Home Blog Page 49

ತುಲಾ ರಾಶಿಯವರ ಸಹಜ ಗುಣ ಸ್ವಭಾವಗಳು, ತುಲಾ ರಾಶಿಯವರಿಗೆ ಹೆಚ್ಚು ಮೋ’ಸವಾಗುವುದು ಏಕೆ ಮತ್ತು ಇವರಿಗೆ ಹೊಂದುವ ವೃತ್ತಿ ಯಾವುದು?..

 

ರಾಶಿ ಕುಂಡಲಿಯಲ್ಲಿ ಏಳನೇ ರಾಶಿಯಾಗಿರುವ ತುಲಾ ರಾಶಿ ವಾಯು ತತ್ವ ರಾಶಿ ಮತ್ತು ಚರಾ ರಾಶಿ. ಈ ರಾಶಿಯ ದಿಕ್ಕು ಪಶ್ಚಿಮ ಮತ್ತು ಬಣ್ಣ ಕಪ್ಪು. ತುಲಾ ರಾಶಿಯ ರಾಶಿಯಾಧಿಪತಿ ಶುಕ್ರ ಇದೆಲ್ಲದರ ಪ್ರಭಾವದಿಂದ ತುಲಾ ರಾಶಿಯ ಗುಣ ಸ್ವಭಾವದ ಬಗ್ಗೆ ಹೇಳುವುದಾದರೆ ಬಹಳ ಲವಲವಿಕೆಯಿಂದ ಇರುವ ರಾಶಿಯಾಗಿದೆ.

ಬೆಳಗ್ಗೆ ಎದ್ದು ಮನೆ ಕೆಲಸ ಮಾಡಿ ಆಫೀಸ್ ಗೆ ಹೋಗಿ ದುಡಿದು, ಮತ್ತೆ ಬಂದು ಮನೆ ಕೆಲಸಗಳಲ್ಲಿ ಅಷ್ಟೇ ಚಟುವಟಿಕೆಯಿಂದ ಇರುವಂತಹ ಸಾಮರ್ಥ್ಯ ಮತ್ತು ಮನಸ್ಥಿತಿ ಇರುವ ರಾಶಿಯಾಗಿದೆ ಆದರೆ ಬೆಳಗ್ಗೆ ಬೇಗ ಎದ್ದು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡರೆ ಅಷ್ಟೇ ಇವರ ಈ ದಿನ ಸುಖಕರ ಇಲ್ಲ ದಿನಪೂರ್ತಿ ಕಿರಿಕಿರಿ ಅನುಭವಿಸುತ್ತಿರುತ್ತಾರೆ.

ಈ ರಾಶಿಯವರಿಗೆ ಪಾಶ್ಚಿಮಾತ್ಯ ದೇಶದ ಬಗ್ಗೆ ಬಹಳ ವ್ಯಾಮೋಹ ಇರುತ್ತದೆ. ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಅಥವಾ ಉದ್ಯೋಗ ಮಾಡಬೇಕು ಅಥವಾ ವಿದೇಶದಲ್ಲಿ ಸೆಟಲ್ ಆಗಬೇಕು ಎನ್ನುವ ಇಚ್ಛೆ ಬಹಳ ಇರುತ್ತದೆ ಮತ್ತು ಇದಕ್ಕಾಗಿ ಪ್ರಯತ್ನ ಪಡುತ್ತಿರುತ್ತಾರೆ.

ಇದಿಷ್ಟು ಅಲ್ಲದೆ ನೀವು ಯಾವಾಗಲೂ ಉದ್ಯೋಗ ಅಥವಾ ವ್ಯಾಪಾರ ಅಥವಾ ಕಾರ್ಯಗಳನ್ನು ನೀವು ವಾಸಿಸುವ ಸ್ಥಳದಿಂದ ಎಡಕ್ಕೆ ಇರುವ ಸ್ಥಳಗಳನ್ನು ಆರಿಸಿಕೊಳ್ಳುತ್ತೀರಿ. ಪಶ್ಚಿಮ ದಿಕ್ಕಿನ ಪ್ರಭಾವ ಕೂಡ ಇದಕ್ಕೆ ಕಾರಣ ಆಗಿರಬಹುದು ಇದು ಕೂಡ ನಿಮಗೆ ಬಹಳಷ್ಟು ಪಾಸಿಟಿವ್ ಎನರ್ಜಿ ಕೊಡುತ್ತೇವೆ.

ಶುಕ್ರನ ಪ್ರಭಾವದಿಂದ ಇವರಿಗೆ ಕಲೆ ಮೇಲೆ ಅಪಾರ ಆಸಕ್ತಿ ಇರುತ್ತದೆ ಹಾಗೆಯೇ ಕಲೆ ಮತ್ತು ಸೃಜನಶೀಲತೆ ಎನ್ನುವುದು ಇವರಿಗೆ ಒಲಿದು ಬಂದಿರುತ್ತದೆ. ಅದೇ ರೀತಿಯಾಗಿ ಶುಕ್ರನ ಬಲದಿಂದಾಗಿ ಬಹಳ ಬೇಗ ಪ್ರೀತಿಯಲ್ಲಿ ಬೀಳುವ ರಾಶಿ ಕೂಡ ಇವರೇ ಆಗಿರುತ್ತಾರೆ. ಇವರು ಬಹಳ ಬೇಗ ಮತ್ತೊಬ್ಬರನ್ನು ನಂಬುತ್ತಾರೆ ಮತ್ತು ಅವರ ಭಾವನೆಗಳಿಗೆ ಸ್ಪಂದಿಸುತ್ತಾರೆ.

ಲವ್ ಆಟ್ ಫಸ್ಟ್ ಸೈಟ್ ಎನ್ನುವುದನ್ನು ಬಹಳ ನಂಬುವ ರಾಶಿಯವರು. ಮೊದಲ ನೋಟದಲ್ಲಿ ಅಂದ ಚೆಂದ ಬುದ್ಧಿವಂತಿಕೆ ಕ್ರಿಯೇಟಿವಿಟಿಯನ್ನು ನೋಡಿ ಇವರು ಮಾರುಹೋಗುತ್ತಾರೆ. ಇವರ ಇದೇ ಗುಣದಿಂದಾಗಿ ಇವರಿಗೆ ಅನೇಕ ತೊಂದರೆಗಳು ಬರುತ್ತದೆ. ಇದೇ ವಿಚಾರದ ಬಗ್ಗೆ ಇವರಿಗೆ ಅನೇಕ ಬಾರಿ ಮೋ’ಸಗಳು ಕೂಡ ಆಗುತ್ತದೆ.

ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ ಈ ರಾಶಿಯ ರಾಶಿ ಚಿಹ್ನೆಯ ತಕ್ಕಡಿ ಆಗಿರುವುದರಿಂದ ಇದೇ ರೀತಿ ಮನಸ್ಥಿತಿ ಹೊಂದಿರುತ್ತಾರೆ. ನ್ಯಾಯ, ನೀತಿ, ಸತ್ಯ, ಧರ್ಮ ಎನ್ನುವುದರ ಮೇಲೆ ನಂಬಿಕೆ ಇಟ್ಟು ಆ ಪ್ರಕಾರವಾಗಿ ನಡೆದುಕೊಳ್ಳುವವರು ಇವರು.

ತುಲಾ ರಾಶಿಯವರು ಬ್ಯೂಟಿಷಿಯನ್ ಅಥವಾ ಬೋಟಿಕ್ ಅಥವಾ ಫ್ಯಾಷನ್ ಡಿಸೈನಿಂಗ್ ಈ ರೀತಿ ವೃತ್ತಿಗಳಲ್ಲಿ ಮತ್ತು ಕಲೆಯನ್ನು ಪ್ರತಿನಿಧಿಸುವ ಸಂಗೀತ ಸಾಹಿತ್ಯ ನಟನೆ ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಕೊಂಡರೆ ಮತ್ತು ಪೊಲೀಸ್ ಇಲಾಖೆ, ನ್ಯಾಯಾಂಗ ಇಲಾಖೆ, ವೈದ್ಯಕೀಯ ಕ್ಷೇತ್ರ ಇತ್ಯಾದಿಗಳಲ್ಲಿ ಅಥವಾ ವಿದೇಶಗಳಿಗೆ ಹೋಗಿ ವೃತ್ತಿ ಮಾಡುವ ಕ್ಷೇತ್ರಗಳನ್ನು ಆಯ್ದುಕೊಂಡರೆ ಜೀವನದಲ್ಲಿ ಬಹಳ ಯಶಸ್ಸು ಆಗುತ್ತಾರೆ.

ತುಲಾ ರಾಶಿಯವರಿಗೆ ಒಂದು ಸಲಹೆಯೇನೆಂದರೆ ನೀವು ಆದಷ್ಟು ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಿಮಗೆ ಆಗುವ ಅನೇಕ ಅ’ಪಾ’ಯಗಳನ್ನು ತಪ್ಪಿಸುತ್ತದೆ ಹಾಗೂ ತತ್ ಕ್ಷಣಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಬದಲು ಆಲೋಚಿಸಿ ನಿಧಾನವಾಗಿ ನಿರ್ಧಾರಕ್ಕೆ ಬರುವುದು ನಿಮ್ಮ ಬದುಕಿಗೆ ಬಹಳ ಒಳ್ಳೆಯದು.

ಸಿಂಹ ರಾಶಿಯವರಿಗೆ ಏಪ್ರಿಲ್ 2024ರ ಶುಕ್ರ ಪ್ರಭಾವ ನಿಮ್ಮ ಜೀವನದಲ್ಲಿ ನೀವು ಊಹಿಸದ ಒಂದು ಅದ್ಭುತ ಬದಲಾವಣೆಯಾಗಲಿದೆ.!

ಏಪ್ರಿಲ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಅದ್ಭುತವಾದ ಶುಕ್ರ ಬಲ ಇರುತ್ತದೆ. ನಿಮ್ಮ ಕರ್ಮಾಧಿಪತಿ ಮತ್ತು ತೃತೀಯಾಧಿಪತಿ ಆದಂತಹ ಶುಕ್ರನು ಮಾರ್ಚ್ 31ರಂದು ಮೀನಾ ರಾಶಿಗೆ ಪ್ರವೇಶ ಮಾಡಿ ಮೀನಾ ರಾಶಿಯಲ್ಲಿ ಪರಮೋಚ್ಚ ಸ್ಥಿತಿಯಲ್ಲಿ ಇರುತ್ತಾರೆ. ಅಷ್ಟಮದಲ್ಲಿ ಇರುವುದರಿಂದ ನೇರವಾಗಿ ಶುಭಫಲ ನೀಡಲಾಗುತ್ತಿದ್ದರು ಪರೋಕ್ಷವಾಗಿ ಒಳ್ಳೆಯದನ್ನು ಮಾಡುತ್ತಾರೆ.

ಸಿಂಹ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯ ಒಟ್ಟಾರೆಯಾಗಿ ಹೇಳುವಾಗ ಎಲ್ಲಾ ಗ್ರಹಗಳ ಪ್ರಭಾವ ಸೇರಿಸಿ ಎಲ್ಲ ಶುಭ ಮತ್ತು ಅಶುಭಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಆದರೆ ಇಂದು ನಾವು ಈ ಲೇಖನದಲ್ಲಿ ಏಪ್ರಿಲ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಶುಕ್ರನ ಸ್ಥಾನ ಬದಲಾವಣೆಯಿಂದ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ಮಾತ್ರ ಹೇಳುತ್ತಿದ್ದೇವೆ.

ಉದ್ಯೋಗಕ್ಕೆ ಸಂಬಂಧ ಪಟ್ಟ ಹಾಗೆ ಬಹಳ ಉತ್ತಮ ಪರಿಣಾಮಗಳು ಉಂಟಾಗಲಿದೆ. ನೀವು ಬಹಳ ದಿನದಿಂದ ಪ್ರಮೋಷನ್ ಬಯಸುತ್ತಿದ್ದರೆ ನಿಮಗೆ ಅದು ಪ್ರಾಪ್ತಿಯಾಗುವ ಅಥವಾ ನಿಮ್ಮ ವೇತನ ಹೆಚ್ಚಿಸುವಂತೆ ಮನವಿ ಸಲ್ಲಿಸಿದರೆ ಅದಕ್ಕೆ ಒಪ್ಪಿಗೆಯಾಗುವ ಅಥವಾ ನೀವು ಕೇಳಿದ ಸ್ಥಳಕ್ಕೆ ವರ್ಗಾವಣೆಯಾಗುವ ಶುಭಫಲಗಳು ಉಂಟಾಗುತ್ತವೆ.

ಈ ಸುದ್ದಿ ಓದಿ:- ಶಿವರಾತ್ರಿ ದಿನ ಹಣದ ಪೆಟ್ಟಿಗೆಯಲ್ಲಿ ಈ ವಸ್ತುಗಳ ಗಂಟು ಇಟ್ಟರೆ ಜೀವನದಲ್ಲಿ ಹಣದ ಸಮಸ್ಯೆಯೇ ಬರುವುದಿಲ್ಲ…

ಹಾಗೆ ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಕೂಡ ಯಾವುದಾದರೂ ತೊಂದರೆಗಳು ಬಹಳ ದಿನದಿಂದ ಕಾಡುತ್ತಾ ಇದ್ದರೆ ಅದು ಇತ್ಯರ್ಥವಾಗುತ್ತದೆ. ಸಿಂಹ ರಾಶಿಯವರಿಗೆ ಯಾವಾಗಲೂ ಸಹೋದರಿಯರದ್ದೇ ಯೋಚನೆ ಇರುತ್ತದೆ. ಸಿಂಹ ರಾಶಿಯ ಮಹಿಳೆಯರಾಗಲಿ ಪುರುಷರಾಗಲಿ ತಮ್ಮ ಸಹೋದರಿಯರ ವಿಷಯದಲ್ಲಿ ಬಹಳ ನೋ’ವಲ್ಲಿ ಇರುತ್ತದೆ.

ಅವರು ಸೆಟಲ್ ಆಗಿಲ್ಲ ಅವರಿಗೆ ಮದುವೆ ಮಾಡಬೇಕು ಹಣ ಇಲ್ಲ ಅಥವಾ ಒಳ್ಳೆ ಸಂಬಂಧ ಕೂಡಿ ಬರುತ್ತಿಲ್ಲ ಈ ರೀತಿ ಯೋಚನೆಯಲ್ಲಿರುವ ಸಿಂಹ ರಾಶಿಯವರಿಗೆ ಮುಕ್ತಿ ಸಿಗುತ್ತದೆ. ಹಣ ಆಸ್ಥಿಗೆ ಸಂಬಂಧ ಪಟ್ಟ ಹಾಗೆ ಅಥವಾ ಮತ್ತೊಂದು ವಿಚಾರಕ್ಕೆ ನಿಮ್ಮ ಸಹೋದರಿಯರ ಜೊತೆ ಮನಸ್ತಾಪ ಆಗಿದ್ದರು ಕೂಡ ಅದು ಬಗೆಹರಿದು, ನೀವು ನೆಮ್ಮದಿಯಾಗಿರುವಂತಹ ಸಂದರ್ಭಗಳು ಈ ತಿಂಗಳಲ್ಲಿ ಉಂಟಾಗುತ್ತದೆ.

ಇದೇ ರೀತಿಯಾಗಿ ದಾಂಪತ್ಯದಲ್ಲಿ ಸಮಸ್ಯೆಗಳು ಇದ್ದರೆ, ಪತಿ ಪತ್ನಿ ನಡುವೆ ಜಗಳ ಮನಸ್ತಾಪ ಇದ್ದರೆ ನಿವಾರಣೆ ಅಥವಾ ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆ ಇದ್ದರೆ ಅದಕ್ಕೆ ಪರಿಹಾರ ಮತ್ತು ಸಂತಾನಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿ ಮನೆಯಲ್ಲಿ ಶುಭಸುದ್ಧಿ ಕೇಳುವ ಉತ್ತಮ ಫಲಿತಾಂಶಗಳು ಸಿಂಹ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಶುಕ್ರನ ಪ್ರಭಾವದಿಂದ ಉಂಟಾಗುತ್ತಿದೆ.

ಈ ಸುದ್ದಿ ಓದಿ:- ಈ ಕ್ಷೇತ್ರದಲ್ಲಿ 7 ವಾರ 7 ತೆಂಗಿನ ಕಾಯಿ ಕಟ್ಟಿದರೆ ಏನೇ ಕಷ್ಟ ಇದ್ದರು ಪರಿಹಾರ ಆಗುತ್ತೆ.!

ಇದನ್ನು ಇನ್ನಷ್ಟು ಹೆಚ್ಚಿಸಿಕೊಂಡು ಶುಕ್ರನ ಸಂಪೂರ್ಣ ಅನುಗ್ರಹ ಪಡೆಯಲು ನೀವು ಶುಕ್ರನ ಆರಾಧನೆಯನ್ನು ಮಾಡಬೇಕು ಪ್ರತಿದಿನ ಕೂಡ ಶುಕ್ರನ ಅಷ್ಟೋತ್ತರ ಪಠಿಸಬೇಕು. ಪ್ರತಿದಿನ ಲಕ್ಷ್ಮಿ ಮತ್ತು ದುರ್ಗಾ ಅಷ್ಟೋತ್ತರ ಪಠಿಸುವುದು ಈ ತಿಂಗಳಲ್ಲಿ ಪ್ರತಿದಿನವೂ ಕೂಡ ಲಲಿತಾ ಸಹಸ್ರ ನಾಮವನ್ನು ಕೇಳುವುದು ಶುಕ್ರಾನುಗ್ರಹವನ್ನು ಹೆಚ್ಚಿಗೆ ಮಾಡಲಿದೆ.

ಮನೆ ಹತ್ತಿರ ನವಗ್ರಹ ದೇವಸ್ಥಾನ ಇದ್ದರೆ, ಏಪ್ರಿಲ್ ತಿಂಗಳಿನಲ್ಲಿ ಬರುವ ಶುಕ್ರವಾರಗಳಂದು ಶುಕ್ರನ ವಿಗ್ರಹಕ್ಕೆ ಬಿಳಿ ಹೂವಿನಿಂದ ಅರ್ಚನೆ ಮಾಡಿಸಿ ಅಭಿಷೇಕಗಳನ್ನು ಮಾಡಿಸಿ ಇನ್ನು ಹೆಚ್ಚಿನ ಶುಭ ಫಲಗಳನ್ನು ಪಡೆಯುತ್ತೀರಿ ಬಿಳಿ ವಸ್ತ್ರದಲ್ಲಿ ಅವರೆ ಕಾಳು ಇಟ್ಟು ದಾನ ಮಾಡಿ.

ಮನೆಯಲ್ಲಿ ಸ್ಪಟಿಕ ಮಣಿ ಇದ್ದರೆ ಧಾರಣೆ ಮಾಡಿದರೆ ಇನ್ನು ಹೆಚ್ಚಿನ ಶುಭಫಲಗಳನ್ನು ಕಾಣಬಹುದು. ಈ ನಿಯಮಗಳನ್ನು ಅನುಸರಿಸಿ ಶುಕ್ರನ ಕೃಪೆಗೆ ಪಾತ್ರರಾಗಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಶಿವರಾತ್ರಿ ದಿನ ಹಣದ ಪೆಟ್ಟಿಗೆಯಲ್ಲಿ ಈ ವಸ್ತುಗಳ ಗಂಟು ಇಟ್ಟರೆ ಜೀವನದಲ್ಲಿ ಹಣದ ಸಮಸ್ಯೆಯೇ ಬರುವುದಿಲ್ಲ…

 

ಶಿವರಾತ್ರಿ ಹಬ್ಬದ ದಿನ ಒಂದು ವಿಶೇಷವಾದ ಆಚರಣೆ ಮಾಡುವ ಮೂಲಕ ನೀವು ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಯಾವ ರೀತಿ ಮಾಡಬೇಕು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಮೊದಲಿಗೆ ಶಿವರಾತ್ರಿ ಹಬ್ಬದ ಹಿಂದಿನ ದಿನ ಅಥವಾ ಶಿವರಾತ್ರಿ ದಿನ ಮನೆಯನ್ನು ಸ್ವಚ್ಛ ಮಾಡಿಕೊಳ್ಳಿ.

ಕೆಲವರು ಶಿವರಾತ್ರಿ ಹಬ್ಬದ ಮುಂಜಾನೆಯೇ ಕೆಲವರು ಪೂಜೆ ಮಾಡುತ್ತಾರೆ ಸಾಧ್ಯವಾಗದೆ ಇದ್ದವರು ಶಿವರಾತ್ರಿ ದಿನ ರಾತ್ರಿ ಸಮಯದ ಪೂಜೆ ವಿಶೇಷವಾಗಿರುವುದರಿಂದ ರಾತ್ರಿ ಸಮಯದಲ್ಲೂ ಕೂಡ ಇದನ್ನು ಮಾಡಬಹುದು. ಈಗ ದೇವರ ಕೋಣೆಯಲ್ಲಿ ಶಿವಪಾರ್ವತಿ ಇರುವ ಫೋಟೋ ಅಲಂಕಾರ ಮಾಡಿ ಅದರ ಮುಂದೆ ರಂಗೋಲಿ ಬರೆದು ಮೊದಲಿಗೆ ಒಂದು ತಟ್ಟೆಯನ್ನು ಇಡಿ ಆ ತಟ್ಟೆಯ ತುಂಬಾ ಅಕ್ಕಿ ಇರಲಿ.

ಈಗ ಆ ಅಕ್ಕಿಯ ಮೇಲೆ ಮತ್ತೊಂದು ಚಿಕ್ಕ ತಟ್ಟೆ ಇಡಿ ಇದರ ಮೇಲೆ ಒಂದು ಎಕ್ಕದ ಎಲೆಯನ್ನು ಇಡಿ ಎಕ್ಕದ ಎಲೆಯ ಮೇಲೆ ನಿಮ್ಮ ಮನೆಯಲ್ಲಿ ಇರುವ ಶಿವಲಿಂಗವನ್ನು ಇಡಿ. ಬೆಳ್ಳಿ ಅಥವಾ ಸ್ಪಟಿಕ ಅಥವಾ ನಿಮ್ಮ ಮನೆಯಲ್ಲಿ ಯಾವ ಲೋಹದ ಶಿವಲಿಂಗ ಇದೆಯೋ ಅದನ್ನೇ ಇಡಿ ಮತ್ತು ಈಗ ಈ ತಟ್ಟೆಯ ಅಕ್ಕಪಕ್ಕ ದೀಪಗಳನ್ನು ಇಟ್ಟು ಅಲಂಕರಿಸಿ ದೀಪ ಹಚ್ಚಿ ನೀವು ಎಕ್ಕದ ಮೇಲೆ ಇಟ್ಟಿರುವ ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸಿ.

16 ಎಕ್ಕದ ಹೂಗಳನ್ನು ಮಾಲೆ ಮಾಡಿ ಅರ್ಪಿಸಿ ಮತ್ತು ತಪ್ಪದೆ ಶಿವದಾರವನ್ನು ಕೂಡ ಶಿವಲಿಂಗಕ್ಕೆ ಅರ್ಪಿಸಿ. ಇವು ಶಿವನಿಗೆ ಬಹಳ ಪ್ರಿಯವಾದ ವಸ್ತುಗಳು ಇದನ್ನು ಅರ್ಪಿಸುವುದರಿಂದ ಮಹಾದೇವನು ಪ್ರಸನ್ನರಾಗುತ್ತಾರೆ. ಈಗ ನೀವು ಶಿವನ ಅಷ್ಟೋತ್ತರವನ್ನು ಮಾಡಬೇಕು ಹೇಗೆ ಎಂದರೆ ಒಂದು ಹಿಡಿ ಚೆನ್ನಾಗಿರುವ ಅಕ್ಕಿ ತೆಗೆದುಕೊಂಡು ಅದಕ್ಕೆ ವಿಭೂತಿ ಮತ್ತು ತುಪ್ಪ ಹಾಕಿ ಅಕ್ಷತೆಯನ್ನಾಗಿ ಮಾಡಿಕೊಳ್ಳಿ.

ಈಗ ನೀವು ಪ್ರತಿಷ್ಠಾಪಿಸಿರುವ ಶಿವಲಿಂಗದ ಎದುರು ಒಂದು ಮಣೆ ಅಥವಾ ಚಾಪೆ ಹಾಕಿ ಕುಳಿತುಕೊಂಡು ಉಂಗುರದ ಬೆರಳು ಹಾಗೂ ಹೆಬ್ಬರಳಿನಿಂದ ಎಷ್ಟು ಅಕ್ಕಿ ಬರುತ್ತದೆ ಅಷ್ಟು ಅಕ್ಕಿಯನ್ನು ತೆಗೆದುಕೊಂಡು ಶಿವನ ಅಷ್ಟೋತ್ತರವನ್ನು ಒಂದೊಂದೇ ಹೇಳುತ್ತಾ ಶಿವಲಿಂಗದ ಮೇಲೆ ಹಾಕಿ ಅಷ್ಟೋತ್ತರ ಎಂದರೆ ಶಿವನ ಹೆಸರುಗಳು. 101 ನಾಮಗಳನ್ನು ಹೇಳಿ ನಂತರ ಸಂಕಲ್ಪ ಮಾಡಿಕೊಳ್ಳಿ.

ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸಬೇಕು ಆದಷ್ಟು ಬೇಗ ಹಣಕಾಸಿನ ಸಮಸ್ಯೆಗಳಿಂದ ಹೊರಬಂದು ಜೀವನದಲ್ಲಿ ಏಳಿಗೆ ಆಗಬೇಕು ಎಂದು ನಿಮ್ಮ ಕಷ್ಟ ಹೇಳಿಕೊಂಡು ಪ್ರಾರ್ಥಿಸಿ. ನಂತರ ಏನು ಮಾಡಬೇಕು ಎಂದರೆ ಒಂದು ಬಿಳಿ ಮಡಿ ವಸ್ತ್ರವನ್ನು ತೆಗೆದುಕೊಳ್ಳಿ ಸಾಧ್ಯವಾದಷ್ಟು ಹೊಸ ಬಟ್ಟೆಯನ್ನು ತೆಗೆದುಕೊಳ್ಳಬೇಕು ಇದು ಒಂದು ಅಂಗೈ ಅಳತೆ ಇರಲಿ.

ಇದಕ್ಕೆ ನೀವು ಎಕ್ಕದ ಮೇಲೆ ಶಿವಲಿಂಗ ಇಟ್ಟಿದ್ದರಿಂದ ಈ ಎಲೆ ಮೇಲೆ ಅಕ್ಷತೆ ಸಂಗ್ರಹವಾಗಿರುತ್ತದೆ. ನೀವು ಅಷ್ಟೋತ್ತರ ಮಾಡಿದ ಅಕ್ಷತೆ ಯನ್ನು ತೆಗೆದುಕೊಂಡು ಬಿಳಿ ವಸ್ತ್ರಕ್ಕೆ ಹಾಕಿ ಇದರ ಜೊತೆಗೆ ತಪ್ಪದೆ ನೀವು ಶಿವಲಿಂಗಕ್ಕೆ ಅರ್ಪಿಸಿದ್ದ ಒಂದು ಬಿಲ್ವಪತ್ರೆಯನ್ನು ಕೂಡ ಹಾಕಿ ಬಿಳಿ ದಾರದಿಂದ ಗಂಟು ಕಟ್ಟಿ ಮತ್ತು ಈ ಗಂಟಿನ ಮೇಲೆ ಒಂದು ಎಕ್ಕದ ಮತ್ತು ಬಿಲ್ವ ಪತ್ರೆ ಇಟ್ಟು ಶಿವ ಪಾರ್ವತಿಯ ಫೋಟೋ ಮುಂದೆ ಅಥವಾ ಶಿವಲಿಂಗದ ಪಕ್ಕದಲ್ಲಿಯೇ ಇಟ್ಟು ಆ ದಿನ ಪೂರ್ತಿ ಇರಲು ಬಿಡಿ.

ಮರುದಿನ ಕೂಡ ಶಿವನಿಗೆ ಪೂಜೆ ಮಾಡುವ ಸಮಯದಲ್ಲಿ ಇದಕ್ಕೂ ಪೂಜೆ ಮಾಡಿ ಪ್ರಾರ್ಥಿಸಿಕೊಳ್ಳಿ. ಈಗ ಸಂಪೂರ್ಣ ಶಕ್ತಿಯು ಆ ಗಂಟಿಗೆ ಬಂದಿರುತ್ತದೆ. ಇದನ್ನು ನೀವು ಹಣಕಾಸು ಇಡುವ ಜಾಗದಲ್ಲಿ ಇಟ್ಟುಕೊಳ್ಳುವುದರಿಂದ ಬಹಳ ಉತ್ತಮವಾದ ಪರಿಣಾಮಗಳನ್ನು ಕಾಣುತ್ತೀರಿ. 48 ದಿನಗಳವರೆಗೂ ಕೂಡ ಇದರ ಶಕ್ತಿ ಇರುತ್ತದೆ ನಂತರ ನೀವು ಇದನ್ನು ಹರಿಯುವ ನೀರಿಗೆ ಬಿಡಬಹುದು ಶಿವರಾತ್ರಿ ಹಬ್ಬದ ದಿನದಂದು ಮಾತ್ರ ಈ ಆಚರಣೆ ಮಾಡಲು ಸಾಧ್ಯ ಆ ದಿನ ಮಾಡಿದ ಈ ವಿಧಾನದ ಪೂಜೆಗೆ ಹೆಚ್ಚು ಶಕ್ತಿ ಇರುತ್ತದೆ.

ಈ ಕ್ಷೇತ್ರದಲ್ಲಿ 7 ವಾರ 7 ತೆಂಗಿನ ಕಾಯಿ ಕಟ್ಟಿದರೆ ಏನೇ ಕಷ್ಟ ಇದ್ದರು ಪರಿಹಾರ ಆಗುತ್ತೆ.!

 

ನಮ್ಮ ರಾಜ್ಯದಲ್ಲಿ ಲಕ್ಷಾಂತರ ದೇವಾಲಯಗಳಿಗೆ ಮತ್ತು ಪುರಾಣ ಪ್ರಸಿದ್ಧ ಸಾವಿರಾರು ಪುಣ್ಯಕ್ಷೇತ್ರಗಳು ಇವೆ. ಹಾಗೆಯೇ ಕೆಲವೊಂದು ಸ್ಥಳಗಳಲ್ಲಿ ಪವಾಡ ಸದೃಶವಾಗಿ ಭಗವಂತನ ಚಮತ್ಕಾರ ನಡೆಯುತ್ತಿರುವಂತಹ ವಿಶೇಷ ದೇವಾಲಯಗಳು ಕೂಡ ಇವೆ.

ಈ ಪೈಕಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮಳೂರು ಹೋಬಳಿಯ ಗೌಡಗೆರೆ ಎನ್ನುವ ಗ್ರಾಮದಲ್ಲಿ ಇರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಮತ್ತು ಇಲ್ಲಿ ನೆಲೆಗೊಂಡಿರುವ ಪವಾಡ ಬಸವಪ್ಪನವರ ಪ್ರಭಾವದ ಬಗ್ಗೆ ನಾಡಿನ ಜನತೆಗೆ ಕೆಲ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಲು ಇಚಿಸುತ್ತಿದ್ದೇವೆ.

ಈ ದೇವಾಲಯಕ್ಕೆ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕಾಗಿ ಮತ್ತು ಪವಾಡ ಬಸವಪ್ಪನವರಿಗೆ ಕಾಯಿ ಹರಕೆ ಮಾಡಿಕೊಳ್ಳುವುದಕ್ಕಾಗಿ ಸ್ಥಳೀಯರು ಮಾತ್ರವಲ್ಲದೆ ನಾಡಿನ ಮತ್ತು ದೇಶದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಬರುತ್ತಾರೆ.

ಈ ಸುದ್ದಿ ಓದಿ:- 1 ರೂಪಾಯಿ ಬಂಡವಾಳ ಇಲ್ಲದೆ ಮನೆಯಲ್ಲಿಯೇ ಕೂತು ಲಕ್ಷ ಹಣ ಸಂಪಾದನೆ ಮಾಡಬಹುದು.!

ನಾಡಿನ ಅಧಿದೇವತೆಯಾದ ಚಾಮುಂಡೇಶ್ವರಿ ತಾಯಿಯು ತನ್ನ ಭಕ್ತರ ಮೇಲೆ ಕರುಣೆ ತೋರಿ ಇಲ್ಲಿ ಎಲ್ಲರನ್ನು ಕಾಪಾಡುತ್ತಿದ್ದಾರೆ ಹಾಗೆ ಪವಾಡ ಬಸವಪ್ಪನವರು ಕಾಯಿ ಹರಕೆ ಮಾಡಿಕೊಂಡ ಭಕ್ತಾದಿಗಳ ಕೋರಿಕೆಗಳನ್ನು ಏಳು ವಾರಗಳಲ್ಲಿ ನೆರವೇರಿಸುತ್ತಿದ್ದಾರೆ.

ಈ ಸ್ಥಳ ಹಿನ್ನೆಲೆ ಬಗ್ಗೆ ಸ್ಥಳೀಯರು ಹೇಳಿದ ಮಾಹಿತಿ ಪ್ರಕಾರ ಕಸಾಯಿಖಾನೆಗೆ ಹೋಗುತ್ತಿದ್ದ ಬಸವ ತನ್ನ ದೈವೀ ಶಕ್ತಿಯಿಂದ ತಪ್ಪಿಸಿಕೊಂಡು ಈ ಸ್ಥಳದಲ್ಲಿ ನೆಲೆ ನಿಂತು ತನ್ನ ಶಕ್ತಿಯನ್ನು ತೋರುತ್ತಿದ್ದಾರೆ.

ಈ ಮೂಲಕ ಈ ಭಾಗದ ಸಾವಿರಾರು ಕುಟುಂಬಗಳ ಆರಾಧ್ಯ ದೈವವಾಗಿ ಪ್ರಖ್ಯಾತಿ ಹೊಂದಿದ್ದಾರೆ. ಬಸಪ್ಪ ಐಕ್ಯರಾದ ಮೇಲೆ ಆ ಸ್ಥಳದಲ್ಲಿಯೇ ಬಸವನ ವಿಗ್ರಹವನ್ನು ಮಾಡಲಾಗಿದೆ. ಇಂದು ಅಲ್ಲಿಗೆ ಭೇಟಿ ಕೊಟ್ಟವರು ಇದೇ ಗುಡಿಯ ಸುತ್ತಲು ರಾಶಿ ರಾಶಿ ತೆಂಗಿನಕಾಯಿ ಕಟ್ಟಿರುವುದನ್ನು ನೋಡಬಹುದು.

ಈ ಸುದ್ದಿ ಓದಿ:-BPL, APL, AAY ರೇಷನ್ ಕಾರ್ಡ್ ದಾರರಿಗೆ ಬಿಗ್ ಶಾಕ್, ಇನ್ನು ಮುಂದೆ ಈ ಬಗೆಯ ರೇಷನ್ ಕಾರ್ಡ್ ದಾರರಿಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಬರುವುದಿಲ್ಲ…

ಈ ರೀತಿ ಹರಕೆಗೆ ಕಾರಣವೆನೇವೆಂದರೆ ಇಲ್ಲಿನ ಜನರ ನಂಬಿಕೊಂಡು ಬಂದಿರುವ ನಂಬಿಕೆ ಪ್ರಕಾರ ಮತ್ತು ಅದೇ ರೀತಿ ಇಂದಿಗೂ ಕೂಡ ನಡೆಯುತ್ತಿರುವ ಚಮತ್ಕಾರದ ಪ್ರಕಾರ ಏಳು ಭಾನುವಾರದಂದು ಈ ಕ್ಷೇತ್ರಕ್ಕೆ ಬಂದು ಪ್ರತಿ ಭಾನುವಾರವೂ ಒಂದೊಂದು ತೆಂಗಿನ ಕಾಯಿಯನ್ನು ತಂದು ಬಸವನಗುಡಿಗೆ ಏಳು ಪ್ರದಕ್ಷಿಣೆ ಹಾಕಿ ಹರಕೆ ಮಾಡಿಕೊಂಡು.

ನಂತರ ಭಾನುವಾರದಂದು ಈ ಕ್ಷೇತ್ರದಲ್ಲಿ ಹಣೆ ಮೇಲಿಂದ ನೀರನ್ನು ಹಾಕಲಾಗುತ್ತದೆಯಂತೆ ಇದನ್ನು ಹಾಕಿಸಿಕೊಂಡುಹೋಗುವುದರಿಂದ ಏಳು ವಾರದ ಒಳಗೆ ಅವರ ಕಷ್ಟಗಳಿಗೆ ಪರಿಹಾರ ಸಿಗುತ್ತದೆಯಂತೆ. ಇಷ್ಟು ಪ್ರಭಾವವಿರುವ ಈ ಕ್ಷೇತ್ರದ ಖ್ಯಾತಿಯು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಬರುವ ಭಕ್ತಾದಿಗಳ ಸಂಖ್ಯೆಯು ಹೆಚ್ಚಾಗುತ್ತಿದೆ ಹಾಗಾಗಿ ಹರಕೆ ಕಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಹರಕೆ ಫಲಿಸಿದ ನಂತರ ಭಕ್ತಾದಿಗಳು ಬಂದು ಸೇವೆ ಕೂಡ ಸಲ್ಲಿಸುತ್ತಾರೆ ವಿವಾಹ ವಿಳಂಬ, ಸಂತಾನ ವಿಳಂಬ, ಹಣಕಾಸಿನ ಸಮಸ್ಯೆ, ಉದ್ಯೋಗ ಸಮಸ್ಯೆ, ವಿದ್ಯಾಭ್ಯಾಸದ ಸಮಸ್ಯೆ, ಕೌಟುಂಬಿಕ ಸಮಸ್ಯೆಗಳು, ಅದರಲ್ಲೂ ಅತಿ ಮುಖ್ಯವಾಗಿ ತಮ್ಮ ಗಂಡಂದಿರ ಕುಡಿತದ ಚಟ ಬಿಡಿಸುವುದಕ್ಕಾಗಿಯೇ ಹರಕೆ ಮಾಡಿಕೊಳ್ಳುವವರ ಸಂಖ್ಯೆಯು ಹೆಚ್ಚಾಗಿ ಇದೆಯಂತೆ.

ಈ ಸುದ್ದಿ ಓದಿ:-ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದರೆ 11 ಮಾವಿನ ಎಲೆಯಲ್ಲಿ ಈ ರೀತಿಯಾಗಿ ಪರಿಹಾರ ಮಾಡಿ.!

ಸುತ್ತ ಮುತ್ತಲಿನಲ್ಲಿ ಸಾವಿರಕ್ಕೂ ಹೆಚ್ಚು ಕುಟುಂಬಗಳಲ್ಲಿ ಬಸವಣ್ಣನ ಕೃಪೆಯಿಂದಾಗಿ ನೆಮ್ಮದಿ ನೆಲೆಸಿದೆಯಂತೆ ಆ ಕುಟುಂಬದ ಹೆಣ್ಣು ಮಕ್ಕಳು ತಮ್ಮ ಪತಿ ಅಥವಾ ತಂದೆ ಅಥವಾ ಮಕ್ಕಳ ಕುಡಿತದ ಚಟಕ್ಕೆ ಮುಕ್ತಿ ಕೊಡಿಸುವಂತೆ ಬಂದು ಇಲ್ಲಿ ಹರಕೆ ಸಲ್ಲಿಸಿ ಕುಡಿತದ ಚಟವನ್ನು ಬಿಡಿಸಿದ್ದಾರಂತೆ. ಇಷ್ಟು ಪ್ರಭಾವ ಬೀರುವ ಈ ಕ್ಷೇತ್ರಕ್ಕೆ ನೀವು ಸಹ ನಿಮ್ಮ ಕುಟುಂಬದೊಡನೆ ಒಮ್ಮೆ ಭೇಟಿ ಕೊಡಿ.

ಮಹಾಶಿವರಾತ್ರಿಯ ದಿನ ಈ ಎರಡು ತರಕಾರಿಗಳನ್ನು ಮಾತ್ರ ತಿನ್ನಬೇಡಿ ಶಿವನ ಕೋಪಕ್ಕೆ ಗುರಿಯಾಗುವಿರಿ.!

 

ನಾಳೆ ಮಾರ್ಚ್ 8 ಮಹಾಶಿವರಾತ್ರಿ ದಿನ. ಶಿವನ ಭಕ್ತರಿಗೆ ಇಂದು ಬಹಳ ದೊಡ್ಡ ಹಬ್ಬ. ಮಹಾದೇವನ ಕೃಪಾಕಟಾಕ್ಷಕ್ಕಾಗಿ ಪ್ರಾರ್ಥಿಸುವುದಕ್ಕೆ ಅತ್ಯಂತ ಶುಭದಿನ. ತ್ರಿಮೂರ್ತಿಗಳಲ್ಲಿ ಬೇಡಿದವರಗಳನ್ನು ತಕ್ಷಣವೇ ನೀಡುವ ಭಗವಂತ ಈಶ್ವರ. ಬಹಳ ಸರಳವಾದ ವಿಧಾನಗಳಿಂದ ಕೂಡ ಪೂಜಿಸಿದರೂ ಪ್ರಸನ್ನನಾಗುವ ಪರಮೇಶ್ವರನ ಆರಾಧನೆಗೆ ಮಹಾಶಿವರಾತ್ರಿಯು ಬಹಳ ಪ್ರಾಶಸ್ಯ್ತವಾದ ದಿನವಾಗಿದೆ.

ಬೈರಾಗಿಯಾದ ಗಂಗಾಧರನನ್ನು ಶ್ರದ್ಧಾಭಕ್ತಿಯಿಂದ ಸರಿಯಾದ ವಿಧಿ ವಿಧಾನಗಳಿಂದ ಪೂಜಿಸಿದರೆ ನೀವು ಕೋರಿಕೊಂಡ ಕೋರಿಕೆ ವರ್ಷದೊಳಗೆ ಈಡೇರುವುದಲ್ಲಿ ಅನುಮಾನವೇ ಬೇಡ. ಆದರೆ ನೀವು ಪೂಜಿಸುವ ಪದ್ಧತಿ ಸರಿಯಾಗಿರಬೇಕು. ನೀವು ಪೂಜೆ ವೇಳೆ ಮಾಡುವ ಕೆಲ ತಪ್ಪುಗಳಿಂದ ನಿಮ್ಮ ಪೂಜೆಗೆ ಫಲ ಸಿಗದೇ ಇರಬಹುದು ಅಥವಾ ಮಹದೇವನ ಕೋಪಕ್ಕೆ ನೀವು ಗುರಿಯಾಗಬಹುದು.

ಮೊದಲಿಗೆ ಯಾವ ರೀತಿ ಶಿವರಾತ್ರಿ ಆಚರಿಸಬೇಕು ಎನ್ನುವ ವಿಷಯದೊಂದಿಗೆ ಈ ದಿನ ಮಾಡಲೇ ಬಾರದ ಕೆಲ ಸಂಗತಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇವೆ. ನೀವು ಶಿವರಾತ್ರಿ ಹಬ್ಬದ ದಿನದಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಡಿ ಉಟ್ಟುಕೊಳ್ಳಬೇಕು. ಅದರಲ್ಲೂ ಹೊಲಿಗೆ ಬೀಳದಂತಹ ವಸ್ತುಗಳನ್ನು ಉಟ್ಟುಕೊಳ್ಳುವುದು ಬಹಳ ಶುಭ ಎಂದು ಹೇಳಲಾಗುತ್ತದೆ.

ಈ ಸುದ್ದಿ ಓದಿ:-ಅರಿಶಿಣದಿಂದ ಈ ಚಿಕ್ಕ ಕೆಲಸ ಮಾಡಿದರೆ, ಗಿರವಿ ಇಟ್ಟಿರೋ ಚಿನ್ನವನ್ನು 3 ದಿನದಲ್ಲಿ ತರಬಹುದು.!

ಅಂದರೆ ಮಹಿಳೆಯರು ಸಾಂಪ್ರದಾಯಕವಾಗಿ ಸೀರೆ ಹಾಗೂ ಪುರುಷರು ಪಂಚೆ ಮತ್ತು ಶಲ್ಯ ಧರಿಸಿ ಶಿವನ ಪೂಜೆಗೆ ಕುಳಿತುಕೊಳ್ಳುವುದು ಶ್ರೇಷ್ಠ ಎನ್ನುವುದು ಅನಾಧಿ ಕಾಲದಿಂದ ರೂಢಿಯಾಗಿರುವ ಪದ್ಧತಿ ಮತ್ತು ಈ ದಿನದಂದು ಮುಂಜಾನೆ ಜೊತೆಗೆ ರಾತ್ರಿ ಸಮಯ ಕೂಡ ಶಿವ ಪೂಜೆ ಮಾಡಿರುವುದು ಅತ್ಯಂತ ಶುಭಕರ ಹೀಗೆ ಶುಭ ಪೂಜೆ ಮಾಡುವಾಗ ಶಿವನಿಗೆ ಪ್ರಿಯವಾದ ಕೆಲ ವಸ್ತುಗಳನ್ನು ಅರ್ಪಿಸುವುದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು.

ಈ ದಿನ ಉಪವಾಸ ಇದ್ದು ರಾತ್ರಿ ಪೂರ್ತಿ ಜಾಗರಣೆ ಇರುತ್ತಾರೆ ಹಾಗೂ ಪ್ರತಿದಿನವ ಶಿವಪೂಜೆ ಮಾಡಲು ಸಾಧ್ಯವಾಗದೆ ಇದ್ದವರು ಶಿವರಾತ್ರಿಯ ಈ ದಿನದಂದು ಆದರೂ ಶುಭ ಪೂಜೆ ಮಾಡಲು ಬಯಸುತ್ತಾರೆ. ಹೀಗೆ ಶಿವ ಪೂಜೆ ಮಾಡುವಾಗ ನೀವು ಬಿಲ್ಪತ್ರೆ, ತುಂಬೆ ಹೂವು, ಮಲ್ಲಿಗೆ ಹೂವು, ಪಾರಿಜಾತ ಹೂ ಈ ರೀತಿ ಹೂವುಗಳಿಂದ ಶಿವಲಿಂಗವನ್ನು ಪೂಜಿಸಿ ಮನೆಯಲ್ಲಿ ನರ್ಮದೇಶ್ವರ ಅಥವಾ ಸ್ಪಟಿಕಲಿಂಗ ಇದ್ದರೆ ಅದಕ್ಕೆ ಪೂಜಿಸಬಹುದು.

ಯಾವುದೇ ಕಾರಣಕ್ಕೂ ಶಿವಲಿಂಗಕ್ಕೆ ಅರಿಶಿನವನ್ನು ಹಚ್ಚಬೇಡಿ ಮತ್ತು ಅಭಿಷೇಕ ಪ್ರಿಯನಾದ ಶಿವನಿಗೆ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಕಬ್ಬಿನರಸ, ಪಂಚಾಮೃತ ಗಂಗಾಜಲ, ನೀರು, ಎಳನೀರು ಇವುಗಳಿಂದ ಅಭಿಷೇಕ ಮಾಡಿ ಆದರೆ ಈ ರೀತಿ ಅಭಿಷೇಕ ಮಾಡುವಾಗ ಶಂಖದಿಂದ ಮಾತ್ರ ಅಭಿಷೇಕ ಮಾಡಬೇಡಿ ಹಾಗೂ ಪೂಜೆಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬೇಡಿ.

ಈ ಸುದ್ದಿ ಓದಿ:-1 ರೂಪಾಯಿ ಬಂಡವಾಳ ಇಲ್ಲದೆ ಮನೆಯಲ್ಲಿಯೇ ಕೂತು ಲಕ್ಷ ಹಣ ಸಂಪಾದನೆ ಮಾಡಬಹುದು.!

ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಕಾರಣಕ್ಕೂ ಈ ದಿನ ಸಂಪಿಗೆ ಕೇದಿಗೆ ಹಾಗೂ ತುಳಸಿ ಹೂವುಗಳನ್ನು ಶಿವಲಿಂಗಕ್ಕೆ ಅರ್ಪಿಸಲೇಬಾರದು. ಇದರಿಂದ ನೀವು ಶಿವನ ಕೋಪಕ್ಕೆ ಗುರಿಯಾಗುತ್ತಿರಿ ಅದೇ ರೀತಿಯಾಗಿ ನೀವು ಸಾಧ್ಯವಾದಷ್ಟು ಶಿವನ ನಾಮಾವಳಿಗಳನ್ನು ಪಂಚಾಕ್ಷರಿ ಮಂತ್ರವನ್ನು ಅಷ್ಟೋತ್ತರಗಳನ್ನು ಮತ್ತು ಶಿವನ ಕಥೆಗಳನ್ನು ಹೇಳುತ್ತಾ ಕೇಳುತ್ತಾ ಸಮಯ ಕಳೆಯಿರಿ.

ನಿಮ್ಮ ಮನೆಯಲ್ಲಿ ಶಿವ ಪೂಜೆ ಮಾಡಲು ಅವಕಾಶವಾಗದೇ ಹೋದರೆ ಈ ಪೂಜಾ ವಸ್ತುಗಳನ್ನು ಹತ್ತಿರದಲ್ಲಿರುವ ಶಿವ ದೇವಾಲಯಕ್ಕೆ ಅರ್ಪಿಸಬಹುದು ಮತ್ತು ಈ ದಿನ ಪೂರ್ತಿ ಉಪವಾಸ ಇದ್ದು ಜಾಗರಣೆ ಮಾಡುವ ಪದ್ಧತಿ ಇರುವುದರಿಂದ ಜಾಗರಣೆ ಸಮಯದಲ್ಲೂ ಕೂಡ ಶಿವನ ಧ್ಯಾನವನ್ನು ಮಾಡಬೇಕು.

ಜಾಗರಣೆ ಸಮಯವನ್ನು ಹಾಳು ಹರಟೆ ಮಾಡಿ ಕಾಲಹರಣ ಮಾಡಬಾರದು ಹಾಗೆಯೇ ಪೂರ್ತಿ ದಿನ ಉಪವಾಸ ಇರಲು ಆಗದೆ ಇದ್ದವರು ಹಾಲು ಮತ್ತು ಹಣ್ಣುಗಳನ್ನು ಸೇವಿಸಬಹುದು. ಆದರೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಮಾಂಸ ಮೊಟ್ಟೆ ಇಂತಹ ಪದಾರ್ಥಗಳನ್ನು ಇಂದು ಸೇವಿಸಲೇಬಾರದು ಮಧ್ಯಪಾನ ಮಾಡಲೇಬಾರದು. ಇದನ್ನು ಪಾಲಿಸಿದರೆ ಖಂಡಿತ ಶಿವನ ಆಶೀರ್ವಾದ ನಿಮಗೆ ದೊರೆಯುತ್ತದೆ.

ಈ ಶಕ್ತಿಶಾಲಿ ಬೇರು ಮನೆಯಲ್ಲಿದ್ದರೆ ಮಾ.ಟ, ಮಂ.ತ್ರ ವಾಮಾಚಾರ, ಯಾರು ಏನೇ ಮಾಡಿಸಿದರೂ ದೋಷ ತಟ್ಟುವುದಿಲ್ಲ.!

ಮನುಷ್ಯ ಕೂಡ ಈ ಪ್ರಕೃತಿಯ ಒಂದು ಭಾಗ. ಈ ಪ್ರಕೃತಿಯಲ್ಲಿ ಉಂಟಾಗುವ ವೈಪರೀತ್ಯಗಳಿಗೆ ಪ್ರಕೃತಿಯಲ್ಲಿಯೇ ಚಿಕಿತ್ಸೆ ಕೂಡ ಇದೆ. ಹಾಗೆ ಮನುಷ್ಯನಿಗೆ ಕೂಡ ಆತನ ಆರೋಗ್ಯದ ಅಥವಾ ಹಣಕಾಸಿನ ಅಥವಾ ಮನಸ್ಸಿಗೆ ಸಂಬಂಧಪಟ್ಟ ಹಾಗೆ ಯಾವುದೇ ರೀತಿ ಸಮಸ್ಯೆ ಬಂದರೂ ಕೂಡ ಈ ಪ್ರಕೃತಿಯ ಸಹಾಯದಿಂದ ಅವನು ಅದನ್ನು ಪರಿಹರಿಸಿಕೊಳ್ಳಬಹುದು.

ಆಯುರ್ವೇದ, ತಂತ್ರ ವಿದ್ಯೆ, ಜ್ಯೋತಿಷ್ಯ ಶಾಸ್ತ್ರ ಎಲ್ಲವೂ ಕೂಡ ಪ್ರಕೃತಿಯಲ್ಲಿರುವ ವಸ್ತುಗಳನ್ನು ಉಪಯೋಗಿಸಿಕೊಂಡು ಮನುಷ್ಯನಿಗೆ ಇರುವ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಪರಿಹಾರ ಮಾರ್ಗ ಸೂಚಿಸುತ್ತದೆ. ಈ ಪ್ರಕೃತಿಯಲ್ಲಿ ನಿಗೂಢ ಶಕ್ತಿ ಹೊಂದಿರುವ ಒಂದು ಅಪರೂಪದ ವಸ್ತುವಿನ ಬಗ್ಗೆ ಇಂದು ನಾವು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಈ ವಸ್ತುವನ್ನು ನೀವು ಕಂಡು ಹಿಡಿದು ಮನೆಯಲ್ಲಿ ತಂದು ಪೂಜಿಸಿದರೆ ನಿಮ್ಮ ಬದುಕಿನಲ್ಲಿ ನೀವು ಗೆದ್ದಂತೆಯೇ ತುಳಸಿ, ಎಕ್ಕ, ತುಂಬೆ, ಅರಳಿ, ಬೇವು, ಬನ್ನಿ ಈ ವೃಕ್ಷಗಳಲ್ಲಿ ಒಂದು ಸಕಾರಾತ್ಮಕವಾದ ಶಕ್ತಿ ಇದೆ. ಇವುಗಳ ಬೇರಿಗೂ ಮತ್ತು ಈ ವೃಕ್ಷಗಳ ಪ್ರತಿಯೊಂದು ವಸ್ತುವಿಗೂ ಆ ಶಕ್ತಿ ಇದೆ ಹಾಗಾಗಿ ಪೂಜ್ಯನೀಯ ಸ್ಥಾನ ಪಡೆದಿವೆ.

ಈ ಸುದ್ದಿ ಓದಿ:- ಈ ತಂತ್ರ ಮಾಡಿ ಶೀಘ್ರದಲ್ಲಿ ಮದುವೆ ಹಾಗೂ ಲಕ್ಷ್ಮಿನಾ ಸಿದ್ಧಿ ಮಾಡಿಕೊಳ್ಳಿ.!

ಅದೇ ರೀತಿಯಾಗಿ ಬಲಮುರಿ ಎಂದು ಹೇಳಲಾಗುವ ಬೇರಿಗೂ ಕೂಡ ಈ ರೀತಿಯ ಶಕ್ತಿ ಇದೆ, ಮತ್ತು ಇದಕ್ಕೆ ಸ್ವಲ್ಪ ವಿಭಿನ್ನವಾದ ಸಾಮರ್ಥ್ಯವು ಇದೆ ಎಂದು ಹೇಳಬಹುದು. ಯಾಕೆಂದರೆ ಹಿತ ಶತ್ರುಗಳ ಕಾಟವನ್ನು, ನರ ದೃಷ್ಟಿಗೆ ದೋಷವನ್ನು ಕಳೆದು ನಿಮ್ಮ ಮೇಲೆ ಉಂಟಾಗುವ ಯಾವುದೇ ನಕಾರಾತ್ಮಕ ಪ್ರಭಾವಗಳು ನಿಮಗೆ ತಟ್ಟದಂತೆ ನಿಮ್ಮನ್ನು ಕಾಪಾಡುವಂತಹ ಬೇರು ಇದು.

ಈಗಿನ ಕಾಲದಲ್ಲಿ ಹಿತ ಶತ್ರುಗಳ ಕಾಟ ಇದ್ದೇ ಇದೆ. ನಾವು ಆರ್ಥಿಕವಾಗಿ ಸ್ವಲ್ಪ ಅಭಿವೃದ್ಧಿ ಹೊಂದಿದರೆ, ನಮ್ಮ ಮನೆ ಒಳ್ಳೆಯ ಸಂಬಂಧಗಳು ಸಿಕ್ಕಿ ಮಕ್ಕಳಿಗೆ ಮದುವೆ ಗೊತ್ತಾದರೆ ಅಥವಾ ಕೆಲಸ ಕಾರ್ಯಗಳಲ್ಲಿ ಏಳಿಗೆಯಾದರೆ ಹಿತ ಶತ್ರುಗಳಿಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಈ ರೀತಿ ನಮಗೆ ಹಿತಶತ್ರುಗಳು ಇದ್ದಾರೆ ಎಂದು ಗೊತ್ತಾದಾಗ ನಮ್ಮ ಪರಿಸ್ಥಿತಿ ಸ್ವಲ್ಲ ಹದಗೆಟ್ಟರೂ ಮೊದಲಿಗೆ ಅವರ ಮೇಲೆಯೇ ಅನುಮಾನ ಬರುತ್ತದೆ.

ಅವರು ನಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಮಾಡಿಸಿರಬಹುದು ನಮ್ಮ ಮೇಲೆ ತೊಂದರೆ ಆಗುವಂತೆ ಮಾಡಿದ್ದಾರೆ ಎನ್ನುವ ಅನುಮಾನ ಬರುತ್ತದೆ. ಈ ರೀತಿ ಆಗಬಾರದು ಎಂದರೆ ನೀವು ಮುನ್ನೆಚ್ಚರಿಕೆಯಿಂದ ನಿಮ್ಮ ಮನೆಯಲ್ಲಿ ಯಾವಾಗಲೂ ಬಲಮುರಿ ಬೇರು ತಂದು ಇಟ್ಟು ಪೂಜಿಸಿ.

ಈ ಸುದ್ದಿ ಓದಿ:-ಕಾಲಿನ ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದವಾಗಿದ್ದರೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ ನೋಡಿ.!

ನೀವು ದೇವರ ಕೋಣೆಯಲ್ಲಿ ಬರಮುರಿ ಬೇರು ಇಟ್ಟು ಪ್ರತಿದಿನವೂ ಕೂಡ ಇದಕ್ಕೆ ಪೂಜೆ ಮಾಡಬಹುದು ಅಥವಾ ಮನೆ ಮುಂದೆ ಮುಂಬಾಗಿಲಿಗೆ ಇದನ್ನು ಕಟ್ಟಿ ಪೂಜೆ ಮಾಡಬಹುದು. ಇದು ನಿಮ್ಮ ಮನೆ ಒಳಗೆ ಇದ್ದರೆ ಯಾವುದೇ ನಕರಾತ್ಮಕ ಶಕ್ತಿಯು ನಿಮ್ಮ ಮನೆ ಪ್ರವೇಶ ಮಾಡುವುದಿಲ್ಲ, ಮನೆಯ ವಾತಾವರಣ ಸಕಾರಾತ್ಮಕವಾಗಿರುತ್ತದೆ. ನಿಮಗೆ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ಜಯ ಸಿಗುತ್ತದೆ.

ಇದರ ಪ್ರಭಾವ ಎಷ್ಟಿದೆ ಎಂದರೆ 48 ದಿನಗಳ ಕಾಲ ಪ್ರತಿದಿನವೂ ಕೂಡ ಇದನ್ನು ನೀರಿನಲ್ಲಿ ಇಟ್ಟು ಆ ನೀರನ್ನು ಪ್ರೋಕ್ಷಣೆ ಮಾಡಿದರೆ ಮದುವೆ ಆಗದೆ ಇದ್ದವರಿಗೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಹಲವರಿಗೆ ಇದನ್ನು ಗುರುತಿಸಲು ಆಗುವುದಿಲ್ಲ ನೀವು ಸರಿಯಾಗಿ ಈ ಬಲಮುರಿ ಬೇರನ್ನು ಗುರುತಿಸಿ ತಂದು ಪೂಜೆ ಮಾಡಿಸಿದರೆ ಮಾತ್ರ ನಿಮಗೆ ಇದರ ಫಲಗಳು ಸಿಗುವುದು.

ಈ ತಂತ್ರ ಮಾಡಿ ಶೀಘ್ರದಲ್ಲಿ ಮದುವೆ ಹಾಗೂ ಲಕ್ಷ್ಮಿನಾ ಸಿದ್ಧಿ ಮಾಡಿಕೊಳ್ಳಿ.!

 

ಕೆಲವರಿಗೆ ಮದುವೆ ಬಹಳ ವಿಳಂಬ ಆಗುತ್ತಿರುತ್ತದೆ. ಬಹಳ ವರ್ಷಗಳಿಂದ ಕೂಡ ಮದುವೆಗಾಗಿ ಸಂಬಂಧ ನೋಡುತ್ತಾ ಇದ್ದರೆ ಯಾವುದು ಕೂಡ ಹೊಂದಾಣಿಕೆ ಆಗುವುದಿಲ್ಲ. ಹತ್ತಾರು ಕಡೆ ಹುಡುಗಿ ನೋಡಿಕೊಂಡು ಬಂದು ಯಾವುದು ಸೆಟ್ ಆಗದೆ ಬೇಜಾರಾಗಿರುತ್ತದೆ. ಹಾಗೆಯೇ ಹೆಣ್ಣು ಮಕ್ಕಳಿಗೂ ಕೂಡ ಹತ್ತಾರು ಮನೆಯವರು ಬಂದು ನೋಡಿಕೊಂಡು ಹೋಗಿ ಒಪ್ಪಿಗೆ ಆಗದೇ ಇದ್ದಾಗ ಹಣೆಬರಹದ ಮೇಲೆ ಬಹಳ ಬೇಸರವಾಗಿರುತ್ತದೆ.

ಮದುವೆ ಹಂತಕ್ಕೆ ಬಂದು ನಿಶ್ಚಿತಾರ್ಥ ಆಗಿ ಮುರಿದು ಹೋಗುತ್ತಿರುತ್ತದೆ. ಸರಿಯಾದ ಸಮಯಕ್ಕೆ ಮದುವೆ ಆಗದೆ ಇರುವುದು ಕೂಡ ಒಂದು ರೀತಿಯ ಕಷ್ಟವೇ. ಇದರಿಂದ ಆಗುವ ಮಾನಸಿಕ ನೋ’ವು ಅಷ್ಟಿಷ್ಟಲ್ಲ. ನಿಮ್ಮ ಮನೆಯಲ್ಲಿ ಯಾರಾದರೂ ಈ ರೀತಿ ಸಮಸ್ಯೆಯಲ್ಲಿದ್ದರೆ ಇವರಿಗೆ ಬಹಳ ಚಮತ್ಕಾರಿಯಾದ ಒಂದು ಉಪಾಯದ ಬಗ್ಗೆ ಹೇಳಿಕೊಡುತ್ತಿದ್ದೇವೆ. ಈ ಆಚರಣೆ ಮಾಡುವುದರಿಂದ ಖಂಡಿತವಾಗಿಯೂ ಅವರಿಗೆ ಕಂಕಣ ಬಲ ಕೂಡಿಬರುತ್ತದೆ.

ಇದನ್ನು ಮಾಡಲು ಮುಖ್ಯವಾಗಿ ಬೇಕಾಗಿರುವುದು ಅಪಾರವಾದ ನಂಬಿಕೆ ಶ್ರದ್ಧೆ ಭಕ್ತಿ. ಇದನ್ನು ಮಾಡುವುದು ಹೇಗೆಂದರೆ ಒಂದು ಶುಕ್ರವಾರದಂದು ಶುದ್ಧವಾಗಿ ಸ್ಥಾನ ಮಾಡಿ ಮಾಡಿ ಮನೆಯಲ್ಲಿ ಮನೆ ದೇವರ ಪೂಜೆ ಮಾಡಿ ಹಾಗೂ ನಿಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿಕೊಂಡು ಒಂದು ಹಳದಿ ಬಣ್ಣದ ಚಿಕ್ಕ ವಸ್ತ್ರ ತೆಗೆದುಕೊಳ್ಳಿ,

ಇದಕ್ಕೆ ಏಳು ಏಲಕ್ಕಿ ಹಾಕಿ ಒಂದು ಕೆಂಪು ಬಣ್ಣದ ದಾರದಿಂದ ಕಟ್ಟಿ ಈಗ ಇದನ್ನು ಹತ್ತಿರದಲ್ಲಿರುವ ಯಾವುದೇ ವಿಷ್ಣುವಿನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ವಿಷ್ಣುವಿನ ಪಾದದ ಬಳಿ ಇಟ್ಟು ಪೂಜೆ ಮಾಡಿ ಕೊಡುವಂತೆ ಅರ್ಚಕರನ್ನು ಕೇಳಿ ಆ ಸಮಯದಲ್ಲಿ ನೀವು ಸಹ ಮಹಾಲಕ್ಷ್ಮಿ ಹಾಗೂ ಮಹಾವಿಷ್ಣುವನ್ನು ನಿಮ್ಮ ಸಮಸ್ಯೆ ಪರಿಹರಿಸುವಂತೆ ನಿಮಗೆ ವಿವಾಹ ಭಾಗ್ಯ ದೊರಕಿಸಿ ಕೊಡುವಂತೆ ಕೇಳಿಕೊಳ್ಳಿ.

ಬಳಿಕ ನೀವು ಆ ಗಂಟನ್ನು ಮನೆಗೆ ತಂದು ದೇವರ ಕೋಣೆಯಲ್ಲಿ ಇಟ್ಟು ಅಥವಾ ನಿಮ್ಮ ಬೆಡ್ ರೂಮಿನಲ್ಲಿ ಶುದ್ಧವಾದ ಜಾಗದಲ್ಲಿ ಇಟ್ಟು ಪ್ರತಿದಿನ ಪೂಜೆ ಮಾಡುತ್ತಾ ಬನ್ನಿ ಬಹಳ ಬೇಗ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ, ಒಳ್ಳೆಯ ಸಂಬಂಧ ಕೂಡ ಕೂಡಿಬರುತ್ತದೆ. ಇದೇ ಆಚರಣೆಯನ್ನು ಮತ್ತೊಂದು ಬಗೆಯಲ್ಲಿ ಮಾಡುವುದರಿಂದ ಹಣಕಾಸಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ವಿವಾಹ ಭಾಗ್ಯದ ಪೂಜೆಗಾಗಿ ಆಚರಣೆಯಲ್ಲಿ ನೀವು ಹಳದಿ ಬಣ್ಣದ ತೆಗೆದುಕೊಂಡಿದ್ದೀರಿ ಈಗ ಇದರ ಬದಲು ಹಸಿರು ಬಣ್ಣದ ವಸ್ತ್ರವನ್ನು ತೆಗೆದುಕೊಂಡು ಏಳು ಏಲಕ್ಕಿಯನ್ನು ಹಾಕಿ ಕೆಂಪು ದಾರದಲ್ಲಿ ಕಟ್ಟಿ ಶುಭ ಶುಕ್ರವಾರದಂದು ಮಹಾಲಕ್ಷ್ಮಿ ಹಾಗೂ ಮಹಾವಿಷ್ಣು ಇರುವ ದೇವಸ್ಥಾನದಲ್ಲಿ ಅವರ ಪಾದದ ಬಳಿ ಇಟ್ಟು ಇದನ್ನು ಕೊಡುವಂತೆ ಕೇಳಿಕೊಂಡು ಅಲ್ಲಿ ನಿಮ್ಮ ಹಣಕಾಸಿನ ಸಮಸ್ಯೆ ಪರಿಹಾರಕ್ಕಾಗಿ ಪ್ರಾರ್ಥಿಸಿ.

ಮನೆಗೆ ತಂದು ದೇವರ ಕೋಣೆಯಲ್ಲಿ ಇಟ್ಟು ಪ್ರತಿ ದಿನವೂ ಬಹಳ ಪೂಜ್ಯ ಭಾವನೆಯಲ್ಲಿ ಈ ಗಂಟಿಗೆ ಪೂಜೆ ಮಾಡುತ್ತಾ ಬಂದರೆ, ಬಹಳ ಶುಭವಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ, ಅನಿರೀಕ್ಷಿತ ಧನಲಾಭ ಅಥವಾ ನಿಮ್ಮ ಬಳಿ ಇರುವ ಹಣ ಎಲ್ಲಾದರೂ ಸಿಲುಕಿಕೊಂಡಿದ್ದರೆ ಇದಕ್ಕೆ ಪರಿಹಾರ ಅಥವಾ ಬೇರೆಯವರಿಂದ ನೀವು ತೆಗೆದುಕೊಂಡಿರುವ ಸಾಲ ತೀರಿಸಲು ದಾರಿಯಾಗುವಂತಹ ಯೋಗ ಎಲ್ಲವೂ ಕೂಡ ಬರುತ್ತದೆ. ಸದ್ಭಕ್ತಿ ಭಾವನೆಗಳಿಂದ ಭಗವಂತನ ಮೇಲೆ ಸಂಪೂರ್ಣ ನಂಬಿಕೆ ಇಟ್ಟು ಈ ರೀತಿ ಮಾಡುವುದರಿಂದ ನೀವು ಉತ್ತಮ ಫಲಗಳನ್ನು ಕಾಣಬಹುದು..

 

ತುಲಾ ರಾಶಿಗೆ ಏಪ್ರಿಲ್ ನಿಂದ ಆರಂಭವಾಗಲಿದೆ ಅತ್ಯಂತ ಪವರ್ ಫುಲ್ ಶುಕ್ರ ಪ್ರಭಾವ, ಇದು ಬದಲಾವಣೆಯ ಕಾಲ.!

 

ತುಲಾ ರಾಶಿಯ ರಾಶಿ ಅಧಿಪತಿಯಾಗಿರುವ ಮತ್ತು ಅಷ್ಟಮಾಧಿಪತಿಯಾದ ಶುಕ್ರನು ಏಪ್ರಿಲ್ ತಿಂಗಳಿನಲ್ಲಿ ಮೀನ ರಾಶಿಯಲ್ಲಿ ಪರಮೋಚ್ಚ ಸ್ಥಿತಿಯಲ್ಲಿ ಇರುತ್ತಾರೆ. ವಿಶೇಷವಾಗಿ ಶುಕ್ರನ ಈ ಪ್ರಭಾವದಿಂದಾಗಿ ತುಲಾ ರಾಶಿಯವರ ಜೀವನದ ಮೇಲೆ ಕೆಲವು ಉತ್ತಮ ಬದಲಾವಣೆಗಳು ಉಂಟಾಗಲಿದೆ. ಇದೇ ಮಾರ್ಚ್ 31 ನೇ ತಾರೀಖಿನಿಂದಲೇ ಇಂತಹ ಶುಭಫಲಗಳು ಉಂಟಾಗಲಿದೆ.

ಪಾಪ ಗ್ರಹಗಳು ಷಷ್ಠದಲ್ಲಿ ಇದ್ದರೆ ಶುಭ ಫಲಗಳನ್ನು ಕೊಡುತ್ತವೆ ಆದರೆ ಶುಭ ಗ್ರಹವಾದ ಶುಕ್ರನೇ ಷಷ್ಠದಲ್ಲಿ ಇರುವುದರಿಂದ ಶುಭಫಲಗಳನ್ನು ಕೊಡಲು ಆಗುವುದಿಲ್ಲ. ಆದರೆ ಶುಕ್ರ ಗ್ರಹವು ಪರಮೋಚ್ಛ ಸ್ಥಾನದಲ್ಲಿ ಇರುವುದರಿಂದ ತುಲಾ ರಾಶಿಯ ಲಾಭಾಧಿಪತಿಯಾದ ರವಿಯ ಜೊತೆ ಇರುವುದರಿಂದ ಇರುವುದರಿಂದ ಕೆಲವೊಂದು ವಿಚಾರದಲ್ಲಿ ಗಮನಾರ್ಹ ಶುಭ ಫಲಗಳು ಕೂಡ ಉಂಟಾಗುತ್ತವೆ.

ಅದರಲ್ಲಿ ಮುಖ್ಯವಾಗಿ ಹೇಳುವುದಾದರೆ ನಿಮ್ಮ ಇತ್ಯರ್ಥವಾಗದ ಹಣಕಾಸಿನ ಸಮಸ್ಯೆ ಒಂದು ಪರಿಹಾರವಾಗಲಿದೆ. ನೀವು ಯಾರಿಗಾದರೂ ಹಣಕಾಸು ಕೊಟ್ಟು ಬಹಳ ಸಮಯವಾಗಿ ನಿಮ್ಮ ಹಣ ವಾಪಸ್ಸು ಬರದಂತೆ ಸಿಲುಕಿಕೊಂಡಿದ್ದರೆ, ನೀವು ಯಾವುದಾದರೂ ಹಣಕಾಸಿನ ವಿಚಾರಕ್ಕೆ ಮಧ್ಯವರ್ತಿಯಾಗಿ ಸಿಲುಕಿದ್ದರೆ.

ಅಥವಾ ಬಹಳ ದಿನಗಳಿಂದ ಲೋನ್ ಗಾಗಿ ಬ್ಯಾಂಕ್ ಗಳಿಗೆ ಅಲೆದು ಸಾಕಾಗಿದ್ದರೆ ಉತ್ತರ ಸಿಗುವ ಅಥವಾ ನೀವೇ ಯಾವುದಾದರೂ ಸಾಲದ ಸುಳಿಯಲ್ಲಿ ಬಿದ್ದು ಎಷ್ಟೇ ಪ್ರಯತ್ನ ಪಡುತ್ತಿದ್ದರು ಕೂಡ ಸಾಲ ತೀರಿಸಲು ಆಗದೆ ಇದ್ದರೆ ಇದು ಇತ್ಯರ್ಥವಾಗುವ ಫಲಗಳು ಕಂಡುಬರುತ್ತವೆ.

ಇದರಲ್ಲಿ ಹಣ ವಾಪಸ್ ಬರುತ್ತದೆ ಅಥವಾ ನೀವು ಸಾಲ ತೀರಿಸುತ್ತೀರಿ ಅಥವಾ ನಿಮಗೆ ಲೋನ್ ಆಗುತ್ತದೆ ಅಥವಾ ಮತ್ತೊಂದು ರೀತಿಯಲ್ಲಿ ಹಣ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಹಣ ಬರುತ್ತದೆ ಅಥವಾ ಇಲ್ಲ, ಈ ಕೆಲಸ ಆಗುತ್ತದೆ ಅಥವಾ ಇಲ್ಲ ಎನ್ನುವ ನಿರ್ಣಾಯಕ ಹಂತಕ್ಕೆ ಬಂದು ಸಮಾಧಾನ ಪಟ್ಟುಕೊಳ್ಳುವಂತಹ ಸ್ಪಷ್ಟವಾದ ರಿಸಲ್ಟ್ ಸಿಗುತ್ತದೆ.

ಹಾಗೆ ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಇದೇ ರೀತಿಯ ಗೊಂದಲಗಳು ಇದ್ದರೆ ಉದಾಹರಣೆಗೆ ಯಾವುದಾದರೂ ಆರೋಗ್ಯ ಸಮಸ್ಯೆಗೆ ಸ್ವಲ್ಪ ದಿನ ಕಾದು ನೋಡೋಣ ಎಂದು ಹೇಳಿದ್ದರೆ ಅಥವಾ ಯಾವುದಾದರೂ ಸಮಸ್ಯೆಗೆ ನೀವೇ ಆಸ್ಪತ್ರೆಗೆ ಹೋಗಬೇಕು ಬೇಡವ ಎನ್ನುವ ಗೊಂದಲದಲ್ಲಿ ಇದ್ದರೆ ಆಸ್ಪತ್ರೆ ವಿಚಾರವಾಗಿ ಕೂಡ ಇದು ಇತ್ಯರ್ಥವಾಗುವ ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವ ಪರಿಣಾಮಗಳು ಈ ತಿಂಗಳಲ್ಲಿ ಆಗುತ್ತದೆ ನೀವು ಶುಕ್ರನ ಇನ್ನು ಅತಿಯಾದ ಫಲಗಳನ್ನು ಪಡೆಯಬೇಕು ಅಂದರೆ ಶುಕ್ರನ ಆರಾಧನೆಯನ್ನು ಮಾಡಬೇಕು.

ಶುಕ್ರನ ಅಷ್ಟೋತ್ತರಗಳನ್ನು ಕೇಳುವುದು ದುರ್ಗಾ ಹಾಗೂ ಮಹಾಲಕ್ಷ್ಮಿ ಆರಾಧನೆ ಮಾಡುವುದು ಸ್ತೋತ್ರಗಳನ್ನು ಕೇಳುವುದು ಲಕ್ಷ್ಮಿ ಸಹಸ್ರನಾಮ ಪ್ರತಿನಿತ್ಯ ಪಠಿಸುವುದು ಅಥವಾ ಕೇಳುವುದು ಶುಕ್ರನಿಗೆ ಬಿಳಿ ಹೂಗಳನ್ನು ಅರ್ಪಿಸುವುದು, ಶುಕ್ರನಿಗೆ ಅಭಿಷೇಕ ಮಾಡಿಸುವುದು ವಿಶೇಷವಾಗಿ ಸ್ಪಟಿಕದ ಮಣಿಗಳನ್ನು ವಿದಿವಿಧಾನದಿಂದ ಧರಿಸುವುದರಿಂದ ಕೂಡ ಹೆಚ್ಚುಫಲಗಳು ಸಿಗುತ್ತವೆ.

ಶುಕ್ರ ಗ್ರಹದ ಪ್ರಭಾವವಿರುವ ರತ್ನ ವಜ್ರ ಆದರೆ ವಜ್ರವನ್ನು ಖರೀದಿಸಲು ಸಾಧ್ಯವಾಗದೇ ಇರುವುದರಿಂದ ಸ್ಪಟಿಕದ ಮಣಿಗಳನ್ನು ಕೂಡ ತಂದು ಸರಿಯಾದ ರೀತಿಯಲ್ಲಿ ಧರಿಸುವುದರಿಂದ ಕೂಡ ಉತ್ತಮ ಫಲಗಳನ್ನು ಪಡೆಯುತ್ತೀರಿ. ನಿಮ್ಮ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆಗಳು ದಾಂಪತ್ಯದಲ್ಲಿ ಪತಿ-ಪತ್ನಿ ನಡುವೆ ಇರುವಂತಹ ಹೊಂದಾಣಿಕೆ ಸಮಸ್ಯೆಗಳು, ಅಥವಾ ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ಇದೆಲ್ಲದಕ್ಕೂ ಶುಕ್ರನ ಪ್ರಭಾವದಿಂದ ಪರಿಹಾರ ಸಿಗಲಿದೆ. ಏಪ್ರಿಲ್ ತಿಂಗಳ ನಾಲ್ಕು ಶುಕ್ರವಾರಗಳು ಕೂಡ 5 ಮುತ್ತೈದರಿಗೆ ಅರಿಶಿನ ಕುಂಕುಮ ಹೂ ಕೊಟ್ಟು ಆಶಿರ್ವಾದ ಪಡೆಯಿರಿ.

ಕಾಲಿನ ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದವಾಗಿದ್ದರೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ ನೋಡಿ.!

 

ಮನುಷ್ಯನ ಹಸ್ತ ರೇಖೆಗಳನ್ನು ನೋಡಿ ಶಾಸ್ತ್ರ ಹೇಳುವುದು ಒಂದು ಪ್ರಕಾರವಾದರೆ ಮನುಷ್ಯ ಹುಟ್ಟಿದ ದಿನಾಂಕವನ್ನು ನೋಡಿ ಸಂಖ್ಯಾಶಾಸ್ತ್ರ ಮೂಲಕ ಆತನ ವ್ಯಕ್ತಿತ್ವ ಹಾಗೂ ಹೋಗುಗಳ ಬಗ್ಗೆ ಹೇಳಲಾಗುತ್ತದೆ ಅದೇ ರೀತಿ ಹುಟ್ಟಿದ ದಿನಾಂಕ ನಕ್ಷತ್ರದ ಆಧಾರದ ಮೇಲೆ ಕೂಡ ಭವಿಷ್ಯವನ್ನು ಊಹೆ ಮಾಡಲಾಗುತ್ತದೆ.

ಇದೆಲ್ಲವನ್ನು ಮೀರಿ ಮತ್ತೊಂದು ಬಗೆಯ ಶಾಸ್ತ್ರ ಇದೆ. ಇದರಲ್ಲಿ ಮನುಷ್ಯನ ಆಕಾರ, ವಿಕಾರ ಆತನ ದೇಹದ ಅಂಗಗಳ ಲಕ್ಷಣಗಳ ಆಧಾರದ ಮೇಲೆ ಅವರ ಅದೃಷ್ಟ ಮತ್ತು ದುರಾದೃಷ್ಟವನ್ನು ಅಳೆಯಲಾಗುತ್ತದೆ ಇದನ್ನು ಸಾಮೂದ್ರಿಕ ಶಾಸ್ತ್ರ ಎಂದು ಹೇಳುತ್ತಾರೆ. ಮನುಷ್ಯನ ಮೈ ಮೇಲಿರುವ ಮಚ್ಚೆಗಳು ಅಥವಾ ಆತನ ಕೈಕಾಲುಗಳ ಲಕ್ಷಣಗಳು ಮುಖಲಕ್ಷಣ ಕೈ ಬೆರಳುಗಳು ಕೂದಲು ಇದೆಲ್ಲದರ ಆಧಾರದ ಮೇಲೆ ಭವಿಷ್ಯ ಹೇಳಲಾಗುತ್ತದೆ.

ಹಿಂದಿನ ಕಾಲದಲ್ಲಿ ಇದನ್ನು ಬಲವಾಗಿ ನಂಬಲಾಗುತ್ತಿತ್ತು, ಅದರಲ್ಲೂ ಹೆಣ್ಣು ಮಕ್ಕಳ ವಿಚಾರದಲ್ಲಿ ಬಹಳ ಸೂಕ್ಷ್ಮವಾಗಿ ಗಮನಿಸಲಾಗುತ್ತಿತ್ತು. ಯಾಕೆಂದರೆ ಹೆಣ್ಣು ಮಗು ಎಂದರೆ ಒಂದು ಮನೆಯಲ್ಲಿ ಹುಟ್ಟಿ ಮತ್ತೊಂದು ಮನೆಯನ್ನು ಬೆಳಗುವ ಅದೃಷ್ಟ ಲಕ್ಷ್ಮಿ. ಹಾಗಾಗಿ ಈ ರೀತಿ ಅದೃಷ್ಟದ ಕಳೆಗಳನ್ನು ಹೊಂದಿರುವ ಹೆಣ್ಣು ಮಕ್ಕಳು ಸೊಸೆಯಾಗಿ ಬಂದರೆ ಆ ಮನೆ ಬೆಳಗುತ್ತದೆ ವಂಶದ ಕೀರ್ತಿ ಪಸರಿಸುತ್ತದೆ ಎಂದು ನಂಬಿಕೆ.

ಆ ಹೆಣ್ಣು ಮಗುವಿನ ಮುಖಲಕ್ಷಣ, ಧ್ವನಿ, ಕೈಕಾಲು, ಕಾಲು ಬೆರಳು, ನಡೆಯುವ ಲಕ್ಷಣ ನೋಡಿ ಹೆಣ್ಣನ್ನು ಆರಿಸುತ್ತಿದ್ದರು. ಈಗಿನ ಕಾಲದಲ್ಲಿ ಈ ರೀತಿ ಲೆಕ್ಕಾಚಾರ ಹಾಕುವವರ ಸಂಖ್ಯೆ ಕಡಿಮೆ ಆಗಿದ್ದರೂ ಕೂಡ ಸಾಮುದ್ರಿಕ ಶಾಸ್ತ್ರ ಸಂಪೂರ್ಣವಾಗಿ ಸುಳ್ಳಲ್ಲ ಇದನ್ನು ಪರೀಕ್ಷೆ ಮಾಡಲು ಈಗ ನಾವು ಹೇಳುವ ಈ ಒಂದು ವಿಚಾರವನ್ನು ಗಮನಿಸಿ ನೋಡಿ ಸಾಕು.

ಈ ಶಾಸ್ತ್ರ ಹೇಳುವ ಪ್ರಕಾರ ಹೆಣ್ಣು ಮಕ್ಕಳ ಕಾಲು ಬೆರಳಿನಲ್ಲಿ ಹೆಬ್ಬೆರಳಿಗಿಂತ ಪಕ್ಕದ ಬೆರಳು ಅಂದರೆ ಕಾಲುಂಗುರದ ಬೆರಳು ಯಾರಿಗೆ ಉದ್ದವಾಗಿರುತ್ತದೆ ಆ ಮಹಿಳೆಯರು ಬಹಳ ಧೈರ್ಯವಂತರು ಮತ್ತು ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಇವರಿಗೆ ಹಣಕಾಸಿನ ಕೊರತೆ ಬರುವುದಿಲ್ಲ ಅಥವಾ ಯಾವುದೇ ಏರುಪೇರು ಬಂದರು ಅದನ್ನೆಲ್ಲ ಮೆಟ್ಟಿ ನಿಲ್ಲುವಂತಹ ಬುದ್ಧಿಶಕ್ತಿ ಇವರಿಗೆ ಇರುತ್ತದೆ.

ಜ್ಞಾನದಲ್ಲಿ ತಿಳುವಳಿಕೆಯಲ್ಲಿ ಗುಣದಲ್ಲಿ ಮಾತುಕತೆಯಲ್ಲಿ ಇವರಿಗೆ ಇವರೇ ಸಾಟಿ. ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರು ಕೂಡ ಯಾರ ಪ್ರಭಾವವೂ ಇವರ ಮೇಲೆ ಬೀಳುವುದಿಲ್ಲ. ಯಾಕೆಂದರೆ ಇವರು ಅದೇ ರೀತಿಯಾಗಿ ನೇರ ನುಡಿಯಲ್ಲಿ ಬದುಕಿರುತ್ತಾರೆ. ಇಂತಹ ಹೆಣ್ಣು ಮಗಳನ್ನು ಪತ್ನಿಯಾಗಿ ಪಡೆದ ಪತಿಯೇ ಪುಣ್ಯವಂತ. ಯಾಕೆಂದರೆ ಈಕೆ ಒಬ್ಬ ಪರಿಪೂರ್ಣ ಪತ್ನಿಯಾಗಿ ಸಂಸಾರವನ್ನು ಸರಿದಾರಿಯಾಗಿ ನಡೆಸಿಕೊಂಡು ಹೋಗುತ್ತಾರೆ.

ಇವರು ಕುಟುಂಬದ ಮೇಲೆ ಹೆಚ್ಚು ಕಾಳಜಿ ಹೊಂದಿರುತ್ತಾರೆ, ಪತಿ ಏಳಿಗೆ ಬಗ್ಗೆ ಮಕ್ಕಳನ್ನು ಸರಿಯಾಗಿ ಬೆಳೆಸುವುದರ ಬಗ್ಗೆ ಕುಟುಂಬದ ಗೌರವವನ್ನು ಕಾಪಾಡುವ ಬಗ್ಗೆ ಸದಾ ಎಚ್ಚರಿಕೆಯಿಂದ ಇರುತ್ತಾರೆ. ಯಾವ ಕೆಲಸ ಮಾಡಿದರೆ ಏನು ಪ್ರತಿಫಲ ಸಿಗುತ್ತದೆ ಎನ್ನುವ ಮುಂದಾಲೋಚನೆಯಿಂದ.

ನಿರ್ಧಾರ ಕೈಗೊಳ್ಳುವುದರಿಂದ ಜೀವನದಲ್ಲಿ ಬಹುತೇಕ ಸಮಸ್ಯೆಗಳು ಇವರಿಗೆ ಕಡಿಮೆ ಮತ್ತು ಸದಾ ಹೊಸತನಕ್ಕೆ ಹಾಗೂ ಒಳ್ಳೆಯದಕ್ಕೆ ದುಡಿಯುವ ಇವರ ಮನಸ್ಸು ಮನೆಯಲ್ಲಿ ಎಲ್ಲರನ್ನು ಚಟುವಟಿಕೆಯಿಂದ ಲವಲವಿಕೆಯಿಂದ ಇರುವಂತೆ ಮಾಡುತ್ತದೆ. ಇವರ ಅಣತಿಯಂತೆ ಪತಿ ಹಾಗೂ ಮಕ್ಕಳು ನಡೆದರೆ ಆ ಸಂಸಾರ ಆನಂದ ಸಾಗರವಾಗಿರುತ್ತದೆ.

ಮಾರ್ಚ್ 08, ಮಹಾಶಿವರಾತ್ರಿ. ಈ ದಿನದಂದು 3 ವಸ್ತುಗಳಲ್ಲಿ ತಪ್ಪದೇ ಒಂದನ್ನಾದರೂ ತನ್ನಿ, ವರ್ಷಪೂರ್ತಿ ಧನ ಲಾಭ ಸಾಕಷ್ಟು ಹಣ ಬರುತ್ತದೆ…

 

ಇನ್ನೆರಡು ದಿನಗಳಲ್ಲಿ ಬರಲಿರುವ ಮಾರ್ಚ್ 8ರ ಶಿವರಾತ್ರಿ ದಿನದಂದು ನಾವು ಹೇಳುವ ರೀತಿಯಲ್ಲಿ ನೀವು ಸಣ್ಣ ಉಪಾಯವನ್ನು ಮಾಡಿದರೆ ನಿಮ್ಮ ಬದುಕಿನಲ್ಲಿ ಬಂದಿರುವ ಬಹುತೇಕ ಎಲ್ಲಾ ಕಷ್ಟಗಳಿಂದ ಮುಕ್ತಿ ಪಡೆಯಬಹುದು. ವರ್ಷದಲ್ಲಿ ಈ ಒಂದು ದಿನವನ್ನಾದರೂ ಸಂಪೂರ್ಣವಾಗಿ ಶಿವನಿಗಾಗಿ ಮೀಸಲಿಟ್ಟು ಶಿವ ಪೂಜೆ, ಶಿವನ ಧ್ಯಾನ ಮಾಡುವುದು.

ಶಿವನ ಮಂತ್ರ ಹೇಳುವುದು, ಶಿವನ ಸನ್ನಿಧಾನಕ್ಕೆ ಹೋಗುವುದು ಈ ರೀತಿ ಆಚರಣೆಗಳನ್ನು ಅನುಸರಿಸಿ ಸಾಧ್ಯವಾದರೆ ಉಪವಾಸ ಮತ್ತು ಜಾಗರಣೆ ಇದ್ದು ಪಾರ್ವತಿ ಪರಮೇಶ್ವರರ ಕೃಪೆಗೆ ಪಾತ್ರರಾಗಿ. ಇದರೊಂದಿಗೆ ತಪ್ಪದೆ ಈಗ ನಾವು ಹೇಳುವ ಈ ಮೂರು ವಸ್ತುಗಳಲ್ಲಿ ಒಂದು ವಸ್ತುವನ್ನು ನಿಮ್ಮ ಮನೆಗೆ ತಂದು ನಿಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಿ. ಈ ದಿನ ಮನೆಗೆ ತರುವಂತಹ ಈ ಮೂರು ವಸ್ತುಗಳಿಗೂ ವಿಭಿನ್ನ ಬಗೆಯ ಶಕ್ತಿ ಇದೆ. ಯಾವುದನ್ನು ತರುವುದರಿಂದ ಏನು ಫಲ ಮಾಹಿತಿ ಇಲ್ಲಿದೆ ನೋಡಿ.

1. ಈ ದಿನ ಅಕ್ಕಿಯನ್ನು ಖರೀದಿಸಿ ಮನೆಗೆ ತರಬೇಕು. ಸಾಮಾನ್ಯವಾಗಿ ಜನರು ಈ ದಿನ ಉಪವಾಸ ಇರುವುದರಿಂದ ಅಕ್ಕಿ ಬಳಸುವುದಿಲ್ಲ ಆದರೂ ಅಕ್ಕಿಯನ್ನು ತಂದು ಮರುದಿನ ಅದನ್ನು ಮನೆಯಲ್ಲಿರುವ ಅಡುಗೆಗೆ ಬಳಸುವ ಇಟ್ಟಿರುವ ಅಕ್ಕಿಯ ಜೊತೆ ಮಿಕ್ಸ್ ಮಾಡಿ ಪ್ರತಿದಿನವೂ ಕೂಡ ಅದರಿಂದ ಮಾಡುವ ಆಹಾರ ಪದಾರ್ಥಗಳನ್ನು ಸೇವಿಸಿ.

ಈ ಸುದ್ದಿ ಓದಿ:- BPL, APL, AAY ರೇಷನ್ ಕಾರ್ಡ್ ದಾರರಿಗೆ ಬಿಗ್ ಶಾಕ್, ಇನ್ನು ಮುಂದೆ ಈ ಬಗೆಯ ರೇಷನ್ ಕಾರ್ಡ್ ದಾರರಿಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಬರುವುದಿಲ್ಲ…

ಇದರ ಜೊತೆಗೆ ಅಕ್ಕಿ ತಂದ ಸಮಯದಲ್ಲಿ ಸ್ವಲ್ಪ ಅಕ್ಕಿಯನ್ನು ಒಂದು ಚಿಕ್ಕ ಪೇಪರ್ ನಲ್ಲಿ ಕಟ್ಟಿ, ನೀವು ಹಣಕಾಸು ಇಡುವ ಪರ್ಸ್ ನಲ್ಲಿ ಅಥವಾ ನಿಮ್ಮ ಬೀರುವಿನಲ್ಲಿ ಇಟ್ಟುಕೊಳ್ಳಿ. ಈ ರೀತಿ ಮಾಡುವುದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿಗಳು ಸುಧಾರಿಸುತ್ತದೆ, ಸಾಲ ಬಾಧೆ ತೀರುತ್ತದೆ, ಅನಿರೀಕ್ಷಿತ ಧನಲಾಭವಾಗುತ್ತದೆ ನಿಮ್ಮ ವ್ಯಾಪಾರ ವ್ಯವಹಾರ ಗಟ್ಟಿಯಾಗಿ ಹಣಕಾಸಿನ ಪರಿಸ್ಥಿತಿ ಉತ್ತಮವಾಗುತ್ತದೆ ಈ ರೀತಿ ನೀವು ಆರ್ಥಿಕವಾಗಿ ಸದೃಢರಾಗುತ್ತೀರಿ.

* ಅದೇ ರೀತಿಯಾಗಿ ಗೋಧಿಯನ್ನು ತರುವುದರಿಂದ ಸೂರ್ಯನ ಸಂಪೂರ್ಣ ಅನುಗ್ರಹ ಮತ್ತು ಶಿವನ ಆಶೀರ್ವಾದವು ನಿಮಗೆ ದೊರೆಯುತ್ತದೆ. ನಿಮ್ಮ ಉದ್ಯೋಗದಲ್ಲಿ ಯಾವುದೇ ರೀತಿ ಕಿರಿಕಿರಿ ಇದ್ದರೂ ಅಥವಾ ನಿಮ್ಮ ಶ್ರಮಕ್ಕೆ ತಕ್ಕ ಹಾಗೆ ಪ್ರಮೋಷನ್ ಸಿಗದೇ ಇದ್ದರೂ ವರ್ಗಾವಣೆ ಸಮಸ್ಯೆ ಇದೆಲ್ಲ ಸಮಸ್ಯೆಗಳಿಗೆ ಇದು ಪರಿಹಾರ ಮಾರ್ಗವಾಗಿದೆ. ಈ ದಿನ ನೀವು ಗೋಧಿಯನ್ನು ತಂದು ಮರುದಿನ ಅದನ್ನು ಆಹಾರವಾಗಿ ಉಪಯೋಗಿಸುವುದರಿಂದ ವೃತ್ತಿಗೆ ಸಂಬಂಧಪಟ್ಟ ಹಾಗೆ ಇರುವ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ಕಾಣುತ್ತೀರಿ.

ಹೆಸರು ಕಾಳು ಕೂಡ ಇದೇ ರೀತಿಯ ಶುಭಫಲಗಳನ್ನು ಉಂಟುಮಾಡುತ್ತದೆ ನಿಮ್ಮ ಮಕ್ಕಳು ಹೇಳಿದ ಮಾತು ಕೇಳದೆ ಇದ್ದರೆ ಅವರಿಗೆ ಓದಿನಲ್ಲಿ ಆಸಕ್ತಿ ಇಲ್ಲದಿದ್ದರೆ ಅಥವಾ ನಿಮಗೆ ವಿದ್ಯಾಭ್ಯಾಸದಲ್ಲಿ ಯಾವುದೇ ರೀತಿಯ ತೊಂದರೆಗಳು ಇದ್ದರೆ ಇಲ್ಲ, ನೀವು ದುಡುಕಿ ತೆಗೆದುಕೊಂಡ ನಿರ್ಧಾರಗಳಿಂದ ಕಷ್ಟದಲ್ಲಿ ಸಿಲುಕಿದ್ದರೆ ಅಥವಾ ನಿಮಗೆ ಬಹಳ ಕಷ್ಟಗಳು ಬಂದು ಮುಂದೆ.

ಈ ಸುದ್ದಿ ಓದಿ:-ಶಿವರಾತ್ರಿ ದಿನ ಈ ತಪ್ಪುಗಳನ್ನು ಮಾಡಬೇಡಿ ಶಿವ ಕೋಪಗೊಳ್ಳುವನು

ಯಾವ ರೀತಿ ಇದನ್ನು ಪರಿಹರಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ದಿಕ್ಕು ತೋಚದಂತೆ ಆಗಿದ್ದರೆ ಶಿವರಾತ್ರಿ ದಿನ ಹೆಸರುಕಾಳು ತಂದು ಮರುದಿನ ಆಹಾರ ಪದಾರ್ಥದಲ್ಲಿ ಸೇರಿಸಿ ಅಡುಗೆ ಮಾಡಿ ಸೇವಿಸಿ. ಹೀಗೆ ಮಾಡುವುದರಿಂದ ಒಳ್ಳೆಯ ಫಲಿತಾಂಶಗಳನ್ನು ಕಾಣುತ್ತೀರಿ. ನಿಮ್ಮ ಶಕ್ತಿಯನುಸಾರ ನಿಮಗೆ ಎಷ್ಟು ಸಾಧ್ಯ ಅಷ್ಟು ಈ ಧಾನ್ಯಗಳನ್ನು ಮನೆಗೆ ಖರೀದಿಸಿ ತರಬಹುದು ಈ ಸರಳ ಉಪಾಯ ಮಾಡಿ ಸಂತೋಷವಾಗಿರಿ.