Home Blog Page 57

ಇಂದಿನಿಂದ ಈ 6 ರಾಶಿಯವರ ಅದೃಷ್ಟವನ್ನು ಬದಲಾಗುತ್ತದೆ. ಯಾವ ರಾಶಿಯವರಿಗೆ ರಾಜಯೋಗ ಇದೆ ನೋಡಿ.!

0

 

ಫೆಬ್ರುವರಿ 24 ಶನಿವಾರದ ದಿನ ಹುಣ್ಣಿಮೆಯ ದಿನವಾಗಿದ್ದು ಈ ದಿನ ಹಲವು ವಿಶೇಷತೆಗಳಿಂದ ಕೂಡಿದೆ. ಈ ಹುಣ್ಣಿಮೆಯನ್ನು ಭರತ ಹುಣ್ಣಿಮೆ ಎಂದು ಕೂಡ ಕರೆಯುತ್ತಾರೆ. ಹುಣ್ಣಿಮೆ ಮುಗಿದ ನಂತರ ದ್ವಾದಶ ರಾಶಿಗಳಲ್ಲಿ ಹಲವು ಬದಲಾವಣೆಗಳಾಗುತ್ತಿದ್ದು, ಕೆಲವು ರಾಶಿಗಳಿಗೆ ವಿಪರೀತವಾದ ರಾಜಯೋಗ, ಶುಕ್ರದೆಶೆ ಆರಂಭವಾಗುತ್ತಿದ್ದು ಗುರುಬಲ ಕೂಡ ಬರುತ್ತಿದೆ.

ಫೆಬ್ರವರಿ 24ರ ಶನಿವಾರದ ದಿನ ಆರಂಭವಾಗಿ 2064ರ ವರೆಗೆ ಕೂಡ ಸತತವಾಗಿ 40 ವರ್ಷಗಳವರೆಗೆ ಇಂತಹ ಯೋಗವು ಈ ರಾಶಿಯಲ್ಲಿ ಮುಂದುವರಿಯಲಿದೆ. ಹಣಕಾಸಿನ ವಿಚಾರ ಉತ್ತಮಗೊಳ್ಳುವುದು, ಆರೋಗ್ಯದ ಸಮಸ್ಯೆಗಳನ್ನು ನಿವಾರಣೆ, ಕುಟುಂಬ ಸೌಖ್ಯ ಇನ್ನು ಮುಂತಾದ ವಿಚಾರಗಳಲ್ಲಿ ಬಹಳ ಸಕಾರಾತ್ಮಕವಾದ ಬದಲಾವಣೆಗಳನ್ನು ಕಾಣಲಿದ್ದಾರೆ ಯಾವ ರಾಶಿಯವರಿಗೆ ಇಂತಹ ಅದೃಷ್ಟ ಇದೆ ಗೊತ್ತಾ?…

ಈ ಸುದ್ದಿ ಓದಿ:- ಯಾವ ದಿಕ್ಕಿಗೆ ತಲೆ ಹಾಕಿ ಮಲಗಿದರೆ ತುಂಬಾ ಒಳ್ಳೆಯದು, ಯಾವ ದಿಕ್ಕಿಗೆ ತಲೆ ಹಾಕಿ ಮಲಗಬಾರದು ನೋಡಿ.!

ಮೇಷ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ ಹಾಗೂ ಮೀನ ರಾಶಿಯವರ ಬದುಕಿನಲ್ಲಿ ಈ ಹುಣ್ಣಿಮೆಯ ದಿನವೂ ಇಂತಹ ಉತ್ತಮ ಬದಲಾವಣೆಗಳನ್ನು ಉಂಟುಮಾಡುತ್ತಿದೆ. ಬಹಳ ಧೀರ್ಘ ಸಮಯದವರೆಗೆ ಇದು ಮುಂದುವರೆಯುತ್ತಿದ್ದು, ಇದರ ಫಲದಿಂದಾಗಿ ನೀವು ಕೈಗೊಂಡ ಎಲ್ಲಾ ಕಾರ್ಯಗಳಲ್ಲಿ ಕೂಡ ಯಶಸ್ಸು ಗಳಿಸುತ್ತೀರಿ.

ಇಂತಹ ರಾಜಯೋಗದ ಸಮಯದಲ್ಲಿ ನಿಮಗೆ ಹೊಸ ವ್ಯಾಪಾರ ಆರಂಭಿಸುವ ಅಥವಾ ಸ್ವಂತ ಗೃಹ ನಿರ್ಮಿಸುವ ಕನಸುಗಳಿದ್ದರೆ ನೀವು ಈ ಬಗ್ಗೆ ಪ್ರಯತ್ನ ಪಟ್ಟರೆ ಖಂಡಿತ ಯಶಸ್ಸು ದೊರೆಯಲಿದೆ. ವಿದ್ಯಾಭ್ಯಾಸದಲ್ಲಿ ಕೂಡ ವಿದ್ಯಾರ್ಥಿಗಳ ಜೀವನದಲ್ಲಿ ಬಹಳ ಉತ್ತಮ ಯೋಗ ಆರಂಭವಾಗಿದ್ದು ಅಭ್ಯಾಸದಲ್ಲಿ ತೊಡಗಿಕೊಂಡಿರಪ್ಪ ಅವರು ಸ್ವಲ್ಪ ಏಕಾಗ್ರತೆ ತೋರಿದರೆ ಈ ರಾಶಿಗಳ ವಿದ್ಯಾರ್ಥಿಗಳು ಕೀರ್ತಿವಂತರಾಗುತ್ತಾರೆ.

ನೀವು ಬಹಳ ವರ್ಷಗಳಿಂದ ತೊಂದರೆ ಪಡುತ್ತಿದ್ದ ಎಲ್ಲಾ ಸಮಸ್ಯೆಯೂ ಕೂಡ ಪರಿಹಾರವಾಗುವಂತಹ ಸು ಸಮಯವನ್ನು ಈ ಮುಂದಿನ ದಿನಗಳಲ್ಲಿ ಕಾಣುತ್ತಿದ್ದೀರಿ ಅಥವಾ ಅರ್ಧಕ್ಕೆ ನಿಂತಿದ್ದಂತಹ ನಿಮ್ಮ ಯೋಜನೆಗಳನ್ನು ಮುಂದುವರಿಸುವಂತಹ ಭಾಗ್ಯ ನಿಮಗೆ ಈ ದಿನಗಳಲ್ಲಿ ಸಿಗುತ್ತಿದೆ.

ಈ ಸುದ್ದಿ ಓದಿ:- ಭಾರತ್, ಇಂಡಿಯನ್, HP ಯಾವುದೇ ಗ್ಯಾಸ್ ಆದರೂ ವಾಟ್ಸಾಪ್ ನಲ್ಲಿಯೇ ಬುಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಮತ್ತೊಮ್ಮೆ ನೀವು ಮನಃಸ್ಪೂರ್ತಿಯಾಗಿ ಆಸಕ್ತಿಯಿಂದ ಇಂತಹ ಕಾರ್ಯಗಳ ಬಗ್ಗೆ ಗಮನಕೊಟ್ಟರೆ ನಿಮ್ಮ ಬಹಳ ವರ್ಷಗಳ ಕನಸು ನನಸಾಗಲಿದೆ. ನೀವು ಅಸಾಧ್ಯವೆಂದು ಕೊಂಡಿದ್ದ ಇಂತಹ ಕಾರ್ಯಗಳನ್ನು ಕೂಡ ಸಾಧಿಸುವ ಶಕ್ತಿ ಯೋಗ ನಿಮಗೆ ಈ ಸಮಯದಲ್ಲಿ ಇರುತ್ತದೆ.

ಆದರೆ ಆರೋಗ್ಯದ ವಿಚಾರದಲ್ಲಿ ನೀವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಾಕೆಂದರೆ ಈ ಸಮಯದಲ್ಲಿ ನಿಮ್ಮನ್ನು ಕಾಡಬಹುದಾದ ಒಂದು ಸಮಸ್ಯೆ ಎಂದರೆ ಅದು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯೇ ಆಗಿದೆ ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಇನ್ನುಳಿದಂತೆ ಹಣಕಾಸಿಗೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ ಕೊರತೆ ಇರುವುದಿಲ್ಲ ನಿಮ್ಮ ಅವಶ್ಯಕತೆ ನಿಮಗೆ ಧನ ಸಹಾಯ ಒದಗಿ ಬರುತ್ತದೆ ಮತ್ತು ನೀವು ಸಾಲ ಮಾಡಿಕೊಂಡಿದ್ದರೂ ಕೂಡ ಆ ಸಾಲದ ಸುಳಿಯಿಂದ ಹೊರಬರಲು ಬೇಕಾದ ಮಾರ್ಗಗಳು ನಿಮಗೆ ಗೋಚರಿಸುತ್ತವೆ.

ಈ ಸುದ್ದಿ ಓದಿ:- ಮನೆಯಲ್ಲಿರುವ 60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ಕೇಂದ್ರ ಸರ್ಕಾರ ರೂ.1000 ಪಿಂಚಣಿ ಕೊಡುವ ಯೋಜನೆ.! ಯಾರು ಪಡೆಯಬಹುದು, ಏನೆಲ್ಲ ದಾಖಲೆಗಳು ಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ವಿವಾಹ ಯೋಗ, ಸಂತಾನ ಭಾಗ್ಯ ಬಯಸುತ್ತಿರುವವರಿಗೂ ಕೂಡ ಶುಭವಾಗುತ್ತದೆ. ವಿದೇಶ ಪ್ರಯಾಣ ಮಾಡಲು ಕನಸು ಕಂಡವರಿಗೆ ಅದು ಕೂಡ ಸಾಕಾರಗೊಳ್ಳುವಂತ ಸಮಯ. ಈ ಯೋಗವು ಇನ್ನಷ್ಟು ವರ್ಷ ಮುಂದುವರೆಯಬೇಕು ಸದಾ ಶಾಶ್ವತವಾಗಿರಬೇಕು ಬದುಕಿನಲ್ಲಿ ಎಲ್ಲವೂ ಒಳ್ಳೆಯದಾಗಬೇಕು ಎಂದರೆ ಪ್ರತಿದಿನವೂ ಭಗವಂತನನ್ನು ಸ್ಮರಿಸಿ, ನಿಮ್ಮ ಕುಟುಂಬದ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳಿ ಮತ್ತು ಅವರಿಂದ ಆಶೀರ್ವಾದವನ್ನು ಪಡೆಯಿರಿ. ಇಂತಹ ಅದೃಷ್ಟದ ಸಮಯವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ಯಶಸ್ವಿ ವ್ಯಕ್ತಿಗಳಾಗಿ ಬದುಕಿ.

 

ಯಾವ ದಿಕ್ಕಿಗೆ ತಲೆ ಹಾಕಿ ಮಲಗಿದರೆ ತುಂಬಾ ಒಳ್ಳೆಯದು, ಯಾವ ದಿಕ್ಕಿಗೆ ತಲೆ ಹಾಕಿ ಮಲಗಬಾರದು ನೋಡಿ.!

ಒಬ್ಬ ವ್ಯಕ್ತಿ ಕನಿಷ್ಠ 6-8 ಗಂಟೆ ನಿದ್ರೆ ಮಾಡಬೇಕು ಎಂದು ವೈದ್ಯಲೋಕ ಹಾಗೂ ಆಯುರ್ವೇದ ಹೇಳುತ್ತದೆ ಮತ್ತು ಮಕ್ಕಳು ಹಾಗೂ ವೃದ್ಧರಿಗಾದರೆ ಈ ಅವಧಿ ಇನ್ನು ಹೆಚ್ಚು. ಇಲ್ಲವಾದಲ್ಲಿ ನೂರಾರು ಬಗೆಯ ದೈಹಿಕ ರೋಗಗಳು ಮಾತ್ರವಲ್ಲದೆ ಮಾನಸಿಕ ಖಿನ್ನತೆಗಳು ಕೂಡ ಕಾಡುತ್ತವೆ. ನಿದ್ರೆಗೊಮ್ಮೆ ನಿತ್ಯ ಮರ.ಣ ಎನ್ನುವುದು ಭೌತಿಕ ಜಗತ್ತಿಗೆ ಬಹಳ ಅನ್ವಯವಾಗುವ ಮಾತು ಯಾಕೆಂದರೆ ಮಲಗಿ ಎದ್ದ ತಕ್ಷಣ ಮನಸ್ಸು ಬಹಳ ಆಕ್ಟಿವ್ ಆಗುತ್ತದೆ.

ಹೀಗೆ ತನ್ನ ಜೀವಿತಾವಧಿಯ 30% ಗಿಂತ ಹೆಚ್ಚು ಭಾಗ ನಿದ್ರೆಯಲ್ಲಿ ಮನುಷ್ಯ ಕಳೆಯುವುದರಿಂದ ಖಂಡಿತವಾಗಿಯೂ ಇದು ಬಹಳ ಮುಖ್ಯ ವಿಷಯ ಎಂದು ನಂಬಬಹುದು, ಹೀಗಿದ್ದಾಗ ಇದರ ಬಗ್ಗೆ ನಿಯಮಗಳನ್ನು ಮಾಡಲಾಗಿರುತ್ತದೆ. ಮನುಷ್ಯ ಮಲಗುವ ದಿಕ್ಕಿಗೆ ಸಂಬಂಧಪಟ್ಟ ಹಾಗೆ ಖಂಡಿತಾ ಕೆಲವು ಶಾಸ್ತ್ರ ಸಂಪ್ರದಾಯಗಳಿವೆ.

ಯಾವ ರಾಶಿಯವರು ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು, ಹಿರಿಯರು ಯಾವ ದಿಕ್ಕಿನಲ್ಲಿ ಮಲಗಬೇಕು, ಯಾರು ಯಾವ ದಿಕ್ಕಿನಲ್ಲಿ ಮಲಗಲೇಬಾರದು ಇತ್ಯಾದಿ ನಿಯಮಗಳಿವೆ. ಇದನ್ನು ಪುರಾಣಗಳಲ್ಲಿಯೂ ಉಲ್ಲೇಖಿಸಲಾಗಿದೆ ಮತ್ತು ಇದಕ್ಕೆ ಅದರದ್ದೇ ಆದ ಕಾರಣಗಳು ಇವೆ. ಇಂದು ಈ ಅಂಕಣದಲ್ಲಿ ಇದರಲ್ಲೊಂದು ಮುಖ್ಯ ವಿಷಯದ ಕುರಿತು ಕೆಲ ಪ್ರಮುಖ ಅಂಶಗಳ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.

ಈ ಸುದ್ದಿ ಓದಿ:- ಭಾರತ್, ಇಂಡಿಯನ್, HP ಯಾವುದೇ ಗ್ಯಾಸ್ ಆದರೂ ವಾಟ್ಸಾಪ್ ನಲ್ಲಿಯೇ ಬುಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಉತ್ತರ ದಿಕ್ಕಿನಲ್ಲಿ ಮಲಗುವುದರಿಂದ ಆ ಮನುಷ್ಯನ ಮನಸ್ಸು ಹಾಗೂ ದೇಹದ ಮೇಲೆ ಗಂಭೀರವಾಗಿ ಕೆಟ್ಟ ಪರಿಣಾಮ ಉಂಟಾಗುತ್ತದೆ. ಪುರಾಣಗಳಲ್ಲಿಯೂ ಇದಕ್ಕೆ ಉಲ್ಲೇಖ ಇದೆ. ಗಣೇಶನ ತಲೆಯನ್ನು ಕೋಪದಲ್ಲಿ ಕಡಿದ ಶಿವನು ಉತ್ತರ ದಿಕ್ಕಿನಲ್ಲಿ ತಲೆ ಹಾಕಿ ಮಲಗಿರುವ ಪ್ರಾಣಿಯ ಶಿರಾ ಕತ್ತರಿಸಿ ಎಂದು ಆಜ್ಞೆ ಮಾಡಿದ್ದರು.

ಉತ್ತರ ದಿಕ್ಕಿನಲ್ಲಿ ಆನೆ ತಲೆ ಹಾಕಿ ಮಲಗಿದ್ದರಿಂದ ಆನೆಯ ತಲೆಯನ್ನು ಕತ್ತರಿಸಿ ತರಲಾಯಿತು ನಂತರ ಮಹಾ ಗಣಪತಿಗೆ ಜೋಡಿಸಲಾಯಿತು ಎಂದು ಹೇಳಲಾಗುತ್ತದೆ. ಹೀಗಾಗಿ ಉತ್ತರ ದಿಕ್ಕು ಯಾರಿಗೂ ಅಷ್ಟೊಂದು ಸೂಕ್ತವಲ್ಲ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ವೈಜ್ಞಾನಿಕ ಸಬೂಬು ಕೊಡುವುದಾದರೆ ಕಾಂತೀಯ ಧ್ರುವಗಳ ಕಾಂತಿಯ ತರಂಗವು ಉತ್ತರ ದಿಕ್ಕಿನಿಂದ ದಕ್ಷಿಣದ ಕಡೆಗೆ ಬರುತ್ತದೆ.

ನಮ್ಮ ದೇಹವು ಕೂಡ ಅಯಸ್ಕಾತದಂತೆ ಎರಡು ಧ್ರುವಗಳನ್ನು ಹೊಂದಿದೆ ನೆತ್ತಿ ಮೇಲಿರುವುದು ಉತ್ತರ ಭಾಗವಾದರೆ ಕಾಲಿನ ಕೆಳಗೆ ಇರುವುದು ದಕ್ಷಿಣದ ಭಾಗ. ನಾವು ಉತ್ತರದ ಕಡೆಗೆ ತಲೆ ಇಟ್ಟು ಮಲಗಿದರೆ ನಿಯಮದ ಪ್ರಕಾರವಾಗಿ ಎರಡು ವಿರುದ್ಧ ದಿಕ್ಕಿನ ಧ್ರುವಗಳು ಆಕರ್ಷಿಸಲ್ಪಡುತ್ತದೆ. ನಿದ್ರೆ ಮಾಡುವಾಗ ನಮ್ಮ ದೇಹದಲ್ಲೂ ಕೂಡ ಹಲವಾರು ರೇಡಿಯೇಷನ್ ಗಳು ಉತ್ಪತ್ತಿ ಆಗಿರುತ್ತವೆ.

ಈ ಸುದ್ದಿ ಓದಿ:- ಮನೆಯಲ್ಲಿರುವ 60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ಕೇಂದ್ರ ಸರ್ಕಾರ ರೂ.1000 ಪಿಂಚಣಿ ಕೊಡುವ ಯೋಜನೆ.! ಯಾರು ಪಡೆಯಬಹುದು, ಏನೆಲ್ಲ ದಾಖಲೆಗಳು ಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ನಿದ್ರೆ ಸಮಯದಲ್ಲೂ ಅಲ್ಫಾ, ಬೀಟಾ, ಗಾಮ ತರಂಗಗಳು ಬಿಡುಗಡೆ ಆಗುತ್ತಿರುತ್ತವೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇವೆರಡರ ಸಂಘರ್ಷ ಏರ್ಪಡುವುದು ಮನುಷ್ಯನಿಗೆ ಮಾನಸಿಕವಾಗಿ ಒತ್ತಡವನ್ನುಂಟು ಮಾಡುತ್ತದೆ ಮತ್ತು ಮಾನಸಿಕವಾಗಿ ನಂತರ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಿ ಆತನ ಪರಿಸ್ಥಿತಿಯನ್ನು ಕೆಡಿಸುತ್ತದೆ.

ಮಾನಸಿಕ ಆರೋಗ್ಯ ಎನ್ನುವುದು ಬಹಳ ಮುಖ್ಯ ವ್ಯಕ್ತಿ. ಮಾನಸಿಕವಾಗಿ ಸಂತೋಷವಾಗಿದ್ದಾಗ ಮಾತ್ರ ತನ್ನ ದಿನನಿತ್ಯದ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗಿಯಾಗುತ್ತಾನೆ. ದಿನೇ ದಿನೇ ಈ ರೀತಿ ಅದರಲ್ಲೂ ನಿದ್ರೆಯ ವಿಷಯದಲ್ಲಿ ಹಾನಿ ಮಾಡಿಕೊಳ್ಳುವುದರಿಂದ ಒಂದೊಂದು ದಿನ ಅದು ಆತನ ಉದ್ಯೋಗ ಕುಟುಂಬ ಹಣಕಾಸಿನ ವಿಚಾರ ಇದೆಲ್ಲದರ ಮೇಲು ಪರಿಣಾಮ ಬೀರುತ್ತದೆ. ಇದರಿಂದ ಕೂಡ ಉತ್ತರ ದಿಕ್ಕಿಗೆ ತಲೆ ಹಾಕುವುದು ಮಲಗುವುದು ಮನೆಯಲ್ಲಿ ಯಾರಿಗೂ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.

ಭಾರತ್, ಇಂಡಿಯನ್, HP ಯಾವುದೇ ಗ್ಯಾಸ್ ಆದರೂ ವಾಟ್ಸಾಪ್ ನಲ್ಲಿಯೇ ಬುಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

 

ಸಾಮಾನ್ಯವಾಗಿ ಗ್ಯಾಸ್ ಸಿಲಿಂಡರ್ ಖಾಲಿಯಾದರೆ ಬುಕ್ ಮಾಡಲು ಕರೆ ಮಾಡುವ ಮೂಲಕ ಅಥವಾ ಆನ್ಲೈನ್ ಮೂಲಕ ಬುಕ್ ಮಾಡುವ ವಿಧಾನವನ್ನು ಗ್ರಾಹಕರು ಬಳಸುತ್ತಾರೆ. ಅದಕ್ಕಿಂತಲೂ ಸರಳವಾಗಿಯೇ ನೀವು ದಿನನಿತ್ಯ ಬಳಸುವ ವಾಟ್ಸಾಪ್ ನಲ್ಲಿಯೇ ಬಹಳ ಈಸಿಯಾಗಿ ಸಿಲಿಂಡರ್ ಬುಕಿಂಗ್ ಮಾಡಬಹುದು.

ಬಹಳ ವರ್ಷಗಳಿಂದಲೂ ಕೂಡ ವಾಟ್ಸಪ್ ಮೂಲಕ ಸಿಲಿಂಡರ್ ಬುಕ್ ಮಾಡುವ ವಿಧಾನ ಇದೆ ಆದರೆ ಅನೇಕರಿಗೆ ಈ ಮಾಹಿತಿ ತಿಳಿದಿಲ್ಲ. ಹಾಗಾಗಿ ಇಂದು ನಾವು ಈ ಅಂಕಣದಲ್ಲಿ ಯಾವ ರೀತಿಯಾಗಿ ಯಾವ ಕಂಪನಿಯವರು ಹೇಗೆ ವಾಟ್ಸಪ್ ಮೂಲಕ ಸಿಲಿಂಡರ್ ಬುಕ್ಕಿಂಗ್ ಮಾಡಬಹುದು ಎನ್ನುವ ವಿಧಾನದ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.

1. HP ಗ್ರಾಹಕರು:-

* ಮುಖ್ಯವಾದ ಕಂಡಿಷನ್ ಏನೆಂದರೆ ನೀವು ಗ್ಯಾಸ್ ಸಿಲೆಂಡರ್ ಖರೀದಿ ಮಾಡುವಾಗ ನೀಡಿರುವ ಮೊಬೈಲ್ ಸಂಖ್ಯೆನಿಂದ ಮಾತ್ರ ಬುಕಿಂಗ್ ಮಾಡಲು ಸಾಧ್ಯ ಹಾಗಾಗಿ ಆ ಮೊಬೈಲ್ ನಂಬರ್ ನಲ್ಲಿ ವಾಟ್ಸಪ್ ಅಕೌಂಟ್ ಇರಬೇಕು.
* Hindusthan petroleum ಬಿಡುಗಡೆ ಮಾಡಿರುವ ವಾಟ್ಸಾಪ್ ಸಂಖ್ಯೆಯಾದ 9222201122 ನಿಮ್ಮ ಮೊಬೈಲ್ ಫೋನ್ನಲ್ಲಿ HP Gas cylinder booking ಎಂದು ಸೇವ್ ಮಾಡಿ ಇಟ್ಟುಕೊಳ್ಳಿ

* ವಾಟ್ಸಾಪ್ ಗೆ ಹೋಗಿ ಈ ಸಂಖ್ಯೆಗೆ Hi ಎಂದು ಸಂದೇಶ ಕಳುಹಿಸಿ, HP ಕಂಪನಿಯಿಂದ Please Send any of the below keywords to get help SUBSIDY/QUOTA/LPGID/BOOK ಎಂದು ರಿಪ್ಲೈ ಬರುತ್ತದೆ.
* BOOK ಎಂದು ಮತ್ತೆ ರಿಪ್ಲೈ ಮಾಡಿ, ತಕ್ಷಣವೇ HP ಇಂದ Consumer Name, Consumer No ಬರುತ್ತದೆ ನಿಮ್ಮ ಹೆಸರು ಹಾಗೂ ನಂಬರ್ ಸರಿಯಾಗಿದೆ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ. ಇದರೊಂದಿಗೆ Please Send Y to Confirm Booking ಎಂದು ಇರುತ್ತದೆ Y ಎಂದು ಟೈಪ್ ಮಾಡಿ ಕಳುಹಿಸಿ.

* ನಿಮ್ಮ ಬುಕಿಂಗ್ ಸಕ್ಸಸ್ ಆಗಿದ್ದರೆ Order Ref.No, Application Code, Expected delivery date, amount ಎಲ್ಲ ಮಾಹಿತಿಯು ಇರುತ್ತದೆ.

2. Indian Gas

* Indian Gas ನಲ್ಲಿ ಎರಡು ವಿಧಾನವಾಗಿ ಬುಕ್ಕಿಂಗ್ ಮಾಡಬಹುದು
* 7588888824 ಇದು ಇಂಡಿಯನ್ ಗ್ಯಾಸ್ ವಾಟ್ಸಾಪ್ ನಂಬರ್ ಇದನ್ನು ಸೇವ್ ಮಾಡಿ ಇಟ್ಟುಕೊಂಡು ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ನಿಂದ (RMN) REFILL ಎಂದು ಟೈಪ್ ಮಾಡಿ ಕಳುಹಿಸಿ.
* ಒಂದು ವೇಳೆ ನೀವು ಬೇರೆಯವರ ಇಂಡಿಯನ್ ಗ್ಯಾಸ್ ಸಿಲಿಂಡರ್ ಬುಕ್ ಮಾಡಿಕೊಡಬೇಕಿದ್ದರೆ ಅಥವಾ ನೀವೇ ಬೇರೆ ಮೊಬೈಲ್ ನಂಬರ್ ನಿಂದ ಬುಕ್ ಮಾಡಬೇಕಿದ್ದರೆ REFILL#(17 Digit Consumer ID No.) ಟೈಪ್ ಮಾಡಿ ಕಳುಹಿಸಿದರೆ ಸಿಲಿಂಡರ್ ಬುಕ್ ಆಗುತ್ತದೆ.

3. Bharath Gas

* ಭಾರತ್ ಗ್ಯಾಸ್ ಗ್ರಾಹಕರು ವಾಟ್ಸಪ್ ನಂಬರ್ 1800224344 ಭಾರತ್ ಗ್ಯಾಸ್ ಎಂದು ಸೇವ್ ಮಾಡಿ ಇಟ್ಟುಕೊಳ್ಳಿ.
* ಭಾರತ್ ಗ್ಯಾಸ್ ಗೂ ಕೂಡ ರಿಜಿಸ್ಟರ್ ಮೊಬೈಲ್ ನಂಬರ್ ನಿಂದಲೇ ಬುಕಿಂಗ್ ಮಾಡಬೇಕು
* Hi ಎಂದು ಸಂದೇಶ ಕಳುಹಿಸಿದರೆ ರಿಪ್ಲೈ ಬರುತ್ತದೆ
* ರಿಪ್ಲೈ ಬಂದ ನಂತರ BOOK ಎಂದು ಟೈಪ್ ಮಾಡಿದರೆ ಸಿಲಿಂಡರ್ ಬುಕ್ಕಿಂಗ್ ಆಗಿ ಕನ್ಫರ್ಮೇಶನ್ ಮೆಸೇಜ್ ಬರುತ್ತದೆ. ಈ ರೀತಿಯಾಗಿ ನೀವು ವಾಟ್ಸಪ್ ನಲ್ಲಿಯೇ ಸಿಲಿಂಡರ್ ಬುಕ್ಕಿಂಗ್ ಮಾಡಬಹುದು.

ಮನೆಯಲ್ಲಿರುವ 60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ಕೇಂದ್ರ ಸರ್ಕಾರ ರೂ.1000 ಪಿಂಚಣಿ ಕೊಡುವ ಯೋಜನೆ.! ಯಾರು ಪಡೆಯಬಹುದು, ಏನೆಲ್ಲ ದಾಖಲೆಗಳು ಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

ವಯಸ್ಸಾದ ಬಳಿಕ ವೃದ್ಧರಿಗೆ (Senior Citizen) ದುಡಿಯಲು ಶಕ್ತಿ ಇರುವುದಿಲ್ಲ ಮತ್ತು ಅವರಿಗೆ ಉದ್ಯೋಗಾವಕಾಶವು ಕೂಡ ಸಿಗುವುದಿಲ್ಲ. ಇಂತಹ ಸಮಯದಲ್ಲೂ ಜೀವನ ನಿರ್ವಹಣೆಗಾಗಿ ಹಣದ ಅವಶ್ಯಕತೆ ಇರುತ್ತದೆ ಎಲ್ಲರಿಗೂ ಕೂಡ ಕುಟುಂಬದ ನೆರವು ಇರುವುದಿಲ್ಲ. ಹೀಗಾಗಿ ಔಷಧೋಪಚಾರಕ್ಕಾದರೂ ಅನುಕೂಲತೆಯಾಗಲಿ ಎಂದು ಕೇಂದ್ರ ಸರ್ಕಾರವು ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ರೂ.1000 ವೃದ್ಧಾಪ್ಯ ವೇತನ ನೀಡುತ್ತದೆ.

ಇದನ್ನು ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ (Indira Gandhi National Pension Scheme) ಎಂದು ಕೂಡ ಕರೆಯುತ್ತಾರೆ. ಪ್ರತಿ ಕುಟುಂಬದಲ್ಲೂ ಕೂಡ ಹಿರಿಯರು ಇದ್ದೇ ಇರುತ್ತಾರೆ ಹಾಗಾಗಿ ಈ ಅಂಕಣದಲ್ಲಿ ಯೋಜನೆ ಬಗ್ಗೆ ಕೆಲ ಪ್ರಮುಖ ಮಾಹಿತಿಯನ್ನು ತಿಳಿಸುತ್ತೇವೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು:-

* ಭಾರತೀಯ ನಾಗರಿಕನಾಗಿದ್ದು, ಕರ್ನಾಟಕದ ನಿವಾಸಿಯಾಗಿರಬೇಕು
* 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು
* ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುವ BPL / AAY ರೇಷನ್ ಕಾರ್ಡ್ ಹೊಂದಿರಬೇಕು.
* ಅರ್ಜಿ ಸಲ್ಲಿಸುವ ಅರ್ಜಿದಾರನ ಕುಟುಂಬದ ವಾರ್ಷಿಕ ಆದಾಯವು ನಗರ ಪ್ರದೇಶಗಳಲ್ಲಿ ರೂ.17,000 ಹಾಗೂ ಗ್ರಾಮೀಣ ಪ್ರದೇಶದಲ್ಲಿ ರೂ.12,000 ಒಳಗೆ ಇರಬೇಕು (ಕಾಲಕಾಲಕ್ಕೆ ಸರ್ಕಾರದ ನಿಬಂಧನೆಗೆ ಒಳಪಟ್ಟು ಆದಾಯದ ಮಿತಿ ಬದಲಾಗುತ್ತಿರುತ್ತದೆ)
* ಅರ್ಜಿದಾರನು ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷ ಯೋಜನೆಯಡಿ ಪಿಂಚಣಿ ಅಥವಾ ಸಾರ್ವಜನಿಕ ಉದ್ಯೋಗದ ಇನ್ಯಾವುದೇ ಪಿಂಚಣಿ ಸೌಲಭ್ಯವನ್ನು ಪಡೆಯುತ್ತಿರಬಾರದು

ಯೋಜನೆಯಿಂದ ಸಿಗುವ ಅನುಕೂಲತೆಗಳು:-

* 60 ರಿಂದ 64ನೇ ವಯಸ್ಸಿನ ವೃದ್ಧರು ತಿಂಗಳಿಗೆ ರೂ.600
* 65 ವರ್ಷ ಮೇಲ್ಪಟ್ಟವರು ರೂ.1000 ಪ್ರತಿ ತಿಂಗಳು ಪಿಂಚಣಿ ಪಡೆಯುತ್ತಾರೆ

ಅರ್ಜಿ ಸಲ್ಲಿಸುವಾಗ ಕೇಳಲಾಗುವ ದಾಖಲೆಗಳು:-

* ವಾಸಸ್ಥಳ ದೃಢೀಕರಣ ಪತ್ರ
* ವಯಸ್ಸಿನ ದೃಢೀಕರಣ ಪತ್ರ (ಶಾಲಾ ದಾಖಲಾತಿ ಪ್ರಮಾಣ ಪತ್ರ / ವೈದ್ಯಕೀಯ ದೃಢೀಕರಣ ಪತ್ರ)
* ಆದಾಯ ಪ್ರಮಾಣ ಪತ್ರ
* BPL ಪಡಿತರ ಚೀಟಿ
* ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ಡೀಟೇಲ್ಸ್

ಅರ್ಜಿ ಸಲ್ಲಿಸುವುದು ಹೇಗೆ?

* ತಮ್ಮ ವಾಸಸ್ಥಳದ ವ್ಯಾಪ್ತಿಗೆ ಬರುವ ನಾಡಕಚೇರಿಗಳಲ್ಲಿ ಹತ್ತಿರದ ಅಟಲ್ ಜಿ ಜನಸ್ನೇಹಿ ಕೇಂದ್ರ / ನೆಮ್ಮದಿ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅವಶ್ಯಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
* ನಿಮ್ಮ ಮನವಿಗಳನ್ನು ಸಂಬಂಧಿಸಿದ ರಾಜಸ್ವ ನಿರೀಕ್ಷಕರಿಗೆ ಕಳುಹಿಸಿ ಕೊಡಲಾಗುವುದು
* ಗ್ರಾಮ ಲೆಕ್ಕಾಧಿಕಾರಿಗಳಿಗೆ ಪರಿಶೀಲನೆಗೆ ಹೋಗುತ್ತದೆ ನಂತರ ಅವರು ರಾಜಸ್ವ ನಿರೀಕ್ಷಕರ ಮೂಲಕ ಕಂದಾಯ ಇಲಾಖೆಗೆ ಕಳುಹಿಸಲಾಗುತ್ತದೆ.

ಈ ಸುದ್ದಿ ಓದಿ:- ರೈತನನ್ನು ಮದುವೆಯಾದ ಯುವತಿಗೆ ಸಿಗಲಿದೆ 5 ಲಕ್ಷ ರೂಪಾಯಿ.! ಕನ್ಯಾ ಭಾಗ್ಯದ ಬಗ್ಗೆ ಸರ್ಕಾರ ನಿರ್ಧಾರ

* ರಾಜಸ್ವ ನಿರೀಕ್ಷಕರು ನೀಡಿದ ವರದಿ ಆಧಾರದ ಮೇಲೆ ನಾಡಕಛೇರಿಯಲ್ಲಿ ಉಪತಹಶೀಲ್ದಾರರ ಮೂಲಕ ವಿಲೆ ಗೊಳಿಸಲಾಗುವುದು.
* ಈ ಎಲ್ಲಾ ಪ್ರಕ್ರಿಯೆಯು 45 ದಿನಗಳ (Working Days) ಒಳಗೆ ಪೂರ್ತಿಗೊಳ್ಳುತ್ತದೆ

* ನೀವು ನೀಡಿರುವ ದಾಖಲೆಗಳಲ್ಲಿ ಮಾಹಿತಿ ಸ್ಪಷ್ಟವಾಗಿದ್ದು ಸರಿ ಇದ್ದರೆ ಪ್ರಕ್ರಿಯೆ 45 ದಿನಗಳ ಒಳಗೆ ಮುಗಿಯುತ್ತದೆ ಮತ್ತು ನಿಮಗೆ ಪಿಂಚಣಿ ಅನುಮೋದನೆಯಾಗುತ್ತದೆ. ಮುಂದಿನ ತಿಂಗಳಿಂದ ನೀವು ನೀಡಿದ್ದ ದಾಖಲೆಗಳಲ್ಲಿ ಸೂಚಿಸಿದ್ದ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಪಿಂಚಣಿ ಹಣವು DBT ಮೂಲಕ ವರ್ಗಾವಣೆಯಾಗುತ್ತದೆ. ನೀವು ನೀಡಿರುವ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಆಗಿರಬೇಕು.

ಈ ಸುದ್ದಿ ಓದಿ:- ಎಷ್ಟೇ ಪೂಜೆ ಮಾಡಿದ್ರು ನಿಮ್ಮ ಕೋರಿಕೆಗಳು ನೆರವೇರುತ್ತಿಲ್ಲ ಎಂದರೆ ಈ ಮಂತ್ರವನ್ನು 11 ಬಾರಿ ಹೇಳಿ ಹಾಗೂ ಈ ಸ್ವಿಚ್ ವರ್ಡ್ ಬರೆದು ಪರ್ಸ್ ನಲ್ಲಿ ಇಟ್ಟುಕೊಳ್ಳಿ ಎಲ್ಲಾ ಕಾರ್ಯ ನೆರವೇರಿಸಿ ಕೊಡುತ್ತಾರೆ ಈ ಶಕ್ತಿಶಾಲಿ ತಾಯಿ.!

* ಇದರ ನಡುವೆ ನಾಡಕಚೇರಿ ವೆಬ್ಸೈಟ್ ವಿಳಾಸ www.nadakacheri.gov.in ಮೂಲಕ ನಿಮ್ಮ ಅರ್ಜಿ ಸ್ಟೇಟಸ್ ಟ್ರಾಕ್ ಮಾಡಬಹುದು.

ಕುಂಭ ರಾಶಿಯ ಬಗ್ಗೆ ನಿಮಗೆ ತಿಳಿಯದೇ ಇರುವ ಸತ್ಯಗಳು.!

0

 

ಈ ರಾಶಿಯ, ಅದೃಷ್ಟದ ಸಂಖ್ಯೆ, ಅದೃಷ್ಟದ ದಿಕ್ಕು, ಅದೃಷ್ಟದ ದೇವರು ಯಾವುದು ಗೊತ್ತಾ? ಜೀವನದಲ್ಲಿ ಈ ಎರಡು ತಪ್ಪುಗಳನ್ನು ಮಾಡದೇ ಇರಿ ನಿಮ್ಮ ಯಶಸ್ಸನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಕುಂಭ ರಾಶಿಯವರು ಬಹಳ ವಿಭಿನ್ನ ಸ್ವಭಾವವನ್ನು ಹೊಂದಿರುತ್ತಾರೆ. ಇವರ ಬಹಳ ಸಕಾರಾತ್ಮಕ ವ್ಯಕ್ತಿಗಳಾಗಿರುತ್ತಾರೆ.

ಒಂದೇ ವಿಷಯವನ್ನು ಹತ್ತಾರು ಆಯಾಮದಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ತಾಳ್ಮೆಯನ್ನು ಕೂಡ ಇವರು ಹೊಂದಿರುತ್ತಾರೆ. ಕೌಟುಂಬಿಕ ವಿಚಾರದಲ್ಲಿ ಬಹುತೇಕ ಎಲ್ಲರೂ ಸುಖಿಗಳೇ, ತಂದೆ ತಾಯಿಯ ಪ್ರೀತಿ ಆಶೀರ್ವಾದ ಹಾಗೂ ಬಯಸಿದ ಕನ್ಯೆಯನ್ನು ವಿವಾಹವಾಗುವಂತಹ ಯೋಗವು ಈ ರಾಶಿಯವರಿಗೆ ಇದ್ದೇ ಇರುತ್ತದೆ. ಕುಂಭ ರಾಶಿಯವರು ಬಹಳ ಯೋಚಿಸಿ ಜೀವನದಲ್ಲಿ ನಿರ್ಧಾರವನ್ನು ತೆಗೆದುಕೊಂಡು ಅದೇ ರೀತಿ ತಮ್ಮ ಗುರಿಯನ್ನು ಕೂಡ ಸಾಧಿಸುತ್ತಾರೆ.

ಕುಂಭ ರಾಶಿಯವರು ಹಣಕಾಸಿನ ವಿಚಾರದಲ್ಲಿ ಕೂಡ ಬಹಳ ಉತ್ತಮವಾಗಿರುತ್ತಾರೆ. ಇವರು ಉದ್ಯೋಗ ಮಾಡಿದರು ಕೂಡ ಉದ್ಯೋಗದ ಜೊತೆಗೆ ಯಾವುದಾದರೂ ಒಂದು ಸಣ್ಣ ವ್ಯಾಪಾರವನ್ನು ಆರಂಭಿಸಲು ಇಷ್ಟಪಡುತ್ತಾರೆ ಇವರು ಹೆಚ್ಚು ಆದಾಯದ ಮೂಲ ಹೊಂದಲು ಹಾಗೂ ಹೆಚ್ಚು ದುಡ್ಡು ಪಡೆದು ಐಷಾರಾಮಿ ಜೀವನ ನಡೆಸಲು ಬಯಸುತ್ತಾರೆ.

ಈ ಸುದ್ದಿ ಓದಿ:- ರೈತನನ್ನು ಮದುವೆಯಾದ ಯುವತಿಗೆ ಸಿಗಲಿದೆ 5 ಲಕ್ಷ ರೂಪಾಯಿ.! ಕನ್ಯಾ ಭಾಗ್ಯದ ಬಗ್ಗೆ ಸರ್ಕಾರ ನಿರ್ಧಾರ

ಇದಕ್ಕೆ ಬೇಕಾದ ಎಲ್ಲ ರೀತಿಯ ಶ್ರಮವನ್ನು ಕೂಡ ಪಡುತ್ತಾರೆ ಇವರಿಗೆ ಸಂಗೀತ ಸಾಹಿತ್ಯ ಕಲೆ ಓದು ಇವುಗಳ ಮೇಲು ಕೂಡ ಆಸಕ್ತಿ ಇರುತ್ತದೆ, ಕೆಲವರು ಇದನ್ನೇ ತಮ್ಮ ಕ್ಷೇತ್ರವಾಗಿರಿಸಿಕೊಂಡರೆ ಕೆಲವರು ಹವ್ಯಾಸದ ರೀತಿಯಲ್ಲಾದರೂ ರೂಢಿಸಿಕೊಂಡಿರುತ್ತಾರೆ. ಇವರ ಜೀವನದ 23, 24ನೇ ವಯಸ್ಸು 30 ಮತ್ತು 32ನೇ ವಯಸ್ಸು 45 ಹಾಗೂ 60ನೇ ವಯಸ್ಸು ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಆಗಿರುತ್ತದೆ.

ಆ ಸಮಯದಲ್ಲಿ ವಿದ್ಯಾಭ್ಯಾಸ, ಉದ್ಯೋಗ, ಮದುವೆ ಮಕ್ಕಳು ಅಥವಾ ವ್ಯಾಪಾರ, ವ್ಯವಹಾರ, ಸಂಸಾರ ಜೀವನ, ಹಣಕಾಸು ಇವುಗಳಲ್ಲಿ ಯಾವುದಾದರೂ ಬಲವಾದ ಬದಲಾವಣೆಯಾಗಿ ಅದು ಅವರ ಜೀವನದ ಮೇಲೆ ಗಂಭೀರ ಪರಿಣಾಮಗಳು ಉಂಟುಮಾಡುವಂತಹ ಘಟನೆಗಳು ಸಂಭವಿಸುವ ಸಮಯ ಆಗಿರುತ್ತದೆ. ಕೆಲವರಿಗೆ ಇದು ಉತ್ತಮ ರೀತಿಯಲ್ಲಿ ನಡೆದು ಜೀವನ ಬದಲಾಗುವಂತಹ ಅವಕಾಶ ಆಗಿದ್ದರೆ ಕೆಲವೊಬ್ಬರು ವಿಪರೀತ ನೋ’ವು ಪಡೆದು ಅದನ್ನೇ ಛಲವಾಗಿ ತೆಗೆದುಕೊಂಡು ಬದುಕು ಬದಲಾಯಿಸಿಕೊಳ್ಳುವಂತಹ ಸಂದರ್ಭ ಸೃಷ್ಟಿಯಾಗಿರುತ್ತದೆ.

ಕುಂಭ ರಾಶಿ ಅವರಿಗೆ ಸ್ನೇಹಿತರು ಹೆಚ್ಚು ಹಾಗೂ ಸ್ನೇಹಿತರಿಗಾಗಿ ಏನು ಬೇಕಾದರೂ ಮಾಡುವಂತಹ ಸ್ವಭಾವ ಇವರದ್ದು. ಆದರೆ ಇದೇ ಅವರ ಜೀವನದಲ್ಲಿ ಅವರ ಗೌರವ ಘನತೆಗೆ ಧಕ್ಕೆ ತರುತ್ತದೆ. ಇದೇ ರೀತಿ ಇವರು ಕೆಲವೊಂದು ಸಂದರ್ಭಗಳಲ್ಲಿ ಸುಳ್ಳು ಹೇಳುವ ಪರಿಸ್ಥಿತಿ ಇರುತ್ತದೆ ಈ ತಪ್ಪು ಮಾಡುವುದರಿಂದ ಕೂಡ ಮುಂದೆ ಇವರಿಗೆ ಸಮಸ್ಯೆಗಳು ಹಾಗೂ ಇವರ ಗೌರವ ಕಡಿಮೆ ಆಗುವ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಈ ಎರಡು ತಪ್ಪುಗಳನ್ನು ಮಾಡದಿರಲು ಪ್ರಯತ್ನಿಸಿ.

ಈ ಸುದ್ದಿ ಓದಿ:- Bank Transaction: ಇನ್ಮುಂದೆ ಬ್ಯಾಂಕ್ ಅಕೌಂಟ್ ನಿಂದ ಇದಕ್ಕಿಂತ‌ ಹೆಚ್ಚು ಡ್ರಾ ಮಾಡಿದ್ರೆ ಟ್ಯಾಕ್ಸ್ ಕಟ್ಟಬೇಕಾಗುತ್ತೆ.! ಹೊಸ ರೂಲ್ಸ್

ಅದೃಷ್ಟದ ದಿಕ್ಕು:- ಇವರು ವಾಸಿಸುವ ಮನೆ ಅಥವಾ ಕಟ್ಟಿಸುವ ಮನೆ ಅಥವಾ ಇವರ ಕಚೇರಿ ವ್ಯಾಪಾರಸ್ಥಳ ಇನ್ಯಾವುದೇ ಶುಭ ಸಂದರ್ಭಗಳಲ್ಲಿ ಪ್ರಯಾಣ ಮಾಡುವ ದಿಕ್ಕು ಪಶ್ಚಿಮ ಅಥವಾ ಉತ್ತರ ಆಗಿದ್ದರೆ ಇವರು ನಿರೀಕ್ಷಿಸಿದ ಫಲಗಳನ್ನು ಪಡೆಯುತ್ತಾರೆ

ಅದೃಷ್ಟದ ದೇವರು:- ಕುಂಭ ರಾಶಿಯವರಿಗೆ ಶಿವ ಹಾಗೂ ಪಾರ್ವತಿಯ ಆಶೀರ್ವಾದ ಸದಾ ಇರುತ್ತದೆ. ಇವರು ಶಿವನ ರೂಪ ಹಾಗೂ ಆದಿಶಕ್ತಿಯ ಅವತಾರಗಳನ್ನು ಆರಾಧಿಸುವುದರಿಂದ ಇವರಿಗೆ ಬಹಳ ಒಳ್ಳೆಯದಾಗುತ್ತದೆ.

ಶುಭದಿನ:- ಕುಂಭ ರಾಶಿಯವರಿಗೆ ಯಾವಾಗಲೂ ಸೋಮವಾರ ಬಹಳ ಶುಭವಾಗಿರುತ್ತದೆ ಮತ್ತು ಇದೇ ಅವರ ಇಷ್ಟವಾದ ವಾರ ಕೂಡ. ಸೋಮವಾರದ ದಿನ ಹೆಚ್ಚು ಸಂತೋಷ ನೆಮ್ಮದಿಯಿಂದ ಇರುವ ಇರುವ ದಿನವಾಗಿದೆ, ಈ ದಿನವೇ ನೀವು ಒಳ್ಳೆ ಕಾರ್ಯಗಳನ್ನು ಆರಂಭಿಸಿದರೆ ಒಳ್ಳೆಯದೇ ಆಗುತ್ತದೆ.

ರೈತನನ್ನು ಮದುವೆಯಾದ ಯುವತಿಗೆ ಸಿಗಲಿದೆ 5 ಲಕ್ಷ ರೂಪಾಯಿ.! ಕನ್ಯಾ ಭಾಗ್ಯದ ಬಗ್ಗೆ ಸರ್ಕಾರ ನಿರ್ಧಾರ

ಸಾಮನ್ಯವಾಗಿ ರೈತರಿಗೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇರುತ್ತದೆ. ರೈತರು ಹೆಚ್ಚಾಗಿ ಕೃಷಿ ಮಾಡುವಲ್ಲಿ ಹೆಚ್ಚಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದರೆ ಇದೀಗ ರೈತರಿಗೆ ಕೃಷಿಯಲ್ಲಿನ ಸಮಸ್ಯೆಯ ಜೊತೆಗೆ ಹೊಸ ರೀತಿಯ ಸಮಸ್ಯೆ ಹುಟ್ಟಿಕೊಂಡಿದೆ. ಅದೇನೆಂದರೆ, ರೈತರ ಮದುವೆಯ ವಿಚಾರವಾಗಿದೆ. ಹೌದು, ರೈತ ಯುವಕರ ಹೆಣ್ಣು ಹುಡುಕುವುದು ತುಂಬಾ ಕಷ್ಟವಾಗುತ್ತಿದೆ ಎಂದು ಸಾಕಷ್ಟು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಕುರಿತು ಸರ್ಕಾರಕ್ಕೆ ವಿಶೇಷ ಮನವಿ ಸಲ್ಲಿಸಿದ್ದಾರೆ.

ಈ ಸುದ್ದಿ ಓದಿ:- HSRP ನಂಬರ್ ಪ್ಲೇಟ್ ಗಡುವು ವಿಸ್ತರಣೆ.! ಸಾರಿಗೆ ಇಲಾಖೆಯ ಅಧಿಕೃತ ಆದೇಶಲ್ಲೇನಿದೆ ಗೊತ್ತಾ.?‌ ಇಲ್ಲಿದೆ ಮಾಹಿತಿ

ಹೌದು, ರೈತನನ್ನು ಮದುವೆಯಾಗುವ ಯುವತಿಗೆ 5 ಲಕ್ಷ ರೂ. ಪ್ರೋತ್ಸಾಹ ಧನವನ್ನು ನೀಡಬೇಕು ಎಂದು ರೈತ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಅದರ ಜೊತೆಗೆ ರಾಜ್ಯ ಬಜೆಟ್ನಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಲಾಗಿದ್ದು, ಕಡಿಮೆ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ಈ ಹಿಂದಿನಿಂದಲೂ ಹಲವು ಬಾರಿ ರೈತಾಪಿ ವರ್ಗದ ಯುವಕರನ್ನು ವರಿಸುವ ಯುವತಿಯರಿಗೆ ಪ್ರೋತ್ಸಾಹಧನ ಅಥವಾ ಇತರೆ ಯೋಜನೆ ಘೋಷಿಸಿ ಎಂದು ಅನೇಕ ರೈತ ಸಂಘಟನೆಗಳು ಆಗ್ರಹಿಸಿತ್ತು. ಇದೀಗ ಈ ವಿಷಯ ಮತ್ತೊಮ್ಮೆ ಪ್ರಸ್ತಾಪಗೊಂಡಿದ್ದು, ರಾಜ್ಯದ ರೈತ ಹುಡುಗನನ್ನು ಮದುವೆಯಾಗುವ ಯುವತಿಗೆ ಐದು ಲಕ್ಷ ರೂ. ಅನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಕೋರಲಾಗಿದೆ.

ಈ ಸುದ್ದಿ ಓದಿ:- Bank Transaction: ಇನ್ಮುಂದೆ ಬ್ಯಾಂಕ್ ಅಕೌಂಟ್ ನಿಂದ ಇದಕ್ಕಿಂತ‌ ಹೆಚ್ಚು ಡ್ರಾ ಮಾಡಿದ್ರೆ ಟ್ಯಾಕ್ಸ್ ಕಟ್ಟಬೇಕಾಗುತ್ತೆ.! ಹೊಸ ರೂಲ್ಸ್

ರೈತರ (farmers) ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಿರುವ ಸರ್ಕಾರ ಈಗ ಈ ಸಮಸ್ಯೆಗೆ ಉತ್ತರ ಕೊಡಲಿದೆಯಾ ಎಂದು ನಿಜಕ್ಕೂ ಕಾದು ನೋಡಲೇಬೇಕು. ರೈತರು ದೇಶದ ಜೀವಾಳ. ಬೆಳೆ ಬೆಳೆಯುವ ವಿಚಾರದಲ್ಲಿ ರೈತರಿಗೆ ಯಾವುದೇ ರೀತಿಯ ಸಮಸ್ಯೆ ಇದ್ದರೂ ಸರ್ಕಾರ ಅದಕ್ಕೆ ಪರಿಹಾರವನ್ನು ಒದಗಿಸಲು ಒಂದಲ್ಲ ಒಂದು ಯೋಜನೆಯನ್ನು ಜಾರಿಗೆ ತರುತ್ತದೆ. ಆದರೆ ಈಗ ರೈತರಿಗೆ ಇರುವುದು ಜೀವನದ ಸಮಸ್ಯೆ.

ಒಂಟಿಯಾಗಿರುವ ರೈತರು ಜಂಟಿಯಾಗಿ ಜೀವನ ನಡೆಸಬೇಕು ಅಂದರೆ ಯಾರು ಹೆಣ್ಣು ಕೊಡುವವರೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು ಇದು ನಿಜಕ್ಕೂ ರೈತರು ಚಿಂತೆ ಮಾಡಬೇಕಾದ ವಿಷಯ. 45 ಕಳೆದರೂ ಕೂಡ ರೈತ ಮಕ್ಕಳಿಗೆ ಮಾತ್ರ ಮದುವೆ (Marriage) ಆಗುತ್ತಿಲ್ಲ. ಅವರು ಎಷ್ಟೇ ದುಡಿಯುತ್ತಾರೆ ಎಂದರು, ಎಷ್ಟೇ ಸಿರಿವಂತರಾಗಿದ್ದರು ಕೂಡ ರೈತರ ಮಕ್ಕಳನ್ನು ಮದುವೆ ಆಗುವವರು ಮಾತ್ರ ಯಾರು ಇಲ್ಲ. ಇದೇ ಕಾರಣಕ್ಕೆ ರಾಜ್ಯ ರೈತ ಸಂಘಟನೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ರಾಜ್ಯ ಸರ್ಕಾರಕ್ಕೆ ಮನವಿ ಒಂದನ್ನು ಸಲ್ಲಿಸಿದ್ದಾರೆ ಇದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಎನ್ನುವ ಕುತೂಹಲ ಜನರಲ್ಲಿ ಮಾಡಿದೆ.

ರೈತ ಯುವಕರನ್ನು ಮದುವೆಯಾದ ಯುವತಿಗೆ ಸಿಗಲಿದೆ 5 ಲಕ್ಷ!

ಸಾಮಾನ್ಯವಾಗಿ ಮದುವೆ ಎನ್ನುವುದು ದೊಡ್ಡ ಜವಾಬ್ದಾರಿಯಾಗಿರುತ್ತದೆ. ಎಲ್ಲರು ಕೂಡ ಮದುವೆಯಾಗಲೇ ಬೇಕಾಗುತ್ತದೆ. ಒಂಟಿ ಜೀವನದಿಂದ ಜಂಟಿಯಾಗಲು ಸಂಗಾತಿಯ ಅವಶ್ಯಕತೆ ಇರುತ್ತದೆ. ಸದ್ಯ ಮದುವೆಗೆ ವಧು ಹುಡುಕುವುದೇ ದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ರೈತರಿಗೆ ಮದುವೆ ಮಾಡುವುದು ಕಷ್ಟವಾಗುತ್ತಿದೆ. ಯಾವುದೇ ಹುಡುಗಿಯು ರೈತರು ಮದುವೆಯಾಗಲು ಮುಂದೆ ಬರುತ್ತಿಲ್ಲ.

ಹೀಗಾಗಿ, ರೈತರು ಈ ಸಮಸ್ಯೆಗೆ ಪರಿಹಾರ ನೀಡಲು ಸರ್ಕಾರದ ಮೊರೆ ಹೋಗಿದ್ದಾರೆ. ರೈತನನ್ನು ಮದುವೆಯಾಗುವ ಯುವತಿಗೆ ಸರ್ಕಾರದಿಂದ 5 ಲಕ್ಷ ರೂ. ಪ್ರೋತ್ಸಾಹಧನ ನೀಡುವಂತೆ ರೈತ ಸಂಘಟನೆಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ರೈತರ ಮನವಿ ಏನು?

ರೈತರಿಗೆ ಎಷ್ಟೇ ಮಾಡಿದರೂ ಹುಡುಗಿಯನ್ನು ಮದುವೆ ಮಾಡಿ ಕೊಡುವವರೇ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ, ರೈತರು ಶ್ರೀಮಂತರಾಗಿದ್ದರು ಕೂಡ ಹುಡುಗಿಯ ತಂದೆ ತಾಯಿ ತಮ್ಮ ಮಕ್ಕಳನ್ನು ರೈತನಿಗೆ ಕೊಟ್ಟು ಮದುವೆ ಮಾಡಲು ಮಾತ್ರ ಹಿಂದೆಟು ಹಾಕುತ್ತಿದ್ದಾರೆ.

ಎಷ್ಟು ದಿನ ಒಂಟಿಯಾಗಿ ಜೀವನ ನಡೆಸಲು ಸಾಧ್ಯವಿದೆ ರೈತರ ಮಕ್ಕಳು ಕೂಡ ಜಂಟಿಯಾಗಿ ಜೀವನ ನಡೆಸಬೇಕು ಅಲ್ಲವೇ ಇದೇ ಕಾರಣಕ್ಕೆ ರೈತ ಸಂಘಟನೆಯ ಮುಖ್ಯಸ್ಥರು ಸಿಎಂ ಸಿದ್ದರಾಮಯ್ಯ ಅವರಿಗೆ ಕನ್ಯಾ ಭಾಗ್ಯ ನೀಡುವಂತೆ ಮನವಿ ಮಾಡಿದ್ದಾರೆ. ಹೆಣ್ಣು ಮಗಳು ರೈತನನ್ನು ಮದುವೆ ಆದರೆ ಆಕೆಗೆ 5 ಲಕ್ಷ ರೂಪಾಯಿಗಳನ್ನು ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ರಾಜ್ಯ ಸರ್ಕಾರದ ನಿರ್ಧಾರ ಏನು?

ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. 45 ವರ್ಷವಾದರೂ ರೈತರ ಮಕ್ಕಳಿಗೆ ಮದುವೆ ಆಗುತ್ತಿಲ್ಲ. ಕೃಷಿಗೆ ಆದ್ಯತೆ ಇಲ್ಲದಂತಾಗಿದೆ. ರೈತನನ್ನು ಮದುವೆಯಾಗುವ ಹುಡುಗಿಗೆ 5 ಲಕ್ಷ ರೂ. ಪ್ರೋತ್ಸಾಹಧನ ನೀಡಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 200ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ರೈತ ಸಂಘಟನೆಗಳ ಮುಖಂಡರೊಂದಿಗೆ ಬಜೆಟ್ ಸಿದ್ಧತೆ ಕುರಿತು ಸಭೆ ನಡೆಸಿದ್ದಾರೆ. ಈ ವೇಳೆ ಈ ವಿಷಯದ ಬಗ್ಗೆ ಚರ್ಚೆ ನಡೆಸಿದ್ದಾರೆ.

ರಾಜ್ಯ ಸರ್ಕಾರ ಸದ್ಯ ಬಜೆಟ್ (budget) ಮಂಡಿಸಲಿದ್ದು, ಈಗಾಗಲೇ ಸಕಲ ಸಿದ್ಧತೆಗಳು ಕೂಡ ನಡೆದಿದೆ. ಈ ಬಾರಿಯ ಬಜೆಟ್ ನಲ್ಲಿ ರಾಜ್ಯ ಸರ್ಕಾರ ರೈತರ ಈ ಮದುವೆಯ ಮನವಿಯನ್ನು ಒಪ್ಪಿ ರೈತರನ್ನು ಮದುವೆ ಆಗುವ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಧನ ನೀಡುವುದಕ್ಕೆ ಅಸ್ತು ಎನ್ನಬಹುದೇ? ಈಗಾಗಲೇ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಏನು ಎಂಬ ಕುತೂಹಲ ಪ್ರತಿಯೊಬ್ಬರಲ್ಲಿಯೂ ಇದೆ. ಕೊನೆ ಪಕ್ಷ ರೈತರ ಈ ಮನವಿಯನ್ನು ರಾಜ್ಯ ಸರ್ಕಾರ ಪರಿಗಣಿಸಲಿದೆಯೇ ಎನ್ನುವುದನ್ನು ಕಾದು ನೋಡಬೇಕು.

ರೈತರ ಇತರೆ ಬೇಡಿಕೆಗಳು

– ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು.
– ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಾಪಸ್‌ ತೆಗೆದುಕೊಳ್ಳಬೇಕು.
– ಹೊಸದಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ಸಂಪರ್ಕ ಪಡೆಯಲು ಎಲ್ಲಾ ಪರಿಕರಗಳ ವೆಚ್ಚವನ್ನು ಸರ್ಕಾರವೇ ಸಂಪೂರ್ಣ ಭರಿಸಬೇಕು.
– ಕರ ನಿರಾಕರಣ ಚಳವಳಿಯ ಭಾಗವಾಗಿ ಬಾಕಿ ಉಳಿದಿರುವ ರೈತರ ಗೃಹ ವಿದ್ಯುತ್ ಬಿಲ್ಅನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು.
– ಎಲ್ಲ ರೈತರಿಗೂ 10 ಹೆಚ್ಪಿ ತನಕ ಉಚಿತ ವಿದ್ಯುತ್ ಸರಬರಾಜು ಮಾಡಲು ತೀರ್ಮಾನಿಸಿ, ಹಳೇ ಬಾಕಿಯನ್ನು ಸಂಪೂರ್ಣ ಮನ್ನಾ ಮಾಡಬೇಕು.

Bank Transaction: ಇನ್ಮುಂದೆ ಬ್ಯಾಂಕ್ ಅಕೌಂಟ್ ನಿಂದ ಇದಕ್ಕಿಂತ‌ ಹೆಚ್ಚು ಡ್ರಾ ಮಾಡಿದ್ರೆ ಟ್ಯಾಕ್ಸ್ ಕಟ್ಟಬೇಕಾಗುತ್ತೆ.! ಹೊಸ ರೂಲ್ಸ್

 

2024 ಆರಂಭವಾಗಿ ಒಂದೂವರೆ ತಿಂಗಳಾಗಿದೆ. ಈ ಹಣಕಾಸು ವರ್ಷದಲ್ಲಿ ಹಣಕಾಸು ವ್ಯವಹಾರ (Financial transaction) ಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ನಿಯಮಗಳ ಬದಲಾವಣೆ ಮಾಡಲಾಗಿದೆ. ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಖಾತೆ (bank account) ಯಿಂದ ಎಷ್ಟು ಹಣವನ್ನು ಹಿಂಪಡೆಯಬಹುದು ಎನ್ನುವುದಕ್ಕೂ ಕೂಡ ತೆರಿಗೆ ನಿಯಮಗಳು ಅನ್ವಯವಾಗುತ್ತವೆ. ಜನರು ಉಳಿತಾಯ ಖಾತೆ (savings account) ಯನ್ನು ಹೊಂದಿರುವುದು ಸರ್ವೇಸಾಮಾನ್ಯ. ನಾವು ಬ್ಯಾಂಕ್ ಮೂಲಕ ಯಾವುದೇ ಹಣಕಾಸಿನ ವ್ಯವಹಾರ ಮಾಡುದಿದ್ದರೆ ಬ್ಯಾಂಕ್ ನಲ್ಲಿ ಕನಿಷ್ಠ ಒಂದು ಖಾತೆಯನ್ನಾದರೂ ಹೊಂದಿರಲೇಬೇಕು.

ಆದಾಯ ತೆರಿಗೆ ಇಲಾಖೆಯ ಹೊಸ ನಿಯಮ! (Income Tax department new rules)

ಹೌದು, ಜನರು ತಮ್ಮ ಉಳಿತಾಯದ ಹಣವನ್ನು ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡಲು ಬಯಸುತ್ತಾರೆ. ಗ್ರಾಹಕರು ತಮ್ಮ ಅನಿವಾರ್ಯ ಪರಿಸ್ಥಿತಿಯಲ್ಲಿ ಹೂಡಿಕೆ ಮಾಡಿದ ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗುವ ಕಾರಣ ಬ್ಯಾಂಕ್ ನಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ. ಆದರೆ ನಿಮಗೆ ಗೊತ್ತೇ…? ನೀವು ಬ್ಯಾಂಕ್ ನಲ್ಲಿ ಹಣವನ್ನು ಹಿಂಪಡೆದರೆ ಅದಕ್ಕೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಆದರೆ, ಈ ತೆರಿಗೆ ಪಾವತಿಗೆ ಆದಾಯ ಇಲಾಖೆಯು ಮಿತಿಯನ್ನು ಅಳವಡಿಸಿದೆ. ನೀವು ಮಿತಿಗಿಂತ ಹೆಚ್ಚಿನ ಹಣವನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ಹಿಂಪಡೆಯಲು ಬಯಸಿದರೆ ಆ ಸಮಯದಲ್ಲಿ ನೀವು TDS ಪಾವತಿಸಬೇಕಾಗುತ್ತದೆ. ಹಣ ಹಿಂಪಡೆಯುವಿಕೆಗೆ ATM ನಲ್ಲಿ ಮಾತ್ರವಳದೆ ಬಾಂಕ್ ಖಾತೆಯ ಹಣ ಹಿಂಪಡೆಯುವಿಕೆಗೂ ನಿಯಮ ರೂಪಿಸಲಾಗಿದೆ. ಇದೀಗ ನಾವು ಈ ಬಗ್ಗೆ ವಿವರವನ್ನು ತಿಳಿದುಕೊಳ್ಳೋಣ.

ಈ ಸುದ್ದಿ ಓದಿ:-ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್, ಮಾರ್ಚ್ 14ರ ಒಳಗೆ ಈ ಕೆಲಸ ಮಾಡದೇ ಇದ್ದರೆ ಆಧಾರ್ ಕಾರ್ಡ್ ಬಂದ್ ಆಗುವುದು ಗ್ಯಾರಂಟಿ.!

ಬ್ಯಾಂಕ್ ಖಾತೆಯಲ್ಲಿ ಅದರಲ್ಲೂ ಉಳಿತಾಯ ಖಾತೆಯಲ್ಲಿ ಸಾಕಷ್ಟು ಜನ ತಮ್ಮ ಬಳಿ ಇರುವಷ್ಟು ಹಣವನ್ನು ಡಿಪೋಸಿಟ್ (deposit)ಇಡುತ್ತಾರೆ. ಭವಿಷ್ಯದ ದೃಷ್ಟಿಯಿಂದ ಉಳಿತಾಯ ಮಾಡುತ್ತಾರೆ. ಆದ್ರೆ, ಕೆಲವೊಮ್ಮೆ ಅನಿವಾರ್ಯ ಪರಿಸ್ಥಿತಿಯಲ್ಲಿ ಆ ಹಣವನ್ನು ಹಿಂಪಡೆಯುವ ಅಗತ್ಯ ಬರಬಹುದು. ಆದರೆ, ನೀವು ಬ್ಯಾಂಕ್ ನಲ್ಲಿ ಎಷ್ಟು ಹಣವನ್ನು ಒಂದು ಆರ್ಥಿಕ ವರ್ಷದಲ್ಲಿ ಹಿಂಪಡೆಯಬಹುದು ಎನ್ನುವುದಕ್ಕೂ ತೆರಿಗೆ ನಿಯಮಗಳು ಅನ್ವಯವಾಗುತ್ತವೆ.

ಇನ್ಮುಂದೆ ಬ್ಯಾಂಕ್ ಖಾತೆಯಿಂದ ವರ್ಷಕ್ಕೆ ಎಷ್ಟು ಹಣ ಮಾತ್ರ ಹಿಂಪಡೆಯಬಹುದು?

ಜನರು ತಮ್ಮ ಬ್ಯಾಂಕ್ ಖಾತೆಯಿಂದ ಉಚಿತವಾಗಿ ಹಣವನ್ನು ಹಿಂಪಡೆದುಕೊಳ್ಳಬಹುದು ಎಂದು ಭಾವಿಸಿದ್ದಾರೆ. ಆದರೆ, ನಿಯಮಗಳ ಪ್ರಕಾರ ಬ್ಯಾಂಕ್ ಖಾತೆಯ್ಲಲಿನ ಹಾನ್ ಹಿಂಪಡೆಯುವಿಕೆಗೆ ಮಿತಿಯನ್ನು ನಿಗದಿಪಡಿಸಲಾಗಿದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 194N ಅಡಿಯಲ್ಲಿ ಒಬ್ಬ ವ್ಯಕ್ತಿ ಆರ್ಥಿಕ ವರ್ಷದಲ್ಲಿ 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆದರೆ TDS ಅನ್ನು ಪಾವತಿಸಬೇಕಾಗುತ್ತದೆ.

ಈ ನಿಯಮ ಸತತ ಮೂರೂ ವರ್ಷದಿಂದ Income Tax Return ಸಲ್ಲಿಸದ ಜನರಿಗೆ ಅನ್ವಯವಾಗುತ್ತದೆ. ITR ಅನ್ನು ಸಲ್ಲಿಸುವವರಿಗೆ ಈ ನಿಯಮದ ಅಡಿಯಲ್ಲಿ ಹೆಚ್ಚಿನ ಪರಿಹಾರ ಸಿಗುತ್ತದೆ. ಅಂತಹ ಗ್ರಾಹಕರು TDS ಪಾವತಿಸದೆಯೇ ಬ್ಯಾಂಕ್, ಅಂಚೆ ಕಚೇರಿ ಅಥವಾ ಸಹಕಾರಿ ಬ್ಯಾಂಕ್ ಖಾತೆಯಿಂದ ಆರ್ಥಿಕ ವರ್ಷದಲ್ಲಿ 1 ಕೋಟಿ ರೂಪಾಯಿಗಳನ್ನ ಹಿಂಪಡೆಯಬಹುದಾಗಿದೆ.

ಹಣವನ್ನು ಹಿಂತೆಗೆದುಕೊಂಡಾಗ ಎಷ್ಟು TDS ಪಾವತಿಸಬೇಕಾಗುತ್ತದೆ…?

ನೀವು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ITR ಅನ್ನು ಸಲ್ಲಿಸದಿದ್ದರೆ, ಆಗ ನೀವು 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಹಿಂತೆಗೆದುಕೊಂಡಾಗ 2 ಪ್ರತಿಶತ TDS ಮತ್ತು 1 ಕೋಟಿಗಿಂತ ಹೆಚ್ಚಿನ ಹಣವನ್ನು ಹಿಂತೆಗೆದುಕೊಂಡಾಗ 5 ಪ್ರತಿಶತ TDS ಅನ್ನು ಪಾವತಿಸಬೇಕಾಗುತ್ತದೆ.

TDS ಎಂದರೇನು?

ಟ್ಯಾಕ್ಸ್ ಡಿಡಕ್ಟೆಡ್ ಆಟ್ ಸೋರ್ಸ್ (ಟಿಡಿಎಸ್) ತೆರಿಗೆ ಸಂಗ್ರಹದ ಉದ್ದೇಶ ಹೊಂದಿದ್ದು, ಹೆಸರೇ ಸೂಚಿಸುವಂತೆ ಇದು ಮೂಲದಲ್ಲಿಯೇ ತೆರಿಗೆ ಕಡಿತ ಮಾಡುವ ವ್ಯವಸ್ಥೆಯಾಗಿದೆ. ಉದ್ಯೋಗದಾತ ಸಂಸ್ಥೆಗಳು ತಮ್ಮ ನೌಕರರಿಗೆ ವೇತನ ಪಾವತಿಸುವ ಸಂದರ್ಭ ಆದಾಯ ತೆರಿಗೆಯನ್ನು ಕಡಿತಗೊಳಿಸುವುದು ಕಡ್ಡಾಯವಾಗಿದ್ದು, ನೇರವಾಗಿ ಕೇಂದ್ರ ಸರ್ಕಾರದ ಆದಾಯ ಇಲಾಖೆಗೆ ಪಾವತಿಸುತ್ತಾರೆ.

ಆದಾಯ ತೆರಿಗೆ ಕಾಯಿದೆ 1961ರ ಅನ್ವಯ ವೇತನಗಳು ಟಿಡಿಎಸ್ ಅಡಿಯಲ್ಲಿ ಬರುತ್ತವೆ. ಹಾಗೆಯೇ ಬ್ಯಾಂಕ್ ಠೇವಣಿಗಳು ಮತ್ತು ಇತರ ಹೂಡಿಕೆಗಳ ಮೇಲಿನ ಬಡ್ಡಿ, ವಿಮಾ ಕಂಪನಿಗಳ ಏಜೆಂಟರ ಕಮಿಷನ್ ಇತ್ಯಾದಿಗಳೂ ಟಿಡಿಎಸ್ ವ್ಯಾಪ್ತಿಗೆ ಒಳಪಟ್ಟಿವೆ. ಈ ಆದಾಯಗಳ ಮೇಲೆ ಟಿಡಿಎಸ್ ಕಡಿತವಾಗುತ್ತದೆ..

ಈ ನಿಯಮ ಯಾರಿಗೆ ಅನ್ವಯವಾಗುತ್ತದೆ?

ಆದಾಯ ತೆರಿಗೆ ಇಲಾಖೆಯ ಈ ನಿಯಮ ಎಲ್ಲರಿಗೂ ಅನ್ವಯವಾಗುತ್ತದೆಯೇ ಎಂದು ಕೇಳಿದರೆ ಖಂಡಿತವಾಗಿಯೂ ಇಲ್ಲ ಸತತವಾಗಿ ಮೂರು ವರ್ಷಗಳಿಂದ ಯಾರು ಇನ್ಕಮ್ ಟ್ಯಾಕ್ಸ್ ರಿಟರ್ನ್ (ITR) ಸಲ್ಲಿಸಿಲ್ಲವೋ ಅಂತವರಿಗೆ ಮಾತ್ರ ಅನ್ವಯವಾಗುತ್ತದೆ. ಆದರೆ, ಐಟಿಆರ್ ಅನ್ನ ಪ್ರತಿ ವರ್ಷ ಸರಿಯಾಗಿ ಪಾವತಿ ಮಾಡುವವರಿಗೆ ಹೆಚ್ಚಿನ ಬೆನಿಫಿಟ್ ಇದೆ. ಸರಿಯಾಗಿ ಐಟಿಆರ್ ರಿಟರ್ನ್ ಸಲ್ಲಿಸುವವರು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿ ಹಾಗೂ ಸಹಕಾರಿ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿದ್ದರೆ ಒಂದು ವರ್ಷದಲ್ಲಿ ಒಂದು ಕೋಟಿ ರೂಪಾಯಿಗಳ ವರೆಗೆ ಹಣವನ್ನು ಹಿಂಪಡೆಯಬಹುದು.

ATM ವಹಿವಾಟಿನ ಮಿತಿಯ ಬಗ್ಗೆ ತಿಳಿಯಿರಿ

ATM ನಲ್ಲಿ ಹಣವನ್ನು ಡ್ರಾ ಮಾಡಲು ಮಿತಿಯನ್ನು ವಿಧಿಸಲಾಗಿದೆ. RBI ಜನವರಿ 1, 2022 ರಿಂದ ATM ನಿಂದ ನಗದು ಹಿಂಪಡೆಯಲು ಸೇವಾ ಶುಲ್ಕವನ್ನು ಹೆಚ್ಚಿಸಿದೆ. ಈಗ ಬ್ಯಾಂಕ್‌ಗಳು ನಿಗದಿತ ಮಿತಿಯನ್ನು ಮೀರಿದ ವಹಿವಾಟುಗಳಿಗೆ 21 ರೂಪಾಯಿಗಳನ್ನು ವಿಧಿಸುತ್ತಿವೆ. ನಿಮ್ಮ ಬ್ಯಾಂಕ್ ATM ನಿಂದ ನೀವು ಪ್ರತಿ ತಿಂಗಳು 5 ಬಾರಿ ಉಚಿತವಾಗಿ ಹಣವನ್ನ ಡ್ರಾ ಮಾಡಬಹುದು ಹಾಗೆ ಇತರ ಬ್ಯಾಂಕ್ ATM ನಿಂದ 3 ಬಾರಿ ಉಚಿತವಾಗಿ ಹಣವನ್ನ ಡ್ರಾ ಮಾಡಬಹುದಾಗಿದೆ.

ಈ ಸುದ್ದಿ ಓದಿ:- HSRP ನಂಬರ್ ಪ್ಲೇಟ್ ಗಡುವು ವಿಸ್ತರಣೆ.! ಸಾರಿಗೆ ಇಲಾಖೆಯ ಅಧಿಕೃತ ಆದೇಶಲ್ಲೇನಿದೆ ಗೊತ್ತಾ.?‌ ಇಲ್ಲಿದೆ ಮಾಹಿತಿ

ಗ್ರಾಹಕರು ಪಡೆಯುವ ಉಚಿತ ಎಟಿಎಂ ವಹಿವಾಟುಗಳ ಸಂಖ್ಯೆಯು ಖಾತೆಯ ಪ್ರಕಾರ ಮತ್ತು ಡೆಬಿಟ್ ಕಾರ್ಡ್ ಅನ್ನು ಆಯ್ಕೆ ಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಒಂದು ತಿಂಗಳಲ್ಲಿ ಎಟಿಎಂಗಳಲ್ಲಿ ಕನಿಷ್ಠ ಸಂಖ್ಯೆಯ ಉಚಿತ ವಹಿವಾಟುಗಳನ್ನು ಕಡ್ಡಾಯಗೊಳಿಸಿದೆ. ಆದಾಗ್ಯೂ, ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಹೆಚ್ಚಿನ ಉಚಿತ ವಹಿವಾಟುಗಳನ್ನು ನೀಡಬಹುದು.

HSRP ನಂಬರ್ ಪ್ಲೇಟ್ ಗಡುವು ವಿಸ್ತರಣೆ.! ಸಾರಿಗೆ ಇಲಾಖೆಯ ಅಧಿಕೃತ ಆದೇಶಲ್ಲೇನಿದೆ ಗೊತ್ತಾ.?‌ ಇಲ್ಲಿದೆ ಮಾಹಿತಿ

 

ಬೈಕ್‌, ಕಾರ್‌, ಟ್ರ್ಯಾಕ್ಟರ್‌ ಯಾವುದೇ ಆಗಿರಲಿ, ಆ ವಾಹನಗಳಿಗೆ ನಂಬರ್‌ ಪ್ಲೇಟ್ ಇರ್ಲೇ ಬೇಕು. ಹೆಚ್‌ಎಸ್‌ಆರ್‌ಪಿ (HSRP) ನಂಬರ್‌ ಪ್ಲೇಟ್ ಇಲ್ಲಂದಿದ್ದರೆ ಫೆಬ್ರವರಿ 17 ರಿಂದಲೇ ವಾಹನಗಳಿಗೆ ದಂಡ ಹಾಕುತ್ತೇವೆ ಎಂದು ಸಾರಿಗೆ ಇಲಾಖೆ ಹೇಳಿತ್ತು. ಆದರೆ, ಇದೀಗ ಈ ಗಡುವುವನ್ನು ಮೇ 31ರ ವರೆಗೆ ವಿಸ್ತರಣೆ ಮಾಡಿದೆ. ಆ ಮೂಲಕ ನಂಬರ್‌ ಪ್ಲೇಟ್‌ ಅಳವಡಿಕೆಗೆ ಪರದಾಡುತ್ತಿದ್ದ ವಾಹನ ಮಾಲೀಕರಿಗೆ ರಿಲೀಫ್‌ ಸಿಕ್ಕಿದೆ. ಸದ್ಯ ಇದು ಎಲ್ಲರಿಗೂ ನಿಟ್ಟುಸಿರು ಬಿಡುವ ವಿಷಯವಾಗಿದೆ.

ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ (HSRP) ನಂಬರ್​ ಪ್ಲೇಟ್ ಅಳವಡಿಸುವ ಅವಧಿಯನ್ನು ನಾಳೆಯಿಂದ ಮೇ 31ರ ವರೆಗೆ ಅಂದರೆ ಮೂರು ತಿಂಗಳು ವಿಸ್ತರಿಸಲಾಗಿದೆ. ಈ ಕುರಿತಾಗಿ ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್​ ಅವರು ಅಧಿಕೃತ ಆದೇಶವನ್ನು ಶುಕ್ರವಾರ ಹೊರಡಿಸಿದ್ದಾರೆ. ಇತ್ತೀಚೆಗೆ ಸದನದಲ್ಲಿ ಗಡುವು ವಿಸ್ತರಣೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮಾಹಿತಿ ನೀಡಿದ್ದರು. ಇಂದು ಗಡುವು ವಿಸ್ತರಣೆ ಮಾಡಿ ರಾಜ್ಯ ಸಾರಿಗೆ ಇಲಾಖೆಯಿಂದ ಅಧಿಕೃತ ಆದೇಶ ನೀಡಿದ್ದು, ಆ ಮೂಲಕ ನಾಲ್ಕನೇ ಬಾರಿಗೆ ಗಡುವು ವಿಸ್ತರಣೆ ಮಾಡಲಾಗಿದೆ. ಗಡುವು ವಿಸ್ತರಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ವಾಹನ ಸವಾರರು ಮನವಿ‌ ಮಾಡಿದ್ದರು.

ಈ ಸುದ್ದಿ ಓದಿ:-  ಎಷ್ಟೇ ಪೂಜೆ ಮಾಡಿದ್ರು ನಿಮ್ಮ ಕೋರಿಕೆಗಳು ನೆರವೇರುತ್ತಿಲ್ಲ ಎಂದರೆ ಈ ಮಂತ್ರವನ್ನು 11 ಬಾರಿ ಹೇಳಿ ಹಾಗೂ ಈ ಸ್ವಿಚ್ ವರ್ಡ್ ಬರೆದು ಪರ್ಸ್ ನಲ್ಲಿ ಇಟ್ಟುಕೊಳ್ಳಿ ಎಲ್ಲಾ ಕಾರ್ಯ ನೆರವೇರಿಸಿ ಕೊಡುತ್ತಾರೆ ಈ ಶಕ್ತಿಶಾಲಿ ತಾಯಿ.!

ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್‌ ಪ್ಲೇಟ್​​ ವಾಹನಗಳ ಸುರಕ್ಷತೆಗಾಗಿ ಈ ಪ್ಲೇಟ್‌ ಅಳವಡಿಕೆಯನ್ನ ಕಡ್ಡಾಯ ಮಾಡಲಾಗಿದೆ. 2019ರ ಏಪ್ರಿಲ್‌ ಬಳಿಕ ಖರೀದಿ ಮಾಡಿರುವ ವಾಹನಗಳಿಗೆ ರಿಜಿಸ್ಟ್ರೇಷನ್‌ ವೇಳೆಯೇ HSRP ಪ್ಲೇಟ್ ಅಳವಡಿಸಲಾಗಿದೆ. ಹೀಗಾಗಿ 2019 ರ ಏಪ್ರಿಲ್‌ಗೂ ಮುನ್ನ ಖರೀದಿಸಿರುವ ಎಲ್ಲಾ ವಾಹನಗಳಿಗೂ ಅತೀ ಸುರಕ್ಷತಾ ನೋಂದಣಿ ಫಲಕ ಅಳವಡಿಕೆ ಕಡ್ಡಾಯವಾಗಿದೆ.

ನಂಬರ್‌ ಪ್ಲೇಟ್‌ ಅಳವಡಿಕೆಗೆ ಫೆಬ್ರವರಿ 17 ರ ಡೆಡ್‌ಲೈನ್‌ ನೀಡಲಾಗಿತ್ತು. ಆದರೆ ಜಿಲ್ಲೆ ಜಿಲ್ಲೆಗಳಲ್ಲೂ ಈ ಪ್ಲೇಟ್‌ ಅಳವಡಿಕೆ ಆಗಿಲ್ಲ. ಇನ್ನೂ ಒಂದೂವರೆ ಕೋಟಿಗೂ ಹೆಚ್ಚು ವಾಹನಗಳಿಗೆ ಈ ಪ್ಲೇಟ್‌ ಅಳವಡಿಕೆ ಆಗಬೇಕಿದೆ ಎಂದು ಕಾಂಗ್ರೆಸ್‌ನ ಪರಿಷತ್‌ ಸದಸ್ಯ ಮಧು ಮಾದೇಗೌಡ ಸದನದಲ್ಲಿ ಪ್ರಸ್ತಾಪಿಸಿದ್ದರು.

ಈ ಹಿಂದೆ 2023ರ ಆ.18ರಂದು ಅಧಿಸೂಚನೆ ಹೊರಡಿಸಿದ್ದ ಸಾರಿಗೆ ಇಲಾಖೆಯು ರಾಜ್ಯದಲ್ಲಿ 2019 ರ ಏ.1ಕ್ಕೂ ಮುನ್ನ ನೋಂದಣಿಯಾದ ಹಳೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲು ನ.17 ರವರೆಗೆ ಕಾಲಾವಕಾಶ ನೀಡಿತ್ತು. ರಾಜ್ಯದಲ್ಲಿ ಅಂತಹ ಸುಮಾರು 2 ಕೋಟಿ ವಾಹನಗಳಿದ್ದು, ನ.17ರ ಗಡುವಿನೊಳಗೆ ಬಹುತೇಕ ಹಳೆ ವಾಹನಗಳ ಮಾಲೀಕರು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬಹುದೆಂದು ಇಲಾಖೆ ನಿರೀಕ್ಷಿಸಿತ್ತು. ಆದರೆ, ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಜನರಿಂದ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ.ಹೀಗಾಗಿ, ಸಾರಿಗೆ ಇಲಾಖೆಯು ಫೆ.17ರವರೆಗೆ ಗಡುವು ವಿಸ್ತರಿಸಿತ್ತು.ಈ ಗಡುವು ಶನಿವಾರಕ್ಕೆ ಅಂತ್ಯಗೊಳ್ಳಲಿದ್ದು, ಈವರೆಗೆ 2 ಕೋಟಿ ಹಳೆ ವಾಹನಗಳ ಪೈಕಿ 18 ಲಕ್ಷ ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಕೆಯಾಗಿದೆ ಎನ್ನಲಾಗಿದೆ.

ಈ ಸುದ್ದಿ ಓದಿ:- ಫ್ರಿಜ್ ನಲ್ಲಿ ಇಟ್ಟ ಈ ಆಹಾರ ಪದಾರ್ಥಗಳು ವಿಷವಾಗುತ್ತವೆ, ಅಪ್ಪಿತಪ್ಪಿಯು ಹೀಗೆ ಮಾಡಬೇಡಿ.!

ಮತ್ತೊಂದೆಡೆ ಎಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ಕೋರಿಕೆ ಸಲ್ಲಿಸುವ ವೆಬ್‌ ಪೋರ್ಟಲ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಈ ಕಾರಣಕ್ಕೆ ಮತ್ತೊಮ್ಮೆ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಗಡುವು ವಿಸ್ತರಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದರು. ಈ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಸಾರಿಗೆ ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಗಡುವು ವಿಸ್ತರಿಸಿದೆ.

ರಾಜ್ಯದಲ್ಲಿ 18 ಲಕ್ಷ ವಾಹನಗಳಿಗೆ ಮಾತ್ರ ಪ್ಲೇಟ್ ಅಳವಡಿಕೆ

ಮಧು ಮಾದೇಗೌಡ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ರಾಜ್ಯದಲ್ಲಿ ಸದ್ಯ 18 ಲಕ್ಷ ವಾಹನಗಳಿಗೆ ಮಾತ್ರ ಈ ಪ್ಲೇಟ್ ಅಳವಡಿಕೆ ಆಗಿದೆ. ಇನ್ನೂ ಒಂದು ಕೋಟಿ 82 ಲಕ್ಷ ವಾಹನಗಳಿಗೆ ಈ ಪ್ಲೇಟ್ ಅಳವಡಿಸಬೇಕಿದೆ. ಹೀಗಾಗಿ 3 ತಿಂಗಳ ವರೆಗೆ ಗಡುವು ವಿಸ್ತರಣೆ ಮಾಡುತ್ತೇವೆ ಎಂದು ಹೇಳಿದ್ದರು.

ಈ ಪ್ಲೇಟ್‌ಗಳನ್ನ ಅಳವಡಿಸಲು ಎಲ್ಲರಿಗೂ ಅವಕಾಶ ನೀಡಲಾಗಿಲ್ಲ. ಸರ್ಕಾರವೇ ಕೆಲ ಏಜೆನ್ಸಿಗಳನ್ನ ನೇಮಕ ಮಾಡಿದೆ. ಅದರಲ್ಲೂ ಆನ್‌ಲೈನ್‌ನಲ್ಲೇ ನೋಂದಣಿ ಮಾಡಿಕೊಂಡು ನಂಬರ್‌ ಪ್ಲೇಟ್‌ಗೆ ಆರ್ಡರ್‌ ಕೊಡಬೇಕು. ಬೆಂಗಳೂರು ಸೇರಿ ಮಹಾನಗರಗಳಲ್ಲಿ ಪ್ಲೇಟ್‌ ಅಳವಡಿಕೆ ವೇಗ ಪಡೆದುಕೊಂಡಿದೆ. ಆದರೆ ಹಳ್ಳಿಗಳಲ್ಲಿ ಜಾಗೃತಿಯೇ ಆಗಿಲ್ಲ. ಇದರ ನಡುವೆ ಕೆಲ ಫೇಕ್‌ ವೆಬ್‌ಸೈಟ್‌ಗಳು ಹುಟ್ಟಿಕೊಂಡಿದ್ದು, ಈ ಬಗ್ಗೆಯೂ ಗಮನ ಹರಿಸುತ್ತೇವೆ ಎಂದಿದ್ದರು.

HSRP ನಂಬರ್‌ ಪ್ಲೇಟ್‌ ಅಳವಡಿಕೆಗೆ ಸರ್ವರ್‌ ಪ್ರಾಬ್ಲಂ, ಎರರ್‌ ಸಂದೇಶದಿಂದಾಗಿ ಜನ ಪರದಾಡುತ್ತಿದ್ದರು. ಹೀಗಾಗಿ ಸರ್ಕಾರ 3 ತಿಂಗಳು ವಿಸ್ತರಣೆ ಮಾಡಿದೆ.

HSRP ನಂಬರ್‌ ಪ್ಲೇಟ್‌ ಅಳವಡಿಕೆಯ ಪ್ರಯೋಜನ

– ಹೆಚ್ಚಿನ ಭದ್ರತೆಯ ನೋಂದಣಿ ಫಲಕಗಳು (ಎಚ್‌ಎಸ್‌ಆರ್‌ಪಿ) ವಾಹನಗಳಿಗೆ ಒಂದು ಕಡ್ಡಾಯ ಭದ್ರತಾ ವೈಶಿಷ್ಟ್ಯವಾಗಿದ್ದು ಹಲವು ಪ್ರಯೋಜನಗಳನ್ನು ಒದಗಿಸುತ್ತದೆ.
– ಆಧಾರ ಚಕ್ರ ಸಂಕೇತ: ಎಚ್‌ಎಸ್‌ಆರ್‌ಪಿ ಪ್ಲೇಟ್‌ ಮೇಲೆ ಬರುವ ಅಶೋಕ ಚಕ್ರ ಸಂಕೇತ ನೀಲಿ ಬಣ್ಣದ ಹೊಲೋಗ್ರಾಮ್‌ನಲ್ಲಿಅಳವಡಿಸಲಾಗಿದೆ. ಇದು ರಾಷ್ಟ್ರೀಯ ಗೌರವವನ್ನು ಸೂಚಿಸುತ್ತದೆ. ಫಲಕ ಸ್ಪಷ್ಟ ಮತ್ತು ಓದಲು ಸುಲಭವಾಗಿದ್ದು ಅಂತಾರಾಷ್ಟ್ರೀಯ ನೋಂದಣಿ ಗುರುತು ಒಳಗೊಂಡಿರುತ್ತದೆ.

– ಹಾಟ್‌-ಸ್ಟ್ಯಾಂಪ್‌ಡ್‌ ಅಕ್ಷರಗಳು ಮತ್ತು ಸಂಖ್ಯೆಗಳು: ಎಚ್‌ಎಸ್‌ಆರ್‌ಪಿ ಪ್ಲೇಟ್‌ಗೆ ರಾಜ್ಯ ಕೋಡ್‌, ಜಿಲ್ಲಾಕೋಡ್‌ ಮತ್ತು ಏಕಮಾತ್ರ ಆಲ್ಫಾ ನ್ಯೂಮರಿಕ್‌ ಗುರುತಿನ ಸಂಖ್ಯೆ ವಿಐಎನ್‌ (ವಾಹನ ಗುರುತಿಸುವಿಕೆ ಸಂಖ್ಯೆ) ನೀಡಲಾಗುವುದು. ಟ್ಯಾಂಪರ್‌-ಪ್ರೂಫ್‌ ವೈಶಿಷ್ಟ್ಯಗಳು ಫಲಕಗಳನ್ನು ಕಾನೂನುಬಾಹಿರ ಬದಲಾವಣೆಗಳಿಂದ ರಕ್ಷಿಸುತ್ತವೆ.

ಈ ಸುದ್ದಿ ಓದಿ:- ಲೇಬರ್ ಕಾರ್ಡ್ ಇದ್ದವರು ನೋಡಿ.!

– ಕಾನೂನು ಜಾರಿಗೆ ಸಹಾಯ: ವಾಹನ ಉಲ್ಲಂಘನೆಗಳನ್ನು ಪತ್ತೆ ಹಚ್ಚಲು ಮತ್ತು ದಂಡ ವಿಧಿಸಲು ಎಚ್‌ಎಸ್‌ಆರ್‌ಪಿಘ್ಕಿ ಫಲಕಗಳು ಕಾನೂನು ಜಾರಿ ಸಂಸ್ಥೆಗಳಿಗೆ ಸಹಾಯ ಮಾಡುತ್ತವೆ. ವಾಹನ ಅಪಘಾತಗಳ ಸಂದರ್ಭದಲ್ಲಿತನಿಖೆಗೆ ಫಲಕಗಳಲ್ಲಿನ ಮಾಹಿತಿಯನ್ನು ಬಳಸಬಹುದು.
– ಪರಿಸರ ಸ್ನೇಹಿ: ಎಚ್‌ಎಸ್‌ಆರ್‌ಪಿ ಫಲಕಗಳನ್ನು ಉತ್ಪಾದಿಸಲು ಪರಿಸರ ಸ್ನೇಹಿ ವಸ್ತುಗಳನ್ನು ಬಳಸಲಾಗುತ್ತದೆ.

ಕನ್ಯಾ ರಾಶಿಯವರಿಗೆ ಪ್ರಮುಖ ಸೂಚನೆ.!

0

 

ಫೆಬ್ರವರಿ 13ನೇ ತಾರೀಖಿನ ದಿನ ಮಧ್ಯಾಹ್ನ 3 ಗಂಟೆ 54 ನಿಮಿಷಕ್ಕೆ ಸೂರ್ಯ ರಾಶಿ ಪರಿವರ್ತನೆ ನಡೆಯುತ್ತದೆ. ಗ್ರಹಗಳ ರಾಜನಾದ ಸೂರ್ಯನು ನೈಸರ್ಗಿಕ ರಾಶಿಯಿಂದ 11ನೇ ರಾಶಿಯಾದ ಕುಂಭ ರಾಶಿಯಲ್ಲಿ ಸಂಚರಿಸಲು ಸಿದ್ಧನಾಗಿದ್ದಾನೆ ಸೂರ್ಯನು ಶಕ್ತಿಯ ಮುಖ್ಯ ಮೂಲವಾಗಿದೆ. ಮತ್ತು ಉಳಿದ 8 ಗ್ರಹಗಳಲ್ಲಿ ಪ್ರಮುಖ ಗ್ರಹವಾಗಿದೆ.

ಸೂರ್ಯನಿಲ್ಲದೆ ಸಾಮಾನ್ಯವಾಗಿ ಬದುಕಲು ಸಾಧ್ಯವಿಲ್ಲ ಸೂರ್ಯ ಸ್ವಭಾವದ ಪುಲ್ಲಿಂಗ ಮತ್ತು ಸಂಕೀರ್ಣ ಕಾರ್ಯಗಳನ್ನು ನಿರ್ವಹಿಸಲು ನಿರ್ಧರಿಸುವವನಾಗಿದ್ದಾನೆ. ನಾಯಕತ್ವದ ಗುಣಗಳನ್ನು ಸೂರ್ಯನಿಂದ ಪ್ರತಿನಿಧಿಸಲಾಗುತ್ತದೆ. ತಮ್ಮ ಜಾತಕದಲ್ಲಿ ಮೇಷ ಅಥವಾ ಸಿಂಹ ರಾಶಿಯಲ್ಲಿ ಬಲವಾದ ಸೂರ್ಯನನ್ನು ಹೊಂದಿರುವವರು ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಯೋಜನಗಳನ್ನು ಸಹ ಅನುಭವಿಸಬಹುದು.

ಈ ಸುದ್ದಿ ಓದಿ:- ಬೆಳ್ಳಿಯ ಉಂಗುರವನ್ನು ಧರಿಸುವವರಿಗೆ ಈ 9 ಅದ್ಭುತ ಲಾಭಗಳು ಸಿಗುತ್ತವೆ.!

ಹೆಚ್ಚಿನ ಹಣ ಹಾಗೂ ಸಂಬಂಧದಲ್ಲಿ ಸಂತೋಷ ಹಾಗೂ ತಂದೆಯಿಂದ ಸಾಕಷ್ಟು ಬೆಂಬಲವನ್ನು ಪಡೆಯುತ್ತಾರೆ ಮೇಷ ರಾಶಿಯಲ್ಲಿ ಸೂರ್ಯನು ತುಂಬಾ ಶಕ್ತಿಶಾಲಿಯಾಗಿರುತ್ತಾನೆ. ಮತ್ತು ಏಪ್ರಿಲ್ ತಿಂಗಳಿನಲ್ಲಿ ಭೂಮಿಯ ಸಮೀಪಕ್ಕೆ ಬಂದು ಉತ್ಕೃ ಷ್ಟದ ಸ್ಥಿತಿಯನ್ನು ಪಡೆಯುತ್ತಾನೆ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಅವನು ಭೂಮಿಯಿಂದ ದೂರ ಹೋದಾಗ ದುರ್ಬಲನಾಗುತ್ತಾನೆ ಮತ್ತು ಆ ಮೂಲಕ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ.

ದುರ್ಬಲತೆಯಲ್ಲಿ ಸೂರ್ಯನೊಂದಿಗೆ ಜನಿಸಿದ ಸ್ಥಳೀಯರು ರೋಗನಿರೋಧಕ ಶಕ್ತಿಯನ್ನು ಹೊಂದಿರುವುದಿಲ್ಲ ಮತ್ತು ಜೀರ್ಣಕಾರಿ ಅಸ್ವಸ್ಥತೆಗಳು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗಬಹುದು. ಜ್ಯೋತಿಷ್ಯದಲ್ಲಿ ಸೂರ್ಯನನ್ನು ಸಾಮಾನ್ಯವಾಗಿ ಉನ್ನತ ಅಧಿಕಾರ ಹೊಂದಿರುವ ಡೈನಮಿಕ್ ಗ್ರಹ ಎಂದು ಕರೆಯಲಾಗುತ್ತದೆ.

ಈ ಗ್ರಹವು ಪರಿಣಾಮಕಾರಿ ಆಡಳಿತ ತತ್ವಗಳನ್ನು ಸೂಚಿಸುತ್ತದೆ ಮತ್ತು ಇದು ಬಿಸಿ ಗ್ರಹವಾಗಿದೆ ಮತ್ತು ಎಲ್ಲಾ ಭವ್ಯವಾದ ಗುಣಗಳನ್ನು ಇದು ಸೂಚಿಸುತ್ತದೆ ಸೂರ್ಯನು ಬಿಸಿ ಗ್ರಹವಾಗಿರುವುದರಿಂದ ಶಕ್ತಿಯುತ ಸೂರ್ಯನನ್ನು ಹೊಂದಿರುವಂತಹ ಸ್ಥಳೀಯರು ಹೆಚ್ಚು ಕೋಪಿಷ್ಟ ಸ್ವಭಾವವನ್ನು ಹೊಂದಿರಬಹುದು ಮತ್ತು ಇತರರ ಕಡೆ ಈ ನಡವಳಿಕೆಯನ್ನು ತೋರಿಸಬಹುದು.

ಈ ಸುದ್ದಿ ಓದಿ:- ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್, ಮಾರ್ಚ್ 14ರ ಒಳಗೆ ಈ ಕೆಲಸ ಮಾಡದೇ ಇದ್ದರೆ ಆಧಾರ್ ಕಾರ್ಡ್ ಬಂದ್ ಆಗುವುದು ಗ್ಯಾರಂಟಿ.!

ಇದನ್ನು ಕೆಲವರು ಒಪ್ಪಿಕೊಳ್ಳ ಬಹುದು ಮತ್ತು ಇನ್ನು ಕೆಲವರು ಒಪ್ಪಿಕೊಳ್ಳದೆ ಇರಬಹುದು. ಆದ್ದರಿಂದ ಸಾಕಷ್ಟು ಕೋಪಿಷ್ಟ ನಡವಳಿಕೆಯನ್ನು ಹೊಂದಿರುವ ಸ್ಥಳೀಯರು ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಲು ಸಂಯಮ ಮತ್ತು ವಿವೇಕದಿಂದ ವರ್ತಿಸಬೇಕು. ಸೂರ್ಯನ ಆಶೀರ್ವಾದವಿಲ್ಲದೆ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಜೀವನದಲ್ಲಿ ಉನ್ನತ ಸ್ಥಾನಗಳನ್ನು ಹೊಂದಲು ಸಾಧ್ಯವಿಲ್ಲ.

ಪ್ರಬಲ ಸೂರ್ಯನು ಜೀವನದಲ್ಲಿ ಎಲ್ಲಾ ಅಗತ್ಯತೆ ಮತ್ತು ತೃಪ್ತಿ ಉತ್ತಮವಾದ ಆರೋಗ್ಯ ಬಲಗಳನ್ನು ಒದಗಿಸಬಹುದು. ವ್ಯಕ್ತಿಯ ಜಾತಕದಲ್ಲಿ ಸೂರ್ಯನು ಉತ್ತಮವಾಗಿ ನೆಲೆಗೊಂಡಿದ್ದರೆ ಸೂರ್ಯನು ಒಬ್ಬ ವ್ಯಕ್ತಿಯನ್ನು ದುರ್ಬಲ ಸ್ಥಾನದಿಂದ ಪ್ರಬಲ ಸ್ಥಾನಕ್ಕೆ ಕೊಂಡೊಯ್ಯ ಬಹುದು.

ವ್ಯಕ್ತಿಯ ಜಾತಕದಲ್ಲಿ ಸೂರ್ಯನು ಅನುಕೂಲಕರ ಸ್ಥಾನದಲ್ಲಿ ಇದ್ದಾಗ ಅದು ಗುರುತಿಸುವಿಕೆ ಮತ್ತು ಅವರ ವೃತ್ತಿಯಲ್ಲಿ ಪ್ರಮುಖ ಸ್ಥಾನಕ್ಕೆ ಕಾರಣವಾಗಬಹುದು. ಪ್ರಬಲ ಸೂರ್ಯನು ವಿಶೇಷವಾಗಿ ಗುರುವಿ ನಂತಹ ಲಾಭದಾಯಕ ಗ್ರಹಗಳಿಂದ ನೋಡಿದಾಗ ದೈಹಿಕ ಮತ್ತು ಮಾನಸಿಕ ತೃಪ್ತಿಯನ್ನು ನೀಡಬಹುದು ಮತ್ತು ವ್ಯಕ್ತಿಯ ಜೀವನಕ್ಕೆ ಮತ್ತಷ್ಟು ಭರವಸೆಯನ್ನು ನೀಡಬಹುದು.

ಈ ಸುದ್ದಿ ಓದಿ:- ವಿವಾಹ, ಸಂತಾನ ಭಾಗ್ಯ, ಸ್ವಂತ ಮನೆ, ಅದೃಷ್ಟ ವ್ಯಾಪಾರ ಉದ್ಯೋಗ ಇವು ನಿಮ್ಮ ಜೀವನದಲ್ಲಿ ವಿಳಂಭವಾಗುತ್ತಿದೆಯೇ.? ಈ ಸರಳ ಉಪಾಯ ಮಾಡಿ ಸಾಕು

ಅದಾಗಿಯೂ ಸೂರ್ಯನು ರಾಹು ಕೇತು ಮಂಗಳ ಗ್ರಹಗಳೊಂದಿಗೆ ಸಂಯೋಜಿಸಲ್ಪಟ್ಟರೆ ಅದರ ಪರಿಣಾಮವು ಅನುಕೂಲಕರವಾಗಿರುವುದಿಲ್ಲ. ಬಹುಶಹ ಆರೋಗ್ಯದ ಸಮಸ್ಯೆಗಳು ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಗಳು, ಹಣಕಾಸಿನ ಕುಸಿತ ಇತರ ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು.

ಮಾಣಿಕ್ಯವು ಸೂರ್ಯನಿಗೆ ರತ್ನವಾಗಿದೆ ಮತ್ತು ಅದನ್ನು ಧರಿಸಿದರೆ ವ್ಯಕ್ತಿಗೆ ನಕಾರಾತ್ಮಕ ಫಲಿತಾಂಶಗಳು ಕಡಿಮೆಯಾಗಬಹುದು. ವ್ಯಕ್ತಿಯ ಜಾತಕದಲ್ಲಿ ಸೂರ್ಯನ ಸ್ಥಾನ ಮತ್ತು ಬಲವನ್ನು ಅವಲಂಬಿಸಿ ಪ್ರಯೋಜನಗಳು ಬರಬಹುದು. ಕುಂಭ ರಾಶಿಯನ್ನು ಶನಿಯು ಆಳುವ ರಾಶಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಒಂದೇ ಒಂದು ಖಾಲಿ ತೆಂಗಿನಕಾಯಿ ಚಿಪ್ಪಿನಿಂದ ನಿಮ್ಮ ಮನೆಗೆ ಸೊಳ್ಳೆಗಳು ಬಾರದಂತೆ ಮಾಡಬಹುದು.!

 

ಮಳೆಗಾಲ ಬಂತು ಎಂದರೆ ಜೊತೆಗೆ ಮನೆಯಲ್ಲಿ ಸೊಳ್ಳೆಗಳ ಕಾಟವು ಕೂಡ ಶುರು ಆಗುತ್ತದೆ. ಪ್ರತಿದಿನ ಸಂಜೆ ತಪ್ಪದೇ ಅತಿಥಿಗಳಂತೆ ಸೊಳ್ಳೆಗಳ ಆಗಮನ ಆಗುತ್ತಿರುತ್ತದೆ. ಈ ರೀತಿ ಬರುವ ಸೊಳ್ಳೆಗಳಿಂದ ಗುಯ್ ಗುಯ್ ಎನ್ನುವ ಶಬ್ದದ ಕಿರಿಕಿರಿ ಮಾತ್ರವಲ್ಲದೆ ಮಲೇರಿಯಾ, ಡೆಂಗ್ಯೂ ನಂತಹ ಮಾರಣಾಂತಿಕ ಕಾಯಿಲೆಗಳು ಕೂಡ ಹರಡುತ್ತವೆ ಹಾಗಾಗಿ ಈ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಪಡುವ ಪಾಡು ಅಷ್ಟಿಷ್ಟಲ್ಲ.

ಸೊಳ್ಳೆ ಕಚ್ಚಬಾರದೆಂದು ಸೊಳ್ಳೆ ಪರದೆ ಕಟ್ಟಿಕೊಂಡು ಮಲಗುವುದು, ಮೈತುಂಬ ಬಟ್ಟೆ ಹಾಕುವುದು, ಮನೆಯ ಅಕ್ಕ ಪಕ್ಕದಲ್ಲಿ ನೀರು ಶೇಖರೆಯಾಗದಂತೆ ನೋಡಿಕೊಳ್ಳುವುದು ಇಷ್ಟೆಲ್ಲಾ ಜಾಗ್ರತೆಯಿಂದ ಇದ್ದರೂ ಕೂಡ ಇದಿಷ್ಟೇ ಸಾಲವುದಿಲ್ಲ ಕೆಲವರು ಇವುಗಳನ್ನು ಕೊಲ್ಲಲು ಅಥವಾ ಇವುಗಳು ಬಾರದಂತೆ ತಡೆಯಲು ಸೊಳ್ಳೆ ಕಾಯಿಲ್ ಉರಿಸುವುದು ಅಥವಾ ಸ್ಪ್ರೇ ಹಚ್ಚುವುದು ಇಂತಹ ಕೆಮಿಕಲ್ ಗಳನ್ನು ಬಳಸುತ್ತಾರೆ. ಆದರೆ ಇದರ ವಾಸನೆಯನ್ನು ತೆಗೆದುಕೊಳ್ಳುವಂತಹ ನಮ್ಮ ಮೇಲೂ ಕೂಡ ಇದರ ಸೈಡ್ ಎಫೆಕ್ಟ್ ಆಗುತ್ತದೆ.

ಈ ಸುದ್ದಿ ಓದಿ:- ನಾವು ಹುಟ್ಟುವ ಮೊದಲೇ ನಾವೇನಾಗಬೇಕು ಎನ್ನುವುದು ನಿರ್ಧಾರ ಆಗಿರುತ್ತದೆಯೇ? ಹಣೆಬರಹ ಎನ್ನುವುದು ಎಷ್ಟು ಸತ್ಯ…

ಮನೆಯಲ್ಲಿ ಚಿಕ್ಕ ಮಕ್ಕಳು ಬಹಳ ವಯಸ್ಸಾದವರು ಇದ್ದರೆ ಈ ಕೆಮಿಕಲ್ ಗಳಿಂದ ಬಹಳ ಬೇಗ ಅವರಿಗೆ ತೊಂದರೆ ಆಗುತ್ತದೆ. ಅಲರ್ಜಿ, ಚರ್ಮ ಸಮಸ್ಯೆ, ಕೆಮ್ಮು ಇನ್ನು ಮುಂತಾದ ತೊಂದರೆಗಳು ಸೊಳ್ಳೆಗಳಿಗೆ ಸಿಂಪಡಿಸಲು ಕೆಮಿಕಲ್ ವಸ್ತುಗಳ ಕಾರಣದಿಂದಾಗಿ ನಮಗೂ ಆಗುತ್ತದೆ. ಹಾಗಾಗಿ ನ್ಯಾಚುರಲ್ ಆಗಿಯೇ ಆದಷ್ಟು ಸೊಳ್ಳೆಗಳನ್ನು ಓಡಿಸಲು ಪ್ರಯತ್ನ ಪಡುವುದು ಬಹಳ ಒಳ್ಳೆಯದು, ಇದರಿಂದ ಸೊಳ್ಳೆಗಳ ಕಾಟವು ತಪ್ಪುತ್ತದೆ.

ನಮ್ಮ ಆರೋಗ್ಯಕ್ಕೂ ಕೂಡ ತೊಂದರೆ ಆಗುವುದಿಲ್ಲ. ಈ ರೀತಿ ನೀವು ನ್ಯಾಚುರಲ್ ಆಗಿ ಸೊಳ್ಳೆ ಬರದಂತೆ ಹೇಗೆ ತಡೆಯುವುದು ಎಂದು ಯೋಚಿಸುತ್ತಿದ್ದರೆ ಈಗ ನಾವು ಹೇಳುವ ಈ ಒಂದು ಸಣ್ಣ ಟಿಪ್ ಫಾಲೋ ಮಾಡಿ ಸಾಕು. ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಒಂದು ರೂಪಾಯಿ ಕೂಡ ಖರ್ಚು ಇಲ್ಲದೆ ನಿಮ್ಮ ಮನೆಯಲ್ಲಿ ಇರುವ ಅದರಲ್ಲೂ ಕಸಕ್ಕೆ ಬಿಸಾಕುವ ವೇಸ್ಟ್ ವಸ್ತುಗಳನ್ನು ಉಪಯೋಗಿಸಿಕೊಂಡು ನೀವು ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಬಹುದು.

ಎಲ್ಲರ ಮನೆಯಲ್ಲೂ ಕೂಡ ತೆಂಗಿನಕಾಯಿ ಬಳಸುತ್ತೇವೆ. ಈ ರೀತಿ ತೆಂಗಿನಕಾಯಿ ಬಳಸಿದ ಮೇಲೆ ಚಿಪ್ಪು ನಾರು ಇವುಗಳನ್ನು ಕಸಕ್ಕೆ ಬಿಸಾಕುತ್ತೇವೆ. ಆದರೆ ಇನ್ನು ಮುಂದೆ ಆ ರೀತಿ ಮಾಡಬೇಡಿ ಜೊತೆಗೆ ಈರುಳ್ಳಿ ಬೆಳ್ಳುಳ್ಳಿಯನ್ನು ಬಿಡಿಸುವಾಗ ಬರುವ ಸಿಪ್ಪೆಯನ್ನು ಕೂಡ ಕಸಕ್ಕೆ ಹಾಕಬೇಡಿ ಅದನ್ನು ಕೂಡ ಇಟ್ಟುಕೊಳ್ಳಿ. ಪ್ರತಿದಿನ ಸಂಜೆ ತೆಂಗಿನಕಾಯಿ ಚಿಪ್ಪಿಗೆ ನಾರು ಹಾಗೂ ಈರುಳ್ಳಿ ಬೆಳ್ಳುಳ್ಳಿ ಸಿಪ್ಪೆಯನ್ನು ಹಾಕಿ ಬೆಂಕಿ ಹಚ್ಚಿ ಇದು ಹತ್ತಿಕೊಂಡ ತಕ್ಷಣ ಹೋಗೆ ಬರಲು ಆರಂಭವಾಗುತ್ತದೆ ಆಗ ಮನೆಯ ಮೂಲೆ ಮೂಲೆಗೂ ಕೂಡ ಅದನ್ನು ಹಿಡಿದುಕೊಂಡು ಓಡಾಡಿ.

ಈ ಸುದ್ದಿ ಓದಿ:-ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್, ಮಾರ್ಚ್ 14ರ ಒಳಗೆ ಈ ಕೆಲಸ ಮಾಡದೇ ಇದ್ದರೆ ಆಧಾರ್ ಕಾರ್ಡ್ ಬಂದ್ ಆಗುವುದು ಗ್ಯಾರಂಟಿ.!

ಈ ರೀತಿ ಮಾಡಿದರೆ ಈ ಹೊಗೆಗೆ ಸೊಳ್ಳೆಗಳು ನಿಮ್ಮ ಮನೆಗೆ ಪ್ರವೇಶ ಮಾಡುವುದಿಲ್ಲ ಮತ್ತು ಇತರ ಘಾಟು ಅವುಗಳಿಗೆ ಆಗದೆ ಇರುವುದರಿಂದ ಮತ್ತೆ ನಿಮ್ಮ ಮನೆ ಕಡೆಗೆ ಅವು ತಲೆ ಕೂಡ ಹಾಕುವುದಿಲ್ಲ. ಕೆಲವರು ಇದೇ ರೀತಿ ಬೇವಿನ ಸೊಪ್ಪಿನಿಂದ ಕೂಡ ಹೊಗೆ ಹಾಕುತ್ತಾರೆ, ಅದನ್ನು ಕೂಡ ಮಾಡಿ ನೋಡಬಹುದು. ಈ ಟಿಪ್ ಬಹಳ ಗಂಭೀರವಾದ ಉತ್ತಮ ಪರಿಣಾಮವನ್ನು ಕೊಡುತ್ತದೆ ಇದನ್ನು ಒಮ್ಮೆ ಟ್ರೈ ಮಾಡಿ ಇದರ ಅನುಕೂಲತೆ ತಿಳಿದ ಮೇಲೆ ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರ ಜೊತೆಗೂ ಕೂಡ ಹಂಚಿಕೊಳ್ಳಿ.