Home Blog Page 48

ರಾಶಿಗಳ ಪ್ರಕಾರವಾಗಿ ನಿಮ್ಮ ಪ್ರೀತಿ ಹಾಗೂ ಪ್ರೀತಿಸುವ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ನೋಡಿ.!

 

ಪ್ರೀತಿ ಈ ಭೂಮಿ ಮೇಲೆ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿಗೂ ಔಷಧಿ. ಪ್ರೀತಿ ಇಲ್ಲದ ಹೃದಯ ಮರುಭೂಮಿಯೇ ಸರಿ. ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು ಆದರೆ ಪ್ರೀತಿ ಇರದ ಬದುಕು ರುಚಿಯೇ ಇರದ ಊಟದಂತೆ ಪ್ರೀತಿ ಎಲ್ಲಾ ಭಾವನೆಗಳಿಗಿಂತಲೂ ಬಹಳ ವಿಶೇಷವಾದ ವಿಭಿನ್ನವಾದ ಪರಿಚಯ ಇದು ಹೃದಯದ ಭಾಷೆ, ಮನಸ್ಸಿನ ಭಾಷೆ. ಪ್ರೀತಿಯಲ್ಲಿ ಬಿದ್ದಾಗ ಪ್ರತಿಯೊಬ್ಬರಿಗೂ ಇದರ ಅನುಭವವಾಗುತ್ತದೆ.

ಹೀಗೆ ಪರಿಚಯವಾಗುವ ಪ್ರೀತಿ ಶಾಶ್ವತವಾಗಿ ಕೊನೆವರೆಗೂ ಹಾಗೆ ಉಳಿಯುತ್ತದೆ ಎನ್ನುವ ಯಾವ ಗ್ಯಾರಂಟಿಯೂ ಇಲ್ಲ. ಪ್ರತಿಯೊಂದು ಪ್ರೀತಿಯು ಬೆಳೆಯುತ್ತಾ ಹೋದಂತೆ ಒಂದೊಂದು ರೂಪ ಪಡೆದುಕೊಳ್ಳುತ್ತದೆ. ಆ ಪ್ರಕಾರವಾಗಿ ರಾಶಿಗೆ ಅನುಕೂಲವಾಗಿ ಅವರ ಪ್ರೀತಿ ಹೇಗಿರುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಈ ಸುದ್ದಿ ಓದಿ:- ಮಕ್ಕಳು ಯಾವ ತಿಂಗಳಲ್ಲಿ ಜನಿಸಿದರೆ ಏನು ಫಲ ನೋಡಿ.!

ಮೇಷ ರಾಶಿ:- ಮೇಷ ರಾಶಿಯವರು ತಮ್ಮ ಸ್ವಭಾವದಿಂದಾಗಿ ಹೆಚ್ಚು ಗುರುತಿಸಿಕೊಳ್ಳುವುದರಿಂದ ಇವರ ಕಡೆ ಎಲ್ಲರೂ ಆಕರ್ಷಿತರಾಗುತ್ತಾರೆ. ಇದೆ ಆಕರ್ಷಣೆಯಿಂದ ಪ್ರೀತಿ ಹುಟ್ಟುತ್ತದೆ. ಇದು ಬಹಳ ಬೇಗ ನಿರ್ಧಾರವಾದ ಪ್ರೀತಿ ಆಗಿರುವುದರಿಂದ ಅಷ್ಟೇ ಬೇಗ ಮುರಿಯುತ್ತದೆ. ಒಮ್ಮೆಯಾದರೂ ಬದುಕಿನಲ್ಲಿ ಪ್ರೇಮ ವೈಫಲ್ಯ ಅನುಭವಿಸುತ್ತಾರೆ.

ವೃಷಭ ರಾಶಿ:- ಬಹಳ ಚಿಕ್ಕ ವಯಸ್ಸಿಗೆ ಪ್ರೀತಿಯಲ್ಲಿ ಬೀಳುತ್ತಾರೆ ಒಂದು ವೇಳೆ ಅದು ಮುರಿದುಬಿದ್ದರು ಆ ವಿಶ್ವಾಸ ಕೊನೆಗೊಂಡಿರುವುದಿಲ್ಲ, ಎಂದಿಗೂ ಕೂಡ ಇವರು ತಮ್ಮ ಪ್ರೇಮಿಗೆ ಗೌರವ ತೋರುವುದಿಲ್ಲ

ಮಿಥುನ ರಾಶಿ:- ಬಹಳ ವರ್ಷಗಳ ಕಾಲ ಪ್ರೀತಿಯಲ್ಲಿ ಇರುವ ಈ ರಾಶಿಯವರು ಇದನ್ನು ವಿವಾಹದ ಹಂತದವರೆಗೂ ತೆಗೆದುಕೊಂಡು ಹೋಗುತ್ತಾರೆ ಮತ್ತು ಸಂಗಾತಿಗಳಾಗಿ ಯಶಸ್ವಿ ಜೀವನ ನಡೆಸುತ್ತಾರೆ, ಕಡೆವರೆಗೂ ತಮ್ಮ ಪ್ರೇಮಿಯನ್ನು ಅಷ್ಟೇ ಪ್ರೀತಿಸುತ್ತಾರೆ.

ಕರ್ಕಾಟಕ ರಾಶಿ:- ಕರ್ಕಾಟಕ ರಾಶಿಯವರ ಪ್ರೀತಿಗೆ ಸಾಮಾನ್ಯವಾಗಿ ಕುಟುಂಬದಿಂದ ವಿರೋಧ ಇದ್ದೇ ಇರುತ್ತದೆ. ಪ್ರೀತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಇವರು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ಇವರು ಪ್ರೀತಿಯನ್ನು ಮದುವೆ ಹಂತದವರೆಗೆ ತೆಗೆದುಕೊಂಡು ಹೋದರೆ ಸಂಗಾತಿ ಸಾಕಾರದಿಂದ ಮದುವೆಯ ನಂತರ ಬಹಳ ಯಶಸ್ವಿ ವ್ಯಕ್ತಿಗಳಾಗುತ್ತಾರೆ.

ಈ ಸುದ್ದಿ ಓದಿ:- ಮಹಿಳೆಯರ ಬಗ್ಗೆ ಎಲ್ಲಾ ಪುರುಷರು ಈ ಮೂರು ಕಹಿ ಸತ್ಯಗಳನ್ನು ತಿಳಿದುಕೊಳ್ಳಿ.!

ಸಿಂಹ ರಾಶಿ:- ಸಿಂಹ ರಾಶಿಯವರು ಸ್ವಭಾವತಃ ಎಲ್ಲಾ ವಿಷಯದಲ್ಲೂ ಕೂಡ ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹಾಗೆ ಒಮ್ಮೆ ಮನಸ್ಸು ಕೊಟ್ಟರೆ ಅವರಿಗಾಗಿ ಕಡೆತನಕ ಯಾವುದೇ ಸಾಹಸ ಬೇಕಾದರು ಮಾಡುತ್ತಾರೆ. ಜೀವನದಲ್ಲಿ ಒಮ್ಮೆ ಆಗುವ ಪ್ರೀತಿಯನ್ನು ಬಲವಾಗಿ ನಂಬುತ್ತಾರೆ ಹಾಗೂ ಆ ಪ್ರೀತಿ ಪಡೆದೇ ತೀರುತ್ತಾರೆ.

ಕನ್ಯಾ ರಾಶಿ:- ಕನ್ಯಾ ರಾಶಿಯವರು ಬಹಳ ಚಂಚಲ ಸ್ವಭಾವದವರಾಗಿರುತ್ತಾರೆ. ಇವರಿಗೆ ಬದುಕಿನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪ್ರೀತಿ ಆಗುತ್ತದೆ ಮತ್ತು ಇವರು ನಿಜವಾದ ಪ್ರೀತಿಯನ್ನು ಗುರುತಿಸುವಲ್ಲಿ ವಿಫಲವಾಗುತ್ತಿರುತ್ತಾರೆ.

ತುಲಾ ರಾಶಿ:- ಈ ರಾಶಿಯವರು ಕೂಡ ಬಹಳ ಬೇಗ ಪ್ರೀತಿಯಲ್ಲಿ ಬೀಳುತ್ತಾರೆ ಮತ್ತು ಜೀವನದಲ್ಲಿ ಎಂದೂ ಕೂಡ ಇವರು ಒಂಟಿಯಾಗಿರಲು ಬಯಸುವುದಿಲ್ಲ. ಬಹಳ ಆಕರ್ಷಣೀಯ ವ್ಯಕ್ತಿತ್ವವನ್ನು ಹೊಂದಿರುವ ಇವರ ಮೇಲೆ ಎಲ್ಲರಿಗೂ ಪ್ರೀತಿಯಾಗುತ್ತದೆ ಆದರೆ ಇವರಿಗೆ ಸಂಗಾತಿ ಮೇಲೆ ಅಪಾರವಾದ ನಿರೀಕ್ಷೆ ಇರುತ್ತದೆ.

ಧನಸ್ಸು ರಾಶಿ:- ಧನಸ್ಸು ರಾಶಿಯವರು ಜೀವನದಲ್ಲಿ ಬಹುತೇಕ ಎಲ್ಲಾ ರೀತಿಯ ಕಷ್ಟ ಪಡುತ್ತಾರೆ. ಅವುಗಳಲ್ಲಿ ಪ್ರೇಮ ವೈಫಲ್ಯ ಕೂಡ ಒಂದು. ಉಳಿದ ಎಲ್ಲ ತೊಂದರೆಗಳಿಗಿಂತ ಈ ವಿಚಾರ ಮನಸ್ಸಿಗೆ ಬಹಳ ನೋವು ಕೊಡುತ್ತದೆ ಆದರೆ ಇದನ್ನು ಅವರು ದಾಟಲೇ ಬೇಕಾಗಿರುತ್ತದೆ. ಲವ್ ಫೆಲ್ಯೂರ್ ಇವರ ಜೀವನವನ್ನು ಬದಲಾಯಿಸುತ್ತದೆ.

ಈ ಸುದ್ದಿ ಓದಿ:- ಈ ಮಂತ್ರ ಹೇಳಿ ಮೂರು ತಿಂಗಳ ಒಳಗೆ ನಿಮಗೆ ಸಂತಾನಭಾಗ್ಯ ಶತಸಿದ್ಧ.!

ವೃಶ್ಚಿಕ ರಾಶಿ:- ವೃಶ್ಚಿಕ ರಾಶಿಯವರು ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಬಹಳ ಕಷ್ಟ ಪಡುತ್ತಾರೆ, ಇವರದ್ದು ಬಹಳ ಪರಿಶುದ್ಧ ಪ್ರೇಮವಾಗಿರುತ್ತದೆ.

ಮಕರ ರಾಶಿ:- ಮಕರ ರಾಶಿಯ ತಮಗೆ ಯಾರು ಇಷ್ಟ ಆಗುತ್ತಾರೆ ಅವರನ್ನು ಕಾಡಿ ಬೇಡಿ ಒಪ್ಪಿಸಿ ಪಡೆದುಕೊಳ್ಳುತ್ತಾರೆ, ಎಂದಿಗೂ ಕೂಡ ಇವರು ತಮ್ಮ ಪ್ರೀತಿಯನ್ನು ಸೋಲಲು ಬಿಡುವುದಿಲ್ಲ.

ಕುಂಭ ರಾಶಿ:- ಕುಂಭ ರಾಶಿಯವರು ಪ್ರೀತಿಯಲ್ಲಿ ಮೋ’ಸ ಹೋಗುವ ಸಾಧ್ಯತೆಗಳು ಇರುತ್ತವೆ. ಲವ್ ಅಟ್ ಫಸ್ಟ್ ಸೈಟ್ ಎನ್ನುವುದನ್ನು ಈ ರಾಶಿಯವರು ನಂಬದೇ ಇರುವುದು ಒಳ್ಳೆಯದು. ಆಪರಿಚಿತರ ಪ್ರೀತಿ ಇವರನ್ನು ಪಜೀತಿಯಲ್ಲಿ ಸಿಲುಕಿಸುತ್ತದೆ.

ಮೀನ ರಾಶಿ:- ಮೀನಾ ರಾಶಿಯವರಿಗಿಂತ ಇವರಿಗೆ ಸಿಗುವ ಸಂಗಾತಿಯೇ ಇವರ ಮೇಲೆ ದುಪ್ಪಟ್ಟು ಪ್ರೀತಿ ಹೊಂದಿರುತ್ತಾರೆ. ಇವರ ಪ್ರೀತಿ ಗೆಲ್ಲುತ್ತದೆ, ಕೊನೆವರೆಗೂ ತನ್ನ ಸಂಗಾತಿ ಜೊತೆ ಸಂತಸದ ಜೀವನ ಕಳೆಯುತ್ತಾರೆ.

https://youtu.be/VPn9yydE-Fo?si=z8RIJtwE3qTmgZJr

ಮಕ್ಕಳು ಯಾವ ತಿಂಗಳಲ್ಲಿ ಜನಿಸಿದರೆ ಏನು ಫಲ ನೋಡಿ.!

 

ಇದುವರೆಗೂ ನಾವು ನಂಬಿಕೊಂಡು ಬಂದಿರುವ ನಂಬಿಕೆಯ ಪ್ರಕಾರವಾಗಿ ಪ್ರತಿಯೊಂದು ಜೀವಿಯ ಸೃಷ್ಟಿಯು ಕೂಡ ಭಗವಂತನ ಇಚ್ಛೆ. ನಾವು ಯಾವ ಕುಟುಂಬದಲ್ಲಿ ಯಾವ ಸಮಯದಲ್ಲಿ ಜನಿಸಬೇಕು ಎನ್ನುವುದು ಪೂರ್ವದಲ್ಲಿಯೇ ನಿರ್ಧಾರವಾಗಿರುತ್ತದೆ.

ಆದರೆ ಈಗಿನ ಕಾಲದಲ್ಲಿ ತಂದೆ ತಾಯಿಯರು ತಮ್ಮ ಮಕ್ಕಳು ಒಳ್ಳೆ ಸಮಯದಲ್ಲಿ ಹುಟ್ಟಿ ಜೀವನವನ್ನು ಸಂತೋಷವಾಗಿ ಕಳೆಯಲಿ ಎಂದು ಒಳ್ಳೆಯ ದಿನ, ಘಳಿಗೆ, ನಕ್ಷತ್ರ ನೋಡಿ ಶಸ್ತ್ರಚಿಕಿತ್ಸೆ ಮೂಲಕ ಮಕ್ಕಳನ್ನು ಪಡೆಯುತ್ತಾರೆ ಒಂದು ರೀತಿಯಲ್ಲಿ ಇದನ್ನು ತಪ್ಪು ಎಂದು ಹೇಳಬಹುದು.

ಜನನದ ಸಮಯದಲ್ಲಿ ಚಂದ್ರನ ಸ್ಥಾನವನ್ನು ಪ್ರಮುಖವಾಗಿ ನೋಡಲಾಗುತ್ತದೆ, ಅದರ ಆಧಾರದ ಮೇಲೆ ಬದುಕಿನ ಏಳು ಬೀಳುಗಳನ್ನು ಊಹಿಸಲಾಗುತ್ತದೆ. ಆ ಪ್ರಕಾರವಾಗಿ ಯಾವ ದಿನ ಜನಿಸಿದ ಮಕ್ಕಳು ಯಾವ ಫಲ ಪಡೆಯುತ್ತಾರೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಈ ಸುದ್ದಿ ಓದಿ:- ಮಹಿಳೆಯರ ಬಗ್ಗೆ ಎಲ್ಲಾ ಪುರುಷರು ಈ ಮೂರು ಕಹಿ ಸತ್ಯಗಳನ್ನು ತಿಳಿದುಕೊಳ್ಳಿ.!

* ಅಮಾವಾಸ್ಯೆ ದಿನಗಳಲ್ಲಿ ಸೂರ್ಯ ಮತ್ತು ಚಂದ್ರರು ಒಂದೇ ಮನೆಯಲ್ಲಿ ಇರುತ್ತಾರೆ ಹಾಗಾಗಿ ಈ ದಿನ ಮಕ್ಕಳು ಜನಿಸುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಅಮವಾಸ್ಯೆ ದಿನ ಸೂರ್ಯ ಮತ್ತು ಚಂದ್ರ ಹತ್ತಿರ ಇರುವುದರಿಂದ ಸೂರ್ಯನ ಪ್ರಕರತೆಯಿಂದ ಚಂದ್ರ ಮಂಕಾಗಿ ಹೋಗುತ್ತಾರೆ.

ಇದು ಈ ದಿನ ಜನಿಸುವ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಅಮವಾಸ್ಯೆ ದಿನ ಜನಿಸುವ ಮಕ್ಕಳು ಧಿರ್ಘಕಾಲಿಕ ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. ಇವರ ಬುದ್ಧಿಶಕ್ತಿಯು ಅಷ್ಟೊಂದು ಉತ್ತಮವಾಗಿರುವುದಿಲ್ಲ. ಬದುಕಿನ ಉದ್ದಕ್ಕೂ ತುಂಬಾ ತೊಂದರೆ ಅನುಭವಿಸುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾಗಿ ಹೆಚ್ಚಿನ ಜನರು ಅಮಾವಾಸ್ಯೆ ದಿನದಂದು ಮಕ್ಕಳು ಜನಿಸದೆ ಇರಲಿ ಎಂದು ಬಯಸುತ್ತಾರೆ

* ಆದರೆ ದೀಪಾವಳಿ ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಮಹಾಲಕ್ಷ್ಮಿಯ ಆಶೀರ್ವಾದ ಇರುವುದರಿಂದ ಒಳ್ಳೆಯದಾಗುತ್ತದೆ ಮತ್ತು ಶಿವರಾತ್ರಿಯ ದಿನ ಶಿವನ ಜಟೆಯ ಮೇಲೆ ಚಂದ್ರನು ಸ್ಥಾನ ಪಡೆದಿರುವುದರಿಂದ ಆ ದಿನ ಜನಿಸುವ ಮಕ್ಕಳಿಗೂ ಕೂಡ ಶಿವನ ಅನುಗ್ರಹ ಇರುತ್ತದೆ ಯಾವುದೇ ಸಮಸ್ಯೆ ಇಲ್ಲ ಇವರು ಬಹಳ ಕೀರ್ತಿವಂತರಾಗುತ್ತಾರೆ ಎಂದು ಹೇಳಲಾಗುತ್ತದೆ.

ಈ ಸುದ್ದಿ ಓದಿ:- ಮೀನ ರಾಶಿಯ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು ಇವು

* ಗ್ರಹಣಗಳ ದಿನಗಳಂದು ಕೂಡ ಸೂರ್ಯ ಚಂದ್ರರು ರಾಹು ಕೇತುಗಳ ವಶದಲ್ಲಿ ಇರುವುದರಿಂದ ಇಂತಹ ದಿನಗಳಲ್ಲಿ ಜನಿಸುವ ಮಕ್ಕಳು ಕೂಡ ಆರೋಗ್ಯಕ್ಕೆ ಸಂಬಂಧಿಸಿದಂತೆ ಮತ್ತು ಮನಸ್ಸಿಗೆ ಸಂಬಂಧಪಟ್ಟ ಹಾಗೆ ಬಹಳ ತೊಂದರೆಗಳನ್ನು ಅನುಭವಿಸುತ್ತಾರೆ. ಈ ಮಕ್ಕಳಿಗೆ ಬದುಕಿನ ಪೂರ್ತಿ ಮಾನಸಿಕ ಒತ್ತಡ ಹೆಚ್ಚಾಗಿರುತ್ತದೆ ಹಾಗಾಗಿ ಗ್ರಹಣ ಸಮಯದಲ್ಲೂ ಕೂಡ ಮಗುವಿನ ಜನನ ಆಗುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ

* ಶುಕ್ಲ ಪಕ್ಷಗಳಲ್ಲಿ ಚಂದ್ರನು ಬೆಳೆಯುತ್ತಾರೆ ಹಾಗೂ ಕೃಷ್ಣಪಕ್ಷಗಳಲ್ಲಿ ಚಂದ್ರನು ಕರಗುತ್ತಾ ಹೋಗುತ್ತಾರೆ. ಹೀಗಾಗಿ ಕೃಷ್ಣಪಕ್ಷಕ್ಕಿಂತ ಶುಕ್ಲ ಪಕ್ಷಗಳಲ್ಲಿ ಜನಿಸುವ ಮಕ್ಕಳು ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಚಂದ್ರ ಬಲವಾಗಿರುವುದರಿಂದ ಅನೇಕ ರಾಜಯೋಗಗಳನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ

* ಪಿತೃಪಕ್ಷದಲ್ಲಿ ಪೂರ್ವಜರು ಭೂಮಿಗೆ ಬರುತ್ತಾರೆ ಎನ್ನುವ ನಂಬಿಕೆ ಇರುವುದರಿಂದ ಈ ಸಮಯದಲ್ಲಿ ಜನಿಸುವ ಮಕ್ಕಳು ಪೂರ್ವಿಕರ ಆಶೀರ್ವಾದ ಪಡೆದು ಹುಟ್ಟಿರುತ್ತಾರೆ ಎಂದು ಹೇಳಲಾಗುತ್ತದೆ. ಪಿತೃ ಪಕ್ಷದಲ್ಲಿ ಯಾವ ಶುಭ ಕಾರ್ಯವನ್ನು ಮಾಡುವುದಿಲ್ಲ ಆದರೆ ಮಕ್ಕಳು ಜನನವಾದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.

ಈ ಸುದ್ದಿ ಓದಿ:- ಈ ಮಂತ್ರ ಹೇಳಿ ಮೂರು ತಿಂಗಳ ಒಳಗೆ ನಿಮಗೆ ಸಂತಾನಭಾಗ್ಯ ಶತಸಿದ್ಧ.!

* ಇದರ ಜೊತೆಗೆ 12 ತಿಂಗಳಲ್ಲಿ ಒಂದೊಂದು ತಿಂಗಳಲ್ಲಿ ಜನಿಸುವ ಮಕ್ಕಳ ವ್ಯಕ್ತಿತ್ವ ಒಂದೊಂದು ರೀತಿಯಾಗಿ ರೂಪುಗೊಳ್ಳುತ್ತದೆ ಎನ್ನುವ ನಂಬಿಕೆಯು ಇದೆ. ಈ 12 ತಿಂಗಳಲ್ಲಿ ಕೆಲವು ತಿಂಗಳಲ್ಲಿ ಜನಿಸಿದ ಮಕ್ಕಳು ಹುಟ್ಟಿನಿಂದಲೇ ಅದೃಷ್ಟ ಪಡೆದಿರುತ್ತಾರೆ ಎಂದು ಹೇಳಲಾಗುತ್ತದೆ. ಆ ರಾಶಿಗಳು ಯಾವುವೆಂದರೆ, ಜನವರಿಯಲ್ಲಿ ಜನಿಸಿದ ಮಕ್ಕಳು ಅದೃಷ್ಟವಂತರು ನಾಯಕತ್ವದ ಗುಣ ಹೊಂದಿರುತ್ತಾರೆ.

ಆಗಸ್ಟ್ ತಿಂಗಳಲ್ಲಿ ಹುಟ್ಟಿದ ಮಕ್ಕಳು ತಮ್ಮ ಪರಿಶ್ರಮದಿಂದ ಜೀವನದಲ್ಲಿ ಬಹಳ ಯಶಸ್ವಿಯಾಗಿರುತ್ತಾರೆ ಮತ್ತು ಜೀವನದಲ್ಲಿ ಬಹಳಷ್ಟು ಶ್ರೀಮಂತಿಕೆಯಿಂದ ಬದುಕುವ ಅದೃಷ್ಟ ಹೊಂದಿರುತ್ತಾರೆ, ಬಹುಮುಖ ಪ್ರತಿಭೆ ಹೊಂದಿರುತ್ತಾರೆ, ಒಳ್ಳೆಯ ಕುಟುಂಬವನ್ನು ಹೊಂದುತ್ತಾರೆ ಎಂದು ಹೇಳಲಾಗುತ್ತದೆ ಇದೇ ರೀತಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಜನಿಸಿದವರು ಕೂಡ ಇಂತಹ ಶುಭಫಲಗಳು ಹೆಚ್ಚಿಗೆ ಸಿಗುತ್ತವೆ ಎಂದು ಹೇಳಲಾಗಿದೆ.

ಮಹಿಳೆಯರ ಬಗ್ಗೆ ಎಲ್ಲಾ ಪುರುಷರು ಈ ಮೂರು ಕಹಿ ಸತ್ಯಗಳನ್ನು ತಿಳಿದುಕೊಳ್ಳಿ.!

 

ಪ್ರಪಂಚದಲ್ಲಿ ನೀರಿನ ಆಳವನ್ನು ಸೌರಮಂಡಲದ ವಿಸ್ತೀರ್ಣವನ್ನು ಅಳೆಯಲು ಉಪಕರಣಗಳ ಬಂದಿರಬಹುದು ಆದರೆ ಹೆಣ್ಣು ಮಕ್ಕಳ ಮನಸ್ಸಿನಲ್ಲಿ ಏನಿದೆ ಎಂದು ನಿಖರವಾಗಿ ಹೇಳಲು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಯಾಕೆಂದರೆ ಹೆಣ್ಣು ಮಕ್ಕಳ ಮನಸ್ಸು ಬಹಳ ಚಂಚಲ ಮತ್ತು ಅವರು ತಮ್ಮ ಮನಸ್ಸಿನಲ್ಲಿ ಏನಿದೆ ಎಂದು ಮುಖದ ಮೇಲೆ ತೋರಿಸಿಕೊಳ್ಳುವುದೇ ಇಲ್ಲ.

ಹೀಗಾಗಿ ಈಗಾಗಲೇ ಅನೇಕ ಕವನ ಕವಿತೆ ಹಾಡುಗಳು ಹೆಣ್ಣಿನ ಬಗ್ಗೆ ಹುಟ್ಟಿಕೊಂಡಿದೆ. ಹೆಣ್ಣನ್ನು ಮಾಯೆ ಎಂದು ಹೇಳಲಾಗುತ್ತದೆ ಮತ್ತು ಮೀನಿನ ಹೆಜ್ಜೆ ಬೇಕಾದರೂ ಹುಡುಕಬಹುದು ಹೆಣ್ಣಿನ ಮನಸ್ಸನ್ನು ಓದಲಾಗದು ಎಂದು ಹೇಳಿದ್ದಾರೆ. ಮನಶಾಸ್ತ್ರ ಪ್ರಕಾರವಾಗಿ ಹೆಣ್ಣು ಮಕ್ಕಳು ಹೊಂದಿರುವಂತಹ ಮೂರು ಕಾಮನ್ ಮೆಂಟಾಲಿಟಿ ಬಗ್ಗೆ ಈ ಅಂಕಣದಲ್ಲಿ ತಿಳಿಸಲು ಬಯಸುತಿದ್ದೇವೆ.

* ಹೆಣ್ಣು ಮಕ್ಕಳು ಬಹಳ ಬೇಗ ಮೆಚ್ಯುರ್ ಆಗಿಬಿಡುತ್ತಾರೆ ಮತ್ತು ಬಹಳ ಸೂಕ್ಷ್ಮವಾಗಿರುತ್ತಾರೆ ತಮ್ಮ ಸುತ್ತಮುತ್ತ ಏನಾಗುತ್ತದೆ ಏನು ಮಾಡಿದರೆ ಏನು ಆಗಬಹುದು ಮತ್ತು ತಾನು ತಪ್ಪಿನಲ್ಲಿ ಸಿಲುಕಿಕೊಂಡರೆ ಹೇಗೆ ತಪ್ಪಿಸಿಕೊಳ್ಳಬೇಕು ಎಲ್ಲವನ್ನು ಲೆಕ್ಕಹಾಕಿಯೇ ಒಂದು ಹೆಜ್ಜೆ ಮುಂದೆ ಇಡುತ್ತಾರೆ.

ಈ ಸುದ್ದಿ ಓದಿ:- ಮೀನ ರಾಶಿಯ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು ಇವು

ಆದರೆ ಗಂಡು ಮಕ್ಕಳು ಯಾವುದಾದರೂ ಕಷ್ಟದಲ್ಲಿ ಬಿದ್ದು, ಅಪಾಯವನ್ನು ಎದುರಿಸಿ ಅವಮಾನ ಅನುಭವಿಸುವವರೆಗೂ ಕೂಡ ಅವರಿಗೆ ಈ ಮೆಚ್ಯುರಿಟಿ ಬರುವುದಿಲ್ಲ. ಇಷ್ಟೆಲ್ಲ ಬುದ್ಧಿವಂತಿಕೆ ಇರುವ ಹೆಣ್ಣು ಮಕ್ಕಳು ಸಹಜವಾಗಿ ಬದುಕನ್ನು ಸಂತೋಷವಾಗಿ ಕಳೆಯಲು ಇಚ್ಛಿಸುತ್ತಾರೆ ಹಾಗಾಗಿ ಅವರು ಹೆಚ್ಚು ಹಣ ಹೊಂದಿರುವವರ ಕಡೆ ಆಕರ್ಷಿತರಾಗುತ್ತಾರೆ.

ಖಾಲಿ ಜೇಬಿನ ಹುಡುಗನ ಕಡೆ ಯಾವ ಹುಡುಗಿಯೂ ಕೂಡ ತಿರುಗಿ ಸಹ ನೋಡುವುದಿಲ್ಲ. ಒಂದು ವೇಳೆ ಅವರನ್ನು ಬದಲಾಯಿಸಲು ಪ್ರಯತ್ನ ಪಟ್ಟು ಕೊನೆಗೆ ಅವನಿಂದ ಏನು ಆಗುತ್ತಿಲ್ಲ ಎನ್ನುವುದು ತಿಳಿದು ಬಂದಾಗ ಕೈ ಕೊಟ್ಟು ಹೋಗುತ್ತಾರೆ ಹೊರತು ಹಣ ಇಲ್ಲದವರ ಜೊತೆ ಹೆಣ್ಣು ಮಕ್ಕಳು ಉಳಿಯುವುದಿಲ್ಲ.

* ಈ ಪ್ರಪಂಚದಲ್ಲಿ ಮಗುವನ್ನು ಪ್ರಾಣಿಗಳನ್ನು ಹಾಗೂ ಹೆಣ್ಣು ಮಕ್ಕಳನ್ನು ಮಾತ್ರ ಯಾವುದೇ ಕಂಡೀಶನ್ ಇಲ್ಲದೆ ಸಮಾಜ ಪ್ರೀತಿಸುತ್ತದೆ ಹೊರತು ಹೆಣ್ಣು ಮಕ್ಕಳು ಕೂಡ ಇದೇ ರೀತಿ ಯಾವುದೇ ಕಂಡೀಶನ್ ಇಲ್ಲದೆ ಗಂಡು ಮಕ್ಕಳನ್ನು ಪ್ರೀತಿಸುವುದು ಅಸಾಧ್ಯವಾದ ಮಾತು.

ಸುದ್ದಿ ಓದಿ:-ಈ ಮಂತ್ರ ಹೇಳಿ ಮೂರು ತಿಂಗಳ ಒಳಗೆ ನಿಮಗೆ ಸಂತಾನಭಾಗ್ಯ ಶತಸಿದ್ಧ.!

ಹೆಣ್ಣಿನ ಪ್ರೀತಿಯಲ್ಲಿ ಬಿದ್ದ ಹುಡುಗ ಆಕೆಯನ್ನು ಬಹಳ ಜೋಪಾನ ಮಾಡಬಹುದು, ತಾಯಿಯಂತೆ ಗೌರವಿಸಿ ಮಗಳಂತೆ ಕಾಳಜಿ ಮಾಡಿ ಮಡದಿಯಂತೆ ಪ್ರೀತಿಸಿ ಸ್ನೇಹಿತೆಯಂತೆ ನೋಡಿಕೊಂಡರೂ ಅದೇ ಹೆಣ್ಣಿನಿಂದ ಇದೇ ಪ್ರೀತಿಯನ್ನು ನಿರೀಕ್ಷಿಸಿದರೆ ಸಿಗುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಆಕೆಗೆ ಪ್ರೀತಿಗಿಂತ ಸೆಕ್ಯೂರ್ ಫೀಲ್ ಮುಖ್ಯ.

ಆತ ಶ್ರೀಮಂತನಾಗಿದ್ದಾಗ ಅಥವಾ ಬಹಳ ದೊಡ್ಡ ಅಧಿಕಾರದಲ್ಲಿದ್ದಾಗ ಹೆಣ್ಣು ಮಕ್ಕಳು ಕಣ್ಣು ಮುಚ್ಚಿ ಒಪ್ಪುತ್ತಾರೆ ಪ್ರತಿಷ್ಠೆಗೆ ಬೇಗ ಕಟ್ಟು ಬೀಳುತ್ತಾರೆ ಹಾಗಾಗಿ ನಿಮಗೆ ಪ್ರೀತಿ ಬೇಕು ಎಂದರೆ ನೀವು ಬೇಗ ಸೆಟಲ್ ಆಗಬೇಕು ನೀವು ಅವರ ಹಿಂದೆ ಹೋಗುವ ಬದಲು ಹೆಣ್ಣು ಮಕ್ಕಳೇ ನಿಮ್ಮ ಹಿಂದೆ ಬರುವ ಹಾಗೆ ಮಾಡಿಕೊಳ್ಳಬೇಕು.

* ಹೆಣ್ಣು ಮಕ್ಕಳು ಈ ಮೊದಲೇ ನಾನು ಹೇಳಿದಂತೆ ಬಹಳ ಚಂಚಲ ಸ್ವಭಾವದವರು ಮತ್ತು ಅವರು ಇನ್ನೊಬ್ಬರ ಒಪಿನಿಯನ್ ಮೇಲೆ ಡಿಪೆಂಡ್ ಆಗುತ್ತಾರೆ. ನೀವು ಯಾವುದಾದರೂ ಹೆಣ್ಣು ಮಕ್ಕಳಿಗೆ ಇಂಪ್ರೆಸ್ ಮಾಡಬೇಕು ಎಂದರೆ ಮೊದಲು ಅವರ ಸ್ನೇಹಿತರಿಗೆ ಕುಟುಂಬದವರಿಗೆ ಇಷ್ಟ ಆಗಬೇಕು.

ಸುದ್ದಿ ಓದಿ:-ಪ್ರಾಣ ಹೋದರೂ ಸರಿ ಈ 9 ವಿಷಯಗಳನ್ನು ಯಾರಿಗೂ ಹೇಳಬೇಡಿ.!

ಅವರೆಲ್ಲರ ಬಾಯಲ್ಲಿ ನಿಮ್ಮ ಹೆಸರು ಬರುವ ರೀತಿ ಆದರೆ ಆಗ ಅವರು ನಿಮ್ಮ ಕಡೆ ತಿರುಗಿ ನೋಡುತ್ತಾರೆ ಹಾಗೆಯೇ ಅವರಿಗೆ ಇನ್ ಸೆಕ್ಯೂರ್ ಫೀಲ್ ಆದರೆ ಬಟ್ಟೆ ಬದಲಾಯಿಸಿದಂತೆ ರಿಲೇಶನ್ಶಿಪ್ ಕೂಡ ಬದಲಾಯಿಸಿ ಒಂದು ಚೂರು ಮನಸ್ಸಿನಲ್ಲಿ ನೆನಪು ಕೂಡ ಉಳಿಸಿಕೊಳ್ಳದಂತೆ ಹೊರಟೆ ಹೋಗಿಬಿಡುತ್ತಾರೆ.

ಆದರೆ ಗಂಡು ಮಕ್ಕಳಿಗೆ ಈ ರೀತಿ ಮಾಡುವುದು ಬಹಳ ಕಷ್ಟ, ತಮ್ಮ ತಪ್ಪು ಇದ್ದರೂ ಇಲ್ಲದಿದ್ದರೂ ಬಹಳ ನೋವು ಅನುಭವಿಸುತ್ತಾರೆ. ಹೀಗಾಗಿ ಹೆಣ್ಣು ಮಕ್ಕಳನ್ನು ಅವರು ನಿಮ್ಮ ಜೊತೆಯಲ್ಲಿರುವಾಗ ಸರಿಯಾಗಿ ಗೌರವದಿಂದ ಪ್ರೀತಿಯಿಂದ ನೋಡಿಕೊಳ್ಳಿ.

https://youtu.be/XMwAjZ1DIwk?si=TrXFARqovij1uTTf

ಮೀನ ರಾಶಿಯ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು ಇವು

 

ರಾಶಿ ಚಕ್ರದ 12ನೇಯ ಮತ್ತು ಕೊನೆಯ ರಾಶಿ ಮೀನಾ ರಾಶಿಯಾಗಿದೆ. ಈ ರಾಶಿಯಲ್ಲಿ ಬುಧ ನೀಚ ಸ್ಥಾನ ಮತ್ತು ಶುಕ್ರನು ಉಚ್ಛಸ್ಥಾನದಲ್ಲಿ ಇರುತ್ತಾರೆ. ಪೂರ್ವ ಭಾದ್ರಪದ, ಉತ್ತರ ಭಾದ್ರಪದ ಮತ್ತು ರೇವತಿ ನಕ್ಷತ್ರಗಳಲ್ಲಿ ಜನಿಸಿದವರು ಮೀನ ರಾಶಿಯವರಾಗಿರುತ್ತಾರೆ. ಬುಧನ ತತ್ವ, ಗುರುವಿನ ತತ್ವ ಹಾಗೂ ಶನಿಯ ತತ್ವ ಈ ರಾಶಿಯವರಲ್ಲಿ ಇರುತ್ತದೆ.

ಮೀನ ರಾಶಿಯ ಸ್ವಭಾವದ ಬಗ್ಗೆ ಹೇಳುವುದಾದರೆ ಬಹಳ ಸೌಮ್ಯ ಸ್ವಭಾವ ಹಾಗೂ ಕುಟುಂಬಕ್ಕಾಗಿ ಏನನ್ನು ಬೇಕಾದರೂ ತ್ಯಾಗ ಮಾಡುವಂತಹವರು ಎನ್ನಬಹುದು. ಇವರು ಎಷ್ಟು ಶಾಂತವಾಗುತ್ತಾರೋ ಬದಲಾದರೆ ಅಷ್ಟೇ ಸುನಾಮಿಯಾಗಿರುತ್ತಾರೆ. ಇವರ ಸ್ವಭಾವ ಹೇಗಿರುತ್ತದೆ ಎಂದರೆ ಮಗುವಿನ ರೀತಿಯ ಮನಸ್ಸು ಮತ್ತು ದಯಾಗುಣ ಹೊಂದಿರುವವರು ಎಂದೇ ಹೇಳಬಹುದು.

ಈ ಸುದ್ದಿ ಓದಿ:- ಈ ಮಂತ್ರ ಹೇಳಿ ಮೂರು ತಿಂಗಳ ಒಳಗೆ ನಿಮಗೆ ಸಂತಾನಭಾಗ್ಯ ಶತಸಿದ್ಧ.!

ಯಾರಿಗಾದರೂ ಏನಾದರೂ ಕೊಟ್ಟ ಮೇಲೆ ಅದನ್ನು ವಾಪಸು ಕೇಳುವುದಕ್ಕೆ ಬಹಳ ಕಷ್ಟ ಪಡುತ್ತಾರೆ ಅಥವಾ ಅದು ಎಷ್ಟೇ ಅವಶ್ಯಕತೆಯ ವಸ್ತು ಆಗಿದ್ದರು ಬಿಟ್ಟುಬಿಡುತ್ತಾರೆ ಇಂತಹ ಮನಸ್ಥಿತಿ ಇವರದ್ದಾಗಿರುತ್ತದೆ. ಈ ರಾಶಿಯವರಿಗೆ ದೇವರ ಮೇಲೆ ಅಪಾರ ನಂಬಿಕೆ. ಬಾಲ್ಯದಿಂದಲೂ ಕೂಡ ಧಾರ್ಮಿಕ ಆಸಕ್ತಿ ಬೆಳೆಸಿಕೊಂಡಿರುತ್ತಾರೆ.

ಇಷ್ಟೇ ಶ್ರದ್ಧೆ, ಭಕ್ತಿ, ನೀತಿಯಿಂದಾಗಿ ತಮ್ಮ ಕೆಲಸ ಕಾರ್ಯಗಳನ್ನು ಕೂಡ ಮಾಡಿಕೊಂಡು ಬದುಕುತ್ತಿರುತ್ತಾರೆ. ಬಹಳ ನಿದ್ರಾ ಪ್ರಿಯರು ಇವರು. ಮೀನಾ ರಾಶಿಯ ಹೆಣ್ಣು ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ಯಾವಾಗಲೂ ಕುಟುಂಬದವರ ಜೊತೆಗೆ ಇರಬೇಕು ಎಂದು ಆಸೆ ಪಡುತ್ತಾರೆ. ಕೂಡು ಕುಟುಂಬದಲ್ಲಿ ಬಾಳುವುದಕ್ಕೆ ಸೂಕ್ತವಾದ ವ್ಯಕ್ತಿಗಳು ಇವರು ಎಂದೇ ವಿಮರ್ಷಿಸಬಹುದು ಹೊಂದಾಣಿಕೆ ಗುಣ ರಕ್ತಗತವಾಗಿ ಬಂದಿರುತ್ತದೆ.

ಸ್ನೇಹಿತರನ್ನು ಅಪಾರವಾಗಿ ಪ್ರೀತಿಸುತ್ತಾರೆ. ಕುಟುಂಬದವಷ್ಟೇ ಸ್ನೇಹಿತರ ಮೇಲೂ ಪ್ರೀತಿ ನಂಬಿಕೆ ಇಟ್ಟಿರುತ್ತಾರೆ. ಮೀನ ರಾಶಿಯವರು ಒಂದು ವೇಳೆ ನಿಮಗೆ ಸ್ನೇಹಿತನಾದರೆ ನಿಮಗೆ ನಿಮ್ಮ ಸಹೋದರ ಅಥವಾ ಸಹೋದರಿ ದೊರಕಿದಂತೆ ಎಂದುಕೊಳ್ಳಬಹುದು ಅಷ್ಟು ಚೆನ್ನಾಗಿ ಅವರು ನಿಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಂಡು ಬದುಕುತ್ತಾರೆ.

ಈ ಸುದ್ದಿ ಓದಿ:- ಯಾವ ವಾರ ಜನಿಸಿದ ಮಕ್ಕಳು ಅದೃಷ್ಟವಂತರು ನೋಡಿ.!

ಇವರ ಜೀವನದಲ್ಲಿ ವಿದ್ಯಾಭ್ಯಾಸ, ಉದ್ಯೋಗ, ಮದುವೆ, ಮಕ್ಕಳು ಎಲ್ಲವು ಕೂಡ ಬಹಳ ಸಲೀಸಾಗಿಯೇ ನಡೆಯುತ್ತದೆ. ಆದರೆ ಇದೆಲ್ಲವನ್ನು ಮೀರಿ ಅವರ ಮನಸಿನೊಳಗೆ ಒಂದು ಸಂಘರ್ಷ ನಡೆಯುತ್ತಲೇ ಇರುತ್ತದೆ ಮತ್ತು ಇದನ್ನು ಅವರು ಮುಕ್ತವಾಗಿ ಕುಟುಂಬದ ಜೊತೆಯಾಗಲಿ ಸ್ನೇಹಿತನ ಜೊತೆಯಲಿ ಹೇಳಿಕೊಳ್ಳಲು ಹೋಗುವುದೇ ಇಲ್ಲ.

ಮೇಲೆ ನಗುಮುಖದಿಂದ ಸದಾ ಖುಷಿಯಾಗಿ ತನಗೆ ಏನು ತೊಂದರೆ ಇಲ್ಲ ಎನ್ನುವ ರೀತಿ ಬದುಕುವ ಇವರು ಹೀಗಾಗಬಾರದಿತ್ತು ಇದು ನನಗೆ ಬೇಡವಿತ್ತು ಎಂದು ಅಂದುಕೊಳ್ಳುತ್ತಲೇ ಎಲ್ಲವನ್ನು ಸಹಿಸಿಕೊಂಡು ಅನುಸರಿಸಿಕೊಂಡು ಬದುಕಿ ಬಿಡುತ್ತಾರೆ ಹಣಕಾಸಿನ ವಿಚಾರವಾಗಿ ಇವರಿಗೆ ಬಹಳ ಸಮಸ್ಯೆ ಇರುವುದಿಲ್ಲ. ಸ್ವಲ್ಪ ಇವರು ಏಕಾಗ್ರತೆ ಮೆಲೆ ನಿಗ್ರಹ ಇಟ್ಟುಕೊಂಡರೆ ಬಹಳ ಉತ್ತಮ ಸ್ಥಾನಗಳಿಗೆ ಏರುತ್ತಾರೆ.

ಪರೋಪಕಾರದ ಗುಣ ಹೊಂದಿರುವ ಇವರಿಗೆ ಇವರ ಆತಿಯಾದ ಒಳ್ಳೆತನವು ಕೆಲವೊಮ್ಮೆ ಮುಳುವಾಗಬಹುದು. ಇವರು ಎಲ್ಲರನ್ನೂ ನೋಡುವ ರೀತಿ ಎಲ್ಲರೂ ಇವರನ್ನು ನೋಡುವುದಿಲ್ಲ. ಅವರ ಅವಶ್ಯಕತೆಗೆ ಇವರನ್ನು ಬಳಸಿಕೊಳ್ಳುವವರೇ ಹೆಚ್ಚಿರುತ್ತಾರೆ ಇದು ಇವರಿಗೆ ಅರಿವಾಗುವ ಸಮಯಕ್ಕೆ ಕಾಲ ಮೀರಿರುತ್ತದೆ ಮತ್ತು ತನಗೆ ಗೊತ್ತಾದ ಮೇಲೆ ಕೂಡ ಅದನ್ನು ಪ್ರಶ್ನಿಸಲು ಹೋಗುವ ಗುಣ ಇವರಿಗೆ ಇರುವುದೇ ಇಲ್ಲ.

ಈ ಸುದ್ದಿ ಓದಿ:- ಪ್ರಾಣ ಹೋದರೂ ಸರಿ ಈ 9 ವಿಷಯಗಳನ್ನು ಯಾರಿಗೂ ಹೇಳಬೇಡಿ.!

ಮೀನ ರಾಶಿಯ ಹೆಣ್ಣು ಮಕ್ಕಳು ಬಹಳ ಬುದ್ಧಿವಂತರಾಗಿರುತ್ತಾರೆ ಆದರೆ ಈ ರಾಶಿಯವರು ಬುದ್ಧಿವಂತಿಕೆಗಿಂತ ಜ್ಞಾನವನ್ನು ಸಂಪಾದನೆ ಮಾಡುವುದು ಒಳ್ಳೆಯದು. ಮೀನ ರಾಶಿ ಹೆಣ್ಣು ಮಕ್ಕಳಿಗೆ ವಸ್ತು ವ್ಯಾಮೋಹ ‌ ಇರುತ್ತದೆ, ವಿಪರೀತ ಶಾಪಿಂಗ್ ಮಾಡುತ್ತಾರೆ. ಸಣ್ಣ ಪುಟ್ಟ ಸಮಸ್ಯೆಗಳಿದ್ದರೂ ಸಮಾಧಾನಕರ ಜೀವನವನ್ನು ಇವರು ಪಡೆಯುತ್ತಾರೆ. ವಯಸ್ಸಾದರೂ ಕೂಡ ಲವಲವಿಕೆಯಿಂದ ಇರುವ ಮಕ್ಕಳಂತಹ ಮನಸ್ಸನ್ನು ಹೊಂದಿರುತ್ತಾರೆ.

ಈ ಮಂತ್ರ ಹೇಳಿ ಮೂರು ತಿಂಗಳ ಒಳಗೆ ನಿಮಗೆ ಸಂತಾನಭಾಗ್ಯ ಶತಸಿದ್ಧ.!

 

ಈಗಿನ ಕಾಲದಲ್ಲಿ ಅನೇಕ ಹೆಣ್ಣು ಮಕ್ಕಳಿಗೆ ಸಂತಾನದ ಸಮಸ್ಯೆ ಎದುರಾಗಿದೆ ಆಧುನಿಕ ಜೀವನ ಶೈಲಿ ಅಥವಾ ಕಳಪೆ ಆಗಿರುವ ಆಹಾರ ಪದ್ಧತಿ ಯಾವುದು ಕಾರಣ ಆಗಿದೆಯೋ ತಿಳಿದಿಲ್ಲ. ಪ್ರತಿ ಮನೆಗಳಲ್ಲೂ, ಕಚೇರಿಯಲ್ಲೂ ಮತ್ತು ಸ್ನೇಹಿತರ ಬಳಗದಲ್ಲೂ ಈ ರೀತಿ ಕಣ್ಣೀರಿಡುವ ಹೆಣ್ಣು ಮಕ್ಕಳು ಇದ್ದಾರೆ. ಆ ಹೆಣ್ಣು ಮಕ್ಕಳಿಗಾಗಿ ಒಂದು ವಿಶೇಷ ವ್ರತದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಸಂತಾನ ಗೋಪಾಲ ವ್ರತ ಮಾಡಿದರೆ ನೂರಕ್ಕೆ ನೂರರಷ್ಟು ನಿಮಗೆ ಸಂತಾನ ಯೋಗ ಬರುವುದು ಖಂಡಿತ. ಇದರ ಆಚರಣೆ ಹೇಗೆ ಎನ್ನುವ ಮಾಹಿತಿ ಹೀಗಿದೆ.

* ಶುಕ್ಲ ಪಕ್ಷದ ಬುಧವಾರ ಅಥವಾ ಗುರುವಾರ ಈ ವ್ರತದ ಆಚರಣೆ ಆರಂಭ ಮಾಡಿ, ಅಂದರೆ ಅಮಾವಾಸ್ಯೆ ನಂತರ ಬರುವ ಮೊದಲ ಬುಧವಾರ ಅಥವಾ ಗುರುವಾರದಂದು ಆರಂಭ ಮಾಡಿ.
* ವೃತ ಸಂಕಲ್ಪವನ್ನು ನಿರ್ದಿಷ್ಟ ಸಮಯದಲ್ಲಿ ಇಷ್ಟು ದಿನ ಆಚರಿಸುತ್ತೇನೆಂದು ಸಂಕಲ್ಪ ತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ಈ ವ್ರತವನ್ನು 45 ದಿನಗಳ ಕಾಲ ಆಚರಣೆ ಮಾಡುತ್ತಾರೆ, ಇದು ಒಂದು ಮಂಡಲಾಗುತ್ತದೆ. ಈ ಸಮಯದಲ್ಲಿ ಮೂರು ಪಕ್ಷಗಳು ಬರುತ್ತದೆ.

ಈ ಸುದ್ದಿ ಓದಿ:- ರಾಹು ಸಂಚಾರದಿಂದ ಈ ರಾಶಿಗಳಿಗೆ ಏಟಿನ ಮೇಲೆ ಏಟು, ನಿಮ್ಮ ರಾಶಿಯು ಇದರಲ್ಲಿ ಇದೆಯೇ ತಿಳಿದುಕೊಳ್ಳಿ…

* ಈ ವ್ರತದ ಮಹತ್ವವೇ ಮಂತ್ರ ಪಠಣೆಯಾಗಿದೆ. ಮಂತ್ರಗಳಿಗೆ ಎಷ್ಟು ಶಕ್ತಿ ಇದೆ ಎಂದರೆ ಅಸಾಧ್ಯವಾದನ್ನು ಸಾಧಿಸುವಂತಹ ಸಾಮರ್ಥ್ಯ ಇರುವುದು ಮಂತ್ರ ಗಳಿಗೆ ಮಾತ್ರ. ಅನಾಧಿಕಾರದಿಂದಲೂ ಕೂಡ ಮಂತ್ರ ಪ್ರಯೋಗದಿಂದ ಸಂತಾನದಿಂದ ಹಿಡಿದು ಯುದ್ಧಗಳವರೆಗೂ ಕೂಡ ಅನೇಕ ಕಾರ್ಯಗಳು ನಡೆದಿದೆ. ಹಾಗಾಗಿ ಸರಿಯಾದ ವಿಧಾನದಲ್ಲಿ ನೀವು ಮಂತ್ರ ಉಚ್ಚಾರಣೆ ಮಾಡುವುದರಿಂದ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

* ವ್ರತ ಮುಗಿವವರೆಗೂ ಕೂಡ ನೀವು ಪ್ರತಿದಿನ 108 ಬಾರಿ ಮಂತ್ರ ಪಠಣೆ ಮಾಡುವುದಾಗಿ ಸಂಕಲ್ಪ ಮಾಡಿ
* ಯಾವುದೇ ವ್ರತ ಆಚರಿಸಿದರೂ ವ್ರತ ನಡೆಯುವ ಸಮಯದಲ್ಲಿ ಧೂಮಪಾನ, ಮದ್ಯಪಾನ ಮುಂತಾದ ದುಷ್ಚಟಗಳು ನಿಷಿದ್ಧ ಹಾಗೂ ಈ ಸಮಯದಲ್ಲಿ ಮಾಂಸಹಾರ ಸೇವನೆ ಮಾಡದೆ ಸಾತ್ವಿಕ ಆಹಾರ ಸೇವನೆ ಮಾಡಬೇಕು.

* ಪೂಜೆ ಮಾಡುವುದಕ್ಕೆ ಕೆಲ ಪೂಜಾ ಸಾಮಗ್ರಿಗಳ ಅವಶ್ಯಕತೆ ಇರುತ್ತದೆ. ಒಂದು ಚಿಕ್ಕ ಅಂಬೆಗಾಲು ಬಾಲಕೃಷ್ಣ ವಿಗ್ರಹ ಒಂದು ಅಗಲವಾದ ಬಟ್ಟಲು ಹಾಗೂ ಜೇನುತುಪ್ಪವನ್ನು ತೆಗೆದುಕೊಳ್ಳಿ
* ಈ ಮೇಲೆ ತಿಳಿಸಿದಂತೆ ನಾವು ಹೇಳಿದ ದಿನದಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಮಡಿ ಉಟ್ಟುಕೊಳ್ಳಿ ಬೆಳಗ್ಗೆ 7ರ ಒಳಗೆ ಪೂಜೆ ಮುಗಿಸುವುದು ಬಹಳ ಒಳ್ಳೆಯದು.

ಈ ಸುದ್ದಿ ಓದಿ:- ಯಾವ ವಾರ ಜನಿಸಿದ ಮಕ್ಕಳು ಅದೃಷ್ಟವಂತರು ನೋಡಿ.!

* ಯಾವುದೇ ಪೂಜೆ ಮಾಡುವ ಮುನ್ನ ಮೊದಲು ಗಣಪತಿಗೆ ಪೂಜೆ ಮಾಡಬೇಕು, ಅಂತೆಯೇ ಗಣಪತಿಗೆ ಸಂಕಲ್ಪ ಮಾಡಿ. ನೀವು ಇಷ್ಟಪಡುವ ಇಷ್ಟ ದೇವರು, ನಿಮ್ಮ ಕುಲದೇವರು, ಗ್ರಾಮದೇವರ ಹೆಸರನ್ನು ನೆನೆದು ಪ್ರಾರ್ಥಿಸಿಕೊಳ್ಳಿ ತಂದೆ ತಾಯಿಯರ ಆಶೀರ್ವಾದವನ್ನು ಪಡೆದುಕೊಳ್ಳಿ

* ಒಂದು ಮಣೆ ಅಥವಾ ಬಟ್ಟಲಿನೊಳಗೆ ಶ್ರೀ ಬಾಲಕೃಷ್ಣ ಮೂರ್ತಿ ಇಟ್ಟು ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಮಾಡಿ. ತುಳಸಿ ಹೂವು ಏರಿಸಿ, ಬೆಣ್ಣೆ ಸಕ್ಕರೆ ನೈವೇದ್ಯ ಮಾಡಿ ಧೂಪದೀಪದಿಂದ ಕೃಷ್ಣನ ವಿಗ್ರಹವನ್ನು ಬೆಳಗಿ ನಿಮ್ಮ ಕಷ್ಟವನ್ನು ಹೇಳಿಕೊಂಡು ಸಂತಾನ ಫಲ ಕೊಡುವಂತೆ ಪ್ರಾರ್ಥಿಸಿ. ಬಳಿಕ ನೀವು 108 ಬಾರಿ ಈ ಮಂತ್ರವನ್ನು ಪಠಿಸಬೇಕು
ಮಂತ್ರ:- ಓಂಶ್ರೀಂಹ್ರೀಂಕ್ಲೀಂಗ್ಲೌಂ ದೇವಕಿಸುತ ಗೋವಿಂದ ವಾಸುದೇವ
ಜಗತ್ಪತೇದೇಹಿ ಮೇ ತನಯಂ ಕೃಷ್ಣ ತ್ಮಾಮಹಂ ಶರಣಂ ಗತಃ

* ದಂಪತಿ ಸಮೇತವಾಗಿ ಈ ಆಚರಣೆ ಮಾಡಿದರೆ ಬಹಳ ಬೇಗ ಶುಭ ಫಲಗಳನ್ನು ಕಾಣುತ್ತೀರಿ.
* ನೀವೇನಾದರೂ ಈಗಾಗಲೇ ಸಂತಾನವನ್ನು ಹೊಂದಿದ್ದು ಪುತ್ರ ಸಂತಾನ ಬಯಸುತ್ತಿದ್ದರು ಕೂಡ ಈ ಆಚರಣೆ ಮಾಡಬಹುದು. ಸಂತಾನ ಗೋಪಾಲ ಮಂತ್ರವನ್ನು ಪಠಿಸುವುದರಿಂದ ದೀರ್ಘಾಯುಷ್ಯವುಳ್ಳ ಬುದ್ಧಿವಂತ ಸದ್ಗುಣಶೀಲ ಪುತ್ರನನ್ನು ಪಡೆಯುತ್ತೀರಿ.

ಈ ಸುದ್ದಿ ಓದಿ:- ಪ್ರಾಣ ಹೋದರೂ ಸರಿ ಈ 9 ವಿಷಯಗಳನ್ನು ಯಾರಿಗೂ ಹೇಳಬೇಡಿ.!

ರಾಹು ಸಂಚಾರದಿಂದ ಈ ರಾಶಿಗಳಿಗೆ ಏಟಿನ ಮೇಲೆ ಏಟು, ನಿಮ್ಮ ರಾಶಿಯು ಇದರಲ್ಲಿ ಇದೆಯೇ ತಿಳಿದುಕೊಳ್ಳಿ…

 

ನವಗ್ರಹಗಳಲ್ಲಿ ರಾಹುವನ್ನು ಅತ್ಯಂತ ಕೆಟ್ಟ ಗ್ರಹ ಎನ್ನಲಾಗುತ್ತಿದೆ. ರಾಹುವನ್ನು ಪಾಪಗ್ರಹ ಎಂದು ಕರೆಯಲಾಗುತ್ತದೆ ಮತ್ತು ರಾಹುವಿನ ಸಂಚಾರವು ಸಂಬಂಧಪಟ್ಟ ರಾಶಿಗಳಲ್ಲಿ ಅಶುಭ ಫಲಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ರಾಹು ಯಾವಾಗಲೂ ಹಿಮ್ಮುಖವಾಗಿ ಚಲನೆ ಮಾಡುವುದು ಮತ್ತು ನವಗ್ರಹಗಳಲ್ಲಿ ಶನಿಯನ್ನು ಹೊರತುಪಡಿಸಿದರೆ ರಾಹುಗ್ರಹವೇ ಬಹಳ ಮಂದಗತಿಯಲ್ಲಿ ಸಾಗುವ ಗ್ರಹವಾಗಿದೆ.

ರಾಹುವಿನ ಸಂಕ್ರಮಣವು 12 ರಾಶಿಗಳ ಮೇಲು ಕೂಡ ಪರಿಣಾಮ ಬೀರುತ್ತದೆ. ರಾಹು ಗ್ರಹವು ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ಹೋಗಲು 18 ತಿಂಗಳ ಸಮಯ ತೆಗೆದುಕೊಳ್ಳುತ್ತದೆ. ರಾಹು ಕಳೆದ ವರ್ಷ ಅಂದರೆ 2023ರ ಅಕ್ಟೋಬರ್ ಕೊನೆಯಲ್ಲಿ ಮೀನ ರಾಶಿ ಪ್ರವೇಶಿಸಿದ್ದಾರೆ ಇದರ ಪ್ರಭಾವ ಈ ವರ್ಷ ಪೂರ್ತಿ ಇರಲಿದೆ, 2025ಕ್ಕೆ ಕುಂಭ ರಾಶಿಗೆ ಬರಲಿದ್ದಾರೆ.

ಇದರ ಪ್ರಭಾವವು ರಾಶಿ ಚಕ್ರದಲ್ಲಿ ಮೂರು ರಾಶಿಗಳ ಮೇಲೆ ಬಹಳ ಗಂಭೀರಕರ ಪರಿಣಾಮವನ್ನು ಉಂಟು ಮಾಡುತ್ತಿದೆ. ರಾಹುವಿನ ಸಂಚಾರದಿಂದ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರುವ ಈ ಮೂರು ರಾಶಿಗಳು ಯಾವುವೆಂದರೆ ಕನ್ಯಾ ರಾಶಿ, ಧನು ರಾಶಿ ಮತ್ತು ಕುಂಭ ರಾಶಿ. ರಾಹು ಈ ರಾಶಿಗಳ ಮೇಲೆ ಯಾವ ರೀತಿಯಾಗಿ ಕೆಟ್ಟ ಪರಿಣಾಮಗಳನ್ನು ಬೀರುತ್ತಾನೆ.

ಈ ಸುದ್ದಿ ಓದಿ:-ಯಾವ ವಾರ ಜನಿಸಿದ ಮಕ್ಕಳು ಅದೃಷ್ಟವಂತರು ನೋಡಿ.!

ಇವುಗಳ ಪ್ರಭಾವ ಕಡಿಮೆ ಮಾಡಿಕೊಂಡು ಬರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ದೈವ ಬಲಕ್ಕಾಗಿ ನವಗ್ರಹಗಳ ಆರಾಧನೆ ಮತ್ತು ನಿಮ್ಮ ಕುಲ ದೇವತೆಗಳ ಆರಾಧನೆ ಮಾಡಿ. ಯಾವ ರೀತಿಯ ಸಮಸ್ಯೆಗಳನ್ನು ಈ ಮೂರು ರಾಶಿಯವರು ಎದುರಿಸಲು ತಯಾರಾಗಿರಬೇಕಾಗಿರುತ್ತದೆ ಎಂಬ ವಿವರ ಹೀಗಿದೆ ನೋಡಿ.

* ಕನ್ಯಾ ರಾಶಿ:- ರಾಹುವಿನ ಈ ಸಂಕ್ರಮಣದ ಪ್ರಭಾವದಿಂದಾಗಿ ಕನ್ಯಾ ರಾಶಿಯವರಿಗೆ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಸ್ವಲ್ಪ ಮನಸ್ತಾಪ ಏರ್ಪಡುತ್ತದೆ. ಕೆಲಸ ಕಾರ್ಯಗಳಿಗೂ ಕೂಡ ಹತ್ತಾರು ರೀತಿಯ ಅಡೆತಡೆಗಳು ಎದುರಾಗುತ್ತದೆ. ನೀವು ನಿಮ್ಮ ಗ್ರಹಗತಿಗಳನ್ನು ಅರಿತು ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳದೆ ಇರುವುದು ಬಹಳ ಒಳ್ಳೆಯದು.

ಹಾಗೆಯೇ ನೀವು ನಿಮಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯಿಂದ ಕೂಡ ಇರಬೇಕು. ಯಾಕೆಂದರೆ ರಾಹುವಿನ ಪ್ರಭಾವದಿಂದಾಗಿ ನೀವು ಎದುರಿಸುವ ಸಮಸ್ಯೆಗಳಿಂದ ನಿಮ್ಮ ಮನಸ್ಸು ಬಹಳ ವಿಚಲಿತವಾಗುತ್ತದೆ. ನಿಮ್ಮ ರಾಶಿಯಲ್ಲಿರುವ ಇತರೆ ಗ್ರಹಗಳ ಪ್ರಭಾವದಿಂದ ಒಳಿತು ಕೂಡ ಆಗುತ್ತದೆ ಹಾಗಾಗಿ ಈ ಸಮಯ ಮುಗಿಯುವವರೆಗೆ ತಾಳ್ಮೆಯಿಂದ, ಜಾಗ್ರತೆಯಿಂದ ಧೈರ್ಯವಾಗಿ ಇರಿ.

ಈ ಸುದ್ದಿ ಓದಿ:-ಪ್ರಾಣ ಹೋದರೂ ಸರಿ ಈ 9 ವಿಷಯಗಳನ್ನು ಯಾರಿಗೂ ಹೇಳಬೇಡಿ.!

* ಧನು ರಾಶಿ:- ಧನು ರಾಶಿಯವರಿಗೆ ಕಷ್ಟಗಳು ಹೊಸದೇನಲ್ಲ ಇವುಗಳು ಹುಟ್ಟಿದಾಗಲಿಂದಲೂ ಅಭ್ಯಾಸ ಆಗಿರುತ್ತದೆ ಆದರೆ ನಿಮ್ಮ ಆರೋಗ್ಯದ ಸಮಸ್ಯೆಗಳು ನಿಮ್ಮನ್ನು ಬಹಳ ಯೋಚನೆಗೆ ಗುರಿ ಮಾಡುತ್ತವೆ. ರಾಹು ನೆರವಾಗಿ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಾನೆ ಹಾಗಾಗಿ ಆರೋಗ್ಯದ ವಿಚಾರದಲ್ಲಿ ಕಾಳಜಿಯಿಂದ ಇರಿ ಹಾಗೂ ಸ್ವಲ್ಪ ಆರೋಗ್ಯ ಹಾಳಾದರೂ ತಕ್ಷಣವೇ ಚಿಕಿತ್ಸೆ ತೆಗೆದುಕೊಳ್ಳುವ ಮೂಲಕ ಚೇತರಿಸಿಕೊಳ್ಳಲು ಪ್ರಯತ್ನಿಸಿ

ಕುಂಭ ರಾಶಿ:- ಕುಂಭ ರಾಶಿಯವರು ಹಣಕಾಸಿನ ವಿಚಾರದಲ್ಲಿ ಈ ಸಮಯದಲ್ಲಿ ಬಹಳ ಜಾಗರೂಕರಾಗಿ ಇರಬೇಕು. ಯಾವುದೇ ಹಣಕಾಸಿನ ವ್ಯವಹಾರ ಮಾಡುವ ಮುನ್ನ ಎರಡು ಸಾರಿ ಯೋಚಿಸಿ ನಿರ್ಧಾರಕ್ಕೆ ಬನ್ನಿ. ಕೆಲಸ ಕಾರ್ಯಗಳಲ್ಲಿ ಅಡತಡೆ ಆಗಬಹುದು ಮತ್ತು ಕಚೇರಿಗಳಲ್ಲಿ ಮೆಲಾಧಿಕಾರಿಗಳಿಂದ ಒತ್ತಡ ಬರಬಹುದು ಯಾವುದೇ ಕಾರಣಕ್ಕೂ ವಾದ ಮಾಡಲು ಹೋಗಬೇಡಿ ಕುಂಭ ರಾಶಿಯವರಿಗೆ ಹೆಚ್ಚು ಪ್ರಯಾಣ ಮಾಡಬೇಕಾಗಿ ಬರುತ್ತದೆ.

ಯಾವ ವಾರ ಜನಿಸಿದ ಮಕ್ಕಳು ಅದೃಷ್ಟವಂತರು ನೋಡಿ.!

 

ಪ್ರತಿಯೊಬ್ಬರಿಗೂ ಕೂಡ ತಮ್ಮ ಮಕ್ಕಳು ಅದೃಷ್ಟವಂತರಾಗಬೇಕು, ಕೀರ್ತಿವಂತರಾಗಬೇಕು ಅವರಿಗೆ ಜೀವನದ ಎಲ್ಲಾ ಸುಖ ಸಂಪತ್ತು ಸಿಗಬೇಕು ಎಂದು ಬಲವಾದ ಇಚ್ಛೆ ಇರುತ್ತದೆ. ಇದಕ್ಕಾಗಿ ಅವರು ಮಾಡದ ಪೂಜೆ ಇರುವುದಿಲ್ಲ ಮತ್ತು ಪಡೆಯದ ಕಷ್ಟ ಇರುವುದಿಲ್ಲ.

ಮಕ್ಕಳು ಹುಟ್ಟುವ ಪೂರ್ವದಿಂದ ತಯಾರಾಗುವ ಇವುಗಳು ತಂದೆ-ತಾಯಿ ಬದುಕಿರುವವರೆಗೂ ಕೂಡ ಮಕ್ಕಳ ಸೇವೆಗಾಗಿ ನಡೆಯುತ್ತಿರುತ್ತವೆ ಆದರೆ ಕೆಲವು ಮಕ್ಕಳು ಮಾತ್ರ ಬಹಳ ಅದೃಷ್ಟವಂತರಾಗಿ ಹುಟ್ಟುವಾಗಲೇ ಭಾಗ್ಯ ಪಡೆದುಕೊಂಡು ಬಂದಿರುತ್ತಾರೆ, ಇನ್ನು ಕೆಲವರು ಬಹಳ ಕಷ್ಟಪಟ್ಟು ಇಂತಹ ಸಕ್ಸಸ್ ಪಡೆದುಕೊಳ್ಳಬೇಕು.

ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ಯಾವ ವಾರ ಜನಿಸಿದ ಮಕ್ಕಳಿಗೆ ಈ ರೀತಿ ಅದೃಷ್ಟ ಇರುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಸ ಬಯಸುತ್ತಿದ್ದೇವೆ. ವಾರದಲ್ಲಿ ಏಳು ದಿನಗಳು ಇರುತ್ತವೆ. ಈ ಏಳು ದಿನಗಳಲ್ಲಿ ಹುಟ್ಟುವ ಮಕ್ಕಳು ಕೂಡ ಭಗವಂತನ ಸೃಷ್ಟಿಯೇ. ಇದರಲ್ಲಿ ಒಂದು ವಾರ ಹುಟ್ಟಿದ ಮಕ್ಕಳಿಗೆ ಮಾತ್ರ ದೇವರ ಆಶೀರ್ವಾದ ಇರುತ್ತದೆ ಎಂದು ಹೇಳುವುದು ತಪ್ಪಾಗುತ್ತದೆ.

ಈ ಸುದ್ದಿ ಓದಿ:- ಪ್ರಾಣ ಹೋದರೂ ಸರಿ ಈ 9 ವಿಷಯಗಳನ್ನು ಯಾರಿಗೂ ಹೇಳಬೇಡಿ.!

ಆದರೆ ಮಕ್ಕಳು ಹುಟ್ಟುವ ಘಳಿಗೆ, ಜನ್ಮ ನಕ್ಷತ್ರ, ತಿಥಿ, ರಾಶಿ, ವಾರ ಅವರ ಹಸ್ತ ರೇಖೆ ಮತ್ತು ಪೂರ್ವ ಜನ್ಮಗಳ ಕರ್ಮನುಸಾರವಾಗಿ ಅವರ ಅದೃಷ್ಟ ನಿರ್ಧಾರವಾಗಿರುತ್ತದೆ. ಇದರಲ್ಲಿ ಕೆಲವು ಗುಣಗಳು ರಾಶಿಯಿಂದ ಕೆಲವು ಗುಣಗಳು ನಕ್ಷತ್ರದಿಂದ ಕೆಲವು ಗುಣಗಳು ಅವರು ಹುಟ್ಟುವ ವಾರದಿಂದ ಬಂದಿರುತ್ತವೆ.

ಅದರ ಪ್ರಕಾರವಾಗಿ ಅವರವರ ಅದೃಷ್ಟದುರದೃಷ್ಟವನ್ನು ಊಹಿಸಬಹುದು, ವ್ಯಕ್ತಿತ್ವವನ್ನು ಗುರುತಿಸಬಹುದು. ಆ ಪ್ರಕಾರವಾಗಿ ಯಾವ ವಾರ ಹುಟ್ಟಿದ ಮಕ್ಕಳು ಯಾವ ರೀತಿ ಅದೃಷ್ಟವನ್ನು ಪಡೆದಿರುತ್ತಾರೆ ಎನ್ನುವುದನ್ನಷ್ಟೇ ತಿಳಿಸುತ್ತಿದ್ದೇವೆ.

ಭಾನುವಾರ:- ಭಾನುವಾರ ಹುಟ್ಟಿದ ಮಕ್ಕಳಿಗೆ ಆಡಳಿತದ ಗುಣ ಹುಟ್ಟಿನಿಂದಲೇ ಬಂದಿರುತ್ತದೆ. ನವಗ್ರಹಗಳಿಗೆ ಸೂರ್ಯನೇ ಅಧಿಪತಿ ಅಂತೆಯೇ ಆದಿತ್ಯನ ಅನುಗ್ರಹವಿರುವ ಭಾನುವಾರದ ದಿನ ಜನಿಸಿದವರು ಅದೇ ರೀತಿ ಗುಣಗಳನ್ನು ಹೊಂದಿರುತ್ತಾರೆ. ಇವರು ಸೂರ್ಯನಂತೆ ಕೀರ್ತಿವಂತರಾಗುತ್ತಾರೆ ಮತ್ತು ಉಜ್ವಲ ಭವಿಷ್ಯವನ್ನು ಹೊಂದಿರುತ್ತಾರೆ ಇವರಿಗೆ ಸರ್ಕಾರಿ ಹುದ್ದೆಗಳು ಅಥವಾ ರಾಜಕೀಯ ಅತ್ಯುನ್ನತ ಪದವಿಗಳು ಹುಡುಕಿ ಬರುತ್ತವೆ.

ಈ ಸುದ್ದಿ ಓದಿ:- ವಯಸ್ಸಾಗುವವರೆಗೂ ಆರೋಗ್ಯದಿಂದ ಇರಲು ಈ ಸುಲಭ ಟಿಪ್ಸ್ ಗಳನ್ನು ಫಾಲೋ ಮಾಡಿ.!

ಸೋಮವಾರ:- ಸೋಮವಾರ ಹುಟ್ಟಿದವರು ಬಹಳ ಸುಂದರವಾಗಿರುತ್ತಾರೆ ಮತ್ತು ಇವರು ಬಹಳ ಅಂತರ್ಮುಖಿಗಳಾಗಿರುತ್ತಾನೆ. ಇವರ ಮನಸ್ಸು ಬಹಳ ವಿಶಾಲವಾಗಿರುತ್ತದೆ ತಾಯಿಯಂತೆ ಎಲ್ಲರ ಬಗ್ಗೆ ಕಾಳಜಿ ಮಾಡುವಂತಹ ಗುಣ ಹೊಂದಿರುತ್ತಾರೆ. ಇವರಿಗೆ ಕುಟುಂಬವೇ ಸರ್ವಸ್ವ ವಾಗಿರುತ್ತದೆ ಕುಟುಂಬದಲ್ಲಿ ಬಹಳ ಸಂತೋಷ ಕಾಣುತ್ತಾರೆ ಇವರ ಸಂಗಾತಿಗೆ ಪ್ರಾಮಾಣಿಕರಾಗಿರುತ್ತಾರೆ ಹಾಗೂ ಉತ್ತಮ ಸಂತಾನವನ್ನು ಪಡೆಯುತ್ತಾರೆ

ಮಂಗಳವಾರ:- ಮಂಗಳವಾರ ಹುಟ್ಟಿದವರು ಬಹಳ ಧೈರ್ಯವಂತರಾಗಿರುತ್ತಾರೆ ಮತ್ತು ತಮ್ಮವರಿಗಾಗಿ ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳುತ್ತಾರೆ. ಇವರಿಗೆ ಮನೆಯ ಜವಾಬ್ದಾರಿಗಳು ಬಹಳ ಬೇಗ ಹೆಗಲಿಗೆ ಬೀಳುತ್ತವೆ. ದೇಶ ಕಾಯುವ ಸೈನಿಕನಾಗುವ ಅಥವಾ ಪೊಲೀಸ್ ಇಲಾಖೆಗೆ ಸೇರುವ ಅದೃಷ್ಟಗಳು ಈ ವಾರ ಜನಿಸಿದವರಿಗೆ ಇರುತ್ತದೆ.

ಬುಧವಾರ:- ಬುಧನ ಅನುಗ್ರಹ ಹೊಂದಿರುವ ವಾರ. ಬುದ್ಧಿ ಕಾರಕನಾಗಿರುವ ಬುಧಗ್ರಹದ ಆಶೀರ್ವಾದದಿಂದ ಇವರು ಬಹಳ ಬುದ್ಧಿವಂತರನೆಸಿಕೊಳ್ಳುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಬಹಳ ಲಾಭ ಮಾಡುವಂತಹ ಮತ್ತು ಮಧ್ಯಸ್ಥಿಕೆ ಕೆಲಸಗಳನ್ನು ಮಾಡಿ ಲಾಭ ಗಳಿಸುವಂತಹ ಕಲೆ ಇವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ.

ಈ ಸುದ್ದಿ ಓದಿ:- ಕೂದಲ ಆರೈಕೆಗೆ ಕೆಲವು ಸುಲಭ ಟಿಪ್ಸ್ ಗಳು…

ಗುರುವಾರ:- ಗುರುವಾರ ಹುಟ್ಟಿದವರು ಯಾವಾಗಲೂ ವಿದೇಶ ಪ್ರಯಾಣ, ವಿದೇಶದಲ್ಲಿ ವಿದ್ಯಾಭ್ಯಾಸ, ಉದ್ಯೋಗ ಅಥವಾ ವಿದೇಶದಲ್ಲಿ ಹೋಗಿ ಸೆಟಲ್ ಆಗಲು ಆಸೆ ಪಡುತ್ತಾರೆ. ಎಲ್ಲರಿಗೂ ಮಾರ್ಗದರ್ಶನ ಮಾಡುವಂತಹ ಅನುಭವಗಳನ್ನು ಬಹಳ ಚಿಕ್ಕ ವಯಸ್ಸಿಗೆ ಪಡೆಯುತ್ತಾರೆ ಮತ್ತು ಬಹಳ ಬೇಗ ಆಧ್ಯಾತ್ಮದತ್ತ ಆಕರ್ಷಿತರಾಗುತ್ತಾರೆ.

ಶುಕ್ರವಾರ:- ಶುಕ್ರವಾರ ಜನಿಸಿದ ಹೆಣ್ಣು ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ಲಕ್ಷ್ಮಿ ಪುತ್ರ ಆಗಿರುತ್ತಾರೆ ಎಂದು ಹೇಳಬಹುದು. ಇವರಿಗೆ ತಾಯಿ ಮಹಾಲಕ್ಷ್ಮಿ ಸಂಪೂರ್ಣ ಅನುಗ್ರಹ ಇರುತ್ತದೆ. ಜೀವನದಲ್ಲಿ ಅವರಿಗೆ ಕಷ್ಟಗಳು ಕಡಿಮೆ ಅದರಲ್ಲೂ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ. ಕಲೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಬಹಳ ಸಾಧಕರಾಗುತ್ತಾರೆ

ಶನಿವಾರ:- ಶನಿವಾರ ಜನಿಸಿದವರು ಬಹಳ ನೀತಿವಂತರಾಗಿರುತ್ತಾರೆ. ತೀರ್ಪುಗಾರರ ಸ್ಥಾನದಲ್ಲಿ ಕುಳಿತುಕೊಳ್ಳುವಂತ ಗುಣಸ್ವಭಾವ ಹೊಂದಿರುತ್ತಾರೆ. ಯಾವಾಗಲೂ ಒಂದಲ್ಲ ಒಂದು ಕಾರಣಕ್ಕಾಗಿ ಕುಟುಂಬದಿಂದ ದೂರದಲ್ಲಿಯೇ ಇರುತ್ತಾರೆ ತಮ್ಮ ಧರ್ಮ ಮಾರ್ಗದಿಂದ ಬದುಕುವ ಇವರು ಇತರರಿಗೆ ಸ್ಪೂರ್ತಿಯಾಗುತ್ತಾರೆ.

ಪ್ರಾಣ ಹೋದರೂ ಸರಿ ಈ 9 ವಿಷಯಗಳನ್ನು ಯಾರಿಗೂ ಹೇಳಬೇಡಿ.!

 

ಹಿರಿಯರು ಕೆಲವು ಬುದ್ಧಿ ಮಾತುಗಳನ್ನು ಹೇಳುತ್ತಾರೆ. ಅವುಗಳನ್ನು ಪಾಲಿಸಿ ನಡೆದಾಗ ನಮಗೆ ಬದುಕಿನಲ್ಲಿ ಬರಲಿರುವ ಅನೇಕ ಅ’ಪಾ’ಯಗಳು ತಪ್ಪುತ್ತದೆ. ಈ ಬುದ್ಧಿ ಮಾತುಗಳಲ್ಲಿ ಒಂದು ಸರ್ವೇ ಸಾಮಾನ್ಯವಾಗಿ ಸಂಗತಿ ಏನೆಂದರೆ ಕೆಲವು ವಿಷಯಗಳನ್ನು ಗುಟ್ಟು ಮಾಡು ಎನ್ನುವುದು.

ಗುಟ್ಟು ಮಾಡುವುದು ಎಂದರೆ ಸುಳ್ಳು ಹೇಳುವುದು ಎಂದು ಅರ್ಥವಲ್ಲ, ನಿಮಗೆ ಗೊತ್ತಿರುವ ಅಥವಾ ನಿಮ್ಮ ಮನೆ ಜೀವನದ ಕೆಲವು ವಿಷಯಗಳನ್ನು ಯಾರಿಗೂ ತಿಳಿಸದೆ ಸೈಲೆಂಟ್ ಆಗಿ ಇರುವುದನ್ನು ಗುಟ್ಟು ಮಾಡುವುದು ಎನ್ನುತ್ತಾರೆ. ಈ ರೀತಿ ಜೀವನದ ಕೆಲವು ಸಂಗತಿಗಳನ್ನು ಯಾರಿಗೂ ತಿಳಿಸದೆ ಪ್ರೈವೇಟ್ ಆಗಿ ಇಟ್ಟುಕೊಳ್ಳುವುದು ಬಹಳ ಒಳ್ಳೆಯದು.

ಯಾಕೆಂದರೆ ಒಂದು ವೇಳೆ ನಮ್ಮ ಜೀವನದ ಎಲ್ಲಾ ವಿಷಯಗಳನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳುವುದರಿಂದ ಮುಂದೆ ಒಂದು ದಿನ ಅದರಿಂದಲೇ ನಮಗೆ ಮೋ’ಸ ಆಗುವ ಅಥವಾ ದೃಷ್ಟಿ ದೋಷ ಉಂಟಾಗಿ ಜೀವನದಲ್ಲಿ ನಾವು ಸಮಸ್ಯೆಗೆ ಸಿಲುಕಿಕೊಳ್ಳಬಹುದು ಹಾಗಾಗಿ ಯಾವುದೇ ಕಾರಣಕ್ಕೂ ಸಾಧ್ಯವಾದಷ್ಟು ಈ ಒಂಬತ್ತು ಸಂಗತಿಗಳನ್ನಾದರೂ ನೀವು ಯಾರಿಗೂ ಹೇಳದೆ ಗುಟ್ಟಾಗಿಟ್ಟುಕೊಳ್ಳಿ.

ಈ ಸುದ್ದಿ ಓದಿ:- ಸಿಂಹ ರಾಶಿಯವರಿಗೆ ಏಪ್ರಿಲ್ 2024ರ ಶುಕ್ರ ಪ್ರಭಾವ ನಿಮ್ಮ ಜೀವನದಲ್ಲಿ ನೀವು ಊಹಿಸದ ಒಂದು ಅದ್ಭುತ ಬದಲಾವಣೆಯಾಗಲಿದೆ.!

* ನಿಮ್ಮ ಬಳಿ ಇರುವ ಹಣದ ವಿಚಾರ, ನಿಮಗೆ ಬರುವಬೇಕಾದ ಹಣಕಾಸಿನ ಮೂಲದ ಬಗ್ಗೆ ವಿವರವಾಗಿ ಯಾರ ಬಗ್ಗೆಯೂ ಕೂಡ ಮಾಹಿತಿ ಹಂಚಿಕೊಳ್ಳಬೇಡಿ. ನಿಮಗೆ ಎಷ್ಟು ಸಂಬಳ ಬರುತ್ತದೆ ಅಥವಾ ನಿಮ್ಮ ವ್ಯಾಪಾರದಲ್ಲಿ ನಿಮಗೆ ಎಷ್ಟು ಲಾಭ ಆಗುತ್ತದೆ ಎನ್ನುವ ಖಚಿತವಾದ ಲೆಕ್ಕಾಚಾರ ಯಾರ ಬಳಿಯು ಹಂಚಿಕೊಳ್ಳಬಾರದು ನಿಮಗೆ ಬರುತ್ತಿರುವುದಕ್ಕಿಂತ ಕಡಿಮೆ ಮೊತ್ತವನ್ನೇ ಹೇಳಬೇಕು

* ನಿಮ್ಮ ಜೀವನದ ಮುಂದಿನ ಹೆಜ್ಜೆಗಳ ಬಗ್ಗೆ ಯಾವುದೇ ಕಾರಣಕ್ಕೂ ಯಾರೊಂದಿಗೂ ಹೇಳಿಕೊಳ್ಳಬಾರದು, ಯಾರು ನಿಮ್ಮ ಜೀವನಕ್ಕೆ ಮನಸ್ಪೂರ್ತಿಯಾಗಿ ಒಳ್ಳೆಯದನ್ನು ಬಯಸುತ್ತಾರೋ ಅಥವಾ ನಿಮ್ಮ ಸಾಧನೆ ಹಾದಿಯಲ್ಲಿ ನಿಮ್ಮನ್ನು ಪ್ರೇರೇಪಿಸುತ್ತಾರೋ ಇವರನ್ನು ಹೊರತುಪಡಿಸಿ ಸಿಕ್ಕಸಿಕ್ಕ ಯಾರ ಬಳಿಯೂ ಕೂಡ ಮುಂದೆ ನಾನು ಇದನ್ನು ಮಾಡುತ್ತೇನೆ ಎಂದು ಮುಂಚೆಯೇ ಹೇಳಿಕೊಳ್ಳಲೇಬಾರದು. ಇದರಿಂದ ಅವರು ನೀವು ಆ ಕೆಲಸ ಮಾಡದಂತೆ ನೀವು ಏಳಿಗೆ ಆಗದಂತೆ ಅಡ್ಡಗಲ್ಲು ಹಾಕುವ ಸಾಧ್ಯತೆ ಇರುತ್ತದೆ.

* ಆದಷ್ಟು ನಿಮ್ಮ ಕುಟುಂಬದ ವಿಚಾರವನ್ನು ಗುಪ್ತವಾಗಿಡಿ. ಅದರಲ್ಲೂ ನಿಮ್ಮ ಸಂಸಾರದ ವಿಷಯ ಹಾಗೂ ಪ್ರೀತಿ ಪ್ರೇಮ ಇತ್ಯಾದಿ ಪರ್ಸನಲ್ ವಿಷಯವನ್ನು ಯಾವುದೇ ಕಾರಣಕ್ಕೂ ಎಷ್ಟೇ ಆಪ್ತರಾಗಿದ್ದರು ಹೇಳಿಕೊಳ್ಳದೆ ಇರುವುದೇ ಒಳ್ಳೆಯದು.

ಈ ಸುದ್ದಿ ಓದಿ:- ಈ ಕ್ಷೇತ್ರದಲ್ಲಿ 7 ವಾರ 7 ತೆಂಗಿನ ಕಾಯಿ ಕಟ್ಟಿದರೆ ಏನೇ ಕಷ್ಟ ಇದ್ದರು ಪರಿಹಾರ ಆಗುತ್ತೆ.!

* ಕೆಲವೊಂದು ಆರೋಗ್ಯ ಸಮಸ್ಯೆ ಬಗ್ಗೆ ಕೂಡ ನೀವು ಗುಟ್ಟಾಗಿರಬೇಕಾಗುತ್ತದೆ. ನಮ್ಮಿಂದ ಮತ್ತೊಬ್ಬರಿಗೆ ಆ ಆರೋಗ್ಯ ಸಮಸ್ಯೆ ಹರಡುವುದಿಲ್ಲ ಯಾವುದೇ ತೊಂದರೆ ಇಲ್ಲ ಆದರೂ ನಿಮಗೆ ಆರೋಗ್ಯ ಸಮಸ್ಯೆ ಇದೆ ಎನ್ನುವುದಾದರೆ ಅದನ್ನು ವೈದ್ಯರ ಬಳಿ ಮತ್ತು ನಿಮ್ಮ ಕುಟುಂಬದವರ ಬಳಿ ಬಿಟ್ಟು ಬೇರೆ ಯಾರ ಜೊತೆಗೂ ಕೂಡ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ

* ಮದುವೆಯಾಗಿರುವ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಗಂಡನ ಮನೆಯ ವಿಷಯಗಳನ್ನು ತವರು ಮನೆಯಲ್ಲಿ ಹೇಳಿಕೊಳ್ಳಬಾರದು. ಗಂಡನ ಮನೆಯಲ್ಲಿ ಬಹಳ ಕಷ್ಟ ಇದ್ದು ಅನಿವಾರ್ಯವಾಗಿ ಗಂಡನಿಗೆ ಸಹಾಯ ಬೇಕಾಗಿದ್ದರೆ ಆಗ ಕೇಳಿಕೊಳ್ಳಬಹುದು. ಅದನ್ನು ಬಿಟ್ಟು ಗಂಡನ ಮನೆಗೆ ಸಾಸಿವೆ ಬಿದ್ದರೂ ತವರಿಗೆ ಹೇಳುವ ಗುಣ ಮಾತ್ರ ಇರಲೇಬಾರದು. ಈ ವಿಚಾರದಲ್ಲಿ ಆದಷ್ಟು ಗುಟ್ಟಾಗಿರಬೇಕು ಸ್ನೇಹಿತರು ಹಾಗೂ ಸಂಬಂಧಿಕರ ಜೊತೆಗೂ ಕೂಡ ಗಂಡನ ಮನೆಯು ವಿಚಾರಗಳನ್ನು ಇದ್ದದ್ದು ಇದ್ದಹಾಗೆ ಹೇಳಿಕೊಳ್ಳದೆ ಇರುವುದೇ ಒಳ್ಳೆಯದು

* ನಿಮಗಿರುವ ಬುದ್ಧಿವಂತಿಕೆ ಬಗ್ಗೆ ಯಾವುದೇ ಕಾರಣಕ್ಕೂ ನೀವೇ ಜಂಬ ಕೊಚ್ಚಿಕೊಂಡು ಹೇಳಿಕೊಳ್ಳಲು ಹೋಗಬೇಡಿ ಇದು ಪ್ರದರ್ಶನ ಮಾಡುವಂಥದ್ದಲ್ಲ ಕಷ್ಟ ಬಂದಾಗ ನಿಮ್ಮನ್ನು ನೀವು ಪಾರು ಮಾಡಿಕೊಳ್ಳಲು ಬಳಸುವುದಾಗಿದೆ ಹಾಗಾಗಿ ಯಾವುದೇ ಕಾರಣಕ್ಕೂ ಇಂತಹ ವಿಚಾರದಲ್ಲಿ ಸಮಯ ಬರುವವರೆಗೂ ಸೈಲೆಂಟ್ ಆಗಿ ಇದ್ದುಬಿಡಿ.

ವಯಸ್ಸಾಗುವವರೆಗೂ ಆರೋಗ್ಯದಿಂದ ಇರಲು ಈ ಸುಲಭ ಟಿಪ್ಸ್ ಗಳನ್ನು ಫಾಲೋ ಮಾಡಿ.!

 

ಆರೋಗ್ಯ ಎನ್ನುವುದು ಬೆಲೆ ಕಟ್ಟಲಾಗದ ಆಸ್ತಿಯಾಗಿದೆ. ನಾವು ಹಣದಿಂದ ಏನು ಬೇಕಾದರೂ ಕಂಡುಕೊಳ್ಳಬಹುದು ಆದರೆ ಆರೋಗ್ಯ ಕೊಂಡುಕೊಳ್ಳಲು ಆಗುವುದಿಲ್ಲ. ಅನಾರೋಗ್ಯ ಉಂಟಾದಾಗ ಚಿಕಿತ್ಸೆ ಕೊಡಿಸಬಹುದು ಹೊರತು ನಾವು ಆರೋಗ್ಯವಂತ ವ್ಯಕ್ತಿಯಂತೆ ಇರಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇರುತ್ತದೆ ಇದನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು.

ಕೆಲವರು ವಯಸ್ಸಾದರು ಕೂಡ ಆರೋಗ್ಯವಾಗಿಯೇ ಇರುತ್ತಾರೆ ಹೆಚ್ಚು ಲವಲವಿಕೆಯಿಂದ ಚೈತನ್ಯದಿಂದ ಇರುತ್ತಾರೆ. ಬಿಪಿ, ಶುಗರ್ ಅಥವಾ ಮತ್ಯಾವುದೇ ಆರೋಗ್ಯ ವ್ಯತ್ಯಾಸಗಳು ಕೂಡ ಇವರನ್ನು ಕಾಡುವುದಿಲ್ಲ. ವಯೋ ಸಹಜ ಕಾಯಿಲೆಗಳು ಕೂಡ ಬಾಧಿಸುವುದಿಲ್ಲ. ಈ ರೀತಿ ನೀವು ಕೂಡ ಇರಬೇಕು ಎಂದಿದ್ದರೆ ಇಂದಿನಿಂದಲೇ ನಾವು ಹೇಳುವ ಈ ಸರಳ ಟಿಪ್ ಗಳನ್ನು ಫಾಲೋ ಮಾಡಿ ಸಾಕು.

* ಪುಡಿ ಉಪ್ಪು ಬಳಸುವುದನ್ನು ನಿಲ್ಲಿಸಿ, ಇದರ ಬದಲು ಪುಡಿ ಉಪ್ಪು ಬಳಸುವ ಕಡೆಗಳಲ್ಲಿ ಹರಳು ಉಪ್ಟನ್ನೇ ಬಳಸಿ
* ರಾತ್ರಿ ಊಟ ಆದ ತಕ್ಷಣ ಮಲಗುವ ಅಭ್ಯಾಸ ತಪ್ಪಿಸಿ. ಮಲಗುವ ಕನಿಷ್ಠ 2 ಗಂಟೆಗಳ ಮೊದಲೇ ಊಟ ಮಾಡಿ ಹಾಗೂ ಊಟ ಆದ ಮೇಲೆ ಕನಿಷ್ಟ 500 ಹೆಜ್ಜೆಗಳನ್ನಾದರೂ ನಡೆಯಿರಿ

* ಎಮ್ಮೆಯ ಹಾಲು ಎಮ್ಮೆಯ ತುಪ್ಪ ಬಳಸುವುದು ನಿಲ್ಲಿಸಿ. ಇದರ ಬದಲು ಹಸುವಿನ ಹಾಲು, ಹಸುವಿನ ತುಪ್ಪವನ್ನು ಬಳಸಿ ಅದರಲ್ಲೂ ನಾಡು ಹಸುವಿನ ಹಾಲು ಮತ್ತು ತುಪ್ಪ ಬಳಸುವುದು ಬಹಳ ಒಳ್ಳೆಯದು
* ಉಪ್ಪು, ಸಕ್ಕರೆ ಮತ್ತು ಮೈದಾವನ್ನು ಬಿಳಿ ರೂಪದ ವಿಷಗಳು ಎಂದು ಹೇಳಲಾಗುತ್ತದೆ ಹಾಗಾಗಿ ಆದಷ್ಟು ಈ ಪದಾರ್ಥಗಳನ್ನು ಕಡಿಮೆ ಬಳಸಿ.

* ರಾತ್ರಿಯ ಹೊತ್ತು ಮೊಸರಿನ ಸೇವನೆ ಅಥವಾ ಮೊಸರನ್ನದ ಸೇವನೆ ಕಡಿಮೆ ಮಾಡಿ
* ಬೆಳಿಗ್ಗೆ ಎದ್ದ ಕೂಡಲೇ ಬ್ರಷ್ ಮಾಡಿ ಒಂದು ಲೋಟ ಬೆಚ್ಚಗಿನ ಅಥವಾ ಬಿಸಿಯಾದ ನೀರನ್ನು ಸಿಪ್ ಬೈ ಸಿಪ್ ಕುಡಿಯಿರಿ
* ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಚಹಾ ಅಥವಾ ಕಾಫಿಯನ್ನು ಕುಡಿಯಬೇಡಿ.

* ಒಂದು ದಿನಕ್ಕೆ ಅತಿಯಾಗಿ ಚಹಾ ಅಥವಾ ಕಾಫಿಯನ್ನು ಕುಡಿಯಬೇಡಿ ದಿನದಲ್ಲಿ ಒಂದು ಬಾರಿ ಅಥವಾ ಎರಡು ಬಾರಿ ಕಡಿಮೆ ಪ್ರಮಾಣದಲ್ಲಿ ಸೇವಿಸಿ. ಹಂತ ಹಂತವಾಗಿ ಅಡಿಕ್ಷನ್ ಕಡಿಮೆ ಮಾಡಿಕೊಳ್ಳುತ್ತಾ ಬನ್ನಿ.
* ಒಂದು ದಿನದಲ್ಲಿ 12 ಲೋಟ ನೀರನ್ನು ತಪ್ಪದೆ ಕುಡಿಯಬೇಕು
* ಊಟ ಮಾಡುವುದಕ್ಕಿಂತ 45 ನಿಮಿಷಗಳ ಮೊದಲು ಒಂದು ಲೋಟ ನೀರು ಕುಡಿಯಿರಿ

* ಸೂರ್ಯಾಸ್ತದ ಮುಂಚೆ ರಾತ್ರಿ ಊಟ ಮಾಡಿಕೊಳ್ಳುವುದು ಒಳ್ಳೆಯದು. ಸಂಜೆ 5:00ರ ನಂತರ ಹೆವಿ ಪದಾರ್ಥಗಳನ್ನು ಸೇವಿಸಬೇಡಿ
* ಬೆಳಗ್ಗೆ ಎದ್ದ ತಕ್ಷಣ ಕಣ್ಣುಗಳನ್ನು ಶುದ್ಧವಾದ ತಣ್ಣೀರಿನಿಂದ ತೊಳೆಯಿರಿ
* ಪ್ರತಿದಿನವೂ ಕನಿಷ್ಠ 20 ನಿಮಿಷಗಳ ಬೆಳಿಗ್ಗೆ ಅಥವಾ ಸಂಜೆಯ ವಾಕ್ ಮತ್ತು ಅರ್ಧ ತಾಸು ಯೋಗ ವ್ಯಾಯಾಮಕ್ಕೆ ಮೀಸಲಿರಲಿ
* ದಿನಕ್ಕೆ ಒಂದಾದರು ಸೇಬಿನ ಹಣ್ಣನ್ನು ಸೇವಿಸಿ ಇದು ಅನೇಕ ರೋಗಗಳನ್ನು ದೂರ ಇಡುತ್ತದೆ.

* ಪ್ರತಿದಿನವೂ ಒಂದು ತುಳಸಿ ದಳವನ್ನು ಸೇವಿಸಿ ಇದು ಕೂಡ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
* ಆಹಾರ ಪರಿಪೂರ್ಣವಾಗಿರಲಿ. ನೀವು ತಿನ್ನುವ ಆಹಾರದಲ್ಲಿ ಧಾನ್ಯಗಳು, ತರಕಾರಿಗಳು, ಸೊಪ್ಪುಗಳು ಈ ರೀತಿ ಎಲ್ಲ ರೀತಿಯ ಪೋಷಕಾಂಶಗಳು ಇರುವ ವಸ್ತುಗಳು ಇರಲಿ.
* ಒಂದು ಲೋಟ ಬಿಸಿ ನೀರಿಗೆ ಒಂದು ಹೋಳು ನಿಂಬೆರಸ ಹಾಕಿಕೊಂಡು ಮುಂಜಾನೆ ಅಥವಾ ಸಂಜೆ ಸಮಯ ಕುಡಿಯುವುದರಿಂದ ದೇಹ ಡಿ ಟಾಕ್ಸಿನ್ ಆಗುತ್ತದೆ.

 

ಕೂದಲ ಆರೈಕೆಗೆ ಕೆಲವು ಸುಲಭ ಟಿಪ್ಸ್ ಗಳು…

 

ಹೆಣ್ಣು ಮಕ್ಕಳ ಸೌಂದರ್ಯದ ಗುಟ್ಟು ಕೂದಲಿನಲ್ಲೇ ಅಡಗಿದೆ ಎಂದರೆ ತಪ್ಪಾಗುವುದಿಲ್ಲ. ಉದ್ದವಾದ ದಟ್ಟವಾದ ಕಪ್ಪಾದ ಸೊಂಪಾದ ಕೂದಲು ಹೊಂದಿರುವ ಹೆಣ್ಣು ಮಕ್ಕಳು ಗುಂಪಿನ ಮಧ್ಯೆ ಇದ್ದರೂ ಕೂಡ ಕಣ್ಣಿಗೆ ಬೀಳುತ್ತಾರೆ. ಸಿನಿಮಾ ತಾರೆಗಳಿಂದ ಹಿಡಿದು ಸಾಮಾನ್ಯರವರಿಗೆ ಎಲ್ಲಾ ಹೆಣ್ಣು ಮಕ್ಕಳಿಗೂ ಕೂಡ ಈ ರೀತಿ ಆರೋಗ್ಯಕರವಾದ ಉದ್ದವಾದ ಕೂದಲು ಇರಬೇಕು ಎನ್ನುವ ಇಚ್ಛೆ ಇರುತ್ತದೆ.

ಅದಕ್ಕಾಗಿ ದುಬಾರಿ ಶಾಂಪೂ ಆಯಿಲ್ ಎಲ್ಲವನ್ನು ಹಾಕಿದರೂ ಪ್ರಯೋಜನವಾಗುತ್ತಿಲ್ಲ ಎಂದು ನೊಂದುಕೊಳ್ಳುವವರು ಕೂಡ ಇದ್ದಾರೆ. ಈಗ ಎಲ್ಲಾ ಹೆಣ್ಣು ಮಕ್ಕಳಿಗಾಗಿ ಕೆಲವು ಬಹಳ ಸುಲಭವಾಗಿ ಕೂದಲ ಆರೈಕೆಗೆ ಸರಳವಾದ ಮನೆಮದ್ದುಗಳನ್ನು ತಿಳಿಸಿಕೊಡುತ್ತಿದ್ದೇವೆ.

* ಪ್ರತಿದಿನವೂ ಕೂಡ ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಲೇಟಾಗಿ ತಲೆ ಕೂದಲನ್ನು ಬಾಚಬೇಕು, ಇದರಿಂದ ಕೂದಲ ಬೇರು ಗಟ್ಟಿಯಾಗುತ್ತದೆ, ಸಿಕ್ಕಾಗಿ ಕೂದಲು ಹಾನಿಯಾಗುವುದು ತಪ್ಪುತ್ತದೆ. ಕೂದಲ ಬುಡದಲ್ಲಿರುವ ಎಣ್ಣೆಯ ಜಿಡ್ಡಿನಾಂಶ ಎಲ್ಲ ಕೂದಲಿಗೂ ಹರಡಿ ಕೂದಲು ಕಾಂತಿಯುತವಾಗಲು ಸಹಾಯವಾಗುತ್ತದೆ.

ಈ ಸುದ್ದಿ ಓದಿ:- ತುಲಾ ರಾಶಿಯವರ ಸಹಜ ಗುಣ ಸ್ವಭಾವಗಳು, ತುಲಾ ರಾಶಿಯವರಿಗೆ ಹೆಚ್ಚು ಮೋ’ಸವಾಗುವುದು ಏಕೆ ಮತ್ತು ಇವರಿಗೆ ಹೊಂದುವ ವೃತ್ತಿ ಯಾವುದು?..

* ಬೆಟ್ಟದ ನೆಲ್ಲಿಕಾಯಿಯನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿ ಆ ಪೇಸ್ಟ್ ನ್ನು ಸ್ನಾನ ಮಾಡುವ ಒಂದು ತಾಸಿನ ಮುಂಚೆ ಕೂದಲಿನ ಬುಡಕ್ಕೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲಿನ ಶೈನಿಂಗ್ ಹೆಚ್ಚಾಗುತ್ತದೆ ಕೂದಲು ಗಟ್ಟಿಯಾಗಿ ಉದುರುವ ಸಮಸ್ಯೆ ನಿಲ್ಲುತ್ತದೆ.

* ಮೆಂತ್ಯೆಯನ್ನು ಚೆನ್ನಾಗಿ ನೆನೆಸಿ ರುಬ್ಬಿ ಆ ಪೇಸ್ಟ್ ನ್ನು ತಲೆಗೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತಲೆ ಕಳೆದುಕೊಳ್ಳುವುದರಿಂದ ತಲೆ ಹೊಟ್ಟು ನಿವಾರಣೆ ಆಗುತ್ತದೆ ಮತ್ತು ಕೂದಲಿಗೆ ಶೈನಿಂಗ್ ಬರುತ್ತದೆ, ದೇಹವು ತಂಪಾಗುತ್ತದೆ.

* ವಾರದಲ್ಲಿ ಎರಡು ದಿನ ಮಾತ್ರ ತಲೆ ಸ್ನಾನ ಮಾಡಬೇಕು, ಉಳಿದ ದಿನಗಳಲ್ಲಿ ಚೆನ್ನಾಗಿ ಕೂದಲಿಗೆ ಎಣ್ಣೆ ಹಚ್ಚಿ ಜಡೆ ಬಾಚಬೇಕು.
* ಕೊಬ್ಬಿನಾಂಶ ಹೆಚ್ಚಿರುವ ಪದಾರ್ಥಗಳನ್ನು ಕರಿದ ಆಹಾರ ಪದಾರ್ಥಗಳನ್ನು ಮತ್ತು ಬೇಕರಿ ಪದಾರ್ಥಗಳ ಸೇವನೆ ಕಡಿಮೆ ಮಾಡುವುದರಿಂದ ಕೂದಲಿನ ಆರೋಗ್ಯ ವೃದ್ಧಿಸುತ್ತದೆ.

ಈ ಸುದ್ದಿ ಓದಿ:- ಸಿಂಹ ರಾಶಿಯವರಿಗೆ ಏಪ್ರಿಲ್ 2024ರ ಶುಕ್ರ ಪ್ರಭಾವ ನಿಮ್ಮ ಜೀವನದಲ್ಲಿ ನೀವು ಊಹಿಸದ ಒಂದು ಅದ್ಭುತ ಬದಲಾವಣೆಯಾಗಲಿದೆ.!

* ತಲೆ ಸ್ನಾನ ಮಾಡುವ ಹಿಂದಿನ ದಿನ ನಾಲ್ಕು ಚಮಚ ಕೊಬ್ಬರಿ ಎಣ್ಣೆಗೆ ಒಂದು ಚಮಚ ನಿಂಬೆರಸ ಮಿಕ್ಸ್ ಮಾಡಿ ತಲೆಗೆ ಹಚ್ಚಿ ರಾತ್ರಿ ಪೂರ ನೆನೆಸಿ ಮರುದಿನ ತಲೆ ಸ್ನಾನ ಮಾಡುವುದರಿಂದ ಕೂದಲಿನ ಆರೋಗ್ಯ ಸುಧಾರಿಸುತ್ತದೆ
* ಉಳಿದ ದಿನಗಳಲ್ಲಿ ತಲೆಗೆ ಎಣ್ಣೆ ಹಚ್ಚುವಾಗ ಕೊಬ್ಬರಿ ಎಣ್ಣೆ ಹಾಗೂ ಹರಳೆಣ್ಣೆಯನ್ನು ಮಿಕ್ಸ್ ಮಾಡಿ ಅದನ್ನು ಸ್ವಲ್ಪ ಬೆಚ್ಚಗೆ ಮಾಡಿ ನಂತರ ತಲೆಕೂದಲಿಗೆ ಹಚ್ಚಿದರೆ ಒಳ್ಳೆಯದು

* ವಾರಕ್ಕೆ ಒಮ್ಮೆ ಕೂದಲು ಬಾಚುವ ಬಾಚಣಿಕೆಯನ್ನು ಸ್ವಚ್ಛ ಮಾಡಿಟ್ಟುಕೊಳ್ಳಬೇಕು
* ತಲೆ ಕೂದಲು ಒರೆಸುವ ವಸ್ತ್ರಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು ಮತ್ತು ವಾರಕ್ಕೆ ಎರಡು ಬಾರಿ ಬದಲಾಯಿಸಬೇಕು
* ತಲೆ ದಿಂಬಿನ ಕವರ್ ಕೂಡ ವಾರಕ್ಕೊಮ್ಮೆ ಬದಲಾಯಿಸಬೇಕು.
* ಸಣ್ಣ ಈರುಳ್ಳಿಯನ್ನು ಪೇಸ್ಟ್ ಮಾಡಿ ತಲೆ ಕೂದಲಿಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ. ದಟ್ಟವಾಗಿ ಶೈನಿಂಗ್ ಕೂಡ ಬರುತ್ತದೆ

* ಆದಷ್ಟು ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ಬಳಸಬೇಕು ಮತ್ತು ಕೊಬ್ಬರಿ ಎಣ್ಣೆಗೆ ಸಮಪ್ರಮಾಣದಲ್ಲಿ ಕರಿಬೇವಿನ ಎಲೆ ಮೆಹಂದಿ ಎಲೆ, ಕೆಂಪು ದಾಸವಾಳ, ಬೆಟ್ಟದ ನೆಲ್ಲಿಕಾಯಿ ಚೂರು ಇವುಗಳನ್ನು ಚೆನ್ನಾಗಿ ಒಣಗಿಸಿ ಇದರ ಜೊತೆಗೆ ಮೆಂತ್ಯೆ ಉರಿದು ಎಲ್ಲವನ್ನು ಪುಡಿ ಮಾಡಿ ಕೊಬ್ಬರಿ ಎಣ್ಣೆಗೆ ಹಾಕಿ ಹದಕ್ಕೆ ಕುದಿಸಬೇಕು ಮತ್ತು ಎಣ್ಣೆ ಆರಿದ ಬಳಿಕ ಅದನ್ನು ಒಂದು ಗಾಜಿನ ಶಿಕ್ಷೆಯಲ್ಲಿ ಶೇಖರಿಸಿ ಮೂರು ದಿನ ಸೂರ್ಯನ ಬೆಳಕಿಗೆ ಇಟ್ಟು ನಂತರ ತಂಪಾದ ಸ್ಥಳದಲ್ಲಿ ಸ್ಟೋರ್ ಮಾಡಿ ತಲೆ ಕೂದಲಿಗೆ ಹಚ್ಚಬೇಕು ಇದು ಕೂದಲಿನ ಬೆಳವಣಿಗೆಗೆ ತುಂಬಾ ಸಹಾಯಕ.