿನಯಿಸಲು ಆಫರ್ ದೊರೆತಿದೆ. ಈ ಆಫರ್ ಅನ್ನು ಸ್ವೀಕಾರ ಮಾಡಿದಂತಹ ವೈಷ್ಣವಿ ಗೌಡ ಅವರು ಲಕ್ಷಣ ದಾರವಾಹಿಯಲ್ಲಿ ಭೂಪತಿ ಅಂದರೆ ಜಗನ್ ಅವರ ಹೆಂಡತಿಯ ಸ್ಥಾನಕ್ಕೆ ಬರಲಿದ್ದಾರೆ.

ಈ ಒಂದು ಪ್ರೋಮೋ ಶೂಟಿಂಗ್ ಸೀನ್ ಅನ್ನು ನಟಿ ವೈಷ್ಣವಿ ಗೌಡ ಅವರು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಇದನ್ನು ನೋಡಿದಂತಹ ಅಭಿಮಾನಿಗಳು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಅನುಮಾನವನ್ನು ಕೂಡ ವ್ಯಕ್ತಪಡಿಸಿದ್ದಾರೆ ಏಕೆಂದರೆ ಇಲ್ಲಿಯವರೆಗೂ ಕೂಡ ವೈಷ್ಣವಿ ಗೌಡ ಅವರು ಸಾಫ್ಟ್ ಪಾತ್ರಗಳನ್ನು ಮಾತ್ರ ಮಾಡಿಕೊಂಡು ಬಂದಿದ್ದರು. ಆದರೆ ಇದೇ ಮೊದಲ ಬಾರಿಗೆ ಖಡಕ್ ವಿಲ್ಲನ್ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಹಾಗಾಗಿ ಈ ಪಾತ್ರವನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದು ವೈಷ್ಣವಿ ಗೌಡ ಅಭಿಮಾನಿಗಳ ಪ್ರಶ್ನೆಯಾಗಿದೆ.

ಇನ್ನು ವೈಷ್ಣವಿ ಗೌಡ ಅಭಿಮಾನಿಗಳಂತೂ ಯಾವುದಾದರೂ ಪಾತ್ರವಾದರೂ ಸರಿ ತೆರೆಯ ಮೇಲೆ ಮತ್ತೆ ಬರುತ್ತಿದ್ದಾರೆ ಎಲ್ಲಾ ಅದೇ ಖುಷಿಯ ವಿಚಾರ ಎಂದು ಸಂತಸವನ್ನು ವ್ಯಕ್ತಪಡಿಸಿದ್ದಾರೆ‌. ಸದ್ಯಕ್ಕೆ ವೈಷ್ಣವಿ ಗೌಡ ಅವರು ಲಕ್ಷಣ ಧಾರವಾಹಿಯಲ್ಲಿ ಇನ್ನು ಮುಂದೆ ಕಾಣಿಸಿಕೊಳ್ಳಲಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಾಮೆಂಟ್ ಮುಖಾಂತರ ತಿಳಿಸಿ.!

ಲೈವ್ ನಲ್ಲಿಯೇ ನಿವೇದಿತಾ ಗೌಡನಾ ಬಿಗಿದಪ್ಪಿಕೊಂಡು ಕಿಸ್ ಕೊಟ್ಟ ಚಂದನ್ ಶೆಟ್ಟಿ, ವೈರಲ್ ವಿಡಿಯೋ ನೋಡಿ ದಾಂಗದ ನೆಟ್ಟಿಗರು.

ನಿವೇದಿತ ಗೌಡ ಕನ್ನಡ ಕಿರುತೆರೆಯ ಬೇಬಿ ಡಾಲ್. ಈಕೆಯನ್ನು ಟಿವಿ ಗರ್ಲ್ ಎಂದು ಕೂಡ ಕರೆಯಬಹುದೇನೋ ಅಷ್ಟರಮಟ್ಟಿಗೆ ಒಂದಾದ ಮೇಲೆ ಒಂದರಂತೆ ಸಾಲು ಸಾಲು ಟಿವಿ ಕಾರ್ಯಕ್ರಮಗಳಲ್ಲಿ ನಿವೇದಿತ ಗೌಡ ಅವರು ಕಾಣಿಸಿಕೊಳ್ಳುತ್ತಾರೆ. ಮೊದಲಿನಿಂದಲೂ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುವುದಕ್ಕೆ ಬಹಳ ಆಸೆ ಪಡುವ ನಿವೇದಿತ ಗೌಡ ಅವರು ಡಬ್ ಸ್ಮ್ಯಾಶ್ ಮಾಡುತ್ತಾ ಬಿಗ್ ಬಾಸ್ ರಿಯಾಲಿಟಿ ಶೋ ಗೆ ಸೀಸನ್ 5 ರಲ್ಲಿ ಭಾಗವಹಿಸಲು ಜಲಸಾಮಾನ್ಯರ ಕೋಟದಡಿ ಸೆಲೆಕ್ಟ್ ಆದರು.

ಇದಾದ ಮೇಲೆ ಅವರ ಬಿರುದು ಬದಲಾಗಿ ಸೆಲೆಬ್ರಿಟಿಯೇ ಆಗಿ ಬಿಟ್ಟರು. ಬಳಿಕ ಭರ್ಜರಿ ಕಾಮಿಡಿ, ರಾಜಾರಾಣಿ, ಕುಕ್ ವಿಥ್ ಕಿರಿಕ್, ಗಿಚ್ಟ ಗಿಲಿ ಗಿಲಿ ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿವೇದಿತಾ ಗೌಡ ಅವರನ್ನು ಕಿರುತೆರೆ ಪ್ರೇಕ್ಷಕರು ಕೂಡ ಬಹಳ ಇಷ್ಟಪಡುತ್ತಾರೆ. ಇವರ ಬೇಬಿ ಡಾಲ್ ಅಂತಹ ಲುಕ್ಕು , ಅವರಾಡುವ ಮುದ್ದು ಮುದ್ದಾದ ಇಂಗ್ಲಿಷ್ ಶೈಲಿಯ ಕನ್ನಡ ಮಾತುಗಳು ಇಷ್ಟವಾಗಿ ಕನ್ನಡಿಗರು ಈಗ ಅವರನ್ನು ಅದೇ ರೀತಿ ಒಪ್ಪಿಕೊಂಡು ಬಿಟ್ಟಿದ್ದಾರೆ.

ಕನ್ನಡದ ಫೇಮಸ್ ರಾಪರ್ ಚಂದನ್ ಶೆಟ್ಟಿ ಅವರ ಕೈ ಹಿಡಿದಿರುವ ನಿವೇದಿತ ಗೌಡ ಅವರು ಸದಾ ಕಾಲ ಸುದ್ದಿಯಲ್ಲಿರುವ ಸೆಲೆಬ್ರಿಟಿ. ಬಿಡುವಿಲ್ಲದೆ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಇವರು ಸೋಶಿಯಲ್ ಮೀಡಿಯಾದಲ್ಲೂ ಕೂಡ ಬಹಳ ಆಕ್ಟಿವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲಕ್ಷಾಂತರ ಸಂಖ್ಯೆ ಫಾಲೋವರ್ಸ್ ಗಳನ್ನು ಹೊಂದಿರುವ ಇವರು ಅವರನ್ನು ರಂಜಿಸುವ ಸಲುವಾಗಿ ಹೊಸ ಹೊಸ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ.

ಜೊತೆಗೆ ತಮ್ಮ ಹೊಸ ವಿಷಯದ ಅಪ್ಡೇಟ್ಗಳ ಕುರಿತು ಫೋಟೋ ಶೇರ್ ಮಾಡುವ ಮೂಲಕ ಎಲ್ಲವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡು ಸುದ್ದಿಯಲ್ಲಿರುತ್ತಾರೆ. ಪತಿ ಚಂದನ್ ಶೆಟ್ಟಿ ಅವರನ್ನು ಬಹಳ ಪ್ರೀತಿಸುವ ಇವರು ಹೆಚ್ಚಾಗಿ ರೀಲ್ಸ್ ಗಳನ್ನು ಮಾಡುವುದು ಚಂದನ್ ಶೆಟ್ಟಿ ಅವರ ಜೊತೆಗೆ. ಇತ್ತೀಚೆಗೆ ನಿವಿ ಅವರು ಅವರ ತಾಯಿಯ ಜೊತೆ ಮಾಡುವ ವಿಡಿಯೋಸ್ ಗಳಿಗೆ ಅಭಿಮಾನಿಗಳು ಹೆಚ್ಚು ಮೆಚ್ಚುಗೆ ನೀಡುತ್ತಿದ್ದು ಆಗಾಗ ಕೋರಿಕೆಯನ್ನು ಕೂಡ ಮಾಡುತ್ತಾರೆ.

ತಮ್ಮದೇ ಆದ ಯುಟ್ಯೂಬ್ ಚಾನೆಲ್ ಕೂಡ ಹೊಂದಿರುವ ನಿವೇದಿತ ಗೌಡ ಅವರು ಅಲ್ಲೂ ಕೂಡ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಅಲ್ಲದೇ ತನ್ನ ಕೆರಿಯರ್ ಬಗ್ಗೆ ಕೂಡ ಬಹಳ ಕಾಳಜಿ ಇರುವ ಇವರು ಅದನ್ನು ಇಂಪ್ರೂ ಮಾಡಿಕೊಳ್ಳಲು ಸಿಗುವ ಎಲ್ಲಾ ಅವಕಾಶಗಳನ್ನು ಅಷ್ಟೇ ಮಟ್ಟಿಗೆ ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಇಡೀ ಕರ್ನಾಟಕ ಹೆಮ್ಮೆ ಪಡುವಂತೆ ಮಿಸ್ಸಸ್ ಇಂಡಿಯಾ ಕಾಂಪಿಟೇಶನ್ ಅಲ್ಲಿ ಭಾಗಿಯಾಗಿದ್ದ ನಿವೇದಿತ ಗೌಡ ಅವರು ಪೀಪಲ್ ಚಾಯ್ಸ್ ಇಂಕ್ನ 2022 ಅವಾರ್ಡ್ ಮಡಿಕೇರಿಸಿಕೊಂಡು ಕರ್ನಾಟಕಕ್ಕೆ ಹೆಸರು ತಂದಿದ್ದಾರೆ.

ಈ ಕಾಂಪಿಟೇಶನ್ ಆದ ಬಳಿಕ ನಿವೇದಿತ ಗೌಡ ಅವರಿಗೆ ನಾಯಕಿ ಆಗಿ ಅಭಿನಯಿಸಲು ಬೇರೆ ಭಾಷೆಗಳಿಂದ ಆಫರ್ಗಳು ಕೇಳಿ ಬರುತ್ತಿವೆ ಈಗಾಗಲೇ ಕೆಲವೊಂದು ಒಪ್ಪಿಕೊಂಡಿದ್ದಾರೆ ಎನ್ನುವ ಮಾತುಗಳು ಇದ್ದವು. ಆ ಬಗ್ಗೆ ಏನು ಸುದ್ದಿ ನೀಡದಿದ್ದರೂ ಇದೀಗ ತಮ್ಮ instagram ಖಾತೆಯಲ್ಲಿ ತನ್ನ ಪತಿಗೆ ಚುಂಬಿಸುವ ಫೋಟೋ ಹಾಕಿಕೊಂಡು ಐ ಮಿಸ್ ಯು ಆಲ್ರೆಡಿ ಎಂದು ಬರೆದುಕೊಂಡಿದ್ದಾರೆ. ಸದ್ಯಕ್ಕೆ ಅವರು ಯಾವ ಕಾರಣದಿಂದ ಈ ರೀತಿ ಬರೆದಿದ್ದಾರೆ ಎಂದು ಹಲವರ ತಲೆಯಲ್ಲಿ ಗೊಂದಲ ಉಂಟಾಗಿದ್ದಾರೆ.

ಇವರೇನಾದರೂ ಸಿನಿಮಾಗಳನ್ನು ಒಪ್ಪಿಕೊಂಡಿರುವ ಕಾರಣದಿಂದ ಅದಕ್ಕಾಗಿ ಶೂಟಿಂಗ್ ಗೆ ತೆರಳಿದ್ದಾರಾ? ಆ ಉದ್ದೇಶದಿಂದಲೇ ಹೀಗೆ ಬರೆದಿದ್ದಾರಾ ಎಂದು ಕೂಡ ಹಲವರು ಊಹೆ ಮಾಡುತ್ತಿದ್ದಾರೆ. ಅದೇನೆ ಆಗಲಿ ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಲಿಪ್ ಲಾಕ್ ಮಾಡಿದ ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

 

ಮದುವೆಗೂ ಮುನ್ನವೇ ಗರ್ಭಿಣಿ ಆದ ನಟಿ ನಿತ್ಯ ಮೆನನ್, ವಿಚಾರ ಕೇಳಿ ಇಡೀ ಚಿತ್ರರಂಗವೇ ಶಾ-ಕ್.

 

ತಾಯಿ ಆಗುವುದು ಪ್ರತಿ ಹೆಣ್ಣಿನ ಜೀವನದಲ್ಲೂ ಒಂದು ವಿಶೇಷ ಸಂದರ್ಭ. ಆಕೆ ಜನ್ಮ ಸಂಪೂರ್ಣವಾಗುವುದು ಆಗಲೇ ಎಂದು ನಮ್ಮಲ್ಲಿನ ನಂಬಿಕೆ. ಪ್ರತಿಯೊಬ್ಬ ಹೆಣ್ಣು ಕೂಡ ತಾನೊಂದು ಜೀವಕ್ಕೆ ತಾಯಿ ಆಗಬೇಕು, ತಾಯಿ ಆಗುವ ಅನುಭವ ಪಡೆಯಬೇಕು ಎನ್ನುವ ಆಸೆ ಹೊತ್ತಿರುತ್ತಾಳೆ. ತಾಯಿ ಆಗಲು ಮದುವೆ ಆಗಲೇಬೇಕು ಎಂದಿಲ್ಲ ಆದರೆ ನಮ್ಮ ಭಾರತೀಯ ಸಂಸ್ಕೃತಿಯ ಪ್ರಕಾರ ನಾವು ಅಳವಡಿಸಿಕೊಂಡಿರುವ ಕುಟುಂಬ ಪದ್ಧತಿಯಲ್ಲಿ ಎಲ್ಲದಕ್ಕೂ ನೀತಿ ನಿಯಮಗಳಿವೆ.

ನಮ್ಮಲ್ಲಿ ವಿವಾಹ ಕ್ಕೂ ಮುನ್ನ ತಾಯಿ ಆದರೆ ಅದನ್ನು ಪಾಪ ಎನ್ನುವ ರೀತಿ ನೋಡಲಾಗುತ್ತದೆ. ಹಾಗೂ ನಮ್ಮ ಸಮಾಜ ಅದನ್ನು ಒಪ್ಪುವುದು ಕೂಡ ಇಲ್ಲ. ಆದರೆ ವಿವಾಹಪೂರ್ವ ತಾಯಿ ಆಗಿರುವ ಪ್ರಕ್ರಿಯೆ ಈಗೇನು ಹೊಸತಲ್ಲ ಮಹಾಭಾರತ ಕಾಲದಲ್ಲಿ ತಾಯಿ ಕುಂತಿಯು ಕೂಡ ಕರ್ಣನಿಗೆ ವಿವಾಹಕ್ಕೂ ಮುನ್ನ ಮಂತ್ರ ಉಚ್ಚಾರದಿಂದ ಜನ್ಮ ನೀಡಿದ್ದರು.

ನಾವೀಗ 21ನೇ ಶತಮಾನದಲ್ಲಿದ್ದೇವೆ. ಈಗ ಕಾಲ ಎಷ್ಟು ಬದಲಾಗಿದೆ ಎಂದರೆ ಎಣ್ಣೆ ಇಲ್ಲದೆ ದೀಪ ಕೂಡ ಉರಿಯುತ್ತದೆ, ರೆಕ್ಕೆ ಇಲ್ಲದಿದ್ದರೂ ಆಕಾಶದಲ್ಲೂ ಹಾರಬಹುದು. ವಿಜ್ಞಾನದ ಪ್ರಕಾರ ಮಗು ಜನ್ಮ ತಾಳಲು ಅಂಡಾಣು ಹಾಗೂ ವೀರ್ಯಾಣ ಸಂಯೋಗ ಸಾಕು. ಮದುವೆ ಹಾಗೂ ಮತ್ತಿತರ ಸಂಪ್ರದಾಯಗಳ ಸೆಂಟಿಮೆಂಟ್ ಸೈನ್ಸ್ ಗೆ ತಿಳಿದಿರುವುದಿಲ್ಲ. ಹೀಗಾಗಿ ಸ್ವತಂತ್ರವಾಗಿ ಈಗಿನ ಕಾಲದ ಎಷ್ಟೋ ಸೆಲೆಬ್ರಿಟಿಗಳು ಅದರಲ್ಲೂ ಪ್ರಮುಖವಾಗಿ ನಟಿಮಣಿಯರು ಈ ರೀತಿ ಮದುವೆ ಆಗದೆ ತಾಯಿ ಆಗುವ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.

ಕಳೆದ ತಿಂಗಳಷ್ಟೇ ತಮಿಳಿನ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರು ಈ ರೀತಿ ಮದುವೆ ಮುನ್ನವೇ ಬಾಡಿಗೆ ತಾಯಿ ಆಗಿ ಈಗ ಅವರು ಅವಳಿ ಮಕ್ಕಳನ್ನು ಪಡೆದಿರುವ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು. ನೆನ್ನೆ ಮೊನ್ನೆಯಿಂದ ಜಯ ಬಚ್ಚನ್ ಅವರು ತಮ್ಮ ಮೊಮ್ಮಗಳಿಗೆ ಇದೇ ರೀತಿ ಮದುವೆ ಆಗದೆ ಮಗು ಹಡೆದರೂ ತಪ್ಪಿಲ್ಲ ಎಂದು ಸಲಹೆ ನೀಡಿದ್ದಾರೆ ಎನ್ನುವ ಸುದ್ದಿಗಳು ಭಾರಿ ಹರಿದಾಡುತ್ತಿವೆ.

ಇದೇ ಬೆನ್ನಲ್ಲೇ ಮತ್ತೊಬ್ಬ ನಟಿಮಣಿ ಮದುವೆ ಆಗದೆ ಇದ್ದರೂ ತಮ್ಮ instagram ಖಾತೆಯಲ್ಲಿ ಪ್ರಗ್ನೆನ್ಸಿ ಟೆಸ್ಟ್ ಮಾಡಿರುವ ಕಿಟ್ ಅಲ್ಲಿ ಪಾಸಿಟಿವ್ ಬಂದಿರುವ ಫೋಟೋ ಶೇರ್ ಮಾಡಿ ದ ವಂಡರ್ ಬಿಗಿನ್ಸ್ ಎಂದು ಶೀರ್ಷಿಕೆ ಕೊಟ್ಟು ಅಭಿಮಾನಿಗಳಿಗೆಲ್ಲರಿಗೂ ಗೊಂದಲ ಕ್ರಿಯೇಟ್ ಮಾಡಿದ್ದಾರೆ. ಕನ್ನಡದಲ್ಲಿ ಮೈನಾ ಹಾಗೂ ಕೋಟಿಗೊಬ್ಬ 2 ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಿತ್ಯ ಮೆನನ್ ಅವರು ಈಗ ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲೂ ಬಹಳ ಬೇಡಿಕೆ ಇರುವ ನಟಿ.

ಇವರ ಇನ್ಸ್ಟಾಗ್ರಾಮ್ ಖಾತೆಯಿಂದ ಈ ರೀತಿ ಫೋಟೋ ಅಪ್ಲೋಡ್ ಆಗಿದ್ದು ಈ ವಿಷಯದ ಬಗ್ಗೆ ಮತ್ತೇನು ಹೇಳಿಕೊಂಡಿಲ್ಲ ಆದರೆ ಇದೇ ಸಮಯಕ್ಕೆ ಪೃಥ್ವಿ ಹಾಗೂ ಮಿಲನ ಸಿನಿಮಾ ಖ್ಯಾತಿಯ ನಟಿ ಪಾರ್ವತಿ ಮೆನನ್ ಕೂಡ ಇದೇ ರೀತಿಯ ಫೋಟೋ ಶೇರ್ ಮಾಡಿದ್ದಾರೆ. ಅವರು ಕೂಡ ಕನ್ನಡದ ಜೊತೆ ಮಲಯಾಳಂ ಸಿನಿಮಾಗಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ನೆಟ್ಟಿಗರೆಲ್ಲರೂ ಖಂಡಿತ ಇದು ಮುಂದಿನ ಸಿನಿಮಾದ ಗಿಮಿಕ್ ಇರಬಹುದು ಎಂದೇ ಭಾವಿಸಿಕೊಳ್ಳುತ್ತಿದ್ದಾರೆ.

ಇವರಷ್ಟೇ ಅಲ್ಲದೆ ಬಾಲಿವುಡ್ ನಟಿಮಣಿಯರಾದ ಸ್ವರ ಮಲ್ಲಿಕ್, ರಿಮಾ ಕಲ್ಲಿಂಗಲ್, ನಿರ್ಮಾಪಕಿ ಗುನೀತ್ ಮೊಂಗ, ಗಾಯಕಿ ಚಿನ್ಮಯಿ ಶ್ರೀಪಾದ ಇದೇ ರೀತಿ ಪ್ರೆಗ್ನನ್ಸಿ ಟೆಸ್ಟ್ ಕಿಟ್ ಫೋಟೋ ತೆಗೆದು ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಇದು ಸಿನಿಮಾ ವಿಚಾರದ್ದೇ ವಿಷಯ ಇರಬಹುದು ಎನ್ನುವ ಊಹೆ ಬಲವಾಗುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಮೈ ಚಳಿ ಬಿಟ್ಟು ಸ್ಟೇಜ್ ಮೇಲೆ ನಟಿ ರಾಧಿಕಾ ಪಂಡಿತ್ ಮಾಡಿದ ಈ ಡ್ಯಾನ್ಸ್ ನೋಡಿ ನಿಜಕ್ಕೂ ಬೆರಗಾಗುತ್ತಿರ.

ಕನ್ನಡ ಚಿತ್ರರಂಗದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಉತ್ತಮ ಡ್ಯಾನ್ಸರ್ ಕೂಡ ಹೌದು. ನಟಿ ರಾಧಿಕಾ ಕುಮಾರಸ್ವಾಮಿ ಉತ್ತಮ ಡ್ಯಾನ್ಸರ್ ಅನ್ನೋದು ಆಟೋ ಶಂಕರ್ ಮಂಡ್ಯ ಸ್ವೀಟಿ ನನ್ನ ಜೋಡಿ ಮುಂತಾದ ಸಿನಿಮಾಗಳಲ್ಲಿ ಸಾಬೀತಾಗಿದೆ.ರಾಧಿಕಾ ಕುಮಾರಸ್ವಾಮಿ 9ನೇ ತರಗತಿ ಓದುತ್ತಿರುವಾಗಲೇ ಸೂಪರ್ ಹಿಟ್ ಸಿನಿಮಾದಲ್ಲಿ ಅಭಿನಯಿಸಿ ಫೇಮಸ್ ಆದವರು. 2002ರಲ್ಲಿ ತೆರೆಕಂಡ ವಿಜಯ ರಾಘವೇಂದ್ರ ಹಾಗೂ ರಾಧಿಕಾ ಕುಮಾರಸ್ವಾಮಿ ಅವರು ಅಭಿನಯಿಸಿದ ಮೊದಲ ಸಿನಿಮಾವಾದ ನಿನಗಾಗಿ ಸಿನಿಮಾವು ಈ ಇಬ್ಬರ ಕೆರಿಯರ್ ಅಲ್ಲಿ ಶಾಶ್ವತವಾಗಿ ದಾಖಲಾಗುವಷ್ಟು ಯಶಸ್ಸು ತಂದುಕೊಟ್ಟಿತ್ತು. ಇದಾದ ಬಳಿಕವೂ ಕೂಡ ವಿಜಯ್ ರಾಘವೇಂದ್ರ ಅವರೊಂದಿಗೆ ಪ್ರೇಮ ಖೈದಿ, ರೋಮಿಯೋ ಜೂಲಿಯೆಟ್, ರಿಷಿ ಇನ್ನು ಮುಂತಾದ ಹಲವು ಸಿನಿಮಾಗಳಲ್ಲಿ ಅಭಿನಯಿಸಿದರು

ಆ ಸಮಯದಲ್ಲಿ ಇವರಿಬ್ಬರ ಕಾಂಬಿನೇಷನ್ ಅಲ್ಲಿ ಮೂಡಿಬಂದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳಾದ ಕಾರಣ ಇವರಿಬ್ಬರನ್ನು ಯಶಸ್ವಿ ಜೋಡಿಗಳು ಎಂದು ಗುರುತಿಸುತ್ತಿದ್ದರು. ನಂತರ ಲವ್ ಸ್ಟೋರಿ ಓರಿಯೆಂಟೆಡ್ ಸಿನಿಮಾ ಗಳಿಗಿಂತ ಸಾಂಸರಿಕ ಚಿತ್ರಗಳ ಕಡೆಗೆ ರಾಧಿಕಾ ಕುಮಾರಸ್ವಾಮಿ ಮುಖ ಮಾಡಿದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೊಂದಿಗೆ ತವರಿಗೆ ಬಾ ತಂಗಿ ಎನ್ನುವ ಸಿನಿಮಾದಲ್ಲಿ ಅದ್ಭುತವಾದ ಪಾತ್ರದಲ್ಲಿ ಕಾಣಿಸಿಕೊಂಡ ರಾಧಿಕಾ ಕುಮಾರಸ್ವಾಮಿ ಅವರು ಎಲ್ಲರ ಹೃದಯ ಕರಗುವಷ್ಟು ಸಹಜ ಅಭಿನಯ ಮಾಡಿ ಕನ್ನಡದಲ್ಲಿ ಮತ್ತೊಬ್ಬ ಕಣ್ಣೀರನ್ನು ನಟಿ ಎನ್ನುವ ಖ್ಯಾತಿ ಪಡೆದರು

ಈ ಸಿನಿಮಾವು ಕೂಡ ನಿರೀಕ್ಷೆಗೂ ಮೀರಿದಷ್ಟು ಗೆಲುವು ತಂದು ಕೊಟ್ಟಿದ್ದು ಹಾಗೂ ಶಾಶ್ವತವಾಗಿ ಶಿವರಾಜ್ಕುಮಾರ್ ಅವರನ್ನು ಶಿವಣ್ಣನಾಗಿ ಹಾಗೂ ರಾಧಿಕಾ ಕುಮಾರಸ್ವಾಮಿ ಅವರು ತಂಗಿ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗೆ ಇರುವುದರಿಂದ ಇವರಿಬ್ಬರು ನಿಜ ಅಣ್ಣ ತಂಗಿ ಎಂದೇ ಭಾಸವಾಗುವಂತೆ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಮತ್ತೊಮ್ಮೆ ಇಬ್ಬರ ಕಾಂಬಿನೇಷನ್ ಅಲ್ಲಿ ಅಣ್ಣ ತಂಗಿ ಎನ್ನುವ ಮತ್ತೊಂದು ಸೆಂಟಿಮೆಂಟ್ ಸಿನಿಮಾ ಬಂತು ಆ ಸಿನಿಮಾ ಕೂಡ ಇದೇ ರೀತಿ ಸೂಪರ್ ಹಿಟ್ ಆಯ್ತು ಸಿನಿ ಜರ್ನಿಯಲ್ಲಿ ಸತತವಾಗಿ ಯಶಸ್ಸು ಕಂಡಿರುವ ರಾಧಿಕಾ ಅವರು ವೈಯುಕ್ತಿಕ ಜೀವನದಲ್ಲಿ ಆ ಮಟ್ಟದ ಸಂತಸ ಕಂಡಿಲ್ಲ ಎಂದು ಹೇಳಬಹುದು. ಕಾರಣ ಇವರ ಮೊದಲ ವಿವಾಹ 14ನೇ ವಯಸ್ಸಿನಿಗೆ ಜರುಗಿತು. ಬಾಲ್ಯ ವಿವಾಹವಾಗಿದ್ದ ಇವರು 2002ರಲ್ಲಿ ತಮ್ಮ ಪತಿ ರತನ್ ಕುಮಾರ್ ಅವರನ್ನು ಕಳೆದುಕೊಂಡರು. ಬಳಿಕ 2006ರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ವಿವಾಹವಾದರು.

ಮೊದರಿಂದಲೂ ಡ್ಯಾನ್ಸ್ ಬಗ್ಗೆ ಬಹಳ ಆಸಕ್ತಿ ಹೊಂದಿರುವ ಇವರು ತಮ್ಮ ಖಾತೆಯಲ್ಲಿ ಆಗಾಗ ಅವರು ನೃತ್ಯ ಮಾಡಿರುವ ವಿಡಿಯೋ ಬೈಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲೀ ಸಕ್ಕತ್ ಆಕ್ಟಿವ್ ಆಗಿರುವ ಇವರ ರೋಮ್ಯಾಂಟಿಕ್ ಡ್ಯಾನ್ಸ್ ವಿಡಿಯೋ ಇಂಟರ್ನೆಟ್ ಅಲ್ಲಿ ಮತ್ತೆ ವೈರಲ್ ಆಗುತ್ತಿದೆ. ವೇದಿಕೆ ಮೇಲೆ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋ ನ ಮತ್ತೊಬ್ಬ ಜಡ್ಜ್ ಆಗಿದ್ದ ಸಲ್ಮಾನ್ ಅವರೊಂದಿಗೆ ರಾಧಿಕಾ ಕುಮಾರಸ್ವಾಮಿ ಅವರು ಕನ್ನಡ ಹಾಡೊಂದಕ್ಕೆ ಹಾಗೂ ಹಿಂದಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ ಆ ನೃತ್ಯದ ವಿಡಿಯೋ ಇದಾಗಿದೆ. ಡ್ಯಾನ್ಸ್ ಮಾಡೋದೆಂದರೆ ನನಗೆ ತುಂಬಾ ಖುಷಿ ಅಂತ ರಾಧಿಕಾ ಕುಮಾರಸ್ವಾಮಿ ಅನೇಕ ಸಂದರ್ಶನಗಳಲ್ಲಿ ಹೇಳಿದ್ದಾರೆ. ಆಗಾಗ ರಾಧಿಕಾ ಕುಮಾರಸ್ವಾಮಿ ಅವರ ಡ್ಯಾನ್ಸ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಧಿಕಾ ಕುಮಾರಸ್ವಾಮಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. 2012ರಲ್ಲಿ ಬಿಡುಗಡೆಯಾದ ಲಕ್ಕಿ ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿ ಬಂಡವಾಳ ಹಾಕಿದ್ದರು. ‘ಲಕ್ಕಿ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಗೋಲ್ಡನ್ ಕ್ವೀನ್ ರಮ್ಯಾ ಮುಂತಾದವರು ಅಭಿನಯಿಸಿದ್ದರು. ಇನ್ನೂ, 2013ರಲ್ಲಿ ರಿಲೀಸ್ ಆದ ಸ್ವೀಟಿ ನನ್ನ ಜೋಡಿ ಚಿತ್ರವನ್ನೂ ರಾಧಿಕಾ ಕುಮಾರಸ್ವಾಮಿ ನಿರ್ಮಾಣ ಮಾಡಿದ್ದರು.

ಸರ್ಕಾರಿ ಶಾಲೆ ಬಗ್ಗೆ ಗಂಟೆಗಟ್ಟಲೆ ಮಾತಾಡೋ ದರ್ಶನ್ ಪ್ರೈವೇಟ್ ಸ್ಕೂಲ್ ನಲ್ಲಿ ತಮ್ಮ ಮಗನಿಗೆ ಕಟ್ತಾ ಇರೋ ಸ್ಕೂಲ್ ಫೀಸ್ ಎಷ್ಟು ಗೊತ್ತ.? ನಿಜಕ್ಕೂ ತಲೆ ತಿರುಗುತ್ತೆ ಈ ವಿಡಿಯೋ ನೋಡಿ

ಸದ್ಯಕ್ಕೆ ಕರ್ನಾಟಕದಾದ್ಯಂತ ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾಗಳಲ್ಲಿ ಒಂದು ಕ್ರಾಂತಿ. ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಎನ್ನುವ ಕಾರಣಕ್ಕೆ ಅವರ ಅಭಿಮಾನಿಗಳು ಕಾಯುತ್ತಿದ್ದರೆ ಇದುವರೆಗೆ ಯಾವ ಮಾಧ್ಯಮ ಕೂಡ ಕ್ರಾಂತಿ ಸಿನಿಮಾದ ಬಗ್ಗೆ ಪ್ರಚಾರ ನೀಡದ ಕಾರಣ ಇದು ಯಾವ ವಿಷಯದ ಕ್ರಾಂತಿ ಮಾಡುವ ಸಲುವಾಗಿ ತಯಾರಾಗಿರುವ ಸಿನಿಮಾ ಆಗಿರಬಹುದು ಎನ್ನುವ ಕುತೂಹಲಕ್ಕಾಗಿಯೇ ಹಲವು ಮಂದಿ ಕಾಯುತ್ತಿದ್ದಾರೆ.

ಈಗಾಗಲೇ ಈ ವರ್ಷದ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾ ರಿಲೀಸ್ ಆಗುತ್ತದೆ ಎಂದೇ ಬಹುತೇಕ ನಿರೀಕ್ಷೆ ಇತ್ತು, ಆದರೆ ಸಿನಿಮಾದ ಅಂತಿಮ ಭಾಗದ ಕೆಲಸ ಬಾಕಿ ಇರುವುದರಿಂದ ಸಿನಿಮಾ ತಂಡ ಕೊಟ್ಟಿರುವ ಮಾಹಿತಿ ಪ್ರಕಾರ 2023 ಜನವರಿ 26 ನೇ ತಾರೀಖಿನಂದು ರಾಜ್ಯದೆಲ್ಲೆಡೆ ಸಿನಿಮಾ ಬಿಡುಗಡೆ ಅಗಲಿದೆ. ಈ ನಡುವೆ ಕ್ರಾಂತಿ ಸಿನಿಮಾ ಬಗ್ಗೆ ಪ್ರಚಾರ ಕೂಡ ಶುರು ಮಾಡಿದ್ದು ಸಿನಿಮಾದ ಡೈರೆಕ್ಟರ್ ಗಳಾದ ಆದ ಬಿ ಸುರೇಶ್ ಹಾಗೂ ಹರಿಕೃಷ್ಣ ಮತ್ತು ನಾಯಕ ನಟ ದರ್ಶನ್ ಅವರು ಈ ಸಂಬಂಧಿತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದೇ ವೇಳೆ ಮಾತನಾಡಿದ ದರ್ಶನ್ ಅವರು ಕ್ರಾಂತಿ ಸಿನಿಮಾದ ಕುರಿತು ಜನರಿಗಿರುವ ಆಸಕ್ತಿಯನ್ನು ಅರಿತು ಸಿನಿಮಾ ಬಗ್ಗೆ ಹಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ತಿಳಿಸಿ, ಸಿನಿಮಾ ಯಾವ ರೀತಿ ಇರಲಿದೆ ಎನ್ನುವುದರ ಬಗ್ಗೆ ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಜೊತೆಗೆ ಮಾತಿನ ಮಧ್ಯೆ ಅವರು ಅವರ ಮಗನಿಗಾಗಿ ವರ್ಷಕ್ಕೆ ಕಟ್ಟುತ್ತಿರುವ ಶಾಲಾ ಫೀಸ್ ಬಗ್ಗೆ ಕೂಡ ಹೇಳಿದ್ದಾರೆ. ಕ್ರಾಂತಿ ಸಿನಿಮಾವು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ನಾವು ಕನ್ನಡದಲ್ಲಿ ಸಿನಿಮಾ ಮಾಡಿದ್ದೇವೆ ಬೇಕಾದರೆ ಡಬ್ಬಿಂಗ್ ಮಾಡಿಕೊಡುತ್ತೇವೆ ಅಷ್ಟೇ.

ಅಲ್ಲಿಗೆ ಹೋಗಿ ಪ್ರಚಾರ ಮಾಡುವ ಯಾವ ಆಲೋಚನೆಯಲ್ಲಿ ನಾನಂತೂ ಇಲ್ಲ ಎಂದು ಹೇಳಿರುವ ಇವರು, ಕ್ರಾಂತಿ ಸಿನಿಮಾವು ಶಿಕ್ಷಣದ ಕ್ರಾಂತಿ ವಿಷಯ ತಿಳಿಸಲು ಬರುತ್ತಿದೆ ಇಂದು ಎಜುಕೇಶನ್ ಸಿಸ್ಟಮ್ ಯಾವ ರೀತಿ ಇದೆ ಎಂದು ಎಲ್ಲರಿಗೂ ತಿಳಿದಿದೆ. ಕೆಲವು ದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಎರಡು ಉಚಿತವಾಗಿ ಸಿಗುತ್ತಿದೆ. ಆದರೆ ನಮ್ಮ ದೇಶದಲ್ಲಿ ವ್ಯವಸ್ಥೆ ಹೇಗಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಇಂದು ಶಿಕ್ಷಣ ವಿಷಯದಲ್ಲಿ ಹೇಗೆ ಜನರ ದುಡ್ಡು ಹೀರುತ್ತಿದ್ದಾರೆ ಎಂದರೆ ನಾನೇ ನನ್ನ ಮಗನಿಗೆ ವರ್ಷಕ್ಕೆ 8 ಲಕ್ಷ ಫೀಸ್ ಕಟ್ಟುತ್ತಿದ್ದೇನೆ.

ಆದರೆ ನಮ್ಮ ಕಾಲದಲ್ಲಿ ತಿಂಗಳಿಗೆ 40 ರೂಪಾಯಿಯಲ್ಲೇ ಮುಗಿಯುತಿತ್ತು. ದೇಶವೇ ಮೆಚ್ಚುವಂತಹ ಸಾಧನೆ ಮಾಡಿದಂತಹ ವಿಶ್ವೇಶ್ವರಯ್ಯ ಮುಂತಾದವರು ಸರಕಾರಿ ಶಾಲೆಯಲ್ಲಿ ಓದಿಯೇ ದೊಡ್ಡವರಾದವರು ಆದರೆ ಈಗ ಯಾಕೆ ಆ ರೀತಿ ಒಳ್ಳೆಯ ಶಿಕ್ಷಣ ಸಿಗುತ್ತಿಲ್ಲ ಇಷ್ಟೆಲ್ಲ ಹೇಗೆ ಬದಲಾಯಿತು ಎನ್ನುವ ವಿಷಯದ ಬಗ್ಗೆ ಬೆಳಕು ಚೆಲ್ಲಿದ್ದೇವೆ. ಸಿನಿಮಾದಲ್ಲಿ ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆಯ ನಡುವಿನ ವ್ಯತ್ಯಾಸ ತಿಳಿಸಿದ್ದೇವೆ ಎಂದರು.

ನಾವು ಹೇಳಿದ ತಕ್ಷಣವೇ ಎಲ್ಲಾ ಬದಲಾಗಿಬಿಡುತ್ತದೆ ಎಂದಲ್ಲಾ ಹೇಗೆ ಯಜಮಾನ ಸಿನಿಮಾ ನೋಡಿದ ಬಳಿಕ ಅನೇಕ ಮಂದಿ ಗಾಣದ ಎಣ್ಣೆ ಬಳಸಲು ಶುರು ಮಾಡಿದರು ಹಾಗೆ ಕ್ರಾಂತಿ ಸಿನಿಮಾ ನೋಡಿದ ಬಳಿಕ ಕೂಡ ಸರ್ಕಾರಿ ಶಾಲೆಗಳ ಉದ್ದಾರದತ್ತ ಎಲ್ಲರ ಗಮನ ಹೋಗಬಹುದು ಎನ್ನುವುದು ನಮ್ಮ ಉದ್ದೇಶ ಎಂದು ಕೂಡ ನುಡಿದರು. ಆ ಪ್ರಯತ್ನದಲ್ಲಂತೂ ನಾವಿದ್ದೇವೆ. ಅದ್ಭುತವಾದ ಸಿನಿಮಾ ಮಾಡಿದ್ದೇನೆ ಎಂದಲ್ಲ ಒಂದು ವಿಶೇಷವಾದ ವಿಷಯ ಇಟ್ಟುಕೊಂಡು ಒಳ್ಳೆ ಸಿನಿಮಾ ಮಾಡಿದ್ದೇನೆ, 6 ರಿಂದ 60 ವರ್ಷದವರೆಗೆ ಮನೆ ಮಂದಿ ಕುಟುಂಬದವರೆಲ್ಲರ ಜೊತೆ ಕೂತು ನೋಡುವಂತ ಸಿನಿಮಾ ಮಾಡಿದ್ದೇನೆ ಎನ್ನುವ ಸಮಾಧಾನದಲ್ಲಿದ್ದೇನೆ ಎಂದು ಸಿನಿಮಾ ಕುರಿತು ಮಾಹಿತಿ ನೀಡಿದರು.

 

ಕನ್ನಡ ರಾಜ್ಯೋತ್ಸವ ದಿನವೇ ಕೋಪಗೊಂಡು ಬಿಗ್ ಬಾಸ್ ಮನೆಯಿಂದ ಹೊರ ನಡೆದ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ.

ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ (Rupesh Rajanna) ಕೋಪ ಮಾಡಿಕೊಳ್ಳುವುದು, ಕಿತ್ತಾಡಿಕೊಳ್ಳುವುದು, ಜೋರು ಧ್ವನಿಯಲ್ಲಿ ಮಾತನಾಡುವುದು ಹೊಸದೇನೂ ಅಲ್ಲ. ಬಿಗ್ ಬಾಸ್ ಮನೆಯಲ್ಲಿರುವ ಹಲವಾರು ಜನರ ಜೊತೆ ಅವರು ಹೀಗೆ ಕೋಪ ಮಾಡಿಕೊಂಡಿದ್ದಾರೆ. ಜಗಳವನ್ನೂ ಆಡಿದ್ದಾರೆ. ಆದರೆ, ಪ್ರಶಾಂತ್ ಸಂಬರ್ಗಿ ವಿಷಯದಲ್ಲಿ ಅವರು ಪದೇ ಪದೇ ರೊಚ್ಚಿಗೇಳುತ್ತಲೇ ಇರುತ್ತಾರೆ.

ಇವತ್ತು ಕೂಡ ಬಿಗ್ ಬಾಸ್ ಮನೆಯಲ್ಲಿ ಜೋರಾಗಿಯೇ ಗಲಾಟೆ ಆಗಿದ್ದು, ರೂಪೇಶ್ ರಾಜಣ್ಣ ತಮ್ಮ ಬ್ಯಾಗ್ ತಗೆದುಕೊಂಡು ದೊಡ್ಮನೆಯಿಂದ ಹೊರ ಹೋಗುವುದಾಗಿ ಅಬ್ಬರಿಸಿದ್ದಾರೆ. ಬ್ಯಾಗ್ ಎತ್ತಿಕೊಂಡು ಮನೆಯಿಂದ ತಮ್ಮನ್ನು ಕಳುಹಿಸುವಂತೆ ಮನೆಯ ಮುಖ್ಯ ಬಾಗಿಲಿನವರೆಗೂ ಬಂದಿದ್ದಾರೆ. ಅವರು ಇಂಥದ್ದೊಂದು ನಿರ್ಧಾರ ತಗೆದುಕೊಳ್ಳುವುದಕ್ಕೆ ಕಾರಣವಾಗಿದ್ದು ಕ್ಯಾಪ್ಟನ್ಸಿ ಟಾಸ್ಕ್.

ಇದೀಗ ಬಿಗ್ ಬಾಸ್ (Bigg Boss Season 9) ಮನೆಯ ಕ್ಯಾಪ್ಟನ್ ಆಗಿ ಅನುಪಮಾ ಗೌಡ ಆಯ್ಕೆಯಾಗಿದ್ದಾರೆ. ಅವರ ಮುಂದಾಳತ್ವದಲ್ಲಿ ಕ್ಯಾಪ್ಟನ್ಸಿ ಆಯ್ಕೆಯ ಟೆಸ್ಟ್ ನಡೆದಿತ್ತು. ಗಾರ್ಡನ್ ಏರಿಯಾದಲ್ಲಿ ಬಜರ್ ಒಂದನ್ನು ಇಟ್ಟಿದ್ದು, ಮೊದಲು ಈ ಬಜರ್ ಯಾರು ಒತ್ತುತ್ತಾರೋ, ಅವರು ಕ್ಯಾಪ್ಟನ್ಸಿ ಟಾಸ್ಕ್ ಗೆ ಆಯ್ಕೆ ಆಗಲಿದ್ದಾರೆ ಎನ್ನುವುದು ನಿಯಮವಾಗಿತ್ತು. ಅದರಂತೆ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ಓಡುತ್ತಾ ಬಂದು ಇಬ್ಬರೂ ಒಂದೇ ವೇಳೆಗೆ ಬಜರ್ ಮುಟ್ಟಿದರು. ಅದರಂತೆ ಯಾರು ಮೊದಲು ಮುಟ್ಟಿದ್ದು ಎಂಬ ಗೊಂದಲ ಎದುರಾಯಿತು.

ಮೊದಲು ಬಜರ್ ಮುಟ್ಟಿದ್ದು ನಾನೇ ಎಂದು ಸಂಬರ್ಗಿ (Prashant Sambargi) ಕೈ ಎತ್ತಿದರೆ, ನಾನು ಮುಟ್ಟಿದ್ದು ಎಂದು ರೂಪೇಶ್ ರಾಜಣ್ಣ ಹೇಳಿದರೆ. ಸಂಬರ್ಗಿಯೇ ಮೊದಲು ಮುಟ್ಟಿದ್ದು ಎಂದು ಅನುಪಮಾ ಗೌಡ (Anupama Gowda) ಹೇಳಿದ್ದು ಜಗಳಕ್ಕೆ ಕಾರಣವಾಯಿತು. ಸಂಬರ್ಗಿಯ ಬೆನ್ನಿಗೆ ನಿಂತು ಅವರಿಗೆ ಕ್ಯಾಪ್ಟನ್ ಅನುಪಮಾ ಗೌಡ ಸಪೋರ್ಟ್ ಮಾಡಿದ್ದು ರೂಪೇಶ್ ರಾಜಣ್ಣಗೆ ಸರಿಬರಲಿಲ್ಲ. ಹಾಗಾಗಿ ಇಬ್ಬರ ಮಧ್ಯೆ ಮಾತಿನ ಚಕಮಕಿಯೇ ನಡೆಯಿತು. ಈ ರೀತಿಯಾದರೆ ನಾನು ಮನೆಯಲ್ಲಿ ಇರಲಾರೆ ಎಂದು ಬ್ಯಾಗ್ ಸಮೇತ ಹೊರಟು ನಿಂತರು.

ತಾನು ಮನೆಯಿಂದ ಹೊರ ಹೋಗಬೇಕು, ದಯವಿಟ್ಟು ಬಾಗಿಲು ತೆಗೆಯಿರಿ ಎಂದು ಬಿಗ್ ಬಾಸ್ ಅವರನ್ನು ಕೇಳಿಕೊಂಡರು ರೂಪೇಶ್ ರಾಜಣ್ಣ. ಕೋಪಗೊಂಡಿದ್ದ ರೂಪೇಶ್ ಅವರನ್ನು ರೂಪೇಶ್ ಶೆಟ್ಟಿ ಮತ್ತು ಸಾನ್ಯ ಸಮಾಧಾನಿಸಿದರು. ಆದರೆ, ಅನುಪಮಾ ಗೌಡ ಮಾತ್ರ ತಾವೇನೂ ತಪ್ಪು ಮಾಡಿಲ್ಲ, ಸುಖಾಸುಮ್ಮನೆ ರೂಪೇಶ್ ಕೂಗಾಡಿದ್ರು ಎಂದು ನೊಂದುಕೊಂಡಿದ್ದಾರೆ.

ಎಲ್ಲಾ ಮರೆತು ವೇದಿಕೆ ಮೇಲೆ ಅಪ್ಪಿಕೊಂಡ ಮತ್ತೆ ಒಂದಾದ ರಶ್ಮಿಕಾ & ರಕ್ಷಿತ್ ಶೆಟ್ಟಿ ಈ ವೈರಲ್ ವಿಡಿಯೋ ನೋಡಿ.

ಸ್ನೇಹಿತರೆ ಸಿನಿಮಾ ರಂಗಗಳಲ್ಲಿ ವಿವಾಹವಾಗಲಿ ಎಂಗೇಜ್ಮೆಂಟ್ ಆಗಲಿ ಅರ್ಧಕ್ಕೆ ನಿಲ್ಲುವುದೂ ಸಾಮಾನ್ಯವಾಗಿದೆ. ಇದಕ್ಕೆ ಕೆಲವು ಮನಸ್ತಾಪಗಳಿರಬಹುದು, ಸರಿಯಾದ ಹೊಂದಾಣಿಕೆ ಇಲ್ಲದಿರಬಹುದು ಕೆಲವು ಕಾರಣದಿಂದಾಗಿ ಸಂಬಂಧಗಳು ಮುರಿದು ಬೀಳುತ್ತವೆ. ಈ ಪೈಕಿ ನಮ್ಮ ಕನ್ನಡ ಚಿತ್ರರಂಗದ ನಟ ಹಾಗೂ ನಟಿಯಾಗಿರುವ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ರವರ ಸಂಬಂಧವು ಒಂದು.

ರಶ್ಮಿಕಾ ಮಂದಣ್ಣ ರವರು ಈಗಾಗಲೇ ತೆಲುಗು ತಮಿಳ್ ಹಾಗೂ ಇವುಗಳನ್ನು ಮೀರಿ ಬಾಲಿವುಡ್ ನಲ್ಲಿ ಕೂಡ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಹಾಗೆ ರಕ್ಷಿತ್ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಅವರ ನಟನೆಯಿಂದ ಹಾಗೂ ಅವರ ಮುಗ್ಧ ನಗುವಿನಿಂದ ಸಿಂಪಲ್ ಹುಡುಗ ಎಂದು ಪ್ರಖ್ಯಾತವಾಗಿದ್ದಾರೆ ಅವರ ಚಾರ್ಲಿ 777 ಚಿತ್ರವು ದೇಶದಾದ್ಯಂತ ಹೆಚ್ಚು ಮನ್ನಣೆಯನ್ನು ಗಳಿಸಿದೆ.

ಸ್ವಲ್ಪ ದಿನಗಳ ಹಿಂದೆ ವೇದಿಕೆ ಒಂದರಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕ ಮಂದಣ್ಣ ರವರು ವೇದಿಕೆ ಮೇಲೆ ಒಟ್ಟಾಗಿ ಕಾಣಿಸಿಕೊಂಡಿರುವುದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲಾಗಿದೆ. ಈ ಹಿಂದೆ ಸೈಮ ಅವಾರ್ಡ್ ವೇದಿಕೆಯಲ್ಲಿ ಬೆಸ್ಟ್ ಎಂಟರ್ಟೈನ್ರ್ ಆಫ್ ದಿ ಇಯರ್ ಎಂಬಾ ಪ್ರಶಸ್ತಿಯು ರಕ್ಷಿತ್ ಶೆಟ್ಟಿ ಅವರಿಗೆ ಸಿಕ್ಕಿದೆ. ಈ ವೇಳೆ ಅಕುಲ್ ಬಾಲಾಜಿ ಅವರು ಕಾರ್ಯಕ್ರಮ ನಡೆಯುವಾಗ ರಶ್ಮಿಕ ಅವರವರನ್ನು ವೇದಿಕೆ ಮೇಲೆ ಕರೆಯುತ್ತಾರೆ.

ಆ ವೇಳೆಯಲ್ಲಿ ರಶ್ಮಿಕ ಹಾಗೂ ರಕ್ಷಿತ್ ಶೆಟ್ಟಿ ಅವರು ಜೊತೆಯಾಗಿ ಕಾಣಿಸಿರುವುದು ಎಲ್ಲಾ ಚಿತ್ರರಂಗದವರಿಗೂ ಸಂತೋಷವನ್ನು ಉಂಟು ಮಾಡಿದೆ. ರಶ್ಮಿಕಾ ಮಂದಣ್ಣ ರವರು ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿದ್ದಾರೆ ಹಾಗೆ ಇದೇ ಕಿರಿಕ್ ಪಾರ್ಟಿ ಚಿತ್ರವು ರಕ್ಷಿತ್ ಶೆಟ್ಟಿ ಅವರಿಗೆ ಹೆಸರನ್ನು ತಂದುಕೊಟ್ಟಿದೆ. ಈ ಚಿತ್ರದ ಮೂಲಕ ಜೋಡಿಯಾಗಿ ಕಾಣಿಸಿದ ಇವರಿಬ್ಬರು, ಇವರಿಗೆ ಅಭಿಮಾನಿಗಳು ಪ್ರೋತ್ಸಾಹಿಸುವ ಮೂಲಕ ಒಪ್ಪಿಗೆ ನೀಡಿದ್ದರು.

ಈ ಚಿತ್ರದ ಮೂಲಕ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿದ್ದು, ಎಂಗೇಜ್ಮೆಂಟ್ ವರೆಗೂ ತಲುಪಿತ್ತು. ಕೊಡಗಿನ ವಿರಾಜ್ ಪೇಟೆಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕ ಮಂದಣ್ಣ ರವರ ನಿಶ್ಚಿತಾರ್ಥವು 2017 ಜುಲೈ 3ರಂದು ಬಹಳ ಅದ್ದೂರಿಯಿಂದ ಜರುಗಿತು. ವಿರಾಜಪೇಟೆಯ ಫೆರ್ನಿಟಿ ಹಾಲಲ್ಲಿ ಇವರಿಬ್ಬರು ಪರಸ್ಪರ ಉಂಗುರಗಳನ್ನು ಬದಲಾಯಿಸುವ ಮೂಲಕ ತಮ್ಮ ಸಂಬಂಧಗಳನ್ನು ಅದ್ಭುತವಾಗಿ ಘೋಷಣೆ ಮಾಡಿಕೊಂಡಿದ್ದರು.

ನಿಶ್ಚಿತಾರ್ಥದಲ್ಲಿ ಕೇಕ್ ಅನ್ನು ಕತ್ತರಿಸಿ ಹಿರಿಯರ ಸಮ್ಮುಖದಲ್ಲಿ ಸಂಭ್ರಮವನ್ನು ಆಚರಿಸಿದರು. ಈ ಸಮಾರಂಭಕ್ಕೆ ನಟ ವಿಜಯ ರಾಘವೇಂದ್ರ ರಿಷಬ್ ಶೆಟ್ಟಿ, ನಟಿರಾದ ಯಜ್ಞಾ ಶೆಟ್ಟಿ, ಮೇಘನ ರಾಜ್ ಹಾಗೂ ಶೀತ ಶೆಟ್ಟಿ ಅವರು ಕೂಡ ಭಾಗವಹಿಸಿ, ಇವರಿಬ್ಬರಿಗೂ ಶುಭವನ್ನು ಹಾರೈಸಿದರು.ಆದರೆ ಈ ನಿಶ್ಚಿತಾರ್ಥವು ಬಹಳ ದಿನದವರೆಗೆ ಇರಲಿಲ್ಲ ಕೆಲವೊಂದು ಇವರ ಮಧ್ಯ ಇದ್ದ ಭಿನ್ನಾಭಿಪ್ರಾಯಗಳಿಂದ ಇವರಿಬ್ಬರ ಸಂಬಂಧವು ಮುರಿದುಬಿತ್ತು.

ಇದಾದ ಬಳಿಕ ರಶ್ಮಿಕಾ ಮಂದಣ್ಣ ರವರು ದಕ್ಷಿಣ ಚಿತ್ರರಂಗದಲ್ಲಿ ಬಹಳ ಬಿಸಿ ಇದ್ದರು, ರಶ್ಮಿಕ ಮಂದಣ್ಣ ರವರು ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಷಯವಾಗಿ ಸಾಮಾನ್ಯವಾಗಿ ಟ್ರೋಲ್ ಆಗುತ್ತಿರುತ್ತಾರೆ.  ಸಧ್ಯ ರಕ್ಷಿತ್ ಶೆಟ್ಟಿ ಅವರು ಕೂಡ ತನ್ನ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಚಾರ್ಲಿ 777 ಗಳಂತಹ  ಒಳ್ಳೊಳ್ಳೆ  ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತುಂಬಾ ದಿನದ ಬಳಿಕ ಇವರು ಸೈಮಾ ವೇದಿಕೆ ಮೇಲೆ ಕಾಣಿಸಿಕೊಂಡಿರುವುದು ವಿಶೇಷವಾಗಿತ್ತು.

ಕಾಂತಾರ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಚಿಕ್ಕ ಪಾತ್ರ ಮಾಡಿದ್ರು ಕೂಡ ರಿಷಬ್ ಶೆಟ್ಟಿ ಸ್ನೇಹಿತ ಪ್ರಮೋದ್ ಗೆ ನೀಡಿದ ಸಂಭಾವನೆ ಎಷ್ಟು ಗೊತ್ತ.?

ಸ್ನೇಹಿತರೆ ಒಂದು ಸಿನಿಮಾ ಯಶಸ್ವಿಯಾಗಿ ಪ್ರತಿಸಬೇಕು ಎಂದರೆ ಚಿತ್ರದ ಕಥೆ ಹಾಗೂ ನಿರ್ದೇಶನ ಬಹಳ ಪ್ರಮುಖ ಸ್ಥಾನವನ್ನು ಹೊಂದಿರುತ್ತದೆ ಜನರು ಇತ್ತೀಚೆಗೆ ಹೆಚ್ಚು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಪ್ರೋತ್ಸಾಹಿಸುತ್ತಿರುವ ಚಿತ್ರವೆಂದರೆ ಅದು ಕಾಂತಾರ. ಕಾಂತಾರ ಕನ್ನಡ ಚಿತ್ರ ಸಿನಿಮಾದ ಹೊಸ ಹೆಸರನ್ನು ತಂದಿದೆ ಹಾಗೆ ಇದು ಮೊದಲ ಕನ್ನಡದಲ್ಲಿ ತೆರೆಗೆ ಬಂದು ನಂತರ ಪಂಚ ಭಾಷೆಗಳಲ್ಲಿ ತೆರೆ ಕಂಡಿದೆ.

ಇನ್ನು ಈ ಚಿತ್ರವನ್ನು ನಿರ್ದೇಶಿಸಿ ಹಾಗೂ ನಾಯಕನಟನಾಗಿ ನಟನೆ ಮಾಡಿದ ರಿಷಬ್ ಶೆಟ್ಟಿಯವರು ಈ ಸಿನಿಮಾಗಾಗಿ ಹಲವು ತಿಂಗಳಿಂದ ಹೆಚ್ಚು ಶ್ರಮವನ್ನು ಪಟ್ಟಿದ್ದಾರೆ ಈ ಸಿನಿಮಾಗಾಗಿ ತಮ್ಮ ಕುಟುಂಬದಿಂದ ಕೆಲವು ದಿನಗಳ ಕಾಲ ದೂರ ಇದ್ದರು. ಇದರ ಜೊತೆಗೆ ಚಿತ್ರದಲ್ಲಿ ಬಹಳ ಅದ್ಭುತವಾಗಿ ನಟನೆಯಲ್ಲಿ ಪಳಗಿರುವ ನಟರನ್ನು ಆಯ್ಕೆ ಮಾಡಿದ್ದಾರೆ. ಸದ್ಯ ಕಾಂತಾರ ಚಿತ್ರವು ಪ್ರಪಂಚದಲ್ಲೆಡೆ ಕನ್ನಡದ ಕಲೆಯನ್ನು ಪ್ರತಿಬಿಂಬಿಸುತ್ತಿದೆ ಹಾಗೂ ಈ ಪ್ರಪಂಚದಲ್ಲಿಲ್ಲಡೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ತುಳಿನಾಡಿನ ಸಂಸ್ಕೃತಿಯಾದ ಭೂತಾರಾಧನೆ ಹಾಗೂ ಕೋಲವನ್ನು ವಿಶಿಷ್ಟ ಶೈಲಿಯಲ್ಲಿ ಚಿತ್ರದ ಮೂಲಕ ವ್ಯಕ್ತಪಡಿಸಿದ್ದಾರೆ ಇಲ್ಲಿ ವ್ಯಕ್ತಪಡಿಸಿರುವ ಕಥೆಯನ್ನು ಹಾಗೂ ನಿರ್ದೇಶನವನ್ನು ಜನರು ಮೆಚ್ಚಿಕೊಂಡಿದ್ದಾರೆ. ಈ ಚಿತ್ರದ ಕೊನೆಯ 20 ನಿಮಿಷಗಳು ಸಿನಿಮಾ ನೋಡುವ ಜನರನ್ನು ಮೈ ಜುಮ್ ಅನ್ನುವಂತೆ ಮಾಡುತ್ತದೆ. ಈ ಸಿನಿಮವು ಹೊಂಬಾಳೆ ಫಿಲಂಸ್ ರವರ ಅಡಿಯಲ್ಲಿ ಕೇವಲ ಹದಿನಾರು ಕೋಟಿಯ ವೆಚ್ಚದಲ್ಲಿ ಮಾಡಲಾಗಿದೆ.

ಕಾಂತಾರ ಸಿನಿಮವು ಕನ್ನಡವಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈಗಾಗಲೇ ಎಲ್ಲಾ ಭಾಷೆಯಲ್ಲಿ ಕೋಟಿ ಕೋಟಿ ಹಣವನ್ನು ದೋಚಿರುವ ಕಾಂತಾರವು ಹೆಚ್ಚು ಮುನ್ನಡೆಯನ್ನು ಭಾರತದಲ್ಲಿ ಕಂಡಿದೆ. ಕೋಟಿಯನ್ನು ದೋಚುವ ಮೂಲಕ ಎಲ್ಲಾ ಸಿನಿಮಾಗಳ ದಾಖಲೆಯನ್ನು ಪುಡಿಪುಡಿ ಮಾಡಿದೆ. ಇನ್ನು ಕಾಂತಾರ ಚಿತ್ರವನ್ನು ವೀಕ್ಷಿಸಿದ ದೊಡ್ಡ ದೊಡ್ಡ ಈ ಚಿತ್ರಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಇನ್ನು ತಮಿಳ್ ತಲೈವಾ ಎಂದು ಹೆಸರುವಾಸಿಯಾದ ರಜನಿಕಾಂತ್ ರವರು ಕೂಡ ಈ ಸಿನಿಮಾವನ್ನು ಹೊಗಳಿದ್ದಾರೆ.

ಕಾಂತಾರವನ್ನು ಭಾರತದ ಮಾಸ್ಟರ್ ಪೀಸ್ ಎಂದು ಹೇಳಿದ್ದಾರೆ ಈ ಸಿನಿಮಾದಲ್ಲಿ ನಟಿಸಿರುವ ಒಬೊಬ್ಬ ಕಲಾವಿದರು ಕೂಡ ಅವರದೇ ಆದ ಚಾಪನ್ನು ಚಿತ್ರದಲ್ಲಿ ಮೂಡಿಸಿದ್ದಾರೆ. ಇನ್ನು ಈ ಚಿತ್ರದಲ್ಲಿ ನಟಿಸಿರುವ ಕಲಾವಿದರ ಸಂಭಾವನೆಗೆ ಬಂದರೆ ಅದರಲ್ಲೂ ರಿಷಬ್ ಶಟ್ಟಿ ಅವರ ಸ್ನೇಹಿತನಾದ ಪ್ರಮೋದ್ ಶೆಟ್ಟಿ ಅವರ ಸಂಭಾವನೆ ಕುರಿತು ಇಲ್ಲಿ ಹೇಳಲಾಗಿದೆ ಪ್ರಮೋದ್ ಶೆಟ್ಟಿಯವರು ಇಲ್ಲಿ ರಾಜಕೀಯ ವ್ಯಕ್ತಿಯಾಗಿ ನಟಿಸಿದ್ದಾರೆ.

ಸಾಮಾನ್ಯವಾಗಿ ಪ್ರಮೋದ್ರವರು ರಿಷಬ್ ಹಾಗೂ ರಕ್ಷಿತ್ ಶೆಟ್ಟಿಯವರ ಜೊತೆಗೆ ನಟಿಸುವುದು ಎಲ್ಲರಿಗೂ ತಿಳಿದಿರುವ ವಿಷಯ ಅವರು ಈಗಾಗಲೇ ಉಳಿದವರು ಕಂಡಂತೆ, ಅವನ ಶ್ರೀಮನ್ನಾರಾಯಣ, ಹರಿಕಥೆಯಲ್ಲ ಗಿರಿಕಥೆ, ಚಿತ್ರಗಳಲ್ಲಿ ನಟಿಸಿದ್ದಾರೆ ಇವರ ಅದ್ಭುತವಾದ ನಟನೆಯು ಇವರನ್ನು ಬಹು ಬೇಡಿಕೆ ನಟರನ್ನಾಗಿ ಮಾಡಿದೆ ಎಂದು ಹೇಳಿದರೆ ಸುಳ್ಳಾಗದು.

ಕಾಂತಾರ ಚಿತ್ರದಲ್ಲಿ ಕೆಲವು ಸಮಯಗಳ ಕಾಲ ಪ್ರೇಕ್ಷಕರನ್ನು ಹಾಸ್ಯಮಯವಾಗಿ ನಗಿಸುವ ಪಾತ್ರವು ಇವರದ್ದಾಗಿದೆ ಇನ್ನು ಸಂಭಾವನೆ ವಿಷಯಕ್ಕೆ ಬಂದರೆ ಪ್ರಮೋದ್ ಶೆಟ್ಟಿ ಅವರು ಕಾಂತಾರ ಸಿನಿಮಾಗಾಗೀ 50 ಲಕ್ಷಗಳನ್ನು ಸಂಭಾವನೆ ಪಡೆದಿದ್ದಾರೆ. ಇನ್ನು ಈ ಚಿತ್ರವು ನೂರು ದಿನಗಳು ಪ್ರದರ್ಶನ ಕಂಡರೆ ಮತ್ತೆ ಈ ಚಿತ್ರದಲ್ಲಿ ನಟಿಸಿರುವ ಕಲಾವಿದರಿಗೆ ಸಂಭಾವನೆಯನ್ನು ಇನ್ನಷ್ಟು ಕೊಡಲಾಗುವುದು ಎಂದು ಹೇಳಲಾಗಿದೆ ಹೊಂಬಾಳೆ ಫಿಲ್ಸಂ ನವರು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.