Home Blog Page 46

ಫ್ರಿಡ್ಜ್ ಮೇಲೆ ಅಪ್ಪಿ ತಪ್ಪಿಯು ಈ 7 ವಸ್ತುಗಳನ್ನು ಇಡಬೇಡಿ, ಅಪ್ಪಿತಪ್ಪಿ ಇಟ್ಟರೆ ಹಣಕಾಸಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಚ್ಚರ.!

ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳು ಮಾತ್ರವಲ್ಲದೆ ಮನೆ ಒಳಗಿನ ಪ್ರತಿಯೊಂದು ವಸ್ತುಗಳ ಮೌಲ್ಯವನ್ನು ತಿಳಿಸಲಾಗಿದೆ. ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳು ಕೂಡ ಆ ಮನೆ ಹಾಗೂ ಮನೆಯಲ್ಲಿರುವ ಸದಸ್ಯರ ಮೇಲೆ ಸಕರಾತ್ಮಕವಾಗಿ ಅಥವಾ ನಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ ಹಾಗಾಗಿ ವಾಸ್ತುಶಾಸ್ತ್ರದಲ್ಲಿ ಯಾವುದು ಹೇಗಿರಬೇಕು ಎನ್ನುವ ನಿಯಮವನ್ನು ತಿಳಿಸಲಾಗಿದೆ.

ಇದು ಮನೆಯಲ್ಲಿರುವ ಫ್ರಿಡ್ಜ್ ಗೂ ಕೂಡ ಅನ್ವಯಿಸುತ್ತದೆ. ಫ್ರಿಜ್ ಈಗ ಎಲ್ಲರ ಮನೆಯಲ್ಲೂ ಇರುವಂತಹ ಯಂತ್ರವಾಗಿದೆ ಮತ್ತು ನಾವು ಪ್ರತಿದಿನವೂ ಕೂಡ ಇದರ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದೇವೆ. ಈ ಫ್ರಿಡ್ಜ್ ಮೇಲೆ ಜನರು ತಿಳಿಯದೇ ಕೆಲ ವಸ್ತುಗಳನ್ನು ಇಡುವುದರಿಂದ ಭವಿಷ್ಯದಲ್ಲಿ ಬಹಳಷ್ಟು ಹಣಕಾಸಿನ ನಷ್ಟವನ್ನು ಹೊಂದುತ್ತಾರೆ. ಹಾಗಾದರೆ ಯಾವ ವಸ್ತುಗಳನ್ನು ಫ್ರಿಡ್ಜ್ ಮೇಲೆ ಇಡಬಾರದು ಎನ್ನುವ ಮಾಹಿತಿ ಹೀಗಿದೆ ನೋಡಿ.

ಈ ಸುದ್ದಿ ಓದಿ:- ಬುಧವಾರದ ಪಕ್ಷಿಗಳಿಗೆ ಮಿಸ್ ಮಾಡದೆ ಈ ಕಾಳು ತಿನ್ನಿಸಿ, ನೀವು ಅಂದುಕೊಂಡ ಕೆಲಸ 100% ವಾರದೊಳಗೆ ಆಗುತ್ತೆ.!

1. ವಾಸ್ತು ಶಾಸ್ತ್ರದ ಪ್ರಕಾರವಾಗಿ ಯಾವುದೇ ಕಾರಣಕ್ಕೂ ಔಷಧಿಗಳನ್ನು ಫ್ರಿಡ್ಜ್ ಮೇಲೆ ಇಡಬಾರದು. ವಾಸ್ತುಶಾಸ್ತ್ರ ಮಾತ್ರವಲ್ಲದೆ ವೈದ್ಯಕೀಯವಾಗಿ ಕೂಡ ಈ ಸಲಹೆ ನೀಡಲಾಗುತ್ತದೆ. ಯಾಕೆಂದರೆ ಫ್ರಿಡ್ಜ್ ಮೇಲಿನ ಭಾಗದಲ್ಲಿ ಉಷ್ಣಾಂಶ ಅಧಿಕವಾಗಿರುತ್ತದೆ, ಇದರಿಂದ ಔಷಧಿಗಳ ಪವರ್ ನಶಿಸುತ್ತದೆ. ಇದೇ ಕಾರಣವನ್ನು ವಾಸ್ತು ಶಾಸ್ತ್ರದಲ್ಲೂ ನೀಡಲಾಗಿದೆ. ಯಾವ ಔಷಧಿಗಳನ್ನು ಫ್ರಿಡ್ಜ್ ಮೇಲೆ ಇಟ್ಟು ಉಪಯೋಗಿಸುತ್ತಾರೆ ಅವುಗಳು ಸತ್ವ ಕಳೆದುಕೊಳ್ಳುತ್ತವೆ ಎಂದು ಹೇಳಲಾಗಿದೆ.

* ಫ್ರಿಡ್ಜ್ ವಿದ್ಯುತ್ ಕಾಂತಿಯ ವಿಕಿರಣಗಳನ್ನು ಹೊರ ಸೂಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರವಾಗಿ ಇದು ನಕಾರಾತ್ಮಕ ಅಂಶವಾಗಿದೆ. ಆಹಾರ, ಹಣ್ಣು, ಬ್ರೆಡ್ ಈ ರೀತಿ ಯಾವುದೇ ತಿನ್ನುವ ಪದಾರ್ಥವನ್ನು ಫ್ರಿಡ್ಜ್ ಮೇಲೆ ಇಡುವುದರಿಂದ ಇವುಗಳ ಮೇಲು ಕೂಡ ವಿದ್ಯುತ್ ಕಾಂತೀಯ ವಿಕಿರಣಗಳು ಪ್ರಹರಿಸುತ್ತವೆ. ಇದು ಆಹಾರವನ್ನು ಬಹಳ ಬೇಗ ಹಾಳು ಮಾಡುವುದು ಮಾತ್ರವಲ್ಲದೆ ಸೇವಿಸಿದ ವ್ಯಕ್ತಿಗಳ ಆರೋಗ್ಯದ ಮೇಲೂ ಮತ್ತು ಮನಸ್ಸಿನ ಮೇಲೂ ದುಷ್ಪರಿಣಾಮ ಬೀರುತ್ತದೆ ಹಾಗಾಗಿ ಫ್ರಿಡ್ಜ್ ಮೇಲೆ ಇವುಗಳನ್ನು ಇಡಬಾರದು ಎಂದು ಹೇಳಲಾಗಿದೆ.

ಈ ಸುದ್ದಿ ಓದಿ:- ಈ ಎಲೆ ಎಲ್ಲೇ ಸಿಕ್ಕರೂ ಬಿಡಲೇಬೇಡಿ, ಸಾಕಷ್ಟು ಶ್ರೀಮಂತರಾಗುತ್ತೀರಿ.!

* ಹಣ ಮತ್ತು ಬಂಗಾರ ಇವುಗಳನ್ನು ಕೂಡ ಫ್ರಿಡ್ಜ್ ಮೇಲೆ ಇಡಬಾರದು ಇದು ಕೂಡ ಕೆಟ್ಟ ಪರಿಣಾಮ ಬೀರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಕೆಲವರು ತಮಗೆ ತಕ್ಷಣ ಹಣ ಸಿಗಲಿ ಎಂದು ಅಥವಾ ಯಾವುದೋ ಅವಸರದಲ್ಲಿ ತಮ್ಮ ಒಡವೆಗಳನ್ನು ಅಥವಾ ಹಣವನ್ನು ಫ್ರಿಡ್ಜ್ ಮೇಲಿನ ಕವರ್ ಗೆ ಹಾಕಿ ಅಥವಾ ಫ್ರಿಡ್ಜ್ ಮೇಲೆ ಇಟ್ಟು ಹೋಗುತ್ತಾರೆ. ಹೀಗೆ ಮಾಡುವುದರಿಂದ ನೀವು ಅಪಾರ ಹಣಕಾಸಿನ ನ’ಷ್ಟವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗಿ ಬರುತ್ತದೆ ಎಂದು ಹೇಳುತ್ತದೆ ಶಾಸ್ತ್ರ.

* ಸಾಮಾನ್ಯವಾಗಿ ಈಗ ಮನೆ ಒಳಗೂ ಕೂಡ ಒಳಾಂಗಣ ಸಸ್ಯಗಳನ್ನು ಬೆಳೆಯಲಾಗುತ್ತಿದೆ. ವಾಸ್ತು ಸಸ್ಯಗಳಾಗಿರುತ್ತವೆ ಅಥವಾ ಅಲಂಕಾರಿಕ ಸಸ್ಯಗಳಾಗಿರುತ್ತವೆ ಅಥವಾ ದೈವೀ ಗುಣವುಳ್ಳ ಸಸ್ಯಗಳನ್ನು ಹಾಕಿಕೊಂಡಿರುತ್ತಾರೆ. ಈ ರೀತಿ ಸಸ್ಯಗಳನ್ನು ನೆಟ್ಟು ಅವುಗಳ ಪಾಟ್ ಫ್ರಿಡ್ಜ್ ಮೇಲೆ ಇಡುವುದರಿಂದ ಆ ಗಿಡಗಳಿಗೆ ಇರುವ ಶಕ್ತಿ ನಶಿಸಿ ಹೋಗುತ್ತದೆ ಅವುಗಳಿಂದ ಯಾವುದೇ ಪ್ರಭಾವ ಉಂಟಾಗುವುದಿಲ್ಲ ಎಂದು ಹೇಳುತ್ತದೆ ವಾಸ್ತು ಶಾಸ್ತ್ರ ಅದರಲ್ಲೂ ಬಿದರು ಗಿಡಗಳನ್ನು ಈ ರೀತಿ ಲೋಹದ ಮೇಲೆ ಇಡಲೇಬಾರದು ಇವು ಪರಸ್ಪರ ವಿರುದ್ಧ ಎಂದು ತಿಳಿಸಲಾಗಿದೆ.

ಈ ಸುದ್ದಿ ಓದಿ:- ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆಯಾ? ಎಲ್ಲಾ ಕಡೆ ಹಣ ಇಲ್ಲ ಅಂತಲೇ ಹೇಳಿಕೊಂಡು ಬರುತ್ತಿದ್ದೀರಾ.? ಇದಕ್ಕೆ ಪರಿಹಾರ ಇಲ್ಲಿದೆ ನೋಡಿ.!

* ಫ್ರಿಡ್ಜ್ ಮೇಲೆ ಜಾಗ ಇರುವುದರಿಂದ ಮಕ್ಕಳ ಪುಸ್ತಕಗಳನ್ನು ಅಥವಾ ಅವರ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಅಥವಾ ಅವರು ಆಟ ಪಾಠಗಳಲ್ಲಿ ಗಳಿಸಿದ ಸಾಧನೆಯ ಟ್ರೋಫಿಗಳನ್ನು ಫ್ರಿಡ್ಜ್ ಮೇಲೆ ಜನ ಇಟ್ಟು ಬಿಡುತ್ತಾರೆ. ನೆನಪಿಡಿ ನೀವು ಈ ರೀತಿ ಮಾಡುವುದರಿಂದ ಇದರ ನಕಾರಾತ್ಮಕ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಈ ಮೇಲೆ ತಿಳಿಸಿದಂತೆ ಫ್ರಿಡ್ಜ್ ಮೇಲೆ ಇಡುವ ವಸ್ತುಗಳ ಮೇಲೆ ನಕಾರಾತ್ಮಕ ಶಕ್ತಿ ಪ್ರಭಾವ ಬೀರುವುದರಿಂದ ಇದು ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಮಾಡಿ ಸಾಧನೆಯನ್ನು ಕುಂಠಿತಗೊಳಿಸುತ್ತದೆ.

ಈ 6 ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ, ಈ 6 ರಾಶಿಯವರು ಏನು ಮಾಡಿದರು ಲಾಭನೇ.!

 

ಎರಡು ಮತ್ತು ಏಳರ ಮನೆಯ ಅಧಿಪತಿ ಸಕಲ ಸುಖ ಸಂಪತ್ತು ಸಮೃದ್ಧಿ ಐಶ್ವರ್ಯವನ್ನು ಕೊಡುವ ಗ್ರಹ ಎಂದು ಶುಕ್ರ ಗ್ರಹವನ್ನು ಕರೆಯಲಾಗುತ್ತದೆ. ಮಾರ್ಚ್ 7ರಿಂದ ಮಕರ ರಾಶಿಯಿಂದ ಕುಂಭ ರಾಶಿಗೆ ಧನಾಧಿಪತಿಯು ಸಂಚಾರ ಮಾಡುತ್ತಿದ್ದಾರೆ ಈ ಸಂಕ್ರಮಣವು ದ್ವಾದಶ ರಾಶಿಗಳೆಲ್ಲದರ ಮೇಲೂ ಕೂಡ ಪರಿಣಾಮ ಬೀರುತ್ತದೆ.

ಕೆಲವು ರಾಶಿಗಳಿಗೆ ಸಾಧಾರಣ ಫಲಗಳಿದ್ದರೆ ಈ ಆರು ರಾಶಿಗಳಿಗೆ ಮಾತ್ರ ವಿಪರೀತ ಧನ ಯೋಗವಿದೆ. ಮಾರ್ಚ್ 7ರಿಂದ 31ರವರೆಗೆ ಈ ಆರು ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಸಮಯವಾಗಿದ್ದು, ಈ ರಾಶಿಗಳ ದಶಾಭುಕ್ತಿ ಅಥವಾ ಅಂತರ ಭುಕ್ತಿಗಳಲ್ಲಿಯೂ ಶುಕ್ರನಿದ್ದರೆ ಇನ್ನೂ ಅದ್ಭುತ. ಯಾವ ರಾಶಿಗಳು ಈ ಅದೃಷ್ಟ ಪಡೆದಿವೆ ಎನ್ನುವುದನ್ನು ಸಹ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

* ಮೇಷ ರಾಶಿ:- ಮೇಷ ರಾಶಿ ಹಾಗೂ ಮೇಷ ಲಗ್ನದಲ್ಲಿ ಜನಿಸಿದವರಿಗೆ ಒಂದು ಮತ್ತು ಏಳರ ಅಧಿಪತಿ ಏಕದಶಮಾ ಸ್ಥಾನದಲ್ಲಿದ್ದಾನೆ. ಇದು ಇವರಿಗೆ ಅತ್ಯಂತ ಶುಭದಾಯಕವಾಗಿದ್ದು, ವಿಪರೀತ ಧನಲಾಭದ ಯೋಗವನ್ನು ಸೂಚಿಸುತ್ತಿದೆ. ನಿಮ್ಮ ನಿರೀಕ್ಷೆಯ ಪ್ರಕಾರದ ಉದ್ಯೋಗ ಪಡೆಯುತ್ತೀರಿ ಅಥವಾ ಉದ್ಯೋಗದಲ್ಲಿ ಬಡ್ತಿ ಹೊಂದುತ್ತೀರಿ, ವ್ಯಾಪಾರ ವ್ಯವಹಾರ ಅಭಿವೃದ್ಧಿ ಆಗುತ್ತದೆ ಹೀಗೆ ನೀವು ಯಾವುದೇ ಕಾರ್ಯ ಮಾಡಿದರು ಎಲ್ಲದರಲ್ಲೂ ಈ ಸಮಯದಲ್ಲಿ ಜಯ ಸಿಗುತ್ತದೆ.

ಈ ಸುದ್ದಿ ಓದಿ:- ಸಿಂಹ ರಾಶಿಯ ಮಾರ್ಚ್ ತಿಂಗಳ ಮಾಸ ಭವಿಷ್ಯ, ಇದೊಂದು ಶಕ್ತಿ ನಿಮಗೆ ಬಹಳ ಧೈರ್ಯ ಕೊಡುತ್ತದೆ.!

* ವೃಷಭ ರಾಶಿ:- ಒಂದು ಮತ್ತು ಆರರ ಅಧಿಪತಿ ಹತ್ತರ ಭಾವದಲ್ಲಿದ್ದಾರೆ. ಈ ರಾಶಿಯವರಿಗೂ ಕೂಡ ವಿಪರೀತ ರಾಜಯೋಗ. ಆರರ ಸ್ಥಾನವು ಇವರಿಗೆ ಸಂಪತ್ತಿನ ಸ್ಥಾನ ಹೆಸರು ಕೀರ್ತಿ ಪ್ರತಿಷ್ಠೆಯ ಸ್ಥಾನ. ಇದರ ಪ್ರಭಾವದಿಂದಾಗಿ ವೃಷಭ ರಾಶಿಯವರು ಏನಾದರೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿದ್ದರೆ ಅವರ ಪ್ರಯತ್ನ ಹಾಗೂ ಶ್ರದ್ಧೆಗೆ ತಕ್ಕನಾದ ಫಲವನ್ನು ಈ ಬಾರಿ ಪಡೆಯುತ್ತಾರೆ.

* ಕಟಕ ರಾಶಿ:- ನಾಲ್ಕು ಮತ್ತು ಹನ್ನೊಂದರ ಅಧಿಪತಿ ಪ್ರಬಲವಾದ ಅಷ್ಟರ ಭಾವದಲ್ಲಿದ್ದಾರೆ. ಇದು ನಿಮಗೆ ಸೈಟ್ ಕಾರು ಬಂಗಾರ ಖರೀದಿಸುವ ಯೋಗವನ್ನು ತರುತ್ತದೆ, ನಿಮ್ಮ ನಿರೀಕ್ಷೆಗೂ ಮೀರಿದ ಹೆಚ್ಚಿನ ಸಂಪತ್ತನ್ನು ಪಡೆಯಲಿದ್ದೀರಿ. ಒಂದು ವೇಳೆ ನೀವು ಮಿಥುನ ಲಗ್ನದಲ್ಲಿ ಜನಿಸಿ ಶುಕ್ರ ದೇಶೆ ಏನಾದರೂ ನಡೆಯುತ್ತಿದ್ದರೆ ನಿಮ್ಮ ಯೋಗಕ್ಕೆ ಸರಿಸಾಟಿ ಬೇರೆ ಯಾರು ಇಲ್ಲ.

* ಸಿಂಹ ರಾಶಿ:- ಮೂರು ಮತ್ತು ಹತ್ತರ ಅಧಿಪತಿ ಸಪ್ತಮ ಭಾವದಲ್ಲಿ ಇರುವುದರಿಂದ ವ್ಯಾಪಾರಾಭಿವೃದ್ಧಿ, ಧನಾಭಿವೃದ್ದಿ ಯೋಗಗಳು ಸಿಂಹ ರಾಶಿಯವರಿಗೆ ಇದೆ. ಶುಕ್ರನ ಬದಲಾವಣೆಯು ನಿಮಗೆ ಬಹಳ ಲಾಭವನ್ನು ತರುತ್ತಿದೆ. ಈ ಸಮಯದಲ್ಲಿ ನೀವು ಯಾವುದೇ ಕಾರ್ಯ ಮಾಡಬೇಕು ಎಂದುಕೊಂಡರೂ ಕೂಡ ಅದರಲ್ಲಿ ಜಯ ಕಾಣುತ್ತೀರಿ.

ಈ ಸುದ್ದಿ ಓದಿ:- ಧನುರ್ ರಾಶಿಯವರು ಈ ಸಲ ಗುರಿ ತಲುಪುವುದು ಪಕ್ಕಾ‌.! ಹೇಗಿದೆ ಗೊತ್ತಾ ಧನು ರಾಶಿಯ ಮಾಸ ಭವಿಷ್ಯ…

* ಧನುರ್ ರಾಶಿ:- ಧನುರ್ ರಾಶಿಯವರಿಗೆ ಆರು ಮತ್ತು ಹನ್ನೊಂದನೇ ಅಧಿಪತಿ ತೃತಿಯ ಭಾವದಲ್ಲಿದ್ದಾರೆ. ಕಲೆ ಮತ್ತು ಸೃಜನಶೀಲತೆಗೆ ಸಂಬಂಧಪಟ್ಟ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಈ ರಾಶಿಯವರು ಇದರ ಅದ್ಭುತ ಲಾಭಗಳನ್ನು ಪಡೆಯಲಿದ್ದಾರೆ. ನೀವು ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಫಲಗಳನ್ನು ಪಡೆದಿದ್ದೀರಿ, ಇದರ ಸದುಪಯೋಗ ಪಡೆದುಕೊಳ್ಳಿ.

ಕುಂಭ ರಾಶಿ:- ನಾಲ್ಕು ಮತ್ತು ಒಂಭತ್ತರ ಭಾಗ್ಯಾಧಿಪತಿ ಹಾಗೂ ಕೇಂದ್ರಾಧಿಪತಿ ಒಂದರ ಕವತದಿರುವುದು ನಿಮಗೆ ಅನೇಕ ಶುಭಫಲಗಳನ್ನು ತರುತ್ತಿದೆ ನಿರಂತರವಾಗಿ ಈ ಸಮಯ ಪೂರ್ತಿ ನೀವು ಧನ ಲಾಭಗಳನ್ನು ಪಡೆಯುತ್ತೀರಿ.

ಈ ಸುದ್ದಿ ಓದಿ:- LPG ಗ್ಯಾಸ್ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ರೂ.799 ಕ್ಕೆ ಗ್ಯಾಸ್ ಸಿಲಿಂಡರ್ ಲಭ್ಯ, ರೂ.300 ಫ್ರೀ ಸಬ್ಸಿಡಿ.!

ಇದನ್ನು ನೀವು ಅರ್ಥ ಮಾಡಿಕೊಂಡು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಎಷ್ಟು ದಿನಗಳ ಕ’ಷ್ಟ ಕಾರ್ಪಣ್ಯಗಳನ್ನು ಪರಿಹರಿಸಿಕೊಳ್ಳಬಹುದು. ಶುಕ್ರನ ಆರಾಧನೆಯನ್ನು ಮಾಡುವುದರಿಂದ, ಶುಕ್ರನಿಗೆ ಸಂಬಂಧಪಟ್ಟ ಸ್ತೋತ್ರಗಳನ್ನು ಪಠಿಸುವುದರಿಂದ ಮೇಲಿನ ಆರು ರಾಶಿಯವರು ಈ ಯೋಗವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು.

ಬುಧವಾರದ ಪಕ್ಷಿಗಳಿಗೆ ಮಿಸ್ ಮಾಡದೆ ಈ ಕಾಳು ತಿನ್ನಿಸಿ, ನೀವು ಅಂದುಕೊಂಡ ಕೆಲಸ 100% ವಾರದೊಳಗೆ ಆಗುತ್ತೆ.!

 

ಜೀವನದ ಬಹುತೇಕ ಕಷ್ಟಗಳಿಗೆ ಪರಿಹಾರ ಬಹಳ ಸರಳವಾಗಿರುತ್ತದೆ. ಪ್ರಕೃತಿಯೇ ದೇವರು ಇದನ್ನು ಅರ್ಥ ಮಾಡಿಕೊಂಡು ಪ್ರಕೃತಿದತ್ತವಾಗಿ ಬದುಕಿದರೆ ಅರ್ಧದಷ್ಟು ಕಷ್ಟಗಳ ಹೊರೆ ಇಳಿಯುತ್ತದೆ ಮತ್ತು ನಾವು ಮಾಡುವ ಪುಣ್ಯ ಕರ್ಮಫಲದಿಂದಾಗಿ ಇನ್ನು ಅರ್ಧದಷ್ಟು ಕಷ್ಟಗಳಿಗೆ ಸಮಸ್ಯೆಗಳಿಗೆ ಪರಿಹಾರ ತನ್ನಿಂದ ತಾನೇ ಸಿಗುತ್ತದೆ.

ಅದೇ ರೀತಿ ಜೀವನದಲ್ಲಿ ಮನುಷ್ಯನಿಗೆ ಕಾಡುವಂತಹ ಅನೇಕ ರೀತಿಯ ಕಷ್ಟಗಳಿಗೆ ಬುಧವಾರದಂದು ಮಾಡುವ ಈ ಸುಲಭ ಪರಿಹಾರ ಬಹಳ ಪರಿಣಾಮಕಾರಿಯಾಗಿ ಫಲಿತಾಂಶಗಳನ್ನು ಕೊಡಲಿದೆ. ಪ್ರತಿಯೊಬ್ಬರೂ ಕೂಡ ನಿಮ್ಮ ಜೀವನದಲ್ಲಿ ಇರುವ ಮನುಷ್ಯ ಸಹಜ ಕಷ್ಟಗಳನ್ನು ಬಗೆಹರಿಸಿಕೊಳ್ಳಲು ಈ ಸರಳ ಉಪಾಯ ಮಾಡಿ.

ಬುಧವಾರ ಎಂದ ಕೂಡಲೇ ಬುಧನ ತತ್ವ ಅಧಿಕವಿರುವ ದಿನ ಎಂದು ಸಹಜವಾಗಿ ಗೊತ್ತಾಗುತ್ತದೆ ಮತ್ತು ಹೆಸರು ಕಾಳು ಕೂಡ ಬುಧ ಗ್ರಹವನ್ನು ಪ್ರತಿನಿಧಿಸುವ ಧಾನ್ಯವಾಗಿದೆ ಮತ್ತು ಬುಧನು ಬುದ್ಧಿ ಕಾರಕನಾಗಿದ್ದು ವಿದ್ಯಾಭ್ಯಾಸದಲ್ಲಿ ಉನ್ನತಿ ಮತ್ತು ವ್ಯಾಪಾರದಲ್ಲಿ ಪ್ರಗತಿ ಮತ್ತು ಚಾಣಾಕ್ಷತೆಯನ್ನು ಇದು ಸೂಚಿಸುತ್ತದೆ.

ಈ ಸುದ್ದಿ ಓದಿ:- ವೃಷಭ ರಾಶಿಯ ಮಾರ್ಚ್ ತಿಂಗಳ ಮಾಸ ಭವಿಷ್ಯ, ಮಾರ್ಚ್ ತಿಂಗಳಲ್ಲಿ ಸರ್ಪ್ರೈಸ್ ಕಾದಿದೆ ನಿಮಗೆ.!

ನೀವು ನಿಮ್ಮ ಜೀವನದಲ್ಲಿ ತಪ್ಪಾದ ನಿರ್ಧಾರಗಳಿಂದ ಕಷ್ಟಗಳಲ್ಲಿ ಸಿಲುಕಿದರೆ ಅಥವಾ ಹಣಕಾಸಿಗೆ ಸಂಬಂಧಪಟ್ಟ ಹಾಗೆ ಸಮಸ್ಯೆಯಲ್ಲಿದ್ದರೆ ನಿಮ್ಮ ವಿದ್ಯಾಭ್ಯಾಸದಲ್ಲಿ ತೊಡಗಿದ್ದರೆ ಅಥವಾ ನಿಮ್ಮ ಮನೆಯ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆಗಳು ಉಂಟಾಗುತ್ತಿದ್ದರೆ ಇದೆಲ್ಲದರ ಪರಿಹಾರಕ್ಕಾಗಿ ಮತ್ತು ಇಷ್ಟು ಮಾತ್ರವಲ್ಲದೆ ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು.

ವಿವಾಹ ಸಂಬಂಧಗಳಿಗೆ ಸಂಬಂಧಿಸಿದ ಅಡಚಣೆಗಳು ಸಂತಾನ ವಿಳಂಬ ಅಥವಾ ಮಕ್ಕಳು ಹೇಳಿದ ಮಾತು ಕೇಳದೆ ಇರುವುದು, ಅನಾರೋಗ್ಯ ಇಂತಹ ಕಷ್ಟಗಳಿಂದ ಕೂಡ ಪರಿಹಾರ ಪಡೆದುಕೊಳ್ಳಲು ಈ ಸರಳ ಉಪಾಯ ಅನುಕೂಲಕರವಾಗಿಯೇ ಇದೆ ಇದರ ಆಚರಣೆ ಮಂಗಳವಾರದಿಂದಲೇ ಆರಂಭವಾಗುತ್ತದೆ ಎನ್ನಬಹುದು, ಆದರೆ ಕಷ್ಟವೇನಿಲ್ಲ.

ಮಂಗಳವಾರದ ದಿನ ರಾತ್ರಿ ನೀವು ಒಂದು ಗಾಜಿನ ಬೌಲ್ ನಲ್ಲಿ ಒಂದು ಹಿಡಿ ಹೆಸರುಕಾಳು ಹಾಕಿ ಅಥವಾ ನಿಮ್ಮ ಶಕ್ತಿಯನುಸಾರ ಎಷ್ಟು ಹೆಸರುಕಾಳು ಸಾಧ್ಯ ಅಷ್ಟನ್ನು ಗಾಜಿನ ಬೌಲ್ ನಲ್ಲಿ ನೆನೆ ಹಾಕಿ ಮರುದಿನ ಬೆಳಿಗ್ಗೆ ಈ ಕಾಳುಗಳನ್ನು ನಿಮ್ಮ ಮನೆಯ ಮುಂದೆ ಖಾಲಿ ಜಾಗದಲ್ಲಿ ಅಥವಾ ಯಾವುದಾದರೂ ಬಯಲು ಪ್ರದೇಶದಲ್ಲಿ ಎಲ್ಲಿ ಪಕ್ಷಿಗಳು ಹೆಚ್ಚಾಗಿ ಬರುತ್ತವೆಯೇ ಆ ಜಾಗದಲ್ಲಿ ಅವುಗಳಿಗೆ ಹಾಕಬೇಕು.

ಈ ಸುದ್ದಿ ಓದಿ:-ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆಯಾ? ಎಲ್ಲಾ ಕಡೆ ಹಣ ಇಲ್ಲ ಅಂತಲೇ ಹೇಳಿಕೊಂಡು ಬರುತ್ತಿದ್ದೀರಾ.? ಇದಕ್ಕೆ ಪರಿಹಾರ ಇಲ್ಲಿದೆ ನೋಡಿ.!

ಈಗ ಬೇಸಿಗೆ ಹೆಚ್ಚಿರುವುದರಿಂದ ಅನೇಕ ಕಡೆ ಪಕ್ಷಿಗಳು ನೀರು ಕುಡಿಯಲು ಅನುಕೂಲ ವ್ಯವಸ್ಥೆ ಮಾಡಲಾಗಿರುತ್ತದೆ ಅಲ್ಲಿಯೂ ಇಡಬಹುದು ಆದರೆ ಯಾವುದೇ ಕಾರಣಕ್ಕೂ ಮನೆಯ ಮಹಡಿ ಮೇಲೆ ಮಾತ್ರ ಹಕ್ಕಿಗಳಿಗಾಗಿ ಕಾಳುಗಳನ್ನು ಹಾಕಬೇಡಿ.

ಇದರಿಂದ ಶುಭ ಫಲದ ಬಹಲಾಗಿ ಗೃಹ ದೋಷಗಳು ಉಂಟಾಗುತ್ತದೆ ಮನೆ ಮೇಲೆ ಹೊರತುಪಡಿಸಿ ಯಾವುದೇ ಜಾಗದಲ್ಲಿ ಹಕ್ಕಿಗಳಿಗಾಗಿ ಇದನ್ನು ಹಾಕಿ ನಿಮ್ಮ ಜೀವನದ ಸಮಸ್ಯೆಗಳು ಆಶ್ಚರ್ಯಕರ ರೀತಿಯಲ್ಲಿ ಪರಿಹಾರವಾಗುತ್ತದೆ.

ಬಹಳ ಬೇಗ ಈ ಸಮಸ್ಯೆಗಳಿಂದ ಮುಕ್ತಿ ಸಿಗಬೇಕು ಎಂದರೆ ಇದೇ ರೀತಿ ರಾತ್ರಿ ನೆನೆಸಿದ ಹೆಸರುಕಾಳನ್ನು ಬುಧವಾರದ ಬೆಳಿಗ್ಗೆ ಮೇಕೆಗಳಿಗೆ ತಿನಿಸಬೇಕು, ನೀವು ಅಂದುಕೊಳ್ಳದ ರೀತಿಯಲ್ಲಿ ನೀವೇ ಆಶ್ಚರ್ಯ ಪಡುವ ರೀತಿಯಲ್ಲಿ ಒಂದು ವಾರದಲ್ಲಿಯೇ ನಿಮ್ಮ ಸಮಸ್ಯೆ ನೂರಕ್ಕೆ ನೂರರಷ್ಟು ಕ್ಲಿಯರ್ ಆಗುತ್ತದೆ.

ಈ ಸುದ್ದಿ ಓದಿ:-ದೀಪ ಹಚ್ಚಿ ಆರಿ ಹೋದರೆ ಅಥವಾ ಕಮಟು ವಾಸನೆ ಬಂದರೆ ಅಥವಾ ಚಟಪಟ ಶಬ್ದ ಮಾಡಿದರೆ ಏನು ಅರ್ಥ ಗೊತ್ತಾ.?.

ಪಟ್ಟಣ ಪ್ರದೇಶಗಳಲ್ಲಿ ಇರುವವರಿಗೆ ಇದು ಸಾಧ್ಯವಾಗದೆ ಹೋಗಬಹುದು ತೊಂದರೆ ಇಲ್ಲ. ಗ್ರಾಮೀಣ ಭಾಗದಲ್ಲಿರುವ ನಿಮ್ಮ ಪರಿಚಯಸ್ಥರಿಗೆ ನಿಮ್ಮ ಹೆಸರಿನಲ್ಲಿ ಈ ರೀತಿ ರಾತ್ರಿ ಹೆಸರುಕಾಳು ನೆನೆ ಇಟ್ಟು ಬುಧವಾರ ಬೆಳಗ್ಗೆ ಮೇಕೆಗೆ ತಿಳಿಸಲು ಹೇಳಿ ಆಗ ನಿಮಗೆ ಬುಧನ ಆಶೀರ್ವಾದ ಮತ್ತು ಸಮಸ್ಯೆಗಳಿಗೆ ಪರಿಹಾರ ಖಂಡಿತ ಸಿಗುತ್ತದೆ.

ವೃಷಭ ರಾಶಿಯ ಮಾರ್ಚ್ ತಿಂಗಳ ಮಾಸ ಭವಿಷ್ಯ, ಮಾರ್ಚ್ ತಿಂಗಳಲ್ಲಿ ಸರ್ಪ್ರೈಸ್ ಕಾದಿದೆ ನಿಮಗೆ.!

 

ಸದಾ ಸರ್ವ ಸ್ವತಂತ್ರರಾಗಿರಲು ಇಚ್ಛಿಸುವ ಗುಣ ವೃಷಭ ರಾಶಿಯವರದ್ದು, ಮಾರ್ಚ್ ತಿಂಗಳಿನಲ್ಲೂ ಕೂಡ ಇವರ ಈ ಇಚ್ಚೆಯ ಪ್ರಕಾರವಾಗಿಯೇ ಬದುಕು ನಡೆಯಲಿದೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ವಿವರಿಸುತ್ತಿದ್ದೇವೆ ವೃಷಭ ರಾಶಿಯವರು ಉದ್ಯೋಗ ಪ್ರಿಯರು ಎನ್ನಬಹುದು.

ಇವರಿಗೆ ತಾವು ಮಾಡುವ ಉದ್ಯೋಗದಷ್ಟು ಖುಷಿ ಕೊಡುವ ಸಂಗತಿ ಮತ್ತೊಂದಿಲ್ಲ ಇದರ ಬಗ್ಗೆ ಬಹಳ ಕಾನ್ಸನ್ಟ್ರೇಟ್ ಮಾಡುವ ಇವರು ಇದಕ್ಕೆ ತಕ್ಕ ಪ್ರತಿಫಲಗಳನ್ನು ಖಂಡಿತ ಪಡೆಯುತ್ತಾರೆ. ಆದರೆ ಅದು ಆ ಕ್ಷಣದಲ್ಲಿಯೇ ನಡೆಯುವಂತದ್ದಲ್ಲ. ಈ ಹಿಂದೆ ಈ ರೀತಿ ಬಹುದಿನಗಳ ಕಾಲ ಕಷ್ಟ ಪಟ್ಟಿದ್ದ ಶ್ರಮಕ್ಕೆ ಅನುಗುಣವಾಗಿ ಅದರ ಫಲವನ್ನು ಈಗ ಪಡೆಯುತ್ತೀರಿ ಅಥವಾ ಈಗ ನೀವು ಯಾವುದಕ್ಕೆ ಶ್ರಮಪಡುತ್ತಿದ್ದೀರಾ ಅದಕ್ಕೆ ಸಿಗಬೇಕಾದ ಪ್ರತಿಫಲವನ್ನು ಇನ್ನೆರಡು ವರ್ಷಗಳ ಬಳಿಕ ಪಡೆಯಲಿದ್ದೀರಿ.

ಈಗಾಗಲೇ ನಿಮ್ಮ ರಾಶಿಯಲ್ಲಿ ಶನಿ ಪ್ರವೇಶವಾಗಿದೆ. ಇದು ನಿಮಗೆ ಒಳ್ಳೆಯ ಫಲಗಳನ್ನು ನೀಡುತ್ತಿದೆ ಆದರೆ ಇದು ವಿಳಂಬವಾಗುತ್ತಿದೆ ಅಷ್ಟೇ ಇದರ ಬಗ್ಗೆ ಚಿಂತೆ ಬೇಡ ಯಾವುದೇ ಕಾರಣಕ್ಕೂ ನಿಮಗೆ ಅ’ನ್ಯಾ’ಯವಾಗುವುದಿಲ್ಲ, ಮುಂದೆಯೂ ಇದು ಹೀಗೆ ಮುಂದುವರಿಯಲಿದೆ.

ಈ ಸುದ್ದಿ ಓದಿ:- ಈ ಎಲೆ ಎಲ್ಲೇ ಸಿಕ್ಕರೂ ಬಿಡಲೇಬೇಡಿ, ಸಾಕಷ್ಟು ಶ್ರೀಮಂತರಾಗುತ್ತೀರಿ.!

ಮಾರ್ಚ್ 7 ರಿಂದ ದಶಮ ಭಾವದಲ್ಲಿ ಶುಕ್ರನು ಬರುತ್ತಾರೆ, ಇದು ಮಾರ್ಚ್ ತಿಂಗಳು ಮಾತ್ರವಲ್ಲದೆ ಈ ವರ್ಷ ಪೂರ್ತಿ ನಿಮಗೆ ಹಣಕಾಸಿನ ಪರಿಸ್ಥಿತಿಯಲ್ಲಿ ಉತ್ತಮ ಫಲಗಳನ್ನು ನೀಡುತ್ತದೆ. ನೀವು ಉದ್ಯೋಗ ಮಾಡುತ್ತಿದ್ದರು ಅಥವಾ ಸ್ವಂತ ಉದ್ಯಮಿಯಲ್ಲಿ ತೊಡಗಿಕೊಂಡಿದ್ದರು ಅದರಲ್ಲಿ ಯಶಸ್ಸನ್ನು ಕಾಣುತ್ತಿರಿ ನಿಮಗೆ ಹೊಸ ಭರವಸೆಗಳನ್ನು ನಿಮ್ಮ ರಾಶಿಯಲ್ಲಿರುವ ಶುಕ್ರನು ನೀಡುತ್ತಾರೆ.

ಇಷ್ಟೇ ಅಲ್ಲದೆ ನೀವು ಅದು ಯಾವುದಾದರು ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ಪಡೆದು ಅದನ್ನು ಯಾವುದಕ್ಕಾಗಿ ಬಳಸಿದ್ದೀರಿ ಅದರಲ್ಲಿ ಲಾಭ ಮತ್ತು ಸಾಲ ತೀರಿಸುವ ಯೋಗ ಅಥವಾ ಬದುಕನ್ನೇ ಒತ್ತೆ ಇಟ್ಟು ಮಾಡಿದ ಕೆಲಸ ಎನ್ನಬಹುದಾದ ಕೆಲಸಗಳಲ್ಲಿ ಜಯ ಇದೆಲ್ಲವೂ ಸಿಗುತ್ತದೆ.

ನಿಮ್ಮ ದಶಮ ಸ್ಥಾನ ಅಂದರೆ ಕುಂಭ ರಾಶಿಯಲ್ಲಿ ರವಿಯು ಇರುವುದರಿಂದ ನಿಮ್ಮ ಉದ್ಯೋಗಗಳಲ್ಲೂ ಕೂಡ ಶುಭಫಲಗಳನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಪ್ರಶಂಸೆ, ಬಡ್ತಿ ಮುಂತಾದ ಪ್ರಯೋಜನಗಳು ಪಡೆಯುತ್ತೀರಿ. ಮಹತ್ತರವಾದ ಕೆಲಸ ಕಾರ್ಯಗಳಲ್ಲಿ ನೀವು ಜವಾಬ್ದಾರಿ ತೆಗೆದುಕೊಂಡಿದ್ದರೆ ಯಶಸ್ಸು ನಿಮ್ಮ ಪಾಲಿಗೆ ಬರುತ್ತದೆ ಆದರೆ ಮನಸ್ಸು ಪೂರ್ತಿಯಾಗಿ ನಿಮ್ಮ ಪ್ರಯತ್ನ, ಶ್ರದ್ಧೆ, ಏಕಾಗ್ರತೆ, ಪರಿಶ್ರಮ ಇದು ಕೂಡ ಇರಬೇಕು.

ಈ ಸುದ್ದಿ ಓದಿ:- ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆಯಾ? ಎಲ್ಲಾ ಕಡೆ ಹಣ ಇಲ್ಲ ಅಂತಲೇ ಹೇಳಿಕೊಂಡು ಬರುತ್ತಿದ್ದೀರಾ.? ಇದಕ್ಕೆ ಪರಿಹಾರ ಇಲ್ಲಿದೆ ನೋಡಿ.!

ಇವು ಅಷ್ಟೇ ಮುಖ್ಯ ಪಾತ್ರ ವಹಿಸುತ್ತವೆ ಎನ್ನುವುದನ್ನು ಮರೆಯುವಂತಿಲ್ಲ. ಮಾರ್ಚ್ 14 ರವರೆಗೂ ಕೂಡ ಇಷ್ಟೆಲ್ಲಾ ಶುಭಫಲಗಳನ್ನು ಪಡೆಯಲಿದ್ದೀರಿ. ಆ ನಂತರವೂ ಕೂಡ ರವಿಯಿಂದ ಲಾಭದಾಯಕ ಫಲಗಳನ್ನೇ ಪಡೆಯುತ್ತೀರಿ. ವಿದ್ಯಾಭ್ಯಾಸದ ವಿಚಾರವಾಗಿ ಹೇಳುವುದಾದರೆ ವೃಷಭ ರಾಶಿಯ ವಿದ್ಯಾರ್ಥಿಗಳಿಗೆ ಈ ತಿಂಗಳಲ್ಲಿ ಅತಿಯಾದ ಒತ್ತಡ, ಟೆನ್ಶನ್ ಇರುತ್ತದೆ.

ಬಹಳಷ್ಟು ಕಡೆಯಿಂದ ನಿಮಗೆ ಡಿಸ್ಟರ್ಬೆನ್ಸ್ ಆಗುತ್ತದೆ ಇವುಗಳನ್ನು ಅರಿತು ಯಾವ ಕಡೆಗೂ ಕೂಡ ಗಮನ ಕೊಡದೆ ಪರೀಕ್ಷಾ ಸಮಯವಾದ ಈ ತಿಂಗಳಿನಲ್ಲಿ ಫೋಕಸ್ ನಿಂದ ಇರಿ, ಎಲ್ಲವೂ ಒಳ್ಳೆಯದೇ ಆಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ವೃಷಭ ರಾಶಿಯ ಎಲ್ಲರಿಗೂ ಕೂಡ ಈ ತಿಂಗಳಿನಲ್ಲಿ ಸಾಧನೆಗೆ ತಕ್ಕ ಮನ್ನಣೆ ಸಿಗುತ್ತದೆ.

ಹಿರಿಯರಿಂದ ಶಭಾಷ್ ಹಾಗೂ ಕಿರಿಯರಿಂದ ಪ್ರೀತಿ ಗೌರವಗಳನ್ನು ಪಡೆಯುವ ಫಲಗಳನ್ನು ಹೊಂದಿದ್ದೀರಿ ಮಾರ್ಚ್ ತಿಂಗಳಿನಲ್ಲಿ ನೀವು ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಹ ಫಲ ಹೊಂದಿದ್ದೀರಿ ಆದರೆ ಶನಿ ಪ್ರಭಾವದಿಂದ ಸ್ವಲ್ಪ ವಿಳಂಬ ಇದೆ ಅಷ್ಟೇ ಅದರ ಬಗ್ಗೆ ಕೂಡ ಹೆಚ್ಚು ತಲೆ ಕೆಡಿಸಿಕೊಳ್ಳದೆ ಮನ್ನುಗ್ಗಿ ಯಶಸ್ಸು ನಿಮ್ಮದೇ.

https://youtu.be/D-pniw1GBxA?si=LQHq0tDnEcsZGaNo

ಈ ಎಲೆ ಎಲ್ಲೇ ಸಿಕ್ಕರೂ ಬಿಡಲೇಬೇಡಿ, ಸಾಕಷ್ಟು ಶ್ರೀಮಂತರಾಗುತ್ತೀರಿ.!

ಈಗಿನ ಕಾಲದಲ್ಲಿ ಹಣಕ್ಕೆ ಬೆಲೆ ಹೆಚ್ಚು ಹಣ ಇಲ್ಲದಿದ್ದರೆ ನಮ್ಮ ಹತ್ತಿರದವರಿಗು ಕೂಡ ನಾವು ಬೇಡವಾಗುತ್ತವೆ. ಇಂದು ಹಣ ಇಲ್ಲದೆ ಇದ್ದರೆ ನಾವು ಏನು ಕೂಡ ಮಾಡಲು ಸಾಧ್ಯವೇ ಇಲ್ಲ ಅದೇ ಕಲಿಗಾಲ. ನಾವು ಈ ಕಲಿಯುಗದಲ್ಲಿ ಬದುಕುತ್ತಿದ್ದೇವೆ ಇಲ್ಲಿ ಬದುಕಬೇಕು ಎಂದರೆ ಪ್ರತಿಯೊಬ್ಬರ ಬಳಿಯೂ ಕೂಡ ಹಣ ಇರಲೇಬೇಕು.

ಇದಕ್ಕಾಗಿಯೇ ನಾವು ಇಷ್ಟು ಕಷ್ಟಪಟ್ಟು ಪ್ರತಿದಿನ ಹೋರಾಟ ಮಾಡುತ್ತಿರುವುದು ಆದರೆ ಕೆಲವರಿಗೆ ಎಷ್ಟೇ ಕಷ್ಟ ಪಟ್ಟರು ಈ ಹಣಕಾಸಿನ ತೊಂದರೆ ಹೋಗುವುದಿಲ್ಲ ಮತ್ತು ಇನ್ನೂ ಕೆಲವರು ದಿಢೀರ್ ಎಂದು ಶ್ರೀಮಂತರಾಗಿ ಬಿಡುತ್ತಾರೆ. ಆಗ ಅವರಿಗೆ ಲಕ್ಷ್ಮಿ ಅನುಗ್ರಹವಾಗಿದೆ, ಅದೃಷ್ಟದ ಬಾಗಿಲು ತೆರೆದಿದೆ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ ನಿಮಗೂ ಕೂಡ ಈ ರೀತಿ ನಮ್ಮ ಹಣೆಬರಹ ಬದಲಾಗಬೇಕು ಎಂದರೆ ತಾಯಿ ಮಹಾಲಕ್ಷ್ಮಿಯ ಅನುಗ್ರಹ ಆಗಬೇಕು.

ಹಣ ಮತ್ತು ಸಂಪತ್ತನ್ನು ತಾಯಿ ಮಹಾಲಕ್ಷ್ಮಿಗೆ ಹೋಲಿಕೆ ಮಾಡಲಾಗುತ್ತದೆ ಮತ್ತು ಈ ಪ್ರಕೃತಿಯಲ್ಲಿರುವ ಹಲವು ವಸ್ತುಗಳನ್ನು ತಾಯಿ ಲಕ್ಷ್ಮಿಗೆ ಹೋಲಿಸಲಾಗುತ್ತಿದೆ ನಾವು ಕೂಡ ಇಂತಹ ವಸ್ತುಗಳನ್ನು ಪೂಜ್ಯ ಭಾವದಿಂದ ಕಾಣುವುದರಿಂದ ತಾಯಿ ಮಹಾಲಕ್ಷ್ಮಿ ಪ್ರಸನ್ನರಾಗಿ ನಮಗೆ ಆಶೀರ್ವದಿಸುತ್ತಾರೆ.

ಈ ಸುದ್ದಿ ಓದಿ:- ಇನ್ಮುಂದೆ ಬಡವರಿಗೆ 6 ತಿಂಗಳಲ್ಲಿ ನ್ಯಾಯ ಸಿಗುತ್ತೆ, ಸಿವಿಲ್ ಪ್ರೊಸೀಜರ್ ಕೋಡ್ ತಿದ್ದುಪಡಿ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ನಂತರ ನಾವು ನಮ್ಮ ಸಮಸ್ಯೆಗಳಿಂದ ಮುಕ್ತಿ ಕಾಣಬಹುದು ಹಾಗಾದರೆ ಯಾವ ರೀತಿ ದೇವಿ ಅನುಗ್ರಹಕ್ಕೆ ಪಾತ್ರರಾಗಬಹುದು ಎನ್ನುವುದನ್ನು ಪುರಾಣಗಳಲ್ಲಿ ಶಾಸ್ತ್ರಗಳಲ್ಲಿ ಉಪನಿಷತ್ತುಗಳಲ್ಲಿ ತಿಳಿಸಲಾಗಿದೆ ಮತ್ತು ವಿದುರ ಮತ್ತು ಚಾಣಕ್ಯರಂತಹ ನ್ಯಾಯ ತಜ್ಞರು ಆರ್ಥಿಕ ತಜ್ಞರು ಕೂಡ ಇದರ ಬಗ್ಗೆ ಸಲಹೆ ನೀಡಿದ್ದಾರೆ. ವಿದುರ ನೀತಿಯಲ್ಲಿ ಈ ಬಗ್ಗೆ ವಿದುರರು ತಿಳಿಸಿರುವ ಕೆಲ ಸಂಗತಿ ಬಗ್ಗೆ ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ ಇದನ್ನು ಪಾಲಿಸಿ ಧನವಂತರಾಗಿ.

* ನಾವು ಯಾವಾಗಲೂ ಹಣಕಾಸು ಇಡುವ ಪರ್ಸ್ ನಲ್ಲಿ ಚಿಕ್ಕದೊಂದು ತಾಯಿ ಮಹಾಲಕ್ಷ್ಮಿಯ ಫೋಟೋ ಇಟ್ಟುಕೊಳ್ಳಬೇಕು. ಆ ಫೋಟೋದಲ್ಲಿ ಲಕ್ಷ್ಮಿ ದೇವಿಯು ಕುಳಿತಿರುವ ಭಂಗಿಯಲ್ಲಿ ಇರಬೇಕು ಯಾವುದೇ ಕಾರಣಕ್ಕೂ ನಿಂತಿರುವ ದೇವರ ಫೋಟೋವನ್ನು ಇಟ್ಟುಕೊಳ್ಳಬಾರದು ಹೀಗೆ ಲಕ್ಷ್ಮಿಯ ಫೋಟೋವನ್ನು ನಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ ಹಣ ನಮ್ಮ ಪರ್ಸನಲ್ಲಿ ಯಾವಾಗಲೂ ಇರುತ್ತದೆ ಎಂದು ಹೇಳಲಾಗುತ್ತದೆ.

* ಕೆಂಪು ಬಣ್ಣದ ಕಾಗದದಲ್ಲಿ ನಮ್ಮ ಹಣಕಾಸಿನ ಗುರಿಗಳನ್ನು ಬರೆದುಕೊಂಡು ಪರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ ಅದು ಶೀಘ್ರವಾಗಿ ನೆರವೇರುತ್ತವೆ ಎಂದು ಹೇಳಲಾಗಿದೆ
* ಸ್ವಲ್ಪ ಅಕ್ಕಿ ಕಾಳುಗಳನ್ನು ಪರ್ಸನಲ್ ಇಟ್ಟುಕೊಳ್ಳುವುದರಿಂದ ಅನವಶ್ಯಕ ಖರ್ಚುಗಳು ತಗುತ್ತವೆ ಎಂದು ಹೇಳಲಾಗುತ್ತದೆ.

ಈ ಸುದ್ದಿ ಓದಿ:- ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶ, ಬ್ಯಾಂಕ್ ಸಹಾಯಕರ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ ವೇತನ 87,125/-

* ಬೆಳ್ಳಿ ಮತ್ತು ಚಿನ್ನ ಸಂಪತ್ತನ್ನು ಸೂಚಿಸುವುದರಿಂದ ಬೆಳ್ಳಿ ಹಾಗೂ ಬಂಗಾರದ ನಾಣ್ಯಗಳನ್ನು ಮೊದಲು ದೇವರ ಕೋಣೆಯಲ್ಲಿ ಇಟ್ಟು ಪೂಜಿಸಿ ಮಹಾಲಕ್ಷ್ಮಿಯ ಆಶೀರ್ವಾದದೊಂದಿಗೆ ಅದನ್ನು ತೆಗೆದುಕೊಂಡು ಪರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ ಕೂಡ ಹಣಕಾಸು ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ.

* ರುದ್ರಾಕ್ಷಿಯನ್ನು ಕೂಡ ವಿಧಿ ವಿಧಾನದಿಂದ ಪೂಜಿಸಿ ನಂತರ ಪರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ ಅಥವಾ ಧರಿಸುವುದರಿಂದ ಧರಿದ್ರ ಬಡತನಗಳು ನಿವಾರಣೆಯಾಗುತ್ತದೆ
* ಆಲದ ಮರವು ತ್ರಿಮೂರ್ತಿಗಳ ಆಶೀರ್ವಾದ ಪಡೆದಿರುವ ಮರ ಎಂದು ಹೇಳಲಾಗುತ್ತದೆ, ಇದಕ್ಕೆ ಶಾಸ್ತ್ರಗಳಲ್ಲಿ ಮಹನೀಯವಾದ ಸ್ಥಾನವಿದೆ ಈ ಆಲದ ಮರದ ಎಲೆಗೆ ಹಣವನ್ನು ಆಕರ್ಷಿಸುವ ಶಕ್ತಿಯು ಕೂಡ ಇದೆ.

ಆಲದ ಮರದ ಎಲೆಯನ್ನು ಶುಕ್ರವಾರದಂದು ಮನೆಗೆ ತಂದು ಅರಿಶಿನದ ನೀರಿನಲ್ಲಿ ತೊಳೆದು ನಂತರ ತಾಯಿ ಮಹಾಲಕ್ಷ್ಮಿ ಫೋಟೋ ಮುಂದೆ ಇಟ್ಟು ಪೂಜಿಸಿ ಪರ್ಸನಲ್ ಇಟ್ಟುಕೊಳ್ಳುವುದರಿಂದ ಎಂದೂ ಹಣಕಾಸಿನ ಕೊರತೆ ಬರುವುದಿಲ್ಲ. ಮ್ಯಾಗ್ನೆಟ್ ರೀತಿ ಹಣವನ್ನು ಇದು ಎಳೆದು ತರುತ್ತದೆ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.

ಈ ಸುದ್ದಿ ಓದಿ:- ಬ್ಯಾಂಕ್ ಹರಾಜಿನಲ್ಲಿ ಮನೆ ಕೊಂಡುಕೊಳ್ಳಬಹುದೇ.? ಎಲ್ಲಿ ಪರ್ಚೇಸ್ ಮಾಡುವುದು.? ಹೇಗೆ ಅಪ್ಲೈ ಮಾಡುವುದು.? ಡಿಸ್ಕೌಂಟ್ ಇರುತ್ತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

* ಆದರೆ ನೆನಪಿರಲಿ ಯಾವುದೇ ಕಾರಣಕ್ಕೂ ಈ ಮೇಲೆ ತಿಳಿಸಿದ ವಸ್ತುಗಳನ್ನು ಇಡುವಾಗ ನಿಮ್ಮ ಪರ್ಸನಲ್ ಹರಿದಿರುವ ನೋಟುಗಳನ್ನು ಇಟ್ಟುಕೊಂಡಿರಬಾರದು.

ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆಯಾ? ಎಲ್ಲಾ ಕಡೆ ಹಣ ಇಲ್ಲ ಅಂತಲೇ ಹೇಳಿಕೊಂಡು ಬರುತ್ತಿದ್ದೀರಾ.? ಇದಕ್ಕೆ ಪರಿಹಾರ ಇಲ್ಲಿದೆ ನೋಡಿ.!

ಸರಳವಾಗಿದೆ ತಿಳಿದುಕೊಳ್ಳಿ ಮತ್ತು ಈ ಪೂಜೆ ಮಾಡಿದ ನಂತರ ಯಾರಿಗೂ ಹೇಳದೆ ಗುಟ್ಟಾಗಿರಿ ಚಮತ್ಕಾರವೇ ನಡೆಯುತ್ತದೆ ಕೆಲವರು ಮಾತನಾಡುವಾಗ ನನ್ನ ಬಳಿ ಒಂದು ರೂಪಾಯಿ ಕೂಡ ಇಲ್ಲ ಎಷ್ಟೇ ದುಡಿದರು ಹಣ ಕೈಯಲ್ಲಿ ಇರುವುದೇ ಇಲ್ಲ. ಯಾವಾಗಲೂ ಹಣಕಾಸಿಗೆ ಸಮಸ್ಯೆ ಇದ್ದೇ ಇರುತ್ತದೆ ಈ ರೀತಿ ಮಾತನಾಡುವುದನ್ನು ಕೇಳಿರುತ್ತೇವೆ.

ನಿಮಗೂ ಕೂಡ ಈ ರೀತಿ ಆಗಿರಬಹುದು ಅಥವಾ ನೀವೇ ಈ ಮಾತುಗಳನ್ನು ಹೇಳಿರಲು ಬಹುದು ಇಂತಹ ತಪ್ಪು ಮಾಡುತ್ತಿದ್ದರೆ ಇಂದೇ ಬಿಟ್ಟುಬಿಡಿ. ಯಾಕೆಂದರೆ ಯಾವಾಗಲೂ ಹಣಕಾಸಿನ ವಿಚಾರವಾಗಿ ಪಾಸಿಟಿವ್ ಆಗಿ ಮಾತನಾಡಬೇಕು ಅದಕ್ಕಿಂತಲೂ ಮಾತನಾಡದೆ ಇರುವುದೇ ಇನ್ನೂ ಉತ್ತಮ.

ನೀವು ದುಡಿಯುತ್ತಿರುವ ಹಣವನ್ನು ಸರಿಯಾಗಿ ಬುದ್ದಿವಂತಿಕೆಯಿಂದ ಸಮರ್ಪಕವಾಗಿ ಬಳಸಿಕೊಂಡು ಹೋದರೆ ನಿಮಗೆ ಈ ಸಮಸ್ಯೆ ಬರುವುದಿಲ್ಲ. ಕೆಲವರು ಉಳಿತಾಯ ಯೋಜನೆಗಳು, ವಿಮೆಗಳು, ಚೀಟಿಗಳು, ಚಿನ್ನದ ಚೀಟಿ ಇತ್ಯಾದಿಗಳ ಕಂತುಗಳಿಗೆ ಅಥವಾ ಹೋಂ ಲೋನ್, ವೆಹಿಕಲ್ ಲೋನ್, ಪರ್ಸನಲ್ ಲೋನ್ ಗಳ EMI ಗಳಿಗೆ ಸಂಬಳದ ಹಣವನ್ನು ಕಳೆಯುತ್ತಿರುತ್ತಾರೆ.

ಈ ಸುದ್ದಿ ಓದಿ:- ದೀಪ ಹಚ್ಚಿ ಆರಿ ಹೋದರೆ ಅಥವಾ ಕಮಟು ವಾಸನೆ ಬಂದರೆ ಅಥವಾ ಚಟಪಟ ಶಬ್ದ ಮಾಡಿದರೆ ಏನು ಅರ್ಥ ಗೊತ್ತಾ.?.

ಇದು ಒಂದು ಕಡೆ ಉಳಿತಾಯ ಆಗುತ್ತಿರುತ್ತದೆ ಅಥವಾ ನೀವು ಈಗಾಗಲೇ ಮಾಡಿಕೊಂಡಿರುವ ಖರ್ಚಿಗೆ ಜಮೆ ಆಗಿರುತ್ತದೆ ಆದರೆ ಒಂದೇ ಬಾರಿಗೆ ಹಣ ಪಡೆದಿದ್ದು ಅಥವಾ ಪಡೆಯುವುದು ನಿಜ ಅಲ್ಲವೇ. ಒಂದು ವೇಳೆ ನಿಜವಾಗಿಯೂ ಹಣಕಾಸನ್ನು ಹೊಂದಿಸಲಾಗದಷ್ಟು ಕಷ್ಟದಲ್ಲಿ ಕೊಂಡಿದ್ದೀರಿ ತುಂಬಾ ಕಮಿಟ್ಮೆಂಟ್ ಹೆಚ್ಚಾಗಿದೆ ಎನ್ನುವುದಾದರೆ.

ನೀವು ನಿಮ್ಮ ಆದಾಯ ದುಪ್ಪಟ್ಟಾಗುವಂತೆ ದುಡಿದ ಹಣವು ಸರಿಯಾಗಿ ಬಳಕೆಯಾಗಿ ಅದರಿಂದ ಲಾಭ ಬರುವಂತೆ ಆಗಲು ನಾವು ಹೇಳುವ ಒಂದು ಸರಳ ಆಚರಣೆ ಮಾಡಿ ಸಾಕು. ಹಣದ ದೇವತೆಯಾದ ಲಕ್ಷ್ಮಿ ಒಲಿಯುವುದರ ಜೊತೆಗೆ ವಿದ್ಯಾ ದೇವತೆ ಸರಸ್ವತಿ ಅನುಗ್ರಹ ದೊರೆತು ಹಣಕಾಸಿನ ವಿಚಾರದಲ್ಲಿ ಹೇಗಿರಬೇಕು ಎನ್ನುವ ಜ್ಞಾನವನ್ನು ಪಡೆಯುತ್ತೀರಿ ಹಾಗೂ ಶಕ್ತಿ ದೇವತೆ ಅಮ್ಮನವರು ನಿಮಗೆ ಹೆಚ್ಚಿಗೆ ದುಡಿಯಲು ಶಕ್ತಿ ನೀಡುತ್ತಾರೆ, ದಾರಿ ತೋರುತ್ತಾರೆ.

ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ಲಕ್ಷ್ಮಿ ಕುಬೇರ ಪೂಜೆ ಮಾಡಿ ಮತ್ತು ಆ ಮಂತ್ರಗಳನ್ನು ಪಠಿಸಿ. ಈ ಆಚರಣೆ ಎಷ್ಟು ಸರಳ ಎಂದರೆ ಪ್ರತಿನಿತ್ಯ ಕೂಡ ನೀವು ಮನೆಗಳಲ್ಲಿ ಪೂಜೆ ಮಾಡುತ್ತಿರುತ್ತೀರಾ ಆ ಸಮಯದಲ್ಲಿ ಒಂದಷ್ಟು ಘಳಿಗೆಯನ್ನು ಇದಕ್ಕಾಗಿ ಮೀಸಲಿಟ್ಟರೆ ಸಾಕು.

ಈ ಸುದ್ದಿ ಓದಿ:- ಸಿಂಹ ರಾಶಿಯ ಮಾರ್ಚ್ ತಿಂಗಳ ಮಾಸ ಭವಿಷ್ಯ, ಇದೊಂದು ಶಕ್ತಿ ನಿಮಗೆ ಬಹಳ ಧೈರ್ಯ ಕೊಡುತ್ತದೆ.!

ಲಕ್ಷ್ಮಿ, ಕುಬೇರ, ಸರಸ್ವತಿ, ಪಾರ್ವತಿ ಹೆಸರು ಹೇಳಿ ದೀಪವನ್ನು ಹಚ್ಚಿ ಸಾಧ್ಯವಾದರೆ ಕೆಂಪು ವಸ್ತ್ರವನ್ನು ಧರಿಸಿ, ಕುಂಕುಮಾರ್ಚನೆಯನ್ನು ಮಾಡುತ್ತಾ ಅಥವಾ ಕಮಲ ಮಾಲೆ ಹಿಡಿದುಕೊಂಡು ಕೆಂಪು ಹೂಗಳನ್ನು ಅರ್ಪಿಸುತ್ತಾ ನಿಮಗೆ ಹೇಗೆ ಸಾಧ್ಯ ಹಾಗೆ 108 ಬಾರಿ ಈ ಕುಬೇರ ಲಕ್ಷ್ಮಿ ಮಂತ್ರವನ್ನು ಪಠಿಸಿ ಮತ್ತು ನಿಮ್ಮ ಹಣಕಾಸಿನ ಪರಿಸ್ಥಿತಿ ವೃದ್ಧಿಯಾಗಲು ನಿಮ್ಮ ಕಷ್ಟಗಳನ್ನು ಮಹಾಲಕ್ಷ್ಮಿ ಮುಂದೆ ಹೇಳಿಕೊಂಡು ಪ್ರಾರ್ಥಿಸಿ

ಹಾಲು ಸಕ್ಕರೆ ಅಥವಾ ಹಾಲಿನಿಂದ ಮಾಡಿದ ಪಾಯಸವನ್ನು ನೈವೇದ್ಯವಾಗಿ ಅರ್ಪಿಸಿ. ನಿಮ್ಮ ಕೈಲಿ ಎಷ್ಟು ದಿನಗಳು ಸಾಧ್ಯ ಅಷ್ಟು ದಿನಗಳು ಇದನ್ನು ಮುಂದುವರೆಸಿಕೊಂಡು ಹೋಗಿ. ಬಹಳ ಚಮತ್ಕಾರಿ ರೀತಿಯಲ್ಲಿ ನೀವು ಇದನ್ನು ಆರಂಭಿಸಿದ ಕೆಲ ದಿನಗಳಲ್ಲಿಯೇ ಫಲಿತಾಂಶಗಳನ್ನು ಕಾಣುತ್ತದೆ.

ಅನಿರೀಕ್ಷಿತ ಧನ ಲಾಭವಾಗುತ್ತದೆ ಅಥವಾ ನೀವು ಎಲ್ಲೋ ಹೂಡಿಕೆ ಮಾಡಿ ಸಿಲುಕಿಕೊಂಡಿದ್ದ ಹಣವು ಕಗ್ಗಂಟು ಬಗೆ ಹರಿದು ನಿಮ್ಮ ಕೈ ಸೇರುತ್ತದೆ ಅಥವಾ ನಿಮ್ಮ ವೇತನವನ್ನು ಹೆಚ್ಚಿಗೆ ಮಾಡುತ್ತಾರೆ ಅಥವಾ ಸಂಗಾತಿ ಕಡೆಯಿಂದ ಹಣ ಬರುತ್ತದೆ ಅಥವಾ ಮಕ್ಕಳೋ, ಒಡಹುಟ್ಟಿದವರು ನಿಮ್ಮ ಕಷ್ಟ ನೋಡಲಾಗದೆ ಹಣ ನೀಡಿ ಸಹಾಯ ಮಾಡುತ್ತಾರೆ ಇಂತಹ ಉತ್ತಮವಾದ ಫಲಗಳನ್ನು ಕಾಣುತ್ತಿರಿ.

ಈ ಸುದ್ದಿ ಓದಿ:- ಕುಂಭ ರಾಶಿಯ ಮಾರ್ಚ್ ತಿಂಗಳ ಮಾಸ ಭವಿಷ್ಯ, ಇದಕ್ಕೆ ಹೇಳುವುದು ಎಲ್ಲರಿಗೂ ಒಳ್ಳೆಯ ಸಮಯ ಬರುತ್ತದೆ ಎಂದು.!

ಇದಕ್ಕಿರುವ ಒಂದೇ ಒಂದು ಕಂಡೀಶನ್ ಎಂದರೆ ನೀವು ಯಾವುದೇ ಕಾರಣಕ್ಕೂ ಈ ರೀತಿ ಪೂಜೆ ಮಾಡುತ್ತಿದ್ದೀರಿ ಎಂದು ಯಾರ ಬಳಿಯೂ ಕೂಡ ಹೇಳಿಕೊಂಡು ಬರಬಾರದು ಬಹಳ ಗುಟ್ಟಾಗಿ ಈ ಮಂತ್ರ ಪ್ರತಿದಿನ 108 ಬಾರಿ ಪಠಿಸುತ್ತಾ ಪೂಜೆ ಮಾಡಿದರೆ ನಿಮ್ಮ ಆರ್ಥಿಕ ಸಮಸ್ಯೆ ಪರಿಹಾರವಾಗಿ ಹಣಕಾಸು ಅಭಿವೃದ್ಧಿ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ ಮಂತ್ರ:-
ಓಂ ಹ್ರೀಂ ಶ್ರೀಂ ಕ್ಲೀಂ ಶ್ರೀಂ ಕುಬೇರಾಯಾ ಅಷ್ಟಲಕ್ಷ್ಮಿ ನಮೋಗೃಹೆ
ಧನಂ ಪೂರಯ ಪೂರಯ ನಮಃ

ದೀಪ ಹಚ್ಚಿ ಆರಿ ಹೋದರೆ ಅಥವಾ ಕಮಟು ವಾಸನೆ ಬಂದರೆ ಅಥವಾ ಚಟಪಟ ಶಬ್ದ ಮಾಡಿದರೆ ಏನು ಅರ್ಥ ಗೊತ್ತಾ.?.

 

ದೀಪ ಎನ್ನುವುದು ಬೆಳಗಿನ ಸಂಕೇತ ಮತ್ತು ಬೆಳಕು ಎನ್ನುವುದು ಮಾರ್ಗದರ್ಶನ ಎನ್ನುವುದನ್ನು ಸೂಚಿಸುತ್ತದೆ. ಅಜ್ಞಾನದಿಂದ ಜ್ಞಾನದತ್ತ, ಕತ್ತಲೆಯಿಂದ ಬೆಳಕಿನ ತರುವ ಈ ಶಕ್ತಿಯನ್ನು ಜ್ಯೋತಿ ಎಂದು ಕರೆಯುತ್ತೇವೆ. ಪ್ರತಿಯೊಂದು ಮನೆಗಳಲ್ಲಿ ದೇವಸ್ಥಾನಗಳಲ್ಲಿ ಯಾವುದೇ ಶುಭ ಸಮಾರಂಭಗಳ ಆರಂಭದ ಮುನ್ನ ಕಾರ್ಯಕ್ರಮಗಳ ಉದ್ಘಾಟನೆಯನ್ನು ದೀಪಾರಾಧನೆ ಮಾಡುವುದು ನಮ್ಮ ಪದ್ಧತಿ, ಅದರಲ್ಲೂ ಮನೆಗಳಲ್ಲಿ ದೀಪ ಹಚ್ಚುವುದಕ್ಕೆ ನಿಯಮವೇ ಇದೆ.

ಆ ರೀತಿ ಹಿರಿಯರು ತಿಳಿಸಿ ಕೊಟ್ಟಿರುವ ನಿಯಮದ ಪ್ರಕಾರವಾಗಿ ದೀಪ ಹಚ್ಚಿ ಆರಾಧನೆ ಮಾಡಿದರೆ ದೀಪದ ರೂಪದಲ್ಲಿ ತಾಯಿ ಮಹಾಲಕ್ಷ್ಮಿಯ ಹಾಗೂ ದೀಪವು ಆಗಿರುವ ತ್ರಿಮೂರ್ತಿಗಳ ಅನುಗ್ರಹವಾಗಿ ಬದುಕಿಗೆ ದೊರೆತು ಬಹಳ ಒಳ್ಳೆಯದಾಗುತ್ತದೆ ಎನ್ನುವ ನಿಯಮ ಇದೆ. ಹಾಗೆ ದೀಪ ಹಚ್ಚುವಾಗ ಆಗುವ ಕೆಲವು ಅವಘಡಗಳ ಬಗ್ಗೆ ಅಷ್ಟೇ ಭಯವೂ ಕೂಡ ಇದೆ.

ಈ ಸುದ್ದಿ ಓದಿ:- ನಿಮ್ಮ ಕೈಯಲ್ಲಿರುವ ಸಂತಾನ ರೇಖೆಯ ಬಗ್ಗೆ ಅರಿಯುವುದು ಹೇಗೆ ನೋಡಿ.!

ನಾವು ದೀಪ ಹಚ್ಚುವಾಗ ಅದು ಹತ್ತದೇ ಇದ್ದರೆ ಅಥವಾ ಎಣ್ಣೆ ಇದ್ದರೂ ನಂದಿ ಹೋದರೆ ಅಥವಾ ಚಿಟಪಟ ಸದ್ದು ಬರುತ್ತಿದ್ದರೆ ಅಪಶಕುನ ಎಂದು ಭಯ ಪಡುತ್ತಾರೆ. ಇದರ ಅರ್ಥ ನಿಜಕ್ಕೂ ಇದೇ ಆಗಿರುತ್ತದೆಯಾ? ಯಾಕಾಗಿ ಈ ಸೂಚನೆ ಸಿಗುತ್ತದೆ? ಯಾವ ಅಪಾಯದ ಬಗ್ಗೆ ಹೇಳುತ್ತದೆ ಎಂದು ಹೇಳುವುದಾದರೆ ಮೊದಲಿಗೆ ದೀಪ ಹಚ್ಚುವ ಮುನ್ನವೇ ನಾವು ಕೆಲ ಎಚ್ಚರಿಕೆ ವಹಿಸಬೇಕು.

ದೀಪದ ಎಣ್ಣೆ ಶುದ್ಧವಾಗಿರಬೇಕು ಯಾವುದೇ ಕಲಬೆರಿಕೆ ಎಣ್ಣೆಗಳನ್ನು ಮಿಕ್ಸ್ ಮಾಡಬಾರದು ಮತ್ತು ದೀಪದ ಬತ್ತಿಯನ್ನು ಹತ್ತಿಯಿಂದ ಚೆನ್ನಾಗಿ ಹೊಸೆದು ಎರಡು ಬತ್ತಿಗಳನ್ನು ಜೋಡಿ ಮಾಡಿ ಹಾಕಬೇಕು, ದೀಪದ ತುದಿಯಲ್ಲಿ ಸ್ವಲ್ಪ ಕರ್ಪೂರದಿಂದ ಪುಡಿ ಹಚ್ಚಿದರೆ ದೀಪ ಹಚ್ಚುವುದಕ್ಕೆ ಸುಲಭವಾಗುತ್ತದೆ ಈ ರೀತಿಯಾದ ಅಗತ್ಯ ಕ್ರಮ ಕೈಗೊಳ್ಳಬೇಕು.

ಇದೆಲ್ಲ ಮಾಡಿಯೂ ಎಷ್ಟೇ ಪ್ರಯತ್ನ ಪಟ್ಟರು ಹತ್ತುತ್ತಿಲ್ಲ ಎಂದರೆ ಯಾವುದೋ ಕೆಟ್ಟ ಸುದ್ದಿಯನ್ನು ನಾವು ಆ ದಿನ ಕೇಳಬೇಕಾಗುತ್ತದೆ ನೋವಿನ ಸಂಗತಿ ನಮಗೆ ಉಂಟಾಗುತ್ತದೆ ಎನ್ನುವುದರ ಅರ್ಥ. ಅದಕ್ಕಾಗಿ ನಾವು ಮಾನಸಿಕವಾಗಿ ಸಿದ್ದರಾಗಲೇಬೇಕಾಗುತ್ತದೆ, ಇದು ಅನೇಕರ ಬದುಕಿನಲ್ಲಿ ನಿಜವಾಗಿದೆ.

ಈ ಸುದ್ದಿ ಓದಿ:- ಸಿಂಹ ರಾಶಿ ಮೇಲೆ ಗುರು ಪರಿವರ್ತನೆ ಯಾವ ರೀತಿ ಪರಿಣಾಮ ಬೀರಲಿದೆ ಗೊತ್ತಾ.?

ಒಂದು ವೇಳೆ ಎಣ್ಣೆ ಬದಲಾಯಿಸಿ ನೋಡಿದಾಗ ಅಥವಾ ಬತ್ತಿಯನ್ನು ಬದಲಾಯಿಸಿ ನೋಡಿದಾಗ ದೀಪ ಸರಿಯಾಗಿ ಉರಿದಾಗ ವಸ್ತುಗಳ ದೋಷದಿಂದ ಉಂಟಾಗಿದೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು. ದೀಪಗಳಲ್ಲಿ ಎಣ್ಣೆ ಇದ್ದರೂ ಕೂಡ ದೀಪ ನಂದು ಹೋದರೆ, ಗಾಳಿ ಕಾರಣ ಇರಬಹುದು ಅಥವಾ ಯಾವುದೇ ಗಾಳಿಯೂ ಬೀಸುತಿಲ್ಲ ಆದರೂ ಈ ರೀತಿ ದೀಪ ನಂದಿದೆ ಎಂದರೆ ಅದು ಕೂಡ ಇದೇ ರೀತಿಯ ಫಲಗಳನ್ನು ಕೊಡುತ್ತದೆ ಎಂದು ಅರ್ಥ.

ನೀವು ಆಗ ಆದಷ್ಟು ಎಚ್ಚರಿಕೆಯಿಂದ ಇರಬೇಕು ಯಾರ ಜೊತೆಯಾದರೂ ವ್ಯವಹಾರ ಮಾಡುವಾಗ ಎಚ್ಚರಿಕೆ, ಮನೆ ಜನರ ಜೊತೆ ಚಿಕ್ಕ ಪುಟ್ಟ ಕಾರಣಕ್ಕೆ ಮನಸ್ತಾಪ ಮಾಡಿಕೊಳ್ಳುವುದನ್ನು ತಪ್ಪಿಸುವುದು ಈ ರೀತಿ ನಿಮ್ಮ ಎಚ್ಚರಿಕೆಯಲ್ಲಿ ನೀವು ಇದ್ದರೆ ಅಪಾಯ ತಪ್ಪುತ್ತದೆ.

ಈ ಸುದ್ದಿ ಓದಿ:- ರಾಶಿಗಳ ಪ್ರಕಾರವಾಗಿ ನಿಮ್ಮ ಪ್ರೀತಿ ಹಾಗೂ ಪ್ರೀತಿಸುವ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ನೋಡಿ.!

ಕೆಲವೊಮ್ಮೆ ದೀಪದಲ್ಲಿ ಚಿಟಪಟ ಶಬ್ದ ಕೂಡ ಬರುತ್ತದೆ ನೀವು ಎಣ್ಣೆಗೆ ನೀರು ತಾಕಿಸಿದ್ದರೆ ಅಥವಾ ಬತ್ತಿಗೆ ನೀರು ತಾಗಿಸಿ ನಿಮ್ಮ ಕೈ ತಪ್ಪಿನಿಂದ ಆಗಿದ್ದರೆ ಈ ರೀತಿ ಆಗುವ ಸಾಧ್ಯತೆ ಇರುತ್ತದೆ, ಆಗ ಮಾತ್ರ ಇಂತಹ ಶಬ್ದ ಬರುತ್ತದೆ. ಹಾಗಾಗಿ ಈ ರೀತಿ ಯಾವುದೇ ಸೂಚನೆ ಬಂದರೂ ಮೊದಲು ಅದನ್ನು ಸೂಕ್ಷ್ಮವಾಗಿ ಗಮನಿಸಿ ಅರ್ಥ ಮಾಡಿಕೊಳ್ಳಬೇಕು. ನಾವು ಏನಾದರೂ ತಪ್ಪು ಮಾಡಿದೆ ಎಲ್ಲವೂ ಸರಿಯಿದ್ದು, ಈ ರೀತಿ ಸೂಚನೆಗಳು ಸಿಗುತ್ತಿವೆ ಎಂದರೆ ಭಗವಂತನನ್ನೇ ಪ್ರಾರ್ಥಿಸಿ ಕಾಪಾಡು ಎಂದು ಕೇಳಿಕೊಳ್ಳಿ.

ಸಿಂಹ ರಾಶಿಯ ಮಾರ್ಚ್ ತಿಂಗಳ ಮಾಸ ಭವಿಷ್ಯ, ಇದೊಂದು ಶಕ್ತಿ ನಿಮಗೆ ಬಹಳ ಧೈರ್ಯ ಕೊಡುತ್ತದೆ.!

 

ಸಿಂಹ ರಾಶಿಯವರಿಗೆ ಗುರುವಿನ ಬಲ ಇದ್ದೇ ಇದೆ. ಆದರೆ ಮಾರ್ಚ್ ತಿಂಗಳಲ್ಲಿ ಇವರು ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ ಕಳೆದುಕೊಂಡು ಬಹಳ ಚಡಪಡಿಕೆ ಅನುಭವಿಸುತ್ತಾರೆ. ಅವರು ನಿರೀಕ್ಷೆ ಮಾಡಿದ ಮಟ್ಟದಲ್ಲಿ ಯಶಸ್ಸನ್ನು ಕಾಣುವುದಿಲ್ಲ ಇದಕ್ಕೆಲ್ಲ ಶ್ರಮದ ಕೊರತೆಯ ಕಾರಣ ಎಂದರು ಕೂಡ ತಪ್ಪಾಗುವುದಿಲ್ಲ ಮತ್ತು ಇದಕ್ಕೆ ಪರೋಕ್ಷವಾಗಿ ಮಾರ್ಚ್ ತಿಂಗಳಿನಲ್ಲಿ ಸಿಂಹ ಲಾಶಿಯವರಿಗೆ ಶನಿ ಪ್ರಭಾವ ಕೂಡ ಇರುವುದರಿಂದ ಇದು ಸಹ ಕಾರಣವಾಗುತ್ತಿದೆ.

ಇದರಿಂದ ದೊಡ್ಡ ಆಘಾತ ಎಂದು ಭಯಪಡುವ ಅಗತ್ಯ ಇಲ್ಲ ಶನಿ ಪ್ರಭಾವವು ನಿಮ್ಮನ್ನು ಸೋಂಬೇರಿಯಾಗಿ ಮಾಡಬಹುದು ಅಂದರೆ ಮಂದಗತಿಯಲ್ಲಿ ಕೆಲಸ ಕಾರ್ಯಗಳು ಸಾಗುವ ರೀತಿ ಮಾಡಬಹುದು. ಶನಿಪ್ರಭಾವ ನಿಧಾನ ಪ್ರಗತಿ ಎನ್ನುವುದನ್ನು ಸೂಚಿಸುತ್ತದೆ.

ನೀವು ಎಷ್ಟೇ ಪ್ಲಾನ್ ಗಳನ್ನು ಹಾಕಿಕೊಂಡರೂ ಅದು ಕಾರ್ಯರೂಪಕ್ಕೆ ಬರದಂತೆ ತಡೆ ಅಥವಾ ನಿಮ್ಮ ಆಲೋಚನೆಗಳ ಮೇಲೆ ನಿಮಗೆ ಅನುಮಾನ ಅಥವಾ ನಿಮ್ಮವರಿಂದಲೇ ನಿಮಗೆ ಸಹಕಾರ ಇಲ್ಲದೆ ಇರುವುದು, ನಿಮ್ಮಲ್ಲಿಯೇ ಆಸಕ್ತಿಯ ಕೊರತೆ, ನೀವು ಎಷ್ಟೇ ಪ್ರಯತ್ನ ನಿಮ್ಮನ್ನು ಅಷ್ಟು ಲವಲವಿಕೆಯಿಂದ ಕೆಲಸ ಮಾಡಲು ಬಿಡದೆ ಯಾವುದಾದರೂ ಮಾತನಾಡಿ ನಿಮ್ಮ ಉತ್ಸಾಹವನ್ನು ನಿಮ್ಮವರೇ ಕುಗ್ಗಿಸುವಂಥದ್ದು ಇಂತಹ ಕಾರಣಗಳಿಂದಾಗಿ ನೀವು ಅಂದುಕೊಂಡ ಕೆಲಸಗಳು ನಿರೀಕ್ಷೆಯಂತೆ ಚುರುಕಾಗಿ ನಡೆಯದೆ ವಿಳಂಬವಾಗುತ್ತದೆ.

ಈ ಸುದ್ದಿ ಓದಿ:- ಕಟಕ ರಾಶಿಯ ಮಾರ್ಚ್ ತಿಂಗಳ ಮಾಸ ಭವಿಷ್ಯ, ಸಮಸ್ಯೆ ಹಲವು ಆದರೂ ಧೈರ್ಯಗೆಡಬೇಡಿ.!

ನೀವು ಅಂದುಕೊಂಡಂತೆ ಪ್ರತಿಫಲ ಅಥವಾ ಲಾಭ ಸಿಗುವುದಿಲ್ಲ ಆದರೆ ಆರ್ಥಿಕ ನಷ್ಟ ಕೂಡ ಆಗುವುದಿಲ್ಲ. ಗುರುಬಲ ಇರುವುದರಿಂದ ಇದು ಸುಧಾರಿಸುತ್ತದೆ ಆದರೆ ದೊಡ್ಡ ದೊಡ್ಡ ಕಮಿಟ್ಮೆಂಟ್ ಗಳಲ್ಲಿ ಸಿಲುಕಿಕೊಳ್ಳಬೇಡಿ. ಈ ಮಾಸ ಪೂರ್ತಿ ನಿಮಗೆ ಗುರುಬಲದ ಜೊತೆಗೆ ಮತ್ತೊಂದು ಗ್ರಹದ ಪ್ರಭಾವದಿಂದ ಬರಲಿರುವ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ ಮತ್ತು ಪುಣ್ಯ ಫಲಗಳು ಸಿಗುತ್ತಿವೆ.

ಈ ಗ್ರಹವೇ ಕುಜ ಗ್ರಹ ಮಾರ್ಚ್ 15 ರ ವರೆಗೂ ಕೂಡ ಷಷ್ಠಮ ಸ್ಥಾನದಲ್ಲಿರುವ ಕುಜಗ್ರಹವು ನಿಮಗೆ ತೀಕ್ಷ್ಣ ಫಲಿತಾಂಶಗಳನ್ನು ನೀಡುತ್ತಿದ್ದಾನೆ. ಕುಜನು ನಿಮಗೆ ಮಾನಸಿಕವಾಗಿ ಧೈರ್ಯ ತುಂಬುತ್ತಾನೆ ಯಾರು ನಿಮ್ಮ ದಾರಿಗೆ ಅಡ್ಡ ಹಾಕಲು ಬಂದರು ಅವರ ಕೆಟ್ಟ ದೃಷ್ಟಿಗಳಿಂದ ನಿಮ್ಮನ್ನು ಪರಿಹಾರ ಮಾಡುತ್ತಾರೆ.

ನಿಮಗೆ ಬರಬಹುದಾದ ಅನೇಕ ತೊಂದರೆಗಳ ಪರಿಣಾಮವನ್ನು ಕಡಿಮೆಗೊಳಿಸಿ, ಸ್ವಲ್ಪದಲ್ಲಿಯೇ ನಿಮ್ಮನ್ನು ಬಚಾವ್ ಮಾಡುತ್ತಾರೆ ಹಾಗೂ ಇತರ ಪಾಪ ಗ್ರಹಗಳ ತೊಂದರೆಗಳಿಂದ ನಿಮ್ಮನ್ನು ಕಾಪಾಡುತ್ತಾರೆ. ಇದೆಲ್ಲವನ್ನು ಎದುರಿಸುವ ಸಾಹಸವನ್ನು ಈ ಕುಜ ಗ್ರಹವು ನೀಡುತ್ತದೆ.

ಈ ಸುದ್ದಿ ಓದಿ:-ಕಟಕ ರಾಶಿಗೆ ಅಷ್ಟಮ ಶನಿ ಅಂತ್ಯ ಯಾವಾಗ.? ಇನ್ನು ಎಷ್ಟು ವರ್ಷವಿದೆ, ಇಲ್ಲಿದೆ ನೋಡಿ ಮಾಹಿತಿ.!

ಅಷ್ಟಮದಲ್ಲಿ ಕುಜಗ್ರಹ ಇರುವ ಬಲದಿಂದ ಮನೆ ಕಟ್ಟುವ ಯೋಗ ಅಥವಾ ಪ್ರಾಪರ್ಟಿಗಳಿಗಿರುವ ತೊಂದರೆಗಳನ್ನು ಪರಿಹರಿಸಿಕೊಳ್ಳುವ ಯೋಗ, ಶತ್ರುನಾಶ, ಕೋರ್ಟ್ ಕಚೇರಿ ಕೇಸ್ ಇತ್ಯರ್ಥ ಇಂತಹ ಫಲಗಳು ಸಿಗುತ್ತವೆ ಎಂದು ಕೂಡ ಹೇಳಲಾಗುತ್ತದೆ. ಇದೆಲ್ಲವನ್ನು ಕೂಡ ಸಿಂಹ ರಾಶಿಯವರು ಮಾರ್ಚ್ 15ರವರೆಗೆ ಪಡೆಯುತ್ತಾರೆ.

ಮಾರ್ಚ್ ತಿಂಗಳ ಅಂತ್ಯದಲ್ಲಿ ಮಾರ್ಚ್ 25ರ ಬಳಿಕ ಸಿಂಹ ರಾಶಿಗೆ ಭಾಗ್ಯಾಧಿಪತಿಯಾಗಿರುವ ಗುರು ಗ್ರಹವು ಬುಧ ಗ್ರಹದ ಜೊತೆಗೆ ಸೇರುತ್ತದೆ. ಭಾಗ್ಯದಲ್ಲಿರುವ ಗುರುವನ್ನು ಬುಧನು ಬಂದು ಸೇರಿದಾಗ ಇದು ವಿದ್ಯಾರ್ಥಿಗಳ ಜೀವನದ ಮಟ್ಟಿಗೆ ಬಹಳ ಅತ್ಯುತ್ತಮ ಫಲಗಳನ್ನು ನೀಡುತ್ತದೆ.

ಸಿಂಹ ರಾಶಿಯ ವಿದ್ಯಾರ್ಥಿಗಳು ಅಥವಾ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸಿಂಹ ರಾಶಿಯವರು ಬಹಳ ಅತ್ಯುನ್ನತ ಫಲಿತಾಂಶಗಳನ್ನು ಈ ತಿಂಗಳಿನಲ್ಲಿ ಗುರು ಹಾಗೂ ಬುಧನ ಸಂಗಮದ ಫಲವಾಗಿ ಪಡೆಯುತ್ತಾರೆ. ಈ ಮಾಸದಲ್ಲಿ ನವಗ್ರಹ ಆರಾಧನೆ ಮಾಡಿ ಶುಭವಾಗುತ್ತದೆ.

https://youtu.be/4ra-r2ehGvE?si=MlHLBEDX6Fcr1TXq

ಕುಂಭ ರಾಶಿಯ ಮಾರ್ಚ್ ತಿಂಗಳ ಮಾಸ ಭವಿಷ್ಯ, ಇದಕ್ಕೆ ಹೇಳುವುದು ಎಲ್ಲರಿಗೂ ಒಳ್ಳೆಯ ಸಮಯ ಬರುತ್ತದೆ ಎಂದು.!

 

ಮರಕ್ಕಿಂತ ಮರ ದೊಡ್ಡದು ಎನ್ನುವ ಗಾದೆ ಮಾತು ಇದೆ. ಸದ್ಯಕ್ಕೆ ಈ ಗಾದೆ ಮಾತನ್ನು ಕುಂಭ ರಾಶಿಯವರಿಗೆ ಸಲಹೆಯಾಗಿ ಹೇಳಲೇಬೇಕು. ಯಾಕೆಂದರೆ ಒಬ್ಬರ ಕಷ್ಟಕ್ಕಿಂತ ಮತ್ತೊಬ್ಬರ ಕಷ್ಟ ದೊಡ್ಡದಿರುತ್ತದೆ ನಾವು ನಮ್ಮ ಕಷ್ಟವನ್ನೇ ದೊಡ್ಡದು ಎಂದುಕೊಂಡು ಬಿಟ್ಟಿರುತ್ತೇವೆ. ಅಂದರೆ ಕುಂಭ ರಾಶಿಯವರು ಈ ತಿಂಗಳಲ್ಲಿ ಇಂತಹದೇ ಫಲವನ್ನು ಪಡೆಯಲಿದ್ದಾರೆ.

ಪೂರ್ತಿ ಎಲ್ಲವೂ ಯಶಸ್ಸೇ ಸಿಗುತ್ತದೆ ಕೈಕೊಂಡ ಎಲ್ಲಾ ಕಾರ್ಯಗಳು ಜಯಿಸುತ್ತದೆ, ಶುಭವಾಗುತ್ತದೆ ಎನ್ನುವ ಭರವಸೆಯೂ ನೀಡಲಾಗದು. ಹಾಗೆ ಕಷ್ಟಗಳೇ ತುಂಬಿರುತ್ತದೆ ಎಂದು ಹೇಳಲು ಆಗದು ಇಂತಹ ಮಿಶ್ರಫಲಗಳನ್ನು ಹೊಂದಿರುತ್ತಾರೆ. ಕಷ್ಟಗಳು ಇದ್ದರೂ ನಿಮಗಿಂತ ಕಷ್ಟಗಳಲ್ಲಿ ಬೇರೆಯವರು ಇದ್ದಾರೆ ಅವರಿಗೆ ಹೋಲಿಸಿದರೆ ನಿಮ್ಮ ಕಷ್ಟ ಕಡಿಮೆ ಎನ್ನಬಹುದು ಇಂತಹ ಫಲಗಳನ್ನು ಪಡೆದಿದ್ದೀರಿ.

ಈಗ ಕುಂಭ ರಾಶಿಗೆ ಸಾಡೇ ಸಾತಿ ನಡೆಯುತ್ತಿದೆ. ಹಾಗಾಗಿ ಸಹಜವಾಗಿ ಶನಿಯ ಪ್ರಭಾವದಿಂದ ಸಾಕಷ್ಟು ಅಡೆತಡೆ, ನೋ’ವು, ಅ’ವ’ಮಾ’ನ ಎಲ್ಲವನ್ನು ಎದುರಿಸಬೇಕಾಗುತ್ತದೆ. ನಡೆಯಬೇಕಾದ ಕಾರ್ಯಗಳೆಲ್ಲಾ ಕೂಡ ಮಂದಗತಿಯಲ್ಲಿ ಸಾಗುತ್ತದೆ. ವಾತಾವರಣ ಸ್ವಲ್ಪ ಬದಲಾದರು ಬಹಳ ಕಷ್ಟವನ್ನು ಅನುಭವಿಸುತ್ತೀರಿ ಹೀಗಾಗಿ ಆರೋಗ್ಯದ ಬಗ್ಗೆ ಎಚ್ಚರದಿಂದ ಇರಲೇಬೇಕು.

ಈ ಸುದ್ದಿ ಓದಿ:- ಧನುರ್ ರಾಶಿಯವರು ಈ ಸಲ ಗುರಿ ತಲುಪುವುದು ಪಕ್ಕಾ‌.! ಹೇಗಿದೆ ಗೊತ್ತಾ ಧನು ರಾಶಿಯ ಮಾಸ ಭವಿಷ್ಯ…

ಬೆಳಗ್ಗೆ ಕೆಲಸಕ್ಕೆ ಹೋಗುವುದಕ್ಕೆ ಮುನ್ನವೇ ನಿಮ್ಮ ಮನಸ್ಸು ಬಹಳ ಕದಡಿ ಹೋಗಿರುತ್ತದೆ ರಾತ್ರಿ ಮಲಗಿದ್ದರು ಮನಶಾಂತಿ ಇಲ್ಲ ಈ ರೀತಿ ಮಾನಸಿಕ ಒತ್ತಡಗಳನ್ನು ಅನುಭವಿಸುತ್ತೀರಿ. ಬಹಳ ಟೆನ್ಶನ್ ನಲ್ಲಿ ಇರುತ್ತೀರಿ ನಿಮ್ಮ ಮೇಲೆ ನಿಮಗೆ ಸಾಕಷ್ಟು ಗೊಂದಲಗಳು ಏರ್ಪಡುತ್ತದೆ, ನೀವು ತೆಗೆದುಕೊಳ್ಳುವ ನಿರ್ಧಾರಗಳನ್ನು ನೀವೇ ಅನುಮಾನಿಸುತ್ತೀರಿ.

ಆದರೆ ಎಲ್ಲಕ್ಕೂ ಕೂಡ ಒಂದು ಮಿತಿ ಇದ್ದೇ ಇರುತ್ತದೆ ನಿಮ್ಮ ಕಷ್ಟಗಳು ಕಳೆದು ಒಳ್ಳೆಯ ದಿನಗಳು ಕೂಡ ಬರಲಿದೆ ಧೈರ್ಯದಿಂದ ಇರಿ ಕುಂಭ ರಾಶಿಯವರಿಗೆ ಕೊಡಬಹುದಾದ ಇನ್ನಷ್ಟು ಸಲಹೆಗಳು ಏನೆಂದರೆ, ಮಾರ್ಚ್ ತಿಂಗಳಲ್ಲಿ ಆದಷ್ಟು ಸ್ವಂತ ನಿರ್ಧಾರಗಳಿಗೆ ಬೆಲೆ ಕೊಡಿ, ನಿಮ್ಮ ಮೇಲೆ ನೀವು ನಂಬಿಕೆ ಇಡಿ.

ನಿಮ್ಮ ತಪ್ಪುಗಳಿಂದ ನೀವು ಕಲಿಯಿರಿ ಆದರೆ ಯಾವುದೇ ಕಾರಣಕ್ಕೂ ಇನ್ನೊಬ್ಬರಿಂದ ಇನ್ಫ್ಲುಯೆನ್ಸ್ ಆಗಬೇಡಿ. ನಿಮ್ಮನ್ನು ಮೋ’ಸಗೊಳಿಸುವ ಜನರೇ ಹೆಚ್ಚಾಗಿ ಇರುತ್ತಾರೆ. ಅದೇ ರೀತಿಯಾಗಿ ಪ್ರಯಾಣಗಳ ಬಗ್ಗೆ ಎಚ್ಚರ ಇರಲಿ ಪ್ರಯಾಣದಲ್ಲಿ ಅಡಚಣೆ ಅಥವಾ ಪ್ರಯಾಣದಲ್ಲಿ ತೊಂದರೆ ಇಂತಹ ಫಲಗಳು ಇರುತ್ತವೆ ಎಂದು ಹೇಳುತ್ತಿದೆ ಮಾಸ ಭವಿಷ್ಯ.

ಈ ಸುದ್ದಿ ಓದಿ:-ಜೀವನಪೂರ್ತಿ ಆರೋಗ್ಯವಾಗಿರಲು ಈ ಸಲಹೆಗಳನ್ನು ಪಾಲಿಸಿ.!

ಹೊಸ ಉದ್ಯೋಗ ಬದಲಾಯಿಸಲು ಅಥವಾ ಹೊಸದಾಗಿ ವ್ಯಾಪಾರ ವ್ಯವಹಾರ ಆರಂಭಿಸಲು ಈ ಸಮಯದಲ್ಲಿ ಹೋಗಬೇಡಿ ಆದಷ್ಟು ತಾಳ್ಮೆಯಿಂದ ಇರಿ. ಇಷ್ಟು ವರ್ಷಗಳ ಕಷ್ಟ ಅನುಭವಿಸುತ್ತಿದ್ದ ನೀವು ಇನ್ನು ಕೆಲವೇ ತಿಂಗಳುಗಳಲ್ಲಿ ಸಾಡೇಸಾತಿಯಿಂದ ಮುಕ್ತಿ ಪಡೆಯುತ್ತೀರಿ. ಆ ಸಮಯದಲ್ಲಿ ನಿಮಗೆ ಶುಭಫಲಗಳನ್ನು ಶನಿ ಕೊಟ್ಟು ಹೋಗುತ್ತಾರೆ.

ತೃತೀಯದಲ್ಲಿ ಬುಧನಿದ್ದಾನೆ ಇದರ ಫಲವಾಗಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಾವುದೇ ಅಡೆಚಣೆ ಇರುವುದಿಲ್ಲ, ಸದ್ಯದ ಮಟ್ಟಿಗೆ ಕುಂಭ ರಾಶಿಯಲ್ಲಿ ವಿದ್ಯಾರ್ಥಿಗಳಿಗೆ ಮಾತ್ರ ಶುಭಫಲವಿದೆ ಎಂದು ಹೇಳಿದರು ಕೂಡ ತಪ್ಪಾಗುವುದಿಲ್ಲ.

ವಿದ್ಯಾರ್ಥಿಗಳು ಇದನ್ನು ಉತ್ತಮವಾಗಿ ಬಳಸಿಕೊಳ್ಳಿ ನೀವು ಉತ್ತಮ ಅಂಕಗಳನ್ನು ಪಡೆಯುವ ಒಳ್ಳೆಯ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಅಥವಾ ಇಂದು ನೀವು ಕಲಿತ ವಿದ್ಯೆಯು ಬಹುಕಾಲದವರೆಗೆ ನಿಮಗೆ ನೆರವಾಗುವ ಸಾಧ್ಯತೆ ಇದೆ, ಇದನ್ನು ಸಾಕಾರಗೊಳಿಸಿಕೊಳ್ಳಿ. ಪ್ರತಿ ಶನಿವಾರ ಶನೇಶ್ವರ ಹಾಗೂ ಆಂಜನೇಯ ಸ್ವಾಮಿಯ ದರ್ಶನ ಮಾಡಿ ಮತ್ತು ಶನೇಶ್ವರನಿಗೆ ವಿಶೇಷ ಸೇವೆ ಸಲ್ಲಿಸುವ ಮೂಲಕ ಶುಭ ಫಲಗಳಿಗಾಗಿ ಪ್ರಾರ್ಥಿಸಿಕೊಳ್ಳಿ.

https://youtu.be/MN6a5ZLo_Ro?si=kLKf3QdBB7SuDd8O

ಶನಿ ಅಸ್ತಗತದಿಂದ ಮತ್ತೆ ಉದಯದ ಕಡೆಗೆ, ಇದುವರೆಗೂ ಕಷ್ಟ ಪಟ್ಟ ಈ ಆರು ರಾಶಿಯವರಿಗೆ ಮತ್ತೆ ರಾಜ ಯೋಗ ಭಾಗ್ಯ.!

 

31 ದಿನಗಳ ಕಾಲ ಅಸ್ತಂಗತರಾಗಿದ್ದ ಶನಿಯು ಮಾರ್ಚ್ 17ರಿಂದ ಮತ್ತೆ ಉದಯವಾಗುತ್ತಿದ್ದಾರೆ. ಇದು ದ್ವಾದಶ ರಾಶಿಗಳ ಮೇಲು ಕೂಡ ಪರಿಣಾಮ ಬೀರುತ್ತಿದ್ದು ಅದರಲ್ಲಿ ಮುಖ್ಯವಾಗಿ ಆರು ರಾಶಿಗಳಿಗೆ ಬಹಳ ಅದೃಷ್ಟ ತರುತ್ತಿದೆ. ಈ ಆರು ರಾಶಿಯವರು ಮತ್ತೆ ಅದೃಷ್ಟವನ್ನು ಪಡೆಯುತ್ತಿದ್ದಾರೆ ಸಂಕಷ್ಟಗಳಿಂದ ಪರಿಹಾರ, ಲಾಭ, ಜಯ, ಭಾಗ್ಯ, ಕೀರ್ತಿ, ರಾಜಯೋಗ ಎಲ್ಲವನ್ನು ಮರಳಿ ಪಡೆಯುತ್ತಿದ್ದಾರೆ.

ಅಸ್ತಂಗತನಾಗಿದ್ದ ಶನಿಯು ಅದರಿಂದ ಆಚೆ ಬಂದು ಹೆಚ್ಚಿನ ಹೊಳಪಿನೊಂದಿಗೆ ಉದಯಿಸುತ್ತಿದ್ದಾರೆ ಎಂದೇ ಹೇಳಬಹುದು. ಶನಿಯು ಅಸ್ತಂಗತರಾಗಿದ್ದ ಸಮಯದಲ್ಲಿ ಬಹಳಷ್ಟು ಮೌಢ್ಯಕ್ಕೆ ಒಳಗಾಗಿದ್ದವರು ಈಗ ಅದರಿಂದ ಆಚೆ ಬಂದು ಜ್ಞಾನೋದಯ ಪಡೆಯಲಿದ್ದಾರೆ ಎಂದೇ ಹೇಳಬಹುದು. ಆ ಆರು ರಾಶಿಗಳು ಯಾವುವು? ಯಾವ ರಾಶಿಗೆ ಏನು ಫಲ ಸಿಗುತ್ತಿದೆ? ಎನ್ನುವುದರ ಬಗ್ಗೆ ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.

ಈ ಸುದ್ದಿ ಓದಿ:- ಧನುರ್ ರಾಶಿಯವರು ಈ ಸಲ ಗುರಿ ತಲುಪುವುದು ಪಕ್ಕಾ‌.! ಹೇಗಿದೆ ಗೊತ್ತಾ ಧನು ರಾಶಿಯ ಮಾಸ ಭವಿಷ್ಯ…

* ಮೊದಲನೇದಾಗಿ ಮೇಷ ರಾಶಿಗೆ ಈ ಯೋಗ ಸಿಗುತ್ತಿದೆ. ಏಕದಶಸ್ಥಾನದಲ್ಲಿ ಶನಿಯು ಮೌಢ್ಯನಾಗಿದ್ದ ಕಾರಣ ಮೇಷ ರಾಶಿಯವರಿಗೆ ಆರ್ಥಿಕವಾಗಿ ಬಹಳ ಹೊಡೆತವಾಗಿತ್ತು ವ್ಯಾಪಾರ ವ್ಯವಹಾರಗಳು ಬಹಳ ಡಲ್ ಆಗಿತ್ತು. ಮಾರ್ಚ್ 17 ರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಚೇತರಿಕೆ ಕಾಣುತ್ತೀರಿ. ಇದ್ದಕ್ಕಿದ್ದ ಹಾಗೆ ಈ 31 ದಿನಗಳ ಕಾಲ ನೀವು ಪಡೆದಿದ್ದ ಕಷ್ಟದಿಂದ ಈಗ ಮುಕ್ತಿ ಪಡೆಯಲಿದ್ದೀರಿ.

* ವೃಷಭ ರಾಶಿಗೂ ಕೂಡ ಇಂತಹದೇ ಸಮಸ್ಯೆಗಳು ಕಾಡಿತ್ತು. ಆದರೆ ಅಧಿಕಾರದ ವಿಚಾರವಾಗಿ ನಿಮಗೆ ಸಮಸ್ಯೆ ಆಗಿತ್ತು. ನಿಮ್ಮ ಮೇಲೆ ಇಲ್ಲಸಲ್ಲದ ಆರೋಪ, ನಿಮ್ಮ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಆಗಿತ್ತು ಆದರೆ ಈಗ ಮತ್ತೆ ಶನಿಯ ಪ್ರಭಾವದಿಂದಾಗಿ ನಿಮ್ಮ ಮೇಲೆ ಬೆಳಕು ಬೀಳಲಿದೆ ಈ ಮೂಲಕ ಸತ್ಯ ಎಲ್ಲರಿಗೂ ತಿಳಿಯಲಿದೆ. ನಿಮ್ಮ ಸ್ಥಾನ ಗೌರವ ಗಟ್ಟಿಯಾಗುತ್ತದೆ ಪ್ರತಿದಿನವೂ ಶಿವನ ಹಾಗೂ ಶನೇಶ್ವರನ ಆರಾಧನೆ ಮಾಡಿ.

ಈ ಸುದ್ದಿ ಓದಿ:-ಜೀವನಪೂರ್ತಿ ಆರೋಗ್ಯವಾಗಿರಲು ಈ ಸಲಹೆಗಳನ್ನು ಪಾಲಿಸಿ.!

* ಮಿಥುನ ರಾಶಿಯವರು ಕೂಡ ಬಹಳಷ್ಟು ಕಷ್ಟಪಟ್ಟಿದ್ದೀರಿ. ನಿಮ್ಮ ಸಹಾಯಕ್ಕೆ ಯಾರು ಬರುತ್ತಿರಲಿಲ್ಲ ಬದಲಾಗಿ ನಿಮಗೆ ನಿಂದನೆ ಮಾತುಗಳಿಂದ ನೋಯಿಸುತ್ತಿದ್ದರು. ಈಗ ಶನಿಯು ಮತ್ತೆ ಉದಯಿಸುತ್ತಿರುವುದು ನಿಮ್ಮ ಬದುಕಿಗೂ ಕೂಡ ಬೆಳಕು ತರುತ್ತಿದೆ. ರಾಶಿಯಾಧಿಪತಿಯು ರಾಶಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ ಶಿವನ ಆರಾಧನೆ ಮಾಡಿ ಹೆಚ್ಚು ಲಾಭವಾಗುತ್ತದೆ

* ಕನ್ಯಾ ರಾಶಿ:- ಕನ್ಯಾ ರಾಶಿಯಲ್ಲಿ ಆರನೇ ಸ್ಥಾನದಲ್ಲಿ ಮೌಢ್ಯನಾಗಿದ್ದರಿಂದ ಕೆಲಸ ಕಾರ್ಯಗಳಲ್ಲಿ ನಿಮಗೆ ಬಹಳ ತೊಂದರೆ ಆಗಿತ್ತು. ಎಷ್ಟೇ ಪ್ರಯತ್ನ ಪಟ್ಟರು ಅಂದುಕೊಂಡ ಕೆಲಸ ಮಾತ್ರ ಆಗುತ್ತಿಲ್ಲ ಕಳೆದ ಕೆಲವೊಂದಿಷ್ಟು ದಿನದಿಂದ ಹಗಲು-ರಾತ್ರಿ ಇದರದ್ದೇ ಚಿಂತೆ ಆಗಿತ್ತು ಎನ್ನುವವರಿಗೆ ನಿಮ್ಮ ಕಷ್ಟಕ್ಕೆ ಈಗ ಮುಕ್ತಿ ಸಿಗುವ ಸಮಯ ಬಂದಿದೆ. ಅದೇ ವೃತ್ತಿ ವಿಚಾರವಾಗಿ ಕೂಡ ಸಮಸ್ಯೆಯಲ್ಲಿದ್ದವರಿಗೆ ನಿರೀಕ್ಷೆಗೂ ಮೀರಿ ಹೆಚ್ಚಿನ ಲಾಭ ಉಂಟಾಗುವ ಸಾಧ್ಯತೆ ಕಂಡು ಬರುತ್ತದೆ.

ಈ ಸುದ್ದಿ ಓದಿ:-ಕಟಕ ರಾಶಿಯ ಮಾರ್ಚ್ ತಿಂಗಳ ಮಾಸ ಭವಿಷ್ಯ, ಸಮಸ್ಯೆ ಹಲವು ಆದರೂ ಧೈರ್ಯಗೆಡಬೇಡಿ.!

* ತುಲಾ ರಾಶಿಯವರಿಗೆ ಕೂಡ ಪಂಚಮ ಸ್ಥಾನದಲ್ಲಿ ಶನಿಯು ಅಸ್ತನಾಗಿದ್ದರಿಂದ ಆರೋಗ್ಯ ಹಾಗೂ ಹಣಕಾಸಿನ ವಿಚಾರವಾಗಿ ತೊಂದರೆಯಾಗಿತ್ತು. ಸಾಲಗಾರರ ಕಾಟದಿಂದ ಬೇಸತ್ತಿದ್ದರು ಅಥವಾ ನಿಮ್ಮಿಂದ ಸಾಲ ತೆಗೆದುಕೊಂಡವರು ವಾಪಸ್ ಸರಿಯಾದ ಸಮಯಕ್ಕೆ ಕೊಡದೆ ತೊಂದರೆ ಕೊಟ್ಟಿದ್ದರು. ಈಗ ಇದೆಲ್ಲವೂ ಪರಿಹಾರವಾಗುವ ಸಮಯ ಆರೋಗ್ಯದಲ್ಲೂ ಕೂಡ ಸುಧಾರಣೆ ಕಂಡು ಬರಲಿದೆ.

* ಕುಂಭ ರಾಶಿ:- ಕುಂಭ ರಾಶಿಯವರೂ ಕೂಡ ಬಹಳ ಸಮಸ್ಯೆ ಪಟ್ಟಿದ್ದಾರೆ. ಎಲ್ಲದರಲ್ಲೂ ವಿಳಂಬ, ಯಾವುದರಲ್ಲೂ ಆಸಕ್ತಿ ಇಲ್ಲ
ಒಂದು ರೀತಿಯಲ್ಲಿ ಸೋಂಬೇರಿತನವೇ ಬಂದಿತ್ತು ಎನ್ನಬಹುದು. ನಿಮ್ಮ ಮನಸ್ಸಿನಲ್ಲಿ ಎಷ್ಟೇ ಆಲೋಚನೆ ಇದ್ದರೂ ಅದ್ಯಾಕೋ ಅಂದುಕೊಂಡ ಕಾರ್ಯ ಮಾತ್ರ ಮಾಡಲು ಆಗುತ್ತಿರಲಿಲ್ಲ ಈಗ ಅದೆಲ್ಲವೂ ಕಳೆದು ಮತ್ತೆ ರಾಜಯೋಗ ಸ್ಥಾಪನೆ ಆಗುತ್ತಿದೆ ನೀವು ಸಹ ಶಿವನ ಹಾಗೂ ಶನೇಶ್ವರನ ದರ್ಶನ ಮಾಡುವುದು ಒಳ್ಳೆಯದು.