Home Blog Page 40

ಹಿಂದಿನ ಕಾಲದಲ್ಲಿ ಆರೋಗ್ಯಕ್ಕಾಗಿ ಅಜ್ಜಿ ಮಾಡುತ್ತಿದ್ದ ಅದ್ಭುತ ಮನೆಮದ್ದುಗಳು.!

ಈಗಿನ ಕಾಲದಲ್ಲಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಆದರೂ ಆಸ್ಪತ್ರೆಗೆ ಓಡುತ್ತಾರೆ ಅಥವಾ ಹೆಣ್ಣು ಮಕ್ಕಳು ತಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳುವುದಕ್ಕಾಗಿ ಪಾರ್ಲರ್ ಸುತ್ತುತ್ತಾರೆ ಅಥವಾ ಸರ್ಜರಿ ಬೇಕಾದರೂ ಮಾಡಿಸಿಕೊಳ್ಳಲು ರೆಡಿಯಾಗಿರುತ್ತಾರೆ. ಆದರೆ ಈಗ ಕಳೆದ ಎರಡು ದಶಕದ ಹಿಂದೆ ಯೋಚಿಸುವುದಾದರೆ ಈ ರೀತಿ ಪದ್ಧತಿ ಇರಲಿಲ್ಲ ಆರೋಗ್ಯ ವ್ಯತ್ಯಾಸವೇ ಆಗಲಿ ಅಥವಾ ಹೆಣ್ಣು ಮಕ್ಕಳಿಗಾಗಿ ಆಗಲಿ ಮನೆಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳಿಂದ ಔಷಧಿ ಸಿದ್ಧವಾಗುತ್ತಿತ್ತು.

ಅಜ್ಜಿ ಅಮ್ಮ ಹೇಳಿಕೊಡುತ್ತಿದ್ದ ಆ ಹೆಲ್ತ್ ಟಿಪ್ಸ್ ಗಳು ಇಂದಿಗೂ ಅಷ್ಟೇ ಚೆನ್ನಾಗಿ ವರ್ಕ್ ಆಗುತ್ತಿವೆ ಎನ್ನುವುದು ಬಹಳ ವಿಶೇಷ. ನೀವು ಕೂಡ ಸುಖಾ ಸುಮ್ಮನೆ ಹಣ ಕಳೆದುಕೊಳ್ಳುವ ಬದಲು ಇನ್ನು ಮುಂದೆ ಇವುಗಳನ್ನು ಪಾಲಿಸಿ ಹಣ ಉಳಿಸಿ ಆರೋಗ್ಯ ವೃದ್ಧಿಸಿಕೊಳ್ಳಿ.

ಒಡೆದ ಹಿಮ್ಮಡಿ ಸಮಸ್ಯೆ ಇದ್ದವರು ಒಂದು ಟಬ್ ನಲ್ಲಿ ಬೆಚ್ಚಗಿನ ನೀರು ತೆಗೆದುಕೊಂಡು ಅದಕ್ಕೆ ಒಂದು ಹೋಳು ನಿಂಬೆಹಣ್ಣನ್ನು ಹಿಂಡಿ 20 ನಿಮಿಷಗಳ ಕಾಲ ಕಾಲನ್ನು ನೆನೆಸಬೇಕು ನಂತರ ನಿಂಬೆ ಸಿಪ್ಪೆಯಿಂದ ಹಿಮ್ಮಡಿಗಳನ್ನು ಉಜ್ಜಿ ಕ್ಲೀನ್ ಮಾಡಿಕೊಳ್ಳಬೇಕು. ಹೀಗೆ ಮಾಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ ಜೊತೆಗೆ ಕಾಲುಗಳಿಗೆ ಕಾಂತಿ ಬರುತ್ತದೆ, ಉಗುರುಗಳ ಕೊಳೆ ನೀಟಾಗಿ ಕ್ಲೀನ್ ಆಗುತ್ತದೆ.

ಈ ಸುದ್ದಿ ಓದಿ:- ನೀರಿನ ಟ್ಯಾಂಕ್ ಗೆ ಇಳಿಯದೆ ಕ್ಲೀನ್ ಮಾಡುವ ಸುಲಭ ವಿಧಾನ.!

* ಹಲ್ಲು ನೋವು ವಿಪರೀತ ಇದ್ದಾಗ ಒಂದು ಲೋಟ ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಬಾಯನ್ನು ಮುಕ್ಕಳಿಸಿದರೆ ಹಲ್ಲು ನೋವು ಸ್ವಲ್ಪ ಕಡಿಮೆ ಆಗುತ್ತದೆ. ಲವಂಗವನ್ನು ಹುಳುಕಲ್ಲು ಇರುವಲ್ಲಿ ಇಟ್ಟುಕೊಳ್ಳುವುದರಿಂದ ಕೂಡ ನೋವು ಕಡಿಮೆಯಾಗುತ್ತದೆ.
* ಉರಿ ಮೂತ್ರದ ಸಮಸ್ಯೆ ಇದ್ದವರು ಒಂದು ಲೋಟ ಕಲ್ಲಂಗಡಿ ಹಣ್ಣಿನ ಜ್ಯೂಸ್ ಗೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಕುಡಿಯಬೇಕು, ತಕ್ಷಣದಲ್ಲಿಯೇ ನಿಯಂತ್ರಣಕ್ಕೆ ಬರುತ್ತದೆ.

* ಮಲಬದ್ಧತೆ ಸಮಸ್ಯೆಯಿಂದ ಬಳಲುವವರು ರಾತ್ರಿ ಹೊತ್ತು ಅರ್ಧ ಚಮಚ ಮೆಂತ್ಯ ಕಾಳನ್ನು ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದು ಆ ನೀರನ್ನು ಮತ್ತು ಮೆಂತೆಕಾಳನ್ನು ಸೇವಿಸುವುದರಿಂದ ಸಮಸ್ಯೆ ನಿವಾರಣೆ ಆಗುತ್ತದೆ.
* ವಾಕರಿಕೆ ಅಥವಾ ವಾಂತಿ ಇಂತಹ ಸಮಸ್ಯೆಗಳಿಗೆ ಶುಂಠಿಯನ್ನು ಜಜ್ಜಿ ರಸ ಮಾಡಿ ಕುಡಿದರೆ ಕ್ರಮೇಣ ಈ ಸಮಸ್ಯೆಯಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು.

* ಸಕ್ಕರೆ ಕಾಯಿಲೆ ಅಥವಾ ಬಿಪಿ ಸಮಸ್ಯೆ ಇರುವವರು ಪ್ರತಿನಿತ್ಯವು ಒಂದು ಲೋಟ ನೀರಿಗೆ ಒಂದೆರಡು ಕಾಳು ಮೆಂತ್ಯ ಹಾಕಿ ಕುದಿಸಿಕೊಂಡು ಆರಿದ ಮೇಲೆ ಕುಡಿಯಬೇಕು. ಪ್ರತಿನಿತ್ಯವು ಹೀಗೆ ಮಾಡಿಕೊಂಡು ಬಂದರೆ ಸಮಸ್ಯೆ ನಾರ್ಮಲ್ ಗೆ ಬರುತ್ತದೆ.

ಈ ಸುದ್ದಿ ಓದಿ:- ವೀಳ್ಯದೆಲೆ ಹಾಗೂ ಸುಣ್ಣದಿಂದ ಸಾಲಕ್ಕೆ ಮುಕ್ತಿ ಸಿಗುತ್ತದೆ. ಎಲೆ ಮೇಲೆ ಹೀಗೆ ಬರೆದು 21 ದಿನ ಈ ಸ್ಥಳದಲ್ಲಿ ಇಟ್ಟರೆ ಸಾಕು.!

* ಪ್ರತಿನಿತ್ಯವೂ ಚಹಾ ಅಥವಾ ಕಾಫಿಗೆ ಹಸಿ ಶುಂಠಿ ಜಜ್ಜಿ ಕುದಿಸಿ ಕುಡಿಯುವುದರಿಂದ ಉರಿಯೂತದ ಸಮಸ್ಯೆ, ಹೆಣ್ಣು ಮಕ್ಕಳ ಹೊಟ್ಟೆ ನೋವಿನ ಸಮಸ್ಯೆ, ನೆಗಡಿ ಕಫದಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ಮತ್ತು ಕ್ರಮೇಣ ದೇಹದ ರೋಗ ನಿರೋಧಕ ಶಕ್ತಿಯು ಕೂಡ ಹೆಚ್ಚಾಗುತ್ತದೆ.

* ಸುಟ್ಟ ಗಾಯಗಳಾಗಿದ್ದರೆ, ಬಿದ್ದ ಗಾಯಗಳು ಆಗಿದ್ದರೆ ಅಥವಾ ಕೀಟ ಕಚ್ಚಿ ಗಾಯ ಆಗಿದ್ದರೆ ಆ ಜಾಗಗಳಿಗೆ ಅಲೋವೆರದ ರಸವನ್ನು ಹಾಕಿ ಹೀಗೆ ಮಾಡುವುದರಿಂದ ನೋವು ಹಾಗೂ ಉರಿ ಕಡಿಮೆ ಆಗುತ್ತದೆ ಮತ್ತು ಬಹಳ ಬೇಗ ಗಾಯ ಗುಣವಾಗುತ್ತದೆ.
* ಉಪ್ಪಿನ ಜೊತೆ ಶುಂಠಿ ಹಾಗೂ ಲವಂಗವನ್ನು ಸೇರಿಸಿ ಅಗಿದು ನುಂಗುವುದರಿಂದ ಕಫ ಹಾಗೂ ಗಂಟಲಿನ ಸಮಸ್ಯೆ ಸರಿ ಹೋಗುತ್ತದೆ.

* ಕಾಫಿ ಪುಡಿಯೊಂದಿಗೆ ಸಕ್ಕರೆ ಹಾಗೂ ಅಲೋವೆರಾ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿಕೊಳ್ಳುವುದರಿಂದ ಮುಖದಲ್ಲಿ ಸುಕ್ಕುಗಟ್ಟಿದ ನರಿಗೆಗಳು ಗುಣವಾಗುತ್ತದೆ ಮತ್ತು ಮುಖ ಕಾಂತಿಯುತವಾಗುತ್ತದೆ.

ಈ ಸುದ್ದಿ ಓದಿ:- 100 ವರ್ಷ ಆದರೂ ಹಾರ್ಟ್ ಅಟ್ಯಾಕ್ ಆಗಬಾರದು ಹೃದಯ ವೀಕ್ನೆಸ್ ಆಗಬಾರದು ಎಂದರೆ ಈ ಆಹಾರಗಳನ್ನು ತಿನ್ನಿರಿ.!

ಮುಂದೆ ಮದುವೆ ಆಗಲು ಬಯಸುವವರು ಈ ವಿಚಾರ ತಿಳಿದುಕೊಳ್ಳಿ.!

 

ಮದುವೆ ಎನ್ನುವುದು ಒಂದು ಸುಂದರ ಕನಸು ಈ ಘಟ್ಟದ ನಂತರ ಬದುಕು ಬದಲಾಗಿ ಹೋಗುತ್ತದೆ. ಜೀವನಕ್ಕೆ ಸಂಗಾತಿ ಬಂದು ಕಷ್ಟ ಸುಖ ಎರಡರಲ್ಲೂ ಹೊಂದಿಕೊಂಡು ಮನೆ ಬೆಳಗುತ್ತಾ ವಂಶೋದ್ಧಾರಕರನ್ನು ಹೆತ್ತು ಕುಟುಂಬದ ಕೀರ್ತಿಯನ್ನು ಹೆಚ್ಚಿಸುತ್ತಾರೆ ಎನ್ನುವ ಕನಸು ಹುಡುಗರದ್ದು ಹಾಗೂ ಗಂಡಿನ ಮನೆಯದ್ದಾದರೆ ಹುಟ್ಟಿದ ಮನೆಯನ್ನು ಬಿಟ್ಟು ಗಂಡನ ಮನೆಯನ್ನು ಸೇರುವ ಹೆಣ್ಣಿನ ಮನಸ್ಸಿನಲ್ಲೂ ಕೂಡ ಗಂಡನ ಬಗ್ಗೆ ಈ ರೀತಿಯ ನೂರಾರು ಕನಸುಗಳು ಇರುತ್ತವೆ.

ಬದುಕು ಪೂರ್ತಿ ಇಬ್ಬರು ಒಟ್ಟಿಗೆ ಹೇಗೆ ಬದುಕಬೇಕು ಎನ್ನುವುದನ್ನು ಮದುವೆ ನಿಶ್ಚಯವಾದ ದಿನದಿಂದಲೂ ಕನಸು ಕಂಡಿರುತ್ತಾರೆ. ಎಲ್ಲಾ ಮದುವೆಗಳು ಈ ರೀತಿ ಆರಂಭ ಆದರೂ ಎಲ್ಲಾ ಮದುವೆಗಳ ಉದ್ದೇಶವು ನೆರವೇರುವುದಿಲ್ಲ. ಕೆಲವರದ್ದು ಮದುವೆ ಮುರಿದು ಬಿದ್ದರೆ, ಹಲವರದ್ದು ಸತ್ವ ಕಳೆದುಕೊಂಡ ಸಂಬಂಧವಾಗಿ ಹೋಗಿರುತ್ತದೆ.

ಈ ಸುದ್ದಿ ಓದಿ:- ಈ 5 ಹೆಸರಿನ ಹೆಣ್ಣು ಮಕ್ಕಳನ್ನು ಕಣ್ಣು ಮುಚ್ಚಿ ನಂಬಬಹುದು, ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ.!

ಇದಕ್ಕೆಲ್ಲ ಕಾರಣ ಹೊಂದಾಣಿಕೆ ಸಮಸ್ಯೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಹೊಂದಾಣಿಕೆ ಎನ್ನುವುದು ಬರಿ ಆಲೋಚನೆಗಳನ್ನು ಮಾತ್ರವಲ್ಲದೆ ಸ್ವಭಾವತಃ ಕೂಡ ಬಂದಿರುತ್ತದೆ. ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಗೂ ಮುನ್ನ ಹೆಣ್ಣು ಹಾಗೂ ಗಂಡಿನ ಜಾತಕದಲ್ಲಿ ರಾಶಿ ನಕ್ಷತ್ರ ಗಣ ಕೂಟ ಎಲ್ಲವೂ ಹೊಂದಾಣಿಕೆ ಆಗುತ್ತದೆಯೇ ಎನ್ನುವುದನ್ನು ಲೆಕ್ಕ ಹಾಕಿಯೇ ಮದುವೆ ಮಾಡಲಾಗುತ್ತದೆ.

ಈ ಸುದ್ದಿ ಓದಿ:- ಬೆಳ್ಳಂ ಬೆಳಗ್ಗೆ ಮಹಿಳೆಯರಿಗೆ ಗುಡ್ ನ್ಯೂಸ್, ಎಲ್ಲಾ ಮಹಿಳೆಯರಿಗೂ ಮಹಾಲಕ್ಷ್ಮಿ ಯೋಜನೆಯಡಿ 1 ಲಕ್ಷ ಕೊಡುವುದಾಗಿ ಸರ್ಕಾರದ ಭರವಸೆ…

ಇದೊಂದು ಬಹಳ ಬೃಹತ್ತಾದ ವಿಷಯವಾಗಿತ್ತು ಇದರಲ್ಲಿ ಬಹಳ ಸಿಂಪಲ್ ಆಗಿ ಸರಳವಾಗಿ ಪ್ರತಿಯೊಬ್ಬರು ತಿಳಿದಿಕೊಳ್ಳಲೇಬೇಕಾದ ಒಂದು ಸೂತ್ರದ ಬಗ್ಗೆ ಮಾತ್ರ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಅದೇನೆಂದರೆ, ರಾಶಿ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ ಹಾಗಾಗಿ ಸರಳವಾಗಿ ಯಾವ ರಾಶಿಯವರು ಯಾವ ರಾಶಿಯವರನ್ನು ಮದುವೆ ಆಗುವುದರಿಂದ ಈ ರೀತಿ ಮ’ನ’ಸ್ತಾ’ಪಗಳು ಹೆಚ್ಚು, ಗಂಡ ಹೆಂಡತಿ ನಡುವೆ ಕಿ’ರಿ’ಕಿ’ರಿ ಬರುತ್ತದೆ ಅಥವಾ ಮಕ್ಕಳ ವಿಚಾರವಾಗಿ ತೊಂದರೆ ಆಗುತ್ತದೆ ಅಥವಾ ಕುಟುಂಬ ಸೌಖ್ಯ ನ’ಶಿಸುತ್ತದೆ ಎನ್ನುವುದರ ಬಗ್ಗೆ ತಿಳಿಸುತ್ತೇವೆ.

* ಮೇಷ ರಾಶಿಯವರು ಮಕರ ರಾಶಿ, ಕುಂಭ ರಾಶಿ, ಮಿಥುನ ರಾಶಿ ಮತ್ತು ಮೀನಾ ರಾಶಿಯವರನ್ನು ಮದುವೆ ಆಗಬಾರದು
* ವೃಷಭ ರಾಶಿಯವರು ಸಿಂಹ ರಾಶಿ, ಮೀನಾ ರಾಶಿ ಮತ್ತು ಧನಸ್ಸು ರಾಶಿಯವರನ್ನು ಮದುವೆಯಾಗಬಾರದು
* ಮಿಥುನಾ ರಾಶಿಯವರು ಕರ್ಕಾಟಕ ರಾಶಿ, ಮೇಷ ರಾಶಿ, ವೃಶ್ಚಿಕ ರಾಶಿಯವರನ್ನು ಮದುವೆ ಆಗಬಾರದು.

* ಕರ್ಕಾಟಕ ರಾಶಿಯವರು ಮಿಥುನ ರಾಶಿ, ಕುಂಭ ರಾಶಿ, ಮಕರ ರಾಶಿಯವರನ್ನು ಮದುವೆಯಾಗಬಾರದು
* ಸಿಂಹ ರಾಶಿಯವರು ಮಕರ ರಾಶಿ ಹಾಗೂ ಕುಂಭ ರಾಶಿಯವರನ್ನು ಮದುವೆ ಆಗಬಾರದು
* ಕನ್ಯಾ ರಾಶಿ:- ಕರ್ಕಾಟಕ ರಾಶಿ, ಮೇಷ ರಾಶಿ, ವೃಶ್ಚಿಕ ರಾಶಿಯವರನ್ನು ಮದುವೆ ಆಗಬಾರದು.

100 ವರ್ಷ ಆದರೂ ಹಾರ್ಟ್ ಅಟ್ಯಾಕ್ ಆಗಬಾರದು ಹೃದಯ ವೀಕ್ನೆಸ್ ಆಗಬಾರದು ಎಂದರೆ ಈ ಆಹಾರಗಳನ್ನು ತಿನ್ನಿರಿ.!

* ತುಲಾ ರಾಶಿಯವರು ಸಿಂಹ ರಾಶಿ, ಧನುರ್ ರಾಶಿ ಮತ್ತು ಮೀನಾ ರಾಶಿಯವರನ್ನು ಮದುವೆ ಆಗಬಾರದು
* ವೃಶ್ಚಿಕ ರಾಶಿಯವರು ಮಕರ ರಾಶಿ, ಕುಂಭ ರಾಶಿ, ಮಿಥುನ ರಾಶಿ ಮತ್ತು ಕನ್ಯಾ ರಾಶಿಯವರನ್ನು ಮದುವೆ ಆಗಬಾರದು
* ಧನಸ್ಸು ರಾಶಿಯವರು ಮಿಥುನ ರಾಶಿ ಹಾಗೂ ಕನ್ಯಾ ರಾಶಿಯವರನ್ನು ಮದುವೆಯಾಗಬಾರದು.

* ಮಕರ ರಾಶಿಯವರು ಸಿಂಹ ರಾಶಿ, ಕರ್ಕಾಟಕ ರಾಶಿ, ಮೇಷ ರಾಶಿ ಮತ್ತು ವೃಶ್ಚಿಕ ರಾಶಿಯವರನ್ನು ಮದುವೆಯಾಗಬಾರದು.
* ಕುಂಭ ರಾಶಿಯವರು ಸಿಂಹ ರಾಶಿ, ಕರ್ಕಾಟಕ ರಾಶಿ, ಮೇಷ ರಾಶಿ ಮತ್ತು ವೃಶ್ಚಿಕ ರಾಶಿಯವರನ್ನು ಮದುವೆಯಾಗಬಾರದು.
* ಮೀನ ರಾಶಿಯವರು ಕನ್ಯಾ ರಾಶಿ ಮತ್ತು ಮಿಥುನ ರಾಶಿಯವರ ಜೊತೆ ಮದುವೆ ಆಗದೆ ಇರುವುದೇ ಉತ್ತಮ.

3 ಒಲೆ ಇರುವ ಗ್ಯಾಸ್ ಸ್ಟವ್ ಬಳಸುವವರು ತಪ್ಪದೆ ನೋಡಿ.!

 

ನಮ್ಮ ಶಾಸ್ತ್ರಗಳಲ್ಲಿ ಶಕುನಗಳ ಬಗ್ಗೆ ಕೂಡ ತಿಳಿಸಲಾಗಿದೆ ಮತ್ತು ಸಂಖ್ಯೆಗಳ ವಿಚಾರವಾಗಿ ಕೂಡ ನವಗ್ರಹಗಳನ್ನು ಹೋಲಿಸಿ ಸಂಖ್ಯಾಶಾಸ್ತ್ರದಲ್ಲಿ ಮಾತನಾಡಲಾಗುತ್ತದೆ. ಆದರೆ ಕೆಲವರು ಮಾತ್ರ ಒಂದಕ್ಕೊಂದು ಸಂಬಂಧ ಇಲ್ಲದಂತೆ ತಮಗೆ ಗೊತ್ತಿರುವ ಬುದ್ಧಿ ಮಟ್ಟಕ್ಕೆ ತಿಳಿದಿದ್ದನ್ನು ಕುಲಂಕುಶವಾಗಿ ತಿಳಿಯದೆ ಬಾಯಿಗೆ ಬಂದದ್ದನ್ನು ಹೇಳುತ್ತಿರುತ್ತಾರೆ.

ಇದಕ್ಕೆ ಯಾವುದೇ ವೈಜ್ಞಾನಿಕ ಕಾರಣಗಳಾಗಲಿ ಅಥವಾ ವಿಮರ್ಶೆಗಳಾಗಲಿ ಸರಿಯಾಗಿ ಸಿಗುವುದಿಲ್ಲ. ಇಂತಹವುಗಳನ್ನು ನಂಬಿ ನಾವು ವಿಷಯ ಸರಿಯಾಗಿದ್ದರೂ ಅನೇಕರು ಅನುಮಾನ ಮನಸ್ಸಿನಲ್ಲಿ ಇಟ್ಟುಕೊಂಡು ಬದುಕುತ್ತಾ ಏನೇ ಆದರೂ ಇದೇ ಕಾರಣ ಎಂದುಕೊಂಡು ತಪ್ಪು ತಿಳಿದುಕೊಳ್ಳುತ್ತೇವೆ.

ಇಂತಹ ತಪ್ಪುಗಳಲ್ಲಿ ಸಂಖ್ಯೆ ಮೂರನ್ನು ದುರಾದೃಷ್ಟದ ಸಂಖ್ಯೆ ಎಂದು ಸೂಚಿಸುವುದು ಕೂಡ ಸೇರಿದೆ. ಮೂರು ಬರ್ನರ್ ಇರುವ ಸ್ಟೌವ್ ತರಬಾರದು ಮೂರು ಸಂಖ್ಯೆಯ ಮನೆ ಅಥವಾ ಸೈಟ್ ಕೊಂಡುಕೊಂಡರೆ ಕಷ್ಟ ಇಂತಹ ಮೂಢನಂಬಿಕೆಗಳು ಇವೆ. ಇದಕ್ಕೆಲ್ಲ ಸ್ಪಷ್ಟತೆಯನ್ನು ಅಥವಾ ಇದು ನಿಜವೇ ಎನ್ನುವ ವಿಷಯವನ್ನು ಈ ಲೇಖನದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ.

ಈ ಸುದ್ದಿ ಓದಿ:- ನಿಮ್ಮ ಮನೆಯ ಈ 4 ಜಾಗದಲ್ಲಿ ಯಾರಿಗೂ ಹೇಳದೆ ರಹಸ್ಯವಾಗಿ ಈ 4 ವಸ್ತುಗಳನ್ನು ಇಡಿ, ಧನಾಕರ್ಷಣೆಯಾಗುತ್ತದೆ. ದೈವಬಲದಿಂದ ಸಾಲ ಕಳೆದು ಶ್ರೀಮಂತರಾಗುವುದು ಗ್ಯಾರೆಂಟಿ…

ಖಂಡಿತವಾಗಿಯೂ ಶಕುನ ಮತ್ತು ಮೂರು ಎನ್ನುವ ಸಂಖ್ಯೆಗೆ ಯಾವುದೇ ಸಂಬಂಧ ಇಲ್ಲ. ಯಾಕೆಂದರೆ ಮೂರು ಎನ್ನುವುದು ಗುರು ಗ್ರಹಕ್ಕೆ ಸಂಬಂಧ ಪಟ್ಟ ಸಂಖ್ಯೆ ಆಗಿದೆ ಮತ್ತು ಗುರುಬಲ ಇಲ್ಲದೆ ಇದ್ದರೆ ಜೀವನದಲ್ಲಿ ಮನೆ ಕಟ್ಟಿಸುವ ಯೋಗವಾಗಲಿ, ಆಸ್ತಿ ಮಾಡುವ ಯೋಗವಾಗಲಿ, ಮದುವೆಯಾಗಲಿ, ಮಕ್ಕಳಾಗಲಿ ಎಲ್ಲವದಕ್ಕೂ ತೊಂದರೆ ಆಗುತ್ತದೆ.

ಇಂತಹ ಸಂಖ್ಯೆಯನ್ನು ಅಪಶಕುನ ಎಂದು ಭಾವಿಸುವುದೇ ಬಹಳ ದೊಡ್ಡ ತಪ್ಪು. ಅಲ್ಲದೆ ನಮ್ಮ ಸಂಸ್ಕೃತಿಯಲ್ಲಿ ಸಂಖ್ಯೆ ಮೂರಕ್ಕೆ ಬಹಳ ಶ್ರೇಷ್ಠ ಸ್ಥಾನವನ್ನು ನೀಡಿದ್ದೇವೆ ನಮ್ಮ ಅನೇಕ ಆಚರಣೆಗಳಲ್ಲಿ ಸಂಖ್ಯೆ ಮೂರು ನಮ್ಮ ಒಳಗೆ ಹಾಸು ಹೊಕ್ಕಾಗಿ ಹೋಗಿದೆ.

ನಾವು ತ್ರಿಮೂರ್ತಿಗಳು ಎಂದು ಮೂರು ಜನರನ್ನು ಸೇರಿಸಿ ಕರೆಯುತ್ತೇವೆ ಮತ್ತು ಬೆಳಗ್ಗೆ ಎದ್ದು ಹೇಳುವ ಕರಾಗ್ರೇ ವಸತೇ ಲಕ್ಷ್ಮಿ ಮಂತ್ರದಲ್ಲೂ ಕೂಡ ಲಕ್ಷ್ಮಿ ಗೌರಿ ಶಾರದೆ ಮೂರು ದೇವಿಯರನ್ನು ನೆನೆಯುತ್ತೇವೆ. ಗಾಯತ್ರಿ ಮಂತ್ರವನ್ನು ಮೂರು ಬಾರ ಬೋಧಿಸಲಾಗುತ್ತದೆ.

ಈ ಸುದ್ದಿ ಓದಿ:- ಬಡ ಹಾಗೂ ಮಧ್ಯಮ ವರ್ಗದವರಿಗೆ ಸರ್ಕಾರದಿಂದ ಬಂಪರ್ ಗಿಫ್ಟ್.! ರೇಷನ್ ಕಾರ್ಡ್ ಇದ್ದವರಿಗೆ 5 ಲಕ್ಷ, ಇಲ್ಲದವರಿಗೆ 1.5 ಲಕ್ಷ ಉಚಿತ.!

ಶಾಂತಿ ಮಂತ್ರವನ್ನು ಓಂ ಶಾಂತಿ ಶಾಂತಿ ಶಾಂತಿಃ ಎಂದು ಮೂರು ಬಾರಿ ಹೇಳಲಾಗುತ್ತದೆ, ಮೂರು ಗಂಟಿನಿಂದ ಮದುವೆ ಎನ್ನುವ ಪವಿತ್ರ ಸಂಬಂಧ ಏರ್ಪಡುತ್ತದೆ, ಕನ್ಯಾ ದಾನ ಮಾಡುವಾಗ ಮೂರು ಬಾರಿ ಹಾಲು ಹಾಕಿ ಧಾರೆ ಎರೆಲಾಗುತ್ತದೆ, ಮಗುವಿಗೆ ನಾಮಕರಣ ಮಾಡುವಾಗ ಕಿವಿಯಲ್ಲಿ ಮೂರು ಬಾರಿ ಹೆಸರು ಹೇಳುತ್ತಾರೆ.

ನಮ್ಮ ನಂಬಿಕೆಗಳ ಪ್ರಕಾರ ಮೂರು ಲೋಕವಿದೆ ಶಿವನಿಗೆ ಮೂರು ಕಣ್ಣುಗಳಿವೆ ಮತ್ತು ಶಿವನನ್ನು ಆರಾಧನೆ ಮಾಡುವ ಶಿವ ಭಕ್ತರು ಹಣೆಯಲ್ಲಿ ಧರಿಸುವ ವಿಭೂತಿಯಲ್ಲಿ 3 ರೇಖೆಗಳು ಇರುತ್ತವೆ, ಗುಣಗಳನ್ನು ಕೂಡ ಸಾತ್ವಿಕ ರಜಸ್ ಮತ್ತು ತಮಸ್ಸು ಎಂಬ ಮೂರು ಸ್ವರೂಪದಲ್ಲಿ ಅಳೆಯಲಾಗುತ್ತದೆ ಮತ್ತು ಗಣಗಳನ್ನು ಕೂಡ ರಾಕ್ಷಸ ದೇವ ಮತ್ತು ಮನುಷ್ಯ ಗಣ ಎಂದು ಮೂರು ಬಗೆಯಲ್ಲಿ ಹೇಳಲಾಗುತ್ತದೆ.

ಹೀಗೆ ಮೂರು ಎನ್ನುವ ಸಂಖ್ಯೆಗೆ ಇರುವ ಪ್ರಾಮುಖ್ಯತೆಯನ್ನು ಹೇಳುತ್ತಾ ಹೋದರೆ ದೊಡ್ಡಪಟ್ಟಿಯೇ ಬೆಳೆಯುತ್ತದೆ. ಹಾಗಾಗಿ ಇಷ್ಟೆಲ್ಲ ಒಳ್ಳೆಯ ಸಂಖ್ಯೆ ಆಗಿರುವ ಮತ್ತು ಇಷ್ಟೆಲ್ಲ ಪ್ರಾಮುಖ್ಯತೆ ನೀಡಲಾಗಿರುವ ಮೂರು ಸಂಖ್ಯೆಯು ಮನೆ ಅಥವಾ ಸೈಟ್ ಅಲ್ಲಿ ಬಂದರೆ ಅದನ್ನು ಖರೀದಿಸುವುದರಲ್ಲಿ ಯಾವುದೇ ದೋಷ ಇಲ್ಲ ಎಂದು ಬಲವಾಗಿ ನಂಬಬಹುದು.

ಈ ಸುದ್ದಿ ಓದಿ:- ವೀಳ್ಯದೆಲೆ ಹಾಗೂ ಸುಣ್ಣದಿಂದ ಸಾಲಕ್ಕೆ ಮುಕ್ತಿ ಸಿಗುತ್ತದೆ. ಎಲೆ ಮೇಲೆ ಹೀಗೆ ಬರೆದು 21 ದಿನ ಈ ಸ್ಥಳದಲ್ಲಿ ಇಟ್ಟರೆ ಸಾಕು.!

ಹಾಗೆ ಮನೆಯಲ್ಲೂ ಕೂಡ ಮೂರು ಒಲೆಗಳು ಇರುವ ಗ್ಯಾಸ್ ಬರ್ನರ್ ಬಳಸಿದರೆ ಯಾವುದೇ ತೊಂದರೆಯೂ ಆಗುವುದಿಲ್ಲ, ತಪ್ಪು ಕೂಡ ಅಲ್ಲ. ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬದುಕಿ ಮತ್ತು ಧರ್ಮ ಮಾರ್ಗದಲ್ಲಿ ನಡೆಯಿರಿ, ಅದೇ ದೊಡ್ಡ ಸಮಾಧಾನ ಹಾಗೂ ಯಾವುದನ್ನೇ ವಿಷಯ ಕೇಳಿದಾಗ ನಿಧಾನಕ್ಕೆ ವಿಚಾರಣೆ ಮಾಡಿ ನಿರ್ಧಾರಕ್ಕೆ ಬನ್ನಿ.

ನಿಮ್ಮ ಮನೆಯ ಈ 4 ಜಾಗದಲ್ಲಿ ಯಾರಿಗೂ ಹೇಳದೆ ರಹಸ್ಯವಾಗಿ ಈ 4 ವಸ್ತುಗಳನ್ನು ಇಡಿ, ಧನಾಕರ್ಷಣೆಯಾಗುತ್ತದೆ. ದೈವಬಲದಿಂದ ಸಾಲ ಕಳೆದು ಶ್ರೀಮಂತರಾಗುವುದು ಗ್ಯಾರೆಂಟಿ…

ಪ್ರತಿಯೊಬ್ಬರಿಗೂ ಕೂಡ ತಾವು ಹೆಚ್ಚು ಹಣ ಹೊಂದಿರಬೇಕು ಎನ್ನುವ ಆಸೆ ಇರುತ್ತದೆ. ಯಾಕೆಂದರೆ ಹಣದ ಬಲ ಇದ್ದರೆ ಯಾವ ಕಷ್ಟಗಳನ್ನು ಬೇಕಾದರೂ ಎದುರಿಸುವ ಧೈರ್ಯ ಬರುತ್ತದೆ. ಆದರೆ ಕೆಲವರ ಅದೃಷ್ಟ ಹೇಗಿರುತ್ತದೆ ಎಂದರೆ ಎಷ್ಟು ದುಡಿದರೂ ಕೈಗೆ ಹಣ ಸೇರುವುದಿಲ್ಲ ಬಂದ ಹಣವೆಲ್ಲ ಸಾಲ ಕಟ್ಟುವುದರಲ್ಲಿ ಮುಗಿದು ಅವರಿಗೆ ಬದುಕು ಬೇಸರವಾಗಿರುತ್ತದೆ.

ಕೈಯಲ್ಲಿ ಹಣ ಓಡಾಡುತ್ತಿದ್ದಾಗ ಮನೆಯಲ್ಲಿ ಹಣ ಉಳಿಯುತ್ತಿದ್ದಾಗ ಮಾತ್ರ ಹೆಚ್ಚು ದುಡಿಯುವ ಚೈತನ್ಯ ಬರುತ್ತದೆ ಇಲ್ಲವಾದಲ್ಲಿ ನೆಮ್ಮದಿ ಕಡಿಮೆ ನಿಮಗೂ ಕೂಡ ಈ ರೀತಿ ಹಣಕಾಸಿನ ತೊಡಕು ಉಂಟಾಗಿದ್ದರೆ ಇವುಗಳನ್ನು ಪರಿಹರಿಸಿಕೊಳ್ಳಲು ನಾವು ಹೇಳುವ ಒಂದು ಸರಳ ಪರಿಹಾರ ಮಾಡಿ ಸಾಕು ನಿಮ್ಮ ಮನೆಯ ನಾಲ್ಕು ಜಾಗಗಳಲ್ಲಿ ನಾವು ಹೇಳುವ ಈ ನಾಲ್ಕು ವಸ್ತುಗಳನ್ನು ಇಟ್ಟು ನಂತರ ನಡೆಯುವ ಚಮತ್ಕಾರವನ್ನು ನೀವೇ ನೋಡಿ.

* ನಿಮ್ಮ ಮನೆಯ ಸಿಂಹದ್ವಾರ ಅಂದರೆ ಮನೆಯ ಮುಖ್ಯ ದ್ವಾರವು ತಾಯಿ ಮಹಾಲಕ್ಷ್ಮಿ ಪ್ರವೇಶಿಸುವ ಜಾಗವಾಗಿದೆ. ಹೊಸ್ತಿಲಿನ ಒಳಗೆ ಮೇಲ್ಬಾಗದಲ್ಲಿ ನೀವು ನವಧಾನ್ಯದ ಗಂಟನ್ನು ಕಟ್ಟಬೇಕು ಹೇಗೆಂದರೆ ಒಂದು ಶುಭ ಶುಕ್ರವಾರದ ದಿನದಂದು ಬೆಳಗ್ಗೆ 6:00 ರಿಂದ 7:30ರ ಒಳಗೆ ದೇವರ ಕೋಣೆಯಲ್ಲಿ ಮನೆ ದೇವರಿಗೆ ಹಾಗೂ ತಾಯಿ ಮಹಾಲಕ್ಷ್ಮಿಗೆ ಪೂಜೆ ಮಾಡಿ.

ಈ ಸುದ್ದಿ ಓದಿ:- 100 ವರ್ಷ ಆದರೂ ಹಾರ್ಟ್ ಅಟ್ಯಾಕ್ ಆಗಬಾರದು ಹೃದಯ ವೀಕ್ನೆಸ್ ಆಗಬಾರದು ಎಂದರೆ ಈ ಆಹಾರಗಳನ್ನು ತಿನ್ನಿರಿ.!

ನಂತರ ಒಂದು ಹಳದಿ ವಸ್ರ್ತವನ್ನು ತೆಗೆದುಕೊಂಡು ಅದಕ್ಕೆ ನವಧಾನ್ಯಗಳನ್ನು ಹಾಕಿ ಸ್ವಲ್ಪ ಅಕ್ಷತೆ ಹಾಕಿ ಗಂಟನ್ನು ಕಟ್ಟಿ ಇದರ ಮೇಲೆ ಅರಿಶಿನ ಕುಂಕುಮ ಹೂವು ಇಟ್ಟು ಪೂಜೆ ಮಾಡಿ ಭಕ್ತಿಯಿಂದ ನಿಮ್ಮ ಮನೆಯಲ್ಲಿ ಹಣ ಉಳಿಯುವಂತೆ ಧನಧಾನ್ಯ ತುಂಬುವಂತೆ ಆಗಲಿ ಎಂದು ಪ್ರಾರ್ಥಿಸಿ ಮನೆಯ ಒಳಗೆ ಹೊಸ್ತಿಲಿನ ಮೇಲ್ಭಾಗದಲ್ಲಿ ಕಟ್ಟಬೇಕು.

* ಮನೆಯ ಅಡುಗೆ ಕೋಣೆ ಕೂಡ ಬಹಳ ಮುಖ್ಯವಾದ ಜಾಗ ತಾಯಿ ಮಹಾಲಕ್ಷ್ಮಿಗೆ ಪ್ರಿಯವಾದ ಜಾಗವು ಹೌದು. ಶುಕ್ರವಾರದಂದು ಬೆಳಗ್ಗೆ 6:00 – 7:00 ರ ಒಳಗೆ ಒಂದು ಬಾರಿ, ಮಧ್ಯಾಹ್ನ 2:00 ರಿಂದ 3:00 ರ ಒಳಗೆ ಒಂದು ಬಾರಿ ಹಾಗೂ ಸಂಜೆ 7:00 ರಿಂದ 8:00ರ ಸಮಯದಲ್ಲಿ ಒಂದು ಬಾರಿ ಅಡುಗೆ ಕೋಣೆಯಲ್ಲಿ ಒಂದು ಬಟ್ಟಲಿನಲ್ಲಿ ಕಲ್ಲುಪ್ಪು ತುಂಬಿ ಅದರ ಮೇಲೆ ಅರಿಶಿಣದ ಕೊಂಬು ಹಾಕಿ ಇಡಬೇಕು.

ಹೀಗೆ ಒಂದರ ಪಕ್ಕ ಒಂದರಂತೆ ಮೂರು ತಟ್ಟೆಗಳಲ್ಲಿ ಕಲ್ಲುಪ್ಪು ಇಟ್ಟು ಆ ದಿನಪೂರ್ತಿ ಅಲ್ಲೇ ಇಡಲು ಬಿಡಬೇಕು. ಮರುದಿನ ಬೆಳಗ್ಗೆ ಯಾರು ತುಳಿಯದ ಜಾಗದಲ್ಲಿ ಅಥವಾ ಗಿಡದ ಬುಡದಲ್ಲಿ ಇವುಗಳನ್ನು ವಿಸರ್ಜಿಸಬೇಕು ಹೀಗೆ ಮಾಡುವುದರಿಂದ ಕೂಡ ನಿಮ್ಮ ಮನೆಯಲ್ಲಿ ಧನಧಾನ್ಯದ ಅಭಿವೃದ್ಧಿ ಆಗುತ್ತದೆ.

ಈ ಸುದ್ದಿ ಓದಿ:-ನೀರಿಗೆ ಈ ಎರಡು ವಸ್ತು ಮಿಕ್ಸ್ ಮಾಡಿ ಬಾಗಿಲ ಬಳಿ ಹಾಕಿದರೆ ಸಾಕು ತಾಯಿ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ.

* ಶುಕ್ರವಾರದ ಒಂದು ಹಳದಿ ಅಥವಾ ಬಿಳಿ ವಸ್ತ್ರದಲ್ಲಿ ಸ್ವಲ್ಪ ಪಚ್ಚ ಕರ್ಪೂರ ಹಾಗೂ 5 ಏಲಕ್ಕಿಯನ್ನು ಗಂಟು ಕಟ್ಟಿ ದೇವರ ಕೋಣೆಯಲ್ಲಿ ತಾಯಿ ಮಹಾಲಕ್ಷ್ಮಿ ಫೋಟೋ ಮುಂದೆ ಇಟ್ಟು ಪ್ರಾರ್ಥನೆ ಮಾಡಿ ನಂತರ ತಂದು ಅದನ್ನು ಬಿರುವಿನಲ್ಲಿ ನೀವು ಹಣ ಇಡುವ ಡಬ್ಬದಲ್ಲಿ ಅಥವಾ ಪರ್ಸ್ ನಲ್ಲಿ ಹಾಕಿಡಬೇಕು.

* ಮನೆಯಲ್ಲಿ ಪ್ರಮುಖವಾದ ಜಾಗಗಳಲ್ಲಿ ದೇವರು ಕೋಣೆಯು ಮೊದಲನೆಯದ್ದು ದೇವರ ಕೋಣೆಯಲ್ಲಿ ಇಡಬೇಕಾದ ವಸ್ತು ಯಾವುದು ಎಂದರೆ ಶುದ್ಧ ಹಾಲು. ಹೇಗೆಂದರೆ ಪ್ರತಿದಿನವೂ ಕೂಡ ನೀವು ದೇವರ ಪೂಜೆ ಮಾಡಿದಾಗ ಹಾಗಷ್ಟೇ ಹಸುವಿನಿಂದ ಕರೆದು ತಂದ ಹಾಲು ಅಥವಾ ಅನುಕೂಲತೆ ಇಲ್ಲದವರು ಅಂಗಡಿಯಿಂದ ತಂದ ಹಾಲನ್ನು ಮೊದಲಿಗೆ ದೇವರ ನೈವೇದ್ಯಕ್ಕಾಗಿ ಎತ್ತಿಹಿಡಬೇಕು.

ಯಾವುದೇ ಕಾರಣಕ್ಕೂ ಇದನ್ನು ಕಾಯಿಸಿರಬಾರದು ಹೀಗೆ ಹಸಿ ಹಾಲನ್ನು ದೇವರ ಕೋಣೆಯಲ್ಲಿ ಇಟ್ಟು ದೇವರಿಗೆ ನೈವೇದ್ಯ ಮಾಡುವುದರಿಂದ ಮುಕ್ಕೋಟಿ ದೇವತೆಗಳು ಪ್ರಸನ್ನರಾಗುತ್ತಾರೆ. ಈಶ್ವರನಿಗೆ, ಗಣೇಶನಿಗೆ, ನಾಗನಿಗೆ, ಗೋಪಾಲನಿಗೆ ಹಾಗೂ ತಾಯಿ ಮಹಾಲಕ್ಷ್ಮಿಗೆ ಹಾಲಿನ ನೈವೇದ್ಯ ಪ್ರಿಯ. ಈ ರೀತಿ ನೀವು ಹಾಲನ್ನು ಇಟ್ಟು ಪೂಜೆ ಮಾಡಿದ್ದೇ ಆದಲ್ಲಿ ನಿಮ್ಮ ಸರ್ವ ದೋಷಗಳು ನಿವಾರಣೆಯಾಗಿ ಮನೆ ಏಳಿಗೆಯಾಗುತ್ತದೆ.

ದೇವರ ಕೋಣೆಯಲ್ಲಿ ಮಹಾಲಕ್ಷ್ಮಿ ಫೋಟೋವನ್ನು ಈ ದಿಕ್ಕು ನೋಡುವಂತೆ ಇಟ್ಟರೆ ಅಖಂಡ ಐಶ್ವರ್ಯ ಹಣ ಗೌರವ ನೆಮ್ಮದಿ ಎಲ್ಲವೂ ಪ್ರಾಪ್ತಿ.!

 

ಪ್ರತಿಯೊಂದು ಮನೆಯಲ್ಲೂ ಕೂಡ ಅದೃಷ್ಟದ ದೇವತೆಯಾದ ಹಣದ ಒಡತಿಯಾದ ತಾಯಿ ಮಹಾಲಕ್ಷ್ಮಿ ಫೋಟೋವನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡುತ್ತೇವೆ. ಕೆಲವರ ಮನೆಯಲ್ಲಿ ಮಹಾಲಕ್ಷ್ಮಿ ವಿಗ್ರಹವನ್ನು ಅಥವಾ ಕಳಶವನ್ನು ತಾಯಿ ಮಹಾಲಕ್ಷ್ಮಿ ಸ್ವರೂಪವೆಂದು ಕಂಡು ಪೂಜೆ ಮಾಡುತ್ತಾರೆ.

ಮನೆಗಳನ್ನು ವಾಸ್ತು ಪ್ರಕಾರವಾಗಿ ಕಟ್ಟಿರುವವರು ಆ ಪ್ರಕಾರವಾಗಿ ದೇವರ ಫೋಟೋಗಳನ್ನು ಇಡುತ್ತಾರೆ, ಇನ್ನು ಕೆಲವರು ತಮ್ಮ ಹಿರಿಯರು ಯಾವ ರೀತಿ ಹೇಳಿದ್ದರು ಆ ರೀತಿ ಪಾಲಿಸಿಕೊಂಡು ಬರುತ್ತಿದ್ದಾರೆ, ಇನ್ನು ಕೆಲವರು ಅನುಕೂಲತೆ ಇಲ್ಲದೆ ಇದ್ದಾಗ ಹೇಗೆ ಸಾಧ್ಯ ಹಾಗೆ ಇಟ್ಟು ಪೂಜೆ ಮಾಡುತ್ತಾರೆ. ಒಟ್ಟಾರೆಯಾಗಿ ಪ್ರತಿಯೊಂದು ಮನೆಯಲ್ಲೂ ಕೂಡ ಮಹಾಲಕ್ಷ್ಮಿ ಫೋಟೋ ಅಂತೂ ಇದ್ದೆ ಇರುತ್ತದೆ.

ಆದರೆ ತಾಯಿ ಮಹಾಲಕ್ಷ್ಮಿ ಫೋಟೋವನ್ನ ನಾವು ಮುಖ ಮಾಡಿ ಇಡುವ ದಿಕ್ಕಿನ ಆಧಾರದ ಮೇಲೂ ಕೂಡ ನಮ್ಮ ಅದೃಷ್ಟ, ದುರಾದೃಷ್ಟ ಕಷ್ಟ ನಷ್ಟಗಳು ನಿರ್ಧಾರ ಆಗುತ್ತದೆ ಎನ್ನುವುದು ಬಹುತೇಕರಿಗೆ ತಿಳಿದೇ ಇಲ್ಲ. ಹಾಗಾಗಿ ಇಂದು ನಾವು ಈ ಅಂಕಣದಲ್ಲಿ ಮನೆಯಲ್ಲಿ ಮಹಾಲಕ್ಷ್ಮಿ ಫೋಟೋ ಯಾವ ದಿಕ್ಕಿನ ಕಡೆ ಇಡಬೇಕು ಎಲ್ಲಿ ಇಟ್ಟರೆ ಏನು ಫಲ ಮತ್ತು ಯಾವ ಫಲಕ್ಕಾಗಿ ಯಾವ ದಿಕ್ಕಿನಲ್ಲಿ ಇಟ್ಟು ಹೇಗೆ ಪೂಜಿಸಬೇಕು ಮತ್ತೆ ಯಾವ ಕಡೆ ಇಡುವುದರಿಂದ ದೋಷಗಳು ಉಂಟಾಗಿ ಕ’ಷ್ಟಗಳು ಬರುತ್ತದೆ ಎನ್ನುವುದನ್ನು ತಿಳಿಸುತ್ತಿದ್ದೇವೆ.

ಈ ಸುದ್ದಿ ಓದಿ:- ಬೆಳ್ಳಂ ಬೆಳಗ್ಗೆ ಮಪಾಲಿಸುತ್ತಾರೆ.ಡ್ ನ್ಯೂಸ್, ಎಲ್ಲಾ ಮಹಿಳೆಯರಿಗೂ ಮಹಾಲಕ್ಷ್ಮಿ ಯೋಜನೆಯಡಿ 1 ಲಕ್ಷ ಕೊಡುವುದಾಗಿ ಸರ್ಕಾರದ ಭರವಸೆ…

* ಪಶ್ಚಿಮ ದಿಕ್ಕಿಗೆ ಇಟ್ಟು ಲಕ್ಷ್ಮಿ ಫೋಟೋ ಪೂರ್ವ ದಿಕ್ಕಿಗೆ ನೋಡುತ್ತಿದ್ದರೆ ತಾಯಿ ಮಹಾಲಕ್ಷ್ಮಿ ಜೊತೆ ಶಾರದಾ ಅಮ್ಮನವರ ಆಶೀರ್ವಾದ ಕೂಡ ದೊರೆಯುತ್ತದೆ. ಇದರಿಂದ ಮನೆಯವರ ಬುದ್ಧಿಶಕ್ತಿ ಚುರುಕಾಗುತ್ತದೆ, ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ, ಮನೆಯಲ್ಲಿ ಕಲಿಕೆಯ ಲವಲವಿಕೆಯ ವಾತಾವರಣ ಇರುತ್ತದೆ ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿ ಹೊಂದುತ್ತಾರೆ. ನೀವು ಲೆಕ್ಕಾಚಾರ ಹಾಕಿಕೊಂಡ ಕಾರ್ಯಗಳು ಅಂತೆಯೇ ಜರುಗುತ್ತವೆ ಇಂತಹ ಫಲಗಳು ಸಿಗುತ್ತವೆ.

* ಒಂದು ವೇಳೆ ಪೂರ್ವ ದಿಕ್ಕಿನ ಕಡೆ ಲಕ್ಷ್ಮಿ ಫೋಟೋ ಇಟ್ಟು ಅದು ಪಶ್ಚಿಮ ದಿಕ್ಕನ್ನು ನೋಡುವ ರೀತಿ ಇದ್ದರೆ ನಿಮ್ಮ ಮನೆಯ ಎಲ್ಲಾ ರೀತಿಯ ವಾಸ್ತುದೋಷಗಳು ಪರಿಹಾರವಾಗುತ್ತದೆ. ನೀವು ಇರುವ ಮನೆಗೆ ವಾಸ್ತು ಸರಿ ಇಲ್ಲದೆ ಇದ್ದರೆ ಅಥವಾ ವಾಸ್ತು ಬಗ್ಗೆ ನಿಮಗೆ ತಿಳಿಯದೆ ಇದ್ದರೆ ನೀವು ಬಾಡಿಗೆ ಮನೆಗಳಲ್ಲಿ ಇದ್ದು ವಾಸ್ತು ಇಲ್ಲದಿದ್ದರೆ ಈ ರೀತಿಯಾಗಿ ಪೂರ್ವ ದಿಕ್ಕಿನಲ್ಲಿ ಫೋಟೋ ಇಟ್ಟು ಪಶ್ಚಿಮ ದಿಕ್ಕಿನ ಕಡೆ ನೋಡುತ್ತಿರುವಂತೆ ಇಡಬೇಕು.

* ಉತ್ತರಕ್ಕೆ ಇಟ್ಟು ದಕ್ಷಿಣದ ದಿಕ್ಕನ್ನು ನೋಡುತ್ತಿರುವಂತೆ ಮುಖ ಮಾಡಿ ಇಟ್ಟರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ ಮೋಕ್ಷ ಸಾಧನೆಯಲ್ಲೇ ತೊಡಗಿರುವವರು ಮಾತ್ರ ಇದನ್ನು ಪಾಲಿಸುತ್ತಾರೆ.

ಈ ಸುದ್ದಿ ಓದಿ:- ನೀರಿಗೆ ಈ ಎರಡು ವಸ್ತು ಮಿಕ್ಸ್ ಮಾಡಿ ಬಾಗಿಲ ಬಳಿ ಹಾಕಿದರೆ ಸಾಕು ತಾಯಿ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ.

* ನಿಮ್ಮ ಮನೆಯಲ್ಲಿ ಇರುವ ಹಣಕಾಸಿನ ಸಮಸ್ಯೆಗಳು ಪರಿಹಾರವಾಗಬೇಕು ಮನೆಯಲ್ಲಿ ಐಶ್ವರ್ಯ ಅಭಿವೃದ್ಧಿ ಆಗಬೇಕು, ಸಾಲಗಳು ಕಡಿಮೆಯಾಗಬೇಕು, ಮನೆಯಲ್ಲಿ ಹಣ ನಿಲ್ಲುವಂತೆ ಲಕ್ಷ್ಮಿ ದೇವಿ ಸ್ಥಿರವಾಗಿ ನಿಲ್ಲುವಂತೆ ಆಗಬೇಕು ಎಂದು ಬಯಸುವವರು ಮನೆಯ ದಕ್ಷಿಣಕ್ಕೆ ಲಕ್ಷ್ಮಿ ದೇವಿ ಫೋಟೋ ಇಟ್ಟು, ಉತ್ತರವನ್ನು ನೋಡುವಂತೆ ಮುಖ ಮಾಡಿ ಇಡಬೇಕು. ಉತ್ತರ ದಿಕ್ಕನ್ನು ಕುಬೇರನ ಸ್ಥಾನ ಎಂದು ಹೇಳುತ್ತಾರೆ ಹೀಗಾಗಿ ಹಣಕಾಸಿಗೆ ಸಂಬಂಧಪಟ್ಟ ಹಾಗೆ ಬಹಳ ಉತ್ತಮ ಫಲಗಳು ಸಿಗುತ್ತವೆ.

* ನೈರುತ್ಯ ದಿಕ್ಕನ್ನು ನೋಡುವಂತೆ ಈಶಾನ ದಿಕ್ಕಿನಲ್ಲಿ ಫೋಟೋವನ್ನು ಇಟ್ಟರೆ ಆ ಕುಟುಂಬದಲ್ಲಿ ಹಿರಿಯರ ಮಾತನ್ನು ಎಲ್ಲರೂ ಕೇಳುತ್ತಾರೆ ಮನೆ, ಯಜಮಾನಿ ಮಾತಿನಂತೆ ಮನೆ ನಡೆಯುತ್ತದೆ ಈ ರೀತಿಯ ಫಲಗಳು ಸಿಗುತ್ತವೆ.

* ಲಕ್ಷ್ಮಿ ದೇವಿಯು ಆಗ್ನೇಯ ದಿಕ್ಕನ್ನು ನೋಡುವಂತೆ ಆಗ್ನೇಯದ ಕಡೆ ಮುಖ ಮಾಡಿ ವಾಯುವ್ಯ ದಿಕ್ಕಿನಲ್ಲಿ ಫೋಟೋ ಇಟ್ಟರೆ ಮನೆ ಮಕ್ಕಳ ವಿಚಾರದಲ್ಲಿ ಒಳ್ಳೆಯದಾಗುತ್ತದೆ ವಿದ್ಯಾಭ್ಯಾಸ ವ್ಯಾಪಾರ ವ್ಯವಹಾರ ಮದುವೆ ಎಲ್ಲ ವಿಚಾರದಲ್ಲೂ ಕೂಡ ಮಕ್ಕಳಿಗೆ ಶುಭಫಲಗಳು ಸಿಗುತ್ತವೆ ಎನ್ನುವ ಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ಮಹಾವಿಷ್ಣು ಗರುಡನಿಗೆ ಹೇಳಿದ ಈ ಆರು ವಸ್ತುಗಳನ್ನು ನೆಲದ ಮೇಲೆ ಇಟ್ಟರೆ ದೇವತೆಗಳು ಪೂಜೆ ಸ್ವೀಕರಿಸುವುದಿಲ್ಲ ಲಕ್ಷ್ಮಿ ನೆಲೆಸದೆ ಅಷ್ಟಕಷ್ಟಗಳು ಬರುತ್ತವೆ.!

ಹಿರಿಯರು ಋಷಿಮುನಿಗಳು ನಮಗೆ ಯಾವುದೇ ವಿಚಾರವನ್ನು ಭೋದಿಸಿದ್ದರು ಅದರಲ್ಲಿ ಒಂದು ಅರ್ಥ ಇರುತ್ತದೆ ಹಾಗೂ ಉದ್ದೇಶವಿರುತ್ತದೆ, ಇದೇ ರೀತಿ ಪುರಾಣಗಳಲ್ಲಿ ಕೂಡ. ಅಷ್ಟ ವಿಧ ಪುರಾಣಗಳಲ್ಲಿ ಜೀವನಕ್ಕೆ ಬಹಳ ಮುಖ್ಯವಾದ ಸಂಗತಿಗಳನ್ನು ತಿಳಿಸಲಾಗಿದೆ ಇದರಲ್ಲಿ ಸಾಕ್ಷಾತ್ ದೇವಾನುದೇವತೆಗಳೇ ಹೇಳಿರುವ ವಿಷಯಗಳೂ ಕೂಡ ಸೇರಿವೆ.

ಇವುಗಳಲ್ಲಿ ಗರುಡ ಪುರಾಣವೂ ಕೂಡ ಒಂದು. ಗರುಡ ಪುರಾಣದಲ್ಲಿ ಮಹಾವಿಷ್ಣು ಗರುಡನಿಗೆ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಸತ್ತ ನಂತರದ ಆತ್ಮದ ಪಯಣದ ಮಾತ್ರ ಬಗ್ಗೆ ಮಾತ್ರವಲ್ಲದೆ ಬದುಕುವ ರೀತಿಯ ಬಗ್ಗೆಯೂ ಕೂಡ ಕೆಲ ವಿಚಾರಗಳನ್ನು ಹೇಳಿದ್ದಾರೆ. ಮನುಷ್ಯನ ಆಚಾರ ವಿಚಾರ ನಡೆವಳಿಕೆ ಆತನ ಮತ್ತು ಭಗವಂತನೊಂದಿಗಿನ ಸಂಬಂಧ, ಭಕ್ತಿ, ಶ್ರದ್ಧೆ, ಮುಕ್ತಿ ಇದೆಲ್ಲವನ್ನು ಒಳಗೊಂಡ ವಿಷಯಗಳು ಈ ಪುರಾಣಗಳಲ್ಲಿ ಇವೆ.

ಇದರಲ್ಲಿ ಪೂಜೆಗೆ ಸಂಬಂಧಪಟ್ಟ ಹಾಗೆ ಮಹಾವಿಷ್ಣು ಹೇಳಿದ ಬಹುಮುಖ್ಯ ವಿಷಯದ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇನೆ. ಅದೇನೆಂದರೆ ಮಹಾ ವಿಷ್ಣು ಗರುಡನಿಗೆ ಹೇಳಿರುವ ಪ್ರಕರಣವಾಗಿ ಪವಿತ್ರವಾದ ಈ ಆರು ವಸ್ತುಗಳನ್ನು ಯಾರ ಮನೆಯಲ್ಲಿ ನೆಲದ ಮೇಲೆ ಇಟ್ಟಿರುತ್ತಾರೆ‌ ಅಂತಹ ಮನೆಗಳಲ್ಲಿ ತಾಯಿ ಮಹಾಲಕ್ಷ್ಮಿ ನೆಲೆಸುವುದಿಲ್ಲ.

ಈ ಸುದ್ದಿ ಓದಿ:- 33 ಕೋಟಿ ದೇವತೆಗಳು ನೆಲೆಸಿರುವ ಗೋ ಪೂಜೆ ಮಾಡುವ ವಿಧಾನ ಹೇಗೆ.? ಯಾವೆಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ನೋಡಿ.!

ಹಾಗೂ ಆ ಮನೆಗಳಲ್ಲಿ ಮಾಡುವ ಪೂಜೆಗಳು ಯಾವುದೇ ದೇವತೆಗಳಿಗೆ ಸಲ್ಲುವುದಿಲ್ಲ ಯಾವ ವಸ್ತುಗಳು ಕಾರಣಗಳು ಏನು ಮತ್ತು ಯಾವ ರೀತಿ ಇಡಬೇಕು ಎನ್ನುವ ವಿಚಾರವನ್ನು ಹೀಗಿದೆ. ಇಂತಹ ಉಪಯುಕ್ತ ಮಾಹಿತಿಯನ್ನು ತಪ್ಪದೇ ನಿಮ್ಮ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

1. ಶಂಖ:- ಶಂಖವನ್ನು ಮಹಾವಿಷ್ಣು ಮಾತ್ರವಲ್ಲದೆ ಮಹಾಲಕ್ಷ್ಮಿಯು ಕೂಡ ಒಂದು ಕೈಯಲ್ಲಿ ಹಿಡಿದುಕೊಂಡಿರುತ್ತಾರೆ. ಹಾಗಾಗಿ ಶಂಕ ಚಕ್ರ ಗದಾ ಹಸ್ತೆ ಎಂದು ನಾರಾಯಣಿ ಸ್ತೋತ್ರ ಮಾಡುತ್ತೇವೆ. ಶಂಖ ನಾದ ಒಂದು ಪವಿತ್ರವಾದ ಶಬ್ದವಾಗಿದೆ, ಇದು ಮೊಳಗದೆ ವಿಷ್ಣುವಿನ ಪೂಜೆ ಆಗುವುದಿಲ್ಲ.

ಪೂಜೆ ಮಾತ್ರವಲ್ಲದೇ ಸಮರ ಕಾಲದಲ್ಲಿ ಕೂಡ ಶಂಖನಾದಮೇಲೆ ಯುದ್ಧ ಆರಂಭವಾಗುವುದು. ಇಷ್ಟು ಪವಿತ್ರವಾದ ಈ ವಸ್ತುವನ್ನು ನೆಲದ ಮೇಲೆ ಇಡುವುದು ಅದಕ್ಕೆ ಅಪಶಕುನ ಮಾಡಿದಂತೆ ಹಾಗಾಗಿ ಇಂತಹ ಮನೆಗಳಲ್ಲಿ ಮಾಡುವ ಪೂಜೆಗಳು ದೇವರಿಗೆ ಸಲ್ಲುವುದಿಲ್ಲ.

ಈ ಸುದ್ದಿ ಓದಿ:- ವೀಳ್ಯದೆಲೆ ಹಾಗೂ ಸುಣ್ಣದಿಂದ ಸಾಲಕ್ಕೆ ಮುಕ್ತಿ ಸಿಗುತ್ತದೆ. ಎಲೆ ಮೇಲೆ ಹೀಗೆ ಬರೆದು 21 ದಿನ ಈ ಸ್ಥಳದಲ್ಲಿ ಇಟ್ಟರೆ ಸಾಕು.!

* ಘಂಟೆ:- ಶಂಖನಾದದಷ್ಟೇ ಘಂಟೆಯ ನಾದಕ್ಕೂ ಪ್ರಾಮುಖ್ಯತೆ ಇದೆ. ಮನೆಯಲ್ಲಿ ದೇವರ ಪೂಜೆಗಳನ್ನು ಮಾಡುವಾಗ ದೇವಸ್ಥಾನಗಳಲ್ಲಿ ಘಂಟೆ ಶಬ್ದ ಬಾರಿಸುತ್ತಾರೆ. ಈ ಶಬ್ದಕ್ಕೆ ವಾತಾವರಣದಲ್ಲಿ ಸಕಾರಾತ್ಮಕ ತರಂಗಗಳನ್ನು ಸೃಷ್ಟಿಸುವ ಶಕ್ತಿ ಇದೆ. ಘಂಟೆಯ ಶಬ್ದವು ಮಾನಸಿಕ ಆರೋಗ್ಯದ ಮೇಲೆ ಬಹಳ ಉತ್ತಮ ಪರಿಣಾಮವನ್ನು ಬೀರುತ್ತದೆ.

ಮತ್ತು ಮನುಷ್ಯ ಹಾಗೂ ಭಗವಂತನ ನಡುವಿನ ಸಂಭಾಷಣೆಗೆ ಇದೊಂದು ಕೊಂಡಿ ಎಂದರೂ ತಪ್ಪಾಗಲಾರದು. ಪ್ರತಿ ಮನೆಯಲ್ಲಿ ಘಂಟೆ ಇರುತ್ತದೆ ಘಂಟೆಯ ತುದಿಯಲ್ಲಿ ನಾಗ ಅಥವಾ ಆಂಜನೇಯನ ರೂಪ ಇರುತ್ತದೆ. ಘಂಟೆಯನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು. ಒಂದು ಮಣೆಯ ಮೇಲೆ ಇಟ್ಟು ಪೂಜಾ ಸಮಯದಲ್ಲಿ ಬಳಸಬೇಕು ಪೂಜೆಗೂ ಮುನ್ನ ಇದಕ್ಕೂ ಸಹ ಹೂವು ನೀರು ಇಟ್ಟು ಅರಿಶಿನ ಕುಂಕುಮ ಹಚ್ಚಿ ಪೂಜಿಸಿ ನಂತರ ಶಬ್ದ ಮಾಡಲು ತೆಗೆದುಕೊಳ್ಳಬೇಕು.

ಶಿವಲಿಂಗ:- ಪ್ರತಿ ಮನೆಗಳನ್ನು ಕೂಡ ಶಿವಲಿಂಗ ಇರಲೇಬೇಕು ಪ್ರತಿದಿನ ಪೂಜೆ ಮಾಡಲು ಆಗದಿದ್ದರೂ ಸೋಮವಾರದಂದು ಆದರೂ ಹಬ್ಬ ಹುಣ್ಣಿಮೆಗಳಂದಾದರು ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ ಸರಳವಾಗಿ ಊದುಕಡ್ಡಿ ಹಚ್ಚಿ ಪಂಚಾಕ್ಷರಿ ಮಂತ್ರ ಜಪಿಸುತ್ತ ಶಿವನನ್ನು ನೆನೆಯಬೇಕು ಶಿವಲಿಂಗ ಇಲ್ಲದ ಮನೆಯಲ್ಲಿ ನೀರನ್ನು ಕೂಡ ಕುಡಿಯಬಾರದು ಎನ್ನುವ ಗಾದೆಯು ಇದೆ. ಇಂಥಹ ಪವಿತ್ರವಾದ ವಸ್ತುವನ್ನು ನೆಲಕ್ಕೆ ಇಟ್ಟ ತಕ್ಷಣ ಅದರ ಶಕ್ತಿ ಕಳೆಯುತ್ತದೆ ಹಾಗಾಗಿ ಯಾವಾಗಲೂ ಶಿವಲಿಂಗವನ್ನು ನೆಲದ ಮೇಲೆ ಇಡದೆ ಒಂದು ತಟ್ಟೆ ಅಥವಾ ಮಣೆ ಮೇಲೆ ಶುದ್ಧವಾದ ವಸ್ತ್ರದ ಮೇಲೆ ಇಟ್ಟು ಪೂಜಿಸಬೇಕು.

ಈ ಸುದ್ದಿ ಓದಿ:- 100 ವರ್ಷ ಆದರೂ ಹಾರ್ಟ್ ಅಟ್ಯಾಕ್ ಆಗಬಾರದು ಹೃದಯ ವೀಕ್ನೆಸ್ ಆಗಬಾರದು ಎಂದರೆ ಈ ಆಹಾರಗಳನ್ನು ತಿನ್ನಿರಿ.!

ದೇವರ ದೀಪಗಳು:- ಪ್ರತಿದಿನವೂ ನಾವು ದೇವರ ಮನೆಯಲ್ಲಿ ಬಳಸುವ ದೇವರ ದೀಪಗಳಿಗೆ ದೈವಿಕ ಶಕ್ತಿ ಬಂದಿರುತ್ತದೆ. ಈ ದೀಪಗಳನ್ನು ತಾತ್ಸಾರದಿಂದ ಕಾಣಬಾರದು ದೇವರ ದೀಪಗಳಿಗೆ. ಅರಿಶಿನ ಕುಂಕುಮ ಇಟ್ಟು ಹೂವಿನಿಂದ ಅಲಂಕರಿಸಿ ಹಚ್ಚಬೇಕು ದೀಪವು ಕೂಡ ಮಹಾಲಕ್ಷ್ಮಿ ಸ್ವರೂಪ ಇಂತಹ ದೀಪಗಳನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು. ದೀಪದ ಕೆಳಗೆ ಚಿಕ್ಕ ತಟ್ಟೆಯನ್ನಾದರೂ ಇಡಬೇಕು. ಮನೆ ಹೊಸ್ತಿನ ಮೇಲೆ ಅಥವಾ ತುಳಸಿ ಕಟ್ಟೆಯಲ್ಲಿ ಇಟ್ಟರು ಕೆಳಗೆ ವೀಳ್ಯದೆಲೆ ಅಥವಾ ಸೆಗಣಿ ಅಥವಾ ಚಿಕ್ಕ ತಟ್ಟೆ ಇಟ್ಟು ನಂತರ ದೀಪ ಇಡಬೇಕು

* ಹೂವು:- ದೇವರ ಪೂಜೆಗೆ ಬಳಸುವ ಹೂಗಳನ್ನು ಯಾವುದೇ ಕಾರಣಕ್ಕೂ ನೆಲಕ್ಕೆ ತಾಗಿಸಬಾರದು. ಒಮ್ಮೆ ನೆಲಕ್ಕೆ ತಾಗಿದರೆ ಭೂದೇವಿಗೆ ಸೇರಿದಂತೆ ನಂತರ ಅವುಗಳನ್ನು ದೇವರ ಪೂಜೆಗೆ ಬಳಸಬಾರದು ಹೀಗೆ ಬಳಸಿದರೆ ಅಂತಹ ಪೂಜೆಗಳು ಸಲ್ಲಿಸುವುದಿಲ್ಲ.

* ಬಂಗಾರ:- ಮನೆಯಲ್ಲಿರುವ ಚಿನ್ನ ಬೆಳ್ಳಿ ಬಂಗಾರ ಮುಂತಾದ ಒಡವೆಗಳಲ್ಲಿ ತಾಯಿ ಮಹಾಲಕ್ಷ್ಮಿ ಇರುತ್ತಾಳೆ ಎಂದು ನಂಬಲಾಗಿದೆ. ಹೀಗಾಗಿ ಹೂಗಳನ್ನು ಎಲ್ಲೆಲ್ಲಿಯೋ ಇಡುವಂತಿಲ್ಲ, ಹಾಸಿಗೆಗಳ ಮೇಲೆ ಇಡುವಂತಿಲ್ಲ ಒಂದು ವೇಳೆ ಹೀಗೆ ಮಾಡಿದರೆ ಮಹಾಲಕ್ಷ್ಮಿ ತನ್ನನ್ನು ತಾತ್ಸಾರ ಮಾಡುತ್ತಾರೆ ಎಂದು ಆ ಮನೆ ಬಿಟ್ಟು ಹೋಗುತ್ತಾರೆ ಎಂದು ಹೇಳಲಾಗುತ್ತದೆ ಹಾಗಾಗಿ ಬಂಗಾರವನ್ನು ಅಷ್ಟೇ ಪೂಜ್ಯನೀಯವಾಗಿ ಕಾಣಬೇಕು. ಒಂದು ವಸ್ತ್ರದಲ್ಲಿ ಅಥವಾ ಡಬ್ಬದಲ್ಲಿ ಹಾಕಿ ಬಚ್ಚಿಡಬೇಕು.

ರಾಜ್ಯದ ರೈತರಿಗೆ ಸರ್ಕಾರದ ಆದೇಶ, ಪಹಣಿ ಜೊತೆ ಆಧಾರ್ ಲಿಂಕ್ ಮಾಡಲು ಹೊಸ ರೂಲ್ಸ್.!

 

ರೈತರಿಗೆ (farmers) ಸರ್ಕಾರದಿಂದ ಸಾಕಷ್ಟು ಯೋಜನೆಗಳ ನೆರವು ಸಿಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (Government Schemes for farmers) ಕೃಷಿ ಕ್ಷೇತ್ರಕ್ಕಾಗಿ ದೊಡ್ಡ ಮೊತ್ತದ ಅನುದಾನವನ್ನು ಮೀಸಲಿಡುತ್ತವೆ.

ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಸಹಾಯಧನ, ಬರ ಪರಿಹಾರ, ಬೆಳೆ ಪರಿಹಾರ, ಸಬ್ಸಿಡಿಯಲ್ಲಿ ಬಿತ್ತನೆ ಬೀಜ ರಸಗೊಬ್ಬರ ವಿತರಣೆ, ರೈತನಿಗೆ ಯಂತ್ರೋಪಕರಣಗಳನ್ನು ಕೊಂಡುಕೊಳ್ಳುವುದಕ್ಕೆ ಸಬ್ಸಿಡಿ ರೂಪದ ಸಾಲ, ಕೃಷಿ ಅವಲಂಬಿತ ಕಸುಬುಗಳಾದ ಕುರಿ ಕೋಳಿ ಮೇಕೆ ಸಾಕಾಣಿಕೆ ಪಶುಸಂಗೋಪನೆಗೂ ಕೂಡ ನೆರವು ರೈತರ ಮಕ್ಕಳಿಗೆ ರೈತನಿಧಿ ಸ್ಕಾಲರ್ಶಿಪ್ ಹೀಗೆ ಸಾಕಷ್ಟು ಯೋಜನೆಗಳ ಪ್ರಯೋಜನವನ್ನು ರಾಜ್ಯದ ರೈತರು ಪಡೆಯುತ್ತಿದ್ದಾರೆ.

ಇವು ಸಣ್ಣ ಹಾಗೂ ಅತಿ ಸಣ್ಣ ರೈತರಿಗಾಗಿಯೇ ರೂಪಿಸಿರುವ ಯೋಜನೆಗಳಾದರು ರೈತರಲ್ಲದೆ ಇದ್ದವರು ಅಥವಾ ಶ್ರೀಮಂತರು ಕೂಡ ಈ ಯೋಜನೆಗಳ ಪ್ರಯೋಜನ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಅಸಲಿ ಫಲಾನುಭವಿಗಳಿಗೆ ವಂಚನೆಯಾಗಿ ಸರ್ಕಾರದ ಹಣ ದುರ್ಬಳಕೆಯಾಗುತ್ತಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿ ಓದಿ:- ಬಡ ಹಾಗೂ ಮಧ್ಯಮ ವರ್ಗದವರಿಗೆ ಸರ್ಕಾರದಿಂದ ಬಂಪರ್ ಗಿಫ್ಟ್.! ರೇಷನ್ ಕಾರ್ಡ್ ಇದ್ದವರಿಗೆ 5 ಲಕ್ಷ, ಇಲ್ಲದವರಿಗೆ 1.5 ಲಕ್ಷ ಉಚಿತ.!

ಇಂತಹ ಸಮಸ್ಯೆಗಳನ್ನು ನಿಯಂತ್ರಣಕ್ಕೆ ತರಲು ಹಾಗೂ ಸರ್ಕಾರದಿಂದ ನೇರವಾಗಿ ರೈತನಿಗೆ ಸಿಗಬೇಕಾದ ಯಾವುದೇ ಅನುದಾನವು ಮಧ್ಯವರ್ತಿಗಳ ಕಾಟ ಇಲ್ಲದೆ DBT ಮೂಲಕ ರೈತನ ಖಾತೆಗೆ ಸೇರುವಂತೆ ಮಾಡಲು ಕೆಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದು ಅಷ್ಟೇ ಮುಖ್ಯವಾದ ವಿಷಯವಾಗಿದೆ.

ಆದ್ದರಿಂದ ಈಗ ಎಲ್ಲಾ ಕ್ಷೇತ್ರವು ಡಿಜಿಟಲೀಕರಣಗೊಂಡಿದ್ದು ಟೆಕ್ನಾಲಜಿ ಸಹಾಯದಿಂದ ಬಹಳ ಸಲಿಸವಾಗಿ ಇದನ್ನು ಸಾಧಿಸಬಹುದು ಎಂದು ಸರ್ಕಾರ ಒಂದು ಹೊಸ ನಿಯಮ ಜಾರಿಗೆ ತಂದಿದೆ. ಇನ್ನು ಮುಂದೆ ಈ ರೀತಿ ರೈತನಿಗೆ ತನ್ನ ಕೃಷಿ ಭೂಮಿ ಆಧಾರಿತವಾಗಿ ಯಾವುದೇ ಪ್ರಯೋಜನ ಸಿಗಬೇಕಾದರೆ ರೈತನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಎಂದು ಸರ್ಕಾರ ಆಜ್ಞೆ ಹೊರಡಿಸಿದೆ.

ಈ ಹಿಂದೆ ಕರ್ನಾಟಕ ಸರ್ಕಾರದ ಕಡೆಯಿಂದ ಬರ ಪರಿಹಾರದ ಹಣ ವರ್ಗಾವಣೆ ಮಾಡುವ ಸಮಯದಲ್ಲಿಯೇ ಕಡ್ಡಾಯವಾಗಿ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ (FRUITS) ನೋಂದಾಯಿಸಿಕೊಂಡು FID ಸಂಖ್ಯೆ ಪಡೆಯಬೇಕು.

ಈ ಸುದ್ದಿ ಓದಿ:- ಈ 5 ಹೆಸರಿನ ಹೆಣ್ಣು ಮಕ್ಕಳನ್ನು ಕಣ್ಣು ಮುಚ್ಚಿ ನಂಬಬಹುದು, ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ.!

ಹತ್ತಿರದಲ್ಲಿರುವ ಯಾವುದೇ ಸೇವಾ ಕೇಂದ್ರಗಳು ಅಥವಾ CSC ಸೆಂಟರ್ ಗಳಿಗೆ ಹೋಗಿ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಪಹಣಿ ಪತ್ರ, ಬ್ಯಾಂಕ್ ಪಾಸ್ ಬುಕ್,ಮೊಬೈಲ್ ಸಂಖ್ಯೆಯನ್ನು ಕೊಟ್ಟು ಲಿಂಕ್ ಮಾಡಿಸಿಕೊಳ್ಳಬೇಕು ಎಂದು ಘೋಷಿಸಲಾಗಿತ್ತು. ಈಗ ಮತ್ತೊಂದು ಅವಕಾಶವನ್ನು ನೀಡಲಾಗುತ್ತಿದೆ ಮತ್ತು ಈ ಬಾರಿ ಗ್ರಾಮ ಆಡಳಿತ ಅಧಿಕಾರಿಗಳಿಗೆ (Village Administration Officer) ಈ ಜವಾಬ್ದಾರಿಯನ್ನು ವಹಿಸಲಾಗಿದೆ.

ಪ್ರತಿಯೊಂದು ಗ್ರಾಮದಲ್ಲೂ ಕೂಡ ಗ್ರಾಮ ಆಡಳಿತ ಅಧಿಕಾರಿ ಜವಾಬ್ದಾರಿ ತೆಗೆದುಕೊಂಡು ಆ ಗ್ರಾಮದ ಎಲ್ಲಾ ರೈತರಿಗೂ ಪಹಣಿ ಪತ್ರಕ್ಕೆ ಆಧಾರ್ ಲಿಂಕ್ ಮಾಡಲು (RTC – Aadhar link) ಜಾಗೃತಿ ಮೂಡಿಸಿ ಶೀಘ್ರವಾಗಿ ಇದನ್ನು ಪೂರ್ತಿ ಗೊಳಿಸಬೇಕು ಎಂದು ಸರ್ಕಾರ ಸೂಚನೆ ಕೊಟ್ಟಿದೆ.

ಆಫ್ಲೈನ್ನಲ್ಲಿ ಗ್ರಾಮ ಆಡಳಿತ ಅಧಿಕಾರಿ ಕಚೇರಿಗೆ ಹೋಗಿ ದಾಖಲೆಗಳನ್ನು ನೀಡಿ ಪೂರ್ತಿಗೊಳಿಸಬಹುದು ಅಥವಾ ಆನ್ಲೈನ್ ನಲ್ಲಿಯೂ ಕೂಡ ರೈತರೇ ತಮ್ಮ ದಾಖಲೆಗಳ ಜೊತೆ ಹತ್ತಿರದಲ್ಲಿರುವ ಯಾವುದೇ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಅಥವಾ ಬಾಪೂಜಿ ಸೇವಾ ಕೇಂದ್ರ ಅಥವಾ CSC ಕೇಂದ್ರಗಳಿಗೆ ಹೋಗಿ ಕೂಡ ಪಹಣಿ ಪತ್ರಿಕೆ ಆಧಾರ್ ಲಿಂಕ್ ಮಾಡಿಸಬಹುದು.

ಈ ಸುದ್ದಿ ಓದಿ:- ವೀಳ್ಯದೆಲೆ ಹಾಗೂ ಸುಣ್ಣದಿಂದ ಸಾಲಕ್ಕೆ ಮುಕ್ತಿ ಸಿಗುತ್ತದೆ. ಎಲೆ ಮೇಲೆ ಹೀಗೆ ಬರೆದು 21 ದಿನ ಈ ಸ್ಥಳದಲ್ಲಿ ಇಟ್ಟರೆ ಸಾಕು.!

ಸರ್ಕಾರದ ನಿಯಮ ಪಾಲಿಸದೆ ಇದ್ದಲ್ಲಿ ಇನ್ನು ಮುಂದೆ ಸರ್ಕಾರದಿಂದ ಕೃಷಿ ಭೂಮಿ ಆಧಾರಿತವಾಗಿ ಸಿಗುವ ಸೌಲಭ್ಯಗಳು ರೈತನಿಗೆ ತಲುಪದೆ ಹೋಗಿಬಿಡಬಹುದು ಹಾಗಾಗಿ ತಪ್ಪದೆ ಈ ರೀತಿ ಲಿಂಕ್ ಮಾಡಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ರೈತರಿಗೆ ತಲುಪುವಂತೆ ಶೇರ್ ಮಾಡಿ.

ನಿಮ್ಮ ಕೆಲಸ ಆಗುತ್ತದಾ? ಇಲ್ಲವಾ? ಎನ್ನುವುದನ್ನು ನೀರಿನಿಂದಲೇ ತಿಳಿಯಬಹುದು, ನೀವೇ ಹೇಳುತ್ತದೆ ನಿಮ್ಮ ಭವಿಷ್ಯ.!

ಪ್ರತಿನಿತ್ಯ ಕೂಡ ನಮ್ಮ ಬದುಕಿಗೆ ಸಂಬಂಧಪಟ್ಟ ಹಾಗೆ ನಾವು ಹೊಸ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಸವಾಲುಗಳನ್ನು ಸ್ವೀಕರಿಸಬೇಕಾಗುತ್ತದೆ. ಈ ಹಾದಿಯಲ್ಲಿ ಒಮ್ಮೊಮ್ಮೆ ನಮಗೆ ಗೊಂದಲವಾಗುವುದು ಉಂಟು.

ನಾವು ಮಾಡುತ್ತಿರುವ ಕೆಲಸ ಸರಿಯೇ ತಪ್ಪೇ ಅಥವಾ ನಾವು ಈ ಕೆಲಸ ಮಾಡಿದರೆ ಅದು ಪೂರ್ತಿ ಆಗುತ್ತದೆಯೇ ಇಲ್ಲವೋ ಇದನ್ನು ಮಾಡಿದರೆ ನಾವು ಅಂದುಕೊಂಡ ರೀತಿ ಪ್ರತಿಫಲ ಸಿಗುತ್ತದೆಯೋ? ಇಲ್ಲವೋ? ಇದು ಲಾಭವೋ?, ನಷ್ಟವೋ? ಈ ರೀತಿ ಹತ್ತಾರು ಅನುಮಾನಗಳು ಮೂಡುತ್ತವೆ ಅದು ಆಸ್ತಿ ಕೊಂಡುಕೊಳ್ಳುವ ವಿಚಾರವಾಗಿರಬಹುದು.

ಅಥವಾ ಮದುವೆ ಸಂಬಂಧ ಬಂದಾಗ ಆಗುವ ಗೊಂದಲ ಇರಬಹುದು ಅಥವಾ ನಾವು ಸಂದರ್ಶನಗಳಿಗೆ ಹೋದಾಗ ಯಾವುದನ್ನು ಸೆಲೆಕ್ಟ್ ಮಾಡುವುದು ಎನ್ನುವ ಗೊಂದಲ ಇರಬಹುದು. ಹೀಗೆ ಬದುಕಿನಲ್ಲಿ ನಿಮ್ಮ ಯಾವುದೇ ಕನ್ಫ್ಯೂಷನ್ ಇದ್ದರು ನೀರಿನಿಂದಲೇ ಅದಕ್ಕೆ ಪರಿಹಾರ ತಿಳಿದುಕೊಳ್ಳಬಹುದು ಅದಕ್ಕಾಗಿ ನಾವು ಹೇಳುವ ಈ ಸರಳ ವಿಧಾನ ಪಾಲಿಸಿ ಸಾಕು.

ಈ ಸುದ್ದಿ ಓದಿ:- ಬಡ ಹಾಗೂ ಮಧ್ಯಮ ವರ್ಗದವರಿಗೆ ಸರ್ಕಾರದಿಂದ ಬಂಪರ್ ಗಿಫ್ಟ್.! ರೇಷನ್ ಕಾರ್ಡ್ ಇದ್ದವರಿಗೆ 5 ಲಕ್ಷ, ಇಲ್ಲದವರಿಗೆ 1.5 ಲಕ್ಷ ಉಚಿತ.!

ಇದನ್ನು ದಿನದ ಯಾವುದೇ ಸಮಯದಲ್ಲಿ ವಾರದ ಯಾವುದೇ ದಿನ ಬೇಕಾದರೂ ಮಾಡಬಹುದು ಆದರೆ ಮಾಡುವ ಮುನ್ನ ನೀವು ಸ್ನಾನ ಮಾಡಿ ಮಡಿ ಉಟ್ಟುಕೊಂಡು ಸಾಧ್ಯವಾದರೆ ದೇವರ ಕೋಣೆಯಲ್ಲಿ ಕುಳಿತುಕೊಳ್ಳಿ ಇಲ್ಲವಾದಲ್ಲಿ ಮನೆಯ ಹಾಲಿನಲ್ಲಿ ಒಂದು ಪ್ರಶಾಂತವಾದ ಜಾಗದಲ್ಲಿ ಕುಳಿತುಕೊಳ್ಳಿ ಇದು ಪೂರ್ತಿ ಆಗುವವರೆಗೂ ಕೂಡ ನೀವು ಅಲ್ಲೇ ಇರಬೇಕಾಗುತ್ತದೆ.

ಮೊದಲಿಗೆ ನಿಮ್ಮ ಮನೆದೇವರು ಕುಲದೇವರು ಇಷ್ಟ ದೇವರನ್ನು ಪ್ರಾರ್ಥಿಸಿ ಐದು ನಿಮಿಷಗಳ ಕಾಲ ದೇವರ ಧ್ಯಾನ ಮಾಡಿ ಈಗ ಒಂದು ಗಾಜಿನ ಬೌಲ್ ನಲ್ಲಿ ಮುಕ್ಕಾಲು ಭಾಗ ನೀರು ತೆಗೆದುಕೊಳ್ಳಿ ನೆನಪಿರಲಿ ಇದಕ್ಕೆ ಗಾಜಿನ ಬೌಲ್ ಬಳಸಿದರೆ ಬಹಳ ಉತ್ತಮ.

ಸ್ವಲ್ಪ ಪೇಪರ್ ತೆಗೆದುಕೊಂಡು ನೀಲಿ ಬಣ್ಣದ ಪೆನ್ನಿನಿಂದ ನಿಮ್ಮ ಇಷ್ಟವಾದ ದೇವರ ಹೆಸರನ್ನು ಮೂರು ಬಾರಿ ಬರೆಯಿರಿ ಒಂದೆರ ಕೆಳಗೆ ಒಂದರಂತೆ ಉದಾಹರಣೆಗೆ ನಿಮ್ಮ ಇಷ್ಟವಾದ ದೇವರು ಈಶ್ವರ ಆಗಿದ್ದರೆ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂದು ಬರೆದು ಆ ಪೇಪರ್ ಹೆಸರು ಇರುವಷ್ಟು ಭಾಗ ಮಾತ್ರ ಕಟ್ ಮಾಡಿಕೊಳ್ಳಿ.

ಈ ಸುದ್ದಿ ಓದಿ:- ವೀಳ್ಯದೆಲೆ ಹಾಗೂ ಸುಣ್ಣದಿಂದ ಸಾಲಕ್ಕೆ ಮುಕ್ತಿ ಸಿಗುತ್ತದೆ. ಎಲೆ ಮೇಲೆ ಹೀಗೆ ಬರೆದು 21 ದಿನ ಈ ಸ್ಥಳದಲ್ಲಿ ಇಟ್ಟರೆ ಸಾಕು.!

ಈಗ ಇದನ್ನು ಕೈಯಲ್ಲಿ ಹಿಡಿದು ಈಶ್ವರನನ್ನು ಒಮ್ಮೆ ಮನಸ್ಸಿನಲ್ಲಿ ಈ ರೀತಿಯಾಗಿ ಪ್ರಾರ್ಥಿಸಿ ಶಿವನೇ ನಾನು ಮಾಡುತ್ತಿರುವ ಕೆಲಸ ಸರಿ ಇದ್ದರೆ ಈ ಕೆಲಸ ಮಾಡಿದ್ದರೆ ಸೂಕ್ತ ಪ್ರತಿಫಲ ಸಿಗುತ್ತದೆ ಎನ್ನುವುದಾದರೆ ನೀರಿಗೆ ಹಾಕಿದಾಗ ಇದು ಬಲಕ್ಕೆ ತಿರುಗಬೇಕು ಈ ಕೆಲಸ ವಿಳಂಬವಾಗುತ್ತದೆ ವಿಘ್ನಗಳು ಹೆಚ್ಚು ಎಂದರೆ ಎಡಕ್ಕೆ ತಿರುಗಬೇಕು ಬಹಳ ಸವಾಲುಗಳು ಬರುತ್ತದೆ‌.

ಆದರೂ ಇದನ್ನು ಮಾಡಲೇಬೇಕು ಮುಂದೆ ಒಳ್ಳೆಯದಾಗುತ್ತದೆ ಎನ್ನುವುದಾದರೆ ಮುಂದಕ್ಕೆ ಬರಬೇಕು ಈ ಕೆಲಸ ಮಾಡಲೇಬಾರದು ಎಂದರೆ ಹಿಂದಕ್ಕೆ ಹೋಗಬೇಕು ಎಂದುಕೊಂಡು ಗಾಜಿನ ಬೌಲ್ ಆಗಲಿ ನೀರನ್ನಾಗಲಿ ಅಲುಗಾಡಿಸದೆ ಆ ಪೇಪರ್ ನ್ನು ನೀರಿನ ಒಳಗೆ ಹಾಕಬೇಕು ಮತ್ತು ನೀವು ಓಂ ನಮಃ ಶಿವಾಯ ಓಂ ನಮಃ ಶಿವಾಯ ಅಥವಾ ಈಶ್ವರನ ಇತರೆ ಹೆಸರುಗಳನ್ನು ಹೇಳುತ್ತಾ ಅದು ಯಾವ ಕಡೆಗೆ ಜರಗುತ್ತದೆ ಎಂದು ನೋಡಿಕೊಳ್ಳುತ್ತಿರಬೇಕು.

ಈಗ ಅದು ಯಾವ ಕಡೆ ತಿರುಗಿದೆ ಎನ್ನುವುದರ ಆಧಾರದ ಮೇಲೆ ನಿಮ್ಮ ಫಲ ನಿರ್ಧಾರವಾಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ಇದು ಆದಮೇಲೆ ನಿಮಗೆ ರಿಸಲ್ಟ್ ಸಿಕ್ಕಿದ ಮೇಲೆ ಆ ನೀರನ್ನು ಮತ್ತು ಪೇಪರ್ ನ್ನು ಯಾವುದಾದರೂ ಗಿಡದ ಬುಡಕ್ಕೆ ಅಥವಾ ಯಾರು ತಿಳಿಯದ ಜಾಗಕ್ಕೆ ಹಾಕಿ. ಕೆಲವರಿಗೆ ಬೇಗ ಸಿಗುತ್ತದೆ ಕೆಲವರಿಗೆ ಬಹಳ ವಿಳಂಬ ಆಗುತ್ತದೆ ಆದರೆ ನಿಮ್ಮ ಪ್ರಶ್ನೆಗೆ ಉತ್ತರ ಬೇಕು ಎಂದರೆ ನೀವು ಅದು ಚಲಿಸಿ ಉತ್ತರ ಕೊಡುವವರೆಗೂ ಕಾಯಲೇ ಬೇಕು.

ಸ್ವಂತ ಮನೆ ಕಟ್ಟಿಸಬೇಕಾ.? ಖರೀದಿಸಬೇಕಾ.? ಮನೆಯವರಿಗೂ ಹೇಳದೆ ಈ ರಹಸ್ಯ ತಂತ್ರ ಮಾಡಿ ಸಾಕು, ವರ್ಷದೊಳಗೆ ಮನೆ ವಿಚಾರವಾಗಿ ಪವಾಡವೇ ನಡೆಯುತ್ತದೆ.

 

ಮನುಷ್ಯನ ವಾಸಸ್ಥಳ ಮನೆ, ಮಾನವನಾದ ಪ್ರತಿಯೊಬ್ಬರಿಗೂ ಮನೆ ಅವಶ್ಯಕತೆ ಇದ್ದೇ ಇದೆ. ಬಾಡಿಗೆ ಮನೆಯೋ, ಸ್ವಂತ ಮನೆಯೋ, ಹುಲ್ಲಿನ ಮನೆಯೋ, ಅರಮನೆ ಅಂತಹ ಮನೆಯೋ ಮನೆ ಬೇಕೇ ಬೇಕು. ಮನೆ ಎನ್ನುವುದು ಮೂಲಭೂತ ಅವಶ್ಯಕತೆ ಮಾತ್ರವಲ್ಲದೆ ನಮ್ಮ ಪ್ರತಿಷ್ಠೆಯ ವಿಚಾರವೂ ಹೌದು.

ನಮ್ಮ ಜೀವನದಲ್ಲಿ ಒಮ್ಮೆ ಒಂದು ಸುಂದರವಾದ ಮನೆ ಕಟ್ಟಿಸಿ ನಾವು ಹಾಗೂ ನಮ್ಮ ಕುಟುಂಬ ನೂರಾರು ವರ್ಷ ಆ ಮನೆಯೊಳಗೆ ಯಾವುದೇ ಕೊರತೆ ಇಲ್ಲದಂತೆ ನಮ್ಮಿಚ್ಛೆಯಂತೆ ಬದುಕಬೇಕು ಎನ್ನುವ ಮಹದಾಸೆ ಇದ್ದೇ ಇರುತ್ತದೆ.

ಆದರೆ ಮನೆ ಕಟ್ಟುವುದು ಅಷ್ಟು ಸುಲಭದ ವಿಚಾರವೇ ಅಲ್ಲ. ನೂರೆಂಟು ವಿಘ್ನಗಳು, ನೂರಾರು ಸಮಸ್ಯೆಗಳು ಇದನ್ನೆಲ್ಲಾ ಮೀರಿ ಹಣಕಾಸು ಹೊಂದಿಸಿಕೊಂಡು ಮನೆ ಮಾಡುವ ಯೋಗ ಎಲ್ಲರಿಗೂ ಇರುವುದಿಲ್ಲ. ಹಾಗಾಗಿ ಜಾತಕವನ್ನು ನೋಡಿ ಇದರ ಬಗ್ಗೆ ತಿಳಿದುಕೊಂಡು ಪ್ರಯತ್ನ ಮಾಡುವವರು ಇದ್ದಾರೆ. ಜಾತಕ ಪರಮರ್ಷೆ ಮಾಡಿ ನೋಡಿದಾಗ ಇದರ ಬಗ್ಗೆ ಹೇಗೆ ತಿಳಿಯುತ್ತದೆ. ಹೇಗೆಂದರೆ ಲಗ್ನದಿಂದ 4ನೇ ಮನೆಯನ್ನು ಗೃಹಸ್ಥಾನ ಎಂದು ಕರೆಯುತ್ತಾರೆ.

ಈ ಸುದ್ದಿ ಓದಿ:- ಬೆಳ್ಳಂ ಬೆಳಗ್ಗೆ ಮಹಿಳೆಯರಿಗೆ ಗುಡ್ ನ್ಯೂಸ್, ಎಲ್ಲಾ ಮಹಿಳೆಯರಿಗೂ ಮಹಾಲಕ್ಷ್ಮಿ ಯೋಜನೆಯಡಿ 1 ಲಕ್ಷ ಕೊಡುವುದಾಗಿ ಸರ್ಕಾರದ ಭರವಸೆ…

4ನೇ ಮನೆಯಲ್ಲಿ ಯಾವ ಗ್ರಹವಿದೆ ಎನ್ನುವುದರ ಆಧಾರದ ಮೇಲೆ ಅವರಿಗೆ ಮನೆ ಕಟ್ಟಲು ಸಾಧ್ಯವಿದೆಯೇ, ನಿಧಾನವಾಗುತ್ತದೆಯೇ ಅಥವಾ ಕಟ್ಟಿದ ಮನೆಯನ್ನು ಕೊಂಡುಕೊಳ್ಳುತ್ತಾರೆಯೇ ಅಥವಾ ಮನೆ ಮಾರಿಕೊಳ್ಳುತ್ತಾರೆಯೇ ಅಥವಾ ಹತ್ತಾರು ಮನೆ ಬಾಡಿಗೆ ಕೊಡುವ ಯೋಗ ಇದೆಯೇ ಇತ್ಯಾದಿ ಎಲ್ಲಾ ವಿಷಯಗಳು ತಿಳಿಯುತ್ತವೆ. ಯಾವ ಗ್ರಹ ಇದ್ದರೆ ಏನು ಫಲ ದೋಷಗಳಿದ್ದರೆ ಪರಿಹಾರ ಏನು ಎನ್ನುವುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ.

* ಸೂರ್ಯನಿದ್ದರೆ ಸರ್ಕಾರಿ ಬಂಗಲೆಗಳಲ್ಲಿ ವಾಸಿಸುವ ಯೋಗ ಇದೆ ಎಂದು ಅರ್ಥ
* ಚಂದ್ರನಿದ್ದರೆ ಹಣ ಎಷ್ಟು ಬಂದರೂ ಸ್ವಂತ ಮನೆ ಕಟ್ಟಲು ಆಗುವುದಿಲ್ಲ ಕೊನೆತನಕ ಬಾಡಿಗೆ ಮನೆಯಲ್ಲಿಯೇ ಇರಬೇಕಾಗುತ್ತದೆ ಎಂದರ್ಥ

* ಕುಜ ಅಥವಾ ಶನಿ ಗ್ರಹಗಳಿದ್ದರೆ ಸ್ವಂತ ಮನೆಯಲ್ಲಿ ಇದ್ದರೂ ನೆಮ್ಮದಿ ಇರುವುದಿಲ್ಲ. ಬಹಳ ಹಳೆಯದಾದ ಅಥವಾ ಪಾಳು ಬಿದ್ದ ಮನೆಯಲ್ಲಿ ಇರಬೇಕಾಗುತ್ತದೆ. ಮನೆಯಲ್ಲಿ ಒಂದಲ್ಲ ಒಂದು ಸಮಸ್ಯೆ ಇರುತ್ತದೆ, ಕೋರ್ಟು ಕಚೇರಿ ವಿಚಾರವಾಗಿ ಅಲೆಯ ಬೇಕಾಗುತ್ತದೆ ಎಂದರ್ಥ
* ಬುಧ ಇದ್ದರೆ ನಿಮ್ಮ ಇಚ್ಛೆಯಂತೆ ಒಂದು ಒಳ್ಳೆಯ ಮನೆ ಕಟ್ಟಿಸಿ ವಾಸಿಸುವ ಯೋಗ ಇದೆ.

ಈ ಸುದ್ದಿ ಓದಿ:- ನೀರಿಗೆ ಈ ಎರಡು ವಸ್ತು ಮಿಕ್ಸ್ ಮಾಡಿ ಬಾಗಿಲ ಬಳಿ ಹಾಕಿದರೆ ಸಾಕು ತಾಯಿ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ.

* ಗುರು ಇದ್ದರೆ ಒಂದು ಮನೆಗಿಂತ ಹೆಚ್ಚು ಮನೆಗಳನ್ನು ಕಟ್ಟಿಸಿ ಬಾಡಿಗೆಗೆ ನೀಡುವ ಯೋಗ ಹೊಂದಿದ್ದಾರೆ ಎನ್ನುವುದನ್ನು ತಿಳಿಸುತ್ತದೆ
* ಶುಕ್ರನಿದ್ದರೆ ಐಷಾರಾಮಿಯಾದ ಬಂಗಲೆಯನ್ನು ಕಟ್ಟಿಸಿಕೊಂಡು ವಾಸಿಸುತ್ತಾರೆ ಎನ್ನುವ ಅರ್ಥ.
* ‌ ಒಂದು ವೇಳೆ ರಾಹು ಕೇತುಗಳು ಲಗ್ನದಿಂದ ನಾಲ್ಕನೇ ಮನೆಯಲ್ಲಿ ಇದ್ದರೆ ಅವರ ಜೀವನದಲ್ಲಿ ಮನೆ ಕಟ್ಟುವ ಕನಸು ಕನಸಾಗೇ ಉಳಿದುಬಿಡುತ್ತದೆ, ಒಂದು ವೇಳೆ ಕಷ್ಟಪಟ್ಟು ಕಟ್ಟಿದರು ಅದನ್ನು ಮಾರಿಕೊಳ್ಳುತ್ತಾರೆ ಎನ್ನುವ ಫಲ.

ಗುರು ಪುಷ್ಯಮಿ ಅಂದರೆ ಗುರುವಾರ ಪುಷ್ಯ ನಕ್ಷತ್ರ ಬಂದ ದಿನ ಅಥವಾ ರವಿ ಪುಷ್ಯಮಿ ಅಂದರೆ ಭಾನುವಾರ ಪುಷ್ಯ ನಕ್ಷತ್ರ ಬಂದ ದಿನ ಅಥವಾ ಗುರುವಾರ ಪುನರ್ವಸು ನಕ್ಷತ್ರ ಬಂದ ದಿನ ಅಥವಾ ಶುಕ್ರವಾರ ಪೂರ್ವಾಷಾಡ ನಕ್ಷತ್ರ ಬಂದ ದಿನ ಅಥವಾ ಭಾನುವಾರ ರೋಹಿಣಿ ನಕ್ಷತ್ರ ಬಂದ ದಿನ ಯಾರಿಗೆ ಈ ರೀತಿ ಮನೆ ಕಟ್ಟುವ ಮಹದಾಸೆ ಇದೆಯೋ ಜಾತಕದಲ್ಲಿ ಯೋಗ ಇದ್ದರೂ ದೋಷಗಳಿದ್ದು ವಿಳಂಬಾಗುತ್ತಿದೆ.

ಅವರು ಶೀಘ್ರವಾಗಿ ಕನಸು ನೆರವೇರಲು ಈ ಮೇಲೆ ತಿಳಿಸಿದ ದಿನಗಳಂದು 11 ಔದುಂಬರ (ಹತ್ತಿ ಗಿಡ) ಅಥವಾ 11 ಅರಳಿ ಸಸಿಯನ್ನು ನೆಟ್ಟು ಪೋಷಿಸಬೇಕು. ಈ ರೀತಿ ಮಾಡಿದರೆ ಅವು ಹೇಗೆ ಬೆಳೆಯುತ್ತವೆಯೋ ಹಾಗೆಯೇ ನಿಮ್ಮ ಹಾದಿ ಸುಗಮವಾಗಿ ಆದಷ್ಟು ಬೇಗ ಮನೆ ಕಟ್ಟಿಸಿಕೊಂಡು ಆ ಮನೆಯಲ್ಲಿ ಸಕುಟುಂಬ ಸಮೇತ ಸಂತೋಷವಾಗಿ ಬದುಕುತ್ತೀರಿ.

ಕುಂಭ ರಾಶಿಗೆ ಸಾಡೆಸಾತಿ, ಹೇಗಿದೆ ನೋಡಿ.!

 

ಕುಂಭರಾಶಿಗೆ ಜನ್ಮ ಶನಿ ಕಾಟ ಆರಂಭವಾಗಿ ಒಂದು ವರ್ಷ ಮಾತ್ರ ಕಳೆದಿದೆ, ಮತ್ತು ಇನ್ನೂ ಒಂದು ವರ್ಷ ಕೂಡ ಇದು ಮುಂದುವರೆಯಲಿದೆ. ಜನ್ಮ ಶನಿ ಕಾಟದ ಸಮಯದಲ್ಲಿ ಬಹಳ ಕಷ್ಟ ಆಗುತ್ತದೆ ಶನಿಯ ನಮ್ಮನ್ನು ತೊಂದರೆಗಳಲ್ಲಿ ಸಿಲುಕಿ ಹಾಕಿಸುತ್ತಾರೆ, ಆ ಮೂಲಕ ನಮಗೆ ಬುದ್ಧಿ ಕಲಿಸುತ್ತಾರೆ.

ಏನೇನು ಅನುಭವಿಸಬೇಕೋ, ಅವಮಾನ ಅನುಮಾನ ಕಷ್ಟ ಕಾರ್ಪಣ್ಯ, ದುಃ’ಖ ಇನ್ನೂ ಒಂದು ವರ್ಷದವರೆಗೆ ಅನುಭವಿಸಬೇಕಾ ಎನ್ನುವ ಆತಂಕವು ಈಗಾಗಲೇ ಕುಂಭ ರಾಶಿಯವರಿಗೆ ಆರಂಭವಾಗಿರುತ್ತದೆ. ಆದರೆ ಭ’ಯ ಬೇಡ ಈ 2024 ರ ವರ್ಷದಲ್ಲಿ ಶನಿಯು ನಿಮಗೆ ಅನೇಕ ವಿಚಾರಗಳಲ್ಲಿ ಶುಭ ಫಲಗಳನ್ನು ನೀಡುತ್ತಿದ್ದಾರೆ.

ಜನವರಿ 17, 2023 ರಿಂದ ಕುಂಭ ರಾಶಿಗೆ ಜನ್ಮ ಶನಿ ಆರಂಭವಾಗಿದೆ. ಆ ಸಮಯದಿಂದಲೇ ಅನೇಕರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ದೇಹದ ಮೇಲೆ ಗಾಯಗಳು ಆಗುವುದು, ಮುಖದ ಮೇಲೆ ಗಾಯಗಳು ಅಥವಾ ಸಣ್ಣಪುಟ್ಟ ಅ’ಪ’ಘಾ’ತ ಇಂತಹ ಸಮಸ್ಯೆಗಳನ್ನು ಅನುಭವಿಸಿದ್ದೀರಿ.

ಈ ಸುದ್ದಿ ಓದಿ:- ಬಡ ಹಾಗೂ ಮಧ್ಯಮ ವರ್ಗದವರಿಗೆ ಸರ್ಕಾರದಿಂದ ಬಂಪರ್ ಗಿಫ್ಟ್.! ರೇಷನ್ ಕಾರ್ಡ್ ಇದ್ದವರಿಗೆ 5 ಲಕ್ಷ, ಇಲ್ಲದವರಿಗೆ 1.5 ಲಕ್ಷ ಉಚಿತ.!

ಇದೇ ರೀತಿಯ ಇನ್ನೊಂದಿಷ್ಟು ಘಟನೆಗಳು ಕೂಡ ಈ ವರ್ಷ ಮುಂದುವರಿಯಲಿದೆ ಹಾಗಾಗಿ ಸಾಧ್ಯವಾದಷ್ಟು ಜಾಗೃತಿಯಿಂದ ಇರಿ. ಫೆಬ್ರವರಿ 11ರಿಂದ ಮಾರ್ಚ್ 17 ರವರೆಗೆ ಸ್ವಲ್ಪ ಹೆಚ್ಚು ಸಮಸ್ಯೆಗಳು ಉಂಟಾಗಿ ಭ’ಯದ ವಾತಾವರಣದಲ್ಲಿ ಬದುಕಿದ್ದೀರಿ. ಕಾರಣ ಇಷ್ಟೇ ಈ ಸಮಯದಲ್ಲಿ ಶನಿಯು ಅಸ್ತಂಗತರಾಗಿದ್ದರು.

ಜನ್ಮ ಸ್ಥಾನದಿಂದ ಮೊದಲ ಮನೆಯಲ್ಲಿ ಯಾವ ಗ್ರಹ ಇರುತ್ತದೆಯೋ ಅದು ನೇರವಾಗಿ ಅವರ ಬದುಕಿನ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದನ್ನು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ, ಆ ಪ್ರಕಾರದ ಬಗ್ಗೆ ನೀವು ಈಗ ಫಲಗಳನ್ನು ಪಡೆಯುತ್ತಿದ್ದೀರಿ.

ನೀವು ಎಷ್ಟೇ ಪ್ರಯತ್ನ ಪಟ್ಟರು ಕೂಡ ಎಷ್ಟೇ ಕಠಿಣ ನಿರ್ಧಾರ ತೆಗೆದುಕೊಂಡರು ನೀವು ನಿಮ್ಮ ಗುರಿಗಳನ್ನು ಸಾಧಿಸಲು ಬಹಳ ಕಷ್ಟವಾಗುತ್ತದೆ ಹಾಗಾಗಿ ಸ್ವಲ್ಪ ಸಮಯ ನೀವು ಕಾಯಲೇಬೇಕು. ಹಾಗೆಂದ ಮಾತ್ರಕ್ಕೆ ಪ್ರಯತ್ನಗಳನ್ನು ನಿಲ್ಲಿಸಬೇಡಿ ತಯಾರಿ ಮಾಡಿಕೊಳ್ಳುತ್ತಾ ಇರಿ, ಆದರೆ ಸಾಡೆಸಾತಿ ಬಿಡುಗಡೆಯಾಗುವವರೆಗೂ ಕೂಡ ಯಾವುದೇ ಹೊಸ ಪ್ರಯತ್ನವನ್ನು ಮಾಡದೆ ಯೋಚನೆ ಮಾಡಿ ಮುಂದುವರೆಯಿರಿ.

ಈ ಸುದ್ದಿ ಓದಿ:-ಸಿಂಹ ರಾಶಿ ಮಾರ್ಚ್ ತಿಂಗಳ ಭವಿಷ್ಯ 2024……….||

ಮಾರ್ಚ್ 18ರ ನಂತರ ಸ್ವಲ್ಪಮಟ್ಟಿಗೆ ಉತ್ತಮ ಫಲಗಳನ್ನು ಕಾಣುತ್ತೀರಿ ಅದು ಕೂಡ ಹೆಚ್ಚಿನ ದಿನಗಳು ಇರುವುದಿಲ್ಲ ಜೂನ್ 31ರ ನಂತರ ಮತ್ತೆ ಶನಿ ಹಿಮ್ಮುಖವಾಗಿ ಚಲಿಸಲು ಆರಂಭಿಸುತ್ತಾರೆ. ಆಗ ಇಂತಹದೇ ಪರಿಣಾಮಗಳು ಮುಂದುವರಿಯುತ್ತವೆ ಆದರೆ ಅಲ್ಲಿಯವರೆಗೂ ಕೂಡ ವೃತ್ತಿ ಜೀವನದಲ್ಲಿ ಸ್ವಲ್ಪ ಸುಧಾರಣೆ, ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ವ್ಯಾಪಾರ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಪ್ರಗತಿ ಆರೋಗ್ಯ ಸುಧಾರಣೆ ಇಂತಹ ಸಮಾಧಾನಕರ ವಿಷಯ ಜರುಗುತ್ತವೆ.

ಜೂನ್ ಅಂತ್ಯದಿಂದ ನವೆಂಬರ್ 14ರವರೆಗೆ ಶನಿ ಪರಿವರ್ತನೆ ಸಮಯದಲ್ಲಿಯೂ ಕೂಡ ನೀವು ಎಂದಿನಂತೆ ಮತ್ತೆ ಸಮಸ್ಯೆಗಳಿಗೆ ಸಿಲುಕುತ್ತೀರಿ. ನೀವು ಕೊಟ್ಟ ಹಣ ವಾಪಸ್ಸು ಬರದೇ ಇರುವುದು ನೀವು ಕೈಗೊಂಡ ಪ್ರಾಜೆಕ್ಟ್ ಕಂಪ್ಲೀಟ್ ಆಗದೆ ನಿಮಗೆ ಅವಮಾನ ಆಗುವುದು ಅಥವಾ ಕೆಲವೊಮ್ಮೆ ನಿಮ್ಮನ್ನು ಅಪಾರ್ಥ ಮಾಡಿಕೊಂಡು ಬೇರೆಯವರು ನೋಯಿಸುವುದು.

ಆರೋಗ್ಯ ಸಮಸ್ಯೆಯಲ್ಲಿ ಎಡವಟ್ಟು, ಹಲ್ಲು ಹಾಗೂ ಕಣ್ಣಿಗೆ ಸಂಬಂಧಿಸಿದೆ ಸಮಸ್ಯೆಗಳು ಇನ್ನು ಮುಂತಾದ ಅನೇಕ ತೊಂದರೆಗಳನ್ನು ಅನುಭವಿಸುತ್ತೀರಿ. ನಂತರ ಡಿಸೆಂಬರ್ ತಿಂಗಳಿನಲ್ಲಿ ಸ್ವಲ್ಪ ಸಮಯ ಉತ್ತಮವಾಗಿರುತ್ತದೆ ಆದರೂ ಈ ವರ್ಷ ಪೂರ್ತಿ ನೀವು ಆದಷ್ಟು ಎಚ್ಚರಿಕೆಯಿಂದ ಕಳೆಯುವುದೇ ನಿಮ್ಮ ಬದುಕಿಗೆ ಒಳ್ಳೆಯದು. ಶನೇಶ್ಚರನ ಸ್ತೋತ್ರಗಳನ್ನು ಪಠಿಸಿ ಪ್ರತಿ ಶನಿವಾರ ಶನಿದೇವ ಹಾಗೂ ಆಂಜನೇಯನ ದರ್ಶನ ಮಾಡಿ ಭಗವಂತನ ಕೃಪೆಗೆ ಪಾತ್ರರಾಗಿ.

https://youtu.be/KkmiHd_6Aho?si=sjvZWlFQa1D7-KbZ