Home Blog Page 45

ಮಿಥುನ ರಾಶಿಯ ಮಾರ್ಚ್ ಮಾಸ ಭವಿಷ್ಯ, ಇದೊಂದು ಸಾಧನೆ ಆಗೋದಿದೆ ನಿಮ್ಮಿಂದ.!

 

ಮಾರ್ಚ್ 7ನೇ ತಾರೀಖಿನಿಂದಲೇ ಮಿಥುನ ರಾಶಿಯವರಿಗೆ ಸಾಕಷ್ಟು ಬದಲಾವಣೆಗಳ ಪರಿಚಯ ಆಗುತ್ತಾ ಹೋಗುತ್ತದೆ ಮತ್ತು ಮಾರ್ಚ್ 14ರಂದು ರವಿ ಪರಿವರ್ತನೆ ಆಗುತ್ತಾರೆ. ಮಾರ್ಚ್ 14 ರ ವರೆಗೂ ಕೂಡ ರವಿಯು ನಿಮ್ಮ ಭಾಗ್ಯಸ್ಥಾನದಲ್ಲಿ ಇರುತ್ತಾರೆ, ಇದು ನಿಮಗೆ ಇಷ್ಟ ಫಲಗಳನ್ನು ನೀಡುತ್ತದೆ ಕೆಲಸ ಕಾರ್ಯಗಳ ಕ್ಷೇತ್ರಗಳಲ್ಲಿ ಶೀತ ಸಮರ ಮತ್ತು ಹತ್ತಿರದ ಸಂಬಂಧಿಕರಲ್ಲಿ ಮನಸ್ತಾಪ ಏರ್ಪಟ್ಟಿರುತ್ತದೆ.

ಸಾಲದಕ್ಕೆ ಸಣ್ಣ ವಿಚಾರಗಳು ಕೂಡ ದೊಡ್ಡದಾಗಿ ನಿಮ್ಮ ನೆಮ್ಮದಿ ಕೆಡಿಸಿರುತ್ತದೆ. ನೀವು ಹೇಳುವುದನ್ನು ಯಾರು ಅರ್ಥ ಮಾಡಿಕೊಳ್ಳುವುದಿಲ್ಲ ನೀವು ಸರಿಯಾಗಿ ಕೆಲಸ ಮಾಡುವ ಕಾರಣದಿಂದಲೇ ನಿಮ್ಮ ಮೇಲೆ ಕೆಲಸದ ಒತ್ತಡ ಹೆಚ್ಚಾಗುವುದು ಮತ್ತು ಎಲ್ಲವೂ ಸರಿ ಇದ್ದಾಗಲೂ ಬಹಳ ನೋ’ವಾಗುವುದು ಇಂತಹ ಪರಿಣಾಮಗಳನ್ನು ಅನುಭವಿಸಿರುತ್ತೀರಿ.

ಮಾರ್ಚ್ 14 ರವರೆಗೆ ನೀವು ಅನುಭವಿಸುತ್ತಿದ್ದ ಕ’ಷ್ಟ ನಿಮಗೆ ಗೊತ್ತು. ಸುಖಾಸುಮ್ಮನೆ ಅ’ವ’ಮಾ’ನ ಆಗುವುದು, ನಿಮ್ಮನ್ನು ಬೇಕೆಂದೇ ಕೆರಳಿಸುವುದು, ಟಾರ್ಗೆಟ್ ಮಾಡುವುದು ಇದನ್ನೆಲ್ಲ ಕೂಡ ಸಹಿಸಿ ತಾಳ್ಮೆಯಿಂದ ಕಾಯುತ್ತಿದ್ದ ನಿಮಗೆ ಮಾರ್ಚ್ 14ರ ರವಿ ಪರಿವರ್ತನೆ ನಂತರ ಇದಕ್ಕೆಲ್ಲ ಟಕ್ಕರ್ ಕೊಡುವ ಟೈಮ್ ಬರುತ್ತದೆ. ಮಾರ್ಚ್ 14ಕ್ಕೆ ಸೂರ್ಯನ ಮೀನ ರಾಶಿಗೆ ಹೋಗುತ್ತಾರೆ ಹಾಗೆಯೇ ಶುಕ್ರನು ಕೂಡ ಮೀನ ರಾಶಿಗೆ ಬರುತ್ತಿದ್ದಾರೆ.

ಈ ಸುದ್ದಿ ಓದಿ:- ಈ ಕ್ಷೇತ್ರದಲ್ಲಿ 7 ವಾರ 7 ತೆಂಗಿನ ಕಾಯಿ ಕಟ್ಟಿದರೆ ಏನೇ ಕಷ್ಟ ಇದ್ದರು ಪರಿಹಾರ ಆಗುತ್ತೆ.!

ಇವೆರಡರ ಸಂಯೋಗ ದ್ವಾದಶ ರಾಶಿಗಳಲ್ಲಿ ಬಹಳ ಬದಲಾವಣೆ ಉಂಟು ಮಾಡುತ್ತಿದ್ದು ಅದರಲ್ಲೂ ಮಿಥುನ ರಾಶಿಗೆ ಬಹಳ ಶುಭ ಫಲಗಳನ್ನು ಕೊಡುತ್ತಿದೆ. ರವಿ ಗ್ರಹವು ಏಕದಶ ಭಾಗದಲ್ಲಿರುವಾಗ ಯಶಸ್ಸು ಎನ್ನುವುದು ಕಟ್ಟಿಟ್ಟ ಬುತ್ತಿ ನೀವು ಇಷ್ಟು ದಿನಗಳವರೆಗೆ ಏನು ಕ’ಷ್ಟ, ತೊಂ’ದ’ರೆ ಸಂಕಟ ಅನುಭವಿಸಿದ್ದೀರಾ ಅದೆಲ್ಲಾದಕ್ಕೂ ತಿರುಗಿ ಉತ್ತರ ಸಾಧನೆ ಮೂಲಕ ಕೊಡುವ ಸಮಯ ಬರುತ್ತದೆ.

ಯಾವ ರೀತಿಯ ವಿಷಯಗಳಲ್ಲಿ ಶುಭ ಯೋಗ ಬರುತ್ತಿದೆ ಎಂದು ಹೇಳುವುದಾದರೆ ರಾಜಕೀಯ ಅಥವಾ ಉನ್ನತ ಅಧಿಕಾರ ಈ ರೀತಿ ನಾಯಕತ್ವದ ಸ್ಥಾನದಲ್ಲಿರುವವರಿಗೆ ತಮ್ಮ ಮಾತು ನಿರ್ಣಾಯಕ ಆಗುವಂತಹ ಮಹತ್ವ ಪಡೆದುಕೊಳ್ಳುವ ಸಿದ್ದಿಯನ್ನು ಪಡೆದುಕೊಳ್ಳುತ್ತೀರಿ. ನಿಮ್ಮ ಮಾತಿಗೆ ವಿಪರೀತ ಬೆಂಬಲ ನಿಮ್ಮ ನಿರ್ಧಾರಕ್ಕೆ ಶ್ಲಾಘನೆ ಎಲ್ಲವೂ ಸಿಗುತ್ತದೆ.

ಹಾಗೆಯೇ ಅಷ್ಟು ಜವಾಬ್ದಾರಿಯುತವಾಗಿ ಇದನ್ನು ನಿರ್ವಹಿಸಿ ವೃತ್ತಿ ಕ್ಷೇತ್ರದಲ್ಲಿರುವವರಿಗೂ ಕೂಡ ನಿಮ್ಮ ಕೆಲಸಕ್ಕೆ ಮನ್ನಣೆ ಮತ್ತು ನಿಮಗೆ ಪ್ರಮೋಷನ್ ಸಿಗುವ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಮತ್ತು ಮೇಲಾಧಿಕಾರಿಗಳಿಂದ ನಿಮಗೆ ಸನ್ಮಾನಗಳು ಆಗುವ ಫಲಗಳು ಸಿಗುತ್ತಿದೆ. ಇನ್ನು ವ್ಯಾಪಾರ ವಹಿವಾಟುಗಳಲ್ಲಿ ಇದ್ದವರಿಗೆ ಒಳ್ಳೆಯ ಲಾಭಗಳಾಗುವ ಫಲ ಇದ್ದೇ ಇದೆ, ಅದರ ಬಗ್ಗೆ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ತಮ್ಮ ಕಾಯಿಲೆಗೆ ತಕ್ಕ ಚಿಕಿತ್ಸೆ ದೊರೆತು ಸುಧಾರಿಸಿಕೊಳ್ಳಲಿದ್ದಾರೆ.

ಈ ಸುದ್ದಿ ಓದಿ:-LPG ಗ್ಯಾಸ್ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ರೂ.799 ಕ್ಕೆ ಗ್ಯಾಸ್ ಸಿಲಿಂಡರ್ ಲಭ್ಯ, ರೂ.300 ಫ್ರೀ ಸಬ್ಸಿಡಿ.!

ವಿದ್ಯಾಭ್ಯಾಸದಲ್ಲೂ ಕೂಡ ವಿದ್ಯಾರ್ಥಿಗಳು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲಗಳನ್ನು ಈ ತಿಂಗಳಿನಲ್ಲಿ ಪಡೆಯುತ್ತಾರೆ. ಈ ರೀತಿಯಾಗಿ ಎಲ್ಲ ವಿಧದಲ್ಲೂ ಕೂಡ ಮಿಥುನ ರಾಶಿಗೆ ಮಾರ್ಚ್ 14 ರ ನಂತರ ಶುಭ ಫಲಗಳು ಸಿಗುತ್ತಾ ಇವೆ ಮತ್ತು ಇದರೊಂದಿಗೆ ಜವಾಬ್ದಾರಿಗಳು ಕೂಡ ಹೆಚ್ಚಾಗುತ್ತದೆ.

ನೀವು ಈ ಸಮಯದಲ್ಲಿ ಬಹಳ ಪ್ರಭುದ್ದರಾಗಿ ನಡೆದುಕೊಂಡು ನಿರ್ಧಾರಗಳನ್ನು ತೆಗೆದುಕೊಂಡರೆ ಇದು ನಿಮ್ಮ ಮುಂದಿನ ಜೀವನಕ್ಕೆ ಸೋಪಾನವಾಗಲಿದೆ. ಮಾತಿನ ಮೇಲೆ ಹಿಡಿತ ಇರಲಿ ನಿರ್ಧಾರಕ್ಕೂ ಮೊದಲು ನೂರು ಬಾರಿ ಯೋಚನೆ ಮಾಡಿ ನಿರ್ಣಯ ಮಾಡಿ. ನಿಮಗಿರುವ ಎಲ್ಲಾ ದೋಷಗಳ ಪರಿಹಾರಕ್ಕಾಗಿ ನವಗ್ರಹಗಳ ಆರಾಧನೆ ಮಾಡಿ ಎಲ್ಲವೂ ಒಳ್ಳೆಯದಾಗುತ್ತದೆ.

https://youtu.be/PAG82kN5l4s?si=riVE2F_zShq_-TxI

ಇದೊಂದು ಸತ್ಯ ಘಟನೆ, ಮಕ್ಕಳಿರುವ ಪ್ರತಿಯೊಬ್ಬರು ಹಾಗೂ ಮಕ್ಕಳು ಕೇಳಿ ತಿಳಿದುಕೊಂಡು ಅರಿತು ಬದುಕಿ…

 

ಇದು ನಮ್ಮದೇ ದೇಶದ ಉತ್ತರ ಪ್ರದೇಶದಲ್ಲಿ ನಡೆದ ಒಂದು ಸತ್ಯ ಘಟನೆ ಆಗಿದೆ. ನಮ್ಮ ದೇಶ ಕಾಯುವ ಯೋಧನ ಬದುಕಿನಲ್ಲಿ ನಡೆದ ದು’ರಂ’ತ ಕಥೆಯೊಂದರ ಉದಾಹರಣೆಯೊಂದಿಗೆ ಈಗಿನ ಕಾಲದ ಮಕ್ಕಳ ಮನಸ್ಥಿತಿ ಹೇಗಿದೆ ಇದರಿಂದ ಪೋಷಕರಿಗೆ ಆಗುತ್ತಿರುವ ನ’ಷ್ಟ ಎಷ್ಟು ಹಾಗೂ ಇದರಲ್ಲಿ ಪೋಷಕರ ತಪ್ಪು ಎಷ್ಟು ಎನ್ನುವುದನ್ನು ಮನದಟ್ಟು ಮಾಡಿಸುವ ಪ್ರಯತ್ನವಾಗಿದೆ.

ಮಿಲ್ಟ್ರಿಯಲ್ಲಿ ಕರ್ನಲ್ ಆಗಿದ್ದ ವ್ಯಕ್ತಿಯೊಬ್ಬರಿಗೆ ಇಬ್ಬರು ಗಂಡು ಮಕ್ಕಳಿದ್ದರೂ ಅವರನ್ನು ಪ್ರೀತಿಯಿಂದ ಚಿನ್ನ ಮುನ್ನ ಎಂದು ಕರೆಯಲಾಗುತ್ತಿತ್ತು. ತಂದೆ ಹಾಗೂ ತಾಯಿ, ಇಬ್ಬರು ಸೇರಿ ಮಕ್ಕಳನ್ನು ಬಹಳ ಕಷ್ಟಪಟ್ಟು ಚೆನ್ನಾಗಿ ಬೆಳೆಸಿದರು ಅವರು ಕೇಳಿದ್ದಕ್ಕೆ ಯಾವುದಕ್ಕೂ ಅಡ್ಡಿ ಬರಲಿಲ್ಲ ಅವರ ಇಷ್ಟದಂತೆ ಆಟ ಪಾಠ ಎಲ್ಲವನ್ನು ನಡೆಸಿಕೊಟ್ಟರು ಬೆಳೆದ ಮಕ್ಕಳು ವಿದೇಶದಲ್ಲಿ ಹುದ್ದೆ ಮಾಡಲು ಬಯಸಿ ದೇಶ ಬಿಟ್ಟರು.

ದೇಶದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ತಂದೆಗೆ ಇದು ಇಷ್ಟ ಇರಲಿಲ್ಲ ಆದರೂ ಹೆಂಡತಿಯ ಒತ್ತಾಯಕ್ಕೆ ಕಟ್ಟುಬಿದ್ದು ತಡೆಯಲಾಗಲಿಲ್ಲ. ವಿದೇಶಕ್ಕೆ ಹೋದ ಮಕ್ಕಳು ಅಲ್ಲೇ ಹೆಣ್ಣು ನೋಡಿ ಮದುವೆಯೂ ಮಾಡಿಕೊಂಡರು. ಮೊದಲೇ ಅಪರೂಪ ಆಗಿದ್ದ ಮಕ್ಕಳು ಮದುವೆ ಮಕ್ಕಳು ಎಂದು ಆದ ಮೇಲೆ ದೇಶಕ್ಕೆ ಬರುವುದನ್ನೇ ಬಿಟ್ಟರು.

ನಿಧಾನವಾಗಿ ಹೆತ್ತವರ ಜೊತೆಗಿದ್ದ ಕೊಂಡಿ ಸವೆಯುತ್ತಾ ಬಂತು. ಇಲ್ಲಿ ತಂದೆ ತಾಯಿ ಇಬ್ಬರು ತಮ್ಮ ಮಕ್ಕಳು ಇಂದು ಮನಸ್ಸು ಬದಲಾಯಿಸಿ ಕೊಂಡು ಬರುತ್ತಾರೆ ನಾಳೆ ಬರುತ್ತಾರೆ ಎಂದು ಕಾದಿದ್ದೆ ಆಯ್ತು. ತಂದೆ ತಾಯಿಗೆ ವಯಸ್ಸಾಯ್ತ, ವಯಸ್ಸಾದ ಕಾಲಕ್ಕೆ ಮಕ್ಕಳು ಬಂದು ಆಸರೆಯಾಗುತ್ತಾರೆ ಎಂದುಕೊಂಡಿದ್ದ ಕನಸು ಚೂರಾಯಿತು.

ಕೊನೆ ಕೊನೆಗೆ ಮಕ್ಕಳಿಗೆ ಹೆತ್ತವರ ಜೊತೆ ಸಮಯ ಕಳೆಯುವುದಿರಲಿ ಫೋನಿನಲ್ಲಿ ಮಾತನಾಡಲು ಕೂಡ ಮನಸಿರದಷ್ಟು ಉತ್ಸಾಹ ಕಡಿಮೆ ಆಯ್ತು. ಇದಕ್ಕೆ ಬ್ಯುಸಿ ಎನ್ನುವ ನೆಪ, ಇದೇ ಕೊರಗಿನಲ್ಲಿ ಕರ್ನಲ್ ಹೆಂಡತಿ ಮೃ’ತಪಡುತ್ತಾರೆ. ಅಂದು ಕಿರಿಯ ಮಗ ತಾಯಿಯ ಅಂತ್ಯಸಂಸ್ಕಾರಕ್ಕೆ ಬರುತ್ತಾನೆ, ಇಲ್ಲಿ ಬಂದು ಬಾಂಧವರೆಲ್ಲ ಸೇರಿರುತ್ತಾರೆ.

ಹಿರಿಯ ಮಗ ಮಾತ್ರ ಇನ್ನು ಪತ್ತೆ ಇಲ್ಲ ಎಲ್ಲರೂ ಕೂಡ ಹಿರಿಯ ಮಗ ಬರಲಿ ಹಿರಿಯ ಮಗ ಕೊನೆ ಬಾರಿ ತಾಯಿ ಮುಖ ನೋಡಲಿ ಎಂದು ಕಾಯುತ್ತಿರುತ್ತಾರೆ. ಆದರೆ ಆ ಸಮಯದಲ್ಲಿ ಕಿರಿಯ ಮಗ ಹೆಂಡತಿ ಹತ್ತಿರ ಹೇಳುತ್ತಿರುತ್ತಾನೆ. ಶಾಸ್ತ್ರದ ಪ್ರಕಾರ ಅಮ್ಮನ ಕೊನೆಯ ವಿಧಿ ವಿಧಾನಗಳನ್ನು ಕಿರಿಯ ಮಗ ಮಾಡಬೇಕು ಅದಕ್ಕೆ ನಾನು ಬಂದಿದ್ದೇನೆ.

ಅಪ್ಪ ಸತ್ತಾ.ಗೆ ಹಿರಿಯ ಮಗ ಬರ್ತಾನೆ ಇಲ್ದಿರುವವರಿಗೆ ಅದು ಗೊತ್ತಿಲ್ಲ ಹೇಳಲು ಆಗುತ್ತಿಲ್ಲ ಎಂದು ಇದನ್ನು ಕೇಳಿದ ಕರ್ನಲ್ ಅವರ ಹೃದಯ ಅಲ್ಲೇ ಒಡೆಯುತ್ತದೆ. ಏನು ಮಾತನಾಡದೆ ಕಣ್ಣಿನಲ್ಲಿ ನೀರು ತುಂಬಿಕೊಂಡು ಅವರು ಹೋಗಿ ಕೊಠಡಿ ಬಾಗಿಲು ಹಾಕಿಕೊಳ್ಳುತ್ತಾರೆ ಮತ್ತು ಒಂದು ಪತ್ರದಲ್ಲಿ ಈ ರೀತಿ ಬರೆಯುತ್ತಾರೆ.

ನಾನು ಮತ್ತು ನನ್ನ ಹೆಂಡತಿ ನಮ್ಮ ಜೀವನವನ್ನೆಲ್ಲ ನಮ್ಮ ಮಕ್ಕಳ ಬದುಕು ಕಟ್ಟುವುದರಲ್ಲಿ ಕಳೆದೆವು, ನಮ್ಮ ಮಕ್ಕಳು ಚೆನ್ನಾಗಿರಬೇಕು ಎಂದು ಆಸೆ ಪಟ್ಟೆವು, ನಮ್ಮ ಮಕ್ಕಳು ಕೊನೆಯವರೆಗೂ ನಮ್ಮ ಜೊತೆಗೆ ಸಂತೋಷವಾಗಿರುತ್ತಾರೆ ಎಂದು ಬಯಸಿದೆವು ಅದು ಕೂಡ ಆಗಲಿಲ್ಲ, ಕೊನೆಗೆ ಅಂತ್ಯಕಾಲದಲ್ಲಾದರೂ ಜೊತೆಗೆ ಇರುತ್ತಾರೆ ಎಂದುಕೊಂಡರೆ ಹೆತ್ತವರ ಸತ್ತಾಗಲು ಬರುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದಾರೆ.

ಅಂತ್ಯಸಂಸ್ಕಾರಕ್ಕೂ ಬರಲು ಅವರಿಗೆ ಆಗುತ್ತಿಲ್ಲ ಎಂದರೆ ಅವರ ಈ ಮನಸ್ಥಿತಿಗೆ ಕಾರಣ ಏನು ನಾವು ಬೆಳೆಸಿದ್ದರಲ್ಲೇ ಏನಾದರೂ ದೋಷವಾಯಿತೇ? ಅವರಿಗೆ ವಿದ್ಯೆ ಕಲಿಸುವುದರಲ್ಲಿ ತೋರಿಸಿದ ಆಸಕ್ತಿಯನ್ನು ಸ್ವಲ್ಪ ಸಂಸ್ಕಾರ ಕಲಿಸುವುದರಲ್ಲಿ ಕೂಡ ತೋರಬೇಕಿತ್ತು. ನಾವು ಕೊಟ್ಟ ಸ್ವತಂತ್ರವನ್ನು ಸ್ವೇಚ್ಛಾಚಾರ ಮಾಡಿಕೊಂಡಿದ್ದಾರೆ ಎಲ್ಲವೂ ಕೈಮೀರಿ ಹೋಗಿದೆ.

ನನ್ನ ಹೆಂಡತಿ ಕೊನೆ ಆಸೆ ಇಬ್ಬರು ಮಕ್ಕಳನ್ನು ಕಡೆಗಾಲದಲ್ಲಿ ಕಾಣಬೇಕು ಎನ್ನುವುದು ಆದರೆ ಅದು ಆಗಲಿಲ್ಲ ಈಗ ಅಂತ್ಯ ಸಂಸ್ಕಾರಕೂ ಬರುತ್ತಿಲ್ಲ ನಾನು ಸತ್ತರೆ ಹಿರಿಯ ಮಗ ಬರುತ್ತಾನೆ ಎಂದು ನಾನು ಸಾ’ಯುತ್ತಿದ್ದೇನೆ. ನನ್ನ ಆಸ್ತಿಯಲ್ಲಿ ಅರ್ಧ ಪಾಲು ವೃದ್ಧಾಶ್ರಮಕ್ಕೆ ಹಾಗೂ ಅರ್ಧ ಪಾಲು ಸೈನಿಕರ ಶ್ರೇಯೋಭಿವೃದ್ಧಿಗೆ ಕೊಡಿ.

ಎಲ್ಲ ಸರ್ಕಾರಿ ಗೌರವಗಳನ್ನು ಪದವಿ ಪಾರತೋಷಕಗಳನ್ನು ಸರ್ಕಾರಕ್ಕೆ ಮರಳಿ ಕೊಟ್ಟುಬಿಡಿ. ನಮ್ಮ ಸಾ’ವು ಎಲ್ಲರಿಗೂ ಪಾಠವಾಗಲಿ ಎಂದು ಬರೆದು ಗುಂಡು ಹಾರಿಸಿಕೊಂಡು ಸ’ತ್ತು ಹೋಗುತ್ತಾರೆ. ಇಷ್ಟನ್ನು ಕೇಳಿದ ಮೇಲೆ ಹೆಚ್ಚಿಗೆ ವಿವರಿಸುವ ಅಗತ್ಯವೇ ಇಲ್ಲ ಎಲ್ಲರ ಮನಸ್ಸಿನಲ್ಲಿ ಯಾರದ್ದು ಸರಿ ಯಾರದ್ದು ತಪ್ಪು ಎಂದು ಲೆಕ್ಕಾಚಾರ ಬಂದಿರುತ್ತದೆ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

 

ಶೀಘ್ರ ವಿವಾಹಕ್ಕೆ ಸರಳ ಪರಿಹಾರ, ತಾಯಿ ಬನಶಂಕರಮ್ಮನಿಗೆ ಹೀಗೆ ಸಂಕಲ್ಪ ಮಾಡಿ.!

 

ಈಗಿನ ಕಾಲದಲ್ಲಿ ಬಹುತೇಕರ ಸಮಸ್ಯೆ ವಿವಾಹ ವಿಳಂಬವಾಗುತ್ತಿದೆ ಎನ್ನುವುದು. ವಿವಾಹ ವಿಳಂಬವಾದರೆ ಅದೊಂದು ಮಾನಸಿಕ ಒತ್ತಡವೇ ಆಗುತ್ತದೆ. ವ್ಯಕ್ತಿ ಮಾತ್ರ ಅಲ್ಲದೇ ಕುಟುಂಬದವರು ಕೂಡ ಇದರಿಂದ ನೋ’ವು ಪಡುತ್ತಾರೆ. ಈ ಕಾಲದಲ್ಲಿ ಹೆಣ್ಣು ಮಕ್ಕಳಿಗೂ ಮತ್ತು ಹೆಚ್ಚಾಗಿ ಗಂಡು ಮಕ್ಕಳಿಗೂ ಕೂಡ ಈ ಸಮಸ್ಯೆ ಇದೆ.

ಹತ್ತಾರು ಕಡೆ ಸಂಬಂಧ ನೋಡಿಕೊಂಡು ಬಂದರು ಯಾವುದು ಒಪ್ಪಿಗೆ ಆಗುವುದಿಲ್ಲ ಅಥವಾ ವಿವಾಹಕ್ಕೆ ಸಂಬಂಧಿಸಿದ ಇನ್ನಿತರ ತೊಡಕುಗಳು ಇರುತ್ತವೆ. ಒಟ್ಟಾರೆಯಾಗಿ ಯಾವುದೋ ಕಾರಣದಿಂದ ನಿಮಗೆ ಕಂಕಣ ಭಾಗ್ಯ ಕೂಡಿ ಬಂದಿಲ್ಲ ಎಂದರೆ ಇದರ ಪರಿಹಾರವಾಗಿ ಶೀಘ್ರವೇ ನಿಮಗೆ ಕಲ್ಯಾಣ ಭಾಗ್ಯ ದೊರಕಲು ನಾವು ಹೇಳುವ ರೀತಿಯಲ್ಲಿ ಸರಳವಾಗಿ ಒಂದು ಆಚರಣೆಯನ್ನು ಶ್ರದ್ಧೆ ಭಕ್ತಿಯಿಂದ ಮಾಡಿ ಸಾಕು.

ಬಾದಾಮಿಯ ಬನಶಂಕರಮ್ಮನ ಶಕ್ತಿಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಶಾಕಾಂಬರಿ ಸ್ವರೂಪಿ ಬನಶಂಕರಮ್ಮನ ದೇವಸ್ಥಾನ ಬಾದಾಮಿಯಲ್ಲಿ ಮಾತ್ರವಲ್ಲದೆ ಬೆಂಗಳೂರು ಸೇರಿದಂತೆ ಕರ್ನಾಟಕದ ನಾನಾ ಕಡೆಗಳಲ್ಲಿ ಇದೆ. ಈ ಬನಶಂಕರಮ್ಮನ ಸನ್ನಿಧಾನದಲ್ಲಿ ನಿಮ್ಮ ಸಮಸ್ಯೆಗೆ ಖಂಡಿತ ಪರಿಹಾರ ಇದೆ ನೀವು ತಾಯಿ ಬನಶಂಕರಿಗೆ ನಾವು ಹೇಳುವ ವಿಧಾನದಲ್ಲಿ ಪೂಜೆ ಸಲ್ಲಿಸಿ ಮನವಿ ಮಾಡಿಕೊಳ್ಳಿ ಸಾಕು.

ಈ ಸುದ್ದಿ ಓದಿ:- ದೇವರ ಕೋಣೆಯಲ್ಲಿ ಈ 5 ವಸ್ತುಗಳಿದ್ದರೆ ತಕ್ಷಣ ತೆಗೆದುಬಿಡಿ, ಇದರಿಂದ ದೋಷ ಉಂಟಾಗುವುದು ಖಚಿತ…

ಪಾರ್ವತಿ ಸ್ವರೂಪಿಣಿ ಬನಶಂಕರಮ್ಮ ನಿಮಗೆ ವಿವಾಹ ಭಾಗ್ಯ ಒದಗಿಸುತ್ತಾರೆ. ಸಾಮಾನ್ಯವಾಗಿ ಬನಶಂಕರಮ್ಮನ ದರ್ಶನಕ್ಕೆ ಮಂಗಳವಾರ ಶುಕ್ರವಾರ ಹಾಗೂ ಭಾನುವಾರದಂದು ಹೆಚ್ಚಿನ ಭಕ್ತಾದಿಗಳು ಹೋಗುತ್ತಾರೆ ನೀವು ಈ ದಿನಗಳಲ್ಲಿ ಅಥವಾ ವಾರದ ಯಾವುದೇ ದಿನ ಬೇಕಾದರೂ ಈ ಆಚರಣೆ ಮಾಡಬಹುದಾಗಿದೆ.

ಮೊದಲು ಯಾವ ದಿನದಂದು ಹೋಗುತ್ತೀರಿ ಎನ್ನುವುದನ್ನು ನಿರ್ಧಾರ ಮಾಡಿ. ಮನೆ ಸ್ವಚ್ಛ ಮಾಡಿ ಸ್ನಾನ ಮಾಡಿ ಮಡಿಯಲ್ಲಿ ನಿಮ್ಮ ಮನೆದೇವರು ಇಷ್ಟ ದೇವರ ಹೆಸರೇಳಿ ದೀಪ ಹಚ್ಚಿ ಪೂಜೆ ಮಾಡಿ ಮನೆಯಲ್ಲೂ ಕೂಡ ತಾಯಿ ಬನಶಂಕರಿ ಅಮ್ಮನನ್ನು ನೆನೆದು ನಿಮ್ಮ ಸಮಸ್ಯೆ ಬಗ್ಗೆ ಹರಿಸುವಂತೆ ಕೇಳಿಕೊಳ್ಳಿ.

ನಂತರ ಅಮ್ಮನ ಸನ್ನಿಧಿಯಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ನೀವು ತಾಯಿಗೆ ಉಡಿ ತುಂಬುವ ಸೇವೆ ಮಾಡಬೇಕು. ಉಡಿ ತುಂಬಲು ನಾವು ಹೇಳುವ ಈ ವಸ್ತುಗಳನ್ನು ತಪ್ಪದೆ ಇಡಬೇಕು. ನೀವು ಕಡ್ಡಾಯವಾಗಿ ಒಂದು ಹೊಸ ತಟ್ಟೆಯನ್ನು ತೆಗೆದುಕೊಳ್ಳಬೇಕು, ಅದರ ಮೇಲೆ ಒಂದು ರವಿಕೆ ಕಣ ಇಟ್ಟು ಎರಡು ಎಲೆ ಮತ್ತು ಅಡಿಕೆಗಳನ್ನು ಇಟ್ಟು ಒಂದು ಅರಿಶಿಣದ ಕೊಂಬು ಮತ್ತು ಹುತ್ತತ್ತಿ ಇಡಬೇಕು.

ಈ ಸುದ್ದಿ ಓದಿ:-ಈ 6 ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ, ಈ 6 ರಾಶಿಯವರು ಏನು ಮಾಡಿದರು ಲಾಭನೇ.!

ಇದು ಇಟ್ಟ ಮೇಲೆ 11 ಹಸಿರು ಬಣ್ಣದ ಬಳೆಗಳನ್ನು ಇಡಬೇಕು ಎರಡು ಜೋಡಿ ಕಾಯಿಗಳನ್ನು ಇಡಬೇಕು ಮತ್ತು ಮಲ್ಲಿಗೆ ಹೂವಿನ ಮಾಲೆಯನ್ನು ಅರ್ಪಿಸಬೇಕು. ನೆನಪಿರಲಿ ನೀವು ಮಲ್ಲಿಗೆ ಹೂವನ್ನೇ ಅರ್ಪಿಸಬೇಕು ನಂತರ ಅರಿಶಿನ ಕುಂಕುಮವನ್ನು ಕೂಡ ಇಡಿ.

ಇದೆಲ್ಲದರ ಜೊತೆಗೆ ಮುಖ್ಯವಾಗಿ ಅರಿಶಿನದ ದಾರವನ್ನು ಇಡಬೇಕು ಇದನ್ನು ಕಂಕಣ ದಾರ ಎಂದು ಕೂಡ ಕರೆಯುತ್ತಾರೆ. ಇದನ್ನು ಹೇಗೆ ಮಾಡಿಕೊಳ್ಳಬೇಕು ಎಂದರೆ 21 ಎಳೆ, ಹಸಿ ನೂಲನ್ನು ತೆಗೆದುಕೊಂಡು ಅರಿಶಿನದಲ್ಲಿ ಹದ್ದಿ ಕಂಕಣದ ದಾರ ಮಾಡಿಕೊಳ್ಳಬೇಕು. ಇದೇ ಮುಖ್ಯ ಇದೆಲ್ಲವನ್ನು ಬನಶಂಕರಿ ತಾಯಿ ಉಡಿ ತುಂಬಲು ಅರ್ಚಕರಿಗೆ ಹೇಳಿಕೊಡಿ.

ಇದರಲ್ಲಿ ಯಾವುದೇ ವಸ್ತುಗಳನ್ನು ಮರಳಿ ಪಡೆದುಕೊಳ್ಳಬೇಡಿ ಆದರೆ ಆ ಕಂಕಣದ ದಾರವನ್ನು ವಾಪಸ್ಸು ಕೊಡುವಂತೆ ಅರ್ಚಕರ ಬಳಿ ಹೇಳಿ ಅರ್ಚಕರು ಪೂಜೆ ಮಾಡಿ ಆ ದಾರವನ್ನು ನಿಮಗೆ ಕೊಡುತ್ತಾರೆ. ಆ ಸಮಯದಲ್ಲಿ ನಿಮ್ಮ ಮನೆ ಸದಸ್ಯರ ಕೈಯಿಂದ ಅಥವಾ ಅರ್ಚಕರ ಕೈಯಿಂದ ಅದನ್ನು ನಿಮ್ಮ ಕೈಗೆ ಕಟ್ಟಿಸಿಕೊಳ್ಳಿ ಮತ್ತು ಬನಶಂಕರಮ್ಮನಿಗೆ ವಿವಾಹ ವಿಳಂಬವನ್ನು ಪರಿಹರಿಸಿ ಶೀಘ್ರವೇ ಒಳ್ಳೆಯ ಸಂಬಂಧ ಕೂಡಿ ಬಂದು ಒಳ್ಳೆಯ ಸಂಗಾತಿ ಸಿಗುವಂತೆ ಮಾಡಿ ಎಂದು ಕೇಳಿಕೊಳ್ಳಿ.

ಈ ಸುದ್ದಿ ಓದಿ:-ಫ್ರಿಡ್ಜ್ ಮೇಲೆ ಅಪ್ಪಿ ತಪ್ಪಿಯು ಈ 7 ವಸ್ತುಗಳನ್ನು ಇಡಬೇಡಿ, ಅಪ್ಪಿತಪ್ಪಿ ಇಟ್ಟರೆ ಹಣಕಾಸಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಚ್ಚರ.!

ಮತ್ತು ಆ ದಾರವನ್ನು ಯಾವಾಗಲೂ ನಿಮ್ಮ ಕೈನಲ್ಲಿಯೇ ಕಟ್ಟಿಕೊಂಡಿರಿ ನೀವು ಹೆಣ್ಣು ನೋಡಲು ಅಥವಾ ಗಂಡು ನಿಮ್ಮನ್ನು ನೋಡಲು ಬಂದಾಗಲೂ ಕೂಡ ಅದು ಕೈಯಲ್ಲಿ ಇರಲಿ ಆದಷ್ಟು ಬೇಗ ನಿಮಗೆ ಮದುವೆ ಆಗುತ್ತದೆ. ವಿವಾಹ ನಡೆದ ಮೇಲೆ ಜೋಡಿಯಾಗಿ ಹೋಗಿ ತಾಯಿ ದರ್ಶನ ಮಾಡಿ.

ಮಿಥುನ ರಾಶಿಗೆ 2024ರ ಶನಿ ಫಲ, ಶನಿ ನಿಮ್ಮ ರಾಶಿಗೆ ಹೀಗಿರುವುದೇ ಒಳ್ಳೆಯದಾ.?

 

2023 ರ ಜನವರಿಯಲ್ಲಿಯೇ ಶನಿ ಸಂಕ್ರಮಣವಾಗಿದೆ, ಈಗ ಶನಿ ನಿಮ್ಮ ಭಾಗ್ಯಸ್ಥಾನದಲ್ಲಿಯೇ ಇದ್ದರು, ಫಲಾನುಫಲಗಳು ಮಾತ್ರ 50:50 ಇತ್ತು. ಒಂದು ರೀತಿಯಲ್ಲಿ ಶನಿಯು ನಿಮ್ಮ ರಾಶಿಯಲ್ಲಿ ತಟಸ್ಥನಾಗಿದ್ದರು ಎಂದೇ ಹೇಳಬಹುದು. ಇದರ ಅರ್ಥ ಏನೆಂದರೆ ಶನಿಯು ಶುಭ ಫಲಗಳನ್ನು ನೀಡದೇ, ಅಶುಭ ಫಲಗಳನ್ನು ತೋರದೆ ನಿರ್ಲಿಪ್ತವಾಗಿದ್ದರು.

ಆದರೆ 2024ರಲ್ಲಿ ಇದು ಬದಲಾವಣೆಯಾಗಿದೆ, ಈ ಬಾರಿ ನೀವು ಸಂತಸ ಪಡಬಹುದು. 50:50 ಇದ್ದ ಫಲವು 20:80 ಆಗಿ ಬದಲಾಗುತ್ತಿದೆ ಶೇಕಡ 80% – 90% ಒಳ್ಳೆಯ ಫಲಗಳನ್ನು ನೀವು ಪಡೆಯಲಿದ್ದೀರಿ. ಶನಿಗೆ ಈ ವರ್ಷದಲ್ಲಿ ಮಿಥುನ ರಾಶಿಗೆ ಯಾವ ವಿಷಯಗಳಲ್ಲಿ ಒಳಿತು ಮಾಡಲಿದ್ದಾರೆ ಮತ್ತು ಯಾವ ವಿಷಯದಲ್ಲಿ ಎಚ್ಚರಿಕೆ ಸೂಚಿಸುತ್ತಿದ್ದಾರೆ ಎನ್ನುವುದರ ವಿವರ ಹೀಗಿದೆ ನೋಡಿ.

ವರ್ಷದ ಆರಂಭದಲ್ಲಿಯೇ ಈ ರೀತಿಯಾದ ಶುಭಫಲಗಳನ್ನು ಪಡೆಯುತ್ತೀರಿ ಎಂದು ಹೇಳಲು ಆಗುವುದಿಲ್ಲ, ನಿಧಾನವಾಗಿ ಶನಿ ಪರಿವರ್ತನೆ ಉಂಟಾದ ಸಮಯದಲ್ಲಿ ಈ ಬದಲಾವಣೆಗಳನ್ನು ಕಾಣುತ್ತೀರಿ. ಶನಿಯ ಫೆಬ್ರವರಿ 11, 2024 ರಿಂದ ಮಾರ್ಚ್ 18 2024ರ ವರೆಗೆ 38 ದಿನಗಳ ಕಾಲ ಅಸ್ತಂಗತನಾಗುತ್ತಿದ್ದಾರೆ.

ಈ ಸುದ್ದಿ ಓದಿ:- ಕನ್ಯಾ ರಾಶಿಗೆ 2024ರ ಶನಿಫಲ ಹೇಗಿದೆ ಗೊತ್ತಾ? ಹಠತ್ತಾಗಿ ಅದೃಷ್ಟ ಪರಿವರ್ತನೆ ಆಶ್ಚರ್ಯ ಖಂಡಿತ…

ಇದರ ನಂತರ ನೀವು ಉತ್ತಮ ಫಲಿತಾಂಶಗಳನ್ನು ಕಾಣುತ್ತಿದ್ದೀರಿ ನೀವು ದೂರದ ಸ್ಥಳಗಳಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ ನೀವು ಹುಟ್ಟೂರಿನಿಂದ ದೂರದ ಸ್ಥಳಗಳಿಗೆ ಹೋಗುತ್ತಿರುವ ಇದು ಒಂದು ವೇಳೆ ಉದ್ಯೋಗದ ಕಾರಣದಿಂದಲೇ ಆಗಿದ್ದರೆ ಆ ಕಾರ್ಯ ನಿಮಗೆ ಕೈ ಹಿಡಿಯಲಿದೆ ವಿದ್ಯಾಭ್ಯಾಸ ಅಥವಾ ಇನ್ನಿತರ ಕಾರಣಕ್ಕಾಗಿ ನೀವು ದೂರದ ಸ್ಥಳಗಳಿಗೆ ಹೋಗುತ್ತಿದ್ದರು ಅದು ನಿಮಗೆ ಶುಭವನ್ನೇ ತರುತ್ತಿದೆ.

ನಿಮ್ಮ ಸ್ವಂತ ಐಡೆಂಟಿಟಿ ಕಟ್ಟಿಕೊಳ್ಳುವುದಕ್ಕೆ 2024 ಬಹಳ ಉತ್ತಮವಾದ ಸಮಯವಾಗಿದೆ. ವಿದ್ಯಾಭ್ಯಾಸದಲ್ಲಿ ಸಾಧನೆಗಳನ್ನು ವೃತ್ತಿ ಜೀವನದಲ್ಲಿ ಅತ್ಯುತ್ತಮ ಮಟ್ಟವನ್ನು ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಸಂಪರ್ಕಗಳನ್ನು ಪಡೆಯುವ ನೀವು ಭಾಗ್ಯಸ್ಥಾನದಲ್ಲಿ ಶನಿ ಇರುವುದರಿಂದ ಅಷ್ಟೇ ಎಚ್ಚರಿಕೆಯಿಂದಲೂ ಇರಬೇಕು.

ಏಕೆಂದರೆ, 20% ಅಶುಭ ಫಲ ಇದೆ ಎನ್ನುವ ವಿಚಾರವನ್ನು ಮರೆಯಬೇಡಿ. ನೀವು ಗಳಿಸಿದ ಎಲ್ಲವನ್ನು ಕೂಡ ಹಾಗೆ ಕಳೆದುಕೊಳ್ಳುವ ಪರಿಸ್ಥಿತಿಗಳು ಎದುರಾಗಬಹುದು ಹಾಗಾಗಿ ಮುಂಜಾಗ್ರತೆಯಿಂದ ಇದರ ಬಗ್ಗೆ ಕಾಳಜಿ ವಹಿಸಿ ಎಚ್ಚೆತ್ತುಕೊಂಡರೆ ಸ್ವಲ್ಪ ಮಟ್ಟಿಗೆ ಇದನ್ನು ತಪ್ಪಿಸಿ ಹುಷಾರಾಗಿ ಇರಬಹುದು.

ಈ ಸುದ್ದಿ ಓದಿ:- ನೀವು ಕೇಳಿದ್ದನ್ನೆಲ್ಲ ದೇವರು ಕೊಡಬೇಕು ಎಂದರೆ ಈ ರೀತಿ ಪ್ರಾರ್ಥಿಸಿ

ಆರೋಗ್ಯದ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಿ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ಮಾಡಿ. ಪಾಕಿಸ್ತಾನದಲ್ಲಿ ಶನಿ ಇರುವುದರಿಂದ ನಿಮಗೆ ದೇವರು, ಧರ್ಮ, ದಾನ ಇವುಗಳಲ್ಲಿ ಮನಸಾಗುತ್ತದೆ ಮತ್ತು ಅನೇಕ ಉತ್ತಮ ಕಾರ್ಯಗಳನ್ನು ಕೂಡ ಕೈಗೊಳ್ಳುತ್ತೀರಿ.

ಹಾಗಾಗಿ ಇದು ನಿಮ್ಮ ರಾಶಿಗೆ ಒಂದು ವಿಶೇಷವಾದ ಫಲವೇ ಆಗಿದೆ ಎನ್ನಬಹುದು. ಇದರ ಪರಿಣಾಮವನ್ನು ನೀವು ನಂತರದ ದಿನಗಳಲ್ಲಿ ಬಹಳ ಉತ್ತಮವಾಗಿ ಪಡೆಯುತ್ತೀರಿ. ಜೂನ್ ಅಂತ್ಯದಿಂದ ನವೆಂಬರ್ 15ರ ವರೆಗೆ ಶನಿಯ ವಕ್ರ ದೃಷ್ಟಿಯು ದ್ವಾದಶ ರಾಶಿಗಳೆಲ್ಲದರ ಮೇಲೆ ಬೀಳುವುದರಿಂದ ನಿಮ್ಮ ರಾಶಿಯು ಇದಕ್ಕೆ ಹೊರತೇನಲ್ಲ.

ಮಿಥುನ ರಾಶಿಗೆ ಇದು ಬಹಳ ಉತ್ತಮವಾದ ಫಲಿತಾಂಶಗಳನ್ನು ತೋರುತ್ತಿದೆ ನಿಮಗೆ ಅನಿರೀಕ್ಷಿತ ಲಾಭ, ನೀವು ಶ್ರದ್ಧೆ ಪಟ್ಟು ಮಾಡಿದ ಕಾರ್ಯದಲ್ಲಿ ಯಶಸ್ಸು, ಸಂಬಂಧಗಳಲ್ಲಿ ಸಮಸ್ಯೆ ನಿವಾರಣೆ ಇನ್ನು ಮುಂತಾದ ಉತ್ತಮ ಫಲಗಳು ಉಂಟಾಗುತ್ತದೆ. ಪ್ರತಿದಿನವೂ ಕೂಡ ಶನಿ ಸ್ತೋತ್ರವನ್ನು ಪಠಿಸಿ ಪ್ರತಿ ಶನಿವಾರ ಶನೇಶ್ವರ ಹಾಗೂ ಆಂಜನೇಯ ಸ್ವಾಮಿ ದರ್ಶನ ಮಾಡಿ ಒಳ್ಳೆಯದಾಗುತ್ತದೆ.

https://youtu.be/AFNcC0DdVmM?si=ZkT135ecyxES01ka

ಕನ್ಯಾ ರಾಶಿಗೆ 2024ರ ಶನಿಫಲ ಹೇಗಿದೆ ಗೊತ್ತಾ? ಹಠತ್ತಾಗಿ ಅದೃಷ್ಟ ಪರಿವರ್ತನೆ ಆಶ್ಚರ್ಯ ಖಂಡಿತ…

 

ಈ ವರ್ಷ ಶನಿ ಪರಿವರ್ತನೆ ಆಗದೆ ಇದ್ದರು ಕನ್ಯಾ ರಾಶಿಗೆ ಅದೃಷ್ಟದ ಪರಿವರ್ತನೆ ಖಂಡಿತಾ ಆಗಲಿದೆ. ಹೇಗೆಂದರೆ 2024ರ ವರ್ಷದಲ್ಲಿ ಶನಿಯು ಅಸ್ತಂಗತನಾಗುತ್ತಾರೆ ಮತ್ತು ಹಿಮ್ಮುಖವಾಗಿ ಚಲನೆ ಮಾಡುವಾಗ ವಕ್ರದೃಷ್ಟಿಯನ್ನು ಬೀರಿ ಬಹಳ ಬದಲಾವಣೆಗಳನ್ನು ಉಂಟು ಮಾಡುತ್ತಿದ್ದಾರೆ.

ದ್ವಾದಶ ರಾಶಿಗಳೆಲ್ಲದ ಮೇಲೆ ಇದರ ಪರಿಣಾಮ ಉಂಟಾಗಲಿದೆ ಅದರಲ್ಲಿ ಕನ್ಯಾ ರಾಶಿಯವರಿಗೆ ಈ ವರ್ಷದಲ್ಲಿ ಶನಿ ಫಲ ಯಾವ ರೀತಿ ಇದೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ. ಮುಖ್ಯವಾಗಿ ಈ ವರ್ಷದಲ್ಲಿ ಎರಡು ರೀತಿಯ ಬದಲಾವಣೆಗಳು ನಿಮ್ಮ ಜೀವನದಲ್ಲಿ ನಡೆಯಲಿದೆ. ಇದು ಶುಭ ಫಲವು ಅಥವಾ ಅಶುಭ ಫಲವೋ ಎನ್ನುವುದು ನೀವು ಇದನ್ನು ಅರಿತು ಎಚ್ಚರಿಕೆಯಿಂದ ನಡೆಯುವುದರ ಮೇಲೆ ನಿರ್ಧಾರ ಆಗುತ್ತದೆ.

ಈ ಸುದ್ದಿ ಓದಿ:- ಮಾರ್ಚ್ 16ರಂದು ಅಮೃತ ಸಿದ್ಧಿ ಯೋಗ, ತಪ್ಪದೇ ಈ ಒಂದು ವಸ್ತುವನ್ನು ಮನೆಗೆ ತನ್ನಿ ನಿಮ್ಮ ಏಳಿಗೆ ತಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ.!

ಮೊದಲನೆಯದಾಗಿ ಫೆಬ್ರವರಿ 11, 2024 ರಲ್ಲಿ ಶನಿ ಅಸ್ತಂಗತನಾಗುತ್ತಿದ್ದಾರೆ ಇದರ ಪರಿಣಾಮ ಹೇಗಿರುತ್ತದೆ ಎಂದರೆ ಶನಿ ಎಂದರೆ ಕರ್ಮಕಾರಕ. ವಿಳಂಬ, ಅಡೆತಡೆ, ಅಡ್ಡಿ, ಆತಂಕ, ಕಷ್ಟ, ಅವಮಾನ, ತೊಂದರೆ ಸೋಂಬೇರಿತನ ಅಂದುಕೊಂಡು ಬಿಟ್ಟಿರುತ್ತೇವೆ. ಆದರೆ ಇದು ಪೂರ್ತಿ ಸರಿಯಲ್ಲ ಎಲ್ಲವೂ ಕರ್ಮ ಆಧಾರಿತವಾಗಿದೆ.

ಒಂದು ವೇಳೆ ನಿಮಗೆ ಗೊತ್ತಿದ್ದೋ ಗೊತ್ತಿರದೆಯೋ ಮಾಡಿದ ತಪ್ಪಿನಿಂದ ಈಗ ಇಂತಹ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದರೂ ಶನಿ ಅಸ್ತಂಗತನಾಗಿರುವ ಈ ಸಮಯದಲ್ಲಿ ನಿಮಗೆ ಇವುಗಳಿಂದ ಪ್ರಭಾವ ಕಡಿಮೆ ಎಂದು ಹೇಳಬಹುದು. ನಿಮ್ಮ ಈ ಕಷ್ಟಗಳು ಕೆಲವು ದಿನಗಳು ಕಣ್ಮರೆಯಾಗಲಿದೆ ಅದರಲ್ಲೂ ಮುಖ್ಯವಾಗಿ ಹಣಕಾಸಿಗೆ ಸಂಬಂಧಪಟ್ಟ ಹಾಗೆ ನೀವು ತೊಂದರೆಯಲ್ಲಿ ಸಿಲುಕಿಕೊಂಡಿದ್ದರೆ ಅದು ಚೇತರಿಕೆಯಾಗಿ ಸುಧಾರಿಸಿಕೊಳ್ಳುವ ಫಲಗಳನ್ನು ಪಡೆಯುತ್ತೀರಿ.

ಈ ಪ್ರಯೋಜನವು ಮಾರ್ಚ್ 18, 2024ರವರೆಗೆ ಅಂದರೆ 38 ದಿನಗಳ ಕಾಲ ಮಾತ್ರ ಇರುತ್ತದೆ ಮತ್ತೆ ಶನಿಯು ಉದಯಿಸಲಿದ್ದಾರೆ. ಆದರೆ ಆತಂಕ ಬೇಡ ಶನಿಯು ಅಸ್ತಂಗತನದ ಸಮಯದಿಂದಲೇ ನಿಮಗೆ ಶುಭ ಫಲಗಳನ್ನು ಕೊಡಲು ಶುರು ಮಾಡಿರುತ್ತಾನೆ. ನಿಮ್ಮ ಆರೋಗ್ಯ ಚೇತರಿಕೆ ಆಗುತ್ತದೆ, ಹೂಡಿಕೆಗಳ ಮೇಲಿನ ಲಾಭಗಳನ್ನು ಹಿಂಪಡೆಯುತ್ತೀರಿ.

ಈ ಸುದ್ದಿ ಓದಿ:-ದೇವರ ಕೋಣೆಯಲ್ಲಿ ಈ 5 ವಸ್ತುಗಳಿದ್ದರೆ ತಕ್ಷಣ ತೆಗೆದುಬಿಡಿ, ಇದರಿಂದ ದೋಷ ಉಂಟಾಗುವುದು ಖಚಿತ…

ವ್ಯಾಪಾರ ವ್ಯವಹಾರ ಚುರುಕುಗೊಳ್ಳುತ್ತದೆ, ವೃತ್ತಿ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತೀರಿ ಇಂತಹ ಇನ್ನು ಅನೇಕ ಉತ್ತಮ ಫಲಗಳನ್ನು ಪಡೆಯುತ್ತೀರಿ ಹಾಗೆಯೇ ನಂತರವೂ ಮೇ ತಿಂಗಳಿನಲ್ಲಿ ಕನ್ಯಾ ರಾಶಿಗೆ ಗುರುವು ಕೂಡ ಭಾಗ್ಯ ಸ್ಥಾನಕ್ಕೆ ಹೋಗುವುದರಿಂದ ಇನ್ನು ಹೆಚ್ಚಿನ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ.

ಜನವರಿ 17, 2023 ರಿಂದಲೂ ಶನಿಯು ಕುಂಭ ರಾಶಿಯಲ್ಲಿಯೇ ಇದ್ದಾರೆ. ರಾಶಿ ಚಕ್ರದಲ್ಲಿ ಬಹಳ ಮಂದವಾಗಿ ಚಲಿಸುವ ಗ್ರಹ ಶನಿಗ್ರಹವಾಗಿದೆ. ಒಂದು ಮನೆಯಿಂದ ಮತ್ತೊಂದು ಮನೆಗೆ ಎರಡು ವರ್ಷಗಳ ಕಾಲ ತೆಗೆದುಕೊಳ್ಳುವ ಶನಿಯು ಜೂನ್ ಅಂತ್ಯದಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದ್ದಾರೆ, ಪರಿಣಾಮ ಶನಿಯ ವಕ್ರ ದೃಷ್ಟಿಯನ್ನು ಅನುಭವಿಸಬೇಕಾಗುತ್ತದೆ.

ಈ ಸುದ್ದಿ ಓದಿ:- ಫ್ರಿಡ್ಜ್ ಮೇಲೆ ಅಪ್ಪಿ ತಪ್ಪಿಯು ಈ 7 ವಸ್ತುಗಳನ್ನು ಇಡಬೇಡಿ, ಅಪ್ಪಿತಪ್ಪಿ ಇಟ್ಟರೆ ಹಣಕಾಸಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಚ್ಚರ.!

ಶನಿಯ ವಕ್ರ ದೃಷ್ಟಿ ಇದ್ದಾಗ ಆರೋಗ್ಯದ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಸಣ್ಣಪುಟ್ಟ ಅ’ಪ’ಘಾ’ತಗಳಾಗುವ ಸಾಧ್ಯತೆ ಇರುತ್ತದೆ. ಪ್ರಯಾಣ ಮಾಡುವವರು ಅಥವಾ ವಾಹನಗಳ ಚಾಲನೆ ಮಾಡುವವರು ಜಾಗೃತಿಯಿಂದ ಇರಿ. ಇಲ್ಲವಾದಲ್ಲಿ ಚಿಕ್ಕದಾಗಿ ಆಗುವ ಸಮಸ್ಯೆಗೆ ನೀವು ಬಹಳ ದೊಡ್ಡ ಬೆಲೆ ತೆರಬೇಕಾಗುತ್ತದೆ.

ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯದ ಬಗ್ಗೆಯೂ ಕೂಡ ಕಾಳಜಿ ಇರಲಿ. ಮನಸ್ಸಿಗೆ ನೋ’ವಾಗುವಂತಹ ಘಟನೆಗಳು ನಡೆಯಬಹುದು ಧೈರ್ಯದಿಂದ ಎದುರಿಸಿ ಈ ಸಮಯವು ಕಳೆದು ಹೋಗುತ್ತದೆ. ಶನಿಯ ವಕ್ರ ದೃಷ್ಟಿ ಜೂನ್ 29, 2024ರಿಂದ ನವೆಂಬರ್ 15, 2024ರವರೆಗೂ ಇರುತ್ತದೆ. ಪ್ರತಿನಿತ್ಯವೂ ಶನಿ ಸ್ತೋತ್ರ ಪಠಿಸಿ ಮತ್ತು ಪ್ರತಿ ಶನಿವಾರ ಶನೇಶ್ವರ ಹಾಗೂ ಆಂಜನೇಯನ ದೇವಸ್ಥಾನಕ್ಕೆ ಭೇಟಿ ಕೊಡಿ ಒಳ್ಳೆಯದಾಗುತ್ತದೆ.

https://youtu.be/EGXQA7GQrek?si=s0Jo-b5cI5mG8zaH

ಕಟಕ ರಾಶಿಗೆ ಈ ವರ್ಷ ಶನಿಫಲ ಯಾವ ರೀತಿ ಇದೆ ಗೊತ್ತಾ.?

 

ಕಟಕ ರಾಶಿಯವರಿಗೆ ಅಷ್ಟಮದಲ್ಲಿ ಶನಿ ಇರುವುದರಿಂದ ಇದರ ಫಲಗಳನ್ನು ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಮಾರ್ಚ್ 2024ರಲ್ಲಿ ಶನಿ ಗ್ರಹದ ಪ್ರಭಾವ ಕಟಕ ರಾಶಿಯ ಮೇಲೆ ಯಾವ ರೀತಿಯೆಲ್ಲಾ ಬೀಳಲಿದೆ, ಯಾವ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು, ಈ ಸಮಯದಲ್ಲಿ ಒಳ್ಳೆಯ ಫಲಗಳು ಕೂಡ ಇವೆಯೇ? ಪರಿಹಾರವೇನು? ಇತ್ಯಾದಿ ವಿಷಯಗಳ ಬಗ್ಗೆ ಈ ಲೇಖನದಲ್ಲಿ ವಿಶೇಷ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.

ನವಗ್ರಹಗಳಲ್ಲಿ ಶನಿಯು ಬಹಳ ಮಂದಗತಿಯಲ್ಲಿ ಸಾಗುವ ಗ್ರಹವಾಗಿದೆ. ಕರ್ಕಾಟಕ ರಾಶಿ ವಿಚಾರವಾಗಿ ಹೇಳುವುದಾದರೆ ಕರ್ಕಾಟಕ ರಾಶಿ ಏಳನೇ ಮತ್ತು ಎಂಟನೇ ಮನೆ ಒಡೆಯನಾದ ಶನಿಯು ಕಟಕ ರಾಶಿಯಿಂದ 8ನೇ ಮನೆಯಲ್ಲಿರುವ ಕುಂಭ ರಾಶಿಯಲ್ಲಿ ನೆಲೆಸುತ್ತಾರೆ.

ಈ ಸುದ್ದಿ ಓದಿ:- ಫ್ರಿಡ್ಜ್ ಮೇಲೆ ಅಪ್ಪಿ ತಪ್ಪಿಯು ಈ 7 ವಸ್ತುಗಳನ್ನು ಇಡಬೇಡಿ, ಅಪ್ಪಿತಪ್ಪಿ ಇಟ್ಟರೆ ಹಣಕಾಸಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಚ್ಚರ.!

ಎಂಟನೇ ಮನೆ.ವಿಳಂಬ ಹಾಗೂ ಅಡೆತಡೆಯನ್ನು ಸೂಚಿಸುತ್ತದೆ. ಇದರ ಪ್ರಭಾವದಿಂದಾಗಿ ನೀವು ಯಾವುದೇ ಕಾರ್ಯವನ್ನು ಮಾಡಲು ಹೊರಟರು ಅದರ ಮೇಲೆ ನೀವೇ ಗೊಂದಲಗುತ್ತೀರಿ ಅಥವಾ ಇವತ್ತು ಮಾಡುವುದು ಬೇಡ ಎಂದು ಆ ಕಾರ್ಯಗಳನ್ನು ಮುಂದಕ್ಕೆ ಹಾಕಲು ನೋಡುತ್ತೀರಿ ಅಥವಾ ನೀವು ಎಷ್ಟೇ ಪ್ರಯುತ್ನ ಪಟ್ಟರು ಆ ಕಾರ್ಯಗಳು ಆಗದಂತೆ ಸಾಕಷ್ಟು ಅಡೆತಡೆಗಳು ಎದುರಾಗಬಹುದು.

ಅದನ್ನೆಲ್ಲಾ ನೀವು ಒಂದಕ್ಕಿಂತ ಹತ್ತು ಪಟ್ಟು ಶ್ರಮ ಹಾಕಿ ಮಾಡಬೇಕಾದ ಪರಿಸ್ಥಿತಿಯು ಬರಬಹುದು ಇದೆಲ್ಲ ಫಲವನ್ನು ಕೊಡುತ್ತಿದೆ. ಇದರೊಂದಿಗೆ ಅಷ್ಟಮ ಶನಿಯ ಪ್ರಭಾವದಿಂದಾಗಿ ಆರೋಗ್ಯ ಹದಗೆಡುವ ಸಣ್ಣಪುಟ್ಟ ಅ’ಪ’ಘಾ’ತಗಳು ಆಗುವ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಸಾಕಷ್ಟು ಈ ಸಮಯದಲ್ಲಿ ಎಚ್ಚರಿಕೆಯಿಂದ ಇರಿ.

ಸಂಗಾತಿಯೊಂದಿಗೆ ಮನಸ್ತಾಪ ಮತ್ತು ಉದ್ಯೋಗ ಸ್ಥಳದಲ್ಲಿ ಕೂಡ ಕಿರಿಕಿರಿ ಮಾನಸಿಕ ಒತ್ತಡ ಇಂತಹ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗಿ ಬರುತ್ತದೆ ಧೈರ್ಯದಿಂದ ಇರಿ ಈ ಸಮಯ ಕಳೆದ ಬಳಿಕ ಬಹಳ ಒಳ್ಳೆಯದಾಗುತ್ತದೆ. ಇದರ ನಡುವೆ ಎರಡು ಸಮಯಗಳಲ್ಲಿ ನೀವು ಸಮಾಧಾನಕರವಾದ ಪರಿಣಾಮಗಳನ್ನು ಕಾಣಬಹುದು.

ಈ ಸುದ್ದಿ ಓದಿ:- ಶಿವನಿಗೆ ಪ್ರಿಯವಾದ 24 ಅಭಿಷೇಕಗಳು, ಯಾವ ಅಭಿಷೇಕ ಮಾಡುವುದರಿಂದ ಏನು ಫಲ ಗೊತ್ತಾ.?

ಅದೇನೆಂದರೆ ಫೆಬ್ರುವರಿ 11, 2024 ರಿಂದ ಮಾರ್ಚ್ 18, 2024ರ ವರೆಗೆ ಶನಿ ಅಸ್ತಂಗತನಾಗಿರುವ ಪರಿಣಾಮವಾಗಿ ನೀವು ಇಷ್ಟು ದಿನಗಳವರೆಗೆ ಪಟ್ಟ ಕಷ್ಟದಲ್ಲಿ ಸ್ವಲ್ಪ ರಿಲೀಫ್ ಸಿಗುತ್ತದೆ ಆದರೆ ಅದು ಕೆಲವು ದಿನಗಳ ವರೆಗೆ ಮಾತ್ರ ಮತ್ತೆ ಹಿಂದಿನ ಯಥಾ ಸ್ಥಿತಿ ಮುಂದುವರೆಯುತ್ತದೆ.

ಈ ಸಮಯದಲ್ಲಿ ನಿಮಗೆ ಹಣಕಾಸಿನ ಪರಿಸ್ಥಿತಿ ಸುಧಾರಿಸುವುದು, ಅನಿರೀಕ್ಷಿತ ಧನ ಲಾಭವಾಗುವುದು ಅಥವಾ ಇದ್ದಕ್ಕಿದ್ದಂತೆ ನಿಮ್ಮ ವ್ಯಾಪಾರ ವ್ಯವಹಾರ ಅಭಿವೃದ್ಧಿ ಹೊಂದಿ ಈ ವರ್ಷದಲ್ಲಿ ಅತ್ಯಂತ ಲಾಭ ಪಡೆಯುವುದು ಇಂತಹ ಪರಿಣಾಮಗಳು ಉಂಟಾಗುತ್ತವೆ 38 ದಿನಗಳ ಈ ಒಳ್ಳೆಯ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ ಇದರ ನಂತರ ಜೂನ್ 29, 2024 ರಿಂದ ನವೆಂಬರ್ 15, 2024ರ ವರೆಗೆ ಶನಿ ಹಿಮ್ಮುಖವಾಗಿ ಚಲನೆ ಆರಂಭಿಸುತ್ತಾನೆ.

ಈ ಸಮಯದಲ್ಲಿ ನಿಮಗೆ ಅಷ್ಟಮ ಶನಿ ಪ್ರಭಾವದಿಂದ ಉಂಟಾಗುತ್ತಿದ್ದ ವಿಪರೀತ ಕಷ್ಟಗಳು ನಿವಾರಣೆಯಾಗಿ ಶನಿಯ ವಕ್ರ ದೃಷ್ಟಿಯಿಂದ ಪಾರಾಗುತ್ತಿರಿ ಎಂದು ಸುಲಭವಾಗಿ ಹೇಳಬಹುದು. ಅದುವರೆಗೂ ನೀವು ಅನುಭವಿಸಿದ್ದ ಉದ್ಯೋಗಕ್ಕೆ ಸಂಬಂಧಿಸಿದ ಕಷ್ಟಗಳು ಅಥವಾ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಅಥವಾ ಸಂಬಂಧಗಳಲ್ಲಿ ಸಮಸ್ಯೆಗಳು ಇವೆಲ್ಲವೂ ನಿವಾರಣೆ ಆಗುತ್ತವೆ.

ಈ ಸುದ್ದಿ ಓದಿ:- ಈ 6 ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ, ಈ 6 ರಾಶಿಯವರು ಏನು ಮಾಡಿದರು ಲಾಭನೇ.!

ನಿಮ್ಮ ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ ಬದುಕಿನಲ್ಲಿ ಕಷ್ಟಗಳು ಕಳೆದು ನೆಮ್ಮದಿ ಬರುತ್ತಿರುವ ಮುನ್ಸೂಚನೆ ಸಿಗುವ ರೀತಿ ಭಾವನೆ ಯಾಗುತ್ತದೆ. ತಪ್ಪದೇ ನೀವು ಪ್ರತಿನಿತ್ಯವು ಶನಿ ಸ್ತೋತ್ರವನ್ನು 11 ಬಾರಿ ಪಟಿಸುವುದರಿಂದ ಶನಿಯ ಪ್ರಭಾವವನ್ನು ಕಡಿಮೆ ಮಾಡಿಕೊಂಡು ಇನ್ನು ಹೆಚ್ಚಿನ ಶುಭ ಫಲಗಳನ್ನು ಪಡೆಯಬಹುದು.
ಸ್ತೋತ್ರ:-
ಓಂ ಪ್ರಾಂ ಪ್ರಿ ಪ್ರೌಂ ಸಃ ಶನೈಶ್ಚರಾಯ ನಮಃ

https://youtu.be/LQUeE8HLIt0?si=92ScUbVozP8iT95g

ಮಾರ್ಚ್ 16ರಂದು ಅಮೃತ ಸಿದ್ಧಿ ಯೋಗ, ತಪ್ಪದೇ ಈ ಒಂದು ವಸ್ತುವನ್ನು ಮನೆಗೆ ತನ್ನಿ ನಿಮ್ಮ ಏಳಿಗೆ ತಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ.!

 

ಒಂದು ವರ್ಷದಲ್ಲಿ ಸಾಕಷ್ಟು ಒಳ್ಳೆಯ ದಿನಗಳು ಇರುತ್ತವೆ ಮತ್ತು ಶುಭ ಮುಹೂರ್ತಗಳು ಕೂಡ ಸಿಗುತ್ತವೆ. ಅಂತಹದ್ದೇ ಒಂದು ಘಳಿಗೆ ಮಾರ್ಚ್ 16 ಶನಿವಾರದ ಮುಂಜಾನೆ 06:30 ರಿಂದ ಸಂಜೆ 4:00. ಈ ಸಮಯವನ್ನು ಅಮೃತ ಸಿದ್ದಿ ಯೋಗ ಎನ್ನಲಾಗುತ್ತಿದೆ. ಬಹಳ ವಿಶೇಷವಾದ ಈ ದಿನವೂ ತಾಯಿ ಮಹಾಲಕ್ಷ್ಮಿಗೆ ಮೀಸಲಾದ ದಿನವಾಗಿದೆ.

ಈ ದಿನದಂದು ನಾವು ಹೇಳುವ ಒಂದು ಸರಳ ಆಚರಣೆಯನ್ನು ಮಾಡಿದರೆ ಸಾಕು, ನೀವು ನಿಮ್ಮ ಜೀವನದ ಬಹುಕಾಲದ ಕಷ್ಟಗಳನ್ನು ಪರಿಹರಿಸಿಕೊಳ್ಳಬಹುದು ಮತ್ತು ನಿಮ್ಮ ಇಷ್ಟಾರ್ಥ ಸಿದ್ದಿಗಾಗಿ ಈ ಸಮಯದಲ್ಲಿ ಪೂಜೆ ಸಲ್ಲಿಸುವುದರಿಂದ ಶೀಘ್ರವಾಗಿ ಅದೆಲ್ಲ ಕೈಗೂಡುತ್ತದೆ. ಬಹಳ ನಂಬಿಕೆ ಹಾಗೂ ಶ್ರದ್ಧೆಯಿಂದ ನೀವು ಈ ಪೂಜೆ ಕೈಕೊಂಡಿದ್ದೇ ಆದಲ್ಲಿ ಖಂಡಿತವಾಗಿಯೂ ತಾಯಿ ಮಹಾಲಕ್ಷ್ಮಿ ಆಶೀರ್ವಾದದಿಂದ ಬಹಳ ಒಳ್ಳೆಯದಾಗುತ್ತದೆ.

ಈ ದಿನ ಎಂದಿನಂತೆ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶುದ್ಧಿಯಾಗಿ ಮಡಿ ಬಟ್ಟೆ ಹಾಕಿಕೊಳ್ಳಿ. ಮನೆಯಲ್ಲಿ ನಿಮ್ಮ ನಿತ್ಯ ಪೂಜೆಯನ್ನು ಮುಂದುವರಿಸಿ, ನಂತರ ನಾವು ಹೇಳಿದ ಸಮಯ ಆರಂಭವಾಗಿ ಮುಕ್ತಾಯವಾಗುವುದರ ಒಳಗೆ ನೀವು ಈ ಪೂಜೆಯನ್ನು ಮಾಡಬೇಕು.

ಈ ಸುದ್ದಿ ಓದಿ:- ನೀವು ಕೇಳಿದ್ದನ್ನೆಲ್ಲ ದೇವರು ಕೊಡಬೇಕು ಎಂದರೆ ಈ ರೀತಿ ಪ್ರಾರ್ಥಿಸಿ

ಈ ಪೂಜೆಯನ್ನು ಮಾಡುವುದಕ್ಕಾಗಿ ನೀವು ದುಬಾರಿ ಬೆಲೆಯ ವಸ್ತ್ರ ದ್ರವ್ಯಗಳನ್ನು ತರುವ ಅವಶ್ಯಕತೆ ಇಲ್ಲ ನಿಮ್ಮ ಶಕ್ತಿಯನುಸಾರವಾಗಿ ಬಹಳ ಸರಳವಾಗಿ ಈ ಪೂಜೆಯನ್ನು ಮಾಡಬಹುದು. ತಾಯಿ ಮಹಾಲಕ್ಷ್ಮಿಗೆ ಇಷ್ಟವಾದ ಎರಡು ವಸ್ತುಗಳು ಹಾಗೂ ದೇವರ ಮೇಲಿರುವ ನಿಮ್ಮ ಶ್ರದ್ಧೆ, ಭಕ್ತಿ, ನಂಬಿಕೆಯಷ್ಟೇ ಈ ಪೂಜೆಗೆ ಮುಖ್ಯ.

ನಾವು ಹೇಳಿದ ಸಮಯದಲ್ಲಿ ತಾಯಿ ಮಹಾಲಕ್ಷ್ಮಿಯ ಫೋಟೋ ಇಟ್ಟುಕೊಳ್ಳಿ ಅಥವಾ ವಿಗ್ರಹ ಇದ್ದರೆ ವಿಗ್ರಹವನ್ನು ಇಟ್ಟುಕೊಳ್ಳಿ. ವಿಗ್ರಹವನ್ನು ಕೂಡ ಶುದ್ಧ ಮಾಡಿ ಅರಿಶಿನ ಕುಂಕುಮ ಹೂ ಇಟ್ಟು ಅಲಂಕರಿಸಿ ಫೋಟೋ ಅಥವಾ ವಿಗ್ರಹದ ಮುಂದೆ ಕುಳಿತುಕೊಳ್ಳಿ.

ಒಂದು ಲೋಟದಲ್ಲಿ ಹಸುವಿನ ಹಾಲನ್ನು ತೆಗೆದುಕೊಳ್ಳಿ ಈ ಹಾಲನ್ನು ಕಾಯಿಸಿರಬಾರದು ಶುದ್ಧವಾದ ಹಸುವಿನ ಹಾಲು ಸಿಕ್ಕಿದರೆ ಒಳ್ಳೆಯದು ಇಲ್ಲವಾದಲ್ಲಿ ನೀವು ಅಂಗಡಿಯಿಂದ ತರುವ ಪಾಕೆಟ್ ಹಾಲನ್ನೇ ಕಾಯಿಸುವ ಮುನ್ನ ಒಂದು ಲೋಟ ಇಟ್ಟುಕೊಳ್ಳಬಹುದು.

ಈ ಸುದ್ದಿ ಓದಿ:- ಫ್ರಿಡ್ಜ್ ಮೇಲೆ ಅಪ್ಪಿ ತಪ್ಪಿಯು ಈ 7 ವಸ್ತುಗಳನ್ನು ಇಡಬೇಡಿ, ಅಪ್ಪಿತಪ್ಪಿ ಇಟ್ಟರೆ ಹಣಕಾಸಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಚ್ಚರ.!

ಇದರ ಜೊತೆಗೆ ನಿಮ್ಮ ಶಕ್ತಿಯನುಸಾರ ಕಲ್ಲು ಸಕ್ಕರೆಯನ್ನು ಖರೀದಿಸಿ ಬಿಳಿ ಅಥವಾ ಕೆಂಪು ಬಣ್ಣದ ಕಲ್ಲುಸಕ್ಕರೆ ಯಾವುದು ಸಿಕ್ಕರೂ ಸರಿ ಅದನ್ನು ಕೂಡ ಖರೀದಿಸಿ ಸ್ವಲ್ಪ ಕಲ್ಲು ಸಕ್ಕರೆಯನ್ನು ಹಾಲಿನ ಒಳಗಡೆ ಹಾಕಿ ಮಿಕ್ಕಿದ್ದನ್ನು ಹಾಗೆ ನೀವು ನೈವೇದ್ಯ ಅರ್ಪಿಸುವ ಬಟ್ಟಲಿನಲ್ಲಿ ಇಟ್ಟುಕೊಳ್ಳಿ.

ಮೊದಲಿಗೆ ತಾಯಿ ಮಹಾಲಕ್ಷ್ಮಿಗೆ ಪೂಜೆ ಮಾಡಿ ಭಕ್ತಿಯಿಂದ ನಮಸ್ಕರಿಸಿ ನಿಮ್ಮ ಕಷ್ಟಗಳನ್ನು ಪರಿಹರಿಸುವಂತೆ ಕೇಳಿಕೊಳ್ಳಿ ಅಥವಾ ನಿಮಗೆ ಯಾವ ಕೋರಿಕೆ ನೆರವೇರಬೇಕು ಎನ್ನುವ ಇಚ್ಛೆ ಇದೆ ಅದಕ್ಕಾಗಿ ಪ್ರಾರ್ಥಿಸಿ. ಉದ್ಯೋಗ, ವ್ಯಾಪಾರ ವ್ಯವಹಾರ ಅಭಿವೃದ್ಧಿ, ಸಂತಾನ ಭಾಗ್ಯ, ಕಂಕಣ ಭಾಗ್ಯ, ಹಣಕಾಸಿನ ತೊಡಕು, ವಿದ್ಯಾಭ್ಯಾಸ ಈ ರೀತಿ ಯಾವುದೇ ಸಮಸ್ಯೆ ಇದ್ದರೂ ಕೂಡ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಅಥವಾ ಸಿದ್ದಿಗಾಗಿ ಪ್ರಾರ್ಥನೆ ಸಲ್ಲಿಸಬಹುದು.

ಪ್ರಾರ್ಥನೆ ಮುಗಿದ ಮೇಲೆ ಕಲ್ಲು ಸಕ್ಕರೆ ಹಾಗೂ ಕಲ್ಲು ಸಕ್ಕರೆ ಹಾಕಿದ ಹಾಲಿನ ನೈವೇದ್ಯ ಮಾಡಿ ನಿಮ್ಮ ಮನೆಯ ಎಲ್ಲರೂ ಕೂಡ ಆ ನೈವೇದ್ಯವನ್ನು ನಂತರ ಪ್ರಸಾದವಾಗಿ ಸೇವಿಸಿ. ನೀವು ಆಶ್ಚರ್ಯ ಪಡುವ ರೀತಿಯಲ್ಲಿ ಈ ಅಮೃತ ಸಿದ್ದಿ ಯೋಗ ಸಮಯದ ಪೂಜೆಯಿಂದ ಬಹಳ ಬೇಗ ನಿಮ್ಮ ಕೋರಿಕೆಗಳು ಈಡೇರುತ್ತವೆ.

ನೀವು ಕೇಳಿದ್ದನ್ನೆಲ್ಲ ದೇವರು ಕೊಡಬೇಕು ಎಂದರೆ ಈ ರೀತಿ ಪ್ರಾರ್ಥಿಸಿ

 ಪ್ರಕೃತಿಯು ಎಷ್ಟು ಸುಂದರವಾಗಿದೆ ನಮ್ಮ ನಂಬಿಕೆಗಳ ಪ್ರಕಾರ ಈ ಜೀವರಾಶಿಯ ಅಣು ಅಣುವು ಕೂಡ ಭಗವಂತನ ಸೃಷ್ಟಿಯೇ ಆಗಿದೆ. ಭಗವಂತನ ಅಪ್ಪಣೆ ಇಲ್ಲದೆ ಒಂದು ಹುಲ್ಲು ಕಡ್ಡಿಶಕೂಡ ಜರುಗುವುದಿಲ್ಲ ಎಂದು ಹೇಳುತ್ತಾರೆ ಕೂಡ. ಹಾಗೆಯೇ ಭಗವಂತನ ಸಾಕ್ಷಾತ್ಕಾರ ಇದ್ದರೆ ಏನು ಬೇಕಾದರೂ ಬದಲಾಗಬಹುದು.

ಇದನ್ನು ಅರಿತಿದ್ದ ಬಸವಣ್ಣನವರು ನೀನೊಲಿದರೆ ಕೊರಡು ಕೊನರುವುದಯ್ಯ ಎನ್ನುವ ವಚನವನ್ನು ಬರೆದರು. ವೇದ, ಉಪನಿಷತ್ತು, ಧರ್ಮ ಗ್ರಂಥಗಳು, ವಚನ, ಕೀರ್ತನೆ ಎಲ್ಲದರ ಸಾರವೂ ಇದೇ. ಇಲ್ಲಿ ಎಲ್ಲವೂ ದೈವೇಚ್ಛೆ ನಾವು ನೆಪ ಮಾತ್ರ, ಸೂತ್ರಧಾರನ ಕೈಯಲ್ಲಿ ಕುಣಿಯುವ ಪಾತ್ರಧಾರಿಗಳು ನಾವೆಲ್ಲಾ ಎಂದು.

ಇಷ್ಟೆಲ್ಲ ಗೊತ್ತಿದ್ದರೂ ನಮ್ಮಲ್ಲಿ ಎಷ್ಟು ಜನರು ತಮ್ಮ ಬದುಕಿನ ಬಗ್ಗೆ ತೃಪ್ತಿಪಟ್ಟು ಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಕೂಡ ಇರುವುದೆಲ್ಲವನ್ನು ಬಿಟ್ಟು ಇಲ್ಲದಿದ್ದರ ಬಗೆಗೆ ಯೋಚನೆ, ಪ್ರತಿನಿತ್ಯವೂ ದೇವರಿಗೆ ಪೂಜೆ ಮಾಡುವುದೇ ತಮ್ಮ ಇಷ್ಟಾರ್ಥಗಳಿಗೆ ಅರ್ಜಿ ಹಾಕುವುದಕ್ಕೆ ಎಂದುಕೊಂಡು ಬಿಟ್ಟಿದ್ದಾರೆ.

ಈ ಸುದ್ದಿ ಓದಿ:- ಶಿವನಿಗೆ ಪ್ರಿಯವಾದ 24 ಅಭಿಷೇಕಗಳು, ಯಾವ ಅಭಿಷೇಕ ಮಾಡುವುದರಿಂದ ಏನು ಫಲ ಗೊತ್ತಾ.?

ಒಂದಾದರ ಮೇಲೆ ಒಂದರಂತೆ ಇವರ ಕೋರಿಕೆಯ ಪಟ್ಟಿಗಳು ಬೆಳೆಯುತ್ತಲೇ ಹೋಗುತ್ತದೆ ಮತ್ತು ಇನ್ನೂ ಒಂದು ವರ್ಗ ಇದೆ ಅವರು ಅನುದಿನವೂ ದೇವರಿಗೆ ಶಾಪ ಹಾಕುತ್ತಿರುತ್ತಾರೆ, ದೇವರಿಗೆ ನಿಂದಿಸುತ್ತಿರುತ್ತಾರೆ. ನಾನು ಅಂದುಕೊಂಡ ರೀತಿ ನೀನು ನಡೆಸಿಕೊಡುತ್ತಿಲ್ಲ ಎಂದು ಕೋ’ಪ ತೋರುತ್ತಿರುತ್ತಾರೆ.

ಹಾಗಾದರೆ ಭಗವಂತನನ್ನು ಒಲಿಸಿಕೊಳ್ಳುವ ಪರಿ ಯಾವುದು? ನಾವು ಕೇಳಿದ್ದನ್ನೆಲ್ಲ ದೇವರು ಕೊಡಬೇಕು ಎಂದಾದರೆ ಅದನ್ನು ಹೇಗೆ ಕೇಳಬೇಕು ಗೊತ್ತಾ? ಮಹಾ ಭಾರತದಲ್ಲಿ ಶ್ರೀ ಕೃಷ್ಣ “ಕರ್ಮಣ್ಯೈ ವಾಧಿಕಾರಸ್ತೆ ಮಾ ಫಲೇಶು ಕದಾಚನ” ಎಂದು ಹೇಳಿದ್ದಾರೆ ಇದರ ಅರ್ಥ ನಾವು ನಮ್ಮ ಕರ್ಮವನ್ನು ಮಾಡಿದರೆ ಕರ್ಮಕ್ಕೆ ಅನುಸಾರವಾದ ಫಲಿತಾಂಶವನ್ನು ಭಗವಂತ ನೀಡುತ್ತಾನೆ ಎಲ್ಲವನ್ನು ಅವನ ಇಚ್ಛೆಗೆ ಬಿಟ್ಟು ನಮ್ಮ ಕಾರ್ಯವನ್ನು ನಾವು ಮಾಡಬೇಕು ಎಂದು.

ಈ ಸೃಷ್ಟಿಯಲ್ಲಿ ಒಂದು ಹೂವಿಗೆ ಇರುವ ಪರಿಮಳ, ಮತ್ತೊಂದು ಹೂವಿಗೆ ಇಲ್ಲ ಒಂದು ಪಕ್ಷಿಗೆ ಇರುವ ಬಣ್ಣ ಮತ್ತೊಂದು ಪಕ್ಷಿಗೆ ಇಲ್ಲ, ಒಂದು ಹಣ್ಣು ಕೊಡುವ ರುಚಿಯನ್ನು ಮತ್ತೊಂದು ಹಣ್ಣು ಕೊಡುವುದಿಲ್ಲ ಹಾಗೆಯೇ ಮನುಷ್ಯ ಗಣಕ್ಕೂ ಕೂಡ. ಒಬ್ಬ ಮನುಷ್ಯನ ಬದುಕಿನ ರೀತಿ ಮತ್ತೊಬ್ಬ ಮನುಷ್ಯನು ಇರುವುದಿಲ್ಲ ಎಲ್ಲದಕ್ಕೂ ಎಷ್ಟೆಷ್ಟು ಸಲ್ಲಬೇಕು ಎನ್ನುವುದನ್ನು ಭಗವಂತ ಈಗಾಗಲೇ ನಿರ್ಣಯಿಸಿರುತ್ತಾನೆ.

ಈ ಸುದ್ದಿ ಓದಿ:- ಫ್ರಿಡ್ಜ್ ಮೇಲೆ ಅಪ್ಪಿ ತಪ್ಪಿಯು ಈ 7 ವಸ್ತುಗಳನ್ನು ಇಡಬೇಡಿ, ಅಪ್ಪಿತಪ್ಪಿ ಇಟ್ಟರೆ ಹಣಕಾಸಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಚ್ಚರ.!

ನಮ್ಮ ಆಲೋಚನೆಗಳಿಗಿಂತಲೂ ಭಗವಂತನ ಆಲೋಚನೆ 100 ಪಟ್ಟು ಉತ್ತಮವಾಗಿರುತ್ತದೆ ಇದನ್ನು ನಂಬಿ ಭಗವಂತನ ಮೇಲೆ ಎಲ್ಲಾ ಭಾರವನ್ನು ಹಾಕಿ ಸತ್ಕಾರ್ಯಗಳಲ್ಲಿ ತೊಡಗಿಕೊಂಡು ಸದ್ಬುದ್ದಿಯನ್ನು ಕಲಿತು ಧರ್ಮ ಮಾರ್ಗದಲ್ಲಿ ನಾವು ಸಾಗಬೇಕು. ನೀವು ಬಹಳ ಪ್ರೀತಿಯಿಂದ ಸಾಕುತ್ತಿರುವ ನಿಮ್ಮ ಮಕ್ಕಳಿಗಾಗಿ ನೀವು ಎಷ್ಟು ಕಷ್ಟ ಪಡುತ್ತಿರುತ್ತೀರಾ ಮಕ್ಕಳ ಭವಿಷ್ಯಕ್ಕಾಗಿ ಒಳ್ಳೆ ಶಾಲೆಗೆ ಸೇರಿಸಿರುತ್ತೀರಾ ಆದರೆ ಪ್ರತಿನಿತ್ಯ ಮಕ್ಕಳು ಬಂದು ಒಂದಲ್ಲ ಒಂದು ದೂರು ಹೇಳುತ್ತಿದ್ದರೆ ನಿಮಗೆ ಹೇಗಾಗುತ್ತದೆ.

ಭಗವಂತನಿಗೂ ಹೀಗೆ ಅಲ್ಲವೇ ಹಾಗಾಗಿ ನಿಮಗೆ ಏನೇ ಸಿಕ್ಕಿದ್ದರು ಅದು ದೇವರ ಇಚ್ಛೆ ಆಗಿದೆ ಹಾಗಾಗಿ ಇರುವುದರ ಬಗ್ಗೆ ತೃಪ್ತಿ ಇರಲಿ ಅದನ್ನು ಕೂಡ ಪಡೆಯಲಾಗದವರ ಸ್ಥಿತಿ ಹೇಗಿದೆ ಎಂದು ಒಮ್ಮೆ ಯೋಚಿಸಿ. ದಿನ ಎದ್ದು ಭಗವಂತನಿಗೆ ನೂರಾರು ದೂರು ಹೇಳುವ ಬದಲು ನಿಮ್ಮ ಜೀವನವನ್ನು ಸ್ವಲ್ಪವಾದರೂ ಉತ್ತಮವಾಗಿ ಇಟ್ಟಿರುವುದಕ್ಕೆ ಕೃತಜ್ಞತೆಯನ್ನು ಹೇಳಿ. ನಿಮ್ಮ ಜೀವನದಲ್ಲಿ ಏಳಿಗೆಯಾಗಲು ನಿಮ್ಮ ಕನಸಿನಂತೆ ನೀವು ಬದುಕಲು ಪ್ರಾಮಾಣಿಕವಾದ ಪ್ರಯತ್ನ ಹಾಕಿ ಒಳ್ಳೆಯ ರೀತಿಯಲ್ಲಿ ಕಷ್ಟ ಪಡಿ ಆಗ ಖಂಡಿತ ಭಗವಂತ ದಯೆ ದಾರಿ ತೋರಿಸುತ್ತಾನೆ.

ದೇವರ ಕೋಣೆಯಲ್ಲಿ ಈ 5 ವಸ್ತುಗಳಿದ್ದರೆ ತಕ್ಷಣ ತೆಗೆದುಬಿಡಿ, ಇದರಿಂದ ದೋಷ ಉಂಟಾಗುವುದು ಖಚಿತ…

 

ದೇವರ ಮನೆ ಎನ್ನುವುದು ಮನೆಯಲ್ಲಿನ ಒಂದು ಪವಿತ್ರವಾದ ಭಾಗ ಮನುಷ್ಯನ ದೇಹಕ್ಕೆ ಹೃದಯ ಎಷ್ಟು ಮುಖ್ಯವೋ ಹಾಗೆ ಮನೆ ಎನ್ನುವುದಕ್ಕೆ ದೇವರ ಕೋಣೆಯು ಅಷ್ಟೇ ಮುಖ್ಯ. ನಮಗೆ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಮಡಿಯಾಗಿ ಹೋಗಬೇಕೆಂದು ಎನಿಸುವ ಮೊದಲ ಜಾಗ ಇದೇ, ಹಾಗೆಯೇ ದಿನಪೂರ್ತಿಯ ಜಂಜಾಟದಲ್ಲಿ ಎಷ್ಟೇ ನೋ’ವಾಗಿದ್ದರು ಮನೆಗೆ ಬಂದ ಮೇಲೆ ನಮ್ಮ ಕ’ಷ್ಟ ಸುಖಗಳನ್ನು ನೆಮ್ಮದಿಯಾಗಿ ಕುಳಿತು ಭಗವಂತನ ಬಳಿ ಹೇಳಿಕೊಳ್ಳುತ್ತಿದ್ದೇನೆ ಎನ್ನುವಂತಹ ಭಾವನೆಯನ್ನು ನಮಗೆ ಉಂಟು ಮಾಡುವಂತಹ ಸ್ಥಳ.

ಹಾಗಾಗಿ ದೇವರ ಕೊನೆಯು ಸ್ವರ್ಗಕ್ಕೆ ಸಮಾನ ಎಂದರೆ ತಪ್ಪಾಗಲಾರದು. ಯಾರಿಗೆ ಆಗಲಿ ದೇವರ ಮನೆಯನ್ನು ಹೊಕ್ಕಿದ ತಕ್ಷಣವೇ ಒಂದು ರೀತಿಯ ಸಮಾಧಾನ ಬರುತ್ತದೆ. ಆದರೆ ಇಂತಹ ದೇವರ ಕೋಣೆಯಲ್ಲಿ ಕೆಲವರು ಸಿಕ್ಕಸಿಕ್ಕ ವಸ್ತುಗಳನ್ನೆಲ್ಲ ಇಡುತ್ತಾರೆ.

ಈ ಸುದ್ದಿ ಓದಿ:- ಬುಧವಾರದ ಪಕ್ಷಿಗಳಿಗೆ ಮಿಸ್ ಮಾಡದೆ ಈ ಕಾಳು ತಿನ್ನಿಸಿ, ನೀವು ಅಂದುಕೊಂಡ ಕೆಲಸ 100% ವಾರದೊಳಗೆ ಆಗುತ್ತೆ.!

ಅದರಿಂದ ದೇವರ ಕೋಣೆಗೆ ಇರುವ ಪವಿತ್ರ ಹೋಗುವುದು ಮಾತ್ರವಲ್ಲದೆ ಅವರು ಇದೆಲ್ಲ ಸಕಾರಾತ್ಮಕ ಪರಿಣಾಮಗಳನ್ನು ಅನುಭವಿಸಲು ಆಗುವುದಿಲ್ಲ ಹಾಗಾದರೆ ಯಾವ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡುವುದು ತಪ್ಪು ಇದರಿಂದ ಎಂತಹ ಕಷ್ಟಗಳು ಎದುರಾಗುತ್ತವೆ ಎನ್ನುವುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಲಿ ಎನ್ನುವ ಉದ್ದೇಶದಿಂದ ನಾವು ಈ ಲೇಖನದಲ್ಲಿ ಇದರ ಬಗ್ಗೆ ತಿಳಿಸುತ್ತಿದ್ದೇವೆ.

* ನಾವು ದೇವರಿಗೆ ಅಲಂಕಾರ ಮಾಡಿದ ಹೂವು ಚೆನ್ನಾಗಿದೆ ಎಂದು ಎರಡು ಮೂರು ದಿನಗಳವರೆಗೆ ಅದನ್ನು ಹಾಗೆಯೇ ಬಿಟ್ಟರೆ ದೋಷಗಳನ್ನು ಅನುಭವಿಸಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ನಮ್ಮ ಕೆಲಸಗಳಿಗೆ ವಿಘ್ನಗಳು ಎದುರಾಗುತ್ತವೆ ಮತ್ತು ಯಾವುದೇ ಕೆಲಸ ಮಾಡಲು ಹೊರಟರು ವಿಳಂಬಗಳು ಅಡೆತಡೆಗಳು ಆಗುತ್ತವೆ ಹೊರತು ಕೈಗೊಂಡ ಕಾರ್ಯ ಪೂರ್ತಿ ಆಗುವುದಿಲ್ಲ

* ದೇವರ ಕೋಣೆಯಲ್ಲಿ ನೀವೇನಾದರೂ ವಿಗ್ರಹಗಳನ್ನು ಇಟ್ಟುಕೊಂಡು ಪೂಜೆ ಮಾಡುತಿದ್ದರೆ ಈ ನಿಯಮದ ಬಗ್ಗೆ ತಿಳಿದಿರಿ. ನಿಮ್ಮ ಮನೆಯ ಹಿರಿಯರ ಹೆಬ್ಬೆರಳಿನ ಗಾತ್ರಕ್ಕಿಂತ ಹಿರಿಯ ವಿಗ್ರಹಗಳು ಇರಬಾರದು ಒಂದು ವೇಳೆ ಇದ್ದರೆ ಪ್ರತಿನಿತ್ಯ ಪೂಜೆ ಸಲ್ಲಬೇಕು ತಪ್ಪದೆ ನಿಯಮ ಬದ್ಧವಾಗಿ ನಡೆದುಕೊಂಡು ಧೂಪ ದೀಪ ನೈವೇದ್ಯಗಳನ್ನು ಅರ್ಪಿಸಿ ಆರಾಧಿಸಬೇಕು ಇಲ್ಲವಾದರೆ ನೀವು ಅನೇಕ ಗೃಹ ದೋಷಗಳನ್ನು, ವಾಸ್ತುದೋಷಗಳನ್ನು ಅನುಭವಿಸಬೇಕಾಗುತ್ತದೆ.

ಈ ಸುದ್ದಿ ಓದಿ:-ವೃಷಭ ರಾಶಿಯ ಮಾರ್ಚ್ ತಿಂಗಳ ಮಾಸ ಭವಿಷ್ಯ, ಮಾರ್ಚ್ ತಿಂಗಳಲ್ಲಿ ಸರ್ಪ್ರೈಸ್ ಕಾದಿದೆ ನಿಮಗೆ.!

* ಅದೇ ರೀತಿಯಾಗಿ ದೇವರ ಕೋಣೆಯಲ್ಲಿ ಇಟ್ಟಿರುವ ವಿಗ್ರಹಗಳಲ್ಲಿ ಆಗಲಿ ಫೋಟೋಗಳಲ್ಲಿ ಆಗಲಿ ಮುಖ ಭಾವವು ಶಾಂತ ಸ್ವರೂಪವಾಗಿರಬೇಕು. ಯಾವುದೇ ದೇವರ ಉಗ್ರಾವತಾರದ ಫೋಟೋಗಳನ್ನು ದೇವರ ಕೋಣೆಯಲ್ಲಿ ಇಟ್ಟುಕೊಂಡು ಪೂಜಿಸಬಾರದು.

ಇದರಿಂದ ಮನೆಯ ಶಾಂತಿಯ ವಾತಾವರಣ ಹದಗೆಡುತ್ತದೆ ಮತ್ತು ಮನೆಯಲ್ಲಿ ಕೋ’ಪ ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತದೆ. ನಿಮಗೆ ಆ ದೇವರು ಇಷ್ಟವಾಗಿದ್ದಲ್ಲಿ ನೀವು ತಪ್ಪದೆ ಆ ದೇವರ ದೇವಸ್ಥಾನಗಳಿಗೆ ಹೋಗಿ ದರ್ಶನ ಮಾಡಿ ಸಮಯ ಕಳೆದು ಬರಬಹುದು ಹೊರತು ದೇವರ ಕೋಣೆಯಲ್ಲಿ ಇಡಬಾರದು. ಮನೆಗಳಲ್ಲಿ ಯಾವಾಗಲೂ ಶಾಂತರೂಪದ ದೇವತೆಗಳ ಫೋಟೋಗಳನ್ನು ಆರಾಧಿಸಬೇಕು.

ಈ ಸುದ್ದಿ ಓದಿ:-ಜೀವನಪೂರ್ತಿ ಆರೋಗ್ಯವಾಗಿರಲು ಈ ಸಲಹೆಗಳನ್ನು ಪಾಲಿಸಿ.!

* ದೇವರ ಕೋಣೆಯಲ್ಲಿ ಶಂಖ ಇಡುವುದು ಶ್ರೇಷ್ಠ ಇದು ವಿಷ್ಣುವಿನ ಸ್ವರೂಪ ಎನ್ನಲಾಗಿದೆ. ಆದರೆ ದೇವರಕೋಣೆಯಲ್ಲಿ ಎರಡು ಶಂಖಗಳನ್ನು ಇಡಬಾರದು ಮತ್ತು ಪ್ರತಿದಿನದ ಪೂಜೆಗಾಗಿ ಒಂದೇ ಶಂಖವನ್ನು ಬಳಸಬೇಕು, ಹಾಗೆಯೇ ಇದರಲ್ಲಿ ದೈವಿಕ ಗುಣ ಇರುವುದರಿಂದ ಆಗಾಗ ಇದನ್ನು ಬದಲಾಯಿಸುವುದು ಕೂಡ ಒಳ್ಳೆಯದಲ್ಲ

* ದೇವರ ಕೋಣೆಯಲ್ಲಿ ಯಾವಾಗಲೂ ಪೂಜಾ ಸಾಮಗ್ರಿಗಳು ನಮ್ಮ ಹಿರಿಯರು ಬಳಸಿಕೊಂಡು ಬಂದಿದ್ದ ಪೂಜಾ ಸಾಮಗ್ರಿಗಳೇ ಆಗಿದ್ದರೆ ಬಹಳ ಒಳ್ಳೆಯದು. ಯಾಕೆಂದರೆ ಈ ಸಾಮಗ್ರಿಗಳಲ್ಲಿ ಈಗಾಗಲೇ ದೈವಿಕ ಗುಣ ಬಂದಿರುತ್ತದೆ ಹಾಗಾಗಿ ಎಷ್ಟೇ ಹಳೆಯದಾಗಿದ್ದರು ಇದನ್ನು ಸ್ವಚ್ಛ ಮಾಡಿ ಬಳಸಬೇಕು ಮತ್ತು ಆಗಾಗ ಇವುಗಳನ್ನು ಬದಲಾಯಿಸಲೂ ಬಾರದು ಎನ್ನುತ್ತದೆ ಶಾಸ್ತ್ರ.

ಶಿವನಿಗೆ ಪ್ರಿಯವಾದ 24 ಅಭಿಷೇಕಗಳು, ಯಾವ ಅಭಿಷೇಕ ಮಾಡುವುದರಿಂದ ಏನು ಫಲ ಗೊತ್ತಾ.?

 

ವಿಷ್ಣು ಅಲಂಕಾರ ಪ್ರಿಯ ಹಾಗೂ ಶಿವನು ಅಭಿಷೇಕ ಪ್ರಿಯ ಎನ್ನುವುದು ಲೋಕೋಕ್ತಿ. ವಿಷ್ಣುವಿಗೆ ಎಷ್ಟು ಅಲಂಕಾರ ಮಾಡಿದರು ಸುಂದರ ಮತ್ತು ಅಲಂಕಾರದಿಂದಲೇ ವಿಷ್ಣು ಪ್ರಸನ್ನನಾಗುವುದು ಮತ್ತು ಶಿವ ಇದಕ್ಕೆ ವಿರುದ್ಧ ಭೈರಾಗಿಯಾದ ಹರನಿಗೆ ಜಟೆಯಂತಿರುವ ಕೂದಲು, ಹುಲಿಯ ಚರ್ಮ, ಮೈತುಂಬ ವಿಭೂತಿ ರುದ್ರಾಕ್ಷಿ ಮಣಿ ಇದೇ ಭೂಷಣ.

ಶಿವನಿಗೆ ಅಭಿಷೇಕವನ್ನು ಭಕ್ತಿಯಿಂದ ಮಾಡಬೇಕು ಈ ರೀತಿ ಮಾಡಿದ ಶಿವಪೂಜೆಗೆ ಬಹಳ ಶಕ್ತಿ ಇದೆ. ಸಕಲ ಜೀವದಲ್ಲಿಯೂ ಶಿವನಿದ್ದಾನೆ ಎನ್ನುವುದನ್ನು ನಂಬುವ ಪದ್ಧತಿ ನಮ್ಮದು ಎಲ್ಲಾ ನರರಲ್ಲೂ ಹರನನ್ನೇ ಕಾಣಬೇಕು ಎನ್ನುವುದು ಶಿವ ತತ್ವ. ಶಿವ ಅಭಿಷೇಕ ಮಾಡುವಾಗ ಆಡಂಬರಕ್ಕಿಂತ ಭಕ್ತಿಯೇ ಮುಖ್ಯ.

ದುಬಾರಿ ದ್ರವ್ಯಗಳ ಬಳಕೆಯನ್ನು ಗಂಗಾಧರ ಕೇಳುವುದಿಲ್ಲ, ನಿಜಭಕ್ತಿಯಷ್ಟೇ ಇಲ್ಲಿ ಕೆಲಸ ಮಾಡುವುದು ಅದೇ ಶ್ರೇಷ್ಠ. ರುದ್ರನಾದ ಈ ಮಹಾಕಾಳೇಶ್ವರ ಅಲಂಕಾರ ಬಯಸುವುದಿಲ್ಲ, ಆದರೆ ಅಭಿಷೇಕಗಳಿಂದ ಮಾಡುವ ಪೂಜೆ ಬೇಗ ಸಲ್ಲುತ್ತದೆ.

ಈ ಸುದ್ದಿ ಓದಿ:- ರಾಶಿಗಳ ಪ್ರಕಾರವಾಗಿ ನಿಮ್ಮ ಪ್ರೀತಿ ಹಾಗೂ ಪ್ರೀತಿಸುವ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ನೋಡಿ.!

ಅಭಿಷೇಕಗಳಿಂದ ಶಿವನನ್ನು ಬಹಳ ಬೇಗ ಒಲಿಸಿಕೊಳ್ಳಬಹುದು ಇಷ್ಟಾರ್ಥಗಳು ಸಿದ್ಧಿ ಆಗುತ್ತವೆ ಎಂದು ಹೇಳಲಾಗುತ್ತದೆ. ಶಿವನಿಗೆ ವಿವಿಧ ರೀತಿಯ ಅಭಿಷೇಕಗಳನ್ನು ಮಾಡಲಾಗುತ್ತದೆ ಯಾವ ವಸ್ತುವಿನಿಂದ ಅಭಿಷೇಕ ಮಾಡುವುದರಿಂದ ಯಾವ ಫಲ ದೊರಕುತ್ತದೆ ಎನ್ನುವುದನ್ನು ಎಲ್ಲ ಶಿವಭಕ್ತರಿಗಾಗಿ ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.

* ಗರಿಕೆಯ ನೀರಿನಿಂದ ಶಿವಾಭಿಷೇಕ ಮಾಡುವುದರಿಂದ ಬದುಕಿನ ತೊಂದರೆಗಳೆಲ್ಲವೂ ನಿವಾರಣೆಯಾಗುತ್ತದೆ, ಕಳೆದುಕೊಂಡ ಹಣವನ್ನು ಮರಳಿ ಪಡೆದುಕೊಳ್ಳಬಹುದು.
* ಎಳ್ಳೆಣ್ಣೆಯಿಂದ ಅಭಿಷೇಕ ಮಾಡಿದರೆ ಅ’ಪ’ಮೃ’ತ್ಯು ಭಯ ನಿವಾರಣೆಯಾಗುತ್ತದೆ
* ಹಸುವಿನ ಹಾಲಿನಿಂದ ಮಾಡಿದ ಅಭಿಷೇಕವು ಸಕಲ ಸೌಕರ್ಯಗಳನ್ನು ಕೊಡುತ್ತದೆ

* ಮೊಸರಿನಿಂದ ಮಾಡಿದ ಅಭಿಷೇಕವು ಶಕ್ತಿ, ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡುತ್ತದೆ
* ಹಸುವಿನ ತುಪ್ಪದಿಂದ ಅಭಿಷೇಕ ಮಾಡಿದರೆ ಸಂಪತ್ತು ಸಿಗುತ್ತದೆ
* ಕಬ್ಬಿನ ರಸದಿಂದ ಅಭಿಷೇಕ ಮಾಡಿದರೆ ಸಂಪತ್ತು ಅಧಿಕವಾಗುತ್ತದೆ
* ಮೃದುವಾದ ಸಕ್ಕರೆಯಿಂದ ಅಭಿಷೇಕ ಮಾಡಿದರೆ ದುಃ’ಖವು ನಾಶವಾಗುತ್ತದೆ
* ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ನೀರಿನಿಂದ ಅಭಿಷೇಕ ಮಾಡಿದರೆ ಆನಂದ ವೃದ್ಧಿಯಾಗುತ್ತದೆ.

ಈ ಸುದ್ದಿ ಓದಿ:- BPL, APL, AAY ರೇಷನ್ ಕಾರ್ಡ್ ದಾರರಿಗೆ ಬಿಗ್ ಶಾಕ್, ಇನ್ನು ಮುಂದೆ ಈ ಬಗೆಯ ರೇಷನ್ ಕಾರ್ಡ್ ದಾರರಿಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಬರುವುದಿಲ್ಲ…

* ಜೇನುತುಪ್ಪದಿಂದ ಅಭಿಷೇಕ ಮಾಡಿದರೆ ದೇಹ ಹಾಗೂ ಮಾನಸಿಕ ಅನಾರೋಗ್ಯ ಹಸನಾಗುತ್ತದೆ, ದೇಹದ ಚೈತನ್ಯ ಹೆಚ್ಚಾಗುತ್ತದೆ
* ಎಳನೀರಿನಿಂದ ಮಾಡುವ ಅಭಿಷೇಕದಿಂದ ಸಕಲ ಸುಖ ಸಂಪತ್ತು ದೊರೆಯುತ್ತದೆ
* ರುದ್ರಾಕ್ಷಿ ನೀರಿನ ಜಲಾಭಿಷೇಕವು ಸಕಲ ಸಂಪತ್ತನ್ನು ನೀಡುತ್ತದೆ
* ಭಸ್ಮದಿಂದ ಅಭಿಷೇಕ ಮಾಡಿದರೆ ಹಿಂದಿನ ಜನ್ಮದ ಪಾಪ ಕರ್ಮವೆಲ್ಲಾ ಪರಿಹಾರವಾಗುತ್ತದೆ
* ಗಂದೋಧಕದಿಂದ ಅಭಿಷೇಕ ಮಾಡಿದರೆ ಉತ್ತಮವಾದ ಪುತ್ರ ಸಂತಾನವನ್ನು ಪಡೆಯುತ್ತಾರೆ

* ಚಿನ್ನದ ನೀರಿನ ಅಭಿಷೇಕ ಕಡುಬಡತನವನ್ನು ದೂರ ಮಾಡುತ್ತದೆ
* ಜಲಾಭಿಷೇಕ ಮಾಡುವುದರಿಂದ ಶಿವನ ಅಭಯ ಸಿಗುತ್ತದೆ
* ಅನ್ನದಿಂದ ಅಭಿಷೇಕ ಮಾಡಿದರೆ ದೀರ್ಘಾಯುಷ್ಯ ಹಾಗೂ ಮೋಕ್ಷ ಪ್ರಾಪ್ತಿ
* ಮೊಸರಿನೊಂದಿಗೆ ಅನ್ನವನ್ನು ಬೆರೆಸಿ ಶಿವನಿಗೆ ಅಭಿಷೇಕ ಮಾಡಿ ನಂತರ ಪ್ರಸಾದ ರೂಪದಲ್ಲಿ ಕೊಡಲಾಗುತ್ತದೆ, ಈ ಪ್ರಸಾದ ದೊರೆತರೆ ಪುಣ್ಯಪ್ರಾಪ್ತಿ
* ದ್ರಾಕ್ಷಾ ರಸದಿಂದ ಅಭಿಷೇಕ ಮಾಡಿದರೆ ಶಿವನ ಕೃಪೆಯಿಂದ ಸಕಲ ಕಾರ್ಯದಲ್ಲೂ ಜಯ

* ಖರ್ಜೂರದ ರಸದಿಂದ ಅಭಿಷೇಕ ಮಾಡುವುದರಿಂದ ಶತ್ರು ಕಾಟದಿಂದ ಮುಕ್ತಿ
* ಕಸ್ತೂರಿ ಮಿಶ್ರಿತ ಹಾಲು ಅಥವಾ ನೀರಿನಿಂದ ಅಭಿಷೇಕ ಮಾಡುವುದರಿಂದ ಕೀರ್ತಿ ಪ್ರಾಪ್ತಿಯಾಗುತ್ತದೆ
* ನವರತ್ನಗಳ ನೀರಿನಿಂದ ಅಭಿಷೇಕ ಮಾಡುವುದರಿಂದ ಮನೆಯಲ್ಲಿ ಧನ ಧಾನ್ಯ ದನ ಕನಕಗಳ ಲಾಭ ಉಂಟಾಗುತ್ತದೆ
* ಮಾವಿನ ಹಣ್ಣಿನ ರಸದಿಂದ ಅಭಿಷೇಕ ಮಾಡಿದರೆ ಧೀರ್ಘಕಾಲದ ಖಾಯಿಲೆಗಳಿಂದ ಮುಕ್ತಿ.

ಈ ಸುದ್ದಿ ಓದಿ:-ಈ ಮಂತ್ರ ಹೇಳಿ ಮೂರು ತಿಂಗಳ ಒಳಗೆ ನಿಮಗೆ ಸಂತಾನಭಾಗ್ಯ ಶತಸಿದ್ಧ.!

* ಇವುಗಳಿಂದ ಅಭಿಷೇಕ ಮಾಡಲು ಸಾಧ್ಯವಿಲ್ಲದೆ ಇದ್ದವರು ಪಂಚಾಮೃತದಿಂದ ಅಭಿಷೇಕ ಮಾಡಿದರು ಸಾಕು ಅಥವಾ ತಮ್ಮ ಬಳಿ ಇರುವ ದ್ರವ್ಯಗಳಿಂದಲೇ ಪೂಜೆ ಮಾಡಿದರು ಭಕ್ತಿಯಿಂದ ಶಿವನಿಗೆ ತಮ್ಮ ಶಕ್ತಿ ಅನುಸಾರ ಸಾಧ್ಯವಾಗಿದ್ದನ್ನೇ ಅರ್ಪಿಸುವುದರಿಂದಲೂ ಕೂಡ ಶಿವನು ಪ್ರಸನ್ನರಾಗುತ್ತಾರೆ.