Home Blog Page 97

2024 ರ ವರ್ಷ ಭವಿಷ್ಯ, ವೃಷಭ ರಾಶಿಯವರ ಅದೃಷ್ಟ ಈ ಹೊಸ ವರ್ಷ ಹೇಗಿದೆ ಗೊತ್ತಾ.?

 

2024ರ ವರ್ಷವು ಈ ಹೊಸ ವರ್ಷದಲ್ಲಿ ಬಹಳ ಅದೃಷ್ಟದಾಯಕವಾಗಿದೆ. 95% ಲಕ್ಕಿ ಆಗಿದ್ದು ಅವರು ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಸಮಯವಾಗಿದೆ. ರಾಶಿ ಕುಂಡಲಿ ಪ್ರಕಾರ ರಾಶಿಯಾಧಿಪತಿ ಶುಕ್ರನು 7ನೇ ಮನೆಯಲ್ಲಿದ್ದು, ಧನಾಧಿಪತಿ ಹಾಗೂ ವಾಗ್‌ ಸ್ಥಾನಾಧಿಪತಿ ಮತ್ತು ಧನ ಸ್ಥಾನಾಧಿಪತಿ ಬುಧನು 7ನೇ ಮನೆಯಲ್ಲಿದ್ದಾರೆ.

ಇಬ್ಬರು ಒಟ್ಟಿಗೆ ಸೇರಿರುವುದರಿಂದ ಇದನ್ನು ಲಕ್ಷ್ಮಿ ನಾರಾಯಣ ಯೋಗ ಎಂದು ಕೂಡ ಕರೆಯುತ್ತಾರೆ 9ನೆ ಮನೆಯಾಧಿಪತಿ ಶನಿಯು 10ನೇ ಮನೆಯಲ್ಲಿದ್ದಾರೆ ಇವರು ಭಾಗ್ಯಾಧಿಪತಿಯಾಗಿರುತ್ತಾರೆ ಮತ್ತು ಉಳಿದ ಗ್ರಹಗಳಾದ ಸೂರ್ಯ, ಚಂದ್ರ, ಗುರು ಎಲ್ಲರೂ ಕೂಡ ಉತ್ತಮ ಸ್ಥಾನದಲ್ಲಿದ್ದು ಒಳ್ಳೆಯ ಪ್ರತಿಫಲಗಳನ್ನು ನೀಡುತ್ತಿರುತ್ತಾರೆ.

ವೃಷಭ ರಾಶಿಯವರು ಈ ಹಿಂದಿನ ಎಲ್ಲಾ ವರ್ಷಗಳಿಗಿಂತ ಹೆಚ್ಚಿನ ಹಣವನ್ನು ಕಡಿಮೆ ಶ್ರಮದಲ್ಲಿ ಸಂಪಾದನೆ ಮಾಡುತ್ತಾರೆ ಎಂದರೂ ತಪ್ಪಾಗುವುದಿಲ್ಲ. ಯಾಕೆಂದರೆ ಹಣಕಾಸು ವಿಷಯದಲ್ಲಿ ಈ ವರ್ಷ ಈ ಮೊದಲೇ ಹೇಳಿದಂತೆ ಲಕ್ಷ್ಮಿ ಹಾಗೂ ಶ್ರೀ ನಾರಾಯಣನ ಆಶೀರ್ವಾದದಿಂದ ಕೈತುಂಬ ಸಂಪಾದನೆ ಮಾಡುತ್ತಾರೆ.

ಅವರು ಬೇಡ ಎಂದರು ಅದೃಷ್ಟ ಅವರ ಪಾಲಿಗೆ ಹುಡುಕೊಂಡು ಬರುವಂತಹ ಯೋಗಗಳನ್ನು ಈ ವರ್ಷ ಹೊಂದಿದ್ದಾರೆ 12 ರಾಶಿಗಳಲ್ಲಿ ವೃಷಭ ರಾಶಿಯವರು ಈ ವರ್ಷ ಹಣಕಾಸಿನ ವಿಚಾರದಲ್ಲಿ ಹೆಚ್ಚು ಉತ್ತಮ ಸ್ಥಾನದಲ್ಲಿದ್ದಾರೆ. ವೃಷಭ ರಾಶಿಯವರ ಅದೃಷ್ಟ ಹೇಗಿದೆ ಎಂದರೆ ನೂರು ರೂಪಾಯಿ ಹಾಕಿ ಅವರು ಸಾವಿರ ರೂಪಾಯಿ ತೆಗೆಯುವಂತಹ ಲಕ್ 2024ನೇ ಇಸವಿಯಲ್ಲಿ ಪಡೆದಿದ್ದಾರೆ.

ಮನೆ ಕಟ್ಟುವ ಯೋಜನೆ ಇದ್ದವರು, ಆಸ್ತಿ ಖರೀದಿಸುವ ಪ್ಲಾನ್ ಮಾಡಿದ್ದವರು ಸರಾಗವಾಗಿ ಈ ಕಾರ್ಯಗಳನ್ನು ಮಾಡುತ್ತಾರೆ. ಕಂಕಣ ಭಾಗ್ಯ ಕೂಡ ಕೂಡಿಬರುತ್ತದೆ. ಒಳ್ಳೆ ಸಂಬಂಧಗಳನ್ನು ಹೊಂದುತ್ತಾರೆ ಹಾಗೆ ಮಕ್ಕಳ ನಿರೀಕ್ಷೆಯಲ್ಲಿರುವವರೆಗೂ ಶುಭ ಸುದ್ದಿ ಸಿಗಲಿದೆ.

ವಿದ್ಯಾಭ್ಯಾಸದ ವಿಚಾರದಲ್ಲಿ ಕೂಡ ವೃಷಭ ರಾಶಿಯವರಿಗೆ ಈ ವರ್ಷ ತಾವೊಂದುಕೊಂಡ ವಿಷಯಗಳನ್ನು ಓದುವ ತಾವಂದು ಕೊಂಡ ಕಾಲೇಜುಗಳಲ್ಲಿ ಸೀಟ್ ಗಿಟ್ಟಿಸಿಕೊಳ್ಳುವ, ತಾವು ಬಯಸಿದ ಪ್ರದೇಶದಲ್ಲಿಯೇ ಉಳಿದುಕೊಂಡು ವಿದ್ಯಾಭ್ಯಾಸ ಮಾಡುವಂತಹ ಯೋಗಗಳು ಲಭಿಸಲಿವೆ.

ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ದುಡಿಯುವವರಿಗೆ ಕೂಡ ಬಡ್ತಿ ಹೊಂದುವ ಅವಕಾಶ ಇದೆ, ವ್ಯಾಪಾರ ವಹಿವಾಟು ಮಾಡುವವರಿಗಂತೂ ಹೇಳುವಂತೆಯೇ ಇಲ್ಲ ಈ ಮೊದಲೇ ಹೇಳಿದಂತೆ ಲಾಭ ಹೆಚ್ಚಾಗಲಿದೆ. ವೃಷಭ ರಾಶಿಯವರು ಅಡ್ವೋಕೇಟ್, ಡಾಕ್ಟರ್, ಜ್ಯೋತಿಷಿ, ಆರ್ಟಿಸ್ಟ್ ಈ ರೀತಿ ಬಂಡವಾಳ ಇಲ್ಲದೆ ದುಡಿಯುವ ಕೆಲಸಗಳನ್ನು ಬಯಸುತ್ತಾರೆ.

ಈಗ ಅದೇ ಕ್ಷೇತ್ರವು ಅವರಿಗೆ ಅದೃಷ್ಟವನ್ನು ತಂದು ಅತಿ ಹೆಚ್ಚು ಲಾಭ ಮಾಡಿ ಕೊಡುತ್ತದೆ 5% ನಲ್ಲಿ ಅನಾರೋಗ್ಯದ ಕಾರಣದಿಂದಾಗಿ ಸ್ವಲ್ಪ ವಿಚಲಿತರಾಗುತ್ತಾರೆ. ಈ ರಾಶಿಯವರು ಸ್ವಭಾವತಃ ದಪ್ಪವಾಗಿರುವುದರಿಂದ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಈ ವರ್ಷ ಅವರಿಗೆ ವಿದೇಶ ಪ್ರಯಾಣದ ಯೋಗ ಇರುವುದರಿಂದ ಇನ್ಫೆಕ್ಷನ್ ಗಳು ಅಥವಾ ಮಕ್ಕಳು ಹಾಗೂ ಕುಟುಂಬ ಸದಸ್ಯರ ಅನಾರೋಗ್ಯದ ಕಾರಣದಿಂದಾಗಿ ಸ್ವಲ್ಪ ಬೇಜಾರು ಮಾಡಿಕೊಳ್ಳುತ್ತಾರೆ ಅಷ್ಟೇ.

ಉಳಿದಂತೆ ಇನ್ನೆಲ್ಲಾ ವಿಷಯದಲ್ಲೂ ಕೂಡ ವೃಷಭ ರಾಶಿಯವರಿಗೆ 2024 ಬಹಳ ಲಕ್ಕಿ ವರ್ಷವಾಗಿದೆ. ಹೊಸ ಕೆಲಸ ಕಾರ್ಯಗಳನ್ನು ಆರಂಭಿಸಬೇಕು ಎಂದು ಬಯಸುವವರು ಈ ವರ್ಷವನ್ನು ಸದುಪಯೋಗಪಡಿಸಿಕೊಳ್ಳಿ ಮತ್ತು ದುಡಿದ ಹಣವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿ, ಕೈಲಾದಷ್ಟು ಅಸಹಾಯಕರಿಗೆ ಸಹಾಯ ಮಾಡಿ.

ನಿತ್ಯ ಕಳಸ ಪೂಜೆ ಮಾಡುವ ಗೃಹಿಣಿಯರು ಈ ಪೂಜಾ ಕ್ರಮದಲ್ಲಿ ಇರುವ ಸೂಕ್ಷ್ಮ ವಿಚಾರಗಳ ಬಗ್ಗೆ ಗಮನ ಕೊಡಿ.!

 

ಕಳಸ ಎನ್ನುವುದು ತಾಯಿ ಮಹಾಲಕ್ಷ್ಮಿಯ ಸ್ವರೂಪ, ಕೆಲವರು ತಾಯಿ ಶ್ರೀ ಗೌರಿಯ ರೂಪವಾಗಿ ಕೂಡ ಕಳಶ ಇಟ್ಟು ಪೂಜೆ ಮಾಡುತ್ತಾರೆ. ಕಳಶ ಇಡುವಾಗ ಗೃಹಿಣಿಯರು ಬಹಳ ಎಚ್ಚರಿಕೆಯಿಂದ ಈ ಪೂಜಾ ವಿಧಾನವನ್ನು ಅನುಸರಿಸಬೇಕು ಇದರಿಂದ ಅವರಿಗೆ ಪೂಜೆಯ ಪೂರ್ತಿ ಪ್ರತಿಫಲ ಸಿಗುತ್ತದೆ ಮತ್ತು ಕಳಶ ಇಟ್ಟು ಪೂಜೆ ಮಾಡುವಾಗ ಕೆಲವು ನಿಯಮಗಳು ಇವೆ ಅವುಗಳನ್ನು ತಪ್ಪದೇ ಪಾಲಿಸಬೇಕು.

ಯಾವ ರೀತಿ ಕಳಶ ಇಡಬೇಕು ಮತ್ತು ಯಾವ ರೀತಿಯ ಪೂಜೆ ಮಾಡಿದರೆ ಫಲ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಹಿರಿಯರು ಹೇಳಿರುವಂತಹ ಕೆಲವು ಕಿವಿಮಾತುಗಳ ಬಗ್ಗೆ ಹೇಳುತ್ತಿದ್ದೇವೆ. ನೀವು ಕೂಡ ಇದೇ ರೀತಿ ಪಾಲಿಸಿ, ಕಳಶ ಪೂಜೆಯ ಸಂಪೂರ್ಣ ಅನುಗ್ರಹ ಪಡೆಯಿರಿ.

* ಯಾವುದೇ ಕಾರಣಕ್ಕೂ ಕಳಸಕ್ಕೆ ಸ್ಟೀಲ್ ಅಥವಾ ಕೋಟಿಂಗ್ ಇರುವ ಚೊಂಬು ಇಡಬಾರದು, ಬೆಳ್ಳಿ ಅಥವಾ ಹಿತ್ತಾಳೆ ಚೆಂಬು ಇಡಬೇಕು. ಅದರಲ್ಲೂ ನಿಮ್ಮ ಹಿರಿಯರು ಮೊದಲಿನಿಂದಲೂ ದೇವರ ಕೋಣೆಯಲ್ಲಿ ಕಳಶ ಇಡಲು ಬಳಸುತ್ತಿದ್ದ ಚೊಂಬನ್ನೇ ಬಳಸಿದರೆ ಇನ್ನು ಉತ್ತಮ ಯಾಕೆಂದರೆ ಈಗಾಗಲೇ ಆ ವಸ್ತುಗಳಿಗೆ ದೈವಿಕ ಗುಣ ಬಂದಿರುತ್ತದೆ.

* ಕೆಲವರು ಮನೆದೇವರು ಕಳಶ, ಎಲೆ ಕಳಶ, ಕಾಯಿ ಕಳಶ ಹೀಗೆ ಅವರ ಪದ್ಧತಿ ಪ್ರಕಾರ ಇಡುತ್ತಾರೆ. ಒಂದು ವೇಳೆ ನೀವೇನಾದರೂ ತಾಯಿ ಮಹಾಲಕ್ಷ್ಮಿ ಅನುಗ್ರಹಕ್ಕಾಗಿ ಲಕ್ಷ್ಮಿ ಕಳಶ ಹೇಳುತ್ತಿದ್ದರೆ ಆ ಲಕ್ಷ್ಮಿ ಕಳಶಕ್ಕೆ ತಾಳಿಯನ್ನು ಹಾಕಬೇಕು ತಾಳಿ ಹಾಕಲು ಶಕ್ತಿ ಇಲ್ಲದಿದ್ದರೆ ಅರಿಶಿಣದ ಕೊಂಬನ್ನಾದರೂ ಅದಕ್ಕೆ ಕಟ್ಟಬಹುದು.

* ಕಳಶ ಇಡುವುದಕ್ಕೂ ಮುನ್ನ ಕಳಶ ಇಡುವ ಸಾಮಾಗ್ರಿಗಳನ್ನು ಶುದ್ಧವಾದ ನೀರಿನಿಂದ ತೊಳೆದು ಮಡಿ ಮಾಡಿದ ಮೇಲೆ ಇಡಬೇಕು. ನೆಲದ ಮೇಲೆ ಕಳಶವನ್ನು ಇಡಬಾರದು, ಒಂದು ತಟ್ಟೆಗೆ ಮೂರು ಹಿಡಿ ಅಥವಾ ಐದು ಹಿಡಿ ಅಕ್ಕಿಯನ್ನು ಹಾಕಿ ಅದಕ್ಕೆ ಅರಿಶಿನ ಕುಂಕುಮ ಅಕ್ಷತೆ ಹಾಕಿ ಉಂಗುರ ಬೆರಳಿನಿಂದ ಅಷ್ಟದಳ ಕಮಲ ಬಿಡಿಸಿ ಅದರ ಮೇಲೆ ನೀರು ತುಂಬಿದ ಚೊಂಬನ್ನು ಇಟ್ಟು ಕಳಶ ಮಾಡಬೇಕು

* ಕಳಸಕ್ಕೆ ತುಂಬವ ನೀರು ಕೂಡ ಮಡಿಯಾಗಿರಬೇಕು. ನೀರು ತುಂಬಿ ಅರಿಶಿನ ಕುಂಕುಮ ಗಂಧ ಅಕ್ಷತೆ ಹಾಕಿ, ನೀರಿಗೂ ಒಂದು ಹೂವು ಹಾಗೂ ಒಂದು ಹಿತ್ತಾಳೆ ಅಥವಾ ಬೆಳ್ಳಿಯ ನಾಣ್ಯವನ್ನು ಹಾಕಬೇಕು. ಕಳಸಕ್ಕೆ ಹಾಕುವ ನೀರು ತುಂಬಿರಬೇಕು ಆದರೆ ಕಾಯಿ ಇಟ್ಟಾಗ ಚೆಲ್ಲಬಾರದು, ಕಾಯಿಗೆ ತಾಗುವಷ್ಟು ನೀರು ಇರಬೇಕು. ಕೆಲವರು ಕಳಶದ ಒಳಗಡೆ ಕವಡೆ, ಗೋಮತಿ ಚಕ್ರ, ಕಮಲದ ಬೀಜಗಳನ್ನು ಹಾಕುತ್ತಾರೆ ಇದು ಕೂಡ ನಿತ್ಯ ಹಾಕಬೇಕೆಂಬ ನಿಯಮ ಇಲ್ಲ ಹಬ್ಬ ಹರಿದಿನಗಳಲ್ಲಿ ಹಾಕಿದರೆ ಸಾಕು.

* ಕಳಸಕ್ಕೆ ಇಡುವ ತೆಂಗಿನಕಾಯಿ ಬಗ್ಗೆಯೂ ಗಮನ ಕೊಡಬೇಕು. ಕಣ್ಣು ಕಾಣಿಸಬಾರದು, ಜುಟ್ಟು ಇರಬೇಕು, ಹಾಳಾಗಿರಬಾರದು ಇದಕ್ಕೆ ಮಡಿ ನೀರು ಚಿಮ್ಮಿಸಿ ಇಡಬೇಕು. ಕೆಲವರು ಕಾಯಿ ಪೂರ್ತಿ ಅರಿಶಿಣ ಹಚ್ಚಿ ಕುಂಕುಮ ಇಟ್ಟು ಇಡುತ್ತಾರೆ, ಹೀಗೂ ಮಾಡಬಹುದು.

* ಕಳಶಕ್ಕೆ ವಿಳ್ಯೆದೆಲೆ ಅಥವಾ ಮಾವಿನ ಎಲೆ ಇಡಬೇಕು. ಇವು ಒಡೆದಿರಬಾರದು, ಬಾಡಿರಬಾರದು ಒಂದೇ ಅಳತೆಯಲ್ಲಿ ಇರಬೇಕು ಮಡಿ ನೀರಿನಲ್ಲಿ ತೊಳೆದು ಇಡಬೇಕು.

* ಯಾವುದೇ ಕಾರಣಕ್ಕೂ ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನದಂದು ಕಳಶವನ್ನು ಕದಲಿಸಬಾರದು. ಇವುಗಳ ಹಿಂದಿನ ದಿನವೇ ಕದಲಿಸಿ ಎಲ್ಲವನ್ನು ಸ್ವಚ್ಛ ಮಾಡಿ ಇಟ್ಟುಕೊಂಡು ಈ ದಿನಗಳಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜಿಸಿದರೆ ಶುಭ. ಕಳಸ ಪತಿಷ್ಠಾಪನೆ ಮಾಡಿದ ನಂತರ ಪದೇಪದೇ ಮುಟ್ಟುವುದು ಸರಿಪಡಿಸುವುದು ಈ ರೀತಿ ಮಾಡಬಾರದು

* ಕಳಶ ಕದಲಿಸಿದ ನಂತರ ಆ ನೀರನ್ನು ತುಳಸಿ ಗಿಡಕ್ಕೆ ಅಥವಾ ತೆಂಗಿನ ಮರಕ್ಕೆ ಹಾಕಬೇಕು. ಯಾರು ಆ ನೀರು ಎಲೆ ಹೂಗಳನ್ನು ತುಳಿಯಬಾರದು, ತೆಂಗಿನಕಾಯಿಯನ್ನು ತೆಗೆದು ಸಿಹಿ ಪದಾರ್ಥ ಮಾಡಿ ದೇವರಿಗೆ ನೈವೇದ್ಯ ಮಾಡಬಹುದು ಮತ್ತು ಮನೆ ಮಂದಿಯೆಲ್ಲಾ ಸೇವಿಸಬಹುದು. ಆದರೆ ಈ ತೆಂಗಿನಕಾಯಿಯಿಂದ ಖಾರದ ಪದಾರ್ಥಗಳನ್ನು ಮಾಡಬೇಡಿ.

ಈ ದಿಕ್ಕಿನಲ್ಲಿ ಮಲಗಿದರೆ ಸಾಕು ನಿಮ್ಮ ಅದೃಷ್ಟ ಖುಲಾಯಿಸುತ್ತದೆ.! ವಾಸ್ತುವಿನ ಬಗ್ಗೆ ಈ ವಿಷಯಗಳನ್ನು ಪ್ರತಿಯೊಬ್ಬರು ತಿಳಿದಿರಲೇಬೇಕು.!

 

ವಾಸ್ತು ಶಾಸ್ತ್ರವನ್ನು ಭಾರತೀಯರು ಅಪಾರವಾಗಿ ನಂಬುತ್ತೇವೆ. ಹಲವು ವರ್ಷಗಳಿಂದ ವಾಸ್ತು ಶಾಸ್ತ್ರವು ಜೀವಂತವಾಗಿದ್ದು ಇಂದಿಗೂ ಕೂಡ ತನ್ನ ಕಡೆಗೆ ಜನರನ್ನು ಆಕರ್ಷಿಸುತ್ತಿದೆ ಎಂದರೆ ಇದಕ್ಕಿರುವ ಶಕ್ತಿ ಎಂತಹದ್ದು ಎಂದು ಮನವರಿಕೆ ಆಗುತ್ತದೆ. ವಾಸ್ತು ತಪ್ಪಿದಾಗ ಆಗುವ ಅ’ನಾ’ಹು’ತಗಳು ಹಾಗೆ ಅದನ್ನು ಸರಿಪಡಿಸಿಕೊಂಡಾಗ ಸಿಗುವ ಫಲಿತಾಂಶಗಳು ವಾಸ್ತು ನಂಬುವುದಕ್ಕೆ ಹೆಚ್ಚು ಪುಷ್ಟಿಕೊಡುತ್ತವೆ.

ವಿಜ್ಞಾನದಲ್ಲಿ ನಾವು ಬಹಳ ಮುಂದುವರೆದು ಚಂದ್ರಲೋಕ ತಲುಪಿ ಬಂದಿದ್ದರು ಕೂಡ ವಾಸ್ತುವಿನ ವಿಷಯದಲ್ಲಿ ನಿರ್ಲಕ್ಷ ತೋರುವಂತಿಲ್ಲ ಇದರ ಹಿಂದೆಯೂ ಕೂಡ ಹಲವು ವೈಜ್ಞಾನಿಕ ಕಾರಣಗಳಿದ್ದು ಇದನ್ನೆಲ್ಲ ಲೆಕ್ಕಾಚಾರ ಹಾಕಿ ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ನಿಯಮಗಳನ್ನು ಮಾಡಲಾಗಿದೆ.

ಅದರಲ್ಲಿ ಮಲಗುವ ದಿಕ್ಕು ಕೂಡ ಅತಿ ಮುಖ್ಯ ವಿಷಯ, ತಪ್ಪಾದ ದಿಕ್ಕಿನಲ್ಲಿ ಮಲಗಿದರೆ ಏನೆಲ್ಲಾ ಸಮಸ್ಯೆಗಳಾಗಬಹುದು ಎನ್ನುವುದರಿಂದ ಹಿಡಿದು ಯಾವ ದಿಕ್ಕಿನಲ್ಲಿ ಮಲಗಿದರೆ ಒಳ್ಳೆಯದು ಎನ್ನುವ ವಿಚಾರದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.

1. ವಾಸ್ತು ಶಾಸ್ತ್ರ ಹೇಳುವ ಪ್ರಕಾರ ಗಂಡ ಹೆಂಡತಿ ಯಾವಾಗಲೂ ದಕ್ಷಿಣ ದಿಕ್ಕಿನ ಕಡೆಗೆ ತಲೆ ಇಟ್ಟು ಮಲಗಬೇಕು. ಕಾಂತೀಯ ಶಕ್ತಿಯು ದಕ್ಷಿಣ ದಿಕ್ಕಿನಿಂದ ಹರಿಯುವುದರಿಂದ ಇದು ದೇಹ ಹಾಗೂ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗಿದಾಗ ಅವರಿಗಿದ್ದ ಎಷ್ಟು ಆರೋಗ್ಯ ಸಮಸ್ಯೆಗಳು ಗುಣವಾಗಲು ಆರಂಭವಾಗುತ್ತದೆ ಮತ್ತು ಮನೆಯ ಪರಿಸ್ಥಿತಿಯು ಕೂಡ ಸುಧಾರಿಸಿ ಸುಖ ಶಾಂತಿ ನೆಮ್ಮದಿ ದೊರೆತು ಹಣಕಾಸಿನ ಸಮಸ್ಯೆಗಳು ಪರಿಹಾರವಾಗಿ ಅವರ ಬದುಕು ಒಳ್ಳೆಯ ರೀತಿಯಲ್ಲಿ ಬದಲಾಗುತ್ತದೆ.

ಹೀಗಾಗಿ ಗೊತ್ತಿಲ್ಲದೆ ಇಷ್ಟು ದಿನ ಈ ತಪ್ಪು ಮಾಡಿದ್ದರೂ ಕೂಡ ಇಂದಿನಿಂದಲೇ ಇದನ್ನು ಸರಿಪಡಿಸಿಕೊಳ್ಳಿ. ಮನೆಯಲ್ಲಿ ಮಕ್ಕಳಿರಲಿ ಅಥವಾ ವೃದ್ಧರಿರಲಿ ಯಾವುದೇ ವಯೋಮಾನದವರು ಆಗಿದ್ದರು ಕೂಡ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳಬೇಡಿ.

2. ವಾಸ್ತು ಶಾಸ್ತ್ರದ ಪ್ರಕಾರ ಪಶ್ಚಿಮ ದಿಕ್ಕಿನ ಕಡೆಗೆ ತಲೆ ಇಟ್ಟು ಮಲಗುವುದು ಅಷ್ಟೊಂದು ಒಳ್ಳೆಯದಲ್ಲ. ಈ ದಿಕ್ಕಿನಲ್ಲಿ ಮಲಗುವ ಅಭ್ಯಾಸ ಜೀವನದಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಇದರಿಂದ ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಬರಲು ಆರಂಭಿಸಿ ನಿಮಗೆ ಜೀವನ ಬಹಳ ಬೇಸರ ತರಿಸಿ ನೋ’ವು ಕೊಡುತ್ತದೆ.

ಪಶ್ಚಿಮ ದಿಕ್ಕಿನಲ್ಲಿ ತಲೆ ಹಾಕಿ ಮಲಗುವುದರಿಂದ ನಿಮ್ಮ ದೇಹವು ಜಡ ಆಗುತ್ತದೆ, ನೀವು ಸೋಂಬೇರಿಗಳಾಗುತ್ತಿರಿ ನಿಮಗೆ ಯಾವುದರಲ್ಲೂ ಆಸಕ್ತಿ ಇಲ್ಲದೆ ಇದೇ ನಿಮ್ಮ ಕುಟುಂಬ ಕ’ಲ’ಹ’ಕ್ಕೆ ಕಾರಣವಾಗುತ್ತದೆ. ವೈವಾಹಿಕ ಜೀವನದ ಮೇಲೂ ಕೆ’ಟ್ಟ ಪರಿಣಾಮ ಬೀರುತ್ತದೆ. ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿ ಹಣಕಾಸಿನ ವಿಚಾರದಲ್ಲಿ ಹಿನ್ನಡೆ ಬೀಳುತ್ತದೆ.

ಕೈಕೊಂಡ ಕೆಲಸ ಕಾರ್ಯಗಳು ಕೈಗೂಡುವುದಿಲ್ಲ, ಪ್ರತಿಯೊಂದರಲ್ಲೂ ಸಮಸ್ಯೆ ಎದುರಿಸಬೇಕಾಗುತ್ತದೆ. ಮತ್ತೊಂದು ವಿಚಾರ ಏನೆಂದರೆ ಇದು ಸೂರ್ಯ ಉದಯಿಸುವ ವಿರುದ್ಧ ದಿಕ್ಕು ಆಗಿರುವುದರಿಂದ ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಿದಾಗ ಸೂರ್ಯನ ಕಡೆಗೆ ಕಾಲು ಬರುತ್ತದೆ. ಬೆಳಗ್ಗೆ ಸೂರ್ಯ ಬಂದಾಗ ಆತನಿಗೆ ಅಗೌರವ ತೋರಿದ ರೀತಿ ಆಗುತ್ತದೆ ಹಾಗಾಗಿ ಈ ರೀತಿ ಮಲಗುವುದು ಬಹಳ ತಪ್ಪು ಎಂದು ನಮ್ಮ ಹಿರಿಯರು ಈ ದಿಕ್ಕಿನಲ್ಲಿ ಮಲಗುತ್ತಿರಲಿಲ್ಲ.

ಹಾಗೆ ಸೂರ್ಯನ ಕಿರಣಗಳು ಮೊದಲು ನಮ್ಮ ತಲೆಯನ್ನು ಸ್ಪರ್ಶಿಸಿದಾಗ ಮೆದುಳನ ಮೂಲಕ ದೇಹದ ಎಲ್ಲಾ ನರನಾಡಿಗಳಿಗೂ ಚೈತನ್ಯ ಸಂಚಾರವಾಗಿ ನಮಗೆ ಬಾಡಿ ಆಕ್ಟಿವೇಟ್ ಆಗುತ್ತದೆ. ಅದಕ್ಕೆ ನಾವು ರೆಸ್ಪಾನ್ಸ್ ಮಾಡಿ ಜಾಗ್ರತೆಗೊಂಡಾಗ ನಮ್ಮ ದಿನವೂ ಕೂಡ ಚೆನ್ನಾಗಿ ಆಗಿ ಎಲ್ಲದರಲ್ಲೂ ನಮಗೆ ಯಶಸ್ಸು ಲಭಿಸುತ್ತದೆ ಇದಕ್ಕೆ ವಿರುದ್ಧವಾಗಿ ನಡೆದುಕೊಂಡಾಗ ಬದುಕಿನಲ್ಲೂ ಕೂಡ ಎಲ್ಲವೂ ನಮ್ಮ ನಿರೀಕ್ಷೆಗೆ ವಿರುದ್ಧ ನಡೆದು ಸೋ’ಲಾಗುತ್ತದೆ. ಅದ್ದರಿಂದ ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಇವತ್ತೇ ಸರಿ ಮಾಡಿಕೊಳ್ಳಿ.

ಹುಟ್ಟಿದ ತಿಂಗಳ ಪ್ರಕಾರ ಹುಡುಗಿಯರ ಸ್ವಭಾವ ಹಾಗೂ ಮನಸ್ಥಿತಿ.!

 

1. ಜನವರಿ:- ಜನವರಿ ತಿಂಗಳಿನಲ್ಲಿ ಹುಟ್ಟಿದವರು ಯಾವಾಗಲೂ ನಗು ನಗುತ್ತಾ ಸಂತೋಷವಾಗಿರುತ್ತಾರೆ. ಇವರಲ್ಲಿ ನಾಯಕತ್ವದ ಗುಣ ಹೆಚ್ಚಾಗಿರುತ್ತದೆ. ಬಹಳ ಧೈರ್ಯವಂತರು, ಯಾವುದೋ ವಿಷಯ ಆದರೂ ಮುನ್ನುಗುವ ಛಲವಂತರು ಮತ್ತು ಎಲ್ಲರ ಮುಂದಾಳತ್ವ ವಹಿಸಿಕೊಳ್ಳುತ್ತಾರೆ, ಇವರು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುತ್ತಾರೆ ಮತ್ತು ಪ್ರಾಮಾಣಿಕರಾಗಿರುತ್ತಾರೆ.

2. ಫೆಬ್ರವರಿ:- ಫೆಬ್ರವರಿ ತಿಂಗಳಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಬಹಳ ಕರುಣಾಮಯಿಗಳಾಗಿದ್ದು ಎಲ್ಲರ ಮೇಲೆ ಪ್ರೀತಿ ಹೊಂದಿರುತ್ತಾರೆ, ಕಾಳಜಿ ಮಾಡುತ್ತಾರೆ. ಇವರು ಬಹಳ ರೋಮ್ಯಾಂಟಿಕ್ ಆಗಿರುತ್ತಾರೆ, ಎಲ್ಲರನ್ನು ಸುಲಭವಾಗಿ ನಂಬುತ್ತಾರೆ, ಆದರೆ ಹೆಚ್ಚು ಮೋ’ಸ ಹೋಗುತ್ತಾರೆ, ಇವರನ್ನು ಅರ್ಥಮಾಡಿಕೊಳ್ಳುವುದು ಕ’ಷ್ಟ

3. ಮಾರ್ಚ್:- ಮಾಚ್ ತಿಂಗಳಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಶ್ರಮಜೀವಿಗಳು. ಬಹಳ ಕಷ್ಟಪಟ್ಟು ಜೀವನದಲ್ಲಿ ಮೇಲೆ ಬರುತ್ತಾರೆ ಇವರು ಯಾರನ್ನು ಪ್ರೀತಿಸುವುದಿಲ್ಲ, ಸುಲಭಕ್ಕೆ ಯಾರನ್ನು ನಂಬುವುದಿಲ್ಲ. ಆದರೆ ಒಮ್ಮೆ ಪ್ರೀತಿಸಿದರು ಹಾಗೂ ನಂಬಿದರು ಎಂದರೆ ಜೀವನ ಪೂರ್ತಿ ಅವರ ಜೊತೆಗೆ ಇರುತ್ತಾರೆ, ಇವರು ಬಹಳ ನಂಬಿಕಸ್ಥರು.

4. ಏಪ್ರಿಲ್:- ಏಪ್ರಿಲ್ ತಿಂಗಳಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಬಹಳ ಹಠವಂತರಾಗಿರುತ್ತಾರೆ. ಸ್ವತಂತ್ರರಾಗಿರಲು ಬಯಸುತ್ತಾರೆ. ತಾವು ಅಂದುಕೊಂಡಿದ್ದನ್ನು ಮಾಡುವವರೆಗೂ ಬಯಸಿದ್ದನ್ನು ಪಡೆಯುವವರೆಗೂ ಸಮಾಧಾನ ಇರುವುದಿಲ್ಲ, ಎಷ್ಟೇ ಕಷ್ಟದ ಕೆಲಸ ಆಗಿದ್ದರು ಸುಲಭವಾಗಿ ಮಾಡುತ್ತಾರೆ ಬೇರೆಯವರ ಜೊತೆ ಕಂಪೇರ್ ಮಾಡಿಕೊಳ್ಳುವುದು ಹೆಚ್ಚು.

5. ಮೇ:- ಮೇ ತಿಂಗಳಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಬಹಳ ಆಕ್ಟಿವ್ ಆಗಿರುತ್ತಾರೆ, ಇವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ, ತಮ್ಮ ಬುದ್ಧಿವಂತಿಕೆಯಿಂದಲೇ ಎಲ್ಲರನ್ನು ಆಕರ್ಷಿಸುತ್ತಾರೆ ಮತ್ತು ತಮ್ಮ ಬುದ್ಧಿಶಕ್ತಿಯಿಂದ ಸ್ವಂತ ಕಾಲ ಮೇಲೆ ನಿಂತು ಬದುಕನ್ನು ನಡೆಸಿಕೊಂಡು ಹೋಗುತ್ತಾರೆ. ಇವರಿಗೆ ಮಕ್ಕಳ ರೀತಿ ಮನಸ್ಸಿರುತ್ತದೆ ಬಹಳ ಸಂತೋಷವಾಗಿ ಜೀವನ ಕಳೆಯಲು ಬಯಸುತ್ತಾರೆ, ಜೀವನದಲ್ಲಿ ಹೆಚ್ಚು ಲೆಕ್ಕಚಾರ ಮಾಡುತ್ತಾರೆ.

6. ಜೂನ್:- ಜೂನ್ ತಿಂಗಳಲ್ಲಿ ಹುಟ್ಟಿದ ಹೆಣ್ಣು ಮಕ್ಕಳ ಬಹಳ ಅದೃಷ್ಟ ಶಾಲಿಗಳಾಗಿರುತ್ತಾರೆ ಮ, ಇವರಿಗೆ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ತೊಂದರೆ ಇರುವುದಿಲ್ಲ ಯಾವಾಗಲೂ ಇವರ ಕೈಯಲ್ಲಿ ಹಣ ಓಡಾಡುತ್ತಾ ಇರುತ್ತದೆ. ಜೀವನಪೂರ್ತಿ ಇವರು ಸಂತೋಷ ಮತ್ತು ಸಮೃದ್ಧಿಯನ್ನು ಹೊಂದಿರುತ್ತಾರೆ, ನಗುನಗುತ ಜೀವನವನ್ನು ಕಳೆಯುತ್ತಾರೆ. ಇವರ ಅದೃಷ್ಟದಿಂದಲೇ ಎಲ್ಲಾ ಕಾರ್ಯಗಳು ಕೂಡ ಸಲೀಸಾಗಿ ಜರುಗುತ್ತದೆ. ಇವರಿಗೆ ಹಣ, ಒಡವೆ, ಆಸ್ತಿ ಇವುಗಳ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೆ.

7. ಜುಲೈ:- ಹುಟ್ಟಿದ ಹೆಣ್ಣು ಮಕ್ಕಳ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ ತಮ್ಮ ಸುತ್ತಲಿನವರನ್ನು ಸಂತೋಷವಾಗಿ ಇಟ್ಟುಕೊಳ್ಳಲು ಬಯಸುತ್ತಾರೆ. ಜೊತೆಗೆ ತಮಗೆ ಎಷ್ಟೇ ಕ’ಷ್ಟ ಇದ್ದರೂ ಕೂಡ ಮೇಲೆ ನಗುನಗುತ್ತ ತೊರಿಸಿಕೊಳ್ಳುವುದಿಲ್ಲ. ಜವಾಬ್ದಾರಿಗಳನ್ನು ತಾವೇ ಹೊತ್ತುಕೊಳ್ಳುತ್ತಾರೆ ಮತ್ತು ಬಹಳ ಸಭ್ಯ ಗುಣಗಳನ್ನು ಹೊಂದಿರುತ್ತಾರೆ. ಇವರಿಗೆ ಯಾರ ಜೊತೆ ಜಗಳ ಮಾಡಲು ಮನಸ್ಸಿರುವುದಿಲ್ಲ ತಾವೇ ಸೋತು ಸಮಾಧಾನ ಪಡಿಸುತ್ತಾರೆ.

8. ಆಗಸ್ಟ್:- ಆಗಸ್ಟ್ ತಿಂಗಳಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ತಮ್ಮ ವಯಸ್ಸಿಗಿಂತ ಹೆಚ್ಚು ಮೆಚ್ಯುರ್ ಆಗಿ ಯೋಚನೆ ಮಾಡುತ್ತಾರೆ. ಇವರಿಗೂ ಕೂಡ ಆರ್ಥಿಕವಾಗಿ ಸ್ವಾತಂತ್ರ್ಯರಾಗಿರಲು ಇಷ್ಟ, ಅದಕ್ಕಾಗಿ ಕೆಲಸಗಳನ್ನು ಹುಡುಕುತ್ತಾರೆ ಹಾಗೂ ಕುಟುಂಬವನ್ನು ಕೂಡ ಅಷ್ಟೇ ಚೆನ್ನಾಗಿ ನಿಭಾಯಿಸುತ್ತಾರೆ ಆಗಸ್ಟ್ ತಿಂಗಳಿಗೆ ಹುಟ್ಟಿದ ಹೆಣ್ಣು ಮಕ್ಕಳಿಗೆ ಸ್ವಲ್ಪ ಕೋ’ಪ ಹೆಚ್ಚು ಇರುತ್ತದೆ.

9. ಸೆಪ್ಟೆಂಬರ್:- ಸೆಪ್ಟೆಂಬರ್ ತಿಂಗಳಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಪ್ರವಾಸವನ್ನು ಹೆಚ್ಚು ಇಷ್ಟಪಡುತ್ತಾರೆ. ಇವರು ಕುಟುಂಬದವರನ್ನು ಸ್ನೇಹಿತರಂತೆ ಹಾಗೂ ಸ್ನೇಹಿತರನ್ನು ಕುಟುಂಬದವರಂತೆ ಕಾಣುತ್ತಾರೆ. ಯಾರಿಗೆ ಕ’ಷ್ಟ ಆದರೂ ಅವರಿಗೆ ಸಹಾಯ ಮಾಡಲು ಮುಂದಾಗುತ್ತಾರೆ ಜೀವನದಲ್ಲಿ ದೃಢ ನಿರ್ಧಾರಗಳನ್ನು ತೆಗೆದುಕೊಂಡು ಅದಕ್ಕೆ ಬದ್ಧವಾಗಿ ಬದುಕುತ್ತಾರೆ.

10. ಅಕ್ಟೋಬರ್ :- ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ತಮ್ಮ ಜೀವನದ ಗುರಿ ಬೇರೆ ಇರುತ್ತದೆ ಆದರೆ ಅವರ ಬದುಕು ಬೇರೆ ದಿಕ್ಕಿನತ್ತ ಸಾಗುತ್ತಿರುತ್ತದೆ ಆದರೆ ಜೀವನದಲ್ಲಿ ಏನೇ ಬಂದರೂ ಅದನ್ನು ಒಪ್ಪಿಕೊಂಡು ಸಂತೋಷವಾಗಿ ಬದುಕುತ್ತಾರೆ ಬೇರೆಯವರಗಾಗಿ ಹೆಚ್ಚು ಕಾಂಪ್ರಮೈಸ್ ಆಗುತ್ತಾರೆ, ಬಹಳ ಮುಗ್ಧರಾಗಿದ್ದು ಯಾರನ್ನು ನೋಯಿಸಲು ಇಷ್ಟಪಡುವುದಿಲ್ಲ.

11. ನವೆಂಬರ್:- ನವೆಂಬರ್ ತಿಂಗಳಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ಸರ್ಕಾರಿ ಹುದ್ದೆಗಳು ಅಥವಾ ಖಾಸಗಿ ಕಂಪನಿಗಳ ಅತ್ಯುನ್ನತ ಹುದ್ದೆಗಳನ್ನು ಏರುವಂತಹ ಗುಣ ಸ್ವಭಾವಗಳು ಇರುತ್ತದೆ. ಇವರು ಹೆಚ್ಚು ಕಾನ್ಫಿಡೆಂಟ್ ಆಗಿರುತ್ತಾರೆ ಮತ್ತು ನೇರನುಡಿ ಇವರ ಸ್ವಭಾವ. ಎಲ್ಲರನ್ನೂ ಅರ್ಥ ಮಾಡಿಕೊಂಡು ಬುದ್ಧಿವಂತರಾಗಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡು ಜೀವನದಲ್ಲಿ ಗೆಲುವಿನತ್ತ ಸಾಗುತ್ತಾರೆ, ಸಮಯಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ, ವ್ಯರ್ಥ ಮಾಡುವುದಿಲ್ಲ

12. ಡಿಸೆಂಬರ್:- ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದವರು ಮನಸ್ಸಿನಿಂದ ಬಹಳ ಸಂತೋಷವಾಗಿರುತ್ತಾರೆ. ಚಿಕ್ಕ ಚಿಕ್ಕ ವಿಷಯಗಳನ್ನು ಕೂಡ ಆಸ್ವಾದಿಸುತ್ತಾರೆ. ಪ್ರತಿಯೊಂದನ್ನು ಕೂಡ ಬಹಳ ಕ್ರಿಯೇಟಿವ್ ಆಗಿ ಥಿಂಕ್ ಮಾಡುತ್ತಾರೆ ಹಾಗೂ ಎಲ್ಲದರ ಬೆಲೆ ಇಲ್ಲ ತಿಳಿದವರಾಗಿರುತ್ತಾರೆ. ಇವರಿಗೆ ಆಧ್ಯಾತ್ಮದತ್ತ ಹೆಚ್ಚು ಆಕರ್ಷಣೆ ಇರುತ್ತದೆ. ಬಹಳ ಸಿಂಪಲ್ ಆಗಿ, ನೆಮ್ಮದಿಯಾಗಿರುತ್ತಾರೆ.

ಹಲ್ಲಿನಲ್ಲಿ ಸೇರಿಕೊಂಡಿರುವ ಕೊಳೆ, ಹಳದಿ ಕಲೆಗಳನ್ನು ಸುಲಭವಾಗಿ ತೆಗೆಯಲು ಈ ಮನೆಮದ್ದು ಬಳಸಿ.!

 

ಹಲ್ಲಿನ ಆರೋಗ್ಯವು ನಮ್ಮ ಸೌಂದರ್ಯವನ್ನು ವೃದ್ಧಿಸುತ್ತದೆ. ನಮ್ಮ ಹಲ್ಲುಗಳು ಚೆನ್ನಾಗಿ ಕಾಣದೆ ಇದ್ದರೆ ನಾವು ಮನಃಸ್ಪೂರ್ತಿಯಾಗಿ ನಗುವುದೇ ಇಲ್ಲ. ಇಷ್ಟರ ಮಟ್ಟಿಗೆ ನಮ್ಮ ಕಾನ್ಫಿಡೆನ್ಸ್ ನ್ನು ಕಡಿಮೆ ಮಾಡಿ ಮಾನಸಿಕವಾಗಿ ನಮಗೆ ಒತ್ತಡ ಕ್ರಿಯೇಟ್ ಮಾಡುವ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ಆರೋಗ್ಯದ ದೃಷ್ಟಿಯಿಂದ ನೋಡುವುದಾದರೂ ಕೂಡ ಹಲ್ಲುಗಳ ಆರೋಗ್ಯ ಹಾಳಾದರೆ ಅದರ ತಡೆಯಲಾಗದ ನೋ’ವಿ’ನ ಜೊತೆ ಅದರ ಚಿಕಿತ್ಸೆಗೆ ತೆರಬೇಕಾದ ಮೊತ್ತವು ಕೂಡ ಹೆಚ್ಚಿನ ಹೊರೆ ಆಗಿರುವುದರಿಂದ ಹಲ್ಲುಗಳು ನಿರ್ಲಕ್ಷಿಸುವ ವಿಷಯವೇ ಅಲ್ಲ.

ನಮ್ಮ ಹಲ್ಲುಗಳ ಆರೋಗ್ಯ ಹಾಳಾಗುವುದಕ್ಕೆ ಹಾಗೂ ಅಂತಹ ಹಳದಿಯಾಗುವುದಕ್ಕೆ ಸಾಕಷ್ಟು ಕಾರಣಗಳಿವೆ. ಪ್ರಮುಖವಾಗಿ ಸರಿಯಾಗಿ ಹಲ್ಲುಗಳನ್ನು ಸ್ವಚ್ಛ ಮಾಡಿ ಕಾಳಜಿ ಮಾಡದೆ ಇರುವುದು, ಸಿಹಿ ಪದಾರ್ಥಗಳನ್ನು ಹೆಚ್ಚು ತಿನ್ನುವುದು, ಕಾಫಿ ಚಹಾ ಇವುಗಳ ಹೆಚ್ಚು ಸೇವನೆ ‌, ತಂಬಾಕು ಗುಟ್ಕಾ, ಧೂಮಪಾನ ಇವುಗಳು ಕೂಡ ಹಲ್ಲಿನ ಅಂದವನ್ನು ಕೆಡಿಸುತ್ತವೆ.

ಹೀಗೆ ನಾನಾ ಕಾರಣಗಳಿಂದ ಹಳದಿ ಆಗುವ ಈ ಹಲ್ಲನ್ನು ಬಿಳಿ ಬಣ್ಣ ಮಾಡಿಕೊಳ್ಳಲು ಅನೇಕರು ದಂತ ವೈದ್ಯರ ಬಳಿ ಹೋಗುತ್ತಾರೆ. ನೀವು ಯಾವುದೇ ಡೆಂಟಲ್ ಕ್ಲಿನಿಕ್ ಗೆ ಹೋಗದೆ ನಿಮ್ಮ ಮನೆಯಲ್ಲಿ ಇರುವ ವಸ್ತುಗಳನ್ನು ಉಪಯೋಗಿಸಿಕೊಂಡು ನಿಮ್ಮ ಹಲ್ಲಿಗೆ ಹಾಲಿನಂತೆ ಬಿಳುಪನ್ನು ತರಬಹುದು. ಅಂತಹ ಕೆಲವು ಟಿಪ್ ಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.

* ಮೊದಲು 7 ತುಳಸಿ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ, ಸ್ವಲ್ಪ ಪ್ರಮಾಣದ ಒಣಗಿದ ಕಿತ್ತಳೆ ಸಿಪ್ಪೆಯನ್ನು ತೆಗೆದುಕೊಂಡು ಅದನ್ನು ಕೂಡಾ ನುಣ್ಣಗೆ ಪುಡಿಮಾಡಿ. ಈಗ ಈ ಎರಡು ಪದಾರ್ಥಗಳನ್ನು ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನೇರವಾಗಿ ನಿಮ್ಮ ಹಲ್ಲುಗಳ ಮೇಲೆ ಹಚ್ಚಿ 20 ನಿಮಿಷಗಳ ಕಾಲ ಬಿಟ್ಟು ಮಾಮೂಲಿಯಂತೆ ನೀರಿನಿಂದ ನಿಮ್ಮ ಬಾಯಿಯನ್ನು ತೊಳೆದರೆ ಹಲ್ಲುಗಳ ಪಳಪಳ ಎಂದು ಹೊಳೆಯುತ್ತವೆ. ನೀವು ದಿನದಲ್ಲಿ ಒಂದು ಬಾರಿ ಅಥವಾ ವಾರದಲ್ಲಿ ಹಲವಾರು ಬಾರಿ ಈ ಪರಿಹಾರವನ್ನು ಮಾಡಬಹುದು.

* ಅಡಿಗೆ ಸೋಡಾ ಕೂಡ ಹಳೆ ಹಳದಿ ಕಲೆ ತೆಗೆದು ಹಲ್ಲನ್ನು ಶೈನಿಂಗ್ ಮಾಡಲು ಒಂದು ಉತ್ತಮ ಔಷಧಿಯಾಗಿದೆ.
ಮೊದಲು 2 ಚಮಚ ಅಡಿಗೆ ಸೋಡಾವನ್ನು ತೆಗೆದುಕೊಂಡು ಅದನ್ನು ನೀರಿನೊಂದಿಗೆ ಬೆರೆಸಿ ದಪ್ಪನಾದ ಪೇಸ್ಟ್ ಮಾಡಿಕೊಳ್ಳಿ. ಈಗ ಆ ಪೇಸ್ಟ್ ಅನ್ನು ಹಲ್ಲುಗಳಿಗೆ ಹಚ್ಚಿ 5 ನಿಮಿಷಗಳ ಕಾಲ ಹಾಗೇ ಮಾಮೂಲಿ ನೀರಿನಲ್ಲಿ ನಿಮ್ಮ ಬಾಯಿಯನ್ನು ತೊಳೆಯಿರಿ. ಮುಖ್ಯವಾಗಿ ಈ ಒಂದು ಚಟುವಟಿಕೆಯನ್ನು ಪ್ರತಿ ದಿನ ರಾತ್ರಿ ಮಲಗುವ ಮುನ್ನ ಮಾಡುತ್ತಾ ಬಂದರೆ ಹಲ್ಲಿನಲ್ಲಿ ಇರುವ ಎಲ್ಲಾ ಕಲೆಗಳು ಮಾಯವಾಗುತ್ತವೆ.

* ಇದೇ ರೀತಿ ಉಪ್ಪು ಹಾಗೂ ನಿಂಬೆರಸದಿಂದ ಕೂಡ ಹಲ್ಲಿನ ಕಲೆಯನ್ನು ತೆಗೆಯಬಹುದು. ಮೊದಲು ಒಂದು ಚಮಚ ಉಪ್ಪನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸವನ್ನು  ಬೆರೆಸಿ. ಈ ಮಿಶ್ರಣದಿಂದ ಹಲ್ಲುಜ್ಜಿದರೆ ಹಲ್ಲಿನಲ್ಲಿರುವ ಹಳದಿ ಕಲೆಯನ್ನು ಸುಲಭವಾಗಿ ಕ್ಲೀನ್ ಆಗಿ ಹಲ್ಲಿಗೆ ಶೈನಿಂಗ್ ಬರುತ್ತದೆ.

* ಆಪಲ್ ಸೈಡರ್ ವಿನೆಗರ್ ಅನ್ನು ಎರಡು ಚಮಚದಷ್ಟು ತೆಗೆದುಕೊಂಡು ಅದಕ್ಕೆ ಒಂದು ಲೋಟ ಬೆಚ್ಚಗಿರುವ ನೀರನ್ನು ಮಿಕ್ಸ್ ಮಾಡಿ ಆ ನೀರಿನಿಂದ ಚೆನಾಗಿ ಬಾಯಿಯನ್ನು ಮುಕ್ಕಳಿಸುತ್ತಾ ಬನ್ನಿ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಈ ಮನೆಮದ್ದನ್ನು  ಅನುಸರಿಕೊಂಡು ನ್ಯಾಚುರಲ್ ಆಗಿ ಹಲ್ಲುಗಳು ಬೆಳ್ಳಗಾಗುತ್ತವೆ.

ಹಸಿ ಬೆಳ್ಳುಳ್ಳಿ ಎಸಳು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ.? 90% ಜನರಿಗೆ ಈ ಗುಟ್ಟು ಗೊತ್ತಿಲ್ಲ.!

 

ಆಯುರ್ವೇದ ಎನ್ನುವುದು ನಮ್ಮ ನೆಲದ ಬೇರು ಎಂದು ಹೇಳಬಹುದು. ಆಯುರ್ವೇದದಲ್ಲಿ ಬಹಳ ಸ್ಪಷ್ಟವಾಗಿ ಮನುಷ್ಯನ ದೇಹಕ್ಕೆ ಯಾವ ಆಹಾರ ಪದಾರ್ಥಗಳು ಒಳ್ಳೆಯದು, ಯಾವುದು ಕೆಟ್ಟದ್ದು ಯಾವುದನ್ನು ಹೇಗೆ ಉಪಯೋಗಿಸಬೇಕು, ಯಾವ ರೀತಿಯ ದೇಹ ಪ್ರಕೃತಿ ಉಳ್ಳವರು ಯಾವುದನ್ನು ಎಷ್ಟು ಪ್ರಮಾಣದಲ್ಲಿ ಉಪಯೋಗಿಸಬೇಕು ಮತ್ತು ಯಾವ ಸಮಯದಲ್ಲಿ ಉಪಯೋಗಿಸಬೇಕು ಎನ್ನುವುದರ ವಿವರವನ್ನು ತಿಳಿಸಿದ್ದಾರೆ.

ನಮಗಿಂತ ನಮ್ಮ ಹಿರಿಯರಿಗೆ ಇವುಗಳು ಚೆನ್ನಾಗಿ ಗೊತ್ತಿದ್ದರಿಂದ ಯಾವುದೇ ಕಾಯಿಲೆ ಬಂದರೂ ಕೂಡ ಆಸ್ಪತ್ರೆಗೆ ಹೋಗದೆ ಮನೆಯಲ್ಲಿ ಮನೆ ಮದ್ದುಗಳನ್ನು ಮಾಡಿಕೊಂಡು ಅನಾರೋಗ್ಯ ಗುಣಪಡಿಸಿಕೊಳ್ಳುತ್ತಿದ್ದರು. ಆಗಿನ ಕಾಲದಲ್ಲಿ ಆಸ್ಪತ್ರೆಗಳು ಇಲ್ಲದೆ ಇದ್ದ ಸಂದರ್ಭದಲ್ಲಿಯೂ ಕೂಡ ಅನಾರೋಗ್ಯದಿಂದ ಸಾ’ವನ್ನಪ್ಪಿದ್ದವರ ಸಂಖ್ಯೆ ಬಹಳ ಕಡಿಮೆ.

ಆದರೆ ಇಂದು ನಾವು ಆಧುನಿಕ ಬದುಕಿನ ಓಟದಲ್ಲಿ ಆಹಾರದಲ್ಲಿನ ಮಹತ್ವವನ್ನೇ ಮರೆಯುತ್ತಿದ್ದೇವೆ ದೇಹವು ನಮ್ಮ ಉಸಿರಿರುವವರೆಗೂ ಕೂಡ ನಮ್ಮ ಜೊತೆ ಬರುವ ಸಂಗಾತಿಯಾಗಿದೆ. ಹಾಗಾಗಿ ನಮ್ಮ ದೇಹದ ಸೌಂದರ್ಯ ಮಾತ್ರವಲ್ಲದೇ ಆರೋಗ್ಯದ ಬಗ್ಗೆಯೂ ಕೂಡ ನಾವು ಕಾಳಜಿ ಮಾಡಬೇಕು. ಹಾಗಾಗಿ ಈ ದೇಹಕ್ಕೆ ಯಾವುದೇ ರೋಗಗಳು ತಾಕದಂತೆ ಇರಲು ಅದಕ್ಕೆ ಬೇಕಾದ ಪೂರಕ ಆಹಾರ ಪದಾರ್ಥಗಳನ್ನು ನಾವು ಕೊಟ್ಟು ಕಾಪಾಡಿಕೊಳ್ಳಬೇಕು.

ಆದರೆ ಇಂದು ಅಂತಹ ಪೌಷ್ಟಿಕಾಂಶಗುಣಗಳುಳ್ಳ ಆಹಾರಗಳನ್ನು ತಿನ್ನುವುದನ್ನೇ ಮರೆತಿದ್ದೇವೆ. ನಾಲಿಗೆಗೆ ರುಚಿ ಆಗುವುದನ್ನು ತಿಂದು ನಾನಾ ರೋಗಗಳಿಗೆ ದೇಹವನ್ನು ಗುರಿ ಪಡಿಸುತ್ತಿದ್ದೇವೆ. ಪ್ರತಿನಿತ್ಯವೂ ಕೂಡ ಆಹಾರದಲ್ಲಿ ಬಳಸಲೇಬೇಕಿದ್ದ ಕೆಲ ಪದಾರ್ಥಗಳನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟಿದ್ದೇವೆ ಆದ್ದರಿಂದಲೇ ದೇಹದ ಬ್ಯಾಲೆನ್ಸ್ ತಪ್ಪುತ್ತಿದೆ ಎಂದರೆ ತಪ್ಪಾಗಲಾರದು.

ಇಂತಹದ್ದೇ ಒಂದು ಮುಖ್ಯವಾದ ಆಹಾರ ಪದಾರ್ಥವಾದ ಬೆಳ್ಳುಳ್ಳಿಯ ಪ್ರಯೋಜನದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಬೆಳ್ಳುಳ್ಳಿಯ ಸೇವನೆಯಿಂದ ರಕ್ತದೊತ್ತಡ, ಕೊಲೆಸ್ಟ್ರಾಲ್, ಉಸಿರಾಟದ ಸಮಸ್ಯೆ, ಅಜೀರ್ಣ, ಹೊಟ್ಟೆ ಊದಿಕೊಳ್ಳುವುದು, ಟ್ರೈ ಗ್ಲಿಸರಿನ್, ಹೃದಯದ ಸಮಸ್ಯೆ ಇನ್ನು ಮುಂತಾದ ಸಮಸ್ಯೆಗಳು ಕಂಟ್ರೋಲ್ ಆಗುತ್ತವೆ.

ಬೆಳ್ಳುಳ್ಳಿಯನ್ನು ಆಯುರ್ವೇದದಲ್ಲಿ ಮೇಧ್ಯ ಎನ್ನುತ್ತಾನೆ ಹೀಗೆಂದರೆ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಅರ್ಥ ಹಾಗೆ ಹೃದಯದ ರಕ್ತನಾಳಗಳಲ್ಲಿ ಉಂಟಾಗುವ ಬ್ಲಾಕ್ ಗಳನ್ನು ಕ್ಲಿಯರ್ ಮಾಡಲು ಬೆಳ್ಳುಳ್ಳಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಗ್ಯಾಸ್ ಸಮಸ್ಯೆ ಇರುವವರಿಗೂ ಕೂಡ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಅದು ಕಂಟ್ರೋಲ್ ಗೆ ಬರುತ್ತದೆ.

ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು,ಲೈಂಗಿಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಆದರೆ ಇದು ಅಷ್ಟೇ ಉಷ್ಣಕಾರಿ ಪದಾರ್ಥವಾಗಿದೆ ಈ ಕಾರಣಕ್ಕಾಗಿ ಮತ್ತು ಇದನ್ನು ತಿಂದರೆ ಬಾಯಿ ವಾಸನೆ ಬರುತ್ತದೆ ಎನ್ನುವ ಕಾರಣಕ್ಕಾಗಿ ಅನೇಕರು ಇದನ್ನು ತಿನ್ನುವುದೇ ಇಲ್ಲ. ಇನ್ನು ಅನೇಕರಿಗೆ ಇದನ್ನು ಯಾವ ರೀತಿ ತಿನ್ನಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎನ್ನುವುದೇ ಗೊತ್ತಿಲ್ಲ.

ಬೆಳ್ಳುಳ್ಳಿಯಲ್ಲಿ ಎಲಿನ್ ಎನ್ನುವ ಕೆಮಿಕಲ್ ಇದೆ, ಬೆಳ್ಳುಳ್ಳಿಯನ್ನು ಹಾಗೆ ತಿನ್ನುವುದರಿಂದ ಪ್ರಯೋಜನವಿಲ್ಲ ಹಾಗಾಗಿ ಅದನ್ನು ಜಜ್ಜಿ ಹತ್ತರಿಂದ ಹದಿನೈದು ನಿಮಿಷ ಹಾಗೆ ಬಿಟ್ಟು ನಂತರ ತಿನ್ನಬೇಕು, ಇದರಿಂದ ಅದು ಎಲ್ಸಿನ್ ಬಿಡುಗಡೆ ಮಾಡುತ್ತದೆ ಅದು ಆರೋಗ್ಯಕ್ಕೆ ಪೂರಕ. ಹಾಗೆ ಒಂದು ದಿನದಲ್ಲಿ 6gm ನಷ್ಟು ಬೆಳ್ಳುಳ್ಳಿಯನ್ನು ತಿನ್ನಬೇಕು ಇದನ್ನು ಚೆನ್ನಾಗಿ ಜಗಿದು ನುಂಗಿದರೆ ಇನ್ನೂ ಒಳ್ಳೆಯದು.

ಊಟ ಮಾಡುವ ಮುಂದೆ ಈ ರೀತಿ ಮಾಡಿ ನಂತರ ಊಟ ಮಾಡಬೇಕು. ಈ ರೀತಿ ತಿನ್ನಲು ಆಗದಿದ್ದವರು ತುಪ್ಪ ಅಥವಾ ಬೆಣ್ಣೆಯಲ್ಲಿ ಇದನ್ನು ಉರಿದು ತಿನ್ನಬಹುದು. ಇದರ ಉಷ್ಣಗುಣದ ಬಗ್ಗೆ ಸಮಸ್ಯೆ ಇದ್ದರೆ ಈ ರೀತಿ ಬೆಳ್ಳುಳ್ಳಿಯನ್ನು ಸೇವನೆ ಮಾಡುವಾಗ ತುಪ್ಪ, ಬೆಣ್ಣೆ ಸೇವನೆ ಕೂಡ ಹೆಚ್ಚು ಮಾಡಿದರೆ ಇದು ಬ್ಯಾಲೆನ್ಸ್ ಆಗುತ್ತದೆ.

https://youtu.be/P5HJUSi_Luo?si=zq49UbREJTIZAy5q

ಕಾಲಲ್ಲಿ ಉಬ್ಬಿರುವ ನರ ಅಥವಾ ರಕ್ತನಾಳ (ವೆರಿಕೋಸ್ ವೆನ್ಸ್) ಗೆ ಮನೆ ಮದ್ದು ಮನೆಮದ್ದು.!

0

 

ಮೊದಲಿಗೆ ವೆರಿಕೋಸ್ ವೆನ್ಸ್ ಎಂದರೆ ಏನು ಎಂದು ತಿಳಿದುಕೊಳ್ಳಬೇಕು. ಎಲ್ಲರಿಗೂ ಗೊತ್ತಿರುವಂತೆ ಹೃದಯದಿಂದ ರಕ್ತ ನಾಳಗಳ ಮೂಲಕ ರಕ್ತವು ದೇಹದ ಎಲ್ಲಾ ಅಂಗಾಂಗ ಗಳಿಗೂ ಸಂಚಾರವಾಗುತ್ತದೆ. ಇದನ್ನು ಹೊತ್ತು ಸಾಗಿಸುವ ರಕ್ತನಾಳಗಳಿಗೆ ಅಪಧಮನಿಗಳು (Artery) ಎನ್ನುತ್ತಾರೆ.

ಹಾಗೆಯೇ ವಾಪಸ್ಸು ಹೃದಯಕ್ಕೆ ದೇಹದ ಎಲ್ಲಾ ಅಂಗಗಳಿಂದಲೂ ರಕ್ತವು ಅಭಿದಮನಿ (veins) ರಕ್ತನಾಳಗಳ ಮೂಲಕ ಪಂಪ್ ಆಗುತ್ತದೆ. ಈ ವೇನ್ಸ್ ಗಳು ಮೆದುಳಿನಿಂದ ಕಾಲಿನ ಪಾದದವರೆಗೂ ಕೂಡ ಇರುತ್ತವೆ. ಅದರಲ್ಲಿ ಕಾಲಿನ ನರಗಳಿಂದ ರಕ್ತ ಹೃದಯಕ್ಕೆ ಹೋಗುವಾಗ ಗುರುತ್ವಾಕರ್ಷಣೆಗೆ ವಿರುದ್ಧ ದಿಕ್ಕಿನಲ್ಲಿ ಹೋಗಬೇಕು ಈ ಕಾರ್ಯಕ್ಕೆ ಮೀನ ಖಂಡಗಳಲ್ಲಿರುವ ವಾಲ್ವ್ (valves) ಹಾಗೂ ಮಾಂಸ ಖಂಡಗಳು ಪ್ರೆಸ್ ಆಗಿ ಸಂಚಾರ ಸರಾಗ ಮಾಡಿಕೊಡುತ್ತವೆ.

ವಾಲ್ವ್ ಗಳು ವೀಕ್ ಆದಾಗ ರಕ್ತ ಸಂಚಾರವು ಹೃದಯದ ಕಡೆಗೆ ಹೋಗುವುದರ ಬದಲು ವಾಪಸ್ ಕಾಲಿನ ಕಡೆಗೆ ಹಿಮ್ಮುಖವಾಗಿ ಚಲನೆ ಆಗುತ್ತದೆ. ಆಗ ರಕ್ತನಾಳಗಳು ಉಬ್ಬಿಕೊಂಡು ಹಾವಿನ ಆಕಾರದಲ್ಲಿ ನೀಲಿ ಅಥವಾ ಹಸಿರು ಬಣ್ಣ ಕಟ್ಟುತ್ತದೆ. ಈ ಸಮಸ್ಯೆಗೆ ವೆರಿಕೋಸ್ ವೇನ್ಸ್ ಎನ್ನುತ್ತಾರೆ.

ವೆರಿಕೋಸ್ ವೇನ್ಸ್ ಆದಾಗ ಕಾಲಿನಲ್ಲಿ ವಿಪರೀತ ನೋ’ವು, ಸೆಳೆತ ಇರುತ್ತದೆ, ಕಾಲು ಭಾರವಾಗುತ್ತದೆ ಹಾಗೂ ಊದಿಕೊಳ್ಳುತ್ತದೆ, ಈ ಮೇಲೆ ತಿಳಿಸಿದಂತೆ ಕಾಲಿನ ರಕ್ತನಾಳಗಳು ಹಸಿರು ಅಥವಾ ನೀಲಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಆಂಕಲ್ ಜಾಯಿಂಟ್ ಗಳಲ್ಲಿ ಚರ್ಮದ ಬಣ್ಣ ಬದಲಾಗಿರುತ್ತದೆ, ಕಾಲಿನ್ನು ಯಾವ ರೀತಿ ಹಾಕಿಕೊಂಡರೂ ಸಮಾಧಾನ ಇರುವುದಿಲ್ಲ, ಇದನ್ನು ರೆಸ್ಟ್ ಲೆಸ್ ಲೆಗ್ ಅವಸ್ಥೆ ಎನ್ನುತ್ತಾರೆ ಕೆಲವರಿಗೆ ಕಾಲಿನಲ್ಲಿ ತುರಿಕೆ ಕೂಡ ಇರುತ್ತದೆ.

ಈ ಕಾಯಿಲೆ ಯಾರಿಗೆ ಹೆಚ್ಚಾಗಿ ಬರುತ್ತದೆ ಅಥವಾ ಬರಲು ಕಾರಣವೇನೆಂದರೆ ಯಾವಾಗಲೂ ಹೆಚ್ಚು ಹೊತ್ತು ನಿಂತುಕೊಂಡು ಕೆಲಸ ಮಾಡುವವರು, ಗರ್ಭಿಣಿ ಸ್ತ್ರೀಯರಿಗೆ ಹೊಟ್ಟೆ ಭಾಗ ದಪ್ಪವಾಗುವುದರಿಂದ ಮತ್ತು ಹಾರ್ಮೋನ್ ವೇರಿಯೇಶನ್ ನಿಂದ, ಮೆನೋಪಾಸ್ ಹಂತದಲ್ಲಿರುವ ಮಹಿಳೆಯರಿಗೆ ಹಾರ್ಮೋನ್ ವೇರಿಯೇಷನ್ ನಿಂದ, ದೇಹದ ತೂಕ ಹೆಚ್ಚಾಗುವುದರಿಂದ ಮತ್ತು ಅನುವಂಶಿಯವಾಗಿ ಕೂಡ ಈ ಕಾಯಿಲೆ ಬರುತ್ತದೆ.

ಅದರಲ್ಲೂ ಮಹಿಳೆಯರಿಗೆ ಬರುವ ಸಾಧ್ಯತೆ ಹೆಚ್ಚು ಇದನ್ನು ಆರಂಭದಲ್ಲಿಯೇ ಗುರುತಿಸಿ ಗುಣಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಸ್ಕಿನ್ ಅಲ್ಸರ್, ರಕ್ತ ಹೆಪ್ಪುಗಟ್ಟುವಿಕೆ, ಕಾಲು ಮರಗಟ್ಟುವಿಕೆ ಅಥವಾ ಕೆಲವರಿಗೆ ಇದು ಹೊಡೆದು ರಕ್ತ ಬರುವಂತಹ ಹಂತಕ್ಕೂ ತಲಪಬಹುದು ಹಾಗಾಗಿ ಆರಂಭಿಕ ಹಂತದಲ್ಲಿಯೇ ಇದನ್ನು ಗುರುತಿಸಿದರೆ ಸುಲಭವಾಗಿ ಮನೆಮದ್ದುಗಳಿಂದಲೇ ಪರಿಹಾರ ಮಾಡಿಕೊಳ್ಳಬಹುದು. ಸುಲಭವಾಗಿ ಈ ಸಮಸ್ಯೆಗಳನ್ನು ಪರಿಹರಿಸಬಹುದಾದ ಮನೆಮದ್ದುಗಳ ಮಾಹಿತಿ ಹೀಗಿದೆ ನೋಡಿ.

1. ಕಾಲಿಗೆ ವ್ಯಾಯಾಮ ‌ನೀಡುವಂತಹ ಸ್ವಿಮ್ಮಿಂಗ್, ವಾಕಿಂಗ್ ಸೈಕಲಿಂಗ್ ರೂಢಿಸಿಕೊಳ್ಳಬೇಕು ಇದರಿಂದ ಕಾಲಿನ ರಕ್ತ ಸಂಚಾರ ಸುಗಮವಾಗುತ್ತದೆ.
* ಯೋಗಾಸನಗಳು ಕೂಡ ಬಹಳ ಪರಿಣಾಮಕಾರಿಯಾಗಿ ಪರಿಹಾರ ನೀಡುತ್ತದೆ. ಅದರಲ್ಲೂ ತಾಳಸನ, ಉತ್ಕಟಾಸನ, ಸರ್ವಂಗಾಸನ, ಪವನ ಮುಕ್ತಾಸನ ಇವುಗಳನ್ನು ಮಾಡುವುದು ಕೂಡ ಒಳ್ಳೆಯ ರಿಸಲ್ಟ್ ಕೊಡುತ್ತದೆ.

* ಬೆಳಗ್ಗೆ 10-20 ನಿಮಿಷ ಹಾಗೂ ಸಂಜೆ 10 ರಿಂದ 20 ನಿಮಿಷ ಕಾಲನ್ನು ಲಂಬವಾಗಿ ಇಟ್ಟುಕೊಳ್ಳಬೇಕು, ದಿಂಬುಗಳ ಸಹಾಯದಿಂದ L ಶೇಪ್ ನಲ್ಲಿ ಗೋಡೆಗಳಿಗೆ ಕಾಲನ್ನು ಒರಗಿಸಿ ಇಟ್ಟುಕೊಳ್ಳಬೇಕು ಅಥವಾ ಸರ್ವಾಂಗಾಸನದಲ್ಲಿ ಓರೆಯಾಗಿ ಇಟ್ಟುಕೊಳ್ಳಬೇಕು
* ಕಾಫ್ ಮತ್ತು ಹ್ಯಾಂಡ್ ಸ್ಪ್ರಿಂಗ್ ಸ್ಟ್ರೆಚಿಂಗ್ ಮಾಡುವುದರಿಂದ ತೊಡೆ ಹಾಗೂ ನೀಲಖಂಡಗಳ ಮಾಂಸ ಗಟ್ಟಿಯಾಗುತ್ತವೆ. ಇದರಿಂದ ರಕ್ತ ಸಂಚಾರಕ್ಕೆ ಇದ್ದ ತೊಡಕು ನಿವಾರಣೆ ಆಗುತ್ತದೆ.

* ದೇಹದ ತೂಕವನ್ನು ಉಳಿಸಿಕೊಳ್ಳುವುದು ಕೂಡ ಇದಕ್ಕೆ ಒಂದು ಉತ್ತಮ ಪರಿಹಾರ
* ಕಂಪ್ರೆಶನ್ ಸ್ಟಾಕಿಂಗ್ ಸಾಕ್ಸ್ ಗಳನ್ನು ಕೂಡ ಈ ಸಮಸ್ಯೆ ಪರಿಹಾರಕ್ಕಾಗಿ ಬಳಸಬಹುದು, ಇದರಲ್ಲಿ ಮೂರು ಬಗೆಯ ಸಾಕ್ಸ್ ಗಳು ಇರುತ್ತವೆ. ನಿಮ್ಮ ಸಮಸ್ಯೆ ಯಾವ ಪ್ರಮಾಣದಲ್ಲಿ ಇದೆ ಎನ್ನುವುದರ ಆಧಾರದ ಮೇಲೆ ವೈದ್ಯರ ಸಲಹೆ ಅಂತ ಇವುಗಳನ್ನು ಬಳಸಿ. ಬೆಳಿಗ್ಗೆ ಸ್ನಾನದ ತಕ್ಷಣ ಹಾಕಿ ನಂತರ ಮಲಗುವಾಗ ತೆಗಿಯಬೇಕು

* ಆಹಾರ ಪದ್ಧತಿಯನ್ನು ಸರಿ ಮಾಡಿಕೊಳ್ಳಬೇಕು , ಆಂಟಿ ಆಕ್ಸಿಡೆಂಟ್ ಅಂಡ್ ಇನ್ಫ್ಲಾಮೆಂಟರಿ ಅಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ
* ಉಪ್ಪಿನಾಂಶವನ್ನು ಕಡಿಮೆ ಮಾಡಿ ಅತಿ ಹೆಚ್ಚು ನೀರನ್ನು ಕುಡಿಯಬೇಕು

* ಹೆಚ್ಚು ಹೊತ್ತು ನಿಂತು ಕೆಲಸ ಮಾಡುವುದನ್ನು ಕಡಿಮೆ ಮಾಡಬೇಕು
* ಹೆಚ್ಚು ಹೊತ್ತು ಕುಳಿತಿರುವವರು ಕೂಡ ಆಗಾಗ ಬ್ರೇಕ್ ತೆಗೆದುಕೊಂಡು ಆಂಕಲ್ ಪಾಯಿಂಟ್ ಎಕ್ಸರ್ಸೈಜ್ ಮಾಡಬೇಕು
* ಲಾವೆಂಡರ್ ಎಣ್ಣೆಯನ್ನು ಕೊಬ್ಬರಿ ಎಣ್ಣೆ ಜೊತೆ ಹಚ್ಚುವುದರಿಂದ ಕೂಡ ಆರಂಭಿಕ ಹಂತದಲ್ಲಿರುವ ವೇರಿಕೋಸ್ ವೇನ್ಸ್ ಗುಣವಾಗುತ್ತದೆ.
* ಉತ್ತರಾಣಿ ಸೊಪ್ಪು ಕೂಡ ಇದಕ್ಕೆ ಉತ್ತಮ ಪರಿಹಾರ.

ಮನೆಯಲ್ಲೇ ಇರುವ ಈ ದಿವ್ಯ ಔಷಧವನ್ನು ಎರಡು ಸ್ಪೂನ್ ಕುಡಿದರೆ ಸಾಕು ಮಲಬದ್ಧತೆ ಮಾಯ, ಕರುಳು ಪೂರ್ತಿ ಕ್ಲೀನ್.!

ಮಲಬದ್ಧತೆ ಅಜೀರ್ಣ ಎನ್ನುವುದು ಇತ್ತೀಚಿನಕ್ಕೆ ಸಾಮಾನ್ಯವಾಗಿ ಎಲ್ಲರಲ್ಲೂ ಕೇಳಿ ಬರುವ ಒಂದು ಸಾಮಾನ್ಯ ಕಾಯಿದೆ. ಈ ರೀತಿ ಆಗುವುದಕ್ಕೆ ಕಾರಣ ಸಾಕಷ್ಟಿದೆ, ನಾವು ಇಂದು ಅಳವಡಿಸಿಕೊಳ್ಳದಿರುವ ತಪ್ಪಾದ ಜೀವನ ಶೈಲಿ ಹಾಗೂ ನಾವು ತಿನ್ನುತ್ತಿರುವ ಆಹಾರ, ತಡವಾಗಿ ಮಲಗುವುದು, ತಡವಾಗಿ ಏಳುವುದು, ತಡವಾಗಿ ಆಹಾರ ಸೇವನೆ ಮಾಡುವುದು ಅಜೀರ್ಣವಾಗದಂತ ಆಹಾರ ಪದಾರ್ಥ ತಿನ್ನುವುದು ಇನ್ನು ಇತ್ಯಾದಿ ಕಾರಣಗಳಿಂದಾಗಿ ಮಲಬದ್ಧತೆ ಉಂಟಾಗುತ್ತದೆ.

ಈ ಮಲಬದ್ಧತೆ ಸರ್ವ ರೋಗಗಳಿಗೂ ಮೂಲ ಏಕೆಂದರೆ, ಮಲಬದ್ಧತೆ ಇದ್ದವರಿಗೆ ಹೃದಯದ ಸಮಸ್ಯೆ, ರಕ್ತದೊತ್ತಡ, ಅಲರ್ಜಿ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು, ಅಜೀರ್ಣ, ನೆನಪಿನ ಶಕ್ತಿ ಕುಂದುವುದು, ತಲೆ ಕೂದಲು ಉದುರುವುದು ಹಾಗೂ ಕಡಿಮೆ ವಯಸಿಗೆ ತಲೆ ಕೂದಲು ಬೆಳ್ಳಗಾಗುವುದು ಇತ್ಯಾದಿ ಕಾಯಿಲೆಗಳಿಗೆ ಮಲಬದ್ಧತೆಗೆ ಕಾರಣ.

ಮಲಬದ್ಧತೆಯಿಂದ ವಾತ ಪಿತ್ತ ಕಫ ವಿಕಾರಗಳು ಉಂಟಾಗಿ ಆ ಮೂಲಕ ಅಂಗಾಂಗಗಳ ಆರೋಗ್ಯವನ್ನು ಕೆಡಿಸುತ್ತವೆ. ಮಲಬದ್ಧತೆ ಇದ್ದವರಿಗೆ ಮಾನಸಿಕ ಒತ್ತಡಗಳು ಕೂಡ ಇರುತ್ತದೆ ಅವರು ಯಾವುದರಲ್ಲೂ ಆಸಕ್ತಿ ಹೊಂದಿರುವುದಿಲ್ಲ, ಅವರಲ್ಲಿ ಲವಲವಿಕೆ ಇರುವುದಿಲ್ಲ, ಮಲಬದ್ಧತೆ ಉಂಟಾದರೆ ಕರುಳು ಕಟ್ಟುವುದರಿಂದ ಕರುಳು ಕಲುಷಿತಕೊಂಡರೆ ಮೆದುಳಿನ ನ್ಯೂರಾಣುಗಳು ಕೂಡ ಆಕ್ಟಿವ್ ಆಗಿರುವುದಿಲ್ಲ ಹೀಗಾಗಿ ಇಂತಹ ಸಮಸ್ಯೆಗಳು ಬರುತ್ತವೆ.

ನಾವು ದಿನಪೂರ್ತಿ ಆಕ್ಟಿವ್ ಆಗಿ ಸಂತೋಷವಾಗಿ ಆರೋಗ್ಯವಾಗಿರಬೇಕು ಎಂದರೆ ಆ ದಿನದ ನಿತ್ಯ ಕರ್ಮಗಳು ಸರಿಯಾಗಿ ಆಗಿರಬೇಕು. ಈ ರೀತಿ ಯಾವುದೇ ಕಾರಣದಿಂದಾಗಿ ನಿಮಗೆ ಮಲಬದ್ಧತೆ ಉಂಟಾಗಿದ್ದರೆ ಅದನ್ನು ಸುಲಭವಾಗಿ ಮನೆಯಲ್ಲೇ ಇರುವಂತಹ ಅದ್ಭುತವಾದ ಔಷಧಿಯಿಂದ ಗುಣ ಮಾಡಿಕೊಳ್ಳುವ ವಿಧಾನದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿಕೊಡುತ್ತಿದ್ದೇವೆ.

ಪ್ರತಿದಿನ ರಾತ್ರಿ ಊಟ ಆದಮೇಲೆ ಎರಡು ಗಂಟೆಗಳ ನಂತರ ಕುದಿಸಿ ಕುದಿಸಿ ಆರಿಸಿದ ಬೆಚ್ಚಗಿನ ಹಾಲಿಗೆ ಎರಡರಿಂದ ಮೂರು ಚಮಚ ಶುದ್ಧವಾದ ಹರಳೆಣ್ಣೆ ಮಿಕ್ಸ್ ಮಾಡಿ ಕುಡಿಯಬೇಕು, ಒಂದು ವೇಳೆ ರಾತ್ರಿ ಕುಡಿಯಲು ಸಾಧ್ಯವಾಗದೆ ಇದ್ದವರು ಬೆಳಗಿನ ಸಮಯ ಖಾಲಿ ಹೊಟ್ಟೆಯಲ್ಲಿ ಊಟ ತಿನ್ನುವ ಎರಡು ಗಂಟೆಗಳ ಮುನ್ನ ಅಂದರೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರಿಗೆ ಎರಡರಿಂದ ಮೂರು ಚಮಚ ಈ ಶುದ್ಧ ಹರಳೆಣ್ಣೆಯನ್ನು ಹಾಕಿಕೊಂಡು ಕುಡಿಯಬಹುದು.

ಈ ರೀತಿ ಕುಡಿದ ಮೇಲೆ 15 ರಿಂದ 20 ನಿಮಿಷಗಳಿಗೆ ಆಗಾಗ ಒಂದು ಲೋಟ ಬಿಸಿ ನೀರನ್ನು ಕುಡಿಯಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಕರುಳಲ್ಲಿ ಶೇಖರಣೆಯಾಗಿರುವ ಕಲ್ಮಶಗಳು ಕೂಡ ಆಚೆ ಬರುತ್ತದೆ. ಮೂರು ತಿಂಗಳವರೆಗೆ ಪ್ರತಿದಿನವೂ ತಪ್ಪದೇ ಮನೆ ಮದ್ದು ಮಾಡಿ ನೋಡಿ ನಿಮ್ಮ ಆರೋಗ್ಯ ಹೇಗೆ ಬದಲಾಗುತ್ತದೆ ಆಶ್ಚರ್ಯ ಪಡುತ್ತೀರಿ.

ಪ್ರತಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿಯುವುದು ಕೂಡ ಟಾಕ್ಸಿನ್ ಅಂಶಗಳನ್ನು ಹೊರಹಾಕಿ ಜಠರಾಗ್ನಿಯನ್ನು ಕ್ರಿಯಾಶೀಲಗೊಳಿಸುತ್ತದೆ. ಇದರಿಂದ ಜೀರ್ಣ ಶಕ್ತಿ ವೃದ್ಧಿಯಾಗಿ ಚಯಾಪಚಯ ಕ್ರಿಯೆಗಳು ಸರಾಗವಾಗಿ ಸಾಗುತ್ತದೆ. ಆದ್ದರಿಂದ ತಪ್ಪದೇ ಇವುಗಳನ್ನು ಪಾಲಿಸಿ ಮತ್ತು ಆದಷ್ಟು ಸರಾಗವಾಗಿ ಜೀರ್ಣವಾಗುವ ಆಹಾರ ಪದಾರ್ಥಗಳನ್ನು ಸೇ‌ವಿಸಿ.

ನಾರಿನಾಂಶ ಹೆಚ್ಚಿರುವ ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ, ದೇಹಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ನೀರನ್ನು ಕುಡಿಯಿರಿ, ಆಹಾರದಲ್ಲಿ ತುಪ್ಪದ ಬಳಕೆ ಮಾಡುವುದು ಕೂಡ ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ. ಇದರೊಂದಿಗೆ ರಾತ್ರಿ ಹೊತ್ತು ತಡವಾಗಿ ಮಲಗುತ್ತಿದ್ದರೆ ಆ ಅಭ್ಯಾಸವನ್ನು ತಪ್ಪಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಹಂಚಿಕೊಳ್ಳಿ.

https://youtu.be/vQOCleyHWr4?si=38mVNXr37vm6engr

ಚಪಾತಿ ತಿನ್ನುವುದರಿಂದ ನಿಜಕ್ಕೂ ಡಯಾಬಿಟಿಸ್ ಕಂಟ್ರೋಲ್ ಆಗುತ್ತಾ.? ವೈದ್ಯರು ಈ ಬಗ್ಗೆ ಏನೆನ್ನುತ್ತಾರೆ ಇಲ್ಲಿದೆ ನೋಡಿ ಉತ್ತರ.!

 

ಈಗ ಕೆಲ ವರ್ಷಗಳ ಹಿಂದಿನವರೆಗೂ ಕೂಡ ಡಯಾಬಿಟೀಸ್ ಇರುವವರು ಅನ್ನ ತಿನ್ನಬಾರದು ಚಪಾತಿ ತಿನ್ನುವುದರಿಂದ ಅವರ ಡಯಾಬಿಟಿಸ್ ಕಂಟ್ರೋಲ್ ಆಗುತ್ತದೆ ಮತ್ತು ಡಯಟ್ ಮಾಡುವವರು ಅನ್ನದ ಬದಲು ಚಪಾತಿ ತಿನ್ನಬಹುದು. ಈ ಮಾತನ್ನು ಜನರು ನಂಬುತ್ತಿದ್ದರು.

ಆದರೆ ಈಗ ನಿಧಾನವಾಗಿ ಜನರಿಗೆ ಆಹಾರದ ಬಗ್ಗೆ ತಿಳುವಳಿಕೆ ಬರುತ್ತಿದೆ ಯಾವ ಆಹಾರದಲ್ಲಿ ಏನೆಲ್ಲಾ ಪೋಷಕಾಂಶಗಳು ಇರುತ್ತವೆ? ಯಾವುದು ಎಷ್ಟು ಪ್ರಮಾಣದಲ್ಲಿ ಇರಬೇಕು? ಎನ್ನುವುದನ್ನು ಲೆಕ್ಕಾಚಾರ ಹಾಕಿ ಒಂದು ಧಾನ್ಯಕ್ಕೂ ಮತ್ತೊಂದು ಧಾನ್ಯಕ್ಕೂ ಕಂಪೇರ್ ಮಾಡುವಷ್ಟು ಕಲಿತಿದ್ದಾರೆ.

ಇಷ್ಟು ತಿಳಿಯದೆ ಇದ್ದರೂ ಎಲ್ಲರ ಮನಸಿನಲ್ಲೂ ಈಗ ಗೋಧಿ ತಿನ್ನುವುದು ನಿಜಕ್ಕೂ ಶುಗರ್ ಕಂಟ್ರೋಲ್ ಮಾಡುತ್ತದೆಯಾ ಎನ್ನುವ ಪ್ರಶ್ನೆಯಂತೂ ಖಂಡಿತ ಮೂಡಿದೆ, ಅದಕ್ಕೆ ಉತ್ತರ ಈ ಅಂಕಣದಲ್ಲಿ ಇದೆ ನೋಡಿ. ಎಲ್ಲರಿಗೂ ಗೊತ್ತಿರುವ ಹಾಗೆ ದಕ್ಷಿಣ ಭಾರತದಲ್ಲಿ ಅಕ್ಕಿ ಜೋಳ ರಾಗಿ ಪ್ರಮುಖ ಧಾನ್ಯ ಮತ್ತು ನಮ್ಮ ಪೂರ್ವಿಕರು ಕೂಡ ಇದನ್ನೇ ಸೇವಿಸುತ್ತಿದ್ದರು ಸೈನ್ಸ್ ಕೂಡ ಇದನ್ನು ಹೇಳುತ್ತದೆ.

ಯಾವುದು ನಮ್ಮ ನೆಲದ ಆಹಾರ ಅದನ್ನು ತಿನ್ನುವುದರಿಂದ ನಾವು ಆರೋಗ್ಯವಾಗಿರುತ್ತೇವೆ ಎಂದು. ಆದರೆ ಗೋಧಿ ಎನ್ನುವುದು ನಮ್ಮ ದೇಶದಲ್ಲಿ ಹೇಳುವುದಾದರೆ ಉತ್ತರ ಭಾರತದಲ್ಲಿ ಹೆಚ್ಚು ಬಳಕೆಯಲ್ಲಿದೆ ಮತ್ತು ಅದಕ್ಕೂ ಮುನ್ನ ವಿದೇಶಗಳ ಧಾನ್ಯವಾಗಿದೆ ಇದು. ಸ್ವತಂತ್ರ ಪೂರ್ವದಲ್ಲಿ ಒತ್ತಾಯಪೂರ್ವಕವಾಗಿ ಏಷ್ಯಾದ ಕೆಲ ದೇಶಗಳಿಗೆ ಗೋಧಿ ಪರಿಚಯ ಮಾಡಿಸಲಾಯಿತು ಅದರಲ್ಲೂ ನೆರವಾಗಿ ಈ ವಿಚಾರದಲ್ಲಿ ಅಮೆರಿಕವನ್ನು ದೂಷಿಸಿದರೆ ತಪ್ಪಿಲ್ಲ.

ಅಮೇರಿಕಾವು ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಕೆಲವೇ ವರ್ಷಗಳ ಹಿಂದೆ ತನ್ನ ದೇಶದಲ್ಲಿ ಅತಿಯಾದ ರಾಸಾಯನಿಕ ಗೊಬ್ಬರ ಹಾಕಿ ಬಹಳ ದೊಡ್ಡ ಪ್ರಮಾಣದಲ್ಲಿ ಗೋಧಿಯನ್ನು ಬೆಳೆಯಿತು, ತನ್ನ ದೇಶದ ಬೇಡಿಕೆಗಿಂತಲೂ ಹೆಚ್ಚಾಗಿ ಬೆಳೆದ ಗೋಧಿಯನ್ನು ಬೇರೆ ದೇಶಗಳಿಗೆ ತಲುಪಿಸುವ ಸಲುವಾಗಿ ನಿಮ್ಮ ದೇಶಗಳಲ್ಲಿ ಬೆಳೆಯುತ್ತಿರುವ ಆಹಾರ ಧಾನ್ಯಗಳಲ್ಲಿ ಪೋಷಕಾಂಶ ಕಡಿಮೆ ಎಂದು ಹೇಳಿ ಉಚಿತವಾಗಿ ಗೋಧಿ ಕೊಟ್ಟು ಗೋಧಿ ಪರಿಚಯ ಮಾಡಿಸಿತು.

ಮತ್ತು ಇಲ್ಲೂ ಕೂಡ ಆ ಸಮಯದಲ್ಲಿ ವಿದೇಶಿಗರ ಮುಷ್ಟಿಯಲ್ಲಿದ್ದ ಭಾರತವು ಒತ್ತಾಯವಾಗಿಯೂ ಅಥವಾ ತಿಳುವಳಿಕೆ ಇಲ್ಲದೆಯೋ ಅದನ್ನು ಬಳಸುವ ಹಾಗೂ ಬೆಳೆಯುವ ಪರಿಸ್ಥಿತಿಗೆ ಬಂತು. ನಂತರ ಜನರು ಗೋಧಿ ತಿನ್ನುವುದಕ್ಕೆ ಒಗ್ಗಿಕೊಂಡರು. ಅತಿಯಾಗಿ ಗೋಧಿ ಪದಾರ್ಥಗಳನ್ನು ತಿನ್ನುತ್ತಿರುವವರಲ್ಲಿ ಅಸಿಡಿಟಿ ಹಾಗೂ ಗ್ಯಾಸ್ ಸ್ಟ್ರೈಟಿಸಿಸ್ ನಂತಹ ಸಮಸ್ಯೆ ಕಾಮನ್ ಆಗಿರುತ್ತದೆ.

ಆದರೆ ನಮಗೆ ಇದು ಅದರಿಂದಲೇ ಬರುತ್ತಿದೆ ಎನ್ನುವುದನ್ನು ತಿಳಿದುಕೊಳ್ಳದೆ ಇರುವಷ್ಟು ಇದು ಹತ್ತಿರವಾಗಿ ಹೋಯಿತು. ಈ ಬಗ್ಗೆ ನ್ಯೂಟ್ರಿಷನ್ ಗಳು ಹೇಳುವಂತೆ ಇರುವ ಸತ್ಯಾಂಶವೇನೆಂದರೆ, ಗೋಧಿಯಲ್ಲಿ ನಮ್ಮ ಅಕ್ಕಿಗಿಂತಲೂ ಕೆಲವು ಪ್ರೋಟೀನ್ ಗಳು ಹೆಚ್ಚಿಗೆ ಇರಬಹುದು ಆದರೆ ಇವು ದೇಹಕ್ಕೆ ಪೂರಕವಾಗಿಲ್ಲ, ಇವು ದೇಹಕ್ಕೆ ದಕ್ಕುವುದು ಇಲ್ಲ.

ಗೋಧಿಯಲ್ಲಿ ಗ್ಲೂಟೇನ್ ಅಂಶ ಹೆಚ್ಚಾಗಿದೆ, ಇದು ನಮ್ಮ ಜೀರ್ಣಶಕ್ತಿಯನ್ನು ಕುಂಠಿತ ಮಾಡುತ್ತದೆ. ಗೋಧಿಯನ್ನು ಜನಟಿಕಲಿ ಮಾಡಿಫೈಡ್ ಧಾನ್ಯ ಎಂದು ಕರೆಯುತ್ತೇವೆ ಇದು ಅವೈಜ್ಞಾನಿಕವಾಗಿ ತಯಾರಾಗಿರುವುದರಿಂದ ಇದಕ್ಕಿಂತಲೂ ನಮ್ಮ ಅಕ್ಕಿ ಅಂದರೆ ಭತ್ತವು ಎಷ್ಟೋ ಪ್ರಮಾಣದಲ್ಲಿ ಬೆಸ್ಟ್.

ಹಾಗಾಗಿ ಗೋಧಿಯಿಂದ ಶುಗರ್ ಕಂಟ್ರೋಲ್ ಆಗುತ್ತದೆ ಡಯಾಬಿಟಿಸ್ ಇರುವವರು ಚಪಾತಿಯನ್ನು ತಿನ್ನಲೇಬೇಕು ಎನ್ನುವ ಯಾವುದೇ ಭರವಸೆ ಇಲ್ಲ ಎಂದು ಆಹಾರ ತಜ್ಞರೇ ಹೇಳುತ್ತಿದ್ದಾರೆ. ಹಾಗಾಗಿ ಚಪಾತಿ ಅಭ್ಯಾಸ ಇಲ್ಲದೆ ಇರುವವರು ಇದನ್ನು ಬಳಸುವ ಅವಶ್ಯಕತೆ ಇಲ್ಲ ಅಥವಾ ಅತಿಯಾಗಿ ಬಳಸುತ್ತಿರುವವರು ನಿಧಾನಕ್ಕೆ ಕಂಟ್ರೋಲ್ ಮಾಡಿಕೊಳ್ಳಿ.

ಮಹಿಳೆಯರ ಮುಟ್ಟಿನ ಸಮಸ್ಯೆಗೆ ಪರಿಹಾರಗಳು…

 

ಮಹಿಳೆಯರಿಗೆ 40 ರಿಂದ 50 ವರ್ಷಗಳ ಸಮಯದಲ್ಲಿ ಅವರ ಋತುಚಕ್ರದ ಪ್ರಕ್ರಿಯೆ ನಿಲ್ಲುತ್ತದೆ. ಸಂತಾನೋತ್ಪತ್ತಿಗೆ ಕ್ರಿಯೆ ಕ್ಷೀಣಿಸಿ ಹಲವು ರೀತಿಯ ಹಾರ್ಮೋನ್ ವೇರಿಯೇಶನ್ ಗಳು ದೇಹದಲ್ಲಿ ಆಗುತ್ತವೆ. ಈ ಸಮಯವನ್ನು ಮೆನುಪಾಸ್ ಎಂದು ಮೆಡಿಕಲ್ ಭಾಷೆಯಲ್ಲಿ ಕರೆಯುತ್ತಾರೆ.

ಈ ಸಮಯದಲ್ಲಿ ದೈಹಿಕವಾಗಿ ಹಲವು ರೀತಿಯ ನೋ’ವುಗಳು ಮಾತ್ರವಲ್ಲದೆ ಮಾನಸಿಕ ಕಸಿವಿಸಿಗಳು ಕೂಡ ಇರುತ್ತವೆ. ಸಾಮಾನ್ಯವಾಗಿ ಅವರಿಗೆ ಮುಖ ಬಿಸಿ ಆಗುವುದು, ರಾತ್ರಿ ಹೆಚ್ಚು ಬೆವರು ಬರುವುದು, ನಿದ್ರಾಹೀನತೆ, ಬೇಗನೆ ಆಯಾಸಗೊಳ್ಳುವುದು, ಮಾನಸಿಕ ಒತ್ತಡ, ಕಿರಿಕಿರಿ, ಕೋ’ಪ, ಲೈಂಗಿಕತೆಯಲ್ಲಿ ನಿರಾಸಕ್ತಿ ಇದರಿಂದ ಖಿನ್ನತೆ, ತಲೆನೋವ, ತಲೆಸುತ್ತು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಇವುಗಳ ಜೊತೆಗೆ ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಕಡಿಮೆ ಆಗುವುದರಿಂದ ಕ್ಯಾಲ್ಸಿಯಂ ಕೊರತೆ ಉಂಟಾಗಿ ಮೂಳೆಗಳು ಬಲಹೀನವಾಗುತ್ತವೆ. ಮಂಡಿ ನೋವು, ಸ್ನಾಯು ನೋವು, ಬೆನ್ನು ನೋವು, ಸೊಂಟ ನೋವು ಇತ್ಯಾದಿಗಳು ಭಾದಿಸುತ್ತವೆ. ಈ ಸಮಯದಲ್ಲಿ ಅವರಿಗೆ ದೈಹಿಕವಾಗಿ ಕಾಡುವ ಕಾಯಿಲೆಗಳಿಗೆ ಅಷ್ಟೇ ಅಲ್ಲದೆ ಮಾನಸಿಕ ಕಾಡುವ ಸಮಸ್ಯೆಗಳಿಗೂ ಕೂಡ ಚಿಕಿತ್ಸೆ ಬೇಕು.

ಅವರು ಈ ವಿಚಾರವಾಗಿ ಬಹಳ ತಲೆಕೆಡಿಸಿಕೊಳ್ಳುವುದರಿಂದ ಅವರಿಗೆ ಸಾಂತ್ವನ ಹಾಗೂ ಧೈರ್ಯದ ಮಾತುಗಳನ್ನು ಹೇಳಿ ಸಮಾಧಾನ ಪಡಿಸಬೇಕು. ಈ ಸಮಯದಲ್ಲಿ ಅವರಿಗೆ ಗೊತ್ತಿಲ್ಲದ ರೀತಿಯಲ್ಲಿ ಅನೇಕ ರೀತಿಯ ಚಟಪಡಿಕೆ ಇರುತ್ತದೆ. ಯಾವಾಗಲೂ ಒಬ್ಬರೇ ಇರಬೇಕು ಎಲಿಸುವುದು, ಏನನ್ನೋ ಯೋಚನೆ ಮಾಡುತ್ತಾ ಕಳೆದುಹೋಗುವುದು, ಸದಾ ಆಕ್ಟಿವ್ ಆಗಿದ್ದವರು ಇದ್ದಕ್ಕಿದ್ದಂತೆ ಮೌನವಾಗಿ ಸೈಲೆಂಟಾಗಿ ಬಿಡುವುದು.

ಈ ರೀತಿಯೆಲ್ಲಾ ಆಗುತ್ತಿರುತ್ತದೆ. ಅದನ್ನು ಅರ್ಥ ಮಾಡಿಕೊಂಡು ಕುಟುಂಬದಲ್ಲಿರುವ ಇತರರು ಆ ಪರಿಸ್ಥಿತಿಯನ್ನು ಅವರು ಎದುರಿಸಲು ಸಹಕರಿಸಬೇಕು. ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡು ಉತ್ತಮ ಆಹಾರ ಶೈಲಿ, ಅದರಲ್ಲೂ ಹೆಚ್ಚು ಜೀವಸತ್ವ ಇರುವ ಪೋಷಕಾಂಶಗಳು ಹೇರಳವಾಗಿರುವ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸುವಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಕು.

ಈ ಸಮಯದಲ್ಲಿ ಅವರಿಗೆ ಬಹಳಷ್ಟು ವಿಶ್ರಾಂತಿಯ ಅವಶ್ಯಕತೆ ಇರುತ್ತದೆ ಮತ್ತು ಅವರು ಸಂತೋಷವಾಗಿರುವಂತೆ ನೋಡಿಕೊಳ್ಳುವುದು ಬಹಳ ಒಳ್ಳೆಯದು ಸಹಿಸಲಾಗದಷ್ಟು ಯಾವುದಾದರೂ ಸಮಸ್ಸೆ ಇದ್ದರೆ ಸ್ತ್ರೀರೋಗ ತಜ್ಞರ ಬಳಿ ಹೇಳಿಕೊಂಡು ಅದಕ್ಕೆ ಈಸ್ಟ್ರೋಜನ್ ಹಾರ್ಮೋನ್ ಚಿಕಿತ್ಸೆ ಕೂಡ ಪಡೆಯಬಹುದು. ಇಲ್ಲವಾದಲ್ಲಿ ಮನೆಮದ್ದುಗಳ ಮೂಲಕವೂ ಕೂಡ ಗುಣಪಡಿಸಿಕೊಳ್ಳಬಹುದು.

ಈ ರೀತಿ ಹಾರ್ಮೋನ್ ವೇರಿಯೇಷನ್ ಕಂಟ್ರೋಲ್ ಮಾಡುವಂತಹ ಉತ್ತಮವಾದ ಮನೆ ಮದ್ದುಗಳು ಮೋನೋಪಾಸ್ ಹಂತದಲ್ಲಿರುವ ಮಹಿಳೆಯರಿಗಾಗಿ ಹೀಗಿದೆ ನೋಡಿ.
* ದಿನದಲ್ಲಿ ಎರಡು ಅಥವಾ ಮೂರು ಬಾರಿ ಒಂದು ಲೋಟ ಹಾಲನ್ನು ಕುಡಿಯುವುದು ಬಹಳ ಒಳ್ಳೆಯದು. ಇದರಿಂದ ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಅವರ ದೇಹಕ್ಕೆ ಹೇರಳವಾಗಿ ಸಿಗುತ್ತದೆ
* ಬೀಟ್ರೋಟ್ ರಸವನ್ನು ಕೂಡ ಸೇವಿಸಬಹುದು ದಿನದಲ್ಲಿ 60ರಿಂದ 70ml ಬೀಟ್ರೂಟ್ ರಸವನ್ನು ದಿನದಲ್ಲಿ ಎರಡು ಬಾರಿ ಸೇವಿಸಿದರೆ ರಕ್ತ ಹೀನತೆಯು ಕಂಟ್ರೋಲ್ ಗೆ ಬರುತ್ತದೆ.

* 40ರ ವಯಸ್ಸಿಗೆ ಬರುತ್ತಿದ್ದಂತೆ ಈ ಪ್ರಕ್ರಿಯ ಸಹಜ ಎನ್ನುವುದನ್ನು ಎದುರಿಸಲು ಮಾನಸಿಕವಾಗಿ ಸಿದ್ದರಾಗಬೇಕು. ಹಾಗೆ ಆ ಸಮಯದಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವ ರಾಗಿ, ನುಗ್ಗೆ ಸೊಪ್ಪು, ಕಬ್ಬು ಮುಂತಾದ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು. ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕು. ಹಸಿ ತರಕಾರಿಗಳು, ಹಸಿರು ಸೊಪ್ಪುಗಳು, ಮೊಳಕೆ ಕಟ್ಟಿದ ಕಾಳುಗಳು ಇವುಗಳನ್ನು ತಿನ್ನಬೇಕು.

* ಚೆನ್ನಾಗಿ ನೀರು ಕುಡಿಯಬೇಕು.
* ಪ್ರತಿದಿನವೂ ನಿಯಮಿತವಾದ ವ್ಯಾಯಾಮ, ಧ್ಯಾನ ಅಥವಾ ಯೋಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಧ್ಯವಾದಷ್ಟು ಆಕ್ಟಿವ್ ಆಗಿರಲು ಪ್ರಯತ್ನಿಸಬೇಕು.
* ದಿನದಲ್ಲಿ ಒಂದು ಬಾರಿ ಒಂದು ಚಮಚ ಅತಿಮಧುರವನ್ನು ಸೇವಿಸಬೇಕು.